text stringlengths 0 61.5k |
|---|
ಮತ್ತೆ ಕನ್ನಡದ ಪದಗಳನ್ನು ಉಚ್ಚರಿಸೋಣ ಅನ್ನೋದು ಸರಿ!!! ಹಾಗಂತ ನೀವೇ ಹೇಳಿದಂತೆ ಸಂಸ್ಕೃತ ಮೂಲದ ಕಷ್ಟ ಶಭ್ದ ಬೇಡ ಅಂದರೆ ಏನರ್ಥ ಸಾರ್ ? ಮತ್ತೆ ಈ ಚರ್ಚೆಯ ಎಲ್ಲಾ ಕಾಮ್ಮೆಂಟು ಗಳಲ್ಲಿ ನೋಡಿ ಭಾವಾರ್ಥ ಅಥವಾ ನೇರ ಅರ್ಥ ಸಂಸ್ಕೃತ ವಿರೋಧ ಅಂತಾನೆ ಅಲ್ಲವೇ? ಯಾಕೆಂದರೆ ಎಲ್ಲರೂ ತಪ್ಪಾಗಿ ತಿಳಿದಿರೋದು ಅದನ್ನೇ ಸರಿ ಎಂದು ನಂಬಿರೋದು ಮಾತ್ರ ಸಂಸ್ಕೃತ ಒಂದು ಬ್ರಾಹ್ಮಣರ ಭಾಷೆ, ಕೇಳ ವರ್ಗದವರ ಭಾಷೆ ಅಂತ., ತಪ್ಪಾಗಿರೋದು ಇಲ್ಲೇ !!! |
ಭಾಷೆಯನ್ನ ಜಾತಿ ಅಥವಾ ವರ್ಗದ ಜೊತೆ ತಳಕು ಹಾಕ ಹೊರಟಿರೋದು ಕಣ್ರೀ !!! ಭಾಷೆ ಅದೆಲ್ಲವನ್ನ ಮೀರಿದ್ದು ಎಂದು ಅರ್ಥೈಸಿಕೊಂಡರೆ ಇಂತಹ ವಿಕೃತಿಯ ಸಂದರ್ಭವೇ ಇರೋದಿಲ್ಲ ಕಣ್ರೀ !!! |
ಅದೇ ಈ ಚರ್ಚೆಯಲ್ಲೇ ನೋಡಿ .. ಎಲ್ಲರೂ ಹೇಳಿದ್ದು ಕಷ್ಟದ(ಉಚ್ಚರಿಸಲು) ಶಬ್ದ ಬೇಡ ಅಂತ ಹೊರತು ಕೆಟ್ಟ ಶಭ್ದ ತೆಗೆಯುವ ಯೋಚನೆಯೇ ಬಂದಿಲ್ಲ !!!! ಅದೇ ಕೆಟ್ಟ ಶಭ್ದಗಳನ್ನೇ ಧಾರಾಳವಾಗಿ ಉಪಯೋಗ ಮಾಡಿಕೊಂಡಿದ್ದಾರೆ ನೋಡಿ(ಅದೂ ಬೇರೆ ಭಾಷೆಯಿಂದ ಎರವಲು ಪಡೆದು ಕನ್ನಡೀಕರಣ ಗೊಳಿಸಿ ಅದನ್ನ ಅರ್ಥ ಸಮೇತ ವಿವರಿಸಿ!! ) !!! |
ನಾ ಇನ್ನೆನ ಹೇಳಲಿ ? ನಮ್ಮ ಜನಕ್ಕೆ ಅದೇ ಬೇಕು ..ಅದರಿಂದ ನಮ್ಮ ಮುಂದಿನ ಪೀಳಿಗೆ ಅದನ್ನೇ ಮುಂದುವರಿಸುತ್ತದೆ ನಮ್ಮನ್ನ ನೋಡಿ ಅಸ್ಟೇ !!! ಆಮೇಲೆ ಭಾಷೆಯ ಮೇಲೆ ಹರಿ ಹಾಯಲು ಅದನ್ನು ತಿದ್ದಲು ಹೊರಡುತ್ತೇವೆ !! ನಮ್ಮ ನಿಮ್ಮಂತ ಹುಲು ಮಾನವರು !!! |
ಇಲ್ಲೇ ಕೆಲವರು ಹೇಳಿದಂತೆ ವಿಜ್ಞಾನ ಇಷ್ಟು ಮುಂದುವರಿಯಲು ಎಸ್ಟೊಂದು ಜನ ಎಸ್ಟೊಂದು ಕಷ್ಟ ಪಟ್ಟು ಅದ್ಯಯನ ನಡೆಸಿಲ್ಲ ? ಅವರೆಲ್ಲ ಇದು ಕಷ್ಟ ಇದನ್ನು ತೆಗೆದು ಬಿಡೋಣ ಅಂತ ಯೋಚಿಸಿ ಕಾರ್ಯೋನ್ಮುಖರಾಗಿದ್ದರೆ ವಿಜ್ಞಾನದ ಗತಿ ಏನಾಗುತ್ತಿತ್ತು? |
ನಿಮ್ಮಲ್ಲಿರುವ ಪ್ರಶ್ನೆಗಳೇ, ಇಲ್ಲಿ ಹಲವಾರು ಜನರಲ್ಲಿರೋದು. |
'ಹ'ಕಾರ ಬರಲ್ಲ ಅಂದ್ರೆ ಕಲಿಸಿ, ಸಂಸ್ಕೃತದ ಪದಗಳು ಅರ್ಥವಾಗೋಲ್ಲ ಅಂದ್ರೆ ಅರ್ಥ ಮಾಡಿಸಿ ಅಂತ ಹಲವರು ಹೇಳ್ತಾರೆ. |
