text
stringlengths
0
61.5k
ಚಿಕ್ಕದಾಗಿದ್ದರೂ ಚೊಕ್ಕ ಲೇಖನ, ಯಾಕಂದ್ದರೆ ಕನ್ನಡದಲ್ಲಿ ಓದುವ ಮಜಾನೇ ಬೇರೆ! 'ಅನಿವಾಸಿ'ಗೆ ಸ್ವಾಗತ ಆರ್ಜೆ ಗಿರೀಶ್ ಅವರೇ.
Girish Prasad says:
October 4, 2021 at 07:52
Nimma thumbu hrudayada abhimaanada nudigalige namana…
September 25, 2021 at 07:46
ನಮ್ ರೇಡಿಯೊ' ದಲ್ಲಿ ಗಿರೀಶ್ ಅವರ ಫಿದಾ ಹೋಗುವ ದನಿಯಲ್ಲಿ "ಯಾಕಂದ್ರೆ ಕನ್ನಡ ಕೇಳೋ ಮಜಾನೇ ಬೇರೆ…" ಕೇಳುತ್ತಾ ಬಂದಿದ್ದೇನೆ! ಈಗ ಅವರ ಲೇಖನಿಯಿಂದ ಅವರ ಹಸಿರು ಉಸಿರಿನ ಮೌಲ್ಯದ ಬಗ್ಗೆ ಕಳಕಳಿಯಿಂದ ಚಂದವಾಗಿ ಬರೆದ ಲೇಖನವನ್ನು ಓದುವ ಮಜಾನೇ ಬೇರೆ! ನಮ್ ಬ್ಲಾಗಿಗೆ ಚೊಚ್ಚಲ ಬರಹಕ್ಕೆ ಅಭಿನಂದನೆಗಳು. ಅನಿವಾಸಿಗೆ ಸ್ವಾಗತ ಕೋರಿ ಹೀಗೆ ಬರೆಯುತ್ತಿರಿ ಎಂದು ಆಶಿಸುವೆ! ಶ್ರೀವತ್ಸ ದೇಸಾಯಿ
October 4, 2021 at 07:51
Nimma Protsaha haago abhimaanakke sadaa chiraruni.. Bareyalu avakaasha kotta Savitha Avarige Dhanyavaadagalu..
ಭೂಮಿ ಕಳೆದುಕೊಂಡ ರೈತರಿಗೆ 10 ವರ್ಷ ಕಳೆದರೂ ಸಿಕ್ಕಿಲ್ಲ ಸೂಕ್ತ ಪರಿಹಾರ – Page 28 – Welcome to First News
ಭೂಮಿ ಕಳೆದುಕೊಂಡ ರೈತರಿಗೆ 10 ವರ್ಷ ಕಳೆದರೂ ಸಿಕ್ಕಿಲ್ಲ ಸೂಕ್ತ ಪರಿಹಾರ
ಧಾರವಾಡ: ಹುಬ್ಬಳ್ಳಿಯ ವಿಮಾನ ನಿಲ್ದಾಣವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ವಿಸ್ತರಣೆಗಾಗಿ 2007ರಲ್ಲಿ ರೈತರಿಂದ ಭೂಮಿಯನ್ನು ಪಡೆದುಕೊಂಡಿದೆ. ಆದರೆ ಭೂಮಿ ನೀಡಿ 10 ವರ್ಷ ಕಳೆದರೂ ಸಂತ್ರಸ್ತರಿಗೆ ಇನ್ನು ಪರಿಹಾರ ಸಿಕ್ಕಿಲ್ಲ. ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವಲ್ಲಿ ರಾಜ್ಯ ಸರ್ಕಾರ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ ಆಸಕ್ತಿ ತೋರುತ್ತಿಲ್ಲ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣ ಸಂತ್ರಸ್ತರ ಒಕ್ಕೂಟದ ಅಧ್ಯಕ್ಷ ರಘೋತ್ತಮ ಕುಲಕರ್ಣಿ ಹೇಳಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ 2009-10ರಲ್ಲಿ ಕೆಲವು ಸಂತ್ರಸ್ತರಿಗೆ ಮಾತ್ರ ನಿವೇಶನ ನೀಡಿ ಕೈ ತೊಳೆದುಕೊಂಡಿದೆ. ಇನ್ನುಳಿದ ಸಂತ್ರಸ್ತರ ಕಡೆಗೆ ಗಮನ ಹರಿಸಿಲ್ಲ. ಈ ಕುರಿತು ಸ್ಥಳೀಯ ಜನಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿ ಮಾಡಿದರು ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ರಾಜ್ಯ ಸರ್ಕಾರ ಹಾಗೂ ನಗರಾಭಿವೃದ್ಧಿ ಇಲಾಖೆ, ಭೂಮಿ ನೀಡಿದ ಸಂತ್ರಸ್ತರಿಗೆ ನಿವೇಶನ ನೀಡಿ ಸೂಕ್ತ ಪರಿಹಾರ ನೀಡಬೇಕು. ಅಲ್ಲದೇ ಸರ್ಕಾರ ಅನುಮೋದಿಸಲ್ಪಟ್ಟ ನಿವೇಶನಗಳನ್ನು ಸಹ ಸಂಪೂರ್ಣವಾಗಿ ವಿತರಿಸದೇ ಸಂತ್ರಸ್ತರಿಗೆ ನಿವೇಶನ ವಿತರಿಸಲು ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿದರು. ಕೂಡಲೇ ಭೂಮಿ ಕಳೆದುಕೊಂಡರಿಗೆ ನ್ಯಾಯ ಒದಗಿಸಿಬೇಕೆಂದು ಸರ್ಕಾರಕ್ಕೆ ರಘೋತ್ತಮ ಕುಲಕರ್ಣಿ ಒತ್ತಾಯಿಸಿದ್ದಾರೆ.
ಅಮೆರಿಕಾ ಚರಿತ್ರೆಯ ವಿವಿಧ ಆಯಾಮಗಳು : ಪ್ರಧಾನ ಸಂಪಾದಕರ ಮಾತು – ಕಣಜ
ಅಮೆರಿಕಾ ಚರಿತ್ರೆಯ ವಿವಿಧ ಆಯಾಮಗಳು : ಪ್ರಧಾನ ಸಂಪಾದಕರ ಮಾತು
Home/ಇತಿಹಾಸ/ವಿಶ್ವ ಇತಿಹಾಸ/ಅಮೆರಿಕಾ/ಅಮೆರಿಕಾ ಚರಿತ್ರೆಯ ವಿವಿಧ ಆಯಾಮಗಳು/ಅಮೆರಿಕಾ ಚರಿತ್ರೆಯ ವಿವಿಧ ಆಯಾಮಗಳು : ಪ್ರಧಾನ ಸಂಪಾದಕರ ಮಾತು
ಚರಿತ್ರೆ ಬರವಣಿಗೆ ಕ್ರಮದಲ್ಲಿ ಮಹತ್ತರ ಬದಲಾವಣೆಯನ್ನು ಕಳೆದ ಶತಮಾನದಲ್ಲಿ ಮತ್ತು ಈ ಶತಮಾನದ ಮೊದಲ ದಶಕದಲ್ಲಿ ನೋಡಬಹುದು. ನಮ್ಮ ದೇಶದ ಅಥವಾ ನಮ್ಮ ಪ್ರದೇಶದ ಚರಿತ್ರೆ ಬರೆಯುವ ಸಂದರ್ಭದಲ್ಲಿ ನಮಗೆ ನಮ್ಮನ್ನು ಅರ್ಥ ಮಾಡಿಕೊಳ್ಳುವ ಚರಿತ್ರೆಯನ್ನು ರೂಪಿಸಲು ಸಾಧ್ಯವಾಗಲಿಲ್ಲವಲ್ಲ ಎಂಬ ವಿಚಾರ ಗಮನಾರ್ಹವಾದುದು. ವಸಾಹತುಶಾಹಿ ಚರಿತ್ರೆಕಾರರು ಹಾಕಿಕೊಟ್ಟ ಚೌಕಟ್ಟಿನೊಳಗೆ ನಮ್ಮ ಬಹುತೇಕ ಚರಿತ್ರೆ ಬರವಣಿಗೆಗಳು ರೂಪಿಸಲ್ಪಟ್ಟಿವೆ. ವಸಾಹತುಶಾಹಿ ಚರಿತ್ರೆ ಬರವಣಿಗೆ ಯನ್ನು ಉಗ್ರವಾಗಿ ಟೀಕಿಸಿದ ರಾಷ್ಟ್ರೀಯವಾದಿಗಳಾಗಲಿ ಅಥವಾ ಈ ಎರಡೂ ಕ್ರಮಗಳನ್ನು ತೀವ್ರವಾಗಿ ವಿಶ್ಲೇಷಣೆಗೆ ಒಳಪಡಿಸಿದ ಮಾರ್ಕ್ಸ್‌ವಾದಿ ಬರವಣಿಗೆ ಕ್ರಮವಾಗಲಿ ಇದಕ್ಕೆ ಹೊರತಲ್ಲ. ವಸಾಹತೋತ್ತರ ದಿನಗಳಲ್ಲಿ ಹೊರಬಂದ ರಾಷ್ಟ್ರೀಯವಾದಿ ಮತ್ತು ಮಾರ್ಕ್ಸ್‌ವಾದಿ ಹಿನ್ನೆಲೆಯ ಅತ್ಯದ್ಭುತ ಕೃತಿಗಳೆಲ್ಲ ಇದಕ್ಕೆ ಸಾಕ್ಷಿಯಾಗಿವೆ. ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳುವ ಸಂದರ್ಭದಲ್ಲಾಗಲಿ, ವಸಾಹತು ವಿರೋಧಿ ಹೋರಾಟದ ಸಂದರ್ಭದಲ್ಲಾಗಲಿ, ರಾಷ್ಟ್ರೀಯ ಹೋರಾಟದ ಸಂದರ್ಭದಲ್ಲಾಗಲಿ ಅಥವಾ ಹೊಸ ರಾಷ್ಟ್ರದ ನಿರ್ಮಾಣದ ಸಂದರ್ಭದಲ್ಲಾಗಲಿ ಈ ಕ್ರಮಗಳೆಲ್ಲ ಭಾರತದ ನೆಲದಲ್ಲಿ ಅಥವಾ ಹೊರಗೆ ದೊರೆತ ಎಲ್ಲ ಬಗೆಯ ಲಭ್ಯ ಆಕರಗಳನ್ನು ಆಧರಿಸಿ ಚರಿತ್ರೆಯನ್ನು ಬರೆಯುವ ಪ್ರಯತ್ನವನ್ನು ಮಾಡಿದವು. ಸೈದ್ಧಾಂತಿಕವಾಗಿ ವಿರೋಧಾಭಾಸಗಳಿದ್ದರೂ ರಾಷ್ಟ್ರೀಯವಾದಿ ಹಾಗೂ ಮಾರ್ಕ್ಸ್‌ವಾದಿ ಬರಹಗಳು ಆಯಾ ವಿದ್ವಾಂಸರು ಆಶಿಸಿದ ಭವಿಷ್ಯದ ಭಾರತವನ್ನು ಕಟ್ಟಲು ಚರಿತ್ರೆಯ ಬರವಣಿಗೆಗೆ ಮಾರು ಹೋದದ್ದನ್ನು ಗಮನಿಸಬಹುದು.
