text stringlengths 0 61.5k |
|---|
|ದುರ್ವಾಸನೆ ಬೀರುತ್ತಿದೆ ಪಾರಿಕಟ್ಟೆ ಕೆರೆ - mysuru - News in kannada, vijaykarnataka |
ದುರ್ವಾಸನೆ ಬೀರುತ್ತಿದೆ ಪಾರಿಕಟ್ಟೆ ಕೆರೆ |
ತಲಕಾಡು: ಕುಡಿಯಲು ಬಳಸುತ್ತಿದ್ದ ಪಾರಿಕಟ್ಟೆ ಕೆರೆ ಇಂದು ನಿರ್ಲಕ್ಷ್ಯಕ್ಕೆ ಒಳಗಾಗಿ ಕಲುಷಿತಗೊಂಡು ಜನರು ದುರ್ವಾಸನೆ ತಾಳಲಾರದ ಸ್ಥಿತಿಯಲ್ಲಿದ್ದಾರೆ. |
ತಲಕಾಡು ಹೋಬಳಿಯ ವಂಡೆಯಂದಳ್ಳಿಯ ಪಕ್ಕದಲ್ಲಿ ಇರುವ ಹಂದಿಜೋಗಿ ಕಾಲನಿಗೆ ಹೊಂದಿಕೊಂಡಂತೆ ಪಾರಿಕಟ್ಟೆ ಮಾಳ ಎಂಬ ಕೆರೆಯಿದ್ದು ಇದರ ಸಮೀಪ ಸುಮಾರು 30 ಮನೆಗಳಲ್ಲಿ ಜನರು ವಾಸಿಸುತ್ತಿದ್ದಾರೆ. |
ಈ ಕಾಲನಿಯನ್ನು ಸುಮಾರು 20 ವರ್ಷಗಳ ಹಿಂದೆ ಸ್ಥಾಪಿಸಲಾಯಿತು. ಈ ಕಾಲನಿಗೆ ಸರಿಯಾಗಿ ನೀರು ಪೊರೈಕೆಯಾಗದ ಕಾರಣ ಈ ಕೆರೆಯ ನೀರನ್ನು ಕುಡಿಯಲು ಉಪಯೋಗಿಸುತ್ತಿದ್ದರು. ಕಾಲ ಕ್ರಮೇಣ ಕಾಲನಿಗೆ ಬೋರ್‌ವೆಲ್ ಬಂದ ನಂತರ ಕಾಲನಿಯವರು ಮತ್ತು ಅಕ್ಕ ಪಕ್ಕದ ಕಾಲನಿಯವರು ಈ ಕೆರೆಯನ್ನು ಜಾನುವಾರುಗಳಿಗೆ ನೀರು ಕುಡಿಸಲು ಮತ್ತು ಅವುಗಳನ್ನು ತೊಳೆಯಲು ಅವಲಂಬಿಸಿದರು. ಅದರೆ ಈ ಕೆರೆಗೆ ಪಕ್ಕದ ಕಾಲನಿಯ ಚರಂಡಿ ನೀರು ಬಂದು ಸೇರಲು ಪ್ರಾರಂಭಿಸಿತು. ಮಳೆ ಬಂದರೆ ಮಳೆ ನೀರು ಹೊರ ಹೋಗಲು ಜಾಗವಿಲ್ಲದೆ ಕೆರೆಯ ಒಳಗಡೆಯೇ ಶೇಖರಿಸಿ ಕೆರೆಯ ನೀರು ಕಲುಷಿತಗೊಂಡಿದೆ. |
ಗಿಡಗಂಟಿ ಆವೃತ: ಇತ್ತಕಡೆ ಜನರು ಹೆಚ್ಚು ಬಾರದ ಕಾರಣ ಕೆರೆಯ ಸುತ್ತ ಗಿಡಗಂಟಿ, ಮುಳ್ಳಗಳು ಬೆಳೆದು ಹೆಮ್ಮರವಾಗಿ ನಿಂತಿವೆ. ನೀರು ಹೊರಹೋಗಲು ಜಾಗವಿಲ್ಲದ್ದರಿಂದ ಹೆಚ್ಚು ಕಾಲ ನೀರು ನಿಂತು ಕೆರೆಯ ತುಂಬಾ ಪಾಚಿ ಕಟ್ಟಿಕೊಂಡಿದೆ. 5 ವರ್ಷಗಳ ಹಿಂದೆ ತಲಕಾಡು ಗ್ರಾಮ ಪಂಚಾಯಿತಿ ವತಿಯಿಂದ ಕೆರೆಯ ನೀರು ಹೊರ ಹೋಗಲು ಒಂದು ಚಿಕ್ಕ ಕಾಲುವೆ ತೋಡಿದ್ದರು. ಆದರೆ ಅದು ಸ್ವಲ್ಪ ದಿನಗಳ ನಂತರ ಕಾಲುವೆ ಹಾದುಹೋಗಿರುವ ಅಕ್ಕ ಪಕ್ಕದ ಗದ್ದೆಯವರು ಈ ಕಾಲುವೆಯನ್ನು ಮುಚ್ಚಿಹಾಕಿದ್ದಾರೆ. ಇದರಿಂದ ಕೆರೆಯ ಸುತ್ತ ದುರ್ವಾಸನೆ ಬೀರಲಾರಂಭಿಸಿದೆ. ಪಕ್ಕದ ಕಾಲನಿಯವರಿಗಂತೂ ಈ ವಾಸನೆ ದಿನನಿತ್ಯ ತಪ್ಪಿದ್ದಲ್ಲ. |
ಕ್ರಿಮಿ ಕ್ರೀಟಗಳ ಆವಾಸ: ಕೆರೆಯು ಈಗ ಸಂಪೂರ್ಣ ಕಲುಷಿತವಾಗಿರುವುದರಿಂದ ಸಂಜೆಯ ನಂತರ ಹೆಚ್ಚು ಸೊಳ್ಳೆ ಗಳು ಕಾಲನಿಗೆ ಬರುತ್ತಿವೆ. ಗ್ರಾಮಸ್ಥರು ಡೆಂಗೆ ಜ್ವರದ ಭೀತಿಯಲ್ಲಿದ್ದಾರೆ. ತಲಕಾಡು ಹೋಬಳಿಯ ರೈತರ ಹೊಲ ಗದ್ದೆಗಳಿಗೆ ಈ ರಸ್ತೆಯಲ್ಲೇ ಹೋಗಬೇಕಿರುವುದರಿಂದ ಸಂಚರಿಸುವವರು ದುರ್ವಾಸನೆ ತಾಳಲಾರದೆ ಮೂಗು ಮುಚ್ಚಿಕೊಂಡು ಹೋಗಬೇಕಾಗಿದೆ. ಇದಲ್ಲದೇ ಕೆಲದಿನಗಳ ಹಿಂದೆ ಇದೇ ಕಾಲನಿಯ ಮೂರು ಮಕ್ಕಳು ಆಯತಪ್ಪಿ ಕೆರೆಗೆ ಬಿದ್ದಿದ್ದು ಯಾವುದೇ ಪ್ರಾಣಾಪಾಯವಾಗದೆ ಬದುಕುಳಿದಿದ್ದಾರೆ. ಇನ್ನಾದರೂ ಗ್ರಾಮಪಂಚಾಯಿತಿ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ವಚ್ಛಗೊಳಿಸಿ ನೆಮ್ಮದಿಯ ಜೀವನ ನಡೆಸಲು ಅನುಕೂಲ ಕಲ್ಪಿಸುವಂತೆ ಮನವಿ ಮಾಡಿದ್ದಾರೆ. ಸರಪಡಿಸದಿದ್ದಲ್ಲಿ ತಲಕಾಡು ಗ್ರಾಮ ಪಂಚಾಯಿತಿ ಎದುರು ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ. |
ಈ ಕೆರೆ ಕಲುಷಿತಗೊಂಡಿದ್ದು ಮೂಗು ಮುಚ್ಚಿಕೊಂಡು ವಾಸಿಸಬೇಕಿದೆ. ಮಕ್ಕಳು ಆಯತಪ್ಪಿ ಬಿದ್ದ ನಂತರ ಕಾಲನಿಯ ಜನತೆ ತಮ್ಮ ಮಕ್ಕಳನ್ನು ಹೊರಗಡೆ ಆಟವಾಡಲೂ ಬಿಡದಂಥÜ ಸ್ಥಿತಿಯಲ್ಲಿದ್ದಾರೆ. ಕೂಡಲೇ ಕರೆಗೆ ಕಾಯಕಲ್ಪಬೇಕಿದೆ. -ಎಲ್ಲಮ್ಮ , ಗ್ರಾ.ಪಂ.ಮಾಜಿ ಸದಸ್ಯೆ |
