text stringlengths 0 61.5k |
|---|
ಯಾವುದೇ ಹಗರಣ ಇಲ್ಲದೆ ಇರುವ ಇನ್ನೊಬ್ಬ ಮಹಿಳೆಗೂ ಸಚಿವ ಸ್ಥಾನ ನೀಡಿದರೆ ಯಾವುದೇ ಬೇಜಾರಿರಲಿಲ್ಲ. ಸ್ವಂತ ಬಲದಿಂದ ಗೆದ್ದಿರುವ ನನಗೂ ಹಾಗೂ ಇನ್ನೊಬ್ಬ ಮಹಿಳಾ ಶಾಸಕಿಯವರಿಗೂ ಇದು ಪಕ್ಷ ಮಾಡುತ್ತಿರುವ ದೊಡ್ಡ ಅವಮಾನ. ಚಿತ್ರದುರ್ಗ ಜಿಲ್ಲೆಯಲ್ಲಿ ಗೂಳಿಹಟ್ಟಿ ಶೇಖರ್, ಚಂದ್ರಪ್ಪರಂತಹ ಹಿರಿಯ ನಾಯಕರು ಮತ್ತು ಆರು ಬಾರಿ ಗೆದ್ದಂತಹ ತಿಪ್ಪಾರೆಡ್ಡಿ ಅವರಿಗಾದರೂ ಸಚಿವ ಸ್ಥಾನ ನೀಡಬಹುದಿತ್ತು. |
ಇದು ಪಕ್ಷವು ನಮ್ಮ ಜಿಲ್ಲೆಗೆ ಮಾಡುತ್ತಿರುವ ಅವಮಾನ. ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ರಾಜ್ಯದ ಗೊಲ್ಲ ಸಮುದಾಯವು 80 ರಷ್ಟು ಭಾಗವು ಬಿಜೆಪಿಗೆ ಮತ ನೀಡಿದ ಗೊಲ್ಲ ಸಮುದಾಯವನ್ನು ಪಕ್ಷ ಮರೆಯಬಾರದಿತ್ತು. ರಾಜ್ಯದಲ್ಲಿ 40 ಲಕ್ಷಕ್ಕೂ ಹೆಚ್ಚು ಗೊಲ್ಲ ಸಮುದಾಯದ ಮತಗಳಿದ್ದು, ಒಂದು ಸ್ಥಾನ ನೀಡದೇ ಇರುವುದು ತುಂಬಾ ನೋವುಂಟು ಮಾಡಿದೆ. |
ರಾಜ್ಯ ಸಂಪುಟಕ್ಕೆ ನೂತನವಾಗಿ ಸೇರ್ಪಡೆಯಾಗಿರುವ ಎಲ್ಲಾ ಸಚಿವರಿಗೂ ಹೃದಯಪೂರ್ವಕ ಅಭಿನಂದನೆಗಳು.... ಎಂದು ಫೇಸ್ ಬುಕ್ ಪೋಸ್ಟ್ ಹಾಕಿದ್ದಾರೆ. |
ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ಧ್ವಂಸ |
chitradurga basavaraj bommai cabinet expansion bjp politics ಚಿತ್ರದುರ್ಗ ಬಸವರಾಜ ಬೊಮ್ಮಾಯಿ ಸಂಪುಟ ವಿಸ್ತರಣೆ ಬಿಜೆಪಿ ರಾಜಕೀಯ |
Supporters of the Hiriyur BJP MLA Poornima Srinivas blocked the Pune-Bengaluru national highway on August 4, 2021. Poornima Srinivas not get minister post in Karnataka chief minister Basavaraj Bommai cabinet. |
'ಬ್ರೇಕಿಂಗ್ ನ್ಯೂಸ್, ಕೊಹ್ಲಿ ಜತೆ ಸೆಲ್ಫಿ ಫೋಟೊ ಸಿಕ್ತು!' | World T20: 'Virat Kohli sir' makes Bengaluru fans happy, signs autographs, clicks selfies - Kannada Oneindia |
» 'ಬ್ರೇಕಿಂಗ್ ನ್ಯೂಸ್, ಕೊಹ್ಲಿ ಜತೆ ಸೆಲ್ಫಿ ಫೋಟೊ ಸಿಕ್ತು!' |
'ಬ್ರೇಕಿಂಗ್ ನ್ಯೂಸ್, ಕೊಹ್ಲಿ ಜತೆ ಸೆಲ್ಫಿ ಫೋಟೊ ಸಿಕ್ತು!' |
Updated: Wednesday, March 23, 2016, 0:07 [IST] |
ಬೆಂಗಳೂರು, ಮಾರ್ಚ್ 22: 'ಬ್ರೇಕಿಂಗ್ ನ್ಯೂಸ್, ಕೊಹ್ಲಿ ಜತೆ ಸೆಲ್ಫಿ ಫೋಟೊ ಸಿಕ್ತು!'' ಹೀಗೆ ಹದಿಹರೆಯದ ಹುಡುಗಿಯೊಬ್ಬಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ (ಮಾರ್ಚ್ 22) ಸಂಜೆ ಕುಣಿದಾಡುತ್ತಿದ್ದಳು. |
ಟೀಂ ಇಂಡಿಯಾದ ನಂಬುಗೆಯ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಜತೆ ಫೋಟೊ ತೆಗೆಸಿಕೊಂಡ ಸಂಭ್ರಮ ಆಕೆಯಲ್ಲಿತ್ತು. ತಕ್ಷಣವೇ ಈ ಸಂತಸವನ್ನು ಗೆಳತಿಯೊಬ್ಬಳಿಗೆ ಫೋನ್ ಕರೆ ಮೂಲಕ ತಲುಪಿಸುತ್ತಿದ್ದಳು.[ವಿರಾಟ್ ಕೊಹ್ಲಿ-ಅನುಷ್ಕಾ ಬ್ರೇಕ್ ಅಪ್ ರಹಸ್ಯ ಬಹಿರಂಗ] |
ಬೆಂಗಳೂರಿನ ಇಂಡಿಯನ್ ಪ್ರೀಮಿಯರ್ ಲೀಗ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ಮುನ್ನಡೆಸುವ ನಾಯಕ ವಿರಾಟ್ ಕೊಹ್ಲಿಗೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ತವರು ನೆಲ. ಮಾರ್ಚ್ 23ರಂದು ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೆ ಅಭ್ಯಾಸ ನಡೆಸಲು ಬಂದ ವಿರಾಟ್ ಕೊಹ್ಲಿಯನ್ನು ಐವತ್ತಕ್ಕೂ ಅಧಿಕ ಅಭಿಮಾನಿಗಳು ಮುತ್ತಿಕೊಂಡರು. |
