text stringlengths 0 61.5k |
|---|
ಇನ್ನೇನು ಪದವಿ ವಿದ್ಯಾಭ್ಯಾಸದ ನಾಲ್ಕು ವರ್ಷಗಳ ನಮ್ಮ ಸುದೀರ್ಘ ಪಯಣವು ಮುಗಿಯುವುದರಲ್ಲಿತ್ತು. ಕಾಲೇಜಿನ 'ನೋ ಡ್ಯೂ' ಓಡಾಟಗಳು ಶುರುವಾಗಿದ್ದವು. ನೋ ಡ್ಯೂಗಳೆಂದರೆ ನಾವು ಕಾಲೇಜಿನ ಯಾವುದೇ ವಿಭಾಗದಲ್ಲೂ ಯಾವ ರೂಪದ ಸಾಲವನ್ನೂ ಬಾಕಿ ಇಟ್ಟುಕೊಂಡಿಲ್ಲವೆಂದು ದೃಢಪಡಿಸುವ ಪ್ರಮಾಣಪತ್ರಗಳು. ಅದು ಕಾಲೇಜಿನ ಕ್ಯಾಂಟೀನಿನಿಂದ ಹಿಡಿದು ಕಂಪ್ಯೂಟರ್ ಕೇಂದ್ರದವರೆಗೂ, ಗ್ರಂಥಾಲಯದಿಂದ ಹಿಡಿದು ಗರಡಿಯವರೆಗೂ… ಹೀಗೆ ಎಲ್ಲದಕ್ಕೂ ಅನ್ವಯವಾಗುತ್ತಿದ್ದ ಪ್ರಮಾಣಪತ್ರ. ಹೊಸದಾಗಿ ಉದ್ಯೋಗಕ್ಕೆ ಸೇರುವ ಅಭ್ಯರ್ಥಿಗಳು ಆರೋಗ್ಯ ಪ್ರಮಾಣಪತ್ರಕ್ಕೆಂದು ಹೇಗೆ ಕಿವಿ, ಮೂಗು, ತಲೆ, ಮೂತ್ರ, ಹೃದಯ, ಅದು-ಇದು ಎನ್ನುತ್ತಾ ಎಲ್ಲಾ ವಿಭಾಗದ ವೈದ್ಯರ ಬಳಿಗೂ ಹೋಗಿ ಅವರ ಸಹಿಯನ್ನು ಪಡೆದು, ಕೊನೆಗೆ ಮುಖ್ಯ ಆರೋಗ್ಯಾಧಿಕಾರಿಯ ಮುದ್ರೆಯನ್ನು ಪಡೆಯುತ್ತಾರೋ ನಮ್ಮದೂ ಅದೇ ಅವಸ್ಥೆ. ಆ ಪ್ರಮಾಣಪತ್ರವನ್ನು ಹಿಡಿದುಕೊಂಡು ಕ್ಯಾಂಪಸ್ಸಿಡೀ ಓಡಾಡುವುದೇ ಒಂದು ಮಹಾಕೆಲಸ. ಆದರೆ ಬೇರ್ಯಾವ ಆಯ್ಕೆಗಳೂ ನಮಗಿರಲಿಲ್ಲ. ಈ ಆಟೋಗ್ರಾಫುಗಳನ್ನು ಪಡೆದುಕೊಂಡು ವಿದ್ಯಾಸಂಸ್ಥೆಗೆ ಸಲ್ಲಿಸದಿದ್ದರೆ ಪದವಿಯ ಪ್ರಮಾಣಪತ್ರವೇ ಸಿಗುವುದಿಲ್ಲವೆಂಬ ಮಹಾಬುದ್ಧಿವಂತಿಕೆಯ ಕಾನೂನನ್ನೂ ಇಟ್ಟಿದ್ದರು. ಅಂತೂ ತರಗತಿಗಳಿಗೇ ನಿಯಮಿತವಾಗಿ ಹೋಗದಿದ್ದವರೂ ಕೂಡ ನಾಲ್ಕು ವರ್ಷಗಳ ಅವಧಿಯಲ್ಲಿ ಎಂದೂ ಕಾಲಿರಿಸದಿದ್ದ ಕಾಲೇಜಿನ ವಿವಿಧ ವಿಭಾಗಗಳನ್ನು ಹುಡುಕಿಕೊಂಡು ಹೋಗಿ, ಸಹಿಯನ್ನು ಪಡೆದು ತಮ್ಮ ಋಣಭಾರವನ್ನು ತೀರಿಸಿಕೊಂಡರು. |
ಈ ಸಮಯದಲ್ಲೇ ನಮ್ಮನಮ್ಮಲ್ಲೇ ಬಾಕಿಯಿದ್ದ ವೈಯಕ್ತಿಕ ಸಾಲಗಳ ಬಗ್ಗೆಯೂ ನಮಗೆ ನೆನಪಾಗಿದ್ದು. ಆ ದಿನಗಳಲ್ಲಿ ಧನರೂಪದ ಯಾವ ಸಾಲವನ್ನೂ ನಾನು ಯಾರಿಗೂ ಕೊಡುವ ಸ್ಥಿತಿಯಲ್ಲಿರದಿದ್ದರಿಂದ ಯಾರಿಂದಲೂ ತೆಗೆದುಕೊಳ್ಳುವ ಗೋಜಿಗೂ ಹೋಗಿರಲಿಲ್ಲ. ಆದರೂ 'ಚಿಲ್ಲರೆ' ಎಂಬಂತಿದ್ದ ಅಳಿದುಳಿದ ಬಾಕಿಗಳನ್ನು ಹೇಗೋ ನಿಭಾಯಿಸಿದ್ದೆ. ಕೈಯಲ್ಲಿ ಕಾಸು ಓಡಾಡುತ್ತಿಲ್ಲದ ದಿನಗಳಲ್ಲಿ 'ಚಿಲ್ಲರೆ'ಯೂ ದೊಡ್ಡ ಮೊತ್ತವೇ ಅಲ್ಲವೇ? ಅಂತೂ ಎಲ್ಲವನ್ನೂ ಸಂಭಾಳಿಸಿಬಿಟ್ಟೆ ಎನ್ನುವ ನಿರಾಳತೆಯಲ್ಲಿದ್ದಾಗಲೇ ನನ್ನ ಬೆಂಗಾಲಿ ಗೆಳತಿಯೊಬ್ಬಳು ಬಾಕಿಯಿದ್ದ ಇನ್ನೊಂದು ಸಾಲದ ಬಗ್ಗೆ ನೆನಪಿಸಿ ಹೊಸ ತಲೆನೋವಿಗೆ ಆಹ್ವಾನವನ್ನು ಕೊಟ್ಟಿದ್ದಳು. ಅದ್ಯಾವ ಮಹಾಸಂಪತ್ತು ಅನ್ನುತ್ತೀರಾ? ಅವುಗಳು ಪುಸ್ತಕಗಳು. |
'ಅಯ್ಯೋ ಶಿವನೇ' ಎಂಬ ಉದ್ಗಾರದೊಂದಿಗೇ ನಾನೂ ಅವಳೂ ಒಂದೆಡೆ ಕೂತು ಪುಸ್ತಕಗಳನ್ನು ಎರವಲು ಕೊಡುವ ಹೆಸರಿನಲ್ಲಿ ಯಾರ್ಯಾರಿಗೆಲ್ಲಾ ದಾನ ಮಾಡಿದ್ದೇವೆ ಎಂದು ಗಂಭೀರವಾಗಿ ಚರ್ಚಿಸಿದೆವು. ದುರದೃಷ್ಟವಶಾತ್ ಪಟ್ಟಿಯು ಬೇಜಾರಾಗುವಷ್ಟು ಉದ್ದವಿತ್ತು. 'ಪುಸ್ತಕಗಳು ಬಂದಂಗೇ' ಎಂದು ನಿಟ್ಟುಸಿರಾದಳು ಅವಳು. ನಾನೂ ಪೆಚ್ಚಾಗಿದ್ದೆ. ಎಲ್ಲಾ ಪುಸ್ತಕಪ್ರಿಯರ ಸಮಸ್ಯೆಯೇ ಇದು. ಯಾರಿಗಾದರೂ ಓದಲೆಂದು ಪುಸ್ತಕಗಳನ್ನು ಕೊಟ್ಟರೆ ಅವುಗಳು ಮರಳಿ ಬರುವುದೇ ಕಮ್ಮಿ. ಬಂದರೂ ಅವುಗಳ ಸ್ಥಿತಿಯು ದೇವರಿಗೇ ಪ್ರೀತಿ. ಅದರಲ್ಲೂ ಪುಸ್ತಕದ ಪುಟಗಳ ತುದಿಯನ್ನು ಮಡಚಿ ಕಿವಿಯನ್ನೂ ಸೃಷ್ಟಿಸದ ನನ್ನಂಥವರಿಗೆ ಇವುಗಳೆಲ್ಲಾ ಮತ್ತಷ್ಟು ನಿರಾಶೆಯನ್ನು ತರುವಂಥವುಗಳು. "ಪುಸ್ತಕಗಳನ್ನು ಯಾರಿಗೂ ಎರವಲು ಕೊಡಲೇಬೇಡಿ. ಏಕೆಂದರೆ ಅವುಗಳೆಂದೂ ಮರಳಿ ಬರಲಾರವು; ನನ್ನ ಸಂಗ್ರಹದಲ್ಲಿರುವ ಪುಸ್ತಕಗಳೆಲ್ಲಾ ಇತರರಿಂದ ಎರವಲು ಪಡೆದಂಥವುಗಳೇ" ಎಂದಿದ್ದ ಪ್ರಸಿದ್ಧ ಫ್ರೆಂಚ್ ಲೇಖಕ, ಪತ್ರಕರ್ತ ಅನಟೋಲ್ ಫ್ರಾನ್ಸ್. ಅಷ್ಟರಮಟ್ಟಿಗೆ ಇದೊಂದು ಶತಶತಮಾನಗಳಿಂದ ಬಗಹರಿಸಲಾಗದೇ ಉಳಿದ ಜಾಗತಿಕ ಮಟ್ಟದ ಸಮಸ್ಯೆಯೂ ಹೌದು ಎಂಬಂತಾಯಿತು. |
ನಮ್ಮಿಬ್ಬರ ದುಃಖವೂ ಇದೇ ಆಗಿತ್ತು. ನನ್ನ ಬೆಂಗಾಲಿ ಗೆಳತಿಯಂತೂ ಆ ದಿನಗಳಲ್ಲೇ ಆನ್ ರ್ಯಾಂಡ್, ಬಿ. ರಸ್ಸೆಲ್ಸ್ರಂತಹ ತತ್ವಜ್ಞಾನಿಗಳ ಮಣಭಾರದ ಪುಸ್ತಕಗಳನ್ನೇ ಓದುತ್ತಿದ್ದವಳು. ನಾನಿನ್ನೂ ಸಿಡ್ನಿ ಶೆಲ್ಡನ್, ಅಗಾಥಾ ಕ್ರಿಸ್ಟೀಯಂಥವರ ಕಾದಂಬರಿಗಳ ಹಂತದಲ್ಲೇ ಇದ್ದೆ. ಹಾಗಾಗಿ ಅವಳ ದುಃಖವು ನನಗಿಂತಲೂ ಹೆಚ್ಚಿನದ್ದೇ ಆಗಿರಬೇಕೆಂದು ನಾನು ಭಾವಿಸಿಕೊಂಡೆ. ಅದರಲ್ಲೂ ಅವಳ ಹಾಸ್ಟೆಲ್ ರೂಮಿನ ಪುಟ್ಟ ಸಂಗ್ರಹದಲ್ಲಿದ್ದ ಸುಪ್ರಸಿದ್ಧ ಕಾದಂಬರಿಯಾದ 'ಶಾಂತಾರಾಮ್' ಕಾಣೆಯಾಗಿದ್ದು ಅವಳಿಗೆ ಅರಗಿಸಿಕೊಳ್ಳಲಾಗದ ಸಂಗತಿಯಾಗಿತ್ತು. ಕೂಡಲೇ ಈ ಸಂಬಂಧವಾಗಿ ಪುಸ್ತಕಗಳನ್ನು ಪಡೆದುಕೊಂಡವರಿಗೆಲ್ಲಾ ಶೋಕಾಸ್ ನೋಟೀಸುಗಳನ್ನು ನೀಡುವುದಾಗಿ ನಾವಿಬ್ಬರೂ ನಿರ್ಧರಿಸಿದೆವು. |
ಅದು ಎಸ್ಸೆಮ್ಮೆಸ್ಸುಗಳ ಯುಗವಾಗಿದ್ದರಿಂದ ಬ್ರೇಕಿಂಗ್ ನ್ಯೂಸ್ ಅನ್ನು ಬಿತ್ತರಿಸುವಂತೆ ಆ ದಿನ ಹೋಲ್-ಸೇಲ್ ಆಗಿಯೇ ಸಂದೇಶಗಳು ರವಾನೆಯಾದವು. ಸೆಮಿಸ್ಟರಿನ ಕೊನೆಯ ಭಾಗ, ಪರೀಕ್ಷೆಗಳು, ನೋ ಡ್ಯೂ, ಉದ್ಯೋಗ ನೇಮಕಾತಿಯ ಸಂದರ್ಶನಗಳು… ಹೀಗೆ ಹತ್ತು ಹಲವು ಚಿಂತೆಗಳಲ್ಲಿ ಆಗಲೇ ಮುಳುಗಿಹೋಗಿದ್ದ ನಮ್ಮ ಸಹಪಾಠಿಗಳಿಗೆ ಇದೊಂದು ಜುಜುಬಿಯೆನ್ನಿಸಿರಬೇಕು. ಹೀಗಾಗಿ ಬಹಳಷ್ಟು ಜನ ಉತ್ತರಿಸುವ ಗೋಜಿಗೇ ಹೋಗಲಿಲ್ಲ. ಬೆರಳೆಣಿಕೆಯ ಕೆಲವರು ಏನೋ ಕುಂಟನೆಪ ಹೇಳಿ ಸಾಗಹಾಕಿದರು. ಇನ್ನು ಕೆಲವರಂತೂ "ಓ, ನಾನು ಇವತ್ತೇ ಕೊಡುವವನಿದ್ದೆ ಮಾರಾಯ" ಎಂದೋ "ನಿನ್ನ ಪುಸ್ತಕ ಚೆನ್ನಾಗೇ ಇದೆಯಪ್ಪಾ" ಎಂದೋ ಪುಢಾರಿಗಳನ್ನೂ ಮೀರಿಸುವ ಸುಳ್ಳಾಡಿ ಟೋಪಿಹಾಕಿದರು. "ಶೋಕಾಸ್ ನೋಟೀಸ್ ಕಳಿಸಿಯಾಯಿತಲ್ಲಾ, ಕಾದು ನೋಡೋಣ" ಎಂದು ನಾನವಳನ್ನು ಸಂತೈಸಿದ್ದೆ. |
ಬಹುಶಃ ಅದು ನಾನು ಮಾಡಿದ್ದ ಮೊದಲ ತಪ್ಪು. ಶೋಕಾಸ್ ನೋಟೀಸುಗಳ ಐಡಿಯಾ ಮಣ್ಣುಮುಕ್ಕಿದ ಮೇಲೆ ನಮ್ಮ ಬಳಿ ಇದ್ದಿದ್ದು ಒಂದೇ ದಾರಿ. ತೆರಿಗೆ ಅಧಿಕಾರಿಗಳು ಅಚಾನಕ್ಕಾಗಿ ದಾಳಿ ನಡೆಸುವಂತೆ ಒಬ್ಬೊಬ್ಬರ ಹಾಸ್ಟೆಲ್ ಕೋಣೆಗಳಿಗೂ ಮುಗಿಬೀಳುವುದು. ಹಾಗೆ ಮಾಡಿದೆವೂ ಕೂಡ. ನಿರೀಕ್ಷೆಯಂತೆಯೇ ವಿಚಿತ್ರ ಸ್ಥಿತಿಗಳಲ್ಲಿ ಪುಸ್ತಕಗಳು ಪತ್ತೆಯಾದವು. ಪುಸ್ತಕಗಳು ಕೆಲವರ ಕೋಣೆಗಳಲ್ಲಿ ಸುಮ್ಮನೆ ಧೂಳು ತಿನ್ನುತ್ತಿದ್ದರೆ ಇನ್ನು ಕೆಲವೆಡೆ ಪುಟ್ಟ ತಲೆದಿಂಬುಗಳಾಗಿದ್ದವು. ಕೆಲ ಪುಸ್ತಕಗಳ ಕೊನೆಯ ಪುಟಗಳು ಪೆನ್ನು ಜೀವಂತವಾಗಿದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸುವ ಪ್ರಯೋಗಶಾಲೆಗಳಾಗಿ ಬದಲಾಗಿದ್ದವು. ತೆಳ್ಳನೆಯ ಪುಸ್ತಕಗಳು ಕೆಲ ಮಹಾಬುದ್ಧಿವಂತರಿಂದ ಬೀಸಣಿಕೆಗಳಂತೆ ಉಪಯೋಗಿಸಲ್ಪಡುತ್ತಿದ್ದರೆ ದಪ್ಪನೆಯ ಪುಸ್ತಕಗಳು ಯಾವುದಕ್ಕಾದರೂ ಮರದ ತುಂಡಿನಂತೆ ಆಧಾರವಾಗಿಯೋ, ಭಾರದ ಪೇಪರ್ ವೇಯ್ಟುಗಳಂತೆಯೋ ಬಳಕೆಯಾಗುತ್ತಿದ್ದವು. ಅವಳು ಬಹುದಿನಗಳಿಂದ ಬೆನ್ನಟ್ಟಿದ್ದ ದಪ್ಪನೆಯ ಶಾಂತಾರಾಮ್ ಪುಸ್ತಕವಂತೂ ಒಬ್ಬನ ಲ್ಯಾಪ್-ಟ್ಯಾಪಿನ ಕುಂಡೆಯಡಿಯಲ್ಲಿ ಭದ್ರವಾಗಿತ್ತು. ಲ್ಯಾಪ್-ಟ್ಯಾಪ್ ತನ್ನ ಕಣ್ಣಿನ ಸಮತಲಕ್ಕೆ ಬರುವಂತೆ ಶಾಂತಾರಾಮ್ ಪುಸ್ತಕವನ್ನು ಇನ್ನೊಂದೆರಡು ಪುಸ್ತಕಗಳೊಂದಿಗೆ ಇಟ್ಟು ಆತ ಈ ಭಾರದ ತಳಪಾಯದ ಮೇಲೆ ತನ್ನ ಲ್ಯಾಪ್-ಟ್ಯಾಪನ್ನು ಪ್ರತಿಷ್ಠಾಪಿಸಿದ್ದ. "ಅದೂ… ದಪ್ಪನೆಯ ಡಿಕ್ಷನರಿ ಇರಲಿಲ್ಲವಲ್ಲಾ, ಹಾಗಾಗಿ ಇದನ್ನು ಇಡಬೇಕಾಯಿತು" ಎಂಬ ಸಮಜಾಯಿಷಿಯನ್ನೂ ಆತ ಕೊಟ್ಟ. ಥತ್, ಯಾರಿಗ್ಹೇಳೋಣ ಪುಸ್ತಕಪ್ರೇಮಿಗಳ ಪ್ರಾಬ್ಲಮ್ಮು? |
