text stringlengths 0 61.5k |
|---|
ಪ್ರಗತಿ ಪರಿಶೀಲನಾ ಸಭೆ: ಅಧಿಕಾರಿಗಳಿಗೆ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸೂಚನೆ |
ಪ್ರಜಾವಾಣಿ ವಾರ್ತೆ Updated: 04 ಸೆಪ್ಟೆಂಬರ್ 2021, 09:22 IST |
ಬೀದರ್: 'ಕೃಷಿ, ತೋಟಗಾರಿಕೆ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳ ಅಧಿಕಾರಿಗಳು ರೈತರಿಗಾಗಿಯೇ ಇರುವ ಕಾರಣ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ಕೃಷಿ ಕ್ಷೇತ್ರದಲ್ಲಾದ ಸಂಶೋಧನೆ ಹಾಗೂ ಹೊಸ ತಂತ್ರಜ್ಞಾನಗಳ ಕುರಿತು ಗ್ರಾಮ ಮಟ್ಟದಲ್ಲಿ ರೈತರಿಗೆ ತಿಳಿವಳಿಕೆ ನೀಡುವ ಕೆಲಸ ಮಾಡಬೇಕು' ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸೂಚಿಸಿದರು. |
ಇಲ್ಲಿಯ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಂಬಂಧ ಇಲ್ಲದಂತೆಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲಾ ಪಂಚಾಯಿತಿ ಸಿಇಒ ಇಲಾಖೆಗಳ ಅಧಿಕಾರಿಗಳನ್ನು ಜೋಡಿಸಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಮುಂದಾಗಬೇಕು' ಎಂದರು. |
'ದೇಶದಲ್ಲಿ ಮಿಶ್ರ ಬೆಳೆ ಹಾಗೂ ಉಪ ಕಸುಬು ಮಾಡಿಕೊಂಡಿರುವ ಒಬ್ಬ ರೈತ ಕೂಡ ಆತ್ಮಹತ್ಯೆ ಮಾಡಿಕೊಂಡಿಲ್ಲ ಎನ್ನುವುದು ಸಮೀಕ್ಷೆಯಿಂದ ದೃಢಪಟ್ಟಿದೆ.ಹೀಗಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಇರುವಂತಹ ಕೃಷಿ ಉತ್ಪನ್ನಗಳನ್ನು ಬೆಳೆದು ಬ್ರ್ಯಾಂಡಿಂಗ್ ಮಾಡಿ ಮಾರಾಟ ಮಾಡಿ ಹೆಚ್ಚಿನ ಆದಾಯ ಪಡೆದುಕೊಳ್ಳಲು ಅನುಕೂ ಲವಾಗುವಂತೆ ರೈತರಿಗೆ ಮಾರ್ಗದರ್ಶನ ನೀಡಬೇಕಿದೆ' ಎಂದು ತಿಳಿಸಿದರು. |
'ಅಧಿಕಾರಿಗಳು ತಂಡ ರಚಿಸಿಕೊಂಡು ಪ್ರತಿ ವಾರ ಒಂದು ವಿಷಯವನ್ನು ಆಯ್ಕೆ ಮಾಡಿಕೊಂಡು ಗ್ರಾಮ ಪಂಚಾಯಿತಿಗಳ ನೋಟಿಸ್ ಬೋರ್ಡ್‌ಗಳಲ್ಲಿ ಮಾಹಿತಿ ಬರೆಯಬೇಕು. ನಂತರ ರೈತರಿಗೆ ಗ್ರಾಮದಲ್ಲೇ ತಿಳಿವಳಿಕೆ ನೀಡಬೇಕು' ಎಂದು ಸಲಹೆ ನೀಡಿದರು. |
'ರಾಯಚೂರು ತಾಲ್ಲೂಕಿನ ಸಿಂಧನೂರಿನ ರೈತರೊಬ್ಬರು ನುಗ್ಗೆಕಾಯಿ ಸೊಪ್ಪು ಒಣಗಿಸಿ ವಿದೇಶಕ್ಕೆ ರಫ್ತು ಮಾಡಿ ಉತ್ತಮ ಆದಾಯ ಪಡೆಯುತ್ತಿದ್ದಾರೆ. ನುಗ್ಗೆ ಸೊಪ್ಪು ಪ್ರತಿ 100 ಎಂಎಲ್‌ಗೆ ₹ 1,500ಗೆ ಮಾರಾಟವಾಗುತ್ತಿದೆ. ಸಿರಿಧಾನ್ಯ ಹಾಗೂ ಎಣ್ಣೆಕಾಳಿಗೂ ವಿದೇಶದಲ್ಲಿ ಅಪಾರ ಬೇಡಿಕೆ ಇದೆ. ಗುಣಮಟ್ಟದ ಉತ್ಪನ್ನ ಬೆಳೆಸಿ ವಿದೇಶಕ್ಕೆ ರಫ್ತು ಮಾಡಲು ರೈತರಿಗೆ ಉತ್ತೇಜನ ನೀಡಬೇಕು' ಎಂದು ಹೇಳಿದರು. |
'ಕೇಂದ್ರ ಸರ್ಕಾರ ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಉದ್ದೇಶದಿಂದ ಕೃಷಿ ಮೂಲಸೌಕರ್ಯ ನಿಧಿಯ ಅಡಿಯಲ್ಲಿ ₹ 1 ಲಕ್ಷ ಕೋಟಿ ಅನುದಾನವನ್ನು ಮೀಸಲಿಟ್ಟಿದೆ. ಸಹಕಾರ ಸಂಘಗಳು ಹಾಗೂ ಸ್ವಸಹಾಯ ಸಂಘಗಳು ಈ ಯೋಜನೆಯ ಪ್ರಯೋಜನ ಪಡೆದು ಸಂಸ್ಕರಣಾ ಘಟಕಗಳನ್ನು ಆರಂಭಿಸಿ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡಬೇಕು ಹಾಗೂ ಆದಾಯ ಹೆಚ್ಚಿಸಿಕೊಳ್ಳಬೇಕು' ಎಂದು ಹೇಳಿದರು. |
ತೋಟಗಾರಿಕೆ ಉಪ ನಿರ್ದೇಶಕ ವಿಶ್ವನಾಥ ಝಿಳ್ಳೆ ಮಾತನಾಡಿ, 'ಜಿಲ್ಲೆಯಲ್ಲಿ 31 ಪಾಲಿಹೌಸ್‌ಗಳಿವೆ. ದ್ರಾಕ್ಷಿ, ಬಾಳೆ ಹಾಗೂ ದಾಳಿಂಬೆ ವಿದೇಶಕ್ಕೆ ರಫ್ತು ಆಗುತ್ತಿದೆ' ಎಂದರು. |
ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ತಾರಾಮಣಿ ಹಾಗೂ ಜನವಾಡ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಸುನೀಲಕುಮಾರ್ ಎನ್.ಎಂ. ಅವರು ಕೃಷಿ ಹಾಗೂ ತೋಟಗಾರಿಕೆಗೆ ಸಂಬಂಧಿಸಿದ ಮಾಹಿತಿಯನ್ನು ಸಚಿವರಿಗೆ ನೀಡಿದರು. |
ಸಚಿವ ಪ್ರಭು ಚವಾಣ್, ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ, ಜಿ.ಪಂ ಸಿಇಒ ಜಹೀರಾ ನಸೀಮ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್ ಇದ್ದರು. |
ಜಿಲ್ಲೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಸೋಯಾಬಿನ್ ಬಿತ್ತನೆ: ಮೆಚ್ಚುಗೆ |
ಬೀದರ್: ಮಾರುಕಟ್ಟೆಯಲ್ಲಿ ಲಾಭದಾಯಕ ಎಣ್ಣೆ ಕಾಳು ಬೆಳೆ ಎಂದು ಗುರುತಿಸಿಕೊಂಡಿರುವ ಸೋಯಾಬಿನ್ ಬೆಳೆಯನ್ನು ಬೀದರ್ ಜಿಲ್ಲೆಯಲ್ಲಿ 2,02 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿರುವುದು ಪ್ರಗತಿಯ ಲಕ್ಷಣವಾಗಿದೆ' ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮೆಚ್ಚುಗೆ ವ್ಯಕ್ತಪಡಿಸಿದರು. |
