text
stringlengths
0
61.5k
26 min ago ಯಶ್ ಅಭಿಮಾನಿಗಳಿಗೆ ಸಂತಸದ ಸುದ್ದಿ: ದಸರಾ ಹಬ್ಬಕ್ಕೆ KGF-1 ರೀ-ರಿಲೀಸ್
57 min ago ವಿಜಯ್ ರಾಘವೇಂದ್ರ ನಟನೆಯ 50ನೇ ಚಿತ್ರದ ಹೆಸರೇನು?
ಹಿಂದಿಯಲ್ಲಿ ಇತಿಹಾಸ ನಿರ್ಮಿಸಿದ ಯಶ್ 'ಕೆಜಿಎಫ್'.!
| Updated: Friday, December 21, 2018, 18:50 [IST]
KGF Kannada Movie: ಹಿಂದಿಯಲ್ಲಿ ಇತಿಹಾಸ ನಿರ್ಮಿಸಿದ ಯಶ್ 'ಕೆಜಿಎಫ್'.! | FILMIBEAT KANNADA
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಜಗತ್ತಿನಾದ್ಯಂತ ಬಿಡುಗಡೆಯಾಗಿದ್ದು, ಎಲ್ಲೆಡೆ ಭಾರಿ ಮೆಚ್ಚುಗೆ ಗಳಿಸಿಕೊಂಡಿದೆ. ಐದು ಭಾಷೆಯಲ್ಲಿ ತೆರೆಕಂಡಿದ್ದ ಸಿನಿಮಾ, ಸುಮಾರು 2 ಸಾವಿರ ಸ್ಕ್ರೀನ್ ನಲ್ಲಿ ರಿಲೀಸ್ ಆಗಿದೆ ಎನ್ನಲಾಗಿತ್ತು. ಆದ್ರೆ, ನಿಖರವಾದ ಮಾಹಿತಿ ಸಿಕ್ಕಿರಲಿಲ್ಲ.
ಇದೀಗ, ಕೆಜಿಎಫ್ ಚಿತ್ರಮಂದಿರಗಳ ಬಗ್ಗೆ ಸ್ಪಷ್ಟನೆ ಸಿಕ್ಕಿದೆ. ಬಾಲಿವುಡ್ ಖ್ಯಾತ ವಿಮರ್ಶಕ ತರಣ್ ಆದರ್ಶ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಹಿಂದಿಯಲ್ಲಿ ಮಾತ್ರ 1500 ಸ್ಕ್ರೀನ್ ಲ್ಲಿ ಕೆಜಿಎಫ್ ರಿಲೀಸ್ ಆಗಿದೆಯಂತೆ.
ಕೆ.ಜಿ.ಎಫ್ ಚೆನ್ನಾಗಿದ್ಯಾ? : ಫಿಲ್ಮಿಬೀಟ್ ಪೋಲ್ ನಲ್ಲಿ ಪ್ರೇಕ್ಷಕ ಹೇಳಿದ್ದೇನು?
ಅಲ್ಲಿಗೆ, ಕೆಜಿಎಫ್ ಸಿನಿಮಾ ಹಿಂದಿಯಲ್ಲೇ ದಾಖಲೆ ಬರೆದಿದೆ. ಇದರ ಜೊತೆಗೆ ಕನ್ನಡದಲ್ಲಿ 400, ತೆಲುಗಿನಲ್ಲಿ 400, ತಮಿಳಿನಲ್ಲಿ 100 ಹಾಗೂ ಮಲಯಾಳಂ ಭಾಷೆಯಲ್ಲಿ 60 ಸ್ಕ್ರೀನ್ ಗಳಲ್ಲಿ ಸೇರಿದಂತೆ ಒಟ್ಟು 2460 ಸ್ಕ್ರೀನ್ ಗಳಲ್ಲಿ ಕೆಜಿಎಫ್ ಸಿನಿಮಾ ತೆರೆಗೆ ಬಂದಿದೆಯಂತೆ.
ಹಿಂದಿಯಲ್ಲಿ ಎಷ್ಟು ಗಳಿಸಬಹುದು?
ಇಷ್ಟು ದೊಡ್ಡ ರಿಲೀಸ್ ಕಂಡಿರುವ ಕೆಜಿಎಫ್ ಮೊದಲ ದಿನದ ಕಲೆಕ್ಷನ್ ನಲ್ಲಿ ಭಾರಿ ದಾಖಲೆ ನಿರ್ಮಿಸುವ ಸಾಧ್ಯತೆ ಇದೆಯಂತೆ. ಹೆಚ್ಚು ಚಿತ್ರಮಂದಿರದಲ್ಲಿ ತೆರೆಕಾಣುತ್ತಿರುವುದರಿಂದ ಮೊದಲ ದಿನ ದೊಡ್ಡ ಮಟ್ಟದ ಕಲೆಕ್ಷನ್ ಮಾಡಬಹುದು ಎಂಬ ನಿರೀಕ್ಷೆ ಇದೆ.
ವಾರಾಂತ್ಯಕ್ಕೆ ಎಷ್ಟಿರಬಹುದು?
ಮೊದಲ ವಾರಾಂತ್ಯಕ್ಕೆ ಕೆಜಿಎಫ್ ಹಿಂದಿ ವರ್ಷನ್ ಸಿನಿಮಾ 10 ಕೋಟಿಗೂ ಅಧಿಕ ಕೆಲಕ್ಷನ್ ಮಾಡುವ ಸಾಧ್ಯತೆ ಇದೆಯಂತೆ. ಜೀರೋ ಚಿತ್ರದ ರಿವ್ಯೂ ಕಳಪೆಯಾಗಿರುವುದರಿಂದ ಕೆಜಿಎಫ್ ಗೆ ಸಹಾಯವಾಗಬಹುದು ಎಂಬ ಮಾತಿದೆ.
ಕರ್ನಾಟಕದಲ್ಲೇ ಕೆಜಿಎಫ್ ರೆಕಾರ್ಡ್
ಹಾಗ್ನೋಡಿದ್ರೆ, ಕರ್ನಾಟಕದಲ್ಲೇ ಕೆಜಿಎಫ್ ಸಿನಿಮಾದ ಗಳಿಕೆ ಹೆಚ್ಚು ಬರಲಿದೆ ಎಂಬ ಮಾತು ಕೇಳಿಬರುತ್ತಿದೆ. ಹೆಚ್ಚು ಕಡಿಮೆ ಕರ್ನಾಟಕದಲ್ಲಿ 20 ಕೋಟಿವರೆಗೂ ಮೊದಲ ದಿನ ಗಳಿಕೆ ಕಾಣಬಹುದು ಎಂಬ ಲೆಕ್ಕಾಚಾರ ನಡೆಯುತ್ತಿದೆ.
ಎಲ್ಲಾ ಭಾಷೆಗಳಲ್ಲೂ ಪ್ರಶಂಸೆ
ಕೆಜಿಎಫ್ ಚಿತ್ರಕ್ಕೆ ಎಲ್ಲಾ ಭಾಷೆಯಲ್ಲೂ ಒಳ್ಳೆಯ ರಿವ್ಯೂ ಬಂದಿದೆ. ಕನ್ನಡ ನಟ ಹಾಗೂ ಕನ್ನಡ ಸಿನಿಮಾವನ್ನ ಎರಡು ಕೈಗಳಿಂದ ಅಪ್ಪಿಕೊಂಡಿದ್ದಾರೆ. ಕನ್ನಡದಲ್ಲೂ ಈ ರೀತಿ ಸಿನಿಮಾ ಬರುತ್ತೆ ಎಂದು ಪರಭಾಷಿಗರು ಅಚ್ಚರಿಯಾಗಿದ್ದಾರೆ. ಕನ್ನಡ್ ಕನ್ನಡ್ ಎನ್ನುತ್ತಿದ್ದ ಮಂದಿ ಈಗ ಕನ್ನಡ ಎನ್ನುವಂತಾಗಿದೆ.
ಬರಹೇನ್: ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸಿದ ಬಹ್ರೈನ್ ಇಂಡಿಯಾ ಫ್ರಾಟೆರ್ನಿಟಿ ಫೋರಂ | SahilOnline
ಬರಹೇನ್: ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸಿದ ಬಹ್ರೈನ್ ಇಂಡಿಯಾ ಫ್ರಾಟೆರ್ನಿಟಿ ಫೋರಂ
Source: so english | By Arshad Koppa | Published on 10th September 2017, 12:21 PM | Gulf News |
ಪ್ರಗತಿಪರ ಚಿಂತಕಿ, ಸತ್ಯವನ್ನು ದೈರ್ಯದಿಂದ ಬರೆಯುವ ಅನುಭವಿ ಪತ್ರಕರ್ತೆ ಮತ್ತು ಲಂಕೇಶ್ ಪತ್ರಿಕೆಯ ಸಂಪಾದಕಿ ಗೌರಿ ಲಂಕೇಶ್ ಅವರನ್ನು ಅಮಾನವೀಯವಾಗಿ, ನಿರ್ದಯವಾಗಿ ಹತ್ಯೆ ಮಾಡಿದ್ದಾರೆ. ಆತ್ಮಸಾಕ್ಷಿಯ ದೈರ್ಯಶಾಲಿ ಪತ್ರಕರ್ತೆ ಮತ್ತು ಸಾಮಾಜಿಕ ಕಾರ್ಯಕರ್ತೆ ಗೌರಿ ಲಂಕೇಶ್ ಅವರನ್ನು ಸಾಯಿಸಲಾಗಿದೆ ಎಂಬ ಸುದ್ದಿಯು ಬಹಳ ಆಘಾತಕಾರಿ ಹಾಗೂ ಕಳವಳಕಾರಿ ಸಂಗತಿಯಾಗಿದೆ.
