text
stringlengths
0
61.5k
ಅವರಿಗೆ ಆ ರೀತಿಯ ಭಾವನೆ ಬಂದಿದ್ದರೆ ಅದರಲ್ಲಿ ಅವರ ತಪ್ಪೇನೂ ಇಲ್ಲ ಅಲ್ಲವೆ? ಅದನ್ನು ನೀವೇಕೆ ನಿವಾರಿಸಬಾರದು?
ಈ ಹಿಂದೆ ನಡೆದ ಚರ್ಚೆಗಳಲ್ಲಿ ಬಂದ ಅನೇಕ ಕಾಮೆಂಟುಗಳು, ಈ ರೀತಿಯ ಭಾವನೆಯನ್ನು ಮೂಡಿಸಿವೆ.
ಇದನ್ನೆ ಮತ್ತೆ ಹೇಳ್ತಾ ಇದೀನಿ
ನೀರ್ಕಜೆಯವರ ಕಾಮೆಂಟ್ ನೋಡಿ
"ಸಂಸ್ಕೃತ ದ್ವೇಷ" ಇಲ್ಲದಿದ್ದರೆ ಸಂಸ್ಕೃತ ಮಾದರಿಯಲ್ಲಿರುವ ಪದಗಳನ್ನು ಯಾಕೆ ಬದಲಾಯಿಸಬೇಕು? ಭಾಷಾ ವಿಜ್ನಾನಿಗಳು ಅನ್ನೋದು ಬಿಟ್ಟು ಈ "ನುಡಿಯರಿಗರು" ಏಕೆ?"
ನುಡಿಯರಿಗ, ಬಾಶಾವಿಗ್ನಾನಿ ವಿರೋದೀ ಪದಗಳಲ್ಲ. ಎರಡೂ ಇರಬಹುದು. ಆದರೆ ಹೆಚ್ಚು ಯಾವುದು ಸುಲಬವಾಗಿರುತ್ತೊ/ಸರಿಯಿರುತ್ತೊ ಅದನ ಜನ ಒಪ್ಕೊತಾರೆ.
ಈಗ ಕನ್ನಡದಲ್ಲಿ ನೀರು ಎಂಬ ಪದ ಇದ್ದರೂ 'ಜಲ' ಎಂಬ ಪದವನ್ನ ಕನ್ನಡ ಬರಹಗಳಲ್ಲಿ ಬಳಸಿಲ್ಲವೆ. ಹಾಗಂತ ನಾವು ದಿನ 'ನೀರು' ಅಂತ ಅನ್ನುವುದನ್ನ ಬಿಟ್ಟಿದ್ದೀವ್ಯೆ. ಹಾಗೆ
ನುಡಿಯರಿಗೆ, ಬಾಶಾವಿಗ್ನಾನಿ ಯಾವುದು ಬೇಕೊ ಜನ ಇಟ್ಕೊತಾರೆ. ಆದರೆ 'ನುಡಿಯರಿಗ' ಪದ ಬ್ಯಾಡಲೇ ಬೇಡ ಅನ್ನೋದು ಸರಿಯೆ? ಇದು ಕನ್ನಡ ದ್ವೇಶ ಅಂತ ಹೇಳಬಹುದಲ್ಲವೆ?
"ನುಡಿಯರಿಗ" ಬಳಸಲೇಬಾರದೆಂದು ನಾನು ಹೇಳಿಲ್ಲ. ನಾನು ಹೇಳದ್ದನ್ನು ನನ್ನ ಬಾಯಿಗೆ ದಯವಿಟ್ಟು ತುರುಕಿಸಬೇಡಿರಿ. ಬೇಕಿದ್ದವರು ಬಳಸಲಿ. ಆದರೆ ಇಂತಹ ಪದಗಳನ್ನು "ಭಾಷಾ ವಿಜ್ನಾನಿ" ಯಂತಹ ಪದಗಳಿಗೆ ಬದಲಾಗಿ(ಪರ್ಯಾಯವಾಗಿ ಅಲ್ಲ) ತಾವುಗಳು ಬಳಸುವಂತೆ ತೋರುತ್ತಿದೆ. ಹಾಗಿದ್ದಲ್ಲಿ ಮಾತ್ರ ನನ್ನ ವಿರೋಧ.
ಏಪ್ರಿಲ್ 7 2011
ಮಹೇಶ ಪ್ರಸಾದ ನೀರ್ಕಜೆ,
ನಿಮ್ಮ ಬಾತ್ ಠೀಕ್ ಇದೆ. ನಮಗೆ ಎಲ್ಲ ಭಾಷಾದ ಶಬ್ದಗಳ ಜರೂರತ್ ಇದೆ. ನಮ್ಮ ಬೋಲಿಗೆ ಎಶ್ಟು ಹೆಚ್ಚು ಹೆಚ್ಚು ಶಬ್ಧ ಬಂದರೂ ಅಶ್ಟು ಅಚ್ಛ ಆಗುತ್ತದೆ.