'ದೇಶದಲ್ಲಿ ಎಣ್ಣೆ ಕಾಳು ಬೆಳೆಗಳಿಗೆ ಹೆಚ್ಚಿನ ಬೇಡಿಕೆ ಇದೆ. ವಿವಿಧ ಎಣ್ಣೆ ಕಾಳುಗಳನ್ನು ಬೆಳೆಯುವಂತಹ ವಾತಾವರಣವು ನಮ್ಮ ದೇಶದಲ್ಲಿದೆ. ಅಂತಹ ಮಣ್ಣು ಕೂಡ ಇದೆ. ಇಂತಹ ವಿಷಯಗಳನ್ನು ರೈತರಿಗೆ ತಿಳಿಸಿ ಲಾಭದಾಯಕ ಎಣ್ಣೆ ಕಾಳುಗಳ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹ ನೀಡಬೇಕು' ಎಂದರು. |
ರೈತರ ಆದಾಯ ದ್ವಿಗುಣವಾಗಲು ಒಳ್ಳೆಯ ಮಾರುಕಟ್ಟೆ ಕಲ್ಪಿಸಬೇಕು. ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಚಿಂತನ ಮಂಥನ ನಡೆಸಿ ರೈತರಿಗೆ ಸಹಾಯ ಮಾಡಬೇಕು. ಲಾಭದಾಯಕ ಬೆಳೆ ತೆಗೆಯುವ ಮತ್ತು ಮಾರುಕಟ್ಟೆಯ ಬಗ್ಗೆ ರೈತರಿಗೆ ಹೆಚ್ಚಿನ ಅರಿವು ಮೂಡಿಸಲು ಮುಂದಾಗಬೇಕು' ಎಂದು ಸಲಹೆ ಮಾಡಿದರು. |
'); $('#div-gpt-ad-863708-2').append(' |
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-863708'); }); googletag.cmd.push(function() { googletag.display('gpt-text-700x20-ad2-863708'); }); },300); var x1 = $('#node-863708 .field-name-body .field-items div.field-item > p'); if(x1 != null && x1.length != 0) { $('#node-863708 .field-name-body .field-items div.field-item > p:eq(0)').append(' |
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-863708').addClass('inartprocessed'); } else $('#in-article-863708').hide(); } else { _taboola.push({article:'auto', url:'https://www.prajavani.net/district/bidar/shoba-karandajle-held-meeting-in-bidar-863708.html'}); window._taboola = window._taboola || []; _taboola.push({ mode: 'thumbnails-e', container: 'taboola-below-article-thumbnails-mobile-863708', placement: 'Below Article Thumbnails 1', target_type: 'mix' }); _taboola.push({flush: true}); // Text ad googletag.cmd.push(function() { googletag.display('gpt-text-300x20-ad-863708'); }); googletag.cmd.push(function() { googletag.display('gpt-text-300x20-ad2-863708'); }); // Remove current Outbrain //$('#dk-art-outbrain-863708').remove(); //ad before trending $('#mob_rhs1_863708').prepend(' |
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-863708 .field-name-body .field-items div.field-item > p'); if(x1 != null && x1.length != 0) { $('#node-863708 .field-name-body .field-items div.field-item > p:eq(0)').append(' |
'); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-863708 .field-name-body .field-items div.field-item > p:eq(2)').after(' |
'); googletag.cmd.push(function() { googletag.display('in-article-mob-3rd-863708'); }); } else { $('#in-article-mob-863708').hide(); $('#in-article-mob-3rd-863708').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' |