ಅಂತೂ ಕೊನೆಗೆ ನಮ್ಮ ಕೈಗೆ ಮರಳಿದ ಪುಸ್ತಕಗಳು ಅರ್ಧದಷ್ಟೂ ಇಲ್ಲ ಎಂಬುದನ್ನು ಹೇಳಲೇಬೇಕು. ಎಲ್ಲಾ ವಿಧಿವಿಲಾಸ! ಇಂಥದ್ದೇ ವಿಚಿತ್ರ ಪುಸ್ತಕಸಂಬಂಧಿ ಸಮಸ್ಯೆಯೊಂದು ಉದ್ಭವವಾಗಿದ್ದು ನಾನು ಉದ್ಯೋಗನಿಮಿತ್ತದ ಅಂಡಮಾನ್ ಪ್ರವಾಸದಲ್ಲಿದ್ದಾಗ. ವಾರದ ಮಟ್ಟಿಗೆಂದು ಹೋದವನು ಒಂದು ತಿಂಗಳ ಮಟ್ಟಿಗೆ ಅಲ್ಲೇ ಉಳಿದುಕೊಂಡಿದ್ದೆ. ಪ್ರಕೃತಿಸೌಂದರ್ಯ ಮತ್ತು ಪ್ರಶಾಂತತೆಯನ್ನೇ ಮೈಗೂಡಿಸಿರುವ ಪೋರ್ಟ್ ಬ್ಲೇರ್ ನಿಜಕ್ಕೂ ಪುಟ್ಟ ನಗರ. ನಗರದ ಅಬರ್ಡೇನ್ ಬಝಾರಿನಲ್ಲಿದ್ದ ಒಂದೆರಡು ಪುಸ್ತಕದಂಗಡಿಗಳಿಗೆ ನುಗ್ಗಿದರೆ ನಾಲ್ಕೈದು ಲೇಖಕರನ್ನು ಹೊರತುಪಡಿಸಿದರೆ ಬೇರ್ಯಾವ ಪುಸ್ತಕಗಳೂ ಅಲ್ಲಿ ಲಭ್ಯವಿರಲಿಲ್ಲ. ಇನ್ನು ನಾನು ಸದ್ಯಕ್ಕಿರುವ ಅಂಗೋಲಾದಲ್ಲಂತೂ ಎಲ್ಲೆಲ್ಲೂ ಪೋರ್ಚುಗೀಸ್ ಭಾಷೆಯದ್ದೇ ದರ್ಬಾರು. ಆನ್ಲೈನ್ ಮಾರ್ಗವಾಗಿ ತರಿಸೋಣವೆಂದರೆ ಕೆಲ ಪ್ರದೇಶಗಳಿಗೆ ಕೊರಿಯರ್ ವ್ಯವಸ್ಥೆಯೇ ಇಲ್ಲವಾದರೆ, ಇನ್ನುಳಿದವು ವಿಪರೀತ ಎಂಬಷ್ಟು ದುಬಾರಿ. ಕಳೆದ ಏಳೆಂಟು ವರ್ಷಗಳಿಂದ ಮೂರು ಜನ್ಮಗಳಿಗಾಗುವಷ್ಟು ಸಂಗ್ರಹಿಸಿಟ್ಟಿದ್ದ, ಯಾವತ್ತೂ ತೆರೆಯದೇ ಇದ್ದ ನನ್ನ ಇ-ಬುಕ್ಕುಗಳ ಫೋಲ್ಡರುಗಳನ್ನು ಕೊನೆಗೂ ತೆರೆಸಿದ ಕ್ರೆಡಿಟ್ ಈ ಆಫ್ರಿಕನ್ ದೇಶಕ್ಕೆ ಸಲ್ಲಬೇಕು. ಹೀಗಾಗಿ ಸದ್ಯಕ್ಕಂತೂ ಇ-ಬುಕ್ಗಳಿಗೆ ಜೈ ಎನ್ನದೆ ವಿಧಿಯಿಲ್ಲ. ಕಾಲಾಯ ತಸ್ಮೈ ನಮಃ! |
ನಿಮಗೂ ಕೆಲ ಪುಸ್ತಕಗಳು ನಿಮ್ಮ ಮಿತ್ರರಿಂದ ವಾಪಾಸು ಬರುವುದು ಬಾಕಿಯಿದ್ದರೆ, ಯಾರಿಗಾದರೂ ಶೋಕಾಸ್ ನೋಟೀಸುಗಳೇನಾದರೂ ಜಾರಿಗೊಳಿಸುವುದಿದ್ದರೆ ತಕ್ಷಣ ಕೊಟ್ಟುಬಿಡಿ. ತಡ ಮಾಡಿದಷ್ಟೂ ನಿಮ್ಮದೇ ಪುಸ್ತಕಗಳು ನಿಮಗೆ ಸಿಗುವ ಸಾಧ್ಯತೆಗಳೂ ಕಮ್ಮಿಯಾಗುತ್ತಾ ಹೋಗುತ್ತವೆ ಎಂಬುದು ಸಾಬೀತಾಗಿರುವ ಸತ್ಯ. |
ಮೂಲತಃ ದಕ್ಷಿಣ ಕನ್ನಡದ ಕಿನ್ನಿಗೋಳಿಯವರಾದ ಪ್ರಸಾದ್ ನಾಯ್ಕ್ ಪ್ರತಿಷ್ಠಿತ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸುರತ್ಕಲ್ (ಎನ್.ಐ.ಟಿ.ಕೆ) ನಿಂದ 2011ರಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿಯನ್ನು ಪಡೆದವರು. ಕಳೆದ ಐದು ವರ್ಷಗಳಿಂದ ಜಲ ಸಂಪನ್ಮೂಲ ಇಲಾಖೆ, ಭಾರತ ಸರ್ಕಾರದ ಅಧೀನದಲ್ಲಿರುವ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಗುರುಗ್ರಾಮ್ ಆದ ಹರಿಯಾಣದ ಗುರ್ಗಾಂವ್ ಮತ್ತು ರಾಷ್ಟ್ರರಾಜಧಾನಿಯಾದ ನವದೆಹಲಿಯಲ್ಲಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ, ಸದ್ಯಕ್ಕೆ ದೂರದ ಆಫ್ರಿಕಾದ ದಕ್ಷಿಣ ಭಾಗದಲ್ಲಿರುವ `ರಿಪಬ್ಲಿಕ್ ಆಫ್ ಅಂಗೋಲಾ' ದೇಶದ ವೀಜ್ ಎಂಬ ಪುಟ್ಟ ಪಟ್ಟಣದಲ್ಲಿ, ವಿಶ್ವಬ್ಯಾಂಕ್ ಪ್ರಾಯೋಜಿತ ಸ್ಥಳೀಯ ಸರ್ಕಾರದ ಯೋಜನೆಯೊಂದರಲ್ಲಿ ನಿಯುಕ್ತಿಗೊಂಡು ನೆಲೆಸಿದ್ದಾರೆ. |
ಚಿತ್ರಕಲೆ ಮತ್ತು ಓದಿನ ಪಯಣದಲ್ಲೇ ಖುಷಿಯಾಗಿದ್ದ ಇವರಿಗೆ, "ತಾನೂ ಬರೆಯಬಲ್ಲೆ" ಎಂಬ ಸಂಗತಿಯ ಅರಿವಾದ ನಂತರದ ದಿನಗಳಿಂದ, ಅಂದರೆ ಕಳೆದ ನಾಲ್ಕೈದು ವರ್ಷಗಳಿಂದ ಬರೆಯುತ್ತಾ ಬಂದಿದ್ದಾರೆ. ಇವರ ಕಥೆಗಳು, ಲೇಖನಗಳು, ಪ್ರಬಂಧಗಳು, ಲಲಿತ ಪ್ರಬಂಧಗಳು, ಮಿನಿ ಸರಣಿ ಬರಹಗಳು, ವ್ಯಕ್ತಿಚಿತ್ರಗಳು, ಅನುವಾದಗಳು ಕನ್ನಡದ ವಿವಿಧ ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ತಕ್ಕಮಟ್ಟಿಗೆ ಓದುವ ಮತ್ತು ಆಗಾಗ ಬರೆಯುವ ಹೊರತಾಗಿ, ಪ್ರವಾಸದ ಹೆಸರಿನಲ್ಲಿ ದೇಶ ಸುತ್ತುವ ಮತ್ತು ವ್ಯಂಗ್ಯಚಿತ್ರಗಳನ್ನು ಬರೆಯುವ ಹವ್ಯಾಸ. |
ಗುಜರಾತ್: ಬುಲೆಟ್ ಟ್ರೈನ್ ಯೋಜನೆ ವಿರೋಧಿಸಿ ಹೈಕೋರ್ಟ್ ಮೆಟ್ಟಿಲೇರಿದ ಸಾವಿರಾರು ರೈತರು ! | 1,000 farmers oppose Government's bullet train project in Gujarat High Court | Kannadaprabha.com |
Published: 18 Sep 2018 08:06 PM IST | Updated: 18 Sep 2018 08:13 PM IST |
ಅಹಮದಾಬಾದ್ : ಕೇಂದ್ರಸರ್ಕಾರದ ಮಹತ್ವಕಾಂಕ್ಷೆಯ ಮುಂಬೈ- ಅಹಮದಾಬಾದ್ ನಡುವಿನ ಬುಲೆಟ್ ಟ್ರೋನ್ ಯೋಜನೆ ವಿರೋಧಿಸಿ ಸಾವಿರಕ್ಕೂ ಹೆಚ್ಚು ರೈತರು ಇಂದು ಗುಜರಾತ್ ಹೈಕೋರ್ಟ್ ನಲ್ಲಿ ಅಪಿಢವಿಟ್ ಸಲ್ಲಿಸಿದ್ದಾರೆ. |
ವೇಗದ ರೈಲು ಯೋಜನೆಗಾಗಿ ಭೂ ಸ್ವಾಧೀನ ಪ್ರಕ್ರಿಯೆ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಐದು ಅರ್ಜಿಗಳನ್ನು ಮುಖ್ಯ ನ್ಯಾಯಾಧೀಶ ಆರ್ ಸುಭಾಶ್ ರೆಡ್ಡಿ ಹಾಗೂ ನ್ಯಾಯಾಧೀಶ ವಿ.ಎಂ. ಪಂಚೊಲಿ ಅವರಿದ್ದ ಪೀಠ ಇಂದು ವಿಚಾರಣೆ ನಡೆಸಿತು. |
ಇದಲ್ಲದೆ, ಕೇಂದ್ರಸರ್ಕಾರದ ಮಹತ್ವಾಕಾಂಕ್ಷೆಯ 1. 10 ಲಕ್ಷ ಕೋಟಿ ರೂ ವೆಚ್ಚದ ಯೋಜನೆಯಿಂದ ಅನೇಕ ಬೆಳೆಗಾರರು ತೊಂದರೆಗೊಳಗಾಬೇಕಾಗುತ್ತದೆ. ಆದ್ದರಿಂದ ಈ ಯೋಜನೆ ಕೈಗೆತ್ತಿಕೊಳ್ಳಬಾರದೆಂದು ಎಂದು 1 ಸಾವಿರ ರೈತರು ಪ್ರತ್ಯೇಕವಾಗಿ ಅಪಿಢವಿಟ್ ಸಲ್ಲಿಸಿದ್ದಾರೆ. |
ಬುಲೆಟ್ ಟ್ರೈನ್ ಮಾರ್ಗ ಸಾಗುವ ಗುಜರಾತಿನ ಕೆಲವು ಜಿಲ್ಲೆಗಳ ರೈತರ ಮೇಲೆ ಈ ಯೋಜನೆಯಿಂದ ಪರಿಣಾಮ ಬೀರಲಿದ್ದು, ಯೋಜನೆಗಾಗಿ ತಮ್ಮ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬಾರೆದೆಂದು ಅಫಿಡವಿಟ್ ನಲ್ಲಿ ಹೇಳಿದ್ದಾರೆ. |
ಬುಲೆಟ್ ಟ್ರೈನ್ ಗಾಗಿ ಸೆಪ್ಟೆಂಬರ್ 2015ರಲ್ಲಿ ಜಪಾನ್ ಭಾರತದೊಂದಿಗೆ ಒಪ್ಪಂದ ಮಾಡಿಕೊಂಡ ನಂತರ ಗುಜರಾತ್ ಸರ್ಕಾರ 2013ರ ಭೂ ಸ್ವಾಧೀನ ಕಾಯ್ದೆಯನ್ನು ಉಲ್ಲಂಘಿಸಿದೆ. ನ್ಯಾಯಾಲಯ ಅಥವಾ ಯಾವುದೇ ರೀತಿಯಿಂದಲೂ ಸಮಾಲೋಚನೆ ನಡೆಸದೆ ಭೂ ಸ್ವಾಧೀನ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ರೈತರು ಆರೋಪಿಸಿದ್ದಾರೆ. |
ಕಳೆದ ನಾಲ್ಕು ವಾರಗಳಿಂದಲೂ ವಿಚಾರಣೆ ಪೂರ್ಣಗೊಳಿಸುವಲ್ಲಿ ಹೈಕೋರ್ಟ್ ವಿಫಲವಾಗಿದ್ದು, ನಾಳೆ ಸುಪ್ರೀಂಕೋರ್ಟ್ ನಲ್ಲಿ ತುರ್ತು ವಿಚಾರಣೆ ನಡೆಸುವಂತೆ ಅರ್ಜಿ ಸಲ್ಲಿಸಲಾಗುವುದು ಎಂದು ರೈತ ಪರ ವಕೀಲ ಆನಂದ್ ಯಾಗ್ ನಿಕ್ ತಿಳಿಸಿದ್ದಾರೆ. |
Topics : Gujarat, Bullet train project , Farmers, High Court ಗುಜರಾತ್, ಬುಲೆಟ್ ಟ್ರೈನ್ ಯೋಜನೆ, ರೈತರು, ಹೈಕೋರ್ಟ್ |
|ಚಾಮರಾಜನಗರ: 27, 28ರಂದು ರಾಜ್ಯಮಟ್ಟದ ನೃತ್ಯ ಸ್ಪರ್ಧೆ - chamarajnagara - News in kannada, vijaykarnataka |
Keywords: ಸ್ಪರ್ಧೆ | ರಾಜ್ಯಮಟ್ಟ | ನೃತ್ಯ | ಚಾಮರಾಜನಗರ | State Level | Dance | competition | chamarajanagara |
ಚಾಮರಾಜನಗರ: ಅವತಾರ್ ಡಾನ್ಸ್ ಇನ್ಸ್‌ಟಿಟ್ಯೂಟ್ ಸಂಸ್ಥೆಯಿಂದ 4ನೇ ವಾರ್ಷಿಕೋತ್ಸವ ಅಂಗವಾಗಿ ಮೇ 27 ಹಾಗೂ 28ರಂದು ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ರಾಜ್ಯಮಟ್ಟದ ನೃತ್ಯಸ್ಪರ್ಧೆ, ಜಿಲ್ಲಾ ಮಟ್ಟದ ದೇಹದಾಢÜ್ರ್ಯ ಸ್ಪರ್ಧೆ ಹಾಗೂ ಚಿಕ್ಕಮಕ್ಕಳಿಗೆ ವಂಡರ್‌ಕಿಡ್-2017 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಪ್ರವೀಣ್ ಹೇಳಿದರು. |