ಚರಿತ್ರೆಯನ್ನು ತಳದಿಂದ ನೋಡಬೇಕು ಎನ್ನುವ ಸಬಾಲ್ಟರ್ನ್‌ಚರಿತ್ರೆಕಾರರೂ ಇದಕ್ಕೆ ಹೊರತಾಗಿಲ್ಲ. ಸಬಾಲ್ಟರ್ನ್‌ಚರಿತ್ರೆ ಬಿಟ್ಟು ಉಳಿದೆಲ್ಲ ಚರಿತ್ರೆಗಳು 'ಎಲೈಟ್' ಚರಿತ್ರೆ ಎಂದು ಬಲವಾಗಿ ನಂಬಿದ ಸಬಾಲ್ಟರ್ನ್‌ಚರಿತ್ರೆಕಾರರು ಕೂಡ ಈ ನಿಟ್ಟಿನಲ್ಲಿ ಮಾರ್ಕ್ಸ್‌ವಾದಿ ಚರಿತ್ರೆಕಾರರಂತೆ 'ಒಪ್ಪಿತ ಚರಿತ್ರೆಗೆ' ಸವಾಲುಗಳನ್ನು ಹಾಕಿದರು ಮತ್ತು ಸವಾಲುಗಳನ್ನು ಹಾಕಿಸಿಕೊಂಡರು. ಚರಿತ್ರೆ ಬರವಣಿಗೆ ಪರಂಪರೆಯಲ್ಲಿ ಇದೊಂದು ನಿರಂತರ ಪ್ರಕ್ರಿಯೆ.
ಭಾರತದ ಚರಿತ್ರೆಯನ್ನೇ ಪುನಾರಚಿಸಬೇಕೆಂಬ ಪುನರುತ್ಥಾನವಾದಿಗಳಿಗಿಂತ ಭಿನ್ನ ಸೈದ್ಧಾಂತಿಕತೆಯಿರುವ ಅನೇಕ ವಿದ್ವಾಂಸರು ಈ ದಿಸೆಯಲ್ಲಿ ಚರಿತ್ರೆಯ ಘಟನೆಗಳನ್ನು ಮತ್ತು ಚರಿತ್ರೆಕಾರರನ್ನು ತೀವ್ರವಾಗಿ ವಿಶ್ಲೇಷಿಸುತ್ತಾ ಅವರವರ ಬದುಕಿಗೆ ಹತ್ತಿರವಿರುವ ಸತ್ಯಗಳನ್ನು ಹುಡುಕುತ್ತಿರುವುದು ಸರಿಯಷ್ಟೆ. ಭಾರತ ಉಪಖಂಡದ ಚರಿತ್ರೆಯನ್ನು ರೂಪಿಸಲು ಪಡುತ್ತಿರುವ ಸಂಕೀರ್ಣ ಸಂದರ್ಭದಲ್ಲಿ ವಿಶ್ವದ ವಿವಿಧೆಡೆಯ ಚರಿತ್ರೆಯನ್ನು ಕನ್ನಡದಲ್ಲಿ ಚರ್ಚಿಸುವುದರ ಸವಾಲು ಭಿನ್ನ ರೀತಿಯದು. ಪಾಶ್ಚಾತ್ಯರು ಭಾರತವನ್ನು ನೋಡಿದ ರೀತಿಯಲ್ಲಿ ಭಾರತೀಯರು ತಮ್ಮ ಅನುಭವದ ಮೂಲಕ ಪಾಶ್ಚಾತ್ಯರನ್ನು, ಆಫ್ರಿಕಾದವರನ್ನು ನೋಡಬೇಕೆಂಬ ತವಕ ನಮಗಿದ್ದರೂ ಬರವಣಿಗೆ ಕ್ರಮದ ಅನೇಕ ಮಿತಿಗಳು ನಮ್ಮನ್ನು ಬಿಡಲಿಲ್ಲ. ಕನ್ನಡ ವಿಶ್ವವಿದ್ಯಾಲಯದಲ್ಲಿ ಇಂತಹ ಪ್ರಶ್ನೆಗಳು ಎದುರಾದಾಗಲೆಲ್ಲ ಅವುಗಳನ್ನು ಬಗೆಹರಿಸುವುದು ಹೇಗೆ ಎಂಬ ಚಿಂತನೆಯೂ ಆರಂಭವಾಗುತ್ತದೆ. ಇಂತಹ ಚಿಂತನೆಯ ಹಿನ್ನೆಲೆಯಲ್ಲಿ ನಾವು 'ಕನ್ನಡ ವಿಶ್ವವಿದ್ಯಾಲಯ ಚರಿತ್ರೆ ಸಂಪುಟಗಳನ್ನು' ಹೊರತರುತ್ತಿದ್ದೇವೆ.
ಚರಿತ್ರೆಯು ಪ್ರತಿಯೊಬ್ಬರ ಜೀವನದ ಭಾಗವಾಗಿ ಕೆಲಸ ಮಾಡುತ್ತಿರುವ ಪ್ರತಿ ಸಮುದಾಯ/ವರ್ಗದ ನೆರಳಾಗಿ ಕಾಡುತ್ತಾ, ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುತ್ತಿರುವ ಜ್ಞಾನಶಿಸ್ತಾಗಿ ರೂಪುಗೊಂಡ ಬಗೆಗಳನ್ನು ಪ್ರಸ್ತುತ ಸಂಪುಟಗಳು ಅನಾವರಣಗೊಳಿಸಲು ಯತ್ನಿಸಿವೆ. ಜನರಲ್ ನಾಲೆಡ್ಜ್‌ನ ಭಾಗವಾಗಿ ಚರಿತ್ರೆಯನ್ನು ನೋಡುವ ಕ್ರಮಕ್ಕಿಂತ ಭಿನ್ನವಾದ ಕ್ರಮ ಇದು. ನಮ್ಮದಲ್ಲದ ಸಂಸ್ಕೃತಿ, ನಾಗರಿಕತೆ, ರಾಜಕೀಯ ಬೆಳವಣಿಗೆಗಳು, ರಾಜ್ಯಗಳ ರೂಪುಗೊಳ್ಳುವಿಕೆ, ವ್ಯವಸ್ಥೆಯ ವಿವಿಧ ಮಜಲುಗಳು, ಸಂಘರ್ಷ, ಹೋರಾಟ ಮುಂತಾದ ಪ್ರಕ್ರಿಯೆಗಳನ್ನು ಏಷ್ಯಾ, ಯುರೋಪ್, ಆಫ್ರಿಕಾಗಳ ಸಂದರ್ಭದಲ್ಲಿ ದಾಖಲಿಸಲು ಪ್ರಸ್ತುತ ಸಂಪುಟಗಳು ಪ್ರಯತ್ನಿಸಿವೆ. ಭಾರತ ಉಪಖಂಡ ಸಂಪುಟಗಳು ಹಾಗೂ ಸಮಕಾಲೀನ ಸಂಪುಟವು ನಮ್ಮೊಳಗಿನ ಸಂಕೀರ್ಣ ವ್ಯವಸ್ಥೆ, ಸಂಘರ್ಷ, ಸೌಹಾರ್ದತೆ ಮತ್ತು ವೈರುಧ್ಯಗಳ ವಿವಿಧ ಆಯಾಮಗಳನ್ನು ಒಳಗೊಳ್ಳುವ ಪ್ರಯತ್ನಗಳನ್ನು ಮಾಡಿವೆ. ಚರಿತ್ರೆ ಬರವಣಿಗೆ ಕ್ರಮ ಮತ್ತು ವಿಧಾನದ ಸಂಪುಟವು ಜಗತ್ತಿನ ಬೇರೆ ಬೇರೆ ಪರಂಪರೆಗಳ ಬೌದ್ದಿಕ ವಿಷಯಗಳನ್ನು ಕನ್ನಡದಲ್ಲಿ ಚರ್ಚಿಸುವ ಪ್ರಯತ್ನವನ್ನು ಮಾಡಿದೆ.
ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಡಾ. ಎಚ್.ಜೆ.ಲಕ್ಕಪ್ಪಗೌಡ ಅವರ ಸಂದರ್ಭದಲ್ಲಿ (೨೦೦೧ರಲ್ಲಿ) ಬಿಡುಗಡೆಯಾದ 'ಚರಿತ್ರೆ ವಿಶ್ವಕೋಶ'ಕ್ಕೆ ನಂತರದ ದಿನಗಳಲ್ಲಿ ಅಷ್ಟೊಂದು ಬೇಡಿಕೆ ಇರುತ್ತದೆ ಎಂದು ನಾನಾಗಲಿ ಅಥವಾ ನಮ್ಮ ಸಂಪಾದಕ ಬಳಗದ ಸದಸ್ಯರಾಗಲಿ ಅಂದುಕೊಂಡಿರಲಿಲ್ಲ. ೧೯೯೬ರಲ್ಲಿ ನಮ್ಮ ಆರಂಭಿಕ ಕುಲಪತಿ ಗಳಾಗಿದ್ದ ಡಾ. ಚಂದ್ರಶೇಖರ ಕಂಬಾರ ಹಾಗೂ ಆಗಿನ ಕುಲಸಚಿವರಾಗಿದ್ದ ಡಾ. ಕೆ.ವಿ.ನಾರಾಯಣ ಅವರ ಒತ್ತಾಸೆಯ ಫಲವೇ ಚರಿತ್ರೆ ವಿಶ್ವಕೋಶ ಎಂದರೆ ಅತಿಶಯೋಕ್ತಿ ಯೇನಲ್ಲ. ನಂತರದ ಕುಲಪತಿಗಳಾಗಿದ್ದ ಡಾ. ಬಿ.ಎ.ವಿವೇಕ ರೈ ಅವರ ಮಾರ್ಗದರ್ಶನದಲ್ಲಿ ಮತ್ತು ಚರಿತ್ರೆ ವಿಭಾಗದ ಮುಖ್ಯಸ್ಥರಾಗಿದ್ದ ಡಾ. ಕೆ.ಮೋಹನ್‌ಕೃಷ್ಣ ರೈ ಅವರ ಸಹಕಾರದಿಂದ ವಿಭಾಗದ ಯೋಜನೆಯಾಗಿ ಬಲು ಬೇಡಿಕೆಯಿದ್ದ ಚರಿತ್ರೆ ವಿಶ್ವಕೋಶವನ್ನು ಬಿಡಿ ಬಿಡಿ ಪುಸ್ತಕಗಳನ್ನಾಗಿ ತರುವ ಯೋಜನೆಯನ್ನು ೨೦೦೫ರಲ್ಲಿ ಕೈಗೆತ್ತಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಸಂಶೋಧಕರಿಗೆ, ಅಧ್ಯಾಪಕರಿಗೆ ಮತ್ತು ಬಹಳ ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಸುಲಭ ಬೆಲೆಯಲ್ಲಿ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ಸಂಪುಟಗಳು ಸಿಗುವಂತೆ ಯೋಜನೆಯನ್ನು ಕಾರ್ಯಗತಗೊಳಿಸಲಾಯಿತು. ಹೀಗಾಗಿ ಚರಿತ್ರೆ ವಿಶ್ವಕೋಶದ ಪ್ರತಿ ಬಿಡಿ ಭಾಗಗಳನ್ನು ಪರಿಷ್ಕಾರಕ್ಕೆ ಒಳಪಡಿಸಬೇಕೆಂದು ತೀರ್ಮಾನಿಸಿ ಅದಕ್ಕೆ ಸಂಬಂಧಿಸಿದ ಕೆಲಸಗಳನ್ನು ಆರಂಭಿಸಲಾಯಿತು. ಹಾಗೆಯೇ ಅನೇಕ ಬಿಡಿ ಭಾಗಗಳಲ್ಲಿ ತೀರಾ ಅಗತ್ಯವಾಗಿ ಬೇಕಾಗಿದ್ದ ಇನ್ನೂ ಕೆಲವು ಲೇಖನಗಳನ್ನು ಸಿದ್ಧಪಡಿಸಿ ಪ್ರತಿ ಸಂಪುಟವು ಓದುಗರ ಅಪೇಕ್ಷೆಯನ್ನು ಪೂರ್ಣಗೊಳಿಸುವಂತೆ ಅವಿರತ ಶ್ರಮವನ್ನು ಹಾಕಲಾಯಿತು. ಚರಿತ್ರೆ ವಿಶ್ವಕೋಶದ ಸಂಪಾದಕೀಯ ಸಮಿತಿಯಲ್ಲಿದ್ದ ಡಾ. ಕೆ.ಮೋಹನ್‌ಕೃಷ್ಣ ರೈ ಹಾಗೂ ಡಾ. ಎನ್.ಚಿನ್ನಸ್ವಾಮಿ ಸೋಸಲೆ ಅವರೊಂದಿಗೆ ಈ ಯೋಜನೆಯಲ್ಲಿ ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಅವರು ಪಾಲ್ಗೊಂಡು ಪರಿಷ್ಕೃತ ಆವೃತ್ತಿಗಳನ್ನು ಯಶಸ್ವಿಯಾಗಿ ಹೊರತರಲು ಶ್ರಮ ವಹಿಸಿದರು. ಈ ಹಿನ್ನೆಲೆಯಲ್ಲಿ ಚರಿತ್ರೆ ಬರವಣಿಗೆ ಕ್ರಮ ಮತ್ತು ವಿಧಾನ, ಭಾರತ ಉಪಖಂಡದ ವಸಾಹತುಪೂರ್ವ ಚರಿತ್ರೆ, ಭಾರತ ಉಪಖಂಡದ ಆಧುನಿಕ ಚರಿತ್ರೆ, ಏಷ್ಯಾ, ಯುರೋಪ್, ಆಫ್ರಿಕಾ, ಅಮೆರಿಕ ಹಾಗೂ ಸಮಕಾಲೀನ ಕರ್ನಾಟಕದ ಮೇಲೆ ವಿವಿಧ ಸಂಪುಟಗಳನ್ನು ಸಿದ್ಧಪಡಿಸಲಾಗಿದೆ. ಏಷ್ಯಾ ಮತ್ತು ಯುರೋಪ್‌ನ ಸಂಪುಟಗಳ ಸಂಪಾದಕರಾಗಿ ಡಾ. ಕೆ.ಮೋಹನ್‌ಕೃಷ್ಣ ರೈ ಅವರು, ಆಫ್ರಿಕಾ ಹಾಗೂ ಸಮಕಾಲೀನ ಕರ್ನಾಟಕ ಸಂಪುಟಗಳ ಸಂಪಾದಕರಾಗಿ ಡಾ. ಎನ್.ಚಿನ್ನಸ್ವಾಮಿ ಸೋಸಲೆ ಅವರು, ಅಮೆರಿಕ ಸಂಪುಟದ ಸಂಪಾದಕರಾಗಿ ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಅವರು, ಚರಿತ್ರೆ ಬರವಣಿಗೆ ಕ್ರಮ ಮತ್ತು ವಿಧಾನ ಸಂಪುಟದ ಸಂಪಾದಕರಾಗಿ ಡಾ. ವಿಜಯ್ ಪೂಣಚ್ಚ ತಂಬಂಡ ಮತ್ತು ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಅವರು ಹಾಗೂ ಡಾ. ವಿಜಯ್ ಪೂಣಚ್ಚ ತಂಬಂಡ ಸಂಪಾದಕತ್ವದಲ್ಲಿ 'ಭಾರತ ಉಪಖಂಡ ವಸಾಹತುಪೂರ್ವ ಮತ್ತು ಆಧುನಿಕ ಚರಿತ್ರೆ' ಎಂಬ ಸಂಪುಟಗಳು ಹೊರಬಂದಿವೆ. ಪ್ರಧಾನ ಸಂಪಾದಕನಾಗಿ ಈ ಎಂಟು ಸಂಪುಟಗಳನ್ನು ಹೊರತರಬೇಕೆಂದು ಹಾಕಿಕೊಂಡ ಯೋಜನೆಯ ಸಫಲತೆಗೆ ಕಾರಣರಾದ ಸಂಪಾದಕ ಮಂಡಳಿಯ ನನ್ನ ಸಹೋದ್ಯೋಗಿಗಳಿಗೆ, ಸಂಪುಟಗಳಲ್ಲಿ ಲೇಖನಗಳನ್ನು ಬರೆದ ಎಲ್ಲ ಲೇಖಕರಿಗೆ ಹಾಗೂ ಅನುವಾದಕರಿಗೆ ನಾನು ಆಭಾರಿಯಾಗಿದ್ದೇನೆ.
ಏಕೀಕರಣಪೂರ್ವ ಕರ್ನಾಟಕ ಚರಿತ್ರೆಯನ್ನು ಕನ್ನಡ ವಿಶ್ವವಿದ್ಯಾಲಯವು ಈಗಾಗಲೇ ಏಳು ಸಂಪುಟಗಳಲ್ಲಿ ಪ್ರಕಟಿಸಿರುವುದರಿಂದ ಅವುಗಳನ್ನು ಇಲ್ಲಿ ಪೂರ್ಣ ಪ್ರಮಾಣದಲ್ಲಿ ಚರ್ಚಿಸಿಲ್ಲ. ಪ್ರಸ್ತುತ ಎಂಟು ಕೃತಿಗಳಲ್ಲಿ ಪ್ರಾಚೀನ ಹಾಗೂ ಮಧ್ಯಯುಗೀನ ಚರಿತ್ರೆಗಳಿಗೆ ಸಂಬಂಧಿಸಿದಂತೆ ಇರುವ ಅನೇಕ ವಿವರಗಳನ್ನು ಮತ್ತು ಚರಿತ್ರೆ ಬರವಣಿಗೆ ಕ್ರಮದಲ್ಲಿನ ಸಮಸ್ಯೆಗಳನ್ನು ಚರ್ಚಿಸಲಾಗಿದೆ. ಭಾರತ ಉಪಖಂಡದ ವಸಾಹತುಪೂರ್ವ ಸಂಪುಟ ಬಿಟ್ಟರೆ ಉಳಿದ ಸಂಪುಟಗಳು ಆಧುನಿಕ ಚರಿತ್ರೆಯನ್ನು ಪ್ರಮುಖವಾಗಿ ವಿಶ್ಲೇಷಿಸಿವೆ. ಸಾಮ್ರಾಜ್ಯಶಾಹಿ ಶಕ್ತಿಗಳು ಬೇರೆ ಬೇರೆ ಖಂಡಗಳ ಅನೇಕ ದೇಶಗಳನ್ನು ವಸಾಹತುಗಳನ್ನಾಗಿ ಮಾಡಿದ ಹಾಗೂ ಆ ವಸಾಹತುಶಾಹಿ ಸರಕಾರಗಳಿಗೆ ವಿರೋಧವಾಗಿ ಜನಾಂದೋಲನಗಳನ್ನು ಸಂಘಟಿಸಿದ ಸ್ಥಳೀಯ ರಾಷ್ಟ್ರೀಯ ಹೋರಾಟಗಳನ್ನು ಇವು ಒಳಗೊಂಡಿವೆ. ಹೋರಾಟದ ಪ್ರತಿಕ್ರಿಯೆಗಳ ಪ್ರಕ್ರಿಯೆಗಳನ್ನು ಈ ಸಂಪುಟಗಳು ವಿವರವಾಗಿ ಚರ್ಚಿಸಲು ಪ್ರಯತ್ನಿಸಿವೆ. ಆಫ್ರಿಕಾ ಮತ್ತು ಅಮೆರಿಕಾಗಳಲ್ಲಿನ ಮೂಲನಿವಾಸಿ ಬುಡಕಟ್ಟುಗಳು ಸಾಮ್ರಾಜ್ಯಶಾಹಿಗಳ ತುಳಿತಕ್ಕೆ ನೇರವಾಗಿ ಬಲಿಯಾದ ಚರಿತ್ರೆಯ ವಿವಿಧ ಘಟ್ಟಗಳನ್ನು ದಾಖಲು ಮಾಡಲು ಪ್ರಯತ್ನಿಸಲಾಗಿದೆ. ಈ ಮೂಲನಿವಾಸಿಗಳ ಪ್ರತಿಭಟನೆಯನ್ನು ಅವರ ಸಾಂಸ್ಕೃತಿಕ ಗುರುತೇ ಇಲ್ಲದ ರೀತಿಯಲ್ಲಿ ಮಟ್ಟ ಹಾಕಿ ವಸಾಹತುಶಾಹಿಗಳು ಭದ್ರವಾಗಿ ಬೇರುಬಿಟ್ಟ ಬಗೆಗಳನ್ನು ಅರಿಯಲು ಈ ಸಂಪುಟಗಳು ಪ್ರಯತ್ನಿಸಿವೆ.
