text stringlengths 0 61.5k |
|---|
ದಿನಗಳು ಕಳೆಯುತ್ತಿದ್ದವು. ಜನರ ಮನಸ್ಥಿತಿಯೂ ಬದಲಾಗುತ್ತಲೇ ಹೋಯಿತು. ಯುದ್ಧದ ಫಲಿಂತಾಶವನ್ನು ಯಾರೂ ತಿಳಿದಿರುವುದಿಲ್ಲ. ಆದರೂ ಎಲ್ಲರಿಗೂ ಯುದ್ಧ ಬೇಕು. ಯುದ್ಧಗಳು ಪ್ರಾರಂಭವಾಗಿದ್ದೇ ಮನುಷ್ಯನ ಅಂತರಂಗದಿಂದ. ಮನುಷ್ಯ ಬದುಕುವ ನೀತಿಯಿಂದ ದೂರಾದ. ಮನಸ್ಸಿನೊಳಗೆ ಯುದ್ಧ ಪ್ರಾರಂಭ. ತಾನು ಬದುಕುತ್ತಿರುವುದು ಏತಕ್ಕೆ? ಬದುಕುವ ರೀತಿ ಹೇಗೆ? ಎಂಬ ವಿಚಾರಗಳೇ ಅರ್ಥವಾಗದೆ ಯೋಚನೆಗಳ ಯುದ್ಧ ಪ್ರಾರಂಭ.... |
ತನ್ನ ಜೀವನದ ಉದ್ಧೇಶ ಮತ್ತು ಗುರಿಯೊಂದಿಗೆ ಕೂಡ ಯುದ್ಧ ಪ್ರಾರಂಭ. ಕೊನೆಯಲ್ಲಿ ಮನುಷ್ಯ ಎಲ್ಲವನ್ನೂ ಕಳೆದುಕೊಂಡು ತಾನು ಸೃಷ್ಟಿಸಿಕೊಂಡ ಬೇಲಿಯೊಳಗೆ ಬದುಕಿದರೂ ತನ್ನ ಜೀವನವೂ ಯುದ್ಧದಲ್ಲೇ ಕಳೆಯುವಂತೆ ಮಾಡಿಕೊಂಡ. ವಿಶ್ವಾತ್ಮ ಹೇಳಿದ್ದ, ಮತ್ತೆ ಮತ್ತೆ ಹೇಳುತ್ತಿದ್ದ ಒಂದು ದಿನ ಎಲ್ಲರೂ ಗೆಲ್ಲುತ್ತೀರಿ, ನೀವು ವಿಶ್ವಾತ್ಮನಿಂದ ಪಡೆದಿರುವುದನ್ನೆಲ್ಲ ಶಾಶ್ವತವಾಗಿ ಅವನಿಗೆ ಅರ್ಪಿಸಿದಾಗ ನೀವೆಲ್ಲರ... |
ಕೊನೆಯಲ್ಲಿ ಸಹಿಸಲಾರದ ವಿಶ್ವಾತ್ಮನೇ ಯುದ್ಧ ಸಾರಿದ. ಅದರ ಪ್ರತಿಫಲವೇ ಮತ್ತೊಂದು ಕತ್ತಲಿಲ್ಲದ ಭೂಮಿ. |
ವರ್ಷಿ ತನ್ನ ಕೆಲಸಗಳಲ್ಲಿ ಕಳೆದು ಹೋಗಿದ್ದ. ಅವನ ಎಲ್ಲ ಆವಿಷ್ಕಾರಗಳು ನಡೆದದ್ದು ಅಲ್ಲಿಯೇ. ಅವುಗಳಲ್ಲಿ ಯಾವುದೇ ಒಂದೂ ವಿಫಲವಾಗಿರಲಿಲ್ಲ.ವರ್ಷಿಯ ಹೊಸ ಪ್ರಯೊಗವೊಂದು ಕೆಲವೇ ದಿನಗಳ ಹಿಂದೆ ಯಶಸ್ವಿಯಾಗಿತ್ತು. ಆದರೆ ಇದು ಕಷ್ಟ. ವರ್ಷಿ ಯಾವುದೋ ರಾಕೆಟ್ ಉಡಾವಣೆ ಮಾಡಿ ಎಲಿಮೆಂಟ್ ಗಳನ್ನು ಮೇಲಕ್ಕೆ ಚಿಮ್ಮಿಸುತ್ತಿರಲಿಲ್ಲ. |
ಆಗಾಗ ವರ್ಷಿಗೊಂದು ಕನಸು ಬೀಳುತ್ತಿತ್ತು. ಕನಸನ್ನೂ ಮೀರಿ ವಿಚಿತ್ರ ಅನುಭೂತಿಯೆನ್ನುವುದೇ ಸರಿ. ಮಲಗಿದ್ದ ವರ್ಷಿ ತನ್ನ ದೇಹದ ತೂಕವನ್ನು ಕಳೆದುಕೊಳ್ಳುತ್ತಿದ್ದ. ಮೊದಮೊದಲು ಸ್ವಲ್ಪಸ್ವಲ್ಪವಾಗಿ, ನಂತರದಲ್ಲಿ ಪೂರ್ತಿಯಾಗಿ ದೇಹದ ತೂಕ ಕಳೆದುಕೊಂಡು ವರ್ಷಿಯ ದೇಹ ಗಾಳಿಯಲ್ಲಿ ಹಾರತೊಡಗುತ್ತಿತ್ತು. ಅದೊಂದು ಅದ್ಭುತ ಅನುಭವ. ದೇಹಕ್ಕೆ ತೂಕವೇ ಇಲ್ಲ, ದೇಹದ ತೂಕ ತಿಳಿಯುತ್ತಿಲ್ಲ. ಅಲ್ಲಿಗೆ? ಭೂಮಿಯ ಗ... |
ಇದೇ ಕನಸು ಮತ್ತೆ ಮತ್ತೆ ಕಾಡಿದಾಗ ವರ್ಷಿ ತಡಮಾಡಲಿಲ್ಲ. ಅದರ ಒಳಗುಟ್ಟನ್ನು ಅರಿಯುವ ಹಠ. ಆಟ ಹೇಗಾದರೂ ಸರಿ ತನ್ನ ಮೇಲೆ ಪ್ರಭಾವ ಬೀರುತ್ತಿರುವ ಗುರುತ್ವದ ಶಕ್ತಿಯನ್ನು ತಡೆಯಬೇಕೆಂದು ಪ್ರಯತ್ನಿಸಿದ. ಅದು ಸಾಧ್ಯವಾಗದೇ ಹೋಯಿತು. ಪುಟ್ಟ ಹಕ್ಕಿಯು ಹಾರಬಲ್ಲದು, ಗುರುತ್ವವನ್ನೂ ಮೀರಬಲ್ಲದು ಎಂದಾದರೆ ಮನುಷ್ಯನಿಗೆ ಏಕೆ ಸಾಧ್ಯವಿಲ್ಲ? |
ವರ್ಷಿ ಅವನು, ಮತ್ತೆ ಮತ್ತೆ ಪ್ರಯತ್ನಿಸಿದ. ಶಾಂತಿಯಲ್ಲಿ ಗೌತಮನಾದರೆ, ಹಟದಲ್ಲಿ, ಸೊಕ್ಕಿನಲ್ಲಿ ವಿಶ್ವಾಮಿತ್ರ ಅವನು, ಛಲ ಬಿಡದ ತ್ರಿವಿಕ್ರಮ. ಏನು ಮಾಡಬೇಕು? ಭೂಮಿಯ ಗುರುತ್ವವನ್ನು ಮೀರಲು ಏನು ಮಾಡಬೇಕು? ವರ್ಷಿಯ ಸೂತ್ರಗಳು, ತಾಳೆಗಳು ಎಲ್ಲವೂ ವಿಫಲವಾಯಿತು. ವರ್ಷಿ ಕೈಲಾಗದ್ದು ಎಂದು ಬಿಟ್ಟು ನಿಂತಿದ್ದ ಮೊದಲ ಬಾರಿ… |
" ಮನುಷ್ಯ ಹಾರಲು ವಿಫಲನಾದ, ಮನುಷ್ಯ ಗುರುತ್ವವನ್ನು ಮೀರದಿರಲು ಕಾರಣ ಅವನ ದೇಹ. ಶರೀರವೇ ಬೇಲಿ ಅವನಿಗೆ " ಎಂದ ವಿಶ್ವಾತ್ಮ. ವರ್ಷಿ ವಿಫಲನಾದಾಗಲೆಲ್ಲ ಜೊತೆಗೆ ನಿಂತಿದ್ದು ವಿಶ್ವಾತ್ಮನೇ, ಅವನ ಹೆಮ್ಮೆಯ ತಂದೆಯೇ. |
"ನನಗರ್ಥವಾಗಲಿಲ್ಲ" ಎಂದ ವರ್ಷಿ. ಅವನಿಗೂ ಸೋಲಿನ ಭಯ. ಅಂತರಂಗದೆದುರು ಸೋತು ನಿಲ್ಲುವ ಭಯ. |
ವಿಶ್ವಾತ್ಮನ ಮುಖದಲ್ಲಿ ನಗು ಹಾದು ಹೋಯಿತು; ಹಾದು ಹೋದದ್ದಲ್ಲ, ಹಸನ್ಮುಖ ವಿಶ್ವಾತ್ಮ. ಮುದ್ದು ಕಂದಮ್ಮನ ನಗುವಿನ ಮುಗ್ಧತೆ. ಆ ನಗುವಿನಲ್ಲಿ ಮತ್ತೆ ಮತ್ತೆ ನೋಡಬೇಕು, ಕಣ್ತುಂಬಿಕೊಳ್ಳಬೇಕೆಂದು ಬಯಸುವ ಭಾವ. |
