text
stringlengths
0
61.5k
ಪ್ರಸ್ತುತ ಲಸಿಕಾ ಅಭಿಯಾನ ತೀವ್ರಗೊಳಿಸಲು ಜಿಲ್ಲಾಧಿಕಾರಿಯ ಕಟ್ಟುನಿಟ್ಟಿನ ತಾಕೀತು – Prasthutha
ಮಂಗಳೂರು: ಜಿಲ್ಲೆಯಲ್ಲಿ ಇನ್ನೂ ಕೂಡ ಕೋವಿಡ್ ವ್ಯಾಕ್ಸಿನ್ನ ಮೊದಲ ಡೋಸ್ ಶೇ. 100ರಷ್ಟು ಪೂರ್ಣಗೊಳ್ಳದ ಬಗ್ಗೆ ಮುಖ್ಯಮಂತ್ರಿಗಳು ಕಳವಳ ವ್ಯಕ್ತಪಡಿಸಿದ್ದು, ಅಧಿಕಾರಿಗಳು ಲಸಿಕೆ ನೀಡುವ ಕಾರ್ಯಕ್ಕೆ ಹೆಚ್ಚಿನ ಗಮನ ನೀಡುತ್ತಿಲ್ಲ, ತಳಮಟ್ಟದಲ್ಲಿ ಕಾರ್ಯನಿರ್ವಹಿಸುವ ಮೂಲಕ ಈ ತಿಂಗಳ ಅಂತ್ಯದೊಳಗೆ ಮೊದಲ ಡೋಸ್ ಪೂರ್ಣಗೊಳಿಸುವಂತೆ ಅವರು ಸೂಚಿಸಿದ್ದಾರೆ, ಆ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿಗಳು ಲಸಿಕಾ ಅಭಿಯಾನವನ್ನು ತೀವ್ರಗೊಳಿಸುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಕಟ್ಟುನಿಟ್ಟಿನ ತಾಕೀತು ಮಾಡಿದರು.
ಅವರು ಜ.19ರ ಬುಧವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ವರ್ಚ್ಯುವಲ್ ಮಾಧ್ಯಮದ ಮೂಲಕ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಭೆ ನಡೆಸಿದರು.
ಮೊದಲ ಡೋಸ್ ನೀಡಿಕೆಯಲ್ಲಿ ಜಿಲ್ಲೆ ಶೇ. 100ರ ಗುರಿ ತಲುಪಲೇಬೇಕು, ಅದಕ್ಕಾಗಿ ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತರು, ಬಿಲ್ ಕಲೆಕ್ಟರ್ ಗಳು, ನೀರುಗಂಟಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಜನ ಪ್ರತಿನಿಧಿಗಳು, ಆರೋಗ್ಯ ನಿರೀಕ್ಷಕರು, ವೈದ್ಯಾಧಿಕಾರಿಗಳೊಂದಿಗೆ ಸಂಬಂಧಿಸಿದವರೆಲ್ಲರೂ ಹೆಚ್ಚು ಶ್ರಮವಹಿಸಿ ಕೆಲಸ ಮಾಡಬೇಕು ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ 3-4 ಸಾವಿರ ಕೋವಿಡ್ ಪ್ರಕರಣಗಳು ವರದಿಯಾಗುವ ಸಾಧ್ಯತೆಗಳು ಇದೆ, ಆದರೆ ಗಾಬರಿ ಪಡುವ ಅಗತ್ಯವಿಲ್ಲ, ಅದಕ್ಕೆ ನಾವು ಸಿದ್ದವಾಗಬೇಕು, ಜಿಲ್ಲೆಯ ಶೇ.96% ಜನರಿಗೆ ಲಸಿಕೆ ನೀಡಿರುವ ಕಾರಣ ಕೋವಿಡ್ ಅಥವಾ ಓಮಿಕ್ರಾನ್ ಸೋಂಕು ಕಂಡುಬಂದರೂ ಅವರಲ್ಲಿ ಆಸ್ಪತ್ರೆಗೆ ದಾಖಲಾಗುವ ಗಂಭೀರತೆ ಕಡಿಮೆ ಪ್ರಮಾಣದಲ್ಲಿರುತ್ತದೆ, ಕೋಂಆರ್ಬಿಟ್ ಗಳಿಗೂ ಲಸಿಕೆ ಅತ್ಯಂತ್ಯ ಮುಖ್ಯವಾಗಿದೆ, ವ್ಯಾಕ್ಸಿನ್ ಪಡೆಯದೇ ಬಾಕಿ ಉಳಿದ ಶೇ.4ರಷ್ಟು ಜನರೇ ಕೋವಿಡ್ ಹಾಗೂ ಅದರ ರೂಪಾಂತರಿ ಓಮಿಕ್ರಾನ್ನಿಂದ ಬಾಧೆಗೆ ಒಳಗಾಗಿ ತೊಂದರೆ ಅನುಭವಿಸುತ್ತಾರೆ, ಆದುದರಿಂದ ವೈಯಕ್ತಿಕವಾಗಿ ವ್ಯಾಕ್ಸಿನ್ ನೀಡಲು ಹೆಚ್ಚಿನ ಗಮನ ಹರಿಸಬೇಕು, ವ್ಯಾಕ್ಸಿನ್ ಪಡೆಯದವರನ್ನು ಪತ್ತೆ ಹಚ್ಚಲು ಪ್ರತಿ ಮನೆ ಮನೆಯನ್ನೂ ಪರಿಶೀಲಿಸಬೇಕು. ಜನರಿಗೆ ಅರ್ಥವಾಗುವ ರೀತಿಯಲ್ಲಿ ಜಾಗೃತಿ ಮೂಡಿಸಿ, ಲಸಿಕೆ ಕೊಡಿಸಬೇಕು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಲಸಿಕೆ ಪಡೆಯದವರನ್ನು ಗುರುತಿಸಿ ಅವರಿಗೆ ವ್ಯಾಕ್ಸಿನ್ ನೀಡುವ ಮೂಲಕ ಶೇ. 100ರಷ್ಟು ಗುರಿ ಸಾಧಿಸಬೇಕು, ಇದಕ್ಕಾಗಿ ಫೀಲ್ಡ್ಗೆ ಇಳಿದು ಕೆಲಸ ಮಾಡಬೇಕು, ಇಲ್ಲದಿದ್ದಲ್ಲೀ ನಿದ್ಯಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಲಸಿಕೆ ಪಡೆಯಲು ಹೆಚ್ಚಿನ ಪ್ರತಿರೋಧ ವ್ಯಕ್ತವಾಗುವೆಡೆ ತಾವೇ ಖುದ್ದಾಗಿ ಭೇಟಿ ನೀಡುವುದಾಗಿ ತಿಳಿಸಿದ ಜಿಲ್ಲಾಧಿಕಾರಿಯವರು, 15 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಯುದ್ದೋಪಾದಿಯಲ್ಲಿ ಲಸಿಕೆ ಕೊಡಿಸಬೇಕು. ಜನ ಪ್ರತಿನಿಧಿಗಳು ಈ ಅಭಿಯಾನಕ್ಕೆ ಕೈ ಜೋಡಿಸಬೇಕು, ಕ್ಷೇತ್ರದ ಅಭಿವೃದ್ಧಿಗೆ ಆಯಾ ಪ್ರದೇಶವಾರು ಸಂಪೂರ್ಣ ಲಸಿಕೆ ಕೊಡಿಸುವುದು ಸಂಬಂಧಿಸಿದ ಜನಪ್ರತಿನಿಧಿಗಳ ಜವಬ್ದಾರಿಯಾಗಿದೆ, ಆಯಾ ಪ್ರದೇಶಗಳ ಧಾರ್ಮಿಕ ಮುಖಂಡರನ್ನು ಈ ಕಾರ್ಯಕ್ಕೆ ಆಹ್ವಾನಿಸಬೇಕು. ತಾಲೂಕು ಮಟ್ಟದಲ್ಲಿ ಈ ಪ್ರಕ್ರಿಯೆಗೆ ವಾಹನಗಳ ಅಗತ್ಯವಿದ್ದರೆ ತಹಶಿಲ್ದಾರರ ಮೂಲಕ ಪಡೆದುಕೊಳ್ಳುವಂತೆ ಅವರು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿದ್ದರು. ಜಿಲ್ಲೆಯ ಸಹಾಯಕ ಆಯುಕ್ತರು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಚ್ಯುವಲ್ ಮಾಧ್ಯಮದ ಮೂಲಕ ಭಾಗವಹಿಸಿದ್ದರು.
ಮನ್ ಮುಲ್ ಚುನಾವಣೆ; ಜೆಡಿಎಸ್ ಗೆ ಅದೃಷ್ಟ, ಬಿಜೆಪಿಗೆ ಮುಖಭಂಗ | JDS Wins In Manmul Election - Kannada Oneindia
ಮಂಡ್ಯ, ಅಕ್ಟೋಬರ್ 3: ಮಂಡ್ಯ ಜಿಲ್ಲಾ ಸಹಕಾರ ಹಾಲು ಒಕ್ಕೂಟ ಸಂಘದ (ಮನ್ ಮುಲ್) ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಮನ್ ಮುಲ್ ಜೆಡಿಎಸ್ ಪಾಲಾಗಿದೆ. ಜೆಡಿಎಸ್ ‌ಗೆ ಅದೃಷ್ಟ ಒಲಿದಿದ್ದು, ಬಿಜೆಪಿಗೆ ಭಾರೀ ಮುಖಭಂಗವಾಗಿದೆ.
ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ಬೆಂಬಲ ವಿಚಾರ: ಕಾಂಗ್ರೆಸ್ ಒಳಗೇ ಕಿತ್ತಾಟ
ಲಾಟರಿ ಮೂಲಕ‌ ಜೆಡಿಎಸ್ ಮನ್ ಮುಲ್ ಗದ್ದುಗೆ ಹಿಡಿದಿದ್ದು, ಅದೃಷ್ಟ ಲಕ್ಷ್ಮೀ ಜೆಡಿಎಸ್ ಕೈಹಿಡಿದಿದೆ. ಚಲಾವಣೆಯಾಗಿದ್ದ 16 ಮತಗಳಲ್ಲಿ 8-8 ಸಮಬಲ ಸಾಧಿಸಿದ್ದವು. ಸಮಬಲ ಸಾಧಿಸಿದ್ದ ಜೆಡಿಎಸ್-ಬಿಜೆಪಿ ಅಧ್ಯಕ್ಷ ಸ್ಥಾನದ ಸ್ಪರ್ಧಿಗಳನ್ನು ಲಾಟರಿ ಎತ್ತುವ ಮೂಲಕ ಆಯ್ಕೆ ಮಾಡಲಾಗಿದ್ದು, ಇದರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ‌ನ ರಾಮಚಂದ್ರು ಆಯ್ಕೆಯಾಗಿದ್ದಾರೆ.
ಬಿಜೆಪಿ ಹಿನ್ನಡೆಗೆ ಅಧಿಕಾರಿಯೊಬ್ಬರ ಕ್ರಾಸ್ ಓಟಿಂಗ್ ಶಂಕೆ ವ್ಯಕ್ತವಾಗಿದೆ. ಜೆಡಿಎಸ್ ಬಿಟ್ಟು ಬಿಜೆಪಿ ಸೇರಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಸ್‌ಪಿ ಸ್ವಾಮಿಗೆ ಮುಖಭಂಗವಾಗಿದೆ. ಉಪಾಧ್ಯಕ್ಷ ಸ್ಥಾನ ಕೂಡ ಜೆಡಿಎಸ್ ಗೆ ಲಭಿಸಿದೆ. 9 ಮತ ಪಡೆದು ರಘು ನಂದನ್ ಉಪಾಧ್ಯಕ್ಷ ಗದ್ದುಗೆ ಏರಿದ್ದಾರೆ. ಡಿಸಿಎಂ ಅಶ್ವತ್ ನಾರಾಯಣ, ಮಾಜಿ ಸಚಿವ ಚಲುವರಾಯಸ್ವಾಮಿಗೆ ತೀವ್ರ ಮುಖಭಂಗವಾಗಿದ್ದು, ಜೆಡಿಎಸ್ ಗೆ ಅಧಿಕಾರ ತಪ್ಪಿಸಲು ಉಭಯ ನಾಯಕರು ಕಸರತ್ತು ನಡೆಸಿದ್ದರು.
election jds bjp mandya ಚುನಾವಣೆ ಜೆಡಿಎಸ್ ಬಿಜೆಪಿ ಮಂಡ್ಯ
The results of the election of the president and Vice President for Mandya District Cooperative Milk Federation Association (Mann Mul) have been announced. JDS win this election by lottery.
ನಮ್ಮ ಬಗ್ಗೆ - ಶೆಂಗ್ಡೆ ವೇರ್ -ರೆಸಿಸ್ಟೆಂಟ್ ಮೆಟೀರಿಯಲ್ಸ್ CO., ಲಿಮಿಟೆಡ್.
1970 ರಲ್ಲಿ ಸ್ಥಾಪನೆಯಾದ ಶುವಾಂಗ್‌ಫೆಂಗ್ ಶೆಂಗ್ಡೆನಿರೋಧಕ ವಸ್ತು ಕಂ, ಲಿಮಿಟೆಡ್ ವಿವಿಧ ಉನ್ನತ ಮ್ಯಾಂಗನೀಸ್ ಉಡುಗೆ ನಿರೋಧಕ ವಸ್ತುಗಳಿಗೆ ವೃತ್ತಿಪರ ಉತ್ಪಾದಕ. ಉದಾಹರಣೆಗೆ ದವಡೆ ಕ್ರಷರ್ ಪ್ಲೇಟ್, ಕೋನ್ ಕ್ರಷರ್ ವೇರ್ ಪಾರ್ಟ್, ಇಂಪ್ಯಾಕ್ಟ್ ಕ್ರಷರ್ ವೇರ್ ಪಾರ್ಟ್, ಹ್ಯಾಮರ್ ಕ್ರಷರ್ ವೇರ್ ಪಾರ್ಟ್.