ನನಗೆ ಜಬಾನ್ ಪಂಡಿತ್, ಭಾಷಾ ವಿಜ್ಞಾನಿ, ನುಡಿಯರಿಗ ಯಾವುದು ಬಳಸಿದರೂ ಅದು ಚಲನಾ ಇರಬೇಕು.
ಒಂದು ವೇಳೆ.. ನನಗೆ ಸಂಸ್ಕ್ರುತದ "ಬಾಶಾ ವಿಗ್ನಾನಿ" ಬೇಡವೇ ಬೇಡ, ಏಕೆಂದರೆ ಕನ್ನಡಕ್ಕೂ ಸಂಸ್ಕ್ರುತಕ್ಕೂ ಯಾವ ನುಡಿಯರಿಗಯಂತೆ ನಂಟಿಲ್ಲ ಎಂದು ಒಂದು ಗುಂಪು ಹೇಳಿದರೆ, ಅದನ್ನು ಹೇಗೆ ಅಲ್ಲ ಗಳೆಯುವಿರಿ.
ಸಂಸ್ಕ್ರುತ ಯಾಕೆ ವಿಶೇಶ? "ಭಾಷಾ ವಿಜ್ಞಾನಿ" ಇರಲಿ ಎಂದಾದರೇ "ಜಬಾನ್ ಸಯಿನ್ಟಿಸ್ಟ್" ಕೂಡ ಕನ್ನಡ ಪದನೆರಿಕೆಯಲ್ಲಿ ಇರಲಿ.. ಹಾಗೇ "ಲಿಂಗವಿಸ್ಟ್' ಎಂಬ ಪದವೂ ಬೇಕು.
ಸಂಸ್ಕ್ರುತ ಒಂದಕ್ಕೆ ಏನು ವಿಶೇಶ? ನಮಗೆ ಸಂಸ್ಕ್ರುತ, ಪಾರಸೀ, ಇಂಗ್ಲಿಶು ಎಲ್ಲ ಸಮ.. ಆಗು ಆದರಣೀಯ..
ವಿಜ್ಞಾನಿ – ಈ ಪದವನ್ನು ಕನ್ನಡ ಸಾಹಿತ್ಯದಲ್ಲಿ ಸಾಕಷ್ಟು ಬಳಕೆಯಾಗಿದೆ.
ಕನ್ನಡದ ಎಲ್ಲ ನಿಘಂಟುಗಳಲ್ಲೂ ಇದು ಸ್ಥಾನ ಪಡೆದಿದೆ. ಇದರ ಮೂಲವನ್ನೇ ಮರೆಯುವಷ್ಟರ ಮಟ್ಟಿಗೆ ಇದು ಕನ್ನಡದ ಪದವಾಗಿಬಿಟ್ಟಿದೆ.
"ಜಬಾನ್ ಸಯಿನ್ಟಿಸ್ಟ್", "ಲಿಂಗವಿಸ್ಟ್" ಪದಗಳನ್ನು ಕನ್ನಡದಲ್ಲಿ ನಾವೆಂದೂ ಬಳಸಿಲ್ಲ. ಕನ್ನಡದ ಯಾವ ನಿಘಂಟುಗಳಲ್ಲೂ ಹುಡುಕಿದರೂ ಈ ಪದಗಳು ದೊರಕುವುದಿಲ್ಲ.
> ಸಂಸ್ಕ್ರುತ ಒಂದಕ್ಕೆ ಏನು ವಿಶೇಶ
ವಿಜ್ಞಾನಿ ಪದವನ್ನು ಸಂಸ್ಕೃತದ ಪದ ಎಂಬ ಕಾರಣಕ್ಕೆ ಉಪಯೋಗಿಸಬೇಕು ಎಂದು ಯಾರೂ ಹೇಳುತ್ತಿಲ್ಲ.
ಪೂರ್ವಾಗ್ರಹಪೀಡಿತವಾಗಿದ್ದರೆ ಮಾತ್ರ ಇವೆಲ್ಲಾ ಪ್ರಶ್ನೆಗಳು ಉದ್ಭವಿಸುತ್ತವೆ.
> ಒಂದು ವೇಳೆ.. ನನಗೆ ಸಂಸ್ಕ್ರುತದ "ಬಾಶಾ ವಿಗ್ನಾನಿ" ಬೇಡವೇ ಬೇಡ, ಏಕೆಂದರೆ ಕನ್ನಡಕ್ಕೂ ಸಂಸ್ಕ್ರುತಕ್ಕೂ
> ಯಾವ ನುಡಿಯರಿಗಯಂತೆ ನಂಟಿಲ್ಲ ಎಂದು ಒಂದು ಗುಂಪು ಹೇಳಿದರೆ
ಇದಕ್ಕೇ ವಿತ್ತಂಡವಾದ ಎಂದು ಹೇಳುವುದು.
