text stringlengths 0 61.5k |
|---|
ಬೆಳಗ್ಗೆ ಬೆಡ್ ಕಾಫಿಯಿಂದ ಶುರುವಾಗಿ breakfast - lunch - evening snack - dinner ಮತ್ತು ಆಗಾಗ ಕುರುಕಲು ತಿಂಡಿ ಅವರ ದಿನನಿತ್ಯದ ಆಹಾರ. ಇಂದು ಸಿಹಿ ತಿನಿಸುಗಳು - ಮಾಂಸಾಹಾರ - ವಿವಿಧ ರೀತಿಯ ಪಾನೀಯಗಳು ಮುಂತಾದವು ಬಯಸಿದಾಗ ತಿನ್ನಬಹುದು. ದ್ರಾಕ್ಷಿ - ಗೋಡಂಬಿ - ಬಾದಾಮಿ ಮುಂತಾದ ಪದಾರ್ಥಗಳನ್ನು ಉಪ್ಪಿಟ್ಟು ಕೇಸರಿಬಾತ್, ವಾಂಗಿಬಾತ್, ಚಿತ್ರಾನ್ನ, ಪಾಯಸ ಎಲ್ಲದರಲ್ಲೂ ಉಪಯೋಗಿಸುತ್ತಾ... |
ಆದರೆ ಈಗ, |
Kitty party, |
Marriage anniversary, |
partyಗೊಂದು ನೆಪ ಸಿಕ್ಕರೆ ಸಾಕು ಮತ್ತು ಅದರಲ್ಲಿ ಎಲ್ಲಾ ರೀತಿಯ ಭಕ್ಷ್ಯ ಭೋಜನ ಮತ್ತು ಪಾನೀಯ ಕಡ್ಡಾಯ. |
ಆ ಕಾರಣಕ್ಕಾಗಿ ದೈಹಿಕ ಶ್ರಮ ಕಡಿಮೆಯಾಗಿ ಸಹಜವಾಗಿ ಖಾಯಿಲೆಗಳು ಹೆಚ್ಚಾಗುತ್ತಿದೆ. ಎಷ್ಟೊಂದು ವ್ಯತ್ಯಾಸ. ಅಂದಿಗೂ ಇಂದಿಗೂ. ಇದನ್ನು ಹೊರತುಪಡಿಸಿ ಇನ್ನೂ ಹಲವಾರು ಬದಲಾವಣೆಗಳು ನಿಮ್ಮ ಮನದಲ್ಲಿ ಮೂಡುತ್ತದೆ. |
ಬದಲಾವಣೆಗಳನ್ನು ಒಪ್ಪಿಕೊಳ್ಳುತ್ತಾ ಅದರ ದಿಕ್ಕನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿಕೊಂಡು ಹೋಗುತ್ತಾ ಜೀವನಮಟ್ಟ ಸುಧಾರಿಸಿಕೊಳ್ಳೋಣ ಎಂದು ಆಶಿಸುತ್ತಾ..... |
ಜ್ಞಾನ ಭಿಕ್ಷಾ ಪಾದಯಾತ್ರೆಯ 161 ನೆಯ ದಿನ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನಲ್ಲಿ ವಾಸ್ತವ್ಯದ ಸಮಯದಲ್ಲಿ ಬರೆದ ಬರಹ. |
ಹೊಸ ಅನುಭವ ಕೊಡುವ ಮಣಿಕಾಂತ್ ಪುಸ್ತಕ | AR Manikanth | Book talk | Mother | 8 lies of mother | MV Kamath - ಹೊಸ ಅನುಭವ ಕೊಡುವ ಮಣಿಕಾಂತ್ ಪುಸ್ತಕ - Kannada Oneindia |
| Published: Saturday, October 24, 2009, 14:42 [IST] |
ಎಆರ್ ಮಣಿಕಾಂತ ಅವರ 'ಅಮ್ಮ ಹೇಳಿದ ಎಂಟು ಸುಳ್ಳುಗಳು' ಸಾಕಷ್ಟು ಚರ್ಚಿತವಾಗಿದೆ, ಮಾರಾಟದಲ್ಲಿ ದಾಖಲೆಯನ್ನೂ ಸೃಷ್ಟಿಸಿದೆ. ಪ್ರತಿಬಾರಿ ಓದಿದಾಗಲೂ ಹೊಸತೊಂದು ಅನುಭವದ ಪರಿಚಯ ಮಾಡಿಕೊಡುತ್ತದೆ. ಅವು ಸಕಾರಾತ್ಮಕವಾಗಿ ನಮ್ಮ ಮೇಲೆ ಪ್ರಭಾವ ಬೀರುತ್ತವೆ, ಹೊಸ ಬೆಳಕು ಚೆಲ್ಲುತ್ತವೆ, ನಮ್ಮ ತಪ್ಪು ನಿರ್ಧಾರಗಳನ್ನು ಬದಲಿಸಲು ಸಹಕರಿಸುತ್ತವೆ. ನಮ್ಮ ಮನ ಮುಟ್ಟುತ್ತವೆ, ಬೆನ್ನು ತಟ್ಟುತ್ತವೆ, ಹೃದಯ ಮಿ... |
ಅಮ್ಮ ಹೇಳಿದ ಎಂಟು ಸುಳ್ಳುಗಳು ಎಂಬ ಎ.ಆರ್. ಮಣಿಕಾಂತ ಅವರ ಪುಸ್ತಕವನ್ನು ನಾನು ಪ್ರವಾಸದಲ್ಲಿದ್ದಾಗ (ಹುಬ್ಬಳ್ಳಿಯಲ್ಲಿ) ನೋಡಿದೆ. (ನೀಲಿಮಾ ಪ್ರಕಾಶನ, ನಂ.೬೮೯, ೫ನೆಯ ಮುಖ್ಯ, 8ನೆಯ ಅಡ್ಡ ರಸ್ತೆ, ಕೆಂಗೇರಿ, ಬೆಂಗಳೂರು-60). ಒಂದು ಒಳ್ಳೆಯ ವಸ್ತುವನ್ನು ಬೇಡಿತಂದು, ಕೊಂಡುತಂದು, ಕಡತಂದು, ಕದ್ದು (beg, buy, borrow or steal) ಪಡೆಯಬೇಕು ಎನ್ನಲಾಗುತ್ತದೆ. ಒಳ್ಳೆಯ ಪುಸ್ತಕದ ವಿಷಯಕ್ಕೂ ಈ... |
ನಾನು ಮಣಿಕಾಂತ ಅವರನ್ನು ನೋಡಿಲ್ಲ. ಅವರ ಲೇಖನಗಳನ್ನು ಇಂಟರ್‌ನೆಟ್‌ನಲ್ಲಿ (ದ್ಯಟ್ಸ್‌ಕನ್ನಡ.ಒನ್‌ಇಂಡಿಯಾ.ಇನ್)ದಲ್ಲಿ ಆಗಾಗ ಓದಿದ್ದೇನೆ. ಒಂದೇಸಲ 35 ಲೇಖನಗಳನ್ನು ಓದುವ ಅವಕಾಶ ದೊರೆಯಿತು ಎಂಬ ಸಂತಸ ನನಗೆ. ಅವರು ಕನ್ನಡ ದಿನಪತ್ರಿಕೆಯಲ್ಲಿ ಹಲವಾರು ಅಂಕಣ ಬರೆಯುತ್ತಾರೆ ಎಂದು ಕೇಳಿದ್ದೇನೆ. ಮುಂಬೈವಾಸಿಯಾದ ಕಾರಣ ನನಗೆ ಅವನ್ನೆಲ್ಲ ಓದುವ ಅವಕಾಶವಿಲ್ಲ. |
ಪ್ರಸ್ತುತ ಪುಸ್ತಕದಲ್ಲಿರುವ 35 ಲೇಖನಗಳಲ್ಲಿ ಎಲ್ಲವೂ ಕತೆಗಳಲ್ಲ. ಕೆಲವು ನಂಬಹುದಾದಂತಹ ಕಲ್ಪನೆಗಳು, ಕೆಲವು ನಂಬಲಾರದಂತಹ ಸತ್ಯ ಕಥೆಗಳು, ಕೆಲವು ಹರಟೆಗಳು, ಒಂದು 'ಎಪ್ರಿಲ್ ಫೂಲ್' ನಿಮಿತ್ತ ಬರೆದ ಕಥೆ. ಈ ಪುಸ್ತಕದ ಅರ್ಪಣೆ ವೈಶಿಷ್ಟ್ಯಪೂರ್ಣವಾಗಿದೆ. (ಅಪ್ಪನಂಥ ಧೈರ್ಯದ ಅಮ್ಮನಿಗೆ | ಅಮ್ಮನಂತೆಯೇ ಬೆಳೆಸಿದ ಅಪ್ಪನಿಗೆ). ಈ ಲೇಖಕರೇ ಒಂದು ವಿಸ್ಮಯಕಾರಿ ಕಥೆಗೆ ವಿಷಯ ಆಗಬಲ್ಲರು. ಇವರು ಕಲಿತದ್... |