ಹುನಾನ್‌ನ ಶುವಾಂಗ್‌ಫೆಂಗ್‌ನಲ್ಲಿರುವ ಶೆಂಗ್ಡೆ 9000 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದೆ, 20 ಕ್ಕೂ ಹೆಚ್ಚು ವೃತ್ತಿಪರರು ಮತ್ತು ತಾಂತ್ರಿಕ ಸಿಬ್ಬಂದಿಗಳು ಸೇರಿದಂತೆ 200 ಕ್ಕೂ ಹೆಚ್ಚು ಕಾರ್ಮಿಕರು. ಶೆಂಗ್ಡೆ ಈಗಾಗಲೇ ರಾಷ್ಟ್ರೀಯ ವಿಶೇಷ ಉತ್ಪಾದನಾ ಪರವಾನಗಿಯನ್ನು ಪಡೆದಿದ್ದಾರೆ, ZGMn13Cr2 ಅನ್ನು ಉತ್ಪಾದಿಸಬಹುದು, ಇದು ಗಣಿ, ಲೋಹಶಾಸ್ತ್ರ, ಜಲ್ಲಿ, ಹೂಳೆತ್ತುವಿಕೆಯಂತಹ ವಿವಿಧ ಉತ್ಪಾದನಾ ಸಾಧನಗಳಿಗೆ ಅತ್ಯುತ್ತಮ ಉಡುಗೆ ಭಾಗವಾಗಿದೆ.
ವ್ಯಾಪಕ ಶ್ರೇಣಿಯ ಉತ್ಪನ್ನಗಳ ಕಟ್ಟುನಿಟ್ಟಿನ ಬೇಡಿಕೆಯ ಅಗತ್ಯತೆಗಳನ್ನು ಪೂರೈಸುವಾಗ ನಮ್ಮ ಗ್ರಾಹಕರಿಗೆ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುವುದು, ಮಾರುಕಟ್ಟೆಯಲ್ಲಿ ಉತ್ಪನ್ನಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವುದು, ಒಟ್ಟಿಗೆ ಉತ್ತಮ ಲಾಭ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸುವುದು.
ನಮ್ಮ ವಾರ್ಷಿಕ ಉತ್ಪಾದನಾ ಸಾಮರ್ಥ್ಯವು 25,000 ಟನ್ನುಗಳನ್ನು ಮೀರಿದೆ, ಮತ್ತು ನಮ್ಮ ಉತ್ಪಾದನೆ ಮತ್ತು ಮಾರಾಟದ ಪ್ರಮಾಣವು ದೇಶೀಯ ಕೌಂಟರ್ಪಾರ್ಟ್ಸ್ ಮತ್ತು ಪಶ್ಚಿಮದಲ್ಲಿ ಮುಂಚೂಣಿಯಲ್ಲಿದೆ. 40 ವರ್ಷಗಳಿಗೂ ಹೆಚ್ಚು ಕಾಲ, ನಾವು ನಮ್ಮ ಗ್ರಾಹಕರನ್ನು ನಮ್ಮ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳ ಮೇಲೆ ಗೆದ್ದಿದ್ದೇವೆ. -ಮುಖ್ಯವಾಗಿ ಯುನೈಟೆಡ್ ಸ್ಟೇಟ್ಸ್, ಕೆನಡಾ, ಬ್ರಿಟನ್, ಜರ್ಮನಿ, ನೆದರ್ಲ್ಯಾಂಡ್ಸ್, ಸ್ವೀಡನ್, ಆಸ್ಟ್ರೇಲಿಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಸ್ಪೇನ್, ಜಪಾನ್, ಬ್ರೆಜಿಲ್ ಮತ್ತು ಇತರ ದೇಶಗಳು ಸೇರಿದಂತೆ ಗುಣಮಟ್ಟದ ಉತ್ಪನ್ನಗಳು. ಮತ್ತು ನಾವು ಇಂಗ್ಲೆಂಡ್, ಜರ್ಮನಿ ಮೊದಲಾದ ಕೆಲವು ದೊಡ್ಡ ಉದ್ಯಮಗಳಿಗೆ ಸತತವಾಗಿ ಉತ್ತಮ ಗುಣಮಟ್ಟದ ಪರಿಕರಗಳ ಪೂರೈಕೆದಾರರಾಗಿದ್ದೇವೆ ಮತ್ತು ನಮ್ಮ ನಿಷ್ಠಾವಂತ ಮತ್ತು ದಕ್ಷ ಸೇವೆಗಳು ದೇಶ ಮತ್ತು ವಿದೇಶಗಳಲ್ಲಿ ಬಳಕೆದಾರರಿಂದ ಹೆಚ್ಚಿನ ಪ್ರಶಂಸೆ ಗಳಿಸಿವೆ! ನಾವು ಅಭಿವೃದ್ಧಿ ಪ್ರವೃತ್ತಿಯನ್ನು ಗ್ರಹಿಸುತ್ತೇವೆ, ಬಳಕೆದಾರರ ಅಗತ್ಯಗಳನ್ನು ಪೂರೈಸಲು ಉದ್ಯಮದ ಅಗತ್ಯಗಳಿಗೆ ಅನುಗುಣವಾಗಿರುತ್ತೇವೆ ಮತ್ತು "ಕೈಗಾರಿಕಾ-ಪ್ರಮುಖ, ಸಮಗ್ರತೆ-ಮೊದಲ, ಪ್ರವರ್ತಕ ಮತ್ತು ನವೀನ" ತತ್ವಕ್ಕೆ ಬದ್ಧರಾಗಿ ನಿರಂತರವಾಗಿ ಹೊಸ ಏರಿಕೆಗಳನ್ನು ಬಯಸುತ್ತೇವೆ. 2011 ರಲ್ಲಿ, ನಾವು ಪರಿಸರ ಸ್ನೇಹಿ, ಕಡಿಮೆ ಕಾರ್ಬನ್ ಮತ್ತು ಹೈಟೆಕ್ ವಿ-ಕಾಸ್ಟಿಂಗ್ ಉತ್ಪಾದನಾ ಮಾರ್ಗವನ್ನು ಪರಿಚಯಿಸಿದ್ದೇವೆ, ಇದು ನಮ್ಮ ಕಂಪನಿಯು ತಂತ್ರಜ್ಞಾನ, ಉಪಕರಣ, ಉತ್ಪಾದನಾ ಸಾಮರ್ಥ್ಯ, ಗುಣಮಟ್ಟ ಮತ್ತು ಸೇವೆಯಲ್ಲಿ ಗುಣಾತ್ಮಕ ಏರಿಕೆಯನ್ನು ಸಾಧಿಸುವಂತೆ ಮಾಡಿತು.
ಸಹಕಾರ ಮತ್ತು ಗೆಲುವು-ಗೆಲುವಿನ ಅಭಿವೃದ್ಧಿಗೆ ದೇಶ-ವಿದೇಶಗಳಲ್ಲಿ ದೂರದೃಷ್ಟಿಯ ಜನರನ್ನು ನಾವು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ!
ಜೀಕೆ ಮಾಸ್ತರರ ಪ್ರಣಯ ಪ್ರಸಂಗ: ೫ – ಕಣಜ
ಜೀಕೆ ಮಾಸ್ತರರ ಪ್ರಣಯ ಪ್ರಸಂಗ: ೫
Home/ಕನ್ನಡ/ಜ್ಞಾನಪೀಠ ಪುರಸ್ಕೃತರ ಕೃತಿ ಸಂಚಯ/ಡಾ. ಚಂದ್ರಶೇಖರ ಕಂಬಾರ/ಜೀಕೆ ಮಾಸ್ತರರ ಪ್ರಣಯ ಪ್ರಸಂಗ: ೫
ಅದಾಗಿ ಐದಾರು ದಿನ ಮಹತ್ವದ್ದೇನೂ ಘಟಿಸಲಿಲ್ಲ. ದಶಮಾನೋತ್ಸವದ ತಯಾರಿ ತನ್ನ ಪಾಡಿಗೆ ತಾನು ನಡೆಯುತ್ತಿತ್ತು. ಎಲ್ಲರಿಗೂ ಕೆಲಸ ಹಂಚಿದ್ದರಿಂದ ಅವರವರು ತಂತಮ್ಮ ಕೆಲಸ ನೋಡಿಕೊಳ್ಳುತ್ತಿದ್ದರು. ಮೈಸೂರಿನ ಸಾಹಿತಿಗಳೊಬ್ಬರು ಮುಖ್ಯ ಅತಿಥಿಗಳಾಗಿ ಬರಲು ಒಪ್ಪಿದ್ದು ಅವರನ್ನು ಕರೆತರು, ಇಳಿಸುವ ಏರ್ಪಾಡುಗಳಾಗಿದ್ದವು. ಯಾರು ಸ್ವಾಗತಿಸಬೇಕು, ಯಾರು ವರದಿವಾಚನ ಮಾಡಬೇಕು, ಯಾರು ವಂದನಾರ್ಪಣೆ ಮಾಡಬೇಕು – ಇವೆಲ್ಲ ನಿರ್ಧಾರವಾಗಿಬಿಟ್ಟಿದ್ದವು. ಅಂದಿನ ಮೀಟಿಂಗಿನಿಂದ ಅಸಮಾಧಾನಗೊಂಡು ಹೋದ ಗಿರೆಪ್ಪನೂ ಜೀಕೆ ಮಾಸ್ತರರನ್ನು ಎದುರುಹಾಕಿಕೊಳ್ಳದೆ ದಾರಿಗೆ ಬಂದಿದ್ದ. ಈ ಮಧ್ಯೆ ಜೀಕೆ ಮೂರು ಬಾರಿ ರೋಜಾಳ ಕ್ಲಾಸಿಗೆ ಹೋಗಿದ್ದರು. ಮೊದಲೆರಡು ದಿನ ಅವಳು ಕ್ಲಾಸಿಗೆ ಬಂದಿರಲಿಲ್ಲ. ಮೂರನೇ ದಿನ ಬಂದಿದ್ದಳಾದರೂ ನಾಚಿಕೊಂಡು ಹುಡುಗಿಯರಲ್ಲಿ ಹುದುಗಿಕೊಂಡೇ ಪಾಠ ಕೇಳಿದ್ದಳು. ಎಲ್ಲರೆದುರಿನಲ್ಲಿ, ಅದೂ ಪ್ರಿನ್ಸಿಪಾಲರ ಕ್ಲಾಸಿನಲ್ಲಿ ಮೂರ್ಛೆ ಬಿದ್ದುದರಿಂದ ಹುಡುಗಿ ನಾಚಿ ನೀರಾಗಿರಲೂ ಸಾಕು. ಅವಳ ಸಂಕೋಚವನ್ನಾದರೂ ದೂರ ಮಾಡುವುದು ಒಳ್ಳೆಯದೆಂದು ಏನಿಲ್ಲದಿದ್ದರೂ ಕರೆದು ಆರೋಗ್ಯ ವಿಚಾರಿಸೋಣವೆಂದು ಲೇಡೀಸ್ ರೂಮಿಗೆ ಸಿಂಗಪ್ಪನನ್ನು ಕಳಿಸಿದರು.
ಈ ಹುಡುಗಿ ಛೇಂಬರಿಗೆ ಬಂದಾಗ ಇವರ ಲೆಕ್ಕಾಚಾರ ತಲೆಕೆಳಗಾದದ್ದು ನಿಜ. ನಾಚಿಕೆಯಾಗಲಿ ಭಯವಾಗಲಿ ಅವಳ ಮುಖದಲ್ಲಿರಲೇ ಇಲ್ಲ. ಮಾತ್ರವಲ್ಲ, ಒಳಗೊಳಗೇ ನಗುತ್ತಿದ್ದಳೆಂದು ಮತ್ತು ತುಳುಕುವ ಆ ನಗೆಯನ್ನು ಪ್ರಯತ್ನಪೂರ್ವಕ ನಿಯಂತ್ರಿಸಿದ್ದಾಳೆಂದು ಅವಳ ಕಣ್ಣು ತುಟಿಗಳಿಂದ ತಿಳಿಯುತ್ತಿತ್ತು. ಅವಳು ಧರಿಸಿದ್ದ ಉಡುಪಿನಲ್ಲಿ ಕೂಡ ಒಂದು ಸ್ಪಷ್ಟವಾದ ಉದ್ದೇಶವಿದ್ದಂತಿತ್ತು. ತನ್ನ ಅಂಗಸೌಷ್ಠವದ ಕೆಲವು ಉದ್ರೇಕಕಾರಿ ಪ್ರದೇಶಗಳ ಮೇಲೆ ಒತ್ತುಕೊಡುವುದಕ್ಕಾಗಿ, ಅಂದರೆ ಅವು ಒಡೆದು ಕಾಣುವುದಕ್ಕಾಗಿ ಜೀನ್ಸ್ ಪ್ಯಾಂಟು ಮತ್ತು ಟೀಷರ್ಟು ಧರಿಸಿದ್ದಳು. ನಿಷ್ಕಾಳಜಿಯಿಂದ ಇಲ್ಲವೆ ಅಂಕ ಮೀರಿ ಎಂಬಂತೆ ಕೂದಲು ಕೆನ್ನೆ ಹಣೆಗಳ ಮೇಲೆ ಸ್ವಚ್ಛಂದವಾಗಿ ಹರಿದಾಡುತ್ತಿದ್ದು ಅದನ್ನು ಎಡಗೈ ಕಿರಿಬೆರಳಿನಿಂದ ಹಿಂದೆ ಸರಿಸಿಕೊಳ್ಳುವಲ್ಲಿ ಒಂದು ಮಾದ ಸ್ಟೈಲಿತ್ತು.
