text stringlengths 0 61.5k |
|---|
ಭಾರತದ ಕೆಲವು ಕಾಲೇಜುಗಳಲ್ಲಿ ಉನ್ನತ ಶಿಕ್ಷಣ ಹೊಂದಲು ಎಂಟರಿಂದ ಹತ್ತು ಲಕ್ಷ ರೂಪಾಯಿಗಳು ಬೇಕಾಗುತ್ತದೆ. ಇದೇ ಹೀಗಾದಲ್ಲಿ, ಇನ್ನು ವಿದೇಶಕ್ಕೆ ಹೋಗಿ ಅಧ್ಯಯನ ಮಾಡುವುದಂತೂ ಕಷ್ಟಸಾಧ್ಯವಾಗಿದೆ. ವಿದೇಶದ ವಿದ್ಯಾಭ್ಯಾಸವಂತೂ ಬಹಳ ತುಟ್ಟಿಯಾಗಿದೆ. ಹೀಗಾಗಿ ಎಷ್ಟೋ ಜನ ವಿದ್ಯಾಪೇಕ್ಷಿಗಳ ಪಾಲಿಗೆ ಶಿಕ್ಷಣವು ಮರೀಚಿಕೆಯಾಗುತ್ತಿದೆ. ಅದೇನೇ ಇರಲಿ, ಶಿಕ್ಷಣವನ್ನು ಹೊಂದಲೇಬೇಕೆಂಬ ಹಂಬಲವಿರುವವರಿಗೆ ಶಿಕ್ಷಣ ಸಾಲಗಳು ಒಂದು ಉತ್ತಮ ಮಾರ್ಗವೇ ಸರಿ. ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಬಯಕೆಯನ್ನು ಪೂರೈಸುವಲ್ಲಿ ಬ್ಯಾಂಕುಗಳು ನೆರವಿಗೆ ಬರುತ್ತಿದೆ. ಆದರೆ ಒಂದು ಬ್ಯಾಂಕಿನ ಬಡ್ಡಿದರಗಳಿಗೂ, ಇನ್ನೊಂದು ಬ್ಯಾಂಕಿನ ಬಡ್ಡಿದರಗಳಿಗೂ ವ್ಯತ್ಯಾಸಗಳಿರುತ್ತವೆ. ಹೀಗಾಗಿ, ಕೆಲವೊಮ್ಮೆ ಉತ್ತಮವಾದ ಆಯ್ಕೆಯನ್ನು ಗುರುತಿಸುವಲ್ಲಿ ಗೊಂದಲ ಮತ್ತು ಕಷ್ಟಗಳು ತಲೆದೋರುತ್ತವೆ. ಶಿಕ್ಷಣ ಸಾಲವನ್ನು ತೆಗೆದುಕೊಳ್ಳುವ ಮೊದಲು ಯಾವಾಗಲೂ ಗಮನದಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳಿವೆ. |
ಉದಾಹರಣೆಗೆ ಎಚ್.ಆರ್.ಡಿ ಸಚಿವಾಲಯವು ಒದಗಿಸಿರುವ ಕೇಂದ್ರ ಸರ್ಕಾರದ ಬಡ್ಡಿ ಸಬ್ಸಿಡಿ ಯೋಜನೆಯು ಆರ್ಥಿಕವಾಗಿ ದುರ್ಬಲರಾಗಿರುವ ವಿದ್ಯಾರ್ಥಿಗಳಿಗಾಗಿ ಅನುದಾನಿತ ದರದಲ್ಲಿ ಶಿಕ್ಷಣ ಸಾಲವನ್ನು ಪಡೆ ಯುವಲ್ಲಿ ಸಹಾಯ ಮಾಡಿ ಕೊಡುತ್ತಿದೆ. ಭಾರತದಲ್ಲಿ ಗುರುತಿಸಲ್ಪಟ್ಟ ವೃತ್ತಿಪರ ಮತ್ತು ತಾಂತ್ರಿಕ ವಿಶ್ವವಿದ್ಯಾಲಯಗಳಿಗೆ ಮತ್ತು ಕೋರ್ಸ್ ಅನ್ನು ಪೂರ್ಣ ಗೊಳಿಸಿದ ವಿದ್ಯಾ ರ್ಥಿಗಳಿಗೆ ಮಾತ್ರ ಈ ಸಬ್ಸಿಡಿ ಲಭ್ಯವಿದೆ. ವಿದ್ಯಾರ್ಥಿಗಳು ತಮ್ಮ ನಾನಾ ರೀತಿಯ ಕೋರ್ಸ್ ಗಳಿಗೆ ವಿಭಿನ್ನ ಬ್ಯಾಂಕುಗಳಿಂದ ಶಿಕ್ಷಣ ಸಾಲಗಳನ್ನು ಪಡೆಯಬಹುದಾಗಿದೆ. ಯಾವ ಶಿಕ್ಷಣ ಸಾಲ ಉತ್ತಮ ಎನ್ನುವುದಕ್ಕಿಂತ ನಮಗೆ ಮತ್ತು ನಮ್ಮ ಕೋರ್ಸ್ ಗಳಿಗೆ ಅನು ಗುಣವಾದ ಶಿಕ್ಷಣ ಸಾಲ ಯಾವುದು ಎಂದು ತಿಳಿದುಕೊಂಡು ಮುಂದಕ್ಕೆ ಹೆಜ್ಜೆ ಹಾಕುವುದೇ ಸಮಂಜಸವಾಗಿದೆ. ಶಿಕ್ಷಣ ಸಾಲವನ್ನು ಪಡೆದು ಕೊಳ್ಳುವ ಮೊದಲು ನಿಮಗೆ ಸಹಾಯವಾಗುವಂತಹ ಸಲಹೆಗಳು ನಿಮಗಾಗಿ ಇಲ್ಲಿವೆ ನೋಡಿ… |
ನಿಮ್ಮ ಕೋರ್ಸ್‌ಗೆ ಸಾಲ ಲಭ್ಯವಿದೆಯೇ? |
ನೀವು ಕೋರ್ಸ್ ಮತ್ತು ಕಾಲೇಜ್ ನಿರ್ಧರಿ ಸುವುದಕಿಂತ ಮೊದಲು ಅದಕ್ಕೆ ಶಿಕ್ಷಣ ಸಾಲ ದೊರೆಯುವುದೇ ಎಂದು ಮೊದಲು ಖಚಿತ ಪಡಿಸಿ ಕೊಳ್ಳಿ. ನಿಮಗೆ ಆ ಸಾಲ ದೊರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದು ಖಾತ್ರಿಯಾದ ನಂತರ ಮಾತ್ರ ಮುಂದುವರೆಯಿರಿ. ಅದಕ್ಕೆ ಬೇಕಾದ ಕಾಗದ ಪತ್ರಗಳನ್ನು ಸಿದ್ಧಪಡಿಸಿಕೊಳ್ಳಿ. ಆಗ ಕಾರ್ಯವಿಧಾನಗಳಲ್ಲಿ ನಿಮಗೆ ಯಾವುದೇ ಅಡೆತಡೆಗಳು ಉಂಟಾಗುವುದಿಲ್ಲ. ಅಷ್ಟೇ ಅಲ್ಲದೆ, ಕಾರ್ಯ ಗತಿಯು ಶೀಘ್ರ ಮತ್ತು ಸಲೀಸಾಗಿರುತ್ತದೆ. ದಾಖಲೆಗಳು ಸಂಪೂರ್ಣ ಮತ್ತು ಸೂಕ್ತವಾಗಿದ್ದಲ್ಲಿ ಸಾಲಗಾರನ ವಿಶ್ವಾಸಾರ್ಹತೆಯೂ ಹೆಚ್ಚಾಗುತ್ತದೆ ಹಾಗೂ ಸಾಲವು ಬಹುಬೇಗ ಅಂಗೀಕೃತವಾಗುತ್ತದೆ. |
ಡೌನ್ ಪೇಮೆಂಟ್ ಶಿಕ್ಷಣ ಸಾಲವನ್ನು ತೆಗೆದುಕೊಳ್ಳುವ ಮುನ್ನ… |
ನಿಮಗೆ ಡೌನ್ ಪೇಮೆಂಟ್ ಮಾಡಲು ಸಾಕಷ್ಟು ಹಣವಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ನೀವು 4 ಲಕ್ಷದೊಳಗೆ ಸಾಲವನ್ನು ತೆಗೆದುಕೊಂಡರೆ ಡೌನ್ ಪೇಮೆಂಟ್ ಮಾಡುವ ಅವಶ್ಯಕತೆಯಿಲ್ಲ. ನೀವೇನಾದರೂ 4 ಲಕ್ಷಕ್ಕೂ ಮೇಲ್ಪಟ್ಟು ಸಾಲವನ್ನು ತೆಗೆದುಕೊಳ್ಳುತ್ತಿರುವ ಪಕ್ಷದಲ್ಲಿ ಆ ಮೊತ್ತದ 5 % ಹಣವನ್ನು ಮುಂಗಡವಾಗಿಯೇ ಕಟ್ಟಬೇಕಾಗುತ್ತದೆ. ಅದೇನಾದರೂ ಅಂತರಾಷ್ಟ್ರೀಯ ಅಧ್ಯಯನದ ಸಾಲವಾದಲ್ಲಿ ಡೌನ್ ಪೇಮೆಂಟ್ 15% ಮಾಡ ಬೇಕಾಗುತ್ತದೆ. ಕೆಲವು ಬ್ಯಾಂಕುಗಳು ಡೌನ್ ಪೇಮೆಂಟ್ ಅನ್ನು ಕಂತುಗಳಲ್ಲಿ ಪಾವತಿಸಲು ಕೂಡ ಅವಕಾಶ ನೀಡಿದೆ. ಆದುದರಿಂದ ನಿಮಗೆ ಸೂಕ್ತವಾದದ್ದು ಏನು ಎಂಬುದನ್ನು ಖಚಿತ ಪಡಿಸಿಕೊಳ್ಳಿ. |