ಶುಭಶ್ರೀಯವರು, ಕಿರಣ್ ಅವರು ತಮ್ಮ ಚರ್ಚೆಯುದ್ದಕ್ಕೂ ಕನ್ನಡದ ಸರಳೀಕರಣ ಎಂಬ ವಾದವನ್ನೇ ಮುಂದಿಡುತ್ತಾ ಬಂದಿದ್ದಾರೆ ಮತ್ತು ಅದು ಒಪ್ಪಿಗೆಯಾಗುವ ವಿಷಯವೇ.
ಸಂಸ್ಕೃತ ಮೂಲವೆಂಬ ಕಾರಣಕ್ಕೆ ಯಾವ ಪದಗಳನ್ನೂ ಬಿಡಬೇಕೆಂದಿಲ್ಲವೆಂಬುದನ್ನೂ ತಿಳಿಸಿದ್ದಾರೆ.
ಇದೀಗ ಮಾಯ್ಸ ಅವರ ವಾದ ನೋಡಿ. "ಸಂಸ್ಕೃತ ಬೇಡ" ಎನ್ನುವುದೇ ಅವರ ವಾದದ ತಿರುಳಾಗಿದೆ. ಅದಕ್ಕಾಗಿ ಕನ್ನಡ ಬದಲಾಗಬೇಕು ಎನ್ನುವುದಲ್ಲವೇ ಅವರ ಮಾತಿನ ಸಾರಾಂಶ?
ಸರಿಯಾಗಿ ಓದಿರಿ…
ನಾನು ಸಂಸ್ಕ್ತುತ ಬೇಡ ಅಂತ ಹೇಳಿಲ್ಲ… ಸಂಸ್ಕ್ರುತ ಒಪ್ಪುವುದಾದರೆ, ಪಾರಸೀ, ಇಂಗ್ಲೀಶು, ಹಿಂದಿ ಯಾಕೆ ಬೇಡ ಎನ್ನು ಪ್ರಶ್ನೆ ಬರುವುದು.
"ಜಬಾನ್ ಪಂಡಿತ್" ಎಂದು ಹಿಂದಿಯವರು ಹೇಳುವರು.
ಹಿಂದಿಯಲ್ಲಿ "ಹಾವಾಯಿ ಅಡ್ಡ" ಎಂಬು ಇಂಡಿಯದೇಶದ ಪ್ರತಿಯೊಂದು ಹಾವಾಯಿ ಅಡ್ಡ/ವಿಮಾನ ನಿಲ್ದಾಣದಲ್ಲೂ ಕೇಳಿಬರುವ ಪದ. ಅದಕ್ಕೆ ಕನ್ನಡ ಪದನೆರಿಕೆಯಲ್ಲಿ "ಹವಾಯಿ ಅಡ್ಡ" ಎಂಬ ಪದವನ್ನು ಕನ್ನಡಪದ ಎಂದು ಸೇರಿಸಿ ಎಂಬ ಮಾತು ಬಂದರೆ ಏನು ಮಾಡೋಣ? ಆಗ ನಮಗೆ ಸಂಸ್ಕ್ರುತ ಓಕೆ, ಹಿಂದಿ ಬೇಡ ಅಂತ ಹೇಳಿದರೇ? ಅವರೂ ಹಿಂದಿ ಹೇಗೆ ವಿಶೇಶ ಎಂದು ಕೇಳುವರು..
ಸಂಸ್ಕ್ರುತವೂ ಇರಲಿ, ಹಿಂದಿಯೂ ಇರಲಿ, ಇಂಗ್ಲೀಶು ಇರಲಿ, ಕನ್ನಡಕ್ಕೆ ಚೀನಿ, ಜಪಾನಿ, ಎಲ್ಲಾ ನುಡಿಗಳ ಪದಬರಲಿ.. ಬರೀ ಸಂಸ್ಕ್ರುತಕ್ಕೆ ಏನು ವಿಶೇಶ?
ನಮಗೆ ಎಲ್ಲ ನುಡಿಗಳ ಸಾಥ್ನ ಚಾಹ್ ಇರಬೇಕು.. ಎಂಬುದು ನನ್ನ ಮನದ ಬಾತ್.
> ಬರೀ ಸಂಸ್ಕ್ರುತಕ್ಕೆ ಏನು ವಿಶೇಶ?
ಇಲ್ಲಿ ಸಂಸ್ಕೃತದ ಪ್ರಶ್ನೆ ಎಲ್ಲಿಂದ ಬಂತು? ಯಾರು ಸಂಸ್ಕೃತ ವಿಶೇಷ ಎಂದದ್ದು?
ಇದು ನಿಮ್ಮ ಮನಸ್ಸಿನ ಊಹೆಯಲ್ಲವೇ?
