text
stringlengths
0
61.5k
ದಾವಣಗೆರೆಯಲ್ಲಿ ಈವರೆಗೂ 1,147 ಮಾದರಿಗಳನ್ನು ಪರೀಕ್ಷಿಸಿದ್ದು, 31 ಮಂದಿಗೆ ಸೋಂಕು ದೃಢಪಟ್ಟಿದೆ. ಇನ್ನೂ 269 ಫಲಿತಾಂಶ ಬರಬೇಕಿದೆ.
ಬೀದರ್‌ನಲ್ಲಿ ಮತ್ತೆ 7 ಮಂದಿಗೆ ಸೋಂಕು:
ಬೀದರ್‌ನಲ್ಲಿ ಸೋಂಕಿನಿಂದ ಸಾವಿಗೀಡಾದ 82 ವರ್ಷದ ವೃದ್ಧನ ಸಂಪರ್ಕದಿಂದ 3 ಪುರುಷರು ಹಾಗೂ ನಾಲ್ವರು ಮಹಿಳೆಯರಿಗೆ ಸೋಂಕು ತಗುಲಿದೆ. ಈ ಮೂಲಕ ಬೀದರ್‌ನಲ್ಲಿ ಸೋಂಕಿತರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ.
ಉಳಿದಂತೆ ಮಂಡ್ಯದಲ್ಲಿ ಮುಂಬೈಗೆ ಪ್ರಯಾಣ ಮಾಡಿದ್ದ ಹಿನ್ನೆಲೆ ಹೊಂದಿದ್ದ ಇಬ್ಬರು ಯುವತಿಯರು ಸೋಂಕಿತರಾಗಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ, ವಿಜಯಪುರದಲ್ಲಿ ಸೋಂಕಿತರ ದ್ವಿತೀಯ ಸಂಪರ್ಕದಿಂದ ಸೋಂಕು ತಗುಲಿದೆ.
ಹಾವೇರಿ ಹಸಿರು ವಲಯದಿಂದ ಔಟ್‌:
ಮುಂಬೈ ಪ್ರಯಾಣ ಹಿನ್ನೆಲೆ ಹೊಂದಿರುವ ಹಾವೇರಿ ಜಿಲ್ಲೆಯ ಸವಣೂರಿನ 32 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಈವರೆಗೆ ಹಸಿರು ವಲಯದಲ್ಲಿದ್ದ ಹಾವೇರಿಗೂ ಕೊರೋನಾ ಲಗ್ಗೆ ಇಟ್ಟಿದ್ದು, ಸೋಂಕಿತ ಜಿಲ್ಲೆಗಳ ಸಂಖ್ಯೆ 21ಕ್ಕೆ ಏರಿಕೆಯಾಗಿದೆ.
ಕನ್ನಡ ಕರ್ನಾಟಕ : ಕನ್ನಡದ ಹಿತ – ಕಣಜ
ಕನ್ನಡ ಕರ್ನಾಟಕ : ಕನ್ನಡದ ಹಿತ
Home/ಕನ್ನಡ/ಜ್ಞಾನಪೀಠ ಪುರಸ್ಕೃತರ ಕೃತಿ ಸಂಚಯ/ಡಾ. ಯು.ಆರ್. ಅನಂತಮೂರ್ತಿ/ಕನ್ನಡ ಕರ್ನಾಟಕ : ಕನ್ನಡದ ಹಿತ
ಕನ್ನಡದ ಅಭಿಯಾನ ನಮ್ಮೆಲ್ಲರನ್ನೂ ಇಲ್ಲಿ ಒಟ್ಟಿಗೆ ತಂದಿದೆ. ರಾಜಕೀಯ, ಸಾಹಿತ್ಯ ಮುಂತಾದ ವಿಷಯಗಳಲ್ಲಿ ಮಾತ್ರವಲ್ಲದೆ ನಮ್ಮ ನಾಡು ನುಡಿಗಳ ಹಿತ ರಕ್ಷಣೆಗೆ ಏನನ್ನು ಮಾಡುವುದು ಈಗ ಅಗತ್ಯ ಎಂಬ ವಿಷಯದಲ್ಲೂ ಭಿನ್ನ ನಿಲುವುಗಳು ಇರಬಹುದಾದ ಜನ ಇಲ್ಲಿ ಸೇರಿದ್ದೇವೆ. ನಮ್ಮನ್ನು ಹೀಗೆ ಒಂದೇ ವೇದಿಕೆಯ ಮೇಲೆ ತಂದಿರುವ ಕನ್ನಡದ ಅಭಿಮಾನ ಶಿವಸೇನೆಯ ಮಾದರಿಯದಾಗಲಾರದು. ಯಾಕೆಂದರೆ ಈ ಅಭಿಮಾನದ ಹಿಂದಿರುವ ಆತ...
ಸಮೂಹ ಸನ್ನಿಯಲ್ಲಿ ತಲೆಕೆಟ್ಟವನಂತೆ ಕಿರುಚುವವನಿಗೆ ವಿಚಾರದ ಅಗತ್ಯವಿಲ್ಲ; ಆದರೆ ನಮಗೆ ಇದೆ. ಶಿವಸೇನೆಯಂತಹ ಸಂಸ್ಥೆಗಳ ಹಿಂದೆ ಮಹಾರಾಷ್ಟ್ರದ ಅತ್ಯುತ್ತಮ ಲೇಖಕರು ಇಲ್ಲ;ಸ ತಮಿಳುನಾಡಿನ ದ್ರಾವಿಡತತ್ವ ತೀಟೆಯ ಮಾತುಗಾರಿಕೆಯಾಗಿ ಮಾತ್ರ ಬೆಳೆಯಿತು – ತಮಿಳಿನ ಸೂಕ್ಷ್ಮಜ್ಞ ಬರಹಗಾರರು ಅದರಿಂದ ಹೊರಗುಳಿದರು. ಪಂಜಾಬಿನ, ಕಾಶ್ಮೀರದ, ಅಸ್ಸಾಮಿನ ಉಗ್ರಗಾಮಿಗಳು, ಶ್ರೀಲಂಕೆಯ ತಮಿಳು ಹುಲಿ ಉಗ್ರಾಗಾಮಿಗಳ...
ಇಂಗ್ಲಿಷ್ ಕವಿ ವಿಮರ್ಶಕ ಆರ್ನಾಲ್ಡ್ ಹೇಳುತ್ತಾನೆ: ನಮ್ಮ ನಾಡು ದೊಡ್ಡದಾಗಿರುವುದು ಕಲ್ಲಿದ್ದಿನ ಉತ್ಪಾದನೆಯಿಂದಲ್ಲ; ಶೇಕ್ಸ್‌ಪಿಯರಿನಿಂದಾಗಿ ಎಂದು. ಆದರ್ಶವಾಗಿ ಈ ಮಾತು ನಿಜವಾದರೂ ಆರ್ನಾಲ್ಡ್‌ನ್ನು ಪಾಠ ಮಾಡುವಾಗೆಲ್ಲ ನಾನೊಂದು ಮಾತು ಹೇಳುವುದಿದೆ. "ಈ ವಾಕ್ಯವನ್ನು ಮೈಸೂರಿನಲ್ಲಿ ಈ ಕ್ಲಾಸಲ್ಲಿ ನಾನು ಓದುತ್ತಿರುವುದಕ್ಕೆ ಕಾರಣ ೧೯ನೇ ಶತಮಾನದ ಇಂಗ್ಲೆಂಡಿಗೆ ಕಲ್ಲಿದ್ದಿಲಿನ ಬಲವಿದ್ದುದರಿಂದ...
ಒಂದು ಭಾಷೆ ಶೇಕ್ಸ್‌ಪಿಯರನನ್ನು ಪಡೆದಿದ್ದರೆ ಸಾಲದು; ಅದರ ಹಿಂದೆ ಸಂಪನ್ಮೂಲಗಳೂ ಸಾಹಸೀ ಉದ್ಯಮಶೀಲರೂ ಇರಬೇಕು. ರಾಜಾರಾಮ ಮೋಹನರಾಯರು ಇಂಗ್ಲಿಷ್ ಭಾಷೆಬೇಕೆಂದು ಕೇಳಿದಾಗ ತಂತ್ರಜ್ಞಾನದ ವೈಜ್ಞಾನಿಕ ಧೋರಣೆಯ ಯೂರೋಪು ನಮಗೆ ಬೇಕೆಂದು ಕೇಳಿದ್ದು. ಈ ಆಯ್ಕೆಯ ಪರಿಣಾಮವಾಗಿ ಇಂಗ್ಲಿಷ್ ಆಳ್ವಿಕೆಯ ದುರಂತವನ್ನೂ, ಅದು ತಂದ ಭರವಸೆಯನ್ನೂ ತಬ್ಬಿಬ್ಬಾಗಿ ಅನುಭವಿಸಿದ ನಾವು ಕನ್ನಡದ ಅಭಿಮಾನವೆಂದೆ ಕೇವಲ ಸಾ...
ಹೀಗೆ ಸಾಂಸ್ಕೃತಿಕವಾಗಿ ಕನ್ನಡ ಬಗ್ಗೆ ನಾವು ತಾಳುವ ಅಭಿಮಾನಕ್ಕೂ, ಈ ಅಭಿಮಾನ ನೈಜವಾಗಲು ಕನ್ನಡ ಮಾತಾಡುವ ಕರ್ನಾಟಕದ ಜನ ನೆಮ್ಮದಿಯಲ್ಲಿ ಬದುಕಿ ಬೆಳೆಯಲು ಅಗತ್ಯವಾದ ಸಂಪನ್ಮೂಲಗಳನ್ನು ಪಡೆದಿರಬೇಕೆಂಬ ಕಾಳಜಿಗೂ ಅಭಿನ್ನವಾದ ಸಂಬಂಧವಿದೆ. ಪ್ರಪಂಚದ ಕೆಲವು ಒಳ್ಳೆಯ ಬರಹಗಾರರು ಕನ್ನಡಿಗರು; ಪ್ರಪಂಚದ ಕೆಲವು ಒಳ್ಳೆಯ ಸಂಗೀತಗಾರರು ಕನ್ನಡಗಿರು; ಪ್ರಪಂಚದ ಕೆಲವು ಮುಖ್ಯ ಧಾರ್ಮಿಕ ಪಂಥಗಳು ತಮ್ಮ ನೆಲೆ...
ಈ ನಮ್ಮ ಯುಗದಲ್ಲಿ ಭಾರತದ ಹಲವು ಭಾಷೆಗಳನ್ನಾಡುವ ಜನ ತಮ್ಮ ಭಾಷೆಗಳ ಆಧಾರದ ಮೇಲೆ ತಾವೊಂದು ಸಾವಯವ ಸಂಬಂಧ ಪಡೆದ ಸಮುದಾಯವೆಂದು ತಿಳಿಯುತ್ತಲೇ ತಾವು ಭಾರತೀಯರೂ ಹೌದು ಎಂದು ತಿಳಿಯುವುದರ ಹಿಂದೆ ಯಾವ ವಿರೋಧವೂಇಲ್ಲ ಎನ್ನುವಾಗ ನಾವು ಕಿಂಚಿತ್ತೂ ಅಂಜಬೇಕಿಲ್ಲ. ಮಹಾತ್ಮ ಗಾಂಧಿಯವರು ಈ ಬಗ್ಗೆ ಅತ್ಯಂತ ಸ್ಪಷ್ಟ ನಿಲುವು ತಾಳಿದವರಾದ್ದರಿಂದ ಭಾಷಾವಾರು ಪ್ರಾಂತಗಳ ರಚನೆ ಸ್ವತಂತ್ರ ಭಾರತದ ಅಗತ್ಯಗಳಲ್ಲಿ...