ಈ ಹತ್ಯೆಯು ಪ್ರಜಾಪ್ರಭುತ್ವದ ಹತ್ಯೆಯಾಗಿದೆ. ಇದು ನಮ್ಮ ದೇಶದಲ್ಲಿರುವ ಅಸಹಿಷ್ಣುತೆಯನ್ನು ತೋರಿಸುತ್ತದೆ.ಇದು ಅತ್ಯಂತ ಖಂಡನೀಯ ಮತ್ತು ನಾನು ಅತ್ಯಂತ ಕಟು ಶಬ್ದದಿಂದ ಖಂಡಿಸುತ್ತೇನೆ. ವೈಚಾರಿಕತೆಯನ್ನು ವೈಚಾರಿಕತೆಯಿಂದ ಎದುರಿಸಲಾಗದ ಹೇಡಿಗಳು ಎಸಗಿದಂತ ಕೃತ್ಯವಾಗಿದೆ. ನಮ್ಮ ದೇಶದ ಜಾತ್ಯಾತೀತ ಮೌಲ್ಯಗಳಿಗಾಗಿ ಹೋರಾಡಿದ ಹಾಗೂ ಕೋಮುವಾದಿ ಫ್ಯಾಸಿಸಂ ವಿರುದ್ಧ ರಾಜಿಯಾಗದೆ ನಿಷ್ಟೆಯಿಂದ, ದೈರ್ಯದಿಂದ ಪಟ್ಟುಹಿಡಿದ ಹೋರಾಟಕ್ಕಾಗಿ ಅವರು ನೆನಪಿಸಿಕೊಳ್ಳುತ್ತಾರೆ. ಪತ್ರಿಕೋದ್ಯಮದಿಂದ ಕೋಮುವಾದವನ್ನು ದಿಟ್ಟವಾಗಿ ಎದುರಿಸುತ್ತಿದ್ದರು. ಇದರಿಂದಾಗಿ ಅವರು ಹಲವಾರು ಕೋಮು ವಿಕೃತಿಯ ಮನೋಭಾವ ಇರುವವರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಹತ್ಯೆಯಿಂದ ಅವರ ವೈಚಾರಿಕತೆಯು ಯವತ್ತೂ ಸಾಯಲಾರದು. ಅದು ಹೆಚ್ಚು ಪ್ರಮಾಣದಲ್ಲಿ ನಮ್ಮ ದೇಶದಲ್ಲಿ ಬೆಳೆಯಲಿದೆ. ಈ ಹುತಾತ್ಮತೆಯು ಹೆಚ್ಚು ಹೆಚ್ಚು ಜನರನ್ನು ಅವರ ವೈಚಾರಿಕತೆ, ಸಾಮಾಜಿಕ ಕಳಕಳಿ ಮತ್ತು ಕೋಮುವಾದದ ವಿರುದ್ಧ ಹೋರಾಟಕ್ಕೆ ಆಕರ್ಷಿತರನ್ನಾಗಿ ಮಾಡಲಿದೆ.
ಅವರನ್ನು ಕೊಂದ ದುಷ್ಕರ್ಮಿಗಳ ಪರವಾಗಿ ಮಾತನಾಡುವ ಮತ್ತು ಅವರು ಮರಣ ಹೊಂದಿದ ನಂತರವು ನಿಂದಿಸುವುದು ಅಮಾನವೀಯ ಮತ್ತು ಹೀನ ಕೃತ್ಯವಾಗಿದೆ. ಇದರಿಂದ ಅಸಹಿಷ್ಣುತೆ ಮತ್ತು ಕೋಮು ವಿಕೃತಿಯ ದುಷ್ಟತನ ಎದ್ದು ಕಾಣುತ್ತದೆ. ಸರಕಾರವು ತನಿಖೆಯನ್ನು ತೀವ್ರಗೊಳಿಸಿ ಈ ದುಷ್ಕ್ರಿತ್ಯ ಎಸಗಿದವರನ್ನು ಹಾಗೂ ಇದರ ಹಿಂದಿರುವ ಕಾಣದ ಕೈಗಳನ್ನು ಕಾನೂನಿನ ಮತ್ತು ಜನರ ಮುಂದೆ ತರಬೇಕಾಗಿ ಬಹ್ರೈನ್ ಇಂಡಿಯಾ ಫ್ರಾಟೆರ್ನಿಟಿ ಫೋರಂ ಕರ್ನಾಟಕ ಘಟಕವು ಈ ಮೂಲಕ ಸರಕಾರವನ್ನು ಒತ್ತಾಯಿಸುತ್ತಿದ್ದೇವೆ. ಅವರ ಕುಟುಂಬ, ಸ್ನೇಹಿತರು ಮತ್ತು ಸಹೋದ್ಯೋಗಿಗಳಿಗೆ ನಮ್ಮ ಸಾಂತ್ವನವನ್ನು ವ್ಯಕ್ತಪಡಿಸುತ್ತಿದ್ದೇವೆ ಎಂದು ತಿಳಿಸುತ್ತಿದ್ದೇವೆ.
ಅವಿವಾಹಿತ ಯುವತಿಯ ಅವಧಿಪೂರ್ವ ಪ್ರಸವ, ಡಿಎನ್ ಎ ಪರೀಕ್ಷೆಗೆ ಮುಂದಾದ ಪೊಲೀಸರು! | ಜನತಾ ನ್ಯೂಸ್ | Shivamogga
ಅವಿವಾಹಿತ ಯುವತಿಯ ಅವಧಿಪೂರ್ವ ಪ್ರಸವ, ಡಿಎನ್ ಎ ಪರೀಕ್ಷೆಗೆ ಮುಂದಾದ ಪೊಲೀಸರು! | ಜನತಾ ನ್ಯೂಸ್
ಶಿವಮೊಗ್ಗ : ಅವಿವಾಹಿತ ಯುವತಿಯೋರ್ವಳು ಅವಧಿಪೂರ್ವ ಪ್ರಸವದ ವೇಳೆ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಹೆರಿಗೆಯಾದ ಎರಡು ಗಂಟೆಯ ಒಳಗಾಗಿ ತಾಯಿ ಮತ್ತು ಮಗು ಇಬ್ಬರೂ ಸಾವನ್ನಪ್ಪಿರುವ ಕರುಣಾಜಕನ ಘಟನೆ ಶಿವಮೊಗ್ಗದ ಮೆಗ್ಗಾನ್​ ಆಸ್ಪತ್ರೆಯಲ್ಲಿ ಸಂಭವಿಸಿದೆ.
ಶಿವಮೊಗ್ಗ ತಾಲೂಕು ಕುಂಸಿ ಗ್ರಾಮದ ಉಪ್ಪಾರ ಕೇರಿಯ ಅಶ್ವಿನಿ ಮೃತ ಯುವತಿ. ಈಕೆ ಆಯನೂರಿನಲ್ಲಿ ಓದುವಾಗ ಆಯನೂರು ಸಮೀಪದ ಗ್ರಾಮದ ಮಧುಸೂದನ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಮನೆಯಲ್ಲಿ ಕಡುಬಡತನ ಇದ್ದಿದ್ದರಿಂದಾಗಿ ಉದ್ಯೋಗ ಅರಸಿ ಮೈಸೂರಿಗೆ ತೆರಳಿದ್ದಳು.
ಅಲ್ಲಿ ಅಶ್ವಿನಿಗೆ ಬಸವರಾಜ್ ಎಂಬಾತನ ಪರಿಚಯವಾಗಿತ್ತು. ಈತನೊಂದಿಗೆ ಕಾಲಕ್ರಮೇಣ ಅಶ್ವಿನಿಗೆ ಪ್ರೇಮಾಂಕುರವಾಗಿತ್ತು. ಇದೇ ವೇಳೆಗೆ ಕರೊನಾ ಲಾಕ್​ಡೌನ್ ಆಗಿದ್ದರಿಂದಾಗಿ ಅಶ್ವಿನಿ ಸ್ವಗ್ರಾಮಕ್ಕೆ ಬಂದಿದ್ದಳು. ಕುಂಸಿಗೆ ಬರುವಾಗ ತನ್ನೊಂದಿಗೆ ಬಸವರಾಜನನ್ನೂ ಕರೆದುಕೊಂಡು ಬಂದಿದ್ದಳು.
ಬಸವರಾಜ್ ಬಗ್ಗೆ ಮನೆಯವರು ವಿಚಾರಿಸಿದಾಗ ಆತ ನನ್ನ ಸ್ನೇಹಿತ. ಲಾಕ್​ಡೌನ್ ಹಿನ್ನೆಲೆಯಲ್ಲಿ ನನ್ನೊಂದಿಗೆ ಬಂದಿದ್ದಾನೆ, ಕೆಲ ದಿನದಲ್ಲೇ ಮತ್ತೆ ಮೈಸೂರಿಗೆ ಹೋಗುತ್ತಾನೆ ಎಂದಿದ್ದಳು. ಆದರೆ ಮನೆಯವರ ವಿಚಾರಣೆ ಹೆಚ್ಚಾದಾಗ ಹದಿನೈದು ದಿನದಲ್ಲೇ ಪ್ರೇಯಸಿಯ ಮನೆಯಿಂದ ಯುವಕ ಬೆಂಗಳೂರಿಗೆ ತೆರಳಿದ್ದ.
ಬಸವರಾಜ್ ಮೈಸೂರಿಗೆ ತೆರಳಿದ ಕೆಲದಿನಗಳ ಬಳಿಕ ಅಶ್ವಿನಿಯ ಆರೋಗ್ಯದಲ್ಲಿ ಏರುಪೇರಾಗಲಾರಂಭಿಸಿತ್ತು. ಆಗ ಅಶ್ವಿನಿ ಆಸ್ಪತ್ರೆಗೆ ಹೋಗಿ ಬರಲಾರಂಭಿಸಿದ್ದಳು. ಇದೇ ವೇಳೆಗೆ ಅಶ್ವಿನಿ ಹೊಟ್ಟೆಯೂ ಊದಿಕೊಳ್ಳಲಾರಂಭಿಸಿತ್ತು. ಈ ಬಗ್ಗೆ ಪಾಲಕರು ವಿಚಾರಿಸಿದಾಗ ಗ್ಯಾಸ್ ಸ್ಟಿಕ್ ನಿಂದ ಹೊಟ್ಟೆ ಊದಿಕೊಂಡಿದೆ ಎಂದು ಪಾಲಕರಿಗೆ ಸುಳ್ಳು ಹೇಳಿದ್ದ ಯುವತಿ ವಿಚಾರ ಮುಚ್ಚಿಟ್ಟುಕೊಂಡಿದ್ದಳು.