'ಜನರಿಗೆ ಬರಲಿಲ್ಲ ಅಂದ್ರೆ ಅದನ್ನ ಕಲಿಸೋರಿಗೆ ಬರಲ್ಲ ಎಂದೇ ಅರ್ಥ' ಎಂದುಕೊಂಡಿದ್ದಾರೆ. |
ಈ ರೀತಿಯ ಅಭಿಪ್ರಾಯ ನಮ್ಮಲ್ಲಿ ಹಲವರಲ್ಲಿದ್ದು, ಭಾಷಾ ವಿಜ್ನ್ಯಾನಿಗಳು ಈ ವಿಚಾರವಾಗಿ ಏನು ಹೇಳುತ್ತಾರೆ ಅಂತ ನೋಡಿದಾಗ ಕಂಡು ಬಂದ ಸತ್ಯದ ಬಗೆಗೆ ಇಲ್ಲಿ ಚರ್ಚೆ ನಡೆಯುತ್ತಿರೋದು. |
ಒಂದು ಸಮುದಾಯದಲ್ಲಿರುವ ಉಲಿಗಳು ಆ ಸಮುದಾಯದಲ್ಲಿ ಹುಟ್ಟಿದ ಮಕ್ಕಳಿಗೂ ತಾನಾಗೇ ಬರುತ್ತದೆ. |
ಕೆಲ ಉಲಿಗಳು, ಆ ಸಮುದಾಯದಲ್ಲಿ ಇಲ್ಲದ ಕಾರಣ ಸಮುದಾಯದಲ್ಲಿನ ಮಕ್ಕಳಿಗೆ ಬರೋದಿಲ್ಲ. ಆಗ, ಅಲ್ಲಿ ಆ ಉಲಿ ಬಿದ್ದು ಹೋಯಿತೆಂದೇ ತಿಳಿಯಬಹುದು. |
ಉದಾ: ಕನ್ನಡದಲ್ಲಿದ್ದ 'ರಳ' ಉಲಿ ಈಗ ಇಲ್ಲ, ಬಿದ್ದು ಹೋಗಿದೆ. ಅದನ್ನು ಉಲಿಯಲು ನೀವು ಯಾವುದೇ ಮಲಯಾಳಂ ಭಾಷಿಕರ ಹತ್ತಿರ ಹರಸಾಹಸ ಪಟ್ಟು ಕಲಿಯಬಹುದು, ಕಲಿಯಲು ಸಾಧ್ಯವಾಗದೇ ಇರಬಹುದು. |
ಈಗ ಆ ಉಲಿಯನ್ನು ಕನ್ನಡದಲ್ಲಿ ಕೈ ಬಿಟ್ಟಿದೀವಲ್ಲ. ಅದನ್ನು ಕಲಿಸಲು ತೊಡಗಿದ್ದೆವಾ? ಅಥವಾ ಅದನ್ನು ಉಲಿಯಲು ಬಾರದವರಿಗೆ ಬೈಯುತ್ತಿದ್ದೆವಾ? ಇಲ್ಲಾ ತಾನೇ! |
ಹಾಗೆಯೇ, ನೀವು ಕಿವಿಗೊಟ್ಟು ಕೇಳಿದರೆ, ಕನ್ನಡಿಗರು ಮಹಾಪ್ರಾಣವನ್ನೂ ಉಲಿಯದಿರುವುದು ನಿಮಗೆ ಕಂಡುಬರುತ್ತದೆ. |
"ಅದನ್ನು ಕಷ್ಟ ಪಟ್ಟು ಕಲಿಯುವುದರಿಂದ/ಕಲಿಸುವುದರಿಂದ ಏನಾದರೂ ಒಳ್ಳೆಯದಿದೆಯಾ? ಇದ್ದರೆ ಏನು? ಕೆಟ್ಟದ್ದು ಇದೆಯಾ? ಇದ್ದರೆ ಏನು? |
ಕಷ್ಟ ಪಟ್ಟು ಕಲಿಸಲು ಆಗುತ್ತದಾ?" ಈ ಎಲ್ಲಾ ಪ್ರಶ್ನೆಗಳ ಸುತ್ತವೇ ಈ ಚರ್ಚೆ. ಚರ್ಚೆಗಳಲ್ಲಿ ವೈಜ್ನ್ಯಾನಿಕವಾಗಿ ನುಡಿಯರಿಗರು ಕಂಡುಕೊಂಡ ವಿಷಯಗಳನ್ನೂ ಬಳಸಲಾಗುತ್ತಿದೆ. |
ಈ ರೀತಿಯ ಡೆಮೊಕ್ರಾಟಿಕ್ ಚರ್ಚೆ ಒಳ್ಳೆಯದೇ ತಾನೇ? |
ಮಹಾಪ್ರಾಣಗಳನ್ನು ಉಲಿಯಲು ಕಲಿಸದೆ ಇದ್ದರೆ, ಅವುಗಳನ್ನು ಬಿಟ್ಟರೆ, ನಮ್ಮ ಮೆದುಳು ತುಕ್ಕು ಹಿಡಿಯುತ್ತದೆ ಎಂದು ಹೇಳಿದ್ದೀರ. |
ಇದು ವೈಜ್ನ್ಯಾನಿಕವಾಗಿ ಯಾವುದೇ ಆಧಾರ ಇಲ್ಲದೇ ಹೇಳಿದ ವಿಷಯ ಎಂದನಿಸುತ್ತದೆ. |
ಮಹಾಪ್ರಾಣ ಉಲಿಯದ ಇಂಗ್ಲೀಶ್ ಭಾಷಿಕರ ಮೆದುಳು ಚೆನ್ನಾಗೆ ಕೆಲಸ ಮಾಡುತ್ತಿದ್ದು, ನಿಮ್ಮ ಥಿಯರಿಗೆ ವಿರುಧ್ಧ ನಿದರ್ಶನವಾಗಿದೆ. |
ನೀವೇಕೆ ಕೇವಲ ಮಹಾಪ್ರಾಣದ ಸುತ್ತಲೂ ಇದ್ದೀರಿ? |
