text stringlengths 0 61.5k |
|---|
ತೋವಿನಕೆರೆಯಲ್ಲಿ ಹಳ್ಳಿಸಿರಿ ಸಂಘಟನೆಯು ಅಯೋಜನೆ, ಸವಿಯೂಟದಲ್ಲಿ ಭಾಗವಹಿಸಿದ ವಿವಿಧ ಭಾಗದ ಜನರು |
Updated: 24 ಜೂನ್ 2018, 19:27 IST |
ತುಮಕೂರು: ಅಬ್ಬಾ... ಈ ಹಣ್ಣಿನಲ್ಲಿ ಇಷ್ಟೊಂದು ಸವಿರುಚಿ ಅಡಗಿದೆಯೆ? ಬರೀ ಹಣ್ಣು ಮಾತ್ರ ಸವಿದಿದ್ದೇವು. ಇದರಲ್ಲಿ ಇಷ್ಟೊಂದು ಖಾದ್ಯ, ಮೃಷ್ಟಾನ ಭೋಜನ ತಯಾರಿಸಬಹುದು ಎಂಬುದು ಗೊತ್ತಿರಲಿಲ್ಲ. ಇದು ನಿಜವಾಗಲೂ ಸವಿರುಚಿಯೇ . ಹೀಗೆ, ಒಬ್ಬರಲ್ಲ, ಇಬ್ಬರಲ್ಲ ಬಾಯಿ ಚಪ್ಪರಿಸಿ ಊಟ ಸವಿದವರು ಹೇಳಿದ ಮಾತುಗಳಿವು. |
ತಾಲ್ಲೂಕಿನ ತೋವಿನಕೆರೆಯಲ್ಲಿ ಕೃಷಿಕ ಪದ್ಮರಾಜ್ ಅವರ ತೋಟದಲ್ಲಿ ಹಲಸಿನ ಉತ್ಪನ್ನ ಪರಿಚಯಿಸುವ ಭಾಗವಾಗಿ 'ಹಳ್ಳಿಸಿರಿ' ಸ್ತ್ರೀ ಶಕ್ತಿ ಸಂಘಟನೆಯು ಭಾನುವಾರ ಆಯೋಜಿಸಿದ್ಧ 'ಹಲಸಿನ ಸವಿರುಚಿ ಊಟ' ಕಾರ್ಯಕ್ರಮದಲ್ಲಿ ಕಂಡು ಬಂದ ನೋಟವಿದು. |
ಹಲಸಿನ ಹೋಳಿಗೆ, ಹಲ್ವಾ, ಬಿರಿಯಾನಿ, ಹಪ್ಪಳ, ಉಪ್ಪಿನಕಾಯಿ, ಸಾಂಬಾರು, ಸೂಪ್, ಬೋಂಡಾ, ಹಲಸಿನ ಮಂಚೂರಿ, ಉಪ್ಪಿನಕಾಯಿ ಹೀಗೆ ತರಹೇವಾರಿ ಖಾದ್ಯಗಳು ಸವಿರುಚಿ ಊಟದ ಭಾಗವಾಗಿದ್ದವು. ಒಂದೊಂದು ಪದಾರ್ಥಕ್ಕೂ ಒಂದೊಂದು ವಿಶಿಷ್ಟ ರುಚಿ , ಹಲಸಿನ ಘಮಲು ಊಟದ ರುಚಿಯನ್ನು ದುಪ್ಪಟ್ಟು ಮಾಡಿತ್ತು. |
ಈ ಹಲಸಿನ ವಿಶೇಷ ಸವಿಯೂಟ ಸವಿಯುವುದಕ್ಕಾಗಿಯೇ ಬೆಂಗಳೂರು, ತುಮಕೂರು ಸೇರಿದಂತೆ ವಿವಿಧ ಕಡೆಯಿಂದ ಆಸಕ್ತರು ಕುಟುಂಬ ಸಮೇತರಾಗಿ ಬಂದಿದ್ದರು. ಸಾಲುಗಟ್ಟಿ ನಿಂತು ಭಾನುವಾರ ಮಧ್ಯಾಹ್ನದ ವಿಶೇಷ ಭೋಜನ ಮಾಡಿ ಖುಷಿಪಟ್ಟರು. |
ಹಲಸಿನ ಉತ್ಪನ್ನ ಪ್ರಚಾರಕ್ಕೆ ಹಳ್ಳಿಸಿರಿ ಅವಿರತ ಶ್ರಮ: |
'ನಮ್ಮ ಸ್ತ್ರೀ ಸಂಘವು ಈ ಹಲಸಿನಲ್ಲಿ ವಿವಿಧ ಪದಾರ್ಥಗಳನ್ನು ತಯಾರಿಸಿ ಆರ್ಥಿಕ ಸ್ವಾವಲಂಬನೆಗೆ ಹಾಗೂ ಹಲಸಿನ ರೈತರ ಆರ್ಥಿಕ ಚೇತನಕ್ಕೆ ಪ್ರಯತ್ನಿಸುತ್ತಿದೆ. 2012ರಿಂದಲೂ ಈ ಪ್ರಯತ್ನ ಮಾಡಿಕೊಂಡು ಬರುತ್ತಿದೆ ಎಂದು ಹಳ್ಳಿಸಿರಿ ಸಂಘದ ಅಧ್ಯಕ್ಷೆ ಮಂಜಮ್ಮ 'ಪ್ರಜಾವಾಣಿ'ಗೆ ತಿಳಿಸಿದರು. |
'ಸಂಘದಲ್ಲಿ 10ಕ್ಕೂ ಹೆಚ್ಚು ಜನ ಸದಸ್ಯರಿದ್ದು, ಹಲಸಿನಲ್ಲಿ ಏನೇನು ಪದಾರ್ಥ ಮಾಡಬಹುದು ಎಂದು ಚಿಂತನೆ ಮಾಡಿದೆವು. ಒಂದೊಂದೇ ಪ್ರಯೋಗ ಮಾಡಿದಾಗ ಜನರಿಂದ ಉತ್ತಮ ಸ್ಪಂದನೆ ಲಭಿಸಿತು. ಹೀಗಾಗಿ, ಜನರ ಆಸಕ್ತಿ ಮೇರೆಗೆ ಈ ತರಹ ಸವಿರುಚಿ ಊಟ ಆಯೋಜನೆ ಮಾಡುತ್ತಿದ್ದೇವೆ' ಎಂದು ಹೇಳಿದರು. |
'ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಇದೆ. ಸಾಕಷ್ಟು ಪ್ರಶಂಸೆಯೂ ವ್ಯಕ್ತವಾಗುತ್ತಿದೆ. ಆದರೆ, ನಮ್ಮ ಸಂಘದ ಆರ್ಥಿಕ ಚೇತರಿಕೆಗೆ ಇದು ಸಾಲದು. ಸಂಘ ಸಂಸ್ಥೆಗಳು, ಸರ್ಕಾರದ ವಿವಿಧ ಇಲಾಖೆಗಳು ಕಾರ್ಯಕ್ರಮಗಳು, ಸಭೆಗಳಿಗೆ 'ಹಲಸಿನ ಸವಿರುಚಿ ಊಟ' ವ್ಯವಸ್ಥೆ ಮಾಡಿದರೆ ನಮ್ಮಂತಹ ಸಂಘಟನೆಗಳಿಗೆ ಒಂದಿಷ್ಟು ಸಹಾಯ ಆಗುತ್ತದೆ. ಅವರಿಗೂ ಸತ್ವಯುತ ಮತ್ತು ಸಂಪೂರ್ಣ ಸಾವಯವ ಆಹಾರ ಸವಿದ ತೃಪ್ತಿಯು ಸಿಗುತ್ತದೆ' ಎಂದು ಹೇಳಿದರು. |
24 ಪದಾರ್ಥ ತಯಾರಿಸುವ ಪ್ರಯತ್ನ ಆಗಲಿ |
'ಹಲಸಿನ ಸವಿರುಚಿ ಊಟ ತುಂಬಾ ಚೆನ್ನಾಗಿತ್ತು. ಈ ತರಹದ ಪ್ರಯತ್ನಗಳು ಈ ಭಾಗದಲ್ಲಿ ಆಗಬೇಕು. ಇದರಿಂದ ರೈತರಿಗೆ ಮತ್ತು ಗುಣಮಟ್ಟದ ಆಹಾರ ಸವಿಯಲು ಬಯಸುವವರಿಗೆ ಅನುಕೂಲ ಆಗುತ್ತದೆ' ಎಂದು ಹಲಸಿನ ಊಟ ಸವಿದ ಅಧೋಕ್ಷಜಕುಮಾರ್ 'ಪ್ರಜಾವಾಣಿ'ಗೆ ತಿಳಿಸಿದರು. |
'ನಮ್ಮ ಊರು ಮಂಗಳೂರು. ಅಲ್ಲಿ ನಾವು ಹಲಸಿನಲ್ಲಿ ಊಟಕ್ಕೆ 24 ತರಹದ ಪದಾರ್ಥ ತಯಾರಿಸಲು ಅವಕಾಶವಿದೆ. ಇಲ್ಲಿಯೂ ಅಂತಹ ಪ್ರಯತ್ನಗಳು ಆಗಬೇಕು' ಎಂದು ಹೇಳಿದರು. |
ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಭಾರೀ ಪೈಪೋಟಿ – EESANJE / ಈ ಸಂಜೆ |
May 28, 2022 Sunil Kumar Bama Harish, Film Chamber election, KFCC election: Sa Ra Govindus |
ಬೆಂಗಳೂರು, ಮೇ 28- ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಇಂದು ಚುನಾವಣೆ ನಡೆಯುತ್ತಿದ್ದು,ಅಧ್ಯಕ್ಷ ಸ್ಥಾನಕ್ಕೆ ಭಾರೀ ಪೈಪೋಟಿ ನಡೆದಿದೆ. ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಮತ್ತು ನಿರ್ಮಾಪಕ ಬಾಮಾ ಹರೀಶ್ ನಡುವೆ ನೇರ ಹಣಾಹಣಿ ನಡೆಯುತ್ತಿದೆ. ಹಿರಿಯ ನಿರ್ಮಾಪಕ ಮತ್ತು ಕನ್ನಡಪರ ಹೋರಾಟಗಾರ ಸಾ.ರಾ.ಗೋವಿಂದು ಈ ಹಿಂದೆ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿದ್ದಾಗ ಸಿನಿಮಾರಂಗದ ಕಲಾವಿದರು ಮತ್ತು ತಂತ್ರಜ್ಞರನ್ನು ಸಮಭಾವದಿಂದ ಕಂಡು ಕಷ್ಟ-ಸುಖಗಳಿಗೆ ಬೆನ್ನೆಲುಬಾಗಿ ನಿಂತಿದ್ದು, ಹಲವು ಸಕಾರಾತ್ಮಕ ಸುಧಾರಣೆಗಳು ಅವರ ಗೆಲುವಿಗೆ ನೆರವಾಗಲಿವೆ ಎಂದು ಹಿರಿಯ ಕಲಾವಿದರ ಮತ್ತು ತಂತ್ರಜ್ಞರ ಅಭಿಪ್ರಾಯವಾಗಿದೆ. |
