text
stringlengths
0
61.5k
ಕಳೆದ ಎರಡು ವಾರಗಳಲ್ಲಿ ದಿನಂಪ್ರತಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ತಮಿಳುನಾಡು ಮತ್ತು ಪಂಜಾಬ್ ರಾಜ್ಯಗಳಲ್ಲಿ ಕೇಂದ್ರ ತಂಡವನ್ನು ನಿಯೋಜಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.
ಭಾರತದಲ್ಲಿ 14,989 ಕೊರೊನಾ ಸೋಂಕಿತರು ಪತ್ತೆ
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 14,989 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,11,39,516ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
coronavirus india corona vaccine Guidelines marriage disease health ವೈರಸ್ ಕೊರೊನಾ ಲಸಿಕೆ ಭಾರತ ಆರೋಗ್ಯ ಮದುವೆ
The government on Tuesday again stressed that the marginal spike in Covid cases daily is not due to new variants and added that it could be because of super spreader events such as weddings.
ಬಿಜೆಪಿಗೆ ಸಿದ್ದರಾಮಯ್ಯ ಮೇಲೇಕೆ ಮಮಕಾರ : ಅಪ್ಪ-ಮಕ್ಕಳ ಮೇಲೇಕೆ ತಿರಸ್ಕಾರ...?
June 6, 2018 Sunil Sirasangi 0 Comments bjp, child, father, governament, karnataka, siddaramaiah, state
ರಾಜ್ಯದ ಎಲೆಕ್ಷನ್ ಸಮರ ಮುಗಿದು, ಒಂದರ ಮೇಲೊಂದರಂತೆ ಎರಡು ಸರ್ಕಾರಗಳು ರಚನೆಯಾದವು. ಉತ್ತರ ಸೀಮೆಯ ಮಜಬೂತು ಜೋಡಿ ಹೋರಿಗಳನ್ನು ನೆಚ್ಚಿಕೊಂಡು ನೊಗ ಕಟ್ಟಿದ್ದ ಯಡ್ಯೂರಪ್ಪನ ಚಕ್ಕಡಿಗೆ ಚಕ್ರಗಳೇ ಇರಲಿಲ್ಲ. ಹಾಗಾಗಿ ಅದು ಮೂರು ಗೇಣೂ ಮುಂದಕ್ಕೆ ಹೋಗದೆ ನಿಂತಲ್ಲೆ ಸುಸ್ತಾಗಿ ನೆಲಕಚ್ಚಿತು. ಈಗ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಹವಾ ಶುರುವಾಗಿದೆ. ಹೆಚ್ಚೂಕಮ್ಮಿ ಒಂದು ದಶಕದ ಕಾಲ ಅಧಿಕಾರವಿಲ್ಲದೆ ಇನ್ನೇನು ಬೂಸ್ಟು ಹಿಡಿಯುವ ಹಂತಕ್ಕೆ ಬಂದಿದ್ದ ಜೆಡಿಎಸ್‌ಗೆ ಕುಮಾರಣ್ಣ ಸಿಎಂ ಆಗುವ ಸುಯೋಗ ಬಂದಿರೋದು ದೇವೇಗೌಡರಿಗೆ ಯೌವ್ವನವನ್ನು ಮರಳಿ ತಂದುಕೊಟ್ಟಿರೋದು ಮಾತ್ರವಲ್ಲ, ಅವರ ತಲೆಯಲ್ಲಿ ಮಲಗಿದ್ದ ಫೀನಿಕ್ಸ್ ಹಕ್ಕಿಗಳೆಲ್ಲ ಒಂದೊಂದಾಗಿ ರೆಕ್ಕೆ ಬಿಚ್ಚುವಂತೆ ಮಾಡಿದೆ. ಕುಮಾರಣ್ಣ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೆ ಮೊದಲೇ ಸಿಎಸ್, ಐಜಿಯಂತಹ ಎ.ಸಿ ಚೇಂಬರ್ ಅಧಿಕಾರಗಳನ್ನು ತನ್ನ ಮನೆಗೇ ಕರೆಸಿಕೊಂಡು ಪಿಚ್ ರಿಪೋರ್ಟ್ ಕಲೆಹಾಕಿದ್ದ ದೇವೇಗೌಡರ ಲಗುಬಗೆ ನೋಡಿದರೆ ಅವರ ಹಳೇ ಆಟಗಳು ಶುರುವಾಗುವುದರಲ್ಲಿ ಡೌಟೇ ಇಲ್ಲ. ಅಂದರೆ, ಫ್ಯಾಮಿಲಿ ಸೆಂಟ್ರಿಕ್ ಡ್ರಾಮಾ ಶುರು ಹಚ್ಚಿಕೊಂಡು ತಮ್ಮ ಎದುರಾಳಿಗಳನ್ನು ಒಬ್ಬೊಬ್ಬರನ್ನಾಗಿ ತೆರೆಮರೆಗೆ ಸರಿಸುವ ಸೋಕಾಲ್ಡ್ ಚಾಣಾಕ್ಷ ತಂತ್ರ!
ದೇವೇಗೌಡರ ಈ ಪರಿ ಹುಮ್ಮಸ್ಸಿನ ಕಾರಣಕ್ಕೇ ಇದೀಗ ಎಲ್ಲರ ಗಮನ ಮಾಜಿ ಸಿಎಂ ಸಿದ್ರಾಮಯ್ಯನತ್ತ ನೆಟ್ಟಿದೆ. ಕಾಂಗ್ರೆಸ್ ಪಾರ್ಟಿಯ ಪ್ರಸ್ತುತ ಅನಾಟಮಿ ಮತ್ತು ದೇಶದ ಮುಂದಿರುವ ಪೊಲಿಟಿಕಲ್ ಕ್ರೈಸಿಸ್ ಬಗ್ಗೆ ಆಳವಾಗಿ ಅರಿವಿಲ್ಲದವರು, `ಇನ್ನು ಸಿದ್ದು ಕಥೆ ಮುಗೀತು. ಒಂದು ಕಡೆ ತಮ್ಮ ವಿರುದ್ಧ ತೊಡೆ ತಟ್ಟಿದ್ದ ದೇವೇಗೌಡ್ರು, ಮತ್ತೊಂದು ಕಡೆ ಕಾಂಗ್ರೆಸ್ ಪಾರ್ಟಿಯೊಳಗೇ ಇರುವ ಹಿತಶತ್ರುಗಳು ಸೇರಿಕೊಂಡು ಸಿದ್ರಾಮಯ್ಯರನ್ನು ಮೂಲೆಗುಂಪು ಮಾಡ್ತಾರೆ. ಹೈಕಮಾಂಡ್ ಕೂಡಾ ಸಿದ್ರಾಮಯ್ಯರನ್ನ ಕ್ಯಾರೇ ಅನ್ನಲ್ಲ' ಎಂಬಂತಹ ವಾದಗಳನ್ನು ಹರಿಬಿಡುತ್ತಿದ್ದಾರೆ. ಇಂಥಾ ವಾದದ ಲಾಭವನ್ನು ಎನ್‌ಕ್ಯಾಶ್ ಮಾಡಿಕೊಳ್ಳುವ ಸಲುವಾಗಿ ಬಿಜೆಪಿ ಕೂಡಾ ಸಿದ್ರಾಮಯ್ಯನ ಮೇಲೆ ದಿಡೀರ್ ಕಕ್ಕುಲಾತಿಯನ್ನು ಹುಟ್ಟಿಸಿಕೊಂಡು `ಅಯ್ಯೋ.., ಪಾಪಾ..' ಎಂದು ಮರುಗಲು ಶುರು ಮಾಡಿದೆ. ಯಡ್ಯೂರಪ್ಪನವರು ಸಿದ್ರಾಮಯ್ಯನವರ ಕುರಿತು `ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯನವರನ್ನು ಚೆನ್ನಾಗಿ ಬಳಸಿಕೊಂಡು, ಈಗ ಮೂಲೆಗೆ ಬಿಸಾಕಿದೆ' ಎಂಬ ಹೇಳಿಕೆ ನೀಡಿದ್ದಲ್ಲದೆ ತಮ್ಮ ಪೌರಾಣಿಕ ಬುಟ್ಟಿಯೊಳಗಿರುವ ದುರಂತ ಪಾತ್ರಗಳನ್ನು ಹೆಕ್ಕಿತೆಗೆದು ಸಿದ್ದುವಿಗೆ ತಾಳೆ ಹಾಕುತ್ತಾ ಓಡಾಡುತ್ತಿದ್ದಾರೆ. ಇತ್ತ ಶೋಭಕ್ಕ, `ಸಿದ್ರಾಮಯ್ಯ ಇದ್ದಕ್ಕಿದ್ದಂತೆ ಕಾಂಗ್ರೆಸ್‌ಗೆ 78 ಸ್ಥಾನ ಬಂತು. ಆದ್ರೆ, ಕಾಂಗ್ರೆಸ್ ಅವರನ್ನು ಸರಿಯಾಗಿ ನಡೆಸಿಕೊಳ್ಳದೆ ಅವಮಾನ ಮಾಡುತ್ತಿದೆ' ಅಂತ ಹೇಳಿಕೆ ಕೊಡುತ್ತಾರೆ.
