text stringlengths 0 61.5k |
|---|
ಅತ್ಯಂತ ಅಪಾಯಕಾರಿ ರೂಪಾಂತರಿ ತಳಿ |
ಲಾಂಬ್ಡಾ ರೂಪಾಂತರಿಯ ಸಂತತಿಯನ್ನು ಜಾಗತಿಕ ವೇರಿಯಂಟ್ ಆಫ್ ಇಂಟರೆಸ್ಟ್ ಎಂದು ವಿಶ್ವ ಆರೋಗ್ಯ ಸಂಸ್ಥೆ ಸೋಮವಾರ ವರ್ಗೀಕರಿಸಿದೆ. ಮೊಟ್ಟ ಮೊದಲ ಬಾರಿಗೆ ಪೆರುವಿನಲ್ಲಿ ಈ ಲ್ಯಾಂಬ್ಡಾ ರೂಪಾಂತರಿ ವೈರಸ್ ನ್ನು ಗುರುತಿಸಲಾಗಿದೆ ಎಂದು ಸಾಪ್ತಾಹಿಕ ಸಭೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿತ್ತು. ಪೆರುವಿನಲ್ಲಿ ಲ್ಯಾಂಬ್ಡಾ ಪ್ರಕರಣ ಮಿತಿಮೀರಿದ್ದು, ಏಪ್ರಿಲ್ ತಿಂಗಳಿನಿಂದ ವರದಿಯಾದ ಪ್ರಕರಣಗಳಲ್ಲಿ 81 ಪ್ರತಿಶತ ಪ್ರಕರಣಗಳು ಈ ಹೊಸ ರೂಪಾಂತರದೊಂದಿಗೆ ಸಂಬಂಧ ಹೊಂದಿದೆ ಎನ್ನಲಾಗಿದೆ. |
ಇದನ್ನೂ ಓದಿ: 2 ಡೋಸ್ ಲಸಿಕೆ ಡೆಲ್ಟಾ ರೂಪಾಂತರಿಗೆ 'ಹೆಚ್ಚು ಪರಿಣಾಮಕಾರಿ', ಆಸ್ಪತ್ರೆ ದಾಖಲಾತಿ ಕಡಿಮೆಯಾಗಿಸುತ್ತದೆ: ಬ್ರಿಟನ್ ವಿಶ್ಲೇಷಣೆ |
ಚಿಲಿ ದೇಶದಲ್ಲಿ ಕಳೆದ 60 ದಿನಗಳಲ್ಲಿ ಶೇಕಡಾ 32ರಷ್ಟು ಲ್ಯಾಂಬ್ಡಾ ರೂಪಾಂತರಿ ಪ್ರಕರಣಗಳು ವರದಿಯಾಗಿದೆ. ಚಿಲಿಯಲ್ಲಿ, ಕಳೆದ 60 ದಿನಗಳಲ್ಲಿ ಸಲ್ಲಿಸಿದ ಎಲ್ಲಾ ಅನುಕ್ರಮಗಳಲ್ಲಿ ಇದು ಶೇಕಡಾ 32 ರಷ್ಟು ಲಾಂಬ್ಜಾ ರೂಪಾಂತರಿ ಸೋಂಕು ಪ್ರಕರಣಗಳು ಪತ್ತೆಯಾಗಿದೆ ಮತ್ತು ಬ್ರೆಜಿಲ್‌ನಲ್ಲಿ ಮೊದಲು ಗುರುತಿಸಲ್ಪಟ್ಟ ಗಾಮಾ ರೂಪಾಂತರದಿಂದ ಮಾತ್ರ ಅದನ್ನು ಮೀರಿಸಲಾಗಿದೆ. ಇನ್ನು ಅರ್ಜೆಂಟೀನಾ ಮತ್ತು ಈಕ್ವೆಡಾರ್‌ನಂತಹ ಇತರ ದೇಶಗಳು ಸಹ ಹೊಸ ರೂಪಾಂತರದ ಹರಡುವಿಕೆಯನ್ನು ಹೆಚ್ಚಿಸಿವೆ ಎಂದು ವರದಿ ಮಾಡಿದೆ. ಈ ಲ್ಯಾಂಬ್ಡಾ ವೈರಸ್ ಮೊದಲ ಬಾರಿಗೆ ಬ್ರೆಜಿಲ್‌ನಲ್ಲಿ ಕಾಣಿಸಿಕೊಂಡ ಗಾಮಾ ರೂಪಾಂತರಿಯ ವರ್ಗೀಕರಣವಾಗಿದೆ. ಅರ್ಜೆಂಟಿನಾ ಹಾಗೂ ಈಕ್ವೆಡಾರ್ನಲ್ಲೂ ಹೊಸ ರೂಪಾಂತರಿಯ ಪತ್ತೆಯಾಗಿದೆ. |
ಲ್ಯಾಂಬ್ಡಾ ರೂಪಾಂತರಿಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನ ಕಲೆಹಾಕಲಾಗಿಲ್ಲ. ರೂಪಾಂತರಿಯ ಬಗ್ಗೆ ಹೆಚ್ಚಿನ ಅಧ್ಯಯನಗಳು ಮುಂದುವರೆದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ. |
ರೂಪಾಂತರಿ ತಳಿ ವೈರಸ್ ಗಳಿಗೆ ನಾಮಕರಣ |
ಇನ್ನು ಜಗತ್ತಿನ ವಿವಿಧೆಡೆ ಪತ್ತೆಯಾದ ರೂಪಾಂತರಿ ತಳಿ ವೈರಸ್ ಗಳಿಗೆ ಈ ಹಿಂದೆ ವಿಶ್ವ ಆರೋಗ್ಯ ಸಂಸ್ಥೆ ಹೆಸರಿಸಿತ್ತು. ಭಾರತದಲ್ಲಿ ಮೊದಲು ಗುರುತಿಸಲ್ಪಟ್ಟ ಕೋವಿಡ್-19 ರ B.1.617.1 ಮತ್ತು B.1.617.2 ರೂಪಾಂತರ ತಳಿಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ನಾಮಕರಣ ಮಾಡಿದ್ದು, 'ಕಪ್ಪಾ' (kappa) ಮತ್ತು 'ಡೆಲ್ಟಾ' (delta) ಎಂದು ಹೆಸರಿಸಿದೆ. ಗ್ರೀಕ್ ಅಕ್ಷರಗಳನ್ನು ಬಳಸಿಕೊಂಡು ಕ್ರಮವಾಗಿ B.1.617.1ಗೆ ಕಪ್ಪಾ'(kappa) ಮತ್ತು B.1.617.2 ಗೆ 'ಡೆಲ್ಟಾ' (delta) ಎಂದು ಹೆಸರಿಸಲಾಗಿದೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಓ) ಘೋಷಣೆ ಮಾಡಿತ್ತು. ಭಾರತ ಮಾತ್ರವಲ್ಲದೇ ಆಫ್ರಿಕಾದಲ್ಲಿ ಮೊದಲು ಪತ್ತೆಯಾದ ಕೋವಿಡ್ ತಳಿಗೆ ಬೀಟಾ, ಬ್ರಿಟನ್ ನಲ್ಲಿ ಪತ್ತೆಯಾದ ತಳಿಗೆ ಆಲ್ಫಾ, ಬ್ರೆಜಿಲ್ ನಲ್ಲಿ ಪತ್ತೆಯಾದ ವೈರಸ್ ತಳಿಗಳಿಗೆ ಗಮ್ಮಾ ಮತ್ತು ಝೀಟಾ, ಅಮೆರಿಕದಲ್ಲಿ ಪತ್ತೆಯಾದ ವೈರಸ್ ತಳಿಗಳಿಗೆ ಎಪ್ಸಿಲಾನ್ ಮತ್ತು ಲೋಟಾ, ಫಿಲಿಫೈನ್ಸ್ ನಲ್ಲಿ ಪತ್ತೆಯಾದ ತಳಿಗೆ ಥೇಟಾ ಎಂದು ನಾಮಕರಣ ಮಾಡಿತ್ತು. |
ಇನ್ನೂ ನಿಗೂಢವಾಗಿದೆ ಈ ಯುವತಿಯರ ಸಾವಿನ ರಹಸ್ಯ | KANNADIGA WORLD |
Home ಕನ್ನಡ ವಾರ್ತೆಗಳು ರಾಷ್ಟ್ರೀಯ ಇನ್ನೂ ನಿಗೂಢವಾಗಿದೆ ಈ ಯುವತಿಯರ ಸಾವಿನ ರಹಸ್ಯ |
ಇನ್ನೂ ನಿಗೂಢವಾಗಿದೆ ಈ ಯುವತಿಯರ ಸಾವಿನ ರಹಸ್ಯ |
Posted By: Karnataka News BureauPosted date: July 15, 2015 In: ರಾಷ್ಟ್ರೀಯ |
ಕೇರಳ: ಜುಲೈ 10 ರಂದು ಕೇರಳದ ಕೊನ್ನಿಯಿಂದ ಕಾಣೆಯಾಗಿದ್ದ ಮೂವರು ಯುವತಿಯರ ಪೈಕಿ ಇಬ್ಬರು ಪಾಲಕ್ಕಾಡ್ ಸಮೀಪ ರೈಲ್ವೇ ಹಳಿ ಮೇಲೆ ಶವವಾಗಿ ಪತ್ತೆಯಾಗಿದ್ದರೆ ಮತ್ತೊಬ್ಬಾಕೆ ತೀವ್ರವಾಗಿ ಗಾಯಗೊಂಡು ತ್ರಿಶೂರಿನ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. |
ಯುವತಿಯರ ಸಾವಿನ ಕಾರಣ ಇನ್ನೂ ನಿಗೂಢವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿ ಚೇತರಿಸಿಕೊಂಡ ಬಳಿಕವಷ್ಟೇ ಸ್ಪಷ್ಟ ಕಾರಣ ತಿಳಿಯಲಿದೆ ಎನ್ನಲಾಗಿದೆ. ಜುಲೈ 10 ರಂದು ಅತಿರಾ, ರಾಜಿ ಹಾಗೂ ಆರ್ಯ ಎಂಬ ಈ ಮೂವರು ಯುವತಿಯರು ಕಾಣೆಯಾಗಿದ್ದರು. ಇವರುಗಳ ಶವದ ಬಳಿ ದೊರೆತ ಬ್ಯಾಗಿನಲ್ಲಿ ಬೆಂಗಳೂರು- ನಾಗರಕೋಯಿಲ್ ಎಕ್ಸ್ ಪ್ರೆಸ್ ರೈಲಿನ ಟಿಕೇಟುಗಳು ದೊರೆತಿವೆ. ಅಲ್ಲದೇ ಬೆಂಗಳೂರಿಗೆ ತೆರಳಿದ್ದ ಇವರುಗಳು ಲಾಲ್ ಬಾಗ್ ಗೂ ಭೇಟಿ ನೀಡಿರುವ ಮಾಹಿತಿ ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ. |
ಪಕ್ಕದ ಮನೆಯವರೊಬ್ಬರ ಐಡೆಂಟಿಟಿ ಕಾರ್ಡ್ ಬಳಸಿ ಈ ಯುವತಿಯರು ಸಿಮ್ ಕಾರ್ಡ್ ಪಡೆದಿರುವುದೂ ತನಿಖೆ ವೇಳೆ ಬಯಲಾಗಿದೆ. ತಮ್ಮ ಐಡೆಂಟಿಟಿ ಕಾರ್ಡ್ ಬಳಸಿಕೊಂಡಿರುವ ಸಂಗತಿ ಪಕ್ಕದ ಮನೆಯಾಕೆಗೆ ಪೊಲೀಸರು ಕರೆ ಮಾಡಿದ ಬಳಿಕವಷ್ಟೇ ಗೊತ್ತಾಗಿದೆ. ಯಾವ ಕಾರಣಕ್ಕಾಗಿ ಇವರುಗಳು ಬೆಂಗಳೂರಿಗೆ ತೆರಳಿದ್ದರು. ಬಳಿಕ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದು ಏಕೆ ಎಂಬ ಪ್ರಶ್ನೆ ಪೊಲೀಸರಲ್ಲಿ ಈಗ ಮೂಡಿದೆ. ಅತಿರಾ ಹಾಗೂ ರಾಜಿ ಸಾವನ್ನಪ್ಪಿದ್ದರೆ, ಆರ್ಯ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದಾಳೆಂದು ಹೇಳಲಾಗಿದೆ. |