ಸೆ.12ರಂದು ವಿಪರೀತ ಹೊಟ್ಟೆನೋವಿನಿಂದ ಬಳಲುತ್ತಿದ್ದ ಅಶ್ವಿನಿಯನ್ನು ಪಾಲಕರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ವೈದ್ಯರು ತಪಾಸಣೆ ಮಾಡಿದಾಗ ಆಕೆ ಗರ್ಭಿಣಿ ಎಂಬುದು ಗೊತ್ತಾಗಿದೆ.
ಇದೇ ವೇಳೆಗೆ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು ಅವಧಿಪೂರ್ವವಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಅವಧಿ ಪೂರ್ವವಾಗಿ ಮಗು ಜನಿಸಿದ್ದರಿಂದಾಗಿ ಮಗು ಬದುಕುಳಿದಿಲ್ಲ. ಮಗು ಮೃತಪಟ್ಟ ಎರಡು ಗಂಟೆ ಒಳಗಾಗಿ ಯುವತಿ ಕೂಡಾ ಮೃತಪಟ್ಟಿದ್ದಾಳೆ.
ತಾಯಿ ಹಾಗೂ ಹಸುಗೂಸು ಇಬ್ಬರೂ ಮೃತಪಡುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡ ಕುಂಸಿ ಠಾಣೆ ಪೊಲೀಸರು ವಿಚಾರಣೆ ಆರಂಭಿಸಿದ್ದರು. ಈ ಪ್ರಕರಣ ಸಂಬಂಧ ಕಾನೂನು ತೊಡಕು ಉಂಟಾದಲ್ಲಿ ಡಿಎನ್​ಎ ಟೆಸ್ಟ್ ಮಾಡಿಸಿ ಮಗುವಿನ ತಂದೆ ಯಾರು? ಎಂದು ಪತ್ತೆ ಮಾಡಲು ಪೊಲೀಸರು ನಿರ್ಧರಿಸಿದ್ದಾರೆ. ಪೊಲೀಸರು ಇದೀಗ ಡಿಎನ್‌ಎ ಟೆಸ್ಟ್ ಮೂಲಕ ಮಗುವಿನ ತಂದೆ ಯಾರು ಎಂದು ಪತ್ತೆ ಹಚ್ಚಲು ಮುಂದಾಗಿದ್ದಾರೆ.
ಶಾಪಿಂಗ್ ಮಾಡಿದ ತಪ್ಪಿಗೆ ಅಧ್ಯಕ್ಷ ಹುದ್ದೆಗೆ ಕೊಡ್ತಿದ್ದಾರೆ ರಾಜೀನಾಮೆ…! | Kannada Dunia | Kannada News | Karnataka News | India News
HomeLive NewsInternationalಶಾಪಿಂಗ್ ಮಾಡಿದ ತಪ್ಪಿಗೆ ಅಧ್ಯಕ್ಷ ಹುದ್ದೆಗೆ…
ಶಾಪಿಂಗ್ ಮಾಡಿದ ತಪ್ಪಿಗೆ ಅಧ್ಯಕ್ಷ ಹುದ್ದೆಗೆ ಕೊಡ್ತಿದ್ದಾರೆ ರಾಜೀನಾಮೆ…!
10-03-2018 6:11PM IST / No Comments / Posted In: Latest News, International
ಶಾಪಿಂಗ್ ಮಾಡಿದ ತಪ್ಪಿಗೆ ಮಾರಿಷಸ್ ಅಧ್ಯಕ್ಷೆ ಅಮೀನಾ ಗುರಿಬ್ ಫಾಕಿಮ್ ತಮ್ಮ ಹುದ್ದೆಯನ್ನೇ ಕಳೆದುಕೊಳ್ತಿದ್ದಾರೆ. ಮುಂದಿನ ವಾರ ಅವರು ರಾಜೀನಾಮೆ ನೀಡಲಿದ್ದಾರೆ ಅಂತಾ ಅಲ್ಲಿನ ಪ್ರಧಾನ ಮಂತ್ರಿ ತಿಳಿಸಿದ್ದಾರೆ. ಅಂತರಾಷ್ಟ್ರೀಯ ಸರ್ಕಾರೇತರ ಸಂಸ್ಥೆ ನೀಡಿದ ಕ್ರೆಡಿಟ್ ಕಾರ್ಡ್ ಮೂಲಕ ಬಟ್ಟೆ ಹಾಗೂ ಆಭರಣ ಖರೀದಿ ಮಾಡಿದ ಆರೋಪ ಅವರ ಮೇಲಿದೆ.
ಮಾರಿಷಸ್ ನ 50ನೇ ವಾರ್ಷಿಕೋತ್ಸವ ಆಚರಣೆ ಬಳಿಕ ಮಾರ್ಚ್ 12ರ ನಂತರ ಅಮೀನಾ ಗುರಿಬ್ ರಾಜೀನಾಮೆ ನೀಡಲಿದ್ದಾರಂತೆ. ಅಮೀನಾ ಗುರಿಬ್ ರಸಾಯನಶಾಸ್ತ್ರ ಪ್ರಾಧ್ಯಾಪಕಿ. 2015ರಲ್ಲಿ ಅಧ್ಯಕ್ಷ ಗಾದಿ ಏರಿದ್ದರು. ದೇಶದ ಮೊದಲ ಮಹಿಳಾ ಅಧ್ಯಕ್ಷೆ ಎಂಬ ಹೆಗ್ಗಳಿಕೆಯೂ ಅವರದ್ದಾಗಿತ್ತು.
ಪ್ಲಾನೆಟ್ ಅರ್ತ್ ಎಂಬ ಸಂಸ್ಥೆ ನೀಡಿದ್ದ ಕ್ರೆಡಿಟ್ ಕಾರ್ಡ್ ಬಳಸಿ ಆಕೆ ದುಬೈ ಮತ್ತು ಇಟಲಿಯಲ್ಲಿ ಶಾಪಿಂಗ್ ಮಾಡಿದ್ದಾರಂತೆ. ಆ ಸಂಸ್ಥೆಯಲ್ಲಿ ಹಿಂದೊಮ್ಮೆ ಅಮೀನಾ ನಿರ್ದೇಶಕಿಯಾಗಿಯೂ ಕೆಲಸ ಮಾಡಿದ್ದರು. ಶಾಪಿಂಗ್ ಮಾಡಿದ್ದ ಹಣವನ್ನೆಲ್ಲ ವಾಪಸ್ ಕೊಟ್ಟಿರುವುದಾಗಿಯೂ ಅಮೀನಾ ಹೇಳಿದ್ದಾರೆ.
ತೆರೆಗೆ ಅಪ್ಪಳಿಸಲಿರುವ 'ಶ್ಯಾಡೋ' ಮತ್ತು 'ರಾಮಾರ್ಜುನ';500 ಥಿಯೇಟರ್‌ಗಳಲ್ಲಿ 'ಇನ್ಸ್‌ಪೆಕ್ಟರ್‌ ವಿಕ್ರಂ' | Vinod prabhakar shadow Anish ramarjuna Prajwal devaraj inspector vikram to hit screen vcs
Bangalore, First Published Jan 25, 2021, 9:12 AM IST
ವಿನೋದ್‌ ಪ್ರಭಾಕರ್‌ ಅಭಿನಯದ 'ಶ್ಯಾಡೋ' ಸಿನಿಮಾ ಫೆ 5ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಸುಮಾರು 250 ಥಿಯೇಟರ್‌ಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.
ಈ ಕುರಿತು ಮಾತನಾಡಿದ ವಿನೋದ್‌ ಪ್ರಭಾಕರ್‌, 'ಇದು ಕ್ಲಾಸ್‌ನಲ್ಲಿ ಮಾಸ್‌ ಸಿನಿಮಾ. ಎಲ್ಲ ವರ್ಗದ ಪ್ರೇಕ್ಷಕರಿಗೂ ಹತ್ತಿರವಾಗುತ್ತೆ. ಎರಡೂವರೆ ವರ್ಷಗಳ ಕಾಲ ಈ ಸಿನಿಮಾಕ್ಕಾಗಿ ದುಡಿದಿದ್ದೇವೆ. ಜೀವ ಪಣಕ್ಕಿಟ್ಟು ಫೈಟ್‌ಗಳಲ್ಲಿ ಅಭಿನಯಿಸಿದ್ದೇವೆ. ಈಗ ಗಡಿಬಿಡಿಯಲ್ಲಿ ಚಿತ್ರ ರಿಲೀಸ್‌ ಮಾಡೋದಕ್ಕೆ ಬೇಸರವಿದೆ. ಆದರೂ ಸನ್ನಿವೇಶವೇ ಹಾಗಿರುವ ಕಾರಣ ಅನಿವಾರ್ಯವಾಗಿ ಬಿಡುಗಡೆಗೆ ಮುಂದಾಗಿದ್ದೇವೆ' ಎಂದರು. 'ಎರಡು ಹಾಡುಗಳ ಜೊತೆಗೆ ಆ್ಯಕ್ಷನ್‌, ಮನರಂಜನೆ ಇದೆ. ಸಿಂಗಲ್‌ ಸ್ಕ್ರೀನ್‌ ಹಾಗೂ ಮಾಲ್‌ಗಳಲ್ಲೂ ಚಿತ್ರ ಓಡುವ ಭರವಸೆ ಇದೆ. ಆದರೆ ಟಿಕೆಟ್‌ ದರವನ್ನು ದಯಮಾಡಿ ಹೆಚ್ಚಿಸಬೇಡಿ' ಎಂದು ಮನವಿ ಮಾಡಿದರು.
