text
stringlengths
0
61.5k
11:54 ಮತ್ತು ಆದ್ದರಿಂದ, ಜೀಸಸ್ ಎಂದಿಗೂ ಯಹೂದಿಗಳು ಸಾರ್ವಜನಿಕವಾಗಿ ನಡೆದರು. ಆದರೆ ಮರುಭೂಮಿ ಬಳಿ ಪ್ರದೇಶದಲ್ಲಿ ಹೋದರು, ಎಫ್ರೇಮ್ ಕರೆಯಲ್ಪಡುವ ಒಂದು ನಗರಕ್ಕೆ. ಅವನು ತನ್ನ ಶಿಷ್ಯರೊಂದಿಗೆ ಅಲ್ಲಿ ವಾಸಿಸಿದನು.
11:55 ಈಗ ಯಹೂದ್ಯರ ಪಾಸೋವರ್ ಸನಿಹದಲ್ಲಿದೆ. ಮತ್ತು ಗ್ರಾಮಾಂತರ ಅನೇಕ ಪಾಸ್ಓವರ್ ಮೊದಲು ಜೆರುಸಲೆಮ್ ಸೇರಿತು, ಆದ್ದರಿಂದ ಅವರು ಪಾವನಗೊಳಿಸು ತಮ್ಮನ್ನು ಎಂದು.
11:56 ಆದ್ದರಿಂದ, ಅವರು ಜೀಸಸ್ ಕೋರುತ್ತಿದ್ದರು. ಅವರು ಪರಸ್ಪರ ಪ್ರದಾನ, ದೇವಾಲಯದಲ್ಲಿ ನಿಂತು: "ನೀವು ಏನು ಆಲೋಚಿಸುತ್ತೀರಿ ಏನು? ಅವರು ಹಬ್ಬದ ದಿನ ಒಳಪಡುವುದೇ?"
ನೋವನ್ನು ಅನುಭವಿಸದಿರುವುದು ಹೇಗೆ
Vijaya Karnataka Web| Sep 13, 2017, 05.00 AM IST
ನಿಮ್ಮ ಬಳಿ ಜ್ಞಾನವಿದ್ದರೆ ಕಲಿಯಲು ನೋವನ್ನು ಅನುಭವಿಸಬೇಕಿಲ್ಲ. ಜ್ಞಾನದ ಅಭಾವವಿರುವುದರಿಂದ ನೋವನ್ನು ಅನುಭವಿಸುತ್ತೇವೆ. ಆದರೆ ಒಂದಲ್ಲ ಒಂದು ಸಮಯದಲ್ಲಿ ಆ ನೋವಿನಿಂದ ಹೊರಬರುತ್ತೀರಿ ಎಂದು ತಿಳಿಯಿರಿ.
ಜೀವನದಲ್ಲಿ ವಿಶಾಲವಾದ ದೃಷ್ಟಿಕೋನವನ್ನು ಹೊಂದುವುದು ಮುಖ್ಯ. ವಿಶಾಲವಾದ ದೃಷ್ಟಿಕೋನವಿದ್ದಾಗ ಕ್ಷುಲ್ಲಕವಾದ ವಿಷಯಗಳು ನಿಮ್ಮನ್ನು ಬಾಧಿಸುವುದಿಲ್ಲ. ಅವುಗಳು ಸಾಗರದ ಮೇಲಿರುವ ಅಲೆಗಳಂತೆ ? ಅವು ಎದ್ದು, ಬೀಳುತ್ತಿರುತ್ತವೆ. ನಿಮ್ಮ ನೋವನ್ನು ಕಡಿಮೆ ಮಾಡಲು ಈ ವಿಧಾನಗಳತ್ತ ನೋಡಿ:
1. ನಿಮ್ಮನ್ನು ಘಾಸಿಗೊಳಿಸಿದವರು ನೋವಿನಲ್ಲಿದ್ದಾರೆ. ಅನೇಕ ಸಲ ಇತರರನ್ನು ನೋಯಿಸುವವರಲ್ಲಿ ಗಾಯಗಳಿರುತ್ತವೆ ಮತ್ತು ದುಃಖಿಗಳಾಗಿ, ವ್ಯಥೆಯಲ್ಲಿರುತ್ತಾರೆ. ಅವರ ಬಳಿ ಇರುವುದನ್ನು ಮಾತ್ರ
ಹಂಚಿಕೊಳ್ಳಬಲ್ಲರು. ಅವರಲ್ಲಿ ನೋವಿದೆ ಮತ್ತು ಅವರ ನೋವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಅವರು ಬೇಕೆಂದೆ ನಿಮ್ಮನ್ನು ನೋಯಿಸುತ್ತಿದ್ದಾರೆ ಎಂದುಕೊಳ್ಳುತ್ತೀರಿ, ಆದರೆ ಅವರಲ್ಲಿ ಸಂತೋಷ, ಆನಂದ ಅಥವಾ ಶಾಂತಿಯಿರುವುದಿಲ್ಲ. ಅವರಲ್ಲಿ ನೋವಿರುವುದರಿಂದ ನಿಮಗೆ ನೋವನ್ನು ಉಂಟು ಮಾಡುತ್ತಿದ್ದಾರೆ. ಆದ್ದರಿಂದ, ಅವರಿಂದ ಘಾಸಿಗೊಂಡವರು ಏನು ಮಾಡಬೇಕು? ಕರುಣೆ. ನಿಮ್ಮನ್ನು ಘಾಸಿಗೊಳಿಸಿದವರೇ...
2. ನಿಮ್ಮನ್ನು ನೋಯಿಸುತ್ತಿರುವವರು ಕೇವಲ ಅಜ್ಞಾನಿಗಳು. ಪೂರ್ಣ ಅಜ್ಞಾನದಿಂದಾಗಿ ಜನರು ಇತರರನ್ನು ನೋಯಿಸುತ್ತಾರೆ. ಅವರು ಸೂಕ್ಷ ್ಮರಾಗಿರುವುದಿಲ್ಲ ಮತ್ತು ಅವರ ವರ್ತನೆಯಿಂದಾಗಿ ಇತರರನ್ನು ಅವರು ನೋಯಿಸುತ್ತಿದ್ದಾರೆಂಬ ಅರಿವು ಅವರಲ್ಲಿ ಇರುವುದಿಲ್ಲ. ಅವರ ಬಗ್ಗೆ ಅವರಿಗೆ ತಿಳಿದಿಲ್ಲ ಮತ್ತು ಅವರೇನು ಮಾಡುತ್ತಿದ್ದಾರೆಂದು ಅವರಿಗೆ ತಿಳಿದಿಲ್ಲ. ಅವರು ಅಹಂಕಾರಿಗಳು ಮತ್ತು ಅಜ್ಞಾನಿಗಳಾಗಿರುತ್ತ...
3. ನಿಮ್ಮನ್ನು ಘನವಾಗಿಸಲು ಹೀಗೆ ಮಾಡಲಾಗುತ್ತಿದೆ: ನೀವು ಘನವಾಗಲೆಂದು, ನಿಮ್ಮೊಳಗಿರುವ ಶಕ್ತಿ, ಬಲವನ್ನು ನೀವು ಕಂಡುಕೊಳ್ಳಲೆಂದು ಪ್ರಕೃತಿಯು ನಿಮಗೆ ಈ ನೋವನ್ನು ತರುತ್ತಿದೆ. ಸಾಮಾನ್ಯವಾಗಿ ಒಂದು ಕಂಬವನ್ನು ನೆಟ್ಟ ಮೇಲೆ, ಆ ಕಂಬ ಸರಿಯಾಗಿ ಕುಳಿತಿದೆಯೊ ಇಲ್ಲವೊ ಎಂದು ಪರೀಕ್ಷಿಸಿ ನೋಡಲು ಆ ಕಂಬವನ್ನು ಅಲುಗಾಡಿಸುತ್ತಾರೆ. ಅದೇ ರೀತಿಯಾಗಿ, ನಿಮ್ಮಲ್ಲಿ ನೀವು ಸ್ಥಿರವಾಗಿ ಸ್ಥಾಪಿತರಾಗಿದ್ದೀರೊ...
