text
stringlengths
0
61.5k
ಆಟೊ ಚಾಲಕ ವರ್ಗಕ್ಕೆ ಕಳಂಕ
'ಎಲ್ಲ ಕಡೆ ಇರುವಂತೆ ಚಾಲಕರಲ್ಲೂ ಕೆಲವರು ಕೆಟ್ಟವರಿದ್ದಾರೆ. ಅವರಿಂದ ಇಡೀ ಚಾಲಕರ ವರ್ಗಕ್ಕೆ ಕಳಂಕ ಬರುತ್ತಿದೆ' ಎಂದು ಬೆಂಗಳೂರು ಆಟೊ ಚಾಲಕರ ಸೌಹಾರ್ದ ಕೋ–ಆಪರೇಟಿವ್‌ ಸೊಸೈಟಿಯ ಅಧ್ಯಕ್ಷ ಸೋಮಶೇಖರ್‌ ಹೇಳುತ್ತಾರೆ.
'ಸರ್ಕಾರದ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಆದರೆ, ಸರ್ಕಾರದಿಂದ ಒಂದು ರೂಪಾಯಿಯೂ ಸಿಗುತ್ತಿಲ್ಲ. ಶೇ 14ರಷ್ಟು ಬಡ್ಡಿಯಲ್ಲಿ ಸಾಲ ಕೊಡಬೇಕೆಂಬ ನಿಯಮವಿದೆ. ಆದರೆ, ಚಾಲಕರಿಂದ ಶೇ 30ರಷ್ಟು ಬಡ್ಡಿ ಪಡೆದು ಸಾಲ ನೀಡಲಾಗುತ್ತಿದೆ. ಪ್ರತಿ ತಿಂಗಳು ಸಾಲದ ಕಂತು ಕಟ್ಟಲೇ ಬೇಕು. ಅದರ ಜೊತೆಗೆ ಕುಟುಂಬವನ್ನು ಸಾಕಬೇಕು. ಇಂಥ ಒತ್ತಡಗಳಿಗೆ ಚಾಲಕರು ಸಿಲುಕುತ್ತಿದ್ದಾರೆ. ಸರ್ಕಾರವೇ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು' ಎಂದು ಮನವಿ ಮಾಡುತ್ತಾರೆ.
ಓಬವ್ವ ಪಡೆಗೆ 100ಕ್ಕೂ ಹೆಚ್ಚು ಕರೆ
'ಮಹಿಳೆಯರು ಹಾಗೂ ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ತಡೆಗೆ ತ್ವರಿತವಾಗಿ ಸ್ಪಂದಿಸುವ ಉದ್ದೇಶದಿಂದ ಕಟ್ಟಿರುವ 'ಓಬವ್ವ ಪಡೆ'ಗೆ ಇದುವರೆಗೂ 100ಕ್ಕೂ ಹೆಚ್ಚು ಕರೆಗಳು ಬಂದಿವೆ' ಎಂದು ಡಿಸಿಪಿ ಚನ್ನಣ್ಣನವರ ಮಾಹಿತಿ ನೀಡುತ್ತಾರೆ.
'ಮಹಿಳಾ ಪಿಎಸ್‌ಐ ನೇತೃತ್ವದಲ್ಲಿ ಈ ಪಡೆ ಕಾರ್ಯನಿರ್ವಹಿಸುತ್ತಿದೆ. ಕರೆಗಳ ಆಧರಿಸಿ ಸ್ಥಳಕ್ಕೆ ಹೋಗುವ ಸಿಬ್ಬಂದಿ, ಆರೋಪಿಗಳನ್ನು ವಶಕ್ಕೆ ಪಡೆದು ಠಾಣೆಗೆ ಕರೆತರುತ್ತಿದೆ. ನೊಂದ ಮಹಿಳೆಯವರು ದೂರು ನೀಡಿದಾಗ, ಕಾನೂನು ಕ್ರಮ ಜರುಗಿಸುತ್ತಿದೆ' ಎಂದು ಹೇಳುತ್ತಾರೆ.
ಅನಧಿಕೃತ ನಿಲುಗಡೆ
ಕೆಎಸ್‌ಆರ್‌ಟಿಸಿ – ಬಿಎಂಟಿಸಿ ಬಸ್‌ ಸಂಚಾರ ಹಾಗೂ ನಿಲುಗಡೆಗೆ ನಿಲ್ದಾಣದಲ್ಲಿ ಅವಕಾಶವಿದೆ. ಅಷ್ಟಾದರೂ ಕೆಲವು ಚಾಲಕರು, ತಮ್ಮ ಆಟೊಗಳನ್ನು ಅನಧಿಕೃತವಾಗಿ ಎಲ್ಲೆಂದರಲ್ಲಿ ನಿಲುಗಡೆ ಮಾಡುತ್ತಿದ್ದಾರೆ. ಅದನ್ನು ಪ್ರಶ್ನಿಸುವವರ ವಿರುದ್ಧವೇ ಹರಿಹಾಯುತ್ತಿದ್ದಾರೆ.
ದುಬಾರಿ ಪ್ರಯಾಣ ದರಕ್ಕೆ ಬೇಡಿಕೆ ಇಡುವ ಚಾಲಕರು, ತಮ್ಮ ಆಟೊಗಳಿಗೆ ಹತ್ತದ ಹಾಗೂ ಆ ದರ ನೀಡದ ಪ್ರಯಾಣಿಕರ ಜೊತೆಯಲ್ಲಿ ರೌಡಿಗಳಂತೆ ನಡೆದುಕೊಳ್ಳುತ್ತಿದ್ದಾರೆ. ಕೆಲವರ ಮೇಲೆ ಹಲ್ಲೆಯನ್ನೂ ಮಾಡಿದ್ದಾರೆ.
ಭಾರತ vs ಇಂಗ್ಲೆಂಡ್ 4ನೇ ಟೆಸ್ಟ್: ಮೂರನೇ ದಿನದಾಟಕ್ಕೆ ಮಳೆಯ ಅಡ್ಡಿ ಉಂಟಾಗಲಿದೆಯಾ? | India vs England Fourth Test: Day 3 Oval weather report - kannada MyKhel
» ಭಾರತ vs ಇಂಗ್ಲೆಂಡ್ 4ನೇ ಟೆಸ್ಟ್: ಮೂರನೇ ದಿನದಾಟಕ್ಕೆ ಮಳೆಯ ಅಡ್ಡಿ ಉಂಟಾಗಲಿದೆಯಾ?
Published: Saturday, September 4, 2021, 12:58 [IST]
ಸೆಪ್ಟೆಂಬರ್ 2 ರಂದು ಆರಂಭವಾದ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಟೀಮ್ ಇಂಡಿಯಾ ಮೊದಲನೇ ಇನ್ನಿಂಗ್ಸ್‌ನಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 191 ರನ್ ಗಳಿಸಿತು. ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮ ಮತ್ತು ಕೆಎಲ್ ರಾಹುಲ್ ಉತ್ತಮ ಇನ್ನಿಂಗ್ಸ್ ಕಟ್ಟುವಲ್ಲಿ ಅಕ್ಷರಶಃ ವಿಫಲರಾದರು. ಉಳಿದಂತೆ ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ ಮತ್ತು ರಿಷಭ್ ಪಂತ್ ಕೂಡ ಓವಲ್ ಅಂಗಳದಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿದ್ದಾರೆ. ಆದರೆ ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ಶಾರ್ದೂಲ್ ಠಾಕೂರ್ ಇಬ್ಬರೂ ಸಹ ಅರ್ಧಶತಕಗಳನ್ನು ಸಿಡಿಸುವುದರ ಮೂಲಕ ಜವಾಬ್ದಾರಿಯುತ ಆಟವನ್ನು ಆಡಿದ್ದಾರೆ. ವಿರಾಟ್ ಕೊಹ್ಲಿ 50 ಹಾಗೂ ಶಾರ್ದೂಲ್ ಠಾಕೂರ್ 57 ರನ್ ಬಾರಿಸುವುದರ ಮೂಲಕ ಇಂಡಿಯಾ ಮೊದಲನೇ ಇನ್ನಿಂಗ್ಸ್‌ನಲ್ಲಿ 191 ರನ್ ತಲುಪುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಪ್ರತ್ಯುತ್ತರವಾಗಿ ಮೊದಲನೇ ದಿನವೇ ತನ್ನ ಮೊದಲನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿರುವ ಇಂಗ್ಲೆಂಡ್ ದಿನದಾಟದಂತ್ಯಕ್ಕೆ 53 ರನ್‌ಗೆ 3 ವಿಕೆಟ್‍ಗಳನ್ನು ಕಳೆದುಕೊಂಡಿತ್ತು.
ನಂತರ ಎರಡನೇ ದಿನದಲ್ಲಿಯೇ ತನ್ನ ದ್ವಿತೀಯ ಇನ್ನಿಂಗ್ಸ್‌ ಬ್ಯಾಟಿಂಗ್ ಆರಂಭಿಸಿದ ಟೀಮ್ ಇಂಡಿಯಾ ದಿನದಾಟದಂತ್ಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೇ 43 ರನ್ ಗಳಿಸಿ 56 ರನ್‌ಗಳ ಹಿನ್ನಡೆಯನ್ನು ಅನುಭವಿಸಿದೆ. ಭಾರತದ ಆರಂಭಿಕ ಆಟಗಾರರಾದ ಕೆ ಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಅಜೇಯರಾಗಿ ಉಳಿದಿದ್ದು ಸೆಪ್ಟೆಂಬರ್ 4ರ ಶನಿವಾರದಂದು ಆರಂಭವಾಗಲಿರುವ ಮೂರನೇ ದಿನದಾಟವನ್ನು ಆರಂಭಿಸಲಿದ್ದಾರೆ. ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಒತ್ತಡ ಹೇರಿ ಪಂದ್ಯದ ಮೇಲೆ ಹಿಡಿತವನ್ನು ಸಾಧಿಸಬೇಕೆಂದರೆ ಈ ದಿನದ ಪೂರ್ತಿ ಬ್ಯಾಟಿಂಗ್ ನಡೆಸಿ ಹೆಚ್ಚಿನ ವಿಕೆಟ್ ಕಳೆದುಕೊಳ್ಳದೆ ದೊಡ್ಡ ಮೊತ್ತವನ್ನು ಕಲೆ ಹಾಕಬೇಕಿದೆ. ಒಂದುವೇಳೆ ಟೀಮ್ ಇಂಡಿಯಾ ವೇಗವಾಗಿ ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿದರೆ ಪಂದ್ಯದಲ್ಲಿ ಸೋಲು ಕಾಣಬೇಕಾಗುತ್ತದೆ. ಅತ್ತ ಮೊದಲನೇ ಇನ್ನಿಂಗ್ಸ್‌ನಲ್ಲಿ 99 ರನ್ ಮುನ್ನಡೆಯನ್ನು ಸಾಧಿಸಿ ಉತ್ತಮ ಹಂತದಲ್ಲಿರುವ ಇಂಗ್ಲೆಂಡ್ ಯಾವುದೇ ವಿಕೆಟ್ ಕಳೆದುಕೊಳ್ಳದೇ ಟೀಮ್ ಇಂಡಿಯಾವನ್ನು ಮೂರನೇ ದಿನ ಒತ್ತಡಕ್ಕೆ ತಳ್ಳಬೇಕೆಂದರೆ ವೇಗವಾಗಿ ವಿಕೆಟ್ ಪಡೆದುಕೊಳ್ಳುವುದೊಂದೇ ದಾರಿಯಾಗಿದೆ..
ನಾಲ್ಕನೇ ಟೆಸ್ಟ್ ಪಂದ್ಯದ ಮೂರನೇ ದಿನದ ಹವಾಮಾನ ವರದಿ
ಭಾರತ ಮತ್ತು ಇಂಗ್ಲೆಂಡ್ ನಡುವೆ ಲಂಡನ್ ನಗರದ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಮೂರನೇ ದಿನದ ಹವಾಮಾನ ವರದಿಯ ಪ್ರಕಾರ ದಿನದ ಬಹುತೇಕ ಸಮಯದವರೆಗೆ ಮೋಡ ಕವಿದ ವಾತಾವರಣವಿರಲಿದೆ. ಉಷ್ಣಾಂಶವು ಕನಿಷ್ಠ 13° ಸೆಲ್ಸಿಯಸ್ ಮತ್ತು ಗರಿಷ್ಠ 20° ಸೆಲ್ಸಿಯಸ್ ಇರಲಿದ್ದು ಬೌಲರ್‌ಗಳಿಗೆ ಹೆಚ್ಚಿನ ಅನುಕೂಲ ಉಂಟಾಗಲಿದೆ. ದಿನದುದ್ದಕ್ಕೂ ಮೋಡ ಕವಿದ ವಾತಾವರಣವಿರಲಿದ್ದು ಮಳೆಯಾಗುವ ಸಂಭವ ತೀರಾ ಕಡಿಮೆ ಇದೆ.
ನಾಳೆ ಎಂದವನ ಮನೆಹಾಳು | Utthana
Utthana > ಉಪವನ > ಉಪವನ - ಗಾದೆಯ ಸುತ್ತಮುತ್ತ > ನಾಳೆ ಎಂದವನ ಮನೆಹಾಳು
ಗಾದೆಗಳು ಹುಟ್ಟಿಕೊಂಡಿದ್ದು ಹೆಚ್ಚಾಗಿ ಗ್ರಾಮೀಣ ಹಿನ್ನೆಲೆಯಲ್ಲಿ; ಜನಸಾಮಾನ್ಯರನ್ನು ಎಚ್ಚರಿಸುವ ಉದ್ದೇಶದಿಂದಾಗಿ.
ಹಳ್ಳಿಯಕಡೆ ಹೆಚ್ಚಾಗಿ ಹುಲ್ಲಿನ ಮನೆಗಳು. ಮಳೆಗಾಲ ಪ್ರಾರಂಭವಾಗುವ ಮೊದಲೇ ಪ್ರತಿವರ್ಷ ಮಾಡಿಗೆ ಹೊದಿಸಿದ ಹುಲ್ಲನ್ನು ಬದಲಾಯಿಸಬೇಕು. ಆದರೆ ಒಬ್ಬ ಸೋಮಾರಿ ನಾಳೆ ಮಾಡಿದರಾಯ್ತು ಎಂದು ಮುಂದೂಡುತ್ತಲೇ ಬರುತ್ತಾನೆ. ಮಳೆ ಪ್ರಾರಂಭವಾಗಿ ಬಿಡುತ್ತದೆ. ಮನೆಯೊಳಗೆಲ್ಲ ಸೋರುವ ನೀರು. ಮೈ ಒದ್ದೆಯಾಗಿ ಗಂಡ ನಡುಗುತ್ತಾ ಕೂತಿದ್ದನ್ನು ನೋಡಿದ ಅವನ ಹೆಂಡತಿ `ನಾಳೆ ಎಂದವನ ಮನೆ ಹಾಳು' ಎಂದು ಬಯ್ಯುತ್ತಾಳೆ. ಯಾವುದೇ ಕಾರ್ಯವಿರಲಿ, ಅದನ್ನು ಸಕಾಲದಲ್ಲಿ ಮಾಡಿ ಮುಗಿಸದಿದ್ದರೆ ನಷ್ಟ ಸಂಭವಿಸುತ್ತದೆ ಎನ್ನುವ ಎಚ್ಚರಿಕೆಯ ಮಾತಿದು.