ನಾವಿಲ್ಲಿ ಚರ್ಚಿಸುತ್ತಿರುವುದು, ಕನ್ನಡದಲ್ಲಿ ಈಗಾಗಲೇ ಬಳಕೆಯಲ್ಲಿರುವ ಪದಗಳ ಕುರಿತಾಗಿ.
ನಾವೇನೂ ಹೊಸದಾಗಿ ಸಂಸ್ಕೃತದಿಂದ ಪದಗಳನ್ನು ಕನ್ನಡಕ್ಕೆ ಆಮದು ಮಾಡುವ ಕುರಿತಾಗಿ ಮಾತನಾಡುತ್ತಿಲ್ಲವಲ್ಲಾ?
ಹಾಗಿದ್ದ ಮೇಲೆ, ನಿಮ್ಮ ಪ್ರಶ್ನೆ "ಅದಕ್ಕೆ ಕನ್ನಡ ಪದನೆರಿಕೆಯಲ್ಲಿ "ಹವಾಯಿ ಅಡ್ಡ" ಎಂಬ ಪದವನ್ನು ಕನ್ನಡಪದ ಎಂದು ಸೇರಿಸಿ ಎಂಬ ಮಾತು ಬಂದರೆ ಏನು ಮಾಡೋಣ?"
ಇಲ್ಲಿ ಅಪ್ರಸ್ತುತವಲ್ಲವೇ?
ಮೊದಲಿಗೆ ನಿಮ್ಮ ಮನಸ್ಸಿನಲ್ಲಿರುವ "ಸಂಸ್ಕೃತ ಮೂಲದ ಪದಗಳು" ಎಂಬುದನ್ನು ತೆಗೆದೆಸಿಯಿರಿ.
ಕನ್ನಡದಲ್ಲಿರುವ ಪದಗಳು ಯಾವ ಮೂಲದ್ದೇ ಆಗಿರಲಿ, ಅದರಿಂದ ತೊಂದರೆಯೇನು?
ಎಲ್ಲರಿಗೂ ಉಪಯೋಗಿಸಲು ಸರಳವಾಗಿದ್ದರಾಯಿತು, ಅದಲ್ಲವೇ ಇಲ್ಲಿನ ಚರ್ಚೆಯ ಸಾರಾಂಶ?
ಅರೇ.. ನರೇಂದ್ರ
ಸಂಸ್ಕ್ರುತ ಖಾಸ್ ಅಲ್ಲ ಅಂದ ಮೇಲೆ.. ಹಿಂದಿ ಯಾಕೆ ಬೇಡ ನಿಮಗೆ? ಹಿಂದಿ ನಮ್ಮ ದೇಶದ ರಾಜ್ ಭಾಷಾ! ನಮ್ ದೇಶದ ಬಡಾ ಹಿಸ್ಸಾ ಹಿಂದಿ ಮಾತಾಡುವುದು. ಮತ್ತು ಹಿಂದಿ ಸಿನಿಮ ನೋಡಿ ನಮಗೆಲ್ಲ ಹಿಂದಿ ಪದಗಳು ಪರಿಚಿತ್ ಇವೆ.
ಹಿಂದಿ ದ್ವೇಷ ಯಾಕೆ ನರೇಂದ್ರ? ಹಿಂದಿ ಉತ್ತರ ಭಾರತೀಯ ಭಾಷಾ ಎಂದು ನೀವು ಪ್ರಾಂತೀಯತಾ ಮಾಡ್ತೀರಾ?
ಅರೇ.. ಶರ್ಮಿಂದಗೀ.. ಇದೆ..
ಬರತ್.. ನಾನು ಮರೆತು ನಿಮಗೆ ಹೇಳಬೇಕಿದ್ದ ಅನಿಸಿಕೆಯನ್ನು ನರೇಂದ್ರ ಅವರಿಗೆ ಬರೆದೆ..
ನಿಮಗೆ ಸಂಸ್ಕ್ರುತ ಬಾಶಾ ವಿಗ್ನಾನಿ ಒಪ್ಪೋದಾರೆ? ಇಂಗ್ಲಿಶಿನ ಲಿಂಗ್ವಿಸ್ಟ್ ಏನು ಮಾಡಿದೆ? ನಾನು ಓದಿರೋದೇ ಲಿಂಗ್ವಿಸ್ಟ್ ಮೊದಲು.. ನನಗೆ ನಿಮ್ಮ ಬಾಶಾ ವಿಗ್ನಾನಿ, ನುಡಿಯರಿಗ ಎಲ್ಲ ಹೊಸತು.. ನಾನು ಇಲ್ಲಿಯ ವರೆಗೂ ಲರ್ನ್ ಮಾಡಿ ಲಿಂಗ್ವಿಸ್ಟ್, ಲಿಂಗ್ವಿಸ್ಟಿಕ್ಸ್, ಲ್ಯಾಂಗ್ವೇಜ್ ಪದಗಳೆಲ್ಲ ಯೂಸ್ಲೆಸ್ಸಾ?