ಓರ್ವ ಜ್ಞಾನಿ ಅಥವಾ ಪ್ರಬುದ್ಧರು ನಿಮ್ಮನ್ನು ನೋಯಿಸುತ್ತಿದ್ದಾರೆಂದು ನಿಮಗೆ ಅನಿಸಿದರೆ, ಆಗ ಕೃತಜ್ಞರಾಗಬೇಕು. ಏಕೆಂದರೆ ಅದರಲ್ಲಿ ಒಂದು ಉದ್ದೇಶವಿರುತ್ತದೆ. ನೀವು ಮತ್ತಷ್ಟು ಬಲಿಷ್ಠರಾಗಬೇಕೆಂದು ಅವರು ಬಯಸುತ್ತಿದ್ದಾರಷ್ಟೆ. ನಿಮ್ಮ ತಂದೆ, ತಾಯಿ ನಿಮ್ಮನ್ನು ಬಯ್ಯುತ್ತಿದ್ದರೆ, ಕೆಟ್ಟ ಉದ್ದೇಶದಿಂದಾಗಿ ಅಂತೂ ಅಲ್ಲ. ನಿಮ್ಮ ಬಗ್ಗೆ ಇರುವ ಅಕ್ಕರೆಯಿಂದಾಗಿ, ಕಾಳಜಿಯಿಂದಾಗಿ ಬಯ್ಯುತ್ತಿರುತ್ತಾರ...
ನಿಮಗೆ ನೋವಾದಾಗ ಎರಡು ಮುಖ್ಯ ವಿಷಯಗಳಿರುತ್ತವೆ- ಸಂಪರ್ಕದ ಅಭಾವ ಮತ್ತು ತಿಳಿವಳಿಕೆಯ ಅಭಾವ. ನೀವು ನೋವನ್ನು ಅನುಭವಿಸುವ ಮತ್ತೊಂದು ಕಾರಣವೆಂದರೆ, ನಶ್ವರವಾದ ಅಥವಾ ಕ್ಷುಲ್ಲಕವಾದ ವಿಷಯಗಳ ಬಗ್ಗೆ ನೀವು ಮಿತಿ ಮೀರಿ ಸಂವೇದನಶೀಲರಾಗಿರುವುದು. ಘಟನೆಗಳೆಲ್ಲವೂ ನಶ್ವರವಾದವು, ಎಲ್ಲವೂ ಚಲಿಸುತ್ತಿವೆ ಮತ್ತು ಅಶಾಶ್ವತವಾಗಿರುವಂತವು ಎಲ್ಲವೂ ಬದಲಿಸುತ್ತಿದೆ. ''ಓ ಅವರು ಹಾಗೆ ಹೇಳಿದರು, ಈಕೆ ಹೀಗೆ ಹೇ...
ಉತ್ತರ ಕನ್ನಡ ಜಿಲ್ಲೆಗೆ ಬನ್ರಿ ಮಾರಾಯ್ರೆ… – ಸುರಹೊನ್ನೆ
by Meghana Kanetkar · February 18, 2021
'ಓಹೊ ಬನ್ರಿ ಮಾರಾಯ್ರೆ… ಆ ಬದಿಗೆ ಬಾನಿ ಒಳಗೆ ನೀರಿದ್ದು, ಕೈಕಾಲು -ಮೊರೆ ತೊಳ್ಕಂಡು ಒಳಬದಿಗ್ ಬನ್ನಿ'.
'ಕುಡಿಲಕ್ಕೆ ಮುರಗಲಹಣ್ಣಿನಪಾನಕಅಡ್ಡಿಲ್ಯೆ ನಿಮಗೆ? ಹೊಯ್ ಆಸರಿಂಗೆ ' 'ತೆಳ್ಳೆವು, ಕಾಯಿಚಟ್ನಿ ಮಾಡಿದ್ನಿ, ಒಂದೆರಡು ತಿನ್ನಲಕ್ಕಿ ಬನ್ನಿ. ಕವಳ ಪೇಟಿ ಇದ್ದು, ಕವಳ ಹಾಕುದಿದ್ರೆ ಹಾಕಿ.. ಹಂಗೆ ಊರ್ ಬದಿಗೆ ತಿರ್ಗಾಡಲೇ ಹೋಪ…'
ಇದೇನಿದು? ಯಾವ ಭಾಷೆ? ಕನ್ನಡವೇ ಹೌದಾ!? ಅಂತ ಮೂಗಿನ ಮೇಲೆ ಬೆರಳು ಇಡಬೇಡಿ. ಇದು ಹವ್ಯಕ ಕನ್ನಡ. ನಾವು ಇವತ್ತು ಹೋಗ್ತಾ ಇರೊದು ಉತ್ತರ ಕನ್ನಡ ಜಿಲ್ಲೆ ನೋಡೊಕೆ. ಹವ್ಯಕರು ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಶಿವಮೊಗ್ಗ ದಲ್ಲಿ ನೆಲೆಸಿದಾರೆ. ಅದ್ರಲ್ಲೂ ಉತ್ತರ ಕನ್ನಡದ ಯಲ್ಲಾಪುರ, ಶಿರಸಿ ಭಾಗದ ಹವ್ಯಕ ಕನ್ನಡ ಒಂದು ರೀತಿಯದ್ದಾದರೆ, ಕುಮಟಾ ಹವ್ಯಕ ಕನ್ನಡ ಮತ್ತೊಂದು ರೀತಿಯದ್ದು. ಇನ್...
ಉತ್ತರ ಕನ್ನಡ(ಕಾರವಾರ) ಜಿಲ್ಲೆ ಎಷ್ಟು ದೊಡ್ಡದಿದೆ ಅಂದ್ರೆ, ಮುಂಡಗೋಡ, ಯಲ್ಲಾಪುರ ಮೊದಲಾಗಿ ಶಿರಸಿ, ಸಿದ್ದಾಪುರ, ಬನವಾಸಿ, ಭಟ್ಕಳ, ಕುಮಟಾ, ಹೊನ್ನಾವರ, ಗೋಕರ್ಣ, ಮುರುಡೇಶ್ವರ, ಇಡುಗುಂಜಿ, ಅಂಕೋಲಾ ಹಾಗೂ ಕಾರವಾರದ ವರೆಗೂ ಹಬ್ಬಿದೆ. ಉತ್ತರ ಕನ್ನಡ ಜಿಲ್ಲೆಗೆ ಜಲಪಾತಗಳ ತವರು ಅಂತ ಕರೀತಾರೆ. ಧರ್ಮಾ, ಕಾಳಿ, ಅಘನಾಶಿನಿ ಹಾಗೂ ಶಾಲ್ಮಲಾ ನದಿಯ ಹಿನ್ನೀರು ಅನೇಕ ಜಲಪಾತಗಳ ಉಗಮಕ್ಕೆ ಕಾರಣವಾಗಿದೆ....
ಎಲ್ಲಿ ನೋಡಿದರಲ್ಲಿ ಬೆಟ್ಟಗುಡ್ಡ; ಮೈದುಂಬಿ ಹರಿಯುವ ನದಿ; ಚಿಮ್ಮುವ ತೊರೆ; ಧುಮ್ಮಿಕ್ಕಿ ಹರಿಯುವ ಜಲಪಾತ; ಹಚ್ಚ ಹಸುರಿನ ಗದ್ದೆ ತೋಟ; ಎತ್ತರೆತ್ತರಕ್ಕೆ ಬೆಳೆದ ಗಿಡಮರಗಳು; ಉದ್ದಗಲಕ್ಕೂ ಹರಡಿರುವ ದಟ್ಟವಾದ ಅರಣ್ಯ; ಹುಲಿಯ ಕಾನು; ಬಾನೆತ್ತರಕ್ಕೆ ಚಾಚಿದ ಅಡಿಕೆ ಮರಗಳು; ವಿಧವಿಧವಾದ ಅಪರೂಪದ ಕಾಡು ಹಣ್ಣುಗಳು; ಭಟ್ಕಳ ಮಲ್ಲಿಗೆಯ ಸುವಾಸನೆ; ಬೆಚ್ಚಿ ಬೀಳಿಸುವ ಉರಗಗಳು; ಬಾನಾಡಿಗಳ ಕಲರವ; ಸ್ವಚ್ಛ...
ಮುಂಡಗೋಡದಲ್ಲಿ ಟಿಬೇಟಿಯನ್ ಕ್ಯಾಂಪ್, ಅತ್ತಿವೇರಿ ಪಕ್ಷಿಧಾಮ ನೋಡಿ ಅಲ್ಲಿಂದ ಯಲ್ಲಾಪುರಕ್ಕೆ ಹೋಗಬಹುದು.
