text
stringlengths
0
61.5k
ಅವರು ಹೀಗೆ ಹಾಸಿಗೆ ಹಿಡಿದಿದ್ದಾಗ ಸರ್ಕಾರ ಅವರನ್ನು ಹಿರಿಯ ಕಲಾವಿದರೆಂದು ಪರಿಗಣಿಸಿತು! ಕೇಂದ್ರದ ಲಲಿತಕಲಾ ಅಕ್ಯಾಡೆಮಿ ಅವರನ್ನು ಮಹಾಪುರುಷರೆಂದು ಸನ್ಮಾನಿಸಿತು. ರಾಜ ಸರ್ಕಾರ ಅವರ ಕಲಾಕೃತಿಗಳನ್ನು ಕೊಳ್ಳುವ ಮನಸ್ಸು ಮಾಡಿತು. ಅಕ್ಯಾಡೆಮಿಯ ಸನ್ಮಾನಕ್ಕೆ ಅವರು ದಿಲ್ಲಿಗಾಗಲೀ ಮತ್ತೆಲ್ಲಿ ಗಾಗಲೀ ಹೋಗುವ ಸ್ಥಿತಿಯಲ್ಲಿರಲಿಲ್ಲ. ದಿಲ್ಲಿಯಿಂದ ಅಧಿಕಾರಿಗಳು ಅವರ ಮನೆಗೇ ಬಂದು ಅವರು ಇದ್ದಲ್ಲಿಯೇ ...
ಸರ್ಕಾರದ ಮತ್ತು ಜನಗಳ ದೃಷ್ಟಿಗೆ ಬಿದ್ದಮೇಲೆ ಅವರು ಬಹುದಿನ ಬಾಳಲಿಲ್ಲ. ಸನ್ಮಾನ ಸಮಾರಂಭಗಳ ಗದ್ದಲ ಮುಗಿದೊಡನೆ ತಮ್ಮ ಏಕಾಂತಕ್ಕೆ ಹಿಂತಿರುಗಿ, ಕೆಲ ತಿಂಗಳುಗಳು ತೀರ ಅಸ್ವಸ್ಥರಾಗಿದ್ದು ತೀರಿಕೊಂಡರು.
ವೆಂಕಟ್ಪಪ್ಪ ಆರ್ಟ್ ಗ್ಯಾಲರಿ
ಅವರ ಕಡೆಗಾಲದಲ್ಲಿ ಅವರನ್ನು ನೋಡಿ ಕೊಳ್ಳುತ್ತಿದ್ದವರು ಅವರ ತಂಗಿ ಮತ್ತು ಆಕೆಯ ಮಕ್ಕಳು ರಾಮರಾಜು. ಅವರು ತೀರಿಕೊಂಡ ಮೇಲೆ ಅವರ ಕಲಾಕೃತಿಗಳನ್ನೆಲ್ಲ ಎಚ್ಚರದಿಂದ ಕಾಯ್ದುಕೊಂಡು, ಸರ್ಕಾರ ದೊಂದಿಗೆ ವ್ಯವಹಾರ ನಡೆಸಿ, ಯೋಗ್ಯವಾದ ವ್ಯವಸ್ಥೆ ಆಗುವ ಭರವಸೆ ಮೂಡಿದೊಡನೆ, ಕಲಾಕೃತಿ ಗಳನ್ನೆಲ್ಲ ರಾಜ್ಯ ಸರ್ಕಾರದ ವಸ್ತು ಸಂಗ್ರಹಾಲಯದ ವಶಕ್ಕೆ ಒಪ್ಪಿಸಿ ದವರು ರಾಮರಾಜು. ಈಗ ವಸ್ತು ಸಂಗ್ರಹಾಲಯದ ಪಕ್ಕ ದಲ...
ಪ್ಲಾಸ್ಟರ್ ಶಿಲ್ಪ ಫಲಕಗಳು ಉಬ್ಬು ಚಿತ್ರಗಳು, ಪ್ಲಾಸ್ಟರ್ ಆಫ್ ಪ್ಯಾರಿಸ್ ಎಂಬ ಬಿಳಿಮಣ್ಣಿನಿಂದ ಸಿದ್ಧ ಪಡಿಸಿದ ಹಲಗೆಯ ಮೇಲೆ ಸುಮಾರು ಎರಡಂಗುಲಕ್ಕೂ ಕಡಿಮೆ ಉಬ್ಬಿರುವಂತೆ ಹಲವು ದೃಶ್ಯಗಳನ್ನು ಕಡೆದಿರುವುದನ್ನು ಇಲ್ಲಿ ಕಾಣಬಹುದು. ಉಬ್ಬು ತೀರ ಲಘುವಾದುದರಿಂದ ನೆರಳು ಬೆಳಕುಗಳ ಚೆಲ್ಲಾಟ ದೃಶ್ಯಗಳ ಸೊಬಗನ್ನೂ ಸ್ವಾರಸ್ಯವನ್ನೂ ಸ್ಪಷ್ಟಪಡಿಸುತ್ತದೆ. ವೆಂಕಟಪ್ಪನ ವರು ಆರಿಸಿಕೊಂಡಿರುವ ಪ್ರಸಂಗಗಳು...
ಜಲವರ್ಣ ಚಿತ್ರಗಳಲ್ಲಿ ನಿಸರ್ಗ ದೃಶ್ಯಗಳೇ ಹೆಚ್ಚು. ಅದೂ ನೀಲಗಿರಿ ಬೆಟ್ಟದ ಹಿನ್ನೆಲೆಯಲ್ಲಿ ಉದಕಮಂಡಲ, ಕೂನೂರುಗಳಲ್ಲಿ ಆರಿಸಿಕೊಂಡವು. ಈ ಪ್ರದೇಶಗಳಲ್ಲಿ ಅವರು ಸಾವಧಾನವಾಗಿ ತಂಗಿದ್ದು, ಪ್ರಕೃತಿಯ ರೂಪುರೇಷೆಗಳನ್ನು ಚೆನ್ನಾಗಿ ಗಮನಿಸಿ, ಸೂರ್ಯನು ಹುಟ್ಟುವಾಗ ಮುಳುಗುವಾಗ ಪ್ರಕೃತಿಯಲ್ಲಿ ಒದಗುವ ಮಾರ್ಪಾಟುಗಳನ್ನು ಅರಿತುಕೊಂಡು ಅಂಥ ನಿಸರ್ಗದಲ್ಲಿ ಸೇರಿಬಂದ ಮನೆಯ ಸೂರು, ಗಿಡಮರಗಳ ಸಾಲು, ಬೀದಿ ...
