text stringlengths 0 61.5k |
|---|
ಕೃಷಿ ಕ್ಷೇತ್ರದಲ್ಲಿ ಬಡರೈತರ ಸಂಖ್ಯೆ ಹೆಚ್ಚಾಗುತ್ತಿದೆ. ಕೃಷಿ ಹೂಡಿಕೆ ದುಬಾರಿಯಾಗಿದೆ. ನಿಗದಿತ ಮಾರುಕಟ್ಟೆ ಇಲ್ಲವಾಗಿದೆ. ಇದರಿಂದಾಗಿ ಸಣ್ಣ ರೈತರು, ಬಡ ರೈತರು ತಮ್ಮ ತುಂಡು ಭೂಮಿಯನ್ನು ಶ್ರೀಮಂತರ ಕೈಗೆ ಒಪ್ಪಿಸಬೇಕಾದ ದುರಂತ ಸ್ಥಿತಿ ಬಂದಿದೆ. ಅಂದರೆ ಸಣ್ಣ ಮತ್ತು ಮಧ್ಯಮ ರೈತರಿಗೆ ಎಲ್ಲ ರೀತಿಯ ನೆರವು ನೀಡಿ ಕೃಷಿ ಅಭಿವೃದ್ದಿ ಪಡಿಸುವ ಬದಲಿಗೆ ಕೃಷಿಯನ್ನೇ ಕಂಪನೀಕರಣ ಮಾಡಲು ಸರಕಾರ ಹೊರಟಿದೆ. ಬಹುತೇಕ ರಾಜ್ಯ ಸರಕಾರಗಳು ಸಹ ಇದೇ ಹಾದಿ ಹಿಡಿದಿವೆ. ದೇವರಾಜ ಅರಸು ಅವರು ತಂದ ಭೂಸುಧಾರಣಾ ಕಾಯ್ದೆಯಲ್ಲಿ ಗೇಣಿ ಪದ್ದತಿಯನ್ನು ರದ್ದುಪಡಿಸಲಾಗಿದೆ. |
ಕಾನೂನು ದೃಷ್ಟಿಯಿಂದ ನೋಡಿದಲ್ಲಿ ರಾಜ್ಯದಲ್ಲಿ ಗೇಣಿ ಪದ್ದತಿ ಇಲ್ಲ. |
ಆದರೆ ಎಡರಂಗ ಸರಕಾರ ಬಂದಾಗ ಪಶ್ಚಿಮ ಬಂಗಾಳದಲ್ಲಿ ಗೇಣಿದಾರರನ್ನು ಗುರುತಿಸಿ ಗೇಣಿ ಹಕ್ಕನ್ನು ವಂಶಪಾರಂಪರ್ಯವಾಗಿ ಪಡೆಯುವಂತೆ ಕಾನೂನು ತರಲಾಯಿತು. ಇತ್ತೀಚೆಗೆ ರೈತ ಚಳುವಳಿಯ ಒತ್ತಾಯದಿಂದ ಆಂಧ್ರಪ್ರದೇಶದಲ್ಲಿಯೂ ಗೇಣಿ ಹಕ್ಕನ್ನು ನೀಡುವ ಕಾನೂನು ತಿದ್ದುಪಡಿ ತರಲಾಗಿದೆ. ಕರ್ನಾಟಕದಲ್ಲಿ ಹಾಗೂ ದೇಶದಲ್ಲಿಯೂ ಬೇರೆ ಬೇರೆ ತರಹದ ಗೇಣಿ ಪದ್ದತಿಗಳಿವೆ. ಅದನ್ನು ಗುರುತಿಸಬೇಕು. |
ಭೂಮಿಯ ಒಡೆತನದ ಪಹಣಿ ಹಕ್ಕನ್ನು ರೈತರಿಗೆ ಉಳಿಸಿ `ಭೂಮಿಯ ಸ್ವಾಧೀನ'ದ ಪ್ರಶ್ನೆಯಲ್ಲಿ ಗೇಣಿದಾರರ ಹೆಸರನ್ನು ದಾಖಲಿಸಬೇಕು. ಅಂದರೆ ಗೇಣಿ ಇರುವುದು ವಾಸ್ತವ ಎಂದು ಒಪ್ಪಿಕೊಳ್ಳಬೇಕು. |
ಹೀಗಾದಲ್ಲಿ ರೈತರಿಗೆ ಗೇಣಿ ಹಕ್ಕು ದೊರೆಯುತ್ತದೆ. ಬ್ಯಾಂಕ್ ಸಾಲ, ಬೆಳೆ ನಷ್ಟವಾದಾಗ ಪರಿಹಾರ ಇತ್ಯಾದಿಗಳನ್ನು ಪಡೆದುಕೊಳ್ಳಲು ಗೇಣಿದಾರರಿಗೂ ಹಕ್ಕು ದೊರೆಯುತ್ತದೆ. ಪಶ್ಚಿಮ ಬಂಗಾಳದಲ್ಲಿ ಭೂಸುಧಾರಣೆ ತರುವ ಮೊದಲು ಗೇಣಿದಾರರ ನೋಂದಣಿಯನ್ನು ನಡೆಸಲಾಯಿತು. ನಂತರ ಭೂಸುಧಾರಣೆ ಜಾರಿಗೆ ತರಲಾಯಿತು. ಆದರೆ ಕರ್ನಾಟಕದಲ್ಲಿ ಗೇಣಿದಾರರನ್ನು ದಾಖಲಿಸದೇ ಹೋದದ್ದರಿಂದ ಭೂಮಾಲಕರು ಸರಿ ಸುಮಾರು ಶೇ. 80 ರಷ್ಟು ಬಡ ಗೇಣಿದಾರರನ್ನು ಒಕ್ಕಲೆಬ್ಬಿಸಿ ಭೂಮಿಯ ಮೇಲಿನ ಹಿಡಿತವನ್ನು ಭಧ್ರ ಪಡಿಸಿಕೊಂಡರು. ಈಗಲಾದರೂ ನಿಜಕ್ಕೂ ವ್ಯವಸಾಯ ಮಾಡುವ ಗೇಣಿದಾರರನ್ನು ದಾಖಲಿಸುವ ಕೆಲಸ ಆಗಬೇಕು. ಈ ಸಂಬಂಧ ಇತ್ತೀಚೆಗೆ ಆಂಧ್ರಪ್ರದೇಶದಲ್ಲಿ ನಡೆದ ಗೇಣಿ ಹೋರಾಟದ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ಮತ್ತು ಇತರ ಕಡೆಗಳಲ್ಲೂ ಚಳುವಳಿ ನಡೆಸಬೇಕಾದ ಅಗತ್ಯವಿದೆ. |
ಜನಶಕ್ತಿ: ಕೇಂದ್ರ ಸರಕಾರ ನಿಗದಿ ಮಾಡಿರುವ ಬೆಂಬಲ ಬೆಲೆಗಿಂತ ಹೆಚ್ಚಿನ ದರವನ್ನು ಬೆಂಬಲ ಬೆಲೆಯಾಗಿ ನಿಗದಿ ಮಾಡಬಾರದು ಎಂದು ರಾಜ್ಯಗಳ ಮೇಲೆ ಕೇಂದ್ರ ಯಾಕೆ ಒತ್ತಡ ಹಾಕುತ್ತಿದೆ.? ಈ ಸಂಬಂಧ ರಾಜ್ಯ ಸರಕಾರದ ನಿಲುವು ಹಾಗೂ ರೈತರ ಮೇಲಿನ ಪರಿಣಾಮವೇನು? |
ಜಿ.ಸಿ. ಬಯ್ಯಾರೆಡ್ಡಿ: ಕೇಂದ್ರ ಸರಕಾರ ರಾಜ್ಯ ಸರಕಾರಗಳಿಗೆ ಪತ್ರ ಬರೆದು ಕೃಷಿ ಉತ್ಪನ್ನಗಳಿಗೆ ಸಿಎಸಿಪಿ ನಿಗದಿ ಮಾಡಿದ್ದಕ್ಕಿಂತ ಹೆಚ್ಚು ದರವನ್ನು ನೀಡಬಾರದು ಎಂದು ಒತ್ತಾಯ ಮಾಡಿದೆ. "ಮಾರುಕಟ್ಟೆಯನ್ನು ನಾಶ ಮಾಡುತ್ತದೆ.. ಖಾಸಗೀ ಖರೀದಿದಾರರು ಹೊರ ಹೋಗುತ್ತಾರೆ..'' ಎಂಬ ಕಾರಣಗಳನ್ನು ಕೇಂದ್ರ ಸರಕಾರ ಹೇಳುತ್ತಿದೆ. |
ಇದಲ್ಲದೇ "ಕನಿಷ್ಟ ಬೆಂಬಲ ಬೆಲೆ ಆಧಾರದಲ್ಲಿ ಪಡಿತರ ವ್ಯವಸ್ಥೆಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಖರೀದಿ ಮಾಡಿ. ಅದಕ್ಕಿಂತ ಹೆಚ್ಚು ಖರೀದಿ ಮಾಡಿದರೆ ಅದು ರಾಜ್ಯ ಸರಕಾರಗಳ ಹೊಣೆ.'' ಎಂದೂ "ರಾಜ್ಯ ಸರಕಾರವು ಬೆಂಬಲ ಬೆಲೆಯಲ್ಲಿ ರೈತರಿಗೆ ಬೋನಸ್ ಕೊಟ್ಟರೆ ಎಫ್ಸಿಐ ಅಂತಹ ಕಡೆ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡುವುದಿಲ್ಲ'' ಎಂದೂ ಬೆದರಿಸಲಾಗುತ್ತಿದೆ. |
