text
stringlengths
0
61.5k
ಏಪ್ರಿಲ್ 6, 2011
ಇಗೋ,ಇದರಲ್ಲಿ ಮುಂದಿದೆ…
– ಕಿರಣ ಬಾಟ್ನಿ, ಬನವಾಸಿ ಬಳಗ
'ನಿಲುಮೆ'ಯಲ್ಲಿ ಕನ್ನಡದ ಸೊಲ್ಲರಿಮೆಯ ಬಗ್ಗೆ ಚರ್ಚೆಯಾಗುತ್ತಿರುವುದು ಒಳ್ಳೆಯ ಸಂಗತಿ. ಅಕ್ಟೋಬರ್ ೨೦೦೮ರಲ್ಲಿ ನಾನು ಬರೆದ ಒಂದು ಬರಹವನ್ನು ಬನವಾಸಿ ಬಳಗದ ಗೆಳೆಯರಾದ ಶ್ರೀ ಆನಂದ್ ಜೋಶಿಯವರು ಈ ಚರ್ಚೆಗೆ ಸರಿಹೊಂದುತ್ತದೆ ಎಂದು ಪ್ರಕಟಣೆಗೆ ಕಳುಹಿಸಿ ಅದು ಪ್ರಕಟಿಸಲಾಗಿ, ಆ ಬರಹದಲ್ಲಿ ಬಂದ ಕೆಲವು ವಿಶಯಗಳ ಬಗ್ಗೆ, ಮತ್ತು ಬನವಾಸಿ ಬಳಗದ ನಿಲುವುಗಳ ಬಗ್ಗೆ ತಮ್ಮ ೪/೪/೨೦೧೧ರ ಬರಹದಲ್ಲಿ ಶ್ರೀ. ಅಜಕ್ಕಳ ಗಿರೀಶ ಬಟ್ಟರು ಪ್ರತಿಕ್ರಿಯೆ ನೀಡಿರುವುದರಿಂದ ಈ ಬರಹವನ್ನು ಬರೆಯುತ್ತಿದ್ದೇನೆ.
ಆ ಬರಹದಲ್ಲಿ ಗಿರೀಶಬಟ್ಟರನ್ನು ಕುರಿತು ನಾನು ಯಾವ ಮಾತನ್ನೂ ಆಡಿಲ್ಲ; ಅದನ್ನು ಬರೆದಾಗ ಅವರು ತಮ್ಮ ಹೊತ್ತಗೆಯನ್ನು ಪ್ರಕಟಿಸಿದ್ದರ ನೆನಪಿಲ್ಲ, ಅವರ ಹೆಸರೂ ನನಗಾಗ ಗೊತ್ತಿರಲಿಲ್ಲ. ಆದುದರಿಂದ ಆ ಬರಹದಲ್ಲಿ ಶಂಕರಬಟ್ಟರಿಗೆ ಗಿರೀಶಬಟ್ಟರು ಕೊಟ್ಟಿರುವ ಉತ್ತರಗಳ ವೈಗ್ನಾನಿಕತೆ-ಅವೈಗ್ನಾನಿಕತೆಗಳ ಬಗ್ಗೆ ನಾನು ಮಾತನಾಡಿರಲು ಸಾದ್ಯವೇ ಇರಲಿಲ್ಲ. ಆದರೆ ಶ್ರೀ. ಕೆ. ವಿ. ತಿರುಮಲೇಶರ ಒಂದು ಬರಹವನ್ನು ಕುರಿತು ಆ ಮಾತುಗಳನ್ನು ಆಡಿದ್ದು ನಿಜ, ಅವರು ಪ್ರತಿನಿದಿಸುವ 'ಹಳೆ-ಶಾಲೆ'ಯವರೆಲ್ಲರನ್ನೂ ಕುರಿತು ಆ ಮಾತುಗಳನ್ನು ಆಡಿದ್ದು ನಿಜ. ಈಗ ಗಿರೀಶಬಟ್ಟರಿಗೆ ಆ ಮಾತುಗಳು ತಮ್ಮನ್ನು ಕುರಿತೇ ಆಡಿದ್ದು ಎಂದು ಅನಿಸಿರುವುದರಲ್ಲಿ ಹಳೆಯ ಬರಹವನ್ನು ಹೊಸ ಚರ್ಚೆಯೊಂದರಲ್ಲಿ ಪ್ರಕಟಿಸಿದ್ದು ಒಂದು ಕಾರಣವಾದರೆ, ಮತ್ತೊಂದು ಕಾರಣ ನಿಜಕ್ಕೂ ಗಿರೀಶಬಟ್ಟರು ಆ 'ಹಳೆ-ಶಾಲೆ'ಗೇ ಸೇರುತ್ತಾರೆ ಎನ್ನುವುದು. ಮೊದಲನೆಯ ಕಾರಣಕ್ಕೆ ಬನವಾಸಿ ಬಳಗದ ಪರವಾಗಿ ನಾನು ಗಿರೀಶಬಟ್ಟರಲ್ಲಿ ಕ್ಶಮೆ ಕೇಳಿಕೊಳ್ಳುತ್ತ, ಎರಡನೆಯ ಕಾರಣದಿಂದ ಪ್ರೇರಿತರಾಗಿ ಅವರು ತಮ್ಮ ೪/೪/೨೦೧೧ರ ಬರಹದಲ್ಲಿ ಅದೇ ಹಳೆಯ ವಾದವನ್ನು ಮಂಡಿಸಿರುವುದರಿಂದ ಅದಕ್ಕೆ ಇಲ್ಲಿ ಮರುವುತ್ತರ.
ಅಂದಹಾಗೆ ನಾನೇನು 'ಹಳೆ-ಶಾಲೆ' ಎಂದು ಮೂದಲಿಸುವಂದದಲಿ ಹೇಳುತ್ತಿಲ್ಲ; ಆ ಶಾಲೆಯು ನಿಜಕ್ಕೂ ಸಾವಿರಾರು ವರ್ಶ ಹಳೆಯದಾದುದರಿಂದ ಮಾತ್ರವೇ ಆ ಹೆಸರನ್ನು ಅದಕ್ಕೆ ಕೊಟ್ಟಿದ್ದೇನೆ, ಅಶ್ಟೆ.
'ಕತ್ತರಿ' ಪುಸ್ತಕದ ಹೆಸರಿನ ಬಗೆಗಿನ ಚರ್ಚೆ ಮತ್ತು ಗೊಂದಲ
ಗಿರೀಶಬಟ್ಟರ ಹೊತ್ತಗೆಯ ಹೆಸರಿನಲ್ಲಿ ಶಂಕರಬಟ್ಟರ ಹೆಸರು ಬಂದಿರುವುದು ನನಗೆ ತಪ್ಪೇನು ಅನಿಸುವುದಿಲ್ಲ; ಅವರು ಹೇಳುವಂತೆ ನಿಜಕ್ಕೂ ಆವೊಂದು 'ಕತ್ತರಿ' ವರಸೆಯನ್ನು ಶಂಕರಬಟ್ಟರೇ ಶುರುಮಾಡಿರುವುದು, ಮತ್ತು ಅವರ ಹಿಂಬಾಲಕರು ಕಡಿಮೆಯೆನ್ನುವುದೂ ನಿಜ. ಅದನ್ನು ಹೇಳುವುದರಲ್ಲಿ ತಪ್ಪೇನೂ ಇಲ್ಲವೆಂದು ನನ್ನ ಅನಿಸಿಕೆ. ಅಶ್ಟೇ ಅಲ್ಲ, ಶಂಕರಬಟ್ಟರ ಹೆಸರನ್ನು ಹೇಳುವುದಕ್ಕೇ ಹಿಂಜರಿದು 'ಇಂದಿನ ಸುದಾರಣಾವಾದಿಗಳು' ಎಂದು ತಿರುಮಲೇಶರಂತೆ 'ಹೆಸರಿಸದೆ ಹೆಸರಿಸುವುದು' ನನಗೊಮ್ಮೆ ರಾ. ಗಣೇಶರು ಹೇಳಿದ 'ಶಾಸ್ತ್ರ ಸ್ವಬಾವವೇ ಕ್ಶಾತ್ರ ಸ್ವಬಾವವು' ಎನ್ನುವ ಮಾತಿಗೆ ಅಪವಾದ ಎನಿಸುತ್ತದೆ. ಆ ಕ್ಶಾತ್ರಸ್ವಬಾವ ಇಲ್ಲದವರ ವಾದದಲ್ಲಿ ಸಾಮಾನ್ಯವಾಗಿ ವೈಗ್ನಾನಿಕತೆಯೂ ಇರುವುದಿಲ್ಲ, ವಿಗ್ನಾನದ ಚರ್ಚೆಗಳಲ್ಲಿ ಅವೈಗ್ನಾನಿಕತೆಯು ಹುಟ್ಟಿಸುವ ಹೆದರಿಕೆ ಇರುತ್ತದೆ (ಅಂದಹಾಗೆ, ಆ ಕ್ಶಾತ್ರಸ್ವಬಾವ ಕಾಣಿಸಿಕೊಂಡ ಮಾತ್ರಕ್ಕೆ ವೈಗ್ನಾನಿಕತೆ ಇದೆ ಎಂದೂ ಹೇಳಲಾಗುವುದಿಲ್ಲ!).