ಯಲ್ಲಾಪುರದಲ್ಲಿ ಸಾತೊಡ್ಡಿ ಫಾಲ್ಸ್, ಮಾಗೊಡು ಫಾಲ್ಸ್, ಶಿರ್ಲೆ ಫಾಲ್ಸ್, ವಿಭೂತಿ ಫಾಲ್ಸ್ ಗಳಲ್ಲಿ ಮಿಂದೆದ್ದು, ಯಾಣದ ಚಾರಣ(ಟ್ರೆಕಿಂಗ್) ಮುಗಿಸಿ, ಗಂಟೆ ಗಣಪತಿಯ ದರ್ಶನ ಮಾಡಿ ದಾಂಡೇಲಿಗೆ ಹೊರಡಬಹುದು. ಹ್ಞಂ ಅಂದ ಹಾಗೆ, ಯಾಣಕ್ಕೆ ಬರುವಾಗ ಮುಂಜಾಗ್ರತಾ ಕ್ರಮವನ್ನು ಅನುಸರಿಸಿ. ಅಲ್ಲಿ ಜಿಗಣೆಗಳು(leach) ಜಾಸ್ತಿ ಹಾಗಾಗಿ. ಇಲ್ಲಿ ಹಾಲಕ್ಕಿ ಮತ್ತು ಸಿದ್ಧಿ ಬುಡಕಟ್ಟು ಜನಾಂಗದವರು ಹೆಚ್ಚಾಗಿ ವ...
ದಾಂಡೇಲಿ ವನ್ಯಜೀವಿ ಸಂರಕ್ಷಣಾ ಕೇಂದ್ರವಾಗಿದ್ದು, ಯಾತ್ರಿಕರ ಪರಿಸರದ ವಿಶೇಷ ಅಭಿರುಚಿಗಾಗಿ ಕುಳಗಿ ಪ್ರಕೃತಿ ಶಿಬಿರವನ್ನು ನಿರ್ಮಿಸಿದೆ. ದಾಂಡೇಲಿ ಪೇಪರ್ ಫ್ಯಾಕ್ಟರಿ ಜನಪ್ರಿಯವಾದದ್ದು. ದಾಂಡೇಲಿಯಲ್ಲಿ ಹುಲಿಯ ಸಫಾರಿ ಪಾರ್ಕ್, ಸಿಂಥೇರಿ ರಾಕ್ಸ್, ರಿವರ್ ರಾಫ್ಟಿಂಗ್, ಉಳವಿ ಗ್ರಾಮದ ಶ್ರೀ ಚನ್ನಬಸವೇಶ್ವರ ದೇವಸ್ಥಾನ ಇವು ಇಲ್ಲಿನ ಸುಪ್ರಸಿದ್ಧ ತಾಣಗಳು. ಯಾತ್ರಿಕರಿಗೆ ತಂಗಲು ಸಾಕಷ್ಟು ಜಂಗಲ್ ...
ಶಿರಸಿಯನ್ನು ಮಲೆನಾಡಿನ ಹೆಬ್ಬಾಗಿಲು ಎಂದು ಕರೆಯಲಾಗುತ್ತದೆ. ಶಿರಸಿಗೆ ಬಂದಮೇಲೆ ಗ್ರಾಮದೇವತೆ ಮಾರಿಕಾಂಬೆಯ ದರುಶನ ಮಾಡದೇ ಹೋಗುವಂತಿಲ್ಲ. ಊರನ್ನು, ಊರ ಜನರನ್ನು ಕಾಯುವ ಮಹಾಮಾತೆ, ಶಕ್ತಿದಾತೆ ಈಕೆ. ಪ್ರತಿ ಎರಡು ವರ್ಷಗಳಿಗೊಮ್ಮೆ ವಿಜೃಂಭಣೆಯಿಂದ ನಡೆಯುವ ಶಿರಸಿ ಮಾರಿಕಾಂಬಾ ದೇವಿಯ ಜಾತ್ರೆ ಜಗತ್ಪ್ರಸಿದ್ಧಿ ಪಡೆದಿದೆ.
ಶಿರಸಿ-ಸಿದ್ದಾಪುರ ಮಾರ್ಗದಲ್ಲಿ ನಿಲೇಕಣಿ ಗಣಪತಿ ದೇವಸ್ಥಾನ ಇದೆ. ಇಲ್ಲಿನ ಗಣಪತಿ ದೇವರು ನಿಲೇಕಣಿ ಮನೆತನದ ಕುಲದೇವರು. ಯಾರು ಈ ನಿಲೇಕಣಿ ಮನೆತನದವ್ರು ಅಂತಿರಾ? ನಂದನ್ ನಿಲೇಕಣಿ ಇವರು ಇನ್ಫೋಸಿಸ್ ಸಂಸ್ಥೆಯ ಸಹ ಸಂಸ್ಥಾಪಕರು.
ಶಿರಸಿಯ ಮಾರಿಕಾಂಬಾ ದೇವಾಲಯ
ಸೋದೆ ಶ್ರೀ ವಾದಿರಾಜ ಮಠ, ಶ್ರೀ ಭೂತರಾಜರ ಸನ್ನಿಧಿ, ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನ, ಸೋಂದಾ ಜೈನ ಬಸದಿ ಇವುಗಳು ಇಲ್ಲಿನ ಪ್ರಮುಖ ಧಾರ್ಮಿಕ ಸ್ಥಳಗಳು. ರಾಜಾ ರಮಾತ್ರಿವಿಕ್ರಮನ ಕೋಟೆಯು ಸಹ ಸೋದೆಯಲ್ಲಿ ನೋಡಲು ಸಿಗುತ್ತದೆ.
ಶಿರಸಿಯ ಆಸು ಪಾಸಿನಲ್ಲೇ ಶಿವಗಂಗಾ ಫಾಲ್ಸ್, ಗಣೇಶ ಫಾಲ್ಸ್ ಸಿಗುತ್ತದೆ. ಶಿರಸಿ-ಸೋಂದಾ ಮಾರ್ಗದಲ್ಲಿ ಸಹಸ್ರಲಿಂಗ ದರ್ಶನ ಹಾಗೂ ಅದಕ್ಕೆ ಸಮೀಪದಲ್ಲಿರುವ ತೂಗುಸೇತುವೆಯನ್ನು ನಾವಿಲ್ಲಿ ನೋಡಬಹುದು.
ಇಲ್ಲಿನ ಪ್ರಮುಖ ಬೆಳೆ ಕಂಗು (ಅಡಿಕೆ). ಶಿರಸಿ ಅಡಿಕೆ ಅಂದ್ರೆ ಜಗದ್ವಿಖ್ಯಾತ. ಜೊತೆಗೆ ಜೋನಿಬೆಲ್ಲದ ಕಬ್ಬು ಸಹ ಬೆಳೆಯುತ್ತಾರೆ. ಪ್ರತಿವರ್ಷ ಚಳಿಗಾಲ ಕಳೆದು ಬೇಸಿಗೆ ಪ್ರಾರಂಭದಲ್ಲಿ ಆಲೆಮನೆ ಹಬ್ಬ ಮಾಡುತ್ತಾರೆ. ಕಟಾವಿಗೆ ಬಂದಿರುವ ಕಬ್ಬಿನ ಹಾಲನ್ನು ಸಂಗ್ರಹಿಸಿ ಜೋನಿಬೆಲ್ಲ ತಯಾರಿಸುತ್ತಾರೆ.
ಶಿರಸಿ-ಕುಮಟಾ ಓಡಾಡುವವರಿಗೆ ದೇವಿಮನೆ ಘಾಟ್ ಅಂದ್ರೆ ಚಿರಪರಿಚಿತ. ಕುಮಟಾ ರಸ್ತೆಯಲ್ಲಿ ಸಾಗಿದರೆ ಶ್ರೀಕ್ಷೇತ್ರ ಮಂಜುಗುಣಿ ವೆಂಕಟರಮಣ ದೇವಸ್ಥಾನ ಸಿಗುತ್ತದೆ. ಇದನ್ನು ಕರ್ನಾಟಕದ ತಿರುಪತಿ ಅಂತಲೂ ಕರೆಯುತ್ತಾರೆ. ಕಾರಣ ಈ ದೇವಸ್ಥಾನದ ವೆಂಕಟರಮಣನ ಮೂರ್ತಿ ಸ್ವಯಂ ಉದ್ಭವಿಸಿದ್ದು. ಅಲ್ಲದೇ ಆಂಧ್ರದ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಹೇಳಿಕೊಂಡ ಹರಕೆಯನ್ನು ಒಂದು ಪಕ್ಷ ಕಾರಣಾಂತರಗಳಿಂದ ಸಕಾಲಕ್ಕ...
