text stringlengths 0 61.5k |
|---|
ನವೆಂಬರ್ 8, 1948ರಂದು ದಿಲ್ಲಿಯಲ್ಲಿ ಒಂದು ಸಭೆಯಲ್ಲಿ ನನ್ನ ಭಾಷಣವಿತ್ತು. ಅದರ ಸುದ್ದಿ ದಿಲ್ಲಿಯ ಇಂಗ್ಲಿಷ್ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ನಾನು ವೇದಿಕೆಯ ಮೇಲೆ ಕುಳಿತಿದ್ದೆ. ಆಗ ಕೋಟು ಪ್ಯಾಂಟು ಧರಿಸಿದ ಪ್ರೌಢ ವ್ಯಕ್ತಿಯೊಬ್ಬ ನನ್ನ ಕಾಲಿಗೆರಗಿದ. ಸಂಸ್ಕೃತ ಮಾತು ಕೇಳುತ್ತಲೇ ನನಗೆ ಅನಂತರಾಮನ ನೆನಪಾಯಿತು. ಹೌದು; ಅವರೇ, 18 ವರ್ಷಗಳ ನಂತರ ನನ್ನ ಮಿತ್ರನನ್ನು ಭೇಟಿಯಾಗುವ ಆ ಸಂತಸ ಎಷ್ಟೆಂದು ಹೇಳಬೇಕಾಗಿಲ್ಲ. ನಾನು ಇರುವ ಜಾಗ ತಿಳಿಸಿದೆ. ಮಾರನೆಯ ದಿನ ಭಟ್ಟರು ಬಂದರು. ಮಹಾಯುದ್ಧಕ್ಕೆ ಮೊದಲೇ ನಮ್ಮ ಪತ್ರ ವ್ಯವಹಾರ ನಿಂತು ಹೋಗಿತ್ತು. ಅವರು ತಮ್ಮ ಜೀವನಗಾಥೆಯನ್ನು ಸಂಕ್ಷೇಪದಲ್ಲಿ ತಿಳಿಸಿದರು. ಮತ್ತೆ ಅವರೆಂದರು – "ಒಂದು ತಿಂಗಳಿಂದ ಎಲ್ಲಿಯೂ ಕೇಳುವವರಿಲ್ಲ. "ಅವರೊಂದು ಹೊಟೇಲಿನಲ್ಲಿ ತಂಗಿದ್ದರು. ಅದರ ಖರ್ಚು ಕೊಡಲು ಅವರ ಹತ್ತಿರ ಹಣವಿರಲಿಲ್ಲ. ಹೊಟೇಲ್ ಸಾಧಾರಣ ದರ್ಜೆಯದ್ದು. ಆದರೆ, ವಾಸ ಊಟದ ಖರ್ಚು ಸಾಕಷ್ಟಾಗುತ್ತದೆ. ಹೊಟೇಲ್ ಮಾಲಿಕ ಒಬ್ಬ ಸಜ್ಜನ. ಆತ ಭಟ್ಟರ ಯೋಗ್ಯತೆ ಕಂಡು ಬೀದಿಗಂತೂ ಹಾಕಲಿಲ್ಲ. ಭಟ್ಟರ ಮೊತ್ತ ಮೊದಲ ಸಮಸ್ಯೆ ಊಟ ಉಪಹಾರಕ್ಕೆ ಏನಾದರೊಂದು ವ್ಯವಸ್ಥೆ. ನನ್ನ ಶಿಫಾರಸ್ಸು ಕೂಡಾ ದೊಡ್ಡ ವ್ಯಕ್ತಿಗಳ ತನಕ ಮುಟ್ಟುತ್ತಿರಲಿಲ್ಲ. ಹಾಗಾಗಿ ಕೆಲಸ ಕೊಡಿಸುವ ವಿಚಾರದಲ್ಲಿ ನನಗೇನು ಮಾಡುವುದು ಸಾಧ್ಯವಿರಲಿಲ್ಲ. ಆ ಕಾಲದಲ್ಲಿ 'ಹಿಂದೀ ಸಾಹಿತ್ಯ ಸಮ್ಮೇಳನದ ವತಿಯಿಂದ ಪಾರಿಭಾಷಿಕ ಶಬ್ದಾವಳಿಗಳ ಕೋಶ ನಿರ್ಮಾಣದ ಜವಾಬ್ದಾರಿ ನನ್ನ ಮೇಲಿತ್ತು. ನನಗನ್ನಿಸಿತು – ಖಂಡಿತಾ ಭಟ್ಟರು ಈ ದಿಕ್ಕಿನಲ್ಲಿ ಉಪಯುಕ್ತರಾಗುತ್ತಾರೆ. ಅವರ ಸಂಸ್ಕೃತ ಮತ್ತು ಜರ್ಮನ್ ಭಾಷೆಯ ಗಂಭೀರ ಜ್ಞಾನ ಪಾರಿಭಾಷಿಕ ಶಬ್ದನಿರ್ಮಾಣಕ್ಕೇ ಹೇಳಿ ಮಾಡಿಸಿದಂತಿತ್ತು. ಆದರೆ, ಅವರ ಯೋಗ್ಯತೆಗೆ ತಕ್ಕಂತೆ ಸಂಬಳ ಕೊಡಿಸುವುದು ಸಾಧ್ಯವಾಗುತ್ತಿರಲಿಲ್ಲ. ನಾನು ಆಗ ಇಷ್ಟೇ ಹೇಳಿದೆ – ನೋಡೋಣ, ಪ್ರಯತ್ನ ಮಾಡುತ್ತೇನೆ. ಯಾವುದೇ ಕೆಲಸ ಸಿಗದಿದ್ದರೆ ಪಾರಿಭಾಷಿಕ ಶಬ್ದಾವಳಿ ರಚನೆಯ ಕಾರ್ಯ ನಮ್ಮ ಬಳಿಯಿದೆ. ಆದರೆ, ಅದರಲ್ಲಿ 350ಕ್ಕಿಂತ ಹೆಚ್ಚಾಗಿ ಸಂಬಳ ಕೊಡಿಸುವುದು ಸಾಧ್ಯವಾಗುವುದಿಲ್ಲ. |
ಜರ್ಮನಿಯಲ್ಲಿ 18 ವರ್ಷವಿದ್ದು ಅವರು ಬಹಳಷ್ಟು ಅವಗುಣಗಳನ್ನು ಕಲಿತಿದ್ದರು. ಗುಣಗಳ ವಿಚಾರ ತೆಗೆದುಕೊಂಡರೆ ಕೇವಲ ಅರ್ಥಶಾಸ್ತ್ರ ಮಾತ್ರವಲ್ಲ, ಭಾರತೀಯ ಸಾಹಿತ್ಯ ಮತ್ತು ಇತಿಹಾಸದ ವಿಶೇಷ ಜ್ಞಾನ ಮಾತ್ರವಲ್ಲದೆ ಆರ್ಕಿವ್ (ಪ್ರಾಚೀನ ಶಾಸನ, ಅಭಿಲೇಖ ಜ್ಞಾನ) ಬಗೆಗೆ ವಿಶೇಷ ತಿಳುವಳಿಕೆ ಅವರಿಗಿತ್ತು. ಹತ್ತಾರು ಸಾವಿರ ವಿಸ್ತೀರ್ಣದ ಗೊಂಡಾರಣ್ಯದಲ್ಲಿ ಬೇಕಾದ ವಸ್ತುವನ್ನು ಕೆಲವೇ ನಿಮಿಷಗಳಲ್ಲಿ ಹುಡುಕಿ ತೆಗೆಯುವ ಸಾಮರ್ಥ್ಯ ಭಟ್ಟರದು. ಭಾರತ ಸ್ವತಂತ್ರವಾಗುತ್ತಲೇ ಹೊಗಳು ಭಟರ ರಾಜ್ಯ ನಿರ್ಮಾಣವಾಯಿತು. ಗುಣವಂತರನ್ನು ಯಾರು ಗಮನಿಸುತ್ತಾರೆ? ಭಟ್ಟರಿಗೆ ಯಾವುದೇ ಕೆಲಸ ಸಿಗಲಿಲ್ಲ, ಮಾರ್ಚ್ ತನಕ ಅವರು ಅಲ್ಲಲ್ಲಿ ಅಲೆದಾಡುತ್ತಲೇ ಇದ್ದರು. ಹೊಟೇಲ್ ಮಾಲಿಕರ ಋಣ ಅವರ ತಲೆ ಮೇಲೆ ಮಣ ಭಾರವಾಗುತ್ತಾ ಇತ್ತು. ಅಂತೂ, ಕೊನೆಗೆ ಏಪ್ರಿಲ್ ಒಂದರಂದು (1949) ಪಾರಿಭಾಷಿಕ ಕಾರ್ಯಕ್ಕೆ ದಿಲ್ಲಿಯಿಂದ ಪ್ರಯಾಗಕ್ಕೆ ಅವರು ತಲುಪಿದರು. |
ಭಟ್ಟರು ಏನು ಅವಗುಣಗಳನ್ನು ಕಲಿತಿದ್ದರೊ ಅದು ಯುರೋಪ್ ಮತ್ತು ಜರ್ಮನಿಯಲ್ಲಿ ದೋಷವಾಗಿರಲಿಲ್ಲ. ಮೊದಲು ಅವರು ಭಾರತೀಯತೆಯ ಸಾಕಾರ ಮೂರ್ತಿಯಾಗಿದ್ದರು. ಯುರೋಪಿನಲ್ಲಿದ್ದು ಅವರ ಭಾರತಭಕ್ತಿ ಮತ್ತಷ್ಟು ವೃದ್ಧಿಸಿತು. ಆದರೆ, ಅವರು ಆಧುನಿಕತೆಯ ಬಣ್ಣದಲ್ಲಿ ಸಂಪೂರ್ಣವಾಗಿ ವರ್ಣಮಯವಾದರು. ಪ್ರತಿಯೊಂದು ವಿಚಾರದಲ್ಲೂ ಅವರು ಚೊಕ್ಕಟ ಮತ್ತು ವ್ಯವಸ್ಥೆಯನ್ನು ಬಯಸುತ್ತಿದ್ದರು. ಆದರೆ, ಭಾರತದ ಸಹಸ್ರಾರು ವರ್ಷಗಳ ಕೊಳಚೆ ಹೇಗೆ ತಾನೆ ಅಷ್ಟು ಬೇಗ ಸರಿ ಹೋದೀತು! ಅವರಿಗೆ ಈ ಸ್ಥಿತಿ ಬಗ್ಗೆ ಅತ್ಯಂತ ತಿರಸ್ಕಾರವಿತ್ತು. ಒಂದು ಕಾಲದಲ್ಲಿ ಅವರು ಜರ್ಮನಿಯಿಂದ ಕನ್ನಡ ಪತ್ರಿಕೆಗಳಲ್ಲಿ ಲೇಖನವನ್ನೂ ಬರೆದಿದ್ದರು. ಲಕ್ಷಗಟ್ಟಳೆ ಪ್ರತಿಗಳಲ್ಲಿ ಮುದ್ರಣವಾಗುವ ಜರ್ಮನ್ ಪತ್ರಿಕೆಗಳಲ್ಲಿ ಅವರ ಲೇಖನಗಳು ಪ್ರಕಟವಾಗುತ್ತಿದ್ದಾಗ ಕನ್ನಡದ ಒಂದೆರಡು ಸಾವಿರ ಪ್ರತಿಗಳ ಪತ್ರಿಕೆಯವರಿಗೆ ಏನೇನೂ ಖುಷಿ ಕೊಡಲಿಲ್ಲ. ಆದರೆ, ಎಷ್ಟೇ ಕಡಿಮೆ ಸಂಖ್ಯೆಯಲ್ಲಿ ಮುದ್ರಣ ಹೊಂದಿದರೂ, ಕನ್ನಡದ ಪತ್ರಿಕೆಗಳ ಮೂಲಕವೇ ತಾನು ತನ್ನ ಜನರನ್ನು ತಲುಪಬಲ್ಲೆ ಎಂಬ ಸತ್ಯ ಮಾತ್ರ ಅವರಿಗೆ ತಿಳಿಯಲಿಲ್ಲ. ಯುರೋಪಿನಲ್ಲಿರುವಾಗ ಅವರು ತಮ್ಮನ್ನು ಕೇವಲ ಭಾರತೀಯ ನಾಗರಿಕ ಎಂದು ತಿಳಿದಿದ್ದರು. ಭಾರತದ ಯಾವುದೇ ಪ್ರದೇಶದಲ್ಲಿ ಕಾಲೂರದೇ ಆತ ಭಾರತೀಯನಾಗಲಾರ ಎಂಬ ಸತ್ಯವನ್ನು ಅವರು ಯೋಚಿಸಲಿಲ್ಲ. ಕರ್ನಾಟಕದ ನೆಲ ಅವರ ಕಾಲುಗಳನ್ನು ತನ್ನ ಮಡಿಲಲ್ಲಿಟ್ಟುಕೊಳ್ಳಲು ಸಿದ್ಧವಿತ್ತು, ಆದರೆ ಪ್ರಾಂತೀಯತೆಯ ಮಾತು ಕೇಳಿದರೇ ಅವರು ಉರಿದು ಬೀಳುತ್ತಿದ್ದರು. ನಾನು ಅವರಿಗೆಂದೆ -'ನೀವು ಕರ್ನಾಟಕವನ್ನು ಮತ್ತೆ ಅಪ್ಪಿಕೊಂಡರೆ ಎಲ್ಲಾ ದಾರಿಗಳೂ ಸುಗಮವಾಗುತ್ತವೆ. ಕನ್ನಡ ಭಾಷೆಯ ಪತ್ರಿಕೆಗಳಲ್ಲಿ ನೀವು ನಿಮ್ಮ ಜರ್ಮನಿಯ ಅನುಭವವನ್ನು ಲೇಖನ ಮಾಲೆಯಾಗಿ ಬರೆಯುವುದನ್ನು ಆರಂಭಿಸಿ. ಆದರೆ, ನನ್ನ ಮಾತು ಅವರಿಗೆ ಒಪ್ಪಿಗೆಯಾಗಲಿಲ್ಲ. ಶ್ರೀ ಶರತ್ ಬೋಸ್‍ರವರು ತಮ್ಮ ದೈನಿಕವನ್ನು ಆರಂಭಿಸಿದ್ದರು. ಆಗ ಭಟ್ಟರು ತಮ್ಮ ಸಂದೇಶವನ್ನು ಆ ಪತ್ರಿಕೆಗೆ ಕಳುಹಿತ್ತಾ ತನ್ನ ಮತ್ತು ನೇತಾಜಿಯವರ ಸಂಬಂಧವನ್ನು ಉಲ್ಲೇಖಿಸಿದ್ದರು. ಶರತ್‍ಬಾಬು ಸಂತೋಷದಿಂದ ಧನ್ಯವಾದ ಸಮರ್ಪಿಸುತ್ತಾ ಅವರಿಗೆ ಪತ್ರ ಬರೆದಿದ್ದರು. ಇಂಥ ವಿಚಾರಗಳೇ ಭಟ್ಟರಿಗೆ ಖುಷಿಕೊಡುತ್ತಿದ್ದವು. |
ನಿಮ್ಮ ಊರು, ಕೇರಿ ಮನೆಯ ಬಗ್ಗೆ ಅವರನ್ನು ಪ್ರಶ್ನಿಸಿದರೆ – 'ಅವರಿಗೂ ನನಗೂ ಏನು ಸಂಬಂಧ? ಅವರು ನನ್ನನ್ನು ಪತಿತ ಮತ್ತು ಸತ್ತು ಹೋಗಿದ್ದೇನೆಂದು ನನ್ನ ಶ್ರಾದ್ಧವನ್ನೂ ಮಾಡಿಬಿಟ್ಟಿದ್ದಾರೆ'. ಅವರ ಮಾವ ಶ್ರಾದ್ಧಕರ್ಮ ಆಚರಣೆ ಮಾಡಿಸಿರಬಹುದು; ಆದರೆ, ಅವರ ಪತ್ನಿ ಹೇಗೆ ಅವರ ಶ್ರಾದ್ಧ ಮಾಡಿಯಾರು? ಕರ್ನಾಟಕ ಭೂಮಿ ಹೇಗೆ ತಾನೆ ತನ್ನ ಈ ಮಹಾನ್ ಪುತ್ರನನ್ನು ಬದುಕಿರುವಾಗಲೇ ಸತ್ತನೆಂದು ತಿಳಿಯಲು ಸಾಧ್ಯ? ಇದು ಅವರ ಅವಗುಣ. 18 ವರ್ಷದ ನಂತರ ದೇಶಕ್ಕೆ ಬರುವಾಗ ತಂದ ಬಳುವಳಿ. |