ಶೋಷಿತರ ಸ್ವಾಭಿಮಾನದ ಹಾಡು ಹಾಡಿದ ಕವಿಗಳಿಗೆ ವಿದಾಯ! | Pratidhvani |
ಶೋಷಿತರ ಸ್ವಾಭಿಮಾನದ ಹಾಡು ಹಾಡಿದ ಕವಿಗಳಿಗೆ ವಿದಾಯ! |
'ತುಳಿತಕ್ಕೊಳಗಾದವರ ಸ್ವಾಭಿಮಾನದ ಹಾಡು' ಎಂದೇ ಗುರುತಿಸಿಕೊಂಡಿದ್ದ ಕವಿ ಡಾ ಸಿದ್ದಲಿಂಗಯ್ಯ ತಮ್ಮ ಸ್ವಾಭಿಮಾನದ ಹಾಡುಗಳನ್ನು ನಿಲ್ಲಿಸಿ, ನಿರ್ಗಮಿಸಿದ್ದಾರೆ. |
ಸುರಿಸುಮಾರು ಅರ್ಧ ಶತಮಾನ ಕಾಲ ನಾಡಿನ ಉದ್ದಗಲಕ್ಕೆ ಶೋಷಿತ ಸಮುದಾಯಗಳ ಸ್ವಾಭಿಮಾನದ ಹಾಡಾಗಿ, ಪ್ರತಿ ಹೋರಾಟ, ಪ್ರತಿಭಟನೆ, ಧರಣಿ, ಸತ್ಯಾಗ್ರಹಗಳಿಗೆ ಕೆಚ್ಚು ಕೊಟ್ಟ ಹಾಡು, ಘೋಷಣೆಗಳ ಕವಿ ಸಿದ್ದಲಿಂಗಯ್ಯ. ಹೀಗೆ ಹೇಳಿದರೆ, ಮೇಲ್ನೋಟಕ್ಕೆ ವಿನಯ ಮತ್ತು ದೈನ್ಯದ ಸಾಕಾರಮೂರ್ತಿಯಂತಿದ್ದ, ಆಳದಲ್ಲಿ ಮಹಾತುಂಟತನ ಮತ್ತು ಚಿಮ್ಮುವ ಜ್ವಾಲಾಮುಖಿಯಂಥ ಪ್ರತಿಭಟನೆಯ, ಆಕ್ರೋಶವನ್ನು ಬಚ್ಚಿಟ್ಟುಕೊಂಡಿದ್ದ ಸಿದ್ದಲಿಂಗಯ್ಯ ಎಂಬ ಕವಿಯ ಕುರಿತು ಅರ್ಧ ಸತ್ಯವನ್ನು ಆಡಿದಂತೆಯೇ ಸರಿ. |
"ಜಗದ ಗೊಂದಲ ಬೇಡ ನಿನಗೆ, ಎದೆಯ ಹಾಡು ನೀನು ನನಗೆ.. ಗೆಳತಿ, ಓ.. ಗೆಳತಿ.." ಎಂದು ಹಾಡುತ್ತಲೇ "ಮೇಲು ಕೀಳಿನ ಬೇಲಿ ಜಿಗಿದು, ಪ್ರೇಮಲೋಕದಿ ನಿನ್ನ ಬಿಗಿದು,.." ಪ್ರೇಮಕಾವ್ಯದಲ್ಲೂ ಸಾಮಾಜಿಕ ಅಸಮಾನತೆಯ ರಾಗ ಬೆಸೆದ ಕವಿ ಸಿದ್ದಲಿಂಗಯ್ಯ, "ದೊಡ್ಡ ಗೌಡರ ಬಾಗಿಲಿಗೆ, ನಮ್ಮ ಮೂಳೆಯ ತೋರಣ,.. ಅವರ ತೋಟದ ತೆಂಗಿನಲ್ಲಿ ನಮ್ಮ ರಕ್ತದ ಎಳನೀರು, ಅವರ ಅಮಲಿನ ಗುಂಗಿನಲ್ಲಿ ಕೂಲಿ ಹೆಣ್ಣಿನ ಕಣ್ಣೀರು.." ಎಂದು ದಮನದ ವಿರುದ್ಧದ ಅಸಹಾಯಕ ಆಕ್ರೋಶಕ್ಕೆ ಕಾವ್ಯದ ದನಿ ಕೊಟ್ಟವರು ಕೂಡ. |
1975ರಲ್ಲಿ 'ಹೊಲೆಮಾದಿಗರ ಹಾಡು'ವಿನ ಮೂಲಕ ಕನ್ನಡ ಸಾಹಿತ್ಯದ ಶಿಷ್ಟಾಚಾರದ ದನಿಗೆ ದಲಿತ ಕ್ರಾಂತಿಯ ಗಡಸುತನ ಕೊಟ್ಟ ಸಿದ್ದಲಿಂಗಯ್ಯ, ಕವಿತೆ ಮತ್ತು ತಮ್ಮ ವೈಚಾರಿಕ ಬರಹಗಳ ಮೂಲಕವಷ್ಟೇ ಅಲ್ಲದೆ, 'ಊರುಕೇರಿ' ಎಂಬ ತಮ್ಮ ಆತ್ಮಕಥನದ ಮೂಲಕವೂ ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಲೋಕ ಮತ್ತು ದಲಿತ ಜಗತ್ತಿನ ಸೀಮೆಗಳನ್ನು ವಿಸ್ತರಿಸಿದವರು. ಚಿಂತನ ಡಿ ಆರ್ ನಾಗರಾಜ್ ಅವರು ಗುರುತಿಸುವಂತೆ 'ದಲಿತ ಆದಿಕವಿ'ಯಾಗಿ ದಲಿತ ಮತ್ತು ಶೋಷಿತ ಸಮುದಾಯಗಳು ನೋವು ಮತ್ತು ಹತಾಶೆಗೆ, ಆಕ್ರೋಶ ಮತ್ತು ಆಗ್ರಹಕ್ಕೆ ದನಿಯಾದವರು. 'ಹೊಲೆಮಾದಿಗರ ಹಾಡು' ಸಂಕಲನದಿಂದ ಆರಂಭವಾಗಿ, 'ಮೆರವಣಿಗೆ', 'ಸಾವಿರಾರು ನದಿಗಳು', 'ಕಪ್ಪು ಕಾಡಿನ ಹಾಡು', ಹಾಗೂ 'ಊರುಕೇರಿ' ಭಾಗ-1 ಮತ್ತು ಭಾಗ-2 ಸೇರಿದಂತೆ ಇತ್ತೀಚಿನ ತಮ್ಮ ಬರಹಗಳವರೆಗೆ ಸಿದ್ದಲಿಂಗಯ್ಯ ಅವರ ಬರಹ ಮತ್ತು ಬದುಕು ಕೇವಲ ಗಡಿ-ಸೀಮೆಗಳನ್ನು ದಾಟಿ ಜಗತ್ತಿನ ಮೂಲೆಮೂಲೆಯ ಶೋಷಿತ ಜನಾಂಗಗಳಿಗೆ ಹೊಸ ಪ್ರೇರಣೆಯಾಗಿವೆ. |
"ಒಂದು ಜನಾಂಗವನ್ನು ಎರಡು ರೀತಿಗಳಲ್ಲಿ ಕಟ್ಟಲು ಸಾಧ್ಯ… ಒಂದು ರಾಜಕೀಯ ಸಂಕಲ್ಪದ ಮೂಲಕ, ಮತ್ತೊಂದು ಸಾಹಿತ್ಯದ ಪ್ರತಿಭಾ ಸಂಕಲ್ಪದ ಮೂಲಕ. .. ರಾಜಕೀಯ ಸಂಕಲ್ಪದ ಮೂಲಕ ನಿರ್ಮಾಣವಾದ ಜನಾಂಗ ತನಗೆ ಅಗತ್ಯವಿರುವ ಸಾಂಸ್ಕೃತಿಕ ರೂಪಗಳನ್ನು ಸೃಷ್ಟಿಸಿಕೊಳ್ಳುತ್ತದೆ. ಹಾಗೂ ಸಾಹಿತ್ಯ ಸಂಕಲ್ಪ ಕೂಡ ಸಾಧ್ಯವಿರುವ ರಾಜಕೀಯ ಕ್ರಿಯೆಯ ಮಾದರಿಗಳನ್ನು ಕಟ್ಟಿಕೊಳ್ಳುತ್ತದೆ.." ಎಂದು ಡಿ ಆರ್ ನಾಗರಾಜ್ ಅವರು ಸಿದ್ದಲಿಂಗಯ್ಯ ಕಾವ್ಯದ ಕುರಿತು ಆಡಿದ ಮಾತುಗಳು ಕಳೆದ 45 ವರ್ಷಗಳಲ್ಲಿ ಹಲವು ಬಗೆಯಲ್ಲಿ ಮತ್ತೆ ಮತ್ತೆ ನಿರೂಪಿತವಾಗಿವೆ. |
ಏಕೆಂದರೆ; ಸಿದ್ದಲಿಂಗಯ್ಯ ಅವರ ಕಾವ್ಯ ಎಂಬುದು ಸಾಹಿತ್ಯ ವಲಯ ಗುರುತಿಸುವಂತೆ ಭಾರತೀಯ ದಲಿತ ಸಾಹಿತ್ಯದ ಪ್ರಮುಖ ದನಿಯಾಗಿ, ದಲಿತ ಸಂವೇದನೆಯ ಹರಿವಾಗಿ ಮಾತ್ರ ಉಳಿಯಲಿಲ್ಲ; ಬದಲಾಗಿ, ಆ ಕಾವ್ಯ ದಲಿತರ ನಿತ್ಯ ಗೋಳು ಮತ್ತು ಸಂಭ್ರಮದ ಹಾಡಾಗಿ ಹರಿಯಿತು. ಕರ್ನಾಟಕದ ಮಟ್ಟಿಗಂತೂ ದಲಿತ ಕವಿಯ ಚೊಚ್ಚಲ ಕವಿತೆಗಳ ಸಂಕಲನ 'ಹೊಲೆಮಾದಿಗರ ಹಾಡಿ'ನೊಂದಿಗೇ ದಲಿತ ಹೋರಾಟದ ಹಾಡು ಕೂಡ ಮೊಳಗಿತು. ಅಂಬೇಡ್ಕರ್, ಲೋಹಿಯಾ, ಬುದಧ ಮತ್ತು ಬಸವರಾಗಿಯಾಗಿ ಅಷ್ಟರಲ್ಲಾಗಲೇ ಹೊತ್ತಿಸಿದ್ದ ಅರಿವಿನ, ಸಮಾನತೆಯ, ಹಕ್ಕೊತ್ತಾಯದ ಕಿಡಿಗಳಿಗೆ 'ಹೊಲೆಮಾದಿಗರ ಹಾಡು', ಸೊಲ್ಲಾಗಿ ತಿದಿಯೊತ್ತಿತು. ದಲಿತ ಮತ್ತು ಬಂಡಾಯದ ಹೋರಾಟ, ರೈತ ಹೋರಾಟಗಳಲ್ಲಿ ಕವಿಯ ಹಾಡುಗಳೇ ಕ್ರಾಂತಿಗೀತೆಗಳಾದವು. |
ಕರೋನಾ ಸೋಂಕಿಗೆ ಕವಿ ಡಾ. ಸಿದ್ದಲಿಂಗಯ್ಯ ಬಲಿ |
ಆಗ ತಾನೇ ಶತಮಾನಗಳ ಶೋಷಣೆಯ ವಿರುದ್ಧ ದನಿ ಎತ್ತಲು ಕಲಿಯತೊಡಗಿದ್ದ ಶೋಷಿತರ ಪಾಲಿಗೆ ಕವಿಯ ಹಾಡೇ ಹಾದಿಯ ತೋರಿತು. ದಲಿತ ಎಚ್ಚರದ ಜೊತೆಗೆ ಎಚ್ಚೆತ್ತ ಪ್ರಜ್ಞೆಗೆ ಸೂಕ್ತ ಭಾಷೆಯನ್ನು ಕಟ್ಟಿಕೊಟ್ಟದ್ದು ಕವಿ ಹಾಡು. ಹಾಗಾಗಿಯೇ ನಾಲ್ಕೂವರೆ ದಶಕಗಳ ಬಳಿಕವೂ 'ಯಾರಿಗೆ ಬಂತು, ಎಲ್ಲಿಗೇ ಬಂತು ನಲವತ್ತೇಳರ ಸ್ವಾತಂತ್ರ್ಯ', 'ನಿನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು, ಕಪ್ಪು ಮುಖ, ಬೆಳ್ಳಿ ಗಡ್ಡ, ಉರಿಯುತ್ತಿರುವ ಕಣ್ಣುಗಳು, ಹಗಲು ರಾತ್ರಿಗಳನು ಸೀಳಿ ನಿದ್ದೆಯನ್ನು ಒದ್ದರು..', 'ಇಕ್ರಲಾ, ಒದೀರ್ಲಾ, ಈ ನನ್ನ ಮಕ್ಕಳ ಚರ್ಮ ಎಬ್ರಲಾ..', ಮುಂತಾದ ಅವರ ಹಾಡುಗಳು ಇಂದಿಗೂ ಬೀದಿಬೀದಿಯ ಹೋರಾಟಗಳಲ್ಲಿ ಅನ್ಯಾಯ ಮತ್ತು ದಬ್ಬಾಳಿಕೆಯ ವಿರುದ್ಧ ಆಕ್ರೋಶದ ದನಿಯಾಗಿ ಮೊಳಗುತ್ತಲೇ ಇವೆ. |