ಬಿಜೆಪಿಗರ ಈ ಸಿದ್ದು ಮಮಕಾರದ ಹೇಳಿಕೆಗಳು ಕೇವಲ ಬಾಯಿಚಪಲಕ್ಕೆ ಹೊರಬೀಳುತ್ತಿರುವ ಡೈಲಾಗ್‌ಗಳಲ್ಲ. ಅಥವಾ ಸಿದ್ದುವನ್ನು ಗೇಲಿ ಮಾಡುವ ಸಿಂಪಲ್ ಕೊಂಕು ಮಾತುಗಳೂ ಅಲ್ಲ. ಅವುಗಳ ಹಿಂದೆ ಅಡಗಿರಬಹುದಾದ ತಂತ್ರವನ್ನು ಊಹಿಸುತ್ತಾ ಸಾಗಿದರೆ, ಬಿಜೆಪಿಯ ಸ್ಟ್ರಾಟಜಿಯ ಜೊತೆಜೊತೆಗೆ `ಸಿದ್ದು ಕಥೆ ಮುಗೀತಾ?' ಎಂಬ ಪ್ರಶ್ನೆಗೆ ಒಂದು ಸಾಲಿಡ್ ಉತ್ತರವೂ ಅರ್ಥವಾಗುತ್ತದೆ. ಮೊನ್ನೆ ಮುಗಿದ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಇಡಿಯಾಗಿ ಬಡಿದಾಡಿದ್ದು ಕಾಂಗ್ರೆಸ್ ಎಂಬ ಶತಮಾನದ ಪಾರ್ಟಿಯ ಜೊತೆಗಲ್ಲ, ದಿಲ್ಲಿಯ ರಾಹುಲ್ ಗಾಂಧಿ ಸಂಗಡವೂ ಅಲ್ಲ; ಸಿದ್ದರಾಮಯ್ಯನ ವಿರುದ್ಧ! ಯಾಕೆಂದರೆ ಹೇಳಿಕೊಳ್ಳುವಂತಹ ದೊಡ್ಡ ಹಗರಣವಿಲ್ಲದೆ ಆಡಳಿತ ನಡೆಸಿದ್ದ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಾದಾಡಲು ಬಿಜೆಪಿಗೆ ಯಾವ ಘನಂದಾರಿ ನೆಪವೂ ಇರಲಿಲ್ಲ. ಇದ್ದರೂ ಅವು ಆಧಾರರಹಿತ ಆಪಾದನೆಗಳು ಮಾತ್ರ. ಅವುಗಳನ್ನು ನೆಚ್ಚಿಕೊಂಡು ಜಾಹೀರಾತು ಕೊಡಲು ಹೋಗಿ ಖುದ್ದು ಚುನಾವಣಾ ಆಯೋಗದಿಂದಲೇ ನೋಟಿಸ್ ಪಡೆದುಕೊಂಡಿದ್ದ ಬಿಜೆಪಿಗೆ ರಾಹುಲ್ ಕೂಡಾ ಪ್ರಬಲ ಎದುರಾಳಿಯಾಗಿರಲಿಲ್ಲ. ಆದರೆ ಮೋದಿ, ಅಮಿತ್ ಶಾರಂತಹ ಬಿಜೆಪಿ ದಿಗ್ಗಜರನ್ನೆ ಪಂಚಾಯ್ತಿ ಮಟ್ಟದ ಎದುರಾಳಿಗಳಂತೆ ತರಾಟೆಗೆ ತೆಗೆದುಕೊಳ್ಳುತ್ತಿದ್ದ ಸಿದ್ರಾಮಯ್ಯ ಬಿಜೆಪಿಗೆ ಬಲು ದೊಡ್ಡ ಸವಾಲಾಗಿ ಕಾಡಿದ್ದರು. ಹಾಗೆ ಕಾಡುವ ಸಾಮರ್ಥ್ಯವನ್ನು ಅವರ ಜನಪ್ರಿಯ ಯೋಜನೆಗಳು ಮತ್ತು ಕಪ್ಪುಚುಕ್ಕೆಯಿಲ್ಲದ ಆಡಳಿತ ಅವರಿಗೆ ನೀಡಿದ್ದವೆನ್ನುವುದರಲ್ಲಿ ಎರಡು ಮಾತಿಲ್ಲ.
ಹೀಗೆ ಕಾಡಿದ್ದ ಸಿದ್ದು ಬಗ್ಗೆ ಬಿಜೆಪಿಗೆ ಸುಖಾಸುಮ್ಮನೇ ಕಾಳಜಿ ಹುಟ್ಟಲು ಸಾಧ್ಯವೇ? ಅಧಿಕಾರಕ್ಕೆ ಹತ್ತಿರತ್ತಿರ ಬಂದು ಅವಕಾಶ ತಪ್ಪಿಸಿಕೊಂಡ ಹೊಟ್ಟೆಸಂಕಟದ ನಡುವೆಯೂ ಬಿಜೆಪಿ ಈಗ ಮೋದಿಗೋಸ್ಕರ ೨೦೧೯ರ ಚುನಾವಣೆಗೆ ಅಣಿಯಾಗಬೇಕಿದೆ. ಮೂರೇ ದಿನದ ಮುಖ್ಯಮಂತ್ರಿಗಿರಿಗೆ ರಾಜೀನಾಮೆ ಕೊಡುತ್ತಾ ಯಡ್ಯೂರಪ್ಪನವರು `ಲೋಕಸಭೆ ಚುನಾವಣೆಯಲ್ಲಿ 28 ಸ್ಥಾನ ಗೆಲ್ತೀವಿ' ಎಂದು ಹೇಳಿದ ಮಾತನ್ನು ನಿಜ ಮಾಡಿಕೊಳ್ಳಲು ಹೆಣಗಾಡಬೇಕಿದೆ. ಅದರ ಭಾಗವಾಗಿಯೇ ಸಿದ್ದು ಮಮಕಾರದ ಮಾತುಗಳು ಬಿಜೆಪಿ ನಾಯಕರಿಂದ ಕೇಳಿ ಬರುತ್ತಿವೆ. ಬಿಜೆಪಿಗಿಂತ ಹೆಚ್ಚು ಶಾಸಕರನ್ನು ಗೆಲ್ಲಿಸಿಕೊಳ್ಳುವಲ್ಲಿ ಸಿದ್ದು ಸೋತಂತೆ ಕಾಣುತ್ತಾರಾದರು, ವೋಟ್ ಶೇರ್ ವಿಚಾರದಲ್ಲಿ ಬಿಜೆಪಿಗಿಂತಲೂ ಮುಂದಿದ್ದಾರೆ. ಬಿಜೆಪಿ ಶೇ.36.2 ಮತಗಳನ್ನಷ್ಟೆ ಗಳಿಸಿದ್ದರೆ, ಕಾಂಗ್ರೆಸ್ ಶೇ.3.8ರಷ್ಟು ಮತ ಗಳಿಸಿದೆ. ಅದರರ್ಥ, ಸಿದ್ರಾಮಯ್ಯ ನೇತೃತ್ವವನ್ನು ಒಪ್ಪುವವರ ಸಂಖ್ಯೆ ಜಾಸ್ತಿಯೇ ಇದೆ. ಅವುಗಳಲ್ಲಿ ಅಹಿಂದ ಮತಗಳ ಪ್ರಮಾಣ ಹೆಚ್ಚೆನ್ನುವುದನ್ನು ಅವರ ರಾಜಕೀಯ ಬದುಕನ್ನು ಕಂಡ ಎಂತವರಿಗೇ ಆದರು ಅರ್ಥವಾಗುತ್ತದೆ. ಅಂದರೆ, ಈಗಲೂ ಅಪಾರ ಸಂಖ್ಯೆಯಲ್ಲಿರುವ ಅಹಿಂದ ಮತಗಳಿಗೆ ಸಿದ್ರಾಮಯ್ಯನವರೇ ಫೇವರಿಟ್ಟು! ಈ ಅಂಶದ ಮೇಲೆ ಕಣ್ಣಿಟ್ಟೆ ಬಿಜೆಪಿ, ಸಿದ್ದು ಬಗ್ಗೆ ಮಮಕಾರದ ಮಾತಾಡುತ್ತಿದೆ.
ಕಾಂಗ್ರೆಸ್ ಪಕ್ಷದಿಂದ ಸಿದ್ರಾಮಯ್ಯನಿಗೆ ಅನ್ಯಾಯವಾಯ್ತು, ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಹೈಕಮಾಂಡ್ ಕೂಡಾ ದೇವೇಗೌಡರ ಶರತ್ತಿಗೆ ತಲೆಬಾಗಿ ಸಿದ್ರಾಮಯ್ಯನನ್ನು ದೂರ ಇಡುತ್ತಿದೆ ಎಂಬ ಗೊಂದಲವನ್ನು ಅಹಿಂದ ಮತಸಮೂಹದ ನಡುವೆ ಹುಟ್ಟುಹಾಕುವುದು ಈ ಮಮಕಾರದ ಇರಾದೆ. ಇದು ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತೊ ಗೊತ್ತಿಲ್ಲ, ಆದರೆ ಇಂಡಿಯಾದ ಜನ ರಾಜಕೀಯ ವಿಚಾರದಲ್ಲಿ ವಸ್ತುಸ್ಥಿತಿ ವಿಸ್ಲೇಷಣೆಗಳನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತ ಹೆಚ್ಚಾಗಿ ಇಂತಹ ಭಾವನಾತ್ಮಕ ಮೆಲೊಡಿಗಳಿಗೆ ಈಡಾಗಿಬಿಡುತ್ತಾರೆ. ಇವತ್ತಿಗೂ ನಮ್ಮ ಚುನಾವಣಾ ವ್ಯವಸ್ಥೆಯಲ್ಲಿ ಜಾತಿ ಪ್ರಧಾನ ಪಾತ್ರ ವಹಿಸುತ್ತಿರುವುದು ಕೂಡಾ ಜನರ ಇಂತಹ ಭಾವನಾತ್ಮಕ ವೀಕ್ನೆಸ್ಸಿನಿಂದಾಗಿಯೇ. ಅದನ್ನೆ ಬಂಡವಾಳ ಮಾಡಿಕೊಂಡು ಒಂದು ಅಸ್ತç ಪ್ರಯೋಗಿಸಿ ನೋಡಲು ಬಿಜೆಪಿ ಮುಂದಾಗಿದೆ. ಆ ಮೂಲಕ ಅಸೆಂಬ್ಲಿ ಎಲೆಕ್ಷನ್‌ನಲ್ಲಿ ಕಾಂಗ್ರೆಸ್‌ಗೆ ಹರಿದುಹೋಗಿರುವ ಮತಗಳ ಪ್ರಮಾಣವನ್ನು ಕುಗ್ಗಿಸುವುದು ಅದರ ಹುನ್ನಾರ!
'ಮದುವೆ ನಂತರ ಜಾತಿ ಬದಲಾವಣೆ ಸಾಧ್ಯವಿಲ್ಲ' : ಸುಪ್ರೀಂ ಕೋರ್ಟ್ | Kannada Dunia | Kannada News | Karnataka News | India News
HomeLive NewsIndia'ಮದುವೆ ನಂತರ ಜಾತಿ ಬದಲಾವಣೆ ಸಾಧ್ಯವಿಲ್ಲ' : ಸುಪ್ರೀಂ…
'ಮದುವೆ ನಂತರ ಜಾತಿ ಬದಲಾವಣೆ ಸಾಧ್ಯವಿಲ್ಲ' : ಸುಪ್ರೀಂ ಕೋರ್ಟ್
20-01-2018 10:43AM IST / No Comments / Posted In: India, Featured News
ಮದುವೆಯ ನಂತರ ಕೂಡ ಯಾವುದೇ ವ್ಯಕ್ತಿಯ ಜಾತಿ ಬದಲಾಗುವುದಿಲ್ಲ ಅಂತಾ ಸುಪ್ರೀಂ ಕೋರ್ಟ್ ಹೇಳಿದೆ. ಪಂಜಾಬ್ ನ ಕೇಂದ್ರೀಯ ವಿದ್ಯಾಲಯದ ಶಿಕ್ಷಕಿಯೊಬ್ಬರ ಪ್ರಕರಣದ ವಿಚಾರಣೆ ವೇಳೆ ಈ ಅಭಿಪ್ರಾಯವನ್ನು ಪ್ರಕಟಿಸಿದೆ. 1991ರಲ್ಲಿ ಆಕೆಗೆ ಹಿಂದುಳಿದ ಜಾತಿಗೆ ಸೇರಿದ್ದಾಳೆಂಬ ಜಾತಿ ಪ್ರಮಾಣಪತ್ರ ನೀಡಲಾಗಿತ್ತು.
