text stringlengths 0 61.5k |
|---|
Previous articleಬಾಗಲೂರು ಗ್ರಾಪಂ: ದಲಿತ ಅಧ್ಯಕ್ಷೆ ಕುಳಿತ ಕುರ್ಚಿ ಗೋಮೂತ್ರದಿಂದ ಶುದ್ಧೀಕರಣ: ಬಿಜೆಪಿ ದೂರು |
Next articleಕರ್ನಾಟಕದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಕಾಯಿದೆ ಜಾರಿಯಿಂದ ಜನರ ಜೀವನೋಪಾಯಕ್ಕೆ ಧಕ್ಕೆ, ಗೂಂಡಾಗಿರಿ ಹೆಚ್ಚಳ: ಅಧ್ಯಯನ ವರದಿ |
ಪಂದ್ಯದಲ್ಲಿನ ಗೆಲುವಿಗೆ ಧೋನಿ ನೀಡಿದ ಆ ಸಲಹೆಯೇ ಕಾರಣ: ಕೊಹ್ಲಿ | Champions trophy 2017: Dhoni's idea changed the game against Bangladesh - Kannada Oneindia |
» ಪಂದ್ಯದಲ್ಲಿನ ಗೆಲುವಿಗೆ ಧೋನಿ ನೀಡಿದ ಆ ಸಲಹೆಯೇ ಕಾರಣ: ಕೊಹ್ಲಿ |
Published: Friday, June 16, 2017, 10:35 [IST] |
ಲಂಡನ್, ಜೂನ್ 16: ಅನುಭವಿ ಆಟಗಾರ ಹಾಗೂ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಸಲಹೆಯೊಂದನ್ನು ತಕ್ಷಣಕ್ಕೆ ಅನುಷ್ಠಾನಕ್ಕೆ ತಂದಿದ್ದರಿಂದಲೇ ಬಾಂಗ್ಲಾದೇಶ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಜಯ ಗಳಿಸಲು ಸಾಧ್ಯವಾಗಿದ್ದು ಎಂದು ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ. |
ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಭಾರತ ತಂಡ, ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ, ಮೊದಲು ಬ್ಯಾಟಿಂಗ್ ಗೆ ಇಳಿದ ಬಾಂಗ್ಲಾದೇಶ ಆರಂಭಿಕ ಸೌಮ್ಯ ಸರ್ಕಾರ್ ಅವರನ್ನು ಬೇಗನೇ ಕಳೆದುಕೊಂಡಿತಾದರೂ, ಆನಂತರ ತಮೀಮ್ ಇಕ್ಬಾಲ್ ಹಾಗೂ ಮುಷ್ಫೀಕರ್ ರಹೀಮ್ ಜೋಡಿ, 3ನೇ ವಿಕೆಟ್ ಗೆ 121 ರನ್ ಜತೆಯಾಟ ನೀಡಿತು. |
ಈ ಜೋಡಿ ಕ್ರೀಸ್ ನಲ್ಲಿ ನಿಂತು ಆರ್ಭಟಿಸುತ್ತಿದ್ದರೆ, ಲಂಡನ್ ನಲ್ಲಿನ ತಂಪು ಗಾಳಿಯಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಭಾರತೀಯ ಬೌಲರ್ ಗಳಿಗೆ ಬೆವರಿಳಿಯುತ್ತಿತ್ತು. ಈ ಜೋಡಿಯನ್ನು ಮುರಿಯುವುದು ಭಾರತ ತಂಡಕ್ಕೆ ತಲೆನೋವಾಗಿತ್ತು. |
ಆಗ, ಧೋನಿ ಅವರು ಕೊಹ್ಲಿಯನ್ನು ಕರೆದು ಸಲಹೆಯೊಂದನ್ನು ನೀಡಿದರಂತೆ. ಈ ಸಂದರ್ಭದಲ್ಲಿ ಆಫ್ ಸ್ಪಿನ್ನರ್ ಒಬ್ಬರನ್ನು ಕಣಕ್ಕಿಳಿಸಬೇಕು ಎಂದು ಹೇಳಿದರಂತೆ. ಅದರಂತೆ, ಕೇದಾರ್ ಜಾಧವ್ ಅವರಿಗೆ ಬೌಲಿಂಗ್ ಗೆ ಇಳಿಸಲಾಯಿತು. ಅವರು ಆ ಇಬ್ಬರೂ ಬ್ಯಾಟ್ಸ್ ಮನ್ ಗಳನ್ನು ಪೆವಿಲಿಯನ್ ಗೆ ಅಟ್ಟಿದರು. ಆನಂತರ, ಬಾಂಗ್ಲಾದೇಶ ಇನಿಂಗ್ಸ್ ಕ್ರಮೇಣ ಕುಸಿತ ಕಂಡಿತು. |
ಹೀಗೆ, ಬಾಂಗ್ಲಾದೇಶವನ್ನು 300 ರನ್ ಮೊತ್ತದೊಳಗೇ ನಿಯಂತ್ರಿಸಲು ಧೋನಿ ನೀಡಿದ್ದ ಆ ಸಲಹೆಯೇ ಕಾರಣವೆಂದು ಖುದ್ದು ವಿರಾಟ್ ಕೊಹ್ಲಿಯವರೇ ಪಂದ್ಯದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. |
virat kohli, mahendra singh dhoni, champions trophy, india, bangladesh, ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ, ಚಾಂಪಿಯನ್ಸ್ ಟ್ರೋಫಿ, ಭಾರತ, ಬಾಂಗ್ಲಾದೇಶ |
Virat Kolhi applause the idea which was given by former captain Mahendra Singh Dhoni in Semi Final match between India and Bangladesh. On following Dhoni's idea, India won the match, Kohli said in post match press meet. |
ದಿನ ಭವಿಷ್ಯ: ಬುಧವಾರದ ರಾಶಿಫಲ ಹೇಗಿದೆ ನೋಡಿ | Dina Bhavishya 03 March 2021 - Kannada BoldSky |
ನಕ್ಷತ್ರ: ಮಾರ್ಚ್ 04 ಮಧ್ಯಾಹ್ನ 01:36ರವರೆಗೆ ಸ್ವಾತಿ, ನಂತರ ವಿಶಾಖ |