ಆದರೆ ದುಕ್ಕದ ಸಂಗತಿಯೇನೆಂದರೆ ಗಿರೀಶಬಟ್ಟರು ತಮ್ಮ ಹೊತ್ತಗೆಯನ್ನು ಹೆಸರಿಸುವಾಗ ಶಂಕರಬಟ್ಟರ 'ಕತ್ತರಿ' ಏನನ್ನು ಕತ್ತರಿಸಲು ಹೊರಟಿದೆ ಎಂಬುದರ ಬಗ್ಗೆಯೇ ಗೊಂದಲವನ್ನು ಹುಟ್ಟಿಸಿ ಬಿಟ್ಟಿದ್ದಾರೆ: ಶಂಕರಬಟ್ಟರು 'ಕನ್ನಡ'ಕ್ಕೆ ಕತ್ತರಿ ಹಾಕಲು ಹೊರಟಿಲ್ಲ, 'ಕನ್ನಡ ಬರಹ'ಕ್ಕೆ ಕತ್ತರಿ ಹಾಕಲು ಹೊರಟಿರುವುದು. ಇವೆರಡೂ ಬೇರೆಬೇರೆ. ಕನ್ನಡಕ್ಕೆ, ಎಂದರೆ ಕನ್ನಡ ನುಡಿಗೆ ಕತ್ತರಿ ಹಾಕುವುದು-ಬಿಡುವುದು ಒಬ್ಬಿಬ್ಬರ ಕೈಯಲ್ಲಿ ಇರುವುದಿಲ್ಲ. ಆದರೆ ಬರಹಕ್ಕೆ, ಬರಿಗೆಮಣೆಗೆ ಕತ್ತರಿ ಹಾಕುವುದು ಹಾಗೆ ಒಬ್ಬಿಬ್ಬರ ಕೈಯಲ್ಲಿ ಇರುತ್ತದೆ. ಅದನ್ನು ಒಪ್ಪಿಕೊಳ್ಳುವುದು ಬಿಡುವುದು ಮಾತ್ರ ಕನ್ನಡಿಗರೆಲ್ಲರ ಕೈಯಲ್ಲಿ ಇರುವುದು. ಶಂಕರಬಟ್ಟರ 'ಕತ್ತರಿ' ವರಸೆಯಿಂದ ಬದಲಾದ ಕನ್ನಡಲಿಪಿಯ ಬದಲು ಒಂದು ಬಿಳಿಹಲಗೆಯೇ ವಾಸೆಯಿಂದು ರೋಮನ್ ಲಿಪಿಯನ್ನೇ ಬಳಸಿದರೆ ಹೇಗೆ ಎಂದು 'ಒಬ್ಬ ವ್ಯಕ್ತಿ'ಯಾದ ನಾನು ಮಿಂಬಲೆಗರಿಗೆ ಈ ಹಿಂದೆ ಸವಾಲು ಹಾಕಿದ್ದೆ (ಹಲವರು ಅದನ್ನು ಒಪ್ಪೂ ಒಪ್ಪಿದ್ದರು). ಬರಹದಲ್ಲಿ ಈ ರೀತಿಯ ಹೊಸತನಗಳನ್ನು 'ಒಬ್ಬಿಬ್ಬ ವ್ಯಕ್ತಿ'ಗಳೇ ಮಾಡಬೇಕು, ಮಾಡಲಾಗುವುದು. ಪ್ರತಿಯೊಬ್ಬ ಕನ್ನಡಿಗನೂ ಕುಳಿತು ಚರ್ಚಿಸಿ ಬರಹದಲ್ಲಿ ಈಬಗೆಯ ಪ್ರಯೋಗಗಳನ್ನು ಮಾಡುವುದು ಆಗದ ಮಾತು; ಆದರೆ ಆ ಪ್ರಯೋಗಗಳು ನೆಲೆನಿಲ್ಲುತ್ತವೋ ಇಲ್ಲವೋ ಎನ್ನುವುದರ ತೀರ್ಮಾನವು ಮಾತ್ರ ಒಬ್ಬಿಬ್ಬರದಲ್ಲ, ಎಲ್ಲ ಕನ್ನಡಿಗರದು (ಅವರನ್ನು ಸ್ವತಂತ್ರವಾಗಿ ಆ ತೀರ್ಮಾನವನ್ನು ಮಾಡಲು ಆರ್ತಿಕ-ಸಾಮಾಜಿಕ-ರಾಜಕೀಯ ಏರ್ಪಾಡುಗಳು ಬಿಟ್ಟರೆ). ಈ ರೋಮನ್ ಲಿಪಿಯ ಪ್ರಯೋಗವನ್ನು ಗಿರೀಶಬಟ್ಟರ ಮಾತಿನ ದಾಟಿಯಲ್ಲಿ ಬಣ್ಣಿಸುವುದಾದರೆ 'ಅಂಗಾಂಗ ಚೇದ'ವೂ ಅಲ್ಲ, 'ಆಂಪ್ಯುಟೇಶನ್ನೂ' ಅಲ್ಲ, 'ಔಶದಿ ಕೊಡುವಿಕೆ'ಯೂ ಅಲ್ಲ; ಹಳೆಬಟ್ಟೆಯನ್ನು ಕಳಚೆಸೆದು ಹೊಸಬಟ್ಟೆಯನ್ನು ಹಾಕುವ ಒಂದು ಪ್ರಯತ್ನ ಎಂದು ಕರೆಯಬಹುದೇನೋ! ಇರಲಿ, ಅದರ ಬಗ್ಗೆ ಇಲ್ಲಿ ಇಶ್ಟು ಸಾಕು.
ನುಡಿಯರಿಮೆ ಮತ್ತು ರಾಜಕೀಯ
ಗಿರೀಶಬಟ್ಟರು ತಮ್ಮ ಮತವನ್ನು ತಿಳಿಹೇಳುತ್ತ ಶಂಕರಬಟ್ಟರು 'ರಾಜಕೀಯ ಸರಿತನಕ್ಕೆ ಸೂಕ್ತವಾದ ಪರಿಭಾಷೆಯಲ್ಲಿ ತಮ್ಮ ವಾದವನ್ನು ಮಂಡಿಸುತ್ತಿದ್ದಾರೆ' ಎಂದಿದ್ದಾರೆ. ಶಂಕರಬಟ್ಟರು ಬೇಕೆಂದೇ ಹೀಗೆ ಮಾಡಿರಲಾರರು ಎಂದು ಅವರ ವಯಸ್ಸು ಎಶ್ಟೆಂದು ಗೊತ್ತಿರುವವರಿಗೆ ಗೊತ್ತಿರುತ್ತದೆ. ಆದರೆ ಬೇಕೆಂದೋ ಬೇಕೆಂದಲ್ಲದೆಯೋ ಒಬ್ಬ ನುಡಿಯರಿಗನ ಮಾತಿನಲ್ಲಿ 'ರಾಜಕೀಯ ಸರಿತನ' ಕಂಡರೆ ತಪ್ಪೇನು? ನುಡಿಯ – ಅದರಲ್ಲೂ ಅದರ ಬರವಣಿಗೆಯ – ಬಗೆಗಿನ ಚರ್ಚೆಯಲ್ಲಿ ರಾಜಕೀಯದ ಪ್ರವೇಶವೇನು ಹೊಸದಲ್ಲ. ನುಡಿ ಮತ್ತು ಬರಹಗಳು ಸಾಮಾಜಿಕ-ಆರ್ತಿಕ-ರಾಜಕೀಯ ನೆಲೆಗಳ ಮೇಲೇ ನಿಂತಿರುತ್ತವೆ ಎಂದು ಹೊಸದಾಗಿ ಹೇಳಬೇಕೆ? ಕನ್ನಡದ ಇತಿಹಾಸವನ್ನು ಬಲ್ಲವರಿಗೆ ಅಶೋಕನೆಂಬ ದೊರೆಯ 'ರಾಜಕೀಯ' ಕನ್ನಡನಾಡನ್ನು ಹರಡಿದ್ದರಿಂದಲೇ ಕನ್ನಡಕ್ಕೆ ಲಿಪಿಯೆಂಬುದು ಬಂದಿದ್ದು ಎಂದು ತಿಳಿದಿರುತ್ತದೆ. ಈ ಮಾತನ್ನು ಹೇಳಿದರೆ ಕನ್ನಡ ನುಡಿಯ ಬಗೆಗಿನ ಚರ್ಚೆಯ ವೈಗ್ನಾನಿಕತೆಯೇನು ಕಡಿಮೆಯಾಗುವುದಿಲ್ಲ. ಹಾಗೆಯೇ ಆ ಕನ್ನಡಲಿಪಿ ಮತ್ತು ಅದರಲ್ಲಿ ಬರೆಯುತ್ತಿದ್ದುದು ಬಹುಪಾಲು ಕನ್ನಡಿಗರಿಂದ ದೂರವುಳಿಯಿತು ಎಂಬ 'ಸಾಮಾಜಿಕ' ಸತ್ಯವನ್ನು ಈ ವಾದಕ್ಕೆ ತಂದರೂ ತಂದವರ ವಾದದ ವೈಗ್ನಾನಿಕತೆಯೇನು ಕಡಿಮೆಯಾಗುವುದಿಲ್ಲ. ಹಾಗೆಯೇ ಆ ದೂರವುಳಿದ ಕನ್ನಡಿಗರು ಆರ್ತಿಕವಾಗಿ ಹಿಂದುಳಿದಿದ್ದರು ಮತ್ತು ಈಗಲೂ ಹಿಂದುಳಿದಿದ್ದಾರೆ ಎಂಬ 'ಆರ್ತಿಕ' ಸತ್ಯವನ್ನು ತಂದರೂ ವೈಗ್ನಾನಿಕತೆ ಕಡಿಮೆಯಾಗುವುದಿಲ್ಲ. ಇವೆಲ್ಲ ದಿಟಗಳು. ದಿಟಗಳನ್ನು ಹೆಕ್ಕಿ ತೆಗೆಯುವುದೇ ಅರಿಗರ ಕೆಲಸ. ಅದನ್ನು ಅವರು ಚೆನ್ನಾಗಿ ಮಾಡಿದಾಗ ಹೊರಬರುವ ದಿಟಗಳು ಯಾರಿಗೆ ಇಶ್ಟವಾಗುವುದಿಲ್ಲವೋ ಅವರು ಆ ದಿಟಗಳ ದಿಟತನವನ್ನೂ, ಅವುಗಳನ್ನು ಹೆಕ್ಕಿ ತೆಗೆಯುವವರ ಅರಿಮೆತನವನ್ನೂ ಪ್ರಶ್ನಿಸುವುದು ಸಹಜ. ಅಂತಹ ಒಂದು ಸಹಜ ಕೆಲಸವನ್ನೇ 'ಹಳೆ-ಶಾಲೆ'ಯವರು ಮಾಡುತ್ತಿರುವುದು. ಅಂತಹ ಒಂದು ಸಹಜ ಕೆಲಸವನ್ನೇ ಗಿರೀಶಬಟ್ಟರು ತಮ್ಮ ಸಮರ್ತನೆಯ ವಾಕ್ಯದಲ್ಲಿ ಮಾಡಿರುವುದು.
ತಮಿಳ್ ತಮಿಳ್ ತಮಿಳೆಂದು ಕೂಗಾಡದಿರಿ!