ಬಹಳಕಾಲದ ಹಿಂದೆ ನಾನೊಂದು ಹಳ್ಳಿಗೆ ಹೋದಾಗ ಕೆಲವರ ಮನೆಯ ಬಾಗಿಲ ಮೇಲೆ, ಗೋಡೆ ಮೇಲೆ `ನಾಳೆ ಬಾ' ಎಂದು ಬರೆದಿರುವುದನ್ನು ನೋಡಿ ಬೆರಗಾಗಿ `ಹೀಗೇಕೆ?' ಎಂದು ಕೇಳಿದ್ದಕ್ಕೆ ಅಲ್ಲಿಯ ಒಬ್ಬ ಮುದುಕ ಕೊಟ್ಟ ಉತ್ತರ ವಿಚಿತ್ರವಾಗಿತ್ತು. ಹಾಗೆ ಬರೆದಿರುವುದು ಭೂತ ಪ್ರೇತಗಳ ನಿವಾರಣೆಗಾಗಿಯಂತೆ. ಹೊತ್ತು ಗೊತ್ತಿಲ್ಲದೆ ಪೀಡಿಸಲು ಬರುವ ಈ ದುಷ್ಟ ದೆವ್ವಗಳಿಗೆ `ಬರಬೇಡಿ' ಎಂದು ಸೂಚಿಸಿದರೆ ಅವು ಸಿಟ್ಟಾಗುತ್ತವಂತೆ. `ನಾಳೆ ಬಾ' ಎಂದು ಸೌಜನ್ಯಕರವಾಗಿ ಸೂಚಿಸುವುದು ಕ್ಷೇಮಕರವಂತೆ. ದೆವ್ವ ಮನೆಯ ಮುಂದೆ ಬರೆದಿರುವ `ನಾಳೆ ಬಾ' ಎನ್ನುವ ಆಹ್ವಾನ ಓದಿ ಕೋಪಿಸಿಕೊಳ್ಳದೆ ಹಿಂತಿರುಗುತ್ತದಂತೆ. ಇವತ್ತಿನ ಸಂದರ್ಭದಲ್ಲಿ ಸಾಲಗಾರ ಮನೆಗೆ ಬಂದಾಗ 'ಇಲ್ಲ' ಎಂದು ಹೇಳುವ ಬದಲು `ನಾಳೆ ಬನ್ನಿ' ಎಂದು ಹೇಳಿಕಳುಹಿಸುವುದು ಸಾಮಾನ್ಯವಾಗಿದೆ. 'ನಾಳೆ' ಎನ್ನುವ ಪದಕ್ಕೆ ಇಲ್ಲಿ ಸೀಮಿತ ಅರ್ಥವಿಲ್ಲ. ಮರುದಿನವೇ ಎಂಬ ಖಚಿತತೆ ಇಲ್ಲ. ಭವಿಷ್ಯತ್ಕಾಲಲ್ಲಿ ಅದು ಯಾವಾಗಲಾದರೂ ಆಗಬಹುದು. ಆ ಕಾಲ ಬರದೆಯೂ ಹೋಗಬಹುದು. 'ನಾಳೆ' ಎನ್ನುವ ಪದದಲ್ಲಿ ಅನಿಶ್ಚಿತತೆ ಅಡಗಿದೆ. ಅದರಲ್ಲಿ ಕಮಿಟ್‌ಮೆಂಟಿಲ್ಲ. ಹಾಗಾಗಿ ರಾಜಕಾರಣಿಗಳಿಗೆ ಇದು ಹೇಳಿ ಮಾಡಿಸಿದ ಪದ. ಕಾಟದಿಂದ ತಪ್ಪಿಸಿಕೊಳ್ಳಲು ನೆರವಾಗುವ ಪದ.
'ನಾಳೆ' ಎನ್ನುವ ಪದದಲ್ಲೇ ನಕಾರಾತ್ಮಕ ಸೂಚನೆ. 'ನಾಡಿದ್ದು' ಎನ್ನುವ ಪದದಲ್ಲಿ ಇರುವಷ್ಟು ಖಚಿತತೆ 'ನಾಳೆ' ಎನ್ನುವ ಪದದಲ್ಲಿ ಇಲ್ಲ. `ಇವತ್ತು' ಎನ್ನುವ ಪದದಲ್ಲಿ ಈಗಲೇ ಎನ್ನುವುದಕ್ಕೆ ಒತ್ತು ಇದೆ.
ದೈನಂದಿನ ಪಾಠಗಳನ್ನು ಅವತ್ತವತ್ತೇ ಓದಿ ಮುಗಿಸಿ, ಕ್ರಮವಾಗಿ ಕಲಿಯಿರಿ ಎಂದು ಗುರುಗಳು ಎಷ್ಟೇ ಬುದ್ಧಿವಾದ ಹೇಳಿದರೂ ಕೆಲವು ವಿದ್ಯಾರ್ಥಿಗಳು ಪರೀಕ್ಷೆ ದೂರವಿದೆ ನಾಳೆ ಓದಿದರಾಯ್ತು ಎಂದು ಮುಂದೂಡುತ್ತಲೇ ಬರುತ್ತಾರೆ. ಪರೀಕ್ಷೆ ಹತ್ತಿರ ಬಂದಾಗ ಹಗಲಿರುಳೆನ್ನದೆ ಓದುತ್ತಾರೆ. ಆತಂಕದಿಂದ ಓದಿದ್ದು ತಲೆಗೆ ಹತ್ತುವುದಿಲ್ಲ. ಪರೀಕ್ಷೆಯಲ್ಲಿ ಫೇಲಾಗುತ್ತಾರೆ. ಒಂದು ವರ್ಷವೇ ಹಾಳಾಗಿಹೋಗುತ್ತದೆ. ಸಾಧನೆಯ ಎಲ್ಲ ಕ್ಷೇತ್ರಕ್ಕೂ ಈ ಗಾದೆ ಅನ್ವಯವಾಗುತ್ತದೆ.
ಕೆಲವರು ಕೆಲವು ದಿನಗಳು ಅಶುಭವೆಂದು ಮಾಡಬೇಕಾದ ಕೆಲಸವನ್ನು ಮುಂದಕ್ಕೆ ತಳ್ಳುವುದುಂಟು. ಇದು ಸರಿಯಲ್ಲ. ಕೆಲಸಮಾಡುವವನಿಗೆ ಎಲ್ಲ ದಿನಗಳೂ ಶುಭ ದಿನಗಳೇ. `ಶುಭಸ್ಯ ಶೀಘ್ರಂ' ಎನ್ನುವುದು ಇದಕ್ಕಾಗಿಯೇ." Hit the nail when it's hot" ಎನ್ನುವ ಆಂಗ್ಲೋಕ್ತಿಯಿದೆ. ವಿಳಂಬದಿಂದ ವಿನಾಶ ಎನ್ನುವ ಮಾತು ಎಲ್ಲ ಭಾಷೆಯಲ್ಲೂ ಇದೆ.
ಆಪಲ್ ವಾಚ್ | ಗೆ ಒ 2 ಇಎಸ್ಐಎಂ ಹೊಂದಿರುತ್ತದೆ ಐಫೋನ್ ಸುದ್ದಿ
ಆಪಲ್ ವಾಚ್‌ಗಾಗಿ ಒ 2 ಇಎಸ್ಐಎಂ ಕೂಡ
ಮೊವಿಸ್ಟಾರ್‌ನ ಎರಡನೇ ಬ್ರಾಂಡ್ ಒ 2 ಇಎಸ್ಐಎಂ ಅಕ್ಟೋಬರ್‌ನಲ್ಲಿ ಆಪಲ್ ವಾಚ್‌ಗೆ ಹೊಂದಿಕೊಳ್ಳಲಿದೆ. ನೀವು ಆಪಲ್ ವಾಚ್ ಎಲ್ ಟಿಇ ಖರೀದಿಸಲು ಯೋಜಿಸುತ್ತಿದ್ದರೆ, ನಿಮ್ಮ ಟೆಲಿಫೋನ್ ಆಪರೇಟರ್ ಅನ್ನು ಆಯ್ಕೆ ಮಾಡಲು ನಿಮಗೆ ಇನ್ನೂ ಒಂದು ಆಯ್ಕೆ ಇದೆ.
ಎರಡು ವರ್ಷಗಳ ಹಿಂದೆ ಆಪಲ್ ತನ್ನ ಬಿಡುಗಡೆ ಮಾಡಿತು ಆಪಲ್ ವಾಚ್ ಸರಣಿ 3 ದೊಡ್ಡ ನವೀನತೆಯೊಂದಿಗೆ. ನೀವು ಈಗಾಗಲೇ ಸಾಂಪ್ರದಾಯಿಕ ಜಿಪಿಎಸ್ ಮಾದರಿ ಮತ್ತು ಎಲ್ ಟಿಇ ನಡುವೆ ಆಯ್ಕೆ ಮಾಡಬಹುದು. ಎರಡನೆಯದು ಐಫೋನ್ ಅನ್ನು ಲಿಂಕ್ ಮಾಡದೆ 4 ಜಿ ಮೊಬೈಲ್ ಫೋನ್ ನೆಟ್‌ವರ್ಕ್‌ಗೆ ಸಂಪರ್ಕಿಸುವ ಅನುಕೂಲವನ್ನು ಹೊಂದಿದೆ, ಆದ್ದರಿಂದ ನೀವು ನಿಮ್ಮ ಫೋನ್ ಅನ್ನು ಮನೆಯಲ್ಲಿಯೇ ಬಿಡಬಹುದು ಮತ್ತು ನಿಮ್ಮ ವಾಚ್ ಧ್ವನಿ ಕರೆಗಳು ಮತ್ತು ಇಂಟರ್ನೆಟ್ ಸಂಪರ್ಕದೊಂದಿಗೆ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಲೇ ಇರುತ್ತದೆ. ಸಾಧನದ ಗಾತ್ರದಿಂದಾಗಿ, ಸಿಮ್ ಕಾರ್ಡ್ ಸೇರಿಸಲು ಯಾವುದೇ ಭೌತಿಕ ಸ್ಥಳವಿಲ್ಲ, ಆದ್ದರಿಂದ ನೀವು ಅದನ್ನು ವರ್ಚುವಲ್ ಟೆಲಿಫೋನ್ ಕಾರ್ಡ್, ಇಸಿಮ್ ಕರೆಗಳೊಂದಿಗೆ ನೋಂದಾಯಿಸಿಕೊಳ್ಳಬೇಕು.
ಈ ಆಪಲ್ ವಾಚ್ ಮಾದರಿಯು ಕಾಣಿಸಿಕೊಳ್ಳುವವರೆಗೂ, ಈ ರೀತಿಯ ಕಾರ್ಡ್‌ಗಳನ್ನು ಸಂಕುಚಿತಗೊಳಿಸುವ ಸಾಧ್ಯತೆಯಿರಲಿಲ್ಲ, ಏಕೆಂದರೆ ಪ್ರಾಯೋಗಿಕವಾಗಿ ಅವರಿಗೆ ಅಗತ್ಯವಿರುವ ಯಾವುದೇ ಸಾಧನಗಳಿಲ್ಲ. ಅಕ್ಟೋಬರ್ 2017 ರಲ್ಲಿ ಆಪಲ್ ವಾಚ್ ಎಲ್‌ಟಿಇ ಪ್ರಾರಂಭವಾದಾಗಿನಿಂದ ಈ ಗ್ರಾಹಕರಿಗೆ ವರ್ಚುವಲ್ ಕಾರ್ಡ್‌ಗಳು ಲಭ್ಯವಿದ್ದ ವೊಡಾಫೋನ್ ಮತ್ತು ಆರೆಂಜ್ ತ್ವರಿತವಾಗಿ ಪ್ರತಿಕ್ರಿಯಿಸಿದವು. ಗ್ರಹಿಸಲಾಗದಂತೆ, ಮೊವಿಸ್ಟಾರ್‌ನಂತಹ ದೊಡ್ಡ ಕಂಪನಿಯು ಅಷ್ಟು ಚುರುಕಾಗಿರಲಿಲ್ಲ, ಮತ್ತು ಇದು ಹೊಂದಲು ಕೆಲವು ತಿಂಗಳುಗಳನ್ನು ತೆಗೆದುಕೊಂಡಿತು ಅವುಗಳು ಲಭ್ಯವಿದೆ. ನಿಮ್ಮ ಚಂದಾದಾರರಿಗೆ ಅಂತಹ ತಂತ್ರಜ್ಞಾನ.
ಕ್ರಿಸ್‌ಮಸ್ 2017 ರಂದು ಮಾರಾಟವಾದ ಎಲ್ಲಾ ಆಪಲ್ ವಾಚ್ ಎಲ್‌ಟಿಇ, ಉದಾಹರಣೆಗೆ, ವೊಡಾಫೋನ್ ಮತ್ತು ಆರೆಂಜ್ ಮೂಲಕ ಮಾತ್ರ ಸಂಪರ್ಕಿಸಬಹುದಾಗಿದೆ. ಈಗ ಮೊವಿಸ್ಟಾರ್‌ನ ಒಎಂವಿ: ಒ 2 ಆಫರ್‌ಗೆ ಸೇರುತ್ತದೆ. ಇದು ಈಗಾಗಲೇ ಐಸಿಮ್ ಐಫೋನ್ ಮತ್ತು ಐಪ್ಯಾಡ್ ಪ್ರೊಗೆ ಹೊಂದಿಕೆಯಾಗಿದ್ದರೂ, ಮುಂದಿನ ತಿಂಗಳಿನಿಂದ ಇದು ಆಪಲ್ ವಾಚ್ ಎಲ್ ಟಿಇ ಜೊತೆ ಹೊಂದಿಕೊಳ್ಳುತ್ತದೆ. ಪೆಪೆಫೋನ್ ಅಥವಾ ಯೊಯಿಗೊದಂತಹ ಇತರ ಮೊಬೈಲ್ ಫೋನ್ ಬ್ರಾಂಡ್‌ಗಳು ಇಎಸ್ಐಎಂ ಅನ್ನು ಹೊಂದಿವೆ, ಆದರೆ ಅವು ಇನ್ನೂ ಆಪಲ್ ವಾಚ್‌ಗೆ ಹೊಂದಿಕೆಯಾಗುವುದಿಲ್ಲ.
ಹೊಸ ಸರಣಿ 5 ಅನ್ನು ಪ್ರಾರಂಭಿಸಿದಾಗಿನಿಂದ, ಆಪಲ್ನ ಪ್ರಸ್ತಾಪವು ಬದಲಾಗಿದೆ: ಸರಣಿ 4 ಅನ್ನು ಹಿಂತೆಗೆದುಕೊಳ್ಳಲಾಗಿದೆ, ಆದ್ದರಿಂದ ನೀವು ಈಗ ಹೊಸ ಆಪಲ್ ವಾಚ್ ಅನ್ನು ಖರೀದಿಸಲು ಬಯಸಿದರೆ, ನೀವು ಅಗ್ಗದ ಸರಣಿ 3 ಮತ್ತು ಹೊಸ ಸರಣಿ 5 ಅನ್ನು ಹೊಂದಿದ್ದೀರಿ, ಮತ್ತು ಎರಡೂ ಆಯ್ಕೆಗಳೊಂದಿಗೆ. ಮೊಬೈಲ್ ನೆಟ್‌ವರ್ಕ್‌ಗೆ ಸಂಪರ್ಕ ಹೊಂದಿರುವ ಸಾಮಾನ್ಯ ಜಿಪಿಎಸ್ ಅಥವಾ ಎಲ್‌ಟಿಇ.
ನೀವು ಅದನ್ನು ಮೊಬೈಲ್ ನೆಟ್‌ವರ್ಕ್‌ನೊಂದಿಗೆ ಆರಿಸಿದರೆ, ಅಕ್ಟೋಬರ್‌ನಿಂದ ನೀವು ಅದನ್ನು ವೊಡಾಫೋನ್, ಆರೆಂಜ್, ಮೊವಿಸ್ಟಾರ್ ಮತ್ತು ಒ 2 ನೊಂದಿಗೆ ನೋಂದಾಯಿಸಲು ಸಾಧ್ಯವಾಗುತ್ತದೆ.
'ಸೈನೈಡ್‌' ಮುಗೀತು! ಇನ್ಮುಂದೆ ವೀರಪ್ಪನ್‌ಬೇಟೆ! | Cyanide director Ramesh plans film on Veerappan Encounter - Kannada Filmibeat
'ಸೈನೈಡ್‌' ಮುಗೀತು! ಇನ್ಮುಂದೆ ವೀರಪ್ಪನ್‌ಬೇಟೆ!
ರಾಜೀವ್‌ ಗಾಂಧಿ ಹಂತಕರ ಬೇಟೆಯನ್ನು 'ಸೈನೈಡ್‌' ಸಿನಿಮಾದಲ್ಲಿ ತೆರೆದಿಟ್ಟ ನಿರ್ದೇಶಕ ಎ.ಎಂ.ಆರ್‌.ರಮೇಶ್‌, ಇನ್ನೊಂದು ಬೇಟೆಗೆ ಸಿದ್ಧತೆ ನಡೆಸಿದ್ದಾರೆ. ಅದು ರಾಜಬೇಟೆ! ವರನಟ ರಾಜ್‌ಕುಮಾರ್‌ರನ್ನು ಅಪಹರಿಸಿದ ನರಹಂತಕ ವೀರಪ್ಪನ್‌ ಬೇಟೆ!