ಇಡಗುಂಜಿ ಮಹಾಗಣಪತಿ ದೇವಸ್ಥಾನ, ಮುರುಡೇಶ್ವರ ದೇವಾಲಯ, ಗೋಕರ್ಣ ಮಹಾಬಲೇಶ್ವರ, ಅಂಕೋಲಾ ಮಹಾಲಸಾ ದೇವಾಲಯ ಇವು ಉತ್ತರ ಕನ್ನಡ ಜಿಲ್ಲೆಯ ಅತ್ಯಂತ ಜನಪ್ರಿಯ ದೈವ ಸನ್ನಿಧಿಗಳು. ಇಡಗುಂಜಿ ಹಾಗೂ ಗೋಕರ್ಣದ ದೇವಾಲಯಗಳಿಗೆ ತ್ರೇತಾಯುಗದ ಇತಿಹಾಸವಿದೆ. ಊರು ಯಕ್ಷಗಾನಕ್ಕೆ ಪ್ರಸಿದ್ಧಿ. ಯಕ್ಷಗಾನದ ಆ ಗೆಜ್ಜೆಯ ಘಳಿರು ನಿನಾದ.. ಭಾಗವತರ ತಾಳ.. ಕಲಾವಿದರ ಕಂಚಿನ ಕಂಠ ಆಹಾ!! ಮನಸೂರೆಗೊಳ್ಳುವವು..!! ಹೀಗಿರು...
ನಂತರ ಅಲ್ಲಿಂದ, ಗೋಕರ್ಣದ ಮಿರ್ಜಾನ್ ಕೋಟೆ ನೋಡಿ ಬಂದರೆ ಕುಮಟಾ, ಹೊನ್ನಾವರ, ಭಟ್ಕಳ, ಗೋಕರ್ಣ, ಅಂಕೋಲಾ, ಹಾಗೂ ಕಾರವಾರದ ಸುತ್ತಾಟ ಮುಗಿದಂತೆ. ಕುಮಟಾದಲ್ಲೂ ಸಹ GSB ಸಮುದಾಯದವ್ರು ಸಿಗುತ್ತಾರೆ. ಕೊನೆಯದಾಗಿ ಆದರೂ ಕನಿಷ್ಟವಲ್ಲ ಕನ್ನಡದ ಮೊಟ್ಟ ಮೊದಲ ರಾಜ ಮನೆತನ ಕದಂಬರ ರಾಜಧಾನಿ ಬನವಾಸಿಮಧುಕೇಶ್ವರ ದೇವಾಲಯ ಮತ್ತು ಕದಂಬರ ಕೋಟೆ ವೀಕ್ಷಣೆ ಮಾಡಬಹುದು.
ಇನ್ನು, ಸಿದ್ದಾಪುರ ತಾಲೂಕಿನ ಕುರಿತು ಒಂದಿಷ್ಟು ಹೇಳಲೇ ಬೇಕು.. ಎಲ್ಲಾದರೂ ಕನ್ನಡಮ್ಮನ ದೇವಾಲಯ ಇರುವುದರ ಕುರಿತು ಕೇಳಿದ್ದೀರಾ?? ಇಲ್ಲ ಅಲ್ವ!! ಈಗ ಕೇಳಿ.. ಸುಮಾರು ಮೂರು ಶತಮಾನದ ಹಿಂದೆ ವಿಜಯನಗರ ಅರಸರ ಕಾಲದಲ್ಲಿ, ಸಿದ್ದಾಪುರ ತಾಲೂಕಿನ ಬಿಳಗಿಯ ಸಾಮಂತ ದೊರೆ ಕನ್ನಡ ನಾಡಿನ ಮೇಲಿರುವ ಅಪಾರ ಪ್ರೀತಿಗಾಗಿ ತನ್ನ ವ್ಯಾಪ್ತಿಯಲ್ಲಿ ಬರುವ ಭುವನಗಿರಿ ಗ್ರಾಮದಲ್ಲಿ ತಾಯಿ ಭುವನೇಶ್ವರಿ ದೇವಿಯ ದೇವಾ...
ಭುವನಗಿರಿಯ ಭುವನೇಶ್ವರಿ ದೇವಿ ದೇವಾಲಯ
ಸಿದ್ದಾಪುರದ ಚಂದ್ರಗುತ್ತಿ ಗ್ರಾಮದಲ್ಲಿ ಜಗಜ್ಜನನಿಯ ಶಕ್ತಿಪೀಠ ಇದೆ. ಅದೇ ಭಗವಾನ್ ಪರಶುರಾಮರ ತಾಯಿ, ಜಮದಗ್ನಿ ಋಷಿಯ ಪತ್ನಿ ಶ್ರೀ ರೇಣುಕಾಂಬಾ ದೇವಿಯ ಸನ್ನಿಧಿ. ಪ್ರತಿವರ್ಷವೂ ಇಲ್ಲಿ ಜಾತ್ರೆ ನಡೆಯುತ್ತದೆ. ಸಮೀಪದಲ್ಲಿ ಮೇದಿನಿ ಕೋಟೆಯನ್ನು ಸಹ ನೋಡಬಹುದು. ಸಿದ್ದಾಪುರದಲ್ಲೂ ಶ್ರೀ ಆದಿ ಶಂಕರರ ಮಠ ಇದೆ. ಇನ್ನೂ ಒಂದು ಹೆಮ್ಮೆಯ ಸಂಗತಿ ಎಂದರೆ ನಾಡಿನ ಧೀಮಂತ ರಾಜಕಾರಣಿ ಮಾಜಿ ಮುಖ್ಯಮಂತ್ರಿ ಶ್ರ...
ಇಲ್ಲಿಗೆ, ಉತ್ತರ ಕನ್ನಡ ಜಿಲ್ಲೆಯ ನಿಮ್ಮ ಪ್ರವಾಸ ಒಂದು ಹಂತದಲ್ಲಿ ಪೂರ್ಣಗೊಂಡಂತೆ…
ಇಲ್ಲಿನ ಊಟೋಪಚಾರದ ಬಗ್ಗೆ ಹೇಳಬೇಕೆಂದರೆ, ಜನರು ಪ್ರಕೃತಿಯ ಮಡಿಲಲ್ಲಿ ನೈಸರ್ಗಿಕವಾಗಿ ಬೆಳೆದ ಪೌಷ್ಟಿಕ ಹಾಗೂ ಔಷಧೀಯ ಗುಣವಿರುವ ಸೊಪ್ಪು, ತರಕಾರಿ, ಗೆಡ್ಡೆಗೆಣಸುಗಳನ್ನೆ ಆಹಾರವಾಗಿ ಬಳಸುತ್ತಾರೆ. ಈಗಂತೂ ಮಾವಿನ ಸೀಜನ್.. ಮಾವಿನಕಾಯಿ ಅಪ್ಪೆಹುಳಿ ಅಂದ್ರೆ ಎಲ್ಲರ ಕಿವಿ ನೆಟ್ಟಗಾಗುತ್ತದೆ. ಉಪ್ಪು,ಹುಳಿ, ಖಾರ (ಸೂಜಿ ಮೆಣಸು/ಮೇಲ್ಮೂತಿ ಮೆಣಸಿನ ಖಾರ) ಹದವಾಗಿ ಬೆರೆಸಿದ ಮಾವಿನಕಾಯಿ ನೀರುಗೊಜ್ಜಿಗೆ...