ಅಷ್ಟೆ ಅಲ್ಲದೆ, ಅನೇಕ ನಿರ್ಮಾಪಕರು ಇವರ ಹಿಂದೆ ಇರುವುದು ಮತ್ತಷ್ಟು ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಸಾ.ರಾ.ಗೋವಿಂದು ಅಧಿಕಾರದಲ್ಲಿಲ್ಲದಿದ್ದರೂ ಕೊರೊನಾ ಸಮಯದಲ್ಲಿ ಸಿನಿಮಾರಂಗದ ಸದಸ್ಯರಿಗೆ ನೆರವು ನೀಡಿದ್ದನ್ನು ಎಲ್ಲರೂ ನೆನಪಿಸಿಕೊಳ್ಳುತ್ತಾರೆ. |
ಅಧ್ಯಕ್ಷನಾಗಿದ್ದಾಗ ನಾನು ಮಾಡಿದ ಕೆಲಸ ಎಲ್ಲರಿಗೂ ಗೊತ್ತಿದೆ. ಸ್ನೇಹಿತರ ಒತ್ತಾಯದ ಮೇರೆಗೆ ಚುನಾವಣೆಗೆ ಸ್ರ್ಪಧಿಸಿದ್ದೇನೆ. ಚುನಾವಣೆಯನ್ನು ಸ್ಪರ್ಧಾತ್ಮಕವಾಗಿ ತೆಗೆದುಕೊಳ್ಳೋಣ. ಗೆದ್ದವರು ಕೆಲಸ ಮಾಡೋಣ. ಸೋತವರು ಗೆದ್ದವರಿಗೆ ಬೆನ್ನೆಲುಬಾಗಿ ನಿಲ್ಲೋಣ ಎಂದು ಹೇಳುವ ಮೂಲಕ ಸೌಹಾರ್ದ ಮನೋಭಾವ ಪ್ರದರ್ಶಿಸಿದರು. |
ಸಾ.ರಾ.ಗೋವಿಂದು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆಯಲ್ಲಿದ್ದರೆ ಅವರ ತಂಡದಲ್ಲಿರುವ ಚಿತ್ರಲೋಕ ವೀರೇಶ್ ನಿರ್ಮಾಪಕರ ವಲಯದ ಗೌರವ ಕಾರ್ಯದರ್ಶಿ ಕಣದಲ್ಲಿದ್ದಾರೆ. ನಿರ್ಮಾಪಕರ ವಲಯದ ಉಪಾಧ್ಯಕ್ಷ ಸ್ಥಾನಕ್ಕೆ ವಿ.ಸುಬ್ರಮಣಿ. ವಿತರಕರ ವಲಯದ ಉಪಾಧ್ಯಕ್ಷ ಸ್ಥಾನದಲ್ಲಿ ಪಿ.ಎಸ್.ಜ್ಞಾನೇಶ್ವರ ಐತಾಳ್, ಪ್ರದರ್ಶಕರ ಉಪಾಧ್ಯಕ್ಷ ಸ್ಥಾನದಲ್ಲಿ ಜಿ.ಪಿ.ಕುಮಾರ್ ಸ್ಪರ್ಧಾಕಣದಲ್ಲಿದ್ದಾರೆ. |
ಕೆ.ಸಿ.ಎನ್. ಕುಮಾರ್ (ಎಂ.ಎನ್.ಕುಮಾರ್) ವಿತರಕರ ವಲಯದ ಗೌರವ ಕಾರ್ಯದರ್ಶಿ ಸ್ಥಾನಕ್ಕೆ, ಪ್ರದರ್ಶಕರ ವಲಯದ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಎಲï.ಸಿ.ಕುಶಾಲ್ ಹಾಗೂ ಗೌರವ ಖಜÁಂಚಿ ಸ್ಥಾನಕ್ಕೆ ಬಿ.ಕೆ.ಜಯಸಿಂಹ ಮುಸರಿ ನಾಮಪತ್ರ ಸಲ್ಲಿಸಿದ್ದರು. ಇನ್ನು ಸಾ.ರಾ.ಗೋವಿಂದು ಅವರ ಪ್ರತಿಸ್ರ್ಪಯಾಗಿ ಬಾಮಾ ಹರೀಶ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಸಿನಿರಂಗದ ಪ್ರಮುಖರು ತನ್ನ ಬೆನ್ನ ಹಿಂದೆ ಇದ್ದಾರೆ ಎಂಬ ಆತ್ಮವಿಶ್ವಾಸ ಇವರದ್ದು. |
ಆಧುನಿಕ ಜಗತ್ತಿನಲ್ಲಿ ಚಿತ್ರರಂಗ ಬದಲಾಗುತ್ತ ಬಂದಿದೆ. ಪ್ರಸ್ತುತ ಅವಶ್ಯಕತೆಗಳಿಗೆ ತಕ್ಕಂತೆ ಮಂಡಳಿಯನ್ನು ಕೊಂಡೊಯ್ಯುವ ಜವಾಬ್ದಾರಿ ಚುನಾವಣೆಯಲ್ಲಿ ಗೆದ್ದವರ ಹೆಗಲಮೇಲಿದೆ ಮತ್ತು ನಿರ್ಮಾಪಕರಿಂದ ಹಿಡಿದು ಸಣ್ಣ ತಂತ್ರಜ್ಞರವರೆಗೂ ಅನೇಕ ಸಮಸ್ಯೆಗಳು, ಸವಾಲುಗಳು ಇವೆ. ಅವುಗಳಿಗೆ ನ್ಯಾಯಸಮ್ಮತವಾಗಿ ಬಗೆಹರಿಸುವುದು ನನ್ನ ಗುರಿಯಾಗಿದೆ ಎಂದು ಹೇಳಿದ್ದಾರೆ. |
ಬಾಮಾ ಹರೀಶ್ ಅವರ ತಂಡದಿಂದ ಉಪಾಧ್ಯಕ್ಷ ಸ್ಥಾನಕ್ಕೆ ನಟ ಜೈಜಗದೀಶ್, ವಿತರಕ ಉಪಾಧ್ಯಕ್ಷ ಸ್ಥಾನಕ್ಕೆ ಶಿಲ್ಪಾ ಶ್ರೀನಿವಾಸ್ ಮುತ್ತು ಕೆ.ಮೋ.ರಂಗಪ್ಪ, ವಿತರಕರ ಕಾರ್ಯದರ್ಶಿ ಸ್ಥಾನಕ್ಕೆ ಕುಶಾಲ್ ಮತ್ತು ಪಾರ್ಥಸಾರಥಿ, ನಿರ್ಮಾಪಕ ಕಾರ್ಯದರ್ಶಿ ಸ್ಥಾನಕ್ಕೆ ಸುಂದರರಾಜï, ಖಜÁಂಚಿ ಸ್ಥಾನಕ್ಕೆ ನಟ ಲೂಸ್ ಮಾದ ಯೋಗಿ ಅವರ ತಂದೆ ಟಿ.ಆರ್.ಸಿದ್ದರಾಜು ಸ್ಪರ್ಧಾ ಕಣದಲ್ಲಿದ್ದಾರೆ. |
ಯೋಧರ ಬಲಿದಾನ ವ್ಯರ್ಥವಾಗಲು ಬಿಡೆವು, ಅಗತ್ಯಬಿದ್ದರೆ ಪ್ರತಿಕಾರ: ಮೋದಿ | News13 |
News13 > ಸುದ್ದಿಗಳು > ರಾಷ್ಟ್ರೀಯ > ಯೋಧರ ಬಲಿದಾನ ವ್ಯರ್ಥವಾಗಲು ಬಿಡೆವು, ಅಗತ್ಯಬಿದ್ದರೆ ಪ್ರತಿಕಾರ: ಮೋದಿ |
ಯೋಧರ ಬಲಿದಾನ ವ್ಯರ್ಥವಾಗಲು ಬಿಡೆವು, ಅಗತ್ಯಬಿದ್ದರೆ ಪ್ರತಿಕಾರ: ಮೋದಿ |
ನವದೆಹಲಿ: ಲಡಾಕ್ ಪ್ರದೇಶದಲ್ಲಿ ಚೀನಾದ ಕುತಂತ್ರ ಬುದ್ಧಿಯಿಂದಾದ ಗಡಿ ಸಂಘರ್ಷದ ಬಗ್ಗೆ ಹೇಳಿಕೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, "ಭಾರತ ಶಾಂತಿಪ್ರಿಯ ರಾಷ್ಟ್ರ. ಆದರೆ ಕಾಲ್ಕೆರೆದುಕೊಂಡು ಯುದ್ಧಕ್ಕೆ ಬಂದರೆ ಸರಿಯಾದ ಪ್ರತ್ಯುತ್ತರ ನೀಡುವುದಕ್ಕೂ ಮುಂದಾಗುತ್ತದೆ" ಎಂದು ತಿಳಿಸಿದ್ದಾರೆ. |
ಮುಖ್ಯಮಂತ್ರಿಗಳ ಸಭೆಯಲ್ಲಿ ಮಾತನಾಡಿದ ಮೋದಿ, "ಭಾರತ ಶಾಂತಿಯನ್ನು ಬಯಸುತ್ತದೆ. ಆದರೆ ಅಗತ್ಯಬಿದ್ದರೆ ಪ್ರತಿಕಾರವನ್ನೂ ತೀರಿಸಿಕೊಳ್ಳುತ್ತದೆ. ಕೇಂದ್ರ ಸರ್ಕಾರಕ್ಕೆ ದೇಶದ ಏಕತೆ, ಸಮಗ್ರತೆ ಮುಖ್ಯವಾಗಿದೆ. ದೇಹವನ್ನು ದೇಶಕ್ಕಾಗಿ ಅರ್ಪಣೆ ಮಾಡಿದ ಯೋಧರ ಬಲಿದಾನವನ್ನು ಯಾವುದೇ ಕಾರಣಕ್ಕೂ ವ್ಯರ್ಥವಾಗಲು ಬಿಡುವುದಿಲ್ಲ" ಎಂದಿದ್ದಾರೆ. |
ಈ ಸಂದರ್ಭದಲ್ಲಿ ಎರಡು ನಿಮಿಷಗಳ ಕಾಲ ಮೌನಾಚರಣೆಯ ಮೂಲಕ ಮಡಿದ ವೀರಪುತ್ರರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ , ಗೃಹ ಸಚಿವ ಅಮಿತ್ ಶಾ ಮೊದಲಾದವರು ಭಾಗವಹಿಸಿದ್ದರು. |
ಪೂರ್ವ ಲಡಾಕ್ ನಲ್ಲಿ ಭಾರತೀಯ ಸೈನಿಕರು ಮತ್ತು ಚೀನಿ ಸೈನಿಕರ ನಡುವೆ ಮಲ್ಲಯುದ್ಧ, ಮುಷ್ಟಿಯುದ್ಧ ನಡೆದಿದ್ದು ,ಈ ಸಂಘರ್ಷದಲ್ಲಿ 20 ಮಂದಿ ಭಾರತದ ಯೋಧರು ಜೀವ ತೆತ್ತಿದ್ದಾರೆ. ಜೊತೆಗೆ 4 ಮಂದಿ ಸೈನಿಕರು ಗಂಭೀರ ಗಾಯಗೊಂಡ ಪರಿಣಾಮ ಚಿಕಿತ್ಸೆ ಪಡೆಯುತ್ತಿದ್ದಾರೆ. ಚೀನಾದ 43 ಮಂದಿ ಸೈನಿಕರನ್ನು ಈ ಸಂದರ್ಭದಲ್ಲಿ ವಧಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ |
1975 ರ ಅಕ್ಟೋಬರ್ ನಲ್ಲಿ ನಡೆದಿದ್ದ ಅರುಣಾಚಲ ಪ್ರದೇಶದ ತುಲುಂಗ್ ಲಾ ಸೆಕ್ಟರ್ ಸಂಘರ್ಷದ ಬಳಿಕ ಇದೇ ಮೊದಲ ಬಾರಿಗೆ ಚೀನಾದೊಂದಿಗಿನ ಗಡಿ ಸಂಘರ್ಷದಲ್ಲಿ ಭಾರತೀಯ ಯೋಧರು ವೀರಸ್ವರ್ಗ ಪಡೆದಿದ್ದಾರೆ. |
