text stringlengths 0 61.5k |
|---|
Wednesday, 27 May 2020 | UPDATED: 05:35 AM IST |
ರಾಘವೇಂದ್ರ ರಾಜಕುಮಾರ್ ಅಭಿನಯದ "ಅಮ್ಮನ ಮನೆ' ಬಿಡುಗಡೆಗೆ ಸಜ್ಜಾಗಿರುವ ಬೆನ್ನಲ್ಲೆ ಇದೀಗ "ತ್ರಯಂಬಕಂ' ಚಿತ್ರ ಕೂಡ ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗೆ ನಿರ್ದೇಶಕ ದಯಾಳ್ ಪದ್ಮನಾಭನ್ ಚಿತ್ರದ ಟ್ರೇಲರ್ ಬಿಡುಗಡೆಗೆ ಪುನೀತ್‌ರಾಜಕುಮಾರ್ ಅವರನ್ನು ಆಹ್ವಾನಿಸಿದ್ದರು. ಢಮರುಗ ಬಾರಿಸುವುದರೊಂದಿಗೆ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು ಪುನೀತ್. "ಚಿತ್ರದ ಟ್ರೇಲರ್ ನೋಡಿ ಖುಷಿಯಾಗಿದೆ. ಟ್ರೇಲರ್ ಕುತೂಹಲ ಮೂಡಿಸುತ್ತದೆ. ಇನ್ನು, ರಾಘಣ್ಣ ಅವರಿಗೆ ಅನಾರೋಗ್ಯ ಎದುರಾದಾಗ ಭಯವಿತ್ತು. ಆಮೇಲೆ, ರಾಘಣ್ಣ ಅದನ್ನು ಎದುರಿಸಿ, ಇದೀಗ ಎರಡು ಚಿತ್ರಗಳಲ್ಲಿ ನಟಿಸಿದ್ದಾರೆ. ನನಗೆ ಶಿವಣ್ಣ ಮತ್ತು ರಾಘಣ್ಣ ಎರಡು ಪಿಲ್ಲರ್‌ಗಳಿದ್ದಂತೆ. ಮುಂದಿನ ದಿನಗಳಲ್ಲಿ ರಾಘಣ್ಣ ಹೀಗೆಯೇ ಚಿತ್ರಗಳಲ್ಲಿ ಬಿಜಿಯಾಗಿರಲಿ' ಎಂದು ಹಾರೈಸಿದರು ಪುನೀತ್. |
ರಾಘವೇಂದ್ರರಾಜಕುಮಾರ್‌ಗೆ "ತ್ರಯಂಬಕಂ' ಚಿತ್ರ ಮೇಲೆ ವಿಶ್ವಾಸ ಹೆಚ್ಚಿದೆ. "ಇಲ್ಲಿ ನಾಯಕ, ನಾಯಕಿ ಎಂಬುದಿಲ್ಲ. ಕಥೆಯೇ ಎಲ್ಲವೂ ಆಗಿದೆ. ಅನುಪಮ ಗೌಡ ಮಗಳಾಗಿ ಕಾಣಿಸಿಕೊಂಡಿದ್ದಾರೆ. ಡಬ್ಬಿಂಗ್ ವೇಳೆ ಅನುಪಮ ಅವರ ನಟನೆ ನೋಡಿ ಖುಷಿಯಾಯ್ತು. ಚೆನ್ನಾಗಿ ನಿರ್ವಹಿಸಿದ್ದಾರೆ. ಒಳ್ಳೆಯ ತಂಡದಲ್ಲಿ ನಾನೂ ಇದ್ದೇನೆ ಎಂಬುದೇ ಖುಷಿಯ ವಿಷಯ. ನಿರ್ಮಾಪಕರಿಗೆ ಇದು ಸಿನಿಮಾವಾದರೆ, ನನಗಿದು ಪ್ರಸಾದ ಎಂದರು ರಾಘವೇಂದ್ರ ರಾಜಕುಮಾರ್. |
ನಿರ್ದೇಶಕ ದಯಾಳ್ ಪದ್ಮನಾಭನ್ ಅವರಿಗೆ, ನಿರ್ಮಾಪಕರು ಒಂದು ಕಥೆ ಬರೆದು ಕೊಟ್ಟಾಗ, ಅದರಲ್ಲಿ ಇಂಗ್ಲೀಷ್ ಚಿತ್ರವೊಂದರ ಸ್ಪೂರ್ತಿ ಇದ್ದದ್ದು ಗೊತ್ತಾಯಿತಂತೆ. ಕೊನೆಗೆ ನಾನು ಇದನ್ನು ಹೀಗೆ ಮಾಡೋದಿಲ್ಲ. ಬೇಕಾದರೆ, ಸ್ವಲ್ಪ ಬದಲಾವಣೆ ಮಾಡಿಕೊಂಡು ಮಾಡುತ್ತೇನೆ. ಅನುಮತಿ ಕೊಟ್ಟರೆ, ನಿರ್ದೇಶನ ಮಾಡುತ್ತೇನೆ ಅಂದಾಗ, ನಿರ್ಮಾಪಕರು ಒಪ್ಪಿದ್ದಕ್ಕೆ ಈ ಚಿತ್ರವಾಗಿದೆ. ಇನ್ನು, ನವೆಂಬರ್‌ದಲ್ಲಿ ಶುರುಮಾಡಿದ ಈ ಚಿತ್ರಕ್ಕೆ 24 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಐತಿಹಾಸಿಕ, ಪೌರಾಣಿಕ ಕಥೆಯ ಅಂಶ ಇಟ್ಟುಕೊಂಡು ಇಲ್ಲಿ ಎರಡನ್ನೂ ಸೇರಿಸಿ ಚಿತ್ರ ಮಾಡಲಾಗಿದೆ' ಎಂಬುದು ದಯಾಳ್ ಮಾತು. |
ಈ ಚಿತ್ರಕ್ಕೆ ನವೀನ್‌ಕೃಷ್ಣ ಸಂಭಾಷಣೆ ಬರೆದಿದ್ದಾರೆ. ಚಿತ್ರದ ಬಗ್ಗೆ ಹೇಳುವ ಅವರು, "ನಿರ್ದೇಶಕ ದಯಾಳ್ ಅವರು, ಸಣ್ಣ ಕಲ್ಪನೆ ಇಟ್ಟುಕೊಂಡೇ ದೊಡ್ಡದ್ದಾಗಿ ಯೋಚಿಸುತ್ತಾರೆ. ಅದನ್ನು ದೊಡ್ಡ ಚಿತ್ರವನ್ನಾಗಿಸುವಲ್ಲಿ ಪ್ರಯತ್ನಿಸುತ್ತಾರೆ. ಆ ಪ್ರಯತ್ನದಲ್ಲಿ ಯಶಸ್ಸನ್ನೂ ಕಂಡಿದ್ದಾರೆ. ಇಲ್ಲಿ ಸಾಕಷ್ಟು ಚರ್ಚೆ ನಡೆಸಿ, ಚಿತ್ರಕಥೆ ಮತ್ತು ಸಂಭಾಷಣೆ ಬರೆಯಲಾಗಿದೆ ಎಂದರು ನವೀನ್‌ಕೃಷ್ಣ. ನಿರ್ಮಾಪಕ ಸಂದೀಪ್, ಸಂಗೀತ ನಿರ್ದೇಶಕ ಗಣೇಶ್ ನಾರಾಯಣ್, ವಾಣಿಜ್ಯ ಮಂಡಳಿ ಗೌರವ ಕಾರ್ಯದರ್ಶಿ ಬಾ.ಮಾ.ಹರೀಶ್, ಶಿವಮಣಿ, ರೋಹಿತ್ ಸಿನಿಮಾ ಕುರಿತು ಮಾತನಾಡಿದರು. |
4ಕ್ಕೆ ಬೆಂಗಳೂರು ಬಂದ್: ವಾಟಾಳ್ |
ಮೂರು ದಿನದಲ್ಲಿ ಮಹದಾಯಿ ಬಗ್ಗೆ ಪ್ರಧಾನಿ ಮೋದಿ ಭರವಸೆ ನೀಡದಿದ್ದರೆ ಬಂದ್ ನಿಶ್ಚಿತ |
ಬೆಂಗಳೂರು ಬಂದ್‌ಗೆ ಅನುಮತಿ ಇಲ್ಲ: ರಾಮಲಿಂಗಾರೆಡ್ಡಿ |
ಬಂದ್‌ಗೆ ಸರ್ಕಾರದ ಷಡ್ಯಂತ್ರ: ಅನಂತಕುಮಾರ್ |
ಬೆಂಗಳೂರು: ಮಹದಾಯಿ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸುವ ಬಗ್ಗೆ ಬಿಜೆಪಿಯವರು ಫೆ.3ರೊಳಗೆ ಭರವಸೆ ನೀಡದಿದ್ದರೆ, ಫೆ. 4ರಂದು ಬೆಂಗಳೂರು ಬಂದ್ ನಡೆಸಲಾಗುವುದು ಎಂದು ಕನ್ನಡ ಒಕ್ಕೂಟ ಸ್ಪಷ್ಟಪಡಿಸಿದೆ. |
ಮಹದಾಯಿ ಹೋರಾಟಗಾರರ ವಿಚಾರವನ್ನು ಪ್ರಧಾನಿಗೆ ಮುಟ್ಟಿಸಲೇಬೇಕು. ಇಲ್ಲವಾದಲ್ಲಿ ಕಳೆದ 3 ವರ್ಷಗಳ ನಿರಂತರ ಹೋರಾಟಕ್ಕೆ ಬೆಲೆ ಇಲ್ಲದಂತಾಗುತ್ತದೆ. ಫೆ.4ರಂದು ಪರಿವರ್ತನಾ ಯಾತ್ರೆ ಸಮಾರೋಪದ ವೇಳೆ ಪ್ರಧಾನಿ ಈ ಬಗ್ಗೆ ಮಾತನಾಡಲಿದ್ದಾರೆ ಎಂಬ ಭರವಸೆ ನೀಡಿದರೆ ಮಾತ್ರ ಹೋರಾಟದಿಂದ ಹಿಂದೆ ಸರಿಯಲಾಗುವುದು ಎಂದು ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದ್ದಾರೆ. |
