text stringlengths 0 61.5k |
|---|
೭. ದಶಹರಿ |
ಈ ಹಣ್ಣಿನಲ್ಲಿಯೂ ನಾರುರಹಿತ ತಿರುಳು ಇರುವುದು ಮತ್ತು ರಸಭರಿತವಾದ ಗುಣ ಹೊಂದಿದೆ. ಉತ್ತರ ಭಾರತದಲ್ಲಿ ಹೆಚ್ಚು ಪ್ರಚಲಿತವಾಗಿದೆ. |
೮. ಅಮ್ರಪಾಲಿ |
ದಶಹರಿ ಹಾಗೂ ನೀಲಂಗಳಿಂದ ಅಭಿವೃದ್ಧಿಪಡಿಸಿದ ಈ ತಳಿಯೂ ಸಾಧಾರಣದಿಂದ ಉತ್ತಮ ಇಳುವರಿ ನೀಡುವ ಗುಣ ಹೊಂದಿದೆ. ಈ ತಳಿಯು ಹೆಚ್ಚಿನ ಸಾಂದ್ರತೆಯಲ್ಲಿ ನಾಟಿ ಮಾಡಲು ಸೂಕ್ತವಾಗಿದೆ. |
೯. ಅರ್ಕಾ ಅನಮೋಲ್ |
ಆಪೂಸು ಹಾಗೂ ಜನಾರ್ಧನ ಪಸಂಗ ತಳಿಗಳಿಂದ ಅಭಿವೃದ್ಧಿ ಪಡಿಸಿದ ಈ ತಳಿಯು ಪ್ರತಿ ವರ್ಷ ಇಳುವರಿ ಕೊಡುವ ಗುಣ ಹೊಂದಿದೆ. ಈ ತಳಿಯ ಹಣ್ಣನ್ನು ಹೆಚ್ಚು ಕಾಲ ಇಡಬಹುದಲ್ಲದೇ ರಫ್ತು ಮಾಡಲು ಸೂಕ್ತವಾಗಿದೆ. |
೧೦. ರ್ಕಾ ಪುನೀತ |
ಆಪೂಸು ಮತ್ತು ಬಂಗನಪಲ್ಲಿ ತಳಿಗಳಿಂದ ಅಭಿವೃದ್ಧಿಪಡಿಸಿದ ಈ ತಳಿಯು ಪ್ರತಿವರ್ಷ ಇಳುವರಿ ನೀಡುವ ಗುಣಹೊಂದಿದೆ. ಉತ್ತಮ ಇಳುವರಿ ನೀಡುವ ಗುಣ ಹೊಂದಿದೆ. (ಹೆಕ್ಟೇರಿಗೆ ೧೦ ರಿಂದ ೧೧ ಟನ್). |
ಉಪ್ಪಿನಕಾಯಿಗೆ ಸೂಕ್ತವಾದ ತಳಿಗಳು : |
ಉಪ್ಪಿನಕಾಯಿ ತಯಾರಿಸಲು ತುಂಬಾ ಸೂಕ್ತವಾದ ತಳಿಗಳೆಂದರೆ, |
೧. ಅಪ್ಪಿ ಮಿಡಿ, ೨. ಹ್ಯಾಮ್ಲೆಟ್. |
ನಾಟಿ ಮಾಡಲು ಸೂಕ್ತ ಸಸಿಗಳ ಆಯ್ಕೆ |
ನಾಟಿ ಮಾಡುವ ಆರೋಗ್ಯವಂತವಾದ ಸಸಿಗಳನ್ನು ಆಯ್ಕೆ ಮಾಡಬೇಕು. ಈ ಸಸಿಗಳು ಕನಿಷ್ಠ ಒಂದು ವರ್ಷ ವಯಸ್ಸಿನದಾಗಿರಬೇಕು ಹಾಗೂ ಕಸಿ ಮಾಡಿದ ಜಾಗೆಯಲ್ಲಿ ಉತ್ತಮವಾಗಿ ಬೆಸೆದುಕೊಂಡಿರಬೇಕು. ಹೆಚ್ಚು ವಯಸ್ಸಿನ ಸಸಿಗಳು ಸೂಕ್ತವಲ್ಲ. ಸಾಮಾನ್ಯವಾಗಿ ಮೃದುಕಾಂಡ ಬೆಣೆ ಕಸಿ ಪದ್ಧತಿಯಿಂದ ಸಸ್ಯಾಭಿವೃದ್ಧಿ ಮಾಡಿ ಸಸಿಗಳನ್ನು ಬಳಸುವುದು ಒಂದಡೆಯಾದರೆ, ಮಾವಿನ ಗೊಟ್ಟಗಳನ್ನು (ಬೀಜ) ಕುಣಿಗಳಲ್ಲಿ ಹಾಕಿ, ಬೇರು ಸಸಿಗಳನ್ನು ಬೆಳೆಸಿ ಮುಂದೆ ಫೆಬ್ರುವರಿ ತಿಂಗಳಲ್ಲಿ ಆಯ್ಕೆ ಮಾಡಿದ ತಳಿಯನ್ನು ಉಪಯೋಗಿಸಿ ಕಸಿ ಮಾಡಬೇಕು. ಈ ಪದ್ಧತಿಯಿಂದ ಶೇ.೯೦ – ೯೫ರಷ್ಟು ಸಸಿಗಳು ಯಶಸ್ಸು ಹೊಂದಿ ಮೂರನೇ ವರ್ಷದಿಂದಲೇ ಮಾವಿನ ಫಲ ಪಡೆಯಬಹುದಾಗಿದೆ. |
ನಾಟಿ ಮಾಡುವ ಅಂತರ |
ಮಾವಿನಲ್ಲಿ ನಾಟಿ ಮಾಡುವ ಅಂತರವು ಪ್ರಮುಖವಾಗಿ ತಳಿ ಹಾಗೂ ಮಣ್ಣಿನ ಗುಣಧರ್ಮದ ಮೇಲೆ ಅವಲಂಬಿತವಾಗಿದೆ. ಸಾಮಾನ್ಯವಾಗಿ ಅನುಸರಿಸುವ ಅಂತರ ೧೦ಮೀ x ೧೦ಮೀ. ಅಂತರವನ್ನು ಆಧರಿಸಿ ಸಸಿಗಳ ಸಂಖ್ಯೆ ಬದಲಾಗುತ್ತದೆ. |
ಗಿಡದಿಂದ ಗಿಡಕ್ಕೆ ಅಂತರ ಸಸಿಗಳ ಸಂಖ್ಯೆ (ಪ್ರತಿ ಹೆಕ್ಟೇರ್ ಪ್ರದೇಶಕ್ಕೆ) |
೯ಮೀ x ೯ಮೀ ೧೨೩ |
೧೦ಮೀ x ೧೦ಮೀ ೧೦೦ |
೧೨ಮೀ x ೧೨ಮೀ ೬೯ |
ನಾಟಿ ಮಾಡುವ ಪದ್ಧತಿ |
ನಾಟಿ ಮಾಡಬೇಕಾದ ತೋಟದಲ್ಲಿಯೇ ಸಸಿಗಳನ್ನು ಬೆಳೆಸಿ ಅಲ್ಲಿಯೇ ಗೂಟಿ ಮಾಡಲು ಸಾಧ್ಯವಿರದೇ ಹೋದಾಗ ಹೊರಗಿನಿಂದ ಸೂಕ್ತವಾದ ಸಸಿಗಳನ್ನು ಆಯ್ಕೆ ಮಾಡಿ ತರಬೇಕು. ಸಸಿಗಳನ್ನು ತರುವ ಪೂರ್ವದಲ್ಲಿ ತೋಟದಲ್ಲಿ ಗುಂಡಿಗಳನ್ನು ಬೇಸಿಗೆಯಲ್ಲಿಯೇ ಅಗೆದು ಸೂಕ್ತವಾಗಿ ಮಣ್ಣು, ಸಾವಯವ/ಕೊಟ್ಟಿಗೆ ಗೊಬ್ಬರ ಇತ್ಯಾದಿಗಳಿಂದ ತುಂಬಿ ತಯಾರು ಮಾಡಿರಬೇಕು. ಸಸಿಗಳನ್ನು ಹೊಂದಿದ ಬ್ಯಾಗುಗಳನ್ನು ನಾಟಿ ಮಾಡುವುದಕ್ಕೆ ಪೂರ್ವದಲ್ಲಿ ಹರಿದು ತೆಗೆದು, ಯಾವುದೇ ರೀತಿಯಲ್ಲಿ ಸಸಿಯ ನಾಟಿ ಮಾಡಿದ ನಂತರ ಜಮೀನಿನ ಲಂಬಕೋನದಲ್ಲಿ ಇರುವಂತೆ ನೋಡಿಕೊಂಡು ಆಧಾರ ನೀಡಬೇಕು. ನಾಟಿ ಮಾಡಿದ ನಂತರ ನೀರು ಹಾಯಿಸಬೇಕು. |
ನಾಟಿ ಮಾಡಲು ಸೂಕ್ತ ಸಮಯ |
ಮಾವಿನ ಸಸಿಗಳನ್ನು ನಾಟಿ ಮಾಡಲು ಅತ್ಯಂತ ಸೂಕ್ತವಾದ ಸಮಯವೆಂದರೆ ಜೂನ್ ಹಾಗೂ ಜುಲೈ ತಿಂಗಳುಗಳು. ಜೂನ್‌ನಲ್ಲಿ ಪ್ರಾರಂಭವಾಗುವ ಮಳೆಯೊಂದಿಗೆ ನಾಟಿ ಕಾರ್ಯವನ್ನು ಪ್ರಾರಂಭಿಸಬೇಕು. |