ರಾಹುಕಾಲ: ಮಧ್ಯಾಹ್ನ 12:32ರಿಂದ 02:01ರವರೆಗೆ |
ಗುಳಿಕಕಾಲ: ಬೆಳಗ್ಗೆ 11:02ರಿಂದ 12:32ರವರೆಗೆ |
ಯಮಗಂಡಕಾಲ: ಬೆಳಗ್ಗೆ 08:04ರಿಂದ 09:33ರವರೆಗೆ |
ದುರ್ಮುಹೂರ್ತ: ಮಧ್ಯಾಹ್ನ 12:08ರಿಂದ 12:55ರವರೆಗೆ |
ಸೂರ್ಯಾಸ್ತ: ಸಂಜೆ 06:29ಕ್ಕೆ |
ಇಂದು ನಿಮಗೆ ಒಳ್ಳೆಯ ದಿನ. ನಿಮ್ಮ ಕೆಲವು ಪ್ರಮುಖ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತವೆ. ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯುವ ಪ್ರಬಲ ಸಾಧ್ಯತೆ ಇದೆ. ನೀವು ನಿರುದ್ಯೋಗಿಗಳಾಗಿದ್ದರೆ ಮತ್ತು ಉದ್ಯೋಗವನ್ನು ಹುಡುಕುತ್ತಿದ್ದರೆ, ಇಂದು ನಿಮ್ಮ ಹುಡುಕಾಟವು ಮುಗಿಯಬಹುದು. ಆಹಾರ ವಸ್ತುಗಳನ್ನು ವ್ಯಾಪಾರ ಮಾಡುವವರು ಇಂದು ಉತ್ತಮ ಆರ್ಥಿಕ ಲಾಭಗಳನ್ನು ಪಡೆಯಬಹುದು. ಮತ್ತೊಂದ... |
ಇಂದು ನಿಮಗೆ ಹೆಚ್ಚಿನ ಪರಿಹಾರ ಸಿಗಲಿದೆ. ನಿಮ್ಮ ಹಣಕಾಸಿನ ಸಮಸ್ಯೆ ಬಗೆಹರಿಯುವ ಸಾಧ್ಯತೆಯಿದೆ. ಹಠಾತ್ ಸಂಪತ್ತನ್ನು ಸಾಧಿಸಬಹುದು. ಚಿಲ್ಲರೆ ವ್ಯಾಪಾರಿಗಳು ಉತ್ತಮ ಆರ್ಥಿಕ ಲಾಭವನ್ನು ಪಡೆಯಬಹುದು. ಮತ್ತೊಂದೆಡೆ, ರಿಯಲ್ ಎಸ್ಟೇಟ್ ನಲ್ಲಿ ಕೆಲಸ ಮಾಡುವ ಜನರು ಸಹ ಪ್ರಯೋಜನ ಪಡೆಯುವ ನಿರೀಕ್ಷೆಯಿದೆ. ನಿಮ್ಮ ಬೆಲೆಬಾಳುವ ವಸ್ತುಗಳನ್ನು ಚೆನ್ನಾಗಿ ನೋಡಿಕೊಳ್ಳಿ. ಇಲ್ಲದಿದ್ದರೆ ಅದು ಕಳೆದು ಹೂಗಬಹುದು... |
ಇಂದು ಕೆಲಸದ ಮುಂಭಾಗದಲ್ಲಿ ಬಹಳ ಮುಖ್ಯವಾದ ದಿನವಾಗಲಿದೆ, ವಿಶೇಷವಾಗಿ ವ್ಯಾಪಾರಸ್ಥರು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ನಿಮ್ಮ ವ್ಯವಹಾರವನ್ನು ಮತ್ತಷ್ಟು ಹೆಚ್ಚಿಸಲು ನೀವು ಬ್ಯಾಂಕಿನಿಂದ ಸಾಲ ತೆಗೆದುಕೊಳ್ಳುವ ಬಗ್ಗೆ ಯೋಚಿಸುತ್ತಿದ್ದರೆ, ಇಂದು ಅರ್ಜಿ ಸಲ್ಲಿಸಲು ಉತ್ತಮ ದಿನವಾಗಿದೆ. ನೌಕರರು ಬಹಳ ಕಾರ್ಯನಿರತ ದಿನವನ್ನು ಹೊಂದಿರುತ್ತಾರೆ. ಇಂದು, ನೀವು ಹೆಚ್ಚು ಕೆಲಸ ಮಾಡಬಹುದು. ಆದಾಗ್ಯೂ... |
ವೃತ್ತಿಜೀವನದ ಬಗ್ಗೆ ನಿಮ್ಮ ಚಿಂತೆ ಇಂದು ಹೆಚ್ಚಾಗಬಹುದು. ಈ ರೀತಿಯ ಪರಿಸ್ಥಿತಿಯಲ್ಲಿ ನೀವು ಅನುಭವಿ ವ್ಯಕ್ತಿಯಿಂದ ಸಲಹೆ ಪಡೆಯಬೇಕು. ವ್ಯಾಪಾರಸ್ಥರು ಹೆಚ್ಚಿನ ಪರಿಹಾರವನ್ನು ಪಡೆಯಬಹುದು. ಸಿಲುಕಿಕೊಂಡ ಹಣ ಸಿಕ್ಕಿಹಾಕಿಕೊಳ್ಳುವ ಬಲವಾದ ಸಾಧ್ಯತೆ ಇದೆ. ಮತ್ತೊಂದೆಡೆ, ದುಡಿಯುವ ಜನರು ಇಂದು ಯಾವುದೇ ಪ್ರಮುಖ ಕಾರ್ಯವನ್ನು ಪೂರ್ಣಗೊಳಿಸಲು ಶ್ರಮಿಸಬೇಕಾಗುತ್ತದೆ. ಹೇಗಾದರೂ, ನೀವು ಹೆಚ್ಚು ಚಿಂತಿಸ... |
ಗ್ರಹಗಳ ಋಣಾತ್ಮಕ ಪರಿಣಾಮಗಳಿಂದಾಗಿ, ನೀವು ಇಂದು ಮಾಡುವ ಯಾವುದೇ ಕೆಲಸ ಇದ್ದಕ್ಕಿದ್ದಂತೆ ಹದಗೆಡಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ತುಂಬಾ ತಾಳ್ಮೆಯಿಂದ ಕೆಲಸ ಮಾಡಲು ಸೂಚಿಸಲಾಗುತ್ತದೆ. ಕಿರಿಕಿರಿಯಿಂದ ಅಂತಹ ಯಾವುದೇ ಕೆಲಸವನ್ನು ಮಾಡಬೇಡಿ ನೀವು ಭವಿಷ್ಯದಲ್ಲಿ ವಿಷಾದಿಸಬೇಕಾಗುತ್ತದೆ. ನೀವು ವ್ಯಾಪಾರ ಮಾಡಿದರೆ ಇಂದು ನೀವು ದೊಡ್ಡ ವ್ಯವಹಾರವನ್ನು ಮಾಡಲು ಅವಕಾಶವನ್ನು ಪಡೆಯಬಹುದು. ಹೇಗಾದರ... |
ಇಂದು ಬ್ಯಾಂಕಿಂಗ್ ಕ್ಷೇತ್ರಕ್ಕೆ ಶುಭ ದಿನವಾಗಲಿದೆ. ನೀವು ಉತ್ತಮ ಯಶಸ್ಸನ್ನು ಪಡೆಯಬಹುದು. ಹಿರಿಯ ಅಧಿಕಾರಿಗಳು ನಿಮ್ಮ ಕಾರ್ಯಕ್ಷಮತೆಗೆ ತೃಪ್ತರಾಗುತ್ತಾರೆ. ನೀವು ವ್ಯಾಪಾರ ಮಾಡಿದರೆ ಮತ್ತು ನೀವು ಇತ್ತೀಚೆಗೆ ದೊಡ್ಡ ನಷ್ಟವನ್ನು ಅನುಭವಿಸಿದರೆ, ಇಂದು ನೀವು ಅದನ್ನು ಸರಿದೂಗಿಸಲು ಉತ್ತಮ ಅವಕಾಶವನ್ನು ಪಡೆಯಬಹುದು. ಷೇರು ಮಾರುಕಟ್ಟೆಯಲ್ಲಿ ಕೆಲಸ ಮಾಡುವವರು ನಿರೀಕ್ಷಿತ ಫಲಿತಾಂಶವನ್ನು ಪಡೆಯಬಹ... |