ದೇಶ ವಿಶಾಲ ವಾದದ್ದು, ಪಂಜಾಬ್ ಕರ್ನಾಟಕ ಎರಡೂ ಒಂದೇ ಅಲ್ಲ. ಇಡೀ ದೇಶಕ್ಕೆ ಒಂದೇ ದರ ಎಂಬುವುದು ಆಗುವುದಿಲ್ಲ. "ರಾಜ್ಯ ಸರಕಾರ ಬೋನಸ್ ನೀಡಿದರೆ ಕೃಷಿ ಉತ್ಪನ್ನಗಳನ್ನು ಗೋದಾಮುಗಳಲ್ಲಿ ಇರಿಸಲು ಅವಕಾಶ ನೀಡುವುದಿಲ್ಲ. ಹಣಕಾಸು ಹೊಣೆಯನ್ನು ರಾಜ್ಯವೇ ಹೊರಬೇಕು.'' ಎಂದೂ "ಕೇಂದ್ರ ಸರಕಾರ ರಾಜ್ಯ ಸರಕಾರಗಳಿಗೆ ನೀಡುವ ವಿವಿಧ ಅನುದಾನಗಳನ್ನು ಕಡಿತ ಮಾಡಲಾಗುವುದು.'' ಎಂದು ಬೆದರಿಕೆ ಹಾಕಲಾಗುತ್ತಿದೆ. |
ಕೃಷಿಯ ಕಂಪನೀಕರಣಕ್ಕೆ ಪೂರಕವಾಗಿ ಕೃಷಿ ಮಾರುಕಟ್ಟೆಯಲ್ಲಿ ಖಾಸಗಿ ಬಂಡವಾಳದ ಹುಚ್ಚು ಹರಿದಾಟಕ್ಕೆ ಅವಕಾಶ ಮಾಡಿಕೊಡಬೇಕೆಂಬ ಉದ್ದೇಶದಿಂದ ರೈತ ವಿರೋಧಿಯಾದ ನೀತಿಯನ್ನು ಜಾರಿಗೆ ತರಲಾಗುತ್ತಿದೆ. |
ಇಂತಹ ಪರಿಸ್ಥಿತಿಯಲ್ಲಿ ರೈತ ಚಳುವಳಿಗಳಲ್ಲದೇ ರಾಜ್ಯ ಸರಕಾರಗಳೂ ರಾಜಕೀಯ ಹೋರಾಟಕ್ಕೆ ಮುಂದಾಗಬೇಕು. ಹಿಂದೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿಗಳಾಗಿ ಜ್ಯೋತಿಬಸು, ಕೇರಳ, ತ್ರಿಪುರದ ಮುಖ್ಯಮಂತ್ರಿಗಳು, ಆಂಧ್ರದ ಮುಖ್ಯಮಂತ್ರಿಗಳಾಗಿ ಎನ್.ಟಿ. ರಾಮರಾವ್, ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಫಾರುಕ್ ಅಬ್ದುಲ್ಲಾ ಮುಂತಾದವರು ಮುಖ್ಯಮಂತ್ರಿಗಳ ಸಭೆಗಳಲ್ಲಿ ಇಂತಹ ನೀತಿಗಳ ವಿರುದ್ದ, ರಾಜ್ಯ ಸರಕಾರಗಳಿಗೆ ಬೆಂಬಲ ಬೆಲೆ ನಿಗದಿ ಅಧಿಕಾರ ಬೇಕೆಂದು ದೃಢವಾಗಿ ಒಗ್ಗಟ್ಟಿನಿಂದ ಹೋರಾಟ ನಡೆಸುತ್ತಿದ್ದರು. ಆದರೆ ದುರದೃಷ್ಟವಶಾತ್ ಇಂತಹ ಹೋರಾಗಳು ಇತ್ತೀಚೆಗೆ ನಡೆಯುತ್ತಿಲ್ಲ. ವಿವಿಧ ರಾಜ್ಯಗಳಲ್ಲಿ ಅಧಿಕಾರ ನಡೆಸುತ್ತಿರುವ ಬಹುತೇಕ ಪ್ರಾದೇಶಿಕ ಪಕ್ಷಗಳು ಸಹ ಖಾಸಗಿ ಮಾರುಕಟ್ಟೆ ನೀತಿಗಳನ್ನೇ ಒಪ್ಪಿ ಜಾರಿ ಮಾಡುತ್ತಿರುವುದೇ ಇದಕ್ಕೆ ಮುಖ್ಯ ಕಾರಣ. ಈ ಪರಿಸ್ಥಿತಿ ಬದಲಾಗಬೇಕು. ರಾಜ್ಯ ಸರಕಾರಗಳ ಕಡೆಯಿಂದ ಈಗಲೂ ಅಂತಹ ಹೋರಾಟ ಅಗತ್ಯವಾಗಿದೆ. |
ಎಲ್ಲಕ್ಕಿಂತ ಮುಖ್ಯವಾಗಿ ಇಂತಹ ಸನ್ನಿವೇಶದಲ್ಲಿ ಜನಚಳುವಳಿಯೇ ಇದಕ್ಕೆ ಪರಿಹಾರ. ಈ ದೆಸೆಯಲ್ಲಿ ಪ್ರಬಲ ಚಳುವಳಿ ಕಟ್ಟಬೇಕಾದ ತುರ್ತು ಅವಶ್ಯಕತೆ ಇದೆ. |
Share this: Kalamani |
By ಜನಶಕ್ತಿ • Posted in ಪ್ರಧಾನ ಲೇಖನ, ವರದಿಗಳು • Tagged agriculchar, aiks, APMC, ಜೂಜುಕೋರ ಬಂಡವಾಳಿಗರ ಹಿತ ಕಾಯುವ ನೀತಿ ಹಿಮ್ಮೆಟ್ಟಿಸಿ ಸಮಗ್ರ ಪರ್ಯಾಯ ರೂಪಿಸಬೇಕು ಕೃಷ�, gc bayyareddy, GV Sriramareddy, INDIAN agriculchar, KARNATAKA agriculchar, kprs, maruthi manpade, sentral goverment, state government, U Basavaraju |
ಹುಡುಕು ಕೊಂಡಿ |
ಹೆಚ್.ಆರ್.ನವೀನ್ ಕುಮಾರ್ |
ವಿಷಯಗಳು ವಿಭಾಗವನ್ನು ಆರಿಸಿ "ಒಳ್ಳೆಯ ದಿನಗಳ" ಭ್ರಮೆಯೊಡೆದ ಒಂದು ವರ್ಷ ವಚನ-ಮಂಥನ ಅಥಿತಿ ಅಂಕಣ ಆಡಿಯೋ ಆದಿವಾಸಿ ಬದುಕು ಇತ್ತೀಚಿನ ವಿದ್ಯಾಮಾನ ಈ ವಾರ ಕಡಲ ತಡಿ ಕವನಗಳು ಕಾರ್ಮಿಕ ಭವಣೆ ಕಾರ್ಮಿಕ ಲೋಕ ಕುರುಡು ಕಾಂಚಾಣ ಕ್ಯಾತೆ ಕ್ಯಾಸ್ಟೋ ಕಥೆ ಕ್ಯಾಸ್ಟ್ರೋ ಕಥೆ ಕ್ರೀಡೆ ಚಿಂತನಾಗೋಷ್ಠಿ ಚಿತ್ರ ಸುದ್ದಿ ಚುಟುಕುಗಳು ಚುನಾವಣೆ ಚೋಮನ ದುಡಿ ಜಗದ ಸುತ್ತ ಜಗದಗಲ ಜನತಾ ಸಮರ ಜನಾರೋಗ ಜೋತಿ ಬಸು ನೆನಪು ಜ್ಷಾನ – ವಿಜ್ಷಾನ ದಲಿತ ಲೋಕ ದುಂಡು ಮೇಜಿ ಸಭೆ ನವಜೀವನ ನಿಮ್ಮ ಪ್ರಶ್ನೆ ನಿರ್ಣಯ ನಿವೇಶನ ಕೊಡುಗೆ ನೆರೆ ಹೊರೆ ಪತ್ರಿಕಾ ಹೇಳಿಕೆಗಳು ಪಿ.