text
stringlengths
0
61.5k
ಪ್ರಾವಿಡೆಂಟ್ ಫಂಡ್ ಗೆ ಹೊರತಾಗಿ ಹೂಡಿಕೆದಾರರು ವಾಲಂಟರಿ ಪ್ರಾವಿಡೆಂಟ್ ಫಂಡ್ (ವಿಪಿಎಫ್) ಮೂಲಕ ಹೆಚ್ಚುವರಿ ಹಣ ಹಾಕಬಹುದು. ತೆರಿಗೆ ಉಳಿತಾಯಕ್ಕೆ ಇದು ಮತ್ತೊಂದು ಉತ್ತಮ ದಾರಿ. ಬಡ್ಡಿಯ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ. ಆದರೆ ನೀವು ಐದು ವರ್ಷಗಳ ಕಾಲ ಹೂಡಿಕೆ ಮಾಡಿರಬೇಕು. ವಿಪಿಎಫ್ ಗೆ ಕೂಡ ಇಪಿಎಫ್ ರೀತಿಯಲ್ಲೇ ಬಡ್ಡಿ ದರ ಬರುತ್ತದೆ. ಐದು ವರ್ಷದ ನಂತರ ಗಳಿಸಿದ ಬಡ್ಡಿಗೆ ತೆರಿಗೆ ಇಲ್ಲ. ಬ...
ಸೆಕ್ಷನ್ 10 (10D), ಆದಾಯ ತೆರಿಗೆ ಕಾಯ್ದೆ 1961ರ ಅಡಿಯಲ್ಲಿ ಯುಲಿಪ್ ಮೇಲಿನ ಆದಾಯಕ್ಕೆ ತೆರಿಗೆ ಇಲ್ಲ. ಆದರೆ ಇದರಲ್ಲಿ ಒಂದು ನಿಬಂಧನೆ ಇದೆ. ವಾರ್ಷಿಕ ಪ್ರೀಮಿಯಂ ಸಮ್ ಅಶ್ಯೂರ್ಡ್ ನ 10 ಪರ್ಸೆಂಟ್ ಗಿಂತ ಕಡಿಮೆ ಇರಬೇಕು. ಇನ್ನು ಈ ಯೋಜನೆಯನ್ನು ಏಪ್ರಿಲ್ 1, 2012ರ ನಂತರ ಖರೀದಿಸಿರಬೇಕು. ಇದರಲ್ಲಿ ಇನ್ಷೂರೆನ್ಸ್ ಮತ್ತು ಹೂಡಿಕೆ ಎರಡೂ ಅನುಕೂಲ ಇದೆ. ಆರಂಭದ ವರ್ಷದಲ್ಲಿ ಇದರ ಮೇಲೆ ಪ್ರತಿಫಲ ...
ಅತಿವೃಷ್ಟಿ ಹಾನಿ ಕಾಮಗಾರಿ ತ್ವರಿತಕ್ಕೆ ಸಚಿವ ರವಿ ಸೂಚನೆ | Udayavani – ಉದಯವಾಣಿ
Team Udayavani, Apr 24, 2020, 1:48 PM IST
ಚಿಕ್ಕಮಗಳೂರು: 2019ರಲ್ಲಿ ಮಳೆಯಿಂದಾದ ಅತಿವೃಷ್ಟಿ ನಿವಾರಣೆ ಮಾಡುವ ಕುರಿತು ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಚಿವ ಸಿ.ಟಿ. ರವಿ ಸಭೆ ನಡೆಸಿದರು.
ಚಿಕ್ಕಮಗಳೂರು: ಕಳೆದ ಆಗಸ್ಟ್‌ ಸೆಪ್ಪೆಂಬರ್‌ ತಿಂಗಳಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಕಟ್ಟಡ, ಮನೆ, ಸೇತುವೆ ನಿರ್ಮಾಣ ಕಾಮಗಾರಿಗಳನ್ನು ಮುಂಗಾರು ಆರಂಭಗೊಳ್ಳುವುದರೊಳಗೆ ಪೂರ್ಣಗೊಳಿಸುವಂತೆ ಸಚಿವ ಸಿ.ಟಿ. ರವಿ ಅಧಿಕಾರಿಗಳಿಗೆ ಸೂಚಿಸಿದರು.
ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ 2019ರ ಆಗಸ್ಟ್‌- ಸೆಪ್ಪೆಂಬರ್‌ ತಿಂಗಳಲ್ಲಿ ಮಳೆಯಿಂದಾದ ಅತಿವೃಷ್ಟಿ ನಿವಾರಣೆ ಮಾಡುವ ಕುರಿತು ವಿವಿಧ ಇಲಾಖೆ ಅಧಿಕಾರಿಗಳೊಂದಿಗಿನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಳೆದ ಬಾರಿ ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ಸಾಕಷ್ಟು ಮನೆ, ಶಾಲಾ ಕಟ್ಟಡ, ಸೇತುವೆ, ರಸ್ತೆಗಳು ಸೇರಿದಂತೆ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಹಾನಿಗೊಳಗಾಗಿದ್ದವ...
ಈ ಬಗ್ಗೆ ಕ್ರಮ ವಹಿಸಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅತಿವೃಷ್ಟಿಯಿಂದ ಹಾನಿಗೊಳಗಾದ ಎ,ಬಿ ಹಾಗೂ ಸಿ
ಕೆಟಗರಿಯ ಮನೆಗಳಲ್ಲಿ ಒಟ್ಟು 2612 ಮನೆಗಳಿದ್ದು, 1,616 ಮನೆಗಳು ಪೂರ್ಣವಾಗಿದ್ದು, 584 ಮನೆಗಳ ಕಾಮಗಾರಿ ನಡೆಯುತ್ತಿದೆ. 430 ಮನೆಗಳ ಯಾವುದೇ ಕಾಮಗಾರಿ ಇನ್ನು ಆರಂಭವಾಗಿಲ್ಲ ನಡೆಯದೆ ಬಾಕಿ ಉಳಿದಿದೆ. ಹಣ ಬಿಡುಗಡೆಯಾಗಿದ್ದರೂ ಕಾಮಗಾರಿ ಆರಂಭಿಸದ ಫಲಾನುಭವಿಗಳಿಗೆ ಅನುದಾನ ವಾಪಸ್‌ ಪಡೆಯುವುದಾಗಿ ನೋಟಿಸ್‌ ಅಥವಾ ತಿಳುವಳಿಕೆ ಪತ್ರ ನೀಡುವಂತೆ ತಿಳಿಸಿದರು.
ಮನೆ ನಿರ್ಮಾಣಕ್ಕಾಗಿ ಅಂಗಡಿ, ಮಾವಿನಕೆರೆ, ಬಿ.ಹೊಸಹಳ್ಳಿ ಭಾಗದಲ್ಲಿ ಒಟ್ಟು 16 ಎಕರೆ ನಿವೇಶನ ಜಾಗ ಗುರುತಿಸಲಾಗಿದ್ದು, ಕೆಲವರಿಗೆ ಹಕ್ಕುಪತ್ರ ವಿತರಿಸಲಾಗಿದೆ. ಇನ್ನು ಕೆಲವರು ಹಕ್ಕುಪತ್ರ ಪಡೆಯಲು ನಿರಾಕರಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ| ಬಗಾದಿ
ಗೌತಮ್‌ ಸಭೆಗೆ ತಿಳಿಸಿದರು. ಕೋವಿಡ್ ಗೆ ಸಂಬಂಧಿಸಿದಂತೆ ಜಿಲ್ಲೆಯ ಸುರಕ್ಷತೆಗಾಗಿ ಅವಶ್ಯಕವಿರುವ 3,500 ಪಿ.ಪಿ.ಇ ಕಿಟ್‌ಗಳನ್ನು
ಹೊಂದಲಾಗಿದ್ದು, ಅಗತ್ಯ ಪ್ರಮಾಣದ ಮಾಸ್ಕ್ಗಳನ್ನು ಹೊಂದಲಾಗಿದೆ. ಜೊತೆಗೆ ಇನ್ನೂ 5 ಸಾವಿರ ಮಾಸ್ಕ್ಗಳಿಗೆ ಬೇಡಿಕೆ ಇಡಲಾಗಿದೆ. ಜಿಲ್ಲೆಯಲ್ಲಿ ಕಟ್ಟಡ ಕಾಮಗಾರಿಗಳ ಕೆಲಸ ಆರಂಭಿಸಲು ಯಾವುದೇ ಅಡೆ ತಡೆಗಳಿಲ್ಲ. ಆದಷ್ಟು ಶೀಘ್ರ ದುರಸ್ತಿ ಕಾರ್ಯಗಳನ್ನು ಪೂರ್ಣಗೊಳಸುವಂತೆ ತಿಳಿಸಿದರು. ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಎಸ್‌. ಪೂವಿತಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರೀಶ್‌ ಪಾ...