ಇನ್ನು, 'ಶಂಕರ ಭಟ್ಟರ ವಾದಕ್ರಮ ತಮಿಳು ಮಾದರಿ, ದ್ರಾವಿಡ ಚಳುವಳಿಯಂಥದ್ದು"' ಎಂದು ಹೇಳುವ ಸ್ವಾತಂತ್ರ್ಯ ಗಿರೀಶಬಟ್ಟರಿಗೆ ಇದೆ. ಅದು ಶಂಕರಬಟ್ಟರ ಮೇಲಿನೆ ವೈಯಕ್ತಿಕ ದಾಳಿ ಎಂದು ನಾನು ಕರೆಯುವುದಿಲ್ಲ. ಒಂದರಲ್ಲಿ ಇನ್ನೊಂದರ ಮಾದರಿಯನ್ನು ಕಾಣುವುದು ಸಹಜ. ಆದರೆ 'ತಮಿಳು ಮಾದರಿ' ಮತ್ತು 'ದ್ರಾವಿಡ ಚಳುವಳಿಯ ಮಾದರಿ' ಎಂದರೆ ಅವೈಗ್ನಾನಿಕವಾದುದು ಎಂದು (ತಮಗೆ ಇಶ್ಟವಾಗದೆ ಇರುವುದು ಎಂದಲ್ಲ) ತೋರಿಸಿಕೊಡುವ ಹೊರೆ ಗಿರೀಶಬಟ್ಟರ ಮೇಲೆ ಬೀಳುತ್ತದೆ, ಏಕೆಂದರೆ ವಿಗ್ನಾನದ ಈ ವಾದದಲ್ಲಿ ಆ ಮಾತನ್ನು ವೈಗ್ನಾನಿಕ ಸತ್ಯವೆಂಬಂತೆ ಎತ್ತಿರುವುದು ಅವರೇ. ತಮಿಳು-ಕನ್ನಡಗಳು ಬೇರೆಯಾದದ್ದು ಇತ್ತೀಚೆಗೆ ಎಂದು ನುಡಿಯರಿಗರಿಗೆ ತಿಳಿಯದೆ ಇಲ್ಲ. ಶಂಕರಬಟ್ಟರು ತಮಿಳನ್ನು ಮಾದರಿಯಾಗಿ ತೆಗೆದುಕೊಂಡಿದ್ದಾರೆ ಎಂದೇನು ನಾನು ಒಪ್ಪುವುದಿಲ್ಲ (ಮತ್ತು ತಮಿಳಿನ ಬಗ್ಗೆ ಶಂಕರಬಟ್ಟರು ಬರೆದಿರುವ ಒಂದೆರಡು ವಾಕ್ಯಗಳನ್ನು ಗಿರೀಶಬಟ್ಟರು ಪುರಾವೆಯಾಗಿ ಕೊಡಲೆತ್ನಿಸಿರುವುದು ಅವರ ಮೇಲಿನ 'ಮಾದರಿ'ಯ ಆರೋಪವನ್ನು ಸರ್ಮರ್ತಿಸುವುದಿಲ್ಲ),
ಆದರೆ ತಮಿಳಿನ ಮಾದರಿ ಕನ್ನಡಕ್ಕೆ ಒಪ್ಪುತ್ತದೆ ಎಂದು ಯಾರಾದರೂ ನಿಜಕ್ಕೂ ಹೇಳಿದರೆ ಅವರು ಮಾಡುವ 'ತಪ್ಪು' ಈವರೆಗಿನ ಹಳೆ-ಶಾಲೆಯವರು ಮಾಡಿರುವ, ಮಾಡುತ್ತಿರುವ, ಇನ್ನು ಮುಂದೆಯೂ ಮಾಡೋಣವೆನ್ನುವ ತಪ್ಪಿಗಿಂತ ದೊಡ್ಡದೇ? ಕನ್ನಡದ ಸೊಲ್ಲರಿಮೆಗೆ ನಂಟಿಲ್ಲದ ಸಂಸ್ಕ್ರುತದ ಬರಿಗೆಮಣೆ, ಪದಕಟ್ಟಣೆ ಮತ್ತು ಸೊಲ್ಲರಿಮೆಗಳ ಮಾದರಿಯನ್ನೇ ಇಲ್ಲಿಯವರೆಗೆ ಕನ್ನಡದ ಬರಹಗಾರರು, ನುಡಿಯರಿಗರು ಮತ್ತು ಸೊಲ್ಲರಿಗರು ಕಣ್ಮುಚ್ಚಿಕೊಂಡು ಪಾಲಿಸುತ್ತ ಬಂದಿರಲಿಲ್ಲವೆ? ಶಂಕರಬಟ್ಟರು ಯಾವ ಹಳೆಯ ಮಾದರಿಗೂ ಅಂಟಿಕೊಳ್ಳದೆ ತಮ್ಮದೇ ಒಂದು ಮಾದರಿಯನ್ನು ಕಟ್ಟುತ್ತ ಬಂದಿದ್ದಾರೆ; ಆದರೆ ಅವರ ಕೆಲಸವನ್ನು ಒಂದಲ್ಲ ಒಂದು ಮಾದರಿಗೆ ಅಂಟಿಸಬೇಕು ಎಂದು ಹೊರಟವರಿಗೆ 'ತಮಿಳಿನ ಮಾದರಿ' ಮತ್ತು 'ದ್ರಾವಿಡ ಚಳುವಳಿಯ ಮಾದರಿ'ಗಳು ಮುಂದೆ ಬಂದು ನಿಂತರೆ ಅವು ಅವರ ಆ ಮಾದರಿಯನ್ನು ಕಾಣುವ ಹಂಬಲದ ಮತ್ತು ಆ ಮಾದರಿಗಳನ್ನು ಎಲ್ಲರೊಪ್ಪುಗೆಯ ಕೆಡಕುಗಳೆಂದು ಆದಾರವಿಲ್ಲದೆ ತಿಳಿದಿರುವವರ ಅವೈಗ್ನಾನಿಕತೆಯ ಕೂಸುಗಳೇ ಹೊರತು ನಿಜವಲ್ಲ. ತಮಿಳಿನ ನುಡಿಯರಿಗರು ತೋಲ್ಕಾಪ್ಪಿಯಮ್ಮಿನ ಎಲ್ಲೆಗಳನ್ನು ಮೀರಿ ಹೋಗಿಲ್ಲ, ಅದರಲ್ಲಿರುವ ಹಲವಾರು ಅವೈಗ್ನಾನಿಕ ಅಂಶಗಳನ್ನು ಎದುರಿಸುವ ಎದೆಗಾರಿಕೆಯನ್ನು ಮಾಡಿಲ್ಲ ಎಂದು ಶಂಕರಬಟ್ಟರು ಗೋಳಿಡುತ್ತಾರೆ ಎಂದು ಅವರನ್ನು ಒಮ್ಮೆ ಮಾತನಾಡಿಸಿದರೆ ತಿಳಿದು ಬರುತ್ತದೆ; ಅವರು ಕನ್ನಡದ ಕಡೆಗೆ ತಮ್ಮೆಲ್ಲ ಗಮನವನ್ನು ಹರಿಸುತ್ತ ಇರುವುದರಿಂದ ಈ ಬಗ್ಗೆ ಬರೆದಿಲ್ಲ, ಅಶ್ಟೆ. ಅಲ್ಲದೆ, ಅರಿಗನೊಬ್ಬನ ಕೆಲಸ ಯಾವ ಮಾದರಿಯದು ಎಂದು ತೀರ್ಮಾನಿಸಲು ಹೊರಡುವುದಾದರೂ ಏಕೆ? ಒಂದು ವಾದದ ವೈಗ್ನಾನಿಕತೆ-ಅವೈಗ್ನಾನಿಕತೆಗಳನ್ನು ಆ ವಾದದ ಆದಾರದ ಮೇಲೇ ತೀರ್ಮಾನಿಸಲು ಆದರೆ ಮಾಡಬೇಕು. ಇಲ್ಲದಿದ್ದರೆ ಸುಮ್ಮನಿರಬೇಕು. ಸರಿ-ತಪ್ಪಿನ ತೀರ್ಮಾನಕ್ಕಾಗಿ ಒಂದಲ್ಲ ಒಂದು ಮಾದರಿಗೆ ವೋಟು ಹಾಕಲೇ ಬೇಕಾದ ಇಕ್ಕಟ್ಟಿಗೆ ತನ್ನನ್ನು ತಾನೇ ಸಿಕ್ಕಿಸಿಕೊಳ್ಳುವುದು ರಾಜಕೀಯದ ಗೋಶಣೆಗಳಿಂದ ಪ್ರೋಗ್ರಾಮಾಗಿರುವ ಮತದಾರನ ಗುಣ; ಎಲ್ಲ ಸರಪಳಿಗಳನ್ನೂ ಕಳಚಿ ಸ್ವತಂತ್ರವಾಗಿ ಚಿಂತಿಸುವ ಅರಿಗನ ಗುಣವಲ್ಲ.
ಇನ್ನು ಗಿರೀಶಬಟ್ಟರು 'ಹೇಳಬೇಕಾದ 'ಬಹಳ ಮುಖ್ಯವಾದ ಸಂಗತಿ''ಗೆ ಬರುತ್ತೇನೆ. ""ಶಂಕರಭಟ್ಟರು ಹೇಳುವ ರೀತಿಯ ಸುಧಾರಣೆಗಳನ್ನು ತಮಿಳರು ಎಂದೋ ಮಾಡಿದ್ದಾರೆ ತಾನೆ? ಅಲ್ಲಿ ಆ ಭಾಷೆಯ ಸ್ಥಿತಿಗತಿ ಹೇಗಿದೆ? ಈ ಸುಧಾರಣೆಗಳ ಕಾರಣದಿಂದಾಗಿ ಯಾವ ಗುಣಾತ್ಮಕ ಪರಿಣಾಮಗಳಾಗಿವೆ? ಇದನ್ನು ನೋಡಬೇಡವೆ?"" ಎಂದು ಶುರು ಮಾಡಿಕೊಂಡು ತಮಿಳಿಗೂ ನೊಬೆಲ್ ಪ್ರಶಸ್ತಿ ಬಂದಿಲ್ಲವೆಂದೂ, ತಮಿಳಿನಲ್ಲೂ 'ಜಗತ್ತಿಗೆ ಬೇಕಾದ ಗ್ನಾನ' ರಚನೆಯಾಗಿಲ್ಲವೆಂದೂ, ತಮಿಳಿನಲ್ಲಿ ಕನ್ನಡದಶ್ಟು ಒಳ್ಳೆಯ ಬರಹಗಾರರು ಬಂದಿಲ್ಲವೆಂದೂ ಗಿರೀಶಬಟ್ಟರು ವಾದಿಸುತ್ತಾರೆ. ಗಮನಿಸಬೇಕಾದ ವಿಶಯವೇನೆಂದರೆ ಈ ವಾದದಲ್ಲಿ ಶಂಕರಬಟ್ಟರು ಮಾಡಬೇಕು ಎನ್ನುತ್ತಿರುವ ಬದಲಾವಣೆಗಳು ವೈಗ್ನಾನಿಕವೋ ಅವೈಗ್ನಾನಿಕವೋ ಎಂಬ ವಾದದಿಂದ ಗಿರೀಶಬಟ್ಟರು ಹೊರಬಂದಿದ್ದಾರೆ, ಮತ್ತು ಯಾವುದೇ ಆದಾರವಿಲ್ಲದೆ ತಮಿಳಿನಲ್ಲಿ ನಡೆದ 'ಸುದಾರಣೆ'ಗೆ ಬಟ್ಟರು ಮಾಡುತ್ತಿರುವ ಕೆಲಸವನ್ನು ಹೋಲಿಸಿದ್ದಾರೆ. ಈಗ ಅವರ ಮುಂದಿರುವ ಪ್ರಶ್ನೆ ವಿಗ್ನಾನದ್ದಲ್ಲ, ಅದರಿಂದ ಹೊರಬಂದ ದಿಟಗಳು ಗಿರೀಶಬಟ್ಟರ ಬಗೆಗಣ್ಣಿನ ಬವಿಶ್ಯದ ಚಿತ್ರಕ್ಕೆ ಒಪ್ಪುತ್ತವೋ ಇಲ್ಲವೋ, 'ಗುಣಾತ್ಮಕ'ವೋ ಇಲ್ಲವೋ ಎಂಬ ಕಾಳಜಿ.
ಆ ಕಾಳಜಿಯಲ್ಲಿ ತಪ್ಪೇನಿಲ್ಲ, ನನಗೂ ಅಂತದ್ದೇ ಕಾಳಜಿಯಿರುವುದು. ಆದರೆ ಯಾವುದನ್ನು 'ಗುಣಾತ್ಮಕತೆ' ಎಂದು ಗಿರೀಶಬಟ್ಟರು ಕರೆಯುತ್ತಿರುವರೋ ಅದು ಗುಣಾತ್ಮಕತೆಯೇ ಎಂಬ ಪ್ರಶ್ನೆ ಏಳುತ್ತದೆ. ನನ್ನ ಉತ್ತರ "ಅಲ್ಲ, ಅದು ಗುಣಾತ್ಮಕತೆಯಲ್ಲ" ಎಂಬುದು. ಹದಿನೈದು ಒಳ್ಳೆಯ ಬರಹಗಾರರು ಹುಟ್ಟಿಕೊಂಡು, ಕೋಟಿಗಟ್ಟಲೆ ಜನರಿಗೆ ಅರ್ತವಾಗದ ಪದಗಳನ್ನು ಸಂಸ್ಕ್ರುತದಿಂದ ತಂದು ತುರುಕಿ ಹೊತ್ತಗೆಗಳನ್ನು ಬರೆದು, ಅದರಲ್ಲಿ ಕೆಲವಕ್ಕೆ ದೊಡ್ಡದೊಡ್ಡ ಬಿರುದು-ಬಹುಮಾನಗಳನ್ನು ಯಾರಿಂದಲೋ ಸಿಕ್ಕಿಬಿಟ್ಟರೆ ಅದೇನು ಗುಣಾತ್ಮಕತೆಯಲ್ಲ. ಈ ಬಿರುದು-ಬಹುಮಾನಗಳಿಗಿಂತ ಒಂದು ಇಡೀ ನುಡಿಜನಾಂಗವು ತಲೆಯೆತ್ತಿ ತಾನಾಡುವ ನುಡಿಯು ಕೀಳಲ್ಲ ಎಂದು ಎದೆತಟ್ಟಿ ಹೇಳುವುದಾದರೆ ಅದೇ ನನ್ನ ಪಾಲಿಗೆ ಗುಣಾತ್ಮಕತೆ. ಈ ಬಿರುದು-ಬಹುಮಾನಗಳಿಗಿಂತ ಒಂದು ಇಡೀ ಜನಾಂಗದಲ್ಲಿ ಒಂದು ಪಂಗಡವು ಆಡುವ ನುಡಿ ಮೇಲ್ದರ್ಜೆಯದು, ಮಿಕ್ಕೆಲ್ಲ ಪಂಗಡದವರು ಆಡುವ ನುಡಿ ಕೆಳದರ್ಜೆಯದು ಎಂಬ ತಾರತಮ್ಯವಿಲ್ಲದಿದ್ದರೆ ಅದೇ ನನ್ನ ಪಾಲಿಗೆ ಗುಣಾತ್ಮಕತೆ. ಅಂತಹ ಗುಣಾತ್ಮಕತೆಯನ್ನು ತಮಿಳರು ಇಂದು ಪಡೆದುಕೊಂಡಿದ್ದಾರೆ, ಕನ್ನಡಿಗರು ಪಡೆದುಕೊಂಡಿಲ್ಲ. ಬೆರಳೆಣಿಕೆಯ ಕೆಲವರು ಎಲ್ಲಿ "ನಿನಗೆ ನಾಲಗೆಯೇ ಹೊರಳುವುದಿಲ್ಲ! ನಿನಗೆ ಬರವಣಿಗೆ ಎಂದಿಗೂ ಬರುವುದಿಲ್ಲ!" ಎಂದು ಬೈದಾರು ಎಂಬ ಹೆದರಿಕೆಯಿಂದ ಕೋಟಿಗಟ್ಟಲೆ ಕನ್ನಡಿಗರು ಇನ್ನೂ ಬಾಯ್ಬಿಡದೆ, ಬರವಣಿಗೆ ಮಾಡದೆ ಕುಳಿತಿದ್ದಾರೆ. ಇಂತಹ ವಾತಾವರಣದಲ್ಲಿ ಹದಿನೈದು ಒಳ್ಳೆಯ ಬರಹಗಾರರಿಗಾಗಲಿ, ಅವರ ಬಿರುದು-ಬಹುಮಾನಗಳಿಗಾಗಲಿ ಎಶ್ಟು ಬೆಲೆ? ಯಾವುದು ಕೋಟಿಗಟ್ಟಲೆ ಕನ್ನಡಿಗರ ಮನುಷ್ಯತ್ವವನ್ನೇ ಅಲ್ಲಗಳೆದು ಬೆರಳೆಣಿಕೆಯ ಜನರಿಗೆ ಬಿರುದು-ಬಹುಮಾನಗಳನ್ನು ಕೊಡುವುದೋ ಅದರಲ್ಲಿ ಯಾವ ಗುಣಾತ್ಮಕತೆಯಿದೆ?
