text
stringlengths
0
61.5k
ಯೋಗ: ವಜ್ರಾಸನ ಹುಟ್ಟಿಕೊಂಡ ಸ್ವಾರಸ್ಯಕರ ಕತೆ
ಯೋಗ ಮತ್ತು ಶಿವ: ಯೋಗ ಶಿವನಿಂದಾಗಿ ಹುಟ್ಟಿಕೊಂಡಿತೇ?
Yoga Poses Before Getting Out Of Bed
Practicing certain yoga asanas early in the morning as soon as you wake up have plenty of health benefits. Yoga isn't just for losing weight, it helps relieve asthma, back pain and other breathing problems as well. Here is a set of yoga poses you can do right before you get out of bed.
ನಾಗರಕುಂಟೆಗೆ ನಡೆದಿದೆ ಕಾಯಕಲ್ಪ | Prajavani
ನಾಗರಕುಂಟೆಗೆ ನಡೆದಿದೆ ಕಾಯಕಲ್ಪ
ಕೋಲಾರ: ನಗರದ ಹೃದಯ ಭಾಗದಲ್ಲಿರುವ ನಾಗರಕುಂಟೆ ಅಭಿವೃದ್ಧಿಗೆ ಜಿಲ್ಲಾಡಳಿತ ಚಾಲನೆ ನೀಡಿ ಗುರುವಾರಕ್ಕೆ ಸರಿಯಾಗಿ ಮೂರು ತಿಂಗಳಾಗುತ್ತದೆ. ಕಳೆದ ಅ.8ರಂದು ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಈ ಕಾರ್ಯಕ್ಕೆ ಚಾಲನೆ ನೀಡಿದ ಬಳಿಕ ಈಗ ಅಲ್ಲಿ ಹಳೆಯ ಕಲ್ಯಾಣಿಯ ಚಿತ್ರವೊಂದು ಅಸ್ಪಷ್ಟವಾಗಿ ಮೂಡಿದೆ.
ಗೋಪುರದಂತೆ ಕಾಣುತ್ತಿದ್ದ ಕಸ ಮತ್ತು ಕಟ್ಟಡ ತ್ಯಾಜ್ಯದ ಬೃಹತ್ ರಾಶಿ ಕಾಣೆಯಾಗಿದೆ. ಪಳೆಯುಳಿಕೆಯಂತೆ ಕಾಣುತ್ತಿದ್ದ ಗೋಪುರಕ್ಕೆ ವಿಶೇಷ ಕಳೆ ಬಂದಿದೆ. ಜಿಲ್ಲೆಯ ಕಲ್ಯಾಣಿಗಳ ಅಭಿವೃದ್ಧಿಗೆ ಚಾಲನೆ ದೊರೆತ ಬಳಿಕ ಸಮಗ್ರ ಅಭಿವೃದ್ಧಿ ಅವಕಾಶ ಪಡೆದಿರುವ ನಗರದ ವೊದಲ ಕಲ್ಯಾಣಿಯಾಗಿಯೂ ನಾಗರಕುಂಟೆ ಗಮನ ಸೆಳೆಯಲಿದೆ.
ಆ.8ರಂದು ಈ ಕಲ್ಯಾಣಿ ಅಭಿವೃದ್ಧಿಗೆ ಚಾಲನೆ ದೊರೆತ ಸಂದರ್ಭದಲ್ಲಿ ನೆರೆದ ಅಧಿಕಾರಿಗಳು, ಸಂಘ-ಸಂಸ್ಥೆಗಳ ಕಾರ್ಯಕರ್ತರು ಕಲ್ಯಾಣಿಯ ಅಗಾಧ ಆಳಕ್ಕೆ ಬೆರಗುಪಟ್ಟಿದ್ದರು. ಇದನ್ನು ಅಭಿವೃದ್ಧಿಪಡಿಸುವುದು ಅಷ್ಟು ಸುಲಭವಲ್ಲ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸುತ್ತಿದ್ದರು. ಅಂತರಗಂಗೆಯ ಬೆಟ್ಟ ಸಾಲುಗಳಿಂದ ಹರಿದು ಬರುವ ನೀರು ಸಂಗ್ರಹವಾಗಲೆಂದೇ ನಿರ್ಮಿಸಿದ್ದ ನಾಗರಕುಂಟೆಯಲ್ಲಿ ಮತ್ತೆ ನೀರಿನ ಕಲರವ ಕೇಳ...
ಕಲ್ಯಾಣಿಯ ಪಾರಂಪರಿಕ ಸ್ವರೂಪವನ್ನು ಕಾಪಾಡುವ ರೀತಿಯಲ್ಲೇ ಕಲ್ಯಾಣಿಯ 200*100 ಅಡಿ ವ್ಯಾಪ್ತಿಯಲ್ಲಿ ಬೃಹತ್ ಸಿಮೆಂಟ್ ತಡೆಗೋಡೆಯನ್ನು ನಿರ್ಮಿಸುವ ಕೆಲಸ ಹಲವು ದಿನಗಳಿಂದ ನಡೆಯುತ್ತಿದೆ.
ಮೊದಲಿನಂತೆ ಜನ ಇಲ್ಲಿ ಕಸ ಸುರಿಯುವುದನ್ನು ತಪ್ಪಿಸುವುದು ಮತ್ತು ಮಳೆ ನೀರು ಸಂಗ್ರಹಕ್ಕೆ ಅವಕಾಶ, ಅನುಕೂಲ ಕಲ್ಪಿಸುವುದು ಈ ತಡೆಗೋಡೆ ನಿರ್ಮಾಣದ ಉದ್ದೇಶ ಎನ್ನುತ್ತಾರೆ ಕಾಮಗಾರಿಯನ್ನು ನಡೆಸುತ್ತಿರುವ ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ನಾರಾಯಣಗೌಡ.
ಬುಧವಾರ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಅವರು, ಜನ ಸುರಿದಿದ್ದ ಕಸ, ಕಟ್ಟಡ ತ್ಯಾಜ್ಯದ ಬೃಹತ್ ರಾಶಿಯನ್ನು ಸುಮಾರು 15 ಲಕ್ಷ ವೆಚ್ಚದಲ್ಲಿ ತೆರವುಗೊಳಿಸಲಾಗಿದೆ. ಕಲ್ಯಾಣಿಯ ಎಲ್ಲ ಕಸವನ್ನೂ ತೆರವುಗೊಳಿಸುವ ಪ್ರಯತ್ನ ನಡೆಸಿದರೆ ಜನರಿಗೆ ಓಡಾಡಲು ರಸ್ತೆಯೇ ಸಿಗದ ಸನ್ನಿವೇಶ ನಿರ್ಮಾಣವಾಗಬಹುದು ಎಂಬ ಕಾರಣಕ್ಕೆ 200*100 ಅಡಿ ವ್ಯಾಪ್ತಿಯಲ್ಲಿ ಕಲ್ಯಾಣಿಯನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ ಎಂದು ತ...
ಉದ್ಯಾನ ನಿರ್ಮಾಣ: ಕಲ್ಯಾಣಿಯ ತಳಭಾಗದಲ್ಲಿ ಪಾರಂಪರಿಕ ಸ್ವರೂಪವನ್ನು ಉಳಿಸಿಕೊಂಡು ಮೇಲ್ಭಾಗದಲ್ಲಿ ವಾಕಿಂಗ್ ಪಾಥ್ ನಿರ್ಮಾಣ ಮಾಡುವ ಉದ್ದೇಶವೂ ಇದೆ. ಕಲ್ಯಾಣಿಯಿಂದ ಮೇಲಕ್ಕೆ ಮೆಟ್ಟಿಲುಗಳನ್ನು ನಿರ್ಮಿಸಲಾಗುವುದು. ಮೇಲ್ಭಾಗದಲ್ಲಿ ಪುಟ್ಟ ಉದ್ಯಾನವನ್ನು ನಿರ್ಮಿಸಲಾಗುವುದು. ಆಗ ಕಲ್ಯಾಣಿಯು ಏಕಕಾಲಕ್ಕೆ ವಾಯುವಿಹಾರಕ್ಕೆ ಬರುವವರಿಗೆ, ಮಕ್ಕಳಿಗೆ ಆಕರ್ಷಣೆ ಕೇಂದ್ರವಾಗುತ್ತದೆ.