ಭಾವೀ ಪ್ರಜೆಗಳ ಬಗ್ಗೆ ಜೀಕೆ ಅಸಮಾಧಾನಗೊಂಡರು. ಇನ್ನು ಮೇಲೆ ದೇಶ ಹಾಳಾಗುವುದರ ಬಗ್ಗೆ ಅವರಿಗೆ ಸಂಶಯವೇ ಉಳಿಯಲಿಲ್ಲ. ಅವರ ಹಳೆ ಥಿಯರಿ ಈಗ ಗೆಲುವಾಯಿತು. ಕೆಳಜಾತಿ ಮುಂಡೇದು. ಒಂದು ನೀತಿಯೇ, ಒಂದು ನಿಯಮವೇ? ಚಿಗುರು ಮೊಲೆ ಮೂಡಿದರೆ ಎದುರು ಕಾಣುವುದಿಲ್ಲ; ಇನ್ನು ಇಷ್ಟು ದೊಡ್ಡ ಮೊಲೆ ಮೂಡಿದರೆ ನನ್ನಂಥವನೇನು, ಇಡೀ ದೇಶವೇ ಕಾಣಿಸೋದಿಲ್ಲ. ಎದುರು ನಿಂತವಳಿಗೆ ಏನಾದರೂ ಹೇಳಬೇಲ್ಲ. ಮೊದಲಿನ ಸಹಾನುಭೂತಿಯ ಮಾತುಗಳು ಹಾರಿಹೋಗಿದ್ದವು. ಹಾಗೇ ಕಳಿಸಿದರೆ ಯಾಕೆ ಕರೆಸಿದ್ದು ಎಂದು ಸಂಶಯ ಬರಬಹುದಲ್ಲ. ತಾತ್ಸಾರಭರಿತ ವ್ಯಂಗ್ಯದ ದನಿಯಲ್ಲಿ 'ಕೂತುಕೋ' ಎಂದರು. ಕೂತಳು. 'ಛೇ, ಕೂರು ಎಂದೊಡನೆ ಕೂತೇಬಿಡೋದೆ? ಅದೂ ಹಿರಿಯರೆದುರಿಗೆ! ಅದೇ ಅದೇ, ಹೀನ ಜಾತಿಗೆ ಹೇಳಿ ಮಾತಡಿಸಿದ್ದಲ್ಲ ಸಂಸ್ಕೃತಿ ಎಂದರೆ, ಅದಕ್ಕೆ ಸಂಸ್ಕಾರ ಬೇಕು' – ಎಂದೇನೋ ಮನಸ್ಸಿನಲ್ಲಿ ವಟಗುಟ್ಟಿ,
'ಈಗ ಹೆಂಗ ಆರಾಮಿದ್ದಿ ಹೌಂದಲ್ಲೋ?' ಎಂದರು.
'ಹೂಂನ್ರಿ ಸರ್.'
ನಿಜ ಹೇಳಬೇಕೆಂದರೆ ಜೀಕೆ ಮಾಸ್ತರರಿಗೆ ಮಾತಾಡುವ ಮನಸ್ಸೇ ಇರಲಿಲ್ಲ. ನಿರಾಶೆಯಾಗಿತ್ತು. ಅವಳೊಬ್ಬ ಕೇವಲ ಹೂ ಮುಗ್ಧೆ ಎಂದು ಕಲ್ಪಿಸಿಕೊಂಡು ಸಮಾಧಾನ ಮಾಡೋಣವೆಂದು ಕರೆಸಿದರೆ ಇಲ್ಲಿ ಹಾವಭಾವ ಉಡುಪುಗಳಲ್ಲಿ ಹರೆಯದ ಚೂರಿಗಳನ್ನಿಟ್ಟುಕೊಂಡ ಪರಿಣತ ವಯಸ್ಸಿನ ಚದುರಿ ನಿಂತಿದ್ದಳು. ಇಂಥವಳು ಗಿರೆಪ್ಪನಂಥ ಕೋತಿಗೆ ಒಲಿಯುವಳೆ? ಆದರೆ ಆ ಕೋತಿ ಇವಳನ್ನು ಕಂಡು ಹುಚ್ಚನಾದದ್ದು ಹೆಚ್ಚಲ್ಲ – ಎನ್ನಿಸಿತು. ಆಯಿತು. ಏನಾದರೂ ಮಾತಾಡಿ ಅವಳನ್ನೀಗ ಸಾಗುಹಾಕಬೇಕಲ್ಲ.
'ಆಯಿತು, ಇನ್ನಮ್ಯಾಲ ಹಂಗೆಲ್ಲ ಕ್ಲಾಸಿನಾಗ ಮೂರ್ಛೆ ಗೀರ್ಛೆ ಬೀಳಬ್ಯಾಡ' ಎಂದರು.
ಹುಡುಗಿ ಫಕ್ಕನೆ ಮಾದಕ ನಗೆ ನಕ್ಕು, ನಕ್ಕದ್ದು ತಪ್ಪಾಯಿತೇನೋ ಎಂಬಂತೆ ಕೈಯಿಂದ ಹೊಳೆವ ಹಲ್ಲುಗಳನ್ನು ಮುಚ್ಚಿಕೊಂಡು ಬಟ್ಟಲುಗಣ್ಣುಗಳ ನೇರದೃಷ್ಟಿಯೊಂದನ್ನು ಜೀಕೆ ಮಾಸ್ತರರತ್ತ ಬೀರಿ ಹೊರಟುಹೋದಳು. ನಕ್ಕಳಲ್ಲ ಹಲ್ಲು ಫಳ್ಳನೇ ಫ್ಲಾಷ್ ಲೈಟಿನಂತೆ ಹೊಳೆದು ಜೀಕೆ ಮಾಸ್ತರರ ಹೃದಯ ಅವಳ ಭಂಗಿಯನ್ನು ಚೂಟಿ ಕೆಮರಾದಂತೆ ಸೆರೆ ಹಿಡಿದುಕೊಂಡಿತು. ಅನೀರೀಕ್ಷಿತವಾಗಿ ಮೈಕಾವೇರಿ ತತ್ತರಿಸಿ ತನ್ನ ಜೀವಮಾನದಲ್ಲಿ ಎಂದೆದೂ ಅನುಭವಿಸಿಲ್ಲದಂಥ ಬಿಸಿನೀರಿನ ಪ್ರವಾಹದಲ್ಲಿ ತಾನು ಕೊಚ್ಚಿಹೋಗುತ್ತಿರುವಂತೆ, ಬಚಾವಾಗಲಿಕ್ಕೆ ತನ್ನಲ್ಲಿ ಶಕ್ತಿಯೇ ಇಲ್ಲದಂತೆ ಅನ್ನಿಸಿ ಹತಾಶರಾಗಿ ಹಾಗೆಯೇ ಹಿಂದಕ್ಕೆ ಒರಗಿದರು.
ಯಾರೋ ಸಾಮಾನ್ಯರಾದರೆ ಅದು ಬೇರೆ ಮಾತು. ಜೀಕೆಯಂಥವರು ವಿವಶರಾಗುವುದು ನಿಜವಾಗಿಯೂ ಆಶ್ಚರ್ಯಕರವೇ. ಕಾರಣ ತಿಳಿಯಲು ಅವರು ಪಟ್ಟು ಹಿಡಿದು ಕೂತುಬಿಟ್ಟರು. ಅವಳ ಆಕರ್ಷಣೆಗೆ ಒಳಗಾದೆನೆ? ಇರಲಾರದು. ತನ್ನ ಈವರೆಗಿನ ಅನುಭವದಲ್ಲಿ ಎಷ್ಟು ಚೆಲುವೆರನ್ನ, ಎಷ್ಟು ಜನ ವಿದ್ಯಾರ್ಥಿನಿಯರನ್ನು ಕಂಡಿಲ್ಲ? ಅವರಲ್ಲಿಲ್ಲದ ವಿಶೇಷ ಇವಳಲ್ಲೇನಿದೆ? ಅಥವಾ ಅವಳೇ ತನ್ನ ಮೇಲೆ ಮೋಡಿ ಮಾಡಿದಳೆ? ಅದೂ ಇರಲಾರದು, ಯಾಕೆಂದರೆ ಅವಳು ಮಾಡಿದ್ದೇನು? ತನ್ನ ಮಾತಿಗೆ ನಕ್ಕಳಷ್ಟೆ. 'ಇನ್ನು ಮೇಲೆ ಮೂರ್ಛೆ ಬೀಳಬೇಡ' ಎಂದು ಹೇಳಿದ್ದರೆ ಎದುರಿಗಿದ್ದ ಯಾರೂ ನಗಲೇಬೇಕಾದ ಮಾತು. ಅಷ್ಟಕೆ ಅಲ್ಲಸಲ್ಲದ ಅರ್ಥಹಚ್ಚಿ ತಾನು ಗಡಿಬಿಡಿಗೊಂಡಿದ್ದು ತಪ್ಪು – ಎಂದೇ ತೀರ್ಮಾನಿಸಿದರು. ಹೀಗೆ ಎಷ್ಟು ಹೊತ್ತು ಕೂತಿದ್ದರೋ, ಅಷ್ಟರಲ್ಲಿ ದೂರದ ಕ್ಲಾಸೊಂದರಲ್ಲಿ ಗಲಾಟೆಯಾಗುತ್ತಿರುವಂತೆ ಕೇಳಿಸಿತು. ಗಡಬಡಿಸಿ ಎದ್ದು ಹೊರಗೆ ಬಂದರು.
ಮೂಲೆಯ ಕ್ಲಾಸ್ ರೂಮಿನಲ್ಲಿ ಹುಡುಗಿಯರು ಅರಚುತ್ತಿದ್ದರು. ಹುಡುಗರು ಹೋ ಎಂದು ಕೇಕೆ ಹಾಕಿ ಚಪ್ಪಾಳೆ ತಟ್ಟಿ ನಗುತ್ತಿದ್ದರು. ಅಕ್ಕಪಕ್ಕದ ಕ್ಲಾಸಿನಿಂದಲೂ ವಿದ್ಯಾರ್ಥಿಗಳು ಏನಾಯಿತೆಂದು ನೋಡಬರುತ್ತಿದ್ದಂತೆ ಜೀಕೆ ತಡಮಾಡದೆ ದಾಪುಗಾಲು ಹಾಕುತ್ತ ಆ ಕಡೆ ನಡೆದರು. ಒಂದರೆಡು ಹೆಜ್ಜೆ ಇಡುವಷ್ಟರಲ್ಲಿ ಎಂಟಿ ಪುಟಿದು ಹಿಂದಕ್ಕೆ ನೆಗೆವ ಚೆಂಡಿನಂತೆ ಕ್ಲಾಸ್ ರೂಮಿನಿಂದ ಸಿಡಿದು ಹುಚ್ಚರ ಹಾಗೆ ಓಡುತ್ತ ತನ್ನ ಕಡೆ ಬಂದ. ಹಾಸ್ಯಾಸ್ಪದನಾಗಿದ್ದ ಅವನನ್ನು ನೋಡಲು ಕೆಲವು ಹುಡುಗರೂ ಹೊರಬಂದರು. ಅಷ್ಟರಲ್ಲಿ ಜೀಕೆ ತಮ್ಮ ಕಡೆಗೇ ಬರುತ್ತಿರುವುದೂ ಗೊತ್ತಾದೊಡನೆ ಒಲ್ಲದ ಮನಸ್ಸಿನಿಂದ ತಮ್ಮ ತಮ್ಮ ಕ್ಲಾಸುಗಳಿಗೆ ನುಗ್ಗಿದರು. ಎಂಟಿ ಓಡಿಬಂದವನೇ 'ಸರ್!' ಎಂದ. ಏನು ಎಂಬಂತೆ ದುರುಗುಟ್ಟಿ ನೋಡಿದರು. ಅವನ ಬಾಯಿಂದ ಮಾತೇ ಬರಲೊಲ್ಲದು. ಅವ ಬೆವರಿದ್ದ, ಬೆದರಿದ್ದ, ತೇಗುತ್ತಿದ್ದ. ಆದ್ದರಿಂದ ಬಾಯಿ ಬಾಯಿ ಬಿಡುತ್ತಿದ್ದ. ಈಗ ತನ್ನನ್ನು ಇಡಿಯಾಗಿ, ಹಸಿಹಸಿಯಾಗಿ ಹಾಗೆಯೇ ನುಂಗುವಂತೆ ನೋಡುತ್ತಿದ್ದ ಪ್ರಿನ್ಸಿಪಾಲರ ದೃಷ್ಟಿ ಎದುರಿಸಲಾರದೆ ಕಂಗಾಲಾದ. ಅವನ ಅವಸ್ಥೆಯನ್ನು ನೋಡುತ್ತ ನಿಲ್ಲದೆ ಜೀಕೆ ಇನ್ನಷ್ಟು ವೇಗದಿಂದ ಕ್ಲಾಸಿನತ್ತ ನಡೆದರು.