ಚಿತ್ರಕೃಪೆ: ಸಿ.ಅಪ್ರಮೇಯ |
ತಾಳ್ಮೆಯಿಂದ ಎಲ್ಲರಿಗೂ ಆಟೋಗ್ರಾಫ್ ನೀಡಿದ ಕೊಹ್ಲಿ |
ಅಭಿಮಾನದ ಪ್ರೀತಿಯಲ್ಲಿ ಬಂಧಿಯಾದ ಕೊಹ್ಲಿ ಅವರು ತಾಳ್ಮೆಯಿಂದ ಎಲ್ಲರಿಗೂ ಆಟೋಗ್ರಾಫ್ ನೀಡಿ, ಸೆಲ್ಫಿ ತೆಗೆಸಿಕೊಂಡು, ಗ್ರೂಪ್ ಫೋಟೋಗೆ ಪೋಸ್ ನೀಡಿದರು. |
ಅಭ್ಯಾಸ ಮುಗಿಯುವವರೆಗೂ ಕಾದ ಅಭಿಮಾನಿಗಳು |
ಡ್ರೆಸಿಂಗ್ ರೂಮಿನಿಂದ ಹೊರ ಬಂದ ನಂತರದ ದೃಶ್ಯ ಇದಾಗಿತ್ತು. ಅಭ್ಯಾಸ ಮುಗಿಸಿಕೊಂಡು ಕೊಹ್ಲಿ ಪೆವಿಲಿಯನ್ ಗೆ ಹಿಂತಿರುಗಿದಾಗಲೂ ಇದೆ ದೃಶ್ಯ ರಿಪೀಟ್ ಆಯಿತು. |
'ವಿ ಲವ್ ಯೂ ಕೊಹ್ಲಿ' ಎಂದ ಹುಡುಗಿಯರು |
ಇತ್ತೀಚೆಗೆ ಕ್ರಿಸ್ ಗೇಲ್ ಪರ ಘೋಷಣೆಯಿಂದ ತುಂಬಿದ ಮೈದಾನ ಇಂದು ವಿರಾಟ್ ಕೊಹ್ಲಿ ಹೆಸರನ್ನು ಪ್ರತಿಧ್ವನಿಸುತ್ತಿತ್ತು. 'ವಿ ಲವ್ ಯೂ ಕೊಹ್ಲಿ' ಎಂದು ಹುಡುಗಿಯರು ಹೇಳುವಾಗ ಕೊಹ್ಲಿ ಅವರೆಡೆಗೆ ಸ್ಮೈಲ್ ಕೊಡದೆ ಇರಲಾಗಲಿಲ್ಲ. |
'ಕೊಹ್ಲಿ ಸಾರ್' ಪ್ಲೀಸ್ ಒಂದು ಸೆಲ್ಫಿ |
ಇನ್ನು ಕೆಲವರು 'ಕೊಹ್ಲಿ ಸಾರ್' ಪ್ಲೀಸ್ ಒಂದು ಸೆಲ್ಫಿ ಎಂದು ಗೋಗರೆದರು. ಭದ್ರತಾ ಸಿಬ್ಬಂದಿಗೆ ಮಾತ್ರ ಅಭಿಮಾನಿಗಳನ್ನು ನಿಯಂತ್ರಿಸುವುದು ತಲೆನೋವಿನ ಕೆಲಸವಾಗಿತ್ತು. |
ಪಾಕಿಸ್ತಾನ ವಿರುದ್ಧ ಭರ್ಜರಿ ಅರ್ಧಶತಕ |
ಪಾಕಿಸ್ತಾನ ವಿರುದ್ಧ ಭರ್ಜರಿ ಅರ್ಧಶತಕ ಸಿಡಿಸಿ ಉತ್ತಮ ಲಯದಲ್ಲಿರುವ ವಿರಾಟ್ ಕೊಹ್ಲಿ ಅವರು ತಮ್ಮ ನೆಚ್ಚಿನ ಮೈದಾನದಲ್ಲಿ ಅಮೋಘ ಪ್ರದರ್ಶನ ನೀಡುತ್ತಾರೆ ಎಂಬ ಭರವಸೆ ಅಭಿಮಾನಿಗಳಲ್ಲಿದೆ. |
ಚಿತ್ರಗಳ ಕೃಪೆ: ಸಿ.ಅಪ್ರಮೇಯ |
ಮಾರ್ಚ್ 23ರಂದು ಬಾಂಗ್ಲಾದೇಶ ವಿರುದ್ಧದ ಪಂದ್ಯ |
virat kohli, world t20, selfie, ksca, bengaluru, chinnaswamy stadium, ವಿರಾಟ್ ಕೊಹ್ಲಿ, ವಿಶ್ವ ಟಿ20, ಸೆಲ್ಫಿ, ಕೆಎಸ್ ಸಿಎ, ಭಾರತ, ಕ್ರಿಕೆಟ್, ಚಿನ್ನಸ್ವಾಮಿ ಕ್ರೀಡಾಂಗಣ |
Virat Kohli is sweating it out, taking catches on the outfield of M Chinnaswamy Stadium on Tuesday (March 22). Around 50 fans at the boundary, scream at the top of their voices to grab his attention. But Kohli carries on with his job. |
ದೇವೇಗೌಡರು ಇನ್ನಷ್ಟು ದಿನ ಪ್ರಧಾನಿಯಾಗಿದ್ದಿದ್ದರೆ ಕಾಶ್ಮೀರ ಸಮಸ್ಯೆ ಪರಿಹಾರವಾಗುತ್ತಿತ್ತು: ಪೇಜಾವರ ಶ್ರೀ | HD Devegowda visits Pejawar Matha and seeks blessings of Sri Vishvesha Tirtha Swamiji | Kannadaprabha.com |
Saturday, July 20, 2019 1:35 PM IST |
ದೇವೇಗೌಡರು ಇನ್ನಷ್ಟು ದಿನ ಪ್ರಧಾನಿಯಾಗಿದ್ದಿದ್ದರೆ ಕಾಶ್ಮೀರ ಸಮಸ್ಯೆ ಪರಿಹಾರವಾಗುತ್ತಿತ್ತು: ಪೇಜಾವರ ಶ್ರೀ |
Published: 14 May 2019 04:59 PM IST |
ಪೇಜಾವರ ಶ್ರೀ ಹಾಗೂ ದೇವೇಗೌಡ |
ಉಡುಪಿ: 10 ತಿಂಗಳು ಪ್ರಧಾನಿಯಾಗಿದ್ದ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಇನ್ನಷ್ಟು ದಿನ ಪ್ರಧಾನಿಯಾಗಿ ಮುಂದುವರಿದ್ದದ್ದರೆ ಕಾಶ್ಮೀರ ಸಮಸ್ಯೆ ಪರಿಹಾರವಾಗುತ್ತಿತ್ತು ಎಂದು ಮಂಗಳವಾರ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದರು ಹೇಳಿದ್ದಾರೆ. |
