text stringlengths 0 61.5k |
|---|
ಹುಬ್ಬಳ್ಳಿಯಲ್ಲಿ ಕಾರು, ಟ್ಯಾಂಕರ್ ಡಿಕ್ಕಿ: ಮುಂಬೈ ಮೂಲದ ಉದ್ಯಮಿ ಸಾವು |
ಇಲ್ಲಿನ ತಾರಿಹಾಳ ಟೋಲನಾಕಾ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ತಡರಾತ್ರಿ ಗ್ಯಾಸ್ ಟ್ಯಾಂಕರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮುಂಬೈ ಉದ್ಯಮಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ. |
Karnataka Districts25, Dec 2019, 9:37 PM |
ದಾವಣಗೆರೆ: ರಸ್ತೆ ಮಧ್ಯೆಯೇ ಗ್ಯಾಸ್ ಟ್ಯಾಂಕರ್ ಧಗ ಧಗ |
ದೊಣೆಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಭೀಕರ ಅಪಘಾತ ಸಂಭವಿಸಿದೆ. ಗ್ಯಾಸ್ ಲಾರಿ ಮತ್ತು ಕಂಟೇನರ್ ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಬ್ಬರು ಸಾವಿಗೀಡಾಗಿದ್ದಾರೆ. |
ಅತೀ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು ರಸ್ತೆ ಮಧ್ಯೆಯೇ ಗ್ಯಾಸ್ ಟ್ಯಾಂಕರ್ ಹೊತ್ತಿ ಉರಿದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಘಟನೆಯ ಮಾಹಿತಿ ಕಲೆ ಹಾಕಿದ್ದಾರೆ. |
ಕಣಿವೆಯಲ್ಲಿ ನೀರೆಲ್ಲಿದೆ? - TheNewsism \n |
Home ಸುದ್ದಿ ರಾಜ್ಯ ಸುದ್ದಿ ಕಣಿವೆಯಲ್ಲಿ ನೀರೆಲ್ಲಿದೆ? |
ಸದ್ಯದ ಸ್ಥಿತಿಯಲ್ಲಿ ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸಾಧ್ಯವಿಲ್ಲ ಎನ್ನುವುದು ರಾಜ್ಯಸರ್ಕಾರದ ಸ್ಪಷ್ಟೋಕ್ತಿ. ಈ ಹೇಳಿಕೆ ನಡುವೆಯೇ ಕೆಆರ್‍ಎಸ್‍ನಿಂದ ನೀರಿನ ಹೊರಹರಿವು ನಿರಂತರವಾಗಿರುವುದು ಅಷ್ಟೇ ಸುಸ್ಪಷ್ಟ. ಹಾಗಾದರೆ ಸರ್ಕಾರ ತನ್ನ ಹೇಳಿಕೆಗೆ ಬದ್ಧವಾಗಿಲ್ಲವೇ? ಖಚಿತವಾಗಿ ಇಲ್ಲ ಎನ್ನದೆ ವಿಧಿಯಿಲ್ಲ. ನದಿಗೆ ನೀರು ಹರಿಸುವ ನೆಪದಲ್ಲಿ ಸಂಕಷ್ಟಸೂತ್ರ ಪಾಲಿಸುವ ಅನಿವಾರ್ಯತೆಗೆ ಸಿಲುಕಿದೆ... |
ಈ ಭಾಗದಲ್ಲಿ ಅಗಸ್ಟ್ 25ರವರೆಗೆ ಆಗಬೇಕಿದ್ದ ವಾಡಿಕೆ ಮಳೆ 172 ಮಿಲಿಮೀಟರ್. ಆದರೆ ಕೇವಲ 102 ಮಿಮಿ ಮಾತ್ರ ಮಳೆಯಾಗಿದೆ. ಆಂದರೆ 70 ಮಿಮಿಯಷ್ಟು ಮಳೆಯ ಕೊರತೆ ಎದುರಾಗಿದೆ. ಇರುವ 63.11 ಟಿಎಂಸಿ ನೀರಿನಲ್ಲಿ ಬಳಕೆಗೆ ಸಿಗುವುದು ಕೇವಲ 39.8 ಟಿಎಂಸಿ ಮಾತ್ರ. ಉಳಿದದ್ದ ಅಣೆಕಟ್ಟೆಯ ತಳಮಟ್ಟದ ನೀರು. ನಾಲ್ಕೂ ಜಲಾಶಯಗಳಿಗೆ ಒಟ್ಟಾರೆ ಇಂದಿನ ಒಳಹರಿವಿನ ಪ್ರಮಾಣ ಕೇವಲ 11,235 ಕ್ಯೂಸೆಕ್ಸ್ (0.97 ಟಿಎ... |
ಪುನೀತ್ ನಮನ: ಕಾರ್ಯಕ್ರಮದಲ್ಲಿ ನಡೆದಿದ್ದೇನು? ಇಲ್ಲಿವೆ ಮುಖ್ಯಾಂಶಗಳು | Puneeth Namana Program Highlights - Kannada Filmibeat |
| Updated: Wednesday, November 17, 2021, 9:32 [IST] |
ಪುನೀತ್ ರಾಜ್‌ಕುಮಾರ್ ಅಗಲಿ 19 ದಿನಗಳಾಗಿವೆ. ಪುನೀತ್ ಅನ್ನು ಮರೆಯಲು ಚಿತ್ರರಂಗಕ್ಕಾಗಲಿ, ಅಭಿಮಾನಿಗಳಿಗಾಗಲಿ ಸಾಧ್ಯವಾಗಿಲ್ಲ. ಪುನೀತ್ ಅನ್ನು ಪ್ರತಿನಿತ್ಯ ಒಂದಲ್ಲ ಒಂದು ರೀತಿಯಲ್ಲಿ ನೆನಪು ಮಾಡಿಕೊಳ್ಳುತ್ತಲೇ ಇದ್ದಾರೆ. |
ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಚಿತ್ರರಂಗದ ಪರವಾಗಿ ಪುನೀತ್ ರಾಜ್‌ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಪುನೀತ್ ನಮನ ಕಾರ್ಯಕ್ರಮವನ್ನು ಅರಮನೆ ಮೈದಾನದ ಗಾಯತ್ರಿ ವಿಹಾರ ಸಭಾಂಗಣದಲ್ಲಿ ಹಮ್ಮಿಕೊಂಡಿತ್ತು. |
ಸಾರ್ವಜನಿಕರು, ಅಭಿಮಾನಿಗಳ ಹೊರತಾಗಿ ಕೇವಲ ವಿಶೇಷ ಆಹ್ವಾನಿತರು ಹಾಗೂ ಸಿನಿಮಾ ಸೆಲೆಬ್ರಿಟಿಗಳಿಗೆ ಮಾತ್ರವೇ ಇಂದಿನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನೆರೆ-ಹೊರೆಯ ಸಿನಿಮಾ ಸೆಲೆಬ್ರಿಟಿಗಳು ಸೇರಿದಂತೆ ಕನ್ನಡ ಚಿತ್ರೋದ್ಯಮದ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮವು ಅರ್ಥಪೂರ್ಣವಾಗಿ ಸಂಪನ್ನವಾಯಿತು. ಕಾರ್ಯಕ್ರಮದ ಮುಖ್ಯಾಂಶಗಳು ಇಲ್ಲಿವೆ. |