ವಸಾಹತುಶಾಹಿಗಳು ಇದೇ ರೀತಿಯಲ್ಲಿ ಏಷ್ಯಾದ ದೇಶಗಳನ್ನೂ ಸುಲಿಗೆ ಮಾಡಿ ಜನರ ಹೋರಾಟಗಳನ್ನು ಸುಮಾರು ಒಂದೂವರೆ ಶತಮಾನಗಳ ಕಾಲ ದಮನಿಸಿದವು. ಆದರೂ, ದ್ವಿತೀಯ ಮಹಾಯುದ್ಧದ ನಂತರ ಮುಖ್ಯವಾಗಿ ಏಷ್ಯಾದಲ್ಲಿ ತಮ್ಮದೇ ಗುರುತನ್ನು ಸ್ಥಾಪಿಸಲು ಈ ರಾಷ್ಟ್ರೀಯ ಹೋರಾಟಗಳಿಗೆ ಸಾಧ್ಯವಾಯಿತು. ವಸಾಹತುಶಾಹಿ ಚರಿತ್ರೆಯನ್ನು ವಿಶ್ಲೇಷಿಸುವುದರೊಂದಿಗೆ ಪ್ರಸಕ್ತ ವಿದ್ಯಮಾನಗಳನ್ನು ಸಂದರ್ಭೋಚಿತವಾಗಿ ನಮ್ಮ ಸಂಪುಟಗಳಲ್ಲಿ ವಿದ್ವಾಂಸರು ಚರ್ಚಿಸಿದ್ದಾರೆ. ಭಿನ್ನ ಭಿನ್ನ ಬೌದ್ದಿಕ ಸಿದ್ಧಾಂತಗಳು, ಸಾಮಾಜಿಕ ಹಾಗೂ ರಾಷ್ಟ್ರೀಯ ಪ್ರಜ್ಞೆಗಳು ಧ್ರುವೀಕರಣಗೊಳ್ಳುವ ಭಿನ್ನ ಭಿನ್ನ ಬಗೆಗಳನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನಗಳನ್ನು ಪ್ರಸ್ತುತ ಸಂಪುಟಗಳು ಮಾಡಲು ಪ್ರಯತ್ನಿಸಿವೆ. ಇದರೊಂದಿಗೆ ಪ್ರಥಮ ಮತ್ತು ದ್ವಿತೀಯ ಮಹಾಯುದ್ಧಗಳು, ಶೀತಲಯುದ್ಧ, ಸೋವಿಯತ್ ರಷ್ಯಾದ ವಿಘಟನೆ ಹಾಗೂ ಜಾಗತೀಕರಣ ಪ್ರಕ್ರಿಯೆಗಳ ರಾಜಕೀಯ-ಸಾಮಾಜಿಕ-ಸಾಂಸ್ಕೃತಿಕ ಸಂಘರ್ಷಗಳನ್ನು ದಾಖಲಿಸುವ ಯತ್ನವನ್ನು ಮಾಡಲು ನಮ್ಮ ಸಂಪುಟಗಳು ಪ್ರಯತ್ನಿಸಿವೆ. ಹಾಗೆಯೇ ಬೇರೆ ಬೇರೆ ದೇಶಗಳ ಮತ್ತು ಜನರ ಸಾಮಾಜಿಕ, ಆರ್ಥಿಕ ಸಾಮ್ಯತೆಗಳನ್ನು, ಭಿನ್ನತೆಗಳನ್ನು, ಸಾಮರಸ್ಯಗಳನ್ನು, ಸಂಘರ್ಷಗಳನ್ನು ಮತ್ತು ಸಂಕೀರ್ಣ ಸಂಬಂಧಗಳನ್ನು ಪ್ರಸ್ತುತ ಸಂಪುಟಗಳು ವಿಶ್ಲೇಷಿಸುವ ಪ್ರಯತ್ನಗಳನ್ನು ಮಾಡಿವೆ.
ಅಮೆರಿಕಾ ಸಂಯುಕ್ತ ಸಂಸ್ಥಾನವು ಜಗತ್ತಿನೆಲ್ಲೆಡೆ ಕಳೆದ ಶತಮಾನದಲ್ಲಿ ತನ್ನ ಬಂಡವಾಳ, ಆಕ್ರಮಣಕಾರಿ ಪ್ರವೃತ್ತಿ ಹಾಗೂ ದೊಡ್ಡಣ್ಣನ ಠೇಂಕಾರದಿಂದಾಗಿ ವಿಶ್ವದ ಬಹುತೇಕ ಬಡದೇಶಗಳನ್ನು ತನ್ನ ಕೈಗೊಂಬೆಗಳನ್ನಾಗಿ ಮಾಡಿಕೊಂಡಿತು. ಅದೇ ಪ್ರಕ್ರಿಯೆ ಈಗಲೂ ಮುಂದುವರೆದಿದೆ. ಯುರೋಪಿಯನ್ನರು ಅಮೆರಿಕಾ ಪ್ರವೇಶ ಮಾಡುವ ಮೊದಲು ಅಲ್ಲಿದ್ದ ಮೂಲನಿವಾಸಿಗಳನ್ನು ಮೂಲೆಗುಂಪು ಮಾಡಿ, ಆಫ್ರಿಕಾದ ಕರಿಯರನ್ನು ಬಿಟ್ಟಿ ದುಡಿಸಿಕೊಂಡು, ಜಗತ್ತಿನ ಅತಿ ದೊಡ್ಡ ಸಾಮ್ರಾಜ್ಯಶಾಹಿಯಾಗಿ ಅಮೆರಿಕಾವು ಎದ್ದು ನಿಂತಿತು. ಅಮೆರಿಕಾವು ತನ್ನ ಸ್ವಾತಂತ್ರ್ಯವನ್ನು ಪಡೆದುಕೊಂಡ ಕಾಲದಿಂದ ಪ್ರಸ್ತುತ ಕಾಲದವರೆಗಿನ ಚರಿತ್ರೆಯ ವಿವಿಧ ಆಯಾಮಗಳನ್ನು ಈ ಸಂಪುಟವು ಒಳಗೊಂಡಿದೆ. ಅಮೆರಿಕಾ ಸಂಯುಕ್ತ ಸಂಸ್ಥಾನದ ಆಕ್ರಮಣಗಳನ್ನು ಸತತವಾಗಿ ಹಾಗೂ ಯಶಸ್ವಿಯಾಗಿ ಲ್ಯಾಟಿನ್ ಅಮೆರಿಕಾ ಅಥವಾ ದಕ್ಷಿಣ ಅಮೆರಿಕಾಗಳ ಜನರು ಹೋರಾಟಗಳ ಮೂಲಕ ಪ್ರತಿಭಟಿಸುತ್ತಾ ಬಂದಿದ್ದಾರೆ. ಜಗತ್ತಿನಲ್ಲಿ ಶ್ರೇಷ್ಠವಾಗಿರುವ ಈ ಬಗೆಯ ಹೋರಾಟಗಳನ್ನು ಪ್ರಸ್ತುತ ಸಂಪುಟವು ಚರ್ಚಿಸಿದೆ. ಕನ್ನಡದಲ್ಲಿ ಈ ಬಗೆಯ ಲೇಖನಗಳು ಬಹಳ ಅಪರೂಪವಾಗಿದ್ದರಿಂದ ಪ್ರಸ್ತುತ ಸಂಪುಟವು ಮಹತ್ವ ದ್ದಾಗಿದೆ. ಈ ಸಂಪುಟದ ಸಂಪಾದಕರಾದ ಡಾ.ವಿರೂಪಾಕ್ಷಿ ಪೂಜಾರಹಳ್ಳಿ ಅವರಿಗೆ ಅಭಿನಂದನೆಗಳು.