ನೀವು ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡಿದರೆ ಇಂದು ನೀವು ಉತ್ತಮ ಆರ್ಥಿಕ ಲಾಭವನ್ನು ಪಡೆಯಬಹುದು. ಇದಲ್ಲದೆ, ನಿಮ್ಮ ಅರ್ಧದಲ್ಲಿ ನಿಂತ ಕೆಲಸವನ್ನು ಪುನರಾರಂಭಿಸುವ ಬಲವಾದ ಸಾಧ್ಯತೆಯೂ ಇದೆ. ನೌಕರರು ಸಾಮಾನ್ಯ ದಿನವನ್ನು ಹೊಂದಿರುತ್ತಾರೆ. ಇಂದು, ಕಡಿಮೆ ಕೆಲಸದ ಹೊರೆಯೊಂದಿಗೆ, ನಿಮಗಾಗಿ ಹೆಚ್ಚುವರಿ ಸಮಯವನ್ನು ಪಡೆಯಲು ನಿಮಗೆ ಸಾಧ್ಯವಾಗುತ್ತದೆ. ಹಣದ ವಿಷಯದಲ್ಲಿ, ಹೆಚ್ಚು ಜಾಗರೂಕರಾಗಿರಬೇಕು. ನ... |
ಇಂದು ಕೆಲಸದ ಮುಂಭಾಗದಲ್ಲಿ ಮಿಶ್ರ ಫಲಿತಾಂಶಗಳು. ನೀವು ಕೆಲಸ ಮಾಡಿದರೆ, ಕಚೇರಿಯಲ್ಲಿ ಒಂದು ಪ್ರಮುಖ ಹಠಾತ್ ಸಭೆ ಇರಬಹುದು. ನೀವು ಮುಂಚಿತವಾಗಿ ತಯಾರಾಗಿರುವುದು ಉತ್ತಮ. ಹೆಚ್ಚಿನ ಲಾಭಕ್ಕಾಗಿ ಉದ್ಯಮಿ ತನ್ನ ವ್ಯವಹಾರ ಯೋಜನೆಗಳಲ್ಲಿ ಕೆಲವು ಬದಲಾವಣೆಗಳನ್ನು ಮಡಿಕೊಳ್ಳಬೇಕಾಗುತ್ತದೆ. ನೀವು ಪಾಲುದಾರಿಕೆಯಲ್ಲಿ ವ್ಯವಹಾರ ಮಾಡಿದರೆ ಅವರೊಂದಿಗೆ ಸಂಘರ್ಷವನ್ನು ತಪ್ಪಿಸಿ. ನಿಮ್ಮ ನಡುವಿನ ಉತ್ತಮ ಬಾಂ... |
ಶುಭ ಸಮಯ: ಬೆಳಗ್ಗೆ 8 ರಿಂದ ಮಧ್ಯಾಹ್ನ 1 ಗಂಟೆ |
ಇಂದು ಸಂಭಾಷಣೆಯ ಸಮಯದಲ್ಲಿ ನಿಮ್ಮ ಪದಗಳನ್ನು ಬಹಳ ಬುದ್ಧಿವಂತಿಕೆಯಿಂದ ಬಳಸಿ. ತಿಳಿಯದೆ, ನೀವು ಇನ್ನೊಬ್ಬರ ಭಾವನೆಗಳನ್ನು ನೋಯಿಸಬಹುದು. ಹಣದ ವಿಷಯದಲ್ಲಿ ಇಂದು ನಿಮಗೆ ಒಳ್ಳೆಯದಲ್ಲ. ನೀವು ಸಾಲ ತೆಗೆದುಕೊಳ್ಳುವ ಅಥವಾ ಸಾಲ ಕೊಡುವ ಬಗ್ಗೆ ಯೋಚಿಸುತ್ತಿದ್ದರೆ, ನೀವು ಅದನ್ನು ತಪ್ಪಿಸಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಿಮ್ಮ ಮೇಲೆ ಒತ್ತಡವು ಗಮನಾರ್ಹವಾಗಿ ಹೆಚ್ಚಾಗಬಹುದು. ವೈಯಕ್ತಿಕ ಜೀ... |
ಶುಭ ಸಮಯ: ಬೆಳಗ್ಗೆ 7 ರಿಂದ ಮಧ್ಯಾಹ್ನ 1:30 ರವರೆಗೆ |
ದಿನದ ಆರಂಭವು ತುಂಬಾ ಚೆನ್ನಾಗಿರುತ್ತದೆ. ನೀವು ಬೆಳಗ್ಗೆ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಮನೆಯ ವಾತಾವರಣವು ಹರ್ಷಚಿತ್ತದಿಂದ ಕೂಡಿರುತ್ತದೆ ನೀವು ಇಂದು ನಿಮ್ಮ ಪ್ರೀತಿಪಾತ್ರರೊಡನೆ ವಿನೋದದ ಸಮಯವನ್ನು ಕಳೆಯುತ್ತೀರಿ. ಸಂಗಾತಿಯೊಂದಿಗೆ ನಡೆಯುತ್ತಿರುವ ಬಿರುಕು ಇಂದು ಕೊನೆಗೊಳ್ಳಬಹುದು. ನಿಮ್ಮ ಪ್ರಿಯತಮೆಯಿಂದ ನೀವು ಅದ್ಭುತ ಉಡುಗೊರೆಯನ್ನು ಸಹ ಪಡೆಯಬಹುದು. ವ್ಯಾಪಾರಸ್ಥರು ಹಣದ ವಿ... |
ಇಂದು ಜೀವನ ಸಂಗಾತಿಯ ಆರೋಗ್ಯದ ಬಗ್ಗೆ ನಿಮ್ಮ ಚಿಂತೆ ಹೆಚ್ಚಾಗಬಹುದು. ಅವರು ಈಗಾಗಲೇ ಅನಾರೋಗ್ಯದಿಂದ ಬಳಲುತ್ತಿದ್ದರೆ ನೀವು ಅವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಹಣದ ವಿಷಯದಲ್ಲಿ, ದಿನವು ದುಬಾರಿಯಾಗಲಿದೆ. ಇದ್ದಕ್ಕಿದ್ದಂತೆ ನೀವು ಕೆಲವು ದೊಡ್ಡ ವೆಚ್ಚವನ್ನು ಭರಿಸಬೇಕಾಗಬಹುದು. ನೀವು ವಿದ್ಯಾರ್ಥಿಯಾಗಿದ್ದರೆ ಮತ್ತು ನಿಮ್ಮ ಪರೀಕ್ಷೆಯು ಶೀಘ್ರದಲ್ಲೇ ಬರಲಿದ್ದರೆ, ನಿಮ್ಮ ಅಮೂಲ್ಯ ಸಮಯವನ್ನ... |
ಉದ್ಯೋಗದಲ್ಲಿರುವವರು ಕಚೇರಿಯಲ್ಲಿ ಜಾಗರೂಕರಾಗಿರಬೇಕು. ಕಚೇರಿ ರಾಜಕೀಯದ ಬಗ್ಗೆ ಎಚ್ಚರದಿಂದಿರಿ. ಮತ್ತೊಂದೆಡೆ, ಇಂದು ನೀವು ನಿಮ್ಮ ಪ್ರತಿಭೆಯನ್ನು ತೋರಿಸಲು ಉತ್ತಮ ಅವಕಾಶವನ್ನು ಪಡೆಯಬಹುದು. ಈ ಅವಕಾಶವನ್ನು ನಿಮ್ಮ ಕೈಯಿಂದ ಬಿಡದಿರುವುದು ಉತ್ತಮ. ವ್ಯಾಪಾರಸ್ಥರು ಉತ್ತಮ ಆರ್ಥಿಕ ಲಾಭಗಳನ್ನು ಪಡೆಯಬಹುದು. ನೀವು ಮರದ ಕೆಲಸ ಮಾಡಿದರೆ, ಇಂದು ನಿಮಗೆ ತುಂಬಾ ಅದೃಷ್ಟಶಾಲಿಯಾಗಲಿದೆ. ಕುಟುಂಬ ಜೀವನದ... |
ಡಿ.ಕೆ.ಶಿವಕುಮಾರ್ ಗಾಳಿಯಲ್ಲಿ ಗುಂಡು ಹೊಡೆಯುವುದರಲ್ಲಿ ನಿಸ್ಸೀಮರು : ಸಚಿವ ಆರ್.ಅಶೋಕ್ | Vartha Bharati- ವಾರ್ತಾ ಭಾರತಿ |
ವಾರ್ತಾ ಭಾರತಿ Nov 30, 2020, 4:50 PM IST |
ಮೈಸೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗಾಳಿಯಲ್ಲಿ ಗುಂಡು ಹೊಡೆಯುವುದರಲ್ಲಿ ನಿಸ್ಸೀಮರು ಹಾಗಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ ವಿಚಾರದಲ್ಲಿ ಸಿಡಿ ಇದೆ ಎಂದು ಹೇಳುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. |
ಗ್ರಾಮ ಸ್ವರಾಜ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಸೋಮವಾರ ಮೈಸೂರಿಗೆ ಆಗಮಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. |
ಬೆಂಗಳೂರಿನ ಆರ್.ಆರ್.ನಗರ ಮತ್ತು ಶಿರಾ ಉಪಚುನಾವಣೆಯಲ್ಲಿ ಸೋಲನ್ನು ಕಂಡ ಡಿ.ಕೆ.ಶಿವಕುಮಾರ್ ಹತಾಶರಾಗಿದ್ದಾರೆ. ತಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳಲು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಗಾಳಿಯಲ್ಲಿ ಗುಂಡು ಹೊಡೆಯುವುದರಲ್ಲಿ ಡಿ.ಕೆ.ಶಿವಕುಮಾರ್ ನಿಸ್ಸೀಮರು ಹಾಗಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರ ಹೇಳಿಕೆಗಳಿಗೆ ಸರ್ಕಾರ ಉತ್ತರ ಕೊಡುವ ಅಗತ್ಯವಿಲ್ಲ ಎಂದು ಹೇಳಿದರು. |
ನಕ್ಸಲ್ ದಾಳಿಗೆ ಕಾರವಾರದ ಯೋಧ ಹುತಾತ್ಮ · |
ಟಿಎನ್ ಕೋಟೆಯಲ್ಲಿ ಪ್ರಬಂಧ ಸ್ಪರ್ಧೆ |
ಪರಶುರಾಮಪುರ: ಜಲ ಸಂರಕ್ಷಣೆಗೆ ಜಾಗೃತಿ ವಹಿಸದಿದ್ದರೆ ಮುಂದೆ ನೀರಿಗಾಗಿ ಕಾದಾಡುವ ದಿನ ಬರುತ್ತವೆ ಎಂದು ಮುಖ್ಯಶಿಕ್ಷಕ ವೈ.ತಿಪ್ಪೇಸ್ವಾಮಿ ಎಚ್ಚರಿಸಿದರು. ತಿಮ್ಮಣ್ಣನಾಯಕನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಲ ಸಂರಕ್ಷಣೆ ಜಾಗೃತಿ ಅಂಗವಾಗಿ ಸೋಮವಾರ ಆಯೋಜಿಸಿದ್ದ… |
Uttara Kannada July 11, 2018 12:10 AM |
ಕಾರವಾರ: ಛತ್ತೀಸ್ಗಢ ರಾಜ್ಯದಲ್ಲಿ ನಕ್ಸಲರು ನಡೆಸಿದ ಬಾಂಬ್ ದಾಳಿಗೆ ಕಾರವಾರ ಮೂಲದ ಬಿಎಸ್ಎಫ್ ಯೋಧ ವಿಜಯಾನಂದ ನಾಯ್ಕ (29) ಹುತಾತ್ಮರಾಗಿದ್ದಾರೆ. |
ಛತ್ತೀಸ್ಗಢದ ರಾಯಪುರದಿಂದ ಸುಮಾರು 200 ಕಿಮೀ ದೂರವಿರುವ ಕಂಕರ್ ಜಿಲ್ಲೆಯ ತಡಬೌಲಿ ಗ್ರಾಮದ ಬಳಿ ಸೋಮವಾರ ಸಂಜೆ ನಡೆದ ಇಂಪ್ರೂವ್ಡ್ ಎಕ್ಸ್ಪ್ಲೋಸಿ ಡಿವೈಸ್ (ಐಇಡಿ) ಸ್ಪೋಟದಲ್ಲಿ ವಿಜಯಾನಂದ ನಾಯ್ಕ ಹಾಗೂ ಅವರ ಜತೆ ಇದ್ದ ಬೆಳಗಾವಿಯ ಸಂತೋಷ ವೀರ ಮರಣವನ್ನಪ್ಪಿದ್ದಾರೆ. |
ಛತ್ತೀಸ್ಗಢದ ಕಂಕರ್ ಜಿಲ್ಲೆಯಲ್ಲಿ ನಕ್ಸಲರ ಅಟ್ಟಹಾಸ ಮಟ್ಟ ಹಾಕಲು ಗಡಿ ರಕ್ಷಣಾ ಪಡೆಯ 121 ಬೆಟಾಲಿಯನ್ನ 200 ಯೋಧರ ವಿಶೇಷ ತುಕಡಿ ಕೆಲ ದಿನಗಳಿಂದ ಕಾರ್ಯಾಚರಣೆ ನಡೆಸಿತ್ತು. ಸೋಮವಾರ ಒಂದು ಗ್ರಾಮದಿಂದ ಇನ್ನೊಂದು ಗ್ರಾಮಕ್ಕೆ 13 ಬೈಕ್ಗಳಲ್ಲಿ 8 ತಂಡಗಳಲ್ಲಿ ಯೋಧರು ತೆರಳುತ್ತಿದ್ದರು. ನಾಲ್ಕನೇ ಬೈಕ್ನಲ್ಲಿ ವಿಜಯಾನಂದ ಅವರು ತೆರಳುತ್ತಿರುವ ಸಂದರ್ಭದಲ್ಲಿ ಐಇಡಿ ಸ್ಪೋಟಗೊಂಡಿದೆ. |
ವಿಜಯಾನಂದ ನಾಯ್ಕ ಕಾರವಾರದ ಕೋಡಿಬಾಗದ ಕೋಮಾರಪಂಥವಾಡದ ನಿವೃತ್ತ ಗ್ರಾಮ ಲೆಕ್ಕಿಗ ಸುರೇಶ ನಾಯ್ಕ ಹಾಗೂ ವಿದ್ಯಾ ದಂಪತಿಯ ಎರಡನೇ ಪುತ್ರ. ಮೊದಲ ಮಗ ವಿಶಾಲ ಕಾರವಾರದ ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಸಹೋದರಿ ಭಾಗ್ಯಶ್ರೀ ಅವರಿಗೆ ವಿವಾಹವಾಗಿದ್ದಾರೆ. |
ಕಾರವಾರದ ಸ್ವಾಮಿ ವಿವೇಕಾನಂದ ಹೈಸ್ಕೂಲ್ನಲ್ಲಿ ಪ್ರೌಢ ಶಿಕ್ಷಣ, ಶಿವಾಜಿ ಕಾಲೇಜ್ನ ವಿಜ್ಞಾನ ವಿಭಾಗದಲ್ಲಿ ಪಿಯುಸಿ ಓದಿದ್ದರು. ಜೊಯಿಡಾದಲ್ಲಿ ಡಿಪ್ಲೊಮಾ ಮಾಡಿದ್ದರು. 2014 ರಲ್ಲಿ ಭಾರತೀಯ ಗಡಿ ರಕ್ಷಣಾ ಪಡೆಗೆ ಆಯ್ಕೆಯಾಗಿದ್ದರು. ಮಣಿಪುರ ಇಂಫಾಲ್ನಲ್ಲಿ ತರಬೇತಿ ಪಡೆದ ನಂತರ ಪಶ್ಚಿಮ ಬಂಗಾಳ, ಹೈದ್ರಾಬಾದ್ನಲ್ಲಿ ಕಾರ್ಯನಿರ್ವಹಿಸಿದ್ದರು. ಇತ್ತೀಚೆಗಷ್ಟೇ ಛತ್ತೀಸಗಢದಲ್ಲಿ ನಕ್ಸಲ್ ಕಾರ್ಯಾಚರ... |
