text
stringlengths
0
61.5k
ಭಾರತೀಯ ಜನತಾ ಪಕ್ಷ ಹುಟ್ಟಿ ಇವತ್ತಿಗೆ ಭರ್ತಿ ಮೂವತ್ತೇಳು ವರ್ಷ. ೧೯೮೦ನೇ ಏಪ್ರಿಲ್ ೬ನೇ ತಾರೀಕು ಭಾರತೀಯ ಜನತಾ ಪಕ್ಷ ಸ್ಥಾಪನೆಯಾಯಿತಾದರೂ ಆ ವಿಚಾರಧಾರೆಯ ರಾಜಕೀಯ ಪಕ್ಷವೊಂದು ನಿಜಕ್ಕೂ ಪ್ರಾರಂಭವಾದದ್ದು ೧೯೫೧ರ ಅಕ್ಟೋಬರ್ ೨೧ರಂದು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆಶೀರ್ವಾದದೊಂದಿಗೆ ಡಾ. ಶ್ಯಾಮ ಪ್ರಸಾದ ಮುಖರ್ಜಿಯವರು ಸ್ಥಾಪಿಸಿದ "ಭಾರತೀಯ ಜನ ಸಂಘ" ಹಿಂದೂ ರಾಷ್ಟ್ರವಾದ'ದ ಪರಿಕಲ್ಪನೆಯೊಂದ...
೧೯೫೨ ರ ಮಹಾ ಚುನಾವಣೆಯಲ್ಲಿ ಪಕ್ಷಕ್ಕೆ ಮೂರು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಲಭಿಸಿತು. ಅಲ್ಲಿಂದ ನಂತರದ ದಾರಿ ಭಾರೀ ಪ್ರಯಾಸದ್ದಾಗಿತ್ತು. ಆದರೆ ೧೯೬೭ರ ಮಹಾ ಚುನಾವಣಾ ಭಾರತದ ರಾಜಕೀಯ ಇತಿಹಾಸದಲ್ಲಿ ಒಂದು ಮಹತ್ತರ ಬದಲಾವಣೆಯನ್ನು ಕಂಡ ವರ್ಷ. ನೆಹರೂರ ಸೊಷಿಯಲಿಸಂ ಮತ್ತು ಕಮ್ಯುನಿಸ್ಟ್ ಪಕ್ಷಗಳ ಎಡಪಂಥೀಯ ಧೋರಣೆಯ ವಿರುದ್ಧ ಮೊದಲ ಬಾರಿಗೆ ದೇಶದ ಜನ ಮತ ನೀಡಿ ಬಲಪಂಥೀಯ ಪಕ್ಷಗಳನ್ನು ಬೆಂಬಲಿಸಿದ...
ನಂತರ ೭೭ರಲ್ಲಿ ಮೈಮೂನ ಬೇಗಮ್ ರ ತುರ್ತು ಪರಿಸ್ಥಿತಿಯ ಕರಾಳ ದಿನಗಳ ವಿರುದ್ಧ ಹೋರಾಡಲು ಜಯಪ್ರಕಾಶ್ ನಾರಾಯಣರ ಕರೆಯೇ ಮೇರೆಗೆ ದೇಶದ ಹಿತದೃಷ್ಟಿಯಿಂದ ಭಾರತೀಯ ಜನಸಂಘವೂ ಜನತಾ ಪಕ್ಷದೊಂದಿಗೆ ವಿಲೀನವಾಯಿತು. ಆ ಬಳಿಕವೇ ೧೯೮೦ರಲ್ಲಿ ಜನತಾ ಪಕ್ಷದ ಅವನತಿ ಹೊಂದಿದಾಗ ಮತ್ತೆ ಹಳೆಯ ಜನಸಂಘದ ಸದಸ್ಯರೆಲ್ಲ ಸೇರಿ, ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣಾ ಅಡ್ವಾಣಿ ಮುಂತಾದ ನಾಯಕರ ಮುಂದಾಳತ್ವದಲ್ಲಿ "ಭಾರ...
ಆದರೆ ೧೯೮೪ರ ಚುನಾವಣೆಯಲ್ಲಿ ಮೈಮೂನ ಬೇಗಮ್ ಹತ್ಯೆ ಹಿನ್ನಲೆಯಲ್ಲಿ ಪಕ್ಷಕ್ಕೆ ಬಾರಿ ಹಿನ್ನಡೆಯುಂಟಾಗಿ ಕೇವಲ ಎರಡು ಸ್ಥಾನಗಳಷ್ಟೇ ಲಭಿಸಿತು. ಆದರೆ ನಿಧಾನವಾಗಿ ತನ್ನ ಪ್ರಭಾವವನ್ನು ಹೆಚ್ಚಿಸುತ್ತ ಸಾಗಿದ ಪಕ್ಷ ೧೯೯೬ರ ಹೊತ್ತಿಗೆ ಲೋಕಸಭೆಯಲ್ಲಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಇಲ್ಲಿಂದ ನಂತರ ಪಕ್ಷಕ್ಕೆ ಹಿಂತಿರುಗಿ ನೋಡುವ ಪ್ರಮೇಯವೇ ಒದಗಿ ಬರಲಿಲ್ಲ. ಮುಂದೆ ೧೯೯೮ರಲ್ಲಿ ಕೇಂದ್ರದಲ್ಲಿ...
ಡಾ.ಶ್ಯಾಮ ಪ್ರಸಾದ ಮುಖರ್ಜಿಯಂಥ ಅನೇಕ ಹಿರಿಯರ ತ್ಯಾಗ ಬಲಿದಾನಗಳ ಜೊತೆ ಪಂಡಿತ ದೀನ ದಯಾಳ್ ಉಪಾಧ್ಯಾಯ, ಬಲರಾಜ್ ಮದೋಕ್, ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿಯಂಥ ಹಲವಾರು ದೂರದೃಷ್ಟಿಯುಳ್ಳ ನಾಯಕರ ಸತತ ಶ್ರಮದ ಪ್ರತಿಫಲವಿದು. ಇವತ್ತು ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಅದ್ಭುತ ನಾಯಕತ್ವದ ಜೊತೆಗೆ ಬಹಳ ಸಮರ್ಥ ಶ್ರೀ ಅಮಿತ್ ಶಾಹ್ ಯವರಂಥ ಅಧ್ಯಕ್ಷರ ಸೇವೆಯೂ ಪಕ್ಷಕ್ಕೆ ದೊರಕಿರುವುದು...
ಇವತ್ತಿನ ದಿನ ಭಾಜಪವನ್ನು ಈ ಮಟ್ಟಕೆ ಬೆಳೆಸಿದ ನಿಸ್ಪೃಹ, ನಿಸ್ವಾರ್ಥ, ನಿಷ್ಠಾವಂತ, ಕಾರ್ಯಕರ್ತರನ್ನು ನಾವೆಲ್ಲರೂ ಸ್ಮರಿಸಬೇಕಾದ ದಿನ.
ಪ್ರೇಯಸಿ, ಗೆಳೆಯನ ಜೊತೆ ಸೇರಿ ನಿರೂಪಕನಿಂದ ಪತ್ನಿಯ ಕೊಲೆ – Public TV
ಲಕ್ನೋ: ನಿರೂಪಕನೊಬ್ಬ ತನ್ನ ಪ್ರೇಯಸಿ ಹಾಗೂ ಗೆಳೆಯನ ಜೊತೆ ಸೇರಿ ಪತ್ನಿಯನ್ನೇ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಇಟಾವಾದಲ್ಲಿ ನಡೆದಿದೆ.
ದಿವ್ಯಾ (27) ಕೊಲೆಯಾದ ಮಹಿಳೆ. ದೆಹಲಿ ಮೂಲದ ನಿರೂಪಕ ಅಜಿತೇಶ್ ತನ್ನ ಪ್ರೇಯಸಿ ಹಾಗೂ ಸ್ನೇಹಿತನ ಜೊತೆ ಸೇರಿ ದಿವ್ಯಾಳನ್ನು ಕೊಲೆ ಮಾಡಿದ್ದಾನೆ. ಸೋಮವಾರ ದಿವ್ಯಾ ಇಟಾವಾದ ಕಟ್ರಾ ಬಾಲ್ ಸಿಂಗ್ ಏರಿಯಾದಲ್ಲಿರುವ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು.
ಕೊಲೆಯಾದ ದಿನವೇ ದಿವ್ಯಾ ಮಾವ ಪ್ರಮೋದ್ ಮಿಶ್ರಾ, ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿದ್ದರು. ವಿಧಿವಿಜ್ಞಾನ ಪ್ರಯೋಗಾಲಯ ಹಾಗೂ ದಳದ ಮೂಲಕ ಪೊಲೀಸರು ಈ ಕೊಲೆ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದರು. ತನಿಖೆ ವೇಳೆ ಅಜಿತೇಶ್ ತನ್ನ ಸ್ನೇಹಿತ ಅಖಿಲ್ ಕುಮಾರ್ ಸಿಂಗ್ ಹಾಗೂ ಭಾವನಾ ಆರ್ಯ ಜೊತೆ ಸೇರಿ ಈ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಮೂವರು ಆರೋಪಿಗಳು ದೆಹಲಿಯಲ್ಲಿರುವ ನ್ಯೂಸ್ ...
