text
stringlengths
0
61.5k
delhi metro rail driver transport ನವದೆಹಲಿ ಮೆಟ್ರೋ ರೈಲು ಸಾರಿಗೆ
The Delhi Metro Rail Corporation(DMRC) is likely to introduce the 'driverless' train services on its longest corridor Pink City by the end of the year 2021.
ದೇವರ ಭಜನೆ, ನಾಮಸ್ಮರಣೆ ಧಾರ್ಮಿಕತೆ ಹೆಚ್ಚುವುದು: ಚೆನ್ನಬಸವ ಸ್ವಾಮೀಜಿ – Kundapra.com ಕುಂದಾಪ್ರ ಡಾಟ್ ಕಾಂ
ದೇವರ ಭಜನೆ, ನಾಮಸ್ಮರಣೆ ಧಾರ್ಮಿಕತೆ ಹೆಚ್ಚುವುದು: ಚೆನ್ನಬಸವ ಸ್ವಾಮೀಜಿ
ಗಂಗೊಳ್ಳಿ : ದೇವಸ್ಥಾನಗಳಲ್ಲಿ ನಿತ್ಯ ನಿರಂತರಾಗಿ ದೇವರ ಪೂಜೆ, ಉಪಾಸನೆಗಳು ನಡೆದುಕೊಂಡು ಬಂದರೆ ದೇವಸ್ಥಾನದಲ್ಲಿ ದೇವರ ಸಾನಿಧ್ಯ ವೃದ್ಧಿಯಾಗುತ್ತದೆ. ದೇವಳಕ್ಕೆ ಆಗಮಿಸುವ ಭಕ್ತರ ಸಕಲ ಇಷ್ಟಾರ್ಥಗಳು ಈಡೇರಿ ದೇವಸ್ಥಾನ ಅಭಿವೃದ್ಧಿಯಾಗುತ್ತದೆ. ಪ್ರತಿಯೊಂದ ಮನೆಗಳಲ್ಲಿ ದೇವರ ಭಜನೆ, ನಾಮಸ್ಮರಣೆ ಮೊದಲಾದ ಧಾರ್ಮಿಕ ಚಟುವಟಿಕೆಗಳು ನಡೆದಾಗ ಜನರಲ್ಲಿ ಧಾರ್ಮಿಕತೆ ಬೆಳೆಯುತ್ತದೆ ಎಂದು ಅಕ್ಕಲಕೋಟ ಸ್ವ...
ಅವರು ಶ್ರೀಮದ್ ವೀರಶೈವ ಶಿವಯೋಗ ಮಂದಿರ ಸಂಸ್ಥೆ ಹಾಗೂ ವೀರಶೈವ ಮಹಾಸಭೆ ಸಂಸ್ಥಾಪಕ ಶ್ರೀ.ಮೆ. ಪ್ರ.ಹಾನಗಲ್ಲ ಕುಮಾರ ಮಹಾಸ್ವಾಮಿಗಳವರ ೧೫೦ನೇ ಜನ್ಮ ಮಹೋತ್ಸವದ ನಿಮಿತ್ತ ಗುಜ್ಜಾಡಿ ನಾಯಕವಾಡಿಯ ಶ್ರೀ ಸಂಗಮೇಶ್ವರ ದೇವಸ್ಥಾನದಲ್ಲಿ ಜರಗಿದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಸಮಾಜದಲ್ಲಿ ಹಿಂದುಗಳಿದ ಪಂಗಡಗಳು ಸಮಾಜದ ಮುಖ್ಯವಾಹಿನಿಗೆ ಬರುವ ಪ್ರಯತ್ನಗಳು ನಿರಂತರವಾಗಿ ನಡೆಯಬೇಕು. ಗೋವುಗಳನ್ನು ರಕ್ಷಣೆ ಮಾಡುವ ಮತ್ತು ಗೋಹತ್ಯೆಯನ್ನು ತಡೆಯುವಲ್ಲಿ ಸಮಾಜದ ಪ್ರತಿಯೊಬ್ಬರು ಕಾರ್ಯತತ್ಪರರಾಗಬೇಕು. ಜೀವನದಲ್ಲಿ ಧಾರ್ಮಿಕ ಮನೋಭಾವ ಬೆಳೆಸಿಕೊಂಡು ಗುರು ಹಿರಿಯರ ಮಾರ್ಗದರ್ಶದಲ್ಲಿ ಮುನ್ನಡೆಯಬೇಕು. ಅಭಿವೃದ್ಧಿಯಲ್ಲಿ ಎದುರಾಗುವ ತೊಡಕುಗಳನ್ನು ನಿವಾರಿಸಿಕೊಂಡು, ನಮ್ಮ ನಮ್ಮಲ್ಲಿನ...
ಹರಿದ್ವಾರದ ಋಷಿಕುಲ ಆಶ್ರಮದ ಮ.ನಿ.ಪ್ರ. ಮಲ್ಲಿಕಾರ್ಜುನ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ದೇವಸ್ಥಾನದ ಆಡಳಿತ ಮೊಕ್ತೇಸರ ನರಸಿಂಹ ಕೆ. ಮತ್ತು ಪ್ರಧಾನ ಅರ್ಚಕ ಪಾಂಡುರಂಗ ಕೆ. ಉಭಯ ಶ್ರೀಗಳಿಗೆ ಫಲಪುಷ್ಪ ನೀಡಿ ಗೌರವಿಸಿದರು. ದೇವಸ್ಥಾನದ ಕಾರ್ಯದರ್ಶಿ ರಘುವೀರ ಕೆ., ಆಡಳಿತ ಮಂಡಳಿ ಸದಸ್ಯರು, ಶ್ರೀ ಚೆನ್ನಬಸವೇಶ್ವರ ಯುವಕ ಮಂಡಲದ ಸದಸ್ಯರು, ಭಕ್ತಾದಿಗಳು ಮತ್ತಿತರರು ಉಪಸ್ಥಿತರಿದ್ದರು.
ಪ್ರವಾಹ ಎಚ್ಚರಿಕೆ ಹಿನ್ನಲೆ: ಅಮರನಾಥ ಯಾತ್ರೆ ಸ್ಥಗಿತ · ವಾರ್ತಾ ಮಿತ್ರ
Homeರಾಷ್ಟ್ರೀಯಪ್ರವಾಹ ಎಚ್ಚರಿಕೆ ಹಿನ್ನಲೆ: ಅಮರನಾಥ ಯಾತ್ರೆ ಸ್ಥಗಿತ
June 30, 2018 Samachar Network-CLB ರಾಷ್ಟ್ರೀಯ, ಧರ್ಮ - ಸಂಸ್ಕೃತಿ Comments Off on ಪ್ರವಾಹ ಎಚ್ಚರಿಕೆ ಹಿನ್ನಲೆ: ಅಮರನಾಥ ಯಾತ್ರೆ ಸ್ಥಗಿತ
ಶ್ರೀನಗರ:ಜೂ-30: ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಭಾರೀ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿರುವ ಹಿನ್ನಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ದಕ್ಷಿಣ ಭಾಗದಲ್ಲಿ ಕಳೆದೆರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಈ ಹಿನ್ನಲೆಯಲ್ಲಿ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಮಳೆಯಿಂದಾಗಿ ದಕ್ಷಿಣ ಕಾಶ್ಮೀರದ ಸಂಗಮ್ ಮತ್ತು ಶ್ರೀನಗರದ ರಾಮ್ ಮುನ್ಷಿ ಬಾಗ್ ನದಿಗಳು ಅಪಾಯದ ಮಟ್ಟಿ ಮೀರಿ ಹರಿಯುತ್ತಿದ್ದು, ಕಾಶ್ಮೀರದಲ್ಲಿ ಇದೀಗ ಪ್ರವಾಹ ಪರಿಸ್ಥಿತಿ ಎದುರಾಗಿದೆ.