ಜಾತಿ ಪ್ರಮಾಣಪತ್ರ ಹಾಗೂ ವಿದ್ಯಾರ್ಹತೆ ಆಧಾರದ ಮೇಲೆ ಆಕೆಗೆ ಪಠಾಣ್ ಕೋಟ್ ನ ಕೇಂದ್ರೀಯ ವಿದ್ಯಾಲಯದಲ್ಲಿ ಉದ್ಯೋಗ ದೊರೆತಿದೆ. ಅದಾಗಿ ದಶಕದ ಬಳಿಕ ಅವಳ ನೇಮಕಾತಿ ರದ್ದು ಮಾಡುವಂತೆ ದೂರು ದಾಖಲಾಗಿದೆ. ಆಕೆ ಹಿಂದುಳಿದ ವರ್ಗಕ್ಕೆ ಸೇರಿಲ್ಲ, ನಕಲಿ ಪ್ರಮಾಣಪತ್ರ ಪಡೆದಿದ್ದಾಳೆಂದು ಆರೋಪಿಸಲಾಗಿದೆ.
2015ರಲ್ಲಿ ಅವಳ ಜಾತಿ ಪ್ರಮಾಣಪತ್ರ ರದ್ದು ಮಾಡಿ, ಕೇಂದ್ರೀಯ ವಿದ್ಯಾಲಯದಲ್ಲಿದ್ದ ಶಿಕ್ಷಕ ವೃತ್ತಿಯನ್ನೂ ಕಸಿದುಕೊಳ್ಳಲಾಗಿತ್ತು. ಇದನ್ನು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದ ಮಹಿಳೆಗೆ ಅಲ್ಲೂ ನಿರಾಸೆಯಾಗಿತ್ತು. ನಂತರ ಆಕೆ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದ್ದಳು.
ಆಕೆಯ ಟರ್ಮಿನೇಶನ್ ಅನ್ನು ನಿವೃತ್ತಿಯಾಗಿ ಪರಿಗಣಿಸುವಂತೆ ಕೋರ್ಟ್ ಈಗ ಆದೇಶಿಸಿದೆ. 21 ವರ್ಷಗಳ ಕಾಲ ಆಕೆ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾಳೆ. ಮಹಿಳೆ ಜನಿಸಿದ್ದು ಮೇಲ್ಜಾತಿಯ ಕುಟುಂಬದಲ್ಲಿ, ಆದ್ರೆ ಹಿಂದುಳಿದ ವರ್ಗದ ಯುವಕನನ್ನು ಮದುವೆಯಾಗಿದ್ದಳು. ಆದರೂ ಆಕೆಯ ಜಾತಿ ಬದಲಾಗುವುದಿಲ್ಲ ಅಂತಾ ಕೋರ್ಟ್ ಸ್ಪಷ್ಟಪಡಿಸಿದೆ.
ಕೊರೋನ ವೈರಸ್: ವಾರಾಂತ್ಯದ ಕರ್ಫ್ಯೂ ಹಿಂಪಡೆದ ದಿಲ್ಲಿ | Vartha Bharati- ವಾರ್ತಾ ಭಾರತಿ
ವಾರ್ತಾ ಭಾರತಿ Jan 27, 2022, 2:01 PM IST
ಹೊಸದಿಲ್ಲಿ: ಕೊರೋನ ವೈರಸ್ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿ ವಿಧಿಸಲಾಗಿರುವ ವಾರಾಂತ್ಯದ ಕರ್ಫ್ಯೂ ಹಾಗೂ ಮಾರುಕಟ್ಟೆಗಳಿಗೆ ಬೆಸ-ಸಮ ನಿರ್ಬಂಧಗಳನ್ನು ಹಿಂಪಡೆಯಲಾಗಿದೆ. ರೆಸ್ಟೋರೆಂಟ್‌ಗಳು ಶೇಕಡಾ 50 ರಷ್ಟು ಸಾಮರ್ಥ್ಯದೊಂದಿಗೆ ಮತ್ತೆ ತೆರೆಯಬಹುದು ಎಂದು ದಿಲ್ಲಿ ಸರಕಾರ ಗುರುವಾರ ಹೇಳಿದೆ ಎಂದು NDTV ವರದಿ ಮಾಡಿದೆ.
ರಾಜಧಾನಿಯಲ್ಲಿ ಪ್ರಕರಣಗಳು ಕಡಿಮೆಯಾಗುತ್ತಿವೆ.ಆದಾಗ್ಯೂ, ಶಾಲೆಗಳು ಸದ್ಯಕ್ಕೆ ಮುಚ್ಚಲ್ಪಡುತ್ತವೆ.
ದಿಲ್ಲಿ ಸರಕಾರ ಹಾಗೂ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ನಡುವಿನ ಸಭೆಯಲ್ಲಿ ನಿರ್ಬಂಧಗಳನ್ನು ಸರಾಗಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ನೀವ್ ಮಾಡ್ತಿರೋದು ಸರೀನಾ ಸಾರ್! | Mining in protected forest | Yeddyurappa | Karnataka forest | Environment | Nature - ನೀವ್ ಮಾಡ್ತಿರೋದು ಸರೀನಾ ಸಾರ್! - Kannada Oneindia
| Published: Thursday, February 25, 2010, 18:14 [IST]
ಸರ್, ಸುತ್ತು ಬಳಸಿನ ಮಾತು ಬೇಡ. ನೇರವಾಗಿ ವಿಷಯಕ್ಕೆ ಬರ್‍ತೇನೆ. ವಾರದ ಹಿಂದಷ್ಟೇ ನಡೆದ ಸಂಪುಟ ಸಭೆಯಲ್ಲಿ ರಾಜ್ಯದ ಆರು ರಕ್ಷಿತಾರಣ್ಯಗಳಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿದ್ದೀರಿ. ಇದರಿಂದ ಎಂತೆಂಥ ಅಡ್ಡ ಪರಿಣಾಮಗಳಾಗ್ತವೆ ಎಂದು ನೀವು ಅಂದಾಜು ಮಾಡಿಕೊಂಡಿಲ್ಲ ಅನಿಸುತ್ತೆ. ಅಥವಾ ಯಾರು ಹಾಳಾದ್ರೆ ನನಗೇನು? ನನ್ನ ಕುರ್ಚಿ ಉಳಿದ್ರೆ ಸಾಕು. ಸರಕಾರದಲ್ಲಿರೋ ಹಣವಂತ ಮಂತ್ರಿಗಳು ಭಿನ್ನಮತಕ್ಕೆ ಮುಂದಾಗದಂತೆ ನೋಡಿಕೊಂಡ್ರೆ ಸಾಕು ಎಂಬ ಆಲೋಚನೆಯಿಂದಲೂ ಗಣಿಗಾರಿಕೆಗೆ ನೀವು ಅನುಮತಿ ಕೊಟ್ಟಿರಲಿಕ್ಕೂ ಸಾಕು. ಆದ್ರೆ ಸಾರ್, ನಿಜ ಹೇಳಬೇಕು ಅಂದ್ರೆ ನಿಮ್ಮದು ಅವಿವೇಕದ ನಡೆ. ದುಡುಕಿನ ನಡೆ. ಏಕಪಕ್ಷೀಯ ನಿರ್ಧಾರ. ತಿಳಿವಳಿಕೆ ಇಲ್ಲದವರು ಮಾತ್ರ ಕೈಗೊಳ್ಳಬಹುದಾದ ನಿರ್ಧಾರ. ಒಂದು ವೇಳೆ ಆರು ರಕ್ಷಿತಾರಣ್ಯಗಳಲ್ಲಿ ಗಣಿಗಾರಿಕೆ ಶುರುವಾದರೆ, ಆಗಬಹುದಾದ ಅನಾಹುತದ ಬಗ್ಗೆ ಆಮೇಲೆ ಹೇಳ್ತೇನೆ. ಅದಕ್ಕೂ ಮೊದಲು, ಯಡಿಯೂರಪ್ಪ ಅಂದ್ರೆ ನಮ್ಮ ಜನಕ್ಕೆ ಈ ಹಿಂದೆ ಎಂಥ ಭಾವನೆಯಿತ್ತು ಅಂತ ಹೇಳಿ ಬಿಡ್ತೀನಿ ಕೇಳಿ...
ಹೌದಲ್ವ ಸಾರ್? ನೀವು ದಶಕಗಳಿಂದಲೂ ವಿರೋಧ ಪಕ್ಷದಲ್ಲೇ ಇದ್ದವರು. ಅದೇನು ಕರ್ಮವೋ ಕಾಣೆ, ಕರ್ನಾಟಕದಲ್ಲಿ ಬಿಜೆಪಿಗೆ ಅಕಾರ ಸಿಕ್ತಾನೇ ಇರಲಿಲ್ಲ. ಆದರೆ ಪ್ರತಿ ಚುನಾವಣೆಯಲ್ಲೂ ಅದೇ ಬಿಜೆಪಿಯಿಂದ ರ್ಸ್ಪಸಿ ನೀವು ಎಮ್ಮೆಲ್ಲೆ ಆಗ್ತಾ ಇದ್ರಿ. ನಂತರ ವಿರೋಧ ಪಕ್ಷದ ಕುರ್ಚಿಲಿ ಕೂತು ಅವಾಗವಾಗ ಅಬ್ಬರಿಸ್ತಾ ಇದ್ರಿ. ರೈತರ ಪರವಾಗಿ ದನಿ ಎತ್ತುತಿದ್ರಿ. ಎಲ್ಲಿಯವರೆಗೆ ಹೋರಾಟ?' ಸಾಯುವವರೆಗೆ ಹೋರಾಟ' ಹೋರಾಟ ಹೋರಾಟ, ನ್ಯಾಯಕ್ಕಾಗಿ ಹೋರಾಟ' ಎಂಬ ಅರ್ಥದಲ್ಲೇ ಮಾತಾಡ್ತಾ ಇದ್ರಿ. ಅದನ್ನೆಲ್ಲ ಕಂಡ ಜನ- ಇದ್ರೆ ಯಡಿಯೂರಪ್ಪನಂಗೆ ಇರಬೇಕು ನೋಡ್ರಿ. ಅವ್ನು ರೈತರ ಪರವಾಗಿ, ನ್ಯಾಯದ ಪರವಾಗಿ ಯಾವಾಗ್ಲೂ ದನಿ ಎತ್ತುತ್ತಾ ಇರ್‍ತಾನೆ. ಆದ್ರೆ ಹಾಳಾದ್ದು ಅದೃಷ್ಟ ಪ್ರತಿಬಾರಿಯೂ ಕೈಕೊಡ್ತಾ ಇದೆ. ಈ ಬಿಜೆಪಿ ಅಕಾರಕ್ಕೆ ಬಂದ್ರೆ ಅವನಿಂದ ಬಹಳ ಒಳ್ಳೆಯ ಕೆಲಸಗಳನ್ನು ನಿರೀಕ್ಷಿಸಬಹುದು' ಎಂದೆಲ್ಲ ಮಾತಾಡಿ ಕೊಂಡಿದ್ದರು.