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); setTimeout(function(){ $('.image_gallery .owl-carousel').trigger('destroy.owl.carousel'); $('.image_gallery .owl-carousel').owlCarousel( image_options ); $('.image_gallery .owl-carousel.owl-ph-gallery').trigger('destroy.owl.carousel'); $('.image_gallery .owl-carousel.owl-ph-gallery').owlCarousel( pg_image_options ); },30); setTimeout(function(){ $('#video_gallery .owl-carousel').trigger('destroy.owl.carousel'); $('#video_gallery .owl-carousel').owlCarousel( video_options ); },30); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0) { var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var in_art = ['#in-article-863708','#in-article-867824','#in-article-867822','#in-article-867820','#in-article-867815']; var twids = ['#twblock_863708','#twblock_867824','#twblock_867822','#twblock_867820','#twblock_867815']; var twdataids = ['#twdatablk_863708','#twdatablk_867824','#twdatablk_867822','#twdatablk_867820','#twdatablk_867815']; var obURLs = ['https://www.prajavani.net/district/bidar/shoba-karandajle-held-meeting-in-bidar-863708.html','https://www.prajavani.net/district/bidar/kalyan-karnataka-day-celebration-in-various-places-867824.html','https://www.prajavani.net/district/bidar/vishnuvardhan-birthday-celebration-867822.html','https://www.prajavani.net/district/bidar/campus-interview-a-selection-of-85-artisans-867820.html','https://www.prajavani.net/district/bidar/advice-on-the-importance-of-skill-867815.html']; var vuukleIds = ['#vuukle-comments-863708','#vuukle-comments-867824','#vuukle-comments-867822','#vuukle-comments-867820','#vuukle-comments-867815']; // var nids = [863708,867824,867822,867820,867815]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; //var obscroll = false; $(window).scroll(function(){ $.each( vuukleIds, function( key, vuukleId ) { if($(vuukleId) && $(vuukleId).length!=0) { if( !$(vuukleId).hasClass('vkAdprocessed')) { var scrollTop = $(window).scrollTop(), elementOffset = $(vuukleId).offset().top, distance = (elementOffset - scrollTop); //if($(vuukleId).parent().prev().isInViewport() ) { if(distance < 1500 ) { $(vuukleId).addClass('vkAdprocessed'); setTimeout(function(){ window.newVuukleWidgets({ elementsIndex: $(vuukleId).parent().data('elementsindex'), articleId: $(vuukleId).parent().data('articleid'), img: $(vuukleId).parent().data('img'), title: $(vuukleId).parent().data('title'), tags: $(vuukleId).parent().data('tags'), url: $(vuukleId).parent().data('url') }); }, 500); } } } }); //obscroll = false; }); }); }); |
ಲೋಕಾಯಕ್ತಕ್ಕೆ ಅಖೈರಾದ ನ್ಯಾ. ವಿಶ್ವನಾಥ ಶೆಟ್ಟಿ ಹೆಸರು- ಆರೋಪದ್ದೂ ಕೆಸರು, ಬೆಳೆನಷ್ಟ ಪರಿಹಾರದ ರೂಪುರೇಷೆ, ಆನ್ಲೈನ್ ಬಿಪಿಎಲ್-ಎಪಿಎಲ್ ಯೋಜನೆ ಪ್ರಾರಂಭ | Digital Kannada |
Home ಸುದ್ದಿಸಂತೆ ಲೋಕಾಯಕ್ತಕ್ಕೆ ಅಖೈರಾದ ನ್ಯಾ. ವಿಶ್ವನಾಥ ಶೆಟ್ಟಿ ಹೆಸರು- ಆರೋಪದ್ದೂ ಕೆಸರು, ಬೆಳೆನಷ್ಟ ಪರಿಹಾರದ ರೂಪುರೇಷೆ, ಆನ್ಲೈನ್... |
ಲೋಕಾಯಕ್ತಕ್ಕೆ ಅಖೈರಾದ ನ್ಯಾ. ವಿಶ್ವನಾಥ ಶೆಟ್ಟಿ ಹೆಸರು- ಆರೋಪದ್ದೂ ಕೆಸರು, ಬೆಳೆನಷ್ಟ ಪರಿಹಾರದ ರೂಪುರೇಷೆ, ಆನ್ಲೈನ್ ಬಿಪಿಎಲ್-ಎಪಿಎಲ್ ಯೋಜನೆ ಪ್ರಾರಂಭ |
