text
stringlengths
0
61.5k
ದೇಶದಲ್ಲಿ ಯುವಸಮುದಾಯ ಆಧುನೀಕತೆಯತ್ತ ವಾಲುತ್ತಿರುವುದರಿಂದ ಜಡತ್ವ ಹೆಚ್ಚಾಗುತ್ತಿದೆ. ದೇಶದಲ್ಲಿ ಹಿಂದೂಗಳಿಗೆ ಬೆಲೆ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರು ಜಾರಿಗೆ ತಂದ ಒಡೆದು ಆಳುವ ನೀತಿ ಈಗಲೂ ಚಾಲ್ತಿಯಲ್ಲಿದೆ. ಆಕ್ಸ್ ಫರ್ಡ್ ಡಿಕ್ಷನರಿಯಲ್ಲಿ ಇಂಡಿಯನ್ಸ್ ಅಂದರೆ ದರೋಡೆಕೋರು, ಕಳ್ಳರು ಎಂದು ಉಲ್ಲೇಖವಿದೆ. ಬ್ರಿಟೀಷರು ಇಟ್ಟಂತಹ ಹೆಸರನ್ನೇ ಈಗಲೂ ಪಾಲನೆಯ...
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿಂದು ಮುಖಂಡ ಜಗದೀಶ್ ಆಳ್ವ ಕುವೆತ್ತಬೈಲ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನ್ಯಾಯವಾದಿ ರಾಜೇಶ್ ಅಮ್ಟಾಡಿ, ಹಿಂ.ಜಾ.ವೇ ಜಿಲ್ಲಾ ಸಹಸಂಚಾಲಕ ಸಂದೀಪ್ ಶೆಟ್ಟಿ ಅಂಬ್ಲಮೊಗರು, ಹಿಂ.ಜಾ.ವೇ ಸುರತ್ಕಲ್ ನಗರ ಅಧ್ಯಕ್ಷ ಸತೀಶ್ ಮುಂಚೂರು, ಉದ್ಯಮಿ ಗುರುಪ್ರಸಾದ್, ಹಿಂದು ಮುಖಂಡ ಲೋಕೇಶ್ , ರಾಮ ಪ್ರಸಾದ್ ಎಕ್ಕೂರು, ವಿಶ್ವನಾಥ ಕೋಡಿಕೆರೆ, ಹಿಂ.ಜಾ.ವೇ ಕುಂಪಲ ಘಟಕ ಅಧ್ಯ...
ಸ್ಪೇನ್‌ ಅಬ್ಬರಕ್ಕೆ ಬೆಚ್ಚಿದ ನೈಗರ್‌ | Prajavani
ಸ್ಪೇನ್‌ ಅಬ್ಬರಕ್ಕೆ ಬೆಚ್ಚಿದ ನೈಗರ್‌
Published: 11 ಅಕ್ಟೋಬರ್ 2017, 01:14 IST
Updated: 11 ಅಕ್ಟೋಬರ್ 2017, 01:14 IST
ಕೊಚ್ಚಿ: ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ಮಂಗಳವಾರ ಯುರೋಪ್‌ನ ಫುಟ್‌ಬಾಲ್‌ ಶಕ್ತಿ ಕೇಂದ್ರ ಎಂದೇ ಗುರುತಿಸಿಕೊಂಡಿರುವ ಸ್ಪೇನ್‌ ತಂಡದ ಆಟದ ಸೊಬಗು ಅನಾವರಣಗೊಂಡಿತು.
ಫಿಫಾ 17 ವರ್ಷದೊಳಗಿನವರ ವಿಶ್ವಕಪ್‌ನ 'ಡಿ' ಗುಂಪಿನ ಪಂದ್ಯದಲ್ಲಿ ಈ ತಂಡ 4–0 ಗೋಲುಗಳಿಂದ ನೈಗರ್‌ ಸವಾಲು ಮೀರಿ ನಿಂತಿತು.
ಯುರೋಪಿಯನ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದಿದ್ದ ಸ್ಪೇನ್‌ ತಂಡ ಆರಂಭಿಕ ಪಂದ್ಯದಲ್ಲಿ 1–2 ಗೋಲುಗಳಿಂದ ಬ್ರೆಜಿಲ್‌ ವಿರುದ್ಧ ಸೋತಿತ್ತು.
ನೈಗರ್‌ ವಿರುದ್ಧ ಗೆಲ್ಲಲೇಬೇಕಾದ ಒತ್ತಡದೊಂದಿಗೆ ಕಣಕ್ಕಿಳಿದಿದ್ದ ಈ ತಂಡ 20ನೇ ನಿಮಿಷದವರೆಗೂ ಎದುರಾಳಿಗಳಿಂದ ಪ್ರಬಲ ಪೈಪೋಟಿ ಎದುರಿಸಿತು.
21ನೇ ನಿಮಿಷದಲ್ಲಿ ಅಬೆಲ್‌ ರುಯಿಜ್‌ ಮೋಡಿ ಮಾಡಿದರು. ಚೆಂಡನ್ನು ಡ್ರಿಬಲ್‌ ಮಾಡುತ್ತಾ ಎದುರಾಳಿ ಆವರಣ ಪ್ರವೇಶಿಸಿದ ಅವರು ಅದನ್ನು ಕಣ್ಣೆವೆ ಮುಚ್ಚಿ ತೆರೆಯುವಷ್ಟರಲ್ಲಿ ಗುರಿ ಮುಟ್ಟಿಸಿ ಸಂಭ್ರಮಿಸಿದರು.
ಆ ನಂತರ ನೈಗರ್‌ ತಂಡದ ಆಟಗಾರರು ರಕ್ಷಣಾ ವಿಭಾಗದಲ್ಲಿ ಮಿಂಚಿದರು. ಜೊತೆಗೆ ಸಮಬಲದ ಗೋಲು ಗಳಿಸುವ ಪ್ರಯತ್ನವನ್ನೂ ಮುಂದುವರಿಸಿದರು. ಚೆಂಡಿನೊಂದಿಗೆ ಪದೇ ಪದೇ ಎದುರಾಳಿಗಳ ಆವರಣ ಪ್ರವೇಶಿಸಿದರೂ ಅದನ್ನು ಗುರಿ ಮುಟ್ಟಿಸಲು ಈ ತಂಡದವರಿಗೆ ಆಗಲಿಲ್ಲ. ಹೀಗಾಗಿ 40ನೇ ನಿಮಿಷದವರೆಗೂ ಸ್ಪೇನ್‌ ತಂಡ 1–0ರಿಂದ ಮುಂದಿತ್ತು. 41ನೇ ನಿಮಿಷದಲ್ಲಿ ಅಬೆಲ್‌ ಮತ್ತೊಮ್ಮೆ ಕಾಲ್ಚಳ ತೋರಿದರು. ಸಹ ಆಟಗಾರ ತಮ್ಮತ್ತ...
ಮೊದಲರ್ಧದ ಹೆಚ್ಚುವರಿ ಅವಧಿಯಲ್ಲಿ (45+1) ಸ್ಪೇನ್‌ ತಂಡ ಮಿಂಚಿತು. ಸೀಸರ್‌ ಗೋಲು ಗಳಿಸಿದ್ದರಿಂದ ತಂಡ 3–0ರ ಮುನ್ನಡೆ ಯೊಂದಿಗೆ ವಿರಾಮಕ್ಕೆ ಹೋಯಿತು.
ದ್ವಿತೀಯಾರ್ಧದಲ್ಲಿ ನೈಗರ್‌ ತಂಡ ತಪ್ಪುಗಳನ್ನು ತಿದ್ದಿಕೊಂಡು ಆಡಿತು. ಹೀಗಾಗಿ ಸ್ಪೇನ್‌ ತಂಡದ ಗೋಲಿನ ಅಬ್ಬರ ತಗ್ಗಿತು. 82ನೇ ನಿಮಿಷದಲ್ಲಿ ಸರ್ಜಿಯೊ ಗೊಮೆಜ್‌ ಗೋಲು ಗಳಿಸಿ ಸ್ಪೇನ್‌ ತಂಡ ಏಕಪಕ್ಷೀಯವಾಗಿ ಗೆಲುವಿನ ತೋರಣ ಕಟ್ಟಲು ನೆರವಾದರು.