" ಮರಳಿನ ಕಣಗಳು ನೀರಿನಲ್ಲಿ ಮುಳುಗುತ್ತವೆ. ಚಿಕ್ಕ ಪುಟ್ಟ ಕಲ್ಲುಗಳು ನೀರಿನಲ್ಲಿ ಮುಳುಗುತ್ತವೆ. ಅದೇಕೆ ದೊಡ್ದ ಬಂಡೆಯೂ ಸೇರುವುದು ನೀರಿನ ಆಳವನ್ನೇ. ದೊಡ್ದ ಹಡಗು ನೀರಿನಲ್ಲಿ ಮುಳುಗುವುದಿಲ್ಲ ಹೇಗೆ ಸಾಧ್ಯ?" ಎಂದ ವಿಶ್ವಾತ್ಮ. |
ವಿಶ್ವಾತ್ಮ ವರ್ಷಿಗೆ ತಂದೆ. ವರ್ಷಿ ವಿಜ್ಞಾನಕ್ಕೇ ತಂದೆ. ಅದು ಗೊತ್ತವನಿಗೆ ಹಡಗು ನೀರಿನ ಮೇಲೆ ತೇಲುವಂತೆ ಅದಕ್ಕೆ ಹೇಗೆ ರೂಪವನ್ನು ನೀಡುತ್ತಾರೆ ಎಂದು. ಸಣ್ಣ ಕಬ್ಬಿಣದ ತುಂಡು ನೀರಿನಲ್ಲಿ ಮುಳುಗುತ್ತದೆ. ಆದರೆ ಕಬ್ಬಿಣವೇ ತುಂಬಿರುವ ಹಡಗು ತೇಲುತ್ತದೆ. ವಿಚಿತ್ರವೆನಿಸಿದರೂ ಸತ್ಯ. ವರ್ಷಿ ಅದರ ಬಗ್ಗೆಯೇ ಯೋಚಿಸಿದ. ಆದರೂ ಗುರುತ್ವವನ್ನು ಮೀರುವುದು ಹೇಗೆಂದು ತಿಳಿಯಲಿಲ್ಲ. ಗುರುತ್ವದ 9.8m/s2... |
" ಯಾವಾಗಲೂ ವಿಜ್ಞಾನಿಯಂತೆ ಯೋಚಿಸಬೇಡ. ಅದರಿಂದ ದೂರ ನಿಂತು ನೋಡು ವರ್ಷಿ, ವಿಜ್ಞಾನವನ್ನು ಮೀರಿದ್ದು ಇದೆ. ವಿಜ್ಞಾನ ಏನನ್ನೇ ಸೃಷ್ಟಿಸಿದ್ದರೂ ಎಲ್ಲದಕ್ಕೂ ಮೂಲ ಈ ವಿಶ್ವವೇ. ಮನುಷ್ಯ ಮತ್ತು ಇನ್ನುಳಿದ ಯಾವುದೇ ಜೀವಿಗಳು ಕೂಡ ಬರುವಾಗ ಏನು ಹೊತ್ತು ಬಂದಿಲ್ಲ, ಉಸಿರು ನಿಂತ ಮೇಲೆ ಬೆತ್ತಲೆಯೇ ಸತ್ಯ ಎಂದ ಮೇಲೆ ಈ ವಿಜ್ಞಾನಕ್ಕೆ ದೊರೆತ ಪ್ರತಿಯೊಂದೂ ಅಂಶವೂ ವಿಶ್ವದ ಚೇತನವೇ ತಾನೆ?" ಕೇಳಿದ ವಿಶ್ವ... |
ವರ್ಷಿ ಹೌದೆಂಬಂತೆ ತಲೆಯಾಡಿಸಿದ. ಅವನ ಮೆದುಳು ತುಂಬ ವೇಗವಾಗಿ ಕೆಲಸ ಮಾಡುತ್ತಿತ್ತು, ವಿಶ್ವಾತ್ಮ ಏನು ಹೇಳುತ್ತಿದ್ದಾನೆ? ತನಗೆ ಯಾವ ದಿಕ್ಕಿನಲ್ಲಿ ಯೋಚಿಸಲು ಹೇಳುತ್ತಿದ್ದಾನೆ ಎಂದು. |
ವಿಶ್ವಾತ್ಮ ಮಾತನಾಡುತ್ತಲೇ ಇದ್ದ " ಮನುಷ್ಯ ಹುಟ್ಟಿಸಿದ ವಿಜ್ಞಾನ ಏನೂ ಅಲ್ಲ, ಮನುಷ್ಯ ಈ ವಿಶ್ವದ ಕೋಟಿಯ ಒಂದು ಭಾಗಕ್ಕೂ ಸಮವಲ್ಲ, ಆತ ತೃಣ ಮಾತ್ರ. ಮಹಾಸಮುದ್ರದಲ್ಲಿ ಬೊಗಸೆಯಿಂದ ಬಿದ್ದ ನೀರಿನ ಹನಿಯಂತೆ. ಅನಂತ ಆಗಸದಲ್ಲಿ ಬೆಳಕಾಗ ಬಯಸುವ ಮಿಣುಕು ನಕ್ಷತ್ರದಂತೆ. ಮನುಷ್ಯನಿಗೆ, ಭೂಮಿಯ ಮೇಲಿನ ಜೀವಿಗಳಿಗೆ ತಿಳಿಯದ ಅದೆಷ್ಟೋ ವಿಜ್ಞಾನ ಈ ಭೂಮಿಯಲ್ಲಿದೆ ವರ್ಷಿ, ಯೋಚಿಸು ಒಮ್ಮೆ" ಎಂದ. |
ವರ್ಷಿ ಅರ್ಥವಾಗದ ಭಾಷೆ ಕೇಳಿದವಂತೆ ಕಣ್ಮುಚ್ಚದೆ ವಿಶ್ವಾತ್ಮನನ್ನೇ ನೋಡುತ್ತಿದ್ದ. ವಿಶ್ವಾತ್ಮನೆದುರು ತಾನು ಸೋಲುತ್ತಿದ್ದೇನೆ ಎಂಬ ಭಾವ ಒಮ್ಮೆ ಮಿಂಚಾಗಿ ಹೋಯಿತು ವರ್ಷಿಯ ಮನದಲ್ಲಿ. ಎಷ್ಟೆಂದರೂ ಗಂಡಸಿನ ಅಹಂ. ವಿಶ್ವಾತ್ಮ ಮತ್ತದೇ ನಗು ನಕ್ಕ. |
"ಇದು ಸಾಧ್ಯವೇ ಇಲ್ಲ, ಒಂದು ಹೊರಗಿನ ಶಕ್ತಿ ವಸ್ತುವಿನ ಮೇಲೆ ಪ್ರಯೋಗವಾಗದಿದ್ದರೆ ವಸ್ತು ಹಾರಲು ಸಾಧ್ಯವೇ ಇಲ್ಲ." ಮಾತು ನಿಲ್ಲಿಸಿದ ವರ್ಷಿ. |
ವಿಶ್ವಾತ್ಮ ನಗುತ್ತಲೇ ಹೇಳಿದ " ಆ ಗೋಡೆಯನ್ನೊಮ್ಮೆ ನೋಡು " ಕತ್ತು ತಿರುಗಿಸಿದ ವಿಶ್ವಾತ್ಮ. |
" ಸರಿಯಾಗಿ ನೋಡಿ ಹೇಳು" ಎಂದು ನಸುನಕ್ಕ. |
ಅಲ್ಲಿ ಹೊಸದೇನಿದೆಯೆಂಬಂತೆ ವರ್ಷಿ ಮತ್ತೊಮ್ಮೆ ದಿಟ್ಟಿಸಿದ. ವರ್ಷಿ ಬೆಳಕಿಗೆ ಎದುರಾಗಿ ನಿಂತಿದ್ದರಿಂದ ಆತನದೇ ನೆರಳು ಗೋಡೆಯ ಮೇಲೆ ಬೀಳುತ್ತಿತ್ತು. |
" ನೆರಳು, ತನ್ನದೇ ನೆರಳು ಅಷ್ಟೆ" ಎಂದು ಮೌನವಾದ ವರ್ಷಿ. |
ತನ್ನ ಪ್ರಶ್ನೆಗೆ ಉತ್ತರವಲ್ಲದ ವಿಷಯಗಳು, ವಿಶ್ವಾತ್ಮನ ವಿಷಯಾಂತರಗಳು ಎಂದು ಮೌನವಾದ ನೆರಳಿಗೂ ಗುರುತ್ವಕ್ಕೂ ತಾಳಮೇಳವಿಲ್ಲವೆಂಬಂತೆ. |
" ವರ್ಷಿ ನೀನು ಹೇಗಿಷ್ಟು ಮೂರ್ಖನಾಗಲು ಸಾಧ್ಯ? ಇದನ್ನೂ ನಾನೇ ಹೇಳಬೇಕೆಂದರೆ ಹೇಗೆ? ಆದರೂ ಹೇಳುತ್ತೇನೆ ಕೇಳು, ನಿನಗೆ ದೇಹವಿದೆ, ದೇಹಕ್ಕೆ ತೂಕವಿದೆ ಸರಿ. ಆದರೆ ನಿನ್ನ ನೆರಳಿಗೆ ತೂಕವಿದೆಯೇ? ಕನ್ನಡಿಯ ಎದುರಿನಲ್ಲಿ ನಿಂತ ನಿನಗೆ ತೂಕವಿದೆ, ಒಳಗೆ ಕಾಣುವ ನಿನ್ನ ಪ್ರತಿಬಿಂಬಕ್ಕೆ ತೂಕವಿದೆಯೇ? ನೀರಿನಲ್ಲಿ ನಿಂತ ನಿನಗೆ ತೂಕವಿದೆ, ನಿನ್ನ ಅಣಕಿಸುವ ಬಿಂಬಕ್ಕೆ ತೂಕವಿದೆಯೇ? " |