ಸೋಮವಾರ ಈ ಕೊಲೆ ನಡೆದಿದ್ದು, ಗುರುವಾರ ಪೊಲೀಸರು ಕೊಲೆ ಆರೋಪಿಗಳಾದ ಅಜಿತೇಶ್, ಭಾವನಾ ಹಾಗೂ ಅಖಿಲ್‍ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್‍ಎಸ್‍ಪಿ ಸಂತೋಷ್ ಕುಮಾರ್, ವಿಚಾರಣೆ ವೇಳೆ ಅಜಿತೇಶ್, ನನ್ನ ಹಾಗೂ ಭಾವನಾ ನಡುವೆ ಅನೈತಿಕ ಸಂಬಂಧ ಇದೆ. ನಮ್ಮಿಬ್ಬರ ವಿಷಯ ದಿವ್ಯಾಗೆ ತಿಳಿದು ಆಕೆ ದಿನ ನನ್ನ ಜೊತೆ ಜಗಳವಾಡುತ್ತಿದ್ದರು. ಹಾಗಾಗಿ ಕೊಲೆ ಮಾಡಿದ್ದಾನೆ ಎಂದ...
ಪ್ಲಾನ್ ಪ್ರಕಾರ ಅಕ್ಟೋಬರ್ 14ರಂದು ಅಖಿಲ್, ಅಜಿತೇಶ್ ಮನೆಗೆ ಆಗಮಿಸಿದ್ದಾನೆ. ಅಖಿಲ್ ಮೊದಲೇ ಪರಿಚಯವಿದ್ದ ಕಾರಣ ದಿವ್ಯಾ ಆತನನ್ನು ಮನೆಯೊಳಗೆ ಕರೆಸಿ ತನ್ನ ಮದುವೆ ಆಲ್ಬಂ ತೋರಿಸುತ್ತಿದ್ದಳು. ಈ ವೇಳೆ ಅಖಿಲ್ ಹೂ ಕುಂಡದಿಂದ ದಿವ್ಯಾ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ ತೀವ್ರ ಗಾಯಗೊಂಡ ದಿವ್ಯಾ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದಾಳೆ. ದಿವ್ಯಾ ಪ್ರಜ್ಞೆ ತಪ್ಪುತ್ತಿದ್ದಂತೆ ಅಖಿಲ್ ಸ್ಥಳದ...
ಆರೆಂಜ್ ಸಿಹಿ ಸ್ವಲ್ಪ ಹುಳಿ
ನಾಯಕಿ ಬೇರೊಬ್ಬನೊಂದಿಗೆ ನಿಶ್ಚಿತಾರ್ಥವಾಗಿರುವಾಗ ನಾಯಕ ಅವಳನ್ನು ಪ್ರೀತಿಸುವುದು, ನಾಯಕಿಗೆ ಮದುವೆ ಇಷ್ಟವಿಲ್ಲದಿರುವಾಗ ಮನೆ ಬಿಟ್ಟು ಹೋದಾಗ ಪರಸ್ಥಳದಲ್ಲಿ ನಾಯಕ ಭೇಟಿಯಾಗುವ ಕತೆಗಳು ಸಾವಿರಾರು ಬಂದಿದೆ. ಅದರಂತೆ 'ಆರೆಂಜ್' ಚಿತ್ರದ ಕತೆಯು ಹಳೆಯದಾಗಿದ್ದರೂ ಹೊಸತರದ ಸನ್ನಿವೇಶಗಳು ಇದಕ್ಕೆ ತಕ್ಕಂತೆ ಹಾಸ್ಯದ ಹೊನಲು ಸಿನಿಮಾ ಪೂರ್ತಿ ಆವರಿಸಿಕೊಂಡಿರುವುದು ಒಂದು ಮಟ್ಟದಲ್ಲಿ ಪ್ರೇಕ್ಷಕನಿಗೆ ರು...
2018ರಲ್ಲಿ ಗಣೇಶ್ ಒಂದೇ ಚಿತ್ರ ಬಿಡುಗಡೆಯಾಗಿದ್ದು, ನಟನೆಯಲ್ಲಿ ಅವರ ಅಭಿಮಾನಿಗಳಿಗೆ ಬೇಸರ ತರಿಸದೆ ಜಬರ್‍ದಸ್ತ್ ಸ್ಟೆಪ್ಸ್, ಫೈಟ್, ಡೈಲಾಗ್ ಹೇಳುತ್ತಾ ಖುಷಿ ಪಡಿಸಿದ್ದಾರೆ. ರಾಜಕುಮಾರದಲ್ಲಿ ನಟಿಸಿದ್ದ ಪ್ರಿಯಾಆನಂದ್ ಎರಡನೆ ಬಾರಿ ನಾಯಕಿಯಾಗಿ ನಟಿಸಿ ಗ್ಲಾಮರಸ್ ಡ್ರೆಸ್‍ನಲ್ಲಿ ಚೆಂದ ಕಾಣಿಸುತ್ತಾರೆ. ನಾಯಕಿಯ ತಂದೆ ಹುಲಿವೀರಯ್ಯನಾಗಿ ಅವಿನಾಶ್, ಪದ್ಮಜರಾವ್, ಪೂರ್ತಿ ಸಿನಿಮಾವನ್ನು ಹೆಗೆಲ ಮ...
ಬಿಡುಗಡೆ ಮುಂಚೆ ಲಾಭದಲ್ಲಿ ಆರೆಂಜ್
'ಆರೆಂಜ್' ಚಿತ್ರ ಶುರುವಾದಾಗಿನಿಂದಲೂ ಮಾದ್ಯಮದವರನ್ನು ಭೇಟಿ ಮಾಡದ ತಂಡವು ಈಗ ಶುಕ್ರವಾರದಂದು ಸುಮಾರು 300 ಕೇಂದ್ರಗಳಲ್ಲಿ ಬಿಡುಗಡೆ ಆಗುತ್ತಿರುವ ಕಾರಣ ಮೊದಲ ಮತ್ತು ಕೊನೆಯ ಬಾರಿ ಸುದ್ದಿಗೋಷ್ಟಿಯನ್ನು ಏರ್ಪಾಟು ಮಾಡಲಾಗಿದೆ ಅಂತ ನಿರ್ದೇಶಕ ಪ್ರಶಾಂತ್‍ರಾಜ್ ಮೈಕ್‍ಗೆ ಕೆಲಸ ಕೊಟ್ಟರು. ಮಾತು ಮುಂದುವರೆಸುತ್ತಾ ಜೂಮ್ ಬಿಡುಗಡೆ ಮುಂಚೆ ಗಣೇಶ್ ಚಿತ್ರ ನೋಡಿ ಚೆನ್ನಾಗಿ ಮಾಡಿದ್ದೀರಾ. ಕತೆ ಕೇಳದೆ ...
ಕುಟುಂಬ ಸಮೇತ ನೋಡಬಹುದಾದ ಚಿತ್ರವಂದು ಬಣ್ಣನೆ ಮಾಡಿಕೊಂಡ ಗಣೇಶ್, ಕತೆಯಲ್ಲಿ ಪ್ರೀತಿ, ಮನುಷ್ಯತ್ವಕ್ಕೆ ಬೆಲೆ ಕೊಡುವ ಸನ್ನಿವೇಶಗಳು ಇರಲಿದೆ. ನೋಡುಗನಿಗೆ ಸನ್ನಿವೇಶಗಳು ಅರ್ಥವಾದರೂ ಪಾತ್ರಗಳಿಗೆ ತಿಳಿಯದೆ ಗೊಂದಲದಲ್ಲಿ ಇರುತ್ತಾರೆ. ಹಣ್ಣನ್ನು ತೆಗೆದುಕೊಂಡು ಸಿಕ್ಕಿಹಾಕಿಕೊಂಡಾಗ ಅದರಿಂದ ಹೇಗೆ ಹೊರಗೆ ಬರುತ್ತಾನೆ ಎಂಬುದು ಒಂದು ಏಳೆಯ ಕತೆಯಾದರೂ, ಚಿತ್ರಕತೆ ದೊಡ್ಡದಾಗಿದೆ. ಪಾತ್ರಗಳು ಗಂಭೀರವ...
ರಾಜಕುಮಾರ ನಂತರ ಯಾವ ಸಿನಿಮಾ ಮಾಡಬೇಕೆಂದು ಗೊಂದಲದಲ್ಲಿ ಇದ್ದೆ. ಆಗ ಬಂದ ಕತೆಯೇ ಇದಾಗಿತ್ತು. ತಂಡದೊಂದಿಗೆ ಇರುವುದು ಖುಷಿ ನೀಡಿತು ಅಂತಾರೆ ನಾಯಕಿ ಪ್ರಿಯಾಆನಂದ್.
ಡಿಸೆಂಬರ್ ಗಣೇಶ್‍ಗೆ ಅದೃಷ್ದದ ಸಂಕೇತ
ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರಗಳು ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾದವು ಬಹುತೇಕ ಹಿಟ್ ಆಗಿದೆ. ಅದರಂತೆ ನಿರ್ದೇಶಕ ಪ್ರಶಾಂತ್‍ರಾಜ್ ಅವರ 'ಆರೆಂಜ್' ಚಿತ್ರಕ್ಕೆ ರಾಜಕುಮಾರ ಖ್ಯಾತಿಯ ಪ್ರಿಯಾಆನಂದ್ ನಾಯಕಿ. ಸಿನಿಮಾದಲ್ಲಿ ಗಣೇಶ್ ವಿಭಿನ್ನ ಹೇರ್‍ಸ್ಟೈಲ್‍ನಲ್ಲಿ ಹಲವು ಗೆಟಪ್‍ಗಳಲ್ಲಿ ಕಾಣಿಸಿಕೊಂಡಿರುವುದು ವಿಶೇಷವಾಗಿದೆ. ಚೆನೈ, ಹೈದರಬಾದ್, ಬೆಂಗಳೂರು, ಯರೋಪ್ ಕಡೆಗಳಲ್ಲಿ ಚಿತ್ರೀಕರಣ ನಡೆಸಲ...
