text stringlengths 0 61.5k |
|---|
ಉಲ್ಲೇಖ: http://newsable.asianetnews.tv/karnataka/if-you-dont-know-hindi-get-out-of-the-bank-bank-employee-to-a-mandya-farmer |
ಈಗ "ಜಾಹೀರಾತು"ಗಳತ್ತ ಗಮನ ಹರಿಸೋಣ. |
ಜಾಹೀರಾತುಗಳ ಉದ್ದೆಶವಾದರೂ ಏನು? |
ಉತ್ತರ: ಯಾವುದಾದರೂ ಸಂಗತಿಯೊಂದರ (ಉತ್ಪನ್ನ, ಸೇವೆ, ನೀತಿ, ಯೋಜನೆ ಇತ್ಯಾದಿ) ಕುರಿತಾಗಿ ಉದ್ದಿಷ್ಟ ಗುಂಪುಗಳಿಗ ಅರಿವು ನೀಡುವುದು. |
ಮುಂದಿನ ಪ್ರಶ್ನೆ: ಕನ್ನಡ ವಾರ್ತಾ ಪತ್ರಿಕೆಗಳನ್ನು ಓದುವವರು ಯಾರು? ಕನ್ನಡಿಗರು, ಸರಿ. |
ಹೀಗಾಗಿ, ಒಂದು ಕನ್ನಡ ವಾರ್ತಾಪತ್ರಿಕೆಯಲ್ಲಿ, ಯಾವುದಾದರೂ ಸಂಗತಿಯ ಕುರಿತು, ಉದ್ದೇಶಿತ ಜನತೆಗೆ ತಲುಪುವಂತೆ, ಅರಿವು ಮೂಡಿಸುವ ಸಲುವಾಗಿ ಯಾರಾದಾರೂ ಜಾಹೀರಾತು ನೀಡುವುದಿದ್ದರೆ ಯಾವ ಭಾಷೆಯನ್ನು ಬಳಸಬೇಕು? ಕನ್ನಡ? ಸರಿ. |
ಆದರೆ ಕನ್ನಡ ವಾರ್ತಾಪತ್ರಿಕೆಗಳಲ್ಲಿ ಭಾರತೀಯ ರೈಲ್ವೆ ಪ್ರಕಟಿಸುವ ಜಾಹೀರಾತುಗಳು ವಿಚಿತ್ರವಾಗಿವೆ, ಏಕೆಂದರೆ ಅವು ಹಿಂದಿಯಲ್ಲಿ ಪ್ರಕಟಿಸಲ್ಪಡುತ್ತವೆ. ಜಾಹೀರಾತುಗಳನ್ನು ಪ್ರಕಟಿಸಲು ತೆರಿಗೆದಾರರ ಕೋಟಿಗಟ್ಟಲೆ ಹಣ ವ್ಯಯವಾಗುತ್ತದೆ. ಆದರೆ ಅವುಗಳು ಹಿಂದಿಯಲ್ಲಿ ಪ್ರಕಟವಾಗುತ್ತಿರುವುದನ್ನು ನೋಡಿದರೆ ಒಂದು, ಸರ್ಕಾರಕ್ಕೆ ಜಾಹೀರಾತಿನ ನಿಜವಾದ ಉದ್ದೇಶದ (ಅರಿವು ಮೂಡಿಸುವುದರ) ಕುರಿತು ಯಾವುದೇ ಯೋಚನೆಯಿಲ್ಲ. ಜೊತೆಗೆ ಇದು ಕನ್ನಡಿಗರನ್ನು ತಮ್ಮದೇ ದೇಶದಿಂದ ದೂರವಾಗಿಸುವ ಸಾರ್ವಭೌಮ ಧೋರಣೆಯನ್ನೂ ತೋರಿಸುತ್ತದೆ. ಏಕೆಂದರೆ ಈ ಜಾಹೀರಾತುಗಳ ಮೂಲಕ ಸರ್ಕಾರ ಏನನ್ನು ಹೇಳುತ್ತಿದೆ ಇಂದು ಅವರಿಗೆ ತಿಳಿಯಲಾಗದು. |
ಈ ತರಹದ ಕನ್ನಡ ವಾರ್ತಾಪತ್ರಿಕೆಯಲ್ಲಿ ಬರುವ ಹಿಂದಿ ಜಾಹೀರಾತೊಂದರ ಉದಾಹರಣೆ ಇಲ್ಲಿದೆ: |
ಉಲ್ಲೇಖ:https://www.facebook.com/photo.php?fbid=10212250927937615&set=a.1693754712955.215173.1510418566&type=3&theater |
ಇಲ್ಲಿ ಸರ್ಕಾರ ರೈಲ್ವೆಯಲ್ಲಿ ನಗದುರಹಿತ ವಹಿವಾಟಿನ ಸೌಕರ್ಯದ ಕುರಿತು ವಿವರಿಸಲು ಪ್ರಯತ್ನಿಸುವ ಜಾಹೀರಾತೊಂದಿದೆ. ಆದರೆ ೯೫% ಓದುಗರಿಗೆ ಇದು ಮುಟ್ಟಲಾರದು, ಏಕೆಂದರೆ ಕನ್ನಡ ವಾರ್ತಾಪತ್ರಿಕೆಯಲ್ಲಿ ಪ್ರಕಟವಾಗಿರುವ ಜಾಹೀರಾತು ಸಂಪೂರ್ಣವಾಗಿ ಹಿಂದಿಯಲ್ಲಿದೆ. |
ಇದು ಕರ್ನಾಟಕದ ಬಸ್ಸೊಂದರ ಮೇಲಿರುವ ಆದಾಯ ತೆರಿಗೆ ಸಂಬಂಧಿತ ಜಾಹೀರಾತು. ಆದರೆ ಮತ್ತೆ ಇದು ೯೫% ಜನರನ್ನು ತಲುಪುವುದಿಲ್ಲ ಏಕೆಂದರೆ ಇದು ಸಂಪೂರ್ಣವಾಗಿ ಹಿಂದಿಯಲ್ಲಿದೆ. ಜಾಹೀರಾತಿನಲ್ಲಿ ಬಳಸಿರುವ ಚಿತ್ರವನ್ನು ನೋಡಿದರೆ, ಬಹುತೇಕ ಕನ್ನಡಿಗರು ಜೇನು ನೊಣಗಳನ್ನು ನಾಶವಾಗದಂತೆ ರಕ್ಷಿಸುವ ಸರ್ಕಾರದ ಕಾರ್ಯಕ್ರಮ ಎಂದು ಭಾವಿಸಿಯಾರು. |
ಇಲ್ಲಿ ಸರ್ಕಾರಿ ಯೋಜನೆಯೊಂದರ ಕುರಿತ ಜಾಹೀರಾತಿದೆ. ಮತ್ತೊಮ್ಮೆ, ೯೫% ಜನರಿಂದ ನಿರ್ಲಕ್ಷಿಸಲ್ಪಡುತ್ತದೆ. ಏಕೆಂದರೆ ಇದು ಸಂಪೂರ್ಣವಾಗಿ ಹಿಂದಿಯಲ್ಲಿದೆ. |
ಇಲ್ಲಿ ಕರ್ನಾಟಕದ ಥಳಥಳಿಸುವ ಫಲಕಗಳಲ್ಲಿ ಹಾಕಿರುವ ಸ್ವಚ್ಚ ಭಾರತ ಕುರಿತಾದ ಜಾಹೀರಾತೊಂದಿದೆ, ಆದರೆ ಸಂಪೂರ್ಣ ಹಿಂದಿಯಲ್ಲಿ. ಹಾಗಾಗಿ ಇದು ಪರಿಣಾಮಕಾರಿಯಾಗಿರದೇ ಹಣ ವ್ಯಥಾ ಪೋಲಾಗುತ್ತಿದೆ. ಹಾಗೂ ಜನಸಾಮಾನ್ಯರಿಗೆ ಹೀಗೆ ತಮ್ಮದೇ ಸರ್ಕಾರ ಏನು ಹೇಳುತ್ತಿದೆಯೆಂದು ತಿಳಿಯದೇ ಇದು ಸ್ಥಳೀಯರನ್ನು ಪರಕೀಯರನ್ನಾಗಿಸುವ ಹಿಂದಿ ಸಾರ್ವಭೌಮ ಮಾನೋಭಾವ ಎಂದು ಎನಿಸಬಹುದು. (ಕೆಳಗೆ ಅಂಗಡಿಗಳ ಮೇಲೆ ಕನ್ನಡದ ಫಲಕಗಳನ್ನು ನೋಡಿ ಇದು ಕರ್ನಾಟಕವೇ ಎಂದು ಖಾತ್ರಿ ಮಾಡಿಕೊಳ್ಳಬಹುದು) |