ಡಿ. ಸಂಪಾದಕೀಯ ಪುಸ್ತಕ ಪರಿಚಯ ಪುಸ್ತಕ ವಿಮರ್ಶೆ / ಬಿಡುಗಡ ಪ್ರಕಾಶ್ ಡೈರಿ ಪ್ರಚಲಿತ ವಿಧ್ಯಮಾನ ಪ್ರಧಾನ ಲೇಖನ ಪ್ರವಾಸ ಕಥನ ಪ್ರಸಕ್ತ ಬಿಜೆಪಿ ದರ್ಬಾರ್ ಮರೆತೇನೆಂದರೆ ಮರೆಯಲಿ ಹ್ಯಾಂಗ ಮಾವೋ ತ್ಸೆ ತುಂಗ ಮಹಿಳಾ ಜಗತ್ತು ಮಾತೆಂದರೆ ಇದು ಮಾಧ್ಯಮ ಮಂಥನ ಮುಖಪುಟ ಮೂಢ ನಂಬಿಕೆ ಮೂಢನಂಬಿಕೆ ಯುಪಿಎ-೨ ದರ್ಬಾರ್ ಯುವಜನ ದಾರಿ ಯೂರೋ ಬಿಕ್ಕಟ್ಟು ರಂಗಭೂಮಿ ರಾಜ್ಯಗಳ ಸುತ್ತ ರೈತ -ಕೂಲಿ ಬದುಕು ವರದಿಗಳು ವಿಕಲಚೇತನರು ವಿಚಾರ ಸಂಕಿರಣ ವಿಡಿಯೋ ವಿದ್ಯಾರ್ಥಿ ಧ್ವನಿ ಶ್ರದ್ದಾಂಜಲಿ ಸಂದರ್ಶನ ಸಂಪಾದಕೀಯ ಸಮುದಾಯ ಸಮ್ಮೇಳನಗಳು ಸಾಂಸ್ಕೃತಿಕ ಸಾಹಿತ್ಯ ಸಿನಿಮಾ ಸುದ್ಧಿಬಿಂಬ ಸ್ಮರಣೆ `ಒಳ್ಳೆಯ ದಿನ'ಗಳ ಡೈರಿ |
ಹಿಂದಿನ ಸಂಚಿಕೆಗಳು ತಿಂಗಳನ್ನು ಆರಿಸಿ ಜುಲೈ 2016 ಜೂನ್ 2016 ಮೇ 2016 ಏಪ್ರಿಲ್ 2016 ಫೆಬ್ರವರಿ 2016 ಜನವರಿ 2016 ಡಿಸೆಂಬರ್ 2015 ನವೆಂಬರ್ 2015 ಅಕ್ಟೋಬರ್ 2015 ಸೆಪ್ಟೆಂಬರ್ 2015 ಆಗಷ್ಟ್ 2015 ಜುಲೈ 2015 ಜೂನ್ 2015 ಮೇ 2015 ಏಪ್ರಿಲ್ 2015 ಮಾರ್ಚ್ 2015 ಫೆಬ್ರವರಿ 2015 ಜನವರಿ 2015 ಡಿಸೆಂಬರ್ 2014 ನವೆಂಬರ್ 2014 ಅಕ್ಟೋಬರ್ 2014 ಸೆಪ್ಟೆಂಬರ್ 2014 ಆಗಷ್ಟ್ 2014 ಜುಲೈ 2014 ಜೂನ್ 2014 ಮೇ 2014 ಏಪ್ರಿಲ್ 2014 ಮಾರ್ಚ್ 2014 ಫೆಬ್ರವರಿ 2014 ಜನವರಿ 2014 ಡಿಸೆಂಬರ್ 2013 ನವೆಂಬರ್ 2013 ಅಕ್ಟೋಬರ್ 2013 ಆಗಷ್ಟ್ 2013 ಜುಲೈ 2013 ಜೂನ್ 2013 ಮೇ 2013 ಏಪ್ರಿಲ್ 2013 ಮಾರ್ಚ್ 2013 ಮಾರ್ಚ್ 2012 ಫೆಬ್ರವರಿ 2012 ಜನವರಿ 2012 ಸೆಪ್ಟೆಂಬರ್ 2011 ಜೂನ್ 2011 ಮೇ 2011 ನವೆಂಬರ್ 2010 ಸೆಪ್ಟೆಂಬರ್ 2010 ಆಗಷ್ಟ್ 2010 ಜುಲೈ 2010 ಜೂನ್ 2010 ಮೇ 2010 ಏಪ್ರಿಲ್ 2010 ಮಾರ್ಚ್ 2010 ಫೆಬ್ರವರಿ 2010 ಜನವರಿ 2010 |
ಬಿಜೆಪಿ ಕಚೇರಿಯಲ್ಲಿ ವೃಕ್ಷಾರೋಪಣ - SuddiKirana.com |
Home ಸಮಾಚಾರ ಜಿಲ್ಲಾ ಸುದ್ದಿ ಬಿಜೆಪಿ ಕಚೇರಿಯಲ್ಲಿ ವೃಕ್ಷಾರೋಪಣ |
ಉಡುಪಿ: ಕೃಷಿ ಸಚಿವ ಬಿ. ಸಿ. ಪಾಟೀಲ್ ಶನಿವಾರ ಉಡುಪಿ ನಗರ ಬಿಜೆಪಿ ಕಚೇರಿಗೆ ಭೇಟಿ ನೀಡಿ ಪಕ್ಷದ ಸಂಸ್ಥಾಪಕ ರಾಷ್ಟ್ರೀಯ ವಾದಿ ಡಾ| ಶಾಮಪ್ರಸಾದ್ ಮುಖರ್ಜಿ ಸ್ಮರಣಾರ್ಥ ಪಕ್ಷ ಹಮ್ಮಿಕೊಂಡಿರುವ ವೃಕ್ಷಾರೋಪಣ ಕಾರ್ಯಕ್ರಮ ಪ್ರಯುಕ್ತ ನಗರ ಬಿಜೆಪಿ ಕಚೇರಿ ಆವರಣದಲ್ಲಿ ಗಿಡ ನೆಟ್ಟರು. |
ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ಶಾಸಕ ಕೆ. ರಘುಪತಿ ಭಟ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ ಶೆಟ್ಟಿ, ಜಿ. ಪಂ. ಮಾಜಿ ಅಧ್ಯಕ್ಷ ದಿನಕರಬಾಬು, ಪಕ್ಷ ಪ್ರಮುಖರಾದ ಶಿಲ್ಪಾ ಸುವರ್ಣ, ನಳಿನಿ ಪ್ರದೀಪ್ ರಾವ್, ಸತ್ಯಾನಂದ ನಾಯಕ್, ಗೀತಾಂಜಲಿ ಸುವರ್ಣ, ಗುರುಪ್ರಸಾದ್ ಶೆಟ್ಟಿ, ಗಿರೀಶ್ ಎಂ. ಅಂಚನ್, ಸುರೇಶ್ ಶೆಟ್ಟಿ ಗುರ್ಮೆ, ಶಿವಕುಮಾರ್, ಮಾರಾಳಿ ಪ್ರತಾಪ್ ಹೆಗ್ಡೆ, ವೀಣಾ ನಾಯ್ಕ, ಕಮಲಾಕ್ಷ ಹೆಬ್ಬಾರ್, ಅಶೋಕ್ ಹೇರೂರು, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ ಮಣಿಪಾಲ ಮತ್ತು ದಿನೇಶ್ ಅಮೀನ್ ಮೊದಲಾದವರಿದ್ದರು. |
Previous articleಎಂಓ4 ಬಿತ್ತನೆ ಬೀಜ ಕೊರತೆಯಾಗದಂತೆ ಕ್ರಮ |
Next articleಮೋದಿ ಸರಕಾರದ ಅಘೋಷಿತ ತುರ್ತು ಪರಿಸ್ಥಿತಿ ತೊಲಗಲಿ |
ಜಿಲ್ಲೆಯಾದ್ಯಂತ ಮಹಾ ಶಕ್ತಿಕೇಂದ್ರ ಸಕ್ರಿಯಗೊಳಿಸಲು ಕರೆ |