ಅವರ ಲೇಖನದ ವೈಶಿಷ್ಟ್ಯವೆಂದರೆ ಅವು ಸಕಾರಾತ್ಮಕವಾಗಿ ನಮ್ಮ ಮೇಲೆ ಪ್ರಭಾವ ಬೀರುತ್ತವೆ, ಹೊಸ ಬೆಳಕು ಚೆಲ್ಲುತ್ತವೆ, ನಮ್ಮ ತಪ್ಪು ನಿರ್ಧಾರಗಳನ್ನು ಬದಲಿಸಲು ಸಹಕರಿಸುತ್ತವೆ. ನಮ್ಮ ಸಂಸ್ಕೃತಿಯಲ್ಲಿ ತಾಯಿ ಮೊದಲ ದೇವರು, ನಂತರ ತಂದೆ ಹಾಗೂ ಗುರುಗಳ ಸ್ಥಾನವಿದೆ. ನವ ನಾಗರಿಕತೆಯ ಪ್ರಭಾವಕ್ಕೆ ಸಿಲುಕಿ ತಂದೆತಾಯಂದಿರನ್ನು ವೃದ್ಧಾಶ್ರಮದಲ್ಲಿಡುತ್ತೇವೆ. ಇವರ ಕತೆ ಓದಿದಮೇಲೆ ನಾವು ನಮ್ಮ ಅಭಿಪ್ರಾಯ ಬ... |
ಒಂದು ಒಳ್ಳೆಯ ಪುಸ್ತಕ ಓದಿದಾಗ ಅದರಿಂದ ಎಂತಹ ಲಾಭವಾಗುತ್ತದೆ ಎನ್ನಲು ನಾನೊಂದು ಉದಾಹರಣೆ ಕೊಡುತ್ತೇನೆ. ಪ್ರಸಿದ್ಧ ಪತ್ರಕರ್ತ ಎಂ.ವಿ.ಕಾಮತರು ತಮ್ಮ ಆತ್ಮಚರಿತ್ರೆ ಬರೆದಿದ್ದಾರೆ. (A Reporter at Large). ಅದನ್ನು ಭಾರತೀಯ ವಿದ್ಯಾಭವನದವರು ಪ್ರಕಟಿಸಿದ್ದಾರೆ. ಅದನ್ನು ಮಿತ್ರರಾದ ವೈಕುಂಠರಾವ ಸೋಂದೆಯವರು ನನಗೆ ಓದಲು ಕೊಟ್ಟರು. (ಅವರು ಸಿರಸಿಯ ಅರ್ಬನ್ ಕೊ-ಆ-ಬ್ಯಾಂಕಿನ ಚೇರ್‌ಮನ್ನರು, ಹಲವಾ... |
ಮಣಿಕಾಂತ ಅವರ ಪುಸ್ತಕ ಓದಿದಾಗ ನಿಮಗೂ ಹೊಸ ಅನುಭವ ಬರುವ ಸಾಧ್ಯತೆ ಇದೆ. ಇಲ್ಲಿ ನಂಬಲು ಅಸಾಧ್ಯವಾದ ಸತ್ಯ ಕಥೆಗಳಿವೆ. ತಂದೆಯ ಮಿತ್ರನ ಟ್ರಕ್‌ನಲ್ಲಿ ಕುಳಿತು ಪ್ರವಾಸ ಮಾಡುತ್ತಿದ್ದ ಒಬ್ಬ ಬಡ ಹುಡುಗ (ನಾಗನರೇಶ) ಅಪಘಾತದಲ್ಲಿ ಎರಡು ಕಾಲು ಕಳೆದುಕೊಳ್ಳುತ್ತಾನೆ. ಮುಂದೆ ಹಟತೊಟ್ಟು ಓದಿ ಒಬ್ಬ ಸಾಫ್ಟ್‌ವೇರ್ ಇಂಜಿನಿಯರ್ ಆಗುತ್ತಾನೆ. ಪಂಗುಂ ಲಂಘಯತೇ ಗಿರಿಂ' ಎಂಬಂತೆ ಇವನ ಸಾಧನೆ ಇತ್ತು. ಅವನು ಏರ... |
ಈ ಸಂಗ್ರಹದಲ್ಲಿ ಶಿಖರಪ್ರಾಯವಾದ ಕಥೆ ಅಮ್ಮ ಹೇಳಿದ ಎಂಟು ಸುಳ್ಳುಗಳು. ನಮ್ಮ ತಂದೆ ತಾಯಿ ನಮ್ಮನ್ನು ಸಾಕುವಾದ ಬಹಳ ತ್ಯಾಗ ಮಾಡಿರುತ್ತಾರೆ, ಎಷ್ಟೋ ಸುಳ್ಳು ಹೇಳಿರುತ್ತಾರೆ. ಬಡವರಾದ ತಂದೆತಾಯಿಗಳು ಮಕ್ಕಳಿಗೆ ಉಣಬಡಿಸಿ, ತಮಗೆ ಹಸಿವೆ ಇಲ್ಲ ಎಂದು ಹೇಳಿ, ಇಲ್ಲವೆ ತಮ್ಮ ಹೊಟ್ಟೆ ತುಂಬಿದೆ ಎಂದು ಹೇಳಿ ನೀರು ಕುಡಿದು ಮಲಗಿರುತ್ತಾರೆ. ಇದು ಹಲವರ ಅನುಭವಕ್ಕೆ ಬಂದ ಸಂಗತಿ. ಇಲ್ಲಿ ತಾಯಿ ಹೇಳಿದ ಎಂಟು ... |
ಏಡ್ಸ್ ವಿರುದ್ಧ ಹೋರಾಡಿದ ವೀಣಕ್ಕನ ಕತೆ, ನೂರಕ್ಕೆ 95ರಷ್ಟು ದೇಹದ ಭಾಗ ಸುಟ್ಟುಕೊಂಡ ಸ್ಪೇನದ ಹುಡುಗಿ(ಜಾಕ್ವೆಲಿನ್ ಸುಬುರಿಡೊ) ಮೋಟು ಕೈಯಿಂದ ಬರೆದಳು, ಕಾರು ನಡೆಸಿದಳು. ಈ ಕತೆ ಓದುವಾಗ ನಮ್ಮಲ್ಲಿ ಹೋರಾಟದ ಬೀಜ ಯಾರೋ ಬಿತ್ತಿದಂತಾಗುತ್ತದೆ. ಕೆಟ್ಟ ಅಮ್ಮಂದಿರಿಲ್ಲ ಜಗದೊಳಗೆ ಎಂಬ ಕತೆ ಶ್ರೀಆದಿಶಂಕರಾಚಾರ್ಯರ ಕುಪುತ್ರೋ ಜಾಯತೇ ಕಚಿದಪಿ ಕುಮಾತಾ ನ ಭವತಿ ಎಂಬ ಸಾಲನ್ನು ನೆನಪಿಗೆ ತರುತ್ತದೆ. ಕೆ... |
ಕೆಲವು ಲೇಖನಗಳನ್ನು ಇಲ್ಲಿ ಸೇರಿಸದಿದ್ದರೆ (ಜನ ಪ್ರತಿನಿಧಿಗಳಿಗೆ ಒಂದು ಬಹಿರಂಗ ಪತ್ರ) ಈ ಪುಸ್ತಕದ ಮಹತ್ವ ಕಡಿಮೆಯಾಗುತ್ತಿರಲಿಲ್ಲ. ನರಸಿಂಹಸ್ವಾಮಿಯವರ ಪ್ರಸಿದ್ಧ ಕವನ ರಾಯರು ಬಂದರು ಮಾವನ ಮನೆಗೆ'ಯನ್ನು ಆಧರಿಸಿ ಬರೆದ ಕತೆ ನಮ್ಮ ಮೇಲೆ ಪ್ರಭಾವ ಬೀರಲು ಸೋಲುತ್ತದೆ. ಓ ಹೆನ್ರಿಯ ಜಗತ್ಪ್ರಸಿದ್ಧ ಕತೆ ಗಿಫ್ಟ್ ಆಫ್ ದ ಮಾಗಿ' ಕಥೆಯನ್ನು ಆಧರಿಸಿ ಒಂದು ಕಥೆ ಬರೆದಿದ್ದಾರೆ. ಕನ್ನಡದಲ್ಲಿ ಅದು ಸಪ್... |
ಮಣಿಕಾಂತ ಅವರು ಓ ಹೆನ್ರಿಯ ಕತೆಯನ್ನೇ ಕನ್ನಡದಲ್ಲಿ ತರಬಹುದಾಗಿತ್ತು. (ಇಂಥ ಯಶಸ್ವಿ ಪ್ರಯತ್ನಗಳು ಕನ್ನಡದಲ್ಲಿ ನಡೆದಿವೆ. ಪಿ. ಲಂಕೇಶರು ದಿ ಬ್ಯೂಟಿ ಅಂಡ್ ದಿ ಬೀಸ್ಟ್ ಕತೆಯನ್ನು, ಗಿರಡ್ಡಿ ಗೋವಿಂದರಾಜರು ನೆಕ್‌ಲೇಸ್ ಎಂಬ ಕತೆಯನ್ನು ಕನ್ನಡಕ್ಕೆ ಯಶಸ್ವಿಯಾಗಿ ತಂದಿದ್ದಾರೆ.) ಒಟ್ಟಿನಲ್ಲಿ ಮಣಿಕಾಂತ ಅವರ ಪ್ರಯತ್ನ ಶ್ಲಾಘನೀಯವಾಗಿದೆ. |
ಸಣ್ಣಕಥೆ ಜೀವಿ ಕುಲಕರ್ಣಿ gv kulkarni short stories mother ಪುಸ್ತಕ ವಿಮರ್ಶೆ ar manikanth ಎಆರ್ ಮಣಿಕಾಂತ್ mv kamath ಎಂವಿ ಕಾಮತ್ |
ಯುಪಿ ಮಿತ್ರರಿಂದಲೇ ರಾಹುಲ್ ಗಾಂಧಿಗೆ ಗೇಟ್‌ಪಾಸ್! |
Bengaluru, First Published 8, Jan 2019, 11:24 AM |