ಗೋವಾದ ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ನಡೆದ ಕೋಸ್ಟರಿಕಾ ಮತ್ತು ಗಿನಿ ನಡುವಣ 'ಸಿ' ಗುಂಪಿನ ಪಂದ್ಯ 2–2 ಗೋಲುಗಳಿಂದ ಸಮಬಲವಾಯಿತು. ಕೋಸ್ಟರಿಕಾ ತಂಡದ ಜಾಕ್ಷೀನ್‌ 26ನೇ ನಿಮಿಷದಲ್ಲಿ ಖಾತೆ ತೆರೆದರು. 30ನೇ ನಿಮಿಷದಲ್ಲಿ ಫಾಂಡ್ಜೆ ಟೌರೆ ಗೋಲು ಬಾರಿಸಿ ಗಿನಿ ತಂಡ 1–1ರಲ್ಲಿ ಸಮಬಲ ಮಾಡಿಕೊಳ್ಳಲು ನೆರವಾದರು.
67ನೇ ನಿಮಿಷದಲ್ಲಿ ಗೊಮೆಜ್ ಗೋಲು ದಾಖಲಿಸಿದ್ದರಿಂದ ಕೋಸ್ಟಾರಿಕಾ 2–1ರ ಮುನ್ನಡೆ ಗಳಿಸಿ ಗೆಲುವಿನ ಕನಸು ಕಂಡಿತ್ತು. 80ನೇ ನಿಮಿಷದವರೆಗೂ ಈ ತಂಡ ಮುನ್ನಡೆ ಕಾಪಾಡಿಕೊಂಡಿತ್ತು. ಆದರೆ 81ನೇ ನಿಮಿಷದಲ್ಲಿ ಸೌಮಾಹ್‌ ಗೋಲು ಬಾರಿಸಿ ಪಂದ್ಯದ ಚಿತ್ರಣವನ್ನೇ ಬದಲಿಸಿಬಿಟ್ಟರು.
ಆ ನಂತರದ ಅವಧಿಯಲ್ಲಿ ಎರಡೂ ತಂಡಗಳು ಗೆಲುವಿನ ಗೋಲು ದಾಖಲಿಸಲು ನಡೆಸಿದ ಪ್ರಯತ್ನ ಫಲಿಸಲಿಲ್ಲ.
ಕೊಚ್ಚಿಯಲ್ಲಿ ನಡೆದ ದಿನದ ಇನ್ನೊಂದು ಪಂದ್ಯದಲ್ಲಿ ಬ್ರೆಜಿಲ್‌ ತಂಡ 2–0 ಗೋಲುಗಳಿಂದ ಉತ್ತರ ಕೊರಿಯಾವನ್ನು ಸೋಲಿಸಿತು. ಈ ಮೂಲಕ ತಂಡ ನಾಕೌಟ್‌ ಪ್ರವೇಶಿಸಿತು.
ಮೊದಲ ಪಂದ್ಯದಲ್ಲಿ ಸಾಂಬಾ ನಾಡಿನ ತಂಡ ಸ್ಪೇನ್‌ಗೆ ಆಘಾತ ನೀಡಿತ್ತು. ಬ್ರೆಜಿಲ್‌ ತಂಡ ವಿಶ್ವಕಪ್‌ನಲ್ಲಿ ಮೂರು ಬಾರಿ ಪ್ರಶಸ್ತಿ ಗೆದ್ದಿದೆ.
ಸ್ವಾತಂತ್ರ್ಯ ಸಂಗ್ರಾಮಕ್ಕೆ ಬಂದೂಕು ಫ್ಯಾಕ್ಟರಿ ಕಟ್ಟಿದ್ದ ಶ್ರೀ! | chadchan inchageri Mutt swamiji builts gun factory for freedom fight snr
Bengaluru, First Published Aug 15, 2021, 9:00 AM IST
ಚಡಚಣ (ಆ.15): ಸ್ವಾತಂತ್ರ್ಯ ಹೋರಾಟದಲ್ಲಿ ಕೊಡುಗೆ ನೀಡಿರುವ ರಾಜ್ಯದ ಅನೇಕ ಮಠಗಳಲ್ಲಿ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಇಂಚಗೇರಿ ಮಠವು ಒಂದು. ಸ್ವಾತಂತ್ರ್ಯಪೂರ್ವದಲ್ಲಿ ಇಂಚಗೇರಿ ಮಠದಲ್ಲಿ ಶ್ರೀಗಳಾಗಿದ್ದವರು ಶ್ರೀ ಮಾಧವಾನಂದ ಪ್ರಭುಜಿಗಳು. ಶ್ರೀಗಳು ತಾವಷ್ಟೇ ಹೋರಾಟದಲ್ಲಿ ಪಾಲ್ಗೊಳ್ಳಲಿಲ್ಲ. ತಮ್ಮ ಭಕ್ತರನ್ನು ಕರೆತಂದು ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರು.
1938ರಲ್ಲಿ ಶ್ರೀ ಮಾಧವನಾನಂದ ಪ್ರಭುಜಿ ತಮ್ಮ 20 ಸಾವಿರ ಭಕ್ತರೊಂದಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಹುಲಕೋಟೆ, ಸಾವಳಗಿ, ಹೊರ್ತಿ ಪೊಲೀಸ್‌ ಠಾಣೆಗಳಿಗೆ ಮುತ್ತಿಗೆ ಹಾಕಿ ಶಸ್ತ್ರಾಸ್ತ್ರಗಳನ್ನ ಅಪಹರಿಸಿದ್ದರು. ಮಾತ್ರವಲ್ಲ, ಹಲವು ಅಂಚೆ, ನಾಡ ಕಚೇರಿಗೆ ಬೆಂಕಿ ಹಚ್ಚಿದ್ದರು. ಬ್ರಿಟಿಷರಿಗೆ ಪ್ರಮುಖ ಸಂಪರ್ಕ ಸಾಧನವಾಗಿದ್ದ ರೈಲು ಹಳಿಗಳನ್ನು ಕಿತ್ತುಹಾಕಿ ಠಾಣೆಗಳನ್ನು ಧ್ವಂಸಗೊ...
ತಮ್ಮ 22ನೇ ವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ್ದ ಅವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಸುಭಾಷ್‌ ಚಂದ್ರ ಬೋಸ್‌ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಚಲೆಜಾವ್‌ ಚಳವಳಿ, ಉಪ್ಪಿನ ಸತ್ಯಾಗ್ರಹ, ಗೋವಾ ವಿಮೋಚನೆಯಂತಹ ಅನೇಕ ಹೋರಾಟಗಳಲ್ಲಿ ತಮ್ಮ ಮಠದ ಭಕ್ತರೊಂದಿಗೆ ಪಾಲ್ಗೊಂಡಿದ್ದರು. ಬ್ರಿಟಿಷರನ್ನು ಬಗ್ಗುಬಡಿಯಬೇಕು ಎಂಬ ಪ್ರಬಲ ಹಂಬಲದೊಂದಿಗೆ ಶ್ರೀಗಳು ತಮ್ಮ ಅನುಯಾಯಿಗಳೊಂ...
ಕಂಡಲ್ಲಿ ಗುಂಡಿಗೆ ಆದೇಶ: 1942ರಲ್ಲಿ ಬ್ರಿಟಿಷ್‌ ಸರ್ಕಾರ ಮಾಧವಾನಂದ ಶ್ರೀಗಳ ಮೇಲೆ ಕಂಡಲ್ಲಿ ಗುಂಡಿಕ್ಕುವ ಆದೇಶ ಹೊರಡಿಸಿತ್ತು. ಅದರಂತೆ ಬೆಳಗಾವಿ ಜಿಲ್ಲೆಯ ಗೋಕಾಕ್‌ ಬಳಿ ಬ್ರಿಟಿಷ್‌ ಪೊಲೀಸರು ಇವರ ಮೇಲೆ ಗುಂಡು ಹಾರಿಸಿದರು. ಆದರೆ ಪೊಲೀಸರು ಬಂದು ನೋಡಿದಾಗ ಅಲ್ಲಿ ಮಾಧವಾನಂದರು ಇರಲೇ ಇಲ್ಲ. ಅವರು ಅಂದುಕೊಂಡಂತೆ ಗೋಕಾಕ ಬಳಿಯ ಹಳ್ಳಿಯೊಂದರಲ್ಲಿ ಸ್ವಾತಂತ್ರ್ಯ ಹೋರಾಟದ ಉದ್ದೇಶಕ್ಕಾಗಿ ನಡೆದ ...