ಅವರೇ ಮಾಡಿದ ವೀಣೆ
ವೀಣೆ ಅವರಿಗೆ ತುಂಬ ಪ್ರಿಯವಾದ ವಾದ್ಯವಷ್ಟೇ. ಆದರೆ ಸಾಮಾನ್ಯವಾಗಿ ಜನ ನುಡಿಸುವ ವೀಣೆ ಸಂಪ್ರದಾಯ ಶುದ್ಧವಾದುದಲ್ಲವೆಂದು ಅವರ ಹಠ. ಶಾಸ್ತ್ರದಲ್ಲಿ ಹೇಳಿರುವಂತೆ ತಾವೇ ಒಂದು ವೀಣೆಯನ್ನು ಸಿದ್ಧಪಡಿಸಿದರು. ಇದು ಸಾಮಾನ್ಯವಾಗಿ ಕಾಣಸಿಗುವ ವೀಣೆಗಿಂತ ದೊಡ್ಡದು, ಉದ್ದವಾದುದು. ಮೀಟಿದರೆ ಶುದ್ಧವಾದ ನಾದಸಂಪತ್ತಿನಿಂದ ಮೊರೆಯುತ್ತದೆ. ಈ ವೀಣೆಯನ್ನೂ ಆರ್ಟ್ ಗ್ಯಾಲರಿಯಲ್ಲಿಟ್ಟಿದ್ದಾರೆ. ಇದಕ್ಕೆ ವಿವರಣ...
ಕಲಾತಪಸ್ವಿ
ವೆಂಕಟಪ್ಪನವರನ್ನು ತಿಳಿದವರು 'ಕಲಾತಪಸ್ಸಿ' ಯೆಂದು ಕರೆದರು. ಇದು ಸರಿಯಾದ ಹೆಸರು. ಅವರು ಬಾಳಿದ ರೀತಿಗೂ ತಳೆದ ನಿಲುವಿಗೂ ಒಪ್ಪುವಂಥದು. ಅವರ ಬದುಕಿನಲ್ಲಿ ಕಲೆಯೊಂದನ್ನು ಬಿಟ್ಟರೆ ಅವರಿಗೆ ಬೇರೆ ಯಾವ ಆಸಕ್ತಿಯೂ ಇರಲಿಲ್ಲ. ಆದರೆ ಕಲೆಯನ್ನು ಅವರು ಲೌಕಿಕ ವ್ಯವಹಾರಕ್ಕೆ ದಾರಿಯೆಂದಾಗಲೀ ಹಣ ಸಂಪಾದಿಸುವುದಕ್ಕೆ ಸಾಧನವೆಂದಾಗಲೀ ಎಂದೂ ಎಣಿಸಿ ರಲಿಲ್ಲ. ದಿಟವಾಗಿ ಅವರು ಹಣಕ್ಕಾಗಿ ಅಥವಾ ಹೆಸರಿಗಾಗಿ ...
ಕೆಲವೊಮ್ಮೆ ಈ ನಿಯಮಗಳನ್ನು ಅತಿರೇಕ ವೆಂಬಂತೆ ಅನುಸರಿಸುತ್ತಿದ್ದರು. ಒಂದು ನಿದರ್ಶನ ಸ್ವಾರಸ್ಯ ವಾದುದು. ಇವರು 'ಅಂಗುಲಿಪ್ರದಾನ' ಎಂಬ ಪ್ಲಾಸ್ಟರ್ ಶಿಲ್ಪಫಲಕವೊಂದನ್ನು ಸಿದ್ಧಪಡಿಸಿದ್ದರು. ರಾಮನ ಉಂಗುರ ವನ್ನು ಅವನ ಬಂಟ ಹನುಮಂತನು ಸೀತಾದೇವಿಗೆ ಅಶೋಕವನದಲ್ಲಿ ಕೊಡುತ್ತಿರುವ ಪ್ರಸಂಗ ಇದರಲ್ಲಿ ಚಿತ್ರಿತವಾಗಿದ್ದಿತು. ಅದರ ಛಾಯಾಚಿತ್ರವೊಂದನ್ನು ಬಂಗಾಳಿಯ 'ಉದ್ಭೋಧನ' ಎಂಬ ಪತ್ರಿಕೆ ತನ್ನ ಒಂದು ...
ಸಂಪಾದಕರು ವೆಂಕಟಪ್ಪನವರ ಪತ್ರವನ್ನು ಗಣನೆಗೆ ತಂದುಕೊಳ್ಳಲಿಲ್ಲ. ಮುಂದಿನ ಸಂಚಿಕೆಯಲ್ಲಿ ತಪ್ಪನ್ನು ಒಪ್ಪಿಕೊಳ್ಳಲೂ ಇಲ್ಲ, ಸರಿಯಾದ ಚಿತ್ರವನ್ನು ಅಚ್ಚು ಮಾಡಲೂ ಇಲ್ಲ. ವೆಂಕಟಪ್ಪನವರು ಇನ್ನೂ ಸಿಟ್ಟಿಗೆದ್ದು, ಇದರಿಂದ ಕಲಾವಿದನಿಗೆ ಅಪಮಾನವಾಗಿದೆ ಯೆಂದೂ ತಮ್ಮ ಚಿತ್ರವನ್ನು ಜನರು ಮೂದಲಿಸುವಂತೆ ಅಚ್ಚು ಮಾಡಿದ್ದಾರೆಂದೂ ಪತ್ರಿಕೆಯ ಸಂಪಾದಕರ ಮೇಲೆ ನ್ಯಾಯಾಲಯದಲ್ಲಿ ತಕರಾರು ಹೂಡಿದರು. ವಿಚಾರಣೆ ನ...