ಉತ್ತರ ಕರ್ನಾಟಕದ ಜನರ ಹಿತದೃಷ್ಟಿ ಯಿಂದ ನಡೆಸಿರುವ ಹೋರಾಟಕ್ಕೆ ಬೆಲೆ ಸಿಗಬೇಕಾದರೆ, ಪ್ರಧಾನಿಗಳು ಮಧ್ಯಸ್ಥಿಕೆ ವಹಿಸಬೇಕು. ಜ.25ರ ಬಂದ್ ಯಶಸ್ವಿಯಾಗಿದ್ದು, ಫೆ.4ರಂದೂ ಬಂದ್ ನಡೆಯಲಿದೆ. ರಾಜ್ಯದ ಹಿತಕ್ಕಾಗಿ ನಿರಂತರವಾಗಿ ಹೋರಾಟ ನಡೆಯಲಿದೆ ಎಂದರು. |
ಬೆಂಗಳೂರು ಬಂದ್‌ಗೆ ಅನುಮತಿ ಇಲ್ಲ |
ಭಾನುವಾರ ಬಂದ್ ಆಚರಣೆಗೆ ಸರ್ಕಾರ ಅನುಮತಿ ನೀಡಿಲ್ಲ. ಹೋರಾಟಗಾರರು ಬೇಕಿದ್ದರೆ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಮಾಡುವಂತೆ ಸೂಚಿಸಿದ್ದೇವೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಈ ಬಂದ್ ಕರೆಗೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ. ಆದರೂ ಬಿಜೆಪಿ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದೆ. ನರೇಂದ್ರ ಮೋದಿ ಬಿಜೆಪಿಯವರಿಗೆ ಮಾತ್ರ ಪ್ರಧಾನಿ ಅಲ್ಲ. ನಮಗೂ ಪ್ರಧಾನಿಗಳೇ ಎಂದು ಅವರು ಹೇಳಿದ್ದಾರೆ. |
ಬಂದ್‌ಗೆ ಸರ್ಕಾರದ ಷಡ್ಯಂತ್ರ |
ಪ್ರಧಾನಿ ನರೇಂದ್ರ ಮೋದಿ ಅವರು ಫೆ.4ರಂದು ರಾಜ್ಯಕ್ಕೆ ಭೇಟಿ ನೀಡುವ ದಿನದಂದು ಮಹದಾಯಿ ವಿಚಾರವಾಗಿ ಕನ್ನಡಪರ ಸಂಘಟನೆಗಳು ಬೆಂಗಳೂರು ಬಂದ್ ನಡೆಸಲು ಮುಂದಾಗಿರುವುದರ ಹಿಂದೆ ರಾಜ್ಯ ಸರ್ಕಾರದ ಕುಮ್ಮಕ್ಕು ಮತ್ತು ಷಡ್ಯಂತ್ರ ಅಡಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಆಪಾದಿಸಿದ್ದಾರೆ. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಅಂದು ಸರ್ಕಾರಿ ಪ್ರಾಯೋಜಿತ ಬಂದ್ ನಡೆಸಲು ಮುಂದಾದರೆ, ಅದು ಯಶಸ್ವಿಯಾಗುವುದಿಲ್ಲ ಬದಲಿಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಬಂದ್ ಆಗುತ್ತದೆ ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ. ಬುಧವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಜ.25ರಂದು ರಾಜ್ಯಕ್ಕೆ ಭೇಟಿ ನೀಡಿದ್ದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದ ಸರ್ಕಾರಿ ಪ್ರಾಯೋಜಿತ ಕರ್ನಾಟಕ ಬಂದ್ ಮಾಡಲಾಯಿತು ಎಂದು ಕಿಡಿ ಕಾರಿದರು. |
ಜಿಂದಾಲ್ ವಿಜಯನಗರ ವಿಮಾನನಿಲ್ದಾಣ - ವಿಕಿಪೀಡಿಯ |
IATA: VDY – ICAO: VOJV |
15°10′30″N 76°38′03″E / 15.1750°N 76.6341°E / 15.1750; 76.6341ನಿರ್ದೇಶಾಂಕಗಳು: 15°10′30″N 76°38′03″E / 15.1750°N 76.6341°E / 15.1750; 76.6341 |
13/31 ೪ ೧ Asphalt |
ಜಿಂದಾಲ್ ವಿಜಯನಗರ ವಿಮಾನನಿಲ್ದಾಣ (IATA(IATA: VDY, ICAO: VOJV)ICAO(IATA: VDY, ICAO: VOJV) ಭಾರತದ ಕರ್ನಾಟಕ ರಾಜ್ಯದ ತೋರಣಗಲ್ಲು ಗ್ರಾಮದಲ್ಲಿ ಇದೆ . ಏಕೆಂದರೆ ಅದರ ಸ್ಥಳ ಬಳಿ ವಿದ್ಯಾನಗರ ಎಂಬ ಪಟ್ಟಣವು ಇರುವುದರಿಂದ ಅದಕ್ಕೆ ವಿದ್ಯಾನಗರ ವಿಮಾನನಿಲ್ದಾಣ ಎಂದೂ ಕರೆಯಲಾಗುತ್ತದೆ . ತೋರಣಗಲ್ಲು ಗ್ರಾಮದಲ್ಲಿರುವ ಸ್ಟೀಲ್ ಗಿರಣಿಯನ್ನು ನಿರ್ವಹಿಸುತ್ತಿರುವ ಜೆ. ಎಸ್. ಡಬ್ಲ್ಯೂ ಸ್ಟೀಲ್ ಸಂಸ್ಥೆಯು ಈ ನಿಲ್ದಾಣದ ಒಡೆತನ ಹೊಂದಿದ್ದು ಇದನ್ನು ನಿರ್ವಹಿಸುತ್ತದೆ ಜಿಂದಾಲ್ ವಿಜಯನಗರ ಎಂಬ ಹೆಸರು ಜೆ. ಎಸ್. ಡಬ್ಲ್ಯೂ ಸ್ಟೀಲ್ ಕಂಪನಿಯ ಹಿಂದಿನ ಹೆಸರಾದ ಜಿಂದಾಲ್ ವಿಜಯನಗರ ಸ್ಟೀಲ್ ಲಿಮಿಟೆಡ್ (JVSL) ದಿಂದ ಬಂದಿದೆ. |
ಹಿಂದೆ JVSL ನೌಕರರಿಗಾಗಿ ಒಂದು ಖಾಸಗಿ ಲ್ಯಾಂಡಿಂಗ್ ಸ್ಟ್ರಿಪ್ ಆಗಿದ್ದ ವಿಮಾನ ನಿಲ್ದಾಣವನ್ನು ವಾಣಿಜ್ಯ ವಿಮಾನಗಳ ಬಳಕೆಗಾಗಿ ಡಿಸೆಂಬರ್ 2006 ರಲ್ಲಿ ಉನ್ನತೀಕರಿಸಲಾಯಿತು. ಇದು ಬಳ್ಳಾರಿ ಜಿಲ್ಲೆಯ ಪ್ರವಾಸೋದ್ಯಮ ಮತ್ತು ವ್ಯಾಪಾರಗಳಿಗೆ ನೆರವಾಗಿದೆ. ರಲ್ಲಿ ಪ್ರಾದೇಶಿಕ ವಿಮಾನಯಾನ ಟ್ರೂಜೆಟ್ ಸಂಸ್ಥೆಯು ಹೈದರಾಬಾದ್ ಮತ್ತು ಬೆಂಗಳೂರುಗಳಿಂದ ದೈನಂದಿನ ಸಂಚಾರ ಸೇವೆಗಳನ್ನು ಒದಗಿಸುತ್ತಿದೆ. |