ದಾಖಲು News: Latest ದಾಖಲು News & Updates on ದಾಖಲು | Vijaya Karnataka - Page 16 |
September,17,2019, 18:41:51 |
ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಸೆಳೆಯಲು ದಾಖಲಾತಿ ಆಂದೋಲನ |
ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಸೆಳೆಯಲು ಮಾಗಡಿ ತಾಲೂಕಿನ ಎಲ್ಲಾ ಸರಕಾರಿ ಶಾಲೆಗಳ ಶಿಕ್ಷ ಕರು, ವಿದ್ಯಾರ್ಥಿಗಳಿಗೆ ಸರಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಸಾರ್ವಜನಿಕರಿಗೆ ತಿಳಿವಳಿಕೆ ಮೂಡಿಸುವ ಆಂದೋಲನದಲ್ಲಿ ತೊಡಗಿದ್ದಾರೆ. |
ಸರಕಾರಿ ಪಬ್ಲಿಕ್ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮದ ಜತೆಗೆ ಎಲ್‌ಕೆಜಿ, ಯುಕೆಜಿ |
ರಾಜ್ಯದಲ್ಲಿ ಕಳೆದ ವರ್ಷ ಇದ್ದ 176 ಪಬ್ಲಿಕ್ ಶಾಲೆಗಳನ್ನು 276 ಕ್ಕೆ ಹೆಚ್ಚಿಸಲಾಗಿದೆ. ಜೊತೆಗೆ ಈ ವರ್ಷದಿಂದ ಇಂಗ್ಲೀಷ್ ಮಾಧ್ಯಮದ ಜತೆಗೆ ಎಲ್‌ಕೆಜಿ ಯುಕೆಜಿ ಆರಂಭ ಮಾಡಿ ಪಾಲಕರು ತಮಗೆ ಇಷ್ಟವಾದ ಬೋಧನಾ ಮಾಧ್ಯಮವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ... |
ಜಿಲ್ಲೆಯಲ್ಲಿ 11 ಕೆಪಿಎಸ್ ಪೂರ್ವ ಪ್ರಾಥಮಿಕ ತರಗತಿ ಪ್ರಾರಂಭ |
ಜಿಲ್ಲೆ ವ್ಯಾಪ್ತಿಯ 6 ತಾಲೂಕುಗಳಲ್ಲಿ ಒಟ್ಟು 11 ಕರ್ನಾಟಕ ಪಬ್ಲಿಕ್ ಶಾಲೆ |
ಗುಬ್ಬಿ ತಾಲೂಕಿನ ಕಡಬ ಹೋಬಳಿಯ ಕಾಡ ಶೆಟ್ಟಿಹಳ್ಳಿ ಹರೀಶ್(55) ಎಂಬುವರು ಸಾಲದ ಬಾಧೆಯಿಂದ ನಿಟ್ಟೂರು ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. |
ದೂರುದಾರರಿಲ್ಲದೇ ನಲುಗಿದ ಸಹಾಯವಾಣಿ ಕೇಂದ್ರ |
ಜಿಲ್ಲೆಯಲ್ಲಿ ಮಳೆ ಹಾಗೂ ಬೆಳೆ ಹಾನಿಯಂತಹ ಸಮಸ್ಯೆ ಉಂಟಾದಾಗ ಜನರು ಸಮಸ್ಯೆ ತೋಡಿಕೊಳ್ಳಲು ಸ್ಥಾಪಿಸಲಾಗಿರುವ ಸಹಾಯವಾಣಿ ದೂರುದಾರರಿಲ್ಲದೇ ಮುಚ್ಚುವ ಹಂತ ತಲುಪಿದೆ. |
ಕಬ್ಬು ಬೆಳೆಗಾರರಿಗೆ ಬಾಕಿ ಶೀಘ್ರ ಪಾವತಿಸಲು ಮುಖ್ಯಮಂತ್ರಿ ಸೂಚನೆ |
May 20, 2019, 09.13 PM |
ಕಬ್ಬು ಬೆಳಗಾರರಿಗೆ ರಾಜ್ಯದ ಸಕ್ಕರೆ ಕಾರ್ಖಾನೆಗಳಿಂದ ಇನ್ನೂ 4 ಸಾವಿರ ಕೋಟಿ ರೂಪಾಯಿ ಬಾಕಿ ಬರಬೇಕಾಗಿದೆ. 2018-19ನೇ ಸಾಲಿನ ಈ ಬಾಕಿಯನ್ನು 15 ದಿನದಲ್ಲಿ ರೈತರಿಗೆ ಕೊಡಿಸಬೇಕು ಎಂದು ಮನವಿ ಸಲ್ಲಿಸಲಾಗಿದೆ |
ಅನುದಾನ ದುರ್ಬಳಕೆ ಸಂಶಯ: ಕ್ರಿಮಿನಲ್ ಕೇಸು ದಾಖಲಿಸಲು ಸೂಚನೆ |
2014-15ನೇ ಸಾಲಿನ ಎಸ್‌ಎಫ್‌ಸಿ ಹಾಗೂ 14ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾಗಿದ್ದ 2 ಕೋಟಿ ರೂ. ಅನುದಾನ ದುರುಪಯೋಗವಾಗಿರುವ ಬಗ್ಗೆ ಸಂಶಯವಿದ್ದು, ಈ ಬಗ್ಗೆ ಮತ್ತೊಮ್ಮೆ ಪರಿಶೀಲಿಸಿ ಸಂಬಂಧಪಟ್ಟವರ ಮೇಲೆ ಕ್ರಿಮಿನಲ್ ಕೇಸು ದಾಖಲು ಮಾಡುವಂತೆ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅವರು ನಗರಸಭಾ ಆಯುಕ್ತ ಎಸ್.ರಾಜು ಅವರಿಗೆ ಆದೇಶ ಮಾಡಿದರು. |
ರಾಷ್ಟ್ರೀಯ-ಪ್ರಾದೇಶಿಕ ಪಕ್ಷಗಳಿಗೆ ಪಕ್ಷೇತರರ ಬಿಸಿ | Udayavani – ಉದಯವಾಣಿ |
ರಾಷ್ಟ್ರೀಯ-ಪ್ರಾದೇಶಿಕ ಪಕ್ಷಗಳಿಗೆ ಪಕ್ಷೇತರರ ಬಿಸಿ |
Team Udayavani, Apr 13, 2018, 5:34 PM IST |
ದೇವದುರ್ಗ: ಸ್ಥಳೀಯ ವಿಧಾನಸಭೆ ಎಸ್‌ಟಿ ಮೀಸಲು ಕ್ಷೇತ್ರದ 2018ರ ಸಾರ್ವತ್ರಿಕ ಚುನಾವಣೆ ಹತ್ತಿರವಾಗುತ್ತಿದ್ದಂತೆ ದಿನೇದಿನೇ ರಾಜಕೀಯ ಚಟುವಟಿಕೆ ರಂಗೇರುತ್ತಿದೆ. ದೇವದರ್ಗು ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಘೋಷಿಸಿದ ಅಭ್ಯರ್ಥಿಗಳು ಅರಕೇರಾ ಗ್ರಾಮದ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಇನ್ನು ಕಾಂಗ್ರೆಸ್ ಕೂಡಾ ಇದೇ ಗ್ರಾಮದ ಕುಟುಂಬದವರಿಗೆ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಕ್ಷೇತ್ರವನ್ನು ಅರಕೇರಾ ಕುಟುಂಬದಿಂದ ಮುಕ್ತಗೊಳಿಸಲು ಮತದಾರರು ಚಿಂತನೆ ನಡೆಸಿದ್ದು, ಇದು ಈ ಬಾರಿ ಪಕ್ಷೇತರರಿಗೆ ವರವಾಗುವ ಸಾಧ್ಯತೆ ಹೆಚ್ಚಿದೆ. |