ವೆಂಕಟಪ್ಪನವರ ನ್ಯಾಯನಿಷ್ಠುರತೆಯ ನಿದರ್ಶನ ಇದು. ತಪ್ಪೆಂದು ತಮಗೆ ಅನಿಸಿದುದನ್ನು ಅದರಿಂದ ತಮಗೆ ಎಷ್ಟೇ ತೊಂದರೆಯಾದರೂ ಮಾಡರು; ತಮ್ಮ ವಿಚಾರವಾಗಿ ತಪ್ಪನ್ನು ಬೇರೆಯವರಲ್ಲಿ ಸಹಿಸರು. ತಾವಾಗಿ ಯಾರನ್ನೂ ಟೀಕಿಸರು, ನಿಂದಿಸರು; 'ಅವರ ಪಾಡು, ನನಗೇಕೆ?' ಎಂದು ಸುಮ್ಮನಿರುವರು. ಆದರೆ ತಮಗೆ ಸಂಬಂಧಿಸಿದಂತೆ ಯಾರಾದರೂ ಸರಿಯಾಗಿ ನಡೆದು ಕೊಳ್ಳದಿದ್ದರೆ ಸುಮ್ಮನೆ ಬಿಡುವವರಲ್ಲ ಈ ಸಂದರ್ಭದಲ್ಲಿ ಇವರು ರಾ...
ವೈಯಕ್ತಿಕವಾಗಿ ಅವರು ಯಾರಿಂದಲೂ ಏನನ್ನೂ ಬಯಸುತ್ತಿರಲಿಲ್ಲವಾದುದರಿಂದ, ತಮ್ಮ ವಿಚಾರ ವಾಗಿ ಏನಾದರೂ ಅಪಚಾರ ನಡೆದರೆ ಅದು ಕಲೆಗೆ ಅಪಚಾರವೆಂದೇ ಅವರು ಬಗೆಯುತ್ತಿದ್ದರು. ಅದನ್ನು ಅವರು ಎಷ್ಟು ಮಾತ್ರವೂ ಸಹಿಸುತ್ತಿರಲಿಲ್ಲ. ಕಲೆ ಅವರ ಪಾಲಿನ ದೇವತೆ; ಅವರ ಸರ್ವಸ್ವ. ತಾವು ಬದುಕಿನುದ್ದಕ್ಕೂ ಕಲೆಯ ವಿದ್ಯಾರ್ಥಿ, ಕಲಾಸಾಧಕ ಎಂದೇ ನಂಬಿದ್ದರು. ಅವರು ತಮ್ಮನ್ನು ತಾವು ಪತ್ರವ್ಯವಹಾರಗಳಲ್ಲಿ ಕರೆದು ಕೊ...
ಕಲೆಯನ್ನು ಯಾವ ಅಡ್ಡಿ ಆತಂಕವೂ ಇಲ್ಲದಂತೆ ಅಭ್ಯಾಸ ಮಾಡಲೆಂದೇ ಅವರು ಒಂಟಿಯಾಗಿ ಉಳಿದರು; ನೆಂಟರನ್ನೂ ದೂರ ಮಾಡಿದರು; ಜನರನ್ನು ಹತ್ತಿರ ಸೇರಿಸಲಿಲ್ಲ. ತಪಸ್ಸಿಗೆ ಬೇಕಾದ ಏಕಾಂತವಾಸ, ಏಕಾಗ್ರಚಿತ್ತ, ಎಡೆಬಿಡದ ಅಭ್ಯಾಸ ಇವನ್ನು ಅವರು ತಮ್ಮ ಬದುಕಿನಲ್ಲಿ ರೂಢಿಸಿಕೊಂಡರು. ಹಾಗೆಂದೇ ಅವರಿಗೆ 'ಕಲಾತಪಸ್ವಿ' ಎನ್ನುವುದು ಸಾರ್ಥಕವಾದ ಹೆಸರಾಯಿತು.
ಶಿಕ್ಷಣದ ಕಷ್ಟ
ಕಲೆಯನ್ನು ಅವರು ತಪಸ್ಸಿನಂತೆ ಬಗೆದುದರಿಂದ ಕಲೆಯ ಅಭ್ಯಾಸ ಸಡಿಲವಾಗಿರಬಾರದು, ಕ್ರಮವಿಲ್ಲದಿರ ಬಾರದು ಎಂದು ಅವರ ಹಠ. ಕಲೆಯನ್ನು ಕಲಿಯುವುದು ಕಷ್ಟವೆಂದೂ, ನಿಷ್ಠೆಯಿಲ್ಲದಿದ್ದರೆ ಅದು ದಕ್ಕುವುದಿಲ್ಲವೆಂದೂ ಅವರು ಮತ್ತೆ ಮತ್ತೆ ಹೇಳುತ್ತಿದ್ದರು. ಸಂಪ್ರದಾಯದಲ್ಲಿ ಶ್ರದ್ಧೆಯಿಲ್ಲದಿದ್ದರೆ ಕಲೆಗೆ ಅರ್ಥವಿಲ್ಲವೆಂದು ಅವರ ವಾದ.
ಅವರು ಏಕಾಂಗಿಯಾಗಿ, ನಿಷ್ಠುರರಾಗಿ ಇರುತ್ತಿದ್ದರೆಂದ ಮಾತ್ರಕ್ಕೆ ಅವರು ಕಲೆಯನ್ನು ಯಾರಿಗೂ ಕಲಿಸಬಾರದೆಂದು ನೆನೆಸಿರಲಿಲ್ಲ. ಯಾರಿಗಾದರೂ ಚಿತ್ರಕಲೆ ಯನ್ನು ಹೇಳಿಕೊಡಲು ಸಿದ್ಧರಾಗಿದ್ದರು. ದಿಟವಾಗಿ, ಅಂಥ ವಿದ್ಯಾರ್ಥಿಗಳು ಯಾರಾದರೂ ಬಂದಾರೋ ಎಂದು ಎದುರು ನೋಡುತ್ತಿದ್ದರು. ವಿದ್ಯಾರ್ಥಿಗಳಿಂದ ಅವರು ಹಣ ವನ್ನು ಬಯಸುತ್ತಿರಲಿಲ್ಲ. ಕಲೆಯನ್ನು ಕಲಿಯುವವರಿಗೆ ಮಾರಲಾರೆ ಎನ್ನುತ್ತಿದ್ದರು. ಅವರು ತೆರ...