ಅಂದರೆ; ಸಿದ್ದಲಿಂಗಯ್ಯ ಕವಿಯಾಗಿ, ಚಿಂತಕರಾಗಿ, ಉಪನ್ಯಾಸಕರಾಗಿ, ಹೋರಾಟಗಾರರಾಗಿ, ವಿಧಾನಪರಿಷತ್ ಸದಸ್ಯರಾಗಿ ವ್ಯಕ್ತಿಗತ ನೆಲೆಯಲ್ಲಿ ಎಷ್ಟೆಲ್ಲಾ ಸಾಧನೆ ಮಾಡಿದ್ದಾರೆ, ತಾವೇ ಸಿಡಿದೆದ್ದ ಶೋಷಿತ ವ್ಯವಸ್ಥೆಯಲ್ಲಿ ಎಷ್ಟು ಬದಲಾವಣೆ ತಂದಿದ್ದಾರೆ ಎಂಬುದು ಒಂದು ಕಡೆಯಾದರೆ, ಅವರನ್ನೂ ಮೀರಿ ಬೆಳೆದ ಅವರ ಹಾಡು, ಕಾವ್ಯ, ಚಿಂತನೆಗಳು, ಹೋರಾಟಕ್ಕೆ ನೀಡಿದ ಪ್ರೇರಣೆ, ಸ್ಫೂರ್ತಿಗಳು ಇಡೀ ವ್ಯವಸ್ಥೆಯ ಬದಲಾವಣೆಯ ವೇಗೋತ್ಕರ್ಷವಾಗಿ ಹಬ್ಬಿರುವುದು ಮತ್ತೊಂದು ಮಜಲು. |
ಎಂಭತ್ತರ ದಶಕದ ಹೊತ್ತಿಗೆ ದಲಿತ ಚಳವಳಿಯ ದನಿಯಾದ ಕವಿಗಳ ಹಾಡುಗಳು ಒಂದು ಕಡೆ ಹೋರಾಟದ ಕಿಚ್ಚನ್ನು ಹಬ್ಬಿಸುತ್ತಿರುವಾಗಲೇ, ದಲಿತ ಸಮಾನತೆ, ದಲಿತ ಹಕ್ಕುಗಳು, ದಲಿತ ಅವಕಾಶಗಳ ಬೇಡಿಕೆಗಳು ಹೋರಾಟದ ಹಕ್ಕೊತ್ತಾಯಗಳಾಗಿರುವಾಗಲೇ ಹಾಡುಗಳನ್ನು ಹಡೆದ ಕವಿ ವಿಧಾನಪರಿಷತ್ತಿನ ಸದಸ್ಯರಾಗಿ ಅಧಿಕಾರದ ಮೊಗಸಾಲೆಗೆ ಕಾಲಿಟ್ಟಿದ್ದರು! ಅಲ್ಲಿಯೂ ಅವರು ಅಜಲು ಪದ್ಧತಿಯಂತಹ ಹೀನಾಯ ದಲಿತ ಶೋಷಣೆಯ ಪದ್ಧತಿಗಳು, ಆಚರಣೆಗಳ ವಿರುದ್ಧ ಸಮರ್ಥವಾಗಿ ಹೋರಾಡಿದರು ಎಂಬುದು ತಳ್ಳಿಹಾಕಲಾಗದ ಸಂಗತಿ. ಆದರೆ, ಅದೇ ಹೊತ್ತಿಗೆ ರಾಜಕೀಯ ಅಧಿಕಾರದ ಮೆಟ್ಟಿಲೇರುತ್ತಲೇ ಕವಿಯ ಹೋರಾಟ ಮತ್ತು ದಲಿತ ಚಳವಳಿಯ ನಾಯಕತ್ವದ ಬದ್ಧತೆಗಳು ಮಾಸತೊಡಗಿದವು. ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರೊಂದಿಗಿನ ಕವಿಯ ಸಖ್ಯ, ಆಗ ತಾನೇ ಕಾವು ಪಡೆದಿದ್ದ ದಲಿತ-ಬಂಡಾಯ ಚಳವಳಿಗಳಿಯನ್ನೇ ಒಂದು ರೀತಿಯ ಮುಲಾಜಿಗೆ, ಸಂದಿಗ್ಧತೆಗೆ ಸಿಲುಕಿಸಿತು ಎಂಬ ಮಾತುಗಳೂ ಕೇಳಿಬಂದಿದ್ದವು. 'ಇಕ್ಕಲ್ರಾ, ಒದಿರ್ಲಾ…' ಎಂದ ಕವಿ, 'ಊರ ಗೌಡ'ರ ಸಾಲಲ್ಲೇ ನಿಂತು ಕೈಬೀಸಿದಾಗ ಸಹಜವಾಗೇ ಬೀದಿ ಹೋರಾಟದ ಕ್ರಾಂತಿಯ ಕಣ್ಣುಗಳಲ್ಲಿ ಗೊಂದಲ ಮೂಡಿತ್ತು. |
ವೈಯಕ್ತಿಕವಾಗಿ ಮೃದುಭಾಷಿಯೂ, ನಯ-ವಿನಯದ ವ್ಯಕ್ತಿತ್ವದವರೂ ಆಗಿದ್ದ ಸಿದ್ದಲಿಂಗಯ್ಯ ಅವರ ಆ ಮೃದೃತ್ವವೇ ಅವರು ಕೆಲವು ಸಂದರ್ಭದಲ್ಲಿ ಮುಲಾಜಿಗೆ ಒಳಗಾಗಿ ಹೋರಾಟ ಮತ್ತು ರಾಜಕೀಯ ವಿಷಯದಲ್ಲಿ ರಾಜಿಗೆ ಒಳಗಾಗಬೇಕಾದ ಅನಿವಾರ್ಯತೆಗೆ ಅವರನ್ನು ದೂಡಿದವು. ಅದು ರಾಮಕೃಷ್ಣ ಹೆಗಡೆಯವರ ಕಾಲದಿಂದ ಇತ್ತೀಚೆಗೆ, ಕಳೆದ ಲೋಕಸಭಾ ಚುನಾವಣೆ ವೇಳೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೊಂದಿಗಿನ ಅವರ ಭೇಟಿಯವರೆಗೆ ಹಲವು ಸಂದರ್ಭಗಳಲ್ಲಿ, ನಿರ್ಣಾಯಕ ಗಟ್ಟಿ ನಿಲುವು ತಳೆಯಬೇಕಾದಾಗ ಅವರನ್ನು ಅನಿವಾರ್ಯ ಹೊಂದಾಣಿಕೆಗೆ ನೂಕಿದವು. ಹಾಗಾಗಿ, ಸಣ್ಣಪುಟ್ಟ ಅವಕಾಶಗಳ ಮರ್ಜಿಗೆ ಬಿದ್ದು, 'ದೊಡ್ಡವರ' ಮುಲಾಜಿಗೆ ಬಿದ್ದು ಕವಿಗಳು, ಕರ್ನಾಟಕದಲ್ಲಿ ದಲಿತ ಚಳವಳಿಗೆ ನೀಡಬಹುದಾಗಿದ್ದ ರಾಜಕೀಯ ಆಯಾಮ ನೀಡುವಲ್ಲಿ, ಸೃಷ್ಟಿಸಬಹುದಾಗಿದ್ದ ರಾಜಕೀಯ ಅವಕಾಶ ಸೃಷ್ಟಿಸುವಲ್ಲಿ ಐತಿಹಾಸಿಕ ಅವಕಾಶವನ್ನು ಕೈಚೆಲ್ಲಿದರು ಎಂಬ ಮಾತೂ ಇದೆ. |
ಇಂತಹದ್ದೇ ಕಾರಣಗಳಿಂದಾಗಿಯೇ ಅವರ ರಾಜಕಾರಣದ ಪ್ರವೇಶದೊಂದಿಗೇ ದಲಿತ ಮತ್ತು ಬಂಡಾಯ ಚಳವಳಿಗಳೊಂದಿಗೆ ಇದ್ದ ಅವರ ನಂಟು ಕೂಡ ಮಸುಕಾಯಿತು ಎಂಬುದು, ಕವಿಯ ದಲಿತಪರ, ಶೋಷಿತ ಪರ ಕಾಳಜಿ ಮತ್ತು ಕಕ್ಕುಲತೆಗಳ ಬಗೆಗಿನ ಮುಕ್ಕಾಗದ ಗೌರವದೊಂದಿಗೇ ಒಪ್ಪಿಕೊಳ್ಳಲೇಬೇಕಾದ ಕಡುವಾಸ್ತವ. ಆದರೆ, ಅಷ್ಟರಲ್ಲಿ ಕವಿಯನೇ ಹಿಂದೆ ಬಿಟ್ಟು ಅವರ ಸ್ವಾಭಿಮಾನದ ಹಾಡು ಬಹಳ ಮುಂದೆ ಸಾಗಿತ್ತು! |
ಇದೀಗ, ಕವಿಗಳು ತಮ್ಮ ಸ್ವಾಭಿಮಾನದ ಹಾಡು ಮುಗಿಸಿ, ಕ್ರಾಂತಿಯ ಕೊರಳಿಗೆ ವಿಶ್ರಾಂತಿ ಘೋಷಿಸಿದ್ದಾರೆ. ಆದರೆ, ಶೋಷಿತರ ಆ ಹಾಡು, ಶೋಷಣೆ, ಅನ್ಯಾಯ, ಅಟ್ಟಹಾಸಗಳ ಅಂಧಕಾರದಲ್ಲಿ ದಿಕ್ಕೆಟ್ಟವರಿಗೆ ಕಂದೀಲಾಗಿ ಹಾದಿಯ ತೋರಿದೆ. ಎಚ್ಚೆತ್ತ ಸಮುದಾಯಗಳು ದಶಕಗಳ ಹೋರಾಟದ ಹಾದಿಯಲ್ಲಿ ಸಾಕಷ್ಟು ಸಾಗಿಬಂದಿವೆ. ಹಾಡು ಸಮುದಾಯವನ್ನು ಕಟ್ಟಿದೆ. ಸಮುದಾಯದ ಮನಸುಗಳನ್ನು ಕಟ್ಟಿ ಬೆಳೆಸಿದೆ. ಒಂದು ಪ್ರಜ್ಞಾವಂತ ಸಮುದಾಯವಾಗಿ, ತಲೆಮಾರುಗಳಾಗಿ ದಲಿತರನ್ನು ಕಟ್ಟಿಬೆಳೆಸುವಲ್ಲಿ ಕವಿಗಳ ಹಾಡುಗಳ ಕೊಡುಗೆ ದೊಡ್ಡದಿದೆ. ಒಂದು ಜನಾಂಗಕ್ಕೆ ಪ್ರತಿರೋಧದ, ಪ್ರತಿಭಟನೆಯ ದನಿ ನೀಡಿದ ಹಾಡುಗಳು ತೋರಿದ ಹಾದಿ ಕೂಡ ವಿಸ್ತಾರವಿದೆ. |
ತಲೆಮಾರುಗಳ ಎದೆಯ ತುಡಿತಕ್ಕೆ, ಸಮಾನತೆಯ ಕೂಗಿಗೆ ದನಿಯಾದ ಹಾಡು ಹಾಡಿದ, ಆ ಹಾಡುಗಳ ಮೂಲಕವೇ ದಂತಕತೆಯಾಗಿದ್ದ ಕವಿಗಳಿಗೆ ಭಾವಪೂರ್ಣ ವಿದಾಯ. ನಿಮ್ಮನ್ನೂ ಮೀರಿ ಹಬ್ಬಿರುವ ಹಾಡು, ತಲೆಮಾರುಗಳವರೆಗೆ ಹಾದಿಯ ತೋರುತ್ತಲೇ ಇರುತ್ತದೆ. ನೀವು ಹಚ್ಚಿದ ಕಂದೀಲು ದಾರಿ ದೀಪವಾಗಿಯೇ ಉರಿಯುತ್ತಿರುತ್ತದೆ.. ಹೋಗಿ ಬನ್ನಿ, ವಿದಾಯ..! |
ಗಾಂಧಿ ಭವನ ಕಾಮಗಾರಿಗೆ ಸಚಿವನಾಗೇಶ್ ಚಾಲನೆ | Sanjevani |
Home ಜಿಲ್ಲೆ ಬೆಂಗಳೂರು ಗಾಂಧಿ ಭವನ ಕಾಮಗಾರಿಗೆ ಸಚಿವನಾಗೇಶ್ ಚಾಲನೆ |
ಗಾಂಧಿ ಭವನ ಕಾಮಗಾರಿಗೆ ಸಚಿವನಾಗೇಶ್ ಚಾಲನೆ |
ಕೋಲಾರ,ಜ.೯:ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಿರ್ಮಿಸಲಾಗುತ್ತಿರುವ ಸುಸಜ್ಜಿತ ಗಾಂಧಿ ಭವನ ಕಾಮಗಾರಿಗೆ ಇಂದು ಮಾನ್ಯ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ನಾಗೇಶ್ ಅವರು ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. |
