text
stringlengths
0
61.5k
ರಾಜ್ಯದಲ್ಲಿ ಈ ಬಾರಿ ಕೋವಿಡ್-19 ಹಿನ್ನೆಲೆ ಇರುವ ಕಾರಣ ಈಗಾಗಲೇ ಸರ್ಕಾರ ನಾಡಹಬ್ಬವನ್ನು ಸಂಪ್ರದಾಯಕ್ಕೆ ಧಕ್ಕೆಯಾಗದಂತೆ ಸರಳವಾಗಿ ಆಚರಿಸಲು ತೀರ್ಮಾನಿಸಿದೆ.
ಈ ಹಿನ್ನೆಲೆಯಲ್ಲಿ ದಸರಾ ಸಂದರ್ಭದಲ್ಲಿ ಮೈಸೂರಿಗೆ ಹೆಚ್ಚು ಜನರು ಸೇರ್ಪಡೆಯಾಗದಂತೆ ನೋಡಿಕೊಳ್ಳಬೇಕು. ಕೊರೊನಾ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡದಂತೆ ಈಗಿನಿಂದಲೇ ಹೆಚ್ಚು ಜಾಗೃತಿ ವಹಿಸಬೇಕೆಂದು ಸಿಎಂ ಸೂಚನೆ ಕೊಟ್ಟರು.
ಸಾಮಾಜಿಕ ಅಂತರ, ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸ್ಯಾನಿಟೈಜರ್ ಬಳಕೆ ಹಾಗೂ ದೇಶ-ವಿದೇಶಗಳಿಂದ ಪ್ರವಾಸಿಗರು ಬಂದರೆ ಅವರ ಮೇಲೆ ವಿಶೇಷ ನಿಗಾ ವಹಿಸುವುದು ಸೇರಿದಂತೆ ಅಧಿಕಾರಿಗಳಿಗೆ ಕೆಲವು ತುರ್ತು ಕ್ರಮಗಳನ್ನು ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದರು.
ದಸರಾ ಆಚರಣೆಗೆ ಸರ್ಕಾರ ಈಗಾಗಲೇ ಘೋಷಣೆ ಮಾಡಿರುವಂತೆ ಆರ್ಥಿಕ ನೆರವು ನೀಡಲಿದೆ. ಅರಮನೆ ಮತ್ತು ಚಾಮುಂಡಿ ಬೆಟ್ಟಕ್ಕೆ ಮಾತ್ರ ಸೀಮಿತವಾಗಿ ಕಾರ್ಯಕ್ರಮ ಆಯೋಜಿಸಬೇಕು. ಅರಮನೆ ಮತ್ತು ನಗರದ ಪ್ರಮುಖ ಬೀದಿಗಳಿಗೆ ದೀಪಾಲಂಕಾರ ಮಾಡಬೇಕಾದ ಅಗತ್ಯವಿಲ್ಲ ಎಂದು ಸಿಎಂ ಸೂಚಿಸಿದ್ದಾಗಿ ತಿಳಿದುಬಂದಿದೆ.
ಸಂಪ್ರದಾಯಕ್ಕೆ ಅಡ್ಡಿಯಾಗದಂತೆ ಕಾರ್ಯಕ್ರಮ ಆಯೋಜಿಸಬೇಕು. ಏನೇ ಸಾಂಸ್ಕøತಿಕ ಕಾರ್ಯಕ್ರಮಗಳಿದ್ದರೂ ಅರಮನೆ ಮತ್ತು ಚಾಮುಂಡಿ ಬೆಟ್ಟಕ್ಕೆ ಸೀಮಿತವಾಗಬೇಕು. ಆದಷ್ಟು ಹೆಚ್ಚು ಜನರು ಒಂದು ಕಡೆ ಗುಂಪು ಗೂಡದಂತೆ ವಿಶೇಷ ಮುತುವರ್ಜಿ ವಹಿಸಿ ಎಂದು ತಾಕೀತು ಮಾಡಿದರು.
ಸರ್ಕಾರ ನೀಡಿರುವ ಎಲ್ಲ ನಿಯಮಗಳನ್ನೂ ಜಿಲ್ಲಾಡಳಿತ ಹಾಗೂ ಪ್ರಮುಖ ಇಲಾಖೆಗಳು ಪಾಲನೆ ಮಾಡಲಿವೆ. ಮುಂದಿನ ವಾರದಿಂದ ಮೈಸೂರು ಸೇರಿದಂತೆ ಬೇರೆ ಬೇರೆ ಭಾಗಗಳಲ್ಲಿ ಇನ್ನಷ್ಟು ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳಲಿದ್ದೇವೆ ಎಂದು ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ಗೊತ್ತಾಗಿದೆ.
ಎಪಿಎಂಸಿ ಅಧ್ಯಕ್ಷರಾಗಿ ಬಾಬು ಅವಿರೋಧ ಆಯ್ಕೆ | Prajavani
ಎಪಿಎಂಸಿ ಅಧ್ಯಕ್ಷರಾಗಿ ಬಾಬು ಅವಿರೋಧ ಆಯ್ಕೆ
Published: 05 ಜುಲೈ 2012, 11:50 IST
Updated: 05 ಜುಲೈ 2012, 11:50 IST
ರಾಣೆಬೆನ್ನೂರು; ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ತುಮ್ಮಿನಕಟ್ಟಿ ಕ್ಷೇತ್ರದ ಶೇಖರಪ್ಪ ಬಣಕಾರ ಅವರ ಅವಿಶ್ವಾಸ ಮಂಡನೆಯಿಂದ ರಾಜೀನಾಮೆ ಯಿಂದ ತೆರವಾದ ಸ್ಥಾನಕ್ಕೆ ಬುಧವಾರ ಶಾಂತಿಯುತವಾಗಿ ಚುನಾವಣೆ ನಡೆಯಿತು. ನೂತನ ಅಧ್ಯಕ್ಷರಾಗಿ ಕುಪ್ಪೇಲೂರು ಕ್ಷೇತ್ರದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಬಾಬು ಹರಿಹರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್‌ನ 9 ಅಭ್ಯರ್ಥಿಗಳು ಮತ್ತು ಬಿಜೆಪಿ ಬೆಂಬಲಿತ 8 ಅಭ್ಯರ್ಥಿಗಳು ಬಾಬು ಹರಿಹರ ಅವರ ಪರವಾಗಿ ಕೈ ಎತ್ತುವ ಮೂಲಕ ಅವಿರೋಧ ಆಯ್ಕೆ ಮಾಡಿದ ಚುನಾವಣೆಯು ರಾಜ್ಯದಲ್ಲಿಯೇ ಹೊಸ ಮಾದರಿಯಾಗಿದೆ. ಮಾಜಿ ಅಧ್ಯಕ್ಷ ಶೇಖರಪ್ಪ ಬಣಕಾರ ಅವರ ಪರವಾಗಿ ಅವಿಶ್ವಾಸ ಮಂಡನೆ ಸಮಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತ ಒಟ್ಟು 16 ಸದಸ್ಯರು ಸೇರಿ ಅವಿಶ್ವಾಸ ಮಂಡನೆಗೆ ಸಹಿ ಹಾಕಿ ಅವಿಶ್ವಾಸಕ್ಕೆ ಕೈ ಎತ್ತಿ ...