''4 ವರ್ಷದಿಂದ ಜಿಲ್ಲೆಯಲ್ಲಿ ನೃತ್ಯ ಸ್ಪರ್ಧೆ ನಡೆಸಿಕೊಂಡು ಬರಲಾಗುತ್ತಿದೆ. ಕಳೆದ ಬಾರಿ ನಡೆದ ನೃತ್ಯ ಸ್ಪರ್ಧೆಯಲ್ಲಿ ರಾಜ್ಯದ ನಾನಾ ಜಿಲ್ಲೆಗಳಿಂದ 30 ತಂಡಗಳು ಭಾಗವಹಿಸಿದ್ದವು. ಹಾಸನ ತಂಡಕ್ಕೆ ಪ್ರಥಮ ಬಹುಮಾನ ಲಭಿಸಿತ್ತು. ಈ ಬಾರಿ 40ಕ್ಕೂ ಹೆಚ್ಚು ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ,'' ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. |
''ವಂಡರ್‌ಕಿಡ್ ಕಾರ್ಯಕ್ರಮದಲ್ಲಿ 6 ವರ್ಷದೊಳಗಿನ ಮಕ್ಕಳು ಭಾಗವಹಿಸಲಿದ್ದು, ಅವರು ನೃತ್ಯ, ಗಾಯನ, ಡ್ರಾಯಿಂಗ್ ಪ್ರದರ್ಶಿಸಲಿದ್ದಾರೆ. ಇದೇ ಪ್ರಥಮ ಬಾರಿಗೆ ಚಾಮರಾಜನಗರದಲ್ಲಿ ಮಿಸ್ ಚಾಮರಾಜನಗರ ಸೌಂದರ್ಯ ಸ್ಪರ್ಧೆ ಏರ್ಪಡಿಸಲಾಗುತ್ತಿದ್ದು, 16ರಿಂದ 24 ವರ್ಷದೊಳಗಿನ ಯುವತಿಯರು ಭಾಗವಹಿಸಬಹುದು. ಎಲ್ಲ ಸ್ಪರ್ಧೆಗಳನ್ನು ವೀಕ್ಷಿಸಿ, ಮೈಸೂರಿನ ತೀರ್ಪುಗಾರರು ವಿಜೇತರನ್ನು ಘೋಷಿಸಲಿದ್ದಾರೆ. ಆಸಕ್ತರು ಹೆಸರು ನೋಂದಾಯಿಸಿಕೊಳ್ಳಲು ಮೊ: 7353819994 ಸಂಪರ್ಕಿಸಬಹುದು,'' ಎಂದರು. |
ಮ0ಗಳೂರು : ಮಾಲಿನ್ಯ ನಿಯಂತ್ರಣಕ್ಕೆ ಆಧುನಿಕ ಉಪಕರಣಗಳ ಬಳಕೆ- ಶಾಸಕ ಬಾವಾ ಸೂಚನೆ - Mangalorean.com |
Home Mangalorean News Kannada News ಮ0ಗಳೂರು : ಮಾಲಿನ್ಯ ನಿಯಂತ್ರಣಕ್ಕೆ ಆಧುನಿಕ ಉಪಕರಣಗಳ ಬಳಕೆ- ಶಾಸಕ ಬಾವಾ ಸೂಚನೆ |
ಮ0ಗಳೂರು : ಮಾಲಿನ್ಯ ನಿಯಂತ್ರಣಕ್ಕೆ ಆಧುನಿಕ ಉಪಕರಣಗಳ ಬಳಕೆ- ಶಾಸಕ ಬಾವಾ ಸೂಚನೆ |
By Michael Rodrigues, Team Mangalorean. - December 10, 2015 Share on Facebook |
tweet ಮ0ಗಳೂರು : ಸುರತ್ಕಲ್, ಬೈಕಂಪಾಡಿ, ನವಮಂಗಳೂರು ವ್ಯಾಪ್ತಿ ಸೇರಿದಂತೆ ಕೈಗಾರಿಕೆಗಳಿಂದ ಮಾಲಿನ್ಯ ಸಂಭವಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ 2 ತಿಂಗಳೊಳಗೆ ವರದಿ ನೀಡುವಂತೆ ಮಂಗಳೂರು ಉತ್ತರ ಶಾಸಕ ಬಿ.ಎ. ಮೊಹಿದೀನ್ ಬಾವಾ ಅವರು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. |
ಅವರು ಗುರುವಾರ ಬೈಕಂಪಾಡಿ ಕೈಗಾರಿಕಾ ಪ್ರದೇಶದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಭಾಂಗಣದಲ್ಲಿ ಉದ್ದಿಮೆಗಳಲ್ಲಿ ಮಾಲಿನ್ಯ ನಿಯಂತ್ರಣ-ಪರಿಸರ ಜಾಗೃತಿ ಮೂಡಿಸುವ ಸಂಬಂಧ ನಡೆದ ಸಭೆಯನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸುರತ್ಕಲ್ ಸುತ್ತಮುತ್ತಲಿನ ಪರಿಸರದಲ್ಲಿ ನೀರು, ವಾಯು ಮಾಲಿನ್ಯದ ಬಗ್ಗೆ ಸಾರ್ವಜನಿಕರಿಂದ ಹಲವಾರು ದೂರುಗಳು ಬರುತ್ತಿವೆ. ಹಲವಾರು ಕೈಗಾರಿಕೆಗಳು ಮಾಲಿನ್ಯ ನಿಯಂತ್ರಕ ಕ್ರಮಗಳನ್ನು ಅಳವಡಿಸಿರುವ ಬಗ್ಗೆ ಸರಕಾರಕ್ಕೆ ಮಾಹಿತಿ ನೀಡಿವೆ. ಹೀಗಿದ್ದೂ, ಮಾಲಿನ್ಯದ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯು ಈ ಬಗ್ಗೆ ವೈಜ್ಞಾನಿಕವಾಗಿ ಪರಿಶೀಲನೆ ನಡೆಸುವಂತೆ ಆಸಕರು ತಿಳಿಸಿದರು. |
ಉದ್ದಿಮೆಗಳು ನಾಗರೀಕರಿಗೆ ಪೂರಕವಾಗಿ ಕಾರ್ಯಾಚರಿಸಬೇಕು. ಮಾಲಿನ್ಯ ನಿಯಂತ್ರಣಕ್ಕೆ ಇಂದು ಅತ್ಯಾಧುನಿಕ ಉಪಕರಣಗಳು ಲಭ್ಯವಿದೆ. ಅನೇಕ ಬೃಹತ್ ಕೈಗಾರಿಕಗೆಳು ಇವುಗಳನ್ನು ಅಳವಡಿಸಿಕೊಂಡಿವೆ. ಇದಲ್ಲದೇ, ಮಾಲಿನ್ಯ ನಿಯಂತ್ರಣಕ್ಕೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುವುದಾಗಿ ಬೃಹತ್ ಕೈಗಾರಿಕಗಳು ಒಪ್ಪಿಕೊಂಡಿದ್ದಾರೆ ಎಂದು ಶಾಸಕ ಮೊಹಿದೀನ್ ಬಾವಾ ತಿಳಿಸಿದರು. |
ಕೈಗಾರಿಕೆಗಳು ತಮ್ಮ ನೇಮಕಾತಿಯಲ್ಲಿ ಸ್ಥಳೀಯರಿಕೆ ಹೆಚ್ಚು ಆದ್ಯತೆ ನೀಡಬೇಕು. ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿಯಡಿ ನೆರವು ನೀಡುವಾಗ ತಮ್ಮ ಉದ್ದಿಮೆಯ ಪರಿಸರದ, ಸುತ್ತಮುತ್ತಲ ಪ್ರದೇಶಗಳಿಗೆ ಆದ್ಯತೆ ನೀಡಬೇಕು. ಸ್ಥಳೀಯ ಪಾರ್ಕ್, ಶಾಲೆಗಳ ಅಭಿವೃದ್ಧಿಗೆ ಒತ್ತುನೀಡಬೇಕು. ಕೈಗಾರಿಕೆಗಳಿಗೆ ಭೂಮಿ ಬಿಟ್ಟುಕೊಟ್ಟ ನಿರ್ವಸಿತರ ಕಾಲನಿಗಳ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಶಾಸಕರು ತಿಳಿಸಿದರು. |
ಸುರತ್ಕಲ್-ಎಂಆರ್‍ಪಿಎಲ್ ರಸ್ತೆಯ ಅಬಿವೃದ್ಧಿಗೆ ಎಂಆರ್‍ಪಿಎಲ್ ಸಂಸ್ಥೆಯು ತಾತ್ವಿಕವಾಗಿ ಒಪ್ಪಿಕೊಂಡಿದೆ. ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಭೂಗತ ಒಳಚರಂಡಿ ಯುಜಿಡಿ ವ್ಯವಸ್ಥೆಗೆ ಬದ್ಧರಾಗಿದ್ದು, ಮಹಾನಗರಪಲಿಕೆಯ ಎಡಿಬಿ 2ನೇ ಹಂತದಲ್ಲಿ ಇದನ್ನು ಕೈಗೆತ್ತಿಕೊಳ್ಳಲಾಗುವುದು. ಇದಲ್ಲದೇ ಬೈಕಂಪಾಡಿ ಕೈಗಾರಿಕಾ ಪ್ರದೇಶದ ಹಾನಿಕಾರಕವಲ್ಲದ ತ್ಯಾಜ್ಯಗಳ ವಿಲೇವಾರಿಗೆ 25 ಎಕರೆ ಜಮೀನಿನ ಅಗತ್ಯವಿದ್ದು, ಈ ಬಗ್ಗೆ ಕ್ರಮಕೈಗೊಳ್ಳಲಾಗುವುದು. ಜೋಕಟ್ಟೆ-ವಿಮಾನನಿಲ್ದಾಣ ನೇರರಸ್ತೆ ನಿರ್ಮಾಣಕ್ಕೆ ಇರುವ ಕಾನೂನಿನ ತೊಡಕು ನಿವಾರಿಸಲು ಶ್ರಮಿಸುವುದಾಗಿ ಶಾಸಕರು ತಿಳಿಸಿದರು. ಕೈಗಾರಿಕಗೆಳು, ಉದ್ದಿಮೆಗಳ ಯಾವುದೇ ಸಮಸ್ಯೆ ಪರಿಹಾರಕ್ಕೆ ತಾನು ಸಿರ್ದಧನಿರುವುದಾಗಿ ಅವರು ಹೇಳಿದರು. |
ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ರಾಜಶೇಖರ್ ಪುರಾಣಿಕ್ ಮಾತನಾಡಿ, ಪರಿಸರ ಮಾಲಿನ್ಯದ ಬಗ್ಗೆ ನಿಗಾ ವಹಿಸಲು ಈಗಾಗಲೇ ಅಪರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಮಟಟ್ದ ಸಮಿತಿ ರಚಿಸಲಾಗಿದೆ. ಜಿಲ್ಲೆಯಲ್ಲಿ 16 ಮೀನಿನ ಎಣ್ಣೆ ತಯಾರಿಸುವ ಕಾರ್ಖಾನೆಗಳಿದ್ದು, ಹೆಚ್ಚಿನ ಕಾರ್ಖಾನೆಗಳು ಮಾಲಿನ್ಯ ನಿಯಂತ್ರಕ ಸಾಧಕಗಳನ್ನು ಅಳವಡಿಸಿದೆ. ಮುಂದಿನ ಮಾರ್ಚ್ ಒಳಗೆ ಎಲ್ಲಾ ಮೀನಿನೆಣ್ಣೆ ಕರ್ಖಾನೆಗಳು ಇದನ್ನು ನಿಯಂತ್ರಿಸುವ ಬದ್ಧತೆ ವ್ಯಕ್ತಪಡಿಸಿದ್ದಾರೆ. ನವಮಂಗಳೂರು ಬಂದರಿನಲ್ಲಿ ಕಲ್ಲಿದ್ದಲು ಸಾಗಾಟ, ನಿರ್ವಹಣೆ ಸಂದರ್ಭದಲ್ಲಿ ಉಂಟಾಗುತ್ತಿರುವ ಮಾಲಿನ್ಯವನ್ನು ನಿಯಂತ್ರಿಸಲು ಮುಂದಿನ ಒಂದೂವರೆ ವರ್ಷದೊಳಗೆ ಯಾಂತ್ರೀಕೃತವಾಗಿ ಕಲ್ಲಿದ್ದಲ್ಲು ನಿರ್ವಹಿಸುವುದಾಗಿ ಎನ್‍ಎಂಪಿಟಿಯು ತಿಳಿಸಿದೆ ಎಂದರು. |
ಸಭೆಯಲ್ಲಿ ಮಂಗಳೂರು ಮಹಾನಗರಪಾಲಿಕೆ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಾದ ಲಕ್ಷಣ್, ಜಯಪ್ರಕಾಶ್ ನಾಯಕ್, ಎನ್‍ಎಂಪಿಟಿ, ಎಂಆರ್‍ಪಿಎಲ್, ಸೇರಿದಂತೆ ವಿವಿಧ ಕೈಗಾರಿಕೆ, ಉದ್ದಿಮೆ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. |
tweet Previous Articlesಮಂಗಳೂರು : ಪಾವೂರು ಉಳಿಯ ಕುದ್ರುವಿನಲ್ಲಿ ನಡೆಯುತ್ತಿರುವ ಮರಳುಗಾರಿಕೆಯನ್ನು ನಿಯಂತ್ರಿಸಲು ಒತ್ತಾಯಿಸಿ ಪ್ರತಿಭಟನಾ ಧರಣಿNext Articles'Maanavatha Milan – a Quest for Humanity' Workshop held to mark 'Intl Human Rights Day' Michael Rodrigues, Team Mangalorean.http://www.mangalorean.com Related ArticlesMore from Author |
Kannada News ಕೊಕ್ಕಡದಲ್ಲಿ ರಸ್ತೆ ದಾಟುತ್ತಿದ್ದ ಬಾಲಕಿಗೆ ಕಾರು ಡಿಕ್ಕಿ ಹೊಡೆದು ಸಾವು Kannada News ಉಡುಪಿ ಜಿಲ್ಲಾ ಕಾಂಗ್ರೆಸ್ ಒಬಿಸಿ ವಿಭಾಗ ಅಧ್ಯಕ್ಷರಾಗಿ ಯತೀಶ್ ಕರ್ಕೇರಾ Kannada News ಅತ್ತೂರು ಪುಣ್ಯಕ್ಷೇತ್ರದ ಮೊಬೈಲ್ ಟವರ್ ಸಮಸ್ಯೆಯ ಮನವಿಗೆ ಸ್ಪಂದಿಸಿದ ಪ್ರಧಾನಿ ಮೋದಿ Leave a Reply Cancel Reply six |
ದೊರೆಸ್ವಾಮಿ 99: ದಣಿವರಿಯದ ಸಕ್ರಿಯ ರಾಜಕಾರಣ : ನಮ್ಮ ಬನವಾಸಿ : Devanuru Mahadeva |