ಲೋಕಸಭಾ ಚುನಾವಣೆಗೆ ಎಸ್‌ಪಿ ಹಾಗೂ ಬಿಎಸ್‌ಪಿ ಮೈತ್ರಿ? ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಮಾಯಾವತಿ ನಕಾರ? ಏಕಾಂಗಿಯಾದ್ರಾ ರಾಹುಲ್ ಹಾಗೂ ಸೋನಿಯಾ ಗಾಂಧಿ? |
ಲಕ್ನೋ (ಜ. 08): ಉತ್ತರ ಪ್ರದೇಶದಲ್ಲಿ ಕೊನೆಗೂ ಲೋಕಸಭಾ ಚುನಾವಣೆ ಮೈತ್ರಿ ಬಗ್ಗೆ ಮಾಯಾವತಿ ಅವರನ್ನು ಅಖಿಲೇಶ್ ಯಾದವ್ ಮನೆಗೇ ಹೋಗಿ ಭೇಟಿ ಮಾಡಿದ್ದು, ಎಸ್‌ಪಿ ಹಾಗೂ ಬಿಎಸ್‌ಪಿ ನಡುವೆ ಮೈತ್ರಿ ಏರ್ಪಡುವುದು ಪಕ್ಕಾ ಆಗಿದೆ. ಮಾಯಾವತಿ ಮತ್ತು ಅಖಿಲೇಶ್ ಯಾದವ್ ತಲಾ 37 ಸ್ಥಾನ ಹಂಚಿಕೊಳ್ಳಲು ನಿರ್ಧರಿಸಿದ್ದು, ಎರಡು ಸೀಟ್ ಅಜಿತ್ ಸಿಂಗ್‌ರಿಗೆ ಹಾಗೂ ಇನ್ನೆರಡು ಸೀಟುಗಳನ್ನು ಎರಡು ಸಣ್ಣ ಪಕ... |
ಆದರೆ ಯಾವುದೇ ಕಾರಣಕ್ಕೂ ಕಾಂಗ್ರೆಸ್ಸನ್ನು ಮೈತ್ರಿಯಲ್ಲಿ ಬಿಟ್ಟುಕೊಳ್ಳಲು ಒಪ್ಪದ ಮಾಯಾವತಿ, ಬೇಕಿದ್ದಲ್ಲಿ ಅಮೇಠಿ ಮತ್ತು ರಾಯ್ಬರೇಲಿ ಎರಡು ಮಾತ್ರ ಬಿಟ್ಟು ಕೊಡೋಣ ಎಂದಿದ್ದಾರೆ. ಇವು ಸೋನಿಯಾ ಮತ್ತು ರಾಹುಲ್ ಗಾಂಧಿ ಕ್ಷೇತ್ರಗಳು. ಇನ್ನು ಎಸ್‌ಪಿಗೆ ಕಾಂಗ್ರೆಸ್ ಬೇಕೇ ಬೇಕು ಎಂದು ಇದ್ದಲ್ಲಿ ಎಸ್‌ಪಿ ಕೋಟಾದಿಂದ ಸೀಟ್ ಕೊಡಿ ಎಂದು ಮಾಯಾವತಿ ಅವರು ಅಖಿಲೇಶ್‌ಗೆ ಹೇಳಿದ್ದಾರೆ. |
ಆದರೆ ಇದಕ್ಕೆ ಎಸ್‌ಪಿ ಕೂಡ ತಯಾರಿಲ್ಲ. ಹೀಗಾಗಿ ಉತ್ತರ ಪ್ರದೇಶದಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವಂಥ ಸ್ಥಿತಿಗೆ ಕಾಂಗ್ರೆಸ್ ಬಂದು ತಲುಪಿದ್ದು, ರಾಹುಲ… ಮತ್ತು ಸೋನಿಯಾ ಗಾಂಧಿ ಸ್ವತಃ ತಮ್ಮದೇ ಗೆಲುವಿಗಾಗಿ ಕೂಡ ಇಬ್ಬರು ಪ್ರಾದೇಶಿಕ ನಾಯಕರ ಎದುರು ನಿಲ್ಲುವ ಅಸಹಾಯಕತೆ ಸೃಷ್ಟಿಯಾಗಿದೆ. |
ಯುಪಿಯಲ್ಲಿ ಯಾರಿಗೆ ಲಾಭ? |
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪ್ರತ್ಯೇಕವಾಗಿ ಸ್ಪರ್ಧಿಸಿದರೆ ಬ್ರಾಹ್ಮಣ, ಬನಿಯಾ, ರಜಪೂತ ಮತಗಳನ್ನು ಒಡೆಯಬಹುದು. ಇದರಿಂದ ಬಿಜೆಪಿಗೆ ನಷ್ಟ, ನಮಗೆ ಲಾಭ ಎನ್ನುವುದು ಮಾಯಾವತಿ ಮತ್ತು ಅಖಿಲೇಶ್ ತಂತ್ರ. ಜೊತೆಗೆ ಮೈತ್ರಿಯಲ್ಲಿ ಕಾಂಗ್ರೆಸ್ಸನ್ನು ಮಜಬೂತ್ ಮಾಡುವುದು ಮಾಯಾವತಿಗೆ ಸುತರಾಂ ಇಷ್ಟವಿಲ್ಲ. |
ಇನ್ನು ಕಾಂಗ್ರೆಸ್ ಪ್ರತ್ಯೇಕವಾಗಿ ಸ್ಪರ್ಧಿಸಿದರೆ ಮುಸ್ಲಿಂ ಮತಗಳನ್ನು ಒಡೆಯಬಹುದು. ಇದರಿಂದ ಲಾಭ ಬಿಜೆಪಿಗೆ ಎನ್ನುವುದು ಅಮಿತ್ ಶಾ ಲೆಕ್ಕಾಚಾರ. ಆದರೆ ಕಾಂಗ್ರೆಸ್‌ಗಿರುವ ಚಿಂತೆ ಬೇರೆ. ಮಾಯಾವತಿ ಹಾಗೂ ಅಖಿಲೇಶ್ ಮೈತ್ರಿಯಿಂದ ಹೊರಗಿದ್ದಲ್ಲಿ ಒಟ್ಟು ಸ್ಥಾನ ಗಳಿಕೆಯಲ್ಲಿ ಹಿಂದೆ ಬೀಳುವುದರ ಜೊತೆಗೆ ಇಡೀ ದೇಶದಲ್ಲಿ ರಾಹುಲ… ಮೈತ್ರಿಯ ನಾಯಕತ್ವ ವಹಿಸುವುದರಿಂದ ವಂಚಿತರಾಗುತ್ತಾರೆ ಎನ್ನುವ ಆತ... |
ಇಜ್ಞಾನ ಡಾಟ್ ಕಾಮ್: ಇದು ಸೋಷಿಯಲ್ ಶಾಪಿಂಗ್ |
ಇ-ವ್ಯಾಪಾರದ ಹೊಸ ಅವತಾರ |
ತೊಂಬತ್ತರ ದಶಕದ ಕೊನೆಯ ವೇಳೆಗೆ ಡಾಟ್‌ಕಾಂ ಗಾಳಿ ಜೋರಾಗಿ ಬೀಸುತ್ತಿದ್ದ ಕಾಲದಲ್ಲಿ ರೂಪುತಳೆದ ಮಹತ್ವಾಕಾಂಕ್ಷಿ ಕಲ್ಪನೆ ಅಂತರಜಾಲ ವ್ಯಾಪಾರದ್ದು. ವೆಬ್‌ಸೈಟ್‌ಗಳ ಮೂಲಕವೇ ಅಕ್ಕಿ-ಬೇಳೆಯಿಂದ ಹಿಡಿದು ಟೀವಿ-ಕಂಪ್ಯೂಟರುಗಳವರೆಗೆ ಸಮಸ್ತ ವಸ್ತುಗಳ ವ್ಯಾಪಾರವನ್ನೂ ನಡೆಸುವ ಇ-ವ್ಯಾಪಾರದ ಈ ಕಲ್ಪನೆ ಅಂತರಜಾಲದ ಬಳಕೆಗೆ ಹೊಸತೊಂದು ಆಯಾಮವನ್ನೇ ಒದಗಿಸಿಕೊಟ್ಟಿತು. |
ಮನೆಯಲ್ಲಿ ಅಥವಾ ಕಚೇರಿಯಲ್ಲಿ ಗಣಕದ ಮುಂದೆ ಆರಾಮವಾಗಿ ಕುಳಿತು ನಮಗೆ ಬೇಕಾದ ವಸ್ತುಗಳನ್ನೆಲ್ಲ ಕೊಳ್ಳಬಹುದು ಎಂಬ ಆಲೋಚನೆಯೇ ಕ್ರಾಂತಿಕಾರಕವಾದದ್ದು. ಈ ಆಲೋಚನೆಯನ್ನು ಮುಂದಿಟ್ಟುಕೊಂಡು ವ್ಯಾಪಾರ ಪ್ರಾರಂಭಿಸಿದ ಅಮೆಜಾನ್‌ನಂತಹ ಸಂಸ್ಥೆಗಳು ವಿಶ್ವವಿಖ್ಯಾತವಾಗಿ ಬೆಳೆದವು; ಅನೇಕ ಭಾರತೀಯ ಸಂಸ್ಥೆಗಳು ಕೂಡ ತಕ್ಕಮಟ್ಟಿಗೆ ಯಶಸ್ವಿಯಾದವು. |
ಈ ಶತಮಾನದ ಪ್ರಾರಂಭದಲ್ಲಿ ಡಾಟ್ ಕಾಮ್ ಭರಾಟೆಯೆಲ್ಲ ಠುಸ್ಸೆಂದಾಗ ಇ-ವ್ಯಾಪಾರಕ್ಕೂ ಭಾರೀ ಹೊಡೆತವೇ ಬಿದ್ದಿತ್ತು. ಆದರೆ ಈಗ, ಹೆಚ್ಚೂಕಡಿಮೆ ಒಂದು ದಶಕದ ನಂತರ, ಇ-ವ್ಯಾಪಾರ ಕ್ಷೇತ್ರ ಭಾರತದಂತಹ ದೇಶದಲ್ಲೂ ಜನಪ್ರಿಯತೆ ಕಾಣುತ್ತಿದೆ. ಅಷ್ಟೇ ಅಲ್ಲ, ಕಾಲಕ್ಕೆ ತಕ್ಕಂತಹ ಬದಲಾವಣೆಗಳನ್ನೂ ಕಂಡಿದೆ. |