ಹ್ಞಂ ಹಲಸಿನಹಣ್ಣು ಅಂದಾಗ ನೆನಪಾಯ್ತು… ಹಲಸಿನಕಾಯಿಯ ಸಾಂಬಾರ್ ಬಗ್ಗೆ ಈಗಾಗಲೇ ಹೇಳಿರುವೆ. ಹಲಸಿನಕಾಯಿಯ ಹಪ್ಪಳ ಹಾಗೂ ಚಿಪ್ಸ್ ಬಗ್ಗೆಯೂ ಗೊತ್ತಿರಬಹುದು ನಿಮಗೆ. ಹಲಸಿನಿಂದ ಇನ್ನೂ ಅನೇಕ ಖಾದ್ಯಗಳನ್ನು ತಯಾರಿಸ್ತಾರೆ. ಅದರಲ್ಲಿ ಪ್ರಮುಖವಾಗಿ ಹಲಸಿನ ಹಣ್ಣಿನ ಸಿಹಿ ಕಡುಬು ಮತ್ತು ಮುಳಕ. ಹಲಸಿನಲ್ಲಿ ಸುಮಾರು ವಿಧಗಳಿವೆ… ಬೇರು ಹಲಸು, ಅಂಬಲಿ, ಬಿಳಿ ಬಕ್ಕೆ, ಚಂದ್ರ ಬಕ್ಕೆ ಇತ್ಯಾದಿ.. ಚಂದ್ರ ಬಕ್...
ಬೇರು ಹಲಸು ಪಲ್ಯ, ಸಾಂಬಾರ್, ಉಪ್ಪಿನಕಾಯಿಗೆ ಉಪಯೋಗಿಸುತ್ತಾರೆ. ಅಂಬಲಿ ಹಣ್ಣು ಹಾಗೆ ತಿನ್ನಲು ಮತ್ತೆ ಕಡುಬು, ಮುಳಕ, ಹಪ್ಪಳ ತಯಾರಿಸಲು ಉಪಯೋಗಿಸುತ್ತಾರೆ. ಬಕ್ಕೆ ಹಣ್ಣು ಹಾಗೆ ತಿನ್ನೊದೆ ಜಾಸ್ತಿ. ಚಿಪ್ಸ್ & ಹಪ್ಪಳ ಮಾಡಲು ಸಹ ಉಪಯೋಗಿಸುತ್ತಾರೆ.
ಹಣ್ಣುಗಳ ವಿಷಯಕ್ಕೆ ಸಂಬಂಧಿಸಿದಂತೆ ಹೇಳಬೇಕೆಂದರೆ ಬಲು ಅಪರೂಪದ ವೈವಿಧ್ಯಮಯ ಕಾಡು ಹಣ್ಣುಗಳು ಅದರ ಬಣ್ಣ, ಆಕಾರ, ರುಚಿ ಸ್ವರ್ಗಕ್ಕೆ ಕಿಚ್ಚು…. ಮುಳ್ಳು ಹಣ್ಣು, ಕವಳಿ ಹಣ್ಣು, ಜಂಬೆ ಹಣ್ಣು, ಪನ್ನೇರಳೆ, ಜಂಬು ನೇರಳೆ, ಕರಂಡೆ ಹಣ್ಣು, ನಕ್ಷತ್ರದ ಹಣ್ಣು, ಗೇರು ಹಣ್ಣು, ಮುರುಗಲ ಹಣ್ಣು, ರಾಜನೆಲ್ಲಿ, ಬೆಟ್ಟದ ನೆಲ್ಲಿ…. ಅದರ ಸವಿ ಬಲ್ಲವರಿಗೆ ಗೊತ್ತು.
ಇಲ್ಲಿನ ಜನರು ಅತ್ಯಂತ ಕಡಿಮೆ ಪ್ರಮಾಣದ ತ್ಯಾಜ್ಯ ವಿಲೇವಾರಿ ಮಾಡುತ್ತಾರೆ. ಕಾರಣ, ಪ್ಲಾಸ್ಟಿಕ್ ಬಳಕೆ ತೀರಾ ಕಡಿಮೆ. ಪ್ಲಾಸ್ಟಿಕ್ ಬದಲಾಗಿ ಮುತ್ತುಗದ ಎಲೆ, ಅಡಿಕೆ ಹಾಳೆ ಹಾಗೂ ಬಾಳೆ ಎಲೆಯನ್ನು ಎಲ್ಲಾ ಸಂದರ್ಭದಲ್ಲೂ ಬಳಸುವುದರಿಂದ ಪರಿಸರ ಸ್ನೇಹಿ ನಾಗರಿಕರಾಗಿದ್ದಾರೆ.
ಉರಗದ ವಿಚಾರ ಹೇಳಬೇಕೆಂದರೆ ಸುತ್ತಲೂ ದಟ್ಟ ಕಾಡು ಪ್ರದೇಶವಾದ್ದರಿಂದ, ತೇವಾಂಶದಿಂದ ಕೂಡಿರುವುದರಿಂದ ಚಿತ್ರ ವಿಚಿತ್ರ ವಿಷಕಾರಿ ಉರಗಗಳನ್ನು ಕಾಣಬಹುದು. ನೀವು ಕೇವಲ ನಾಗ ಸರ್ಪ, ಕೇರೆ ಹಾವು, ಹಸಿರು ಹಾವು, ಹೆಬ್ಬಾವು, ಕಾಳಿಂಗ ಸರ್ಪ ಮಾತ್ರ ಕೇಳಿರಬಹುದು/ನೋಡಿರಬಹುದು. ಆದರೆ, ಬಹುಶಃ ಇಂತಹ ಹೆಸರುಗಳು ಕೇಳಿರಲು ಅಥವಾ ಕಣ್ಣಾರೆ ನೋಡಿರಲು ಸಾಧ್ಯವೇ ಇಲ್ಲ… ಅವುಗಳು ಕನ್ನಡಿ ಹಾವು, ಕೊಳಕ ಮಂಡಲ, ಕ...
ಇಲ್ಲಿನ ಜನರು ಜಾನುವಾರು ಪ್ರೇಮಿಗಳು. ಪ್ರತಿಯೊಬ್ಬರ ಮನೆಯಲ್ಲೂ ದನಕರುಗಳು ಸಾಕಿರುತ್ತಾರೆ. ಅವುಗಳನ್ನು ತಮ್ಮ ಮನೆಯ ಮಕ್ಕಳಂತೆ ಪ್ರೀತಿಯಿಂದ ಕಾಣುತ್ತಾರೆ. ಇಲ್ಲಿನ ಮನೆಗಳ ವಾಸ್ತುಶಿಲ್ಪದ ಶೈಲಿ ಅತ್ಯಂತ ವಿಶೇಷವಾದದ್ದು… ಕೆಂಪು ಹೆಂಚಿನ ಛಾವಣಿ, ಜಂಬಿಟ್ಟಗೆ ಕಲ್ಲಿನ ಗೋಡೆಗಳು, ಸಾಗುವಾನಿ ತೇಗ ಬೀಟೆಯಿಂದ ಮಾಡಿದ ಮನೆಯ ಬಾಗಿಲುಗಳು, ಸಗಣಿಯಿಂದ ಸಾರಿಸಿದ ನೆಲ, ಕುಡಿಯಲು & ಬಳಸಲು ಶುದ್ಧವಾದ ಬಾವ...
ಬರ್ತೀರಿ ಅಲ್ಲಾ? ತಪ್ಪಿಸಬಾರದು…!!
Tags: ಇಡುಗುಂಜಿಗೋಕರ್ಣದಾಂಡೇಲಿಬನವಾಸಿಭಟ್ಕಳಮುರುಡೇಶ್ವರಶಿರಸಿ
ಉತ್ತರ ಕನ್ನಡ ಜಿಲ್ಲೆಯ ಕುರಿತು ಸಮಗ್ರ ಮಾಹಿತಿ ಮಾಡಲಾಗಿದೆ. ಕೆಲ ಊರುಗಳು ನಾವು ನೊಡಿರುವೆ.ಉತ್ತಮ ಬರಹ.ಧನ್ಯವಾದಗಳು
ಆಹಾ…. ಇನ್ನೇನಾದ್ರೂ ಬಾಕಿ ಇದೆಯಾ ಉತ್ತರ ಕನ್ನಡದ ಬಗ್ಗೆ ಹೇಳೋಕೆ….???
ಇಡೀ ಜಿಲ್ಲೆಯನ್ನು ಒಂದು ಲೇಖನದೊಳಗೆನೇ ಸುತ್ತಾಡಿಸಿಬಿಟ್ರಿ, ಪ್ರಕೃತಿಯ ಬಗ್ಗೆ ಓದುವಾಗ ಅಂತೂ ಮನಸ್ಸು ಸುಂದರ ಕಲ್ಪನೆಯೊಳಗೆ ಲೀನ. ತುಂಬಾ ಚಂದದ ಬರಹ.