ಕೆರೆಯ ಜಾಗಕ್ಕೆ ಎಲ್ಲಾ ಅಧಿಕಾರಿಗಳೊಂದಿಗೆ ಭೇಟಿ ಕೊಟ್ಟಿದ್ದೇನೆ. ಕೆರೆಯ ನೀರು ಹೊರ ಹೋಗಲು ಸೂಕ್ತ ಕ್ರಮ ಕೈಗೊಳ್ಳತ್ತೆನೆ. -ಅಮ್ಜದ್ ಪಾಷ, ಪಿಡಿಒ, ತಲಕಾಡು |
|ಚುನಾವಣೆ ಘೋಷಣೆಗೂ ಮುನ್ನ ಬೆವರಿಳಿಸುವ ತಾಲೀಮು - columns - News in kannada, vijaykarnataka |
ಚುನಾವಣೆ ಘೋಷಣೆಗೂ ಮುನ್ನ ಬೆವರಿಳಿಸುವ ತಾಲೀಮು |
ಚಾಮರಾಜನಗರ-ವಿಧಾನಸಭಾ ಕ್ಷೇತ್ರಗಳು |
*ಫಾಲಲೋಚನ ಆರಾಧ್ಯ / ಕುಂದೂರು ಉಮೇಶ ಭಟ್ಟ |
ಇನ್ನು ಚುನಾವಣೆ ಘೋಷಣೆಯಾಗಿಲ್ಲ. ಆದರೆ, ಗಡಿ ಜಿಲ್ಲೆಯಲ್ಲಿ ಈಗಿನಿಂದಲೇ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧವಾಗತೊಡಗಿವೆ. ಕೆಲ ಆಕಾಂಕ್ಷಿಗಳು ಈಗಾಗಲೇ ಚುನಾವಣಾ ತಾಲೀಮು ಶುರು ಮಾಡಿದ್ದಾರೆ. ಒಂದೊಂದು ಕ್ಷೇತ್ರಕ್ಕೂ ಡಜನ್‌ಗಟ್ಟಲೆ ಆಕಾಂಕ್ಷಿಗಳಿದ್ದಾರೆ. |
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದ ಶಾಸಕರು ಬಲ ಪ್ರದರ್ಶನಕ್ಕೆ ತಯಾರಾಗುತ್ತಿದ್ದಾರೆ. ಜಿಲ್ಲೆಯ 4 ವಿಧಾನಸಭೆ ಕ್ಷೇತ್ರಗಳಲ್ಲಿನ ಯಾವ ಶಾಸಕರೂ ಪಕ್ಷ ಬದಲಿಸುವ ಸಾಧ್ಯತೆ ಇಲ್ಲ. ಇನ್ನು 2 ಮತ್ತು 3ನೇ ಸ್ಥಾನ ಪಡೆದಿದ್ದ ಮಂದಿ ಅತ್ತಿಂದಿತ್ತ ಜಿಗಿದಾಡಿದ್ದಾರೆ. ಚಾಮರಾಜನಗರ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ 8 ವಿಧಾನಸಭೆ ಕ್ಷೇತ್ರಗಳಿವೆ. 2008ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 8 ಕ್ಷೇತ್ರಗಳನ್ನೂ ತನ್ನ ಮಡಿಲಿಗೆ ಹಾಕಿಕೊಂಡಿತ್ತು. ಆದರೆ ನಂತರ ನಡೆದ ಲೋಕಸಭೆ ಚುನಾವಣೆ ವೇಳೆ ಕೊಳ್ಳೇಗಾಲ ವಿಧಾನಸಭೆ ಕ್ಷೇತ್ರದ ಶಾಸಕರಾಗಿದ್ದ ಧ್ರುವನಾರಾಯಣ, ಲೋಕಸಭೆಗೆ ಸ್ಪರ್ಧಿಸಿ ಗೆಲುವು ಕಂಡಿದ್ದರಿಂದ ಕೊಳ್ಳೇಗಾಲ ಕ್ಷೇತ್ರದಲ್ಲಿ ಮರು ಚುನಾವಣೆ ನಡೆಯಿತು. ಆಗ ಬಿಜೆಪಿ ಒಂದು ಸ್ಥಾನವನ್ನು ತನ್ನ ಬಗಲಿಗೆ ಹಾಕಿಕೊಂಡಿತು. |
ಚಾಮರಾಜನಗರ : ಹಾಲಿ ಶಾಸಕ ಕಾಂಗ್ರೆಸ್‌ನ ಸಿ. ಪುಟ್ಟರಂಗಶೆಟ್ಟಿ ಅದೇ ಪಕ್ಷದಿಂದಲೇ ಸ್ಪರ್ಧಿಸಲಿದ್ದಾರೆ. ಇನ್ನು ಬಿಜೆಪಿಯಿಂದ ಸ್ಪರ್ಧಿಸಿ 2ನೇ ಸ್ಥಾನ ಗಳಿಸಿದ್ದ ಎಂ. ಮಹಾದೇವು, ಈಗ ಜಾ.ದಳದ ಅಂಗಳ ದಲ್ಲಿದ್ದಾರೆ. ಆದರೆ, ಈ ಬಾರಿ ಚಾ.ನಗರದಿಂದ ಸ್ಪರ್ಧಿಸುತ್ತಾರೋ ಅಥವಾ ಹನೂರು ಕ್ಷೇತ್ರಕ್ಕೆ ವಲಸೆ ಹೋಗುತ್ತಾರೋ ಎಂಬುದು ಇನ್ನು ದೃಢಪಟ್ಟಿಲ್ಲ. 3ನೇ ಸ್ಥಾನ ಪಡೆದಿದ್ದ ವಾಟಾಳ್ ನಾಗರಾಜ್ ಮತ್ತೊಮ್ಮೆ ಪಕ್ಷೇತರರಾಗಿ ಕಣಕ್ಕಿಳಿಯಲಿದ್ದು, ಕೆಜೆಪಿ ಬೆಂಬಲ ಪಡೆಯುವ ಯತ್ನದಲ್ಲಿದ್ದಾರೆ. ಕಳೆದ ಚುನಾವಣೆಯಲ್ಲಿ ಸಿ.ಪುಟ್ಟರಂಗಶೆಟ್ಟಿ 42,017 ಮತ, ಬೆಂಕಿ ಮಹಾದೇವು 39,405 ಮತ ಹಾಗೂ ವಾಟಾಳ್ ನಾಗರಾಜ್ 11,426 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್‌ನ ಸಿ.ಪುಟ್ಟರಂಗಶೆಟ್ಟಿ 2,638 ಮತಗಳ ಅಂತರದಿಂದ ಗೆದ್ದಿದ್ದರು. |
ಇತರ ಆಕಾಂಕ್ಷಿಗಳು: ಕಾಂಗ್ರೆಸ್- ಜಿ. ನಾಗಶ್ರೀ, ಬಿಜೆಪಿ - ಪ್ರೊ. ಮಲ್ಲಿಕಾರ್ಜುನಪ್ಪ, ಜಾ.ದಳ - ಮಂಗಲ ಶಿವಕುಮಾರ್, ಕೆಜೆಪಿ - ಮಲ್ಲೇಶ್, ಕೆ.ಪಿ. ಮಹಾದೇವಸ್ವಾಮಿ. ಬಿಎಸ್‌ಆರ್ - ಎಂ. ರಾಮಚಂದ್ರ. |