ಹಾಗೆಯೇ ಕಲ್ಯಾಣಿ ಪಕ್ಕದ ವೆಂಕಟರಮಣಸ್ವಾಮಿ ದೇವಾಲಯಕ್ಕೆ ಬರುವವರಿಗೆ ಧಾರ್ಮಿಕ ಮಹತ್ವದ ಸ್ಥಳವಾಗಿಯೂ ಉಳಿಯಲಿದೆ ಎಂದು ಅವರು ನುಡಿದರು.
ಡಿಸೆಂಬರ್-ಜನವರಿ ವೇಳೆಗೆ ಕಲ್ಯಾಣಿ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳ್ಳಲಿದೆ. ನಂತರ ಅದನ್ನು ನಗರಸಭೆಗೆ ಹಸ್ತಾಂತರಿಸಲಾಗುವುದು. ಇದುವರೆಗೂ ಈ ಸ್ಥಳ ಘನ ತ್ಯಾಜ್ಯ ವಿಲೇವಾರಿಯಿಂದ ಸುತ್ತಮುತ್ತಲಿನ ಪರಿಸರವನ್ನು ಕಲುಷಿಷಿತಗೊಳಿಸುತ್ತಿತ್ತು. ಒತ್ತುವರಿದಾರರಿಗೂ ಅನುಕೂಲ ಕಲ್ಪಿಸಿದಂತಾಗುತ್ತಿತ್ತು. ಇನ್ನು ಮುಂದೆ ಅಂಥ ವಾತಾವರಣ ಇರುವುದಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ನಾಗರಕುಂಟೆಯಲ್ಲಿ ಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಮೂರು ವಾರದೊಳಗೆ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ. ಡಿಸೆಂಬರ್ ಹೊತ್ತಿಗೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳ್ಳಲಿದೆ. ಹೊಸ ವರ್ಷದ ಹೊತ್ತಿಗೆ ನಾಗರಕುಂಟೆ ನಗರದ ಪ್ರಮುಖ ಆಕರ್ಷಣೆಯಾಗಲಿದೆ. ಜಲಸಂರಕ್ಷಣೆ ಮತ್ತು ಕಲ್ಯಾಣಿ ಅಭಿವೃದ್ಧಿಯ ಪ್ರಮಖ ಮಾದರಿಯಾಗಿಯೂ ಗಮನ ಸೆಳೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ತಿಳಿಸಿದರು.
ಮಳೆಗಾಲ ಮುಗಿದ ಬಳಿಕ ವೇಣುಗೋಪಾಲ ಪುಷ್ಪರಣಿಯ ಅಭಿವೃದ್ಧಿ ಕಾರ್ಯವನ್ನು ಖಂಡಿತವಾಗಿಯೂ ಕೈಗೆತ್ತಿಕೊಳ್ಳಲಾಗುವುದು. ಪುಷ್ಕರಣಿಯಲ್ಲಿ ಹೂಳು, ಕೆಸರು ತುಂಬಿದೆ. ಅದನ್ನು ಈಗ ತೆರವುಗೊಳಿಸಿದರೆ ಅಭಿವೃದ್ಧಿ ಕಾರ್ಯಕ್ಕೆ ತೊಂದರೆಯಾಗಬಹುದು ಎಂಬ ಕಾರಣದಿಂದ ಕಾರ್ಯವನ್ನು ಸ್ವಲ್ಪ ಅವಧಿಯ ಮಟ್ಟಿಗೆ ಮುಂದೂಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
'); $('#div-gpt-ad-125413-2').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(funct...
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-125413').addClass('inartprocessed'); } else $('#in-article-125413').hide(); } else { _taboola.push({article:'auto', url:'https://www.prajavani.net/article/ನಾಗರಕುಂಟೆಗೆ-ನಡೆದಿದೆ-ಕಾಯಕಲ್...
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-125413 .field-name-body .field-items div.field-item > p'); if(x1 != null && x1.length != 0) { $('#node-125413 .field-name-body...
'); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-125413 .field-name-body .field-items div.field-item > p:eq(2)').after('
'); googletag.cmd.push(function() { googletag.display('in-article-mob-3rd-125413'); }); } else { $('#in-article-mob-125413').hide(); $('#in-article-mob-3rd-125413').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $('
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ ...
ಸುಳ್ಯ ದಸರಾ: ಲೋಕಕಲ್ಯಾಣಾರ್ಥ ಚಂಡಿಕಾ ಮಹಾಯಾಗ - Samskruti-udayavani
Home ಧಾರ್ಮಿಕ ಸುದ್ದಿ ಸುಳ್ಯ ದಸರಾ: ಲೋಕಕಲ್ಯಾಣಾರ್ಥ ಚಂಡಿಕಾ ಮಹಾಯಾಗ
ಸುಳ್ಯ : ಶ್ರೀ ಶಾರದಾಂಬಾ ದಸರಾ ಸೇವಾ ಟ್ರಸ್ಟ್‌ ಸುಳ್ಯ ಹಾಗೂ ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಸುಳ್ಯ, ತಾಲೂಕು ದಸರಾ ಉತ್ಸವ ಸಮಿತಿ ಆಶ್ರಯದಲ್ಲಿ ನಡೆದ 48ನೇ ವರ್ಷದ ಶ್ರೀ ಶಾರದಾಂಬಾ ಉತ್ಸವ- ಸುಳ್ಯ ದಸರಾದಲ್ಲಿ ಶುಕ್ರವಾರ ಮಹಾಗಣಪತಿ ಹವನ ಸಹಿತ ಚಂಡಿಕಾ ಮಹಾಯಾಗ ನಡೆಯಿತು.
ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಸಹಕಾರದಲ್ಲಿ ಬ್ರಹ್ಮಶ್ರೀ ಪುರೋಹಿತ ನಾಗರಾಜ ಭಟ್‌ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಿತು. ನೂರಾರು ಭಕ್ತರು ಪೂಜೆ ಸಲ್ಲಿಸಿದರು. ಬಳಿಕ ಅನ್ನಸಂತರ್ಪಣೆ ನಡೆಯಿತು.
ಶ್ರೀ ಶಾರದಾಂಬಾ ಸೇವಾ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ, ಗೌರವಾಧ್ಯಕ್ಷ ಕೆ. ಗೋಕುಲದಾಸ್‌, ಉಪಾಧ್ಯಕ್ಷರಾದ ಚಿದಾನಂದ ವಿದ್ಯಾನಗರ, ರವಿಚಂದ್ರ ಕೊಡಿಯಾಲಬೈಲು, ಪ್ರಧಾನ ಕಾರ್ಯದರ್ಶಿ ಬೂಡು ರಾಧಾಕೃಷ್ಣ ರೈ, ಕೋಶಾಧಿಕಾರಿ ಕೆ. ರಾಜು ಪಂಡಿತ್‌, ಕಾರ್ಯದರ್ಶಿ ರಾಜೇಶ್‌ ಕುರುಂಜಿಗುಡ್ಡೆ ಮತ್ತು ನಿರ್ದೇಶಕರು, ಶಾರದಾಂಬಾ ದಸರಾ ಸೇವಾ ಟ್ರಸ್ಟ್‌ನ ಅಧ್ಯಕ್ಷ ನವೀನ್‌ ಚಂದ್ರ ಕೆ.ಎಸ್‌., ಪ್ರಧಾನ ಕಾರ್ಯದ...