ಹೋಗಿ ನೋಡಿದರೆ, ಗುಲ್ಲು ಗದ್ದಲ ಏನೇನಿರಲಿಲ್ಲ. ಈಗಷ್ಟೆ ಒಂದು ಕ್ಲಾಸು ಮುಗಿದು ಇನ್ನೊಂದಕ್ಕೆ ಕಾಯುತ್ತಿರುವಂತೆ ಹುಡುಗರು ಶಿಸ್ತು ಮತ್ತು ಆಯಾಸದಲ್ಲಿರುವವರಂತೆ ಕೂತಿದ್ದರು. ಜೀಕೆ ಎಲ್ಲರನ್ನೂ ದುರುಗುಟ್ಟಿ ನೋಡಿದರು. 'ಏನಿದು ಗದ್ದಲ?' ಎಂದು ಗುಡುಗಿದರು. ಯಾರೂ ಮಾತಾಡಲಿಲ್ಲ. ಇವರ ಕಣ್ಣುಗಳನ್ನು ನೇರ ಎದುರಿಸಲೂ ಇಲ್ಲ. ಹಾಗೆ ಕೆಳಮುಖ ಮಾಡಿ ಕೂತವರಲ್ಲಿ ರೋಜಾ ಕೂಡ ಇದ್ದಳು. ಮುಖ ಕೆಳಗಿದ್ದರೂ ಕಣ್ಣು ನೆತ್ತಿಗೇರಿಸಿ ಹುಬ್ಬಿನ ಗುಂಟ ಇವರನ್ನೇ ನೋಡುತ್ತಿದ್ದಳು. ಅವಳಕೆ ಕಡೆ ಕೈ ಮಾಡಿ 'ನೀ ಹೇಳು, ಏನಿದು ಗದ್ದಲ?' ಆಕೆ ಗಕ್ಕನೆ ಎದ್ದು ಮಾತುಬಾರದೆ ತಡಬಡಿಸಿ ಫಕ್ಕನೆ ಬಾಗಿಲ ಕಡೆ ಕೈಮಾಡಿ ತೋರಿಸಿದಳು. ಅಲ್ಲಿ ಎಂಟಿ ಕುರಿಯ ಹಾಗೆ ನಿಂತಿದ್ದ. ತೋರುಬೆರಳಿಗೆ ಗುರಿಯಾದದ್ದೇ, – ಸರಕ್ಕನೆ ಒಳಬಂಧು 'ಸರ, ಇದರಾಗೊಂದು ರಬ್ಬರ್ ಹಾವೈತ್ರಿ….' ಎಂದು ತೊದಲಿದ. ಟೇಬಲ್ಲಿನ ಮೇಲೊಂದು ಸಣ್ಣ ಡಬ್ಬಿ ಇತ್ತು. ತಗೊಂಡು ನಡುಗವ ಬೆರಳುಗಳಿಂದ ಅದರ ಮುಚ್ಚಳ ತೆಗೆದ. ತೆಗೆದೊಡನೆ ಒಂದು ರಬ್ಬರ್ ಹಾವು ಟಣ್ಣನೆ 'ಅಗೋ' ನೆಗೆದು ಹುಡುಗಿಯರಲ್ಲೇ ಬಿತ್ತು. ಹಾವಿನಂತಯೇ ಹುಡುಗಿಯರಿಬ್ಬರು ನೆಗೆದು ಆಯ್ ಎಂದು ಕಿರುಚಿಕೊಂಡರು. ಹುಡುಗರು ತಡೆಯದೆ ಮತ್ತೆ ಹೋ ಎಂದು ನಕ್ಕು ಜೀಕೆ ಮಾಸ್ತರರನ್ನು ನೋಡಿ ಸರಿಹೋಗಲಿಲ್ಲವೆಂದು ಸುಮ್ಮನಾದರು. ಒಳಗೆ ಮಾತ್ರ ನಗುತ್ತಲೇ ಇದ್ದರು. ಹಾವಿನ ನೆಗೆತಕ್ಕೆ ಎಂಟಿ ಕೂಡ ಹಿಂದೆ ಸರಿದ. ಜೀಕೆ ಮಾತ್ರ ಸುಮ್ಮನೆ ಇದ್ದರು. ದುರ್ದೈವದಿಂದ ರೋಜಾ ಅದೇ ಮಾದ ನಗೆಯನ್ನ, ಅಂದರೆ ಇವರ ಛೇಂಬರಿನಲ್ಲಿ ನಕ್ಕಿದ್ದಳಲ್ಲ, ಇವರು ಕ್ಲಿಕ್ ಮಾಡಿಕೊಂಡಿದರಲ್ಲ – ನಕ್ಕಳು. ಜೀಕೆ ಒಳಗಿನ ಉದ್ವೇಗ ಉಕ್ಕಿಬಿಟ್ಟಿತು. ಅದನ್ನು ಹತ್ತಿಕ್ಕುವಂತೆ ತುಟಿ ಬಿಗಿಹಿಡಿದರು. ಉಕ್ಕಿದ ಉದ್ವೇಗ ಕೆಂಪಾಗಿದ್ದಿತೆಂಬುದನ್ನು ಅವರ ಕಣ್ಣುಗಳಿಂದಲೇ ತಿಳಿಯಬಹುದಿತ್ತು. ಕ್ಲಾಸಿನಲ್ಲಿ ಯಾಕೆ ಗದ್ದಲವಾಯಿತೆಂದು ತಿಳಿಯತಲ್ಲ. ಎಂಟಿ ಆ ಹಾವನ್ನು ಮತ್ತೆ ಡಬ್ಬಿಯೊಳಗೆ ಹಾಕುವ ತನಕ ಸುಮ್ಮನಿದ್ದು, ಹಾಕಿದ ಮೇಲೆ 'ಇಲ್ಲಿ ಕೊಡು' ಎಂಬಂತೆ ಕೈ ನೀಡಿದರು. ಎಂಟಿ ಕೊಟ್ಟ. ಇಡೀ ಕ್ಲಾಸಿನಲ್ಲಿ ಗೋರಿಯಲ್ಲಿರುವಂಥ ಮೌನ ಆವರಿಸಿತು. ತುಸು ಹೊತ್ತು ಎಲ್ಲರನ್ನೂ ಮತ್ತು ವಿಶೇಷವಾಗಿ ರೋಜಾಳನ್ನು ನೋಡಿ 'ಇದನ್ನು ಯಾರು ತಂದದ್ದು?' ಎಂದರು. ಯಾರು ಹೇಳುತ್ತಾರೆ? ಹಾಗೇ ಬಿಗಿದ ಮುಖದಲ್ಲೇ ಡಬ್ಬಿ ತಗೊಂಡೇ ಎಂಟಿ ಕಡೆ ಕೂಡ ನೋಡದೆ 'ಇನ್ನ ಕ್ಲಾಸ್ ತಗೋ' ಎಂದು ಹೇಳಿ ಬಾಗಿಲು ದಾಟಿದರು. ಯಾರು ತಂದದ್ದೆಂದು ಸಮ ವಿಚಾಸದೆ ಡಬ್ಬಿ ತಗೊಂಡು ಬಿಮ್ಮನೆ ಹೋದದ್ದಕ್ಕೆ ಹುಡುಗರಿಗೆ ಆಶ್ಚರ್ಯವಾಯಿತು.
By kanaja|2012-06-25T20:44:25+05:30June 25, 2012|ಕನ್ನಡ, ಜ್ಞಾನಪೀಠ ಪುರಸ್ಕೃತರ ಕೃತಿ ಸಂಚಯ, ಡಾ. ಚಂದ್ರಶೇಖರ ಕಂಬಾರ|0 Comments
ಪೆಟ್ರೋಲ್ ದರ 100ರೂ ತಲುಪಿದರೆ ಪೆಟ್ರೋಲ್ ಬಂಕ್ ಮಷಿನ್ ಗಳು ಬದಲು | IF the petrol price crosses Rs 100,bunks will face biggest challenge - Kannada Oneindia
ಪೆಟ್ರೋಲ್ 100ರ ಗಡಿ ದಾಟಿದರೆ ಡ್ರಾ ಪ್ರದರ್ಶನದ ಬೋರ್ಡ್ ಬದಲು ಮಾಡಲು ನಿರ್ಧಾರ | Oneindia Kannada
ಬೆಂಗಳೂರು, ಅ.3: ಷೇರು ಮಾರುಕಟ್ಟೆಯಲ್ಲಿ ಡಾಲರ್ ಎದುರು ಮತ್ತೆ ರೂಪಾಯಿ ಕುಸಿತ ಕಂಡಿದೆ, ತೈಲ ಬೆಲೆ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ. ಹೀಗೆ ಪೆಟ್ರೋಲ್ ದರ 100ರೂ ಗಡಿ ದಾಟಿದರೆ ಮಷಿನ್ ಗಳನ್ನೇ ಬದಲು ಮಾಡುವ ಪರಿಸ್ಥಿತಿ ಎಲ್ಲಾ ಪೆಟ್ರೋಲ್ ಬಂಕ್ ಗಳಿಗೆ ಬಂದೊದಗಲಿದೆ.
ಬೆಂಗಳೂರಲ್ಲಿ ಲೀಟರ್ ಪೆಟ್ರೋಲ್ ದರ 85.52ರೂ ದಾಟಿದ್ದು 100ರ ಗಡಿ ದಾಟುವ ಸಾಧ್ಯತೆ ಇದೆ, ಈ ಹಿನ್ನೆಲೆಯಲ್ಲಿ ಬಂಕ್ ಮಾಲೀಕರು ಪಂಪ್ ಗಳಲ್ಲಿ ಉಂಟಾಗುವ ಪೈಸ್ ಡಿಸ್‌ಪ್ಲೇ ಬೋರ್ಡ್(ದರ ಪ್ರದರ್ಶನ ಫಲಕ) ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ತೈಲ ಕಂಪನಿಗಳ ಮೊರೆ ಹೋಗಿವೆ.
ಈಗ ಪೆಟ್ರೋಲ್ ಬಂಕ್ ಗಳಲ್ಲಿ ಡಿಸ್‌ಪ್ಲೇ ಬೋರ್ಡ್ ಎರಡಂಕಿ ದರ ಪ್ರದರ್ಶಿಸುವ(99.99ರೂ.)ಸಾಮರ್ಥ್ಯ ಹೊಂದಿದೆ. ಲೀಟರ್ ಪೆಟ್ರೋಲ್ ಮೂರಂಕಿ ಅಂದರೆ 100 ರೂ ತಲುಪಿದರೆ ಡಿಸ್‌ಪ್ಲೇ ಬೋರ್ಡ್ ಲ್ಲಿ ದರ ಪ್ರದರ್ಶನವಾಗುವುದಿಲ್ಲ.
ದೇಶದಲ್ಲಿ ಇದುವರೆಗೆ ಪೆಟ್ರೋಲ್ 100 ರೂ ಗಡಿ ದಾಟಿಲ್ಲ ಆದರೆ ಈ ಬಾರಿ ದಾಟುವ ಸಾಧ್ಯತೆ ಇದೆ, ಡಿಸೆಂಬರ್ ಮಧ್ಯದ ವೇಳೆ 100ರ ಗಡಿ ದಾಟುವ ಎಲ್ಲಾ ಸಾಧ್ಯತೆಗಳಿವೆ. ಎರಡಂಕಿಯಿಂದ ಮೂರಂಕಿ ದರ ಪ್ರದರ್ಶಿಸಬೇಕಾದರೆ ಸಾಫ್ಟ್‌ವೇರ್ ಉನ್ನತೀಕರಿಸುವ ಅಗತ್ಯವಿದೆ, ಇದು ಬಂಕ್ ಮಾಲೀಕರಿಂದ ಸಾಧ್ಯವಿಲ್ಲ, ತೈಲ ಕಂಪನಿಗಳೇ ಈ ಕೆಲಸ ಮಾಡಬೇಕಿದೆ.
india petrol bunk petrol price hike ಭಾರತ ಪೆಟ್ರೋಲ್ ಪೆಟ್ರೋಲ್ ಬಂಕ್ ದರ ಏರಿಕೆ
Distributors of Petrol bunks are worried that if petrol price reached Rs.100 in the coming days, they have to replace existing all price display boards with disposal units which have only two digit of price display.
ಪ್ರವಾಹ ಪರಿಹಾರಕ್ಕೆ ಹಣದ ಕೊರತೆ..! – EESANJE / ಈ ಸಂಜೆ
July 30, 2021 Sunil Kumar belagavi Flood, flood relief funds, Karnataka Govt
ಬೆಂಗಳೂರು,ಜು.29- ರಾಜ್ಯದ ಹಲವೆಡೆ ಮಳೆಯ ರೌದ್ರಾವತಾರ ಹೆಚ್ಚಾಗಿದ್ದು, ನೆರೆ ಪರಿಸ್ಥಿತಿ ಉಂಟಾಗಿ ಅಪಾರ ಹಾನಿ ಸಂಭವಿಸಿದೆ. ಎಸ್‍ಡಿಆರ್‍ಎಫ್‍ನ ಬಹುತೇಕ ಹಣ ಕೋವಿಡ್ ನಿಯಂತ್ರಣಕ್ಕೆ ಬಳಸಿಕೊಂಡಿರುವ ರಾಜ್ಯ ಸರ್ಕಾರಕ್ಕೆ ನೆರೆ ಪರಿಹಾರಕ್ಕಾಗಿ ಉಳಿದಿರುವುದು ಅಲ್ಪ ಹಣ ಮಾತ್ರ. ಕರುನಾಡು ಕೊರೊನಾ ಎರಡನೇ ಅಲೆಗೆ ಸಂಪೂರ್ಣ ತತ್ತರಿಸಿ ಹೋಗಿದೆ. ಇದರ ನಿರ್ವಹಣೆ ಸದ್ಯ ಸರ್ಕಾರದ ಮುಂದಿರುವ ಆದ್ಯತೆ. ಇದರ ಮಧ್ಯೆ ರಾಜ್ಯದಲ್ಲಿ ಮಳೆ ತನ್ನ ಆರಂಭಿಕ ಆರ್ಭಟವನ್ನು ಪ್ರದರ್ಶಿಸಿದೆ.
11 ಜಿಲ್ಲೆಗಳ 45 ತಾಲೂಕು ಗಳಲ್ಲಿ ಮಳೆಯಿಂದಾಗಿ ಸಂಕಷ್ಟ ಎದುರಾಗಿದೆ. ಅಪಾರ ಪ್ರಮಾಣದ ಬೆಳೆ ಹಾನಿಯಾಗಿವೆ. ಮಳೆ ಹಾನಿ ಪ್ರಮಾಣದ ಪರಿಶೀಲನೆ ಪ್ರಗತಿಯಲ್ಲಿದೆ. ಪ್ರಾಥಮಿಕವಾಗಿ ಸುಮಾರು 15 ಸಾವಿರ ಕೋಟಿ ರೂ.ಗೂ ಅಧಿಕ ನೆರೆ ಹಾನಿ ಸಂಭವಿಸಿರ ಬಹುದೆಂದು ಅಂದಾಜಿಸಲಾಗಿದೆ. ರಾಜ್ಯಕ್ಕೆ ತೌಕ್ತೆ ಚಂಡಮಾರುತ ಅಪ್ಪಳಿಸಿ, ಭಾರೀ ನಷ್ಟ ಉಂಟು ಮಾಡಿದೆ. ಕರಾವಳಿ ಭಾಗದಲ್ಲಿ ಚಂಡ ಮಾರುತದಿಂದ ಅಪಾರ ಹಾನಿಯಾಗಿತ್ತು.