ಕೋಲಾರ ತಾಲ್ಲೂಕು ಕಸಬಾ ಹೋಬಳಿಯ ಗಾಂಧಿ ನಗರದ ಮಣಿಘಟ್ಟ ರಸ್ತೆಯಲ್ಲಿ ಇರುವ ೩೦ ಗುಂಟೆ ನಿವೇಶನದಲ್ಲಿ ೨ ಕೋಟಿ ರೂ.ಗಳ ಕಟ್ಟಡ ಕಾಮಗಾರಿ ಹಾಗೂ ೧ಕೋಟಿ ರೂಗಳಲ್ಲಿ ಕಾಂಪೌಂಡ್ ಹಾಗೂ ಹೊರಾಂಗಣ ವಿನ್ಯಾಸ ಕಾಮಗಾರಿಯನ್ನು ಜಿಲ್ಲಾ ನಿರ್ಮಿತಿ ಕೇಂದ್ರದ ವತಿಯಿಂದ ಅನುಷ್ಟಾಗೊಳಿಸಲು ಕ್ರಮ ವಹಿಸಲಾಗಿದೆ. ಈ ಸಂಪೂರ್ಣ ಕಾಮಗಾರಿಯನ್ನು ಜಿಲ್ಲಾಡಳಿತ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶನದಂತೆ ಇನ್ನು ೧೦ ತಿಂಗಳೊಳಗಾಗಿ ಪೂರ್ಣಗೊಳಿಸಲಾಗುವುದು. |
ಜಿಲ್ಲೆಯ ಜನತೆಗೆ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ವಿಚಾರಧಾರೆಗಳನ್ನು ಪರಿಚಯಿಸುವ ಸಲುವಾಗಿ ಸಾಬರಮತಿ ಆಶ್ರಮದ ಕುಟೀರ ಮಾದರಿಯಲ್ಲಿ ನಿರ್ಮಿಸಲಾಗುವ ಗಾಂಧಿಭವನ ಕಟ್ಟಡವು, ವಸ್ತು ಸಂಗ್ರಹಾಲಯ, ವಿವಿದ್ದೋದೇಶ ಸಭಾಂಗಣ, ಗ್ರಂಥಾಲಯ, ತರಬೇತಿ ಕೇಂದ್ರ ಸೇರಿದಂತೆ ಮಹಾತ್ಮರನ್ನು ಪರಿಚಯಿಸುವ ಚಿತ್ರಕಲಾ ಗ್ಯಾಲರಿಗಳನ್ನು ಹೊಂದಲಿದೆ. |
ನಗರದ ಕೇಂದ್ರ ಭಾಗದಲ್ಲೇ ಭವನ ನಿರ್ಮಾಣಗೊಳ್ಳಲಿದ್ದು, ಜಿಲ್ಲೆಯ ವಿದ್ಯಾರ್ಥಿಗಳು, ಮಕ್ಕಳು, ಗಾಂಧಿ ಅಧ್ಯಯನ ಆಸಕ್ತರು ಸೇರಿದಂತೆ ಸಾರ್ವಜನಿಕರಿಗೆ ಗಾಂಧಿಯನ್ನು ಹತ್ತಿರದಿಂದ ಪರಿಚಯಿಸುವ ಪ್ರಯತ್ನವಾಗಿ ಪರಿಣಮಿಸಲಿದೆ ಎಂದು ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಪಲ್ಲವಿ ಹೊನ್ನಾಪುರ ಅವರು ತಿಳಿಸಿದರು. |
ಕಾರ್ಯಕ್ರಮದಲ್ಲಿ ಕೋಲಾರ ಶಾಸಕರಾದ ಕೆ.ಶ್ರೀನಿವಾಸಗೌಡ, ವಿಧಾನ ಪರಿಷತ್ ಸದಸ್ಯರಾದ ಗೋವಿಂದರಾಜು, ಜಿ. ಪಂ ಅಧ್ಯಕ್ಷರಾದ ಸಿ.ಎಸ್.ವೆಂಕಟೇಶ್, ಜಿಲ್ಲಾಧಿಕಾರಿಗಳಾದ ಸಿ.ಸತ್ಯಭಾಮ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಎನ್.ಎಂ.ನಾಗರಾಜ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ವಿ.ಮುನಿರಾಜು, ಉಪ ವಿಭಾಗಾಧಿಕಾರಿಗಳಾದ ಸೋಮಶೇಖರ್, ತಹಶೀಲ್ದಾರ್ ಶೋಭಿತಾ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ನಾರಾಯಣಗೌಡ ಉಪಸ್ಥಿತರಿದ್ದರು. |
ದಾವಣಗೆರೆಯಲ್ಲಿ ಅ.20ಕ್ಕೆ ವೀರಶೈವ ವಧು–ವರರ ಸಮಾವೇಶ | Prajavani |
ದಾವಣಗೆರೆಯಲ್ಲಿ ಅ.20ಕ್ಕೆ ವೀರಶೈವ ವಧು–ವರರ ಸಮಾವೇಶ |
Published: 15 ಅಕ್ಟೋಬರ್ 2019, 18:37 IST |
Updated: 15 ಅಕ್ಟೋಬರ್ 2019, 18:37 IST |
ಹುಬ್ಬಳ್ಳಿ: ಅಖಿಲ ಭಾರತ ವೀರಶೈವ ಸೇವಾ ಸಭಾ ಟ್ರಸ್ಟ್ ಮತ್ತು ಕರ್ನಾಟಕ ವೀರಶೈವ ವಧು–ವರರ ಅನ್ವೇಷಣಾ ಕೇಂದ್ರದ ಸಹಯೋಗದಲ್ಲಿ ಅ. 20ರಂದು ದಾವಣಗೆರೆಯಲ್ಲಿ ವೀರಶೈವ ಲಿಂಗಾಯತ ಹಾಗೂ ಜಂಗಮ ವಧು–ವರರ ರಾಜ್ಯಮಟ್ಟದ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ರವಿ ಹಂದಿಗೋಳ ಹೇಳಿದರು. |
ದಾವಣಗೆರೆಯ ಜೆ.ಪಿ. ಫಂಕ್ಷನ್ ಹಾಲ್‌ನಲ್ಲಿ ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ಸಮಾವೇಶ ಜರುಗಲಿದ್ದು, ವಧು–ವರರ ಪರಿಚಯ ಮತ್ತು ಪಾಲಕರ ಮಾತುಕತೆಗೆ ಅವಕಾಶವನ್ನು ಕಲ್ಪಿಸಲಾಗುವುದು ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. |
ಸಮಾವೇಶದಲ್ಲಿ ವೀರಶೈವ ಲಿಂಗಾಯತ, ಜಂಗಮ, ಆರಾಧ್ಯರು, ಪಂಚಮಸಾಲಿ, ಬಣಜಿಗ, ಆದಿ ಬಣಜಿಗ, ಬಣಗಾರರು, ಶಿವಾಚಾರ್ಯ, ಕುಂಬಾರ, ಪಟ್ಟಸಾಲಿ, ಶಿವಸಿಂಪಿ, ಸಾದರು, ಗಾಣಿಗೇರ, ಮಡಿವಾಳರು, ಹಡಪದ, ನಾಮದ ರೆಡ್ಡಿ, ಲಿಂಗಾಯತ ರೆಡ್ಡಿ, ನೊಳಂಬ, ನೇಕಾರ, ಪಂಚಾಚಾರ್ಯ, ಹೂಗಾರ ಸೇರಿದಂತೆ ವಿವಿಧ ಒಳ ಪಂಗಡಗಳ ವಧು–ವರರು ಭಾಗವಹಿಸಲಿದ್ದಾರೆ. ಆಕಸ್ತರು ತಮ್ಮ ವೈಯಕ್ತಿಕ ಮಾಹಿತಿ ಹಾಗೂ ಭಾವಚಿತ್ರ ತರಬೇಕು. ವಿಧವೆಯರು ಹಾಗೂ ವಿಧುರರು ಕೂಡ ಸಮಾವೇಶದಲ್ಲಿ ಭಾಗವಹಿಸಬಹುದು ಎಂದು ಹೇಳಿದರು. |
ಕರ್ನಾಟಕ ವೀರಶೈವ ವಧು–ವರರ ಅನ್ವೇಷಣಾ ಕೇಂದ್ರದ ಶಿವಕುಮಾರ ಹಿರೇಮಠ ಹಾಗೂ ಶಕುಂತಲಾ ನಂದಿಮಠ ಇದ್ದರು. ಮಾಹಿತಿಗೆ 72041 39739, 96631 08606. |
ಹುಬ್ಬಳ್ಳಿಯಲ್ಲಿ ಅ.20ಕ್ಕೆ ವಧು–ವರರ, ಪಾಲಕರ ಪರಿಚಯ ಸಮಾವೇಶ |
ಹುಬ್ಬಳ್ಳಿ: ಗುರು ಅಸೋಸಿಯೇಟ್ಸ್ ವಧು–ವರರ ಮಾಹಿತಿ ಹಾಗೂ ಸೇವಾ ಕೇಂದ್ರವು ಅ. 20ರಂದು ಹುಬ್ಬಳ್ಳಿಯಲ್ಲಿ ವೀರಶೈವ ಲಿಂಗಾಯತ ಮತ್ತು ಎಲ್ಲಾ ಒಳ ಪಂಗಡಗಳ ವಧು–ವರರ ಹಾಗೂ ಪಾಲಕರ ರಾಜ್ಯಮಟ್ಟದ ಪರಿಚಯ ಸಮಾವೇಶವನ್ನು ಆಯೋಜಿಸಿದೆ ಎಂದು ಗುರು ಅಸೋಸಿಯೇಟ್ಸ್ ವ್ಯವಸ್ಥಾಪಕ ನಿರ್ದೇಶಕ ಡಿ.ಬಿ. ದುಂಡಪ್ಪನವರ ಹೇಳಿದರು. |
ಕೆ.ಸಿ.ಸಿ ಬ್ಯಾಂಕ್ ಸಭಾಭವನದಲ್ಲಿ ಬೆಳಿಗ್ಗೆ 10ಕ್ಕೆ ಸಮಾವೇಶ ಆರಂಭಗೊಳ್ಳಲಿದೆ. ನೋಂದಣಿ ಶುಲ್ಕ ₹500 ಇದ್ದು, ಸ್ಥಳದಲ್ಲೇ ಪಾವತಿಸಿ ಭಾಗವಹಿಸಬಹುದಾಗಿದೆ. ಮಧ್ಯಾಹ್ನ 1ರಿಂದ 4ರವರೆಗೆ ಎರಡನೇ ಸಂಬಂಧಕ್ಕಗಿ ವಿಧವೆಯವರು, ವಿಧುರರು ಹಾಗೂ ವಿಚ್ಛೇದಿತರ ಪರಿಚಯ ಕಾರ್ಯಕ್ರಮ ಜರುಗಲಿದ್ದು, ಪ್ರವೇಶ ಉಚಿತವಾಗಿದೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. |
ವಿರಾಜ್ ದೇಸಾಯಿ ಇದ್ದರು. ಹೆಚ್ಚಿನ ಮಾಹಿತಿಗೆ ಮೊ: 73494 51628, 97397 04309. |
ಉಚಿತ ಆಪ್ತ ಸಮಾಲೋಚನೆ |
ಹುಬ್ಬಳ್ಳಿ: 'ಮಹಿಷಿ ಟ್ರಸ್ಟ್ ವತಿಯಿಂದ ಧಾರವಾಡದ ಕೆಲಗೇರಿ ರಸ್ತೆಯಲ್ಲಿರುವ ಬನಶಂಕರಿ ಕಲ್ಯಾಣಮಂಟಪದಲ್ಲಿ ಪ್ರತಿ ಗುರುವಾರ ಸಂಜೆ 5ರಿಂದ 7 ಗಂಟೆವರೆಗೆ ಉಚಿತವಾಗಿ ಆಪ್ತ ಸಮಾಲೋಚನೆ ನಡೆಯಲಿದೆ' ಎಂದು ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಸಾವಿತ್ರಿ ಮಹಿಷಿ ಹೇಳಿದರು. |