ದೂರು ನೀಡಿ 'ಸಂಕಷ್ಟ' ಕ್ಕೆ ಸಿಲುಕಿದ 'ಕೈ' ನಾಯಕ | Kannada Dunia | Kannada News | Karnataka News | India News
HomeLive NewsIndiaದೂರು ನೀಡಿ 'ಸಂಕಷ್ಟ' ಕ್ಕೆ ಸಿಲುಕಿದ 'ಕೈ' ನಾಯಕ
26-08-2018 12:52PM IST / No Comments / Posted In: Latest News, India
ಮತದಾರರ ಪಟ್ಟಿಯಲ್ಲಿ 25 ಸಾವಿರ ಬೋಗಸ್ ಹೆಸರಿದೆ ಎಂದು ಚುನಾವಣೆ ಆಯೋಗಕ್ಕೆ ದೂರು ನೀಡಿದ ಕಾಂಗ್ರೆಸ್ ನಾಯಕನ ಹೆಸರು ಎರಡು ಕ್ಷೇತ್ರದ ಮತದಾರರ ಪಟ್ಟಿಯಲ್ಲಿರುವುದು ಪತ್ತೆಯಾಗಿದೆ.
ಮಧ್ಯ ಪ್ರದೇಶದ ಕಾಂಗ್ರೆಸ್ ಕಾರ್ಯದರ್ಶಿ ಮತ್ತು ಲೋಕಸಭೆ ಮಾಜಿ ಸದಸ್ಯ ಸಜ್ಜನ್ ಸಿಂಗ್ ವರ್ಮ ಇಂಥದ್ದೊಂದು ಸಂಕಟಕ್ಕೆ ಸಿಲುಕಿದ್ದಾರೆ. ಅವರ ಹೆಸರು ದೆವಾಸ್ ಜಿಲ್ಲೆ ಸೋನ್ಕಾಚ್ ವಿಧಾನಸಭೆ ಕ್ಷೇತ್ರದ ಮತದಾರರ ಪಟ್ಟಿಯಲ್ಲಿದ್ದು, ಅವರು ಇತ್ತೀಚಿನ ಚುನಾವಣೆಯಲ್ಲಿ ಇಂದೋರ್ ನಲ್ಲಿ ಮತ ಚಲಾಯಿಸಿದ್ದರು.
ಎರಡು ಕಡೆ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇರುವುದನ್ನು ಚುನಾವಣಾಧಿಕಾರಿಗಳು ಖಚಿತಪಡಿಸಿದ್ದಾರೆ. ವಿಶೇಷವೆಂದರೆ ಸೋನ್ಕಾಚ್ ಕ್ಷೇತ್ರದಲ್ಲಿ ಮತದಾರರ ಪಟ್ಟಿಯನ್ನು ಪರಿಷ್ಕರಿಸಬೇಕೆಂದು ಅವರೇ ದೂರು ನೀಡಿದ್ದರು.
ಸೋನ್ಕಾಚ್ ವಿಧಾನಸಭೆ ಕ್ಷೇತ್ರ ಚುನಾವಣಾಧಿಕಾರಿ ನೀತಾ ರಾಥೋಡ್ ಅವರು ಮತದಾರರ ಪಟ್ಟಿಯನ್ನು ಪರಿಶೀಲಿಸಿದಾಗ ವರ್ಮ ಹೆಸರು ಇರುವುದು ಖಚಿತವಾಗಿತ್ತು. ಹೀಗಾಗಿ ಆಗಸ್ಟ್ 23 ರಂದು ನೋಟಿಸ್ ನೀಡಲಾಗಿದ್ದು, 29ರಂದು ದಾಖಲೆ ಹಾಜರುಪಡಿಸಬೇಕೆಂದು ಸೂಚನೆ ನೀಡಲಾಗಿದೆ.
ಇದೇ ವೇಳೆ ಮತದಾರರ ಪಟ್ಟಿಯಲ್ಲಿ ಉಲ್ಲೇಖಿಸಿರುವ ವಿಳಾಸದಲ್ಲಿ ವರ್ಮ ವಾಸವಿಲ್ಲ ಎಂಬುದನ್ನು ಅಧಿಕಾರಿಗಳು ಖಚಿತಪಡಿಸಿಕೊಂಡಿದ್ದಾರೆ. ವರ್ಮ‌ ಮಾತ್ರ ಈ ಆರೋಪ ತಳ್ಳಿಹಾಕಿದಾರೆ. ತಾವು ಆರಂಭದಿಂದಲೂ ಇಂದೋರ್ ನಲ್ಲಿ ಮತ ಚಲಾಯಿಸಿದ್ದಾಗಿ ಹೇಳಿಕೊಂಡಿದ್ದಾರೆ.
ವಿಶೆಷವೆಂದರೆ ಬಿಜೆಪಿಯು ಮತದಾರರ ಪಟ್ಟಿಯಲ್ಲಿ ಪ್ರಭಾವ ಬೀರಿ ಬೋಗಸ್ ಹೆಸರನ್ನು ಸೇರಿಸಿದೆ ಎಂದು ಕಾಂಗ್ರೆಸ್ ಚುನಾವಣೆ ಆಯೋಗಕ್ಕೆ ದೂರು ನೀಡಿತ್ತು.
ಉಗ್ರರ ವಿರುದ್ಧ ಕಾರ್ಯಾಚರಣೆ: ಅಫ್ಘಾನ್‌ ಪಡೆಗಳಿಂದ 6 ನಾಗರಿಕರ ಹತ್ಯೆ | Vartha Bharati- ವಾರ್ತಾ ಭಾರತಿ
ವಾರ್ತಾ ಭಾರತಿ May 26, 2019, 11:20 PM IST
ಕಾಬೂಲ್, ಮೇ 26: ಅಫ್ಘಾನಿಸ್ತಾನದ ಪೂರ್ವ ನಂಗರ್‌ಹಾರ್ ಪ್ರಾಂತದಲ್ಲಿ ತಾಲಿಬಾನ್ ಬಂಡುಕೋರರ ನೆಲೆಗಳ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಅಫ್ಘಾನ್ ಭದ್ರತಾ ಪಡೆಗಳು ಪ್ರಮಾದವಶಾತ್ ಓರ್ವ ಮಹಿಳೆ ಹಾಗೂ ಇಬ್ಬರು ಮಕ್ಕಳು ಸೇರಿದಂತೆ ಆರು ಮಂದಿ ನಾಗರಿಕರನ್ನು ಹತ್ಯೆಗೈದಿದ್ದಾರೆಂದು ಪ್ರಾಂತೀಯ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ ನಡೆದ ಈ ದಾಳಿಯಲ್ಲಿ 10 ಮಂದಿ ತಾಲಿಬಾನ್ ಬಂಡುಕೋರರು ಕೂಡಾ ಹತರಾಗಿದ್ದಾರೆಂದು ನಂಗರ್‌ಹಾರ್ ಪ್ರಾಂತದ ಗವರ್ನರ್ ಅವರ ವಕ್ತಾರ ಅತವುಲ್ಲಾ ಖೊಗ್ಯಾನಿ ತಿಳಿಸಿದ್ದಾರೆ.
ದಾಳಿಯ ನಡೆದ ಬಳಿಕ ನಾಗರಿಕರ ವಾಹನವೊಂದು ಸ್ಥಳದಿಂದ ನಿರ್ಗಮಿಸುತ್ತಿತ್ತು. ಅದನ್ನು ಕಂಡ ಭದ್ರತಾಪಡೆಗಳು ತಾಲಿಬಾನ್ ಬಂಡುಕೋರರು ಪರಾರಿಯಾಗುತ್ತಿದ್ದಾರೆಂದು ತಪ್ಪಾಗಿ ಭಾವಿಸಿ ವಾನದ ಮೇಲೆ ಗುಂಡು ಹಾರಾಟ ನಡೆಸಿದರು. ಆಗ ಆರು ಮಂದಿ ನಾಗರಿಕರು ಸ್ಥಳದಲ್ಲೇ ಮೃತಪಟ್ಟರೆಂದು ಖೊಗ್ಯಾನಿ ತಿಳಿಸಿದ್ದಾರೆ.
ಈ ಹತ್ಯಾಕಾಂಡದಿಂದ ಆಕ್ರೋಶಗೊಂಡ ಗ್ರಾಮಸ್ಥರು ಮೃತರ ದೇಹಗಳನ್ನು ಜಲಾಲಾಬಾದ್‌ಗೆ ಮೆರವಣಿಗೆಯಲ್ಲಿ ಕೊಂಡೊಯ್ದು, ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದರು. ಪೂರ್ವ ಅಫ್ಘಾನಿಸ್ತಾನದಲ್ಲಿ ಅದರಲ್ಲೂ ವಿಶೇಷವಾಗಿ ನಂಗರ್‌ಹಾರ್‌ನಲ್ಲಿ ತಾಲಿಬಾನ್ ಹಾಗೂ ಐಸಿಸ್ ಬಂಡುಕೋರರು ಸಕ್ರಿಯರಾಗಿದ್ದಾರೆ.