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಯವರು (ಜನನ:10 ಏಪ್ರಿಲ್ 1918) ಮೊನ್ನೆ ತೊಂಬತ್ತೊಂಬತ್ತಕ್ಕೆ ಕಾಲಿಟ್ಟರು. ಈ ಅಂಕಣ ಬರೆಯುವ ಮಂಗಳವಾರ ಬೆಂಗಳೂರಿನ ಜಯನಗರದಲ್ಲಿರುವ ಅವರ ಮನೆಗೆ ಹೋದಾಗ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಕೇಕ್ ಕತ್ತರಿಸುತ್ತಿದ್ದರು. 'ನನಗೂ ಕೊಡಿ' ಎಂದು ಕೇಕ್ ತೆಗೆದುಕೊಂಡು ತಿನ್ನುತ್ತಿದ್ದ ದೊರೆಸ್ವಾಮಿಯವರನ್ನು 'ಹಲ್ಲುಗಳು ಹೇಗಿವೆ?' ಎಂದೆ. 'ಎಲ್ಲಾ ಒರಿಜಿನಲ್' ಎಂದರು. ಬಾಲ್ಯದಲ್ಲಿ ಅಜ್ಜನ ಜೊತೆ ಕಬ್ಬಿನ ಗದ್ದೆಗೆ ಹೋಗಿ ನಿತ್ಯ ಕಬ್ಬು ಜಗಿದು ಗಟ್ಟಿಯಾದ ಹಲ್ಲುಗಳು ಇನ್ನೂ ಉಳಿದಿದ್ದವು. ಹಾಗೆಯೇ, ಗಾಂಧೀ ಸ್ಪರ್ಶದಿಂದ ಹುಟ್ಟಿದ ಸಾಮಾಜಿಕ ಬದ್ಧತೆ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿ ಯಾಗಿ ದ್ದರಿಂದ ಬಂದ ನಿರ್ಭೀತಿ, ನಿರಂತರ ಎಚ್ಚರ, ಸರ್ವೋದಯ ಚಳವಳಿಯಿಂದ ಬಂದ ಭೂಹಂಚಿಕೆಯ ಬಗೆಗಿನ ಕಾಳಜಿ, ರಚನಾತ್ಮಕ ಕಾರ್ಯಕ್ರಮಗಳು… ಎಲ್ಲವೂ ಹಾಗೇ ಇವೆ. ದೊರೆಸ್ವಾಮಿ ಅಧಿಕಾರ ರಾಜ ಕಾರಣ ದತ್ತ ಹೋಗದಿದ್ದರೂ, 'ನಾನು ಸಕ್ರಿಯ ರಾಜ ಕೀಯ ದಲ್ಲಿದ್ದೇನೆ' ಎನ್ನುತ್ತಾರೆ. ಭೂಗಳ್ಳರು ಕಬಳಿಸಿದ ಲಕ್ಷಗಟ್ಟಲೆ ಎಕರೆ ಸರ್ಕಾರಿ ಜಮೀನನ್ನು ಉಳಿಸಲು ಅವರು ಮಾಡಿದ ಈಚಿನ ಹೋರಾಟದವರೆಗೂ ಅವರು ನಡೆಸಿ ರುವ ಹತ್ತಾರು ಹೋರಾಟಗಳೇ 'ಸಕ್ರಿಯ ರಾಜಕಾರಣ' ಎಂದರೇನು ಎಂಬುದನ್ನು ಸ್ಪಷ್ಟವಾಗಿ ವಿವರಿಸುತ್ತವೆ. |
ಅಲ್ಲಿದ್ದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರನ್ನು ನೋಡುತ್ತಾ, 'ಆಪ್, ಬಿಜೆಪಿ ವಿರುದ್ಧ ಪರ್ಯಾಯ ವೊಂ ದನ್ನು ಕಟ್ಟಬಹುದೇ?' ಎಂದೆ. 'ಅದಕ್ಕೆ ಆ ಶಕ್ತಿ ಇರ ಬಹುದು; ಆದರೆ ಈಗಿನ ಸನ್ನಿವೇಶದಲ್ಲಿ ಆ ಪಕ್ಷ, ಈ ಪಕ್ಷ ಅಂತ ಅಲ್ಲ; ಅವತ್ತು ಇಂದಿರಾ ಗಾಂಧಿಯವರ ಸರ್ವಾಧಿ ಕಾರದ ವಿರುದ್ಧ ಎಲ್ಲ ಪಕ್ಷಗಳೂ ಒಗ್ಗೂಡಿದಂತೆ ಈಗ ಬಿಜೆಪಿ ವಿರುದ್ಧ ಎಲ್ಲ ಪಕ್ಷಗಳೂ ಒಗ್ಗೂಡಬೇಕು. ಅದೊಂದೇ ದಾರಿ' ಎಂದರು ದೊರೆಸ್ವಾಮಿ. 'ದಬ್ಬಾಳಿಕೆಯ ಹಾಗೂ ಸರ್ವಾಧಿಕಾರದ ರಾಜಕಾರಣ ವನ್ನು ಎಲೆಕ್ಷನ್ನಿನಲ್ಲಿ ಹಿಮ್ಮೆಟ್ಟಿ ಸು ವುದು ಮುಖ್ಯ' ಎಂಬ ಅವರ ಮಾತು ಕೇಳುತ್ತಿದ್ದರೆ, ಒಳ್ಳೆಯ ರಾಜ ಕಾರಣವೆನ್ನುವುದು ಕೇವಲ ಆದರ್ಶಗಳ ಆರಾಧನೆಯಲ್ಲ; ನಿರಂತರವಾಗಿ ತಕ್ಷಣದ ಸವಾಲುಗಳಿಗೆ ಎದುರಾಗುವುದು ಎಂಬುದು ಹೊಳೆಯತೊಡಗುತ್ತದೆ. ರಾಜಕಾರಣವನ್ನು ಎಷ್ಟು ತುರ್ತಿನಿಂದ ಮಾಡಬೇಕಾಗುತ್ತದೆ ಎಂಬ ಎಚ್ಚರ ಮೂಡತೊಡಗುತ್ತದೆ. ಸಾಮಾಜಿಕ ಚಳವಳಿ ಮಾಡುವ ವರು ಚುನಾವಣಾ ರಾಜಕಾರಣವನ್ನು ಎಷ್ಟು ಗಂಭೀರ ವಾಗಿ ನೋಡಬೇಕು ಎಂಬುದೂ ಸ್ಪಷ್ಟವಾಗತೊಡ ಗುತ್ತದೆ. ಇದೆಲ್ಲದರ ನಡುವೆ, ಬರವಣಿಗೆಯನ್ನೂ ಬಿಡದ ದೊರೆ ಸ್ವಾಮಿ ಯವರು ತಮ್ಮ 98ನೆಯ ವಯಸ್ಸಿನಲ್ಲಿ 'ಭೂಗಳ್ಳರು ಕಬಳಿಸಿದ ಸರ್ಕಾರಿ ಜಮೀನನ್ನು ಉಳಿಸಿದ ಹೋರಾಟ' ಎಂಬ ಪುಸ್ತಕವನ್ನೂ ಬರೆದಿದ್ದಾರೆ. ಈ ಪುಸ್ತಕ ದೊರೆ ಸ್ವಾಮಿ ಯವರ ಹರೆಯದ ದಿನಗಳ ದಿಟ್ಟ ಪತ್ರಿಕೋದ್ಯಮ ಹಾಗೂ ಅವರಲ್ಲಿ ಇವತ್ತಿಗೂ ಉಳಿದಿರುವ ನೇರ, ನಿರ್ಭೀತ, ಸತ್ಯನಿಷ್ಠ ಬರವಣಿಗೆಯ ಸಾಕ್ಷಿಯಂತಿದೆ. |
ದೊರೆಸ್ವಾಮಿಯವರನ್ನು ರೂಪಿಸಿದ ಪುಸ್ತಕ ಪ್ರಕಾಶನ ಹಾಗೂ ಪತ್ರಿಕೋದ್ಯಮಗಳೆರಡಕ್ಕೂ ಅವರ ಬದುಕಿನಲ್ಲಿ ಮುಖ್ಯ ಸ್ಥಾನವಿದೆ. ಅವರ ಜೀವನದ ಮುಖ್ಯ ವಿವರಗಳನ್ನು ಬಿ. ಆರ್. ರಮೇಶ್ ಬರೆದ 'ಗಾಳಿಗೆ ಸಿಕ್ಕ ತರಗೆಲೆ' (ಪ್ರ: ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ, ಮೈಸೂರು) ಪುಸ್ತಕದಿಂದ ಆಯ್ದುಕೊಂಡಿರುವೆ. ಹಾರೋ ಹಳ್ಳಿ ಯಲ್ಲಿ ಹುಟ್ಟಿ, ನಂತರ ಬೆಂಗಳೂರು ಸೇರಿ ಸ್ವಾತಂತ್ರ್ಯ ಚಳವಳಿಗೆ ಧುಮುಕಿದ ದೊರೆಸ್ವಾಮಿ ನಂದಿಬೆಟ್ಟದಲ್ಲಿ ಗಾಂಧಿ ಅವರನ್ನು ಮೊದಲ ಬಾರಿಗೆ ಕಂಡರು. ಅದಕ್ಕೂ ಮುನ್ನ ಐದನೆಯ ಕ್ಲಾಸಿನಲ್ಲಿದ್ದಾಗಲೇ ಗಾಂಧಿಯವರ 'ಮೈ ಅರ್ಲಿ ಲೈಫ್' ಪುಸ್ತಕದ ಪ್ರಭಾವಕ್ಕೊಳಗಾಗಿದ್ದರು. ಯಾವ ಪುಸ್ತಕದಲ್ಲಿ ಯಾವ ಸಾಲು ನಮ್ಮಲ್ಲಿ ಉಳಿಯುತ್ತದೆ ಎಂಬುದು ನಿಜಕ್ಕೂ ನಿಗೂಢ! ಗಾಂಧಿಯವರ ಈ ಪುಸ್ತಕದಲ್ಲಿ 'ಎ ಸೋಷಿಯಲ್ ವರ್ಕರ್ ಶುಡ್ ಹಗ್ ವಾಲಂಟರಿ ಪಾವರ್ಟಿ' (ಸಾಮಾಜಿಕ ಕಾರ್ಯಕರ್ತನೊಬ್ಬ ಸ್ವಇಚ್ಛೆಯಿಂದ ಬಡತನವನ್ನು ಅಪ್ಪಿಕೊಳ್ಳಬೇಕು) ಎಂಬ ಮಾತು ದೊರೆಸ್ವಾಮಿಯವರಲ್ಲಿ ಉಳಿದುಬಿಟ್ಟಿತು. 'ಅದರ ಅರ್ಥ ಆಗ ಸರಿಯಾಗಿ ಆಗಿರಲಿಲ್ಲ. ಸಾರ್ವಜನಿಕ ಜೀವನಕ್ಕೆ ಬಂದಾಗ ಅದು ಸರಿಯಾಗಿ ಅರ್ಥವಾಯಿತು' ಎಂದು ನಕ್ಕರು ದೊರೆಸ್ವಾಮಿ. ಗೆಳೆಯ ಭದ್ರಣ್ಣನವರು 'ಪೌರವಾಣಿ' ಪತ್ರಿಕೆಯನ್ನು ನಡೆಸುವ ಹೊಣೆಯನ್ನು ದೊರೆಸ್ವಾಮಿಯ ವರಿಗೆ ಬಿಟ್ಟು ತೀರಿಕೊಂಡರು. ದೊರೆಸ್ವಾಮಿ ಮಿತ್ರರೊಬ್ಬರ ಮನೆಯಲ್ಲಿ ಊಟ ಮಾಡಿ, 'ಪೌರವಾಣಿ' ಪತ್ರಿಕೆಯ ಆಫೀಸಿನಲ್ಲಿ ಕೆಲಸ ಮಾಡಿ, ಅಲ್ಲೇ ಮಲಗುತ್ತಿದ್ದರು. |
ಪತ್ರಿಕೆ ವಹಿಸಿಕೊಂಡ ದೊರೆಸ್ವಾಮಿ ಮೈಸೂರಿನಲ್ಲಿ ಸ್ವಾತಂತ್ರ್ಯ ಘೋಷಣೆಗೆ ಅಡ್ಡಿಯಾಗಿದ್ದ ಆರ್ಕಾಟ್ ರಾಮಸ್ವಾಮಿ ನೇತೃತ್ವದ ಮಂತ್ರಿಮಂಡಲದ ಸರ್ಕಾರವನ್ನು ವಜಾಗೊಳಿಸಿ ಜವಾಬ್ದಾರಿ ಸರ್ಕಾರವನ್ನು ಸ್ಥಾಪಿಸಲು ಒತ್ತಾಯಿ ಸುವ ಲೇಖನಗಳನ್ನು ಪ್ರಕಟಿಸಲಾರಂಭಿಸಿದರು. ಆರ್ಕಾಟ್ ಸರ್ಕಾರದ ವಿರುದ್ಧ ಎಂಟು ದಿನಗಳ ಕಾಲ ತಿ.ತಾ. ಶರ್ಮರ ಹರಿತವಾದ ಬರಹಗಳನ್ನು 'ಪೌರವಾಣಿ' ಪ್ರಕಟಿಸ ತೊಡಗಿ ದಾಗ, ಸರ್ಕಾರ ಈ ಪತ್ರಿಕೆಯ ಲೇಖನಗಳನ್ನು ಸರ್ಕಾರದ ಮುಖ್ಯಕಾರ್ಯದರ್ಶಿಗೆ ತೋರಿಸಿ ಪ್ರಕಟಿಸ ಬೇಕೆಂಬ ನಿರ್ಬಂಧ ಹೇರಿತು. ಅದಕ್ಕೆಲ್ಲ ಜಗ್ಗದ ದೊರೆಸ್ವಾಮಿ ತಿ.ತಾ.ಶರ್ಮರ ಉಳಿದ ಎರಡು ಲೇಖನ ಗಳನ್ನೂ ಪ್ರಕಟಿಸಿ, 'ಆರ್ಕಾಟ್ ರಾಮಸ್ವಾಮಿ ಮೊದಲಿಯಾರರ ನೇತೃತ್ವದ ಸರ್ಕಾರದ ಈ ನಿರಂಕುಶ ನೀತಿಯನ್ನು ಪ್ರತಿಭಟಿಸಲು ನಾಳೆಯಿಂದ ಪತ್ರಿಕೆ ಯನ್ನು ಹೊರತರಬಾರದೆಂದು ನಿರ್ಧರಿಸಿದ್ದೇವೆ' ಎಂದು ಘೋಷಿಸಿ ದರು. ಆರ್ಕಾಟ್ ನೇತೃತ್ವದ ಸರ್ಕಾರ 'ಪೌರವಾಣಿ' ಪತ್ರಿಕೆಯನ್ನು ಮುಟ್ಟುಗೋಲು ಹಾಕಿಕೊಂಡಿತು. |
ಆರ್ಕಾಟ್ ನೇತೃತ್ವದ ಸರ್ಕಾರದ ವಿರುದ್ಧ ಸತ್ಯಾಗ್ರಹಕ್ಕೆ ಜನರನ್ನು ಅಣಿಗೊಳಿಸಲು ಪತ್ರಿಕೆ ಇರಲೇಬೇಕೆಂಬುದನ್ನು ಮನಗಂಡ ದೊರೆಸ್ವಾಮಿ ಆಗ ಮದ್ರಾಸು ಪ್ರಾಂತದಲ್ಲಿದ್ದ ಹಿಂದೂಪುರದಿಂದ ಪತ್ರಿಕೆಯನ್ನು ಹೊರತಂದರು. ಸರ್ಕಾರ ತರಲೆ ಮಾಡಿದರೆ ಅದಕ್ಕೂ ಟಾಂಗ್ ಕೊಡಲು, 'ಪೌರವಾಣಿ'ಯ ಜೊತೆಗೇ, 'ಪೌರವೀರ', 'ಪೌರ ಮಾರ್ತಾಂಡ', 'ಪೌರದೂತ', 'ಪೌರಭಾಸ್ಕರ' ಹೀಗೆ ಒಟ್ಟು ಐದು ಪತ್ರಿಕೆಗಳ ಸಂಪಾದಕರಾಗಿ ನೋಂದಾಯಿಸಿ ಕೊಂಡರು! ಮುಂದೆ 'ಪೌರವಾಣಿ' ಮೈಸೂರು ಸಂಸ್ಥಾನ ದೊಳಗೆ ಬರಬಾರದೆಂದು ಮೈಸೂರು ಸರ್ಕಾರ ಆದೇಶ ಹೊರಡಿಸಿದ ತಕ್ಷಣ ಅದೇ ಪತ್ರಿಕೆ 'ಪೌರವೀರ' ಆಗಿ ಹೊರಬಂತು! 1947ರ ಅಕ್ಟೋಬರ್ 24ರಂದು ಕೆ.ಸಿ.ರೆಡ್ಡಿ ಯವರ ನಾಯಕತ್ವದಲ್ಲಿ ಮೈಸೂರಿನಲ್ಲಿ ಜವಾಬ್ದಾರಿ ಸರ್ಕಾರ ಅಸ್ತಿತ್ವಕ್ಕೆ ಬಂತು. 'ಪೌರವಾಣಿ'ಯ ಜೊತೆ ದೊರೆಸ್ವಾಮಿ ಮತ್ತೆ ಬೆಂಗಳೂರಿಗೆ ಬಂದರು. |