ತಮಿಳು ಸಾಹಿತ್ಯದ ಮೇಲೆ ಗಿರೀಶಬಟ್ಟರು ಮಾಡಿರುವ ಆರೋಪಗಳನ್ನು ಒಪ್ಪುವ ಇಲ್ಲವೇ ತಳ್ಳಿಹಾಕುವ ಸ್ತಿತಿಯಲ್ಲಿ ನಾನಿಲ್ಲ. ಏಕೆಂದರೆ ತಮಿಳಿನ ಒಬ್ಬ ಸಾಹಿತಿಯನ್ನೂ ನಾನು ಹೆಸರಿಸಲಾರೆ; ನನಗೆ ತಮಿಳು ಬರುವುದೂ ಇಲ್ಲ; ಆದ್ದರಿಂದ ತಮಿಳಿನ ಬರಹಗಾರರ ಸಂಕ್ಯೆ ಮತ್ತು ಅವರ ಬರವಣಿಗೆಯ ಗುಣಮಟ್ಟದ ಬಗ್ಗೆ ನಾನು ತೀರ್ಪು ಕೊಡಲಾರೆ. ಗಿರೀಶಬಟ್ಟರು ತಮಿಳು ಬಲ್ಲವರಾಗಿದ್ದು ತಮಿಳಿನ ಬರವಣಿಗೆಯ ಪ್ರಪಂಚವನ್ನು ಬಹಳ ಹತ್ತಿರದಿಂದ ಗಮನಿಸುತ್ತ ಬಂದಿರುವರೋ ಇಲ್ಲವೋ ಗೊತ್ತಿಲ್ಲ, ಆದರೆ ಅಂತವರಂತೆ ಅವರು ಬರೆದುಕೊಂಡಿರುವುದರಿಂದ ಅದನ್ನು ಒಪ್ಪಬೇಕಶ್ಟೆ! ಅವರು ಹೇಳುವುದು ನಿಜವಾದರೂ ಏನಂತೆ? ಮೇಲೆ ಹೇಳಿದಂತೆ ಸಾಹಿತ್ಯದ ಹದಿನೈದು ಮೇರುಮನುಜರು ಹುಟ್ಟಿಕೊಂಡುಬಿಟ್ಟರೆ ಅದು ಆ ನುಡಿಯ ಹೆಗ್ಗಳಿಕೆಯನ್ನೇನು ತೋರಿಸುವುದಿಲ್ಲ. ಇನ್ನೂ ನಿಜವೇನೆಂದರೆ, ಕೋಟಿಗಟ್ಟಲೆ ಜನರಿಗೆ ಅರಿಯದ ರೀತಿಯಲ್ಲಿ (ಇಲ್ಲವೇ ಅರಿಯದ ನುಡಿಯಲ್ಲಿ) ಬರೆಯುವಂತೆ ಹದಿನೈದು ಜನರಿಗೆ ತರಬೇತಿ ಕೊಟ್ಟುಬಿಟ್ಟು ಬರವಣಿಗೆಯ ಪಂದ್ಯದಲ್ಲಿ ಅವರನ್ನೇ ಗೆಲ್ಲಿಸಿ ತೋರಿಸುವುದು ಕಶ್ಟದ ಕೆಲಸವೂ ಏನಲ್ಲ. ಇಲ್ಲಿ ಗಿರೀಶಬಟ್ಟರು ತಮ್ಮ ಇತ್ತೀಚಿನ ಬರಹದಲ್ಲಿ ಮಾಡಿರುವಂತೆ ಹಲವು ಹಳೆ-ಶಾಲೆಯವರು (ಶ್ರೀ ರಾ ಗಣೇಶ್ ಅವರನ್ನು ಸೇರಿದಂತೆ) ಎಂದಿನಂತೆ 'ದಲಿತ'ಸಾಹಿತಿಗಳೂ ಇವರಲ್ಲಿ ಇದ್ದಾರೆ ಎಂದು ತೋರಿಸುವುದರಿಂದ ಅವರ ವಾದಕ್ಕೆ ಯಾವ ಬಲವೂ ಬಾರದು, ಏಕೆಂದರೆ ಯಾರುಯಾರು ಸಂಸ್ಕ್ರುತಮಯವಾದ ಕನ್ನಡದಲ್ಲಿ ಬರೆಯುವರೋ ಅವರೆಲ್ಲ ಆ 'ಹದಿನೈದು ಜನ'ರಿಗೆ ಸೇರಿದವರೇ – ಅವರು 'ದಲಿತ'ಸಾಹಿಗಳಾಗಿರಲಿ, ಆಗಿಲ್ಲದಿರಲಿ. ಇದನ್ನೇ ಮೊದಮೊದಲು ಬ್ರಿಟಿಶರು ಮಾಡಿದ್ದು – ಇಂಗ್ಲೀಶಿನಲ್ಲಿ. ಕೋಟಿಗಟ್ಟಲೆ ಜನರು ಮಾಡಲಾರದ ಕೆಲಸವನ್ನು ಹದಿನೈದು ಜನರು ಮಾಡಿ ತೋರಿಸಿದರೆ ಅದು ಆ ಜನರ ನುಡಿಯ ಹೆಗ್ಗಳಿಕೆಯೆಂದು ತಿಳಿಯುವುದೇ ತಪ್ಪು. ಬದಲಾಗಿ ಆ ಕೋಟಿಗಟ್ಟಲೆ ಜನರು ಎಲ್ಲರೂ ಮಾಡುವ ಕೆಲಸವನ್ನು ಮಾಡಿ ತೋರಿಸಿದರೆ – ಎಂದರೆ ತಮ್ಮ ನುಡಿಯನ್ನು ಹೆದರಿಕೆಯಿಲ್ಲದೆ, ಕೀಳರಿಮೆಯಿಲ್ಲದೆ ಸದಾಕಾಲ ತಲೆಯೆತ್ತಿ ಆಡಿ ತೋರಿಸಿದರೆ – ಅದೇ ಹೆಗ್ಗಳಿಕೆ. ಆ ಹೆಗ್ಗಳಿಕೆ ಕನ್ನಡಕ್ಕಿಲ್ಲ, ತಮಿಳಿಗಿದೆ. ಆ ಹೆಗ್ಗಳಿಕೆಯನ್ನು ಕನ್ನಡಕ್ಕೆ ತಂದುಕೊಡುವ ಪ್ರಯತ್ನಗಳನ್ನು 'ತಮಿಳಿನ ಮಾದರಿ'ಯಲ್ಲಿ ಮಾಡಿದ ಕೆಲಸಗಳು ಎಂದು ಕರೆಯುವುದಾದರೆ ಹಾಗೇ ಆಗಲಿ. ಹಾಗೆನಿಸಿಕೊಳ್ಳುವುದಕ್ಕೆ ಯಾರಿಗಾದರೂ ಏಕೆ ಬೇಜಾರಿರಬೇಕು?
ಇನ್ನು ಯಾರೋ ಒಬ್ಬ ತಮಿಳನು ಮಿಂಬಲೆಯಲ್ಲಿ ತಮಿಳಿಗೆ ಇನ್ನೂ ಬರಿಗೆಗಳನ್ನು ಸೇರಿಸಬೇಕು ಎಂದು ಬರೆದಿರುವುದನ್ನು ಕನ್ನಡದ ಬರಿಗೆಮಣೆ ಈಗಾಗಲೇ ಚೆನ್ನಾಗಿದೆ ಎಂದು ವಾದಿಸಲು ಗಿರೀಶಬಟ್ಟರು ವಾದದಲ್ಲಿ ಇರಿಸುವುದು ನಗೆ ತರಿಸುವಂತದ್ದು. ಕನ್ನಡದಲ್ಲಿ ಮಹಾಪ್ರಾಣಗಳು, ಋ ಮುಂತಾದವುಗಳು ಬೇಕೇ ಎಂಬ ನೇರವಾದ ಪ್ರಶ್ನೆಗೆ ಅದು ಉತ್ತರವಲ್ಲ. ಅದು ಉತ್ತರವೆಂದು ವಾದಕ್ಕೋಸ್ಕರ ಒಪ್ಪಿದರೂ ಆ ತಮಿಳೋತ್ತಮನೇನಾದರೂ ತಮಿಳು ಬರಿಗೆಮಣೆಗೆ ಮಹಾಪ್ರಾಣ, ಋ ಮುಂತಾದವುಗಳನ್ನು ಸೇರಿಸಬೇಕೆಂದು ಹೇಳುತ್ತ ಇರುವನೇ? ಇಲ್ಲ ತಾನೆ? ಅಲ್ಲದೆ, ಅವನು ತಿಳಿದಿರುವಂತೆ ತಮಿಳರು ಇತರ ನುಡಿಗಳ ಪದಗಳನ್ನು ತಪ್ಪಾಗಿ ಉಲಿಯುತ್ತಾರೆ ಎನ್ನುವುದೇ ತಪ್ಪು. ತಮಿಳರು ತಮಗೆ ಬೇಕಾದಂತೆ ಉಲಿಯುತ್ತಾರೆ, ಅದಕ್ಕೇನಂತೆ? ಅದನ್ನು ತಪ್ಪು ಎನ್ನಲು ಇವನಾಗಲಿ ಮತ್ತೊಬ್ಬನಾಗಲಿ ಯಾವನು? ಒಬ್ಬ ಬ್ರಿಟನ್ನಿನ ಇಲ್ಲವೇ ಫ್ರಾನ್ಸಿನ ವ್ಯಕ್ತಿಯ ಕೈಯಲ್ಲಿ ನಿಮ್ಮ ಮನಸ್ಸು ಒಪ್ಪುವಂತೆ 'ಅಜಕ್ಕಳ ಗಿರೀಶ ಬಟ್ಟ' ಎನಿಸಿಬಿಡಿ, ನೋಡೋಣ? ಅವರಿಗೆ ಆಗಲಿಲ್ಲ ಎಂದು ಅವರ ನುಡಿಗಳಿಗೆ ಬರಿಗೆಗಳನ್ನು ತುರುಕೋಣವೇ? ಇದು ವೈಗ್ನಾನಿಕತೆಯೇ? ಇದರ ಬದಲಾಗಿ ಜನರು ಉಲಿದಿದ್ದನ್ನು ಕಣ್ಗೊತ್ತಿಗೊಂಡು ಸರಿಯೆಂದು ಒಪ್ಪಿಕೊಳ್ಳುವುದೇ ನುಡಿಯರಿಗರಿಗೂ ಹುಲುಜನರಿಗೂ ಒಪ್ಪುವಂತದ್ದು, ಅದೇ ವೈಗ್ನಾನಿಕತೆಯು.