ವಿಶ್ವಾತ್ಮ ಮಾತಿನ ಮಹಾಪೂರ " ಮರದ ಮೇಲಿನ ಸೇಬು ಯಾವಾಗಲೂ ನೆಲಕ್ಕೆ ಬೀಳುತ್ತಿತ್ತು. ಅದೇ ಏಕೆ? ಮೇಲಕ್ಕೆ ಹಾರಿದ ಪ್ರತಿಯೊಂದು ವಸ್ತುವೂ ನೆಲಕ್ಕೆ ಬರುತ್ತಿತ್ತು. ಇಷ್ಟಾದರೂ ಮನುಷ್ಯನಿಗೆ ಭೂಮಿ ತನ್ನನ್ನು ಸೆಳೆಯುತ್ತಿದೆ ಎಂದು ತಿಳಿದಿರಲಿಲ್ಲ. ಸೇಬು ತಲೆಯ ಮೇಲೆ ಬಿದ್ದವನಿಗೆ ತಿಳುವಳಿಕೆಯಿತ್ತೇನೋ…!? ವಿಶ್ವವು ಯಾವಾಗಲೂ ಸೂಚನೆ ಅಥವಾ ವಿಜ್ಞಾನವನ್ನು ಕಣ್ಣಮುಂದೆ ತರುತ್ತಲೇ ಇರುತ್ತದೆ. ಅದನ್ನ... |
"ಗ್ರಹಿಸುವ ಶಕ್ತಿ ಎಂಬುದು ಬದುಕುವ ನೀತಿಯಿಂದ ಬರುತ್ತದೆ. ವಿಶ್ವವು ಪ್ರತಿಬಿಂಬವನ್ನು ನೆರಳಿನಲ್ಲಿ, ಕನ್ನಡಿಯಲ್ಲಿ, ನೀರಿನಲ್ಲಿ ತೋರಿಸಿತ್ತು. ಯಾರೂ ಗ್ರಹಿಸಲಿಲ್ಲ. ಯಾರಾದರೂ ನಿನಗೆ ಹೊಡೆಯಬಹುದು. ನಿನ್ನ ನೆರಳಿಗೆ ಹೊಡೆಯಲು ಸಾಧ್ಯವಿಲ್ಲ. ನಿನ್ನ ಬಿಂಬವನ್ನು ಯಾರೂ ಹಿಡಿಯಲಾರರು. ಯಾರಿಗೂ ಅದನ್ನು ಕೊಲ್ಲುವ ಸಾಮರ್ಥ್ಯವಿಲ್ಲ. ನೀನು ಹಾರುವುದು ಸಾಧ್ಯವೇ ಇಲ್ಲ ಎಂದು ಹೇಳುತ್ತಿರುವೆ, ಹಾರುತ್ತ... |
"ಗುರುತ್ವ ಎಂದರೇನು? ಕೇಳು, ಅದನ್ನೂ ತಿಳಿಸುತ್ತೇನೆ, ಪ್ರೀತಿ, ಅದಮ್ಯ ಪ್ರೀತಿ. ಗುರುತ್ವ ಎಂದರೆ ಅದೊಂದು ಸ್ವಾರ್ಥ. ತನ್ನ ಸ್ವಂತದ ಯಾವುದೇ ವಸ್ತುವೂ ತನ್ನಿಂದ ದೂರ ಹೋಗಬಾರದು ಎಂಬ ಭಾವ. ಕೆಲವೊಮ್ಮೆ ಬದುಕುವ ನೀತಿ ಕಲಿತ ಜೀವಿಗಳು ನನ್ನ ಸೂಚನೆ ಗ್ರಹಿಸಿ ಗುರುತ್ವ ಮೀರಿ ಹಾರುತ್ತವೆ. ಆಗ ಭೂಮಿಯ ಪ್ರೀತಿಗೂ ಆ ಜೀವಿಗಳ ಮನಸ್ಸಿಗೂ ನಡುವೆ ಯುದ್ಧ ನಡೆಯುತ್ತದೆ. ಯ್ಯರು ಗೆಲ್ಲುತ್ತಾರೆ ಎಂಬುದು ಅವ... |
ಈ ಬಾರಿ ವರ್ಷಿಯ ಮುಖದ ಮೇಲೂ ನಗು ಮೂಡಿತ್ತು. Virtuality ಎಂದು ನಕ್ಕ ವರ್ಷಿ. " ಪ್ರತಿಬಿಂಬ" "ನೆರಳು" ಶಬ್ದಗಳು ನೆನಪಾಗುತ್ತಲೇ ಇದ್ದವು. ವಿಶ್ವಾತ್ಮ ನಕ್ಕಂತೆ ಕೇಳಿತು. ಸುತ್ತಲೂ ಅವರಿಬ್ಬರ ನಗುವಿನ ಪಡಸಾಲೆ. ವರ್ಷಿಯು ಹೊರಗಿನ ಯಾವುದೇ ಶಕ್ತಿಯ ಸಹಾಯವಿಲ್ಲದೆ ಹಾರಿದ ಅಂದು. ಯಾವುದೇ ವಸ್ತುವನ್ನಾದರೂ ಗುರುತ್ವ ಮೀರಿಸಿ ತೇಲಾಡಿಸುವುದು ಹೇಗೆಂದು ಕಲಿತ. ಅಂದು ಕಲಿತ ವಿದ್ಯೆ ವರ್ಷಿಯ ಎರಡನೇ ... |
"ಎಂದಿಗೂ ವಿಶ್ವದ ಸೂಚನೆಯನ್ನು ಗ್ರಹಿಸು, ಗ್ರಹಿಸುವ ಕಲೆಯೇ ಬದುಕಿನ ನೀತಿ. ಒಮ್ಮೆ ನೀನದನ್ನು ಕಲಿತರೆ ಉಳಿದೆಲ್ಲವನ್ನೂ ಕಲಿತಂತೆ." ವಿಶ್ವಾತ್ಮನ ಧ್ವನಿ ಪ್ರತಿಧ್ವನಿಸಿತು. |
ರಿಲೀಸ್ ಮುನ್ನವೆ ಭರ್ಜರಿ ಕಲೆಕ್ಷನ್|ಭಾರೀ ಮೊತ್ತಕ್ಕೆ 'ಜೇಮ್ಸ್' ಸ್ಯಾಟ್‍ಲೈಟ್ ರೈಟ್ಸ್ ಸೇಲ್ | Udayavani – ಉದಯವಾಣಿ |
Saturday, 23 Oct 2021 | UPDATED: 07:17 AM IST |
Team Udayavani, Sep 28, 2021, 3:20 PM IST |
ಬೆಂಗಳೂರು : ಪವರ್ ಸ್ಟಾರ್ ಪುನೀತ್ ರಾಜಕುಮಾರ ಅವರು ಅಭಿನಯಿಸುತ್ತಿರುವ 'ಜೇಮ್ಸ್' ಸಿನಿಮಾ ಬಿಡುಗಡೆಯ ಮುನ್ನವೆ ಭಾರೀ ಗಳಿಕೆಯ ಸೂಚನೆ ನೀಡಿದೆ. |
ಹೌದು, ಚೇತನ ಕುಮಾರ್ ಆ್ಯಕ್ಷನ್ ಕಟ್ ಹೇಳುತ್ತಿರುವ ಜೇಮ್ಸ್ ಸಿನಿಮಾ ಸ್ಯಾಂಡಲ್ವುಡ್ ನಲ್ಲಿ ಭಾರೀ ಹವಾ ಸೃಷ‍್ಟಿಸಿದೆ. ಇನ್ನೂ ಚಿತ್ರೀಕರಣದ ಹಂತದಲ್ಲಿರುವ ಈ ಚಿತ್ರದ ಮೇಲೆ ಕನ್ನಡದ ಸಿನಿ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿಕೊಂಡು ಮಾತಿನ ಮನೆಗೆ ಹೋಗಲು ಸಿದ್ಧವಾಗಿರುವ ಈ ಚಿತ್ರದ ಸ್ಯಾಟ್ ಲೈಟ್ ರೈಟ್ಸ್ ಇದೀಗ ದೊಡ್ಡ ಮೊತ್ತಕ್ಕೆ ಮಾರಾಟವ... |
ಪಕ್ಕಾ ಆ್ಯಕ್ಷನ್ ಕಥಾ ಹಂದರದ ಈ ಚಿತ್ರವನ್ನು ಚೇತನ ಕುಮಾರ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇದೆ ಮೊದಲ ಬಾರಿಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಚೇತನ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಮೆಕಾ ಶ್ರೀಕಾಂತ್, ಆದಿತ್ಯಾ ಮೆನೆನ್ ಅನು ಪ್ರಭಾಕರ್ , ರಂಗಾಯಣ ರಘು ಸೇರಿದಂತೆ ದೊಡ್ಡ ತಾರಾಬಳಗ ಜೇಮ್ಸ್ ಚಿತ್ರದಲ್ಲಿದೆ. |