* ಕಾರ್ಯಕ್ರಮದಲ್ಲಿ ಕೊನೆಯವರಾಗಿ ಮಾತನಾಡಿದ ಶಿವರಾಜ್ ಕುಮಾರ್ ವೇದಿಕೆ ಮೇಲೆ ದುಃಖ ಹತ್ತಿಕ್ಕಲಾರದೆ ಕಣ್ಣೀರು ಹಾಕಿದರು. ''ಎಲ್ಲ ಸಂದರ್ಶನಗಳಲ್ಲಿ, ಎಲ್ಲ ಕಾರ್ಯಕ್ರಮಗಳಲ್ಲಿ ನನ್ನ ತಮ್ಮ, ನನ್ನ ತಮ್ಮ ಎಂದು ಹೊಗಳುತ್ತಿದ್ದೆ, ನನ್ನ ದೃಷ್ಟಿಯೇ ಅವನಿಗೆ ಬಿದ್ದಿತೇನೋ'' ಎನ್ನುತ್ತಾ ಕಣ್ಣೀರು ಸುರಿಸಿದರು. ಶಿವಣ್ಣ ಅತ್ತದ್ದು ಕಂಡು ವೇದಿಕೆ ಮುಂದೆ ಉಪಸ್ಥಿತರಿದ್ದವರು ಮಾತ್ರವೇ ಅಲ್ಲದೆ ಮನೆಯಲ್ಲಿ... |
* ರಾಘವೇಂದ್ರ ರಾಜ್‌ಕುಮಾರ್ ಭಾಷಣವೂ ಅಷ್ಟೇ ಭಾವುಕವಾಗಿತ್ತು. ಇಷ್ಟು ದಿನ ಬಹಿರಂಗವಾಗಿ ಕಣ್ಣೀರು ಹಾಕದೆ ಇದ್ದ ರಾಘಣ್ಣ ಇಂದು ಕಾರ್ಯಕ್ರಮದಲ್ಲಿ ಕಣ್ಣೀರು ಹರಿಸಿದರು. ಅವರ ಭಾಷಣ ಎಲ್ಲರನ್ನೂ ಆರ್ದ್ರಗೊಳಿಸಿತು. |
* ಕಾರ್ಯಕ್ರಮದಲ್ಲಿ ಮೊದಲಿಗರಾಗಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಪುನೀತ್ ರಾಜ್‌ಕುಮಾರ್ ಅವರಿಗೆ 'ಕರ್ನಾಟಕ ರತ್ನ' ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡುವುದಾಗಿ ಘೊಷಿಸಿದರು. ಸಿಎಂ ಅವರಿಂದ ಘೋಷಣೆ ಹೊರಬೀಳುತ್ತಿದ್ದಂತೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರೆಲ್ಲ ಎದ್ದು ನಿಂತು ಚಪ್ಪಾಳೆ ತಟ್ಟಿದರು. |
* ಯಡಿಯೂರಪ್ಪ ಮಾತನಾಡಿ, ತಾವು ಕೆಲವು ದಿನಗಳ ಹಿಂದಷ್ಟೆ ಪುನೀತ್ ರಾಜ್‌ಕುಮಾರ್ ಅವರ ಕೆಲವು ಸಿನಿಮಾಗಳನ್ನು ನೋಡಿದ್ದಾಗಿಯೂ, ಪುನೀತ್ ರಾಜ್‌ಕುಮಾರ್ ತಮ್ಮ ತಂದೆಯ ಗುಣಗಳನ್ನು ಹೊಂದಿರುವ ವ್ಯಕ್ತಿಯಾಗಿಯೂ ಇದ್ದುದಾಗಿ ಹೇಳಿದರು. |
* ಸಿದ್ದರಾಮಯ್ಯ ಮಾತನಾಡಿ, ಪುನೀತ್ ರಾಜ್‌ಕುಮಾರ್ ಅನ್ನು ಕಳೆದುಕೊಂಡಿದ್ದು ಕುಟುಂಬದ ಒಬ್ಬ ಸದಸ್ಯನನ್ನು ಕಳೆದುಕೊಂಡಷ್ಟೆ ದುಃಖವಾಗಿದೆಯೆಂದು ಹೇಳಿದರು. ಪುನೀತ್‌ಗೆ ಮರಣೋತ್ತರ ಪದ್ಮಶ್ರೀ ನೀಡಬೇಕೆಂದು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಹೇಳಿದರು. |
* ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಸರ್ಕಾರವು ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿ ಹೊಸ ಕಲಾವಿದರನ್ನು ತಯಾರು ಮಾಡುವ ಸಂಸ್ಥೆಯೊಂದನ್ನು ಕಟ್ಟಬೇಕು, ಜೊತೆಗೆ ಸ್ಟುಡಿಯೋ ಒಂದನ್ನು ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು. |
* ತಮಿಳಿನ ನಟ ವಿಶಾಲ್ ಮಾತನಾಡಿ, ಪುನೀತ್ ರಾಜ್‌ಕುಮಾರ್ ತಮಗೆ ಅಣ್ಣನಿದ್ದಂತೆ, ಅವರ ಕುಟುಂಬದವರು ಮನಸ್ಸು ಮಾಡಿ ಪುನೀತ್ ರಾಜ್‌ಕುಮಾರ್ ಮಾಡುತ್ತಿದ್ದ ಸಾಮಾಜಿಕ ಕಾರ್ಯವನ್ನು ಮುಂದುವರೆಸಿಕೊಂಡು ಹೋಗುವ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಶಕ್ತಿಧಾಮದ ವಿದ್ಯಾರ್ಥಿನಿಯರ ಜವಾಬ್ದಾರಿಯನ್ನು ತಾವು ವಹಿಸಿಕೊಳ್ಳುವುದಾಗಿ ಮತ್ತೊಮ್ಮೆ ಹೇಳಿದರು. |
* ಕಾರ್ಯಕ್ರಮದಲ್ಲಿ ವಿ ನಾಗೇಂದ್ರ ಪ್ರಸಾದ್ ರಚಿಸಿರುವ ''ಮುತ್ತುರಾಜನ ಮುತ್ತು ಎತ್ತ ಹೋದೆಯೋ'' ಎಂಬ ಹಾಡನ್ನು ಬಿಡುಗಡೆ ಮಾಡಲಾಯ್ತು. ಹಾಡನ್ನು ವಿಜಯಪ್ರಕಾಶ್ ಹಾಡಿದ್ದು, ಗುರುಕಿರಣ್ ಸಂಗೀತ ನೀಡಿದ್ದಾರೆ. |
* ಜೆಡಿಎಸ್ ಮುಖಂಡ ಹಾಗೂ ಉದ್ಯಮಿ ಶರವಣ ಅವರು ಪುನೀತ್ ರಾಜ್‌ಕುಮಾರ್ ಚಿತ್ರವುಳ್ಳ ನಾಣ್ಯವನ್ನು ಬಿಡುಗಡೆಗೊಳಿಸಿದರು. ವೇದಿಕೆ ಮೇಲೆ ಎಲ್ಲ ಪಕ್ಷದ ಮುಖಂಡರು ಒಟ್ಟಾಗಿ ನಾಣ್ಯ ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು. |