ಕನಸುಗಳಿಗೆ ರೆಕ್ಕೆ ಕಟ್ಟಿ ಹಾರುವ ಸಮಯವಿದು… | Udayavani – ಉದಯವಾಣಿ |
Sunday, 26 Sep 2021 | UPDATED: 12:46 AM IST |
ಕನಸುಗಳಿಗೆ ರೆಕ್ಕೆ ಕಟ್ಟಿ ಹಾರುವ ಸಮಯವಿದು… |
Team Udayavani, Jul 28, 2021, 8:00 AM IST |
ಮನುಷ್ಯ ಜೀವನದಲ್ಲಿ ಅನೇಕ ಕನಸುಗಳನ್ನು ಕಾಣುತ್ತಾನೆ. ಆದರೆ ಅವೆಲ್ಲವನ್ನೂ ನನಸು ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗೆ ಕೆಲವೊಂದು ಕನಸುಗಳು ಮಾತ್ರ ನೆನಪಿನಲ್ಲಿ ಸದಾ ಉಳಿಯುವಂತ ಕನಸಾಗಿರುತ್ತವೆ. ಅಂತಹ ಅನೇಕ ಕನಸುಗಳು ಬಾಲ್ಯದಿಂದ ಪ್ರಾರಂಭವಾಗುತ್ತವೆ. ಬಾಲ್ಯದ ಕನಸುಗಳು ಕೆಲವೊಮ್ಮೆ ಹಾಸ್ಯಾಸ್ಪದ ಎನಿಸಿದರೂ ಮನಸ್ಸಿಗೆ ಖುಷಿ ನೀಡುತ್ತವೆ. |
ನಾನು 5ನೇ ತರಗತಿ ಓದುತ್ತಿದ್ದ ಸಮಯವದು. ಆ ಕಾಲದಲ್ಲಿ ಚಲನಚಿತ್ರಗಳನ್ನು ನೋಡಿ ಕನಸುಗಳನ್ನು ಕಾಣುತ್ತಿದ್ದೆ. ಒಂದು ದಿನ ಬಿಳಿ ಹೆಂಡ್ತಿ ಎನ್ನುವ ಚಿತ್ರವನ್ನು ನೋಡಿ ನನಗೂ ಕೂಡ ಬಿಳಿ ಹೆಂಡ್ತಿ ಸಿಗಬೇಕು ಎನ್ನುವ ಆಸೆ ನನ್ನಲ್ಲಿತ್ತು. ಇಂತಹ ಅನೇಕ ಹಾಸ್ಯಾಸ್ಪದ ಬಯಕೆಗಳನ್ನು ನಾವು ನೆನಪಿಸಿಕೊಂಡಾಗ ಒಮ್ಮೆಲೇ ನಗು ಬರುತ್ತದೆ. ಮುಂದೆ ಬೆಳೆಯುತ್ತ ಬೆಳೆಯುತ್ತ ಗುರಿಗಳನ್ನು ಕನಸುಗಳಾಗಿಟ್ಟುಕೊಂಡಿರುತ್ತೇವೆ. ಒಂದೊಮ್ಮೆ ಪ್ರಾಥಮಿಕ ಶಿಕ್ಷಣ ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲಿ ಶಿಕ್ಷಕರು ನಿಮ್ಮ ಜೀವನದಲ್ಲಿ ಏನಾಗಬೇಕು ಎನ್ನುವ ಗುರಿಯನ್ನು ಹೊಂದಿದ್ದೀರಿ ಎಂದು ಕೇಳಿದಾಗ ತತ್‌ಕ್ಷಣ ಯಾವುದಾದರೂ ಒಂದು ಗುರಿಯನ್ನು ಹೇಳಿ ಬಿಡುತ್ತಿದ್ದೆವು. ಒಮ್ಮೆ ಡಾಕ್ಟರ್, ಒಮ್ಮೆ ಪೊಲೀಸ್, ಇನ್ನೊಮ್ಮೆ ಲಾಯರ್‌ನಂತಹ ಉತ್ತರಗಳನ್ನು ನಾನು ಹೇಳಿದ್ದೇನೆ. |
ಕ್ರಮೇಣ ನಮ್ಮ ಮನಸ್ಸು ವಾಸ್ತವವನ್ನು ಅರ್ಥ ಮಾಡಿಕೊಳ್ಳಲು ಆರಂಭಿಸಿದಾಗ ನಮ್ಮ ನಿಲುವುಗಳು ಕನಸುಗಳು ಬೇರೆಯಾಗಿ ಬಿಡುತ್ತವೆ. 10ನೇ ತರಗತಿಯವರೆಗೆ ಯಾವುದೇ ನಿರ್ದಿಷ್ಟ ಗುರಿಯಿಟ್ಟುಕೊಳ್ಳದ ನನಗೆ ಪಿಯುಸಿ ಆರಂಭದಲ್ಲಿ ಒಂದು ಕಂಪೆನಿ ಸ್ವಂತವಾಗಿ ಮಾಡಬೇಕು ಎನ್ನುವ ಗುರಿಯಿಟ್ಟುಕೊಂಡು ವಾಣಿಜ್ಯ ವಿಷಯವನ್ನು ತೆಗೆದುಕೊಂಡೆ. ಅನಂತರ ಪಿಯುಸಿ ಕೊನೆಯ ಹಂತಕ್ಕೆ ಬರುವಾಗ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಬೇಕು. ನಾನು ಉತ್ತಮ ನಿರೂಪಕನಾಗಬೇಕು ಎನ್ನುವ ಕನಸು ಹುಟ್ಟಿಕೊಂಡಿತು. ಅನಂತರ ಪತ್ರಿಕೋದ್ಯಮದಲ್ಲಿ ಮುನ್ನಡೆಯಲು ಪ್ರಾರಂಭಿಸಿದೆ. ಅನಂತರ ಕೆಲ ದಿನಗಳಲ್ಲಿ ಚಿತ್ರನಟನಾಗಬೇಕು ಎನ್ನುವ ಆಸೆಯೂ ಹುಟ್ಟಿಕೊಂಡಿತು. ಆದರೆ ಈ ಆಸೆ ನನ್ನ ಪ್ರಯತ್ನಕ್ಕೂ ಮೀರಿದ್ದಾಗಿದೆ ಎಂದು ಅರಿತುಕೊಂಡು ಸುಮ್ಮನಾದೆ. ಕೆಲವೊಮ್ಮೆ ಅನಿವಾರ್ಯ ಸಮಯ, ನೋವು, ಹತಾಶೆಗಳು ಜೀವನದ ಅನೇಕ ಕನಸುಗಳನ್ನು ನುಚ್ಚುನೂರಾಗಿಸುತ್ತವೆ. ಆ ಕನಸುಗಳಿಗೆ ರೆಕ್ಕೆ ಕಟ್ಟಿ ಹಾರುವ ಸಮಯಗಳು ನಮಗೆ ಸಿಗಬಹುದು ಎನ್ನುವ ನಿರೀಕ್ಷೆ ಜೀವನಕ್ಕೆ ಅನೇಕ ಮಾರ್ಗಗಳನ್ನು ತೋರಿಸಬಲ್ಲುದು. |
ಆದರೆ, ಇದೀಗ ನನ್ನಲ್ಲಿರುವ ಕನಸು, ಆಸೆಗಳನ್ನು ಹೆಚ್ಚಾಗಿ ಕಾಣುವುದನ್ನು ನಿಲ್ಲಿಸಿದ್ದೇನೆ. ಯಾಕೆಂದರೆ ಕೊರೊನಾದಂತಹ ಮಹಾಮಾರಿಯಿಂದ ಜನಜೀವನ ಹದಗೆಟ್ಟಿರುವ ಕಾರಣ ಈ ಸಮಯದಲ್ಲಿ ಕಂಡ ಕನಸುಗಳೆಲ್ಲವೂ ಆಕಾಶಕ್ಕೆ ಏಣಿ ಇಟ್ಟಂತೆ ಎನಿಸುತ್ತವೆ. ಹಾಗಾಗಿ ಕೊರೊನಾ ಮುಗಿದಿದೆ. ಮುಂದಿನ ದಿನಗಳಲ್ಲಿ ಕನಸುಗಳನ್ನು ಕಾಣುವುದು ಹಾಗೂ ಅದನ್ನು ನನಸಾಗಿಸುವ ಯೋಚನೆ ನನ್ನಲ್ಲಿದೆ. |
ಮುಸ್ಲಿಮರೇ ಯಾರನ್ನು ನಂಬುತ್ತೀರಿ! |
Shanker Gowda Posted On January 7, 2018 |
ಮುಸಲ್ಮಾನರ ಒಲೈಕೆ ಬಿಡಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗುಜರಾತ್ ಚುನಾವಣೆಯ ಸಂದರ್ಭದಲ್ಲಿಯೇ ತಮ್ಮ ಪಕ್ಷದ ಆಂತರಿಕ ಸಭೆಗಳಲ್ಲಿ ಮುಖಂಡರಿಗೆ ಕರೆ ಕೊಟ್ಟಿದ್ದಾರೆ. ಅದನ್ನು ಅವರು ಮತ್ತೆ ಕರ್ನಾಟಕ ಚುನಾವಣೆಯಲ್ಲಿ ಹೇಳಲೇಬೇಕಾಗಿಲ್ಲ. ಅವರು ಒಂದು ಕಡೆ ಹೇಳಿದ್ದು ಅದು ರಾಷ್ಟ್ರಮಟ್ಟದಲ್ಲಿ ಅನ್ವಯವಾಗಬೇಕು. ಯಾಕೆಂದರೆ ಅವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮತ್ತು ಅವರ ಆ ರಣತಂತ್ರ ಗುಜರಾತಿನ ಮಟ್ಟಿಗೆ ಒಂದಿಷ್ಟು ವರ್ಕೌಟ್ ಆಗಿದೆ. ಅಲ್ಲಿ ರಾಹುಲ್ ಗಾಂಧಿ ಬಹಿರಂಗ ಸಭೆಗಳಷ್ಟೇ ದೇವಸ್ಥಾನಗಳನ್ನು ಕೂಡ ಸುತ್ತಿದ ಕಾರಣ ಫಲಿತಾಂಶದ ಬಳಿಕ ಧರಾಶಾಯಿಯಾಗಲಿದ್ದ ಪಕ್ಷಕ್ಕೆ ಒಂದಿಷ್ಟು ಉಸಿರಾಡುವ ಅವಕಾಶವನ್ನಾದರೂ ಕೊಟ್ಟರು. ಆದ್ದರಿಂದ ವಾಕರಿಕೆ ಬರುವಷ್ಟು ಅಲ್ಪಸಂಖ್ಯಾತರನ್ನು ಹೆಗಲ ಮೇಲೆ ಕೂರಿಸಿ ಮೆರವಣಿಗೆ ಮಾಡಬೇಡಿ, ನಮ್ಮ ಜಾತ್ಯಾತೀತ ಟ್ಯಾಗ್ ಎಂದರೆ ಮುಸ್ಲಿಮರ ಒಲೈಕೆ ಎಂದು ಆಗಿದೆ ಹೀಗಂತ ರಾಹುಲ್ ಗಾಂಧಿ ಹೇಳಿದ ಮೇಲೆ ಉಸ್ಸಪ್ಪ ಎಂದು ಇಲ್ಲಿನ ಕಾಂಗ್ರೆಸ್ ನಾಯಕರು ಮುಸ್ಲಿಮರನ್ನು ಎಲ್ಲಿ ಇಡಬೇಕೋ ಅಲ್ಲಿ ಇಡಲು ನಿರ್ಧರಿಸಿದ್ದಾರೆ. |