3 ಏಪ್ರಿಲ್, 1949ಕ್ಕೆ ಭಟ್ಟರು ನಮ್ಮೊಂದಿಗೆ ಕಲಿಂಪೊಂಗ್‍ಗೆ ಬಂದರು. ಹೃದಯದ ಕಾಯಿಲೆ ಬಹಳ ಕಠಿಣವಾಗಿರುತ್ತದೆ. ಕೆಲವೊಮ್ಮೆ ಅದು ನೋವನ್ನು ಹೆಚ್ಚಿಸುತ್ತದೆ. ತಮ್ಮೆಲ್ಲಾ ಸಮಯವನ್ನು ಅವರು ಪಾರಿಭಾಷಿಕದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ನಮ್ಮಲ್ಲಿ ಮಹಾಕೂಪಮಂಡೂಕಗಳು ಇಂಗ್ಲಿಷ್ ಮಾತ್ರವೇ ಏಕಮೇವ ಅಂತಃರಾಷ್ಟ್ರೀಯ ಭಾಷೆಯೆಂದು ತಿಳಿದಿರುತ್ತವೆ. ಭಟ್ಟರಿಗೆ ಈ ಕೂಪಮಂಡೂಕಗಳ ಮಾತು ಕೇಳಿ ನಗು ಬರುತ್ತಿತ್ತು. ಜರ್ಮನ್ ಸಮುದಾಯ ವಿಜ್ಞಾನದಲ್ಲಿ ಯಾವ ದೇಶಕ್ಕೂ ಕಡಿಮೆಯಿಲ್ಲ. ವಿಜ್ಞಾನ ಕ್ಷೇತ್ರಕ್ಕೆ ಅವರ ಕೊಡುಗೆ ಅಪೂರ್ವ. ಅವರು ಸಾವಿರ ಅಲ್ಲ; ಲಕ್ಷಗಟ್ಟಳೆ ಪಾರಿಭಾಷಿಕ ಪದಗಳನ್ನು ಸೃಷ್ಟಿಸಿದ್ದಾರೆ. ಅದೆಂತಹ ಪಾರಿಭಾಷಿಕ ಪದಗಳೆಂದರೆ ಜನರು ಅತ್ಯಂತ ಸುಲಭವಾಗಿ ಅವುಗಳನ್ನು ಅರ್ಥಮಾಡಿಕೊಳ್ಳಬಲ್ಲರು. ಸಾಯನ್ಸ್ ಅಥವಾ ಸಿಯಾಂಸ್ ಎಂದರೆ ಓರ್ವ ಜರ್ಮನಿಯವನಿಗೆ ಏನೂ ಅರ್ಥವಾಗುವುದಿಲ್ಲ. 'ವಿಜನ್ ಶಾಫ್ಟ್' ಯಾ ವಿಜ್ಞಾನವನ್ನು ಅವನು ತಿಳಿದುಕೊಳ್ಳಬಲ್ಲ. ಆದ್ದರಿಂದಲೇ ಜರ್ಮನಿಯು ತನ್ನ ಭಾಷೆಯಲ್ಲಿ ಪಾರಿಭಾಷಿಕ ಪದಗಳನ್ನು ರಚಿಸಿತು. ಈ ಕಾರ್ಯದಲ್ಲಿ ಭಟ್ಟರು ಅತ್ಯಂತ ಮಹತ್ವದ ಕೆಲಸ ಮಾಡಿದರು. ಖೇದದ ವಿಚಾರವೆಂದರೆ 'ಸಮ್ಮೇಳನ'ದ ಅಧಿಕಾರಿಗಳ ಶೈಥಿಲ್ಯದಿಂದಾಗಿ ಆ ಕಾರ್ಯ ವೇಗವಾಗಿ ಮುಂದುವರಿಯಲಿಲ್ಲ. ಅವರು ಚೆನ್ನಾಗಿ ಸಹಕರಿಸಿದ್ದರೆ ಇಷ್ಟರಲ್ಲಿಯೇ ಪಾರಿಭಾಷಿಕ ಪದಾವಳಿಗಳಲ್ಲಿ ಹಿಂದಿ ಮತ್ತು ಭಾರತದ ಇತರ ಭಾಷೆಗಳು ನಿಶ್ಚಿಂತವಾಗಿರಬಹುದಿತ್ತು. ಡಾ| ಭಟ್ಟರಂತಹ ಇನ್ನೋರ್ವ ಪ್ರತಿಭಾಶಾಲಿ ಪುರುಷ ಶ್ರೀ ಸುರೇಶ್ಚಂದ್ರ ಸೇನಗುಪ್ತ ಈ ಕೆಲಸಕ್ಕೆ ಒದಗಿದ್ದರು. ಕಲಿಂಪೋಂಗ್‍ನಲ್ಲಿ ಪ್ರಾಯಃ 60 ಸಾವಿರಗಳಿಗಿಂತ ಹೆಚ್ಚು ಪದಾವಳಿಗಳನ್ನು ನಾವು ರಚಿಸಿದ್ದೆವು. |
22 ಫೆಬ್ರವರಿಗೆ ನಮ್ಮ ಎಲ್ಲಾ ಸಾಮಾನು ಸರಂಜಾಮುಗಳನ್ನು ಒಟ್ಟುಗೂಡಿಸಿಕೊಂಡು ಡಾ| ಭಟ್ಟರು ಮತ್ತು ಸೇನಗುಪ್ತರೊಂದಿಗೆ ನಾವು ಪ್ರಯಾಗದಿಂದ ಹೊರೆಟೆವು. ಕಟಿಹಾರದಲ್ಲಿ ಗಾಡಿ ಬದಲಿಸಬೇಕಿತ್ತು. ಅಲ್ಲಿ ಓರ್ವ ಸಹೃದಯ ಕೈಗಾರಿಕೋದ್ಯಮಿ ಶ್ರೀ ಮಹಾವೀರಪ್ರಸಾದ ಮಾವಂಡಿಯಾ ಅವರ ಪರಿಚಯವಾಯಿತು. ಅವರು ಬಹಳ ಸತ್ಕಾರ ಮಾಡಿದರು. ನಾವೊಂದು ಟ್ರೇನ್ ಬಿಟ್ಟೆವು. ಮಾರನೆಯ ದಿನ ಮಾವಂಡಿಯಾ ಕಾರ್ ಡ್ರೈವ್ ಮಾಡಿಕೊಂಡು ನಮ್ಮನ್ನು ರೈಲ್ವೆ ಸ್ಟೇಶನ್‍ಗೆ ಬಿಟ್ಟರು. ರೈಲ್ವೆ ಲೈನ್ ದಾಟುತ್ತಾ ಸೇನಗುಪ್ತನರು ಭಟ್ಟರನ್ನು ನೋಡಿ ಹೀಗೆಂದರು -"ಅಚ್ಛಾ, ನೀವು ನಿದ್ರಿಸ ಬಯಸುವುದಾದರೆ ನಿದ್ರಿಸಿ". ಸ್ಟೇಶನ್ ಬಳಿ ಕಾರ್ ನಿಂತಿತ್ತು. ನೋಡಿದರೆ ಭಟ್ಟರು ನಿದ್ರಿಸಿರಲಿಲ್ಲ; ಬದಲಿಗೆ ಮೂರ್ಛೆ ಹೋಗಿದ್ದರು. ಸೆಕೆಂಡ್ ಕ್ಲಾಸ್ ರಿಸರ್ವ್ ಆಗಿತ್ತು. ಅಲ್ಲಿಗೆ ಕೊಂಡೊಯ್ದೆವು. ಅವರ ಪರಿಸ್ಥಿತಿ ಕಂಡು ಗಾಬರಿಯಾಯ್ತು. ಮಾವಂಡಿಯಾ ಓಡಿ ಹೋಗಿ ಡಾ| ರಾಮಪ್ರಸಾದ್ ಸೂದ್ ಅವರನ್ನು ಕರೆತಂದರು. ಸೂದ್ ಅವರೆಂದರು -"ಈ ಟ್ರೇನ್‍ನಲ್ಲಿ ಇವರನ್ನು ಮುಂದೆ ಕರೆದುಕೊಂಡು ಹೋಗಲಾಗದು" ಸ್ವಲ್ಪವೂ ಪ್ರಜ್ಞೆಯಿಲ್ಲ. ಅವರ ಸ್ಥಿತಿ ಕಂಡು ಎದೆ ಕಂಪಿಸಿತು. ಅವರಿಗೆ ಹಲವು ಬಾರಿ ವಾಂತಿಯಾಯಿತು. ಡಾಕ್ಟರ್ ಇಂಜೆಕ್ಷನ್ ಕೊಟ್ಟರು. ಆಸ್ಪತ್ರೆಯಲ್ಲಿ ಔಷಧಿಗಳು ಇರಲಿಲ್ಲ. ಡಾಕ್ಟರ್ ಹೇಳಿದರು -"ಇವರಿಗೆ ಲಕ್ವಾ ಹೊಡೆದಿದೆ" ಹೃದಯದ ಕಾಯಿಲೆ ಮೊದಲೇ ಇತ್ತು. ನಾವು ಕಟಿಹಾರದಲ್ಲಿ ಉಳಿಯಲೇ ಬೇಕಾಯ್ತು. ಮಾರನೆಯ ದಿನವೂ ಭಟ್ಟರ ಪರಿಸ್ಥಿತಿ ಹಾಗೆಯೇ ಇತ್ತು. ಕಣ್ಣು ಬಹಳ ಕಡಿಮೆ ತೆರೆಯುತ್ತಿದ್ದರು. ಒಮ್ಮೆ ಪ್ರಜ್ಞೆ ಬಂದರೆ ಮರುಗಳಿಗೆ ಪ್ರಜ್ಞೆ ತಪ್ಪುತ್ತಿದ್ದರು. ಇದನ್ನು ಕಂಡು ನನ್ನ ಹೃದಯ ವಿಲವಿಲ ಒದ್ದಾಡಿತು. 1930ರಲ್ಲಿ ಈ ತರುಣ ಹಡುಗು ಏರಿದ್ದ ನೆನಪು ನನಗೆ ಕಾಡತೊಡಗಿತು. ಮತ್ತ ಎಣಿಸಿದೆ. ಈ ಕಳೆದ 18 ವರ್ಷಗಳಲ್ಲಿ ಈತ ಎಷ್ಟೊಂದು ಜ್ಞಾನ, ಅನುಭವವನ್ನು ಗಳಿಸಿದ-ಇಂಥವನು ಆತನ ದೇಶಕ್ಕೆ ಎಷ್ಟೊಂದು ಅಗತ್ಯವಿತ್ತು; ಅವನ್ನೆಲ್ಲಾ ಆತ ತನ್ನೊಂದಿಗೇ ಕೊಂಡೊಯ್ದು ಬಿಡುತ್ತಾನೆಯೆ! |
25 ಫೆಬ್ರವರಿ ಡಾ| ಸೂದ್ ಮತ್ತು ಡಾ| ಕುಂಡೂರವರು ಭಟ್ಟರನ್ನು ಪರೀಕ್ಷಿಸಿದರು. ಇಬ್ಬರೂ ಔಷಧಿ ಬರೆದು ಕೊಟ್ಟರು. ಮತ್ತೆ ಅವರು ಹೇಳಿದರು. ಯಾರಾದರೂ ಡಾಕ್ಟರೊಂದಿಗೆ ತಾವು ಪ್ರಯಾಣಿಸಬಹುದು. ಕಟಿಹಾರದಲ್ಲಿ ಡಾಕ್ಟರ್ ಶ್ರೀ ಕಾಲೀ ಪ್ರಸಾದ್ ದಾಸ್ ಸಂತೋಷದಿಂದ ನಮ್ಮೊಂದಿಗೆ ಬರಲು ಒಪ್ಪಿದರು. ಕಟಿಹಾರದಲ್ಲಿದ್ದರೂ ಪರಿಸ್ಥಿತಿಯಲ್ಲಿ ಸುಧಾರಣೆಯಾಗುವ ಸಾಧ್ಯತೆಯಿರಲಿಲ್ಲ. ಮೊದಲ ದಿನ ಮೂರು ಬಾರಿ ಕಿತ್ತಳೆ ರಸ ಅವರಿಗೆ ಕೊಡಲಾಯಿತು. ಮೂರು ಬಾರಿ ಅವರು ವಾಂತಿ ಮಾಡಿಕೊಂಡರು. ಕೇವಲ ಗ್ಲೂಕೋನ್ ಇಂಜೆಕ್ಷನ್‍ನಿಂದ ಮಾತ್ರ ಅವರ ಶರೀರದಲ್ಲಿ ಶಕ್ತಿ ಇರುವಂತೆ ಇಡಬಹುದಾಗಿತ್ತು. 26 ಫೆಬ್ರವರಿ ಸಂಜೆ ಕತ್ತಲಾಗುತ್ತಿದ್ದಂತೆ ನಾವು ಪ್ರಯಾಗ ತಲುಪಿದೆವು. ಮೊದಲೇ ತಂತಿ ಕಳಿಸಿದ್ದೆವು. ರಾಮಬಾಗ್ ಸ್ಟೇಶನ್ ಬಳಿ ಆಸ್ಪತ್ರೆಯ ಎಂಬುಲೆನ್ಸ್ ಕಾರ್ ನಿಂತಿತ್ತು. ಅವರನ್ನು ಮೋತಿಲಾಲ್ ಮೆಮೊರಿಯಲ್ ಆಸ್ಪತ್ರೆಗೆ ಕೊಂಡೊಯ್ದೆವು. ಡಾ| ಪಾರ್ಟರ್‍ಕರ್ ಚೆನ್ನಾಗಿ ಪರೀಕ್ಷಿಸಿದರು. ಒಳ್ಳೆಯ ಆಸ್ಪತ್ರೆ, ಒಳ್ಳೆಯ ಡಾಕ್ಟರ್ ಮತ್ತು ನರ್ಸ್‍ಗಳನ್ನು ಕಂಡು ನಮಗೆ ಸಂತೋಷವಾಯಿತು. ಆದರೆ, ಭಟ್ಟರ ಸ್ಥಿತಿ ಈಗಲೂ ಚಿಂತಾಜನಕವಾಗಿತ್ತು. ಎಷ್ಟೊ ದಿನಗಳ ನಂತರ ಅವರು ಸಾವಿನ ದವಡೆಯಿಂದ ಪಾರಾಗಿ ಬಂದರು; ಆದರೆ, ಲಕ್ವಾದ ಪ್ರಭಾವ ಏನಿತ್ತೊ ಅದು ಒಂದು ವರ್ಷ ಅವರನ್ನು ಕಾಡಿಸಿತು. |
ನಾನು ಮತ್ತೆ ಮತ್ತೆ ಪ್ರಯಾಗದಲ್ಲಿ ಇರಲಾರದಾದೆ. 'ಸಮ್ಮೇಳನ'ದ ಅಧಿಕಾರಿಗಳು, ವಿಶೇಷವಾಗಿ ಟಂಡನ್ ಅವರು, ರಾಮ್‍ಚರಣಲಾಲ್, ಡಾ| ಉದಯನಾರಾಯಣ ತಿವಾರಿ ಭಟ್ಟರ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದರು. ಕೆಲವು ತಿಂಗಳ ನಂತರ ಆಸ್ಪತ್ರೆಯವರು ಇವರನ್ನು ಇನ್ನೂ ಇಲ್ಲಿ ಇಟ್ಟುಕೊಳ್ಳುವುದು ಸಾಧ್ಯವಿಲ್ಲವೆಂದರು. ಅಪಾಯದಿಂದ ಅವರ ಹೊರಬಂದಿದ್ದಾರೆ. ಶಕ್ತಿ ಸಾಮರ್ಥ್ಯ ಪಡೆಯಲು ಅವರಿಗೆ ಇನ್ನು ಕೆಲವು ತಿಂಗಳುಗಳು ಬೇಕು. ಅದು ನಮ್ಮ ಆಸ್ಪತ್ರೆಯಲ್ಲಿ ಸಾಧ್ಯವಿಲ್ಲ. ದೊಡ್ಡ ಚಿಂತೆ ಹುಟ್ಟಿಕೊಂಡಿತು. ಭಟ್ಟರನ್ನು ಎಲ್ಲಿ ಕೊಂಡೊಯ್ಯುವುದು? ನಾನು ಸದ್ಯ ಮಸೂರಿಯಲ್ಲಿದ್ದೆ. ಮಸೂರಿ 6ಳಿ ಸಾವಿರ ಅಡಿ ಎತ್ತರದ ಪ್ರದೇಶ; ಅವರ ಕಾಯಿಲೆಗೆ ಪ್ರತಿಕೂಲ ಹವಾಮಾನವೆಂದು ಹೇಳುತ್ತಿದ್ದರು. ಹಾಗಾಗಿ ನಾನು ನನ್ನ ಮಿತ್ರನನ್ನು ನನ್ನ ಬಳಿ ಇರಿಸಿಕೊಳ್ಳದಾದೆ. ಟಂಡನ್ ಕಾರ್ಯದರ್ಶಿಯವರಿಗೆ ಪತ್ರ ಬರೆದರು ಅಂತೂ ಅವರನ್ನು ಅಲ್ಲಿ ಉಳಿಸಿಕೊಳ್ಳಲಾಯಿತು. |
ಅದೇ ವರ್ಷ (1951) ಮಿತ್ರರಿಂದ ಪತ್ರ ಬರುತ್ತಿತ್ತು. ಸಾಹಿತ್ಯ ಸಮ್ಮೇಳನವೂ ಸರಿಯಾಗಿ ಸಂಬಳ ವಿತರಿಸುತ್ತಿರಲಿಲ್ಲ. ನಾನು ಚಡಪಡಿಸುತ್ತಿದ್ದೆ. ಯಾವ ಕಾರ್ಯದರ್ಶಿ ಬಳಿ ರೇಡಿಯೊ ಇತ್ತೊ ಅದು ಭಟ್ಟರ ಪ್ರದೇಶದ್ದೇ ಆಗಿತ್ತು. ಅದರಲ್ಲಿ ನಾನು ಹೀಗೆ ಹೇಳಿದೆ – "ಜಗತ್ತಿನ ಎಷ್ಟೊ ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತ ಕಲಿಸಲ್ಪಡುತ್ತಿದೆ. ಭಾರತದಲ್ಲಿ ಸಂಸ್ಕೃತ ಅದ್ಭುತವಾಗಿದೆ. ಅದನ್ನು ತಿಳಿಯಲು ಜನ ಉತ್ಸುಕರಾಗಿದ್ದಾರೆ. ತಾವು ರೆಡಿಯೋದಲ್ಲಿ ಸಂಸ್ಕೃತದ ಕಾರ್ಯಕ್ರಮ ಇಟ್ಟುಕೊಳ್ಳಬೇಕು. ಅಂತೆಯೇ ಈ ಕೆಲಸಕ್ಕೆ ಭಟ್ಟರಿಗೆ ಅದ್ಭುತ ಯೋಗ್ಯತೆಯಿದೆ". ಹೀಗೆ ಹೇಳಿ ನಾನು ಏನಾದರೂ ಆಗುತ್ತದೆ; ಯಾರಾದರೂ ಏನಾದರೂ ಸಹಾಯ ಮಾಡಿಯಾರು ಎಂದುಕೊಂಡೆ. ಆದರೆ, ಭಟ್ಟರಂಥಹ ಅನರ್ಘ್ಯ ರತ್ನ ಈ ನಮ್ಮ ಸ್ವತಂತ್ರ ಭಾರತದಲ್ಲಿ ಒಂದು ಕವಡೆ ಕಾಸಿಗೂ ಬೆಲೆ ಬಾಳಲಿಲ್ಲ. ಕೊನೆಗೂ ಭಟ್ಟರು ಎಲ್ಲಿಗೆ ಹೋದರು. ವರ್ಷಗಟ್ಟಳೆ ಅವರ ಸುಳಿವೇ ಸಿಗಲಿಲ್ಲ. ಮತ್ತೆ ಮತ್ತೆ ನನ್ನ ಎದೆಯಲ್ಲಿ ಮುಳ್ಳಿನಂತೆ ಚುಚ್ಚಿ ಚುಚ್ಚಿ ಭಟ್ಟರ ವಿಚಾರ ನೋವನ್ನುಂಟು ಮಾಡುತ್ತಿದೆ. |