ನಿಮ್ಮ ಮಿತಿಗಳನ್ನು ತಿಳಿದುಕೊಳ್ಳಿ … |
ಶಿಕ್ಷಣ ಸಾಲವನ್ನು ತೆಗೆದುಕೊಳ್ಳುವಾಗ ನೀವು ಗರಿಷ್ಠ ಮಿತಿಯ ಸಾಲವನ್ನು ತೆಗೆದುಕೊಳ್ಳಬಹುದು. ಒಂದು ವೇಳೆ ನಿಮ್ಮ ಅಧ್ಯಯನವು ಕಡಿಮೆ ಮೊತ್ತದಲ್ಲೇ ಪೂರ್ಣಗೊಳ್ಳುವ ಸಾಧ್ಯತೆಗಳಿದ್ದರೆ, ಯಾವಾಗಲೂ ಕನಿಷ್ಠ ಮೊತ್ತ ಎಷ್ಟು ಬೇಕೋ ಅಷ್ಟು ಮಾತ್ರ ಸಾಲ ತೆಗೆದುಕೊಳ್ಳುವುದು ಉತ್ತಮ. ಇದರಿಂದ ಸಾಲವನ್ನು ನೀವು ಬೇಗ ಮರುಪಾವತಿಸಲು ಸಹಾಯವಾಗುತ್ತದೆ. ಅದಷ್ಟೇ ಅಲ್ಲದೆ ಭವಿಷ್ಯದಲ್ಲಿ ನೀವು ಸಂಪಾದಿಸುವ ಹಣವನ್ನು ಉಳಿತಾಯ ಮಾಡಿಟ್ಟುಕೊಳ್ಳಲೂ ನಿಮಗಿದು ಸಹಕರಿಸುತ್ತದೆ. |
ಭಾರತೀಯ ಮತ್ತು ಅಂತರಾಷ್ಟ್ರೀಯ ಶಿಕ್ಷಣದ ನಡುವಿನ ವ್ಯತ್ಯಾಸ ಅರಿಯಿರಿ… |
ಭಾರತೀಯ ಮತ್ತು ಅಂತರಾಷ್ಟ್ರೀಯ ಅಧ್ಯಯ ನವೆರಡಕ್ಕೂ ಬ್ಯಾಂಕುಗಳು ಶಿಕ್ಷಣ ಸಾಲವನ್ನು ನೀಡುತ್ತವೆ. |
Previous articleಕುರುಬರಿಗೆ ಸಚಿವ ಸ್ಥಾನ ನೀಡದೆ ಅನ್ಯಾಯ : ಕಾಂಗ್ರೆಸ್‍ಗೆ ರಾಜಿನಾಮೆ ನೀಡಿ ಹೊರಬರಲು ಹಾಲುಮತ ಮಹಾಸಭಾ ಒತ್ತಾಯ |
ಎಲ್ಲರಿಗೂ ಯುಗಾದಿಯ ಶುಭಾಶಯಗಳು... |
ಹಲವು ಭಾಷೆ, ಹಲವು ಜನ, ಎಲ್ಲರಿಗೂ ಒಂದೇ ಯುಗಾದಿ - ಸನಾತನ ನವ ವರ್ಷ! |
ಸಾಜೀಬು ನೋಂಗ್ಮಾ ಪಾಂಬಾ ಅಥವಾ ಸಾಜೀಬು ಚೈರಾಓಬಾ ಅಂದರೆ ಮಂಡ್ಯದ ರೈತನಿಗೋ, ಬೆಳಗಾವಿಯ ವರ್ತಕನಿಗೋ, ಅರ್ಥವಾಗುವುದಿಲ್ಲ. ಛೇತೀ ಚಾಂದ್ ಅಂದರೂ ಕರ್ನಾಟಕದ ಕರಾವಳಿ ಭಾಗದವರಿಗೆ ಅದರರ್ಥ ಗೊತ್ತಿರುವುದಿಲ್ಲ..! ಗುಡಿ ಪಾಡ್ವಾ ಅಂದ್ರೆ ಆಂಧ್ರದವರಿಗೆ ಗೊತ್ತಿರುವುದಿಲ್ಲ. ತಪನಾ ಅನ್ನೋ ಶಬ್ದ ಕೂಡಾ ನಮಗೆ ಹೊಸತು. ಇನ್ನು ನ್ಯೇಪಿ ಅನ್ನೋದರ ಅರ್ಥವನ್ನು ನಾವು ಶಬ್ದಕೋಶದಲ್ಲಿ ಹುಡುಕಬೇಕು...! |
ಭಾರತವೆಂಬ ಈ ದೇಶ ಒಂದು ಇತಿಮಿತಿಯೊಳಗೆ ಹಿಡಿದಿಡಲಾಗದ, ಹಲವು ಬಣ್ಣ ಬೆಡಗುಗಳ ಅದಮ್ಯ ತಾಣ ಎಂಬುದನ್ನು ಅರ್ಥ ಮಾಡಿಕೊಳ್ಳಲು ಈ ಕೆಲ ಉದಾಹರಣೆಗಳು ಸಾಕು. ಜಗತ್ತಿನ ಹಲವಾರು ಜನಾಂಗಗಳು, ಪಂಗಡಗಳು, ಪ್ರದೇಶಗಳು, ದಿನಗಳು, ತಿಂಗಳುಗಳು, ವರ್ಷಗಳನ್ನು ಲೆಕ್ಕ ಹಾಕಲು ಎರಡು ರೀತಿಯ ಲೆಕ್ಕಾಚಾರ ಮಾಡುತ್ತವೆ. ಒಂದು ಸೂರ್ಯನ ಚಲನೆಯ ಲೆಕ್ಕಾಚಾರ, ಮತ್ತು ಚಂದ್ರನ ಚಲನೆಯ ಲೆಕ್ಕಾಚಾರ. ಚಂದ್ರನ ಮತ್ತು ಸೂರ್ಯನ ಚಲನೆಗಳನ್ನು ಮೇಳೈಯಿಸಿದ ಲೆಕ್ಕಾಚಾರಗಳೂ ಇವೆ. ದಿನ ತಿಂಗಳುಗಳ ಲೆಕ್ಕಾಚಾರ ಹಾಕಿದ ಮೇಲೆ ವರ್ಷ ಮತ್ತು ಅದರ ಮೊದಲ ದಿನದ ಲೆಕ್ಕಾಚಾರವೂ ಸಹಜವೇ. ಹಾಗಾಗಿ ಹೊಸವರ್ಷದ ಮೊದಲ ದಿನವನ್ನು ಸಡಗರದಿಂದ ಬರಮಾಡಿಕೊಳ್ಳುವ ಹಬ್ಬದ ಆಚರಣೆ ಅನಾದಿ ಕಾಲದಿಂದಲೂ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ರೂಢಿಯಲ್ಲಿದೆ. |
ಚಾಂದ್ರಮಾನ ಹೊಸವರ್ಷದ ಮೊದಲ ದಿನ (ಚೈತ್ರ ಶುಧ್ದ ಪಾಡ್ಯಮಿ) ಅಂದರೆ ಚೈತ್ರ ಮಾಸದ ಮೊದಲ ದಿನವೇ ಸಾಜೀಬು ನೋಂಗ್ಮಾ ಪಾಂಬಾ ಎಂಬ ಹಬ್ಬವನ್ನು ಮಣಿಪುರ ರಾಜ್ಯದ ನಮ್ಮ ಸಹೋದರರು ಆಚರಿಸುತ್ತಾರೆ.. ಸ್ವಾತಂತ್ರ್ಯ ದೊರಕಿದಾಗ ಭಾರತ ಮತ್ತು ಪಾಕಿಸ್ತಾನಗಳಲ್ಲಿ ಹರಿದು ಹಂಚಿ ಹೋಗಿರುವ ಸಿಂಧೀ ಜನಾಂಗ ಛೇತೀ ಚಾಂದ್ ಹಬ್ಬವನ್ನು ಅದೇ ದಿನ ಆಚರಿಸುತ್ತಾರೆ. ಇನ್ನು ದೇಶದ ಮುಕುಟ ಮಣಿಯಂತಿರುವ ಕಾಶ್ಮೀರದ ಪಂಡಿತರು ಇದೆ ದಿನವನ್ನು ನವರೇಹ್ ಅಂತ ಆಚರಿಸುತ್ತಾರೆ. ರಾಜಸ್ಥಾನದ ಮಂದಿ ತಪನಾ ಅನ್ನೋ ಹೆಸರಿನ ಹಬ್ಬವನ್ನೂ ಅದೇ ದಿನ ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಇನ್ನು ಮರಾಠರೊ ಗುಡಿ ಪಾಡ್ವಾ ಎಂಬ ಹಬ್ಬವನ್ನು ವೈಭವದಿಂದ ಆಚರಿಸುತ್ತಾರೆ. ನಮಗೆ ಅಂದರೆ ಕರ್ನಾಟಕದ ಕನ್ನಡಿಗರಿಗೆ, ಆಂಧ್ರ, ತೆಲಂಗಾಣದ ತೆಲುಗರಿಗೆ ಇದು ಅಚ್ಚುಮೆಚ್ಚಿನ ಯುಗಾದಿ.! |
