text stringlengths 0 61.5k |
|---|
ಕನ್ನಡದ ಖ್ಯಾತ ಚಾನೆಲ್ ಉದಯ ವಾಹಿನಿಯಲ್ಲಿ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮ ಇದೇ ಜುಲೈ 15 ರಿಂದ ರವಿವಾರದಿಂದ ಶುರು ಆಗಿದೆ. ಜನಪ್ರಿಯ ಸೆಲಬ್ರಿಟಿಗಳು ಜನ ಸಾಮಾನ್ಯರಂತೆ ಕೆಲಸ ಮಾಡಿ, ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವುದೇ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದ ವಿಶೇಷ. ಈ ವಾರದ ಸಂಚಿಕೆಯಲ್ಲಿ ಆಗಮಿಸಿ ಟಗರು ಖ್ಯಾತಿಯ ಧನಂಜಯ್ ಅವರು ತಾವೇ ಮೋಸಂಬಿ ಜ್ಯೂಸ್ ತಯಾರಿಸಿ ಅದನ್ನು ಮಾರಾಟ ಮಾಡಿ ಕಷ್ಟದಲ್ಲಿ ಕುಟುಂವೊಂದಕ್ಕೆ ಸಹಾಯ ಮಾಡಿದ್ದಾರೆ. ಆ ಕುಟುಂಬ ಯಾವುದು ತಿಳಿಯಲು ಮುಂದೆ ಓದಿ. |
ಮೀನು ಹಿಡಿದು ಜೀವನ ನಡೆಸುತ್ತಿದ್ದ ಯಜಮಾನ ರವಿ ಪಾರ್ಶ್ವವಾಯು ನಿಂದ ಬಲಗೈ ಸ್ವಾಧೀನ ಕಳೆದು ಕೊಂಡ ಕಾರಣ ಅವರ ಇಬ್ಬರು ಹೆಣ್ಣು ಮಕ್ಕಳೇ ತಂದೆಯ ಹಾಗೆ ಬೆಳಗಿನ ಜಾವ ಐದು ಗಂಟೆಗೆ ಕಬಿನಿ ಹಿನ್ನೀರಿನಲ್ಲಿ ಮೀನು ಹಿಡಿದು ಮಾರಿ ಅದರಿಂದ ಬಂದ ಹಣದಿಂದ ತಂದೆಯ ಚಿಕಿತ್ಸೆ ಮತ್ತು ಮನೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಅದರ ಜೊತೆಗೆ ತಮ್ಮಿಬ್ಬರ ವಿದ್ಯಾಭ್ಯಾಸವನ್ನು ಬಿಡದೆ ಸಂಸಾರವನ್ನು ನಡೆಸುತ್ತಾ ಬರುತ್ತಿದ್ದಾರೆ. ಈ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಲು ಟಗರು ಖ್ಯಾತಿಯ ಧನಂಜಯ್ ಈ ವಾರದ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ಮೋಸಂಬಿ ಜ್ಯೂಸ್ ಮಾರಿದ್ದಾರೆ. |
ಶಿಖರಸೂರ್ಯ : ಎಲ್ಲಿದೇ ಶಿವಾಪುರ : ಅರವತೈದು – ಕಣಜ |
ಶಿಖರಸೂರ್ಯ : ಎಲ್ಲಿದೇ ಶಿವಾಪುರ : ಅರವತೈದು |
Home/ಕನ್ನಡ/ಜ್ಞಾನಪೀಠ ಪುರಸ್ಕೃತರ ಕೃತಿ ಸಂಚಯ/ಡಾ. ಚಂದ್ರಶೇಖರ ಕಂಬಾರ/ಶಿಖರಸೂರ್ಯ : ಎಲ್ಲಿದೇ ಶಿವಾಪುರ : ಅರವತೈದು |
ಇತ್ತ ಕನಕಪುರಿಯಲ್ಲಿ ಶಿಖರಸೂರ್ಯ ತೀವ್ರ ಚಡಪಡಿಕೆಯಲ್ಲಿದ್ದ. ಚಿಕ್ಕಮ್ಮಣ್ಣಿಗೆ ಮಾತ್ರ ಹೇಳಿ ಕಂಚಿಗೆ ಹೋಗಿದ್ದ ರವಿ ತಿಂಗಳಾದರೂ ನಾಪತ್ತೆಯಾಗಿದ್ದ. ರವಿಯನ್ನು ಹುಡುಕಲು ಹೋದ ಸುಕ್ರ ಕಂಚಿಯಿಂದ ಆತಂಕದ ಕಾಗದ ತಂದಿದ್ದ: ವಾಸಂತಿ, ಅವಳ ಮಗು ಮತ್ತು ಆಚಾರ್ಯರು ಅಮಾನುಷವಾಗಿ ಕೊಲೆಯಾದ ಸುದ್ದಿ ಕೇಳಿ ರವಿಕೀರ್ತಿಗೆ ಆಘಾತವಾಗಿ ಕಾಡಿನಲ್ಲಿ ಕಣ್ಮರೆಯಾದನೆಂದೂ ಸೈನಿಕರನ್ನಟ್ಟಿ ಹುಡುಕಿಸಿದರೂ ಸಿಕ್ಕಿಲ್ಲವೆಂದೂ ಕಂಚಿಯ ದೊರೆ ಕನಕಪುರಿಯ ಮಹಾರಾಜನಿಗೆ ಕಾಗದ ಬರೆದಿದ್ದ. ನಿಮಗೆ ಸಿಕ್ಕರೆ ನಮಗೂ ಸುದ್ದಿ ಕಳಿಸಿರೆಂದು ಹೇಳಿ ನಡೆದ ದುರ್ದೈವದ ಸಂಗತಿಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದ! |
ಶಿಖರಸೂರ್ಯ ಇದನ್ನು ನಿರೀಕ್ಷಿಸಿರಲಿಲ್ಲ. ದಿನಗಳೆದಂತೆ ವಾಸಂತಿಯ ನೆನಪು ಮಸಳಿಸಿ, ಮನಸ್ಸಿನ ಗಾಯಾಗಳು ಮಾಗಿ, ಮಗ ದಾರಿಗೆ ಬಂದೇ ಬರುವನೆಂದು ತನಗೆ ತಾನೇ ಹೇಳಿಕೊಂಡು ಸುಮ್ಮನಾದ. ಆದರೆ ಈಚೀಚೆ ಮಗನ ಬಗ್ಗೆ ಛಾಯಾದೇವಿಯ ಹಂಬಲ ಹೆಚ್ಚಾಗಿತ್ತು. ಗಂಡನನ್ನು ಕೇಳುವದಕ್ಕೆ ಭಯ. ಶಿಖರಸೂರ್ಯನಿಲ್ಲದಾಗ 'ಸುದ್ದಿಯೇನಾದರೂ ಗೊತ್ತಾಯಿತೇನಪ್ಪ' ಎಂದು ಸೇವಕರನ್ನು ಕದ್ದು ಕೇಳುತ್ತಿದ್ದಳು. ತಾಯಿಯ ಮುಂದೆಯೂ ಸಂಕಟ ತೋಡಿಕೊಳ್ಳಲಾಗುತ್ತಿರಲಿಲ್ಲ. ಎಚ್ಚರಾದರೆ ರವಿಯ ನೆನಪಾಗಿ 'ಮಗ ಬಂದನೇ ಮಗಳೇ', ಎಂದು ಕೇಳಿ ಉತ್ತರಿಸುವುದರೊಳಗಾಗಿ ಚಿಕ್ಕಮ್ಮಣ್ಣಿ ತೂಕಡಿಸುತ್ತಿದ್ದಳು. ಇನ್ನು ಗೌರಿಯ ಬಗ್ಗೆಯೇನಾದರೂ ತಿಳಿಯೋಣವೆಂದರೆ ಪುಣ್ಯಾತ್ಮ ಅವಳ ಹೆಸರು ತಗೊಂಡ ಕೂಡಲೇ ಮುಖ ಬಿರುಸು ಮಾಡಿ ಕಿವಿಗೂದಲು ನಿಮಿರಿಸಿ, ನೋಟಗಳಲ್ಲಿ ಚೂರಿ ಹಿಡಿದು ಇರುಯುತ್ತಿದ್ದ. ಆದರೆ ವಿಷಯವನ್ನು ಚಿಕ್ಕಮ್ಮಣ್ಣಿಗಾಗಲಿ, ಛಾಯಾದೇವಿಗಾಗಲಿ ತಿಳಿಸಿರಲಿಲ್ಲ. ಆಗಲೂ ಗೌರಿಯ ಬಗ್ಗೆ ಅವರು ಕೇಳಿದರೆ – |
"ಬೇಹುಗಾರರು ಶಿವಾಪುರಕ್ಕೆ ಹೋಗಿದ್ದಾರೆ. ಇಂದು ನಾಳೆ ಸುದ್ದಿ ತರುತ್ತಾರೆ. ಆದರೆ ಹೇಳ ಕೇಳದೆ ಮನೆಬಿಟ್ಟು ಹೋದ ಹೆಣ್ಣನ್ನು ನಾನು ಮನೆ ಸೇರಿಸಿಕೊಳ್ಳಲಾರೆ." |
– ಎಂದು ತನ್ನ ಹಳೆಯ ಮಾತನ್ನೇ ಪುನಃ ಹೇಳುತ್ತಿದ್ದ. |
ಆದರೆ ಶಿಖರಸೂರ್ಯನಿಗೆ ಗೌರಿಯ ಬಗ್ಗೆ ಮಾಹಿತಿ ಇತ್ತು. ಗುಣದವ್ವನನ್ನು ಅಟ್ಟಿಸಿಕೊಂಡು ಹೋದ ನಂಬಿಕೆಯ ಬೇಹುಗಾರರೇ ಸುದ್ದಿ ತಂದಿದ್ದರು. ಶಿವಾಪುರಕ್ಕೆ ಹೋಗುವ ದಾರಿಯಲ್ಲೇ ಗೌರಿ ಹೊಟ್ಟೆ ನೋವೆಂದು ಚಡಪಡಿಸಿ ಸತ್ತಳೆಂದೂ, ಆದರೆ ಆಕೆ ರಾಜಕುಮಾರಿ ಎಂದು ಯಾರಿಗೂ ಗೊತ್ತಾಗಲಿಲ್ಲವೆಂದೂ ಹೇಳಿದ್ದರು. ಇದನ್ನು ಕೇಳಿ ಒಳಗೋಳಗೆ ಅವನೂ ಮರುಗಿದ. ಕೋಪದ ಪ್ರತಾಪದಲ್ಲಿ, ಹಿಂದೆ ಮುಂದೆ ನೋಡದೆ ಮಗಳಿಗೆ ವಿಷವಿಟ್ಟುದು ಒಳ್ಳೆಯದಾಗಲಿಲ್ಲವೆಂದುಕೊಂಡ. ನಿಜ ಗೊತ್ತಾದರೆ ಮಗ, ಅಜ್ಜಿ, ಮಡದಿಯಿರಲಿ, ಕನಕಪುರಿಯ ಯಾವನೊಬ್ಬ ಪ್ರಜೆಯೂ ತನ್ನ ಬಗ್ಗೆ ಹೇಸಿಕೆ ಪಟ್ಟುಕೊಳ್ಳದಿರಲಾರನೆಂದು ನಾಚಿಕೆಯಿಂದ ಪಶ್ಚಾತಾಪ ಪಟ್ಟ. ಆದರೆ ನಿನ್ನಡಿಯೇ ತರುಣಚಂದ್ರನೆಂದು ನೆನಪಾಗಿ ಮತ್ತೆ ಕೋಪಾವಿಷ್ಟನಾಗಿ ದವಡೆಯ ತುಂಬ ವಿಷ ತುಂಬಿಕೊಂಡು ಹೆಡೆಯಾಡಿಸುತ್ತಿದ್ದ. ಒಂದಂತು ನಿಜ. ನಿನ್ನಡಿ ನಾಶವಾಗುವತನಕ ತನಗಾಗಲಿ, ರವಿಗಾಗಲೆ ನೆಮ್ಮದಿಯಿಲ್ಲವೆಂದು ಖಾತ್ರಿ ಮಾಡಿಕೊಂಡಿದ್ದ. ಅಂಥ ವೈರಿಯನ್ನು ವರಿಸಿದ್ದು ಗೌರಿಯ ದೊಡ್ಡ ತಪ್ಪು. ಇದೂ ಚಿಕ್ಕಮ್ಮಣ್ಣಿಯದೇ ಕಿತಾಪತಿಯೆಂದು ಅವಳ ಮೇಲೂ ಹರಿಹಾಯುತ್ತಿದ್ದ. ಆದರೆ ತಾನೇ ಹಾಕಿದ ಮದ್ದಿನಿಂದ ಆ ವೃದ್ಧೆ ಸದಾಕಾಲ ತೂಕಡಿಸುತ್ತಿದ್ದಳಾಗಿ ಬಚಾವಾಗಿದ್ದಳು. |