* ನಟ ದರ್ಶನ್ ತಡವಾಗಿ ಕಾರ್ಯಕ್ರಮಕ್ಕೆ ಆಗಮಿಸಿದರು. ಅವರನ್ನು ಪೊಲೀಸರು ಹೊರಗಡೆ ತಡೆದು, ಒಳಗೆ ಜಾಗ ಖಾಲಿ ಇಲ್ಲ ಎಂದರು. ನನ್ನನ್ನು ಒಳಗೆ ಬಿಡಿ ಸಾಕು ಎಲ್ಲೋ ಒಂದು ಕಡೆ ಕುಳಿತುಕೊಳ್ಳುತ್ತೇನೆ ಎಂದರು. ಆ ನಂತರ ಒಳಗೆ ಬಂದ ದರ್ಶನ್ ವೇದಿಕೆ ಏರಿ ಪುನೀತ್ ಬಗ್ಗೆ ಪ್ರೀತಿಯ ಮಾತನ್ನಾಡಿದರು. ಪುನೀತ್‌ಗೆ 47 ವರ್ಷ ಆಯಸ್ಸು ಎಂದು ಬ್ರಹ್ಮ ಬರೆದಿದ್ದ ಎನಿಸುತ್ತದೆ, ಅವನೇ ಅದನ್ನು ತಿದ್ದಬೇಕು ಎನಿಸಿಕ... |
* ಕಾರ್ಯಕ್ರಮದಲ್ಲಿ ಶಕ್ತಿಧಾಮದ ವಿದ್ಯಾರ್ಥಿನಿಯರು ಸಾಮೂಹಿಕವಾಗಿ ಹಾಡು ಹಾಡಿದ್ದು ಎಲ್ಲರನ್ನೂ ಆರ್ದ್ರಗೊಳಿಸಿತು. ಶಕ್ತಿಧಾಮಕ್ಕೆ ಪುನೀತ್ ಬೆನ್ನೆಲುಬಾಗಿದ್ದರು. ದೊಡ್ಮನೆ ಕುಟುಂಬ ಶಕ್ತಿಧಾಮವನ್ನು ಕಟ್ಟಿದ್ದು ಅದುವೇ ಅದರ ಮೇಲುಸ್ತುವಾರಿ ನೋಡಿಕೊಳ್ಳುತ್ತಿದೆ. |
* ತೆಲುಗಿನ ನಟ ಮೋಹನ್‌ಲಾಲ್ ಪುತ್ರ ಮಂಚು ಮನೋಜ್, ಕಾರ್ಯಕ್ರಮದಲ್ಲಿ ಮಾತನಾಡಿ ಪುನೀತ್ ರಾಜ್‌ಕುಮಾರ್‌ಗೆ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂದು ತೆಲುಗು ಚಿತ್ರರಂಗದಿಂದ ಮನವಿಯನ್ನು ಕೇಂದ್ರಕ್ಕೆ ಕಳಿಸುತ್ತೇವೆ, ಅಂತೆಯೇ ಎಲ್ಲ ಚಿತ್ರರಂಗದಿಂದಲೂ ಮನವಿ ಕಳಿಸುವಂತಾಗಬೇಕು ಎಂದರು. |
Read more about: puneeth rajkumar sandalwood shiva rajkumar ಪುನೀತ್ ರಾಜ್‌ಕುಮಾರ್ ಚಂದನವನ ಶಿವರಾಜ್ ಕುಮಾರ್ |
Karnataka Film Chamber organized Puneeth Namana program in remember of Puneeth Rajkumar today in palace ground. Here is the highlights of the program. |
ವಿನಯ್ ಕುಮಾರ್, ಯೂಸುಫ್ ಕ್ರಿಕೆಟ್ ವಿದಾಯ | Udayavani – ಉದಯವಾಣಿ |
Thursday, 15 Apr 2021 | UPDATED: 12:00 PM IST |
Team Udayavani, Feb 27, 2021, 6:20 AM IST |
ಬೆಂಗಳೂರು: ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಕರ್ನಾಟಕದ ಯಶಸ್ವಿ ಪೇಸ್ ಬೌಲರ್, "ದಾವಣಗೆರೆ ಎಕ್ಸ್‌ಪ್ರೆಸ್' ಖ್ಯಾತಿಯ ಆರ್. ವಿನಯ್ ಕುಮಾರ್ ಮತ್ತು ಭಾರತದ ಸ್ಫೋಟಕ ಬ್ಯಾಟ್ಸ್‌ಮನ್ ಆಗಿದ್ದ ಯೂಸುಫ್ ಪಠಾಣ್ ಶುಕ್ರವಾರ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದರು. |
"ಕಳೆದ 25 ವರ್ಷಗಳಿಂದ ಕ್ರಿಕೆಟ್ ಬದುಕಿನ ಸುದೀರ್ಘ ಸಂಚಾರ ನಡೆಸುತ್ತ, ವಿವಿಧ ನಿಲ್ದಾಣಗಳನ್ನು ಹಾದುಹೋದ ದಾವಣಗೆರೆ ಎಕ್ಸ್‌ಪ್ರೆಸ್ ಇಂದು "ರಿಟೈರ್‌ವೆುಂಟ್' ಎಂಬ ಕೊನೆಯ ನಿಲ್ದಾಣವನ್ನು ತಲುಪಿದೆ. ಸಾಕಷ್ಟು ಸಮ್ಮಿಶ್ರ ಭಾವನೆಗಳೊಂದಿಗೆ ನಾನು, ವಿನಯ್ ಕುಮಾರ್ ಆರ್., ಅಂತಾರಾಷ್ಟ್ರೀಯ ಮತ್ತು ಪ್ರಥಮ ದರ್ಜೆ ಕ್ರಿಕೆಟಿಗೆ ವಿದಾಯ ಹೇಳುತ್ತಿದ್ದೇನೆ. ಇದು ಸುಲಭ ನಿರ್ಧಾರವಲ್ಲ. ಆದರೆ ಪ್ರ... |
"ಆದರೆ ದಾವಣಗೆರೆ ಎಕ್ಸ್‌ಪ್ರೆಸ್ ಒಂದು ನಿಲ್ದಾಣದಲ್ಲಿ ನಿಂತಿದೆಯೇ ಹೊರತು ಹಳಿ ತಪ್ಪಿಲ್ಲ. ಈ ಅದ್ಭುತ ಕ್ರೀಡೆಗೆ ಮರಳಿ ಕೊಡುಗೆಯನ್ನು ನೀಡುವ ಸಲುವಾಗಿ ಓಟ ಮುಂದುವರಿಸಲಿದೆ. ನಿದ್ರಿಸುವ ಮುನ್ನ ಮೈಲುಗಟ್ಟಲೆ ಪಯಣ ಮಾಡಲಿಕ್ಕಿದೆ. ನನ್ನ ಬದುಕಿನುದ್ದಕ್ಕೂ ಪ್ರೀತಿ ಮತ್ತು ಬೆಂಬಲ ವ್ಯಕ್ತಪಡಿಸಿದ ನಿಮ್ಮೆಲ್ಲರಿಗೂ ಥ್ಯಾಂಕ್ಸ್' ಎಂದು 37 ವರ್ಷದ ವಿನಯ್ ಟ್ವೀಟ್‌ನಲ್ಲಿ ತಿಳಿಸಿದರು. |
ಪ್ರಥಮ ದರ್ಜೆ ಸಾಧಕ : |
1984ರ ಫೆ. 12ರಂದು ದಾವಣಗೆರೆಯಲ್ಲಿ ಜನಿಸಿದ ರಂಗನಾಥ್ ವಿನಯ್ ಕುಮಾರ್ ಭಾರತದ ಪರ ಏಕೈಕ ಟೆಸ್ಟ್, 31 ಏಕದಿನ ಹಾಗೂ 9 ಟಿ20 ಪಂದ್ಯಗಳನ್ನಾಡಿದ್ದಾರೆ. 2012ರ ಆಸ್ಟ್ರೇಲಿಯ ಪ್ರವಾಸದ ವೇಳೆ ಪರ್ತ್‌ನಲ್ಲಿ ಆಡಿದ ಟೆಸ್ಟ್‌ನಲ್ಲಿ ಅವರು ಜಹೀರ್, ಉಮೇಶ್ ಯಾದವ್ ಮತ್ತು ಇಶಾಂತ್ ಜತೆಗೂಡಿ ಬೌಲಿಂಗ್ ನಡೆಸಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ ಮೈಕಲ್ ಹಸ್ಸಿ ಅವರ ವಿಕೆಟ್ ಉರುಳಿಸಿದ್ದಷ್ಟೇ ಅ... |