ಕರ್ನಾಟಕದವರು ನಾವು ಬೇವುಬೆಲ್ಲ ತಿಂದು ಇತರರಿಗೂ ತಿನಿಸಿ ಸಿಹಿ ಕಹಿಗಳೆರಡನ್ನೂ ಸಮನಾಗಿ ಸ್ವೀಕರಿಸುತ್ತೇವೆ ಎಂಬ ದೊಡ್ಡ ತತ್ತ್ವವನ್ನು ಕೃತಿಯಲ್ಲಿ ಮಾಡಿತೋರಿಸುತ್ತೇವೆ.. ಆಂಧ್ರದ ತೆಲುಗರೂ ನಮ್ಮಂತೆಯೇ ಷಡ್ರುಚಿಲು ಎಂಬ ಹೆಸರಿನಲ್ಲಿ ಆರು ರುಚಿಗಳನ್ನು ಸೇರಿಸಿ ಅಂದರೆ ಬೇವು, ಬೆಲ್ಲದ ಜೊತೆಗೆ ಹಸಿ ಮೆಣಸು, ಉಪ್ಪು, ಹುಣಸೆ ಹಣ್ಣು ಮತ್ತು ಮಾವಿನಕಾಯಿ ಸೇರಿಸಿ ಯುಗಾದಿ ಪಚಡಿಯನ್ನು ಮಾಡಿ ಹಂಚುತ್ತಾರೆ. ನಮ್ಮಲ್ಲೂ ಈ ರೀತಿಯ ಸಂಪ್ರದಾಯ ಕೆಲವೊಂದು ಭಾಗದಲ್ಲಿ ಇದೆ. ಮರಾಠರು ಪೂರಣ್ ಪೋಳಿ ಮಾಡಿದರೆ, ಕನ್ನಡಿಗರು ಒಬ್ಬಟ್ಟು ಮಾಡುತ್ತಾರೆ, ಅದೇ ಆಂಧ್ರದ ಮಂದಿ ಬೊಬ್ಬಟ್ಲು ಅಂತ ಹೆಸರಿರುವ ಸಿಹಿತಿಂಡಿ ಮಾಡುತ್ತಾರೆ.. ಎಲ್ಲವೂ ಹೋಳಿಗೆಗಳೇ !! ಕಾಶ್ಮೀರದ ಪಂಡಿತರಾಗಲೀ, ಪಾಕಿಸ್ತಾನ, ಭಾರತದಲ್ಲಿರುವ ಸಿಂಧೀ ಜನಾಂಗದವರಾಗಲೀ, ರಾಜಸ್ಥಾನದ ಜನ, ಮಣಿಪುರದ ಮಂದಿ ಎಲ್ಲರೂ ಬೇರೆ ಬೇರೆ ಹೆಸರಿನಲ್ಲಿ ಆಚರಿಸುವುದು ಒಂದೇ ಹಬ್ಬವನ್ನೇ.. ಅದನ್ನೇ ನಾವು ಯುಗಾದಿ ಅಂತನ್ನೋ ಹೆಸರಿನಿಂದ ಕರೀತೇವೆ. ಹಳೆಯ ವರ್ಷ ಕಳೆದು ಹೊಸ ವರ್ಷದ ಹೊಸ್ತಿಲಲ್ಲಿ ನಿಂತಿರುವ ನಾವು ಹೊಸವರ್ಷವನ್ನು ಹೊಸ ಯುಗದ ಪ್ರಾರಂಭ ಎಂಬ ರೀತಿಯಲ್ಲಿ ಪರಿಭಾವಿಸಿ ಸಂಭ್ರಮ ಪಡುತ್ತೇವೆ. |
ನಮ್ಮ ಹೆಮ್ಮೆಯ ದೇಶದ, ನಮ್ಮ ಹೆಮ್ಮೆಯ ಸಂಸ್ಕೃತಿಯ ವೈಶಿಷ್ಟ್ಯವೇ ಅದು. ಆಚಾರ, ವಿಚಾರ, ಆಹಾರ, ಉಡುಗೆ, ತೊಡುಗೆ, ಮಾತು, ಲಿಪಿ, ಯಾವುದರ ವ್ಯತ್ಯಾಸವಿದ್ದರೂ ನಮ್ಮೆಲ್ಲರನ್ನೂ ಒಂದು ಶ್ರೇಷ್ಠ ಸಂಸ್ಕೃತಿ ಅನೂಹ್ಯವಾಗಿ ಬಂಧಿಸಿರುತ್ತದೆ. ಅಂದ ಹಾಗೆ ಇಂಡೋನೇಷ್ಯಾದ ಬಾಲಿ ದ್ವೀಪದಲ್ಲೂ ಯುಗಾದಿಯ ಸಂಭ್ರಮಾಚರಣೆಯಿದೆ... ಬಾಲಿನೀಯರು ಅದನ್ನು ನ್ಯೇಪಿ ಅಂತನ್ನೋ ಹೆಸರಿನಿಂದ ಕರೆಯುತ್ತಾರೆ. |
ಇದೆ ಸನಾತನ ಧರ್ಮದ ಮೂಲ ತತ್ವವು ಆಗಿದೆ!! |
ಹೀಗಾಗಿ ಹಲವು ಭಾಷೆ, ಹಲವು ಜನ, ಎಲ್ಲರಿಗೂ ಒಂದೇ ಯುಗಾದಿ! ಮತ್ತು ಎಲ್ಲರಿಗೂ ಯುಗಾದಿಯ ಶುಭಾಶಯಗಳು... ಈ ಹೇಮಲಂಬಿ ಸಂವತ್ಸರ ನಿಮಗೆ ಬೇವಿನ ಕಹಿಗಿಂತ ಬೆಲ್ಲದ ಸಿಹಿಯನ್ನೇ ಹೆಚ್ಚು ತರಲೆಂದು ಆಶಿಸುತ್ತೇನೆ... |
ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ ಅಪಘಾತದಲ್ಲಿ ಅಕಾಲಿಕ ಮರಣ, ಗಣ್ಯರ ಸಂತಾಪ – EESANJE / ಈ ಸಂಜೆ |
May 28, 2018 May 28, 2018 Sri Raghav #SidduBNyamagouda #SidduNyamagouda #MLA #Jamakhandi #MLA #Dead #ಸಿದ್ದುನ್ಯಾಮಗೌಡ |
ಬೆಂಗಳೂರು, ಮೇ 28- ಇಂದು ಬೆಳಗಿನ ಜಾವ 4.30ರ ಸುಮಾರಿನಲ್ಲಿ ಬಾಗಲಕೋಟೆ ಜಿಲ್ಲೆ ತುಳಸಿಗೆರೆ ಸಮೀಪ ಕಾರಿನ ಟಯರ್ ಬ್ಲಾಸ್ಟ್ ಆಗಿ ಸಂಭವಿಸಿದ ಅಪಘಾತದಲ್ಲಿ ಜಮಖಂಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ (70) ಸಾವನ್ನಪ್ಪಿದ್ದಾರೆ. ದೆಹಲಿಯ ನಿಜಾಮುದ್ದೀನ್ ದರ್ಗಾದ ದರ್ಶನ ಪಡೆದು ಹಿಂದಿರುಗಿದ ಶಾಸಕ ಸಿದ್ದು ನ್ಯಾಮೇಗೌಡ ಏರೋಪ್ಲೇನ್ ಮೂಲಕ ಗೋವಾಕ್ಕೆ ಬಂದು ಗೋವಾದಿಂದ ತಮ್ಮ ಕ್ಷೇತ್ರಕ್ಕೆ ಕಾರಿನಲ್ಲಿ ಮರಳುವಾಗ ಬೆಳಗಿನ 4.30ರ ಸುಮಾರಿಗೆ ತುಳಸಿಗೆರೆ ಹತ್ತಿರ ಕಾರು ಬ್ಲಾಸ್ಟ್ ಆಗಿರುವ ಪರಿಣಾಮವಾಗಿ ಎದುರಿಗೆ ಬರುವ ಲಾರಿಯನ್ನು ತಪ್ಪಿಸಲು ಹೋಗಿ ರಸ್ತೆ ಪಕ್ಕದ ಕಂಬಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡರು. |