ಹೀಗೆ ಸರ್ಕಾರ ಕೋಟ್ಯಂತರ ರೂಪಾಯಿ ತೆರಿಗೆದಾರರ ಹಣದೊಂದಿಗೆ ಕರ್ನಾಟಕದಾದ್ಯಂತ ಜಾಹೀರಾತುಗಳನ್ನು ಪ್ರಕಟಿಸಿ, ಅವು ಹಿಂದಿಯಲ್ಲಿದ್ದಿದುದರಿಂದ ಯಾವುದೇ ಪರಿಣಾಮ ಬೀರದ ಹಲವು ನಿದರ್ಶನಗಳಿವೆ. ಮತ್ತು ನಾನು ಮೊದಲು ಹೇಳಿದಂತೆ ಈ ರೀತಿಯ ಧೋರಣೆ ಬಹುಕಾಲ ತೋರಲ್ಪಟ್ಟಾಗ ಇದು ಪರಕೀಯತೆಯ ಭಾವನೆ ಮತ್ತು ಸರ್ಕಾರ ಸಾಮ್ರಾಜ್ಯಶಾಹಿಯಾಗಿ ವರ್ತಿಸುತ್ತಿದೆ ಎಂಬ ಭಾವನೆಗಳಿಗೆ ಎಡೆಯಾಗುತ್ತದೆ. |
ಈಗ ಇತ್ತೀಚಿನ ಮತ್ತು ಅತ್ಯಂತ ಬಿಸಿಯಾದ ವಿವಾದದತ್ತ ಗಮನ ಹರಿಸೋಣ: ಹೆದ್ದಾರಿ ಮೈಲಿಗಲ್ಲುಗಳ ವಿವಾದ. |
ಕೆಲವು ತಿಂಗಳ ಹಿಂದೆ, ಇದ್ದಕ್ಕಿದ್ದಂತೆ ಸರ್ಕಾರವು, ಸ್ಥಳೀಯ ಭಾಷೆ+ಇಂಗ್ಲಿಷ್ ಸೂತ್ರ ಇರುವ, ದಕ್ಷಿಣ ಭಾರತದ ಹೆದ್ದಾರಿ ಮೈಲಿಗಲ್ಲುಗಳ್ಳಲ್ಲಿ ಹಿಂದಿಯನ್ನು ಸೇರಿಸಲು ಪ್ರಾರಂಭಿಸಿತು. ಹಿಂದಿಯನ್ನು ಸೇರಿಸುವುದಷ್ಟೇ ಆಗಿದ್ದರೆ ಸಮಸ್ಯೆ ಆಗಿರುತ್ತಿರಲಿಲ್ಲ. ಆದರೆ ಹಲವೆಡೆ ಹಿಂದಿಯನ್ನು ಸೇರಿಸುವ ಸಲುವಾಗಿ ಕನ್ನಡವನ್ನು ತೆಗೆಯುವ ಕೆಲಸವಾಯಿತು. ಶುರುವಿನಲ್ಲಿ, ನಾನು ಇವು ಕೇವಲ ಗಾಳಿಸುದ್ದಿಗಳೆಂದು ಇದರ ಕುರಿತು ಸಂದೇಹ ಹೊಂದಿದ್ದೆ. ಆದರೆ ತದನಂತರ ಬಿಜೆಪಿ ಎಂಪಿಗಳು ತಮ್ಮದೇ ಪಕ್ಷದ ಕೇಂದ್ರ ಸಚಿವರಿಗೆ ಕಾಳಜಿಯನ್ನು ವ್ಯಕ್ತಪಡಿಸಲು ಪ್ರಾರಂಭಿಸಿದಾಗ ನನಗೆ ಇದು ನಿಜವಾದ ಹಾಗೂ ಗಂಭೀರವಾದ ವಿಷಯವೆಂದು ಅರಿವಾಯಿತು. ಇದು ಪ್ರಚಲಿತ ಬಿಜೆಪಿ ಎಂಪಿ ಆದ ಕರ್ನಾಟಕದ ಪ್ರತಾಪ್ ಸಿಂಹ ಅವರು ಕನ್ನಡದ ಬದಲಾಗಿ ಹಿಂದಿಯನ್ನು ಸೇರಿಸಿದ್ದನ್ನು ಪ್ರಶ್ನಿಸುವ ಟ್ವೀಟ್. |
ಟ್ವೀಟ್: https://twitter.com/mepratap/status/877759522336460801 |
ಈ ಸಮಸ್ಯೆಯ ವಿಚಾರಗಳನ್ನು ಕೇವಲ ಕರ್ನಾಟಕದಲ್ಲಷ್ಟೇ ಅಲ್ಲ, ಒಡಿಶಾದಲ್ಲಿಯೂ ಎತ್ತಿ ತೋರಿಸಲಾಗಿತ್ತು. ಒಡಿಶಾದ ಮುಖ್ಯಮಂತ್ರಿಯವರು ಹೆದ್ದಾರಿ ಮೈಲಿಗಲ್ಲುಗಳಲ್ಲಿ ಒಡಿಶಾ ತೆಗೆದು ಹಿಂದಿ ಸೇರಿಸುತ್ತಿರುವ ಕುರಿತಾಗಿ ಅತೃಪ್ತಿ ವ್ಯಕ್ತ ಪಡಿಸಿದ್ದರ ಕುರಿತಾದ ವರದಿ ಇಲ್ಲಿದೆ. |
ಉಲ್ಲೇಖ:https://www.facebook.com/photo.php?fbid=10212490838335225&set=a.1770961003064.221799.1510418566&type=3&theater |
ಈ ರೀತಿಯಾಗಿ ಕನ್ನಡವನ್ನು(ಅಥವಾ ಸ್ಥಳೀಯ ಭಾಷೆಯನ್ನು) ತೆಗೆದು ಹಾಕಿಯಾದರೂ ಹಿಂದಿಯನ್ನು ಸೇರಿಸುವ ಪ್ರಯತ್ನ ಹೆದ್ದಾರಿಯ ಮೈಲಿಗಲ್ಲುಗಳಷ್ಟೇ ಸೀಮಿತವಾಗಿರದೇ PSU ಬ್ಯಾಂಕುಗಳಲ್ಲಿ ಕೂಡ ಕೈಗೊಳ್ಳಲಾಯಿತು. |
ಎಸ್‍ಬಿಐ ಕರ್ನಾಟಕದಾದ್ಯಂತ ಇರುವ ತನ್ನ ಎಟಿಎಂಗಳಲ್ಲಿ ಕನ್ನಡವನ್ನು ತೆಗೆದು ಹಾಕಿ ಹಿಂದಿಯನ್ನು ಸೇರಿಸಿದ ಉದಾಹರಣೆ ಇಲ್ಲಿದೆ. ನಂತರ ಸಾಮಾಜಿಕ ಮಾಧ್ಯಮದಲ್ಲಿಯ ಚಳುವಳಿಗಳ ಒತ್ತಡದಿಂದ ಮತ್ತೆ ಕನ್ನಡವನ್ನು ಸೇರಿಸಬೇಕಾಯಿತು. |
ಉಲ್ಲೇಖ:https://www.facebook.com/photo.php?fbid=10212696327592328&set=a.1770961003064.221799.1510418566&type=3&theater |
ಕನ್ನಡವನ್ನು ತೆಗೆದು ಹಿಂದಿಯನ್ನು ಕರ್ನಾಟಕದಲ್ಲಿ ತೂರುವ ಈ ಪ್ರಯತ್ನಗಳು ನಡೆದಂತೆಯೇ ಜನ ಸಿಟ್ಟಿಗೆದ್ದು #StopHindiImposition, #StopHindiImperialism ಇತ್ಯಾದಿ ಟ್ಯಾಗ್‍ಗಳೊಂದಿಗೆ ಚಳುವಳಿಗಳನ್ನು ನಡೆಸುತ್ತಿರುವಾಗ, ಇದಕ್ಕೆ ಸಮಾನಾಂತರವಾಗಿ ಕೇಂದ್ರ ಸರ್ಕಾರ ನೀಡುತ್ತಿದ್ದ ಹೇಳಿಕೆಗಳು, ಕೈಗೊಳ್ಳುತ್ತಿದ್ದ ಕ್ರಮಗಳು ಉರಿಯುತ್ತಿದ್ದ ಬೆಂಕಿಗೆ ಇನ್ನಷ್ಟು ತುಪ್ಪ ಸುರಿದವು. |