ಆದರೆ, ಇಲ್ಲ ಯಡಿಯೂರಪ್ನೋರೇ, ನಮ್ಮ ನಂಬಿಕೆ ನಿಜವಾಗಲಿಲ್ಲ. ನೀವು ಸಿಎಂ ಆದ ಎರಡೇ ತಿಂಗಳಲ್ಲಿ ಹಾವೇರೀಲಿ ರೈತರ ಮೇಲೆ ಗೋಲಿಬಾರ್ ಆಯ್ತು. ಗೊಬ್ಬರ ಬೇಕು ಎಂದು ಪ್ರತಿಭಟಿಸಿದ ರೈತರ ಹೆಣ ಬಿತ್ತು. ಆ ನಂತರದಲ್ಲಿ ಬಿಡಿ, ನಿಮ್ಮ ಕಣ್ಮುಂದೆಯೇ ಒಂದೊಂದೇ ಅನಾಹುತ ನಡೀತಾ ಹೋದ್ವು. ಆಗೆಲ್ಲ ನೀವು ಹರಾ ಅನ್ನಲಿಲ್ಲ ಶಿವಾ ಅನ್ನಲಿಲ್ಲ. ಆದರೆ ನಿಮ್ಮ ಖುರ್ಚಿಗೆ ಸಂಚಕಾರ ಬರ್ತಿದೆ ಅಂತ ಗೊತ್ತಾದರೆ ಸಾಕು, ಧಡಕ್ಕನೆ ಮೇಲೆದ್ದು ರಾಜ್ಯದ ಅಷ್ಟೂ ದೇವಸ್ಥಾನದ ಮೆಟ್ಟಿಲು ಹತ್ತಿ- ದುಷ್ಟರ ವಿರುದ್ಧ ಹೋರಾಡಲು ಶಕ್ತಿ ಕೊಡು ತಂದೇ...' ಎಂದು ಪ್ರಾರ್ಥಿಸ್ತಾ ಇದ್ರಿ. ನಾನು ಅಸಹಾಯಕ ಅನ್ನೋ ಥರಾ ಪೋಸ್ ಕೊಟ್ರಿ. ಸಿಂಪಥಿ ಗಿಟ್ಟಿಸಿಕೊಂಡ್ರಿ.
yeddyurappa manikanth ಮಣಿಕಾಂತ್ ಯಡಿಯೂರಪ್ಪ ಗಣಿಗಾರಿಕೆ mining ಉಭಯ ಕುಶಲೋಪರಿ ubhaya kushalopari ರೈತ farmer ಅರಣ್ಯ ಕನ್ನಡ ಅಂಕಣ kannada column
ಬಂತು ನೋಡಿ ಆಸಿಂಕೋಜ಼ಿಲ್ಲ! - Cinibuzz
By ARUN KUMAR G January 29, 2020
ಶ್ರೀ ಮಾರುತಿ ಮೂವಿ ಮೇಕರ‍್ಸ್ ಲಾಂಛನದಲ್ಲಿ ಸೋಮಶೇಖರ್ ಶೆಟ್ಟಿ ನಿರ್ಮಿಸಿರುವ ಆಸಿಂಕೋಜ಼ಿಲ್ಲ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ವಿಜ್ಞಾನಿಯೊಬ್ಬ ಸಮಾಜದಲ್ಲಿ ಒಂದು ಬದಲಾವಣೆ ತರಬೇಕೆಂದು ಯೋಚಿಸಿ ಕಾಡಿಗೆ ಹೋಗಿ ಹೊಸ ಸಾಹಸವನ್ನು ಮಾಡುತ್ತಾನೆ. ಇದೇ ಸಮಯದಲ್ಲಿ ಆತನ ಜೊತೆಗೆ ಇನ್ನು ೪ ಜನ ವಿಶೇಷ ವ್ಯಕ್ತಿಗಳು ಸೇರಿಕೊಳ್ಳುತ್ತಾರೆ. ಅಲ್ಲಿಗೆ ಶಾಲಾ ವಿದ್ಯಾರ್ಥಿನಿಯೊಬ್ಬಳು ಅಪಹರಣಕ್ಕೊಳಗಾಗಿ ಕಾಡಿಗೆ ಬರುತ್ತಾಳೆ. ಮುಂದೆ ಏನಾಗುತ್ತದೆ ಎಂದು ಹೇಳುವ ಕಥಾಹಂದರವಿರುವ ಈ ಚಿತ್ರವನ್ನು ಶಮನ್ ನಿರ್ದೇಶನ ಮಾಡಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ ಅವರ ಅಭಿಮಾನಿಯಾಗಿದ್ದುಕೊಂಡು, ಚಿತ್ರರಂಗಕ್ಕೆ ಬಂದ ಅಸಂಖ್ಯ ಜನರಲ್ಲಿ ಈ ಚಿತ್ರದ ನಿರ್ದೇಶಕ ಶಮನ್ ಕೂಡಾ ಒಬ್ಬರು. ಹೇಗೆ ಉಪ್ಪಿ ಯಾರೂ ಊಹಿಸಲೂ ಸಾಧ್ಯವಾಗದ ಪಾತ್ರಗಳನ್ನು ಸೃಷ್ಟಿಸಿ ಸೈ ಅನ್ನಿಸಿಕೊಂಡರೋ, ಹಾಗೇ ತಾನು ಕೂಡಾ ಇಡೀ ಚಿತ್ರರಂಗ ತಿರುಗಿ ನೋಡುವಂತಾ ಸಿನಿಮಾ ಮಾಡಬೇಕು ಅನ್ನೋ ಹಂಬಲ ಶಮನ್ ಅವರಿಗಿತ್ತಂತೆ. ಅದನ್ನು ಸಾಕಾರಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಆಸಿಂಕೋಜ಼ಿಲ್ಲ ಚಿತ್ರವನ್ನು ರೂಪಿಸಿದ್ದಾರೆ.
ಈ ವರೆಗೆ ಯಾರೂ ಇಡದ ಹೆಸರನ್ನು ಈ ಚಿತ್ರಕ್ಕೆ ಶೀರ್ಷಿಕೆಯನ್ನಾಗಿ ಇಟ್ಟಿರುವುದೇ ಈ ಚಿತ್ರದ ಬಗ್ಗೆ ಎಲ್ಲರೂ ತಿರುಗಿನೋಡಲು ಕಾರಣವಾಗಿದೆ. ಇದು ಈ ಚಿತ್ರದಲ್ಲಿ ಬರುವ ಯಾವುದಾದರೂ ಪಾತ್ರವಾ? ಅಥವಾ ಯಾವುದಾದರೂ ಪ್ರಾಣಿಯ ಹೆಸರಾ? ಅಥವಾ ಅದನ್ನೂ ಮೀರಿದ ಜೀವಿಗಳನ್ನು ಈ ಸಿನಿಮಾದಲ್ಲಿ ಪರಿಚಯಿಸಲಾಗುತ್ತಿದೆಯಾ? ಇವೆಲ್ಲಾ ಕುತೂಹಲದ ಪ್ರಶ್ನೆಗಳಿಗೆ ಇನ್ನೇನು ಉತ್ತರ ಸಿಗಲಿದೆ!
ಚಿತ್ರಕ್ಕೆ ಅಮೋಘವರ್ಷ ಸಂಗೀತ, ಮಂಜುನಾಥ್ ಹೆಗ್ಡೆ, ಸಚಿನ್ ತಿರುಮಲ ಛಾಯಾಗ್ರಹಣ, ಮಂಜುನಾಥ್ ಕೆ.ಸಿ. ಕಥೆ-ಚಿತ್ರಕಥೆ-ಸಂಭಾಷಣೆ-ಸಾಹಿತ್ಯ, ವಿನಯ್‌ಕುಮಾರ್ ಕೂರ್ಗು ಸಂಕಲನವಿದೆ. ಭಾನುಪ್ರಿಯ ಶೆಟ್ಟಿ, ಹೊನ್ನಾವಳ್ಳಿ ಕೃಷ್ಣ, ಪ್ರಶಾಂತ್, ವಿನಯ್ ಚಂದ್ರು ಛತ್ರಪತಿ, ತಾರಖ್, ರಕ್ಷಿಕ, ಸೋನಂರಾಯ್, ಮೇಘನಶ್ರೀ, ತಿಮ್ಮೇಗೌಡ ಇನ್ನು ಮುಂತಾದವರು ಅಭಿನಯಿಸಿದ್ದಾರೆ.