ಕೌಟುಂಬಿಕ ಸಮಸ್ಯೆ ಒಂದು ತೂಕವಾದರೆ ಕನಕಪುರಿಯೇ ಇನ್ನೊಂದು ತೂಕದ ಸಮಸ್ಯೆಯಾಗಿತ್ತು. ಧಾನ್ಯದ ಅಭಾವದಿಂದ ನಗರ ತತ್ತರಿಸಿ ಹೋಗಿತ್ತು. ಚಿನ್ನ ಕೊಡುತ್ತೇವೆಂದರೂ ಧಾನ್ಯ ಕೊಡುವವರಿರಲಿಲ್ಲ. ದೂರದ ದೇಶಗಳಿಂದ ಧಾನ್ಯವನ್ನು ಆಮದು ಮಾಡಿ ನಿಯಂತ್ರಣದಲ್ಲಿ ಹಂಚಲಾಗುತ್ತಿತ್ತು. ಇದರಿಂದ ವರ್ತಕರ ಸ್ವಾಭಿಮಾನ ಕೆರಳಿ ಕೆಂಡವಾಗಿದ್ದರು. ವರ್ತಕರ ಮಾತಿನಲ್ಲಿಯೇ ಹೇಳುವದಾದರೆ – "ಚಿನ್ನದ ತೂಕದಲ್ಲಿ ಧಾನ್ಯ ಸಿಗದಾಗಿತ್ತು!" ಸದಾ ಗಿಜಿಗುಟ್ಟುವ ಜನರಿಂದ ತುಂಬಿರುತ್ತಿದ್ದ ಕನಕಪುರಿಯ ಪ್ರಸಿದ್ಧ ಪೇಟೆ ಈಗ ಭಿಕೋ ಎನ್ನುತ್ತಿತ್ತು, ಇದರಿಂದಂತೂ ವರ್ತಕಜರ ಆತ್ಮಸ್ಥೈರ್ಯ ಕುಸಿದು ಕೆಲವರು ಅಕ್ಕಪಕ್ಕದ ರಾಜಧಾನಿಗಳಿಗೆ ನುಗ್ಗಿ ವ್ಯವಹಾರ ಕುದುರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಆದರೆ ಇವರಿಗಿಂತ ಮುನ್ನ ಅಲ್ಲಿಗೆ ನಕಲಿ ಚಿನ್ನದ ಕತೆಗಳು ಹರಡಿ ಕನಕಪುರಿಯವರು ಎಂದು ಹೇಳಿದೊಡನೆ ಅನುಮಾನದಿಂದ ನೋಡುತ್ತಿದ್ದರು. ಒಂದು ರಾಜ್ಯದಲ್ಲಂತೂ ಕನಕಪುರಿಯ ವರ್ತಕರೆಂದು ಹೇಳಿದ್ದೇ ತಡ ಸದರಿ ಇಬ್ಬರೂ ವರ್ತಕರನ್ನು ಸೆರೆಮನೆಗಟ್ಟಿದ್ದರು. ಹೀಗಾಗಿ ಕನಕಪುರಿಯವರು ಆತ್ಮ ವಿಶ್ವಾಸ ಕಳೆದುಕೊಂಡದ್ದರಿಂದ ಇನ್ನೊಂದು ಕಡೆ ವ್ಯವಹರಿಸಲು ಸಂಕೋಚ ಪಡುತ್ತಿದ್ದರು ಇಲ್ಲವೆ ಹೆದರುತ್ತಿದ್ದರು. ಏನೇನು ಮಾಡಲು ಸಾಧ್ಯವಾಗದೆ ಶಿಖರಸೂರ್ಯನಿಗೆ ಶಾಪಹಾಕುತ್ತ ಕೈಕೈ ಹೊಸೆಯುತ್ತ, ಅಂಗಡಿಗಳಲ್ಲಿ ಕೂತಿದ್ದರು. |
ಇದು ಪೇಟೆಯ ಮಾತಾದರೆ ಊರ ಹೊರಗಿನ ಹೊರಕೇರಿ ಹೊಲಗೇರಿಗಳಲ್ಲಿ ಗಡ್ಡೀಬೇನೆ ಹಬ್ಬತೊಡಗಿತ್ತು. ಜನದಟ್ಟಣೆಯ ಹೊರಕೇರಿಯಲ್ಲಿ, ಆಗಲೇ ಆರೇಳೂ ಹೆಣ ಬಿದ್ದಿದ್ದವು. ಅದು ಭಯಂಕರ ಸಾಂಕ್ರಾಮಿಕ ರೋಗವೆಂದು ಶಿಖರಸೂರ್ಯನಂಥ ವೈದ್ಯಗೆ ಹೇಳಿಕೊಡಬೇಕಾಗಿದ್ದರಲಿಲ್ಲ. ಆದರೆ ಧಾನ್ಯದ ಅಭಾವ ಅದಕ್ಕಿಂತ ಭಯಾನಕವೆನ್ನುವುದೈ ನಿಜ! |
ಇನ್ನು ಜನಗಳಾಡಿದ ಒಂದು ಮಾತೂ ಇವನ ಕಿವಿ ಹೊಕ್ಕು ಮಿಡಿಯಲಿಲ್ಲ. ಮಿಡಿಯುವದಕ್ಕೆ ಶಿಖರಸೂರ್ಯ ಬಿಡಲಿಲ್ಲ. ಸಧ್ಯ ತನ್ನ ಆಯುಧಾಗಾರದಲ್ಲಿ ವರ್ತಕರನ್ನು ಎದುರಿಸುವ ಆಯುಧಗಳಿರಲಿಲ್ಲ. ಅವನ್ನು ಸೃಷ್ಟಿಸಬೇಕಾಗಿತ್ತು. ಯಾಕೆಂದರೆ ಈ ರಾಜ್ಯವೇ ಅವರದು. ಆದರೆ ಇಷ್ಟು ಗೊತ್ತಿದ್ದೂ ಅವನು ಅಸಹಾಯಕನಾಗಿದ್ದ. ಬರುವ ಸುಗ್ಗಿಯತನಕ ಹ್ಯಾಗೋ ನಿಭಾಯಿಸಿಕೊಂಡು ಹೋಗಬೇಕೆಂದು ಎಲ್ಲರಿಗೂ ಬುದ್ಧಿ ಹೇಳುತ್ತಿದ್ದ. |
ಅಷ್ಟರಲ್ಲಿ ಶಿವಾಪುರದಲ್ಲಿ ಧಾನ್ಯದ ಹೇರಳ ಸಂಗ್ರಹವಿದೆಯೆಂಬ ಸುದ್ದಿ ಬಂತು ನೋಡು, ಶಿಖರಸೂರ್ಯನ ಕಿವಿ ಚುರುಕಾದವು. ಕ್ಷಿಪ್ರವಾಗಿ ಶಿವಾಪುರವನ್ನು ವಶಕ್ಕೆ ತಕ್ಕೊಳ್ಳುವ ಯೋಜನೆ ತಯಾರಿಸಿದ. ಸಿಡಿತಲೆ ಎಳೆಯುವ ಎರಡು ಗಾಡಿಗಳು, ಸಿಡಿತಲೆ ಸಿಡಿಸುವ ಎಂಟು ಜನ ಯೋಧರನ್ನು ಕರೆದು ಸಜ್ಜಾಗಿರಬೇಕೆಂದು ಆಜ್ಞೆಮಾಡಿದ. |
ಶಿವಾಪುರವೇನು ದೊಡ್ಡ ರಾಜ್ಯವಲ್ಲ. ಎದುರಿಸುವಂಥ ಪಡೆಯಿಲ್ಲ, ಕೋಟೆ ಕೊತ್ತಳಗಳಿಲ್ಲ. ನೇರ ಹೋಗಿ ಧಾನ್ಯ ತಗೊಂಡು ಬೆಟ್ಟವ ವಶಪಡಿಸಿಕೊಂಡು ಬರುವುದೆಷ್ಟೋ ಅಷ್ಟೇ ಎಂಬಷ್ಟು ಸರಳ ಸಮಸ್ಯೆಯಾದರೂ ಇಷ್ಟೆಲ್ಲಾ ಪೂರ್ವತಯಾರಿ ಮತ್ತೂ ಒಂದು ಯೋಜನೆ ಬೇಕೇ? ಎನಿಸಬಹುದು. ಆದರೆ ಅದು ಜನಸಾಮಾನ್ಯರ ನಂಬಿಕೆಯ ಪ್ರದೇಶ. ಬಂಟರ ಸಹಾಯವಿಲ್ಲದೆ ತಾನೊಬ್ಬನೇ ಹೋಗಿ ಪ್ರಯೋಜನವಿಲ್ಲ. ದೋಚಿದ ಧಾನ್ಯವನ್ನ ತರಬೇಕಾದರೂ ಜನ ಬೇಕಲ್ಲ? ಇದು ಜನತೆಗೆ ಹೇಳುವ ಉತ್ತರವಾದರೂ ಅವನ ಮನದಿಂಗಿತದ ಮಹತ್ವಾಕಾಂಕ್ಷೆ ಇನ್ನೂ ಆಳವಾಗಿತ್ತು. ಶಿವಾಪುರದ ಮಡುವಿನ ಬುಡದಿಂದ ಬೆಟ್ಟದ ತುದಿಯವರೆಗಿನ ಒಂದೇ ಅಖಂಡ ಬಂಡೆ ಅಸಲಿ ಚಿನ್ನದ ಗಟ್ಟಿಯಾಗಿತ್ತು! ಅದು ನನ್ನದಾದರೆ ನನಗೆ ಸರಿಸಾಟಿ ಯಾರು? ಆವಾಗ ಇಂದ್ರ ಚಂದ್ರರಿಗೂ ಬಿಡಿಗಾಸಿನ ಬೆಲೆ ಇರೋದಿಲ್ಲ! ಅದನ್ನ ದೋಚಬೇಕಾದರೆ ಜನರ ಮನಸ್ಸನ್ನು ಪ್ರಭಾವಗೊಳಿಸುವ, ಒಪ್ಪಿಸುವ ರಾಜಕೀಯ ಬಲಬೇಕಿತ್ತು! |
ನಮ್ಮ ಭಂಟರೋ ಶಿವಾಪುರ, ಶಿವಪಾದ, ಅಮ್ಮ ಎಂದರೆ ಅಡ್ಡ ಬೀಳುವಂಥವರು. ಇಂಥವರನ್ನು ಕಟ್ಟಿಕೊಂಡು ಶಿವಾಪುರದೆದುರು ಯುದ್ಧ ಮಾಡಲಾದೀತೆ? ಬಂಡೆಯ, ಸುಕ್ರರು ಮಾತ್ರವಲ್ಲ ಯಾವನೇ ಮನುಷ್ಯನನ್ನು ಒಯ್ಯಬಾರದೆಂದೂ, ಮೇವಿನ ಸೈನಿಕರನ್ನು, ಅದರಲ್ಲೂ ಗೊತ್ತಿಲ್ಲದ ಸ್ಥಳದ ಮೇವಿನಿಂದ ತಯಾರಿಸಲಾದ ಸೈನಿಕರನ್ನು ಯುದ್ಧದಲ್ಲಿ ತೊಡಗಿಸಬೇಕೆಂದೂ ನಿರ್ಧರಿಸಿದ. ಮತ್ತು ತಾನೂ ಶಿವಾಪುರದ ಮೇಲೆ ಯುದ್ಧಕ್ಕೆ ಹೋಗುತ್ತಿರುವ ಸಂಗತಿಯನ್ನು ಗೌಪ್ಯವಾಗಿಡಬೇಕೆಂದೂ ಸುಕ್ರನಿಗೆ ಹೇಳಿ, ಸಿಡಿತಲೆ ಎಳೆಯುವ ಎರಡು ಗಾಡಿ, ಹಾಗೂ ತನಗಾಗಿ ಇನ್ನೊಂದು ಗಾಡಿ ಹಾಗೂ ಎಂಟು ಜನ ಬಂಟರನ್ನು ಜೊತೆ ಕರೆದುಕೊಂಡು ಶಿವಾಪುರಕ್ಕೆ ಪಯಣವಾದ. |
ಊರು ಪ್ರವೇಶಿಸುವ ಮುನ್ನ ಅಗಸಿಯಲ್ಲಿ ಗಾಡೀ ನಿಲ್ಲಿಸಿ ಒಂದು ಸಲ ಇಡೀ ರಸ್ತೆಯನ್ನೆ, ಆಜೂ ಬಾಜೂ ಇದ್ದ ಮನೆ ಗೊಡುಗಳನ್ನ, ರಸ್ತೆಯಂಚಿನ ಮಂಟಪವನ್ನ, ಬೀದಿಯ ಎಡಭಾಗದಲ್ಲಿ ಎದ್ದು ಕಾಣುವ ಬೆಳ್ಳಿಯ ಮನೆಯನ್ನ ನೋಡಿದ. ಈಗ ಬೆಳ್ಳಿಯೇ ಹೊರಗಡೆ ಬಂದು ನಿಂತರೆ – ಅವಳೆದುರು ತನ್ನ ವೈಭವವನ್ನು ಮೆರೆಯಬಹುದೆಂಬ ಆಸೆ ಮೂಡಿತು. "ಇಂದಿಲ್ಲಾ ನಾಳೆ ನನ್ನ ಬಳಿಗೆ ಬರಲೇಬೆಕಲ್ಲ" ಎಂದುಕೊಳ್ಳುತ್ತ ಆಮೇಲೆ ಬೆಟ್ಟದ ಕಡೆಗೆ ದೃಷ್ಟಿಯನ್ನು ಚಲಿಸಿದ. ದೃಷ್ಟಿ ತುದಿ ತಲುಪುವ ಮುನ್ನವೇ ಗೋಮಾಳದ ದಿನ್ನೆಯ ಮೇಲೊಂದು ಹೊಸ ದೇವಸ್ಥಾನ ಎದ್ದುದನ್ನು ನೋಡಿ ಇದಾವ ದೇವರು ಬಂತೋ ಎಂದು ಶಿವಾಪುರದ ಮೂಢನಂಬಿಕೆಗೆ ಕರುಣೆಗೊಂಡು, ಆಮೇಲೆ ಬೆಟ್ಟವ ನೋಡಿದ! ಕಣ್ಣು ಫಳ್ಳನೆ ಮಿಂಚಿದವು! ಚಿನ್ನದ ಬೆಟ್ಟ! ಇದೊಂದು ವಶವಾದರೆ…. ಎಂದುಕೊಳ್ಳುತ್ತ, ಅದು ವಶವಾದ ಮೇಲೆ ತನಗೆ ಸಿಕ್ಕುವ ವೈಭವವನ್ನ ಕಲ್ಪಿಸಿಕೊಂಡು ಪುಳಕಿತನಾದ! |