'ಬೆಂಗಳೂರಿನ 'ಸಮಾಧಾನ' ಕೇಂದ್ರದ ಡಾ.ಸಿ.ಆರ್. ಚಂದ್ರಶೇಖರ್ ಹಾಗೂ ಅವರ ತಂಡದ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಪಡೆದಿರುವರು ಆಪ್ತ ಸಮಾಲೋಚನೆ ನಡೆಸಲಿದ್ದಾರೆ' ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. |
'ಉದ್ಯೋಗಿಗಳು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಗೃಹಿಣಿಯರು, ಪುರುಷರು, ಯುವಕ–ಯುವತಿಯರು ಆಪ್ತ ಸಮಾಲೋಚನೆಯ ಪ್ರಯೋಜನ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಮೊ: 94825 20874, 82770 33139, 98800 19258 ಸಂಪರ್ಕಿಸಬಹುದು' ಎಂದರು. |
ಏಡಿ ಮಾಂಸ ಸೇವನೆ ಮಾಡುವುದರಿಂದ ಆಗುವ ಲಾಭಗಳು! – Upayuktamahiti.com |
April 19, 2022 April 19, 2022 adminLeave a Comment on ಏಡಿ ಮಾಂಸ ಸೇವನೆ ಮಾಡುವುದರಿಂದ ಆಗುವ ಲಾಭಗಳು! |
ಏಡಿ ಮಾಂಸ ನನ್ ವೆಜ್ ಪ್ರಿಯರಿಗೆ ಸಮುದ್ರ ಆಹಾರದಲ್ಲಿ ಹೆಚ್ಚು ಇಷ್ಟ ಆಗುವ ಆಹಾರದಲ್ಲಿ ಏಡಿ ಕೂಡ ಒಂದು. ಏಡಿಯನ್ನು ಸೇವನೇ ಮಾಡುವುದರಿಂದ ಹಲವಾರು ರೀತಿಯ ಅರೋಗ್ಯಕರ ಲಾಭಗಳು ಇವೇ.ಇದರಲ್ಲಿ ಕ್ಯಾಲ್ಸಿಯಂ ಕಬ್ಬಿಣ ಕೊಬ್ಬು ಇದೆ ಪ್ರೊಟೀನ್ ಇದೆ ವಿಟಮಿನ್ ಎ,ವಿಟಮಿನ್ ಸಿ ಮತ್ತು ವಿಟಮಿನ್ ಬಿ12 ಹಾಗೂ ಒಮೇಗಾ 3 ತಾಮ್ರ ಇನ್ನು ಹಲವಾರು ರೀತಿಯ ಪೌಷ್ಟಿಕಾಂಶಗಳನ್ನು ಇದು ಒಳಗೊಂಡಿದೆ. |
ಏಡಿಯನ್ನು ಸೇವನೆ ಮಾಡಿದರೆ ಆಗುವ ಲಾಭಗಳು :1, ಕಣ್ಣಿನ ದೃಷ್ಟಿ ಸುಧಾರಿಸುತ್ತದೆ.2, ನರಮಂಡಲವನ್ನು ಬಲ ಪಡಿಸುತ್ತದೆ ಹಾಗೂ ಮನಸ್ಥಿತಿಯನ್ನು ಕೂಡ ಸುಧಾರಿಸುತ್ತದೆ.3, ನಿದ್ರೆಗೆ ಇರುವ ತೊಂದರೆಗಳನ್ನು ಸಹ ನಿವಾರಿಸುತ್ತದೆ. ನಿದ್ರೆ ಕೂಡ ಚೆನ್ನಾಗಿ ಬರುತ್ತದೆ ಹಾಗೂ ಮಾನಸಿಕ ಆರೋಗ್ಯವನ್ನು ವೃದ್ಧಿಸುತ್ತದೆ.4, ಇದರಲ್ಲಿರುವ ಪ್ರೊಟೀನ್ ಅಂಶ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೆ ದೇಹದಲ್ಲಿರುವ ಪ್ರತಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. |
5, ಇದನ್ನು ಸೇವನೆ ಮಾಡುವುದರಿಂದ ಪುರುಷರ ಸಾಮರ್ಥ್ಯದ ಮೇಲೆ ಪ್ರಯೋಜನಕರೀ ಆಗುವಂತಹ ಪರಿಣಾಮಗಳನ್ನು ಬಿರುತ್ತದೆ.6, ಬೆನ್ನು ನೋವು ನರ ನೋವು ಇರುವವರು ಇದನ್ನು ಸೇವನೆ ಮಾಡಿದರೆ ಬೆನ್ನು ನೋವು ನರ ನೋವು ಕಡಿಮೆ ಆಗುತ್ತದೆ.7, ಏಡಿ ಸೇವನೆ ಮಾಡಿದರೆ ಹೃದಯದ ಅರೋಗ್ಯವನ್ನು ಕೂಡ ಕಾಪಾಡುತ್ತದೆ.8, ಇದನ್ನು ಸೇವನೇ ಮಾಡಿದರೆ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ. |
ಸಂಗತ: ಕಿವಿಯಾಗಬೇಕಿದೆ ಮನದಾಳದ ಮಾತಿಗೆ | Prajavani |
To be an ear to the word of conviction |
ಮಕ್ಕಳು ಕೋವಿಡ್ ಕಾಲದಲ್ಲಿನ ಅನುಭವಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಸಾಧ್ಯವಾಗುವಂತಹ ವಾತಾವರಣವನ್ನು ಶಿಕ್ಷಕರು ಶಾಲೆಯಲ್ಲಿ ಸೃಷ್ಟಿಸುವ ಮೂಲಕ ಭಾವನಾತ್ಮಕ ಭದ್ರತೆ ಕಲ್ಪಿಸಬೇಕಾಗಿದೆ |
ಡಾ. ಎಚ್.ಬಿ.ಚಂದ್ರಶೇಖರ್ Updated: 08 ಸೆಪ್ಟೆಂಬರ್ 2021, 01:01 IST |
ಕೋವಿಡ್ ತೀವ್ರಗತಿಯಲ್ಲಿದ್ದ ಕಾಲಘಟ್ಟದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ವಿಭಿನ್ನ ರೀತಿಯ ಸನ್ನಿವೇಶ ದಲ್ಲಿ ಆತಂಕ, ಒತ್ತಡಗಳನ್ನು ಎದುರಿಸಿದ್ದಾರೆ. ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಒಡನಾಟ, ಸಂವಾದ, ಸಂವಹನಗಳ ಮೂಲಕ ಕಲಿಸಲಾಗದೆ ಅನಿವಾರ್ಯವಾಗಿ ನೂತನ ತಂತ್ರಜ್ಞಾನಕ್ಕೆ ತಮ್ಮನ್ನು ತಾವು ತೆರೆದುಕೊಂಡು ಬೋಧಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಶಿಕ್ಷಕರ ನೇರ ಬೋಧನೆಯ ಜೊತೆ ಗೆಳೆಯರೊಂದಿಗೆ ಆಟ, ವಿನೋದಗಳ ಮೂಲಕ ಸಹಜವಾಗಿ ಆಗುತ್ತಿದ್ದ ಸಾಮಾಜೀಕರಣದಿಂದ ವಂಚಿತ ರಾಗಿದ್ದ ವಿದ್ಯಾರ್ಥಿಗಳು ಮನೆಯಿಂದ ಹೊರಬರದೆ ಮೊಬೈಲ್, ಲ್ಯಾಪ್‌ಟಾಪ್, ದೂರದರ್ಶನದಂತಹ ಮಾಧ್ಯಮಗಳ ಮೂಲಕ ಕಲಿಯುವ ಒತ್ತಡದಲ್ಲಿದ್ದರು. |
ದೀರ್ಘಕಾಲದ ಬಿಡುವಿನ ನಂತರ ಇದೀಗ ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳು ಮರು ಪ್ರಾರಂಭವಾಗಿವೆ. ಇಂತಹ ಸಂದರ್ಭದಲ್ಲಿ, ಈವರೆಗೆ ಶಿಕ್ಷಕರು ತಾವು ನಿರ್ವಹಿಸುತ್ತಿದ್ದ ಪಾತ್ರಗಳಲ್ಲಿ ಕಂಡುಕೊಳ್ಳಬಹುದಾದ ಬದಲಾವಣೆಗಳು ಮುಖ್ಯ ಪಾತ್ರ ವಹಿಸುತ್ತವೆ. |
ಕೋವಿಡ್ ಕಾಲದಲ್ಲಿ ತಂತ್ರಜ್ಞಾನದ ವಿವಿಧ ಸಾಧನಗಳನ್ನು ಬಳಸಿ, ಆನ್‍ಲೈನ್ ಮೂಲಕ ಪಾಠ ಬೋಧನೆ ಮಾಡಲು ಶಿಕ್ಷಕರು ಕಲಿತಿದ್ದಾರೆ. ವಿವಿಧ ಕಲಿಕಾಂಶಗಳಿಗೆ ಸಂಬಂಧಿಸಿದಂತೆ ಅನೇಕ ಶಿಕ್ಷಕರು ವಿಡಿಯೊಗಳನ್ನು ಸೃಜಿಸಿ, ಅವುಗಳಿಗೆ ಅಗತ್ಯವಾದ ಚಿತ್ರ, ಪೂರಕ ಮಾಹಿತಿ ಸೇರಿಸಿ, ಅನಿಮೇಶನ್ ಅಳ ವಡಿಸಿ, ಎಡಿಟ್ ಮಾಡಿ, ತಮ್ಮದೇ ಯುಟ್ಯೂಬ್ ಚಾನೆಲ್‍ಗಳಲ್ಲಿ ಅವುಗಳನ್ನು ಅಪ್‍ಲೋಡ್ ಮಾಡು ತ್ತಿದ್ದಾರೆ. ಪಾಠಕ್ಕೆ ಪೂರಕವಾಗಿ ಅಂತರ್ಜಾಲ |
ದಲ್ಲಿ ಲಭ್ಯವಿರುವ ಅನೇಕ ಚಿತ್ರ, ಆಡಿಯೊ, ವಿಡಿಯೊ ಸಂಪನ್ಮೂಲಗಳ ಹುಡುಕಾಟ ನಡೆಸಿ, ತಮ್ಮ ಆನ್‍ಲೈನ್ ತರಗತಿಗಳಿಗೆ ಬಳಸುವುದನ್ನು ಕಲಿತಿದ್ದಾರೆ. ಶಿಕ್ಷಣ ಇಲಾಖೆ ವತಿಯಿಂದ ಪ್ರಸಾರವಾಗುವ ದೂರದರ್ಶನ ಪಾಠಗಳನ್ನು ವೀಕ್ಷಿಸಿ, ಅವುಗಳಲ್ಲಿರುವ ಉತ್ತಮ ಅಂಶ ಗಳನ್ನು ತಮ್ಮ ಪಾಠಗಳಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ. ಶಿಕ್ಷಕರು ಬೋಧನೆಯ ವಿಷಯಕ್ಕೆ ಸಂಬಂಧಿಸಿದಂತೆ ತರಗತಿಯಾಚೆ ಗಮನಿಸಿ, ತಮ್ಮ ಕಲಿಕೆಯ ಪರಿಧಿಯನ್ನು ಹಿಗ್ಗಿಸಿಕೊಳ್ಳಲು ಅವಕಾಶ ದೊರೆತಿದೆ. |