ಕೂಡಲೇ ಅವರನ್ನು ಸ್ಥಳೀಯ ಕೆರೋಡಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಯಿತಾದರೂ ಹೃದಯ ಭಾಗಕ್ಕೆ ಹೆಚ್ಚಿನ ಪೆಟ್ಟು ಬಿದ್ದಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇವರೊಂದಿಗಿದ್ದ ಸಹ ಪ್ರಯಾಣಿಕರಾದ ಜಮಖಂಡಿಯ ಮೌಲಾನಾ ರಜ್ವಿ (54), ಬಾಗಲಕೋಟೆಯ ಅಬ್ದುಲ್ಲಾ ರಶೀದ್ (73), ಸಾಲಾರ, ಚಾಲಕ ಪರಮಾನಂದ ಅಂಬಿ (27), ಅನ್ವರ್ ಮೋಮಿನ್ (49) ಇವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. |
ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಿದ್ದು ನ್ಯಾಮಗೌಡ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬ ವರ್ಗದಲ್ಲಿ ಶೋಕ ಮುಗಿಲುಮುಟ್ಟಿತ್ತು. ಅವರ ನಿವಾಸದತ್ತ ಎಲ್ಲೆಡೆಯಿಂದ ಕಾರ್ಯಕರ್ತರು, ಅಭಿಮಾನಿಗಳು ದಾವಿಸಿದರು. ಬಾಗಲಕೋಟೆ ಜಿಲ್ಲೆ , ಜಮಖಂಡಿ ತಾಲೂಕು ಕ್ರೀಡಾಂಗಣದಲ್ಲಿ ಸಿದ್ದು ನ್ಯಾಮಗೌಡ ಅವರ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಜಮಖಂಡಿಯ ನಾಗನೂರಿನಲ್ಲಿರುವ ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಾಳೆ ಬೆಳಗ್ಗೆ 10 ಗಂಟೆಗೆ ವೀರಶೈವ ವಿಧಿ-ವಿಧಾನದ ಪ್ರಕಾರ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. |
ಭಾವಪೂರ್ಣ ಶ್ರದ್ಧಾಂಜಲಿ: |
ಸಿದ್ದು ನ್ಯಾಮಗೌಡ ಅವರ ನಿಧನಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ , ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವೇಣುಗೋಪಾಲ್, ಮಲ್ಲಿಕಾರ್ಜುನ ಖರ್ಗೆ, ರಾಮಲಿಂಗಾರೆಡ್ಡಿ, ಡಿ.ಕೆ.ಶಿವಕುಮಾರ್, ಎಸ್.ಆರ್.ಪಾಟೀಲ್, ದಿನೇಶ್ ಗುಂಡೂರಾವ್, ಸೇರಿದಂತೆ ಅನೇಕ ಗಣ್ಯರು ತೀವ್ರ ಶೋಕ ವ್ಯಕ್ತಪಡಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿದರು. |
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಬಾಗಲಕೋಟೆ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗೆ ತೆರಳಿ ಸಿದ್ದು ನ್ಯಾಮಗೌಡರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಶಾಸಕ ವೀರಣ್ಣ ಸಿ.ಚರಂತಿಮಠ್, ಮುರುಗೇಶ್ ನಿರಾಣಿ, ಟಿ.ಎಚ್.ಪೂಜಾರ್, ಹೂವಪ್ಪ ರಾಥೋಡ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಪಿ.ಸೌದಾಗಾರ್, ಮಾಜಿ ಶಾಸಕ ಜಿ.ಟಿ.ಪಾಟೀಲ್, ಕಾಂಗ್ರೆಸ್ ಮುಖಂಡ ಸಿದ್ದಪ್ಪ ಚಡ್ಡಿ ಮುಂತಾದವರು ಅಂತಿಮ ನಮನ ಸಲ್ಲಿಸಿದರು. |
ಬಂದ್ ಕರೆ ವಾಪಸ್: |
ಬಾಗಲಕೋಟೆಯಲ್ಲಿ ಬಿಜೆಪಿ ಕರೆ ನೀಡಿದ್ದ ಬಂದ್‍ಅನ್ನು ಸಿದ್ದು ನ್ಯಾಮಗೌಡ ಅವರ ನಿಧನದ ಪ್ರಯುಕ್ತ ಹಿಂಪಡೆದಿರುವುದಾಗಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದು ಸವದಿ ತಿಳಿಸಿದ್ದಾರೆ. |
ಹಸಿ ಈರುಳ್ಳಿ ದೂರ ಉಳಿಯಬೇಡಿ, ಯಾಕೆಂದರೆ ಈ ವಿಷಯ ತಿಳಿದ್ರೆ ಓಪನ್ ಚಾಲೆಂಜ್ ಮಾಡ್ತೇವೆ ಇಂದೇ ತಿನ್ನೋಕೆ ಶುರು ಮಾಡ್ತೀರಾ - ಕರುನಾಡ ವಾಣಿ |
ನಮಸ್ಕಾರ ಸ್ನೇಹಿತರೇ ಹಸಿ ಈರುಳ್ಳಿ ಸ್ವಲ್ಪ ವಾಸನೆ ಬರತ್ತೆ ಅಂತ ತಿನ್ನೋದನ್ನ ಬಿಟ್ಟಿದ್ದೀರಾ !? ಹಾಗಾದರೆ ನೀವು ಬಹುದೊಡ್ಡ ಪ್ರಯೋಜನದಿಂದ ವಂಚಿತರಾಗಿದ್ದೀರಿ ಎಂದೇ ಅರ್ಥ. ಯಾಕೆ ಅಂತೀರಾ! ಹಸಿ ಈರುಳ್ಳಿಯಲ್ಲಿ ಸಾಕಷ್ಟು ಆರೋಗ್ಯಕರ ಪ್ರಯೋಜನಗಳಿವೆ. ಹಸಿ ಈರುಳ್ಳಿಯನ್ನು ಊಟದ ಸಮಯದಲ್ಲಿ ತಿನ್ನಬಹುದು ಅಥವಾ ಸಲಾಡ್ ಗಳ ರೂಪದಲ್ಲಿಯೂ ತಿನ್ನಬಹುದು. ಇದರಿಂದ ಇದರ ವಾಸನೆ ಅಷ್ಟು ಅಸಹನೀಯ ಎನಿಸುವುದಿಲ್ಲ. |