ಇಂದು ಗೋವಿಂದ ಕಲ್ಯಾಣ ಮಂಟಪದಲ್ಲಿ ತಮ್ಮನ್ನು ಭೇಟಿಯಾದ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ, ಚೆನ್ನಮ್ಮ ದಂಪತಿಯನ್ನು ಅನುಗ್ರಹಿಸಿ ಮಾತನಾಡಿದರ ಶ್ರೀಗಳು, ನಿಷ್ಕಳಂಕ, ಪ್ರಾಮಾಣಿಕ ಭಗವದ್ಭಕ್ತ ರಾಜಕಾರಣಿಯಾದ ದೇವೇಗೌಡರು ಪ್ರಧಾನಿಯಾಗಿದ್ದಾಗ ಉತ್ತಮ ಕೆಲಸಗಳ ಜತೆಗೆ ಹಲವು ಸಮಸ್ಯೆ ಬಗೆಹರಿಸಿದ್ದು, ಅವರೊಬ್ಬ ಉತ್ತಮ ಮುತ್ಸದ್ಧಿ. ರೈತ ಪರ ಹೋರಾಟಗಾರ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹೊಳೆನರಸೀಪುರದಲ್ಲಿ ತಮ್ಮನ್ನು ಭೇಟಿಯಾಗಿ ಜೈಲಿಗೆ ತೆರಳಿದ್ದರು ಎಂದರು. |
ದೇವೇಗೌಡ ಅವರು ಪ್ರಧಾನಿಯಾಗಿದ್ದಾಗ ದಿಲ್ಲಿಯಲ್ಲಿ ಮಠದ ವಿವಿಧ ಯೋಜನೆ, ಅಭಿವೃದ್ಧಿ ಕಾರ್ಯಗಳಿಗಾಗಿ ಜಾಗ ನೀಡಿದ್ದಾರೆ ಎಂದು ಶ್ರೀಗಳು ತಿಳಿಸಿದರು. |
ದೇವೇಗೌಡ ಅವರು ಕುಟುಂಬ ಸಮೇತ ಶ್ರೀಕೃಷ್ಣಮಠದಿಂದ ಗೋವಿಂದ ಕಲ್ಯಾಣ ಮಂಟಪಕ್ಕೆ ಬಂದಿಳಿದಾಗ ಅವರನ್ನು ಮಲ್ಲಿಗೆ ಹೂವಿನ ಹಾರ ಹಾಕಿ ಶಂನ ಸೂಕ್ತ ಪಠಣದೊಂದಿಗೆ ಸ್ವಾಗತಿಸಲಾಯಿತು. |
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ, ಶ್ರೀ ಕೃಷ್ಣಮಠದಲ್ಲಿ ಪೂಜೆ ಜತೆಗೆ 89ನೇ ಹುಟ್ಟು ಹಬ್ಬ ಸಂಭ್ರಮದಲ್ಲಿರುವ ಪೇಜಾವರ ಶ್ರೀಗಳಿಗೆ ಗೌರವ ಸಲ್ಲಿಸಲು ಬಂದಿದ್ದೇನೆ, ಆಯುರ್ವೇದ ಚಿಕಿತ್ಸೆ ಪಡೆಯುತ್ತಿದ್ದೇನೆ, ನೋ ಪೊಲಿಟಿಕ್ಸ್ ಎಂದು ಹೇಳಿದರು. |
Topics : HD Devegowda, Pejawar Matha, Vishvesha Tirtha Swamiji, ಎಚ್ ಡಿ ದೇವೇಗೌಡ, ಪೇಜಾವರ ಮಠ, ಶ್ವೇಶತೀರ್ಥ ಶ್ರೀಗಳು |
ಕನ್ನಡ ರಾಜ್ಯೋತ್ಸವಕ್ಕೆ ಕನ್ನಡಾಭಿಮಾನಿಗಳಿಗೆ ಡಬಲ್ ಧಮಾಕಾ – Public TV |
-ಮದ್ವೆಯಾದವ್ರು ಕೇಳಲೇ ಬೇಕು 'ನಾನು ಮನೆಗೆ ಹೋಗಲ್ಲ' ಹಾಡು |
ಬೆಂಗಳೂರು: ಶರಣ್ ಅಭಿನಯದ ವಿಕ್ಟರಿ-2 ಸಿನಿಮಾ ಇದೇ ನವೆಂಬರ್ 1 ಅಂದ್ರೆ ಕನ್ನಡ ರಾಜ್ಯೋತ್ಸವ ದಿನದಂದು ಬಿಡುಗಡೆ ಆಗಲಿದೆ ಎಂದು ನಿರ್ದೇಶಕ ತರುಣ್ ಸುಧೀರ್ ಟ್ವಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಚಿತ್ರದಲ್ಲಿ ಡಬಲ್ ಫನ್ ಅಂತಾನೇ ಹೇಳಲಾಗುತ್ತಿದ್ದು, ಕನ್ನಡಾಭಿಮಾನಿಗಳು ರಾಜ್ಯೋತ್ಸವದಂದು ಸಿನಿಮಾ ನೋಡಿ ಎಂಜಾಯ್ ಮಾಡಬಹುದು. |
ಈಗಾಗಲೇ ಟ್ರೇಲರ್, ಹಾಡು, ಫೋಟೋಗಳ ಮೂಲಕ ಜನರ ಮೆಚ್ಚುಗೆಯನ್ನು ವಿಕ್ಟರಿ-2 ಸಿನಿಮಾ ಪಡೆದುಕೊಂಡಿದೆ. ಸಿನಿಮಾ ಸೆಟ್ಟೇರಿದಾಗಿನಿಂದಲೂ ಕುತೂಹಲವನ್ನು ಮೂಡಿಸಿದ್ದ ಚಿತ್ರ ಫಸ್ಟ್ ಲುಕ್‍ನಲ್ಲಿ ಶರಣ್ ದ್ವಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಚಿಕ್ಕ ಸುಳಿವು ನೀಡಿತ್ತು. ಫಸ್ಟ್ ಲುಕ್ ಬಳಿಕ ನಾಯಕ ನಟ ಶರಣ್, ರವಿಶಂಕರ್ ಮತ್ತು ಸಾಧುಕೋಕಿಲ ಹೆಣ್ಣು ವೇಷಧಾರಿಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದವು. ಇದನ್ನು ಓದಿ: ಎರಡನೇ ವಿಕ್ಟರಿಯಲ್ಲಿ ಡಬಲ್ ಫನ್ ಫಿಕ್ಸ್ |
ಅಕ್ಟೋಬರ್ 16ರಂದು ವಿಕ್ಟರಿ-2 ಚಿತ್ರದ `ನಾನು ಮನೆಗೆ ಹೋಗೋದಿಲ್ಲ' ಹಾಡು ಮದುವೆ ಆದವರ ನೆಚ್ಚಿನ ಹಾಡು. ಕೇಳಲು ತುಂಬಾ ಕ್ಯಾಚಿಯಾಗಿದ್ದು, ಯೋಗರಾಜ್ ಭಟ್ಟರು ಲೇಖನಿಯಲ್ಲಿ ಮದುವೆಯಾದ ಗಂಡಸರಿಗೆ ಮತ್ತೊಂದು ಸ್ಪೆಷಲ್ ಹಾಡನ್ನು ನೀಡಿದ್ದಾರೆ. ಈ ಹಾಡು ಕೇಳಿದ ಪುನೀತ್ ರಾಜ್‍ಕುಮಾರ್, ಪ್ರಜ್ವಲ್ ದೇವರಾಜ್, ಲೂಸ್ ಮಾದಯೋಗಿ, ಉಪೇಂದ್ರ ಸಖತ್ ಆಗಿದೆ ಎಂದು ಕೊಂಡಾಡಿದ್ದಾರೆ. ಖಾಲಿ ಕ್ವಾಟರ್ ಬಾಟಲ್ ಹಂಗ ಲೈಫು ಎಂದು ಹಾಡಿದ್ದ ವಿಜಯ್ ಪ್ರಕಾಶ್ ನಾನು ಮನೆಗೆ ಹೋಗುದಿಲ್ಲ ಹಾಡಿಗೆ ಕಂಠದಾನ ನೀಡಿದ್ದಾರೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಇದನ್ನು ಓದಿ: ಪ್ಲೀಸ್ ಟ್ರಸ್ಟ್, ನಾನು ಚೀಪ್ & ಬೆಸ್ಟ್- ಆಸ್ಮಿತಾ ಜೊತೆ ವಿಕ್ಟರಿ ಶರಣ್ ಡ್ಯಾನ್ಸ್ |