ಡಾ. ಎಸ್.ಎ.ಬಾರಿ ಹಾಗೂ ಡಾ. ರಾಜಾರಾಮ ಹೆಗಡೆ ಅವರ ಮಾರ್ಗದರ್ಶನದಲ್ಲಿ ಚರಿತ್ರೆ ವಿಶ್ವಕೋಶವನ್ನು ಸಮರ್ಥವಾಗಿ ರಚಿಸಲು ಸಾಧ್ಯವಾದದ್ದನ್ನು ನಾನು ನೆನಪಿಸಿ ಕೊಳ್ಳಲೇಬೇಕು. ಪ್ರಸ್ತುತ ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಎಸ್.ಎ.ಬಾರಿ ಹಾಗೂ ಚರಿತ್ರೆ ವಿಭಾಗದ ಪ್ರಾಧ್ಯಾಪಕರಾದ ಡಾ. ರಾಜಾರಾಮ ಹೆಗಡೆ ಅವರು ನಮ್ಮ ಸಂಪುಟಗಳ ವಿಷಯತಜ್ಞರಾಗಿ ಸಾಕಷ್ಟು ಸಲಹೆ-ಸೂಚನೆ ನೀಡಿದ ಹಿನ್ನೆಲೆಯಲ್ಲಿ ಕನ್ನಡ ವಿಶ್ವವಿದ್ಯಾಲಯ ಚರಿತ್ರೆ ಸಂಪುಟಗಳನ್ನು ಯಶಸ್ವಿಯಾಗಿ ಹೊರತರಲು ಸಾಧ್ಯವಾಯಿತು. ಈ ಇಬ್ಬರು ವಿದ್ವಾಂಸರಿಗೆ ಸಂಪಾದಕ ಮಂಡಳಿಯು ಆಭಾರಿಯಾಗಿದೆ.
ಪ್ರಸ್ತುತ ಸಂಪುಟಗಳನ್ನು ಹೊರತರಲು ನಮಗೆ ಎಲ್ಲ ಬಗೆಗಳಿಂದಲೂ ಪ್ರೋ ನೀಡಿದ ಮಾನ್ಯ ಕುಲಪತಿಗಳಾದ ಡಾ. ಎ.ಮುರಿಗೆಪ್ಪ ಅವರಿಗೆ, ಕುಲಸಚಿವರಾದ ಹಾಗೂ ಪ್ರಸಾರಾಂಗದ ನಿರ್ದೇಶಕರಾದ ಡಾ. ಮಂಜುನಾಥ ಬೇವಿನಕಟ್ಟಿ ಅವರಿಗೆ, ಹಿಂದಿನ ಕುಲಸಚಿವರಾದ ಡಾ. ಹಿ.ಚಿ.ಬೋರಲಿಂಗಯ್ಯ ಅವರಿಗೆ, ಪ್ರಸಾರಾಂಗದ ಹಿಂದಿನ ನಿರ್ದೇಶಕರಾದ ಡಾ. ಎ.ಮೋಹನ ಕುಂಟಾರ್ ಅವರಿಗೆ ಸಂಪಾದಕ ಮಂಡಳಿಯ ಪರವಾಗಿ ನಾನು ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ. ಚರಿತ್ರೆ ವಿಭಾಗದ ಮುಖ್ಯಸ್ಥರಾದ ಡಾ. ಎನ್.ಚಿನ್ನಸ್ವಾಮಿ ಸೋಸಲೆ ಅವರ ಸಹಕಾರಕ್ಕಾಗಿ ನಾನು ಆಭಾರಿಯಾಗಿದ್ದೇನೆ. ಪ್ರಸ್ತುತ ಸಂಪುಟ ಹೊರಬರಲು ನಿರಂತರವಾಗಿ ನಮಗೆ ಸಹಕರಿಸಿದ ಚರಿತ್ರೆ ವಿಭಾಗದ ಸಹೋದ್ಯೋಗಿ ಡಾ. ಸಿ.ಆರ್.ಗೋವಿಂದರಾಜು ಹಾಗೂ ಪ್ರೊ. ಲಕ್ಷ್ಮಣ್ ತೆಲಗಾವಿ ಇವರಿಗೆ ಸಂಪಾದಕ ಮಂಡಳಿ ಆಭಾರಿಯಾಗಿದೆ.
ಪ್ರಸ್ತುತ ಸಂಪುಟಗಳ ಪುಟವಿನ್ಯಾಸ ಮಾಡಿದ ಪ್ರಸಾರಾಂಗದ ಸಹಾಯಕ ನಿರ್ದೇಶಕರಾದ ಶ್ರೀ ಸುಜ್ಞಾನಮೂರ್ತಿ ಅವರಿಗೆ, ಮುಖಪುಟ ವಿನ್ಯಾಸ ಮಾಡಿದ ಶ್ರೀ ಯು.ಟಿ.ಸುರೇಶ್ ಅವರಿಗೆ, ಅಕ್ಷರ ಜೋಡಣೆ ಮಾಡಿದ ಶ್ರೀ ಸಾವಳಗಿ ಶಿವಲಿಂಗೇಶ್ವರ ಗ್ರಾಫಿಕ್ಸ್‌ನ ಶ್ರೀಮತಿ ರಶ್ಮಿ ಕೃಪಾಶಂಕರ್ ಅವರಿಗೆ ಹಾಗೂ ಈ ಸಂಪುಟವನ್ನು ಮುದ್ರಿಸಿದ ಯಶವಂತ್ ಪ್ರಿಂಟರ್ಸ್, ಬೆಂಗಳೂರು ಅವರಿಗೆಲ್ಲ ನನ್ನ ಕೃತಜ್ಞತೆಗಳು.
By kanaja|2011-11-22T13:26:37+05:30November 22, 2011|ಅಮೆರಿಕಾ, ಅಮೆರಿಕಾ ಚರಿತ್ರೆಯ ವಿವಿಧ ಆಯಾಮಗಳು, ವಿಶ್ವ ಇತಿಹಾಸ|0 Comments
ಹಾವು – Page 2 – Public TV
All posts tagged "ಹಾವು"
ಮೈಸೂರು ಮೃಗಾಲಯದಲ್ಲಿ ಕೋಬ್ರಾ, ಹುಲಿ ಸಾವು
ಮೈಸೂರು: ಶ್ರೀ ಚಾಮರಾಜೇಂದ್ರ ಝೂಲಾಜಿಕಲ್ ಗಾರ್ಡನ್(ಮೈಸೂರು ಮೃಗಾಲಯ)ನಲ್ಲಿ ಹುಲಿ ಹಾಗೂ ಕಿಂಗ್ ಕೋಬ್ರಾ ಸಾವನ್ನಪ್ಪಿವೆ. ಕಿಂಗ್ ಕೋಬ್ರಾ ಲಿವರ್ ಸಮಸ್ಯೆಯಿಂದ ಮೃತಪಟ್ಟಿದ್ದರೆ, ಹುಲಿ ಹೃದಯಾಘಾತದಿಂದ ಸಾವನ್ನಪ್ಪಿದೆ ಎನ್ನಲಾಗಿದೆ. ಈ ಬಗ್ಗೆ ಮೈಸೂರು ಮೃಗಾಲಯ ನಿರ್ದೇಶಕ ಅಜಿತ್...
ಮರಿಗಳಿಗಾಗಿ ಹಾವಿನ ಜೊತೆ ಸೆಣಸಾಟಕ್ಕೆ ನಿಂತ ಮರ ಕುಟಿಗ: ವಿಡಿಯೋ
– ತಾಯಿ ಪಕ್ಷಿಯ ಪ್ರೀತಿಗೆ ನೆಟ್ಟಿಗರು ಫಿದಾ ನವದೆಹಲಿ: ಮರಿಗಳಿಗಾಗಿ ಮರ ಕುಟಿಗ ಪಕ್ಷಿಯೊಂದು ಹಾವಿನ ಜೊತೆ ಪ್ರಾಣವನ್ನು ಲೆಕ್ಕಿಸದೆ ಹೋರಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ತಾಯಿ ಎಂದರೆ ಹಾಗೇ ಎಂಥ...
ಬೆಂಗ್ಳೂರು ಸುಂದರಿ ಬಳಿ ಮಾತನಾಡೋ ದೇವರ ಹಾವು- ಪಬ್ಲಿಕ್ ಟಿವಿಯಲ್ಲಿ ನಾಗಿಣಿ ರಹಸ್ಯ
– ಹಾವ್ ರಾಣಿ ಹೇಳ್ತಾಳಂತೆ ಮಹಾಭವಿಷ್ಯ – ಮಾಟಗಾತಿಯ ಮೋಸಕ್ಕೆ ಮದ್ವೆಯೇ ಸ್ಟಾಪ್! ಬೆಂಗಳೂರು: ದೇವಲೋಕದಿಂದ ಭೂ ಲೋಕಕ್ಕೆ ದೇವರೆ ಕಳಿಸಿದ ಹಾವು. ಈ ದೇವರ ಹಾವು ಮಾತನಾಡುತ್ತದೆ, ಭವಿಷ್ಯ ಹೇಳುತ್ತದೆ. ಅಷ್ಟೇ ಅಲ್ಲದೆ ಥಟ್...
ವಿಷ ಸರ್ಪಗಳ ರಕ್ಷಣೆ ಮಾಡುತ್ತಿದ್ದಾಳೆ 12 ವರ್ಷದ ಪೋರಿ
– ಈಕೆ ಹಿಡಿಯುವ ಹಾವು ನೋಡಿದ್ರೆ ಮೈ ಝಲ್ ಎನ್ನುತ್ತೆ ಕಾರವಾರ: ಹಾವು ಎಂದ್ರೆ ಎಂಥವರಿಗೂ ಭಯ. ಆದರೆ ಇಲ್ಲೊಬ್ಬ ಪುಟ್ಟ ಬಾಲಕಿಗೆ ಹಾವು ಅಂದ್ರೆ ಪಂಚಪ್ರಾಣ. ಕಾರ್ಕೋಟಕ ವಿಷದ ಹಾವನ್ನು ಸಹ ಮುದ್ದಿಸುವ ಈ...