ಅನಂತ್ ನಾಗ್ ಜಿಲ್ಲೆಯ ನುನ್ವಾನ್ ಮತ್ತು ಪಹಲ್ಗಾಂ, ಗಂದೇರ್ ಬಾಲ್ ಜಿಲ್ಲೆಯ ಬಲ್ಟಾಲ್ ಕಣಿವೆಯ ಮೇಲ್ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಈ ಹಿನ್ನಲೆಯಲ್ಲಿ ಎರಡು ದಿನಗಳ ಪಟ್ಟಿಗೆ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಸಲಾಗಿದೆ.
ಹವಾಮಾನ ಪರಿಸ್ಥಿತಿ ನಾಳೆ ಮಧ್ಯಾಹ್ನ ಸುಧಾರಿಸಲಿದೆ. ಆದರೆ ಜುಲೈ.1 ಮತ್ತು 2 ರಂದು ಮತ್ತೆ ಕಾಶ್ಮೀರದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಹಲವೆಡೆ ಭೂಕುಸಿತಗೊಳ್ಳುವ ಸಂಭವವಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಲಿದೆ, ಹಲವೆಡೆ ಪ್ರವಾಹ ಪರಿಸ್ಥಿತಿಗಳೂ ಕೂಡ ಎದುರಾಗಲಿವೆ. ಭೀತಿಗೊಳಗಾಗದಂತೆ ಜನರ ಬಳಿ ಮನವಿ ಮಾಡಿಕೊಳ್ಳಲಾಗುತ್ತಿದೆ ಎಂದು ಕಾಶ್ಮೀರ ಹವಾಮಾನ ಇಲಾಖೆ ನಿರ್ದೇಶಕಿ ಸೋನಮ್ ಲೋಟಸ್ ಹೇಳಿದ್ದಾರೆ.
Flood Alert,Jammu And Kashmir, Amarnath Yatra,suspended
Seen By: 2,257 ಶ್ರೀನಗರ:ಜೂ-16; ಜಮ್ಮು ಮತ್ತು ಕಾಶ್ಮೀರದ ಹಲವೆಡೆಗಳಲ್ಲಿ ರಂಜಾನ್ ಪ್ರಾರ್ಥನೆ ಬಳಿಕ ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆದಿದ್ದು, ಈ ವೇಳೆ ಸಂಭವಿಸಿದ [more]
ಅಡಿಕೆ ಕಳ್ಳಸಾಗಾಣಿಕೆ ಪ್ರಕರಣ | ಅಸ್ಸಾಂನಲ್ಲಿ ಈ ವರ್ಷ 163 ಪ್ರಕರಣಗಳು ದಾಖಲು | ಅಡಿಕೆ ಕಳ್ಳಸಾಗಾಣಿಕೆಗೆ ಸತತ ತಡೆ | - The Rural Mirror
ಅಡಿಕೆ ಕಳ್ಳಸಾಗಾಣಿಕೆ ಪ್ರಕರಣ | ಅಸ್ಸಾಂನಲ್ಲಿ ಈ ವರ್ಷ 163 ಪ್ರಕರಣಗಳು ದಾಖಲು | ಅಡಿಕೆ ಕಳ್ಳಸಾಗಾಣಿಕೆಗೆ ಸತತ ತಡೆ |
By: ದ ರೂರಲ್ ಮಿರರ್.ಕಾಂ May 11, 2022
ಅಸ್ಸಾಂ ಪೊಲೀಸರು ಈ ವರ್ಷದಲ್ಲಿ ಅಸ್ಸಾಂ ಭಾಗದಲ್ಲಿ ನಡೆದ ಅಪರಾಧ ಪ್ರಕರಣಗಳ ವರದಿ ನೀಡಿದ್ದರು. ಇದರಲ್ಲಿ ಅಡಿಕೆ ಕಳ್ಳ ಸಾಗಾಣಿಕೆಗೆ ಸೇರಿದ 163 ಪ್ರಕರಣಗಳು ದಾಖಲಾದ ಬಗ್ಗೆ ವರದಿ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ 182 ಮಂದಿಯನ್ನು ಬಂಧಿಸಿ 146 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.ಎಲ್ಲಾ ಕಳ್ಳ ಸಾಗಾಣಿಕೆಗಳು ಮ್ಯಾನ್ಮಾರ್‌ ಮೂಲಕ ನಡೆದಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಅಸ್ಸಾಂ ರಾಜ್ಯದಲ್ಲಿ ಈ ವರ್ಷ ಅಪರಾಧ ಪ್ರಕರಣಗಳು ಕಡಿಮೆಯಾಗಿದೆ. 11 ತಿಂಗಳಲ್ಲಿ ಅಪರಾಧ ಪ್ರಕರಣಗಳಲ್ಲಿ ತೀವ್ರ ಇಳಿಕೆಯಾಗಿದೆ ಎಂದು ಅಸ್ಸಾಂ ಪೊಲೀಸರು ಹೇಳಿದ್ದಾರೆ. ಪ್ರತಿ ತಿಂಗಳು ದಾಖಲಾಗುವ ಸರಾಸರಿ ಪ್ರಕರಣಗಳ ಸಂಖ್ಯೆ ಕಳೆದ ವರ್ಷ 11,103 ರಿಂದ ಈ ವರ್ಷ 6,247 ಕ್ಕೆ ಇಳಿದಿದೆ ಎಂದು ಅಸ್ಸಾಂ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿದೆ.
ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಸಮ್ಮಿಶ್ರ ಸರ್ಕಾರವು ಆಡಳಿತ ನಡೆಸುತ್ತಿದ್ದು ಎಲ್ಲಾ ಅಪರಾಧಗಳಿಗೆ ಕಡಿವಾಣ, ಕಳ್ಳಸಾಗಾಣಿಕೆಗಳ ತಡೆಗೆ ಸತತ ಪ್ರಯತ್ನ ನಡೆಸುತ್ತಿದೆ. ಈ ಕಾರಣದಿಂದ ಅಡಿಕೆ ಕಳ್ಳ ಸಾಗಾಣಿಕೆ ಕೂಡಾ ಕಳೆದ ಹಲವು ಸಮಯಗಳಿಂದ ಬ್ರೇಕ್‌ ಬಿದ್ದಿದೆ. ಹಾಗಿದ್ದರೂ ಇಲಾಖೆಗಳ, ಪೊಲೀಸರ ಕಣ್ಣು ತಪ್ಪಿಸಿ ಕಳ್ಳ ಸಾಗಾಣಿಕೆ ನಡೆಯುತ್ತಿತ್ತು, ಇದು ಕೂಡಾ ಈಚೆಗೆ ತಡೆಯಾಗುತ್ತಿದೆ.
ಕಳೆದ ವರ್ಷ ಮೇ ತಿಂಗಳಿನಿಂದ ಅಸ್ಸಾಂ ಪೊಲೀಸರು ಎನ್‌ಡಿಪಿಎಸ್ ಕಾಯ್ದೆಯಡಿ 2,834 ಪ್ರಕರಣಗಳನ್ನು ದಾಖಲಿಸಿದ್ದಾರೆ, 4,838 ಕ್ಕೂ ಹೆಚ್ಚು ಮಾದಕವಸ್ತು ಕಳ್ಳಸಾಗಣೆದಾರರನ್ನು ಬಂಧಿಸಿದ್ದಾರೆ ಮತ್ತು 548.53 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. 141 ಮಾನವ ಕಳ್ಳಸಾಗಣೆ ಪ್ರಕರಣಗಳನ್ನು ದಾಖಲಿಸಿದ್ದಾರೆ, 104 ಕ್ಕೂ ಹೆಚ್ಚು ಮಾನವ ಕಳ್ಳಸಾಗಣೆದಾರರನ್ನು ಬಂಧಿಸಿದ್ದಾರ...
