text
stringlengths
0
61.5k
ಹೊಸ ಕಾನೂನು ಜಾರಿಗೆ ಬಂದ ನಂತರ ನಜೀರ್‌ಸಾಬರನ್ನು ಭೇಟಿಮಾಡಿ, 'ವಿಕೇಂದ್ರೀಕೃತ ವ್ಯವಸ್ಥೆಯಲ್ಲಿ ಮತ್ತೆ ಪಟೇಲ, ಶಾನುಭೋಗ, ಬಲಿಷ್ಠ, ಶ್ರೀಮಂತರ ಆಡಳಿತಕ್ಕೆ ದಾರಿ ಮಾಡಿಕೊಡಲಾಗಿದೆ' ಎಂದು ಆಕ್ಷೇಪ ವ್ಯಕ್ತಪಡಿಸಿದೆ. ಆಗ ನಜೀರ್‌ಸಾಬರು, 'ಈ ಸರ್ಕಾರದಲ್ಲಿ ಈಗ ಮಾಡಿದ್ದೇ ದೊಡ್ಡದು, ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮಾತ್ರ ನೀನು ಹೇಳಿದಂತೆ ಬದಲಾವಣೆ ತರಲು ಸಾಧ್ಯ' ಎಂದರು.
ಆಗ ಜಾರಿಗೊಳಿಸಿದ ಕಾಯ್ದೆಯಲ್ಲಿ ಪರಿಶಿಷ್ಟರಿಗೆ ಹಾಗೂ ಮಹಿಳೆಯರಿಗೆ ಸದಸ್ಯ ಸ್ಥಾನಗಳಿಗೆ ಮಾತ್ರ ಮೀಸಲು ಕಲ್ಪಿಸಲಾಗಿತ್ತು. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಇರಲಿಲ್ಲ. ಅಧಿಕಾರದ ವಿಕೇಂದ್ರೀಕರಣವಾಗಿತ್ತು, ಹಂಚಿಕೆ ಆಗಿರಲಿಲ್ಲ.
ಹೊಸ ಕಾಯ್ದೆಯಂತೆಯೇ 1986–87 ಡಿಸೆಂಬರ್–ಜನವರಿಯಲ್ಲಿ ಜಿಲ್ಲಾ ಪರಿಷತ್‌ಗಳಿಗೆ ಚುನಾವಣೆಗಳು ನಡೆದವು. ನನ್ನ ಗ್ರಾಮ ಹುಲಕೋಟಿ, ಪರಿಶಿಷ್ಟರಿಗೆ ಮೀಸಲಾಗಿದ್ದಿತು. ಸೊರಟೂರ ಮತಕ್ಷೇತ್ರದಿಂದ ಸ್ಪರ್ಧಿಸುವಂತೆ ನನಗೆ ಪಕ್ಷದಿಂದ ಒತ್ತಾಯಬಂತು. ಇದಕ್ಕೆ ಮಣಿದು, ಸ್ಪರ್ಧಿಸಿ ವಿಭಜನಾಪೂರ್ವ ಧಾರವಾಡ ಜಿಲ್ಲಾ ಪರಿಷತ್ ಸದಸ್ಯನಾದೆ. ಜೊತೆಗೆ ಜಿಲ್ಲಾ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕನಾದೆ.
ಇಂದಿರಾಗಾಂಧಿ ಅವರ ಹತ್ಯೆಯ ನಂತರ ದೇಶದಲ್ಲಿ ರಾಜೀವ್ ಗಾಂಧಿ ಅವರ ಯುಗಾರಂಭವಾಗಿತ್ತು. ದೂರದೃಷ್ಟಿಯ ಚಿಂತಕ ರಾಜೀವ್‌ಗಾಂಧಿ ಅವರು ಕ್ರಾಂತಿಕಾರಕ ಸುಧಾರಣೆಗಳನ್ನು ಮಾಡಿದರು. ವಾಟರ್ ಮಿಷನ್, ಆಯಿಲ್ ಸೀಡ್ಸ್ ಮಿಷನ್, ಅಪರೇಶನ್ ಬ್ಲ್ಯಾಕ್‌ ಬೋರ್ಡ್‌ ಮೊದಲಾದವುಗಳ ಮೂಲಕ, ಕಾಲಮಿತಿಗೊಳಪಟ್ಟು ಯೋಜನೆಗಳನ್ನು ಅನುಷ್ಠಾನಗೊಳಿಸುವ ಕೆಲಸ ಆರಂಭಿಸಿದರು. ಈ ಕಾಲದಲ್ಲಿಯೇ ಅವರು, 'ಅಭಿವೃದ್ಧಿಗಾಗಿ ಕೇಂದ್ರ ನೀಡುವ ಒಂದು ರೂಪಾಯಿಯಲ್ಲಿ 16 ಪೈಸೆ ಮಾತ್ರ ಫಲಾನುಭವಿಗೆ ದೊರೆಯುತ್ತದೆ' ಎಂದು ಹೇಳಿದ್ದರು. ಜನರಿಗೆ ತಲುಪಬೇಕಾದ ಹಣವನ್ನು ವ್ಯವಸ್ಥೆಯೇ ನುಂಗಿಹಾಕುವುದನ್ನು ತಪ್ಪಿಸಲು ಗ್ರಾಮ ಪಂಚಾಯಿತಿಗಳಿಗೆ ನೇರವಾಗಿ ಅನುದಾನ ಬಿಡುಗಡೆ ಮಾಡಿದರು.
ಅಧಿಕಾರ ವಿಕೇಂದ್ರೀಕರಣದಲ್ಲಿ ವಿಶ್ವಾಸವಿಟ್ಟಿದ್ದ ನಜೀರ್‌ಸಾಬರು ರಾಜ್ಯದಲ್ಲಿ ಗ್ರಾಮಸಭೆ ಕಲ್ಪನೆಯನ್ನು ಜಾರಿಗೆ ತಂದರು. ಗ್ರಾಮಸಭೆಗಳ ಬಗ್ಗೆ ಜನರು ಪ್ರಾರಂಭದಲ್ಲಿ ಬಹಳ ಆಸಕ್ತಿ ಹಾಗೂ ಆಶಾಭಾವನೆ ಹೊಂದಿದ್ದರು. ಆದರೆ ಗ್ರಾಮಸಭೆಗಳ ನಿರ್ಣಯಗಳು, ಅನುಷ್ಠಾನಗೊಳ್ಳದೆ ಅಲ್ಪ ಕಾಲದಲ್ಲಿಯೇ ಜನರು ಭ್ರಮನಿರಸನಗೊಂಡರು. ಗ್ರಾಮ ಪಂಚಾಯಿತಿಗಳಿಗೆ ಹಣಕಾಸು ಒದಗಿಸುತ್ತಿರಲಿಲ್ಲ. ಬರುವ ಹಣ ವಿದ್ಯುತ್ ಬಿಲ್‌, ಕುಡಿಯುವ ನೀರು ಸರಬರಾಜು ವೆಚ್ಚ ಸರಿದೂಗಿಸಲು ಸಾಕಾಗುತ್ತಿರಲಿಲ್ಲ. ಪ್ರಧಾನಿ ರಾಜೀವ್‌ಗಾಂಧಿ ಅವರು ಮಂಡಲ ಪಂಚಾಯಿತಿಗಳಿಗೆ ನೇರವಾಗಿ ಅನುದಾನ ಬಿಡುಗಡೆ ಮಾಡಿದ್ದರಿಂದ ಅವುಗಳಿಗೆ ಮಾತ್ರ ಅನುಕೂಲವಾಗಿತ್ತು.
ನಮ್ಮ ರಾಜ್ಯದಲ್ಲಿ ನಡೆದ ಅಧಿಕಾರ ವಿಕೇಂದ್ರೀಕರಣ ಪ್ರಯೋಗ ಮತ್ತು ಪಶ್ಚಿಮ ಬಂಗಾಳದ ಪಂಚಾಯಿತಿ ವ್ಯವಸ್ಥೆಗಳಿಂದ
ಪ್ರಭಾವಿತರಾಗಿದ್ದ ರಾಜೀವ್‌ಗಾಂಧಿ ಅವರು, ಸ್ಥಳೀಯ ಆಡಳಿತ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರಲು, ದೇಶದಾದ್ಯಂತ ಅಧ್ಯಯನ ಪ್ರವಾಸ ಕೈಗೊಂಡರು. ದಕ್ಷಿಣ ಭಾರತದ ಚಿಂತನ-ಮಂಥನ ಸಭೆಯನ್ನು ಬೆಂಗಳೂರಲ್ಲಿ ಆಯೋಜಿಸಲಾಗಿತ್ತು. ಈ ಸಭೆಗೆ ರಾಜ್ಯದ ಎಲ್ಲ ಜಿಲ್ಲಾ ಪರಿಷತ್ತುಗಳ ಅಧ್ಯಕ್ಷರನ್ನು ಹಾಗೂ ವಿರೋಧ ಪಕ್ಷದ ನಾಯಕರನ್ನು ಆಹ್ವಾನಿಸಲಾಗಿತ್ತು. ನಾನು ಧಾರವಾಡ ಜಿಲ್ಲಾ ಪರಿಷತ್ತಿನ ವಿರೋಧ ಪಕ್ಷದ ನಾಯಕನಾಗಿ ಈ ಸಭೆಯಲ್ಲಿ ಪಾಲ್ಗೊಂಡೆ.
'ಪಂಚಾಯಿತಿ ರಾಜ್‌ ವ್ಯವಸ್ಥೆಯಲ್ಲಿ ಸದಸ್ಯ ಸ್ಥಾನಕ್ಕೆ ಮಾತ್ರ ಮೀಸಲಾತಿ ನೀಡುವುದರಿಂದ, ಸಮಾಜದ ಬಲಿಷ್ಠ ವರ್ಗ ಅಥವಾ ಕೋಮಿನವರೇ, ಅಧಿಕಾರ ಗದ್ದುಗೆಗೇರುತ್ತಾರೆ. ಇದು ತಪ್ಪು, ಶ್ರೀಸಾಮಾನ್ಯರು, ಬಡವರು, ಪರಿಶಿಷ್ಟರು, ಹಿಂದುಳಿದ ವರ್ಗದವರು ಹಾಗೂ ಮಹಿಳೆಯರಿಗೆ ಅಧಿಕಾರ ಸ್ಥಾನಗಳಲ್ಲಿಯೂ ಮೀಸಲಾತಿ ನೀಡಬೇಕು' ಎಂದು ಬಲವಾಗಿ ವಾದ ಮಂಡಿಸಿದೆ. ರಾಜೀವ್‌ಗಾಂಧಿ ಅವರಿಗೆ ನನ್ನ ಸಲಹೆ ಹಿಡಿಸಿತು. ಅವರು ತಮ್ಮ ನೋಟ್‌ ಪ್ಯಾಡ್‌ನಲ್ಲಿ ಟಿಪ್ಪಣಿ ಮಾಡಿಕೊಂಡಿದ್ದನ್ನು ನಾನು ನೋಡಿದೆ. ಅನಂತರ ರೂಪಿಸಿದ ಸಂವಿಧಾನ ತಿದ್ದುಪಡಿ ಮಸೂದೆಯಲ್ಲಿ ಅಧಿಕಾರ ಸ್ಥಾನಗಳಿಗಳಿಗೂ ಮೀಸಲಾತಿ ನೀಡಲಾಗಿತ್ತು. ಈ ಸಂವಿಧಾನ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಸರಳವಾಗಿ ಅಂಗೀಕಾರವಾಯಿತು. ಆದರೆ ಎಲ್ಲ ವಿರೋಧ ಪಕ್ಷಗಳ ಸಂಘಟಿತ ವಿರೋಧದಿಂದಾಗಿ ರಾಜ್ಯಸಭೆಯಲ್ಲಿ ಪರಾಭವಗೊಂಡಿತು. ಇದರಿಂದ ರಾಜೀವ್‌ಗಾಂಧಿ ತುಂಬ ನೊಂದಿದ್ದರು.