ನುಡಿಯರಿಮೆಯ ಇನ್ನೂ ಕೆಲವು ಪ್ರಶ್ನೆಗಳಿಗೆ ಉತ್ತರಗಳು
ಒಂದರ್ತದಲ್ಲಿ ಬಳಕೆಯಲ್ಲಿರುವ ಕನ್ನಡದ ಪದಗಳನ್ನು ಬೇರೆಯರ್ತಗಳಲ್ಲಿ ಬಳಸುವುದು ತಮಗೆ 'ಸರಿ ಅನಿಸುವುದಿಲ್ಲ'ವೆಂದು ಗಿರೀಶಬಟ್ಟರು ತಿಳಿಸಿದ್ದಾರೆ. ಸಂತೋಶ. ಆದರೆ ಈಬಗೆಯಲ್ಲಿ ಎಲ್ಲಾ ನುಡಿಗಳಲ್ಲೂ ನಡೆಯುತ್ತಲೇ ಇರುತ್ತವಲ್ಲ? ನುಡಿಯ ಪ್ರಶ್ನೆಗಳಿಗೆಲ್ಲ ಹಳೆ-ಶಾಲೆಯವರೇ ಮಾದರಿ ನುಡಿಯೆನ್ನುವ ಸಂಸ್ಕ್ರುತದಲ್ಲೂ ಹೀಗೇನೇ ನಡೆಯುತ್ತದಲ್ಲ? ಒಂದೇ ಪದವನ್ನು ಸಂದರ್ಬಕ್ಕೆ ತಕ್ಕಂತೆ ಬೇರೆಬೇರೆಯಾಗಿ ಅರ್ತಮಾಡಿಕೊಳ್ಳುವ ಅಳವು ಮನುಶ್ಯನಿಗೆ ಇರುತ್ತದೆ; ಹಾಗೆ ಅರ್ತ ಮಾಡಿಕೊಳ್ಳುವ ಮನುಶ್ಯತನವನ್ನು ಕನ್ನಡಿಗರಿಗೆ ಅಲ್ಲಗಳೆದರೆ ಆಗ ಅದು 'ಸರಿ ಅನಿಸುವುದಿಲ್ಲ'. ಒಮ್ಮೆ ಆ ಮನುಶ್ಯತ್ವವನ್ನು ಕನ್ನಡಿಗರಿಗೆ ಕೊಟ್ಟು ನೋಡಿದರೆ ಸರಿ ಅನಿಸುತ್ತದೆ. ಅಂತಹ ಮನುಶ್ಯತ್ವವನ್ನು ಇಂಗ್ಲೀಶು ಬಲ್ಲವರಿಗೆ ಕೊಟ್ಟೇ ಗಣಕದ ಪಕ್ಕದಲ್ಲಿ ಕೂರುವ ಇಲಿಯಂತಹ ಸಲಕರಣೆಗೆ mouse ಎಂದು ಹೆಸರಿಟ್ಟಿರುವುದು. ನಮ್ಮಲ್ಲಿ 'ಮೂಷಿಕ' ಎಂದು ಹೆಸರಿಡದೆ ಹೋದರೆ ಅದೇನೋ ಮುಜುಗರ. ಇಲಿಗಿಂತ ಇಲಿಯಾಗಿರಬೇಡವೆ ಮೌಸು? ಆದುದರಿಂದ 'ಮೂಷಿಕ'ವೆನ್ನುವುದೇ ಸರಿಯೆಂದು ಕೆಲವರ ಅನಿಸಿಕೆ.
ಇನ್ನು ಶಂಕರಬಟ್ಟರ ನುಡಿಯರಿಮೆ ಬಣ್ಣನೆಯ ನುಡಿಯರಿಮೆಯಾಗುಳಿಯದೆ (descriptive linguistics) ಅಪ್ಪಣೆಯ ನುಡಿಯರಿಮೆಯಾಗಿಬಿಟ್ಟಿದೆ (prescriptive linguistics) ಎಂದು ಗಿರೀಶಬಟ್ಟರಿಗೆ ಅನಿಸಿರುವುದು ನಿಜವೆಂದು ಒಂದು ವೇಳೆ ಒಪ್ಪಿದರೂ, ಎಂದಿಗೂ ಬಣ್ಣನೆಯ ನುಡಿಯರಿಮೆಯ ಗೋಜಿಗೇ ಹೋಗದೆ ಮೊದಲ ಹೆಜ್ಜೆಯಿಂದಲೇ ಅಪ್ಪಣೆಯ ನುಡಿಯರಿಮೆಯನ್ನು ಕೊಡಮಾಡಿಸುತ್ತ ಸಾವಿರಾರು ವರುಶಗಳನ್ನು ಕಳೆದಿರುವ ಹಳೆ-ಶಾಲೆಗೆ ಶಂಕರಬಟ್ಟರು ಸಾಟಿಯೇ? ಇಲ್ಲವೇ ಬಣ್ಣನೆಯಲ್ಲಿ ಆಳವಾಗಿ ಅರಕೆಯನ್ನು ಮಾಡಿದವರು ಅದರಿಂದ ಕಲಿತ ದಿಟಗಳನ್ನು ಬಳಸಿಕೊಂಡು ಅಪ್ಪಣೆಯ ನುಡಿಯರಿಮೆಯ ಕಡೆಗೆ ಜಾರುವುದೇ ತಪ್ಪೇ? ಯಾವ ಅಪ್ಪಣೆಯು ಅಪ್ಪಣೆಯೆಂದು ಅಪ್ಪಣೆಪಡೆದವರಿಗೆ ಅನ್ನಿಸುವುದಿಲ್ಲವೋ ಅದು ಅಪ್ಪಣೆಯೋ, ಯಾವ ಅಪ್ಪಣೆಯು ಅಪ್ಪಣೆಯಾಗಿ ಅಪ್ಪಣೆಪಡೆದವರಿಗೆ ಹಗಲಿರುಳು ಕಾಡಿ ಅವರಲ್ಲಿ ಕೀಳರಿಮೆಯನ್ನು ಸಾಕಿಕೊಂಡು ಬಂದಿದೆಯೋ ಅದು ಅಪ್ಪಣೆಯೋ?
ಇನ್ನು, 'ಎಲ್ಲ ಪ್ರಭೇದಗಳೂ ಸರಿಯೇ. ಬರೆವಾಗ ತಪ್ಪುಗಳಾಗುವುದು ಕೂಡ ತಪ್ಪಲ್ಲ. ಆದರೆ ತಪ್ಪು ಬರೆಯೋದೇ ಸರಿ ಅಂತ ನೀವು ವಾದಿಸುವುದಾದರೆ (ಇವೆರಡಕ್ಕೆ ವ್ಯತ್ಯಾಸವಿದೆ) ನಾನೇನೂ ಹೇಳಲಾರೆ.' ಎನ್ನುವ ಗಿರೀಶಬಟ್ಟರಿಗೆ ಒಂದು ವಿಶಯ ಅರ್ತವಾಗುತ್ತಿಲ್ಲ. ಅದೇನೆಂದರೆ, ಬರೆಯುವಾಗ ಯಾವುದು ಸರಿ, ಯಾವುದು ತಪ್ಪು ಎಂದು ಹಳೆ-ಶಾಲೆಯವರು ಏನನ್ನು ಹೇಳಿಕೊಡುತ್ತ ಬಂದಿರುವರೋ ಅದನ್ನೇ ಶಂಕರಬಟ್ಟರು ಪ್ರಶ್ನಿಸುತ್ತ ಇರುವುದು, ಅದನ್ನು ಪ್ರಶ್ನೆ ಮಾಡೇ ಇಲ್ಲಿ ಚರ್ಚೆ ನಡೆಯುತ್ತಿರುವುದು. ಇಶ್ಟೆಲ್ಲ ಕತೆ ಕೇಳಿ ಮತ್ತೆ ತಮ್ಮ ಶಾಲೆಯ ಸರಿ-ತಪ್ಪಿನ ನಿಯಮಗಳೇ ಸರಿ ಎಂದು ತೀರ್ಪನ್ನು ಕೊಡುತ್ತಿರುವುದು ಒಳ್ಳೆಯ ತಮಾಶೆಯಾಗಿದೆ. ಹೀಗೆ ಹೇಳಿದ್ದನ್ನೇ ಹಿಂದೆ ಹೇಳಿತ್ತೆಂಬ ಕಾರಣದಿಂದ ಸರಿಯೆಂದು ತೀರ್ಪು ಕೊಡುವುದು ಹಳೆ-ಶಾಲೆಯವರ ತರ್ಕದ ಪರಿಗಳಲ್ಲಿ ಒಂದು.
ಯಾವುದರಲ್ಲಿ ಮುಂದಿದೆಯೆಂದು ತಿಳಿಯಬೇಕೆ? ಕೇಳಿ.