ಉದಾಹರಣೆಗೆ, ಸರ್ಕಾರದ ಭಾಷಾ ನೀತಿಯ ಕುರಿತು ಪ್ರಶ್ನಿಸಿದಾಗ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಡಿಜಿಟಲ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾದಂತಹ ಯೋಜನೆಗಳು ಹಿಂದಿಯಲ್ಲಿ ಕೈಗೊಂಡಾಗಲೇ ಯಶಸ್ವಿಯಾಗಲು ಸಾಧ್ಯ ಎಂದು ಹೇಳಿಕೆ ನೀಡಿದರು. ಈ ಮೂಲಕ ಬಹುಶಃ ಕರ್ನಾಟಕದ ರೈತರು, ಡಿಜಿಟಲ್ ಇಂಡಿಯಾದ ಕ್ರಾಂತಿಯ ಭಾಗವಾಗಲು – ಅದು ಹಿಂದಿಯಲ್ಲಿ ಕಾರ್ಯಗತವಾಗುವುದರಿಂದ, ಮೊದಲು ಹಿಂದಿಯನ್ನು ಕಲಿಯಬೇಕು ಎಂದು ಸೂಚಿಸಿದರು. ಇನ್ನೊಂದೆಡೆ ಬಿಜೆಪಿ ವಕ್ತಾರ ಮತ್ತು ವಕೀಲರೊಬ್ಬರು ಎಲ್ಲ ದಕ್ಷಿಣ ಭಾರತದ ಶಾಲೆಗಳಲ್ಲಿ ಹಿಂದಿ ಕಲಿಕೆ ಕಡ್ಡಾಯ ಮಾಡುವಂತೆ ಸುಪ್ರೀಂ ಕೋರ್ಟಿನಲ್ಲಿ PIL ಸಲ್ಲಿಸಿದರು. |
ಉಲ್ಲೇಖ:https://www.facebook.com/photo.php?fbid=10212326802874441&set=a.1770961003064.221799.1510418566&type=3&theater |
ಕನ್ನಡದ ವಾರ್ತಾ ಪತ್ರಿಕೆಗಳು ಈ ಆರೋಪಿಸಲಾಗಿರುವ ಹಿಂದಿ ಹೇರಿಕೆಯ ವಿರುದ್ಧ ದಾಳಿಯನ್ನು ಪ್ರಬಲವಾಗಿಸಿದವು ಮತ್ತು, ಕೇಂದ್ರ ಸರ್ಕಾರವು ಹಿಂದಿಯನ್ನು ಒತ್ತಾಯದಿಂದ ಜನಸಾಮಾನ್ಯರಿಗೆ ತುರುಕಿ ವಿನಾ ಕಾರಣ ಭಾರ ಹೇರುತ್ತಿದೆ ಎನ್ನುವಂತಹ, ಈ ಕೆಳಗಿನ ರೀತಿಯ ವ್ಯಂಗ್ಯಚಿತ್ರಗಳನ್ನು ಪ್ರಕಟಿಸಿದವು. |
ಇಷ್ಟೆಲ್ಲ ಸಾಮಾಜಿಕ ಸಂಘರ್ಷ ಮತ್ತು ಚಳುವಳಿಗಳ ಹೊರತಾಗಿಯೂ, ಕೇಂದ್ರ ಸಚಿವರುಗಳ ಇತ್ತೀಚಿನ ಹೇಳಿಕೆಗಳು ಕೂಡ ಸಾಂತ್ವನ ನೀಡುವಂತಿಲ್ಲ. ಏಕೆಂದರು ಅವರು ಹಿಂದಿ ರಾಷ್ಟ್ರೀಯ ಭಾಷೆ ಎನ್ನುವ ಹುಸಿ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಹರಡುವಂತೆ ಕಾಣುತ್ತಿದೆ (ವಾಸ್ತವದಲ್ಲಿ ಭಾರತಕ್ಕೆ ಯಾವುದೇ ರಾಷ್ಟ್ರೀಯ ಭಾಷೆಯಿಲ್ಲ). ಜೊತೆಗೆ ಹಿಂದಿಯನ್ನು ರಾಷ್ಟ್ರೀಯತೆಯೊಂದಿಗೆ ಬೆರೆಸಲಾಗುತ್ತಿದೆ (ಹಿಂದಿ ತಿಳಿಯದವರು ಕಡಿಮೆ ರಾಷ್ಟ್ರಭಕ್ತರು ಎಂದು ಸೂಚಿಸುವಂತೆ). ಮತ್ತು ಹಿಂದಿಯೇ ಭಾರತವನ್ನು ಸಮೃದ್ಧಿಯತ್ತ ಕೊಂಡೊಯ್ಯಬಹುದೆಂದು ಹೇಳುತ್ತಿದ್ದಾರೆ, ಆದರೆ ವಾಸ್ತವದಲ್ಲಿ ಹಿಂದಿ ಭಾಷಿಗರಲ್ಲದ ರಾಜ್ಯಗಳು ಇತರ ರಾಜ್ಯಗಳಿಗಿಂತ ಮುಂದಿದ್ದು, ವೇಗವಾಗಿ ಅಭಿವೃದ್ಧಿ ಹೊಂದುತ್ತಿವೆ. |
ಹಾಗೆಂದು ಇಡೀ ಬಿಜೆಪಿ ಹೀಗೆ ಹೇಳಿಕೆಗಳನ್ನು ನೀಡಿ ಕನ್ನಡಿಗರನ್ನು ಪರಕೀಯರಾಗಿಸುತ್ತಿದೆ ಎಂದೇನಲ್ಲ. ನಾನು ಈ ಮುಂಚೆ ಟ್ವೀಟ್ ಒಂದರಲ್ಲಿ ತೋರಿಸಿದಂತೆ, ಬಿಜೆಪಿಯಲ್ಲಿ ತಮ್ಮ ಪಕ್ಷದ್ದೇ ಕೇಂದ್ರ ನಾಯಕತ್ವವನ್ನು ಈ ಕುರಿತಾಗಿ ಪ್ರಶ್ನಿಸಿದ ಎಂಪಿಗಳಿದ್ದಾರೆ, ಪ್ರತಾಪ್ ಸಿಂಹರಂತೆ. |
ಬಿಜೆಪಿ ಎಂಪಿ ಪ್ರತಾಪ್ ಸಿಂಹ ಅವರು ಈ ಕುರಿತು ಕಾಳಜಿ ವ್ಯಕ್ತಪಡಿಸಿದ ಇನ್ನೊಂದು ಉದಾಹರಣೆ ಇಲ್ಲಿದೆ. |
ದೊಡ್ಡ ಹೆಸರಿದ್ದು ಬಿಜೆಪಿಯ ಬೆಂಬಲಿಗರಾದಂತಹ ಮೋಹನ್‍ದಾಸ್ ಪೈ ಅಂತಹವರು ಸರ್ಕಾರವನ್ನು ಈ ತರಹದ "ಭಾಷಾ ಹೇರಿಕೆ"ಯ ಬಗ್ಗೆ ಪರೋಕ್ಷವಾಗಿ ಪ್ರಶ್ನಿಸಿದ್ದಿದೆ. |
ಇ ಕುರಿತು ಧ್ವನಿ ಇತ್ತಿರುವ ಇನ್ನೊಬ್ಬ ಬಿಜೆಪಿ ನಾಯಕರೆಂದರೆ ಕರ್ನಾಟಕದ ಬಹು ಪ್ರಚಲಿತ ಎಂಎಲ್‍ಎ ಸಿಟಿ ರವಿ. |
"ಹಿಂದಿ ಹೇರಿಕೆ"ಯ ಕುರಿತು ಚಳುವಳಿಯೊಂದರಲ್ಲಿ ಬಿಜೆಪಿ ಎಂಎಲ್‍ಎ ಸಿಟಿ ರವಿ ಅವರು ಭಾಗವಹಿಸಿದ ಉದಾಹರಣೆ ಇಲ್ಲಿದೆ. ನಂತರದಲ್ಲಿ ಕೇಂದ್ರದ ನಿಲುವು ಬಿಗುವಾದಾಗ ಮೆಟ್ರೋ ವಿಷ್ಯದಲ್ಲಿ ಅವರೂ ಗೊಂದಲಮಯವಾದ ಹೇಳಿಕೆಗಳನ್ನು ನೀಡಿದರು . |
ಟ್ವೀಟ್: https://twitter.com/CTRavi_BJP/status/765148884872011777 |
ಈಗ ನಾವು ಇಡೀ ವಿಶ್ಲೇಷಣೆಯನ್ನು ಸಾರಾಂಶಗೊಳಿಸೋಣ: |
ನಾವು ಭಾರತೀಯ ಅಂಚೆ, ಎಸ್‍ಬಿಐನಂತಹ PSU ಬ್ಯಾಂಕುಗಳು, ಮಂಡ್ಯದ ಬ್ಯಾಂಕ್ ಅಧಿಕಾರಿ, ಸರ್ಕಾರಿ ಯೋಜನೆಯಾದ RTI ಇತ್ಯಾದಿ ಹಲವು ಸರ್ಕಾರಿ ಸಂಸ್ಥೆಗಳ ಉದಾಹರಣೆಗಳಲ್ಲಿ ನೋಡಿದಂತೆ, ಕರ್ನಾಟಕದಲ್ಲಿ ನೆಲೆಸಿ ಹಿಂದಿ/ಇಂಗ್ಲಿಷ್ ಬದಲಾಗಿ ಕನ್ನಡ ಗೊತ್ತಿರುವ ಕಾರಣದಿಂದಾಗೆ ಸೇವೆ ನಿರಾಕರಿಸಲ್ಪಟ್ಟ ಕೆಲವು ಅಥವಾ ಹಲವು ನಿದರ್ಶನಗಳಿವೆ. |