Today's BIG Mirror, ರಾಜ್ಯ, ಸುದ್ದಿಗಳು
ಅಡಿಕೆಯ ಬಗ್ಗೆ ಸರಿಯಾದ ವೈಜ್ಞಾನಿಕ ಸಂಶೋಧನೆ ನಡೆಸಿ ರೈತರಿಗೆ ಧೈರ್ಯ ತುಂಬಲು ಅಡಿಕೆ ಬೆಳೆಗಾರರ ಸಂಘ ಒತ್ತಾಯ
City mirror, Local mirror, ಕೃಷಿ, ಸುದ್ದಿಗಳು
ಕೊರೋನಾ ಹೆಚ್ಚಳ | ಮೇ.15 ವರೆಗೆ ಕ್ಯಾಂಪ್ಕೋದಿಂದ ಅಡಿಕೆ ಖರೀದಿ ಇಲ್ಲ | ಅಡಿಕೆ ಮಾರುಕಟ್ಟೆ ಬಗ್ಗೆ ಆತಂಕ ಬೇಕಾಗಿಲ್ಲ – ಬೆಳೆಗಾರರಿಗೆ ಕ್ಯಾಂಪ್ಕೋ ಭರವಸೆ|
ತೆರಿಗೆ ವಂಚನೆ | 1.28 ಕೋಟಿ ರೂಪಾಯಿ ಮೌಲ್ಯದ ಅಡಿಕೆ ವಶ |
Exclusive - Mirror Hunt, ಕೃಷಿ, ಸುದ್ದಿಗಳು
Be the first to comment on "ಅಡಿಕೆ ಕಳ್ಳಸಾಗಾಣಿಕೆ ಪ್ರಕರಣ | ಅಸ್ಸಾಂನಲ್ಲಿ ಈ ವರ್ಷ 163 ಪ್ರಕರಣಗಳು ದಾಖಲು | ಅಡಿಕೆ ಕಳ್ಳಸಾಗಾಣಿಕೆಗೆ ಸತತ ತಡೆ |"
ದೇವೇಗೌಡರನ್ನು ಅವಹೇಳಿಸಿದ ಸುಮಲತಾ! ಸಾಮಾಜಿಕ ಜಾಲತಾಣಗಳಲ್ಲಿ ಸುಮಲತಾ ವಿರುದ್ಧ ಆಕ್ರೋಶ...! -
ಸುಮಲತಾ ಅಂಬರೀಷ್ ಅವರು ಚುನಾವಣೆ ಗೆಲ್ಲುವ ತವಕದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರನ್ನು ಅವಹೇಳಿಸಿ ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಸುಮಲತಾ ಅವರು ತಮ್ಮ ಫೇಸ್ಬುಕ್ ಪೋಸ್ಟ್ ಒಂದರಲ್ಲಿ ಮಂಡ್ಯಕ್ಕೆ ದೇವೇಗೌಡರ ಕೊಡುಗೆ ಶೂನ್ಯ. ಕೇವಲ ರೈತರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ ಅಷ್ಟೇ ಎಂದು ಬರೆದುಕೊಂಡಿದ್ದಾರೆ.
ಇದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಸುಮಲತಾ ಅವರು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ದೇವೇಗೌಡರ ಕೊಡುಗೆ ಏನು ಎಂಬುದು ಇಡೀ ದೇಶಕ್ಕೆ ಗೊತ್ತು. ಮಂಡ್ಯ ಜನತೆಗೆ, ಅದರಲ್ಲೂ ರೈತರಿಗೆ ಅವರ ನೀಡಿರುವ ಅಗಾಧ ಕೊಡುಗೆ ನಿಮಗೆ ಗೊತ್ತಿಲ್ಲವೆಂದರೆ ತಿಳಿದುಕೊಂಡು ಮಾತನಾಡಿ. ಅವರು ಕಾವೇರಿ ವಿಷಯದಲ್ಲಿ ಕರ್ನಾಟಕದ ಪರ ಎಷ್ಟು ಹೋರಾಟ ನಡೆಸಿದ್ದಾರೆ ಎಂಬುದನ್ನು ಮೊದಲು ತಿಳಿದುಕೊಳ್ಳಿ ಎಂದು ಸುಮಲತಾ ವ...
ರಾಜ್ಯದ ಜನತೆಯ ಮುಂದೆ ಮತ ಕೇಳುವ ಮುನ್ನ ಮೊದಲು ಕರ್ನಾಟಕದ ರಾಜಕೀಯ ಇತಿಹಾಸವನ್ನು ಸರಿಯಾಗಿ ತಿಳಿದುಕೊಳ್ಳಿ. ಒಂದು ತಿಂಗಳಿಂದ ರಾಜಕೀಯ ಮಾಡುತ್ತಿರುವ ನಿಮಗೆ ದೇವೇಗೌಡರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಸುಮಲತಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
"ದರ್ಶನ್, ಯಶ್ ಜನ ಸೇರಿಸಬಹುದೇ ಹೊರೆತು ಮತ ಗೆಲ್ಲಿಸಲು ಸಾಧ್ಯವಿಲ್ಲ" – ಮಂಡ್ಯ ಜನತೆ
9 thoughts on "ದೇವೇಗೌಡರನ್ನು ಅವಹೇಳಿಸಿದ ಸುಮಲತಾ! ಸಾಮಾಜಿಕ ಜಾಲತಾಣಗಳಲ್ಲಿ ಸುಮಲತಾ ವಿರುದ್ಧ ಆಕ್ರೋಶ…!"
JAYAPRAKASH H NEELAVARA says:
ಜೆ ಡಿ ಎಸ್ ನವರಿಗೆ ಹತಾಷೆಯಾಗಿರಬೇಕು. ಎಲ್ಲವನ್ನೂ sportive ಆಗಿ ತೆಗೆದುಕೊಳ್ಳಬೇಕು. ಇವೆಲ್ಲವೂ ಚುನಾವಣೆಗಾಗಿ ಮಾತ್ರ. ನಾಳೆ ಅವರೆಲ್ಲರೂ ಒಂದೇ. ನಾವಿಲ್ಲ ಒಂದೊಂದು ಗಲ್ಲಿಯವರು ಕಿತ್ತಾಟ ಮಾಡ್ಕೋಬೇಕಷ್ಟೆ.
ಅಪ್ಪಾಜಿ ದೇವೇಗೌಡ ಜಿ ಅವರಿಗೆ ಆಗಿರುವ ರಾಜಕೀಯ ಅನುಭವದಷ್ಟು ವಯಸ್ಸು ಸುಮಲತಾ ಅವರಿಗೆ ಆಗಿಲ್ಲ ಆಗಲೇ ಮಂಡ್ಯವನ್ನು ಗೆದ್ದು ಬಿಟ್ಟಿದ್ದೇನೆ ಚುನಾವಣೆಯ ಮೊದಲೇ ಎಂಬ ದುರಹಂಕಾರದ ಮಾತುಗಳು ನಿಮ್ಮನ್ನ ಕೊನೆಗೆ ಯಾವ ಸ್ಥಿತಿಗೆ ತರುತ್ತವೆ ಎಂದರೆ ಕುಮಾರಣ್ಣನವರ ಪಾದಗಳನ್ನು ಹಿಡಿಯುವ ಅಷ್ಟರ ಮಟ್ಟಿಗೆ
S she s right
BL Shivananda Swamy says:
Dilouge of a virtual image , it is always lifeless
HDD bage matadodu tumbane tappu avaru Karnataka kotiro koduge apara loka sabha dali ambi hesaru helila anta kopisi kondidu ade gowdaru tilloli
ಇಂಗ್ಲೀಶ್ ಬಲ್ಲ, ಆದರೆ ಅರೆಬರೆ ಅರಿಮೆಯ ನಾಡು ಕಟ್ಟಬೇಕೇ? - ಏನ್ ಗುರು... ಕಾಫಿ ಆಯ್ತಾ?