ಇನ್ನು ಪುನೀತ್ ರಾಜಕುಮಾರ್ ಅವರು ಯುವರತ್ನದ ಬಳಿಕ ಜೇಮ್ಸ್ ಚಿತ್ರದಲ್ಲಿ ಬ್ಯುಝಿಯಾದರು. ಇದರ ಜೊತೆಗೆ ಲೂಸಿಯಾ ಪವನ್ ನಿರ್ದೇಶನದ 'ದ್ವಿತ್ವ' , ದಿನಕರ ತುಗೂದೀಪ್ ನಿರ್ದೇಶನದಲ್ಲಿ ಇನ್ನೂ ಹೆಸರಿಡದ ಸಿನಿಮಾ ಹಾಗೂ ರಾಜಕುಮಾರ ಮತ್ತು ಯುವರತ್ನ ಖ್ಯಾತಿಯ ನಿರ್ದೇಶಕ ಸಂತೋಷ ಆನಂದರಾಮ್ ಅವರ ಜೊತೆ ಮೂರನೇ ಬಾರಿಗೆ ಮತ್ತೊಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ ಪುನೀತ್. |
ಅ.15ರಂದು ವಿವಿಸಂಘದ ಕಾರ್ಯಕಾರಿ ಸಮಿತಿಯ ಚುನಾವಣೆ - 2017 |
51 times Last modified on Sunday, 08 October 2017 15:54 |
ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಅ.08; |
ಬಳ್ಳಾರಿಯಲ್ಲಿ ವಿವಿಸಂಘದ ಕಾರ್ಯಕಾರಿ ಸಮಿತಿಯ ಚುನಾವಣೆಯು ಅಕ್ಬೋಬರ್ 15ರಂದು ನಡೆಯಲಿದೆ. |
ಈ ಚುನಾವಣೆಯಲ್ಲಿ ಹಿರಿಯರ ತಂಡ ಜಯಗಳಿಸಲಿದೆ ಎಂದು ವಿವಿಸಂಘದ ಕಾರ್ಯದರ್ಶಿ ಉಡೇದ ಬಸವರಾಜ್ ತಿಳಿಸಿದರು. ಇಂದು ನಗರದ ಕಪಗಲ್ ರಸ್ತೆಯಲ್ಲಿ ಚುನಾವಣೆಯ ಪ್ರಯುಕ್ತ ಅಬ್ಬರದ ಪ್ರಚಾರದಲ್ಲಿ ತೊಡಗಿದ ಬಸರಾಜ್, ನಾವು ಈ ಹಿಂದೆ ಮಾಡಿರುವ ಸೇವೆಗಳನ್ನು ಮತ್ತು ಇನ್ನು ಮುಂದಿನ ದಿನಗಳಲ್ಲಿ ಮಾಡಲಿರುವ ಸಂಘದದಲ್ಲಿನ ಕೆಲವು ದ್ಯೇಯೋದ್ದೇಶಗಳನ್ನು ಎಲ್ಲಾ ಸಂಘದ ಮತದಾರರಿಗೂ ತಿಳಿಸಿ ಹೇಳಲಾಗಿದೆ. |
ಈ ಎಲ್ಲಾ ರೀತಿಯ ಸೇವೆಗಳನ್ನು ಸಂಘದ ಸದಸ್ಯರು ಮೆಚ್ಚಿರುವುದರಿಂದ ಹಾಗೂ ಅನುಭವಿ ಹಿರಿಯರು ಸಂಘದಲ್ಲಿ ಅನೇಕ ರೀತಿಯ ಸೇವೆ ಸಲ್ಲಿಸಿದ್ದನ್ನು ಮನಗಂಡ ಸಂಘದ ಮತದಾರರು ನಮಗೆ ಮತಚಲಾಯಿಸಿ ಹೆಚ್ಚಿನ ಬಹುಮತದಿಂದ ಆಯ್ಕೆ ಮಾಡಲಿದ್ದಾರೆಂದು ಉಡೇದ ಬಸವರಾಜ್ ವಿಶ್ವಾಸದಿಂದ ತಿಳಿಸಿದರು. |
ಈಗಾಗಲೆ ಚುನಾವಣಾ ಪ್ರಚಾರಕ್ಕೆಂದು ಮನೆಮನೆಗೆ ತೆರಳಿ ಸಂಘದ ಸದಸ್ಯರನ್ನು ಮತ ಕೋರಲಾಗಿದೆ. ಅವರಿಂದ ಒಳ್ಳೆಯ ಬೆಂಬಲವು ದೊರೆತಿದೆ ಎಂದು ತಿಳಿಸಿದರು. ಈಗಾಗಲೆ ನಮ್ಮ ಹಿರಿಯರ ತಂಡದಲ್ಲಿ 2 ತಂಡಗಳನ್ನಾಗಿ ಮಾಡಲಾಗಿದ್ದು ಒಂದು ತಂಡ ನಗರ ಪ್ರದೇಶದಲ್ಲಿ ಸ್ಪರ್ಧಿಸಲಿದೆ. ಅದರಲ್ಲಿ ಒಟ್ಟು 16 ಸದಸ್ಯರು ಚುನಾವಣೆಯಲ್ಲಿ ಸ್ಪರ್ದಿಸಿದ್ದಾರೆ. ಮತ್ತೊಂದು ತಂಡ ಗ್ರಾಮೀಣ ಭಾಗದಲ್ಲಿ ಸ್ಪರ್ಧಿಸಲಿದೆ ಆ ತಂಡದಲ್... |
2017ರ ದ್ಯೇಯೋದ್ದೇಶಗಳು:- ಶಿಕ್ಷಣಕ್ಷೇತ್ರದ ಸುಧಾರಣೆಗಾಗಿ ಅಕ್ಯಾಡೆಮಿಕ್ ಕೌಸಿಲ್ ರಚನೆ, ಕೇಂದ್ರೀಕೃತ ಅಕೌಂಟಿಂಗ ವ್ಯವಸ್ಥೆಜಾರಿಗೆ ತರುವುದು, ಸಂಘದ ಆಡಳಿತ ನಿಯಮಾವಳಿ ಮತ್ತು ಆರ್ಥಿಕ ನಿಯಮಾವಳಿ ರೂಪಿಸುವುದು. ಡ್ರೀಮ್ಢ್ ವಿಶ್ವವಿದ್ಯಾಲಯದತ್ತ ನಮ್ಮಹೆಜ್ಜೆ, ಈಗಿರುವ ಕಿಂಡರ್ ಗಾರ್ಟನ್ ಶಾಲೆಗಳನ್ನು ಪ್ರತಿ ತಾಲೂಕಿನಲ್ಲಿಯೂ ಸ್ಥಾಪಿಸುವ ಯೋಜನೆ ಹೊಂದಿದೆ. ಕುಂದುಕೊರತೆಗಳ ವಿಭಾಗ ರಚನೆ, ಮೆಡಿಕ... |
ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ | Udayavani – ಉದಯವಾಣಿ |
Sunday, 12 Jul 2020 | UPDATED: 01:30 AM IST |
ಬಿಜೆಪಿ ಕಾರ್ಯಕರ್ತರು-ಅಭ್ಯರ್ಥಿಗಳ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪ ವಿಶ್ವಾಸ |
Team Udayavani, Nov 7, 2019, 11:20 AM IST |
ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. |
ಬುಧವಾರ ಶ್ರೀ ಶಾರದಾಂಬ ಸಮುದಾಯ ಭವನದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ ಪೂರ್ಣ ಕಾರ್ಯಕರ್ತರ ಚುನಾವಣೆ. ಎಲ್ಲಾ ಕಾರ್ಯಕರ್ತರ ಸಂಘಟಿತ ಪರಿಶ್ರಮದಿಂದ ಶೇ.100 ರಷ್ಟು ಮಹಾನಗರ ಪಾಲಿಕೆಯಲ್ಲಿ ಪೂರ್ಣ ಬಹುಮತ ಬಂದೇ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. |
ದಾವಣಗೆರೆಯ ಬಿಜೆಪಿ ಕಾರ್ಯಕರ್ತರಿಗೆ ಚುನಾವಣೆ ಏನೂ ಹೊಸದಲ್ಲ. ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದಾರೆ. ಮಹಾನಗರ ಪಾಲಿಕೆ ಚುನಾವಣೆಯಲ್ಲೂ ಗೆಲ್ಲುವ ಹುಮ್ಮಸ್ಸಿದೆ. ಆದರೂ, ಚುನಾವಣೆ ಎಂದರೆ ತಮ್ಮ ಶಕ್ತಿ ಮರೆಯುತ್ತಾರೆ. ಆದರೆ, ದಾವಣಗೆರೆ ಬಿಜೆಪಿ ಸಂಘಟನೆಗೆ ಇಡೀ ರಾಜ್ಯಕ್ಕೆ ಮಾದರಿ. ನಮ್ಮ ಕಾರ್ಯಕರ್ತರು ಹನುಮಂತ ಇದ್ದಂತೆ. ಕೊಂಚ ತಿವಿಯಬೇಕು. ನಮ್ಮ ಕಾರ್ಯಕರ್ತರು ಬೇರೆಯವರ ಶಕ್ತಿ ... |
ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕೆಲವಾರು ವಾರ್ಡ್ಗಳಲ್ಲಿ ಇನ್ನೂ ಬೂತ್ ಸಮಿತಿಯವರು ಹೊರಗೆ ಹೊರಟಿಲ್ಲ. ಅಂತಹವರನ್ನು ಪ್ರೀತಿಯಿಂದ ಮಾತನಾಡಿಸಿ ಚುನಾವಣಾ ಕೆಲಸದಲ್ಲಿ ತೊಡಗಿಸಿ. ಪೇಜ್ ಪ್ರಮುಖ್, ಗ್ರೂಪ್ ವೋಟರ್ ಮನೆ ಮನೆಗೆ ಹೋಗಿ ಕೇಂದ್ರ, ರಾಜ್ಯ ಸರ್ಕಾರದ ಸಾಧನೆ ತಿಳಿಸಿ, ಮತ ನೀಡುವಂತೆ ಮನವಿ ಮಾಡಿಕೊಳ್ಳಿ, ಬೂತ್ ಸಮಿತಿಯವರು ಬೇರೆಯ |
ಬೂತ್ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಬೂತ್ ಬಗ್ಗೆಯಷ್ಟೇ ಗಮನ ಹರಿಸಿ |
ಬಿಜೆಪಿ ಅಧಿಕಾರವಧಿಯಲ್ಲಿ ದಾವಣಗೆರೆಗೆ ಸ್ಮಾರ್ಟ್‌ಸಿಟಿ ಯೋಜನೆ ಬಂದಿದೆ. ವರ್ಷಕ್ಕೆ ಬರುವಂತಹ 1 ಸಾವಿರ ಕೋಟಿ ಹಣ ಪೂರ್ಣ ಬಳಕೆಯಾಗಬೇಕು ಮತ್ತು ದಾವಣಗೆರೆ ನಗರದ ಸಮಗ್ರ ಅಭಿವೃದ್ಧಿಗೆ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಪರಿಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಬೇಕು. ಆ ನಿಟ್ಟಿನಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ತಿಳಿಸಿದರು. |
ವಿಧಾನ ಪರಿಷತ್ತು ಸದಸ್ಯ ವೈ.ಎ. ನಾರಾಯಣಸ್ವಾಮಿ ಮಾತನಾಡಿ, ತಮಗೆ ದೊರೆತ ಮಾಹಿತಿಯಂತೆ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಗೆಲ್ಲುವ ಶೇ.200 ರಷ್ಟು ವಿಶ್ವಾಸ ಇದೆ. ಕಳೆದ ಬಾರಿ ನಾನಾ ಕಾರಣಕ್ಕೆ ಹಿನ್ನಡೆ ಆಗಿದೆ. ಈ ಬಾರಿ 45 ವಾರ್ಡ್‌ಗಳಲ್ಲಿ 35 ವಾರ್ಡ್ಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. |
ಮಹಾನಗರ ಪಾಲಿಕೆ ಚುನಾವಣೆ ಸಹ ಪ್ರಭಾರಿ ಎಸ್. ದತ್ತಾತ್ರಿ ಮಾತನಾಡಿ, ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇವೆ. ಪ್ರತಿ 3-4 ವಾರ್ಡ್ ಜವಾಬ್ದಾರಿಯನ್ನು ಶಾಸಕರಿಗೆ ನೀಡಲಾಗಿದೆ. ವಾರ್ಡ್, ಬೂತ್ ಉಸ್ತುವಾರಿ, ಪೇಜ್ ಪ್ರಮುಖ್ ರನ್ನು ನಿಯೋಜಿಸಲಾಗಿದೆ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು. |
ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತರಾವ್ ಜಾಧವ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಎಸ್.ಎ. ರವೀಂದ್ರನಾಥ್, ಎಸ್.ವಿ. ರಾಮಚಂದ್ರ, ಕೆ. ಮಾಡಾಳ್ ವಿರುಪಾಕ್ಷಪ್ಪ, ಪ್ರೊ. ಎನ್. ಲಿಂಗಣ್ಣ, ಮಾಜಿ ಶಾಸಕ ಎಂ. ಬಸವರಾಜ ನಾಯ್ಕ, ಜಿ.ಎಸ್. ಅನಿತ್, ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಎಚ್.ಸಿ. ಜಯಮ್ಮ, ರಾಜನಹಳ್ಳಿ ಶಿವಕುಮಾರ್, ಸಂಗಜ್ಜಗೌಡ್ರು ಇತರರು ಇದ್ದರು. ಸವಿತಾ ಮಂಜುನಾಥ್ ವಂದೇ ಮಾ... |
`ರಿಕ್ರಿಯೇಶನ್ ಕ್ಲಬ್ ಕಾಮಗಾರಿ ನಿಲ್ಲಿಸಿ' | Prajavani |
`ರಿಕ್ರಿಯೇಶನ್ ಕ್ಲಬ್ ಕಾಮಗಾರಿ ನಿಲ್ಲಿಸಿ' |
ಹು-ಧಾ ಮಹಾನಗರ ಪಾಲಿಕೆಗೆ ಪಾಟೀಲ ಪುಟ್ಟಪ್ಪ ಆಗ್ರಹ |
Published: 04 ಸೆಪ್ಟೆಂಬರ್ 2013, 11:57 IST |
Updated: 04 ಸೆಪ್ಟೆಂಬರ್ 2013, 11:57 IST |
ಹುಬ್ಬಳ್ಳಿ: `ಜಿಮ್ಖಾನಾ ಮೈದಾನದಲ್ಲಿ ಕಾನೂನು ಬಾಹಿರವಾಗಿ ರಿಕ್ರಿಯೇಶನ್ ಕ್ಲಬ್‌ಅನ್ನು ನಿರ್ಮಿಸಲಾಗಿದೆ. ಹೀಗಾಗಿ ಕೂಡಲೇ ಕ್ಲಬ್ ಕಾಮಗಾರಿಯನ್ನು ನಿಲ್ಲಿಸಬೇಕು ಹಾಗೂ ಮೈದಾನಕ್ಕೆ ಕಟ್ಟಿರುವ ಆವರಣ ಗೋಡೆಯನ್ನು ಕೆಡವಿ ಹಾಕಬೇಕು' ಎಂದು ಹುಬ್ಬಳ್ಳಿ ಸ್ಪೋರ್ಟ್ಸ್ ಗ್ರೌಂಡ್ ಬಚಾವೊ ಸಮಿತಿ ಗೌರವಾಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಡಾ.ಪಾಟೀಲ ಪುಟ್ಟಪ್ಪ ಆಗ್ರಹಿಸಿದ್ದಾರೆ. |