ವಿತರಕ, ಧೀರಜ್‌ ಎಂಟರ್‌ಪ್ರೈಸಸ್‌ನ ಮೋಹನದಾಸ ಪೈ ಮಾತನಾಡಿ, 'ಮರಿ ಟೈಗರ್‌ ಅವರ ಈ ಚಿತ್ರ ಗಲ್ಲಾಪೆಟ್ಟಿಗೆ ದೋಚೋದು ಖಚಿತ. ಹೀಗಾಗಿ ಕನ್ನಡ ಸಿನಿಮಾ ಥಿಯೇಟರ್‌ಗಳ ಜೊತೆಗೆ ತಮಿಳು, ತೆಲುಗು ಚಿತ್ರಗಳಿಗೆ ಮೀಸಲಾಗಿರುವ ಥಿಯೇಟರ್‌ಗಳಲ್ಲೂ ಈ ಚಿತ್ರ ಬಿಡುಗಡೆ ಮಾಡುತ್ತೇವೆ' ಎಂದರು.
ರವಿ ಗೌಡ್ರು ನಿರ್ದೇಶನದ ಚಿತ್ರವನ್ನು ಚಕ್ರಿ ನಿರ್ಮಿಸಿದ್ದಾರೆ. ಶೋಭಿತಾ ರಾಣಾ ನಾಯಕಿ.
ಬೇರ್‌ ಬಾಡಿ ಮಾಡು ಅನ್ನದಿರಿ
'8 ಪ್ಯಾಕ್‌ ಬೇರ್‌ ಬಾಡಿ ತೆರೆಯ ಮೇಲೆ ನೋಡಲು ಚೆನ್ನಾಗಿರುತ್ತದೆ. ಆದರೆ ಅದಕ್ಕಾಗಿ ವರ್ಷಗಟ್ಟಲೆ ಅನ್ನ, ನೀರು ಬಿಟ್ಟು ವಾಟರ್‌ ಕಟ್‌ ಮಾಡಿ ಬಾಡಿ ರೆಡಿ ಮಾಡಿಕೊಳ್ಳಬೇಕಾಗುತ್ತೆ. ಉಪ್ಪು, ಖಾರ ಬಿಟ್ಟು ಬದುಕಬೇಕಾಗುತ್ತೆ. ಇದರಿಂದ ಮೂಳೆ ಸಮಸ್ಯೆ, ನೋವು ಬಾಧಿಸಿ ಒದ್ದಾಡಿದ್ದೇನೆ. ಇನ್ನು ಮೇಲೆ ಬೇರ್‌ ಬಾಡಿ ಮಾಡಿ ಅನ್ನದಿರಿ' ಎಂದು ವಿನೋದ್‌ ಪ್ರಭಾಕರ್‌ ಆದ್ರ್ರವಾಗಿ ವಿನಂತಿಸಿದರು. ಇನ್ನು ಮುಂದೆ ಫಿಟ್‌ನೆಸ್‌ ಬಗ್ಗೆ ಗಮನಹರಿಸುವುದಾಗಿ ಹೇಳಿದ ಅವರು ಬೇರ್‌ ಬಾಡಿ, ವಾಟರ್‌ ಕಟ್‌ ಮಾಡಲ್ಲ ಅಂದರು.
ಜ.29ಕ್ಕೆ ರಾಮಾರ್ಜುನ ಅಬ್ಬರ
ನಟ ಅನೀಶ್‌ ತೇಜಶ್ವರ್‌ ನಿರ್ದೇಶಿಸಿ, ಅಭಿನಯಿಸಿರುವ 'ರಾಮಾರ್ಜುನ' ಚಿತ್ರ ಜ.29ಕ್ಕೆ ತೆರೆ ಕಾಣಲಿದೆ. ರಾಜ್ಯಾದ್ಯಂತ ಕೆಆರ್‌ಜಿ ಸ್ಟುಡಿಯೋ ದೊಡ್ಡಮಟ್ಟದಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ. 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬರುತ್ತಿದ್ದು, ಎಲ್ಲ ವರ್ಗದ ಪ್ರೇಕ್ಷಕರನ್ನೂ ತಲುಪಲಿದೆ ಎಂಬುದು ಚಿತ್ರತಂಡದ ಭರವಸೆ.
ಅನೀಶ್‌ ತೇಜೇಶ್ವರ್‌ ಹೊಸ ಸಿನಿಮಾ ಎನ್‌ಆರ್‌ಐ
ಈ ಚಿತ್ರದ ಟ್ರೇಲರ್‌ ಸಾಕಷ್ಟುಕುತೂಹಲದಿಂದ ಕೂಡಿದೆ. ರೈತರು, ಎಲ್‌ಐಸಿ ಪಾಲಿಸಿ, ಮೆಡಿಕಲ್‌ ಮಾಫಿಯಾ, ಸಾವು, ರಾಜಕೀಯ, ಸಾಮಾನ್ಯರ ಅಳಲು, ಅವರ ಬೆಂಬಲಕ್ಕೆ ನಿಲ್ಲುವ ಹೀರೋ... ಹೀಗೆ ಹಲವು ಅಂಶಗಳನ್ನು ಒಳಗೊಂಡು ಕುತೂಹಲಕಾರಿ ಮೂಡಿಸುವಂತಿದೆ. ಚಿತ್ರದ ನಿರ್ದೇಶನ ಹಾಗೂ ನಿರ್ಮಾಣ ಅನೀಶ್‌ ಅವರದು. ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿನಿರ್ಮಾಣದಲ್ಲಿ ಪಾಲುದಾರರಾಗಿದ್ದು ಚಿತ್ರ ಯಶಸ್ವಿಯಾಗುವ ಭರವಸೆ ಹೊಂದಿದ್ದಾರೆ. ನಿಶ್ವಿಕಾ ನಾಯ್ಡು ನಾಯಕಿ. 'ಸದ್ಯ ಟ್ರೇಲರ್‌ ನೋಡಿದವರು ಖುಷಿಯಾಗಿದ್ದು, ಸಿನಿಮಾವೂ ಇಷ್ಟೇ ಆಸಕ್ತಿದಾಯಕವಾಗಿದೆ. ನಮ್ಮ ಶ್ರಮವನ್ನು ಗುರುತಿಸಿ ಜನ ಕೈ ಹಿಡಿಯುತ್ತಾರೆ ಎಂಬ ನಂಬಿಕೆ ಇದೆ' ಎನ್ನುತ್ತಾರೆ ಅನೀಶ್‌.
500 ಥಿಯೇಟರ್‌ಗಳಲ್ಲಿ ಇನ್ಸ್‌ಪೆಕ್ಟರ್‌ ವಿಕ್ರಂ
ಪ್ರಜ್ವಲ್‌ ದೇವರಾಜ್‌ ನಾಯಕನಾಗಿ ನಟಿಸಿರುವ 'ಇನ್ಸ್‌ಪೆಕ್ಟರ್‌ ವಿಕ್ರಮ್‌' ಚಿತ್ರ ಫೆ.5ಕ್ಕೆ ತೆರೆ ಮೇಲೆ ಮೂಡುತ್ತಿರುವುದು ಎಲ್ಲರಿಗೂ ಗೊತ್ತಿದೆ. ಈಗ ಸಿನಿಮಾ ಹಲವು ಕಾರಣಗಳಿಗೆ ಸದ್ದು ಮಾಡುತ್ತಿದೆ. 'ಈಗ ನನ್ನ ಡ್ಯೂಟಿ ಹೊಸ ಇನ್ಸ್‌ಪೆಕ್ಟರ್‌ಗೆ' ಎನ್ನುವ ಡೈಲಾಗ್‌ ಹೇಳುವ ಮೂಲಕ ಶಿವರಾಜ್‌ಕುಮಾರ್‌ ವಾಯ್‌್ಸ ಓವರ್‌ ನೀಡಿದ್ದಾರೆ.
ಭಗತ್‌ಸಿಂಗ್‌ ಪಾತ್ರದಲ್ಲಿ ದರ್ಶನ್‌ ನಟಿಸಿರುವ ಕಾರಣ ಅತ್ತ ಚಾಲೆಂಜಿಂಗ್‌ ಸ್ಟಾರ್‌ ಅಭಿಮಾನಿಗಳಲ್ಲೂ ಇನ್ಸ್‌ಪೆಕ್ಟರ್‌ ಕುತೂಹಲ ಮೂಡಿಸಿದ್ದಾನೆ. ಚಿತ್ರ 500 ಚಿತ್ರಮಂದಿರಗಳಲ್ಲಿ ತೆರೆಗೆ ಬರುತ್ತಿದೆ. ಬೆಂಗಳೂರಿನ 100 ಕಡೆ ಪ್ರಜ್ವಲ್‌ ದೇವರಾಜ್‌ ಹಾಗೂ ದರ್ಶನ್‌ ಕಾಂಬಿನೇಷನ್‌ನ ಕಟೌಟ್‌ಗಳು ರಾರಾಜಿಸಲಿವೆ. ಇದೊಂದು ಹೊಸ ರೀತಿಯ ಪ್ರಚಾರದ ಸಾಹಸ ಎನ್ನುತ್ತಾರೆ ನಿರ್ಮಾಪಕ ಎ ಆರ್‌ ವಿಖ್ಯಾತ್‌. ಶ್ರೀನರಸಿಂಹ ನಿರ್ದೇಶನದ ಈ ಚಿತ್ರಕ್ಕೆ ಜಾಕಿ ಭಾವನಾ ನಾಯಕಿ.