ಗುಂಪುಗಳು: ಕಲಿಕೆ, ನುಡಿ, ಭಾಷಾನೀತಿ
"ಸ್ವದೇಶಿ/ಭಾರತೀಯತೇ" ಎಂದು ಮತ ಗಿಟ್ಟಿಸಿದ ಈ (E) ಪಕ್ಷದವರು ಮತ್ತು ಇದರ ಹಿಂದಿರುವ ಗುಂಪುಗಳು, ಇಂದು English ನ್ನು ಹೇರುತ್ತಿರುವುದನ್ನು ನೋಡಿದರೆ, ಅವರ ಮಾತು/ನಿಲುವುಗಳ "ಪೊಳ್ಳುತನ" ಯಾರಿಗಾದರೂ ತಿಳಿಯುತ್ತದೆ.
ಒಡಿಶಾ ಕೋನಾರ್ಕ್ ದೇವಾಲಯ ಕುರಿತು ಮಾನಹಾನಿಕರ ಲೇಖನ: ಲೇಖಕನ ಬಂಧನ | ಸುದ್ದಿ ಟಿವಿ
ಭುವನೇಶ್ವರ: ಒಡಿಶಾದ ಕೋನಾರ್ಕ್ ದೇವಾಲಯದ ವಿರುದ್ಧ ಮಾನಹಾನಿಕರವಾಗಿ ಬರೆದ ಆರೋಪದಡಿ ಲೇಖಕ ಅಭಿಜಿತ್ ಐಯರ್ ಮಿತ್ರಾ ಅವರನ್ನು ಬಂಧಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಒಂದು ವೇಳೆ ನೀವು ನನ್ನ ಬರಹಗಳನ್ನು ನೋಡಿದರೆ, ನಾನು ಒಡಿಶಾವನ್ನು ಹೊಗಳಿ ಬರೆದಿರುವ ಸಾಕಷ್ಟು ಸಂಶೋಧನೆಗಳನ್ನು ಕಾಣಬಹುದು. ಅನವಶ್ಯಕವಾಗಿ ಕೆಟ್ಟ ಪದವನ್ನು ಸಿಎಂ ಮತ್ತು ಅವರ ಕಚೇರಿ ವಿರುದ್ಧ ಬಳಸಿರುವುದಕ್ಕೆ ನ...
ಒಡಿಶಾದ ಕುರಿತು ನನಗೆ ಸದಾ ಹೆಮ್ಮೆಯಿದೆ. ನಾನು ಇತಿಹಾಸ ಮತ್ತು ಭಾರತೀಯ ಸಂಸ್ಕೃತಿಗೆ ಒಡಿಶಾದ ಕೊಡುಗೆ ಕುರಿತು ಸಂಶೋಧನೆ ನಡೆಸಿದ್ದೇನೆ. ನಾನು ಒಡಿಶಾವನ್ನು ಪ್ರೀತಿಸುತ್ತೇನೆ. ನನ್ನ ಟ್ವೀಟರ್ ಖಾತೆ ಇರುವುದು ಫನ್​​ ಮಾಡಲಿಕ್ಕಾಗಿಯೇ ಹೊರತು, ವೃತ್ತಿಗಲ್ಲ ಎಂದು ಅವರು ಸ್ಪಷ್ಟೀಕರಣ ನೀಡಿದ್ದು, ಸಾರ್ವಜನಿಕ ವೇದಿಕೆಗಳಲ್ಲಿ ಮೌನವಾಗಿರಬೇಕು ಎಂಬ ಸಂಗತಿ ನನ್ನ ಅರಿವಿಗೆ ಬಂದಿದೆ. ನೀವು ಹೇಳಬೇಕಿರ...
ಕಸಬ್ ನಮ್ಮವನೇ ಎಂದ ಇಮ್ರಾನ್ ಖಾನ್ | Pak role in 26/11 attacks possible: Imran Khan - ಕಸಬ್ ನಮ್ಮವನೇ ಎಂದ ಇಮ್ರಾನ್ ಖಾನ್ - Kannada Oneindia
| Published: Friday, January 9, 2009, 13:19 [IST]
ಇಸ್ಲಾಮಾಬಾದ್, ಜ. 9 : ಮುಂಬೈ ಭಯೋತ್ಪಾದನೆ ಪಾಕ್ ನಲೆದ ವ್ಯಕ್ತಿಗಳಿಂದ ನಡೆದ ಘಟನೆ ಎಂದು ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೆಹಮೂದ್ ಅಲಿ ದುರಾನಿ ಒಪ್ಪಿಕೊಂಡ ಬೆನ್ನಲ್ಲೇ ಮಾಜಿ ಕ್ರಿಕೆಟ್ ಆಟಗಾರ ಹಾಗೂ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಮುಖಂಡ ಇಮ್ರಾನ್ ಖಾನ್ ಕೂಡ ಅದೇ ರಾಗ ಮುಂದುವರಿಸಿದ್ದಾರೆ.
ಮುಂಬೈ ಭಯೋತ್ಪಾದನೆಗೆ ಸಂಬಂಧಿಸಿದಂತೆ ಬಂಧಿತನಾಗಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ಪಾಕಿಸ್ತಾನ ಮೂಲದ ವ್ಯಕ್ತಿ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ಮುಂಬೈ ಘಟನೆಗೆ ಸಂಬಂಧಿಸಿದ ವ್ಯಕ್ತಿಗಳನ್ನು ಬಂಧಿಸಿ ಭಾರತಕ್ಕೆ ಹಸ್ತಾಂತರಿಸಬೇಕು ಎನ್ನುವ ನವದೆಹಲಿಯ ಒತ್ತಾಯಕ್ಕೆ ಇದರಿಂದ ಮತ್ತಷ್ಟು ಶಕ್ತಿ ಬಂದಂತಾಗಿರುವುದು ಸುಳ್ಳಲ್ಲ.
ಪಾಕಿಸ್ತಾನದ ವ್ಯಕ್ತಿಗಳು ಈ ಕೃತ್ಯ ಎಸಗಿರುವುದು ತನಿಖೆಯಿಂದ ತಿಳಿದಿದೆ. ಈ ಘಟನೆ ಹೇಗೆ ನಡೆಯಿತು ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲವಾದರೂ ಪಾಕ್ ಗೆ ಸಂಬಂಧಿಸಿದ ವ್ಯಕ್ತಿಗಳು ಈ ಕೃತ್ಯದಲ್ಲಿ ಭಾಗಿಯಾಗಿಲ್ಲ ಎನ್ನಲು ಆಗದು ಎಂದು ಸಿಎನ್ಎನ್-ಐಬಿಎನ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಇಮ್ರಾನ್ ಖಾನ್ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.
ಮುಂಬೈ ಘಟನೆ ಪಾಕಿಸ್ತಾನ ಸರ್ಕಾರ ನುಂಗಲಾರದ ತುತ್ತಾಗಿದೆ. ಪಾಕ್ ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ಹಾಗೂ ಪ್ರಧಾನಮಂತ್ರಿ ಯೂಸೆಫ್ ರಾಜಾ ಗಿಲಾನಿ ನೇತೃತ್ವದ ಸರ್ಕಾರ ಭಾರಿ ಇಕ್ಕಟ್ಟಿಗೆ ಸಿಲುಕಿರುವುದಂತೂ ಅಲ್ಲಗೆಳೆಯಲು ಸಾಧ್ಯವಿಲ್ಲ ಎಂದು ಖಾನ್ ವಿವರಿಸಿದರು. ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ಪಾಕಿಸ್ತಾನದವನು ಎಂದು ಪಾಕಿಸ್ತಾನದ ರಾಷ್ಟ್ರೀಯ ಭದ್ರತ...