ಕೆಲವು ದಿನಗಳ ಹಿಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ವಿಕ್ಟರಿ-2 ಸಿನಿಮಾ ಸೆಟ್ ಗೆ ಭೇಟಿ ನೀಡಿದ್ದರು. ಚಿತ್ರದಲ್ಲಿ ದರ್ಶನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬಿತ್ಯಾದಿ ಸುದ್ದಿಗಳು ಸಹ ಹರಿದಾಡಿದ್ದವು. ಈ ಹಿಂದೆ ತರುಣ್ ನಿರ್ದೇಶನದ 'ಚೌಕ' ಸಿನಿಮಾದಲ್ಲಿ ದರ್ಶನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ತರುಣ್ ಮತ್ತು ದರ್ಶನ್ ಇಬ್ಬರು ಒಳ್ಳೆಯ ಸ್ನೇಹಿತರಾಗಿದ್ದರಿಂದ ಸಿನಿಮಾ ಸೆಟ್ ಗೆ ಭೇಟಿ ನೀಡಿದ್ದಾರೆಂದು ಹೇಳಲಾಗಿದೆ. |
ಶರಣ್‍ಗೆ ನಾಯಕಿಯಾಗಿ ಅಪೂರ್ವ, ಅಸ್ಮಿತಾ ಸೂದ್ ಜೊತೆಯಾಗಿದ್ದಾರೆ. ರವಿಶಂಕರ್, ಸಾಧುಕೋಕಿಲಾ, ತಬಲಾ ನಾಣಿ, ನಾಸೀನ್, ಅವಿನಾಶ್, ಮಿತ್ರಾ, ಕಲ್ಯಾಣಿ, ಅರಸು ಮತ್ತು ಸಿದ್ದಿ ಸೇರಿದಂತೆ ದೊಡ್ಡ ತಾರಾಗಣವನ್ನು ಚಿತ್ರ ಹೊಂದಿದೆ. ವಿಕ್ಟರಿಗೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯಾ ಸಂಗೀತ ನೀಡಿದ್ದಾರೆ. ತರುಣ್ ಸುಧೀರ್ ಕಥೆ ಬರೆದಿದ್ದು, ಅಲೆಮಾರಿ ಸಂತು ನಿರ್ದೇಶನ ಮತ್ತು ತರುಣ್ ಶಿವಪ್ಪ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬರುತ್ತಿದೆ. |
Its official.. Very happy to announce that our movie #Victory2 is all set to release on November 1. Need all your Wishes, support and love✌✌ pic.twitter.com/vOWf8VDSTC |
— sharan (@sharanhruday) October 22, 2018 |
#NaavManegHogodila from the movie #Victory2 reached one million views in just two days. Thanks to each and everyone for all the love and support ✌✌???????? pic.twitter.com/9jpeGRvVsO |
— sharan (@sharanhruday) October 17, 2018 |
It's Kumblakai time for VICTORY 2 with a wonderful song "Naav manegogodilla". pic.twitter.com/s9JtueGxl2 |
— sharan (@sharanhruday) September 23, 2018 |
Related Topics:cinemaPublic TVsandalwoodSharantarun shivappaTarun SudhirVictory-2ತರುಣ್ ಶಿವಪ್ಪತರುಣ್ ಸುಧೀರ್ಪಬ್ಲಿಕ್ ಟಿವಿವಿಕ್ಟರಿ 2ಶರಣ್ಸಿನಿಮಾಸ್ಯಾಂಡಲ್‍ವುಡ್ |
ಶ್ರೀಧರಾಯಣ ಅಭಿನಂದನಾ ಕಾರ್ಯಕ್ರಮ |
November 17, 2016 3:43 PM·0 commentsViews: 6 |