ಗಾಂಧೀಜಿ ಕಾಲದ ರಾಜಕಾರಣದಲ್ಲಿ ತಯಾರಾದ ದೊರೆಸ್ವಾಮಿ ಅಧಿಕಾರ ರಾಜಕಾರಣಕ್ಕಿಂತ ಗಾಂಧೀಜಿಯ ರೀತಿಯ ರಚನಾತ್ಮಕ ಕಾರ್ಯಗಳ ಹಾದಿಯಲ್ಲೇ ಮುಂದು ವ ರಿದರು. ಸ್ವತಂತ್ರವಾಗಿ ಬದುಕಲು ಬಯಸಿದ್ದ ದೊರೆ ಸ್ವಾಮಿ ಬರವಣಿಗೆ ಮಾಡಿ, ಪುಸ್ತಕಗಳನ್ನು ಪ್ರಕಟಿಸಿ ಮಾರಾಟ ಮಾಡಿ, ತಮ್ಮ ಪುಟ್ಟ ಸಂಸಾರವನ್ನು ಪೊರೆ ದರು. 'ಅದರಲ್ಲಿ ಮೂವತ್ತು ರೂಪಾಯಿ ಬಂದರೆ ಹಿಟ್ಟು ಸೊಪ್ಪು; ಮುನ್ನೂರು ರೂಪಾಯಿ ಬಂದರೆ ಒಳ್ಳೆಯ ಊಟ… ಹೀಗೇ ನಡೆಯಿತು ಜೀವನ' ಎಂದು ನಕ್ಕರು ದೊರೆಸ್ವಾಮಿ. |
ಕರ್ನಾಟಕ ಏಕೀಕರಣ ಚಳವಳಿಯ ಸಂದರ್ಭದಲ್ಲಿ ದೆಹಲಿಗೆ ಹೋದ ನಿಯೋಗದಲ್ಲಿ ದೊರೆಸ್ವಾಮಿಯವರೂ ಇದ್ದರು. ರಾಷ್ಟ್ರಪತಿ ಬಾಬು ರಾಜೇಂದ್ರಪ್ರಸಾದ್, ಪ್ರಧಾನಿ ನೆಹರೂ ಅವರನ್ನು ಭೇಟಿ ಮಾಡಿದ ನಿಯೋಗ ಗೃಹಮಂತ್ರಿ ಸರ್ದಾರ್ ಪಟೇಲರನ್ನೂ ಭೇಟಿ ಮಾಡಿ ಏಕೀಕರಣದ ಬೇಡಿಕೆ ಇಟ್ಟಿತು. 'ಹಾಗಾದರೆ ಮೊದಲು ನಿಮ್ಮ ಮಹಾ ರಾಜರನ್ನು ತೆಗೆದುಹಾಕಿ' ಎಂದರು ಪಟೇಲರು. 'ಇದನ್ನು ತಮ್ಮ ಸಂದೇಶವೆಂದು ಒಯ್ಯಬಹುದೇ?' ಎಂದು ದೊರೆಸ್ವಾಮಿ ಕೇಳಿದರು. ಪಟೇಲರು 'ಹೂಂ' ಎಂದರು. ನಿಯೋಗ ಬೆಂಗಳೂರಿಗೆ ಬಂದ ಮೇಲೆ ದೊರೆಸ್ವಾಮಿಯ ವರು 'ಕರ್ನಾಟಕದ ಏಕೀಕರಣವನ್ನು ಸುಗಮಗೊಳಿಸಲು ಶ್ರೀಮನ್ಮಹಾರಾಜರು ಉದಾರ ಮನಸ್ಸಿನಿಂದ ತಮ್ಮ ಸಿಂಹಾ ಸನ ತೆರವು ಮಾಡಿಕೊಡಬೇಕು' ಎಂದು ಮನವಿ ಮಾಡಿ ದರು. ಆಗ ಪಂಡಿತ ಶಿವಮೂರ್ತಿಶಾಸ್ತ್ರಿಗಳು ದೊರೆಸ್ವಾಮಿ ಯವರನ್ನು ಕಟುವಾಗಿ ಟೀಕಿಸಿದಾಗ, ದೊರೆಸ್ವಾಮಿ ದಿಟ್ಟವಾಗಿ ಹೇಳಿದರು: 'ಸರ್ದಾರ್ ಪಟೇಲರು ನಿಮ್ಮ ಮಹಾರಾಜರನ್ನು ತೆಗೆದು ಹಾಕಿ ಎಂದು ಹೇಳಿದ್ದಾರೆ. ಆದರೆ ನಾವು ಪ್ರಥಮ ಹೆಜ್ಜೆಯಾಗಿ 'ಸಿಂಹಾಸನ ತೆರವು ಮಾಡಿ ಕೊಡಿ' ಎಂಬ ಪ್ರಾರ್ಥನೆ ಯನ್ನು ಗೌರವಪೂರ್ವಕ ವಾಗಿ ಸಲ್ಲಿಸುತ್ತಿ ದ್ದೇವೆ. ತೆರವು ಮಾಡದಿದ್ದರೆ ಪ್ರಜೆಗಳೇ ಅವರನ್ನು ರಾಜಗದ್ದುಗೆಯಿಂದ ಇಳಿಸಬೇಕಾಗು ವುದು' ಎಂದರು. |
ಯಾರೆದುರೇ ಆದರೂ ಹೀಗೆ ನೇರವಾಗಿ ನುಡಿಯ ಬಲ್ಲ ದಿಟ್ಟತನ ದೊರೆಸ್ವಾಮಿಯವರಿಗೆ ಸ್ವಾತಂತ್ರ್ಯ ಚಳವಳಿ ಯಿಂದ ಬಂದದ್ದು. ಹಾಗಾಗಿಯೇ, 1975ರ ತನಕ ಕಾಂಗ್ರೆಸ್ಸಿ ನಲ್ಲಿದ್ದ ಅವರು ಇಂದಿರಾ ಗಾಂಧಿ ಹೇರಿದ ತುರ್ತು ಪರಿಸ್ಥಿತಿ ವಿರುದ್ಧ ಬಂಡೆದ್ದರು. ತುರ್ತು ಪರಿಸ್ಥಿತಿಯ ಕಾಲದಲ್ಲಿ ಜೈಲಿನಲ್ಲಿ ದೊರೆಸ್ವಾಮಿ ಆರೆಸ್ಸೆಸ್‌ನವರ ಜೊತೆಗಿದ್ದರೂ ಅವರ ರಾಜಕಾರಣ, ತತ್ವ ಎರಡನ್ನೂ ವಿರೋಧಿಸಿದವರು. ಸ್ವಾತಂತ್ರ್ಯ ಚಳವಳಿಯ ಕಾಲದಲ್ಲೂ, ಸ್ವಾತಂತ್ರ್ಯೋತ್ತರ ದಲ್ಲೂ ಸೆರೆಮನೆವಾಸ ಅನುಭವಿಸಿರುವ ದೊರೆಸ್ವಾಮಿ, ಹರಿಹರದಲ್ಲಿ ನೀಲಗಿರಿ ಬೆಳೆಸಿ ನೆಲವನ್ನು ಬಂಜರು ಮಾಡಿದ್ದ ಬಿರ್ಲಾ ಪಾಲಿಫೈಬರ್ಸ್ ಕಂಪೆನಿ ವಿರುದ್ಧ, ಕರ್ನಾಟಕದ ಗಣಿಲೂಟಿಯ ವಿರುದ್ಧ, ನೈಸ್ ಕಾರಿಡಾರ್ ರಸ್ತೆಯ ವಿರುದ್ಧ ಹೋರಾಡಿದ್ದಾರೆ. ರೈತ ಚಳವಳಿಯಲ್ಲಿ ಪಾಲ್ಗೊಂಡಿದ್ದಾರೆ, ರೈತ ಶಿಬಿರಗಳಲ್ಲಿ ಪಾಠ ಹೇಳಿದ್ದಾರೆ. ದಲಿತರ ದೇವಾಲಯ ಪ್ರವೇಶದ ಪರವಾಗಿ ನಿಂತಿದ್ದಾರೆ. ಕೋಮುಬೆಂಕಿ ಹಚ್ಚಿದ ಊರುಗಳಲ್ಲಿ ಶಾಂತಿ ನೆಲೆಸಲು ದುಡಿದಿದ್ದಾರೆ. ಕರ್ನಾಟಕದ ಬಹುತೇಕ ಭಾಗ ಗಳಲ್ಲಿ ಪಾದಯಾತ್ರೆ ಮಾಡಿದ್ದಾರೆ. 'ಸರ್ವೋದಯದ ಭೂದಾನ ಚಳವಳಿಯ ಕಾಲದಲ್ಲಿ ಜನರಿಂದ ನಡೆದ ಭೂದಾನ ದಲ್ಲಿ ಪಾಲ್ಗೊಂಡಿದ್ದೆ; ಈಗ ಸರ್ಕಾರದಿಂದ ಭೂದಾನ ಚಳವಳಿಗಾಗಿ ಒತ್ತಾಯಿಸುತ್ತಿದ್ದೇವೆ' ಎಂದರು. |
ಮಂಗಳವಾರ ಬೆಳಗ್ಗೆ ದೊರೆಸ್ವಾಮಿಯವರು ನೂರ್ ಶ್ರೀಧರ್ ಜೊತೆಗೆ ಸರ್ಕಾರಿ ಜಮೀನನ್ನು ಭೂಮಿಯಿಲ್ಲ ದವರಿಗೆ ಹಂಚಬೇಕೆಂದು ಒತ್ತಾಯಿಸಲು ಮುಖ್ಯಮಂತ್ರಿ ಯ ವರನ್ನು ಭೇಟಿಯಾಗಬೇಕಿತ್ತು. ದೊರೆಸ್ವಾಮಿಯವರ ಮಡದಿ ಇದ್ದಕ್ಕಿದ್ದಂತೆ ಅಸ್ವಸ್ಥರಾಗಿದ್ದರು. ಗೆಳೆಯರು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ದೊರೆಸ್ವಾಮಿ ಭೂಹಂಚಿಕೆಯ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲು ಹೊರಡುವ ಗಡಿಬಿಡಿಯಲ್ಲಿದ್ದರು. ಮಾತಿನ ನಡುನಡುವೆ ಬರುತ್ತಲೇ ಇದ್ದ ಲ್ಯಾಂಡ್ ಲೈನ್ ಫೋನನ್ನು ರಿಸೀವ್ ಮಾಡುತ್ತಿದ್ದ ದೊರೆಸ್ವಾಮಿ ಫೋನ್ ಮಾಡಿದವರನ್ನು ಗುರುತಿಸಿ ಮಾತಾಡುತ್ತಿದ್ದರು. ಮನೆಗೆ ಬಂದ ಎಲ್ಲರಿಗೂ ಒಂದು ಕಣ್ಣೋಟದ, ಮುಗುಳ್ನಗೆಯ, ಒಂದೇ ಮಾತಿನ ಆತ್ಮೀಯತೆ ಯನ್ನಾ ದರೂ ತೋರುತ್ತಿ ದ್ದರು. ಮುಂದಿನ ವರ್ಷ ನೂರು ತಲುಪಲಿರುವ ದೊರೆಸ್ವಾಮಿಯವರ ನೆನಪು ಕೈಕೊಟ್ಟಿದ್ದಾ ಗಲೀ, ಚಿಂತನೆ ಯಲ್ಲಿ ಗೊಂದಲಗಳಾಗಲೀ ಕಾಣಲಿಲ್ಲ. ಒಟ್ಟು ನಾಲ್ಕು ಗಂಟೆಯಷ್ಟೆ ನಿದ್ರಿಸುವ ದೊರೆಸ್ವಾಮಿಯವರ ಬಿಡುವಿಲ್ಲದ ಸಮಾಜದ ಕೆಲಸ, ನಿಜವಾದ ಕಾಳಜಿ ಅವರನ್ನು ಲವಲವಿಕೆ ಯಲ್ಲಿ, ಆರೋಗ್ಯದಲ್ಲಿ ಇಟ್ಟಂತಿತ್ತು. 'ನಮ್ಮ ಮನೆಯ ಬಾಗಿಲು ಸದಾ ತೆರೆದೇ ಇರುತ್ತದೆ' ಎಂದ ದೊರೆಸ್ವಾಮಿ, 'ಒಂದು ವಿಷಯದಲ್ಲಿ ನಾನು ಭಾಗ್ಯಶಾಲಿ. ನನಗೆ ಯಾರ ಭಯವೂ ಇಲ್ಲ. ನಾನು ಎಲ್ಲರನ್ನೂ ಟೀಕಿಸುತ್ತೇನೆ; ಆದರೆ ಯಾರನ್ನೂ ಶತ್ರುವಾಗಿ ಕಾಣುವು ದಿಲ್ಲ' ಎಂದು ನಕ್ಕರು. ಆ ನಗೆಯ ಮುಗ್ಧತೆ, ನಿರಾಳತೆ ನನ್ನಲ್ಲಿ ಬಹುಕಾಲ ಉಳಿದಿರು ತ್ತದೆ. ಈ ಬರಹ ಮುಗಿಸುವ ಹೊತ್ತಿಗೆ, ಮುಖ್ಯಮಂತ್ರಿಗಳು ಹಾಗೂ ಕಂದಾಯ ಮಂತ್ರಿಗಳು ಭೂಹಂಚಿಕೆಯ ಬೇಡಿಕೆ ಯನ್ನು ಒಪ್ಪಿದ್ದಾರೆಂದು ದೊರೆಸ್ವಾಮಿಯವರು ಹೇಳಿದಾಗ, ಇದು ಕರ್ನಾಟಕ ಸರ್ಕಾರ ನಮ್ಮ ಧೀಮಂತ ನಾಯಕ ರೊಬ್ಬರ ತೊಂಬತ್ತೊಂಬತ್ತನೆಯ ಹುಟ್ಟುಹಬ್ಬಕ್ಕೆ ಕೊಟ್ಟ ದೊಡ್ಡ ಸಾಮಾಜಿಕ ಉಡುಗೊರೆ ಎಂದುಕೊಂಡೆ. |
ದೊರೆಸ್ವಾಮಿಯವರಿಗೆ ಕೆಂಗಲ್ ಹನುಮಂತಯ್ಯ ನ ವರ ಕಾಲದಲ್ಲಿ ವಿಧಾನ ಪರಿಷತ್ ಸದಸ್ಯರಾಗುವ ಅವಕಾಶ ಬಂತು. ಆಗ ಅವರಿಗೆ ಕೆಂಗಲ್ ಹಾಕಿದ ಷರತ್ತು: 'ನಿಮ್ಮನ್ನು ಎಂ.ಎಲ್.ಸಿ. ಮಾಡುತ್ತೇನೆ. ನೀವು ನನಗೆ ಲಾಯಲ್ ಆಗಿರಬೇಕು.' |
ಇತಿಹಾಸ | Vikrama - Part 3 |
ಭಗತ್ ಸಿಂಗ್ ಅವರ ಕೊನೆಯ ದಿನಗಳು |
ಇತಿಹಾಸ ಮಹಾಪುರುಷರ ಜೀವನ ಚರಿತ್ರೆ ಎಂಬ ಥಾಮಸ್ ಕಾರ್ಲೈಲ್ (1795-1881) ಅವರ ವ್ಯಾಖ್ಯಾನಕ್ಕೆ ಭಗತ್ ಸಿಂಗ್ ಅವರ ಜೀವನ ವೃತ್ತಾಂತ ಒಂದು ಉತ್ತಮ ನಿದರ್ಶನ. ಬಾಲ್ಯದಿಂದ ಯೌವ್ವನದ ತನಕವೂ ದೇಶಸೇವೆಯಲ್ಲಿ ಸ್ವಲ್ಪವೂ ಬಳಲದ ಭಗತ್‌ಸಿಂಗ್ ಕಡೆಗೂ ಬಲಿದಾನಗೈದರು. ಭಗತ್‌ಸಿಂಗ್ ಅವರಿಗಾಗಿ ಅನೇಕರು ಕಣ್ಣೀರಿಟ್ಟರೆ, ಅವರು ಮಾತ್ರ ನಿರಾಳರಾಗಿದ್ದರು. ಆ ಸ್ಥಿತಿಯಲ್ಲಿಯ ಅವರ ಸ್ಥಿತಪ್ರಜ್ಞತ್ವ ಹಾಗೂ ಎದೆಗಾರಿಕೆ ವೀರೋಚಿತವಾದುದು ಎಂಬುದರಲ್ಲಿ ಸಂಶಯವಿಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಸಿಡಿದೆದ್ದ ಕ್ರಾಂತಿಕಾರಿಗಳಲ್ಲಿ ಭಗತ್‌ಸಿಂಗ್ ಅಗ್ರಗಣ್ಯರು. ಅವರ ಕ್ರಾಂತೀಕಾರೀ ಉಸಿರು ಇರುವ […] |
ನ್ಯಾಯಾಲಯದಲ್ಲಿ ಭಗತ್ ಸಿಂಗ್ |
''ನಮ್ಮ ಮೇಲೆ ಗಂಭೀರವಾದ ಆರೋಪ ಮಾಡಲಾಗಿದೆ ಮತ್ತು ಅದಕ್ಕೆ ನಾವು ಈ ವಿವರಣೆಯನ್ನು ನೀಡುತ್ತೇವೆ. ಬಾಂಬ್ ಎಸೆದುದರ ಜವಾಬ್ದಾರಿಯನ್ನು ನಾವೇ ಹೊರುತ್ತೇವೆ. ಆದರೆ ಅದಕ್ಕೆ ಸಂಬಂಧಿಸಿದಂತೆ ಆಪಾದನೆಯಲ್ಲಿ ಅನೇಕ ಸತ್ಯಕ್ಕೆ ಹೊರತಾದ ಸಂಗತಿಗಳಿವೆ. ಮೊಕದ್ದಮೆಯಲ್ಲಿ, ನಮ್ಮ ಕೈಯಿಂದ ಪಿಸ್ತೂಲು ವಶಪಡಿಸಿಕೊಳ್ಳಲಾಗಿದೆ ಎನ್ನಲಾಗಿದೆ, ಅದು ನಿಜವಲ್ಲ. ನಾವು ಶರಣಾಗತರಾದಾಗ ನಮ್ಮಲ್ಲಿ ಪಿಸ್ತೂಲು ಇರಲಿಲ್ಲ. ನಮ್ಮನ್ನು 'ಸಮಾಜದ್ರೋಹಿ' ಗಳೆಂದು ಪತ್ರಿಕೆಯೊಂದು (Lahore Tribune) ಕರೆದುದರಲ್ಲಿ ಸತ್ಯಾಂಶವಿಲ್ಲ. ಭಗತ್ ಸಿಂಗ್ ಮತ್ತು ಬಟುಕೇಶ್ವರ ದತ್ ಅವರ ಮೇಲಿನ ದೆಹಲಿ ಬಾಂಬ್ […] |
