text stringlengths 0 61.5k |
|---|
ತನ್ನ ಗಂಡಂದಿರನ್ನು ಅವಹೇಳನ ಮಾಡುವುದನ್ನು ನೋಡಿದಾಗ ಈಕೆಯ ಪಾತ್ರೌನ್ನತ್ಯದಲ್ಲಿ ನಮಗೆ ಶಂಕೆ ಬರುವುದು ಸುಲಭ. ಆದರೆ ಅದರಲ್ಲಿ ಎಷ್ಟು ಸಹಜತೆ, ಅನಿವಾರ್ಯತೆ, ದುರ್ದಮ್ಯತೆ ಇದೆ ಎಂಬುದನ್ನು ಕವಿ ಬಲ್ಲ; ಕೃಷ್ಣ ಬಲ್ಲ. |
ಮಹಾಭಾರತದಲ್ಲೆಲ್ಲಾ ಅಗ್ನಿಕನ್ಯೆಯಾಗಿ ಜಾಜ್ವಲ್ಯಮಾನವಾಗಿ ಥಳಥಳಿಸುವ ಈಕೆ ಎಷ್ಟು ಸೌಮ್ಯವಾಗಿ ಮುಗ್ಧವಾಗಿ ತೋರುತ್ತಾಳೆ, ಆ ತನ್ನ ಸ್ವಯಂವರ ಮಂಟಪದಲ್ಲಿ! ಕೃಷ್ಣನನ್ನು ಅಣ್ಣ ದೃಷ್ಟದ್ಯುಮ್ನ ಪರಿಚಯಮಾಡಿಕೊಟ್ಟಾಗ ಮೊಟ್ಟಮೊದಲು ಅವನಲ್ಲಿ ಆಕೆ ಕಂಡು ತೋರಿದ ಭಾವವೇ ಭಾವ! |
'ಎನಲು ಭಕುತಿಯ ಭಾವರಸದಲಿ ನೆನೆದು ಹೊಂಪುಳಿಯೋಗಿ ರೋಮಾಂ |
ಚನದ ಮೈಯುಬ್ಬಿನಲಿ ತನು ಪುಳಕಾಂಬು ಪೂರದಲಿ, |
ಮನದೊಳಗೆ ವಂದಿಸಿದಳೆನಗೀತನಲಿ ಗುರುಭಾವನೆಯ ಮತಿ ಸಂ |
ಜನಿಸಿತೇನೆಂದರಿಯೆನೆಂದಳು ಕಮಲಮುಖಿ ನಗುತ!' |
ಭಾರತಾಂತ್ಯದಲ್ಲಿ, ತನ್ನೈವರು ಮಕ್ಕಳನ್ನು ಕಳೆದುಕೊಂಡು ವಿಹ್ವಲಳಾಗಿದ್ದ ಈಕೆ, ತನ್ನ ಕುಮಾರನನ್ನು ಕೊಂದ ಅಶ್ವತ್ಥಾಮನನ್ನು ಕೊಲ್ಲಲೆಂದು ಮುನ್ನುಗ್ಗುವ ಅರ್ಜುನ ಭೀಮರನ್ನು ತಡೆಯುವಾಗ ಆಡುವ ಮಾತನ್ನು ನೋಡಿ: |
'ಬಂದಳಾ ದ್ರೌಪದಿಯಹಹ ಗುರುನಂದನನ ಕೊಲಬಾರದಕಟೀ |
ಕೊಂದುಕೂಗದೆ ಕೃಪೆಯನಬಲಾ ವೃಂದ ಸಮಸುಖ ದುಃಖಿಗಳು ಸಾ |
ರೆಂದು ಭೀಮಾರ್ಜುನರ ತೆಗೆದಳು ಬಳಿಕ ಪಾಂಚಾಲಿ!' |
ಭೀಮಾರ್ಜುನರು ತಪ್ಪಿ ನಡೆಯುವಾಗಲು ಇವಳು ತನ್ನೆಲ್ಲ ಮಕ್ಕಳನ್ನು ಕಳೆದುಕೊಂಡೂ ತೋರಿದ ಸಂಯಮ ಎಂಥ ಘನವಾದುದು! |
ಧರ್ಮರಾಜ ಭಾರತದ ನಾಯಕನಾಗಿದ್ದರೂ ಶ್ರೀಕೃಷ್ಣನ ಅತಿಮಾನುಷ ಶಕ್ತಿಯಲ್ಲಿ ತನ್ನ ನಾಯಕತ್ವವನ್ನು ನಿವೇದಿಸಿಕೊಂಡಿರುವಂತೆ ಕಾಣುತ್ತಾನೆ. 'ಧರ್ಮಕ್ಷಮೆಯ ಗರ ಹೊಡೆದಿಹುದು' ಎಂದು ದ್ರೌಪದಿ ಕೋಪಿಸುವಷ್ಟು ಮಟ್ಟಿಗೆ ಅವನು ಧರ್ಮಪ್ರಜ್ಞವಂತ. ಭೀಮನ ಪ್ರಾಕೃತಿಕ ಶಕ್ತಿಯನ್ನಾಗಲಿ, ಅರ್ಜುನನ ಲೋಕೈಕ ವೀರವನ್ನಾಗಲಿ ಬಹಳ ಮಟ್ಟಿಗೆ ಪ್ರದರ್ಶಿಸದಿರುವುದರಿಂದ ಇವನು ಒಮ್ಮೊಮ್ಮೆ ಸಪ್ಪೆಯಾಗಿ ತೋರಿದರೂ ತೋರಬಹುದು. |
ಭೀಷ್ಮ ದ್ರೋಣರು ಮಹಾಭಾರತದ ವೃದ್ಧರು: ಜ್ಞನದಿಂದ , ವಯಸ್ಸಿನಿಂದ. ಇಂತಹವರು ಏನು ಕರ್ಮದಿಂದಲೋ ಏನೊ ತಮಗಿಂತಲೂ ಬಹು ಕಿರಿಯರಾದ ಮಕ್ಕಳ ಮಧ್ಯದಲ್ಲಿ ಸಿಲುಕಿಕೊಂಡು ಬದುಕಬೇಕಾಗುತ್ತದೆ. ಅವರು ತಮ್ಮ ಸಮೃದ್ಧ ವೃದ್ಧಜ್ಞನವು ನಿರ್ದೇಶಿಸಿದಂತೆ ನಡೆಯಬೇಕೆಂದರೆ ತಿಂದ ಉಪ್ಪಿಗೆ ತಪ್ಪಬಾರದೆಂಬ ಸಂಕಟ ಬರುತ್ತದೆ. ಹೀಗಾಗಿ ಮಹಾಪುರಾತನ ವಟವೃಕ್ಷಗಳಂತಿದ್ದ ಈ ಮಹಾ ಚೇತನಗಳು ಸಣ್ಣ ಸಣ್ಣವರ ಬಿದಿರುಗಿಚ್ಚಿಗೆ ... |
ಈ ಮಹಾನುಭಾವ ಶರಶಯ್ಯೆಗೇರಿದಾಗ ಮಹಾಕವಿ ಒಂದು ಮಾತನ್ನು ಹೇಳುತ್ತಾನೆ: 'ಪಡುವಣ ಶೈಲ ವಿಪುಲಸ್ತಂಭ ದೀಪಿಕೆಯಂತೆ ರವಿ ಮೆರೆದ' ಎಂದು. ಮಹಾಪುರುಷನ ಮರಣವನ್ನು ಆಚರಿಸಲು ಪ್ರಕೃತಿದೇವಿ ಪಶ್ಚಿಮಾಚಲ ವಿಪುಲಸ್ತಂಭದ ಮೇಲೆ ರವಿದೀಪಿಕೆಯನ್ನು ಹೊತ್ತಿಸಿಡುತ್ತಾಳೆ. ಧ್ಯಾನಗೋಚರವಾಗುವ ದಿವ್ಯತೆಯನ್ನು ಈ ಮಾತಿನಲ್ಲಿ ಕವಿ ಕಂಡಿದ್ದಾನೆ. |
ದ್ರೋಣಾಚಾರ‍್ಯರು ಈ ಬೆಳಕಿನಲ್ಲಿ ಪ್ರಕಾಶಮಾನವಾಗಿ ಕಾಣದಿದ್ದರೂ ಮಹಾ ತೇಜಸ್ವಿಗಳೇ ಅಹುದು. ಕುಮಾರವ್ಯಾಸ ಈ ಮಹಾವ್ಯಕ್ತಿಯ ಅಂತ್ಯವನ್ನು ದರ್ಶನಧ್ವನಿ ದೀಪ್ತವಾಗುವಂತೆ ಚಿತ್ರಿಸಿದ್ದಾನೆ. ಪ್ರಲಯ ಭೈರವರಾಗಿ ಯುದ್ಧ ಮಾಡುತ್ತಿರುವಾಗ ಸಪ್ತರ್ಷಿಗಳು ಜ್ಞನಗೋಚರವಾಗಿ ಅವರನ್ನು ಎಚ್ಚರಿಸುವುದು, ಅವರು ಕಣ್ಮರೆಯಾದೊಡನೆಯೇ ಅವರು ಕಂಡ ಅರಿವು ಮರೆಯಾಗಿ ಮಾಯಾವರಣವಶಿಯಾಗಿ ಯುದ್ಧಭಯಂಕರರಾಗುವುದು, ಮತ್ತೆ ಅ... |