ಇನ್ನು ತುಕ್ಕು ಹಿಡಿಯುವುದು ……ಸ್ವಾಮೀ ಹಿಂದೆ ಆರ್ಯಭಟ ರಂತಹ ಮೆದಾವಿಗಳನ್ನೇ ನೋಡಿ , ಈಗಿನ ವಿಜ್ಞಾನಿಗಳು ಯಂತ್ರದ ಸಹಾಯದಿಂದ ಮಾಡಿದ್ದನ್ನು ಯಂತ್ರವಿಲ್ಲದೆಯೇ ಗಣಿತದ ಮೂಲಕ ಕರಾರು ವಕ್ಕಾಗಿ ಮಾಡಿದ್ದಾರೆ ಅಂದರೆ ಭಾಷೆಯ ಉಲಿಯುವಿಕೆ ಕೂಡ ನಮ್ಮ ಮೆದುಳಿನ ಕ್ಷಮತೆಯನ್ನು ಹೆಚ್ಚಿಸುತ್ತದೆ ಅಂತಷ್ಟೇ ನಾನು ಹೇಳಿದ್ದು.. ನಾಲಗೆ ಹೊರಳದವನು ಸಾಧಿಸೋಲ್ಲ ಅಂತಲ್ಲ !! ಮತ್ತೆ ಕಲಿಸಲಾಗದಿದ್ದರೆ ಕೇವಲ ಗುರು ಅಸಮರ್ಥ ಹೇಗಾಗುತ್ತದೆ? ಶಿಷ್ಯನಿಗೆ ಆಸಕ್ತಿಯೇ ಇಲ್ಲದಿದ್ದರೆ ಯಾರೇನು ಮಾಡಿದರೂ ನೀರ್ಗಲ್ಲ ಮೇಲೆ ಮಳೆ ಹೊಯ್ದಂತೆ !!!!!! |
ನಿಮ್ಮ ವಾದದಂತೆ ನೋಡಿದರೆ ನಾವು ಕನ್ನಡ ಬಿಟ್ಟು ಇಂಗ್ಲಿಷ್ ಕಲಿಯಬೇಕು ಮೆದುಳು ಚೆನ್ನಾಗಿ ಕೆಲಸ ಮಾಡಲು!!!! ಯಾಕಂದ್ರೆ ಈಗಿನ ಸಂಶೋದಕರೆಲ್ಲ ಇಂಗ್ಲಿಷ್ ಹೆಚ್ಚು ಮಾತಾಡುತ್ತಾರೆ!! ಇದು ಒಪ್ಪಲಾಗದು ಅಲ್ಲವೇ? ಹಾಗಾಗಿ ಕೆಲವು ಪದ ಕಷ್ಟ ಎಂದು ತೆಗೆದು ಬಿಡೋ ಬದಲು ,ಕನ್ನಡ ವನ್ನೇ ತೆಗೆದು ಬಿಟ್ಟರೆ ? ಹಾಗಾಗುತ್ತದೆಯೇ? ಒಪ್ಪತಕ್ಕಂತಹುದಲ್ಲ ಅದು !!!!! ಇನ್ನು ಭಾಷಾ ವಿಜ್ಞಾನಿಗಳು ಏನಾದರೂ ಹೇಳಿದ್ದರೆ ಯಾವ ಸಂದರ್ಬದಲ್ಲಿ ಯಾಕೆ ಹಾಗೆ ಹೇಳಿದ್ದಾರೆ ಎಂದು ಯೋಚಿಸಬೇಕು ಸುಮ್ಮನೆ ಅವರು ಹೇಳಿದ ಶಭ್ದಾರ್ಥ ತೆಗೆದುಕೊಂಡು ಅನ್ವಯಿಸಿಕೊಂಡರೆ, ಅವರು ಪಟ್ಟ ಶ್ರಮ ನೀರಿನಲ್ಲಿ ಹೋಮ ಮಾಡಿದಂತೆ ಅಸ್ಟೇ . ನಮಗೆ ನಸ್ಟ!!!!! |
ಯೋಚಿಸಿ !!!! ಚರ್ಚಿಸಿ …ಮುಖ್ಯವಾಗಿ ಎಲ್ಲಾ ದೃಷ್ಟಿ ಕೋನಗಳಿಂದ. ಇದು ನಾವು ನೀವೆಲ್ಲರೂ ಮಾಡಬೇಕಾದ ಬಹುಮುಖ್ಯ ಕೆಲಸ. |
ನಾವು ಉಪಯೋಗಿಸದೆ ಬಿಟ್ಟರೆ ಕಷ್ಟದ ಶಭ್ಧಗಳು ಮಾತ್ರವಲ್ಲ ಸುಲಭದ ಶಬ್ಧಗಳೂ ಮರೆಯಾಗಿ ಬಿಡುತ್ತವೆ. ಮಹಾಪ್ರಾಣ ಗಳು ಮಾತ್ರವಲ್ಲ ಎಲ್ಲವೂ ಮರೆಯಾಗಿ ಬಿಡುತ್ತವೆ. |
ಧನ್ಯವಾದ ಗಳು . |
ಸುಮಾರು ಮೂವತ್ತು ವರ್ಷ ಭಾಷಾ ವಿಜ್ಞಾನಿಯಾಗಿ ಕೆಲಸ ಮಾಡಿದ ಶಂಕರ ಬಟ್ಟರಿಗೆ ಶಾಂತಿಯವರು ಕೊಟ್ಟ ಸಲಹೆ ಸರಿಯಾಗಿಯೇ ಇದೆ! |
ಅವರು ಮೂವತ್ತು ವರುಷ ಎಲ್ಲಾ ಕೋನಗಳಿಂದ ಯೋಚಿಸಿಲ್ಲ ! ಇನ್ನೊಂದು ಮೂವತ್ತು ವರ್ಷ ಎಲ್ಲಾ ಕೋನಗಳಲ್ಲಿ ಯೋಚಿಸುವುದನ್ನು ಕಲಿಯಬೇಕು! |