ಬಿಜೆಪಿ ಪಕ್ಷದಿಂದ ಶಾಸಕ ಕೆ.ಶಿವನಗೌಡ ನಾಯಕ, ಜೆಡಿಎಸ್ ಪಕ್ಷದಿಂದ ವೆಂಕಟೇಶ ಪೂಜಾರಿ ಅಭ್ಯರ್ಥಿಯಾಗುವುದು ಖಚಿತವಾಗಿದೆ. ಆದರೆ ಕಾಂಗ್ರೆಸ್ ಅಭ್ಯರ್ಥಿ ಯಾರು ಎನ್ನುವುದು ಇಲ್ಲಿವರೆಗೆ ಅಂತಿಮವಾಗಿಲ್ಲ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅರಕೇರಾ ಗ್ರಾಮದ ರಾಜಶೇಖರ ನಾಯಕರೇ ಅಭ್ಯರ್ಥಿ ಆಗುವುದರಲ್ಲಿ ಯಾವುದೇ ದೇಹವಿಲ್ಲ ಎಂದು ಈಗಾಗಲೇ ಪ್ರಚಾರದಲ್ಲಿ ತೊಡಗಿದ್ದಾರೆ. ಒಂದೇ ಅರಕೇರಾ ಗ್ರಾಮಕ್ಕೆ ಮೂರು ಪಕ್ಷದಿಂದ ಟಿಕೆಟ್ ಬಹುತೇಕ ಖಚಿತವಾಗುತ್ತಿದೆ. |
ಕಾಂಗ್ರೆಸ್ ನಲ್ಲಿ ಪೈಪೋಟಿ: ದೇವದುರ್ಗ ಕ್ಷೇತ್ರದಲ್ಲಿ ರಾಜಶೇಖರ ನಾಯಕ ಅವರಿಗೆ ಕಾಂಗ್ರೆಸ್ ಟಿಕೆಟ್ ಬಹುತೇಕ ಖಚಿತ ಎನ್ನಲಾಗುತ್ತಿದ್ದರೂ, ಈ ಬಾರಿ ಕಾಂಗ್ರೆಸ್ ಬೇರೆಯವರಿಗೆ ಟಿಕೆಟ್ ನೀಡಬೇಕೆಂಬ ಒತ್ತಾಯ ಪಕ್ಷದ ಮುಖಂಡರಿಂದಲೇ ಕೇಳಿಬರುತ್ತಿದೆ. ಗೌರಮ್ಮ ಬಸಯ್ಯ ಶಾಖೆ ನೇತೃತ್ವದ ಐದು ಜನ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದಲ್ಲದೇ ಪಕ್ಷದ ವರಿಷ್ಠರನ್ನು ಭೇಟಿ ಮಾಡಿದ್ದಾರೆ. ಐವರಲ್ಲಿ ಯಾರಿಗೇ ಟಿಕೆಟ್ ನೀಡಿದರೂ ಪಕ್ಷದ ಗೆಲುವಿಗೆ ಶ್ರಮಿಸುವುದಾಗಿ ಹೇಳಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಕುಟುಂಬ ರಾಜಕಾರಣ ಬಿಟ್ಟು ಪಕ್ಷೆ ನಿಷ್ಠೆಗೆ ದುಡಿದ ದಿ| ಬಸಯ್ಯ ಶಾಖೆ ಅವರ ಪತ್ನಿ ಗೌರಮ್ಮ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುವಂತೆ ಆಕಾಂಕ್ಷಿ ಭೀಮರೆಡ್ಡಿ ಮದರಕಲ್ ಆಗ್ರಹಿಸಿದ್ದಾರೆ. ಅಲ್ಲದೇ ಏ.19ರಂದು ಟಿಕೆಟ್‌ಗೆ ಅರ್ಜಿ ಸಲ್ಲಿಸಿದ ಈ ಐವರ ತಂಡ ಸಭೆ ನಡೆಸಲು ನಿರ್ಧರಿಸಿದೆ ಎನ್ನಲಾಗಿದ್ದು, ತಮಗೆ ಟಿಕೆಟ್ ಸಿಗದಿದ್ದಲ್ಲಿ ಪಕ್ಷೇತರಾಗಿ ಸ್ಪರ್ಧಿಸುವ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ.ಇಂಥ ಬೆಳವಣಿಗೆ ಹೈಕಮಾಂಡ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. |
ಪಕ್ಷೇತರರ ಪ್ರತಿರೋಧ: ಅರಕೇರಾ ಗ್ರಾಮದ ಕುಟುಂಬ ರಾಜಕಾರಣಕ್ಕೆ ಸೆಡ್ಡು ಹೊಡೆಯುವ ಉದ್ದೇಶದಿಂದ ಜೆಡಿಎಸ್ ಮುಖಂಡರಾದ ಕೆ. ಕರೆಮ್ಮ ಗೋಪಾಲಕೃಷ್ಣ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಸಂಘಟನೆಗೊಳಿಸಿ, ತಾವು ಸ್ಪರ್ಧೆಗಿಳಿಯುವ ಉದ್ದೇಶ ಹೊಂದಿದ್ದರು. ಆದರೆ ಜೆಡಿಎಸ್ ವರಿಷ್ಠರು ಅರಕೇರಾ ಗ್ರಾಮದ ವೆಂಕಟೇಶ ಪೂಜಾರಿ ಅವರಿಗೆ ಟಿಕೆಟ್ ಘೋಷಿಸಿದೆ. ಇದರಿಂದ ಬೇಸತ್ತ ಕೆ. ಕರೆಮ್ಮ ಬೆಂಬಲಿಗರ ಒತ್ತಾಸೆಯಂತೆ ಈ ಬಾರಿ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಪಕ್ಷೇತರದಿಂದ ಕಣಕ್ಕಿಳಿಯುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಇನ್ನು ಗಬ್ಬೂರು ಭಾಗದಲ್ಲಿ ಗುರುವಿನ ಸಿದ್ದಯ್ಯ ತಾತಾನವರ ಪ್ರಭಾವ ಹೆಚ್ಚಾಗಿದ್ದು, ಅದೇ ಕುಟುಂಬದ ಮಮತಾ ಗುರುವಿನ ತಾತ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದು, ಈಗಾಗಲೇ ಪ್ರಚಾರದಲ್ಲಿ ತೊಡಗಿದ್ದಾರೆ. |