ಇದರ ಮತಲಬ್ ಏನು?
ತಮಗೆ ಸಂಸ್ಕ್ರುತ ಚಾಲ್ತಿ ಆಗುವುದು? ಹಿಂದಿ, ಇಂಗ್ಲೀಶ ಯಾಕೆ ಬೇಡ.
ವರ್ಲ್ಡಲ್ಲಿ ಇಂಗ್ಲೀಶು ಹಿಂದಿ ಮಾತಾಡೋದು ಕರೋಡ್ ಕರೋಡ್ ಇದ್ದಾರೆ. ಸಂಸ್ಕ್ರುತ ಮಾತಾಡೋರು ಬರೀ ಕೆಲವು ಲ್ಯಾಕ್ಗಳು…
ನಿಮ್ಮ ಇಂಗ್ಲೀಶು ಹೇಟ್ರೆಡ್, ಹಿಂದಿ ನಫರತ್ ನ ಪೀಚ್ಛೇ ಏನಿದೆ?
> ನಿಮ್ಮ ಇಂಗ್ಲೀಶು ಹೇಟ್ರೆಡ್, ಹಿಂದಿ ನಫರತ್ ನ ಪೀಚ್ಛೇ ಏನಿದೆ?
ಕಾಮಾಲೆ ಕಣ್ಣಿಗೆ ಕಾಣೋದೆಲ್ಲಾ ಹಳದಿ ಎಂದು ಇದಕ್ಕೇ ಹೇಳುವುದು.
ಇಲ್ಲಿ ನೀವು "ಸಂಸ್ಕೃತ ವಿರೋಧಿ" ಎಂದು ಹೇಳುವುದಕ್ಕೆ ಯಾವ ಸಂಶೋಧನೆಯನ್ನೂ ಮಾಡಬೇಕಾಗಿಲ್ಲ.
ಆದರೆ, ನಿಮ್ಮ ಯಾವ ಸಂಶೋಧನೆಯಿಂದ "ಇಂಗ್ಲೀಶು ಹೇಟ್ರೆಡ್, ಹಿಂದಿ ನಫರತ್" ಇವೆಲ್ಲಾ ಕಂಡು ಬಂದಿದೆಯೋ ತಿಳಿಯುತ್ತಿಲ್ಲ.
ನೀವು ಇಲ್ಲಿಯವರೆಗೂ ರಾಜಕಾರಣಿಗಳಂತೆ ಯಾವುದೇ ಪುರಾವೆಗಳನ್ನೂ ನೀಡದೆ "ಇಂಗ್ಲೀಶು ಹೇಟ್ರೆಡ್, ಹಿಂದಿ ನಫರತ್" ಇತ್ಯಾದಿ ಹರಟುತ್ತಿದ್ದೀರಿ.
ನೀವು ಅವುಗಳಿಗೆ ಪುರಾವೆ ನೀಡಲಾಗದಿದ್ದರೆ, ರಾಜಕಾರಣಿಗಳ ಮಾತಿಗಿರುವ ಕಿಮ್ಮತ್ತೇ ನಿಮ್ಮ ಮಾತಿಗೂ ದೊರೆಯುತ್ತದೆ ಎಂಬುದನ್ನು ನೆನಪಿನಲ್ಲಿಡಿ.
ಏಪ್ರಿಲ್ 8 2011
೯೦% ಕನ್ನಡ,
೧೦% ಯಾವುದ್ ಬೇಕೊ (ಸಕ್ಕದ,ಇಂಗ್ಲಿಶ್, ಹಿಂದಿ….) ಅದನ್ನ ಹಾಕಿಕೊಳ್ಳಿ.
ಮಹೇಶ್ ಪ್ರಸಾದ್ ಅವರೇ,
ನಿಮ್ಮ ಮನದಾಳದ ಪ್ರಶ್ನೆಗಳನ್ನು ಕೇಳಿದ್ದಕ್ಕೆ ನನ್ನಿ.
ಇವಕ್ಕೆ ನನ್ನ ಉತ್ತರ ಹೀಗಿದೆ. ಉತ್ತರ ಒಮ್ಮೆ ಓದಿ, ನಿಮಗೆ ಗೊಂದಲವಿದ್ದರೆ ಖಂಡಿತ ತಿಳಿಸಿ, ಚರ್ಚೆ ಮಾಡೋಣ.
೧. ಯಾವುದೇ ಭಾಷೆಯನ್ನು ದ್ವೇಷಿಸುವುದು ಸಾಧ್ಯವಿಲ್ಲ ಎಂಬುದೇ ನನ್ನ ನಂಬಿಕೆಯಾಗಿದೆ.