ಕರಾವಳಿ ಕರ್ನಾಟಕ ಭಾಗಕ್ಕೆ ಅಪ್ಪಳಿಸಿದ ತೌಕ್ತೆ ಚಂಡಮಾರುತದಿಂದ ಬರೋಬ್ಬರಿ 209 ಕೋಟಿ ರೂ. ಅಂದಾಜು ನಷ್ಟ ಉಂಟಾಗಿದೆ. ಒಂದೆಡೆ ಕೋವಿಡ್ ನಿರ್ವಹಣೆ ಮತ್ತೊಂದೆಡೆ ನೆರೆ ಪರಿಹಾರ ಕಾರ್ಯಕ್ಕೆ ಸರ್ಕಾರಕ್ಕೆ ಹಣ ಹೊಂದಿಸುವ ಅನಿವಾರ್ಯತೆ ಎದುರಾಗಿದೆ. ಈಗಾಗಲೇ ಬಹುತೇಕ ಎಸ್‍ಡಿಆರ್‍ಎಫ್ ಹಣ ಕೋವಿಡ್ ನಿರ್ವಹಣೆಗೆ ಬಳಸಲಾಗುತ್ತಿದೆ. ಈ ಮಧ್ಯೆ ನೆರೆ ವಿಪತ್ತು ಎದುರಾಗಿದ್ದು, ಸೀಮಿತ ಹಣದಿಂದ ಸಂಪೂರ್ಣ ನೆರೆ ನಿರ್ವಹಣೆ ಕಷ್ಟಸಾಧ್ಯವಾಗುತ್ತಿದೆ.
ಎಸ್‍ಡಿಆರ್‍ಎಫ್ ಹಣದ ಬಳಕೆಯಾಗಿದ್ದೆಷ್ಟು?: 2021-22ನೇ ಸಾಲಿಗೆ ಕೇಂದ್ರ ಸರ್ಕಾರದಿಂದ Sಆಖಈ ಅನುದಾನವಾಗಿ ಕರ್ನಾಟಕಕ್ಕೆ 1,054 ಕೋಟಿ ರೂ. ಮಂಜೂರು ಮಾಡಿದೆ. ಇದರಲ್ಲಿ ರಾಜ್ಯದ ಪಾಲು 263 ಕೋಟಿ ರೂಪಾಯಿ ಆಗಿದ್ದರೆ, 791 ಕೋಟಿ ರೂ. ಕೇಂದ್ರದ ಪಾಲಾಗಿದೆ. ಮೊದಲನೇ ಕಂತಿನ ಬಾಪ್ತು ಕೇಂದ್ರದ ಪಾಲಿನ 316.4 ಕೋಟಿ ರೂ. ಈಗಾಗಲೇ ಬಿಡುಗಡೆ ಮಾಡಲಾಗಿದೆ. ಇನ್ನು 329.93 ಕೋಟಿ ರೂ. ರಾಜ್ಯದ ಪಾಲನ್ನು ಬಿಡುಗಡೆ ಮಾಡಲಾಗಿದೆ. ಈ ಎಲ್ಲಾ ಹಣವನ್ನು ಕೋವಿಡ್ ನಿಯಂತ್ರಣಕ್ಕಾಗಿ ಬಳಸಲಾಗುತ್ತಿದೆ.
ಒಟ್ಟು ಶೇ. 50ರಷ್ಟು ಹಣವನ್ನು ಕೋವಿಡ್ ನಿರ್ವಹಣೆಗೆ ಬಳಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈ ಹಣದಲ್ಲಿ ಅರ್ಧದಷ್ಟು ಕೋವಿಡ್ ನಿರ್ವಹಣೆಗೆ ವ್ಯಯಿಸಿದರೆ, ಅತಿವೃಷ್ಟಿ, ಅನಾವೃಷ್ಟಿಯ ನಿರ್ವಹಣೆಗೆ ಎಸ್‍ಡಿಆರ್‍ಎಫ್‍ನಡಿ ಕೇವಲ ಶೇ.50ರಷ್ಟು ಮಾತ್ರ ಉಳಿಯಳಿದೆ. ಕಂದಾಯ ಇಲಾಖೆ ನೀಡಿರುವ ಅಂಕಿ-ಅಂಶದ ಪ್ರಕಾರ ಜೂನ್ ಅಂತ್ಯದವರೆಗೆ ಎಸ್‍ಡಿಆರ್‍ಎಫ್‍ನಡಿ 646.38 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ಈ ಹಣವನ್ನು ಕೋವಿಡ್ ನಿರ್ವಹಣೆಗಾಯೇ ಬಳಸಲಾಗಿದೆ.
ಯಾವ ಇಲಾಖೆಗೆ ಎಷ್ಟು ಬಿಡುಗಡೆ?: ಕಂದಾಯ ಇಲಾಖೆ ನೀಡಿರುವ ಅಂಕಿ-ಅಂಶದ ಪ್ರಕಾರ ಕೋವಿಡ್ ನಿರ್ವಹಣೆಗಾಗಿ ಎಸ್‍ಡಿಆರ್‍ಎಫ್‍ನಡಿ ರಾಜ್ಯ ಸರ್ಕಾರ 646.38 ಕೋಟಿ ರೂ.ಗಳನ್ನು ವಿವಿಧ ಇಲಾಖೆಗಳಿಗೆ ಬಿಡುಗಡೆ ಮಾಡಿದ್ದು, ಬಿಬಿಎಂಪಿ- 300 ಕೋಟಿ, ಎಲ್ಲಾ ಜಿಲ್ಲೆಗಳು- 266.33 ಕೋಟಿ ಪೆÇಲೀಸ್ ಇಲಾಖೆ- 10 ಕೋಟಿ, ಕಾರಾಗೃಹ ಇಲಾಖೆ- 5 ಕೋಟಿ, ಚಿತ್ರದುರ್ಗ ಜಿಲ್ಲೆ- 20 ಕೋಟಿ, ಅಗ್ನಿಶಾಮಕ- 5 ಕೋಟಿ, ಹಾಸನ- 10 ಕೋಟಿ, ಗ್ರಾಮ ಪಂಚಾಯತಿಗಳು- 30 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.
ಅಚ್ಚಕನ್ನಡ Page 4 of 35 for ಅಚ್ಚಕನ್ನಡ | The Kannada Blog. ಇದು ನಮ್ಮ ಜೀವನಕ್ಕೆ ಸಿಕ್ಕ ಅನುಭವ, ಒಡನಾಡಿಗಳು, ಸುತ್ತಲ ಪರಿಸರ ಕೊಟ್ಟ ವಿಷಯಗಳ ಕನ್ನಡಿ.
ನಾ ಸತ್ತ ದಿನ
ನಾನು ಒಬ್ಬನೇ ಇರುವ ಒಳ್ಳೆ ಫೋಟೋನ ನೋಡಿದಾಗಲೆಲ್ಲ ಅದೊಂದು ಯೋಚನೆ ಬರುತ್ತೆ. ಅಕಸ್ಮಾತ್ ನಾನ್ ಸತ್ರೆ, ನಮ್ ಮನೆಯವ್ರು ಇದೇ ಫೋಟೋಗೆ ಫ್ರೇಮ್ ಹಾಕಿ, ಹೂ ಹಾರ ಹಾಕ್ಬೋದಾ ಅಂತ. ಫೋಟೋ ಫ್ರೇಮ್ ನ ಉದ್ದ ಎಷ್ಟಿರ್ಬೋದು? ಅಗಲ ಎಷ್ಟಿರ್ಬೋದು? ಬದುಕಿದ್ದಾಗಲೇ ಇವರೆಲ್ಲ ನನ್ನನ್ನ ಸುಟ್ಟಿದ್ದು ಸಾಕು, ಇನ್ನ ಸತ್ತಾಗಲು ಇವರಿಗೆ ಸುಡಲು ಬಿಡಬೇಕಾ, ಸುಮ್ನೆ ವಿದ್ಯುತ್ ಚಿತಾಗಾರದಲ್ಲಿ ಹಾಕಿ ಸುಟ್ಟು ಬೂದಿ ಮಾಡಿ ಅಂತ ವಿಲ್ ಬರೀಬೇಕು ಅನ್ಸುತ್ತೆ.....
ನಾಯಿ ಪಾಡು
ಸಿಕ್ಕಿದ್ದ ತಿನ್ಕಂಡು, ಕಂಡಲ್ಲಿ ಮಲ್ಕಂಡು, ಹಾಡ್ತೀವಿ ನೆಮ್ಮದಿಯ ನೂರು ಹಾಡು, ಸಿಗುವುದೆ ಮನುಜರಿಗಿಂಥ ನಾಯಿ ಪಾಡು? ಇದ್ದಲ್ಲೆ ನಮ್ಮೂರು, ಬೇಕಿಲ್ಲ ಬೇರೂರು, ಅನುದಿನ ಇರುವುದು ನಮಗಿಲ್ಲಿ ಸ್ವರ್ಗ, ಇರುವುದೆ ಮನುಜರಲ್ಲಿ ಇಂಥ ವರ್ಗ? ಜೊತೆಯಲ್ಲಿ ನಾವೆಲ್ಲ, ಜಗಳಗಳು ನಮಗಿಲ್ಲ, ಇರ್ತೀವಿ ನಾವೆಂದಿಗೂ ಕೂಡಿಕೊಂಡು, ಬೆರೆವರೆ ಮನುಜರು ಒಗ್ಗಿಕೊಂಡು? ಹಾದಿ ಜನಜಂಗುಳಿಯೇ ನಮ್ಮಯ ಲಾಲಿ, ಸಂತೆಲ್ಲೂ ನಮಗುಂಟು ಸುಖ ನಿದ್ದಿರೆ ಹಾಡು, ಸಿಗುದು ಮನುಜರಿಗೆಂದಿಗೂ ನಿಜ ನಾಯಿ ಪಾಡು. - ಆದರ್ಶ...
ಹೇಗೆ ತಾನೆ ಹೋಗಲಿ, ಬಿಟ್ಟು ನನ್ನ ಊರ, ಇಲ್ಲೇ ತಾನೆ ಇರುವುದು ನನ್ನ ಪುಟ್ಟ ಸಂಸಾರ. ಇಲ್ಲೇ ನಾನು ಹುಟ್ಟಿದ್ದು, ಇಲ್ಲೇ ನಾನು ಬೆಳೆದದ್ದು, ಇಲ್ಲಿ ತಾನೆ ನನಗೆ ಮಣ್ಣಾಗುವ ಆಸೆ ಇದ್ದಿದ್ದು. ಹೇಗೆ ತಾನೆ ಹೋಗಲಿ, ಬಿಟ್ಟು ನನ್ನ ಊರ, ಇಲ್ಲೇ ತಾನೆ ಇರುವುದು ನನ್ನ ಈ ಬಿಡಾರ. ಹೊಸಿಲ ಆಚಿನ ನೆಲವು ಎಶ್ಟು ಹಸಿರಾದರೇನು, ತಲೆಯ ಮೇಲಿನ ಸೂರಿನಶ್ಟು ಬೆಚ್ಚಗಿರುವುದೇನು? ಇಲ್ಲೇ ಅಲ್ಲವೆ ಕಳೆದದ್ದು ಗುಡುಗು ಮಳೆ...
ಭಾಗ ಒಂದು ಆಗಲೇ ಹೇಳಿದ ಹಾಗೆ, "ನನ್ನ ಜೀವನದ ಜೀವಂತಿಕೆಯೇ, ಅವಳಾಗಿ ಹೋಗಿದ್ಳು". ಮದುವೆ ನಿಶ್ಚಯ ಆಗಿ, ಮದುವೆ ಆಗೋ ಹೊತ್ತಿಗೆ, ಅದೆಷ್ಟೋ ಹುಚ್ಚಾಟಗಳ ಕಥೆಗೆ ಲೇಖನಿ‌ ಹಿಡಿದಿದ್ಲು ಅವಳು. ಎಷ್ಟೋ ಸಲ, ಅವಳ‌ ಕಡೆಯಿಂದ ಕರೆ ಬಂದಾಗ, "ಈ ದಿನ ಅದೇನು ತಲೆಯಲ್ಲಿ ಯೋಜನೆ ಹಾಕಿದ್ದಾಳೋ!", ಅಂತ ದಿಗಿಲು ಬಿದ್ದದ್ದೂ ಇದೆ. ಅದೆ ರೀತಿ, ಇವಳನ್ನ ಅರ್ಥ ಮಾಡಿಕೊಂಡ ಮೇಲೆ, ಇವಳ‌ ಸಾಕಷ್ಟು ಹುಚ್ಚಾಟಗಳ ಭಾಗವಾದ ಮೇಲೆ, "ಇನ್ನೂ...
ನಕ್ಸಲ್ ದಾಳಿಯ ಮಾಸ್ಟರ್ ಮೈಂಡ್ ಹಿದ್ಮಾ - Sanjevani
Home ಸುದ್ದಿ ರಾಷ್ಟ್ರೀಯ ನಕ್ಸಲ್ ದಾಳಿಯ ಮಾಸ್ಟರ್ ಮೈಂಡ್ ಹಿದ್ಮಾ
ನಕ್ಸಲ್ ದಾಳಿಯ ಮಾಸ್ಟರ್ ಮೈಂಡ್ ಹಿದ್ಮಾ
ಛತ್ತೀಸ್ ಗಢ.ಏ೬:ನಕ್ಸಲ್ ಪೀಡಿತ ಪ್ರದೇಶವಾಗಿರುವ ಸುಕ್ಮಾ ಮತ್ತು ಬಿಜಾಪುರ್ ನಡುವಿನ ಜೋನಾಗುಡದಲ್ಲಿ ನಡೆದ ೨೨ ಯೋಧರ ಸಾವಿಗೆ ಕಾರಣವಾಗಿರುವ ನಕ್ಸಲ್ ದಾಳಿಯಲ್ಲಿ ಮಾಸ್ಟರ್ ಮೈಂಡ್ ಹಿದ್ಮಾ ಎನ್ನಲಾಗಿದೆ.