ಇನ್ನು ಜಾಲಹಳ್ಳಿ ಭಾಗದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿರುವ ಜಿಪಂ ಮಾಜಿ ಸದಸ್ಯೆ ಮಹಾದೇವಮ್ಮ ಮುದರಂಗಪ್ಪ ಯರಕಮಟ್ಟಿ ಬಿಜೆಪಿಯಲ್ಲಿ ತಮ್ಮನ್ನು ಕಡೆಗಣಿಸಿದ್ದರಿಂದ ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಒಂದೇ ಕುಟುಂಬದ ರಾಜಕಾರಣದಿಂದ ಕ್ಷೇತ್ರವನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮೂರೂ ಪಕ್ಷಗಳಿಗೆ ಬಿಸಿ ಮುಟ್ಟಿಸಲು ಪಕ್ಷೇತರರು ಸೆಡ್ಡು ಹೊಡೆಯಲಿದ್ದಾರೆ. ಕ್ಷೇತ್ರದ ಮತದಾರರು ಕೂಡ ಪಕ್ಷೇತರರಿಗೆ ಮಣೆ ಹಾಕುತ್ತಾರೋ ಇಲ್ಲವೇ ಸಂಪ್ರದಾಯದಂತೆ ಕುಟುಂಬ ರಾಜಕಾರಣಕ್ಕೇ ಮನ್ನಣೆ ನೀಡುತ್ತಾರೋ ಕಾದು ನೋಡಬೇಕಿದೆ. |
ಲಿಂಗಾಯತರಲ್ಲಿ ಮೂಡದ ಒಮ್ಮತ ದೇವದುರ್ಗ ಕ್ಷೇತ್ರವನ್ನು ಅರಕೇರಾ ಗ್ರಾಮದ ಕುಟುಂಬದಿಂದ ಮುಕ್ತಿಗೊಳಿಸಲು ಮತ್ತು ಪರ್ಯಾಯ ನಾಯಕತ್ವ ಹುಡುಕಾಟದಲ್ಲಿ ಲಿಂಗಾಯತ ಮುಖಂಡರು ಇತ್ತೀಚೆಗೆ ನಡೆಸಿದ ಸಭೆಯಲ್ಲೂ ಯಾರಿಗೆ ಬೆಂಬಲಿಸಬೇಕೆಂಬ ಕುರಿತು ಒಮ್ಮತಾಭಿಪ್ರಾಯ ಮೂಡಿಲ್ಲ ಎನ್ನಲಾಗಿದೆ. ಲಿಂಗಾಯತ ಮುಖಂಡ ಸಿ.ಎಸ್. ಪಾಟೀಲ ಬಣ ಜೆಡಿಎಸ್ ಅಭ್ಯರ್ಥಿ ವೆಂಕಟೇಶ ಪೂಜಾರಿಗೆ ಬೆಂಬಲಿಸುವ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರೆ, ಬುಡ್ಡನಗೌಡ ಬಣ ಪಕ್ಷೇತರ ಅಭ್ಯರ್ಥಿ ಕರೆಮ್ಮ ಗೋಪಾಲಕೃಷ್ಣ ಅವರಿಗೆ ಬೆಂಬಲಿಸುವ ಕುರಿತು ಒಲವು ತೋರಿದೆ ಎಂದು ಹೇಳಲಾಗುತ್ತಿದೆ. ಕ್ಷೇತ್ರದಲ್ಲಿ ಲಿಂಗಾಯತರ ಮತಗಳು ಕಡಿಮೆ ಪ್ರಮಾಣದಲ್ಲಿದ್ದರೂ ಅಭ್ಯರ್ಥಿಗಳ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. |
rajashekharnayak |
ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ದಲ್ಲಾಳಿಗಳ ಆಟ-ಜನರಿಗೆ ಪ್ರಾಣಸಂಕಟ |
ಬ್ಯಾಂಕ್‌ಗೆ ಹಣ ಪೂರೈಕೆ ಕುಸಿತ: ಗ್ರಾಹಕರ ಪರದಾಟ |
ತ್ರಿಪದಿಗಳಲ್ಲಿ ಮೌಲ್ಯ ಸಾರಿದ ಸರ್ವಜ್ಞ |
ರಾಯಚೂರು: ನಮ್ಮ ಆಚಾರ, ವಿಚಾರ, ನಡೆ ನುಡಿ ಹೇಗಿರಬೇಕು. ಜೀವನದಲ್ಲಿ ಹೇಗೆ ಬಾಳಬೇಕು ಎಂಬದನ್ನು ಕವಿ ಸರ್ವಜ್ಞರಿಗಿಂತ ಸುಂದರವಾಗಿ ಮತ್ಯಾರು ಹೇಳಿಲ್ಲ. ಅವರ ತ್ರಿಪದಿಗಳನ್ನು... |
ಮಾರ್ಚ್‌ಅಂತ್ಯಕ್ಕೆಕಾಮಗಾರಿ ಮುಗಿಸಿ |
ರಾಯಚೂರು: ಆರ್ಥಿಕ ವರ್ಷಾಂತ್ಯ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅನುದಾನದಡಿ ಕೈಗೊಂಡಿರುವ ಕಾಮಗಾರಿಗಳನ್ನು... |
ದೇವದುರ್ಗ: ತಾಲೂಕಿನ ಗಬ್ಬೂರು ಗ್ರಾಮದಲ್ಲಿರುವ ಬಸ್ ನಿಲ್ದಾಣದಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳ ಕೊರತೆಯಿಂದಾಗಿ ಪ್ರಯಾಣಿಕರು ತೊಂದರೆ ಪಡುವಂತಾಗಿದೆ. ನಿರ್ವಹಣೆ... |
ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ಸಹಕರಿಸಲು ಚಾಮರಾಜನಗರ ಜಿಲ್ಲಾಧಿಕಾರಿ ಬಿ. ರಾಮು ಮನವಿ – ಮೈಸೂರು ಟುಡೆ |
Home/ ಪ್ರಮುಖ ಸುದ್ದಿ/ ಕರ್ನಾಟಕ/ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ಸಹಕರಿಸಲು ಚಾಮರಾಜನಗರ ಜಿಲ್ಲಾಧಿಕಾರಿ ಬಿ. ರಾಮು ಮನವಿ |
ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ಸಹಕರಿಸಲು ಚಾಮರಾಜನಗರ ಜಿಲ್ಲಾಧಿಕಾರಿ ಬಿ. ರಾಮು ಮನವಿ |
CT BUREAU September 8, 2016 |
ಯಳಂದೂರು: ರಾಷ್ಟ್ರೀಯ ಹೆದ್ದಾರಿ 209 ರಲ್ಲಿ ಯಳಂದೂರು ಪಟ್ಟಣದ ಸರಪಳಿ 322.800 ಕಿ.ಮಿ. ನಿಂದ 325.400 ಕಿ.ಮಿ ಪರಿಮಿತಿಯ ನಾಲ್ಕುಪಥ ರಸ್ತೆಯನ್ನಾಗಿ ಅಗಲೀಕರಣ ಮಾಡುವುದರಿಂದ ಇದಕ್ಕೆ ಅಕ್ಕಪಕ್ಕದ ನಿವಾಸಿಗಳು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಬಿ. ರಾಮು ಮನವಿ ಮಾಡಿದರು. |