ಕಿನ್ನಿಗೋಳಿ: ತೆಂಕುತಿಟ್ಟು ಯಕ್ಷಗಾನ ಕವಿ, ಪ್ರಸಂಗಕರ್ತ, ಯಕ್ಷಪ್ರಭಾ ಮಾಸಪತ್ರಿಕೆಯ ಸಂಪಾದಕರಾಗಿ ಕಟೀಲು ಮೇಳದಲ್ಲಿ 26 ವರ್ಷಗಳಿಂದ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸುತ್ತಿರುವ ಕುಬಣೂರು ಶ್ರೀಧರ ರಾಯರ ಸಾರ್ಥಕ ಸೇವೆಯನ್ನು ಕುಬಣೂರು ಅಭಿಮಾನಿಗಳು ಶ್ರೀಧರಾಯಣ ಅಭಿನಂದನಾ ಕಾರ್ಯಕ್ರಮ ಶನಿವಾರ ಪೂರ್ವಾಹ್ನ ಗಂಟೆ 9 ರಿಂದ ಕಟೀಲು ವಿದ್ಯಾಸದನ ಮತ್ತು ಸರಸ್ವತೀ ಸದನದಲ್ಲಿ ಶೈಕ್ಷಣಿಕ ಗೋಷ್ಠಿಗಳು, ಅಭಿನಂದನೆ, ಸಾಧಕರಿಗೆ ಸನ್ಮಾನ ಪ್ರಶಸ್ತಿ ಪ್ರಧಾನ ಮತ್ತು ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಅಭಿನಂಧನ ಸಮಿತಿ ಅಧ್ಯಕ್ಷ ಶ್ರೀಹರಿನಾರಾಯಣದಾಸ ಆಸ್ರಣ್ಣ ಹೇಳಿದರು. |
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು. |
ಶನಿವಾರ ಪೂರ್ವಾಹ್ನ 9.30ಕ್ಕೆ ಕಟೀಲು ದೇವಳ ಮೊಕ್ತೇಸರ ವಾಸುದೇವ ಆಸ್ರಣ್ಣರು ಶ್ರೀಧರಾಯಣಕ್ಕೆ ದೀಪಬೆಳಗಿಸಿ ಚಾಲನೆ ನೀಡಲಿದ್ದಾರೆ. 10.30ರಿಂದ ಶೈಕ್ಷಣಿಕ ಗೋಷ್ಠಿ ಯಕ್ಷಗಾನ ಹಿಮ್ಮೇಳದಲ್ಲಿ ಪ್ರಸ್ತುತ-ಪ್ರಸ್ತುತಿ ನಡೆಯಲಿದ್ದು ಇದರಲ್ಲಿ ತೆಂಕುತಿಟ್ಟಿನ ಹಿರಿಯ ಹಿಮ್ಮೇಳ ಕಲಾವಿದರು ಭಾಗವಹಿಸಲಿದ್ದಾರೆ, ಅಧ್ಯಯನ ಕಾರಣಗಳಿಂದಾಗಿ ಸುಮಾರು 30 ವಿವಿಧ ಪ್ರಶ್ನೆಗಳನ್ನು ಸಿದ್ದಪಡಿಸಲಾಗಿದೆ ಎಂದು ಆಸ್ರಣ್ಣ ತಿಳಿಸಿದರು. |
ಮಧ್ಯಾಹ್ನದ ಗೋಷ್ಠಿ ರಾಗಾನುಸಂಧಾನ ನಡೆಯಲಿದ್ದು ತೆಂಕು ಮತ್ತು ಬಡಗು ತಿಟ್ಟುಗಳ ಸಮ್ಮಿಲನದಲ್ಲಿ ವಿವಿಧ ರಾಗಗಳ ಅನುಸಂಧಾನದ ಕುರಿತು ವಿಮರ್ಶೆಗಳಲ್ಲಿ ಆಯ್ದ ಹಿರಿಯ ಭಾಗವತರು ಭಾಗವಹಿಸಲಿದ್ದಾರೆ. ಎರಡೂ ಗೋಷ್ಠಿಗಳಲ್ಲಿ ಎಡನೀರು ಕ್ಷೇತ್ರದ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಉಪಸ್ಥಿತರಿದ್ದು ಅವರೊಂದಿಗೆ ಹಿರಿಯ ವಿಧ್ವಾಂಸರು ಅವಲೋಕನಗೈಯಲಿದ್ದಾರೆ. ಸಂಜೆ 5.30 ರಿಂದ ಅಭಿನಂದನಾ ಸಭೆ ನಡೆಯಲಿದ್ದು ಎಡನೀರು ಕ್ಷೇತ್ರದ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿಯ ದಿವ್ಯ ಉಪಸ್ಥಿತಿಯಲ್ಲಿ ಧರ್ಮಸ್ಥಳದ ಡಿ ಹರ್ಷೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕುಬಣೂರು ದಂಪತಿಗಳಿಗೆ ಅಭಿನಂದನೆ. ಶ್ರೀಧರರಾಯರ ಸಂಗೀತ ಗುರುಗಳಾದ ರಘು ಮಾಸ್ತರ್ ಕುಂಬ್ಳೆ ಅವರಿಗೆ ದಾಮೋದರ ಮಂಡೆಚ್ಚ ಪ್ರಶಸ್ತಿ ಪ್ರಧಾನ ಹಿರಿಯ ಸಾಧಕರಿಗೆ ಗೌರವಾರ್ಪಣೆ, ಯಕ್ಷ ಸಂಗೀತ ಶೈಕ್ಷಣಿಕ ಪಾಠದ ಸಿಡಿ ಬಿಡುಗಡೆ, ಕುಬಣೂರು ರವರ ಯಕ್ಷ ಜೀವನ ಆತ್ಮಕಥೆಯನ್ನು ಒಳಗೊಂಡ ಕೃತಿ ಬಿಡುಗಡೆ ಕಾರ್ಯಕ್ರಮವಿರುವುದು ಎಂದರು. |
ರಾತ್ರಿ 7.30ರಿಂದ ಬೆಳಿಗ್ಗೆ 6ವರೆಗೆ ಹಿರಿಯ ಪ್ರಸಿದ್ದ ಕಲಾವಿದರಿಂದ ಬ್ರಹ್ಮ ಕಪಾಲ,ಗಧಾಯುದ್ದ,ರಕ್ತರಾತ್ರಿ ಯಕ್ಷಗಾನ ನಡೆಯಲಿದೆ. ಶ್ರೀಧರರಾಯರ ಪರಿಕಲ್ಪನೆಯಲ್ಲಿ ದೇವೇಂದ್ರನ ಒಡ್ಡೋಲಗ ಹಾಗೂ ಪರಮೇಶ್ವರನ ತಾಂಡವ ನೃತ್ಯ ರೂಪಕ ವನ್ನು ಶ್ರೀ ದುರ್ಗಾ ಮಕ್ಕಳ ಮೇಳದ ವಿದ್ಯಾರ್ಥಿಗಳು ನಡೆಸಲಿದ್ದಾರೆ ಹಿರಿಯ ಕಲಾವಿದರಿಂದ ವಿಶಿಷ್ಟ ಚಂಡೆ ಜುಗಲ್‌ಬಂದಿ ನಡೆಯಲಿದೆ ಎಂದರು. |
ಈ ಸಂದರ್ಭ ಸಮಿತಿಯ ಗೌರವ ಅಧ್ಯಕ್ಷ ಕಮಲಾದೇವಿ ಪ್ರಸಾದ ಆಸ್ರಣ್ಣ, ಅಧ್ಯಕ್ಷ ಶ್ರೀಧರ ಉಡುಪ, ಕಾರ್ಯಾಧ್ಯಕ್ಷ ಮಧುಕರ ಭಾಗವತ್, ಸಂಘಟನಾ ಕಾರ್ಯದರ್ಶಿ ವಾದಿರಾಜ ಕಲ್ಲೂರಾಯ, ಕಾರ್ಯದರ್ಶಿ ಡಾ. ಶುತಕೀರ್ತಿರಾಜ್ ಉಜಿರೆ, ಅಡಕ ಮುದ್ರಿಕೆ ಸಮಿತಿಯ ವೆಂಕಟೇಶ ಉಡುಪ, ವಿಶ್ವೇಶ್ವರ ಭಟ್, ಸಲಹಾ ಸಮಿತಿಯ ರಘುನಾಥಕಾಮತ್ ಕೆಂಚನಕೆರೆ ಉಪಸ್ಥಿತರಿದ್ದರು. |
ಏರ್‌ಫೋರ್ಸ್‌ನ ಉದ್ಯೋಗಾವಕಾಶಗಳ ಮಾಹಿತಿಗೊಂದು ವೆಬ್‌ಸೈಟ್ | Website on career in IAF - Kannada Oneindia |
ಏರ್‌ಫೋರ್ಸ್‌ನ ಉದ್ಯೋಗಾವಕಾಶಗಳ ಮಾಹಿತಿಗೊಂದು ವೆಬ್‌ಸೈಟ್ |