ಮೈಕ್ರೋಸಾಫ್ಟ್ ಈಗಾಗಲೇ ಡಿಎನ್‌ಎ | ನಲ್ಲಿ 200 ಎಂಬಿ ಡಿಜಿಟಲ್ ಡೇಟಾವನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ ಗ್ಯಾಜೆಟ್ ಸುದ್ದಿ
ಮೈಕ್ರೋಸಾಫ್ಟ್ ಈಗಾಗಲೇ ಡಿಎನ್‌ಎಯಲ್ಲಿ 200 ಎಂಬಿ ಡಿಜಿಟಲ್ ಡೇಟಾವನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ
ನಾವು ಸ್ವಲ್ಪ ಸಮಯದವರೆಗೆ ತಿಳಿದಿದ್ದೇವೆ ಮೈಕ್ರೋಸಾಫ್ಟ್ ಡಿಜಿಟಲ್ ಡೇಟಾವನ್ನು ಸಂಗ್ರಹಿಸಲು ಹೊಸ ಮಾರ್ಗಗಳನ್ನು ಹುಡುಕುವಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ, ಈ ಸಮಯದಲ್ಲಿ ಮತ್ತು ಸಹಯೋಗದೊಂದಿಗೆ ಧನ್ಯವಾದಗಳು ವಾಷಿಂಗ್ಟನ್ ವಿಶ್ವವಿದ್ಯಾಲಯ, ಮುಂದೆ ಹೋಗಿ ಡಿಎನ್‌ಎದಲ್ಲಿ ಡಿಜಿಟಲ್ ಡೇಟಾ ಸಂಗ್ರಹಣೆಗಾಗಿ ಹೊಸ ದಾಖಲೆಯನ್ನು ಸ್ಥಾಪಿಸಲು ಸಾಧ್ಯವಾಗಿದೆ. ನಿರ್ದಿಷ್ಟವಾಗಿ ಮತ್ತು ಪ್ರಸ್ತುತಪಡಿಸಿದ ಫಲಿತಾಂಶಗಳ ಪ್ರಕಾರ, ಸಂಶೋಧಕರು ಸಾಧಿಸಿದ್ದಾರೆ ಸಿಂಥೆಟಿಕ್ ಜೀನ್ ಎಳೆಗಳಲ್ಲಿ 200 ಎಂಬಿ ಅನ್ನು ಎನ್ಕೋಡ್ ಮಾಡಿ ಮತ್ತು ಡಿಕೋಡ್ ಮಾಡಿ ಮತ್ತು ಅವುಗಳನ್ನು ಪರೀಕ್ಷಾ ಟ್ಯೂಬ್‌ನಲ್ಲಿ ಸಂಗ್ರಹಿಸಿ.
ಪರದೆಯ ಮೇಲೆ ನೀವು ನೋಡಬಹುದಾದ ಚಿತ್ರವು ನಿಖರವಾಗಿ ಈ ಸಂಸ್ಕರಿಸಿದ ಡಿಎನ್‌ಎ ಸಂಗ್ರಹವಾಗಿರುವ ಪರೀಕ್ಷಾ ಟ್ಯೂಬ್ ಆಗಿದೆ. ಅದೇ ಫೋಟೋದಲ್ಲಿ ಫೋಟೋವನ್ನು ನೋಡುವ ಯಾರಾದರೂ ಈ ವಂಶವಾಹಿಗಳ ಸಣ್ಣ ಗಾತ್ರವನ್ನು ಮೆಚ್ಚುತ್ತಾರೆ ಎಂಬ ಏಕೈಕ ಉದ್ದೇಶದಿಂದ ಪೆನ್ಸಿಲ್ ಇದೆ. ವಿವರವಾಗಿ, ಆ 200 ಎಂಬಿ ಯಲ್ಲಿ ಯಾವುದೇ ಫೈಲ್ ಇಲ್ಲ ಎಂದು ನಿಮಗೆ ತಿಳಿಸಿ, ಆದರೆ ಸಂಶೋಧಕರು ಎನ್‌ಕೋಡ್ ಮಾಡಿದ್ದಾರೆ ಮತ್ತು ಡಿಕೋಡ್ ಮಾಡಿದ್ದಾರೆ 100 ಕ್ಕೂ ಹೆಚ್ಚು ಭಾಷೆಗಳಲ್ಲಿ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ, ಪ್ರಾಜೆಕ್ಟ್ ಗುಟೆನ್‌ಬರ್ಗ್‌ರ 100 ಅತ್ಯುತ್ತಮ ಪುಸ್ತಕಗಳು, ಸಣ್ಣ ಡೇಟಾಬೇಸ್ ಮತ್ತು ಸರಿ ಗೋ! ಗುಂಪು ಸಂಗೀತ ವೀಡಿಯೊ.
ಮೈಕ್ರೋಸಾಫ್ಟ್ ಒಂದು ಗ್ರಾಂ ಡಿಎನ್‌ಎಯಲ್ಲಿ 1.000 ಬಿಲಿಯನ್ ಟಿಬಿ ವರೆಗೆ ಸಂಗ್ರಹಿಸಲು ಸಾಧ್ಯವಾಗುತ್ತದೆ ಎಂದು ನಿರೀಕ್ಷಿಸುತ್ತದೆ
ಮಾಡಿದ ಹೇಳಿಕೆಗಳ ಪ್ರಕಾರ ಕರಿನ್ ಸ್ಟ್ರಾಸ್, ಯೋಜನೆಯ ನಾಯಕ:
ಡೇಟಾವನ್ನು ಸಂಗ್ರಹಿಸಬಲ್ಲ, ಅದು ಸ್ವಯಂಚಾಲಿತ ಮತ್ತು ಕಂಪೆನಿಗಳು ಬಳಸಬಹುದಾದ ಡಿಎನ್‌ಎ ಆಧಾರಿತ ಎಂಡ್-ಟು-ಎಂಡ್ ವ್ಯವಸ್ಥೆಯನ್ನು ನಾವು ರಚಿಸಬಹುದೇ ಎಂದು ಕಂಡುಹಿಡಿಯಲು ನಾವು ಆಸಕ್ತಿ ಹೊಂದಿದ್ದೇವೆ.
ಡೇಟಾ ಸಂಗ್ರಹಣೆ ಅಗತ್ಯಗಳು ನಿರಂತರವಾಗಿ ಬೆಳೆಯುತ್ತಿವೆ, ಈ ಕಾರಣದಿಂದಾಗಿ, ಹಲವಾರು ಗುಂಪುಗಳ ವಿಜ್ಞಾನಿಗಳು ಅಧ್ಯಯನ ಮಾಡುತ್ತಿರುವುದು ಆಶ್ಚರ್ಯವೇನಿಲ್ಲ ಡಿಜಿಟಲ್ ಡೇಟಾವನ್ನು ಸಂಗ್ರಹಿಸುವ ಹೊಸ ವಿಧಾನಗಳು. ಇವುಗಳಲ್ಲಿ ಒಂದು ಡಿಎನ್‌ಎ, ಆನುವಂಶಿಕ ವಸ್ತುವಾಗಿದ್ದು ಅದು ಆದರ್ಶ ಬೆಂಬಲವಾಗಿದೆ ಏಕೆಂದರೆ ಅಣುಗಳಲ್ಲಿ ಬರೆಯಲು ಸಾಧ್ಯವಿದೆ ಹೆಚ್ಚಿನ ಸಾಂದ್ರತೆ ಸಾಂಪ್ರದಾಯಿಕ ಶೇಖರಣಾ ತಂತ್ರಜ್ಞಾನಗಳಿಗಿಂತ.
ಸದ್ಯಕ್ಕೆ, ಎರಡೂ ಸಂಸ್ಥೆಗಳ ಸಂಶೋಧಕರು ಮತ್ತು ವಿಜ್ಞಾನಿಗಳು ತಮ್ಮ ಕಲಿಕೆಯಲ್ಲಿ ಮುಂದುವರಿಯಲು ಮತ್ತು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದನ್ನು ಮುಂದುವರೆಸಲು ಆಶಿಸುತ್ತಾರೆ, ಮೈಕ್ರೋಸಾಫ್ಟ್ ಪ್ರಕಾರ, ಸಂಗ್ರಹಿಸಲು ಒಂದೇ ಗ್ರಾಂ ಡಿಎನ್‌ಎಯಲ್ಲಿ 1.000 ಬಿಲಿಯನ್ ಟೆರಾಬೈಟ್ ಡೇಟಾ.
ಹೆಚ್ಚಿನ ಮಾಹಿತಿ: ಎಂಐಟಿ
ಲೇಖನಕ್ಕೆ ಪೂರ್ಣ ಮಾರ್ಗ: ಗ್ಯಾಜೆಟ್ ಸುದ್ದಿ » ಜನರಲ್ » ಸುದ್ದಿ » ಮೈಕ್ರೋಸಾಫ್ಟ್ ಈಗಾಗಲೇ ಡಿಎನ್‌ಎಯಲ್ಲಿ 200 ಎಂಬಿ ಡಿಜಿಟಲ್ ಡೇಟಾವನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ
ಪೊಕ್ಮೊನ್ ಜಿಒ ಡೆವಲಪರ್ ನಿಯಾಂಟಿಕ್ ಗೂಗಲ್ ಖಾತೆಗಳಲ್ಲಿನ ಸಮಸ್ಯೆಗಳನ್ನು ಪರಿಹರಿಸುವ ಅಪ್ಲಿಕೇಶನ್ ಅನ್ನು ನವೀಕರಿಸುತ್ತಾರೆ
ಕೃಷಿ ವಿವಿ ಘಟಿಕೋತ್ಸವ: 11 ಚಿನ್ನದ ಪದಕಗಳಿಗೆ ಭಾಜನರಾದ ಚೈತ್ರಾ ಭಟ್. - TheNewsism \n
Home ಸುದ್ದಿ ರಾಜ್ಯ ಸುದ್ದಿ ಕೃಷಿ ವಿವಿ ಘಟಿಕೋತ್ಸವ: 11 ಚಿನ್ನದ ಪದಕಗಳಿಗೆ ಭಾಜನರಾದ ಚೈತ್ರಾ ಭಟ್.
ಧಾರವಾಡ: ಜೂನ್ , 30: ಧಾರವಾಡ ಕೃಷಿ ವಿಶ್ವವಿದ್ಯಾಲಯದ 29ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ವಜೂಭಾಯಿ ವಾಲಾ ಅವರು ವಿವಿಧ ಪದವಿ, ಸ್ನಾತಕೋತ್ತರ ಪದವಿ, ಪಿ.ಎಚ್ಡಿ ಶ್ರೇಯಾಂಕ ಪಡೆದವರಿಗೆ ಚಿನ್ನದ ಪದಕ ಪ್ರದಾನ ಮಾಡಿದರು.
ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಕೆರೆಹೊಂಡದ ಚೈತ್ರಾ ಗಣಪತಿ ಭಟ್ 11 ಬಂಗಾರದ ಪದಕ ಪಡೆದು ಚಿನ್ನದ ಹುಡುಗಿಯೆನಿಸಿದರು. ಚೈತ್ರಾ ಸದ್ಯ ದೆಹಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರ್ ಸೆಂಟರ್ನಲ್ಲಿ ಎಂಎಸ್ಸಿ ವ್ಯಾಸಂಗ ಮಾಡುತ್ತಿದ್ದಾರೆ. ಸಸ್ಯ ಸಂರಕ್ಷಣೆ ವಿಷಯದಲ್ಲಿ ಸಂಶೋಧನೆ ಮಾಡುವ ಗುರಿ ಇಟ್ಟುಕೊಂಡಿದ್ದಾರೆ.[ಜುಲೈ 1, 2ರಂದು ಉಡುಪಿಯಲ್ಲಿ ಹಲಸಿನ ಹಬ್ಬ ]
ಪಿಎಚ್.ಡಿಯ 53, ಸ್ನಾತಕೋತ್ತರ ಪದವಿಯ 283, ಪದವಿ ವಿಭಾಗದ 667 ವಿದ್ಯಾರ್ಥಿಗಳು ಸೇರಿ ದಂತೆ 1,003 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಸಸ್ಯ ತಳಿಶಾಸ್ತ್ರ ವಿಭಾಗದ ಓಂಪ್ರಕಾಶ ಕುಮಾರಸಿಂಗ್, ಕೀಟಶಾಸ್ತ್ರ ವಿಭಾಗದ ಬೋನ್ತಾ ರಾಜಶೇಖರ 4, ಪಿ.ಎಚ್ಡಿಯಲ್ಲಿ ಬೇಸಾಯಶಾಸ್ತ್ರ ವಿಭಾಗದ ಶೇಖ್ ಜಾಫರ್ ಪಾಷಾ 3 ಬಂಗಾರದ ಪದಕಕ್ಕೆ ಭಾಜನರಾದರು.
ಜೂಜುಕೋರ ಬಂಡವಾಳಿಗರ ಹಿತ ಕಾಯುವ ನೀತಿ ಹಿಮ್ಮೆಟ್ಟಿಸಿ ಸಮಗ್ರ ಪರ್ಯಾಯ ರೂಪಿಸಬೇಕು |
← ಕರ್ನಾಟಕದ ಹೊಸ ಭೂಸ್ವಾಧೀನ ಆದೇಶ 1894ರ ಕರಾಳ ಭೂಸ್ವಾಧೀನ ಕಾಯ್ದೆಯ ಪಡಿಯಚ್ಚು?
ಜುಲೈ 6 2016
ಜೂಜುಕೋರ ಬಂಡವಾಳಿಗರ ಹಿತ ಕಾಯುವ ನೀತಿ ಹಿಮ್ಮೆಟ್ಟಿಸಿ ಸಮಗ್ರ ಪರ್ಯಾಯ ರೂಪಿಸಬೇಕು
ಸಂಪುಟ: 10 ಸಂಚಿಕೆ: 28 Sunday, July 3, 2016
ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ :
ರೈತರ ಬೆಳೆಗೆ ಮಾರುಕಟ್ಟೆಯಲ್ಲಿ ನ್ಯಾಯಬದ್ದ ಬೆಲೆ ಒದಗಿಸುವ ಪ್ರಶ್ನೆಯ ಹಿನ್ನೆಲೆಯಲ್ಲಿ ಕನಿಷ್ಟ ಬೆಂಬಲ ಬೆಲೆಯ ಸೂತ್ರ ಬಂದಿದ್ದು ಈಗ ನವ-ಉದಾರವಾದದ ಅಡಿಯಲ್ಲಿ ಅದು ಮಾರುಕಟ್ಟೆಯನ್ನು 'ವಿರೂಪ'ಗೊಳಿಸುವ ಅಂಶ ಎಂಬ ಪರಿಕಲ್ಪನೆ ಯನ್ನು ತರಲಾಗಿದೆ. ಕೃಷಿಯ ಕಂಪನೀಕರಣಕ್ಕೆ ಪೂರಕವಾಗಿ ಕೃಷಿ ಮಾರುಕಟ್ಟೆಯಲ್ಲಿ ಖಾಸಗಿ ಬಂಡವಾಳದ ಹುಚ್ಚು ಹರಿದಾಟಕ್ಕೆ ಅವಕಾಶ ಮಾಡಿಕೊಡಬೇಕೆಂಬ ಉದ್ದೇಶದಿಂದ ರೈತ ವಿರೋಧಿಯಾದ ನೀತಿಯನ್ನು ಜಾರಿಗೆ ತರಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ರೈತ ಚಳುವಳಿಗಳಲ್ಲದೇ ರಾಜ್ಯ ಸರಕಾರಗಳೂ ರಾಜಕೀಯ ಹೋರಾಟಕ್ಕೆ ಮುಂದಾಗಬೇಕು ಎನ್ನುತ್ತಾರೆ ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷರಾದ ಜಿ.ಸಿ. ಬಯ್ಯಾರೆಡ್ಡಿಯವರು. 'ಜನಶಕ್ತಿ'ಯ ಪರವಾಗಿ ಈ ಸಂದರ್ಶನ ನಡೆಸಿದವರು ಟಿ.ಯಶವಂತ.
ಜನಶಕ್ತಿ: ರೈತರ ಆತ್ಮಹತ್ಯೆಗಳ ಕಾರಣಗಳಲ್ಲಿ ಬೆಳೆಯ ಬೆಲೆ ಕುಸಿತ ಒಂದು ಸಾಮಾನ್ಯ ಅಂಶವಾಗಿರುವಾಗ ಸರಕಾರಗಳ ಮುಂದೆ ರೈತ ಚಳುವಳಿಯಾಗಿ ನೀವು ಇಡುತ್ತಿರುವ ಅಜೆಂಡಾ ಏನು ?
ಜಿ.ಸಿ. ಬಯ್ಯಾರೆಡ್ಡಿ: ರಾಷ್ಟ್ರದ ರೈತ ಚಳುವಳಿಯ ಶಿಫಾರಸ್ಸುಗಳು, ಹಲವು ಇತರ ಅಧ್ಯಯನಗಳು ಹಾಗೂ ಇದೆಲ್ಲವುಗಳ ಜೊತೆಗೆ ಡಾ. ಸ್ವಾಮಿನಾಥನ್ ಆಯೋಗದ ಸೂತ್ರ ಇವೆಲ್ಲವೂ ಸ್ಪಷ್ಟವಾಗಿ ದೃಢಪಡಿಸಿದ ಅಂಶ ಈ ಬೆಳೆಗೆ ನ್ಯಾಯಬದ್ದ ಬೆಲೆಯ ಪ್ರಶ್ನೆ.
`ಸಿ2+50%' ಸೂತ್ರ
`ಸಿ2+50%' ಎಂದರೆ ಬೆಳೆಯ ಉತ್ಪಾದನಾ ವೆಚ್ಚ ಮತ್ತು ಅದರ ಮೇಲೆ ಶೇ. 50 ಲಾಭ ಬರುವಂತೆ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿ ಮಾಡಬೇಕು. ಇದು ಒಂದು ವೈಜ್ಞಾನಿಕ ಅಧ್ಯಯನದ ಆಧಾರದಲ್ಲಿ ಮೂಡಿಬಂದಿರುವ ಸೂತ್ರ. ಕೇಂದ್ರ ಸರಕಾರಕ್ಕೆ ಸಲ್ಲಿಸಿರುವ ಈ ಶಿಫಾರಸ್ಸುಗಳು ಎಲ್ಲ ರಾಜ್ಯಗಳಿಗೂ ಅನ್ವಯವಾಗುತ್ತವೆ.
ಇದು ರೈತರನ್ನು ರಕ್ಷಿಸುವ ಪ್ರಧಾನ ಸೂತ್ರ. ರೈತ ಚಳುವಳಿಗಳು ದೇಶದೆಲ್ಲೆಡೆ ವೈಜ್ಞಾನಿಕವಾಗಿ ತಾವೇ ಉತ್ಪಾದನಾ ವೆಚ್ಚವನ್ನು ಲೆಕ್ಕಾಚಾರ ಮಾಡುವಂತಾಗಬೇಕು. ರೈತರಿಗೆ ಈ ಬಗೆಗೆ ಮನನ ಮಾಡಿಸುವುದು ಮತ್ತೊಂದು ಪ್ರಮುಖ ಅಂಶ. 2014 ರ ಲೋಕಸಭಾ ಚುನಾವಣೆಗಳ ಸಂದರ್ಭದಲ್ಲಿ ನರೇಂದ್ರ ಮೋದಿಯವರು ಕೃಷಿ ಉತ್ಪನ್ನಗಳಿಗೆ ಡಾ. ಸ್ವಾಮಿನಾಥನ್ ಆಯೋಗದ ಶಿಫಾರಸ್ಸಾದ `ಸಿ2+50 ಶೇ.' ಸೂತ್ರದಂತೆ ಬೆಂಬಲ ಬೆಲೆ ಕೊಡುವುದಾಗಿ ಪ್ರಚಾರ ಭಾಷಣಗಳಲ್ಲಿ ಸಾರಿ ಸಾರಿ ಹೇಳಿದ್ದರು. ಆದರೆ ಅಧಿಕಾರಕ್ಕೆ ಬಂದ ಮೇಲೆ ಈ ಸಂಬಂಧ ಕೊಟ್ಟ ಭರವಸೆಗೆ ವಿರುದ್ದವಾಗಿ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿ ಕೃಷಿ ಕ್ಷೇತ್ರವು ಮಾರುಕಟ್ಟೆ ನಿಯಮದಂತೆ ನಡೆಯಲು ಬಿಡಬೇಕು. ಕೃಷಿಗೆ ಬೆಂಬಲ ಬೆಲೆ ನೀಡಿಕೆಗೂ ಒಂದು ಮಿತಿ ಇರಬೇಕು ಎಂದಿದ್ದಾರೆ.