೨. ಸಂಸ್ಕೃತ ಬೇರಿನ ಪದಗಳು ಕನ್ನಡಕ್ಕೆ ಹಲವು ಬಂದಿವೆ. ಕೆಲವು ದಿನನಿತ್ಯದ ಆಡುನುಡಿಗೂ ಬಂದಿವೆ. ಉದಾ: ಸುಲಭ, ಆನಂದ.
ಅವುಗಳನ್ನು ತೆಗೆದು ಹಾಕಬೇಕು ಅನ್ನೋ ಮನಸ್ಥಿತಿ ನನ್ನದಲ್ಲ. ಅವುಗಳು ಬಳಕೆಯಲ್ಲೇ ಮುಂದುವರೆಯಲಿ.
೩. 'ನುಡಿಯರಿಗ' , 'ಕಲಿಕೆಯರಿಗ' ಇವುಗಳು 'ಭಾಷಾ ವಿಜ್ನ್ಯಾನಿ, ಶಿಕ್ಷಣ ತಜ್ನ್ಯ' ಪದಗಳದ್ದೆ ಅರ್ಥ ಹೊಂದಿರುವ ಕನ್ನಡ ಬೇರಿನ ಪದಗಳು. ಕನ್ನಡದಲ್ಲೂ ಇದು ಸಾಧ್ಯ ಎಂದು ತೋರಿಸುತ್ತಿವೆ.
ಮುಂದಿನ ದಿನಗಳಿಗೆ ಕನ್ನಡವನ್ನು ಸಜ್ಜುಗೊಳಿಸಬೇಕಾದಾಗ, ಮುಂದಿನ ದಿನಗಳಲ್ಲಿ ಇನ್ನೂ ಬೇರೆ ಬೇರೆ ರೀತಿಯ ಕನ್ನಡ ಪದಗಳನ್ನು ಹುಟ್ಟು ಹಾಕಬೇಕಾಗುತ್ತದೆ. ಆಗಲೂ ಸಂಸ್ಕೃತದ ಪದಗಳನ್ನು ಬಳಸಿ, ಅವು ಕನ್ನಡಿಗರಿಗೆ ಅರ್ಥವಾಗುತ್ತವೋ ಇಲ್ಲವೋ ಎಂಬುದನ್ನೂ ಗಮನಿಸದೇ, ಅವನ್ನೇ ಕನ್ನಡಕ್ಕೂ ಅಳವಡಿಸೋದು 'ಕಲಿಯುವ' ಮಕ್ಕಳಿಗೆ ತೊಂದರೆಯೇ ಆಗುತ್ತದೆ. 'ಕಲಿತವರಿಗೂ' ಅರ್ಥವಾಗದ ಪದಗಳ ಬಳಕೆ ನಾವು ನೋಡಬಹುದು.
ಈಗಾಗಲೇ ಇಂತಹ ಪ್ರಯೋಗ ಆಗಿರೋದರ ಬಗ್ಗೆ ಕೆಲವು ಉದಾಹರಣೆಗಳನ್ನು ಕೊಡಬಹುದು. ದ್ಯುತಿ ಸಂಶ್ಲೇಷಣ ಕ್ರಿಯೆ, ಏಕಪದೋಕ್ತಿ, ವ್ಯುತ್ಕ್ರಮ, ಸಂಕಲನ, ವ್ಯವಕಲನ ಇತ್ಯಾದಿ.
೪. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು, ಈ ಹೊರೆಯನ್ನು ಹೊತ್ತು ಕಷ್ಟ ಪಡುತ್ತಿದ್ದಾರೆ. ಅವರಿಗೆ ಅರ್ಥವಾಗುವ ಪದಗಳನ್ನು ಹುಟ್ಟು ಹಾಕಿಸಬಾರದೇಕೆ ಎಂಬ ಪ್ರಶ್ನೆ ಇಟ್ಟವರಿಗೆ "ಅದೆಲ್ಲಾ ಕನ್ನಡದಲ್ಲಿ ಆಗಲ್ಲ ರೀ" ಅನ್ನೋ ಉತ್ತರ ಸಿಕ್ಕಿದೆ. ಕನ್ನಡದಲ್ಲಿ ಸಾಧ್ಯವಿಲ್ಲ ಅಂತೇನಿಲ್ಲ, ಹುಟ್ಟು ಹಾಕಲು ಬರಬೇಕಷ್ಟೇ ಎಂಬುದನ್ನು 'ನುಡಿಯರಿಗ', 'ಕಲಿಕೆಯರಿಗ' ಪದಗಳು ತೋರಿಸುತ್ತಿವೆ.
೫. ಸಂಕಲನ – ಕೂಡುವುದು
ವ್ಯವಕಲನ – ಕಳೆಯುವುದು
ವ್ಯುತ್ಕ್ರಮ – ತಲೆಕೆಳಗು, ಇತ್ಯಾದಿ ಪದಗಳನ್ನು ಬಳಸುವುದರಿಂದ ಮಕ್ಕಳ ಕಲಿಕೆ ಅಷ್ಟರ ಮಟ್ಟಿಗೆ ಸುಲಭ ಮಾಡಿದಂತಾಗುವುದಿಲ್ಲವೇ !