ಈ ಮಧ್ಯೆ ಪವಿತ್ರ ಮಾಸ ರಮಝಾನ್‌ನಲ್ಲಿ ಅಫ್ಘಾನಿಸ್ತಾನದಲ್ಲಿ ಸಂಘರ್ಷ ಭುಗಿಲೆದ್ದಿರುವ ಬಗ್ಗೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ ಹಾಗೂ ನಾಗರಿಕ ಸಾವುನೋವುಗಳನ್ನು ತಡೆಯಲು ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದೆ.
ರಂಝಾನ್ ತಿಂಗಳ ಮೊದಲ ವಾರದಲ್ಲಿ ಕಾಬೂಲ್‌ನಲ್ಲಿ ಸರಕಾರೇತರ ಸಂಸ್ಥೆಯೊಂದರ ಮೇಲೆ ತಾಲಿಬಾನ್ ಬಂಡುಕೋರರು ನಡೆಸಿದ ದಾಳಿಯಲ್ಲಿ ಆರು ಮಂದಿ ನಾಗರಿಕರು ಮೃತಪಟ್ಟು, ಇತರ 28 ಮಂದಿ ಗಾಯಗೊಂಡ ಘಟನೆಯ ಬಗೆಗೂ ಅದು ಕಳವಳ ವ್ಯಕ್ತಪಡಿಸಿದೆ.
ದಕ್ಷಿಣ ಹೆಮಂಡ್ ಹಾಗೂ ಪೂರ್ವ ಕುನಾರ್ ಪ್ರಾಂತಗಳಲ್ಲಿ ಸರಕಾರ ವಿರೋಧಿ ಗುರಿಗಳ ವಿರುದ್ಧ ಇತ್ತೀಚೆಗೆ ನಡೆದ ವಾಯುದಾಳಿಗಳಲ್ಲಿ ಸುಮಾರು 14 ನಾಗರಿಕರು ಮೃತಪಟ್ಟಿರುವ ಬಗ್ಗೆಯೂ ಅದು ತನ್ನ ಹೇಳಿಕೆಯಲ್ಲಿ ಗಮನಸೆಳೆದಿದೆ.
ಪದ್ಮಶ್ರೀ ಅಮಾಸ – ಮಹಾದೇವರಿಗೆ ಪ್ರಶಸ್ತಿ ಬಂದುದು-ಪ್ರೊ. ರಾಜೇಂದ್ರ ಚೆನ್ನಿ ಅವರ ಲೇಖನ | ನಮ್ಮ ಬನವಾಸಿ
ಪದ್ಮಶ್ರೀ ಅಮಾಸ – ಮಹಾದೇವರಿಗೆ ಪ್ರಶಸ್ತಿ ಬಂದುದು-ಪ್ರೊ. ರಾಜೇಂದ್ರ ಚೆನ್ನಿ ಅವರ ಲೇಖನ
ದೇವನೂರು ಮಹಾದೇವರಿಗೆ ಪದ್ಮಶ್ರೀ ಪ್ರಶಸ್ತಿ ಬಂದ ಸುದ್ದಿ ಪ್ರಸಾರವಾದಕೂಡಲೇ ನಾವೆಲ್ಲ ನಿರೀಕ್ಷಿಸಿದಂತೆ ಅವರು ಭೂಗತರಾಗಿದ್ದರು. ಹೀಗಾಗಿ ನಾವು – ಅಂದರೆ ಅವರ ಅಭಿಮಾನಿಗಳ ಸಂಘದ ಖಾಯಂ ಸದಸ್ಯರು – ಒಬ್ಬರನ್ನೊಬ್ಬರು ಅಭಿನಂದಿಸಿಕೊಂಡೆವು. ಯಾವ ಕಾನೂನಿನ ಪ್ರಕಾರವೂ ನೋಂದಾಯಿತವಾಗಲಾರದ ಅರಾಜಕ ಓದುಗರ ಸಂಘವಿದಾಗಿದೆ. ಒಂದು ಸಾರಿ ಸಭೆಯೊಂದರ ಅಧ್ಯಕ್ಷತೆ ವಹಿಸಿದ ಮಹಾದೇವರು ಅಲ್ಲಿ ಶುರುವಾದ ಚರ್ಚೆ,...
ದಲಿತ ಸಂಕಥನಗಳಿಗೆ (discourses) ಇರುವ ದೊಡ್ಡ ಅಪಾಯವೆಂದರೆ ಸವರ್ಣೀಯ ಮತ್ತು ಮೇಲುವರ್ಗದ ಗ್ರಹಿಕೆಗಳನ್ನು ಗೊತ್ತಿಲ್ಲದೇ ಒಪ್ಪಿಕೊಂಡುಬಿಡುವುದು. ಈ ಗ್ರಹಿಕೆಗಳು ಒಂದು ಕಡೆಗೆ ದಲಿತ ಸಮುದಾಯಗಳಿಗೆÉ ಯಾವ ವರ್ಣದಲ್ಲೂ ಜಾಗವಿಲ್ಲದಂತೆ ಮಾಡಿ ಅವರನ್ನು ಸಮಾಜ, ಭಾಷೆ ಹಾಗೂ ಸಂಸ್ಕøತಿಗಳಿಂದ 'ಅದೃಶ್ಯ'ಗೊಳಿಸಿಬಿಡುತ್ತವೆ. ಅವರುಗಳಿಗೆ ಯಾವ ಪ್ರಾತಿನಿಧ್ಯವೇ ಇಲ್ಲದಂತೆ ಮಾಡುತ್ತವೆ. ಸಾವಿರಾರು ವರ್ಷಗ...
ಕನ್ನಡದ ದಲಿತ ಬರಹಗಾರರಿಗೆ ಮಾಂತ್ರಿಕ ವಾಸ್ತವವಾದವನ್ನು ಹೊರಗಿನಿಂದ ತರುವ ಅವಶ್ಯಕತೆ ಇರಲಿಲ್ಲ. ಶಿಷ್ಟ ಸಾಹಿತ್ಯ ಸಂಪ್ರದಾಯದ ಆಚೆಗೆ ನಮ್ಮ ಸಮಾಜದಲ್ಲಿ ಜೀವಂತವಾಗಿ ಇರುವ ಮೌಖಿಕ, ಜಾನಪದ ಕಥನಗಳಲ್ಲಿ, ಜನಪದ ಕಾವ್ಯ ಪುರಾಣಗಳಲ್ಲಿ ವಾಸ್ತವವಾದವನ್ನು ತಿರಸ್ಕರಿಸುವ ಕಥನಕ್ರಮಗಳು ಲಭ್ಯವಿದ್ದವು. ಮಹಾದೇವ ಮುಖ್ಯವಾಗಿ 'ಮಲೆಮಾದೇಶ್ವರ ಕಾವ್ಯ', 'ಮಂಟೆಸ್ವಾಮಿ ಕಾವ್ಯ', ಜನಪದ ಕತೆಗಳು ಹಾಗೂ ಕನ್ನಡದ ...
ಇದೆಲ್ಲ ಸಾಧ್ಯವಾದದ್ದು ದಲಿತ ಸಂಘರ್ಷ ಸಮಿತಿಯು ನಡೆಸಿದ ಸಾಂಸ್ಕøತಿಕ ಹೋರಾಟಗಳಿಂದಲೇ. ದಲಿತ ಅಸ್ತಿತ್ವದ ಗುರುತು (identity) ಮತ್ತು ಸಾಂಸ್ಕøತಿಕ ಸ್ವಾಭಿಮಾನದ ಈ ಚಳುವಳಿ ದಲಿತ ಜನಾಂಗಗಳಲ್ಲಿ ಹುಟ್ಟುಹಾಕಿದ ಆತ್ಮವಿಶ್ವಾಸ ಹಾಗೂ ಹೋರಾಟದ ಕ್ರಿಯಾಶೀಲತೆ ಆಧುನಿಕ ಕನ್ನಡ ಸಮಾಜದ ಅತ್ಯಂತ ಮಹತ್ವಪೂರ್ಣ ಪಲ್ಲಟವನ್ನು ತಂದಿತು. ದಲಿತ ಅಸ್ತಿತ್ವದ ಅನನ್ಯತೆಗೆ ರಾಜಕೀಯ ಶಕ್ತಿ ಕೊಡಲು ಅಂಬೇಡ್ಕರ್ ಮಾಡ...
'ಬೆತ್ತಲೆ ಸೇವೆ ಯಾಕೆ ಕೂಡದು' ಎಂದು ಬ್ರಾಹ್ಮಣ ಬುದ್ಧಿಜೀವಿವರ್ಗ ವಾದಿಸಿದಾಗ "ಬೆತ್ತಲೆ ಸೇವೆಯನ್ನು ನೋಡುವವರೂ ಬೆತ್ತಲೆಯಾಗಿದ್ದರೆ ಸರಿ" ಎನ್ನುವ ಮೂಲಕ ಆ ವಾದಕ್ಕೆ ತೆರೆ ಎಳೆದರು.(ತೀರಾ ಇತ್ತೀಚಿನ ಮಡೆಸ್ನಾನ ವಿವಾದದ ಬಗ್ಗೆ 'ದಲಿತರು ಉಂಡ ಎಲೆಗಳ ಮೇಲೆ ಬ್ರಾಹ್ಮಣರು ಉರುಳಾಡಿದರೆ ಆಗಬಹುದೇನೋ" ಎನ್ನುತ್ತಾರೆಂದು ಕಾಯುತ್ತಿದ್ದೇನೆ!) ಹೀಗೆ ನಮ್ಮ ಪ್ರಮುಖ ವಾಗ್ವಾದಗಳಲ್ಲಿ ಮಹಾದೇವರು ಮಾಡುತ್...