ವೀರಪ್ಪನ್‌ ನೆರಳಲ್ಲಿ ರಾಜ್‌ಕುಮಾರ್‌ 108 ದಿನ ವನವಾಸ ಅನುಭವಿಸಿದ್ದು, ಮಾರಡಗಿ ನಾಗಪ್ಪ ಆತನಿಂದ ತಪ್ಪಿಸಿಕೊಂಡು ಬಂದದ್ದು, ಅಂತಿಮವಾಗಿ ಕಾರ್ಯಾಚರಣೆಯಲ್ಲಿ ವೀರಪ್ಪನ್‌ ಹಾಗೂ ಆತನ ತಂಡದ ಇತರರು ಹತರಾದ ಘಟನೆಗಳನ್ನು ಸಿನಿಮಾದಲ್ಲಿ ಹೇಳಲು ರಮೇಶ್‌, ಸಾಕಷ್ಟು ಹೋಮ್‌ವರ್ಕ್‌ ಮಾಡುತ್ತಿದ್ದಾರೆ.
ಈ ನಿಮಿತ್ತ ಮೈಸೂರು ಕಾರಾಗೃಹದಲ್ಲಿರುವ ವೀರಪ್ಪನ್‌ ಸಹಚರರನ್ನು ರಮೇಶ್‌ ಸಂಪರ್ಕಿಸಿದ್ದಾರೆ. ತಮಿಳು ರಾಷ್ಟ್ರೀಯ ಚಳವಳಿ ನಾಯಕ ನೆಡುಮಾರನ್‌ ಅವರೊಂದಿಗೆ ಒಂದು ಸುತ್ತಿನ ಮಾತುಕತೆಯನ್ನೂ ಮುಗಿಸಿದ್ದಾರೆ. ಮಲೆಮಹಾದೇಶ್ವರ ಬೆಟ್ಟವನ್ನೂ ಕಂಡುಬಂದಿದ್ದಾರೆ. ಎಲ್ಲವೂ ಸರಿ ರಾಜ್‌ ಪಾತ್ರ ಯಾರು ಮಾಡ್ತಾರೆ ಎಂಬ ಪ್ರಶ್ನೆಗೆ ಅವರಿಗೆ ಉತ್ತರ ಸಿಕ್ಕಿಲ್ಲ. ನಿಮಗೆ ಹೊಳೆದರೆ ನಮಗೆ ತಿಳಿಸಬಹುದು.
ಚಿತ್ರ 2007ರಲ್ಲಿ ತೆರೆಗೆ ಬರಬಹುದು. ವರ್ಷಕ್ಕೊಂದು ವಿಶಿಷ್ಟ ಚಿತ್ರ ನೀಡೋ ಹಂಬಲ ರಮೇಶ್‌ ಅವರದು. ಈ ಹಿಂದೆ 'ವೀರಪ್ಪನ್‌' ಚಿತ್ರ ತಯಾರಾಗಿತ್ತು. ಅದರಲ್ಲಿ ದೇವರಾಜ್‌ರವರು ವೀರಪ್ಪನ್‌ ಪಾತ್ರದಲ್ಲಿ ಮಿಂಚಿದ್ದರು.
ಇನ್ನೆಷ್ಟು ದಿನ ಸಹಿಸುವುದು ಈ ಅವಹೇಳನ ? - Vishwavani Kannada Daily
Vishwavani Kannada Daily > ಅಭಿಪ್ರಾಯಗಳು > ಇನ್ನೆಷ್ಟು ದಿನ ಸಹಿಸುವುದು ಈ ಅವಹೇಳನ ?
ಇನ್ನೆಷ್ಟು ದಿನ ಸಹಿಸುವುದು ಈ ಅವಹೇಳನ ?
ಭಾರತದಲ್ಲಿ ಕನ್ನಡ ಭಾಷೆಯ ಅವಹೇಳನ ಮಾಡಿದ್ದು ನಿಜವಾದ ಸಂಗತಿ ಎಂದು ಸ್ವತಃ ಗೂಗಲ್ ಒಪ್ಪಿಕೊಂಡಿದೆ. ಭಾರತದಲ್ಲಿ ಅತ್ಯಂತ ಕೆಟ್ಟ ಭಾಷೆ ಯಾವುದು ಎಂದು ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ ಕನ್ನಡವೆಂಬುದಾಗಿ ಉತ್ತರಿಸುತ್ತಿತ್ತು. ಈ ಒಂದು ಉತ್ತರ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಯಿತು.
ಕನ್ನಡದ ಭಾಷೆ ಮೇಲಿರುವ ಅಭಿಮಾನಕ್ಕೆ ಕುತ್ತು ಬಂದಾಗ ಕೆರಳಿದ ಕನ್ನಡಿಗರು ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಕ್ಕೆ ಆಗುತ್ತಿರುವ ಅವಹೇಳನದ ವಿರುದ್ಧ ಧ್ವನಿ ಎತ್ತಿದ್ದರು. ಕರ್ನಾಟಕದ ಮೂಲೆ ಮೂಲೆಯಿಂದಲೂ ಸಾಮಾನ್ಯ ನಾಗರಿಕರು ಸೇರಿದಂತೆ ಕನ್ನಡ ಪರ ಸಂಘಟನೆಗಳು, ರಾಜಕೀಯ ನಾಯಕರು ಹೀಗೆ ಹಲವರು ಒಕ್ಕೊರಲಿನಿಂದ ಗೂಗಲ್ ಬಳಿ ಕ್ಷಮೆ
ಯಾಚಿಸುವಂತೆ ಹೇಳಿದರು. ಇದರ ಪರಿಣಾಮವಾಗಿ ಗೂಗಲ್ ನೀಡಿದ್ದ ತಪ್ಪು ಮಾಹಿತಿಯನ್ನು ತೆಗೆದು ಹಾಕಿತ್ತು. ಇದಕ್ಕೆ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಒತ್ತಾಯಿಸಿದ್ದಾರೆ.
ಕನ್ನಡ ಭಾಷೆಯು ಪ್ರಪಂಚದಲ್ಲಿ ಒಂದು ಅಗ್ರಗಣ್ಯ ಭಾಷೆ. 2500 ವರ್ಷಗಳ ಇತಿಹಾಸವನ್ನು ಹೊಂದಿದ ಈ ಭಾಷೆಯನ್ನು 7 ಕೋಟಿ ಜನರು ಮಾತನಾಡುತ್ತಾರೆ. ಅಭಿಜಾತ ಭಾಷೆ ಎಂಬ ಸ್ಥಾನ ತನ್ನದಾಗಿಸಿಕೊಂಡ ಈ ಭಾಷೆಯ ಲಿಪಿಗಳ ಬಳಕೆ ಕೃಷ್ಣ ದೇವರಾಯನ ಕಾಲದಲ್ಲಿಯೆ ಪ್ರಚಲಿತದಲ್ಲಿ ಇತ್ತು. ಕ್ರಿ.ಶ.2ನೇ ಶತಮಾನದಿಂದ ಕನ್ನಡಿಗರ ಸ್ಥಾನ ಗುರುತಿಸಿಕೊಂಡಿದೆ. ಇಷ್ಟೊಂದು ಭಾಷಾ ಶ್ರೀಮಂತಿಕೆ ಇರುವ ಕನ್ನಡ ಭಾಷೆಯ ಅವಹೇಳನವನ್ನು ಮಾಡಿದ ವೆಬ್‌ಸೈಟ್‌ವೊಂದು ಕನ್ನಡಿಗರ
ಸ್ವಾಭಿಮಾನಕ್ಕೆ ಅಡ್ಡಿ ಮಾಡಿದೆ.
ಯಾವುದೇ ಸಂಸ್ಥೆ ತನ್ನ ಕರ್ತವ್ಯ ಮೀರಿ ನಡೆಯುವಂತಿಲ್ಲ. ತಂತ್ರಜ್ಞಾನದ ತಪ್ಪನ್ನು ದೂರುವಂತಿಲ್ಲ. ಅದಕ್ಕೆ ನೀಡಿದ ಜವಾಬ್ದಾರಿಯನ್ನು ನಿಬಾಯಿಸಬೇಕಿತ್ತು. ಈ ಘಟನೆಗೆ ಕೀ ವರ್ಡ್ಸ್ ಕಾರಣ ನೀಡಿದ್ದಾರೆ. ಆದರೆ ಸರಿಯಾದ ಉತ್ತರ ನೀಡಿಲ್ಲ. ಅದಾದ ಬಳಿಕ ಗೂಗಲ್‌ನಲ್ಲಿ ಕನ್ನಡಕ್ಕೆ ಮೊದಲ ಸ್ಥಾನ ನೀಡಿದೆ. ಯಾವುದೇ ಮಾಹಿತಿಯನ್ನು ಕನ್ನಡದಲ್ಲಿಯೇ ಅವಕಾಶ ಮಾಡಿಕೊಟ್ಟಿದೆ. ಆದರೆ ಆದ ಗೋಜಲಿಗೆ ಸರಿಯಾದ ಉತ್ತರ ನೀಡಲು ಯಶ್ವಸಿಯಾಗಿಲ್ಲ.
ಇದಾದ ಕೆಲವೇ ದಿನದ ಬಳಿಕ ಮತ್ತೆ ಕನ್ನಡಿಗರ ಮನಸ್ಸಿಗೆ ನೋವುಂಟು ಮಾಡುವ ಕೆಲಸ ನಡೆದಿದೆ. ಇ-ಕಾಮರ್ಸ್ ದೈತ್ಯ ಅಮೆಜಾನ್ ಕನ್ನಡಕ್ಕೆ ಅವಮಾನ ಮಾಡಿದೆ. ಸಾಮಾನ್ಯವಾಗಿ ಮಹಿಳೆಯರು ಧರಿಸುವ ಉಡುಪಾದ ಬಿಕಿನಿಯಲ್ಲಿ ಕನ್ನಡ ಧ್ವಜದ ಬಣ್ಣವನ್ನು ಬಳಸಲಾಗಿತ್ತು. ಇದು ಅತೀ ಶೀಘ್ರದಲ್ಲಿಮಾರಾಟಕ್ಕೆ ಇಡಲಾಗಿದೆ ಎಂಬ ಮಾಹಿತಿಯು ಪ್ರಸಾರವಾಗಿತ್ತು. ಒಂದು ದೇಶಕ್ಕೆ ಅವಮಾನ ಮಾಡುವುದು ಹೇಗೆ ತಪ್ಪೋ ಹಾಗೆಯೇ ಒಂದು ರಾಜ್ಯದ ಬಾವುಟಕ್ಕೆ ಅವಮಾನ ಮಾಡುವುದು ಕೂಡಾ
ಅಷ್ಟೇ ಅಪರಾಧ.
ಪ್ರಪಂಚದ ಇತರ ದೇಶಗಳಾದ ಯುಎಸ್ ಮುಂತಾದ ದೇಶಗಳಲ್ಲಿ ದೇಶದ ಧ್ವಜವನ್ನು ಬಿಕಿನಿಗಳ ರೂಪದಲ್ಲಿ ಪ್ರತಿಬಿಂಬಿ ಸುತ್ತಾರೆ. ಅದೇ ತರಹ ಈಗ ಕರ್ನಾಟಕದ ಧ್ವಜ ಮತ್ತು ಲಾಂಛನವನ್ನು ಮುದ್ರಣ ಮಾಡಲಾಗಿದೆ. ಮತ್ತೆ ಮತ್ತೆ ಕನ್ನಡಿಗರನ್ನ ಕೆಣಕುವ ಇಂಥ ಕೃತ್ಯಗಳಿಗೆ ಕಡಿವಾಣ ಬೀಳಬೇಕಾದರೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲೇಬೇಕು. ಕನ್ನಡ ಭಾಷೆ , ನಾಡು-ನುಡಿಯ ವಿಷಯ ಬಂದಾಗ ಎಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕು. ಆಗ ಮಾತ್ರ ನಮ್ಮ ಸಂಸ್ಕೃತಿ ಉಳಿದೀತು.
ಇನ್ನೆಷ್ಟು ದಿನ ಇಂಥ ಕೃತ್ಯಗಳನ್ನು ಸಹಿಸಿಕೊಳ್ಳುವುದು. ಈಗಲಾದರೂ ಇಲಾಖೆಗಳು ಎಚ್ಚೆತ್ತುಕೊಂಡು ಮುಂದಿನ ದಿನಗಳಲ್ಲಿ ಭಾಷೆಗೆ ಬಂದೊದಗುವ ಕಂಟಕಗಳನ್ನು ತಡೆಯಬೇಕು.
ಹುಡುಗಿ ನಿಮ್ಮನ್ನು ಇಷ್ಟ ಪಡುತ್ತಿದ್ದಾಳ ಅಥವಾ ಇಲ್ವಾ ಅಂತ ತಿಳ್ಕೊಬೇಕು ಅಂದ್ರೆ ತಪ್ಪದೆ ಇದನ್ನ ಒಂದ್ಸಲ ಓದಿ – ಅರಳಿ ಕಟ್ಟೆ
ಹುಡುಗಿ ನಿಮ್ಮನ್ನು ಇಷ್ಟ ಪಡುತ್ತಿದ್ದಾಳ ಅಥವಾ ಇಲ್ವಾ ಅಂತ ತಿಳ್ಕೊಬೇಕು ಅಂದ್ರೆ ತಪ್ಪದೆ ಇದನ್ನ ಒಂದ್ಸಲ ಓದಿ
ಹುಡುಗಿ ನಿಮ್ಮನ್ನು ಇಷ್ಟ ಪಡುತ್ತಿದ್ದಾಳೆ ಎಂದು ತಿಳಿದುಕೊಳ್ಳಬೇಕೇ,ಇದನ್ನೊಮ್ಮೆ ಓದಿ.
ಆಕೆ ಪದೇ ಪದೇ ನಿಮ್ಮ ಕಡೆ ತಿರುಗಿ ನೋಡಲೆತ್ನಿಸುತ್ತಾಳೆ,ಆಕೆ ನಿಮ್ಮ ಕಡೆ ತಿರುಗಿಸಿ ಕೂರುತ್ತಾಳೆ,ನಿಮ್ಮೊಡನೆ ಮಾತನಾಡುತ್ತಿರುವಾಗ ನಿಮ್ಮ ಕಡೆ ಬಹಳ ಸಮಯ ನೋಡುತ್ತಿರುತ್ತಾಳೆ,ನಿಮ್ಮ ಹೆಸರು ತಿಳಿದುಕೊಳ್ಳಲು ಯತ್ನಿಸುತ್ತಾಳೆ.ನಿಮ್ಮಲಿ ಹೆಚ್ಚು ಹೆಚ್ಚು ಪ್ರಶ್ನೆಗಳನ್ನು ಕೆಳ ಬಯಸುತ್ತಾಳೆ.ನಿಮ್ಮ ಬಳಿ ನಿಂತುಕೊಳ್ಳಲು ಹವಣಿಸುತ್ತಾಳೆ.ಯಾವುದಾದರೂ ಒಂದು ವಿಷಯವನ್ನು ಪ್ರಸ್ತಾಪಿಸಿ ಸಂಭಾಷಣೆಯನ್ನು ಮುಂದುವರೆಸಲು ಪ್ರಯತ್ನಿಸುತ್ತಾಳೆ.ನಿಮ್ಮ ಜೊತೆ ಮಾತನಾಡುವ ಸಂದರ್ಭದಲ್ಲಿ ತನ್ನ ತಲೆಗೂದಲಿನೊಂದಿಗೆ ಆಟವಾಡುತ್ತಾಳೆ.ನಿಮ್ಮ ಬಗ್ಗೆ ಆಗಿಂದಾಗ್ಗೆ ಮೆಚ್ಚುಗೆ ಸೂಚಿಸುತ್ತಾಳೆ.