ಸಂವಿಧಾನ ತಿದ್ದುಪಡಿ ಮಸೂದೆ ಸಿದ್ಧಪಡಿಸುವಲ್ಲಿ, ಅಂದು ರಾಜೀವ್‌ಗಾಂಧಿ ಅವರ ಕಚೇರಿಯಲ್ಲಿ ವಿಶೇಷಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಮಣಿಶಂಕರ ಅಯ್ಯರ್‌ ಅವರ ಪಾತ್ರವೂ ಮಹತ್ವದ್ದಾಗಿತ್ತು.
1989ರಲ್ಲಿ ಕೇಂದ್ರದಲ್ಲಿ ವಿ.ಪಿ. ಸಿಂಗ್‌ ನೇತೃತ್ವದಲ್ಲಿ ಕಾಂಗ್ರೆಸ್ಸೇತರ ಸರ್ಕಾರ ಅಧಿಕಾರಕ್ಕೆ ಬಂದಿತು. ಇವರಿಗೆ ಬಿಜೆಪಿ, ಕಮ್ಯುನಿಸ್ಟ್‌ ಸೇರಿ ಹಲವು ಪಕ್ಷಗಳು ಬೆಂಬಲಿಸಿದ್ದವು. ಇವರ ಅಧಿಕಾರದ ಅವಧಿಯಲ್ಲಿ ರಾಜೀವ್‌ಗಾಂಧಿ ಕಾಲದಲ್ಲಿ ರೂಪಿಸಿದ್ದ ಸಂವಿಧಾನ ತಿದ್ದುಪಡಿ ಮಸೂದೆ ಸಂಸತ್ತಿನ ಮುಂದೆ ಬರಲೇ ಇಲ್ಲ.
ಮಂಡಲ- ಕಮಂಡಲಗಳ ತಿಕ್ಕಾಟದಲ್ಲಿ, ಸರ್ಕಾರ ಪತನಗೊಂಡು, 1991ರಲ್ಲಿ ಪಾರ್ಲಿಮೆಂಟ್‌ಗೆ ಚುನಾವಣೆ ನಡೆಯುತ್ತಿದ್ದ ಕಾಲದಲ್ಲಿ, ರಾಜೀವ್‌ಗಾಂಧಿ ಅವರು ತಮಿಳುನಾಡಿನ ಶ್ರೀಪೆರಂಬುದೂರ್‌ನಲ್ಲಿ ಹತ್ಯೆಯಾದರು. ಆ ಚುನಾವಣೆ ನಂತರ ಕಾಂಗ್ರೆಸ್‌ ಪುನಃ ಅಧಿಕಾರಕ್ಕೆ ಬಂತು. ಅನುಭವಿ ರಾಜಕಾರಣಿ, ಮುತ್ಸದ್ದಿ ಪಿ. ವಿ. ನರಸಿಂಹರಾವ್‌ ಅವರು ಪ್ರಧಾನಿಯಾದರು. ರಾಜೀವ್‌ಗಾಂಧಿ ಅವರ ಕನಸಿನ ಪಂಚಾಯಿತಿರಾಜ್‌ ವ್ಯವಸ್ಥೆ ರೂಪಿಸಲು, ಸಂವಿಧಾನ ತಿದ್ದುಪಡಿ ಮಸೂದೆ ಮತ್ತೆ ಮುಂಚೂಣಿಗೆ ಬಂತು. 1992ರ ಡಿಸೆಂಬರ್‌ 22 ಮತ್ತು 23ರಂದು ಕ್ರಮವಾಗಿ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಒಪ್ಪಿತವಾಗಿ, 1993ರ ಏಪ್ರಿಲ್‌ 24ರಂದು ಗೆಜೆಟ್‌ನಲ್ಲಿ ಪ್ರಕಟವಾಯಿತು.
ನಜೀರ್‌ಸಾಬರು 'ಕಾಂಗ್ರೆಸ್ ಪಕ್ಷದ ಸಾಮಾಜಿಕ ನ್ಯಾಯದ ಬದ್ಧತೆ'ಯ ಬಗ್ಗೆ 1985ರಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯ ನಿಜವಾಯಿತು.
ನನ್ನ ಚಿಕ್ಕಪ್ಪನವರ ನಿಧನದಿಂದ ತೆರವಾದ ಗದಗ ಮತಕ್ಷೇತ್ರದಿಂದ ನಾನು, 1992ರ ಜೂನ್‌ನಲ್ಲಿ ಶಾಸಕನಾಗಿ ವಿಧಾನಸಭೆ ಪ್ರವೇಶಿಸಿದ್ದೆ. ಆಗ ಸಂವಿಧಾನದ 73ನೇ ತಿದ್ದುಪಡಿಗೆ ರಾಜ್ಯ ವಿಧಾನಮಂಡಲಗಳ ಒಪ್ಪಿಗೆ ಪಡೆಯುವ ಪ್ರಕ್ರಿಯೆ ನಡೆದಿತ್ತು. ರಾಜ್ಯದ ವಿಧಾನಸಭೆಯಲ್ಲಿ ಚರ್ಚೆ ನಡೆಯುತ್ತಿದ್ದಾಗ ಅಂದಿನ ವಿಧಾನಸಭಾಧ್ಯಕ್ಷ ವಿ.ಎಸ್. ಕೌಜಲಗಿ ಅವರಿಗೆ ನಾನು ಚೀಟಿ ಕಳಿಸಿ, ನನಗೆ ಮಾತನಾಡಲು ಅವಕಾಶ ನೀಡಲು ವಿನಂತಿಸಿದೆ. ಅವರು ಅವಕಾಶ ಕೊಟ್ಟರು. ನನ್ನ ಅಂದಿನ ಭಾಷಣದಲ್ಲಿಯೂ ಅಧಿಕಾರ ಸ್ಥಾನಗಳಿಗೆ ಮೀಸಲಾತಿ ನಿಗದಿ ಮಾಡಿದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದೆ. ಇದಾದ ಮರುದಿನ ಅಂದಿನ ಪಂಚಾಯಿತಿರಾಜ್‌ ಸಚಿವರಾದ ಎಂ.ವೈ. ಘೋರ್ಪಡೆ ಅವರನ್ನು ಭೇಟಿಯಾಗಿ, 'ಸಂವಿಧಾನದ 73ನೇ ತಿದ್ದುಪಡಿ ಜಾರಿಗೆ ಬರುವುದು ನಿಶ್ಚಿತವಾದಾಗ, ಈ ತಿದ್ದುಪಡಿಯ ಆಶಯಗಳನ್ನು ಈಡೇರಿಸುವ, ರಾಜ್ಯದ ಕಾನೂನು ರಚನೆಯಾಗಬೇಕು ಹಾಗೂ ಅದು ರಾಷ್ಟ್ರದಲ್ಲಿ ಮೊಟ್ಟ ಮೊದಲಿಗೆ ಜಾರಿಗೆ ತಂದ ಕೀರ್ತಿ ತಮ್ಮದಾಗಬೇಕು'ಎಂದು ಕೋರಿದೆ.
ತಿದ್ದುಪಡಿ ಮಸೂದೆಯಲ್ಲಿ ಪರಿಶಿಷ್ಟರು ಹಾಗೂ ಮಹಿಳೆಯರಿಗೆ ಅಧಿಕಾರ ಸ್ಥಾನಗಳಲ್ಲಿಯೂ ಮೀಸಲಾತಿ ನೀಡಲಾಗಿದ್ದಿತು. ಆದರೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಅಧಿಕಾರ ರಾಜ್ಯಗಳಿಗೆ ನೀಡಲಾಗಿತ್ತು. ಮಂಡಲ ವರದಿಯ ಶಿಫಾರಸುಗಳನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಾಗ ರಾಷ್ಟ್ರದಾದ್ಯಂತ ಮೀಸಲು ವಿರೋಧಿ ಚಳವಳಿ ಆರಂಭವಾಗಿತ್ತು.
ಸರ್ಕಾರವನ್ನು ಬೆಂಬಲಿಸುವ ಪಕ್ಷವೇ ಹೋರಾಟಕ್ಕೆ ಇಳಿದಿತ್ತು. ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಸಹಜವಾಗಿ ಒಪ್ಪಿಕೊಳ್ಳುವ ದೃಷ್ಟಿಯಿಂದ ಅದರ ವ್ಯಾಖ್ಯೆಯಲ್ಲಿ ಬಡ ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯದವರು ಬರುವಂತೆ ಮಾಡಿದ್ದು ಆಗಿನ ಸರ್ಕಾರದ ಜಾಣ್ಮೆಯ ನಡೆಯಾಗಿದ್ದಿತು. ಅವಕಾಶ ವಂಚಿತರಿಗೆ ಅಧಿಕಾರ ಗದ್ದುಗೆಯಲ್ಲಿ ಕೂಡಿಸುವ ಗುರಿ ಸಾಧನೆಯಲ್ಲಿ ಅಂದಿನ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಹಾಗೂ ಇಲಾಖೆಯ ಸಚಿವ ಎಂ.ವೈ. ಘೋರ್ಪಡೆ ಅವರ ಜಾಣ್ಮೆ ಹಾಗೂ ಬದ್ಧತೆ ಮೆಚ್ಚುವಂಥದ್ದು.