ಜಿಂದಾಲ್ ವಿಜಯನಗರ ವಿಮಾನನಿಲ್ದಾಣವು ಮೂಲತಃವಿಮಾನ ಬಳಸುವ ಜಿಂದಾಲ್ ವಿಜಯನಗರ ಸ್ಟೀಲ್ ಸಂಸ್ಥೆಯು ತನ್ನ ಹಿರಿಯ ನೌಕರರನ್ನು ಅದರ ಪಕ್ಕದ ಸ್ಟೀಲ್ ಪ್ಲಾಂಟ್ ಗೆ ಸಾಗಿಸಲು ಬಳಸುತ್ತಿದ್ದ ಒಂದು ಖಾಸಗಿ ಏರ್ ಸ್ಟ್ರಿಪ್ ಆಗಿತ್ತು. [೧] 2004 ರಲ್ಲಿ, ಇಲ್ಲಿ ರಾಜ್ಯ ಸರ್ಕಾರ ವು ವಾಣಿಜ್ಯ ವಿಮಾನಗಳ ಹಾರಾಟಕ್ಕೆ ಒಪ್ಪಿಗೆ ನೀಡಿತು. ಸುವಿಖ್ಯಾತ ಹಂಪಿ ಪ್ರವಾಸಿತಾಣವು ಹತ್ತಿರವೇ ಇದೆ. ಇದು ಬಳ್ಳಾರಿಯಲ್ಲಿನ ಸ್ಟೀಲ್ ಉದ್ಯಮಕ್ಕೆ ಉದ್ಯಮಿಗಳನ್ನು ಆಕರ್ಷಿಸಲು ಅನುವಾಗುವುದು ಎಂದು ರಾಜ್ಯ ಸರ್ಕಾರವು ಆಶಿಸಿತು. . ಬಳ್ಳಾರಿ ವಿಮಾನನಿಲ್ದಾಣದ ರನ್ ವೇಯು ತುಂಬ ಕಿರಿದಾಗಿದ್ದು ಅದನ್ನು ವಿಸ್ತರಿಸಲು ಸಾಧ್ಯವಿರಲಿಲ್ಲ.[೨] ಬೆಂಗಳೂರಿನಿಂದ ಇಲ್ಲಿಗೆ 2 ಅಕ್ಟೋಬರ್ 2004ರಿಂದ ತನ್ನ ವಿಮಾನ ಹಾರಾಟವನ್ನು ಆರಂಭ ಮಾಡುವುದಾಗಿ ಏರ್ ಡೆಕ್ಕನ್ ಘೋಷಿಸಿತು ; ಆದಾಗ್ಯೂ, ತಾಂತ್ರಿಕ ಕಾರಣಗಳಿಂದಾಗಿ ಅದು ಸಾಧ್ಯವಾಗಲಿಲ್ಲ.[೩] |
ರಾಜ್ಯ ಸರ್ಕಾರವು ಇಲ್ಲಿ ಒಂದು ಏರ್ ಟ್ರಾಫಿಕ್ ಕಂಟ್ರೋಲ್ ಟವರ್ ಸೇರಿದಂತೆ ಕೆಲವು ಹೆಚ್ಚುವರಿ ಸೌಲಭ್ಯಗಳನ್ನು ಅಳವಡಿಸಬೇಕಿತ್ತು .[೪] ₹25 ಕೋಟಿ₹೨೫ crore (US$೫.೫೫ million) ವೆಚ್ಚದ ಪ್ರಯಾಣಿಕರ ಟರ್ಮಿನಲ್ ನ ನಿರ್ಮಾಣವನ್ನು ಅನ್ನು 2006 ರಲ್ಲಿ ಜೆ. ಎಸ್. ಡಬ್ಲ್ಯೂ ಸ್ಟೀಲ್ ಸಂಸ್ಥೆಯು ಆರಂಭಿಸಿತು. ಈ ವಿಮಾನನಿಲ್ದಾಣವನ್ನು 3 ನವೆಂಬರ್ 2005 ರಂದು ವ್ಯವಸ್ಥಾಪಕ ನಿರ್ದೇಶಕ ಸಜ್ಜನ್ ಜಿಂದಾಲ್ ಅವರು ಜೆ. ಎಸ್. ಡಬ್ಲ್ಯೂ ಸ್ಟೀಲ್ ನ , ಮತ್ತು ರಾಜ್ಯ ಸರ್ಕಾರದ ಹಲವಾರು ಅಧಿಕಾರಿಗಳು ಮತ್ತು ರಾಜ್ಯಪಾಲ ಟಿ. ಎನ್. ಚತುರ್ವೇದಿ, ಅವರ ಹಾಜರಿಯಲ್ಲಿ ಉದ್ಘಾಟಿಸಿದರು.[೫][೬] |
ಇಲ್ಲಿ 13/31 ಎಂದು ಗೊತ್ತುಪಡಿಸಿದ ಒಂದು ರನ್ವೇ ಇದ್ದು , ಅದು ೧೫೦೦ ಮೀ. ಉದ್ದ ಮತ್ತು ೩೦ ಮೀ ಅಗಲ ಹೊಂದಿದೆ . ಪ್ರಯಾಣಿಕರ ಟರ್ಮಿನಲ್ ೧೯೦ ಚ.ಮೀ ಆವರಿಸಿದ್ದು ಒಂದೇ ಒಂದು ಚೆಕ್-ಇನ್ ಡೆಸ್ಕ್ ಅನ್ನು , ಭದ್ರತಾ ಲೇನ್, ಬ್ಯಾಗೇಜ್ ಸ್ಕ್ಯಾನರ್ ಮತ್ತು 50 ಆಸನಗಳನ್ನು ಹೊಂದಿರುವ ಕಾಯುವ ಪ್ರದೇಶವನ್ನು ಹೊಂದಿದೆ. |
ಹೊಸ ಬಳ್ಳಾರಿ ವಿಮಾನನಿಲ್ದಾಣ |
↑ Dey, Sudipto (6–19 April 2008). "The Second Coming". Outlook Business. 3 (8): 58–59. Retrieved 21 June 2016. |
↑ "Bellary flights to use Jindal airstrip". The Hindu. 16 July 2004. Retrieved 21 June 2016. |
↑ "Bangalore-Bellary flights postponed". The Hindu. 28 September 2004. Retrieved 21 June 2016. |
↑ "Jindal airstrip needs a few more facilities". The Hindu. 18 March 2005. Retrieved 21 June 2016. |
↑ "Air Deccan launches flight from Bellary to Bangalore". The Hindu. 4 November 2006. Retrieved 21 June 2016. |
↑ "Hampi gets air connectivity from Bangalore, Goa". Oneindia. 3 November 2006. Retrieved 21 June 2016. |
Media related to ಜಿಂದಾಲ್ ವಿಜಯನಗರ ವಿಮಾನನಿಲ್ದಾಣ at Wikimedia Commons |
"https://kn.wikipedia.org/w/index.php?title=ಜಿಂದಾಲ್_ವಿಜಯನಗರ_ವಿಮಾನನಿಲ್ದಾಣ&oldid=831935" ಇಂದ ಪಡೆಯಲ್ಪಟ್ಟಿದೆ |
ಅಮಿತ್ ಶಾ ಬಿಜೆಪಿ ಅಧ್ಯಕ್ಷ ಹುದ್ದೆಯಲ್ಲಿ ಇನ್ನೂ ಆರು ತಿಂಗಳು ಮುಂದುವರಿಕೆ - TruthIndia |
ಬಿಜೆಪಿ ಸಭೆಯಲ್ಲಿ ಅಮಿತ್ ಶಾ ಅವರ ಮಾತುಗಳನ್ನು ಇಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಭೂಪೇಂದರ್ ಯಾದವ್ ಸುದ್ದಿಗೋಷ್ಠಿ ನಡೆಸಿ ಸುದ್ದಿಗಾರರೊಂದಿಗೆ ಹಂಚಿಕೊಂಡರು. |