ಈ ಹಿನ್ನೆಲೆಯಲ್ಲಿ ಮುಂಬರುವ ಅಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯನ್ನು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲು ಪರಸ್ಪರ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆ ಪ್ರಕಾರ ಬುಧವಾರ ನಡೆದ ಚುನಾವಣೆಯಲ್ಲಿ ಸರ್ವ ಸದಸ್ಯರು ಪಕ್ಷ ಭೇದ ಮರೆತು ಚುನಾವಣೆಗೆ ಬೆಂಬಲ ಮತ್ತು ಸಹಕಾರ ನೀಡಿದ್ದಾರೆ ಎಂದು ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಏಕನಾಥ ಭಾನುವಳ್ಳಿ ಸುದ್ದಿಗಾರರಿಗೆ ತಿಳಿಸಿದರು.
ನೂತನ ಅಧ್ಯಕ್ಷ ಬಾಬು ಹರಿಹರ ಅವರು ಮಾತನಾಡಿ, ಪಕ್ಷ ಭೇದ ಮರೆತು ಸರ್ವ ಸದಸ್ಯರು ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಕ್ಕೆ ಮೊದಲು ಅಭಿನಂದನೆ ತಿಳಿಸಿದರು. ಇದೊಂದು ಮಾದರಿ ಚುನಾವಣೆಯಾಗಿದೆ, ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಾಲ್ಲೂಕಿನ ಕೃಷಿ ಮಾರುಕಟ್ಟೆ ಅಭಿವೃದ್ಧಿ ಸಮಿತಿಯ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಸದಸ್ಯರಾದ ನಂದೆಪ್ಪ ತೆಗ್ಗಿನ ಅವರು ಪಕ್ಷ ಭೇದ ಮರೆತು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪರಸ್ಪರ ಸಹಕಾರ ಮನೋ ಭಾವದಿಂದ ಮುನ್ನಡೆಸಿಕೊಂಡು ಹೋಗುತ್ತೇವೆ. ಅವಿಶ್ವಾಸ ಮಂಡನೆ ಹಿನ್ನೆಲೆಯಲ್ಲಿ ಮಾಜಿ ಅಧ್ಯಕ್ಷ ಶೇಖರಪ್ಪ ಬಣಕಾರ ಅವರು ಸದಸ್ಯರ ಮೇಲೆ ಮಾಡಿದ ಆರೋಪಗಳು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ಸತ್ಯಕ್ಕೆ ದೂರವಾಗಿವೆ ಎಂದು ತಿಳಿಸಿದರು.ತಹಸೀಲ್ದಾರ ಮಹ್ಮದ್ ಜುಬೈರ್ ಚುನಾವಣಾಧಿಕಾರಿಯಾಗ...
ಉಪಾಧ್ಯಕ್ಷ ಮಹೇಶ ಮಲ್ಲಾಪೂರ, ಸಣ್ಣತಮ್ಮಪ್ಪ ಬಾರ್ಕಿ, ಕರಬಸಪ್ಪ ಭರಡಿ, ಮಂಜುನಾಥ ಲಿಂಗದಹಳ್ಳಿ, ಸೋಮನಗೌಡ ಹಾದಿಮನಿ, ಶರಶ್ಚಂದ್ರ ದೊಡ್ಮನಿ, ವೆಂಕಟೇಶ ಬಣಕಾರ, ನೀಲವ್ವ ನೀಲಪ್ಪ ಕೂನಬೇವು, ಬಸವಣ್ಣೆವ್ವ ಯಲಿಗಾರ, ನಾಗರಾಜ ಪಾಟೀಲ, ರಾಮಣ್ಣಲಮಾಣಿ ಉಪಸ್ಥಿತರಿದ್ದರು. ಎಪಿಎಂಸಿ ಕಾರ್ಯದರ್ಶಿ ಅನಿಲಕುಮಾರಿ ಸ್ವಾಗತಿಸಿದರು. ದೊಡ್ಡಮನಿ ವಂದಿಸಿದರು.
ಕರಸ್ಥಲ ಸಾಹಿತ್ಯ: ಪ್ರಸ್ತಾವನೆ (೧) – ಕಣಜ
ಕರಸ್ಥಲ ಸಾಹಿತ್ಯ: ಪ್ರಸ್ತಾವನೆ (೧)
Home/ಸಮುದಾಯ ಸಾಹಿತ್ಯ, ಸಾಹಿತ್ಯ, ಸಾಹಿತ್ಯ ವಿಮರ್ಶೆ/ಕರಸ್ಥಲ ಸಾಹಿತ್ಯ: ಪ್ರಸ್ತಾವನೆ (೧)
ಕರ್ನಾಟಕದ ಪ್ರಮುಖ ರಾಜಮನೆತನಗಳಲ್ಲಿ ಹೆಚ್ಚು ಪ್ರಸಿದ್ಧವಾದುದು ವಿಜಯನಗರ. ಈ ಮನೆತನದ ಪ್ರೌಢದೇವರಾಯನ ಕಾಲಾವಧಿಯಲ್ಲಿ ಕನ್ನಡ ಸಾಹಿತ್ಯ, ಧರ್ಮ, ಸಂಸ್ಕೃತಿಗಳು ಉತ್ತುಂಗ ಶಿಖರವೇರಿದ್ದವು ಅದರಲ್ಲಿಯೂ ವೀರಶೈವ ಸಾಹಿತ್ಯವು ಇನ್ನೂಒಂದು ಹೆಜ್ಜೆ ಮುಂದೆ ಹೋಗಿ, ಹೊಸ ಹೊಸ ರೂಪಗಳಲ್ಲಿ ತನ್ನ ವೈಶಿಷ್ಟವನ್ನು ಮೆರೆದಿತ್ತು. ಶಿವಶರಣರ ವಚನಗಳ ಸಂಗ್ರಹ – ಸಂಕಲನ – ಸಂಪಾದನೆ, ಕಾಲಜ್ಞಾನ, ಅಷ್ಟಕ, ತಾರಾವಳಿ...
ಪ್ರೌಢದೇವರಾಯನು ಕ್ರಿ.ಶ. ೧೪೨೪ರಿಂದ ೧೪೪೭ರ ವರೆಗೆ ಅಂದರೆ, ೨೨ ವರ್ಷಗಳ ಕಾಲ ರಾಜ್ಯಭಾರದ ಕರ್ಣಧಾರತ್ವವನ್ನು ವಹಿಸಿದ್ದನೆಂದು ಶಾಸನಾಧಾರಗಳಿಂದ ತಿಳಿದುಬರುತ್ತದೆ. ಈತನ ಕಾಲಾವಧಿಯಲ್ಲಿ ಸಾಮ್ರಾಜ್ಯವು ರಾಜಕೀಯ ಸ್ಥಿರತೆ, ಸಾಮಾಜಿಕ ಸುಖ – ಶಾಂತಿಗಳಿಂದ ಕೂಡಿದ ನೆಮ್ಮದಿಯ ಬೀಡಾಗಿತ್ತು. ಅರಸ, ಪ್ರಧಾನಿ, ಪ್ರಜೆಗಳಾದಿಯಾಗಿ ಎಲ್ಲರೂ ಸಾಹಿತ್ಯ, ಕಲೆ, ಸಂಗೀತ, ಸಂಸ್ಕೃತಿಗಳಲ್ಲಿ ವಿಶೇಷ ಆಸಕ್ತಿ ವಹಿಸ...