ಜರ್ಮನ್ ಬೇಕರಿ ಸ್ಫೋಟ ಪ್ರಕರಣ; ತಜ್ಞರ ನಡುವೆ ಮೊಬೈಲ್‌ಫೋನ್ ಭಿನ್ನತೆ | Prajavani
ಜರ್ಮನ್ ಬೇಕರಿ ಸ್ಫೋಟ ಪ್ರಕರಣ; ತಜ್ಞರ ನಡುವೆ ಮೊಬೈಲ್‌ಫೋನ್ ಭಿನ್ನತೆ
Published: 20 ಫೆಬ್ರವರಿ 2011, 21:25 IST
Updated: 20 ಫೆಬ್ರವರಿ 2011, 21:25 IST
ಮುಂಬೈ/ ಪುಣೆ, (ಪಿಟಿಐ): ಜರ್ಮನ್ ಬೇಕರಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಮಹಾರಾಷ್ಟ್ರ ಎಟಿಎಸ್ ಮತ್ತು ವಿಧಿವಿಜ್ಞಾನ ತಜ್ಞರ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು, ಸ್ಫೋಟಕ್ಕೆ ಮೊಬೈಲ್ ಫೋನ್ ಅಲಾರಾಂ ಬಳಸಲಾಗಿತ್ತು ಎಂದು ಎಟಿಎಸ್ ತಿಳಿಸಿದ್ದರೆ, ಘಟನೆ ನಡೆದ ಸ್ಥಳದಲ್ಲಿ ಮೊಬೈಲ್ ಫೋನ್ ಪತ್ತೆಯಾಗಿಲ್ಲ ಎಂದು ವಿಧಿವಿಜ್ಞಾನ ತಜ್ಞರು ಸ್ಪಷ್ಟಪಡಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇನ್ನೂ ಹುಡುಕುತ್ತಿರುವ ಮೋಹ್ಸಿನ್ ಚೌಧರಿ, ಯಾಸೀನ್ ಭಟ್ಕಳ್ ಹಾಗೂ ಬಂಧನಕ್ಕೊಳಗಾಗಿರುವ ಆರೋಪಿ ಹಿಮಾಯತ್ ಬೇಗ್ ಮುಂಬೈಗೆ ತೆರಳಿ ಅಲ್ಲಿಂದ ನೋಕಿಯಾ 1100 ಮೊಬೈಲ್ ಹಾಗೂ ದೊಡ್ಡ ಗೋಣಿಚೀಲವನ್ನು ಖರೀದಿಸಿ ಅದನ್ನೇ ಸ್ಫೋಟಕ್ಕೆ ಬಳಸಿದ್ದರು ಎಂದು ಎಟಿಎಸ್ ತನ್ನ ಆರೋಪಪಟ್ಟಿಯಲ್ಲಿ ತಿಳಿಸಿದೆ.
ಬಾಂಬ್ ಅನ್ನು ಗೋಣಿಚೀಲದೊಳಗಿಟ್ಟ ಬಳಿಕ ಅದನ್ನು 2010 ಫೆಬ್ರುವರಿ 3ರಂದು 5 ಗಂಟೆಯ ವೇಳೆಗೆ ಬೇಕರಿ ಒಳಗೆ ಇಡಲಾಗಿತ್ತು. 6.50ರ ವೇಳೆಗೆ ಬಾಂಬ್ ಸ್ಫೋಟಗೊಂಡಿತು.
ಈ ಸ್ಫೋಟದಲ್ಲಿ 17 ಜನರು ಸತ್ತು 56 ಮಂದಿ ಗಾಯಗೊಂಡಿದ್ದರು ಎಂದು ಎಟಿಎಸ್ ತನ್ನ ಆರೋಪಪಟ್ಟಿಯಲ್ಲಿ ತಿಳಿಸಿದೆ. ಆದರೆ ಇದನ್ನು ಸ್ಪಷ್ಟಪಡಿಸಲು ಸ್ಫೋಟ ನಡೆದ ಸ್ಥಳದಿಂದ ಮೊಬೈಲ್ ಫೋನ್ ದೊರೆತ ಬಗ್ಗೆ ವಿಧಿವಿಜ್ಞಾನ ಪರೀಕ್ಷೆಯ ವೇಳೆ ತಿಳಿದುಬಂದಿಲ್ಲ ಎನ್ನುವುದೇ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ.
ಮೆಟ್ರೋ ಉದ್ಘಾಟನೆ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣನೆ- ಶಿಸ್ತು ಕ್ರಮಕ್ಕೆ ಆಗ್ರಹ
ಬೆಂಗಳೂರು: ಕೆಂಗೇರಿ ಮಾರ್ಗದ ಮೆಟ್ರೋ ವಿಸ್ತರಿತ ಯೋಜನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣನೆ ಭಾರೀ ವಿರೋಧಕ್ಕೆ ಕಾರಣವಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಸರ್ಕಾರಕ್ಕೆ ಪತ್ರ ಬರೆದು ನಿಯಮ ಉಲ್ಲಂಘಿಸಿ ಕನ್ನಡ ಕಡೆಗಣನೆಗೆ ಕಾರಣರಾದ ಅಧಿಕಾರಿ ನೌಕರರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಮೆಟ್ರೋ ವತಿಯಿಂದ ಈ ಬಗ್ಗೆ ಕ್ಷಮೆ ಕೇಳಿದ್ದು, ಮೈಸೂರು ರಸ್ತೆ ಮೆಟ್ರೋ ನಿಲ್ದಾಣದಿಂದ ಕೆಂಗೇರಿ ಮೆಟ್ರೋ ನಿಲ್ದಾಣದವರೆಗಿನ ಎಲ್ಲಾ ಫಲಕಗಳು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿಯೇ ಇದ್ದು, ಮುಖ್ಯ ವೇದಿಕೆಯ ಫಲಕವು ಮಾತ್ರ ಆಂಗ್ಲ ಭಾಷೆಯಲ್ಲಿ ಇದ್ದುದರಿಂದ ಹಲವಾರು ಆಕ್ಷೇಪಣೆಗಳು ಮಾಧ್ಯಮ ಮತ್ತು ಇತರೆ ಸಾಮಾಜಿಕ ಜಾಲಗಳಲ್ಲಿ ಬಂದಿರುತ್ತವೆ. ಈ ತಪ್ಪು ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಇದರ ಸಂಪೂರ್ಣ ...
ಟಿ.ಎಸ್ ನಾಗಾಭರಣ ಅವರು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತಕ್ಕೆ ಪತ್ರ ಬರೆದು, ಕರ್ನಾಟಕ ಸರ್ಕಾರದ ಸ್ವಾಮ್ಯಕ್ಕೆ ಬರುವ ಎಲ್ಲಾ ಸರ್ಕಾರಿ, ಸರ್ಕಾರೇತರ, ಖಾಸಗಿ ಸಂಸ್ಥೆಗಳು ತಮ್ಮ ಆಡಳಿತದಲ್ಲಿ ಸಂಪೂರ್ಣ ಕನ್ನಡ ಅನುಷ್ಠಾನ ಮಾಡಬೇಕೆಂದು ಈಗಾಗಲೇ ಸಾಕಷ್ಟು ಆಜ್ಞೆ, ಆದೇಶ, ಸೂತ್ತೋಲೆಗಳು ಬಂದಿದ್ದರೂ ಪದೇ ಪದೇ ಕನ್ನಡ ಭಾಷೆಯ ಕಡೆಗಣನೆ ಅಖಂಡ ಕನ್ನಡಿಗರ ಮನಸ್ಸಿಗೆ ನೋವುಂಟು ಮಾಡುತ್ತಿದೆ. ಈಗ ನಮ...