ಸಿಡಿದ ಕ್ರಾಂತಿಯ ಕಿಡಿ ಭಗತ್‍ಸಿಂಗ್ |
ಇಲ್ಲಿಯೂ ಭಗತ್‌ಸಿಂಗನ ಉದ್ದೇಶ ಸ್ಪಷ್ಟವಾಗಿ ಗೋಚರಿಸುತ್ತದೆ. ಸಾಂಡರ್ಸ್‌ನ ಹತ್ಯೆಯಲ್ಲಿ ಅವನಿಗೆ ಮರಣದಂಡನೆ ಕಟ್ಟಿಟ್ಟ ಬುತ್ತಿ. ಆಮೇಲೆ, ಈ ಬಾಂಬ್ ಪ್ರಕರಣದಲ್ಲೂ ಕಠಿಣ ಶಿಕ್ಷೆಯಾಗುವ ಬಗ್ಗೆ ಸಂಶಯವಿಲ್ಲ. ಆದುದರಿಂದ ದೇಶಕ್ಕಾಗಿ ಆ ತ್ಯಾಗ – ಬಲಿದಾನ ಮಾಡಲು ಭಗತ್‌ಸಿಂಗನೇ ಸಿದ್ಧನಾದ! ಇತರರು ಯಾರಾದರೂ ಆ ಕೆಲಸ ಮಾಡಿದರೆ, ಅವರು ಜೀವ ಕಳೆೆದುಕೊಳ್ಳಬೇಕಾಗ ಬಹುದು. ಹಾಗಾಗಿ, ಆ ಬಲಿದಾನವನ್ನು 'ಭಾಗ್ಯ'ವೆಂದೇ ಅವನು ಸ್ವೀಕರಿಸಿದ. ಇನ್ನೊಬ್ಬ ಕ್ರಾಂತಿಕಾರಿಯ ಜೀವ ಉಳಿಯಲಿ ಎಂಬುದೂ ಅವನ ಆಶಯವಾಗಿತ್ತು. ದೇಶದ ಸ್ವಾತಂತ್ರ್ಯಕ್ಕಾಗಿ ಅವನ ತ್ಯಾಗ, ನಿಃಸ್ವಾರ್ಥ […] |
ಕ್ರಾಂತಿಯ ಪಥದಲ್ಲಿ ಭಗತ್‌ಸಿಂಗ್ |
1928ರಲ್ಲಿ ಭಗತ್ ಸಿಂಗ್ 'ಲಾಹೋರ್ ವಿದ್ಯಾರ್ಥಿ ಸಂಘ' ಸ್ಥಾಪನೆ ಮಾಡಿದ. ಅದರ ಮುಖ್ಯ ಉದ್ದೇಶ ಅದಷ್ಟು ಜನರನ್ನು ಕ್ರಾಂತಿಕಾರಿ ಸಂಘಟನೆಗೆ ಸೇರಿಸುವುದಾಗಿತ್ತು. ಜಾತಿ – ಧರ್ಮಗಳ, ಸಂಸ್ಕಾರ – ಸಂಸ್ಕೃತಿಯ ಭೇದವಿಲ್ಲದೆ ಜನರನ್ನು ರಾಷ್ಟ್ರಾಭಿಮಾನಿಗಳನ್ನಾಗಿ ಮಾಡುವ ಕಾರ್ಯ ಅದರಡಿಯಲ್ಲಿ ಆಗುತ್ತಿತ್ತು. ವಿಶೇಷವೇನೆಂದರೆ, ಮುಸಲ್ಮಾನ ನಾಯಕರಾದ ಫಜಲ್ ಮತ್ತು ಮನ್‌ಸೂರ್ ಇಲಾಹಿ ಹಲವಾರು ಲೇಖನಗಳನ್ನು ಬರೆದು ಮುಸ್ಲಿಂ ಸಮಾಜದ ಕೆಟ್ಟ ಆಚರಣೆಗಳನ್ನು ಎತ್ತಿ ತೋರಿಸಿ ಅವುಗಳ ನಿವಾರಣೆಗಾಗಿ ಪ್ರಯತ್ನಿಸಿದರು (1930ರಲ್ಲಿ ಆ ಸಂಘವನ್ನು ಬ್ರಿಟಿಷರು ನಿಷೇಧಿಸಿದರು). ಬಾಲಕ ಭಗತ್ […] |
ದೇಶಾರ್ಪಣೆಗೆ ಸಜ್ಜಾದ ಭಗತ್‍ಸಿಂಗ್ |
Issue Date : 13.10.2015 |
-ಸಿ.ಎಸ್.ಶಾಸ್ತ್ರೀ ಚಿಕ್ಕಂದಿನಲ್ಲಿ ಭಗತ್‌ಸಿಂಗ್‌ನ ಮೇಲೆ ಅನೇಕ ಅಂಶಗಳು ಪ್ರಭಾವ ಬೀರಿದವು. ಅವನ ಅಪ್ಪ – ಚಿಕ್ಕಪ್ಪಂದಿರಿಗಾದ ಸೆರೆಮನೆ ವಾಸ, ಕರ್ತಾರ್ ಸಿಂಗ್ ಶರಭಾಗೆ ಆದ ಗಲ್ಲು ಶಿಕ್ಷೆ, ರಾಸ್ ಬಿಹಾರಿ ಬೋಸರ ಹೋರಾಟ ಹಾಗೂ ಅನೇಕ ಕ್ರಾಂತಿಕಾರಿಗಳ ಸಂಪರ್ಕ ಭಗತ್‌ಸಿಂಗ್‌ನನ್ನು ಉತ್ಕಟ ರಾಷ್ಟ್ರಪ್ರೇಮಿಯನ್ನಾಗಿ ಪರಿವರ್ತಿಸಿದಾಗ ಅವನು ದೇಶಾರ್ಪಣೆಗಾಗಿ ಸಜ್ಜಾದ. ಬಾಲಕನೊಬ್ಬ ತನ್ನ ತಂದೆಯವರೊಂದಿಗೆ ಅವರ ಸ್ನೇಹಿತನ (ನಂದ ಕಿಶೋರ್ ಮೆಹತಾ) ತೋಟದ ಮನೆಗೆ ಹೋದಾಗ, ಅವರು ಗದ್ದೆಯಲ್ಲಿ ಕೃಷಿಕಾರ್ಯದಲ್ಲಿ ನಿರತರಾಗಿದ್ದರು. ಚಿಕ್ಕ ಬಾಲಕ ಅಷ್ಟು ದೂರ ನಡೆದುಕೊಂಡೇ ಬಂದುದನ್ನು […] |
ಅಮರಸಿಂಹನ ಆಳ್ವಿಕೆಯ ಅವಲೋಕನ |
ಮೊಗಲರ ಅಧೀನಕ್ಕೊಳಪಡದೆ, ಮೇವಾರವನ್ನು ಸಂಪೂರ್ಣವಾಗಿ ಸ್ವತಂತ್ರವಾಗಿರಿಸುವ ಧ್ಯೇಯವಿದ್ದ ಅಮರಸಿಂಹನಿಗೆ ಯುದ್ಧವೇ ಕಾದಿತ್ತು. 1598ರಲ್ಲಿ ಅಕ್ಬರ್ ಮೇವಾರದ ಮೇಲೆ ದಾಳಿ ಮಾಡಿದ. ಮಾನ್‌ಸಿಂಗ್‌ನ ನೇತೃತ್ವದಲ್ಲಿ ಮೇವಾರಕ್ಕೆ ಮೊಗಲರ ದಾಳಿಯಾಯಿತು ಮತ್ತು ಅದರಲ್ಲಿ ಅತೀ ಹಾನಿಯಾಯಿತು. ಆದರೆ, ಅರ್ಧದಲ್ಲೇ ಅವನಿಗೆ ಬಂಗಾಳದತ್ತ ಹೋಗಬೇಕಾಯಿತು. ಆಗ ಮೊಗಲ್ ಠಾಣೆಗಳನ್ನು ಪುಡಿಗಟ್ಟಲಾಯಿತು. ಅಮರ್‌ಸಿಂಗ್ ಮೊಗಲ್ ಪರ್‌ಗಾಣಾಗಳನ್ನು ಲೂಟಿ ಮಾಡಿ ಕಾಡಿನಲ್ಲಿ ಕಣ್ಮರೆಯಾದ. 'ಇತಿಹಾಸದ ಪುನರಾವರ್ತನೆ' ಎಂಬ ಹೇಳಿಕೆ ಇತಿಹಾ ಸಾಧ್ಯಯನದಲ್ಲಿ ಸಂದರ್ಭಗಳಿಗನುಸಾರವಾಗಿ ಅರ್ಥ ಪೂರ್ಣವಾಗಿ ಹಾಗೂ ಅರ್ಥಹೀನವಾಗಿ ಕಂಡುಬರುವುದಾಗಿದೆ. ಇತಿಹಾಸ ಮರುಕಳಿಸಲು ಸಾಧ್ಯವೇ […] |
ಮೇವಾರದ ರಾಜ್‍ಸಿಂಗನ ರಾಷ್ಟ್ರಾಭಿಮಾನ |
ಹಿಂದೂಸ್ಥಾನದ ಮೇಲೆ ಮುಸಲ್ಮಾನರ ದುರಾಕ್ರಮಣ, ದೌರ್ಜನ್ಯ, ದಾಂಧಲೆಗಳಾದಾಗ ಅವುಗಳ ವಿರುದ್ಧ ಹೋರಾಡಿದವರಲ್ಲಿ ರಜಪೂತರು ಪ್ರಾತಃಸ್ಮರಣೀಯರು. ಅವರಲ್ಲಿ ಮೇವಾರದ ಸಿಸೋಡಿಯಾ ವಂಶದವರು ಅದ್ವಿತೀಯರು. ಮೊಗಲರ ಅಥವಾ ಮುಘಲರ ವಿರುದ್ಧ ಸೆಣೆಸಿದ ರಾಣಾ ಸಂಗ್ರಾಮಸಿಂಹ ಮತ್ತು ರಾಣಾ ಪ್ರತಾಪಸಿಂಹ ಅವರು ಮೇವಾರದ ಸ್ವಾತಂತ್ರ್ಯಕ್ಕಾಗಿ ಅಜನ್ಮ ಹೋರಾಟ ವಾಡಿದ ವೀರಾಗ್ರಣಿಗಳು. ರಾಣಾ ಪ್ರತಾಪ ತನ್ನ ಕಳೆದುಹೋದ ಸಾಮ್ರಾಜ್ಯದ ಬಹುಭಾಗವನ್ನು ಮರುಸ್ವಾಧೀನ ಮಾಡಿದ ಮತ್ತು ಅಕ್ಬರನಿಗೆ ಕೊನೆಯತನಕವೂ ರಾಣಾ ಮೇಲೆ ಸಾರ್ವಭೌಮತ್ವವನ್ನು ಹೇರಲಾಗಲಿಲ್ಲ. ಆದರೆ 1615ರಲ್ಲಿ ಅಮರಸಿಂಹನ ಾಲದಲ್ಲಿ ಮೇವಾರ ನಿರ್ವಾಹವಿಲ್ಲದೆ ಮೊಗಲರ […] |
ಅಕ್ಬರನಿಗೆ ಒಲಿದ ಅದೃಷ್ಟ! |
-ಸಿ.ಎಸ್.ಶಾಸ್ತ್ರೀಇತಿಹಾಸದಲ್ಲಿ 'ಅದೃಷ್ಟ', 'ದುರದೃಷ್ಟ', 'ಹಣೆಬರಹ', 'ದೈವಾಯಕ್ತ' , 'ಆದರೆ – ಹೋದರೆ (It's – buts), ಮೊದಲಾದವುಗಳಿಗೆ ಪ್ರಾಶಸ್ತ್ಯ ವಿಲ್ಲ.ಅದು ತರ್ಕಬದ್ಧವಾಗಿ ನಿಜವಾದರೂ, ಯಾವುದೇ ಕಾರಣಗಳಿಂದ ಸಮರ್ಥಿಸಲಾಗದೆ 'ಏನೋ'ಗಳು ನಡೆಯು ವುದೂ ತಪ್ಪಿದ್ದಲ್ಲ ಹಾಗೂ ಗಮನಾರ್ಹ. ವ್ಯಕ್ತಿ ಜೀವನದಲ್ಲಿ ಒಬ್ಬನಿಗೆ ಒಳ್ಳೆಯದಾದರೆ, 'ಭಾಗ್ಯ'ವೆಂದೂ ಕೆಟ್ಟದಾದರೆ 'ದೌರ್ಭಾಗ್ಯ'ವೆಂದೂ ಹೇಳಲಾಗುವುದು ಸಾಮಾನ್ಯ ವಿಚಾರ. ಇತಿಹಾಸಕ್ಕಾದರೆ, ಜೀವವಿಲ್ಲ, ಕೈ – ಕಾಲುಗಳಿಲ್ಲ, ಪಂಚೇಂದ್ರಿಯ ಜ್ಞಾನವಿಲ್ಲ ಆದರೂ ಅದಕ್ಕೆ ಸಾವಿಲ್ಲ, ಸದಾ ಚಲನಶೀಲ ಮತ್ತು ವಿಶ್ಲೇಷಣೀಯ. ಗತಕಾಲದ ವ್ಯಕ್ತಿಗಳನ್ನೂ, ವಿಚಾರಗಳನ್ನೂ ಜೀವಂತವಾಗಿರಿಸುವ ಶಕ್ತಿ […] |
ಪ್ರಚಂಡ ಪ್ರತಾಪಿ ರಾಣಾ ಪ್ರತಾಪ |
-ಸಿ.ಎಸ್. ಶಾಸ್ತ್ರೀ ರಾಣಾನ ಆದರ್ಶ ವ್ಯಕ್ತಿತ್ವ, ನಿಷ್ಕಳಂಕ ಖಾಸಗಿ ಜೀವನ, ಧೀರೋದಾತ್ತ ನಾಯಕತ್ವ, ಅವಿರತ ಹೋರಾಟ,ಅಪ್ರತಿಮ ಸಾಹಸ ಇತ್ಯಾದಿಗಳು ಅರಾವಳಿ ಗಿರಿ – ಕಂದರಗಳಲ್ಲಿ ಮೇವಾರದ ಸ್ವಾತಂತ್ರ್ಯದ ಉದ್ಘೋಷವನ್ನು ಪ್ರತಿಧ್ವನಿಸಿದವು. ರಾಜಸ್ಥಾನಿ ಕವಿ ಪೃಥ್ವಿರಾಜ್ ರಾಥೋರ್ 'ನಮ್ಮ ರಾಜರು ತಮ್ಮ ಪೌರುಷವನ್ನೂ, ಸ್ತ್ರೀಯರು ಗೌರವವನ್ನೂ ಕಳೆದುಕೊಂಡರು. ನಮ್ಮ ಕುಲದ ಮಾರುಕಟ್ಟೆಯಲ್ಲಿಯ ದಳ್ಳಾಳಿಯಾದ ಅಕ್ಬರ್ ಎಲ್ಲರನ್ನೂ ಕೊಂಡುಕೊಂಡ.ಆದರೆ ರಾಣಾ ಪ್ರತಾಪನಿಗೆ ಬೆಲೆಕಟ್ಟಲು ಅವನಿಂದ ಆಗಲಿಲ್ಲ' ಎಂದು ಹೇಳಿದರೆ, ಅಕ್ಬರನ ಆಸ್ಥಾನದ ಪರ್ಷಿಯನ್ ಕವಿ ಮಿರ್ಜಾ ಅಬ್ದುಲ್ ರಹೀಂಖಾನ್ […] |
ಪ್ರತಾಪನ ಮರುಪ್ರತಾಪ |
-ಸಿ.ಎಸ್. ಶಾಸ್ತ್ರೀ ಹಳದೀಘಾಟ್‌ನಲ್ಲಿ ಪ್ರತಾಪನಿಗಾದ ಪರಾಭವದ ಕಾರಣ ಗಳನ್ನು ಪರಾಂಬರಿಸಿದಾಗ ಕೆಲವು ಮುಖ್ಯ ಅಂಶಗಳು ಗೋಚರಿಸುವವು. ರಾಣಾನಿಗೆ ಆದುದು ಶಾಶ್ವತ ಸೋಲಾಗಿರಲಿಲ್ಲ. ಆ ತಾತ್ಕಾಲಿಕ ಹಿನ್ನೆಡೆಗೂ ಅನೇಕ ಕಾರಣಗಳಿದ್ದವು. (1) ಪ್ರಾರಂಭದಲ್ಲಿ ಮೇವಾರಕ್ಕೇ ಜಯವಾಗುವ ಎಲ್ಲಾ ಲಕ್ಷಣಗಳು ಕಂಡುಬಂದರೂ, ಆ ಮೇಲುಗೈಯನ್ನು ಕದನದಲ್ಲಿ ಅವರಿಗೆ ಉಳಿಸಿಕೊಳ್ಳಲು ಆಗಲಿಲ್ಲ. (2) ರಜಪೂತರ ಪ್ರಾಚೀನ ಕದನ ಸಂಪ್ರದಾಯ ಅವರ ಸೋಲಿಗೆ ಒಂದು ಮುಖ್ಯ ಕಾರಣವಾಗಿತ್ತು. ರಾಣಾ ಅವರ ಸೈನ್ಯವನ್ನು ಒಂದೇ ಕಡೆ ಕೂಡಿಹಾಕಿದುದು ತಪ್ಪಾಯಿತು. ಸೈನಿಕರನ್ನು ಬೇರೆ ಬೇರೆಡೆಗಳಲ್ಲಿ, […] |
ತುಟಿ - ವಿಕಿಪೀಡಿಯ |
ತುಟಿಗಳು ಮನುಷ್ಯರ ಮತ್ತು ಹಲವು ಪ್ರಾಣಿಗಳ ಮುಖದಲ್ಲಿ ಕಾಣಿಸುವ ದೇಹದ ಭಾಗವಾಗಿವೆ. ತುಟಿಗಳು ಮೃದುವಾಗಿವೆ, ಚಲಿಸಬಲ್ಲವಾಗಿವೆ, ಮತ್ತು ಆಹಾರ ಸೇವನೆಯಲ್ಲಿ ರಂಧ್ರವಾಗಿ ಮತ್ತು ಧ್ವನಿ ಹಾಗು ಮಾತಿನ ಚಲನೆಯಲ್ಲಿ ಕೆಲಸ ಮಾಡುತ್ತವೆ. ಮಾನವ ತುಟಿಗಳು ಸ್ಪರ್ಶಸಂಬಂಧಿ ಸಂವೇದನಾವಾಹಕ ಅಂಗವಾಗಿವೆ, ಮತ್ತು ಚುಂಬನ ಹಾಗು ಇತರ ಅನ್ಯೋನ್ಯತೆಯ ಕ್ರಿಯೆಗಳಲ್ಲಿ ಬಳಸಿದಾಗ ಕಾಮಪ್ರಚೋದಕವಾಗಿರಬಹುದು. |
೩ ಸೀಳು ತುಟಿ (ಸಿರಿ ಬಾಯಿ) |