ಮನೆಯಲ್ಲಿ ಅಡಗಿ ಕುಳ್ತಿದ್ದ ಕರಿನಾಗರ ರಕ್ಷಣೆ
ಹಾವೇರಿ: ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿ ಮನೆಯೊಂದರಲ್ಲಿ ಅಡಗಿ ಕುಳಿತ ಕರಿನಾಗರ ಹಾವನ್ನ ರಕ್ಷಣೆ ಮಾಡಲಾಗಿದೆ. ಯಮನಪ್ಪ ಮಾದರ ಮನೆಯಲ್ಲಿ ಹಾವು ಅಡಗಿ ಕುಳಿತಿತ್ತು. ಇವರ ಹಾನಗಲ್ ಡಿಪೋದ ಚಾಲಕನಾಗಿದ್ದು, ಮನೆಯಲ್ಲಿ ಹಾವು ಕಂಡ ತಕ್ಷಣ ಗಾಬರಿಯಾಗಿದ್ದಾರೆ....
Chikkaballapur9 months ago
ಶ್ರೀಮಂತಿಕೆಯ ಆಸೆ ತೋರಿಸಿ 2 ತಲೆ ಹಾವು ಮಾರಾಟಕ್ಕೆ ಯತ್ನಿಸಿದ ಮೂವರು ಅಂದರ್
ಚಿಕ್ಕಬಳ್ಳಾಪುರ: ಮೊಬೈಲ್ ಯುಗದಲ್ಲಿ ಎಲ್ಲವೂ ಫಾಸ್ಟ್, ಫಾಸ್ಟ್. ಬೇಗ ದುಡ್ಡು ಮಾಡಬೇಕು, ಬೇಗ ಶ್ರೀಮಂತನಾಗಬೇಕು ಎಂಬ ತವಕದಲ್ಲಿ ಮನುಷ್ಯ ಅತಿಯಾಸೆಗೆ ಬಲಿಯಾಗುತ್ತಿದ್ದಾನೆ. ಇಂತಹದ್ದೇ ಪ್ರಕರಣವೊಂದು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದ್ದು, ಶ್ರೀಮಂತಿಕೆ ಆಸೆ ತೋರಿಸಿ ಹಾವನ್ನು ಮಾರಾಟ...
ಮಡಿಕೇರಿ: ಕೊಳಕುಮಂಡಲ ಹಾವೊಂದು ಕಚ್ಚಿದ ಪರಿಣಾಮ ಎಂಟು ತಿಂಗಳ ತುಂಬು ಗರ್ಭಿಣಿಯೊಬ್ಬರು ಮೃತಪಟ್ಟಿರುವ ಘಟನೆ ಮಡಿಕೇರಿ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ. ಸೋಮವಾರಪೇಟೆ ತಾಲೂಕಿನ ಕುಶಾಲನಗರದ ಸುಚಿತ (36) ಮೃತ ದುರ್ದೈವಿ. ಸುಚಿತಗೆ ಶುಕ್ರವಾರ ರಾತ್ರಿ...
ಮೇಲೆ ಬರಲಾಗದೆ ಇಡೀ ರಾತ್ರಿ ಬಾವಿಯಲ್ಲೇ ಈಜಿದ ಹಾವು
ಚಿಕ್ಕಮಗಳೂರು: ಬಾವಿಯೊಳಗೆ ಬಿದ್ದ ಹಾವೊಂದು ಇಡೀ ರಾತ್ರಿ ನೀರಿನಲ್ಲಿ ಈಜಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಚಕಮಕಿ ಗ್ರಾಮದ ಕೃಷ್ಣ ಭಟ್ ಎಂಬವರು ಮನೆ ಹಿಂದೆ ಇದ್ದ ಬಾವಿಯಲ್ಲಿ ಶುಕ್ರವಾರ ಸಂಜೆ ಏನೂ...
ಗಿರ್ಗಿಟ್ಲೆ ರೀತಿ ನಾಗಪ್ಪನನ್ನು ತಿರುಗಿಸಿ, ಕತ್ತಿಗೆ ಸುತ್ಕೊಂಡ ಕುಡುಕ
ಜೈಪುರ: ಮದ್ಯದ ನಶೆಯಿದ್ದ ಜನರು ಚಿತ್ರ ವಿಚಿತ್ರವಾಗಿ ವರ್ತಿಸುತ್ತಿರುತ್ತಾರೆ. ಆದರೆ ರಾಜಸ್ಥಾನದಲ್ಲೊಬ್ಬ ಕುಡುಕ ಮದ್ಯದ ನಶೆಯಲ್ಲಿ ನಾಗರ ಹಾವಿನೊಂದಿಗೆ ಸರಸಕ್ಕಿಳಿದಿದ್ದಾನೆ. ಹಾವಿನ ಮುಂದೆ ನಿಂತು ನಾನಾ, ನೀನಾ ನೋಡೇ ಬಿಡಣಾ ಎಂದು ನಾಗನಿಗೆ ಸವಾಲ್ ಹಾಕಿರುವ...
ಹಾವಿಗೆ ಕಿಸ್ ಕೊಡಲು ಹೋಗಿ ಆಸ್ಪತ್ರೆ ಸೇರಿದ
ಶಿವಮೊಗ್ಗ: ನಾಗರ ಹಾವಿಗೆ ಮುತ್ತು ಕೊಡಲು ಹೋದ ವ್ಯಕ್ತಿಯೊಬ್ಬ ಹಾವಿನಿಂದ ಕಚ್ಚಿಸಿ ಕೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜಿಲ್ಲೆಯ ಭದ್ರಾವತಿ ಪಟ್ಟಣದಲ್ಲಿ ನಡೆದಿದೆ. ಭದ್ರಾವತಿಯ ತಮ್ಮಣ್ಣ ಕ್ಯಾಂಪ್‍ನ ಸೋನು ಹಾವಿನಿಂದ ಕಚ್ಚಿಸಿ ಕೊಂಡು ಆಸ್ಪತ್ರೆಗೆ ಸೇರಿದ...
ಶಾಲೆಯ ಆವರಣದಲ್ಲಿ ಬಾಲಕನಿಗೆ ಕಚ್ಚಿತು ಹಾವು – ಐಸಿಯುನಲ್ಲಿ ವಿದ್ಯಾರ್ಥಿ
– 30 ದಿನದ ಒಳಗಡೆ 2ನೇ ಕೇಸ್ – ಕೇರಳದ ವಯನಾಡ್ ಸುಲ್ತಾನ್‍ಬತ್ತೇರಿಯಲ್ಲಿ ಘಟನೆ ತಿರುವನಂತಪುರ: ಕೆಲವೇ ದಿನಗಳ ಹಿಂದೆ ಶಾಲೆಯ ಕೊಠಡಿಯಲ್ಲೇ ವಿದ್ಯಾರ್ಥಿನಿಗೆ ಹಾವು ಕಚ್ಚಿ ಸಾವನ್ನಪ್ಪಿದ್ದ ಪ್ರಕರಣ ಮಾಸುವ ಮುನ್ನವೇ ಅದೇ ರೀತಿಯ...
ಸಿಎಂ ಕಾರ್ಯಕ್ರಮದ ವೇದಿಕೆಯಲ್ಲಿ ಕಾಣಿಸಿಕೊಂಡ ಹಾವು
ಹುಬ್ಬಳ್ಳಿ: ಸಿಎಂ ಯಡಿಯೂರಪ್ಪ ಹುಬ್ಬಳ್ಳಿಯಲ್ಲಿ ಪಾಲ್ಗೊಳ್ಳಲಿರುವ ಕಾರ್ಯಕ್ರಮದ ವೇದಿಕೆಯಲ್ಲಿ ಹಾವು ಪ್ರತ್ಯಕ್ಷವಾಗಿದೆ. ಹುಬ್ಬಳ್ಳಿ ನಗರದ ರಾಜ್ಯ ಹೆದ್ದಾರಿ-73ರ ಕಾಡಸಿದ್ದೇಶ್ವರ ಕಾಲೇಜಿನಿಂದ ತೋಳನಕೆರೆಯವರೆಗೆ ನಿರ್ಮಿಸಲಾಗಿರುವ ಟೆಂಡರ್ ಶ್ಯೂರ್ ರಸ್ತೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಸಂಜೆ 5 ಗಂಟೆಗೆ...
ಡಿಸಿಎಂ ಲಕ್ಷ್ಮಣ ಸವದಿ ನಿವಾಸದಲ್ಲಿ ಹಾವು ಪ್ರತ್ಯಕ್ಷ
ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ನಿವಾಸದಲ್ಲಿ ಹಾವು ಪ್ರತ್ಯಕ್ಷವಾಗಿದೆ. ಬೆಂಗಳೂರಿನ ಬಿಡಿಎ ಕಚೇರಿಯ ಪಕ್ಕದಲ್ಲಿ ಇರುವ ಲಕ್ಷ್ಮಣ ಸವದಿ ಅವರ ಸರ್ಕಾರಿ ನಿವಾಸದಲ್ಲಿ ನೀರಾವು ಪ್ರತ್ಯಕ್ಷವಾಗಿದೆ. ನಿವಾಸದ ಮುಂದೆ ಇರುವ ಕಾವೇರಿ...
Chikkaballapur11 months ago
ಚಿಕ್ಕಬಳ್ಳಾಪುರ: ಸ್ಕೂಟಿ ಹರಿಸಿದ ಸವಾರನ ಮೇಲೆ ನಾಗರಹಾವು ಅಟ್ಯಾಕ್ ಮಾಡಿದ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ. ನಗರದ ಎಪಿಎಂಸಿ ಮಾರುಕಟ್ಟೆ ಬಳಿ ಮೊಹ್ಮದ್ ಆಯಾತುಲ್ಲಾ ತಮ್ಮ ಸ್ಕೂಟಿಯಲ್ಲಿ ಹೋಗುತ್ತಿದ್ದರು. ಈ ವೇಳೆ ರಸ್ತೆ ದಾಟುತ್ತಿದ್ದ ಭಾರೀ...