ಇನ್ನು ಭಾರತೀಯ ಜನತಾ ಪಾರ್ಟಿಯ ಸಿದ್ಧಾಂತವಂತೂ ಹೇಳುವುದೇ ಬೇಡಾ. ಅವರು ಆಗಾಗ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ಕರೆಸಿ ಭಾಷಣ ಮಾಡಿಸುತ್ತಾ ಜನ ಸಭೆಗಳಲ್ಲಿ ಜೈಶ್ರೀರಾಮ್ ಎಂದು ಘೋಷಣೆ ಕೂಗುವಾಗಲೇ ಒಂದು ಮಾತು ಸ್ಪಷ್ಟ. ಬಿಜೆಪಿ ಹಿಂದೂತ್ವದ ಏಜೆಂಡಾ ಬಿಟ್ಟಿಲ್ಲ. ಅವರು ಸಬ್ ಕಾ ವಿಕಾಸ್ ಎಂದು ನೂರು ಬಾರಿ ಹೇಳಿದರೂ ಎಷ್ಟು ಮುಸ್ಲಿಂ ವೋಟ್ ಅವರಿಗೆ ಬೀಳುತ್ತೆ ಎನ್ನುವುದು ಅವರಿಗೂ ಗೊತ್ತು. ಒಂದು ವೇಳೆ ಬಿಜೆಪಿ ತನ್ನ ಸಿದ್ಧಾಂತದಲ್ಲಿ ಮೃದುತ್ವ ಮಾಡಿದರೆ ಇರುವ ಹಿಂದೂ ವೋಟ್ ಅವರ ಕೈ ಬಿಡಬಹುದು ಎನ್ನುವ ಆತಂಕದಲ್ಲಿ ಅವರು ಮುಸ್ಲಿಂ ಒಲೈಕೆಗೆ ಮುಂದಾಗುವುದಿಲ್ಲ |
ಕೊನೆಗೆ ಕರ್ನಾಟಕದಲ್ಲಿ ಉಳಿದಿರುವುದು ಜಾತ್ಯಾತೀತ ಜನತಾದಳ. ಈ ಪಕ್ಷ ಯಾವತ್ತೂ ಹಿಂದೂತ್ವದ ಜಪ ಮಾಡಿಲ್ಲ. ಹಳೆ ಮೈಸೂರು ಭಾಗದಲ್ಲಿರುವ ಗೌಡ, ಲಿಂಗಾಯಿತ ಮತಗಳನ್ನೇ ನಂಬಿಕೊಂಡು ರಾಜಕೀಯ ಮಾಡುವ ಜೆಡಿಎಸ್ ಗೆ ಈ ಬಾರಿ ಜ್ಞಾನೋದಯವಾಗಿದೆ. ಯಾಕೆಂದರೆ ಬುದ್ಧಿವಂತ ಒಕ್ಕಲಿಗ, ಲಿಂಗಾಯಿತ ಸಮಾಜದವರಿಗೆ ತಾವು ಜಾತಿ ಆಧಾರಿತವಾಗಿ ಯೋಚಿಸುವ ಬದಲು ಮೊದಲು ನಾವು ಹಿಂದೂಗಳು. ಅದನ್ನು ಮರೆಯಬಾರದು. ನಮ್ಮನ್ನು ಜಾತಿ ಆಧಾರದಲ್ಲಿ ಒಡೆಯುವವರಿಗೆ ಬೆಲೆ ಕೊಡಬಾರದು ಎಂದು ತೀರ್ಮಾನಿಸಿದ್ದಾರೆ. ಹಿಂದೂತ್ವದ ಕೂಗು ಕೇಳುವ ಪಕ್ಷಕ್ಕೆ ಮತ ಹಾಕುವ ಬದಲು ಯಾರ್ಯಾರಿಗೋ ಜೈ ಎಂದರೆ ಏನೂ ಪ್ರಯೋಜನವಿಲ್ಲ ಎಂದು ಅವರಿಗೆ ಗ್ಯಾರಂಟಿಯಾಗಿದೆ. ಅದಕ್ಕಾಗಿ ಜೆಡಿಎಸ್ ಕೂಡ ಈ ಬಾರಿ ತಮ್ಮ ಮುನ್ನಲೆಯಲ್ಲಿ ಮಹೇಂದ್ರ ಕುಮಾರ್ ಅವರಂತಹ ಒಂದು ಕಾಲದ ಪ್ರಬಲ ಹಿಂದೂ ನಾಯಕನನ್ನು ನಿಲ್ಲಿಸಿ ತಾವೂ ಹಿಂದೂಪರ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದೆ. ಮಹೇಂದ್ರ ಕುಮಾರ್ ಸಂಘ ಪರಿವಾರದ ಪ್ರಮುಖ ಜವಾಬ್ದಾರಿಯಲ್ಲಿದ್ದವರು. ಅವರು ಅಲ್ಲಿಂದ ಕೋಪಿಸಿ ಜೆಡಿಎಸ್ ಗೆ ಹೋದವರು. ಬಂದ ಪ್ರಾರಂಭದಲ್ಲಿ ಅವರನ್ನು ಒಳ್ಳೆಯ ರೀತಿಯಲ್ಲಿ ಪ್ರಾಜೆಕ್ಟ್ ಮಾಡಿದ ಜೆಡಿಎಸ್ ನಂತರ ಮೂಲೆಗೆ ತಳ್ಳಿತ್ತು. ಈಗ ಹಿಂದೂತ್ವದ ಅಲೆ ಏಳುತ್ತಿರುವ ನಿಟ್ಟಿನಲ್ಲಿ ಮತ್ತೆ ಮಹೇಂದ್ರ ಕುಮಾರ್ ಅವರನ್ನು ಮುಂದೆ ತಂದು ಹಿಂದೂ ಮತಗಳನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಆದರೆ ಅದು ಸಾಕಾಗುತ್ತಿಲ್ಲ. ಅದಕ್ಕಾಗಿ ಇತ್ತೀಚೆಗೆ ಚಕ್ರವರ್ತಿ ಸೂಲಿಬೆಲೆಯವರು ಸಂಸದ ಅನಂತ ಕುಮಾರ್ ಹೆಗ್ಡೆಯವರ ಹೇಳಿಕೆಯೊಂದಕ್ಕೆ ಪ್ರತಿಕ್ರಿಯಾತ್ಮಕವಾಗಿ ಬರೆದ ಅಂಕಣವನ್ನೇ ಹಿಡಿದಿಟ್ಟುಕೊಂಡು ಚಕ್ರವರ್ತಿ ಸೂಲಿಬೆಲೆಯವರು ಬಿಜೆಪಿಯ ಬಗ್ಗೆ ಭ್ರಮನಿರಸನಗೊಂಡಿದ್ದಾರೆ, ಅದಕ್ಕಾಗಿ ಜೆಡಿಎಸ್ ಗೆ ಬರುತ್ತಿದ್ದಾರೆ ಎಂದು ತಮ್ಮ ಆಪ್ತ ಮಾಧ್ಯಮಗಳ ಮೂಲಕ ಸುದ್ದಿ ಹಬ್ಬಿಸುತ್ತಿದ್ದಾರೆ. ಹೇಳಿ ಕೇಳಿ, ಸೂಲಿಬೆಲೆ ನರೇಂದ್ರ ಮೋದಿಯವರ ಗುಣಗಾನವನ್ನು ಮಾಡದ ದಿನವೇ ಇಲ್ಲ. ಮೋದಿಯವರೇ ಹೇಳುವ ಹಾಗೆ ನಮಗೆ ವಿಕಾಸ ಮೊದಲು ನಂತರ ಉಳಿದದ್ದು ಎನ್ನುವುದು ಸೂಲಿಬೆಲೆಯವರ ಅಭಿಪ್ರಾಯ. ವಿಕಾಸದ ವಿಷಯದಲ್ಲಿ ಮಾತನಾಡಬೇಕಾದ ನಮ್ಮ ಜನಪ್ರತಿನಿಧಿಗಳು ಹಿಂದೂತ್ವದ ವಿಷಯದ ಬಗ್ಗೆ ಅತೀ ಹೆಚ್ಚಾಗಿ ಮಾತನಾಡಿದಾಗ ಅದಕ್ಕೆ ತಮ್ಮ ಪ್ರತಿಕ್ರಿಯೆ ಚಕ್ರವರ್ತಿ ಸೂಲಿಬೆಲೆಯವರು ಕೊಟ್ಟರೆ ಅದು ಬಿಜೆಪಿಯ ವಿರುದ್ಧ ಹೇಗಾಗುತ್ತದೆ ಎಂದು ಗೊತ್ತಿಲ್ಲದ ಜೆಡಿಎಸ್ ಮುಖಂಡರು ಚಕ್ರವರ್ತಿ ನಮ್ಮ ಪಕ್ಷಕ್ಕೆ ಬಂದೇ ಬರುತ್ತಾರೆ, ಅವರನ್ನು ಉಡುಪಿಯಲ್ಲಿ ಚುನಾವಣೆಗೆ ನಿಲ್ಲಿಸುತ್ತೇವೆ, ಹಾಗೆ ಮಂಗಳೂರಿನಲ್ಲಿ ನಮೋ ಬ್ರಿಗೇಡ್ ಮಾಡಿದ ಕಾರ್ಯದಿಂದ ಸ್ವತ: ಮೋದಿಯವರಿಂದ ಬೆನ್ನು ತಟ್ಟಿಸಿಕೊಂಡ ನರೇಶ್ ಶೆಣೈಯವರನ್ನು ಚುನಾವಣೆಗೆ ನಿಲ್ಲಿಸಿ ಕರಾವಳಿಯಲ್ಲಿ ಹಿಂದೂತ್ವದ ಮುಖವಾಣೆಯಾಗಿ ಇಬ್ಬರನ್ನು ಬಳಸುತ್ತೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. |
ಹೌದು, ಚಕ್ರವರ್ತಿ ಇತ್ತೀಚೆಗೆ ಜೆಡಿಎಸ್ ಹಮ್ಮಿಕೊಂಡಿದ್ದ ಹಿರಿಯ ನಾಗರಿಕರ ಸಮಾವೇಶದ ಪೋಸ್ಟರ್ ತಮ್ಮ ಸಾಮಾಜಿಕ ತಾಣದಲ್ಲಿ ಶೇರ್ ಮಾಡಿದ್ದರು. ಅಷ್ಟಕ್ಕೆ ಸೂಲಿಬೆಲೆ ಜೆಡಿಎಸ್ ಗೆ ಎಂದು ಸುದ್ದಿ ಹಬ್ಬಿಸಲಾಗಿದೆ. ಅದರ ಹಿಂದೆ ಬಿಎಸ್ ಯಡಿಯೂರಪ್ಪನವರ ಒಂದು ಪೋಸ್ಟ್ ಹಾಗೇ ಪ್ರತಾಪಸಿಂಹ ಅವರ ಒಂದು ಪೋಸ್ಟ್ ಶೇರ್ ಮಾಡಿಕೊಂಡಿದ್ದ ಸೂಲಿಬೆಲೆಯವರು ಒಳ್ಳೆಯ ಕೆಲಸ ಎಲ್ಲಿಂದ ಬಂದರೂ ಸ್ವಾಗತಿಸುತ್ತಾರೆ. ಅದನ್ನೇ ತಮ್ಮ ಪಕ್ಷಕ್ಕೆ ಬರುತ್ತಾರೆ ಎಂದು ನಂಬುವ ಮೂರ್ಖರು ಜೆಡಿಎಸ್ ನಲ್ಲಿ ಇದ್ದಾರಲ್ಲ ಎನ್ನುವುದೇ ಆಶ್ಚರ್ಯ. ಮುಖ್ಯವಾಗಿ ಚಕ್ರವರ್ತಿ ಸೂಲಿಬೆಲೆಯವರಿಗೆ ಜೆಡಿಎಸ್ ಗೆ ಹೋಗುವ ಅವಶ್ಯಕತೆ ಇಲ್ಲ. |