ನಿಮ್ಮ ತೋಳಿಗೆ ಪ್ರೀತಿ ಇಂದ ಗುದ್ದುವುದೂ ಕೂಡ ಪ್ರೀತಿ ಸೂಚಕವೇ .ನೀವು ಮಾಡಿದ ಜೋಕ್ ಇಷ್ಟವಾಗದೆ ಇದ್ದರೂ ನಗುತ್ತ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾಳೆ.ನೀವು ಒಂದು ವಿಚಾರವನ್ನು ಇಷ್ಟ ಪಡುತ್ತೀರಾ ಎಂದ ಕೂಡಲೇ ತನಗೂ ಅದರ ಬಗ್ಗೆ ಆಸಕ್ತಿ ಇದೆ ಎಂದು ತೋರಿಸಿಕೊಳ್ಳುತ್ತಾಳೆ.ನಿಮ್ಮ ಮಾತು ಅರ್ಧದಲ್ಲೇ ನಿಂತರೆ ಮತ್ತೆ ಮುಂದುವರೆಸುತ್ತಾಳೆ.ನಿಮ್ಮ ಗರ್ಲ್ ಫ್ರೆಂಡ್ ಬಗ್ಗೆ ತಿಳಿದುಕೊಳ್ಳಲು ಮರೆಯುವುದಿಲ್ಲ.ಆಕೆ ಯಾವಾಗಲೂ ನಿಮ್ಮೊಡನೆ ಸಲುಗೆಯಿಂದಿರಲು ಪ್ರಯತ್ನಿಸುತ್ತಾಳೆ, ಆಗಾಗ್ಗೆ ಸವಾಲುಗಳನ್ನು ಎಸೆಯುತ್ತಾಳೆ.ನಿಮ್ಮನ್ನು ಸ್ಪರ್ಶಿಸಲು ಪ್ರಯತ್ನಿಸುವುದುಂಟು.ಒಂದು ವಿಚಾರವವನ್ನು ಪ್ರಸ್ತಾಪಿಸಿ ಅದರ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿದುಕೊಳ್ಳಲು ಪ್ರಯತ್ನಿಸುವುದುಂಟು.ತನ್ನ ಬಗ್ಗೆ ಆದಷ್ಟು ಒಳ್ಳೆಯ ಅಭಿಪ್ರಾಯ ಬರುವ ಹಾಗೆ ಎಚ್ಚರವಹಿಸುವುದರಲ್ಲಿ ಆಕೆ ಜಾಣೆ.ಆಕೆ ಖಂಡಿತ ತನ್ನ ಸ್ನೇಹಿತರನ್ನು ನಿಮಗೆ ಪರಿಚಯ ಮಾಡಿಸುತ್ತಾಳೆ.ನೀವೇನಾದರೂ ಆಕೆಯ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾರೆ ಅದನ್ನು ನಿಲ್ಲಿಸುವ ಚಾಣಾಕ್ಷತನ ತೋರುತ್ತಾಳೆ.
ನಿಮ್ಮನು ಬೇರೆ ಬೇರೆ ಹೆಸರಿನಿಂದ ಸಂಬೋಧಿಸಿ ತನ್ನ ಆತ್ಮೀಯತೆ ವ್ಯಕ್ತಪಡಿಸುತ್ತಾಳೆ.ನಿಮ್ಮ ಬಳಿ ಒಬ್ಬಂಟಿಯಾಗಿ ಇರಲು, ನಿಮ್ಮೊಡನೆ ಸಂವಹಿಸಲು ಕಾರಣಗಳನ್ನು ಹುಡುಕುತ್ತಿರುತ್ತಾಳೆ..ಹೊರಡುವಾಗ ಪದೇ ಪದೇ 'ಹೊರಡುತ್ತಿದ್ದೇನೆ' ಎಂದು ಹೇಳಿ ತನ್ನ ಹೊರಡುವಿಕೆಯನ್ನು ಬೇಸರದಿಂದ ವ್ಯಕ್ತಪಡಿಸುತ್ತಾಳೆ.ಹೊರಡುವಾಗ ನೀವೆಲ್ಲಿಗೆ ಹೋಗುತ್ತಿದ್ದೀರಾ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಾಳೆ.
ದೆಹಲಿ ಪ್ರವಾಸ ಯಶಸ್ವಿ: ಸಿಎಂ ಯಡಿಯೂರಪ್ಪ
ಸಚಿವ ಸಂಪುಟ ವಿಸ್ತರಣೆ, ರಾಜ್ಯಕ್ಕೆ ಹೆಚ್ಚಿನ ನೆರವು ಮೊದಲಾದ ವಿಷಯಗಳ ಕುರಿತು ಚರ್ಚಿಸಲು ದೆಹಲಿ ಪ್ರವಾಸ ಕೈಗೊಂಡಿದ್ದ ಯಡಿಯೂರಪ್ಪ, ಈ ಬಾರಿಯ ದೆಹಲಿ ಪ್ರವಾಸ ಯಶಸ್ವಿಯಾಗಿದೆಯೆಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Published on : 19 Sep, 2020 , 9:40 am
ಶನಿವಾರ ಬೆಳಿಗ್ಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿದ ಕರ್ನಾಟಕ ಸಿಎಂ ಯಡಿಯೂರಪ್ಪ ಈ ಬಾರಿಯ ನನ್ನ ದೆಹಲಿ ಪ್ರವಾಸ ಯಶಸ್ವಿಯಾಗಿದೆಯೆಂದು ಹೇಳಿಕೆ ನೀಡಿದ್ದಾರೆ. ಈಗಾಗಲೇ ವೆಂಕಯ್ಯನಾಯ್ಡು ಜೊತೆಗೆ ಚರ್ಚೆ ಮಾಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಕೂಡಾ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ರಾಜ್ಯಕ್ಕೆ ಹೆಚ್ಚಿನ ನೆರವು ನೀಡುವುದಾಗಿ ತಿಳಿಸಿದ್ದಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಸಚಿವ ಸಂಪುಟದ ಬಗ್ಗೆ ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಜೊತೆಗೆ ಚರ್ಚೆ ನಡೆಸಿದ್ದು, ಇವತ್ತು ಜೆಪಿ ನಡ್ಡಾ ಹಾಗೂ ಪ್ರಧಾನಿ ಚರ್ಚೆ ಮಾಡಲಿದ್ದಾರೆ. ಹಾಗೂ ಇಂದೇ ಮುಂದಿನ ಕಾರ್ಯತಂತ್ರಕ್ಕೆ ತಕ್ಕಂತೆ ನಡ್ಡಾ ಸೂಚನೆ ಕೊಡಬಹುದು ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿರೋಧಗಳ ನಡುವೆಯೂ ಪುತ್ರ ವ್ಯಾಮೋಹ ಬಿಡಲೊಲ್ಲದ ಸಿಎಂ ಬಿಎಸ್‌ವೈ
ಸಂಪುಟ ವಿಸ್ತರಣೆ ಅಥವಾ ಪುನರ್ರಚನೆ ಎಂಬುವುದನ್ನು ಹೈಕಮಾಂಡ್ ತೀರ್ಮಾನ ಮಾಡಲಿದ್ದು, ಎಷ್ಟು ಜನರನ್ನು ಸೇರಿಸಿಕೊಳ್ಳಬೇಕು ಎಂಬುವುದನ್ನು ಹೈಕಮಾಂಡ್ ನಿರ್ಧರಿಸಲಿದೆ. ದೆಹಲಿ ನಾಯಕರ ಆಧಾರದ ಮೇಲೆ ಮಂತ್ರಿಮಂಡಲವನ್ನು ನಿರ್ಧರಿಸುತ್ತೇನೆ. ವಿಧಾಣ ಸಭಾ ಅಧಿವೇಶನಕ್ಕೂ ಮುನ್ನವೇ ಸಂಪುಟ ವಿಸ್ತರಣೆ ಮಾಡಬೇಕೆನ್ನುವುದು ನನ್ನದೂ ಉದ್ದೇಶ ಎಂದು ಬಿಎಸ್‌ವೈ ಹೇಳಿದ್ದಾರೆ.
ಅಕ್ರಮ ಮರಳು ಗಣಿಗಾರಿಕೆ: ಉ.ಪ್ರ.ದ ನಾಲ್ವರ ಬಂಧನ | Udayavani – ಉದಯವಾಣಿ
ಅಕ್ರಮ ಮರಳು ಗಣಿಗಾರಿಕೆ: ಉ.ಪ್ರ.ದ ನಾಲ್ವರ ಬಂಧನ
Team Udayavani, Jun 6, 2019, 3:29 PM IST
ಮದ್ದೂರು: ಶಿಂಷಾ ನದಿ ಪಾತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದ ಉತ್ತರ ಪ್ರದೇಶದ ಮೂಲದ ನಾಲ್ವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಉತ್ತರ ಪ್ರದೇಶದ ಚೋಲಲಾಲ್, ವಿನಿಯ, ರಾಜೇಶ್‌, ಕರ್ಮರಾಜ್‌ ಬಂಧಿತರು. ಇವರು ತಾಲೂಕಿನ ಕೂಳಗೆರೆ, ಬನ್ನಹಳ್ಳಿ, ಕೊಕ್ಕರೆ ಬೆಳ್ಳೂರು ಸೇರಿದಂತೆ ಇನ್ನಿತರೆ ಗ್ರಾಮಗಳಲ್ಲಿ ಶಿಂಷಾನದಿ ಪಾತ್ರದಲ್ಲಿ ಬಿಹಾರ, ಉತ್ತರ ಪ್ರದೇಶ ರಾಜ್ಯದ ಯುವಕರು ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದ ಹಿನ್ನೆಲೆಯಲ್ಲಿ ಪಿಎಸ್‌ಐ ಮಂಜೇಗೌಡ ನೇತೃತ್ವದಲ್ಲಿ ದಾಳಿ ನಡೆಸಿ ಬಂಧಿಸಿದ್ದಾರೆ.
ಬಳಿಕ ತಹಶೀಲ್ದಾರ್‌ ಬಿ.ಗೀತಾ ಅವರ ಮುಂದೆ ಹಾಜರುಪಡಿಸಿದ ಬಳಿಕ ವಿಚಾರಣೆ ನಡೆಸಿದ ತಹಶೀಲ್ದಾರ್‌ ಅವರು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಎಚ್ಚರಿಕೆ: ಶಿಂಷಾ ನದಿ ಪಾತ್ರದಲ್ಲಿ 144 ಸೆಕ್ಷನ್‌ ಜಾರಿಯಾಗಿದ್ದರೂ ಅಕ್ರಮ ಮರಳು ಗಣಿಗಾರಿಕೆ ನಿರಂತರವಾಗಿ ಸಾಗಿದ್ದು ಈಗಾಗಲೇ ಜಿಲ್ಲಾ ಹಾಗೂ ತಾಲೂಕು ಆಡಳಿತ ಕಟ್ಟುನಿಟ್ಟಿನ ಕ್ರಮ ವಹಿಸಿದ್ದು ಅಕ್ರಮ ಮರಳು ಸಾಗಾಣಿಕೆದಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ವಹಿಸಲಾಗುವುದು. ಸಾರ್ವಜನಿಕರು ಹಾಗೂ ಸಂಘ, ಸಂಸ್ಥೆಗಳಿಂದ ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ತಮಗೆ ದೂರು ಬಂದಿವೆ. ಕೆಲ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆಯೂ ದೂರುಗಳು ಬಂದಿದ್ದು ಅಂತಹ ಅಧಿಕಾರಿಗಳನ್ನು ಅಮಾನತು ಗೊಳಿಸುವುದಾಗಿ ತಹಶೀಲ್ದಾರ್‌ ಗೀತಾ ಎಚ್ಚರಿಸಿದರು.
ಕೊರೋನಾ ನಡುವೆಯೂ ಪಟಾಕಿ ಮಾರಾಟದ ಭರಾಟೆ..! | Fireworks sale in Bengaluru Market grg
Bengaluru, First Published 8, Nov 2020, 7:11 AM
ದೀಪಾವಳಿ ಸಂಭ್ರಮ| ಸರ್ಕಾರದ ಆದೇಶದ ಮಧ್ಯೆಯೂ ಹಸಿರು ಪಟಾಕಿ ಜತೆ ಸಾಂಪ್ರದಾಯಿಕ ಪಟಾಕಿಗೂ ಭಾರೀ ಬೇಡಿಕೆ| ಸರ್ಕಾರದ ದಿಢೀರ್‌ ನಿರ್ಧಾರ ವ್ಯಾಪಾರದ ಮೇಲೆ ಬೀರಿದ ಪರಿಣಾಮ| ಪರವಾನಗಿ ಪಡೆದವರು ಹಸಿರು ಪಟಾಕಿ ಮಾರಾಟ|
ಬೆಂಗಳೂರು(ನ.08): ಕೊರೋನಾ ಸೋಂಕಿತರಿಗೆ ಮಾರಕವಾಗಲಿದೆ ಎಂಬ ಕಾರಣಕ್ಕೆ ಸಾಂಪ್ರದಾಯಕ ಪಟಾಕಿ ಬದಲು ಹಸಿರು ಪಟಾಕಿ ಮಾರಾಟಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಿದ ಬೆನ್ನಲ್ಲೆ ಮಾರುಕಟ್ಟೆಯಲ್ಲಿ ಪಟಾಕಿ ಮಾರಾಟದ ಸದ್ದು ಜೋರಾಗಿದೆ.
ಪಟಾಕಿ ಸಂಬಂಧ ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಳ್ಳುವ ಮುನ್ನವೇ ರಾಜ್ಯದಾದ್ಯಂತ ಸಗಟು ಪಟಾಕಿ ವ್ಯಾಪಾರಿಗಳು, ವಿತರಕರು ಶೇ.30ರಷ್ಟು ಪಟಾಕಿ ಖರೀದಿಸಿದ್ದರು. ಆದರೆ, ಕೊರೋನಾ ಹಾಗೂ ಸರ್ಕಾರದ ಗೊಂದಲದ ಹೇಳಿಕೆ ಹಿನ್ನೆಲೆ ಮಳಿಗೆ ತೆರೆಯಲು ಹಿಂದೇಟು ಹಾಕಿದ್ದರು. ಈಗ ಎಲ್ಲೆಡೆ ಪಟಾಕಿ ಮಾರಾಟ ನಡೆಯುತ್ತಿದ್ದು, ಗ್ರಾಹಕರು ರೋಗದ ಭೀತಿ ಬದಿಗಿಟ್ಟು ಉತ್ಸಾಹದಿಂದ ಖರೀದಿಸುತ್ತಿದ್ದಾರೆ. ಆದರೆ ಬೆಂಗಳೂರು ನಗರದಲ್ಲಿ ಪಟಾಕಿ ಮಳಿಗೆ ತೆರೆಯಲು ಇನ್ನೂ ಅನುಮತಿ ನೀಡಿಲ್ಲ. ಸದ್ಯ ಅಧಿಕೃತ ಮಾರಾಟಗಾರರು ಅಂಗಡಿಗಳಲ್ಲಿ ಮಾತ್ರ ಮಾರಾಟ ಮಾಡುತ್ತಿದ್ದಾರೆ.
ನಗರ ಹಾಗೂ ಹೊರ ವಲಯದಲ್ಲಿ ಪಟಾಕಿ ವ್ಯಾಪಾರ-ವಹಿವಾಟು ಕಳೆಗಟ್ಟಿದೆ. ಹಸಿರು ಪಟಾಕಿ ಮಾರಾಟ ನೆಪ ಮಾಡಿಕೊಂಡ ಮಾರಾಟಗಾರರು ಎಂದಿನಂತೆ ಪಟಾಕಿ ಮಾರಾಟ ಮಾಡುತ್ತಿದ್ದಾರೆ. ಕೆಲವರು ಮಾತ್ರ ಹಸಿರು ಪಟಾಕಿ ಖರೀದಿಗೆ ಆಸಕ್ತಿ ತೋರುತ್ತಿದ್ದರೆ, ಬಹುತೇಕರು ಸಾಂಪ್ರದಾಯಿಕ ಪಟಾಕಿಗಳಿಗೆ ಬೇಡಿಕೆ ಇಡುತ್ತಿದ್ದಾರೆ. ಹೀಗಾಗಿ ಕೆಲ ವ್ಯಾಪಾರಿಗಳು ಹಸಿರು ಪಟಾಕಿ ಜತೆಗೆ ಸಾಂಪ್ರದಾಯಕ ಪಟಾಕಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಆದರೆ, ವ್ಯಾಪಾರಿಗಳು ಮಾತ್ರ ಸರ್ಕಾರದ ಆದೇಶವನ್ನು ಪಾಲಿಸುತ್ತಿರುವುದಾಗಿ ಹೇಳುತ್ತಿದ್ದಾರೆ. ಗ್ರಾಹಕರು ಹಸಿರು ಪಟಾಕಿಯೋ ಅಥವಾ ಸಾಂಪ್ರದಾಯಿಕ ಪಟಾಕಿಯೋ ಎಂಬುದನ್ನು ಅರಿಯದೆ ಖರೀದಿ ಮಾಡುತ್ತಿದ್ದಾರೆ.