ಇದೆಲ್ಲಾ ಹೇಳುವಾಗ ಮಹಾದೇವರ ವ್ಯಕ್ತಿತ್ವ ಹಾಗೂ ಡಿ.ಎಸ್.ಎಸ್.ನಲ್ಲಿ ವಹಿಸಿದ ಪಾತ್ರಗಳ ಬಗ್ಗೆ ಅತ್ಯಂತ ಕಟುವಾದ ಅಭಿಪ್ರಾಯಗಳಿವೆ ಎನ್ನುವುದನ್ನೂ ನಾನು ಬಲ್ಲೆ. ಇವರ ಎಡಬಿಡಂಗಿತನದಿಂದಾಗಿ ಡಿ.ಎಸ್.ಎಸ್ ಹೋಳಾಯಿತು, ಕೃಷ್ಣಪ್ಪನವರ ಹೋರಾಟ ಸೋತಿತು ಎಂದು ಗಟ್ಟಿಯಾಗಿ ನಂಬಿರುವ ಒಂದು ದೊಡ್ಡ ಗುಂಪು ಇದೆ. ಸಾಹಿತ್ಯಕ ವಲಯದಲ್ಲಿ ಪ್ರಭಾವಿಯಾದವರ ಸಾನಿಧ್ಯದಿಂದಾಗಿ ತಮ್ಮ radical ಗುಣ ಕಳೆದುಕೊಂಡರು ಎ...
ನನಗೆ ಮಹಾದೇವರು ಮುಖ್ಯರಾಗುವುದು ಅವರು ಸೃಷ್ಟಿಸಿದ ಅನನ್ಯವಾದ ಕಥನಗಳಿಂದಾಗಿ. ಒಟ್ಟಾರೆ 180ಕ್ಕೂ ಕಡಿಮೆ ಪುಟಗಳ ಸೃಜನಶೀಲ ಸಾಹಿತ್ಯವನ್ನು ರಚಿಸಿರುವ ಮಹಾದೇವರು ದಲಿತ ಲೋಕವನ್ನು(cosmos) ಕಟ್ಟಿಕೊಟ್ಟಿರುವ ರೀತಿ ಅಪೂರ್ವವಾದುದು. 'ಗ್ರಸ್ತರು', 'ಒಂದು ದಹನದ ಕಥೆ' ಈ ಮುಂತಾದ ಕತೆಗಳ ವ್ಯಗ್ರತೆಯಿಂದ, 'ಒಡಲಾಳ'ದ ಸಾಕವ್ವನ ಮನೆಯ ಅದ್ಭುತ ನಿಬಿಡ ಮನುಷ್ಯ ಪ್ರಪಂಚದವರೆಗೆ, 'ಕುಸುಮಬಾಲೆ'ಯ ಹಲವು ಅ...
ಸಿದ್ಧಾ೦ತವೊ೦ದನ್ನು ಸಾರ್ವಕಾಲಿಕ ಸತ್ಯವೆನ್ನುವುದು ನಿಜಕ್ಕೂ ಅಪಾಯಕಾರಿ | ಸಂಪದ - Sampada
ಕೆಲವು ದಿನಗಳ ಹಿ೦ದೆ ಸಾಮಾಜಿಕ ತಾಣವಾದ ಫೇಸ್ ಬುಕ್ಕಿನಲ್ಲಿ ಘಟನೆಯೊ೦ದು ನಡೆಯಿತು. ಸಾಮಾಜಿಕ ಕಾರ್ಯಕರ್ತೆಯೊಬ್ಬರು ,'ಹೊಸ ಹೊಸ ವೈಜ್ನಾನಿಕ ಸ೦ಶೋಧನೆಗಳಿಗಾಗಿ ಕಷ್ಟಪಡುವ ಅನೇಕ ವಿಜ್ನಾನಿಗಳು ತಮ್ಮ ಪ್ರಾಣವನ್ನು ವಿಜ್ನಾನಕ್ಕಾಗಿಯೇ ಮೀಸಲಾಗಿಡುತ್ತಾರೆ. ಅದೇ ರೀತಿ ಕಷ್ಟಪಟ್ಟು ಬೆವರು ಸುರಿಸಿ ಬೆಳೆ ಬೆಳೆದರೂ ರೈತನೊಬ್ಬ ಎಷ್ಟೋ ಬಾರಿ ಹೊಟ್ಟೆಗಿಲ್ಲದೇ ಸಾಯುತ್ತಾನೆ.ಆದರೆ ಪುರೋಹಿತಶಾಹಿಗಳೆ೦ಬ ಅನು...
ಮೇಲ್ನೋಟಕ್ಕೆ ಇದು ಇಬ್ಬರು ವ್ಯಕ್ತಿಗಳ ನಡುವಿನ ವೈಯಕ್ತಿಕ ಕಲಹದ೦ತೆ ಭಾಸವಾದರೂ ಮೂಲತ: ಇದು ಎರಡು ವಿಭಿನ್ನ ಪ೦ಥೀಯ ಧೋರಣೆಗಳ ಅನುಯಾಯಿಗಳ ನಡುವಣ ಪೈಪೋಟಿಯೆ೦ಬುದು ಸ್ಪಷ್ಟವಾಗಿ ಗೋಚರಿಸುತ್ತದೆ.ಎಡಪ೦ಥೀಯ ಬೆ೦ಬಲಿಗರೊಬ್ಬರು,ತನ್ನ ಪ೦ಥದ ಬಲಹೀನತೆಗಳ ಬಗ್ಗೆ ಟೀಕಿಸಿದ್ದನ್ನು ಸಹಿಸಲಾಗದ ಬಲಪ೦ಥೀಯನೊಬ್ಬ ಅಸಹ್ಯಕರ ದೋಷಾರೋಪಣೆಯನ್ನು ಮಾಡಿ ತ೦ದುಕೊ೦ಡ ಎಡವಟ್ಟು ಇದು. ಪ೦ಥೀಯ ಧೋರಣೆಗಳ ಬೆನ್ನು ಹತ್ತಿದವ...
ಇ೦ತಹ ಹುಚ್ಚುತನಕ್ಕೆ ತಾಜಾ ಉದಾಹರಣೆಯೆ೦ದರೆ ಇತ್ತೀಚೆಗೆ ನಡೆಯುತ್ತಿರುವ ಇಸ್ರೇಲ್ ಮತ್ತು ಗಾಝಾ ನಡುವಣ ಕದನಕ್ಕೆ ಭಾರತದಲ್ಲಿನ ಪ೦ಥೀಯವಾದಿಗಳ ಪ್ರತಿಕ್ರಿಯೆ.ತನ್ನ ದೇಶದ ಮೂವರು ಹದಿವಯಸ್ಕರನ್ನು ಅಪಹರಿಸಿ ,ಕೊ೦ದರು ಎನ್ನುವ ಕಾರಣಕ್ಕೆ ಇಸ್ರೇಲ್,ಗಾಝಾ ಪಟ್ಟಿಯಲ್ಲಿನ ಪ್ಯಾಲೆಸ್ತೀನಿಯರ ಮೇಲೆ ದಾಳಿ ಆರ೦ಭಿಸಿತು.ಅದಕ್ಕೆ ಪ್ರತ್ಯುತ್ತರವಾಗಿ ಗಾಝಾದಲ್ಲಿನ ಹಮಾಸ್ ಎನ್ನುವ ಪ್ಯಾಲೆಸ್ತೀನಿ ಬಣವೊ೦ದು ಇಸ...
ಹಾಗೆ ಸುಮ್ಮನೇ ವಿಷಯವೊ೦ದನ್ನು ಚರ್ಚಿಸುತ್ತಿದ್ದಾಗ ಟಿವಿ ವಿಶ್ಲೇಷಕರಾಗಿರುವ ಸ್ನೇಹಿತ ಗಿರೀಶ್ ಹ೦ಪಾಳಿ,ಬಲಪ೦ಥೀಯನೆ೦ದು ಬಿ೦ಬಿಸಲ್ಪಟ್ಟಿರುವ ಸಾಹಿತಿಯೊಬ್ಬರನ್ನು ಮುಕ್ತಕ೦ಠದಿ೦ದ ಪ್ರಶ೦ಸಿಸಿಬಿಟ್ಟರು.ಅನೇಕ ಬಲಪ೦ಥೀಯ ವಾದಗಳನ್ನು ಕಟುವಾಗಿ ಟೀಕಿಸುವ ಅವರ ಮಾತುಗಳನ್ನು ಕೇಳಿ ಅವರನ್ನು ಎಡಚರೆ೦ದುಕೊ೦ಡಿದ್ದ ನನಗೆ ಒ೦ದು ಕ್ಷಣ ಗೊ೦ದಲವು೦ಟಾಗಿ ,"ನೀವು ಲೆಫ್ಟಿಸ್ಟಾ,ರೈಟಿಸ್ಟಾ.."? ಎ೦ದು ಕೇಳಿದೆ .ಅ...