ಕೋವಿಡ್ ಕಾಲದಲ್ಲಿ ಶಿಕ್ಷಕರಲ್ಲಿ ಆದ ಈ ಕಲಿಕೆಯು ಅವರು ವಿದ್ಯಾರ್ಥಿಗಳಿಗೆ ಕೈಗೊಳ್ಳುವ ನೇರ ತರಗತಿ |
ಗಳನ್ನು ಸಂಪದ್ಭರಿತಗೊಳಿಸಲು ನೆರವಾಗಲಿದೆ. ಇದರ ಜೊತೆ ವಿದ್ಯಾರ್ಥಿಗಳು ಸಹ ಶಿಕ್ಷಣಕ್ಕೆ ಪೂರಕವೆನಿಸುವ ಅನೇಕ ಕೌಶಲಗಳನ್ನು ಕಲಿತು ಬಂದಿರುತ್ತಾರೆ. ಕೋವಿಡ್ ಸನ್ನಿವೇಶದಲ್ಲಿ ಆದ ಕಲಿಕೆಯ ನಷ್ಟವನ್ನು ಮಾತ್ರ ಅಂದಾಜಿಸದೆ ವಿದ್ಯಾರ್ಥಿಗಳು ಈ ಅವಧಿಯಲ್ಲಿ ಕಟ್ಟಿಕೊಂಡಿರುವ ಅನುಭವಗಳ ಆಧಾರದ ಮೇಲೆ ಶಿಕ್ಷಕರು ತಮ್ಮ ತರಗತಿಗಳ ಬೋಧನೆಯನ್ನು ರೂಪಿಸ ಬೇಕಾಗಿದೆ. |
ಅನೇಕ ಕುಟುಂಬಗಳು ಕೋವಿಡ್ ಕಾರಣದಿಂದ ಕುಟುಂಬ ಸದಸ್ಯರ ಅನಾರೋಗ್ಯ, ಸಾವು, ಉದ್ಯೋಗ ನಷ್ಟ, ಆರ್ಥಿಕ ಸಂಕಷ್ಟ, ಏಕಾಂಗಿತನ, ಮಾನಸಿಕ ಆಘಾತದಂತಹ ಸಮಸ್ಯೆಗಳಿಂದ ತೊಂದರೆಗೀಡಾಗಿರುವ ಸಾಧ್ಯತೆಗಳಿರುತ್ತವೆ. ಇಂತಹ ಕುಟುಂಬಗಳಿಂದ ಶಾಲೆಗೆ ಹಾಜರಾಗುವ ಅನೇಕ ವಿದ್ಯಾರ್ಥಿಗಳ ಜೊತೆ ಶಿಕ್ಷಕರು ಭಾವನಾತ್ಮಕವಾಗಿ ಸ್ಪಂದಿಸುವ ಅಗತ್ಯವಿದೆ. ಈ ಅಂಶಗಳನ್ನು ಶಿಕ್ಷಕರು ಅರ್ಥ ಮಾಡಿಕೊಂಡು, ಅಂತಹ ಮಕ್ಕಳೊಂದಿಗೆ ಸೂಕ್ಷ್ಮವಾಗಿ ಒಡನಾಡುವ ಅಗತ್ಯವಿದೆ. |
ಕೋವಿಡ್ ಕಾಲದಲ್ಲಿ ಮಕ್ಕಳು ಓದಿದ ಪುಸ್ತಕ ಗಳು, ದಕ್ಕಿಸಿಕೊಂಡ ಅನುಭವಗಳು, ಅನುಭವಿ ಸಿದ ಸಂತಸ, ಸಂಕಟ, ಸಮಸ್ಯೆಗಳ ಕುರಿತಾದ ವಿಷಯಗಳನ್ನು ಮಕ್ಕಳು ತಾವಾಗಿಯೇ ಮುಕ್ತ ವಾಗಿ ಹಂಚಿಕೊಳ್ಳಲು ಸಾಧ್ಯವಾಗುವ ವಾತಾವರಣ ವನ್ನು ಶಿಕ್ಷಕರು ತರಗತಿಯಲ್ಲಿ ಸೃಷ್ಟಿಸಬೇಕು. ಮಕ್ಕಳ ಮಾತುಗಳಿಗೆ ಶಿಕ್ಷಕರು ಕಿವಿಯಾಗಬೇಕು. ಹಂಚಿ ಕೊಳ್ಳಲು ಇಚ್ಛಿಸದ ಮಕ್ಕಳನ್ನು ಗುರುತಿಸಿ, ಅವರ ಮೌನವನ್ನೂ ಗೌರವಿಸಬೇಕು. ಶಿಕ್ಷಕರು ತೋರುವ ಇಂತಹ ಅನುಭೂತಿಯು ಮಕ್ಕಳಲ್ಲಿ ಭಾವನಾತ್ಮಕ ಭದ್ರತೆ ಹೊಂದುವಂತೆ ಮಾಡುತ್ತದೆ. ಇದರ ಜೊತೆ ಮಕ್ಕಳಿಗೆ ತಮ್ಮ ಶಾಲೆಯ ಮೇಲೆ ಪ್ರೀತಿ, ವಿಶ್ವಾಸ ಹಾಗೂ ಭರವಸೆಗಳು ಮೂಡುತ್ತವೆ. ಇದು ಅವರ ಶಾಲಾ ಜೀವನವನ್ನು ಮುಂದುವರಿಸಲು ಅಗತ್ಯವಾದ ಚೈತನ್ಯವನ್ನು ಅವರಿಗೆ ನೀಡುತ್ತದೆ. |
ಶಾಲೆಗಳು ದೀರ್ಘ ಅವಧಿಯ ಬಿಡುವಿನ ನಂತರ ಪ್ರಾರಂಭವಾಗಿವೆ. ಹೀಗಾಗಿ, ವಿದ್ಯಾರ್ಥಿಗಳಲ್ಲಿರುವ ಕಲಿಕೆಯ ಅಂತರವನ್ನು ಸರಿದೂಗಿಸಲು ಶಿಕ್ಷಕರು ಸಹಜವಾಗಿ ಅವರ ಕಲಿಕಾ ಮಟ್ಟ ಅಳೆಯಲು ಪರೀಕ್ಷೆ ಮಾಡುವುದು ಹಾಗೂ ಪಠ್ಯಾಂಶ ಬೋಧನೆಗೆ ಹೆಚ್ಚು ಒತ್ತು ನೀಡುತ್ತಾರೆ. ಈ ಪ್ರಕ್ರಿಯೆಯಿಂದ ಮಕ್ಕಳಲ್ಲಿ ಕಲಿಕೆಯೆಡೆ ನಿರಾಸಕ್ತಿಯ ಭಾವ, ಆತಂಕ, ಒತ್ತಡಗಳು ಉಂಟಾಗಬಹುದು. ಈ ಹಿನ್ನೆಲೆಯಲ್ಲಿ ಹಾಡು, ಕತೆ, ಕವಿತಾ ವಾಚನ, ನಾಟಕ, ಪ್ರಶ್ನೆ, ಸಂವಾದ, ಯೋಜನಾ ಕಾರ್ಯ, ರಸಪ್ರಶ್ನೆ, ವೈಜ್ಞಾನಿಕ ಪ್ರಯೋಗ ಹಾಗೂ ಇತರ ಪ್ರಾಯೋಗಿಕ ಚಟುವಟಿಕೆ, ಬರವಣಿಗೆ, ಓದುವ ಅಭ್ಯಾಸಗಳಲ್ಲಿ ಮಕ್ಕಳನ್ನು ನಿಧಾನವಾಗಿ ತೊಡಗಿಸಿ |
ಕೊಳ್ಳುವ ಕಾರ್ಯ ಮಾಡಬೇಕು. |
ವಿದ್ಯಾರ್ಥಿಗಳು ಹಂತ ಹಂತವಾಗಿ ಖುಷಿ, ಸಂತಸ, ಆಸಕ್ತಿಗಳಿಂದ ಕಲಿಕೆಯೆಡೆಗೆ ಸಾಗುವಂತೆ ಕಾರ್ಯತಂತ್ರ, ಚಟುವಟಿಕೆಗಳನ್ನು ಶಿಕ್ಷಕರು ರೂಪಿಸಿ, ಮುನ್ನಡೆಯುವ ಅಗತ್ಯ ಇದೆ. |
ಕೋವಿಡ್ ಸನ್ನಿವೇಶವು ಮಕ್ಕಳ ಸಾಮಾಜಿಕ ಬೆಳವಣಿಗೆಗೆ ಬಹು ದೊಡ್ಡ ಪೆಟ್ಟು ನೀಡಿದೆ. ವಿದ್ಯಾರ್ಥಿಗಳು ದೈಹಿಕ ಅಂತರವನ್ನು ಕಾಯ್ದುಕೊಳ್ಳು ತ್ತಲೇ ಸಾಮಾಜಿಕವಾಗಿ ಮತ್ತು ಭಾವನಾತ್ಮಕವಾಗಿ ಸ್ಪಂದಿಸುತ್ತಾ ಸಹಪಾಠಿಗಳ ಜೊತೆ ಒಡನಾಡುವಂತೆ ಮಾಡಬೇಕಿದೆ. ತರಗತಿಗಳು ಹೆಚ್ಚು ಹೆಚ್ಚು ಸಂವೇದನಾ ಶೀಲವಾಗುವಂತೆ ರೂಪಿಸುವ ಜರೂರಿದೆ. |
'); $('#div-gpt-ad-864876-2').append(' |
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-864876'); }); googletag.cmd.push(function() { googletag.display('gpt-text-700x20-ad2-864876'); }); },300); var x1 = $('#node-864876 .field-name-body .field-items div.field-item > p'); if(x1 != null && x1.length != 0) { $('#node-864876 .field-name-body .field-items div.field-item > p:eq(0)').append(' |
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-864876').addClass('inartprocessed'); } else $('#in-article-864876').hide(); } else { _taboola.push({article:'auto', url:'https://www.prajavani.net/op-ed/opinion/to-be-an-ear-to-the-word-of-conviction-864876.html'}); window._taboola = window._taboola || []; _taboola.push({ mode: 'thumbnails-e', container: 'taboola-below-article-thumbnails-mobile-864876', placement: 'Below Article Thumbnails 1', target_type: 'mix' }); _taboola.push({flush: true}); // Text ad googletag.cmd.push(function() { googletag.display('gpt-text-300x20-ad-864876'); }); googletag.cmd.push(function() { googletag.display('gpt-text-300x20-ad2-864876'); }); // Remove current Outbrain //$('#dk-art-outbrain-864876').remove(); //ad before trending $('#mob_rhs1_864876').prepend(' |