ಹಾಲಿವುಡ್ ಸಿನಿಮಾ ಹಾಗೂ ಅಮೆರಿಕದ ಟಿವಿ ಕಾರ್ಯಕ್ರಮಗಳಿಗೆ ವಾರ್ಷಿಕ ಸನ್ಮಾನದ ಕಾರ್ಯಕ್ರಮವಾದ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಮಾರಂಭದಲ್ಲಿ ಭಾರತದ ನಟಿ ಪ್ರಿಯಾಂಕಾ ಚೋಪ್ರ |
ಲೋಕಾಯುಕ್ತ ಮುಖ್ಯಸ್ಥರಾಗಿ ನಿ. ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರನ್ನು ನೇಮಕ ಮಾಡುವ ನಿರ್ಧಾರ ಸರ್ಕಾರದ ಮಟ್ಟದಲ್ಲಿ ಹೆಚ್ಚು ಕಡಿಮೆ ನಿರ್ಧಾರವಾಗಿದ್ದು, ಅಧಿಕೃತ ಪ್ರಕಟಣೆ ಹೊರಬೀಳಬೇಕಿದೆ. ಇದರ ಬೆನ್ನಲ್ಲೇ ಆರೋಪಗಳೂ ರಂಗೇರಿದ್ದು, ಸಮಾಜ ಪರಿವರ್ತನಾ ಸಂಘಟನೆಯ ಹಿರೇಮಠ ಅವರು ಆರೋಪಿಸಿರುವ ಪ್ರಕಾರ ನ್ಯಾ. ವಿಶ್ವನಾಥ ಶೆಟ್ಟಿ ಬೆಂಗಳೂರಿನಲ್ಲಿ ಮನೆ ಹೊಂದಿದ್ದರೂ ನ್ಯಾಯಾಂಗ ನೌಕರ ಸಂಘದ ಬಡಾವಣೆಯಲ್ಲಿ ಸುಳ್ಳು ಮಾಹಿತಿ ಮೂಲಕ ನಿವೇಶನ ಹೊಂದಿದ್ದಾರೆ. ಹೀಗಾಗಿ ಇವರು ಲೋಕಾಯುಕ್ತ ಸ್ಥಾನಕ್ಕೆ ಅರ್ಹರಲ್ಲ ಎಂಬುದು ಇವರ ವಾದ. |
ಇದೇನೇ ಇದ್ದರೂ ಹೈಕೋರ್ಟ್‍ನ ಮುಖ್ಯನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಅಧ್ಯಕ್ಷತೆಯಲ್ಲಿ ನಡೆದ ಲೋಕಾಯುಕ್ತ ಆಯ್ಕೆ ಸಮಿತಿ ಸಭೆಯಲ್ಲಿ ವಿಶ್ವನಾಥ್ ಶೆಟ್ಟಿ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. |
ಹಲವು ಕಾಲದಿಂದ ನೆನೆಗುದಿಗೆ ಬಿದ್ದ ಲೋಕಾಯುಕ್ತರ ನೇಮಕಾತಿ ಸಂಬಂಧ ಇಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿ,ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರ ಹೆಸರು ಎಲ್ಲರಿಂದಲೂ ಪ್ರಸ್ತಾಪವಾಗಿದೆ ಎಂದು ಮೂಲಗಳು ಹೇಳಿವೆ. |
ಸಭೆ ಆರಂಭವಾಗುತ್ತಿದ್ದಂತೆ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ್ ಅವರು ಶೆಟ್ಟಿ ಅವರ ಹೆಸರನ್ನು ಪ್ರಸ್ತಾಪ ಮಾಡುತ್ತಿದ್ದಂತೆ ಮುಖ್ಯಮಂತ್ರಿಯವರು ಅವರ ನೇಮಕಾತಿಗೆ ಸರ್ಕಾರದ ಒಪ್ಪಿಗೆ ನೀಡಿದರು. |
ಮುಖ್ಯಮಂತ್ರಿಯವರು, ವಿಶ್ವನಾಥ್ ಶೆಟ್ಟಿ ಅವರ ಹೆಸರಿಗೆ ಅನುಮೋದನೆ ನೀಡುತ್ತಿದ್ದಂತೆ ಉಳಿದ ಸದಸ್ಯರಾದ ವಿಧಾನ ಪರಿಷತ್ತಿನ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಪ್ರತಿಪಕ್ಷದ ನಾಯಕರಾದ ಜಗದೀಶ್ ಶೆಟ್ಟರ್, ಹಾಗೂ ಕೆ.ಎಸ್.ಈಶ್ವರಪ್ಪ ಕೂಡಾ ಸಮ್ಮತಿಸಿದರು. |
ಲೋಕಾಯುಕ್ತಕ್ಕೆ ಈ ಹಿಂದೆ ನಡೆದ ಸಭೆಗಳಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಗದ ಕಾರಣ ಕಳೆದ ಎರಡು ವರ್ಷದಿಂದ ಲೋಕಾಯುಕ್ತ ಹುದ್ದೆ ಖಾಲಿ ಉಳಿದಿತ್ತು. |
ಶೆಟ್ಟಿ ಅವರು ರಾಜ್ಯ ಹೈ ಕೋರ್ಟ್‍ನಲ್ಲಿ ನಿರಂತರವಾಗಿ 10 ವರ್ಷಗಳ ಕಾಲ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದಾರೆ. |
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ,ನೂತನ ಲೋಕಾಯುಕ್ತ ಹುದ್ದೆಗೆ ಮೂವರು ನ್ಯಾಯಮೂರ್ತಿಗಳ ಹೆಸರು ಪ್ರಸ್ತಾಪವಾಗಿದ್ದು ಈ ಪೈಕಿ ಒಬ್ಬರ ಹೆಸರನ್ನು ಲೋಕಾಯುಕ್ತ ಹುದ್ದೆಗೆ ಶಿಫಾರಸು ಮಾಡಲಾಗುವುದು ಎಂದು ವಿವರಿಸಿದರು. |
ಲೋಕಾಯುಕ್ತ ಹುದ್ದೆಗೆ ನಿವೃತ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ, ಎನ್.ಕೆ. ಪಾಟೀಲ್ ಮತ್ತು ಬೈರಾರೆಡ್ಡಿ ಅವರ ಹೆಸರುಗಳು ಇಂದಿನ ಸಭೆಯಲ್ಲಿ ಪ್ರಸ್ತಾಪವಾಗಿವೆ ಎಂದು ಅವರು ಸ್ಪಷ್ಟ ಪಡಿಸಿದರು. |
ವಿಶ್ವನಾಥ ಶೆಟ್ಟಿ, ಎನ್.ಕೆ.ಪಾಟೀಲ್ ಹಾಗೂ ಆನಂದಭೈರಾರೆಡ್ಡಿ ಹೀಗೆ ಮೂರು ಹೆಸರುಗಳಿಗೂ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಗಳು ಒಪ್ಪಿದ್ದಾರೆ ಎಂದರು. ಈ ಮೂರು ಹೆಸರುಗಳ ಪೈಕಿ ಒಂದು ಹೆಸರನ್ನು ನೂತನ ಲೋಕಾಯುಕ್ತರ ಹುದ್ದೆಗೆ ಶಿಫಾರಸು ಮಾಡಿ ರಾಜ್ಯಪಾಲರಿಗೆ ರವಾನಿಸಲಾಗುವುದು ಎಂದು ಅವರು ಹೇಳಿದರು. |
ಉಳಿದಂತೆ ತಿಳಿಯಬೇಕಾದ ಸುದ್ದಿಗಳು |
ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿ ನೀರಿಲ್ಲದೆ ಬೆಳೆ ಕಳೆದುಕೊಂಡ ರೈತರಿಗೆ ಬೆಳೆ ಪರಿಹಾರವಿಲ್ಲ ಎಂದು ಸ್ಪಷ್ಟಪಡಿಸಿರುವ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಮಳೆಯಿಲ್ಲದೆ ಬೆಳೆ ಕಳೆದುಕೊಂಡ ಒಣಭೂಮಿ ರೈತರಿಗೆ ಹೆಕ್ಟೇರ್‍ಗೆ 6350 ರೂ. ಪರಿಹಾರ ನೀಡುವುದಾಗಿ ಇಂದಿಲ್ಲಿ ತಿಳಿಸಿದ್ದಾರೆ. |