ಹಸಿ ಈರುಳ್ಳಿ ತಿನ್ನುವುದು ಎಲ್ಲರಿಗೂ ಅಷ್ಟು ಇಷ್ಟವಲ್ಲ, ಆದರೆ ಕೆಲವರಿಗೆ ತುಂಬಾನೇ ಇಷ್ಟ. ಈರುಳ್ಳಿಯಲ್ಲಿ ಕ್ಯಾಲ್ಸಿಯಂ, ಸೋಡಿಯಂ, ಫೋಲೆಟ್ಸ್, ವಿಟಮಿನ್ ಗಳು, ಮೆಗ್ನೀಷಿಯಂ ಮೊದಲಾದ ಪೋಷಕಾಂಶಗಳು ಹೇರಳವಾಗಿವೆ. ಈರುಳ್ಳಿಯಲ್ಲಿರುವ ಫ್ಲೇವನಾಯ್ಡ್‌ಗಳು ಮತ್ತು ಥಿಯೋಸಲ್ಫಿನೇಟ್‌ಗಳಿಂದಾಗಿ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ. ರಕ್ತದ ಹರಿವು ಸುಲಭವಾಗುತ್ತದೆ. ಹಾಗಾಗಿ ಯಾವುದೇ ಹೃದ್ರೋಗ ಅಥವಾ ಪಾರ್ಶ್ವವಾಯು ಸಮಸ್ಯೆ ನಮ್ಮನ್ನು ಕಾಡುವುದಿಲ್ಲ. |
ಈರುಳ್ಳಿಯಲ್ಲಿ 25.3ಮಿಗ್ರಾಂ ಕ್ಯಾಲ್ಸಿಯಂ ಇದ್ದು, ಮೂಳೆಗಳ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಹಾಗಾಗಿ ಹಸಿ ಈರುಳ್ಳಿಯನ್ನು ಸಲಾಡ್ ನಲ್ಲಿ ಸೇರಿಸಿ ಸೇವಿಸಿ. ಈರುಳ್ಳಿ ಕ್ಯಾನ್ಸರ್ ವಿರೋದಿಯೂ ಹೌದು ಎಂದು ಸಂಶೋಧನೆಗಳು ಹೇಳುತ್ತವೆ. ಜರ್ನಲ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಈರುಳ್ಳಿ ಸ್ನಾಯುಗಳ ಸೆಳೆತವನ್ನು ಕೂಡ ನಿವಾರಿಸುತ್ತದೆ. ಅಸ್ತಮಾ ರೋಗಿಗಳ ಉಸಿರಾಟಕ್ಕೆ ಸಹಾಯವಾಗುತ್ತದೆ ಹಸಿ ಈರುಳ್ಳಿ. ಇನ್ನು ಈರುಳ್ಳಿ ಅಲರ್ಜಿ ನಿವಾರಕವಾಗಿಯೂ ಕೂಡ ಸಹಾಯಕವಾಗಿದೆ. ಹಸಿ ಈರುಳ್ಳಿ ದೇಹದ ಒಳಭಾಗದ ಆರೋಗ್ಯವನ್ನು ಮಾತ್ರದಲ್ಲ ದೇಹದ ತ್ವಚೆಯ ರಕ್ಷಣೆಗೂ ಕೂಡ ಸಹಾಯಕವಾಗುತ್ತದೆ. ಕೂದಲಿಗೂ ಕೂಡ ಹಸಿ ಈರುಳ್ಳಿ ರಸ ಹಚ್ಚುವುದರಿಂದ ಸಮೃದ್ಧವಾದ ಕೂದಲು ನಿಮ್ಮದಾಗಬಹುದು. ಮೊಡವೆಗಳ ಕಲೆಗಳನ್ನು ತೆಗೆಯಲೂ ಕೂಡ ಈರುಳ್ಳಿ ಪ್ರಭಾವಶಾಲಿಯಾಗಿ ಕೆಲಸ ಮಾಡುತ್ತದೆ. |
ಕಲಶ | Oppanna : ಒಪ್ಪಣ್ಣನ ಬೈಲಿನ ಒಪ್ಪಂಗೊ |
July 10, 2010 ರ 8:00 amಗೆ ನಮ್ಮ ಗಣೇಶ ಮಾವ° ಬರದ್ದು, ಇದುವರೆಗೆ 13 ಒಪ್ಪಂಗೊ. |
ಹಾಂಗಾದ ಕಾರಣ ನಾವು ದೇವರ ಚೈತನ್ಯವ ನಮ್ಮ (ಮನುಷ್ಯ )ರೂಪಕ್ಕೆ ಕಲ್ಪನೆ ಮಾಡಿಗೊಂಡು ಆರಾಧನೆ ಮಾಡಿದರೆ ಜೀವ ದೇವರ (ಸಂಪರ್ಕ)ಸಂಬಂಧ ಆವ್ತು. |
ಕಾಯಾರದ ಬಟ್ಟಮಾವ ಕಲಶ ಪೂಜೆ ಮಾಡುವದು |
ಅದು ಹೇಂಗೆ ಹೇಳಿರೆ ಸ್ವಿಚ್ಚು ಹಾಕಿಯಪ್ಪಗ ಕರೆಂಟು ವಯರಿಲಿ ಹೋಗಿ ಹೇಂಗೆ ಬಲ್ಬು ಹೊತ್ತುತ್ತೋ ಹಾಂಗೆ ನಮ್ಮಲ್ಲಿಪ್ಪಂತಹ ಭಾವನೆಯೆಂಬ (infrared ray) ಚೈತನ್ಯವ ದರ್ಭೆಯ ಮೂಲಕ ಕಲಶಕ್ಕೆ ಸಂಪರ್ಕ ಮಾಡಿಯಪ್ಪಗ ಅಲ್ಲಿ ಜೀವ ದೇವರ ಸಂಬಂಧ ಆವ್ತು. ಆ ಕಲಶವ ಸ್ನಾನ,ಪ್ರೋಕ್ಷಣೆಗಳ ಮೂಲಕ ನಾವು ಉಪಯೋಗಿಸಿಗೊಂಬಗ ನಮ್ಮಲ್ಲಿ ಚೈತನ್ಯ ವೃದ್ಧಿ ಆವ್ತು..ಇದನ್ನೇ ಶಾಂತಿ ಹೇಳಿ ಹೇಳುವದು..ಇದರ ವಿಧಂಗ ಸುಮಾರು ರೀತಿಲಿ ಇದ್ದು..ಸಂಧಿ ಶಾಂತಿ,ಗ್ರಹ ಶಾಂತಿ ಮೃತ್ಯುಂಜಯ ಶಾಂತಿಹೇಳಿ ಹಲವು ಹೆಸರುಗಳ ಮೂಲಕ ನಾವು ಶಾಂತಿಯ ಮಾಡ್ತು. ಹಾಂಗೆಲ್ಲ ಇಪ್ಪಗ ಕಲಶ ಹೆಂಗಿರೆಕ್ಕು ಹೇಳಿ ಈ ಮುಂದಾಣ ಶ್ಲೋಕದ ಮೂಲಕ ವಿವರಣೆ ಕೊಡ್ತೆ. |
ಪದ್ಮಂ ಯದ್ಗೃಹಮುಚ್ಯತೇ ಪದಯುಗಂ ಶಾಲೀ ತಥಾ ತಂಡುಲಂ |
ಜಾನೂದ್ವೌ ಕೂರ್ಚಲಿಂಗೇ ಘಟಮಪಿಚ ತನುಃ ಚರ್ಮ ವಸ್ತ್ರೇಚ ನಾಡ್ಯಃ| |
ತಂತುಂ ತನ್ಮಾಂಸಯುಕ್ತಂ ಜಲಮಪಿಚ ರುಧಿರಂ ಸ್ವರ್ಣಕಂ ಪ್ರಾಣರೂಪಂ |
ರತ್ನಾನ್ಯ ಸ್ಥೀನಿ ಚಾಸ್ಯುಃ ಫಲಮಪಿಚ ಶಿರಃ ಕೂರ್ಚಾನಾಂ ಕೇಶಜಾಲಾ: || |
ಅಷ್ಟದಳ ಪದ್ಮ ಮಂಡಲವ ಭೂಮಿ ಮೇಲೆ ಬರದು ಅದರಮೇಲೆ ಅಕ್ಕಿಯ ಹಾಕಿ, ಎರಡು ದರ್ಭೆಯ ಕೂರ್ಚೆಯ ಮಡುಗಿ, ಮತ್ತೆ ಕಲಶ ಪಾತ್ರವ ಮಡುಗೆಕ್ಕು. |