ನವದೆಹಲಿ: ಭಾರತೀಯ ಜನತಾ ಪಕ್ಷದ ರಾಷ್ಟ್ರಾಧ್ಯಕ್ಷರಾಗಿರುವ ಅಮಿತ್ ಶಾ ಅವರನ್ನು ಇನ್ನೂ 6 ತಿಂಗಳ ಕಾಲ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸುವ ನಿರ್ಧಾರವನ್ನು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿ ಸಧ‍್ಯ ಸಂಘಟನಾ ಪದಾಧಿಕಾರಿಗಳನ್ನು ಚುನಾಯಿಸುವ ಪ್ರಕ್ರಿಯೆ ನಡೆಸಲಿದ್ದು ಇದು ಮುಗಿಯು ವರೆಗೂ ಹಾಲಿ ಅಧ್ಯಕ್ಷ ಅಮಿತ್ ಶಾ ಅವರನ್ನೇ ಮುಂದುವರೆಸಲಾಗುವುದು ಎನ್ನಲಾಗಿದೆ. |
"ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಇಷ್ಟು ವರ್ಷಗಳಲ್ಲೇ ಅತಿ ಹೆಚ್ಚು- 303 ಸೀಟು ಗಳಿಸಿಕೊಂಡಿದ್ದರೂ ಪಕ್ಷವು ಚುನಾವಣಾ ಕಾರ್ಯನಿರ್ವಹಣೆ ವಿಷಯದಲ್ಲಿ ಇನ್ನೂ ತನ್ನ ಉತ್ತುಂಗವನ್ನು ತಲುಪಿಲ್ಲ" ಎಂದು ಅಮಿತ್ ಶಾ ಅಭಿಪ್ರಾಯಪಟ್ಟಿದ್ದಾರೆ" ಎಂದು ಯಾದವ್ ತಿಳಿಸಿದರು. |
ಶೇಕಡಾ 50ಕ್ಕಿಂತ ಹೆಚ್ಚು ಮತದಾರರ ಬೆಂಬಲ ಪಡೆದಿರುವ ಬಿಜೆಪಿಯ ಯಶಸ್ಸಿಗೆ ಕೋಟ್ಯಂತರ ಬಿಜೆಪಿ ಬೆಂಬಲಿಗರ ಮತ್ತು ಕಾರ್ಯಕರ್ತರ ಕಠಿಣ ಶ್ರಮವೇ ಕಾರಣ ಎಂದು ಅಮಿತ್ ಶಾ ಹೇಳಿದ್ದಾರೆ" |
ಬಿಜೆಪಿ ಹಮ್ಮಿಕೊಂಡಿರುವ ಸದಸ್ಯತ್ವ ಆಂದೋಲನದ ಹೊಣೆಯನ್ನು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವಹಿಸಿಕೊಳ್ಳುವುದಾಗಿ ಸಭೆಯಲ್ಲಿ ತೀರ್ಮಾನವಾಗಿದೆ" ಎಂದು ಭೂಪೆಂದರ್ ತಿಳಿಸಿದರು. |
ಸಧ‍್ಯ ಬಿಜೆಪಿ ದೇಶದಾದ್ಯಂತ 11 ಕೋಟಿ ಸದಸ್ಯರನ್ನು ಹೊಂದಿದ್ದು ಶೇಕಡಾ 20ರಷ್ಟು ಸದಸ್ಯಬಲ ಹೆಚ್ಚಿಸುವ ಗುರಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಯಾದವ್ ತಿಳಿಸಿದರು. |
ರೈತ ಹೋರಾಟವೆಂಬ ಸಾಗರ ; ಇದು ಬರೀ ಪಂಜಾಬಿನದ್ದಲ್ಲ, ಇಡೀ ದೇಶದ ಹೋರಾಟ – Kannada news- suddiDina (ಸುದ್ದಿ ದಿನ) | kannada Live news | Karnataka news | ಕನ್ನಡ ನ್ಯೂಸ್ | Kannada News Portal |
ಸುದ್ದಿದಿನ,ಬೆಂಗಳೂರು: "ತುತ್ತು ಅನ್ನವ ತಿನ್ನುವ ಮೊದಲು ರೈತನನ್ನು ನೆನೆ" ಎಂಬುದು ನಮ್ಮ ನಡುವಿನ ಖ್ಯಾತ ನಾಣ್ನುಡಿ. ಆದರೆ, ನಮ್ಮನ್ನು ಆಳುವ ಪ್ರಭುತ್ವ ಈ ನಾಣ್ನುಡಿಯನ್ನು ಮರೆತು ಇದೀಗ ರೈತರಿಗೆ ದ್ರೋಹವೆಸಗಲು ಮುಂದಾಗಿದೆ. ಕೃಷಿಯನ್ನು ಕಾರ್ಪೋರೇಟ್ಗೊಳಿಸಲಾಗುತ್ತಿದೆ. ಪರಿಣಾಮ ವಿಶ್ವ ಪರಂಪರೆಯಲ್ಲಿ ರೈತರ ನಾಡು ಎಂದೇ ಖ್ಯಾತವಾಗಿರುವ ಭಾರತ ರೈತರ ಹಕ್ಕಿನ ಕಾರಣಕ್ಕೆ ಹಿಂದೆಂದೂ ಕಾರಣ ಐತಿಹಾಸಿಕ ಹೋರಾಟವೊಂದಕ್ಕೆ ಸಾಕ್ಷಿಯಾಗಿದೆ. ಹೊಸ ದಶಕವೊಂದು ರೈತ ಹೋರಾಟದೊಂದಿಗೆ ಉದಯಿಸಿದೆ. |
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆ ಅಕ್ಷರಶಃ ರೈತರ ಪಾಲಿನ ಮರಣ ಶಾಸನ ಎಂಬುದು ರೈತರ ಆರೋಪ. ಹೀಗಾಗಿ ಈ ಕಾನೂನನ್ನು ಹಿಂಪಡೆಯಬೇಕು ಎಂದು ರೈತ ಸಮುದಾಯ ಕಳೆದ ಒಂದು ವರ್ಷದಿಂದ ಹೋರಾಟ ನಡೆಸುತ್ತಿದೆ. ಆದರೆ, ಈ ರೈತ ಹೋರಾಟ ತೀವ್ರತೆಯನ್ನು ಕಂಡಿದ್ದು ಕಳೆದ ವರ್ಷದ ನವೆಂಬರ್ ಅಂತ್ಯದಲ್ಲೇ. ರಾಷ್ಟ್ರ ರಾಜಧಾನಿಗೆ ಹತ್ತಿರದಲ್ಲೇ ಇರುವ ಪಂಜಾಬ್-ಹರಿಯಾಣ ರೈತರು ರಾಜಧಾನಿಗೆ ಲಗ್ಗೆ ಹಾಕಿ, ಇದೀಗ ದೆಹಲಿಯ ಹೊರವಲಯದಲ್ಲಿ ಬೀಡು ಬಿಟ್ಟಿದ್ದಾರೆ. ಸರ್ಕಾರದ ವಿರುದ್ಧ ನಿರಂತರ ಹೋರಾಟ ನಡೆಸುತ್ತಿದ್ದಾರೆ. |
ಹಾಗಾದರೆ ಇದು ಕೇವಲ ಪಂಜಾಬ್ ಮತ್ತು ಹರಿಯಾಣ ರೈತರ ಹೋರಾಟವೇ? ಈ ಹೋರಾಟಕ್ಕೆ ಬೇರೆ ರಾಜ್ಯದ ರೈತರ ಬೆಂಬಲ ಇಲ್ಲವೇ? ಎಂಬುದು ಪ್ರಶ್ನೆ. ಅಸಲಿಗೆ ಕೊರೋನಾ ಕಾರಣಕ್ಕೆ ದೇಶದ ನಾನಾ ಮೂಲೆಗಳಿಂದ ದೆಹಲಿಗೆ ತೆರಳಲಾಗದ ರೈತರು ತಮ್ಮ ರಾಜ್ಯದಲ್ಲೇ ಹಲವೆಡೆ ಉಗ್ರ ಹೋರಾಟಗಳನ್ನು ನಡೆಸುತ್ತಲೇ ಇದ್ದಾರೆ. ಆದರೆ, ಇದು ಕೇವಲ ಪಂಜಾಬ್ ಹರಿಯಾಣ ರೈತರ ಹೋರಾಟವಷ್ಟೇ ಹೊರತು, ಇಡೀ ಭಾರತದ ಹೋರಾಟವಲ್ಲ ಎಂದು ಬಿಂಬಿಸುವಲ್ಲಿ ನಮ್ಮ ದೇಶದ ಮುಖ್ಯವಾಹಿನಿ ಮಾಧ್ಯಮಗಳು ಸಾಕಷ್ಟು ಶ್ರಮವಹಿಸಿವೆ. ಇದು ಮಾಧ್ಯಮಗಳು ರೈತರಿಗೆ ಎಸಗಿದ ದ್ರೋಹ ಎನ್ನಲು ಅಡ್ಡಿಯಿಲ್ಲ. |