ಯಾವ ಭಾರತೀಯನೂ 'ಕೇವಲ' ಭಾರತೀಯನಾಗಲಾರ. ಎಲ್ಲಿಯೂ ಸಲ್ಲದ್ದರಿಂದ, ಎಲ್ಲಿಯಾದರೂ ತೇಲಬಲ್ಲ ತೋರಿಕೆಯ ಭಾರತೀಯ ಇಲ್ಲವೆಂದಲ್ಲ. ಆದರೆ ಈ ಆಕಾಶರಾಯನಿಗೆ ನೆಲೆಯಿಲ್ಲ. ಆಳವಿಲ್ಲ. ನಾವೆಲ್ಲರೂ ಕನ್ನಡಿಗರಾಗಿದ್ದೇ, ಬಂಗಾಳಿಯಾಗಿದ್ದೇ, ತಮಿಳಿನವರಾಗಿದ್ದೇ ಭಾರತೀಯರಾಗಬೇಕು. ನಾವು ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ಆಯಲೇಬೇಕಾಗಿ ಮಾಡಿರುವ ಈ ನಮ್ಮ ವೈವಿಧ್ಯದ ವಾಸ್ತವ ಒಂದು ವರವೆಂದೇ ತಿಳಿಯಬೇಕು. "ಅನೇಕತ...
ಕನ್ನಡ ಭಾಷೆಯ ಸ್ಥಿತಿ ಕೂಡ ಹಾಗಿದೆ. ಸುಸಂಸ್ಕೃತರಾದ ನಮ್ಮ ಅನಕ್ಷರಸ್ಥರು ನಮ್ಮ ಪೌರಾಣಿಕ ಪ್ರಜಞೆಯನ್ನು ಕಿವಿಯಿಂದ ಕಿವಿಗೆ ದಾಟುವಂತೆ ಈ ಭಾಷೆಯಲ್ಲಿ ಉಳಿಸಿದ್ದಾರೆ. ಪಂಪನಿಂದ ಕುಮಾರವ್ಯಾಸನ ತನಕದ ಲೇಖಕರು ಸಂಸ್ಕೃತದಲ್ಲಿನ ಜೀವಾಳವನ್ನು ದೇಶೀಯ ಅಧಿಕೃತ ಧಾಟಿಯಲ್ಲಿ ಕನ್ನಡಿಸಿದ್ದಾರೆ. ವಚನಕಾರರು ಉಪನಿಷತ್ತಿನ ಋಷಿಗಳಂತೆ ಚಿಂತಿಸಿದ್ದಾರೆ. ನಮ್ಮ ಆಧುನಿಕರು ಐರೋಪ್ಯ ಸಂಸ್ಕೃತಿಯ ಜೀವಾಳವನ್ನು ತಮ...
ಜೀವನದ ರಕ್ಷಣೆಗೆ ಸ್ವಪ್ರೇಮ ಅಗತ್ಯ. ಆದರೆ ವಿಪರ್ಯಾಸವೆಂದರೆ ಈ ಪ್ರಪಂಚದಲ್ಲಿ ಇರುವುದು ತಾನೊಬ್ಬನೇ ಎಂದು ತಿಳಿದ ಜೀವಿಗೆ ರಕ್ಷಣೆಯೂ ಇಲ್ಲ, ಪೋಷಣೆಯೂ ಇಲ್ಲ. ಆದ್ದರಿಂದಲೇ ನಾವು ಕುಟುಂಬ, ಜಾತಿ, ಧರ್ಮ, ಕಸುಬು – ಹೀಗೆ ಹಲವು ಮಟ್ಟದ ಸಮುದಾಯಗಳಲ್ಲಿ ನಮಗೆ ಅನ್ಯವಾದ್ದನ್ನು ಒಳಗೊಂಡು ವಿಸ್ತಾರವಾಗಲು ಹವಣಿಸುತ್ತೇವೆ. ಈ ಎಲ್ಲ ಸಮುದಾಯಗಳಿಗಿಂತಲೂ ನಮ್ಮ ಕಾಲಕ್ಕೆ ನಮಗೆ ಅನ್ಯವಾದ್ದನ್ನು ಕಲ್ಪನೆಯ ...
ಸಾಹಿತ್ಯ ಅನುಭವದಲ್ಲಿ ನಾವು ಅನ್ಯವನ್ನು ಒಳಗೊಳ್ಳುತ್ತ ವಿಸ್ತಾರವಾಗುವುದು ಮಾತ್ರವಲ್ಲ. ಒಬ್ಬ ವಿಜ್ಞಾನಿ ಅಥವಾ ತಂತ್ರಜ್ಞ ತನ್ನ ಕಾಲದ ತನ್ನ ಜನರ ಅಗತ್ಯಗಳ ಸವಾಲಿಗೆ ಉತ್ತರ ಹುಡುಕುವ ಪ್ರೇರಣೆ ಪಡೆಯುವುದೂ ಆ ಭಾಷೆಯನ್ನಾಡುವ ಜನರಲ್ಲಿ ಒಬ್ಬನಾಗಿರುವುದರಿಂದ. ಮಾನವೀಯ ಶಾಸ್ತ್ರಗಳಲ್ಲಂತೂ ತನ್ನ ನಾಡಿನ ನಾಡಿನ ಭಾಷೆಯ ಸೂಕ್ಷ್ಮ ತಿಳಿಯದೇ ಹೊಸದಾಗಿ ಯಾರೂ ಚಿಂತಿಸಲಾರರು. ಭಾರತದ ಎಷ್ಟೋ ವಿಜ್ಞಾನಿಗಳ...
ಕನ್ನಡತನದ ಸಾತ್ವಿಕ ಕೆಚ್ಚಿನಿಂದ ಕ್ರಿಯಾಶೀಲನಾಗುವವನು ಈ ಕಾಲದ ಸವಾಲುಗಳನ್ನು ಹೇಗೆ ಎದುರಿಸುತ್ತಾನೆ, ಎಂಥ ನಿಲುವು ತಾಳಿ ಹೋರಾಡುತ್ತಾನೆ ಎಂಬುದನ್ನು ನೋಡೋಣ. ಸ್ಥೂಲವಾಗಿ ಕೆಲವು ಪ್ರಶ್ನೆಗಳಿಗೆ ನಮ್ಮ ಉತ್ತರಗಳನ್ನು ಹೀಗೆ ಸ್ಪಷ್ಟಪಡಿಸಿಕೊಳ್ಳಬಹುದೆಂದು ಈ ಸಭೆಯಲ್ಲಿ ವಿನಂತಿಸಿಕೊಳ್ಳುತ್ತೇನೆ.
ಮೊದಲನೆಯ ನಮ್ಮ ಉಳಿವಿನ, ಬೆಳವಣಿಗೆಯ ಸೂತ್ರ: ವಿಕೇಂದ್ರಿಕರಣ. ದೂರದರ್ಶನದಲ್ಲಿ ಬೆಂಗಳೂರಿನ ಕಾರ್ಯಕ್ರಮ ಕೊನೆಯಾಗುತ್ತಿದ್ದಂತೆ ಇನ್ನು ಮುಂದೆ ರಾಷ್ಟ್ರೀಯ ಕಾರ್ಯಕ್ರಮ ಎಂದು ಹೇಳಲಾಗುತ್ತದೆ. ಬೆಂಗಳೂರಲ್ಲಿ ನಡೆಯುವುದೇನು ರಾಷ್ಟ್ರದ ಕೆಲಸವಲ್ಲವೆ? ಗೋವಿನ ಹಾಡಿನ ಕವಿಗೆ ಕರ್ನಾಟಕ ದೇಶವಿರುವುದು 'ಧರಣಿ ಮಂಡಲ ಮಧ್ಯದೊಳಗೆ'. ಯಾವುದೇ ಹಳ್ಳಿಯ ಬಾವಿಯಿಂದ ಎತ್ತಿದ ನೀರನ್ನು ತಲೆಯ ಮೇಲೆ ಹೊಯಿದುಕೊಳ್...
ಪ್ರಭುತ್ವ ದೆಹಲಿಯಿಂದ ಬೆಂಗಳೂರಿಗೆ ವರ್ಗಾವಣೆಯಾದರೆ ಮಾತ್ರ ಸಾಲದು. ಬೆಂಗಳೂರಿಂದ ಪ್ರತಿ ಜಿಲ್ಲೆಗೆ, ಜಿಲ್ಲೆಯಿಂದ ಪ್ರತಿ ಹಳ್ಳಿಗೆ ವರ್ಗಾವಣೆಯಾಗಬೇಕು. ಅಂದರೆ ಬೆಳಗಾವಿಯ ಹಿತರಕ್ಷಕರು ಬೆಳಗಾವಿಯವರೇ. ಹೀಗಾದಾಗ ನಮ್ಮ ಅನೇಕ ಗಡಿ ಸಮಸ್ಯೆಗಳು ಬಗೆಹರಿಯಬಲ್ಲವು. ಯಾಕೆಂದರೆ ಈ ಭಾರತದಲ್ಲಿ ಸರ್ಜನ್ ಥರ ಕೊಯ್ದು ರಾಜ್ಯಗಳನ್ನು ವಿಂಗಡಿಸುವುದು ಸಾಧ್ಯವೇ ಇಲ್ಲ. ವಿಕೇಂದ್ರೀಕರಣ ಒಂದೇ ಇದಕ್ಕೆ ಪರಿಹಾರ...
ಎರಡನೆಯ ನಮ್ಮ ಸೂತ್ರ: ಯಾವ ರಾಜ್ಯದಲ್ಲಿ ನಾವು ನೆಲೆಸಿ ವ್ಯವಹಾರ ಮಾಡುತ್ತೇವೋ ಆ ರಾಜ್ಯದ ಭಾಷೆಯನ್ನು ಕಲಿಯಬೇಕು, ಮಕ್ಕಳಿಗೆ ಕಲಿಸಬೇಕು. ಹಾಗೆಯೇ ಕನ್ನಡನಾಡಿಗೆ ವಲಸೆ ಬಂದ ತಮಿಳಿನವನು ಕನ್ನಡ ಕಲಿಯಬೇಕು. ತಾನು ಬಾಳುವ ಕರ್ನಾಟಕದ ಪರಿಸರ ತನ್ನ ಹಿತದ ಸಾಧನೆಗೆ ಅಗತ್ಯವೆಂದು ತಿಳಿಯಬೇಕು. ಕವಿಯೊಬ್ಬರು ಬರೆದಿದ್ದಾರೆ; ನಾನು ಅಡಿಗೆ ಮನೆಯಲ್ಲಿ ತಮಿಳನ್ನೂ, ಬೀದಿಯಲ್ಲಿ ಕನ್ನಡವನ್ನೂ, ಮಹಡಿ ಮೇಲೆ ಇ...