ಮತ್ತೆ ಓಶಧಿಯುಕ್ತ ನೀರಿನ (ಕೆತ್ತೆ ಕಷಾಯ) ಕಲಶ ಪಾತ್ರಕ್ಕೆ ಹಾಕೆಕ್ಕು. ಮತ್ತೆ ಸ್ವರ್ಣ ಹಾಕಿ ಕಲಶದ ಮೇಲೆ ತೆಂಗಿನಕಾಯಿ ಮಡುಗೆಕ್ಕು. ಅದರ ಮೇಲೆ ವಸ್ತ್ರ ಮಡುಗಿ ವಸ್ತ್ರದ ಮೇಲೆ ಪುನಃ ರತ್ನವ ಮಡುಗಿ ಐದರ ಕೂರ್ಚೆ ಅಥವಾ ೧೮, ಅಲ್ಲದ್ರೆ ೧೦೮ ಮಡುಗೆಕ್ಕು. |
ಇಷ್ಟು ಮಾಡಿಯಪ್ಪಗ ಕಲಶ ಹೇಳುವದು ಪೂರ್ತಿ ಆವ್ತು. |
ಇದರ ಬಗ್ಗೆ ರಜ್ಜ ವಿವರಣೆ ಕೊಡ್ತೆ. ಮಂಡಲ ಹೇಳುವದು ದೇವರ ಮನೆ, ಅಕ್ಕಿಲಿ ಪಾದ,ಅದರ ಮೇಲೆ ಮಡುಗಿದ ಎರಡು ದರ್ಭೆಯ ಕೂರ್ಚೆ ದೇವರ ಕಾಲು, ಕಲಶ ಪಾತ್ರೆ ಶರೀರ, ಓಶಧಿ ಕೆತ್ತೆ=ಅತ್ತಿ, ಇತ್ತಿ(ಕಿನ್ನಿಗೋಳಿ) ಗೋಳಿ, ಅಶ್ವತ್ಥ, ಪಾಲಾಶ ಇದಕ್ಕೆ ಪಂಚ ಪಲ್ಲವಂಗ ಹೇಳಿ ಹೇಳ್ತವು. |
ಮನುಷ್ಯನ ಶರೀರ ನಿರ್ಮಾಣಲ್ಲಿಯೂ ಪಂಚಭೂತಂಗಳ ಸಾಂಕೇತಿಕವಾಗಿ ಪಂಚ ಇಂದ್ರಿಯಂಗ ಇರ್ತಲ್ಲದಾ!! |
ಹಾಂಗೆ ಈ ಪಂಚೇಂದ್ರಿಯದ ಸಾಂಕೇತಿಕವಾಗಿ ಪಂಚಪಲ್ಲವಂಗ. |
ಆ ಕಷಾಯ ರಕ್ತ(ನೆತ್ತರು), ಸ್ವರ್ಣ ಪ್ರಾಣರೂಪ, ತೆಂಗಿನಕಾಯಿ ಶಿರಸ್ಸು, ಮತ್ತೆ ಅದರ ಮೇಲೆ ಮಡುಗಿದ ಕೂರ್ಚೆ ಕೂದಲು.. ಇಂತಹ ಭಾವನೆಯ ನಾವು ಕಲಶಲ್ಲಿ ಕಾಣೆಕ್ಕು. |
ಮತ್ತೂ ಕಲಶದ ಬಗ್ಗೆ ಬಟ್ಟಮಾವ ಹೇಳ್ತವು. |
ಕಲಶಸ್ಯ ಮುಖೇ ವಿಷ್ಣುಃ, ಕಲಶದ ಮೋರೆಲಿ ವಿಷ್ಣು, ಕೊರಳಿಲಿ ಶಿವ ಕಲಶದ ಕೆಳ ಬ್ರಹ್ಮ. |
ಹೀಂಗೆ ತ್ರಿಮೂರ್ತಿ ಸ್ವರೂಪಲ್ಲಿಯೂ ಕಲಶವ ಆರಾಧನೆ ಮಾಡುವ ಪದ್ಧತಿ. |
ನಾಲ್ಕು ವೇದಂಗ, ವೇದ ಮಾತೆಗ ಗಾಯತ್ರೀ, ಸಾವಿತ್ರೀ, ನಮ್ಮ ದೇಶಲ್ಲಿ ಹರಿವ ಗಂಗಾ, ಯಮುನಾ, ನರ್ಮದಾ, ಗೋದಾವರೀ, ಸರಸ್ವತೀ, ಸಿಂಧೂ, ಕಾವೇರಿ – ಇಷ್ಟು ಪುಣ್ಯ ನದಿಗಳ ಕಲಶಲ್ಲಿ ಪ್ರಾರಂಭಿಕವಾಗಿಯೇ ಆರಾಧನೆ ಮಾಡ್ತು. |
ಬಟ್ಟಮಾವ ನಮ್ಮತ್ರೆ "ಮಮ"ಹೇಳು ಹೇಳಿ ಹೇಳ್ತವು. |
ನವಗೆ ಅಷ್ಟೇ ಗೊಂತು. ಮತ್ತೆ ಇದರ ಅರ್ಥ ತಿಳುಸೆಕ್ಕು ಹೇಳಿ ಕೇಳಿದೆ. ಅಂಬಗ ಇದರ ಬಗ್ಗೆ ಹೀಂಗೆ ಹೇಳಿದವು.. |
ಇನ್ನು ಬಟ್ಟ ಮಾವನ ಹತ್ರೆ ಹೀಂಗಿಪ್ಪ ಅಮೂಲ್ಯ ವೈದಿಕ ವಿಚಾರಂಗ ಕೇಳಿ ತಿಳುದು ಹೇಳ್ತೆ. |
ಕೇಟತ್ತೋ?? |
ಏ…?? |
ಕಲಶ, 5.0 out of 10 based on 7 ratings |
ಶುದ್ದಿಶಬ್ದಂಗೊ (tags): bhat , ganesh , ganeshanna , kalasha , kalasha pooje , kayara , madavu , pooja ,ಒಪ್ಪಣ್ಣ, oppanna, havyaka, ಹವ್ಯಕ |
ಡಾ.ಸೌಮ್ಯ ಪ್ರಶಾಂತ July 10, 2010 |
ಇದರ ಓದಿ ಅಪ್ಪಗ ಆನು ಕಲಶ ಮಿಂದದು ನೆಂಪಾತು… ಗಣೇಶ ಮಾವ ಲಾಯಿಕ್ಕಲಿ ಬರದ್ದಿ.. |
ಎನಗೊಂದು ಸಂಶಯ.. ಕಲಶಕ್ಕೆ ಹಾಕುವ ಓಷಧಿ ಕೆತ್ತೆಗೊಕ್ಕೆ ಪಂಚ ವಲ್ಕಲ ಹೇಳಿ ಹೇಳುದಲ್ಲದಾ?? ಪಂಚ ವಲ್ಕಲ(೫ ನಮುನೆಯ ಕೆತ್ತೆಗೊ) ಹೇಳಿದರೆ-ವಟ(ಗೋಳಿ),ಉದುಂಬರ(ಅತ್ತಿ),ಅಶ್ವತ್ಥ,ಪಾರಿಷ,ಪ್ಲಕ್ಷ.. ಎನಗೆ ಗೊಂತಿಪ್ಪ ಪ್ರಕಾರ ಪಂಚ ಪಲ್ಲವ(೫ನಮುನೆಯ ಚಿಗುರುಗೊ) ಹೇಳಿದರೆ-ಆಮ್ರ(ಮಾವಿನಕೊಡಿ),ಜಂಬೂಕ(ನೇರಳೆಕೊಡಿ),ಕಪಿತ್ಥ(ಬೇಲದ ಕೊಡಿ),ಬೀಜಪೂರಕ(ಮಾದಲ ಕೊಡಿ),ಬಿಲ್ವ(ಬಿಲ್ವಪತ್ರೆ ಕೊಡಿ).. ಎಂಗೊ ಮದ್ದಿಂಗೆ ಉಪಯೋಗ ಮಾಡುದು ಇವುಗಳ.. ವೈದಿಕ ಶಾಸ್ತ್ರದ ಪ್ರಕಾರ ಬೇರೆ ಇದ್ದಾ ಗೊಂತಿಲ್ಲೆ… |
ಈ ಬಗ್ಗೆ ಎನಗೆ ಬೋಧಾಯನೋಕ್ತ ವೆಂಕಟೇಶ ಪ್ರಯೋಗಲ್ಲಿ ಕಂಡ ಹಾಂಗೆ ಆನು ಇಲ್ಲಿ ವಿವರಣೆ ಕೊಟ್ಟದು.ಈ ಬಗ್ಗೆ ಬಟ್ಟ ಮಾವನ ಹತ್ರೆ ವಿಮರ್ಶೆ ಮಾಡಿ ತಿಳಿಸುತ್ತೆ ಸೌಮ್ಯಕ್ಕ… |
ನಿಂಗೊ ಕೇಳಿದ ಒಂದು ವಿಮರ್ಶೆಗೆ ಬಟ್ಟ ಮಾವ ಉತ್ತರ ಕೊಟ್ಟಿದವು.ಪಲ್ಲವ ಹೇಳಿದರೆ ಚಿಗುರು ಹೇಳಿ ಅರ್ಥ ಇದ್ದು.ಆದರೆ ವಲ್ಕಲದ ಬಗ್ಗೆ ಮಾಹಿತಿ ಸಿಕ್ಕಿದ್ದಿಲ್ಲೆ.. ಮತ್ತೆ ಪಂಚ ವೃಕ್ಷಂಗ ಅದುವೇ ಹೇಳಿ ಹೇಳಿದವು..ಅತ್ತಿ,ಇತ್ತಿ,ಗೋಳಿ.ಅಶ್ವತ್ಥ,ಪಾಲಾಶ. ಶಾಸ್ತ್ರ ವಿಧಿ ಪ್ರಕಾರ ಚಿಗುರೇ ಆಯೆಕ್ಕಡ.. ಈಗ ಅದರ ಬಗ್ಗೆ ಹೆಚ್ಚಿನವಕ್ಕೂ ಶ್ರದ್ಧೆ ಕಡಮ್ಮೆ ಆದ ಕಾರಣ ಮರದ ಕೊಡಿಲಿ ಇಪ್ಪ ಚಿಗುರಿನ ಮಹತ್ವ ಬುಡದ ಕೆತ್ತೆ ಕೊಯ್ಯುವಲ್ಲಿವರೆಗೆ ಬಂತು. ನಿಂಗ ವಿಮರ್ಶೆ ಮಾಡಿದ ಕಾರಣ ಎನಗೂ ಗೊಂತಾತು.ನಿಂಗಳಿಂದ ಇನ್ನಷ್ಟು ವಿಮರ್ಶೆಯ ನಿರೀಕ್ಷೆ ಮಾಡ್ತೆ. ಧನ್ಯವಾದಂಗ. |