ಇಂತಹ ಬದಲಾವಣೆಗಳಲ್ಲಿ ಮುಖ್ಯವಾದದ್ದು ಸೋಷಿಯಲ್ ಶಾಪಿಂಗ್‌ನ ಪರಿಕಲ್ಪನೆ. |
ಶಾಪಿಂಗ್ ಲೋಕದ ಸಮಾಜವಾದ |
ಇ-ವ್ಯಾಪಾರ ಹಾಗೂ ಸಾಮಾಜಿಕ ಜಾಲಗಳ (ಸೋಷಿಯಲ್ ನೆಟ್‌ವರ್ಕ್) ಪರಿಕಲ್ಪನೆಯನ್ನು ಒಂದುಗೂಡಿಸುವ ಉದ್ದೇಶ ಸೋಷಿಯಲ್ ಶಾಪಿಂಗ್‌ನದು. ಯಾವುದೇ ವಸ್ತುವನ್ನೇ ಆದರೂ ಒಟ್ಟಾಗಿ ಕೊಂಡಾಗ ಅದರ ಮಾರಾಟ ಬೆಲೆ ಕಡಿಮೆಯಾಗುತ್ತದೆ ಎನ್ನುವ ಸರಳ ತತ್ತ್ವವನ್ನು ಈ ಪರಿಕಲ್ಪನೆ ಬಳಸಿಕೊಳ್ಳುತ್ತದೆ. ಊಟ ತಿಂಡಿ, ಪುಸ್ತಕ-ಸಿಡಿ-ಡಿವಿಡಿಗಳು, ಇಲೆಕ್ಟ್ರಾನಿಕ್ ಉತ್ಪನ್ನಗಳು, ಆರೋಗ್ಯಕ್ಕೆ ಸಂಬಂಧಪಟ್ಟ ಸೇವೆಗಳು, ಪ್ರವಾಸ... |
ಮಾರಾಟಗಾರರೊಡನೆ ವ್ಯವಹರಿಸಿ ಅವರ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಮಾರುವಂತೆ ಮನವೊಲಿಸುವುದು, ಹಾಗೆ ಕಡಿಮೆ ಬೆಲೆಗೆ ಮಾರಾಟಕ್ಕೆ ಬರುವ ವಸ್ತು ಅಥವಾ ಸೇವೆಗಳಿಗೆ ಪ್ರಚಾರ ಕೊಟ್ಟು ಗ್ರಾಹಕರಿಗೆ ಮಾರುವುದು, ಹಾಗೂ ಅಷ್ಟು ಮಾಡಿದ್ದಕ್ಕೆ ಒಂದಷ್ಟು ಕಮಿಷನ್ ಸಂಪಾದಿಸಿಕೊಳ್ಳುವುದು - ಇದಿಷ್ಟು ಸೋಷಿಯಲ್ ಶಾಪಿಂಗ್ ತಾಣಗಳ ಕೆಲಸ. ನಿರ್ದಿಷ್ಟ ಸಂಖ್ಯೆಯ ಗ್ರಾಹಕರು ದೊರೆತರಷ್ಟೆ ಉತ್ಪನ್ನವನ್ನು ಕಡಿಮೆ ಬ... |
ಏರುತ್ತಿರುವ ಜನಪ್ರಿಯತೆ |
ಪರಿಚಯವಾದ ಕೆಲವೇ ಸಮಯದಲ್ಲಿ ಸೋಷಿಯಲ್ ಶಾಪಿಂಗ್ ಪರಿಕಲ್ಪನೆ ಭಾರತದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡಿದೆ. ತಂತ್ರಜ್ಞಾನ ಕ್ಷೇತ್ರದ ಹೆಸರಾಂತ ಪತ್ರಿಕೆಯೊಂದು ನಡೆಸಿರುವ ಸಮೀಕ್ಷೆಯ ಪ್ರಕಾರ ಭಾರತದ ಅತ್ಯಂತ ಜನಪ್ರಿಯ ಇ-ವ್ಯಾಪಾರ ತಾಣಗಳ ಪಟ್ಟಿಯಲ್ಲಿ ಅನೇಕ ಸೋಷಿಯಲ್ ಶಾಪಿಂಗ್ ತಾಣಗಳು ಸ್ಥಾನಪಡೆದಿವೆ. |
ಈ ಜನಪ್ರಿಯತೆಯಿಂದ ಪ್ರಭಾವಿತರಾಗಿರುವ ಇತರ ಇ-ವ್ಯಾಪಾರ ತಾಣಗಳೂ ಸೋಷಿಯಲ್ ಶಾಪಿಂಗ್‌ನತ್ತ ಮುಖಮಾಡಿವೆ. ವಿಶ್ವವಿಖ್ಯಾತ ಇ-ಬೇ ತಾಣದ ಭಾರತೀಯ ಆವೃತ್ತಿಯಲ್ಲಿ ಸೋಷಿಯಲ್ ಶಾಪಿಂಗ್ ವಿಭಾಗ ಇತ್ತೀಚೆಗಷ್ಟೆ ಪ್ರಾರಂಭವಾಗಿದೆ. ಸೋಸಸ್ತಾ ಎಂಬ ಸಂಸ್ಥೆಯನ್ನು ಕೊಳ್ಳುವುದರ ಮೂಲಕ ಅಮೆರಿಕಾದ ಹೆಸರಾಂತ ಸೋಷಿಯಲ್ ಶಾಪಿಂಗ್ ತಾಣ ಗ್ರೂಪ್‌ಆನ್ ಭಾರತಕ್ಕೂ ಕಾಲಿರಿಸಿದೆ. |
ಒಟ್ಟಿನಲ್ಲಿ ಸೋಷಿಯಲ್ ಶಾಪಿಂಗ್ ಗಾಳಿ ಇದೀಗ ನಮ್ಮ ದೇಶದಲ್ಲಿ ಸಾಕಷ್ಟು ಬಲವಾಗಿಯೇ ಬೀಸುತ್ತಿದೆ. ಮುಂದಿನ ಬೆಳವಣಿಗೆಗಳನ್ನು ಕಾದುನೋಡುವುದಷ್ಟೆ ನಮ್ಮ ಕೆಲಸ! |
ಮಾರ್ಚ್ ೧, ೨೦೧೧ರ ಉದಯವಾಣಿಯಲ್ಲಿ 'ಸೋಷಿಯಲ್ ಶಾಪಿಂಗ್ ಕುರಿತು..' ಎಂಬ ಶೀರ್ಷಿಕೆಯೊಡನೆ ಪ್ರಕಟವಾದ ಲೇಖನ. ಇದು ನನ್ನ 'ವಿಜ್ಞಾಪನೆ' ಅಂಕಣದ ಇಪ್ಪತ್ತನೇ ಬರೆಹವೂ ಹೌದು. |
ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿ: ಕರ್ನಾಟಕ–ಛತ್ತೀಸಗಡ ಸೆಮಿ ಕದನ | Prajavani |
ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿ: ಕರ್ನಾಟಕ–ಛತ್ತೀಸಗಡ ಸೆಮಿ ಕದನ |
ತಮಿಳುನಾಡು ಸೆಮಿಗೆ; ಮುಂಬೈ, ಪಂಜಾಬ್‌ಗೆ ನಿರಾಸೆ |
Published: 22 ಅಕ್ಟೋಬರ್ 2019, 00:37 IST |
Updated: 22 ಅಕ್ಟೋಬರ್ 2019, 00:37 IST |
ಬೆಂಗಳೂರು: ಆತಿಥೇಯ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ನಾಲ್ಕರ ಘಟ್ಟದ ಪಂದ್ಯದಲ್ಲಿ ಛತ್ತೀಸ್‌ಗಢ ತಂಡವನ್ನು ಎದುರಿಸಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಪಂದ್ಯ ನಡೆಯಲಿದೆ. ಮತ್ತೊಂದು ಪಂದ್ಯದಲ್ಲಿ ತಮಿಳುನಾಡು ಮತ್ತು ಗುಜರಾತ್ ತಂಡಗಳು ಸೆಣಸಲಿವೆ. |
ಸೋಮವಾರ ನಡೆದ ಮುಂಬೈ–ಛತ್ತೀಸ್‌ಗಢ, ತಮಿಳುನಾಡು–ಪಂಜಾಬ್ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯಗಳಿಗೆ ಮಳೆ ಅಡ್ಡಿಯಾಯಿತು. ಹೀಗಾಗಿ ಲೀಗ್ ಹಂತದಲ್ಲಿ ಹೆಚ್ಚು ಜಯ ಗಳಿಸಿದ ಛತ್ತೀಸಗಡ ಮತ್ತು ತಮಿಳುನಾಡು ತಂಡಗಳಿಗೆ ಸೆಮಿಫೈನಲ್ ಹಾದಿ ಸುಗಮವಾಯಿತು. |