ಪವಾಡ! ರಾತ್ರಿಯಿಡೀ ಶವಾಗಾರದ ಫ್ರೀಜರ್‌ನಲ್ಲಿದ್ದ ಮೃತ ವ್ಯಕ್ತಿ ಜೀವಂತ! | Miracle! The dead man who was in the freezer in the cemetery all night was awake - Kannada Oneindia
8 min ago ಮೋದಿ-ನೆಹರೂ ಹೋಲಿಕೆ ಅಸಾಧ್ಯ: ಸಿದ್ದರಾಮಯ್ಯಗೆ ಪ್ರಹ್ಲಾದ್ ಜೋಶಿ ತಿರುಗೇಟು
22 min ago Breaking: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ವಂದಿತಾ ಶರ್ಮಾ ನೇಮಕ
ಪವಾಡ! ರಾತ್ರಿಯಿಡೀ ಶವಾಗಾರದ ಫ್ರೀಜರ್‌ನಲ್ಲಿದ್ದ ಮೃತ ವ್ಯಕ್ತಿ ಜೀವಂತ!
| Published: Monday, November 22, 2021, 16:45 [IST]
ಲಕ್ನೋ ನವೆಂಬರ್ 22: ಸಾವನ್ನಪ್ಪಿದ್ದಾನೆಂದು ರಾತ್ರಿಯಿಡಿ ಶವಗಾರದಲ್ಲಿಟ್ಟಿದ್ದ ವ್ಯಕ್ತಿ ಬೆಳಗ್ಗೆ ಜೀವಂತವಾಗಿರುವ ಅಘಾತಕಾರಿ ಘಟನೆ ನಡೆದಿದೆ. ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ 45 ವರ್ಷದ ವ್ಯಕ್ತಿಯನ್ನು ಪರೀಕ್ಷೆಯ ನಂತರ ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದರು. ಹೀಗಾಗಿ ಆತನ ಶವವನ್ನು ಆಸ್ಪತ್ರೆಯ ಶವಾಗಾರದ ಫ್ರೀಜರ್‌ನಲ್ಲಿ ಇರಿಸಲಾಗಿತ್ತು. ಆದರೆ ರಾತ್ರಿಯಿಡೀ ಶವಾಗಾರದ ಫ್ರೀಜರ್‌ನಲ್ಲಿದ್ದ ನಂತರವೂ ಅವರು ಉಸಿರಾಡುತ್ತಿರುವುದನ್ನು ಮರುದಿನ ಕಂಡು ಮೃತನ ಸಂಬಂಧಿಕರು ಆಶ್ಚರ್ಯಗೊಂಡಿದ್ದಾರೆ.
ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಕಳೆದ ಗುರುವಾರ ರಾತ್ರಿ ಬೈಕ್ ಡಿಕ್ಕಿಯಾಗಿ ಶ್ರೀಕೇಶ್ ಕುಮಾರ್ ಎಂಬಾತ ಗಾಯಗೊಂಡಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಶ್ರೀಕೇಶ್ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ತುರ್ತು ವೈದ್ಯಕೀಯ ಅಧಿಕಾರಿ ಅವರನ್ನು ಪರೀಕ್ಷಿಸಿದ್ದಾರೆ. ಬಳಿಕ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ಸಂಬಂಧಿಕರಿಗೆ ಈ ಬಗ್ಗೆ ಮಾಹಿತಿ ಕೂಡ ನೀಡಲಾಗಿದೆ. ಮಾಹಿತಿ ನೀಡಿ 6 ಗಂಟೆ ಕಳೆದರೂ ಸಂಬಂಧಿಕರು ಆಸ್ಪತ್ರೆಗೆ ಬಾರದೆ ಇದ್ದುದರಿಂದ ಮೃತನನ್ನು ಆಸ್ಪತ್ರೆಯ ಶವಾಗಾರದ ಫ್ರೀಜರ್‌ನಲ್ಲಿ ಇಡಲಾಗಿದೆ. ನಂತರ ಶುಕ್ರವಾರ ಅವರನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಮೃತ ವ್ಯಕ್ತಿ ಎಚ್ಚರ
ಗುರುವಾರ ಮೃತಪಟ್ಟಿದ್ದಾನೆ ಎಂದು ಹೇಳಲಾದ ವ್ಯಕ್ತಿಯನ್ನು ಶುಕ್ರವಾರ ಮುಂಜಾನೆಯವರೆಗೆ ಶವಗಾರದಲ್ಲಿಡಲಾಗಿತ್ತು. ಮನೆಯವರು ಬರುವವರೆಗೂ ಶವಾಗಾರದ ಫ್ರೀಜರ್‌ನಲ್ಲಿ ಇಡಲಾಗಿದ್ದ ವ್ಯಕ್ತಿ ಮುಂಜಾನೆ ಜೀವಂತವಾಗಿರುವುದು ಕಂಡು ಬಂದಿದೆ. ಇದನ್ನು ಕಂಡು ವೈದ್ಯರೇ ಆಶ್ಚರ್ಯಗೊಂಡಿದ್ದಾರೆ.
ಶವಪರೀಕ್ಷೆಗಾಗಿ ಪೇಪರ್ ವರ್ಕ್ ಪ್ರಾರಂಭಿಸಲು ಪೊಲೀಸ್ ತಂಡ ಆಸ್ಪತ್ರೆಗೆ ಬರಬೇಕಿತ್ತು. ಇದಕ್ಕೆ ವ್ಯಕ್ತಿಯ ಕುಟುಂಬದ ಒಪ್ಪಿಗೆಯೋ ಬೇಕಿತ್ತು. ಅವರು ಮರುದಿನ ಬೆಳಿಗ್ಗೆ ಬಂದ ತಕ್ಷಣ ಶ್ರೀಕೇಶ್ ಜೀವಂತವಾಗಿದ್ದಾರೆಂದು ತಿಳಿದು ಬಂದಿದೆ. ಶ್ರೀಕೇಶ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರು ಇನ್ನೂ ಕೋಮಾದಲ್ಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಶ್ರೀಕೇಶನನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಇದು ಪವಾಡವಲ್ಲದೆ ಬೇರೇನೂ ಅಲ್ಲ. ಆದರೆ ಬದುಕಿದ್ದಾಗಲೂ ವೈದ್ಯರು ಹೇಗೆ ಸತ್ತರು ಎಂದು ಘೋಷಿಸಿದರು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ವೈದ್ಯರ ಸಮರ್ಥನೆ
ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ರಾಜೇಂದ್ರ ಕುಮಾರ್, ಶ್ರೀಕೇಶ್ ಕುಮಾರ್ ಅವರನ್ನು ಅಪಘಾತ ಸಂಭವಿಸಿದ ತಕ್ಷಣ ಆಸ್ಪತ್ರೆಗೆ ತರಲಾಗಿತ್ತು. ನಾವು ಅವರಿಗೆ ಕೂಡಲೇ ಚಿಕಿತ್ಸೆ ನೀಡಿದ್ದೇವೆ. ಚಿಕಿತ್ಸೆಗೂ ಅವರು ಸ್ಪಂದಿಸುತ್ತಿರಲಿಲ್ಲ. ಜೊತೆಗೆ ವ್ಯಕ್ತಿಯಲ್ಲಿ ಯಾವುದೇ ಜೀವಿತಾವಧಿಯ ಚಿಹ್ನೆಗಳು ಕಂಡುಬಂದಿಲ್ಲ. ಆದ್ದರಿಂದ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು. ಇದಾದ ನಂತರ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿ ಮೃತರನ್ನು ಆಸ್ಪತ್ರೆಯ ಶವಾಗಾರದ ಫ್ರೀಜರ್‌ನಲ್ಲಿ ಇಡಲಾಗಿದೆ. ಬೆಳಗ್ಗೆ ಆ ವ್ಯಕ್ತಿ ಇನ್ನೂ ಜೀವಂತವಾಗಿರುವುದು ಕಂಡು ಬಂದಿದೆ. ಅವರಿಗೆ ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಮೊರಾದಾಬಾದ್‌ನ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ ಶಿವ ಸಿಂಗ್, "ಡಾ ಮನೋಜ್ ಯಾದವ್ ತುರ್ತು ಕರ್ತವ್ಯದಲ್ಲಿದ್ದರು. ರಾತ್ರಿ ಶ್ರೀಕೇಶ್ ಎಂಬ ರೋಗಿ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ಬಂದಿದ್ದರು. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಆತನನ್ನು ನೋಡಲಾಗಿದೆ. ಅವರು (ತುರ್ತು ವೈದ್ಯರು) ರೋಗಿಯನ್ನು ಹಲವು ಬಾರಿ ಪರೀಕ್ಷಿಸಿದ್ದಾರೆ ಮತ್ತು ಹೃದಯ ಬಡಿತವನ್ನು ಕಂಡುಕೊಂಡಿಲ್ಲ. ಆದ್ದರಿಂದ ಅವರು ಸತ್ತಿದ್ದಾರೆ ಎಂದು ಘೋಷಿಸಿದ್ದಾರೆ. ಬೆಳಿಗ್ಗೆ ಪೊಲೀಸ್ ಮತ್ತು ಶ್ರೀಕೇಶ್ ಕುಟುಂಬವು ಅವನನ್ನು ಜೀವಂತವಾಗಿ ಕಂಡುಕೊಂಡರು. ಇದನ್ನು "ಅಪರೂಪದ ಪ್ರಕರಣಗಳು" ಎಂದು ಕರೆದ ಶಿವ ಸಿಂಗ್, "ಕೆಲವೊಮ್ಮೆ ಯಾರಾದರೂ ಸತ್ತಿದ್ದಾರೆ ಎಂದು ಘೋಷಿಸುವಲ್ಲಿ ಸಮಸ್ಯೆಗಳಾಗುತ್ತವೆ. ಉದಾಹರಣೆಗೆ, "ಕೆಲವರಲ್ಲಿ ಸಾವು ಇಲ್ಲದೆ ಅನೇಕ ಪ್ರಮುಖ ಅಂಗಗಳ ತಾತ್ಕಾಲಿಕ ನಿಲುಗಡೆ ಆಗಿರುತ್ತದೆ" ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಕೇಶ್ ಅವರ ಸೋದರ ಮಾವ ಕಿಶೋರಿ ಲಾಲ್, ಜಿಲ್ಲಾ ಆಸ್ಪತ್ರೆಯಲ್ಲಿ ತುರ್ತು ಕರ್ತವ್ಯದ ವೇಳೆ ವೈದ್ಯರು ಶ್ರೀಕೇಶ್ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. "ತುರ್ತು ಕರ್ತವ್ಯದಲ್ಲಿದ್ದ ವೈದ್ಯರು ತಪಾಸಣೆ ಮಾಡಿದರು, ಆದರೆ ಚಿಕಿತ್ಸೆ ನೀಡಲಿಲ್ಲ. ನಾಡಿಮಿಡಿತವಾಗಲೀ, ಬಿಪಿಯಾಗಲೀ (ರಕ್ತದೊತ್ತಡ) ಇಲ್ಲ ಅವರು ಸತ್ತಿದ್ದಾರೆ ಎಂದು ವೈದ್ಯರು ಹೇಳಿದರು. ಕರ್ತವ್ಯ ನಿರತ ವೈದ್ಯರ ನಿರ್ಲಕ್ಷ್ಯ ಹಾಗೂ ನಿರ್ಲಕ್ಷ್ಯವೇ ಇದಕ್ಕೆ ಕಾರಣ" ಕಿಶೋರಿ ಲಾಲ್ ಆರೋಪಿಸಿದರು.
uttar pradesh man dead doctor ಉತ್ತರ ಪ್ರದೇಶ ಸಾವು ವೈದ್ಯ
There was an incident where the man in the coffin was found alive in the early hours of the morning. A 45-year-old man who was injured in a road accident has been pronounced dead by doctors after an examination.