ನಾವು ಕನ್ನಡ ದಿನಪತ್ರಿಕೆಗಳಲ್ಲಿ ಭಾರತೀಯ ರೈಲ್ವೆಯ ಜಾಹೀರಾತುಗಳಲ್ಲಿ, ಸರ್ಕಾರಿ ಆದಾಯ ತೆರಿಗೆ ವಿಭಾಗದ ಜಾಹೀರಾತುಗಳಲ್ಲಿ, ಜನಕಲ್ಯಾಣ ಯೋಜನೆಗಳ ವಿಭಾಗಗಳ, ಸ್ಚಚ್ಛ ಭಾರತ ಅಭಿಯಾನದ ಜಾಹೀರಾತುಗಳಲ್ಲಿ ನೋಡಿದಂತೆ, ತಮ್ಮದೇ ಸರ್ಕಾರ ಏನು ಹೇಳುತ್ತಿದೆಯೆಂದು ತಿಳಿಯದೆಯೆ ಕರ್ನಾಟಕದ ಜನಕ್ಕೆ ಪರಕೀಯತೆಯ ಭಾವನೆ ಮೂಡುತ್ತಿರಬಹುದು. ಈ ರೀತಿಯ ಜಾಹೀರಾತುಗಳು ಸಾರ್ವಭೌಮ ಧೋರಣೆಯನ್ನು ತೋರಿಸುವುದಲ್ಲದೇ, ಇದು ಜನತೆಯ ಹಣವನ್ನು ಪೋಲು ಮಾಡುವಂತೆ ಕೆಲಸ ಮಾಡುತ್ತಿದೆ. |
ನಾವು ಎಟಿಎಂಗಳಲ್ಲಿ, ಹೆದ್ದಾರಿಯ ಮೈಲಿಗಲ್ಲುಗಳಲ್ಲಿ ಕನ್ನಡವನ್ನು ತೆಗೆದು ಹಿಂದಿಯನ್ನು ಸೇರಿಸುತ್ತಿರುವಾಗ ಕನ್ನಡಿಗರಲ್ಲಿ ಸರ್ಕಾರ ಪ್ರಾದೇಶಿಕ ಭಾಷೆಯನ್ನು ಕುಂದಿಸಿಯೂ ಹಿಂದಿಯನ್ನು ತೂರಿಸಲು ಪ್ರಯತ್ನಿಸುತ್ತಿದೆ ಎಂಬ ಕಾರಣಕ್ಕಾಗಿ ಪರಕೀಯತೆಯ ಭಾವ ಮೂಡುತ್ತಿರುವಂತಿದೆ. |
ನಾವು ಸರ್ಕಾರ ರೂಪಿಸಿರುವ ನೀತಿಗಳಲ್ಲಿ ಹಾಗೂ ಕೇಂದ್ರ ಸಚಿವರುಗಳ ವಿವಾದಾತ್ಮಕ ಹೇಳಿಕೆಗಳಲ್ಲಿ ನೋಡಿರುವಂತೆ, ಸರ್ಕಾರ ಹಿಂದಿಯನ್ನು ಹೇರಲು ಸುಳ್ಳುಗಳನ್ನು (ಬಾರತಕ್ಕಿ ರಾಷ್ಟ್ರೀಯ ಭಾಷೆ ಇಲ್ಲದಿರುವಾಗಲೂ ಹಿಂದಿ ರಾಷ್ಟ್ರೀಯ ಭಾಷೆಯೆಂದು) ಹೇಳಿಯಾದರೂ ಪ್ರಯತ್ನಿಸುತ್ತಿದೆ ಎನ್ನುವ ಭಾವನೆ ಮೂಡಿರುವಂತಿದೆ. ಹಿಂದಿ ಮಾತ್ರ ಪ್ರಗತಿಯತ್ತ ಕೊಂಡೊಯ್ಯಬಹುದೆಂದು ದಾರಿತಪ್ಪಿಸುವ ಹೇಳಿಕೆ ನೀಡಿಯಾದರೂ, ಹಿಂದಿಯನ್ನು ರಾಷ್ಟ್ರೀಯತೆ/ರಾಷ್ಟ್ರಭಕ್ತಿಗೆ ತಳಕು ಹಾಕಿ, ನಾವು ನೋಡಿರುವಂತೆ ಈಗಾಗಲೇ ಸಂಘರ್ಷಗಳು ಹುಟ್ಟಿರುವ ವಿಚಾರಗಳಲ್ಲಿ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತಾಗಿದೆ. |
ಕೊನೆಯದಾಗಿ ಬಿಜೆಪಿಯೊಳಗೆಯೇ ಈ ವಿಚಾರವಾಗಿ, ಕರ್ನಾಟಕದ ಕೆಲ ಬಿಜೆಪಿ ನಾಯಕರು ಕೇಂದ್ರ ಬಿಜೆಪಿಯನ್ನು ಪ್ರಶ್ನಿಸುವ ಮೂಲಕ, ಸಂಘರ್ಷ ಮೂಡಿದೆಯನ್ನುವ ಕಾರಣವಾಗಿ ಇದು ವಿರೋಧ ಪಕ್ಷ ಹೀಗೆಯೇ ಹುಟ್ಟಿಸಿದ ಯಾವುದೋ ವಿಷಯವಾಗಿರದೇ ನಿಜವಾದ ಸಮಸ್ಯೆಗಳಾಗಿದ್ದು, ಕರ್ನಾಟಕದ ಜನಕ್ಕೆ ಇದು ಪರಿಣಾಮ ಬೀರುತ್ತಿರುವುದರಿಂದಲೇ ಬಿಜೆಪಿ ನಾಯಕರು ಈ ಕುರಿತು ಧ್ವನಿ ಎತ್ತಿದ್ದಾರೆಂದು ಕಾಣಿಸುತ್ತಿದೆ. |
ಹೀಗೆ ನಾವು ಇಡೀ ಸನ್ನಿವೇಶವನ್ನು ವಿವಿಧ ಉದಾಹರಣೆ ಹಾಗೂ ದೃಷ್ಟಿಕೋನಗಳಿಂದ ವಿಶ್ಲೇಷಿಸಿದ ನಂತರ ನಮ್ಮ ಮುಂದೆ ದೊಡ್ಡ ಪ್ರಶ್ನೆ ಉಳಿದಿರುತ್ತದೆ. |
ಈ "ಹಿಂದಿ ಹೇರಿಕೆ" ಅಥವಾ "ಹಿಂದಿ ಸಾರ್ವಭೌಮತ್ವ" ಕೇವಲ ವಿರೋಧ ಪಕ್ಷಗಳು ಸೃಷ್ಟಿಸಿದ ವದಂತಿಯೇ ಅಥವಾ ಕನ್ನಡಿಗರು ವ್ಯಕ್ತ ಪಡಿಸುತ್ತಿರುವ ಹುಸಿ ಕಳಕಳಿಯೇ? |
ಅಥವಾ ಇದು ದಿನದಿಂದ ದಿನಕ್ಕೆ ಹೆಚ್ಚು ಗಂಭೀರವಾಗುತ್ತಿರುವ, ಐದು ಕೋಟಿ ಕನ್ನಡಿಗರು ತಮ್ಮ ರಾಜ್ಯದಲ್ಲಿಯೇ ಪರಕೀಯರೆನಿಸದ ಹಾಗೆ ಕೇಂದ್ರ ಸರ್ಕಾರವು ತಕ್ಷಣ ತಿದ್ದುಪಡಿಸಿಕೊಳ್ಳುವಂತೆ ಸಾರುತ್ತಿರುವ ವಾಸ್ತವವೇ? |
ಪ್ರಶ್ನೆಯನ್ನು ಸರಳ ಪದಗಳಲ್ಲಿ ಹೇಳುವುದಾದರೆ: |
ಇದು ಹಿಂದಿ ಹೇರಿಕೆ ಅಥವಾ ಹಿಂದಿ ಸಾರ್ವಭೌಮತ್ವವಾ? |
ಇದು ವಾಸ್ತವವಾ ಅಥವಾ ಹುಸಿ ಪ್ರಚಾರವಾ? |
ನಿರ್ಧಾರವನ್ನು ನಾನು ಓದುಗರಿಗೆ ಬಿಟ್ಟಿದ್ದೇನೆ. |
ಅನುವಾದ : ಸುಬ್ರಮಣ್ಯ ಹೆಗಡೆ |
ಮೂಲತಃ ಶಿರಸಿಯವರಾದ ಸುಬ್ರಹ್ಮಣ್ಯ ಹೆಗಡೆ ಈಗ ತಿರುವನಂತಪುರಂನಲ್ಲಿ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಅನುಸಂಧಾನ ಕೇಂದ್ರದಲ್ಲಿ ಭೌತಶಾಸ್ತ್ರದ ಸಂಶೋಧನಾ ವಿದ್ಯಾರ್ಥಿ. ಆಗೀಗ ಕವಿತೆಗಳನ್ನು ಬರೆಯುತ್ತಾರೆ. ಬ್ಲಾಗಿಗ. |