ಹವ್ಯಕ ಭಾಷೆಯ ಕುರಿತಾಗಿ ಹೇಳಿದ್ದೂ ಲಾಯ್ಕ್ ಇದ್ದು.
ಅಂತೂ ಉತ್ತರ ಕನ್ನಡ ಜಿಲ್ಲೆಯ ಒಂದು ಸುತ್ತು ಹಾಕಿಸಿ ಅಲ್ಲಿ ನಾ ಮಾಹಿತಿ ಕೊಟ್ಟಿದ್ದಕ್ಕೆ ನನ್ನ ದೊಂದು ನಮಸ್ಕಾರ ಕಂಡ್ರೀ . ಚಂದದ ಬರಹ ಗೆಳತಿ ಅಭಿನಂದನೆಗಳು.
ನನಗಂತೂ ಈ ಹವ್ಕಕ ಭಾಷೆಯ ಕತೆಗಳೆಂದರೆ ತುಂಬ ಇಷ್ಟ. ಉತ್ತರಕನ್ನಡವನ್ನು ಪೂರ್ಣ ಹವ್ಯಕದಲ್ಲೇ ಸುತ್ತಾಡಿಸಬೇಕಿತ್ತು. ಇನ್ನೂ ಖುಷಿಯಾಗುತ್ತಿತ್ತು. ನಾನು ಸಿರಸಿ, ಬನವಾಸಿ, ಮುಂತಾದ ಸ್ಥಳಗಳನ್ನು ನೋಡಿರುವೆ.ತುಂಬ ಚೆನ್ನಾಗಿ ಬರೆದಿದ್ದೀರಿ. ಪ್ರವಾಸ ಹೋಗಿ ಬಂದಹಾಗನಿಸಿತು
ಸೊಗಸಾದ ಕನ್ನಡ..ಹವ್ಯಕ ಕನ್ನಡ. ಹಲವಾರು ವರ್ಷ, ನೌಕರಿಯ ಸಲುವಾಗಿ ಕುಮಟಾದಲ್ಲಿ ಇದ್ದುದು ನೆನಪಾಯ್ತು.. ಹಳೆಯ ಸಂಪ್ರದಾಯಗಳನ್ನು ಇಂದಿಗೂ ಮೈಗೂಡಿಸಿಕೊಂಡಿರುವ ಅಲ್ಲಿಯ ಹಳ್ಳಿಯ ಜೀವನ ಸೊಗಸೇ ಸೊಗಸು. ಚಂದದ ಲೇಖನ ಕಣ್ರೀ..ಧನ್ಯವಾದಗಳು ತಮಗೆ.
ಉತ್ತರಕನ್ನಡದ ಬಗ್ಗೆ ಬಹಳ ಸುಂದರ ಮಾಹಿತಿಯನ್ನು ನೀಡಿದ್ದೀರಿ,ಚಂದದ ನಿರೂಪಣೆ
Oh! beautiful description of uttarakannada.
ಕನ್ನಡದ ಅದ್ಭುತ ಕಥೆಗಾರ್ತಿ ವೈದೇಹಿ ಅವರ ಕಥೆ ಓದಿ ದಂತಾಯಿತು
ಜಿಲ್ಲೆಯ ಪರಿಚಯ ಸಮಗ್ರವಾಗಿ ಸೊಗಸಾಗಿದೆ.
Notice: It seems you have Javascript disabled in your Browser. In order to submit a comment to this post, please write this code along with your comment: 3c104f60358d34354a429684582a6507
ಗೌರಿಗೆ ಗುಂಡು ಹಾರಿಸಿದ್ದು ಪರುಶರಾಮ್; ಎಫ್‍ಎಸ್‍ಎಲ್ ವರದಿ ದೃಢ | Kannadamma
Home ರಾಜ್ಯ ಗೌರಿಗೆ ಗುಂಡು ಹಾರಿಸಿದ್ದು ಪರುಶರಾಮ್; ಎಫ್‍ಎಸ್‍ಎಲ್ ವರದಿ ದೃಢ
ಬೆಂಗಳೂರು: ಪತ್ರಕರ್ತೆ ಗೌರಿ ಹತ್ಯೆ ಪ್ರಕರಣದ ಹಂತಕನನ್ನು ಸಾಬೀತು ಪಡಿಸುವಲ್ಲಿ ಎಸ್‍ಐಟಿ ತಂಡ ಯಶಸ್ವಿಯಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಗೌರಿಗೆ ಗುಂಡು ಹಾರಿಸಿದ್ದು,ಯಾರು ಎನ್ನುವುದರ ಬಗ್ಗೆ ಗುಜರಾತ್ ಎಫ್‍ಎಸ್‍ಎಲ್ ವರದಿ ದೃಢಪಡಿಸಿದೆ.ಬಂಧಿತರಾಗಿರುವ ಆರೋಪಿಗಳಲ್ಲಿ ಪ್ರಮುಖನಾಗಿರುವ ಪರುಶರಾಮ್ ಹತ್ಯೆ ನಡೆಸಿರುವುದು ಎಂದು ಸಾಬೀತಾಗಿದೆ.
ಜೂನ್ ತಿಂಗಳ ದೃಶ್ಯಾವಳಿಗಳನ್ನು ಎಫ್‍ಎಸ್‍ಎಲ್‍ಗೆ ಎಸ್‍ಐಟಿ ತಂಡ ಕಳುಹಿಸಿತ್ತು.ಇದೀಗ ಎಸ್‍ಐಟಿ ನೀಡಿದ್ದ ಸಾಕ್ಷ್ಯಗಳನ್ನು ಪರೀಶೀಲಿಸಿ ಎಫ್‍ಎಸ್‍ಎಲ್ ವರದಿ ನೀಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಎಸ್‍ಐಟಿ ಅಧಿಕಾರಿಗಳು ಆರೋಪಿ ಬಂಧಿಸಿ ವಿಚಾರಣೆ ನಡೆಸಿದಾಗ ಧರ್ಮ ಎನ್ನುವ ವಿಚಾರ ಒಂದೇ ನನ್ನ ತಲೆಯಲ್ಲಿತ್ತು. ಗೌರಿ ಅವರನ್ನು ಕೊಂದರೆ ಧರ್ಮ ಉಳಿಯತ್ತೆ,ಅದಕ್ಕೆ ಕೊಂದು ಮುಗಿಸಿದೆ.ಗೌರಿಲಂಕೇಶ್ ಬಗ್ಗೆ ನನ್ನ ಹಿರಿಯರು ಹೇಳುವಾಗ ಆಕೆ ಒಬ್ಬ ಧರ್ಮ ವಿರೋಧಿ ಎಂದು ನನ್ನ ರಕ್ತ ಕುದಿಯುತ್ತಿತ್ತು. ಅದಕ್ಕೆ ಆಕೆಯನ್ನು ಕೊಂದು ಹಾಕಿದೆ.
ಗೌರಿಹಿಂದೂ ವಿರೋಧಿ ಎಂದು ನಿರ್ಧರಿಸಿ ಕೊಲೆ ಮಾಡಿದೆ.ಗೌರಿಯನ್ನು ಕೊಂದ ನಂತರ ನನ್ನಿಂದ ಧರ್ಮ ಉಳಿಯಿತು, ಧರ್ಮಕ್ಕೆ ನಾನು ಅಳಿಲು ಸೇವೆ ಮಾಡಿದೆ ಎಂಬ ಹೆಮ್ಮೆಯಿಂದಲೇ ಮನೆಗೆ ಹೋದೆ ಎಂದು ಪ್ರಕರಣದ ಆರೋಪಿ ಬಾಯ್ಬಿಟ್ಟಿದ್ದಾನೆ.ಗೌರಿ ಹಂತಕರನ್ನು ಬಂಧಿಸುವ ಮೊದಲು ಎಸ್‍ಐಟಿ ತಂಡ ಆರೋಪಿಗಳ ರೇಖಾಚಿತ್ರ ಕೂಡ ಬಿಡಿಸಿ ಮಾಧ್ಯಮಕ್ಕೆ ಬಿಡುಗಡೆ ಮಾಡಿತ್ತು.ಆ ರೇಖಾ ಚಿತ್ರದಲ್ಲಿ ಈತನ ಕೂಡ ಇದ್ದ.ಇದೇ ಆರೋಪಿ...