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-864876 .field-name-body .field-items div.field-item > p'); if(x1 != null && x1.length != 0) { $('#node-864876 .field-name-body .field-items div.field-item > p:eq(0)').append(' |
'); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-864876 .field-name-body .field-items div.field-item > p:eq(2)').after(' |
'); googletag.cmd.push(function() { googletag.display('in-article-mob-3rd-864876'); }); } else { $('#in-article-mob-864876').hide(); $('#in-article-mob-3rd-864876').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' |
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); setTimeout(function(){ $('.image_gallery .owl-carousel').trigger('destroy.owl.carousel'); $('.image_gallery .owl-carousel').owlCarousel( image_options ); $('.image_gallery .owl-carousel.owl-ph-gallery').trigger('destroy.owl.carousel'); $('.image_gallery .owl-carousel.owl-ph-gallery').owlCarousel( pg_image_options ); },30); setTimeout(function(){ $('#video_gallery .owl-carousel').trigger('destroy.owl.carousel'); $('#video_gallery .owl-carousel').owlCarousel( video_options ); },30); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0) { var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var in_art = ['#in-article-864876','#in-article-869092','#in-article-868824','#in-article-868461','#in-article-868150']; var twids = ['#twblock_864876','#twblock_869092','#twblock_868824','#twblock_868461','#twblock_868150']; var twdataids = ['#twdatablk_864876','#twdatablk_869092','#twdatablk_868824','#twdatablk_868461','#twdatablk_868150']; var obURLs = ['https://www.prajavani.net/op-ed/opinion/to-be-an-ear-to-the-word-of-conviction-864876.html','https://www.prajavani.net/op-ed/opinion/education-reality-should-get-importance-while-writing-syllabus-869092.html','https://www.prajavani.net/op-ed/opinion/lets-get-ahead-of-the-rhino-protection-868824.html','https://www.prajavani.net/op-ed/opinion/is-do-not-need-kannada-medium-for-legal-education-868461.html','https://www.prajavani.net/op-ed/opinion/in-every-house-need-senior-person-868150.html']; var vuukleIds = ['#vuukle-comments-864876','#vuukle-comments-869092','#vuukle-comments-868824','#vuukle-comments-868461','#vuukle-comments-868150']; // var nids = [864876,869092,868824,868461,868150]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; //var obscroll = false; $(window).scroll(function(){ $.each( vuukleIds, function( key, vuukleId ) { if($(vuukleId) && $(vuukleId).length!=0) { if( !$(vuukleId).hasClass('vkAdprocessed')) { var scrollTop = $(window).scrollTop(), elementOffset = $(vuukleId).offset().top, distance = (elementOffset - scrollTop); //if($(vuukleId).parent().prev().isInViewport() ) { if(distance < 1500 ) { $(vuukleId).addClass('vkAdprocessed'); setTimeout(function(){ window.newVuukleWidgets({ elementsIndex: $(vuukleId).parent().data('elementsindex'), articleId: $(vuukleId).parent().data('articleid'), img: $(vuukleId).parent().data('img'), title: $(vuukleId).parent().data('title'), tags: $(vuukleId).parent().data('tags'), url: $(vuukleId).parent().data('url') }); }, 500); } } } }); //obscroll = false; }); }); }); |
ಹದಿನಾಲ್ಕು ವರ್ಷಗಳ ನಂತರ ಹೊಸ ಚಿತ್ರದಲ್ಲಿ ಚಿರಂಜೀವಿ, ತ್ರಿಷಾ ನಟನೆ | Prajavani |
ಹದಿನಾಲ್ಕು ವರ್ಷಗಳ ನಂತರ ಹೊಸ ಚಿತ್ರದಲ್ಲಿ ಚಿರಂಜೀವಿ, ತ್ರಿಷಾ ನಟನೆ |