ಹೀಗಾದರೂ ವಿದ್ಯಾರ್ಥಿಗಳೇಕೆ ಅವರ ಸುತ್ತ ನೆರೆಯಲಿಲ್ಲ? ಅದಕ್ಕೆ ಕಾರಣ, ಅವರ ಶಿಕ್ಷಣವಿಧಾನದ ನಿಷ್ಠುರತೆ. ಯಾರಾಗಲೀ ಅವರಲ್ಲಿ ಕಲಿಯಬೇಕೆಂದರೆ ಗೆರೆ ಎಳೆಯುವುದರಿಂದ ಆರಂಭಿಸಬೇಕು, ಅವರು ಹಾಕಿದ ದಾರಿಯಲ್ಲೇ ಇಷ್ಟೂ ತಪ್ಪದೆ ಸಾಗಬೇಕು. 'ಕಲೆಯ ಗುಟ್ಟು ಬೇಗನೆ ಕೈಗೂಡಲಿ,' 'ಕಲಿತದ್ದನ್ನು ಗಳಿಕೆಗೆ ಬಳಸು ವಂತಾಗಲಿ' ಎಂದು ಮೊದಲಾಗಿ ಆಲೋಚನೆ ಮಾಡಿದರೆ ಕಲೆಯ ಸಿದ್ಧಿ ತುಂಬ ದೂರವೇ. ವಿದ್ಯಾರ್ಥಿಗಳು ಎ...
ತಾವು ಕಲಿತಂತೆಯೇ, ಅಷ್ಟೇ ನಿಷ್ಠೆಯಿಂದ ಅಷ್ಟೇ ಕಷ್ಟಪಟ್ಟು, ಇತರರೂ ಕಲಿಯಲಿ ಎಂದು ಅವರ ಹಂಬಲ. ತಮ್ಮ ಬಳಿ ಬಂದು ಯಾರೂ ಕಲಿಯುವುದಿಲ್ಲವೆಂಬ ದುಗುಡವೂ ಅವರಿಗೆ ಇರಲಿಲ್ಲ. 'ನಿಷ್ಠೆಯಾಗಲೀ ಆದರ ವಾಗಲೀ ಇಲ್ಲದ ಜನ ಕಲೆಯನ್ನು ಕಲಿಯದಿದ್ದರೆ ಯಾರಿಗೂ ನಷ್ಟವಿಲ್ಲ; ಕಲೆಯನ್ನು ಪೋಲು ಮಾಡಲಾರೆ' ಎಂದು ಅವರು ಸಮಾಧಾನದಿಂದಿದ್ದರು. ಕಲಿಯುವು ದಾದರೆ ಸರಿಯಾಗಿ, ಕ್ರಮಬದ್ಧವಾಗಿ, ಬೇರೆ ಯಾವ ವ್ಯಸನವೂ ಇಲ್ಲದೆ...
ಅವರ ಬಳಿ ಒಬ್ಬ ವಿದ್ಯಾರ್ಥಿಯೂ ಬರಲೇ ಇಲ್ಲ ವೆಂದಲ್ಲ, ಕೆಲವರು ಬಂದು ಅವರ ದಾರಿಯಲ್ಲಿ ಸಾಗಲು ಯತ್ನಿಸಿ ಸಾಗದೆ ಕೈಬಿಟ್ಟರು. ಮತ್ತೆ ಕೆಲವರು ಉತ್ಸಾಹ ದಿಂದ ಬಂದು ಅವರ ನಿಯಮಗಳಿಗೆ ಬೆಚ್ಚಿಬಿದ್ದು ಹಿಂದಕ್ಕೆ ಸರಿದರು. ಒಬ್ಬ ವಿದ್ಯಾರ್ಥಿ ಮಾತ್ರ ಅವರಂತೆಯೇ ನಿಷ್ಠೆ ಯಿಂದ, ನಿಯಮದಿಂದ ಕೆಲವು ವರ್ಷಗಳ ಕಾಲ ಅವರಲ್ಲಿ ಶಿಷ್ಯವೃತ್ತಿ ಮಾಡಿದ. ಅವನು ತೆಲುಗು ದೇಶದ ರಾಮಮೋಹನ ಶಾಸ್ತ್ರಿ ಎಂಬಾತ. ಆದರೆ ಪ...
ಸಂತೋಷಕ್ಕಾಗಿ ವೀಣಾವಾದನ
ಚಿತ್ರಕಲೆಯನ್ನು ಕಲಿಸಲು ಅವರು ಸಿದ್ಧರಾಗಿ ದ್ದರೂ ವೀಣೆಯ ನುಡಿಸಾಣಿಕೆಯನ್ನು ಯಾರಿಗೂ ಕಲಿಸಲು ಒಪ್ಪಲಿಲ್ಲ. ವೈಣಿಕ ಶಿಖಾಮಣಿ ಶೇಷಣ್ಣನವರ ಅಚ್ಚುಮೆಚ್ಚಿನ ಶಿಷ್ಯನೆಂದ ಮೇಲೆ ಅವರ ಪ್ರೌಢಿಮೆಯ ಬಗ್ಗೆ ಹೇಳಬೇಕೆ? ಶೇಷಣ್ಣನವರು ಬದುಕಿದ್ದಾಗ ಆಗಾಗ ಕೆಲವರು ಶಿಷ್ಯರಿಗೆ ವೆಂಕಟಪ್ಪನೇ ಹೇಳಿಕೊಡಲಿ ಎಂದು ಅಪ್ಪಣೆ ಮಾಡುತ್ತಿದ್ದರು. ಅಂಥ ಸಂದರ್ಭಗಳನ್ನು ಬಿಟ್ಟರೆ ಅವರು ವೀಣಾವಾದನವನ್ನು ಯಾರಿಗೂ ಹೇಳಿಕೊಡ...
ಅವರ ಆದರ್ಶ
ಒಟ್ಟಿನಲ್ಲಿ, ವೆಂಕಟಪ್ಪನವರ ಬದುಕಿನ ತಾತ್ಪರ್ಯ ವೇನು? ಕಲೆಗಾಗಿಯೇ ಮುಡಿಪಿಟ್ಟ ಬದುಕು ಅವರದ್ದು. ಚಿತ್ರ, ಶಿಲ್ಪ, ಸಂಗೀತ ಮೂರೂ ಪ್ರಕಾರಗಳಲ್ಲಿ ಅವರು ಪಡೆದಿದ್ದ ಸಿದ್ಧಿ ಯಾರನ್ನಾದರೂ ಬೆರಗು ಮಾಡುವಂಥದು. ಕಲೆಯೆಂದರೆ ಖುಷಿಗೆ ಸಾಧನ ಎಂದು ಕಲ್ಪನೆಯಿರುವ ಕಾಲದಲ್ಲಿ ಕಲೆಯೆನ್ನುವುದು ತಪಸ್ಸು ಎಂದು ತೋರಿಸಿ ಕೊಟ್ಟವರು ಅವರು. ಬಾಳುವೆಯಲ್ಲಿ ನಿಯಮ ವಿಲ್ಲದೆ ಯಾವ ಸಿದ್ಧಿಯನ್ನೂ ಪಡೆಯುವುದು ಸಾಧ್ಯ...