ಊರಿನ ಜನರಾಗಲೇ ಕುದುರೆಗಾಡಿಯ ಸುತ್ತ ನೆರೆದಿದ್ದರು. ಮಕ್ಕಳು ಹೆಂಗಸರು ಭೀತಿ ಬೆರಗುಗಳಿಂದ ರಾಜನನ್ನೇ ದುರುಗುಟ್ಟಿಕೊಂಡು ನೋಡುತ್ತಿದ್ದರು. ಜನಗಳೇನು ರಾಜನನ್ನು ಕಾಣದವರಲ್ಲ. ಆದರೆ ಇವನ ವೈಭವ ತುಂಡರಸರ ವೈಭವಕ್ಕಿಂತ ಎಷ್ಟೋ ಪಾಲು ಹೆಚ್ಚಾಗಿತ್ತು. ಇವನ ಆಕಾರ, ವ್ಯಕ್ತಿತ್ವವು ಹಾಗಿತ್ತು. ಆದರೆ ಈ ಹಿಂದೆ ನಮ್ಮಲ್ಲಿದ್ದ ಜನಸೂರ್ಯನೇ ಇವನು! ಎಂದು ಯಾರಿಗೊಬ್ಬರಿಗೂ ಹೊಳೆಯಲಿಲ್ಲ. ಯಾರಿವನು? ರಾಜನೋ? ದೇವರೋ? ಎಂದು ಜನ ತಂತಮ್ಮಲ್ಲೇ ಕದ್ದಾಡಿಕೊಳ್ಳುತ್ತಿದ್ದರು. |
ಈ ಊರನ್ನು ಮೊದಲಿನಿಂದ ಬಲ್ಲನೆಂದು ತೋರಿಸಿಕೊಳ್ಳಲು – ಅಂದರೆ ಆಗಲಾದರೂ ಜನ ತನ್ನನ್ನು ಗುರುತಿಸಿ ಬೆರಗುಗೊಂಡಾರೆಂದು, – |
"ಅಮ್ಮನ ಜಾತ್ರೆ ಯಾವಾಗ್ರಯ್ಯಾ?" |
ಅಂದ. ಈ ಮಾತು ಅರ್ಥವಾಗಿ ಅನೇಕರು ಉತ್ತರಿಸಲು ಮುಂದೆ ಬಂದರು. ಒಬ್ಬೊಬ್ಬರು ಒಂದೊಂದು ಉತ್ತರ ಕೊಟ್ಟರೂ ಎಲ್ಲ ಉತ್ತರಗಳ ಸಾರಾಂಶ ಒಂದೇ ಆಗಿತ್ತು: ಜಾತ್ರೆ ಎಂದೋ ಮುಗಿದು ಹೋಗಿದೆ! |
ಶಿಖರಸೂರ್ಯನಿಗೆ ನಿರಾಸೆಯಾಯ್ತು. ತಕ್ಷಣ ಕುದುರೆಗಳನ್ನ ಚಲಿಸುವಂತೆ ಮಾಡಿ ಊರ ಹೊರಗಿನ ಮುರಿಗೆಪ್ಪನ ತೋಟಕ್ಕೆ ಹೋದ! |
ಅಲ್ಲಿ ಇಳಿದುಕೊಳ್ಳುವ ವ್ಯವಸ್ಥೆ ಮಾಡಿ ನಿನ್ನಡಿಯ ಕರೆತರಲು ಜನ ಕಳಿಸಿ ಬೆಟ್ಟಕ್ಕೆ ಹೋದ. ಮ್ಯಾಲೆ ಆಕಾಶದ ನೀಲಿ ಮಡುಗಟ್ಟಿದ ಸರೋವರದ ಹಾಗೆ, ಕೆಂದೇರಿದ ಸೂರ್ಯ ಅದರಲ್ಲಿ ಅರಳಿದ ಕಮಲದ ಹಾಗೆ ಕಾನುತ್ತಿದ್ದ. ಸಂಜೆಯ ನಸುಗೆಂಪು ವರ್ಣವನ್ನ ಮೋಡಗಳ ಮ್ಯಾಲೆ ಚೆಲ್ಲಿ ಅಲ್ಲಿ ಸ್ವರ್ಗ ಪ್ರತಿಬಿಂಬಿಸಿದಂತೆ ಕಾಣುತ್ತಿತ್ತು. ಕೆಳಗೆ ಶಿವಾಪುರದ ಬದುಕು ಸ್ತಬ್ಧವಾಗಿರುವಂತೆ ಮೌನ ಆವರಿಸಿತ್ತು. |
ಬೆಟ್ಟ ಹತ್ತಿ ಹೊನ್ನೆಮರದಡಿಯ ಕಟ್ಟೆಯ ಮೇಲೆ ಕೂತ. ಆ ಮರದಡಿ ಕೂತಾಗ ಯಾರೋ ಗುಡ್ಡದಳತೆಯ ವ್ಯಕ್ತಿಯೊಬ್ಬನ ಮುಂದೆ ಕೂತಂತೆ ಅನುಭವವಾಯಿತು. ಆ ಗಾತ್ರದ ವ್ಯಕ್ತಿ ನಿಜವಾಗಿ ಅಕ್ಕಪಕ್ಕ ಕೂತರೆ…. ಎಷ್ಟು ಭಯಾನಕ ಅಂದುಕೊಂಡು ಆಮೇಲೆ ಶಿವಪಾದ ನಿಲ್ಲುತ್ತಿದ್ದ ಸ್ಥಳಕ್ಕೆ ಹೋಗಿ ನಿಂತುಕೊಂಡ. ಪರಿಮಳಯುಕ್ತವಾದ ಗಾಳಿಯ ಸೇವನೆಯಿಂದ ಶ್ವಾಸಕೋಶಗಳಿಗೆ ಚೈತನ್ಯವೊದಗಿ ಸಂತೋಷವಾಯಿತು. ಕೊಳ್ಳ, ಘಟಪ್ರಭಾ ನದಿ, ಬೆಟ್ಟ, ನಾಚಿಕೆಯಿಂದ ಮರಗಳಲ್ಲಿ ಮುಖ ಮುಚ್ಚಿಕೊಂಡ ಶಿವಾಪುರ – ಇವೆಲ್ಲ ಮನಪಸಂದಾಗಿ ಶೋಭಿಸಿದವು. ವಿಭಿನ್ನ ಸೌಂದರ್ಯದ ಈ ನೋಟದಿಂದ ಶಿಖರಸೂರ್ಯನಲ್ಲಿ ಮಾತ್ಸರ್ಯ ಉಂಟಾಯಿತು. ತನ್ನಲ್ಲಿಗೆ ಒಬ್ಬ ಚಕ್ರವರ್ತಿ ಬಂದಿರುವನೆಂದಾಗಲಿ, ತನ್ನನ್ನು ಇದಕ್ಕಿಂತ ನೂರುಪಟ್ಟು ಆಕರ್ಷಣೀಯ ಸ್ಥಳವನ್ನಾಗಿ ಮಾಡಬಲ್ಲ ದೊರೆ ಬಂದಿರುವನೆಂದಾಗಲೆ ಬಡ ಶಿವಾಪುರಕ್ಕೆ ಗೊತ್ತೇ ಇರಲಿಲ್ಲ! |
ಕೆಳಗಿನ ಕೊಳ್ಳ, ಗದ್ದೆಗಳು, ಕಾಡಿನ ಹಸಿರು ಎಲ್ಲವನ್ನು ನೋಡುತ್ತಿದ್ದಂತೆ ಶಿವಪಾದ ಹೇಳುತ್ತಿದ್ದುದು ನೆನಪಾಯಿತು: |
"ಕನಕಪುರಿಯವನನ್ನ ಕೇಳು: 'ನನ್ನಂಥಾ ಬಡವನೇ ಜಗತ್ತಿನಲ್ಲಿಲ್ಲ' ಅಂತಾನೆ". |
"ಶಿವಪುರದವನನ್ನ ಕೇಳು: ಈ ಹಸಿರು, ಬೆಟ್ಟ, ನದಿ, ಕೊಳ್ಳ, ಆಕಾಶ, ಭೂಮಿ ಎಲ್ಲವೂ ನಮ್ಮದೆ! ನಮ್ಮಂಥಾ ಶ್ರೀಮಂತರು ಯಾರಿದ್ದಾರಪ್ಪಾ?" |
ಈ ಮಾತು ಈಗ ನಿಜ ಅನ್ನಿಸಿತು. 'ಇದೆಲ್ಲಾ ನನ್ನದೇ!' ಎಂದು ಹೆಮ್ಮೆಯಿಂದ ಕೊಳ್ಳವನ್ನ, ಬೆಟ್ಟದಿಂದ ಇಳಿವ ಘಟಪ್ರಭಾ, ಅದು ಬೀಳುವಲ್ಲಿ ಉಂಟಾದ ಚಂದ್ರಾವತಿ ಮಡು, ಅದರ ಸುತ್ತ ಥರಾವರಿ ಮರಗಳು, ನಿರ್ಭಯದಿಂದ ನೀರು ಕುಡಿಯಲಯ ಬರುವ ಮೃಗಗಳು, ದಂಡೆಯನ್ನು ಬಿಡಲಾರದೆ ಅಲ್ಲೇ ಮಲಗಿ ಕಾಲ ಕಳೆಯುವ ಸೋಂಬೇರಿ ಪ್ರಾಣಿಗಳು, ಮಡುವಿನಲ್ಲಿರುವ ಚಿನ್ನದ ಹರಳುಗಳು, ಮಂಟಪವೊಂದೇ ಎತ್ತರವಾಗಿರುವ ಪುಟ್ಟ ಶಿವಾಪುರ, ಕಡುವಾದ ಹಸಿರು ಘನೀಭೂತವಾದಂತಿದ್ದ ಕಾಡು, ಇದೆಲ್ಲಾ ನನ್ನದೇ! ಹಿಂದೆ ಇಲ್ಲಿದ್ದಾಗ ಯಾವುದೂ ಚಂದ ಕಂಡಿರಲಿಲ್ಲ. ಈಗ ಎಲ್ಲವೂ ಚಂದ ಕಂಡಿತು. ಶಿವಾಪುರದ ಸೌಂದರ್ಯವನ್ನು ಹಡಿದ ಕಣ್ಣುಗಳಿಂದ ಹೀರುವಂತೆ ನೋಡಿದ. ಈಗ ಬೆಳ್ಳಿಯ ನೆನಪಾಯಿತು. ಅವಳ ಭುಜದ ಮೇಲೆ ಎಡಗೈ ಇಟ್ಟು ಜೊತೆಯಲ್ಲಿ ಕೆಳಗಿನ ಶಿವಾಪುರವ ನೋಡುವಂತಾಗಿದ್ದರೆ! |
'ಸೂರ್ಯನ ಕಿರಣಗಳಲ್ಲಿ ಮಿನಿಗುತ್ತಿರುವ ಚಿನ್ನದ ಘಟ್ಟಿ ಈ ಬೆಟ್ಟ, ಈಗ ನನ್ನ ಪದತಲದಲ್ಲಿದೆ! ಎಲಗೇ ಬೆಡಗಿನ ಬೆಳ್ಳಿ, ಈ ಬೆಟ್ಟದ ಮ್ಯಾಲೊಂದು ರಾಜಧಾನಿಯ ನಿರ್ಮಿಸುತ್ತೇನೆ ನಿನಗಾಗಿ! ಭವ್ಯ, ಅದ್ಭುತ ಸೌಧಗಳ ನಗರಿಗೆ ನೀನೇ ಮಹಾರಾಣಿ. ಐವತ್ತಾರು ದೇಶಗಳ ಚಕ್ರವರ್ತಿನಿ! ಐವತ್ತಾರು ದೇಶಗಳಿಗೆ ಕೃಪೆ ಮಾಡುವ ಸ್ಥಳದಲ್ಲಿ ನಿನ್ನ ಕೂರಿಸುತ್ತೇನೆಯೇ ಬೆಳ್ಳಿ!' |
'ಎಷ್ಟು ವರ್ಷಗಳಿಂದ ಇದು ಹೀಗೇ ಇದೆಯಲ್ಲ!' ಎಂದು ಶಿವಾಪುರದ ಪ್ರಾಚೀನ ಸೌಂದರ್ಯಕ್ಕೆ ಮಾರುಹೋದ! ಎಷ್ಟೊಂದು ಕಾಲ ಸರಿದು, ಏನೆಲ್ಲ ಬದಲಾವಣೆಗಳನ್ನ ಕಂಡಿವೆ ಕನಕಪುರಿಯಂಥ ಸ್ಥಳಗಳು! ಕಾಲದ ಒಂದೊಂದು ಹೆಜ್ಜೆ ಗುರುತುಗಳನ್ನೂ ಲೆಕ್ಕ ಹಾಕಿ ಹೇಳಬಹುದಾದಂತೆ ಕನಕಪುರಿಯ ಲಕ್ಷಣಗಳಿಗೆ. ಆದರೆ ಈ ಶಿವಾಪುರ ಹಾಗಲ್ಲ, ಕಾಲ ಇಲ್ಲೂ ಇದೆ – ಅಖಂಡವಾಗಿ, ತಾನಿಟ್ಟ ಎಲ್ಲಾ ಹೆಜ್ಜೆಗಳ ಜೀವಂತ ಮೊತ್ತವಾಗಿ! ನಾನು ಕಟ್ಟಲಿರುವ ರಾಜಧಾನಿ ನಿರ್ಮಾಣವಾದ ಮೇಲೆ ಈ ಭಾಗ ಹ್ಯಾಗೆ ಕಾಣುವುದೆಂಬ ಕಲ್ಪನೆಯಿಂದ ಪುಳಕಿತನಾದ. |