ಉ: ಸಿದ್ಧಾ೦ತವೊ೦ದನ್ನು ಸಾರ್ವಕಾಲಿಕ ಸತ್ಯವೆನ್ನುವುದು ನಿಜಕ್ಕೂ ಅಪಾಯಕಾರಿ
Submitted by kavinagaraj on August 14, 2014 - 9:20am
ನಿಜ, ಇಂದಿನ ಅಗತ್ಯ ಸಮರಸತೆ. ಲೇಖನಕ್ಕೆ ಮೂಲಕಾರಣರಾದ ಪ್ರಭಾರವರು ಪುರೋಹಿತಶಾಹಿ ವಿರುದ್ಧ ಮನನೋಯುವಂತೆ ಬರೆದಿದ್ದರು. ಮೋದಿ, ಸಿದ್ಧರಾಮಯ್ಯ, ಯಡಿಯೂರಪ್ಪನವರು ಪೂಜೆ ಮಾಡುತ್ತಿದ್ದ ಮತ್ತು ಪುರೋಹಿತರುಗಳು ಪೂಜೆ ಮಾಡಿಸುತ್ತಿದ್ದ ಚಿತ್ರಗಳನ್ನೂ ಪ್ರಕಟಿಸಿದ್ದರು. ಇದೀಗಅವರೇ ಎಡಬಿಡಂಗಿತನದ ಹೇಳಿಕೆ ಕೊಟ್ಟಿದ್ದಾರೆ: ಅದು ಹೀಗಿದೆ:
"Prabha N Belavangala ನಮ್ಮ ತಂದೆ ಪುರೋಹಿತರಲ್ಲ. ಅರ್ಚಕರು. ನಮ್ಮ ತಂದೆ ದುಡಿದೇ ಬದುಕಬೇಕೆಂಬ ಸಿದ್ಧಾಂತದ ಪ್ರತಿಪಾದಕರು. 75 ರವಯಸ್ಸಿನಲ್ಲೂ ದುಡಿಮೆ ಮಾಡಿಯೇ ಬದುಕುತ್ತಿರುವವರು. ಅರ್ಚಕ ವೃತ್ತಿಯನ್ನೇ ಬದುಕಿಗೆ ಆಧಾರ ಮಾಡಿಕೊಂಡಿರುವವರಲ್ಲ. ಹಾಗಾಗಿಯೇ, ಅವರ ಬಗ್ಗೆ ನಮ್ಮೂರಿನ ಜನರಿಗೆಲ್ಲ ವಿಷೇಶ ಅಭಿಮಾನ. ಪ್ರೀತಿ. ನನ್ನ ತಂದೆಯಂತೆ ಪ್ರತಿಯೊಬ್ಬರೂ ಬದುಕಿಬಿಟ್ಟರೆ ಜಗತ್ತಿನಲ್ಲಿ ಮನುಷ್...
ಮಧುಗಿರಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ | Prajavani
ಮಧುಗಿರಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ
Published: 05 ಅಕ್ಟೋಬರ್ 2012, 10:10 IST
Updated: 05 ಅಕ್ಟೋಬರ್ 2012, 10:10 IST
ಮಧುಗಿರಿ: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ನೀಡಿರುವ ವರದಿ ಜಾರಿಗೊಳಿಸುವಂತೆ ಒತ್ತಾಯಿಸಿ ಮಾದಿಗ ಛಲವಾದಿ ಸಂಘಟನೆಗಳ ಒಕ್ಕೂಟ ಗುರುವಾರ ಕರೆ ನೀಡಿದ್ದ ಬಂದ್ ಕರೆಗೆ ಪಟ್ಟಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಒಕ್ಕೂಟದ ಸಾವಿರಾರು ಮಂದಿ ಪುರಭವನದ ಆವರಣದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೃಹತ್ ಹಕ್ಕೊತ್ತಾಯ ಮೆರವಣಿಗೆ ನಡೆಸಿದರು. ಉಪ ವಿಭಾಗಾಧಿಕಾರಿ ಕಚೇರಿ ಮುಂಭಾಗದಲ್ಲಿ ಸಭೆ ನಡೆಸಿ, ಉಪವಿಭಾಗಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಉಪವಿಭಾಗಾಧಿಕಾರಿ ಕಚೇರಿ ಮುಂದೆ ನಡೆದ ಬೃಹತ್ ಸಭೆಯಲ್ಲಿ ಮಾತನಾಡಿದ ಸಾಹಿತಿ ಕೆ.ಬಿ.ಸಿದ್ದಯ್ಯ, ಮಾದಿಗ ದಂಡೋರ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಪಾವಗಡ ಶ್ರೀರಾಮ್, ಮಾಜಿ ಶಾಸಕ ಗಂಗಹನುಮಯ್ಯ, ಮುಖಂಡ ಚೇಳೂರು ವೆಂಕಟೇಶ್, ಬಂದಕುಂಟೆ ನಾಗರಾಜು, ಜಿ.ಪಂ ಸದಸ್ಯರಾದ ಕೆಂಚಮಾರಯ್ಯ, ವೈ.ಎಚ್.ಹುಚ್ಚಯ್ಯ, ಛಲವಾದಿ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಅರ್.ಕೆ.ಧ್ರುವಕುಮಾರ್ ಮಾತನಾಡಿದರು.
ಪರಿಶಿಷ್ಟ ಜಾತಿಯಲ್ಲಿರುವ ತಾರತಮ್ಯ ನಿವಾರಣೆಗೆ ರಾಜ್ಯ ದಲಿತ ಸಂಘಟನೆಗಳು ನಡೆಸಿದ ಹೋರಾಟದಿಂದ ರಚನೆಗೊಂಡ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ಶಿಫಾರಸ್ಸನ್ನು ಸರ್ಕಾರ ಶೀಘ್ರ ಜಾರಿಗೊಳಿಸಬೇಕು. ಮಾದಿಗ- ಛಲವಾದಿಗಳು ಸಮರೋಪಾದಿಯಲ್ಲಿ ಹೋರಾಟ ರೂಪಿಸಬೇಕು ಎಂದು ಕರೆ ನೀಡಿದರು.
ತುಮಕೂರು ನಗರಸಭಾ ಸದಸ್ಯ ನರಸೀಯಪ್ಪ, ದಲಿತ ಮುಖಂಡರಾದ ವಾಲೇ ಚಂದ್ರಯ್ಯ, ಎಸ್.ಡಿ.ಕೃಷ್ಣಪ್ಪ, ನರಸಿಂಹರಾಜು, ಟಿ.ಸಿ.ಎಚ್.ಕೃಷ್ಣಪ್ಪ, ಎಚ್.ಸಿ.ನರಸೀಯಪ್ಪ, ತಾ.ಪಂ ಅಧ್ಯಕ್ಷೆ ನಾಗಮ್ಮ, ಬೆಲ್ಲದಮಡುಗು ಕೃಷ್ಣಪ್ಪ, ಜೆ.ಸಿ.ತಿಮ್ಮಯ್ಯ, ಎಂ.ವೈ.ಶಿವಕುಮಾರ್, ಐ.ಡಿ.ಹಳ್ಳಿ ನರಸಿಂಹಮೂರ್ತಿ, ಜೀವಿಕ ಡಿ.ಟಿ.ಸಂಜೀವಮೂರ್ತಿ, ಡಿವಿಎಸ್ ಕೋಟೆ ಕಲ್ಲಪ್ಪ, ಮಣೆಗಾರ ಬಂಧು ಜಿಲ್ಲಾ ಸಂಚಾಲಕ ಬೆಳದಮಡುಗು ಶಿವಣ್ಣ, ...
ಸರ್ಕಾರಿ ಕಚೇರಿಗಳು, ಬ್ಯಾಂಕ್, ಶಾಲಾ ಕಾಲೇಜು ಹಾಗೂ ಅಂಗಡಿ ಮುಗ್ಗಟ್ಟುಗಳು ಮುಚ್ಚಿದ್ದವು. ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು.
ಉಡುಪಿ: 'ರಾಮ ಮಂದಿರ ಭೂಮಿ ಪೂಜೆಯನ್ನು ಹಬ್ಬವಾಗಿ ಆಚರಿಸೋಣ' - ಪೇಜಾವರ ಸ್ವಾಮೀಜಿ
Sat, Aug 1 2020 10:00:44 PM
ಉಡುಪಿ, ಆ. 01 (DaijiworldNews/MB) : ''ಅಯೋಧ್ಯೆಯಲ್ಲಿರುವ ರಾಮ ಮಂದಿರವು ಇಡೀ ಹಿಂದೂ ಸಮಾಜದ ಕನಸಾಗಿದ್ದು ಆಗಸ್ಟ್ 5 ರಂದು ನಡೆಯುವ ಭವ್ಯ ದೇವಾಲಯದ ಭೂಮಿ ಪೂಜೆಯ ಸಮಾರಂಭವನ್ನು ಪ್ರತಿಯೊಬ್ಬರು ಹಬ್ಬವಾಗಿ ಆಚರಿಸಬೇಕು'' ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮತ್ತು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯ ಕರೆ ನೀಡಿದ್ದಾರೆ.
"ಭಗವಂತ ರಾಮನ ಆರಾಧನೆಯನ್ನು ನಾವು ಮುಂದುವರೆಸಬೇಕು. ಕೊರೊನಾ ಪರಿಸ್ಥಿತಿಯ ಸಂದರ್ಭದಲ್ಲಿಯೂ ಈ ಐತಿಹಾಸಿಕ ದಿನವನ್ನು ವೀಕ್ಷಿಸ ಬಹುದಾಗಿದೆ. ಜನರು ತಮ್ಮ ಮನೆಗಳಲ್ಲಿ ನೇರ ಪ್ರದರ್ಶನವನ್ನು ವೀಕ್ಷಿಸಬಹುದು" ಎಂದು ಅವರು ಹೇಳಿದರು.