ಆದರೆ, ಹರಿವ ನದಿಗೆ ನೂರಾರು ತೊರೆ ಎಂಬಂತೆ ದೆಹಲಿ ರೈತ ಹೋರಾಟಕ್ಕೆ ಇಡೀ ದೇಶದ ರೈತರು ಸ್ಪಂದಿಸಿದ್ದಾರೆ. ತಾವಿದ್ದಲ್ಲಿಂದಲೇ ತಮ್ಮ ದನಿಗೂಡಿಸಿದ್ದಾರೆ ಎಂಬುದೇ ಕಟುವಾಸ್ತವ. ಹಾಗಾದರೆ, ಕಳೆದ ಎರಡು ತಿಂಗಳಲ್ಲಿ ದೆಹಲಿ ರೈತರ ಹೋರಾಟವನ್ನು ಬೆಂಬಲಿಸಿ ಭಾರತದಲ್ಲಿ ಯಾವ ಯಾವ ರಾಜ್ಯದಲ್ಲಿ ರೈತರು ಹೋರಾಟ ನಡೆಸಿದ್ದಾರೆ? ಹೋರಾಟದ ತೀವ್ರತೆ ಏನು? ಈ ಹೋರಾಟವನ್ನು ತಡೆಯಲು ಅಲ್ಲಿನ ಸರ್ಕಾರಗಳು ಕೈಗೊಂಡ ಕ್ರಮ ಏನು? ಎಂಬ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. |
ದ್ರಾವಿಡ ನಾಡಿನಲ್ಲಿ ಮೊಳಗಿತ್ತು ರೈತ ಕಹಳೆ |
ಕೇಂದ್ರ ಸರ್ಕಾರದ ಕೃಷಿ ಕಾನೂನನ್ನು ವಿರೋಧಿಸಿ ಪಂಜಾಬ್ ಹಾಗೂ ಹರಿಯಾಣ ರೈತರು ದೆಹಲಿ ಕಡೆ ಮುಖ ಮಾಡುತ್ತಿದ್ದಂತೆಯೇ ತಮಿಳುನಾಡಿನಲ್ಲೂ ರೈತರು ಹೋರಾಟದ ಕಣಕ್ಕೆ ಧುಮುಕಿದ್ದರು. |
ನವೆಂಬರ್ ಅಂತ್ಯದಲ್ಲಿ ರೈತರು ದೆಹಲಿ ಕಡೆಗೆ ಹೊರಡುತ್ತಿದ್ದಂತೆ ತಮಿಳುನಾಡಿನ ಪ್ರಬಲ ವಿರೋಧ ಪಕ್ಷವಾದ ಡಿಎಂಕೆ ಕಳೆದ ವರ್ಷ ಡಿಸೆಂಬರ್ 05 ರಂದು ದೆಹಲಿ ರೈತ ಹೋರಾಟವನ್ನು ಬೆಂಬಲಿಸಿ "ಅನ್ನದಾತನಿಗಾಗಿ ಒಂದು ದಿನದ ಉಪವಾಸ ಸತ್ಯಾಗ್ರಹ" ಎಂಬ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮವನ್ನು ತಮಿಳುನಾಡಿನ ಎಲ್ಲಾ 36 ರೈತ ಸಂಘಟನೆಗಳೂ ಬೆಂಬಲಿಸಿದ್ದವು. ಅಲ್ಲದೆ, ಸಾವಿರಾರು ರೈತರು ಹಾಗೂ ಡಿಎಂಕೆ ಕಾರ್ಯಕರ್ತರು ಈ ಹೋರಾಟದಲ್ಲಿ ಪಾಲ್ಗೊಂಡು ಒಂದು ದಿನ ಉಪವಾಸ ಆಚರಿಸುವ ಮೂಲಕ ಗಾಂಧಿ ಮಾರ್ಗದಲ್ಲಿ ಹೋರಾಟದ ಕಿಚ್ಚು ಹಚ್ಚಿಸಿದ್ದರು. |
ಅಲ್ಲಿಂದ ಈವರೆಗೆ ತಮಿಳುನಾಡಿನಲ್ಲಿ ಪ್ರತಿದಿನ ಒಂದಲ್ಲಾ ಒಂದು ಜಿಲ್ಲೆಯಲ್ಲಿ ರೈತರು ಕೇಂದ್ರ ಸರ್ಕಾರವನ್ನು ವಿರೋಧಿಸಿ ನಿರಂತರವಾಗಿ ಹೋರಾಟವನ್ನು ನಡೆಸುತ್ತಲೇ ಇದ್ದಾರೆ. ಈ ಹೋರಾಟಗಳಲ್ಲೇ ಹೆಚ್ಚು ಗಮನ ಸೆಳೆದ ಹೋರಾಟವೆಂದರೆ ಡಿಸೆಂಬರ್ 11ರಂದು ರೈತರ ರಾಜಭವನ ಮುತ್ತಿಗೆ ಚಳುವಳಿ, ಡಿಸೆಂಬರ್ 15 ರಂದು ತಂಜಾವೂರು ಜಿಲ್ಲೆಯಲ್ಲಿ ನಡೆದ ರೈತರ ಟ್ರ್ಯಾಕ್ಟರ್ ರ‍್ಯಾಲಿ ಮತ್ತು ರೈಲ್ ರೋಖೋ ಚಳುವಳಿ. |
ತಮಿಳುನಾಡಿನ 22 ಜಿಲ್ಲೆಗಳ ರೈತರು ಒಟ್ಟಾಗಿ ಡಿಸೆಂಬರ್ 11 ರಂದು ಚೆನ್ನೈನಲ್ಲಿರುವ ರಾಜಭವನಕ್ಕೆ ಮುತ್ತಿಗೆ ಹಾಕಿದ್ದರೆ, ಡಿಸೆಂಬರ್ 15 ರಂದು ತಂಜಾವೂರಿನ ಕಾವೇರಿ ಡೆಲ್ಟಾ ಭಾಗದಲ್ಲಿ ಟ್ರ್ಯಾಕ್ಟರ್ ರ್ಯಾಲಿ ಆಯೋಜಿಸಿದ್ದರು. ಈ ರ್ಯಾಲಿಗೆ ಪೊಲೀಸರಿಂದ ಅನುಮತಿಯನ್ನೂ ಪಡೆಯಲಾಗಿತ್ತು. ಆದರೆ, ದಿಢೀರೆಂದಯ ಮಾರ್ಗ ಮಧ್ಯೆ ರ್ಯಾಲಿಯನ್ನು ತಡೆಯಲಾಗಿತ್ತು. ಇದರಿಂದ ರೊಚ್ಚಿಗೆದ್ದ ರೈತರು ಒಂದಿಡೀ ದಿನ ತಂಜಾವೂರು ಚೆನ್ನೈ ರಾಷ್ಟ್ರೀಯ ಹೆದ್ದಾರಿಯನ್ನೇ ತಡೆದು ಪ್ರತಿಭಟಿಸಿದ್ದರು. ಅಲ್ಲದೆ, ಕೃಷಿ ಕಾನೂನನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈಲ್ ರೋಖೋ ಚಳುವಳಿಯನ್ನೂ ನಡೆಸಿದ್ದರು. |
ಇದೇ ವೇಳೆ ತಮಿಳುನಾಡಿನ ರೈತ ಸಂರಕ್ಷಣಾ ಸಂಘದ ರೈತರ ಒಂದು ತಂಡ ದೆಹಲಿಗೆ ತೆರಳಿ ರೈತ ಹೋರಾಟದಲ್ಲಿ ಭಾಗವಹಿಸಿದ್ದರೆ, ಮತ್ತೊಂದೆಡೆ ತಮಿಳುನಾಡಿನ ತಿರುನಲ್ವೇಲಿ, ನಾಗಪಟ್ಟಣಂ ಜಿಲ್ಲೆಗಳಲ್ಲಿ ರೈತರು ನೇಗಿಲು ಹಿಡಿದು ಕೇಂದ್ರದ ವಿರುದ್ಧ ಹೋರಾಟ ನಡೆಸಿದ್ದರು. ಈ ವೇಳೆ ರೈತರ ಮೇಲೆ ಲಾಠಿ ಚಾರ್ಚ್ ಮಾಡಲಾಗಿತ್ತು. ಅಲ್ಲದೆ, 62 ಜನರನ್ನು ಒತ್ತಾಯಪೂರ್ವಕವಾಗಿ ಬಂಧಿಸಿ ವಿವಿಧ ಕಲಂ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು ಎಂಬುದು ಉಲ್ಲೇಖಾರ್ಹ. |
ಮಹಾರಾಷ್ಟ್ರದ 21 ಜಿಲ್ಲೆಯಿಂದ ಮುಂಬೈಗೆ ಭೋರ್ಗರೆದ ರೈತರ ದಂಡು |
ದೆಹಲಿ ರೈತ ಹೋರಾಟ ಮತ್ತು ಜನವರಿ 26ರಂದು ದೆಹಲಿಯಲ್ಲಿ ನಡೆಯಲಿರುವ ಟ್ರ್ಯಾಕ್ಟರ್ ರ್ಯಾಲಿಯನ್ನು ಬೆಂಬಲಿಸಿ ಮಹಾರಾಷ್ಟ್ರದ ರೈತರು ಸಹ ಜನವರಿ 26 ರಂದು ಮುಂಬೈ ಮಹಾನಗರದಲ್ಲಿ ರ್ಯಾಲಿ ನಡೆಸಲು ಮುಂದಾಗಿದ್ದಾರೆ. ಈ ಮೂಲಕ ಕೇಂದ್ರದ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಲು ವೇದಿಕೆ ಸಿದ್ದಪಡಿಸಿದ್ದಾರೆ. |