ಇಷ್ಟು ದಿನ ಕನಸಾಗಿದ್ದ ಶಿವಾಪುರ ಈಗ ನನ್ನ ವಶದಲ್ಲಿದೆ. ಮನಸ್ಸು ಮಾಡಿದರೆ ನಾನಿದನ್ನ ಬೂದಿ ಮಾಡಬಹುದು. ಬೇಕಾದರೆ ಇಂದ್ರ ನಗರಿಯಾಗಿ ಪರಿವರ್ತಿಸಬಹುದು. ಎರಡೂ ನನ್ನ ಕೈಯಲ್ಲಿವೆ! |
ತಾನು ಮತ್ತು ಬೆಳ್ಳಿ ಎದುರಾಗುವುದನ್ನ ಕಲ್ಪಿಸಿಕೊಂಡ. 'ಕಳೆದ ಬಾರಿ ಅವಳು ತಿರಸ್ಕರಿಸಿದ್ದರೆ ಅದು ಸಹಜವೆ. ಆಗಿನ್ನೂ ಜಟ್ಟಿಗನಿದ್ದ. ತಾನೊಬ್ಬ ಭಿಕಾರಿಯಾಗಿದ್ದ. ಈಗ ನಾನು ಚಕ್ರವರ್ತಿ! ಒಂದು ಕಡಿಮೆ ಇಪ್ಪತ್ತು ದೇಶಗಳ ರಾಜ ಮಹಾರಾಜರುಗಳೇ ನನ್ನ ಆಜ್ಞೆಗಾಗಿ ಕಾದಿರುವಾಗ ನಿನ್ನಡಿ ಬೆಳ್ಳಿಗಳ್ಯಾರು? ಎಷ್ಟರವರು?' |
ಕೆಳಗಿನ ಶಿವಪುರದ ಪ್ರಾಣಿಗಳಂತಿರುವ ಜನಗಳನ್ನು ಜ್ಞಾಪಿಸಿಕೊಂಡು ಖಿನ್ನನಾದ. ನಾನವರಿಗೆ ನಾಗರಿಕತೆ ಕಲಿಸಬೇಕು. ಕಾಡಿಗಿಂತ ಹೆಚ್ಚು ಮಹತ್ವಾಕಾಂಕ್ಷೆಯ, ಹೆಚ್ಚು ಸುಖ ಸೌಲಭ್ಯಗಳುಳ್ಳ, ಹೆಚ್ಚು ಆನಂದವನ್ನ ನೀಡುವ ಜೀವನ ಪದ್ಧತಿಯಿದೆ. ಬರೀ ಪ್ರಾಣಿಗಳಂತೆ ಬದುಕುವುದರಲ್ಲೇ ಮನುಷ್ಯನ ಸುಖ ನಿಲ್ಲುವುದಿಲ್ಲ, ಅದರಾಚೆಗೂ ಇದೆಯೆಂಬುದನ್ನು ಇವರಿಗೆ ತೋರಿಸುತ್ತೇನೆ. ನಿಮ್ಮ ನೆಮ್ಮದಿ ಪ್ರಾಣಿಗಳಿಗಿರುವ ನೆಮ್ಮದಿ ಕಣ್ರಯ್ಯಾ! ಬುದ್ಧಿವಂತರ ನೆಮ್ಮದಿಯಲ್ಲ. ಬುದ್ಧಿವಂತರಾಗಿದ್ದರೆ ಈ ರೀತಿ ಪ್ರಾಣಿಗಳಂತೆ ನೀವು ಇರುತ್ತಿರಲಿಲ್ಲ – ಎಂಬುದನ್ನ ಖಾತ್ರಿ ಮಾಡಿಕೊಡುತ್ತೇನೆ. |
"ನಾನು ಅವರಿಗೆ ಚಿನ್ನದ ಹೊಸ ದೇವರನ್ನು ತೋರಿಸುತ್ತೇನೆ. ಅವರ ಗವಿಯಲ್ಲೇ ಇರುವ ಹಡೆಯುವ ಕಲ್ಲಿನ ದೇವರಿಗೆ ಬದಲು, ಹೊಳೆಯುವ, ಹೊಟ್ಟೆ ತುಂಬಿಸುವ ಚಿನ್ನದ ದೇವರನ್ನ ತೋರಿಸುತ್ತೇನೆ. ಮಂಕು ಮರುಳು ಮಾಡುವ ಕತೆ ಹಾಡುಗಳಿಂದಲ್ಲ. ನೇರವಾಗಿ ಕಣ್ಣಿಗೆ ರಾಚುವಂತೆ ಸತ್ಯ ತೋರಿಸುವುದರಿಂದ ಅವರನ್ನು ತಿದ್ದುತ್ತೇನೆ. ಹೊಚ್ಚು ಹೊಸ ಭವ್ಯ ಭವಿಷ್ಯವನ್ನು ತೋರಿಸುತ್ತೇನೆ, ನಾನೇ ನಿಮ್ಮ ಭವಿಷ್ಯ ಅಂತ ಹೇಳ್ತೇನೆ". |
"ಗೊಡ್ಡು ಅಮ್ಮನನ್ನು ಬಿಟ್ಟು ಇನ್ನೊಂದನ್ನು ಕಾಣದ ಈ ಊರಿಗೆ ಕನಕಪುರಿಯ ವ್ಯವಹಾರ ಪ್ರತಿಭೆಯನ್ನ ಕಸಿ ಮಾಡಿ ಬೆಟ್ಟದಗುಂಟ ದೊಡ್ಡ ರಾಜಧಾನಿಯನ್ನು ಕಟ್ಟುತ್ತೇನೆ! ಇನ್ನು ಮುಂದೆ ಇದು ಅಮ್ಮನ ದರಿದ್ರ ಶಿವಪುರವಾಗಿ ಉಳಿಯುವುದಿಲ್ಲ. ಸೂರ್ಯಪುರವಾಗಿ ಐವತ್ತಾರು ದೇಶಗಳ ಬೃಹನ್ನಗರವಾಗಿ ಬೆಳೆಯುತ್ತದೆ" |
– ಎಂದು ಅಂದುಕೊಳ್ಳುವಷ್ಟರಲ್ಲಿ ಯಾರೋ ಬಂದಂತೆನಿಸಿ ತಕ್ಷಣ ಹೊನ್ನೆ ಮರದ ಮರೆಗೆ ನಿಂತು ಬಂದವರು ಯಾರು ಎಂದು ಹಣಿಕಿದ. ಒಬ್ಬ ಹೆಂಗಸು, ಅವಳ ಹಿಂದಿನಿಂದ ಒಬ್ಬ ತರುಣ ಇದ್ದ. ಹೆಂಗಸು ಬೆನ್ನ ಮೇಲೆ ಹಸಿಕೂದಲು ಬಿಟ್ಟಿದ್ದಳು. ಮಿಂದು ಒದ್ದೆ ಬಟ್ಟೆಯಲ್ಲೇ ಬಂದಿದ್ದರಿಂದ ಬಟ್ಟೆ ಮೈಗುಂಟ ದೇಹದ ಸಣ್ಣ ದೊಡ್ಡ ಉಬ್ಬುಗಳನ್ನು ಆಕರ್ಷವಾಗಿ ತೋರಿಸುತ್ತಿತ್ತು. ಇನ್ನೂ ಮುಂದೆ ಬಂದಾಗ ನೋಡಿದರೆ ಬೆಳ್ಳಿ! ಶಿಖರಸೂರ್ಯನ ಹೃದಯದ ಬಡಿತ ಹೆಚ್ಚಾಗಿ, ಮುಖಕ್ಕೆ ನೆತ್ತರೇರಿ ಒಂದು ಕ್ಷಣ ಕಣ್ಣು ಮುಚ್ಚಿ ಸುಧಾರಿಸಿಕೊಂಡ. ಅಷ್ಟರಲ್ಲಿ ತರುಣನೂ ಹತ್ತಿರ ಬಂದ. ಸೊಂಟದ ಬಟ್ಟೆ ಬಿಟ್ಟರೆ ಉಳಿದಂತೆ ಅವನೂ ಮಿಂದು ಬಂದುದರಿಂದ ಒದ್ದೆ ಕೂದಲು ಕತ್ತು, ಭುಜಗಳ ಮ್ಯಾಲೆ ಹರಡಿ ಅವನ ಆಕೃತಿಗೊಂದು ಅನುಪಮ ಸೌಂದರ್ಯ ಕೊಟ್ಟಿತ್ತು. ಆಗಂತುಕರಿಬ್ಬರೂ ಆ ಕಡೆ ಈ ಕಡೆ ನೋಡದೆ ನೇರವಾಗಿ ಗವಿಯೊಳಕ್ಕೆ ಹೋದರು. ಈಗಿವರು ಬಂದದ್ದು ಶಿವಪಾದ ನಿರ್ವಾಣವಾದ ನಂತರದ ಮೂರನೇ ಹುಣ್ಣಿಮೆಯ ಶಿವಸೋಮವಾರದಂದು. |
By kanaja|2013-01-13T08:21:11+05:30January 13, 2013|ಕನ್ನಡ, ಜ್ಞಾನಪೀಠ ಪುರಸ್ಕೃತರ ಕೃತಿ ಸಂಚಯ, ಡಾ. ಚಂದ್ರಶೇಖರ ಕಂಬಾರ|0 Comments |
ಕಾಂಗ್ರೆಸ್, ಬಿಜೆಪಿ: ಮೂಲ-ವಲಸಿಗ ರಾಜಕಾರಣ | Udayavani – ಉದಯವಾಣಿ |
Sunday, 24 Oct 2021 | UPDATED: 06:00 PM IST |
Team Udayavani, Jul 5, 2021, 6:30 AM IST |
ರಾಜ್ಯ ಬಿಜೆಪಿಯಲ್ಲಿ ಹಾಲಿ ಇರುವ ಮುಖ್ಯಮಂತ್ರಿಯ ಬದಲಾವಣೆಯ ಚರ್ಚೆ ನಡೆಯತ್ತಿದ್ದರೆ, ಇನ್ನೊಂದೆಡೆ ಚುನಾವಣೆಗೆ ಇನ್ನೂ ಒಂದು ವರ್ಷ ಹತ್ತು ತಿಂಗಳು ಸಮಯ ಇರುವಾಗಲೇ ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಚರ್ಚೆ ಆರಂಭವಾಗಿದ್ದು, ಎರಡೂ ಪಕ್ಷಗಳ ನಾಯಕತ್ವದ ಗೊಂದಲಕ್ಕೆ ಕಾರಣವಾಗಿದ್ದು ಮಾತ್ರ "ಮೂಲ ಮತ್ತು ವಲಸಿಗ' ಎನ್ನುವ ರಾಜಕಾರಣದ ಅನುಕೂಲಸಿಂಧು ಪದ. |
ರಾಜಕಾರಣ ನಿಂತ ನೀರಲ್ಲ ಎನ್ನುವುದು ಸರ್ವವಿದಿತ. ನಿಂತ ನೀರಿಗಿಂತ ಹರಿಯುವ ನೀರು ಹೆಚ್ಚು ಶುಭ್ರ ಮತ್ತು ಸ್ವತ್ಛವಾಗಿರುತ್ತದೆ. ಹರಿಯುವ ನೀರು ಅಂತಿಮವಾಗಿ ಸಮುದ್ರ ಸೇರುತ್ತದೆ. ಆದರೆ ರಾಜಕಾರಣದಲ್ಲಿ ವಲಸೆ ಎಂಬ ಹರಿಯುವ ನೀರಿನ ಶುಭ್ರತೆಯ ಬಗ್ಗೆ ಅಷ್ಟು ಖಚಿತವಾಗಿ ಹೇಳುವುದು ಕಷ್ಟ. ಅಷ್ಟೇ ಅಲ್ಲದೇ ರಾಜಕಾರಣದಲ್ಲಿ ಇತ್ತೀಚಿನ ದಿನಗಳಲ್ಲಿ ಪಕ್ಷಾಂತರದ ಅಂತಿಮ ಗುರಿ ಅಧಿಕಾರವೇ ಆದಂತಾಗಿದೆ. |
ರಾಜಕಾರಣದಲ್ಲಿ ವಲಸೆ ಎನ್ನುವುದು ಈಗ ಆರಂಭವಾಗಿರುವುದೇನಲ್ಲ. ರಾಜಕೀಯದ ಆಗಿನ ಕಾಲಘಟ್ಟದಲ್ಲಿ ನಾಯಕರ ನಡುವಿನ ಪ್ರತಿಷ್ಠೆ, ಅಧಿಕಾರಕ್ಕಾಗಿ ತಿಕ್ಕಾಟ, ಇರುವ ಪಕ್ಷದಲ್ಲಿನ ನಿರ್ಲಕ್ಷ್ಯ, ಅರ್ಹತೆಗೆ ಸಿಗದ ಮಾನ್ಯತೆ ಹಲವಾರು ಕಾರಣಗಳಿಂದ ರಾಜಕಾರಣದಲ್ಲಿ ವಲಸೆ ಎನ್ನುವುದು ನಿರಂತರವಾಗಿ ನಡೆಯುತ್ತಲೇ ಇದೆ. |