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಳೆ ಕಳೆದುಕೊಂಡ ರೈತರಿಗೆ ಈ ಪ್ರಮಾಣದಲ್ಲಿ ಪರಿಹಾರೂ ನೀಡಿದರೂ, ಮೂರು ಸಾವಿರ ಕೋಟಿ ರೂ. ಅಗತ್ಯವಿದೆ. ಆದರೆ ಕೇಂದ್ರ ಸರ್ಕಾರ ಬೆಳೆ ಪರಿಹಾರಕ್ಕಾಗಿ 1782.44 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದ್ದು, ಉಳಿದ ಹಣವನ್ನು ರಾಜ್ಯ ಸರ್ಕಾರ ಭರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಾಳೆ ನಡೆಯುವ ಸಚಿವ ಸಂಪುಟದ ಉಪಸಮಿತಿ ಹಾಗೂ ಸಂಪುಟ ಸಭೆಯಲ್ಲಿ ಈ ಸಂಬಂಧ ಚರ್ಚೆ ಮಾಡಿ, 1300 ಕೋಟಿ ರೂ.ಗಳನ್ನು ಒದಗಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ನೀರಾವರಿ ಪ್ರದೇಶದಲ್ಲಿ ಬೆಳೆ ಹಾನಿಯಾಗಿಲ್ಲ. ಕೆಲವು ಪ್ರದೇಶಗಳಲ್ಲಷ್ಟೇ ನೀರಿಲ್ಲದೆ, ಬೆಳೆ ಒಣಗಿದೆ. ಈ ಬಗ್ಗೆ ಸರ್ಕಾರಕ್ಕೆ ಇನ್ನು ಯಾವುದೇ ವರದಿ ಬಂದಿಲ್ಲ ಎಂದರು. |
ರಾಜ್ಯಾದ್ಯಂತ ಇರುವ ಸೊಪ್ಪಿನ ಬೆಟ್ಟಗಳನ್ನು ಡೀಮ್ಡ್ ಅರಣ್ಯ ಭೂಮಿಯ ವ್ಯಾಪ್ತಿಯಿಂದ ಕೈ ಬಿಡುವ ಸಂಬಂಧ ಅಗತ್ಯ ಕಾನೂನು ಮಾಡಲಾಗುವುದು ಎಂದ ಅವರು,ಇದೇ ರೀತಿ ಬಾಕಿ ಉಳಿದಿರುವ ನಾಲ್ಕು ಲಕ್ಷ ಬಗರ್‍ಹುಕುಂ ಸಾಗುವಳಿದಾರರ ಅರ್ಜಿಗಳನ್ನು ಮಾರ್ಚ್ ಅಂತ್ಯದೊಳಗಾಗಿ ಬಗೆಹರಿಸುವುದಾಗಿ ವಿವರಿಸಿದರು. |
ಆನ್‍ಲೈನ್ ಮೂಲಕ ಎಪಿಎಲ್ ಕಾರ್ಡು ಪಡೆಯುವ ನೂತನ ಯೋಜನೆಗೆ ರಾಜ್ಯ ಸರ್ಕಾರ ಇಂದಿಲ್ಲಿ ಚಾಲನೆ ನೀಡಿದ್ದು, ಪಡಿತರ ಚೀಟಿ ಅಂಗಡಿಗಳಲ್ಲೇ ಬಿಪಿಎಲ್ ಕಾರ್ಡುಗಳ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ ಖಾದರ್ ವಿವರ ನೀಡುತ್ತ ರಾಷ್ಟ್ರದಲ್ಲೇ ಮೊದಲ ಬಾರಿಗೆ ಮನೆಯಲ್ಲೇ ಕುಳಿತು ಆನ್‍ಲೈನ್ ಮೂಲಕ ಆಧಾರ್ ಸಂಖ್ಯೆ ನಮೂದಿಸಿ, ಎಪಿಎಲ್ ಕಾರ್ಡು ಪಡೆಯುವ ಯೋಜನೆ ಜಾರಿಗೆ ಬಂದಿದೆ. ಮುಂದಿನ 15 ದಿನಗಳಲ್ಲಿ ಬಿಪಿಎಲ್ ಕಾರ್ಡು ಕೂಡಾ ಆನ್‍ಲೈನ್ ಮೂಲಕವೇ ಪಡಿತರ ಚೀಟಿ ವಿತರಿಸುವ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದರು. |
ಎಪಿಎಲ್ ಕಾರ್ಡುದಾರರು ಅರ್ಜಿ ತುಂಬಿದ ತಕ್ಷಣವೇ ತಾತ್ಕಾಲಿಕ ಪಡಿತರ ಚೀಟಿಯನ್ನು ಪಡೆದುಕೊಳ್ಳಬಹುದು. ನಂತರ 15 ದಿನಗಳಲ್ಲಿ ಅವರ ಮನೆಯ ಬಾಗಿಲಿಗೆ ಅಸಲಿ ಪಡಿತರ ಚೀಟಿ ಅಂಚೆ ಮೂಲಕ ರವಾನೆಯಾಗಲಿದೆ. ಬಿಪಿಎಲ್ ಕಾರ್ಡುಗಳನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಅರ್ಜಿ ಸಲ್ಲಿಸಿ, ಪಡೆಯಬಹುದು. 20 ರೂ ಶುಲ್ಕ ನೀಡಿ, ಬಿಪಿಎಲ್ ಕಾರ್ಡುಗೆ ಅರ್ಜಿ ಸಲ್ಲಿಸಿದರೆ 15 ದಿನಗಳಲ್ಲಿ ಕಾರ್ಡು ದೊರೆಯಲಿದೆ ಎಂದು ತಿಳಿಸಿದ್ದಾರೆ. |
Previous articleಪೆಟ್ರೋಲ್ ಸುರಿದುಕೊಂಡು ಭಗ್ಗೆಂದಿರುವ ಚರ್ಚೆ: ಕಾರ್ಡು ವ್ಯವಹಾರದ ವೆಚ್ಚ ಭರಿಸೋರು ಯಾರು? |
Next articleನೋಟು ಅಮಾನ್ಯದಿಂದ ಅರ್ಥವ್ಯವಸ್ಥೆ ಕುಸಿದಿಲ್ಲವೆಂಬುದಕ್ಕೆ ಭರಪೂರ ತೆರಿಗೆ ಸಂಗ್ರಹವೇ ಸಾಕ್ಷಿ ಎಂದ ವಿತ್ತ ಸಚಿವ ಜೇಟ್ಲಿ |
'ಚಾಲಿ ಪೋಲಿಲು' ಕಲಾವಿದರಿಗೆ ಹೊಸ ಬಿರುದು ಸನ್ಮಾನ | Tulu movie Chaali Polilu actors honoured - Kannada Filmibeat |
'ಚಾಲಿ ಪೋಲಿಲು' ಕಲಾವಿದರಿಗೆ ಹೊಸ ಬಿರುದು ಸನ್ಮಾನ |
| Published: Saturday, February 14, 2015, 17:25 [IST] |
ಈ ವರ್ಷ ಭಾರಿ ಸದ್ದು ಮಾಡಿದ ತುಳು ಚಿತ್ರ 'ಚಾಲಿ ಪೋಲಿಲು'. ಈ ಚಿತ್ರ ಶತದಿನೋತ್ಸವ ಪೂರೈಸಿರುವುದಷ್ಟೇ ಅಲ್ಲದೆ ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದೆ. ಈ ಚಿತ್ರದ ನಟರಿಗೆ ಇತ್ತೀಚೆಗೆ ಹೊಸ ಬಿರುದುಗಳನ್ನು ಪ್ರದಾನ ಮಾಡಿ ಮಂಗಳೂರಿನಲ್ಲಿ ಸನ್ಮಾನಿಸಲಾಯಿತು. |
ಜಯಕಿರಣ ಫಿಲಂಸ್ ಲಾಂಛನದಲ್ಲಿ ಪ್ರಕಾಶ್ ಪಾಂಡೇಶ್ವರ್ ನಿರ್ಮಾಣದ 'ಚಾಲಿಪೋಲಿಲು' ತುಳು ಚಿತ್ರದ ಶತದಿನೋತ್ಸವ ಸಮಾರಂಭದ ಸಂದರ್ಭದಲ್ಲಿ ಚಿತ್ರನಟ ಅರವಿಂದ ಬೋಳಾರ್ ಅವರಿಗೆ 'ತುಳುವ ಮಾಣಿಕ್ಯ', ಭೋಜರಾಜ್ ವಾಮಂಜೂರ್ ಅವರಿಗೆ 'ನವರಸ ರಾಜೆ' ಹಾಗೂ ಲಕ್ಷ್ಮಣ್ ಕುಮಾರ್ ಮಲ್ಲೂರ್ ಅವರಿಗೆ 'ರಂಗಭೂಷಣ' ಬಿರುದು ನೀಡಿ ಸನ್ಮಾನಿಸಲಾಯಿತು. [ಚಾಲಿಪೋಲಿಲು ಚಿತ್ರ ವಿಮರ್ಶೆ] |
ಡಾನ್ ಬಾಸ್ಕೋ ಸಭಾಂಗಣದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಹಿರಿಯ ಜಾನಪದ ವಿದ್ವಾಂಸ ಡಾ. ಬಿ.ಎ. ವಿವೇಕ್ ರೈ, ಡಾ. ಹಂನ್ಸರಾಜ್ ಆಳ್ವ ಅವರು ಅರವಿಂದ ಬೋಳಾರ್ ಮತ್ತು ಭೋಜರಾಜ್ ವಾಮಂಜೂರ್ ಅವರನ್ನು ಗೌರವಿಸಿದರು. ಲಕ್ಷ್ಮಣ್ ಕುಮಾರ್ ಮಲ್ಲೂರ್ ಅವರನ್ನು ಮೇಯರ್ ಮಹಾಬಲ ಮಾರ್ಲ ಸನ್ಮಾನಿಸಿದರು. |