ಇದರ ಜೊತೆಗೆ ಪಾಕ್ ಮಾಜಿ ಪ್ರಧಾನಮಂತ್ರಿ ನವಾಜ್ ಷರೀಫ್ ಕೂಡ ಇದೇ ಹೇಳಿಕೆ ನೀಡಿ ನಂತರ ತಮ್ಮ ಮಾತು ಬದಲಿಸಿ ಕಸಬ್ ನಮ್ಮವನಲ್ಲ ಎಂಬರ್ಥ ಬರುವ ರೀತಿಯಲ್ಲಿ ಇನ್ನೊಂದು ಹೇಳಿಕೆ ನೀಡಿದ್ದರು. ಭಾರತ ಸರ್ಕಾರ ಕಸಬ್ ಪಾಕಿಸ್ತಾನದ ವ್ಯಕ್ತಿ ಎಂಬುದಕ್ಕೆ ಅನೇಕ ಸಾಕ್ಷ್ಯಾಧಾರಗಳನ್ನು ಈಗಾಗಲೇ ಪಾಕ್ ಸರ್ಕಾರಕ್ಕೆ ನೀಡಿದೆ.
ನಾನು ಮತ್ತು ಗುಂಡ ಸಿನಿಮಾ ವಿಮರ್ಶೆ – ಗುಂಡನ ನಟನೆ ನೋಡಿ ಕಣ್ಣೀರು ಬರೋದು ಗ್ಯಾರಂಟಿ… – torrentspree
ನಾನು ಮತ್ತು ಗುಂಡ ಸಿನಿಮಾ ವಿಮರ್ಶೆ – ಗುಂಡನ ನಟನೆ ನೋಡಿ ಕಣ್ಣೀರು ಬರೋದು ಗ್ಯಾರಂಟಿ…
Posted on January 25, 2020 by TorrentSpree
ಮನುಷ್ಯ ಮತ್ತು ನಾಯಿಯ ಸಂಬಂಧವನ್ನು ವಿವರಿಸುವ ಸಿನಿಮಾಗಳು ಸಾಕಷ್ಟು ಬಂದಿವೆ. ಬೇರೆ ಬೇರೆ ಭಾಷೆಗಳಲ್ಲಿ ಇಂತಹ ಕಥೆ ಹೊತ್ತು ಬಂದ ಸಿನಿಮಾಗಳಿಗೆ ಲೆಕ್ಕವಿಲ್ಲ.
ಇದೀಗ ಅಂತಹುದೇ ಬಾಂಧವ್ಯದ ಕಥೆಯನ್ನು ಹೊತ್ತು ತಂದಿರುವ ಸಿನಿಮಾ ನಾನು ಮತ್ತು ಗುಂಡ. ಆದರೆ ಈವರೆಗೆ ಬಂದಿರುವ ಮನುಷ್ಯ ಮತ್ತು ನಾಯಿಯ ನಡುವಿನ ಸಿನಿಮಾಗಳ ಸಾಲಿನಲ್ಲಿ ಭಿನ್ನವಾಗಿ ನಿಲ್ಲುವ ಚಿತ್ರ ನಾನು ಮತ್ತು ಗುಂಡ.
ಸಿನಿಮಾ ನೋಡಿ ಹೊರಗೆ ಬಂದವರ ಕಣ್ಣಂಚಿನಲ್ಲಿ ಕಣ್ಣೀರು ಇಡೀ ಚಿತ್ರದ ಕಥೆಯನ್ನು ಸಾರುತ್ತಿತ್ತು. ಕೆಲವರಂತು ಮನೆಯಲ್ಲಿ ಗುಂಡನಿದ್ರೆ ಸಿನಿಮಾ ನೋಡಿ ಅಂದಿದ್ದಾರೆ. ಮತ್ತೆ ಕೆಲವರು ಕೋಟಿ ಕೋಟಿ ಸುರಿದು ಮಾಡಿದ 10 ಸಿನಿಮಾ ನೋಡುವ ಬದಲು ಇದೊಂದು ಸಿನಿಮಾ ನೋಡಿದರೆ ಸಾಕು ಅಂದಿದ್ದಾರೆ.
ಇನ್ನು ಸಿನಿಮಾದ ಕಥೆ ಬಗ್ಗೆ ಹೇಳುವುದಾದರೆ ಲವ್ ಮ್ಯಾರೇಜ್ ಆಗಿ ಮಕ್ಕಳಾಗದ ನೋವಿನಲ್ಲಿರುವ ಆಟೋ ಡ್ರೈವರ್ ಶಂಕ್ರ. ಈತನ ಲೈಫಿನಲ್ಲೊಂದು ಆಚಾನಕ್ ತಿರುವು. ಮಕ್ಕಳಾಗದ ನೋವಿನಲ್ಲಿ ರಾತ್ರಿ ಕುಡಿದ ಮತ್ತಿನಲ್ಲಿರುವಾಗ ಆತನ ಬಳಿ ಬರೋ ಅಪರೂಪದ ಅತಿಥಿ ಗುಂಡ. ಶಂಕ್ರ ಅತಿಥ್ಯದ ಕರಗಿ ನಿಯತ್ತು ತೋರಿಸುವ ಗುಂಡ. ಈ ನಿಯತ್ತಿನ ಬಾಂಧವ್ಯದಿಂದ ಶಂಕ್ರನ ಮನೆಯಲ್ಲಿ ಬಿರುಗಾಳಿ, ಮನುಷ್ಯ ಪ್ರೀತಿಗಿಂತ ಶ್ವಾನ ಪ...
ನಾಯಿಯನ್ನ ಸಾಕಿ ಅದರ ಪ್ರೀತಿ ಪಡೆದವರಿಗೆ, ನಾಯಿಯ ನಿಯತ್ತು, ಪ್ರೀತಿ ಗೊತ್ತಿರೋರಿಗೆ ಈ ಚಿತ್ರ ಮನಸ್ಸಿಗೆ ತಟ್ಟೋದು ಗ್ಯಾರಂಟಿ. ಕಥೆ ನಗುವಿನಿಂದ ಶುರುವಾದರು, ಹೊತ್ತು ಕಳೆದಂತೆ ಬರೋ ತಿರುವುಗಳು ಪ್ರೇಕ್ಷಕನನ್ನು ಭಾವುಕಥೆಗೆ ತಳ್ಳುತ್ತದೆ.
ಚಿತ್ರದ ಮುಖ್ಯ ಹೈಲೈಟ್ ಅಂದ್ರೆ ಕಥೆ ಮತ್ತು ಶಿವರಾಜ್ ಕೆ.ಆರ್ ಪೇಟೆ ಹಾಗೂ ಸಿಂಬಾ ( ಗುಂಡ)ನ ಅದ್ಭುತ ಪರ್ಫಾರ್ಮೆನ್ಸ್. ಶಿವರಾಜ್ ಕೆ.ಆರ್ ಪೇಟೆ ಮತ್ತು ಸಿಂಬಾ ನಡುವಿನ ಬಾಂಡಿಂಗ್ ಅದ್ಭುತ ಅನ್ನಿಸುತ್ತೆ. ಮಾಧ್ಯಮ ಲೋಕದಿಂದ ಹಾಸ್ಯ ಕಲಾವಿದನಾಗಿ ಉದಯಿಸಿದ ಕೆ ಆರ್ ಪೇಟೆ ಈ ಚಿತ್ರದ ಮೂಲಕ ತಾನೊಬ್ಬ ಹಾಸ್ಯನಟ ಮಾತ್ರವಲ್ಲ ಅನ್ನುವುದನ್ನು ಸಾರಿದ್ದಾರೆ.