ಕೃಷಿ ಚಟುವಟಿಕೆಗೆ ಎತ್ತುಗಳ ಕೊರತೆ | Udayavani – ಉದಯವಾಣಿ
Wednesday, 01 Dec 2021 | UPDATED: 09:47 PM IST
ಲಾಕ್‌ಡೌನ್‌ನ ಆವಾಂತರ-ಅನ್ನದಾತನ ಪರದಾಟ
Team Udayavani, May 18, 2020, 4:17 PM IST
ಹಾವೇರಿ: ವರ್ಷವಿಡೀ ಒಂದಲ್ಲ ಒಂದು ಸಮಸ್ಯೆಯ ಸುಳಿಯಲ್ಲಿ ಸಿಲುಕುವ ಅನ್ನದಾತನಿಗೆ ಈ ಬಾರಿಯ ಮುಂಗಾರು ಹಂಗಾಮಿನ ಕೃಷಿಗೆ ಯೋಗ್ಯ ಎತ್ತುಗಳು ಸಿಗದೇ ಪರದಾಡುವ ಪರಿಸ್ಥಿತಿ ಎದುರಾಗಿದೆ. ಇದು ಲಾಕ್‌ಡೌನ್‌ ಸೃಷ್ಟಿಸಿದ ಆವಾಂತರಗಳಲ್ಲೊಂದಾಗಿದೆ.
ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ವಿಧಿಸಿದ ಲಾಕ್‌ಡೌನ್‌ನಿಂದಾಗಿ ಎತ್ತುಗಳ ಸಂತೆ ನಡೆದಿಲ್ಲ. ಹೀಗಾಗಿ ರೈತರು ಯೋಗ್ಯ ಎತ್ತುಗಳನ್ನು ಖರೀದಿಸಲಾಗದೆಈಗ ಪರಿತಪಿಸುವಂತಾಗಿದೆ. ಆದ್ದರಿಂದ ಈ ಬಾರಿ ರೈತರು ಕೃಷಿ ಚಟುವಟಿಕೆಗೆ ಯಂತ್ರಗಳಿಗೇ ಹೆಚ್ಚು ಮೊರೆ ಹೋಗುವುದು ಅನಿವಾರ್ಯವಾಗಿದೆ.
ಸಾಮಾನ್ಯವಾಗಿ ರೈತರು ಮುಂದಿನ ಹಂಗಾಮಿನ ಕೃಷಿ ಚಟುವಟಿಕೆಗೆ ಬೇಕಾದ ಎತ್ತುಗಳನ್ನು ಹೊಸ ವರ್ಷ ಯುಗಾದಿ ಸಮಯದಲ್ಲಿಯೇ ಜಾನುವಾರು ಸಂತೆಗೆ ಹೋಗಿ ಖರೀದಿಸುತ್ತಾರೆ. ಅವುಗಳನ್ನು ಕೃಷಿ ಚಟುವಟಿಕೆಗೆ ಬಳಸಿಕೊಂಡು ಮುಂದಿನ ಹಂಗಾಮಿನ ವೇಳೆಗೆ ಅದು ಬಲಿಷ್ಠವಾಗಿದ್ದರೆ ಮತ್ತೆ ಕೃಷಿ ಚಟುವಟಿಕೆಗೆ ಬಳಸಿಕೊಳ್ಳುತ್ತಾರೆ. ದುರ್ಬಲವಾಗಿದ್ದರೆ ಅವುಗಳನ್ನು ಮಾರಿ ಇಲ್ಲವೇ ಗೋಶಾಲೆಗೆ ಬಿಟ್ಟು ಹೊಸ ಎತ್ತುಗಳನ್ನು ಖರ...
ಇಂದಿನ ಯಾಂತ್ರೀಕೃತ ಜಗತ್ತಿನಲ್ಲಿ ಕೃಷಿ ಕ್ಷೇತ್ರವೂ ಹಿಂದೆ ಬಿದ್ದಿಲ್ಲ. ಇಲ್ಲಿಯೂ ಎಲ್ಲದಕ್ಕೂ ಯಂತ್ರಗಳನ್ನು ಬಳಸಲಾಗುತ್ತಿದೆ. ಆದರೆ, ಯಾಂತ್ರಿಕೃತ ಕೃಷಿ ಬಹುಸಂಖ್ಯಾತ ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ವರ್ಗದ ರೈತರಿಗೆ ಆರ್ಥಿಕ ಹೊರೆಯಾಗುತ್ತದೆ. ಆದ್ದರಿಂದ ರೈತರು ಉಳುಮೆ, ಬಿತ್ತನೆ, ಕಟಾವು ಸೇರಿದಂತೆ ಎಲ್ಲದಕ್ಕೂ ಎತ್ತು ಹಾಗೂ ಮಾನವಶಕ್ತಿಯನ್ನೇ ಅವಲಂಬಿಸಿಕೊಂಡೇ ಬಂದಿದ್ದಾರೆ. ಮನೆಯಲ್ಲಿ ಒಂ...
ಬಾಡಿಗೆ ದುಬಾರಿ: ಟ್ರ್ಯಾಕ್ಟರ್‌ ಸೇರಿದಂತೆ ಇತರ ಕೃಷಿ ಯಂತ್ರೋಪಕರಣಗಳು ಬಾಡಿಗೆ ಆಧಾರದಲ್ಲಿ ಅಲ್ಲಲ್ಲಿ ಸಿಗುತ್ತಿದೆಯಾದರೂ ಅವುಗಳ ಬಾಡಿಗೆ ದರ ನಿಭಾಯಿಸುವುದು ಸಣ್ಣ ರೈತರಿಗೆ ಕಷ್ಟವಾಗಿದೆ. ಇನ್ನು ಸಾಲಸೂಲ ಮಾಡಿಯಾದರೂ ಬಾಡಿಗೆ ಯಂತ್ರ ಬಳಸಿಕೊಂಡೇ ಕೃಷಿ ಮಾಡಿದರಾಯಿತು ಎಂದುಕೊಂಡರೆ ಬಾಡಿಗೆ ಯಂತ್ರಗಳ ಸಂಖ್ಯೆ ಕಡಿಮೆ ಇರುವುದರಿಂದ ಅವು ರೈತರಿಗೆ ಅಗತ್ಯ ಸಮಯದಲ್ಲಿಯೂ ಸಿಗುವುದಿಲ್ಲ. ಇದರಿಂದ ಕೃ...
ಟ್ರ್ಯಾಕ್ಟರ್‌ ಮೊರೆ : ಕಳೆದ ಸಲ ನೆರೆ ಬಂದಿದ್ದರಿಂದ ನಿರ್ವಹಣೆ ಮಾಡಲಾಗದೆ ಹಲವರು ಎತ್ತುಗಳನ್ನು ನವೆಂಬರ್‌- ಡಿಸೆಂಬರ್‌ ಒಳಗೆಯೇ ಕಡಿಮೆ ಬೆಲೆಗೆ ಮಾರಿದ್ದಾರೆ. ಲಾಕ್‌ಡೌನ್‌ ನಿಂದಾಗಿ ಜಾನುವಾರು ಸಂತೆ ನಡೆದಿಲ್ಲ. ಹೀಗಾಗಿ ಬಹಳಷ್ಟು ರೈತರಿಗೆ ಹೊಸ ಎತ್ತುಗಳನ್ನು ಖರೀದಿಸಲು ಸಾಧ್ಯವಾಗಿಲ್ಲ. ಮನೆಯಲ್ಲಿ ಎತ್ತು ಇರುವವರು ಅವುಗಳನ್ನೇ ಬಳಸಿಕೊಂಡು ಉಳುಮೆ ಮಾಡುವುದು ಅನಿವಾರ್ಯವಾಗಿದೆ. ಇಲ್ಲವೇ ಬ...