ಆಯುರ್ವೇದಲ್ಲಿ ಪಂಚವಲ್ಕಲಕ್ಕೆ ತುಂಬಾ ಪ್ರಾಮುಖ್ಯತೆ ಇದ್ದು. ಪಂಚವಲ್ಕಲಂದ ಮಾಡಿದ ಕಷಾಯ ಚರ್ಮರೋಗಂಗಳ ಗುಣ ಮಾಡುತ್ತು.. ಮೈಲಿ ತೊರ್ಸಿ ಸಣ್ಣ ಸಣ್ಣ ದಡಿಕ್ಕೆ ಬಂದಿದ್ದರೆ ಪಂಚವಲ್ಕಲ ಕಷಾಯಲ್ಲಿ ದಿನಕ್ಕೆ ೨-೩ ಸರ್ತಿ ತೊಳದರೆ ಉಪಕಾರ ಆವುತ್ತು… ವೈದಿಕ ಶಾಸ್ತ್ರಂಗಳ ಈಗಾಣೋರು ಗೊಡ್ದು ಸಂಪ್ರದಾಯಂಗೊ ಹೇಳ್ತವು.. ಆದರೆ ಅದು ಸತ್ಯ ಅಲ್ಲ.. ಪ್ರತಿಯೊಂದು ಸಂಪ್ರದಾಯಂಗಳಲ್ಲಿಯೂ ಎಂತಾರು ಒಂದು ಅರ್ಥ ಇದ್ದೇ ಇರ್ತು.. ಕಲಶ ಮೀವದು ಶುದ್ದೀಕರಣಕ್ಕಾದರೂ ಕಲಶದ ಓಷಧಿ ನೀರು ಚರ್ಮ ರೋಗ ಬಪ್ಪದರ ತಡೆತ್ತು.. ಇದೇ ರೀತಿ ನರಕಚತುರ್ದಶಿ ಸಮಯಲ್ಲಿ ಎಣ್ಣೆ ಕಿಟ್ಟಿ ಮೀವ ಮೊದಲು ನೀರಿನ ಮಂಡಗೆಗೆ ಈ ಕೆತ್ತೆಗಳ ಹಾಕಿ ನೀರು ಕಾಸುತ್ತವು..ಈ ನೀರಿಲಿ ಮಿಂದರೆ ಚರ್ಮಕ್ಕೆ ತುಂಬಾ ಒಳ್ಳೆದು… |
ಶ್ರೀದೇವಿ ವಿಶ್ವನಾಥ್ July 10, 2010 |
ನಾವು.., ನಮ್ಮ ಎಲ್ಲಾ ವೈದಿಕ ಕ್ರಿಯೆಲಿ ಕಲಶ ಮಡುಗುದು ಕಾಣ್ತು.. ಅದರ ಉದ್ದೇಶವ ಆರೂ ಬಿಡುಸಿ ಹೇಳ್ತವಿಲ್ಲೇ… ಗಣೇಶ ಮಾವ° ಹೇಳಿದ ಹಾಂಗೆ ಬಟ್ಟಮಾವ° ಹೇಳುವಾಗ 'ಮಮ' ಹೇಳಿ.. ಅವು ಹೇಳಿದ ಹಾಂಗೆ ಮಾಡಿದರೆ ಆತು… ನಿಂಗೊ ಕಲಶದ ಬಗ್ಗೆ ಹೇಳಿದ ಕಾರಣ ಇದೊಂದು ಲಾಯ್ಕಲ್ಲಿ ಗೊಂತಾತದಾ… ಇನ್ನು ನಮ್ಮ ಲ್ಲಿ ಕಾರ್ಯಕ್ರಮ ಅಪ್ಪಗ ಕಲಶದ ಬಗ್ಗೆದೆ ಎಂಗಳೆಲ್ಲರ ಗಮನ ಇಕ್ಕಲ್ಲದಾ? ಹೀಂಗೆ ನಮ್ಮ ವೈದಿಕ ಕ್ರಮಲ್ಲಿ ಬಪ್ಪ ಎಲ್ಲಾ ವಿಧಾನಂಗಳದ್ದೂ ಬಟ್ಟ ಮಾವನ ಹತ್ತರೆದೆ ಕೇಳಿಗೋನ್ದು ವಿವರಣೆ ಕೊಡಿ ಗಣೇಶ ಮಾವ° ಆತಾ… |
ಮಹೇಶ, ಕೂಳಕ್ಕೋಡ್ಲು July 10, 2010 |
ಗಣೇಶ ಮಾವ°, |
ಕಲಶಕ್ಕೆ ಬೇಕಾದ ಪಾತ್ರ ಯಾವ ಲೋಹಂದ ತಯಾರಾದ್ದದು ಆಯೆಕಡ? |
ಚಿನ್ನ,ಬೆಳ್ಳಿ,ತಾಮ್ರ~ಸಾತ್ವಿಕ = ದೇವರ ಪೂಜೆಗೆ |
ಮಣ್ಣಿನ ಕಲಶ ~ರಾಜಸ = ಭೂತಂಗೊಕ್ಕೆ |
ಕಬ್ಬಿಣ,ಸ್ಟೀಲು ~ತಾಮಸ =ದೋಷ ನಿವೃತ್ತಿಗೆ,ಮಂತ್ರವಾದ ದ ಉಪಯೋಗಕ್ಕೆ |
raamajja July 10, 2010 |
ganesho. layka baradde. hInge munduvareyali. |
ಶ್ರೀಕೃಷ್ಣ ಶರ್ಮ. ಹಳೆಮನೆ July 11, 2010 |
ದೇವರ ಚೈತನ್ಯಕ್ಕೆ ಮನುಷ್ಯರ ರೂಪ ಕಲ್ಪಿಸಿ, ಕಲಶಲ್ಲಿ ದೇವರ ಸ್ವರೂಪವ ಕಾಂಬದು, ಅದಕ್ಕೆ ಪೂಜೆ ಮಾಡುವದು, ಕಲಶ ಸ್ನಾನ ಮಾಡುವದು…. ಹಿಂದಾಣವರ ಅಲೋಚನೆಗೊ ಯಾವ ಎತ್ತರಲ್ಲಿ ಇತ್ತಿದ್ದು ಹೇಳಿ ಗೊಂತಾವುತ್ತು. ಇದರ ಬಗ್ಗೆ ವಿವರಣೆ ಕೊಟ್ಟದು ಲಾಯಿಕ್ ಆಯಿದು. ಹೀಂಗಿಪ್ಪ ವಿಶಯಂಗೊ ಇನ್ನೂ ಬರೆತ್ತಾ ಇರಿ. ನಮ್ಮವಕ್ಕೆ ಇದರ ಬಗ್ಗೆ ತಿಳುವಳಿಕೆ ಮೂಡಲಿ. |
ವೇಣೂರಣ್ಣ July 13, 2010 |
ಕಲಶ ಸ್ಥಾಪನೆ ಮಾಡಿ ಬಟ್ಟ ಮಾವ ಹೇಳ್ತ "ಉದಕ ಶಾಂತಿ " ಪ್ರಯೋಗ ಮಂತ್ರಂಗೋ ಅತ್ಯಂತ ಸ್ವಾರಸ್ಯ ಪೂರ್ಣವಾಗಿದ್ದು . ಅದರಲ್ಲಿ ಬಪ್ಪ ವಿವಿಧ ಮಂತ್ರ ಸಮುಚ್ಚಯಂಗೋ ಪಾರಾಯಣ ಮಾಡುಲೆ ಹಾಂಗೆ ಕೆಳುಲೇ ಕೊಶಿ ಅವುತ್ತು. |
ramachandra kodibai July 13, 2010 |
ningala artical laikiddu |
ಗಣಪತಿ.ಭಟ್.ಬಿ July 21, 2010 |
ಗಣೇಶಣ್ಣ, ಲಾಯ್ಕ ಬರದ್ದಿ. ಇನ್ನುದೆ ಹೀಂಗಿಪ್ಪ ವಿಷಯಂಗಳ ಬರೆಯಿರಿ.ಯೆಲ್ಲರಿಂಗೂ ತುಂಬಾ ಉಪಯೋಗ ಆವುತ್ತು … |
Rajanna Halumajalu July 23, 2010 |
namma hiriyaru nirina bagge yestondu pujaniya bhavaneli ittiddavu heli Gonthavtallada Ganeshamava ??? |