ಮೈದಾನದಲ್ಲಿ ಹಾವು – ರಣಜಿ ಕ್ರಿಕೆಟ್ ಪಂದ್ಯ ವಿಳಂಬ
ಹೈದರಾಬಾದ್: ಅಂಧ್ರ ಪ್ರದೇಶದ ವಿಜಯವಾಡದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿಯ ಮೊದಲ ದಿನದ ಅಂಧ್ರ ಪ್ರದೇಶದ ಮತ್ತು ವಿದರ್ಭ ನಡುವಿನ ಪಂದ್ಯದಲ್ಲಿ ಮೈದಾನಕ್ಕೆ ಹಾವು ಬಂದ ಕಾರಣ ಆಟಕ್ಕೆ ವಿಳಂಬವಾಗಿದೆ. ಇಂದು ಅಂಧ್ರಪ್ರದೇಶ ಮತ್ತು ವಿದರ್ಭ ತಂಡದ...
ಹಾವು ಕಚ್ಚಿದ್ರೂ ಪಾಠ ಮುಂದುವರಿಕೆ – ಟೀಚರ್ ನಿರ್ಲಕ್ಷ್ಯಕ್ಕೆ ಬಾಲಕಿ ಬಲಿ
– ಆಸ್ಪತ್ರೆಗೆ ದಾಖಲಿಸದೆ ತರಗತಿ ಮುಂದುವರಿಸಿದ ಟೀಚರ್ – ದಾರಿ ಮಧ್ಯೆ ಪ್ರಾಣಬಿಟ್ಟ ಬಾಲಕಿ ತಿರುವನಂತಪುರಂ: ಹಾವು ಕಡಿತದಿಂದ ಬಾಲಕಿ ಪ್ರಾಣಬಿಟ್ಟ ಘಟನೆ ಕೇರಳದ ವಯನಾಡ್ ಜಿಲ್ಲೆಯ ಸುಲ್ತಾನ್ ಬತ್ತೇರಿಯಲ್ಲಿ ನಡೆದಿದೆ. ಶೆಹೆಲಾ ಶರ್ಲಿನ್(10) ಮೃತಪಟ್ಟ...
ಹಾವು ಕಚ್ಚಿದರೆ, ಕೂಡಲೇ ಈ ಟಿಪ್ಸ್ ಅನುಸರಿಸಿ ವ್ಯಕ್ತಿಯ ಪ್ರಾಣ ಉಳಿಸಿ | Quick Tip: Emergency Alternative Medicine For Snake Bites - Kannada BoldSky
9 hrs ago ಜನವರಿ 24ರ ಮೌನಿ ಅಮವಾಸ್ಯೆಯ ವಿಶೇಷತೆ ಏನು?
12 hrs ago ಚೀನಾ, ಇತರ ದೇಶಗಳಲ್ಲಿ ಹರಡುತ್ತಿದೆ ಕೋರ್ನೋವೈರಸ್ ಎಂಬ ಮಾರಕ ಕಾಯಿಲೆ
13 hrs ago ಹಗಲಿನಲ್ಲಿ ತೂಕಡಿಕೆ, ಆಲಸ್ಯ ಉಂಟಾಗುತ್ತಿದೆಯೇ? ಈ ಕಾರಣಗಳಿರಬಹುದು ನೋಡಿ
14 hrs ago ಬುಧವಾರದ ರಾಶಿಫಲ (22-01-2020)
| Updated: Thursday, April 20, 2017, 14:26 [IST]
ಹಿಂದೆ ಹಳ್ಳಿಗಳಲ್ಲಿ ವೈದ್ಯರು ಹಾಗೂ ಆಸ್ಪತ್ರೆಯ ಪ್ರಮಾಣ ತುಂಬಾ ಕಡಿಮೆಯಿತ್ತು. ಇಂತಹ ಕಠಿಣ ಸಮಯದಲ್ಲೂ ಯಾವುದಾದರೂ ವಿಷಜಂತುಗಳು ಕಚ್ಚಿದರೆ ಅದಕ್ಕೆ ಹಳ್ಳಿಯಲ್ಲೇ ಮದ್ದು ತಯಾರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆಯುರ್ವೇದಲ್ಲಿ ಸೂಚಿಸಿರುವಂತಹ ಕೆಲವೊಂದು ಮನೆಮದ್ದುಗಳು ವಿಷಕಾರಿ ಹಾವುಗಳ ಕಡಿತಕ್ಕೆ ತುಂಬಾ ಪರಿಣಾಮಕಾರಿಯಾಗಿದೆ. ಹಾವಿನ ಕನಸ್ಸು ಬಿದ್ದರೆ ಏನಂತ ಅರ್ಥ?
ಆದರೆ ಕೆಲವೊಂದು ಹಾವುಗಳ ವಿಷವು ಅಧಿಕವಾಗಿರುವ ಕಾರಣದಿಂದ ತಕ್ಷಣ ಸಾವು ಸಂಭವಿಸುತ್ತದೆ. ಯಾವ ಹಾವು ಕಚ್ಚಿದೆ ಎಂದು ಸರಿಯಾಗಿ ತಿಳಿದಿದ್ದರೆ ಈ ಮದ್ದನ್ನು ಬಳಸಬಹುದು. ಹಾವು ಕಡಿದಾಗ ಪ್ರಥಮ ಚಿಕಿತ್ಸೆ ಅಗತ್ಯವಾಗಿ ಬೇಕೇಬೇಕು. ಯಾವ ಚಿಕಿತ್ಸೆ ಮಾಡಬಹುದು ಎಂದು ಈ ಲೇಖನದ ಮೂಲಕ ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ... ಮುಂದೆ ಓದಿ
ಹಾವು ಕಚ್ಚಿದ ಸಂದರ್ಭದಲ್ಲಿ ಮೊದಲು ಮಾಡುವ ಕೆಲಸ
ಹಾವು ಕಚ್ಚಿದ ಸಂದರ್ಭದಲ್ಲಿ ಕಚ್ಚಿದ ಜಾಗಕ್ಕೆ ಯಾವುದಾದರೂ ಚಾಕುವಿಂದ ಸ್ವಲ್ಪ ಗಾಯವನ್ನು ದೊಡ್ಡದು ಮಾಡಿ ವಿಷವನ್ನು ಹೊಂದಿರುವ ರಕ್ತವನ್ನು ಹೊರಹಾಕಬೇಕು. ಇದರ ಬಳಿಕ ಪೊಟಾಶಿಯಂ ಪಾರಾಗ್ನೆಟ್ ಹುಡಿಯನ್ನು ಹಾಕಿಕೊಳ್ಳಿ.
ಹಿಂದಿನ ಕಾಲದಲ್ಲಿ ಹಾವು ಕಚ್ಚಿದಾಗ ಗಾಯಕ್ಕೆ ಬಾಯಿ ಹಾಕಿ ವಿಷವನ್ನು ಹೀರಿ ತೆಗೆಯಲಾಗುತ್ತಾ ಇತ್ತು. ಆದರೆ ವಿಷ ಹೀರುವವರಿಗೆ ಇದು ಅಪಾಯಕಾರಿ. ಬೆಟ್ಟ ಪ್ರದೇಶದಲ್ಲಿರುವ ಕೆಲವು ತಜ್ಞರು ಈಗಲೂ ಇದೇ ತಂತ್ರವನ್ನು ಅನುಸರಿಸುತ್ತಾರೆ.
5-8 ಇಂಚು ಮೇಲಕ್ಕೆ ಹಾಗೂ ಕೆಳಕ್ಕೆ ಬಟ್ಟೆಯಿಂದ ಬಲವಾಗಿ ಕಟ್ಟಿ
ಹಾವು ಕಡಿದ ಜಾಗದಿಂದ ವಿಷವನ್ನು ತೆಗೆದ ಬಳಿಕ ಕಡಿದ ಜಾಗಕ್ಕಿಂತ 5-8 ಇಂಚು ಮೇಲಕ್ಕೆ ಹಾಗೂ ಕೆಳಕ್ಕೆ ಬಟ್ಟೆ ಅಥವಾ ಹಗ್ಗದಿಂದ ದೇಹದ ಭಾಗವನ್ನು ಬಲವಾಗಿ ಕಟ್ಟಿ. ಇದರಿಂದ ವಿಷವು ದೇಹಕ್ಕೆ ಹರಡುವುದು ತಪ್ಪುತ್ತದೆ.
ಮನೆಯಲ್ಲೇ ತಯಾರಿಸಿದ ಅಪ್ಟಟ ತುಪ್ಪ
ಮನೆಯಲ್ಲೇ ತಯಾರಿಸಿದ ತುಪ್ಪ, ಬೆಣ್ಣೆ ಅಥವಾ ಫಿಟ್ಕರಿ/ ಅಲಮ್ ಹುಡಿಯನ್ನು ಹಾಕಿದರೆ ವಿಷದ ಪ್ರಭಾವವು ಕಡಿಮೆಯಾಗುವುದು. 50 ಗ್ರಾಂ ದೇಶೀಯ ತುಪ್ಪಕ್ಕೆ 2-3 ಗ್ರಾಂ ಫಿಟ್ಕರಿ ಹುಡಿಯನ್ನು ಬೆರೆಸಿ ಹಾವು ಕಡಿದ ಜಾಗಕ್ಕೆ ಹಚ್ಚಿಕೊಳ್ಳಿ.
ಅಶ್ವತ್ಥ ವೃಕ್ಷದ ಎಲೆಗಳು...
ಹಾವು ಕಡಿದಿರುವುದಕ್ಕೆ ಚಿಕಿತ್ಸೆ ನೀಡಲು ಅಶ್ವತ್ಥ ಮರವು ತುಂಬಾ ಪರಿಣಾಮಕಾರಿ. 40ರಿಂದ ಅಶ್ವತ್ಥ ವೃಕ್ಷದ ಎಲೆಗಳನ್ನು ತೆಗೆದುಕೊಂಡು ಒಂದರ ಹಿಂದೆ ಒಂದರಂತೆ ನಿಮ್ಮ ಎರಡೂ ಕಿವಿಗೂ ಇಟ್ಟುಕೊಳ್ಳಿ. ಎಲೆಯ ಕಾಂಡವನ್ನು ಹಾವು ಕಚ್ಚಿದ ಜಾಗಕ್ಕೆ ಇಟ್ಟುಬಿಡಿ. ಇದರಿಂದ ವಿಷದ ಪರಿಣಾಮವು ಕಡಿಮೆಯಾಗುವುದು.