ಗುಂಡ್ಲುಪೇಟೆ: ಹಾಲಿ ಶಾಸಕ ಎಚ್.ಎಸ್. ಮಹಾದೇವ ಪ್ರಸಾದ್ ಕಾಂಗ್ರೆಸ್‌ನಿಂದಲೇ ಕಣಕ್ಕಿಳಿ ಯಲಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಿ 2ನೇ ಸ್ಥಾನ ಪಡೆದಿದ್ದ ಸಿ.ಎಸ್. ನಿರಂಜನ್‌ಕುಮಾರ್ ಈಗ ಕೆಜೆಪಿಯಲಿದ್ದು, ಆ ಪಕ್ಷ ದಿಂದ ಸ್ಪರ್ಧಿಸಲಿದ್ದಾರೆ. ಇವರಿಬ್ಬರ ನಡುವೆ ಅತ್ಯಲ್ಪ ಮತ ಪಡೆದು 3ನೇ ಸ್ಥಾನ ಗಳಿಸಿದ್ದ ಬಿಎಸ್ಪಿಯ ವೆಂಕಟರಮಣಶೆಟ್ಟಿ ಕ್ಷೇತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಕಳೆದ ಚುನಾವಣೆಯಲ್ಲಿ ಎಚ್.ಎಸ್. ಮಹಾದೇವಪ್ರಸಾದ್ 64,824 ಮತ, ಸಿ.ಎಸ್.ನಿರಂಜನಕುಮಾರ್ 62,621 ಮತ ಹಾಗೂ ವೆಂಕಟರಮಣಶೆಟ್ಟಿ 7,677 ಮತ ಪಡೆದಿದ್ದರು. ಇತರ ಆಕಾಂಕ್ಷಿಗಳು: ಬಿಜೆಪಿ- ಎಚ್.ಎಸ್. ನಂಜಪ್ಪ, ಮಲ್ಲಿಕಾರ್ಜುನಸ್ವಾಮಿ, ಪುಟ್ಟರಂಗನಾಯಕ. ಜಾ.ದಳ-ಎಚ್. ಮಹೇಶ್, ಕೆಜೆಪಿ - ಬಿಎಸ್‌ಆರ್- ಸುರೇಶ್. |
ಕೊಳ್ಳೇಗಾಲ ಮೀಸಲು ಕ್ಷೇತ್ರ (ಪರಿಶಿಷ್ಟ ಜಾತಿ): 2008ರಲ್ಲಿ ನಡೆದ ಚುನಾವಣೆಯಲ್ಲಿ ಜಯ ಸಾಧಿಸಿದ್ದ ಕಾಂಗ್ರೆಸ್ ನ ಆರ್. ಧ್ರುವನಾರಾಯಣ ಅವರು ಒಂದು ವರ್ಷ ಬಳಿಕ ನಡೆದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರು. ಹೀಗಾಗಿ ಇಲ್ಲಿ ನಡೆದ ಮರು ಚುನಾವಣೆಯಲ್ಲಿ ಬಿಜೆಪಿಯ ಜಿ.ಎನ್. ನಂಜುಂಡಸ್ವಾಮಿ ಜಯಗಳಿಸಿದರು. ಈ ಬಾರಿ ಅವರು ಬಿಜೆಪಿಯಿಂದಲೇ ಸ್ಪರ್ಧಿಸುವ ಸಾಧ್ಯತೆ ಇದೆ. 2ನೇ ಸ್ಥಾನ ಪಡೆದಿದ್ದ ಕಾಂಗ್ರೆಸ್‌ನ ಎಸ್. ಜಯಣ್ಣ ಸಹ ಕೈ ಬಳಗದಿಂದಲೇ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿಯುವ ತಯಾರಿಯಲ್ಲಿದ್ದಾರೆ. 3ನೇ ಸ್ಥಾನ ಗಳಿಸಿದ್ದ ಬಿಎಸ್ಪಿಯ ಸುಭಾಷ್ ಭರಣಿ ಈಗ ಆ ಪಕ್ಷದಲ್ಲಿಲ್ಲ. ಅವರು ಕ್ಷೇತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಲೂ ಇಲ್ಲ. ಇನ್ನು 4ನೇ ಸ್ಥಾನ ಗಳಿಸಿದ್ದ ಜಾ. ದಳದ ಎಸ್. ಬಾಲರಾಜು ಈಗ ಅದೇ ಪಕ್ಷದಿಂದಲೇ ಚುನಾವಣೆ ಎದುರಿಸುವ ಸಿದ್ಧತೆಯಲ್ಲಿದ್ದಾರೆ. ಕಳೆದ ಚುನಾವಣೆಯಲ್ಲಿ ಜಿ.ಎನ್. ನಂಜುಂಡಸ್ವಾಮಿ ಬಿಜೆಪಿ 49553 ಮತ, ಎಸ್. ಜಯಣ್ಣ 41286, ಡಾ. ಸುಭಾಷ್ ಭರಣಿ 21143 ಹಾಗೂ ಎಸ್. ಬಾಲರಾಜು 16572 ಮತಗಳು. |
ಇತರ ಆಕಾಂಕ್ಷಿಗಳು: ಕಾಂಗ್ರೆಸ್ - ಬಿ.ಪಿ. ಪುಟ್ಟಬುದ್ಧಿ, ಡಿ.ಎನ್. ನಟರಾಜು, ಮಾಂಬಳ್ಳಿ ನಂಜುಂಡಸ್ವಾಮಿ. ಜಾ.ದಳ - ಪಂಚಾಕ್ಷರಿ. ಬಿಜೆಪಿ - ಎ.ಆರ್. ಕೃಷ್ಣಮೂರ್ತಿ, ಚಂದ್ರಕಲಾಬಾಯಿ. ಬಿಎಸ್ಪಿ - ಎನ್. ಮಹೇಶ್, ಬಿಎಸ್‌ಆರ್ - ಮಾದೇಶ್. |
ಹನೂರು: ಹಾಲಿ ಶಾಸಕ ಕಾಂಗ್ರೆಸ್‌ನ ಆರ್. ನರೇಂದ್ರ ಈ ಬಾರಿಯೂ ಕೈಯನ್ನೇ ನಂಬಿದ್ದಾರೆ. ಇನ್ನು ಬಿಎಸ್ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ 2ನೇ ಸ್ಥಾನ ಗಳಿಸಿದ್ದ ಪರಿಮಳಾ ನಾಗಪ್ಪ ಅವರು ಈಗ ಕೆಜೆಪಿಯ ಅಂಗಳದಲ್ಲಿದ್ದು, ಅದರಡಿಯಲ್ಲೇ ಚುನಾವಣೆಗೆ ತಯಾರಿ ನಡೆಸಿದ್ದಾರೆ. ಮತ್ತೊಂದು ಮೂಲದ ಪ್ರಕಾರ ಅವರ ಪುತ್ರ ಪ್ರೀತನ್ ಅವರು ಕಣಕ್ಕಿಳಿಯಬಹುದು. ಇನ್ನು ಬಿಜೆಪಿಯಿಂದ ಸ್ಪರ್ಧಿಸಿದ್ದ ಸೋಮನಾಯಕ ಆ ಪಕ್ಷದಲ್ಲಿಲ್ಲ. ಜಾ.ದಳದಿಂದ ಸ್ಪರ್ಧಿಸಿದ್ದ ವಿಷ್ಣುಕುಮಾರ್ ಈ ಬಾರಿಯೂ ಅದೇ ಪಕ್ಷದಿಂದ ಸ್ಪರ್ಧಿಸಲಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಆರ್.ನರೇಂದ್ರ 59,523 ಮತ ಪಡೆದಿದ್ದರೆ, ಪರಿಮಳಾ ನಾಗಪ್ಪ 36,383 ಮತ ಪಡೆದಿದ್ದರು. |
ಇತರ ಆಕಾಂಕ್ಷಿಗಳು: ಕಾಂಗ್ರೆಸ್ - ಆರ್. ನರೇಂದ್ರ, ದತ್ತೇಶ್‌ಕುಮಾರ್, ಬಿಜೆಪಿ - ಬಿ.ಕೆ. ಶಿವಕುಮಾರ್, ಕೆಜೆಪಿ - ಪರಿಮಳಾ ನಾಗಪ್ಪ, ಪ್ರೀತನ್. ಜಾ.ದಳ- ಎಂ. ಮಹಾದೇವು, ವಿಷ್ಣುಕುಮಾರ್, ಪೊನ್ನಾಚಿ ಮಹಾದೇವಸ್ವಾಮಿ, ಜೆ. ಶಿವಮೂರ್ತಿ. |