ಪ್ರಸಿದ್ಧರಾದ ಖಳಚತುಷ್ಟಯದ ಪ್ರಧಾನರೆಂದರೆ ಕರ್ಣಕೌರವರು. ವ್ಯಾಸರು ಈ ವ್ಯಕ್ತಿಗಳನ್ನು ಅತಿ ದೂಷಿಸದೆ ಅತಿ ಪ್ರೀತಿಸದೆ ಚಿತ್ರಿಸಿಕೊಂಡು ಹೋಗಿದ್ದಾರೆ. ಮುಂದೆ ಬಂದ ಭಾಸ, ಪಂಪ ಹಾಗೂ ಆತನ ಪ್ರಭಾವದಲ್ಲಿ ಬೆಳದ ರನ್ನ ಇವರನ್ನು ಉದಾತ್ತೀಕರಿಸಿ ತೋರಿಸಿದ್ದಾರೆ. ಈ ಉದಾತ್ತೀಕರಣ ಮೂಲಾಂಶವನ್ನು ಮರೆಮಾಚುವಷ್ಟಾಗಬಾರದೆಂಬುದನ್ನು ಅವರೇನು ಮರೆತಿಲ್ಲ. ಕುಮಾರವ್ಯಾಸ ಕಥಾ ದೃಷ್ಟಿಯಿಂದ ವ್ಯಾಸರನ್ನು ಅನುಸರ... |
ಕೌರವನಿಗೆ ಪಾಂಡವರಲ್ಲಿದ್ದ ಸಹಜ ವೈರಕ್ಕೆ ಪೋಷಕವಾಗುವಂತಹ ನಾಲ್ಕಾರು ಸನ್ನಿವೇಶಗಳನ್ನು ಕುಮಾರವ್ಯಾಸ ಬಹು ಸುಂದರವಾಗಿ ಚಿತ್ರಿಸಿದ್ದಾನೆ. ಚಿಕ್ಕಂದಿನಲ್ಲಿ ಭೀಮನ ಕೋಟಲೆಯಿಂದ ಹೊತ್ತಿಕೊಂಡ ಒಳಗಿದ್ದ ವೈರ, ದ್ರೌಪದೀ ಸ್ವಯಂವರದಲ್ಲಾದ ಪರಿಭವದಿಂದ, ರಾಜಸೂಯದಲ್ಲಾದ ನೂರಾರುಬಗೆಯ ಅಹಂಭಂಗ ಮಾನಭಂಗಗಳಿಂದ, ಚಿತ್ರಸೇನ ಪ್ರಸಂಗದಲ್ಲಾದ ಆತ್ಮಹತ್ಯಾಕಾರಿಯಾದ ಭಯಂಕರ ಅಪಮಾನದಿಂದ ದುರ್ದಮ್ಯವಾದ ವಂಶನಾಶಕ ಹಾ... |
'ಎನ್ನ ಹೃದಯದೊಳಿರ್ದು ಮುರಿವನು ಗನ್ನದಲಿ ಸಂಧಿಯನು; ರಿಪುಗಳೊ |
ಳಿನ್ನು ತನ್ನವರವರೊಳಿರ್ದಾ ಹದನನಾಡಿಸುವ; |
ಭಿನ್ನನಂತಿರೆ ತೋರಿ ಭಿನ್ನಾಭಿನ್ನನೆನಿಸಿಯೆ ಮೆರೆವ, ತಿಳಿಯಲ |
ಭಿನ್ನನೀ ಮುರವೈರಿ, ನಾವಿನ್ನಂಜಲೇಕೆಂದ! |
ಮತ್ತೆ ಕೇಳಿ: |
ಮಣಿದು ಬದುಕುವನಲ್ಲ, ಹಗೆಯಲಿ ಸೆಣಸಿ ಬಿಡುವವನಲ್ಲ, ದಿಟ ಧಾ |
ರುಣಿಯ ಸಿರಿಗೆಳೆಸುವನಲ್ಲಳುಕಿಲ್ಲ ಕಾಯದಲಿ! |
ರಣಮಹೋತ್ಸವವೆನ್ನ ಮತ, ಕೈ ದಣಿಯೆ ಹೊಯ್ದಾಡುವೆನು ಕೃಷ್ಣನ |
ಕೆಣಕಿದಲ್ಲದೆ ವಹಿಲದಲಿ ಕೈವಲ್ಯವಿಲ್ಲೆಂದ!' |
ಇದಲ್ಲವೆ ರೀತಿ! ಕೃಷ್ಣಮಾಯೆಯನ್ನರಿತೂ ಅದನ್ನು ಎದುರಿಸುವ ಛಲ! ನಾಟಕದ ನಟನಾದವನು ತನ್ನ ಮುನ್ನಿನ ಸ್ವರೂಪವನ್ನೂ ತನ್ನ ಸೂತ್ರಧಾರಿಯನ್ನೂ ಮರೆತಂತೆ ಅಭಿನಯಿಸಬೇಕಾದರೂ ಒಮ್ಮೊಮ್ಮೆ ಅದು ಸ್ಮೃತಿಪಟಲದ ಮೇಲೆ ಹಾಯ್ದುಹೋಗುವುದುಂಟು. ತಲ್ಲೀನತೆಯಿಂದ ಅಪಾಯವಾದರೆ ಈ ಬಗೆಯ ಅತಿ ಎಚ್ಚರದಿಂದ ರಸಾಭಾಸವುಂಟಾಗಬಹುದು, ಇಲ್ಲ ರಸಭಂಗವಾದರೂ ಆಗಬಹುದು. ಇವೆರಡರ, ಅಂದರೆ ಎಚ್ಚರ ಮರವೆಗಳ, ಮಧ್ಯೆಯಿದ್ದು ರಸೋತ್ಕರ್... |
ಈ ಕೌರವ ಕರ್ಣರ ಪ್ರೇಮ ಮಹಾಭಾರತವನ್ನೆಲ್ಲಾ ಬಿಗಿದಪ್ಪಿತಲ್ಲ! ಏನಾದರೂ ಆ ಬಿಗಿತಕ್ಕೆ ಧಕ್ಕೆ ಬಂದಿದ್ದರೇನಾಗುತ್ತಿತ್ತು? ಅರ್ಜುನ ಕೃಷ್ಣರ ಪ್ರೇಮ ಒಂದು ಕಡೆ, ಕೌರವ ಕರ್ಣರ ಪ್ರೇಮ ಮತ್ತೊಂದು ಕಡೆ. ಯಾವುದು ಹೆಚ್ಚು, ಯಾವುದು ಶ್ರೇಷ್ಠ, ಯಾರು ಹೇಳಬಲ್ಲರು? ಕರ್ಣನ ಜೀವಿತಕ್ಕೆ ಕೌರವ ದೊರೆತದ್ದು ಒಂದು ವಿಚಿತ್ರ ಯೋಗ. ಆದರೆ ಕೃಷ್ಣಾರ್ಜುನರ ಸ್ನೇಹಕ್ಕೆ ಅಘಟಿತವಾದುದೇನೂ ನಡೆಯಬೇಕಾಗಿರಲಿಲ್ಲ. ಹುಟ್... |
ಒಟ್ಟಿನಲ್ಲಿ ಕರ್ಣಸುಯೋಧನರ ಸ್ನೇಹಬಂಧನ ಮಹಾಭಾರತವೆಲ್ಲವನ್ನೂ ವ್ಯಾಪಿಸಿ ಆವರಿಸಿದೆ. ತಾನು ಪಾಂಡವನೆಂದು ತಿಳಿದ ಮೇಲೆ ಧರ್ಮಸಂಕಟಕ್ಕೆ ಒಳಗಾದ ಕರ್ಣ ಕೌರವನನ್ನು ಬಿಟ್ಟು ಅವರ ಪಕ್ಷಕ್ಕೆ ಸೇರುವುದಿರಲಿ, ತಾನು ಪಾಂಡವರ ಹಿರಿಯ ಎಂಬುದೆ ಯಾರಿಗೂ ತಿಳಿಯದ ಹಾಗೆ ವರ್ತಿಸುತ್ತಾನೆ- ಕೌರವಪ್ರೀತಿಗಾಗಿ. ಅವನು ಅಷ್ಟು ಮಾಡದಿದ್ದರೆ, ಇಲ್ಲವೆ ಪಾಂಡವರಿಗೆ ತನ್ನ ಜನ್ಮ ವೃತ್ತಾಂತ ತಿಳಿಯುವಂತೆ ಮಾಡಿದ್ದರೆ ಏ... |
ಕುಮಾರವ್ಯಾಸನ ಕರ್ಣನ ಜೀವನದಲ್ಲಿ ಶ್ರೀಕೃಷ್ಣ ಪರಿಣಾಮಕಾರಿಯಾದ ಶಕ್ತಿಯಾಗಿ ವರ್ತಿಸುತ್ತಾನೆ. ಶ್ರೀಕೃಷ್ಣ ಯಾರು ಏನು ಎಂಬುದನ್ನು ಕರ್ಣ ಚೆನ್ನಾಗಿ ಬಲ್ಲ. ಆದರೂ ಸ್ನೇಹಬಂಧಿತನಾಗಿ, ವಿಧಿಚಾಲಿತನಾಗಿ ಬಾಯಿಕಟ್ಟಿಕೊಂಡವನಂತೆ ಇರುತ್ತಾನೆ. ಕುಮಾರವ್ಯಾಸ ಕರ್ಣನ ಮೇಲಾದ ಶ್ರೀಕೃಷ್ಣನ ಪ್ರಭಾವವನ್ನು ಅದ್ಬುತವಾಗಿ ಚಿತ್ರಿಸಿದ್ದಾನೆ. ಆದಿಪರ್ವದಲ್ಲಿ ಶಸ್ತ್ರಪ್ರದರ್ಶನ ಸನ್ನಿವೇಶಧಲ್ಲಿ ಕರ್ಣನನ್ನು ಕಂಡ ... |