ನಾಗರಿಕತೆಯ ಉದಯದಿಂದಲೂ ಮಾನವ ನದಿ ದಂಡೆ ಮತ್ತು ಫಲವತ್ತಾದ ಭೂಮಿ ಇರುವ ಕಡೆಗೆ ವಲಸೆ ಹೋಗುವ ಪ್ರವೃತ್ತಿ ಇದೆ. ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ರಾಜಕೀಯ ವಲಸೆಗಳೂ ಅದೇ ರೀತಿಯಲ್ಲಿ ಕಾಣಿಸುತ್ತಿವೆ. ರಾಜ್ಯದಲ್ಲಿ ಈಗ ಅಧಿಕಾರಕ್ಕಾಗಿ ನಡೆಯುತ್ತಿರುವ ಸಂಘರ್ಷಕ್ಕೆ ಕಾರಣವಾಗಿರುವ ಎರಡು ಮಹಾ ವಲಸೆಗಳ ಬಗ್ಗೆ ಚರ್ಚೆಯಾಗುತ್ತಿದೆ. |
ವಿಪಕ್ಷ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್‌ಗೆ ಬಂದು ದಶಕವೊಂದು ಕಳೆದು ಹೋಗಿದ್ದರೂ ಅವರನ್ನು ವಲಸಿಗರು ಎನ್ನುವ ಮಾತುಗಳು ಅಧಿಕಾರ ವಂಚಿತ ಮೂಲ ಕಾಂಗ್ರೆಸ್ ನಾಯಕರ ವಲಯದಿಂದ ಕೇಳು ಬರುತ್ತಿವೆ. |
ಯಾವುದೇ ವ್ಯವಸ್ಥೆಯಲ್ಲಿ ಹೊರಗಡೆಯಿಂದ ಬಂದವರಿಗೆ ಹೆಚ್ಚಿನ ಆದ್ಯತೆ ಸಿಗುವುದು ಸಾಮಾನ್ಯ, ಅದು ಅತಿಥಿ ದೇವೋಭವ ಎನ್ನುವ ನಮ್ಮ ಸಂಸ್ಕೃತಿಯ ಭಾಗವಾಗಿರುವುದೂ ಕಾರಣವಾಗಿರಬಹುದು. ಹೀಗಾಗಿ ಯಾರೇ ಹೊರಗಿನಿಂದ ಬಂದರೂ ಅವರಿಗೆ ಹೆಚ್ಚಿನ ಮರ್ಯಾದೆ ದೊರೆ ಯುವಂತೆ ನೋಡಿಕೊಳ್ಳಲಾಗುತ್ತದೆ. ಅದು ಒಂದು ರೀತಿ ಮನೆಯ ಅಳಿಯನಿಗೆ ಕೊಡುವ ಮರ್ಯಾದೆ ಯಂತೆ. ಮನೆ ಮಗನಿಗೆ ಏನಾದರೂ ದೊರೆಯ ದಿದ್ದರೆ ಹೇಗಿದ್ದರೂ ಮನೆಯಲ್ಲಿಯೇ ಇರುತ್ತಾನೆ. ಆದರೆ ಮನೆ ಅಳಿಯನಿಗೆ ಸಿಗಬೇಕಾಗಿದ್ದು ಸಿಗದೇ ಹೋದಾಗ ಮುನಿಸಿಕೊಂಡು ಹೋದರೆ, ಮಗಳ ಸಂಸಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಅದೇ ರೀತಿ ರಾಜಕೀಯದಲ್ಲಿಯೂ ವಲಸೆ ಬಂದ ನಾಯಕರು ಮುನಿಸಿಕೊಳ್ಳದಂತೆ ನೋಡಿಕೊಳ್ಳುವ ಜವಾಬ್ದಾರಿ ಪಕ್ಷಕ್ಕೆ ಕರೆದುಕೊಂಡು ಬಂದ ಪಕ್ಷದ ಜವಾಬ್ದಾರಿ ಹೊತ್ತಿರುವ ನಾಯಕರ ಮೇಲೆ ಬೀಳುತ್ತದೆ. ಅದೇ ಕಾರಣಕ್ಕೆ ವಲಸಿಗರಿಗೆ ಹೆಚ್ಚಿನ ಪ್ರಾಧಾನ್ಯ ದೊರೆಯುತ್ತದೆ. ವಲಸಿಗರಿಗೆ ತಮ್ಮಿಂದಲೇ ಅಧಿಕಾರ ಎನ್ನುವ ಅಹಂ ಬರುವುದರಿಂದ ಎಷ್ಟೋ ಸಾರಿ ಅದೇ ಅವರ ಅಸ್ತ್ರವೂ ಆಗಿ ಬಿಡುತ್ತದೆ. |
ಈಗ ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ಬಿಜೆಪಿಗೆ ವಲಸೆ ಬಂದವವರೂ ಕೂಡ ತಮ್ಮಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎನ್ನುವ ವಾದ ಮುಂದಿಡುತ್ತಿದ್ದಾರೆ. ಅವರ ವಾದವನ್ನೂ ಅಲ್ಲಗಳೆಯುವಂತಿಲ್ಲ. ಆದರೆ ಅವರಿಂದ ಮಾತ್ರ ಸರಕಾರ ರಚನೆಯಾಗಿಲ್ಲ. ನಮ್ಮದೂ ಪಾಲಿದೆ ಎನ್ನುವುದು ಮೂಲ ಬಿಜೆಪಿಗರ ವಾದ. ಇಲ್ಲಿ ಅಧಿಕಾರ ಹಿಡಿಯುವುದೇ ಮೂಲ ಉದ್ದೇಶವಾಗಿದ್ದರಿಂದ ಇಲ್ಲಿ ವಲಸೆ-ಮೂಲ ಎಂಬ ವಾದಕ್ಕೆ ಮಹತ್ವ ಇಲ್ಲ ಎನಿಸುತ್ತದೆ. |
ಹಾಲಿ ಬಿಜೆಪಿ ಸರಕಾರದಲ್ಲಿ ಸಚಿವರ ಪಟ್ಟಿ ಮಾಡುತ್ತ ಹೋದರೆ, ಶೇ. 70ರಷ್ಟು ವಲಸಿಗರೇ ಇದ್ದಾರೆ, ಈ ಹಿಂದೆಯೂ ಜನತಾ ಪರಿವಾರದಿಂದ ವಲಸೆ ಬಂದವರು ಈಗ ಮೂಲ ಬಿಜೆಪಿಗರಂತಾಗಿದ್ದಾರೆ. ಆದರೆ ಅವರಿಗೂ ಮಹತ್ವದ ಹುದ್ದೆ ನೀಡುವ ವಿಚಾರ ಬಂದಾಗ ಅವರೂ ವಲಸಿಗರೇ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತವೆ. |
ಬದಲಾದ ರಾಜಕಾರಣದಲ್ಲಿ ವಲಸಿಗರ ಎಲ್ಲ ಬೇಡಿಕೆಗಳನ್ನು ಈಡೇರಿಸುವುದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಕಷ್ಟವಾಗುತ್ತಿರುವಂತೆ ಕಾಣಿಸುತ್ತಿದೆ. ಅದೇ ಕಾರಣಕ್ಕೆ ಬಿಜೆಪಿಯಲ್ಲಿ ಆಂತರಿಕ ಸಂಘರ್ಷ ಹೆಚ್ಚಾಗಲು ಕಾರಣವಾಗಿದೆ. |
ಬಿಜೆಪಿ ಹಾಗೂ ಕಾಂಗ್ರೆಸ್ ಆಗಿರಲಿ ಯಾವುದೇ ರಾಜಕೀಯ ಪಕ್ಷಕ್ಕೆ ಅಧಿಕಾರಕ್ಕೆ ಬರುವುದೇ ಅಂತಿಮ ಗುರಿಯಾದರೆ ರಾಜಕಾರಣದಲ್ಲಿ ತಣ್ತೀ ಸಿದ್ಧಾಂತ ತನ್ನ ಮಹತ್ವ ಕಳೆದುಕೊಳ್ಳುತ್ತವೆ. ಯಾವುದೇ ನಾಯಕನ ವಲಸೆ ಇರುವ ವ್ಯವಸ್ಥೆಗೆ ಬಲ ತುಂಬುವಂತಾಗಬೇಕು. ಅಲ್ಲದೇ ವ್ಯವಸ್ಥೆಯಲ್ಲಿನ ಒಗ್ಗಟ್ಟಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವಂತಿರಬೇಕು. ಆದರೆ ವಲಸೆಯ ಉದ್ದೇಶ ಹಾಗೂ ಪಕ್ಷಕ್ಕೆ ಸೇರಿಸಿಕೊಳ್ಳುವ ಉದ್ದೇಶವೂ ಬದಲಾದಂತೆ ಕಾಣಿಸುತ್ತಿದೆ. |
ಸರಕಾರವನ್ನು ಪತನ ಮಾಡಿ ಹೋದವರನ್ನೇ ಮರಳಿ ಬನ್ನಿ ಎಂದು ರಾಷ್ಟ್ರೀಯ ಪಕ್ಷದ ರಾಜ್ಯ ಅಧ್ಯಕ್ಷರೇ ಬಹಿರಂಗವಾಗಿ ಆಹ್ವಾನ ನೀಡುವಂತಾದರೆ, ಆ ಪಕ್ಷ ತತ್ವಸಿದ್ಧಾಂತಕ್ಕಿಂತ ಅಧಿಕಾರಕ್ಕಾಗಿ ಎಷ್ಟು ಹಪಹಪಿಸುತ್ತಿದೆ ಎನ್ನುವುದು ವೇದ್ಯವಾಗುತ್ತದೆ. |
ರಾಜಕೀಯ ಪಕ್ಷಗಳ ನಾಯಕರ ವಲಸೆ ಪಕ್ಷದ ಮೂಲ ನಾಯಕರನ್ನಷ್ಟೇ ಅಲ್ಲ. ಪಕ್ಷಕ್ಕಾಗಿ ನಿರಂತರವಾಗಿ ಬೆವರು ಹರಿಸುವ ಕಾರ್ಯಕರ್ತರನ್ನೂ ತೆರೆಗೆ ಸರಿಸಿ ತನ್ನ ಪ್ರಭಾವ ಹೆಚ್ಚಾಗುವಂತೆ ನೋಡಿಕೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ಅಧಿಕಾರಕ್ಕಾಗಿಯೇ ರಾಜಕಾರಣ ಮಾಡುವ ಮನಃಸ್ಥಿತಿ ಹೆಚ್ಚುತ್ತಿರುವುದು ವಲಸೆ ರಾಜಕಾರಣಕ್ಕೆ ಹೆಚ್ಚು ಮಹತ್ವ ಬಂದಂತಾಗಿದೆ. ವಲಸೆ ಎನ್ನುವುದು ರಾಜಕೀಯ ಪಕ್ಷಗಳ ನಾಯಕರು ಹಾಗೂ ಕಾರ್ಯಕರ್ತರ ನಡುವೆ ಆಂತರಿಕ ಸಂಘರ್ಷ ಹೆಚ್ಚಾಗುವಂತೆ ಮಾಡುತ್ತದೆ. ಇದರ ಪರಿಣಾಮ ನಾಯಕರು ಬೇರೆ ಪಕ್ಷಗಳ ವಿರುದ್ಧ ಹೋರಾಟ ಮಾಡುವುದಕ್ಕಿಂತ ಪಕ್ಷದಲ್ಲಿನ ವಲಸೆ ನಾಯಕನ ವಿರುದ್ಧವೇ ಸಂಘರ್ಷ ನಡೆಸುವ ಪ್ರಮೇಯ ಹೆಚ್ಚಾಗುತ್ತದೆ. ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರಕ್ಕೆ ಬರುವ ನಿರೀಕ್ಷೆಯಲ್ಲಿ ಮೂಲ ವಲಸಿಗರ ನಡುವಿನ ಸಂಘರ್ಷ ಕೇವಲ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ನಡೆಯದೇ ಬ್ಲಾಕ್ ಮಟ್ಟದ ಕಾರ್ಯಕರ್ತರ ನಡುವೆಯೂ ನಡೆಯು ತ್ತಿದ್ದು, ಆಂತರಿಕ ಸಂಘರ್ಷ ಪಕ್ಷವನ್ನು ಅಧಿಕಾರಕ್ಕೆ ತರುವುದಕ್ಕಿಂತ ಹೆಚ್ಚಾಗಿ, ಇನ್ನೊಬ್ಬರಿಗೆ ಅಧಿಕಾರ ದೊರೆಯದಂತೆ ನೋಡಿಕೊಳ್ಳುವುದಕ್ಕೆ ಹೆಚ್ಚಿನ ಪ್ರಾಧಾನ್ಯ ದೊರೆಯುವಂತೆ ಮಾಡುತ್ತದೆ. |