ಋ ಕಾರ ರು ಕಾರ ಒಂದೇ ರೀತಿಯಲ್ಲಿ ಉಲಿಯಲ್ಪಡುತ್ತವೆ. ಎಲ್ಲಿ ಋ ಮತ್ತು ಎಲ್ಲಿ ರು ಬಳಸಬೇಕೆಂಬುದಕ್ಕೆ ಒಂದು thumb rule ಇದೆಯೇ? ಎಷ್ಟು ಶಬ್ದಗಳನ್ನ ಅಂ<ತ ನೆನಪಿಟ್ಟುಕೊಳ್ಲುವುದು? ಅದರ ಬದಲು ;'ರು' ಬಳಸಲು ಸ್ವಾತಂತ್ರ ಕೊಟ್ಟರೆ ಎಲದಲರಿಗೂ ಅನುಕೂಲವಲ್ಲವೇ? ಈಗಿರುವ ಸಮಯದಲ್ಲಿ ವಿಷಯಕ್ಕಿಂತ ಮೊದಲು ಭಾಷೆಯನ್ನು ಅರಿತುಕೊಂಡು ಮುಂದುವರೆಯಬೇಕಾಗಿದೆ. ಭಾಷೆಯೇ ಮೊದಲ ತೊಡಕಾದರೆ ವಿಷಯ ಕಲಿಯುವುದೆಂತು? |
ಭಾಷೆ ತೊಡಕಾಗದಂತೆ ಮಾರ್ಪಡಿಸುವುದು ಒಳ್ಳೆಯದು. ಅ ಕಾರ 'ಹ'ಕಾರ ಕಲಿಸಿಕೊಂದು ನಾಲಗೆ ತಿದ್ದುವುದಕ್ಕಿಂತ ವಿಷಯದ ಮೂಲಕ ಮೆದುಳನ್ನೇ ತಿದ್ದುವುದು ಒಳ್ಲೆಯದು. |
ಹ ಕಾರ ಕನ್ನದ ದ ಅಕ್ಕರ ವಲ್ಲ. ಹಾಗಾಗಿ ಬಿಟ್ಟರೆ ತಪ್ಪೇನಿಲ್ಲ. ಜಪಾನೀಸ ಭಾಷೆಯಲ್ಲಿ 'ವ' ಕಾರ ವಿಲ್ಲ. ಅದೆನೂ ತೊಡಕಲ್ಲ |
@ಶ್ರೀಹರ್ಷ, |
ಬೇರೆಯವರಿಗೆ ಬೊದನೆ ಮಾಡುವ ನೀವು ಮಾಡುತ್ತಿರುವುದೇನು? ಬೇರೆಯವರಿಗೆ ಹೇಳುತ್ತೀರಿ ಬೇಕಾದ್ದನ್ನು ತೆಗೆದು ವಾದಿಸುತ್ತೀರಿ ಎಂದು!! ನೀವು, ನಾನು , ನಮ್ಮ ನಿಮ೦ಥವರಿಗೆ ಎಂದು ಹೇಳಿದ್ದನ್ನು ಶಂಕರ ಭಟ್ಟರಿಗೆ ಹೇಳಿದ್ದೆಂದು ಹೇಳಿ ಅದ್ಬುತ ಪ್ರೌಢಿಮೆ ಮೆರೆದಿದ್ದೀರಿ !!!!! ಕಲಾಕಾರರು ಕಣ್ರೀ ನೀವು !!! ಇದನ್ನೇ ನಾನು ಹೇಳಿದ್ದು ಪೂರ್ತಿ ವಾಕ್ಯದ ಒಂದು ಶಭ್ಧ (ತನಗೆ ಬೇಕಾದದ್ದು ವಾದದಲ್ಲಿ ಜರೆಯಲು ) ಹೆಕ್ಕಿ ತೆಗೆದು ಅದರ ಅರ್ಥವನ್ನ ತನ್ನದೇ ಮಾನದಂಡದಲ್ಲಿ ಕಲ್ಪಿಸಿ , ಇದಮಿತ್ಥಂ ಅಂತ ಹೇಳೋದು ಅಂತ !!!! |
ಮೊದಲು ನಿಮ್ಮ ಯೋಚನಾ ವಿಧಾನವನ್ನು ತಿದ್ದಿಕೊಳ್ಳಿ. ಆಮೇಲೆ ಕನ್ನಡವನ್ನ ತಿದ್ದಬಹುದು !!! |
ಇನ್ನು ಇದರಲ್ಲೂ ಒಂದೊಂದೇ ಶಭ್ಧ ಹೆಕ್ಕಿ ತೆಗೆದು ಅದರ ಅರ್ಥವನ್ನೇ ಸಮೀಕರಿಸಿ, ಅದನ್ನು ಎಲ್ಲೆಲ್ಲೋ ಪೋಣಿಸಿ ..ಶಾಂತಿ ಯವರು ಇದನ್ನೇ ಹೇಳಿದ್ದು ಅನ್ನಬೇಡಿ !!!! |
ನಾನು ಏನು ಬೋಧನೆ ಮಾಡಿದ್ದೇನೆ ದಯವಿಟ್ಟು ತಿಳಿಸೋಣವಾಗಲಿ. |
ಇದು ಎಲ್ಲರಿಗೂ ಗೊತ್ತಿರುವ ವಿಷಯ. ಹೊಸದಿದ್ದರೆ ಹೇಳಿ 😉 |