ಗೆರಿಲ್ಲಾ ಯುದ್ಧದ ಮೂಲಕ ಸುಕ್ಮಾದಲ್ಲಿ ನಕ್ಸಲರು ಹಲವು ದಾಳಿಗಳನ್ನು ನಡೆಸುತ್ತಾ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ವಿವಿಧ ಬೆಟಾಲಿಯನ್ ಗಳ ಸುಮಾರು ೨೦೦೦ ಸಿಬ್ಬಂದಿ ಕೆಲವು ದಿನಗಳಿಂದ ತೆರ್ರಮ್ ಪ್ರದೇಶದ ಸಿಲ್ಗರ್ ಕಾಡಿನ ಜೋನಾಗುಡ ಬಳಿ ಕಾರ್ಯಚರಣೆಗೆ ಹೊರಟ್ಟಿದ್ದರು.
ಜೋನಾಗುಡ ಬಳಿ ನಕ್ಸಲರ ಗುಂಪೊಂದು ಬೀಡುಬಿಟ್ಟಿದೆ ಎಂಬ ಮಾಹಿತಿ ಸಿಕ್ಕಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಇಲ್ಲಿನ ಉಪಗ್ರಹ ಫೋಟೋಗಳಲ್ಲಿ ನಕ್ಸಲರ ಚಲನವಲಗಳು ಕಂಡು ಬಂದಿತ್ತು. ಇದರಂತೆ ನಕ್ಸಲ್ ನಿಗ್ರಹ ಪಡೆ ಜೋನಾಗುಡದ ಬಳಿ ಬರುತ್ತಿದ್ದೆ ಮೂರು ಕಡೆ ಅಡಗಿ ಕುಳಿತ್ತಿದ್ದ ನಕ್ಸಲರು ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದರು.
ದಾಳಿಯಲ್ಲಿ ೨೨ ಯೋಧರು ಹುತಾತ್ಮರಾಗಿದ್ದು ೩೧ ಯೋಧರು ಗಂಭೀರವಾಗಿ ಗಾಯಗೊಂಡಿದ್ದರು. ಗುಂಡಿನ ದಾಳಿ ನಡೆಸಿದ್ದ ನಕ್ಸಲರು ಮೃತ ಯೋಧರ ಬಳಿಯಿದ್ದ ಶಸ್ತ್ರಾಸ್ತ್ರ, ಮದ್ದು ಗುಂಡು, ಯೋಧರು ಹಾಕಿಕೊಂಡಿದ್ದ ಬಟ್ಟೆ, ಶೂಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದರು.
ಇತ್ತೀಚೆಗೆ ಸುಕ್ಮಾದಲ್ಲಿ ನಡೆದ ನಕ್ಸಲ್ ದಾಳಿಯಲ್ಲಿ ಹಿದ್ಮಾ ಹೆಸರು ಕೇಳಿಬರುತ್ತಿದೆ. ಯಾರೀ ಹಿದ್ಮಾ ಹಿದ್ಮಾನ್ ಪೂರ್ಣ ಹೆಸರು ಮಾಡ್ವಿ ಹಿದ್ಮಾ ಅಕಾ ಇಡಮುಲ್ ಪೊಡಿಯಮ್ ಭೀಮಾ. ಸುಕ್ಮಾ ಜಿಲ್ಲೆಯ ಜಾಗರಗುಂಡ ಪ್ರದೇಶದ ಪುಡಿತಿ ಗ್ರಾಮದವನು. ಅನಕ್ಷರಸ್ಥನಾಗಿದ್ದರೂ ಹಿದ್ಮಾ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುತ್ತಾನೆ. ಅಲ್ಲದೆ ಸ್ಥಳೀಯ ಭಾಷೆಗಳನ್ನು ಸುಲಲಿತವಾಗಿ ಮಾತನಾಡುತ್ತಾನೆ.
೨೦೧೦ರಲ್ಲಿ ಚಿಂತಲ್ ನರ್ ಬಳಿಯ ತಾಡೆಟ್ಲಾದಲ್ಲಿ ನಡೆದಿದ್ದ ನಕ್ಸಲ್ ದಾಳಿಯಲ್ಲಿ ೭೬ ಸಿಆರ್ ಪಿಎಫ್ ಸಿಬ್ಬಂದಿ ಹುತಾತ್ಮರಾಗಿದ್ದರು. ಛತ್ತೀಸಘಡದ ಜಿರಾಮ್ ಕಣಿವೆಯಲ್ಲಿ ೨೦೧೩ರಲ್ಲಿ ನಡೆದಿದ್ದ ನಕ್ಸಲ್ ದಾಳಿಯಲ್ಲಿ ಕಾಂಗ್ರೆಸ್ ನಾಯಕ ಸಹಿತ ೩೦ ಜನರು ಮೃತಪಟ್ಟಿದ್ದರು. ಈ ದಾಳಿಗಳ ಹಿಂದೆಯೂ ಹಿದ್ಮಾನ ಕೈವಾಡವಿತ್ತು.
ಇವರು ನಮ್ಮ ಹಿರಿಯರು ಮಾಲಿಕೆಯ ೫ ನೇ ಲೇಖನವಿದು. ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.
ಇದೇ ಸೆಪ್ಟೆಂಬರ್ ನಲ್ಲಿ ಅಜ್ಜಂಪುರಕ್ಕೆ ಹೋಗುವ ಸಂದರ್ಭ ಒದಗಿತು. ಈ ಮೊದಲು ಬ್ಲಾಗ್‌ನಲ್ಲಿ ಸ್ಮರಿಸಬೇಕಿದ್ದ ಹೆಸರು ಶೆಟ್ರು ಸಿದ್ದಪ್ಪನವರದು. ಆದರೆ ಸಾಕಷ್ಟು ವಿವರಗಳು ದೊರೆಯದ ಕಾರಣ ಪ್ರಕಟಿಸಲು ಸಾಧ್ಯವಾಗಿರಲಿಲ್ಲ. ಇದೀಗ ಶೆಟ್ರು ಸಿದ್ದಪ್ಪನವರ ಮೊಮ್ಮಗ ಶ್ರೀ ಶಿವಶಂಕರ್ ರವರನ್ನು ಸಂದರ್ಶಿಸಿದೆ. ಇವರೊಂದಿಗೆ ವಿದ್ಯಾ ಇಲಾಖೆಯ ನಿವೃತ್ತ ಶಾಲಾ ಪರೀವೀಕ್ಷಕರಾದ ಶ್ರೀ ಶ್ರೀಕಂಠಯ್ಯನವರೂ, ಆಕಸ್ಮಿಕವಾಗಿ ಭೇಟಿಯಾದರು. ಇವರೀರ್ವರು ನೀಡಿದ ಮಾಹಿತಿ ನಿಮ್ಮ ಓದಿಗಾಗಿ ಇಲ್ಲಿದೆ.
ಅವರು ಅಜಾತ ಶತ್ರು. ಅಜ್ಜಂಪುರದ ಸಮೀಪದ ಗ್ರಾಮ ಸೊಲ್ಲಾಪುರದಲ್ಲಿರುವ ಸಿದ್ಧರಾಮೇಶ್ವರನ ಪರಮಭಕ್ತರು. ಈ ಪ್ರದೇಶದ ಅತಿ ದೊಡ್ಡ ಕೃಷಿಕರು ಮತ್ತು ಕೃಷಿ ಉತ್ಪನ್ನಗಳ ವರ್ತಕರು. ಅವರ ನಿವಾಸ ಅಜ್ಜಂಪುರದ ರೇಲ್ವೇ ನಿಲ್ದಾಣದ ಎದುರಿಗೆ ಇದೆ. ಉತ್ತರ ಕರ್ನಾಟಕ ದೊಡ್ಡ ವಾಡೆಯನ್ನು ನೆನಪಿಸುವಂತಹ ವಾಸ್ತುಹೊಂದಿರುವ ಆ ಕಟ್ಟಡ ಅಜ್ಜಂಪುರದ ಪ್ರಮುಖ ಗುರುತು. ಕೃಷಿ, ವ್ಯಾಪಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಶೆಟ್ರು ಸಿದ್ದಪ್ಪನವರು ಎತ್ತರದ ಆಳು. ಗಿರಿಜಾ ಮೀಸೆ. ಕತ್ತು ಮುಚ್ಚುವ ಕಪ್ಪು ನೀಳ ಕೋಟು, ಕಚ್ಚೆಪಂಚೆ, ತಲೆಯಮೇಲೆ ದೊಡ್ಡದಾದ ಬಿಳಿಯ ಸರಿಗೆಯ ರುಮಾಲು, ಹಣೆಯ ಮೇಲೆ ವಿಭೂತಿ. ಎಂಥ ಜನಸಂದಣಿಯಲ್ಲೂ ಗುರುತು ಹಿಡಿಯಬಹುದಾದ ವಿಶಿಷ್ಟ ಚಹರೆ ಅವರದು.
ಕರ್ನಾಟಕ ಏಕೀಕರಣದ ಚಳವಳಿ ನಡೆಯುತ್ತಿದ್ದ ದಿನಗಳಲ್ಲಿ ಶೆಟ್ರು ಸಿದ್ದಪ್ಪನವರ ಹಂಬಲವೆಂದರೆ, ಅದು ತನ್ನ ಕಾಲದಲ್ಲೇ ನಡೆಯುವಂತಾಗಲಿ ಎಂಬ ಅಭಿಲಾಷೆಯಿತ್ತು. ಆಗ ಭಾಷಾವಾರು ಪ್ರಾಂತಗಳ ವಿಂಗಡಣೆಯ ಕಾಲಕ್ಕೆ ಸರದಾರ್ ಪಟೇಲರ ನಿರ್ಧಾರಗಳನ್ನು ನೆಹರೂ ಒಪ್ಪಿಕೊಳ್ಳಲೂ ಆಗದ, ಆದರೆ ಬಿಡಲಾಗದ ಪರಿಸ್ಥಿತಿ ಎದುರಿಸುತ್ತಿದ್ದರು. ನೆಹರೂರಿಗೆ ವರದಿಯನ್ನು ಸಲ್ಲಿಸಿದ ನಂತರ, ವಿಂಗಡಣೆಯ ಹೆಸರಿನಲ್ಲಿ ಹಿಂಸಾಚಾರ ಹಬ್ಬುವುದು ಅವರಿಗೆ ಬೇಕಿರಲಿಲ್ಲ. ಅದಕ್ಕೆಂದೇ ಈ ಸಂಬಂಧದ ವಿವರಗಳನ್ನು ರೇಡಿಯೋ ಮೂಲಕ ದೇಶಾದ್ಯಂತ ಏಕಕಾಲಕ್ಕೆ ಪ್ರಸಾರ ಮಾಡುವ ತಂತ್ರ ಅನುಸರಿಸಿದರು. ಆಗೆಲ್ಲ ರೇಡಿಯೋ ಇದ್ದವರೇ ಶ್ರೀಮಂತರು. ಅಜ್ಜಂಪುರದಲ್ಲಿ ಕೇವಲ ಎರಡು ರೇಡಿಯೋಗಳಿದ್ದವು. ಒಂದು ಸುಬ್ರಹ್ಮಣ್ಯ ಶೆಟ್ಟರ ಮನೆಯಲ್ಲಿ, ಮತ್ತೊಂದು ಶೆಟ್ರು ಸಿದ್ದಪ್ಪನವರ ಮನೆಯಲ್ಲಿ. ಪ್ರಾಂತವಾರು ವಿಭಜನೆಯ ಸುದ್ದಿ ತಿಳಿದಕೂಡಲೇ ಈ ಇಬ್ಬರು ಹಿರಿಯರೂ ಚಿಕ್ಕಮಕ್ಕಳಂತೆ ಸಂಭ್ರಮಿಸಿದ್ದನ್ನು ನೋಡಿದ್ದ ಹಿರಿಯರಾದ ಶ್ರೀಕಂಠಯ್ಯನವರು ತಿಳಿಸಿದರು.