ಕರಸ್ಥಲ ಸಾಹಿತ್ಯ
'ಕರಸ್ಥಲ' ಎಂಬುದು ಒಂದು ವೀರಶೈವ ಪಾರಿಭಾಷಿಕ ಪದ. ಇಷ್ಟಲಿಂಗ, ಸದ್ಭಾವವೆಂಬ ಹಸ್ತ ಎಂಬ ಅರ್ಥಗಳನ್ನು ಅದು ಹೊಂದಿದೆ. ವೀರಶೈವರಲ್ಲಿ ಶ್ರೀಗುರುವು ಶಿಷ್ಯನ ಕರಸ್ಥಲಕ್ಕೆ ಇಷ್ಟಲಿಂಗವನ್ನು ಕರುಣಿಸುತ್ತಾನೆ. ಇದಕ್ಕೆ 'ವೇಧಾದೀಕ್ಷೆ' ಯೆಂದೂ ಕರೆಯುತ್ತಾರೆ. ಇದನ್ನೆ ಹಸ್ತಮಸ್ತಕ ಸಂಯೋಗವೆಂದೂ ಹೇಳಲಾಗುತ್ತಿದೆ. ಮಾಯಿದೇವಾಚಾರ್ಯನು ತನ್ನ ಶಿವಾನುಭವಸೂತ್ರದಲ್ಲಿ 'ಹಸ್ತಮಸ್ತಕ ಸಂಯೋಗಾಚ್ಚಲಾದ್ವೇಧೇತಿಗೀ...
'ಕರಸ್ಥಲ'ದ ಮಹತ್ವವನ್ನು ತಮ್ಮ ಕೃತಿಗಳ ಮುಖಾಂತರ ಹೆಚ್ಚು ಪ್ರಚುರ ಪಡಿಸಿದವರು ಕರಸ್ಥಲ ವೀರಣ್ಣೊಡೆಯ, ಕರಸ್ಥಲ ನಾಗಿದೇವ, ಕರಸ್ಥಲ ಮಲ್ಲಿಕಾರ್ಜುನ. ಹೀಗಾಗಿ ಇವರಿಗೆ 'ಕರಸ್ಥಲ' ಎಂಬ ವಿಶೇಷ ಅನ್ವರ್ಥಕನಾಮ ಪ್ರಾಪ್ತವಾದಂತಿಗೆ. ಕರಸ್ಥಲದ ಗುರುಶಾಂತ ವೀರಯ್ಯ, ಪಾಲ್ಕುರಿಕೆಯ ಕರಸ್ಥಲದ ವಿಶ್ವೇಶ್ವರ, ಕರಸ್ಥಲದೇವರು ಎಂಬ ಹೆಸರಿನ ಕೆಲವರು ಕಾವ್ಯಗಳಲ್ಲಿ ಉಲ್ಲೇಖಗೊಂಡಿದ್ದರೂ ಅವರು ಕೃತಿಗಳನ್ನು ರಚಿಸಿ...
ಕರಸ್ಥಲ ವೀರಣ್ಣೊಡೆಯ
ಪ್ರೌಢದೇವರಾಯನ ಕಾಲದ ಒಬ್ಬ ಪ್ರಭಾವಿ ವ್ಯಕ್ತಿ ಕರಸ್ಥಲ ವೀರಣ್ಣೊಡೆಯ. ರಾಜಕೀಯ, ಧಾರ್ಮಿಕ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ತನ್ನದೇ ಆದ ಸೇವೆಯನ್ನು ಸಲ್ಲಿಸಿದ ಈತ ನೂರೊಂದು ವಿರಕ್ತರೊಡನೆ ಅನ್ಯೋನ್ಯವಾಗಿದ್ದನು. ಅದೃಶ್ಯಕವಿ, ಶಾಂತಲಿಂಗ ದೇಶಿಕರಂತೂ ಈತನನ್ನು ನೂರೊಂದು ವಿರಕ್ತರಲ್ಲಿ ಒಬ್ಬನೆಂದು ಗುರುತಿಸಿದ್ದಾರೆ. ಪ್ರೌಢದೇವರಾಯನು ವೀರಣ್ಣೊಡೆಯನಿಗೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿದೆನಂಬ...
ಪ್ರೌಢದೇವರಾಯನ ಆಸ್ಥಾನದಲ್ಲಿ ಈತ ಮಂತ್ರಿಯಾಗಿದ್ದನೆಂದು ಊಹಿಸಲು ನಮಗೆ ಶಾಸನಗಳು ಪುಷ್ಟಿಯನ್ನು ನೀಡುತ್ತದೆ. ಆ ಕಾಲದ ಮಂತ್ರಿಗಳಿಗೆ ಸಾಮಾನ್ಯವಾಗಿ ಒಡೆಯ ಎಂಬುದು ಒಂದು ಪ್ರಶಸ್ತಿಯಾಗಿತ್ತು. ಇರುಗಪ್ಪೊಡೆಯ, ಬೈಚಪ್ಪೊಡೆಯ, ನಾಗಣ್ಣೊಡೆಯ ಎಂದು ಶಾಸನಗಳಲ್ಲಿ ಕರೆಯಲಾಗಿದೆ. ಆದ್ದರಿಂದ ವೀರಣ್ಣೊಡೆಯ ಎಂಬ ಹೆಸರೇ ಸೂಚಿಸುವಂತೆ ಈತನೂ ಪ್ರೌಢದೇವರಾಯನಲ್ಲಿದ್ದ ಲಕ್ಕಣ್ಣ, ಜಕ್ಕಣ್ಣ, ಮುದ್ದಣ್ಣ, ನಾಗಣ್ಣ...
ಜೀವನ ವಿವರಗಳು
ವಿರುಪಣ್ಣೊಡೆಯ, ವೀರಣ್ಣೊಡೆಯ, ವೀರಣ್ಣಯ್ಯ, ವೀರಯ್ಯ, ವೀರಣಯ್ಯ, ಗುರು ವೀರಣ್ಣಯ್ಯ, ಕರಸ್ಥಲ ವೀರಣ್ಣ, ಕರಸ್ಥಲ ಗುರುಶಾಂತವೀರಯ್ಯ ಎಂದು ಶಾಸನ ಮತ್ತು ಕಾವ್ಯಗಳಲ್ಲಿ ಈತನನ್ನು ಕರೆಯಲಾಗಿದೆ. 'ವೀರಣ್ಣೊಡೆಯ' ಎಂಬ ಹೆಸರಿನ ಜೊತೆಗೆ 'ಕರಸ್ಥಲ' ಎಂಬ ಪದ ಪ್ರಾಪ್ತವಾದುದು ಬಹುಶಃ ನಾಗಿದೇವನಿಗೆ ಗುರುವಾದ ಮೇಲೆಯೇ ಎಂದು ತೋರುತ್ತದೆ. ಶ್ರೀರಂಗಪಟ್ಟಣದ ಸಮೀಪವಿರುವ ಕಾವೇರಿ ನದಿ ತೀರದಲ್ಲಿರುವ ಬೊಮ್ಮೂರು...