ಬಣ್ಣಗಳ ಓಕುಳಿಯಲ್ಲಿ ರಂಜಕ ವಾಸ್ತವ | Prajavani |
ಬಣ್ಣಗಳ ಓಕುಳಿಯಲ್ಲಿ ರಂಜಕ ವಾಸ್ತವ |
ಪ್ರಜಾವಾಣಿ ವಾರ್ತೆ Updated: 23 ಜನವರಿ 2011, 01:15 IST |
ಭಾರತೀಯ ಜನಪ್ರಿಯ ಚಿತ್ರಗಳಲ್ಲಿ ಸಮಕಾಲೀನ ರಾಜಕೀಯವನ್ನು ಅದರ ಯಥಾಸ್ಥಿತಿಯಲ್ಲಿ ಹಿಡಿಯುವ ಪ್ರಯತ್ನ ಮಾಡಿದ ಚಿತ್ರಗಳ ಸಂಖ್ಯೆ ತೀರಾ ಕಡಿಮೆ. 'ರಾಜಕೀಯ ಸಿನಿಮಾಗಳು' ಎಂಬ ಹಣೆಪಟ್ಟಿ ಹೊತ್ತು ಬಂದಂತಹ ಚಿತ್ರಗಳು ಬಹುಪಾಲು ಕನ್ನಡದ 'ಅಂತ'ದ ಮಾದರಿಯವು. ಅಲ್ಲಿ ರಾಜಕಾರಣಿ ಖಳನಾಗಿರುತ್ತಾನೆ. ನಾಯಕ ಆತನನ್ನು ಗುಂಡಿಟ್ಟು ಕೊಲ್ಲುತ್ತಾನೆ, ಅಷ್ಟೆ. ಹಳೆಯ ನಾಯಕ ಪ್ರಧಾನ ಕತೆಗೆ ರಾಜಕಾರಣದ ಪೋಷಾಕು ತೊಡಿ... |
ಆದರೆ ಹೊಸಅಲೆಯ ಪ್ರಭಾವದಿಂದಲೇ ಹುಟ್ಟಿದ 'ಅಂಕುರ್', 'ಅರ್ಧಸತ್ಯ' ಮುಂತಾದ ಚಿತ್ರಗಳು ಇಂತಹವಲ್ಲ. ಅವು ಸಮಕಾಲೀನ ಪರಿಸ್ಥಿತಿಯನ್ನು ವಿವರಿಸಿ, ಇವುಗಳಲ್ಲಿ ಸಿಕ್ಕಿ ನರಳುವ ಶ್ರೀಸಾಮಾನ್ಯನ ಕತೆಯನ್ನು ಹೇಳುತ್ತವೆ. ಹೀಗಾಗಿಯೇ ಇಂತಹ ಕೆಲವು ಚಿತ್ರಗಳು ಜನಮಾನಸದೊಳಗೆ ಶಾಶ್ವತ ಸ್ಥಾನ ಪಡೆಯುತ್ತವೆ. ಇಂಥ ಚಿತ್ರಗಳ ಸಾಲಿಗೆ ಸೇರಬಹುದಾದ ಮತ್ತೊಂದು ಸಿನಿಮಾ, ಅನುರಾಗ್ ಕಶ್ಯಪ್ ಅವರ ನಿರ್ದೇಶನದ 'ಗುಲಾಲ... |
ಇದು 2001ರಲ್ಲಿ ಅನುರಾಗ್ ಅವರು ಸಿದ್ಧಪಡಿಸಿದ ಯೋಚನೆ. ಆದರೆ ಅನೇಕ ಕಾರಣಗಳಿಗಾಗಿ ತಡವಾಗುತ್ತಾ ಸಾಗಿ, ಕೊನೆಗೆ 2009ರಲ್ಲಿ 'ಗುಲಾಲ್' ತೆರೆ ಕಾಣುತ್ತದೆ. ತಮ್ಮ ವೃತ್ತಿ ಜೀವನದ ಆರಂಭದ ದಿನಗಳಲ್ಲಿ ಅನುರಾಗ್ ಯೋಜಿಸಿದ ಒಂದು ಚಿತ್ರವು, ಅವರದ್ದೇ ವೃತ್ತಿ ಜೀವನವು 'ದೇವ್ ಡಿ', 'ಬ್ಲಾಕ್ ಫ್ರೈಡೇ' ಮುಂತಾದ ಚಿತ್ರಗಳ ಯಶಸ್ಸಿನ ನಂತರ ಬಿಡುಗಡೆಯ ಭಾಗ್ಯವನ್ನು ಪಡೆಯುತ್ತದೆ. ಇದು ಈ ಚಿತ್ರವನ್ನು ನೋಡ... |
ಚಿತ್ರವೊಂದರ ಹೂರಣವು ಅದು ತಯಾರಾದ ಕಾಲದ ರಾಜಕೀಯ ಹವಾಮಾನವನ್ನು ತನ್ನೊಳಗೆ ಹುದುಗಿಸಿಕೊಂಡಿರುತ್ತದೆ. ಆದರೆ ಚಿತ್ರ ಬಿಡುಗಡೆಯಾಗುವ ಕಾಲಕ್ಕೆ ಅದೇ ರಾಜಕೀಯ ಪರಿಸರ ಇಲ್ಲದೇ ಹೋದಾಗ ಆ ಚಿತ್ರಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ತಣ್ಣಗಾಗುತ್ತದೆ. 'ಗುಲಾಲ್' ಚಿತ್ರದ ಸಂದರ್ಭದಲ್ಲಿಯೂ ಅದೇ ಆಯಿತು. ಈ ಚಿತ್ರಕ್ಕೆ ಬಾಕ್ಸ್ ಆಫೀಸಿನಲ್ಲಿ ಶೇ 30ರಷ್ಟು ಮಾತ್ರ ಹಣ ಸಂಗ್ರಹವಾಯಿತು. ಈ ಕಾರಣಕ್ಕಾಗಿ 'ಗುಲಾಲ್... |
ಕೇ ಕೇ ಮೆನನ್, ಮಾಹಿ ಗಿಲ್, ರಾಜಾಸಿಂಗ್ ಚೌಧರಿ, ಅಭಿಮನ್ಯು ಸಿಂಗ್, ಪಿಯೂಷ್ ಮಿಶ್ರ ಅಭಿನಯವಿದ್ದ 'ಗುಲಾಲ್' ಕೊನೆಯ ಕ್ಷಣದವರೆಗೂ ಪ್ರೇಕ್ಷಕನನ್ನು ಒಳಗೊಳ್ಳುವ, ಅಚ್ಚರಿಗಳಿಗೆ ದೂಡುವ ಸಿನಿಮಾ. ರಾಜಕಾರಣ ಮತ್ತು ಯುವಕರು, ಪ್ರೀತಿ ಮತ್ತು ಮೋಸ, ಸೇಡು ಮತ್ತು ಸಂಚಿನ ನಡುವೆ ಹೊಸ ಬದುಕಿನ ಕುರಿತು ವಾಂಛೆ ಎಲ್ಲವೂ ಮೇಳೈಸಿದ ಕತೆಯನ್ನುಳ್ಳ ಚಿತ್ರವಿದು. ಅನೇಕ ಮೈವಳಿಕೆಗಳನ್ನು ಒಂದೇ ಕತೆಗೆ ಹೊಂದಿಸು... |
ಈ ಮೈವಳಿಕೆಗಳಿಗೆ, ಕಥನ ಪದರಗಳಿಗೆ ಹೊಂದಿಕೊಂಡಂತೆ ಇರುವ ನಾಟಕೀಯ ಗುಣವು ಸಹ ಈ ಸಿನಿಮಾವನ್ನು ಸಹ್ಯವಾಗಿಸುತ್ತದೆ. 'ದೇವ್ ಡಿ' ಅನುರಾಗ್ ಕಶ್ಯಪ್ ಅವರ ಅತಿಹೆಚ್ಚು ಜನಪ್ರಿಯತೆ ಪಡೆದ ಸಿನಿಮಾ ಆದರೂ ಆ ಚಿತ್ರಕ್ಕಿಂತ ಹೆಚ್ಚು ಆತ್ಮವಿಶ್ವಾಸವುಳ್ಳ ನಿರೂಪಣೆ 'ಗುಲಾಲ್'ನಲ್ಲಿದೆ. |
ಅನುರಾಗ್ ಕಶ್ಯಪ್ ಅವರು ಈ ಚಿತ್ರದಲ್ಲಿ ಒಂದೇ ತಟ್ಟೆಯಲ್ಲಿ ಹಲವು ಭಕ್ಷ್ಯಗಳನ್ನು ಇಡುತ್ತಾರೆ. ಇಲ್ಲಿ ರ್ಯಾಗಿಂಗ್ ಇದೆ, ವಿದ್ಯಾರ್ಥಿ ಚಳವಳಿಗಳ ಜಡ್ಡುಗಟ್ಟಿದ ಸ್ಥಿತಿಯಿದೆ, ಜಾತಿಗಳನ್ನು ಕುರಿತಂತೆ ಸಮಾಜದಲ್ಲಿರುವ ಪೂರ್ವಗ್ರಹಗಳ ಚರ್ಚೆ ಇದೆ, ಅಧಿಕಾರದ ಚುಕ್ಕಾಣಿ ಹಿಡಿಯಲು ಯಾವ ಯಾವುದೋ ಹೆಸರಿನಲ್ಲಿ ಚಳವಳಿ ನಡೆಸುವ ನಾಯಕರಿದ್ದಾರೆ, ಇವರೆಲ್ಲರನ್ನೂ ಮೀರಿದ ಹಿಂಸೆಯೂ ಈ ಚಿತ್ರದಲ್ಲಿ ರಾರಾಜಿಸು... |