ರಾಜ್ಯದಲ್ಲಿ 1993ರ ಕರ್ನಾಟಕ ಪಂಚಾಯಿತಿರಾಜ್‌ ಅಧಿನಿಯಮವನ್ನು 1993ರ ಮೇ 10ರಂದು ಜಾರಿಗೊಳಿಸಲಾಯಿತು. ಕ್ರಾಂತಿಕಾರಿ ಕಾಯ್ದೆ ಜಾರಿಯಾದ ಐತಿಹಾಸಿಕ ದಿನ ಇದಾಯಿತು. 'ರಕ್ತರಹಿತ ಸಾಮಾಜಿಕ ಮೌನ ಕ್ರಾಂತಿ'ಗೆ ಕಾರಣವಾದ ಕಾಯ್ದೆ ಜಾರಿಯಾದ ಪುಣ್ಯದಿನವಿದು. ಈ ಹೊಸ ಕಾನೂನಿನನ್ವಯ ಅವಕಾಶ ವಂಚಿತರೆಲ್ಲಾ ಅಧಿಕಾರ ಪಡೆದುಕೊಂಡಿದ್ದು ಇತಿಹಾಸ. ಗ್ರಾಮದಲ್ಲಿಯ ಬಲಿಷ್ಠರ ಅಧಿಕಾರ ಕಿತ್ತು, ಅವಕಾಶವಂಚಿತರಿಗೆ ಅಧಿಕಾರ ನೀಡಿದ್ದರಿಂದ ಅಲ್ಲಿಯವರೆಗೆ ಅಧಿಕಾರ ಅನುಭವಿಸಿದ ಜನರು ಸಿಟ್ಟಾಗಿದ್ದರು. ಪರಿಣಾಮ 1994ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪರಾಭವಗೊಂಡಿತು. ಎಚ್‌.ಡಿ. ದೇವೇಗೌಡರ ನೇತೃತ್ವದಲ್ಲಿ ಜನತಾ ಪಕ್ಷದ ಸರ್ಕಾರ ರಚನೆಯಾಯಿತು. ಅವರ ಸರ್ಕಾರ ಹಿಂದುಳಿದ ವರ್ಗದವರ ಮೀಸಲಾತಿಯನ್ನು ಮತ್ತೆ ವಿಭಾಗಿಸಿ, ಅತಿ ಹಿಂದುಳಿದ ಜಾತಿಯವರಿಗೆ ಶೇ 80 ಹಾಗೂ ಒಕ್ಕಲಿಗ, ಲಿಂಗಾಯತ, ಇತರ ಅವಕಾಶ ಪಡೆದ ಜಾತಿಗಳ ಬಡವರಿಗೆ ಶೇ 20 ಮೀಸಲಾತಿ ನೀಡಿತು.
ಹಿಂದೆ, ಗ್ರಾಮದ ಮುಖ್ಯಸ್ಥರು ಕೂಡುವ ಕಟ್ಟೆಯ ಮೇಲೆ ಸಹ ಕೂಡಲು ಸಾಧ್ಯವಾಗದಿದ್ದ ಪರಿಶಿಷ್ಟ ಜಾತಿಯ ಜನ, ಬಲಿಷ್ಠರ ಮುಂದೆ ಅಂಜುತ್ತ ಕೈ ಕಟ್ಟಿ ನಿಲ್ಲುತ್ತಿದ್ದ ಜನ, ತಲೆಮೇಲೆ ಸೆರಗು ಹೊತ್ತು ಬಾಯಿ ಮುಚ್ಚಿಕೊಂಡಿರುತ್ತಿದ್ದ ಮಹಿಳೆಯರು, ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷರಾಗಿದ್ದಾರೆ. ಈ ಸಾಮಾಜಿಕ ಬದಲಾವಣೆಗೆ ಕಾರಣವಾದ ಮೇ 10 ಅವಿಸ್ಮರಣೀಯ ದಿನ. ಅದಕ್ಕಾಗಿ 2017ರ ಮೇ 10 ರಿಂದ 2018ರ ಮೇ 9 ರವರೆಗೆ 'ಸಮಾನತೆಯ ರಕ್ತರಹಿತ ಮೌನ ಕ್ರಾಂತಿಯ ರಜತ ಮಹೋತ್ಸವ'ವನ್ನಾಗಿ ಆಚರಿಸಬೇಕಾಗಿದೆ. ತನ್ಮೂಲಕ ಯುವಜನಾಂಗದಲ್ಲಿ ಈ ವ್ಯವಸ್ಥೆ ರೂಪುಗೊಂಡ ಹಿನ್ನೆಲೆ ಹಾಗೂ ಹೋರಾಟದ ಬಗ್ಗೆ ಜಾಗೃತಿ ಮೂಡಿಸಬೇಕು.
ಈ ಹೋರಾಟ ನಿರಂತರವಾಗಿ ನಡೆಸಲು ಹಾಗೂ ಈಗಿರುವ ವ್ಯವಸ್ಥೆ ಬಲಪಡಿಸಲು ರಜತಮಹೋತ್ಸವ ವರ್ಷ ಪರ್ವಕಾಲವಾಗಲೆಂದು ಹಾರೈಸುವೆ. ಎಲ್ಲೆಡೆ ಪಂಚಾಯಿತಿ ರಾಜ್‌ ವ್ಯವಸ್ಥೆಯ ಅರಿವಿನ ಹರಿವು ವಿಸ್ತರಿಸಲಿ. ಗಾಂಧೀಜಿಯವರ ಕನಸಿನ ಗ್ರಾಮಸ್ವರಾಜ್ಯ ಅಸ್ತಿತ್ವಕ್ಕೆ ಬರಲಿ.
10 ಲಕ್ಷಕ್ಕೂ ಅಧಿಕ ಮುಸ್ಲಿಮ ಮತದಾರರು ನಾಪತ್ತೆ! | SahilOnline
10 ಲಕ್ಷಕ್ಕೂ ಅಧಿಕ ಮುಸ್ಲಿಮ ಮತದಾರರು ನಾಪತ್ತೆ!
Source: sonews | By Staff Correspondent | Published on 27th March 2018, 4:48 PM | State News | National News | Special Report | Don't Miss |
ಬೆಂಗಳೂರು: ಚುನಾವಣೆಯ ಹೊಸ್ತಿಲಲ್ಲಿ ನಿಂತಿರುವ ಕರ್ನಾಟಕದಲ್ಲಿ ಮತ ಚಲಾಯಿಸಲು ಅರ್ಹರಾದ ಹತ್ತು ಲಕ್ಷಕ್ಕೂ ಅಧಿಕ ಮುಸ್ಲಿಮರ ಹೆಸರುಗಳು ಮತದಾರರ ಪಟ್ಟಿಯಿಂದ ನಾಪತ್ತೆಯಾಗಿರುವ ಆಘಾತಕಾರಿ ಅಂಶವನ್ನು ದಿಲ್ಲಿ ಮೂಲದ ಸಂಸ್ಥೆಯೊಂದು ಬಯಲು ಮಾಡಿದೆ.
ದಿಲ್ಲಿ ಮೂಲದ ನೀತಿ ಅಭಿವೃದ್ಧಿ ಸಂಶೋಧನೆ ಮತ್ತು ಸಮಾಲೋಚನೆ ಕೇಂದ್ರವು (ಸಿಆರ್‌ಡಿಡಿಪಿ) ನಡೆಸಿದ ಅಧ್ಯಯನದ ವರದಿಯ ಪ್ರಕಾರ, ಸಂಸ್ಥೆಯು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಸಿದ ಪ್ರಾಥಮಿಕ ವಿಶ್ಲೇಷಣೆಯಲ್ಲಿ ಹತ್ತು ಲಕ್ಷಕ್ಕೂ ಅಧಿಕ ಅರ್ಹ ಮುಸ್ಲಿಮರ ಹೆಸರುಗಳು ಮತದಾರರ ಪಟ್ಟಿಯಲ್ಲಿಲ್ಲ ಮತ್ತು ಅವರ ಬಳಿ ಮತದಾರರ ಗುರುತಿನ ಚೀಟಿ ಕೂಡಾ ಇಲ್ಲ ಎಂಬುದು ತಿಳಿದುಬಂದಿದೆ.
ಸಂಸ್ಥೆಯು ಬೆಂಗಳೂರಿನ ಶಿವಾಜಿನಗರ, ಪುಲಕೇಶಿನಗರ (ಮುಸ್ಲಿಂ ಬಾಹುಳ್ಯದ ಫ್ರೇಝರ್ ಟೌನ್ ಸೇರಿದಂತೆ), ಹೆಬ್ಬಾಳ (ಅನೇಕ ಮುಸ್ಲಿಂ ಪ್ರದೇಶಗಳೂ ಸೇರಿ), ಜಯನಗರ, ಪದ್ಮನಾಭನಗರ, ಟಿ.ಎಂ ಲೇಔಟ್ ಹಾಗೂ ಹುಬ್ಬಳ್ಳಿ ಪೂರ್ವ ಮತ್ತು ಕೋಲಾರ ಮುಂತಾದ ಎಂಟು ವಿಧಾನಸಭಾ ಕ್ಷೇತ್ರಗಳ್ಲಲಿ ಅಂಕಿಅಂಶ ವಿಶ್ಲೇಷಣೆಯನ್ನು ಸಂಪೂರ್ಣಗೊಳಿಸಿದೆ. ಈ ವಿಶ್ಲೇಷಣೆಯಲ್ಲಿ 65,258 ಕುಟುಂಬಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನಮೂದಿಸಲಾಗದ ವಯಸ್ಕ ವ್ಯಕ್ತಿಗಳು ಇರುವುದು ಪತ್ತೆಯಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಅಬುಸಲೇಹ್ ಶರೀಫ್ ತಿಳಿಸಿದ್ದಾರೆ.