ಹೊಸ ವರ್ಷದ ಸಂಭ್ರಮ ಕಿತ್ತುಕೊಂಡ ಓಮ್ರಿಕಾನ್ ವೈರಸ್. ಸರ್ಕಾರದ ಗೈಡ್ ಲೈನ್ಸ್ನಲ್ಲಿ ಏನೇನಿದೆ? – ಅರಳಿ ಕಟ್ಟೆ
ಹೊಸ ವರ್ಷದ ಸಂಭ್ರಮ ಕಿತ್ತುಕೊಂಡ ಓಮ್ರಿಕಾನ್ ವೈರಸ್. ಸರ್ಕಾರದ ಗೈಡ್ ಲೈನ್ಸ್ನಲ್ಲಿ ಏನೇನಿದೆ?
ಕೊರೋನಾ ನಂತರ ರಾಜ್ಯದ ಜನರನ್ನು ಅತಿಯಾಗಿ ಹೆದರಿಸುತ್ತಿರೋದು ಮೂರನೇ ಅಲೆ ಎಂದೇ ಕರೆಸಿಕೊಳ್ಳುವ ಓಮ್ರಿಕಾನ್. ಇನ್ನೇನು ಲಾಕ್ ಡೌನ್ ಆಗಿಯೇ ಬಿಡುತ್ತದೆ. ಎಂದು ಯೋಚಿಸುವ ಹೊತ್ತಿಗಾಗಲೇ ಮುಖ್ಯಮಂತ್ರಿಗಳು ಯಾವುದೇ ಕಾರಣಕ್ಕೂ ಲಾಕ್‌ಡೌನ್ ಮಾಡುವುದಿಲ್ಲ. ಅಂತ ಘೋಷಿಸಿಯೇ ಬಿಟ್ಟಿದ್ದರು. ಇದರ ಬೆನ್ನಲ್ಲೇ ಇದೀಗ ಹೊಸ ವರ್ಷದ ಸಂಭ್ರಮದಲ್ಲಿದ್ದ ರಾಜ್ಯದ ಜನರಿಗೆ ಸರ್ಕಾರ ಶಾಕ್ ಕೊಟ್ಟಿದೆ. ಅಂದ್ಹಾಗೆ ಸರ್ಕಾರ ಹೊಸ ವರ್ಷದ ಅದ್ದೂರಿ ಆಚರಣೆಗೆ ಕಡಿವಾಣ ಹಾಕಿ ಗೈಡ್ ಲೈನ್ ತಂದಿದೆ. ಬೆಳಗಾವಿ ಸದನದಲ್ಲಿ ಸಿಎಂ ಬೊಮ್ಮಾಯಿ ಮತ್ತು ಸಚಿವ ಸುಧಾಕರ್ ಈ ಘೋಷಣೆ ಹೊರಡಿಸಿ ಮಾರ್ಗಸೂಚಿಗಳನ್ನು ಹಾಕಿದ್ದಾರೆ. ಸರ್ಕಾರದ ಈ ಮಾರ್ಗಸೂಚಿಯಲ್ಲಿ ಏನೇನಿದೆ ನೋಡೋಣ ಬನ್ನಿ.
ಹೊಸ ಮಾರ್ಗಸೂಚಿಗಳು :
1. ಹೊಸ ಮರ್ಗಸೂಚಿಯನ್ನು ಡಿಸೆಂಬರ್ 30ರಿಂದ ಜನವರಿ 2ನೇ ತಾರೀಖಿನವರೆಗೆ ಹೊರಡಿಸಲಾಗಿದೆ.
2. ಬಹಿರಂಗ ಸಂಭ್ರಮಾಚರಣೆಗೆ ನಿರ್ಬಂಧ ಹೇರಲಾಗಿದೆ. ಮನೆಯಿಂದ ಹೊರಗಡೆ ಗುಂಪು ಗುಂಪಾಗಿ ಸೇರಿ ನ್ಯೂ ಇಯರ್ ಸೆಲೆಬ್ರೆಷನ್ ಮಾಡುವಂತಿಲ್ಲ.
3. 4 ದಿನಗಳು ಅಂದರೆ ಡಿ.3೦ರಿಂದ ಜ.2ರವರೆಗೆ ಡಿಜೆಗೆ ರಾಜ್ಯದ್ಯಾಂತ ಅವಕಾಶ ಇಲ್ಲ.
4. ಹೊಸ ವರ್ಷದ ಆಚರಣೆಗೆ ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳಲ್ಲಿ ಯಾವುದೇ ಸಂಭ್ರಮಾಚರಣೆಗೆ ಅವಕಾಶ ಇಲ್ಲ.
5. ಬಾರ್ ಮತ್ತು ರೆಸ್ಟೋರೆಂಟ್ ನಲ್ಲಿ 5೦% ಜನರಿಗೆ ಮಾತ್ರ ಅವಕಾಶ ನೀಡಲಾಗಿದ್ದು ಹೆಚ್ಚಿನ ಜನ ಸೇರುವಂತಿಲ್ಲ. ಹಾಗೂ ಸಿಬ್ಬಂದಿಗಳು ಎರಡು ಡೋಸ್ ಲಸಿಕೆ ಪಡೆದಿರುವುದು ಕಡ್ಡಾಯ.
6. ಕ್ರಿಸ್‌ಮಸ್ ಆಚರಣೆಗೆ ಯಾವುದೇ ನಿಷೇಧ ಹೇರಲಾಗಿಲ್ಲ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಕೆ. ಸುಧಾಕರ್ ಇಲಾಖೆಯ ಅಧಿಕಾರಿಗಳು ಹಾಗೂ ತಜ್ಞರ ಸಲಹೆಯಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಓಮ್ರಿಕಾನ್ ಬೇರೆ ಬೇರೆ ದೇಶಗಳಲ್ಲಿ ವೇಗವಾಗಿ ಹರಡುತ್ತಿದೆ. ಹಾಗಾಗಿ ಹೆಚ್ಚಿನ ಜನ ಸೇರುವ ಹೊಸ ವರ್ಷದ ಆಚರಣೆಗೆ ನಿರ್ಬಂಧ ಹೇರಲಾಗಿದೆ ಎಂದರು.
ಓಮಿಕ್ರಾನ್ ಸೋಂಕಿನ ಲಕ್ಷಣಗಳೇನು?
ಗಂಟಲು ಕೆರೆತ, ವಿಪರೀತ ಸುಸ್ತು, ಲಘು ಜ್ವರ ಇವು ಈ ಓಮಿಕ್ರಾನ್‌ನ ಕೆಲವು ಲಕ್ಷಣಗಳಾಗಿವೆ. ಬೇರೆ ಬೇರೆ ದೇಶಗಲಲ್ಲಿ ವೇಗವಾಗಿ ಹರಡುತ್ತಿರುವ ಈ ವೈರಸ್ ಅನ್ನು ಕೊರೋನಾ ರೂಪಾಂತರಿ ವೈರಸ್ ಎಂದು ಕರೆಯಲಾಗುತ್ತದೆ.
ದೇಶದಲ್ಲಿ ಪತ್ತೆಯಾದ ಒಮಿಕ್ರಾನ್ ಕೊರೋನಾ ವೈರಸ್ ರೂಪಾಂತರದ ಒಟ್ಟು19 ಪ್ರಕರಣಗಳಲ್ಲಿ 16 ಪ್ರಕರಣಗಳು ಯಾವುದೇ ಓಮ್ರಿಕಾನ್ ಲಕ್ಷಣ ರಹಿತವಾಗಿವೆ ಎಂದು ಹಿರಿಯ ಆರೋಗ್ಯ ಅಧಿಕಾರಿಯೊಬ್ಬರು ಮಂಗಳವಾರ ಹೇಳಿಕೆ ನೀಡಿದ್ದಾರೆ.
ಕೋವಿಡ್-19 ರೂಪಾಂತರ ಓಮಿಕ್ರಾನ್ ಸೋಂಕಿನ ಮುಖ್ಯ ಲಕ್ಷಣಗಳು:
1. ಗಂಟಲು ಕೆರೆತ
2. ಮೈ-ಕೈ ನೋವು, ತಲೆನೋವು, ಆಯಾಸ,
3. ಹೆಚ್ಚಿನ ತಾಪಮಾನ
4. ಹೊಸ, ನಿರಂತರ ಕೆಮ್ಮು
5. ನಿಮ್ಮ ವಾಸನೆ ಅಥವಾ ರುಚಿಯ ಗ್ರಹಿಕೆ ನಷ್ಟ
ಕೊರೊನಾ ಮೊದಲ ಬಲಿ ಕರ್ನಾಟಕ, ಕೇರಳದಲ್ಲಿ ದೇಶದ ಮೊದಲ ಕೊರೊನಾ ಸೋಂಕು ಪತ್ತೆಯಾದರೆ, ರಾಜ್ಯದ ಕಲಬುರಗಿಯ ವ್ಯಕ್ತಿ ದೇಶದಲ್ಲೇ ಕೊರೊನಾಗೆ ಬಲಿಯಾದ ಮೊದಲನೆಯವರಾಗಿದ್ದರು. ಕೊರೊನಾದ ಅಪಾಯಕಾರಿ ರೂಪಾಂತರವಾದ ಓಮಿಕ್ರಾನ್ ಕರ್ನಾಟಕದಲ್ಲೇ ಮೊದಲು ಪತ್ತೆಯಾಗಿ ಕನ್ನಡಿಗರಲ್ಲಿ ಆತಂಕ ಮೂಡಿಸಿತ್ತು.
ಪ್ರೈವೇಟ್ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆಗೆ ದರ ನಿಗದಿ | ರಾಜ್ಯ ಸರ್ಕಾರದಿಂದ ದರ ಪಟ್ಟಿ ಪ್ರಕಟ - Hosakananda
ಪ್ರೈವೇಟ್ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆಗೆ ದರ ನಿಗದಿ | ರಾಜ್ಯ ಸರ್ಕಾರದಿಂದ ದರ ಪಟ್ಟಿ ಪ್ರಕಟ
ರಾಜ್ಯದಲ್ಲಿ ಮತ್ತು ಇಡೀ ದೇಶದಲ್ಲಿ ಕೋರೋನಾ ಅಬ್ಬರ
ಜೋರಾಗಿದೆ. ಕೊರೋನಾ 2ನೇ ಅಲೆಯ ಅಬ್ಬರದಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಕೊರೋನಾ ಹೊಸ ಪ್ರಕರಣಗಳ ಸಂಖ್ಯೆ ಕೂಡ ಏರಿಕೆಯಾಗಿದೆ. ಹೀಗಾಗಿ ಕೊರೋನಾ ಸೋಂಕಿತರು ಚಿಕಿತ್ಸೆಗಾಗಿ ಪರದಾಡುವಂತ ಪರಿಸ್ಥಿತಿ, ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಚಿಕಿತ್ಸಾ ದರ ವಸೂಲಿಯಂತ ಸಮಸ್ಯೆ ಎದುರಿಸುವಂತಾಗಿದೆ.