೩.೧ ಚಿಕಿತ್ಸೆ |
೪ ಸೀಳು ತುಟಿ ಮತ್ತು ಸೀಳು ತಾಳು |
೪.೧ ಚಿಕಿತ್ಸೆ |
ತುಟಿ - ದಪ್ಪ ಮಡಿಕೆಯಂತೆ ಬಾಯಸುತ್ತಲೂ ಇರುವ ಅಂಗ. ಬಾಯಿ ಮುಚ್ಚಿದ್ದಾಗ ಅಥವಾ ಅರ್ಧ ತೆರೆದಿದ್ದಾಗ ಬಾಯಿಗೆ ಮೇಲೆ ಮತ್ತು ಕೆಳಗೆ ಎರಡು ಅಂಚುಗಳಾಗಿ ವ್ಯಕ್ತವಾಗುತ್ತದೆ. ಮೇಲು ತುಟಿಗೆ ಓಷ್ಠವೆಂದೂ ಕೆಳತುಟಿಗೆ ಅಧರ (ಅವುಡು) ಎಂದೂ ಬೇರೆ ಬೇರೆ ಹೆಸರಿನಿಂದ ವ್ಯವಹರಿಸುವುದಿದೆ. ಮನೋದ್ರೇಕವಾದಾಗ ಅಥವಾ ಕಷ್ಟಕೆಲಸ ಮಾಡುವಾಗ ಅವುಡು ಕಚ್ಚಿಕೊಳ್ಳುವುದು ಬಹು ಸಾಮಾನ್ಯ. ತುಟಿಯ ರಚನೆಯಲ್ಲಿ ಸ್ನಾಯು, ಮೇದಸ್ಸು ಮತ್ತು ನೂರಾರು ಅತಿ ಸಣ್ಣ ಲಾಲಾಗ್ರಂಥಿಗಳು ಹೊರಗೆ ಚರ್ಮದಿಂದಲೂ ಒಳಗೆ ಲೋಳೆ ಪೊರೆಯಿಂದಲೂ ಹೊದ್ದಿಸಲ್ಪಟ್ಟಿರುವುದು ವ್ಯಕ್ತವಾಗುತ್ತದೆ. ಸ್ನಾಯುವಿಗೆ ನರಪೂರೈಕೆಯಾಗುವುದರಿಂದ ತುಟಿಗಳನ್ನು ಯಾವ ಕಡೆಗಾದರೂ ಐಚ್ಛಿಕವಾಗಿ ಚಲಿಸಬಹುದು. ಎಷ್ಟು ದೀರ್ಘಕಾಲಿಕವಾಗಿಯಾದರೂ ತುಟಿಯನ್ನು ತೆರೆದಿರಬಹುದು ಇಲ್ಲವೆ ಮುಚ್ಚಿರಬಹುದು. ಮನೋದ್ರೇಕಕ್ಕೆ ಅನುಗುಣವಾಗಿ ಅನೈಚ್ಛಿಕವಾಗಿಯೇ ತುಟಿಗಳು ಚಲಿಸಿ ಮುಖಭಂಗಿಯ ವಿಶಿಷ್ಟತೆಗೆ ಒಂದು ಮುಖ್ಯ ಸಾಧನವಾಗಿರುವುದೂ ಉಂಟು. |
ತುಟಿಯ ಲೋಳೆಪೊರೆ ತೆಳು. ಇದಕ್ಕೆ ಅಲ್ಪವಾಗಿ ಪಾರಕ ಗುಣ ಉಂಟು. ಆದ್ದರಿಂದ ಇದರ ಅಡಿಯಲ್ಲಿರುವ ರಕ್ತಯುಕ್ತ ಲೋಮನಾಳಗಳ ಕೆಂಪುಬಣ್ಣ ಗೋಚರವಾಗಿ ಲೋಳೆಪೊರೆಯೇ ಕೆಂಪಗಿರುವಂತೆ ಕಾಣಿಸುತ್ತದೆ. ಸದಾ ತೇವವಾಗಿರುವ ಲೋಳೆಪೊರೆ ಕ್ರಮೇಣ ಬದಲಾವಣೆಯಿಂದ ಶುಷ್ಕವಾದ ಚರ್ಮದ ಹೊರಮೇಲ್ಮೈ ಆಗುತ್ತದೆ. ಹೀಗೆ ಮೇಲ್ಮೈರಚನೆ ಬದಲಾಗುವ ಸ್ಥಳವೇ ಹೊರಗಿನಿಂದ ಬಾಯಿಯ ಅಂಚಾಗಿ ಕಂಡುಬರುವ ತುಟಿಯ ಕೆಂಪುಭಾಗ (ರೆಡ್ ಮಾರ್ಜಿನ್). ತುಟಿಯ ಕೆಂಪು ಅಂಚಿನಲ್ಲಿ ರೋಮಕೂಪಕ್ಕೆ (ಹೇರ್ ಫಾಲಿಕಲ್) ಸಂಬಂಧಿಸಿದಂತೆ ಜಿಡ್ಡುಗ್ರಂಥಿಗಳು (ಸೆಬೇಶಿಯಸ್ ಗ್ಲಾಂಡ್ಸ್) ಇರುವುದು ಒಂದು ವಿಶೇಷ. ಗಂಡಸರಲ್ಲಿ ಪ್ರಬುದ್ಧ ವಯಸ್ಸಾದ ಬಳಿಕ ಮೇಲ್ತುಟಿಯಲ್ಲಿ ಮೀಸೆ ಬೆಳೆಯುವುದನ್ನು ಎಲ್ಲರೂ ಬಲ್ಲರು. ಆ ಕಾಲದಿಂದ ಮುಂದೆ ಗಂಡಸರಲ್ಲಿ ಮಾತ್ರ ಗಣನೀಯ ಪ್ರಮಾಣದಲ್ಲಿ ಉತ್ಪತ್ತಿಯಾಗುವ ಟೆಸ್ಟೋಸ್ಟಿರೋನ್ ಎಂಬ ಹಾರ್ಮೋನ್ ಇದಕ್ಕೆ ಕಾರಣ. ತುಟಿಮಧ್ಯದಲ್ಲಿ ಕೆಂಪು ಭಾಗ ಅತ್ಯಂತ ಅಗಲ. ಪಕ್ಕಕ್ಕೆ ಹೋದಂತೆ ಇದು ಕಿರಿದಾಗುತ್ತ ಬಾಯಿಮೂಲೆಗಳಲ್ಲಿ ಇಲ್ಲವಾಗುತ್ತದೆ. ಮುಖಭಾಗವನ್ನು ಗ್ರಹಿಸಬಲ್ಲ ತಜ್ಞರಿಗೆ ತುಟಿ ಒಂದು ಮುಖ್ಯ ಸಂಕೇತ. ತುಟಿಯ ಚಲನೆಯನ್ನು ಸೂಕ್ಷ್ಮವಾಗಿ ವೀಕ್ಷಿಸಿ ವ್ಯಕ್ತಿಯ ಮನಸ್ಸನ್ನು ಇವರು ಅರಿಯಬಲ್ಲರು. ತುಟಿ ಚಲಿಸದೆ ಸ್ಥಿರಾಕಾರದಲ್ಲಿದ್ದರೂ ವ್ಯಕ್ತಿಯ ಸ್ವಭಾವವನ್ನು ಸ್ಥೂಲವಾಗಿ ಪತ್ತೆಮಾಡಬಹುದು ಎನ್ನಲಾಗಿದೆ. ಉದಾಹರಣೆಗೆ ದಪ್ಪತುಟಿ ಸೋಮಾರಿತನ ವಿಷಯಲಂಪಟತ್ವಗಳನ್ನೂ (ಇಂಡೊಲೆನ್ಸ್, ಸೆನ್‍ಶುಯಾಲಿಟಿ), ತೆಳುತುಟಿ ಆತಂಕ ಅತ್ಯಾಶೆಗಳ ಸ್ವಭಾವವನ್ನೂ (ಆಂಕ್ಸೈಟಿ, ಆವರಿಸ್) ಕಿರುತುಟಿ ನಿಷ್ಠುರ ನಿರ್ದಯ ಸ್ವಭಾವವನ್ನೂ (ಸ್ಟರ್ನ್, ಕೋಲ್ಡ್), ಸೂಚಿಸುವುವು ಎನ್ನಲಾಗಿದೆ. ಆದರೆ ಇವಕ್ಕೆ ವೈಜ್ಞಾನಿಕ ಅಥವಾ ಅಂಕೆ ಅಂಶಗಳ ಆಧಾರವಿರುವು ಅನುಮಾನ. |
ವರ್ಣೋಚ್ಚಾರಣೆಗೆ ತುಟಿಚಲನೆ ಅಗತ್ಯ. ಪವರ್ಗದ ವ್ಯಂಜನಗಳನ್ನು ಕ್ಷಣಿಕವಾಗಿ ತುಟಿಯನ್ನು ಮುಚ್ಚಿಬಿಡುವುದರಿಂದ ಮಾತ್ರ ಉಚ್ಚರಿಸಬಹುದು ಅಷ್ಟೆ. ಆದ್ದರಿಂದ ಈ ಗುಂಪಿನ ವರ್ಣಗಳಿಗೆ ಓಷ್ಠ್ಯಗಳೆಂದು ಹೆಸರು. ಫಕಾರ (ಈ) ವಕಾರಗಳು ದಂತಗಳಿಗೆ ತುಟಿತಾಕಸಿಯೇ ಉಚ್ಚರಿಸುವಂಥವು. ಸ್ವರವರ್ಣಗಳನ್ನು ಉಚ್ಚರಿಸುವಾಗ ತುಟಿಗಳನ್ನು ತೆರೆದೇ ಇರಬೇಕಲ್ಲದೆ ಕೆಲವು ವೇಳೆ ನಿರ್ದಿಷ್ಟ ಚಲನೆಯೂ ಅಗತ್ಯವಾಗಿರುತ್ತದೆ. ಎ ಏ ಐಗಳನ್ನು ಉಚ್ಚರಿಸುವಾಗ ತುಟಿಯನ್ನು ಅಗಲವಾಗಿ ತೆರೆದಿಡಬೇಕು. ಉ ಊ ಒ ಓಗಳನ್ನು ಉಚ್ಚರಿಸುವಾಗ ತುಟಿಗಳನ್ನು ಭಾಗಶಃ ಮುಚ್ಚಿರಬೇಕು ಎಂಬುದನ್ನು ಎಲ್ಲರೂ ಗ್ರಹಿಸಿರಬಹುದು. ಆಹಾರ ಸೇವನೆಯಲ್ಲೂ ತುಟಿಯ ಚಲನೆ ಅಗತ್ಯ. ನವಜಾತ ಶಿಶುವಿನ ತುಟಿಗೆ ಮೈಕೈ ಸೋಕಿಸಿದರೆ ಅದು ಚೀಪುವಂತೆ ತಾನಾಗಿಯೇ ಆಕೃತಿಗೊಳ್ಳುತ್ತದೆ. ಇದು ಒಂದು ವಿಧೇಯಕ (ಕಂಪಲ್ಸಿವ್) ಕ್ರಿಯೆ. ಆಹಾರವನ್ನು ಹಲ್ಲುಗಳು ಅಗಿಯಲು ಅನುಕೂಲವಾಗುವಂತೆ ತುಟಿಗಳು ಮುಚ್ಚಿಕೊಂಡು ಆಹಾರವನ್ನು ಹಲ್ಲುಗಳ ನಡುವೆ ಸಿಕ್ಕಿಸುತ್ತವೆ. ಬಾಯಿಯ ಮುಂಭಾಗದಲ್ಲಿ ಇರುವ ಘನದ್ರವ ಪದಾರ್ಥಗಳನ್ನು ನುಂಗಲು ತುಟಿಯನ್ನು ಮುಚ್ಚಿಕೊಳ್ಳುವುದು ಅಗತ್ಯ. ನಗುವಾಗ ಮತ್ತು ದುಃಖದಿಂದ ಅಳುವಂತಾದಾಗಿ ಕಂಡುಬರುವ ತುಟಿಚಲನೆ ಎಲ್ಲರಿಗೂ ಗೊತ್ತು. |
ಆರೋಗ್ಯವಂತರ ತುಟಿಯ ಕೆಂಪು ಬಣ್ಣ ವಿಶಿಷ್ಟವಾದದ್ದು. ರಕ್ತಕಣ ಕೊರತೆಯ ರೋಗದಿಂದ (ಅನೀಮಿಯ) ನರಳುತ್ತಿರುವವರಲ್ಲಿ ತುಟಿ ಬಿಳಿಚಿದಂತಾಗಿರುತ್ತದೆ. ತುಟಿ ನೀಲಿಗಟ್ಟಿರುವುದು ಗುಂಡಿಗೆ ಫುಪ್ಪುಸಗಳ ಕೆಲವು ವಿಶೇಷ ರೋಗಗಳ ಸಂಕೇತ. ಜ್ವರದಲ್ಲಿ ತುಟಿ ಒಣಗಿ ಒಡೆದಿರುವುದಲ್ಲದೆ ಸಿಪ್ಪೆ ಸುಲಿಯುತ್ತಿರಬಹುದು. ತುಟಿಗಳ ಕಪ್ಪು ಬಣ್ಣ ನಮ್ಮ ಸೌಂದರ್ಯವನ್ನು ಹಾಳುಮಾಡುವುದರಲ್ಲಿ ಸಂದೇಹವಿಲ್ಲ, ಕಪ್ಪು ಬಣ್ಣದ ತುಟಿ ಆರೈಕೆ ಸಲಹೆಗಳು ಪಾಲಿಸಲೇ ಬೇಕು. ಗುಲಾಬಿ ದಳಗಳಂತೆ ಅರಳುವ ಗುಲಾಬಿ ತುಟಿಗಳು ಚೆನ್ನಾಗಿ ಕಾಣುವುದಲ್ಲದೆ ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಗುಲಾಬಿ ತುಟಿಗಳು ಎಲ್ಲರಿಗೂ ಸಿಗದ ಅತ್ಯುತ್ತಮ ಕೊಡುಗೆಯಾಗಿದೆ. ಕೆಲವರ ತುಟಿಗಳು ಕಾಲಕ್ರಮೇಣ ಕಪ್ಪಾಗುತ್ತವೆ. ಕಪ್ಪು ತುಟಿಗಳಿಗೆ ದೊಡ್ಡ ಕಾರಣ ಸಿಗರೇಟ್ ಬಳಕೆ [೧]. ತುಟಿಯ ಲೋಳೆಪೊರೆಯಲ್ಲಿ ದಪ್ಪಗುಳ್ಳೆಗಳು (ಸಾಮಾನ್ಯವಾಗಿ ಆಚೀಚೆ ಕಡೆ ಎರಡು) ಕಂಡುಬರಬಹುದು. ವರ್ಣರಹಿತ ಲೋಳೆಯುಕ್ತ ದ್ರವ ತುಂಬಿರುವ ಇವನ್ನು ಶಸ್ತ್ರಕ್ರಿಯೆಯಿಂದ ತೆಗೆದುಹಾಕುವುದೊಂದೇ ಚಿಕಿತ್ಸೆ. ತುಟಿಯಲ್ಲಿ ಏಡಿಗಂತಿ ಆಗುವುದು ಅಪರೂಪವಲ್ಲ. ಮಧ್ಯ ವಯಸ್ಸು ಕಳೆದ ಗಂಡಸರಲ್ಲಿ ಇದು ಹೆಚ್ಚು. ವಕ್ರದಂತದಿಂದ ನಿರಂತರವಾಗಿ ತುಟಿಯನ್ನು ಗಾಹಗೊಳಿಸುತ್ತಿರುವ ಸ್ಥಿತಿ ಮತ್ತು ಮಣ್ಣಿನ ಪುಟ್ಟ ಕೊಳವೆಯಲ್ಲಿ ತಂಬಾಕು ಸೇದುತ್ತ ದೀರ್ಘಕಾಲದಿಂದಲೂ ತುಟಿಯನ್ನು ಆಗಾಗ್ಗೆ ಸುಟ್ಟುಕೊಳ್ಳುತ್ತಿರುವುದು- ಇವು ತುಟಿಯಲ್ಲಿ ಏಡಿಗಂತಿ ಆಗುವುದಕ್ಕೆ ಮುಖ್ಯ ಕಾರಣಗಳು. ಗಡುಸಾದ ಸಣ್ಣಗಂಟಾಗಿ ಏಡಿಗಂತಿ ಪ್ರಾರಂಭವಾಗುತ್ತದೆ. ಕ್ರಮೇಣ ಗಾತ್ರವೃದ್ಧಿಯಾಗಿ ಕೊನೆಗೆ ವ್ರಣವಾಗುವುದು ಇದರ ಲಕ್ಷಣ. ಕತ್ತಿನಲ್ಲಿರುವ ದುಗ್ಧರಸ ಗ್ರಂಥಿಗಳು ತುಟಿಯಲ್ಲಿ ಏಡಿಗಂತಿ ಕಂಡುಬಂದ ತರುಣದಲ್ಲೆ ಊತಗೊಳ್ಳುತ್ತದೆ. ತತ್‍ಕ್ಷಣದ ರೋಗ ನಿದಾನ ಹಾಗೂ ಶಸ್ತ್ರಚಿಕಿತ್ಸೆ ಅತ್ಯಗತ್ಯವಾದ ಸ್ಥಿತಿ ಇದು. ಆಜನ್ಮ ನ್ಯೂನತೆಗಳಲ್ಲಿ ಸೀಳುತುಟಿ (ಹರಿದತುಟಿ ) ಮುಖ್ಯ. |
ಮೆತ್ತಗೆ ಕೆಂಪಗಿರುವ ತುಟಿ ಆರೋಗ್ಯ ಹಾಗೂ ಸೌಂದರ್ಯದ ಲಕ್ಷಣ [೨]. ತುಟಿಯನ್ನು ಈ ಸ್ಥಿತಿಯಲ್ಲಿ ಇಟ್ಟುಕೊಂಡಿರಲು ಸೂಕ್ತವಾದ ಆರೋಗ್ಯಕ್ರಮಗಳಲ್ಲದೆ ಸೌಂದರ್ಯವರ್ಧಕ ಕ್ರಮಗಳೂ (ಕಾಸ್ಮೆಟಿಕ್) ಅಪೇಕ್ಷಣೀಯ. ಆದರೆ ಬಜಾರಿನಲ್ಲಿ ಸಿಕ್ಕುವ ಅಗ್ಗದ ತುಟಿಕಡ್ಡಿಗಳಿಂದ (ಲಿಪ್‍ಸ್ಟಿಕ್) ಬಹುವೇಳೆ ಅನುಕೂಲಕ್ಕಿಂತ ಅಪಾಯ ಹೆಚ್ಚು ಎನ್ನವುದನ್ನು ಮನಗಂಡು ಎಚ್ಚರಿಕೆಯಿಂದಿರಬೇಕು. ತುಟಿಯನ್ನು ಒಣಗಿಸುವ ಇಂಥ ಬಣ್ಣಗಳ ಬದಲು ಲೇಪನಗಳ ಬಳಕೆ ಉತ್ತಮ. |