ದೇಶಪಾಂಡೆ ನಗರದಲ್ಲಿರುವ ಜಿಮ್ಖಾನಾ ಮೈದಾನವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವಂತೆ ಒತ್ತಾಯಿಸಿ ಮಂಗಳವಾರ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆ ನಂತರ ಮಹಾನಗರ ಪಾಲಿಕೆಯ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿ ಅವರು ಮಾತನಾಡಿದರು. |
`ರಿಕ್ರಿಯೇಶನ್ ಕ್ಲಬ್ ಕಟ್ಟಡವನ್ನು ನಿರ್ಮಿಸುವ ಸಂದರ್ಭದಲ್ಲಿ ಎಲ್ಲ ಕಾನೂನುಗಳನ್ನು ಉಲ್ಲಂಘಿಸಲಾಗಿದೆ. ಇಷ್ಟೆಲ್ಲಾ ಲೋಪಗಳಿದ್ದರೂ ಪಾಲಿಕೆ ಅಧಿಕಾರಿಗಳು ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡಿದ್ದು ಎಷ್ಟು ಸರಿ' ಎಂದು ಪ್ರಶ್ನಿಸಿದ ಅವರು, `ಈ ವಿಷಯದಲ್ಲಿ ತಪ್ಪಿತಸ್ಥರು ಎಂದು ಕಂಡು ಬಂದ ಅಧಿಕಾರಿಗಳನ್ನು ಸಹ ಶಿಕ್ಷಿಸಿ' ಎಂದರು. |
ಈ ಮನವಿಗೂ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದೂ ಎಚ್ಚರಿಸಿದರು. |
ಇದಕ್ಕೂ ಮುನ್ನ ದುರ್ಗದ ಬೈಲ್ ವೃತ್ತದಲ್ಲಿ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಸಂಸದ ಪ್ರಹ್ಲಾದ್ ಜೋಶಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಮೈದಾನವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವವ ರೆಗೆ ಈ ಹೋರಾಟ ನಿಲ್ಲದು ಎಂದರು. |
ಡಾ.ಮಹೇಶ ನಾಲ್ವಾಡ, ಮಹೇಶ ಕಮಟಗಾರ, ಮನೋಜ್ ಹಾನಗಲ್, ಪಾಲಿಕೆಯ ಮಾಜಿ ಸದಸ್ಯ ಚಂದ್ರಶೇಖರ ಅಳಗುಂಡಗಿ, ಕೆಜೆಪಿ ಮುಖಂಡ ಎನ್. ಎಸ್. ನಾಡಗೇರ, ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಅಮೃತ ಇಜಾರಿ ಮಾತನಾಡಿದರು. |
ಅಣ್ಣಾ ಹೇಳಿಕೆಗೆ ಪಾಕ್‌ನಲ್ಲಿ ಆಕ್ಷೇಪ | Prajavani |
ಅಣ್ಣಾ ಹೇಳಿಕೆಗೆ ಪಾಕ್‌ನಲ್ಲಿ ಆಕ್ಷೇಪ |
ಇಸ್ಲಾಮಾಬಾದ್ (ಪಿಟಿಐ): `ಭಾರತ- ಪಾಕಿಸ್ತಾನ ನಡುವೆ ಯುದ್ಧ ನಡೆದರೆ ನಾನು ಈಗಲೂ ಯುದ್ಧದಲ್ಲಿ ಪಾಲ್ಗೊಳ್ಳಲು ಸಿದ್ಧ~ ಎನ್ನುವ ಅಣ್ಣಾ ಹಜಾರೆ ಹೇಳಿಕೆಗೆ ಪಾಕಿಸ್ತಾನದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. |
`ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಪಾಕ್ ವಿರುದ್ಧದ ಯುದ್ಧದಲ್ಲಿ ಪಾಲ್ಗೊಂಡಿದ್ದ ತಮ್ಮ ಹಣೆ ಮೇಲೆ ಗುಂಡಿನ ಗುರುತು ಈಗಲೂ ಇದೆ. ಇದು ದೇಶ ಪ್ರೇಮದ ಬಗ್ಗೆ ನನ್ನ ಬದ್ಧತೆಯನ್ನು ತೋರಿಸುತ್ತದೆ~ ಎಂದು ಅಣ್ಣಾ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದರು. |
`ಅಣ್ಣಾ ಹಜಾರೆ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಂತೆ ಗಡಿಯಲ್ಲಿ ಉಭಯ ದೇಶಗಳ ನಡುವೆ ಯುದ್ಧ ನಡೆಯಬೇಕಿಲ್ಲ. ಗಡಿಯಲ್ಲಿ ಯೋಧರನ್ನು ನಿಯೋಜನೆ ಮಾಡುವ ಬದಲಾಗಿ ಭ್ರಾತೃತ್ವದ ಸಂಕೇತವನ್ನು ಮೂಡಿಸಲು ಹೂವುಗಳು ಮತ್ತು ಮೊಂಬತ್ತಿಗಳಿಂದ ಶೃಂಗರಿಸುವ ಅಗತ್ಯ ಇದೆ~ ಎಂದು ಉಮರ್ ತಾರಿಖ್ ಎನ್ನುವವರು ತಮ್ಮ ಬ್ಲಾಗ್‌ನಲ್ಲಿ ತಿರುಗೇಟು ನೀಡಿದ್ದಾರೆ. |
`ಯುದ್ಧದಲ್ಲಿ ಪಾಲ್ಗೊಳ್ಳಲು ಸಿದ್ಧ ಎನ್ನುವ ಅಣ್ಣಾ ಹೇಳಿಕೆ ಪಾಕಿಸ್ತಾನಿಯರ ಭಾವನೆಯನ್ನು ಕೆರಳಿಸುತ್ತದೆ. ಅಣ್ಣಾ ಹಜಾರೆ ಅವರಿಗೆ ಎರಡನೇ ಗಾಂಧಿ ಎಂದು ಜನ ಏಕೆ ಕರೆಯುತ್ತಾರೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ~ ಎಂದೂ ತಾರಿಖ್ ಹೇಳಿದ್ದಾರೆ. |
`ಮಹಾತ್ಮಾ ಗಾಂಧಿ ಅವರು ಪಾಕಿಸ್ತಾನಕ್ಕೆ ಅನ್ಯಾಯ ಆಗುವುದರ ವಿರುದ್ಧ ನಿರಶನ ನಡೆಸಿದ್ದರು. ಆದರೆ ಹಜಾರೆ ಪಾಕ್ ವಿರುದ್ಧ ಯುದ್ಧಕ್ಕೆ ಸೈ ಎನ್ನುತ್ತಿದ್ದಾರೆ. ಇದು ಗಾಂಧಿ ಮತ್ತು ಅಣ್ಣಾ ನಡುವೆ ಇರುವ ವ್ಯತ್ಯಾಸ~ ಎಂದು ಅವರು ವ್ಯಂಗ್ಯವಾಡಿದ್ದಾರೆ. |
ತಾರಿಖ್ ಅವರ ಬ್ಲಾಗ್ ಓದಿರುವ ಪಾಕಿಸ್ತಾನ ಮತ್ತು ಭಾರತದ ಅನೇಕ ನಾಗರಿಕರು ಅಣ್ಣಾ ಅವರನ್ನು ವಿರೋಧಿಸಿದ್ದರೆ, ಇನ್ನು ಕೆಲವು ಮಂದಿ ಅವರನ್ನು ಸಮರ್ಥಿಸಿಕೊಳ್ಳಲು ಯತ್ನಿಸಿದ್ದಾರೆ. |