ವಲಸೆ ಇರುವ ವ್ಯವಸ್ಥೆಯನ್ನು ಬುಡಮೇಲು ಮಾಡುವಂತಾದರೆ, ಅದು ರಾಜಕೀಯಕ್ಕಷ್ಟೇ ಮಾತ್ರವಲ್ಲ ರಾಜ್ಯಕ್ಕೂ ಒಳ್ಳೆಯದಲ್ಲ. ಅಂತಹ ವ್ಯವಸ್ಥೆಗೆ ರಾಜಕೀಯ ಪಕ್ಷಗಳೇ ನಿಯಂತ್ರಣ ಹಾಕುವ ವ್ಯವಸ್ಥೆ ನಿರ್ಮಾಣವಾಗಬೇಕು. ಅಧಿಕಾರದ ಆಸೆಗಾಗಿ ನಡೆಯುವ ರಾಜಕೀಯ ವಲಸೆಯಿಂದ ರಾಜ್ಯ ಮತ್ತು ಸಮಾಜದ ಉದ್ಧಾರ ಆಗುವುದು ಕಷ್ಟ. ಅಧಿಕಾರಕ್ಕಾಗಿ ನಡೆಯುವ ರಾಜಕೀಯ ವಲಸೆಗೆ ತಡೆಯೊಡ್ಡದಿದ್ದರೆ, ಕೊಳಚೆ ನೀರನ್ನೇ ನದಿಯೆಂದು ಪೂಜಿಸುವ ಪರಿಸ್ಥಿತಿಗೆ ಬಂದಂತಾಗುತ್ತದೆ. |
ಈಗಿನ ಪ್ರಸಕ್ತ ರಾಜ್ಯ ರಾಜಕೀಯದಲ್ಲಿನ ವಿದ್ಯ ಮಾನಗಳು ರಾಜ್ಯದ ಅಭಿವೃದ್ಧಿಗೆ ಪೂರಕವಾಗಿರುವುದಕ್ಕಿಂತ ಮಾರಕವಾಗುವುದೇ ಹೆಚ್ಚು. ಈ ನಿಟ್ಟಿನಲ್ಲಿ ಹಾಲಿ ಸರಕಾರದಲ್ಲಿನ ಮೂಲ ವಲಸಿಗರ ನಡುವಿನ ಗೊಂದಲ ಹಾಗೂ ಈಗಲೇ ಅಧಿಕಾರಕ್ಕೇರುವ ಲೆಕ್ಕಾಚಾರದಲ್ಲಿ ಮೂಲ ವಲಸಿಗರೆಂದು ಬೀದಿ ರಂಪ ಮಾಡುವ ರಾಜಕಾರಣ ಬದಿಗಿಟ್ಟು ರಾಜ್ಯದ ಹಿತದೃಷ್ಟಿಯಿಂದ ರಾಜಕಾರಣ ಮಾಡುವ ಅಗತ್ಯ ಹೆಚ್ಚಿದೆ. ಅದಕ್ಕಾಗಿ ವಲಸೆ ಮತ್ತು ಅದರ ಬಗೆಗಿನ ರಾಜಕೀಯ ನಾಯಕರ ಮನಃಸ್ಥಿತಿ ಎರಡೂ ಬದಲಾಗಬೇಕಿದೆ. |
ದುಬೈನಲ್ಲಿ ಮನಸೂರೆಗೊಂಡ 'ಅಷ್ಟಭುಜೆ ಆದಿಮಾಯೆ' ತಾಳಮದ್ದಳೆ | Yakshagana Talamaddale performance in Dubai - Kannada Oneindia |
By ಪದ್ಯಾಣ ರಾಮಚಂದ್ರ, ಅಬುಧಾಬಿ |
ಸಮಾನ ಯಕ್ಷಮನಸ್ಕರ ಒಗ್ಗೂಡುವಿಕೆಯಿಂದ ಶೇಖರ್ ಡಿ ಶೆಟ್ಟಿಗಾರ್ ಮಾರ್ಗದರ್ಶನದಲ್ಲಿ, ಸಂಯುಕ್ತ ಅರಬ್ ಸಂಸ್ಥಾನದ ಸ್ಥಳೀಯ ಯಕ್ಷಗಾನ ಕಲಾವಿದರು 'ಅಷ್ಟಭುಜೆ ಆದಿಮಾಯೆ' ಎಂಬ ಆಖ್ಯಾನವನ್ನು ತಾಳಮದ್ದಳೆ ರೂಪದಲ್ಲಿ ಶುಕ್ರವಾರ, ದಿನಾಂಕ 22 ಜೂನ್ 2018ರಂದು ದುಬೈಯಲ್ಲಿ ನಡೆಸಿಕೊಟ್ಟರು. |
ಯಕ್ಷಗಾನಾಚಾರ್ಯ ದಿ। ನಿಡ್ಲೆ ನರಸಿಂಹಜ್ಜ ವೇದಿಕೆಯಲ್ಲಿ ಜರುಗಿದ ಕಾರ್ಯಕ್ರಮದ ಸಾಂಪ್ರದಾಯಿಕ ಚೌಕಿ ಪೂಜೆಯನ್ನು ವೆಂಕಟೇಶ್ ಶಾಸ್ತ್ರೀ ಪುತ್ತಿಗೆಯವರು ನೆರವೇರಿಸಿದರು. |
ಸುಮಂಗಳೆಯರೊಡನೆ ದೀಪ ಬೆಳಗಿಸಿ, ಭಾಗ್ಯದ ಲಕ್ಷ್ಮಿ ಬಾರಮ್ಮ ಸ್ತುತಿಯೊಂದಿಗೆ ಮುಖ್ಯ ಅತಿಥಿ ಖ್ಯಾತ ಭರತನಾಟ್ಯ ಕಲಾವಿದೆ ಗುರು ವಿದುಷಿ ಸಪ್ನಾ ಕಿರಣ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. |
"ಯಕ್ಷಗಾನದ ಮತ್ತೊಂದು ಆಯಾಮವಾದ ತಾಳಮದ್ದಳೆ, ಯಕ್ಷಗಾನದಂತೆ ಆಂಗಿಕ, ವಾಚಿಕ, ಸಾತ್ವಿಕ, ಆಹಾರ್ಯಗಳನ್ನು ಕಾಣದೆ ತಮ್ಮ ವಾಚಿಕಾಭಿನಯನದಿಂದ ಪಾತ್ರವನ್ನು ಸೃಷ್ಟಿಸಿ, ಪ್ರೇಕ್ಷಕರನ್ನು ಹಿಡಿದಿರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸಾವಿರ ಮೈಲು ದೂರವಿರುವ ಈ ಮರಳುಗಾಡಿನಲ್ಲಿ ಇದಕ್ಕೆ ಮುಂಗೈವಹಿಸಿ ಕಾರ್ಯಕ್ರಮ ಹಮ್ಮಿಕೊಳ್ಳುವುದು ಸುಲಭ ಮಾತಲ್ಲ. ಈ ನಿಟ್ಟಿನಲ್ಲಿ ಸ್ಥಳೀಯ ಯಕ್ಷಗಾನ ಪ್ರೇಮಿಗಳ ಪ್ರಯತ್ನ ನಿಜಕ್ಕೂ ಶ್ಲಾಘನೀಯ " ಎಂದು ಸಪ್ನಾ ಕಿರಣ್ ಹೊಗಳಿದರು. |
ನಂತರ ಯಕ್ಷಗಾನಾಚಾರ್ಯ ದಿ। ನಿಡ್ಲೆ ನರಸಿಂಹಜ್ಜ ವೇದಿಕೆಯಲ್ಲಿ ನಡೆದ 'ಅಷ್ಟಭುಜೆ ಆದಿಮಾಯೆ' ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿ ಸಂಪನ್ನಗೊಂಡಿತು. ಮೂಲತಃ ಉಕ್ಷ ಬ್ರಹ್ಮ ಬಿರುದಾಂಕಿತ ಅಗರಿ ಶ್ರೀನಿವಾಸ ಭಾಗವತರ "ಶ್ರೀದೇವಿ ಮಹಾತ್ಮೆ" ಪ್ರಸಂಗವನ್ನು ತಾಂತ್ರಿಕ ಕಾರಣಗಳಿಂದ ಬದಲಾವಣೆ ಮಾಡಿಕೊಳ್ಳಲಾಗಿತ್ತು. |
ಉದರ ನಿಮಿತ್ತ ವಿದೇಶದಲ್ಲಿ ನೆಲೆಸಿ, ಈ ತಾಳಮದ್ದಳೆಯಲ್ಲಿ ಪಾಲ್ಗೊಂಡ ಹೆಚ್ಚಿನವರು ಹೊಸ ಕಲಾವಿದರು. ಮನಸ್ಸು ಮಾಡಿದರೆ ಏನನ್ನೂ ಸಾಧಿಸಬಹುದು ಎನ್ನುವುದಕ್ಕೆ ಈ ತಾಳಮದ್ದಳೆ ಸಾಕ್ಷಿಯಾಯಿತು. ಈ ಕಾರ್ಯಕ್ರಮಕ್ಕೆ ಪೂರ್ವಾಭ್ಯಾಸ ತಯಾರಿ, ತರಬೇತಿಗಳು ಇಲ್ಲದೆಯೂ ಕಲಾವಿದರು ಹೆಚ್ಚಿನ ಆತ್ಮವಿಶ್ವಾಸದಿಂದ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿ ಗೊಳಿಸಿದರು. |
ಹಿಮ್ಮೇಳದಲ್ಲಿ ಶೇಖರ್ ಡಿ. ಶೆಟ್ಟಿಗಾರ್, ಕಿನ್ನಿಗೋಳಿ ಶರತ್, ಕುಮಾರ್, ಕೃಷ್ಣ ಪ್ರಸಾದ್ ರಾವ್ ಸುರತ್ಕಲ್, ಭವಾನಿ ಶಂಕರ್ ಶರ್ಮ, ವೆಂಕಟೇಶ್ ಶಾಸ್ತ್ರೀ ಪುತ್ತಿಗೆ, ಗಿರೀಶ್ ನಾರಾಯಣ್ ಕಾಟಿಪಳ್ಳ, ವಿಕ್ರಂ ಶೆಟ್ಟಿ ಕಡಂದಲೆ ಚಕ್ರತಾಳದಲ್ಲಿ ಆದಿತ್ಯ ದಿನೇಶ್ ಕೊಟ್ಟಿಂಜ ಪಾಲ್ಗೊಂಡಿದ್ದರು. |
ಮುಮ್ಮೇಳದಲ್ಲಿ ಸ್ವಾತಿ ಸಂತೋಷ್ ಕಟೀಲು, ಕೃಷ್ಣಪ್ರಸಾದ್ ರಾವ್ ಸುರತ್ಕಲ್, ಕಿಶೋರ್ ಗಟ್ಟಿ ಉಚ್ಚಿಲ, ಲತಾ ಸುರೇಶ ಹೆಗ್ಡೆ, ಗಿರೀಶ್ ನಾರಾಯಣ್ ಕಾಟಿಪಳ್ಳ, ರವಿ ಕೋಟ್ಯಾನ್, ಸಮಂತಾ ಗಿರೀಶ್, ರಜನಿ ಭಟ್ ಕಲ್ಮಡ್ಕ, ಸ್ವಾತಿ ಶರತ್ ಸರಳಾಯ, ಭವಾನಿ ಶಂಕರ್ ಶರ್ಮ, ಸತೀಶ್ ಶೆಟ್ಟಿಗಾರ್ ವಿಟ್ಲ, ಅಶೋಕ್ ಶೆಟ್ಟಿ ಕಾರ್ಕಳ, ಶೇಖರ್ ಡಿ ಶೆಟ್ಟಿಗಾರ್ ಕಿನ್ನಿಗೋಳಿ, ಶರತ್ ಕುಮಾರ್, ಬಾಲಕೃಷ್ಣ ಡಿ ಶೆಟ್ಟಿಗಾರ್ ಕಿನ್ನಿಗೋಳಿ ಭಾಗವಹಿಸಿದ್ದರು. |
ಫೋರ್ಚುನ್ ಗ್ರೂಪ್ ಹೋಟೆಲ್ ನ ಮಾಲೀಕರಾದ ಪ್ರವೀಣ್ ಶೆಟ್ಟಿಯವರು ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತ, "ನುರಿತ ಕಲಾವಿದರಂತೆ ಅರ್ಥವತ್ತಾಗಿ ತಾಳಮದ್ದಳೆ ಮೂಡಿಬಂತು. ಭಾಗವಹಿಸಿದ ಹವ್ಯಾಸಿ ಕಲಾವಿದವರಿಗೆ ಅಭಿನಂದನೆಗಳು. ಇದೊಂದು ಹೊಸ ಪ್ರಯೋಗ, ಹೊಸ ಪ್ರಯತ್ನ ಹಾಗು ಯಶಸ್ವಿಯಾದ ಕಾರ್ಯಕ್ರಮ" ಎಂದು ಹೊಸಬರ ಪ್ರಯತ್ನವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. |