ಭಾರತ-ನ್ಯೂಜಿಲ್ಯಾಂಡ್‌ ದ್ವಿತೀಯ ಟೆಸ್ಟ್‌, 4 ವೇಗಿಗಳ ಬೌಲಿಂಗ್‌ ಕಾಂಬಿನೇಶನ್‌? | Udayavani – ಉದಯವಾಣಿ
Wednesday, 08 Apr 2020 | UPDATED: 02:17 PM IST
Team Udayavani, Feb 27, 2020, 11:30 PM IST
ಕ್ರೈಸ್ಟ್‌ಚರ್ಚ್‌: ಭಾರತ-ನ್ಯೂಜಿಲ್ಯಾಂಡ್‌ ನಡುವಿನ ದ್ವಿತೀಯ ಟೆಸ್ಟ್‌ ಪಂದ್ಯದ ತಾಣವಾದ ಕ್ರೈಸ್ಟ್‌ಚರ್ಚ್‌ನ "ಹ್ಯಾಗ್ಲಿ ಓವಲ್‌' ಟ್ರ್ಯಾಕ್‌ ಸಂಪೂರ್ಣವಾಗಿ ವೇಗದ ಬೌಲಿಂಗಿಗೆ ನೆರವಾಗುವ ಸಾಧ್ಯತೆ ಇದೆ. ಇದಕ್ಕಾಗಿ ಆತಿಥೇಯ ಕಿವೀಸ್‌ 4 ಮಂದಿ ಸ್ಪೆಷಲಿಸ್ಟ್‌ ವೇಗಿಗಳನ್ನು ಕಣಕ್ಕಿಳಿಸಲು ನಿಧರಿಸಿದೆ. ಭಾರತ ಕೂಡ ಇದೇ ಕಾಂಬಿನೇಶನ್‌ನೊಂದಿಗೆ ಕಣಕ್ಕಿಳಿದೀತೇ ಎಂಬುದೊಂದು ಪ್ರಶ್ನೆ.
ಆಗ ಭಾರತ ತಂಡದಿಂದ ಸ್ಪಿನ್ನರ್‌ ಅಶ್ವಿ‌ನ್‌ ಹೊರಗುಳಿದು, ಈ ಸ್ಥಾನವನ್ನು ಉಮೇಶ್‌ ಯಾದವ್‌ ತುಂಬಬೇಕಾಗುತ್ತದೆ. ಆದರೆ ವೆಲ್ಲಿಂಗ್ಟನ್‌ನಲ್ಲಿ ಅಶ್ವಿ‌ನ್‌ ಬೌಲಿಂಗ್‌ ತೀರಾ ಕಳಪೆಯೇನೂ ಆಗಿರಲಿಲ್ಲ. ಅವರು 3 ವಿಕೆಟ್‌ ಉರುಳಿಸುವಲ್ಲಿ ಯಶಸ್ವಿಯಾಗಿದ್ದರು. ಸಮಸ್ಯೆ ಇರುವುದು ಅವರ ಬ್ಯಾಟಿಂಗಿನಲ್ಲಿ. 2017ರ ಬಳಿಕ ಅಶ್ವಿ‌ನ್‌ ರನ್‌ ಬರಗಾಲ ಅನುಭವಿಸುತ್ತ ಬಂದಿದ್ದಾರೆ.
ಅಶ್ವಿ‌ನ್‌ ಬದಲು ಸ್ಪಿನ್‌ ಬೌಲಿಂಗ್‌ ಆಲ್‌ರೌಂಡರ್‌ ರವೀಂದ್ರ ಜಡೇಜ ಅವರನ್ನು ಆಡಿಸುವ ಕುರಿತೂ ತಂಡದ ಆಡಳಿತ ಮಂಡಳಿ ಯೋಚಿಸುತ್ತಿದೆ.
ಪಟೇಲ್‌ ಬದಲು ವ್ಯಾಗ್ನರ್‌
ಪೇಸ್‌ ಬೌಲರ್‌ ನೀಲ್‌ ವ್ಯಾಗ್ನರ್‌ ನ್ಯೂಜಿಲ್ಯಾಂಡ್‌ ತಂಡವನ್ನು ಕೂಡಿಕೊಂಡಿದ್ದು, 2ನೇ ಟೆಸ್ಟ್‌ ಆಡುವುದು ಖಚಿತ ಎಂಬುದಾಗಿ ಕೋಚ್‌ ಗ್ಯಾರಿ ಸ್ಟೆಡ್‌ ಸುಳಿವು ಕೊಟ್ಟಿದ್ದಾರೆ. ಆಗ ಸ್ಪಿನ್ನರ್‌ ಅಜಾಜ್‌ ಪಟೇಲ್‌ ಹೊರಗುಳಿಯಲಿದ್ದಾರೆ. ಬೌಲ್ಟ್, ಸೌಥಿ, ಜಾಮೀಸನ್‌ ಮತ್ತು ಗ್ರ್ಯಾಂಡ್‌ಹೋಮ್‌ ಉಳಿದ ವೇಗಿಗಳು. ಇವರ ದಾಳಿಯನ್ನು ನಿಭಾಯಿಸಿ ನಿಲ್ಲುವುದು ಭಾರತಕ್ಕೆ ಭಾರೀ ಸಮಸ್ಯೆಯಾಗಬಹುದು. ಸರಣಿಯನ...
ಹರ್ದಿಕ್ ಪಾಂಡ್ಯರವರು ಖರೀದಿಸಿದ ಹೊಸ ಆಡಿ ಕಾರು ಹೇಗಿದೆ ನೀವೆ ನೋಡಿ.. - Kannada DriveSpark
24 min ago ಎರಡೂವರೆ ಟನ್ ತೂಕದ ಸ್ಕಾರ್ಪಿಯೋ ಕಾರನ್ನು ಸಲೀಸಾಗಿ ಎಳೆದ ಆರ್15 ಬೈಕ್..!
2 hrs ago ಎಂಜಿ ಹೆಕ್ಟರ್ ಎಸ್‌ಯುವಿ ಕಾರು ಖರೀದಿಗಾಗಿ ಅಧಿಕೃತ ಬುಕ್ಕಿಂಗ್‌ ಆರಂಭ
2 hrs ago ದೀಪಾವಳಿಗೆ ಬಿಡುಗಡೆಯಾಗಲಿದೆ ಸುಜುಕಿ ಜಿಕ್ಸರ್ 250 ನೇಕೆಡ್ ರೋಡ್‍‍ಸ್ಟರ್
News ನನ್ನ ರಾಜಕೀಯ ಜೀವನ ಮುಗಿದಿಲ್ಲ : ಮುದ್ದಹನುಮೇಗೌಡ
Movies ಈ ವಾರ 'ರೇಸ್'ಗೆ ಇಳಿಯಲಿದ್ದಾರೆ ಬಿಗ್ ಬಾಸ್ ದಿವಾಕರ್
ಹರ್ದಿಕ್ ಪಾಂಡ್ಯರವರು ಖರೀದಿಸಿದ ಹೊಸ ಆಡಿ ಕಾರು ಹೇಗಿದೆ ನೀವೆ ನೋಡಿ..
Updated: Thursday, April 19, 2018, 18:09 [IST]
ಭಾರತೀಯ ಯುವ ಆಟಗಾರರಾದ ಹರ್ಧಿಕ್ ಪಂಡ್ಯಾರವರು ಇಂಡಿಯನ್ ಸ್ಪೋರ್ಟ್ ಗೌರವಗಳಲ್ಲಿ ಅದ್ಭುತ ಸಾಧನೆಯ ಪ್ರಶಸ್ತಿಯನ್ನು ಪಡೆದುಕೊಂಡಿರುವ ವಿಷಯ ನಮಗೆಲ್ಲ ತಿಳಿದೆಯಿದೆ. ಇದೀಗ ಹರ್ಧಿಕ್ ಪಂಡ್ಯಾರವರು ಆಡಿ ಎ6 35ಟಿಡಿಐ ಐಷಾರಾಮಿ ಕಾರ್ ಅನ್ನು ಖರೀಸಿದಿದ್ದಾರೆ.