ಸುದ್ದಿಕಿರಣ ವರದಿ ಬುಧವಾರ, ಮೇ 4 ಜಿಲ್ಲೆಯಾದ್ಯಂತ ಮಹಾ ಶಕ್ತಿಕೇಂದ್ರ ಸಕ್ರಿಯಗೊಳಿಸಲು ಕರೆ ಉಡುಪಿ: ಮೇರಾ ಬೂತ್ ಸಬ್ಸೇ ಮಜ್ಬೂತ್ ಎಂಬ ತತ್ವದಡಿ ಪ್ರತಿಯೊಂದು ಬೂತ್ ಗಳನ್ನು ಗೆಲ್ಲುವ ಗುರಿಯೊಂದಿಗೆ ಬೂತ್ ಮತ್ತು ಶಕ್ತಿಕೇಂದ್ರಗಳನ್ನು ಸದೃಢಗೊಳಿಸುವ ನಿಟ್ಟಿನಲ್ಲಿ... |
ದೀಪದ ಬುಡದಲ್ಲಿ… | Utthana |
Utthana > ಉತ್ಥಾನ ಮಾರ್ಚ್ 2016 > ದೀಪದ ಬುಡದಲ್ಲಿ… |
`ಹಣತೆಯಲ್ಲಿ ದೀಪ ಉರಿಯೆ ಬೆಳಗಿ ಬದುಕ ಕಾಣುವೆ.' ಒಂದು ದೀಪಕ್ಕಿರುವ ಶಕ್ತಿ ಎಂಥದ್ದು? ಅದರ ಸುತ್ತ ಆವರಿಸಿರುವ ಪ್ರಭೆ ಎಷ್ಟು ಶುಭ್ರ! ಒಂದೇ ಒಂದು ಸಣ್ಣ ಧೂಳಿನ ಕಣವೂ ಇಲ್ಲ ಅದರಲ್ಲಿ. ಆದರದು ಎಲ್ಲಿವರೆಗೆ? ಬತ್ತಿ ಪೂರ್ತಿ ಉರಿದು ಖಾಲಿಯಾಗುವವರೆಗೆ. ಆಮೇಲೆ ಕೊನೆಯಲ್ಲಿ ಒಂದು ಚಿಕ್ಕ ಬೂದಿಯ ಚೂರು. ಬತ್ತಿಯನ್ನು ಹೊತ್ತುಕೊಂಡ ಮಣ್ಣ ಹಣತೆಗೂ ಒಂದು ರೀತಿ ಬೇಜಾರು. ಅಯ್ಯೋ ಇನ್ಯಾವಾಗ ದೀಪ ಹೊತ್ತು ತಿರುಗಾಡುವುದೇನೋ ಎಂಬ ಕಾತರ. ಆದರೆ ಬದುಕು ಇಷ್ಟಕ್ಕೇ ಮುಗಿದರೆ ಅದರಲ್ಲೇನಿದೆ ವಿಶೇಷ? ಆ ಪುಟ್ಟ ಹಣತೆ ಯಾರ ಜೊತೆಗೂ ಮಾತಾಡದೆ? ಮನೆಯೊಳಗೆ ಬೆಳ್ಳಿ ನೀಲಾಂಜನವೇ ದೇವರ ಮುಂದೆ ಜಂಭದಿಂದ ವಿಜ್ರಂಬಿಸುವುದು. ಹಾಗಾದರೆ ಹಣತೆಗೆ ಎಲ್ಲಿದೆ ಸ್ಥಾನ? ಮನೆಯ ಹೊಸ್ತಿಲ ಹೊರೆಗೆ. ತುಳಸಿಯ ಕಟ್ಟೆಯ ಬಳಿಯಲ್ಲಿ. ಯಾವತ್ತೂ ಕಾಯುವ ಗೆಳತಿಯಂತೆ ಕಾಯುವ ತುಳಸಿ ಹಣತೆ ಬರುವ ಕ್ಷಣ ಒಂದು ಗಳಿಗೆ ತಡವಾದರೂ ಚಟಪಡಿಸುತ್ತದೆ. |
`ಯಾಕಿಷ್ಟು ತಡ ಇವತ್ತು? ಆಗಲೇ ಕಪ್ಪು ಕತ್ತಲೆ ಆಗಿಯಾಗಿದೆ?' |
`ಅಯ್ಯೋ ಅವರು ಕಳುಹಿಸಿಕೊಡಬೇಕಲ್ಲಾ? ಬರಿ ನಾನು ಬರುವುದಾದರೆ ಎಂದೋ ಬಂದೇನು.' |
`ಮತ್ತೆ ನಿನ್ನ ಜೊತೆ ಇನ್ಯಾರಿದ್ದಾರೆ ಬರುವವರು? ದಿನವೂ ನಾವಿಬ್ಬರೇ ತಾನೆ ಹರಟೆ ಹೊಡೆಯುವುದು?' |
`ಅದು ಹೌದು. ಆದರೆ ಈ ದೀಪವಿಲ್ಲದೆ ನನ್ನನ್ನು ಮೂಸುವವರು ಯಾರು?' |
`ಹೋ ಅದೂ ಸರಿಯೇ? ಈ ದೀಪದಿಂದಲ್ಲವೇ ನಾನೂ ಈ ಕಪ್ಪಿನಲ್ಲಿ ಕೃಷ್ಣ ತುಳಸಿಯಂತೆ ಹೊಳೆಯುವುದು.' |
`ಎಲ್ಲರಿಗೂ ಅವರವರ ಚಿಂತೆ.' |
`ಸರಿ ಈಗ ತಡವಾದುದಕ್ಕೆ ಕಾರಣವಾದರೂ ಏನು?' |
`ಅದೇ ಅಮ್ಮಾವ್ರು ತಡವಾಗಿ ಮನೆಗೆ ಬಂದದ್ದು.' |
`ನಿನ್ನೆ ಅದೇ ಕಾರಣಕ್ಕೆ ಜಗಳ ಆಗಿತ್ತಲ್ಲವೇ?' |
`ಹ್ಞೂಂ..ನಿನ್ನೆ ಯಜಮಾನ್ರು ತಡವಾಗಿ ಬಂದಿದ್ರು.' |
`ಅಯ್ಯೋ ಗಂಡ ಹೆಂಡಿರ ಜಗಳಕ್ಕೊಂದು ಕಾರಣ ಬೇಡವೇ?' |
`ಎಲ್ಲವೂ ಸಕಾರಣವೇ. ಅರ್ಥವಿಲ್ಲದ ಸಂಬಂಧಕ್ಕೊಂದು ಅನರ್ಥವಾದ ಬಂಧನ.' |
`ಅವರಿಬ್ಬರೂ ಪ್ರೀತಿಸಿ ಮದುವೆ ಆದವರಲ್ಲವೇ?' |
`ಅವರದ್ದೆಂಥ ಪ್ರೀತಿ ಎಂಬುದು ಎಲ್ಲರಿಗೂ ತಿಳಿದದ್ದೇ.' |
`ಮನೆಯವರು ಬಂಧು ಬಳಗದವರ ವಿರೋಧ ಕಟ್ಟಿಕೊಂಡು ಮದುವೆಯಾಗುವುದು ಈ ಸುಖಕ್ಕೇ ಏನು?' |
`ಅದೊಂದು ಬಗೆಯ ನಾಟಕ. ಯಾರದೋ ಜೊತೆಗೆ ಮದುವೆಯಾದರೆ ಅವರನ್ನು ಅರ್ಥ ಮಾಡಿಕೊಂಡು ಜಗಳವಾಡುವುದಕ್ಕೆ ಕೆಲವು ವರ್ಷಗಳೇ ಬೇಕಾಗುತ್ತವೆ. ಇದು ಹಾಗಲ್ಲವಲ್ಲಾ? ಮದುವೆ ಆದಂದಿನಿಂದಲೇ ಮಹಾಭಾರತ ಶುರುಹಚ್ಚಿಕೊಳ್ಳಬಹುದು. ನನಗಂತೂ ಮಹಾಭಾರತ ಮುಗಿದು ಕಲಿಯುಗ ಬರಬಾರದೇ ಎನಿಸುತ್ತಿದೆ. ನೀನಾದರೋ ಪವಿತ್ರ ತುಳಸಿ. ಹಾಯಾಗಿ ಹೊರಗಿರುವವವಳು. ನಾನು ದೀಪವಿದ್ದರೆ ಮಾತ್ರ ಹೊರಗೆ. ಉಳಿದಂತೆ ಒಳಗೆ.' |
`ಸುಯ್…ಸ್…' |
`ಅಯ್ಯೋ ಇದೇನಿದು ಇಷ್ಟೊಂದು ರಭಸದ ಗಾಳಿ? ಕಾಪಾಡಪ್ಪಾ' |
`ಇಂಥಾ ಗಾಳಿಗಲ್ಲವೇ ನಮ್ಮನ್ನಡಗಿಸುವ ಶಕ್ತಿ ಇರುವುದು? ಭೂಮಿಯೊಳಗೆ ಬೇರೂರಿ ಭದ್ರವಾಗಿ ನಿಂತಿರುವ ನೀನೇ ಇಷ್ಟೊಂದು ಭಯ ಪಟ್ಟರೆ ನನ್ನ ಪಾಡೇನು?' |
`ಈ ಗಾಳಿಗಿಂತಲೂ ನಿನ್ನೊಳಗಿರುವ ದೀಪದ ನರ್ತನವೇ ನನ್ನ ಭಯವನ್ನು ಹೆಚ್ಚಿಸುವುದು. ಎಂಥಾ ಅತಂತ್ರ ಸ್ಥಿತಿ?' |