ಮಂಗಳೂರು: ಆನೆ ಸೊಂಡಿಲು ಹೋಲುವ ನಾಯಿ ಮರಿ ಜನನ ! | Vartha Bharati- ವಾರ್ತಾ ಭಾರತಿ
ವಾರ್ತಾ ಭಾರತಿ Jan 21, 2020, 5:55 PM IST
ಮಂಗಳೂರು, ಜ.21: ನಗರದ ಎಕ್ಕೂರಿನ ಕರ್ನಾಟಕ ಗೃಹ ಮಂಡಳಿ ಸಮೀಪದ ಮನೆಯೊಂದರಲ್ಲಿ ನಾಯಿಯೊಂದು ಆನೆ ಸೊಂಡಿಲನ್ನು ಹೆಲುವ ಸತ್ತ ಮರಿಗೆ ಜನ್ಮ ನೀಡಿದೆ.
ಧನಲಕ್ಷ್ಮಿ ಎಂಬವರ ಮನೆಯ ನಾಯಿಯು ಇಂದು ಬೆಳಗ್ಗೆ ಐದು ಮರಿಗಳಿಗೆ ಜನ್ಮ ನೀಡಿತ್ತು. ಮಧ್ಯಾಹ್ನದ ವೇಳೆಗೆ ಮನೆಯವರು ನಾಯಿ ಮರಿಗಳನ್ನು ಗಮನಿಸಿದಾಗ ಅದರಲ್ಲಿ ಸತ್ತ ಒಂದು ಮರಿಯ ಮೂಗು ಆನೆ ಸೊಂಡಿಲನ್ನು ಹೋಲುತ್ತಿದ್ದು, ಕುತೂಹಲಕ್ಕೆ ಕಾರಣವಾಗಿದೆ.
ಹರಪನಹಳ್ಳಿಯ ತಾಲೂಕು, ಜಿಲ್ಲಾ ಪಂಚಾಯಿತಿ ಕ್ಷೇತ್ರ ಬಳ್ಳಾರಿಗೆ | Harapanahalli Taluk and Zilla Panchayat members belongs to Ballari - Kannada Oneindia
20 min ago ಮೋದಿಗೆ ಅರಬ್‌ ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿ
32 min ago ಕಾಶ್ಮೀರದಲ್ಲಿ ಸಿಆರ್‌ಪಿಎಫ್ ಯೋಧ ಗುಂಡು ಹಾರಿಸಿಕೊಂಡು ಆತ್ಮಹತ್ಯೆ
43 min ago ವಲ್ಡ್ ಹೆಲ್ತ್ ಆರ್ಗನೈಝೇಷನ್ ಡೈರೆಕ್ಟರ್ ಎಂದು ತಿರುಗುತ್ತಿದ್ದ ಆ ಶಂಕಿತ ಕಾಶ್ಮೀರಿ ಯಾರು?
| Updated: Monday, January 7, 2019, 14:59 [IST]
ದಾವಣಗೆರೆ, ಜನವರಿ 07 : ದಾವಣಗೆರೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿದ್ದ ಹರಪನಹಳ್ಳಿ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರ ಸ್ಥಾನವನ್ನು ಬಳ್ಳಾರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಸೇರ್ಪಡೆಗೊಳಿಸಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧೀನ ಕಾರ್ಯದರ್ಶಿ ವಿ.ವೆಂಕಟೇಶ್ ಅವರ ಆದೇಶದ ಬಳಿಕ ತಾಲೂಕು ಪಂಚಾಯಿತಿಯ 23 ಸದಸ್ಯ ಸ್ಥಾನ ಮತ್ತು ಜಿಲ್ಲಾ ಪಂಚಾಯಿತಿಯ 7 ಸದಸ್ಯ ಸ್ಥಾನ ದಾವಣಗೆರೆಯ ನಂಟು ಕಳೆದುಕೊಂಡು ಬಳ್ಳಾರಿಗೆ ಸೇರಿದೆ.
ಬಳ್ಳಾರಿ ಜಿಲ್ಲೆಗೆ ಹರಪನಹಳ್ಳಿ ಸೇರ್ಪಡೆ : ಕಂದಾಯ ಇಲಾಖೆ
ಹರಪನಹಳ್ಳಿ ತಾಲೂಕು ಪಂಚಾಯಿತಿ ಸದಸ್ಯರು, ತಾಲೂಕು ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಜಿಲ್ಲಾ ಪಂಚಾಯಿತಿ ಪ್ರತಿನಿಧಿಸುವ ತೆಲಿಗಿ, ಉಚ್ಚಂಗಿದುರ್ಗ, ಅರಸೀಕೆರೆ, ಚಿಟಗೇರಿ, ಕಂಚೀಕೆರೆ, ಹಲುವಾಗಲು, ನೀಲಗುಂದ ಸದಸ್ಯರ ಸ್ಥಾನವು ಬಳ್ಳಾರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಒಳಪಡಲಿದೆ ಎಂದು ಆದೇಶ ಸ್ಪಷ್ಟಪಡಿಸಿದೆ.
ರಾಜೀನಾಮೆ : ದಾವಣಗೆರೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನವನ್ನು ಹರಪನಹಳ್ಳಿ ತಾಲೂಕಿಗೆ ನೀಡಲಾಗಿತ್ತು. ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ತೆಲಿಗೆ ಕ್ಷೇತ್ರದ ಕೆ.ಆರ್.ಜಯಶೀಲಾ, ಉಪಾಧ್ಯಕ್ಷರಾಗಿದ್ದ ಉಚ್ಚಂಗಿದುರ್ಗ ಕ್ಷೇತ್ರದ ರಶ್ಮಿ ರಾಜಪ್ಪ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ದಾವಣಗೆರೆ ಜಿಲ್ಲೆ ರಚನೆಯಾದಾಗ ಬಳ್ಳಾರಿ ಜಿಲ್ಲೆಯಲ್ಲಿದ್ದ ಹರಪನಹಳ್ಳಿ ತಾಲೂಕನ್ನು ದಾವಣಗೆರೆಗೆ ಸೇರಿಸಲಾಗಿತ್ತು. ಆದರೆ, ತಾಲೂಕಿನ ಜನರು ಪುನಃ ಜಿಲ್ಲೆಯನ್ನು ಬಳ್ಳಾರಿಗೆ ಸೇರಿಸಲು ಹೋರಾಟ ಮಾಡಿದ್ದರಿಂದ, ಕರ್ನಾಟಕ ಸರ್ಕಾರ ತಾಲೂಕನ್ನು ಬಳ್ಳಾರಿಗೆ ವಾಪಸ್ ಸೇರಿಸಿದೆ.
harapanahalli ballari davanagere karnataka government district news ಬಳ್ಳಾರಿ ಹರಪನಹಳ್ಳಿ ದಾವಣಗೆರೆ ಕರ್ನಾಟಕ ಸರ್ಕಾರ ಜಿಲ್ಲಾಸುದ್ದಿ
After order by the Panchayat Raj department Karnataka Harapanahalli Taluk and Zilla Panchayat members belongs to Ballari district. Karnataka Government announced that Harapanaalli is included to Ballari.