ಆಲೂರು 2ನೇ ಮೈದಾನದಲ್ಲಿ ನಡೆದ ಪಂದ್ಯವನ್ನು ಮಳೆಯ ಕಾರಣ 45.4 ಓವರ್‌ಗಳಿಗೂ ಆಲೂರು 1ನೇ ಮೈದಾನದಲ್ಲಿ ನಡೆದ ಪಂದ್ಯವನ್ನು 39 ಓವರ್‌ಗಳಿಗೂ ನಿಗದಿ ಸೀಮಿತಗೊಳಿಸಲಾಗಿತ್ತು. 2ನೇ ಮೈದಾನದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಛತ್ತೀಸ್‌ಗಡ 6 ವಿಕೆಟ್‌ಗಳಿಗೆ 190 ರನ್ ಗಳಿಸಿತ್ತು. ಮುಂಬೈ ಇನಿಂಗ್ಸ್ ಆರಂಭಿಸುವ ಮುನ್ನ ಮತ್ತೆ ಮಳೆ ಕಾಡಿತು. ಹೀಗಾಗಿ 40 ಓವರ್‌ಗಳಲ್ಲಿ 192 ರನ್ ಗಳಿಸುವ ಗುರಿ ನ... |
ಛತ್ತೀಸಗಢ ಆರಂಭದಲ್ಲಿ ಬೇಗನೇ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೆ ನಾಯಕ ಹರಪ್ರೀತ್ ಸಿಂಗ್ (83; 108 ಎಸೆತ, 4 ಬೌಂಡರಿ, 4 ಸಿಕ್ಸರ್) ಮತ್ತು ಎ.ಎನ್. ಖಾರೆ (ಅಜೇಯ 59; 87 ಎ, 4 ಬೌಂಡರಿ, 1 ಸಿ) ಅವರ ಅರ್ಧಶತಕಗಳು ತಂಡಕ್ಕೆ ಬಲ ತುಂಬಿದವು. |
ತಮಿಳುನಾಡು ಕೈ ಹಿಡಿದ ವರುಣ: ಪಂಜಾಬ್ ವಿರುದ್ಧ ಟಾಸ್ ಸೋತ ತಮಿಳುನಾಡು ಮೊದಲು ಬ್ಯಾಟಿಂಗ್ ಮಾಡಿ 39 ಓವರ್‌ಗಳಲ್ಲಿ 6ಕ್ಕೆ 174 ರನ್ ಗಳಿಸಿತ್ತು. ಪಂಜಾಬ್‌ಗೆ 195 ರನ್‌ಗಳ ಗೆಲುವಿನ ಗುರಿ ನಿಗದಿ ಮಾಡಲಾಗಿತ್ತು. ಆದರೆ ತಂಡ 12.2 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 52 ರನ್ ಗಳಿಸಿದ್ದಾಗ ಮಳೆಯಿಂದಾಗಿ ಪಂದ್ಯವನ್ನು ರದ್ದುಗೊಳಿಸಲಾಯಿತು. |
ತಮಿಳುನಾಡು ತಂಡ ಆರಂಭದಲ್ಲಿ ಸಂಕಷ್ಟ ಅನುಭವಿಸಿತ್ತು. ಬಾಬಾ ಅಪರಾಜಿತ್ (56; 76 ಎಸೆತ, 2 ಬೌಂಡರಿ, 2 ಸಿಕ್ಸರ್) ಮತ್ತು ವಾಷಿಂಗ್ಟನ್ ಸುಂದರ್ (35; 39 ಎಸೆತ, 3 ಬೌಂಡರಿ) ಅವರ ಕೆಚ್ಚೆದೆಯ ಆಟದಿಂದ ತಂಡ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು. |
ಸಂಕ್ಷಿಪ್ತ ಸ್ಕೋರು: ಛತ್ತೀಸಗಡ: 45.4 ಓವರ್‌ಗಳಲ್ಲಿ 6ಕ್ಕೆ 190 (ಅಶುತೋಷ್ ಸಿಂಗ್ 27, ಹರಪ್ರೀತ್ ಸಿಂಗ್ 84, ಎ.ಎನ್.ಖಾರೆ 59; ಧವಳ್ ಕುಲಕರ್ಣಿ 9ಕ್ಕೆ2); ಮುಂಬೈ: 11.3 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 95 (ಯಶಸ್ವಿ ಜೈಸ್ವಾಲ್ 60, ಆದಿತ್ಯ ತರೆ 31). ಫಲಿತಾಂಶ: ಪಂದ್ಯ ರದ್ದು; ಹೆಚ್ಚು ಪಂದ್ಯಗಳನ್ನು ಗೆದ್ದ ಆಧಾರದಲ್ಲಿ ಛತ್ತೀಸಗಡ ಸೆಮಿಫೈನಲ್‌ಗೆ ಪ್ರವೇಶ. |
ತಮಿಳುನಾಡು: 39 ಓವರ್‌ಗಳಲ್ಲಿ 6ಕ್ಕೆ 174 (ಬಾಬಾ ಅಪರಾಜಿತ್ 56, ವಾಷಿಂಗ್ಟನ್ ಸುಂದರ್ 35; ಮಯಂಕ್ ಮಾರ್ಕಂಡೆ 26ಕ್ಕೆ2, ಗುರುಕೀರತ್ ಸಿಂಗ 25ಕ್ಕೆ2); ಪಂಜಾಬ್: 12.2 ಓವರ್‌ಗಳಲ್ಲಿ 2ಕ್ಕೆ 52 (ಸನ್ವೀರ್ 21). ಫಲಿತಾಂಶ: ಪಂದ್ಯ ರದ್ದು; ಹೆಚ್ಚು ಪಂದ್ಯಗಳನ್ನು ಗೆದ್ದ ಆಧಾರದಲ್ಲಿ ತಮಿಳುನಾಡು ಸೆಮಿಫೈನಲ್‌ಗೆ ಪ್ರವೇಶ. |
ಬೈಕಂಪಾಡಿ ಕೈಗಾರಿಕಾ ವಲಯ ರಸ್ತೆ ಬಗ್ಗೆ ಯಾಕಿಷ್ಟು ನಿರ್ಲಕ್ಷ | Karavali Ale / ಕರಾವಳಿ ಅಲೆ | ಕರಾವಳಿಯ ಪರ್ಯಾಯ ಮಾಧ್ಯಮ |
Home ಸ್ಪಂದನ ಬೈಕಂಪಾಡಿ ಕೈಗಾರಿಕಾ ವಲಯ ರಸ್ತೆ ಬಗ್ಗೆ ಯಾಕಿಷ್ಟು ನಿರ್ಲಕ್ಷ |
ಬೈಕಂಪಾಡಿ ಕೈಗಾರಿಕಾ ವಲಯ ರಸ್ತೆ ಬಗ್ಗೆ ಯಾಕಿಷ್ಟು ನಿರ್ಲಕ್ಷ |
ಮಂಗಳೂರಿನಲ್ಲಿರುವ ಪ್ರಮುಖ ಇಂಡಸ್ಟ್ರಿ ವಲಯವೆಂದರೆ ಬೈಕಂಪಾಡಿ ಕೈಗಾರಿಕಾ ವಲಯ. ಆದರೆ ಆ ರಸ್ತೆ ನೋಡಿದರೆ ಹಳ್ಳಿಗಾಡಿನ ಒಳರಸ್ತೆಗಳೂ ಅದಕ್ಕಿಂತ ಉತ್ತಮವಾಗಿರುತ್ತದೆ. ಸಾವಿರಾರು ಜನರು ಪ್ರತಿನಿತ್ಯ ಉಪಯೋಗಿಸುವ ಈ ರಸ್ತೆ ಜನಪ್ರತಿನಿಧಿಗಳಿಗೆ ಮುಖ್ಯವೇ ಅಲ್ಲವಾಗಿದೆ. |
ರಾಷ್ಟ್ರೀಯ ಹೆದ್ದಾರಿಯಿಂದ ದೀಪಕ್ ಪೆಟ್ರೋಲ್ ಎದುರುಗಡೆಯಿಂದ ಇಂಡಸ್ಟ್ರಿ ವಲಯಕ್ಕೆ ಹೊಗುವ ರಸ್ತೆ ಕೆಟ್ಟು ವರ್ಷಗಳೇ ಕಳೆದವು. ಇನ್ನು ಪೋಸ್ಟ್ ಆಫೀಸ್, ವಿಜಯಾ ಬ್ಯಾಂಕ್ ಕಡೆಯಿಂದ ಇಂಡಸ್ಟ್ರಿ ವಲಯಕ್ಕೆ ಹೋಗುವ ರಸ್ತೆಯಂತೂ ಕೇಳುವುದೇ ಬೇಡ. ಆಶ್ಚರ್ಯವೆಂದರೆ ಕೆನರಾ ಸಣ್ಣ ಕೈಗಾರಿಕಾ ಆಸೋಸಿಯೇಷನ್ ಆಫೀಸ್ ಎದುರುಗಡೆಯೇ ರಸ್ತೆ ಎಕ್ಕುಟ್ಟಿಹೋಗಿದೆ. ಆದರೂ ಅದರ ಬಗ್ಗೆ ಕೇಳುವವರೇ ಇಲ್ಲವಾಗಿದೆ |