ವೃತ್ತಿಯಲ್ಲಿ ಅಭಿಯಂತರರು ಹಾಗೂ ತಂತ್ರಜ್ಞಾನದ ಮಾರ್ಗದರ್ಶಕರು. ಬಿಡುವಿನ ಸಮಯದಲ್ಲಿ ಭಾರತ, ತಂತ್ರಜ್ಞಾನ , ಇತಿಹಾಸ ಮತ್ತು ಮನೋವಿಜ್ಞಾನಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಸಂಶೋಧನೆ ಮತ್ತು ಬರವಣಿಗೆಯನ್ನು ರೂಢಿಸಿಕೊಂಡಿದ್ದಾರೆ . ಛಾಯಾಗ್ರಹಣ, ಹಾಸ್ಯ, ಪ್ರಯಾಣ ಮತ್ತು ಕವನಗಳ ಮೂಲಕ ಸೃಜನಶೀಲತೆಯನ್ನು ಅನ್ವೇಷಿಸುವ ಚಟ . |
One comment to "ಹಿಂದಿ ಹೇರಿಕೆ: ಹುಸಿಪ್ರಚಾರವೇ ಅಥವಾ ವಾಸ್ತವವೇ?" |
Kumaraswamy S K |
Very good and detailed writing on current issue. This is the time for Central Govt to understand fact that langauge liberty is one of top most important and unity in divercity. Other wise one day this will be a big matter of concern to republic of India. |
ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ 18 ಸದಸ್ಯರ ಶ್ರೀಲಂಕಾ ತಂಡ ಪ್ರಕಟ | Sri Lanka announce 18 members squad for Test series against Bangladesh - kannada MyKhel |
» ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ 18 ಸದಸ್ಯರ ಶ್ರೀಲಂಕಾ ತಂಡ ಪ್ರಕಟ |
ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ 18 ಸದಸ್ಯರ ಶ್ರೀಲಂಕಾ ತಂಡ ಪ್ರಕಟ |
Updated: Tuesday, April 20, 2021, 18:42 [IST] |
ಸದ್ಯ ಕ್ರಿಕೆಟ್ ಲೋಕ ಭಾರತದಲ್ಲಿ ನಡೆಯುತ್ತಿರುವ ಚುಟುಕು ಕ್ರಿಕೆಟ್ ಸಮರ ಐಪಿಎಲ್ ಹಂಗಾಮವನ್ನು ಆಸ್ವಾದಿಸುತ್ತಿದೆ. ಈ ಸಂದರ್ಭದಲ್ಲಿ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡಗಳು ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಸಜ್ಜಾಗುತ್ತಿದೆ. ಜಿಂಬಾಬ್ವೆ ವಿರುದ್ಧ ಶ್ರೀಲಂಕಾ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಳ್ಗೊಳ್ಳಲಿದೆ. |
ಈ ಸರಣಿಯಲ್ಲಿ ಶ್ರೀಲಂಕಾ ತಂಡವನ್ನು ದಿಮುತ್ ಕರುಣರತ್ನ ಮುನ್ನಡೆಸಲಿದ್ದಾರೆ. ಏಂಜಲೋ ಮ್ಯಾಥ್ಯೂಸ್, ಲಹಿರು ತಿರಿಮನ್ನೆ, ದಿನೇಶ್ ಚಾಂಡಿಮಲ್ ಮತ್ತು ಸುರಂಗ ಲಕ್ಮಲ್ ಅವರಂತಾ ಅನುಭವಿ ಆಟಗಾರರು ಕೂಡ ಈ ಸರಣಿಯಲ್ಲಿ ಭಾಗಿಯಾಗಲಿದ್ದಾರೆ. |
ಗಾಯಗೊಂಡಿರುವ ಕಾರಣ ಲಸಿತ್ ಎಂಬುಲ್ಡೇನಿಯಾ ಗಾಯಗೊಂಡಿರುವ ಕಾರಣ ಈ ಸರಣಿಯಲ್ಲಿ ಅವಕಾಶವನ್ನು ಪಡೆದಿಲ್ಲ. ಮತ್ತೊಂದೆಡೆ ಟೆಸ್ಟ್ ಕ್ರಿಕೆಟ್‌ನಲ್ಲಿ ನೀಡಿದ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಕುಸಲ್ ಮೆಂಡಿಸ್ ಕೂಡ ಹೆಸರಿಸಲಾದ 18 ಆಟಗಾರರ ತಂಡದಿಂದ ಹೊರಬಿದ್ದಿದ್ದಾರೆ. |
ಶ್ರೀಲಂಕಾ ಟೆಸ್ಟ್ ಸ್ಕ್ವಾಡ್: |
ದಿಮುತ್ ಕರುಣರತ್ನ (ನಾಯಕ), ಲಹಿರು ತಿರಿಮನ್ನೆ, ಓಷಾಡಾ ಫರ್ನಾಂಡೊ, ಪಾತುಮ್ ನಿಸ್ಸಂಕ, ದಿನೇಶ್ ಚಂಡಿಮಲ್, ಏಂಜೆಲೊ ಮ್ಯಾಥ್ಯೂಸ್, ರೋಶೆನ್ ಸಿಲ್ವಾ, ಧನಂಜಯ ಡಿ ಸಿಲ್ವಾ, ನಿರೋಷನ್ ಡಿಕ್ವೆಲ್ಲಾ, ದಶುನ್ ಶಾನಕಾ, ವನಿಂದು ಹಸರಂಗ, ರಮೇಶ್ ಮೆಂಡಿಸ್, ಸುರಂಗ ಲಕ್ಮಲ್, ವಿಶ್ವ ಫರ್ನಾಂಡೊ, ಲಹಿರು ಕುಮಾರ, ಅಸಿಥಾ ಫರ್ನಾಂಡೊ, ದಿಲ್ಶನ್ ಮಧುಶಂಕಾ, ಪ್ರವೀಣ್ ಜಯವಿಕ್ರಮ. |
ನಗರದ ನೂರು ಕಡೆ ಸ್ಮಾರ್ಟ್‌ಬಿನ್ | Udayavani – ಉದಯವಾಣಿ |
Thursday, 24 Sep 2020 | UPDATED: 07:01 AM IST |