ರಾಜಸ್ತಾನದಲ್ಲಿ ನಡೆವ ಈ ಕತೆಯ ಕೇಂದ್ರ ಕಥನವೂ ಅಲ್ಲಿ ಹಿಂದೆ ರಾಜರಾಗಿದ್ದವರು ಮರಳಿ ತಮ್ಮ ಕೈಗೆ ಅಧಿಕಾರದ ಸೂತ್ರವನ್ನು ಹಿಡಿಯಲು ಮಾಡುವ ದೇಶವಿಭಜಕ ವಿವರಗಳನ್ನು ಇಟ್ಟುಕೊಂಡಿದೆ. ಈ ವಿಭಜಕ ಶಕ್ತಿಗಳು 1990ರಿಂದ ಇಂದಿನವರೆಗೆ ನಮ್ಮ ದೇಶದಲ್ಲಿ ಮಾಡಿರುವ ಅನಾಹುತಗಳನ್ನು ಬಲ್ಲವರಿಗೆ 'ಗುಲಾಲ್' ಚಿತ್ರವು ಚರ್ಚಿಸುತ್ತಿರುವ ವಿಷಯವು ಎಷ್ಟು ಮುಖ್ಯ ಎಂಬುದು ತಿಳಿಯುತ್ತದೆ. |
'ಗುಲಾಲ್'ನ ಕತೆಯು ಆರಂಭವಾಗುವುದು ಹಳ್ಳಿಯಿಂದ ನಗರಕ್ಕೆ ಕಾನೂನು ಓದಲೆಂದು ಬರುವ ದಿಲೀಪ್ ಸಿಂಗ್ ಎಂಬ ವಿದ್ಯಾರ್ಥಿಯ ಮೂಲಕ. ಆತ ಕಾಲೇಜಿಗೆ ಬಂದ ಅವಧಿಯಲ್ಲಿಯೇ ಆತನಿಗಿಂತ ಹಿರಿಯ ವಿದ್ಯಾರ್ಥಿಯಾದ ರಾಣಾಸಿಂಗ್ ಜೊತೆಗೆ ಇರಬೇಕಾಗುತ್ತದೆ. ಆ ಅವಧಿಯಲ್ಲಿ ದಿಲೀಪ್‌ಸಿಂಗ್‌ನ ಜೀವನ ಕ್ರಮ ಮಾತ್ರವಲ್ಲದೆ ಜೀವನದೃಷ್ಟಿಯೇ ಬದಲಾಗುವ ವಿವರಗಳು ಘಟಿಸುತ್ತಾ ಹೋಗುತ್ತವೆ. |
ಸ್ಥಳೀಯ ರಾಜಕೀಯ ನಾಯಕ ದುಖೇ ಬಾನಾನು ರಾಣಾನನ್ನು ವಿದ್ಯಾರ್ಥಿ ಸಂಘದ ಚುನಾವಣೆಗೆ ನಿಲ್ಲಲು ಹೇಳುತ್ತಾನೆ.ಅಲ್ಲಿಂದಾಗುವ ಘಟನೆಗಳ ಸರಮಾಲೆಯಲ್ಲಿ ಅಮಾಯಕ ದಿಲೀಪ್ ಸ್ವತಃ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ನಿಂತು ಗೆಲ್ಲುವ ಹಾಗಾಗುತ್ತದೆ. ಈ ಅವಧಿಯಲ್ಲಿ ದಿಲೀಪ್‌ಸಿಂಗ್ ತಾನೂ ಭ್ರಷ್ಟ ರಾಜಕೀಯ ವ್ಯವಸ್ಥೆಯಲ್ಲಿ ಹಾಗೂ ಹಿಂಸೆಯಲ್ಲಿ ಸೇರಿಕೊಂಡುಬಿಡುತ್ತಾನೆ. ನಿಧಾನವಾಗಿ ಇವೆಲ್ಲವೂ ದುಖೇ ಬಾನಾನ ಮಹತ... |
ಇದು ಸ್ಥೂಲವಾಗಿ ಕಥೆಯ ಹೂರಣ. ಇವೆಲ್ಲವನ್ನೂ ಅನುರಾಗ್ ಅವರು ರಾಜಸ್ತಾನದ ವೈಶಾಲ್ಯವನ್ನು ತೋರುತ್ತಾ ನಗರ ಜೀವನದ ಒಳಗಿರುವ ನೆರಳು ಬೆಳಕಿನ ಓಣಿಯನ್ನೂ ತೋರುತ್ತಾ, ಆಧುನಿಕತೆಯ ನಡುವೆ ಸೊರಗಿದ ಸನಾತನ ವಿವರಗಳನ್ನು ಕಾಣಿಸುವ ಯತ್ನ ಮಾಡುತ್ತಾರೆ. ಕತೆಯ ಆದಿಯಿಂದ ಅಂತ್ಯದವರೆಗೆ ಪ್ರೇಕ್ಷಕನನ್ನು ಕತೆಯ ನಾಟಕೀಯ ಗುಣಗಳಿಂದಲೇ ಹಿಡಿದಿಡುತ್ತಾರೆ. ಶ್ರೀಮಂತ ಪಾತ್ರಗಳು, ಉಪಕತೆಗಳನ್ನು ನೇರ ನಿರೂಪಣೆಯಲ್ಲ... |
'ಗುಲಾಲ್'ನ ಮತ್ತೊಂದು ಮೆಚ್ಚತಕ್ಕ ಅಂಶ ಸಂಗೀತ. ಪೃಥ್ವಿ ಬಾನಾ ಅವರ ಸಾಹಿತ್ಯ ಹಾಗೂ ಪಿಯೂಶ್ ಮಿಶ್ರ ಅವರ ಸಂಗೀತ ಸಂಯೋಜನೆ ನೋಡುಗನನ್ನು ಹಿಡಿದಿಡುತ್ತವೆ. ಎರಡೂವರೆ ಗಂಟೆಗಳ 'ಗುಲಾಲ್'ನ ಛಾಯಾಗ್ರಹಣವೂ ಉತ್ತಮವಾದುದು.ಒಳಾಂಗಣ ಚಿತ್ರೀಕರಣವಷ್ಟೇ ಅಲ್ಲದೆ ಹೊರಾಂಗಣದ ವೈಶಾಲ್ಯವನ್ನು ತೋರುವಾಗ ತಣ್ಣಗೆ ಇರುವ ಚಿತ್ರಗಳು, ಆ ತಣ್ಣಗಿನ ಆವರಣದ ಒಳಗೇ ಇರುವ ಕ್ರೌರ್ಯವನ್ನು ತೋರುವುದು ಮೆಚ್ಚಿಗೆ ಪಡೆಯುತ್... |
ಕೇವಲ ವಿಶೇಷಣಗಳ ಮೂಲಕ ಏನೇ ಹೇಳಿದರೂ ಚಿತ್ರವೊಂದನ್ನು ನೋಡುವುದು ಪ್ರತಿಯೊಬ್ಬರಿಗೂ ಅನನ್ಯ ಅನುಭವ ಕಟ್ಟಿಕೊಡಬಲ್ಲದು. ಹಾಗಾಗಿ 'ಗುಲಾಲ್' ನಮ್ಮ ಸಿನಿಮಾ ವಿದ್ಯಾರ್ಥಿಗಳು ನೋಡಬೇಕಾದ ಚಿತ್ರ. ಕಥನವೊಂದನ್ನು ಬಿಡಿಸಿಡುವ ಕ್ರಮ, ಪಾತ್ರಗಳಿಗೆ ಆರೋಪಿತವಾದ ವ್ತಕ್ತಿತ್ವವನ್ನು ತೆರೆಯ ಮೇಲೆ ದಾಖಲಿಸುವ ಕ್ರಮ, ದೃಶ್ಯದ ಭಾವವನ್ನು ತಲುಪಿಸಲು ಬಳಸುವ ಚಿತ್ರಿಕೆಗಳ ಜೋಡಣೆಯ ಕ್ರಮ, ಆಯಾ ಚಿತ್ರಿಕೆಗಳ ಉದ್ದ... |
ಜಿಹ್ವೆಗೆ ಸಹ್ಯವಾದದ್ದು ಮನಸ್ಸಿನಲ್ಲಿ ಬಹುಕಾಲ ನಿಲ್ಲದು. ಹೀಗಾಗಿಯೇ ಚಿತ್ರ ತಯಾರಿಕೆ ಈ ಆಧುನಿಕ ಕಾಲದಲ್ಲಿ ತಂತಿಯ ಮೇಲಿನ ನಡಿಗೆ. ಕೊಂಚ ಹೆಚ್ಚು ಕಡಿಮೆಯಾದರೂ ಕರಪತ್ರವಾಗಿ ಬಿಡಬಹುದಾದ ಸಾಧ್ಯತೆಯನ್ನು ತಪ್ಪಿಸಿಕೊಂಡು, ಯಾವುದೇ ಒಂದು ವಿವರಕ್ಕೆ ಹೆಚ್ಚು ಕಾಲವನ್ನು ನೀಡಿದರೆ ಕಾವ್ಯಾತ್ಮಕ ಆಗಿಬಿಡಬಹುದಾದ ಸಾಧ್ಯತೆಯಿಂದ ತಪ್ಪಿಸಿಕೊಂಡು ಒಂದು ಸ್ಪಷ್ಟ ರಾಜಕೀಯ ನಿಲುವನ್ನು ಸ್ಥಾಪಿಸುವಲ್ಲಿ ಅನು... |