ಕಳೆದ ವಾರ ನನ್ನ ಮಗನನ್ನು ಕೂರಿಸಿಕೊಂಡು ಸ್ಕೂಟರಿನಲ್ಲಿ ಹೋಗುವಾಗ ಎದುರುಗಡೆ ಲೋಡು ತುಂಬಿದ ಲಾರಿ ಬಂತೆಂದು ಸ್ವಲ್ಪ ಸೈಡಿಗೆ ಹೋಗಲು ಪ್ರಯತ್ನಿಸಿದಾಗ ಸ್ಕೂಟರ್ ಸ್ಕಿಡ್ಡಾಗಿ ನಾನು ಮಗ ಇಬ್ಬರೂ ಕೆಳಗುರುಳಿದೆವು. ದೇವರ ದಯೆಯಿಂದ ಚಿಕ್ಕ ಪುಟ್ಟ ಗಾಯಗಳಾದರೂ ಪ್ರಾಣಾಪಾಯದಿಂದ ಪಾರಾದೆವು |
ಚಿಂತೆಯ ವಿಷಯೆವೆಂದರೆ ಈಗಲೇ ಹೀಗಾದರೆ ಇನ್ನು ಮಳೆಗಾಲದಲ್ಲಿ ಆ ರಸ್ತೆಯಲ್ಲಿ ಹೋಗುವುದೇ ದುಸ್ತರ. ಹೊಂಡ ಯಾವುದು ರಸ್ತೆ ಯಾವುದು, ಎಂದು ಗೊತ್ತಾಗದೇ ಗಾಡಿ ಹೊಂಡಕ್ಕಿಳಿದರೆ ಸ್ಕೂಟರೇನು ಸಣ್ಣ ಕಾರೂ ಪಲ್ಟಿ ಹೊಡೆಯುವುದು ಗ್ಯಾರಂಟಿ. ಕೂಡಲೇ ಸಂಬಂಧಪಟ್ಟವರು ಆದ್ಯತೆ ಮೇರೆಗೆ ರಸ್ತೆ ದುರಸ್ತಿ ಮಾಡಬೇಕೆನ್ನುವುದು ಕಳಕಳಿಯ ವಿನಂತಿ |
ಅರವಿಂದ ಚೊಕ್ಕಾಡಿ ವಿಶ್ಲೇಷಣೆ: ಶಿಕ್ಷಣ ನೀತಿ ಮತ್ತು ವಾಸ್ತವದ ಅರಿವು | Prajavani |
Education Policy and Awareness of Reality |
ತಾತ್ವಿಕವಾಗಿ ಮಹತ್ವದ್ದಾಗಿರುವ ಈ ನೀತಿಯನ್ನು ಕ್ರಿಯೆಗೆ ಇಳಿಸಲು ನಮ್ಮ ಸಿದ್ಧತೆಗಳೇನು? |
ಅರವಿಂದ ಚೊಕ್ಕಾಡಿ Updated: 15 ಸೆಪ್ಟೆಂಬರ್ 2020, 01:00 IST |
ನೂತನ ಶಿಕ್ಷಣ ನೀತಿ ಜಾರಿಗೆ ಬರುವ ಸಂದರ್ಭವು ಜಗತ್ತಿನ ಆರ್ಥಿಕತೆಯೇ ಹೊರಳು ದಾರಿಯಲ್ಲಿ ಮಹತ್ವದ ತಿರುವು ಪಡೆಯುವ ಹಂತದಲ್ಲಿದೆ. ಆ ಹಂತ ಬೇರೆ ಯಾವುದೂ ಅಲ್ಲ; ಭವಿಷ್ಯದ ಬದುಕು ಜಾತಿ, ಮತ-ಧರ್ಮ, ಜನಾಂಗ, ಭಾಷೆ ಈ ಯಾವುದೂ ಆಗಿರುವುದಿಲ್ಲ. ದಕ್ಷತೆ ಇದ್ದವನು ಯಶಸ್ಸು ಪಡೆಯಲಿದ್ದಾನೆ ಎನ್ನುವುದೇ ಆಗಿರುತ್ತದೆ. ಪ್ರತಿಭೆ ಮತ್ತು ಪರಿಶ್ರಮ ಮಾತ್ರವೇ ಮುಖ್ಯವಾಗುತ್ತದೆ. ಏಕೆಂದರೆ ಪ್ರತಿಭೆ ಮತ್ತು ಪ... |
'ಉತ್ತೀರ್ಣಗೊಳ್ಳುವುದು- ಉತ್ತೀರ್ಣಗೊಳಿಸುವುದು' ಈ ರೂಪದ ಚರ್ಚೆಗಳು ಚರ್ಚೆಗಳಾಗಿಯೇ ಉಳಿಯುತ್ತವೆ. ಗರಿಷ್ಠ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಕೂಡ ಆ ಅಂಕಗಳ ಕಾರಣಕ್ಕಾಗಿ ಇಡೀ ಜೀವನದಲ್ಲಿ ಪ್ರಸ್ತುತರಾಗಿ ಉಳಿಯಲಾರರು. ಅವರ ಕಾರ್ಯದಕ್ಷತೆ ಏನು ಎನ್ನುವುದಷ್ಟೇ ಮಹತ್ವವನ್ನು ಪಡೆಯುತ್ತದೆ. ಆದ್ದರಿಂದ ಹೊರಳು ದಾರಿಯಲ್ಲಿ ಸಾಗಲಿರುವ ಜಗತ್ತಿನಲ್ಲಿ ತನ್ನ ಮಹತ್ವವನ್ನು ಉಳಿಸಿಕೊಳ್ಳುವಂತೆ ವಿದ್ಯಾರ... |
ನೂತನ ಶಿಕ್ಷಣ ನೀತಿಗೆ ತಾತ್ವಿಕ ಮಹತ್ವ ಬಹಳವಿದೆ. ಆದರೆ ತಾತ್ವಿಕವಾಗಿ ಮಹತ್ವದ್ದಾದುದನ್ನು ವಾಸ್ತವೀಕರಣ |
ಗೊಳಿಸಲು ನಮ್ಮ ಬಳಿ ಇರುವ ಸಿದ್ಧತೆಗಳೇನು ಎನ್ನುವ ಚರ್ಚೆ ಪ್ರಸ್ತುತವಾಗಿದೆ. 1986ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದಾಗ ಸಮಾಜ ಈಗಿನಷ್ಟು ಸಂಕೀರ್ಣವಾಗಿರಲಿಲ್ಲ. ಶೈಕ್ಷಣಿಕ ರಚನೆ ಕೂಡ ಈಗಿರುವುದಕ್ಕಿಂತ ಸರಳವಿತ್ತು. ಏನೂ ಇಲ್ಲದಿರುವಲ್ಲಿ ಹೊಸದನ್ನು ಕಟ್ಟಿದಷ್ಟು ಸುಲಭವಾಗಿ, ಜಟಿಲವಾದದ್ದನ್ನು ಸರಿಪಡಿಸಿಕೊಂಡು ಹೊಸದನ್ನು ಅಳವಡಿಸಲು ಆಗುವುದಿಲ್ಲ. |
ವರ್ತಮಾನದ ಶಿಕ್ಷಣ ತುಂಬ ಜಟಿಲವಾದ ರಚನೆಯಾಗಿ ಮಾರ್ಪಟ್ಟಿದೆ. 'ಎಲ್ಲರಿಗೂ ಶಿಕ್ಷಣ- ದುರ್ಬಲರಿಗೇ ಶಿಕ್ಷಣ- ಪ್ರತಿಭಾವಂತರಿಗಾಗಿ ಶಿಕ್ಷಣ' ಎಂಬಿತ್ಯಾದಿ ಘೋಷಣೆಗಳು ಶಿಕ್ಷಣದ ಜಟಿಲತೆಯ ಸಾಂಕೇತಿಕ ರೂಪಗಳಾಗಿವೆ. ಎಲ್ಲರಿಗೂ ಶಿಕ್ಷಣ ಎಂದ ಮೇಲೆ ಅಲ್ಲಿ ದುರ್ಬಲರು ಮತ್ತು ಪ್ರತಿಭಾವಂತರನ್ನು ಪ್ರತ್ಯೇಕವಾಗಿ ಗುರುತಿಸುವ ಪ್ರಶ್ನೆ ಉದ್ಭವಿಸುವುದಿಲ್ಲ. ದುರ್ಬಲರಿಗೇ ಶಿಕ್ಷಣ ಎನ್ನುವುದು ಆದ್ಯತೆಯಾದರೆ ... |
ಉದಾಹರಣೆಯಾಗಿ ಹೇಳಿದ ರೀತಿಯ ವಿಚಾರಗಳು ಬಹಳ ಇವೆ. ಮೂಲಭೂತವಾಗಿ ನಮ್ಮ ಧ್ಯೇಯದ ಬಗ್ಗೆ ಸ್ಪಷ್ಟತೆ ಅಗತ್ಯವಾಗಿದೆ. ಇದು ಯಾಕೆ ಅಗತ್ಯ? ನೂತನ ಶಿಕ್ಷಣ ನೀತಿಯು ಶಿಕ್ಷಣ ಸಂಸ್ಥೆಯ ಮೌಲ್ಯಮಾಪನದ ಬಗ್ಗೆ ಹೇಳುತ್ತದೆ. ಮೌಲ್ಯಮಾಪನಕ್ಕೆ ರೂಪಿಸುವ ಮಾನದಂಡಗಳ ಸಿದ್ಧತೆ ಬೇಕಾಗುತ್ತದೆ. ಏಕೆಂದರೆ, ಶೇಕಡ 80ಕ್ಕಿಂತ ಹೆಚ್ಚು ಅಂಕ ಗಳಿಸಿದವರನ್ನೇ ತೆಗೆದುಕೊಳ್ಳುವ ಶಾಲೆಗಳಿಗೂ ಶೇ 35ರಿಂದ 55ರಷ್ಟು ಅಂಕ ಪಡೆ... |