ಬೆಂಗಳೂರು: ನಗರದಲ್ಲಿ ಹಸಿ ಹಾಗೂ ಒಣ ತ್ಯಾಜ್ಯದ ಪ್ರತ್ಯೇಕ ಸಂಗ್ರಹಣೆಗೆ ಆಯ್ದ ಪ್ರದೇಶಗಳಲ್ಲಿ ಹೊಸದಾಗಿ 100 ಸ್ಮಾರ್ಟ್‌ಬಿನ್‌ಗಳನ್ನು ಅಳವಡಿಸಲಾಗುತ್ತದೆ ಎಂದು ಬಿಬಿಎಂಪಿ ಸೋಮವಾರ ಹೈಕೋರ್ಟ್‌ಗೆ ತಿಳಿಸಿದೆ. |
ಘನತ್ಯಾಜ್ಯ ನಿರ್ವಹಣೆ, ವಾರ್ಡ್ ಕಮಿಟಿ ರಚನೆ ಸಂಬಂಧ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠಕ್ಕೆ ಪಾಲಿಕೆ ಈ ಮಾಹಿತಿ ನೀಡಿತು. |
ವಿಚಾರಣೆ ವೇಳೆ ಹಾಜರಿದ್ದ ಘನತ್ಯಾಜ್ಯ ಸಂಸ್ಕರಣೆ ವಿಭಾಗದ ಜಂಟಿ ಆಯುಕ್ತ ಡಾ.ಸಫರಾಜ್ ಖಾನ್, ತ್ಯಾಜ್ಯ ಸಂಸ್ಕರಣೆಗೆ ಪಾಲಿಕೆ ಹಲವು ಕ್ರಮಗಳನ್ನು ಕೈಗೊಂಡಿದ್ದು, ಹೊಸದಾಗಿ 1500 ಟನ್ ತ್ಯಾಜ್ಯ ಸಂಗ್ರಹಣೆ ಸಾಮರ್ಥ್ಯದ 100 ಸ್ಮಾರ್ಟ್‌ಬಿನ್‌ಗಳನ್ನು ನಗರದ ಆಯ್ದ ಪ್ರದೇಶಗಳಲ್ಲಿ ಅಳವಡಿಸಲಾಗುವುದು. ಒಣ ಹಾಗೂ ಹಸಿ ತ್ಯಾಜ್ಯ ಸಂಗ್ರಹಣೆಗೆ ಪ್ರತ್ಯೇಕ ಸ್ಮಾರ್ಟ್ ಬಿನ್‌ಗಳಲ್ಲಿ ಇಡಲಾಗುತ್ತದೆ ಎಂದು ತಿಳಿಸಿದರು. |
ಈ ಹಿಂದೆ ವಾಣಿಜ್ಯ ಪ್ರದೇಶಗಳಲ್ಲಿ ಅಳವಡಿಸಿದ್ದ 2000 ಸ್ಮಾರ್ಟ್‌ಬಿನ್‌ಗಳ ಪೈಕಿ, 500 ಸ್ಮಾರ್ಟ್‌ಬಿನ್‌ಗಳನ್ನು ದುಷ್ಕರ್ಮಿಗಳು ಹಾಳುಗೆಡವಿದ್ದು, ಹಲವೆಡೆ ಕಳವು ಮಾಡಿದ್ದಾರೆ. ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿದ್ದೇವೆ. ಇದೀಗ ಮತ್ತೆ ಸ್ಮಾರ್ಟ್‌ಬಿನ್‌ಗಳನ್ನು ಅಳವಡಿಸಲಾಗುತ್ತದೆ ಎಂದು ಪಾಲಿಕೆ ಹಮ್ಮಿಕೊಂಡಿರುವ ಕ್ರಮಗಳ ಬಗ್ಗೆ ವಿವರಣೆ ನೀಡಿದರು. |
ವಾದ -ಪ್ರತಿವಾದ ಆಲಿಸಿದ ನ್ಯಾಯಪೀಠ, ಹೊಸದಾಗಿ ಸ್ಮಾರ್ಟ್‌ಬಿನ್‌ಗಳನ್ನು ಯಾವ ರೀತಿ ಅಳವಡಿಸಲಾಗುತ್ತದೆ ಮತ್ತು ಕಸ ವಿಂಗಡಣೆಗೆ ವೈಜ್ಞಾನಿಕವಾಗಿ ಕೈಗೊಳ್ಳುವ ಕ್ರಮಗಳ ಬಗ್ಗೆ ಮುಂದಿನ ಎರಡು ವಾರದಲ್ಲಿ ಪ್ರಮಾಣಪತ್ರ ಸಲ್ಲಿಸುವಂತೆ ತಾಕೀತು ಮಾಡಿತು. |
ತ್ಯಾಜ್ಯ ಸಂಸ್ಕರಣ ಘಟಗಳಲ್ಲಿ, ತ್ಯಾಜ್ಯ ವಿಲೇವಾರಿ, ತಾಂತ್ರಿಕ ಅಳವಡಿಕೆ ಸೇರಿದಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮುಂದಿನ ವಿಚಾರಣೆ ವೇಳೆ ಖುದ್ದು ಹಾಜರಿದ್ದು ವರದಿ ನೀಡುವಂತೆ ಕರ್ನಾಟಕ ಸಾವಯವ ಗೊಬ್ಬರ ಅಭಿವೃದ್ಧಿ ನಿಗಮ (ಕೆಸಿಡಿಸಿ) ವ್ಯವಸ್ಥಾಪಕ ನಿರ್ದೇಶಕರಿಗೆ ನ್ಯಾಯಪೀಠ ನಿರ್ದೇಶಿಸಿ ಚಾರಣೆಯನ್ನು ಜೂನ್ 29ಕ್ಕೆ ಮುಂದೂಡಿತು. |
ತಾಂತ್ರಿಕ ಸಲಹಾ ಸಮಿತಿ ರಚನೆ: ಪಾಲಿಕೆ ವ್ಯಾಪ್ತಿಯ ಏಳು ತ್ಯಾಜ್ಯ ಸಂಸ್ಕರಣಾ ಘಟಕಗಳ ಸಮರ್ಪಕ ಕಾರ್ಯನಿರ್ವಹಣೆಗೆ ಅನುಕೂಲವಾಗುವಂತೆ ಶಿಫಾರಸುಗಳನ್ನು ನೀಡುವ ಸಲುವಾಗಿ ತಜ್ಞರನ್ನೊಳಗೊಂಡ "ತಾಂತ್ರಿಕ ಸಲಹಾ ಸಮಿತಿ' ರಚಿಸಲಾಗಿದೆ ಎಂದು ರಾಜ್ಯಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ. |
ಹೈಕೋರ್ಟ್ ಸೂಚನೆ ಮೇರೆಗೆ ರಾಜ್ಯಸರ್ಕಾರ ಮೇ 16ರಂದು ತಾಂತ್ರಿಕ ಸಲಹಾ ಸಮಿತಿ ರಚಿಸಿದೆ ಎಂದು ಸರ್ಕಾರದ ಪರ ವಕೀಲರು ಮೆಮೊ ಸಲ್ಲಿಸಿದರು. ಸಾರ್ವಜನಿಕ ಹಿತ ಹಾಗೂ ಪರಿಸರ ಸಂರಕ್ಷಣೆ ದೃಷ್ಟಿಯಿಂದ ಕಸ ಸಂಸ್ಕರಣಾ ಘಟಕಗಳು ವೈಜಾನಿಕವಾಗಿ ಮತ್ತು ಯಾವುದೇ ಲೋಪವಿಲ್ಲದೆ ಕಾರ್ಯನಿರ್ವಹಿಸಬೇಕಿದೆ. |
ಆದ್ದರಿಂದ ತ್ಯಾಜ್ಯ ಸಂಸ್ಕರಣೆ, ವಿಲೇವಾರಿ, ತಾಂತ್ರಿಕ ಅಳವಡಿಕೆ ಸೇರಿದಂತೆ ಇನ್ನಿತರೆ ಅಂಶಗಳ ಬಗ್ಗೆ ಅಧ್ಯಯನ ನಡೆಸಿ ಅಗತ್ಯ ಶಿಫಾರಸುಗಳನ್ನು ನೀಡುವ ಸಲುವಾಗಿ ಐಐಎಸ್ಸಿ, ಪರಿಸರ ವಿಜ್ಞಾನಿಗಳು, ಕೃಷಿ ವಿ.ವಿ ತಜ್ಞರು, ಮಾಲಿನ್ಯ ನಿಯಂತ್ರಣ ಮಂಡಳಿ, ವಿವಿಧ ಕ್ಷೇತ್ರಗಳ ತಜ್ಞರನ್ನೊಳಗೊಂಡತೆ ಕನಿಷ್ಟ 8 ಸದಸ್ಯರ ಉನ್ನತ ಮಟ್ಟದ "ತಾಂತ್ರಿಕ ಸಲಹಾ ಸಮಿತಿಯನ್ನು' ರಚಿಸುವಂತೆ ಹೈಕೋರ್ಟ್ ಸೂಚಿಸಿತ್ತು. |
ಆರ್ ಎಸ್ ಎಸ್ ಕಾರ್ಯಕರ್ತ ದಿ.ರಾಜು ಕುಟುಂಬಕ್ಕೆ ಶಾ ಭೇಟಿ | BJP National president Amit Shah meets RSS worker Raju's family in Mysuru - Kannada Oneindia |