ವಿಶ್ವದ ವಿವಿಧೆಡೆ 1.31 ಕೋಟಿ ಜನರಿಗೆ ಕೊರೊನಾ ಸೋಂಕು - Times of Deenabandhu
by Times fo Deenabandhu July 13, 2020
ಹಾಂಗ್‌ಕಾಂಗ್: ಕಟ್ಟುನಿಟ್ಟಿನ 'ಅಂತರ' ಜಾರಿ
ಶಿಕ್ಷಣ ಸಂಸ್ಥೆಗಳು ಕಾರ್ಯಾರಂಭ ಮಾಡಬೇಕು ಎಂದು ಟ್ರಂಪ್ ಆಡಳಿತ ಒತ್ತಡ ಹೇರುತ್ತಿದ್ದರೆ, ಮಿಚಿಗನ್ ಮತ್ತು ಮಿಸ್ಸೋರಿ ಪ್ರಾಂತ್ಯಗಳಲ್ಲಿ 'ಮಾಸ್ಕ್ ಬೇಡ' ಪ್ರತಿಭಟನೆಗಳು ಆರಂಭವಾಗಿವೆ.
ರಾಜ್ಯದಲ್ಲಿ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದ ಕೊರೊನಾ… ಬೆಂಗಳೂರೊಂದರಲ್ಲಿಯೇ 1148 ಜನರಿಗೆ ಸೋಂಕು.. ದಕ್ಷಿಣ ಕನ್ನಡದಲ್ಲಿ ಮತ್ತೊಮ್ಮೆ ಆರ್ಭಟ…. ಕಳೆದ 24 ಘಂಟೆಯಲ್ಲಿ ಎಲ್ಲೆಲ್ಲಿ? ಎಷ್ಟು? ಜನರಿಗೆ……ಇಲ್ಲಿದೆ ಫುಲ್ ಡಿಟೈಲ್ಸ್……
ಬಿ‍ಎಸ್ 6 ಎಂಜಿನ್‍‍ನೊಂದಿಗೆ ಐಸ್ಮಾರ್ಟ್ ಸ್ಪ್ಲೆಂಡರ್ ಬೈಕ್ ಬಿಡುಗಡೆ - Kannada DriveSpark
ಬಿ‍ಎಸ್ 6 ಎಂಜಿನ್‍‍ನೊಂದಿಗೆ ಐಸ್ಮಾರ್ಟ್ ಸ್ಪ್ಲೆಂಡರ್ ಬೈಕ್ ಬಿಡುಗಡೆ
Published: Thursday, November 7, 2019, 17:58 [IST]
ಹೀರೋ ಮೋಟೊಕಾರ್ಪ್ ತನ್ನ ಸರಣಿಯಲ್ಲಿರುವ ಎಲ್ಲಾ ಬೈಕ್ ಹಾಗೂ ಸ್ಕೂಟರ್‍‍ಗಳನ್ನು ಬಿ‍ಎಸ್ 6 ನಿಯಮಗಳಿಗೆ ತಕ್ಕಂತೆ ಅಪ್‍‍ಡೇಟ್‍‍ಗೊಳಿಸುತ್ತಿದೆ. ಹೀರೋ ಮೋಟೊಕಾರ್ಪ್ ಕಂಪನಿಯ ಸ್ಪ್ಲೆಂಡರ್ ಐಸ್ಮಾರ್ಟ್ 110 ಬೈಕ್, ಇಂಟರ್‍‍ನ್ಯಾಷನಲ್ ಸೆಂಟರ್ ಫಾರ್ ಆಟೋಮೋಟಿವ್ ಟೆಕ್ನಾಲಜಿಯಿಂದ ಬಿ‍ಎಸ್ 6 ಪ್ರಮಾಣಪತ್ರ ಪಡೆದ ಭಾರತದ ಮೊದಲ ದ್ವಿಚಕ್ರ ವಾಹನವಾಗಿದೆ.
ಬಿ‍ಎಸ್ 6 ಎಂಜಿನ್ ಹೊಂದಿರುವ ಹೀರೋ ಸ್ಪ್ಲೆಂಡರ್ ಅನ್ನು ರಾಜಸ್ತಾನದ ಜೈಪುರದಲ್ಲಿರುವ ಕಂಪನಿಯ ಆರ್ ಅಂಡ್ ಡಿ ಘಟಕದಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ಹೀರೋ ಮೋಟೊಕಾರ್ಪ್ ಈ ಬಿ‍ಎಸ್ 6 ಬೈಕ್ ಅನ್ನು ತರಬೇತಿಗಾಗಿ ಹಾಗೂ ಡೀಲರ್‍‍ಗಳಿಗೆ ಹೆಚ್ಚು ಪರಿಚಿತವಾಗಲಿ ಎಂಬ ಕಾರಣಕ್ಕಾಗಿ ಬಿಡುಗಡೆಗೂ ಮುನ್ನ ಮಾರಾಟಗಾರರಿಗೆ ಕಳುಹಿಸಿತ್ತು.
ಹೀರೋ ಮೋಟೊಕಾರ್ಪ್, ಬಿ‍ಎಸ್ 6 ಎಂಜಿನ್ ಹೊಂದಿರುವ ಹೊಸ ಐ‍‍ಸ್ಮಾರ್ಟ್ ಬೈಕ್ ಅನ್ನು ಇಂದು ಬಿಡುಗಡೆಗೊಳಿಸಿದೆ. ಸ್ಪ್ಲೆಂಡರ್ ಐಸ್ಮಾರ್ಟ್ ಬೈಕಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.64,900ಗಳಾಗಿದೆ.
ಸ್ಪ್ಲೆಂಡರ್ ಬೈಕಿಗಿಂತ ರೂ.7,470 ಹೆಚ್ಚು ಬೆಲೆಯನ್ನು ಹೊಂದಿದೆ. ಈ ಬೈಕ್ ಅನ್ನು ಡ್ರಮ್ ಹಾಗೂ ಡಿಸ್ಕ್ ಬ್ರೇಕ್‌ನ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಅಪ್‍‍ಡೇಟೆಡ್ ಮಾದರಿಯು ಒಂದೇ ರೀತಿಯ ಆಯಾಮಗಳನ್ನು ಹೊಂದಿರಲಿದೆ.
ಡಿಸ್ಕ್ ಬ್ರೇಕ್ ಮಾದರಿಯು 1 ಕೆ.ಜಿ ಹೆಚ್ಚು ತೂಕವನ್ನು ಹೊಂದಿರಲಿದ್ದು, 10 ಎಂಎಂ ಅಗಲವಾಗಿರಲಿದೆ. ಬಿಎಸ್ 6 ಸ್ಪ್ಲೆಂಡರ್ ಬೈಕಿನಲ್ಲಿ 113.2 ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಎಂಜಿನ್ ಇರಲಿದ್ದು, ಈ ಎಂಜಿನ್ 7,500 ಆರ್‌ಪಿಎಂನಲ್ಲಿ 9.15 ಬಿ‍‍‍‍ಹೆಚ್‌ಪಿ ಪವರ್ ಉತ್ಪಾದಿಸುತ್ತದೆ.
ಈ ಎಂಜಿನ್ ಹೊಸ ಡೈಮಂಡ್ ಫ್ರೇಂನಲ್ಲಿ ಕೂರಲಿದೆ. ಆರಾಮದಾಯಕವಾದ ಹಾಗೂ ಸ್ಥಿರವಾದ ಸವಾರಿಗಾಗಿ ಹೀರೋ ಮೋಟೊಕಾರ್ಪ್ ಈ ಬೈಕಿನಲ್ಲಿರುವ ಸಸ್ಪೆಂಷನ್ ಅನ್ನು 15 ಎಂಎಂ ಹಾಗೂ ವ್ಹೀಲ್‍‍ಬೇಸ್ ಅನ್ನು 36 ಎಂಎಂನಷ್ಟು ಹೆಚ್ಚಿಸಿದೆ.