ಗಿರೀಶಬಟ್ಟರ ಬರಹದ ಶೀರ್ಶಿಕೆಯಲ್ಲಿ ಒಂದು ಪ್ರಶ್ನೆಯನ್ನು ಕೇಳಿದ್ದಾರಲ್ಲ, ಅದನ್ನು ನೇರವಾಗಿ ಉತ್ತರಿಸಿ ನನ್ನ ಬರಹವನ್ನು ಮುಗಿಸುತ್ತೇನೆ. ಅವರು ಕೇಳುವ ಪ್ರಶ್ನೆ "ಕನ್ನಡಕ್ಕಿಂತ ತಮಿಳು ಯಾವುದರಲ್ಲಿ ಮುಂದಿದೆ?" ಎಂಬುದು. ಹೇಳುತ್ತೇನೆ, ಯಾವುದರಲ್ಲಿ ಮುಂದಿದೆ ಎಂದು: ಯೂರೋಪಿನ ನರಹಂತಕರು ಅಮೇರಿಕಕ್ಕೆ ವಲಸೆ ಹೋಗಿ ಅಲ್ಲಿಯ ಬುಡಕಟ್ಟು ಜನಾಂಗದವರನ್ನೆಲ್ಲ ಕೊಂದು, ಅವರ ನೆತ್ತರಿನಿಂದ ಅಮೇರಿಕದ ಮಣ್ಣನ್ನು ತೊಯ್ದು, ಅವರಿದ್ದರು ಎಂಬ ಕುರುಹುಗಳನ್ನೇ ಅಳಿಸಿಹಾಕಿ, ಆ ಮಣ್ಣಿನ ಮೇಲೆ ಮುಗಿಲುಮುಟ್ಟುವ ಜಗಗಗಿಸುವ ತಳತಳಿಸುವ ಕಟ್ಟಡಗಳನ್ನು ಕಟ್ಟಿ ಇಂದು ಅದನ್ನೇ 'ಮುಂದಿರುವಿಕೆ' ಎಂದು ಕರೆದುಕೊಂಡು ಮೆರೆಯುತ್ತಿದ್ದಾರಲ್ಲ, ಆ 'ಮುಂದಿರುವಿಕೆ'ಯಲ್ಲಿ ಹಿಂದುಳಿದ ಆ ಅಮೇರಿಕದ ಬುಡಕಟ್ಟು ಜನಾಂಗದವರು ಆ ಯೂರೋಪಿಯನ್ನರ ಹೋಲಿಕೆಯಲ್ಲಿ ಯಾವುದರಲ್ಲಿ ಮುಂದಿದ್ದರೋ ಅದರಲ್ಲಿ ತಮಿಳು ಕನ್ನಡಕ್ಕಿಂತ ಮುಂದಿದೆ. ಎಂದರೆ, ಗಿರೀಶಬಟ್ಟರು ಹೇಳುವಂತೆ ಕನ್ನಡಕ್ಕೆ ತಮಿಳಿಗಿಲ್ಲದ ಸಾಹಿತ್ಯದ ಮತ್ತು ಬಿರುದು-ಬಹುಮಾನಗಳ ಕೋಡು ಬಂದಿರಬಹುದು, ಆದರೆ ಜನಸಾಮಾನ್ಯರಿಗೆ ಮನುಷ್ಯತ್ವವನ್ನು ಅಲ್ಲಗಳೆಯದೆ ಇರುವಲ್ಲಿ ತಮಿಳು ಕನ್ನಡಕ್ಕಿಂತ ಮುಂದಿದೆ. ಹೌದು, ಕನ್ನಡನಾಡಿನಲ್ಲೇನು ಅಮೇರಿಕದಲ್ಲಿ ನಡೆದಂತೆ ನೆತ್ತರ ಚೆಲ್ಲಾಟ ನಡೆದಿಲ್ಲ, ಆದರೆ ಅದರ ಬದಲಾಗಿ ಸಮಾಜದಲ್ಲಿ ಮತ್ತು ಅದರ ಗುರುತೆನ್ನಬಹುದಾದ ನುಡಿ-ಬರಹಗಳಲ್ಲಿ ಮೇಲು-ಕೀಳುಗಳು ಏರ್ಪಟ್ಟು ಪ್ರತಿದಿನವೂ ಕನ್ನಡಿಗರ ಮನುಷ್ಯತ್ವವನ್ನೇ ಅಲ್ಲಗಳೆದು ಕಾಡುತ್ತಿವೆ, ಅಶ್ಟೆ.
ಅವುಗಳನ್ನೇ ಮುಂದುವರೆಸಿಕೊಂಡು ಹೋಗುವುದು ಒಳ್ಳೆಯದು ಎಂದು ಹಳೆ-ಶಾಲೆಯವರು ಹೇಳುತ್ತಿರುವಾಗ ವಿಗ್ನಾನವನ್ನು ಸ್ವಲ್ಪವಾದರೂ ಕಲಿತವರು, ಮತ್ತು ನಮ್ಮ ಸಮಾಜದ ಬಗ್ಗೆ ಸ್ವಲ್ಪವಾದರೂ ಕಾಳಜಿಯಿರುವವರು ಅದರ ಅವೈಗ್ನಾನಿಕತೆ ಮತ್ತು ಅದು ಮುಂದುವರೆಸುತ್ತಿರುವ ಸಾಮಾಜಿಕ ಅನ್ಯಾಯವನ್ನು ಪ್ರಶ್ನಿಸದೆ ಇರಲಾರರು. ಇಂತವರ ಶಾಲೆಯೇ ನಾನು ಹೆಸರಿಸಿರುವ 'ಹೊಸ ಶಾಲೆ'.
ಬಾಗಿಲು ತೆಗೆದಿದೆ, ಯುಗಾದಿಗೆ ಮಾವಿನ ತೋರಣವೂ ಹಾಕಿದೆ. ಹೊಸ ಯುಗಕ್ಕೆ ಕಾಲಿಡೋಣ, ಹದುಳ ಬನ್ನಿ.
← ಯಾವುದು ನಿಜವಾದ ದೇಶಪ್ರೇಮ ?
ಬನ್ನಿ,ಅಣ್ಣನ ಜೊತೆ ನಿಲ್ಲೋಣ… →
113 ಟಿಪ್ಪಣಿಗಳು Post a comment
ಏಪ್ರಿಲ್ 6 2011
ಬಹಳ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಾ ಕಿರಣ್, ಭಾಷೆ ಆಧಾರಿತ ಯಾವುದೇ ಸುಧಾರಣೆಯನ್ನು ಇಲ್ಲ ನಮ್ಮದಲ್ಲದ ಭಾಷೆಯನ್ನು ಒಪ್ಪುದಿರುವ ದೃಷ್ಟಿಕೋನವನ್ನು ಬಹಳ ಸುಲಭವಾಗಿ "ತಮಿಳರ ಮಾದರಿ" ಎಂದು ಬ್ರಾಂಡ್ ಮಾಡುತ್ತಾರೆ. ಅದರಲ್ಲೂ ಮುಖ್ಯವಾಗಿ ಇದನ್ನು ಹಳೆಯ ಶಾಲೆಯ ಅನೇಕ ಪಂಡಿತರ ಶೈಲಿಯಲ್ಲಿ ನೋದಿದ್ದೇನೆ. ಹಾಗೆ ಮಾಡಿದರೆ ಅದನ್ನು ಓದುವ ಜನರಿಗೆ ಮೊದಲಿಗೆ ತಮಿಳರು ಎಂದರೆ ಒಂದು ಮೈಲಿ ದೂರ, ಯಾವತ್ತು ಕನ್ನಡಿಗ ತಮಿಳಿಗನ ಹಾಗೆ ಆಗಬಾರದು ಎಂದುಕೊಳ್ಳುವ ಮನೋಬುದ್ದಿಯನ್ನು ಒಳಗೊಂಡಿರುತ್ತಾನೆ, ಅದನ್ನು ಬಳಸಿಕೊಂಡು, ನೋಡಿ ನೀವು ಭಾಶೆಯಲ್ಲಿ ಈ ಸುಧಾರಣೆ ತಂದರೆ ತಮಿಳರ ತರ ಆಗುತ್ತಿರಾ , ನಿಮಗೆ ಹಾಗೆ ಆಗಬೇಕಾ ಎಂಬ ತಾರ್ಕಿಕ ವಾದವನ್ನು ಮುಂದಿಡುತ್ತಾರೆ. ಯಾವಗ ವಿಶಯಧರಿತ ವಾದ ಮಾಡಲು ಆಗುವದಿಲ್ಲವೋ ಆಗ ಈ ಬ್ರ್ಯಾಂಡ್ ಸಂಸ್ಜೃತಿಯನ್ನು ನಾವು ಕಾಣಬಹುದು. ಯಾಕೆಂದರೆ ವಾದ ಮಾಡುವ ಹಳೆ ಶಾಲೆಯ ಜನರ ಬತ್ತಳಿಕೆಯಲ್ಲಿ ಇರುವ ಅಸ್ತ್ರಗಳೇ ಕಮ್ಮಿ.
ಭಾಷೆಯು ಕೇವಲ ಒಂದು ವರ್ಗದ ಆಸ್ತಿ, ಅದನ್ನು ಯಾರು ಮುಟ್ಟಬಾರದು, ಅದೊಂದು ದೇವರ ವಿಗ್ರಹ ಇದ್ದ ಹಾಗೆ, ಯಾವುದೇ ಹೊಸ ಪ್ರಯೋಗಗಳು ವಿಗ್ರಹಕ್ಕೆ ಬಿನ್ನ ತಂದು ಅದರ ಪೂಜಾಸ್ಥಿತಿಯನ್ನು ಹಾಳು ಮಾಡುತ್ತದೆ ಎನ್ನುವ ವಾದ ಇವತ್ತಿನ ಯುಗದಲ್ಲಿ ಹಳೆಯದು ಮತ್ತು ಹಳಸಿರುವುದು.
ಮಹೇಶ ಪ್ರಸಾದ ನೀರ್ಕಜೆ
ಶ್ಯ್.. ನಿಮ್ಮ ಬರವನಿಗೆಯಲ್ಲಿ ತುಂಬಾ ಸಕ್ಕದದ ತೂರಿಕೆಯಾಗಿದೆ. ಅವನ್ನು ಸರಿಪಡಿಸಿಕೊಲ್ಲಿ ಮೊದಲು.
ನಿಮ್ಮ ವ್ಯಂಗ್ಯ ನೋಡಿದರೆ ಮಕ್ಕಳು ವೆವ್ವವ್ವೆವೆವೆವ್ ಅಂತ ಹೇಳಿದನ್ನು ಮತ್ತೆ ಹೇಳುವ ಪ್ರಯತ್ನ ಹಾಗೆ ಕಾಣುತ್ತದೆ. ಇದು ನಿಮಗೆ ವಾದ ಮಾಡಲು ಸರಕು ಖಾಲಿ ಆದಾಗ ಕಾಮೆಂಟ್ ಹಾಕಿದ ರೀತಿ ಇದೆ. ನೋಡಿ ಇನ್ನೋಮ್ಮೆ ಇದಕ್ಕಿಂತ ಚೆನ್ನಾಗಿ ಬರೆಯಬಹುದು, ಆಗದಿದ್ದಲ್ಲಿ ಮುಂದುವರೆಸಿ ನಿಮ್ಮ ವೆವ್ವೆವೆವ್ವೆವೆ …
ಆಯ್ತು… ನನಗೆ ಈ ಚರ್ಚೆಯಲ್ಲಿ ಆಸಕ್ತಿ ಇಲ್ಲ. ತೊಂದರೆ ಕೊಟ್ಟಿದ್ದಕ್ಕೆ ಕ್ಷಮೆಯಿರಲಿ. ವೆವ್ವೆವ್ವೆವೆವ್ವೆವ್..
ಕಿರಣ್,
ಕಿರಣ್..
ಬರಹದ ಹುರುಳು ಚನ್ನಾಗಿದೆ.. ಶಂಕರಬಟ್ಟರ ಹೊಸಗನ್ನಡದ ಬರವಣಿಗೆಯಲ್ಲಿ ಬಂದಿರುವುದು ತುಂಬಾ ಚನ್ನಾಗಿದೆ.
ನನಗೆ ಕೆಲವು ಕೇಳ್ವಿಗಳಿವೆ. ಅದನ್ನು ಬಳಿಕೆ ಕೇಳುವೆನು.
ಹೊಸಶಾಲೆ ಎಂದರೆ ಬರೀ ಅಕ್ಕರದ ಕಡಿತ ಅಶ್ಟೇ ಅಲ್ಲ,ಅದು ಪದವುಟ್ಟು, ಸಾಲುಕಟ್ಟು ಹಾಗು ಸಾಲುಗಳಿಂದಾಗುವ ಬರಹಕಟ್ಟುಗಳ ಬಗ್ಗೆಯೂ ಆರಯ್ಯು ಹಾಗು ಹೊಸನೋಟ ಬೀರುವುದು. ಈ ಸಂಗತಿಯನ್ನು ಕೆ.ವಿ.ನಾರಾಯಣ ಅವರು ಬನವಾಸಿ ಬಳಗದವರು ನಡೆಸಿದ "ನುಡಿಯರಿಮೆ ಮತ್ತು ಕಲಿಕೆ" ಆಗುಹದ ವಿಡಿಯೋ ಒಂದರಲ್ಲಿ ಹೇಳಿದ್ದಾರೆ.. ಆ ಬಗ್ಗೆ ನೀವು ಒಂದು ಬರಹವನ್ನು ಹೊತ್ತುಬಿಡುವು ಆದ ಬರೆಯಿರಿ ಎಂದು ಕೋರಿಕೆ. ಆ ಒಟ್ಟುನೋಟದಲ್ಲಿ ಕನ್ನಡ-ಹೊಸ-ಶಾಲೆ ಮೇರುಮಟ್ಟದಲ್ಲಿರುವ ಮೊಗಸು…
ನನ್ನಿ..