ಆರ್ ಎಸ್ ಎಸ್ ಕಾರ್ಯಕರ್ತ ದಿ.ರಾಜು ಕುಟುಂಬಕ್ಕೆ ಶಾ ಭೇಟಿ |
| Published: Friday, March 30, 2018, 15:48 [IST] |
ಮೈಸೂರು, ಮಾರ್ಚ್ 30: ಮೈಸೂರಿನ ಕ್ಯಾತಮಾರನಹಳ್ಳಿಯ ಆರ್ ಎಸ್ ಎಸ್ ಕಾರ್ಯಕರ್ತ ರಾಜು ಹತ್ಯೆ ಪ್ರಕರಣ ಸಂಬಂಧಪಟ್ಟಂತೆ ಮಾಹಿತಿ ಪಡೆದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇಂದು ಅವರ ಮನೆಗೆ ಭೇಟಿಯಿತ್ತರು. |
ಇದೇ ವೇಳೆ ರಾಷ್ಟ್ರೀಯ ತನಿಖಾದಳದಿಂದ ತನಿಖೆ ನಡೆಸುವಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾರನ್ನು ರಾಜುವಿನ ತಾಯಿ ಚಂದ್ರಮ್ಮ ಒತ್ತಾಯಿಸಿದರು. ಮೈಸೂರಿನ ಉದಯಗಿರಿಯಲ್ಲಿ ಕಳೆದೆರಡು ವರ್ಷಗಳ ಹಿಂದೆ ಕೆ. ಎಫ್. ಡಿ, ಪಿ ಎಫ್ ಐ, ಎಸ್ ಡಿಪಿಐ ಬೆಂಬಲಿತ ಸಕ್ರಿಯ ಕಾರ್ಯಕರ್ತರು ನನ್ನ ಮಗನನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಇದರಲ್ಲಿ ಪ್ರಮುಖ ಆರೋಪಿಯಾದ ಅಬೀದ್ ಪಾಷಾ ಎಂಬ ವ್ಯಕ್ತಿ ಮೈಸೂರು ಸೇರಿದಂತೆ ಹುಣಸೂರು, ಮಂಗಳೂರು ರಾಜ್ಯದ ಇತರೆ ಭಾಗಗಳಲ್ಲಿ ಕೊಲೆ ಕೇಸುಗಳು ದಾಖಲಾಗಿವೆ. |
ಮೈಸೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು ಹಾಗೂ ಗಂಭೀರ ಆರೋಪಗಳಿದ್ದರೂ ಸಹ ಕಾಂಗ್ರೆಸ್ ಸರ್ಕಾರದ ವೈಫಲ್ಯದಿಂದ ಪೊಲೀಸ್ ತನಿಖೆಯಲ್ಲಿ ರಾಜಕೀಯ ಕೈವಾಡ ಇದೆ. ಇದೇ ವೇಳೇ ಆರೋಪಿಗೆ ಮತ್ತು ಎಲ್ಲಾ ಸಹಚರರಿಗೆ ಜಾಮೀನು ದೊರಕಿದೆ. ಈ ಬೆಳವಣಿಗೆಯಿಂದ ರಾಜ್ಯ ಸರ್ಕಾರ ನಡೆಸಿದ ತನಿಖೆಯಲ್ಲಿ ನಮಗೆ ವಿಶ್ವಾಸವಿಲ್ಲ. ದಯವಿಟ್ಟು ನನ್ನ ಮಗನ ಹತ್ಯೆಯ ತನಿಖೆಯನ್ನು ರಾಷ್ಟ್ರೀಯ ತನಿಖಾದಳದಿಂದ ಮಾಡಿಸಿ ಎಂದು ವಿನಂತಿಸಿದರು. ಇದೀಗ ನನ್ನ ಮನೆಯಲ್ಲಿ ದುಡಿಯುವ ಕೈ ಇಲ್ಲದಂತಾಗಿದ್ದು, ಮತ್ತೊಬ್ಬ ಮಗ ಚಂದ್ರುಗೆ ಸರ್ಕಾರಿ ನೌಕರಿ ಕೊಡಿಸಿ ಎಂದು ವಿನಂತಿಸಿಕೊಂಡರು. |
ಇದೇ ವೇಳೆ ರಾಜು ಹತ್ಯೆಯಾದ ಘಟನೆ ಕುರಿತು ಕೇಂದ್ರ ಸಚಿವ ಅನಂತಕುಮಾರ್ ಹಾಗೂ ಪ್ರತಾಪ್ ಸಿಂಹ ಸಂಪೂರ್ಣ ವಿವರ ನೀಡಿದರು. ರಾಜು ಕುಟುಂಬ ಭೇಟಿಯಾದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅಮಿತ್ ಶಾ, ಸಿದ್ದರಾಮಯ್ಯ ಸರ್ಕಾರದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದೆ. ರಾಜ್ಯದಲ್ಲಿ 25 ಮಂದಿ ಹಿಂದೂಗಳ ಹತ್ಯೆಯಾಗಿದೆ. ಮುಂದೆ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ ಯಡಿಯೂರಪ್ಪ ಸಿಎಂ ಆಗಲಿದ್ದಾರೆ. ಆರೋಪಿಗಳು ಪಾತಾಳದಲ್ಲಿದ್ದರೂ ಬಿಡುವುದಿಲ್ಲ. ಅವರನ್ನು ಬಂಧಿಸಿ ಜೈಲಿಗಟ್ಟುತ್ತೇವೆ ಎಂದರು. |
amit shah mysuru district news ಅಮಿತ್ ಶಾ ಮೈಸೂರು ಜಿಲ್ಲಾಸುದ್ದಿ |
BJP National president Amit Shah meets RSS worker Raju's family in Mysuru. Raju was murdered in Mysuru Udaygiri police station limits on March 13th, 2016. |
ಪ್ರಕಾಶಕರಿಗೆ.. | ಸಂಪದ - Sampada |
ಪ್ರಕಾಶಕರಿಗೆ.. |
ಸವಿನಯ ವಿನಂತಿ |
Submitted by sinjo on July 8, 2011 - 6:53pm |
ಸಂಪದ ಸ೦ಹಿತೆಯಲ್ಲಿ ಎಲ್ಲಾ ಲೆಖನಗಳು ತುಂಬಾ ರಸವತ್ತಾಗಿ ಮೂಡಿಬರುತ್ತಿವೆ. ಇನ್ನೂ ಹಾಸ್ಯಭರಿತ,ಹಾಗೂ ಆಧ್ಯಾತ್ಮ ಕುರಿತಾದ ಲೇಖನಗಳನ್ನು ಮಾಡಿದರೆ,ಅನುಕೂಲವಾಗುವದು. ಒಟ್ಟಿನಲ್ಲಿ ಹೇಳುವುದಾದರೆ, ಚಿಕ್ಕ ಮಕ್ಕಳಿಗೆ ಮತ್ತು ಯುವಜನಾಂಗಕ್ಕೆ ಪ್ರೇರಣೆ ಕೊಡುವ೦ಥ ಒಳ್ಳೆಯ ಬರಹಗಳು ಬರಲಿ,ಎ೦ದು ನನ್ನ ಅನಿಸಿಕೆಯಾಗಿದೆ. ಆಯ್ದ ಲೇಖನಗಳನ್ನು ಮಾತ್ರ ಪ್ರಕಟಗೊಳಿಸಿರಿ. ನಿಮ್ಮ ಲ್ಲಿ ನಮಗೆಲ್ಲರಿಗೂ ಕನ್ನಡದಲ್ಲಿ ಬರೆಯಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ವ೦ದನೆಗಳು. |