ಇದನ್ನು ಮನಗಂಡ ಕರ್ನಾಟಕದ ರಾಜ್ಯ ಸರ್ಕಾರ ಇದಕ್ಕೆ ಬ್ರೇಕ್ ಹಾಕಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ದರವನ್ನು ಫಿಕ್ಸ್ ಮಾಡಿದೆ. ರಾಜ್ಯ ಸರ್ಕಾರ ನಿಗದಿ ಪಡಿಸಿರುವಂತ ದರದಂತೆ ಚಿಕಿತ್ಸಾ ವೆಚ್ಚ ಪಡೆಯುವಂತೆಯೂ ಸೂಚಿಸಲಾಗಿದೆ.
ಈ ಕುರಿತಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಕಳೆದ ಜೂನ್ ನಲ್ಲಿ ಹೊರಡಿಸಿದ್ದ ಆದೇಶವನ್ನು ಮರು ಜಾರಿಗೊಳಿಸಿದ್ದು, ಸರ್ಕಾರದಿಂದ ಖಾಸಗಿ ಆಸ್ಪತ್ರೆಗೆ ಶಿಫಾರಸು ಆಗಿರುವ ರೋಗಿಗಳಿಗೆ ದಿನಕ್ಕೆ ಗರಿಷ್ಠ 10 ಸಾವಿರ ರೂ.ಚಿಕಿತ್ಸಾ ದರ ನಿಗದಿ ಮಾಡಿದೆ. ಈ ವೆಚ್ಚವನ್ನು ಸರ್ಕಾರವೇ ಭರಿಸಲಿದೆ.
ನೇರವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವವರಿಗೆ ದಿನಕ್ಕೆ ಗರಿಷ್ಠ 25 ಸಾವಿರ ರೂ. ಚಿಕಿತ್ಸೆ ವೆಚ್ಚ ನಿಗದಿಪಡಿಸಲಾಗಿದೆ. ಈ ಹಿಂದಿನ ಆದೇಶಕ್ಕೂ ಹೊಸ ಆದೇಶದಕ್ಕೂ ಚಿಕಿತ್ಸಾ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಖಾಸಗಿ ಆಸ್ಪತ್ರೆಯಲ್ಲಿ ಜನರಲ್ ವಾರ್ಡ್ ಗೆ ಪ್ರತಿದಿನ 5,200 ರೂ., ಆಮ್ಲಜನಕ ವ್ಯವಸ್ಥೆಯುಳ್ಳ ವಾರ್ಡ್ ಗೆ ಪ್ರತಿದಿನ 7 ಸಾವಿರ ರೂ., ತೀವ್ರ ನಿಗಾ ವಿಭಾಗದ ವಾರ್ಡ್ ಗೆ 8,500 ರೂ., ಐಸಿಯು ಜೊತೆಗೆ ವೆಂಟಿಲೇಟರ್ ವಾರ್ಡ್ ಗೆ 10 ಸಾವಿರ ರೂ. ನಿಗದಿ ಮಾಡಲಾಗಿದೆ.
ನೇರವಾಗಿ ಖಾಸಗಿ ಆಸ್ಪತ್ರೆಗೆ ತೆರಳಿದವರಿಗೆ ಹಾಗೆಯೇ ನಗದು ಅಥವಾ ವಿಮಾ ಯೋಜನೆ ಹೊಂದಿರುವವರಿಗೆ ಜನರಲ್ ವಾರ್ಡ್ ಗೆ 10 ಸಾವಿರ ರೂ., ಆಕ್ಸಿಜನ್ ವ್ಯವಸ್ಥೆಯುಳ್ಳ ವಾರ್ಡ್ 12 ಸಾವಿರ ರೂ., ಐಸಿಯು ವಾರ್ಡ ಗೆ 15 ಸಾವಿರ ರೂ., ಐಸಿಯು ಮತ್ತು ವೆಂಟಿಲೇಟರ್ ಹೊಂದಿರುವ ವಾರ್ಡ್ ಗೆ 25 ಸಾವಿರ ರೂ.ಗಳನ್ನು ಸರ್ಕಾರ ನಿಗದಿ ಪಡಿಸಲಾಗಿದೆ.
ಈಶ್ವರಪ್ಪ ಹೇಳಿಕೆಯನ್ನು ಖಂಡಿಸಿ ಪ್ರತಿಭಟನೆ | Kannadamma
Home ಕಾರವಾರ ಹಳಿಯಾಳ ಈಶ್ವರಪ್ಪ ಹೇಳಿಕೆಯನ್ನು ಖಂಡಿಸಿ ಪ್ರತಿಭಟನೆ
ಈಶ್ವರಪ್ಪ ಹೇಳಿಕೆಯನ್ನು ಖಂಡಿಸಿ ಪ್ರತಿಭಟನೆ
ಹಳಿಯಾಳ,23: ರಾಷ್ಟ್ರದ್ರೋಹಿ ಮುಸ್ಲಿಂರು ಎಂದು ಆಕ್ಷೇಪಾರ್ಹ ಹೇಳಿಕೆ ನೀಡಿದ ವಿಧಾನ ಪರಿಷತ್ ನಾಯಕ ಕೆ.ಎಸ್. ಈಶ್ವರಪ್ಪ ಅವರ ಹೇಳಿಕೆಯನ್ನು ಖಂಡಿಸಿ ಸೋಮವಾರ ಹಳಿಯಾಳದಲ್ಲಿ ನೂರಾರು ಸಂಖ್ಯೆಯ ಮುಸಲ್ಮಾನ ಸಮುದಾಯದವರು ಪ್ರತಿಭಟನೆ ನಡೆಸಿದರು.
ಶಿವಾಜಿ ವೃತ್ತದಲ್ಲಿ ಸ್ವಲ್ಪಕಾಲ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು `ಭಾರತ ಮಾತಾಕಿ ಜೈ', `ಈಶ್ವರಪ್ಪಗೆ ಧಿಕ್ಕಾರ' ಎಂಬ ಘೋಷಣೆಗಳನ್ನು ಹಾಕಿದರು. ಕರ್ನಾಟಕ ಸರಕಾರವು ರಾಷ್ಟ್ರದ್ರೋಹಿ ಮುಸ್ಲಿಂರಿಗೆ ರಕ್ಷಣೆ ನೀಡುತ್ತಿದೆ ಎಂದು ಈಶ್ವರಪ್ಪನವರು ನೀಡಿದ ಹೇಳಿಕೆಯಲ್ಲಿ `ರಾಷ್ಟ್ರದ್ರೋಹಿ ಮುಸ್ಲಿಂರು' ಎಂಬ ಶಬ್ದ ಬಳಕೆಯಿಂದ ನಮ್ಮ ಭಾವನೆಗಳಿಗೆ ಧಕ್ಕೆಯುಂಟಾಗಿದೆ ಎಂದು ಹೇಳಿದ ಪ್ರತಿಭಟನಾಕಾರರು ಈಶ್ವರಪ್ಪನವರು ತಮ್ಮ ಹೇಳಿಕೆಯನ್ನು ಹಿಂಪಡೆದು ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. ಬಿಜೆಪಿಯಂತಹ ಒಳ್ಳೆಯ ಪಕ್ಷದಲ್ಲಿರುವ ಈಶ್ವರಪ್ಪರಂತಹ ಬೆರಳೆಣಿಕೆಯಷ್ಟಿರುವ ಮುಖಂಡರನ್ನು ಬಿಜೆಪಿ ವರಿಷ್ಠರು ತಮ್ಮ ಪಕ್ಷದಿಂದ ತೆಗೆದುಹಾಕಿ ಪಕ್ಷವನ್ನು ಸ್ವಚ್ಛಗೊಳಿಸಬೇಕು. ಈ ರೀತಿ ಹೇಳಿಕೆ ನೀಡದಂತೆ ಮಾನ್ಯ ರಾಜ್ಯಪಾಲರು ಈಶ್ವರಪ್ಪನನ್ನು ಸೂಚಿಸಬೇಕು. ಇಲ್ಲದಿದ್ದರೆ ಇದೇ ರೀತಿ ತಮ್ಮ ಹೇಳಿಕೆ ಮುಂದುವರೆಸಿದರೆ ಅವರನ್ನು ವಿಧಾನ ಪರಿಷತ್ ಪ್ರತಿಪಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಲಾಯಿತು.
ಭಾರತವು ಜಾತ್ಯತೀತ ರಾಷ್ಟ್ರವಾಗಿದ್ದು, ಇಲ್ಲಿನ ಮುಸಲ್ಮಾನರು ಇಲ್ಲಿಯೇ ಹುಟ್ಟಿ, ಇಲ್ಲಿಯೇ ಬೆಳೆದು ಜೀವನಪರ್ಯಂತ ಇಲ್ಲಿಯೇ ಇರುತ್ತಾರೆ. ಭಾರತದ ಗೌರವಕ್ಕಾಗಿ ನಮ್ಮ ಪ್ರಾಣವನ್ನಾದರೂ ಕೊಡಲು ಸಿದ್ಧರಿರುತ್ತಾರೆ ಎಂದು ರಾಜ್ಯಪಾಲರಿಗೆ ಬರೆದ ಮನವಿಪತ್ರದಲ್ಲಿ ಒತ್ತಾಯಿಸಲಾಗಿದೆ. ಇಸ್ಲಾಂ ಧರ್ಮದಲ್ಲಿ ಭಯೋತ್ಪಾದನೆ, ದೇಶದ್ರೋಹಿಗಳಿಗೆ ಅವಕಾಶವಿಲ್ಲ. ಕೆಲ ಮುಸಲ್ಮಾನರು ಮಾಡಿದ ತಪ್ಪಿಗೆ ಎಲ್ಲಾ ಮುಸಲ್ಮಾನರನ್ನು ದೂಷಿಸಕೂಡದು ಎಂದು ತಹಶೀಲ್ದಾರ ವಿದ್ಯಾಧರ ಗುಳಗುಳಿ ಅವರಿಗೆ ನೀಡಿದ ಪತ್ರದಲ್ಲಿ ವಿನಂತಿಸಲಾಗಿದೆ.