ದೊಡ್ಡ ಮಧುರೆ ಕೆರೆಗೆ ಗಂಗಾಪೂಜೆ | Sanjevani |
Home ಜಿಲ್ಲೆ ತುಮಕೂರು ದೊಡ್ಡ ಮಧುರೆ ಕೆರೆಗೆ ಗಂಗಾಪೂಜೆ |
ದೊಡ್ಡ ಮಧುರೆ ಕೆರೆಗೆ ಗಂಗಾಪೂಜೆ |
ಕುಣಿಗಲ್, ನ. ೧೦- ಎರಡು ದಶಕದ ನಂತರ ದೊಡ್ಡ ಮಧುರೆ ಕೆರೆ ಹೇಮಾವತಿ ನೀರಿನಿಂದ ತುಂಬಿ ಕೋಡಿ ಸಂದರ್ಭದಲ್ಲಿ ಗ್ರಾಮಸ್ಥರು ಗ್ರಾಮದೇವತೆ ಹಬ್ಬದ ರೀತಿಯಲ್ಲಿ ಗಂಗಾ ಪೂಜೆ ನೇರವೇರಿಸಿ ಸಂಭ್ರಮಿಸಿದರು. |
ತಾಲ್ಲೂಕಿನ ದೊಡ್ಡ ಮಧುರೆ ಕೆರೆಗೆ ಹೇಮಾವತಿ ನಾಲೆ ನಿರ್ಮಾಣವಾಗಿ ೨೦ ವರ್ಷ ಕಳೆದರೂ ಹೇಮಾವತಿ ನೀರು ಹರಿಯದೇ ಕೆರೆ ಬತ್ತಿ ಹೋಗಿತ್ತು. ಇದರಿಂದ ಕೃಷಿ ಹಾಗೂ ಜನ, ಜಾನವಾರುಗಳಿಗೂ ಕುಡಿಯುವ ನೀರಿಲ್ಲದೆ ಪರದಾಟವಾಗಿತ್ತು. ಕೆರೆಗೆ ನೀರು ಹರಿಸಲು ಗ್ರಾಮಸ್ಥರು ಹೋರಾಟ ನಡೆಸಿದ್ದರು. ನೀರು ಹರಿಸುವುದಾಗಿ ಶಾಸಕರು ಮಾತು ಕೊಟ್ಟಿದ್ದರು. |
ಶಾಸಕ ಡಾ.ರಂಗನಾಥ್ ಹೇಮಾವತಿ ನಾಲಾ ವಲಯದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ತುರುವೇಕರೆ ಹಾಗೂ ಗುಬ್ಬಿ ತಾಲ್ಲೂಕಿನ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಡಿ ೨೬ ನಾಲೆಯ ಬಳಿ ದೊಡ್ಡ ಮಧುರೆ ಕೆರೆಗೆ ನೀರು ಹರಿಯುವ ಗೇಟ್‌ನ್ನು ತೆಗೆಸಿ ನೀರು ಹರಿಸಿದರು. ಇದರಿಂದ ಈಗ ದೊಡ್ಡ ಮಧುರೆ ಕೆರೆ ತುಂಬಿ ಕೋಡಿಯಾಗಿದೆ. ಇದರ ಜತೆಗೆ ಎಡೆಯೂರು ಹೋಬಳಿಯ ೧೪ ಸಾಲು ಕೆರೆಗಳು ಕೂಡ ಹೇಮಾವತಿ ನೀರಿನಿಂದ ಭರ್ತಿಯಾಗಿವೆ. |
ದೊಡ್ಡ ಮಧುರೆ ಕೆರೆ ಕೋಡಿಯಾಗಿರುವುದು ಗ್ರಾಮಸ್ಥರ ಸಂಭ್ರಮಕ್ಕೆ ಪಾರವೆ ಇಲ್ಲದಂತಾಗಿದೆ. ದೊಡ್ಡ ಮಧುರೆ ಗ್ರಾಮವು ಗ್ರಾಮದೇವತೆ ಹಬ್ಬದಂತೆ ಸಿಂಗಾರಗೊಂಡಿತ್ತು. ಹೇಮಾವತಿ ನೀರು ಹರಿಸಿ ಕೆರೆ ತುಂಬಲು ಶ್ರಮಿಸಿದ ಶಾಸಕ ಡಾ.ರಂಗನಾಥ್ ಗಂಗಾಪೂಜೆಗೆ ಅಗಮಿಸುತ್ತಿದ್ದಂತೆ ಗ್ರಾಮದ ಹೊರ ಭಾಗದಿಂದ ವಿವಿಧ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ಕೆರೆಯ ಏರಿಗೆ ಕರೆತರಲಾಯಿತು. ನಂತರ ಶಾಸಕರು ಗಂಗಾಪೂಜೆ ನೆರವೇರಿಸಿದರು. |
ನಂತರ ಗ್ರಾಮದೇವತೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಗ್ರಾಮಸ್ಥರೇ ಸ್ವತಃ ಖರ್ಚಿನಿಂದ ಅಕ್ಕಪಕ್ಕದ ಗ್ರಾಮದ ಜನತೆಗೂ ೧೬ ಮರಿ ಕಡಿದು ಭರ್ಜರಿ ಬಾಡೂಟ ಹಾಕಿಸಿದರು. |
ಗಂಗಾಪೂಜೆ ನೆರವೇರಿಸಿದ ನಂತರ ಶಾಸಕ ಡಾ.ರಂಗನಾಥ್ ಮಾತನಾಡಿ, ೨೦ ವರ್ಷದಿಂದ ಕೆರೆಗೆ ಹೇಮಾವತಿ ನೀರು ಹರಿಯದಿರುವುದು ಗ್ರಾಮಸ್ಥರಿಂದ ವಿಷಯ ತಿಳಿಯಿತು. ಅಧಿಕಾರಿಗಳ ಮೇಲೆ ಒತ್ತಡ ತಂದು ಹೇಮಾವತಿ ನೀರು ಹರಿಸಲಾಗಿದೆ ಎಂದರು. |
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಅವರ ಸಹಕಾರದಿಂದ ಹೇಮಾವತಿ ನಾಲೆ ಹೂಳೆತ್ತುವ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿಕೊಟ್ಟಿದ್ದರಿಂದ ಕುಣಿಗಲ್ ತಾಲ್ಲೂಕಿನ ಎಡೆಯೂರು ಹೋಬಳಿಯ ೧೪ ಕೆರೆಗೆಳಿಗೆ ಇದೇ ಪ್ರಥಮ ಬಾರಿಗೆ ಹೇಮಾವತಿ ನೀರು ಹರಿಸಿ ಕೆರೆ ತುಂಬಿಸಲಾಗಿದೆ. ರೈತರಿಗೆ ನೀರು ಎಷ್ಟು ಮುಖ್ಯ ಎನ್ನುವುದು ಕೆರೆ ತುಂಬಿರುವ ಖುಷಿಯನ್ನು ಗ್ರಾಮಸ್ಥರು ಸಂಭ್ರಮಿಸಿರುವುದನ್ನು ಕಂಡು ನನಗೆ ತಿಳಿಯುತ್ತಿದೆ ಎಂದರು. |
ಕುಣಿಗಲ್ ತಾಲ್ಲೂಕು ಪಾಲಿನ ನೀರು ಹರಿದರೆ ತಾಲ್ಲೂಕಿನ ಬಹುತೇಕ ಕೆರೆಗಳು ಭರ್ತಿಯಾಗಲಿವೆ. ಇದಕ್ಕೆ ಲಿಂಕ್ ಕೆನಾಲ್ ಯೋಜನೆ ಜಾರಿಯಾದರೆ ಮಾತ್ರ ಸಾಧ್ಯವಾಗಲಿದೆ ಎಂದ ಅವರು, ಇಚ್ಛಾಶಕ್ತಿ ಇದ್ದರೆ ಮಾತ್ರ ಕೆರೆಗಳಿಗೆ ನೀರು ಹರಿಸುವ ಕೆಲಸ ಮಾಡಲು ಸಾಧ್ಯವಾಗಲಿದೆ. ಹಿಂದಿನ ಶಾಸಕರು ಮತ್ತು ತಾಲ್ಲೂಕಿನ ರಾಜಕಾರಣಿಗಳು ಎಡೆಯೂರು ಹೋಬಳಿ ಕೆರೆಗಳಿಗೆ ಏಕೆ ನೀರು ಹರಿಸುವ ಪ್ರಯತ್ನ ಮಾಡಲಿಲ್ಲ ಎಂದು ವಿರೋಧಿಗಳಿಗೆ ಪ್ರಶ್ನಿಸಿದರು. |
ಇಂದಿನಿಂದ ತಾಲ್ಲೂಕಿನ ಬೇಗೂರು ಕೆರೆಗೂ ಹೇಮಾವತಿ ನೀರು ಹರಿಸಲಾಗುತ್ತದೆ. ನಾಲೆ ನಿರ್ಮಾಣವಾಗದಿದ್ದರೂ ಪೈಪ್‌ಗಳ ಮೂಲ ನೀರು ಹರಿಸಲಾಗುತ್ತಿದೆ ಎಂದು ತಿಳಿಸಿದರು. |
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ, ಯುವ ಕಾಂಗ್ರೆಸ್ ಅಧ್ಯಕ್ಷ ಲೋಹಿತ್‌ಗೌಡ, ಗ್ರಾ.ಪಂ. ಚಂದ್ರ ಮಾಯಗೋನಹಳ್ಳಿ ಮತ್ತಿತರರು ಉಪಸ್ಥಿತರಿದ್ದರು. |
ಶರಣರ ಪ್ರತಿರೂಪವೇ ಡಾ.ಚನ್ನಬಸವ ಪಟ್ಟದ್ದೇವರು | Prajavani |
ಶರಣರ ಪ್ರತಿರೂಪವೇ ಡಾ.ಚನ್ನಬಸವ ಪಟ್ಟದ್ದೇವರು |
Published: 01 ಡಿಸೆಂಬರ್ 2017, 12:32 IST |
Updated: 01 ಡಿಸೆಂಬರ್ 2017, 12:32 IST |
ಕಮಲನಗರ: 'ಜಾತಿ, ಧರ್ಮ ರಹಿತ ಸಮಾಜ ನಿರ್ಮಾಣಕ್ಕಾಗಿ 12ನೇ ಶತಮಾನದಲ್ಲಿ ನಡೆದ ವೈಚಾರಿಕ ಕ್ರಾಂತಿಯನ್ನು 21ನೇ ಶತಮಾನದಲ್ಲಿ ಮುಂದುವರಿಸಿದ ಲಿಂಗೈಕ್ಯ ಡಾ.ಚನ್ನಬಸವ ಪಟ್ಟದ್ದೇವರು, ಬಸವಣ್ಣ ಹಾಗೂ ಅಲ್ಲಂಪ್ರಭುದೇವರ ಪ್ರತಿರೂಪದ ಮಹಾನ್ ಸಂತರಾಗಿದ್ದರು' ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಹೇಳಿದರು. |
ಇಲ್ಲಿನ ಹಿರೇಮಠ ಸಂಸ್ಥಾನದ ಶಾಖಾ ಮಠದಲ್ಲಿ ಲಿಂಗೈಕ್ಯ ಡಾ.ಚನ್ನಬಸವ ಪಟ್ಟದ್ದೇವರ 128ನೇ ಜಯಂತಿ ನಿಮಿತ್ತ ಹೊರಡುವ 'ಬಸವ ಸಂದೇಶ ಪಾದಯಾತ್ರೆ' ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. |
'ಉರ್ದು ಮತ್ತು ಮರಾಠಿ ಭಾಷೆಗಳ ಪ್ರಾಬಲ್ಯಕ್ಕೆ ಸಿಲುಕಿದ ಗಡಿಭಾಗದ ಕನ್ನಡಕ್ಕೆ ಮರುಜೀವ ತುಂಬಿದ ಲಿಂಗೈಕ್ಯ ಡಾ.ಚನ್ನಬಸವ ಪಟ್ಟದ್ದೇವರು, ಸಮಾಜದಲ್ಲಿನ ಅಶಕ್ತರಿಗೆ ಅಕ್ಷರ ದಾಸೋಹದ ಜತೆಗೆ ಅನ್ನ ದಾಸೋಹವನ್ನು ಕರುಣಿಸಿ ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿದ ಮಹಾನ ಚೇತನರಾಗಿದ್ದರು' ಎಂದರು. |
ಸಾನಿಧ್ಯ ವಹಿಸಿದ್ದ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, 'ಡಾ.ಚನ್ನಬಸವ ಪಟ್ಟದ್ದೇವರು ನುಡಿದಂತೆ ನಡೆದ ಶರಣರು. ಅವರ ಆದರ್ಶದ ಬದುಕಿನ ಜ್ಯೋತಿ ಎಲ್ಲರ ಅಂತರಂಗದಲ್ಲಿ ಬೆಳಗಲಿ ಎಂಬುದೆ ಬಸವಜ್ಯೋತಿ ಪಾದಯಾತ್ರೆಯ ಉದ್ದೇಶವಾಗಿದೆ' ಎಂದರು. |
ಶಾಸಕ ಪ್ರಭು ಚವಾಣ್ ಮಾತನಾಡಿ, 'ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಕಮಲನಗರದಲ್ಲಿ ಅಪೂರ್ಣ ಸ್ಥಿತಿಯಲ್ಲಿರುವ ಡಾ.ಚನ್ನಬಸವ ಪಟ್ಟದ್ದೇವರ ಸ್ಮಾರಕ ಭವನಕ್ಕೆ ಅಗತ್ಯವಿರುವ ಅನುದಾನ ಕಲ್ಪಿಸಿ ಪೂರ್ಣಗೊಳಿಸಲಾಗುವುದು' ಎಂದು ಭರವಸೆ ನೀಡಿದರು. |
ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಮಾತನಾಡಿ, 'ಸಕಲ ಜೀವಿಗಳ ಲೇಸನ್ನು ಬಯಸುವ ಬಸವತತ್ವವು, ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಇದು ಕೇವಲ ಲಿಂಗಾಯತರಿಗೆ ಮಾತ್ರ ಸೀಮಿತವಲ್ಲ' ಎಂದು ಅಭಿಪ್ರಾಯಪಟ್ಟರು. |