ಈ ವಿಷಯದಲ್ಲಿ ಯಾರೂ ಅಸಹನೆ ತೋರಬಾರದು. ಆದರೆ ಬೆಂಗಳೂರಲ್ಲಿದ್ದು, ಬೀದಿಯ ವ್ಯವಹಾರದಲ್ಲೂ ಕನ್ನಡ ಬಾರದವರನ್ನು ಕಂಡಾಗ ನಮಗೆ ಪಶ್ಚಾತ್ತಾಪವಾಗುತ್ತದೆ. ತನ್ನಸದ್ಯದ ಪರಿಸರಕ್ಕೇ ಕುರುಡನೂ ಕಿವುಡನೂ ಆಗುವ ದುಸ್ಥಿತಿಗೆ ಯಾರೂ ಬರಬಾರದು. ಮಹಾತ್ಮಗಾಂಧಿ ವಿಶ್ವವಿದ್ಯಾಲಯ ಪ್ರಪ್ರಥಮವಾಗಿ ಇಡೀ ಕೊಟ್ಟಾಯಮ್‌ನ್ನು ಅಕ್ಷರಸ್ಥ ಮಾಡಿದ ಸಂದರ್ಭದಲ್ಲಿ ನಾನು ಹೇಳಿದೆ. ನೂರಕ್ಕೆ ನೂರು ಅಕ್ಷರಸ್ಥರಾದ ನಗರ ಇದೆಂ...
ಈ ನೇತ್ಯಾತ್ಮಕ ಪ್ರತ್ಯೇಕತೆಗೆ ಈಚಿನ ಒಂದು ಉದಾಹರಣೆ: ತಿರುವಳ್ಳುವರ್ ಪ್ರತಿಮೆ ಬಗ್ಗೆ ಎದ್ದಿರುವ ವಿವಾದ. ತಮಿಳರಿಗೆ ತಿರುವಳ್ಳುವರ್ ತಮ್ಮ ಪ್ರತಿಷ್ಠೆಯ ಗುರುತಾಗಬಾರದು. ಪ್ರಪಂಚದ ಸಂಸ್ಕೃತಿಗೆ ತಿರುವಳ್ಳುವರ್ ತಮಿಳಿನ ಕೊಡುಗೆಯಾಗಿ ಅವರಿಗೆ ಕಂಡಿದ್ದರೆ, ತಮ್ಮ ಪ್ರತ್ಯೇಕ ಹಿತಾಸಕ್ತಿಯನ್ನು ಕನ್ನಡ ನೆಲದಲ್ಲಿ ಊರುವ ಸಂಕೇತವಾಗದಿದ್ದರೆ, ತಿರುವಳ್ಳುವರ್ ಪ್ರತಿಮೆಯನ್ನು ಕನ್ನಡ ಸಾಹಿತ್ಯ ಪರಿಷತ್...
ಇಲ್ಲಿರುವ ತಮಿಳರು ಕನ್ನಡಕ್ಕೆ ಸ್ಪಂದಿಸಿದಲ್ಲಿ ತಮಿಳು ಕೂಡ ಬೆಳೆದೀತು. ಬೇಂದ್ರೆ ಕುವೆಂಪು ಕಾರಂತ ಪು.ತಿ.ನ. ರಂಥವರಿಂದ, ಈಗಿನ ಲೇಖಕರಿಂದ, ದ್ರಾವಿಡ ಚಳವಳಿಯ ಬಾಯ್ಬಡಕತನದಿಂದ ಮರುಳಾದ ತಮಿಳುರು ಕಲಿಯುವುದು ಬಹಳ ಇದೆ. ಇಂಗ್ಲೆಂಡ್ ದೇಶ ಫ್ರಾನ್ಸ್‌ನಿಂದ ಸದಾ ಕಲಿಯುತ್ತಿಲ್ಲವೆ? ಹಾಗೆ.
ತಮಿಳರ ದಬ್ಬಾಳಿಕೆಯಿಂದ ಕನ್ನಡದವರು ತಮ್ಮ ಉದಾರತೆಯನ್ನು ಕಳೆದುಕೊಳ್ಳಬಾರದು. ಆದ್ದರಿಂದಲೇ ಕನ್ನಡಿಗನಾಗಿ ನಾನು ತಿರುವಳ್ಳುವರ್ ಪ್ರತಿಮೆ ಪರಮಾತಾಡಿದ್ದು. ಈಗ ಸಂಪೂರ್ಣವಾಗಿ ನನ್ನ ಮನಸ್ಸನ್ನು ಬಿಚ್ಚಲು ಅವಕಾಶವಾಗಿದೆ – ಅದರಿಂದ ನನಗೆ ಸಮಾಧಾನವಾಗಿದೆ.
ಈ ಜನರು ಫ್ರಾನ್ಸ್‌ನಲ್ಲೋ, ಡೆನ್ಮಾರ್ಕಲ್ಲೋ, ರಷ್ಯದಲ್ಲೋ ಇದ್ದಿದ್ದರೆ ಏನು ಮಾಡುತ್ತಿದ್ದರು? ಆ ಭಾಷೆಗಳನ್ನು ಕಲಿಯದೇ ಇರುವುದು ಸಾಧ್ಯವಿರುತ್ತಿತ್ತೆ? ಆದರೆ ಇಲ್ಲಿ ಯಾಕೆ ಸಾಧ್ಯ? ನಾವೇ ಇದಕ್ಕೆ ಕಾರಣ. ಯಾಕೆಂದರೆ ಕನ್ನಡದ ಜನ ಈ ದೇಶದ ನಿಜವಾದ ಯಜಮಾನ ಇಂಗ್ಲಿಷ್ ಎಂದು ತಿಳಿದಿರುವುದರಿಂದ, ನಮ್ಮಮಕ್ಕಳು ಆದಷ್ಟು ಕಡಿಮೆ ಕನ್ನಡವನ್ನೂ ಆದಷ್ಟು ಹೆಚ್ಚು ಇಂಗ್ಲಿಷನ್ನೂ ಮಾತಾಡುವ ಸಾಧ್ಯತೆಯೇ ಉತ್ತಮ...
ಮೂರನೆಯ ಸೂತ್ರ: ಕರ್ನಾಟಕದಲ್ಲಿ ಎಲ್ಲ ಹಂತದಲ್ಲೂ ನಮ್ಮ ಆಡಳಿತ ಭಾಷೆ ಸಂಪೂರ್ಣವಾಗಿ ಕನ್ನಡವಾಗಬೇಕೆಂಬುದು. ಯಾವ ಪ್ರಜಾತಂತ್ರದಲ್ಲೂ ಅಲ್ಪಸಂಖ್ಯಾತರ ಭಾಷೆ ಕೇವಲ ವಿದ್ಯಾವಂತರ ಭಾಷೆ – ಆಡಳಿತ ಭಾಷೆಯಾಗಲಾರದು. ಪರನಾಡಿನ ಐ ಎ ಎಸ್‌ ಜನ ಇದಕ್ಕೆ ವಿರೋಧಿಗಳಾಗಿದ್ದರೆ ನಾವು ಐಎಎಸ್ಸೇ ನಮಗೆ ಬೇಡವೆನ್ನಲು ತಯಾರಿರಬೇಕು. ಕೇವಲ ಜಾಣತನ ಆಡಳಿತ ನಡೆಸಲು ಸಾಲದು. ಹಲವು ಭಾಷೆಗಳ ಅಗತ್ಯದ ಮಹಾನ್ ಜಾಣರು ಇರಬೇ...
ಅಂದರೆ, ಕರ್ನಾಟಕದಲ್ಲಿ ಆಡಳಿತಗಾರರಾಗಬೇಕಾದರೆ, ಉದ್ಯಮಶೀಲರಾಗಬೇಕಾದರೆ ಅವರೆಲ್ಲರೂ ಕನ್ನಡ ಕಲಿತಿರಬೇಕು. ಮೂರ್ಖನಲ್ಲದ ಪ್ರತಿ ಮನುಷ್ಯನೂ ತಾನು ಯಾರೊಡನೆ ಕೆಲಸ ಮಾಡಬೇಕೋ ಅವರ ಭಾಷೆಯನ್ನು ಕಲಿತಿರುತ್ತಾನೆ. ಕೆಲವು ವರ್ಷ ಮಾತ್ರ ಇಲ್ಲಿ ಬಂದಿರುವವರಿಗೆ ಕನ್ನಡ ಗೊತ್ತಿಲ್ಲದಿರುವುದು ತೊಡಕಾದರೆ, ಇಲ್ಲೇ ನೆಲೆಸುವವರಿಗೆ ಕನ್ನಡ ಗೊತ್ತಿಲ್ಲದಿರುವುದು ಕಂಟಕಪ್ರಾಯ. ಅಥವಾ ಈ ಜನ ಪರಿಸರಕ್ಕೆ ಸ್ಪಂದಿಸಲ...
ಕನ್ನಡ ಇಲ್ಲಿನ ಆಡಳಿತ ಭಾಷೆಯಾದಲ್ಲಿ, ವಿಕೇಂದ್ರೀಕರಣದಿಂದ ಅದು ಸುಸೂತ್ರವಾದಲ್ಲಿ ಇಲ್ಲಿ ಬದುಕುವ ಜನರೆಲ್ಲರೂ ತಮ್ಮ ಮಾತೃ ಭಾಷೆಗಳನ್ನು ಕೆಲವು ಆತ್ಮೀಯ ಅಗತ್ಯಗಳಿಗೆ ಉಳಿಸಿಕೊಂಡು ಕನ್ನಡ ಕಲಿತವರಾದಲ್ಲಿ, ನಮ್ಮ ನಾಲ್ಕನೆಯ ಸೂತ್ರ: ಕನ್ನಡವೇ ಜ್ಞಾನಾರ್ಜನೆಯ ಮಾಧ್ಯಮವಾಗುವುದು ಅತ್ಯಂತ ಸಹಜವಾದ ನಿರ್ಧಾರವಾಗಿರುತ್ತದೆ. ಕುವೆಂಪು ಮತ್ತು ಮಾಸ್ತಿಯವರು ಈ ವಿಷಯದ ಬಗ್ಗೆ ಎಷ್ಟು ವೈಜ್ಞಾನಿಕವಾಗಿ ಮಾತ...
ಹೀಗೆ ಮಾತಾಡುವ ನಮ್ಮಂಥವರೇ ನಮ್ಮ ಮಕ್ಕಳನ್ನೇ ಕನ್ನಡ ಮಾಧ್ಯಮದಲ್ಲಿ ಓದಿಸುತ್ತಿಲ್ಲವೆಂಬ ಅಪವಾದವಿಎ. ಇದು ನಿಜವೇ. ನಾವು ಹಳ್ಳಿಗಳಲ್ಲಿದ್ದಾಗ, ಇರುವ ಒಂದೇ ಶಾಲೆ ಕನ್ನಡ ಮಾಧ್ಯಮದ್ದಾಗಿ ಬೇರೆ ದಿಕ್ಕಿಲ್ಲದೆ ಮಕ್ಕಳು ಕನ್ನಡದಲ್ಲಿ ಕಲಿಯುತ್ತವೆ – ಅಷ್ಟೆ ಹಳ್ಳಿಗಳಲ್ಲಿ ಶ್ರೀಮಂತರಾದವರು ತಮ್ಮ ಮಕ್ಕಳನ್ನು ಬೇರೆಡೆ ಇಟ್ಟು ಇಂಗ್ಲಿಷಿನಲ್ಲಿ ಕಲಿಸುತ್ತಾರೆ. ಇನ್ನು ಒಂದೆರಡು ದಶಕಗಳಲ್ಲಿ, ೨೧ನೇ ಶತಮಾ...