ಬೆಂಗಳೂರು : ಭಾರತೀಯ ವಾಯುಪಡೆ (ಇಂಡಿಯನ್ ಏರ್ ಫೋರ್ಸ್) ತನ್ನಲ್ಲಿ ಲಭ್ಯವಿರುವ ಹುದ್ದೆ ವಗೈರೆಗಳ ಕುರಿತ ವೆಬ್‌ಸೈಟೊಂದನ್ನು ಬಿಡುಗಡೆ ಮಾಡಿದೆ. |
ವಾಯುಪಡೆಯಲ್ಲಿರುವ ಅವಕಾಶಗಳು, ತರಪೇತಿ ಕಾರ್ಯಕ್ರಮಗಳು ವೆಬ್‌ಸೈಟಿನಲ್ಲಿ ಲಭ್ಯ. ಬುದ್ಧಿ ಸಾಣೆಗೊಡ್ಡುವ ಏರ್‌ಫೋರ್ಸ್ ಮೂಲದ ಆಟವೂ ಈ ವೆಬ್‌ಸೈಟ್‌ನಲ್ಲಿ ಉಂಟು. ವಾಯುಪಡೆಯಲ್ಲಿನ ಅವಕಾಶದ ಹರವನ್ನು ಯುವಕರಿಗೆ ಮನವರಿಕೆ ಮಾಡಿಸುವುದೇ ಈ ವೆಬ್‌ಸೈಟ್‌ನ ಉದ್ದೇಶ ಎಂದು ಪಡೆಯ ಪ್ರಕಟಣೆ ತಿಳಿಸಿದೆ. |
http://careerairforce.nic.inದಲ್ಲಿ ಒಮ್ಮೆ ಪಯಣಿಸಿ. ಏರ್‌ಫೋರ್ಸ್ ಸೇರಬಯಸುವವರಲ್ಲಿ ನೀವೂ ಒಬ್ಬರಾದರೆ ಉಪಯೋಗವಾಗಲಿದೆ. ಹೆಚ್ಚಿನ ಮಾಹಿತಿ ಪಡೆಯಬೇಕಾದಲ್ಲಿ ddiaf03@bol ಅಥವಾcareer_iaf@bol.net.in. ಗೆ ಇ-ಮೇಲ್ ಮಾಡಿ. |
ಜೀ ಕನ್ನಡದಲ್ಲಿ ಎರಡು ನವ ನವೀನ ಧಾರಾವಾಹಿಗಳು | Two fresh daily soaps on Zee Kannada - Kannada Filmibeat |
4 min ago 'ಉಪಾಧ್ಯಕ್ಷ'ರಿಗೆ ಜೋಡಿಯಾಗುವ ಸುವರ್ಣ ಅವಕಾಶ |
23 min ago 19 ವರ್ಷಗಳ ಹಿಂದೆ ಮುಗಿದ ಕತೆಯನ್ನು ಅಲ್ಲಿಂದಲೇ ಪ್ರಾರಂಭಿಸುವೆ: ಮಾಧವನ್ |
49 min ago ಪ್ರಭಾಸ್ ಹುಟ್ಟುಹಬ್ಬಕ್ಕೆ ಫ್ಲೆಕ್ಸ್ ಕಟ್ಟಲು ಹೋಗಿ ಅಭಿಮಾನಿ ಸಾವು |
ಜೀ ಕನ್ನಡದಲ್ಲಿ ಎರಡು ನವ ನವೀನ ಧಾರಾವಾಹಿಗಳು |
| Published: Thursday, April 10, 2014, 12:40 [IST] |
ಪ್ರತಿಬಾರಿಯೂ ತನ್ನ ವೀಕ್ಷಕರಿಗೆ ಏನಾದರೂ ಹೊಸದನ್ನು ಕೊಡಲೆಂದು ಹವಣಿಸುತ್ತಿರುವ ಜೀ ಕನ್ನಡ ವಾಹಿನಿ ಇಂದೇ 14 ರಿಂದ ಮತ್ತೆರಡು ನವ ನವೀನ ಕಥೆ ಹಾಗೂ ನಿರೂಪಣೆಯುಳ್ಳ ಧಾರಾವಾಹಿಗಳನ್ನು ಪ್ರಾರಂಭಿಸುತ್ತಿದೆ. |
ಬಹಳ ದಿನಗಳ ನಂತರ ಹಿರಿಯ ನಟಿ ಅಭಿನಯ ಶಾರದೆ ಜಯಂತಿ ಅಭಿನಯಿಸುತ್ತಿರುವ 'ಒಂದೇ ಗೂಡಿನ ಹಕ್ಕಿಗಳು' ಹಾಗೂ ಯಶಸ್ವೀ 'ರಾಧಾ ಕಲ್ಯಾಣ' ನಿರ್ಮಾಪಕರಾದ ಅಶುಬೇದ್ರಾ ಅವರ ಮತ್ತೊಂದು ವಿನೂತನ ಕೃತಿ 'ಸಾಗರ ಸಂಗಮ' ಈ ಎರಡೂ ಧಾರವಾಹಿಗಳು ಏ.14 ರ ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರವಾಗಲಿವೆ. |
ಪ್ರತಿ ರಾತ್ರಿ 8ಕ್ಕೆ 'ಒಂದೇ ಗೂಡಿನ ಹಕ್ಕಿಗಳು' ಹಾಗೂ 8.30 ಕ್ಕೆ 'ಸಾಗರ ಸಂಗಮ' ಈ ಎರಡೂ ಧಾರಾವಾಹಿಗಳನ್ನು ಕಣ್ತುಂಬಿಕೊಳ್ಳಬಹುದು. ಈ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಮಾಧ್ಯಮ ಮಿತ್ರರಿಗೆ ನೀಡಲೆಂದು ಜೀ ತಂಡದ ಪ್ರೆಸ್ ಮೀಟ್ ಆಯೋಜಿಸಿತ್ತು. |
ಕೂಡು ಕುಟುಂಬದ ಕಥೆ ಹೊಂದಿರುವ 'ಒಂದೇ ಗೂಡಿನ ಹಕ್ಕುಗಳು' ಲಕ್ಷ್ಮೀಕಾಂತ್ ನಿರ್ಮಾಣ ಹಾಗೂ ಎಂ.ಎನ್.ಜಯಂತ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಧಾರಾವಾಹಿ. ರಘು ಸಮರ್ಥ ಚಿತ್ರಕಥೆಯ ಹೊಣೆ ಹೊತ್ತಿದ್ದಾರೆ. |
ಅನಾಥೆಯಾದ ನಾಯಕಿ ಹರಿಣಿಗೆ ಕೂಡು ಕುಟುಂಬದ ಸೊಸೆಯಾಗಬೇಕೆಂಬ ಆಸೆ. ತನ್ನಾಸೆಯಂತೆ ಆಕೆ ಅಂಥಾ ಮನೆಗೇ ಹೋಗುತ್ತಾಳೆ. ಒಳಹೊಕ್ಕನಂತರ ಅದು ಒಡೆದ ಮನಸ್ಸುಗಳ ಗೂಡು ಎಂದು ತಿಳಿಯುತ್ತದೆ. ಆ ಒಡೆದ ಮನೆಯನ್ನು ಹರಿಣಿ ತನ್ನ ಬುದ್ದಿವಂತಿಕೆಯಿಂದ ಹೇಗೆ ಒಂದು ಗೂಡಿಸುತ್ತಾಳೆ ಎನ್ನುವುದೇ 'ಒಂದೇ ಗೂಡಿನ ಹಕ್ಕಿಗಳು' ಧಾರಾವಾಹಿಯ ಸಾರಾಂಶ. |