ಇದರ ಭಾಗವಾಗಿ ಮಹಾರಾಷ್ಟ್ರದ 21 ಜಿಲ್ಲೆಗಳ ಲಕ್ಷಾಂತರ ರೈತರು ಕಳೆದ ಜನವರಿ 23 ರಂದು ನಾಸಿಕ್ನಿಂದ ಮುಂಬೈಗೆ ಪಾದಯಾತ್ರೆ ಹೊರಟಿದ್ದಾರೆ. ಈ ಯಾತ್ರೆ ಸೋಮವಾರ (ಜನವರಿ 25) ಮುಂಬೈ ಪ್ರವೇಶಿಸಲಿದೆ. ಅಲ್ಲದೆ, ಹೆಸರಾಂತ ಆಜಾದ್ ಮೈದಾನದಲ್ಲಿ ಮಹಾರಾಷ್ಟ್ರದ ಲಕ್ಷಾಂತರ ರೈತರು ಜಮಾಯಿಸಲಿದ್ದು, ದೆಹಲಿಯಲ್ಲಿ ಹೋರಾಟ ನಿರತ ರೈತರಿಗೆ ಬಲ ತುಂಬಲಿದ್ದಾರೆ. ಈ ಹೋರಾಟದಲ್ಲಿ ಎನ್ಸಿಪಿ ಹಿರಿಯ ನಾಯಕ ಶರದ್ ಪವಾರ್ ಸಹ ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದೆ. |
ಆದರೆ, ಕೃಷಿ ಕಾಯ್ದೆಯನ್ನು ವಿರೋಧಿಸಿ ಈ ಪ್ರಮಾಣ ಸಂಖ್ಯೆಯಲ್ಲಿ ರೈತರು ಮುಂಬೈಗೆ ಲಗ್ಗೆ ಇಡುತ್ತಿರುವ ಕುರಿತು ದೇಶದ ಯಾವ ಸುದ್ದಿ ಮಾಧ್ಯಮಗಳೂ ಸಹ ಒಂದೈದು ನಿಮಿಷವೂ ಸಹ ಸುದ್ದಿ ಮಾಡದೆ ಇರುವುದು ದುರಂತವೇ ಸರಿ! |
ಮಧ್ಯಪ್ರದೇಶದಲ್ಲಿ ರೈತರ ರ್ಯಾಲಿ ವಿರುದ್ಧ ಜಲಫಿರಂಗಿ ಬಳಸಿದ್ದ ಸರ್ಕಾರ |
ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟಿಸುತ್ತಿರುವ ರೈತರನ್ನು ಬೆಂಬಲಿಸಿ ಮಧ್ಯಪ್ರದೇಶದ ಭೂಪಾಲ್ನಲ್ಲಿ ಕಾಂಗ್ರೆಸ್ ಪಕ್ಷ ಎರಡು ವಾರಗಳ ಪ್ರತಿಭಟನಾ ಕಾರ್ಯಕ್ರಮ ಆಯೋಜಿಸಿತ್ತು. ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಈ ಹೋರಾಟದ ನೇತೃತ್ವವಹಿಸಿದ್ದರು. |
ಜನವರಿ 23 ರಂ ಮಧ್ಯಾಹ್ನ ನೂರಾರು ಕಾಂಗ್ರೆಸ್ ಕಾರ್ಯಕರ್ತರು ನಗರದ ಜವಾಹರ್ ಚೌಕ್ ಪ್ರದೇಶದಲ್ಲಿ ಒಟ್ಟುಗೂಡಿದ್ದರು. ಅಲ್ಲದೆ ರಾಜಭವನಕ್ಕೆ ಮುತ್ತಿಗೆ ಹಾಕಲು ಯೋಜಿಸಲಾಗಿತ್ತು. ಆದರೆ, ಪೊಲೀಸರು ಇದಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ. ಪರಿಣಾಮ ರೈತರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ರಾಜಭವನವನ್ನು ಸಮೀಪಿಸುತ್ತಿದ್ದಂತೆ, ಅವರನ್ನು ನಿಯಂತ್ರಿಸಲು ಸಾಧ್ಯವಾಗದ ಪೊಲೀಸರು ಹೋರಾಟಗಾರರ ಮೇಲೆ ಅಶ್ರವಾಯು ದಾಳಿ, ಜಲಫಿರಂಗಿ ದಾಳಿ ನಡೆಸಿದ್ದಾರೆ. |
ಪೊಲೀಸರ ಬಲ ಪ್ರಯೋಗದ ಮೂಲಕ ಮಧ್ಯಪ್ರದೇಶದಲ್ಲಿ ರೈತರ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡಲಾಗಿತ್ತು. ಆದರೂ, ಸಹ ಇಂದಿಗೂ ಮಧ್ಯಪ್ರದೇಶದ ಹಲವು ಜಿಲ್ಲೆಗಳಲ್ಲಿ ಪ್ರತಿನಿತ್ಯ ರೈತರು ಹೋರಾಟವನ್ನು ಮುಂದುವರೆಸುತ್ತಲೇ ಇದ್ದಾರೆ. |
ಕಲ್ಕತ್ತಾದ ರಾಜಭವನಕ್ಕೆ 40 ಸಾವಿರ ಜನ ಮೆರವಣಿಗೆ |
ಕೇಂದ್ರ ಸರ್ಕಾರ ಕೃಷಿ ಕಾನೂನನ್ನು ಜಾರಿಗೆ ತರುತ್ತಿದ್ದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಕಾನೂನನ್ನು ಬಹಿರಂಗವಾಗಿ ಟೀಕಿಸಿದ್ದರು. ಅಲ್ಲದೆ ಅಲ್ಲಿನ ವಿಧಾನಸಭೆಯಲ್ಲಿ ಈ ಕಾನೂನುಗಳ ವಿರುದ್ಧ ನಿರ್ಣಯವನ್ನು ಮಂಡಿಸಿದ್ದರು. ಆದರೆ, ದೆಹಲಿ ರೈತ ಹೋರಾಟಕ್ಕೆ ಬಲ ತುಂಬಲು ಮುಂದಾಗಿದ್ದ ಬಂಗಾಳದ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಡಿಸೆಂಬರ್ 17 ರಂದು ಸುಮಾರು 40,000 ರೈತ ಹೋರಾಟಗಾರರ ಜೊತೆಗೆ ಕಲ್ಕತ್ತಾದ ರಾಜಭವನಕ್ಕೆ ಮೆರವಣಿಗೆ ಆಯೋಜಿಸಿತ್ತು. ಅಲ್ಲದೆ, ಜಿಲ್ಲಾವಾರು ಹೋರಾಟಗಳು ಪ್ರತಿನಿತ್ಯ ನಡೆಯುತ್ತಲೇ ಇದೆ. |
ಈ ಹೋರಾಟವನ್ನು ಬಂಗಾಳದ ಇತಿಹಾಸದಲ್ಲಿ ನಡೆದ ಅತಿದೊಡ್ಡ ಹೋರಾಟ ಎಂದು ಬಣ್ಣಿಸಲಾಗುತ್ತಿದೆ. ಈ ಮೂಲಕ ರೈತರ ಪ್ರತಿಭಟನೆಯು ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಿಗೆ ಮಾತ್ರ ಸೀಮಿತವಾಗಿಲ್ಲ ಎಂಬುದನ್ನು ಸಾಬೀತುಪಡಿಸಿದೆ ಎಂದು ಸಂಘಟಕರು ತಿಳಿಸಿದ್ದರು. |
ಕೇರಳದಲ್ಲೂ ರೈತ ಕಹಳೆ |
ದೆಹಲಿಯ ಸಿಂಗು ಗಡಿಯಲ್ಲಿ ರೈತ ಹೋರಾಟ ಕಾವು ಪಡೆಯುತ್ತಿದ್ದಂತೆ ಕೇರಳದ ರೈತರು ಸಹ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದರು. ತಿರುವನಂತಪುರಂನಲ್ಲಿ ಜಂಟಿ ರೈತ ಪರಿಷತ್ ಆಯೋಜಿಸಿದ್ದ ಅನಿರ್ದಿಷ್ಟ ಪ್ರತಿಭಟನೆ ಇಂದಿಗೂ ಸಹ ಮುಂದುವರೆದಿದೆ. ಈ ಪ್ರತಿಭಟನೆಯಲ್ಲಿ 600 ರೈತ ಸಂಘಗಳು ಪಾಲ್ಗೊಂಡಿವೆ. ಅಲ್ಲದೆ ಸ್ವತಃ ಕೇರಳ ಸರ್ಕಾರ ಅಲ್ಲಿನ ಅಧಿವೇಶನದಲ್ಲಿ ಕೇಂದ್ರ ಸರ್ಕಾರದ ಮೂರು ಕೃಷಿ ನೀತಿಗಳ ವಿರುದ್ಧ ನಿರ್ಣಯ ಜಾರಿಗೆ ತಂದಿದ್ದನ್ನು ಇಲ್ಲಿ ಸ್ಮರಿಸಬಹುದು. |