ಸಂಗೀತ ನಿರ್ದೇಶಕ ವಿ. ಮನೋಹರ್, ದೇವದಾಸ್ ಕಾಪಿಕಾಡ್, ಉತ್ಪಲ್ ನಾಯರ್, ಕರ್ನೂರ್ ಮೋಹನ್ ರೈ, ಗಿರೀಶ್ ಶೆಟ್ಟಿ ಕಟೀಲ್, ಪ್ರಕಾಶ್ ಪಾಂಡೇಶ್ವರ್,ವೀರೇಂದ್ರ ಶೆಟ್ಟಿ ಕಾವೂರ್, ಜಗನ್ನಾಥ ಶೆಟ್ಟಿ ಬಾಳ, ಕದ್ರಿ ನವನೀತ್ ಶೆಟ್ಟಿ ಉಪಸ್ಥಿತರಿದ್ದರು. |
ಚಾಲಿಪೋಲಿಲು ಉತ್ತಮ ಗುಣಮಟ್ಟ ಮತ್ತು ಉತ್ತಮ ಕಥೆ, ಸಂದೇಶ, ಹಾಸ್ಯದಿಂದ ಎಲ್ಲ ವರ್ಗದ ಜನರನ್ನೂ ಸೆಳೆದಂಥ ಒಂದು ಉತ್ಕೃಷ್ಟ ಮಟ್ಟದ ಸಿನಿಮಾ ಆಗಿದೆ. ಮಹಿಳೆಯರೂ, ಮಕ್ಕಳನ್ನೂ ಇದು ಸಿನಿಮಾ ಮಂದಿರಕ್ಕೆ ಸೆಳೆದಿದೆ |
ಹಲವಾರು ನಟ, ನಟಿಯರ ಭವಿಷ್ಯಕ್ಕೆ ಚಾಲಿಪೋಲಿಲು ಹೊಸ ರೂಪ ನೀಡಿದೆ ಎಂಬುದು ಚಿತ್ರತಂಡಕ್ಕೆ ಹೆಮ್ಮೆಯ ಸಂಗತಿ. ಇತ್ತೀಚೆಗೆ ಮಂಗಳೂರಿನ ಫೋರಂ ಮಾಲ್ ನಲ್ಲಿ ನಡೆದ ತುಳು ಚಿತ್ರೋತ್ಸವ 2014ರ ವಿಭಾಗದಲ್ಲಿ ಚಾಲಿಪೋಲಿಲು 8 ಪ್ರಶಸ್ತಿಗಳನ್ನು ಬಾಚಿಕೊಳ್ಳುವ ಮೂಲಕ ತನ್ನ ಸಾಧನೆಗೆ ಒಂದು ಅಧಿಕೃತ ಮನ್ನಣೆಯನ್ನು ಗಳಿಸಿಕೊಂಡಿದೆ. (ಫಿಲ್ಮಿಬೀಟ್ ಕನ್ನಡ) |
ಹಾಡುಹಗಲೇ ತಲವಾರು ಹಿಡಿದು ತುಳು ಸಿನಿಮಾ ನಟನ ಗೂಂಡಾಗಿರಿ |
Read more about: tulu mangalore ತುಳು ಚಿತ್ರ ಮಂಗಳೂರು |
Tulu movie 'Chaali Polilu' actors Aravinda Bolar, Bhojaraj Vamanjoor and Lakshman Kumar Mallur honoured in Mangaluru with new title 'Tuluva Manikya', 'Navarasa Raje' and 'Rangabhushana' respectively. |
ಮಂಡ್ಯದಿಂದ ವಿಜಯಪುರದವರೆಗೆ ನಿಮ್ಮೂರಲ್ಲೊಂದು ಸುತ್ತಾಟ | CM Siddaramaiah inaugurates a programme in Mandya - Kannada Oneindia |
ಮಂಡ್ಯದಿಂದ ವಿಜಯಪುರದವರೆಗೆ ನಿಮ್ಮೂರಲ್ಲೊಂದು ಸುತ್ತಾಟ |
| Updated: Thursday, April 20, 2017, 16:57 [IST] |
ಮಂಡ್ಯ, ಏಪ್ರಿಲ್ 20: ಮಂಡ್ಯ ಜಿಲ್ಲೆಯ ಪೂರಿಗಾಲಿ ಏತ ನೀರಾವರಿ ಮತ್ತು ಹನಿ ನೀರಾವರಿ ಯೋಜನೆಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕು ಸ್ಥಾಪನೆ ನೆರವೇರಿಸಿದರು. ಕಾವೇರಿ ನೀರಾವರಿ ನಿಗಮವು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮಲ್ಲಗಹಳ್ಳಿ ಬೋರೆ ಗ್ರಾಮದಲ್ಲಿ ಈ ಕಾರ್ಯಕ್ರಮನ್ನು ಆಯೋಜಿಸಿತ್ತು |
ಮುಖ್ಯಮಂತ್ರಿಗಳ ಜೊತೆಯಲ್ಲಿ ಸಚಿವರುಗಳಾದ ಎಂ ಬಿ ಪಾಟೀಲ್, ಟಿ ಬಿ ಜಯಚಂದ್ರ, ಡಿ ಕೆ ಶಿವಕುಮಾರ್ ಮುಂತಾದವರು ಹಾಜರಿದ್ದರು. |
ತಿಪಟೂರಿನಲ್ಲಿ ನಕಲಿ ವೈದ್ಯನಿದ್ದಾನೆ ಎಚ್ಚರ! |
ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಎಂಬಿಬಿಎಸ್ ಪದವಿಯನ್ನೇ ಪಡೆಯದೆ ಕ್ಲಿನಿಕ್ ತೆರೆದು ವೈದ್ಯವೃತ್ತಿ ನಡೆಸುತ್ತಿದ್ದ ನಕಲಿ ವೈದ್ಯ ಶಂಕರಯ್ಯ ಎಂಬುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಂಘಸ್ವಾಮಿ ಹೇಳಿದ್ದಾರೆ. |
ನಕಲಿ ವೈದ್ಯ ಶಂಕರಯ್ಯ ತನ್ನ ಬಳಿ ಬರುವ ರೋಗಿಗಳಿಗೆ ಮನಸ್ಸಿಗೆ ಕಂಡ ಮಾತ್ರೆ ನೀಡಿ, ಇಂಜೆಕ್ಷನ್ ಕೊಟ್ಟು ಕಳಿಸುತ್ತಿದ್ದ. ಈತನ ಬಳಿ ಬರುತ್ತಿದ್ದ ರೋಗಿಗಳ ರೋಗ ಕಡಿಮೆಯಾಗುವ ಬದಲು ಹೊಸ ರೋಗವೇ ಹುಟ್ಟಿಕೊಳ್ಳುತ್ತಿತ್ತು. ಈ ಬಗ್ಗೆ ಕನ್ನಡ ವಾಹಿನಿಯೊಂದು ಮಾಡಿದ ವರದಿಯನ್ವಯ ಜಿಲ್ಲಾ ಆರೋಗ್ಯಾಧಿಕಾರಿಗಳು ನಕವಿ ವೈದ್ಯನ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ. |
ಶಿವಮೊಗ್ಗದ ಮೇಳಿಗೆ ಗ್ರಾಮಕ್ಕೆ ರಾಷ್ಟ್ರೀಯ ಗೌರವ |
ಅತ್ಯುತ್ತಮ ಅಭಿವೃದ್ಧಿ ಕಾರ್ಯಕ್ಕಾಗಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಳಿಗೆ ಗ್ರಾಮಕ್ಕೆ ರಾಷ್ಟ್ರೀಯ ಗೌರವ ಗ್ರಾಮ ಪುರಸ್ಕಾರ ಪಡೆದಿದೆ. ಮಲೆನಾಡಿನ ಈ ಪುಟ್ಟ ಹಳ್ಳಿ ಈ ಗೌರವ ಪಡೆದು ಉಳಿದ ಹಳ್ಳಿಗಳಿಗೆ ಮಾದರಿಯಾಗಿದೆ.[ವಿಜಯಪುರ: ಆಸ್ತಿಗಾಗಿ ಪತ್ನಿ ಮೇಲೆ ಫೈರಿಂಗ್ ಮಾಡಿದ ಮಾಜಿ ಸೈನಿಕ] |
ವಿಜಯಪುರ: ಪತ್ನಿ ಸಾವಿನಿಂದ ನೊಂದ ಪತಿ ಆತ್ಮಹತ್ಯೆ |