ಶಿವಾಜಿನಗರದಲ್ಲಿ 18,453 ಕುಟುಂಬಗಳನ್ನು ಗುರುತಿಸಲಾಗಿದ್ದು, ಈ ಪೈಕಿ 8,795 ಕುಟುಂಬಗಳಲ್ಲಿ ಕೇವಲ ಪ್ರತಿ ಮನೆಯಲ್ಲಿ ತಲಾ ಒಬ್ಬರ ಹೆಸರು ಮಾತ್ರ ಮತದಾರರ ಪಟ್ಟಿಯಲ್ಲಿದೆ. ಆಶ್ಚರ್ಯವೆಂದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಒಬ್ಬ ವ್ಯಕ್ತಿಯಿರುವ ಕುಟುಂಬಗಳ ಪ್ರಮಾಣ ಶೇ.4.2 ಮಾತ್ರ. ಇದನ್ನು ಪರಿಗಣಿಸಿದರೆ, 790 ಮನೆಗಳಲ್ಲಿ ಮಾತ್ರ ಒಬ್ಬ ಮತದಾರ ಇರಬೇಕಿತ್ತು. ಶಿವಾಜಿನಗರ ಒಂದರಲ್ಲೇ ಸುಮಾರು 8,002 ಮುಸ್ಲಿಂ ಕುಟುಂಬಗಳಲ್ಲಿ ನೋಂದಾಯಿಸಲಾಗದ ವಯಸ್ಕರು ಇದ್ದಾರೆ ಎಂದು ವರದಿ ತಿಳಿಸಿದೆ. ಸಿಆರ್‌ಡಿಡಿಪಿಯು ಮುಸ್ಲಿಂ ಮತದಾರರು ಎಂಬ ಆ್ಯಂಡ್ರಾಯ್ಡ್ ಆ್ಯಪನ್ನು ಅಭಿವೃದ್ಧಿಪಡಿಸಿದೆ. ನೋಂದಾವಣೆಗೊಳ್ಳದ ಮತದಾರರು ಈ ಆ್ಯಪ್‌ನಲ್ಲಿ ತಮ್ಮ ವಿಳಾಸವನ್ನು ಸರಿಯಾಗಿ ನಮೂದಿಸುವ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಅರ್ಜಿ ಹಾಕಬಹುದು ಮತ್ತು ಗುರುತಿನ ಚೀಟಿಯನ್ನು ಪಡೆಯಬಹುದು ಎಂದು ಅಬುಸಲೇಹ್ ತಿಳಿಸಿದ್ದಾರೆ. ಸಿಆರ್‌ಡಿಡಿಪಿಯು ಎಲ್ಲ 224 ಕ್ಷೇತ್ರಗಳ ವಿಶ್ಲೇಷಣೆಯನ್ನು ಸಂಪೂರ್ಣಗೊಳಿಸಲಿದೆ. ನಂತರ ಎಲ್ಲ ನಾಪತ್ತೆಯಾಗಿರುವ ಮತದಾರರು ತಮ್ಮ ಹೆಸರುಗಳನ್ನು ಆ್ಯಂಡ್ರಾಯ್ಡ್ ಆ್ಯಪ್ ಅಥವಾ ಜಾಲತಾಣದ ಮೂಲಕ ನಮೂದಿಸಿಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರತಿ ವಿಧಾನಸಭಾ ಕ್ಷೇತ್ರದಿಂದಲೂ ಸ್ವಯಂಸೇವಕರು ಈ ಕಾರ್ಯದಲ್ಲಿ ತನ್ನ ಜೊತೆ ಕೈಜೋಡಿಸುವಂತೆ ಸಿಆರ್‌ಡಿಡಿಪಿ ಮನವಿ ಮಾಡಿದೆ. ಪ್ರತಿಯೊಬ್ಬ ಸ್ವಯಂಸೇವಕನಿಗೂ 20ರಿಂದ 25 ಕುಟುಂಬಗಳ ಅರ್ಹ ಮತದಾರರ ಹೆಸರನ್ನು ಪಟ್ಟಿಯಲ್ಲಿ ಸೇರಿಸುವ ಜವಾಬ್ದಾರಿಯನ್ನು ನೀಡಲಾಗುವುದು. ಮನೆಮನೆಗಳಿಗೆ ಭೇಟಿ ನೀಡುವ ಕಾರ್ಯಕರ್ತರು ಮತದಾರರ ಗುರುತಿನ ಚೀಟಿಗಾಗಿ ಹೊಸದಾಗಿ ಅರ್ಜಿ ಹಾಕುವವರ ಮೊಬೈಲ್ ಸಂಖ್ಯೆಯನ್ನು ಆ್ಯಪ್ ಮೂಲಕ ನಮೂದಿಸಲಿದ್ದಾರೆ ಎಂದು ಅಬುಸಲೇಹ್ ತಿಳಿಸಿದ್ದಾರೆ. ಈ ಆ್ಯಪನ್ನು ಮಾರ್ಚ್ 17ರ ತನಕ 6,000 ಕಾರ್ಯಕರ್ತರು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಸಿಆರ್‌ಡಿಡಿಪಿ ಈಗಾಗಲೇ 3,026 ಕಾರ್ಯಕರ್ತರನ್ನು ಪರೀಕ್ಷಾರ್ಥವಾಗಿ ಅಭಿಯಾನದಲ್ಲಿ ತೊಡಗಿಸಿದೆ. ಈ ಕಾರ್ಯಕರ್ತರು ಪ್ರತಿಮನೆಗೆ ತೆರಳಿ ನೋಂದಾವಣೆಯಾಗದ ಮತದಾರರು ತಮ್ಮ ಗುರುತಿನ ಚೀಟಿ ಪಡೆಯಲು ಸಹಾಯ ಮಾಡಲು ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಅಬುಸಲೇಹ್ ತಿಳಿಸಿದ್ದಾರೆ.
ರೈತ ಮಹಿಳಾ ಉದ್ದಿಮೆದಾರರನ್ನು ಪ್ರೋತ್ಸಾಹಿಸಲು ಕೃಷಿ ವಿವಿ ಸರ್ಕಾರೇತರ ಸಂಸ್ಥೆಯೊಂದಿಗೆ ಒಡಂಬಡಿಕೆ: ಜನಗೌಡರ – UKSuddi
ರೈತ ಮಹಿಳಾ ಉದ್ದಿಮೆದಾರರನ್ನು ಪ್ರೋತ್ಸಾಹಿಸಲು ಕೃಷಿ ವಿವಿ ಸರ್ಕಾರೇತರ ಸಂಸ್ಥೆಯೊಂದಿಗೆ ಒಡಂಬಡಿಕೆ: ಜನಗೌಡರ
ಧಾರವಾಡ: ಮಹಿಳಾ ಉದ್ದಿಮೆಗಳಿಗೆ ಉದ್ಯಮ ಆರಂಭಿಸಲು ತಿಳುವಳಿಕೆ, ತರಬೇತಿ, ತಂತ್ರಜ್ಞಾನ ಅಳವಡಿಕೆ ಹಾಗೂ ಮಾರುಕಟ್ಟೆ ಬಲವರ್ಧನೆ ಕುರಿತು ರೈತ ಮಹಿಳೆಯರನ್ನು ಕೇಂದ್ರವಾಗಿ ಇಟ್ಟುಕೊಂಡು ಕಾರ್ಯಕ್ರಮ ಆಯೋಜಿಸಲು ಸರ್ಕಾರೇತರ ಸಂಸ್ಥೆ ಮಹಿಳಾ ಉದ್ದಿಮೆದಾರರ ಶ್ರೇಯೋಭಿವೃದ್ಧಿ ಸಂಘದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಎಸ್.ಜನಗೌಡರ ಹೇಳಿದರು.
ಕುಲಪತಿಗಳ ಕಚೇರಿ ಸಭಾಂಗಣದಲ್ಲಿ ಒಡಂಬಡಿಕೆ ಕುರಿತು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಧಾರವಾಡ ಕೃಷಿ ವಿಶ್ವವಿದ್ಯಾಲಯವು ಅನೇಕ ವರ್ಷಗಳಿಂದ ಮಹಿಳಾ ಸಬಲೀಕರಣ ಹಾಗೂ ರೈತ ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ವಿವಿಧ ವಿಭಾಗಗಳ ಮೂಲಕ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಮಹಿಳಾ ಉದ್ಯಮಶೀಲತೆಗಾಗಿ ಶ್ರಮಿಸುತ್ತಿರುವ ವೇದಾ ಸಂಘದೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವದರೊಂದಿಗೆ ಮಹಿಳಾ ಉದ್ದಿಮೆಗಳಿಗೆ ತಿಳುವಳಿಕೆ ಕಾರ್ಯಕ್ರಮಗಳನ್ನು ಆಯೋಜಿಸುವುದು, ಧಾರವಾಡ ಕೃಷಿ ವಿಶ್ವವಿದ್ಯಾಲಯವು ಅಭಿವೃದ್ಧಿಪಡಿಸಿ ಮಾರಾಟ ಮಾಡಲ್ಪಡುವ ತಂತ್ರಜ್ಞಾನಗಳನ್ನು ಪ್ರಚುರಗೊಳಿಸುವುದು, ಉದ್ಯಮಶೀಲತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಮಹಿಳಾ ಉದ್ದಿಮಿಗಳಿಗೆ ತಾಂತ್ರಿಕ ತರಬೇತಿ ನೀಡುವುದು, ವಿಶ್ವೇಶ್ವರಯ್ಯ ಟ್ರೇಡ್ ಸೆಂಟರ್ ಹಾಗೂ ಕರ್ನಾಟಕ ಉದ್ಯೋಗ ಮಿತ್ರ ಇವರೊಂದಿಗೆ ಸೇರಿ ಇ-ಮಾರಾಟ ತರಬೇತಿ ಆಯೋಜಿಸುವುದು ಮತ್ತು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರದರ್ಶನ, ಕಾರ್ಯಕ್ರಮಗಳಲ್ಲಿ ಮಹಿಳಾ ಉದ್ದಿಮಿದಾರರು ಭಾಗವಹಿಸಲು ಅನುವು ಮಾಡಿಕೊಡುವುದು ಈ ಒಡಂಬಡಿಕೆಯ ಉದ್ದೇಶವಾಗಿದೆ ಎಂದು ಕುಲಪತಿ ಪ್ರೊ.ಜನಗೌಡರ ಹೇಳಿದರು.
ಮುಂದಿನ ಐದು ವರ್ಷಗಳ ಅವಧಿಯಲ್ಲಿ ಸುಮಾರು ಐದು ಸಾವಿರ ಮಹಿಳಾ ಉದ್ದಿಮೆದಾರರನ್ನು ಕರಕುಶಲತೆ, ವಸ್ತ್ರ ಮತ್ತು ಉಡುಪು ವಿನ್ಯಾಸ, ನಾರಿನ ಕರಕುಶಲ ವಸ್ತುಗಳ ಉತ್ಪಾದನೆ, ಆಹಾರ ಪದಾರ್ಥಗಳ ಮೌಲ್ಯವರ್ಧನೆ, ಕೈಚೀಲಗಳ ತಯಾರಿಕೆ, ಆಭರಣಗಳ ವಿನ್ಯಾಸ ಹಾಗೂ ಉತ್ಪಾದನೆ, ಕಲಾ ಹಾಗೂ ಚಿತ್ರಕಲೆ ಮತ್ತು ಇವೆಂಟ್ ಮ್ಯಾನೇಜ್‍ಮೆಂಟ್ ಮುಂತಾದ ಕಾರ್ಯಚಟುವಟಿಕೆಗಳನ್ನು ಅಳವಡಿಸುವ ಮೂಲಕ ರೈತ ಮಹಿಳೆಯರನ್ನು ಸಬಲೀಕರಣಗೊಳಿಸಲಾಗುವುದು ಎಂದು ಅವರು ತಿಳಿಸಿದರು.
ಸಮೀಕ್ಷೆಯ ಮೂಲಕ ಆಯ್ಕೆ ಮಾಡಿದ ಗ್ರಾಮೀಣ ಮಹಿಳಾ ಉದ್ದಿಮೆದಾರರಿಗೆ ನಮ್ಮ ಸಮುದಾಯ ವಿಜ್ಞಾನ ಮಹಾವಿದ್ಯಾಲಯವು ಅಭಿವೃದ್ಧಿಪಡಿಸಿದ ಉದ್ದಿಮೆಶೀಲತಾ ಅಭಿವೃದ್ಧಿ ಕೌಶಲ್ಯ, ನೈಪುಣ್ಯತೆಯ ತಂತ್ರಜ್ಞಾನಗಳನ್ನು ತರಬೇತಿ ಮೂಲಕ ಕಾಲಕಾಲಕ್ಕೆ ನೀಡಲಾಗುತ್ತದೆ ಎಂದು ಕುಲಪತಿಗಳು ಹೇಳಿದರು.