ಅವರು ಈ ಬಗ್ಗೆ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಪಟ್ಟಣದ ಅರಣ್ಯ ಕಚೇರಿಯಿಂದ ಪೆಟ್ರೋಲ್ ಬಂಕ್ ವರೆಗಿನ ರಸ್ತೆಯನ್ನು 4 ಪಥದ ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸಲು 14.64 ಕೋಟಿ ಹಣ ಬಿಡುಗಡೆಯಾಗಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಕಾಮಗಾರಿ ಆರಂಭಗೊಳ್ಳಲಿದೆ. ಈ ರಸ್ತೆಗಾಗಿ ಅಕ್ಕಪಕ್ಕದಲ್ಲಿರುವ ಮನೆಗಳನ್ನು ತೆರವುಗೊಳಿಸಲು ಈಗಾಗಲೇ ಗುರುತಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ಭಾಗದ ನಿವಾಸಿಗಳು ಇದಕ್ಕೆ ಸಹಕರಿಸಬೇಕು. ಬಕರೀದ್ ಹಬ್ಬದ ನಂತರ ತೆರವು ಕಾರ್ಯ ಆರಂಭಿಸಲಾಗುವುದು. ಇಲ್ಲಿ ಬಡವರ್ಗದವರೇ ಅಧಿಕ ಸಂಖ್ಯೆಯಲ್ಲಿರುವುದು ಗಮನಕ್ಕೆ ಬಂದಿದೆ. ಹಾಗಾಗಿ ಇವರಿಗೆ ಖಾಲಿ ನಿವೇಶನ ನೀಡಲು ಮತ್ತು ಮನೆ ಕಟ್ಟಿಕೊಳ್ಳಲು ಸರ್ಕಾರದಿಂದ ನೀಡುವ ಸಹಾಯಧನವನ್ನು ನೀಡಲು ಜಿಲ್ಲಾಡಳಿತವ ವತಿಯಿಂದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಅಲ್ಲದೆ ಪಟ್ಟಣದಲ್ಲಿ 5 ಎಕರೆ ವರೆಗೆ ಜಾಗ ಖರೀದಿಸಿ ಇಲ್ಲಿ ಮನೆ ಕಳೆದುಕೊಂಡವರಿಗೆ ಹಾಗೂ ಬಡವರಿಗೆ ನೀಡಲು ಕ್ರಮ ವಹಿಸಲಾಗುವುದು ಈ ಬಗ್ಗೆ ಕಂದಾಯ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಆದಷ್ಟು ಬೇಗ ವರದಿ ನೀಡಬೇಕೆಂದು ತಿಳಿಸಿದರು. |
ಸಭೆಯಲ್ಲಿ ಭಾಗವಹಿಸಿದ್ದ ಕೆಲ ಸಾರ್ವಜನಿಕರು ಹೆದ್ದಾರಿ ಬೈಪಾಸ್ ರಸ್ತೆಯಾಗಿರುವುದರಿಂದ ರಸ್ತೆ ಅಗಲೀಕರಣ ಮಾಡಬಾರದು, ಬಡವರೇ ಹೆಚ್ಚಾಗಿರುವ ಈ ಪ್ರದೇಶಗಳಲ್ಲಿ ಇದರಿಂದ ಇಲ್ಲಿನ ನಿವಾಸಿಗಳಿಗೆ ಅನ್ಯಾಯವಾಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕುತ್ತರಿಸಿದ ಜಿಲ್ಲಾಧಿಕಾರಿಗಳು ಹೆದ್ದಾರಿ ಪ್ರಾಧಿಕಾರದ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಸರ್ವೋಚ್ಚ ನ್ಯಾಯಾಲಯದ ಸ್ಪಷ್ಟ ನಿರ್ದೇಶನ ಇರುವುದರಿಂದ ಇದು ಸಾಧ್ಯವಾಗುವುದಿಲ್ಲ. ಆದರೆ ನಿವೇಶನ ಕಳೆದುಕೊಳ್ಳುವ ನಾಗರೀಕರು ಹಾಗೂ ಬಡವರಿಗೆ ಪರವಾಗಿ ಆದಷ್ಟು ಬೇಗ ಕ್ರಮ ವಹಿಸಲಾಗುವುದು ಎಂದರು. |
ತಹಶೀಲ್ದಾರ್ ಕೆ. ಚಂದ್ರಮೌಳಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್. ಉಮಾಶಂಕರ್, ರಾಷ್ಟ್ರೀಯ ಹೆದ್ದಾರಿಯ ಕಾರ್ಯಪಾಲಕ ಅಭಿಯಂತರ ಕಾಂತರಾಜು ಇದ್ದರು. |
ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ: ಆರ್.ಶೇಷಣ್ಣಕುಮಾರ್ ಗೆ ಮತ ನೀಡಿ: ಕುಂ.ವಿ ಮನವಿ.! - BC Suddi |
ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ: ಆರ್.ಶೇಷಣ್ಣಕುಮಾರ್ ಗೆ ಮತ ನೀಡಿ: ಕುಂ.ವಿ ಮನವಿ.! |
25/04/2021 1 min read News Desk |
ಚಿತ್ರದುರ್ಗ: ಖ್ಯಾತ ಸಾಹಿತಿಗಳು, ಪಂಪ ಪ್ರಶಸ್ತಿ ಪುರಸ್ಕೃತರು ಆದ ಕುಂ. ವೀರಭದ್ರಪ್ಪ ಅವರು ಚಿತ್ರದುರ್ಗ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಚುನಾವಣೆಗೆ ಸಂಬಂಧಸಿದಂತೆ ಒಬ್ಬ ಅಭ್ಯರ್ಥಿ ಪರವಾಗಿ ಪತ್ರಿಕಾಗೋಷ್ಠಿ ನಡೆಸಿದ್ದರು. ಆದರೆ ಅವರು ಯಾರಿಗೆ ಮತ ಹಾಕಬೇಕೆಂದು ಈಗ ಮತದಾರರಲ್ಲಿ ಮನವಿಮಾಡಿಕೊಂಡಿದ್ದಾರೆ. |
ಆತ್ಮೀಯ ಕನ್ನಡ ನುಡಿ, ಸಾಹಿತ್ಯ ಪ್ರೇಮಿಗಳೆ, |