ವರುಣಾ: ಕಳೆದ ಬಾರಿ ಸಿದ್ದರಾಮಯ್ಯ ಅವರು ಗೆದ್ದಿದ್ದ ವರುಣಾ ಕ್ಷೇತ್ರದಲ್ಲೇ ಅವರು ಮತ್ತೊಮ್ಮೆ ಕಣಕ್ಕಿಳಿಯುವುದು ಬಹುತೇಕ ಖಚಿತ. ಕೆಜೆಪಿಯಿಂದ ಯಡಿಯೂರಪ್ಪ ಬೆಂಬಲಿಗ ಕಾ.ಪು. ಸಿದ್ದಲಿಂಗ ಸ್ವಾಮಿ ಸ್ಪರ್ಧಿಸಬಹುದು. ಕೊನೆ ಕ್ಷಣದಲ್ಲಿ ಅವರ ಸಹೋದರ, ಜಿಪಂ ಅಧ್ಯಕ್ಷ ಕಾ.ಪು.ಸಿದ್ದವೀರಪ್ಪ ಕಣಕ್ಕಿಳಿಯ ಬಹುದು ಎನ್ನಲಾಗುತ್ತಿದೆ. ಬಿಜೆಪಿಯಿಂದ ಕಳೆದ ಬಾರಿ ಸ್ಪರ್ಧಿಸಿದ್ದ ನಿವೃತ್ತ ಡಿಜಿಪಿ ರೇವಣ್ಣಸಿದ್ದಯ್ಯ ಆ ಪಕ್ಷದಲ್ಲಿ ಸಕ್ರಿಯವಾಗಿಲ್ಲ. ಅವರು ಬೇರೆ ಕ್ಷೇತ್ರಗಳಿಗೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ. ಬಿಜೆಪಿಯಿಂದ ಮೃಗಾಲಯ ಪ್ರಾಧಿಕಾರ ಮಾಜಿ ಅಧ್ಯಕ್ಷ ಎಂ.ನಂಜುಂಡಸ್ವಾಮಿ, ಯುವ ಮೋರ್ಚಾ ಉಪಾಧ್ಯಕ್ಷ ದೇವನೂರು ಪ್ರತಾಪ್ ಹೆಸರಿದೆ. ಜೆಡಿಎಸ್‌ನಿಂದ ಕಳೆದ ಬಾರಿ ಕಣದಲ್ಲಿದ್ದ ಕೃಷ್ಣಸ್ವಾಮಿ ಬದಲು ಪೊಲೀಸ್ ಅಧಿಕಾರಿ ಚಲುವರಾಜುಗೆ ಟಿಕೆಟ್ ಸಿಗಬಹುದು. |
ತಿ.ನರಸೀಪುರ ಮೀಸಲು (ಪರಿಶಿಷ್ಟ ಜಾತಿ): ಸತತ 2 ಬಾರಿ ಗೆದ್ದಿರುವ ಮಾಜಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಕಾಂಗ್ರೆಸ್‌ನಿಂದ ಸ್ಪರ್ಧಿಸಬಹುದು. ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಆರ್. ಧರ್ಮಸೇನಾ ಹೆಸರೂ ಇದೆ. ಡಾ.ಮಹಾದೇವಪ್ಪ ತಿ.ನರಸೀಪುರ ಬದಲು ನಂಜನಗೂಡಿನಿಂದ ಕಣಕ್ಕಿಳಿಯುವ ಆಕಾಂಕ್ಷೆ ವ್ಯಕ್ತಪಡಿಸಿದ್ದರೂ ಅಲ್ಲಿ ಶ್ರೀನಿವಾಸಪ್ರಸಾದ್ ಅವರೇ ಸ್ಪರ್ಧಿಸುವ ಕಾರಣಕ್ಕೆ ಕ್ಷೇತ್ರ ಬದಲಾವಣೆ ಈ ಬಾರಿ ಆಗಲಾರದು. ಇಲ್ಲಿ ಜೆಡಿಎಸ್‌ನಿಂದ ಕಳೆದ ಬಾರಿ ಸ್ಪರ್ಧಿಸಿದ್ದ ಎಂ.ಸಿ.ಸುಂದರೇಶನ್ ಪ್ರಬಲ ಆಕಾಂಕ್ಷಿ. ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಸುಭಾಷ್ ಭರಣಿ ಈಗ ಜೆಡಿಎಸ್ ಸೇರಿದ್ದಾರೆ. ಅವರ ಹೆಸರೂ ಇದೇ ಪಕ್ಷದಿಂದ ಕೇಳಿ ಬರುತ್ತಿದೆ. ಕೆಜೆಪಿಯಿಂದ ಮಾಜಿ ಶಾಸಕರಾದ ಡಾ.ಎನ್.ಎಲ್.ಭಾರತೀ ಶಂಕರ್, ಹೆಜ್ಜಿಗೆ ಶ್ರೀನಿವಾಸಯ್ಯ ಅವರ ಹೆಸರಿದೆ. ಮಾಜಿ ಶಾಸಕ ಸಿ.ರಮೇಶ್ ಬಿಜೆಪಿಯಿಂದ ಕಣಕ್ಕಿಯಬಹುದು. |
ನಂಜನಗೂಡು ಮೀಸಲು (ಪರಿಶಿಷ್ಟ ಜಾತಿ): ಕಾಂಗ್ರೆಸ್‌ನಿಂದ ವಿಧಾನಸಭೆ ಪ್ರವೇಶಿಸಿದ್ದ ಕೇಂದ್ರದ ಮಾಜಿ ಸಚಿವ ಶ್ರೀನಿವಾಸಪ್ರಸಾದ್ ಮತ್ತೊಮ್ಮೆ ಇಲ್ಲಿಂದಲೇ ಕಣಕ್ಕಿಳಿಯುವ ತೀರ್ಮಾನ ಮಾಡಿದ್ದಾರೆ. ಆರೋಗ್ಯದ ಕಾರಣಕ್ಕೆ ಚುನಾವಣೆ ಯಿಂದ ದೂರ ಉಳಿಯುತ್ತಾರೆ ಎನ್ನುವ ಮಾತುಗಳಿದ್ದವು. ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಮಹಾದೇವಯ್ಯ ಕೆಜೆಪಿ ಆಕಾಂಕ್ಷಿ. ಹಿಂದಿನ ಬಾರಿ ಜೆಡಿಎಸ್‌ನಿಂದ ಕೊಳ್ಳೇಗಾಲದಲ್ಲಿ ಕಣಕ್ಕಿಳಿದು, 2009ರ ಲೋಕಸಭೆ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿದ್ದ ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ ಕೆಜೆಪಿಯಿಂದ ಇಲ್ಲಿ ಸ್ಪರ್ಧಿಸಲು ಬಯಸಿದ್ದಾರೆ. ಇವರೊಂದಿಗೆ ಉದ್ಯಮಿ ಕೆ.ವಿ.ಚಿನ್ನಯ್ಯ ಸಹಿತ 18 ಮಂದಿ ಕೆಜೆಪಿಯಲ್ಲಿ ಆಕಾಂಕ್ಷಿತರು. ಜೆಡಿಎಸ್‌ನಿಂದ ಹಿಂದಿನ ಬಾರಿ ಸ್ಪರ್ಧಿಸಿದ್ದ ಕೇಶವಮೂರ್ತಿಯೇ ಈ ಬಾರಿಯೂ ಕಣಕ್ಕಿಳಿಯಬಹುದು. ಬಿಜೆಪಿಯಿಂದ ಜಿಪಂ ಮಾಜಿ ಉಪಾಧ್ಯಕ್ಷ ಡಾ.ಶಿವರಾಂ ಹೆಸರಿದೆ. |
ಎಚ್.ಡಿ.ಕೋಟೆ ಮೀಸಲು (ಪರಿಶಿಷ್ಟ ವರ್ಗ): ಹಿಂದಿನ ಬಾರಿ ಆಯ್ಕೆಯಾಗಿದ್ದ ಕಾಂಗ್ರೆಸ್‌ನ ಚಿಕ್ಕಣ್ಣ ಅವರೇ ಇಲ್ಲಿ ಕಣಕ್ಕಿಳಿಯಬಹುದು. ಜೆಡಿಎಸ್‌ನಿಂದ ಪಕ್ಷದ ಜಿಲ್ಲಾಧ್ಯಕ್ಷ ಎಸ್.ಚಿಕ್ಕಮಾದು ಅವರಿಗೆ ಸ್ಪರ್ಧಿಸುವ ಒತ್ತಡವಿದೆ. ಅವರ ಚಿತ್ತ ಹುಣಸೂರಿನಲ್ಲೇ ಇದೆ. ಕಳೆದ ಬಾರಿ ಸ್ಪರ್ಧಿಸಿದ್ದ ದೊಡ್ಡನಾಯಕ ಆಕಾಂಕ್ಷಿ. ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯ ಸಿದ್ದರಾಜು ಹೆಸರಿದೆ. ಕೆಜೆಪಿಯಿಂದ ವೀರಾಜಪೇಟೆ ಮಾಜಿ ಶಾಸಕ ಎಚ್.ಡಿ.ಬಸವರಾಜು ಇಲ್ಲವೇ ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಜಿಪಂ ಸದಸ್ಯ ಚಿಕ್ಕವೀರನಾಯಕ ಸ್ಪರ್ಧಿಸಬಹುದು. |