ಹೊಸ ಸ್ಪ್ಲೆಂಡರ್ ಐ‍‍ಸ್ಮಾರ್ಟ್ ಬೈಕಿನ ಗ್ರೌಂಡ್ ಕ್ಲಿಯರೆನ್ಸ್ ಅನ್ನು 180 ಎಂಎಂನಷ್ಟು ಹೆಚ್ಚಿಸಲಾಗಿದೆ. ಹೀರೋ ಮೋಟೊಕಾರ್ಪ್ 799 ಎಂಎಂ ಸೀಟ್ ಹೈಟಿನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ.
ಹೊಸ ಬಿ‍ಎಸ್6 ಎಂಜಿನ್ ಫ್ಯೂಯಲ್ ಇಂಜೆಕ್ಷನ್ ಟೆಕ್ನಾಲಜಿಯನ್ನು ಹೊಂದಿರಲಿದೆ. ಇದರೊಂದಿಗೆ ಐ3 ಎಸ್ ಸ್ಟಾರ್ಟ್ ಸ್ಟಾಪ್ ಟೆಕ್ನಾಲಜಿ ಇರಲಿದೆ. ಇದು ಐಡಲ್ ಸ್ಟಾರ್ಟ್ ಹಾಗೂ ಸ್ಟಾಪ್ ಸಿಸ್ಟಂ ಆಗಿದ್ದು, ಹೆಚ್ಚು ಅವಧಿಯವರೆಗೆ ಬೈಕ್ ಅನ್ನು ಆಫ್ ಮಾಡದೇ ನಿಲ್ಲಿಸಿದ್ದರೆ ಈ ಸಿಸ್ಟಂ ಎಂಜಿನ್ ಅನ್ನು ಆಫ್ ಮಾಡುತ್ತದೆ.
ಕ್ಲಚ್ ಅನ್ನು ಬಿಟ್ಟ ನಂತರ ಮತ್ತೆ ಸ್ಟಾರ್ಟ್ ಮಾಡಲಿದೆ. ಮುಂದಿನ 3-4 ವಾರಗಳಲ್ಲಿ ಬಿ‍ಎಸ್ 6 ಸ್ಪ್ಲೆಂಡರ್ ಐಸ್ಮಾರ್ಟ್ ಬೈಕುಗಳನ್ನು ಡೀಲರ್‍‍ಗಳಿಗೆ ಕಳುಹಿಸಲಾಗುವುದೆಂದು ಹೀರೋ ಮೋಟೊಕಾರ್ಪ್ ಕಂಪನಿಯು ತಿಳಿಸಿದೆ.
ಅದಾದ ನಂತರ ಬೈಕುಗಳ ವಿತರಣೆಯನ್ನು ಆರಂಭಿಸಲಾಗುವುದು. ಅಂದ ಹಾಗೆ ಹೊಸ ಬಿ‍ಎಸ್ 6 ಮಾಲಿನ್ಯ ನಿಯಮಗಳು 2020ರ ಏಪ್ರಿಲ್ 1ರಿಂದ ಜಾರಿಗೆ ಬರಲಿವೆ. ಅದಕ್ಕೂ ಮುನ್ನ ಎಲ್ಲಾ ಕಂಪನಿಗಳು ತಮ್ಮ ವಾಹನಗಳನ್ನು ಬಿಎಸ್ 6 ಎಂಜಿನ್‍‍ಗೆ ಅಪ್‍‍ಗ್ರೇಡ್‍‍ಗೊಳಿಸುತ್ತಿವೆ.
ಅದರಂತೆ ಹೀರೋ ಮೋಟೊಕಾರ್ಪ್ ಸಹ ತನ್ನ ವಾಹನಗಳನ್ನು ಬಿ‍ಎಸ್ 6 ಎಂಜಿನ್‍‍ಗೆ ಅಪ್‍‍ಗ್ರೇಡ್‍‍ಗೊಳಿಸುತ್ತಿದೆ. ಅದರ ಭಾಗವಾಗಿ ಈಗ ಕಂಪನಿಯ ಜನಪ್ರಿಯ ಬೈಕ್ ಆದ ಸ್ಲ್ಪೆಂಡರ್ ಅನ್ನು ಐ‍‍ಸ್ಮಾರ್ಟ್ ಹೆಸರಿನಲ್ಲಿ ಬಿ‍ಎಸ್ 6 ಎಂಜಿನ್‍‍ನೊಂದಿಗೆ ಬಿಡುಗಡೆಗೊಳಿಸಿದೆ.
ಇಂದಿನಿಂದ ಬೆಳೆ ಹಾನಿ ಸಮೀಕ್ಷೆ ಆರಂಭ | Prajavani
ಇಂದಿನಿಂದ ಬೆಳೆ ಹಾನಿ ಸಮೀಕ್ಷೆ ಆರಂಭ
ಮೈಸೂರು: ಜಿಲ್ಲೆಯಲ್ಲಿ ಬರದಿಂದ ತೀವ್ರ ಹಾನಿಗೆ ಒಳಗಾಗಿರುವ ಆಯ್ದ ಗ್ರಾಮಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಮತ್ತು ಅಧಿಕಾರಿಗಳ ತಂಡ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಮೈಸೂರು ತಾಲ್ಲೂಕಿನ ಇಲವಾಲ ಹೋಬಳಿ ಮತ್ತು ನಂಜನಗೂಡು ತಾಲ್ಲೂಕಿನ ಕೌಲಂದೆ ಹೋಬಳಿಗಳ ಕೆಲವು ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ಹಾನಿ, ಮೇವು, ಕುಡಿಯುವ ನೀರು, ವಿದ್ಯುತ್ ಸಮಸ್ಯೆ ಕುರಿತು ವಾಸ್ತವ ಸ್ಥಿತಿಯನ್ನು ಅರಿಯಿತು. ಈ ಭಾಗದಲ್ಲಿ ರಾಗಿ, ಹುರುಳಿ, ಅವರೆ, ಅಲಸಂದೆ, ಎಳ್ಳು, ಹತ್ತಿ ಬೆಳೆ ಮಳೆ ಕೊರತೆಯಿಂದ ಹಾನಿಗೊಳಗಾಗಿದೆ. ಇದನ್ನು ಪ್ರತ್ಯಕ್ಷವಾಗಿ ಕಂಡ ರಾಮದಾಸ್ ಹೊಲದಲ್ಲಿದ್ದ ರೈತರಿಂದ ಮಾಹ...
`ಸೆಪ್ಟಂಬರ್ ತಿಂಗಳಲ್ಲಿ ಮಳೆ ಕೈಕೊಟ್ಟಿತು. ಆದ್ದರಿಂದ ರಾಗಿ ಸರಿಯಾಗಿ ಕಾಳುಕಟ್ಟುತ್ತಿಲ್ಲ. ಜೊಳ್ಳು ಹೆಚ್ಚಾಗಿದೆ. ಇದರಿಂದ ಇಳುವರಿ ಕಡಿಮೆಯಾಗುತ್ತದೆ. ನಾವು ಮಾಡಿದ ಖರ್ಚು ಸಹ ಕೈ ಸೇರುವುದಿಲ್ಲ. ಹುರುಳಿ, ಅವರೆ, ಎಳ್ಳಿನ ಕಥೆಯೂ ಇದೇ ಆಗಿದೆ~ ಎಂದು ಯಲಚಹಳ್ಳಿಯ ರೈತರು ಸಚಿವ ರಾಮದಾಸ್‌ಗೆ ತಮ್ಮ ಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟರು.