ಜನಶಕ್ತಿ: ಈಗ ಚಾಲ್ತಿಯಲ್ಲಿರುವ ಬೆಂಬಲ ಬೆಲೆಯ ಸ್ವರೂಪ ಏನು? ಇದು ರೈತರಿಗೆ ಅನುಕೂಲಕರವಾಗಿದೆಯೇ? ರೈತರ ಮೇಲಿನ ಪರಿಣಾಮಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಜಿ.ಸಿ. ಬಯ್ಯಾರೆಡ್ಡಿ: ಬಹಳಷ್ಟು ರೈತರಿಗೆ ಉತ್ಪಾದನಾ ವೆಚ್ಚವನ್ನು ಲೆಕ್ಕಾಚಾರ ಮಾಡುವ ವಿಧಾನ ಗೊತ್ತಿಲ್ಲ. ಅವರು ಉತ್ಪಾದನಾ ವೆಚ್ಚದಲ್ಲಿ ಕೇವಲ ಬೀಜ, ಗೊಬ್ಬರ, ಕೀಟನಾಶಕ ಮುಂತಾದವುಗಳನ್ನಷ್ಟೆ ಲೆಕ್ಕ ಹಾಕುತ್ತಾರೆ. ಹೊಲ-ಗದ್ದೆಗಳಲ್ಲಿ ಕುಟುಂಬ ಸದಸ್ಯರ ದುಡಿಮೆ, ಕೊಟ್ಟಿಗೆ ಗೊಬ್ಬರದ ಬೆಲೆ, ಕೃಷಿ ಸಾಧನ, ಸಲಕರಣೆಗಳ ಮೇಲಿನ ಹೂಡಿಕೆ ಮತ್ತು ಅವುಗಳ ಸವಕಳಿ ವೆಚ್ಚ, ಕೃಷಿಯಲ್ಲಿ ಪ್ರಾಣಿಗಳ ಬಳಕೆ ಇಂಥವುಗಳನ್ನೆಲ್ಲಾ ಅವರು ಲೆಕ್ಕಕ್ಕೇ ತೆಗೆದುಕೊಳ್ಳುವುದಿಲ್ಲ. ಕೃಷಿ ಉತ್ಪನ್ನಗಳ ಉತ್ಪಾದನಾ ವೆಚ್ಚವನ್ನು ವೈಜ್ಞಾನಿಕವಾಗಿ ಲೆಕ್ಕ ಹಾಕಿ ಅದರ ಮೇಲೆ ಶೇ. 50 ರಷ್ಟು ಲಾಭವಾಗಿ ಸಿಗಬೇಕೆಂಬ ಅಂಶ ಮೊದಲು ರೈತರಿಗೆ ಮನನ ಆಗಬೇಕು. ರೈತರು ಕೃಷಿ ಉತ್ಪನ್ನಗಳಿಗೆ ಬೆಲೆಯನ್ನು ವೈಜ್ಞಾನಿಕವಾಗಿ ತಾವು ಅನುಭವಿಸಿ ಆ ಮೂಲಕ ದೃಢವಾಗಿ ಕೇಳುವಂತಾಗಬೇಕು.
ರಾಜ್ಯದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಕೋಲಾರ ಜಿಲ್ಲೆ ಸಮಿತಿಯ ಮೂಲಕ ಇತ್ತೀಚೆಗೆ ಕೃಷಿ ಉತ್ಪನ್ನಗಳ ವೆಚ್ಚವನ್ನು ರೈತರೇ ಲೆಕ್ಕ ಮಾಡುವ ಪ್ರಯೋಗಗಳು ನಡೆದಿದ್ದು ರಾಗಿ, ಭತ್ತ, ಟೆಮೊಟೋ, ರೇಷ್ಮೆ ಇತ್ಯಾದಿ ಬೆಳೆಗಳಿಗೆ ರೈತರು ಬೆಂಬಲ ಬೆಲೆ ನಿಗದಿ ಮಾಡಿದ ವಿಧಾನವನ್ನು ಕರ್ನಾಟಕ ಕೃಷಿ ಬೆಲೆ ಅಯೋಗವು ಮೆಚ್ಚಿಕೊಂಡಿದೆ. ಆಯೋಗದ ಅಧ್ಯಕ್ಷರು ಆಯೋಗದ ಕೆಲಸ ಶೇ. 90 ರಷ್ಟು ಸರಾಗವಾಗಿದೆ ಎಂದು ಹೇಳಿ ಅದರಂತೆ ಕೃಷಿಬೆಲೆ ಶಿಫಾರಸ್ಸು ಮಾಡಿದ್ದಾರೆ. ಲೆಕ್ಕಾಚಾರ ಮಾಡಿದ ರೈತರಿಗೂ ಇದು ಒಂದು ಹೊಸ ಜ್ಞಾನೋದಯದಂತೆ ಕಂಡು ಬಂದಿದೆ. ಆದರೆ ಇದು ಜಾರಿಯಾಗಬೇಕು.
ಬೆಂಬಲ ಬೆಲೆಯ ಪ್ರಶ್ನೆಯಲ್ಲಿ ಕೇಂದ್ರ ಸರಕಾರದ್ದೇ ಶೇ. 80 ರಷ್ಟು ಪಾತ್ರ. ವೈಜ್ಞಾನಿಕ ಬೆಲೆಯನ್ನು ಒಂದು ಹಕ್ಕಾಗಿ ರೈತರು ಕೇಳುವಂತಾಗಬೇಕು. ಕೃಷಿ ಮಾರುಕಟ್ಟೆಯಲ್ಲಿ ಬಂಡವಾಳಶಾಹಿ ಹಿತಾಸಕ್ತಿಗಳು ಮಧ್ಯಪ್ರವೇಶ ಮಾಡುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಉತ್ಪನ್ನಗಳ ಮಾರುಕಟ್ಟೆ ವ್ಯವಸ್ಥೆಯಲ್ಲಿ ಸಹಕಾರಿ ಚಳುವಳಿಯನ್ನು ಬಲಪಡಿಸುವ ಕೆಲಸಕ್ಕೂ ಒತ್ತು ಸಿಗಬೇಕಿದೆ. ಇಂತಹ ಬಂಡವಾಳಶಾಹಿ ಮಾರುಕಟ್ಟೆ ನಡುವೆ ರೈತರ ಹಿತ ಕಾಯುವಲ್ಲಿ ಸಹಕಾರಿ ಕ್ಷೇತ್ರದ ಪಾತ್ರ ಅತ್ಯಂತ ಮಹತ್ವದ್ದು.
ಗ್ರಾಹಕರು ಕೃಷಿ ಉತ್ಪನ್ನಗಳಿಗೆ ತಾವು ಕೊಡುವ ಮೌಲ್ಯದ ಶೇ.35 ಮಾತ್ರ ರೈತರಿಗೆ ತಲುಪುತ್ತಿದೆ ಎಂದು ಅಂದಾಜು ಮಾಡಲಾಗಿದೆ. ಸಹಕಾರಿ ಕ್ಷೇತ್ರವು ಬಲವಾಗಿರುವ ಕಡೆ ಕೃಷಿ ಉತ್ಪನ್ನ ಮಾರಾಟವಾಗುವ ದರದ ಶೇ. 60-70 ರಷ್ಟು ಮೌಲ್ಯವು ರೈತರಿಗೆ ಸಿಗುತ್ತಿದೆ. ಹೈನುಗಾರಿಕೆಯಲ್ಲಿ ಗ್ರಾಮ ಮಟ್ಟದಿಂದ ರಾಜ್ಯಮಟ್ಟದವರೆಗೆ ಕೆಲಸ ನಿರ್ವಹಿಸುತ್ತಿರುವ ಸಹಕಾರಿ ರಂಗ ಇದಕ್ಕೊಂದು ಉತ್ತಮ ಉದಾಹರಣೆ. ದೋಷ-ಕೊರತೆಗಳ ನಡುವೆಯೂ ಶೇ. 65-70 ರಷ್ಟು ಪಾಲು ರೈತರಿಗೆ ದೊರೆಯುತ್ತಿದೆ. ಕೃಷಿ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ನಿಯಂತ್ರಣ ಆಗಬೇಕಿದೆ.
ಚಾಲ್ತಿ ಇರುವ ಬೆಂಬಲ ಬೆಲೆ ವ್ಯವಸ್ಥೆಯಲ್ಲಿ ಗಂಭೀರ ಸಮಸ್ಯೆಗಳಿವೆ. ಕೇಂದ್ರ ಸರಕಾರದ `ಕೃಷಿ ಉತ್ಪನ್ನಗಳ ಬೆಲೆ ಆಯೋಗ'(ಸಿಎಸಿಪಿ)ವು ಕೃಷಿ ಉತ್ಪಾದನಾ ವೆಚ್ಚಕ್ಕಿಂತಲೂ ಕಡಿಮೆ ಬೆಲೆ ನಿಗದಿ ಮಾಡುತ್ತದೆ. ಇದರ ಉದ್ದೇಶ `ಮಾರುಕಟ್ಟೆ ವ್ಯವಸ್ಥೆ' ಕೆಲಸ ಮಾಡಲು ಬಿಡಬೇಕು ಎಂಬುದು. ಇದು ಅತ್ಯಂತ ದೋಷಪೂರಿತ, ಅವೈಜ್ಞಾನಿಕ, ಅನ್ಯಾಯುತ ಬೆಲೆ ನಿಗದಿ ಪದ್ದತಿ. ಇದರಿಂದ ರೈತರಿಗೆ ಯಾವ ಅನುಕೂಲವೂ ಇಲ್ಲ. ಈ ಪದ್ದತಿ ಹೋಗಬೇಕು. ಇಂತಹ ಕೆಟ್ಟ ಮಾರುಕಟ್ಟೆಯ ವ್ಯವಸ್ಥೆಯಿಂದಾಗಿಯೇ 3.5 ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆಗಳಿಗೆ ಗುರಿಯಾಗಿರುವುದು.