ರಜನಿಗೆ ರಜನಿಯೇ ಸಾಟಿ.. | | ಅವಧಿ । AVADHI |
ರಜನಿಗೆ ರಜನಿಯೇ ಸಾಟಿ.. |
ಶಾರದಾ ನಾಯಕ್ |
ಅಂಬಿಸಂಭ್ರಮದಲ್ಲಿ ಅತ್ಯಂತ ನಿರರ್ಗಳ, ಸ್ಪಷ್ಟ ಮತ್ತು ಸುಂದರ ಕನ್ನಡದಲ್ಲಿ ಮಾತನಾಡಿದವರೆಂದರೆ ರಜನಿಕಾಂತ್. ಉಳಿದಂತೆ ಸುನಿಲ್ ಶೆಟ್ಟಿ ಒಂದಕ್ಷರ ಕನ್ನಡ ಮಾತಾಡಿ ತನಗೆ ಕನ್ನಡ ಬರುವುದಿಲ್ಲ ಎಂದು ಹೇಳುವುದಕ್ಕಿಂತ ಸುಮ್ಮನಿದ್ದರೆ ಚೆನ್ನಾಗಿರುತ್ತಿತ್ತು. (ಹೋದ ಸಾರಿ ಐಶ್ವರ್ಯ ರೈ ಕನ್ನಡವನ್ನು ಕೊಂದಿದ್ದನ್ನು ಮರೆತಿಲ್ಲ). ಅಂದಹಾಗೆ ಸಾಮ್ರಾಟ್ ಅಶೋಕ್ ಈ ಸಾರಿ ಅರ್ಥವಾಗುವ ಕನ್ನಡದಲ್ಲಿ ಮಾತನಾಡಿ ಅಚ್ಚರಿ ಮೂಡಿಸಿದ್ರು. ಅದೆನೇ ಇರಲಿ. ರಜನಿಗೆ ರಜನಿಯೇ ಸಾಟಿ. |
← ಹಿಂದಿನದು: ರ೦ಗಾಯಣ ಎ೦ದರೆ.. ಮುಂದಿನದು: 'ನಿಮಗೇನ್ರಿ ಪ್ರಾಬ್ಲಂ' ಎಂದು ದಬಾಯಿಸಿದೆ → |
A P BHAT on May 31, 2012 at 12:43 PM |
Rajanis kannada is better than many Kannada actors.I have heard his speech on golden jubilee celebration of kannada cinema .They way he had kannada writers like Ta RA SU and Karanth really impressed many.He appears to be better informed about kannada literature |
D.RAVI VARMA on June 1, 2012 at 9:57 AM |
ರಜನಿ ಗೆ ರಜನಿ ಏ ಸಾಟಿ ಇದು ಅಪ್ಪಟ ಸತ್ಯ ಅವರ ಬದುಕು, ಆಲೋಚನೆ, ನಡೆದುಬಂದ ಹಾದಿ , ಈ ಸಮಾಜದ ಬಗ್ಗೆ ಆತನಿಗಿರುವ ಕಳಕಳಿ .ಚಿಂತನೆ, ಎಲ್ಲವುಗಳಲ್ಲು ರಜನಿ ವಿಸಿಸ್ಟ ಹಾಗು ವಿಭಿನ್ನರಾಗಿದ್ದರೆ, ಸಿನಿಮಾ ರಂಗದಲ್ಲಿ ಉತ್ತುಂಗಕ್ಕೆರಿದ್ದರು ,ellastu ಸೊಕ್ಕು, ದುರಾಭಿಮಾನ ,ಆಡಂಬರ ದಿಂದ ದೂರ ಉಳಿದು ಅವರು ಅವರಾಗೆ ಉಳಿದಿದ್ದಾರೆ, ಕೋಟ್ಯಂತರ ಅಭಿಮಾನಿಗಳ ಹೃದಯ,ಮನಸು ಗೆದ್ದು ,ತಮ್ಮ ಗತಕಾಲದ ಹಿಂದಿನ ಬದುಕನ್ನು ನೆನಪಿಸಿಕೊಂಡು ,ವತ್ಸವದಲ್ಲಿ ನಿರಂತರವಾಗಿ ಬದುಕನ್ನು ಅದಮ್ಯವಾಗಿ ಪ್ರೀತಿಸುತ್ತ ,ಸಮಾಜದ ಜನರೊಡನೆ ತಮ್ಮನ್ನು ಗುರುತಿಸಿಕೊಳ್ಳುತ್ತಾ ಬಂದಿರುವ ಸಹೃದಯಿ . |
ತಾಂತ್ರಿಕ ಮಹಾ ವಿದ್ಯಾಲಯ: Latest ತಾಂತ್ರಿಕ ಮಹಾ ವಿದ್ಯಾಲಯ News & Updates, Photos & Images, Videos | Vijaya Karnataka |
October,16,2019, 10:48:30 |
ತಾಂತ್ರಿಕ ಮಹಾ ವಿದ್ಯಾಲಯ |
ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ, ಕೌಶಲ ಅಗತ್ಯ |
ಬ್ಯಾಡಗಿ: ಶಿಕ್ಷ ಣ ಸಂಸ್ಥೆಗಳು ಶಾಲೆಯಲ್ಲಿನ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ, ಪ್ರಾಪಂಚಿಕ ಜ್ಞಾನ ಹಾಗೂ ಕೌಶಲಗಳನ್ನು ರೂಢಿಸಿಕೊಳ್ಳುವ ಮೂಲಕ ದೇಶವನ್ನು ಕಟ್ಟುವ ಕೆಲಸದಲ್ಲಿ ಸಹಕಾರಿಯಾಗಬೇಕು. ಶಿಕ್ಷ ಣದ ನಂತರ ಒಳ್ಳೆಯ ಅವಕಾಶಗಳಿದ್ದು ಅವುಗಳನ್ನು ಪಡೆದುಕೊಂಡು ಸುಂದರ ಬದುಕು ಕಟ್ಟಿಕೊಳ್ಳುವಂತೆ ಹಾವೇರಿ ಜಿ.ಹೆಚ್.ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಜಗದೀಶ ಹೊಸ್ಮನಿಕರೆ ನೀಡಿದರು. |
'ಭ್ರಷ್ಟರನ್ನು ಬಹಿಷ್ಕರಿಸುವ ಸಮಾಜ ಕಟ್ಟಿ' |