ಅ.3 ರಿಂದ 8: ಉಳ್ಳಾಲ ಶ್ರೀ ಶಾರದಾ ನಿಕೇತನದಲ್ಲಿ 72ನೇ ಶಾರದೋತ್ಸವ | KANNADIGA WORLD
Home ಕನ್ನಡ ವಾರ್ತೆಗಳು ಕರಾವಳಿ ಅ.3 ರಿಂದ 8: ಉಳ್ಳಾಲ ಶ್ರೀ ಶಾರದಾ ನಿಕೇತನದಲ್ಲಿ 72ನೇ ಶಾರದೋತ್ಸವ
ಮಂಗಳೂರು / ಉಳ್ಳಾಲ: ಸಾರ್ವಜನಿಕ ನವರಾತ್ರಿ ಶ್ರೀ ಶಾರದಾ‌ಉತ್ಸವ ಸಮಿತಿ, ಉಳ್ಳಾಲ ಇದರ ವತಿಯಿಂದ 72ನೇ ವರ್ಷದ ಶಾರದಾ‌ ಉತ್ಸವವು‌ ಇದೇ‌ಅಕ್ಟೋಬರ್ 3, ಗುರುವಾರದಿಂದ ಅ.8 ಮಂಗಳವಾರವರೆಗೆ 'ಶ್ರೀ ಶಾರದಾ ನಿಕೇತನದಲ್ಲಿ ಜರಗಲಿರುವುದು.
ತಾ. 3ರಂದು ಸಂಜೆ ಶ್ರೀ ಶಾರದಾ ಮಾತೆಯ ಪಟ್ಟ ಬಂಧೋತ್ಸವ ಮೆರವಣಿಗೆ ಶ್ರೀ ಶಾರದಾ ನಿಕೇತನದಿಂದ ಹೊರಟು ಉಳ್ಳಾಲದ ಪ್ರಮುಖ ಬೀದಿಗಳಲ್ಲಿ ಸಾಗಿ ಬರಲಿದ್ದು. ಶುಕ್ರವಾರ ತಾ.5ರಂದು ಮಧ್ಯಾಹ್ನ ಶಾರದಾ ಪ್ರತಿಷ್ಠೆಯಾಗಲಿದೆ.
ಅಂದು ಸಂಜೆಧಾರ್ಮಿಕ ಸಭಾಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಉದ್ಘಾಟನೆಗೊಳ್ಳಲಿರುವುದು. ದ.ಕ. ಜಿಲ್ಲಾ ಪಂಚಾಯತ್ ಸರಕಾರಿ ಶಾಲೆ ಮತ್ತು ಬಿ.ಇ.ಎಂ. ಶಾಲೆ ಉಳ್ಳಾಲ ಇಲ್ಲಿನ ಮಕ್ಕಳಿಂದ ಕಾರ್ಯಕ್ರಮ ವೈವಿಧ್ಯ ಹಾಗೂ ಶ್ರೀ ಶಾರದಾ ಮಹಿಳಾ ವೇದಿಕೆಯ‌ಆಶ್ರಯದಲ್ಲಿ ದಿ| ಯು. ಸುಬ್ರಾಯ ನಾಯಕ್ ಸ್ಮರಣಾರ್ಥ ಕಲಾ ಕಾರ್ಯಕ್ರಮ ನಡೆಯುವುದು.
ತಾ. ೦5 ಶನಿವಾರ ಬೆಳಿಗ್ಗೆ ದಿ| ಪೈಲ್ವಾನ್ ಮೋತಿ ಪುತ್ರನ್ ಸ್ಮರಣಾರ್ಥ ಬೆಳ್ಳಿಗದೆಯ ಕುಸ್ತಿ ಪಂದ್ಯಾಟವು ಶ್ರೀ ವೀರ ಮಾರುತಿ ವ್ಯಾಯಾಮ ಶಾಲೆ ಮತ್ತು ಬ್ರದರ್‍ಸ್ ಸ್ಪೋರ್ಟ್ಸ್‌ಕ್ಲಬ್ ಹಾಗೂ ಬ್ರದರ್‍ಸ್‌ಯುವಕ ಮಂಡಲ ಇವರ ಸಂಯೋಜನೆಯಲ್ಲಿ ಹಮ್ಮಿಕೊಳ್ಳ ಲಾಗಿದೆ.
ರಾತ್ರಿ‌ಅನುದಾನಿತ ಮೊಗವೀರ ಹಿ.ಪ್ರಾ. ಶಾಲಾ ಮಕ್ಕಳಿಂದ ವಿವಿಧ ವಿನೋದಾವಳಿ ಪ್ರದರ್ಶನಗೊಳ್ಳಲಿರುವುದು. ತಾ. 06, ಭಾನುವಾರ, ಬೆಳಿಗ್ಗೆ ಸಾಂಸ್ಕೃತಿಕ ಸ್ಪರ್ಧೆ ಹಾಗೂ ಅಪರಾಹ್ನರಸಪ್ರಶ್ನೆಜರಗಲಿದೆ. ಸಂಜೆ ಜರಗುವಧಾರ್ಮಿಕ ಸಭೆಯಲ್ಲಿ ದಿ| ಯುದಯಾನಂದ ನಾಯಕ್‌ ದತ್ತಿ ಪ್ರಶಸ್ತಿ ಪ್ರದಾನ ಹಮ್ಮಿಕೊಳ್ಳಲಾಗಿದ್ದು, ಕಲ್ಲಡ್ಕದ ಶ್ರೀ ರಾಮ ವಿದ್ಯಾಕೇಂದ್ರವನ್ನು 'ದತ್ತಿ ಪ್ರಶಸ್ತಿ' ನೀಡಿಗೌರವಿಸಲಾಗುವುದು...
ರಾತ್ರಿ ಶ್ರೀ ವಿದ್ಯಾರಣ್ಯ ಕಲಾ ವೃಂದ ಉಳ್ಳಾಲ ಇವರ‌ಆಶ್ರಯದಲ್ಲಿ ಕಲಾ ಕಾರ್ಯಕ್ರಮ ನಡೆಯುವುದು. ಸೋಮವಾರತಾ. 07ರಂದು ಸಂಜೆವಿಶೇಷ ಪೂಜೆ 'ಶ್ರೀ ಚಂಡಿಕಾ‌ಅಷ್ಟೋತ್ತರ ಶತಪುಷ್ಪಾಂಜಲಿಕುಂಕುಮಾರ್ಚನೆ' ಹಮ್ಮಿಕೊಂಡಿದ್ದು ನವ ವಧು-ವರರಿಂದ ನವಜ್ಯೋತಿ ಬೆಳಗಿಸಲಾಗುವುದು. ಪೂಜೆಯ ಬಳಿಕ 'ಸಾರ್ವಜನಿಕ‌ಅನ್ನ ಸಂತರ್ಪಣೆ' ನಡೆಯಲಿರುವುದು. ರಾತ್ರಿ ವಿಕ್ರಮ ಮಿತ್ರ ವೃಂದ ಉಳ್ಳಾಲ ಇವರಿಂದ ಕಲಾ ಕಾರ್ಯಕ್ರಮ ಪ್...
ತಾ. ೮, ಮಂಗಳವಾರ ಬೆಳಿಗ್ಗೆ ಎಳೆಯ ಮಕ್ಕಳಿಗಾಗಿ ವಿದ್ಯಾರಂಭ ಪೂಜೆ' ಜರಗಲಿದೆ. ಸಂಜೆ ಮಂಗಳಾರತಿಯ ಬಳಿಕ ಶಾರದಾ ಮಾತೆಯ ವಿಶೇಷ ಅಲಂಕೃತ ವಿಸರ್ಜನಾ ಮೆರವಣಿಗೆ ಹೊರಡುವುದು. ವಿವಿಧ ಸಂಘ ಸಂಸ್ಥೆಗಳ ಆಕರ್ಷಕಟ್ಯಾಬ್ಲೋ, ಹುಲಿವೇಷ ಇತ್ಯಾದಿಗಳಿಂದೊಡಗೂಡಿದ, ವೈಭವದ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಾಗಿ ಉಳ್ಳಾಲದ ಸಮುದ್ರಕಿನಾರೆಯಲ್ಲಿ ಸಮಾರೋಪ ಸಮಾರಂಭಜರಗುವುದು. ಮಂಡ್ಯದ ವಿವೇಕ ಶಿಕ್ಷಣವಾಹಿನಿಯ ಸ್ಥ...