ಕರಸ್ಥಲ ವೀರಣ್ಣೊಡೆಯನ ಕಾಲವನ್ನು ನಿಖರವಾಗಿ ಹೇಳಲು ಸಾಧ್ಯವಾಗುತ್ತಿಲ್ಲವಾದರೂ, ಶಾಸನಾಧಾರಗಳಿಂದ ಕೆಲವು ಅಂಶಗಳು ತಿಳಿದುಬರುತ್ತವೆ. ವೀರಣ್ಣೊಡೆಯನಿಗೆ ಸಂಬಂಧಿಸಿದ ಶಾಸನಗಳು ಕ್ರಿ.ಶ. ೧೪೦೪ ರಿಂದ ೧೪೩೪ರ ಅವಧಿಯಲ್ಲಿ ರಚನೆಗೊಂಡಂಥವುಗಳು. ಆದ್ದರಿಂದ ಈತ ಮೊದಲನೆಯ ದೇವರಾಯ (೧೪೦೬ – ೧೪೨೨)ನ ಕಾಲದಿಂದಲೂ ರಾಜ್ಯದಲ್ಲಿ ಅಧಿಕಾರಿಯಾಗಿದ್ದನೆಂಬುದು ಸ್ಪಷ್ಟವಾಗುತ್ತದೆ. ಅರಗನಾಡ ಪ್ರಜೆಗಳು ಒಂದಾಗಿ ವೀ...
ವೀರಣ್ಣೊಡೆಯನ ಜೀನವಮಾರ್ಗ ಎರಡು ರೀತಿಯಾಗಿ ಹರಿದು ಬಂದಿರುವುದನ್ನು ಕಾಣಬಹುದು ಒಂದು: ಪೂರ್ವಾರ್ಧ ಜೀವನವು ಪ್ರೌಢದೇವರಾಯನ ಆಸ್ಥಾನದಲ್ಲಿ ಮಹಾಮಂತ್ರಿಯಾಗಿ, ಅಪ್ತನಾಗಿ ಕಾಣಿಸಿಕೊಂಡಿದ್ದು, ಎರಡು: ಉತ್ತರಾರ್ಧ ಜೀವನವು ಕರಸ್ಥಲ ನಾಗಿದೇವನ ಗುರುವಾಗಿ, ವೀರಶೈವ (ಕರಸ್ಥಲ) ಸಾಹಿತ್ಯಕ್ಕೆ ತನ್ನದೇ ಆದ ಸೇವೆಯನ್ನು ಸಲ್ಲಿಸಿದ್ದು. ಈ ಎರಡು ಮಾರ್ಗಗಲ್ಲಿ ಈತನ ಜೀವನದ ಉತ್ತರಾರ್ಧವನ್ನು ಶಿವತತ್ವ ಚಿಂತಾ...
ನಾಗಿದೇವನು ಗುರುವನ್ನು ಹುಡುಕಿಕೊಂಡು ಬರುತ್ತಿರುವಾಗ ಆತನ ಕೈಯಲ್ಲಿ 'ಪೀಠ ರಹಿತವಾಗಿ ಲಿಂಗ' ವಿದ್ದುದನ್ನು ಕಂಡು ವೀರಣ್ಣೊಡೆಯ ಅದಕ್ಕೆ ಪೀಠವನ್ನು ಅನುವುಗೊಳಿಸಿ ವೀರಶೈವ ತತ್ವಗಳನ್ನು ಬೋಧಿಸುತ್ತಾನೆ. ಆದರೆ ನಾಗಿದೇವನಿಗೆ ತನ್ನ ಗುರುವಿನ ಐಹಿಕ ಜೀವನದ ರೀತಿ – ನೀತಿ ಹಿಡಿಸುವುದಿಲ್ಲ. ಒಂದು ದಿನ ವೀರಣ್ಣೊಡೆಯ ಪುಷ್ಪವಾಟಿಕೆಗೆ ಹೋಗಿರಲು ನಾಗಿದೇವ 'ಮೂರಡೆಯಲ್ಲಿ ಮಲವ ಬಿಟ್ಟು' ಅಲ್ಲಿದ್ದ ನಾರಿ...
ಪಂಪಾಪುರ (ವಿಜಯನರಗ)ಕ್ಕೆ ಬಂದ ಮೇಲೆ ವೀರಣ್ಣೊಡೆಯನು ನಾಗಿದೇವನೊಡೆಯನೆಯೇ ಇರುತ್ತಾನೆ. ಅಲ್ಲಿ ಒಂದು ಘಟನೆ ನಡೆಯುತ್ತದೆ. ನಾಗಿದೇವನು ಭಿಕ್ಷೆಗೆಂದು ಹೋಗಿರಲು 'ಹುಚ್ಚರಾಹುತನ ಸತಿ' ಶೃಂಗಾರಗೊಂಡು ಆತನೊಲಿದು ಬಂದು, ತನ್ನನ್ನೇ ಭಿಕ್ಷೆಯಿತ್ತುದಾಗಿ ಹೇಳುತ್ತಾಳೆ. ನಾಗಿದೇವ ಅವಳಿಗೊಲಿದಿರಲು ಹುಚ್ಚರಾವುತನು ಬಂದು ನಾಗಿದೇವನನ್ನು ಖಡ್ಗದಿಂದ ಇರಿಯುತ್ತಾನೆ. ಆಗ ನಾಗಿದೇವನಿಗೆ ಗಾಯವಾಗದಿರುವುದನ್ನು...
ಲೌಕಿಕವಾಗಿ ಬಾಳಿ ಅಲೌಕಿಕ ಸಿದ್ಧಿಯನ್ನು ಸಂಪಾದಿಸಿದ ಕರಸ್ತಲ ವೀರಣ್ಣೊಡೆಯನು ಲೋಕಾನುಭವ – ಶಿವಾನುಭವಗಳೆರಡನ್ನೂ ಗಳಿಸಿಕೊಂಡವರು. ಧರ್ಮ, ತತ್ವಬೋಧೆಯ ಜೊತೆಗೆ ವೀರಶೈವ ತತ್ವಬೋಧಕವಾದ ಕೃತಿಗಳನ್ನು ರಚಿಸಿ, ವೀರಶೈವಸಾಹಿತ್ಯ, ಆ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತನ್ನದೇ ಆದ ಸೇವೆಯನ್ನು ಸಲ್ಲಿಸಿದ್ದಾನೆ. ಈಗ ಈತನ ಉಪಲಬ್ಧವಾದ ಕೃತಿಗಳನ್ನು ಪರಿಶೀಲಿಸಬಹುದು.