ಯುವ ಜನತೆ ತೃಪ್ತಿ ಮತ್ತು ಮಾನವೀಯತೆಯನ್ನು ಮೈಗೂಡಿಸಿಕೊಳ್ಳುವ ಜತೆಗೆ ಭ್ರಷ್ಟರನ್ನು ಬಹಿಷ್ಕರಿಸುವ ಸಮಾಜ ಕಟ್ಟಬೇಕು ಎಂದು ನಿವೃತ್ತ ಲೋಕಾಯುಕ್ತ ನ್ಯಾ.ಎನ್.ಸಂತೋಷ ಹೆಗ್ಡೆ ಸಲಹೆ ಮಾಡಿದರು. |
ವ್ಯಸನಮುಕ್ತ ಸಮಾಜದಿಂದ ದೇಶದ ಪ್ರಗತಿ |
ವ್ಯಸನಮುಕ್ತ ಸಮಾಜದಿಂದ ದೇಶ ಪ್ರಗತಿ ಸಾಧಿಸಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಪ್ರಭಾವತಿ ಎಂ.ಹಿರೇಮಠ್ ಅಭಿಪ್ರಾಯಪಟ್ಟರು. |
'ಮಾಹಿತಿ ತಂತ್ರಜ್ಞಾನ ಪ್ರತಿಯೊಬ್ಬರಿಗೂ ಅಗತ್ಯ' |
Jan 30, 2016, 05.27 AM |
ಮಾಹಿತಿ ತಂತ್ರಜ್ಞಾನದ ಪ್ರಸ್ತುತ ಯುಗದಲ್ಲಿ ಪ್ರತಿಯೊಬ್ಬರೂ ಮಾಹಿತಿ ಹುಡುಕಾಟಕ್ಕೆ ಒಂದಲ್ಲ ಒಂದು ತಂತ್ರಜ್ಞಾನ ಅವಲಂಬಿ ಸಿದ್ದಾರೆ ಎಂದು ಬೆಂಗಳೂರು ಆರ್.ವಿ. ತಾಂತ್ರಿಕ ಮಹಾ ವಿದ್ಯಾಲಯ ಗಣಕಯಂತ್ರ ವಿಭಾಗದ ಮುಖ್ಯಸ್ಥೆ ಡಾ.ಜಿ.ಶೋಭಾ ಹೇಳಿದರು. |
ಅಂಬೇಡ್ಕರ್ ಕಾಲೇಜಿನಲ್ಲಿ ರಕ್ತದಾನ ಶಿಬಿರ |
Oct 11, 2015, 05.57 AM |
ಡಾ. ಅಂಬೇಡ್ಕರ್ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಲಯನ್ಸ್ ಕ್ಲಬ್, ಬೌರಿಂಗ್ ಆಸ್ಪತ್ರೆ, ನಾರಾಯಣ ಹೃದಯಾಲಯ ಮತ್ತು ಕಿದ್ವಾಯಿ ಆಸ್ಪತ್ರೆ ಸಹಯೋಗದೊಂದಿಗೆ ರಕ್ತದಾನ ಶಿಬಿರ ನಡೆಯಿತು. |
ಮಣ್ಣು ಫಲವತ್ತತೆ ಪರೀಕ್ಷೆಗೆ 'ವಿಸ್ಪ್ರೋ' ತಂತ್ರಾಂಶ |
ರೈತರ ಅನುಕೂಲಕ್ಕಾಗಿ ಮಹಾರಾಜ ತಾಂತ್ರಿಕ ಮಹಾವಿದ್ಯಾಲಯ'ವಿಸ್ಟ್ರೋ'ಎಂಬ ನೂತನ ತಂತ್ರಾಂಶ ಪರಿಚಯಿಸಿದ್ದು,ಕೃಷಿ ಜಮೀನಿನ ಮಣ್ಣಿನ ಫಲವತ್ತತೆ ಪರೀಕ್ಷೆಯೂ ಸೇರಿದಂತೆ ಕೃಷಿ ಸಂಬಂಧಿ ನಾನಾ ಮಾಹಿತಿಗಳನ್ನು ನೀಡಲು ಇದು ನೆರವಾಗಲಿದೆ. |
'ತಾತ್ವಿಕ ಭಿನ್ನಾಭಿಪ್ರಾಯದ ನಡುವೆಯೂ ಗಾಂಧಿ-ನೆಹರು ಸಂಬಂಧ ಗಟ್ಟಿ' |
Nov 21, 2014, 05.46 AM |
ಗಾಂಧಿ ಮತ್ತು ನೆಹರು ನಡುವೆ ಅನೇಕ ತಾತ್ವಿಕ ಭಿನ್ನಾಭಿಪ್ರಾಯಗಳಿದ್ದರೂ ಅವರಿಬ್ಬರ ನಡುವೆ ಉತ್ತಮ ಸಂಬಂಧವಿತ್ತು. ಗಾಂಧೀಜಿ ಅವರನ್ನು ಗುರು ಎಂದೇ ನೆಹರು ಭಾವಿಸಿದ್ದರು ಎಂದು ಕುವೆಂಪು ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಕೆ.ಚಿದಾನಂದಗೌಡ ಹೇಳಿದರು. |
'ಪ್ರತಿಭಾವಂತ ವಿದ್ಯಾರ್ಥಿಗಳನ್ನು ರೂಪಿಸಿ' |
ಪ್ರಸ್ತುತ ಶೈಕ್ಷಣಿಕ ಯುಗದಲ್ಲಿ ಸಮಾಜಕ್ಕೆ ಉತ್ತಮ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ರೂಪಿಸುವ ಜವಾಬ್ದಾರಿ ಉಪನ್ಯಾಸಕರ ಮೇಲಿದೆ ಎಂದು ಬೆಂಗಳೂರು ಏಟ್ರಿಯ ತಾಂತ್ರಿಕ ಮಹಾ ವಿದ್ಯಾಲಯ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಪ್ರೊ.ನರಸಿಂಹನ್ ಅಭಿಪ್ರಾಯಪಟ್ಟರು. |
ಎಐಟಿ ಕಾಲೇಜಿಗೆ ಉತ್ತಮ ಫಲಿತಾಂಶ |
Jul 02, 2014, 05.04 AM |
ವಿಶ್ವೇಶ್ವರಯ್ಯ ತಾಂತ್ರಿಕ ಮಹಾ ವಿದ್ಯಾಲಯ 2014 ಜೂನ್‌ನಲ್ಲಿ ನಡೆಸಿದ ಅಂತಿಮ ವರ್ಷದ ಬಿಇ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ನಗರದ ಆದಿಚುಂಚನಗಿರಿ ತಾಂತ್ರಿಕ ಮಹಾ ವಿದ್ಯಾಲಯಕ್ಕೆ ಅತ್ಯುತ್ತಮ ಫಲಿತಾಂಶ ಬಂದಿದೆ. |
ತಂತ್ರಜ್ಞಾನ ಅರಿಯಲು ನಿರಂತರ ಕಲಿಕೆ ಅಗತ್ಯ |
ಬದಲಾಗುತ್ತಿರುವ ತಂತ್ರಜ್ಞಾನ ಅರಿಯಲು ನಿರಂತರ ಕಲಿಕೆ ಅಗತ್ಯ ಎಂದು ಆದಿಚುಂಚನಗಿರಿ ತಾಂತ್ರಿಕ ಮಹಾ ವಿದ್ಯಾಲಯ ಪ್ರಾಂಶುಪಾಲ ಡಾ.ಸಿ.ಕೆ.ಸುಬ್ಬರಾಯ ಹೇಳಿದರು. |
ಚಿಕ್ಕಮಗಳೂರಲ್ಲಿ ಮಾದರಿ ನ್ಯಾಯಾಲಯ ಸಂಕೀರ್ಣ ನಿರ್ಮಾಣ |
Feb 23, 2014, 05.40 AM |