ಜಾಗತೀಕರಣದ ತರುವಾಯ ನಡೆದ ಶೈಕ್ಷಣಿಕ ಬೆಳವಣಿಗೆಗಳು ಬಹುಮಟ್ಟಿಗೆ ಶಾಲಾ ಪದ್ಧತಿಯನ್ನು ವರ್ಗ ಆಧಾರಿತವಾಗಿ ಮರು ನಿರೂಪಿಸಿವೆ. ಇದರಿಂದ ಆಗುವ ಶೈಕ್ಷಣಿಕ ಪರಿಣಾಮವು ಸಾಮಾಜಿಕ ಸಂಬಂಧಗಳು ಹಾಗೂ ಸೃಜನಶೀಲತೆಯ ದುರ್ಬಲೀಕರಣ. ಶಾಲಾ ಪದ್ಧತಿಯಲ್ಲಿ 'ವರ್ಗ'ದ ಪರಿಕಲ್ಪನೆ ಬಂದಾಗ ಸಮಾಜದ ಎಲ್ಲ ವರ್ಗಗಳ ಮಕ್ಕಳು ಒಡನಾಡಿಗಳಾಗಲು ಅವಕಾಶ ಇರುವುದಿಲ್ಲ. ಆಗ ಸಮಾಜದ ವಿವಿಧ ವರ್ಗಗಳೊಂದಿಗಿನ ಸಂಬಂಧ ಮಕ್ಕಳಲ್ಲಿ ... |
ಶಾಲೆಗಳ ಮೂಲ ಸೌಕರ್ಯಗಳಲ್ಲಿಯೂ ನಮ್ಮಲ್ಲಿ ಬಹಳ ವ್ಯತ್ಯಾಸಗಳಿವೆ. ಕಲಿಕಾ ಪ್ರಕ್ರಿಯೆಯ ಮೌಲ್ಯಮಾಪನಕ್ಕೆ ಹೊರಟಾಗ ಬಹುಮಟ್ಟಿಗೆ ಸಮಾನವಾದ ಮೂಲ ಸೌಕರ್ಯಗಳನ್ನು ಒದಗಿಸಬೇಕಾಗುತ್ತದೆ. ಉದಾಹರಣೆಗೆ, ಒಂದು ವ್ಯವಸ್ಥಿತ ಪ್ರಯೋಗಾಲಯವಿದ್ದು, ಆ ಪ್ರಯೋಗಾಲಯವು ಸಮರ್ಪಕವಾಗಿ ಬಳಕೆಯೂ ಆದಾಗ ಉಂಟಾಗುವ ಕಲಿಕಾ ಪರಿಣಾಮಕ್ಕೂ ಪ್ರಯೋಗಾಲಯವಿಲ್ಲದೆ ಅಥವಾ ಇದ್ದರೂ ಬಳಸಲು ಸಾಧ್ಯವಾಗದೆ ಇರುವಲ್ಲಿ ಉಂಟಾಗುವ ಕಲಿಕಾ ... |
ಶಿಕ್ಷಕರ ಗುಣಮಟ್ಟದ ಸುಧಾರಣೆಯ ಅನೇಕ ಸಾರ್ಥಕ ಕಾರ್ಯಕ್ರಮಗಳು ಶಿಕ್ಷಕರ ವಿಷಯಜ್ಞಾನವನ್ನು ಪರೀಕ್ಷಿಸುತ್ತಾ ಬಂದಿವೆ. ಇದು ಶಿಕ್ಷಕರ ಅರ್ಹತೆಯ ಒಂದು ಭಾಗವಷ್ಟೇ ಆಯಿತು. ಆದರೆ ಶಿಕ್ಷಕರಿಗೆ ವಿದ್ಯಾರ್ಥಿಗಳ ಬಗ್ಗೆ ಇರುವ ಬದ್ಧತೆ, ಶಿಕ್ಷಕರಲ್ಲಿನ ಜೀವನ ಮೌಲ್ಯಗಳ ಪ್ರಜ್ಞೆ ಮತ್ತು ಬದ್ಧತೆ, ಶಿಕ್ಷಕರ ವರ್ತನೆ ಮತ್ತು ನಡವಳಿಕೆಯಂತಹ ಸಂಗತಿಗಳು ವಿಷಯ ತಜ್ಞತೆಗಿಂತಲೂ ಹೆಚ್ಚು ಶೈಕ್ಷಣಿಕ ಮಹತ್ವವನ್ನು ... |
ರಾಜ್ಯ ಸರ್ಕಾರಿ, ಕೇಂದ್ರ ಸರ್ಕಾರಿ, ಅನುದಾನಿತ, ಅನುದಾನರಹಿತ ಮುಂತಾದ ಬಹುಕೋನೀಯ ಶೈಕ್ಷಣಿಕ ಘಟಕಗಳಲ್ಲಿ ಕೆಲಸ ಮಾಡುವ ಶಿಕ್ಷಕರ ನಿಯಂತ್ರಣಾಧಿಕಾರವೂ ಬೇರೆ ಬೇರೆ ಸನ್ನಿವೇಶದಲ್ಲಿ ಬೇರೆ ಬೇರೆಯಾಗಿರುತ್ತದೆ. ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುವ ಶಿಕ್ಷಕರು ಮತ್ತು ರಾಜ್ಯ ಸರ್ಕಾರದ ಸಿಬ್ಬಂದಿಯಾಗಿರುವ ಶಿಕ್ಷಕರು ಯಾವ ಸಾಮಾನ್ಯ ಧೋರಣೆಯ ಲಯದಲ್ಲಿ ಒಂದಾಗಬಲ್ಲರು ಎಂಬುದನ್ನು ಕಂಡುಕೊಳ್ಳದೆ, ಸಾರ್ವತ... |
ನೂತನ ನೀತಿಯ ಅತ್ಯಂತ ಅಭಿನಂದನಾರ್ಹ ವಿಷಯವೆಂದರೆ, ಶಿಕ್ಷಕರನ್ನು ಬೋಧನೇತರ ಚಟುವಟಿಕೆಗೆ ತೊಡಗಿಸುವುದನ್ನು ನಿಲ್ಲಿಸಬೇಕೆಂದು ಹೇಳಿರುವುದು. ಸರ್ವ ಶಿಕ್ಷಣ ಅಭಿಯಾನ ಜಾರಿಯಾದ ನಂತರ ಹೆಚ್ಚಿದ ಶಿಕ್ಷಕರ ಕಾರ್ಯಒತ್ತಡವನ್ನು ಪರಿಗಣಿಸಿದ ಆ ನಂತರದ ಎಲ್ಲ ಶೈಕ್ಷಣಿಕ ವರದಿಗಳೂ ಶಿಕ್ಷಕರನ್ನು ಬೋಧನೇತರ ಕಾರ್ಯಗಳಿಗೆ ತೊಡಗಿಸಬಾರದು ಎಂಬ ಅಭಿನಂದನಾರ್ಹ ವಿಷಯವನ್ನೇ ಹೇಳಿವೆ. ಆದರೆ ವಾಸ್ತವದಲ್ಲಿ ಸಾಧ್ಯ ಆ... |
ಸಂಕೀರ್ಣಗಳನ್ನು ರಚಿಸಬೇಕೆಂದು ಹೇಳಿದೆ. ಶಾಲಾ ಸಂಕೀರ್ಣಗಳಾದಾಗ ಒಂದು ಶಾಲೆಯಲ್ಲಿ ಶಿಕ್ಷಕರ ಕೊರತೆಯಾದಾಗ ಮತ್ತೊಂದು ಶಾಲೆಯಿಂದ ಶಿಕ್ಷಕರನ್ನು ಕರೆಸಿಕೊಳ್ಳಲು ಅವಕಾಶವಿದೆ. |
ಅಂದರೆ ನೂತನ ಶಿಕ್ಷಣ ನೀತಿ ತುಂಬಾ ಚೆನ್ನಾಗಿದೆ. ಅದು ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದರೆ ಭಾರತೀಯ ಶಿಕ್ಷಣ ವ್ಯವಸ್ಥೆಯೇ ಜಾಗತಿಕ ಗುರುತಿಸುವಿಕೆಯನ್ನು ಪಡೆಯಬಲ್ಲಷ್ಟು ನೀತಿಯು ತಾತ್ವಿಕವಾಗಿ ಸುಂದರವಾಗಿದೆ. ಆದರೆ ಅದು ವಾಸ್ತವಿಕವಾಗಬೇಕಾದರೆ |
ವಾಸ್ತವದ ಅರಿವಿನೊಂದಿಗೆ ಸೂಕ್ತ ಸಿದ್ಧತೆಗಳು ಆಗಬೇಕಾಗಿವೆ. ಈ ನೆಲೆಯಲ್ಲಿ ಹೆಚ್ಚು ಚರ್ಚೆ; ಚರ್ಚೆಯ ನಂತರ ಸಿದ್ಧತೆಯ ಅಗತ್ಯವಿದೆ. |
'); $('#div-gpt-ad-761842-2').append(' |
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(funct... |
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-761842').addClass('inartprocessed'); } else $('#in-article-761842').hide(); } else { _taboola.push({article:'auto', url:'https://www.prajavani.net/op-ed/analysis/education-policy-an... |