ಆಂಧ್ರ ತೆಲಂಗಾಣದಲ್ಲೂ ಹೋರಾಟಕ್ಕಿಳಿದ ರೈತರು |
ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳು ರೈತರನ್ನು ಮತ್ತಷ್ಟು ಶೋಷಿಸುತ್ತವೆ ಮತ್ತು ದೇಶದ ಆಹಾರ ಭದ್ರತೆಗೆ ಧಕ್ಕೆ ತರುವ ಕಪ್ಪು ಕಾನೂನುಗಳು ಎಂದು ವಿರೋಧಿಸಿರುವ ಆಂಧ್ರಪ್ರದೇಶದ "ಅಖಿಲಾ ರೈತ ಪೋರಾಟ ಸಮನ್ವಯ ಸಮಿತಿ" ಮುಂದಾಳತ್ವದಲ್ಲಿ ಆಂಧ್ರಪ್ರದೇಶದಲ್ಲೂ ರೈತ ಹೋರಾಟ ನಡೆಯುತ್ತಲೇ ಇದೆ. |
ಕಳೆದ ವಾರ ಮಾಜಿ ಸಚಿವ ವಡ್ಡೆ ಶೋಭನದೀಶ್ವರ್ ರಾವ್ ನೇತೃತ್ವದಲ್ಲಿ ಕೇಂದ್ರದ ವಿರುದ್ಧ ಹೋರಾಟ ಆಯೋಜಿಸಲಾಗಿತ್ತು. ವೈ.ಕೇಶವ ರಾವ್, ಎಂ.ಸೂರ್ಯನಾರಾಯಣ, ವಿ.ಶ್ರೀನಿವಾಸ ರಾವ್, ಸಿ.ಎಚ್. ಬಾಬು ರಾವ್, ರವುಲಾ ವೆಂಕಯ್ಯ, ಯಲಮಂದ ರಾವ್, ಪಿ.ಜಮಲಯ, ವಿ.ವೆಂಕಟೇಶ್ವರಲು ಸೇರಿದಂತೆ ಆಂಧ್ರದ ಪ್ರಮುಖ ನಾಯಕರು ಈ ಹೋರಾಟದಲ್ಲಿ ಭಾಗಿಯಾಗಿದ್ದರು. ಆದರೆ, ಈ ಹೋರಾಟದಲ್ಲಿ ಉದ್ವಿಗ್ನತೆ ಉಂಟಾದ ಪರಿಣಾಮ ಈ ಎಲ್ಲಾ ಹೋರಾಟಗಾರರನ್ನು ಬಂಧಿಸಲಾಗಿತ್ತು. |
ಇದೇ ವೇಳೆ ತೆಲಂಗಾಣದ ರೈತರೂ ಸಹ ಒಗ್ಗಟ್ಟನ್ನು ಪ್ರದರ್ಶಿಸಿದ್ದರು. ರಾಜ್ಯದ ವಿವಿಧ ಭಾಗಗಳಿಂದ ಹೈದ್ರಾಬಾದ್ಗೆ ಆಗಮಿಸಿದ್ದ ರೈತರು ಹಾಗೂ ರೈತ ಮಹಿಳೆಯರು ದೊಡ್ಡ ಮಟ್ಟದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿದ್ದರು. ಅಲ್ಲದೆ, ಕಳೆದ ಎರಡು ತಿಂಗಳಲ್ಲಿ ಹಲವಾರು ಜಿಲ್ಲೆಗಳು ಹೋರಾಟಕ್ಕೆ ಸಾಕ್ಷಿಯಾಗಿವೆ. |
ಬಿಜೆಪಿಗರಿಗೆ ನಿಷೇಧ ಹೇರಿದ ಉತ್ತರಪ್ರದೇಶ-ಹರಿಯಾಣ ಗ್ರಾಮಗಳು |
ಕೇಂದ್ರದ ಕೃಷಿ ಕಾಯ್ದೆಯ ವಿರುದ್ದ ಪಂಜಾಬ್ ಮತ್ತು ಹರಿಯಾಣದಲ್ಲಿನ ಹೋರಾಟ ತಾರಕಕ್ಕೇರಿದೆ. ದೇಶದಾದ್ಯಂತ ವಿವಿಧೆಡೆ ಹೋರಾಟಗಳು ನಡೆಯುತ್ತಲೇ ಇದೆ. ಆದರೆ, ಇಡೀ ದೇಶದ ಹೋರಾಟ ಒಂದು ಬಗೆಯದ್ದಾದರೆ, ಹರಿಯಾಣದ 60 ಗ್ರಾಮಗಳು ಹಾಗೂ ಉತ್ತರ ಪ್ರದೇಶದ ಕೆಲ ಗ್ರಾಮಗಳ ಹೋರಾಟ ವಿಭಿನ್ನ ರೀತಿಯಲ್ಲಿ ಸಾಗಿದೆ. |
ದೇಶದ ರೈತರು ದೆಹಲಿಯಲ್ಲಿ ತಮ್ಮ ಹೋರಾಟವನ್ನು ಆರಂಭಿಸುತ್ತಿದ್ದಂತೆ ಹರಿಯಾಣ ಹಾಗೂ ಉತ್ತರಪ್ರದೇಶದ ಅನೇಕ ಹಳ್ಳಿಗಳ ಜನ ತಮ್ಮ ಗ್ರಾಮಗಳಿಗೆ ರಾಜ್ಯದ ಆಡಳಿತ ಪಕ್ಷವಾದ ಬಿಜೆಪಿ ಹಾಗೂ ಜೆಜೆಪಿ ನಾಯಕರು ಮತ್ತು ಕಾರ್ಯಕರ್ತರಿಗೆ ಪ್ರವೇಶವನ್ನೇ ನಿಷೇಧಿಸಿದ್ದಾರೆ. |
ರೈತ ವಿರೋಧಿ ಕಾನೂನನ್ನು ವಿರೋಧಿಸಿ ರಾಷ್ಟ್ರದಾದ್ಯಂತದ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿರುವುದರಿಂದ ರಾಜ್ಯದ ಅನೇಕ ಗ್ರಾಮಗಳ ನಿವಾಸಿಗಳು ಬಿಜೆಪಿ-ಜೆಜೆಪಿಯ ಸಚಿವರು ಮತ್ತು ಶಾಸಕರನ್ನು ಬಹಿಷ್ಕರಿಸಿ ನಿರ್ಣಯಗಳನ್ನು ಅಂಗೀಕರಿಸಿದ್ದಾರೆ. |
ಈ ಬಗ್ಗೆ ರೈತರು ಗ್ರಾಮದ ವಿವಿಧ ಪ್ರವೇಶ ಕೇಂದ್ರಗಳಲ್ಲಿ ಹೋರ್ಡಿಂಗ್ಗಳನ್ನು ಹಾಕಿದ್ದು, ಬಿಜೆಪಿ ಮತ್ತು ಜೆಜೆಪಿ ನಾಯಕರು ಹಾಗೂ ಕಾರ್ಯಕರ್ತರು ಗ್ರಾಮಕ್ಕೆ ಪ್ರವೇಶಿಸಿದರೆ ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ. |
ಭಾಗಶಃ ಬಾರತ ಇತಿಹಾಸದಲ್ಲಿ ಗ್ರಾಮದ ಪ್ರವೇಶದ್ವಾರವೊಂದರಲ್ಲಿ ಹೀಗೊಂದು ಬೋರ್ಡಿಂಗ್ ಹಾಕಿದ್ದ ಇತಿಹಾಸ ಈ ಹಿಂದೆಯೂ ಇಲ್ಲ, ಮುಂದೆಯೂ ಇರಲಿಕ್ಕಿಲ್ಲವೇನೋ? ಆದರೆ, ಈ ಎಲ್ಲಾ ಸಂಗತಿಗಳು ನಮಗೆ ನೀಡುವ ಒಂದೇ ಒಂದು ಸಂದೇಶವಿಷ್ಟೆ. ಇದು ಕೇವಲ ಪಂಜಾಬ್-ಹರಿಯಾಣ ರೈತರ ಹೋರಾಟವಷ್ಟೇ ಅಲ್ಲ. ಬದಲಿಗೆ ಇದು ಇಡೀ ದೇಶದ ರೈತ ಸಮುದಾಯದ ಹೋರಾಟ ಎಂಬುದೇ ಆಗಿದೆ. |
ಪಂಜಾಬ್ ಹೋರಾಟವಲ್ಲ…ಇಡೀ ಬಾರತದ ರೈತ ಹೋರಾಟವೆನ್ನಿ..! |
"ತುತ್ತು ಅನ್ನವ ತಿನ್ನುವ ಮೊದಲು ರೈತನನ್ನು ನೆನೆ" ಎಂಬುದು ನಮ್ಮ ನಡುವಿನ ಖ್ಯಾತ ನಾಣ್ನುಡಿ. ಆದರೆ, ನಮ್ಮನ್ನು ಆಳುವ ಪ್ರಭುತ್ವ ಈ ನಾಣ್ನುಡಿಯನ್ನು ಮರೆತು ಇದೀಗ ರೈತರಿಗೆ ದ್ರೋಹವೆಸಗಲು ಮುಂದಾಗಿದೆ. ಕೃಷಿಯನ್ನು ಕಾರ್ಪೋರೇಟ್ಗೊಳಿಸಲಾಗುತ್ತಿದೆ. ಪರಿಣಾಮ ವಿಶ್ವ ಪರಂಪರೆಯಲ್ಲಿ ರೈತರ ನಾಡು ಎಂದೇ ಖ್ಯಾತವಾಗಿರುವ ಭಾರತ ರೈತರ ಹಕ್ಕಿನ ಕಾರಣಕ್ಕೆ ಹಿಂದೆಂದೂ ಕಾರಣ ಐತಿಹಾಸಿಕ ಹೋರಾಟವೊಂದಕ್ಕೆ ಸಾಕ್ಷಿಯಾಗಿದೆ. ಹೊಸ ದಶಕವೊಂದು ರೈತ ಹೋರಾಟದೊಂದಿಗೆ ಉದಯಿಸಿದೆ. |