ವೆಂಕಟಪ್ಪನವರು ಬದುಕಿದ ಬಗೆ, ಅವರು ತಮ್ಮ ವೃತ್ತಿಯಲ್ಲಿ ಗಳಿಸಿದ ಯಶಸ್ಸು, ತಮ್ಮ ಸಾಧನೆಗಳಲ್ಲಿ ಪಡೆದ ಜಯ, ತಮ್ಮ ಬಾಳಿನಿಂದ ಕಂಡುಕೊಂಡ ಸಮಾಧಾನ ಇವೆಲ್ಲಕ್ಕೂ ಅವರ ವ್ರತನಿಷ್ಠೆಯೇ ಅಡಿಗಲ್ಲು. ಯಾವುದೋ ಒಂದು ಆದರ್ಶವನ್ನು ಹಿಡಿದು ಅದಕ್ಕಾಗಿ ತಮ್ಮ ಇಡೀ ಜೀವನವನ್ನೇ ಸವೆಸಿದರು. ಜಗತ್ತಿನಲ್ಲಿ ಇಂಥ ಆದರ್ಶವೇ ಕಾಪಾಡುವುದು; ಆದರ್ಶವನ್ನು ಹಿಡಿದು ನಡೆಯುವವರೇ ಇತರರಿಗೆ ದಾರಿದೀಪವಾಗುವರು.
ರಾಸ್ ವಿಡಿಯೋ ಸ್ವಾಧೀನ ಸಂಖ್ಯೆ ಹದಿನಾರು ಮಾಡುತ್ತದೆ - ಚಿತ್ರ ವಿಡಿಯೋ | NAB ಸುದ್ದಿ ತೋರಿಸಿ | 2020 ಎನ್‌ಎಬಿ ಶೋ ಮೀಡಿಯಾ ಪಾಲುದಾರ ಮತ್ತು ಎನ್‌ಎಬಿ ಶೋ ಲೈವ್‌ನ ನಿರ್ಮಾಪಕ. ಬ್ರಾಡ್ಕಾಸ್ಟ್ ಎಂಜಿನಿಯರಿಂಗ್ ಸುದ್ದಿ
ಮುಖಪುಟ » ಒಳಗೊಂಡಿತ್ತು » ರಾಸ್ ವಿಡಿಯೋ ಸ್ವಾಧೀನ ಸಂಖ್ಯೆ ಹದಿನಾರು ಮಾಡುತ್ತದೆ - ಚಿತ್ರ ವಿಡಿಯೋ
ರಾಸ್ ವಿಡಿಯೋ ಟೊರೊಂಟೊ ಮೂಲದ ಇಮೇಜ್ ವೀಡಿಯೊವನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ಘೋಷಿಸಲು ಸಂತೋಷವಾಗಿದೆ. ಇಮೇಜ್ ವಿಡಿಯೋವನ್ನು 1974 ರಲ್ಲಿ ಸ್ಥಾಪಿಸಲಾಯಿತು - ಅದೇ ವರ್ಷ ರಾಸ್ - ಮತ್ತು ಅದರ ಟಿಎಸ್ಐ ಟ್ಯಾಲಿ ಕಂಟ್ರೋಲ್ ಪ್ಲಾಟ್‌ಫಾರ್ಮ್‌ಗೆ ಹೆಸರುವಾಸಿಯಾಗಿದೆ, ಇದನ್ನು ಪ್ರಮುಖ ಪ್ರಸಾರ ನೆಟ್‌ವರ್ಕ್ ಪೂರೈಕೆದಾರರು, ಕ್ರೀಡಾ ಸ್ಥಳಗಳು, ಕಾರ್ಪೊರೇಟ್ ವೀಡಿಯೊ ಸೌಲಭ್ಯಗಳು ಮತ್ತು ಪೂಜಾ ಮನ...
ಈ ಸ್ವಾಧೀನ - ರಾಸ್ ವಿಡಿಯೋ2009 ರಿಂದ ಹದಿನಾರನೇಯದು - ach ಾಕ್ ವಿಲ್ಕಿ ಮತ್ತು ಡೇವಿಡ್ ರಸ್ಸೆಲ್ ನೇತೃತ್ವದ ಇಮೇಜ್ ವಿಡಿಯೋ ಉತ್ಪನ್ನ ತಂಡವನ್ನು ಅವರ ಆರ್ & ಡಿ ಮತ್ತು ತಾಂತ್ರಿಕ ಬೆಂಬಲ ತಂಡಗಳೊಂದಿಗೆ ರಾಸ್‌ಗೆ ಪರಿವರ್ತನೆಗೊಳ್ಳುತ್ತದೆ. Ach ಾಕ್ ವಿಲ್ಕಿ ಈಗ ಉತ್ಪನ್ನ ವ್ಯವಸ್ಥಾಪಕ, ರಾಸ್ ಟ್ಯಾಲಿ ಸಿಸ್ಟಮ್ಸ್, ಭಾಗವಾಗಿ ಜೀವನದ ನಿರೀಕ್ಷೆಯಲ್ಲಿ ಉತ್ಸುಕರಾಗಿದ್ದಾರೆ ರಾಸ್ ವಿಡಿಯೋ. "ಅದ...
ಸಿಇಒ ಡೇವಿಡ್ ರಾಸ್, ಸ್ವಾಧೀನದ ವೈಯಕ್ತಿಕ ಮಹತ್ವವನ್ನು ಪ್ರತಿಬಿಂಬಿಸುತ್ತದೆ. "1973 ರಲ್ಲಿ, ನನ್ನ ತಂದೆ ಕಾಲು ಮುರಿದ ನಂತರ ಆಸ್ಪತ್ರೆಯಲ್ಲಿದ್ದರು. ಲೀಚ್ ವೀಡಿಯೊದ ಸಂಸ್ಥಾಪಕ ಜಿಮ್ ಲೀಚ್ (ಈಗ ಕಮ್ಯುನಿಕೇಷನ್ಸ್ ಇಮ್ಯಾಜಿನ್) ಭೇಟಿ ನೀಡಿ ನನ್ನ ತಂದೆಗೆ ಸ್ವಂತ ಕಂಪನಿಯನ್ನು ಪ್ರಾರಂಭಿಸಲು ಸಲಹೆ ನೀಡಿದರು. ಕೆನಡಾದಲ್ಲಿ ಲೀಚ್ ವಿಡಿಯೋ ಮತ್ತು ಇಮೇಜ್ ವಿಡಿಯೋ ಇದೆ, ಆದ್ದರಿಂದ ಎ ಕೂಡ ಇರಬೇಕು...