ಅಂಜುಮನ್ ಸಂಸ್ಥೆಯ ಮುಖ್ಯಸ್ಥ ಎಲ್.ಎಸ್. ದಲಾಲ, ಫಯಾಜ ಮುಖ್ತಿ, ಮುಸ್ತಾಕ ಮುಖ್ತಿ ಇವರುಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಮುಖರಾದ ಎಂ.ಎಂ. ದೊಡ್ಡವಾಡ, ಮಕ್ಬುಲಸಾಬ, ಅಹ್ಮದಸಾಬ ಮನಿಯಾರ, ಅಲ್ಲಿಸಾಬ ಕಾಕರ, ಅಲ್ತಾಫ್ ಅಂಕೋಲೆಕರ, ಖಾಕೇಶಾ ಮಕಾನದಾರ, ಹಕೀಮಸಾಬ, ಜಹಾಂಗೀರ ದಲಾಲ, ರಾಜು ಮುಲ್ಲಾ, ಫಾರೂಕ ಬಾಳೇಕುಂದ್ರಿ, ಸಿರಾಜ್ ಮುನವಳ್ಳಿ ಮೊದಲಾದವರು ನೇತೃತ್ವ ವಹಿಸಿದ್ದರು.
ಮತ್ತೊಮ್ಮೆ 'ಅಪ್ಪು' ಮೇಲಿನ ಅಭಿಮಾನ ಮೆರೆದ ಮಂಗಳೂರು ಪೊಲೀಸ್ ಕಮಿಷನರ್‌ | Vartha Bharati- ವಾರ್ತಾ ಭಾರತಿ
ವಾರ್ತಾ ಭಾರತಿ Dec 08, 2021, 4:04 PM IST
ಮಂಗಳೂರು, ಡಿ.8: ನಟ ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿರುವ ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಮ್ಮ ಅಭಿಮಾನವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ತಮ್ಮ ಮನೆಯಲ್ಲಿ ಸಾಕಿದ 'ಭವಾನಿ' ಹೆಸರಿನ ಹಸು ಹಾಕಿರುವ ಗಂಡು ಕರುವಿಗೆ 'ಅಪ್ಪು' ಎಂದು ನಾಮಕರಣ ಮಾಡಿದ್ದಾರೆ.
ಕೃಷಿ ಬಗ್ಗೆ ಅಪಾರ ಒಲವು, ಆಸಕ್ತಿಯನ್ನು ಹೊಂದಿರುವ ಕಮಿಷನರ್ ಶಶಿಕುಮಾರ್ ಪಾಂಡೇಶ್ವರದಲ್ಲಿ ತಾವು ವಾಸವಿರುವ ಪೊಲೀಸ್ ಕಮಿಷನರ್ ಬಂಗ್ಲೆಯಲ್ಲಿ 2 ಹಸುಗಳನ್ನು ಅವುಗಳ ಕರುಗಳೊಂದಿಗೆ ಸಾಕಿ ಸಲಹುತ್ತಿದ್ದಾರೆ. ಸಮಯ ಸಿಕ್ಕಾಗಲೆಲ್ಲಾ ಖುದ್ದು ತಾವೇ ಆರೈಕೆ, ಪಾಲನೆ ಮಾಡುತ್ತಿರುವ ಶಶಿಕುಮಾರ್ ಖರೀದಿಸಿ ತಂದಿದ್ದ ಗಿಡ್ಡ ತಳಿಯ ಗರ್ಭಿಣಿ ಹಸು 'ಭವಾನಿ' ಡಿ. 4ರಂದು ಗಂಡು ಕರುವಿಗೆ ಜನ್ಮ ನೀಡಿತ್ತು.ಈ ಬಗ್ಗೆ ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಡಿ.6ರಂದು ಮುದ್ದಾದ ಬಿಳಿ ಕಂದು ಬಣ್ಣದ 'ಅಪ್ಪು' ಜತೆಗಿನ ಫೋಟೋವನ್ನು ಹಂಚಿಕೊಂಡಿರುವ ಅವರು, 'ನಮ್ಮ ಮನೆಯ ಹೊಸ ಸದಸ್ಯ ಅಪ್ಪು' ಎಂದು ಬರೆದುಕೊಂಡಿದ್ದಾರೆ.
ತಾವು ಹೋದಲ್ಲೆಲ್ಲಾ ಜನರ ಜತೆ ಸ್ನೇಹದಿಂದ ಬೆರೆಯುವ ಪೊಲೀಸ್ ಕಮಿಷನರ್ ಶಶಿಕುಮಾರ್ ಸ್ನೇಹಜೀವಿ ಮಾತ್ರವಲ್ಲದೆ, ಪ್ರಾಣಿಗಳ ಬಗ್ಗೆಯೂ ಅಪಾರ ಕಾಳಜಿ, ಪ್ರೀತಿ ಹೊಂದಿರುವವರು. ತಮ್ಮ ಕರ್ತವ್ಯದ ಸಂದರ್ಭ ರಸ್ತೆಯಲ್ಲಿ ಓಡಾಡುವಾಗ ಬೀದಿ ನಾಯಿಗಳನ್ನು ಕಂಡರೂ ಮೈದಡವಿ ಅಕ್ಕರೆ ತೋರಿಸುವ ಅವರು, ಇತ್ತೀಚೆಗೆ ಮಂಗಳೂರು ಪೊಲೀಸ್ ಶ್ವಾನದಳ ವಿಭಾಗಕ್ಕೆ 'ಜೂಲಿ' ಹೆಸರಿನ ಶ್ವಾನದ ಮರಿಯೊಂದು ಸೇರ್ಪಡೆಗೊಂಡಾಗಲೂ ಅದರೊಂದಿಗಿನ ಫೋಟೋವನ್ನು ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದರು.
ಪುನೀತ್ ರಾಜ್ ಕುಮಾರ್ (ಅಪ್ಪು) ಅವರ ಅಪ್ಪಟ ಅಭಿಮಾನಿಯಾಗಿರುವ ಶಶಿಕುಮಾರ್, ಅಪ್ಪು ಅಸ್ವಸ್ಥಗೊಂಡು ಆಸ್ಪತ್ರೆಗೆ ಸೇರಿದ ಸಂದರ್ಭದಲ್ಲೇ ಮಂಗಳೂರು ಜನತೆಗೆ ವೀಡಿಯೋ ಸಂದೇಶದ ಮೂಲಕ ಆರೋಗ್ಯಕ್ಕಾಗಿ ಪ್ರಾರ್ಥಿಸುವಂತೆ ಮನವಿ ಮಾಡಿದ್ದರು. ನಿಧನದ ಬಳಿಕ 'ಅಪ್ಪು ನಮ್ಮೆಲ್ಲರಿಗಾಗಿ ಮತ್ತೊಮ್ಮೆ ಹುಟ್ಟಿ ಬಾ' ಎಂಬ ಅಭಿಮಾನದ ನುಡಿ ನಮನದೊಂದಿಗೆ, ನಟನೆಯ ಜತೆಯಲ್ಲೇ ತನ್ನ ವ್ಯಕ್ತಿತ್ವದಿಂದ ಎಲ್ಲರಿಗೂ ಸ್ಫೂರ್ತಿಯಾಗಿದ್ದ ಅಪ್ಪುಗೆ ಪದ್ಮಶ್ರೀ ನೀಡಬೇಕೆಂದು ಅಭಿಯಾನವನ್ನು ಮಾಡಿದ್ದರು. ಹಾಡು ಹೇಳುವ ಹವ್ಯಾಸವನ್ನು ಇಟ್ಟುಕೊಂಡಿರುವ ಕಮಿಷನರ್ ಶಶಿಕುಮಾರ್ ಅಪ್ಪು ನಿಧನದ ಬಳಿಕ ನಗರದ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಪ್ಪು ನಟನೆಯ 'ಬೊಂಬೆ ಹೇಳುತೈತೆ' ಹಾಡು ಹಾಡಿದ್ದರು. ಮಾತ್ರವಲ್ಲದೆ ಅಪ್ಪುವಿಗೆ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂಬ ತಮ್ಮ ಅಭಿಯಾನದ ಅಂಗವಾಗಿ ಸಾಮಾಜಿಕ ಜಾಲತಾಣದಲ್ಲಿ ಅಪ್ಪು ನಟನೆಯ ಚಲನಚಿತ್ರಗಳ ಹಾಡಾದ 'ಏನಿದು ಈ ದಿನ' ಹಾಡು ಅಪ್ಪುವಿನ ಇಷ್ಟವಾದ ಹಾಡಾದ 'ಮೈ ಶಾಯರ್ ತೊ ನಹೀಂ' ಮೊದಲಾದ ಹಾಡುಗಳನ್ನು ಹಾಡುವ ಮೂಲಕ ಗಾನ ನಮನವನ್ನು ಸಲ್ಲಿಸುತ್ತಾ ಬಂದಿದ್ದಾರೆ.
ಮನೆಯಲ್ಲಿ ತಾವೇ ಬಿಡುವಿದ್ದಾಗ ಅಡುಗೆ ಮಾಡುವ ಹವ್ಯಾಸವನ್ನೂ ಹೊಂದಿರುವ ಅವರು, ಮನೆಗೆ ಬಂದ ಸ್ನೇಹಿತರಿಗೆ ಊಟವನ್ನೂ ತಾವೇ ಖುದ್ದು ಬಡಿಸುತ್ತಾರೆ. ತಾವು ಹೋದಲ್ಲೆಲ್ಲಾ ಅಲ್ಲಿನ ಜನರ ಆಚಾರ ವಿಚಾರ, ಸಂಸ್ಕೃತಿ, ಅಲ್ಲಿನ ವಿಶೇಷತೆಗಳನ್ನು ಕಲಿತು ಜನರ ಜತೆ ಬೆರೆಯುವ ಶಶಿಕುಮಾರ್ ಇತ್ತೀಚೆಗೆ ಕಟೀಲು ಸಮೀಪದ ಎಕ್ಕಾರಿನಲ್ಲಿ ನಡೆದ ಕೆಸರುಗದ್ದೆಯಲ್ಲಿ ತಮ್ಮ ಸ್ನೇಹಿತರು, ಕುಟುಂಬ ಸದಸ್ಯರ ಜತೆ ಭಾಗವಹಿಸಿ ಸಂಭ್ರಮಿಸಿದ್ದರು.
ಹಿಂದಿಯಲ್ಲಿ ಇತಿಹಾಸ ನಿರ್ಮಿಸಿದ ಯಶ್ 'ಕೆಜಿಎಫ್'.! | Kgf hindi movie released in 1500 screens - Kannada Filmibeat
10 min ago ಪ್ರಭಾಸ್ ಹುಟ್ಟುಹಬ್ಬಕ್ಕೆ ಫ್ಲೆಕ್ಸ್ ಕಟ್ಟಲು ಹೋಗಿ ಅಭಿಮಾನಿ ಸಾವು