ಸರ್ಕಾರ ನಡೆಸುವ ಯಾವ ಕನ್ನಡ ಮಾಧ್ಯಮ ಶಾಲೆಯೂ ಇಂಗ್ಲಿಷ್ ಮಾಧ್ಯಮ ಶಾಲೆಯಷ್ಟು ಚೆನ್ನಾಗಿರುವುದಿಲ್ಲವೆಂಬುದು ಇದಕ್ಕೆ ಮುಖ್ಯ ಕಾರಣ. ಮೈನಾರಿಟಿ ಜನ ತಮ್ಮ ಸ್ವಾತಂತ್ರ್ಯವನ್ನು ಇಂಗ್ಲಿಷ್ ಮಾಧ್ಯಮದ ವ್ಯಾಪಾರದ ಮೂಲಕ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆಂಬುದೂ ನಿಜವೇ. ಆದರೆ ನಾವು ಕನ್ನಡಿಗರೇ ಅದನ್ನು ಬಯಸದಿದ್ದಲ್ಲಿ, ಮತ್ತು ಈ ಬಯಕೆಯ ಹಿಂದೆ ಇರುವ ಒಂದು ಸಾರ್ವತ್ರಿಕ ಸತ್ಯವಾದ ಆಧುನಿಕ ಜಗತ್ ವ್ಯ...
ಆಧುನಿಕ ಜಗತ್ ವ್ಯವಸ್ಥೆಗೆ ಅನುಗುಣವಾಗಿ ಭಾರತ ರೂಪುಗೊಳ್ಳುವುದು – ಮಹಾತ್ಮ ಗಾಂಧಿ ಕನಸನ್ನು ತಿರಸ್ಕರಿಸಿ ಬೆಳೆಯುವುದು – ಕೇವಲ ನಮ್ಮ ಆದರ್ಶವಾದೀ ನಿಲುವಿನಿಂದ ಬದಲಾಗುವಂಥದಲ್ಲ. ಇದಕ್ಕೆ ಪರ್ಯಾಯವೆಂದು ಭ್ರಮಿಸುತ್ತಿದ್ದ ಮಾರ್ಕ್ಸ್‌ವಾದೀ ವ್ಯವಸ್ಥೆಗಳೂ ಜಗತ್ತಿನಲ್ಲೆಲ್ಲ ಮುರಿದು ಬೀಳುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಪ್ರಪಂಚದ ನಾಶದ ಸಾಧ್ಯತೆಯನ್ನು ಕಂದಕದ ಅಂಚಿಗೆ ಬರುವ ತನಕ ಈ ಆಕ...
ಪ್ರಳಯೋನ್ಮುಖವಾದ ನಮ್ಮ ಜಗತ್ತಿನಲ್ಲಿ ಮನುಷ್ಯನನ್ನು ಪಾಶ್ಚಿಮಾತ್ಯ ತಾಂತ್ರಿಕತೆ ಸ್ವಂತಿಕೆ ಇಲ್ಲದವನನ್ನಾಗಿಯೂ, ಆಕಾರ ಹೀನನನ್ನಾಗಿಯೂ, ಮನೆಯಿಲ್ಲದ ತಬ್ಬಲಿಯನ್ನಾಗಿಯೂ ಮಾಡುವತ್ತ ಕೊಂಡೊಯ್ಯುತ್ತಿದೆ ಎಂದುಹಲವು ಪಾಶ್ಚಿಮಾತ್ಯ ದ್ರಷ್ಟಾರರು ಭಯಪಡುತ್ತಾರೆ ಎಂಬುದು ಈ ರಕ್ಷಣೋಪಾಯಕ್ಕೆ ಸಮರ್ಥನೆ ನೀಡುತ್ತದೆ. ಹೆಗಲ್ ಮತ್ತು ಮಾರ್ಕ್ಸ್‌ರಿಗೆ ಇತಿಹಾಸ ಏರುತ್ತಿರುವ ಸಂಗತಿಯಾದರೆ, ಈ ಏರುವಿಕೆಗೆ ಮಾದ...
ಇಂಥ ಒಂದು ಐತಿಹಾಸಿಕ ಸಂದರ್ಭದಲ್ಲಿ ಕನ್ನಡದಂತಹ ಭಾಷೆಗಳು ನಾವು ಅಡಗುವ ಜಾಗಗಳಾಗಬಹುದು. ಅಡಗಿದ್ದು ನೆನಪಿನ ಸಾತತ್ಯವನ್ನು ಸಾಧಿಸುವ ಸ್ವಂತಿಕೆಯ ಆಶ್ರಯಸ್ಥಾನಗಳಾಗಬಹುದು. ದುರಾಸೆಯಲ್ಲಿ ತಮ್ಮ ರೂಪವನ್ನು ಕಳೆದುಕೊಳ್ಳುವವರ ನಡುವೆ, ಮಾನವ ಧರ್ಮವನ್ನು ಸಾರಗ್ರಾಹಿಯಾಗಿ ಸ್ವೀಕರಿಸಿದ ಒಂದು ಸಂಸ್ಕೃತಿಯಾಗಿ ಕನ್ನಡ ಹಾಗೂ ಉಳಿದ ಭಾರತೀಯ ಭಾಷೆಗಳು ನಿಲ್ಲಬಹುದು. ಆದರೆ ಅದಕ್ಕಾಗಿ ನಾವು ಐತಿಹಾಸಿಕ ಪ್ರ...
ಈಗಿಂದೀಗಲೇ ಇದು ಸಾಧ್ಯವಿಲ್ಲ ಎನ್ನಿ. ಹಾಗಾದರೆ ಇನ್ನೊಂದು ಸೂಚನೆಯಿದೆ. ಎಲ್ಲ ಶಾಲೆಗಳೂ ಉಭಯ ಮಾಧ್ಯಮ ಶಾಲೆಗಳಾಗಲಿ. ಹಲವು ತಾಯಿತಂದೆಯವರಿಗೆ ತಮ್ಮಮಕ್ಕಳು ಮೆಡಿಕಲ್‌ಗೊ, ಎಂಜಿನಿಯರಿಂಗಿಗೊ, ಐಐಟಿಗೊ ಹೋಗಬೇಕೆಂದೂ, ಆನಂತರ ಅಮೆರಿಕಾಕ್ಕೆ ಹೋಗಬೇಕೆಂದೂ ಆಸೆಯಿರುತ್ತದೆ. ಸೈನ್ಸ್‌ನಲ್ಲಿ ತಾನೇ ಈ ಬಯಕೆಗೆ ಅವಕಾಶವಿರುವುದು? ಹಾಗಿದ್ದರೆ ಅಗತ್ಯವಿದ್ದಲ್ಲಿ ಸೈನ್ಸನ್ನು ಇಂಗ್ಲಿಷಿನಲ್ಲಿ ಕಲಿಸಿ, ಉಳಿದೆ...
ವಿದ್ಯಾಭ್ಯಾಸದ ಕೊನೆಯ ಹಂತದವರೆಗೆ ಹೀಗೆ ಕಲಿಸುವುದಕ್ಕೆ ವಿರೋಧವಿದೆ ಎನ್ನಿ. ಹಾಗಿದ್ದಲ್ಲಿ ಹತ್ತನೇ ಇಯತ್ತೆ ತನಕವಾದರೂ, ಕನ್ನಡ ಮಾಧ್ಯಮವಾಗಬೇಕು; ಇಂಗ್ಲಿಷಿಗೆ ಒತ್ತಡವಿದ್ದಲ್ಲಿ ಉಭಯ ಮಾಧ್ಯಮ ಜಾರಿಗೆ ಬರಬೇಕು. ಇದಕ್ಕಿಂತ ನಾವು ಹಿಂದೆ ಸರಿಯಲೇ ಕೂಡದು.
ಎಲ್ಲ ವಿದ್ಯಾರ್ಥಿಗಳ ಮಾಧ್ಯಾಮ ಹೀಗೆ ದೇಶದ ಭಾಷೆಯಾದ ಕನ್ನಡವಾದಲ್ಲಿ, ಇಂಗ್ಲಿಷಿನ ಜೊತೆಯಲ್ಲೇ ಎಲ್ಲರೂ ತಮ್ಮ ಮನೆಗಳ ಸಂಸ್ಕೃತಿಗೆ ಅಗತ್ಯವಾದ ಯಾವ ಭಾಷೆಯನ್ನಾದರೂ ಕಲಿಯಲಿಕ್ಕೆ ಅವಕಾಶವಿದ್ದೇ ಇರುತ್ತದೆ. ಕೆಲವರು ಕನ್ನಡವನ್ನು ತಮ್ಮಕಲಿಕೆಯ ಭಾಷೆಯಾಗಿ ಆಯುವುದಿಲ್ಲ. ಎಂದಾಗಲೂ ನಾವು ವಿರೋಧಿಸಬೇಕಾಗಿಲ್ಲ. ಮಾಧ್ಯಮ ಕನ್ನಡಕವಾಗಿದ್ದ ಪಕ್ಷದಲ್ಲಿ ಯಾವ ಎರಡು ಭಾಷೆಗಳನ್ನಾದರೂ ಆಯುವ ಸ್ವಾತಂತ್ರ್ಯವನ್...
ಆದರೆ ಮಾತ್ರ ವಿದ್ಯಾರ್ಥಿ ಯಾವ ಭಾಷೆಯನ್ನೇ ಆಯಲಿ, ಕನ್ನಡನಾಡಿನ ಎಲ್ಲ ವಿದ್ಯಾರ್ಥಿಗಳಿಗೂ ಈ ನಾಡಿನ ಸಾಹಿತ್ಯ ಸಂಸ್ಕೃತಿಯ ಪರಿಚಯವಾದರೂ ಇರಲೇಬೇಕು. ಇವತ್ತು ಶೇಕ್ಸ್‌ಪಿಯರಿನ ಯಾವೊಂದು ನಾಟಕದ ನೂರು ಪ್ರತಿಗಳು ಮಾರಾಟವಾದಲ್ಲಿ ಅವುಗಳಲ್ಲಿ ೯೯ ಖಂಡಿತವಾಗಿ ಪಠ್ಯವಾದ್ದರಿಂದ. ಇಂಗ್ಲೆಂಡ್ ಹೀಗೆ ತನ್ನ ಪೂರ್ವದ ಹಿರಿಯರ ನೆನಪನ್ನು ಒಂದು ಸಾಂಸ್ಕೃತಿಕ ಪಾಲಿಸಿಯಾಗಿ ಉಳಿಸಿಕೊಂಡು ಬಂದಿದೆ. ಪಾಶ್ಚಿಮಾತ್...