ಪ್ರತಿದಿನ ವಿವಿಧ ಭಜನಾ ಮಂಡಳಿಯವರಿಂದ ಭಜನೆ, ಶ್ರೀ ದುರ್ಗಾ‌ಅಷ್ಟೋತ್ತರ ನಮಸ್ಕಾರ, ಲಲಿತಾ ಸಹಸ್ರನಾಮ ಪಠನ, ಪಾರಾಯಣೆ, ಅರ್ಚನೆ, ಪೂಜೆ ನಡೆಯಲಿದ್ದು, ಸೆಪ್ಟೆಂಬರ್ 29ನೇ ಭಾನುವಾರ, ಉಳ್ಳಾಲ ಭಾರತ ಪ್ರೌಢಶಾಲಾಕ್ರೀಡಾಂಗಣದಲ್ಲಿ ವಿವಿಧ‌ಆಟೋಟ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು‌ ಉತ್ಸವ ಸಮಿತಿಯ ಗೌರವಾಧ್ಯಕ್ಷ ಯು.ಎಸ್. ಪ್ರಕಾಶ್, ಅಧ್ಯಕ್ಷ ಶ್ರೀಕರ ಕಿಣಿ, ಗೌರವ‌ ಉಪಾಧ್ಯಕ್ಷ‌ ಉದಯ ಶಂಕರ...
ಸಂಸ್ಕೃತಿ ಸಲ್ಲಾಪ: ಕಯ್ಯಾರ ಕಿಞ್ಞಣ್ಣ ರೈ
ಕನ್ನಡದ ಮಹಾನ್ ಧ್ವನಿ ಕಯ್ಯಾರ ಕಿಞ್ಞಣ್ಣ ರೈ
ಕನ್ನಡ ಪರ ಅಸಾಮಾನ್ಯ ಧ್ವನಿಯಾಗಿದ್ದವರು ಮಹಾನ್ ಕನ್ನಡ ಹೋರಾಟಗಾರ, ಕವಿ, ಶತಾಯುಷಿ ಕಯ್ಯಾರ ಕಿಞ್ಞಣ್ಣ ರೈ. ಕಯ್ಯಾರ ಕಿಞ್ಞಣ್ಣ ರೈ ಎಂದರೆ ಕನ್ನಡದ ಬಗೆಗಿನ ಅಪಾರ ಪ್ರೀತಿ, ಕಾಳಜಿಗಳಿಗೆ ಒಂದು ಮಹತ್ವದ ಹೆಸರು. ನೂರು ವರ್ಷ ಬಾಳಿ ಕಳೆದ ವರ್ಷದ ಆಗಸ್ಟ್ನಲ್ಲಿ ಈ ಲೋಕವನ್ನಗಲಿದ ಅವರು ಕಾಸರಗೋಡು ಕರ್ನಾಟಕದ ಕೈತಪ್ಪಿ ಕೇರಳಕ್ಕೆ ಸೇರಿಕೊಂಡುದರ ಬಗೆಗೆ ಅವರು ನಿರಂತರ ಅತೃಪ್ತರಾಗಿದ್ದವರು. ಆದರೆ ಆ ಅತ...
ಕಯ್ಯಾರ ಕಿಞ್ಞಣ್ಣ ರೈ ಈಗ ಕೇರಳ ರಾಜ್ಯಕ್ಕೆ ಸೇರಿರುವ ಕಾಸರಗೋಡು ತಾಲೂಕಿನ ಪೆರಡಾಲ ಗ್ರಾಮದಲ್ಲಿ 1915 ಜೂನ್ 8 ರಂದು ಜನಿಸಿದರು. ತಂದೆ ದುಗ್ಗಪ್ಪ ರೈ, ತಾಯಿ ದೈಯಕ್ಕೆ.
ರೈಯವರು ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ವಿದ್ವಾನ್ ಪದವಿಗಳ ಜೊತೆಗೆ ಬಿ.ಎ. ಮತ್ತು ಅಧ್ಯಾಪಕ ತರಬೇತಿ ಪಡೆದರು. ಮುಂದೆ ಎಂ.ಎ ಪದವಿಧರರೂ ಆದ ಕಿಞ್ಞಣ್ಣ ರೈ ಅವರು ಕಾಸರಗೋಡಿನ ಬಳಿಯ ಪೆರಡಾಲ ಗ್ರಾಮದ ನವಜೀವನ ಪ್ರೌಢಶಾಲೆಯಲ್ಲಿ ಹಲವಾರು ವರ್ಷಗಳ ಅಧ್ಯಾಪನ ನಡೆಸಿ ನಿವೃತ್ತರಾದರು.
ಕಯ್ಯಾರ ಕಿಞ್ಞಣ್ಣ ರೈಯವರು ಸ್ವಾತಂತ್ರ್ಯಸಂಗ್ರಾಮದಲ್ಲಿನ ಹೋರಾಟ. ಹರಿಜನ ಸೇವಕ ಸಂಘಟನೆಯಲ್ಲಿ ದುಡಿತ ಮತ್ತು ಕನ್ನಡದ ಬಗೆಗಿನ ಪ್ರೀತಿಗಳಲ್ಲಿ ಚಿರಸ್ಮರಣೀಯರು. ಸ್ವಲ್ಪ ಕಾಲ ಸ್ಥಳೀಯ ಪಂಚಾಯತಿಯ ಅಧ್ಯಕ್ಷ ಪದವಿಯನ್ನೂ ಅಲಂಕರಿಸಿದ್ದ ಕಯ್ಯಾರ ಕಿಞ್ಞಣ್ಣ ರೈ ಅವರು ಕೇರಳ ಸಂಗೀತ ನಾಟಕ ಆಕಾಡೆಮಿಯ ಸದಸ್ಯರೂ ಆಗಿದ್ದರು.
ಕಯ್ಯಾರ ಕಿಞ್ಞಣ್ಣ ರೈ ಅವರ ಸಾಹಿತ್ಯಕ ಸಾಧನೆ ವಿವಿಧ ರೂಪಗಳಲ್ಲಿದ್ದು ಶ್ರೀಮುಖ, ಐಕ್ಯಗಾನ, ಪುನರ್ನವ, ಚೇತನ, ಕೊರಗ, ಶತಮಾನದ ಗಾನ, ಗಂಧವತಿ, ಪ್ರತಿಭಾ ಪಯಸ್ವಿನಿ, ಮೊದಲಾದ ಕನ್ನಡ ಕವನ ಸಂಕಲನಗಳನ್ನಲ್ಲದೆ ಒಂದು ತುಳು ಕವನ ಸಂಕಲನವನ್ನೂ ಪ್ರಕಟಿಸಿದ್ದರು. ಕಾರ್ನಾಡ ಸದಾಶಿವರಾವ್, ರತ್ನರಾಜಿ, ಎ. ಬಿ. ಶೆಟ್ಟಿ ಮೊದಲಾದವರ ಜೀವನಚರಿತ್ರೆಗಳನ್ನೂ ಹಾಗು ಕಥಾಸಂಗ್ರಹಗಳನ್ನೂ ಪ್ರಕಟಿಸಿದ್ದರು. ರಾಷ್ಟ...
ತಮ್ಮ ಅಧ್ಯಾಪನ ಮತ್ತು ವಿಫುಲ ಬರವಣಿಗೆಯ ಜೊತೆಗೆ ಪತ್ರಿಕಾ ಸಂಪಾದನೆಯಲ್ಲೂ ತಮ್ಮ ಶ್ರಮದಾನ ನೀಡಿದ್ದ ಕಿಞ್ಞಣ್ಣ ರೈ ಪ್ರಭಾತ, ರಾಷ್ಟ್ರಬಂಧು, ಸ್ವದೇಶಾಭಿಮಾನಿ ಎನ್ನುವ ಕನ್ನಡ ಪತ್ರಿಕೆಗಳಲ್ಲಿ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದರು.