ಹನುಮ ವಿಹಾರಿ: Latest ಹನುಮ ವಿಹಾರಿ News & Updates, Photos & Images, Videos | Vijaya Karnataka - Page 9 |
October,23,2019, 03:06:34 |
ಯುವಕರ ನಡುವೆ ವಯಸ್ಸಿನ ಆಟ |
Apr 01, 2013, 04.35 AM |
ಜಗತ್ತಿನ ಪ್ರತಿಯೊಂದು ಕ್ರಿಕೆಟ್ ತಂಡವನ್ನು ಗಮನಿಸಿದಾಗ ಅಲ್ಲಿ ವಯಸ್ಸಿನ ಏರು-ಪೇರು ಕಂಡು ಬರುವುದು ಸಹಜ. ಇಂಡಿಯನ್ ಪ್ರೀಮಿಯರ್ ಲೀಗ್‌ನ ಆರನೇ ಅವತರಣಿಕೆಯೂ ಇದರಿಂದ ಹೊರತಾಗಿಲ್ಲ. |
ಉತ್ತಮ ಮೊತ್ತ ಗಳಿಸುವತ್ತ ತಮಿಳುನಾಡು |
Nov 10, 2012, 04.35 AM |
ಕರ್ನಾಟಕ ತಂಡವನ್ನು ಕಾಡಿದ್ದು ಹದಿನೆಂಟು ವರ್ಷ ವಯಸ್ಸಿನ ಬಾಬಾ ಅಪರಾಜಿತ್. ತಮಿಳುನಾಡು ವಿರುದ್ಧದ ರಣಜಿ ಟ್ರೋಫಿ ಕ್ರಿಕೆಟ್ ಬಿ' ಗುಂಪಿನ ಪಂದ್ಯದ ಮೊದಲ ದಿನದಾಟದಲ್ಲಿಯೇ ಈ ಯುವ ಬ್ಯಾಟ್ಸ್‌ಮನ್‌ನಿಂದಾಗಿ ಆರ್.ವಿನಯ್‌ಕುಮಾರ್ ಪಡೆಯ ಬೌಲರ್‌ಗಳು ಸುಸ್ತು. |
ಕಿವೀಸ್ ವಿರುದ್ಧ ರೋಚಕ ಗೆಲುವು: ಭಾರತ ವಿಶ್ವಕಪ್ ಫೈನಲಿಗೆ |
Aug 23, 2012, 09.08 PM |
ಭಾರತದ ಕಿರಿಯರು ನ್ಯೂಜಿಲೆಂಡ್ ಕಿರಿಯರ ತಂಡವನ್ನು ರೋಮಾಂಚಕ 9 ವಿಕೆಟ್ ಅಂತರದಿಂದ ಸೋಲಿಸಿ ಅಂಡರ್-19 ಕ್ರಿಕೆಟ್ ವಿಶ್ವಕಪ್ ಕೂಟದ ಫೈನಲಿಗೇರಿದ್ದಾರೆ. |
ರೋಚಕ ಪಂದ್ಯ: ಪಾಕ್ ಸೋಲಿಸಿ ಭಾರತ ಸೆಮಿಗೆ |
Aug 20, 2012, 08.35 PM |
ಹಿರಿಯರ ಕ್ರಿಕೆಟಿಗೆ ಸರಿಸಾಟಿಯಾದ ಉದ್ವೇಗದ ಕ್ಷಣಗಳನ್ನು ಸೃಷ್ಟಿಸಿದ ಭಾರತ-ಪಾಕಿಸ್ತಾನ ನಡುವಿನ ಕಿರಿಯರ ಕ್ರಿಕೆಟ್ ಕದನದಲ್ಲಿ, ರೋಚಕ 1 ವಿಕೆಟ್ ಅಂತರದಿಂದ ಪಾಕಿಸ್ತಾನವನ್ನು ಮಣಿಸಿ ಸೆಮಿಫೈನಲಿಗೇರಿತು. |
ಕಿರಿಯರ ವಿಶ್ವಕಪ್: ಜಿಂಬಾಬ್ವೆಗೆ ಸೋಲುಣಿಸಿದ ಭಾರತ |
Aug 15, 2012, 05.12 AM |
ಮಧ್ಯಮ ವೇಗಿ ಕಮಲ್ ಪಾಸಿ ಅದ್ಭುತ ದಾಳಿ ನಡೆಸಿ 6 ವಿಕೆಟ್ ಉರುಳಿಸುವುದರೊಂದಿಗೆ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಜಿಂಬಾಬ್ವೆ ವಿರುದ್ಧ ಭಾರತ ತಂಡಕ್ಕೆ 63 ರನ್‌ಗಳ ಭರ್ಜರಿ ಗೆಲುವು ತಂದುಕೊಟ್ಟಿದ್ದಾರೆ. |
ಪಂಚಾಯತ್‌ರಾಜ್: ಮೌನ ಕ್ರಾಂತಿಯ ರಜತ ವರ್ಷ | Prajavani |
ಪಂಚಾಯತ್‌ರಾಜ್: ಮೌನ ಕ್ರಾಂತಿಯ ರಜತ ವರ್ಷ |
ರಾಜ್ಯದಲ್ಲಿ 1983ರ ವಿಧಾನಸಭಾ ಚುನಾವಣೆ ಐತಿಹಾಸಿಕ. ಆ ಚುನಾವಣೆಯ ಬಳಿಕ ರಾಜ್ಯದಲ್ಲಿ ಮೊತ್ತಮೊದಲ ಕಾಂಗ್ರೆಸ್ಸೇತರ ಸರ್ಕಾರ ಅಧಿಕಾರಕ್ಕೆ ಬಂತು. |
ಮುಖ್ಯಮಂತ್ರಿಯಾದ ರಾಮಕೃಷ್ಣ ಹೆಗಡೆ ಅವರು, ಯಾವುದೇ ಸದನದ ಸದಸ್ಯರಲ್ಲದ ನಜೀರ್‌ಸಾಬರನ್ನು ಸಂಪುಟ ದರ್ಜೆ ಸಚಿವರನ್ನಾಗಿ ಮಾಡಿದರಲ್ಲದೆ, ಅವರ ಅಪೇಕ್ಷೆಯಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯಿತಿರಾಜ್ ಖಾತೆ ನೀಡಿದರು. |
ನಾನು 1975ರಿಂದಲೇ ನಜೀರ್‌ಸಾಬರ ಜೊತೆ ಬಹು ಆತ್ಮೀಯ ಸಂಬಂಧ ಹೊಂದಿದ್ದೆ. ಹಾಗಾಗಿ ಅವರು ಮಂತ್ರಿಯಾದ ಕೂಡಲೇ ಅವರನ್ನು ಭೇಟಿಮಾಡಿ, 'ಹೊಸ ಪಂಚಾಯಿತಿ ರಾಜ್ ವ್ಯವಸ್ಥೆ ರೂಪಿಸಿದಾಗ ರಾಜಕೀಯ ಅಧಿಕಾರ ಕೇವಲ ಸಾಂಪ್ರದಾಯಿಕ ಬಲಿಷ್ಠ ವರ್ಗದವರಾದ ಪಟೇಲರು, ಶಾನುಭೋಗರು, ಶ್ರೀಮಂತರಿಗೆ ಮೀಸಲಾಗಬಾರದು, ಜನ ಸಂಖ್ಯೆಯನ್ನಾಧರಿಸಿ ಎಲ್ಲ ವರ್ಗ ಹಾಗೂ ಶ್ರೇಣಿಯ ಜನರಿಗೆ ಅಧಿಕಾರ, ಸ್ಥಾನಮಾನ ದೊರೆಯಬೇಕು. ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರೂ ಸಹ ಅಧಿಕಾರದಲ್ಲಿ ಪಾಲು ಪಡೆಯುವಂತೆ ವ್ಯವಸ್ಥೆ ರೂಪಿಸಬೇಕು' ಎಂದು ವಿನಂತಿಸಿದೆ. ಅದಕ್ಕೆ ಪ್ರತಿಕ್ರಿಯಿಸಿದ ನಜೀರ್‌ಸಾಬರು, 'Population will be reflected in power sharing' ಎಂದು ಭರವಸೆ ನೀಡಿದರು. |
ನಜೀರ್‌ಸಾಬರನ್ನು ಬಹು ಕಾಲದಿಂದ ಬಲ್ಲವನಾಗಿದ್ದ ನನಗೆ ಅವರು ನೀಡಿದ್ದ ಭರವಸೆ ಈಡೇರುತ್ತದೆ ಎಂಬ ವಿಶ್ವಾಸವಿದ್ದಿತು. ಆದರೆ ಕಾನೂನು ರೂಪುಗೊಂಡಾಗ ನಾನು ಭ್ರಮನಿರಸನಗೊಂಡೆ. |
Subsets and Splits
No community queries yet
The top public SQL queries from the community will appear here once available.