2004-05ರ ರಣಜಿ ಋತುವಿನಲ್ಲಿ ಅವರು ಕರ್ನಾಟಕ ಪರ ಪದಾರ್ಪಣೆ ಮಾಡಿದರು. ಯಶಸ್ವಿ ನಾಯಕನಾಗಿಯೂ ಮೂಡಿಬಂದರು. ಕೊನೆಯಲ್ಲೊಂದು ವರ್ಷ ಪುದುಚೆರಿಯನ್ನು ಪ್ರತಿನಿಧಿಸಿದ ವಿನಯ್, 139 ಪ್ರಥಮ ದರ್ಜೆ ಪಂದ್ಯಗಳಿಂದ 504 ವಿಕೆಟ್ ಹಾಗೂ 3,311 ರನ್ ಸಂಪಾದಿಸಿದ್ದಾರೆ. 32ಕ್ಕೆ 8 ವಿಕೆಟ್ ಕೆಡವಿದ್ದು ಅತ್ಯುತ್ತಮ ಸಾಧನೆ. ಎರಡು ಶತಕಗಳನ್ನೂ ಬಾರಿಸಿ ತಮ್ಮ ಆಲ್‌ರೌಂಡ್ ಸಾಮರ್ಥ್ಯವನ್ನು ಸಾಬೀತುಪಡಿಸಿದ... |
ಮಹಾನ್ ಆಟಗಾರರ ಒಡನಾಟ : |
ಲೆಜೆಂಡ್ರಿ ಕ್ರಿಕೆಟಿಗರಾದ ತೆಂಡುಲ್ಕರ್, ಕುಂಬ್ಳೆ, ಸೆಹವಾಗ್, ಗಂಭೀರ್, ಧೋನಿ, ಕೊಹ್ಲಿ ಮೊದಲಾದವರೊಂದಿಗೆ ಆಡುವ ಅವಕಾಶ ಪಡೆದ ತಾನು ನಿಜಕ್ಕೂ ಅದೃಷ್ಟವಂತ ಎಂದು ವಿನಯ್ ಇದೇ ಸಂದರ್ಭದಲ್ಲಿ ಹೇಳಿದರು. |
ವಿಶ್ವಕಪ್ ಹೀರೋ ಯೂಸುಫ್ ಪಠಾಣ್ : |
ಪಠಾಣ್ ಸೋದರರಲ್ಲಿ ಹಿರಿಯರಾದ ಯೂಸುಫ್ ಪಠಾಣ್ ಹೊಡಿಬಡಿ ಆಟಕ್ಕೆ ಖ್ಯಾತರಾಗಿದ್ದರು. 2007ರ ಚೊಚ್ಚಲ ಟಿ20 ವಿಶ್ವಕಪ್, 2011ರ ವಿಶ್ವಕಪ್, ಕೆಕೆಆರ್‌ನ ಐಪಿಎಲ್ ಗೆಲುವಿನ ವೇಳೆ ತಂಡದ ಸ್ಟಾರ್ ಆಟಗಾರನಾಗಿ ಮಿಂಚಿದ್ದು ಯೂಸುಫ್ ಹೆಗ್ಗಳಿಕೆ. |
"ನನ್ನ ಬದುಕಿನ ಪ್ರಮುಖ ಇನ್ನಿಂಗ್ಸ್ ಒಂದಕ್ಕೆ ಪೂರ್ಣವಿರಾಮ ಹಾಕುತ್ತಿದ್ದೇನೆ. ಎಲ್ಲ ಮಾದರಿಯ ಕ್ರಿಕೆಟಿಗೆ ಅಧಿಕೃತವಾಗಿ ವಿದಾಯ ಹೇಳುತ್ತಿದ್ದೇನೆ. ಈ ಸಂದರ್ಭದಲ್ಲಿ ನನ್ನ ಕುಟುಂಬದವರಿಗೆ, ಗೆಳೆಯರಿಗೆ, ಅಭಿಮಾನಿಗಳಿಗೆ, ತಂಡ, ಕೋಚ್ ಮತ್ತು ಇಡೀ ದೇಶಕ್ಕೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ' ಎಂದರು. ಈ ಸಂದರ್ಭದಲ್ಲಿ ಬಿಸಿಸಿಐ ಮತ್ತು ಬರೋಡ ಕ್ರಿಕೆಟ್ ಮಂಡಳಿಯನ್ನೂ ಅವರು ಸ್ಮರಿಸಿದರು. |
ಯೂಸುಫ್ ಪಠಾಣ್ 57 ಏಕದಿನ ಪಂದ್ಯಗಳಿಂದ 810 ರನ್ ಹೊಡೆದಿದ್ದಾರೆ. 2 ಶತಕ, 3 ಅರ್ಧ ಶತಕ ಇದರಲ್ಲಿ ಒಳಗೊಂಡಿದೆ. 22 ಟಿ20 ಪಂದ್ಯಗಳಿಂದ 236 ರನ್ ಬಾರಿಸಿದ್ದಾರೆ. 2012ರಲ್ಲಿ ಭಾರತವನ್ನು ಕೊನೆಯ ಸಲ ಪ್ರತಿನಿಧಿಸಿದ್ದರು. ಕಳೆದೆರಡು ಐಪಿಎಲ್ ಹರಾಜಿನಲ್ಲಿ ಅವರು ಮಾರಾಟವಾಗಿರಲಿಲ್ಲ. |
ಸ್ಮರಣೀಯ ಕ್ಷಣಗಳು : |
"ಎರಡು ವಿಶ್ವಕಪ್ ವಿಜೇತ ತಂಡದ ಸದಸ್ಯನಾಗಿದ್ದು, ತೆಂಡುಲ್ಕರ್ ಅವರನ್ನು ಹೆಗಲ ಮೇಲೆ ಹೊತ್ತು ಸುತ್ತು ಬಂದದ್ದೆಲ್ಲ ನನ್ನ ಪಾಲಿನ ಸ್ಮರಣೀಯ ಕ್ಷಣಗಳಾಗಿವೆ. ನನ್ನ ಮೇಲೆ ಸಂಪೂರ್ಣ ನಂಬಿಕೆ ಇರಿಸಿದ ನಾಯಕರಾದ ಧೋನಿ, ವಾರ್ನ್, ಗಂಭೀರ್ ಮತ್ತು ಜೇಕಬ್ ಮಾರ್ಟಿನ್ ಅವರಿಗೆ ವಿಶೇಷ ಥ್ಯಾಂಕ್ಸ್' ಎಂದು ಪಠಾಣ್ ಹೇಳಿದರು. |
ಪಾಕಿಸ್ಥಾನ ವಿರುದ್ಧದ 2007ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಯೂಸುಫ್ ಪಠಾಣ್ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಅಡಿಯಿರಿಸಿದ್ದರು. ಗಂಭೀರ್ ಜತೆ ಆರಂಭಿಕನಾಗಿ ಇಳಿದು 8 ಎಸೆತಗಳಿಂದ 15 ರನ್ ಹೊಡೆದಿದ್ದರು. |
174 ಐಪಿಎಲ್ ಪಂದ್ಯಗಳಿಂದ 3,204 ರನ್, ಭಾರತದ ಅತೀ ವೇಗದ ಶತಕದ ದಾಖಲೆ, 16 ಪಂದ್ಯಶ್ರೇಷ್ಠ ಗೌರವ, 42 ವಿಕೆಟ್ ಸಂಪಾದಿಸಿದ ಹೆಗ್ಗಳಿಕೆ ಯೂಸುಫ್ ಅವರದು. |
ಬಾಳಿಗೊಂದು ಚಿಂತನೆ (143) - ಹುತಾತ್ಮರ ದಿನ | ಸಂಪದ |
ಬಾಳಿಗೊಂದು ಚಿಂತನೆ (143) - ಹುತಾತ್ಮರ ದಿನ |
By ಬರಹಗಾರರ ಬಳಗ on Sun, 01/30/2022 - 09:29 |