ಕಂಠೀರವ ಸ್ಟುಡಿಯೊ ನಿಗಮದ ಅಧ್ಯಕ್ಷೆ ಮೀನಾಕ್ಷಿ ಸಂಗ್ರಾಮ ಮಾತನಾಡಿ, 'ವಚನ ಸಾಹಿತ್ಯದಲ್ಲಿ ಭಕ್ತಿ, ಅನುಭವ ಜ್ಞಾನ, ದಲಿತರ ಸಂವೇದನೆ, ಸ್ತ್ರೀ ಸ್ವಾತಂತ್ರ್ಯದ ಧ್ವನಿ, ಕಾಯಕದ ಹಿರಿಮೆ, ದಾಸೋಹದ ಮಹಿಮೆ ಅಡಗಿದ್ದು, ವಚನಗಳ ಸಾರವನ್ನು ಎಲ್ಲರೂ ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು' ಎಂದರು. ಪಾದಯಾತ್ರೆಯಲ್ಲಿ ಕರ್ನಾಟಕ, ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯದಿಂದ ಭಕ್ತರೂ ಪಾಲ್ಗೊಂಡಿದ್ದರು. |
ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೇವರು, ಮಹಾದೇವಮ್ಮ ತಾಯಿ, ಜಿಲ್ಲಾ ಪಂಚಾಯಿತಿ ಸದಸ್ಯ ಬಾಬುಸಿಂಗ್ ಹಜಾರಿ, ಮಾರುತಿರಾವ ಚವಾಣ್, ಮುಖಂಡ ಪ್ರಕಾಶ ಟೊಣ್ಣೆ, ಶರಣೆ ಶಕುಂತಲಾ ಬೆಲ್ದಾಳ್, ಬಾಬುವಾಲಿ, ಶರಣಪ್ಪಾ ಮಿಠಾರೆ, ಅಪ್ಪಾಸಾಬ್ ದೇಶಮುಖ್, ಲಿಂಗಾನಂದ ಮಹಾಜನ್, ಪ್ರೊ.ಎಸ್.ಎನ್.ಶಿವಣಕರ್, ರಾಜಕುಮಾರ ಬಿರಾದಾರ್, ಪ್ರಕಾಶ ಮಾನಕರಿ, ರಾಚಪ್ಪಾ ಪಾಟೀಲ ಇದ್ದರು. ಪ್ರೊ.ಮಲ್ಲಮ್ಮ ಪಾಟೀಲ ಸ್ವಾಗತಿಸಿದರು. ಸಂಜೀವಕುಮಾರ ಜುಮ್ಮಾ ನಿರೂಪಿಸಿದರು. |
ಪಾದಯಾತ್ರೆ: ಡಾ.ಬಸವಲಿಂಗ ಪಟ್ಟದ್ದೇವರ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆಯು ಕಮಲನಗರದಿಂದ ಆರಂಭಗೊಂಡು ಡಿಗ್ಗಿ, ಹೊಳಸಮುದ್ರ, ಸಾವಳಿ ಮೂಲಕ ಸಂಗಮ್ ಗ್ರಾಮ ತಲುಪಿ ವಾಸ್ತವ್ಯ ಮಾಡುವುದು. ಡಿಸೆಂಬರ್ 1 ರಂದು ಆಳಂದಿ, ಡೋಣಗಾಪುರ್ ಮೂಲಕ ಭಾಲ್ಕಿಯ ಚನ್ನಬಸವಾಶ್ರಮ ತಲುಪಲಿದೆ ಎಂದು ಶರಣ ಶಶಿಧರ್ ಕೋಸಂಬೆ ತಿಳಿಸಿದ್ದಾರೆ. |
ಗುಂಡ್ಲುಪೇಟೆಯಲ್ಲಿ ಮತ ಎಣಿಕೆಗೆ ಸಕಲ ಸಿದ್ಧತೆ | All preparations made for Gundlupet by-poll votes counting - Kannada Oneindia |
» ಗುಂಡ್ಲುಪೇಟೆಯಲ್ಲಿ ಮತ ಎಣಿಕೆಗೆ ಸಕಲ ಸಿದ್ಧತೆ |
ಗುಂಡ್ಲುಪೇಟೆಯಲ್ಲಿ ಮತ ಎಣಿಕೆಗೆ ಸಕಲ ಸಿದ್ಧತೆ |
By: ಚಾಮರಾಜನಗರ ಸುದ್ದಿ |
Published: Wednesday, April 12, 2017, 23:02 [IST] |
ಚಾಮರಾಜನಗರ, ಏಪ್ರಿಲ್ 12: ಭಾರೀ ಕುತೂಹಲ ಕೆರಳಿಸಿರುವ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಫಲಿತಾಂಶ ಗುರುವಾ ಪ್ರಕಟವಾಗಲಿದ್ದು, ಮತ ಎಣಿಕೆಗಾಗಿ ಗುಂಡ್ಲುಪೇಟೆ ಪಟ್ಟಣದ ಸೆಂಟ್‍ಜಾನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಲ್ಲ ರೀತಿಯ ವ್ಯವಸ್ಥೆಯನ್ನು ಚುನಾವಣಾ ಆಯೋಗ ಮಾಡಿದೆ. |
ಮತಎಣಿಕೆ ನಡೆಯಲಿರುವ ಸ್ಥಳದಲ್ಲಿ 4 ಕೊಠಡಿಗಳಲ್ಲಿ ಪ್ರತಿ ಕೊಠಡಿಗೆ 4 ಟೇಬಲ್ಲಿನಂತೆ ಒಟ್ಟು 16 ಟೇಬಲ್‍ಗಳಲ್ಲಿ ಮತ ಎಣಿಕೆಗೆ ವ್ಯವಸ್ಥೆ ಮಾಡಲಾಗಿದೆ. ಪ್ರತಿಕೊಠಡಿಯಲ್ಲಿ ಎಣಿಕೆ ಕಾರ್ಯದ ಮೇಲ್ವಿಚಾರಣೆ ನಡೆಸಲು ಒಬ್ಬರು ಚುನಾವಣಾಧಿಕಾರಿ, ಒಬ್ಬರು ಸಹಾಯಕ ಚುನಾವಣಾಧಿಕಾರಿ, ಇಬ್ಬರು ಹೆಚ್ಚುವರಿ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ. |
ಮತ ಎಣಿಕೆ ಕಾರ್ಯಕ್ಕಾಗಿ ಪ್ರತಿ ಟೇಬಲ್‍ಗೆ ಒಬ್ಬರು ಮೇಲ್ವಿಚಾರಕರು, ಒಬ್ಬರು ಸಹಾಯಕ ಅಧಿಕಾರಿ ಹಾಗೂ ಒಬ್ಬರು ಮೈಕ್ರೋ ಅಬ್ಸರ್‍ವರ್ ಅವರನ್ನು ನೇಮಕ ಮಾಡಲಾಗಿದೆ. ಮೊದಲಿಗೆ ಅಂಚೆ ಮೂಲಕ ಸ್ವೀಕರಿಸಲಾಗಿರುವ ಮತ ಪತ್ರಗಳ ಎಣಿಕೆ ಕಾರ್ಯ ನಡೆಸಿ, ನಂತರ ಇವಿಎಂ ಯಂತ್ರಗಳ ಮತ ಎಣಿಕೆ ನಡೆಸಲಾಗುತ್ತದೆ. [ಉಪಚುನಾವಣೆ: ಮತ ಎಣಿಕೆಗೆ ಸಿದ್ಧವಾಯ್ತು ನಂಜನಗೂಡು] |
ಇನ್ನು ಮತ ಎಣಿಕೆ ಸಂದರ್ಭ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಇಬ್ಬರು ಡಿವೈಎಸ್ಪಿ, 8 ಇನ್ಸ್ಪೆಕ್ಟರ್, 24 ಪಿಎಸ್‍ಐ, 41 ಎಎಸೈ, 204 ಹೆಡ್‍ಕಾನ್‍ಸ್ಟೇಬಲ್, 93 ಗೃಹ ರಕ್ಷಕ ಸಿಬ್ಬಂದಿ ಜೊತೆಗೆ ಅರೆ ಸೇನಾ ಪಡೆಯ ತುಕಡಿ ಹಾಗೂ ಒಂದು ಸಾವಿರಕ್ಕೂ ಅಧಿಕ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. |
ಮತ ಎಣಿಕೆ ಹಿನ್ನಲೆಯಲ್ಲಿ ಬುಧವಾರ ಸಂಜೆ 6 ಗಂಟೆಯಿಂದ ಶುಕ್ರವಾರ ಬೆಳಗ್ಗೆ 6 ಗಂಟೆಯವರೆಗೆ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. |
ಇದಲ್ಲದೆ ಬುಧವಾರ ಮಧ್ಯರಾತ್ರಿ 12 ಗಂಟೆಯಿಂದ ಗುರುವಾರ ಮಧ್ಯರಾತ್ರಿ 12ರವರೆಗೆ ಒಣದಿನ ಘೋಷಣೆ ಮಾಡಲಾಗಿದ್ದು, ಮದ್ಯ ಮಾರಾಟ ಸಂಪೂರ್ಣ ನಿಷೇಧಿಸಲಾಗಿದೆ. |
ಈಗಾಗಲೇ ಸ್ಟ್ರಾಂಗ್ ರೂಂನಲ್ಲಿರುವ ಇವಿಎಂ ಮತ ಯಂತ್ರಗಳನ್ನು ಪೊಲೀಸ್ ಬಂದೋಬಸ್ತಿನಲ್ಲಿ ಮತ ಎಣಿಕೆ ಸ್ಥಳಕ್ಕೆ ತಂದು ಬೆಳಿಗ್ಗೆ 8ಗಂಟೆ ವೇಳೆಯಲ್ಲಿ ಅಭ್ಯರ್ಥಿಗಳ ಸಮ್ಮುಖದಲ್ಲಿ ತೆರೆಯಲಾಗುತ್ತದೆ. |
chamarajanagar, by election, gundlupet, voting, result, ಚಾಮರಾಜನಗರ, ಉಪ ಚುನಾವಣೆ, ಗುಂಡ್ಲುಪೇಟೆ, ಮತದಾನ, ಫಲಿತಾಂಶ |
Gundlupet by-election results will be announced on Wednesday. People of the state are curiously waiting for the result. District administration made all necessary arrangements for the counting. |
ಕಾವೇರಿ: ನೇಗಿಲು ಹೊತ್ತು ಪ್ರತಿಭಟನೆ | Prajavani |
ಕಾವೇರಿ: ನೇಗಿಲು ಹೊತ್ತು ಪ್ರತಿಭಟನೆ |
ಮಂಡ್ಯ: ಕಾವೇರಿ ಉಸ್ತುವಾರಿ ಸಮಿತಿ (ಸಿಎಂಸಿ) ಅ. 16 ರಿಂದ 31ರೊಳಗೆ, ಬಿಳಿಗುಂಡ್ಲುವಿಗೆ 8.85 ಟಿಎಂಸಿ ಅಡಿ ನೀರು ಹರಿಸಬೇಕು ಎಂದು ಹೇಳಿರುವುದನ್ನು ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನೇಗಿಲನ್ನು ಮೈಮೇಲೆ ಹೊತ್ತು ಉಳುಮೆ ಮಾಡುವ ಅಣುಕು ಪ್ರದರ್ಶನ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. |
ಅಲ್ಲದೆ, ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು, ಕಾಲೇಜಿನಿಂದ ಧರಣಿ ಸ್ಥಳದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಮೊಳಗಿಸಿ ಆಕ್ರೋಶ ವ್ಯಕ್ತಪಡಿಸಿದರು. |
ಜೆಡಿಎಸ್ ಮುಖಂಡ ಜಫ್ರುಲ್ಲಾಖಾನ್ ನೇತೃತ್ವದಲ್ಲಿ ನೂರಾರು ಮುಸ್ಲಿಂಮರು ಜಾಥಾ ನಡೆಸಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಬಳಿಕ ಧರಣಿಯಲ್ಲಿ ಪಾಲ್ಗೊಂಡರು. |
ತಾಲ್ಲೂಕಿನ ಗೋಪಾಲಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಚ್.ಕೋಡಿಹಳ್ಳಿ, ಚನ್ನೇಗೌಡನ ನಗರ ಹಾಗೂ ಫಾರ್ಮ್‌ನ ಗ್ರಾಮಸ್ಥರು, ದ್ವಿಚಕ್ರ ವಾಹನಗಳ ದುರಸ್ತಿಗಾರರ ಸಂಘ, ಮಂಡ್ಯ ನಗರ ಆಟೋ ಕನ್ಸಲ್‌ಟೆಂಟ್ ಮಾಲೀಕರ ಹಾಗೂ ಡೀಲರ್ಸ್‌ಗಳ ಸಂಘ, ಗ್ರಾಮೀಣ ಅಂಗವಿಕಲರ ಪುನರ್ವಸತಿ ಮತ್ತು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರ ಜಿಲ್ಲಾ ಒಕ್ಕೂಟ ಹಾಗೂ ದ್ವಿಚಕ್ರ ವಾಹನಗಳ ಮಾರಾಟಗಾರರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು. |
ಸರದಿ ಉಪವಾಸ: ಕಾವೇರಿ ವನ ಮುಂಭಾಗ ನಡೆಯುತ್ತಿರುವ ಸರದಿ ಉಪವಾಸ ಸತ್ಯಾಗ್ರಹದಲ್ಲಿ ಶುಕ್ರವಾರ ಶಂಭೂನಹಳ್ಳಿ ಕೃಷ್ಣ, ಚಾಮಲಾಪುರ ಯೋಗೇಶ್, ಹಳುವಾಡಿ ಕೃಷ್ಣ, ಬೋರೇಗೌಡ ಹುನಗನಹಳ್ಳಿ, ಬಿ.ದೊರೆಸ್ವಾಮಿ ಮತ್ತು ಸಿದ್ದರೂಢ ಸತೀಶ್‌ಗೌಡ ಪಾಲ್ಗೊಂಡಿದ್ದರು. |
ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನಾ ಧರಣಿ 29ನೇ ದಿನಕ್ಕೂ ಮತ್ತು ಸರದಿ ಉಪವಾಸ ಸತ್ಯಾಗ್ರಹ 9ನೇ ದಿನವೂ ನಡೆಯಿತು. |
`ರೈತರು ಆತಂಕ ಪಡುವ ಅಗತ್ಯವಿಲ್ಲ~ |
ಮಂಡ್ಯ: ಕಾವೇರಿ ಉಸ್ತುವಾರಿ ಸಮಿತಿಯು ಸಲಹೆ ನೀಡಿರುವಂತೆ 8.85 ಟಿಎಂಸಿ ಅಡಿ ನೀರು ಬಿಡುವ ವಿಷಯದಲ್ಲಿ ರೈತರು ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಕೆಪಿಸಿಸಿ ಸದಸ್ಯ ಟಿ.ಎಸ್. ಸತ್ಯಾನಂದ ಹೇಳಿದರು. |
ಪ್ರಸ್ತುತ ಪರಿಸ್ಥಿತಿಯಲ್ಲಿಯೂ ಪ್ರತಿದಿನ ಬಿಳಿಗುಂಡ್ಲು ಮೂಲಕ 5 ಸಾವಿರ ಕ್ಯೂಸೆಕ್ ಹರಿದು ಹೋಗುತ್ತಿದೆ. ತಮಿಳುನಾಡಿನಲ್ಲಿ ಮಳೆ ಆರಂಭವಾಗಿರುವುದರಿಂದ ನಮ್ಮ ಜಲಾಶಯಗಳಿಂದ ನೀರು ಬಿಡುವ ಪ್ರಮೇಯ ಬರುವುದಿಲ್ಲ ಎಂದು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು. |
ಸುಪ್ರೀಂಕೋರ್ಟ್‌ನಲ್ಲಿ ರಾಜ್ಯ ಸರ್ಕಾರವು ಸಲ್ಲಿಸಿರುವ ಅರ್ಜಿಯಲ್ಲಿ ಅ.1 ರಿಂದ ಜ.31ರ ವರೆಗೆ 38 ಟಿಎಂಸಿ ಅಡಿ ನೀರನ್ನು ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ ಹರಿದು ಹೋಗುವುದನ್ನು ಖಾತ್ರಿ ಪಡಿಸುವುದಾಗಿ ಹೇಳಿದೆ. ಸಮಿತಿ ಹೇಳಿದಂತೆ 24.5 ಟಿಎಂಸಿ ಅಡಿ ಮಳೆಯಿಂದಾಗಿ ಜಲಾಶಯಗಳ ಕೆಳಗಿನ ನೀರಿನಿಂದಲೇ ಹರಿದು ಹೋಗಲಿದೆ ಎಂದರು. |
ಪರಿಣಾಮ ಸಮಿತಿ ನೀಡಿರುವ ಸಲಹೆಯೂ ಕರ್ನಾಟಕದ ಪಾಲಿಗೆ ವರವಾಗಿದೆ. ಸಮಿತಿ ಕೇವಲ ಸಲಹೆಯನ್ನು ಮಾತ್ರ ನೀಡಿದೆ. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ಅಧಿಕಾರ ತಮಿಳುನಾಡಿಗೂ ಇಲ್ಲ. ಈ ಕುರಿತು ಅಂತಿಮ ತೀರ್ಮಾನವನ್ನು ಪ್ರಾಧಿಕಾರವೇ ತೆಗೆದುಕೊಳ್ಳಬೇಕಿದೆ. ರಾಜ್ಯದ ವಾಸ್ತವ ಸ್ಥಿತಿಯ ಅರಿವಿರುವುದರಿಂದ ಪ್ರಧಾನಮಂತ್ರಿಗಳು ರಾಜ್ಯ ಹಿತ ಕಾಪಾಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. |
ಕಾವೇರಿ ಕಣಿವೆಯ ಯಾವುದೇ ಜಲಾಶಯದಿಂದಲೂ ನೀರು ಬಿಡುವುದಿಲ್ಲ ಎಂಬ ನಿರ್ಣಯಕ್ಕೆ ರಾಜ್ಯ ಸರ್ಕಾರ ಬದ್ಧವಾಗಿರಬೇಕು ಎಂದು ಆಗ್ರಹಿಸಿದರು. ನರಸಪ್ಪ ಹೆಗಡೆ, ವೈ.ಎನ್. ತಿಮ್ಮೇಗೌಡ, ಹೊನ್ನೇಶ ಎಂ.ಎಚ್. ಉಪಸ್ಥಿತರಿದ್ದರು. |
ಜಲನೀತಿಗೆ ರೈತರ ಒತ್ತಾಯ |
ಮದ್ದೂರು: ರಾಷ್ಟ್ರೀಯ ಜಲನೀತಿ ರೂಪಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತಸಂಘವು ಇಲ್ಲಿನ ಅಂಚೆ ಮತ್ತು ದೂರವಾಣಿ ಇಲಾಖೆ ಕಚೇರಿ ಎದುರು ನಡೆಸುತ್ತಿರುವ ಧರಣಿ ಸತ್ಯಾಗ್ರಹ ಶುಕ್ರವಾರ 3ನೇ ದಿನಕ್ಕೆ ಕಾಲಿಟ್ಟಿತು. |
ಬೆಳಿಗ್ಗೆಯಿಂದ ಸಂಜೆಯವರೆಗೆ ಧರಣಿ ನಡೆಸಿದ ಅವರು, ಸ್ಪಷ್ಟ ಜಲನೀತಿ ರೂಪಿಸುವ ವರೆಗೆ ನಿರಂತರ ಧರಣಿ ನಡೆಸುವುದಾಗಿ ಘೋಷಿಸಿದರು. |
ರೈತಸಂಘದ ಜಿಲ್ಲಾಧ್ಯಕ್ಷ ಕೋಣಸಾಲೆ ನರಸರಾಜು ಮಾತನಾಡಿ, ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಹಿಂದಿನಿಂದಲೂ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ. ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ ತಮಿಳುನಾಡು ಹೆಚ್ಚುವರಿ ನೀರಿಗಾಗಿ ಕ್ಯಾತೆ ತೆಗೆದಿದೆ. ಹೀಗಾಗಿ ಎಲ್ಲರಿಗೂ ಸಮ್ಮತವಾಗುವ ಸ್ಪಷ್ಟ ರಾಷ್ಟ್ರೀಯ ಜಲನೀತಿ ರೂಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು. |
ರೈತಸಂಘದ ವಿಭಾಗೀಯ ಕಾರ್ಯದಶಿ ಯರಗನಹಳ್ಳಿ ರಾಮಕೃಷ್ಣಯ್ಯ, ನಾಗಮಂಗಲ ಕ್ಷೇತ್ರ ಅಧ್ಯಕ್ಷ ಕೀಳಘಟ್ಟನಂಜುಂಡಯ್ಯ, ಮುಖಂಡರಾದ ಚಂದ್ರು, ಸೀತರಾಮು, ವರದಯ್ಯ, ವೆಂಕಟೇಶ್, ಕೃಷ್ಣ, ಅಪ್ಪಾಜಿ, ಚೆಲುವೇಗೌಡ, ಗಿರಿಯಪ್ಪ, ದುಂಡೇಗೌಡ, ರಾಮಲಿಂಗಯ್ಯ, ಎ.ಸಿ.ಮಾದೇಗೌಡ, ನದೀಂ, ಜಿ.ಅಶೋಕ್, ಅಜ್ಜಹಳ್ಳಿ ಮಾದೇಗೌಡ, ಮಹೇಂದ್ರ ಭಾಗವಹಿಸಿದ್ದರು. |
ಸಿಎಂಸಿ ಸೂಚನೆಗೆ ವಿರೋಧ |
ಕೃಷ್ಣರಾಜಪೇಟೆ: ತಮಿಳುನಾಡಿಗೆ 8.85 ಸಾವಿರ ಕ್ಯುಸೆಕ್ ನೀರು ಬಿಡುವಂತೆ ಆದೇಶಿಸಿರುವ ಕಾವೇರಿ ಉಸ್ತುವಾರಿ ಸಮಿತಿಯ (ಸಿಎಂಸಿ) ಕ್ರಮವನ್ನು ವಿರೋಧಿಸಿ ತಾಲ್ಲೂಕು ವಕೀಲರ ಸಂಘದ ವತಿಯಿಂದ ಶುಕ್ರವಾರ ನ್ಯಾಯಾಲಯದ ಕಲಾಪಗಳಿಂದ ದೂರ ಉಳಿದು ಪ್ರತಿಭಟನೆ ನಡೆಸಲಾಯಿತು. |
ಪಟ್ಟಣದ ಎಂ.ಕೆ.ಬೊಮ್ಮೇಗೌಡ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದರು. ಬಳಿಕ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ‌್ಯಾಲಿಯಲ್ಲಿ ಸಾಗಿದ ವಕೀಲರು ಮಿನಿ ವಿಧಾನಸೌಧ ತೆರಳಿ ಮನವಿ ಸಲ್ಲಿಸಿದರು. |
ವಕೀಲರ ಸಂಘದ ಉಪಾಧ್ಯಕ್ಷ ಬಿ.ಎಲ್.ದೇವರಾಜ್, ಕಾರ್ಯದರ್ಶಿ ಅನಂತರಾಮಯ್ಯ, ಮಾಜಿ ಅಧ್ಯಕ್ಷರಾದ ಬಿ.ಗಣೇಶ್, ಎಚ್.ರವಿ, ನ್ಯಾಯವಾದಿಗಳಾದ ಎಂ.ಆರ್.ಪ್ರಸನ್ನ ಕುಮಾರ್, ಪಿ.ಬಿ.ಮಂಜುನಾಥ್, ಸರೋಜಮ್ಮ, ಪಲ್ಲವಿ, ಕೆ.ಆರ್.ಮಹೇಶ್, ಸಿ.ಎನ್.ಮೋಹನ್ ಕುಮಾರ್, ಎಸ್.ಆರ್.ನವೀನ್ ಕುಮಾರ್, ಸಿ.ದಿನೇಶ್, ಪಾಂಡು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. |
ಕಾವೇರಿ ಚಳವಳಿಗೆ ತಾತ್ಕಾಲಿಕ ತೆರೆ |
ಶ್ರೀರಂಗಪಟ್ಟಣ: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುವುದನ್ನು ವಿರೋಧಿಸಿ ಪಟ್ಟಣದಲ್ಲಿ ನಡೆಯುತ್ತಿದ್ದ ಚಳವಳಿಯನ್ನು ಅ.19ರ ವರೆಗೆ ಮುಂದೂಡಲಾಗಿದೆ. |
ಪಟ್ಟಣದ ಕುವೆಂಪು ವೃತ್ತದಲ್ಲಿ ಶುಕ್ರವಾರ ನಡೆದ ಧರಣಿಯಲ್ಲಿ ಕಾವೇರಿ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಕೆ.ಎಸ್.ನಂಜುಂಡೇಗೌಡ ಈ ವಿಷಯ ತಿಳಿಸಿದರು. ಕಾವೇರಿ ನದಿ ನೀರು ಹಂಚಿಕೆ ಕುರಿತ ವಿಚಾರಣೆ ಅ.19ಕ್ಕೆ ಮುಂದೂಡಿರುವ ಹಿನ್ನೆಲೆಯಲ್ಲಿ ಸಮಿತಿ ಈ ತಿರ್ಮಾನ ಕೈಗೊಂಡಿದೆ. ಅ.19ರ ಬೆಳವಣಿಗೆ ನೋಡಿಕೊಂಡು ಮುಂದಿನ ನಿರ್ಧಾರ ಪ್ರಕಟಿಸಲಾಗುವುದು ಎಂದು ಅವರು ಹೇಳಿದರು. |
ತಾಲ್ಲೂಕಿನ ಅಚ್ಚಪ್ಪನಕೊಪ್ಪಲು ಗ್ರಾಮಸ್ಥರು ಶುಕ್ರವಾರ ಪಟ್ಟಣದ ಮುಖ್ಯ ಬೀದಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬೆಂಗಳೂರು- ಮೈಸೂರು ಹೆದ್ದಾರಿ ವೃತ್ತದಲ್ಲಿ ಧರಣಿ ದಿನಪೂರ್ತಿ ನಡೆಸಿದರು. ರೈತ ಸಂಘದ ತಾಲ್ಲೂಕು ಅಧ್ಯಕ್ಷ ಪಿ.ಕೆಂಪೇಗೌಡ, ನಂಜುಂಡಪ್ಪ, ಸಾರ್ವಜನಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡಿ.ಎಂ.ರವಿ, ಸಿ.ಸುರೇಶ್, ಶಿವಕುಮಾರ್, ದಿನೇಶ್, ಕರವೇ ಮುಖಂಡ ಸಿ.ಸ್ವಾಮಿಗೌಡ, ಕಸಾಪ ತಾಲ್ಲೂಕು ಅಧ್ಯಕ್ಷ ಪುರುಷೋತ್ತಮ ಭಾಗವಹಿಸಿದ್ದರು. |
ಶ್ವಾನ ಸ್ವರ್ಗಾರೋಹಣ | ವಾರ್ತೆ |
Home ಅಂಕಣಗಳು ಶ್ವಾನ ಸ್ವರ್ಗಾರೋಹಣ |
ಧರ್ಮರಾಯನ ಜೊತೆ ಸ್ವರ್ಗಕ್ಕೆ ಹೋದ ನಾಯಿಯ ಬಗ್ಗೆ ಮಹಾಭಾರತದಲ್ಲಿ ಓದಿದ್ದೇವೆ. ಮನುಷ್ಯನೇ ಬಲವಂತವಾಗಿ ನಾಯಿಯೊಂದನ್ನು ಸ್ವರ್ಗಕ್ಕೆ ಅಟ್ಟಿದ ಪ್ರಸಂಗ ಇಲ್ಲಿದೆ. ಸಾಧನೆ ಮಾಡಬೇಕೆಂಬ ತೆವಲು, ಎಲ್ಲಿರಿಗಿಂತ ಮುಂದೆ ನಾವೇ ನಿಲ್ಲಬೇಕೆಂಬ ಹಪಾಹಪಿ, ನಮ್ಮಿಂದ ಎಂತೆಂತಹ ಕೆಲಸಗಳನ್ನು ಮಾಡಿಸಿದೆ ಎನ್ನುವುದಕ್ಕೆ ಸಣ್ಣ ಉದಾಹರಣೆ – ಈ ಲೈಕಾ ನಾಯಿಯ ಸ್ವರ್ಗಾರೋಹಣದ ಕತೆ (2018ನೆ ಇಸವಿಯ ನವೆಂಬರ್ 3) ಈ ಕಥೆಗೆ ಇಂದಿಗೆ 59 ವರ್ಷ. |