ಯಾಕೆಂದರೆ ನಮ್ಮ ಸಂಸ್ಕೃತಿಗಳನ್ನು ಈ ತನಕ ಉಳಿಸಿಕೊಂಡು ಬಂದಿರುವುದು, ವಿಪರ್ಯಾಸವೆಂದರೆ, ಅನಕ್ಷರತೆ ಮತ್ತು ಹಿಂದುಳಿದಿರುವಿಕೆ. ನಮ್ಮನ್ನು ಈ ತನಕ ಆಳಿವರಿಗೂ, ಕಾಣದಂತೆ ಆಳುತ್ತಿರುವವರಿಗೂ ಅನಕ್ಷರತೆ ಮತ್ತು ಬಡತನದಿಂದಾಗಿ ನಮ್ಮ ಜನ ಅಗಮ್ಯರಾಗಿಯೇ ಹೊರಗುಳಿದಿದ್ದಾರೆ. ಆದರೆ ಇದು ಅಸಹ್ಯವಾದ ಸ್ಥಿತಿಯೂ ಹೌದು. ಈ ಅಸಹ್ಯದಿಂದ ನಮ್ಮ ಜನ ಮೇಲೇಳುವಾಗ, ಸಾಕ್ಷರತೆಯಲ್ಲಿ ಸುಖ ಜೀವನದ ಭರವಸೆ ಕಾಣುವಾಗ...
ನಮ್ಮ ಸಂಸ್ಕೃತಿಯಲ್ಲಿ ಏನೇನನ್ನು ಎಷ್ಟು ತೀವ್ರತೆಯಲ್ಲಿ, ಎಷ್ಟು ವ್ಯಾಪಕತೆಯಲ್ಲಿ ಉಳಿಸಿಕೊಳ್ಳಬೇಕೆಂಬ ವಾಗ್ವದವೇ ಎಲ್ಲ ಸಾಹಿತ್ಯ ವಿಮರ್ಶೆಯ ಜೀವಾಳ. ಅದು ಕನ್ನಡದಲ್ಲಿ ಈಗ ನಡೆಯುತ್ತಿದೆಯಾದ್ದರಿಂದ ನಾವು ಪೂರ್ಣ ಸಾಕ್ಷರತೆಯಲ್ಲಿ ಪಡೆಯಲು ಬಯಸುವ ಕಲ್ಪನೆಗೊಂದು ಸ್ಪಷ್ಟತೆಯೂ ದಿಕ್ಕೂ ಒದಗುತ್ತದೆ. ಜನರಂಜಕ ಮಂಕುಬೂದಿಯ ರಾಜಕೀಯಕ್ಕೂ, ನಮ್ಮ ಮಾಧ್ಯಮಗಳ ಅಲ್ಪ ಮನರಂಜನೆಗೂ ಅಕ್ಷರಸ್ಥರಾಗುವ ಜನ ಬಾಯಿ...
ಯಾಕೆಂದರೆ ದೂರದರ್ಶನದಂತಹ ಮಾಧ್ಯಮದ ಅಪಾಯ ಈಗಿಂದೀಗಲೆ ನಮಗೆ ಎದುರಾಗಿದೆ. ಹಿಂದಿಯಲ್ಲಿನ ಕಚಡಾ ಚಿತ್ರಗಳು ಕನ್ನಡದಲ್ಲಿ ಡಬ್ಬಾಗಿ ಬರಲಿವೆ. ರಾಜಕೀಯ ಬಲವಿರುವಂತೆ ಕಾಣುವ ಟಿಪ್ಪೂ ಚಿತ್ರ ಕನ್ನಡಕ್ಕೆ ಈಗಾಗಲೇ ಡಬ್ಬಾಗುತ್ತಿದೆ. ಇದನ್ನು ಸರ್ವಥಾ ನಾವು ಆಗದಂತೆ ತಡೆಯಬೇಕು. ಪರಭಾಷೆಯ ಚಿತ್ರ ಸಾಂಸ್ಕೃತಿಕವಾಗಿ ಕಲಾತ್ಮಕವಾಗಿ ಉತ್ತಮವಾದ್ದಲ್ಲಿ ಕನ್ನಡದ ಸಬ್‌ಟೈಟಲ್ ಪಡೆದು ಅವು ಪ್ರದರ್ಶಿತವಾಗಲಿ. ಹಾ...
ಯಾಕೆಂದರೆ ಕೀಳು ಮಟ್ಟದ ಚಿತ್ರಗಳು ನಮ್ಮ ಭಾಷೆಗೆ ಡಬ್ಬೂ ಆದರೆ ಅವುಗಳು ಆಕ್ರಮಿಸುವುದು ಪೋಲಿಗಳಂತೆ ಹೊರ ಬೀದಿಗಳನ್ನಲ್ಲ, ನಮ್ಮ ನಮ್ಮ ಆಪ್ತ ಜೀವನದ ವಿಶ್ರಾಂತಿಯ ನಡುಮನೆಯನ್ನು, ಪರ ಭಾಷೆಯ ಅಜ್ಞಾನದಿಂದಲಾದರೂ ಕೀಳಿನ ಗೀಲನ್ನು ಬೆಳೆಸಿಕೊಳ್ಳದ ಸಾಮಾನ್ಯರ ಸಹಜವಾದ ಸ್ವರಕ್ಷಣಾ ಶಕ್ತಿಯನ್ನು ಹೀಗೆ, ಕಣ್ಣಿನ ಮೂಲಕವಲ್ಲ ಕಿವಿಗಳ ಮೂಲಕವೂ, ಹೊಕ್ಕು ಭೇದಿಸುವುದು ಅಕ್ಷಮ್ಯ ಅಪರಾಧ.
ಕನ್ನಡದ ಅಭಿಮಾನಿಗಳಾದ ನಾವೆಲ್ಲರೂ ನೆಲ ಜಲ ಉದ್ಯೋಗದ ಪ್ರಶ್ನೆಗಳನ್ನೆತ್ತಿ ಕೊಳ್ಳುತ್ತಿದ್ದಂತೆಯೇ, ಅದರ ಜೊತೆಯಲ್ಲೇ, ಇಡೀ ಕನ್ನಡನಾಡನ್ನ ಸುಸಂಸ್ಕೃತ ಅಕ್ಷರಸ್ಥರನ್ನಾಗಿ ಮಾಡುವ ಹಠದ ಸೈನ್ಯವಾಗಬೇಕು. ಕನ್ನಡ ಶಕ್ತಿ ಕೇಂದ್ರ ಹೀಗೆ ಅಕ್ಷರ ಸೈನ್ಯವೂ ಆಗಿ ಕೆಲಸ ಮಾಡಲಿ ಎಂದು ಕೋರುತ್ತೇನೆ. ಆಗ ಉಳಿದ ಎಲ್ಲ ಚಳುವಳಿಗೂ ಅರ್ಥ ಬರುತ್ತದೆ. ಇದೇ ಗಾಂಧಿ ನಮಗೆ ತೋರಿಸಿದ ಮಾದರಿ. ಬ್ರಿಟಿಷರನ್ನು ಓಡಿಸುವು...
ನನ್ನ ಈ ಭಾಷಣದ ಒಟ್ಟು ಉದ್ದೇಶ ಈಗಾಗಲೇ ಸ್ಪಷ್ಟವಾಗಿರಬೇಕು. ನಮ್ಮ ನಿಜವಾದ ವೈರಿ ಯಾರೆಂದು ತಿಳಿಯದವನು ಒಂದೋ ನಿರರ್ಥಕ ಹೋರಾಟದಲ್ಲಿ ವಂಚಿತನಾಗುತ್ತಾನೆ, ಅಥವಾ ಬಾಯಿಬಡುಕ ಫುಡಾರಿತನದಲ್ಲ ಸಮೂಹ ಸನ್ನಿಗೆ ಆಗೀಗ ಕಾರಣನಾಗಿ ತನನ್ ಬೇಳೆ ಬೇಯುತ್ತಿದೆಯೆಂದು ಭ್ರಮಿಸುತ್ತಾನೆ. ಕರ್ನಾಟಕಕ್ಕೆ ವಲಸೆ ಬರುವ ಅನ್ಯಭಾಷೆಯೆ ಜನ ಯಾಕೆ ಕನ್ನಡ ಕಲಿಯುವುದಿಲ್ಲ, ಯಾಕೆ ನಮ್ಮ ಹಿತಕ್ಕೆ ಮಾರಕರೆಂದು ಕಾಣುತ್ತಾರೆ...
ಗ್ರಂಥ: ಬೆತ್ತಲೆ ಪೂಜೆ ಯಾಕೆ ಕೂಡದು? ಪುಟ; ೧ – ೧೬
By kanaja|2013-12-19T07:28:10+05:30December 19, 2013|ಕನ್ನಡ, ಜ್ಞಾನಪೀಠ ಪುರಸ್ಕೃತರ ಕೃತಿ ಸಂಚಯ, ಡಾ. ಯು.ಆರ್. ಅನಂತಮೂರ್ತಿ|0 Comments
'ಕಾವೇರಿ'ಗೆ ಹಗ್ಗ–ಜಗ್ಗಾಟ ನಡೆದಿಲ್ಲ | Prajavani
ಸರ್ಕಾರಿ ನಿವಾಸ ಹಂಚಿಕೆ ವಿವಾದ: ಹಿರಿಯ ಅಧಿಕಾರಿಯೊಬ್ಬರ ಸ್ಪಷ್ಟನೆ
Published: 21 ಅಕ್ಟೋಬರ್ 2019, 08:10 IST
Updated: 21 ಅಕ್ಟೋಬರ್ 2019, 08:10 IST
ಬೆಂಗಳೂರು: 'ಕಾವೇರಿ' ನಿವಾಸಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಮಧ್ಯೆ ಹಗ್ಗ–ಜಗ್ಗಾಟ ನಡೆದಿಲ್ಲ ಎಂದು ಎರಡೂ ಕಡೆಯ ಮೂಲಗಳು ಸ್ಪಷ್ಟಪಡಿಸಿವೆ.
ಅಧಿಕೃತ ನಿವಾಸ 'ಕೃಷ್ಣಾ' ಪಕ್ಕದಲ್ಲೇ 'ಕಾವೇರಿ' ಇರುವುದರಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅದಕ್ಕೆ ಕೋರಿಕೆ ಸಲ್ಲಿಸಿದ್ದರು. ಆದ್ದರಿಂದ, ಅವರಿಗೆ ಆ ನಿವಾಸವನ್ನು ಹಂಚಿಕೆ ಮಾಡಲಾಗಿದೆ ಎಂದು ಆಡಳಿತ ಮತ್ತು ಸಿಬ್ಬಂದಿ ಇಲಾಖೆ (ಶಿಷ್ಟಾಚಾರ) ಹಿರಿಯ ಅಧಿಕಾರಿಯೊಬ್ಬರು 'ಪ್ರಜಾವಾಣಿ'ಗೆ ತಿಳಿಸಿದರು.
ಅಲ್ಲದೆ, ಅದನ್ನು ತಕ್ಷಣವೇ ಖಾಲಿ ಮಾಡುವಂತೆ ನೋಟಿಸ್‌ ನೀಡಿಲ್ಲ. ವಿದ್ಯುತ್‌ ಅಥವಾ ನೀರು ಸಂಪರ್ಕ ಕಡಿತ ಮಾಡುತ್ತೇವೆ ಎಂದೂ ಹೇಳಿಲ್ಲ. ಈ ಹಿಂದೆ ಕೆ.ಜೆ.ಜಾರ್ಜ್‌ ಅವರಿಗೆ 'ಕಾವೇರಿ' ಹಂಚಿಕೆ ಮಾಡಲಾಗಿತ್ತು. ಅವರು ಅದನ್ನು ಸಿದ್ದರಾಮಯ್ಯ ಅವರಿಗೆ ಬಿಟ್ಟುಕೊಟ್ಟಿದ್ದರು. ಈಗ ಮನೆ ಬಿಟ್ಟುಕೊಡುವಂತೆ ಜಾರ್ಜ್‌ ಅವರಿಗೆ ಮೌಖಿಕವಾಗಿ ಮನವಿ ಮಾಡಿದ್ದೇವೆ ಎಂದು ಅವರು ಹೇಳಿದರು.
ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕರಂತಹ ಪ್ರಮುಖರಿಗೆ ನೋಟಿಸ್‌ ನೀಡಿ, ತಕ್ಷಣವೇ ಬಿಟ್ಟುಕೊಡಿ ಎಂದು ತಾಕೀತು ಮಾಡುವ ಪ್ರಶ್ನೆಯೇ ಇಲ್ಲ. ಸದ್ಯ, ಸಿದ್ದರಾಮಯ್ಯ ಅವರಿಗೆ ರೇಸ್‌ ವ್ಯೂ –2 ನಿವಾಸ ಹಂಚಿಕೆ ಆಗಿದೆ' ಎಂದರು.
ತೆರವಿಗೆ ಸಿದ್ಧ: ಸಿದ್ದರಾಮಯ್ಯ ಅವರು 'ಕಾವೇರಿ' ನಿವಾಸ ತೆರವಿಗೆ ಸಿದ್ಧರಿದ್ದು, ಪರ್ಯಾಯ ವ್ಯವಸ್ಥೆವರೆಗೂ ಅಲ್ಲೇ ಇರುತ್ತಾರೆ ಎಂದು ಅವರ ಆಪ್ತ ಮೂಲಗಳು ಹೇಳಿವೆ.
'ಕಾವೇರಿ' ಮನೆ ಬಳಿ ಸಿದ್ದರಾಮಯ್ಯ ಅವರ ಹೆಸರಿನ ಫಲಕವಷ್ಟೇ ಇತ್ತು. ವಿರೋಧ ಪಕ್ಷದ ನಾಯಕರಾದ ಮೇಲೆ ಹೊಸ ಫಲಕ ಅಳವಡಿಸಲು ಲೋಕೋಪಯೋಗಿ ಇಲಾಖೆ ಸಿಬ್ಬಂದಿ ಹಳೆಯದನ್ನು ತೆಗೆದಿದ್ದು, ಹೊಸದು ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸೈಲೆಂಟ್ ಆಗಿದ್ದ ಪ್ರಕಾಶ್ ರೈ, ವೈಲೆಂಟ್ ಆಗಿ #JustAsking | Prakash Rai surfaces again on Twitter - Kannada Oneindia
| Updated: Tuesday, May 15, 2018, 21:11 [IST]
ಬೆಂಗಳೂರು, ಮೇ 15 : ಮತಎಣಿಕೆಯ ಪ್ರಕ್ರಿಯೆಯನ್ನು ಸೈಡ್ ವಿಂಗ್ ನಿಂದೆಯೇ ವೀಕ್ಷಿಸುತ್ತ, ಕರ್ನಾಟಕದಲ್ಲಿ ಸರಕಾರ ರಚಿಸಲು ರಾಜ್ಯದ ಜನತೆ ಬಿಜೆಪಿಗೆ ಅವಕಾಶ ನೀಡುವುದಿಲ್ಲ ಎಂಬ ಅಪಾರ ನಿರೀಕ್ಷೆಯೊಂದಿಗೆ ಕೆಲಕಾಲ ಸೈಲೆಂಟ್ ಆಗಿದ್ದ ಪ್ರಕಾರ್ ರೈ ಅವರು ಮತ್ತೆ ವೈಲೆಂಟ್ ಆಗಿ ಪ್ರತ್ಯಕ್ಷರಾಗಿದ್ದಾರೆ.
ಭಾರತೀಯ ಜನತಾ ಪಕ್ಷ ಅತೀಹೆಚ್ಚು ಸ್ಥಾನಗಳನ್ನು ಗಳಿಸುತ್ತಿದ್ದಂತೆ ಹಲವಾರು ಟ್ವಿಟ್ಟಿಗರು, ಅಭಿಮಾನಿಗಳು ಪ್ರಕಾಶ್ ರೈ ಎಲ್ಲಿ, ಯಾಕೆ ಸೈಲೆಂಟ್ ಆಗಿದ್ದಾರೆ, ಯಾಕೆ ಪ್ರಶ್ನೆಗಳನ್ನು ಕೇಳುತ್ತಿಲ್ಲ, ಯಾಕೆ ಮತಎಣಿಕೆಯ ಅವ್ಯವಸ್ಥೆಯ ವಿರುದ್ಧ ದನಿಯೆತ್ತುತ್ತಿಲ್ಲ ಎಂದು ಕೇಳುತ್ತಲೇ ಇದ್ದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟ ಖಾತ್ರಿಯಾಗುತ್ತಿದ್ದಂತೆ, ಭಾರತೀಯ ಜನತಾ ಪಕ್ಷಕ್ಕೆ ಅಧಿಕಾರ ಸಿಗುವುದಿಲ್ಲ, ಅವರು ಸರಕಾರ ರಚಿಸುವುದರಿಂದ ಹಿಂದುಳಿಯುತ್ತಾರೆ ಎಂಬುದು ಗೊತ್ತಾಗುತ್ತಿದ್ದಂತೆ ಮತ್ತೆ ಪ್ರಶ್ನೆಗಳನ್ನು ಕೇಳಲು ಆರಂಭಿಸಿದ್ದಾರೆ. ಒಂದರ ಹಿಂದೊಂದರಂತೆ ಪ್ರಶ್ನೆಗಳನ್ನು ಕೇಳಿದ್ದಾರೆ.
ಅವರು ಏನು ಕೇಳುತ್ತಿದ್ದಾರೆ ಮುಂದೆ ಓದಿ, ಸಾಧ್ಯವಾದರೆ ಅವಕ್ಕೆ ಉತ್ತರಿಸಿ. ಮುಂದೆ ಏನಾಗಲಿದೆ ಎಂಬುದನ್ನು ಅವರು ಅತ್ಯಂತ ಸ್ವಾರಸ್ಯಕರವಾಗಿ ವ್ಯಾಖ್ಯಾನಿಸಿದ್ದಾರೆ. ಅವರು ಅಂದುಕೊಂಡಂತೇ ಆಗುವುದಾ? ಕಾದು ನೋಡೋಣ. ಇವುಗಳಿಗೆ ಅರ್ಥ ಹುಡುಕುವುದು ಓದುಗರಿಗೆ ಬಿಟ್ಟಿದ್ದು.
ಬೇಟೆಯಾಡಲು ಚಾಣಕ್ಯ ಬರುತ್ತಾರೆ
1. ಅತಿದೊಡ್ಡ ಪಕ್ಷವಾಗಿರುವಾಗಿ ಹೊರಹೊಮ್ಮಿರುವುದರಿಂದ ಬಿಜೆಪಿ ನಾಯಕರು ರಾಜ್ಯಪಾಲರನ್ನು ಸಂಪರ್ಕಿಸುತ್ತಾರೆ... 2. ಅವರು (ಬಹುಮತ) ಸಾಬೀತುಪಡಿಸಲು ಸಮಯ ನೀಡುತ್ತಾರೆ (ಇದನ್ನು ಬಲಿ ತೆಗೆದುಕೊಳ್ಳಲು ಎಂದು ಓದಿ)... 3. (ಶಾಸಕರನ್ನು) ಬೇಟೆಯಾಡಲು ಚಾಣಕ್ಯ (ಅಮಿತ್ ಶಾ) ಬರುತ್ತಾರೆ... 4. ಅವರ ಪ್ರತಿಭೆಯನ್ನು ಹೊಗಳಲು ಪೇಯ್ಡ್ ಮೀಡಿಯಾ ತುದಿಗಾಲಲ್ಲಿ ನಿಂತಿರುತ್ತದೆ... 5. ಕಡೆಗೆ ಕುದುರೆ ವ್ಯ...
ದೊಡ್ಡ ನಾಟಕ ಅನಾವರಣಗೊಳ್ಳಲಿದೆ
ಬಿಜೆಪಿ ಆಡುತ್ತಿರುವ ಈ ಆಟವನ್ನು ಕರ್ನಾಟಕ ನೋಡುತ್ತಿದೆ. ಅತ್ಯಂತ ಅಸಹ್ಯಕರ ಹಣದ ಬಲ ಮತ್ತು ತೋಳು ಬಲ, ದೊಡ್ಡ ಸುಳ್ಳುಗಳನ್ನು ಹೇಳಿದ ನಂತರವೂ ಬಹುಮತದ ಅರ್ಧ ದಾರಿ ಮಾತ್ರ ಕ್ರಮಿಸಿದೆ. ತನ್ನ ಸ್ವಂತ ಬಲದ ಮೇಲೆ ಅಧಿಕಾರ ಪಡೆಯಲು ಸೋತಿದೆ. ಆದರೆ, ಎರಡು ಪಕ್ಷಗಳು ಬಹುಮತ ಸಾಬೀತುಪಡಿಸುವುದಾಗಿ ಒಟ್ಟಿಗೆ ಬಂದಿವೆ. ಆದರೆ ಪ್ರೀತಿಯ ನಾಗರಿಕರೆ ನೋಡುತ್ತಿರಿ, ಇನ್ನು ಮುಂದೆ ದೊಡ್ಡ ನಾಟಕ ಅನಾವರಣಗೊಳ್ಳ...
ಎಚ್ಚೆತ್ತುಕೊಳ್ಳದಿದ್ದರೆ ಪ್ರಶ್ನೆ ಕೇಳದಿದ್ದರೆ...
ನೀವು ಎಚ್ಚೆತ್ತುಕೊಳ್ಳದಿದ್ದರೆ, ಪ್ರತಿ ರಾಜಕಾರಣಿಯನ್ನು, ಪ್ರತಿ ಪಕ್ಷವನ್ನು ಪ್ರಶ್ನೆ ಕೇಳದಿದ್ದರೆ, ನೀವು ನೀಡಿರುವ ಜನಾದೇಶವನ್ನು ಕೇವಲವಾಗಿ ನೋಡಲಾಗುತ್ತದೆ, ತಿರುಚಲಾಗುತ್ತದೆ ಮತ್ತು ಈ ದೇಶದ (ಕರ್ನಾಟಕದ ಅಲ್ಲ) ಜನರು ಕೇವಲ ಮೂಕ ಪ್ರೇಕ್ಷಕರಂತೆ ಆಗುತ್ತೇವೆ. ಪ್ರಶ್ನೆ ಕೇಳುವುದನ್ನು ಮುಂದುವರಿಸಿ. (ಅವರು ಕಾಂಗ್ರೆಸ್ ರಾಜಕಾರಣಿಗಳನ್ನು ಪ್ರಶ್ನೆ ಕೇಳಿ ಎಂದು ಹೇಳಿಲ್ಲ, ಬದಲಿಗೆ ಬಿಜೆಪಿ ನ...