ಇಂತಹ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲದೇ ಉಳಿಯುವುದರಿಂದಾಗಿ ಅನುರಾಗ್ ಅಂತಹವರು ಮರಳಿ 'ದೇವ್ ಡಿ', 'ಎಮೋಷನಲ್ ಅತ್ಯಾಚಾರ್' ರೀತಿಯ ರೂಕ್ಷ ನಿರೂಪಣೆಗೆ ಜಾರಿಬಿಡುತ್ತಾರೆ. ಈ ರೂಕ್ಷತೆಯು ತತ್‌ಕ್ಷಣದ ಜನಪ್ರಿಯತೆಯನ್ನು ತಂದುಕೊಡುತ್ತವೆ. ಆ ಜನಪ್ರಿಯತೆಯಿಂದಾಗಿ ಸಿನಿಮಾ ತಯಾರಕನಿಗೆ ಆರ್ಥಿಕ ನೆಮ್ಮದಿಯೂ ಸಿಗಬಹುದು. ಆದರೆ ಆತನ ಚಿತ್ರವು ಕಲಾಕೃತಿಯಾಗಿ ಬಹುಕಾಲ ಉಳಿಯುವುದು ಕಷ್ಟ. ಈ ಹಿನ... |
ಮರಳಿ ಈ ಲೇಖನದ ಆರಂಭದಲ್ಲಿ ಆಡಿದ ಮಾತನ್ನು ನೆನೆಯುತ್ತಾ, ನಮ್ಮ ಬಹುತೇಕ 'ರಾಜಕೀಯ' ಸಿನಿಮಾಗಳು 'ಸಕ್ಕರೆ ಲೇಪಿತ ಸತ್ಯ'ಗಳನ್ನು ಹೇಳಿ, ನೋಡುಗನನ್ನು ಆಲೋಚನೆಗೆ ಹಚ್ಚುವ ಕೆಲಸದಿಂದ ದೂರ ಉಳಿಸುತ್ತವೆ. ಹೀಗಾಗಿಯೇ ಈಚೆಗೆ ಕನ್ನಡದಲ್ಲಿ ಬಂದ 'ಪೃಥ್ವಿ'ಯಂತಹ ಸಿನಿಮಾ ಸಹ ತನ್ನ ಹೊಸ ಕಥನ ಗುಣದಿಂದ ಇಷ್ಟವಾದರೂ, ಎಲ್ಲವನ್ನೂ ಯಾವನೋ ನಾಯಕ ಸರಿಪಡಿಸುತ್ತಾನೆ ಎಂಬ ಭ್ರಮಾತ್ಮಕ ಸೂತ್ರಕ್ಕೆ ಆ ಸಿನಿಮಾಗಳು ... |
'); $('#div-gpt-ad-2399-2').append(' |
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(funct... |
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-2399').addClass('inartprocessed'); } else $('#in-article-2399').hide(); } else { _taboola.push({article:'auto', url:'https://www.prajavani.net/article/ಬಣ್ಣಗಳ-ಓಕುಳಿಯಲ್ಲಿ-ರಂಜಕ-ವಾಸ್ತವ'... |
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-2399 .field-name-body .field-items div.field-item > p'); if(x1 != null && x1.length != 0) { $('#node-2399 .field-name-body .fi... |
'); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-2399 .field-name-body .field-items div.field-item > p:eq(2)').after(' |
'); googletag.cmd.push(function() { googletag.display('in-article-mob-3rd-2399'); }); } else { $('#in-article-mob-2399').hide(); $('#in-article-mob-3rd-2399').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' |
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ ... |
ವಿಶ್ವದ ಅತಿದೊಡ್ಡ ಸೋಲಾರ್ ಪಾರ್ಕ್: ಮಾರ್ಚ್ 1ಕ್ಕೆ ಕಾರ್ಯಾರಂಭ | Worlds biggest Solar park operations from tomorrow in Karnataka - Kannada Oneindia |
» ವಿಶ್ವದ ಅತಿದೊಡ್ಡ ಸೋಲಾರ್ ಪಾರ್ಕ್: ಮಾರ್ಚ್ 1ಕ್ಕೆ ಕಾರ್ಯಾರಂಭ |
ವಿಶ್ವದ ಅತಿದೊಡ್ಡ ಸೋಲಾರ್ ಪಾರ್ಕ್: ಮಾರ್ಚ್ 1ಕ್ಕೆ ಕಾರ್ಯಾರಂಭ |
Published: Wednesday, February 28, 2018, 9:40 [IST] |
ತುಮಕೂರು, ಫೆಬ್ರವರಿ 28 : ಪಾವಗಡ ತಾಲೂಕಿನಲ್ಲಿ ನಿರ್ಮಿಸಲಾಗಿರುವ ವಿಶ್ವದ ಬೃಹತ್ ಸೋಲಾರ್ ಪಾರ್ಕ್ ಮಾರ್ಚ್ 1 ರಂದು ಉದ್ಘಾಟನೆಗೊಳ್ಳಲಿದೆ. |
ಮೊದಲ ಹಂತದ ತಿರುಮಣಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ 600 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದನಾ ಘಟಕಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂದು ಬೆಳಗ್ಗೆ 11 ಗಂಟೆಗೆ ಚಾಲನೆ ನೀಡಲಿದ್ದಾರೆ. |
ವಿಶ್ವದ ಅತಿದೊಡ್ಡ ಸೋಲಾರ್ ಪಾರ್ಕ್ ವಿಶೇಷತೆಗಳು |
ತಿರುಮಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಯಚರ್ಲು, ವಳ್ಳೂರು ಗ್ರಾಪಂ ವ್ಯಾಪ್ತಿಯ ವೆಂಕಟಮ್ಮನಹಳ್ಳಿ, ಕ್ಯಾತಗಾನಚೆರ್ಲು ಬಳಸಮುದ್ರ ಸೇರಿ ಒಟ್ಟು 5 ಗ್ರಾಮಗಳ 13, 000 ಎಕರೆ ಪ್ರದೇಶದಲ್ಲಿ ಕೇಂದ್ರ ಸರ್ಕಾರ ಹಾಗೂ ಕರ್ನಾಟಕ ರಾಜ್ಯ ಸರ್ಕಾರದ ಸಹಯೋಗದಲ್ಲಿ 2,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸೌರಶಕ್ತಿ ಘಟಕ ಸ್ಥಾಪಿಸುವ ಗುರಿ ಹೊಂದಿದೆ. |
ಈ ಪಾರ್ಕ್ 15 ಸಾವಿರ ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ರೈತರಿಂದ 25 ವರ್ಷಗಳ ಕಾಲ ಗುತ್ತಿಗೆ ಆಧಾರದ ಮೇಲೆ ಭೂಮಿಯನ್ನು ಪಡೆಯಲಾಗಿದೆ. ಸತತ 40 ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿರುವ ಪಾವಗಡದಲ್ಲಿ ಸ್ಥಳೀಯವಾಗಿ ಸಂಪನ್ಮೂಲ ಕ್ರೋಢೀಕರಿಸಬೇಕೆಂಬ ಉದ್ದೇಶದಿಂದ ಈ ಪಾರ್ಕ್ ನಿರ್ಮಿಸಲಾಗುತ್ತಿದೆ. |
tumkur siddaramaiah ಸಿದ್ದರಾಮಯ್ಯ ತುಮಕೂರು solar solar energy district news ಜಿಲ್ಲಾಸುದ್ದಿ |
Pavagada in Tumkur district will be witnessing the world's biggest solar park which starts operations from Thursday. The state government has been set solar unit in 13,000 acres of land and will generate 600 mw of power. |
ರೋಹಿತ್ ಟೆಸ್ಟ್ ಆರಂಭಿಕ? | VIJAYAVANI - ವಿಜಯವಾಣಿ |
ನವದೆಹಲಿ: ಏಕದಿನ-ಟಿ20 ಕ್ರಿಕೆಟ್ನಲ್ಲಿ ಆರಂಭಿಕ ಆಗಿ ಬಡ್ತಿ ಪಡೆದ ಬಳಿಕ ಸಾಕಷ್ಟು ರನ್ಪ್ರವಾಹ ಹರಿಸಿರುವ ಮುಂಬೈ ಬ್ಯಾಟ್ಸ್ಮನ್ ರೋಹಿತ್ ಶರ್ಮಗೆ ಟೆಸ್ಟ್ ತಂಡದಲ್ಲೂ ಆರಂಭಿಕನ ಸ್ಥಾನ ನೀಡಲು ಭಾರತೀಯ ಟೀಮ್ ಮ್ಯಾನೇಜ್ವೆುಂಟ್ ಚಿಂತಿಸಿದೆ. |
ತಂಡದ ಹಾಲಿ ಆರಂಭಿಕರಾಗಿರುವ ಕನ್ನಡಿಗ ಕೆಎಲ್ ರಾಹುಲ್ ಕಳೆದ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ತೋರಿರುವ ಕಳಪೆ ನಿರ್ವಹಣೆ ತೋರಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್ಕೆ ಪ್ರಸಾದ್ ಈ ಸುಳಿವು ಬಿಟ್ಟುಕೊಟ್ಟಿದ್ದಾರೆ. |
ಸೀಮಿತ ಓವರ್ ತಂಡದ ಉಪನಾಯಕ ರೋಹಿತ್ ಶರ್ಮ ಕಳೆದ ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಆಗಿ ಟೆಸ್ಟ್ ತಂಡದಲ್ಲಿದ್ದರೂ, ಆಡುವ ಅವಕಾಶ ಪಡೆದಿರಲಿಲ್ಲ. ಅಜಿಂಕ್ಯ ರಹಾನೆ ಮತ್ತು ಹನುಮ ವಿಹಾರಿ ವಿಂಡೀಸ್ನಲ್ಲಿ ಟೆಸ್ಟ್ ತಂಡದ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ನಿರ್ವಹಣೆ ತೋರಿರುವುದರಿಂದ ಸದ್ಯಕ್ಕೆ ರೋಹಿತ್ಗೆ ಈ ಕ್ರಮಾಂಕದಲ್ಲಿ ಅವಕಾಶ ಸಿಗುವ ನಿರೀಕ್ಷೆಯೂ ಇಲ್ಲ. ಹೀಗಾಗಿ... |
'ವೆಸ್ಟ್ ಇಂಡೀಸ್ ಪ್ರವಾಸದ ಬಳಿಕ ಆಯ್ಕೆ ಸಮಿತಿ ಇನ್ನೂ ಸಭೆ ಸೇರಿಲ್ಲ. ಮುಂದಿನ ಬಾರಿ ಸಭೆ ಸೇರಿದಾಗ ರೋಹಿತ್ ಅವರನ್ನು ಟೆಸ್ಟ್ ತಂಡದ ಆರಂಭಿಕನ ಸ್ಥಾನಕ್ಕೆ ಖಂಡಿತವಾಗಿಯೂ ಪರಿಗಣಿಸಲಿದ್ದೇವೆ' ಎಂದು ಎಂಎಸ್ಕೆ ಪ್ರಸಾದ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. |
'ಕೆಎಲ್ ರಾಹುಲ್ರಲ್ಲಿ ಉತ್ತಮ ಪ್ರತಿಭೆ ಇದೆ. ಆದರೆ ಟೆಸ್ಟ್ ಕ್ರಿಕೆಟ್ನಲ್ಲಿ ಅವರೀಗ ಕಠಿಣ ಸಮಯ ಎದುರಿಸುತ್ತಿದ್ದಾರೆ. ಅವರ ಫಾಮ್ರ್ ಬಗ್ಗೆ ನಾವು ಕಳವಳಗೊಂಡಿದ್ದೇವೆ. ಅವರು ಕ್ರೀಸ್ನಲ್ಲಿ ಹೆಚ್ಚಿನ ಸಮಯ ಕಳೆದು ಲಯ ಕಂಡುಕೊಳ್ಳಬೇಕಾದ ಅಗತ್ಯವಿದೆ' ಎಂದು ಎಂಎಸ್ಕೆ ಹೇಳಿದ್ದಾರೆ. ವಿಂಡೀಸ್ ಪ್ರವಾಸದ 4 ಇನಿಂಗ್ಸ್ಗಳಲ್ಲಿ ರಾಹುಲ್ 13, 6, 44 ಮತ್ತು 38 ರನ್ ಗಳಿಸಿದ್ದರು. |