ಕರಸ್ಥಲ ವೀರಣ್ಣೊಡೆಯನು ಕಂದ, ಶತಕ, ವೃತ್ತ, ತ್ರಿಪದಿ, ರಗಳೆ, ವಚನ, ಸ್ವರವಚನ – ಹೀಗೆ ವಿವಿಧ ಪ್ರಕಾರಗಳಲ್ಲಿ ಏಳು ಕೃತಿಗಳನ್ನು ರಚಿಸಿದ್ದಾನೆ.
೧. ವೀರಣ್ಣೊಡೆಯರ ಕಂದ
೨. ನಿಃಕಲ ಶತಕ
೩. ಪರಮವಿರಕ್ತನ ಐಕ್ಯಸ್ಥಲ
೪. ಅಷ್ಟವಿಧಾರ್ಚನೆ
೫. ಮಂತ್ರೋತ್ಪತ್ತಿ ರಗಳೆ
೬. ವಚನ
೭. ಸ್ವರವಚನ
ಈ ಎಲ್ಲ ಕೃತಿಗಳು ಸ್ತುತಿ ರೂಪದಲ್ಲಿದ್ದು, ಲಿಂಗ, ಮಂತ್ರ, ಅರ್ಚನೆ ಮೊದಲದ ವೀರಶೈವ ತತ್ವಗಳ ನಿರೂಪಣೆ ಇಲ್ಲಿದೆ.
೧. ವೀರಣ್ಣೊಡೆಯರ ಕಂದ: ಕರಸ್ಥಲ ವೀರಣ್ಣೊಡೆಯವ ಕಂದವು ೨೫ ಕಂದ ಪದ್ಯಗಳನ್ನೊಳಗೊಂಡ ಲಘುಸ್ತೋತ್ರ ರಚನೆಯಾಗಿದೆ. ಸಾಕಾರ ಪರಮಾತ್ಮನನ್ನು ವರ್ಣಿಸುತ್ತಾ ಆತನ ಕರಸ್ಥಲದಲ್ಲಿ ಪ್ರತಿಷ್ಟಿತಗೊಂಡುದು ಇದರ ವಿಷಯವಾಗಿದೆ. ಪ್ರತಿಯೊಂದು ಪದ್ಯವೂ 'ಕಂಡೆನೆನ್ನ ಕರಕಮಲದೊಳು' ಎಂದು ಮುಕ್ತಾಯವಾಗುತ್ತದೆ. ಈ ಕೃತಿಯು ಆಧ್ಯಾತ್ಮ ರಸದ ಸ್ತ್ರೋತ್ರಗೀತೆಯಾಗಿದ್ದು, ಕವಿ ಭಕ್ತಿಭಾವಾವೇಶದೊಂದಿಗೆ ಪರಮಾತ್ಮನನ್ನು ಸ್ತ...
ವೇದ ಮೊದಲಾದ ಶಾಸ್ತ್ರದ
ಲಾದಿಯ ಪೌರಾಣದಾಗಮ ರಹಸ್ಯಗಳು
ಬೋಧಿಸಿದ ನಾದಮೂರ್ತಿಯ
ಪಾದಸುಪದ್ಮವನು ಕಂಡೆ ಕರಕಮಲದೊಳುಂ ||
ಎಂದು ನಾನಾ ರೀತಿಯಾಗಿ ಶಿವನನ್ನು ಸ್ತುತಿಸಿದ್ದಾನೆ. ಅಜಹತಿ ಸುರಮನು ಮುನಿಗಳ ಭಜಿಸುವ ಬಾಧನೆಗೆ ಸಿಲುಕದ ಜಡಧ್ವಯವನ್ನು ಕರಕಮದಲ್ಲಿ ಕಂಡು ಪುಲಕಿತನಾಗಿದ್ದಾನೆ. ಒಟ್ಟಿನಲ್ಲಿ "ಕನ್ನಡದ ಕಂದ ಸಾಹಿತ್ಯದಲ್ಲಿ ಕರಸ್ಥಲ ವೀರಣ್ಣೊಡೆಯನ ರಚನೆ ಉತ್ಕ್ರಷ್ಟವೂ, ಉದಾತ್ತವೂ, ವಿಶಿಷ್ಟವೂ ಆಗಿದೆ. ಇದು ವೀರಶೈವ ತತ್ವಗಳನ್ನು ನಿರೂಪಿಸುತ್ತಿದ್ದು, ಲಿಂಗಪೂಜಕರಿಗಂತೂ ನಿತ್ಯ ಪಾರಾಯಣಕ್ಕೆ ಪ್ರಶಸ್ತವಾಗಿದೆ. ಈ ...
೨. ನಿಃಕಲ ಶತಕ: ಈ ಕೃತಿಯು ೧೦೦ ವೃತ್ತಗಳನ್ನೊಳಗೊಂಡಿದೆ. ಅನುಭಾವಿ ಕವಿಯಾದ ವೀರಣ್ಣೊಡೆಯನು ತನ್ನ ಗುರುವಿನ ಮಹತಿಯನ್ನು ಕೊಂಡಾಡಿದ್ದಾನೆ. ಪ್ರತಿಯೊಂದು ಪದ್ಯವೂ 'ನಿಜಶಾಂತ ನಿಃಕಲಾ' ಎಂದು ಮುಕ್ತಾಯವಾಗುತ್ತದೆ. ನಿಜಶಾಂತ ಎಂಬುದು ಈತನ ಇಷ್ಟಗುರು. ಪ್ರತಿಯೊಂದು ಮನುಷ್ಯನಲ್ಲಿರುವ ಜಡಸಂಶಯಗಳನ್ನು ತೊಡೆದು ಹಾಕಬೇಕು. ಘನಲಿಂಗ ಮಹಿಮೆಯನ್ನು ಮಾನವರಾರು ತಿಳಿಯಲೊಲ್ಲರು. ಲೋಕದ ಜನಗಳಿಗೆ ಕೆಲವರು ತುಚ...
"ಹೃದಯದೊಳಾಸೆ ಭೀತಿ ಜಡಶಂಕೆಗಳುಳ್ಳ ನರರ್ ಮಹಾತ್ಮರಿಂ
ದೊದವಿದ ಗರ್ವದಿಂ ಪಲವು ಮಾತುಗಳಂ ಪುರಿಗಟ್ಟಿ ತೋರೆ ಲಿಂ
ಗದ ನಿಜ ಸಂಗಿಗಳ್ ನಗರೆ ಪೇಳ್ ಗುರು ಮುದ್ರೆಯ ಕಳ್ಳಹೊನ್ನ ನೊ
ಯ್ದದನೆ ಸುವರ್ಣವಾಣಿಜರ್ಗೆ ತೋರುವವೊಲ್ ನಿಜಶಾಂತ ನಿಃಕಲಾ ||
ಹೀಗೆ ಈ ಶತಕವು ವೀರಶೈವರಿಗೆ ಅಗತ್ಯವಾಗಿ ಉಪಯೋಗವಾಗುತ್ತದೆ. ನಿಃಕಲ ಪರಶಿವನನ್ನು ಈ ಕೃತಿಯ ಮೂಲಕ ಕೊಂಡಾಡಲಾಗಿದೆ.