ಪತಿಯ ಕುಡಿತದ ಚಟದಿಂದ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಮಾಡಿಕೊಂಡ ಪತ್ನಿ ಭೀಮವ್ವಳ ಸಾವಿನ ಸುದ್ದಿ ಕೇಳಿ, ಪತಿ ಜಗದೇವ್ (36) ಎಂಬುವವರು ನೇಣಿಗೆ ಶರಣಾದ ಘಟನೆ ವಿಜಯಪುರ ಜಿಲ್ಲೆಯ ಹೊಳೆಸಂಕ ಎಂಬ ಗ್ರಾಮದಲ್ಲಿ ನಡೆದಿದೆ. ಏಪ್ರಿಲ್ 16 ರಂದು ಭೀಮವ್ವ ಇಲ್ಲಿನ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದರು.[ಗರಿಷ್ಠ ತಾಪಮಾನದಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಕಲಬುರಗಿ] |
ಉತ್ತರ ಕನ್ನಡ: ಎಸಿಬಿ ಬಲೆಗೆ ಬಿದ್ದ ಅಧಿಕಾರಿಗಳು |
ಗೇರು ಬೀಜ ಕಾರ್ಖಾನೆಗೆ ನಿರ್ಮಾಣಕ್ಕೆ ಎನ್ ಒಸಿ ನೀಡಲು 15,000 ಲಂಚ ಕೇಳಿದ ಉತ್ತರ ಕನ್ನಡ ಜಿಲ್ಲಾ ಪರಿಸರ ಅಧಿಕಾರಿ ಸುಗಂಧ ಕುರಿ, ಜಿಲ್ಲಾ ಪರಿಸರ ಸಹಾಯಕ ಅಧಿಕಾರಿ ಕುಮಾರಸ್ವಾಮಿ, ಕಚೇರಿ ಸಹಾಯಕ ಚಂದ್ರಕಾಂತ್ ಅವರು ಎಸಿಬಿ ಬಲೆಗೆ ಬಿದ್ದಿದ್ದಾರೆ. ಇಂದು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕಚೇರಿಯಲ್ಲಿ ಸಹಾಯಕನ ಮೂಲಕ ವ್ಯಕ್ತಿಯೊಬ್ಬರಿಂದ ಲಂಚ ಪಡೆಯುತ್ತಿದ್ದ ವೇಳೆ ಅವರು ಎಸಿಬಿ ಬಲೆಗೆ ಬಿದ್ದರು. |
tumakuru tiptur vijayapura shivamogga uttara kannada district news ತುಮಕೂರು ತಿಪಟೂರು ಶಿವಮೊಗ್ಗ ಉತ್ತರ ಕನ್ನಡ ಜಿಲ್ಲಾಸುದ್ದಿ mandya ಮಂಡ್ಯ |
Chief Minister of Karnataka Siddaramaiah has inaugurated a developmental programme in Mallagahalli Bore village, Malahalli taluk in Mandya district. |
ಮೈತ್ರಿ ಬಲ ಹೆಚ್ಚಿಸಿದ ರಾಹುಲ್ ಪ್ರಚಾರ | Prajavani |
ಮೈತ್ರಿ ಬಲ ಹೆಚ್ಚಿಸಿದ ರಾಹುಲ್ ಪ್ರಚಾರ |
ಪರಿವರ್ತನಾ ಸಮಾವೇಶ: ಕಾಂಗ್ರೆಸ್–ಜೆಡಿಎಸ್ ಶಕ್ತಿ ಪ್ರದರ್ಶನ |
Published: 14 ಏಪ್ರಿಲ್ 2019, 10:18 IST |
Updated: 14 ಏಪ್ರಿಲ್ 2019, 10:18 IST |
ಮೈಸೂರು: ಮತದಾನಕ್ಕೆ ಕೇವಲ ನಾಲ್ಕು ದಿನ ಬಾಕಿ ಉಳಿದಿರುವಂತೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅಬ್ಬರದ ಪ್ರಚಾರದ ಮೂಲಕ ಅಖಾಡವನ್ನು ಮತ್ತಷ್ಟು ರಂಗೇರಿಸಿದರು. ಈ ಕ್ಷೇತ್ರದ ಮೈತ್ರಿ ಅಭ್ಯರ್ಥಿಗೆ ಬಲ ತುಂಬಿದರು. |
ಕೆ.ಆರ್.ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಸಮಾವೇಶದಲ್ಲಿ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದರು. ರಾಹುಲ್ ಅವರಿಗೆ ಸಿದ್ದರಾಮಯ್ಯ, ಎಚ್.ಡಿ.ದೇವೇಗೌಡ ಸಾಥ್ ನೀಡಿದರು. |
ತಮ್ಮ ಭಾಷಣದುದ್ದಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಿಚಾಯಿಸುತ್ತಲೇ ಸಾಗಿದರು. ಮೈತ್ರಿ ಸರ್ಕಾರದ ಸಾಲಮನ್ನಾ ವಿಚಾರವನ್ನು ಪದೇಪದೇ ಪ್ರಸ್ತಾಪಿಸಿದರು. ಭಿನ್ನಾಭಿಪ್ರಾಯ ಬದಿಗಿಟ್ಟು ಮುಖಂಡರು ಒಗ್ಗಟ್ಟಾಗಿ ಮಂಡ್ಯ, ಮೈಸೂರು, ಚಾಮರಾಜನಗರ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಕಿವಿಮಾತು ಹೇಳಿದರು. |
'ಕೇಂದ್ರದಲ್ಲಿ 22 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಆ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಪಂಚಾಯಿತಿಗಳಲ್ಲಿ 10 ಲಕ್ಷ ಹುದ್ದೆ ಕಲ್ಪಿಸಲಾಗುವುದು' ಎಂದು ರಾಹುಲ್ ಘೋಷಿಸಿದರು. |
'ಕನಿಷ್ಠ ಆದಾಯ ಯೋಜನೆ (ನ್ಯಾಯ್) ಜಾರಿ ಮೂಲಕ ಬಡತನ ನೀಗಿಸಲಾಗುವುದು. ಇದೊಂದು ಬಡತನದ ಮೇಲಿನ ಸರ್ಜಿಕಲ್ ಸ್ಟ್ರೈಕ್. ಇದರಿಂದ ದೇಶದ ಅರ್ಥ ವ್ಯವಸ್ಥೆ ಸುಧಾರಿಸುವುದರ ಜೊತೆಗೆ ಕೋಟ್ಯಂತರ ಯುವಕರಿಗೆ ಉದ್ಯೋಗ ಸಿಗಲಿದೆ' ಎಂದರು. |
'₹15 ಲಕ್ಷ ಹಣವನ್ನು ಖಾತೆಗೆ ಹಾಕುವುದಾಗಿ ಮೋದಿ ಸುಳ್ಳು ಹೇಳಿದರು. ಆದರೆ, ನಾನು ಸುಳ್ಳು ಹೇಳುವುದಿಲ್ಲ. ಬದಲಾಗಿ ಐದು ವರ್ಷಗಳಲ್ಲಿ ಪ್ರತಿ ಬಡ ಕುಟುಂಬದ ಖಾತೆಗೆ ₹ 3.60 ಲಕ್ಷ ಹಣ ಹಾಕುತ್ತೇವೆ' ಎಂದು ಭರವಸೆ ನೀಡಿದರು. |
'ದೇಶದ ಸ್ವಘೋಷಿತ ಚೌಕಿದಾರನು ರೈತರು, ನಿರುದ್ಯೋಗಿಗಳ ಮನೆ ಮುಂದೆ ಹೋಗಲಿಲ್ಲ. ಬದಲಾಗಿ ಉದ್ಯಮಿಗಳು, ಶ್ರೀಮಂತರನ್ನು ಅಪ್ಪಿಕೊಂಡರು. ಒಬ್ಬ ಚೌಕಿದಾರ ದೇಶದ ಎಲ್ಲಾ ಚೌಕಿದಾರರನ್ನು ಹಾಳು ಮಾಡಿದ್ದಾರೆ' ಎಂದು ವಾಗ್ದಾಳಿ ನಡೆಸಿದರು. |