ರಾಸ್ ಟ್ಯಾಲಿ ಸಿಸ್ಟಮ್ಸ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿ ಕ್ಲಿಕ್.
ರಾಸ್ ವಿಡಿಯೋ - ಹೆಚ್ಚಿನ ಪರಿಣಾಮ, ಹೆಚ್ಚಿನ ದಕ್ಷತೆಯ ಉತ್ಪಾದನಾ ಪರಿಹಾರಗಳು
ಉದ್ಯಮದ ವಿಶಾಲ ವ್ಯಾಪ್ತಿಯೊಂದಿಗೆ ರಾಸ್ ಪ್ರತಿದಿನ ಶತಕೋಟಿ ಜಾಗತಿಕ ವೀಕ್ಷಕರಿಗೆ ವೀಡಿಯೊ ನಿರ್ಮಾಣಗಳನ್ನು ಲೈವ್ ಮಾಡುತ್ತದೆ ಹೆಚ್ಚಿನ ಪರಿಣಾಮ, ಹೆಚ್ಚಿನ ದಕ್ಷತೆ ಪರಿಹಾರಗಳು ಮತ್ತು ಸೇವೆಗಳು. ಬಲವಾದ ಸುದ್ದಿ, ಹವಾಮಾನ ಮತ್ತು ಕ್ರೀಡೆಗಳನ್ನು ರಚಿಸಲು ರಾಸ್ ಸುಲಭಗೊಳಿಸುತ್ತದೆ ಪ್ರಸಾರಗಳು, ತೊಡಗಿಸಿಕೊಳ್ಳುವ ವಿಷಯ ಕ್ರೀಡಾ ಕ್ರೀಡಾಂಗಣ ಪರದೆಗಳು, ಮನರಂಜನಾ ಪ್ರದರ್ಶನಗಳು ಮತ್ತು ರಾಕ್ ಸಂಗೀ...
ರಾಸ್ ಪರಿಹಾರಗಳು ಪ್ರೇಕ್ಷಕರು ಮತ್ತು ಮಾರ್ಕೆಟಿಂಗ್ ಪಾಲುದಾರರನ್ನು ಆಕರ್ಷಿಸಿವೆ ಯುರೋಸ್ಪೋರ್ಟ್, ಬಿಬಿಸಿ ವರ್ಲ್ಡ್, ಎಸ್‌ಕೆವೈ, ಗೂಗಲ್ ಯೂಟ್ಯೂಬ್ ಸ್ಪೇಸ್ ಲಂಡನ್, ಮತ್ತು ಅಂತರರಾಷ್ಟ್ರೀಯ ಎಸ್‌ಪೋರ್ಟ್ಸ್ ಪವರ್‌ಹೌಸ್ ಈಎಸ್ಎಲ್. ಕ್ಯಾಮೆರಾಗಳು, ನೈಜ-ಸಮಯದ ಚಲನೆಯ ಗ್ರಾಫಿಕ್ಸ್, ಪ್ರೊಡಕ್ಷನ್ ಸ್ವಿಚರ್‌ಗಳು, ರೊಬೊಟಿಕ್ ಕ್ಯಾಮೆರಾ ವ್ಯವಸ್ಥೆಗಳು, ವರ್ಧಿತ ರಿಯಾಲಿಟಿ / ವರ್ಚುವಲ್ ಸ್ಟುಡಿಯೋಗ...
ಹಿಂದಿನ: ವೆಲೋಸಿಕ್ಸ್ ಮೇಘ-ಸ್ಥಳೀಯ ವೀಡಿಯೊ ಜಾಹೀರಾತು ಮತ್ತು ಸ್ಟ್ರೀಮ್ ವೈಯಕ್ತೀಕರಣ ಸೇವೆಯನ್ನು ಅನಾವರಣಗೊಳಿಸಿದೆ
ಮುಂದೆ: ಪೇಸ್ ಪಿಕ್ಚರ್ಸ್ ಉತ್ಪಾದನೆ ಮತ್ತು ಪೋಸ್ಟ್ ನಡುವಿನ ರೇಖೆಯನ್ನು ಮಸುಕುಗೊಳಿಸಲು ಬ್ಲ್ಯಾಕ್‌ಮ್ಯಾಜಿಕ್ ವಿನ್ಯಾಸವನ್ನು ಬಳಸುತ್ತದೆ
ವಿವಿಧ ನಿಗಮ- ಮಂಡಳಿ ಅಧ್ಯಕ್ಷರ ನೇಮಕ: ಆರಗ ಜ್ಞಾನೇಂದ್ರ, ಹರತಾಳ ಹಾಲಪ್ಪ ಸಹಿತ 24 ಮಂದಿಗೆ ಸ್ಥಾನ ಭಾಗ್ಯ - ಉಪಯುಕ್ತ ನ್ಯೂಸ್
by Upayuktha July 27, 2020 079
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಮೊದಲ ವರ್ಷ ಪೂರ್ಣಗೊಳಿಸುತ್ತಿರುವ ಸಂದರ್ಭದಲ್ಲಿ ವಿವಿಧ ನಿಗಮ- ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿದೆ.
ಅದರಂತೆ ಕರ್ನಾಟಕ ಗೃಹಮಂಡಳಿ ಅಧ್ಯಕ್ಷರಾಗಿ ಹಿರಿಯ ಶಾಸಕ ಅರಗ ಜ್ಞಾನೇಂದ್ರ ಅವರನ್ನು ನೇಮಿಸಲಾಗಿದೆ.