ಯೋಧರ ಕುಟುಂಬ: ವಿಜಯಾನಂದ ಅವರ ಅಜ್ಜ ವಿಶ್ರಾಮ ನಾಯ್ಕ ಹಿಂದೆ ಸೈನ್ಯದಲ್ಲಿ ಕಾರ್ಯನಿರ್ವಹಿಸಿದ್ದರು. ಅದರಿಂದ ಪ್ರೇರಿತರಾದ ವಿಜಯಾನಂದ ತಾನೂ ಸೇನೆ ಸೇರಬೇಕು ಎಂಬ ಇಚ್ಛೆಯನ್ನು ಬಾಲ್ಯದಿಂದಲೇ ಹೊಂದಿದ್ದರು. ಕಾಲೇಜ್ಗೆ ತೆರಳುವಾಗ ಎನ್ಸಿಸಿ ಸೇರಿದ್ದರು. ಸೇನೆ ಸೇರಿದ ನಂತರವೂ ಉತ್ತಮವಾಗಿ ಕಾರ್ಯನಿರ್ವಹಿಸಿ ಮೆಡಲ್ ಪಡೆದಿದ್ದರು ಎನ್ನುತ್ತಾರೆ ಚಿಕ್ಕಪ್ಪ ಸಂತೋಷ ನಾಯ್ಕ. |
ಒಳ್ಳೆಯ ವ್ಯಕ್ತಿತ್ವ: ಎಲ್ಲರನ್ನೂ ಕಾಳಜಿ ಮಾಡುವ ಉತ್ತಮ ವ್ಯಕ್ತಿತ್ವ ಹೊಂದಿದವರಾಗಿದ್ದರು ಎಂಬುದು ವಿಜಯಾನಂದ ಸ್ನೇಹಿತರು ಹಾಗೂ ಕುಟುಂಬದವರ ಅಭಿಪ್ರಾಯ. ಇತ್ತೀಚೆಗಷ್ಟೇ ತಂದೆಯವರಿಗೆ ಹೊಸ ಬೈಕ್ ಕೊಡಿಸಿದ್ದ ವಿಜಯಾನಂದ ಅಣ್ಣ ವಿಶಾಲ್ಗೆ ಎನ್ಫೀಲ್ಡ್ ಬೈಕ್ ಕೊಡಿಸಲು ಮಾತುಕತೆ ನಡೆಸಿದ್ದರು. ಡಿಸೆಂಬರ್ನಲ್ಲಿ ನಡೆಯುವ ಅತ್ತೆ ಮಗಳ ಮದುವೆ ರಜೆ ಹಾಕಿ ಬರುತ್ತೇನೆ ಎಂದಿದ್ದರು ಎನ್ನುತ್ತಾರೆ ಸ್ನೇ... |
ಅಂತಿಮ ನಮನಕ್ಕೆ ಇಂದು ವ್ಯವಸ್ಥೆ: ವಿಜಯಾನಂದ ನಾಯ್ಕ ಅವರ ಪಾರ್ಥಿವ ಶರೀರವನ್ನು ಜು.11 ರಂದು ಬೆಳಗ್ಗೆ 9 ಗಂಟೆಗೆ ಕಾರವಾರಕ್ಕೆ ತರಲಾಗುತ್ತಿದೆ. ಜಿಲ್ಲಾಧಿಕಾರಿ ಕಚೇರಿಯ ಎದುರು ಜಿಲ್ಲಾಡಳಿತದಿಂದ ಹುತಾತ್ಮ ಯೋಧನಿಗೆ ಅಂತಿಮ ನಮನ ಸಲ್ಲಿಸಲಾಗುವುದು. ಅಲ್ಲಿಂದ ಮೆರವಣಿಗೆ ಮೂಲಕ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪೊಲೀಸ್ ಪೆರೆಡ್ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ನಂತರ ಕೋಮಾರಪಂತವ... |
ದುಃಖದ ಮಡುವಿನಲ್ಲಿ ಕೋಡಿಬಾಗ: ಕೋಡಿಬಾಗಕ್ಕೆ ಬಂದರೆ ಅಕ್ಕಪಕ್ಕದ ಮನೆಯವರನ್ನೆಲ್ಲ ಪ್ರೀತಿಯಿಂದ ಕಾಣುತ್ತಿದ್ದ ವಿಜಯಾನಂದ ನಾಯ್ಕ ಅವರು ಎಲ್ಲರ ನೆಚ್ಚಿನವರಾಗಿದ್ದರು. ಇದರಿಂದ ಮನೆಯವರಷ್ಟೇ ಅಲ್ಲದೆ, ಇಡೀ ಓಣಿ, ನೆಂಟರು, ಸ್ನೇಹಿತರು ದುಃಖದಲ್ಲಿ ಮುಳುಗಿದ್ದಾರೆ. ತಂದೆ ಸುರೇಶ ನಾಯ್ಕ ಹಾಗೂ ತಾಯಿ ವಿದ್ಯಾ ಆರೋಗ್ಯ ಸ್ಥಿತಿ ಹದಗೆಟ್ಟಿದೆ. |
ಈ 12 ರಾಶಿಗಳವರಿಗೆ ಈ ವೀಕ್‍ನೆಸ್ ಪಾಯಿಂಟ್ಸ್ ಇರುತ್ತದೆ..! – Kannadaviralnews |
Wednesday, January 23 , 2019 11:39 AM |
ಈ 12 ರಾಶಿಗಳವರಿಗೆ ಈ ವೀಕ್‍ನೆಸ್ ಪಾಯಿಂಟ್ಸ್ ಇರುತ್ತದೆ..! |
ಸ್ಪೆಷಲ್ ಡಸ್ಕ್: ಪ್ರಪಂಚದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೂ ಯಾವುದೋ ಒಂದು ವಿಚಾರಲ್ಲಿ ವೀಕ್‍ಸೆಸ್, ವೀಕ್ ಪಾಯಿಂಟ್ ಇರುತ್ತದೆ. ಅದರ ಬಗ್ಗೆ ಯಾರೂ ಇತರರಿಗೆ ತಿಳಿಸಲ್ಲ. ಯಾಕೆಂದರೆ ಇತರರಿಗೆ ನಮ್ಮ ವೀಕ್ ಪಾಯಿಂಟ್ ಗೊತ್ತಾದರೆ ಅವರು ನಮ್ಮನ್ನು ಏನು ಬೇಕಾದರು ಮಾಡಬಹುದು. ನಮಗೆ ಅನೇಕ ರೀತಿಯಲ್ಲಿ ನಷ್ಟ ಉಂಟು ಮಾಡಬಹುದು. ಹಾಗಾಗಿ ಯಾರೂ ಸಹ ತಮ್ಮ ವೀಕ್ ಪಾಯಿಂಟ್‌ಗಳನ್ನು ಇತರರಿಗೆ ಹೇಳಲ್ಲ. ಆದರ... |
ಇವರು ತಮ್ಮ ಸುತ್ತಲೂ ನಡೆಯುವ ಬಹಳಷ್ಟು ಸಂಗತಿಗಳನ್ನು ಗಮನಿಸುತ್ತಿರುತ್ತಾರೆ. ಅವುಗಳ ಮೇಲೆ ಕಂಟ್ರೋಲ್ ಸಾಧಿಸಬೇಕೆಂದು ಬಯಸುತ್ತಾರೆ. ಇವರಲ್ಲಿ ನಾಯಕತ್ವ ಲಕ್ಷಣಗಳು ಹೆಚ್ಚಾಗಿರುತ್ತವೆ. ಹಾಗಾಗಿ ಇವರು ತಮ್ಮ ಸುತ್ತ ಏನಾದರೂ ಘಟನೆ ನಡೆದರೆ ಕೂಡಲೆ ಸ್ಪಂದಿಸುತ್ತಾರೆ. ಹಾಗಾಗಿ ತೊಂದರೆಗೆ ಸಿಕ್ಕಿಬೀಳುತ್ತಾರೆ. ಇದೇ ಈ ರಾಶಿಯವರ ವೀಕ್‌ನೆಸ್, ವೀಕ್ ಪಾಯಿಂಟ್. |
ವೃಷಭ: ಏಪ್ರಿಲ್ 20 – ಮೇ 20 |
ವೃಷಭ ರಾಶಿಯವರು ತುಂಬಾ ನಂಬಿಕೆಯ ವ್ಯಕ್ತಿಗಳಾಗಿರುತ್ತಾರೆ. ಅದೇ ರೀತಿ ಇವರು ತುಂಬಾ ಸ್ಥಿರವಾಗಿ ಇರುವ ಗುಣವನ್ನು ಹೊಂದಿರುತ್ತಾರೆ. ಆದರೆ ಇವರಿಗೆ ಅಪಜಯಗಳು ಎದುರಾಗುತ್ತವೆಂದು ತುಂಬಾ ಭಯಬೀಳುತ್ತಿರುತ್ತಾರೆ. ಇದು ಇವರ ವೀಕ್‌ನೆಸ್. ಗೆಲುವಾದರೂ, ಸೋಲಾದರೂ ಯಾವುದಾದರೂ ಸರಿ ಎಂದು ಮುಂದಡಿ ಇಟ್ಟರೆ ಇವರಿಗೆ ಸಾಟಿ ಇರಲ್ಲ. |
ಮಿಥುನ ರಾಶಿ: ಮೇ 21- ಜೂನ್ 20 |