ಸುಸಜ್ಜಿತ, ಸಕಲ ಸೌಲಭ್ಯ ಒಳಗೊಂಡ ಮಾದರಿ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ನಗರದಲ್ಲಿ ಜಾಗ ಗುರುತಿಸಿದ್ದು, ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಕಾಮಗಾರಿ ಆರಂಭವಾಗಲಿದೆ. |
ವಿದ್ಯುತ್ ಉತ್ಪಾದನೆ ಕುಂಠಿತ ಸಮಸ್ಯೆಗೆ ಕಾರಣ |
May 04, 2013, 12.36 AM |
ವಿದ್ಯುತ್ ಉತ್ಪಾದನೆ ಕುಂಠಿತವಾಗಿರುವುದೇ ದೇಶದ ಅನೇಕ ಸಮಸ್ಯೆಗಳಿಗೆ ಕಾರಣ ಎಂದು ಮೈಸೂರು ಎನ್‌ಐಇ ತಾಂತ್ರಿಕ ಮಹಾ ವಿದ್ಯಾಲಯ ಪ್ರಾಧ್ಯಾಪಕ ಡಾ.ಟಿ.ಅನಂತಪದ್ಮನಾಭ ಹೇಳಿದರು. |
ಜೈವಿಕ ಇಂಧನ ಬಳಕೆಗೆ ಆದ್ಯತೆ ಕೊಡಿ |
May 14, 2012, 01.20 AM |
ಜೈವಿಕ ಇಂಧನ ಬಳಕೆಯತ್ತ ಪ್ರತಿಯೊಬ್ಬರೂ ಗಮನಹರಿಸಬೇಕು ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಸಲಹೆ ಮಾಡಿದರು. |
'ದರ್ಬಾರ್' ಕಲೆಕ್ಷನ್: 'ಸರ್ಕಾರ್'-'2.0' ಸಿನಿಮಾ ರೆಕಾರ್ಡ್ ಬ್ರೇಕ್ ಮಾಡುವಲ್ಲಿ 'ದರ್ಬಾರ್' ವಿಫಲ | Super Star Rajinikanth Starrer Darbar Film First Day Collection - Kannada Filmibeat |
ಪಿ.ವಿ ಸಿಂಧಿಗೆ ಕಂಚಿನ ಪದಕ; ಸಿನಿ ತಾರೆಯರಿಂದ ಅಭಿನಂದನೆಗಳ ಮಹಾಪೂರ |
Sports ಕೊರೊನಾವೈರಸ್‌ಗೆ ತುತ್ತಾದ ಆಸಿಸ್ ದಿಗ್ಗಜ ಸ್ಪಿನ್ನರ್ ಶೇನ್ ವಾರ್ನ್ |
News ಭಾರತದಲ್ಲಿ ಕೊರೊನಾವೈರಸ್ 3ನೇ ಅಲೆ ಮತ್ತು ಲಸಿಕೆ ವಿತರಣೆ ವಿವರ |
Lifestyle ಬಾಣಂತಿಯರ ಆಹಾರ: ರವೆ ಗಂಜಿ ರೆಸಿಪಿ |
Finance ದೇಶದ ಪ್ರಮುಖ ನಗರಗಳಲ್ಲಿ ಆಗಸ್ಟ್ 01ರ ಚಿನ್ನ, ಬೆಳ್ಳಿ ದರ ಹೀಗಿದೆ |
'ದರ್ಬಾರ್' ಕಲೆಕ್ಷನ್: 'ಸರ್ಕಾರ್'-'2.0' ಸಿನಿಮಾ ರೆಕಾರ್ಡ್ ಬ್ರೇಕ್ ಮಾಡುವಲ್ಲಿ 'ದರ್ಬಾರ್' ವಿಫಲ |
| Published: Friday, January 10, 2020, 12:01 [IST] |
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಾರಿ ನಿರೀಕ್ಷೆಯ ದರ್ಬಾರ್ ಸಿನಿಮಾ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಕನ್ನಡ ವರ್ಷನ್ ಬಿಟ್ಟು ದರ್ಬಾರ್ ದಕ್ಷಿಣ ಭಾರತೀಯ ಎಲ್ಲಾ ಭಾಷೆಯ ಜೊತೆಗೆ ಹಿಂದಿಯಲ್ಲೂ ತೆರೆಗೆ ಬಂದಿದೆ. ಸುಮಾರು 4000 ಚಿತ್ರಮಂದಿರಗಳಲ್ಲಿ ದರ್ಬಾರ್ ರಿಲೀಸ್ ಆಗಿದೆ. |
ಪೇಟಾ ಸಿನಿಮಾ ನಂತರ ತಲೈವಾ ದರ್ಬಾರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಚಿತ್ರದಲ್ಲಿ ಸೂಪರ್ ಸ್ಟಾರ್ ಪೊಲೀಸ್ ಅಧಿಕಾರಿಯಾಗಿ ಮಿಂಚಿದ್ದಾರೆ. ಸುಮಾರು ಎರಡು ದಶಕಗಳ ನಂತರ ರಜನಿಕಾಂತ್ ಖಾಕಿ ತೊಟ್ಟು ಖದರ್ ತೋರಿಸಿದ್ದಾರೆ. ಎ.ಆರ್ ಮುರುಗದಾಸ್ ನಿರ್ದೇಶದಲ್ಲಿ ಮೂಡಿಬಂದ ದರ್ಬಾರ್ ನಲ್ಲಿ ರಜನಿಗೆ ನಾಯಕಿಯಾಗಿ ನಯನತಾರಾ ಕಾಣಿಸಿಕೊಂಡಿದ್ದಾರೆ. ಅನೇಕ ವರ್ಷಗಳ ಬಳಿಕ ಸೂಪರ್ ಸ್ಟಾರ್ ಮತ್ತು ನಯನತಾರಾ ಇಬ್ಬರು ಒಟ್ಟಿಗೆ ತೆರೆ ಮಿಂಚಿದ್ದಾರೆ. ಸಾಕಷ್ಟು ಕುತೂಹಲಗಳೊಂದಿಗೆ ತೆರೆಗೆ ಬಂದ ದರ್ಬಾರ್ ಮೊದಲ ದಿನ ಗಳಿಸಿದೆಷ್ಟು? ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.. |
ಮೊದಲ ದಿನವೇ ರಜನಿಕಾಂತ್ ದರ್ಬಾರ್ ಗೆ ಆಘಾತ! |
ದರ್ಬಾರ್ ಗಿಂತ ಜಾಸ್ತಿ ಸರ್ಕಾರ್ ಮತ್ತು 2.0 ಕಲೆಕ್ಷನ್ |
ಬಾರಿ ನಿರೀಕ್ಷೆಯೊಂದಿಗೆ ತೆರೆಗೆ ಬಂದ ದರ್ಬಾರ್ ಸಿನಿಮಾ ಉತ್ತಮ ಕಲೆಕ್ಷನ್ ಮಾಡಿದ್ದರು ಇಳೆಯದಳಪತಿ ವಿಜಯ್ ಅಭಿನಯದ ಸರ್ಕಾರ್ ಮತ್ತು ರಜನಿಕಾಂತ್ ಅಭಿನಯದ 2.0 ಸಿನಿಮಾದ ಕಲೆಕ್ಷನ್ ಬ್ರೇಕ್ ಮಾಡುವಲ್ಲಿ ದರ್ಬಾರ್ ವಿಫಲವಾಗಿದೆ. ಸರ್ಕಾರ್ ಸಿನಿಮಾ ಮೊದಲ ದಿನ ಚೆನ್ನೈನಲ್ಲಿ ಸಿಟಿಯಲ್ಲಿ 2.37 ಕೋಟಿ ಬಾಚಿಕೊಂಡಿತ್ತು. ಇನ್ನು ರಜನಿಕಾಂತ್ ಅಭಿನಯದ 2.0 ಸಿನಿಮಾ 2.64 ಕೋಟಿ ಕಲೆಕ್ಷನ್ ಮಾಡಿದೆ. |