ಆನಂದೂರು ಭಾಗದಲ್ಲಿ ಹುರುಳಿ, ರಾಗಿ ಪೈರುಗಳು ಒಣಗುವ ಸ್ಥಿತಿಯಲ್ಲಿದ್ದವು. ಮೂರು ದಿನಗಳಿಂದ ಮಳೆಯಾಗಿದ್ದು ಪೈರು ಹಸಿರಾಗಿವೆ. `ಈಗ ಬಿತ್ತನೆ ಮಾಡಲು ನೀವು ಸಿದ್ಧವಿದ್ದರೆ ಅಗತ್ಯವಾದ ಬೀಜ, ಗೊಬ್ಬರವನ್ನು ಒದಗಿಸಲಾಗುತ್ತದೆ~ ಎಂದು ಸಚಿವರು ರೈತರನ್ನು ಕೇಳಿದರು. ಆದರೆ ರೈತರು ಮಾತ್ರ ಇದಕ್ಕೆ ಒಪ್ಪಲಿಲ್ಲ. `ಬಿತ್ತನೆ ಸಮಯ ಮುಗಿದು ಹೋಗಿದೆ. ಈಗ ಬಿತ್ತಿದರೂ ಪ್ರಯೋಜನವಿಲ್ಲ. ಆದ್ದರಿಂದ ನಾವು ಬಿತ್...
ನಾಳೆಯಿಂದ ಸರ್ವೆ: ಬರ ಸ್ಥಿತಿಯನ್ನು ವೀಕ್ಷಿಸಿದ ನಂತರ ಪತ್ರಕರ್ತರೊಂದಿಗೆ ರಾಮದಾಸ್ ಮಾತನಾಡಿ, `ನಾಳೆಯಿಂದ ಬರದಿಂದ ಆಗಿರುವ ಬೆಳೆ ನಷ್ಟವನ್ನು ಅಂದಾಜು ಮಾಡುವ ಸರ್ವೆಯನ್ನು ಆರಂಭಿಸಲಾಗುತ್ತದೆ. ಬಳಿಕವಷ್ಟೇ ಪರಿಹಾರ ಕುರಿತು ಚಿಂತಿಸಲಾಗುವುದು. ಕೆಲವು ಕಡೆ ಬಿತ್ತನೆ ಮಾಡಿದ್ದು ಪೈರು ಬಂದಿವೆ. ಇನ್ನು ಕೆಲವು ಕಡೆ ಬಿತ್ತನೆಯೇ ಆಗಿಲ್ಲ. ಎಲ್ಲವನ್ನೂ ಸರ್ವೆ ನಂತರ ನಿರ್ಧಾರಿಸಲಾಗುವುದು. ಇಷ್ಟೇ ಅ...
`ಬೆಳೆ ಹಾನಿಯಷ್ಟೇ ಕುಡಿಯುವ ನೀರಿಗೂ ತೊಂದರೆ ಇದೆ. ಆದ್ದರಿಂದ ಈಗ ಇರುವ ಕೊಳವೆಬಾವಿಗಳ ಪುನಶ್ವೇತನಗೊಳಿಸಲಾಗುವುದು. 23 ಕೊಳವೆಬಾವಿಗಳ ನೀರಿನಲ್ಲಿ ಫ್ಲೋರೈಡ್ ಅಂಶವಿದ್ದು ಇವುಗಳನ್ನು ಬಳಕೆ ಮಾಡದಂತೆ ಸೂಚಿಸಲಾಗಿದೆ. ಹೆಚ್ಚು ಕೊಳವೆಬಾವಿಗಳನ್ನು ಕೊರೆಸಲು ಅನುಮತಿ ನೀಡುವುದಿಲ್ಲ. ಇದಕ್ಕೆ ಪರ್ಯಾಯವಾಗಿ ನದಿ, ಕಾಲುವೆ, ಕೆರೆ ಇತ್ಯಾದಿಗಳಿಂದ ಮೇಲುಮಟ್ಟದಲ್ಲಿ ನೀರು ತರುವ ವ್ಯವಸ್ಥೆಗೆ ಆದ್ಯತೆ ನೀ...
`ಬರ ಪರಿಹಾರಕ್ಕೆ ಸರ್ಕಾರ ಸದ್ಯದಲ್ಲಿ ಹಣ ಬಿಡುಗಡೆ ಮಾಡಿಲ್ಲ. ಆದರೆ ಜಿಲ್ಲಾಧಿಕಾರಿ ಬಳಿ ಪ್ರಕೃತಿ ವಿಕೋಪ ನಿಧಿಯಲ್ಲಿ 4 ಕೋಟಿ ರೂಪಾಯಿ ಇದೆ. ಇದನ್ನು ಬಳಕೆ ಮಾಡಿಕೊಂಡು ಇನ್ನು ಹೆಚ್ಚಿನ ಹಣಕ್ಕೆ ಸರ್ಕಾರಕ್ಕೆ ಬೇಡಿಕೆ ಇಡಲಾಗುವುದು. ಕುಡಿಯುವ ನೀರಿನ ಸಮಸ್ಯೆಯನ್ನು ನೀಗುವ ಸಲುವಾಗಿ ಜಿಲ್ಲಾ ಪಂಚಾಯಿತಿ ಬಳಿ 57 ಕೋಟಿ ರೂಪಾಯಿಗಳಿದ್ದು ಇದನ್ನು ಬಳಕೆ ಮಾಡಿಕೊಳ್ಳಲಾಗುವುದು~ ಎಂದರು.
ಶಾಸಕ ಎಂ.ಸತ್ಯನಾರಾಯಣ ಮಾತನಾಡಿ, `ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಜಯಪುರ ಹೋಬಳಿಯಲ್ಲಿಯೂ ಬರದ ಸ್ಥಿತಿ ಇದೆ. ಆದ್ದರಿಂದ ಈ ಬಗ್ಗೆಯೂ ಗಮನಹರಿಸಬೇಕು. ನಾಗರಕಟ್ಟೆ ಸೇತುವೆಯನ್ನು ಸಂಪರ್ಕಿಸುವ ರಸ್ತೆ ನಿರ್ಮಾಣ ಕಾರ್ಯ ಹಣಕಾಸಿನ ತೊಂದರೆಯಿಂದ ಅರ್ಧಕ್ಕೆ ನಿಂತಿದೆ. ಇದಕ್ಕೂ ಅಗತ್ಯವಾದ ಹಣವನ್ನು ಕೊಡಬೇಕು~ ಎಂದು ಸಚಿವ ರಾಮದಾಸ್ ಅವರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುನೀತಾವೀರಪ್ಪಗೌಡ , ಉಪಾಧ್ಯಕ್ಷ ಡಾ.ಶಿವರಾಮು, ಜಿಲ್ಲಾಧಿಕಾರಿ ಪಿ.ಎಸ್.ವಸ್ತ್ರದ್, ಕೃಷಿ ಜಂಟಿ ನಿರ್ದೇಶಕ ಕೃಷ್ಣಯ್ಯ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಗೋಪಾಲ್, ಉಪವಿಭಾಗಾಧಿಕಾರಿ ಭಾರತಿ, ತಹಶೀಲ್ದಾರ್ ಮಂಜುನಾಥ್ ಬಾಬು ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು, ವಿವಿಧ ಪಕ್ಷಗಳ ಮುಖಂಡರು ಹಾಜರಿದ್ದರು.
ಬಿಜೆಪಿಯೇತರ ಆಡಳಿತದ ಏಳು ರಾಜ್ಯಗಳಿಂದ ಜಿಎಸ್‌ಟಿ ನಷ್ಟ ಪರಿಹಾರ ಬೇಡಿಕೆ | Seven non-BJP-ruled States raised demand to grant GST loss compensation - Kannada Oneindia
12 min ago ಕರ್ನಾಟಕದಲ್ಲಿ ಒಂದೇ ದಿನ 783 ಮಂದಿಗೆ ಕೊರೊನಾವೈರಸ್
43 min ago ಸೆ.20ರ ಬೆಳಗ್ಗೆ 11 ಗಂಟೆಗೆ ಪಂಜಾಬ್ ಸಿಎಂ ಚರಂಜಿತ್ ಸಿಂಗ್ ಚನ್ನಿ ಪದಗ್ರಹಣಕ್ಕೆ ಮುಹೂರ್ತ