ಎಂಎಸ್‌ಐಎಲ್ ಅಧ್ಯಕ್ಷರಾಗಿ ಸಾಗರದ ಶಾಸಕ ಹರತಾಳ ಹಾಲಪ್ಪ, ಕೆ.ಎಸ್‌.ಆರ್‌ಟಿಸಿ ಅಧ್ಯಕ್ಷರಾಗಿ ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ, ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ದೇವದುರ್ಗ ಶಾಸಕ ಶಿವನಗೌಡ ನಾಯಕ್‌ ಹಾಗೂ ರಾಜ್ಯ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರಾಗಿ ಶೋರಾಪುರ ಶಾಸಕ ರಾಜೂಗೌಡ ಅವರನ್ನು ನೇಮಿಸಲಾಗಿದೆ.
ಒಟ್ಟು 24 ಶಾಸಕರನ್ನು ವಿವಿಧ ನಿಗಮ ಮಂಡಳಿಗಳಿಗೆ ಅಧ್ಯಕ್ಷರಾಗಿ ನೇಮಿಸಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಆದೇಶ ಹೊರಡಿಸಿದ್ದಾರೆ.
ಪುನೀತ್ 'ಜಾಕಿ' ಧ್ವನಿಸುರುಳಿ ಸೂಪರ್ ಡೂಪರ್ ಹಿಟ್! | Jackie Audio | Puneeth Rajkuamar | Director Soori | Yograj Bhat | V Harikrishna | ಜಾಕಿ | ಪುನೀತ್ ರಾಜ್ ಕುಮಾರ್ | ವಿ ಹರಿಕೃಷ್ಣ | ಯೋಗರಾಜ್ ಭಟ್ - Kannada Filmibeat
14 min ago ಅರಮನೆಯನ್ನೇ ಹೊಂದಿರುವ ಸೈಫ್, ಮನೆ ಬದಲಾಯಿಸುತ್ತಿದ್ದಾರೆ!
25 min ago 51ನೇ ಗೋವಾ ಚಿತ್ರೋತ್ಸವಕ್ಕೆ ಚಾಲನೆ: ಕನ್ನಡದಲ್ಲಿ ಮಾತು ಆರಂಭಿಸಿದ ಸುದೀಪ್
1 hr ago ತಲ್ವಾರ್‌ನಲ್ಲಿ ಕೇಕ್ ಕತ್ತರಿಸಿ ಬಳಿಕ ಕ್ಷಮೆಯಾಚಿಸಿದ ವಿಜಯ್ ಸೇತುಪತಿ
2 hrs ago ತೆಲುಗು 'ಲವ್ ಮಾಕ್ಟೈಲ್' ಜೋಡಿಗೆ ಮದುವೆ ಆಮಂತ್ರಣ ನೀಡಿದ ಕೃಷ್ಣ-ಮಿಲನ
Lifestyle ನಿಮ್ಮ ಮಕ್ಕಳ ಕೋಣೆಯನ್ನು ವಾಸ್ತು ಪ್ರಕಾರ ಈ ರೀತಿ ರೆಡಿ ಮಾಡಿ
News "ಲಸಿಕೆ ಮೇಲೆ ಅಷ್ಟು ನಂಬಿಕೆಯಿದ್ದರೆ ನೀವೆಲ್ಲಾ ಇನ್ನೂ ತೆಗೆದುಕೊಂಡಿಲ್ಲ ಏಕೆ?"
Finance Gold Silver Rate: ಪ್ರಮುಖ ನಗರಗಳಲ್ಲಿ ಜ.16ರ ಚಿನ್ನ, ಬೆಳ್ಳಿ ದರ
Automobiles ಟೈರ್ ಸೇವೆಗಳನ್ನು ಸರಳಗೊಳಿಸಲು ಪ್ರತ್ಯೇಕ ಸರ್ವಿಸ್ ಸೆಂಟರ್ ತೆರೆದ ಅಪೊಲೊ ಟೈರ್ಸ್
ಪುನೀತ್ 'ಜಾಕಿ' ಧ್ವನಿಸುರುಳಿ ಸೂಪರ್ ಡೂಪರ್ ಹಿಟ್!
| Published: Tuesday, September 14, 2010, 17:41 [IST]
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 'ಜಾಕಿ' ಆಡಿಯೋಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದ ಎಲ್ಲಾ ಹಾಡುಗಳನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಸಾಮಾನ್ಯವಾಗಿ ಒಂದು ಚಿತ್ರದಲ್ಲಿ ಎರಡು, ಮೂರು ಹಾಡುಗಳು ಮಾತ್ರ ಹಿಟ್ ಆಗುತ್ತವೆ. ಆದರೆ ಜಾಕಿ ಚಿತ್ರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಚಿತ್ರದ ಎಲ್ಲಾ ಹಾಡುಗಳನ್ನು ಪ್ರೇಕ್ಷಕ ಮನಸಾರೆ ಇಷ್ಟಪಟ್ಟಿದ್ದಾನೆ.
ಯೋಗರಾಜ್ ಭಟ್ಟರ ಲೇಖನಿಯ ಮತ್ತೆ ಗಮ್ಮತ್ತು! ಅವರು ಬರೆದಿರುವ ಚಿತ್ರದ ಎಲ್ಲಾ ಹಾಡುಗಳು ಈಗ ಪಡ್ಡೆಗಳ ಪಾಲಿಗೆ ಪಂಚಾಮೃತ. ವಿ ಹರಿಕೃಷ್ಣ ಸಂಗೀತ ಸಪ್ಪಳ ಮತ್ತೊಮ್ಮೆ ವಿಜೃಂಭಿಸಿದೆ. ಶಿವ ಅಂಥ ಹೋಗುತ್ತಿದೆ ರೋಡಿನಲ್ಲಿ, ಎಕ್ಕ ರಾಜ ರಾಣಿ, ಎರಡು ಜಡೆಯನು ಮತ್ತು ಎಡವಟ್ಟಾಯ್ತು ಹಾಡುಗಳ ಗಾನ ಬಜಾನ ಈಗ ಎಲ್ಲ ಕಡೆ ಕೇಳಿಸುತ್ತಿದೆ.
ಸೂರಿ ನಿರ್ದೇಶನದ ಈ ಚಿತ್ರ ಬಿಡುಗಡೆ ಮುನ್ನವೆ ಹೊಸ ಭರವಸೆಯನ್ನು ಮೂಡಿಸಿದೆ. ಆನಂದ್ ಆಡಿಯೋ ಹೊರತಂದಿರುವ 'ಜಾಕಿ' ಸಿಡಿಗಳು ಬಿಸಿಬಿಸಿ ಬೋಂಡಾಗಳಂತೆ ಬಿಕರಿಯಾಗುತ್ತಿವೆ. ಯೋಗರಾಜ್ ಭಟ್ ತುಂಬ ಮುತುವರ್ಜಿಯಿಂದ ರಚಿಸಿದ ಸಾಹಿತ್ಯ ಈಗ ಫಲ ನೀಡುತ್ತಿದೆ ಎಂಬ ಮಾತನ್ನು ಪುನೀತ್ ಸಹ ಒಪ್ಪುತ್ತಾರೆ.