ಕಿರಣರವರೆ,
ನಿಮ್ಮ ಬರಹ ತುಂಬ ಚೆನ್ನಾಗಿ ಬಂದಿದೆ.
"ಈ ಬಿರುದು-ಬಹುಮಾನಗಳಿಗಿಂತ ಒಂದು ಇಡೀ ನುಡಿಜನಾಂಗವು ತಲೆಯೆತ್ತಿ ತಾನಾಡುವ ನುಡಿಯು ಕೀಳಲ್ಲ"
"ಆದರೆ ಜನಸಾಮಾನ್ಯರಿಗೆ ಮನುಷ್ಯತ್ವವನ್ನು ಅಲ್ಲಗಳೆಯದೆ ಇರುವಲ್ಲಿ ತಮಿಳು ಕನ್ನಡಕ್ಕಿಂತ ಮುಂದಿದೆ"
ನೀವು ಹೇಳಿರುವ ಈ ಮಾತುಗಳಿಗೆ ಇನ್ನಶ್ಟು ಇಂಬು ಕೊಡಲು ಮೊಗಸುತ್ತೇನೆ.
ತಮಿಳರು 'ಹಿಂದಿ ಹೇರಿಕೆ'ಯನ್ನು ಚೆನ್ನಾಗಿ ವಿರೋದಿಸಿ ಬಾರತದಲ್ಲಿ ಒಕ್ಕೂಟ(ಒಪ್ಪುಕೂಟ)ವನ್ನು ಉಳಿಸುವಲ್ಲಿ ತಮ್ಮ ಕೊಡುಗೆಯನ್ನ ಕೊಟ್ಟಿದ್ದಾರೆ. ಇದರಲ್ಲಿ ತಮಿಳರು ಕನ್ನಡಿಗರಿಗಿಂತ ಮುಂದು ಎನ್ನುವುದರಲ್ಲಿ ನನಗೆ ಯಾವ ಹಿಂಜರಿಕೆಯಿಲ್ಲ. ತಮಿಳರು ತಮ್ಮನ್ನಲ್ಲದೆ ಕನ್ನಡಿಗರನ್ನ, ತೆಲುಗರನ್ನ ಹಿಂದಿ ಹೇರಿಕೆಯಿಂದ ಕಾಪಾಡಿ ಒಕ್ಕೂಟ ವೆವಸ್ತೆಯನ್ನು ದಿಟವಾದ ಅರ್ತದಲ್ಲಿ ಬಲಗೊಳಿಸಿದ್ದಾರೆ. ಇದನ್ನ ನಾವು ಅರ್ತ ಮಾಡಿಕೊಳ್ಳಬೇಕು. ಇದಕ್ಕೆ ಅವರಲ್ಲಿರುವ ತಮಿಳು ಪ್ರಗ್ನೆಯೇ ಮತ್ತು ತಮಿಳು ಹಿಂದಿಗಿಂತ ಯಾವ ತರದಲ್ಲೂ ಕೀಳಲ್ಲ ಎಂಬ ಅರಿವು ಇರುವುದು.
ಒಕ್ಕೂಟವನ್ನು ಉಳಿಸಿ, ಬಲಗೊಳಿಸುವುದು ಮನುಶ್ಯತ್ವದ ಮತ್ತು ಮಂದಿಯಾಳ್ವಿಕೆಯ(democratic)ತತ್ವಗಳನ್ನು ಎತ್ತಿಹಿಡಿಯುವುದೇ ಆಗಿದೆ.
" ಒಬ್ಬ ಬ್ರಿಟನ್ನಿನ ಇಲ್ಲವೇ ಫ್ರಾನ್ಸಿನ ವ್ಯಕ್ತಿಯ ಕೈಯಲ್ಲಿ ನಿಮ್ಮ ಮನಸ್ಸು ಒಪ್ಪುವಂತೆ 'ಅಜಕ್ಕಳ ಗಿರೀಶ ಬಟ್ಟ' ಎನಿಸಿಬಿಡಿ, ನೋಡೋಣ"
ಬ್ರಿಟನ್,ಪ್ರಾನ್ಸ್ ಬ್ಯಾಡ. ಡೆಲ್ಲಿಯವನೊ, ಬಿಹಾರದವನೊ ಸರಿಯಾಗಿ 'ಅಜಕ್ಕಳ' ಅಂತ ಉಲಿಯುತ್ತಾನ?
ನನ್ನ ಹೆಸರು(ಬರತ್) ಹೊರದೇಶದವರ ಬಾಯಲ್ಲಿ ಹಲವು ರೂಪ ತಾಳಿವೆ: ಬ್ಯಾರಟ್, ಬರಾತ್, ಬೊರಾತ್ 🙂
ಈ ಬರಅ (ಬರಹ) ಓದಿದ ಮೇಲೆ ನಾನು ಕಲಿಕಾ ಕಟ್ಟಡ (ಶಾಲೆ) ದಲ್ಲಿ ಕನ್ನಡವನ್ನು ಕಲಿತಿದ್ದು ನಿರರ್ತಕ ಅಂತ ಅನಿಸಲು ಶುರುವಾಗಿದೆ. ಏನ್ಮಾಡೋದು?
ಇಂತಾ ತಿಲುವಲಿಕೆಗಾರರನ್ನು ಉಟ್ಟಿಸಿದ ಬಾರತದ ಅಮ್ಮ, ಮನ್ನಿಸಿ ಕನ್ನಡಮ್ಮ ನಿಜಕ್ಕೂ ದೊಡ್ಡವಳಾಗಿದ್ದಾಳೆ!
ಮಹೇಶ ಪ್ರಸಾದ ನೀರ್ಕಜೆಯವರೆ,
ತಾವು ಈ ಬರಹದಲ್ಲಿ ಬಂದಿರುವ ವಿಶಯಗಳನ್ನು ಓದಿ, ಅರಿತು ತಮ್ಮ ವಾದವನ್ನು ಮಂಡಿಸಿ ಒಂದು ಒಳ್ಳೆಯ ಚರ್ಚೆಯಲ್ಲಿ ಪಾಲ್ಗೊಳ್ಳಿ.
ನನ್ನ ವಾದ ನಿಲುಮೆಯಲ್ಲೇ ಬೇರೆ ಕಡೆ ಬರೆದಿದ್ದೇನೆ. ಅಜಕ್ಕಳ ಗಿರೀಶ ಭಟ್ಟರ ವಾದಕ್ಕೆ ನನ್ನದು ಸಹಮತವಿದೆ. ಹಾಗಂತ ಶಂಕರ ಭಟ್ಟರ ವಿರೋಧಿ ಅಂತಲ್ಲ. ಅವರು ಏನು ಹೇಳಿದ್ದಾರೋ ತಿಳಿಯದು. ಕನ್ನಡ ಈಗ ಹೇಗೆ ಇದೆಯೋ ಅದನ್ನು ಬದಲಾಯಿಸಬೇಕೆಂದು (ಈ ಲೇಖನದಲ್ಲಿ ಚಿತ್ರ ವಿಚಿತ್ರವಾಗಿ ಬರೆದಿದ್ದಾರಲ್ಲ, ಹಾಗೆ) ಅವರು ಹೇಳಿದ್ದರೆ ಅದಕ್ಕೆ ನನ್ನ ವಿರೋಧವಿದೆ. ಅಗತ್ಯವಿಲ್ಲದ ಸಂಸ್ಕೃತ/ಇಂಗ್ಲಿಷ್ ಪದಗಳ ಬಳಕೆ ಕಡಿಮೆ ಮಾಡಲು ಮಾತ್ರ ನನ್ನ ಸಹಮತ.
"ಅವರು ಏನು ಹೇಳಿದ್ದಾರೋ ತಿಳಿಯದು "
ಹಾಗಾದರೆ ಶಂಕರಬಟ್ಟರು ಬರೆದಿರುವ ಹೊತ್ತೆಗೆಗಳನ್ನು ಮೊದಲು ಓದಿ. ಯಾಕಂದರೆ ಈ ಬರಹವನ್ನು ಸರಿಯಾಗಿ ಅರಿತುಕೊಳ್ಳಬೇಕಾದರೆ ನಿಮಗೆ ಆ ಓದು ಬೇಕು. ನೀವು ಶಂಕರಬಟ್ಟರ ಹೊತ್ತೆಗೆಗಳನ್ನು ಓದದೆ ಅದರ ಬಗ್ಗೇನೆ(ಸೊಲ್ಲರಿಮೆ/ವ್ಯಾಕರಣದ)ಇರುವ ಒಂದು ಬರಹದ ಬಗ್ಗೆ 'ನಗೆ'ದಾಟಿಯಲ್ಲಿ ಕಮೆಂಟು ಹಾಕುವುದು ಎಶ್ಟು ಸರಿ ? ಇದನ್ನ ನಿಮಗೇ ನೀವು ಕೇಳಿಕೊಳ್ಳಬೇಕಾಗುತ್ತದೆ
ಮಹೇಶ ಪ್ರಸಾದ್ ಅವರೇ,
ವಿಷಯದ ಬಗ್ಗೆ ತಿಳಿದಿಲ್ಲ ಎನ್ನೋದು ನೀವೇ ಒಪ್ಪಿಕೊಂಡಿದ್ದೀರಾ.
ವಿಷಯದ ಬಗ್ಗೆ ತಿಳಿಯಲು ನೀವು ಪ್ರಯತ್ನ ಪಡಿ. ತಿಳಿದ ಮೇಲೆ ನೀವು ಚರ್ಚೆಯಲ್ಲಿ ಪಾಲ್ಗೊಳ್ಳಿ.
ಅಲ್ಲೀವರೆಗೂ, ಚರ್ಚೆಯಲ್ಲಿ ಬಂದು ನಿಮ್ಮ ಸಮಯ ಹಾಳು ಮಾಡಬೇಡಿ.
D Sulibele
ಹೌದು ಗುರು, ನೀನ್ ಹೇಳೋದು ದಿಟ. ನಿನ್ನ ಹುಟ್ಟಿಸಿದ ಬಾರತದ ಅಮ್ಮ ದಡ್ಡ ಆಗಿದ್ದಾಳೆ,
ತೊಂದ್ರೆ ಇಲ್ಲ. ನಂಗೆ ನನ್ನ ದಡ್ಡ ಅಮ್ಮನೇ ಪ್ರೀತಿ. ನಿಮ್ಮಂಗೆ ಅಂದ ಇಲ್ಲ ಅಂತ ಅಮ್ಮನನ್ನೇ ಬದಲಾಯಿಸುವ ಬುಧ್ದಿ ನನಗಿಲ್ಲ.
ee mahEsh avara comments aLisi. iMthaa vyaMgya charsheya bhaaga alla taane?
ತಮ್ಮ ಕಡೆಯವರು ನಿಲುಮೆಲಿ ಬೇರೆ ಕಡೆ ಬರೆದಿರುವ ವ್ಯಂಗ್ಯ, ಸುಳ್ಳುಗಳನ್ನು ಏನು ಮಾಡಬೇಕು ಗುರುವೇ?
ಇರಲಿ. ಹಳೇ ವಿಷಯ ಕೆದಕಲು ಹೋಗುವುದಿಲ್ಲ. ಈಗೀಗ ಒಳ್ಳೆ ಚರ್ಚೆಯಾಗುತ್ತಿದೆ. ನನ್ನ ಮಾತನ್ನು ಹಿಂತೆಗೆದುಕೊಳ್ಳುತ್ತೇನೆ. ಎಲ್ಲರಿಗೂ ಒಳ್ಳೆಯದಾಗಲಿ.
namma kaDe nimma kaDe Enilla mahesh, naavellaa nimma kaDEne… ellara guri oMdE. bhinna daari aShTe. nanna comment hurt maaDiddare sorry.