ಹೌದಲ್ವಾ? ಜನವರಿ ೩೦ ಬಂದೊಡನೆ ನೆನಪು ಬಾಲ್ಯದ ದಿನಗಳು, ಶಾಲಾ ಜೀವನದತ್ತ ಓಡುತ್ತದೆ. ಪ್ರಾಥಮಿಕ ಶಾಲೆಯಲ್ಲಿ ನೀಡುವ ಸೂಚನೆ ೧೧ ಗಂಟೆಗೆ ಬೆಲ್ ಆದ ತಕ್ಷಣ ೨ ನಿಮಿಷ ಮೌನ ಪ್ರಾರ್ಥನೆ. ನಾವೆಲ್ಲ ಎದ್ದು ನಿಲ್ಲುತ್ತಿದ್ದೆವು ಸಂಭ್ರಮದಲ್ಲಿ. ಆದರೆ ಇದರ ಹಿಂದಿನ ನೋವು, ದು:ಖ ಒಂದೂ ಗೊತ್ತಿರಲಿಲ್ಲ. ನಮ್ಮ ರಾಷ್ಟ್ರಪಿತ ಬಾಪೂಜಿಯವರನ್ನು ನಾವು ಕಳಕೊಂಡ ದಿನ. ಸತ್ಯ, ಶಾಂತಿ, ಅಹಿಂಸೆ, ತ್ಯಾಗವೆಂಬ ಬಲವ... |
ನಮ್ಮ ರಾಷ್ಟ್ರದ ಹಿತರಕ್ಷಣೆಗಾಗಿ ಹಗಲಿರುಳು ದುಡಿಯುವ ವೀರ ಯೋಧರ ಬಲಿದಾನ ಅಳತೆಗೆ ಸಿಗಲಾರದು. ಅವರೆಲ್ಲರ ತ್ಯಾಗಕ್ಕೆ ಬೆಲೆ ಕಟ್ಟಲಾಗದು. ಎಲ್ಲರನ್ನೂ ಸ್ಮರಿಸುವ ದಿನ. ಒಂದಷ್ಟು ಚರಿತ್ರೆಯ ಪುಟಗಳನ್ನು ತಿರುವಿ ಹಾಕಿದಾಗ ತ್ಯಾಗದ, ಹಿಂದಿನ ಘಟನೆಗಳನ್ನು ಓದಿದಾಗ ಮೈರೋಮಾಂಚನವಾಗುತ್ತದೆ. ಸ್ವಾತಂತ್ರ್ಯಪೂರ್ವದಲ್ಲಿ ನಂತರದಲ್ಲಿ ಹುತಾತ್ಮರಾದ ಎಲ್ಲರನ್ನೂ ನೆನಪಿಸಿ, ಶ್ರದ್ಧಾಂಜಲಿ ಸಲ್ಲಿಸುತ್ತೇವೆ.... |
ಬಾಪೂರವರು ಸತ್ಯದ ಶೋಧನೆಯನ್ನು ಅಹಿಂಸೆಯ ಮೂಲಕ ಸಿದ್ಧಿಸಿಕೊಂಡವರು. ಭಗವಂತನ ಸಾಕ್ಷಾತ್ಕಾರಕ್ಕೆ ಅಹಿಂಸೆಯ ಮಾರ್ಗ ಹಿಡಿದವರು. ಸ್ವಾವಲಂಬನೆ, ನಮ್ಮ ಕೆಲಸವನ್ನು ನಾವೇ ಮಾಡಿಕೊಳ್ಳುವುದು, ಶ್ರಮದ ಮಹತ್ವಕ್ಕೆ ಆದ್ಯತೆ ನೀಡಿದವರು. ಎಲ್ಲಿ ಪ್ರೇಮ, ಪ್ರೀತಿ, ದಯೆ, ಕರುಣೆ, ತ್ಯಾಗ, ಸಹನೆ, ಧ್ಯೇಯ ಇದೆಯೋ ಅಲ್ಲಿ ಹಿಂಸೆಯ ಪ್ರಶ್ನೆಯೇ ಬರಲಾರದು ಎಂಬುದನ್ನು ತೋರಿಸಿಕೊಟ್ಟವರು. ಕ್ರೌರ್ಯಕ್ಕೆ ಕ್ರೌರ್ಯ, ... |
ಈ ದಿನವನ್ನು ಸರ್ವೋದಯ ದಿನವೆಂದು ಸಹ ಹೇಳುವರು. 'ಸರ್ವರಿಗೂ ಸಮ ಬಾಳು ಸರ್ವರಿಗೂ ಸಮಪಾಲು' ತತ್ವವನ್ನು ಸಾರಿದರು. ಹೆತ್ತ ತಾಯಿಯ ಪ್ರೇಮ ಸಹನೆಯ ಪ್ರತೀಕ ಪ್ರತಿಯೋರ್ವನಲ್ಲೂ ಈ ಗುಣ ಬಂದಾಗ ಜಗಳ, ದ್ವೇಷಕ್ಕೆ ಆಸ್ಪದವಿಲ್ಲ, ಹಿಂಸೆಯ ಮಾತೇ ಇಲ್ಲ ಎಂದ ಮಹಾನ್ ವ್ಯಕ್ತಿತ್ವ ಬಾಪೂ ಅವರದು. ನಮ್ಮ ಹಿತಕ್ಕಾಗಿ, ತಾಯ್ನಾಡ ರಕ್ಷಣೆಗಾಗಿ ಹಗಲಿರುಳು ಹೋರಾಡಿ ಮಡಿದ ಎಲ್ಲರನ್ನೂ ನೆನೆಯೋಣ, ನುಡಿನಮನ ಸಲ್ಲಿಸೋ... |
ಕೋಮುಗಲಭೆ ತನಿಖೆ ಅನಗತ್ಯ: ಸಿಎಂ ಕುಮಾರಸ್ವಾಮಿ | Communal clash : Investigation is not needed, says chief minister Kumaraswamy - Kannada Oneindia |
9 min ago ಪಬ್‌ನಲ್ಲಿ ಯುವತಿ ಟಾಯ್ಲೆಟ್‌ಗೆ ಹೋದಾಗ ವಿಡಿಯೋ ಮಾಡಿದ ನೌಕರ! |
13 min ago ಕುಡಿಬೇಡ ಎಂದಿದ್ದಕ್ಕೆ ಮದುಮಗನ ಕೊಲೆಗೆ ಯತ್ನಿಸಿದ ಬಾವ |
15 min ago ಶಿವಮೊಗ್ಗ; ಭಿನ್ನಮತದ ಹೊರತಾಗಿಯೂ ಮೇಯರ್ ಸ್ಥಾನ ಉಳಿಸಿಕೊಂಡ ಬಿಜೆಪಿ |
ಕೋಮುಗಲಭೆ ತನಿಖೆ ಅನಗತ್ಯ: ಸಿಎಂ ಕುಮಾರಸ್ವಾಮಿ |
| Published: Tuesday, January 23, 2007, 5:30 [IST] |
ಬೆಂಗಳೂರು: ಗಲಭೆಕೋರರಿಗೆ ಕಡಿವಾಣ ಹಾಕಲು ಸರ್ಕಾರ ಸಮರ್ಥವಾಗಿದ್ದು, ನಗರದಲ್ಲಿ ನಡೆದ ಕೋಮುಗಲಭೆ ಕುರಿತು ತನಿಖೆ ಅನಗತ್ಯ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. |
ಈ ಕುರಿತು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಗಲಭೆಗೆ ಸರ್ಕಾರದ ವೈಫಲ್ಯ ಕಾರಣ ಎಂಬುದು ಆಧಾರರಹಿತ. ಸರ್ಕಾರ ಯಾವುದೇ ಹಂತದಲ್ಲೂ ಎಡವಿಲ್ಲ. ಹಾಗಾಗಿ ತನಿಖೆ ನಡೆಸುವ ಅಗತ್ಯವೂ ಇಲ್ಲ. ಒಂದು ವೇಳೆ ತನಿಖೆ ಅಗತ್ಯವೆನಿಸಿದರೆ ಸರ್ಕಾರ ಸ್ಪಂದಿಸಲಿದೆ ಎಂದು ತಿಳಿಸಿದರು. |
ಗಲಭೆ ಹಿಂದೆ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ಅಡಗಿದೆ ಎಂದು ಆರೋಪಿಸಿದ ಅವರು, ಗಲಭೆಕೋರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. |