ಆಹಾರದಲ್ಲಿ ಉಪ್ಪನ್ನು ಸೇರಿಸಬೇಡಿ
ಸಂಪೂರ್ಣವಾಗಿ ಚೇತರಿಸಿಕೊಳ್ಳುವ ತನಕ ಆಹಾರದಲ್ಲಿ ಉಪ್ಪನ್ನು ಸೇರಿಸಬೇಡಿ. ನಿರ್ಗುಂಡಿ ಹಸಿರು ಎಲೆಯನ್ನು ಹಾವು ಕಡಿದ ಜಾಗಕ್ಕೆ ಇಟ್ಟುಕೊಂಡರೆ ಅದರಿಂದ ಸೋಂಕು ಕಡಿಮೆಯಾಗುವುದು.
ಬೆಟೋನೈಟ್ ಮರಳು
ಈ ಮರಳು ದೇಹದಿಂದ ವಿಷಯವನ್ನು ತುಂಬಾ ಪರಿಣಾಮಕಾರಿಯಾಗಿ ತೆಗೆಯುತ್ತದೆ ಮತ್ತು ಕಚ್ಚಿದ ನೋವನ್ನು ಕಡಿಮೆ ಮಾಡುವುದು. ಎಕಿನೇಶಿಯಾದ ಹುಡಿ ಮತ್ತು ಮರಳನ್ನು ಸೇರಿಸಿ ಸ್ವಲ್ಪ ಪೇಸ್ಟ್ ರೀತಿ ಮಾಡಿಕೊಂಡು ಗಾಯಕ್ಕೆ ಹಚ್ಚಿಕೊಳ್ಳಿ. ಈ ಮರಳನ್ನು ತಿನ್ನುತ್ತಾ ಇದ್ದರೆ ಸಾಧ್ಯವಾದಷ್ಟು ನೀರು ಕುಡಿಯಿರಿ.
ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕರಿಬೇವಿನ ಎಲೆಗಳಿಂದ ಚಿಕಿತ್ಸೆ ಮಾಡಬಹುದು. ಯಾವುದೇ ಆಹಾರದ ರುಚಿಯನ್ನು ಹೆಚ್ಚಿಸುವ ಕರಿಬೇವಿನ ಗಂಜಿಯಿಂದ ವಿಷವನ್ನು ತೆಗೆಯಬಹುದು ಮತ್ತು ಹಾವು ಕಡಿತಕ್ಕೆ ಚಿಕಿತ್ಸೆ ನೀಡಬಹುದು.
ಎಚ್ಚರಿಕೆಯ ಸಲಹೆಗಳು
ಹಾವು ಕಚ್ಚಿದಂತಹ ಸಂದರ್ಭದಲ್ಲಿ ಆದಷ್ಟು ಬೇಗ ವೈದ್ಯಕೀಯ ನೆರವನ್ನು ಪಡೆಯಲು ಪ್ರಯತ್ನಿಸಿ. ಇದರಿಂದ ಪ್ರಾಣಾಪಾಯ ಕಡಿಮೆಯಾಗುವುದು. ಆದಷ್ಟು ಬೇಗನೆ ಹಾವು ಕಡಿದ ವ್ಯಕ್ತಿಗೆ ಆಂಟಿವಿನಿನ್ ನೀಡಬೇಕು. ಮೇಲೆ ಸೂಚಿಸಿದ ಚಿಕಿತ್ಸಾ ಕ್ರಮಗಳು ಪ್ರಥಮ ಚಿಕಿತ್ಸೆ ಮತ್ತು ಸ್ವಲ್ಪ ವಿಷವಿರುವ ಹಾವುಗಳು ಕಡಿದಾಗ ಬಳಸಿಕೊಳ್ಳಬಹುದು. ಹೆಚ್ಚು ವಿಷವಿರುವ ಹಾವುಗಳ ಕಡಿತಕ್ಕೆ ಅಲ್ಲ.
Snake bite sometimes very harmful and cause to death. It is depends upon the snake. Some snake has a strong poison and causes immediate death after bite. Snakes are present entire the world with thousands of different species and known as a dangerous creature. A quick and emergency first aid is very necessary in snake bite treatment.
ಸಂಪತ್ತಿನ ಅಸಮಾನತೆ ಹೆಚ್ಚಳ | Prajavani
ಸಂಪತ್ತಿನ ಅಸಮಾನತೆ ಹೆಚ್ಚಳ
ದಾವೋಸ್‌: ಭಾರತದಲ್ಲಿ ಸಂಪತ್ತಿನ ಅಸಮಾನ ಹಂಚಿಕೆ ಹೆಚ್ಚುತ್ತಿದ್ದು, ಕಳೆದ ವರ್ಷ ಸೃಷ್ಟಿಯಾದ ಸಂಪತ್ತಿನ ಬಹುಭಾಗವು (ಶೇ 73), ಶೇ 1ರಷ್ಟಿರುವ ಆಗರ್ಭ ಶ್ರೀಮಂತರ ಪಾಲಾಗಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.
ಇದೇ ಅವಧಿಯಲ್ಲಿ, ಒಟ್ಟು ಜನಸಂಖ್ಯೆಯಲ್ಲಿನ ಬಡವರು ಒಳಗೊಂಡ 67 ಕೋಟಿ ಜನರ ಸಂಪತ್ತು ಕೇವಲ 1ರಷ್ಟು ಮಾತ್ರ ಹೆಚ್ಚಳಗೊಂಡಿದೆ ಎಂದು ಅಂತರ ರಾಷ್ಟ್ರೀಯ ಹಕ್ಕುಗಳ ಸಂಘಟನೆ ಆಕ್ಸ್‌ಫಮ್‌ ನಡೆಸಿದ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.
ಇಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ ಸಮಾವೇಶ ಆರಂಭಕ್ಕೂ ಮುನ್ನ ಈ ಸಮೀಕ್ಷೆ ಬಿಡುಗಡೆ ಮಾಡಲಾಗಿದೆ.
ಈ ಸಂಪತ್ತಿನ ಅಸಮಾನತೆಯ ಜಾಗತಿಕ ಚಿತ್ರಣವು ಹೆಚ್ಚು ಕಳವಳಕಾರಿಯಾಗಿದೆ. ವಿಶ್ವದಾದ್ಯಂತ ಸೃಷ್ಟಿಯಾದ ಸಂಪತ್ತಿನ ಶೇ 82ರಷ್ಟು ಪ್ರಮಾಣವು ಕೇವಲ ಶೇ 1ರಷ್ಟು ಜನರಲ್ಲಿ ಹಂಚಿಕೆಯಾಗಿದೆ. ಜಗತ್ತಿನ ಒಟ್ಟು ಜನಸಂಖ್ಯೆಯ ಅರ್ಧದಷ್ಟಿರುವ ಅತ್ಯಂತ ಬಡವರ (370 ಕೋಟಿ) ಸಂಪತ್ತಿನಲ್ಲಿ ಯಾವುದೇ ಹೆಚ್ಚಳ ದಾಖಲಾಗಿಲ್ಲ.
ಪ್ರತಿ ವರ್ಷ ನಡೆಸುವ ಆಕ್ಸ್‌ಫಮ್‌ ಸಮೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು. ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಮಾವೇಶದಲ್ಲಿ ವಿವರವಾಗಿ ಚರ್ಚಿಸಲಾಗುವುದು.
ಭಾರತದ ಒಟ್ಟು ಸಂಪತ್ತಿನ ಶೇ 58ರಷ್ಟು, ಶೇ 1ರಷ್ಟಿರುವ ಶ್ರೀಮಂತರಿಗೆ ಸೇರಿದೆ ಎಂದು ಕಳೆದ ವರ್ಷದ ಸಮೀಕ್ಷೆಯಲ್ಲಿ ತಿಳಿಸಲಾಗಿತ್ತು. ಇದು ಜಾಗತಿಕ ಮಟ್ಟಕ್ಕಿಂತ (ಶೇ 50) ಹೆಚ್ಚಿಗೆ ಇತ್ತು. 2017ರಲ್ಲಿ ಶೇ 1ರಷ್ಟಿರುವ ಸಿರಿವಂತರ ಸಂಪತ್ತು ₹ 20.9 ಲಕ್ಷ ಕೋಟಿಗಿಂತ ಹೆಚ್ಚಾಗಿದೆ.
ಜಾಗತಿಕವಾಗಿ 2017ರಲ್ಲಿ ಕೋಟ್ಯಧಿಪತಿಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಳಗೊಂಡಿದೆ. ಪ್ರತಿ ಎರಡು ದಿನಗಳಿಗೆ ಒಬ್ಬ ಕೋಟ್ಯಧಿಪತಿ ಹೊಸದಾಗಿ ಸೇರ್ಪಡೆಯಾಗಿದ್ದಾನೆ. 2010ರಿಂದೀಚೆಗೆ ಕೋಟ್ಯಧಿಪತಿಗಳ ಸಂಪತ್ತು ಪ್ರತಿ ವರ್ಷ ಸರಾಸರಿ ಶೇ 13ರಷ್ಟು ಏರಿಕೆ ಕಾಣುತ್ತಿದೆ. ಇದು ಸಾಮಾನ್ಯ ಕೆಲಸಗಾರರ ವೇತನಕ್ಕಿಂತ ಆರು ಪಟ್ಟುಗಳಷ್ಟು ವೇಗವಾಗಿ ಹೆಚ್ಚಳ ದಾಖಲಿಸಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.
ನೂರು ಕನಸು: ನಾವು ಮರೆತ ಪ್ರತಿಜ್ಞೆ...
ನಾವು ಮರೆತ ಪ್ರತಿಜ್ಞೆ...
India is my country. All Indians are my brothers and sisters. I Love my country. I am proud of its rich and varied culture. I shall always strive to be worthy of it. I shall love and respect my parents, teachers and elders. To my country and my people I pledge my devotion. In their well being and prosperity alone lies my happiness.
I solemnly pledge to work with dedication to preserve and strengthen the freedom and integrity of the nation. I further affirm that I shall never resort to violence and that all differences and disputes relating to religion, language, region or other political or economic grievances should be settled by peaceful and constitutional means.