ಆದರೆ ಹಿಂದೂತ್ವದ ಜಪ ಮಾಡುತ್ತಾ ಕರಾವಳಿಯಲ್ಲಿ ಕೆಲವು ಖಾತೆ ತೆರೆಯಲು ಹರಸಾಹಸ ಪಡುತ್ತಿರುವ ಜೆಡಿಎಸ್ ಗೆ ಚಕ್ರವರ್ತಿಯವರ ಅವಶ್ಯಕತೆ ಇದೆ. ಅತ್ತ ಕಾಂಗ್ರೆಸ್ ಈ ಬಾರಿ ಮೃದು ಹಿಂದೂತ್ವಕ್ಕೆ ವಾಲಿ ಆಗಿದೆ. ಅದನ್ನು ರಾಹುಲ್ ಗಾಂಧಿಯವರ ನಡೆಗಳೇ ಗ್ಯಾರಂಟಿ ಕೊಡುತ್ತವೆ. ಹಿಂದೂತ್ವ ಇಲ್ಲದಿದ್ದರೆ ಈ ಬಾರಿ ಮೂರು ಮುಕ್ಕಾಲು ಸೀಟು ಕರಾವಳಿ, ಮಲೆನಾಡಿನಲ್ಲಿ ಕಷ್ಟ ಎಂದು ಜೆಡಿಎಸ್ ಗೂ ಅರಿವಾಗಿದೆ. ಅವರು ಹಿಂದೂ ನಾಯಕರ ಮನೆಬಾಗಿಲಿಗೆ ಅಡ್ಡಾಡುತ್ತಿದ್ದಾರೆ. ಬಿಜೆಪಿಗಂತೂ ಹಿಂದೂತ್ವವೇ ಜೀವಾಳ. ಇದರ ನಡುವೆ ಅನಾಥ ಶಿಶುವಾಗಿರುವವರು ಯಾರೆಂದರೆ ಮುಸಲ್ಮಾನರು. ಅಭಿವೃದ್ಧಿಗಿಂತ ತಮ್ಮ ಧರ್ಮದ ಒಲೈಕೆ ಮಾಡುವವರಿಗೆ ಮತ ಹಾಕುವ ಮನಸ್ಥಿತಿಯವರಿಗೆ ಈ ಬಾರಿ ಗೊಂದಲ ಏರ್ಪಟ್ಟಿದೆ. ಅಂತಿಮವಾಗಿ ನಿಜಕ್ಕೂ ಅಲ್ಪಸಂಖ್ಯಾತರಿಗೆ ಮೊಣಕೈಗೆ ಬೆಣ್ಣೆ ಹಚ್ಚದೆ ಹೆಚ್ಚು ಅನುದಾನ ಕೊಟ್ಟ ಬಿಜೆಪಿಗಾದರೂ ಮತ ಹಾಕಿದರೆ ಅದಾದರೂ ಸಿಕ್ಕಿತು, ಕಪಟ ಹಿಂದೂತ್ವದ ಮುಖವಾಡ ತೊಟ್ಟು ಕುಣಿಯಲು ಸಿದ್ಧರಾಗಿರುವ ಪಕ್ಷಗಳು ತಮ್ಮ ಬೇಳೆ ಬೇಯಬೇಕಾದರೆ ಮುಸ್ಲಿಮರನ್ನು ಅರ್ಧ ನೀರಿಗೆ ಬಿಡಲು ತಯಾರಾಗಿವೆ, ಆಯ್ಕೆ ಅವರಿಗೆ ಬಿಟ್ಟಿದ್ದು!! |
97,000 ಅನಾಲಿಟಿಕ್ಸ್, ಡೇಟಾ ಸೈನ್ಸ್ ಉದ್ಯೋಗಾವಕಾಶ - Mahiti Kanaj |
Home / General Information / Jobs / 97,000 ಅನಾಲಿಟಿಕ್ಸ್, ಡೇಟಾ ಸೈನ್ಸ್ ಉದ್ಯೋಗಾವಕಾಶ |
97,000 ಅನಾಲಿಟಿಕ್ಸ್, ಡೇಟಾ ಸೈನ್ಸ್ ಉದ್ಯೋಗಾವಕಾಶ |
on March 28, 2019 in General Information, Jobs |
ಅನಾಲಿಟಿಕ್ಸ್ ಮತ್ತು ಡೇಟಾ ಸೈನ್ಸ್‌ಗೆ ಸಂಬಂಧಿಸಿದಂತೆ 97,000 ಉದ್ಯೋಗಗಳು ಖಾಲಿ ಇವೆ ಎಂದು ಆನ್‌ಲೈನ್ ಶಿಕ್ಷಣ ಕಂಪನಿ ಗ್ರೇಟ್ ಲರ್ನಿಂಗ್ ವರದಿ ತಿಳಿಸಿದೆ |
ಕಾರ್ಪೊರೇಟ್ ವಲಯದಲ್ಲಿ ಕಂಪನಿಗಳು ಅನಾಲಿಟಿಕ್ಸ್ ಹಾಗೂ ಡೇಟಾ ಆಧಾರಿತ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಈ ವಲಯದಲ್ಲಿ ಹೇರಳ ಉದ್ಯೋಗಾವಕಾಶ ಸೃಷ್ಟಿಯಾಗಿದೆ. |
''ಕೇವಲ ಒಂದು ವರ್ಷದಲ್ಲಿ ಬೇಡಿಕೆ ಮತ್ತು ಪೂರೈಕೆಯ ನಡುವೆ ಶೇ.45ರಷ್ಟು ಅಂತರ ಉಂಟಾಗಿದೆ. ಉದ್ದಿಮೆ ವಲಯ ಡೇಟಾ ಆಧಾರಿತ ನಿರ್ಣಯ ತೆಗೆದುಕೊಳ್ಳುತ್ತಿರುವುದಕ್ಕೆ ಇದು ಸಾಕ್ಷಿ. ಕೆಲವೇ ವರ್ಷಗಳಲ್ಲಿ ಬೇಡಿಕೆ ಮತ್ತಷ್ಟು ಹೆಚ್ಚಲಿದೆ'' ಎನ್ನುತ್ತಾರೆ ಗ್ರೇಟ್ ಲರ್ನಿಂಗ್ ಸಹ ಸಂಸ್ಥಾಪಕ ಹರಿ ಕೃಷ್ಣನ್ ನಾಯರ್ |
. ಏನಿದು ಡೇಟಾ ಸೈನ್ಸ್? |
ನಾನಾ ಬಗೆಯ ಮಾಹಿತಿ, ದತ್ತಾಂಶಗಳನ್ನು ಸಂಗ್ರಹಿಸಿ, ಅದನ್ನು ವಿಶ್ಲೇಷಿಸುವ ಪ್ರಕ್ರಿಯೆ ಡೇಟಾ ಸೈನ್ಸ್‌ನಲ್ಲಿರುತ್ತದೆ. ಕಾರ್ಪೊರೇಟ್ ವಲಯದ ಕಂಪನಿಗಳಿಗೆ ಭವಿಷ್ಯದ ತಮ್ಮ ವಹಿವಾಟು ಸುಧಾರಣೆಗೆ, ಹೊಸ ಕಾರ್ಯತಂತ್ರಗಳ ಜಾರಿಗೆ, ಗ್ರಾಹಕರ ಮನಸ್ಥಿತಿಗಳನ್ನು ಅರಿತು ನಿರ್ಣಯ ಕೈಗೊಳ್ಳಲು ಇದು ಸಹಾಯಕ. |
ಪ್ರಮುಖ ಜಾಬ್ ಪೋರ್ಟಲ್‌ಗಳಲ್ಲಿ ಡೇಟಾ ಸೈನ್ಸ್, ಅನಾಲಿಟಿಕ್ಸ್ ಕುರಿತ ಉದ್ಯೋಗಾವಕಾಶಗಳ ಮಾಹಿತಿ ಪಡೆಯಬಹುದು. ಬಹುತೇಕ ಹುದ್ದೆಗಳು ಜ್ಯೂನಿಯರ್ ಲೆವೆಲ್‌ನದ್ದಾಗಿದೆ. 5 ವರ್ಷದೊಳಗಿನ ಅನುಭವಸ್ಥರಿಗೆ ಲಭ್ಯ. ಹೊಸಬರಿಗೂ ಅವಕಾಶಗಳಿವೆ. ಅನಾಲಿಟಿಕ್ಸ್ ಹುದ್ದೆಗಳು ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ. ಮುಂಬಯಿ, ದಿಲ್ಲಿ, ಚೆನ್ನೈನಲ್ಲೂ ಅವಕಾಶಗಳು ಇವೆ. ಬ್ಯಾಂಕಿಂಗ್, ರಿಟೇಲ್ ,ಇ-ಕಾಮರ್ಸ್, ಔಷಧ, ಆಟೊಮೊಬೈಲ್, ಟೆಲಿಕಾಂ ಇತ್ಯಾದಿ ವಲಯಗಳಲ್ಲಿ ಈ ಕುರಿತ ಉದ್ಯೋಗಾವಕಾಶಗಳಿವೆ. |
ಸನ್ನಡತೆಗಳಿಂದ ಅಭಿವೃದ್ಧಿಯ ಗುರಿ ತಲುಪಲು ಸಾಧ್ಯ: ದಿನೇಶ್ ಕೆ. ಸನಿಲ್ | Udayavani – ಉದಯವಾಣಿ |
Tuesday, 21 Sep 2021 | UPDATED: 03:50 AM IST |
ಸನ್ನಡತೆಗಳಿಂದ ಅಭಿವೃದ್ಧಿಯ ಗುರಿ ತಲುಪಲು ಸಾಧ್ಯ: ದಿನೇಶ್ ಕೆ. ಸನಿಲ್ |
ಭಾರತ್ ಬ್ಯಾಂಕ್ ಮುಲುಂಡ್ ಶಾಖೆಯ ಶೇಖರ ಎನ್. ಬಿಲ್ಲವ ಸೇವಾ ನಿವೃತ್ತಿ |
Team Udayavani, Sep 10, 2021, 1:10 PM IST |
ಮುಲುಂಡ್: ಹಸನಾದ ಬದುಕಿಗೆ ಹೊಸತನ ನೀಡುವ ನಿವೃತ್ತಿ ಬದುಕು ವಿಶಿಷ್ಟ ಅನುಭ ವಗಳ ಸರಮಾಲೆಯಾಗಿದೆ. ಜೀವನ |
ವನ್ನು ಸರಿಯಾದ ಪಥದಲ್ಲಿ ಮುನ್ನಡೆಸಿದಾಗ ಅದು ಫಲಪ್ರದವಾಗಿ ಯಶಸ್ವಿಯಾಗಬಲ್ಲದು. ಉದ್ಯೋಗ, ಕುಟುಂಬದ ಸಂರಕ್ಷಣೆ, ಮುಂಬಯಿ ಮಹಾನಗರದಲ್ಲಿ ಸ್ವಂತ ಮನೆ ಇತ್ಯಾದಿ ಸೌಕರ್ಯಗಳಿಗೆ ಸಹಕರಿಸಿದ ಭಾರತ್ ಬ್ಯಾಂಕ್ ನಮ್ಮೆಲ್ಲರ ಮಾತೃಸ್ವರೂಪಿಣಿ ಎಂದು ಭಾರತ್ ಬ್ಯಾಂಕ್ ಎಂಪ್ಲಾ ಯೀಸ್ ಯೂನಿಯನ್ ಗೌರವ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಸನಿಲ್ ಅಭಿಪ್ರಾಯಪಟ್ಟರು. |
ಇತ್ತೀಚೆಗೆ ಭಾರತ್ ಕೋ- ಆಪರೇಟಿವ್ ಬ್ಯಾಂಕ್ ಮುಂಬಯಿ ಇದರ ಮುಲುಂಡು ಪೂರ್ವ ಶಾಖೆಯಲ್ಲಿ ಆಯೋಜಿಸಿದ್ದ ಕಾರ್ಯ |