1957ರ ಚಳಿಗಾಲ. ಅಮೆರಿಕ ಮತ್ತು ಸೋವಿಯೆಟ್ ರಷ್ಯದ ನಡುವೆ ಜಗತ್ತಿನ ದೊಡ್ಡಣ್ಣನಾಗಲು ಶೀತಲಸಮರ ಅರ್ಥಾತ್ ಕೋಲ್ಡ್‍ವಾರ್ ನಡೆಯುತ್ತಿದ್ದ ಸಮಯ. ಸೋವಿಯಟ್ ರಷ್ಯದ ಅಧ್ಯಕ್ಷ ನಿಕಿಟ ಕ್ರುಶ್ಚೇವ್ ದೇಶದ ಎಲ್ಲ ರಾಕೆಟ್ ತಂತ್ರಜ್ಞರನ್ನು ಒಂದು ಔತಣಕೂಟಕ್ಕೆ ಕರೆದಿದ್ದರು. ಸ್ಪುಟ್ನಿಕ್ 1ರ ಅಭೂತಪೂರ್ವ ಯಶಸ್ಸಿನ ವಿಜಯದುಂಧುಬಿಯಾಗಿತ್ತು ಈ ಔತಣಕೂಟ. ಸೋವಿಯೆಟ್ ಕೂಟದ ಅಂತರಿಕ್ಷ ಯೋಜನೆಗಳ ಪಿತಾಮಹ ಎಂದೇ ಕರೆಯಲ್ಪಟ್ಟ ಸೆರ್ಗಿ ಕೊರೊಲೆವ್ ಕೂಡ ಅಲ್ಲಿದ್ದರು. ನಿಕಿಟ ಕ್ರುಶ್ಚೇವ್, ನೆರೆದಿದ್ದ ಗಣ್ಯರನ್ನು ಅವರ ಸಾಧನೆಗಳಿಗಾಗಿ ಅಭಿನಂದಿಸಿ, ಸೋವಿಯೆಟ್ ಕೂಟದ ಅಂತರಿಕ್ಷ ಸಾಧನೆಗಳನ್ನು ಕೊಂಡಾಡಿ, ವೋಡ್ಕದ ಗ್ಲಾಸೆತ್ತಿ ಘೋಷಿಸಿದರು: "ಇದೇ ವರ್ಷದ ನವೆಂಬರ್ 7ರಂದು ನಾವು ಬೊಲ್ಶೆವಿಕ್ ಕ್ರಾಂತಿಯ ನಲವತ್ತನೆ ವರ್ಷದ ಸಂಭ್ರಮಾಚರಣೆ ಮಾಡುತ್ತಿದ್ದೇವೆ. ಅದರ ನೆನಪಿಗಾಗಿ ನಮ್ಮ ರಾಷ್ಟ್ರ ಇನ್ನೊಂದು ಸ್ಪುಟ್ನಿಕ್‍ನ್ನು ಅಂತರಿಕ್ಷಕ್ಕೆ ಹಾರಿಬಿಡಬೇಕು!" |
ನೆರೆದ ತಂತ್ರಜ್ಞರು ಮತ್ತು ವಿಜ್ಞಾನಿಗಳ ಬೆನ್ನುಹುರಿ ಆ ಚಳಿಯ ಕೊರೆತದಲ್ಲೂ 'ಚುಳ್' ಎಂದಿತು! ಕಾರಣ, ಅವರೆಲ್ಲ ಸ್ಪುಟ್ನಿಕ್ 1ರ ದಣಿವಿನಿಂದ ಹೊರಬಂದಿದ್ದರಷ್ಟೆ. ಆ ಉಪಗ್ರಹವನ್ನು ಅಂತರಿಕ್ಷದ ಕಕ್ಷೆಯಲ್ಲಿ ಕೂರಿಸುವ ಸಾಹಸಕ್ಕೆ ಹಗಲಿರುಳು ಒಂದುಮಾಡಿ ದುಡಿದಿದ್ದರು. ಹಲವಾರು ತಿಂಗಳುಗಳ ಸಾವಿರಾರು ಗಂಟೆಗಳು ಸ್ಪುಟ್ನಿಕ್ ಎಂಬ ಫುಟ್‍ಬಾಲ್ ಗಾತ್ರದ ಉಪಗ್ರಹದ ಅಂತರಿಕ್ಷಯಾನಕ್ಕಾಗಿ ಕಳೆದುಹೋಗಿದ್ದವು. ಮತ್ತೆ ಅಂತಹುದೇ ಸಾಹಸಕ್ಕೆ ಕೈಹಾಕಲು ವಿಜ್ಞಾನಿಗಳಿಗೆ ತುಸುವಾದರೂ ಸಮಯ ಬೇಕಿತ್ತು. ಆದರೆ, ಈಗ ದೇಶದ ಅಧ್ಯಕ್ಷರು ತನ್ನ ಅಮೃತಹಸ್ತಗಳಿಂದ ಉದಾರವಾಗಿ ದಯಪಾಲಿಸಿದ್ದ ಸಮಯ ಕೇವಲ ಇಪ್ಪತ್ತೆಂಟು ದಿನಗಳು! |
ಸೋವಿಯೆಟ್ಟಿನ ಕಮ್ಯುನಿಸ್ಟ್ ಸರಕಾರ ಕಾಲಲ್ಲಿ ಹೇಳಿದ ಕೆಲಸವನ್ನು ತಲೆಯಲ್ಲಿ ಹೊತ್ತು ಮಾಡಬೇಕಾದ ಅನಿವಾರ್ಯತೆ ವಿಜ್ಞಾನಿಗಳಿಗೆ ಎದುರಾಗಿತ್ತು. ಅದರಲ್ಲೂ ದೇಶದ ಅಧ್ಯಕ್ಷನೇ ತೆರೆದ ಸಭೆಯಲ್ಲಿ ಆಜ್ಞೆ ಕೊಟ್ಟನೆಂದ ಮೇಲೆ ಕೇಳಬೇಕೆ? ತುಟಿಪಿಟಕ್ಕೆನ್ನದೆ, ವಿಜ್ಞಾನಿಗಳು ಮತ್ತು ತಂತ್ರಜ್ಞರ ತಂಡ ಹೊಸ ಕಾರ್ಯಯೋಜನೆಯಲ್ಲಿ ನಿರತವಾಯಿತು. ಗಂಟೆಗಳು, ನಿಮಿಷಗಳು ಹೇಗೆ ವಿನಿಯೋಗವಾಗಬೇಕು ಎಂಬ ಪ್ಲ್ಯಾನ್ ಸಿದ್ಧವಾಯಿತು. ರಾಕೆಟ್ ಮತ್ತು ಉಪಗ್ರಹವನ್ನು ಮತ್ತೆ ಮೊದಲಿಂದ ಕಟ್ಟುವ, ಗಗನಕ್ಕೆ ಹಾರಿಬಿಡುವ ಕೆಲಸಕ್ಕೆ ಚಾಲನೆ ಸಿಕ್ಕಿತು. ಆದರೆ, ಈ ಎರಡನೇ ಯೋಜನೆ ಭಿನ್ನವಾಗಿತ್ತು. ಯಾಕೆಂದರೆ, ಇದು ಮೊದಲ ಸ್ಪುಟ್ನಿಕ್ಕಿನಂತೆ ಕೇವಲ ಒಂದು ಯಂತ್ರವನ್ನು ಗಾಳಿಗೆ ತೂರುವ ಕೆಲಸವಾಗಿರಲಿಲ್ಲ. ರಾಕೆಟ್ಟಿನೊಳಗೆ ಒಂದು ನಾಯಿಯನ್ನು ಕೂರಿಸಿ ಪ್ರಪಂಚಪ್ರದಕ್ಷಿಣೆ ಮಾಡಿಸುವ ಅದ್ಭುತ ಸಾಹಸಕ್ಕೆ ವಿಜ್ಞಾನಿಗಳು ಕೈ ಹಾಕಿದ್ದರು! |
ಆ ಕಾಲದಲ್ಲಿ ಅಮೆರಿಕ ಮತ್ತು ರಷ್ಯಗಳ ನಡುವೆ ಎಂತಹ ಘನಘೋರ ಮುಷ್ಟಿಯುದ್ಧ ನಡೆಯುತ್ತಿತ್ತೆಂದರೆ, ಎರಡೂ ದೇಶಗಳ ಒಂದೊಂದು ಹೆಜ್ಜೆಯನ್ನೂ ಮಾಧ್ಯಮಗಳು ಕಣ್ಣಿಗೆ ಎಣ್ಣೆಬಿಟ್ಟುಕೊಂಡು ಗಮನಿಸುತ್ತಿದ್ದವು. ರಷ್ಯ ಎಡವಿದರೆ ಅಮೆರಿಕದ ಟಿವಿಗಳು ವಾರ್ತೆಯನ್ನೇ ಹಾಸ್ಯಕಾರ್ಯಕ್ರಮದಂತೆ ಬಿತ್ತರಿಸಿ, ಶತ್ರುರಾಷ್ಟ್ರದ ದುರಂತಗಳನ್ನು ಅತಿಶಯವಾಗಿ ವರ್ಣಿಸಿ ಮಾನ ಕಳೆಯುತ್ತಿದ್ದವು. ಅಮೆರಿಕ ಎಲ್ಲಾದರೂ ಜಾರಿಬಿದ್ದರೆ, ಆ ಸಂದರ್ಭವನ್ನು ಮಿಸ್ ಮಾಡಿಕೊಳ್ಳದೆ ರಷ್ಯದ ಟಿವಿ ಮತ್ತು ಪತ್ರಿಕೆಗಳು ಗೇಲಿ ಮಾಡಿ ನಗುತ್ತಿದ್ದವು. ಹಾಗಿರುವಾಗ, ತಮ್ಮ ದೇಶದ ಅಧ್ಯಕ್ಷ ಒದಗಿಸಿಕೊಟ್ಟಿರುವ ಸುವರ್ಣಾವಕಾಶವನ್ನು ಕಳೆದುಕೊಳ್ಳುವುದಾದರೂ ಹೇಗೆ ಎಂಬ ಉನ್ಮಾದ ಸೋವಿಯೆಟ್ ರಷ್ಯದ ವಿಜ್ಞಾನಿಗಳಲ್ಲಿ ತುಂಬಿದ್ದು ಸಹಜವೇ. ಉಪಗ್ರಹವನ್ನಷ್ಟೇ ಭೂಮಿಯ ಸುತ್ತ ತಿರುಗಿಸುವುದಲ್ಲ; ಅದರಲ್ಲಿ ಪ್ರಾಣಿಯನ್ನೂ ಕಳಿಸಿ ಭೂಮಿಗೆ ಪ್ರದಕ್ಷಿಣೆ ಹಾಕಿಸಿ, ಜೀವಂತವಾಗಿ ಮರಳಿ ಭೂಮಿಗೆ ತರುತ್ತೇವೆ ಎಂದು ಅವರು ಹೇಳಿದ್ದು ಅಮೆರಿಕದ ನಿದ್ದೆಯನ್ನು ಪೂರ್ತಿಯಾಗಿ ಕಿತ್ತುಕೊಂಡುಬಿಟ್ಟಿತು. ರಷ್ಯಕ್ಕೆ ಬೇಕಾಗಿದ್ದದ್ದು ಇದೇ ತಾನೆ! ಮೊದಲ ಸ್ಪುಟ್ನಿಕ್ ಉಡ್ಡಯನಕ್ಕಿಂತ ಭಿನ್ನವಾದ ಪ್ರಯೋಗ ಮಾಡಿ ಜಗತ್ತಿನ ಹುಬ್ಬೇರಿಸಬೇಕು ಎಂಬ ತುಡಿತ ಒಂದೆಡೆಯಾದರೆ, "ನಾವು ಮನುಷ್ಯರನ್ನು ಅಂತರಿಕ್ಷಕ್ಕೆ ಕಳಿಸುವ ದಿನ ದೂರವಿಲ್ಲ" ಎಂಬ ಸಂದೇಶವನ್ನು ಅಮೆರಿಕಕ್ಕೆ ಕೊಟ್ಟು ಅದರ ನಿದ್ದೆಕೆಡಿಸುವ ಕೆಟ್ಟ ಹಂಬಲ ಸೋವಿಯೆಟ್ ರಷ್ಯದ್ದು. ಅದಕ್ಕಾಗಿ ರೂಪಿತವಾದ ಯೋಜನೆಯೇ ಶ್ವಾನ ಸ್ವರ್ಗಾರೋಹಣ! ರಷ್ಯನ್ ವಿಜ್ಞಾನಿಗಳು ತಮ್ಮ ಯೋಜನೆಗಾಗಿ ಮಾಸ್ಕೋ ನಗರದ ಗಲ್ಲಿಗಳಲ್ಲಿ ಅಲೆಯುತ್ತಿದ್ದ ಅಲ್ಬೀನ, ಮುಷ್ಕ ಮತ್ತು ಲೈಕಾ ಎಂಬ ಮೂರು ಬೀದಿನಾಯಿಗಳನ್ನು ಹಿಡಿದು ತಂದರು. ಬೀದಿಯ ಅಡ್ನಾಡಿ ನಾಯಿಗಳಾದರೆ ಈಗಾಗಲೇ ಪರಿಸರದ ವೈಪರೀತ್ಯಗಳಿಗೆ ಹೊಂದಿಕೊಂಡಿರುತ್ತವೆ, ಒಳ್ಳೆಯ ರೋಗನಿರೋಧಕ ಶಕ್ತಿ ಬೆಳೆಸಿಕೊಂಡಿರುತ್ತವೆ ಮತ್ತು ಹಸಿವು ನೀರಡಿಕೆ ಚಳಿ ಬಿಸಿಲಿನಂತಹ ಎಂತಹ ಪರಿಸ್ಥಿತಿಗೂ ತಲೆಯೊಡ್ಡುವ ಅನಿವಾರ್ಯತೆ ಗೊತ್ತಿರುತ್ತದೆ – ಎಂಬ ಕಾರಣಕ್ಕೆ ಆಯ್ಕೆಯಾದ ವಿಐಪಿಗಳು ಅವು! |
ಸರಿ, ಆರಿಸಿದ ಮೇಲೆ ಟ್ರೈನಿಂಗ್ ನಡೆಯುವುದು ಬೇಡವೇ? ಈ ಮೂರೂ ನಾಯಿಗಳನ್ನು ವಿವಿಧ ಪರೀಕ್ಷೆಗಳಿಗೊಡ್ಡಿ ಅವುಗಳ ದೇಹದ ಸ್ಥಿತಿ, ಮಾನಸಿಕ ಸ್ತಿಮಿತವನ್ನು ಗಮನಿಸಲಾಯಿತು. ನಾಯಿಗಳ ಸುತ್ತ ಅತ್ಯಧಿಕ ಶಬ್ದವನ್ನು ಹರಡಿ ನೋಡಲಾಯಿತು. ಒಂದೇ ಸಮನೆ ತಿರುಗುವ ಚೇಂಬರಿನಲ್ಲಿಡಲಾಯಿತು. ಅತಿ ಉಷ್ಣ, ಅತಿ ಶೀತದ ಕೋಣೆಗಳಲ್ಲಿಟ್ಟು ವೀಕ್ಷಿಸಲಾಯಿತು. ಶೂನ್ಯಗುರುತ್ವದಲ್ಲಿ ತೇಲಿಸಲಾಯಿತು. ಪೃಷ್ಟಕ್ಕೆ ಬ್ಯಾಗುಗಳನ್ನು ಕಟ್ಟಿ ಅವು ಅಲ್ಲೇ ವಿಸರ್ಜನೆ ಮಾಡುವ ಹಾಗೆ ಮಾಡಲಾಯಿತು. ನಿಂತರೆ ಕೂರಲಾಗದ, ಕೂತರೆ ಮಲಗಲಾಗದ ಕೋಳಿಗೂಡಿನಂತಹ ಚೇಂಬರಿನಲ್ಲಿ ದಿನಗಟ್ಟಲೆ ಇಟ್ಟು ಅವುಗಳಿಗೆ ಅಭ್ಯಾಸ ಮಾಡಿಸಲಾಯಿತು. ಒಟ್ಟಾರೆ, ಅಂತರಿಕ್ಷದ ಅವಕಾಶದಲ್ಲಿ ರಾಕೆಟ್ಟಿನೊಳಗೆ ಕೂತು ಪಯಣಿಸಬೇಕಾದ ಮನುಷ್ಯ ಎಷ್ಟೆಲ್ಲ ತರಬೇತಿಯನ್ನು ಪಡೆಯಬೇಕೋ ಅವೆಲ್ಲಕ್ಕಿಂತ ತುಸು ಹೆಚ್ಚೇ ಎನ್ನಿಸಬಹುದಾದ ಅಭ್ಯಾಸ ಮಾಡಿಸಿ ಈ ನಾಯಿಗಳನ್ನು ಅಣಿಗೊಳಿಸಿದರು. |
ನಾಯಿಗಳು ತರಬೇತಿಯ ಎಲ್ಲ ಹಂತಗಳನ್ನು ದಾಟಿಬಂದರೂ ಪುಷ್ಪಕವಿಮಾನವೇರುವ 'ಭಾಗ್ಯ' ಲಭಿಸಿದ್ದು ಮಾತ್ರ ಲೈಕಾ ಎಂಬ ಹೆಣ್ಣು ನಾಯಿಗೆ. ಉಳಿದವರನ್ನು ಮೀರಿಸಿ ಗೆಲ್ಲಲು ಆಕೆಗಿದ್ದ ಎಕ್ಸ್‍ಟ್ರಾ ಅರ್ಹತೆಗಳೆಂದರೆ: ಆಕೆ ಎಲ್ಲೆಂದರಲ್ಲಿ ಹೋಗದೆ ನಿಗದಿತ ಸ್ಥಳದಲ್ಲಿ ಕೂತು ಮೂತ್ರವಿಸರ್ಜನೆ ಮಾಡುವುದನ್ನು ರೂಡಿಸಿಕೊಂಡಿದ್ದಳು ಮತ್ತು ಇತರ ನಾಯಿಗಳ ಜೊತೆ ಜಗಳವಾಡದೆ ಸೌಮ್ಯ ಸ್ವಭಾವ ತೋರಿಸಿದ್ದಳು, ಎನ್ನುವುದು! "ಲೈಕಾ" ಎಂದರೆ "ಬೊಗಳುವ ನಾಯಿ" ಎಂದರ್ಥ! ನಾಮಕ್ಕೂ ಗುಣಕ್ಕೂ ಎಂಥಾ ವೈರುಧ್ಯ! |