ಹರ್ದಿಕ್ ಪಾಂಡ್ಯರವರು ಈಗಾಗ್ಲೆ ರೇಂಜ್ ರೋವರ್ ಸಂಸ್ಥೆಯ ವೌಗ್ ಎಸ್‍ಯುವಿ ಕಾರನ್ನು ಖರೀದಿಸಿದ್ದು, ಇದೀಗ ಮತ್ತೊಂದು ಐಷಾರಾಮಿ ಸೆಡಾನ್ ಕಾರು ಕೂಡ ಪಟ್ಟಿಯಲ್ಲಿ ಸೇರಿಕೊಂಡಿದೆ. ಇನ್ನು ಹರ್ದಿಕ್ ಪಾಂಡ್ಯರವರು ಖರೀಸದಿಸಿದ ಎ6 35ಟಿಡಿಐ ಕಾರು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 64.5 ಲಕ್ಷಕ್ಕೆ ಮಾರಾಟಗೊಳ್ಳುತ್ತಿದೆ.
ಆಡಿ ಅ6 35 ಟಿಡಿಐ ಕಾರು ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ಲಭ್ಯವಿರಲಿದ್ದು ಡೀಸೆಲ್ ಆವೃತ್ತಿಯ ಕಾರುಗಳು 2 ಲೀಟರ್ 4 ಸಿಲೆಂಡರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಸಹಾಯದಿಂದ 190 ಬಿಹೆಚ್‍ಪಿ ಹಾಗು 400ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 7 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.
ಇನ್ನು ಕಾರಿನ ಪೆಟ್ರೋಲ್ ಆವೃತ್ತಿಯ ಕಾರುಗಳು 1.8 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಸಹಾಯದಿಂದ 190 ಬಿಹೆಚ್‍ಪಿ ಮತ್ತು 320ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವಶಕ್ತಿಯನ್ನು ಪಡೆದಿದ್ದು, 7 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.
ಆಡಿ 35ಟಿಡಿಐ ಕಾರಿನ ಡೀಸೆಲ್ ಆವೃತ್ತಿ ಕಾರುಗಳಿಗಿಂತ ಪೆಟ್ರೋಲ್ ಆವೃತ್ತಿಯ ಕಾರುಗಳು ಬೆಲೆಯಲ್ಲಿ ಮೂರು ಲಕ್ಷ ಕಮ್ಮಿಯಿದ್ದು, ಪ್ರಯಾಣಿಕರ ರಕ್ಷಣೆಗಾಗಿ ಎಂತು ಏರ್‍‍ಬ್ಯಾಗ್‍ಗಳು, ಎಬಿಎಸ್, ಇಬಿಡಿ, ಟ್ರಾಕ್ಷನ್ ಕಂಟ್ರೋಲ್, ಇಎಸ್‍ಪಿ, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಹಾಗು ಸೆನ್ಸಾರ್ಸ್, ಕ್ರೂಸ್ ಕಂಟ್ರೋಲ್ ಮತ್ತು ಹಿಲ್ ಹೋಲ್ಡ್ ಎಂಬ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.
ಇನ್ನು ಆಡಿ 35ಟಿಡಿಐ ಕಾರು 4915ಎಂಎಂ ಉದ್ದ, 1874 ಅಗಲ, 1455ಎಂಎಂ ಎತ್ತರ, 165ಎಂಎಂ ಗ್ರೌಡ್ ಕ್ಲಿಯರೆನ್ಸ್ ಮತ್ತು 2912ಎಂಎಮ್ ವೀಲ್‍‍ಬೇಸ್ ಅನ್ನು ಪಡೆದುಕೊಂಡಿದ್ದು, ಮಾರುಕಟ್ಟೆಯಲ್ಲಿ ಆಡಿ ಸಂಸ್ಥೆಯ ಹೆಚ್ಚು ಮಾರಾಟಗೊಂಡ ಕರಾಗಿದೆ ಎನ್ನಲಾಗಿದೆ.
ಹರ್ದಿಕ್ ಪಾಂಡ್ಯರವರು ಈ ಹಿಂದೆಯೆ ಜೀಪ್ ಕಾಂಪಾಸ್ ಕಾರನ್ನು ಉಡುಗೊರೆಯಾಗಿ ಪಡಿದಿದ್ದರು. ಇನ್ನು ಹೊಸದಗಿ ಖರೀದಿಸಿದ ಆಡಿ ಎ6 35ಟಿಡಿಐ ಕಾರುಗಳು ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಇ ಕ್ಲಾಸ್ ಮತ್ತು ಬಿಎಂಡಬ್ಲ್ಯೂ 5 ಸಿರೀಸ್ ಕಾರುಗಳಿಗೆ ಪೈಪೋತಿಯನ್ನು ನೀಡುತ್ತಿವೆ.
ಟ್ಯಾಂಕರ್: Latest News, Photos, Videos on ಟ್ಯಾಂಕರ್ | kannada.asianetnews.com
Karnataka Districts30, Apr 2020, 8:55 PM
ಡಿಶುಂ..ಡಿಶುಂ.. ಕಾರವಾರದಲ್ಲಿ ಚಾಲಕರಿಬ್ಬರ ಬೀದಿ ಹೊಡೆದಾಟ..ವಿಡಿಯೋ
ಕಾರವಾರದಲ್ಲಿ ಟ್ಯಾಂಕರ್ ಚಾಲಕರಿಬ್ಬರು ಕ್ಷುಲ್ಲಕ ಕಾರಣಕ್ಕೆ ರಸ್ತೆಯಲ್ಲೇ ಮಾರಾಮಾರಿ ನಡೆಸಿದ್ದಾರೆ. ಕಾರವಾರ ಪ್ರವೇಶಿಸುವ ವಿಚಾರದಲ್ಲಿ ಡಿಶುಂ ಡಿಶುಂ ನಡೆದಿದೆ. ಕೊರೋನಾ ಲಾಕ್ ಡೌನ್ ನಡುವೆ ಈ ಚಾಲಕರಿಬ್ಬರ ಹೊಡೆದಾಟ ಒಂದುಷ್ಟು ಪುಕ್ಕಟ ಮನರಂಜನೆ ನೀಡಿದ್ದು ಸುಳ್ಳಲ್ಲ.
Coronavirus Karnataka4, Apr 2020, 11:37 AM
ಲಾಕ್‌ಡೌನ್‌ ಸಂದರ್ಭದಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ಕೆಜಿಎಫ್‌ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ದೂರವಾಣಿ ಮೂಲಕ ಮನವಿ ಮಾಡಿದ ಪ್ರತಿಯೊಬ್ಬರಿಗೂ ಮನೆ ಬಾಗಿಲಿಗೆ ಉಚಿತ ಟ್ಯಾಂಕರ್‌ ನೀರು ಸರಬರಾಜು ಮಾಡಲು ಕ್ರಮ ಕೈಗೊಂಡಿರುವುದಾಗಿ ಶಾಸಕಿ ರೂಪಕಲಾ ಶಶಿಧರ್‌ ತಿಳಿಸಿದ್ದಾರೆ.
Karnataka Districts9, Feb 2020, 2:07 PM
ಮಂಗಳೂರು: ಓವರ್‌ಟೇಕ್‌ ಭರದಲ್ಲಿ ಅಪಘಾತ, ಇಬ್ಬರು ಸಾವು
ಓವರ್‌ಟೇಕ್ ಮಾಡೋ ಭರದಲ್ಲಿ ಕಾರು ಟ್ಯಾಂಕರ್‌ಗೆ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಒಬ್ಬನ ಸ್ಥಿತಿ ಗಂಭೀರವಾಗಿದೆ.
Karnataka Districts30, Dec 2019, 8:51 AM
ಧಾರವಾಡ: ಕಾರು, ಟ್ಯಾಂಕರ್ ಮುಖಾಮುಖಿ ಡಿಕ್ಕಿ, ಇಬ್ಬರ ದುರ್ಮರಣ
ಕಾರು ಮತ್ತು ಟ್ಯಾಂಕರ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಇಬ್ಬರ ಮೃತಪಟ್ಟು, ಓರ್ವ ವ್ಯಕ್ತಿಗೆ ಗಾಯುವಾದ ಘಟನೆ ನಗರದ ಬೈಪಾಸ್ ಯರಿಕೊಪ್ಪ ಡೌನಲ್ ಬಳಿ ಇಂದು ಬೆಳಗ್ಗೆ(ಸೋಮವಾರ) ನಡೆದಿದೆ.
Karnataka Districts26, Dec 2019, 7:31 AM