ಈ ಸಂದರ್ಭದಲ್ಲಿ ವೇದಾ ಸಂಘದ ಅಧ್ಯಕ್ಷೆ ರತಿ ಶ್ರೀನಿವಾಸನ್ ಹಾಗೂ ಕಾರ್ಯದರ್ಶಿ ಜಯಶ್ರೀ ಹಿರೇಮಠ ಅವರು ಸಂಘದ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದರು.
ಶ್ರೀಗಂಧದ ಮರ ಕಡಿದು ಕಳ್ಳ ಸಾಗಾಣೆ- ಮೂವರ ಬಂಧನ – Public TV
ಬಳ್ಳಾರಿ: ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಪ್ರಾದೇಶಿಕ ಅರಣ್ಯ ವಲಯದ ವ್ಯಾಪ್ತಿಗೆ ಒಳಪಡುವ ತುಂಬಿನಕೇರಿ ಕಾಯ್ದಿಟ ಅರಣ್ಯ ಪ್ರದೇಶದ ತುಂಬಿನಕೇರಿ ಸರ್ವೆ ನಂಬರ್ 176ರಲ್ಲಿ ಅಕ್ರಮವಾಗಿ ಅರಣ್ಯ ಪ್ರವೇಶಿಸಿ ಎರಡು ಶ್ರೀಗಂಧದ ಮರಗಳನ್ನ ಕಡಿದು ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಮೂವರನ್ನ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಅಂದಾಜು 10 ಕೆ.ಜಿ ತೂಕದ 30 ಶ್ರೀಗಂಧ ತುಂಡುಗಳನ್ನ ಹಾಗೂ ಮರ ಕತ್ತರಿಸಲು ಬಳಸಲಾದ ಕೊಡಲಿ, ಬಾಯಿಗುದ್ದಲಿ, ಕಂದೀಲು ಹಾಗೂ 2 ಮೊಬೈಲ್ ಗಳನ್ನ ಅರಣ್ಯ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ನೆರೆಯ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ನಲ್ಲೂರು ಕ್ಯಾಂಪಿನ ನಿವಾಸಿಯಾಗಿರುವ ಶಬ್ಬೀರ್ ಅಹಮ್ಮದ್, ಅಮಾ ನುಲ್ಲಾ, ನೂರ್ ಜಹಾನ್ ಎಂಬವರನ್ನು ಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳ ತಂಡವು ಬಳ್ಳಾರಿಯ ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬಳ್ಳಾರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿದ್ದರಾಮಪ್ಪ ಎಂ. ಚಳಕಾಪುರೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಡಿ. ಮೋಹನ್ ಇವರ ಮಾರ್ಗದರ್ಶನದಲ್ಲಿ ಹಡಗಲಿ ವಲಯ ಅರಣ್ಯ ಅಧಿಕಾರಿ ಕಿರಣ್ ಕುಮಾರ್ ಕಲ್ಲಮ್ಮನವರ, ಉಪ ವಲಯ ಅರಣ್ಯ ಅಧಿಕಾರಿ ಡಿ.ವೈ ಸಾಗರ, ಅರಣ್ಯ ರಕ್ಷಕ ದುಷ್ಯಂತಗೌಡ, ಅರಣ್ಯ ವೀಕ್ಷಕ ಚಂದ್ರನಾಯ್ಕ, ಸಂತೋಷ್ ಹಾವನೂರು ಈ ದಾಳಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಖ್ಯಾತ ನಟ ಕಮಲ್ ಹಾಸನ್ ವಿರುದ್ಧ ಹೊಸ ವಿವಾದ - Mahanayaka
11:17 PM Friday 20 - May 2022
ಖ್ಯಾತ ನಟ ಕಮಲ್ ಹಾಸನ್ ವಿರುದ್ಧ ಹೊಸ ವಿವಾದ
ಕಮಲ್ ಹಾಸನ್ ನಟನೆಯ ವಿಕ್ರಮ್ ಸಿನಿಮಾದ ಹಾಡು ಇತ್ತೀಚಿಗಷ್ಟೆ ಬಿಡುಗಡೆಯಾಗಿತ್ತು ಇದರಲ್ಲಿರುವ 'ಪಾತಾಳ ಪಾತಾಳ.' ಎನ್ನುವ ಸಾಹಿತ್ಯವಿರುವ ಹಾಡಿನಲ್ಲಿ ಕೇಂದ್ರ ಸರ್ಕಾರವನ್ನು ಅಣಕು ಮಾಡಲಾಗಿದೆ ಎನ್ನುವ ಕಾರಣಕ್ಕೆ ದೂರು ದಾಖಲಾಗಿದೆ.
ಸದ್ಯ ವಿವಾದದಲ್ಲಿ ಸಿಲುಕಿರುವ ಪಾತಾಳ್ ಪಾತಾಳ್ ಹಾಡನ್ನು ಕಮಲ್ ಹಾಸನ್ ಅವರೇ ಬರೆದು ಹಾಡಿರುವ ಹಾಡಾಗಿದೆ. ಈ ಹಾಡಿನಲ್ಲಿ ಕೇಂದ್ರ ಸರ್ಕಾರವನ್ನು ಅಣಕಿಸುವ ಸಾಲುಗಳಿವೆ ಎಂದು ಚೆನ್ನೈನ ಕೊರುಕ್ಕುಪೆಟ್ಟೈ ನಿವಾಸಿಯಾದ ಸೆಲ್ವಂ ಅವರು ಕಮಲ್ ವಿರುದ್ಧ ದೂರು ದಾಖಲಿಸಿದ್ದಾರೆ.
ಕೇಂದ್ರ ಸರ್ಕಾರವನ್ನು ಅಣಕಿಸಲಾಗಿದೆ ಮತ್ತು ಕೊವಿಡ್ ನಿಧಿ ಸಂಗ್ರಹ ಹಣದ ಬಗ್ಗೆ ನಕಾರಾತ್ಮಕ ವಾಗಿ ಸಾಲಿನಲ್ಲಿ ಉಲ್ಲೇಖಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಹಾಡಿನ ಅರ್ಥ 'ಖಜಾನೆಯಲ್ಲಿ ಹಣವಿಲ್ಲ, ಜ್ವರ ಮತ್ತು ರೋಗಗಳು ಹೆಚ್ಚುತ್ತಿರುವ ಸಮಯದಲ್ಲಿ ಕೇಂದ್ರ ಸರ್ಕಾರ ಮಾಡಿದ ತಪ್ಪಿನಿಂದಾಗಿ ಏನು ಉಳಿದಿಲ್ಲ.ಕೀ ಈಗ ಕಳ್ಳನ ಬಳಿ ಇದೆ' ಎನ್ನುವ ಅರ್ಥದ ಸಾಲು ಈ ಹಾಡಿನಲ್ಲಿ ಇದೆ ಎನ್ನುವ ಕಾರಣಕ್ಕಾಗಿ ಕಮಲ್ ಹಾಸನ್ ವಿರುದ್ಧ ದೂರು ದಾಖಲಿಸಲಾಗಿದೆ.
ಸೆಲ್ವಂ ಎನ್ನುವ ವ್ಯಕ್ತಿ ಮೇ 12ರಂದು ಚೆನ್ನೈ ಪೊಲೀಸ್ ಕಮಿಷನರ್ ದೂರು ದಾಖಲಿಸಿದ್ದಾರೆ. ಪೊಲೀಸರು ಕ್ರಮ ಕೈಗೊಳ್ಳದಿದ್ದರೆ ಮದ್ರಾಸ್ ಹೈಕೋರ್ಟ್ ಮೊರೆ ಹೋಗುವುದಾಗಿ ಹೇಳಿದ್ದಾರೆ.
ಪಾಕಿಸ್ಥಾನ ವ್ಯಾಮೋಹಕ್ಕೆ ಕಾಂಗ್ರೆಸ್ ತಕ್ಕ ಬೆಲೆ ತೆರುವುದು ಶತಸಿದ್ಧ | News13
News13 > ಅಂಕಣಗಳು > ಯುವಧ್ವನಿ > ಪಾಕಿಸ್ಥಾನ ವ್ಯಾಮೋಹಕ್ಕೆ ಕಾಂಗ್ರೆಸ್ ತಕ್ಕ ಬೆಲೆ ತೆರುವುದು ಶತಸಿದ್ಧ
ಪಾಕಿಸ್ಥಾನ ವ್ಯಾಮೋಹಕ್ಕೆ ಕಾಂಗ್ರೆಸ್ ತಕ್ಕ ಬೆಲೆ ತೆರುವುದು ಶತಸಿದ್ಧ
Monday, October 19th, 2020 ಯುವಧ್ವನಿ Admin
ಭಾರತದಲ್ಲಿ ಭಾರತವನ್ನು ವಿರೋಧಿಸುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ನರೇಂದ್ರ ಮೋದಿ ಮತ್ತು ಅವರ ಸರ್ಕಾರವನ್ನು ಟೀಕಿಸುವ ಭರದಲ್ಲಿ ಪ್ರತಿಪಕ್ಷಗಳು ದೇಶದ ಗೌರವವನ್ನು ಹರಾಜು ಹಾಕುತ್ತಿವೆ. ಅದರಲ್ಲೂ ಕಾಂಗ್ರೆಸ್ ಒಂದು ಹೆಜ್ಜೆ ಮುಂದೆ ಹೋಗಿ ಭಾರತದ ಪರಮಶತ್ರು ಪಾಕಿಸ್ಥಾನದ ಎದುರು ಭಾರತವನ್ನು ಅವಮಾನ ಮಾಡುವಂತಹ ಕೃತ್ಯಗಳನ್ನು ನಡೆಸುತ್ತಿದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವಿನ ಆರೋಪ-ಪ್ರತ್ಯಾರೋಪಗಳು ಸರ್ವೇಸಾಮಾನ್ಯ. ಇದಕ್ಕೆ ಸಂವಿಧಾನದಲ್ಲಿ ಅವಕಾಶವೂ ಇದೆ. ಆದರೆ ಸರ್ಕಾರವನ್ನು ಟೀಕಿಸಲು ದೇಶದ ಮಾನವನ್ನು ಹರಾಜು ಹಾಕಬೇಕಾಗಿಲ್ಲ.
ಪಾಕಿಸ್ಥಾನ ಭಾರತದ ಬದ್ಧವೈರಿ. ಶತ್ರು ದೇಶದೊಂದಿಗೆ ಭಾರತವನ್ನು ಹೋಲಿಕೆ ಮಾಡುವುದನ್ನು ಯಾವ ಭಾರತೀಯನೂ ಕೂಡ ಸಹಿಸಲು ಸಾಧ್ಯವಿಲ್ಲ. ಆದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಸಂಸದ ಶಶಿ ತರೂರ್ ಮುಂತಾದವರು ಪಾಕಿಸ್ಥಾನದೊಂದಿಗೆ ಭಾರತವನ್ನು ತುಲನೆ ಮಾಡಿ ಭಾರತೀಯತೆಯನ್ನು ಅವಮಾನಿಸುತ್ತಿದ್ದಾರೆ.