೬. ಹಾಗಂತ ಎಲ್ಲಾ ಸಂಸ್ಕೃತ ಬೇರಿನ ಪದಗಳನ್ನು ತೆಗೆದು ಹಾಕಬೇಕಾಗಿಲ್ಲ. ಆಡುನುಡಿಗೆ ಈಗಾಗಲೇ ಬಂದಿರುವ ಸಂಸ್ಕೃತ ಬೇರಿನ ಪದಗಳನ್ನು ಬಳಸಿಕೊಳ್ಳೋದು ಒಳ್ಳೆಯದು.
ಯಾರೂ ಕಂಡು ಕೇಳರಿಯದ ಪದಗಳನ್ನು ಹೇರೋದು ಯಾಕೆ ಎಂಬ ಪ್ರಶ್ನೆ ನೀವು ಎತ್ತಿದ್ದೀರ.
ಯಾವುದೇ ಪದಗಳನ್ನು ಜನರ ಆಡುನುಡಿಗೆ ತುರುಕಲು ಒಬ್ಬಿಬ್ಬರ ಕೈಯಲ್ಲಿ ಸಾಧ್ಯವಿಲ್ಲ – ಕಿರಣ್ ಇದನ್ನೇ ಹೇಳಿದ್ದಾರೆ.
ಹಾಗೆ ಸಾಧ್ಯವಿದ್ದಿದ್ದರೆ, ಇವತ್ತಿನ ದಿನ ಪಟ್ಯ ಪುಸ್ತಕಗಳಲ್ಲಿರೋ ಎಷ್ಟೋ ಸಂಸ್ಕೃತ ಬೇರಿನ ಪದಗಳು ಆಡುನುಡಿಗೆ ಬಂದುಬಿಡುತ್ತಿದ್ದವು.
ಹಾಗಾಗಿ, ಯಾವುದೇ ಪದವನ್ನು ನುಡಿಯರಿಗರು ಕಾಯಿನ್ ಮಾಡಿದರೆ, ಅದನ್ನು ಸಮಾಜವೇ ಆಡುನುಡಿಗೆ ತಂದುಕೊಳ್ಳಬೇಕು. ಸಮಾಜಕ್ಕೆ ಆ ಪದವು ಅರ್ಥವಾಗದಿದ್ದರೆ, ಅದರ ಬಳಕೆ ಮುಂದುವರೆಯೊಲ್ಲ.
ನಿಮಗೆ ಕಳವಳ ಬೇಡ.
> ದ್ಯುತಿ ಸಂಶ್ಲೇಷಣ ಕ್ರಿಯೆ, ಏಕಪದೋಕ್ತಿ, ವ್ಯುತ್ಕ್ರಮ, ಸಂಕಲನ, ವ್ಯವಕಲನ ಇತ್ಯಾದಿ
> ಸಂಕಲನ – ಕೂಡುವುದು
> ವ್ಯವಕಲನ – ಕಳೆಯುವುದು
> ವ್ಯುತ್ಕ್ರಮ – ತಲೆಕೆಳಗು, ಇತ್ಯಾದಿ ಪದಗಳನ್ನು ಬಳಸುವುದರಿಂದ ಮಕ್ಕಳ ಕಲಿಕೆ ಅಷ್ಟರ ಮಟ್ಟಿಗೆ ಸುಲಭ ಮಾಡಿದಂತಾಗುವುದಿಲ್ಲವೇ
ಖಂಡಿತ ಇದನ್ನು ಮಾಡಬೇಕು. ಕಠಿಣವಾದ ಪದಗಳ ಬದಲು ಸರಳವಾದ ಪದಗಳಿದ್ದಲ್ಲಿ ಉಪಯೋಗಿಸೋಣ.
ಈಗಿರುವ ಪದಗಳು ಯಾವ ಮೂಲದ್ದೇ ಇರಲಿ, ಅದು ಕಷ್ಟವಾಗಿದ್ದರೆ ಅದಕ್ಕೆ ಪರ್ಯಾಯ ಪದ ಹುಡುಕೋಣ ಇಲ್ಲವೇ ಹುಟ್ಟುಹಾಕೋಣ.
ಹಾಗೆ ಮಾಡುವಾಗ, ಹೊಸ ಪದ ಮತ್ತಷ್ಟು ಕಷ್ಟವಾಗಿರಬಾರದೆಂಬ ಕಡೆ ಗಮನವಿರಬೇಕು.
ಆದರೆ, ಕೇವಲ ಸಂಸ್ಕೃತದಿಂದ ಬಂದ ಪದವೆಂಬ ಒಂದೇ ಕಾರಣಕ್ಕೆ ಪದಗಳನ್ನು ಬದಲಾಯಿಸುವುದಿದ್ದರೆ ಅದಕ್ಕೆ ನನ್ನ ಸಮರ್ಥನೆಯಿಲ್ಲ.