'ಸಿದ್ದರಾಮಯ್ಯ ನಿಜವಾದ ಹೀರೋ' | Prajavani |
'ಸಿದ್ದರಾಮಯ್ಯ ನಿಜವಾದ ಹೀರೋ' |
Published: 14 ಜೂನ್ 2018, 00:49 IST |
ಬೆಂಗಳೂರು: 'ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ಹೀರೋ. ಅವರು ಕುರುಬ ಸಮುದಾಯ ಮಾತ್ರವಲ್ಲದೆ, ಎಲ್ಲ ಸಮುದಾಯದ ಮುಂಚೂಣಿ ನಾಯಕರು' ಎಂದು ವಿಧಾನ ಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಹೇಳಿದ್ದಾರೆ. |
ಮಹಾಲಕ್ಷ್ಮಿಲೇಔಟ್‌ನ ತಮ್ಮ ಮನೆಯಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, 'ಸಂಪುಟ ವಿಸ್ತರಣೆ ವೇಳೆ ನನಗೆ ಬೇಸರವಾಗಿದ್ದು ನಿಜ. ಆದರೆ, ಆ ಸಹಜ ಅತೃಪ್ತಿಯನ್ನೇ ತಪ್ಪಾಗಿ ಅರ್ಥೈಸಲಾಯಿತು. ಸಿದ್ದರಾಮಯ್ಯ ಕುರುಬ ಸಮುದಾಯದ ವಿಲನ್ ಎಂದು ನಾನು ಎಲ್ಲೂ ಹೇಳಿಲ್ಲ. ಆದರೆ, ಅಂತಹ ಹೇಳಿಕೆ ಮಾಧ್ಯಮಗಳಲ್ಲಿ ಬಂತು. ಅವರು ಕುರುಬ ಸಮುದಾಯದ ನಿಜವಾದ ಹೀರೋ' ಎಂದರು. |
'ನಾನು ಅಸಮಾಧಾನಗೊಂಡಿದ್ದ ಸಂದರ್ಭದಲ್ಲಿ ಬೇರೆ ಪಕ್ಷದ ಮುಖಂಡರು ತಮ್ಮ ಜತೆ ಬರುವಂತೆ ಆಹ್ವಾನಿಸಿದ್ದರು. 40 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪಕ್ಷವನ್ನು ಯಾವುದೇ ಕಾರಣಕ್ಕೂ ತೊರೆಯುವುದಿಲ್ಲ ಎಂದು ಅವರಿಗೆ ಉತ್ತರಿಸಿದ್ದೆ.' |
'ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅವರೇ ನಮ್ಮ ನಾಯಕರು. ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದ ಮುಂಚೂಣಿ ನಾಯಕರಾಗುವ ಲಕ್ಷಣಗಳು ಸಿದ್ದರಾಮಯ್ಯ ಅವರಿಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಆಡಳಿತವನ್ನು ಸುಲಲಿತವಾಗಿ ಕೊಂಡೊಯ್ಯುತ್ತಿದ್ದಾರೆ. ಅವರು ಹಾಗೂ ಕಾಂಗ್ರೆಸ್ ನಾಯಕರು ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಕುರುಬ ಸಮುದಾಯಕ್ಕೆ ಶುಭಸುದ್ದಿ ನೀಡಲಿದ್ದಾರೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು. |
ಅಧಿಕಾರಿಗಳ ಜೊತೆ ಸಿಎಂ ಮಹತ್ವದ ಮೀಟಿಂಗ್, ಸರಳ ದಸರಾಗೆ ಸೂಚನೆ – EESANJE / ಈ ಸಂಜೆ |
ಅಧಿಕಾರಿಗಳ ಜೊತೆ ಸಿಎಂ ಮಹತ್ವದ ಮೀಟಿಂಗ್, ಸರಳ ದಸರಾಗೆ ಸೂಚನೆ |
October 11, 2020 October 11, 2020 Sri Raghav |
ಬೆಂಗಳೂರು, ಅ.11- ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಅಧಿಕಾರಿಗಳ ಜತೆ ಮಹತ್ವದ ಸಭೆ ನಡೆಸಿದರು. |
ಮುಖ್ಯಮಂತ್ರಿಯವರ ಅಕೃತ ನಿವಾಸ ಕಾವೇರಿಯಲ್ಲಿ ನಡೆದ ಈ ಸಭೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್‍ಭಾಸ್ಕರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಜಾವಿದ್ ಅಖ್ತರ್, ಕಾರ್ಯದರ್ಶಿ ಪಂಕಜ್‍ಕುಮಾರ್ ಪಾಂಡೆ, ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಪ್ರವಾಸೋದ್ಯಮ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್‍ಕುಮಾರ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು. |
ಸುಮಾರು 20 ನಿಮಿಷಕ್ಕೂ ಹೆಚ್ಚು ಕಾಲ ನಡೆದ ಈ ಸಭೆಯಲ್ಲಿ ನಾಡಹಬ್ಬ ಮೈಸೂರು ದಸರಾ ಸಂದರ್ಭದಲ್ಲಿ ಯಾವುದೇ ರೀತಿಯ ಲೋಪದೋಷಗಳು ಉಂಟಾಗದಂತೆ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. |
Subsets and Splits
No community queries yet
The top public SQL queries from the community will appear here once available.