ಇತ್ತೀಚಿಗಷ್ಟೇ ಕರೋನವೈರಸ್ ವಿಷಯದಲ್ಲಿ ಭಾರತಕ್ಕಿಂತ ಪಾಕಿಸ್ಥಾನ ಉತ್ತಮ ಕಾರ್ಯ ಮಾಡಿದೆ ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು. ಮೊನ್ನೆಯಷ್ಟೇ ಲಾಹೋರ್ ಲಿಟರೇಚರ್ ಫೆಸ್ಟ್ ಅನ್ನು ಉದ್ದೇಶಿಸಿ ಮಾತನಾಡಿದ್ದ ತರೂರ್ ಅವರು, ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಉಲ್ಬಣಗೊಳ್ಳುತ್ತಿರುವ ಧರ್ಮಾಂಧತೆ ಮತ್ತು ಪೂರ್ವಗ್ರಹ ಪೀಡನೆಯನ್ನು ಭಾರತ ನೋಡುತ್ತಿದೆ ಎಂದಿದ್ದಾರೆ. ಮಾತ್ರವಲ್ಲ ಸಾಂಕ್ರಾಮಿಕ ರೋಗ ಹೆಚ್ಚಾಗಲು ಕಾರಣವಾಗಿದ್ದ ತಬ್ಲೀಘಿ ಜಮಾತ್ ಅನ್ನು ಸಮರ್ಥಿಸಿದ ಅವರು, ಮುಸ್ಲಿಮರ ವಿರುದ್ಧ ಭಾರತದಲ್ಲಿ ಹೆಚ್ಚುತ್ತಿರುವ ತಾರತಮ್ಯಕ್ಕೆ ತಬ್ಲೀಘಿಗಳ ವಿರುದ್ಧ ನಡೆದ ಅಪಪ್ರಚಾರ ಉದಾಹರಣೆ ಎಂದಿದ್ದಾರೆ.
ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಕಾನೂನಿನಲ್ಲಿ ಅಲ್ಪಸಂಖ್ಯಾತರಿಗೆ ಎಲ್ಲಾ ತರನಾದ ಸಮಾನತೆಗಳನ್ನು ಒದಗಿಸಲಾಗಿದೆ. ಸಂವಿಧಾನದ ರಕ್ಷಣೆ ಅವರಿಗೆ ಇರುವಾಗ ಅವರನ್ನು ನಿರ್ಲಕ್ಷ್ಯ ಭಾವದಿಂದ ನೋಡುವ ಮಾತೇ ಉದ್ಭವಿಸುವುದಿಲ್ಲ. ಭಾರತೀಯ ಮುಸ್ಲಿಮರು ಬೇರೆಲ್ಲಾ ದೇಶಗಳಿಗಿಂತ ಭಾರತದಲ್ಲಿ ಹೆಚ್ಚು ಸುರಕ್ಷಿತರಾಗಿದ್ದಾರೆ, ಹೆಚ್ಚು ಶಿಕ್ಷಿತರಾಗಿದ್ದಾರೆ. ಬೇರೆ ಯಾವ ದೇಶವು ತನ್ನ ಅಲ್ಪಸಂಖ್ಯಾತರಿಗೆ ನೀಡದಷ್ಟು ಸವಲತ್ತುಗಳನ್ನು ಈ ದೇಶ ತನ್ನ ಅಲ್ಪಸಂಖ್ಯಾತರಿಗೆ ನೀಡಿದೆ. ಆದರೆ ಕಾಂಗ್ರೆಸ್ ಮುಖಂಡರುಗಳು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ಥಾನದಲ್ಲಿ ಭಾರತದ ಮುಸ್ಲಿಮರ ವಿರುದ್ಧ ತಾರತಮ್ಯ ನಡೆಯುತ್ತಿದೆ ಎನ್ನುತ್ತಿದ್ದಾರೆ. ಯಾವ ರಾಷ್ಟ್ರ ತನ್ನ ಅಲ್ಪಸಂಖ್ಯಾತರನ್ನು ತುಚ್ಚವಾಗಿ ಕಾಣುತ್ತದೆಯೋ, ಯಾವ ರಾಷ್ಟ್ರ ತನ್ನ ಅಲ್ಪಸಂಖ್ಯಾತರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲು ಹಿಂಸಾ ಮಾರ್ಗವನ್ನು ಅನುಸರಿಸುತ್ತದೆಯೋ ಆ ದೇಶದ ಮುಂದೆ ಭಾರತವನ್ನು ಅವಮಾನಿಸುವ ಕಾರ್ಯವನ್ನು ಇವರು ಮಾಡುತ್ತಿದ್ದಾರೆ.
ಕಾಂಗ್ರೆಸ್ ಮುಖಂಡರು ಭಾರತದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಾರೋ ಅಥವಾ ಪಾಕಿಸ್ಥಾನದಲ್ಲಿ ಸ್ಪರ್ಧಿಸುತ್ತಾರೋ ಎಂಬ ಅನುಮಾನಗಳು ಭಾರತೀಯರಿಗೆ ಕಾಡತೊಡಗಿದೆ. ಭಾರತ ಪಾಕಿಸ್ಥಾನದ ಭಯೋತ್ಪಾದಕ ಶಿಬಿರಗಳ ಮೇಲೆ ವೈಮಾನಿಕ ದಾಳಿ ನಡೆಸಿದ್ದಾಗ ಇದೇ ಜನರು ಭಾರತದ ಸರ್ಕಾರದ ಬಳಿ ಸಾಕ್ಷಿಯನ್ನು ಕೇಳಿದ್ದರು. ಆತ್ಮಸಾಕ್ಷಿ ಇಲ್ಲದವರು ಭಾರತೀಯ ಸೇನೆಯ ದಿಟ್ಟತನಕ್ಕೆ ಸಾಕ್ಷಿ ಕೇಳುವ ಮೂಲಕ ಭಾರತೀಯರಿಂದ ಛೀಮಾರಿ ಹಾಕಿಸಿಕೊಂಡಿದ್ದರು. ಸರ್ಕಾರದ ಕಾರ್ಯಕ್ಕೆ ಸಾಕ್ಷಿ ಕೇಳುವುದು ತಪ್ಪಲ್ಲ, ಆದರೆ ಸೇನೆ ಹೇಳಿದ್ದೆಲ್ಲ ಸುಳ್ಳು ಎಂಬುದನ್ನು ಬಿಂಬಿಸಲು ಕಾಂಗ್ರೆಸ್ಸಿಗರು ಪ್ರಯತ್ನ ಪಟ್ಟಿದ್ದು ನಿಜಕ್ಕೂ ದುರದೃಷ್ಟಕರವಾದ ಸಂಗತಿಯಾಗಿದೆ.
ಭಾರತಕ್ಕಿಂತ ಪಾಕಿಸ್ಥಾನ ಕರೋನವೈರಸ್ ಸಾಂಕ್ರಾಮಿಕ ರೋಗವನ್ನು ಉತ್ತಮವಾಗಿ ನಿಭಾಯಿಸಿದೆ ಎಂದು ಕಾಂಗ್ರೆಸ್ಸಿಗರು ಹೇಳುತ್ತಿದ್ದಾರೆ. ಅಂದರೆ ಆ ದೇಶದಲ್ಲಿ ಎಷ್ಟು ಮಂದಿ ಕೊರೋನಾ ಕಾರಣದಿಂದ ಸತ್ತಿದ್ದಾರೆ, ಎಷ್ಟು ಮಂದಿಗೆ ಪರೀಕ್ಷೆಗಳನ್ನು ನಡೆಸಲಾಗಿದೆ, ಅಲ್ಲಿನ ಆಸ್ಪತ್ರೆಗಳಲ್ಲಿ ಸಾಂಕ್ರಾಮಿಕವನ್ನು ನಿಭಾಯಿಸುವ ಸವಲತ್ತುಗಳು ಎಷ್ಟರಮಟ್ಟಿಗೆ ಇದೆ ಎಂಬ ಅಂಕಿ ಅಂಶಗಳು ಕಾಂಗ್ರೆಸ್ಸಿಗರ ಬಳಿ ಇದೆಯೇ?.
ಭಾರತ ವಿಶ್ವದ ಏಳನೇ ಅತಿ ದೊಡ್ಡ ರಾಷ್ಟ್ರ, ಎರಡನೇ ಅತಿ ದೊಡ್ಡ ಜನಸಂಖ್ಯೆ ಇರುವ ರಾಷ್ಟ್ರ. ಇಂತಹ ರಾಷ್ಟ್ರದಲ್ಲಿ ಯಾವುದೇ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವುದು ಅಷ್ಟು ಸುಲಭದ ಮಾತಲ್ಲ, ಆದರೂ ನಮ್ಮ ವೈದ್ಯಕೀಯ ವ್ಯವಸ್ಥೆ ಬುಡಮೇಲಾಗದಂತೆ ಪ್ರಸ್ತುತ ಪರಿಸ್ಥಿತಿಯಲ್ಲಿ ಸಾಂಕ್ರಾಮಿಕವನ್ನು ನಿಭಾಯಿಸಲಾಗುತ್ತಿದೆ. ಭಾರತದ ಔಷಧ ರಫ್ತು ಈಗ ಹಿಂದಿಗಿಂತ ವೃದ್ಧಿಯಾಗಿದೆ, ಪಿಪಿಇ ಕಿಟ್‌ಗಳನ್ನು ಭಾರತ ಅತ್ಯಧಿಕ ಪ್ರಮಾಣದಲ್ಲಿ ಉತ್ಪಾದನೆ ಮಾಡುತ್ತಿದೆ. ಕೋವಿಡ್ ಮರಣ ದರ ಭಾರತದಲ್ಲಿ ಅತಿ ಕಡಿಮೆ ಇದೆ. ಭಾರತದ ಈ ಸಾಧನೆಗಳನ್ನು ಪಾಕಿಸ್ಥಾನದ ಮುಂದೆ ಹೋಲಿಕೆ ಮಾಡಲು ಸಾಧ್ಯವೇ? . ಭಾರತದ ಕಾಲು ಭಾಗ ಭೂಭಾಗವನ್ನೂ ಅದು ಹೊಂದಿಲ್ಲ ಎಂಬುದು ಕಾಂಗ್ರೆಸ್ಸಿಗರಿಗೆ ತಿಳಿಯದ ವಿಚಾರವೇ? ಅಷ್ಟಕ್ಕೂ ಆ ದೇಶ ಕೊರೋನಾವನ್ನು ಹೇಗೆ ನಿಭಾಯಿಸಿದೆ ಎಂಬುದನ್ನು ಕಾಂಗ್ರೆಸ್ಸಿಗರು ಖುದ್ದಾಗಿ ಹೋಗಿ ನೋಡಿ ಬಂದಿದ್ದಾರೆಯೇ?