ದಿನಾಂಕ 29-08-2021ರಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಸಂಸ್ಥೆಯ ವತಿಯಿಂದ ನಡೆದ ಕಾರ್ಯಕ್ರಮದ ವೇದಿಕೆಯ ಪರದೆ (ಬ್ಯಾನರ್)ಯ ಮೇಲೆ ಆಡಳಿತ ಭಾಷೆಯಾದ ಕನ್ನಡವನ್ನು ಕಡೆಗಣಿಸಿ ಕೇವಲ ಆಂಗ್ಲ ಭಾಷೆಯನ್ನು ಹಾಕಿರುವ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಾಕಷ್ಟು ಮೌಖಿಕ ಹಾಗೂ ಲಿಖಿತ ದೂರುಗಳು ಸಲ್ಲಿಕೆಯಾಗಿವೆ. ಅಲ್ಲದೇ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳ ಮೂಲಕ ಕನ್ನಡ ಅಭಿವೃದ್ಧಿ ...
ಇದು ಮೇಲ್ಕಾಣಿಸಿದ ರಾಜ್ಯ ಸರ್ಕಾರದ ಆಡಳಿತ ಕನ್ನಡಪರ ಆಜ್ಞೆ-ಆದೇಶಗಳ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿ/ನೌಕರರ ಮೇಲೆ ಸುತ್ತೋಲೆ ಸಂಖ್ಯೆ:ಸಂಕಇ 39ಕೆಒಎಲ್ 2002, ದಿನಾಂಕ:13-06-2002ರನ್ವಯ ಶಿಸ್ತುಕ್ರಮವನ್ನು ಜಾರಿಗೊಳಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾನ್ಯ ಅಧ್ಯಕ್ಷರಾದ ಟಿ.ಎಸ್. ನಾಗಾಭರಣರು ಮೆಟ್ರೋ ರೈಲ್ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಿ...
Related Topics:kannadanamma metroPublic TVT.S Nagabharanaಕನ್ನಡಕನ್ನಡ ಅಭಿವೃದ್ಧಿ ಪ್ರಾಧಿಕಾರಟಿ.ಎಸ್ ನಾಗಾಭರಣನಮ್ಮ ಮೆಟ್ರೋಪಬ್ಲಿಕ್ ಟಿವಿ
ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಕೊರೋನಾ ಪ್ರತ್ಯೇಕ ಚಿಕಿತ್ಸಾ ಘಟಕ ತೆರೆಯಲು ಡಿ.ಕೆ. ಶಿವಕುಮಾರ್ ಆಗ್ರಹ | Digital Kannada
Home ರಾಜಕೀಯ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಕೊರೋನಾ ಪ್ರತ್ಯೇಕ ಚಿಕಿತ್ಸಾ ಘಟಕ ತೆರೆಯಲು ಡಿ.ಕೆ. ಶಿವಕುಮಾರ್ ಆಗ್ರಹ
ಕೊರೋನಾ ಸೋಂಕು ಪ್ರಮಾಣ ಕ್ಷಿಪ್ರಗತಿಯಲ್ಲಿ ಪಸರಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ವೆಂಟಿಲೇಟರ್ ವ್ಯವಸ್ಥೆಯುಳ್ಳ ಪ್ರತ್ಯೇಕ ಚಿಕಿತ್ಸಾ ಘಟಕ ತೆರೆಯಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರ ಈ ಸೋಂಕು ನಿವಾರಣೆಗೆ ಮತ್ತಷ್ಟು ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕು. ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ರೋಗ ಎದುರಿಸಲು ಸಮರ್ಪಕ ವ್ಯವಸ್ಥೆ ಇಲ್ಲ. ಗ್ರಾಮೀಣ ಭಾಗಗಳಿಗೆ ಹಬ್ಬಿದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ. ಅಗತ್ಯ ಕ್ರಮ ಕೈಗೊಳ್ಳುವುದಾಗಿ ಮಾತಿನಲ್ಲಿ ಹೇಳಿದರೆ ಸಾಲದು. ಕೃತಿಯಲ್ಲಿ ಜಾರಿಗೆ ತರಬೇಕು ಎಂದು ಅವರು ಹೇಳಿಕೆಯಲ್ಲಿ ಸೋಮವಾರ ತಿಳಿಸಿದ್ದಾರೆ.
ಕೊರೋನಾ ನಿಯಂತ್ರಣಕ್ಕೆ ಜಿಲ್ಲಾಡಳಿತವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು. ಅವುಗಳಿಗೆ ಹೆಚ್ಚಿನ ಆರ್ಥಿಕ ನೆರವು ನೀಡಬೇಕು. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಕೊರೋನಾ ಸೋಂಕು ಚಿಕಿತ್ಸೆಗೆ ಕನಿಷ್ಠ 60 ರಿಂದ 80 ಹಾಸಿಗೆ ಸಾಮರ್ಥ್ಯದ ವೆಂಟಿಲೇಟರ್ ಯುಕ್ತ ಪ್ರತ್ಯೇಕ ಚಿಕಿತ್ಸಾ ಘಟಕವನ್ನು ಸನ್ನದ್ಧ ಮಾಡಿಕೊಂಡಿರಬೇಕು. ಜತೆಗೆ ಕೊರೋನಾ ರೋಗ ಪತ್ತೆ ಮತ್ತು ನಿಗಾ ಕೇಂದ್ರಗಳನ್ನೂ (Quarantine C...
ಮೊರಾರ್ಜಿ ದೇಸಾಯಿ ವಸತಿ ಶಾಲೆ, ವಿದ್ಯಾರ್ಥಿ ನಿಲಯಗಳು, ವಿಶ್ವವಿದ್ಯಾಲಯ ಕ್ಯಾಂಪಸ್ ಗಳು, ಹಾಸ್ಟೆಲ್ ಗಳು ಸೇರಿದಂತೆ ಇತರೆ ಸಾಮೂಹಿಕ ವಸತಿ ಕೇಂದ್ರಗಳಲ್ಲಿ ರೋಗ ಪತ್ತೆ, ನಿಗಾ ಘಟಕಗಳನ್ನು ತೆರೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇನ್ನು ಸೋಂಕು ಹರಡದಂತೆ ಜನರು ತಮ್ಮನ್ನು ತಾವೇ ನಿರ್ಬಂಧಿಸಿಕೊಳ್ಳಬೇಕು. ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಸೂಚನೆಗಳನ್ನು ತಪ್ಪದೆ ಪಾಲಿಸಬೇಕು. ಸಾರ್ವಜನಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಲಾಕ್ ಡೌನ್ ಹಿಂದಿನ ಉದ್ದೇಶವನ್ನು ಅರ್ಥ ಮಾಡಿಕೊಂಡು, ಅದನ್ನು ಚಾಚು ತಪ್ಪದೇ ಅನುಷ್ಠಾನಕ್ಕೆ ತರಬೇಕು. ಸಾರ್ವಜನಿಕ ಸಹಕಾರ ಇದ್ದರೆ ಮಾತ್ರ ಪರಿಣಾಮಕಾರಿಯಾಗಿ ಸೋಂಕು ತಡೆಯಲು ಸಾಧ್ಯ ಎಂದು ವಿನಂತಿ ಮಾಡಿದ...
*ಗ್ರಾಮೀಣ ಭಾಗದ ವೈದ್ಯರಿಗೆ ಮನವಿ:*
ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ವಿಶೇಷ ಮನವಿ ಮಾಡಿರುವ ಡಿ.ಕೆ. ಶಿವಕುಮಾರ್ ಅವರು, ಸರ್ಕಾರಿ ಮತ್ತು ಖಾಸಗಿ ವೈದ್ಯರು ತಮ್ಮ ಕಾರ್ಯ ನಿಯೋಜಿತ ಪ್ರದೇಶಗಳಲ್ಲೇ ಉಳಿದುಕೊಂಡು, ಕಾರ್ಯನಿರ್ವಹಿಸಬೇಕು ಎಂದು ಹೇಳಿದ್ದಾರೆ.