'ರೈತರ ಬೆಳೆ ವಿಮೆ ಹಣವನ್ನು ಅನಿಲ್ ಅಂಬಾನಿ ಸೇರಿದಂತೆ ದೊಡ್ಡ ದೊಡ್ಡ ಉದ್ಯಮಿಗಳಿಗೆ ಕಳಿಸಿಕೊಟ್ಟರು. ಶ್ರೀಮಂತರನ್ನು ಉದ್ಧಾರ ಮಾಡಿದರು. ಉದ್ಯಮಿಗಳು ಕೋಟ್ಯಂತರ ಸಾಲ ಮಾಡಿ ದೇಶ ಬಿಟ್ಟು ಓಡಿ ಹೋದರು. ಆದರೆ, ಸಾಲ ಮರುಪಾವತಿಸದ ರೈತರ ಮೇಲೆ ಕ್ರಿಮಿನಲ್ ಮೊಕದ್ದಮೆ ಹಾಕಿ ಜೈಲಿಗೆ ಕಳಿಸಿದರು' ಎಂದು ಟೀಕಿಸಿದರು. |
'ನಾವು ಈ ಬಾರಿ ಅಧಿಕಾರಕ್ಕೆ ಬಂದರೆ ಪ್ರತ್ಯೇಕವಾಗಿ ರೈತರ ಬಜೆಟ್ ಮಂಡಿಸಲಾಗುವುದು. ಮೊದಲೇ ಬೆಂಬಲ ಬೆಲೆ ಘೋಷಿಸಲಾಗುವುದು, ಮೊದಲೇ ಪರಿಹಾರ ಘೋಷಣೆ ಮಾಡಲಾಗುವುದು, ಎಲ್ಲೆಲ್ಲಿ ಆಹಾರ ಸಂಸ್ಕಾರ ಘಟಕ, ಉಗ್ರಾಣ ತೆರೆಯಲಾಗುವುದು ಎಂಬುದನ್ನು ಘೋಷಿಸುತ್ತೇವೆ. ರೈತರು ಸಾಲ ಮರುಪಾವತಿ ಮಾಡದಿದ್ದರೆ ನಾವು ಕ್ರಿಮಿನಲ್ ಪ್ರಕರಣ ದಾಖಲಿಸುವುದಿಲ್ಲ' ಎಂದು ಭರವಸೆ ನೀಡಿದರು. |
'ಮೋದಿ ಜಾರಿ ಮಾಡಿರುವ ಗಬ್ಬರ್ ಸಿಂಗ್ ತೆರಿಗೆ (ಜಿಎಸ್‌ಟಿ), ನೋಟು ರದ್ಧತಿಯಿಂದ ದೇಶದ ಆರ್ಥಿಕ ವ್ಯವಸ್ಥೆ ಕುಸಿದು ಹೋಗಿದೆ. ವ್ಯಾಪಾರ ನಷ್ಟವಾದವರಿಗೆ, ಉದ್ಯೋಗ ಕಳೆದುಕೊಂಡವರಿಗೆ ನ್ಯಾಯ್ ವ್ಯವಸ್ಥೆ ಮೂಲಕ ನ್ಯಾಯ ಕೊಡಿಸಲಾಗುವುದು' ಎಂದರು. ಜಿಎಸ್‌ಟಿ ಸ್ವರೂಪದಲ್ಲಿ ಬದಲಾವಣೆ ಮಾಡಲಾಗುವುದು. ಏಕರೂಪದ, ಸರಳ ತೆರಿಗೆ ವ್ಯವಸ್ಥೆ ಜಾರಿ ಮಾಡಲಾಗುವುದು ಎಂದು ಹೇಳಿದರು. |
ಜಿಲ್ಲೆಯಿಂದಲೇ ಬಿಜೆಪಿ ಗೆಲುವಿನ ಅಭಿಯಾನ | Prajavani |
ಜಿಲ್ಲೆಯಿಂದಲೇ ಬಿಜೆಪಿ ಗೆಲುವಿನ ಅಭಿಯಾನ |
Published: 03 ಡಿಸೆಂಬರ್ 2012, 13:42 IST |
Updated: 03 ಡಿಸೆಂಬರ್ 2012, 13:42 IST |
ಶಿವಮೊಗ್ಗ: ಹೋರಾಟದ ಜಿಲ್ಲೆ ಶಿವಮೊಗ್ಗದಿಂದಲೇ ಬಿಜೆಪಿ ಗೆಲುವಿನ ಅಭಿಯಾನ ಆರಂಭವಾಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅನಂತ್‌ಕುಮಾರ್ ಹೇಳಿದರು. |
ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. |
ಕಾಂಗ್ರೆಸ್ ವಿರುದ್ಧ ಬಿಜೆಪಿಯ ಹೋರಾಟ ಆರಂಭವಾಗಿದ್ದೇ ಶಿವಮೊಗ್ಗ ಜಿಲ್ಲೆಯಿಂದ. ಈ ಹೋರಾಟ ಐತಿಹಾಸಿಕವಾದದ್ದು. ಜಿಲ್ಲೆಯ ಈ ಹೋರಾಟದ ಕೆಚ್ಚನ್ನು ಇಡೀ ರಾಜ್ಯಕ್ಕೆ ಹಚ್ಚಬೇಕಾಗಿದೆ ಎಂದರು. |
ಜಿಲ್ಲೆಯಲ್ಲಿ ಎಲ್ಲಾ ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಜಿಲ್ಲೆಯ ತಾಲ್ಲೂಕು, ಹೋಬಳಿ ಕೇಂದ್ರಗಳಲ್ಲಿ ಪಕ್ಷದ ಮುಖಂಡರು ಸವಿಸ್ತಾರವಾಗಿ ಪ್ರವಾಸ ಕೈಗೊಳ್ಳುವರು ಎಂದರು. |
ಇದಕ್ಕೂ ಮೊದಲು ನಗರದ ವಾಸವಿ ವಿದ್ಯಾಲಯದಲ್ಲಿ ನಡೆದ ಬಿಜೆಪಿ ಜಿಲ್ಲಾ ನಗರ ಹಾಗೂ ಗ್ರಾಮಾಂತರ ಘಟಕ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಾವುದೋ ಆಸೆ, ಆಕಾಂಕ್ಷೆಗಳಿಂದಾಗಿ ಹಾಗೂ ವೈಯಕ್ತಿಕ ಹಿತಾಸಕ್ತಿಗಾಗಿ ಸ್ವಯಂಕೃತ ಅಪರಾಧದಿಂದ ತಪ್ಪು ನಿರ್ಧಾರ ಮಾಡಿರುವವರು ಮುಂದೆ ಪಶ್ಚಾತಾಪ ಪಡಲಿದ್ದಾರೆ ಎಂದು ಪರೋಕ್ಷವಾಗಿ ಯುಡಿಯೂರಪ್ಪ ಅವರನ್ನು ಛೇಡಿಸಿದರು. |
ಸದ್ಯ ರಾಜ್ಯದ ರಾಜಕೀಯದಲ್ಲಿ ಗ್ರಹಣದ ಛಾಯೆ ಇರಬಹುದು. ಆದರೆ, ಕಾರ್ಮೋಡವಿರಲಿ ಅಥವಾ ಉತ್ತಮ ಮೋಡವಿರಲಿ; ಅದು, ಶಾಶ್ವತವಲ್ಲ. ಗ್ರಹಣ ಸಹ ಬಿಟ್ಟು ಹೋಗುತ್ತದೆ. ರಾಜಕೀಯ ಜೀವನದಲ್ಲೂ ಏರುಪೇರುಗಳಿರುತ್ತವೆ. ಆದರೆ, ಆ ಏರುಪೇರುಗಳಲ್ಲೂ ಪಕ್ಷಕ್ಕೆ ನಿಷ್ಠರಾಗಿರುವುದು ಮುಖ್ಯ ಎಂದರು. |
ಕಾರ್ಯಕರ್ತರ ಬೆವರಿನಿಂದ, ಹೋರಾಟದಿಂದ ಪಕ್ಷಕ್ಕೆ, ನಾಯಕರಿಗೆ ಶಕ್ತಿ ಬರುತ್ತದೆ. ಬಿಜೆಪಿಗೆ 5ಕೋಟಿ ಕಾರ್ಯಕರ್ತರಿದ್ದಾರೆ. 10 ಕೋಟಿ ಅಭಿಮಾನಿಗಳಿದ್ದಾರೆ. ಇದು ತಂದೆ ಮಗನ ಪಕ್ಷವಲ್ಲ; ತಾಯಿ ಮಕ್ಕಳ ಪಕ್ಷವಲ್ಲ ಎಂದರು. |
ಪಕ್ಷದಲ್ಲೂ ಸರ್ವಾಧಿಕಾರ ಇರಬಾರದು; ದೇಶದಲ್ಲೂ ಸರ್ವಾಧಿಕಾರ ಇರಬಾರದು. ದೇಶದಲ್ಲಿ ಜನಪರ ಅಧಿಕಾರ ಮಾಡಿದ ಪಕ್ಷ ಬಿಜೆಪಿ ಮಾತ್ರ. ಸಂದಿಗ್ಧ ಪರಿಸ್ಥಿತಿಯಲ್ಲಿ ಅಧಿಕಾರ ವಹಿಸಿಕೊಂಡ ಶೆಟ್ಟರ್ ಅವರು ್ಙ 3,500 ಕೋಟಿ ಬಿಡುಗಡೆ ಮಾಡಿ ರೈತರ ಸಾಲ ಮನ್ನಾ ಮಾಡಿದ್ದಾರೆ. ಬಡ್ಡಿ ರಹಿತ ಸಾಲ ನೀಡಿದ್ದಾರೆ ಎಂದು ಶ್ಲಾಘಿಸಿದರು. |
ಬಿಜೆಪಿ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. ದೇಶದಲ್ಲೂ ಬಿಜೆಪಿ ಗಾಳಿ ಇದ್ದು, ಇತರ ರಾಜ್ಯಗಳಲ್ಲಿ ಮತ್ತು ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು. |
Subsets and Splits
No community queries yet
The top public SQL queries from the community will appear here once available.