ಎಲ್ಲವೂ ಅಂದುಕೊಂಡಂತೆ ನಡೆದರೆ ರೋಹಿತ್ ಶರ್ಮ ಮುಂಬರುವ ದಕ್ಷಿಣ ಆಫ್ರಿಕಾ ಸರಣಿಯಿಂದಲೇ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರೊಂದಿಗೆ ಆರಂಭಿಕರಾಗಿ ಕಣಕ್ಕಿಳಿಯುವ ನಿರೀಕ್ಷೆ ಇದೆ. ಅ. 2ರಿಂದ ಈ ಸರಣಿ ನಡೆಯಲಿದೆ. |
ಭಿನ್ನ ಅಭಿಪ್ರಾಯಗಳು ಭಿನ್ನಮತವಲ್ಲ! |
ಭಿನ್ನ ಅಭಿಪ್ರಾಯಗಳನ್ನು ಭಿನ್ನಮತವೆಂದು ಪರಿಗಣಿಸಬಾರದು ಎನ್ನುವ ಮೂಲಕ ಭಾರತ ತಂಡದ ಕೋಚ್ ರವಿಶಾಸ್ತ್ರಿ, ನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ನಡುವೆ ಒಡಕು ಇದೆ ಎಂಬ ಊಹಾಪೋಹವನ್ನು ತಳ್ಳಿಹಾಕಿದ್ದಾರೆ. '15 ಆಟಗಾರರು ಇರುವ ತಂಡದಲ್ಲಿ ಕೆಲವೊಮ್ಮೆ ಭಿನ್ನವಾದ ಅಭಿಪ್ರಾಯಗಳು ವ್ಯಕ್ತವಾಗುವುದು ಸಹಜ. ಅದು ಅಗತ್ಯ ಕೂಡ. ಯಾಕೆಂದರೆ ಎಲ್ಲರೂ ಒಂದೇ ರೀತಿ ಯೋಚಿಸುವುದನ್ನು ನಾನು ಇಷ್ಟಪಡುವುದಿ... |
ಕುಲ್-ಚಾ ಕಡೆಗಣನೆ ಇಲ್ಲ |
ಕುಲ್-ಚಾ ಖ್ಯಾತಿಯ ರಿಸ್ಟ್ ಸ್ಪಿನ್ ಜೋಡಿಯಾದ ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್ ಕಳೆದ ವೆಸ್ಟ್ ಇಂಡೀಸ್ ಪ್ರವಾಸ ಮತ್ತು ಮುಂದಿನ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ತಂಡದಲ್ಲಿ ಸ್ಥಾನ ಪಡೆದಿಲ್ಲ. ಆದರೆ ಅವರಿಬ್ಬರು ಮುಂದಿನ ಟಿ20 ವಿಶ್ವಕಪ್ ತಂಡದ ಯೋಜನೆಯಲ್ಲಿ ಇರುತ್ತಾರೆ ಎಂದು ಎಂಎಸ್ಕೆ ಸ್ಪಷ್ಟಪಡಿಸಿದ್ದಾರೆ. 'ಸ್ಪಿನ್ ವಿಭಾಗಕ್ಕೆ ವೈವಿಧ್ಯತೆ ತರಲು ಪ್ರಯತ್ನಿಸಲಾಗುತ್ತಿದೆ... |
ಗಂಗೂಲಿ, ಲಕ್ಷ್ಮಣ್ ಒತ್ತಾಯಿಸಿದ್ದರು |
ರೋಹಿತ್ ಶರ್ಮರನ್ನು ಟೆಸ್ಟ್ನಲ್ಲೂ ಆರಂಭಿಕರನ್ನಾಗಿ ಆಡಿಸುವ ಬಗ್ಗೆ ಮೊದಲು ಅಭಿಪ್ರಾಯ ಮಂಡಿಸಿದವರು ಮಾಜಿ ನಾಯಕ ಸೌರವ್ ಗಂಗೂಲಿ. ಹಿಂದೆ ವೀರೇಂದ್ರ ಸೆಹ್ವಾಗ್ರನ್ನು ಟೆಸ್ಟ್ ಆರಂಭಿಕರನ್ನಾಗಿ ಆಡಿಸಿ ಯಶ ಕಂಡಿದ್ದ ಗಂಗೂಲಿ, 'ರೋಹಿತ್ರನ್ನು ಯಾವುದೇ ತಂಡದಿಂದ ಹೊರಗಿಡುವುದು ಸರಿಯಲ್ಲ. ಅತ್ಯುತ್ತಮ ವಿಶ್ವಕಪ್ ನಿರ್ವಹಣೆಯ ಬಳಿಕ ಅವರು ಟೆಸ್ಟ್ನಲ್ಲೂ ಅವಕಾಶ ಬಾಚಿಕೊಳ್ಳುವ ಹಂಬಲದಲ್ಲಿದ್ದಾರೆ. ... |
ರ್‍ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಿದ ವಿರಾಟ್ ಕೊಹ್ಲಿ, ಪಂತ್, ಬುಮ್ರಾ | udayavani |
10:37 PM Jan 19, 2022 | Team Udayavani | |
ದುಬಾೖ: ನೂತನ ಐಸಿಸಿ ಟೆಸ್ಟ್ ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ವಿರಾಟ್ ಕೊಹ್ಲಿ, ರಿಷಭ್ ಪಂತ್ ಮತ್ತು ಜಸ್‌ಪ್ರೀತ್ ಬುಮ್ರಾ ಪ್ರಗತಿ ಸಾಧಿಸಿದ್ದಾರೆ. |
ದಕ್ಷಿಣ ಆಫ್ರಿಕಾ ಎದುರಿನ ಕೇಪ್‌ಟೌನ್ ಟೆಸ್ಟ್ ಪಂದ್ಯದಲ್ಲಿ 79 ಹಾಗೂ 29 ರನ್ ಹೊಡೆದ ವಿರಾಟ್ ಕೊಹ್ಲಿ ಎರಡು ಸ್ಥಾನದ ಪ್ರಗತಿಯೊಂದಿಗೆ ಏಳಕ್ಕೆ ಏರಿದರು. ಇದೇ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅಜೇಯ ಶತಕ ಬಾರಿಸಿದ ರಿಷಭ್ ಪಂತ್ 10 ಸ್ಥಾನ ಮೇಲೇರುವಲ್ಲಿ ಯಶಸ್ವಿಯಾದರು. ಅವರೀಗ 24ನೇ ಸ್ಥಾನದಿಂದ 14ಕ್ಕೆ ಬಂದಿದ್ದಾರೆ. |
ಕೇಪ್‌ಟೌನ್ ಟೆಸ್ಟ್‌ನಲ್ಲಿ 6 ವಿಕೆಟ್ ಉಡಾಯಿಸಿದ ಜಸ್‌ಪ್ರೀತ್ ಬುಮ್ರಾ ಮರಳಿ ಟಾಪ್-10 ಯಾದಿಯಲ್ಲಿ ಕಾಣಿಸಿಕೊಂಡರು. ಅವರೀಗ 10ನೇ ಸ್ಥಾನದಲ್ಲಿದ್ದಾರೆ. ಆರ್. ಅಶ್ವಿನ್ ದ್ವಿತೀಯ ಸ್ಥಾನ ಕಾಯ್ದುಕೊಂಡಿದ್ದಾರೆ. |
ಕೇಪ್‌ಟೌನ್ ಟೆಸ್ಟ್ ಪಂದ್ಯದ ಬ್ಯಾಟಿಂಗ್ ಹೀರೋ ಕೀಗನ್ ಪೀಟರ್‌ಸನ್ ಅವರದು ಭರ್ಜರಿ 68 ಸ್ಥಾನಗಳ ನೆಗೆತ. ಅವರೀಗ 33ನೇ ಸ್ಥಾನ ಅಲಂಕರಿಸಿದ್ದಾರೆ. ಪ್ರತಿಯೊಂದು ಟೆಸ್ಟ್ ಪಂದ್ಯದ ಬಳಿಕವೂ ಅವರು ರ್‍ಯಾಂಕಿಂಗ್‌ನಲ್ಲಿ ಪ್ರಗತಿ ಕಾಣುತ್ತ ಹೋದರು. |