ಹಸಿರು ಪಟಾಕಿ ಮಾತ್ರ ಮಾರಾಟ:
2019ರಲ್ಲೇ ಸುಪ್ರೀಂಕೋರ್ಟ್‌ ಆದೇಶದಂತೆ ಮಾಲಿನ್ಯ ರಹಿತ ಹಸಿರು ಪಟಾಕಿಗಳನ್ನು ತಯಾರಿಸಲಾಗುತ್ತಿದೆ. ನಾವು ಸಹ ಅವುಗಳನ್ನೇ ಮಾರಾಟ ಮಾಡುತ್ತಿದ್ದೇವೆ. ಆದರೆ, ಹಸಿರು ಪಟಾಕಿಗಿಂತ ಇತರೆ ಪಟಾಕಿಗಳು ಕಡಿಮೆ ಬೆಲೆಗೆ ಸಿಗುತ್ತದೆ. ಬಡವರು ಹಸಿರು ಪಟಾಕಿ ಕೇಳುವುದಿಲ್ಲ. ಕಡಿಮೆ ಬೆಲೆಗೆ ಸಿಗುವ ಪಟಾಕಿಗಳ ಖರೀದಿಸುತ್ತಾರೆ. ಈ ಮಧ್ಯೆ ಮಾರಾಟಕ್ಕೆ ಪರವಾನಗಿ ಸಿಗುತ್ತದೋ ಇಲ್ಲವೋ ಅಂತ ಸಂಶಯದಿಂದ ಕೆಲವು ವ್ಯಾಪಾರಿಗಳೇ ಪಟಾಕಿಗಳ ಖರೀದಿಗೆ ಆಸಕ್ತಿ ತೋರುತ್ತಿಲ್ಲ ಎಂದು ಎಚ್‌ಎಸ್‌ಆರ್‌ ಲೇಔಟ್‌ನ ಕ್ರಾಕ​ರ್‍ಸ್ ಬಜಾರ್‌ನ ಸುದರ್ಶನ್‌ ಹೇಳಿದರು.
ಸರ್ಕಾರದ ನಡೆ ಈ ವರ್ಷ ವ್ಯಾಪಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಕಳೆದ ವರ್ಷ 30 ಲಕ್ಷಕ್ಕೂ ಹೆಚ್ಚು ವ್ಯಾಪಾರವಾಗಿತ್ತು. ಈ ಹಿಂದಿನ ವರ್ಷ ಇದೇ ಸಮಯದಲ್ಲಿ ದಿನಕ್ಕೆ ಒಂದು ಲಕ್ಷದವರೆಗೂ ಖರೀದಿಯಾಗುತ್ತಿತ್ತು. ಆದರೆ, ಈ ವರ್ಷ ಪ್ರತಿದಿನ 10 ಸಾವಿರದಿಂದ 15 ಸಾವಿರ ರು. ವ್ಯಾಪಾರವಾಗುತ್ತಿದೆ. ಈ ವರ್ಷ ಶೇ.50ರಿಂದ 60ರಷ್ಟುವ್ಯಾಪಾರವಾಗುವ ನಿರೀಕ್ಷೆಯಿದೆ ಎಂದು ಹೊಸೂರು ರಸ್ತೆಯ ಎಸ್‌ಎಲ್‌ವಿ ಪಟಾಕಿ ಅಂಗಡಿ ಮಾಲೀಕ ರಾಮಸ್ವಾಮಿ 'ಕನ್ನಡಪ್ರಭ'ಕ್ಕೆ ಮಾಹಿತಿ ನೀಡಿದರು.
ಮಾರುಕಟ್ಟೆಯಲ್ಲಿ ಕನಿಷ್ಠ 50 ರು.ನಿಂದ ಎಂಟು ಸಾವಿರ ರು.ವರೆಗೆ ಪಟಾಕಿ ಬೆಲೆ ಇದೆ. ಗಿಫ್ಟ್‌ ಬಾಕ್ಸ್‌ಗಳನ್ನು ರಿಯಾಯಿತಿ ದರದಲ್ಲಿ ಮಾರುತ್ತಿದ್ದೇವೆ. ಗ್ರಾಹಕರು ಹಸಿರು ಪಟಾಕಿ, ವಿಷ್ಣುಚಕ್ರ, ಹೂಕುಂಡ, ಸ್ಕೈಶಾಟ್‌, ಮಕ್ಕಳು ಸಿಡಿಸುವ ಪಟಾಕಿಗಳನ್ನು ಹೆಚ್ಚಿನದಾಗಿ ಖರೀದಿಸುತ್ತಿದ್ದಾರೆ. ಪಟಾಕಿ ಮೇಲೆ ಹಸಿರು ಬಣ್ಣದ ಚಿಹ್ನೆಯ ಗುರುತು ಇರುತ್ತದೆ. ಪರವಾನಗಿ ಪಡೆದವರು ಹಸಿರು ಪಟಾಕಿ ಮಾರಾಟ ಮಾಡುತ್ತಿದ್ದಾರೆ. ಗ್ರಾಹಕರು ಚಿಹ್ನೆ ಪರಿಶೀಲಿಸಿ ಪಟಾಕಿ ಖರೀದಿಸಬೇಕು ಎಂದು ರಾಮಸ್ವಾಮಿ ಹೇಳಿದರು.
ಲಾಕ್‌ಡೌನ್‌ ಸಮಯದಲ್ಲೇ ಪಟಾಕಿ ಮಾರಾಟ ನಿಷೇಧ ಕುರಿತಂತೆ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಸರ್ಕಾರದ ದಿಢೀರ್‌ ನಿರ್ಧಾರ ವ್ಯಾಪಾರದ ಮೇಲೆ ಪರಿಣಾಮ ಬೀರಿದೆ. ಲಕ್ಷಾಂತರ ರು. ಸಾಲ ಮಾಡಿ ಸರಕುಗಳನ್ನು ತರಿಸಿರುತ್ತೇವೆ. ವ್ಯಾಪಾರ ನಡೆಯದಿದ್ದರೆ ಆರ್ಥಿಕ ನಷ್ಟಕ್ಕೆ ಗುರಿಯಾಗುತ್ತೇವೆ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ ವ್ಯಾಪಾರಿಗಳು.
ಕೊರೋನಾ ಹಿನ್ನೆಲೆ ಸರ್ಕಾರದ ಕ್ರಮ ಒಪ್ಪಬಹುದು. ಆದರೆ, ಸರ್ಕಾರದ ದಿಢೀರ್‌ ನಿರ್ಧಾರ ಸರಿಯಲ್ಲ. ದೀಪಾವಳಿಯಲ್ಲಿ ಪಟಾಕಿ ಸಿಡಿಸುವುದು ನಮ್ಮ ಪದ್ಧತಿ. ನಾವು ಹಸಿರು ಪಟಾಕಿ ಕೇಳಿದರೂ ಅಂಗಡಿಯವರು ಯಾವುದಾದರೂ ನೀಡಬಹುದಲ್ಲವೇ? ಒಟ್ಟಿನಲ್ಲಿ ಹಸಿರು ಪಟಾಕಿ ಎಂಬ ಗುರುತು ಇರುವ ಪಟಾಕಿಗಳನ್ನು ಖರೀದಿ ಮಾಡುತ್ತಿದ್ದೇವೆ ಎಂದು ಗ್ರಾಹಕರೊಬ್ಬರು ಹೇಳಿದರು.
ಮಹಾಪಂಡಿತ ರಾಹುಲ ಸಾಂಕೃತ್ಯಾಯನರ ಲೇಖನ – ಡಾ.ಅನಂತರಾಮ ಭಟ್ಟರ ದುರಂತ ಕಥನ | ನಿಲುಮೆ
1928ರ ಕೊನೆಯಲ್ಲಿ ನಾನು ಟಿಬೇಟಿಗೆ ಹೊರಡುವ ತಯಾರಿಯಲ್ಲಿದ್ದೆ. ನನಗನ್ನಿಸಿತು; ಭಟ್ಟರು ವಿದ್ಯಾಲಂಕಾರ ವಿಹಾರಕ್ಕೆ ಬಂದರೆ ಅಲ್ಲಿ ಸಂಸ್ಕೃತ ಪಠಣ-ಪಾಠಣ ಸುಸೂತ್ರವಾಗಿ ನಡೆಯಬಲ್ಲುದು. ಅವರನ್ನು ಕೇಳಿದಾಗ ತಿಳಿದುಬಂದದ್ದೆಂದರೆ ಅವರು ಸ್ವಾವಲಂಬಿಯಾಗಿ ಓದಲು ಬಂದವರು ಹಾಗೂ ಇಷ್ಟರ ತನಕ ಯಾವುದೇ ಖಾಯಂ ನೌಕರಿ ಸಿಕ್ಕಿರಲಿಲ್ಲ.ಅವರಿಗೆ ವಿದ್ಯಾಲಂಕಾರ ಪರಿವೇಣದಲ್ಲಿ ವಾಸ ಮತ್ತು ಸಂಬಳದ ವ್ಯವಸ್ಥೆ ಮಾಡಿಸುವುದಾಗಿ ನಾನು ಹೇಳಿದೆ. ಅಂತೆಯೆ ನಾನೆಂದೆ – 'ಮೆಟ್ರಿಕ್ ಮತ್ತು ಲಂಡನ್ನಿನ ಪರೀಕ್ಷೆಯ ಭ್ರಮೆಗೆ ಒಳಗಾಗಬೇಡ. ದಾರಿಕರ್ಚಿಗೆ ಸ್ವಲ್ಪ ದುಡ್ಡು ಒಟ್ಟು ಮಾಡಿಕೊಂಡು ಜರ್ಮನಿಗೆ ಹೋದರೆ ನೀನು 2-3 ವರ್ಷದಲ್ಲಿ ಪಿಎಚ್.ಡಿ. ಪಡೆಯುವೆ. ಅದರ ಬೆಲೆ ಲಂಡನ್ನಿನ ಬಿ.ಎ.ಗಿಂತ ಹೆಚ್ಚು'. ಅವರು ವಿದ್ಯಾಲಂಕಾರ ವಿಹಾರಕ್ಕೆ ಸೇರಿಕೊಂಡರು.
ನಾನು ಟಿಬೇಟಿನಿಂದ ಬಹಳ ಬೇಗ ವಾಪಾಸಾದೆ. ಅಂದರೆ ಜೂನ್ 1930ರ ಮೂರನೆಯವಾರ ಶ್ರೀಲಂಕೆಗೆ ಬಂದೆ. ಭಟ್ಟರು ಅಲ್ಲಿ ಪಾಠ ಮಾಡುತ್ತಾ ಇದ್ದರು. ನನಗೆ ಬಹಳ ಖುಷಿಯಾಯಿತು. ನಾನು ಹಿಂತಿರುಗುತ್ತಲೇ ಭಿಕ್ಷುವಾದೆ. ಅಧ್ಯಾಪನ ಕಾಯಕವೂ ಸಾಗಿತ್ತು. ನಾನು ಭಟ್ಟರಿಗೆ ಹೇಳಿದೆ – 'ನೀವು ಈ ಪರೀಕ್ಷೆಗಳ ಗೊಂದಲಕ್ಕೆ ಬೀಳಬೇಡಿ'. ಆದರೆ, ಅವರು ಈ ವರ್ಷವೂ ಲಂಡನ್ನಿನ ಮೆಟ್ರಿಕ್ ಪರೀಕ್ಷೆಗೆ ಕುಳಿತರು. ಪಾಸಾಗಲಿಲ್ಲ. ಈಗ ನಾನು ಹೇಳಿದ್ದನ್ನು ಕಿವಿಗೊಟ್ಟು ಕೇಳತೊಡಗಿದರು. ನನಗೆ ಜರ್ಮನಿಯಲ್ಲಿ ಕೆಲವು ಮಿತ್ರರಿದ್ದಾರೆ. ಮಾರಾವುರ್ಗ್‍ನ ಸಂಸ್ಕೃತ ಅಧ್ಯಾಪಕ ರುಡೋಲ್ಫ್ ಓಡೊ ನನಗೆ ಸಿಲೋನಿನಲ್ಲಿ ಸಿಕ್ಕಿದ್ದರು. ನಮ್ಮಿಬ್ಬರ ಮಿತ್ರತ್ವ ಗಾಢವಾಗಿ ಬೆಳೆದಿತ್ತು. ನಾನು ಅವರಿಗೆ ಬರೆದೆ – "ಇವರು ಸಂಸ್ಕೃತದ ಬಹಳ ಶ್ರೇಷ್ಠ ವಿದ್ವಾಂಸರು. ಜರ್ಮನಿಗೆ ವಿಶೇಷ ಅಧ್ಯಯನ ಮಾಡಲು ಬರಲು ಇಚ್ಛಿಸುತ್ತಾರೆ. ಅಲ್ಲಿ ಅವರಿಗೆ ಅಧ್ಯಯನದ ಜತೆಗೆ ಜೀವನೋಪಾಯದ ವ್ಯವಸ್ಥೆ ಮಾಡಿಕೊಡಬಹುದೆ?" ಅವರು ತಮ್ಮ ಮಿತ್ರರನ್ನು ಕೇಳಿದರು. ಟುವಿಂಗ್‍ನ ಸಂಸ್ಕೃತಾಧ್ಯಾಪಕ 'ನಾವು ಫೀಸನ್ನು ಮಾಫಿ ಮಾಡುತ್ತೇವೆ. ಹಾಗೂ 70-80 ಮಾರ್ಕ್ ಮಾಸಿಕ ಸ್ಟೈಫೆಂಡ್ ಕೊಡುವ ವ್ಯವಸ್ಥೆ ಮಾಡುತ್ತೇವೆ' ಎಂದು ಆಶ್ವಾಸನೆ ಕೊಟ್ಟರು. ಅಂತೂ 22 ವರ್ಷದ ಅನಂತರಾಮುಗೆ ಜರ್ಮನಿಯಲ್ಲಿ ವ್ಯವಸ್ಥೆಯಂತೂ ಆಯಿತು. ಸರಿ ಲಂಕೆಯಿಂದ ಜರ್ಮನಿಗೆ ತಲುಪುವುದು ಹೇಗೆ? ಪಾಸ್‍ಪೋರ್ಟ್ ಪಡೆಯಲು ಅವರು ಭಾರತಕ್ಕೆ ಹೋಗಬೇಕಾಗಿತ್ತು. ಅವರು ಭಾರತಕ್ಕೆ ಹೋದರು. ಪಾಸ್‍ಪೋರ್ಟ್ ಪಡೆಯುವಲ್ಲಿ ಸಫಲರಾದರು. ಆದರೆ ಮಗಳಿಗೆ ಅನಿಷ್ಠವಾಗುವ, ತನ್ನ ಅಳಿಯ ಸಮುದ್ರ ದಾಟಿ ಜಾತಿಯಿಂದ ಬಹಿಷ್ಕಾರ ಹೊಂದುವ, ಪರಿಸ್ಥಿತಿಗೆ ಒಳಗಾಗುವುದಕ್ಕೆ ಧರ್ಮಭೀರು ಮಾವ ಒಪ್ಪಲಿಲ್ಲ. ಅಂತೂ, ಹೇಗೊ ಕೆಲವು ತಿಂಗಳುಗಳ ನಂತರ ಭಟ್ಟರು ಸಿಲೋನಿಗೆ ವಾಪಸ್ಸಾದರು.