ಕ್ರಮದಲ್ಲಿ ಸೇವಾ ನಿವೃತ್ತಿ ಹೊಂದಿದ ಶೇಖರ ಎನ್. ಬಿಲ್ಲವ ಅವರನ್ನು ಸಮ್ಮಾನಿಸಿ ಮಾತನಾಡಿದ ಅವರು, ಪ್ರಸ್ತುತ ಕಾಲಘಟ್ಟದಲ್ಲಿ ಬ್ಯಾಂಕ್‌ಗಳು ಜನಸಾಮಾನ್ಯರ ಅವಿಭಾಜ್ಯ ಅಂಗವಾಗಿದೆ. ಕಾನೂನು ನಿಯ ಮಗಳನ್ನು, ನಮ್ಮಲ್ಲಿರುವ ವಿನೂತನ ಸವಲತ್ತುಗಳನ್ನು ಖಾತೆದಾರರಿಗೆ ವಿವರಿಸಿ ಮಾನವ ಸಂಪನ್ಮೂಲಗಳಗನ್ನು ಕ್ರೋಢೀಕರಿಸಬೇಕು. ಪ್ರಾಮಾಣಿಕತೆ, ಸತ್ಯಸಂಧತೆ, ಸನ್ನಡತೆಗಳಿಂದ ನಾವು ಅಭಿವೃದ್ಧಿಯ ಗುರಿ ತಲಪಲು ಸಾಧ್ಯವಾಗುತ್ತದೆ ಎಂದರು. |
ಇದನ್ನೂ ಓದಿ:ಕಲ್ಯಾಣ್: ಸಂತ ನಿರಂಕಾರಿ ಮಿಷನ್‌ನಿಂದ ರಕ್ತದಾನ ಶಿಬಿರ |
ಮುಲುಂಡು ಪೂರ್ವ ಶಾಖೆಯ ಪ್ರಬಂಧಕಿ ಕಲಾವತಿ ಡಿ. ಬೋಳಾರ್ ಮಾತನಾಡಿ, ನಿವೃತ್ತಿ ಜೀವನವನ್ನು ಸಮಾಜಮುಖಿ ಚಿಂತನೆಗಳಲ್ಲಿ ತೊಡಗಿಸಿ ಹೊಸ ಬದುಕಿನ ಸಾರ್ಥಕತೆ ಪಡೆಯಬೇಕು. 32 ವರ್ಷಗಳ ಅವರ ಸುದೀರ್ಘ ಸೇವೆಯಲ್ಲಿ ಪಡೆದ ಅನುಭವ ಇತರಿಗೂ ಸ್ಫೂರ್ತಿಯಾಗಲಿ. ಅವರ ನಿವೃತ್ತ ಬದುಕು ಸುಖ, ಶಾಂತಿ, ಸಮೃದ್ಧಿಯಿಂದ ಕೂಡಿರಲಿ ಎಂದು ಹಾರೈಸಿದರು. |
ಸಮ್ಮಾನ ಸ್ವೀಕರಿಸಿ ಮಾತನಾಡಿದ ಶೇಖರ ಎನ್. ಬಿಲ್ಲವ, ಸಮಯ ನೋಡದೆ, ಗ್ರಾಹಕರ ಮನಸ್ಸನ್ನು ನೊಯಿಸದೆ ತನ್ನ ಸೇವಾತತ್ವರತೆಯನ್ನು ಪೂರೈಸಬೇಕು. ಕರ್ತವ್ಯಕ್ಕೆ ನ್ಯಾಯ ಒದಗಿಸುವ ಮನೋಭಾವ ನಮ್ಮದಾಗಬೇಕು. ಸಾಮಾನ್ಯ ಬಡ ಕುಟುಂಬದ ನನಗೆ ಸ್ವಂತ ಮನೆ, ವಿಧ್ಯಾಭ್ಯಾಸ, ಕುಟುಂಬ ಸದಸ್ಯರ ಆರೈಕೆ ಭಾರತ್ ಬ್ಯಾಂಕ್ ನೀಡಿದ ಸಹಕಾರದಿಂದ ಸಾಧ್ಯವಾಯಿತು ಎಂದು ತಿಳಿಸಿ, ಸಹಕರಿಸಿದ ಸಹೋ ದ್ಯೋಗಿಗಳಿಗೆ ಕೃತಜ್ಞತೆ ಸಲ್ಲಿಸಿದರು. |
ರಮೇಶ್ ಕುಂದರ್, ಶಿಶಿರ್ ಸಾಲ್ಯಾನ್, ಭಾರತ್ ಬ್ಯಾಂಕ್ ಎಂಪ್ಲಾಯಿಸ್ ಯೂನಿಯನ್ ಅಧ್ಯಕ್ಷ ಅಶೋಕ್ ಎಲ…. ಕೋಟ್ಯಾನ್, ಉಪಕಾರ್ಯಾಧ್ಯಕ್ಷ ಲೋಹಿತಾಕ್ಷ ಎಸ್. ಅಂಚನ್, ಜತೆ ಕಾರ್ಯದರ್ಶಿ ಪ್ರಿಯಾ ಬಿ. ಪೂಜಾರಿ, ಕೋಶಾಧಿಕಾರಿ ಪುರುಷೋತ್ತಮ ಕೆ. ಪೂಜಾರಿ, ಜತೆ ಕೋಶಾಧಿಕಾರಿ ವಿನೂತಾ ಪೂಜಾರಿ, ಪದಾಧಿಕಾರಿಗಳಾದ ಗಿರೀಶ್ ಎ. ಸಾಲ್ಯಾನ್, ಶ್ರೀಧರ ಎಚ್. ಪೂಜಾರಿ, ರಾಘವೇಂದ್ರ ಪ್ರಸಾದ್ ಸಾಲ್ಯಾನ್, ಸುಜೀತ್ ಜಿ. ಕೋಟ್ಯಾನ್ ಶುಭ ಹಾರೈಸಿದರು. ಹಿರಿಯ ಅಧಿಕಾರಿ ಸುನೀತಾ ಜೆ. ಪೂಜಾರಿ ಸ್ವಾಗತಿಸಿದರು. ಅರುಣಾ ಕೆ. ಬಂಟ್ವಾಳ್ ವಂದಿಸಿದರು. |
ಗೋವಾಣಿ : Cow Story 10 : ಶ್ರೀಶ್ರೀ ಸಂದರ್ಶನ – ಗೋಬ್ಯಾಂಕ್ - HareRaama : Official website of Sri Sri Raghaveshwara Bharati Swamiji, Pontiff - Sri Ramachandrapura Matha Hosanagara |
ಪುರಾತನ ಕಾಲದಲ್ಲಿ ಶ್ರೀಮಂತಿಕೆಯನ್ನು ಗೋ ಸಂಪತ್ತಿನ ಆಧಾರದಲ್ಲಿ ಅಳೆಯಲಾಗುತ್ತಿತ್ತು. ಹಣವನ್ನು ಠೇವಣಿ ಇರಿಸುವಂತೆ ಗೋವುಗಳನ್ನು ಸಂರಕ್ಷಿಸಲು ಗೋ ಬ್ಯಾಂಕ್ ರಚನೆಯ ಪರಿಕಲ್ಪನೆ ಮೂಡಿತು. ಈ ಕುರಿತ ಚಿಂತನೆಯನ್ನು ಹಂಚಿಕೊಂಡಿದ್ದಾರೆ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು. |
ಗೋಬ್ಯಾಂಕ್ |
1. ಗೋಬ್ಯಾಂಕ್ – ಈ ವಿಶಿಷ್ಟ ಕಲ್ಪನೆ ಬಂದಿದ್ದು ಹೇಗೆ? ಸಮಾಜಕ್ಕೆ ಇದರ ಉಪಯೋಗ ಏನು? |
ಪ್ರಾಚೀನ ಭಾರತದಲ್ಲಿ ಗೋವನ್ನು ಸಂಪತ್ತಿನ ರೂಪದಲ್ಲಿ ಕಾಣಲಾಗುತ್ತಿತ್ತು. ಯಾರ ಬಳಿ ಹೆಚ್ಚು ಗೋವುಗಳಿದೆಯೋ ಅವನನ್ನೇ ಶ್ರೀಮಂತ ಎಂದು ಭಾವಿಸಲಾಗುತ್ತಿತ್ತು. ಪ್ರಾಚೀನರ ಆ ಕಲ್ಪನೆ ಈ ಇಂದಿನ ಗೋಬ್ಯಾಂಕ್‍ಗೆ ಒಂದು ಪ್ರೇರಣೆ. ಇನ್ನೊಂದು ಪ್ರೇರಣೆ ಇಂದಿನ ಬ್ಯಾಂಕ್‍ಗಳು. ಹೆಚ್ಚುವರಿ ಹಣವನ್ನು ಬ್ಯಾಂಕ್‍ನಲ್ಲಿ ಠೇವಣಿಯಾಗಿ ಇಡಲಾಗುತ್ತದೆ. ಹಣ ಕಡಿಮೆ ಬಿದ್ದಾಗ ಬ್ಯಾಂಕ್ ನಿಂದ ಲೋನ್ ಪಡೆಯುವ ಪರಿಪಾಠವೋ, ಸಾಲ ಪಡೆಯುವ ಪರಿಪಾಠವೂ ಇದೆ. ಇದೆರಡೂ ಕಲ್ಪನೆ ಮೇಳೈಸಿದಾಗ ಗೋಬ್ಯಾಂಕ್ ಹೊರಹೊಮ್ಮಿದ್ದು. ಗೋವು ಒಂದು ಸಂಪತ್ತು ನಿರ್ವಹಿಸಲು ಕಷ್ಟವಾದಾಗ ಅದನ್ನು ತಂದು ಗೋ ಬ್ಯಾಂಕ್ ನಲ್ಲಿ ಬಿಡಬಹುದು. ಗೋವು ಬೇಕು ಇಲ್ಲ ನಮ್ಮ ಬಳಿಯಲ್ಲಿ ಎನ್ನುವ ಸಂದರ್ಭದಲ್ಲಿ ಗೋವನ್ನು ಗೋ ಬ್ಯಾಂಕ್ ನಿಂದ ಎರವಲಾಗಿ ಪಡೆದು ಲಾಭವನ್ನು ಪಡೆದುಕೊಂಡು ಪುನಃ ಅಲ್ಲಿಗೇ ಮರಳಿ ಸಲ್ಲಿಸಬಹುದು. |
2. ಗೋ ಬ್ಯಾಂಕ್ ಯೋಜನೆಯಲ್ಲಿ ಸಾಕಲಾಗದವರು ತಂದು ಬಿಟ್ಟ ಗೋವಿಗೆ ಮೇವು ನೀಡಿ ಸಾಕಿಯೂ, ಮಠಕ್ಕೇನು ಲಾಭ? |
ಗೋವಿನ ಜೀವ ಉಳಿಯುವುದೇ ಮಠಕ್ಕೆ ಲಾಭ, ಮಠ ಮನೆಯ ಹಾಗಲ್ಲ, ಅಲ್ಲಿ ಸ್ವಂತ ಲಾಭದ ಪ್ರಶ್ನೆ ಇರೋದಿಲ್ಲ, ಅಲ್ಲಿ ಸಮಾಜದ ಲಾಭವೇ ಲಾಭ, ಹಾಗೆ ಒಂದು ಗೋವಿನ ಜೀವ ಉಳಿದರೆ ಅದು ಸಮಾಜಕ್ಕೆ ಲಾಭ ಸೃಷ್ಟಿಗೇ ಲಾಭ. ಆ ಲಾಭವೇ ಮಠದ ಲಾಭ |
3. ಗೋಬ್ಯಾಂಕ್ ಮೂಲಕ ಗೋಸಂರಕ್ಷಣೆ ಉದ್ದೇಶ. ಪರೋಕ್ಷವಾಗಿ ರೈತರ ಸಂರಕ್ಷಣೆಯೇ? ಮಠದ ವ್ಯಾಪ್ತಿಯೊಳಗೆ ಇದು ಸುಲಭ ಸಾಧ್ಯವೇ? |
ನಿಜವಾದ ಮಾತು ಗೋ ಸಂರಕ್ಷಣೆಯ ಮೂಲಕ ರೈತರ ಸಂರಕ್ಷಣೆಯೇ ಮಠದ ಉದ್ದೇಶ, ಸಾಧ್ಯವೇ ಅಂದರೆ ಅದಕ್ಕೆ ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ ಅನ್ನೋದೇ ಉತ್ತರ ಈಗ 4 ಸಾವಿರ ಟನ್ ಹಸಿರು ಮೇವನ್ನ ಮಲೆ ಮಹದೇಶ್ವರ ಬೆಟ್ಟದಲ್ಲಿ ಹಂಚಲಿಕ್ಕೆ ಸಾಧ್ಯ ಅನ್ನೋದಾದ್ರೆ ಆ ಕಾಯ9ನಡೆಯೋಕೆ ಮುಂಚೆ ಯಾರೂ ಕೂಡಾ ಸಾಧ್ಯ ಇಲ್ಲ ಅಂತಾನೇ ಹೇಳತಾ ಇದ್ದರು. ಇವತ್ತು ಅದು ಸಾಧ್ಯ ಆಗಿದೆ ಹಾಗಾಗಿ ಅಸಂಭವ ಯಾವುದೂ ಇಲ್ಲ. |