5 ಟ್ರಿಲಿಯನ್ ಡಾಲರ್ ಅರ್ಥ ವ್ಯವಸ್ಥೆಯ ಹಾದಿ ಅಸ್ಪಷ್ಟ | Vartha Bharati- ವಾರ್ತಾ ಭಾರತಿ
ವಾರ್ತಾ ಭಾರತಿ Jul 11, 2019, 12:04 AM IST
ಭಾರತ ಮುಂದಿನ ಐದು ವರ್ಷಗಳಲ್ಲಿ 5 ಟ್ರಿಲಿಯನ್ ಡಾಲರ್ ಅರ್ಥ ವ್ಯವಸ್ಥೆಯಾಗುವ ಗುರಿ ಹೊಂದಿದೆ. ಆದರೆ 'ಟ್ರಿಲಿಯನ್' ಅಂದರೆ ಎಷ್ಟೆಂದು ಬಹಳ ಮಂದಿಗೆ ಗೊತ್ತಿರಲಾರದು. ಒಂದು ಟ್ರಿಲಿಯನ್ ಒಂದು ಲಕ್ಷ ಕೋಟಿಗೆ ಸಮಾನ. 5ರ ಮುಂದೆ ಹನ್ನೆರಡು ಸಂಖ್ಯೆಗಳನ್ನು ಇಟ್ಟರೆ ಅದು ಟ್ರಿಲಿಯನ್ ಆಗುತ್ತದೆ. ಈ ಗುರಿ ರೂಪಾಯಿಯಲ್ಲಿಲ್ಲ. ಇದು ಇರುವುದು ಡಾಲರ್‌ನಲ್ಲಿ. ಡಾಲರ್ ಎಂಬುದು ಅರ್ಥ ವ್ಯವಸ್ಥೆಗೆ ಜಾಗತಿಕ ಮ...
ಆ ಮೈಲುಗಲ್ಲನ್ನು ತಲುಪಬೇಕಾದರೆ ಮಾಡಬೇಕಾದ ಕೆಲಸ ತುಂಬಾ ಇದೆ. ಇದೆಲ್ಲದರ ಜೊತೆ ಡಾಲರ್-ರೂಪಾಯಿ ಮೌಲ್ಯ ಕುಸಿಯದಂತೆ, ಡಾಲರ್ ಎದುರು ರೂಪಾಯಿ ವೌಲ್ಯ ಕೆಳಗಿಳಿಯದಂತೆ ನೋಡಿಕೊಳ್ಳಬೇಕು. ಯಾಕೆಂದರೆ ಹೀಗೇನಾದರೂ ಆದಲ್ಲಿ ಉದಾಹರಣೆಗೆ ರೂಪಾಯಿ ಡಾಲರ್ ಎದುರು ಮೌಲ್ಯ ಶೇ. 20 ಕುಸಿದಲ್ಲಿ, ಆಗ ಅದು ಶೇ. 20ರಷ್ಟು ಜಾಸ್ತಿ ಯಾಗಬೇಕಾಗುತ್ತದೆ. (5ರ ಬದಲು 6 ಟ್ರಿಲಿಯನ್ ಆಗಬೇಕಾಗುತ್ತದೆ.)
ಆದ್ದರಿಂದ ನಾವು ಬಳಸುವ ತಂತ್ರದಲ್ಲಿ ಒಂದು ಮಿಲಿಯ (ಅಥವಾ ಬಿಲಿಯ) ಕೆಲಸಗಳನ್ನು ಮಾಡಬೇಕಾಗುತ್ತದೆ. ಜೊತೆಗೆ ರೂಪಾಯಿ-ಡಾಲರ್ ವಿನಿಮಯ ದರದಲ್ಲಿ ತುಲನಾತ್ಮಕವಾಗಿ ತುಂಬಾ ಏರುಪೇರಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಇದು ತುಂಬಾ ಮಹತ್ವಾಕಾಂಕ್ಷೆಯ ಗುರಿ. ಯಾಕೆಂದರೆ ಕಳೆದ ಐದು ವರ್ಷಗಳಲ್ಲಿ ಆರ್ಥಿಕವಾಗಿ ನಾವು ಗಾತ್ರದಲ್ಲಿ ಒಂದು ಟ್ರಿಲಿಯನ್ ಡಾಲರ್‌ಗಿಂತಲೂ ಕಡಿಮೆ ಬೆಳವಣಿಗೆ ಕಂಡಿದ್ದೇವೆ.
ಮುಂದಿನ ಐದು ವರ್ಷಗಳಲ್ಲಿ ನಾವು ಕನಿಷ್ಠ ಪಕ್ಷ ಇದಕ್ಕಿಂತ ಎರಡು ಪಟ್ಟು ವೇಗದಲ್ಲಿ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಾ ಬೆಳೆಯಬೇಕು. ಆರ್ಥಿಕ ಸಮೀಕ್ಷೆಯ ಪ್ರಕಾರ ಈ ಐದರಲ್ಲಿ ಮೊದಲ ವರ್ಷ ಶೇ. 7 ಜಿಡಿಪಿಯ ಬೆಳವಣಿಗೆ ಸಾಧ್ಯವಾದೀತು. ಆದ್ದರಿಂದ ಉಳಿದ ನಾಲ್ಕು ವರ್ಷಗಳಲ್ಲಿ ನಾವು ವೇಗವನ್ನು ಹೆಚ್ಚಿಸಿಕೊಳ್ಳಬೇಕು. ವಾಸ್ತವಿಕವಾಗಿ ವಿತ್ತ ಸಚಿವರು ತನ್ನ ಬಜೆಟ್ ಭಾಷಣದಲ್ಲಿ ಕೆಲವು (ಫ್ಯೂ) ವರ್ಷಗಳ...
ಈ ನಿಟ್ಟಿನಲ್ಲಿ 2001ರ ಸೆಪ್ಟ್ಟಂಬರ್‌ನಲ್ಲಿ ನಡೆದ ಒಂದು ಘಟನೆಯನ್ನು ಜ್ಞಾಪಿಸಿಕೊಳ್ಳುವುದು ಸೂಕ್ತ. ಜಾಗತಿಕವಾಗಿ ಪ್ರಸಿದ್ಧವಾದ ಬಹುರಾಷ್ಟ್ರೀಯ ಸಮಾಲೋಚನಾ ಕಂಪೆನಿಯೊಂದು ಎರಡಂಕೆಯ ಆರ್ಥಿಕ ಅಭಿವೃದ್ಧಿ ಸಾಧಿಸುವ ಬಗ್ಗೆ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಒಂದು ಪ್ರಾತ್ಯಕ್ಷಿಕೆ ತೋರಿಸಿತು. ಪರದೆಯ ಮೇಲೆ ತೋರಿಸಲಾದ ಅಂಕಿ ಸಂಖ್ಯೆಗಳು, ಚಿತ್ರಗಳು ಎಲ್ಲವೂ ಅದ್ಭುತವಾಗಿದ್ದವು. ಅ...
ಆ ಪವರ್‌ಪಾಯಿಂಟ್ ಪ್ರಾತ್ಯಕ್ಷಿಕೆ ಉದ್ದಕ್ಕೂ ಪ್ರಧಾನಿಯವರು ತಾಳ್ಮೆಯಿಂದ ಕುಳಿತು ಎಲ್ಲವನ್ನೂ ಕೇಳಿಸಿಕೊಂಡರು. ಕೊನೆಗೆ ಅವರು ಮುಗುಳ್ನಕ್ಕು ಕೇಳಿದರು, ''ಪರ್ ಯೇ ಸಬ್ ಹೋಗಾ ಕೈಸೆ?'' (ಆದರೆ ನಾವು ಅದನ್ನು ಸಾಧಿಸುವುದು, ಆ ಗುರಿ ತಲುಪುವುದು ಹೇಗೆ?) 5 ಟ್ರಿಲಿಯನ್ ಡಾಲರ್ ಗುರಿಯ ಬಗ್ಗೆ ಕೂಡ ಇದೇ ಪ್ರಶ್ನೆಯನ್ನು ಕೇಳಬಹುದು.
ವಿತ್ತ ಸಚಿವರ ಬಜೆಟ್ ಪ್ರಸ್ತಾವಗಳಲ್ಲಿ ರಸ್ತೆಗಳ ನಿರ್ಮಾಣ, ಸಾಗರ್‌ಮಾಲಾ, (ಅನೇಕ ಬಂದರುಗಳ ನಡುವೆ ಸಂಪರ್ಕಿಸುವುದು) ರೈಲ್ವೆ ಮತ್ತು ವಿಮಾನ ಮಾರ್ಗಗಳು, ಅನಿಲ ಮತ್ತು ವಿದ್ಯುತ್‌ಗೆ ರಾಷ್ಟ್ರೀಯ ವ್ಯವಸ್ಥೆ ಇತ್ಯಾದಿಗಳಿವೆ ಈ ಎಲ್ಲ ಮೂಲ ಚೌಕಟ್ಟುಗಳು ಖಂಡಿತವಾಗಿಯೂ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತವೆ.