ರಸ್ತೆ ಮೇಲೆ ಹರಿದಿದೆ ಕೊಳಕು ನೀರು | Prajavani |
ರಸ್ತೆ ಮೇಲೆ ಹರಿದಿದೆ ಕೊಳಕು ನೀರು |
Published: 10 ಜೂನ್ 2019, 18:15 IST |
Updated: 10 ಜೂನ್ 2019, 18:15 IST |
ರಾಮನಗರ: ಇಲ್ಲಿನ ರೋಟರಿ ಆಸ್ಪತ್ರೆ ಹಿಂಭಾಗದ ಮೂರನೇ ಅಡ್ಡ ರಸ್ತೆಯಲ್ಲಿ ಒಳಚರಂಡಿ ಮ್ಯಾನ್‌ಹೋಲ್ ಉಕ್ಕಿದ್ದು, ಕೊಳಕು ನೀರು ರಸ್ತೆಗೆ ಹರಿಯುತ್ತಿದೆ. |
ಇದರಿಂದ ಸುತ್ತಮುತ್ತ ವಾಸಿಸುವ ಜನರು ಕಲುಷಿತ ನೀರಿನ ದುರ್ವಾಸನೆಯಿಂದ ಬೇಸತ್ತಿದ್ದು, ಮನೆಯಲ್ಲಿ ಇರಲಾಗದ ಪರಿಸ್ಥಿತಿ ಇದೆ. ಕೆಲವು ದಿನದ ಹಿಂದೆ ಈ ಬಗ್ಗೆ ಜಲಮಂಡಳಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಅವರು ಚೇಂಬರ್ ನಿಂದ ಒಂದು ಪೈಪ್ ಹಾಕಿ ರಾಜ ಕಾಲುವೆಗೆ ಸಂಪರ್ಕ ಕಲ್ಪಿಸಿ ಕೈ ತೊಳೆದುಕೊಂಡರು. ಆದರೆ ಈಚೆಗೆ ಸುರಿದ ಮಳೆಯಿಂದಾಗಿ ಚೇಂಬರ್ ಕಟ್ಟಿಕೊಂಡು ಕಲುಷಿತ ನೀರು ರಸ್ತೆ ಮಧ್ಯದಲ್ಲಿ ಹರಿಯುತ್ತಿದೆ. ಇದರ ದುರ್ವಾಸನೆ ತಾಳಲು ಆಗದು ಎಂದು ಸ್ಥಳೀಯ ನಿವಾಸಿಗಳು ತಿಳಿಸಿದರು. ಸಂಬಂಧಿಸಿದ ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸಬೇಕೆಂದು ಮನವಿ ಮಾಡಿದರು. |
'ಶಾನೆ ಟಾಪ್ ಆಗಾವ್ಳೆ' ಚಿರಂಜೀವಿ ಸರ್ಜಾ ಹುಡುಗಿ | chiranjeevi sarja's singa kannada movie song released. - Kannada Filmibeat |
| Published: Thursday, March 21, 2019, 16:32 [IST] |
ಚಿರಂಜೀವಿ ಸರ್ಜಾ ಹುಡುಗಿ 'ಶಾನೆ ಟಾಪ್ ಆಗಾವ್ಳಂತೆ..'. ಆ ಹುಡುಗಿನ ನೋಡಿ ಹುಡುಗುರೆಲ್ಲಾ ಲೂಸ್ ಆಗ್ತಿದ್ದಾರಂತೆ. ಅಷ್ಟು ಹುಚ್ಚು ಹಿಡಿಸಿರುವ ಆ ಹುಡುಗಿ ಯಾರಪ್ಪ ಅಂತ ತಲೆಕೆಡಿಸಿಕೊಳ್ಳುತ್ತಿದ್ದೀರಾ. ಅದು ಮತ್ಯಾರು ಅಲ್ಲ 'ಸಿಂಗ' ಸಿನಿಮಾದ ನಾಯಕಿ. |
ಹೌದು, ಚಿರಂಜೀವಿ ಸರ್ಜಾ ಮತ್ತು ಅಧಿತಿ ಪ್ರಭುದೇವ ಅಭಿನಯದ 'ಸಿಂಗ' ಚಿತ್ರದ ಲಿರಿಕಲ್ ಹಾಡು ರಿಲೀಸ್ ಆಗಿದ್ದು, ಈ ಹಾಡು ಈಗ ಗಾನಪ್ರಿಯರ ಮೆಚ್ಚುಗೆ ಪಡೆದಿದೆ. 'ಶಾನೆ ಟಾಪ್ ಆಗವ್ಳೆ..' ಅನ್ನೋ ಸಾಲುಗಳಿಂದ ಪ್ರಾರಂಭವಾಗುವ ಈ ಹಾಡು ಕೇಳೋಕೆ ಸಖತ್ ಮಜಾವಾಗಿದೆ. |
ಮೊನ್ನೆ ಮೊನ್ನೆಯಷ್ಟೆ 'ಸಿಂಗ' ಚಿತ್ರದಿಂದ ಮಾಸ್ ಟ್ರೈಲರ್ ರಿಲೀಸ್ ಮಾಡಲಾಗಿತ್ತು. ಡೈಲಾಗ್ ಮತ್ತು ಫೈಟ್ ಗಳ ಅಬ್ಬರ ನೋಡಿ ಇದು ಪಕ್ಕಾ ಆಕ್ಷನ್ ಸಿನಿಮಾ ಅಂತ ಹೇಳಲಾಗುತ್ತಿತ್ತು. ಆದ್ರೀಗ 'ಸಿಂಗ' ಚಿತ್ರದಿಂದ ಇಂಟ್ರಸ್ಟಿಂಗ್ ಆಗಿರುವ ಲವ್ ಟ್ರ್ಯಾಕ್ ಒಂದನ್ನು ರಿಲೀಸ್ ಮಾಡಲಾಗಿದೆ. ಈ ಹಾಡು ಈಗ ಸ್ಯಾಂಡಲ್ ವುಡ್ ನಲ್ಲಿ ಎಲ್ಲರ ಗಮನ ಸೆಳೆದಿದ್ದು ಟ್ರೆಂಡಿಂಗ್ ನಲ್ಲಿದೆ. |
ಗಾಯಕ ವಿಜಯ್ ಪ್ರಕಾಶ್ ದ್ವನಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ 'ಭರ್ಜರಿ' ಚೇತನ್ ಕುಮಾರ್ ಸಾಹಿತ್ಯವಿದೆ. ಧರ್ಮ ವಿಶ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ. |
Read more about: chiranjeevi sarja ಚಿರಂಜೀವಿ ಸರ್ಜಾ ಚೇತನ್ ಕುಮಾರ್ |
Chiranjeevi Sarja and Aditi Prabhudeva's 'Singa' movie song released. 'Bharjari' Chethan Kumar wrote this song. |
Subsets and Splits
No community queries yet
The top public SQL queries from the community will appear here once available.