ಇಲ್ಲಿ ಕಾಮೆಂಟ್ ಗಳನ್ನು ನೋಡಿ ನನಗನ್ನಿಸಿದ್ದು, ಎಲ್ಲರೂ ಸಂಸ್ಕೃತ ವನ್ನ ವಿರೋದಿಸಲು ಕನ್ನಡದ ಬದಲಾವಣೆ ಬಯಸುತ್ತಿರುವುದು !!!!!
ಹೀಗೆ ಈ ಈರ್ಷೆ ಇಟ್ಟುಕೊಂಡು ಮುಂದಡಿಯಿಟ್ಟರೆ ಖಂಡಿತವಾಗೂ ಕನ್ನಡಕ್ಕೆ ನಷ್ಟ ಆಗುತ್ತದೆ. ಯಾವಾಗಲೂ ಬದಲಾವಣೆ ಇನ್ನೊಂದನ್ನು ವಿರೋಧಿಸುವುದಕ್ಕಾಗಿ ಬರಬಾರದು ….ಅದು ಸ್ವ ಉದ್ದಾರದ ಉದ್ದೇಶ ಮಾತ್ರ ಹೊಂದಿರಬೇಕು ಆಗ ಮಾತ್ರ ಆ ಬದಲಾವಣೆ ಬೆಳವಣಿಗೆಗೆ ಸಹಕಾರಿ ಆಗುತ್ತದೆ.
ಆದರೂ ಸಂಸ್ಕ್ಹೃತದ ಬಗ್ಗೆ ಯಾಕೆ ಇಷ್ಟೊಂದು ದ್ವೇಷ ಗೊತ್ತಾಗಲಿಲ್ಲ !!!! ಅದೇನು ದ್ರೋಹ ಮಾಡಿದೆಯೋ ಇವರಿಗೆ? ದೇವರೇ ಬಲ್ಲ !!! ದ್ವೇಷಿಸುವವರಿಗೆ ಅಂತೂ ಖಂಡಿತ ಗೊತ್ತಿಲ್ಲ ಅಂತ ಖಡಾ ಖಂಡಿತ ವಾಗಿ ಹೇಳಬಲ್ಲೆ !!!!!
ಶಾಂತಿ ಅವರೇ,
ಈ ಬರಹದಲ್ಲಿ ನಿಮಗೆ 'ಸಂಸ್ಕೃತ ದ್ವೇಷ' ಎಲ್ಲಿ ಕಾಣಿಸಿತೋ ಗೊತ್ತಿಲ್ಲ.
ಇನ್ನೊಂದು ಬರಹದಲ್ಲೂ ನಿಮ್ಮ ಕಾಮೆಂಟುಗಳನ್ನು ನೋಡಿದ್ದೇನೆ. ಹಾಗಾಗಿ ನನಗನಿಸಿದ್ದು, ನೀವು ನುಡಿಯರಿಮೆಯ ಬಗ್ಗೆ ಹೆಚ್ಚು ತಿಳಿದುಕೊಂಡಿಲ್ಲ ಎಂಬುದು.
ನುಡಿಯರಿಗರು ಅಧ್ಯಯನದ ಮೂಲಕ ಕಂಡುಕೊಂಡು ಸೂಚಿಸಿರೋ ಸುದಾರಣೆಗಳು ಒಂದು ಸಮುದಾಯಕ್ಕೆ ಹೇಗೆ ಒಳಿತಾಗುತ್ತವೆ ಎಂಬ ಚರ್ಚೆ ಇದಾಗಿದೆ.
ಇದಕ್ಕೆ, ಇನ್ನೊಂದು ಭಾಷೆಯ ದ್ವೇಷ ಎಂಬ ಹಣೆಪಟ್ಟ ಕಟ್ಟುವ ಮುಂಚೆ, ನುಡಿಯರಿಗರ ಬಗ್ಗೆ, ಮತ್ತವರ ಕೆಲಸದ ಬಗ್ಗೆ ಹೆಚ್ಚು ತಿಳಿದುಕೊಳ್ಳುವುದು ಒಳಿತು.
ಪ್ರಿಯಾಂಕ್
"ಸಂಸ್ಕೃತ ದ್ವೇಷ" ಇಲ್ಲದಿದ್ದರೆ ಸಂಸ್ಕೃತ ಮಾದರಿಯಲ್ಲಿರುವ ಪದಗಳನ್ನು ಯಾಕೆ ಬದಲಾಯಿಸಬೇಕು? ಭಾಷಾ ವಿಜ್ನಾನಿಗಳು ಅನ್ನೋದು ಬಿಟ್ಟು ಈ "ನುಡಿಯರಿಗರು" ಏಕೆ? ರಸ್ತೆಯಲ್ಲಿ ಹೋಗೋ ಕನ್ನಡಿಗನನ್ನ ಈ ಎರಡು ಶಬ್ದಗಳನ್ನು ಕೇಳಿ ನೋಡಿ. ಯಾವುದು ಅರ್ಥ ಆಗುತ್ತೆ ಅಂತ. ಎಲ್ಲರಿಗೂ ಅರ್ಥ ಆಗುವ ಸರಳ ನುಡಿ ಬೇಕು ಅನ್ನುವವರೇ ಈವರೆಗೆ ಯಾರೂ ಕಂಡು ಕೇಳಿಲ್ಲದ ಪದಗಳನ್ನು ಹೇರುವುದು ಯಾಕೆ? ಅದೂ ಅಧ್ಯಯನದ ಹೆಸರಿನಲ್ಲಿ?
ಈ ಮೊದಲೇ ಅರಿಯದೇ ತಪ್ಪು ಕನ್ನಡ ಕಲಿತ ನನ್ನಂಥವರಿಗೆ ನಿಮ್ಮ ಹೊಸ ಕನ್ನಡ ಕಲಿಸುವ ಕೆಲಸ ಯಾರು ಮಾಡುತ್ತಾರೆ? ಅದಕ್ಕೆ ಎಷ್ಟು ದುಡ್ಡು ದಂಡವಾಗಬೇಕು?
ಸ್ವಾಮಿ ಮಹೇಶ ಪ್ರಸಾದ ನೀರ್ಕಜೆಯವರೆ,
ನುಡಿ ,ಅರಿವು, ಇಗ(ಹಾವಾಡಿಗ,ಲೆಕ್ಕಿಗ, ಗಾಣಿಗ) ಈ ಪದಗಳು ನಿಮಗೆ ಗೊತ್ತಿಲ್ಲವೆ? ಇದನ್ನ ಹೊಸದಾಗಿ ಕಲಿಸಬೇಕೆ? ಈ ಮೇಲಿನ ಪದಗಳು ಕನ್ನಡವಲ್ಲವೆ?
ಕನ್ನಡದ ಪದಗಳನ್ನೇ ಬಳಸಿದರೆ ಸಂಸ್ಕ್ರುತದ ಹಗೆ ಹೇಗಾಗುತ್ತದೆ?
> ನುಡಿ ,ಅರಿವು, ಇಗ(ಹಾವಾಡಿಗ,ಲೆಕ್ಕಿಗ, ಗಾಣಿಗ) ಈ ಪದಗಳು ನಿಮಗೆ ಗೊತ್ತಿಲ್ಲವೆ?
ಭಾಷಾ ವಿಜ್ಞಾನಿ ಎಂದರೇನು ತಪ್ಪು?
ಸಾಮಾನ್ಯರಿಗೂ 'ವಿಜ್ಞಾನಿ' ಪದದ ಪರಿಚಯವಿದೆಯಲ್ಲವೆ?
ನರೇಂದ್ರರೆ,
"ಭಾಷಾ ವಿಜ್ಞಾನಿ ಎಂದರೇನು ತಪ್ಪು?.."
ಯಾರು ಹೇಳಿದ್ದು ತಪ್ಪು ಅಂತ? ಆದರೆ ಆ ಪದ ಹೆಚ್ಚು ಕನ್ನಡಿಗರ ಬಾಯಲ್ಲಿ ಅದು 'ಬಾಶಾವಿಗ್ನಾನಿ'ಯಾಗುತ್ತದೆ. ಹಾಗಾಗಿ ಅದನ್ನ ಹಾಗೆ ಬರೆದರೇನು ತಪ್ಪು?
"ಭಾಷಾ ವಿಜ್ಞಾನಿ", 'ನುಡಿಯರಿಗ' ಎರಡೂ ಪದಗಳನ್ನ ಜನರ ಮುಂದಿಡಿ. ಕಿರಣ್ ಹೇಳಿದ ಹಾಗೆ ಕೊನೆಗೆ ಜನರೇ ಯಾವುದು ಬೇಕು ಅದನ್ನ ತೆಗೆದುಕೊಳ್ಳುತ್ತಾರೆ.
ಅದು ಬಿಟ್ಟು ಮಹೇಶ ಪ್ರಸಾದ ನೀರ್ಕಜೆಯವರು ಹೇಳಿದ ಹಾಗೆ 'ನುಡಿಯರಿಗ' ಪದವನ್ನ ಬಳಸಲೇಬಾರದು ಅದು ಸಂಸ್ಕ್ರುತ ವಿರೋದಿ ಅನ್ನುವುದರಲ್ಲಿ ಏನಾದರೂ ಅರ್ತ ಇದಿಯ?
> "ಭಾಷಾ ವಿಜ್ಞಾನಿ", 'ನುಡಿಯರಿಗ' ಎರಡೂ ಪದಗಳನ್ನ ಜನರ ಮುಂದಿಡಿ. ಕಿರಣ್ ಹೇಳಿದ ಹಾಗೆ ಕೊನೆಗೆ ಜನರೇ ಯಾವುದು ಬೇಕು ಅದನ್ನ ತೆಗೆದುಕೊಳ್ಳುತ್ತಾರೆ.
ಒಪ್ಪಿದೆ.
> ಅದು ಬಿಟ್ಟು ಮಹೇಶ ಪ್ರಸಾದ ನೀರ್ಕಜೆಯವರು ಹೇಳಿದ ಹಾಗೆ 'ನುಡಿಯರಿಗ' ಪದವನ್ನ ಬಳಸಲೇಬಾರದು
> ಅದು ಸಂಸ್ಕ್ರುತ ವಿರೋದಿ ಅನ್ನುವುದರಲ್ಲಿ ಏನಾದರೂ ಅರ್ತ ಇದಿಯ?
ಮಹೇಶ ಪ್ರಸಾದ್ ಅವರು ಆ ರೀತಿ ಹೇಳಿದ್ದು ನನಗೆಲ್ಲೂ ಕಾಣಿಸುತ್ತಿಲ್ಲ.
"ಭಾಷಾ ವಿಜ್ಞಾನಿ" ಎನ್ನುವ ಪದ ಸಂಸ್ಕೃತ ಮೂಲದ್ದಾದ್ದರಿಂದ ಅದರ ಬದಲು "ನುಡಿಯರಿಗ" ಪದವನ್ನು ನೀವು ಹುಟ್ಟುಹಾಕುತ್ತಿರುವಿರಿ;
ಕೇವಲ "ಸಂಸ್ಕೃತ ಮೂಲ" ಎನ್ನುವ ಕಾರಣಕ್ಕಾಗಿ ಸಾಮಾನ್ಯವಾಗಿ ಉಪಯೋಗಿಸುವ, ಎಲ್ಲರಿಗೂ ಅರ್ಥವಾಗುವ ಪದವನ್ನು ಬಿಟ್ಟು,
ಹೊಸ ಪದವನ್ನು ಹುಟ್ಟುಹಾಕುವುದು ಸರಿಯಲ್ಲ ಎನ್ನುವುದು ಅವರು ಮಾತಿನ ಅರ್ಥ, ಎಂದು ನನಗನ್ನಿಸುತ್ತದೆ.