ಮೆಗಾಸ್ಟಾರ್ ಚಿರಂಜೀವಿ ಅಭಿನಯದ 'ಸೈರಾ ನರಸಿಂಹ ರೆಡ್ಡಿ' ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡುತ್ತಿದೆ. ಈಗ ತಮ್ಮ ಹೊಸ ಚಿತ್ರದ ತಯಾರಿಯಲ್ಲಿ ಚಿರಂಜೀವಿ ತೊಡಗಿಸಿಕೊಂಡಿದ್ದಾರೆ. |
'ಮಿರ್ಚಿ', 'ಜನತಾ ಗ್ಯಾರೇಜ್', 'ಶ್ರೀಮಂತುಡು', 'ಭರತ್ ಆನೆ ನೇನು' ಮೊದಲಾದ ಹಿಟ್ ಚಿತ್ರಗಳನ್ನು ನೀಡಿರುವ ನಿರ್ದೇಶಕ ಕೊರಟಾಳ ಶಿವ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಈ ಹೊಸ ಚಿತ್ರಕ್ಕೆ ನಾಯಕಿಯಾಗಿ ನಟಿ ತ್ರಿಷಾ ಕೃಷ್ಣನ್ ಅವರು ಆಯ್ಕೆಯಾಗಿದ್ದಾರೆ. ಸದ್ಯದಲ್ಲೇ ಈ ಚಿತ್ರದ ಶೂಟಿಂಗ್ ಆರಂಭವಾಗಲಿದೆ. |
ಈ ಚಿತ್ರಕ್ಕೆ ಮೊದಲು ಕಾಜಲ್ ಅಗರವಾಲ್, ಹುಮಾ ಖುರೇಶಿ, ತಮನ್ನಾ ಭಾಟಿಯಾ, ಹಾಗೂ ನಯನತಾರಾ ಹೆಸರು ಕೇಳಿಬಂದಿತ್ತು. ಆದರೆ ಈಗ ಚಿತ್ರತಂಡವು ನಾಯಕಿ ಸ್ಥಾನಕ್ಕೆ ತ್ರಿಷಾ ಅವರನ್ನು ಆಯ್ಕೆ ಮಾಡಿದೆ. ತ್ರಿಷಾ ಹಾಗೂ ಚಿರಂಜೀವಿ ಈ ಮುನ್ನ ಎ.ಆರ್. ಮುರುಗದಾಸ್ ಅವರ ಸ್ಟಾಲಿನ್ ಚಿತ್ರದಲ್ಲಿ ಜೋಡಿಯಾಗಿ ನಟಿಸಿದ್ದರು. ಈ ಚಿತ್ರ 2006ರಲ್ಲಿ ಬಿಡುಗಡೆಯಾಗಿತ್ತು. ಎಲ್ಲವೂ ಸರಿಹೋದರೆ 14 ವರ್ಷಗಳ ನಂತರ ಮತ್ತೊಮ್ಮೆ ಈ ಜೋಡಿಯನ್ನು ತೆರೆಯಲ್ಲಿ ಸದ್ಯದಲ್ಲೇ ನೋಡಬಹುದು. 'ದಮ್ಮು' ಸಿನಿಮಾವು ತ್ರಿಷಾ ನಟಿಸಿದ ಕೊನೆಯ ತೆಲುಗು ಚಿತ್ರ. ಇದರಲ್ಲಿ ಜ್ಯೂನಿಯರ್ ಎನ್‌ಟಿಆರ್ ನಾಯಕಿಯಾಗಿ ನಟಿಸಿದ್ದರು. ಅನಂತರ ತಮಿಳು ಚಿತ್ರದಲ್ಲಿ ಅವರು ಬ್ಯುಸಿಯಾಗಿದ್ದರು. |
ಹಸಿರೇ ಉಸಿರು – ಗಿರೀಶ್ ಪ್ರಸಾದ್ – ಅನಿವಾಸಿ – ಯು.ಕೆ ಕನ್ನಡಿಗರ ತಂಗುದಾಣ |
ಹಸಿರೇ ಉಸಿರು – ಗಿರೀಶ್ ಪ್ರಸಾದ್ |
September 24, 2021 ಸವಿತಾ ಸುರೇಶ್4 Comments |
ಪ್ರಿಯ ಓದುಗರೇ ! ಈ ವಾರದ ಸಾಪ್ತಾಹಕ ಸಂಚಿಕೆಯಲ್ಲಿ ಯುನೈಟೆಡ್ ಕಿಂಗ್ಡಮ್ ನ ಮಿಲ್ಟನ್ ಕೇನ್ಸ್ ನಿವಾಸಿಯಾದ ಹಾಗು ನಮ್ಮ್ ರೇಡಿಯೋ ವಾಟ್ಸ್ ಅಪ್ ಯು.ಕೆ? ಕಾರ್ಯಕ್ರಮದ RJ ಗಿರೀಶ್ ಪ್ರಸಾದ್ ಅವರ 'ಹಸಿರೇ ಉಸಿರು' ಶೀರ್ಷಿಕೆಯಡಿಯಲ್ಲಿ ಒಂದು ಪುಟ್ಟ ಲೇಖನ. ಓದಿ ಪ್ರತಿಕ್ರಿಯಿಸಿ. -ಸವಿ. ಸಂ |
ಲೇಖಕರ ನುಡಿಗಳು |
ಎಲ್ಲರಿಗೂ ನಮಸ್ಕಾರ. ನನ್ನ ಹೆಸರು ಗಿರೀಶ್ ಪ್ರಸಾದ್, ಯುನೈಟೆಡ್ ಕಿಂಗ್ಡಮ್ ನ ಮಿಲ್ಟನ್ ಕೇನ್ಸ್ ನಿವಾಸಿ. Astra Zeneca ಎಂಬ ಸಂಸ್ಥೆಯಲ್ಲಿ ಕೋವಿಡ್-೧೯ ಲಸಿಕೆಯ ಪ್ರಯೋಗ ತಂಡದಲ್ಲಿ ವಿಜ್ಞಾನಿಯಾಗಿ ನನ್ನ ವೃತ್ತಿ. 'ನಮ್ಮ್ ರೇಡಿಯೋ' ಖ್ಯಾತಿಯ ವಾಟ್ಸ್ ಅಪ್ ಯು.ಕೆ? ಕಾರ್ಯಕ್ರಮದಲ್ಲಿ RJ ಗಿರೀಶ್ ಪ್ರಸಾದ್ ಧ್ವನಿ ತಮಗೆಲ್ಲ ಚಿರ ಪರಿಚಿತ. ನನ್ನ ಈ ಇತ್ತೀಚಿನ ವೃತ್ತಿಪರ ಪ್ರಯೋಗದ ಅನುಭವ ಪ್ರಕೃತಿಯ ಹಸಿರಿನ ಮೌಲ್ಯ ಎಷ್ಟು ಪ್ರಮುಖ ಎಂದು ಅರಿವಾಯಿತು. ನನ್ನ ಈ ಒಂದು ಚಿಕ್ಕ ಲೇಖನ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ . |
💚💚 ಹಸಿರೇ ಉಸಿರು 💚💚 |
ಕೆಲವಾರು ವರುಷಗಳಿಂದ ಎಲ್ಲಾ ದಿನ ಪತ್ರಿಕೆಗಳಲ್ಲಿ, ಸುದ್ದಿ ಮಾಧ್ಯಮದಲ್ಲಿ , ಸಾಮಾಜಿಕ ಜಾಲ ತಾಣಗಳಲ್ಲಿ ಹೆಚ್ಚು ಸದ್ದು ಮಾಡಿರುವ, ಮಾಡುತ್ತಿರುವ ಸುದ್ದಿಎಂದರೆ "ಕಾಂಕ್ರೀಟ್ ಕಾಡಿನಿಂದಾಗಿ ಮುಂದೊಂದು ದಿನ ಆಮ್ಲಜನಕ ಖರೀದಿ ಮಾಡಬೇಕಾದ ಪರಿಸ್ಥಿತಿ ಎದುರಾಗಬಹುದು " ಎಂದು ! ಈ ಸುದ್ದಿಗೂ , ನಮಗೂ , ಯಾವುದೇ ರೀತಿಯ ಸಂಬಂಧವೇ ಇಲ್ಲ ಎನ್ನುವಂತೆ ಬುದ್ಧಿವಂತ ಮರೆವನ್ನು ಪ್ರದರ್ಶಿಸಿ, ಪ್ರಕೃತಿ ವಿನಾಶದ ಕಡೆ ಅಲಕ್ಷ್ಯ ಮಾಡಿದ ನಮಗೆಲ್ಲಾ ಕನಸಿನಲ್ಲೂ ಊಹಿಸದ ಆ ದಿನ ಇಷ್ಟು ಬೇಗ ಎದುರಾಗಿದ್ದು ದುರಂತವೇ ಸರಿ. ಯಾರ ಮಾತನ್ನೂ ಕೇಳದ ಅತಿಜಾಣ ಮಾನವನಿಗೆ ಒಂದು ಸಣ್ಣ ವೈರಾಣು 'ಹಸಿರಿಂದಲೇ ಉಸಿರು. ಹಸಿರಿಲ್ಲದ ಕಡೆ ಉಸಿರೂ ಇಲ್ಲ ಎಂಬ ನಿತ್ಯ ಪಾಠ ಕಲಿಸಿದ್ದು ವಿಪರ್ಯಾಸವೇ ಸರಿ. |
ಚಿತ್ರ ಕೃಪೆ : ಗಿರೀಶ್ ಪ್ರಸಾದ್ |
💚💚ಪಾಶ್ಚಿಮಾತ್ಯ ದೇಶಗಳನ್ನು ಎಲ್ಲಾ ವಿಷಯದಲ್ಲೂ ಅನುಸರಿಸೋ ನಾವುಗಳು. ಅದ್ಯಾಕೋ ಪರಿಸರ ಸಂರಕ್ಷಣೆ ವಿಚಾರದಲ್ಲಿ ಮಾತ್ರ ಕಡೆಗಣಿಸುತ್ತೇವೆ. 'ವಿದೇಶದಲ್ಲಿ ರಸ್ತೆಗಳು ಬಹಳ ಸ್ವಚ್ಛವಾಗಿರುತ್ತವೆಯಂತೆ' , ' ಮನೆ ಸುತ್ತ ಉದ್ಯಾನವನಗಳಿರುತ್ತವಂತೆ' , 'ವಿದೇಶದಲ್ಲಿ ಎಲ್ಲಿ ನೋಡಿದರೂ ಹಸಿರು ಕಂಗೊಳಿಸುತ್ತದೆಯಂತೆ' ಎಂದು ಮಾತಾಡುತ್ತಲೇ ನಮ್ಮ ಮನೆ ಅಂಗಳದಲ್ಲಿರುವ ತಾತನ ಕಾಲದ ಮರಗಳನ್ನು ನೆಲ ಸಮ ಮಾಡಿ ಆ ಜಾಗದಲ್ಲಿ ಒಂದು ರೂಮ್ , ಕಾರ್ ಪಾರ್ಕಿಂಗ್ ವ್ಯವಸ್ಥೆ ಮಾಡುವುದರಲ್ಲಿ ವ್ಯಸ್ಥವಾಗುತ್ತ ಇರೋದು ಸೋಜಿಗವೇ ಸರಿ. ಈ ಕರೋನ ಮಹಾಮಾರಿಯನ್ನು ಪಾಶ್ಚತ್ಯ ದೇಶಗಳು, ಅಲ್ಲಿನ ಜನರು ಎದುರಿಸಲು ಅತ್ಯಂತ ಮಹತ್ವದ ಪಾತ್ರ ವಹಿಸಿದ್ದು ಈ "ಹಸಿರೇ ". ಇಂದಿಗೂ ತನ್ನನ್ನೇ ನಂಬಿರುವ ಜನರ ಕೈ ಬಿಡದೆ , ಶುದ್ಧ ಆಮ್ಲಜನಕವನ್ನು 'ಉಸಿರಾಗಿ' ಕೊಡುತ್ತಿರುವ , ಸಸ್ಯಶಾಮಲೆಗೆ ಸಮರಾರು ? ಒಂದು ಸಣ್ಣ ವೈರಾಣು ಕಲಿಸಿರುವ ಜೀವನ ಪಾಠವನ್ನು ಈ ಜನ್ಮದಲ್ಲಿ ಮರೆಯದೇ , ಹಸಿರೇ ಉಸಿರು ಎಂಬ ಮಂತ್ರವನ್ನು ನಿತ್ಯಮಂತ್ರವಾಗಿಸಿಕೊಂಡು ಇನ್ನು ಮುಂದಾದರೂ ಹೆಚ್ಚು ಹೆಚ್ಚು ಗಿಡ-ಮರಗಳನ್ನು ಬೆಳೆಸಿ, ಉಳಿಸೋಣ. ಬನ್ನಿ ಉಸಿರಾಡೋಣ …🌴🌱🌲🍀🌴🌳 |
– ಗಿರೀಶ್ ಪ್ರಸಾದ್ |
4 thoughts on "ಹಸಿರೇ ಉಸಿರು – ಗಿರೀಶ್ ಪ್ರಸಾದ್" |
September 28, 2021 at 09:04 |
Subsets and Splits
No community queries yet
The top public SQL queries from the community will appear here once available.