೩. ಪರಮವಿರಕ್ತನ ಐಕ್ಯಸ್ಥಲ: ೬೧ ತ್ರಿಪದಗಳಲ್ಲಿ ಪರಮ ವಿರಕ್ತನ ಮಹತ್ವವನ್ನು ವೀರಣ್ಣೊಡೆಯ ಹೇಳಿದ್ದಾನೆ. ವೀರಣ್ಣೊಡೆಯನ ದೃಷ್ಟಿಯಲ್ಲಿ ಪರಮ ವಿರಕ್ತನಾದವನು "ಪರಮ ಲಿಂಗವ ಕರದಿ ಧರಿಸಿ ಜಡಮನುಜರ ಮನೆಗೆ ಹೋಗದೆ ತಾನು ಗಿರಿಗುಹೆಯಲ್ಲಿ ವಾಸಮಾಡಬೇಕು. ಅಂಥವನೆ ನಿಜವಾದ ವಿರಕ್ತನು." ಪ್ರತಿಯೊಂದು ತ್ರಿಪದಿಯೂ 'ನಿಜಮುಕ್ತಾ' ಎಂದು ಮುಕ್ತಾಯಗೊಳ್ಳುತ್ತದೆ. ಲಿಂಗವನ್ನು ಕರದೊಳಗೆ ಧರಿಸಿದ ಮೇಲೆ ಅಂಗಗುಣಗ...
೪. ಮಂತ್ರೋತ್ಪತ್ತಿ ರಗಳೆ: ಹೆಸರೇ ಸೂಚಿಸುವಂತೆ ಇದು ರಗಳೆ ಛಂದಸ್ಸಿನಲ್ಲಿದೆ. ಆದಿಯಲ್ಲಿ ಒಂದು ಕಂದ, ಗದ್ಯ, ಅಂತ್ಯದಲ್ಲಿ ಒಂದು ಕಂದಪದ್ಯವಿದ್ದು, ೨೦೨ ಪಾದಗಳಲ್ಲಿ ವಿಸ್ತಾರಗೊಂಡಿದೆ. ಓಂ ನಮಃಶಿವಾಯ ಎಂಬ ಷಡಕ್ಷರ ಮಂತ್ರವ ಉತ್ಪತ್ತಿ, ಅದರ ಮಹತ್ವವನ್ನು ಕುರಿತಂತೆ ಸುದೀರ್ಘವಾಗಿ ಹೇಳಲಾಗಿದೆ.
ಶಿವ ಸ್ವಯಾನುಭಾವ ಪಂಚಪ್ರಣವ ಓಂ ನಮಃಶಿವಾಯ
ಶಿವನು ಸೂಕ್ಷ್ಮ ಪಂಚಪ್ರಣವವರ್ಣ ಓಂ ನಮಃಶಿವಾಯ
ಪ್ರಣಮ ವರ್ಣದ ಮೂರ್ತಿಯಾದುದೋಂ ನಮಃಶಿವಾಯ
ಎಂದು ಓಂ ನಮಃಶಿವಾಯ ಪ್ರತಿ ಸಾಲಿನಲ್ಲಿಯೂ ಪುನರಾವರ್ತನೆಗೊಂಡಿದೆ. ಮಂತ್ರೋತ್ಪತ್ತಿ ರಗಳೆಯನ್ನು ಅನವರತ ಯಾರೇ ಆಗಲಿ ಪಠಣ ಮಾಡಿದರೆ ಶಾಂತನ ಸನ್ನಧಿಯೊಳು ಭಕ್ತನು ಇರುತ್ತಾನೆಂದು ಕೊನೆಯಲ್ಲಿ ಹೇಳಾಗಿದೆ.
೫. ಅಷ್ಟವಿಧಾರ್ಚನೆ : ಮಜ್ಜನ, ಸುಗಂಧ ಲೇಪನ, ಅಕ್ಷತೆ, ಪುಷ್ಪ ಧೂಪ, ದೀಪ, ನೈವೇದ್ಯ, ತಾಂಬೂಲವೆಂಬ ಎಂಟು ರೀತಿಯ ದ್ರವ್ಯಗಳಿಂದ ಲಿಂಗವನ್ನು ಪೂಜಿಸುವ ವಿಧಾನಗಳನ್ನು ಈ ಕಿರುಕೃತಿಯಲ್ಲಿ ವೀರಣ್ಣೊಡೆಯ ಹೇಳಿದ್ದಾನೆ. ೧೧ ಮಲ್ಲಿಕಾಮಾಲಾ ವೃತ್ತಗಳಲ್ಲಿ ಇದು ರಚಿತವಾಗಿದೆ. ಒಂದೊಂದು ವಿಧದ ಅರ್ಚನೆಯ ಸ್ವರೂಪವನ್ನು ಒಂದೊಂದು ವೃತ್ತಗಳ ಮುಖಾಂತರ ಹೇಳಲಾಗಿದೆ. ಪುಷ್ಪಾರ್ಚನೆಯ ವಿಧಾನವನ್ನು ನೋಡಬಹುದು:
ಅಳಿಗಳೆಲ್ಲವ ತುಳಿದು ಚುಂಬಿಸಿ ಬಳಸಿ ಬಿಟ್ಟರಳಲ್ಲದೆ
ನಳಿನ ನೇತ್ರನ ಕಿರಣ ಸೋಂಕಿ ಕಳಲಿ ಕುಂದಿದುಲ್ಲದೆ
ಸುಳಿವ ಪಾವನಗೆ ಕಂಪಸೂಸುವ ಕಳೆ ಬಲು ನನೆಯಲ್ಲದೆ
ಇಳೆಯೊಳುಳ್ಳ ಸುಗಂಧ ಪುಷ್ಪವ ನಳಿನ ಸುಖಧರಗರ್ಚಿಪೆ ||
ವೀರಣ್ಣೊಡೆಯನ ಭಕ್ತಿ ಭಾವ, ಸರಳಸುಂದರ ಶೈಲಿಗೆ ಹಿಡಿದ ಕನ್ನಡಿಯಂತಿವೆ ಇಲ್ಲಿಯ ಪದ್ಯಗಳು.
೬. ವಚನಗಳು: ಕರಸ್ಥಲ ವೀರಣ್ಣೊಡೆಯ ಬಸವೋತ್ತರ ಯುಗದ ಒಬ್ಬವಚನಕಾರ. ಸಧ್ಯ ಈತನ ಏಳು ವಚನಗಳು ಲಭ್ಯವಾಗಿದ್ದು, ಅವು ಬೇರೆ ಬೇರೆ ವಚನ ಸಂಕಲನಗಳಲ್ಲಿ ಎಡೆಪಡೆದುಕೊಂಡಿವೆ. ಮಹಾಘನ ಶಾಂತಮಲ್ಲಿಕಾರ್ಜುನ, ನಿಜಗುರು ಶಾಂತ ಮಲ್ಲಿಕಾರ್ಜುನ, ಶಾಂತಮಲ್ಲಿಕಾರ್ಜುನ, ಪರಮಪಂಚಾಕ್ಷರ ಮೂರ್ತಿ ಶಾಂತಮಲ್ಲಿಕಾರ್ಜುನ, ಪರಮಪ್ರಭು ಶಾಂತಮಲ್ಲಿಕಾರ್ಜುನ, ನಿಜಗುರು ಶಾಂತ ಮಲ್ಲೆಶ್ವರಾ ಎಂಬು ಆರು ವಿವಿಧ ಅಂಕಿತಗಳಲ್ಲಿ ...