ಗ್ರಾಮೀಣ ಭಾಗದಲ್ಲಿರುವ ಸರ್ಕಾರಿ ಹಾಗೂ ಖಾಸಗಿ ವೈದ್ಯರು ಬೇರೆ ಸ್ಥಳಗಳಿಗೆ ಹೋಗದೆ ನಿಯೋಜಿತ ಸ್ಥಳಗಳಲ್ಲೇ ಸೇವೆ ಸಲ್ಲಿಸಬೇಕು. ಈ ಸಂದರ್ಭದಲ್ಲಿ ನಿಮ್ಮ ಪಾತ್ರ ಹಾಗೂ ಬದ್ಧತೆ ಬಹುಮುಖ್ಯ. ಅಗತ್ಯ ಬಿದ್ದ ಜನರಿಗೆ ಸೂಕ್ತ ಚಿಕಿತ್ಸೆ ಒದಗಿಸಿ ಎಂದು ಅವರು ಕೋರಿದ್ದಾರೆ.
ದೇಶದಲ್ಲಿ ಕೊರೋನಾ ಸೋಂಕು ಮೂರನೇ ಹಂತ ತಲುಪುತ್ತಿರುವ ಹೊತ್ತಲ್ಲಿ ಎಲ್ಲರೂ ಮುಂಜಾಗ್ರತೆ ವಹಿಸಬೇಕು. ನಗರ ಪ್ರದೇಶಗಳಿಂದ ಹಳ್ಳಿಗಳತ್ತ ಜನರು ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಿರುವುದು ಗೊತ್ತಾಗಿದೆ. ಇದರಿಂದ ಸೋಂಕು ಗ್ರಾಮೀಣ ಭಾಗಗಳಿಗೂ ಪಸರಿಸುವ ಸಾಧ್ಯತೆಗಳಿವೆ. ಆ ಭಾಗದಲ್ಲಿ ಸೂಕ್ತ ಚಿಕಿತ್ಸೆ ಸಿಗುವುದು ಕಷ್ಟವಾಗುತ್ತದೆ. ಹೀಗಾಗಿ ಜನ ಹೆದರುವುದು ಬೇಡ. ಚಿಂತೆ ಮಾಡುವುದೂ ಬೇಡ. ಕಟ್ಟುನಿಟ್ಟ...
Previous articleಕೊರೋನಾ ಪರಿಸ್ಥಿತಿ ನಿಯಂತ್ರಣಕ್ಕೆ ಪ್ಯಾಕೇಜ್ ಘೋಷಿಸಿದ ಸಚಿವೆ ನಿರ್ಮಲಾ ಸೀತರಾಮನ್!
Next articleಕೊರೋನಾ ನಿಯಂತ್ರಣ, ನಿರ್ವಹಣೆ: ಸರ್ವಪಕ್ಷ ಸಭೆ ಕರೆಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಡಿಕೆ ಶಿವಕುಮಾರ್ ಆಗ್ರಹ
|ಕಂದೇಗಾಲ: ಸ್ಕಂದಗಿರಿ ಪಾರ್ವತಾಂಬ ಅದ್ಧೂರಿ ರಥೋತ್ಸವ - chamarajnagara - News in kannada, vijaykarnataka
ಕಂದೇಗಾಲ: ಸ್ಕಂದಗಿರಿ ಪಾರ್ವತಾಂಬ ಅದ್ಧೂರಿ ರಥೋತ್ಸವ
Updated: May 16, 2017, 09:04PM IST
Keywords: ಸ್ಕಂದಗಿರಿ | ಪಾರ್ವತಾಂಬ | ಕಂದೇಗಾಲ | ಅದ್ಧೂರಿ | Skandagiri | parvatamba | kandegala | Grand
ಗುಂಡ್ಲುಪೇಟೆ: ತಾಲೂಕಿನ ಪ್ರಸಿದ್ಧ ಪ್ರವಾಸಿ ಮತ್ತು ಧಾರ್ಮಿಕ ಕ್ಷೇತ್ರ ಕಂದೇಗಾಲದ ಸ್ಕಂದಗಿರಿ ಪಾರ್ವತಾಂಬ ಸಮೇತ ಸೋಮೇಶ್ವರ ಮಹಾರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ರಥೋತ್ಸವ ಹಿನ್ನೆಲೆಯಲ್ಲಿ ದೇವಾಲಯ ಮತ್ತು ಆವರಣವನ್ನು ತಳಿರು, ತೋರಣ ಮತ್ತು ವಿದ್ಯುತ್‌ದೀಪಗಳಿಂದ ಅಲಂಕರಿಸಲಾಗಿತ್ತು. ಬುಧವಾರ ಬೆಳಗ್ಗೆಯಿಂದಲೇ ದೇವಾಲಯದಲ್ಲಿ ನಾನಾ ಧಾರ್ಮಿಕ ಕಾರ್ಯಗಳು ಜರುಗಿದವು. ತಾಲೂಕು ಮತ್ತು ರಾಜ್ಯದ ನಾನಾ ಕಡೆಗಳಿಂದ ಆಗಮಿಸಿದ್ದ ಭಕ್ತರು ಸರದಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿದರು. ನಂತರ ಪಾರ್ವತಾಂಬ ಸಮೇತ ಸೋಮೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು ಪುಷ್ಪಾಲಂಕೃತ ಅಡ...
ರಥೋತ್ಸವ ಹಿನ್ನೆಲೆಯಲ್ಲಿ ದಾನಿಗಳು ದೇವಾಲಯದ ಸುತ್ತಲಿನ ಪ್ರದೇಶದಲ್ಲಿ ಹಸಿರು ಚಪ್ಪರ ಹಾಕಿ ಅರವಟ್ಟಿಗೆಗಳ ತೆರೆದು ಮಜ್ಜಿಗೆ, ಪಾನಕ, ಕೋಸಂಬರಿ, ಪುಳಿಯೋಗÜರೆ ವಿತರಿಸಿದರು.
ವ್ಯಾಪಾರ ಜೋರು: ದೇವಾಲಯದ ಸಂಪರ್ಕ ರಸ್ತೆ, ಸಮುದಾಯ ಭವನಕ್ಕೆ ಹೋಗುವ ರಸ್ತೆ, ಮರಗಳ ನೆರಳಿನಲ್ಲಿ ಮಕ್ಕಳ ಆಟಿಕೆಗಳು, ಗೃಹಪಯೋಗಿ ವಸ್ತುಗಳು, ಸಿಹಿ ಮತ್ತು ಕುರುಕಲು ತಿಂಡಿ ಮಾರಾಟ ಜೋರಾಗಿತ್ತು. ಬಿಸಿಲ ಝಳ ಹೆಚ್ಚಿದ್ದ ಕಾರಣ ವಯಸ್ಸಿನ ಬೇಧವಿಲ್ಲದೇ ಎಲ್ಲರೂ ಐಸ್‌ಕ್ರೀಮ್‌ ಮೊರೆ ಹೋದರು.
ವಿಶೇಷ ಬಸ್‌ ಸಂಚಾರ: ರಥೋತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸ್ಥಳೀಯ ಘಟಕದವರು ವಿಶೇಷ ಬಸ್‌ಗಳ ಸಂಚಾರದ ವ್ಯವಸ್ಥೆ ಮಾಡಿದ್ದರು. ಇನ್ನೂ ಖಾಸಗಿ ಟೆಂಪೊ, ಇತರೆ ಪ್ರಯಾಣಿಕರ ಸಾಗಿಸುವ ವಾಹನಗಳಲ್ಲಿ ಮತ್ತು ದ್ವಿಚಕ್ರ ವಾಹನಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ವಾಹನ ಮತ್ತು ಜನದಟ್ಟಣೆ ಹೆಚ್ಚಿದ್ದ ಹಿನ್ನೆಲೆಯಲ...