ದಿನೇಶ್ ಶೆಟ್ಟಿ ಕೊಟ್ಟಿಂಜ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಯೋಜಿಸಿ, ಸ್ವಾಗತಿಸಿ, ವಂದನಾರ್ಪಣೆಗೈದು ನಿರೂಪಿಸಿ, ನಿರ್ವಹಿಸಿದರು. ಕಟೀಲಮ್ಮನ ಆಶೀರ್ವಾದದಿಂದ ಮೂಡಿಬಂದ "ಅಷ್ಟಭುಜೆ ಆದಿಮಾಯೆ" ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮಕ್ಕೆ ದೇವಿಸ್ತುತಿಯೊಂದಿಗೆ ಮಂಗಳ ಹಾಡಲಾಯಿತು. |
ವರದಿ : ಪದ್ಯಾಣ ರಾಮಚಂದ್ರ, ಅಬುಧಾಬಿ / ವರ್ಣಚಿತ್ರ : ಶರತ್ ಸರಳಾಯ, ದುಬೈ |
dubai yakshagana nri activities abu dhabi ದುಬೈ ಯಕ್ಷಗಾನ ಅನಿವಾಸಿ ಕನ್ನಡಿಗ ಅಬುಧಾಬಿ |
Yakshagana Talamaddale was performanced in Dubai under the guidance of Shekhar D Shettigar. Many local talented artists also took part in this art form from Karnataka. |
ಬಿಜೆಪಿಯಿಂದ ಮನೆ ಬಾಗಿಲಿಗೆ ಸರ್ಕಾರ: ಸಚಿವ ಮುನೇನಕೊಪ್ಪ | Minister Shankar Patil Munenkoppa Talks Over BJP Government grg |
ಬಿಜೆಪಿಯಿಂದ ಮನೆ ಬಾಗಿಲಿಗೆ ಸರ್ಕಾರ: ಸಚಿವ ಮುನೇನಕೊಪ್ಪ |
* ಹುಬ್ಬಳ್ಳಿಯಲ್ಲಿ ನವಭಾರತ ಮೇಳಕ್ಕೆ ಚಾಲನೆ |
* ಹುಬ್ಬಳ್ಳಿ- ಧಾರವಾಡ ಹಿಂದೆಂದಿಗಿಂತಲೂ ವೇಗವಾಗಿ ಅಭಿವೃದ್ಧಿ |
* ಪ್ರಧಾನಿ ಮೋದಿ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ರಾಜ್ಯ ಸರ್ಕಾರ |
Bengaluru, First Published Oct 4, 2021, 10:40 AM IST |
ಹುಬ್ಬಳ್ಳಿ(ಅ.04): ಪ್ರಧಾನಿ ನರೇಂದ್ರ ಮೋದಿ(Narendra Modi) ನೇತೃತ್ವದ ಕೇಂದ್ರ ಸರ್ಕಾರ ಕಳೆದ ಏಳು ವರ್ಷಗಳಲ್ಲಿ ಅಗಾಧ ಸಾಧನೆ ಮಾಡಿದ್ದು, ಜನರ ಮನೆ ಬಾಗಿಲಿಗೆ ಆಡಳಿತ ಕೊಂಡೊಯ್ದಿದೆ ಎಂದು ಜವಳಿ, ಸಕ್ಕರೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಂಕರಪಾಟೀಲ್ ಮುನೇನಕೊಪ್ಪ(Shankar Patil Munenkoppa) ಹೇಳಿದ್ದಾರೆ. |
ನಗರದ ಮೂರುಸಾವಿರ ಮಠದ ಸಭಾಂಗಣದಲ್ಲಿ ನವಭಾರತ ಮೇಳಕ್ಕೆ ಚಾಲನೆ ನೀಡಿ ಮಾತನಾಡಿ, ದೇಶದ ಹೆಮ್ಮೆಯ ಪ್ರಧಾನಿ ಮೋದಿ ಕುರಿತು ಜನತೆಗೆ ತಿಳಿಸಲು ಮೇಳ ಆಯೋಜನೆ ಮಾಡಲಾಗಿದೆ. ಮೋದಿ ಅವರ ಜೀವನಚರಿತ್ರೆಯನ್ನು ವಸ್ತು ಪ್ರದರ್ಶನದಲ್ಲಿ ಬಿಂಬಿಸಲಾಗಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ(BJP) ಸರ್ಕಾರ ಇರುವುದು ಹೆಚ್ಚಿನ ಅಭಿವೃದ್ಧಿ ಸಾಧಿಸಲು ಅನುಕೂಲವಾಗಿದೆ ಎಂದರು. ಮುಂದಿನ ದಿನಗಳಲ್ಲಿ ಜನತೆ ಸಾಕಷ್ಟು ಅಭಿವೃದ್ಧಿಯನ್ನು ಕಾಣಲಿದ್ದಾರೆ ಎಂದರು. |
ದೇಶಕ್ಕಾಗಿ ದುಡಿಯುತ್ತಿರುವ ಏಕೈಕ ಪಕ್ಷ ಬಿಜೆಪಿ: ಮುನೇನಕೊಪ್ಪ |
ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಬಿಜೆಪಿಯಿಂದಾಗಿ ಜನತೆಯ ದಶಕಗಳ ಕನಸು, ಅಭಿವೃದ್ಧಿ ಈಡೇರುತ್ತಿದೆ. ಹುಬ್ಬಳ್ಳಿ- ಧಾರವಾಡ ಹಿಂದೆಂದಿಗಿಂತಲೂ ವೇಗವಾಗಿ ಬದಲಾವಣೆಗಳನ್ನು ಕಾಣುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ರಾಜ್ಯ ಸರ್ಕಾರ ಮುನ್ನಡೆಯುತ್ತಿದೆ ಎಂದರು. |
ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರ ಜೀವನವನ್ನು ಕಟ್ಟಿಕೊಡುವ ಹಾಗೂ ಕೇಂದ್ರ ಸರ್ಕಾರದ ಸಾಧನೆಯನ್ನು ತಿಳಿಸುವ ಫಲಕವನ್ನು ಪ್ರದರ್ಶಿಸಲಾಯಿತು. ಕಾರ್ಯಕರ್ತರು ಮೋದಿ ಅವರನ್ನು ಅಭಿನಂದಿಸಿ ಪತ್ರ ಅಭಿಯಾನ ನಡೆಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ತಿಪ್ಪಣ್ಣ ಮಜ್ಜಗಿ ಸೇರಿದಂತೆ ಹಲವರಿದ್ದರು. |
ಶಿಕ್ಷಕರ ಪ್ರತಿಭಟನೆ(ಗುಡಿಬಂಡೆ) - Nammuru T V |
ಚಿಕ್ಕಬಳ್ಳಾಪುರ/ಗುಡಿಬಂಡೆ: ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಯಿತು. |
ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಬಾಲಾಜಿ ಕಳೆದ 50 ವರ್ಷಗಳಿಂದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ನೀಡುವಲ್ಲಿ ಶಿಕ್ಷರ ಸೇವೆ ಅಪಾರವಾದುದು. 2004 ರಿಂದ ದೇಶದ ಶಿಕ್ಷಕರಿಗೆ ಹಾಗೂ ನೌಕರರಿಗೆ ಜಾರಿಗೆ ತಂದಿರುವ ಹೊಸ ಪಿಂಚಣಿ ಯೋಜನೆ ಅನ್ನು ರದ್ದುಗೊಳಿಸಬೇಕಿದೆ. ಈ ಕುರಿತು ಸಭಂದಪಟ್ಟವರಿಗೆ ಮನವಿ ಸಹ ಮಾಡಲಾಗಿದೆ. ಆದರೆ ಸರ್ಕಾರ ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಲು ಮಿನಾಮೇಷ ಎಣಿಸುತ್ತಿದೆ. ಇದೆ ಅಲ್ಲದೇ ನೌಕರರ ಅನೇಕ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದರು. |
ನಂತರ ಸಂಘದ ಉಪಾಧ್ಯಕ್ಷ ವಿ.ಶ್ರೀರಾಮಪ್ಪ ಮಾತನಾಡಿ ಅಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆಯ ನಿರ್ಧಾರದಂತೆ ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈ ತಿಂಗಳ ಅಂತ್ಯದೊಳಗೆ ಈಡೇರಿಸಿದೆ ಇದ್ದಲ್ಲಿ ಹೋರಾಟದ ಯೋಜನೆಯನ್ನು ರೂಪಿಸಿ, ಕೇಂದ್ರ ಮಟ್ಟದಲ್ಲಿ ಹೋರಾಟ ಮಾಡುತ್ತೇವೆ ಎಂದರು. |
7ನೇ ವೇತನ ಆಯೋಗದ ಶಿಫಾರಸ್ಸು ಗಳನ್ನು ಎಲ್ಲಾ ರಾಜ್ಯಗಳಲ್ಲಿ ತಕ್ಷಣ ಜಾರಿಗೊಳಿಸುವುದು, ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭ ಮಾಡಿವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಬಿ.ಈ.ಓ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. |