ಶಂಕರ ಬಟ್ಟರು ಸ್ಪಷ್ಟವಾಗಿ ಕನ್ನಡ ಬರಹವನ್ನು ಸರಿಪಡಿಸೋಣ ಹೊತ್ತಗೆಯಲ್ಲಿ ಹೊಸ ಶಾಲೆಯ ಬಗ್ಗೆ ಹೇಳಿದ್ದಾರೆ. ಅವರು ಹೇಳಿದ್ದನ್ನೆ ಇಲ್ಲಿ ಅವರ ಪರವಾದವರು ಹೇಳುತ್ತಿದ್ದಾರೆ. |
ಯೋಚನಾವಿಧಾನದಲ್ಲಿ ಎಲ್ಲಿ ತಪ್ಪಿದೆ ಎಂದು ದಯವಿಟ್ಟು ತಿಳಿಸಿ. ತಮ್ಮನ್ನು ಗುರುಸಮಾನರಾಗಿ ತಿಳಿದು ಕಲಿತುಕೊಳ್ಲುತ್ತೇನೆ. ಈವನ ಪೂರ್ತ ಕನ್ನಡಿಗರಿಗೆ ಕನ್ನಡವೇ ಅಲ್ಲದ ಹ ಕಾರ ಋ ಕಾರ ಕಲಿಸುತ್ತಾ ಕೂರುವದರಲ್ಲಿ ಯಾವ ಪುರುಷಾರ್ಥವಿದೆ ಎಂದು ತಾವು ನನಗೆ ದಾರಿ ತೋರಿಸಬೇಕು. |
ಹಾಗೆಯೇ ಕನ್ನಡ ಪದಗಳಲ್ಲಿ ಬಳಕೆಯಾಗದ ಮಹಾಪ್ರಾಣಗಳನ್ನು ಏಕೆ ಶತಾಯಗತಾಯ ಕಲಿಸಲೇಬೇಕು ಎಂದು ದಯವಿಟ್ಟು ತಿಳಿಸಿ. |
ಆರ್ಯಭಟ \ನಿಗೆ ಸಕ್ಕದ ಗೊತ್ತಿತ್ತು ಹಾಗಾಗಿ ನಾವು ಬುದ್ದಿವಂತರಾಗಬೇಕಾದರೆ ಸಕ್ಕದಕ್ಕೆ ಕನ್ನಡ ಹೊಂದಿಸಿಕೊಳ್ಳಬೇಕು ಎಂಬ ಅವೈಜ್ಞಾನಿಕ ವಾದ ಮಾಡುವುದಿಲ್ಲವೆಂಬ ನಂಬಿಕೆಯೊಂದಿಗೆ ತಮ್ಮ ಉತ್ತರಕ್ಕೆ ಕಾಯುತ್ತಿರುತ್ತೇನೆ. |
ಭಾಷೆಯ ಉಲಿಯುವಿಕೆಗೂ ಬುಧ್ಧಿಮಟ್ಟಕ್ಕೂ ಸಂಬಂಧ ಇದೆ ಎಂಬುದನ್ನು ನೀವು ಹೇಳ್ತಿದೀರಿ. |
ಆರ್ಯಭಟರ ಉದಾಹರಣೆ ಅದೇ ನಿಟ್ಟಿನಲ್ಲಿ ತೆಗೆದುಕೊಂಡಿದೀರಿ ಎಂದು ಭಾವಿಸುತ್ತೇನೆ. |
ಇದಕ್ಕೆ ಯಾವುದೇ ವೈಜ್ನ್ಯಾನಿಕ ಪುರಾವೆಗಳಿಲ್ಲ ಎಂದು ನಾನು ನಂಬಿದ್ದೇನೆ. ನಿಮ್ಮ ಬಳಿ ಇದ್ದರೆ ಹಂಚಿಕೊಳ್ಳಿ. |
ಮೆದಾವಿ ನಹಿ. ಮೇಧಾವಿ (ಮಹಾಪ್ರಾಣದ ಗಲತೀ ಇರಲಿ.. ಹ್ರಸ್ವಸ್ವರ ಮಾಡಿ ಬಿಟ್ರೀ..) |
ಸಂದರ್ಬದಲ್ಲಿ ಅಯ್ಯೋ ಶಿವ ಶಿವ ಸಂದರ್ಭ ಅದು.. ದೋಷ! |
"ಶಭ್ದಾರ್ಥ ಅಲ್ಲ ಶಬ್ದಾರ್ಥ".. ಮಹಾಪ್ರಾಣದ confusion. |
"ಶಭ್ಧಗಳು, ಶಬ್ಧಗಳೂ" ಏನಿದು ಒಂದು ಪದದ ಎರೆಡೆರಡು ಸ್ಪೆಲ್ಲಿಂಗು? |
ಶಾಂತಿ ಬೆಹನ್.. ನಿಮ್ಮ ಬಾತ್ ಠೀಕ್ ಇದೆ. ಕನ್ನಡದಾಗೆ ಸಬ್ ಬಾಷಾ ಪದ ಬರಲಿ.. |
ಪಾಪ ತುಂಬಾ ಜಲ್ದಿ ಜಲ್ದಿ ಟಿಪ್ಪಣಿ ಬರೆಯಕ್ಕೆ ಹೋಗಿ ನಿಮಗಾ ಹಡಬಡೀ ಆಗ್ಯಾದ.. ಜ್ಸರ ಸಾವಾಧಾನ್ ಸಾವಕಾಶ್ ಬರೀರಿ… |
ನಿಮ್ಮ್ ಬಹಸ್ ಮಸ್ತ್ ಇದೆ. |
ಶುಖ್ರಿಯಾ! |
ನೋಡಿ ನಾನ್ ದೇಹಾತೀ, ನಿಮ್ಮ ಹಂಗಾ ಪಡೀಲಿಖಾ ಇಲ್ಲ.. |
ಭಾಷಾ ನ ಬಾಷಾ ಅಂತ ಬರೆದಿ. |