ದರ್ಬಾರ್ ಸಿನಿಮಾದ ಕಲೆಕ್ಷನ್ |
ಚೆನ್ನೈನಲ್ಲಿ ದರ್ಬಾರ್ ಸಿನಿಮಾ 2.27 ಕೋಟಿ ಬಾಚಿಕೊಂಡಿದೆ ಎಂದು ಹೇಳಲಾಗುತ್ತಿದೆ. ತಮಿಳು ಚಿತ್ರರಂಗದ ವಿಶ್ಲೇಶಕ ರಮೇಶ್ ಬಾಲ ಟ್ವೀಟ್ ಮಾಡಿರುವ ಪ್ರಕಾರ ದರ್ಬಾರ್ ಮೊದಲ ದಿನ ಚೆನ್ನೈನಲ್ಲಿ 2.27 ಕೋಟಿ ಕಲೆಕ್ಷನ್ ಮಾಡಿದೆ. ತಮಿಳು ಸಿನಿಮಾ ಚೆನ್ನೈನಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಎರಡನೆ ಸಿನಿಮಾ ಇದಾಗಿದೆ. ರಜನಿಕಾಂತ್ ಅಭಿನಯದ ಪೇಟಾ ಸಿನಿಮಾ 2 ಕೋಟಿ ಬಾಚಿಕೊಂಡಿತ್ತು. |
Darbar Review: ಅದ್ಭುತವಂತೂ ಅಲ್ಲ, ಇಷ್ಟ ಆಗುತ್ತೆ ರಜನಿ 'ಪೊಲೀಸ್ ಸ್ಟೋರಿ' |
ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ದರ್ಬಾರ್ ಗಳಿಕೆ |
ದರ್ಬಾರ್ ಸಿನಿಮಾ ತಮಿಳುನಾಡು ಮತ್ರವಲ್ಲದೆ ಆಂಧ್ರ ಮತ್ತು ತೆಲಂಗಾಣದಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಮೇಶ್ ಬಾಲ ಟ್ವೀಟ್ ಮಾಡಿರುವ ಪ್ರಕಾರ ದರ್ಬಾರ್ ಸಿನಿಮಾ ಆಂಧ್ರ ಮತ್ತು ತೆಲಂಗಾಣದಲ್ಲಿ ಗ್ರಾಸ್ ಕಲೆಕ್ಷನ್ 7.5 ಕೋಟಿಯಾಗಿದೆ. ಮತ್ತು ಶೇರ್ ಕಲೆಕ್ಷನ್ 4.5 ಕೋಟಿಯಾಗಿದೆ. |
'ದರ್ಬಾರ್' ಚಿತ್ರದ ಟ್ವಿಟ್ಟರ್ ವಿಮರ್ಶೆ: ಸಿನಿಮಾ ವೀಕ್ಷಿಸಿದ ಪ್ರೇಕ್ಷಕರು ಹೇಳಿದ್ದೇನು? |
ವಿದೇಶದಲ್ಲಿ ದರ್ಬಾರ್ ಕಲೆಕ್ಷನ್ |
ಸೂಪರ್ ಸ್ಟಾರ್ ರಜನಿಕಾಂತ್ ಕೇವಲ ಭಾರತದಲ್ಲಿ ಮಾತ್ರ ಅಭಿಮಾನಿಗಳಿಲ್ಲ. ವಿದೇಶದಲ್ಲು ಅಪಾರ ಸಂಖ್ಯೆ ಅಭಿಮಾನಿಗಳಿದ್ದಾರೆ. ದರ್ಬಾರ್ ಸಿನಿಮಾ ವಿದೇಶಿ ನೆಲದಲ್ಲೂ ಅಬ್ಬರಿಸಿದೆ. ಯು.ಎಸ್ ನಲ್ಲಿ ದರ್ಬಾರ್ 4.38 ಕೋಟಿ ಬಾಚಿಕೊಂಡಿದೆ. ಇನ್ನು ಉತ್ತಮ ಪ್ರದರ್ಶನ ಕಾಣುತ್ತಿದೆ. ಇನ್ನು ಆಸ್ಟ್ರೇಲಿಯಾ ಈಗಾಗಲೆ 78 ಲಕ್ಷ ಕಲೆಕ್ಷನ್ ಆಗಿದೆ. ಸಿಂಗಾಪುರ, ಮಲೇಶಿಯಾದಲ್ಲೂ ದರ್ಬಾರ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. |
Read more about: rajinikanth ರಜನಿಕಾಂತ್ |
Super star Rajinikanth starrer Darbar film earned 2.27 crore in Chennai City. Rajinikanth Darbar film big opening in first day. |
ಪ್ರವಾಸಿ ಶ್ರೀಲಂಕಾವನ್ನು ಹೀಯಾಳಿಸಿ ನಂತರ ಟ್ವೀಟ್ ಡಿಲಿಟ್ ಮಾಡಿದ ಹರ್ಭಜನ್ ಸಿಂಗ್ | Harbhajan Ridicules Sri Lanka cricket team, deletes tweet later | Kannadaprabha.com |
Thursday, October 18, 2018 9:18 PM IST |
ಪ್ರವಾಸಿ ಶ್ರೀಲಂಕಾವನ್ನು ಹೀಯಾಳಿಸಿ ನಂತರ ಟ್ವೀಟ್ ಡಿಲಿಟ್ ಮಾಡಿದ ಹರ್ಭಜನ್ ಸಿಂಗ್ |
Published: 14 Nov 2017 01:23 PM IST | Updated: 14 Nov 2017 01:26 PM IST |
ಮುಂಬೈ: ಟೆಸ್ಟ್ ಸರಣಿಗಾಗಿ ಪ್ರವಾಸಿ ಶ್ರೀಲಂಕಾ ತಂಡ ಭಾರತಕ್ಕೆ ಆಗಮಿಸಿದ್ದು ಭಾರತೀಯ ಕ್ರಿಕೆಟಿಗ ಹರ್ಭಜನ್ ಸಿಂಗ್ ಲಂಕಾ ವಿರುದ್ಧ ವಿವಾದಾತ್ಮಕ ಟ್ವೀಟ್ ಮಾಡಿ ತಕ್ಷಣವೇ ಅದನ್ನು ಅಳಿಸಿ ಹಾಕಿದ್ದಾರೆ. |
ಭಾರತೀಯ ಬೌಲರ್ ಗಳನ್ನು ಪಳಗಿಸುವುದು ದೊಡ್ಡ ವಿಚಾರವೇನಲ್ಲ ಎಂಬರ್ಥದಲ್ಲಿ ಶ್ರೀಲಂಕಾ ತಂಡದ ಖ್ಯಾತ ಬ್ಯಾಟ್ಸ್ ಮನ್ ದಿಮುತ್ |
Subsets and Splits
No community queries yet
The top public SQL queries from the community will appear here once available.