ಆದರೆ ಬಜೆಟ್‌ನಲ್ಲಿ ಮಾಡಲಾಗಿರುವ ಒಟ್ಟು ಬಂಡವಾಳ ಹೂಡಿಕೆಯನ್ನು ಗಮನಿಸಿದರೆ, ಅದು ನಿಜವಾಗಿ ಕಡಿಮೆಯಾಗುತ್ತಿದೆ ಎಂದು ಗೊತ್ತಾಗುತ್ತದೆ. ಕಳೆದ ಮೂರು ವರ್ಷಗಳಲ್ಲಿ ಮೂಲ ಚೌಕಟ್ಟುಗಳಿಗೆ ಸರಕಾರದ ಕೊಡುಗೆ (2017-18ರಲ್ಲಿ) ಶೇ. 5.2ರಿಂದ 4.6ಕ್ಕೆ (2018-19ರಲ್ಲಿ) ಇಳಿದಿದೆ. ಆದ್ದರಿಂದ ಖಾಸಗಿ ರಂಗದ ಹೂಡಿಕೆ ಹರಿದು ಬಂದಲ್ಲಿ ಮಾತ್ರ ನಿರೀಕ್ಷಿತ ಆರ್ಥಿಕ ಬೆಳವಣಿಗೆಗೆ ಸಾಧ್ಯ ಎಂದು ಹೇಳಬಹುದು.
ಆದರೆ ಹಲವು ವರ್ಷಗಳಿಂದ ಈ ಹೂಡಿಕೆಯ ಪ್ರಮಾಣದಲ್ಲಿ ಏರಿಕೆಯಾಗಿಲ್ಲ. ಆದ್ದರಿಂದ ನಾವು ಸಾಕಷ್ಟು ವೇಗವಾಗಿ ಸಾಗಿ 5 ಟ್ರಿಲಿಯನ್ ಡಾಲರ್ ಗುರಿತಲುಪಲು ಎದುರಾಗುವ ಅತ್ಯಂತ ದೊಡ್ಡ ಸವಾಲು ಈ ಹೂಡಿಕೆಯೇ ಆಗಿದೆ.
ಸಾರ್ವಜನಿಕ ರಂಗದ ಬ್ಯಾಂಕುಗಳಿಗೆ ಸರಕಾರ ನೀಡುವ 70,000 ಕೋಟಿ ರೂಪಾಯಿಯ ಬಂಡವಾಳದ ಒಳಹರಿವು ಈ ನಿಟ್ಟಿನಲ್ಲಿ ಸಹಕಾರಿಯಾದೀತು. ಹಾಗೆಯೇ ಒಟ್ಟು 400 ಕೋಟಿ ರೂಪಾಯಿಗಿಂತ ಕಡಿಮೆ ವ್ಯವಹಾರವಿರುವ ಎಲ್ಲ ಕಂಪೆನಿಗಳಿಗೆ ಶೇಕಡ ಇಪ್ಪತ್ತೈದು ಆದಾಯ ತೆರಿಗೆ ವಿಧಿಸುವ ಕಡಿಮೆ ಆದಾಯ ತೆರಿಗೆ ಕ್ರಮ ಕೂಡ ಈಗ ತುಂಬಾ ಅವಶ್ಯಕವಾಗಿರುವ ಒಂದು ಹೆಜ್ಜೆಯಾಗಿದೆ.
5 ಟ್ರಿಲಿಯನ್ ಡಾಲರ್‌ಗೆ ಸಾಗುವ ಹಾದಿಯನ್ನು ಇನ್ನೂ ಚಿಕ್ಕ ಚಿಕ್ಕದಾದ ಮತ್ತು ತಕ್ಷ್ಷಣದ ಮೈಲುಗಲ್ಲುಗಳಿರುವ ಹಾದಿಯಾಗಿ ಮಾಡಿಕೊಳ್ಳಬೇಕಾಗಿದೆ. ಇದಕ್ಕೆ ಪ್ರತಿಯೊಂದು ರಂಗದ ಗುರಿಗಳನ್ನು ಹಾಕಿಕೊಳ್ಳಬೇಕು; ಆದರೆ ಇದು ಕೇಂದ್ರೀಯ ಯೋಜನೆ ಎಂಬ ಅರ್ಥದಲ್ಲಿ ಅಲ್ಲ.
ಉದಾಹರಣೆಗೆ, ಭಾರತವು ಹೇಗೆ ಉಡುಪುಗಳ ಒಂದು ಪ್ರಮುಖ ರಫ್ತುದಾರನಾಗಿ ತನ್ನ ಸ್ಥಾನವನ್ನು ಪುನಃ ಪಡೆಯಬಹುದು? ಈಗ ಬಾಂಗ್ಲಾದೇಶ ಮತ್ತು ವಿಯೆಟ್ನಾಂ ಕೂಡ ಈ ರಂಗದಲ್ಲಿ ನಮಗಿಂತ ಮುಂದಿವೆ. ರಫ್ತುಗಳನ್ನು ಹೆಚ್ಚು ಮಾಡುವಂತೆ ಆಗ್ರೋ- ಪ್ರೋಸೆಸಿಂಗ್ ಉದ್ಯಮಕ್ಕೆ ಹೇಗೆ ಪುನರ್ಜೀವ ತುಂಬಬಹುದು? ನಾವು ಹೇಗೆ ಚರ್ಮ ಕೈಗಾರಿಕೆಯನ್ನು ಪುನಶ್ಚೇತನಗೊಳಿಸಬಹುದು? ನಾವು ಹೇಗೆ ಕನಿಷ್ಠ ಒಂದು ಮಿಲಿಯ ಚೀನೀ ಪ್ರವಾಸ...
ಪ್ರಾಯಶಃ ಇದೆಲ್ಲ ನೀತಿ ಆಯೋಗದ ಮುಂದಿರುವ ಕೆಲಸ. ಬಜೆಟ್ ಎಷ್ಟೆಂದರೂ ಖಾತೆಗಳು ಮತ್ತು ವಿಶ್ವಾಸಾರ್ಹ ನೀಲ ನಕಾಶೆಗಳು ಒಂದು ವಿವರ. ನಮಗೆ 5 ಟ್ರಿಲಿಯನ್ ಡಾಲರ್‌ನ ರಸ್ತೆ ನಕಾಶೆಯ ಬಗ್ಗೆ ಇನ್ನಷ್ಟು ಸ್ಪಷ್ಟತೆ ಬೇಕಾಗಿದೆ.
ಶ್ರೀ ಮುರಳಿ 'ಬಘೀರ' ಶೂಟಿಂಗ್ ಸ್ಥಗಿತ: ಕಥೆಯಲ್ಲಿ ಬದಲಾವಣೆ? | Sri Murali Starrer Bagheera Film Shooting Stop To Alter The Story - Kannada Filmibeat
ಕೇರಳದಲ್ಲಿ ಕೆಜಿಎಫ್ 2, 777 ಚಾರ್ಲಿ ಗೆಲ್ಲಿಸಿದ್ದ ನಟನಿಗೆ ಕರ್ನಾಟಕದಲ್ಲೂ ಅದೇ ಪ್ರತಿಕ್ರಿಯೆ ಸಿಗುತ್ತಾ?
ಶ್ರೀ ಮುರಳಿ 'ಬಘೀರ' ಶೂಟಿಂಗ್ ಸ್ಥಗಿತ: ಕಥೆಯಲ್ಲಿ ಬದಲಾವಣೆ?
| Updated: Saturday, June 11, 2022, 12:30 [IST]
ನಟ ರೋರಿಂಗ್ ಸ್ಟಾರ್ ಶ್ರೀ ಮುರಳಿ ಸದ್ಯ ತಮ್ಮ ಹೊಸ ಸಿನಿಮಾವನ್ನು ಆರಂಭಿಸಿದ್ದಾರೆ. 'ಉಗ್ರಂ' ಸಿನಿಮಾದ ಮೂಲಕ ಕಮ್‌ಬ್ಯಾಕ್ ಮಾಡಿದ ಶ್ರೀ ಮುರಳಿ ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಭರ್ಜರಿ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಸಾಲು ಸಾಲು ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಶ್ರೀಮುರಳಿ. ಇದೀಗ ಮತ್ತೊಂದು ಪಕ್ಕಾ ಮಾಸ್ ಕಮರ್ಷಿಯಲ್ ಸಿನಿಮಾ 'ಬಘೀರ'ದಲ್ಲಿ ನಟಿಸುತ್ತಿದ್ದು ಚಿತ್ರ ಸೆಟ್ಟೇ...