ಸರಣಿಯ ಆರಂಭಕ್ಕೂ ಮುನ್ನ ಪೀಟರ್‌ಸನ್ 158ನೇ ಸ್ಥಾನದಲ್ಲಿದ್ದರು. |
ಆ್ಯಶಸ್ ಸರಣಿಯಲ್ಲಿ 357 ರನ್ ಬಾರಿಸಿ ಮಿಂಚಿದ ಆಸ್ಟ್ರೇಲಿಯದ ಟ್ರ್ಯಾವಿಸ್ ಹೆಡ್ ಜೀವನಶ್ರೇಷ್ಠ 5ನೇ ಸ್ಥಾನ ಅಲಂಕರಿಸಿದ್ದಾರೆ. |
ಜನಪರ ಲೇಖನಗಳ ಸಂಕಲನ 'ದೇವಕಾರು' | | ಅವಧಿ । AVADHI |
ಈ ಭಾನುವಾರ ಅಂಕಿತ ಪ್ರಕಾಶನದಿಂದ ಬಿಡುಗಡೆ |
ಸುಮಾರು ಎರಡು ದಶಕಗಳಿಂದ ಪತ್ರಕರ್ತನಾಗಿರುವ ಸತೀಶ್ ಚಪ್ಪರಿಕೆ ಅವರು ಕಳೆದ ಐದು ವರ್ಷಗಳ ಅವಧಿಯಲ್ಲಿ ಜನಸಾಮಾನ್ಯರ ಬಗ್ಗೆ ಬರೆದ ಜನಪರ ಲೇಖನಗಳ ಸಂಕಲನ ದೇವಕಾರು. |
ಭಾರತದ ಗ್ರಾಮೀಣ ಪ್ರದೇಶಗಳಲ್ಲಿನ ಹಲವು ಮುಖಗಳನ್ನು ಪರಿಚಯ ಮಾಡಿಕೊಡುಂವತಹ ಒಟ್ಟು ಒಂಬತ್ತು ಲೇಖನಗಳು ಈ ಕೃತಿಯಲ್ಲಿವೆ. ದೇವಕಾರಿನ ಮಹಾ |
ಬಲ ಬಬನಿ ನಾಯಕ, ವಿದರ್ಭದ ಕಲಾವತಿ, ಬಂಡ್ಲಪಲ್ಲಿಯ ರಾಜಾ ರೆಡ್ಡಿ, ಸಿದ್ದಾಪುರದ ಮೈಲಮ್ಮ, ವಾರಣಾಸಿಯ ಬಾಬಾ ನಾಗನಾಥ ಯೋಗೀಶ್ವರ, ದಾವಣಗೆರೆಯ ತಾಹೀರ್ ಅಲಿ, ಪುಲಕುಂಟದ ನಾರಾಯಣಮ್ಮ, ಉದಕಮಂಡಲದ ಮುದ್ಸಿನ್ ಮತ್ತು ಚೋಂಡಿಮುಖೇಡ್‌ನ ಶ್ರೀಪತಿರಾವ್ ಮಹದೇವರಾವ್ ಪಾಟೀಲ್ ಅವರಂತಹ |
ಜನಸಾಮಾನ್ಯರ ಮೂಲಕ ಇಲ್ಲಿನ ಪ್ರತಿಯೊಂದು ಲೇಖನಗಳೂ ಆವರಣಗೊಳ್ಳುತ್ತಾ ಸಾಗುತ್ತವೆ |
ಸಂತ್ರಸ್ತರ ಪಾಡು, ರೈತರ ಆತ್ಮಹತ್ಯೆ, ಎನ್‌ಆರ್‌ಜಿಎ- ಭಾರತ್ ನಿರ್ಮಾಣ್ ಯೋಜನೆಗಳ ವೈಫಲ್ಯ, ಗಣಿಕಾರ್ಮಿಕರ ದುಸ್ಥಿತಿ, ಗಂಗಾ ನದಿಯ ದಾರುಣ ಮುಖ, ಅನಂತಪುರದಲ್ಲಿನ ಮಾನವ ಕಳ್ಳಸಾಗಣೆ… ಹೀಗೆ ಹಲವು ವಿಷಯಗಳನ್ನು ಒಳಗೊಂಡಿರುವ ಇಲ್ಲಿನ ಪ್ರತಿಯೊಂದು ಲೇಖನವೂ ನೇರವಾಗಿ ಒಡಲಾಳದಿಂದ ಬಂದಿದೆ. |
ಉನ್ನತ ಮಟ್ಟದ ಗ್ರಾಮೀಣ ವರದಿಗಾರಿಕೆಯ ಫಲವಾಗಿ ನಮ್ಮೆಲ್ಲರ ಕೈಸೇರುತ್ತಿದೆ ದೇವಕಾರು ಎಂಬ ಈ ಕೃತಿ. ಮುಖ್ಯವಾಗಿ ಪತ್ರಕರ್ತರು ಮತ್ತು ಪತ್ರಿಕೋದ್ಯಮದ ಕಡೆ ಮುಖ ಮಾಡಿ ನಿಂತಿರುವ ಯುವಕರು ಓದಲೇ ಬೇಕಾಗಿರುವುದು ದೇವಕಾರು ಕೃತಿಯ ಪತ್ರಕರ್ತರು ಮತ್ತು ಪತ್ರಿಕೋದ್ಯಮ ಯಾರಿಗಾಗಿ? ಎಂಬ ಮುನ್ನುಡಿಯನ್ನು. |
ಅಯೋಧ್ಯೆಯಲ್ಲಿ ಪವಿತ್ರ ರಾಮಜನ್ಮಭೂಮಿ ನಿರ್ಮಿಸಿಯೇ ಸಿದ್ದ – Bunts Info Media |
ಉಳ್ಳಾಲ: ಭಗವಾನ್ ಶ್ರೀರಾಮನನ್ನು ವರ್ಷಗಳಿಂದ ಕಟಕಟೆಯಲ್ಲಿ ನಿಲ್ಲಿಸುತ್ತಿರುವುದು ಖೇದಕರ ಸಂಗತಿ. ಮತ್ತೆ ವಿಚಾರಣೆಯನ್ನು ಮುಂದೂಡಲು ಪ್ರೇರೇಪಿಸುವ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ನಂತಹ ಹಿಂದೂ ಜನರೇ ಇದರಲ್ಲಿ ತೊಡಗಿಕೊಂಡಿರುವುದು ಹಿಂದು ಸಮಾಜದ ದುರಾದೃಷ್ಠ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದ್ದಾರೆ. |
ಅವರು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ, ಕುಂಪಲ ಹಿಂದು ಜಾಗರಣಾ ವೇದಿಕೆ ಓಂ ಶಕ್ತಿ ಘಟಕದ ಆಶ್ರಯದಲ್ಲಿ ಅಯೋಧ್ಯೆ ಶ್ರೀ ರಾಮ ಜನ್ಮಸ್ಥಾನದ ಮುಕ್ತಿ ಆಂದೋಲನದ ವಿಜಯೋತ್ಸವ ಅಂಗವಾಗಿ ನಡೆದ 8ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. |
ಅಯೋಧ್ಯೆ ಚಳವಳಿ ದೇಶದ ಇತಿಹಾಸಕ್ಕೆ ಬಹುದೊಡ್ಡ ಸವಾಲಾಗಿದೆ. ದೇಶದ ಹಿತ ಕಾಯುವ ಪಕ್ಷ ಆಡಳಿತಕ್ಕೆ ಬರಲು ಚಳವಳಿಯಿಂದ ಸಾಧ್ಯವಾಗಿದೆ. ಇದೀಗ ಆಡಳಿತ ಕೈಯಲ್ಲಿರುವ ಸಂದರ್ಭ ಅಯೋಧ್ಯೆಯಲ್ಲಿ ಪವಿತ್ರ ರಾಮಜನ್ಮಭೂಮಿ ರಚಿಸಿಯೇ ಸಿದ್ದ. ಅದಕ್ಕಾಗಿ ಹಿಂದು ಸಮಾಜ ಒಗ್ಗಟ್ಟಾಗುವ ನೆಲೆಯಲ್ಲಿ ಇಂತಹ ಕಾರ್ಯಕ್ರಮಗಳು ಪೂರಕ. ಇಂತಹ ಶೌರ್ಯ ದಿವಸ್ ಆಚರಣೆ ದೇಶಾದ್ಯಂತ ದೇವಸ್ಥಾನ ಕಟ್ಟಲು ಅಡ್ಡಿಪಡಿಸುತ್ತಿರುವ ಎಲ್... |
Subsets and Splits
No community queries yet
The top public SQL queries from the community will appear here once available.