ಲೈಕಾ ಒಂದು ಮುದ್ದಾದ ಬೀದಿನಾಯಿ. ಅವಳಿಗೆ ಆಗ ಕೇವಲ ಮೂರುವರ್ಷ! ಹೆಚ್ಚೆಂದರೆ ಐದೂವರೆ ಕೆಜಿ ತೂಗುತ್ತಿದ್ದಳು. ಉಡ್ಡಯನಕ್ಕೆ ಆರಿಸಿದ ಮೇಲೆ, ಆಕೆಯನ್ನು ಉಳಿದ ನಾಯಿಗಳಿಂದ ಬೇರ್ಪಡಿಸಿ ವಿಶೇಷ ತರಬೇತಿಯನ್ನು ಮುಂದುವರಿಸಿದರು. ಆಕೆ ಇರಬೇಕಿದ್ದ ರಾಕೆಟ್ಟಿನೊಳಗಿನ ಸಣ್ಣಕೋಣೆಯಲ್ಲಿ ಆಕೆಯನ್ನು ಕೂಡಿಹಾಕಿ, ಅವಳಿಗೆ ಅದರ ಪರಿಚಯ ಮಾಡಿಸಿದರು. ರಾಕೆಟ್ಟು ಮೇಲೆ ಹಾರಿದ್ದು ನವೆಂಬರ್ ಮೂರನೇ ತಾರೀಖಿನಂದಾದರೂ, ಲೈಕಾ ತನ್ನ ಕೋಣೆಯಲ್ಲಿ ಅಕ್ಟೋಬರ್ 31ರಿಂದಲೇ ಬಂಧಿಯಾಗಿದ್ದಳು. ಅವಳ ಕೋಣೆ ಎಷ್ಟು ಚಿಕ್ಕದಾಗಿತ್ತೆಂದರೆ, ಅಲ್ಲಿ ಆಕೆ ಪೂರ್ತಿಯಾಗಿ ಹಿಂತಿರುಗಿ ನೋಡುವುದೂ ಸಾಧ್ಯವಿರಲಿಲ್ಲ. ಆಕೆಯ ದೇಹದ ಜೊಂಪುಕೂದಲಿಗೆಲ್ಲ ಜೆಲ್ಲಿ ಬಳಿದರು. ದೇಹದ ಅಲ್ಲಲ್ಲಿ ಕೂದಲು ಕತ್ತರಿಸಿ, ಚರ್ಮದ ಮೇಲೆ ಅಯೊಡಿನ್ ಹಚ್ಚಿ ಸೆನ್ಸಾರುಗಳನ್ನು ಅಳವಡಿಸಿದರು. ಆಕೆಯ ದೇಹದಲ್ಲಿ ನಡೆಯುತ್ತಿದ್ದ ಪುಟ್ಟಪುಟ್ಟ ಬದಲಾವಣೆಗಳನ್ನೂ ಈ ಸೆನ್ಸಾರುಗಳು ಕಂಪ್ಯೂಟರಿಗೆ ಊಡುತ್ತಿದ್ದವು. ಕಾಲಕಾಲಕ್ಕೆ ಆಕೆಯೆದುರು ವಿಶೇಷವಾಗಿ ತಯಾರಿಸಲ್ಪಟ್ಟ ಆಹಾರ ಬರುವಂತೆ ವ್ಯವಸ್ಥೆ ಮಾಡಲಾಗಿತ್ತು. ಯಾವ ಜನ್ಮದ ಪಾಪವೋ, ಪುಣ್ಯವೋ – ಅಂತೂ ಲೈಕಾ, ಈ ಎಲ್ಲ ವ್ಯವಸ್ಥೆಗಳ ಹೊಸ ಅವತಾರದೊಂದಿಗೆ, ಅಂದುಕೊಂಡಿದ್ದಂತೆ ನವೆಂಬರ್ 3ರಂದು, ಬೊಲ್ಶೊವಿಕ್ ಕ್ರಾಂತಿಯ 'ಸವಿ'ನೆನಪಿಗಾಗಿ, ರಷ್ಯದ ವೈಜ್ಞಾನಿಕ ಸಾಧನೆಗಳ ಮೇರುಕುರುಹಾಗಿ, ಅಮೆರಿಕದ ಗರ್ವಭಂಗ ಮಾಡಲು ಬೀಸಿದ ಚಾಟಿಯಂತೆ ಜಮ್ಮನೆ ಗಗನಕ್ಕೆ ಜಿಗಿದಳು! ಸ್ಪುಟ್ನಿಕ್ 2ರ ಉಡ್ಡಯನದೊಂದಿಗೆ ಸೋವಿಯೆಟ್ ರಷ್ಯ – ಬಾಹ್ಯಾಕಾಶ ಚರಿತ್ರೆಯಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿತು. |
ರಷ್ಯ, ತಾನು ಎರಡನೆ ಉಪಗ್ರಹ ಕಳಿಸುವ ಘೋಷಣೆ ಕೂಗಿ ತಿಂಗಳಾಗುವ ಮೊದಲೆ ಅದನ್ನು ಕಾರ್ಯಗತ ಮಾಡಿತೋರಿಸಿದ್ದನ್ನು ಜಗತ್ತಿನ ಅತ್ಯಂತ ದೊಡ್ಡ ಅದ್ಭುತ ಎಂಬಂತೆ ಬಿಂಬಿಸಿಕೊಂಡಿತು. ಸಹಜವಾಗಿಯೇ ಇದರಿಂದ ಅಮೆರಿಕಕ್ಕೆ ಮುಖಭಂಗವಾಯಿತು. ಆಗಿನ ಎನ್‍ಬಿಸಿ ಚಾನೆಲ್ ಬಿತ್ತರಿಸಿದ ಸುದ್ದಿ ನೋಡಿ – "ಕೊನೆಗೂ ಸೋಯಿಯೆಟ್ ಒಕ್ಕೂಟ ಅಮೆರಿಕದ ಗತ್ತಿನ ಕೋಡು ಮುರಿದು ಹಾಕಿದೆ. ಸ್ಪುಟ್ನಿಕ್ 2 ಉಪಗ್ರಹ ಲೈಕಾ ಎಂಬ ನಾಯಿಯ ಸಮೇತ ಆಕಾಶಕ್ಕೆ ಚಿಮ್ಮಿದೆ. ಇಲ್ಲಿ ಗಮನಿಸಲೇಬೇಕಾದ ಇನ್ನೊಂದು ಸಂಗತಿಯೂ ಇದೆ. ಸ್ಪುಟ್ನಿಕ್‍ಅನ್ನು ಹೊತ್ತು ಸಾಗಿಸಿರುವ ರಾಕೆಟ್ಟು 5000 ಮೈಲಿ ದೂರ ಹಾರಿ ಹೈಡ್ರೋಜನ್ ಬಾಂಬಿನ ಮಳೆಗರೆಯುವ ಸಾಮಥ್ರ್ಯವನ್ನೂ ಹೊಂದಿದೆ ಎಂಬ ವಿಷಯವನ್ನು ಅಮೆರಿಕ ಉಪೇಕ್ಷಿಸಬಾರದು!" ಬಹುಶಃ ಈ ಒಂದು ಸುದ್ದಿಯಿಂದಲೇ ನಾವು ಆ ಕಾಲದಲ್ಲಿ ಈ ಎರಡು ದೇಶಗಳ ನಡುವೆ ಬೆಳೆದುನಿಂತಿದ್ದ ಶೀತಲಯುದ್ಧದ ತೀವ್ರತೆಯನ್ನು ಲೆಕ್ಕಹಾಕಬಹುದು. ಅದೇನೇ ಇರಲಿ, ಲೈಕಾ ಮಾತ್ರ ಈ ಎಲ್ಲ ಲೌಕಿಕ ಗೊಂದಲಗಳಿಂದ ದೂರವಾಗಿ ಆಕಾಶಕ್ಕೆ ಚಿಮ್ಮಿದ್ದಳು. ಒಂದಾನೊಂದು ಕಾಲದಲ್ಲಿ ಬೀದಿನಾಯಿಯಾಗಿದ್ದ ಲೈಕಾ ಮರುದಿನದ ಎಲ್ಲ ಪತ್ರಿಕೆಗಳಲ್ಲೂ ಮುಖಪುಟದಲ್ಲಿ ಕಂಗೊಳಿಸಿದಳು. ಲೈಕಾಳನ್ನು ಭೂಮಿಗೆ ಪ್ರದಕ್ಷಿಣೆ ಹಾಕಿಸಿ ಜೀವಂತವಾಗಿ ವಾಪಸ್ ಕರೆದುಕೊಂಡು ಬರುತ್ತೇವೆ ಎಂದು ರಷ್ಯದ ವಿಜ್ಞಾನಿಗಳು ಪ್ರಶ್ನಿಸಿದ ಪತ್ರಕರ್ತರಿಗೆಲ್ಲ ಹೇಳುತ್ತಿದ್ದರು. ಅದು ಅಸಾಧ್ಯ ಎಂದು ಹೇಳುವ ಧೈರ್ಯ ಅಮೆರಿಕಕ್ಕೂ ಇರಲಿಲ್ಲ. ಲೈಕಾ ಹೇಗೆ ವಾಪಸ್ ಬರುತ್ತಾಳೆ? ಉಪಗ್ರಹವೇ ಮತ್ತೆ ಭೂಮಿಗಿಳಿಯುತ್ತದಾ? ಅಥವಾ ಇನ್ನೊಂದು ಉಪಗ್ರಹ ಕಳಿಸಿ ಅವಳನ್ನು ಅದರಲ್ಲಿ ಇಟ್ಟುಕೊಂಡು ಬರುತ್ತಾರಾ? ಅಥವಾ ಅವಳನ್ನು ಪ್ಯಾರಾಚೂಟ್ ಮೂಲಕ ಭೂಮಿಗೆ ತಂದಿಳಿಸುತ್ತಾರಾ? ಎಂದು ಜನ ತಮ್ಮ ಅರಿವಿಗೆ ನಿಲುಕಿದಷ್ಟು ವಿಷಯಗಳನ್ನು ಇಟ್ಟುಕೊಂಡು ಚರ್ಚಿಸುತ್ತಿದ್ದರು. ರಷ್ಯದ ಸರಕಾರ, ಜನರಿಗೆ, "ಲೈಕಾಳ ಯಶಸ್ವೀ ಮರುಪ್ರಯಾಣಕ್ಕಾಗಿ ಪ್ರತಿದಿನ ಒಂದು ನಿಮಿಷ ಪ್ರಾರ್ಥಿಸಿ" ಎಂದು ಕೇಳಿಕೊಂಡಿತು. ಜನ ಇದು ಕೂಡ ತಮ್ಮ ಸಾಂವಿಧಾನಿಕ ಕರ್ತವ್ಯ ಎಂಬಂತೆ ಪ್ರತಿದಿನ ತಮ್ಮತಮ್ಮ ನಾಯಿಬೆಕ್ಕುಗಳ ಜೊತೆ ಲೈಕಾಳಿಗಾಗಿ ಪ್ರಾರ್ಥಿಸುತ್ತಿದ್ದರು. ಅತ್ತ ಅಮೆರಿಕದಲ್ಲೂ ಅವಳದ್ದೇ ಚರ್ಚೆ ಗಾಸಿಪ್ಪಿನಂತೆ ನಡೆಯುತ್ತಿತ್ತು. ಹೋಟೇಲುಗಳಲ್ಲಿ, ಬಾರುಗಳಲ್ಲಿ ಹಾಡುವ ಆರ್ಕೆಸ್ಟ್ರದ ಹುಡುಗರು ಕೂಡ ಲೈಕಾ ಗುಣಗಾನವನ್ನೇ ಮಾಡುತ್ತ ಕಾಸು ಸಂಪಾದಿಸುತ್ತಿದ್ದರು! ಒಂದು ಹಾಡು ಹೀಗಿತ್ತು – |
They'll pin a red, red ribbon in her hair |
For being the only dog that's been up there! |
For she has been the highest in the air, |
ಇದು ನಾವು-ನೀವು ನಿಂತಿರುವ ಈ ನೆಲದ ಮೇಲೆ ನಡೆಯುತ್ತಿದ್ದ ಕತೆ. ಆದರೆ, ಅತ್ತ ಆಕಾಶದಲ್ಲಿ ಸ್ಪುಟ್ನಿಕ್‍ನೊಳಗೆ ನಡೆದುಹೋದ ಘಟನೆಗಳು ಮಾತ್ರ ಈ ಕತೆಗೆ ಬೇರೆಯೇ ತಿರುವು ಕೊಟ್ಟಿದ್ದವು. ನಭಕ್ಕೆ ಚಿಮ್ಮಿದ ಏಳುಗಂಟೆಗಳವರೆಗೆ ಎಲ್ಲವೂ ಸರಿಯಾಗಿಯೇ ಇತ್ತು. ಸ್ಪುಟ್ನಿಕ್ ವ್ಯೋಮದಿಂದ ಕಳಿಸಿದ ಸಿಗ್ನಲ್‍ಗಳು ರಷ್ಯದ ಅಂತರಿಕ್ಷಕೇಂದ್ರಗಳ ಕಂಪ್ಯೂಟರುಗಳಲ್ಲಿ ದಾಖಲಾಗುತ್ತಿದ್ದವು. ಆದರೆ, ಏಳು ಗಂಟೆಗಳ ಬಳಿಕ, ಆ ಸಿಗ್ನಲ್‍ಗಳು ಥಟ್ಟನೇ ನಿಂತುಹೋದವು! ಉಡ್ಡಯನವಾದ ಕೆಲ ಗಂಟೆಗಳಲ್ಲಿ ಲೈಕಾಳ ಹೃದಯಬಡಿತ ನಿಮಿಷಕ್ಕೆ 103 ಇದ್ದದ್ದು 240ಕ್ಕೆ ಹಾರಿತ್ತು! ಆಕೆಯ ಉಸಿರಾಟದ ವೇಗ ಮಿತಿಮೀರಿತ್ತು. ಆಕೆಯನ್ನು ಕೂರಿಸಿದ ಅಥವಾ ಬಂಧಿಸಿದ ಕೊಠಡಿಯ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ಸಿಗೆ ಏರಿಹೋಗಿತ್ತು. ಹದಿನೈದು ಡಿಗ್ರಿ ಮೀರಿದೊಡನೆ ಚಾಲೂ ಆಗಬೇಕಿದ್ದ ಫ್ಯಾನು ಕೈಕೊಟ್ಟು, ಕೊಠಡಿಯ ಉಷ್ಣವೇರಿ ಲೈಕಾ ಬೆವರಿಳಿಸುತ್ತ ಕಂಗಾಲಾಗಿ ಹೋಗಿದ್ದಳು. ಕೇವಲ ಕೆಲನಿಮಿಷಗಳಲ್ಲಿ ನಡೆದ ಈ ಎಲ್ಲ ಬದಲಾವಣೆಗಳಿಂದ, ಆಕೆ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದಾಳೆ ಎಂದು ಯಾರು ಬೇಕಾದರೂ ಊಹಿಸಬಹುದಾಗಿತ್ತು. |
ಲೈಕಾ ಇನ್ನಿಲ್ಲವಾದಳು. ಗಗನಕ್ಕೆ ಹಾರಿದ ಕೆಲವೇ ಗಂಟೆಗಳಲ್ಲಿ ಕೆಟ್ಟುಹೋಗಿದ್ದ ಸ್ಫುಟ್ನಿಕ್ ನಾಯಿಯ ಹೆಣ ಹೊತ್ತು ಅಂತರಿಕ್ಷದಲ್ಲಿ ಸುತ್ತುವ ಸಮಾಧಿಯಾಗಿ ಬದಲಾಗಿತ್ತು. ಆದರೆ, ಇಲ್ಲಿ – ಪ್ರಪಂಚದಲ್ಲಿ ನಿಂತು ಅವಳ ಯಾನಕ್ಕೆ ಟಾಟಾ ಮಾಡಿದ್ದ ಜನ ಮಾತ್ರ, ಲೈಕಾ ಇನ್ನೂ ಬದುಕಿದ್ದಾಳೆ, ಅಲ್ಲಿ ಕೂತೇ ಈ ಜಗತ್ತನ್ನು ನೋಡುತ್ತಿದ್ದಾಳೆ; ಕಾಲಕಾಲಕ್ಕೆ ಬ್ರೆಡ್ಡು-ಬನ್ನು ತಿಂದುಂಡು ಸುಖವಾಗಿ ಕಾಲ ಕಳೆಯುತ್ತಿದ್ದಾಳೆ ಎಂದೇ ನಂಬಿಬಿಟ್ಟಿತ್ತು. ಇಂದಲ್ಲಾ ನಾಳೆ ಆಕೆಯನ್ನು ಮರಳಿ ಭೂಮಿಗೆ ಕರೆತರಲಾಗುತ್ತದೆ ಎಂದು ಅಮೆರಿಕವೂ ನಂಬಿಬಿಟ್ಟಿತ್ತು. ಆದರೆ, ಸ್ಪುಟ್ನಿಕ್ ಹಾರಿ ಒಂದು ವಾರದ ನಂತರ, ಅಮೆರಿಕದ ಕೆಲವು ವಿಜ್ಞಾನಿಗಳು "ಲೈಕಾ ಬದುಕಿರುವುದು ಸಂಶಯ" ಎನ್ನತೊಡಗಿದರು. ಯಾಕೆಂದರೆ, ನಾಯಿಯೇ ಆಗಲಿ ಮನುಷ್ಯನೇ ಆಗಲಿ, ಭೂಮಿಯ ಸಂಪರ್ಕದಿಂದ ಸಾವಿರಾರು ಮೈಲಿ ದೂರದಲ್ಲಿ ಆರೇಳು ದಿನ ಕಳೆಯುವ ತಂತ್ರಜ್ಞಾನ ಆಗ ಅಮೆರಿಕದಲ್ಲೂ ಇರಲಿಲ್ಲ, ಅದರ ಶತ್ರು ರಷ್ಯದ ಬಳಿಯೂ ಇರಲಿಲ್ಲ ಎನ್ನುವುದು ಅನೇಕ ವಿಜ್ಞಾನಿಗಳಿಗೆ ಖಚಿತವಾಗಿ ಗೊತ್ತಿತ್ತು. ಹಾಗಾಗಿ, ಲೈಕಾ ವಾಪಸು ಬರುವುದು ಸಂಶಯ; ರಷ್ಯ ಸರಕಾರ ಬೊಗಳೆ ಬಿಡುತ್ತಿದೆ ಎಂದು ಕೆಲವರು ಸಾರ್ವಜನಿಕವಾಗಿಯೇ ತಮ್ಮ ಅಸಮಾಧಾನ ಹೇಳಿಕೊಂಡರು. ಜನಸಾಮಾನ್ಯರಿಗೂ ಆ ಮಾತು ನಿಜ ಇರಬಹುದು ಎಂಬ ಅನುಮಾನ ಬಲವಾಗತೊಡಗಿತು. ಪ್ರಾಣಿದಯಾ ಸಂಘಟನೆಗಳಂತೂ "ಒಂದು ಮೂಕಪ್ರಾಣಿಯನ್ನು ವ್ಯೋಮಾಕಾಶಕ್ಕೆ ಕಳಿಸಿ ಈ ನೆಲದ ಕಾನೂನಿಗೆ ಅವಮಾನ ಮಾಡಿರುವ ಸೋವಿಯೆಟ್ ಸರಕಾರ ಸತ್ಯ ಹೇಳಿ ಮಾನವೀಯತೆ ಮೆರೆಯಬೇಕು" ಎಂದು ಚಳುವಳಿಯನ್ನೇ ಶುರುಮಾಡಿಬಿಟ್ಟವು. |