ಈ ವೇಳೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ, ಪ್ರದಾನ ಕಾರ್ಯದರ್ಶಿ ಮುನಿಕೃಷ್ಣ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಇ.ಎನ್. ಶ್ರೀರಾಮರೆಡ್ಡಿ, ಉಪಾಧ್ಯಕ್ಷ ರಘುರಾಮ್, ಖಾಜಾಂಚಿ ಶೈಲಾಕುಮಾರಿ, ಪದಾಧಿಕಾರಿಗಳಾದ ಪುರುಷೋತ್ತಮ್, ಅಶೋಕ್ ಸೇರಿದಂತೆ ಹಲವರು ಇದ್ದರು. |
ಸೆಲ್ಫಿ ತೆಗೆಯಲು ಹೋದವನ ಬೆನ್ನು ಮೂಳೆ ಮುರಿದ ಆನೆ – EESANJE / ಈ ಸಂಜೆ |
ಸೆಲ್ಫಿ ತೆಗೆಯಲು ಹೋದವನ ಬೆನ್ನು ಮೂಳೆ ಮುರಿದ ಆನೆ |
November 24, 2017 Sri Raghav Injured A Man, Selfie Incident, Sira, Tumakuru |
ಶಿರಾ, ನ.24- ಕಾಡಾನೆಗಳ ಮುಂದೆ ಸೆಲ್ಫಿ ತೆಗೆಯಲು ಹೋಗಿದ್ದ ವ್ಯಕ್ತಿಯೊಬ್ಬನ ಮೇಲೆ ಆನೆಯೊಂದು ದಾಳಿ ಮಾಡಿರುವ ಘಟನೆ ತಾಲ್ಲೂಕಿನ ಅಗ್ರಹಾರ ಗ್ರಾಮದಲ್ಲಿ ನಡೆದಿದೆ. ಭೀಮಣ್ಣ (40) ಆನೆ ದಾಳಿಗೆ ಒಳಗಾದ ವ್ಯಕ್ತಿ. ನಿನ್ನೆಯಷ್ಟೆ ಶಿರಾ ನಗರದ ಓಜಗುಂಟೆ ಬಳಿ ಕಾಣಿಸಿಕೊಂಡ ಎರಡು ಕಾಡಾನೆಗಳು ನಗರ ಸೇರಿದಂತೆ ಹಲವಾರು ಗ್ರಾಮದ ಜನರಲ್ಲಿ ಆತಂಕ ಸೃಷ್ಟಿಸಿದ್ದವು. ಅರಣ್ಯ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿಗಳು ಆನೆಗಳನ್ನು ಹಿಮ್ಮೆಟ್ಟಿಸಲು ಹರಸಾಹಸ ಪಟ್ಟರು ಸ್ಥಳ ಬಿಟ್ಟು ಕದಲಿರಲಿಲ್ಲ. ರಾತ್ರಿ ಕಾರ್ಯಾಚರಣೆ ಸ್ಥಗಿತಗೊಂಡ ಕಾರಣ ಪೂಜಾರ ಮುದ್ದನಹಳ್ಳಿ ಹತ್ತಿರ ಪ್ರತ್ಯಕ್ಷವಾಗಿವೆ. ಮತ್ತೆ ಅರಣ್ಯಧಿಕಾರಿಗಳು ಪಟಾಕಿ ಸಿಡಿಸಿದ ಕಾರಣ ಆನೆಗಳು ಅಗ್ರಹಾರ ಕೆರೆಯ ಮೂಲಕ ಹಾಯುತ್ತಿರುವಾಗ ಭೀಮಣ್ಣ ತನ್ನ ಮೊಬೈಲ್‍ನಲ್ಲಿ ಸೆಲ್ಫಿ ತೆಗೆಯಲು ಯತ್ನಿಸಿದ್ದಾನೆ. ಮೊದಲೇ ಗಾಸಿಗೊಂಡಿದ್ದ ಕಾಡಾನೆ ರೊಚ್ಚಿಗೆದ್ದು ದಾಳಿ ಮಾಡಿದ ಪರಿಣಾಮ ಆತನ ಬಲ ಭುಜ, ಕೈಮೂಳೆ ಮುರಿದು ತೀವ್ರತರ ಪಟ್ಟಾದ ಕಾರಣ ಭೀಮಣ್ಣ ನನ್ನು ಚಿಕಿತ್ಸೆಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಧಾಖಲಿಸಲಾಗಿದೆ ಎನ್ನಲಾಗಿದೆ. |
ಪೊಲೀಸ್ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಸಾರ್ವಜನಿಕರು ಕಾಡಾನೆಗಳ ದಾಳಿಗೆ ತುತ್ತಾದಾರೂ ಎಂಬ ಬಗ್ಗೆ ಜನರನ್ನು ಎಷ್ಠೇ ಚದುರಿಸಿದರು ಸಹ ಜನರ ಸೆಲ್ಫಿ ಹುಚ್ಚಿನಿಂದಾಗಿ ಆನೆಗಳು ಕೆರಳುವ ಸ್ಥಿತಿ ನಿರ್ಮಾಣವಾಗಿತ್ತು. ಮಧ್ಯಾಹ್ನದ ಸಮಯಕ್ಕೆ ರಾಜ್ಯದ ಹಾರೋಗೆರೆ ಕಡೇಯಿಂದ ಆಂಧ್ರ ಪ್ರದೇಶದ ಇಟ್ಟಗೆಹಳ್ಳಿ ಗುಟ್ಟೆಯ ಮೂಲಕ ಆನೆಗಳು ಅನ್ಯ ರಾಜ್ಯ ಸೇರಿದನ್ನು ನೋಡಿ ಜನ ನಿಟ್ಟುಸಿರು ಬಿಟ್ಟರು. ಶಿರಾ ಗ್ರಾಮಾಂತರ ಸಿಪಿಐ ಸುದರ್ಶನ್, ಪಿಎಸ್‍ಐ ಬಿ.ಕೆ.ಚಂದ್ರಶೇಖರ್ ಹಾಗೂ ಅರಣ್ಯಧಿಕಾರಿ ಸುರೇಶ್ ಸೇರಿದಂತೆ ಅರಣ್ಯ ಮತ್ತು ಪೊಲೀಸ್ ಸಿಬ್ಬಂದ್ದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. |
ಎಂಜಿ ಗ್ಲೊಸ್ಟರ್ ಬಿಡುಗಡೆಯಾದ ಮೊದಲ ತಿಂಗಳಿನಲ್ಲೇ ಮೊದಲ ಬ್ಯಾಚ್ ಸೋಲ್ಡೌಟ್ - Kannada DriveSpark |
ಎಂಜಿ ಗ್ಲೊಸ್ಟರ್ ಬಿಡುಗಡೆಯಾದ ಮೊದಲ ತಿಂಗಳಿನಲ್ಲೇ ಮೊದಲ ಬ್ಯಾಚ್ ಸೋಲ್ಡೌಟ್ |
Updated: Monday, November 2, 2020, 12:51 [IST] |
ಕಳೆದ ತಿಂಗಳು ಅಕ್ಟೋಬರ್ 8ರಂದು ಭಾರತದಲ್ಲಿ ಬಿಡುಗಡೆಗೊಂಡಿದ್ದ ಎಂಜಿ ಮೋಟಾರ್ ಬಹುನೀರಿಕ್ಷಿತ ಗ್ಲೊಸ್ಟರ್ ಎಸ್‌ಯುವಿ ಕಾರು ಮಾದರಿಯು ಭಾರೀ ಪ್ರಮಾಣದ ಬೇಡಿಕೆ ಹರಿದುಬಂದಿದ್ದು, ಮೊದಲ ಬ್ಯಾಚ್‌ನಲ್ಲಿದ್ದ 2 ಸಾವಿರ ಯುನಿಟ್‌ಗಳಿಗೆ ಬುಕ್ಕಿಂಗ್ ಪಡೆದುಕೊಳ್ಳಲಾಗಿದೆ. |
ಗ್ಲೊಸ್ಟರ್ ಎಸ್‌ಯುವಿ ಕಾರು ಮಾದರಿಯು ಭಾರತದಲ್ಲಿ ಎಂಜಿ ಮೋಟಾರ್ ಕಂಪನಿಯ ನಾಲ್ಕನೇ ಕಾರು ಉತ್ಪನ್ನವಾಗಿದ್ದು, ಹೆಕ್ಟರ್, ಜೆಡ್ಎಸ್ ಎಲೆಕ್ಟ್ರಿಕ್, ಹೆಕ್ಟರ್ ಪ್ಲಸ್ ನಂತರ ಗ್ಲೊಸ್ಟರ್ ಎಸ್‌ಯುವಿ ಮೂಲಕ ಎಂಜಿ ಕಂಪನಿಯು ಹೊಸ ಸಂಚಲನಕ್ಕೆ ಕಾರಣವಾಗಿದೆ. ಐಷಾರಾಮಿ ಫೀಚರ್ಸ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸಿರುವ ಗ್ಲೊಸ್ಟರ್ ಕಾರು 2 ಸಾವಿರ ಯುನಿಟ್‌ಗಳಿಗೆ ಬೇಡಿಕೆ ಪಡೆದುಕೊಂಡಿದ್ದು, ಹೊಸ ಕಾರಿನ ವಿತರಣೆಯು ಈಗಾಗಲೇ ಅಧಿಕೃತವಾಗಿ ಆರಂಭಗೊಂಡಿದೆ. |
ಸೂಪರ್, ಸ್ಮಾರ್ಟ್, ಶಾರ್ಪ್ ಮತ್ತು ಸ್ಯಾವಿ ಎನ್ನುವ ನಾಲ್ಕು ವೆರಿಯೆಂಟ್ ಹೊಂದಿರುವ ಗ್ಲೊಸ್ಟರ್ ಎಸ್‌ಯುವಿ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 28.98 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 35.38 ಲಕ್ಷ ಬೆಲೆ ಹೊಂದಿದೆ. |
ಗ್ರಾಹಕರ ಬೇಡಿಕೆಯೆಂತೆ 6 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ ಎಸ್‌ಯುವಿ ಕಾರು ಮಾದರಿಗಳಲ್ಲೇ ಅತಿ ಹೆಚ್ಚು ವೀಲ್ಹ್ ಬೆಸ್ ಹೊಂದಿರುವ ಗ್ಲೊಸ್ಟರ್ ಕಾರು ಐಷಾರಾಮಿ ಕಾರು ಮಾದರಿಗಳಲ್ಲಿ ಲೆವಲ್ ಅಟೊನೊಮಸ್ ಟೆಕ್ನಾಲಜಿ ಜೋಡಣೆ ಹೊಂದಿದ್ದು, ಟೊಯೊಟಾ ಫಾರ್ಚೂನರ್ ಮತ್ತು ಫೋರ್ಡ್ ಎಂಡೀವರ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ. |
ಬಾಕ್ಸ್ ಆಫೀಸ್‌ಗೆ ಹಣ ತರ್ತಾರಾ ಧ್ರುವ ಸರ್ಜಾ, ಪುನೀತ್, ದರ್ಶನ್? | Can Darshan, Puneeth Rajkumar, Dhruva Sarja Bring Money Back To Box Office? - Kannada Filmibeat |
| Published: Thursday, January 7, 2021, 13:08 [IST] |
Subsets and Splits
No community queries yet
The top public SQL queries from the community will appear here once available.