ಕೆಲವು ಭಾರತೀಯರು ಅಣ್ಣಾ ಹಜಾರೆ ಅವರನ್ನು ಬೆಂಬಲಿಸಿದ್ದು, ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಅದರೆ ಪಾಕಿಸ್ತಾನದ ಜನರು ಮಾತ್ರ ಅಣ್ಣಾ ಅವರ ಸೇಡಿನ ಹೇಳಿಕೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. |
ಸಿದ್ದರಾಮಯ್ಯ ವಿರುದ್ದ ಸರಣಿ ಟ್ವೀಟ್ ಮೂಲಕ ಹೆಚ್.ಡಿ.ಕೆ. ವಾಗ್ದಾಳಿ | The News 24 Kannada |
Home ಜಿಲ್ಲೆ ಸಿದ್ದರಾಮಯ್ಯ ವಿರುದ್ದ ಸರಣಿ ಟ್ವೀಟ್ ಮೂಲಕ ಹೆಚ್.ಡಿ.ಕೆ. ವಾಗ್ದಾಳಿ |
October 5, 2020 - 11:40 AM |
ಸಿದ್ದರಾಮಯ್ಯ ವಿರುದ್ದ ಸರಣಿ ಟ್ವೀಟ್ ಮೂಲಕ ಹೆಚ್.ಡಿ.ಕೆ. ವಾಗ್ದಾಳಿ |
ಉಪಚುನಾವಣೆಗೆ ಅಭ್ಯರ್ಥಿಗಳಿಲ್ಲದೇ ಜೆಡಿಎಸ್ ನವರನ್ನು ಸೆಳೆದ ನಿಮ್ಮದು ರಾಜಕೀಯ ಪಕ್ಷವೇ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದ್ದಾರೆ. |
ಮಾಜಿ ಸಿಎಂ ಸಿದ್ದರಾಮಯ್ಯ, ನನ್ನ ಪ್ರಕಾರ ಜೆಡಿಎಸ್ ಒಂದು ರಾಜಕೀಯ ಪಕ್ಷವೇ ಅಲ್ಲ ಎಂದು ವ್ಯಂಗ್ಯವಾಡಿದ್ದರು. ಸಿದ್ದರಾಮಯ್ಯ ಹೇಳಿಕೆಗೆ ಸರಣಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಜೆಡಿಎಸ್ ನಿಂದ ಪ್ರವರ್ಧಮಾನಕ್ಕೆ ಬಂದು, ಜೆಡಿಎಸ್ ನಿಂದಲೇ ಡಿಸಿಎಂ ಆಗಿ, ಜೆಡಿಎಸ್ ಮುಖಂಡರನ್ನೇ ತಮ್ಮ ಈಗಿನ ಪಕ್ಷಕ್ಕೆ ಸೇರಿಸಿಕೊಳ್ಳುತ್ತಾ ಅದೇ ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದಾರೆ. ಉ... |
ದೇಶದ ಅತಿ ಹಳೆಯ ರಾಜಕೀಯ ಪಕ್ಷವಾಗಿರುವ ಕಾಂಗ್ರೆಸ್ ಇಂದು ಯಾವ ಪರಿಸ್ಥಿತಿಯಲ್ಲಿದೆ? ಯಾವ ರಾಜ್ಯದಲ್ಲಿ ಸ್ವಂತ ಬಲದ ಮೇಲೆ ಸರ್ಕಾರ ರಚನೆ ಮಾಡಿದೆ? ಯಾರ ಯಾರ ಹೆಗಲ ಮೇಲೆ ಕುಳಿತು ರಾಜಕೀಯ ಮಾಡುತ್ತಿದೆ? ಎಲ್ಲೆಲ್ಲಿ ಯಾರು ಯಾರಿಗೆ ಹೆಗಲಾಗಿದೆ? ಎಂಬುದನ್ನು ಜೆಡಿಎಸ್ ಉಪ್ಪು ತಿಂದ ಸಿದ್ದರಾಮಯ್ಯನವರು ಉತ್ತರ ನೀಡಲಿ ಎಂದಿದ್ದಾರೆ. |
ಮಿತ್ರಪಕ್ಷಗಳನ್ನೇ ಆಪೋಷನ ಪಡೆದು ಜೀವಿಸುತ್ತಿರುವ, ಜನರಿಂದ ತಿರಸ್ಕರಿಸಲ್ಪಟ್ಟಿರುವ, ಬೇರೆ ಪಕ್ಷಗಳ ಜೊತೆ ಚೌಕಾಸಿ ಮಾಡುತ್ತಿರುವ ಕಾಂಗ್ರೆಸ್ ಭಾರತದಲ್ಲಿ ರಾಜಕೀಯ ಪಕ್ಷವಾಗಿ ಉಳಿದಿದೆಯೇ? ಕಾಂಗ್ರೆಸ್ ಅಹಂಕಾರ ಪ್ರವೃತ್ತಿ ಮುಂದುವರೆಸಿಕೊಂಡು ಹೋದರೆ ಕರ್ನಾಟಕದಲ್ಲೂ ನೆಲೆ ಕಳೆದುಕೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ. |
ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 13 ರೋಗಿಗಳು ಸಜೀವ ದಹನ - Kannada Prabha |
Published: 23rd April 2021 07:18 AM | Last Updated: 23rd April 2021 01:00 PM | A+A A- |
ಬೆಂಕಿ ಅವಘಡ ಸಂಭವಿಸಿದ ವಿಜಯ್ ವಲ್ಲಭ ಆಸ್ಪತ್ರೆ |
ಪಲ್ಗಾರ್ (ಮಹಾರಾಷ್ಟ್ರ): ಮೊನ್ನೆಯಷ್ಟೇ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಆಸ್ಪತ್ರೆಯಲ್ಲಿ ಆಮ್ಲಜನಕ ಸೋರಿಕೆಯಾಗಿ 20ಕ್ಕೂ ಹೆಚ್ಚು ರೋಗಿಗಳು ಮೃತಪಟ್ಟಿದ್ದರು. ಕಳೆದ ವರ್ಷ ಕೊರೋನಾ ಸೋಂಕು ಬಂದ ಮೇಲೆ ದೇಶದ ಅಲ್ಲಲ್ಲಿ ಆಸ್ಪತ್ರೆಗಳಲ್ಲಿ ಹಲವು ದುರಂತ ಸಂಭವಿಸಿದೆ. |
ಇಂದು ನಸುಕಿನ ಜಾವ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸೈಯಲ್ಲಿರುವ ವಿಜಯ್ ವಲ್ಲಭ ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ ಸಂಭವಿಸಿ 13 ಮಂದಿ ರೋಗಿಗಳು ಸಜೀವ ದಹನವಾಗಿದ್ದಾರೆ ಎಂದು ವಸೈ ವಿರಾಲ್ ನಗರ ಪಾಲಿಕೆ ತಿಳಿಸಿದೆ. ಇಂದು ನಸುಕಿನ ಜಾವ 3 ಗಂಟೆ ಸುಮಾರಿಗೆ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ಈ ದುರಂತ ಸಂಭವಿಸಿದೆ. |