ಪ್ರತಿ ವರ್ಷದಂತೆ ಕಂದೇಗಾಲ, ಶಿಂಡನಪುರ, ಮೊಳ್ಳಯ್ಯನಹುಂಡಿ, ಕಂದೇಗಾಲದ ಹೊಸಹಳ್ಳಿ ಇತರೆ ಗ್ರಾಮಗಳ ಜನರು ಸಾರ್ವಜನಿಕರ ಸಹಯೋಗದಲ್ಲಿ ಪ್ರಸಾದ ವಿನಿಯೋಗ ಮಾಡಿದರು.
ನಾಯಕತ್ವದ ಗುಣ ಮೈಗೂಡಿಸಿಕೊಳ್ಳಿ: ವಿದ್ಯಾರ್ಥಿಗಳಿಗೆ ವೃಷಭೇಂದ್ರಪ್ಪ ಕಿವಿಮಾತು | VIJAYAVANI - ವಿಜಯವಾಣಿ
ಸಿರಿಗೆರೆ: ಶಿಸ್ತು, ಸಂಯಮ, ಸಹಬಾಳ್ವೆ, ನಾಯಕತ್ವದ ಗುಣ ಬೆಳಸಲು ಶಿಬಿರ ಪರಿಣಾಮಕಾರಿ ಆಗಿದೆ ಎಂದು ದಾವಣಗೆರೆ ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯದ ನಿರ್ದೇಶಕ ವೈ.ವೃಷಭೇಂದ್ರಪ್ಪ ತಿಳಿಸಿದರು.
ಸಮೀಪದ ಶಾಂತಿವನದಲ್ಲಿ ದಾವಣಗೆರೆ ಮಾಕನೂರು ಮಲ್ಲೇಶಪ್ಪ ಶಿಕ್ಷಣ ಮಹಾವಿದ್ಯಾಲಯದಿಂದ ಆಯೋಜಿಸಿದ್ದ ಪೌರ ಶಿಕ್ಷಣ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜೀವನ ಮೌಲ್ಯ, ಆದರ್ಶಗಳ ಜತೆಗೆ ಶ್ರಮದ ಮಹತ್ವ ಅರಿಯುವುದು ಅಗತ್ಯ. ಶಿಬಿರದ ಪ್ರತಿಯೊಂದು ಚಟುವಟಿಕೆಯಲ್ಲಿ ಕ್ರಿಯಾತ್ಮಕವಾಗಿ ಪಾಲ್ಗೊಳ್ಳಬೇಕು ಎಂದರು.
ಎಂ.ಬಸವಯ್ಯ ವಸತಿ ಪಿಯು ಕಾಲೇಜಿನ ಪ್ರಾಚಾರ್ಯ ಡಿ.ಎಂ.ನಾಗರಾಜ್ ಮಾತನಾಡಿ, ಶಿಬಿರಾರ್ಥಿಗಳಿಗೆ ಜೀವನಶೈಲಿ ಹಾಗೂ ವ್ಯಕ್ತಿತ್ವ ರೂಪಿಸಿಕೊಳ್ಳಲು ತರಬೇತಿ ದೊರೆಯುತ್ತದೆ ಎಂದು ತಿಳಿಸಿದರು.
ಬಿ.ಇಡಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿ ಎನ್.ನಂದಿನಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಎಂ.ಎಂ.ಕಾಲೇಜಿನ ಸಲಹಾ ಸಮಿತಿ ಅಧ್ಯಕ್ಷ ಬಿ.ಸಿದ್ದಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಕೆ.ಟಿ.ನಾಗರಾಜ ನಾಯ್ಕ ಪ್ರತಿಭಾ ಪುರಸ್ಕಾರ ನೆರವೇರಿಸಿದರು. ಪ್ರಾಧ್ಯಾಪಕಿ ಜಿ.ಎಂ.ಶಶಿಕಲಾ ಸ್ವಾಗತಿಸಿದರು. ಟಿ.ಹಾಲೇಶಪ್ಪ ವಂದಿಸಿದರು.
ಮೈಸೂರು ದಸರಾ: ವಿಜಯದಶಮಿ ದಿನದಂದು ಅರಮನೆ ಆವರಣದಲ್ಲಿ ಸರಳ ಜಂಬೂಸವಾರಿ | Mysuru Dasara 2020: A Simple Jamboo Savari In The Palace Premises On Vijayadashami Day - Kannada Oneindia
| Published: Monday, October 26, 2020, 8:39 [IST]
ಮೈಸೂರು, ಅಕ್ಟೋಬರ್ 26: ಮೈಸೂರು ದಸರಾ ಅಂದರೆ ಅಲ್ಲಿ ಸಂಭ್ರಮ, ಸಡಗರ ಹಾಗೂ ಸಂಪ್ರದಾಯಗಳ ಸಂಗಮವಾಗಿರುತ್ತದೆ. ಮೈಸೂರು ದಸರಾ ಅಂದರೆ ರೋಮಾಂಚನ, ದಸರಾ ವಿಜೃಂಭಣೆ ನೋಡುವುದೇ ಚಂದದ ಅನುಭವ. ಆದರೆ ಈ ಬಾರಿ ವಿಶ್ವವಿಖ್ಯಾತ ದಸರಾ ಸಂಭ್ರಮವನ್ನು ಕೊರೊನಾ ಕಿತ್ತುಕೊಂಡಿದೆ. ಇಂದು ಸೋಮವಾರ ಸರಳ ಜಂಬೂಸವಾರಿ ನಡೆಯಲಿದ್ದು, ಹಿಂದಿನ ದಿನ ಭಾನುವಾರದಂದು ಅರಮನೆಯಲ್ಲಿ ಆಯುಧ ಪೂಜೆ ನೆರವೇರಿಸಲಾಯಿತು.
ಪಟ್ಟದ ಆನೆ, ಕುದುರೆ, ಹಸು, ಒಂಟೆಗಳನ್ನು ಆನೆ ಬಾಗಿಲು ಬಳಿಯಿಂದ ಕೋಡಿ ಸೋಮೇಶ್ವರ ಸ್ವಾಮಿ ದೇಗುಲಕ್ಕೆ ಕರೆತರಲಾಯಿತು. ಈ ವೇಳೆ ಪಲ್ಲಕ್ಕಿ ಮೇಲಿದ್ದ ಪಟ್ಟದ ಕತ್ತಿ ಸಮೇತ ರಾಜವಂಶಸ್ಥರು ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಅರಮನೆಯ ಕಲ್ಯಾಣ ಮಂಟಪದಲ್ಲಿ ಆಯುಧಗಳಿಗೆ ಯದುವೀರ್ ಒಡೆಯರ್ ಪೂಜೆ ಸಲ್ಲಿಸಿದರು. ನಂತರ ಸವಾರಿ ತೊಟ್ಟಿಯಲ್ಲಿ ಆನೆ, ಒಂಟೆ, ಕುದುರೆ, ಪಲ್ಲಕಿ, ಕುದುರೆಗಳಿಗೂ ಮತ...