ಶೆಟ್ರು ಸಿದ್ದಪ್ಪನವರ ನಿವಾಸ
ತಾನೂ ಬೆಳೆಯಬೇಕು, ತನ್ನ ಸುತ್ತಣ ಎಲ್ಲರೂ ಬೆಳೆಯಬೇಕೆಂಬುದು ಅವರ ಜೀವನ ಧ್ಯೇಯ. ಸಾರ್ವಜನಿಕ ಜೀವನದಲ್ಲಿ ತಮ್ಮ ಛಾಪು ಒತ್ತಿದವರು. ಇಂಥ ವಿಶಾಲ ದೃಷ್ಟಿಯಿದ್ದುದರಿಂದಲೇ ಅವರು ಅಜ್ಜಂಪುರದಲ್ಲಿ ಅಜರಾಮರರು. ಅವರು Member of Representative Assemblyಯ ಸದಸ್ಯರಾಗಿದ್ದರು. ಆಗೆಲ್ಲ ಈ ಸ್ಥಾನಗಳಿಗೆ ಚುನಾವಣೆಯಿರುತ್ತಿರಲಿಲ್ಲ. ಸಮಾಜದಲ್ಲಿ ಶ್ರೀಮಂತರಾಗಿದ್ದು, ಜನಪರ ಕಾರ್ಯ ಕೈಗೊಳ್ಳುವವರನ್ನು ಆಯ್ಕೆಮಾಡಲಾಗುತ್ತಿತ್ತು. ಹೀಗೆ ನಡೆದ ಪ್ರಕ್ರಿಯೆಯಲ್ಲಿ ಶಿವನೆಯ ಪಟೇಲ್ ಶಿವಪ್ಪನವರು ಆರಂಭದಲ್ಲಿ ಆಯ್ಕೆಯಾದರು. ತದನಂತರದ ಸರದಿ ಶೆಟ್ರ ಸಿದ್ದಪ್ಪನವರದು. ಅಜ್ಜಂಪುರಕ್ಕೆ ಪುರಸಭೆ ಬಂದಾಗ ಅದು ಸರಕಾರದ ಆಡಳಿತದಲ್ಲಿ ಇರುತ್ತಿತ್ತು. ಎಂದರೆ, ಪ್ರಜಾಪ್ರತಿನಿಧಿಗಳು ಇರುತ್ತಿದ್ದರೂ, ತಾಲ್ಲೂಕಿನ ಧಣಿಯೆಂದೇ ಕರೆಯಲ್ಪಡುತ್ತಿದ್ದ ಅಮಲ್ದಾರರು ಪುರಸಭೆಯ ಅಧ್ಯಕ್ಷರಾಗಿರುತ್ತಿದ್ದರು. ನಂತರದ ಉಪಾಧ್ಯಕ್ಷರ ಹಂತದಿಂದ ಪ್ರಜಾಪ್ರತಿನಿಧಿಗಳಿಗೆ ಅವಕಾಶವಿರುತ್ತಿತ್ತು. ಹೀಗಾಗಿ ಅಜ್ಜಂಪುರದ ಶೆಟ್ರು ಸಿದ್ದಪ್ಪನವರು ಸತತ ಕಾಲು ಶತಮಾನಕ್ಕೂ ಹೆಚ್ಚು ಸಮಯ ಪ್ರಥಮ ಪುರಸಭಾ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಆರೆಂಟು ದಶಕಗಳ ಹಿಂದೆ ಅಜ್ಜಂಪುರ ಇತರ ಎಲ್ಲ ಹೋಬಳಿಗಳಂತೆಯೆ ಸಾರ್ವಜನಿಕ ಸೌಲಭ್ಯಗಳ ವಿಷಯದಲ್ಲಿ ಹಿಂದುಳಿದಿತ್ತು. ಸ್ವಾತಂತ್ರ್ಯ ಬಂದ ತರುಣದಲ್ಲಿನ ಉತ್ಸಾಹ ಎಲ್ಲರಲ್ಲೂ ಜೀವಂತವಾಗಿತ್ತು. ತಮ್ಮ ಊರು ಅಭಿವೃದ್ಧಿಯಾಗಬೇಕೆಂಬ ಹಂಬಲವುಳ್ಳ ಜನ ಸಾರ್ವಜನಿಕ ಜೀವನದಲ್ಲಿದ್ದರು. ಹೀಗಾಗಿ ಶೆಟ್ರು ಸಿದ್ದಪ್ಪನವರು ಅಜ್ಜಂಪುರಕ್ಕೆ ವಿದ್ಯಾಭ್ಯಾಸ, ಆರೋಗ್ಯ, ಕೃಷಿಗಳಿಗೆ ಸಂಬಂಧಿಸಿದಂತೆ ತಮ್ಮಿಂದಾದ ಕಾರ್ಯಗಳನ್ನು ಮಾಡಬೇಕೆಂದು ಸಂಕಲ್ಪಿಸಿದರು.
ಶೆಟ್ರು ಸಿದ್ದಪ್ಪನವರ ಪತ್ನಿ ಮರಿಶಾಂತಮ್ಮನವರು ಹೆರಿಗೆ ಸಮಯದಲ್ಲಿ ಸೂಕ್ತ ವೈದ್ಯಕೀಯ ಅನುಕೂಲಗಳಿಲ್ಲದೇ, ಹುಟ್ಟಿದ ಮಗುವೂ ಸೇರಿದಂತೆ ತೀರಿಕೊಂಡರು. ಈ ಘಟನೆ ಶೆಟ್ರು ಸಿದ್ದಪ್ಪನವರ ಮೇಲೆ ಅಗಾಧ ಪರಿಣಾಮ ಬೀರಿತು. ತನ್ನ ಪತ್ನಿಗೆ ಒದಗಿದ ಸ್ಥಿತಿ ಮತ್ತಾರಿಗೂ ಬರಬಾರದೆಂಬ ಭಾವನೆಯಿಂದ ಪತ್ನಿಯ ಹೆಸರಿನಲ್ಲಿ ಹೆರಿಗೆ ವಾರ್ಡ್‌ನ್ನು ಕಟ್ಟಿಸಿದರು. ವಿವಿಧ ಸಂಸ್ಥೆಗಳಿಗೆ ಭೂಮಿಯನ್ನು ದಾನ ಮಾಡುವ ಮೂಲಕ ಸಮಾಜದ ಋಣ ತೀರಿಸುವ ಕಾರ್ಯವನ್ನು ನಡೆಸಿದರು.
ಅಜ್ಜಂಪುರದ ಮಾಧ್ಯಮಿಕ ಶಾಲಾ ಕಟ್ಟಡ ೧
ಅಜ್ಜಂಪುರದ ಮಾಧ್ಯಮಿಕ ಶಾಲಾ ಕಟ್ಟಡ ೨
ಹಿಂದಕ್ಕೆ ಕಡೂರು ಜಿಲ್ಲೆಯಾಗಿತ್ತೆಂಬ ಸಂಗತಿ ಇಂದಿನ ತಲೆಮಾರಿನವರಿಗೆ ತಿಳಿದಿರಲಾರದು. ಪ್ರಾಥಮಿಕ ವಿದ್ಯಾಭ್ಯಾಸ ಮುಗಿದ ನಂತರ ಹೆಚ್ಚಿನ ಓದಿಗಾಗಿ ಜಿಲ್ಲಾಕೇಂದ್ರಕ್ಕೆ ಹೋಗುವುದು ಆಗ ಅನಿವಾರ್ಯವಾಗಿತ್ತು. ಅಜ್ಜಂಪುರಕ್ಕೆ ಜಿಲ್ಲಾಧಿಕಾರಿಗಳು ಬಂದಾಗ, ಲೋವರ್ ಸೆಕೆಂಡರಿ ಶಾಲೆಯನ್ನು ಮಂಜೂರುಮಾಡುವುದಾಗಿ ತಿಳಿಸಿದರು. ಆದರೆ ಅದಕ್ಕೆ ತಕ್ಕ ಸಿದ್ಧತೆ ಊರಿನಲ್ಲಿ ಇರಲಿಲ್ಲ. ಇದಕ್ಕೆಂದು ಭೂಮಿ ಮತ್ತು ಹಣವನ್ನು ಹೊಂದಿಸುವುದು ಕಷ್ಟಕರವಾಗಿತ್ತು. ಆಗ ಮುಂದೆ ಬಂದವರು ಶೆಟ್ರು ಸಿದ್ದಪ್ಪನವರು. ಈ ಶಾಲೆಗೆಂದು ಅವರು ಕಟ್ಟಿಸಿದ ಕಟ್ಟಡದ ಚಿತ್ರ ಇದರೊಂದಿಗಿದೆ. ಇದಕ್ಕೆಂದು ಸಿರಿಗೆರೆಯಲ್ಲಿದ್ದ ತಮ್ಮ ೪೫೦ ಎಕರೆ ಭೂಮಿಯನ್ನು ಮಾರಿದರು. ಇದಲ್ಲದೆ ವಿನೋಬಾ ಭಾವೆಯವರ ಭೂದಾನ ಚಳವಳಿಗೆಂದು ಹಿರೇನಲ್ಲೂರಿನ ಸಮೀಪದ ಕೇದಿಗೆರೆಯಲ್ಲಿ ೧೦ ಎಕರೆ ನೆಲವನ್ನು ದಾನ ನೀಡಿದರು. ನೂರಾರು ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆಮಾಡಿದರು. ಅಜ್ಜಂಪುರದಲ್ಲಿ ವಿದ್ಯುತ್ ಇಲಾಖೆ ತನ್ನ ಕಛೇರಿಯನ್ನು ಆರಂಭಮಾಡುವ ಕಾಲಕ್ಕೂ ಅದೇ ಸ್ಥಿತಿ. ಶೆಟ್ರು ಸಿದ್ದಪ್ಪನವರು ತಮ್ಮ ಪತ್ನಿ ಮರಿಶಾಂತಮ್ಮನವರ ಹೆಸರಿನಲ್ಲಿ ಭೂಮಿ ನೀಡಿದರು. ಮುಂದೆ ತಾಲ್ಲೂಕ್ ಬೋರ್ಡ್ ಪ್ರೌಢಶಾಲೆಯ ಪ್ರಸ್ತಾಪ ಬಂದಾಗಲೂ ಶೆಟ್ರು ಸಿದ್ದಪ್ಪನವರು ತಾವಾಗಿಯೇ ಮುಂದೆ ಬಂದು ಈಗಿರುವ ಭವ್ಯ ಕಟ್ಟಡದ ನಿರ್ಮಾಣಕ್ಕೆ ಕಾರಣರಾದರು. ಇವರು ಭೂಮಿಯನ್ನು ನೀಡುವ ಮೊದಲೇ ಶಿವಾನಂದಾಶ್ರಮದ ಶ್ರಿ ಶಂಕರಾನಂದ ಸ್ವಾಮಿಗಳು ತಮ್ಮಿಂದಾದ ಪ್ರಯತ್ನಮಾಡಿದ್ದರು. ಅದು ಕೈಗೂಡದಾದಾಗ ನೆರವಿಗೆ ಬಂದವರು ಶೆಟ್ರು ಸಿದ್ದಪ್ಪನವರು.
ಇಷ್ಟೆಲ್ಲ ಸಾರ್ವಜನಿಕ ಕಾರ್ಯಗಳನ್ನು ಮಾಡಿದ್ದರೂ, ಅವರೂ ಆಡಳಿತದ, ಕಣ್ಣಿಲ್ಲದ ಕಾನೂನುಗಳ ಬಿಸಿ ಅನುಭವಿಸಬೇಕಾಯಿತು! ಊರಿಗೆಲ್ಲ ನೆರವಾದ ಶೆಟ್ರು ಸಿದ್ದಪ್ಪನವರ ಮನೆಗೆ ಕುಡಿಯುವ ನೀರಿನ ನಲ್ಲಿ ಬಂದದ್ದು ೨೦೦೦ದ ಇಸವಿಯಲ್ಲಿ ! ಇದಕ್ಕೆ ಇರುವ ಕಾರಣ ಆಡಳಿತಾತ್ಮಕ ವಿವಾದ. ಅವರ ಮನೆಯಿರುವುದು ಅಜ್ಜಂಪುರದ ಸಮೀಪದ ಗೌರಾಪುರದ ಗ್ರಾಮಪಂಚಾಯಿತಿಯ ವ್ಯಾಪ್ತಿಯಲ್ಲಿ. ಸ್ವತಃ ಶೆಟ್ರು ಸಿದ್ದಪ್ಪನವರೇ ಪುರಸಭೆಯ ಅಧ್ಯಕ್ಷರಾಗಿದ್ದರೂ, ಕಾನೂನು ಮುರಿದು ತಮಗೆ ಬೇಕಿರುವ ಸೌಲಭ್ಯಗಳಿಗೆ ಆಶಿಸದೇ ಇದ್ದುದು ಅವರ ಹೆಚ್ಚುಗಾರಿಕೆ. ಅವರ ಹೆಗ್ಗಳಿಕೆಯಾಗಿ ಸ್ಮರಿಸಬಹುದಾದ ಇನ್ನೊಂದು ಸಂಗತಿಯೆಂದರೆ, ಅವರು ನಮ್ಮ ಪ್ರದೇಶದ ಅತಿದೊಡ್ಡ ಕೃಷಿಕರೆಂದು ಹೇಳಿದಯಷ್ಟೆ. ಅವರ ಕೃಷಿ ಉತ್ಪನ್ನಗಳನ್ನು ಪರವೂರುಗಳಿಗೆ ಸಾಗಿಸಲೆಂದೇ ರೇಲ್ವೇ ಇಲಾಖೆಯ ಪ್ರತ್ಯೇಕ ಮಾರ್ಗವನ್ನು ನಿಲ್ದಾಣದ ಸಮೀಪ ನಿರ್ಮಿಸಿತು. ಅವರ ಆಗಮನಕ್ಕೆಂದು ರೈಲುಗಳು ಕೆಲವೊಮ್ಮೆ ನಿಗದಿತ ವೇಳೆಗಿಂತ ಸ್ವಲ್ಪ ತಡವಾಗಿ ಹೊರಡುತ್ತಿದ್ದುದೂ ಉಂಟು ಎಂದು ಶ್ರೀಕಂಠಯ್ಯನವರು ತಿಳಿಸಿದರು. ಇದು ಸಮಾಜಸೇವಕನೊಬ್ಬನಿಗೆ ಭಾರತದ ಬೃಹತ್ ಸಂಸ್ಥೆ ನೀಡಿದ ಗೌರವವೂ ಹೌದು. ಶರಣರ ಸಾವು ಮರಣದಲ್ಲಿ ಕಾಣುತ್ತದೆಂಬ ನಾಣ್ಣುಡಿಯಿದೆ. ಶೆಟ್ರು ಸಿದ್ದಪ್ಪನವರ ಮರಣದಲ್ಲಿ ಅದು ನಿಜವೇ ಆಯಿತು. ಶಿವನ ಪರಮಭಕ್ತರಾಗಿದ್ದ, ೯೫ ವಯಸ್ಸಿನ ತುಂಬುಜೀವನ ನಡೆಸಿದ ಶೆಟ್ರು ಸಿದ್ದಪ್ಪನವರು ಶಿವಸಾಯುಜ್ಯ ಕಂಡದ್ದು ಶಿವರಾತ್ರಿಯಂದು!
ಇವರಂತೆಯೇ ಸಾರ್ವಜನಿಕ ಉದ್ದೇಶಗಳಿಗೆಂದು ನೆರವಾದ ಮತ್ತೊಬ್ಬ ಹಿರಿಯರು ಶ್ರೀ ಜೋಗಿ ತಿಮ್ಮಯ್ಯನವರು. ಅವರ ಬಗೆಗಿನ ವಿವರಗಳು ಹೆಚ್ಚು ದೊರೆತಿಲ್ಲವಾದ್ದರಿಂದ ಮುಂದೊಮ್ಮೆ ಪ್ರಕಟವಾಗಲಿದೆ.