ಈ ಸಲ ಸ್ವಲ್ಪ ವಿಳಂಬವಾಗಿ ನಮ್ಮೆಲ್ಲರ ಹೆಮ್ಮೆಯ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆ ಬಂದಿದೆ, ಅದೂ ಕೋವಿಡ್ ೨ ನೆ ಅಲೆ ತೀವ್ರತೆ ಪಡೆದಿರುವ ಕ್ಲಿಷ್ಟಕರ ಸಂದರ್ಭದಲ್ಲಿ. ಅಲ್ಲದೆ ಈ ಸಲದ ಚುನಾವಣೆ ಹಿಂದೆಂದಿಗಿಂತ ಹಲವು ಸವಾಲುಗಳನ್ನು ಒಳಗೊಂಡಿದೆ. ಕೆಲವು ಅಭ್ಯರ್ಥಿಗಳು ರಾಜಕೀಯ ಪಕ್ಷಗಳ ಮೊರೆ ಹೋಗಿದ್ದರೆ ಕೋಮುವಾದಿ ಪಕ್ಷವೊಂದು ಓರ್ವ ಅಭ್ಯರ್ಥಿಯನ್ನು ಬಹಿರಂಗವಾಗಿ ಬೆಂಬಲಿಸಿದೆ, ಕನ್ನಡದ ಅಸ್ಮಿತೆಗೆ ದಕ್ಕೆ ತರುವ ಅಂಶವೆಂದರೆ ಈ ಚುನಾವಣೆ ರಾಜಕಾರಣದ ಪರಿವೇಷ ಧರಿಸಿದೆ, ನಮ್ಮ ಕನ್ನಡ ನುಡಿ ಸೇವಕ, ಪರಿಚಾರಕ, ಫಲಾನುಭವಿ ಹಣ ರಾಜಕಾರಣದ ಆಮಿಷಕ್ಕೆ ಒಳಗಾಗಬಾರದು. |
ಇತಿಹಾಸ ಪ್ರಸಿದ್ದ ಕೋಟೆಗಳ ನಾಡು ಚಿತ್ರದುರ್ಗ ಜಿಲ್ಲೆ ನಾಡಿಗೆ ಹಲವು ಹೆಸರಾಂತ ಸಾಹಿತಿಗಳನ್ನು ನೀಡಿದೆ, ಇಲ್ಲಿನ ಮತದಾರ ಕನ್ನಡ ತೆಲುಗು ಇವೆರಡೂ ಭಾಷೆಗಳ ಮಹಾಪೋಷಕ. ಈ ದ್ವಿಭಾಷಿಕ ಪ್ರಾಂತದಲ್ಲಿ ಕಸಾಪ ಚುನಾವಣೆ ನಡೆಯುತ್ತಿರುವುದು ಸಂಭ್ರಮದ ವಿಷಯ. ಈ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳೆಲ್ಲರು ನಿಸ್ಸಂದೇಹವಾಗಿ ಕನ್ನಡ ಪ್ರೇಮಿಗಳೆ. ಇವರ ನಡುವೆ ಪುನಃ ಎರಡನೆ ಸಲ ಸ್ಪರ್ಧಿಸಿರುವ ಜಿಲ್ಲೆಯಾದ್ಯಂತ ಅದಮ್ಯ ಉತ್ಸಾಹದಿಂದ ಓಡಾಡುತ್ತಿರುವ ಕನ್ನಡಪರ ಕನಸುಗಾರ ಆರ್. ಶೇಷಣ್ಣಕುಮಾರ್ ನನ್ನ ಪ್ರಿಯ ಸಹೋದರ ಸದೃಶ ಮಿತ್ರ, ಕಳೆದ ಎರಡು ದಶಕಗಳಿಂದ ನಾನೀ ಪಾದರಸದಂಥ ಪಾರದರ್ಶಕ ವ್ಯಕ್ತಿತ್ವದ ಈ ಛಲದಂಕಮಲ್ಲನನ್ನು ತೀರಾ ಹತ್ತಿರದಿಂದ ಬಲ್ಲೆ, ಒಳ್ಳೆಯ ಸಂಘಟಕ , ಕವಿಹೃದಯಿ, ಸದಭಿರುಚಿ ವಾಚಕ, ಜನಾನುರಾಗಿ. ಕನ್ನಡ ನಾಡು ನುಡಿ ಸಂಬಂಧಿತ ಕನಸುಗಳನ್ನು ನನಸಾಗಿಸಲು ಈ ಸಲ ಸ್ಪರ್ಧಿಸಿದ್ದಾನೆ, ದಯವಿಟ್ಟು ಈ ಸಲ ಈತನಿಗೆ ನಿಮ್ಮ ಪವಿತ್ರ ಮತ ನೀಡಿ ಕನ್ನಡ ನುಡಿ ಚುಕ್ಕಾಣಿಯನ್ನು ಈ ಗೆಳೆಯನ ಕೈಗೆ ನೀಡಿ, ಇದು ನಿಮ್ಮೆಲ್ಲರ ಪ್ರೀತಿಯ ಫಲಾನುಭವಿಯಾದ ನನ್ನ ಮನವಿ. |
ಗಂಗಾವತಿ: ಗುಹೆಯಲ್ಲಿ ಸಿಲುಕಿದ ಇಟಲಿಯ ಮಾರಿಯಾನ್; ಸ್ಥಳೀಯರಿಂದ ಸಹಾಯ ಹಸ್ತ!- Kannada Prabha |
Published: 02nd May 2020 05:41 PM | Last Updated: 02nd May 2020 05:41 PM | A+A A- |
ಕೊಪ್ಪಳ ಜಿಲ್ಲೆಯ ಋಷಿಮುಖ ಪರ್ವತದ ಗುಹೆಯಲ್ಲಿ ಸಿಲುಕಿರುವ ಇಟಲಿಯ ಮಾರಿಯಾನ್‌ಗೆ ಆಹಾರ ಸಾಮಗ್ರಿ ಕೊಡಲಾಯಿತು. |
ಕೊಪ್ಪಳ: ಕೊರೊನಾದಿಂದಾಗಿ ದೇಶವೇ ಲಾಕ್‌ಡೌನ್ ಸುಮಾರು 40 ದಿನಗಳಾಗುತ್ತಾ ಬಂದಿದೆ. ಈಗ ಹಂತ-ಹಂತವಾಗಿ ಲಾಕ್‌ಡೌನ್ ಸಡಿಲಗೊಳ್ಳುವ ಘಟ್ಟಕ್ಕೆ ಬರಲಾಗಿದ್ದು, ಕಳೆದ ಸುಮಾರು ಎರಡು ತಿಂಗಳಿನಿಂದಲೂ ವಿದೇಶಿ ಪ್ರಜೆಯೊಬ್ಬ ಗುಹೆಯಲ್ಲೇ ವಾಸವಾಗಿದ್ದಾನೆ. ಅದು ಅನ್ನ-ನೀರಿಲ್ಲದೇ! |
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ, ಅಂಜನಾದ್ರಿ ಪರ್ವತ, ಸಾಣಾಪುರ, ವಿರುಪಾಪುರಗಡ್ಡೆ ಸೇರಿದಂತೆ ಕೆಲ ಪ್ರದೇಶಗಳು ವಿದೇಶಿಯವರ ಫೇವರೆಟ್ ಸ್ಪಾಟ್‌ಗಳು. |
ಫೆಬ್ರವರಿಯಲ್ಲಿ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲಾಡಳಿತ ಹಾಗೂ ಹಂಪಿ ಅಭಿವೃದ್ಧಿ ಪ್ರಾಧಿಕಾರ ಸೇರಿಕೊಂಡು ನ್ಯಾಯಾಲಯದ ಆದೇಶದಂತೆ ವಿರುಪಾಪುರಗಡ್ಡೆಯಲ್ಲಿದ್ದ ಅಕ್ರಮ ರೇಸಾರ್ಟ್‌ಗಳನ್ನು ನೆಲಸಮ ಮಾಡಿ ತೆರವುಗೊಳಿಸಲಾಗಿತ್ತು. |
ಹಂಪಿ ಹಾಗೂ ಸುತ್ತಮುತ್ತಲಿನ ಸ್ಥಳಗಳನ್ನು ನೋಡಲು ಬರುತ್ತಿದ್ದ ವಿದೇಶಿಯರು ಉಳಿದುಕೊಳ್ಳಲು ವಿರುಪಾಪುರಗಡ್ಡೆಯ ರೇಸಾರ್ಟ್‌ಗಳನ್ನೇ ಹೆಚ್ಚು ಇಷ್ಟಪಡುತ್ತಿದ್ದರು. ರೇಸಾರ್ಟ್ ತೆರವಿನ ಬಳಿಕ ವಿದೇಶದವರ ಟಚ್ ಇಲ್ಲದಂತಾಯಿತು. ಇದು ರೇಸಾರ್ಟ್ ತೆರವಿನ ವೇಳೆ ಅಚಾನಕ್ಕಾಗಿ ಉಳಿದುಕೊಂಡ ವಿದೇಶಿ ಪ್ರಜೆಯ ಕಥೆ ಮತ್ತು ವ್ಯಥೆ.. |