ಜರ್ಮನಿ ತಲುಪಲು ಅವರ ಹತ್ತಿರ ಸಾಕಷ್ಟು ಹಣ ಇರಲಿಲ್ಲ. ಅದೇ ಸಮಯ ನನಗೆ ಯಾವುದಕ್ಕೋ 150 ರೂ.ದೊರೆತಿತ್ತು. ಅದನ್ನು ಸೇರಿಸಿ ನಾನು ಭಟ್ಟರಿಗೆ ಪಂಪ್ ಮಾಡಲು ತೊಡಗಿದೆ. ಲಂಡನ್ನಿನ ಡಿಗ್ರಿ ಬಹಳ ದೂರದ ಮಾತು. ಜರ್ಮನಿಯದ್ದು ನಿಜಕ್ಕೂ ಆಕರ್ಷಕ. ಆದರೆ, ಸಮುದ್ರ ದಾಟಿ ಧರ್ಮದಿಂದ ಪತಿತವಾಗುವ ಪ್ರಶ್ನೆಯಿತ್ತು. ಲಂಕೆಗೂ ಸಮುದ್ರದಾಟಿಯೇ ಬರಬೇಕಾಗಿತ್ತು; ಆದರೆ ಅದು ಮನೆಬಾಗಿಲ ಹಾಗಿನ ವಿಚಾರವಾಗಿತ್ತು. ಅವರೆಂದೂ ವಿದೇಶಕ್ಕೆ ಹೋಗಿರಲಿಲ್ಲ. ಸಂಸ್ಕೃತದ ವಿದ್ಯಾರ್ಥಿಯಾಗಿದ್ದುದರಿಂದ ಕೂಪಮಂಡೂಕತನ ಸಾಕಷ್ಟು ಇತ್ತು. ಪರದೇಶಕ್ಕೆ ಲಕ್ಷ್ಮಿಯ ಕೃಪೆಯಿಲ್ಲದೆ ಹೋಗುವುದು ಅತ್ಯಂತ ಅಪಾಯಕಾರಿ. ನನ್ನೆಲ್ಲಾ ಯಾತ್ರಾನುಭವ ಜ್ಞಾನವನ್ನೆಲ್ಲಾ ಒಟ್ಟುಗೂಡಿಸಿ ಹೇಳಿದೆ :- ಮನುಷ್ಯ ಸಮುದ್ರಕ್ಕೆ ಬಿದ್ದರೆ ಅವನನ್ನು 99ಶೇ. ಉಳಿಸುವವರು ಯಾರೂ ಇರುವುದಿಲ್ಲ. ನೀವು ಏಕೆ ನೂರಕ್ಕೆ ನೂರು ಶೇಕಡಾ ಯೋಚಿಸುತ್ತೀರಿ? ನೀವು ಸಮುದ್ರಕ್ಕೋ ನಿರ್ಜನ ಮರುಭೂಮಿಗೋ ಹೋಗುತ್ತಿಲ್ಲ. ಮನುಷ್ಯರಿರುವ ಜಾಗಕ್ಕೆ ತಾನೆ ನೀವು ಹೋಗುತ್ತಿದ್ದೀರಿ. ಮನುಷ್ಯತ್ವ ಎಲ್ಲ ಸ್ಥಳಗಳಲ್ಲೂ ಮನುಷ್ಯನನ್ನು ರಕ್ಷಿಸಲು ಸಿದ್ಧವಾಗಿರುತ್ತದೆ" ನಾನು ಅವರಿಗೆ ಯುರೋಪಿಗೆ ಹೋಗಲು ಹೇಳುತ್ತಿದ್ದೆ; ಸತ್ಯವಿಚಾರವೆಂದರೆ ನಾನು ಈವರೆಗೆ ಯುರೋಪಿಗೆ ಹೋಗಿರಲಿಲ್ಲ. ಹೀಗೆ ನಿಧಾನವಾಗಿ ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿದೆ.
ಊಟ ತಿಂಡಿಯ ಪ್ರಶ್ನೆ ಬಂತು. ವಿದೇಶದಲ್ಲಿ ಯಾವುದೇ ಮನುಷ್ಯನ ಹತ್ತಿರ ಬೇಕಾದಷ್ಟು ಹಣ ಇದ್ದರೆ ಆತ ತನ್ನ ಸಸ್ಯಾಹಾರದ ನಿಯಮಕ್ಕೆ ಬದ್ಧನಾಗಿಯೇ ಬದುಕಬಹುದು. ಆದರೆ, ಭಟ್ಟರಂಥವರ ಪರಿಸ್ಥಿತಿ ಸಸ್ಯಾಹಾರಕ್ಕೆ ಪೂರಕವಾಗಿಲ್ಲ ನಾನೆಂದೆ – "ಅಲ್ಲಿಗೆ ಹೋದ ಮೇಲೆ ವೈಷ್ಣವ ಪಂಥದ ಗೀಳಿಗೆ ಒಳಗಾಗಬೇಡ. ಮಾಂಸ ತಿನ್ನಲು ಶುರುಮಾಡು. ಇಲ್ಲಿಂದಲೇ ಮೊಟ್ಟೆ ತಿನ್ನಲು ಶುರುಮಾಡು". ಪ್ರಾಯಃ ಅವರು ಶುರುಮಾಡಿದರು. ಎರಡು ವರ್ಷಗಳ ನಂತರ ಅಂದರೆ 1933ರಲ್ಲಿ ನಾನು ಇಂಗ್ಲೆಂಡಿನಲ್ಲಿರುವಾಗ ಅವರ ಪತ್ರದಿಂದ ತಿಳಿದುಬರುತ್ತಿತ್ತು – 'ಹೆಂಡತಿಯನ್ನು ಮಾರಿಯಾದರೂ ನಾನು ಮೊಟ್ಟೆ ತಿನ್ನಲು ತಯಾರು". ಆದರೆ, ಇನ್ನೂ ಮಾಂಸದ ತನಕ ತಲುಪಿರಲಿಕ್ಕಿಲ್ಲ.
ಯುರೋಪಿಗೆ ಹೋಗಲು ಬಟ್ಟೆ ಬರೆಗಳ ಅವಶ್ಯಕತೆಯಿತ್ತು. ಅವರ ಹತ್ತಿರ ಕುರ್ತಾ ಧೋತಿ ಇತ್ತು. ಸೂಟು ಹೊಲಿಸಲು 150 ರೂಪಾಯಿ ಬೇಕಾಗುತ್ತಿತ್ತು. ನಾನು ಟಿಬೇಟಿನಿಂದ ಬರುವಾಗ ಒಂದು ಬೆಲೆ ಬಾಳುವ ಉಲ್ಲನ್ ಕ್ಲಾತ್ ತಂದಿದ್ದೆ. ಭಟ್ಟರು ಅಂಥ ಫ್ಯಾಶನ್ ಪ್ರಿಯರೇನಲ್ಲ. ಅದರಿಂದಲೇ ಕೊಲೊಂಬೋದ ದರ್ಜಿಯ ಬಳಿ ಕೋಟು ಪ್ಯಾಂಟ್ ಹೊಲಿಸಿದೆ. ನಾನೆಂದೆ – 'ನೋಡವುದಕ್ಕೆ ಅಷ್ಟೇನೂ ಚಂದ ಕಾಣಿಸದಿದ್ದರೂ, ಈ ಸೂಟು ಇಪ್ಪತ್ತು ವರ್ಷಕ್ಕೆ ಸಾಕು. ಜರ್ಮನಿಯ ಮೂಳೆ ಕೊರೆಯುವ ಚಳಿಯಲ್ಲಿ ಇದರಿಂದ ಆಗುವಷ್ಟು ಅನುಕೂಲ 400 ರೂಪಾಯಿ ಸೂಟಿನಿಂದಲೂ ಆಗುವುದಿಲ್ಲ." ಒಂದು ಫ್ರಾನ್ಸಿನ ಹಡಗು ಕಂಪೆನಿಯಿಂದ 250 ರೂಪಾಯಿಯಲ್ಲಿ 'ಮೋರ್‍ಸೇಯಿ'ಗೆ ಟಿಕೇಟ್ ಸಿಕ್ಕಿತು. ಸ್ವಲ್ಪ ಹಣ ಜೇಬಿನಲ್ಲಿತ್ತು. ಟುವಿಂಗ್‍ನ ತಲುಪಿದ ಮೇಲೆ ಸ್ವಲ್ಪ ಅಚ್ಚುಕಟ್ಟು ಮಾಡಿದರೆ ಒಂದು ತಿಂಗಳು ಕಳೆಯಬಹುದಿತ್ತು.
ಅಂತೂ ನಾನು ಅನಂತರಾಮನನ್ನು ಸಮುದ್ರಕ್ಕೆ ದೂಡಿದೆ. ಅವರು ಟುವಿಂಗನ್ ತಲುಪಿ ಪ್ರೊಫೆಸರ್ ಮಿತ್ರರಿಗೆ ಸಂಸ್ಕೃತ ಸಂಶೋಧನೆಗೆ ಸಹಾಯ ಮಾಡುತ್ತಾ ಸ್ವತಃ ಡಾಕ್ಟರೇಟ್‍ಗೆ ತಯಾರಿ ನಡೆಸತೊಡಗಿದರು. ಪ್ರೊಫೆಸರೊಡನೆ ಅವರು ಸಂಸ್ಕೃತದಲ್ಲೇ ಸಂಭಾಷಿತಬಲ್ಲವರಾಗಿದ್ದರು. ಇದು ಅವರನ್ನೆಲ್ಲಾ ಹೆಚ್ಚು ಪ್ರಭಾವಿಸಿತು. 1932ರನ್ನು ನಾನು ಇಂಗ್ಲೆಂಡಿನಲ್ಲಿರುವಾಗಲೇ ಅವರ ಒಂದು ಪತ್ರದಿಂದ ತಿಳಿದು ಬಂದ ವಿಚಾರ – ಅವರು ಡಾಕ್ಟರೇಟ್‍ಗೆ ಆರಿಸಿಕೊಂಡ ವಿಚಾರ 10 ವರ್ಷಗಳಲ್ಲಿ ಮುಗಿಯುವುದೂ ಕಷ್ಟವಿತ್ತು. ನಾನು ಪತ್ರ ಬರೆದೆ – "ನೀನು ಹೀಗೇಕೆ ಮಾಡಿದಿ? ಒಂದು-ಎರಡು ವರ್ಷದೊಳಗೆ ಪಿಎಚ್.ಡಿ. ಮುಗಿಸಲು ಸಾಧ್ಯವಾಗುವ ವಿಷಯ ತೆಗೆದುಕೊಳ್ಳಬೇಕಿತ್ತು. ಸಂಶೋಧನೆಯ ಕೆಲಸ ಜೀವನದುದ್ದಕ್ಕೂ ಮಾಡಲಿಕ್ಕಿದೆ. ಅದನ್ನು ಮತ್ತೆ ಮಾಡಬಹುದಿತ್ತು". ಅಂತೂ ಅದೇ ರೀತಿ ಮಾಡಿ ಭಟ್ಟರು ಟುವಿಂಗ್‍ನ ಪಿಎಚ್.ಡಿ. ಪಡೆದರು. ಭಾಷೆ ಕಲಿಯುವ ಆಸಕ್ತಿ ಅವರ ಸ್ವಾಭಾವಿಕ ಪ್ರವೃತ್ತಿಯೇ ಆಗಿತ್ತು. ಹಾಗಾಗಿ ಜರ್ಮನ್ ಭಾಷೆಯ ಮೇಲೆ ಬಹುಬೇಗನೆ ಹಿಡಿತ ಸಾಧಿಸಿದರು. ಅನಂತರ ಅರ್ಥಶಾಸ್ತ್ರದಲ್ಲಿ ಅವರು ಡಿ.ಎಸ್ಸಿ ಪದವಿ ಗಳಿಸಿದರು. ಅವರ ಪರಿಚಯದವರ ಸಂಖ್ಯೆ ಹೆಚ್ಚುತ್ತಾ ಹೋಯಿತು. ಅವರ 'ಯೋಗ್ಯತೆ' ಪ್ರಚಾರಕ್ಕೆ ಬರತೊಡಗಿತು. ಭಟ್ಟರು ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ಭಾರತೀಯ ಶಾಸ್ತ್ರದ ಪ್ರೊಫೆಸರ್ ಆದರು. ಇವರ ಅಂತಃಸತ್ವ ಇನ್ನೊಂದು ಕ್ಷೇತ್ರದಲ್ಲೂ ಬೆಳಗಿತು. ಅವರು ಭಾಷಣ ಮಾಡುತ್ತಲೇ ಜರ್ಮನ್ ಭಾಷೆಯಲ್ಲಿ ಉತ್ಕೃಷ್ಟ ಲೇಖನಗಳನ್ನೂ ಬರೆಯತೊಡಗಿದ್ದರು. ಭಾರತದ ಪರಿಚಯಕ್ಕೆ ಸಂಬಂಧಿಸಿದ ಸಾಕಷ್ಟು ಅಂಕಿಅಂಶಗಳಿರುವ ಅವರ ಒಂದು ಪುಸ್ತಕ ಲಕ್ಷಗಟ್ಟಲೆ ಪ್ರತಿಗಳಲ್ಲಿ ಮುದ್ರಣ ಕಂಡಿತು.ಹಣ ಮತ್ತು ಕೀರ್ತಿ ಎರಡೂ ಅವರ ಕಾಲಿಗೆ ಎರಗಿದವು.
ಜರ್ಮನಿಯಲ್ಲಿ ಹಿಟ್ಲರ್‍ನ ರಣಕಹಳೆ ಮೊಳಗಿತು. ಭಾರತದಿಂದ ಹೊರಡುವಾಗ ಭಟ್ಟರಿಗೆ ರಾಜಕೀಯದ ಜ್ಞಾನ ಏನೇನೂ ಇರಲಿಲ್ಲ. ಹೆಚ್ಚೆಂದರೆ 'ನಮ್ಮ ದೇಶದ ಗುಲಾಮಗಿರಿ ನನಗೆ ಏನೇನೂ ಇಷ್ಟವಾಗುವುದಿಲ್ಲ' – ಎಂದು ಹೇಳುವಷ್ಟು ಮಾತ್ರ. ಉದಯದಿಂದ ಅಸ್ತದ ತನಕ ಎಲ್ಲೆಲ್ಲೂ ಇಂಗ್ಲಿಷ್‍ರದ್ದೇ ಸಾಮ್ರಾಜ್ಯವೆಂದು ಭಟ್ಟರು ತಿಳಿದಿದ್ದರು. ಇಂಗ್ಲಿಷ್‍ರ ಎದುರಿಗೆ ಇಡೀ ಜಗತ್ತಿನ ರಾಷ್ಟ್ರಗಳು ಕಸಕ್ಕೆ ಸಮಾನ. ತನ್ನೆದುರಿಗೆ ಭಟ್ಟರು ಮಲಗಿದ್ದ ಜರ್ಮನಿಯು ಎದ್ದು ನಿಂತಿದ್ದನ್ನು ಕಂಡರು. ಅದರ ವಿಶಾಲ ಶರೀರದ ಎದುರುಗಡೆ ಇಂಗ್ಲಿಷ್‍ರು ಕುಬ್ಜರಾಗಿ ಕಾಣಿಸತೊಡಗಿದರು. ಹೆಜ್ಜೆ ಹೆಜ್ಜೆಗೂ ಹಿಟ್ಲರ್ ಅವರಿಗೆ ಒದೆಕೊಡುತ್ತಿದ್ದ. ಇಂಗ್ಲಿಷ್‍ರು ಬಾಲ ಮುದುಡಿಕೊಂಡು ಕುಂಯಿಗುಡುತ್ತಿದ್ದರು. ಭಟ್ಟರಿಗೂ ತನ್ನ ಗುಲಾಮ ದೇಶದ ಚಿಂತೆ ಕಾಡಿತು. ಅವರ ಮೇಲೆ ದೇಶಭಕ್ತಿಯ ಅಮಲೇರಿತು.
ಎರಡನೆಯ ಮಹಾಯುದ್ಧ ಆರಂಭವಾಯಿತು. ಜರ್ಮನಿಯ ವಿಜಯವಾಹಿನಿ ಇಡೀ ಯುರೋಪನ್ನು ತುಳಿದು ಹಾಕಿತು. ಭಟ್ಟರು ಆಗ ಕೇವಲ ಪ್ರೊಫೆಸರ್ ಮಾತ್ರವಲ್ಲ; ಓರ್ವ ಕುಶಲ ಪತ್ರಕರ್ತರೂ ಆಗಿದ್ದರು.