ನಾಚಿಕೆಗೇಡಿನ ರಾಜಕಾರಣಿಗಳ ಸರ್ಕಸ್
ನಾಚಿಕೆಗೇಡಿನ ರಾಜಕಾರಣಿಗಳು (ಬಿಜೆಪಿಯವರನ್ನು ಕುರಿತು ಆಡಿದ್ದಾ, ಕಾಂಗ್ರೆಸ್ ನಾಯಕರನ್ನು ಕುರಿತು ಆಡಿದ್ದಾ? #JustAsking) ಸರ್ಕಸ್ ಆಡುತ್ತಿದ್ದಾರೆ. ಆದರೆ ಇದರಿಂದ ನಾನು ನಾಗರಿಕರ ಪರವಾಗಿ ನಿಂತಿರುವ ನನ್ನ ನಿಲುವನ್ನು ಇನ್ನಷ್ಟು ಬಲಪಡಿಸುತ್ತದೆ. ಮತ್ತು ಅಧಿಕಾರಕ್ಕೆ ಯಾರೇ ಬರಲಿ ಅವರನ್ನು ಪ್ರಶ್ನಿಸುವಂತೆ ಉತ್ತೇಜಿಸುವ ನನ್ನ ಅಭಿಯಾನ ಮುಂದುವರಿಯುತ್ತದೆ. ಆದರೆ, ಜೋಕರ್ ಗಳ ನಿಜವಾದ ಬಣ್ಣ...
prakash rai karnataka election results 2018 karnataka assembly elections 2018 twitter ಕರ್ನಾಟಕ ವಿಧಾನಸಭೆ ಚುನಾವಣೆ 2018 ಪ್ರಕಾಶ್ ರೈ ಟ್ವಿಟ್ಟರ್
Prakash Rai surfaces again on twitter, after the Karnataka Assembly Election results are announced and after a short break. He is #JustAsking about the incidents that have unfolded after BJP failed to get clear majority and tie up of JDS and Congress.
ಬೆವರಿನ ಹಂಗಿಲ್ಲದ 'ಬಂಗಾರದ ಮನುಷ್ಯ' | ಪ್ರಜಾವಾಣಿ
ಬೆವರಿನ ಹಂಗಿಲ್ಲದ 'ಬಂಗಾರದ ಮನುಷ್ಯ'
ನಿರ್ಮಾಣ: ಜಯಣ್ಣ–ಭೋಗೇಂದ್ರ
ನಿರ್ದೇಶನ: ಯೋಗಿ ಜಿ. ರಾಜ್
ತಾರಾಗಣ: ಶಿವರಾಜ್‌ಕುಮಾರ್‌, ವಿದ್ಯಾ ಪ್ರದೀಪ್, ಶ್ರೀನಿವಾಸಮೂರ್ತಿ
'ಬಂಗಾರ s/o ಬಂಗಾರದ ಮನುಷ್ಯ' ಸಿನಿಮಾ ನೋಡಿದ ನಂತರ ಸ್ಮಶಾನ ವೈರಾಗ್ಯ, ಪ್ರಸವ ವೈರಾಗ್ಯ ಹಾಗೂ ಅಭಾವ ವೈರಾಗ್ಯಗಳ ಪಾಲಿಗೆ 'ಸಿನಿಮಾ ವೈರಾಗ್ಯ'ವನ್ನು ಸೇರಿಸಬಹುದು. ಯೋಗಿ ಜಿ. ರಾಜ್‌ ನಿರ್ದೇಶನದ ಈ ಸಿನಿಮಾ ಎರಡು ಬಗೆಯ ವಿರಕ್ತಿಯನ್ನು ಉಂಟುಮಾಡುತ್ತದೆ. ಮೊದಲನೆಯದು, ಒಟ್ಟಾರೆ ಸಿನಿಮಾ ಉಂಟುಮಾಡುವ ನಿರಾಶೆಗೆ ಸಂಬಂಧಿಸಿದ್ದು; ಮತ್ತೊಂದು, ಕನ್ನಡ ಸಿನಿಮಾದ ಕ್ಲಾಸಿಕ್‌ಗಳಲ್ಲೊಂದಾದ 'ಬಂಗಾರದ ಮನ...
ರೈತರ ಸಮಸ್ಯೆಗಳನ್ನು ಚರ್ಚಿಸುವ ಚಿತ್ರತಂಡದ ಉದ್ದೇಶ–ಪ್ರಾಮಾಣಿಕತೆಯನ್ನು ಅನುಮಾನಿಸಬೇಕಿಲ್ಲ. ಆದರೆ, ಚಿತ್ರತಂಡಕ್ಕೆ ಕೃಷಿ ಸಂಸ್ಕೃತಿಯ ನಾಡಿಮಿಡಿತ ಹಾಗೂ ಗ್ರಾಮೀಣ ಸಂಸ್ಕೃತಿ ಅರ್ಥವಾಗಿಲ್ಲ ಎನ್ನುವುದಕ್ಕೆ ಇಡೀ ಸಿನಿಮಾ ಒಂದು ಉದಾಹರಣೆಯಂತಿದೆ. ಗಂಭೀರ ಸಮಸ್ಯೆಯನ್ನು ಚಿತ್ರತಂಡ ನಿರ್ವಹಿಸಿರುವ ರೀತಿ ಪ್ರೌಢವಾಗಿಲ್ಲ. ನೆಲದ ವಾಸ್ತವಗಳ ಅರಿವೇ ಇಲ್ಲದ ಭಾವುಕ ಹೋರಾಟದ ಮೂಲಕ ರೈತರ ಸಮಸ್ಯೆಗಳನ್ನು...
ಸಿನಿಮಾದ ಕೊನೆಯಲ್ಲಿನ ಗೀತೆಯೊಂದನ್ನು ಹೊರತುಪಡಿಸಿದರೆ ಉಳಿದ ಯಾವ ಸಂದರ್ಭದಲ್ಲೂ ನೇಗಿಲಾಗಲೀ ತೆನೆಯಾಗಲೀ ಚಿತ್ರದಲ್ಲಿಲ್ಲ. ಜಾಗತೀಕರಣದ ಸಂದರ್ಭದಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ಕೆಲವು ದಿನಗಳ ಕಾಲ ಮಾರಾಟ ಮಾಡದಿರುವುದರಿಂದ ಸಮಾಜದಲ್ಲಿ ಕ್ಷೋಭೆ ಉಂಟಾಗುತ್ತದೆಂದು ಭಾವಿಸುವ ಮೂಲಕ ಸಮಸ್ಯೆಯನ್ನು ಸರಳೀಕರಿಸಲಾಗಿದೆ. ತಮಿಳಿನ 'ಕತ್ತಿ' ಸಿನಿಮಾದಲ್ಲಿ ರೈತರು ನಗರಕ್ಕೆ ಮೂಲಭೂತ ಸೌಕರ್ಯಗಳನ್ನು ...
ಇಲ್ಲಿನ ರೈತರು ನಗರಗಳ ಜನರ ವಿರುದ್ಧ ಸಿಟ್ಟು ಮಾಡಿಕೊಳ್ಳುತ್ತಾರೆ. ಆದರೆ, ನಗರಗಳಲ್ಲಿ ಇರುವ ಬಹುಸಂಖ್ಯಾತರು ಕೂಡ ರೈತರ ಮಕ್ಕಳು ಎನ್ನುವ ವಾಸ್ತವವನ್ನು ಮರೆಯುತ್ತಾರೆ. ರೈತರ ಬದುಕಿನ ಜೊತೆಗೆ ಹಾಸುಹೊಕ್ಕಾದ ಗ್ರಾಮೀಣ ಬದುಕು ಸಿನಿಮಾದಲ್ಲಿ ಗೈರುಹಾಜರಾಗಿದೆ. ರೈತ ದಂಪತಿಯ ಶವವನ್ನು ಇರಿಸಿಕೊಂಡು ಪ್ರತಿಭಟನೆ ನಡೆಸುವುದು ಸಿನಿಮಾದಲ್ಲಿನ ಗಟ್ಟಿಯಾದ ಹಾಗೂ ಪ್ರೌಢವಾದ ದೃಶ್ಯ. ಈ ರೂಪಕಶಕ್ತಿಯನ್ನು ...
ಈ ಕ್ಷಣದ ಬದುಕನ್ನಷ್ಟೇ ನಂಬುವ ಅನಿವಾಸಿ ಭಾರತೀಯನೊಬ್ಬನಿಗೆ ಇದ್ದಕ್ಕಿದ್ದಂತೆ ಜ್ಞಾನೋದಯವಾಗಿ ತವರಿಗೆ ಮರಳುವುದು, ರೈತರ ತಲ್ಲಣಗಳಿಗೆ ಮಿಡಿಯುವುದು ಚಿತ್ರದ ಕಥೆ. ಈ ಮಿಡಿತವನ್ನು ಘೋಷಣೆಗಳು–ಭಾಷಣಗಳ ಮೂಲಕ ಕಟ್ಟಿಕೊಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ರೈತರನ್ನು ಸಂಘಟಿಸುವ ತರುಣನ ಪಾತ್ರದಲ್ಲಿ ಶಿವರಾಜ್‌ಕುಮಾರ್‌ ಹಾಗೂ ನಾಯಕನ ಪೊಳ್ಳು ವ್ಯಕ್ತಿತ್ವವನ್ನು ಆರಾಧಿಸುವ ಪ್ರೇಮಿಯ ಪಾತ್ರದಲ್ಲಿ...
ಸಿನಿಮಾದ ಮೊದಲ ಭಾಗದ ಕಥೆ ವಿದೇಶದಲ್ಲಿ ನಡೆಯುತ್ತದೆ. ನಮ್ಮ ಸಿನಿಮಾಗಳ ನಾಯಕರು ವಿದೇಶಗಳಲ್ಲಿ ಬೆಳೆಯುವ ಮೂಲಕ ತವರಿನ ತವಕ ತಲ್ಲಣಗಳನ್ನು ಅರ್ಥ ಮಾಡಿಕೊಳ್ಳುವ ಸಂವೇದನೆ ರೂಪಿಸಿಕೊಳ್ಳುವ ಸೂತ್ರವೊಂದು ಚಿತ್ರರಂಗದಲ್ಲಿ ರೂಪುಗೊಳ್ಳುತ್ತಿರುವಂತಿದೆ.
ಹಾಡು, ಕುಣಿತ, ಹೊಡೆದಾಟದ ಮಗ್ಗಿಪುಸ್ತಕವನ್ನು ಕೈಯಲ್ಲಿ ಹಿಡಿದೇ ನಿರ್ದೇಶಕರು ರೈತರ ಬಗ್ಗೆ ಮಾತನಾಡಲು ಹೊರಟಿದ್ದಾರೆ. ತಾವು ಹೇಳುತ್ತಿರುವ ವಿಚಾರದ ಬಗ್ಗೆ ಅವರಿಗೆ ಖಚಿತ ನಂಬಿಕೆ ಇರುವಂತಿಲ್ಲ. ಚಿತ್ರದ ನಾಯಕನನ್ನು ಅವರು ಕ್ಯಾನ್ಸರ್‌ರೋಗಿ ಆಗಿಸಿದ್ದಾರೆ. ಜನರ ಪಾಲಿಗೆ ಅವನು ವಾಸ್ತವ ಅಲ್ಲ – ಆತ ಒಂದು ಸುಂದರ ಕನಸು ಅಥವಾ ಭ್ರಮೆ ಮಾತ್ರ ಎನ್ನುವುದನ್ನು ಅವರು ನಾಯಕನ ಅಂತ್ಯದ ಮೂಲಕ ಸೂಚಿಸುತ್ತ...