ಇತ್ತೀಚಿಗಷ್ಟೇ 'ಬಘೀರ' ಚಿತ್ರದ ಶೂಟಿಂಗ್ ಶುರುವಾಗಿದೆ. ಸಿನಿಮಾದ ಮುಹೂರ್ತ ಕೂಡ ಅದ್ಧೂರಿಯಾಗಿ ನೆರವೇರಿತ್ತು. ಚಿತ್ರದ ಫಸ್ಟ್ ಲುಕ್ ನಲ್ಲಿಯೇ 'ಬಘೀರ'ನಾಗಿ ಶ್ರೀಮುರಳಿ ಗಮನಸೆಳೆದಿದ್ದಾರೆ. ಶ್ರೀ ಮುರಳಿ ಅಭಿನಯದ ಈ ಚಿತ್ರವನ್ನು ಹೊಂಬಾಳೆ ನಿರ್ಮಾಣ ಸಂಸ್ಥೆ ನಿರ್ಮಾಣ ಮಾಡುತ್ತಿದೆ.
'ಬಘೀರ' ಚಿತ್ರದ ಶೂಟಿಂಗ್ ಆರಂಭವಾಗಿತ್ತು. ಆದ್ರೀಗ ಕೆಲವು ದಿನಗಳ ಬಳಿಕ ಶೂಟಿಂಗ್ ಸ್ಥಗಿತಗೊಂಡಿದೆ. ಮೂಲಗಳ ಪ್ರಕಾರ, ಚಿತ್ರದ ಶೂಟಿಂಗ್ ತಾತ್ಕಾಲಿಕವಾಗಿ ನಿಂತು ಹೋಗಿದೆ. ಇದಕ್ಕೆ ಕಾರಣ ಕಥೆಯಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಲು ನಿರ್ಮಾಣ ಸಂಸ್ಥೆ ಸೂಚಿಸಿದಂತೆ.
'ಬಘೀರ' ಶೂಟಿಂಗ್ ಆರಂಭ!
ಇತ್ತೀಚೆಗೆ ಅದ್ಧೂರಿ ಮುಹೂರ್ತದ ಬಳಿಕ 'ಬಘೀರ' ಸಿನಿಮಾದ ಶೂಟಿಂಗ್ ಶುರುವಾಗಿದೆ. ಮೈಸೂರಿನಲ್ಲಿ ಹಲವು ದಿನಗಳ ಚಿತ್ರೀಕರಣ ಕೂಡ ಮಾಡಿದೆ ಚಿತ್ರತಂಡ. ಆದರೀಗ ಸದ್ಯಕ್ಕೆ ಶೂಟಿಂಗನ್ನು ನಿಲ್ಲಿಸಲಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಶೂಟಿಂಗ್ ಸ್ಥಗಿತಗೊಳಿಸಲು ಕಾರಣ ಕಥೆಯಲ್ಲಿ ಒಂದಷ್ಟು ಬದಲಾವಣೆಗಳನ್ನು ತರುವುದು ಎನ್ನಲಾಗುತ್ತಿದೆ. ಹೊಂಬಾಳೆ ಸಂಸ್ಥೆಯ ಸೂಚನೆಯ ಮೇರೆಗೆ ಸ್ಕ್ರಿಪ್ಟ್‌ನಲ್ಲಿ...
ಆ ನಟನಿಗೆ ಮಾತು ಕೊಟ್ಟಿದ್ದೀನಿ, ಖಂಡಿತ ಕನ್ನಡ ಸಿನಿಮಾ ಮಾಡ್ತೀನಿ: ಪ್ರಶಾಂತ್ ನೀಲ್
ಪೊಲೀಸ್ ಪಾತ್ರದಲ್ಲಿ ನಟ ಶ್ರೀ ಮುರಳಿ!
ಈ ಚಿತ್ರದಲ್ಲಿ ನಟ ಶ್ರೀ ಮುರಳಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಚಿತ್ರದ ಫಸ್ಟ್ ಲುಕ್‌ನಲ್ಲಿಯೇ ರಿವೀಲ್ ಆಗಿದೆ. ಪೊಲೀಸ್ ಪಾತ್ರ ಆದಕಾರಣ ನಾಯಕ ಪೊಲೀಸ್ ತರಬೇತಿ ತೆಗೆದುಕೊಳ್ಳುವಂತಹ ದೃಶ್ಯಗಳು ಕೂಡ ಕಥೆಯಲ್ಲಿ ಬರೆಯಲಾಗಿದೆ. ಆದರೆ ನಿರ್ಮಾಣ ಸಂಸ್ಥೆ ಪೊಲೀಸ್ ಟ್ರೈನಿಂಗ್ ದೃಶ್ಯಗಳು ಬೇಡ ಎಂದು ಸೂಚನೆಯನ್ನು ನೀಡಿ ಒಂದಷ್ಟು ಬದಲಾವಣೆಗಳನ್ನು ಮಾಡಲು ಸೂಚಿಸಿದಂತೆ. ಹಾಗಾಗಿ ಕೆ...
ಪ್ರಶಾಂತ್ ನೀಲ್ ಕಥೆ, ಡಾ. ಸೂರಿ ನಿರ್ದೇಶನ!
'ಬಘೀರ' ಸಿನಿಮಾ ಕಥೆಯನ್ನು ಬರೆದಿರುವುದು ಪ್ರಶಾಂತ್ ನೀಲ್. ಈ ಹಿಂದೆ ಶ್ರೀ ಮುರಳಿಗಾಗಿ 'ಉಗ್ರಂ' ಸಿನಿಮಾ ಮಾಡಿರುವ ಪ್ರಶಾಂತ್ ನೀಲ್, 'ಉಗ್ರಂ' ಸಿನಿಮಾದ ಮೂಲಕವೇ ನಿರ್ದೇಶಕನಾಗಿ ಬಡ್ತಿ ಹೊಂದಿದ್ದಾರೆ. 'ಕೆಜಿಎಫ್' ಬಳಿಕ ಪ್ರಶಾಂತ್ ನೀಲ್ ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೂ, ಶ್ರೀ ಮುರಳಿಗಾಗಿ 'ಬಘೀರ' ಕಥೆಯನ್ನು ಒದಗಿಸಿ ಕೊಟ್ಟಿದ್ದಾರೆ. ಹೊಂಬಾಳೆ ನಿರ್ಮಾಣ ಸಂಸ್ಥೆ ಈ ಚಿತ್...
ಶ್ರೀಮುರಳಿ 'ಮದಗಜ' ಸಕ್ಸಸ್ ಮೀಟ್‌ನಲ್ಲಿ 'ಮದಗಜ 2' ಘೋಷಣೆ: ಏನಂತಿದೆ ಸ್ಯಾಂಡಲ್‌ವುಡ್?
ನಿರೀಕ್ಷೆ ಹುಟ್ಟಿಸಿರುವ 'ಬಘೀರ'!
'ಬಘೀರ' ಸಿನಿಮಾ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಂದ ಮೇಲೆ ಸಾಕಷ್ಟು ನಿರೀಕ್ಷೆ ಹುಟ್ಟಿಕೊಂಡಿವೆ. ಇನ್ನು ಚಿತ್ರದ ಕಥೆ ಪ್ರಶಾಂತ್ ನೀಲ್ ಮಾಡಿದ್ದಾರೆ ಎಂದಾಗ ಮತ್ತಷ್ಟು ನಿರೀಕ್ಷೆ ಕುತೂಹಲಗಳು ಹೆಚ್ಚಾದವು. ನಿರ್ದೇಶಕ ಡಾಕ್ಟರ್ ಸೂರಿ ಸಾರಥ್ಯದಲ್ಲಿ ಸಿನಿಮಾ ಚಿತ್ರೀಕರಣ ಆರಂಭವಾಗಿದ್ದು, ಆದಷ್ಟು ಬೇಗ ಶೂಟಿಂಗ್ ಮುಗಿಸಿ ಸಿನಿಮಾ ರಿಲೀಸ್ ಮಾಡಲು ಯೋಜ...