ಕಯ್ಯಾರ ಕಿಞ್ಞಣ್ಣ ರೈ ಅವರಿಗೆ 1969ರಲ್ಲಿ ಶ್ರೇಷ್ಠ ಅಧ್ಯಾಪಕ ಎಂದು ರಾಷ್ಟ್ರಪ್ರಶಸ್ತಿ ಲಭಿಸಿತು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಸಹ ಅದೇ ವರ್ಷ ಕಯ್ಯಾರ ಕಿಞ್ಞಣ್ಣ ರೈ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿತು. ಕರ್ನಾಟಕರ ರಾಜ್ಯೋತ್ಸವ ಪ್ರಶಸ್ತಿ, 1997ರಲ್ಲಿ ಮಂಗಳೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಮಂಗಳೂರು ವಿಶ್ವವಿದ್ಯಾಲಯದ ಡಾಕ್ಟರೇಟ್ ಪದ...
ಈ ಮಹಾನ್ ಕನ್ನಡಪ್ರಿಯ ವಿದ್ವಾಂಸರಾದ ಕಯ್ಯಾರ ಕಿಞ್ಞಣ್ಣ ರೈ ಅವರು ತಮ್ಮ ಶತಾಯುಷ್ಯವನ್ನು ಪೂರೈಸಿದ ಎರಡು ತಿಂಗಳಲ್ಲಿ ಆಗಸ್ಟ್ 9, 2015ರ ದಿನದಂದು ಈ ಲೋಕದ ತಮ್ಮ ಬದುಕಿಗೆ ವಿದಾಯ ಹೇಳಿದರು. ಈ ಮಹಾನ್ ಜೀವ ಕನ್ನಡಿಗರನ್ನು ನಿರಂತರವಾಗಿ ಪ್ರೇರೇಪಿಸುತ್ತಿರಲಿ.
ಸಂಕಷ್ಟದಲ್ಲಿರುವರನ್ನೇ ದೋಚಲು ಯತ್ನ-ಲಕ್ಷದ ಆಸೆ ತೋರಿಸಿ ನಾಲ್ಕು ಸಾವಿರ ಪಡೆಯಲು ಮುಂದಾದ ವ್ಯಕ್ತಿ | ಸುದ್ದಿ ಪುತ್ತೂರು : Undefined index: color in /home/suddinew/public_html/puttur2k16/wp-content/themes/multinews/framework/functions/multinews.php on line 506
ಸಂಕಷ್ಟದಲ್ಲಿರುವರನ್ನೇ ದೋಚಲು ಯತ್ನ-ಲಕ್ಷದ ಆಸೆ ತೋರಿಸಿ ನಾಲ್ಕು ಸಾವಿರ ಪಡೆಯಲು ಮುಂದಾದ ವ್ಯಕ್ತಿ
ಉಪ್ಪಿನಂಗಡಿ: ಅಪಘಾತಕ್ಕೀಡಾಗಿ ಸುಧೀರ್ಘ ಕಾಲದ ಚಿಕಿತ್ಸೆಗೆ ತುತ್ತಾಗಿರುವ ಮಗನ ಚಿಕಿತ್ಸೆಗೆ ಸಹಾಯ ಹಸ್ತ ನೀಡಿ ಎಂದು ಸಾರ್ವಜನಿಕರಲ್ಲಿ ವಿನಂತಿಸಿದ ಬಡಪಾಯಿ ಕುಟುಂಬವೊಂದನ್ನು ದೋಚಲು ಯತ್ನಿಸಿದ ಘಟನೆ ವರದಿಯಾಗಿದೆ.
ಇಲ್ಲಿನ ಪೆರಿಯಡ್ಕ ಕಿಂಡೋವು ಮನೆ ನಿವಾಸಿ ಶೇಖರ್ ಪೂಜಾರಿ ಎಂಬವರ ಮಗ ಕಾಲೇಜು ವಿದ್ಯಾರ್ಥಿ ವಂದಿತ್ ಎಸ್. ಕಳೆದ ಜನವರಿ ತಿಂಗಳಲ್ಲಿ ಬಸ್ಸಿನಿಂದ ಬಿದ್ದು ಗಂಭೀರ ಗಾಯಗೊಂಡು ಚಿಕಿತ್ಸೆಗೆ ಒಳಗಾಗಿದ್ದಾರೆ. ಚಿಕಿತ್ಸೆಗೆ ಹೆಚ್ಚಿನ ಹಣದ ಅಗತ್ಯತೆ ಮೂಡಿದ ಕಾರಣ ದಾನಿಗಳ ಸಹಕಾರ ಬಯಸಿ ಸಾಮಾಜಿಕ ಜಾಲತಾಣಗಳಲ್ಲಿ ಮನವಿಯನ್ನು ಹರಿಯಬಿಡಲಾಗಿತ್ತು.
ಈ ಮನವಿಯನ್ನು ಗಮನಿಸಿದ ವ್ಯಕ್ತಿಯೋರ್ವರು ತಾವು ಗುಲ್ಬರ್ಗದ ಪ್ರಖ್ಯಾತ ದರ್ಗಾವೊಂದರ ಸಾಮಾಜಿಕ ಸೇವಾ ಯೋಜನೆಯ ಪದಾಧಿಕಾರಿ ಎಂದೂ ಪರಿಚಯಿಸಿ, `ನಿಮ್ಮ ಸಮಸ್ಯೆಯನ್ನು ಪರಿಶೀಲಿಸಿ ಸಮಾಜದ ಮುಂದೆ ಪ್ರಸ್ತಾಪಿಸಲಾಗಿತ್ತು. ೧.೯೮ ಲಕ್ಷ ರೂಪಾಯಿ ಸಂಗ್ರಹಣೆಗೊಂಡಿದೆ. ಈ ಮೊತ್ತವನ್ನು ಪಡೆಯಲು ತಾವು ಖುದ್ದಾಗಿ ಬರುವಿರೋ ಅಥವ ನಾವು ಬಂದು ಕೊಡಬೇಕಾ' ಎಂದು ತಿಳಿಸಿದ್ದರು. ೧.೯೮ ಲಕ್ಷದ ದೊಡ್ಡ ಮೊತ್ತ ಸಿಗು...
ಇದೊಂದು ವಂಚನಾ ತಂಡದ ಕೃತ್ಯವೆನ್ನುವುದು ಖಚಿತವಾದೊಡನೆ ಆತನಿಗೆ ಖುದ್ದು ಗುಲ್ಬರ್ಗಕ್ಕೆ ಬರಲು ಕಷ್ಟವಾಗುತ್ತಿದೆ. ನೀವು ಕೊಡುವ ಮೊತ್ತವನ್ನು ಬ್ಯಾಂಕ್ ಖಾತೆಗೆ ವರ್ಗಾಹಿಸಿ ಎಂದು ತಿಳಿಸಲಾಯಿತು. ನಮ್ಮದೇನೇ ಕೊಡುಗೆ ಇದ್ದರೂ ಹಣವನ್ನು ಪಾವತಿಸುವ ಯಾ ಸ್ವೀಕರಿಸುವ ಪೋಟೋ ದಾಖಲೆ ಬೇಕಾಗಿರುವುದರಿಂದ ನಾವೇ ಬಂದು ನಿಮಗೆ ಹಣ ಕೊಡುತ್ತೇವೆ. ಸದ್ಯ ನೀವು ವಾಹನದ ಪೆಟ್ರೋಲ್ ಬಾಬ್ತು ೪೦೦೦ ರೂ. ಮೊತ್ತವನ್...
ಮೊದಲೇ ಸಂಕಷ್ಟದಲ್ಲಿದ್ದು ಅನ್ಯರ ಸಹಾಯ, ಸಹಕಾರ ಪಡೆಯಲು ಯಾಚಿಸುತ್ತಿದ್ದ ಮಂದಿಯನ್ನೂ ಈ ವಂಚಕರ ತಂಡ ವಂಚಿಸಲು ಮುಂದಾಗುತ್ತಿದೆ ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸುವುದು ಅಗತ್ಯ.