ದರ ನಿಗದಿ ಮಾತ್ರವಲ್ಲ, ಸಕಾಲದಲ್ಲಿ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡುವುದು ಮುಖ್ಯ. ಕೃಷಿ ಮಾರುಕಟ್ಟೆಯಲ್ಲಿ ಸರಕಾರಗಳು ಸರಿಯಾದ ಸಮಯದಲ್ಲಿ ಮಧ್ಯಪ್ರವೇಶ ಮಾಡಬೇಕು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ)ಗಳಿಗೆ ಈಗ ರೈತರು ಬೆಳೆದ ಕೃಷಿ ಉತ್ಪನ್ನಗಳು ಬರುತ್ತಿರುವುದು ಕೇವಲ ಶೇ. 50 ರಷ್ಟು ಮಾತ್ರ. ಉಳಿದವರು ಬೆಳೆ ಇಡುವಾಗಲೇ ಬೆಳೆಯನ್ನು ನಿಮಗೇ ಕೊಡುತ್ತೇವೆಂದು ಹಣವಂತರಿಗೆ ಮಾತು ಕೊಟ್ಟಿರುತ್ತಾರೆ.
ಸರಕಾರಗಳು ಸುಗ್ಗಿಯ ಕಾಲದಲ್ಲಿ ಮಧ್ಯಪ್ರವೇಶ ಮಾಡುವುದರಲ್ಲಿ ತಡ ಮಾಡುತ್ತವೆ. ಬೆಳೆದ ಬೆಳೆಯನ್ನು ತಮ್ಮ ಬಳಿ ಹೆಚ್ಚು ದಿನ ಇಟ್ಟುಕೊಳ್ಳಲು ಶಕ್ತಿಯಿಲ್ಲದ ಬಡ ರೈತರು, ಗೇಣೀದಾರರು ಸುಗ್ಗಿಯ ಕಾಲದಲ್ಲಿ ಕೃಷಿ ಮಾರುಕಟ್ಟೆಗೆ ಬರುತ್ತಾರೆ. ಇವರುಗಳು ಮಾರುಕಟ್ಟೆಗೆ ಬಂದಾಗ ಕೃಷಿ ಉತ್ಪನ್ನಗಳ ಬೆಲೆ ಕುಸಿದು ಹೋಗಿರುತ್ತದೆ. ಒಟ್ಟು ರೈತರಲ್ಲಿ ಸರಿಸುಮಾರು 80 ಶೇ. ರಷ್ಟು ಸಣ್ಣ ರೈತರೇ ಇದ್ದಾರೆ. ಇವರು ಉತ್ಪಾದನಾ ವೆಚ್ಚಕ್ಕಿಂತಲೂ ಕಡಿಮೆ ಬೆಲೆಗೆ ಬೆಳೆಯನ್ನು ಮಾರುವಂತಾಗುತ್ತದೆ.
ಸರಕಾರ ತಡವಾಗಿ ಮಧ್ಯಪ್ರವೇಶ ಮಾಡಿದಾಗ ವ್ಯಾಪಾರಸ್ಥರು ರೈತರ ಹೆಸರಿನಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಲಾಭ ಮಾಡಿಕೊಳ್ಳುವುದು ಸಹ ಇದೆ. ಸುಗ್ಗಿಗೆ ಮೊದಲೇ ಸರಕಾರದ ಖರೀದಿ ಕೇಂದ್ರಗಳು ಶುರುವಾಗಿರಬೇಕು. ಮತ್ತು ಸರಕಾರಗಳು ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆಯನ್ನು ಘೋಷಿಸಿರಬೇಕು. ಕೃಷಿಬೆಲೆ ಆಯೋಗ ಬೆಲೆ ನಿಗದಿ ಮಾಡುವುದು, ನಂತರ `ಎಫ್ಸಿಐ', `ಎಪಿಎಂಸಿ'ಗಳಿಗೆ ತಿಳಿಸುವುದು. ಆಮೇಲೆ ಜಿಲ್ಲಾಧಿಕಾರಿಗಳ ಮಧ್ಯ ಪ್ರವೇಶ….. ಈಗ ಇರುವ ಈ ಸ್ವರೂಪವು ಅವೈಜ್ಞಾನಿಕವಾಗಿದೆ. ಇದು ರೈತರಿಗೆ ಅನುಕೂಲಕರವಲ್ಲ. ಈ ವ್ಯವಸ್ಥೆಗೆ ಪರ್ಯಾಯ ವ್ಯವಸ್ಥೆ ಬೇಕು.
ರಾಜ್ಯದಲ್ಲಿ ರೇಷ್ಮೆ ಗೂಡಿಗೆ ಸಂಬಂಧಿಸಿ ಡಾ. ಬಸವರಾಜ್ ಸಮಿತಿಯು ತನ್ನ ವರದಿಯನ್ನು ನೀಡಿದೆ. ಆದರೆ ಬೆಲೆ ನಿಗದಿಯಲ್ಲಿ ಕೃಷಿ ಉತ್ಪನ್ನಗಳ ಒಟ್ಟು ಮೌಲ್ಯದ ಶೇ. 50 ಲಾಭವಾಗಿ ಸಿಗಬೇಕು ಎಂಬ ಡಾ. ಸ್ವಾಮಿನಾಥನ್ ಆಯೋಗದ ಶಿಫಾರಸ್ಸನ್ನು ತಪ್ಪಾಗಿ ಅರ್ಥೈಸಿಕೊಂಡು ವರ್ಷಕ್ಕೆ 5 ಬೆಳೆ ತೆಗೆಯುವುದರಿಂದ ಒಂದು ಬೆಳೆಯಲ್ಲಿ ರೈತರಿಗೆ ಶೇ. 10 ರಷ್ಟು ಲಾಭ ಎಂದು ಬೆಲೆ ನಿಗದಿ ಮಾಡಿದೆ. ಈ ತಪ್ಪು ನೀತಿಯನ್ನು ಸರಿಪಡಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ರೈತರ ಲಾಭಾಂಶದ ಕುರಿತ ಈ ಪರಿಕಲ್ಪನೆಯನ್ನು ಒಪ್ಪಲಾಗದು.
ಜನಶಕ್ತಿ: ಎಪಿಎಂಸಿ ಕಾಯ್ದೆಗೆ ತಂದಿರುವ ತಿದ್ದುಪಡಿಯಿಂದ ಬೆಂಬಲ ಬೆಲೆ ಕ್ರಮದ ಮೇಲೆ ಎಂತಹ ಪರಿಣಾಮ ಉಂಟಾಗುತ್ತಿದೆ.?
ಜಿ.ಸಿ. ಬಯ್ಯಾರೆಡ್ಡಿ: ನಮ್ಮ ರಾಜ್ಯದ ರೈತರಲ್ಲಿ ಶೇ. 85 ರಷ್ಟು ಸಣ್ಣ ರೈತರು. ಎಪಿಎಂಸಿ ಕಾಯ್ದೆಗೆ ತಂದಿರುವ ತಿದ್ದುಪಡಿ ಈ ರೈತರ ಹಿತಾಸಕ್ತಿಗೆ ಮಾರಕವಾಗಿದೆ. ಈ ತನಕ ಕೃಷಿ ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ಖರೀದಿಯಲ್ಲಿ ಸರಕಾರದ ಮಧ್ಯಪ್ರವೇಶ ಇರುತ್ತಿತ್ತು. ಹೊಸ ತಿದ್ದುಪಡಿಯಿಂದಾಗಿ ಖಾಸಗಿ ಕೃಷಿ ಮಾರುಕಟ್ಟೆಗೆ ಅವಕಾಶವಾಗಿದೆ. ಇಲ್ಲಿಯವರೆಗೆ ಎಪಿಎಂಸಿಗಳಲ್ಲಿ ತೂಕ, ಪಾವತಿ ಇತ್ಯಾದಿಗಳು ಇದ್ದುದರಲ್ಲಿ ಪಾರದರ್ಶಕವಾಗಿದ್ದವು. ಗುತ್ತಿಗೆ ಕೃಷಿಗಾಗಿ ಕೃಷಿ ನೀತಿಯಲ್ಲಿ ಬದಲಾವಣೆ ತರಲಾಗಿದೆ. ಕೃಷಿಯಲ್ಲಿ ವಿದೇಶಿ ಬಂಡವಾಳ ತರಬೇಕು, ಕೃಷಿಯ ಕಂಪನೀಕರಣವಾಗಬೇಕು.. ಇತ್ಯಾದಿ ಜಾಗತೀಕರಣದ ನೀತಿಗಳ ಭಾಗವಾಗಿ ಈ ತಿದ್ದುಪಡಿ ತರಲಾಗಿದೆ.
ಕೃಷಿ ಮಾರುಕಟ್ಟೆಯಲ್ಲಿ ಇ-ಟ್ರೇಡ್ ಶುರುವಾಗಿದೆ. ಕೃಷಿಯಲ್ಲಿ ಬಂಡವಾಳಗಾರರ ಮಧ್ಯಪ್ರವೇಶಕ್ಕೆ ಮತ್ತು ಈ ಶಕ್ತಿಗಳ ಜೂಜುಕೋರತನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಎಪಿಎಂಸಿ ಎಂಬುದು ರೈತರ ಪಾಲಿಗೆ ಒಂದು ಹಂತದವರೆಗೆ ರಕ್ಷಣಾತ್ಮಕವಾದ ವ್ಯವಸ್ಥೆಯಾಗಿತ್ತು. ಈಗ ಖಾಸಗಿ ಕ್ಷೇತ್ರಕ್ಕೆ ಅವಕಾಶ ಮಾಡಿಕೊಡುತ್ತಿರುವುದರಿಂದ ಎಪಿಎಂಸಿ ವ್ಯವಸ್ಥೆ ವ್ಯರ್ಥವಾಗಿ ಅಪ್ರಸ್ತುತ ಎನಿಸಿಕೊಳ್ಳುತ್ತದೆ.
ಹಿಂದೆ ಕೃಷಿ ಭೂಮಿಯನ್ನು ಗುತ್ತಿಗೆಗೆ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶ ಇರಲಿಲ್ಲ. ಈಗ ಅವಕಾಶ ಮಾಡಿಕೊಡಲಾಗಿದೆ. ತೋಟದಿಂದ ನೇರ ಮಾಲ್ಗಳಿಗೆ ಕೃಷಿ ಉತ್ಪನ್ನಗಳು ಬರುವ ವ್ಯವಸ್ಥೆಯಾಗಿದೆ.