ಶ್ರೀಮುರಳಿ ಹುಟ್ಟುಹಬ್ಬ: ಅಭಿಮಾನಿಗಳಿಗೆ ವಿಶೇಷ ಸಂದೇಶ ರವಾನಿಸಿದ ರೋರಿಂಗ್ ಸ್ಟಾರ್
ಸಿನಿಮಾ ಬಜೆಟ್ 25 ಕೋಟಿ.. ಒಟ್ಟು ಗಳಿಕೆ 50 ಕೋಟಿ: ಏನಿದು 'ಮದಗಜ'ನ ಲೆಕ್ಕ?
ಒಟಿಟಿ ಹಾಗೂ ಡಬ್ಬಿಂಗ್ ವಿಚಾರದಲ್ಲಿ ಶ್ರೀಮುರಳಿ ಖಡಕ್ ಮಾತು
'ಮದಗಜ' ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು?
Read more about: sri murali vijay kiragandur sandalwood filmibeat original ಶ್ರೀ ಮುರಳಿ ವಿಜಯ್ ಕಿರಗಂದೂರು ಸ್ಯಾಂಡಲ್‌ವುಡ್
ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಫೋಟೋ ಇರುವ ಸಾವಿರಾರು ಸೀರೆಗಳ ವಶ | Vartha Bharati- ವಾರ್ತಾ ಭಾರತಿ
ವಾರ್ತಾ ಭಾರತಿ Nov 19, 2019, 7:45 PM IST
ಮಂಡ್ಯ, ನ.19: ಕೆ.ಆರ್.ಪೇಟೆ ವಿಧಾನಸಭೆ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಅವರ ಫೋಟೋ ಇರುವ ಸಾವಿರಾರು ಸೀರೆಗಳನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಕೆ.ಆರ್.ಪೇಟೆ ತಾಲ್ಲೂಕಿನ ಸಾಕ್ಷಿಬೀಡು ಗ್ರಾಮದ ಬಳಿ (ಕೆ.ಎ.05, ಎಂ.ಇ.0599) ಮಾರುತಿ ಓಮ್ನಿ ಕಾರಿನಲ್ಲಿ ಸಾಗಿಸುತ್ತಿದ್ದಾಗ ಚುನಾವಣಾ ತಪಾಸಣಾಧಿಕಾರಿ ಅಶೋಕ್ ನೇತೃತ್ವದ ಅಧಿಕಾರಿಗಳು ವಶಪಡಿಕೊಂಡಿದ್ದಾರೆ.
ಘಟನೆ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯ ಎ.ಎಸ್.ಐ ಶಿವಕುಮಾರ್ ಯಾದವ್ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಮಂಗಳೂರು: ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಇಂದಿನಿಂದ ಆರಂಭವಾಗಿವೆ. ಮೊದಲ ದಿನವೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಅವಘಡವೊಂದು ಸಂಭವಿಸಿದೆ. ಪರೀಕ್ಷೆ ನಡೆಯುತ್ತಿದ್ದ ಕೊಠಡಿಗೆ ಬೆಂಕಿ ತಗುಲಿದ ಘಟನೆ ಉಳ್ಳಾಲ ಸಮೀಪದ ಬಬ್ಬುಕಟ್ಟೆಯಲ್ಲಿ ನಡೆದಿದೆ.
ಬಬ್ಬುಕಟ್ಟೆ ಖಾಸಗಿ ಶಾಲೆಯ ಲ್ಯಾಬ್​ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪಕ್ಕದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಯುತ್ತಿದ್ದ ಕೊಠಡಿಗೂ ತಗುಲಿದೆ. ಈ ವೇಳೆ ತಕ್ಷಣ ಪರೀಕ್ಷಾ ಕೇಂದ್ರದ ಸಿಬ್ಬಂದಿ ವಿದ್ಯಾರ್ಥಿಗಳನ್ನು ಇನ್ನೊಂದು ಕಟ್ಟಡಕ್ಕೆ ಸ್ಥಳಾಂತರ ಮಾಡಿದ್ದಾರೆ.ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ತಗುಲಿರಬಹುದೆಂದು ಶಂಕಿಸಲಾಗಿದೆ.
ಕೈ ನೋವಿನಿಂದ ಬಳಲುತ್ತಿರುವ ಅಭಿಷೇಕ್ ಬಚ್ಚನ್ – ಅಮಿತಾಬ್ ಬಚ್ಚನ್ ಆಸ್ಪತ್ರೆಗೆ ಭೇಟಿ - ಸವಿ ಕನ್ನಡ ನ್ಯೂಸ್
ಮುಂಬೈ: ಬಾಲಿವುಡ್ ನಟ ಅಭಿಷೇಕ್ ಬಚ್ಚನ್‍ಗೆ ಚಿತ್ರೀಕರಣದ ವೇಳೆ ಕೈಗೆ ಪೆಟ್ಟಾಗಿದ್ದು, ಭಾನುವಾರ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ಈ ವೇಳೆ ಬಿಗ್-ಬಿ ಅಮಿತಾಬ್ ಬಚ್ಚನ್ ಮತ್ತು ಸಹೋದರಿ ಶ್ವೇತಾ ಬಚ್ಚನ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಫೋಟೋದಲ್ಲಿ ಅಮಿತಾಬ್ ಕುರ್ತಾ ಮತ್ತು ಪೈಜಾಮ ಧರಿಸಿದ್ದು, ಶ್ವೇತಾ ಬಚ್ಚನ್ ನಂದ ಬಿಳಿ ಬಣ್ಣದ ಟೀ ಶರ್ಟ್ ಮತ್ತು ಪ್ಯಾಂಟ್ ಧರಿಸಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ:ಅಮಿತಾಬ್ ಬಚ್ಚನ್, ಜಯಗೆ 48ನೇ ವಿವಾಹ ವಾರ್ಷಿಕೋತ್ಸ...
ಸದ್ಯ ಈ ಕುರಿತಂತೆ ಲೀಲಾವತಿ ಆಸ್ಪತ್ರೆಯ ಸಿಇಒ ಅವರು, ಅಭಿಷೇಕ್‍ರವರ ಕೈಗೆ ಸಣ್ಣ ಪೆಟ್ಟಾಗಿದ್ದು, ಕೈ ಸಂಬಂಧಿಸಿದ ನೋವಿನಿಂದ ಅವರು ಭಾನುವಾರ ಆಸ್ಪತ್ರೆಗೆ ಬಂದಿದ್ದರು. ಇದೀಗ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದ್ದು, ಈಗಾಗಲೇ ಮನೆಗೆ ಹೋಗಿದ್ದಾರೆ ಎಂದು ತಿಳಿಸಿದ್ದಾರೆ.
ಕಳೆದ ವಾರ ಅಭಿಷೇಕ್ ಬಚ್ಚನ್, ಪತ್ನಿ ಐಶ್ವರ್ಯ ರೈ ಬಚ್ಚನ್ ಮತ್ತು ಮಗಳು ಆರಾಧ್ಯ ಬಚ್ಚನ್ ಮುಂಬೈನ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಐಶ್ವರ್ಯ ರೈ ನಿರ್ದೇಶಕ ನಣಿರತ್ನಂ ಆಕ್ಷನ್ ಕಟ್ ಹೇಳುತ್ತಿರುವ ಪೊನ್ನಿನ್ ಸೆಲ್ವನ್ ಚಿತ್ರದ ಚಿತ್ರೀಕರಣಕ್ಕಾಗಿ ಮಧ್ಯಪ್ರದೇಶಕ್ಕೆ ಹೊರಟ್ಟಿದ್ದರು. ಇದನ್ನೂ ಓದಿ:ಅಮಿತಾಬ್ ಬಚ್ಚನ್ ಶಸ್ತ್ರಚಿಕಿತ್ಸೆ – ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ ...