ತನಿಖೆಗೆ ಕಾಂಗ್ರೆಸ್ ಒತ್ತಾಯ: ಶಿವಾಜಿನಗರ ಹಾಗೂ ಸುತ್ತಮುತ್ತ ನಡೆದ ಕೋಮುಗಲಭೆ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಪಕ್ಷ ಒತ್ತಾಯಿಸಿದೆ. ಸೋಮವಾರ ನಡೆದ ಪಕ್ಷದ ಸಭೆಯಲ್ಲಿ ಈ ಕುರಿತು ಗೊತ್ತುವಳಿಯಾಂದನ್ನು ಅಂಗೀಕರಿಸಲಾಯಿತು. |
ಬಿಡುಗಡೆಯಾಯ್ತು ಹೊಸ ಸಿಎಫ್‍ಮೋಟೊ 250ಎಸ್ಆರ್ ಬೈಕ್ - Kannada DriveSpark |
2 min ago ರೋಡ್ ಟೆಸ್ಟಿಂಗ್‌ನಲ್ಲಿ ಕಂಡುಬಂದ ಹ್ಯುಂಡೈ ಕ್ರೆಟಾ 7 ಸೀಟರ್ ವರ್ಷನ್ |
Published: Wednesday, July 29, 2020, 15:55 [IST] |
ಚೀನಾ ಮೂಲದ ದ್ವಿಚಕ್ರ ವಾಹನ ಕಂಪನಿಯಾದ ಸಿಎಫ್‍ಮೋಟೊ ತನ್ನ ಬಹುನೀರಿಕ್ಷಿತ ಹೊಸ 250ಎಸ್‍ಆರ್ ಬೈಕ್ ಅನ್ನು ಮಲೇಷ್ಯಾದಲ್ಲಿ ಬಿಡುಗಡೆಗೊಳಿಸಿದೆ. ಸಿಎಫ್‌ಮೋಟೊ 250 ಎಸ್‌ಆರ್ ಸಂಪೂರ್ಣ ಫೇರ್ಡ್ ಕ್ವಾರ್ಟರ್-ಲೀಟರ್ ಬೈಕ್ ಆಗಿದೆ. |
ಈ ಹೊಸ ಸಿಎಫ್‍ಮೋಟೊ 250ಎಸ್ಆರ್ ಬೈಕ್ ಈಗಾಗಲೇ ಆಗ್ನೇಯ ಏಷ್ಯಾದ ದೇಶದಲ್ಲಿ ಮಾರಾಟವಾಗುತ್ತಿದೆ. ಸಿಎಫ್‍ಮೋಟೊ ಹೊಸ 250ಎಸ್‍ಆರ್ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡಗಡೆಗೊಳಿಸಿದರೆ ಜಿಕ್ಸರ್ ಎಸ್‍ಎಫ್ ಬೈಕಿಗೆ ನೇರ ಪೈಪೋಟಿಯನ್ನು ನೀಡುತ್ತದೆ. ಕ್ವಾರ್ಟರ್-ಲೀಟರ್ ಸೆಗ್‍ಮೆಂಟ್‍ನಲ್ಲಿ ಬೈಕುಗಳು ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದೆ. ಆದರೆ ಸಿಎಫ್‌ಮೋಟೊ... |
ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಸಿಎಫ್‌ಮೊಟೊ ಇಂಡಿಯಾ ಕಂಪನಿಯು 300 ಎನ್‍ಕೆ, 650 ಎನ್‍ಕೆ, 650 ಎಂಟಿ ಮತ್ತು 650 ಜಿಟಿ ಎಂಬ ಮಾದರಿಗಳನ್ನು ಮಾರಾಟ ಮಾಡಲಾಗುತ್ತಿವೆ. |
ಹೊಸ ಸಿಎಫ್ ಮೋಟೊ 250ಎಸ್‍ಎರ್ ಬೈಕಿನ ಮುಂಭಾಗದಲ್ಲಿ ಎಲ್‌ಇಡಿ ಹೆಡ್‌ಲ್ಯಾಂಪ್ ಕ್ಲಸ್ಟರ್ ಅನ್ನು ಹೊಂದಿದೆ. ಬೈಕ್‍ನ ಸವಾರನಿಗೆ ಕಾಂಫರ್ಟ್ ನೀಡಲು ಸ್ಪ್ಲಿಟ್ ಸೀಟ್ ಮತ್ತು ಕಡಿಮೆ ಸೆಟ್ ಹ್ಯಾಂಡಲ್ ಬಾರ್‍ಗಳನ್ನು ಸಹ ಹೊಂದಿದೆ. ಇದಲ್ಲದೆ, ಬೈಕು ಕಾಂಪ್ಯಾಕ್ಟ್ ವ್ಹೀಲ್ ಬೇಸ್ ಅನ್ನು ಹೊಂದಿದ್ದು, ಅದು ತಿರುವುಗಳು ಸರಾಗವಾಗಿ ಹೋಗಲು ಅನುವು ಮಾಡಿಕೊಡುತ್ತದೆ. |
ಸಿಎಫ್‌ಮೋಟೊ 250ಎಸ್‌ಆರ್ ಬೈಕಿನಲ್ಲಿ ಟಿಎಫ್‌ಟಿ ಬಣ್ಣದ ಡಿಸ್‍ಪ್ಲೇ ಒಳಗೊಂಡಿರುತ್ತದೆ, ಅದನ್ನು 300 ಎನ್‌ಕೆ ಮಾದರಿಯಿಂದ ಎರವಲು ಪಡೆಯಲಾಗಿದೆ. ಈ ಡಿಸ್‍ಪ್ಲೇಯು ಸವಾರನಿಗೆ ವೇಗದ ಬಗ್ಗೆ, ಟ್ರಿಪ್ ಮೀಟರ್, ಗೇರ್ ಪೊಸಿಷನ್-ಇಂಡಿಕೇಟರ್, ಟ್ಯಾಕೋಮೀಟರ್, ಫ್ಯೋಲ್ ಗೇಜ್ ಸಮಯ ಇತ್ಯಾದಿ ವಿವರಗಳನ್ನು ನೀಡುತ್ತವೆ. |
ವಿಶೇಷ ವೆಂದರೆ ಈ ಬೈಕಿನಲ್ಲಿ ಸ್ಪೋರ್ಟ್ ಮತ್ತು ರೈನ್ ಎಂಬ ಎರಡು ರೈಡಿಂಗ್ ಮೂಡ್‍ಗಳನ್ನು ಹೊಂದಿದೆ. ಈ ಯಾವುದೇ ಮೋಡ್‍ಗಳನ್ನು ಆಯ್ಕೆ ಮಾಡುವ ಮೂಲಕ 250 ಎಸ್‌ಆರ್‌ನ ಥ್ರೊಟಲ್ ಪ್ರತಿಕ್ರಿಯೆ ಬದಲಾಗುತ್ತದೆ ಮತ್ತು ಇನ್ಸ್ಟ್ರುಮೆಂಟ್ ಕನ್ಸೋಲ್‌ನ ಗ್ರಾಪೀಕ್ಸ್ ವಿನ್ಯಾಸವೂ ಬದಲಾಗುತ್ತದೆ. |
ಸಿಎಫ್‌ಮೊಟೊ 250ಎಸ್‌ಆರ್ ಬೈಕಿನಲ್ಲಿ 249.2 ಸಿಸಿ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಿದೆ. ಈ ಎಂಜಿನ್ 26 ಬಿಹೆಚ್‌ಪಿ ಪವರ್ ಮತ್ತು 22 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ. |
ಈ ಹೊಸ ಬೈಕಿನಲ್ಲಿ ಅಪ್‍ಸೈಡ್ ಡೌನ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿದೆ. ಇನ್ನು ಎರಡೂ ಕಡೆಯಲ್ಲೂ ಡಿಸ್ಕ್ ಬ್ರೇಕ್ ಮೂಲಕ ಬ್ರೇಕಿಂಗ್ ಸಿಸ್ಟಂ ಅನ್ನು ಹೊಂದಿರುತ್ತದೆ. ಈ ಬೈಕ್ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸಹ ಹೊಂದಿರುತ್ತದೆ. |
ಇನ್ನು ಸಿಎಫ್‌ಮೋಟೊ 250ಎಸ್ಆರ್ ಬೈಕ್ ಭಾರತದಲ್ಲಿ ಬಿಡುಗಡೆಯಾದರೆ ಸುಜುಕಿ ಜಿಕ್ಸರ್ ಎಸ್‌ಎಫ್ 250, ಹೋಂಡಾ ಸಿಬಿಆರ್ 250 ಆರ್, ಮತ್ತು ಕೆಟಿಎಂ ಆರ್‌ಸಿ 200 ಬೈಕ್‍ಗಳಿಗೆ ಪೈಪೋಟಿ ನೀಡುತ್ತದೆ. |