ಮೂರು ವಚನಗಳಲ್ಲಿ ಬಸವ, ಚೆನ್ನಬಸವ, ಪ್ರಭುದೇವ ಸಿದ್ಧರಾಮ, ಮಡಿವಾಳ ಮಾಚಯ್ಯ, ಅಜಗಣ್ಣ ಮುಕ್ತಾಯಕ್ಕಗಳ ಸ್ತುತಿ, ವ್ಯಕ್ತಿ ವೈಶಿಷ್ಟ್ಯವನ್ನು ಹೇಳಲಾಗಿದೆ. ಎನ್ನ ಕಾಮ, ಕ್ರೋಧ, ಲೋಭ, ಮೋಹ, ಮದ,ಮತ್ಸರಗಳನ್ನು ಕ್ರಮವಾಗಿ ಸಿದ್ಧರಾಮಯ್ಯ, ಚೆನ್ನಬಸವಣ್ಣ, ಪ್ರಭುದೇವ, ಸಂಗನಬಸವಣ್ಣ, ಮಡಿವಾಳಯ್ಯಗಳು ಕಳೆಯಬೇಕೆಂದು ಅವರಲ್ಲಿ ಪ್ರಾರ್ಥಿಸಿದ್ದಾನೆ. ಹಾಗೇಯೇ ಜಂಗಮನ ಸ್ವರೂಪವನ್ನು ಹೇಳುತ್ತಾ ನಿಜಸ್ವರೂಪ ...
೭. ಸ್ವರ ವಚನಗಳು: ಕರಸ್ಥಲ ವೀರಣ್ಣೊಡೆಯ ಶಾಂತಮಲ್ಲ, ಗುರು ಶಾಂತಮಲ್ಲೇಶ, ಸದ್ಗುರು ಶಾಂತಮಲ್ಲೇಶ, ಶಾಂತಮಲ್ಲೇಶಲಿಂಗ, ನಿಜಗುರು ಮುಗ್ಧಶಾಂತಮಲ್ಲ, ಮದ್ಗುರು ಶಾಂತಮಲ್ಲೇಶಲಿಂಗ ಎಂಬ ಅಂಕಿತಗಳಲ್ಲಿ ಸ್ವರವಚನಗಳನ್ನು ರಚಿಸಿದ್ದಾನೆ. ಕನ್ನಡ ಅಧ್ಯಯನ ಪೀಠದ ಹಸ್ತಪ್ರತಿಯೊಂದರಲ್ಲಿ ದೊರೆತ 'ಶಾಂತಮಲ್ಲೇಶ್ವರ' ಎಂಬ ಅಂಕಿತವುಳ್ಳ ಸ್ವರವಚನದ ಆದಿಯಲ್ಲಿ 'ವೀರಣ್ಣ ದೇವರು ನಿರೂಪಿಸಿದ ಪದನು' ಎಂದು ಬರೆದುದನ...
ಈಗ ಆತನ ೨೦ ಸ್ವರವಚನಗಳು ಉಪಲಬ್ಧವಿದ್ದು, ಅವು ಕಂಬಾಳ ಶಾಂತಮಲ್ಲೇಶನ ಗಣವಚನ ರತ್ನಾವಳಿ, ಚನ್ನವೀರಾರ್ಯನ ಶಿವಯೋಗ ಪ್ರದೀಪಿಕೆಯಲ್ಲಿ ಸೇರಿಕೊಂಡಿವೆ. ಅಲ್ಲದೆ ಕೆಲವು ಬಿಡಿಬಿಡಿ ರೂಪದಲ್ಲಿಯೂ ದೊರೆತಿವೆ. ಕಾಮ ಕ್ರೋಧ ಮದ ಮತ್ಸರ ಮತ್ತು ಮಾನಿನಿಯರ ಮೋಹಜಾಲದಲ್ಲಿ ಸಿಲುಕಿಕೊಂಡವರಿಗೆ ಲಿಂಗದ ಮಹತ್ವವನ್ನು ಅರಿತುಕೊಳ್ಳುವುದು ಅಸಾಧ್ಯವೆಂದು ಸ್ವರವಚನವೊಂದರಲ್ಲಿ ಹೇಳಿದ್ದಾನೆ.
ಕಾಮದಲಿ ಕಂಗೆಟ್ಟು ಕ್ರೋಧದಲಿ ಮುಂಗೆಟ್ಟು
ಆ ಮಹಾ ಮದ ಮತ್ಸರದಲ್ಲಿ ಮುಳುಗೆ
ಕಾಮಿನಿಯ ಕಾಲೆಡೆಯ ಹಳ್ಳದೊಳು ಸಿಲ್ಕಿ ನಿ
ಸ್ಸೀಮ ಲಿಂಗವನೆಂತು ಅರಿವಿರಣ್ಣ
ಎಂದು ನಿರೂಪಿಸಿದ್ದಾನೆ. ಅಲ್ಲದೆ ಪುತ್ರ ಮಿತ್ರ ಕಳತ್ರ ಎಂಬ ಮೋಹವನ್ನು ತ್ಯಜಿಸಿ, ಲಿಂಗದಲ್ಲಿ ಮನಸ್ಸು ನೆಲೆಗೊಳಿಸಿದಾಗ ಮಾತ್ರ ಲಿಂಗಾನುಭಾವಿಯೆನಿಸಿಕೊಳ್ಳುತ್ತಾನೆಂದು ವೀರಣ್ಣೊಡೆಯ ತಿಳಿಸಿದ್ದಾನೆ.
ವೀರಶೈವ ಧರ್ಮದ ತತ್ವಗಳಾಧ ಷಟ್ ಸ್ಥಲ, ಅಷ್ಟಾವರಣ, ಶಿವಯೋಗ, ಲಿಂಗಾಂಗ ಸಾಮರಸ್ಯ ಮುಂತಾದ ವಿಷಯಗಳನ್ನು ಸ್ವರವಚನಗಳಲ್ಲಿ ಕಾಣಬಹುದು.