`ಈ ವಿಶ್ವದಲ್ಲಿರುವ ಪ್ರತಿಯೊಂದು ಜೀವವೂ ಪ್ರತಿಯೊಂದು ವಸ್ತುವೂ ಅಂತೆಯೇ. ಯಾವಾಗ ಯಾವ ಕ್ಷಣದಲ್ಲಾದರೂ ಇಲ್ಲವಾಗಬಹುದು. ಇದು ನಿಜವೇ ಆದರೂ ಈ ವಿಶ್ವದ ಮೇಲೆ ಮನುಷ್ಯನ ಅಟ್ಟಹಾಸ ಮಾತ್ರ ದಿನದಿಂದ ದಿನಕ್ಕೆ ಮೇರೆ ಮೀರುವಂತಿದೆ.' |
`ವಿನಾಶ ಕಾಲೇ ವಿಪರೀತ ಬುದ್ಧಿ. ಅವನ ಅಂತ್ಯ ಅವನದೇ ಕೈಯ್ಯಲ್ಲಿ. ಪರಮಾತ್ಮ ಸುಮ್ಮನೇ ಹೇಳಿಯಾನೇ- ನಮ್ಮ ಮನಸ್ಸೇ ನಮಗೆ ಮಿತ್ರ, ನಮ್ಮ ಮನಸ್ಸೇ ನಮಗೆ ಶತ್ರು. ಅರೇ ನೋಡಲ್ಲಿ. ತಾಮ್ರದ ತಂಬಿಗೆಯೊಂದು ಹೊಸ್ತಿಲು ದಾಟಿ ಉರುಳಿ ನಿನ್ನ ಕಡೆಗೇ ಬರುತ್ತಿದೆ. ತಪ್ಪಿಸಿಕೋ.' |
`ಅಯ್ಯೋ ಇಂಥದಕ್ಕೆಲ್ಲ ಹೆದರುವಂತಿಲ್ಲ. ಉರುಳಿಬಿದ್ದರೆ ಮರಣ ಅಷ್ಟೆ. ಅದರಲ್ಲಿ ಭಯವೆಂಥದ್ದು? ಆದರೆ ಈ ಗಂಡಹೆಂಡತಿಯ ನಡುವೆ ಕೂಸು ಬಡವಾಗುವುದೇ ಸರಿ.' |
`ಅಷ್ಟೊಂದು ಪ್ರೀತಿಯಿದ್ದವರು ಈ ಮಟ್ಟದಲ್ಲಿ ದ್ವೇಷಿಸಲು ಸಾಧ್ಯವೇ?' |
`ಯಾಕಾಗದು? ಕತ್ತಲಿದ್ದರಲ್ಲವೇ ಬೆಳಕು? ಹಾಗೆಯೇ ಪ್ರೀತಿಯಿದ್ದಲ್ಲಿ ದ್ವೇಷ. ಆಯ್ಕೆ ನಮ್ಮದು. ಪ್ರೀತಿಯೇ ಅಥವಾ ಕತ್ತಲೇ? ಪಕ್ವವಾದ ಪ್ರೀತಿಗೆ ಎಲ್ಲ ಬಗೆಯ ಶಕ್ತಿಯಿರುತ್ತದೆ. ಎಂಥಹದ್ದೇ ಸಂಶಯ, ಅಸಮಧಾನ, ತಪ್ಪು ಕಲ್ಪನೆಗಳು ದ್ವೇಷದ ಮನೆಯ ಬಾಗಿಲಿಗೆ ಹೋಗುವ ಮೊದಲೇ ತಡೆಯುತ್ತದೆ. ಹೊಕ್ಕ ಮೇಲೆ ಮೊದಲಿನಂತಿರುವುದು ಕಷ್ಟವೇ ಸರಿ.' |
`ಇವರು ಹೀಗೆ ಕಚ್ಚಾಡುತ್ತಿದ್ದರೆ ಮಗಳೇನು ಮಾಡುತ್ತಿರುತ್ತಾಳೆ? ಅದಕ್ಕೆ ಮಂಕು ಬಡಿಯದಿದ್ದರೆ ಸಾಕು.' |
`ಈಗ ಆಗಿರುವುದೂ ಅದೇ. ಹರೆಯಕ್ಕೆ ಕಾಲಿಟ್ಟ ಹುಡುಗಿಯ ಮುಂದೆ ಇವರು ಹೀಗಾಡುವುದೆಂದರೆ? ಮೊದಲೆಲ್ಲಾ ಅದು ಚಾವಡಿಯಲ್ಲಿದ್ದರೆ ಭಯ ಪಟ್ಟು ಮೂಲೆ ಹಿಡಿದು ಕೂತಿರುತಿತ್ತು. ಈಗ ಅದಕ್ಕೆಂದೇ ಒಂದು ಕೋಣೆ ಬಿಟ್ಟುಕೊಟ್ಟಿದ್ದಾರೆ. ಇವರ ಜಗಳ ಶುರುವಾಗುತ್ತಿದ್ದಂತೆ ಕೋಣೆಗೆ ಹೋಗಿ ದಢಾರೆಂದು ಬಾಗಿಲು ಹಾಕಿಕೊಂಡುಬಿಡುತ್ತದೆ. ಆ ಶಬ್ದಕ್ಕೆ ಒಂದು ಕ್ಷಣ ಇವರಿಬ್ಬರೂ ಬೆಚ್ಚಿಬೀಳುತ್ತಾರಾದರೂ ಅರೆಗಳಿಗೆಯೊಳಗೆ ಮತ್ತೆ ಶುರು ಮಾಡುತ್ತಾರೆ.' |
`ಛೆ! ಇಂಥ ಅಪ್ಪ ಅಮ್ಮಂದಿರಿಂದಾಗಿಯೇ ಮಕ್ಕಳು ಹಾಳಾಗಿರುವುದು. ಮನೆಯಲ್ಲಿ ಸಿಗದೆ ಇರುವ ಪ್ರೀತಿಯನ್ನು ಎಲ್ಲೆಲ್ಲೋ ಹುಡುಕುವುದಕ್ಕೆ ಮನಸ್ಸು ಮಾಡ್ತಾರೆ.' |
`ಇನ್ನು ಮಾಡಬೇಕಾದುದೇನಿಲ್ಲ. ಅದಾಗಲೇ ಆಗಿ ಆಗಿದೆ. ಕರೆಂಟು ಹೋದಾಗಲೆಲ್ಲ ನನ್ನನ್ನು ಕರೆದೊಯ್ಯುತ್ತಿದ್ದಳು. ನೀನು ಯಾವಾಗಲೂ ಕೇಳುತ್ತಿದ್ದೆ ನನ್ನನ್ನು ಯಾಕೆ ಬರಲಿಲ್ಲ ಎಂದು. ಆ ದಿನಗಳಲ್ಲಿ ಅವಳೊದಿಗೆ ನನ್ನ ವಾಸ. ಕರೆಂಟು ಹೋದಾಗ ಈ ಗಂಡ ಹೆಂಡತಿಯೂ ಸುಮ್ಮನಾಗುತ್ತಾರೆ. ಅಕ್ಕ ಪಕ್ಕದ ಮನೆಗಳಿಗೆ ಗುಟ್ಟು ರಟ್ಟಾಗದಂತೆ ಜಾಗ್ರತೆ ವಹಿಸುತ್ತಾರೆ. ಈ ಮನುಷ್ಯರು ಎಷ್ಟು ಬುದ್ಧಿವಂತರಾಗಿರುತ್ತಾರಲ್ಲವೇ?' |
`ಆ ಬುದ್ಧಿವಂತಿಕೆಗೆ ನನ್ನಂಥ ಹಸಿರು ಗಿಡಗಳೆಲ್ಲಾ ಬಲಿ ಆಗುತ್ತಿರುವುದು.' |
`ಆ ಹುಡುಗಿಯನ್ನು ಕಂಡಾಗಲೆಲ್ಲಾ ಅವಳ ಮುಂದಿನ ಭಯಾನಕ ದಿನಗಳ ಚಿತ್ರವೇ ಕಣ್ಣ ಮುಂದೆ ಬರುವುದು. ಅವಳೂ ಯಾವುದೋ ಹುಡುಗನನ್ನು ಪ್ರೀತಿಸುತ್ತಿದ್ದಾಳೆ. ಅವನು ಇವರ ಜಾತಿಯವನಲ್ಲ. ಎಂಥಾ ವಿಪರ್ಯಾಸ ನೋಡು. ಅಪ್ಪ ಅಮ್ಮನಿಗೆ ಯಾವುದೇ ಬಗೆಯ ನೈತಿಕ ಧ್ವನಿ ಉಳಿದಿಲ್ಲ ಅವಳನ್ನು ತಡೆದು ಹಿಡಿಯೋದಿಕ್ಕೆ. ಅವರೂ ಇಂಥದ್ದೊಂದು ತಪ್ಪಿನ ತೆಪ್ಪದಲ್ಲಿ ಹಾರಿ ಕುಳಿತು ಈಗ ನೀರಿಲ್ಲದ ಕಡೆಗೆ ಬಂದು ತೆಪ್ಪವನ್ನು ತಳ್ಳುತ್ತಿದ್ದಾರೆ. ಅವರ ನಡುವೆ ಏನೇನೂ ಉಳಿದಿಲ್ಲ. ಈ ಮಗುವೂ ಅವರೊಂದಿಗೆ ಉಳಿಯುವುದೋ ತಿಳಿದಿಲ್ಲ.' |