ಪಿಸ್ಟನ್ ಪಿನ್ಸ್-ಟಕುಮಿ ಆಟೋ ಪಾರ್ಟ್ |
ನಾನು ಯಾವ ರೀತಿಯ ರಿಂಗ್ ಎಂಡ್ ಅಂತರವನ್ನು ಚಲಾಯಿಸಬೇಕು? |
ನಿಮ್ಮ ಅಪ್ಲಿಕೇಶನ್‌ಗಾಗಿ ನಿರ್ದಿಷ್ಟ ಅಂತರ ಶಿಫಾರಸುಗಳನ್ನು ನೀವು ಬಯಸಿದರೆ, ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮ್ಮ ಗ್ರಾಹಕ ಕೇಂದ್ರವನ್ನು ಸಂಪರ್ಕಿಸಿ. |
ನನ್ನ ಬಳಿ ಪ್ರತಿಸ್ಪರ್ಧಿ ಪಿಸ್ಟನ್‌ಗಳ ಸೆಟ್ ಇದೆ, ಮತ್ತು ನನಗೆ ಇನ್ನೂ 2 ಅಗತ್ಯವಿದೆ. ಟಕುಮಿ ಟಿ ಮಾಡಬಹುದು |
ಇಲ್ಲ. ನಾವು ಇತರ ಬ್ರಾಂಡ್‌ಗಳಿಗೆ ಹೊಂದಾಣಿಕೆ ಮಾಡಲು ಬದಲಿ ಪಿಸ್ಟನ್‌ಗಳನ್ನು ಪೂರ್ಣ ಸೆಟ್ಗಿಂತ ಕಡಿಮೆ ಪ್ರಮಾಣದಲ್ಲಿ ತಯಾರಿಸುವುದಿಲ್ಲ. |
ನನ್ನ ಬಳಿ ಪ್ರತಿಸ್ಪರ್ಧಿ ಪಿಸ್ಟನ್ ಸೆಟ್‌ಗಳ ಸೆಟ್ ಇದೆ. ಟಕುಮಿ ಅವುಗಳನ್ನು ಪುನಃ ಕೆಲಸ ಮಾಡಬಹುದೇ? |
ಇಲ್ಲ. ಒಇ ಗ್ರಾಹಕರಿಗೆ ಸರಬರಾಜು ಮಾಡುವುದನ್ನು ಬಿಟ್ಟು ಬೇರೆ ಯಾವುದೇ ಪಿಸ್ಟನ್‌ಗೆ ನಾವು ಯಾವುದೇ ಪುನರ್ನಿರ್ಮಾಣವನ್ನು ಮಾಡುವುದಿಲ್ಲ. |
ವಾಲ್ ಕ್ಲಿಯರೆನ್ಸ್‌ಗೆ ನನ್ನ ಪಿಸ್ಟನ್ ಅನ್ನು ನಾನು ಹೇಗೆ ತಿಳಿಯುವುದು, ಮತ್ತು ನಾನು ಅಳತೆಯನ್ನು ಎಲ್ಲಿ ಪಡೆಯುತ್ತೇನೆ? |
ಎಲ್ಲಾ ಪಿಸ್ಟನ್ ಕಿಟ್‌ಗಳಲ್ಲಿ ಪಿಸ್ಟನ್ ಸ್ಪೆಕ್ ಶೀಟ್ ಅನ್ನು ಪಿಸ್ಟನ್ ಟು ವಾಲ್ ಕ್ಲಿಯರೆನ್ಸ್ ಶಿಫಾರಸು ಒಳಗೊಂಡಿದೆ. ಶಿಫಾರಸು ಮಾಡಲಾದ ಗೇಜ್ ಪಾಯಿಂಟ್‌ನಲ್ಲಿ ಯಾವಾಗಲೂ ಪಿಸ್ಟನ್‌ಗಳನ್ನು ಅಳೆಯಿರಿ, ಸಾಮಾನ್ಯವಾಗಿ .500 "ಸ್ಕರ್ಟ್‌ನ ಕೆಳಗಿನಿಂದ ಅಥವಾ ಸ್ಪೆಕ್ ಶೀಟ್‌ನಲ್ಲಿ ಸೂಚಿಸಿದಲ್ಲಿ. ನಿಮ್ಮ ಪಿಸ್ಟನ್-ಟು-ವಾಲ್ ಕ್ಲಿಯರೆನ್ಸ್ ಅನ್ನು ನಿರ್ಧರಿಸಲು ಈ ಆಯಾಮವನ್ನು ನಿಮ್ಮ ಸಿದ್ಧಪಡಿಸಿದ ... |
ನಾನು ಎಷ್ಟು ರಿಂಗ್ ಎಂಡ್ ಅಂತರವನ್ನು ಚಲಾಯಿಸಬೇಕು? |
ಪ್ರತಿ ಅಪ್ಲಿಕೇಶನ್‌ಗೆ ಅಗತ್ಯವಾದ ರಿಂಗ್ ಎಂಡ್ ಅಂತರವು ಬದಲಾಗುತ್ತದೆ. ಸರಿಯಾದ ರಿಂಗ್ ಎಂಡ್ ಅಂತರವನ್ನು ನಿರ್ಧರಿಸಲು ನಿಮಗೆ ಸಹಾಯ ಮಾಡಲು ಪಿಸ್ಟನ್ ಮತ್ತು ರಿಂಗ್ ಆದೇಶಗಳೊಂದಿಗೆ ಸ್ಪೆಕ್ ಶೀಟ್ ಅನ್ನು ಸೇರಿಸಲಾಗಿದೆ. ನಿಮ್ಮ ಸ್ಪೆಕ್ ಶೀಟ್ ಅನ್ನು ನೀವು ತಪ್ಪಾಗಿ ಇರಿಸಿದ್ದರೆ ಮತ್ತು ಪ್ರಶ್ನೆಗಳನ್ನು ಹೊಂದಿದ್ದರೆ, ದಯವಿಟ್ಟು ನಮ್ಮ ಗ್ರಾಹಕ ಕೇಂದ್ರವನ್ನು ಸಂಪರ್ಕಿಸಿ .. |
ಟಕುಮಿ ಪ್ರೊಫೆಷನಲ್ ಎಂದರೇನು? |
ಟಕುಮಿ ಪ್ರೊಫೆಷನಲ್ ಟಕುಮಿ ಉತ್ಪನ್ನ ಸಾಲಿಗೆ ಇತ್ತೀಚಿನ ಸೇರ್ಪಡೆಯಾಗಿದೆ. ಉಂಗುರಗಳೊಂದಿಗೆ ಖರೀದಿಸಿದಾಗ ಅಸ್ತಿತ್ವದಲ್ಲಿರುವ ಟಕುಮಿ ಪಿಸ್ಟನ್ ರೇಖೆಯಂತೆಯೇ ಬೆಲೆಯನ್ನು ಉಳಿಸಿಕೊಳ್ಳುವಾಗ ಈ ಹೆಚ್ಚಿನ ಕಾರ್ಯಕ್ಷಮತೆಯ ಪಿಸ್ಟನ್ ಕಿಟ್‌ಗಳು ಅನೇಕ ಸುಧಾರಿತ ವೈಶಿಷ್ಟ್ಯಗಳನ್ನು ಒಳಗೊಂಡಿವೆ. |
ನಿಮ್ಮೊಡನೆ ವಿ.ಆರ್.ಭಟ್: ವಾರಾನ್ನದ ಹುಡುಗರೂ ಮತ್ತು ಪ್ರಶಸ್ತಿಯ ಸರದಾರರೂ ! |
ವಾರಾನ್ನದ ಹುಡುಗರೂ ಮತ್ತು ಪ್ರಶಸ್ತಿಯ ಸರದಾರರೂ ! |
ಅನಿವಾರ್ಯವಾಗಿ ನಿಮ್ಮೊಡನೆ ಹಂಚಿಕೊಳ್ಳಬೇಕಾದ ಮನದ ಇಂಗಿತಗಳು ಕೆಲವು. ಸಮಾಜದ ಹತ್ತಾರು ಮುಖ-ಮಜಲುಗಳನ್ನು ಅವಲೋಕಿಸಿದಾಗ ಸಿಗುವ ಅನನ್ಯ ಅನುಭವ ಬರೇ ' ಕುಳಿತೋದದೆಯುಂ ಕಾವ್ಯಪರಿಣತಮತಿಗಳ್' ಎಂಬ ಮಾತಿಗೆ ಅಡ್ಡ ಬರುತ್ತವೇನೋ. ಕೆಲವನ್ನು ನಾವು ಅಗೆದು ತೆಗೆದು ಜಾಳಿಗೆಯಲ್ಲಿ ಜಾಲಾಡಿಸಿದಾಗ ಮಾತ್ರ ನಮಗೆ ಅವರ ಪರಿಣತಿಯಾಗಲೀ ಅಥವಾ ಇತಿಹಾಸದ ಕತ್ತಲೆಯ ಗರ್ಭದಲ್ಲಿ ನಡೆದುಹೋದ ನೈಜ ಕಥೆಗಳ ಹಂದರವಾಗಲೀ ... |