ನೇತಾಜಿ ಕಲ್ಕತ್ತಾದ ತಮ್ಮ ಮನೆಯಿಂದ ಮಾಯವಾದರು. ತಲೆಯನ್ನು ಅಂಗೈಯಲ್ಲಿ ಇಟ್ಟುಕೊಂಡು ಜರ್ಮನಿ ತಲುಪಿದರು. ಹಿಟ್ಲರನು ಇಂಗ್ಲಿಷರ ವಿರುದ್ಧ ಯಾವುದೇ ಅಸ್ತ್ರ ಉಪಯೋಗಿಸಲೂ ತಯಾರಿದ್ದನು. ಅವನು ನೇತಾಜಿಯನ್ನು ಭಾರತದ 'ಪುರೇರ್' (ಸರ್ವೇ ಸರ್ವಾ ನೇತಾರ) ಎಂದು ಸ್ವೀಕರಿಸಿದನು. ಅದಕ್ಕನುಸಾರವಾಗಿಯೇ ಅವರಿಗೆ ಗೌರವಾದರಗಳನ್ನು ನೀಡಲಾಯಿತು. ನೇತಾಜಿ ಬರ್ಲಿನ್‍ನಿಂದ ತಮ್ಮ ವಿಚಾರಗಳನ್ನು ಪ್ರಚಾರ ಮಾಡಲು ಒಂದು ಪತ್ರಿಕೆಯನ್ನು ಹೊರ ತರಲು ಇಚ್ಚಿಸಿದರು. ಅದಕ್ಕೆ ಇಂಗ್ಲಿಷ್ ಹಾಗೂ ಜರ್ಮನಿ ಭಾಷೆಯ ಮೇಲೆ ಪೂರ್ಣ ಪ್ರಭುತ್ವವಿರುವ ಸಂಪಾದಕನೊಬ್ಬನ ಅಗತ್ಯವಿತ್ತು. ಆಗ ಕೊಡವೂರು ಅನಂತರಾಮ ಭಟ್ಟರ ಹೆಸರು ಅವರ ಕಿವಿಗೆ ಬಿತ್ತು. ಅವರನ್ನೇ ಪತ್ರಿಕೆಯ ಮುಖ್ಯ ಸಂಪಾದಕರನ್ನಾಗಿ ಆರಿಸಿಕೊಳ್ಳಲಾಯಿತು. ಅನಂತರಾಮ ಭಟ್ಟರು ಆ ಮೂಲಕ ನೇತಾಜಿಯ ಅತ್ಯಂತ ನಿಕಟವರ್ತಿಗಳಾದರು ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಅವರು 'ಆಜಾದ್ ಹಿಂದ್' ಪತ್ರಿಕೆಯನ್ನು ಅತ್ಯಂತ ಸಮರ್ಪಕವಾಗಿ ಮನ್ನಡೆಸಿದರು. ಬರ್ಲಿನ್‍ನ ವಿಂಟೇನ್ ಬರ್ಗ್ ಪ್ಲಾಜಾ 2-111ರ ವಿಶಾಲ ಕಟ್ಟಡದಲ್ಲಿ ಪ್ರೊಫೆಸರ್ ಹಾಗೂ ಸಂಪಾದಕರಾದ ಕೆ.ಎ. ಭಟ್ಟರ ಕಛೇರಿಯಿತ್ತು.
ನೇತಾಜಿಯವರ ಅಗತ್ಯತೆ ಪೂರ್ವದ ಕಡೆಗೆ ಅತ್ಯವಶ್ಯವಾದ ಕಾಲ ಬಂತು. ಯಾವ ರೀತಿ ಪವಾಡ ಸದೃಶವಾಗಿ ನೇತಾಜಿ ಭಾರತದಿಂದ ಅಂತರ್ಧಾನರಾಗಿ ಬರ್ಲಿನ್‍ಗೆ ಬಂದರೊ ಅದೇ ರೀತಿ ಬರ್ಲಿನ್‍ನಿಂದ ಮಲಯಾ ತಲುಪಿದರು. ಭಟ್ಟರು ಬರ್ಲಿನ್‍ನಲ್ಲಿ ಅವರ ಕೆಲಸವನ್ನು ನಿರ್ವಹಿಸುತ್ತಿದ್ದರು. 30 ಜೂನ್, 1943 ಡಿ ಹೋಫ್ಟ್ ಶಿಫ್ಟಾ ಲಾಯಿಟುಂಗ್ 'ಆಜಾದ್ ಹಿಂದ್' ಬರ್ಲಿನ್ ವ 85 ಅಖಡೆನ್ ಸ್ಟಾನೋಲಿ 2' ಮುಹರು ಹೇಳುವ ಪ್ರಕಾರ ಆ ಕಾಲದಲ್ಲಿ ಭಟ್ಟರು ಓರ್ವ ಗೌರವಾನ್ವಿತ ಸಂಪಾದಕರಾಗಿ ಬರ್ಲಿನ್ನಿನಲ್ಲಿ ಇದ್ದರು.
ಜರ್ಮನಿ ಸಂಪೂರ್ಣವಾಗಿ ಪರಾಜಯ ಹೊಂದುತ್ತದೆಂದು ಯಾರಿಗೆ ತಾನೆ ಗೊತ್ತಿತ್ತು? ಹಿಟ್ಲರ್ ಹುಚ್ಚುನರಿ ಊರಿನೆಡೆಗೆ ಓಡುವಂತೆ ರಷ್ಯಾದ ಕಡೆಗೆ ಧಾವಿಸಿದ. ಅದರ ಪರಿಣಾಮ ಸರ್ವನಾಶ. ಜರ್ಮನಿ ಶಸ್ತ್ರ ಸನ್ಯಾಸ ಮಾಡುವಾಗ ಭಟ್ಟರು ಅಲ್ಲಿಯೇ ಇದ್ದರು. ಅವರು 'ಆಜಾದ್ ಹಿಂದ್' ಮೂಲಕ ಮಿತ್ರರಾಷ್ಟ್ರಗಳ ವಿರುದ್ಧ ಬಹಳಷ್ಟು ಬರೆಯುತ್ತಿದ್ದರು. ಅವರನ್ನು ಮಿತ್ರರಾಷ್ಟ್ರಗಳು ಕ್ಷಮಿಸುವುದು ಸಾಧ್ಯವೇ ಇರಲಿಲ್ಲ. ಈಗ ಭಟ್ಟರು ಹಳೆಯ ಕಾಲದ ಸಂಸ್ಕೃತಪಂಡಿತರಾಗಿರಲಿಲ್ಲ. 17 ವರ್ಷ ಜರ್ಮನಿಯಲ್ಲಿರುತ್ತಾ ರಾಜಕೀಯದ ವರಸೆಗಳನ್ನು, ಪಟ್ಟುಗಳನ್ನು ಚೆನ್ನಾಗಿ ತಿಳಿದಿದ್ದರು. ಯುರೋಪಿಯನ್ ದೇಶಗಳ ಸಂಪೂರ್ಣ ಜ್ಞಾನ ಅವರಿಗಿತ್ತು. ಈಗ ತನ್ನನ್ನು ರಕ್ಷಿಸಿಕೊಳ್ಳಲು ಅವರು ಏನನ್ನಾದರೂ ಮಾಡಲೇ ಬೇಕಿತ್ತು. ಅವರು ಬರ್ಲಿನ್‍ನಿಂದ ಬಹುದೂರ ಇರುವ ಬವೇರಿಯಾ ಪ್ರದೇಶಕ್ಕೆ ಹೋದರು. ಅಲ್ಲಿ ಅವರು ತಮ್ಮನ್ನು ಓರ್ವ ಜಿಪ್ಸಿ (ರೋಮನ್) ಎಂಬುದಾಗಿ ಪರಿಚಯಿಸಿಕೊಂಡು ಓರ್ವ ರೈತನ ಬಳಿ ಕೆಲಸಕ್ಕೆ ಸೇರಿಕೊಂಡರು. ಮನುಷ್ಯ ತನ್ನ ಜ್ಞಾನವನ್ನು ಮುಚ್ಚಿಟ್ಟು ಅಜ್ಞಾನಿಯ ರೂಪವನ್ನು ಧರಿಸಬಲ್ಲ; ಏಕೆಂದರೆ, ಮೊದಲು ಆತ ಅಜ್ಞಾನಿಯಾಗಿದ್ದ. ಆದರೆ ಅಜ್ಞಾನಿಯೋರ್ವ ಜ್ಞಾನಿಯ ವೇಷ ಧರಿಸುವುದು ಸಾಧ್ಯವಿಲ್ಲ. ಆದರೆ, ಧಾರ್ಮಿಕ ಕ್ಷೇತ್ರದಲ್ಲಿ ಇದಕ್ಕೆ ಅಪವಾದ ಖಂಡಿತವಾಗಿಯೂ ಸಿಗುತ್ತದೆ! ಭಟ್ಟರು ಕುಳ್ಳರೂ, ಆರೋಗ್ಯಪೂರ್ಣರೂ ಹಾಗೂ ತೆಳ್ಳಗಿನ ಶರೀರವುಳ್ಳವರೂ ಆಗಿದ್ದರು. ಯುರೋಪಿನವರ ಹೋಲಿಕೆಯಲ್ಲಿ ಅವರ ಬಣ್ಣ ಕಪ್ಪು; ನಮ್ಮ ದೃಷ್ಟಿಯಲ್ಲಿ ಗೋಧಿ ಬಣ್ಣ. ಜಿಪ್ಸಿಗಳು ಹಲವಾರು ಶತಮಾನಗಳಿಗೂ ಮುಂಚೆ ಭಾರತದಿಂದ ಯುರೋಪಿಗೆ ನಡೆದಿದ್ದರು. ಶತಮಾನಗಳ ಪ್ರಭಾವ ಇಷ್ಟಂತೂ ಖಂಡಿತಾಯಿದೆ; ಏನೆಂದರೆ ನಾವು ಭಾರತೀಯರು ಯಾರನ್ನು ಕಪ್ಪೆಂದು ಕರೆಯುತ್ತೇವೋ ಅಂತವರು ಅಲ್ಲಿ ಯಾರೂ ಇಲ್ಲ. ನಮ್ಮಲ್ಲಿಗೆ ಬಂದರೆ ನಾವು ಅವರನ್ನು ಬಿಳಿಯರು ಎನ್ನುತ್ತೇವೆ. ಆದರೆ, ಯುರೋಪಿನವರು ಅವರನ್ನು ಕರಿಯರೆಂದೇ ತಿಳಿಯುತ್ತಾರೆ. ಜಿಪ್ಸಿ ತರುಣಿಯರು ತಮ್ಮ ಸೌಂದರ್ಯಕ್ಕೆ ಅಲ್ಲಿ ಪ್ರಖ್ಯಾತರು; ಆದರೆ, ಅವರ ಕೂದಲು ಮಾತ್ರ ಇದ್ದಲಿನಷ್ಟೇ ಕಪ್ಪು. ಬವೇರಿಯಾದ ಹಳ್ಳಿಯಲ್ಲಿ 36 ವರ್ಷದ ಈ ಯುವಕ ಜಿಪ್ಸಿಯಲ್ಲ; ಬೇರೆ ಯಾವುದೊ ಜಾತಿಯವನೆಂಬುದು ಕನಸಿನಲ್ಲೂ ತಿಳಿದುಬರಲಿಲ್ಲ. ಯಾರಾದರೂ ಇಂಗ್ಲಿಷರು ಮತ್ತು ಅಮೇರಿಕನ್ನರು ತಮ್ಮ ವೈರಿಗೆ ಶರಣು ಕೊಟ್ಟವರೆಂಬುದು ತಿಳಿದರೆ ಅವರ ಕತೆ ಮುಗಿದಂತೆಯೇ.
ಇಲ್ಲಿರುವಾಗ ಯಾವ ಭಟ್ಟರು 'ಮೊಟ್ಟೆ' ತಿನ್ನಲು ಆರಂಭಿಸುವುದಕ್ಕೆ ನಡುಗುತ್ತಿದ್ದರೊ ಅವರು ಇಂದು ಭೋಜನದಲ್ಲಿ ಪಾಗ್ವೈದಿಕ ಪೂರ್ವಜರನ್ನು ಸಂಪೂರ್ಣವಾಗಿ ಅನುಕರಿಸುತ್ತಿದ್ದರು. ಪೀಳಿಗೆ ಪೀಳಿಗೆಗಳಿಂದ ಅವರ ಮಾಧ್ವ ವೈಷ್ಣವ ಪರಿವಾರ ಶರಾಬನ್ನು ನೋಡಿಯೂ ಇರಲಿಕ್ಕಿಲ್ಲ. ಆದರದು ಇಂದು ಭಟ್ಟರ ಸಾಮಾನ್ಯ ಪೇಯ. ತಮ್ಮ ಮಾಲಿಕರೆದಿರು ಅವರು ತಮ್ಮ 'ಸಂಸ್ಕೃತ ವ್ಯಕ್ತಿತ್ವವನ್ನು ಹೇಗೆ ಮುಚ್ಚಿಟ್ಟಿದ್ದರೆಂಬುದು ನಿಜಕ್ಕೂ ಆಶ್ಚರ್ಯದ ಸಂಗತಿ. ಆದರೆ, ಯಾರ ತಲೆಯ ಮೇಲೆ ಮೃತ್ಯುವು ನರ್ತಿಸುತ್ತಿರುತ್ತದೋ ಆತ ಯಾವುದೇ ಅಭಿನಯವನ್ನು ಅರೆಮನಸ್ಸಿನಿಂದ ಮಾಡುವುದಿಲ್ಲ. ಅಂತೆಯೇ ಭಟ್ಟರು 'ಜಿಪ್ಸಿ'ಯ ಅಭಿನಯವನ್ನು ಪರಿಪೂರ್ಣವಾಗಿಯೇ ನಿಭಾಯಿಸಿದರು. ಉಡುಪಿಯಲ್ಲಿ ಅವರು ಕುದುರೆಯನ್ನು ಕಂಡಿರಬಹುದು. ಅದೆಲ್ಲೊ ಬೆರಳಣಿಕೆಯಲ್ಲಿರಬಹುದು; ಅದರ ಬಳಿ ಹೋಗಲೂ ಅವರ ಧೈರ್ಯ ಮಾಡಿರಲಾರರು. ಆದರಿಲ್ಲಿ ರೈತರ ವಿಭಿನ್ನ ತಳಿಯ ದೊಡ್ಡ ದೊಡ್ಡ ಕುದುರೆಗಳಿದ್ದವು. ಅವುಗಳನ್ನು ಕಟ್ಟುವುದು, ಬಿಡುವುದು, ಮೇಯಿಸುವುದು, ನೇಗಿಲಿಗೆ ಕಟ್ಟುವುದು ಎಲ್ಲಾ ಕೆಲಸವನ್ನು ಮಾಡಬೇಕಾಗಿತ್ತು. ಕುದುರೆ ಸವಾರಿ ಪ್ರಾಯಃ ಮೊದಲೇ ಕಲಿತಿರಬೇಕು; ಏಕೆಂದರೆ ಯುದ್ಧಕ್ಕೆ ಅವರು ತಮ್ಮನ್ನು ಅಣಿಗೊಳಿಸಿಕೊಳ್ಳಬೇಕಾಗಿತ್ತು. ಸರಿಸುಮಾರು ನಾಲ್ಕು ವರ್ಷ ಅವರು ಆ-ಈ ಗ್ರಾಮಗಳಲ್ಲಿ ಜಿಪ್ಸಿಯಾಗಿ ಕಳೆದರು. ಕುದುರೆ ಓಡಿಸುವಾಗ ಒಮ್ಮೆ ಬಿದ್ದಿದ್ದರು. ಆಗ ಅವರ ಎದೆಗೆ ಆಘಾತವಾಗಿತ್ತು; ಅನಂತರ ಅವರಿಗೆ ಹೃದ್ರೋಗ ಪೀಡಿಸತೊಡಗಿತು. ಇದನ್ನು ಅವರು ಹೇಗೊ ಅನುಭವಿಸಿಕೊಂಡು, ಸಹಿಸಿಕೊಂಡು ಬರುತ್ತಿದ್ದರೊ ಏನೋ. ಆದರೆ 1947ರ ಆಗಸ್ಟ್ ಮಧ್ಯದಲ್ಲಿ ಇಂಗ್ಲಿಷರು ಭಾರತ ಬಿಟ್ಟು ಹೋದ ಸುದ್ದಿ ಅವರಿಗೆ ತಲುಪಿತು. ಜರ್ಮನಿಯ ರೈತರು ನಮ್ಮ ರೈತರ ಹಾಗೆ ಅನಕ್ಷರಸ್ಥರಲ್ಲ. ಅವರು ಸುಶಿಕ್ಷಿತರೂ, ಸುಸಂಸ್ಕೃತರೂ ಆಗಿದ್ದರು. ಎದೆ ನೋವಿನೊಡನೆ ಅವರಿಗೆ ಇನ್ನೊಂದು ನೋವು ಆರಂಭವಾಯಿತು. ನನ್ನ ಸ್ವತಂತ್ರ ದೇಶಕ್ಕೆ ನಾನು ಹೋಗಲೇ ಬೇಕು. "ಆಜಾದ್ ಹಿಂದ್" ಸಂಪಾದಕನಿಗೆ ಈಗ ನಿದ್ರೆ ಮಾಯವಾಗಿ ಹೋಯಿತು. ಇಲ್ಲಿಂದ ಹೇಗೆ ಹೋಗಲಿ ಎಂಬುದೇ ಅವರ ಯೋಚನೆಯಾಗಿತ್ತು. ನಾಲ್ಕೂ ಕಡೆ ಅಮೆರಿಕಾದ ಸೈನ್ಯ.ಹಳ್ಳಿಯಿಂದ ಹೊರಹೊರಟರೆ ಯಾವನಾದರೂ ಅಮೇರಿಕನ್ ಸೈನಿಕನ ಕೈಗೆ ಸಿಕ್ಕಿ ಬೀಳುತ್ತಾರೆ; ಎಲ್ಲಾದರೂ ಈತ ಜಿಪ್ಸಿ ವೇಷದಲ್ಲಿರುವ ಬೇರೆ ಮನುಷ್ಯ ಎಂದು ತಿಳಿದರೆ ಯಮನ ದವಡೆಯಿಂದ ಆತನನ್ನು ಯಾರೂ ಉಳಿಸಲೊಲ್ಲರು.