4. ಗೋಬ್ಯಾಂಕ್ ಯೋಜನೆಯಿಂದ ಗೋವಿನ ರಕ್ಷಣೆಗೆ ಸಹಾಯ ಆಗಿದೆ ಎನ್ನಬಹುದೇ? |
ಧಾರಾಳವಾಗಿ, ಒಂದೊಂದು ಗೋ ಬ್ಯಾಂಕಲ್ಲಿ ಈಗಾಗಲೇ ಸಾವಿರಾರು ಗೋವುಗಳ ರಕ್ಷಣೆ ಆಗಿದೆ ಆಗ್ತಾ ಇದೆ. |
5. ಗೋಬ್ಯಾಂಕ್ ಯೋಜನೆಯಲ್ಲಿ ತೊಡಗಿಸಿಕೊಳ್ಳಲು ಯಾರಿಗೆಲ್ಲ ಅವಕಾಶವಿದೆ? ಹೇಗೆ ತೊಡಗಿಸಿಕೊಳ್ಳಬಹುದು? ಅವರಿಗೆ ಶ್ರೀಮಠ ಹೇಗೆ ಸಹಾಯ ಮಾಡುತ್ತದೆ? |
ಯಾರಿಗೆಲ್ಲಾ ಗೋವಿನ ಬಗ್ಗೆ ಪ್ರೀತಿ ಮಮತೆ ಇದೆಯೋ ಯಾರಿಗೆಲ್ಲಾ ಗೋವು ಉಳಿಯಬೇಕು, ಉಳಿಸಬೇಕು ಗೋವನ್ನ ಮತ್ತು ಸರಿಯಾದ ರೀತಿಯಲ್ಲಿ ಬಳಸಬೇಕು ಅಂತ ಇದೆಯೋ ಅವರೆಲ್ಲರೂ ಗೋ ಬ್ಯಾಂಕ್ ಯೋಜನೆಯಲ್ಲಿ ಪಾಲುದಾರರಾಗಲು ಅರ್ಹರು. ಅಂದರೆ ಇಲ್ಲಿಂದ ಗೋವನ್ನು ಪಡೆದುಕೊಂಡು ಕಟುಕರಿಗೆ ಕೊಡುವವರು ಅರ್ಹರಲ್ಲ. ಹಾಗಾಗಿ ಗೋಬ್ಯಾಂಕ್ ನಲ್ಲಿ ಆ ರೀತಿಯಾರುವ ಕಾನೂನು ಬದ್ದವಾದ ಕಾಗದ ಪತ್ರ ಮಾಡಲಾಗುತ್ತದೆ. ಅಂದರೆ ಅಲ್ಲಿಂದ ಎರವಲಾಗಿ ಪಡೆದ ಗೋವನ್ನು ಮಾರಾಟ ಮಾಡುವುದಿಲ್ಲ. ಪರಬಾರೆ ಮಾಡುವುದಿಲ್ಲ. ಗೋ ಬ್ಯಾಂಕ್ ಒಪ್ಪಿಗೆ ಇಲ್ಲದೆ ಅದನ್ನು ಏನೂ ಮಾಡುವುದಿಲ್ಲ ಎನ್ನು ಕಾನೂನು ಬದ್ದ ಕರಾರು ಪತ್ರಮಾಡಿಕೊಂಡೇ ಕೊಡಲಾಗುತ್ತದೆ. ಸಾಕಲಾಗದ ಗೋವಿದ್ದರೆ ತಂದು ಬಿಡುವ ಮೂಲಕ ನಾವು ಈ ಯೋಜನೆಯನ್ನು ಬಳಸಿಕೊಳ್ಳಬಹುದು. ಗೋವಿನ ಅಗತ್ಯ ಇದ್ದರೆ, ಅಂದರೆ ನಿಜವಾದ ಅಗತ್ಯ ಇದ್ದರೆ, ಪ್ರಾಮಾಣಿಕ ಅಗತ್ಯ ಇದ್ದರೆ ಗೋಬ್ಯಾಂಕ್‍ಗೆ ಅರ್ಜಿಕೊಟ್ಟು ಗೋ ಬ್ಯಾಂಕ್‍ಗೆ ಸರಿಯಾದ ಕರಪತ್ರವನ್ನು ಮಾಡಿಕೊಟ್ಟು ಪರಬಾರೆ ಮಾಡುವುದಿಲ್ಲ ಎಂದು ಕರಪತ್ರ ಮಾಡಿಕೊಟ್ಟು ಪಡೆದುಕೊಳ್ಳಬಹುದು. ತನ್ಮೂಲಕವೂ ಉಪಯೋಗ ಪಡೆದುಕೊಳ್ಳಬಹುದು. ಅವರಿಗೆ ಮಠ ಸಹಾಯ ಮಾಡುವುದು ಹೇಗೆಂದರೆ ಗೋವನ್ನು ಪಡೆದುಕೊಳ್ಳುವ ಮೂಲಕ ಸಾಕಲಾಗದವರ ಗೋವನ್ನು ಪಡೆದುಕೊಂಡು ಸಾಕುವ ಮೂಲಕ ಬೇಕಾದ ಮರಳಿ ಕೊಡುವ ಮೂಲಕ ಹಾಗೇ ಗೋವಿನ ಅಗತ್ಯ ಇರುವವರಿಗೆ ಗೋವನ್ನು ಪ್ರಧಾನ ಮಾಡುವ ಮೂಲಕ ಮಠ ಸಹಾಯ ಮಾಡುತ್ತದೆ. |
ಸರ್ವರ ಸಹಕಾರದಿಂದಷ್ಟೇ ಕಡ್ಡಾಯ ಶಿಕ್ಷಣ ಆಶಯ ಫಲಪ್ರದ | Udayavani – ಉದಯವಾಣಿ |
Saturday, 15 Aug 2020 | UPDATED: 10:05 PM IST |
Team Udayavani, Feb 19, 2020, 6:59 AM IST |
ದೇಶದ ನಾಗರಿಕರ ಏಳಿಗೆಯ ದೃಷ್ಟಿಯಿಂದ ಮಕ್ಕಳ ಕಡ್ಡಾಯ ಶಿಕ್ಷಣ ದಂತಹ ಕೆಲವೊಂದು ಉತ್ತಮ ಕಾನೂನುಗಳನ್ನು ಸರಕಾರ ಜಾರಿಗೆ ತಂದಿದೆ. |
ಅವುಗಳಲ್ಲಿ 6ರಿಂದ 14 ವರ್ಷದೊಳಗಿನ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಕುರಿತಾಗಿನ ಕಾನೂನು ಒಂದು. ಇದನ್ನು ಸಂವಿಧಾನದ 21ಎ ವಿಧಿಯ ಮೂಲಕ ಮೂಲಭೂತ ಹಕ್ಕನ್ನಾಗಿ ಪ್ರತಿ ಪಾದಿಸಲಾಗಿದೆ. ಪ್ರವೇಶಾತಿ ನೀಡುವುದು, ಹಾಜರಾತಿ ಖಚಿತಪಡಿಸಿ ಕೊಳ್ಳುವುದು ಮತ್ತು ಆ ವಯೋಮಾನದೊಳಗೆ ದೇಶದ ಪ್ರತಿ ಮಗು ವಿಗೂ ಕನಿಷ್ಟ ಎಲಿಮೆಂಟರಿ ಶಿಕ್ಷಣ ಒದಗಿಸಿಕೊಡುವ ಕಡ್ಡಾಯ ಜವಾಬ್ದಾರಿ ಸರಕಾರದ್ದಾಗಿರುತ್ತದೆ. 2009ರ ಆಗಸ್ಟ್ 4ರಂದು ಸಂಸತ್‌ನಲ್ಲಿ ಅಂಗೀಕಾರಗೊಂಡ ಶಿಕ್ಷಣ ಹಕ್ಕು ಕಾನೂನು 2010ರ ಏಪ್ರಿಲ್ 1ರಿಂದ ಜಾರಿಗೊಂಡಿದೆ. ಆ ಹೊತ್ತು ಭಾರತ ಮಕ್ಕಳ ವಿದ್ಯಾಭ್ಯಾಸವನ್ನು ಮೂಲಭೂತ ಹಕ್ಕನ್ನಾಗಿಸಿದ ಜಗತ್ತಿನ 135 ದೇಶಗಳೊಳಗೆ ಒಂದೆನಿ ಸಿತ್ತು. ಮಕ್ಕಳನ್ನು ಅನುತ್ತೀರ್ಣ ಮಾಡದ ಆಶಯುವೂ 2009ರ ಕಡ್ಡಾಯ ಶಿಕ್ಷಣ ಕಾನೂನಿನಲ್ಲಿತ್ತು. ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ (ತಿದ್ದುಪಡಿ) ಕಾನೂನು ಸಂಸತ್‌ನಲ್ಲಿ 2019ರ ಜ.3ರಂದು ಅಂಗೀಕಾರಗೊಂಡಿತು. 2019 ಜ.10ರಂದು ರಾಷ್ಟ್ರಪತಿಗಳ ಅಂಕಿತ ದೊರೆತು ಗಜೆಟ್ ಪ್ರಕಟನೆಯೂ ಆಗಿದೆ. ಈ ತಿದ್ದುಪಡಿ ಕಾನೂನಿನ ಮೇರೆಗೆ ಅನುತ್ತೀರ್ಣ ಕುರಿತಾಗಿನ ತೀರ್ಮಾನವನ್ನು ಆಯಾ ರಾಜ್ಯ ಸರಕಾರಗಳು ತೆಗೆದುಕೊಳ್ಳಬಹುದಾಗಿದೆ. |
ಭಾರತಕ್ಕೆ ಸ್ವಾತಂತ್ರ್ಯ ದೊರೆಯುವ ಹೊತ್ತು ದೇಶದ ಸಾಕ್ಷರತಾ ಪ್ರಮಾಣ ಕೇವಲ ಶೇ.12 ಆಗಿತ್ತು. ಈಗ ಏಳು ದಶಕಗಳ ಬಳಿಕ ಆಡಳಿತ ನಡೆಸಿದ ಸರಕಾರಗಳ ಪ್ರಯತ್ನ ಮತ್ತು ಜನರ ಸಹಭಾಗಿತ್ವ ದಿಂದ ಈ ಪ್ರಮಾಣ ಶೇ.70ನ್ನು ದಾಟಿದೆ. ದೇಶ ಪ್ರಗತಿಪಥದಲ್ಲಿ ಸಾಗುತ್ತಿದ್ದಂತೆ ಜನರ ಸಾಕ್ಷರತಾ ಪ್ರಮಾಣವೂ ಹೆಚ್ಚಾಗಬೇಕು. ಕೇವಲ ಸಾಕ್ಷರತಾ ಪ್ರಮಾಣವಲ್ಲದೆ ಜನರ ತಿಳಿವಳಿಕೆಯ ಮಟ್ಟದಲ್ಲೂ ಏರಿಕೆಯಾಗಬೇಕು. ಆಗ ಮಾತ್ರ ದೇಶ ನಿಜವಾದ ಪ್ರಗತಿ ಸಾಧಿಸಿದೆ ಎನ್ನಬಹುದು. |