ಲಕ್ಷ್ಮೀ ನಾರಾಯಣರಾವ್. ಡಿಸೆಂಬರ್ 2, 2011 11:52 ಪೂರ್ವಾಹ್ನ
ಪ್ರೀತಿಯ ದತ್ತಣ್ಣಾ,
ಇತ್ತೀಚಿನ ಎಲ್ಲ ಬರಹಗಳನ್ನೂ ನೋಡಿದೆ, ನಮ್ಮೂರ ಪ್ರಾತಃ ಸ್ಮರಣೀಯರ ಸಾರ್ಥಕ ಬದುಕಿನ ಬಗ್ಗೆ , ನಿನ್ನ ನುಡಿ ನಮನ ಕೂಡ ನಿಜಕ್ಕೂ ಸಾರ್ಥಕ ದಾಖಲೆ.ಅವರೆಲ್ಲರ ಬಾಳನ್ನು, ನಮ್ಮ ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ, ಜೊತಗೆ ನಾವೂ ಸಹ ನಮ್ಮ ಈ ಇಳಿ ವಯಸ್ಸಿನಲ್ಲಿ ನಮ್ಮ ಬದುಕಲ್ಲಿ ಕಂಡು ಕೇಳಿದ ಸ್ಪೂರ್ತಿದಾಯಕ ವ್ಯಕ್ತಿ ಚಿತ್ರಗಳನ್ನು ಸ್ಮರಿಸಿ ಕೊಳ್ಳುವಲ್ಲಿ ನೀನು ಮಾಡಿರುವ ಈ ಯಶಸ್ವೀ ಪ್ರಯತ್ನಕ್ಕೆ ನಮ್ಮಮ್ಮ,ತಮ್ಮ,ತಂಗೀ ಎಲ್ಲಾ ಎಷ್ಟು ಖುಷಿ ಪಟ್ಟರು ಗೊತ್ತಾ?.
ನಮ್ಮ ಮನೆಯವರೆಲ್ಲರ ಪರವಾಗಿ ಧನ್ಯವಾದ.
ನನ್ನ ಮನದ ತೋಟದಲ್ಲಿ ಅಜ್ಜಂಪುರದ ನೆನಪು ನಿತ್ಯ ಮಲ್ಲಿಗೆ. ಈ ಗಿಡಕ್ಕೆ ನೀರೆರದ ನಿನ್ನ ಉಪಕಾರಕ್ಕೆ ಋಣಿಯಾಗಿರುವೆ. ಮುಂಬರುವ ದಿನಗಳಲ್ಲಿ ಇನ್ನಸ್ಷ್ಟು ನೆನಪಿನ ಉತ್ಹ್ಖಲನ ನಡೆಯಲಿ.
ಭಾರತದಲ್ಲಿ 'ರೆಡ್ಮಿ 70 ಇಂಚಿನ' ಸ್ಮಾರ್ಟ್‌ಟಿವಿ ಸ್ವಾಗತಕ್ಕೆ ದಿನಾಂಕ ಫಿಕ್ಸ್! | Redmi TV 70 Might Launch On September 17th In India - Kannada Gizbot
| Updated: Saturday, September 7, 2019, 14:23 [IST]
ಜನಪ್ರಿಯ ಶಿಯೋಮಿ ಕಂಪನಿಯು ಇತ್ತೀಚಿಗೆ ಮೊದಲ ಬಾರಿಗೆ 'ರೆಡ್ಮಿ' ಹೆಸರಿನಡಿ ಹೊಸದಾಗಿ 70 ಇಂಚಿನ ಸ್ಮಾರ್ಟ್‌ಟಿವಿಯೊಂದನ್ನು ಚೀನಾದಲ್ಲಿ ಬಿಡುಗಡೆ ಮಾಡಿತ್ತು. ಈ ಸ್ಮಾರ್ಟ್‌ಟಿವಿಯು 4k HDR ಗುಣಮಟ್ಟದ ಡಿಸ್‌ಪ್ಲೇಯನ್ನು ಹೊಂದಿರುವ ಜೊತೆಗೆ ಅಗ್ಗದ ಬೆಲೆಯಲ್ಲಿ ರಿಲೀಸ್‌ ಆಗಿ ಗ್ರಾಹಕರ ಗಮನ ಸೆಳೆದಿತ್ತು. ಆ ರೆಡ್ಮಿ 70 ಇಂಚಿನ ಹೊಸ ಸ್ಮಾರ್ಟ್‌ಟಿವಿ ಇದೀಗ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲು ದಿನಾಂಕ ನಿಗದಿ ಮಾಡಿಕೊಂಡಿದೆ.
ಹೌದು, ಶಿಯೋಮಿ ಕಂಪನಿಯ ಇದೇ ಸೆಪ್ಟಂಬರ್ 17ರಂದು ಬೆಂಗಳೂರಿನಲ್ಲಿ ನಡೆಯುವ Smarter Living 2020 ಕಾರ್ಯಕ್ರಮದಲ್ಲಿ ತನ್ನ 'ರೆಡ್ಮಿ 70' ಸ್ಮಾರ್ಟ್‌ಟಿವಿ ಬಿಡುಗಡೆ ಮಾಡಲಿದೆ ಎನ್ನುವ ಬಗ್ಗೆ ಮುನ್ಸೂಚನೆಯನ್ನು ನೀಡಿದೆ. ತೆಳ್ಳನೆಯ ಬೆಜಲ್ ಹೊಂದಿರುವ ಸ್ಮಾರ್ಟ್‌ಟಿವಿ ಜೊತೆಗೆ Smarter Living 2020 ಎಂದು ಬರೆದಿರುವ ಚಿತ್ರವೊಂದನ್ನು ಕಂಪನಿಯು ಟೀಸ್‌ ಮಾಡಿದ್ದು, ಶಿಯೋಮಿ ಅಭಿಮಾನಿಗಳಿಗೆ ಭಾರೀ ಕುತೂಹಲ ಮೂಡಿಸಿದೆ. ಬಹುಶಃ ರೆಡ್ಮಿ 70 ಇಂಚಿನ ಸ್ಮಾರ್ಟ್‌ಟಿವಿಯೇ ಇರಬಹುದು ಎನ್ನಲಾಗಿದೆ.
ರೆಡ್ಮಿಯ ಹೊಸ ಸ್ಮಾರ್ಟ್‌ಟಿವಿಯು 70 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಇದರೊಂದಿಗೆ HDR ಬೆಂಬಲ್, 4K ರೆಸಲ್ಯೂಶನ್, ಕ್ವಾಡ್‌ಕೋರ್ ಪ್ರೊಸೆಸರ್ ಒಳಗೊಂಡಂತೆ ಕಂಪನಿಯ ಪಾಚ್‌ವಾಲ್‌ ಇಂಟರ್‌ಫೇಸ್‌ (patchwall interface) ಸೌಲಭ್ಯಗಳನ್ನು ಕಾಣಬಹುದಾಗಿದೆ. ಹಾಗೆಯೇ 2GB RAM ಸಾಮರ್ಥ್ಯವನ್ನು ಪಡೆದಿದ್ದು, ಆಂತರಿಕವಾಗಿ 16GB ಸ್ಟೋರೇಜ್ ಸ್ಥಳಾವಕಾಶವನ್ನು ಸಹ ಪಡೆದುಕೊಂಡಿದೆ.
ರೆಡ್ಮಿಯ ಈ ಟಿವಿಯಲ್ಲಿ ಕಂಪನಿಯು ಡಿಸ್‌ಪ್ಲೇಯೊಂದಿಗೆ ಸೌಂಡ್‌ಗೂ ಹೆಚ್ಚಿನ ಆದ್ಯತೆ ನೀಡಿದ್ದು ಇದರೊಂದಿಗೆ 'ಡಾಲ್ಬಿ ಆಡಿಯೊ' (Dolby Audio) ಮತ್ತು (DTS HD) ಡಿಟಿಎಸ್‌ ಹೆಚ್‌ಡಿ ಆಡಿಯೊಗಳ ಸೌಲಭ್ಯಗಳ ಬೆಂಬಲ ಒಳಗೊಂಡಿದೆ. ಬ್ಲೂಟೂತ್ ವಾಯಿಸ್‌ ರಿಮೋಟ್ ಕಂಟ್ರೋಲ್‌ ಸೌಲಭ್ಯವನ್ನು ಪಡೆದಿದ್ದು, ಜೊತೆಗೆ ವೇಗದ ಪ್ರೊಜೆಕ್ಷನ್‌ಗಾಗಿ ಫೋನ್ ಸ್ಕ್ಯಾನ್‌ಕೋಡ್‌ ಆಯ್ಕೆಯನ್ನು ನೀಡಲಾಗಿದೆ.
ರೆಡ್ಮಿಯ ಹೊಸ ಸ್ಮಾರ್ಟ್‌ಟಿವಿಯಲ್ಲಿ ಮೂರು ಎಚ್‌ಡಿಎಮ್‌ಐ ಪೋರ್ಟ್‌ಗಳು, ಎರಡು ಯುಎಸ್‌ಬಿ ಪೋರ್ಟ್‌ಗಳನ್ನು ಆಯ್ಕೆಗಳನ್ನು ಕನೆಕ್ಟಿವಿಟಿಗಾಗಿ ನೀಡಲಾಗಿದೆ. ಹಾಗೆಯೇ ಡ್ಯುಯಲ್ ವೈಫೈ ಆಯ್ಕೆ, ಬ್ಲೂಟೂತ್ 4.2 ಕನೆಕ್ಟರ್, AV ಇನ್‌ಪುಟ್‌ ಸೌಲಭ್ಯಗಳನ್ನು ನೀಡಲಾಗಿದೆ. ಟಿವಿಯನ್ನು ಗ್ರಾಹಕರು ವಾಲ್‌ ಮೌಂಟೆಡ್‌ ಮತ್ತು ಟೇಬಲ್‌ಟಾಪ್‌ ಮಾದರಿಯಲ್ಲಿಯೂ ಇಡಬಹುದಾಗದ ಆಯ್ಕೆಯನ್ನು ಹೊಂದಿದೆ.
ಚೀನಾದಲ್ಲಿ ರೆಡ್ಮಿ 70 ಸ್ಮಾರ್ಟ್‌ಟಿವಿಯ ಬೆಲೆಯು CNY 3,799 ಆಗಿದ್ದು, ಭಾರತದಲ್ಲಿ ಅಂದಾಜು 38,000ರೂ.ಗಳು ಆಗಿರಲಿದೆ. ಇದೇ ಸೆಪ್ಟಂಬರ್ 17 ರಂದು ದೇಶಿಯ ಮಾರುಕಟ್ಟೆಗೆ ಎಂಟ್ರಿಕೊಡಲಿದೆ ಎನ್ನಲಾಗಿದೆ. ಹಾಗೆಯೇ ಶಿಯೋಮಿಯ ಮಿ 4A Pro (49 ಇಂಚಿನ), ಮಿ ಟಿವಿ 4X Pro (55 ಇಂಚಿನ) ಮತ್ತು ಮಿ ಟಿವಿ 4 Pro (55ಇಂಚಿನ) ಸ್ಮಾರ್ಟ್‌ಟಿವಿಗಳು ಅದೇ ಅಕ್ಟೊಬರ್‌ನಲ್ಲಿ ಆಂಡ್ರಾಯ್ಡ್ ಪೈ ಓಎಸ್‌ಗೆ ಅಪ್‌ಗ್ರೇಡ್‌ ಆಗಲಿವೆ.
Xiaomi has also sent invites for the Smarter Living 2020 launch event in Bengaluru on September 17. to know more visit to kannada.gizbot.com
ಬಿ-ಟೌನ್ ಪ್ರವೇಶ ಮಾಡಲಿದ್ದಾರಂತೆ ಕೂಲ್ ಕ್ಯಾಪ್ಟನ್ ಧೋನಿ | MS Dhoni Enter To Bollywood - Kannada Filmibeat
ಬಿ-ಟೌನ್ ಪ್ರವೇಶ ಮಾಡಲಿದ್ದಾರಂತೆ ಕೂಲ್ ಕ್ಯಾಪ್ಟನ್ ಧೋನಿ
| Published: Saturday, August 31, 2019, 12:32 [IST]
ಬಾಲಿವುಡ್ ಗೆ ಪ್ರವೇಶ ಮಾಡುವ ಬಗ್ಗೆ ಸುಳಿವು ಕೊಟ್ಟಿದ್ದಾರೆ ಧೋನಿ | M S Dhoni | FILMIBEAT KANNADA
ಟೀಂ ಇಂಡಿಯಾದ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ತಮ್ಮ ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸುವ ಸೂಚನೆ ನೀಡಿದ್ದಾರೆ. ವಿಶ್ವಕಪ್ ಮುಗಿದ ಬಳಿಕ ಎರಡು ವಿಶ್ರಾಂತಿ ಪಡೆದುಕೊಂಡಿರುವ ಧೋನಿ, ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿದ್ದರು.
ಇದೀಗ, ಸೇನೆಯಿಂದ ವಾಪಸ್ ಆಗಿರುವ ಎಂ.ಎಸ್.ಡಿ ಕುಟುಂಬದ ಜೊತೆ ಕಾಲಕಳೆಯುತ್ತಿದ್ದಾರೆ. ಈ ಮಧ್ಯೆ ಬಾಲಿವುಡ್ ಗೆ ಪ್ರವೇಶ ಮಾಡುವ ಬಗ್ಗೆ ಸುಳಿವು ಕೊಟ್ಟಿದ್ದಾರೆ ಎನ್ನಲಾಗಿದೆ.
ಹೌದು, ಚಿತ್ರರಂಗದ ಮೇಲೆ ಆಸಕ್ತಿ ಹೊಂದಿರುವ ಧೋನಿ ಸಿನಿಮಾ ನಿರ್ಮಾಣ ಮಾಡುವ ಆಸೆ ಹೊಂದಿದ್ದಾರೆ. ಅವಕಾಶ ಸಿಕ್ಕ ಕೂಡಲೇ ಚಿತ್ರ ನಿರ್ಮಾಣಕ್ಕೆ ಮುಂದಾಗ್ತಾರಂತೆ.