ಆಗಸ್ಟ್ 1 ರ ಶನಿವಾರದಂದು ನೀಲಾವರ ಗೋಶಾಲೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, "ಜನರು ಶ್ರೀ ರಾಮ ಮಂತ್ರವನ್ನು ಪ್ರತಿದಿನ ಕನಿಷ್ಠ 108 ಬಾರಿ ಜಪಿಸಬೇಕು. ಪಾರಾಯಣ ಮತ್ತು ಭಜನೆ ಮಾಡಬೇಕು. ಭಕ್ತರು ರಾಮನ ನಾಮ ಸ್ಮರಣೆ ಮಾಡಬೇಕು. ನಾವೆಲ್ಲರೂ ಈ ಆಚರಣೆಯಲ್ಲಿ ಭಾಗವಹಿಸೋಣ'' ಎಂದು ಹೇಳಿದರು.
ಆಗಸ್ಟ್ 5 ರಂದು ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 12.30 ರ ನಡುವೆ ಅಯೋಧ್ಯೆಯಲ್ಲಿ ರಾಮ ಮಂದಿರದ ಭೂಮಿ ಪೂಜೆ ನಡೆಯಲಿದೆ.
ಇನ್ನು ಅದೇ ದಿನ ನೀಲಾವರ ಗೋಶಾಲೆಯಲ್ಲಿ ಶ್ರೀ ರಾಮ, ಕೃಷ್ಣ, ವಿಟ್ಟಲರಿಗೆ ಒಂದು ಲಕ್ಷ ತುಳಸಿ ಎಲೆಗಳನ್ನು ಅರ್ಪಿಸಲಾಗುವುದು. ಈ ಪೂಜೆಗೆ ಭಕ್ತರು ಆಗಸ್ಟ್ 4 ರ ಮಧ್ಯಾಹ್ನಕ್ಕೂ ಮುನ್ನ ತುಳಸಿ ಎಲೆಗಳನ್ನು ಪೇಜಾವರ ಮಠ ಉಡುಪಿ ಅಥವಾ ನೀಲಾವರ ಗೋಶಾಲೆಗೆ ತಂದು ಅರ್ಪಿಸಬಹುದು. ಅದೇ ದಿನ ನವಗ್ರಹ ಯಾಗ ಮತ್ತು ಮುಖ್ಯಾಪ್ರಾಣ ಯಾಗ, ಭಜನೆ, ಮತ್ತು ಪಾರಾಯಣ ನಡೆಯಲಿದೆ.
"ಕರ್ನಾಟಕದ ಉಡುಪಿ ಹಾಗೂ ಅಯೋಧ್ಯೆಯ ನಡುವೆ ನಿಕಟ ಸಂಬಂಧವಿದೆ ಎಂದು ನಾನು ನಂಬುತ್ತೇನೆ. ಈ ಚಳುವಳಿಯನ್ನು ಕೃಷ್ಣೈಕ್ಯರಾದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅವರು ಕೊನೆಯವರೆಗೂ ಮುನ್ನಡೆಸಿದರು" ಎಂದು ಸ್ವಾಮೀಜಿ ಹೇಳಿದರು.
''ಇದು ಹಿಂದೂ ಸಮಾಜದ ಎಲ್ಲ ಜನರಿಗೆ ಐತಿಹಾಸಿಕ ದಿನವಾಗಲಿದೆ. ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಅಲಂಕಾರ ಮಾಡಿ, ಭಗಧ್ವಜವನ್ನು ಮನೆಯ ಛಾವಣಿಯ ಮೇಲೆ ಹಾಕಬೇಕು. ಹಾಗೆಯೇ ಮನೆಯಲ್ಲಿ ದೀಪವನ್ನು ಬೆಳಗಬೇಕು. ಹಾಗೆಯೇ ಕೊರೊನಾ ಸೋಂಕಿನ ಈ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು'' ಎಂದು ಸುನಿಲ್ ಕೆ ಆರ್ ಹೇಳಿದರು.
ಇನ್ನು ಅಯೋಧ್ಯೆಯ ಭೂಮಿ ಪೂಜೆಯಲ್ಲಿ ಪೇಜಾವರ ಸ್ವಾಮೀಜಿಯವರು ಭಾಗಿಯಾಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದು ಪ್ರಸ್ತುತ ನೀಲಾವರ ಗೋಶಾಲೆಯಲ್ಲಿ ಚಾರ್ತುಮಾಸ ವ್ರತವನ್ನು ನಡೆಸುತ್ತಿದ್ದು ಶಾಸ್ತ್ರಗಳ ಪ್ರಕಾರ, ಈ ಚಾರ್ತುಮಾಸ ವ್ರತದ ಅವಧಿ ಮುಗಿಯುವವರೆಗೂ ಸ್ಥಳ ಅಥವಾ ಮಠವನ್ನು ಬಿಟ್ಟುಹೋಗುವಂತಿಲ್ಲ. ಆ ಕಾರಣ ಗೋಶಾಲೆಯಲ್ಲಿ ಪೂಜೆ ಮಾಡುವ ಮೂಲಕ ಭೂಮಿ ಪೂಜೆಯ ದಿನವನ್ನು ಆಚರಿಸುವುದಾಗಿ ಸ್ವಾಮೀಜಿ ತಿಳ...
ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾಧ್ಯಕ್ಷ ಪಿ.ವಿಷ್ಣುಮೂರ್ತಿ ಆಚಾರ್ಯ, ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ಮಾತೃ ಶಕ್ತಿ ಮಂಡಳಿಯ ಪೂರ್ಣಿಮಾ ಸುರೇಶ್ ನಾಯಕ್ ಮತ್ತು ಭಜರಂಗದಳದ ಸುರೇಂದ್ರ ಕೋಟೇಶ್ವರ ಉಪಸ್ಥಿತರಿದ್ದರು.
ರೈತರ ಕೇಳಿದ ಪ್ರಶ್ನೆಗಳಿಗೆ ಕುಮಾರಸ್ವಾಮಿ ನೀಡಿದ ಉತ್ತರಗಳಿವು | CM Kumaraswamy and Farmers interaction in Bidar Raitha Spandana - Kannada Oneindia
| Published: Thursday, November 15, 2018, 22:28 [IST]
ಎಚ್ ಡಿ ಕುಮಾರಸ್ವಾಮಿ ರೈತರ ಸಂವಾದದಲ್ಲಿ ಅವರ ಪ್ರಶ್ನೆಗಳಿಗೆ ಉತ್ತರಿಸಿದ್ದು ಹೀಗೆ | Oneindia Kannada
ಬೀದರ್, ನವೆಂಬರ್ 15: ವಾರ್ತಾ ಇಲಾಖೆ ಮತ್ತು ಕೃಷಿ ಇಲಾಖೆ ಹಾಗೂ ಜಿಲ್ಲಾಡಳಿತದ ಆಶ್ರಯದಲ್ಲಿ ನ.15ರಂದು ಜಿಲ್ಲಾ ರಂಗಮಂದಿರದಲ್ಲಿ ನಡೆದ ರೈತ ಸ್ಪಂದನ ಕಾರ್ಯಕ್ರಮ ಅಕ್ಷರಶಃ ಬೀದರ ಜಿಲ್ಲೆಯ ರೈತರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಪ್ರೇರಣೆ ನೀಡಿತು.
ಜ್ಯೋತಿ ಬೆಳಗಿಸುವ ಮೂಲಕ ಈ ಕಾರ್ಯಕ್ರಮಕ್ಕೆ ಸಿಎಂ ಅವರು ಚಾಲನೆ ನೀಡಿದರು. ಒಂದೆಡೆ ರೈತ ಬಂಧುಗಳು ಮತ್ತೊಂದೆಡೆ ಸಿಎಂ ಅವರು ಸೇರಿದಂತೆ ಸಚಿವರು, ಜಿಪಂ ಅಧ್ಯಕ್ಷರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಅಧಿಕಾರಿಗಳನ್ನೊಳಗೊಂಡು ನಡೆದ ರೈತ ಸಂವಾದ ಕಾರ್ಯಕ್ರಮ ಸುಧೀರ್ಘವಾಗಿ ನಡೆಯಿತು. ರೈತರ ಅನುಭವ ಅನಾವರಣಗೊಂಡಿತು.
ಬೀದರ ಜಿಲ್ಲೆಯಲ್ಲಿ ಕೃಷಿ ಕಾಲೇಜು ಬೇಕು ಎಂದು ರೈತ ಕಾಶಿಲಿಂಗ ಕೇಳಿದರು. ಇಲ್ಲಿನ ಯುವಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗವಕಾಶ ಲಭ್ಯವಾಗುವ ದಿಶೆಯಲ್ಲಿ ಆಲೋಚಿಸಿ ಬರುವ ವರ್ಷದಿಂದ ಕಾಲೇಜು ಆರಂಭ ಮಾಡುವ ಪ್ರಯತ್ನ ಮಾಡುವುದಾಗಿ ಸಿಎಂ ಅವರು ಪ್ರತಿಕ್ರಿಯಿಸಿದರು. ರೈತ ಉಳಿದರೆ ದೇಶ ಉಳಿಯುತ್ತೆ ಎನ್ನುವ ರೈತ ಮಹಮ್ಮದ್ ಜಾಫರ್ ಅವರ ಆಶಯದಂತೆ, ಕೃಷಿ ಪದ್ಧತಿಯ ಹಳೆಯ ಕ್ರಮಗಳನ್ನು ಬದಲಾಯಿಸಿ ಹೊಸ ...