ಈ ದೃಷ್ಟಿಯಲ್ಲಿ ನೋಡುವಾಗ ಕಡ್ಡಾಯ ಶಿಕ್ಷಣ ಎನ್ನುವುದು ಒಂದು ಅತ್ಯತ್ತಮ ಹೆಜ್ಜೆ ಎನ್ನಬಹುದು. ಕಡ್ಡಾಯ ಶಿಕ್ಷಣದ ಜವಾಬ್ದಾರಿ ಸರಕಾರದ್ದಾಗಿರುವುದಾದರೂ ಸರಕಾರವೆನ್ನುವುದು ಜನರಿಂದ, ಜನರಿಗಾಗಿ ಮತ್ತು ಜನರದ್ದೇ ವ್ಯವಸ್ಥೆಯಾದ ಕಾರಣ ಕಡ್ಡಾಯ ಶಿಕ್ಷಣದ ಅನುಷ್ಠಾನದಲ್ಲಿ ಬಡವ – ಬಲ್ಲಿದ, ವಿದ್ಯಾವಂತ ಅವಿದ್ಯಾವಂತ ನೆನ್ನದೆ ಎಲ್ಲರ ಸಹಭಾಗಿತ್ವವೂ ಅಡಕವಾಗಿರಬೇಕು. ಆದರೆ ವಾಸ್ತವ ಸ್ಥಿತಿ ಹೇಗಿದೆ? ಶಾಲಾ ಸಿಬ್ಬಂದಿ ಮತ್ತು ಸರಕಾರಿ ಅಧಿಕಾರಿಗಳೇನೋ ತಮ್ಮ ವ್ಯಾಪ್ತಿಗೊಳಪಟ್ಟ ಪ್ರದೇಶಗಳಲ್ಲಿ 6ರಿಂದ 14ರೊಳಗಿನ ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ನೋಡಿ ಕೊಳ್ಳುತ್ತಾರೆ. ಆದರೆ ದಾಖಲಾತಿ ಪಡೆದ ಮಗು ತರಗತಿಯಲ್ಲಿ ಹಾಜರಿರುತ್ತದೋ, ಪಾಠ ಆಟದ ಚಟುವಟಿಕೆಗಳಲ್ಲಿ ಭಾಗವಹಿಸಿ ಸರಿಯಾದ ವಿದ್ಯಾಭ್ಯಾಸ ಪಡೆ ಯುತ್ತದೆಯೋ ಎನ್ನುವುದನ್ನು ಬಹುಶಃ ಅವರಿಂದಲೂ ನೋಡಿಕೊಳ್ಳಲಾಗುವುದಿಲ್ಲ. |
ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾನೂನು ಜಾರಿಗೊಳ್ಳುವ ಅನೇಕ ವರ್ಷಗಳ ಹಿಂದೆಯೇ ಬಾಲಕಾರ್ಮಿಕ ದುಡಿಮೆ (ನಿರ್ಬಂಧ ಮತ್ತು ನಿಯಂತ್ರಣ) ಕಾನೂನು 1986ರಲ್ಲಿ ಜಾರಿಗೊಂಡಿದ್ದು, ಅದರಂತೆ 14 ವರ್ಷ ಕೆಳಗಿನ ಮಕ್ಕಳನ್ನು ಯಾವುದೇ ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳುವಂತಿಲ್ಲ. |
ಅಂದರೆ ಗೃಹ ಕೃತ್ಯಗಳಲ್ಲಿ, ವಾಹನ ತೊಳೆ ಯುವುದು, ಬೀದಿ ಬದಿ ಆಹಾರ ಮಾರಾಟ ಮತ್ತಿತರ ಉದ್ಯೋಗ ಗಳಲ್ಲೂ ಮಕ್ಕಳು ದುಡಿಯುವಂತಿಲ್ಲ. |
2016ರಲ್ಲಿ ಜಾರಿಗೊಂಡ ತಿದ್ದುಪಡಿ ಪ್ರಕಾರ 14ರಿಂದ 18ರೊಳಗಿನವರನ್ನು ಹದಿಹರೆಯದವರು ಎಂದಿರುವ ಕಾನೂನು ಅವರನ್ನು ಅಪಾಯಕಾರಿ ಎಂದು ಸಾರಿರುವ ಉದ್ಯಮ ಮತ್ತು ಅಂತಹ ಉದ್ಯೋಗಗಳಲ್ಲಿ ತೊಡಗಿಸದಂತೆ |
ನಿರ್ಬಂ ಧಿ ಸಿದೆ. ತಮ್ಮದೇ ಮನೆವಾರ್ತೆಯಲಿ/ಕುಟುಂಬದ ಕಸುಬಲ್ಲಿ ಶಾಲಾ ಅವಧಿಯ ಬಳಿಕ ಮಕ್ಕಳು ಸಹಾಯ ಮಾಡಬಹುದಾಗಿದೆ. |
ನಮ್ಮ ದೇಶದಲ್ಲಿ ಸದುದ್ದೇಶದಿಂದ ರಚಿಸಿದ ಕಾನೂನುಗಳೇನೋ ಇವೆ. ಆದರೆ ಅವುಗಳ ಸದುಪಯೋಗ ನಿರೀಕ್ಷಿತ ಮಟ್ಟದಲ್ಲಿರದಿರು ವುದು ಬೇಸರದ ಸಂಗತಿ. ಮಕ್ಕಳ ಕಡ್ಡಾಯ ಶಿಕ್ಷಣದ ಕುರಿತಾಗಿನ ಕಾನೂ ನನ್ನೇ ಗಮನಿಸೋಣ. ದೊಡ್ಡ ದೊಡ್ಡ ಜಾತ್ರೆಗಳು, ಸಾಂಸ್ಕೃತಿಕ ಉತ್ಸವಗಳು ಮತ್ತಿತರ ಕಾರ್ಯಕ್ರಮಗಳಿರುವಲ್ಲಿ ಬಲೂನು, ಗೊಂಬೆ ಗಳು ಮತ್ತಿತರ ವಸ್ತುಗಳ ಮಾರಾಟ, ಹಗ್ಗದ ಮೇಲಿನ ನಡಿಗೆ ಮತ್ತಿತರ ಆಟಗಳನ್ನೊಳಗೊಂಡ ಪ್ರದರ್ಶನ ಕಾರ್ಯಕ್ರಮಗಳು ಸಾಮಾನ್ಯ ವಾಗಿ ಹಲವಾರು ದಿನ ನಡೆಯುತ್ತವೆ. |
ಶಾಲೆಗಳಿರುವ ದಿನಗಳಲ್ಲೇ ದೂರ ದೂರದ ಊರುಗಳಿಂದ ಬಂದಿರುವ ಈ ಮಾರಾಟ ಅಂಗಡಿಗಳಲ್ಲಿ, ಕಸರತ್ತು ಪ್ರದರ್ಶನಗಳಲ್ಲಿ 6 ರಿಂದ 14 ವರ್ಷದೊಳಗಿನ ಮಕ್ಕಳೂ ಕಾಣ ಸಿಗುತ್ತಾರೆ ಅಂದರೆ ಒಂದೋ ಅವರು ಶಾಲೆಗೇ ಸೇರ್ಪಡೆ ಗೊಂಡಿಲ್ಲ, ಅಲ್ಲದಿದ್ದಲ್ಲಿ ಅವರು |
ಶಾಲೆ ತಪ್ಪಿಸಿ ಪಾಲಕರಿಗೆ ನೆರವಾಗಲು ದುಡಿಯುತ್ತಿದ್ದಾರೆ. ಹೀಗಿರುವಾಗ ಉದಾತ್ತ ಧ್ಯೇಯವಿಟ್ಟುಕೊಂಡು ಕೈಗೊಂಡಿರುವ ದೇಶದ ಎಲ್ಲಾ ಪ್ರಜೆಗಳನ್ನು ಸುಶಿಕ್ಷಿತಗೊಳಿಸುವ ಯೋಜನೆ ಕೈಗೂಡುವುದಾದರೂ ಹೇಗೆ? |
ಈಗೀಗ ಸಣ್ಣ ದೊಡ್ಡ ನಗರಗಳಲ್ಲಿ ಎಲ್ಲೆಲ್ಲೂ ವಸತಿ ಸಮುಚ್ಚಯಗಳು ತಲೆ ಎತ್ತಿವೆ. ಕೆಲವೊಂದು ವಸತಿ ಸಮುಚ್ಚಯಗಳಲ್ಲಿ ಕಾವಲುಗಾರ (ವಾಚ್‌ಮನ್), ಕಟ್ಟಡ ನಿರ್ವಹಣೆ(ಹೌಸ್ ಕೀಪಿಂಗ್) ಕೆಲಸಗಳಲ್ಲಿ ಕುಟುಂಬವೊಂದನ್ನು ನೇಮಿಸಲಾಗುತ್ತದೆ. ಈ ಕುಟುಂಬದ ವಾಸ್ತವ್ಯ ಸಮುಚ್ಚಯದಲ್ಲೇ ನಡೆಯುತ್ತದೆ. ಕುಟುಂಬದಲ್ಲಿ ಗಂಡ – ಹೆಂಡತಿ ಮತ್ತು ಮಕ್ಕಳಿರುತ್ತಾರೆ. ಕೆಲವು ಕಡೆ ಮಕ್ಕಳ ಸಂಖ್ಯೆ ಮೂರಕ್ಕಿಂತ ಅಧಿಕ ಇರುವುದೂ ಇದೆ. ಕುಟುಂಬದ ಗಂಡಸು ಹಗಲು ಪಾಳಿಯಲ್ಲಿ ಹೊರಗಡೆ ಕೆಲಸಕ್ಕೆ ಹೋದರೆ ರಾತ್ರಿ ಪಾಳಿಯಲ್ಲಿ ಕಾವಲುಗಾರ ನಾ ಗಿಯೂ, ಹೆಂಗಸು ಹತ್ತಾರು ಮಹಡಿಗಳ ಸಮುಚ್ಚಯದ ನೈರ್ಮಲ್ಯ ಕೆಲಸಕ್ಕೆ ಮತ್ತು ಹಗಲುಪಾಳಿಯ ಕಾವಲು ನೋಡಿಕೊಳ್ಳುತ್ತಾರೆ. |
ಎರಡು ಅಥವಾ ಮೂರು ಕೆಲಸಗಳಿಗಾಗಿ ಸಂಬಳಗಳನ್ನೂ ಅವರಿಗೆ ನೀಡಲಾಗುತ್ತದೆ. ಜತೆಗೆ ಅಂತಹವರು ನಿವಾಸಿಗಳ ವಾಹನ ತೊಳೆ ಯುವ ಮತ್ತಿತರ ಕೆಲಸಗಳನ್ನೂ ನಿರ್ವಹಿಸುತ್ತಾರೆ. ಆದರೆ ಇಷ್ಟೆಲ್ಲಾ ಕೆಲಸಗಳನ್ನು ವಯಸ್ಕರಿಂದಲೇ ನಡೆಸಲು ಸಾಧ್ಯವೇ? |
ಇಲ್ಲಿಯೂ ಆ ಕುಟುಂಬದ ಮಕ್ಕಳು ಶ್ರಮಭರಿತ ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತಾರೆ. ತೋರಿಕೆಗೆ ಆ ಮಕ್ಕಳು ಶಾಲೆಗೆ ಸೇರ್ಪಡೆಗೊಂಡಿರುತ್ತಾರೆ. ಆದರೆ ರಜಾ ದಿನಗಳಲ್ಲಿ ಮಾತ್ರವಲ್ಲ ಶಾಲೆಯನ್ನು ತಪ್ಪಿಸಿಯೂ ಅವರು ವಸತಿ ಸಮುಚ್ಚಯದಂತಹ ಸ್ಥಳಗಳಲ್ಲಿ ದುಡಿಯುತ್ತಾರೆ. ಹೀಗಿರುವಾಗ ನಮ್ಮ |
ಕಾನೂನುಗಳ ಆಶಯ ಉಪಯೋಗಕ್ಕೆ ಬರುವುದಾದರೂ ಹೇಗೆ? |
ಮಕ್ಕಳನ್ನು ಶ್ರಮದಾಯಕ ಕೆಲಸದಲ್ಲಿ ತೊಡಗಿಸಿಕೊಳ್ಳುವ ಅವರ ಪಾಲಕರ, ಹೀಗೆ ಕೆಲಸಕ್ಕೆ ನೇಮಕ ಮಾಡಿಕೊಂಡಿರುವ ಮಾಲಕರ ಮತ್ತಿತರ ಎಲ್ಲರ ಸಹಕಾರವಿದ್ದಾಗ ಮಾತ್ರ ಇಂತಹ ಕಾನೂನುಗಳು ಫಲಪ್ರದವಾಗಲು ಸಾಧ್ಯವಿದೆ. ಈ ಅಂಶಗಳನ್ನು ಮನಗಂಡಾಗ ಮಾತ್ರ ದೇಶ ನಿಜವಾದ ಪ್ರಗತಿ ಸಾಧಿಸುವುದು. |
Subsets and Splits
No community queries yet
The top public SQL queries from the community will appear here once available.