Previous : ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಮಲಾಕ್ಷ ರೈ ಹೃದಯಾಘಾತದಿಂದ ನಿಧನ
ಮೋದಿಯನ್ನು ಟೀಕಿಸಿ ಲೇಖನ ಬರೆದಿದ್ದ ಬ್ರಿಟಿಷ್‌ ಪ್ರಜೆ ಆತಿಶ್‌ 'ಒಸಿಐ' ರದ್ದು | Prajavani
ನವದೆಹಲಿ: ಲೇಖಕ ಆತಿಶ್‌ ತಸೀರ್‌ ಅವರಿಗೆ ನೀಡಲಾಗಿದ್ದ ಸಾಗರೋತ್ತರ ಭಾರತೀಯ ಕಾರ್ಡ್‌ (ಒಸಿಐ) ಅನ್ನು ಭಾರತ ಸರ್ಕಾರ ಶುಕ್ರವಾರ ಹಿಂದಕ್ಕೆ ಪಡೆದಿದೆ. ಈ ಬಗ್ಗೆ ನೀಡಲಾದ ನೋಟಿಸ್‌ಗೆ ಆತಿಶ್‌ ಅವರು ಪ್ರತಿಕ್ರಿಯೆ ನೀಡಿಲ್ಲ ಎಂದು ಗೃಹ ಸಚಿವಾಲಯ ಹೇಳಿದೆ. ಆದರೆ, ಅದನ್ನು ಆತಿಶ್‌ ನಿರಾಕರಿಸಿದ್ದಾರೆ.
ಭಾರತದ ಪ್ರಸಿದ್ಧ ಪತ್ರಕರ್ತೆ ತವ್ಲೀನ್‌ ಸಿಂಗ್‌ ಅವರು ಆತಿಶ್‌ ತಾಯಿ.
ಲೋಕಸಭಾ ಚುನಾವಣೆಗೆ ಮೊದಲು 'ಟೈಮ್‌' ನಿಯತಕಾಲಿಕದಲ್ಲಿ ಆತಿಶ್‌ ಅವರು ನರೇಂದ್ರ ಮೋದಿ ಅವರು 'ಭಾರತದ ಮುಖ್ಯ ವಿಭಜಕ' (ಡಿವೈಡರ್‌ ಇನ್‌ ಚೀಫ್‌) ಎಂಬ ತಲೆಬರಹದಲ್ಲಿ ಲೇಖನ ಬರೆದಿದ್ದರು. ಈ ಕಾರಣಕ್ಕಾಗಿಯೇ ಆತಿಶ್‌ ಅವರ ಒಸಿಐ ಅನ್ನು ರದ್ದುಪಡಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಆತಿಶ್‌ ಅವರು ಪಾಕಿಸ್ತಾನಿ ಎಂದು ಆಗ ಮೋದಿ ಅವರು ಪ್ರತಿಕ್ರಿಯೆ ನೀಡಿದ್ದರು. 'ತಾವು ಪಾಕಿಸ್ತಾನದ ರಾಜಕೀಯ ಕುಟುಂಬವೊಂದರಿಂದ ಬಂದವರು ಎಂದು ಆತಿಶ್‌ ಹೇಳಿಕೊಂಡಿದ್ದಾರೆ. ಅವರ ವಿಶ್ವಾಸಾರ್ಹತೆಗೆ ಈ ಹೇಳಿಕಯೇ ಸಾಕು' ಎಂದು ಮೋದಿ ಹೇಳಿದ್ದರು.
ಒಸಿಐಗೆ ಬೇಕಾದ ಮೂಲಭೂತ ಅಗತ್ಯಗಳನ್ನು ಅವರು ಪೂರೈಸಿಲ್ಲ ಮತ್ತು ಕೆಲವು ಮಾಹಿತಿಯನ್ನು ಮುಚ್ಚಿಟ್ಟಿದ್ದಾರೆ. ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ರಾಜ್ಯಪಾಲರಾಗಿದ್ದ ಸಲ್ಮಾನ್‌ ತಸೀರ್‌ ಅವರು ತಮ್ಮ ತಂದೆ ಎಂಬ ಮಾಹಿತಿಯನ್ನು ಆತಿಶ್‌ ಉಲ್ಲೇಖಿಸಿಲ್ಲ ಎಂದು ಗೃಹ ಸಚಿವಾಲಯ ಹೇಳಿದೆ.
ಗೃಹ ಸಚಿವಾಲಯದ ನಿಲುವು ಪ್ರಕಟವಾಗುತ್ತಿದ್ದಂತೆಯೇ ಆತಿಶ್‌ ಅವರು 'ಟೈಮ್‌'ನಲ್ಲಿ ಲೇಖನವೊಂದನ್ನು ಬರೆದಿದ್ದಾರೆ. ತಾವು ಪಾಕಿಸ್ತಾನಿ ಅಲ್ಲ ಮತ್ತು ತಮ್ಮ ತಂದೆಯ ಜತೆಗಿನ ಸಂಬಂಧ ಸಮಸ್ಯಾತ್ಮಕವಾಗಿತ್ತು ಎಂದು ಈ ಲೇಖನದಲ್ಲಿ ಹೇಳಿದ್ದಾರೆ.
'21 ವರ್ಷ ವಯಸ್ಸಾಗುವವರೆಗೆ ನನಗೆ ತಂದೆಯ ಜತೆಗೆ ಯಾವುದೇ ಸಂಪರ್ಕ ಇರಲಿಲ್ಲ. ನಾನು ಹುಟ್ಟಿದ್ದು ಬ್ರಿಟನ್‌ನಲ್ಲಿ ಮತ್ತು ಅಲ್ಲಿನ ಪೌರತ್ವವನ್ನು ಹೊಂದಿದ್ದೇನೆ. ಎರಡನೇ ವಯಸ್ಸಿನಿಂದ ನಾನು ಬೆಳೆದದ್ದು ಭಾರತದದಲ್ಲಿ. ನನ್ನ ತಾಯಿ ಭಾರತೀಯ ಪ್ರಜೆ ಮತ್ತು ಪ್ರಸಿದ್ಧ ಪ‍ತ್ರಕರ್ತೆ. ಅವರೊಬ್ಬರೇ ನನ್ನನ್ನು ದೆಹಲಿಯಲ್ಲಿ ಬೆಳೆಸಿದರು' ಎಂದು ಆತಿಶ್‌ ಬರೆದಿದ್ದಾರೆ.
ತಮಗೆ ಆಧಾರ್‌ ಸಂಖ್ಯೆ ಇದೆ, ಭಾರತದ ಬ್ಯಾಂಕುಗಳಲ್ಲಿ ಖಾತೆಗಳಿವೆ ಮತ್ತು ಅಲ್ಲಿ ತೆರಿಗೆಯನ್ನೂ ಪಾವತಿಸಿದ್ದೇನೆ ಎಂದೂ ಅವರು ಹೇಳಿದ್ದಾರೆ. ನೋಟಿಸ್‌ಗೆ ತಾವು ನೀಡಿದ್ದ ಪ್ರತಿಕ್ರಿಯೆಗೆ ಗೃಹ ಸಚಿವಾಲಯವು ಕೊಟ್ಟ ಸ್ವೀಕೃತಿ ಪತ್ರವನ್ನು ಅವರು ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ.
ಸರ್ಕಾರದ ನಿಲುವಿಗೆ ಟೀಕೆ
ಒಸಿಐ ರದ್ದತಿಗೆ ಟೀಕೆ ವ್ಯಕ್ತವಾಗಿದೆ. ಸರ್ಕಾರದ ಕ್ರಮವನ್ನು ಟ್ವಿಟರ್‌ ಮತ್ತು ಇತರ ವೇದಿಕೆಗಳಲ್ಲಿ ಖಂಡಿಸಲಾಗಿದೆ
ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ)
ಟೀಕೆಗಳ ಬಗ್ಗೆ ಬಿಜೆಪಿಗೆ ಅಸಹಿಷ್ಣುತೆ ಇದೆ ಮತ್ತು ಮಾಧ್ಯಮ ಸ್ವಾತಂತ್ರ್ಯವನ್ನು ಆ ಪಕ್ಷ ಒಪ್ಪಿಕೊಳ್ಳುವುದಿಲ್ಲ ಎಂಬುದನ್ನು ವಿಮರ್ಶಾತ್ಮಕವಾದ ಲೇಖನವನ್ನು ಪ‍್ರಕಟಿಸಿದ ಬಳಿಕ ಪತ್ರಕರ್ತನನ್ನು ಗುರಿ ಮಾಡಿದ್ದು ತೋರಿಸುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ಹೊಂದಿರುವ ವರ್ಚಸ್ಸಿಗೆ ಇದು ಧಕ್ಕೆ ಉಂಟು ಮಾಡುತ್ತದೆ. ಆತಿಶ್‌ ಬಗ್ಗೆ ನೀಡಿದ ನಿರ್ದೇಶನವನ್ನು ತಕ್ಷಣವೇ ಹಿಂದಕ್ಕೆ ಪಡೆಯಬೇಕು ಮ...