ಶತ್ರು ರಾಷ್ಟ್ರದ ಮುಂದೆ ಭಾರತವನ್ನು ಅವಮಾನ ಮಾಡುವುದರಿಂದ ಕಾಂಗ್ರೆಸ್ಸಿಗರಿಗೆ ಸಿಗುವ ಲಾಭವಾದರೂ ಏನು?, ಭಾರತದ ನಿರ್ಧಾರಗಳನ್ನು ಪ್ರಶ್ನೆ ಮಾಡುವುದಿದ್ದರೆ ಭಾರತದಲ್ಲೇ ಪ್ರಶ್ನೆ ಮಾಡಲಿ. ಮನೆಯೊಳಗಿನ ಸಮಸ್ಯೆಯನ್ನು ಮನೆಯೊಳಗೆಯೇ ಪರಿಹರಿಸಿಕೊಳ್ಳಬೇಕು, ಅದನ್ನು ಊರು‌ ತುಂಬ ಡಂಗೂರ ಸಾರಲು ಹೋದರೆ ಹೋಗುವುದು ನಮ್ಮ ಮರ್ಯಾದೆ. ಇದನ್ನು ಕಾಂಗ್ರೆಸ್ಸಿಗರು ಮೊದಲು ಅರ್ಥಮಾಡಿಕೊಳ್ಳಬೇಕು.
ಶಾಲೆಯ ಆವರಣದಲ್ಲಿ ಬಾಲಕನಿಗೆ ಕಚ್ಚಿತು ಹಾವು – ಐಸಿಯುನಲ್ಲಿ ವಿದ್ಯಾರ್ಥಿ – Public TV
ಶಾಲೆಯ ಆವರಣದಲ್ಲಿ ಬಾಲಕನಿಗೆ ಕಚ್ಚಿತು ಹಾವು - ಐಸಿಯುನಲ್ಲಿ ವಿದ್ಯಾರ್ಥಿ
– 30 ದಿನದ ಒಳಗಡೆ 2ನೇ ಕೇಸ್
– ಕೇರಳದ ವಯನಾಡ್ ಸುಲ್ತಾನ್‍ಬತ್ತೇರಿಯಲ್ಲಿ ಘಟನೆ
ತಿರುವನಂತಪುರ: ಕೆಲವೇ ದಿನಗಳ ಹಿಂದೆ ಶಾಲೆಯ ಕೊಠಡಿಯಲ್ಲೇ ವಿದ್ಯಾರ್ಥಿನಿಗೆ ಹಾವು ಕಚ್ಚಿ ಸಾವನ್ನಪ್ಪಿದ್ದ ಪ್ರಕರಣ ಮಾಸುವ ಮುನ್ನವೇ ಅದೇ ರೀತಿಯ ಇನ್ನೊಂದು ಪ್ರಕರಣ ನಡೆದಿದೆ.
ಕೇರಳದ ವಯನಾಡ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗೆ ಹಾವು ಕಚ್ಚಿದೆ. ಶಾಲಾ ಆವರಣದಲ್ಲಿ ವಿದ್ಯಾರ್ಥಿಗೆ ಹಾವು ಕಚ್ಚಿರುವುದು ನಿಜ. ಆದರೆ ತರಗತಿ ಕೊಠಡಿಯಲ್ಲಿ ಹಾವು ಕಚ್ಚಿಲ್ಲ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.
ಸಂತ್ರಸ್ತ ವಿದ್ಯಾರ್ಥಿಯನ್ನು 2ನೇ ತರಗತಿಯ ಮೊಹಮ್ಮದ್ ರೆಹಾನ್ ಎಂದು ಗುರುತಿಸಲಾಗಿದ್ದು, ವಯನಾಡ್ ಜಿಲ್ಲೆಯ ಸುಲ್ತಾನ್ ಬತ್ತೇರಿಯ ಬೀನಾಚಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದೆ. ವಿದ್ಯಾರ್ಥಿಯನ್ನು ಖಾಸಗಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ ಪರಿಸ್ಥಿತಿ ಗಂಭೀರವಾಗಿದೆ.
ರೆಹಾನ್‍ಗೆ ಆಂಟಿವೆನಿನ್ ನೀಡಲಾಗಿದೆ, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಮಧ್ಯವಾರ್ಷಿಕ ಪರೀಕ್ಷೆ ನಂತರ ವಿದ್ಯಾರ್ಥಿ ಶಾಲೆಯಿಂದ ಮನೆಗೆ ಬರುವಾಗ ಹಾವು ಕಚ್ಚಿದೆ. ಮನೆಗೆ ಬಂದ ತಕ್ಷಣ ವಿದ್ಯಾರ್ಥಿ ಘಟನೆ ಕುರಿತು ನಮಗೆ ತಿಳಿಸಿದ. ನಂತರ ನಾವು ಹತ್ತಿರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದೆವು. ಅವರು ಪ್ರಥಮ ಚಿಕಿತ್ಸೆ ನೀಡಿದರು. ನಂತರ ಹೆಚ್ಚಿನ ಚಿಕಿತ್ಸೆಗೆ ಖಾಸಗಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವಿದ್ಯಾರ್ಥಿಯ ಪೋಷಕರು ಮಾಹಿತಿ ನೀಡಿದ್ದಾರೆ.
ಶಾಲೆ ಆವರಣದಲ್ಲಿ ಕಸ ಬೆಳೆದಿದ್ದರಿಂದ ಬಾಲಕನಿಗೆ ಹಾವನ್ನು ಗುರುತಿಸಲು ಸಾಧ್ಯವಾಗಿಲ್ಲ. ಹೀಗಾಗಿ ಕೂಡಲೇ ಶಾಲಾ ಆವರಣವನ್ನು ಸ್ವಚ್ಛಗೊಳಿಸಿ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಶಾಲಾ ಆಡಳಿತ ಮಂಡಳಿಗೆ ಸೂಚಿಸಿದ್ದಾರೆ.
ಕಳೆದ ತಿಂಗಳು ಸರ್ಕಾರಿ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿಯನ್ನು ತರಗತಿಯಲ್ಲೇ ಹಾವು ಕಚ್ಚಿದ್ದ ಘಟನೆ ಸುಲ್ತಾನ್ ಬತ್ತೇರಿಯ ಶೆಹಲಾ ಶೆರಿನ್ ನಲ್ಲಿ ನಡೆದಿತ್ತು. ಹಾವು ಕಚ್ಚಿದ ಕುರಿತು ವಿದ್ಯಾರ್ಥಿನಿ ಶಿಕ್ಷಕಿಗೆ ತಿಳಿಸಿದರೂ ಬಾಲಕಿಯನ್ನು ಗದರಿಸಿ ಸುಮ್ಮನಿರಿಸಿದ್ದರು. ಹೀಗಾಗಿ ಹಾವು ಕಚ್ಚಿದ ಕೆಲವೇ ಗಂಟೆಗಳಲ್ಲಿ ವಿದ್ಯಾರ್ಥಿ ಸಾವನ್ನಪ್ಪಿದ್ದಳು. ತರಗತಿ ಕೊಠಡಿಯಲ್ಲಿ ಉಂಟಾಗಿದ್ದ ಸಣ್ಣ ಕಿಂಡಿಯಿಂದ ಹಾವು ನುಸುಳಿತ್ತು. ಈ ಕಿಂಡಿಯ ಪಕ್ಕದಲ್ಲೇ ಕುಳಿತಿದ್ದ ವಿದ್ಯಾರ್ಥಿನಿಯನ್ನು ಹಾವು ಕಚ್ಚಿತ್ತು. ಘಟನೆ ನಂತರ ಶಾಲಾ ಆಡಳಿತ ಮಂಡಳಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತೀವ್ರ ಪ್ರತಿಭಟನೆ ನಡೆಸಲಾಗಿತ್ತು.
ವೈರಸ್ ಹೊಡೆದೋಡಿಸಿ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ! – Navakarnataka news
ವೈರಸ್ ಹೊಡೆದೋಡಿಸಿ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ!
April 16, 2021 adminLeave a Comment on ವೈರಸ್ ಹೊಡೆದೋಡಿಸಿ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ!
ರೋಗವನ್ನು ಪ್ರತಿರೋಧಿಸುವ ಸಾಮರ್ಥ್ಯವನ್ನು ರೋಗ ನಿರೋಧಕ ಶಕ್ತಿ ಅಂತ ಕರೆಯುತ್ತಾರೆ.ವೈರಸ್ ಗಳಿಂದ ಮತ್ತು ವಿವಿಧ ರೀತಿಯ ಸೋಂಕಿನಿಂದ ರಕ್ಷಣೆಗೆ ಪ್ರತಿರೋಧಕ ಶಕ್ತಿ ಅತಿ ಅಗತ್ಯ.ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸುವುದು ಜೀವಮಾನದ ಪ್ರಕ್ರಿಯೆಯಾಗಿದೆ.ಪೋಷಕರಾಗಿ ನಾವು ಮಗು ಜನಿಸಿದ ನಂತರ ಪ್ರತಿ ರಕ್ಷೆಯನ್ನು ಸುಧಾರಿಸಲು ನಮ್ಮ ಅತ್ಯುತ್ತಮ ಪ್ರಯತ್ನವನ್ನು ಮಾಡಬೇಕು.
ಪ್ರಸ್ತುತ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯು ದಿನೇ ದಿನೇ ಕುಸಿಯುತ್ತಿದೆ ಹೊಸ ಆವಿಷ್ಕಾರಗಳು ಮತ್ತು ಸಂಶೋಧನೆಗಳ ಹೊರತಾಗಿಯೂ ಮಕ್ಕಳು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ.ಕೆಲವು ಕಾಲಕ್ರಮೇಣ ನಾವು ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ನಿರ್ಮಿಸಬಹುದೇ ?ನಿರ್ದಿಷ್ಟ ಅವಧಿಯ ನಂತರವೂ ಪ್ರತಿ ರಕ್ಷೆಯನ್ನು ನಿರ್ವಹಿಸಲು ಪುನಃ ಪ್ರಯತ್ನಿಸಬಹುದೆ ?ಹೀಗೆ ಅನೇಕ ಪ್ರಶ್ನೆಗಳು ಉದ್ಭವಿಸುವುದು ಮತ್ತು ಪ್ರತಿ ಮಗುವು ಅನನ್ಯವಾಗಿರುತ್ತಾರೆ ಹಾಗೂ ಪ್ರತಿರಕ್ಷಣೆಯು ವಿಭಿನ್ನವಾಗಿರುತ್ತದೆ.
ವಿಶೇಷ ವೈದ್ಯಕೀಯ ಆರೈಕೆ ಮತ್ತು ಅವಶ್ಯಕತೆಗೆ ಅಗತ್ಯವಿರುವ ರೋಗನಿರೋಧಕಶಕ್ತಿ ಮಗುವಿನಲ್ಲಿ ಅಭಿವೃದ್ಧಿ ಪಡಿಸಲು ಮತ್ತು ಉತ್ತಮ ವಿನಾಯಿತಿಯನ್ನು ಅಂದ್ರೆ ಇಮ್ಯುನಿಟಿಯನ್ನು ನಿರ್ಮಿಸಲು ಸಹಾಯ ಮಾಡುವ ಅನೇಕ ಅಂಶಗಳು ಖಂಡಿತವಾಗಿಯೂ ಇವೆ.