ನಟಿ ಜಯಂತಿ ಮಾತನಾಡಿ ಈ ಹಿಂದೆ ಮನೆತನ, ಅಮೃತವರ್ಷಿಣಿ ಧಾರವಾಹಿಗಳಲ್ಲಿ ಅಭಿನಯಿಸಿದ್ದೆ. ಜಯಂತ್ ಬಂದು ಈ ಕಥೆ ಹೇಳಿದಾಗ ಇಷ್ಟವಾಯ್ತು. ಕೂಡು ಕುಟುಂಬವೆಂದರೆ ನನಗೂ ತುಂಬಾ ಇಷ್ಟ. ಇಲ್ಲಿ ಕಲಾವಿದರು, ತಂತ್ರಜ್ಞರು, ಎನ್ನದೆ ಎಲ್ಲರೂ ಒಂದೇ ಕುಟುಂಬದ ಥರ ಕೆಲಸ ಮಾಡ್ತಿದ್ದಾರೆ ಎಂದು ಹೇಳಿದರು. |
ಎಲ್ಲೋ ಹುಟ್ಟುವ ನದಿ ಅದೆಲ್ಲೋ ಹರಿದು ಕೊನೆಗೆ ಸಾಗರವನ್ನು ಸೇರುತ್ತದೆ. ಅಮೆರಿಕಾದಲ್ಲೇ ಚಿಕ್ಕಂದಿನಿಂದ ಬೆಳೆದ ನಾಯಕಿ ಶಾರ್ವರಿ ಯಾವುದೋ ಕಾರಣಕ್ಕೆ ಭಾರತಕ್ಕೆ ಬರುತ್ತಾಳೆ. ಆಕಸ್ಮಿಕವಾಗಿ ನಾಯಕನನ್ನು ಭೇಟಿಯಾಗಿ ವಿರುದ್ಧ ಸ್ವಭಾವದ ಆತನ ಜೊತೆಯಲ್ಲಿ ಇರುವಂಥ ಸಂದರ್ಭ ಆಕೆಗೆ ಒದಗಿ ಬರುತ್ತದೆ. ಉತ್ತರ ದಕ್ಷಿಣದಂತಿದ್ದ ಅವರಿಬ್ಬರ ನಡುವೆ ಪ್ರೀತಿ-ಪ್ರೇಮ ಹೇಗೆ ಬೆಳೆಯುತ್ತದೆ ಎನ್ನುವುದೇ 'ಸಾಗರ ಸಂಗಮ' ಧಾರಾವಾಹಿಯ ಸಾರಾಂಶ. |
ನಟ ಅನಿರುದ್ ಸಾತ್ವಿಕ್ (ನಾಯಕ) ಪಾತ್ರ ನಿರ್ವಹಿಸಿದ್ದರೆ ಸ್ನೇಹಾ ಅಚಾರ್ಯ ನಾಯಕಿ ಶಾರ್ವರಿ ಪಾತ್ರ ಮಾಡಿದ್ದಾರೆ. ಹಿರಿಯ ನಟಿ ಜಯಲಕ್ಷ್ಮಿ ಅಜ್ಜಿಯ ಪಾತ್ರ ಮಾಡಿದ್ದಾರೆ. ರಾಧಾಳ ಸಾಕು ತಾಯಿಯಾಗಿ ಗಮನ ಸೆಳೆದಿದ್ದ ಸೀತಾಕೋಟೆ ಈ ಧಾರಾವಾಹಿಯಲ್ಲಿ ನೆಗೆಟಿವ್ ರೋಲ್ ಮಾಡಿದ್ದಾರೆ. "ಸದಾ ಅಳುಮುಂಜಿಯಾಗಿ ಕಾಣಿಸಿಕೊಳ್ಳುತ್ತಿದ್ದ ನಾನು ಕಾಮಿಡಿ ಟಚ್ ಇರುವಂಥ ವಿಲನ್ ಪಾತ್ರವನ್ನು ಮೊದಲ ಬಾರಿಗೆ ನಿರ್ವಹಿಸಿದ್ದೇನೆ" ಎಂದು ಅವರು ಹೇಳಿಕೊಂಡರು. |
ಸಂಗೀತದ ಸಪ್ತಸ್ವರಗಳಿಂದಲೇ ಶೀರ್ಷಿಕೆಯನ್ನು ನಿರೂಪಿಸಿದ ಹೊಸ ಪ್ರಯತ್ನವನ್ನು ನಿರ್ಮಾಪಕ ಅಶುಬೆದ್ರೆ ಮಾಡಿದ್ದಾರೆ. ಕಿರಣ್ ಈ ಧಾರಾವಾಹಿಯ ನಿರ್ದೇಶಕರು, ಕಿರಣ್ ಈ ಹಿಂದೆ 'ಪಲ್ಲವಿ ಅನುಪಲ್ಲವಿ' ನಿರ್ದೇಶಿಸಿದ್ದರು. ಅಕ್ಷಯ್ ಸತ್ಯ ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ಬರೆದಿದ್ದಾರೆ. ಸ್ವಾತಿ, ಶೃತಿ ಜಯರಾಮ್, ನಮ್ರತಾ, ಉಷಾ, ಸಹನಾ, ತನುಜಾ, ನಾಗರಾಜ್ ಅಭಿನಯಿಸಿದ್ದಾರೆ. (ಏಜೆನ್ಸೀಸ್) |
Read more about: zee kannada serial tv jayanthi ಜೀ ಕನ್ನಡ ಧಾರಾವಾಹಿ ಟಿವಿ ಜಯಂತಿ |
Zee Kannada all set to air two new serials 'Onde Gudina Hakkigalu' and 'Sagara Sangama' on 14th April. Both soaps telecast from Monday to Friday at 8 and 8.30 slot. |
ಪೋಸ್ಕೋ ಕಾಯ್ದೆಯಡಿ ಮೂವರು ಬಂಧನ | VIJAYAVANI - ವಿಜಯವಾಣಿ |
ರಬಕವಿ/ಬನಹಟ್ಟಿ: ಬಾಲಕಿಯನ್ನು ಪುಸಲಾಯಿಸಿ ಅಪರಣ ಮಾಡಿದ ಆರೋಪದ ಮೇರೆಗೆ ಮೂವರನ್ನು ಬನಹಟ್ಟಿ ಪೊಲೀಸರು ಬಂಧಿಸಿದ್ದಾರೆ. |
ಸಚಿನ್ ನಾರಾಯಣ ಕಾಜವೆ, ಸಂತೋಷ ನಾರಾಯಣ ಕಾಜವೆ ಹಾಗೂ ಬೇಬಿ ನಾರಾಯಣ ಕಾಜವೆ ಬಂಧಿತರು. ರಬಕವಿ-ಬನಹಟ್ಟಿ ತಾಲೂಕಿನ ರಾಂಪುರಿನ ಬಾಲಕಿ ತಂದೆ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಪೋಸ್ಕೋ ಕಾಯ್ದೆಯಡಿ ಬಂಧಿಸಿದ್ದಾರೆ. ಬಾಲಕಿ ಸುರಕ್ಷಿತವಾಗಿ ಮರಳಿದ್ದಾಳೆ. ಈ ಕುರಿತು ಸಿಪಿಐ ಅಶೋಕ ಸದಲಗಿ, ಪಿಎಸ್‌ಐ ಎಸ್.ಎಂ. ಅವಜಿ ತನಿಖೆ ಮುಂದುವರಿಸಿದ್ದಾರೆ. |
ಆರೋಗ್ಯ : ಮೂತ್ರದ ಬಣ್ಣ ತಿಳಿಸುತ್ತೆ ನಿಮ್ಮ ಅರೋಗ್ಯ ಹೇಗಿದೆ ಅಂತ ಓದಿ..! – Karnataka Jwale |
Home/ಆರೋಗ್ಯ/ಆರೋಗ್ಯ : ಮೂತ್ರದ ಬಣ್ಣ ತಿಳಿಸುತ್ತೆ ನಿಮ್ಮ ಅರೋಗ್ಯ ಹೇಗಿದೆ ಅಂತ ಓದಿ..! |
ಮಾಹಿತಿ : ಡಾ:ನರೇಶ್ ಕುಮಾರ್ ಎಂ.ಡಿ ಬಳ್ಳಾರಿ |