ಇವರಿಗೆ ಒಂದು ಅಂಶದ ಬಗ್ಗೆ ಸ್ಥಿರವಾದ ಆಲೋಚನೆ ಇರಲ್ಲ. ನಿಮಿಷಕ್ಕೊಂದು ಆಲೋಚನೆ ಬರುತ್ತಿರುತ್ತದೆ. ಉದ್ಯೋಗ, ಹಾಬಿಗಳು, ಇತರೆ ಯಾವುದೇ ವಿಷಯವಾದರೂ ಸರಿ ಅನೇಕ ಸಲ ಯೋಚಿಸುತ್ತಾರೆ. ಇದರಿಂದ ತೊಂದರೆಗೆ ಸಿಕ್ಕಿ ಬೀಳುತ್ತಾರೆ. ಇದು ಇವರ ವೀಕ್‍ನೆಸ್. |
ಕರ್ಕಾಟಕ ರಾಶಿ: ಜೂನ್ 21- ಜುಲೈ 22 |
ಈ ರಾಶಿಯವರಿಗೆ ಭಾವೋದ್ವೇಗಗಳು ಹೆಚ್ಚಾಗಿ ಇರುತ್ತವೆ. ಇವರು ಒಮ್ಮೊಮ್ಮೆ ಎಮೇಷನ್ಸ್ ಹಾಗೆಯೇ ಇಟ್ಟುಕೊಳ್ಳುತ್ತಾರೆ. ಅವನ್ನು ಯಾವಾಗಲೋ ಒಮ್ಮೆ ಆಕಸ್ಮಿಕವಾಗಿ ಹೊರಹಾಕುತ್ತಾರೆ. ಬೇರೆಯಾದರೂ ಒಂದು ಸಣ್ಣ ಮಾತು ಹೇಳಿದರೂ ಇವರ ಮನೋಭಾವನೆಗಳು ಘಾಸಿಗೊಳ್ಳುತ್ತವೆ. ಹಾಗಾಗಿ ಇರುವ ಹೆಚ್ಚು ಆತಂಕಕ್ಕೆ ಒಳಗಾಗುತ್ತಾರೆ. ನಿರಾಸೆಗೂ ಒಳಗಾಗುತ್ತಾರೆ. ಇವರು ಹೆಚ್ಚಾಗಿ ನಿರಾಶಾಜನಕವಾಗಿರುತ್ತಾರೆ. ಯಾವುದೇ ಸಂ... |
ಸಿಂಹ ರಾಶಿ: ಜುಲೈ 23- ಆಗಸ್ಟ್ 23 |
ಸಿಂಹರಾಶಿ ಅವರಿಗೆ ಸ್ವಲ್ಪ ಗರ್ವ, ಅಹಂಕಾರ ಹೆಚ್ಚಾಗಿ ಇರುತ್ತದೆ. ಇವರು ಪಕ್ಕದವರ ಜತೆಗೂ ಸ್ವಲ್ಪ ಗರ್ವದಿಂದ ಇರುತ್ತಾರೆ. ಇದೇ ಇವರ ವೀಕ್‌ನೆಸ್. ಇದರಿಂದ ಇವರಿಗೆ ಬಹಳಷ್ಟು ಮಂದಿ ದೂರವಾಗುತ್ತಾರೆ. ಇವರು ಇಗೋ ಬಿಟ್ಟರೆ ಹ್ಯಾಪಿಯಾಗಿ ಇರಬಹುದು. |
ಕನ್ಯಾ ರಾಶಿ: ಆಗಸ್ಟ್ 24- ಸೆಪ್ಟೆಂಬರ್ 23 |
ಕನ್ಯಾ ರಾಶಿಯವರಿಗೆ ಬುದ್ಧಿ ಚೆನ್ನಾಗಿರುತ್ತದೆ. ಇವರು ಯಾವುದರ ಬಗ್ಗೆಯಾದರೂ ವಿಶ್ಲೇಷಣೆ ಮಾಡುತ್ತಾರೆ. ಇದೇ ಇವರ ಬಲ…ಬಲಹೀನತೆ. ಪ್ರತಿ ಸಮಸ್ಯೆಯನ್ನೂ ತಾವು ಪರಿಷ್ಕರಿಸಿಕೊಳ್ಳುತ್ತೇವೆಂಬ ಧೈರ್ಯಯಿಂದ ಇವರು ಇರುತ್ತಾರೆ. ಆದರೆ ಕೊನೆಗೆ ತಮ್ಮ ಸಮಸ್ಯೆಯನ್ನು ತಾವೇ ಪರಿಷ್ಕರಿಸಿಕೊಳ್ಳಲಾಗದ ಅಯೋಮಯ ಸ್ಥಿತಿಗೆ ಬೀಳುತ್ತಾರೆ. ಇದು ಕೂಡಾ ಇವರ ವೀಕ್‌ನೆಸ್. |
ಈ ರಾಶಿಯವರು ತುಂಬಾ ನೆಮ್ಮದಿಯಾಗಿ ಇರುತ್ತಾರೆ. ಶಾಂತಿಧೂತರಂತೆ ವರ್ತಿಸುತ್ತಾರೆ. ಆದರೆ ಇವರಿಗೆ ಶಾರ್ಟ್ ಟೆಂಪರ್ ಹೆಚ್ಚಾಗಿ ಇರುತ್ತದೆ. ಇವರಿಗೆ ಇದ್ದಕ್ಕಿದ್ದಂತೆ ಆಗಿಂದಾಗಲೆ ಕೋಪ ಬರುತ್ತದೆ. ಇದರಿಂದ ಸಹನೆ ಕಳೆದುಕೊಳ್ಳುತ್ತಾರೆ. ಎಲ್ಲರನ್ನೂ ದೂರ ಮಾಡಿಕೊಳ್ಳುತ್ತಾರೆ. ಇದು ಇವರ ವೀಕ್‌ನೆಸ್ ಪಾಯಿಂಟ್. |
ವೃಶ್ಚಿಕ ರಾಶಿ: ಅಕ್ಟೋಬರ್ 23 – ನವೆಂಬರ್ 22 |
ಈ ರಾಶಿಯವರು ಹೆಚ್ಚಾಗಿ ರೊಮ್ಯಾಂಟಿಕ್ ಆಗಿ ಇರುತ್ತಾರೆ. ಇವರು ಶೃಂಗಾರ ಸಂಬಂಧಗಳನ್ನೂ ಹೆಚ್ಚಾಗಿ ಹೊಂದಿರುತ್ತಾರೆ. ಹಾಗಾಗಿ ಇವರು ಬಹಳಷ್ಟು ಸಂದರ್ಭಗಳಲ್ಲಿ ತೊಂದರೆ ಸಿಕ್ಕಿಬೀಳುತ್ತಾರೆ. ಇದು ಇವರ ವೀಕ್‌ನೆಸ್ ಪಾಯಿಂಟ್. |
ಧನುಸ್ಸು ರಾಶಿ: ನವೆಂಬರ್ 23-ಡಿಸೆಂಬರ್ 22 |
ಈ ರಾಶಿಯವರು ಯಾವಾಗಲೂ ಬೋರ್ ಆಗಿ ಫೀಲ್ ಆಗುತ್ತಿರುತ್ತಾರೆ. ಇವರಿಗೆ ಹೆಚ್ಚು ಸಹನೆ, ತಾಳ್ಮೆ ಇರಲ್ಲ. ಇವರು ಬೇರೆಯವರು ಹೇಳಿದ್ದನ್ನು ಯಾವುದೇ ಕಾರಣಕ್ಕೂ ಕೇಳಲ್ಲ. ಹಾಗಾಗಿ ಇವರು ಬಹಳಷ್ಟು ಮಂದಿಯನ್ನು ದೂರ ಮಾಡಿಕೊಳ್ಳುತ್ತಾರೆ. ಇದೇ ಇವರ ವೀಕ್‍ನೆಸ್. |
ಮಕರ ರಾಶಿ: ಡಿಸೆಂಬರ್ 23-ಜನವರಿ 20 |
ಈ ರಾಶಿಯವರು ಹಣಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ. ಹಣ ಸಂಪಾದಿಸಲು ಹೆಚ್ಚು ಶ್ರಮ ವಹಿಸುತ್ತಾರೆ. ಇದರಿಂದ ಇವರು ಚಿಕ್ಕಪುಟ್ಟ ಆನಂದಗಳನ್ನು ಸಹ ಕಳೆದುಕೊಳ್ಳುತ್ತಾರೆ. ಅದೇ ರೀತಿ ಇವರು ಚಿಕ್ಕ ಕೆಲಸ ಮಾಡಿ ಅದನ್ನು ದೊಡ್ಡದಾಗಿ ಹೇಳಿಕೊಳ್ಳುತ್ತಾರೆ. ತಮ್ಮದೇ ಜಯ ಎಂದುಕೊಳ್ಳುತ್ತಾರೆ. ಇದೇ ಇವರ ವೀಕ್‌ನೆಸ್. |
ಕುಂಭ ರಾಶಿ: ಜನವರಿ 21- ಫೆಬ್ರವರಿ 18 |
ಈ ರಾಶಿಯವರು ತಮ್ಮ ಮನಸ್ಸಿನಲ್ಲಿನ ವಿಷಯಗಳನ್ನು ಹೊರಗೆ ಇಡಲು ತುಂಬಾ ತೊಂದರೆ ಅನುಭವಿಸುತ್ತಿರುತ್ತಾರೆ. ಇವರಿಗೆ ತುಂಬಾ ಭಾವೋದ್ವೇಗಗಳು. ಆದರೆ ಅದನ್ನು ವ್ಯಕ್ತಪಡಿಸಲ್ಲ. ಬೇರೆಯವರು ಏನೆಂದುಕೊಳ್ಳುತ್ತಾರೋ ಎಂಬ ಭಯ ಇವರಲ್ಲಿ ಇರುತ್ತದೆ. ಇದು ಇವರ ವೀಕ್‌ನೆಸ್. |