ಸಿಎಂ ಕುಮಾರಸ್ವಾಮಿ ಅವರ ಪ್ರಯಾಣಿಸುತ್ತಿದ್ದ ಬಸ್ ತಡೆದು ಪ್ರತಿಭಟಿಸಿದವರು ಕಾರ್ಮಿಕರಲ್ಲ...! ಇಲ್ಲಿದೆ ಅಸಲಿ ಸತ್ಯ...! -
ಮಾನ್ಯ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ತಮ್ಮ ಎರಡನೇ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ನೆನ್ನೆ ಆರಂಭಿಸಿದರು. ಇಂದು ರಾಯಚೂರು ಜಿಲ್ಲೆಯ ಕರೇಗುಡ್ಡ ಗ್ರಾಮಕ್ಕೆ ಬಸ್ಸಿನಲ್ಲಿ ಗ್ರಾಮ ವಾಸ್ತವ್ಯ ಮಾಡಲು ಕುಮಾರಸ್ವಾಮಿ ಅವರು ಹೋಗುತ್ತಿದ್ದ ವೇಳೆ ದಾರಿಯಲ್ಲಿ ಪ್ರತಿಭಟನಾಕಾರರು ಮುತ್ತಿಗೆ ಹಾಕಿ ಬಸ್ ತಡೆದರು. ಜನರಿಗೆ ಒಳ್ಳೇದು ಮಾಡಲು ಹೋಗುತ್ತಿರುವ ನನ್ನ ವಿರುದ್ಧ ಇವರು ಪ್ರತಿಭಟಿಸ...
ಅವರು ಪ್ರತಿಭಟನಾಕಾರರೊಂದಿಗೆ ಮಾತನಾಡಿರುವುದನ್ನು ಸೆರೆ ಹಿಡಿಯಲಾಗಿದೆ. ಆದರೆ ಈ ವಿಡಿಯೋದಲ್ಲಿ ಅವರು ಏನು ಮಾತನಾಡಿದ್ದಾರೆ ಎಂದು ಸರಿಯಾಗಿ ಕೇಳುವುದಿಲ್ಲ. ಈ 15 ಸೆಕೆಂಡ್ ಗಳ ದೃಶ್ಯವನ್ನು ನಮ್ಮ ಅತ್ಯಂತ ಸಮಾಜ ಕಳಕಳಿ ಹೊಂದಿರುವ ಸುದ್ದಿ ವಾಹಿನಿಗಳು ಬೆಳ್ಳಗೆಯಿಂದ ಪ್ರಸಾರ ಮಾಡುತ್ತಲೇ ಇದ್ದಾರೆ. ಅಲ್ಲದೆ ಅದಕ್ಕೆ ತಮ್ಮದೇ ಡೈಲಾಗ್ ಗಳನ್ನು ಸೇರಿಸಿ, ಮುಖ್ಯಮಂತ್ರಿ ಅವರೇ ಹೇಳಿರುವ ರೀತಿಯಲ್ಲಿ ...
ಅಸಲಿಗೆ ಅಲ್ಲಿ ನಡೆದಿದ್ದರೂ ಏನು? ಸಿಎಂ ನಿಜವಾಗಲೂ ಜನರ ಬಗ್ಗೆ ಲಘುವಾಗಿ ಮಾತಾಡಿದ್ದಾರೆ? ಯಾರು ಈ ಪ್ರತಿಭಟನಾಕಾರರು? ಅವರ ಉದ್ದೇಶವೇನು? ಅವರ ಬೇಡಿಕೆಯೇನು? ಮುಂದೆ ಓದಿ…
ಸಿಎಂ ಕುಮಾರಸ್ವಾಮಿ ಅವರು ಕಳೆದ ಒಂದು ವರುಷದಿಂದ ವಿರೋಧ ಪಕ್ಷದಿಂದ ಸಾಕಷ್ಟು ಅನಗತ್ಯ ಒತ್ತಡ, ಹಣಕ್ಕಾಗಿ ಹಾಗು ಟಿಆರ್ಪಿ ಗಾಗಿ ನೆಗೆಟಿವ್ ಪಬ್ಲಿಸಿಟಿ ಮಾಡುತ್ತಿರುವ ಸುದ್ದಿ ವಾಹಿನಿಗಳನ್ನು ಎದುರಿಸುತ್ತ ಉತ್ತಮ ಆಡಳಿತವನ್ನು ನೀಡಿದ್ದಾರೆ. ಹಲವಾರು ನೂತನ ಜನಪರ ಯೋಜನೆಗಳಿಗೆ ಅಡಿಪಾಯ ಹಾಕಿದ್ದಾರೆ. ಉತ್ತಮ ಬಜೆಟ್ ಮಂಡಿಸಿದ್ದಾರೆ. ಜನತಾ ದರ್ಶನ, ಗ್ರಾಮ ವಾಸ್ತವ್ಯ ಕಾರ್ಯಕ್ರಮಗಳ ಮೂಲಕ ಜನತೆಯ ಕ...
ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಯರಮರಸ್ ಸರ್ಕೀಟ್ ಹೌಸ್ ಮುಂಭಾಗ ವೈಟಿಪಿಎಸ್‍ನ ನೂರಾರು ಜನ ಕಾರ್ಮಿಕರು ಪ್ರತಿಭಟಿಸುತ್ತ ಸಿಎಂ ಬಸ್‍ಗೆ ಮುತ್ತಿಗೆ ಹಾಕಿದರು ಎಂಬ ಸುದ್ದಿ ಈಗ ಎಲ್ಲೆಡೆ ಹರಿದಾಡುತ್ತಿದೆ. ಆದರೆ ಸ್ವಲ್ಪ ತಾರ್ಕಿಕವಾಗಿ ಯೋಚಿಸಿದಾಗ ನಮಗೆ ಇವರು ನಿಜವಾಗ್ಲೂ ಕಾರ್ಮಿಕರ? ಕಾರ್ಮಿಕರೇ ಆಗಿದ್ದರೂ, ಇದು ಸ್ವಯಂ ಪ್ರೇರಿತವೋ ಅಥವಾ ರಾಜಕೀಯ ದ್ವೇಷದಿಂದ ರೂಪಿಸಿರುವ ಷಡ್ಯಂತರವೊ? ಎಂಬ ಅನು...
ಇವರು ಕಾರ್ಮಿಕರೇ ಅಂದುಕೊಳ್ಳೋಣ. ಇವರಿಗೆ ನಿಜವಾಗಲೂ ತಮ್ಮ ಸಮಸ್ಯೆಗೆ ಪರಿಹಾರ ಬೇಕಿದ್ದರೆ, ಮೊದಲು ಸಿಎಂ ಅವರನ್ನು ಭೇಟಿ ಮಾಡಿ, ತಮ್ಮ ಸಮಸ್ಯೆ ಮುಂದಿಟ್ಟು, ಪರಿಹಾರ ಕೇಳುತ್ತಿದ್ದರು. ಆದರೆ ಇವರು ಸಿಎಂ ಬರುವುದನ್ನೇ ಕಾದು, ಅವರು ಬಂದಾಗ ವಿಪಕ್ಷ ನಾಯಕನಿಗೆ ಜೈಕಾರ ಹಾಕುತ್ತ ಪ್ರತಿಭಟಿಸಿರುವುದು, ಇದು ರಾಜಕೀಯ ಷಡ್ಯಂತ್ರ ಎಂಬುದಕ್ಕೆ ಬಲವಾದ ಸಾಕ್ಷಿ.
ಒಲ್ಲದ ಮನಸ್ಸಿನಿಂದ ಡೀಲ್ ಮಾಡಿಕೊಂಡು ಹಳ್ಳಕ್ಕೆ ಬಿದ್ದ ಆಂಡಿ.! | Bigg Boss Kannada 6: Andrew gets nominated for Kavitha Gowda - Kannada Filmibeat
News ಚೀನಾ ವಿರೋಧಿ ಟ್ರಂಪ್‌ಗೆ ಚೀನಾದಲ್ಲೂ ಬ್ಯಾಂಕ್ ಖಾತೆ, ಉದ್ಯಮ ವ್ಯವಹಾರ!