"ಗುರುಲಿಂಗಜಂಗಮವನರಿದು ಮುಂದೆ
ಪರವ ಬೆರಸಿಹೆನೆಂಬ ಶರಣರೆಲ್ಲರು
ಚರಲಿಂಗ ನಿಜಗುರುಶಾಂತೇಶನ ಚರಣವ ನೆನೆದು
ಬೆರೆದು ಭಿನ್ನಭಾಜನವಳಿದಡವನೆ ಸುಜ್ಞಾನಿ"
ಎಂದಿದ್ದಾನೆ. ಬರಿಯ ಬೊಮ್ಮದ ಮಾತು ಕೇಡು ಗುರುಕರುಣವ ಪಡೆದಂತರಂಗವ ನೋಡು, ವಾಯು ಮನವನೊಂದು ಮಾಡು ನಿನ್ನ ಕಾಯವಿಡಿದು ಪರಮಾತ್ಮನ ಕೂಡು, ಮಾಯಪಾಶವ ಹೋಗಲಾಡು ನಿನಗಾಯಾಸವಲ್ಲಿಲ್ಲ ಇಲ್ಲಿದೆ ನೋಡು, ಹಿಂಗದೆ ಮನೋಭಾವ ಬಲಿದು ಲಿಂಗವು ತನಗಂಗವಾಗಿರಬಲ್ಲಡೆ ಶರಣಾ, ಎನ್ನುವಂತಹ ಮಾತುಗಳಲ್ಲಿ ವೀರಣ್ಣೊಡೆಯನ ಶಿವಾನುಭಾವ, ಲೋಕಾನುಭಾವ ಎದ್ದು ಕಾಣುತ್ತವೆ. ವಚನಗಳ ನಿರೂಪಣೆಯಲ್ಲಿ ಸಹಜತೆ, ಸರಳತೆ, ಸಹೃದಯತೆಗ...
ತತ್ವ, ಅನುಭಾವ, ಯೋಗ ವಿಚಾರಗಳನ್ನು ಬೆಡಗಿನ ರೂಪದಲ್ಲಿ ಹೇಳಿರುವುದು ಸ್ವರವಚನಗಳ ವೈಶಿಷ್ಟವಾಗಿದೆ. 'ಅಲಸಿದೆನಕ್ಕ ಅಲಸಿದೆ, ಅಳುವ ಮಕ್ಕಳ ಕಾಟ, ಉಲಿವ ಗಂಡನ ಕೂಟ' ಎನ್ನುವ ಪಲ್ಲವಿಯೊಂದಿಗೆ ಪ್ರಾರಂಭವಾಗುವ ಈತನ ಬೆಡಗಿನ ರೂಪದ ಸ್ವರವಚನವನ್ನು ಗಮನಿಸಬಹುದು.
ವೀರಣ್ಣೊಡೆಯನ ಸ್ವರವಚನಗಳ ಆರಂಭದಲ್ಲಿ ಮಂಗಳ ಕೌಶಿ, ಅಹರಿಪಂತು, ಶ್ರೀ ಪಂತುವರಾಳಿ, ಮೌಳಿ, ಮುಖಾರಿ, ನಾದರಾಮಕ್ರಿ, ಶುದ್ಧಕಾಂಭೋದಿ, ಶಂಕರಾಭರಣ, ಭೂಪಾಳಿ ಪಾಡಿ, ತೆಲಗು ಕಾಂಬೋಧಿ, ಧನ್ವಾಸಿ, ವಸಂತ ಭೈರವಿ, ಅಹರಿ ನಾಟಿ, ಮಂಗಳಕಾಶಿ, ಸೌರಾಷ್ಟ್ರಿ, ಮುಂತಾದ ರಾಗತಾಳಗಳನ್ನು ನಿರ್ದೇಶಿಸಲಾಗಿದೆ. ಡಾ. ಬಿ. ಆರ್. ಹಿರೇಮಠ ಅವರು ಹೇಳುವಂತೆ" "ಈ ಎಲ್ಲ ರಾಗ, ತಾಳಗಳನ್ನು ಪ್ರಾದೇಶಿಕವಾಗಿ ಸಂಗ್ರಹಿಸಿ,...
ಹೀಗೆ ಕರಸ್ಥಲ ವೀರಣ್ಣೊಡೆಯನು ಪ್ರೌಢದೇವರಾಯನ ಆಸ್ಥಾನದಲ್ಲಿ ಮಂತ್ರಿಯಾಗಿ ವೀರಶೈವ ಧರ್ಮದ ಏಳಿಗೆಗಾಗಿ ಶ್ರಮಿಸಿದವನು. ಜೊತೆಗೆ ಕಂದ, ತ್ರಿಪದಿ, ರಗಳೆ, ವೃತ್ತ, ಶತಕ,ವಚನ, ಸ್ವರವಚನ ರೂಪಗಳಲ್ಲಿ ಲಘುಸಾಹಿತ್ಯವನ್ನು ರಚಿಸಿ, ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ತನ್ನದೇ ಆದ ಸ್ಥಾನವ್ನನು ಪಡೆದುಕೊಂಡಿದ್ದಾನೆ.
[1] ಶಿವಾನೂಭವ ಸೂತ್ರಂ, ಪಂಚಮಾಧಿಕರಣ ೨. – ೩೮
[2] ಪ್ರೌಢದೇವರಾಯನ ಕಾಲದ ಕನ್ನಡ ಸಾಹಿತ್ಯ ಪು.೧೩೨
[3] Social and Political life under Vijayanagara Empire Vol. I & II, Mysore Archalogical Report of 1923 ಮತ್ತು Empigraphia Carnatica Vol – VIII ದಲ್ಲಿ ಈ ಶಾಸನಗಳು ಪ್ರಕಟಗೊಂಡಿವೆ.
[4] ಶಿವತತ್ವ ಚಿಂತಾಮಣಿ (ಸಂ.ಪಂಡಿತ ಬಸಪ್ಪ, ೧೯೬೦) ಸಂಧಿ : ೩೮ ಪದ್ಯ – ೧೧೦
[5] S.P.V.E.Vol – I P – 166
[6] ….. ಅದೇ ….. ಪುಟ ೪೪೯
[7] MAR of 1923, No – 370
[8] ಪ್ರೌಢದೇವರಾಯನ ಕಾಲದ ಕನ್ನಡ ಸಾಹಿತ್ಯ ಪುಟ – ೧೨೫
[9] ….. ಅದೇ ….. ಪು.೧೩೦
[10] ಶಿವಯೋಗ ಪ್ರದೀಪಿಕೆ (ಸಂ. ಡಾ. ವೀರಣ್ಣ ರಾಜೂರ, ೧೯೮೧) ಪು – ೧೪
[11] ವೀರಶೈವ ಸಂಪದ, ಪುಟ ೪೩
By kanaja|2015-06-20T20:46:30+05:30June 20, 2015|ಸಮುದಾಯ ಸಾಹಿತ್ಯ, ಸಾಹಿತ್ಯ, ಸಾಹಿತ್ಯ ವಿಮರ್ಶೆ|0 Comments
ಮಸ್ಕಿ, ಬಸವಕಲ್ಯಾಣ ಉಪಚುನಾವಣೆ: ಕುಮಾರಸ್ವಾಮಿ ಶಸ್ತ್ರತ್ಯಾಗ | Maski And Basavakalyana Assembly Bypoll: JDS Decided Not To Contest Said HD Kumaraswamy - Kannada Oneindia
6 min ago ಹರ್ಯಾಣ: 10ನೇ ತರಗತಿ ಪರೀಕ್ಷೆ ರದ್ದು, 12ನೇ ತರಗತಿ ಪರೀಕ್ಷೆ ಮುಂದೂಡಿಕೆ
13 min ago ಕೊವಿಡ್ 19: ಏಪ್ರಿಲ್ 15ರಂದು ವಿಶ್ವದಲ್ಲಿ ಎಷ್ಟು ಮಂದಿ ಚೇತರಿಕೆ?