ಸೀಳು ತುಟಿ (ಸಿರಿ ಬಾಯಿ)[ಬದಲಾಯಿಸಿ] |
ತುಟಿ, ಬಾಯಿಗಳಿಗೆ ಸಂಬಂಧಿಸಿದಂಥ ಒಂದು ಆಜನ್ಮ ನ್ಯೂನತೆ (ಕ್ಲೆಫ್ಟ್ ಲಿಪ್). ಈ ನ್ಯೂನತೆಯೊಡನೆ ಜನಿಸುವ ಮಕ್ಕಳ ಸಂಖ್ಯೆ ಸಾಕಷ್ಟು ಇದೆ ಎಂದು ಹೇಳಲಾಗಿದೆ. ಭಾರತಕ್ಕೆ ಹೋಲಿಸುವಾಗ ಸಣ್ಣದಾಗಿರುವ ಮತ್ತು ಕಡಿಮೆ ಜನನ ಸಂಖ್ಯೆ ಇರುವ ಬ್ರಿಟನ್ನಿನಲ್ಲಿ ವರ್ಷಕ್ಕೆ ಸುಮಾರು 800ರಷ್ಟು ಮಕ್ಕಳು ಈ ನ್ಯೂನತೆಯೊಡನೆ ಜನಿಸುತ್ತದೆ ಎಂದು ತಿಳಿದಿದೆ. ಭಾರತವನ್ನು ಕುರಿತಂತೆ ಖಚಿತ ವಿವರ ಇಲ್ಲ. ಸಿರಿಬಾಯಿಗಳಲ್ಲಿ 17%ರಷ್ಟು ವಂಶಪಾರಂಪರ್ಯವಾಗಿಯೂ 10%ರಷ್ಟು ಗದೆಯಾಕಾರದ ಪಾದ (ಕ್ಲಬ್ ಫುಟ್), ದ್ರವ ತುಂಬಿದ ತಲೆ (ಹೈಡ್ರೊ ಕೆಫಲಸ್) ಮೊದಲಾದ ಇತರ ಆಜನ್ಮ ನ್ಯೂನತೆಗಳಿಂದ (ಕಂಜೆನಿಟಲ್ ಡಿಫೆಕ್ಟ್) ಕೂಡಿಯೂ ಇರುವುದನ್ನು ಕಾಣಬಹುದು. |
ಸೀಳು ತುಟಿ ಮತ್ತು ಸೀಳು ತಾಲುಗಳು ಗರ್ಭಕೋಶದಲ್ಲಿ ಭ್ರೂಣವು ಬೆಳೆಯುವಾಗ ಕೆಲವು ಭಾಗಗಳ ಕೂಡಿಕೆಯಾಗದಿರುವುದರ ಪರಿಣಾಮ. ಮೇಲೆ ಸೂಚಿಸಿರುವಂತೆ ಆನುವಂಶಿಕ ಅಂಶಗಳು (ಜೆನೆಟಿಕ್ ಫ್ಯಾಕ್ಟರ್ಸ್) ಇದರಲ್ಲಿ ಪಾತ್ರ ವಹಿಸುವುದು ವ್ಯಕ್ತವಾಗಿದ್ದರೂ ಬೆಳೆವಣಿಗೆ ಕಾಲದಲ್ಲಿ ಭ್ರೂಣದ ಪರಿಸರದ ಪ್ರಭಾವವೂ ಗಣನೀಯವೆಂದು ಹೇಳಲಾಗಿದೆ. 1 ಸೀಳು ತುಟಿ ಮಾತ್ರ 2 ಸೀಳು ತುಟಿ ಮತ್ತು ಸೀಳು ತಾಳು (ಸೀಳು ಅಂಗುಳು) 3 ಸೀಳು ತಾಳು ಮಾತ್ರ |
ಸೀಳು ತುಟಿ ಮಾತ್ರ: ಮೇಲು ತುಟಿ ಸಾಮಾನ್ಯವಾಗಿ ಒಂದು ಪಾಶ್ರ್ವದಲ್ಲಿ ಮಾತ್ರ ಸೀಳಿದಂತಿರುತ್ತದೆ. ತುಟಿಯ ಬಲಭಾಗಕ್ಕಿಂತ ಎಡಭಾಗದಲ್ಲಿ ಸೀಳಾಗಿರುವುದೇ ಹೆಚ್ಚು. ಜನಿಸಿದ 2.500 ಮಕ್ಕಳಿಗೆ ಒಬ್ಬರಲ್ಲಿ ಇದನ್ನು ಕಾಣಬಹುದು. 15%ರಲ್ಲಿ ತುಟಿಯ ಎರಡು ಭಾಗಗಳಲ್ಲೂ ಸೀಳು ಇರುತ್ತದೆ. ಮೊಲದ ಮೇಲ್ತುಟಿಯನ್ನು ಹೋಲುವುದರಿಂದ ಇದಕ್ಕೆ ಮೊಲದುಟಿ (ಹೇರ್‍ಲಿಪ್) ಎಂಬ ಹೆಸರಿದೆ. ಗಂಡುಶಿಶುಗಳಿಗಿಂತ ಹೆಣ್ಣುಶಿಶುಗಳಲ್ಲೇ ಸೀಳು ತುಟಿಗಳು ಹೆಚ್ಚು. |
ಸಿರಿಬಾಯಿ ವ್ಯಕ್ತಿಗೆ ಎರಡು ಬಗೆಯ ತೊಂದರೆಗಳಿರುವುವು: ಕಾರ್ಯಾಚರಣೆಗೆ ಧsÀಕ್ಕೆಯಾಗುವುದು ಮತ್ತು ರೂಪ ವಿಕೃತಿಗೊಳ್ಳುವುದು. ಕಾರ್ಯಾಚರಣೆ ಧಕ್ಕೆಯಲ್ಲಿ ಮುಖ್ಯವಾದುದು ಹೀರಲು ಸಾಧ್ಯವಾಗದಿರುವುದು. ತಂದೆ ತಾಯಿಯರು ತ್ವರಿತವಾಗಿ ಈ ನ್ಯೂನತೆಯನ್ನು ಸರಿಪಡಿಸಬೇಕು. |
ಚಿಕಿತ್ಸೆಗೆ ಸರಿಯಾದ ಕಾಲ ಮಗು ಹುಟ್ಟಿದ ಮೂರು ತಿಂಗಳಿಗೆ ಅಂದರೆ ಮಗು ಸುಮಾರು 4 ಕೆ.ಜಿ. ತೂಕವಿದ್ದಾಗ. ಇದರಲ್ಲಿ ವಿವಿಧ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗುತ್ತದೆ. ಆದರೆ ಶಸ್ತ್ರಕಾರ್ಯದಲ್ಲಿ ಗಣಿಸಬೇಕಾದ ಧ್ಯೇಯಗಳು: 1 ಬಾಯಿಯ ವರ್ತುಲ ಸ್ನಾಯುವಿನ (ಓರಲ್ ಸ್ಟಿಂಕ್ಟರ್) ಸಂಪೂರ್ಣತೆಯನ್ನು ಉಳಿಸಿಕೊಳ್ಳುವುದು: 2 ತುಟಿಯ ಕೆಂಪು ಲೋಳೆಪೊರೆಯ ಅಂಚನ್ನು (ರೆಡ್ ಮಾರ್ಜಿನ್) ಅಸ್ತವ್ಯಸ್ತಗೊಳ್ಳದಂತೆ ಮಾಡುವುದು: 3 ತುಟಿಯ ಚಲನೆ ಮತ್ತು ಮೂಗಿನ ನ್ಯೂನತೆಗಳನ್ನು ಸರಿಪಡಿಸುವುದು. |
ಸೀಳು ತುಟಿ ಮತ್ತು ಸೀಳು ತಾಳು[ಬದಲಾಯಿಸಿ] |
ಸೀಳು ತಾಳು ಸಾಮಾನ್ಯವಾಗಿ ಸೀಳು ತುಟಿಯೊಡನೆಯೇ ಕೂಡಿರುತ್ತದೆ. ಇದರಲ್ಲಿ ಮೂರು ಬಗೆಗಳಿವೆ: 1 ತುಟಿಯ ಒಂದು ಕಡೆ ಮಾತ್ರ ಸೀಳು ಇದ್ದು ಅದು ಕಠಿಣ ಮತ್ತು ಮೃದು ತಾಳಿನಲ್ಲಿ ಮುಂದುವರಿಯುವುದು; 2 ಎರಡೂ ಕಡೆ ತುಟಿ ಸೀಳಾಗಿದ್ದು ಕೆಳದರ್ಜೆಯ ಪ್ರಾಣಿಗಳಲ್ಲಿರುವಂತೆ ಆ ಸೀಳುಗಳ ನಡುವೆ ಮೂತಿ ಆಕಾರವಾಗಿ ಚಾಚಿರುವ ಸೀಳು ತಾಳು; ಮತ್ತು 3 ಕಠಿಣ ಮತ್ತು ಮೃದು ತಾಳುಗಳಲ್ಲಿ ಮಾತ್ರ ಇರುವ ಸೀಳು. |
ಸ್ಪಷ್ಟವಾಗಿ ಮಾತಾಡಲು ತೊಂದರೆಯಾಗುವುದೇ ಈ ನ್ಯೂನತೆಯ ಪ್ರಮುಖ ದೋಷ. ಸ್ಪಷ್ಟ ಉಚ್ಚಾರಣೆಗೆ ಬಾಯಿಯ ಅಟ್ಟದ ಸಂಪೂರ್ಣತೆ ಮತ್ತು ಗಂಟಲಿನ ಮೇಲುಭಾಗವನ್ನು ಕೆಳಭಾಗದಿಂದ ಬೇರ್ಪಡಿಸುವಿಕೆ ಅವಶ್ಯಕ. ಸ್ವರಗಳ ಉಚ್ಚಾರಣೆಯಲ್ಲಿ ಸ್ವಲ್ಪ ಮಾತ್ರ ಬದಲಾವಣೆ ಆಗುತ್ತದೆ. ಆದರೆ ತುಟಿ, ನಾಲಗೆ ಮತ್ತು ತಾಳುಗಳಿಂದ ಉಚ್ಚರಿಸುವ ವ್ಯಂಜನಗಳು ಮುಖ್ಯವಾಗಿ ಪ, ಡ, ಟ, ಢ, ಸ, ಕ-ಹೆಚ್ಚು ವ್ಯತ್ಯಾಸ ಹೊಂದುತ್ತದೆ. |
ತುಟಿಯ ನ್ಯೂನತೆಯನ್ನು ಎಳೆತನದ ಸುಮಾರು ಮೂರನೆಯ ತಿಂಗಳಲ್ಲಿ ಸರಿಪಡಿಸಿದರೆ ತಾಲುವನ್ನು ಮಗುವು ಮಾತಾಡಲು ಪ್ರಾರಂಭಿಸುವ ಮೊದಲು ಅಂದರೆ 1ರಿಂದ 1.5 ವರ್ಷದೊಳಗೆ ಸರಿಪಡಿಸಬೇಕು. ಶಸ್ತ್ರಚಿಕಿತ್ಸೆಯ ಗುರಿ ಮುಖ್ಯವಾಗಿ ಮೂರು: 1 ಕಠಿಣ ಮತ್ತು ಮೃದು ತಾಲುಗಳಲ್ಲಿಯ ಬಿರುಕನ್ನು ಕೂಡಿಸುವುದು; 2 ಮೃದು ತಾಳು ಚಲಿಸುವಂತೆ ಮಾಡಿ ಅದನ್ನು ಹಿಂದಕ್ಕೆ ಗಂಟಲಿನ ವರೆಗೆ ವರ್ಗಾಯಿಸುವುದು; 3 ಸ್ನಾಯುಕಾರ್ಯದ ಎಲ್ಲ ವಿಧದ ತೊಂದರೆಯನ್ನು ನಿವಾರಿಸುವುದು. |
ಮಗು ದೊಡ್ಡದಾಗಿದ್ದರೆ ಕೆಲವು ವೇಳೆ ವಾಕ್ ಚಿಕಿತ್ಸೆ (ಸ್ಪೀಚ್ ಥೆರಪಿ) ಅವಶ್ಯಕವಾಗುತ್ತದೆ. |
ಸೀಳು ತಾಳು ಮಾತ್ರ : ಇದು ಕೂಡ ಹುಟ್ಟಿನಿಂದಲೇ ಬರುವ ನ್ಯೂನತೆ. ಗರ್ಭಸ್ಥಭ್ರೂಣದಲ್ಲಿ ಶಿಶುವಿನ ಮುಖಕ್ಕೆ ಸಂಬಂಧಿಸಿದ ಭಾಗಗಳ ಸಕಾಲಿಕ ಜೋಡಣೆ ವಿಫಲವಾಗುವುದರಿಂದ ತಲೆದೋರುತ್ತದೆ. ಕಠಿಣ ಹಾಗೂ ಮೃದು ಅಂಗುಳಗಳೆರಡರ ಮೂಲಕ ಮೂಗಿನವರೆಗೂ ಈ ಸೀಳು ಹಾದು ಹೋಗಿರುವುದುಂಟು; ಇಲ್ಲವೇ ಆ ಮೊದಲೇ ಯಾವುದೋ ಹಂತದಲ್ಲಿ ನಿಂತಿರುವುದೂ ಉಂಟು. ಬಹುತೇಕ ಸೀಳುತಾಳು ಸಿರಿಬಾಯಿಯೊಡನೆ ತಲೆದೋರುತ್ತದೆ. |
ಕೋವಿಡ್-19 ವೈರಸ್ ಮತ್ತೊಂದು ರೂಪಾಂತರ; 29 ದೇಶಗಳಲ್ಲಿ ಅಟ್ಟಹಾಸ; 'ಲಾಂಬ್ಡಾ' ಅಪಾಯಕಾರಿ ತಳಿ!- Kannada Prabha |
ಕೋವಿಡ್-19 ವೈರಸ್ ನ ಮತ್ತೊಂದು ರೂಪಾಂತರ; 29 ದೇಶಗಳಲ್ಲಿ ಅಟ್ಟಹಾಸ; 'ಲಾಂಬ್ಡಾ' ಅಪಾಯಕಾರಿ ತಳಿ ಎಂದ ವಿಶ್ವ ಆರೋಗ್ಯ ಸಂಸ್ಥೆ |
ಜಗತ್ತಿನಾದ್ಯಂತ ಮಾರಣಾಂತಿಕ ವೈರಸ್ ಕೋವಿಡ್-19 ಅಟ್ಟಹಾಸ ಮುಂದುವರೆದಿರುವಂತೆಯೇ ಇದೀಗ ಇದೇ ಡೆಡ್ಲಿ ವೈರಸ್ ನ ಮತ್ತೊಂದು ರೂಪಾಂತರ ಕೂಡ ತನ್ನ ಆರ್ಭಟ ಆರಂಭಿಸಿದೆ. |
Published: 18th June 2021 05:26 PM | Last Updated: 18th June 2021 08:10 PM | A+A A- |
ಜಿನೀವಾ: ಜಗತ್ತಿನಾದ್ಯಂತ ಮಾರಣಾಂತಿಕ ವೈರಸ್ ಕೋವಿಡ್-19 ಅಟ್ಟಹಾಸ ಮುಂದುವರೆದಿರುವಂತೆಯೇ ಇದೀಗ ಇದೇ ಡೆಡ್ಲಿ ವೈರಸ್ ನ ಮತ್ತೊಂದು ರೂಪಾಂತರ ಕೂಡ ತನ್ನ ಆರ್ಭಟ ಆರಂಭಿಸಿದೆ. |
29 ದೇಶಗಳಲ್ಲಿ ಆರ್ಭಟ |
ಹೌದು.. ಪೆರು ದೇಶದಲ್ಲಿ ಮೊದಲು ಪತ್ತೆಯಾದ ಈ ಕೋವಿಡ್-19 ವೈರಸ್ ನೂತನ ರೂಪಾಂತರಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಲಾಂಬ್ಡಾ ಎಂದು ಹೆಸರಿಸಿದ್ದು, ಈ ಲಾಂಬ್ಡಾ ರೂಪಾಂತರಿ ವೈರಸ್ ಪ್ರಸ್ತುತ ಜಗತ್ತಿನ ಬರೊಬ್ಬರಿ 29 ದೇಶಗಳಲ್ಲಿ ತನ್ನ ಆರ್ಭಟ ನಡೆಸುತ್ತಿದೆ. ಮೊದಲ ಬಾರಿಗೆ ಪೆರು ದೇಶದಲ್ಲಿ ಕಾಣಿಸಿಕೊಂಡ ಈ ರೂಪಾಂತರಿ ತಳಿ ಬಳಿಕ ಬ್ರೆಜಿಲ್, ಅರ್ಜೆಂಟೀನಾ ಮತ್ತು ಈಕ್ವೆಡಾರ್ ನಲ್ಲಿ ಕಾಣಿಸಿಕೊಂಡಿತು. ಕ್ರಮೇಣ ಈ ಲಾಂಬ್ಡಾ ವೈರಸ್ ಆರ್ಭಟ ಜೋರಾಗಿದ್ದು, ಲಕ್ಷಾಂತರ ಮಂದಿಗೆ ಸೋಂಕು ವ್ಯಾಪಕವಾಗಿ ಪ್ರಸರಿಸುವಂತೆ ಮಾಡುತ್ತಿದೆ. |
Subsets and Splits
No community queries yet
The top public SQL queries from the community will appear here once available.