ಕೋವಿಡ್ ಆಸ್ಪತ್ರೆಯ ತೀವ್ರ ನಿಗಾ ಘಟಕದ ಎಸಿ ಘಟಕದಲ್ಲಿ ಸ್ಫೋಟ ಸಂಭವಿಸಿದ ನಂತರ ಬೆಂಕಿ ಕಾಣಿಸಿಕೊಂಡಿದೆ ಎಂದು ಜಿಲ್ಲಾ ವಿಪತ್ತು ನಿಯಂತ್ರಣ ಕೋಶದ ಮುಖ್ಯಸ್ಥ ವಿವೇಕಾನಂದ್ ಕದಮ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ಒಟ್ಟು 16 ಮಂದಿ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು. |
ಬೆಂಕಿ ಅವಘಡದಲ್ಲಿ ಗಾಯಗೊಂಡಿರುವ ಮತ್ತು ಇತರ ಸುರಕ್ಷಿತ ರೋಗಿಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸುವ ಕೆಲಸ ಮುಂದುವರಿದಿದೆ. ವಸೈ ನಗರ ಪಾಲಿಕೆಯಿಂದ ಅಗ್ನಿಶಾಮಕ ಸಿಬ್ಬಂದಿಯನ್ನು ಕರೆಸಿ ಒಂದು ಗಂಟೆಯಲ್ಲಿ ಬೆಂಕಿ ನಂದಿಸುವ ಕಾರ್ಯವನ್ನು ಮಾಡಲಾಯಿತು. |
ಕೊರೋನಾತಂಕ ನಡುವೆ ಗುಡ್ ನ್ಯೂಸ್: ರಾಜ್ಯದಲ್ಲೀಗ ಸೋಂಕಿತರಿಗಿಂತ ಚೇತರಿಕೆ ಹೆಚ್ಚು! | Coronavirus In Karnataka The Number Of Recovered Cases Are More Than Active Cases |
ರಾಜ್ಯದಲ್ಲಿ ಈಗ ಸೋಂಕಿತರಿಗಿಂತ ಚೇತರಿಕೆ ಹೆಚ್ಚು!| ಸಕ್ರಿಯ ಕೇಸ್: 302| ಗುಣಮುಖ: 321| ನಿನ್ನೆ 16 ಮಂದಿಗೆ ಸೋಂಕು, ಇಬ್ಬರು ಸಾವು| ಬೀದರ್ 7, ಮಂಡ್ಯ, ಕಲಬುರಗಿ ತಲಾ 2| ಹಾವೇರಿಯಲ್ಲಿ ಮೊದಲ ಕೊರೋನಾ ಕೇಸ್ |
Bangalore, First Published May 5, 2020, 7:27 AM IST |
ಬೆಂಗಳೂರು(ಮೇ. 05): ರಾಜ್ಯದಲ್ಲಿ ಸೋಮವಾರ 16 ಮಂದಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 651ಕ್ಕೆ ತಲುಪಿದೆ. ಇದೇ ವೇಳೆ ದಾವಣಗೆರೆ ಹಾಗೂ ಕಲಬುರಗಿಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 27ಕ್ಕೆ ಏರಿಕೆಯಾಗಿದೆ. |
ಉಳಿದಂತೆ ಸೋಮವಾರ 28 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದು, ಒಟ್ಟು ಸಕ್ರಿಯ ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಾಗಿರುವುದು ತುಸು ನೆಮ್ಮದಿ ತಂದಿದೆ. 651 ಮಂದಿ ಸೋಂಕಿತರ ಪೈಕಿ 27 ಮಂದಿ ಮೃತಪಟ್ಟಿದ್ದು, 321 ಮಂದಿ ಗುಣಮುಖರಾಗಿದ್ದಾರೆ. ಉಳಿದ 302 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. |
ಸೋಮವಾರ ಸೋಂಕು ದೃಢಪಟ್ಟಪ್ರಕರಣಗಳ ಪೈಕಿ ಬೀದರ್‌ನ ಏಳು ಮಂದಿ, ಮಂಡ್ಯ ಹಾಗೂ ಕಲಬುರಗಿಯ ಇಬ್ಬರು, ಬೆಂಗಳೂರು, ಚಿಕ್ಕಬಳ್ಳಾಪುರ, ಹಾವೇರಿ, ದಾವಣಗೆರೆ, ವಿಜಯಪುರದಲ್ಲಿ ತಲಾ ಒಬ್ಬರು ಸೋಂಕಿತರಾಗಿದ್ದಾರೆ. ಹಸಿರು ವಲಯದಲ್ಲಿದ್ದ ಹಾವೇರಿಯಲ್ಲೂ ಈಗ ಸೋಂಕು ಕಾಣಿಸಿಕೊಂಡಿದೆ. ಬೆಂಗಳೂರು ನಗರದಲ್ಲಿ ಬೇಗೂರು ಠಾಣೆ ಪೊಲೀಸ್ ಪೇದೆಗೆ ಸೋಂಕು ಉಂಟಾಗಿರುವುದು ಆತಂಕ ಸೃಷ್ಟಿಸಿದೆ. |
ದಾವಣಗೆರೆಯಲ್ಲಿ ಮತ್ತೊಬ್ಬರು 48 ವರ್ಷದ ಕೊರೊನಾ ವೈರಸ್ ಸೋಂಕಿತ ಮಹಿಳೆ ಮೃತಪಟ್ಟಿದ್ದು, ಇವರಿಗೆ ಇತ್ತೀಚೆಗೆ ಸೋಂಕಿಗೊಳಗಾಗಿದ್ದ ನರ್ಸ್ (ಸೋಂಕಿತೆ 533) ದ್ವಿತೀಯ ಸಂಪರ್ಕದಿಂದ ಸೋಂಕು ತಗುಲಿದೆ ಎಂದು ಪರೀಕ್ಷೆಯಿಂದ ದೃಢಪಟ್ಟಿದೆ. ಮತ್ತೊಂದು ಪ್ರಕರಣದಲ್ಲಿ ಕಲಬುರಗಿಯ 56 ವರ್ಷದ ಸೋಂಕಿತ ಪುರುಷ ಸಾವಿಗೀಡಾಗಿದ್ದಾರೆ. ಈ ಮೂಲಕ ಕಲಬುರಗಿಯ ಸಾವಿನ ಸಂಖ್ಯೆ 6ಕ್ಕೆ ಏರಿದೆ. |
ದಾವಣಗೆರೆಯ 21ರಲ್ಲಿ 19 ಮಂದಿಗೆ ಶುಶ್ರೂಷಕಿಯಿಂದ ಸೋಂಕು: |
ದಾವಣಗೆರೆಯಲ್ಲಿ ಕಳೆದ ಎರಡು ದಿನಗಳಲ್ಲಿ ದೃಢಪಟ್ಟ22 ಪ್ರಕರಣಗಳಲ್ಲಿ 19 ಮಂದಿಗೆ ದಾವಣಗೆರೆಯ ಖಾಸಗಿ ಆಸ್ಪತ್ರೆಯ ಶುಶ್ರೂಷಕಿಯಿಂದ (533ನೇ ಸೋಂಕಿತೆ) ಸೋಂಕು ಹರಡಿದೆ. ಇವರು ಬಾಗಲಕೋಟೆಯ ಮದುವೆಯೊಂದಕ್ಕೆ ಹೋಗಿರುವ ಮಾಹಿತಿ ಇದೆ. ಸೋಂಕಿತರೆಲ್ಲರೂ ಅವರ ಸಂಬಂಧಿಕರಾಗಿದ್ದು, 19 ಮಂದಿಯಲ್ಲಿ ಮೂವರು ಬಾಲಕರು, ಒಬ್ಬ ಬಾಲಕಿ, ಏಳು ಮಂದಿ ಮಹಿಳೆಯರು, ಆರು ಮಂದಿ ಪುರುಷರು, ಒಬ್ಬರು ವೃದ್ಧರಿದ್ದಾರೆ ಎಂ... |
Subsets and Splits
No community queries yet
The top public SQL queries from the community will appear here once available.