`ಅಬ್ಬಾ ಮನುಷ್ಯರ ಬದುಕು ಎಷ್ಟು ಕಷ್ಟ ಅಲ್ಲವೇ? ಅವರು ಬದುಕಿದ ರೀತಿಯೇ ಅವರ ಮುಂದಿನ ದಿನಗಳನ್ನು ನಿರ್ಧರಿಸುವುದು. ಅಪ್ಪ ಅಮ್ಮ ಎಡವಿದ ಕಲ್ಲುಗಳು ಮಕ್ಕಳಿಗೆ ಮೆಟ್ಟಿಲಾಗಲು ಸಾಧ್ಯವಿಲ್ಲವೇ?' |
`ಅಸಾಧ್ಯವೇನಲ್ಲ. ಆದರೆ ಅವರು ನನ್ನಂತೆ ನಿನ್ನಂತೆ ಇನ್ನೊಬ್ಬರಿಗಾಗಿ ಬದುಕುತ್ತಿಲ್ಲವಲ್ಲಾ?' |
`ಅದೂ ಸರಿಯೆ. ಅದಕ್ಕಿಂತ ವಿಚ್ಛೇದನ ಪಡೆಯಬಾರದೇಕೆ?' |
`ಸಮಾಜದಲ್ಲಿ ಗೌರವ ಉಳಿಯುವುದಿಲ್ಲವಲ್ಲಾ? ಸಂಸಾರವೂ ಬೇಕು ಗೌರವವೂ ಬೇಕು ಎಂದಾದರೆ ಸಹಿಸಿಕೊಳ್ಳುವ ಗುಣವಿರಬೇಕು. ಈಗ ನಾನಿಲ್ಲವೇ ಈ ಸುಡುವ ಉರಿಯುವ ದೀಪದೊಂದಿಗೆ!' |
`ಮತ್ತೆ ನಂದೇನು ಪಾಡು? ಕಟ್ಟೆಯಲ್ಲಿ ಕುಳಿತಿದ್ದೇನೆ ಎಂಬ ಕಾರಣಕ್ಕೆ ಬದುಕಿದ್ದೇನೆ. ಹೊಸ ಮನೆ ಕಟ್ಟುವಾಗ ಎಲ್ಲಿಗೆ ಎತ್ತಂಗಡಿ ಮಾಡುತ್ತಾರೋ ಏನೋ?' |
`ಹ್ಞುಂ, ಆ ವಿಷಯ ಹೇಳುವುದನ್ನೇ ಮರೆತಿದ್ದೆ. ಹೊಸಮನೆಯ ಕೆಳಭಾಗವನ್ನು ಬಾಡಿಗೆ ಕೊಡುವುದೆಂದು ನಿಶ್ಚಯಿಸಿದ್ದಾರಲ್ಲಾ? ಅದು ಅವಳ ಕ್ರಿಶ್ಚಿಯನ್ ಗೆಳತಿಗೆ ಕೊಡಬೇಕೆಂದು ಅವಳ ವಾದ. ಇವನೋ ತಾನು ಅದನ್ನು ವಸ್ತು ಸಂಗ್ರಹಾಲಯ ಮಾಡುವವನೆಂದು ಹಠ.' |
`ಅಂತೂ ನನಗೆ ಉಳಿಗಾಲವಿಲ್ಲ ಎಂಬುದು ದಿಟವೇ. ಇನ್ನು ಕೆಲವೇ ದಿನಗಳ ಭೇಟಿ ನಮ್ಮದು.' |
`ನನ್ನನ್ನು ನನ್ನಿಂದ ಬೇರ್ಪಡಿಸುವ ಧೈರ್ಯ ಅವರಿಗಿನ್ನೂ ಬಂದಂತಿಲ್ಲ. ಅದಕ್ಕೆ ಮೇಲಿನ ಮನೆಯ ಮೂಡಣ ದಿಕ್ಕಿನ ಕೋಣೆಯ ಬದಿಯಲ್ಲಿಯೇ ನಿನ್ನನ್ನು ಕುಳ್ಳಿರಿಸುವ ಬಗ್ಗೆ ತೀರ್ಮಾನವಾಗಿದೆ. ನೀನಿನ್ನೂ ನನಗೆ ಹತ್ತಿರವೇ ಆದೆ.' |
`ಸಂತೋಷವೇ. ಆದರೆ ಪ್ರಕೃತಿಯಿಂದ ಇನ್ನಷ್ಟು ದೂರವಾದೆ. ಅದೇ ಅಲ್ಲವೇ ಮನುಷ್ಯನ ಜೀವನದ ಉದ್ದೇಶ. ತಾನೂ ಪ್ರಕೃತಿಯ ಮಡಿಲಲ್ಲಿ ಇರಲಾರ. ಇರುವವರನ್ನೂ ಬಿಡಲಾರ.' |
`ನಮ್ಮ ಕೈಯ್ಯಲ್ಲಿಲ್ಲದ ವಿಷಯಗಳನ್ನು ಚಿಂತಿಸುವುದು ವ್ಯರ್ಥವೇ ಸರಿ. ನೋಡು ಮತ್ತೆ ಶುರುವಾಯಿತು ರಾಮಾಯಣ…' |
`ರಾಮಾಯಣ ಅಲ್ಲ ಮಹಾಭಾರತ. ಆ ಹುಡುಗಿ ಬಂತು ನೋಡು ಹೊರಗೆ. ಕಿವಿಗೆ ಕೈ ಹಿಡಿದುಕೊಂಡು.' |
`ಅಲ್ಲಿ ಆ ಕಡೆಗೆ ನೋಡು ಪಕ್ಕದ ಮನೆ ಲಲಿತಕ್ಕ ಕಿಟಕಿಯಲ್ಲಿ ಇಣುಕಿ ನೋಡುತ್ತಿದ್ದಾರೆ.' |
`ಅವರ ಟೀವಿಯಲ್ಲಿ ಬರುವ ಮಹಾಭಾರತಕ್ಕಿಂತ ಇದೇ ಚೆನ್ನಾಗಿದೆ ಅನ್ನಿಸಿರಬೇಕು.' |
`ಶ್ಶ್.. ಮಾತನಾಡಬೇಡ. ಸುಮ್ಮನಿರು. ಈ ಹುಡುಗಿ ಅದೇನೋ ಫೋನಿನಲ್ಲಿ ಹರಟೆ ಹೊಡೆಯುತ್ತಿದ್ದಾಳೆ. ನನಗನ್ನಿಸುತ್ತದೆ ಆ ಕಡೆಯಲ್ಲಿ ಅವಳು ಪ್ರೀತಿಸುವ ಹುಡುಗನೇ ಇರಬೇಕು. ಕೇಳೋಣ.' |
`ಎಷ್ಟೊಂದು ನಿಧಾನವಾಗಿ ಮಾತನಾಡುತ್ತಿದ್ದಾಳೆ ಆ ಫೋನಿಗಾದರೂ ಕೇಳಿಸೀತೆ?' |
`ಸುಮ್ಮನಿರು. ಪ್ರೇಮಿಗಳೆಲ್ಲ ಫೋನಿನಲ್ಲಿ ಹೀಗೇ ಮಾತನಾಡುವುದು. ನನಗೆ ಕೇಳಿಸುತ್ತದೆ. ನೀನೂ ಮೌನವಾಗಿದ್ದರೆ ಪ್ರೀತಿಯ ಮಾತುಗಳೂ ನಿನಗೂ ಕೇಳಸಿಯಾವು. ಶ್ಶ್…' |
'ಮಹನೀಯರ ಜಯಂತಿಗಳ ಆಚರಣೆ ಕಾಟಾಚಾರಕ್ಕೆ ಬೇಡ' | Vartha Bharati- ವಾರ್ತಾ ಭಾರತಿ |
ಡಿಸಿ ಅಧ್ಯಕ್ಷತೆ ಸಭೆಯಲ್ಲಿ ವಿವಿಧ ಸಮಾಜದ ಮುಖಂಡರ ಆಗ್ರಹ |
ವಾರ್ತಾ ಭಾರತಿ Jan 21, 2020, 8:22 PM IST |
ಉಡುಪಿ, ಜ.21: ಸರಕಾರದ ವತಿಯಿಂದ ಆಚರಿಸಲಾಗುವ 25ಕ್ಕೂ ಹೆಚ್ಚು ಮಹನೀಯರ ಜಯಂತಿಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ವಿರೋಧ ಹಾಗೂ ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಸಾರ್ವಜನಿಕ ರಿಂದ, ವಿವಿಧ ಸಮುದಾಯಗಳ ಮುಖಂಡರಿಂದ ಅಭಿಪ್ರಾಯಗಳನ್ನು ಪಡೆಯಲು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆಯಲಾದ ಸಭೆಯಲ್ಲಿ ಜಯಂತಿಗಳನ್ನು ಕಾಟಾಚಾರಕ್ಕೆ ಆಚರಿಸದೆ ಅರ್ಥಪೂರ್ಣವಾಗಿ ಮಾಡಬೇಕೆಂಬ ಸಲಹೆಗಳು ವ್ಯಕ್ತವಾದವು. |
ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಜಯಂತಿಗಳ ಆಚರಣೆ ನಿಲ್ಲಿಸುವುದು ಬೇಡ. ಆದರೆ ಸೂಕ್ತ ಕ್ರಿಯಾಯೋಜನೆ ರೂಪಿಸಿಕೊಂಡು, ಸಾಂಸ್ಕೃತಿಕ ಸಂಘಟನೆಗಳ ಮೂಲಕ, ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಅರ್ಥಪೂರ್ಣ ವಾಗಿ ಆಚರಣೆ ನೆಸಬೇಕು ಎಂದು ಅಭಿಪ್ರಾಯಪಟ್ಟರು. |
ಪ್ರಸ್ತುತ ಆಚರಿಸುವ ವಿಶ್ವಕರ್ಮ ಜಯಂತಿ ಸಮಂಜಸವಲ್ಲ. ಆದುದರಿಂದ ಇದರ ಬದಲಿಗೆ ವಿಶ್ವಕರ್ಮ ದಿನಾಚರಣೆಯನ್ನು ಆಚರಿಸಬೇಕು. ಅದೇ ವಿಶ್ವಕರ್ಮ ಭಾವಚಿತ್ರವನ್ನು ಬದಲಾಯಿಸಬೇಕೆಂದು ವಿಶ್ವಕರ್ಮ ಮುಖಂಡರು ಸಭೆಯಲ್ಲಿ ಒತ್ತಾಯಿಸಿ ದರು. ಜಯಂತಿಗಳು ಕಾಟಾಚಾರದ ಆಚರಣೆಯಾಗದೆ ಅರ್ಥಪೂರ್ಣವಾಗಿರಬೇಕು. ಇದಕ್ಕಾಗಿ ಶಾಲೆ, ಆಸ್ಪತ್ರೆ ಮತ್ತು ಬಸದಿ ಗಳಲ್ಲಿ ಉಪಯೋಗವಾಗುವಂತಹ ಕಾರ್ಯಗಳನ್ನು ಹಮ್ಮಿಕೊಂಡರೆ ಜಯಂತಿಗೆ ತಕ್ಕುದಾದ ಬೆಲೆ ಸಿಗುತ್ತದೆ ಎಂದು ಜೈನ ಸಮುದಾಯದ ಮುಖಂಡರು ತಮ್ಮ ಅಭಿಪ್ರಾಯಗಳನ್ನು ಹೇಳಿದರು. |
ರಜಾ ದಿನಗಳಂದು ಆಚರಿಸಿ: ಶ್ರೀನಾರಾಯಣಗುರು, ವಿಶ್ವಕರ್ಮ, ಮಹಾವೀರ ಸೇರಿದಂತೆ ಹಲವು ಮಹನೀಯರ ಜಯಂತಿ ಗಳನ್ನು ಜಿಲ್ಲಾಡಳಿತ ವತಿಯಿಂದ ಆಚರಿಸುವ ಸಮಯದಲ್ಲಿ ಆಯಾ ಸಮುದಾಯದವರಿಗೆ ತಮ್ಮ ತಮ್ಮ ಮಂದಿರಗಳಲ್ಲಿ ಪೂಜೆ ಹಾಗೂ ಆಚರಣೆಗಳಿರುತ್ತವೆ. ಇದರಿಂದಾಗಿ ಈ ಜಯಂತಿ ಆಚರಣೆಯಲ್ಲಿ ಭಾಗವಹಿಸಲು ಹೆಚ್ಚಿನವರಿಗೆ ಸಾಧ್ಯವಾಗುವು ದಿಲ್ಲ ಎಂಬ ಮಾತುಗಳು ಕೇಳಿಬಂದವು. |
ಆದುದರಿಂದ ಮಹನೀಯರ ಜಯಂತಿಗಳನ್ನು ಆ ದಿನದ ಬದಲು ಇತರೆ ದಿನ ಅಥವಾ ರಜಾ ದಿನಗಳಂದು ಎಲ್ಲ ಸಮುದಾಯ ಗಳನ್ನು ಕರೆಸಿ ಆಚರಿಸ ಬೇಕು. ಜಯಂತಿ ಆಚರಣೆಯ ಸಿದ್ಧತೆಗಳನ್ನು ಅಂತಿಮ ಹಂತದಲ್ಲಿ ಮಾಡದೆ, ಸಾಕಷ್ಟು ಪೂರ್ವ ತಯಾರಿ ನಡೆಸಿಕೊಂಡು ಆಚರಿಸಬೇಕು ಎಂದು ವಿವಿಧ ಸಮಾಜದ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. |
ವಿವಿಧ ಮಹನೀಯರ ಜಯಂತಿಗಳಿಗಾಗಿ ಸರಕಾರ ಪ್ರತಿ ವರ್ಷ ಸುಮಾರು 17 ಕೋಟಿ ರೂ. ವೆಚ್ಚ ಮಾಡುತ್ತಿದ್ದು, ಜಯಂತಿಗಳ ಆಚರಣೆಗೆ ನೀಡುವ ಅನುದಾನವನ್ನು ಆಯಾ ಸಮುದಾಯಗಳ ಸಂಘಗಳಿಗೆ ನೀಡಿ, ಆಚರಣೆಯ ಜವಾಬ್ದಾರಿಯನ್ನು ಆಯಾ ಮುಖಂಡರಿಗೆ ನೀಡಬೇಕು. ಮಹನೀಯರ ಸಾಧನೆ ಕುರಿತ ಪುಸ್ತಕಗಳನ್ನು ಮುದ್ರಿಸಿ ಹಂಚಬೇಕು ಎಂದು ನಿವೃತ್ತ ಪ್ರಾಂಶು ಪಾಲ ಮೇಟಿ ಮುದಿಯಪ್ಪ ತಿಳಿಸಿದರು. |
ಜಯಂತಿಗಳನ್ನು ಸರಕಾರ ಆಚರಿಸುವ ಬದಲು ಆಯಾ ಸಮುದಾಯ ದವರು ಆಚರಿಸುವಂತೆ ಮಾಡಬೇಕು. ಜಯಂತಿಗೆ ನೀಡುವ ಅನುದಾನವನ್ನು ಆಯಾ ಸಮುದಾಯದ ಮಕ್ಕಳಿಗೆ ಅನುಕೂಲವಾಗುವಂತೆ ವಿದ್ಯಾರ್ಥಿವೇತನ ವಾಗಿ ನೀಡಬೇಕು ಎಂದು ಬಸವ ಸಮಿತಿಯ ಶಾಂತಾಗೌಡ ಅಭಿಪ್ರಾಯ ಪಟ್ಟರು. |
ಸಭೆಯಲ್ಲಿ ಉಡುಪಿ ತಾಪಂ ಅಧ್ಯಕ್ಷೆ ನೀತಾಗುರುರಾಜ್ ಪೂಜಾರಿ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಸಹಾಯಕ ಆಯುಕ್ತ ಕೆ.ರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಆರ್.ಶೇಷಪ್ಪ, ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು. |
ಸರಕಾರಕ್ಕೆ ವರದಿ: ಜಿಲ್ಲಾಧಿಕಾರಿ |
ಜಯಂತಿಗಳ ಆಚರಣೆ ಮತ್ತು ಸ್ವರೂಪದ ಕುರಿತು ಸಾರ್ವಜನಿಕರ ಅಭಿಪ್ರಾಯ ಮತ್ತು ಸಲಹೆಗಳನ್ನು ಸಂಗ್ರಹಿಸಿ ರಾಜ್ಯ ಸರಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಿಗೆ ವರದಿ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು. |