ಮೀನ ರಾಶಿ: ಫೆಬ್ರವರಿ 19-ಮಾರ್ಚ್ 20 |
ಮೀನರಾಶಿಯವರಿಗೆ ಸಹ ಭಾವೋದ್ವೇಗಗಳು ಹೆಚ್ಚಾಗಿ ಇರುತ್ತವೆ. ಆದರೆ ಅವನ್ನು ಇವರು ವ್ಯಕ್ತಪಡಿಸುತ್ತಾರೆ. ಇವರಲ್ಲಿ ಸೃಜನಶೀಲತೆ ಹೆಚ್ಚಾಗಿ ಇರುತ್ತದೆ. ಆದರೆ ಅದನ್ನು ಹೊರತೆಗೆಯುವಲ್ಲಿ ತೊಂದರೆ ಅನುಭವಿಸುತ್ತಾರೆ. ಇದೇ ಇವರ ವೀಕ್‌ನೆಸ್ ಪಾಯಿಂಟ್. |
'ರಾಬರ್ಟ್' ಗೆ ಜೋಡಿಯಾದ ಸೌತ್ ಸುಂದರಿ - Public Tv |
'ರಾಬರ್ಟ್' ಗೆ ಜೋಡಿಯಾದ ಸೌತ್ ಸುಂದರಿ |
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ 'ರಾಬರ್ಟ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ದರ್ಶನ್ ಸಿನಿಮಾ ಅಂದರೆ ಸಾಕು ಅವರಿಗೆ ನಾಯಕಿಯಾಗಿ ಯಾರು ಬರುತ್ತಾರೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿರುತ್ತಾರೆ. ಇದೀಗ ಅವರ ಕುತೂಹಲಕ್ಕೆ ತೆರೆಬಿದ್ದಿದ್ದು, ರಾಬರ್ಟ್ ಸಿನಿಮಾದಲ್ಲಿ ದರ್ಶನ್‍ಗೆ ಜೋಡಿಯಾಗಿ ಟಾಲಿವುಡ್ ಬೆಡಗಿ ಆಯ್ಕೆಯಾಗಿದ್ದಾರೆ. |
ತೆಲುಗು ಚಿತ್ರರಂಗದಲ್ಲಿ ಖ್ಯಾತಿಗಳಿಸಿರುವ ನಟಿ ಮೆಹರಿನ್ ಪಿರ್ಜಾದಾ ಅವರು ರಾಬರ್ಟ್ ಸಿನಿಮಾದಲ್ಲಿ ದರ್ಶನ್‍ಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ನಾಯಕಿಯರ ಆಯ್ಕೆ ವಿಚಾರದಲ್ಲಿ 'ರಾಬರ್ಟ್' ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರು ಹೆಸರು ಕೂಡ ಕೇಳಿ ಬಂದಿತ್ತು. ಇದೀಗ ಮೆಹರಿನ್ ನಾಯಕಿಯಾಗಿ ಬರುವುದು ಬಹುತೇಕ ಖಚಿತವಾಗಿದೆ. |
ಸದ್ಯಕ್ಕೆ 'ರಾಬರ್ಟ್' ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಮುಂದಿನ ತಿಂಗಳು ಪ್ರಾರಂಭವಾಗಲಿದೆ. ಈಗಾಗಲೇ ನಾಯಕಿ ಇಲ್ಲದೆ ಚಿತ್ರತಂಡ ಮೊದಲ ಹಂತದ ಚಿತ್ರೀಕರಣವನ್ನು ಮುಗಿಸಿದೆ. ಮುಂದಿನ ತಿಂಗಳು ನಟಿ ಮೆಹರಿನ್ ಚಿತ್ರತಂಡ ಭಾಗಿಯಾಗಲಿದ್ದಾರೆ. ಇದೇ ಮೊದಲ ಬಾರಿಗೆ ಮೆಹರಿನ್ ಕನ್ನಡ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. |
ಚಿತ್ರತಂಡ ಎರಡನೇ ಹಂತದ ಚಿತ್ರೀಕರಣವನ್ನು ಹೈದರಾಬಾದ್‍ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಸಲು ಪ್ಲ್ಯಾನ್ ಮಾಡಿಕೊಂಡಿದ್ದೆ. ಅದಕ್ಕಾಗಿ ಸೆಟ್ ಕೂಡ ನಿರ್ಮಾಣವಾಗುತ್ತಿದೆ ಎಂದು ತಿಳಿದು ಬಂದಿದ್ದು, ಒಟ್ಟು 15 ದಿನಗಳಲ್ಲಿ ಶೂಟಿಂಗ್ ಮಾಡಿ ಮುಗಿಸಲು ಚಿತ್ರತಂಡ ಯೋಜನೆ ಮಾಡಿದೆ. ಈ ಸಿನಿಮಾದಲ್ಲಿ ಖಳನಟ ಜಗಪತಿ ಬಾಬು ಕಾಣಿಸಿಕೊಳ್ಳುತ್ತಿದ್ದು, ಈಗಾಗಲೇ ಅವರು ಚಿತ್ರತಂಡ ಸೇರಿಕೊಂಡಿದ್ದಾರೆ. ಈ ಸಿನಿಮ... |
Related Topics:actressbengalurucinemadarshanmehreen pirzadaPublic TVRobertದರ್ಶನ್ನಟಿಪಬ್ಲಿಕ್ ಟಿವಿಬೆಂಗಳೂರುಮೆಹರಿನ್ ಪಿರ್ಜಾದಾರಾಬರ್ಟ್ಸಿನಿಮಾ |
ಪತ್ನಿಯನ್ನು ಕೊಂದು, ಅರಣ್ಯದಲ್ಲಿ ಶವ ಸುಟ್ಟ! | Prajavani |
ಪತ್ನಿಯನ್ನು ಕೊಂದು, ಅರಣ್ಯದಲ್ಲಿ ಶವ ಸುಟ್ಟ! |
ತಿಂಗಳಿಂದ ನಾಪತ್ತೆಯಾಗಿದ್ದ ಮಹಿಳೆ |
ಬೆಂಗಳೂರು: ಸಾಫ್ಟ್‌ವೇರ್ ಕಂಪನಿಯ ಮಾಜಿ ಉದ್ಯೋಗಿ ಅಕ್ಷತಾ (28) ಅವರನ್ನು ಕೊಲೆಗೈದು, ತಮಿಳುನಾಡಿನ ಕಾಮನದೊಡ್ಡಿ ಅರಣ್ಯ ಪ್ರದೇಶದಲ್ಲಿ ಶವ ಸುಟ್ಟು ಹಾಕಿದ್ದ ಪ್ರಕರಣದಲ್ಲಿ ಮೃತರ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. |
ಅಕ್ಷತಾ ನಾಪತ್ತೆಯಾದ ಕುರಿತು ತಾಯಿ ರೇಖಾ ಜ.22ರಂದು ಸಂಪಂಗಿರಾಮನಗರ ಠಾಣೆಗೆ ದೂರು ಕೊಟ್ಟಿದ್ದರು. ತನಿಖೆ ಪ್ರಾರಂಭಿಸಿದಪೊಲೀಸರು, ಅಕ್ಷತಾ ಪತಿ ಚಂದ್ರಕಾಂತ್‌ನೇ (38) ತನ್ನ ಸಹಚರ ರಾಜ್ವಿಂದರ್ ಸಿಂಗ್ (24) ಜತೆ ಸೇರಿ ಹತ್ಯೆಗೈದಿದ್ದಾನೆ ಎಂಬ ಸಂಗತಿಯನ್ನು ಬಯಲು ಮಾಡಿದ್ದಾರೆ. |