ಜೇಷ್ಠ ಮಧು
ಈ ಜೇಷ್ಠಮಧುವಿನ ಕಷಾಯವನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ಪ್ರತಿನಿತ್ಯ ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ಪ್ರೋಟಿನ್ , ವಿಟಮಿನ್ ಎ , ಬಿ , ಸಿ ಸೇರಿದಂತೆ ಹಲವು ಪೌಷ್ಟಿಕಾಂಶಗಳು ಸಿಗುತ್ತದೆ ಹಾಗೂ ಇದು ಅಸಿಡಿಟಿ ಗ್ಯಾಸ್ಟ್ರಿಕ್ ತೊಂದರೆಗಳನ್ನು ಇದು ದೂರಮಾಡುತ್ತದೆ. ಗ್ಯಾಸ್ಟಿಕ್ ಮತ್ತು ಅಸಿಡಿಟಿಗೆ ಅತ್ಯುತ್ತಮ ರಾಮಬಾಣವಾಗಿದೆ.
ಬಸಳೆಸೊಪ್ಪು
ಬಸಳೆಸೊಪ್ಪನ್ನು ಪೌಷ್ಟಿಕಾಂಶದ ಸೊಪ್ಪು ಅಂತ ಕರೆಯುತ್ತಾರೆ. ಪ್ರತಿನಿತ್ಯ ಈ ಸೊಪ್ಪನ್ನು ತಿನ್ನುವುದರಿಂದ ದೇಹದ ಆರೋಗ್ಯ ಹೆಚ್ಚಾಗುತ್ತದೆ.
ಸಿಹಿ ಗೆಣಸಿನಲ್ಲಿ ಕ್ಯಾರೆಟಿನಾಯಿಡ್ಗಳು ಹೆಚ್ಚಾಗಿರುತ್ತವೆ.ವಿಟಮಿನ್ ಎ ಅನ್ನು ಅಧಿಕ ಪ್ರಮಾಣದಲ್ಲಿ ಹೊಂದಿರುವಂತಹ ಈ ಸಿಹಿ ಗೆಣಸು ದೇಹಕ್ಕೆ ಪೋಷಕಾಂಶ ಮತ್ತು ನಾರಿನ ಅಂಶ ಒದಗಿಸಿ ಜೀರ್ಣಕ್ರಿಯೆ ಸರಾಗವಾಗಿ ಆಗುವಂತೆ ಮಾಡುತ್ತದೆ.
ಅಣಬೆಯು ಅತಿ ಹೆಚ್ಚು ಪ್ರೊಟೀನ್ಯುಕ್ತ ಆಹಾರವಾಗಿದ್ದು , ವಿಟಮಿನ್ , ಮಿನರಲ್ , ಅಮೈನೋ ಆಸಿಡ್ , ಆ್ಯಂಟಿ ಬಯಾಟಿಕ್ ಮತ್ತು ಆ್ಯಂಟಿ ಅಕ್ಸಿಡೆಂಟ್ ಗಳು ಅಧಿಕವಾಗಿರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ.
ಕೋಸು ಗಡ್ಡೆ
ಕೋಸು ಗಡ್ಡೆ ಪಲ್ಯ ,ಕೋಸು ಗಡ್ಡೆ ಸೂಪ್ , ಕೋಸುಗಡ್ಡೆ ಸಲಾಡ್ ಕೂಡ ಉತ್ತಮ ಆಹಾರವಾಗಿದೆ.
ಹಣ್ಣುಗಳಲ್ಲಿ ಕಿವಿ ಹಣ್ಣು ಹೆಚ್ಚು ಪೋಷಕಾಂಶಗಳನ್ನು ಹೊಂದಿರುವುದರಿಂದ ಪ್ರತಿ ದಿನ ಈ ಹಣ್ಣು ನಿಮಗೆ ಸಿಕ್ಕರೆ ತಪ್ಪದೇ ಸೇವಿಸಬೇಕು.ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು.
ಜವಿ ಗೋಧಿ
ಜವಿ ಗೋಧಿಯಲ್ಲಿ ಅಣಬೆಯಲ್ಲಿ ಇರುವಂತೆ ಅತಿ ಹೆಚ್ಚು ಪೋಷಕಾಂಶಗಳಿದ್ದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.
ಬದಾಮಿಯಲ್ಲಿ 50% ವಿಟಮಿನ್ ಎ ಅಂಶ ಇದ್ದು ಇದು ಖಿನ್ನತೆಯನ್ನು ಹೋಗಲಾಡಿಸುತ್ತದೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಅಮೃತಬಳ್ಳಿ ಕಷಾಯವನ್ನು ವಾರದಲ್ಲಿ 2 ರಿಂದ 3 ಬಾರಿ ಸೇವಿಸುತ್ತಾ ಬಂದರೆ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.ಮೊಸರು ಮತ್ತು ಹಾಲು ಮೊಸರಿನಲ್ಲಿ ವಿಟಮಿನ್ ಡಿ ಇದ್ದು , ಇದನ್ನು ಪ್ರತಿದಿನ ಸೇವಿಸುವುದರಿಂದ ಶೀತ , ಕೆಮ್ಮು ಹೀಗೆ ಚಿಕ್ಕ ಪುಟ್ಟ ಕಾಯಿಲೆಗಳನ್ನು ತಡೆಗಟ್ಟಬಹುದು. 70 % ರೋಗ ನಿರೋಧಕ ಅಂಶವು ನಮ್ಮ ಜೀರ್ಣಾಂಗದಲ್ಲಿ ಇರುತ್ತದೆ. ಜೀರ್ಣಕ್ರಿಯೆ ಸರಿಯಾಗಿ ನಡೆದರೆ ಮಾತ್ರ ಅದು ದೇಹಕ್ಕೆ ದೊರೆಯುತ್ತದೆ.
ಮೊಸರು ಜೀರ್ಣಕ್ರಿಯೆ ಸರಿಯಾಗಿ ನಡೆಯಲು ಸಹಕಾರಿಯಾಗಿದೆ.
ಹೀಗೆ ಇತ್ತೀಚಿನ ದಿನಗಳಲ್ಲಿ ಮುಖ್ಯವಾಗಿ ಈ ಕೊರೊನಾ ಸಮಸ್ಯೆ ಬಂದಾಗಿನಿಂದ ನಮಗೆ ಪೌಷ್ಟಿಕಾಂಶದ ಮತ್ತು ಪೌಷ್ಟಿಕ ಪದಾರ್ಥಗಳ ಅಗತ್ಯವಿದೆ.ನಾವು ನಮ್ಮ ಇಮ್ಯುನಿಟಿ ಯನ್ನು ಬೆಳೆಸಿಕೊಳ್ಳಬೇಕೆಂದರೆ ಈ ಮೇಲೆ ತಿಳಿಸಿರುವ ಪದಾರ್ಥಗಳನ್ನು ಸಾಧ್ಯವಾದಷ್ಟು ಸೇವಿಸಿಕೊಂಡು ನಮ್ಮ ದೇಹದಲ್ಲಿರುವ ಇಮ್ಯುನಿಟಿ ಯನ್ನು ಬೆಳೆಸಿಕೊಂಡರೆ ರೋಗನಿರೋಧಕ ಶಕ್ತಿ ಹೆಚ್ಚಾಗಿ ರೋಗದಿಂದ ನಾವು ಪಾರಾಗಲು ಸಾಧ್ಯವಾಗುತ್ತದೆ.
ವಿ.ಎಸ್. ಉಗ್ರಪ್ಪ ಆಸ್ತಿ ಜಪ್ತಿಗೆ ನ್ಯಾಯಾಲಯ ಆದೇಶ!!! | Prajapragathi
February 20, 2019, 7:54 pm
Home Lead News ವಿ.ಎಸ್. ಉಗ್ರಪ್ಪ ಆಸ್ತಿ ಜಪ್ತಿಗೆ ನ್ಯಾಯಾಲಯ ಆದೇಶ!!!
ವಿ.ಎಸ್. ಉಗ್ರಪ್ಪ ಆಸ್ತಿ ಜಪ್ತಿಗೆ ನ್ಯಾಯಾಲಯ ಆದೇಶ!!!
ದೊಡ್ಡಬಳ್ಳಾಪುರ:
ಅಪಘಾತ ಪ್ರಕರಣವೊಂದರಲ್ಲಿ ನ್ಯಾಯಾಲಯಕ್ಕೂ ಹಾಜರಾಗದೆ ಹಾಗೂ ದಂಡ ಪಾವತಿಸದರಿಂದ ಕಾಂಗ್ರೆಸ್ ನಾಯಕ ಉಗ್ರಪ್ಪನವರ ಚರಾಸ್ತಿ ಜಪ್ತಿ ಮಾಡುವಂತೆ ಕೋರ್ಟ್ ಆದೇಶಿಸಿದೆ
ದೊಡ್ಡಬಳ್ಳಾಪುರ ನಗರದ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ನ್ಯಾಯಾಧೀಶರಾದ ಶುಕ್ಲಾಕ್ಷ ಫಾಲನ್ ಅವರು ಆದೇಶ ಹೊರಡಿಸಿದೆ. 2010ರಲ್ಲಿ ಉಗ್ರಪ್ಪನವರು ಕ್ವಾಲಿಸ್ ಕಾರು ಬಾಲಾಜಿ ಎಂಬವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಕಾರ್‌ಗೆ ವಿಮೆ ಇಲ್ಲವೆಂದು ಆರೋಪಿಸಿ ಗಾಯಾಳು ನ್ಯಾಯಾಲಯದ ದೂರು ಕೂಟ್ಟಿದರು.
ಇದಾದ ನಂತರ 2012 ರಿಂದ ನೋಟಿಸ್ ಜಾರಿ ಮಾಡುತ್ತಿದ್ದರೂ ಉಗ್ರಪ್ಪನವರು ಪ್ರಕರಣದ ವಿಚಾರಣೆಗೆ ಗೈರು ಹಾಜರಾಗುವ ಮೂಲಕ ಕೋರ್ಟ್ ಆದೇಶ ಉಲ್ಲಂಘಿಸಿದ್ದಾರೆಂದು ನ್ಯಾಯಾಧೀಶರು 94,925 ರೂ. ದಂಡ ವಿಧಿಸಿದ್ದರು.
ಎಸ್ ಆರ್ ನಾಥನ್ - ವಿಕಿಪೀಡಿಯ
ಎಸ್ ಆರ್ ನಾಥನ್
ಎಸ್ ಆರ್ ನಾಥನ್ ಎಂದೇ ಖ್ಯಾತರಾದ ಸೆಲ್ಲಪ್ಪನ್ ರಾಮನಾಥನ್, ೧೨ ವರ್ಷಕಾಲ (೧೯೯೯-೨೦೧೧) ಸಿಂಗಾಪುರದ ರಾಷ್ಟ್ರಪತಿಯಾಗಿದ್ದರು.೨ ಬಾರಿಯೂ ಅವಿರೋಧವಾಗಿ ಆಯ್ಕೆಯಾದ ಹಿರಿಮೆ ನಾಥನ್ ಅವರದು.