ಮಾವುತ, ಕಾವಾಡಿಗನ ಹೆಸರಿನಲ್ಲಿ ಅರ್ಚನೆ
ಅರಮನೆಯ ಕೋಡಿ ಸೋಮೇಶ್ವರ ದೇವಸ್ಥಾನದ ಬಳಿ ಜಂಬೂಸವಾರಿ ಗಜಪಡೆಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ನೇತೃತ್ವದಲ್ಲಿ ಪೂಜೆ ನೆರವೇರಿತು. ಶೃಂಗಾರಗೊಂಡಿದ್ದ ಆನೆಗಳಿಗೆ ಕಬ್ಬು, ಬಾಳೆಹಣ್ಣು, ತೆಂಗಿನಕಾಯಿ, ಹಣ್ಣು ಬೆಲ್ಲ ತಿನ್ನಿಸಿ ಪೂಜೆ ಸಲ್ಲಿಸಲಾಯಿತು. ಇದೇ ವೇಳೆ ಅಭಿಮನ್ಯು ಆನೆಯ ಮಾವುತ, ಕಾವಾಡಿಗನ ಹೆಸರಿನಲ್ಲಿ ಅರ್ಚನೆ ಮಾಡಿಸಲಾಯಿತು.
ಇದೇ ಮೊದಲ ಬಾರಿ ಅಂಬಾರಿ ಹೊರುವ ಅಭಿಮನ್ಯು
ಅ.26 ರಂದು ಸರಳ ದಸರೆಯ ಜಂಬೂಸವಾರಿ ನಡೆಯಲಿದ್ದು, ಇದೇ ಮೊದಲ ಬಾರಿಗೆ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊರುವ ಜವಾಬ್ದಾರಿಯನ್ನು ಅಭಿಮನ್ಯು ಆನೆಗೆ ವಹಿಸಲಾಗಿದೆ. ಇದು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಲಿದೆ. ಆದರೆ ಇಷ್ಟು ವರ್ಷ ಐದೂವರೆ ಕಿಲೋಮೀಟರ್ ನಡೀತಿದ್ದ ಜಂಬೂಸವಾರಿ, ಈ ವರ್ಷ ಕೇವಲ 400 ಮೀಟರ್‍ಗಷ್ಟೇ ಸೀಮಿತವಾಗಲಿದೆ. ಅಲ್ಲದೇ ಈ ಬಾರಿ ಕೇವಲ 30 ರಿಂದ 40 ನಿಮಿಷಗಳಲ್ಲಿ ಜಂಬೂಸವಾರ...
ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ
ಮೈಸೂರಿನ ಅಂಬಾವಿಲಾಸ ಅರಮನೆ ಆವರಣದಲ್ಲಷ್ಟೇ ಸರಳವಾಗಿ ಚಾಮುಂಡಿ ದೇವಿ ಮೂರ್ತಿ ಹೊತ್ತು ಅಂಬಾರಿ ಸಾಗಲಿದೆ. ಕೇವಲ 300 ಜನರಿಗಷ್ಟೇ ಅವಕಾಶ ನೀಡಲಾಗಿದೆ. ಇದಕ್ಕಾಗಿ ಕುರ್ಚಿ, ಶಾಮಿಯಾನ ವ್ಯವಸ್ಥೆ ಮಾಡಲಾಗಿದೆ. ಜಂಬೂಸವಾರಿ ತೆರಳುವ ಎಡ ಮತ್ತು ಬಲ ಭಾಗದಲ್ಲಿ ಆಸನದ ವ್ಯವಸ್ಥೆ ಮಾಡಲಾಗಿದೆ. ಕಟ್ಟಡ ಹತ್ತಿ ದಸರಾ ವೀಕ್ಷಣೆಗೆ ಅವಕಾಶ ನೀಡಲಾಗಿಲ್ಲ. ಇದಕ್ಕಾಗಿ ರಾಜ್ಯ ಸರ್ಕಾರ ಹಾಗೂ ಮೈಸೂರು ಜಿಲ್ಲಾಡಳಿ...
ಮುಖ್ಯಮಂತ್ರಿಗಳಿಂದ ಚಾಮುಂಡಿ ದೇವಿಗೆ ಪುಷ್ಪಾರ್ಚನೆ
ಇಂದು ಭುವನೇಶ್ವರಿ ದೇವಾಲಯದಲ್ಲಿ ಯದುವೀರ್ ಒಡೆಯರ್ ಅವರು ಬನ್ನಿ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಮಧ್ಯಾಹ್ನ 2.59 ರಿಂದ 3.20ಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ನಂದಿಧ್ವಜಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಸಂಜೆ 4.15ಕ್ಕೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಮುಖ್ಯಮಂತ್ರಿಗಳು ಚಾಮುಂಡಿ ದೇವಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ. ಜಂಬೂ ಸವಾರಿಯಲ್ಲಿ 2 ಟ್ಯಾಬ್ಲೋ, ಕೆಲವೇ ಜನಪದ ಕಲಾತಂಡ...
mysuru dasara mysuru palace jamboo savari mysuru ಮೈಸೂರು ದಸರಾ ಮೈಸೂರು ಅರಮನೆ ಜಂಬೂ ಸವಾರಿ ಮೈಸೂರು
Abhimanyu Elephant was entruste with the responsibility of carrying 750 kg of golden Ambari for the This time In Mysuru Dasara.
ಬಿಜೆಪಿಯಲ್ಲಿ ಶುರುವಾಯ್ತು ರೆಸಾರ್ಟ್‌ ಪಾಲಿಟಿಕ್ಸ್‌: 100 ಶಾಸಕರು ದೆಹಲಿ ಟು ಗುರುಗ್ರಾಮ್‌ಗೆ ಶಿಫ್ಟ್‌ - Power TV News
Home ಪವರ್ ಪಾಲಿಟಿಕ್ಸ್ ಬಿಜೆಪಿಯಲ್ಲಿ ಶುರುವಾಯ್ತು ರೆಸಾರ್ಟ್‌ ಪಾಲಿಟಿಕ್ಸ್‌: 100 ಶಾಸಕರು ದೆಹಲಿ ಟು ಗುರುಗ್ರಾಮ್‌ಗೆ ಶಿಫ್ಟ್‌
ದೆಹಲಿಯಲ್ಲಿ ಬೀಡು ಬಿಟ್ಟಿದ್ದ ಕೇಸರಿ ಟೀಮ್ ಇದೀಗ ಹರಿಯಾಣದ ಗುರುಗ್ರಾಮ್‌ನ ಖಾಸಗಿ ರೆಸಾರ್ಟ್‌ಗೆ ಶಿಫ್ಟ್‌ ಆಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಡೆ ನಿಗೂಢವಾಗಿದ್ದು, ಶಾಸಕರನ್ನು ಅಮಿತ್‌ ಶಾ ಮತ್ತಷ್ಟು ಗೊಂದಕ್ಕೀಡು ಮಾಡಿದ್ದಾರೆ. ಎರಡು ದಿನಗಳ ಬಳಿಕ ಬಿಜೆಪಿ ಸಂಸದರು ಬೆಂಗಳೂರಿಗೆ ವಾಪಸ್‌ ಆಗಿದ್ರೆ, ಶಾಸಕರನ್ನು ಮಾತ್ರ ಗುರುಗ್ರಾಮ್‌ಗೆ ಶಿಫ್ಟ್‌ ಮಾಡಲಾಗಿದೆ.
20 ಶಾಸಕರ ಐದು ತಂಡಗಳನ್ನ ರಚಿಸಿ, ಅರವಿಂದ್ ಲಿಂಬಾವಳಿ, ಸಿಟಿ ರವಿ, ಆರ್.ಅಶೋಕ್, ಈಶ್ವರಪ್ಪ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೆಗಲಿಗೆ ಶಾಸಕರ ಜವಾಬ್ದಾರಿಯನ್ನು ವಹಿಸಲಾಗಿದೆ. ಆ ಮೂಲಕ ಬಿಜೆಪಿ ತಮ್ಮ ಶಾಸಕರನ್ನ ಹಿಡಿದಿಡುವ ತಂತ್ರಗಾರಿಕೆ ಅನುಸರಿಸ್ತಿದೆ.