ಇಂಗ್ಲೀಶ್ ಮನೆಮಾತಾದವರು ಮಹಾಪ್ರಾಣ ಉಲಿಯಲ್ಲ ಅಂತ ನಾನು ಹೇಳಿದ್ದೆ. |
ಗೆಳೆಯರೊಬ್ಬರು ಇಂಗ್ಲೀಷರು ಉಲಿಯಬಲ್ಲರು/ಉಲಿಯುತ್ತಾರೆ ಎಂಬುದು ತೋರಿಸಿಕೊಟ್ಟಿದಾರೆ. |
ನಾನು ಇಲ್ಲಿ ಕೊಟ್ಟ ಉದಾಹರಣೆ ತಪ್ಪಾಗಿದೆ. |
ಮಹಾಪ್ರಾಣ ಉಲಿಯುವಿಕೆಗೂ ಬುಧ್ಧಿಮಟ್ಟಕ್ಕೂ ತಳುಕು ಹಾಕೋಕೆ ನನಗೆ ಇನ್ನೂ ಪುರಾವೆ ದೊರೆತಿಲ್ಲ. |
ನಿಮಗೆ ಸಿಕ್ಕರೆ ಹಂಚಿಕೊಳ್ಳಿ. |
ಇಲ್ರೀ ಶಾಂತಿ ಬೆಹೆನ್.. |
ನಿಮ್ಮ ದೂಸರ ಬರಹದಾಗಿನ ಟಿಪ್ಪಣಿ ದೇಖಿಸಿ, ನಾನು ಕನ್ನಡದಲ್ಲಿ ಸಬ್ ಭಾಷಾ ಶಬ್ದ ಬರಲಿ ಅನ್ನೋವ ಆದೆನು. |
ಸಂಸ್ಕೃತ್ ಇರಲಿ, ಹಿಂದಿ ಬರಲಿ, ಇಂಗ್ಲೀಶ್ ಸೇರಲಿ.. ನಮ್ಮ ಕನ್ನಡ ಬೋಲಿ ಬಡಾ ಆಗಲಿ.. |
ನಿಮ್ಮ ಮಾತು ಠೀಕ್ ಇದೆ ನೋಡಿ.. |
ಏಹಸಾನ್ಮಂದ್.. |
ಕಿರಣ್, ಅಜಕ್ಕಳ ಗಿರೀಶ ಭಟ್ಟರ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗಿಂತ ಭಿನ್ನ ರೀತಿಯಲ್ಲಿದೆ ನಿಮ್ಮ ತರ್ಕ. |
ಸಾಕಷ್ಟು ಸಂಗತಿಗಳು ಒಪ್ಪುವಂತಹ ರೀತಿಯಲ್ಲೂ ಇದೆ. |
ಆದರೂ ಕೆಲವು ವಿಷಯಗಳ ಕುರಿತಾಗಿ ನನ್ನ ಭಿನ್ನಮತವಿದೆ. |
ನೀವು ಪ್ರಶ್ನೆಗಳನ್ನು ಸ್ವಾಗತಿಸುವಿರಿ, ಪ್ರಶ್ನಿಸಿದವರ ಮೇಲೆ ಹಾರಾಡುವುದಿಲ್ಲ, ತರ್ಕಬದ್ಧವಾದುದನ್ನು ಒಪ್ಪುವಿರಿ ಎಂದು ಭಾವಿಸಿ ನನ್ನ ಪ್ರತಿಕ್ರಿಯೆಗಳನ್ನು ಬರೆಯುತ್ತಿರುವೆ. |
> ಇದರ ಬದಲಾಗಿ ಜನರು ಉಲಿದಿದ್ದನ್ನು ಕಣ್ಗೊತ್ತಿಗೊಂಡು ಸರಿಯೆಂದು ಒಪ್ಪಿಕೊಳ್ಳುವುದೇ ನುಡಿಯರಿಗರಿಗೂ ಹುಲುಜನರಿಗೂ ಒಪ್ಪುವಂತದ್ದು, ಅದೇ ವೈಗ್ನಾನಿಕತೆಯು |
ಇದು ಒಪ್ಪತಕ್ಕ ಮಾತಲ್ಲ. ಪ್ರತಿಯೊಂದು ಭಾಷೆಯಲ್ಲೂ ಪದಗಳನ್ನು ಯಾವ ರೀತಿ ಉಚ್ಚರಿಸಬೇಕೆಂದು ಇರುತ್ತದೆ. |
ಉದಾಹರಣೆಗೆ ಇಂಗ್ಲಿಷಿನ Rendezvous ಎಂಬ ಪದವನ್ನೇ ತೆಗೆದುಕೊಳ್ಳಿ (ಈ ಪದವನ್ನೇ ಏಕೆ ತೆಗೆದುಕೊಂಡೆನೆಂದರೆ, ಇದನ್ನು ಹಲವು ರೀತಿ ಉಚ್ಚರಿಸಬಹುದು). ಅದನ್ನು ಹೇಗೆ ಉಚ್ಚರಿಸಬೇಕೆಂದೂ ಇಂಗ್ಲಿಷಿನ ನಿಘಂಟಿನಲ್ಲಿ ದಾಖಲಾಗಿದೆ. |
ನೀವು ಇಂಗ್ಲಿಷಿನಲ್ಲಿ ಮಾತನಾಡುವಾಗ Rendezvous ಪದವನ್ನು ಆ ಭಾಷೆಯಲ್ಲಿ ತಿಳಿಸಿದಂತೆಯೇ ಉಚ್ಚರಿಸಬೇಕು. |