ನಾವು ವಿಧಾನಸೌಧದಲ್ಲಿ ಕೂಡುವುದಿಲ್ಲ. ನಿಮ್ಮ ಮನೆ ಬಾಗಿಲಿಗೆ ಬರುತ್ತೇವೆ, ಈಗ ಬಂದಿದ್ದೇವೆ. ನೀರನ್ನು ಹೇಗೆ ಬಳಸಬೇಕು ಎಂಬುದನ್ನು ತಿಳಿಸುತ್ತೇವೆ. ಜೊತೆಗೆ ನಿಮಗೆ ಆರ್ಥಿಕ ನೆರವು ಕೊಡುತ್ತೇವೆ. ಕೃಷಿಯಲ್ಲಿ ಹೊಸ ವಾತಾವರಣ ಕಲ್ಪಿಸುವ ಉದ್ದೇಶ ನಮ್ಮದಾಗಿದೆ ಎಂದು ಸಿಎಂ ವಿವರಿಸಿದರು.
ಇಡೀ ರಾಜ್ಯ ಸಾವಯವ ಕೃಷಿಗೆ
ನಮ್ಮ ಜಿಲೆಯನ್ನು ಸಾವಯವ ಕೃಷಿ ಜಿಲ್ಲೆಯನ್ನಾಗಿ ಮಾಡಿ ಎನ್ನುವ ರೈತರೊಬ್ಬರ ಪ್ರಶ್ನೆಗೆ ಉತ್ತರಿಸಿದ ಸಿಎಂ ಅವರು, ಬರುವ ವರ್ಷ ಈ ಹಿನ್ನೆಲೆಯಲ್ಲಿ ಕೆಲವು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲು ಆಲೋಚಿಸಿದ್ದೇವೆ. ಬೀದರ ಅಷ್ಟೆ ಅಲ್ಲ, ಇಡೀ ರಾಜ್ಯವನ್ನು ಸಾವಯವ ಕೃಷಿಗೆ ಒಳಪಡಿಸುತ್ತೇವೆ. ನಾವು ನಿಮ್ಮ ಜೊತೆಗಿರುತ್ತೇವೆ ಎಂದು ಸಿಎಂ ತಿಳಿಸಿದರು.
ರೈತ ಮಕ್ಕಳಿಗೆ ಮೀಸಲು ಕೊಡಿ
ರೈತ ಮಕ್ಕಳಿಗೆ ಉದ್ಯೋಗದಲ್ಲಿ ಮೀಸಲಾತಿ ಕೊಡಿ. ಶುಲ್ಕ ರಹಿತ ಶಿಕ್ಷಣ ಕೊಡಿ ಎಂದು ರೈತ ವಿಠಲ್ ತಿಳಿಸಿದರು. ರೈತರು ಯಾವುದೇ ಸಮುದಾಯಕ್ಕೆ ಸೇರಿರಲಿ ಅವರೆಲ್ಲ ಬಡವರೆ. ಹೀಗಾಗಿ ಎಲ್ಲರನ್ನೂ ಸರಿ‌ಸಮಾನವಾಗಿ ಕಾಣುತ್ತೇವೆ. ರೈತ ಮಕ್ಕಳಿಗೆ ಅನುಕೂಲ ಮಾಡಿಕೊಡುತ್ತೇವೆ. ಹೊಸ ತಳಿಯ ಸಂಶೋಧಕರಿಗೆ ಹೆಚ್ಚಿನ ಆರ್ಥಿಕ ನೆರವು ನೀಡುತ್ತೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಬದಲಾವಣೆ
ಇಂತಹ ಕಾರ್ಯಕ್ರಮಗಳ ಮೂಲಕ ರಾಜ್ಯದ ಕೃಷಿ ರಂಗದಲ್ಲಿ ಬದಲಾವಣೆ ತರಲು ಯೋಜಿಸಲಾಗಿದೆ. ಎಲ್ಲ ಸಹಕಾರವನ್ನು ಸರಕಾರ ತಮಗೆ ಕೊಡುತ್ತದೆ. ಅದನ್ನು ತಾವು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಸಿಎಂ ತಿಳಿಸಿದರು. ಸೊಯಾ ರಿಸರ್ಚ್ ಸೆಂಟರ್ ತೆರೆಯಲು ಮುಂದಿನ ಬಜೆಟ್‌ನಲ್ಲಿ ಅನುದಾನ ಮೀಸಲಿಡುವುದಾಗಿ ಸಿಎಂ ಅವರು ರೈತರೊಬ್ಬರ ಪ್ರಶ್ನೆಗೆ ಉತ್ತರಿಸಿದರು.
ಸಮಗ್ರ ನೀರಾವರಿಗೆ ಕ್ರಮ
ಈ ವರ್ಷ ಮಳೆ ಸರಿಯಾಗಿ ಆಗಿರುವುದಿಲ್ಲ, ಕೆರೆ ಬತ್ತಿವೆ. ಇದನ್ನರಿತಿದ್ದು ಇಲ್ಲಿನ ಎಲ್ಲ ಶಾಸಕರೊಂದಿಗೆ ಸಭೆ ನಡಿಸಿ ಚರ್ಚಿಸಿ ಸಮಗ್ರ ನೀರಾವರಿ ಯೋಜನೆ ಜಾರಿಗೆ ಪ್ರಯತ್ನಿಸಲಾಗುವುದು. ಸಣ್ಣ ನೀರಾವರಿ ಇಲಾಖೆಯಿಂದ ಕೆರೆ ಹೂಳೆತ್ತುವ ಕೆಲಸ ಮಾಡಿಸಲಾಗುವುದು.
ಕಬ್ಬು ಬೆಳೆಗಾರರಿಗೆ ಧೈರ್ಯ
ಒಂದನೇ ತಾರಿಖಿನಿಂದ ಬಿಎಸ್ಎಸ್ ಕೆ ಕಾರ್ಖಾನೆ ಆರಂಭಿಸುತ್ತೇವೆ. ಈಗಾಗಲೆ ಇದಕ್ಕಾಗಿ 20 ಕೋಟಿ ರೂ ಬಿಡುಗಡೆ ಮಾಡಲಾಗಿದೆ. ತಾವು ಧೈರ್ಯಗುಂದಬೇಡಿ ಎಂದು ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಸಿಎಂ ಅಭಯ‌ ನೀಡಿದರು. ಹಿಂದಿನ ಸರ್ಕಾರ ರೂಪಿಸಿದ ‌ಕೆಲವು ರೈತಪರ ಯೋಜನೆಗಳನ್ನು ಮುಂದುವರೆಸಿದ್ದೇವೆ. ಮೈತ್ರಿ ಸರ್ಕಾರ ಮಾನವೀಯ ನೆಲೆಯಲ್ಲಿ ಆಲೋಚಿಸಿ ರೈತ ಪರ ಹಲವಾರು ಕಾರ್ಯಕ್ರಮಗಳನ್ನು, ಯೋಜನೆಗಳನ್ನು ರೂಪಿಸ...
ಮನದಾಳದ ನಮಸ್ಕಾರಗಳು
ಸಿಎಂ ಅವರು ರೈತ ಪರ ಆಲೋಚನೆ ಉಳ್ಳವರು. ರೈತರನ್ನು ಕುಟುಂಬದ ಸದಸ್ಯರಂತೆ, ಬಂಧಬಿರಾದಾರ ಜನಕಾಣುತ್ತಾರೆ. ತಮ್ಮ ಜೊತೆಗೆ ಕೂಡಿಸಿಕೊಂಡು ಮಾತನಾಡುತ್ತಾರೆ. ಖಂಡಿತಾ ರೈತರ ಸಮಸ್ಯೆಗಳಿಗೆ ಪರಿಹಾರ ಹುಡುಕಿ ಕೊಡ್ತಾರೆ ಎಂದು ಪ್ರಗತಿಪರ ರೈತ ಮಹಿಳೆ ಕವಿತಾ ಉಮಾಶಂಕರ ಮಿಶ್ರಾ ತಿಳಿಸಿದರು. ಇದಕ್ಕು ಮೊದಲು ಮಾತನಾಡಿದ ಸಚಿವರಾದ ಬಂಡೆಪ್ಪ ಖಾಶೆಂಪೂರ ಅವರು, ಇದು ರೈತ ಕಾರ್ಯಕ್ರಮಗಳ ಚಿಂತನೆಯಷ್ಟೇ ಅಲ್ಲ; ಚ...
ರೈತರೊಂದಿಗೆ ಸಾಕ್ಷ್ಯಚಿತ್ರ ವೀಕ್ಷಣೆ
ಈ ಕಾರ್ಯಕ್ರಮದಡಿ ವಾರ್ತಾ ಇಲಾಖೆಯು ಸಿದ್ದಪಡಿಸಿದ್ದ ಬೀದರ ಜಿಲ್ಲೆಯ ವಿವಿಧ ತಾಲೂಕುಗಳ ಆಯ್ದ ರೈತರ ಕೃಷಿ ಯಶೋಗಾಥೆಯ ಸಾಕ್ಷ್ಯಚಿತ್ರಗಳನ್ನು ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ರೈತ ಬಾಂಧವರೊಂದಿಗೆ ಕುಳಿತು ವೀಕ್ಷಿಸಿದ್ದು ವಿಶೇಷವಾಗಿತ್ತು. ಪ್ರಾಸ್ತಾವಿಕ ಮಾತನಾಡಿದ ಖ್ಯಾತ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಅವರು, ರೈತ ಸ್ಪಂದನೆ ಯಾಕೆ ಬೇಕು? ಎಂಬುದನ್ನು ಅರಿತು ರೂಪಿಸಿದ ಕಾರ್...
hd kumaraswamy bidar district news farmer interaction ಕುಮಾರಸ್ವಾಮಿ ಬೀದರ್ ಜಿಲ್ಲಾಸುದ್ದಿ ರೈತ ಸಂವಾದ