ಇಟಲಿ ದೇಶದ ಪ್ರಜೆ ಮಾರಿಯಾನ್, 2020ರ ಜನವರಿ ತಿಂಗಳಿನಲ್ಲೇ ಹಂಪಿ, ಮತ್ತಿತರ ಸ್ಥಳಗಳನ್ನು ನೋಡಲು ಬಂದಿದ್ದಾನೆ. ಫೆಬ್ರವರಿಯಲ್ಲಿ ರೇಸಾರ್ಟ್ ತೆರವು ವೇಳೆ ಯಾವುದೋ ಸ್ಥಳ ವೀಕ್ಷಣೆಗೆ ಹೋದಾತ ರಾತ್ರಿ ಬಂದಿದ್ದಾನೆ. ನಸುಕಿನ ವೇಳೆಯಲ್ಲಿದ್ದ ಕಟ್ಟಡಗಳೆಲ್ಲ ನೆಲಸಮವಾಗಿವೆ. ಹಾಗಾಗಿ ಮಾರಿಯಾನ್ ಹಂಪಿ, ಆನೆಗೊಂದಿ, ನವವೃಂದಾವನ, ಪಂಪಾಸರೋವರ, ಗವಿರಂಗನಾಥ, ವಾಲಿ ಕಿಲ್ಲಾ ಮತ್ತಿತರ ಸ್ಥಳಗಳನ್ನು ವೀಕ್ಷಿಸಿ ಇನ್ನೇನು ತಮ್ಮ ದೇಶಕ್ಕೆ ಹೋಗಬೇಕೆನ್ನುವಷ್ಟರಲ್ಲಿ ಲಾಕ್‌ಡೌನ್ ಘೋಷಣೆಯಾಗಿದೆ. ಹೊರಗಡೆ ಎಲ್ಲೂ ತಿರುಗುವ ಹಾಗಿಲ್ಲ. ಹಾಗಾಗಿ ಋಷಿಮುಖ ಪರ್ವತದ ಗುಹೆ ಪ್ರವೇಶಿದ್ದಾನೆ. ಗುಹೆಯ ಸುತ್ತಮುತ್ತ ಹಣ್ಣು-ಹಂಪಲು, ದೇಗುಲ ಬಿಟ್ಟರೆ ಮತ್ತೇನೂ ಇಲ್ಲ. |
ಮಾರ್ಚ್-ಏಪ್ರಿಲ್ ಎರಡು ತಿಂಗಳು ಗುಹೆಯಲ್ಲಿ ಕಳೆದಿರುವ ಮಾರಿಯಾನ್, ಹಣ್ಣು-ಹಂಪಲಿನಿಂದ ಹೊಟ್ಟೆ ತುಂಬಿಸಿಕೊಂಡಿದ್ದಾನೆ. ದೇಗುಲದ ಪಕ್ಕ ಹರಿಯುತ್ತಿದ್ದ ನೀರಿನ ಸಣ್ಣ ಝರಿಯಿಂದ ದಾಹ ನೀಗಿಸಿಕೊಂಡಿದ್ದಾನೆ. ಈ ಎರಡು ತಿಂಗಳಲ್ಲಿ ಮಾರಿಯಾನ್‌ಗೆ ಮೊದಲಿನಿಂದಲೂ ಆಧ್ಯಾತ್ಮದಲ್ಲಿ ಒಲವಿದ್ದಿದ್ದರಿಂದ ಅಲ್ಲಿನ ಪರಿಸರ ಕಂಡು ಸಾಧುವಾಗಿದ್ದಾನೆ. ಕೇಸರಿ ಉಡುಪು ಧರಿಸಿ, ಗಡ್ಡ ಬಿಟ್ಟಿದ್ದಾನೆ. |
ಸುಮಾರು ತಿಂಗಳ ಹಿಂದೆ, ಋಷಿಮುಖ ಪರ್ವತದಲ್ಲಿದ್ದ ಈಶ್ವರ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಸಾಣಾಪುರ ಗ್ರಾಮಸ್ಥರೊಬ್ಬರು ಆಗಮಿಸಿದಾಗ ಮಾರಿಯಾನ್ ಗುಹೆಯಲ್ಲಿ ಸಿಲುಕಿರುವುದು ಗೊತ್ತಾಗಿದೆ. ಜನರು ಅಲ್ಲಿಗೆ ಬಂದು ಈಶ್ವರನ ಪೂಜೆ ಮಾಡುತ್ತಿದ್ದನ್ನು ಕಂಡು ಮಾರಿಯಾನ್ ಸಹ ನಿತ್ಯ ಪೂಜೆ ಮಾಡುತ್ತಿದ್ದಾನೆ. ಆಗಾಗ ಗ್ರಾಮಸ್ಥರು ಊಡ ಕೊಡುತ್ತಿದ್ದರು. ಕಿರ್ಲೋಸ್ಕರ ಕಂಪನಿಯ ನೌಕರ ಎಂ.ವೆಂಕಟರಮಣ ಎಂಬುವವರು ಮಾರಿಯಾನ್ ಸಂಕಷ್ಟ ಅರಿತು ದಿನಸಿ ಕಿಟ್ ನೀಡಿದ್ದಾರೆ. ಆ ವೇಳೆ ಲಾಕ್‌ಡೌನ್ ಮುಗಿಯುವ ಕುರಿತು ಕೇಳಿರುವ ಮಾರಿಯಾನ್, ಲಾಕ್‌ಡೌನ್ ಮುಗಿದ ಬಳಿಕ ಇಟಲಿಗೆ ತೆರಳುವ ಇಂಗಿತ ವ್ಯಕ್ತಪಡಿಸಿದ್ದಾರೆ. |
ಕೋವಿಡ್-19 ಪರೀಕ್ಷೆ ಮಾಡಲಾಗಿದೆ: |
ಇಟಲಿಯ ಮಾರಿಯಾನ್‌ಗೆ ಭಾರತದ ವಿವಿಧ ಪ್ರದೇಶಗಳ ಜೊತೆಗೆ ಸುಮಾರು 20 ವರ್ಷಗಳಿಂದಲೂ ನಂಟಿದೆ. ವಿಷಯ ಗೊತ್ತಾದ ಬಳಿಕ ವಿಚಾರಣೆ ನಡೆಸಿದಾಗ ಮಾರಿಯಾನ್ ಹಿಂದಿಯಲ್ಲೇ ಮಾತನಾಡಿದ. ಅಲ್ಲದೇ ಶ್ಲೋಕಗಳನ್ನು ಸಹ ಹೇಳುತ್ತಾನೆ. ಅದನ್ನು ಕಂಡು ನಮಗೆ ಅಚ್ಚರಿಯಾಯಿತು. ವಿದೇಶದನಾದ್ದರಿಂದ ಆತನಿಗೆ ಕೋವಿಡ್-19 ಪರೀಕ್ಷೆ ಮಾಡಲಾಗಿದೆ. ರಿಜಲ್ಟ್ ನೆಗೆಟಿವ್ ಬಂದಿದೆ. ಈಗ ಆತನನ್ನು ಇಟಲಿಗೆ ಕಳಿಸಿಕೊಡಲು ಬರುವುದಿಲ್ಲ. ಲಾಕ್‌ಡೌನ್ ಮುಗಿದ ಬಳಿಕ ಸರಕಾರ ಹಾಗೂ ಮೇಲಧಿಕಾರಿಗಳ ನಿರ್ದೇಶನದ ಪ್ರಕಾರ ಕ್ರಮಕ್ಕೆ ಮುಂದಾಗಲಾಗುವುದು. |
ಭಾರತದಲ್ಲಿ ಕೊರೊನಾ ಸೋಂಕು ಹೆಚ್ಚಳಕ್ಕೆ ರೂಪಾಂತರಿ ಸೋಂಕು ಕಾರಣವಲ್ಲ | Are Weddings, Parties Causing Spikes In COVID-19 Cases In India? Centre Thinks So - Kannada Oneindia |
26 min ago ಸಿಎಂ ಕುಟುಂಬದ ವಿರುದ್ದ ಕಿಕ್ ಬ್ಯಾಕ್ ಆರೋಪ: 10% ಅಂದರೆ ಎಷ್ಟಾಯಿತು? |
36 min ago ಕೋವಿಡ್‌ನಿಂದ ಮೃತಪಟ್ಟವರಿಗೆ 4 ಲಕ್ಷ ಪರಿಹಾರ ಸಾಧ್ಯವಿಲ್ಲ; ಕೇಂದ್ರ |
38 min ago ವೆಂಟಿಲೇಟರ್ ಅಗತ್ಯವಿರುವ ರೋಗಿಗಳನ್ನು ಗುರುತಿಸಲು ಹೊಸ ತಂತ್ರಾಂಶ |
| Published: Wednesday, March 3, 2021, 12:22 [IST] |