ಸತೀಶ್​ ಜಾರಕಿಹೊಳಿಗೆ ಟೈಂ ಕೊಟ್ಟಿದ್ದಾರೆ ಬಿಎಸ್​ವೈ: ಬಿಜೆಪಿ ಶಾಸಕರೆಲ್ಲ ಹರಿಯಾಣದ ಗುರುಗ್ರಾಮ್‌ಗೆ ಶಿಫ್ಟ್‌ ಆಗಿದ್ರೆ, ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಂದು ಗೇಮ್ ಪ್ಲ್ಯಾನ್‌ ನಡೆಯುತ್ತಿದೆ. ಮೈತ್ರಿ ಸರ್ಕಾರದ 12 ಅತೃಪ್ತ ಶಾಸಕರು ದೆಹಲಿಯಲ್ಲೇ ಬೀಡು ಬಿಟ್ಟಿದ್ದಾರೆ. ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಜೊತೆಗೆ ಚರ್ಚೆ ನಡೆಸಲು ಬಿಎಸ್‌ವೈ ಈಗಾಗಲೇ ಸಮಯ ನೀಡಿದ್ದಾರೆ ಎನ್ನಲಾಗಿದೆ. ಇಂದು ಮಧ್...
ದೋಸ್ತಿ ಸರ್ಕಾರ ಬಂದಾಗಿನಿಂದಲು ಒಂದಿಲ್ಲೊಂದು ಸಮಸ್ಯೆಗಳು ಎದುರಾಗುತ್ತಲೇ ಇವೆ. ರಾಜ್ಯ ರಾಜಕಾರಣದಲ್ಲಿ ಬಿರುಸಿನ ವಿದ್ಯಮಾನಗಳು ನಡೆಯುತ್ತಿವೆ. ಅದರಲ್ಲೂ ರಮೇಶ ಜಾರಕಿಹೊಳಿ ವಿಚಾರ ಸರಕಾರಕ್ಕೆ ಪದೇ ಪದೇ ಮುಜುಗರ ಉಂಟು ಮಾಡ್ತಿದೆ. ಜೊತೆಗೆ ಕೆಲ ಕಾಂಗ್ರೆಸ್ ಶಾಸಕರು ಸಂಪರ್ಕಕಕ್ಕೆ ಸಿಗದಿರುವುದು ಬಿಜೆಪಿಯ ಆಪರೇಷನ್ ಕಮಲ ಸಕ್ಸಸ್ ಆಗುತ್ತಾ ಅನ್ನೋ ಆತಂಕವನ್ನು ಕಾಂಗ್ರೆಸಿಗರಲ್ಲಿ ಹುಟ್ಟು ಹಾಕ್ತಿ...
ಒಂದಡೆ ಮೈತ್ರಿ ಸರ್ಕಾರವನ್ನು ಮುಳುಗಿಸಲು ಕೇಸರಿ ಪಡೆ ಆಪರೇಷನ್‌ ಕಮಲ ನಡೆಸ್ತಿದೆ ಅನ್ನೋ ಆರೋಪ ಕೇಳಿ ಬರ್ತಿದೆ. ಇದಕ್ಕೆ ಪ್ರತಿಯಾಗಿ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್‌ ಕೂಡ ಪ್ರತಿತಂತ್ರ ಹೆಣೆಯುತ್ತಿದೆ. ಈ ಸಂಬಂಧ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸಂಪುಟದ ಸಚಿವರು ಸಭೆ ನಡೆಸಿದ್ರು. ಕಾಂಗ್ರೆಸ್‌ ಸಚಿವರ ಸಭೆಯಲ್ಲಿ ಆಪರೇಷನ್‌ ಕಮಲದ ವಿಚಾರವೇ ಚರ್ಚೆಯಾಯ್ತು. ಕಾಂಗ್ರೆಸ್‌ಗೆ ಸೇರುವ ಶಾಸಕ...
ಮೂರು ತಿಂಗಳಿಂದ ಶಾಲೆಗೆ ಚಕ್ಕರ್ ಹಾಕಿದ ಶಿಕ್ಷಕರಿಗೆ ಮಕ್ಕಳಿಂದ ಕ್ಲಾಸ್ – Public TV
ಕಾರವಾರ: ಮಕ್ಕಳು ಶಾಲೆಗೆ ಚಕ್ಕರ್ ಹೊಡೆಯುವುದು ಮಾಮೂಲಿ. ಆದರೆ ಉತ್ತರ ಕನ್ನಡ ಜಿಲ್ಲೆಯ ಮಂಡಗೋಡಿನಲ್ಲಿ ಶಿಕ್ಷಕರೇ ಶಾಲೆಗೆ ಚಕ್ಕರ್ ಹೊಡೆದು ಮಕ್ಕಳಿಂದ ಪಾಠ ಹೇಳಿಸಿಕೊಂಡಿದ್ದಾರೆ.
ಕಳೆದ ಮೂರು ತಿಂಗಳಿಂದ ಶಾಲೆಗೆ ಶಿಕ್ಷಕರು ಬಾರದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಶಾಲೆಯ ಎದುರು ಪ್ರತಿಭಟನೆ ನಡೆಸಿ ಶಿಕ್ಷಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಮುಂಡಗೋಡ ತಾಲೂಕಿನ ಬದ್ರಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇಬ್ಬರು ಶಿಕ್ಷಕರನ್ನು ಹೊಂದಿದ್ದು, 50 ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ.
ಕಳೆದ ಮೂರು ತಿಂಗಳಿಂದ ಮಕ್ಕಳಿಗೆ ಪಾಠ ಮಾಡದೇ ಶಿಕ್ಷಕ ಜಾವಳಗಿ, ಶಿಕ್ಷಕಿ ನಾಗಮಣಿ, ಶಾರದ ಎಂಬವರು ಗೈರಾಗುತ್ತಿದ್ದರು. ಕಳೆದ ಒಂದು ತಿಂಗಳ ಹಿಂದೆ ಶಿಕ್ಷಕಿ ನಾಗಮಣಿ ಅವರಿಗೆ ಅಪಘಾತದಲ್ಲಿ ಕೈ ಮುರಿದಿದ್ದು, ಈ ಕಾರಣದಿಂದ ರಜೆ ಹಾಕಿದ್ದಾರೆ. ಇವರ ಜಾಗಕ್ಕೆ ಶಾರದ ಅವರನ್ನು ಬದಲಿ ನಿಯುಕ್ತಿ ಮಾಡಲಾಗಿದೆ. ಆದರೆ ಶಾಲೆಗೆ ಈ ಶಿಕ್ಷಕರು ಕಳೆದ ಮೂರು ತಿಂಗಳಿಂದ ಬಾರದೇ ಚಕ್ಕರ್ ಹಾಕುತ್ತಿದ್ದರು.
ಪ್ರತಿದಿನ ಶಾಲೆಗೆ ಮಕ್ಕಳು ಬಂದು ಬೀಗ ಹಾಕಿರುವುದನ್ನು ನೋಡಿ ಮನೆಗೆ ಮರಳುತ್ತಿದ್ದರು. ಇದಲ್ಲದೇ ಈ ಕುರಿತು ಶಾಲೆಯ ಎಸ್‍ಡಿಎಂಸಿ ಸದಸ್ಯರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ಸಹ ನೀಡಿದ್ದಾರೆ. ಆದರೆ ಕಾರಣವೇ ಇಲ್ಲದೇ ಗೈರಾಗಿರುವ ಈ ಶಿಕ್ಷಕರ ವಿರುದ್ಧ ಯಾವ ಕ್ರಮವೂ ಜರುಗಿರಲಿಲ್ಲ. ಈ ಕಾರಣದಿಂದ ಇಂದು ಶಾಲೆಗೆ ಬಂದ ಮಕ್ಕಳು ಬೀಗ ಹಾಕಿರುವ ಶಾಲೆಯ ಎದುರು ಪ್ರತಿಭಟನೆ ನಡೆಸಿದ್ದಾರೆ.