-ಸ್ಟೀವನ್‌ ಬಟ್ಲರ್‌, ಸಿಪಿಜೆ ಏಷ್ಯಾ ಕಾರ್ಯಕ್ರಮ ಸಂಯೋಜಕ
ಟೀಕಿಸಿದವರ ದಮನ
ತಮ್ಮ ಅಂಕಣಗಳಲ್ಲಿ ತವ್ಲೀನ್‌ ಅವರು ನನ್ನನ್ನು ಆಗಾಗ ಟೀಕಿಸಿದ್ದಾರೆ. ಆದರೆ, ಗೃಹ ಸಚಿವಾಲಯವು ಆತಿಶ್‌ ಅವರ ಒಸಿಐ ರದ್ದು ಮಾಡಿದ್ದನ್ನು ನಾನು ಖಂಡಿಸುತ್ತೇನೆ. ಏನೇ ಆದರೂ, ಇದು ನಿರೀಕ್ಷಿತ. ವಿಮರ್ಶಾತ್ಮಕ ಧ್ವನಿಗಳ ಮೇಲೆ ಬೇಹುಗಾರಿಕೆ ನಡೆಸಲಾಗುತ್ತದೆ, ಕಿರುಕುಳ ನೀಡಲಾಗುತ್ತದೆ ಮತ್ತು ದಮನ ಮಾಡಲಾಗುತ್ತದೆ. ನಿರಂಕುಶಾಧಿಕಾರಕ್ಕೆ ಇನ್ನೊಂದು ಹೆಸರೇ ಗೃಹ ಸಚಿವ ಅಮಿತ್‌ ಶಾ.
-ಜೈರಾಂ ರಮೇಶ್‌, ಕಾಂಗ್ರೆಸ್ ಮುಖಂಡ
ವಕ್ತಾರನಿಂದ ಸುಳ್ಳು ಹೇಳಿಕೆ
ಸರ್ಕಾರದ ಅಧಿಕೃತ ವಕ್ತಾರನೇ ಸುಳ್ಳು ಹೇಳಿಕೆ ನೀಡಿದ್ದು ನೋಡಿ ನೋವಾಯಿತು. ಎಷ್ಟೊಂದು ಸುಲಭವಾಗಿ ಬಯಲು ಮಾಡಬಹುದಾದಂತಹ ಸುಳ್ಳು ಅದು. ನಮ್ಮ ‍ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ನಡೆಯುತ್ತಿದೆ ಎಂಬುದು ಇನ್ನೂ ನೋವಿನ ವಿಚಾರ. ಪತ್ರಕರ್ತನೊಬ್ಬನ ಮುಂದೆ ಹೆದರಿ ನಿಲ್ಲುವಷ್ಟು ನಮ್ಮ ಸರ್ಕಾರ ದುರ್ಬಲವಾಗಿದೆಯೇ?
-ಶಶಿ ತರೂರ್, ಕಾಂಗ್ರೆಸ್‌ ಮುಖಂಡ
ಟೀಕೆ ಸಹಿಸುವುದಿಲ್ಲ
ಸತ್ಯವನ್ನು ಮುಚ್ಚಿಡಲಾಗಿದೆಯೇ? ತಮ್ಮ ಹಿನ್ನೆಲೆಯ ಬಗ್ಗೆ ಆತಿಶ್‌ ಅವರು ಪುಸ್ತಕವನ್ನೇ ಬರೆದಿದ್ದಾರೆ. ಸರ್ಕಾರವು ಟೀಕೆಯನ್ನು ಸಹಿಸಿಕೊಳ್ಳುವುದಿಲ್ಲ ಎಂಬ ಕಾರಣಕ್ಕಾಗಿ ಉಪಖಂಡದ ಅತ್ಯುತ್ತಮ ಬರಹಗಾರನೊಬ್ಬನ ರಾಷ್ಟ್ರೀಯತೆಯನ್ನು ರದ್ದು ಮಾಡಲಾಗಿದೆ. ಆತಿಶ್‌ ಮುಸ್ಲಿಂ ಎಂಬುದನ್ನು ತೋರಿಸುವುದಕ್ಕಾಗಿಯೇ ಅವರ ಹೆಸರಿನ ಜತೆಗೆ 'ತಸೀರ್‌' ಎಂದು ಉಲ್ಲೇಖಿಸಲಾಗಿದೆ.
-ಒಮರ್‌ ವಾರೈಚ್‌, ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ಉಪ ನಿರ್ದೇಶಕ (ದಕ್ಷಿಣ ಏಷ್ಯಾ)
ಮೋದಿ ನೇತೃತ್ವದ ಸರ್ಕಾರವು ಆತಿಶ್‌ ಅವರ ಒಸಿಐ ರದ್ದು ಮಾಡಿರುವುದು ನಿಜಕ್ಕೂ ಕಳವಳ ಮೂಡಿಸಿದೆ. ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರವಾದರೆ, ಮೋದಿ ಟೀಕಾಕಾರರನ್ನು ಇನ್ನೂ ಕಠಿಣವಾಗಿ ಶಿಕ್ಷಿಸುವ ಅಧಿಕಾರ ಸರ್ಕಾರಕ್ಕೆ ದೊರೆಯಲಿದೆ.
-ಕವಿತಾ ಕೃಷ್ಣನ್‌, ಸಿಪಿಐ (ಎಂಎಲ್‌) ಪಾಲಿಟ್‌ಬ್ಯೂರೊ ಸದಸ್ಯೆ
ಆತಿಶ್‌ನ ತಾಯಿ ಯಾವಾಗಲೂ ಭಾರತೀಯ ಪ್ರಜೆ. ಗೃಹ ಸಚಿವರಿಗೆ ಇಷ್ಟವಾಗದ್ದನ್ನು ಬರೆಯುವವರೆಗೆ ಭಾರತದಲ್ಲಿ ನೆಲೆಸುವ ಆತನ ಹಕ್ಕನ್ನು ಯಾರೂ ಪ್ರಶ್ನಿಸಿರಲಿಲ್ಲ.
ಜನಪದ ಸಾಹಿತ್ಯದಲ್ಲಿದೆ ಮಾನವೀಯ ಮೌಲ್ಯ | Udayavani – ಉದಯವಾಣಿ
ಜನಪದ ಸಾಹಿತ್ಯದಲ್ಲಿದೆ ಮಾನವೀಯ ಮೌಲ್ಯ
Team Udayavani, Aug 25, 2020, 5:52 PM IST
ಬೀದರ: ಜನಪದ ಸಾಹಿತ್ಯದಲ್ಲಿ ಮಾನವೀಯ ಮೌಲ್ಯ ಅಡಗಿವೆ. ಜನಪದ ಸತ್ಯ ಸಂಗತಿಗಳನ್ನೇ ಒಳಗೊಂಡಿದ್ದು, ಅಲ್ಲಿ ಕಾಲ್ಪನಿಕತೆಗೆ ಅವಕಾಶವಿಲ್ಲ. ಹಾಗಾಗಿ ಈ ಸಾಹಿತ್ಯ ಅಷ್ಟೊಂದು ವಿಶೇಷತೆ ಪಡೆದುಕೊಂಡಿದೆ ಎಂದು ಗುಲ್ಬರ್ಗಾ ವಿವಿ ನೂತನ ಸಿಂಡಿಕೇಟ್‌ ಸದಸ್ಯೆ ಪ್ರತಿಭಾ ಚಾಮಾ ಹೇಳಿದರು.