ದೇಹದಲ್ಲಿ ಸ್ವಲ್ಪ ಏನಾದ್ರು ಹೆಚ್ಚು ಕಡಿಮೆ ಆದ್ರೆ ಅನಾರೋಗ್ಯ ಸಮಸ್ಯೆ ಕಾಡುತ್ತಿದೆ ಎಂಬುದಾಗಿ ಗೊತ್ತಾಗುತ್ತದೆ ಅಲ್ಲದೆ ಕೆಲವೊಮ್ಮೆ ಯಾವುದೇ ಅನಾರೋಗ್ಯ ಸಮಸ್ಯೆ ಕಂಡು ಹಿಡಿಯಲು ವೈದ್ಯರೇ ಕೆಲವೊಮ್ಮೆ ಈ ಪರೀಕ್ಷೆಗಳನ್ನು ಮಾಡಿಸಿಕೊಂಡು ಬನ್ನಿ ಎಂಬುದಾಗಿ ಹೇಳುತ್ತಾರೆ ಹೌದು ಮೂತ್ರ ಪರೀಕ್ಷೆ, ರಕ್ತ ಪರೀಕ್ಷೆ ಇವುಗಳ ಆಧಾರದ ಮೇಲೆ ವೈದ್ಯರು ಇಂತಹ ಕಾಯಿಲೆ ರೋಗ ಇದೆ ಅನ್ನೋದನ್ನ ಹೇಳುತ್ತಾರೆ. |
ಹಾಗೆಯೆ ಮೂತ್ರದ ಬಣ್ಣವನ್ನು ತಿಳಿದು ನಮ್ಮ ಅರೋಗ್ಯ ಹೇಗಿದೆ ಅನ್ನೋದನ್ನ ತಿಳಿದುಕೊಳ್ಳಬಹುದು ಅದು ಹೇಗೆ ಅನ್ನೋದನ್ನ ಮುಂದೆ ನೋಡಿ, ಮಲ ಮೂತ್ರದ ಮೂಲಕ ಕೂಡ ಆರೋಗ್ಯವನ್ನು ತಿಳಿದುಕೊಳ್ಳಬಹುದು ಎಂಬುದಾಗಿ ಹೇಳುತ್ತಾರೆ ತಜ್ಞರು. |
ಮೂತ್ರದ ಬಣ್ಣ ಏನಾದ್ರು ತಿಳಿ ಹಳದಿ ಬಣ್ಣದಲ್ಲಿ ಇದ್ರೆ ಅದು ಸಾಮಾನ್ಯವಾಗಿ ನಾರ್ಮಲ್ ಎಂಬುದಾಗಿ ಹೇಳಲಾಗುತ್ತದೆ. ಇದರಿಂದ ಮನುಷ್ಯನ ಅರೋಗ್ಯ ಚನ್ನಾಗಿದೆ ಅನ್ನೋದನ್ನ ತಿಳಿದುಕೊಳ್ಳಬಹುದು. |
ಇನ್ನು ಎರಡನೆಯದಾಗಿ ಮೂತ್ರ ನೀರಿನ ಬಣ್ಣದಲ್ಲಿ ಇದ್ರೆ ನಿಮ್ಮ ಶರೀರಕ್ಕೆ ನೀರಿನಂಶ ಹೆಚ್ಚಿನ ಪ್ರಮಾಣದಲ್ಲಿದೆ ಎಂಬುದಾಗಿ ಅಂದರೆ ನೀವು ಹೆಚ್ಚು ನೀರು ಕುಡಿಯುತ್ತಿದ್ದಿರಿ ಎಂಬುದಾಗಿ ತಿಳಿಯಲಾಗುತ್ತದೆ. ಆ ಸಂದರ್ಭದಲ್ಲಿ ಕಡಿಮೆ ನೀರು ಕುಡಿದರೂ ನಡೆಯುತ್ತದೆ. ಅರೋಗ್ಯ ಚನ್ನಾಗಿದೆ ಎಂದರ್ಥ. |
ಮೂರನೆಯದಾಗಿ ಡಾರ್ಕ್ ಹಳದಿ ಬಣ್ಣದಲ್ಲಿ ಮೂತ್ರ ಇದ್ರೆ: ದೇಹದಲ್ಲಿ ನೀರಿನ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ ಎಂದರ್ಥ ಆಗಾಗಿ ನೀವು ನೀರು ಕುಡಿಯುವುದನ್ನು ಹೆಚ್ಚು ಮಾಡಬೇಕಾಗುತ್ತದೆ. |
ನಾಲ್ಕನೆಯದಾಗಿ ಮೂತ್ರದ ಬಣ್ಣ ಜೇನಿನ ಬಣ್ಣದಲ್ಲಿದ್ದರೆ ದೇಹಕ್ಕೆ ಬೇಕಾದಷ್ಟು ನೀರು ಸಿಗುತ್ತಿಲ್ಲ ಎಂಬುದನ್ನು ತಿಳಿಯಲಾಗುತ್ತದೆ ಆದುದರಿಂದ ಹೆಚ್ಚು ನೀರು ಕುಡಿಯಿರಿ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಿ. |
ಐದನೆಯದಾಗಿ ನಿಮ್ಮ ಬಣ್ಣ ಏನಾದ್ರು ನಸು ಕಂದು ಬಣ್ಣವನ್ನು ಹೊಂದಿದ್ದರೆ ಲಿವರ್ ಸಮಸ್ಯೆ ಇರುವ ಸಾಧ್ಯತೆ ಇದೆ ತುಂಬಾ ಕಡಿಮೆ ಪ್ರಮಾಣದಲ್ಲಿ ನೀರಿನ ಸೇವನೆ ಮಾಡುತ್ತಿದ್ದೀರಿ ಎಂದು ಅರ್ಥ, ವೈದ್ಯರನ್ನು ತಕ್ಷಣ ಕಾಣುವುದು ಉತ್ತಮ ಹಾಗು ನೀರಿನ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬೇಕು. |
ಇನ್ನು ಕೊನೆಯದಾಗಿ ಮೂತ್ರದ ಬಣ್ಣ ಕೆಂಪು ಗುಲಾಬಿ ಬಣ್ಣ ಹೊಂದಿದ್ದರೆ ಕೆಲವೊಮ್ಮೆ ಕಿಡ್ನಿ ಸಮಸ್ಯೆ, ಮೂತ್ರ ನಾಳದ ಸೋಂಕು, ಟ್ಯೂಮರ್ ಲಕ್ಷಣ ಕೂಡ ಆಗಿರುವ ಸಾಧ್ಯತೆ ಇರುತ್ತದೆ ವೈದ್ಯರನ್ನು ಭೇಟಿ ನೀಡುವುದು ಒಳ್ಳೆಯದು. ಒಟ್ಟಾರೆಯಾಗಿ ಮನುಷ್ಯನ ದೇಹಕ್ಕೆ ನೀರಿನ ಅಗತ್ಯತೆ ಹೆಚ್ಚಿದೆ ಆದ್ದರಿಂದ ಹೆಚ್ಚು ನೀರು ಸೇವನೆ ಮಾಡಿ ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ. ನಿಮಗೆ ಈ ಅರೋಗ್ಯ ಮಾಹಿತಿ ಇಷ್ಟವಾದಲ್ಲಿ ನಮಗೆ ಒಂದು ಶೇರ್ ಮಾಡುವ ಮೂಲಕ ಬೆಂಬಲಿಸಿ ಶುಭವಾಗಲಿ |
ಪ್ರಕಟಣೆ ನಿಲ್ಲಿಸಿದ 'ಸುಜಾತ' ನಿಯತಕಾಲಿಕೆ | Prajavani |
ಪ್ರಕಟಣೆ ನಿಲ್ಲಿಸಿದ 'ಸುಜಾತ' ನಿಯತಕಾಲಿಕೆ |
Published: 10 ಅಕ್ಟೋಬರ್ 2019, 02:05 IST |
Subsets and Splits
No community queries yet
The top public SQL queries from the community will appear here once available.