ಲೈಕಾ ತೀರಿಕೊಂಡಿದ್ದಾಳೆ ಎಂಬ ಗಾಳಿಸುದ್ದಿ ಎಲ್ಲೆಡೆ ಕಾಳ್ಗಿಚ್ಚಿನಂತೆ ಹರಡಲಾರಂಭಿಸಿತು. ಕೆಲವು ರಷ್ಯನ್ ವಿಜ್ಞಾನಿಗಳು ಮುಂದೆ ಬಂದು ಸ್ಫುಟ್ನಿಕ್‍ನಲ್ಲಿ ತಾಂತ್ರಿಕ ದೋಷ ಇದ್ದದ್ದನ್ನು ಒಪ್ಪಿಕೊಂಡರು. ಉಡ್ಡಯಿಸಿದ ಕೆಲವು ದಿನಗಳಲ್ಲೇ ಅದರೊಳಗಿನ ವ್ಯವಸ್ಥೆ ಕೆಟ್ಟುಹೋಗಿತ್ತು. ಹಾಗಾಗಿ ಲೈಕಾ ಸಾವನ್ನಪ್ಪಿದಳು – ಎಂದು ಹೇಳಿ ಉರಿಯುವ ಬೆಂಕಿಗೆ ಪೆಟ್ರೋಲ್ ಸಿಂಚನ ಮಾಡಿದರು. ತಾಂತ್ರಿಕದೋಷದಿಂದ ಉಪಗ್ರಹದೊಳಗಿನ ಫ್ಯಾನು ಕೈಕೊಟ್ಟು, ಕೊಠಡಿಯ ಉಷ್ಣಾಂಶ ವಿಪರೀತ ಏರಿ ಅದು ಸಿಡಿದದ್ದೇ ಲೈಕಾ ಸಾವಿಗೆ ಕಾರಣ ಎಂದು ಕೆಲವರು ಹೇಳಿದರು. "ಇಲ್ಲ, ಆಕೆ ಮೂರು ದಿನ ಜೀವಂತವಿದ್ದಳು. ಮೂರನೇ ದಿನ ಆಕ್ಸಿಜನ್ ಪೂರೈಕೆ ನಿಂತುಹೋಗಿ ಅಸುನೀಗಿದಳು" ಎನ್ನುವ ವಾದ ಕೆಲವರದ್ದು. ರಾಕೆಟ್ಟಿಗೆ ಅಳವಡಿಸಿದ್ದ ಬ್ಯಾಟರಿಗಳು ಕೆಟ್ಟುಹೋಗಿ, ಅದರ ಇಡೀ ವ್ಯವಸ್ಥೆಯೇ ನಿಂತುಹೋಯಿತು. ಸ್ಪುಟ್ನಿಕ್ ಭೂಮಿಗೆ ಕಳಿಸುತ್ತಿದ್ದ ಸಿಗ್ನಲ್‍ಗಳೂ ನಿಂತುಹೋದವು. ಲೈಕಾ ಸತ್ತಿದ್ದು ಹೀಗೆ – ಎಂದು ಕೆಲ ವಿಜ್ಞಾನಿಗಳ ಅನಿಸಿಕೆ. ಆದರೆ, ಇವ್ಯಾವ ಮಾಹಿತಿಗಳನ್ನೂ ಸರಕಾರ ಹೊರಜಗತ್ತಿಗೆ ಕೊಟ್ಟಿರಲೇ ಇಲ್ಲ. ಈ ಗಲಾಟೆ – ಗೊಂದಲಗಳು ಮುಖಪುಟದ ಸುದ್ದಿಯಾಗುತ್ತಿದ್ದಾಗಲೇ, ಸೋವಿಯೆಟ್ ಸರಕಾರ – "ಇಲ್ಲ, ಆಕೆ ಆರು ದಿನ ಜೀವಂತವಿದ್ದಳು. ಆಕೆಯ ಕೊನೆಯ ಆಹಾರದ ಪ್ಯಾಕೆಟ್ಟಿನಲ್ಲಿ ವಿಷ ಬೆರೆಸಲಾಗಿತ್ತು. ಆಕೆ ಸತ್ತಿದ್ದು ವಿಷಾಹಾರದಿಂದ" ಎಂದು ಹೇಳಿ ರಾಡಿಗೆ ಇನ್ನೊಂದು ಕಲ್ಲೆಸೆಯಿತು! ನವೆಂಬರ್ ಮೂರರಂದು ಗಗನಕ್ಕೆ ಹೋದ ಲೈಕಾ, ಬೊಲ್ಶೊವಿಕ್ ಕ್ರಾಂತಿಯ ನಲವತ್ತನೆ ವರ್ಷಾಚರಣೆಯ ದಿನದವರೆಗೂ ಜೀವಂತವಿದ್ದಳು ಎನ್ನುವುದನ್ನು ಸಾಬೀತುಪಡಿಸುವುದು ಸರಕಾರದ ಮುಖ್ಯ ಅಜೆಂಡ ಆಗಿತ್ತು! "ಯಾಕೆ ಸಾಯಿಸಿದಿರಿ, ಯಾಕೆ ಅವಳನ್ನು ವಾಪಸು ತರಲಿಲ್ಲ?" ಎಂದು ಇಡೀ ಜಗತ್ತು ಕೇಳತೊಡಗಿದಾಗ ವಿಜ್ಞಾನಿಗಳು ಇನ್ನೊಂದು ಬಾಂಬು ಸಿಡಿಸಿದರು: ಉಪಗ್ರಹದ ವಿನ್ಯಾಸ ಹೇಗಿತ್ತೆಂದರೆ, ಅದನ್ನು ವಾಪಸು ಕರೆತರುವ ಯಾವುದೇ ತಂತ್ರಜ್ಞಾನವನ್ನು ಅಳವಡಿಸಿರಲಿಲ್ಲ. ತನ್ನ ಕೆಲಸ ಮುಗಿದ ಮೇಲೆ, ಆ ಉಪಗ್ರಹ ಅಂತರಿಕ್ಷದಲ್ಲೇ ಸುತ್ತು ಹೊಡೆಯುತ್ತ, ಇಲ್ಲವೇ, ಭೂಕಕ್ಷೆಯನ್ನು ಸ್ಪರ್ಷಿಸಿ ಸುಟ್ಟುಹೋಗುವ ಹಾಗೆ ಅದನ್ನು ರಚಿಸಲಾಗಿತ್ತು. ಲೈಕಾಳನ್ನು ರಾಕೆಟ್ಟಿನಲ್ಲಿ ಕಳಿಸುವಾಗಲೇ ಆಕೆಯ ಮರಣಮೃದಂಗ ಬಾರಿಸಿಯಾಗಿತ್ತು! ಆಕೆ ಎಂದಿಗೂ ಭೂಮಿಗೆ ಮರಳಿ ಬರುವ ಪ್ರಶ್ನೆಯೇ ಇರಲಿಲ್ಲ! |
ಮುಖ್ಯ ವಿಷಯವೇನೆಂದರೆ, ಕ್ರುಶ್ಚೇವ್ ವಿಧಿಸಿದ ಸಮಯದ ಮಿತಿಯಲ್ಲಿ ವಿಜ್ಞಾನಿಗಳಿಗೆ ಒಂದು ಪರಿಪೂರ್ಣ ರಾಕೆಟ್ಟನ್ನು ನಿರ್ಮಿಸುವುದು ಸಾಧ್ಯವಿರಲಿಲ್ಲ. ರಾಕೆಟ್ಟಿನ ಕೊನೆಯ ಹಂತ ಉಪಗ್ರಹದಿಂದ ಬೇರ್ಪಡುವ ತಂತ್ರಜ್ಞಾನವನ್ನೂ ಇದರಲ್ಲಿ ಅಳವಡಿಸಿರಲಿಲ್ಲ. ರಷ್ಯದ ಅಧ್ಯಕ್ಷ ಹೇಳಿದ ಮಾತಿಗೆ ಮರುಮಾತಾಡದೆ ತಲೆಕೊಡುವುದು ಮತ್ತು ಅಮೆರಿಕವನ್ನು ಹಿಮ್ಮೆಟ್ಟಿ ಮುಂದೋಡುವುದು – ಇವೆರಡೇ ಮುಖ್ಯ, ಉಳಿದದ್ದೆಲ್ಲ ನಗಣ್ಯವಾಗಿದ್ದ ಕಾಲವದು. ಕೆಟ್ಟುಹೋದ ಉಪಗ್ರಹ ಗಂಟೆಗೆ ಹದಿನೆಂಟು ಸಾವಿರ ಮೈಲಿಗಳನ್ನು ಕ್ರಮಿಸುತ್ತ ಭೂಮಿಗೆ 2570 ಬಾರಿ ಗಿರಕಿ ಹೊಡೆದು 1958ರ ಎಪ್ರೀಲ್ 14ರಂದು ಭೂಕಕ್ಷೆಯನ್ನು ಸ್ಪರ್ಷಿಸಿ ಸುಟ್ಟು ಭಸ್ಮವಾಯಿತು. ಲೈಕಾ ನೆನಪಾಗಿ ಉಳಿದಳು. |
ತಂತ್ರಜ್ಞಾನದ ಔನ್ನತ್ಯದ ಅರ್ಥಹೀನತೆಗೆ ಸಂಕೇತವೆನ್ನುವ ಹಾU,É ಬೀದಿಯಲ್ಲಿ ತಿರುಗಾಡಿಕೊಂಡಿದ್ದ ನಾಯಿಯೊಂದು ಭೂಮಿಯಿಂದ ಸಾವಿರಾರು ಮೈಲಿ ಮೇಲೆ ಹೋಗಿ ಪಡಬಾರದ ಪಾಡು ಪಟ್ಟು ಕೊನೆಯುಸಿರೆಳೆಯಿತು. ಲೈಕಾಳ ಯೋಗಕ್ಷೇಮ ನೋಡಿಕೊಂಡ ಮತ್ತು ಆಕೆಯನ್ನು ಉಡ್ಡಯನಕ್ಕೆ ಮುನ್ನ ಒಂದು ದಿನದ ಮಟ್ಟಿಗೆ ತನ್ನ ಮನೆಗೆ ಕರೆದೊಯ್ದು ತನ್ನ ಮಕ್ಕಳೊಂದಿಗೆ ಆಟವಾಡಲು ಬಿಟ್ಟ ಆಕೆಯ ಡಾಕ್ಟರ್ – ವ್ಲಾದಿಮೀರ್ ಯಾಜ್‍ದೋವಿಸ್ಕಿ, "ಮನುಷ್ಯನಾಗಿ ನಾನು ಆಕೆಗೆ ಕೊಡಬಹುದಾಗಿದ್ದ ಕಾಣಿಕೆ ಅಷ್ಟು ಮಾತ್ರ. ಯಾಕೆಂದರೆ, ಇನ್ನು ಕೆಲವೇ ದಿನಗಳಲ್ಲಿ ರಾಕೆಟ್ಟಿನಲ್ಲಿ ವ್ಯೋಮಾಕಾಶಕ್ಕೆ ಹೋಗಿ ಅಸುನೀಗುವವಳಿದ್ದಳು ಅವಳು" ಎಂದಿದ್ದಾರೆ. ಸ್ಪುಟ್ನಿಕ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ವಿಜ್ಞಾನಿ ಓಲೆಗ್ ಗಜೆಂಕೋ 1998ರಲ್ಲಿ ಹೇಳಿದ ಮಾತುಗಳು ಇವು: "ಅವತ್ತಿಂದ ಇಂದಿನವರೆಗೂ ಆ ಪಾಪಕಾರ್ಯಕ್ಕಾಗಿ ಪಶ್ಚಾತ್ತಾಪ ಪಡುತ್ತಲೇ ಇದ್ದೇನೆ. ಒಂದು ನಿಷ್ಪಾಪಿ ನಾಯಿಯ ಕೊಲೆಗೆ ನ್ಯಾಯ ಒದಗಿಸುವಂತಹ ಯಾವೊಂದು ದೊಡ್ಡ ಸಾಧನೆಯನ್ನೂ ನಾವು ಆ ಕಾರ್ಯಾಚರಣೆಯಲ್ಲಿ ಮಾಡಲಿಲ್ಲ!". |
ಶಿಕ್ಷಣಕ್ಕಾಗಿ ನೀವು ಸಾಲತೆಗೆದುಕೊಳ್ಳುತ್ತಿದ್ದೀರಾ…? ಹಾಗಾದರೆ ಈ ಮಾಹಿತಿಯನ್ನು ಓದಿ..! | Prajapragathi |
Home ಜಿಲ್ಲಾ ವಿಶೇಷ ವಾಣಿಜ್ಯ ಶಿಕ್ಷಣಕ್ಕಾಗಿ ನೀವು ಸಾಲತೆಗೆದುಕೊಳ್ಳುತ್ತಿದ್ದೀರಾ…? ಹಾಗಾದರೆ ಈ ಮಾಹಿತಿಯನ್ನು ಓದಿ..! |
ಶಿಕ್ಷಣಕ್ಕಾಗಿ ನೀವು ಸಾಲತೆಗೆದುಕೊಳ್ಳುತ್ತಿದ್ದೀರಾ…? ಹಾಗಾದರೆ ಈ ಮಾಹಿತಿಯನ್ನು ಓದಿ..! |
ಶಿಕ್ಷಣವು ಯಶಸ್ವೀ ಜೀವನಕ್ಕೆ ಕೀಲಿಕೈ ಇದು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ ಅಂತಾರೆ. ಆದರೆ ಅತ್ಯಂತ ದುಬಾರಿಯಾಗಿರುವ ಇಂತಹ ಶಿಕ್ಷಣವು ವಿದ್ಯಾಕಾಂಕ್ಷಿಗಳಿಗೆ ಕೈಗೆಟುಕುವುದು ಬಹಳ ಕಷ್ಟವಾಗಿದೆ. ಅದನ್ನು ಎಟುಕಿಸಿಕೊಳ್ಳಲು ಶಿಕ್ಷಣ ಸಾಲವು ಬಹು ಸಹಕಾರಿಯಾಗಿದೆ. ಆದರೆ ಸಾಲ ತೆಗೆದುಕೊಳ್ಳುವುದರಿಂದ ಹಿಡಿದು ಮರುಪಾವತಿ ಮಾಡುವ ತನಕ ಎಲ್ಲೂ ಏನೂ ಅಡ್ಡಿ ಆತಂಕಗಳು ಬರದಂತೆ ಎಚ್ಚರಿಕೆವಹಿಸುವುದು ಬಹಳ ಮುಖ್ಯ. ಇಂದಿನ ಹೆಜ್ಜೆ ಸರಿಯಾಗಿಟ್ಟರೆ ನಾಳೆಯು ಸುಗಮವಾಗಿರುತ್ತದೆ. ಈ ನಿಟ್ಟಿನಲ್ಲಿ, ನಿಮಗಾಗಿ ಕೆಲವು ಉಪಯುಕ್ತ ಮಾಹಿತಿಗಳು ಇಲ್ಲಿವೆ ನೋಡಿ. |
ಪ್ರಮುಖ ಸಂಗತಿಗಳು ಶಿಕ್ಷಣದ ವ್ಯವಹಾರವು ದಶಕದ ಹಿಂದೆ ಇದ್ದಂತೆ ಈಗಿಲ್ಲ. ಅದರಲ್ಲೂ ಉನ್ನತ ಶಿಕ್ಷಣವಂತೂ ಬಹಳ ದುಬಾರಿ ಯಾಗಿದೆ. |
Subsets and Splits
No community queries yet
The top public SQL queries from the community will appear here once available.