ಆದರೆ ಅವರ ಎರಡೂ ಬಗೆಯ ಹೃದಯ ಬೇನೆಗೆ ಔಷಧಿ ಒಂದೇ ಮಾರ್ಗದಲ್ಲಿ ಸಿಗುವ ಸಾಧ್ಯತೆಯಿತ್ತು. ಜರ್ಮನಿಯಲ್ಲಿ ಜನರ ಆರೋಗ್ಯದ ಬಗ್ಗೆ ಗಮನ ಹರಿಸುವವರ್ಯಾರು? ಲಕ್ಷಾಂತರ ಜನ ಯುದ್ಧದಲ್ಲಿ ಸತ್ತಿದ್ದರು; ಸಹಸ್ರಾರು ಜನ ಕಾಯಿಲೆಯಿಂದ ಸತ್ತಿದ್ದರು. ಅವರ ಹೃದಯರೋಗಕ್ಕೆ ಔಷಧಿ ಖಂಡಿತಾ ಅಗತ್ಯವಿತ್ತು. ಬವೇರಿಯಾದ ಗಡಿ ಸ್ವಿಝರ್‍ಲೆಂಡ್‍ಗೆ ಸೇರುತ್ತದೆ. ಅವರು ತಮ್ಮೆರಡೂ ಹೃದಯ ರೋಗಗಳಿಗೆ ಔಷಧಿಗಾಗಿ ಗಡಿಯತ್ತ ಓಡುತ್ತಾ ಗಡಿ ದಾಟಿದರು. ಅಲ್ಲಿ ಸ್ವಿಸ್ ಸಿಪಾಯಿಯೊಬ್ಬ ಅವರನ್ನು ಹಿಡಿದ. ಅವರೆಂದರು – "ನಾನು ಭಾರತೀಯ. ನನ್ನನ್ನು ಭಾರತೀಯ ಧೂತಾವಾಸ ಬಳಿ ಕರೆದೊಯ್ಯಿರಿ". ಆದರೆ ಹಾಗಾಗಲಿಲ್ಲ – ಗಡಿ ದಾಟಿ ಒಳ್ಳೆಯ ಡಾಕ್ಟರ್ ಬಳಿ ಅವರು ಬಂದರು. ಡಾಕ್ಟರ್ ಅವರ ಭಯಾನಕ ರೋಗವನ್ನು ಕಂಡರು. ಡಾಕ್ಟರ್ ಫೀಸ್ ಕೊಡಲು ಅವರ ಬಳಿ ಹಣವೆಲ್ಲಿತ್ತು? ಆದರೆ, ಸಹೃದಯ ಡಾಕ್ಟರ್ ಅವರಿಗೆ ಔಷಧಿ ನೀಡಿದ. ಅವರೊಂದಿಗೆ ಮಾತನಾಡಿದ ಡಾಕ್ಟರ್ ಕೂಡಾ ಅವರಿಂದ ಪ್ರಭಾವಿತರಾದರು. ಭಟ್ಟರು ತಮ್ಮ ಕತೆ ಹೇಳಿದರು – 'ನನ್ನ ದೇಶ ಸ್ವತಂತ್ರವಾಗಿದೆ; ನಾನು ಅಲ್ಲಿಗೆ ಹೋಗಲು ಬಯಸುತ್ತೇನೆ'. ಭಟ್ಟರ ಸೂಚನೆಯನ್ನು ಸ್ವಿಸ್ ಅಧಿಕಾರಿಗಳು ಭಾರತೀಯ ಕೌನ್ಸಿಲ್ ಜನರಲ್‍ಗಳಿಗೆ ಕಳುಹಿಸಿದರು. ಕೌನ್ಸಿಲ್ ಜನರಲ್ ಬಳಿ ಅವರು ತಮ್ಮ ಪರಿಚಯವನ್ನು ಬಹು ಸುಲಭವಾಗಿ ಕೊಡಬಲ್ಲವರಾಗಿದ್ದರು. ಹೀಗೆ, ಅಲ್ಲಿ ಅವರು ಕೆಲವು ದಿನ ಇದ್ದರು.
ಸ್ವಿಝರ್‍ಲೇಂಡಿನಲ್ಲಿ ಅವರಿಗೆ ಎಷ್ಟು ಒಳ್ಳೆಯ ಚಿಕಿತ್ಸೆ ಸಿಕ್ಕಿತ್ತೊ ಅದು ಭಾರತದಲ್ಲಿ ಖಂಡಿತಾ ಸಾಧ್ಯವಿಲ್ಲ ಎಂಬುದು ಅವರಿಗೆ ಹೇಗೆ ತಾನೆ ಗೊತ್ತಿರಲು ಸಾಧ್ಯ? ಸಂಸ್ಕೃತದ ಇಂಥ ದಿಗ್ಗಜ ಪಂಡಿತನಿಗೆ ಸ್ವಿಜರ್‍ಲ್ಯಾಂಡಿನಲ್ಲಿ ಕೆಲಸ ಸಿಕ್ಕುವುದು ಏನೇನೂ ಕಷ್ಟಸಾಧ್ಯವಲ್ಲ. ಆದರೆ, ಅವರು ಸ್ವತಂತ್ರ ಭಾರತದ ಹುಚ್ಚಿನಲ್ಲಿದ್ದರು. ಅವರು ಕೌನ್ಸಿಲ್ ಜನರಲ್ ಅವರೊಡನೆ ಭಾರತಕ್ಕೆ ಕಳುಹಿಸಿಕೊಡಲು ಕೇಳಿಕೊಂಡರು. ಅವರ ಬಳಿ ಕಾಗದ ಪತ್ರ ದಸ್ತಾವೇಜುಗಳಿದ್ದವು. ಲಕ್ಷಗಟ್ಟಲೆ ಮಾರ್ಕ್‍ಗಳು ಜರ್ಮನಿಯ ಬೇಂಕಿನಲ್ಲಿತ್ತು. ಇದನ್ನು ಮಿತ್ರಶಕ್ತಿಗಳ ಮೂಲಕ ಹಿಂದಕ್ಕೆ ಪಡೆದುಕೊಳ್ಳಲು ಅವರಿಗೆ ಅಧಿಕಾರವಿತ್ತು. ಆದರೆ, ಈ ಸಮಯದಲ್ಲಿ ಆ ಮಾರ್ಕ್‍ಗಳು ಬರೇ ಕಾಗದದ ಚೂರುಗಳಾಗಿದ್ದವು. ಕೌನ್ಸಿಲ್ ಜನರಲ್ ಅವರು ಭಾರತ ಸರ್ಕಾರದ ಖರ್ಚಿನಲ್ಲಿ ಅವರನ್ನು ಭಾರತಕ್ಕೆ ಕಳುಹಿಸಿತು.
ಮೊದಲ ವಿಶ್ವಯುದ್ಧದ ಮೊದಲು ದೇಶದಿಂದ ಹೊರಗೆ ಹೋಗಲು ಪಾಸ್‍ಪೋರ್ಟ್ ಅಗತ್ಯವಿರಲಿಲ್ಲ. ನೀವು ಎಲ್ಲಿಗೆ ಬೇಕಾದರೂ ಹೋಗಬಹುದಿತ್ತು. ಯುದ್ಧಾನಂತರ ಆಂಗ್ಲರು ಇಡೀ ಭಾರತವನ್ನು ಜೈಲನ್ನಾಗಿ ಮಾಡಿಬಿಟ್ಟಿದ್ದರು. ಅವರ ಆಜ್ಞೆಯಿಲ್ಲದೆ ಯಾರೂ ಜೈಲಿನಿಂದ ಹೊರಹೋಗುವಂತಿರಲಿಲ್ಲ. ಈ ಆಜ್ಞೆಯ ಹೆಸರೇ ಪಾಸ್‍ಪೋರ್ಟ್. ಇಂಗ್ಲಿಷ್‍ರ ಒಟ್ಟು ಆಡಳಿತ ವ್ಯವಸ್ಥೆಯಲ್ಲಿ ಪಾಸ್‍ಪೋರ್ಟ್ ಸಿಗುವುದು ಕಷ್ಟಸಾಧ್ಯವಾಗಿತ್ತು. ಪೋಲಿಸರಿಂದ ಆತ ತಮ್ಮ ಆಡಳಿತಕ್ಕೆ ವಿರೋಧಿಯೇ ಎಂಬುದನ್ನು ತನಿಖೆ ಮಾಡಿಸಲಾಗುತ್ತಿತ್ತು. ಆಗಸ್ಟ್ 15, 1947ರಂದು ಬ್ರಿಟಿಷರು ಭಾರತ ಬಿಟ್ಟು ಹೋದರು. ಇದರಿಂದ ದೇಶದ ನಾಲ್ಕೂ ಸುತ್ತಲಿನಲ್ಲಿ ಎದ್ದು ನಿಂತಿರುವ ಗೋಡೆಗಳು ಉರುಳಿ ಬೀಳುತ್ತವೆಯೆಂದು ಎಲ್ಲರಿಗೂ ಆಸೆಯಿತ್ತು; ನಂಬಿಕೆಯಿತ್ತು. ಆದರೆ, ಅವು ಉರುಳಿ ಬೀಳುವುದು ಹೋಗಲಿ, ಮತ್ತೆ ನಾಲ್ಕು ಮೀಟರ್ ಎತ್ತರವಾಯಿತು. ಇಂದು, ಪಾಸ್‍ಪೋರ್ಟ್ ಪಡೆಯಲು ಮೊದಲಿನಂತೆಯೇ ಪೋಲೀಸು ತನಿಖೆ ಅತ್ಯವಶ್ಯಕ. ಪೊಲೀಸು ರಿಪೋರ್ಟ್ ಅನುಕೂಲಕರವಾಗಿದ್ದರೂ ಯಾವನಾದರೂ ಪ್ರಾಮಾಣಿಕ ಶ್ರೀಮಂತ ಮನುಷ್ಯನಿಂದ 12 ರೂ. ಕಾಗದದ ಮೇಲೆ ಜಾಮೀನು ಪತ್ರದಲ್ಲಿ ವಿದೇಶದಲ್ಲಿ ಸರಕಾರದ ವತಿಯಿಂದ ಆಗುವ ಖರ್ಚುಗಳಿಗೆ ತಾನು ಜವಾಬುದಾರ ಎಂದು ಒಕ್ಕಣೆ ಬರೆಸಿ ಸಹಿ ಮೊಹರು ಆದ ಹೊರತು ನಿಮಗೆ ಪಾಸ್‍ಪೋರ್ಟ್ ದೊರಕುವುದಿಲ್ಲ. 1948ರ ವಿಚಾರ. ನಾನು ಪಾಸ್‍ಪೋರ್ಟ್‍ಗೆ ಅರ್ಜಿ ಸಲ್ಲಿಸಿದೆ. ಪೊಲೀಸು ಮತ್ತು ಗುಪ್ತಚರ ಇಲಾಖೆ ತನಿಖೆ ನಡೆಸಿತು. ಇಂಗ್ಲಿಷ್‍ರ ಕಾಲದ ನನ್ನ ವಿರುದ್ಧವಿದ್ದ ಎಲ್ಲಾ ಫೈಲ್‍ಗಳೂ ಇದ್ದವು. ಸ್ವತಂತ್ರ ಭಾರತದಲ್ಲೂ ಗುಪ್ತಚರ ಪೊಲೀಸು ಸದಾ ನನ್ನ ಬೆನ್ನ ಹಿಂದಿರುತ್ತಿದ್ದರು. ಪ್ರತಿಯೊಂದು ಕಾಗದವೂ ಅವರ ದೃಷ್ಟಿಗೆ ಬಿದ್ದ ಮೇಲೆಯೇ ನನಗೆ ಸಿಗುತ್ತಿತ್ತು. ಮಸೂರಿಯಲ್ಲಿರುವ ಸೆನ್ಸಾರ್ ಸಾಹೇಬನಿಗೆ ಎರಡೆರಡು ಮೂರು ಮೂರು ದಿನ ನನ್ನ ಕಾಗದ ನೋಡಲು ಪುರುಸೊತ್ತು ಸಿಗುತ್ತಿರಲಿಲ್ಲ. ಆತನ ಕೃಪೆಯಿಂದ ಕೆಲ ಪತ್ರಗಳು ಕಳೆದು ಹೋದರೂ ಆಶ್ಚರ್ಯವಿಲ್ಲ. ಇಂತಹ ಪೊಲೀಸರಿಂದ ಅನುಕೂಲ ವರದಿ ಹೇಗೆ ತಾನೆ ಸಿಗಲು ಸಾಧ್ಯ. ಇನ್ನೊಮ್ಮೆ ಪಾಸ್‍ಪೋರ್ಟ್ ಸಿಗುವ ಭರವಸೆಯ ಮೇರೆಗೆ ಮತ್ತೆ ಅರ್ಜಿ ಗುಜರಾಯಿಸಿದೆ. 12 ರೂಪಾಯಿ ಸ್ಟಾಂಪ್ ಪೇಪರಿನಲ್ಲಿ ಒಕ್ಕಣೆ ಸಹಿ ಮೊಹರು ಕೂಡಾ ಮಾಡಿ ಕಳಿಸಿದೆ. ಕೆಲವು ತಿಂಗಳ ಮೇಲೆ ಪತ್ರ ಬಂತು – "ಜಾಮೀನು ಕೊಟ್ಟ ವ್ಯಕ್ತಿ ನಿಮಗೆ ವಿದೇಶದಲ್ಲಿ ತಗಲುವ ಖರ್ಚಿಗೆ ಜವಾಬ್ದಾರನಾಗುವನೆಂಬುದಕ್ಕೆ ಸಾಕ್ಷಿಯೇನಿದೆ? ಆ ಜವಾಬ್ದಾರಿ ಹೊರಲು ಆತನೊಡನೆ ಅಷ್ಟು ಸಂಪತ್ತು ಇದೆಯೆಂಬುದಕ್ಕೆ ದಾಖಲೆ ಸಲ್ಲಿಸುವುದು" ಸಾಮಾನ್ಯವಾಗಿ ಸರಕಾರಕ್ಕೆ ವಿದೇಶ ಯಾತ್ರೆಯಲ್ಲಿ 'ಅಂತೇಷ್ಟಿ ಕ್ರಿಯೆ'ಯ ಖರ್ಚಿನದ್ದೇ ಪ್ರಧಾನ ಭಯ. ಆರು ತಿಂಗಳು ಕಳೆಯಿತು. ಪಾಸ್‍ಪೋರ್ಟ್ ಸಿಗುತ್ತೊ ಇಲ್ಲವೊ ಎಂಬ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಇದು ಸ್ವತಂತ್ರ ಭಾರತ!
'ಆಜಾದ್ ಹಿಂದ್'ನ ಸುದ್ದಿ ಕೇಳಿ ಭಟ್ಟರ ಕಣ್ಣುಗಳು ಮಿಂಚತೊಡಗಿದವು. 20 ವರ್ಷ ಸಾಕಷ್ಟು ದೀರ್ಘವಾದ ಕಾಲವೆ. ಮಾತೃಭೂಮಿ ತೊರೆಯುವಾಗ ಅವರಿಗೆ 22 ವರ್ಷ. ಈಗ 40 ವರ್ಷ ಪ್ರಾಯ ದಾಟಿದೆ. ದೇಶಕ್ಕೆ ಹಿಂತಿರುಗಲು ಹುಚ್ಚಾಗಿದ್ದರು. ಖರ್ಚು ಹಿಂತಿರುಗಿಸುವ ಪತ್ರಕ್ಕೆ ಸಹಿ ಮಾಡಿ ಸ್ವಿಝರ್‍ಲೇಂಡಿನಿಂದ ಭಾರತಕ್ಕೆ ಬಂದರು.