ರಾಜ್ ಪ್ರಭಾವಳಿ, 'ಬಂಗಾರದ ಮನುಷ್ಯ'ನ ನೆನಪು ಯೋಗಿ ಅವರ ಚಿತ್ರಕ್ಕೆ ಭಾರವಾಗಿ ಪರಿಣಮಿಸಿದ್ದು, 'ಹೊಳೆಯುವುದೆಲ್ಲ ಬಂಗಾರವಲ್ಲ' ಎನ್ನುವ ಮಾತನ್ನು ನೆನಪಿಸುವಂತಿದೆ. ನೆನಪುಗಳ ಹಂಗಿಲ್ಲದೆ ರೈತರ ಕಥೆಯನ್ನು ಸರಳವಾಗಿ ಹೇಳಹೊರಟಿದ್ದರೆ ಸಹ್ಯವಾದ ಚಿತ್ರವೊಂದನ್ನು ರೂಪಿಸುವ ಅವಕಾಶ ಅವರಿಗಿತ್ತು.
ದೆಹಲಿಯಲ್ಲಿ ಶೀಘ್ರದಲ್ಲೇ ಮತ್ತೊಂದು ಚಾಲಕ ರಹಿತ ಮೆಟ್ರೋ ಸೇವೆ ಆರಂಭ | Another driverless metro service to be launched soon in Delhi - Kannada Oneindia
2 min ago ಜಮ್ಮು-ಕಾಶ್ಮೀರದಲ್ಲಿ ಬುರ್ಖಾ ಧರಿಸಿದ ವ್ಯಕ್ತಿ ನಡೆಸಿದ ಗ್ರನೇಡ್ ದಾಳಿಗೆ ಒಬ್ಬ ಸಾವು
16 min ago ಜೆಡಿಎಸ್ ತೊರೆಯುವೆ ಎಂದ ಪರಿಷತ್ ಸದಸ್ಯ ಮರಿತಿಬ್ಬೇಗೌಡ!
18 min ago ಪಿಎಸ್‌ಐ ಹಗರಣ: ಮುಖ್ಯಪೇದೆ ಶ್ರೀಧರ್ ಮನೆಯಲ್ಲಿ 1.55 ಕೋಟಿ ನಗದು ಜಪ್ತಿ
ದೆಹಲಿಯಲ್ಲಿ ಶೀಘ್ರದಲ್ಲೇ ಮತ್ತೊಂದು ಚಾಲಕ ರಹಿತ ಮೆಟ್ರೋ ಸೇವೆ ಆರಂಭ
| Published: Tuesday, November 16, 2021, 0:12 [IST]
ನವದೆಹಲಿ, ನವೆಂಬರ್ 15: 2020 ರ ಡಿಸೆಂಬರ್‌ನಲ್ಲಿ ದೇಶದ ಮೊಟ್ಟ ಮೊದಲ ಚಾಲಕ ರಹಿತ ಮೆಟ್ರೋ ಸೇವೆಯನ್ನು ಜಾರಿಗೆ ತಂದ ದೆಹಲಿ ಮೆಟ್ರೋ ರೈಲು ನಿಗಮ ಈಗ ಮತ್ತೊಂದು ಮಾರ್ಗದಲ್ಲೂ ಚಾಲಕ ರಹಿತ ರೈಲು ಸೇವೆಯನ್ನು ಪರಿಚಯಿಸಲು ಸಿದ್ಧವಾಗಿದೆ. ದೆಹಲಿ ಮೆಟ್ರೋ ರೈಲು ನಿಗಮವು (ಡಿಎಂಆರ್‌ಸಿ) 2021ರ ಅಂತ್ಯದ ವೇಳೆಗೆ ಪಿಂಕ್ ರೈಲಿನಲ್ಲಿ 'ಚಾಲಕ ರಹಿತ' ರೈಲು ಸೇವೆಗಳನ್ನು ಪರಿಚಯಿಸುವ ಸಾಧ್ಯತೆಯಿದೆ. ಪ್ರಸ...
ಆದರೆ ಪಿಂಕ್ ಲಿಂಕ್‌ನಲ್ಲಿ ಚಾಲಕ ರಹಿತ ಕಾರ್ಯಾಚರಣೆಯನ್ನು ಪರಿಚಯಿಸುವುದರೊಂದಿಗೆ, ಭಾಗವು ವಿಶ್ವದ ಅತಿ ಉದ್ದದ ಮೆಟ್ರೋ ನೆಟ್‌ವರ್ಕ್ ಆಗಲಿದೆ. ಟೈಮ್ಸ್ ಆಫ್ ಇಂಡಿಯಾ (TOI) ಪ್ರಕಟಿಸಿದ ವರದಿಯ ಪ್ರಕಾರ, DMRC ಅಧಿಕಾರಿಗಳು ಸಿಗ್ನಲಿಂಗ್ ಕೆಲಸವನ್ನು ಪೂರ್ಣಗೊಳಿಸಿದ್ದಾರೆ ಮತ್ತು ಮೆಟ್ರೋ ರೈಲು ಸುರಕ್ಷತೆ (CMRS)ಯ ಬಗ್ಗೆ ಆಯುಕ್ತರು ಈ ವಾರದ ವೇಳೆಗೆ ಗಮನವಾಗುವ ರೈಲಿನ (UTO) ಕಾರಿಡಾರ್ ಸುರಕ್...
ಮೆಟ್ರೋ ರೈಲು ಸುರಕ್ಷತಾ ಆಯುಕ್ತರಿಂದ ಸುರಕ್ಷತಾ ಕ್ರಮದ ನಂತರವೇ ರೈಲು ಕಾರ್ಯಾಚರಣೆ (UTO) ಆರಂಭವಾಗಿತ್ತದೆ. ಇದು ವರ್ಷದ ಅಂತ್ಯದ ವೇಳೆಗೆ ಪ್ರಾರಂಭವಾಗುವ ನಿರೀಕ್ಷೆಯಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ 58.4 ಕಿಮೀ ಉದ್ದದ ಗುಲಾಬಿ ಮಾರ್ಗದಲ್ಲಿ ಚಾಲಕ ರಹಿತ ರೈಲು ಸಂಚಾರ ಆರಂಭವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಪಿಂಕ್ ಲೈನ್‌ನಲ್ಲಿ ಚಾಲಕರಹಿತ ರೈಲು ಕಾರ್ಯಾಚರಣೆ ಪ್ರಾರಂಭವಾದ ನಂತರ DMRC ಯ ಒಟ್ಟು ಚಾಲಕರಹಿತ ದೂರವು ಸುಮಾರು 96 ಕಿ.ಮೀ. ಆಗಲಿದೆ. ಇದಕ್ಕೂ ಮೊದಲು, ದೇಶದ ಮೊದಲ ಚಾಲಕ ರಹಿತ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು 2020 ರ ಡಿಸೆಂಬರ್ 28 ರಂದು 37 ಕಿಮೀ ಮೆಜೆಂಟಾ ಲೈನ್‌ನಲ್ಲಿ (ಜನಕಪುರಿ ಪಶ್ಚಿಮದಿಂದ ಬೊಟಾನಿಕಲ್ ಗಾರ್ಡನ್) ಸೇವೆಗೆ ಚಾಲನೆ ನೀಡಿದರು. 37-ಕಿಮೀ ಮೆಜೆಂಟಾ ಲೈನ್ ಜನಕಪುರಿ ಪ...
ದೆಹಲಿ ಮೆಟ್ರೋ ಚಾಲಕ ರಹಿತ ರೈಲನ್ನು ಆರಂಭದಲ್ಲಿ ದ.ಕೊರಿಯಾದಿಂದ ಆಮದು ಮಾಡಿದೆ. ಅಲ್ಲಿನ ಹುಂಡೈ ರೊಟೊಮ್‌ ಕಂಪನಿ ಚಾಲಕ ರಹಿತ ರೈಲಿನ ವಿನ್ಯಾಸ, ತಂತ್ರಜ್ಞಾನಗಳನ್ನು ತಯಾರು ಮಾಡಿದೆ. ಕಳೆದ ವರ್ಷವೇ ಗುಜರಾತಿನ ಮುಂದ್ರಾ ಬಂದರಿನ ಮೂಲಕ 6 ರೈಲ್ವೇ ಕೋಚ್‌ಗಳು ದೆಹಲಿಗೆ ಬಂದು ತಲುಪಿದ್ದವು. ಒಪ್ಪಂದ ಪ್ರಕಾರ ಒಟ್ಟು 20 ರೈಲುಗಳನ್ನು ಹ್ಯುಂಡೈ ಕಂಪನಿ ತಯಾರು ಮಾಡಿದೆ. ಸುಮಾರು 60 ರೈಲುಗಳನ್ನು ಬೆಂ...
ವಿಮಾನ ನಿಲ್ದಾಣ ಎಕ್ಸ್ ಪ್ರೆಸ್ ಮಾರ್ಗದಲ್ಲಿ ಸಂಪೂರ್ಣ ಕಾರ್ಯಾಚರಣೆಗೆ ಬರುವ ರಾಷ್ಟ್ರೀಯ ಸಮಾನ ಚಲನಶೀಲತೆ ಕಾರ್ಡ್ ಸೇವೆಯು ದೇಶದ ಯಾವುದೇ ಭಾಗದಲ್ಲಿ ನೀಡಲಾಗಿರುವ ರೂಪೇ ಡೆಬಿಟ್ ಕಾರ್ಡ್ ಹೊಂದಿರುವವರಿಗೆ ವಿಮಾನ ನಿಲ್ದಾಣ ಎಕ್ಸ್ ಪ್ರೆಸ್ ಮಾರ್ಗದಲ್ಲಿ ಆ ಕಾರ್ಡ್ ಬಳಸಿ ಸಂಚರಿಸಲು ಅವಕಾಶ ಕಲ್ಪಿಸುತ್ತದೆ. 2014ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಕನಸನ್ನು ಮೊದಲ ಮೆಟ್ರೋ ರೈಲು ಸೇವೆಯ ಮೂಲಕ ನಮ...
ಇತರ ಮೆಟ್ರೋ ರೈಲುಗಳಿಗಿಂತಲೂ ಚಾಲಕ ರಹಿತ ರೈಲು ಹೆಚ್ಚು ಪರಿಸರ ಸ್ನೇಹಿಯಾಗಿದೆ. ಶೇ.10ರಷ್ಟು ಕಡಿಮೆ ವಿದ್ಯುತ್‌ ಬಳಕೆ ಮಾಡುತ್ತಿದೆ. ಜೊತೆಗೆ ವೇಗವೂ ಹೆಚ್ಚು. ಗರಿಷ್ಠ 95 ಕಿ.ಮೀ. ವೇಗದ ವರೆಗೆ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದ್ದು, ದೆಹಲಿ ಮೆಟ್ರೋ ವೇಗವನ್ನು ಗರಿಷ್ಠ 85 ಕಿ.ಮೀ.ಗೆ ನಿಗದಿ ಮಾಡಿದೆ.