ಮಹನೀಯರು ಜಾತಿ, ಮತ, ಪಂಥಗಳನ್ನು ಮೀರಿ ಬೆಳೆದವರು. ಸಭೆಯಲ್ಲಿ ನೀಡಿದ ಎಲ್ಲರ ಅಭಿಪ್ರಾಯಗಳನ್ನು ಕ್ರೋಢೀಕರಿಸಿ, ವರದಿ ತಯಾರಿಸಿ ಸರಕಾರಕ್ಕೆ ಸಲ್ಲಿಸಲಾಗುವುದು. ಮುಂದೆ ಸರಕಾರ ತೆಗೆದುಕೊಳ್ಳುವ ಯಾವುದೇ ತೀರ್ಮಾನಕ್ಕೆ ನಾವೆಲ್ಲ ಬದ್ಧರಾಗಿರಬೇಕು ಎಂದು ಅವರು ಹೇಳಿದರು. |
ಅನಾವರಣಗೊಂಡ 2019ರ ಹೊಸ ಸುಜುಕಿ ವಿಟಾರ ಫೇಸ್‍ಲಿಫ್ಟ್ ಕಾರು.. - Kannada DriveSpark |
ಅನಾವರಣಗೊಂಡ 2019ರ ಹೊಸ ಸುಜುಕಿ ವಿಟಾರ ಫೇಸ್‍ಲಿಫ್ಟ್ ಕಾರು.. |
Updated: Wednesday, August 1, 2018, 18:00 [IST] |
ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಸುಜುಕಿ ಮೋಟರ್ ಕಾರ್ಪೊರೇಷನ್ ಭಾರತೀಯ ಮಾರುಕಟ್ಟೆಯಲ್ಲಿ ತಮ್ಮ 2019ರ ವಿಟಾರ ಫೇಸ್‍ಲಿಫ್ಟ್ ಎಸ್‍ಯುವಿ ಕಾರನ್ನು ಬಿಡುಗಡೆಗೊಳಿಸಲಿದ್ದು, ವಿನ್ಯಾಸದಲ್ಲಿ ಗುರುತರ ಬದಲಾವಣೆಗಳನ್ನು ಪದೆದುಕೊಂಡಿದೆ. |
ಕೇವಲ ವಿನ್ಯಾಸದಲ್ಲಿ ಮಾತ್ರವಲ್ಲದೇ ಟೆಕ್ನಾಲಜಿಯಲ್ಲಿ ಕೂಡಾ ಬದಲಾವಣೆಗಳನ್ನು ಪದೆದಿದೆ. 2015ರಿಂದಲೂ ಯುಕೆ ರಾಷ್ಟ್ರದ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿ ಮಾರಾಟಗೊಳ್ಳುತ್ತಿದ್ದು, ಜಾಗತಿಕವಾಗಿ ವಿಟಾರ ಕಾರು ಸುಜುಕಿ ಸಂಸ್ಥೆಯ ಅತಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. |
ಹೊಸ ಸುಜುಕಿ ವಿಟಾರ ಎಸ್‍ಯುವಿ ಕಾರು ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ಬರಲಿದ್ದು, 1.0 ಲೀಟರ್ ಟರ್ಬೋಚಾರ್ಜ್ಡ್ ಮತ್ತು 1.4 ಲೀಟರ್ ಬೂಸ್ಟರ್‍ಜೆಟ್ ಟರ್ಬೋಚಾರ್ಜ್ಡ್ ಎಂಜಿನ್‍ಗಳಲ್ಲಿ ದೊರೆಯಲಿದೆ. ಎರಡೂ ಎಂಜಿನ್‍ಗಳು 109ಬಿಹೆಚ್‍ಪಿ ಮತ್ತು 138ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. |
ಎರಡೂ ಎಂಜಿನ್‍ಗಳು ಪ್ರೀ-ಫೇಸ್‍ಲಿಫ್ಟ್ ವಿಟಾರ ಎಸ್‍ಯುವಿ ಕಾರಿನಲ್ಲಿನ 1.6 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಭರ್ತಿ ಮಾಡಲಿದ್ದು, ಈ ಕಾರು ಡೀಸೆಲ್ ಎಂಜಿನ್ ಅನ್ನು ಪಡೆದಿರುವುದಿಲ್ಲ ಎನ್ನಲಾಗಿದೆ. ಮತ್ತು ಡ್ರೈವಿಂಗ್ ಅನುಭವವನ್ನು ಅಭಿವೃದ್ಧಿಗೊಳಿಸಲು ಆಲ್‍ಗ್ರಿಪ್ ಫೋರ್-ವ್ಹೀಲ್-ಡ್ರೈವ್ ಸಿಸ್ಟಮ್ ಅನ್ನು ಅಳವಡಿಸಲಾಗಿದೆ. |
ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ ಹೊರಭಾಗದಲ್ಲಿ ಕ್ರೋಮ್ ಗಾರ್ನಿಷಿಂಗ್‍ಣೊಂದಿಗೆ ಮರುವಿನ್ಯಾಸಗೊಳಿಸಲಾದ ಗ್ರಿಲ್, ಅಗಲವಾದ ಪ್ರೊಜೆಕ್ಟರ್ ಹೆಡ್‍ಲ್ಯಾಂಪ್‍ಗಳು, ಎಲ್ಇಡಿ ಡಿಆರ್‍ಎಲ್ ಮತ್ತು ಸ್ಕಲ್ಪ್ಟೆಡ್ ಬಂಪರ್ ಅನ್ನು ಪಡೆದುಕೊಂಡಿರಲಿದೆ. |
ಇದಲ್ಲದೆ ಸುಜುಕಿ ವಿಟಾರ ಫೇಸ್‍ಲಿಫ್ಟ್ ಕಾರು ಅಲಾಯ್ ಚಕ್ರಗಳು, ವಿಸಿಬಲ್ ಮಸ್ಕ್ಯೂಲರ್ ಟೋನ್ ಮತ್ತು ಬ್ಲಾಕ್ ಕ್ಲೇಡಿಂಗ್ ಅನ್ನು ಪಡೆದಿದ್ದು, ಹಿಂಭಾಗದಲ್ಲಿ ಎಲ್‍ಇಡಿ ಅಧಾರಿತ ಶಾರ್ಪ್ ಲುಕಿಂಗ್ ಟೈಲ್‍ಲೈಟ್‍ಗಳನ್ನು ಪಡೆದುಕೊಂಡಿದೆ. |
ಕಾರಿನ ಹೊರಭಾಗದಲ್ಲಿ ಮಾತ್ರವಲ್ಲದೇ ಒಳಭಾಗದಲ್ಲಿಯೂ ಕೂಡ ನವೀಕರಿಸಲಾದ ಡ್ಯಾಶ್‍ಬೋರ್ಡ್, ಸೀಟ್, ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಮತ್ತು ಒಳಭಾಗವನ್ನು ಕಪ್ಪು ಬಣ್ಣದಿಂದ ಸಜ್ಜುಗೊಳಿಸಲಾಗಿದೆ. ಇನ್ನುಳಿದ ವೈಶಿಷ್ಟ್ಯತೆಗಳ ಬಗ್ಗೆ ಮಾಹಿತಿ ಲಭ್ಯವಾಗಿಲ್ಲದಿದ್ದರೂ ಸುಜುಕಿ ಸಂಸ್ಥೆಯು ಹೈ ಎಂಡ್ ವೈಶಿಷ್ಟ್ಯತೆಗಳನ್ನು ಆಳವಡಿಸಲಿದೆ ಎಂಬ ಭರವಸೆ ಇದೆ. |
Subsets and Splits
No community queries yet
The top public SQL queries from the community will appear here once available.