ಕಾರವಾರದ ಅಕ್ಷತಾ ಹಾಗೂ ಚಂದ್ರಕಾಂತ್, 10 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಹೆಬ್ಬಾಳ ಬಳಿಯ ಕೆಂಪಾಪುರದ 'ಎಸ್‌ಎಂಎಸ್ ಅಪಾರ್ಟ್‌ಮೆಂಟ್'ನಲ್ಲಿ ವಾಸವಿದ್ದರು. ದಂಪತಿಗೆ ನಾಲ್ಕು ವರ್ಷದ ಮಗನಿದ್ದಾನೆ. |
(ಚಂದ್ರಕಾಂತ್) |
'ಉತ್ತರ ಭಾರತದ ಪ್ರವಾಸಕ್ಕೆ ಹೋಗಲು ಅಕ್ಷತಾ ತಯಾರಿ ಮಾಡಿಕೊಳ್ಳುತ್ತಿದ್ದರು. ಅದಕ್ಕೆ ಹಣ ನೀಡುವಂತೆ ಪತಿಯನ್ನು ಕೇಳಿದ್ದರು. ಜ.6 |
ರಂದು ರಾತ್ರಿ ದಂಪತಿ ಒಟ್ಟಿಗೆ ಕುಳಿತು ಮದ್ಯ ಕುಡಿದಿದ್ದರು. ಹಣ ಕೊಟ್ಟರೆ ಮರುದಿನವೇ ಪ್ರವಾಸಕ್ಕೆ ಹೋಗುವುದಾಗಿ ಹೇಳಿದ್ದರು. ಆಗ ಜಗಳತೆಗೆದಿದ್ದ ಚಂದ್ರಕಾಂತ್, ಉಸಿರುಗಟ್ಟಿಸಿ ಕೊಲೆ ಮಾಡಿದ್ದ' ಎಂದು ಕೇಂದ್ರ ವಿಭಾಗದ ಡಿಸಿಪಿ ಚಂದ್ರಗುಪ್ತ ತಿಳಿಸಿದರು. |
'ಕೊಲೆಗೈದ ಬಳಿಕ ಸಹಾಯಕ ರಾಜ್ವಿಂದರ್‌ಗೆ ಕರೆ ಮಾಡಿ ಮನೆಗೆ ಕರೆಸಿಕೊಂಡಿದ್ದ. ಪತ್ನಿಯು ಪ್ರವಾಸಕ್ಕೆ ಹೋಗಲು ಕಾಯ್ದಿರಿಸಿದ್ದ ಕಾರಿನಲ್ಲೇ, ಶವ ತೆಗೆದುಕೊಂಡು ಹೋಗುವಂತೆ ಆತನಿಗೆ ಹೇಳಿದ್ದ. ಅಂತೆಯೇ ಶವ ತೆಗೆದುಕೊಂಡು ಕಾಮನದೊಡ್ಡಿ ಅರಣ್ಯ ಪ್ರದೇಶಕ್ಕೆ ತೆರಳಿದ ಆತ, ದೇಹದ ಮೇಲೆ ಡೀಸೆಲ್ ಸುರಿದು ಬೆಂಕಿ ಹಚ್ಚಿ ಕಾರಿನ ಸಮೇತ ಪರಾರಿಯಾಗಿದ್ದ' ಎಂದು ತಿಳಿಸಿದರು. |
'ಪತ್ನಿ ಉತ್ತರ ಭಾರತ ಪ್ರವಾಸಕ್ಕೆ ಹೋಗಿದ್ದಾಳೆ ಎಂದು ಹೇಳಿಕೊಂಡು ಚಂದ್ರಕಾಂತ್ ಓಡಾಡುತ್ತಿದ್ದ. ಅಕ್ಷತಾ ಸಂಪರ್ಕಕ್ಕೆ ಸಿಗದಿದ್ದಾಗ ತಾಯಿ ಠಾಣೆಗೆ ದೂರು ನೀಡಿದ್ದರು. ಆತನನ್ನು ಫೆ. 5ರಂದು ವಿಚಾರಣೆಗೆ ಒಳಪಡಿಸಿದಾಗ ಕೊಲೆ ವಿಷಯ ಬಾಯ್ಬಿಟ್ಟ. ಆತ ಹಾಗೂ ಆತನ ಸಹಾಯಕನನ್ನು ಬಂಧಿಸಲಾಗಿದೆ. ಇಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದಾರೆ' ಎಂದು ಡಿಸಿಪಿ ಮಾಹಿತಿ ನೀಡಿದರು. |
(ರಾಜ್ವಿಂದರ್ ಸಿಂಗ್) |
ಶೂಲಗಿರಿ ಪೊಲೀಸರಿಗೆ ಮಾಹಿತಿ: 'ಅರಣ್ಯದಲ್ಲಿ ಬೆಂಕಿ ಕಂಡಿದ್ದ ಸ್ಥಳೀಯರು, ಅರಣ್ಯ ಸಿಬ್ಬಂದಿ ಹಾಗೂ ಶೂಲಗಿರಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಜ.7ರಂದು ಬೆಳಿಗ್ಗೆ ಪೊಲೀಸರು ಸ್ಥಳಕ್ಕೆ ಹೋದಾಗ ಶವ ಕಂಡಿತ್ತು. ಮುಖವೆಲ್ಲ ಸುಟ್ಟು ಹೋಗಿದ್ದರಿಂದ ಗುರುತು ಪತ್ತೆಯಾಗಿರಲಿಲ್ಲ. ಬಟ್ಟೆಯ ತುಣುಕು ಹಾಗೂ ಆಭರಣಗಳು ಮಾತ್ರ ಪೊಲೀಸರಿಗೆ ಸಿಕ್ಕಿದ್ದವು. ಕೊಲೆ (ಐಪಿಸಿ 302) ಹಾಗೂ ಸಾಕ್ಷ್ಯ ನಾಶ (ಐಪಿಸಿ ... |
'ಪತ್ನಿಯು ಯುವಕನೊಬ್ಬನ ಜತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದಳು. ಈ ಬಗ್ಗೆ ಹಲವು ಬಾರಿ ಎಚ್ಚರಿಕೆ ನೀಡಿದರೂ ಸಂಬಂಧ ಮುಂದುವರಿಸಿದ್ದಳು. ಹೀಗಾಗಿ ಕಂಠಪೂರ್ತಿ ಕುಡಿಸಿ ಕೊಲೆ ಮಾಡಿದೆ' ಎಂದು ಚಂದ್ರಕಾಂತ್ ತಪ್ಪೊಪ್ಪಿಕೊಂಡ. ಬಳಿಕವೇ ಶವ ಸುಟ್ಟ ಜಾಗದ ಮಾಹಿತಿ ಕಲೆಹಾಕಿದೆವು' ಎಂದು ಪೊಲೀಸರು ತಿಳಿಸಿದರು. |
'ಆರೋಪಿಗಳು ಹಾಗೂ ಸಂಬಂಧಿಕರ ಸಮೇತ ಕಾಮನದೊಡ್ಡಿ ಅರಣ್ಯ ಪ್ರದೇಶಕ್ಕೆ ಹೋಗಿದೆವು. ಅಕ್ಷತಾ ಅವರ ಬಟ್ಟೆಯ ತುಣುಕು ಹಾಗೂ ಆಭರಣಗಳನ್ನು ಸಂಬಂಧಿಕರು ಗುರುತು ಹಿಡಿದರು' ಎಂದು ಚಂದ್ರಗುಪ್ತ ತಿಳಿಸಿದರು. |
'ಮರಣೋತ್ತರ ಪರೀಕ್ಷೆ ಬಳಿಕ ದೇಹದ ಕೆಲ ಅಂಗಾಂಗಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಅಲ್ಲಿನ ಪೊಲೀಸರು ಕಳುಹಿಸಿದ್ದಾರೆ. ಅದರ ವರದಿಯನ್ನು ಕೆಲವು ದಿನಗಳಲ್ಲಿ ನೀಡುವುದಾಗಿ ಹೇಳಿದ್ದಾರೆ' ಎಂದರು. |
Subsets and Splits
No community queries yet
The top public SQL queries from the community will appear here once available.