ಒಲ್ಲದ ಮನಸ್ಸಿನಿಂದ ಡೀಲ್ ಮಾಡಿಕೊಂಡು ಹಳ್ಳಕ್ಕೆ ಬಿದ್ದ ಆಂಡಿ.!
| Published: Tuesday, November 20, 2018, 14:43 [IST]
ಒಲ್ಲದ ಮನಸ್ಸಿನಿಂದ ಡೀಲ್ ಮಾಡಿಕೊಂಡು ಹಳ್ಳಕ್ಕೆ ಬಿದ್ದ ಆಂಡ್ರ್ಯೂ | FILMIBEAT KANNADA
''ಈ ಮನೆಯಲ್ಲಿ ಒಂದು ಹುಡುಗಿ ಇದ್ದಾಳೆ. ಆಕೆ ನನ್ನ ಎದುರಿಗೆ ಪಾಸ್ ಆದರೆ, ಮೈ ಜುಮ್ ಎನ್ನುತ್ತೆ'' ಅಂತ ಒಂದು ವಾರದ ಹಿಂದೆಯಷ್ಟೇ 'ಬಿಗ್ ಬಾಸ್' ಮನೆಯಲ್ಲಿ ಎಲ್ಲರ ಮುಂದೆ ಆಂಡ್ರ್ಯೂ ಹೇಳಿಕೊಂಡಿದ್ದರು.
ಅಷ್ಟಕ್ಕೂ, ಯಾರನ್ನ ಕಂಡ್ರೆ ಆಂಡ್ರ್ಯೂ ಮೈ ಜುಮ್ ಎನ್ನುತ್ತೆ ಗೊತ್ತಾ.? ಬೇರೆ ಯಾರೂ ಅಲ್ಲ.. 'ಚಿನ್ನು' ಕವಿತಾ ಗೌಡ.
ಹೌದು, ಕವಿತಾ ಗೌಡ ಕಂಡ್ರೆ ಆಂಡ್ರ್ಯೂಗೆ ಒಂಥರಾ ಫೀಲಿಂಗ್. ಈ ವಿಚಾರ 'ಬಿಗ್ ಬಾಸ್'ಗೂ ಗೊತ್ತು. ಅದಕ್ಕೆ ನಾಮಿನೇಷನ್ ಟಾಸ್ಕ್ ನಲ್ಲಿ ಇಬ್ಬರನ್ನೂ ಒಟ್ಟಿಗೆ ಕರೆದು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.
ಅತ್ತ ನಾಮಿನೇಷನ್ ನಿಂದ ಸೇಫ್ ಆಗುವ ಆಸೆ ಆಂಡ್ರ್ಯೂಗಿದೆ. ಆದ್ರೆ, ಎದುರಿಗೆ ಕವಿತಾ ಇರುವ ಕಾರಣ ಆಂಡ್ರ್ಯೂಗೆ ಸಂಕಷ್ಟ.! ಕಡೆಗೆ ಕವಿತಾ ಜೊತೆಗೆ ಪ್ರತಿ ದಿನ ಹತ್ತು ನಿಮಿಷ ಕಾಲ ಕಳೆಯಲು ಡೀಲ್ ಮಾಡಿಕೊಂಡು ಒಲ್ಲದ ಮನಸ್ಸಿನಿಂದಲೇ ಆಂಡ್ರ್ಯೂ ನಾಮಿನೇಟ್ ಆಗಿದ್ದಾರೆ. ಒಂದು ವೇಳೆ ವೀಕ್ಷಕರು ಕೈ ಹಿಡಿಯದೇ ಇದ್ದರೆ, ಆಂಡ್ರ್ಯೂ ಹಳ್ಳಕ್ಕೆ ಬಿದ್ದ ಹಾಗೆ. ಮುಂದೆ ಓದಿರಿ...
ನಾಮಿನೇಷನ್ ವೇಳೆ....
'ಬಿಗ್ ಬಾಸ್' ಮನೆಯಲ್ಲಿ ಇರಲು ಅರ್ಹರಲ್ಲದ ಇಬ್ಬರು ವ್ಯಕ್ತಿಗಳ ಹೆಸರುಗಳನ್ನು ಪ್ರತಿ ಸ್ಪರ್ಧಿಯೂ ಪ್ರತಿ ವಾರ ತೆಗೆದುಕೊಳ್ಳಬೇಕು. ಇದೇ ನಾಮಿನೇಷನ್ ಪ್ರಕ್ರಿಯೆ. ಆದ್ರೆ, ಈ ಬಾರಿ ನಾಮಿನೇಷನ್ ಪ್ರಕ್ರಿಯೆ ಅಷ್ಟು ಸುಲಭವಾಗಿ ನಡೆಯಲಿಲ್ಲ. ಜೋಡಿಗಳ ಅನುಗುಣವಾಗಿ ನಾಮಿನೇಷನ್ ಪ್ರಕ್ರಿಯೆ ನಡೆಯಿತು.
ಇಬ್ಬರಲ್ಲಿ ಒಬ್ಬರು ಸೇಫ್
ಈ ಬಾರಿ ನಾಮಿನೇಷನ್ ಗಾಗಿ 'ಬಿಗ್ ಬಾಸ್' ಇಬ್ಬಿಬ್ಬರನ್ನು ಕನ್ಫೆಶನ್ ರೂಮ್ ಒಳಗೆ ಕರೆದರು. ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಸೇಫ್ ಆಗುವ ಅವಕಾಶವನ್ನು 'ಬಿಗ್ ಬಾಸ್' ನೀಡಿದರು.
ಎಷ್ಟೇ ಹೇಳಿದರೂ ಬುದ್ಧಿ ಕಲಿಯದ ಆಂಡ್ರ್ಯೂ ಮೇಲೆ ಸುದೀಪ್ ಮುನಿಸು.!
ಕವಿತಾ-ಆಂಡ್ರ್ಯೂ ಜೋಡಿ
ನಾಮಿನೇಷನ್ ಗಾಗಿ ಕನ್ಫೆಶನ್ ರೂಮ್ ಒಳಗೆ ಕವಿತಾ ಮತ್ತು ಆಂಡ್ರ್ಯೂನ 'ಬಿಗ್ ಬಾಸ್' ಕರೆದರು. ಅಲ್ಲಿಂದ ಕವಿತಾ ಮತ್ತು ಆಂಡ್ರ್ಯೂ ನಡುವೆ ವಾದ-ವಾಗ್ವಾದ ಆರಂಭ ಆಯ್ತು.
ಮೊಟ್ಟೆ ಹೊಡೆದ ಆಂಡಿ: ಇಡೀ ಮನೆ ಮಂದಿ ಸಿಡಿಮಿಡಿ.!
ಇದು ಎಂಥಾ ಪರೀಕ್ಷೆ.?
''ಇದು ಎಂಥಾ ಪರೀಕ್ಷೆ. ನಾನು ಕಾಮನ್ ಮ್ಯಾನ್. ನೀವು ಸೆಲೆಬ್ರಿಟಿ. ನಿಮಗೆ ಫ್ಯಾನ್ಸ್ ಇದ್ದಾರೆ'' ಅಂತೆಲ್ಲಾ ಹೇಳಿ ತಪ್ಪಿಸಿಕೊಳ್ಳಲು ಆಂಡ್ರ್ಯೂ ಪ್ರಯತ್ನ ಪಟ್ಟರು. ಆದ್ರೆ, ಇದಕ್ಕೆ ಕವಿತಾ ಒಪ್ಪಿಕೊಳ್ಳಲಿಲ್ಲ. ''ನೀನು ಕೂಡ ಆಕ್ಟರ್. ನೀನು ಕೂಡ ಸೆಲೆಬ್ರಿಟಿ. ಎಲ್ಲರೂ 'ಬಿಗ್ ಬಾಸ್' ಮನೆಯಲ್ಲಿ ಇದ್ದೀವಿ ಅಂದ್ರೆ ಎಲ್ಲರೂ ಸೆಲೆಬ್ರಿಟಿಗಳೇ'' ಅಂತ ಕವಿತಾ ತಮ್ಮ ವಾದವನ್ನು ಮಂಡಿಸಿದರು.
ಎಷ್ಟು ಹೇಳಿದರೂ ಕೇಳದ ಆಂಡಿ
''ನಿನ್ನ ಬಳಿ ಸುರಕ್ಷಾ ಕವಚ ಇದೆ. ಬಳಸಿ ಸೇಫ್ ಆಗು'' ಅಂತ ಕವಿತಾ ಎಷ್ಟೇ ಹೇಳಿದರೂ ಆಂಡ್ರ್ಯೂ ಒಪ್ಪಿಕೊಳ್ಳಲಿಲ್ಲ. ಹೀಗಾಗಿ ''ನಾನೇ ನಾಮಿನೇಟ್ ಆಗುವೆ. ನನಗೆ ನನ್ನ ಫ್ಯಾನ್ಸ್ ಮೇಲೆ ನಂಬಿಕೆ ಇದೆ'' ಎಂದರು ಕವಿತಾ.
ಎಡವಟ್ಟು ಕಾರಣ