ಮತ್ತು ಈ ಕೆಲಸವನ್ನು, ಕನ್ನಡ ಅಕ್ಷರ ಮಾಲೆಯನ್ನು ಬದಲಿಸದೆಯೇ ಮಾಡಬಹುದು.
ಕನ್ನಡ ಅಕ್ಷರಮಾಲೆ ಬದಲಾವಣೆಯಿಂದ ಏನು ಸಾಧಿಸಿದಂತಾಗುತ್ತದೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ.
ಪದಗಳ ಬಗ್ಗೆ ನಿಮಗೆ ಒಪ್ಪಿತವಿದೆ ಎಂದು ತಿಳಿಯಿತು.
ಲಿಪಿ ಸುದಾರಣೆಯಿಂದ ಆಗಬಹುದಾದ ಲಾಬಗಳ ಬಗ್ಗೆ ನಿಮ್ಮ ಜೊತೆ ಇನ್ನೊಂದು ಬರಹದಲ್ಲಿ ಮಾತನಾಡಿದ್ದೇನೆ.
ನಿಮಗೆ ಅದು convincing ಅನ್ನಿಸಿಲ್ಲ. ಒಂದೆರಡು ಮಾತಿನಲ್ಲೇ ಒಪ್ಪುವಂತಹ ವಿಷಯವೂ ಇದಲ್ಲ ಎಂದು ನನಗನ್ನಿಸಿದೆ.
ನಿಮಗೆ ಈ ಬಗ್ಗೆ ಹೆಚ್ಚು ತಿಳಿಯಲು ಆಸಕ್ತಿ ಇದ್ದರೆ, ಶಂಕರ ಭಟ್ಟರು ಬರೆದಿರುವ ಪುಸ್ತಕಗಳನ್ನು ಓದಿ.
ನಿಮ್ಮ ಉತ್ತರ ಹೆಚ್ಚು ಸಮಂಜಸವಾಗಿದೆ. ನನ್ನಂಥವರಿಗೆ ಅರ್ಥ ಆಗುವಂತಿದೆ. 🙂 ಧನ್ಯವಾದ.
ನಾನು ಹೇಳುತ್ತಿರುವುದೂ ನೀವು ಕಾಮೆಂಟಿಸುರುವುದೂ, ಗಿರೀಶ ಭಟ್ಟರು ಹೇಳುತ್ತಿರುವುದೂ ಹೆಚ್ಚು ಕಮ್ಮಿ ಒಂದೇ ಇದೆ. ಇಲ್ಲಿ ಭಿನ್ನತೆ ಎಲ್ಲಿದೆ ಎಂದೇ ತಿಳಿಯುತ್ತಿಲ್ಲ. ಬಹುಷಹ ನೀವು ಹೇಳಿದ್ದಕ್ಕೂ ಲೇಖನದ ಸಾರಕ್ಕೂ ಭಿನ್ನತೆಯಿರಬೇಕು. ಎಲ್ಲಾ ಗೊಂದಲಮಯವಾಗಿದೆ. ಅದಕ್ಕೇ ಆ ರೀತಿ ಕಾಮೆಂಟಿಸಿದೆ. ತಪ್ಪು ತಿಳಿಯಬೇಡಿರಿ.
@ಪ್ರಿಯಾಂಕ್,
'ಹ' ಕಾರ ಉಚ್ಚರಿಸಲು ಬರುವುದಿಲ್ಲ ಎಂದಾದಲ್ಲಿ ಅವರಿಗೆ ಉಚ್ಚರಿಸಲು ಕಲಿಸಬೇಕೆ ವಿನಃ 'ಹ-ಕಾರ'ವನ್ನೇ ಕಿತ್ತೊಗೆದರೆ ಆಗುತ್ತದೆಯೇ? ಪ್ರಯತ್ನ ಪಟ್ಟರೆ ಎಲ್ಲವೂ ಸಾದ್ಯ ಎಲ್ಲರಿಗೂ. ಕಲಿಯುವ ಮನಸ್ಸಿರಬೇಕು ಅಸ್ಟೇ. ಯಾವುದೇ ಪದ ಅಥವಾ ಅಕ್ಷರ ಉಚ್ಚರಿಸಲು ಕಷ್ಟ ಹೇಗಾಗುತ್ತದೆ? ಒಂದೋ ಆತನಲ್ಲಿ ಏನೋ ಊನವಿರಬೇಕು ಅಥವಾ (ಮುಖ್ಯವಾಗಿ) ಮನಸ್ಸಿಲ್ಲದಿರಬೇಕು ಅಲ್ಲವೇ ? ಉಚ್ಚರಿಸಲು ಕಷ್ಟ ಹಾಗಾಗಿ ಆ ಪದ ಅಥವ...