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-761842 .field-name-body .field-items div.field-item > p'); if(x1 != null && x1.length != 0) { $('#node-761842 .field-name-body... |
'); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-761842 .field-name-body .field-items div.field-item > p:eq(2)').after(' |
'); googletag.cmd.push(function() { googletag.display('in-article-mob-3rd-761842'); }); } else { $('#in-article-mob-761842').hide(); $('#in-article-mob-3rd-761842').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' |
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ ... |
ತಂದೆಗೆ ಪಂಕ್ಚರ್ ಶಾಪ್ ನಲ್ಲಿ ಕೆಲಸಕ್ಕೆ ನೆರವಾಗುವ ಪಿಯುಸಿ ಕಲಾ ವಿಭಾಗದ ಟಾಪರ್ | This PU-II topper also helps dad fix punctures | Kannadaprabha.com |
Wednesday, June 26, 2019 4:16 AM IST |
ತಂದೆಗೆ ಪಂಕ್ಚರ್ ಶಾಪ್ ನಲ್ಲಿ ಕೆಲಸಕ್ಕೆ ನೆರವಾಗುವ ಪಿಯುಸಿ ಕಲಾ ವಿಭಾಗದ ಟಾಪರ್ |
Published: 16 Apr 2019 11:07 AM IST |
ಪಂಕ್ಚರ್ ಶಾಪ್ ನಲ್ಲಿ ತಂದೆಗೆ ಕೆಲಸಕ್ಕೆ ನೆರವಾಗುತ್ತಿರುವ ಕುಸುಮಾ |
ಬಳ್ಳಾರಿ: ಇಲ್ಲಿನ ಕೊಟ್ಟೂರು ಪಿಯುಸಿ ಕಾಲೇಜು ವಿದ್ಯಾರ್ಥಿನಿ ಡಿ ಕುಸುಮಾ ಪಾಲಿಗೆ ನಿನ್ನೆಯ ಸೋಮವಾರ ಅತ್ಯಂತ ಸಂತಸದ ದಿನವಾಗಿತ್ತು. ತನ್ನ ತಂದೆಯ ವಾಹನ ಪಂಕ್ಚರ್ ಶಾಪ್ ನಲ್ಲಿ ವಿರಾಮದ ಸಮಯಗಳಲ್ಲಿ ಕೆಲಸಕ್ಕೆ ಸಹಾಯ ಮಾಡುತ್ತಿದ್ದ ಕುಸುಮಾ ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ. |
ಕುಸುಮಾಳಲ್ಲಿ ಚಿಕ್ಕಂದಿನಿಂದಲೂ ಓದಿನಲ್ಲಿ ಬಹಳ ಉತ್ಸಾಹ, ಇದರಿಂದಾಗಿಯೇ ಕಲಾ ವಿಭಾಗದಲ್ಲಿ 600ಕ್ಕೆ 594 ಅಂಕಗಳನ್ನು ಗಳಿಸಿದ್ದಾಳೆ. 5 ವರ್ಷಗಳ ಹಿಂದೆ ಕುಸುಮಾ ಓದಿದ್ದ ಕಾಲೇಜಿನಲ್ಲಿಯೇ ಓದಿದ್ದ ನೇತ್ರಾವತಿ ಎಂಬುವವಳು ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಳು. ಅವರೇ ನನಗೆ ಸ್ಪೂರ್ತಿ ಎನ್ನುತ್ತಾಳೆ ಕುಸುಮಾ. |
ಕುಸುಮಾಳ ಸಾಧನೆಯ ಹಿಂದೆ ಹೆತ್ತವರ ಪ್ರೋತ್ಸಾಹವೂ ಇದೆ. ಅವರು ಅಷ್ಟೊಂದು ಶಿಕ್ಷಿತರಲ್ಲದಿದ್ದರೂ ಕೂಡ ಮಕ್ಕಳು ಓದುವುದಕ್ಕೆ ಯಾವುದೇ ಅಡ್ಡಿಪಡಿಸಲಿಲ್ಲ. ನಾನು ಮತ್ತು ನನ್ನ ಸೋದರಿಯರು ಓದಲು ಪೋಷಕರು ಸಹಾಯ ಮಾಡಿದ್ದಾರೆ ಎನ್ನುತ್ತಾರೆ ಕುಸುಮಾ. |
ಅಂತಿಮ ಪರೀಕ್ಷೆಗೆ ಮೊದಲು ಇಡೀ ಸಿಲೆಬಸ್ ನ ಮೇಲೆ 10 ಬಾರಿ ನಮಗೆ ಪೂರ್ವತಯಾರಿ ಪರೀಕ್ಷೆ ಮಾಡಿದ್ದರು. ಇಡೀ ವರ್ಷ ಉಪನ್ಯಾಸಕರು ಚೆನ್ನಾಗಿ ನಮಗೆ ಹೇಳಿಕೊಟ್ಟು ಪರೀಕ್ಷೆಗೆ ಸಜ್ಜುಗೊಳಿಸಿದರು. ಇದು ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಲು ಸಹಾಯವಾಯಿತು ಎನ್ನುವ ಕುಸುಮಾಗೆ ಐಎಎಸ್ ಮಾಡಬೇಕೆಂಬ ಆಸೆಯಿದೆ. |
ಕುಸುಮಾಳಿಗೆ ಮೂವರು ಸೋದರಿಯರಿದ್ದಾರೆ. ಹಿರಿಯ ಸೋದರಿ ಕರಿಬಸಮ್ಮ ಎಂ.ಕಾಂ ಮಾಡಿದ್ದು, ಎರಡನೇ ಸೋದರಿ ಕಾವ್ಯ ಬಿ.ಎಡ್ ಮುಗಿಸಿದ್ದಾಳೆ. ಮೂರನೇ ಸೋದರಿ ಪ್ರೇಮಾ ಅಂತಿಮ ವರ್ಷದ ಬಿ.ಎಸ್ಸಿ ವ್ಯಾಸಂಗ ಮಾಡುತ್ತಿದ್ದಾಳೆ. ಮಕ್ಕಳ ಓದಿನ ಆಸೆಗೆ ನನ್ನಿಂದಾದಷ್ಟು ಸಹಾಯ ಮಾಡುತ್ತೇನೆ. ಅವರ ಕನಸು ಈಡೇರಬೇಕೆಂಬುದು ನನ್ನ ಆಸೆ ಎನ್ನುತ್ತಾರೆ ತಂದೆ ದೇವೇಂದ್ರಪ್ಪ. |
Subsets and Splits
No community queries yet
The top public SQL queries from the community will appear here once available.