೩೦-೪೦ ವರ್ಷಗಳ ಹಿಂದಿನ ಕರ್ನಾಟಕ ಇಷ್ಟು ಸಿರಿವಂತರನ್ನು ಹೊಂದಿರಲಿಲ್ಲ, ಆ ವಿಷಯದಲ್ಲಿ ಈಗಲೇ ವಾಸಿ ಎನ್ನಬಹುದು. ಇವತ್ತು ಧನದ ಶ್ರೀಮಂತಿಕೆಯಿದೆ ಆದರೆ ಹೃದಯ ಸಿರಿವಂತಿಕೆಯ ಕೊರತೆ ಹಲವೆಡೆ ಕಾಣುತ್ತದೆ. ಅಂದು ಕರ್ನಾಟಕದ ಹಳ್ಳಿ ಹಳ್ಳಿಗಳು ರಸ್ತೆಗಳಿರದೇ, ಪ್ರಾಥಮಿಕ ಆರೋಗ್ಯ ಸೌಲಭ್ಯಗಳಿರದೇ ಇದ್ದವು. ಹಾಗಂತ ಹಳ್ಳಿಯ ಜನ ಭಾರತೀಯ ಆಯುರ್ವೇದವನ್ನು ಪಾರಂಪರ್ಯವಾಗಿ ನಡೆಸಿಬಂದ ಕೆಲವು ವೈದ್ಯರನ್ನು ... |
ರಾಜಕೀಯದ ಕಲಿ ಕಾಲಿಟ್ಟಮೇಲೆ ಹಳ್ಳಿಗಳ ಸ್ಥಿತಿ ಬದಲಾಗಿಹೋಯಿತು. ಎಷ್ಟಪ್ಪಾ ಅಂದರೆ ಅಕ್ಕ ಪಕ್ಕದ ದಾಯಾದರು ಮುಖ ಮುಖ ನೋಡದಷ್ಟು ಬದ್ಧವೈರಿಗಳಾಗಿ ಮಾರ್ಪಟ್ಟರು. ಯಾರಿಗೂ ಕಷ್ಟದ ಕೆಲಸವಾಗಲೀ ಶ್ರಮಜೀವನವಾಗಲೀ ಬೇಕಾಗಿಲ್ಲ. ಕೃಷಿ ಪದಾರ್ಥಗಳಷ್ಟೇ ಬೇಕೇ ವಿನಃ ಅವುಗಳನ್ನು ಬೆಳೆಯುವ ಗೋಜಿಗೆ ಹೋಗದವರೇ ಜಾಸ್ತಿ. ಎಲ್ಲರೂ ಅಂಡೆಚಡ್ಡಿ[ಪ್ಯಾಂಟು] ಹಾಕಲು ತೊಡಗಿದರು. ಪ್ರತಿಯೊಬ್ಬರ ಕೈಗೂ ಗಡಿಯಾರ ಬಂತು. ಕ... |
ಈ ಎರಡು ಕಾಲಘಟ್ಟಗಳ ಜತೆಜತೆಗೆ ಅಂದಿನ ಹಾಗೂ ಇಂದಿನ ಕೆಲವು ಮಾನವೀಯ ಮೌಲ್ಯಾಧಾರಿತ ಘಟನೆಗಳನ್ನು ಈಗ ನೋಡೋಣ. ಮೊದಲನೆಯದು ವಾರಾನ್ನ. ಬಡ ವಿದ್ಯಾರ್ಥಿಗಳು ತಮ್ಮ ಮುಂದಿನ ಕಲಿಕೆಗಾಗಿ ತಮ್ಮ ತಂದೆ-ತಾಯಿಗಳಿಂದ ಬೀಳ್ಕೊಂಡು, ಪಟ್ಟಣಗಳಿಗೆ ಬಂದು ಅಲ್ಲಿ ಕಠಿಣ ಪರಿಶ್ರಮದಿಂದ ಓದನ್ನು ಮುಂದುವರಿಸಲು ನಿರ್ಧರಿಸಿ, ಸ್ಥಿತಿವಂತರ ಅಥವಾ ಸ್ವಲ್ಪ ಸ್ಥಿತಿವಂತರ ಮನೆಗಳಿಗೆ ಭೇಟಿ ನೀಡಿ ಅನ್ನ-ವಸತಿಗೆ ಕೋರಿಕೊಂಡ... |
ಈ ವಾರಾನ್ನಕ್ಕೆ ಹೋಗುವ ಹುಡುಗರಿಗೆ ಬಹಳ ಇರುಸುಮುರುಸು. ಅನ್ನಹಾಕುವವರ ಋಣವನ್ನು ಭರಿಸುವುದು ಹೇಗೆ ಎಂಬ ಯೋಚನೆ ಕೆಲವರಲ್ಲಿರುತ್ತಿತ್ತು. ಕೆಲವು ಮನೆಗಳಲ್ಲಿ ಬಂದ ವಾರದ ಹುಡುಗರನ್ನು ಚೆನ್ನಾಗಿ ಕಂಡರೆ ಇನ್ನು ಕೆಲವು ಮನೆಗಳಲ್ಲಿ ಒಟ್ಟಾರೆ ಹಾಕಬೇಕಲ್ಲಪ್ಪಾ ಎಂಬ ಭಾವವಿರುತ್ತಿತ್ತು. ಕೆಲವೊಮ್ಮೆ ಸರದಿಯ ವಾರದ ಮನೆಯವರು ಅನಾರೋಗ್ಯದಿಂದಲೋ ಅಥವಾ ಬೇರೇ ಕಾರ್ಯಗಳಿಂದಲೋ " ನಾಳೆ ಬರಬೇಡ, ಮುಂದಿನವಾರ ... |
ಹಾಗೆ ನೋಡಿದರೆ ಅಂದಿಗೆ ಅಡಿಗೆ ಪರಿಕರಗಳು, ಅನುಕೂಲತೆಗಳು ಕಮ್ಮಿ ಇದ್ದವು. ಇದ್ದಲು ಒಲೆ ಅಥವಾ ಸೀಮೆ ಎಣ್ಣೆ ಅಗ್ಗಿಷ್ಟಿಕೆಯನ್ನು ಬಳಸಿ ಆಹಾರ ಬೇಯಿಸಬೇಕಾಗಿತ್ತು. ಕೆಲವು ಕಡೆ ಕಟ್ಟಿಗೆಯ ಒಲೆಯೂ ಇದ್ದ ಕಾಲವದು. ಅಂದಿನ ಗೃಹಿಣಿಯರಿಗೆ ಶಾರೀರಿಕ ಅನಾನುಕೂಲವಿದ್ದರೆ ಇವತ್ತಿನ ರೀತಿ ಹಲವು ವೈದ್ಯಕೀಯ ಸವಲತ್ತುಗಳು ಇರಲಿಲ್ಲ. ಹಾಗಂತ ಅತಿರೇಕದ ಧಾವಂತವೂ ಇರದ ಜೀವನ ಅವರದಾಗಿತ್ತು. ತಮ್ಮ ಮಕ್ಕಳ ಜತೆಗೆ... |
ಒಮ್ಮೆ ಒಬ್ಬರು ಹೇಳಿದ್ದು-- ತಾವು ವಾರಾನ್ನ ಮಾಡುತ್ತಿರುವಾಗ ಒಂದು ದಿನ ಉಪವಾಸವಿರಬೇಕಾದ ಪ್ರಮೇಯ ಬಂದಿತ್ತು. ಯಾವ ಮನೆಯೂ ಗೊತ್ತಾಗಿರಲಿಲ್ಲ. ಸಹಪಾಠಿಯೊಬ್ಬನ ಸ್ನೇಹದಲ್ಲಿ ಆತನಲ್ಲಿ ನಿವೇದಿಸಿ " ಏ ನಿಮ್ಮಮ್ಮಂಗೆ ಹೇಳಿ ಊಟ ಹಾಕಲು ಕೇಳಿನೋಡುತ್ತೀಯೇನೋ " ಎಂದಿದ್ದಕ್ಕೆ ಆ ಹುಡುಗ ಒಪ್ಪಿ ತನ್ನ ಮನೆಯಲ್ಲಿ ಹೇಳಿಬಿಟ್ಟಿದ್ದಾನೆ. ಅವರು " ಆಗಲಿ ಆತ ಬರಲಿ " ಎಂದು ಹೇಳಿಕಳಿಸಿದ್ದಾರೆ. ಈತ ಹೋಗಿದ್ದಾ... |
ಇನ್ನೊಂದು ದಿನ ಇದೇ ವಿದ್ಯಾರ್ಥಿಗೆ ಊಟವಿರಲಿಲ್ಲ. ಅನಿರೀಕ್ಷಿತವಾಗಿ ವಾರದಲ್ಲೊಂದು ದಿನ ಅನ್ನಹಾಕುವವರು ಎಲ್ಲಿಗೋ ಪ್ರಯಾಣ ಹೋಗಿದ್ದರಿಂದ ಅಂದಿಗೆ ಉಪವಾಸವೇ ಗತಿಯಾಗಿತ್ತು. ತಾಳದ ಹೊಟ್ಟೆಯ ತಾಳಕ್ಕೆ ತಕ್ಕಂತೇ ಒಂದಷ್ಟು ನೀರುಕುಡಿದು ಅನ್ನದ ಜಾಡನ್ನು ಹಿಡಿದು ಹೊರಟಿದ್ದನೀತ. ದಕ್ಷಿಣ ಕನ್ನಡದ ಪುಣ್ಯಾತ್ಮರೊಬ್ಬರ ಹೋಟೆಲ್ ಒಂದು ಕಾಣಿಸಿತು. ಹೇಳಿ-ಕೇಳಿ ದಕ್ಷಿಣ ಕನ್ನಡವೆಂದರೆ ಉತ್ಕೃಷ್ಟ ಆಹಾರ ತಯ... |
Subsets and Splits
No community queries yet
The top public SQL queries from the community will appear here once available.