ನವದೆಹಲಿ, ಮಾರ್ಚ್ 03: ಭಾರತದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗಲು ಮದುವೆ, ಪಾರ್ಟಿಗಳೇ ಕಾರಣ ಎಂದು ಹೇಳಲಾಗುತ್ತಿದೆ. ಭಾರತದಲ್ಲಿ ಕೊರೊನಾ ಸೋಂಕು ಮತ್ತೆ ಹೆಚ್ಚಾಗುತ್ತಿರುವುದಕ್ಕೆ ರೂಪಾಂತರಿ ಸೋಂಕು ಕಾರಣವಲ್ಲ, ಮದುವೆ ಸೇರಿದಂತೆ ಇನ್ನಿತರೆ ಕಾರ್ಯಕ್ರಮಗಳಲ್ಲಿ ಜನರು ಭಾಗಿಯಾಗುತ್ತಿದ್ದಾರೆ ಅದರಿಂದ ಸೋಂಕು ಹೆಚ್ಚುತ್ತಿದೆ ಎಂದು ಸರ್ಕಾರ ಹೇಳಿದೆ. |
ಕೆಲವು ರಾಜ್ಯಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕೋವಿಡ್ ಪ್ರಕರಣಗಳು ವಿಪರೀತ ಏರಿಕೆಯಾಗಿದ್ದು, ಕೊರೊನಾ ರೂಪಾಂತರದ ಪಾತ್ರ ಇದರಲ್ಲಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ಡಾ ವಿ ಕೆ ಪೌಲ್ ಹೇಳುತ್ತಾರೆ. |
ಇನ್ನು ಒಂದೇ ದಿನವೈರಸ್ 98 ಮಂದಿಯನ್ನು ಬಲಿಪಡೆದುಕೊಂಡಿದ್ದು, ಸಾವಿನ ಸಂಖ್ಯೆ 1,57,346ಕ್ಕೆ ಏರಿಕೆಯಾಗಿದೆ. ಈ ನಡುವೆ ಒಟ್ಟಾರೆ 1,11,39,516 ಮಂದಿ ಸೋಂಕಿತರ ಪೈಕಿ ನಿನ್ನೆ ಒಂದೇ ದಿನ 13,123 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು, ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 1,08,12,044ಕ್ಕೆ ಏರಿಕೆಯಾಗಿದೆ. |
ಪ್ರಸ್ತುತ ದೇಶದಲ್ಲಿ 1,70,126 ಸಕ್ರಿಯ ಪ್ರಕರಣಗಳು ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದುಬಂದಿದೆ. ಇನ್ನು ಭಾರತದಲ್ಲಿ ಒಂದೇ ದಿನ 7,85,220 ಮಂದಿಯನ್ನು ಕೊರೊನಾ ಪರೀಕ್ಷೆಗೊಳಪಡಿಸಲಾಗಿದ್ದು, ಈವರೆಗೂ ದೇಶದಲ್ಲಿ 21,84,03,277 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ. |
ಭಾರತದಲ್ಲಿ ಜನವರಿ 16 ರಂದು ಸ್ವದೇಶಿ ನಿರ್ಮಿತ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಕೊರೊನಾ ಲಸಿಕೆಗೆ ಪ್ರಧಾನಿ ಮೋದಿಯವರು ಚಾಲನೆ ನೀಡಿದ್ದು, ತಮ್ಮ ಜೀವವನ್ನೇ ಪಣಕ್ಕಿಟ್ಟು ಕೊರೊನಾ ವಿರುದ್ಧ ಹೋರಾಟ ಮಾಡುತ್ತಿರುವ ಕೊರೊನಾ ವಾರಿಯರ್ಸ್‌ಗೆ ಲಸಿಕೆಯ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ. |
ಇದರಂತೆ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ ಒಟ್ಟಾರೆ 1,56,20,749 ಮಂದಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. |
ಕೊರೊನಾ ಲಸಿಕೆಗಾಗಿ ಕೋವಿನ್ ಪೋರ್ಟಲ್‌ನಲ್ಲಿ 50 ಲಕ್ಷ ಜನರ ನೋಂದಣಿ |
ಸಕ್ರಿಯ ಪ್ರಕರಣಗಳು ಕಡಿಮೆಯಾಗುತ್ತಿದೆ |
ಭಾರತದಲ್ಲಿ ಒಟ್ಟು ಕೋವಿಡ್ ಪ್ರಕರಣಗಳಲ್ಲಿ ಸದ್ಯ ಸಕ್ರಿಯ ಕೇಸುಗಳು ಶೇಕಡಾ 1.51ರಷ್ಟಿದ್ದು ಗುಣಮುಖ ಹೊಂದುತ್ತಿರುವವರ ಸಂಖ್ಯೆ ಶೇಕಡಾ 97ರಷ್ಟಿದೆ. ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ ಅತಿ ಹೆಚ್ಚು ಶೇಕಡಾ 67.84ರಷ್ಟು ಸಕ್ರಿಯ ಕೋವಿಡ್ ಪ್ರಕರಣಗಳಿವೆ. |
ರಾಜ್ಯಗಳಿಗೆ ಕೇಂದ್ರ ತಂಡ ಭೇಟಿ |
ರಾಜ್ಯಗಳಿಗೆ ಭೇಟಿ ನೀಡಿರುವ ಕೇಂದ್ರ ತಂಡ ಹಿಂತಿರುಗಿ ಬಂದು ಪ್ರತಿಕ್ರಿಯೆ ಮತ್ತು ವರದಿ ನೀಡಿದ ನಂತರ ಈ ಬಗ್ಗೆ ಸ್ಪಷ್ಟ ಚಿತ್ರಣ ಕಂಡುಬರಲಿದೆ. ಮದುವೆ, ಪಾರ್ಟಿಗಳಿಂದಾಗಿ ಕೋವಿಡ್ ಪ್ರಕರಣಗಳು ಹೆಚ್ಚಾಗಿದೆ ಎಂದು ಅನಿಸುತ್ತಿದೆ ಎಂದು ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ಡಾ ವಿ ಕೆ ಪೌಲ್ ಹೇಳುತ್ತಾರೆ. |
ಕಳೆದ ಎರಡು ವಾರಗಳಿಂದ ಕೊರೊನಾ ಸೋಂಕು ಹೆಚ್ಚಳ |
Subsets and Splits
No community queries yet
The top public SQL queries from the community will appear here once available.