ಇಲ್ಲದಿದ್ದರೆ ನಿಮ್ಮೊಡನೆ ಮಾತನಾಡುತ್ತಿರುವವನಿಗೆ ಅದು ತಿಳಿಯುವುದಿಲ್ಲ. ಮುಂದಿರುವವನಿಗೆ ತಿಳಿಯದಿದ್ದರೆ, ಸಂವಹನ ಅಲ್ಲಿ ನಿಂತ ಹಾಗೇ ಅಲ್ಲವೆ? |
ಭಾಷೆ ಇರುವುದೇ ನಿಯಮಗಳ ಮೇಲೆ – ಉಚ್ಚಾರಣೆಗೂ ನಿಯಮವಿರಬೇಕು. |
ಹಾಗಿಲ್ಲದೆ, ಎಲ್ಲರೂ ಎಲ್ಲ ಪದಗಳನ್ನೂ ತಮಗಿಷ್ಟ ಬಂದಂತೆ ಉಚ್ಚರಿಸತೊಡಗಿದರೆ, ಅದನ್ನು ಭಾಷೆ ಎಂದು ಕರೆಯಲಾಗುತ್ತದೆಯೇ? |
> ಆದರೆ ಜನಸಾಮಾನ್ಯರಿಗೆ ಮನುಷ್ಯತ್ವವನ್ನು ಅಲ್ಲಗಳೆಯದೆ ಇರುವಲ್ಲಿ ತಮಿಳು ಕನ್ನಡಕ್ಕಿಂತ ಮುಂದಿದೆ. ಹೌದು, ಕನ್ನಡನಾಡಿನಲ್ಲೇನು ಅಮೇರಿಕದಲ್ಲಿ ನಡೆದಂತೆ ನೆತ್ತರ |
> ಚೆಲ್ಲಾಟ ನಡೆದಿಲ್ಲ, ಆದರೆ ಅದರ ಬದಲಾಗಿ ಸಮಾಜದಲ್ಲಿ ಮತ್ತು ಅದರ ಗುರುತೆನ್ನಬಹುದಾದ ನುಡಿ-ಬರಹಗಳಲ್ಲಿ ಮೇಲು-ಕೀಳುಗಳು ಏರ್ಪಟ್ಟು ಪ್ರತಿದಿನವೂ ಕನ್ನಡಿಗರ |
> ಮನುಷ್ಯತ್ವವನ್ನೇ ಅಲ್ಲಗಳೆದು ಕಾಡುತ್ತಿವೆ, ಅಶ್ಟೆ. |
ಈ ರೀತಿಯ ಮೇಲು-ಕೀಳು ಇರುವುದು ಭಾಷೆಯ ಕಾರಣದಿಂದಲ್ಲ. ಭಾಷೆಯನ್ನು ಬದಲಾಯಿಸಿದ ಕೂಡಲೇ ಇದು ಸರಿಹೋಗುವುದೂ ಇಲ್ಲ. |
ಮೇಲು-ಕೀಳು ಭಾವನೆ ಇರುವುದು ಮನುಷ್ಯರ ಮನಸ್ಸಿನ ಒಳಗೆ. ಅದನ್ನು ಬದಲಾಯಿಸದೆ ಭಾಷೆಯನ್ನು ಮಾತ್ರ ಬದಲಾಯಿಸಿದರೆ, ಮೇಲು-ಕೀಳು ಭಾವನೆ ಹೋಗುವುದಿಲ್ಲ. |
ಈ ರೀತಿಯ ತಾರತಮ್ಯ ಭಾವನೆಗಳು ನಮ್ಮ ದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. |
ಅಮೆರಿಕದಲ್ಲೂ ಕಪ್ಪು ಜನರನ್ನು ಕೀಳಾಗಿ ಕಾಣಲಾಯಿತು. ಅವರ ಭಾಷೆಯಲ್ಲಿ ನಾವು ಕನ್ನಡದಲಿರುವ ಕಷ್ಟಗಳಾವುದನ್ನೂ ಕಾಣುವುದಿಲ್ಲ. |
ಇಂಗ್ಲಿಷಿನಲ್ಲಿ ಕೇವಲ ೨೬ ಅಕ್ಷರಗಳಿವೆ. ಹೀಗಿದ್ದೂ ಈ ರೀತಿಯ ತಾರತಮ್ಯಕ್ಕೆ ಕಾರಣವೇನು? |
ಇಂದು ಈ ರೀತಿಯ ತಾರತಮ್ಯ ಅಮೆರಿಕದಲ್ಲಿ ಕಡಿಮೆಯಾಗಿದೆ. ಆ ಜನ ತಮ್ಮ ಅಧ್ಯಕ್ಷನನ್ನಾಗಿ ಕಪ್ಪು ಜನಾಂಗಕ್ಕೆ ಸೇರಿದವನನ್ನೇ ಆರಿಸಿದ್ದಾರೆ. |
ಒಟ್ಟಿನಲ್ಲಿ ಅಲ್ಲಿ ಬದಲಾವಣೆ ಕಣ್ಣಿಗೆ ಕಾಣಿಸುತ್ತದೆ. ಈ ರೀತಿಯ ಬದಲಾವಣೆ ತರಲು ಅವರು ತಮ್ಮ ಭಾಷೆಯನ್ನೇನೂ ಸುಧಾರಿಸಲಿಲ್ಲವಲ್ಲ? |
ತಾರತಮ್ಯ ಭಾವನೆಗಳು ಹೋಗಬೇಕು, ಎಲ್ಲರೂ ಸಮಾನವಾಗಿರುವ ಸಮಾಜ ರಚನೆಯಾಗಬೇಕು. |
ಇದರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಆದರೆ, ಇದನ್ನು ಸಾಧಿಸಲು ಭಾಷೆಯ ಬದಲಾವಣೆಯಿಂದ ಸಾಧ್ಯ ಎನ್ನುವುದು ನನಗೆ ಒಪ್ಪಿಗೆಯಾಗುತ್ತಿಲ್ಲ. |
ಇಷ್ಟು ಸುಲಭದಲ್ಲಿ ಇದು ಸಾಧ್ಯವಾಗುತ್ತದೆ ಎಂದಾದರೆ, ಕನ್ನಡವನ್ನೂ ಪೂರ್ಣವಾಗಿ ಬದಲಾಯಿಸಿಬಿಡೋಣ. |
ನಾನಿಲ್ಲಿ ಕೇವಲ ಶಂಕರಭಟ್ಟರು ಬರೆದರೆಂಬ ಕಾರಣಕ್ಕೆ ವಿರೋಧವನ್ನೋ ಅಥವಾ ಅಜಕ್ಕಳರು ಬರೆದರೆಂಬ ಕಾರಣಕ್ಕೆ ಸಮರ್ಥನೆಯನ್ನೋ ಮಾಡುತ್ತಿಲ್ಲ. |
ಅವರಿಬ್ಬರೂ ನನಗೆ ಪರಿಚಯವಿಲ್ಲ. ಹಾಗೆ ನೋಡಿದರೆ, ಇಲ್ಲಿನ ಚರ್ಚೆಯಲ್ಲಿ ಭಾಗವಹಿಸುತ್ತಿರುವ ಯಾರೊಬ್ಬರೂ ನನಗೆ ಪರಿಚಯಸ್ಥರಲ್ಲ. |
ಹೀಗಾಗಿ, ಕುರುಡಾಗಿ ಯಾವುದನ್ನೂ ನಾನು ಸಮರ್ಥಿಸುತ್ತಿಲ್ಲ ಅಥವಾ ವಿರೋಧಿಸುತ್ತಿಲ್ಲ. |
ಮುಂದೆ ನನ್ನ ಪ್ರತಿಕ್ರಿಯೆಗೆ ಬರುವ ಕಾಮೆಂಟುಗಳನ್ನು ಗಮನದಲ್ಲಿಟ್ಟುಕೊಂಡು ಈ ಮುನ್ನುಡಿಯನ್ನು ಬರೆಯಬೇಕಾಯಿತಷ್ಟೆ. |
ಹಿಂದಿನ ಚರ್ಚೆಗಳಿಂದ ಪೂರ್ವಾಗ್ರಹಕ್ಕೊಳಗಾಗದೇ ಪ್ರತಿಕ್ರಿಯಿಸಿದರೆ ಉತ್ತಮವಾಗಿರುತ್ತದೆ ಎಂದೂ ತಿಳಿಸಲಿಚ್ಚಿಸುವೆ. |
ಒಳ್ಳೆಯ ಪ್ರಶ್ನೆಗಳನ್ನೇ ಎತ್ತಿದ್ದೀರಿ. |
ನಿಮ್ಮ ಪ್ರಶ್ನೆಗಳಿಗೆ ನಾನು ಉತ್ತರಿಸಬಯಸುತ್ತೇನೆ. |
ಪ್ರತಿಯೊಬ್ಬರೂ ತಮ್ಮ ತಮ್ಮದೇ ರೀತಿಯಲ್ಲಿ ಮಾತನಾಡತೊಡಗಿದರೆ, ತೊಂದರೆಯೇ ಆಗುತ್ತದಲ್ಲವೇ ಎಂದು ನೀವು ಕೇಳಿದ್ದೀರಾ. |
ಹೌದು. ಪ್ರತಿಯೊಬ್ಬರೂ ತಮ್ಮದೇ ರೀತಿಯಲ್ಲಿ ಮಾತನಾಡಿದರೆ ಅದು ತೊಂದರೆಯೇ. |
ಆದರೆ, ಹಾಗಾಗದಂತೆ ಅದನ್ನು ಸಮಾಜವೇ ನಿಭಾಯಿಸುತ್ತದೆ. ಬೆಳೆಯುವ ಮಗುವು, ತನ್ನ ಸುತ್ತಲಿನ ಮಾತುಗಳನ್ನು ಆಲಿಸಿ ಮಾತು ಕಲೆಯೋದರಿಂದ, ಸ್ವಾಭಾವಿಕವಾಗಿ ಎಲ್ಲರಂತೆಯೇ ಮಾತನಾಡುತ್ತದೆ. |
ಕಿರಣ್ ಅವರು ಇಲ್ಲಿ ಹೇಳುತ್ತಿರೋದು ಒಂದು ಸಮುದಾಯವನ್ನೇ ಗಮನದಲ್ಲಿಟ್ಟುಕೊಂಡು. |
ಒಂದು ಸಮುದಾಯದಲ್ಲಿ ಯಾವ ಭಾಷೆ ಆಡಲಾಗುತ್ತಿದೆಯೋ ಅದೇ ಸರಿ ಎಂದು ಒಪ್ಪಿಕೊಳ್ಳುವ ಮನಸ್ಥಿತಿ ಬೇಕಾಗಿದೆ. |
Subsets and Splits
No community queries yet
The top public SQL queries from the community will appear here once available.