ಜಾಕಿ ಧ್ವನಿಸುರುಳಿ ವಿಮರ್ಶೆ
Read more about: ಜಾಕಿ ಪುನೀತ್ ರಾಜ್ ಕುಮಾರ್ ಸೂರಿ ಯೋಗರಾಜ್ ಭಟ್ ವಿ ಹರಿಕೃಷ್ಣ ಆನಂದ್ ಆಡಿಯೋ jackie audio puneeth rajkumar soori yogaraj bhat v harikrishna anand audio
ದೇವಾಲಯ ಶಿಲ್ಪಗಳಲ್ಲಿ ನಾಟ್ಯಾಯಮಾನತೆ – ಭಾಗ ೩ | Prekshaa
This article is part 3 of 5 in the series ದೇವಾಲಯ ಶಿಲ್ಪಗಳು
ಪ್ರಕೃತ ಕಾಲದ ಕಲೆಗಳಿಗೆ ಶಿಲ್ಪಸಾಗರಯಾನದ ಅವಶ್ಯಕತೆ
ದೇವಾಲಯ ಸಂಸ್ಕೃತಿಯಲ್ಲಿ ರಂಗಭೋಗದಂತಹ ಹಲವು ಕಲಾವಿಶೇಷಗಳ ಸನ್ನಿಧಾನ ಕಾಲಕ್ರಮೇಣ ಕ್ಷಯಿಸಿದರೂ ಶಿಲ್ಪದ ಸಂವಿಧಾನ ಮತ್ತು ಸನ್ನಿಧಾನ ಎಷ್ಟೊಂದು ಶಕ್ತಿಯುತವಾಗಿದೆಯಂದರೆ ಹಾಗೆ ಕಾಲದ ಓಟದಲ್ಲಿ ಕಳೆದುಕೊಂಡದುದನ್ನೂ ಗಾತ್ರರೂಪದಲ್ಲಿ ಅಲ್ಲವಾದರೂ ಸೂತ್ರರೂಪದಿಂದ ಸಮಾಶ್ರಯವಾಗಿದೆ. ಹಾಗೆ ನೋಡಲಾಗಿ ಎಲ್ಲಾ ಕಲೆಗಳು ತಮ್ಮ ಆಯುರ್ಬಲವೆಲ್ಲವನ್ನೂ ಶಿಲ್ಪವೆಂಬ ವಿಶಾಲ ಕಲಾಕಕ್ಷೆಗೇ ಧಾರೆಯೆರೆದಿದ್ದಾರೇನೋ ಎ...
ಹೇಗೆ ದೇವಾಲಯ-ಪದದ ನಿರುಕ್ತಿಯ ಧಾತ್ವ್ವರ್ಥಾನುಸಾರ- ದೇವಶಬ್ದಕ್ಕೆ ಲೀಲೆ, ಗೆಲ್ಮೆ, ವ್ಯವಹಾರ, ಬೆಳಕು, ಸ್ತುತಿ, ಆನಂದ, ಆಮೋದ, ಕನಸು, ಚೆಲುವು ಮತ್ತು ಗತಿಶೀಲತೆ ಎಂಬೆಲ್ಲಾ ಬಹು‌ಆಯಾಮಗಳಿವೆಯೋ (ದಿವು>ಕ್ರೀಡಾ-ವಿಜಿಗೇಷಾ-ವ್ಯವಹಾರ-ದ್ಯುತಿ-ಸ್ತುತಿ-ಮೋದ-ಸ್ವಪ್ನ-ಕಾಂತಿ-ಗತಿಷು) (ಗಣೇಶ್, ೨೦೦೯;೧೬೧) ಶಿಲ್ಪಗಳೂ ಅಂತೆಯೇ. ಚಿತ್ರ, ಗೀತ, ಕಾವ್ಯ, ನರ್ತನಾದಿ ಎಲ್ಲಾ ಕಲೆಗಳನ್ನೂ ಪ್ರಾಚೀನರು ಶಿಲ್...
ಸರ್ವಶಾಸ್ತ್ರಾರ್ಥಸಂಪನ್ನಂ ಸರ್ವಶಿಲ್ಪಪ್ರವರ್ತಕಮ್
(ನಾಟ್ಯಶಾಸ್ತ್ರ, ಪ್ರಥಮ ಅಧ್ಯಾಯ)
ಈ ಕುರಿತಾಗಿ ಕೌಷೀತಕೀ ಬ್ರಾಹ್ಮಣವೂ ಗೀತ, ಕಾವ್ಯ, ನೃತ್ಯಗಳೆಲ್ಲದಕ್ಕೂ ಶಿಲ್ಪವೆಂಬ ಹೆಸರನ್ನು ನೀಡಿರುವುದರ ಉಲ್ಲೇಖವನ್ನು ನೀಡುತ್ತಾ, ಪಾಣಿನಿಯೂ ಶಿಲ್ಪವೆಂದರೆ ಗೀತವಾದನ ನೃತ್ತಗಳಂತಹ ಲಲಿತಕಲೆಯೆಂದಿದ್ದು ಶಿಲ್ಪಿನ್ ಎಂದರೆ ಗಾಯಕ, ವಾದಕ, ನರ್ತಕ ಎನ್ನುವ ವಿಚಾರ ಅಷ್ಟಾಧ್ಯಾಯಿಯಲ್ಲಿ ಕಂಡುಬರುತ್ತದೆ, ಕಾಳಿದಾಸನೂ ಶಿಲ್ಪಕಾರ್ಯವೆಂದರೆ ಗೀತವಾದ್ಯನರ್ತನಗಳೆಂದೇ ಅರ್ಥೈಸಿದ್ದಾನೆ ಎನ್ನುತ್ತಾರೆ ಮಹ...
ಶತಾವಧಾನಿ ಡಾ. ರಾ.ಗಣೇಶರೂ ಶಿಲ್ಪಮಹಾಸಮುದ್ರವನ್ನು ಗಮನಿಸಿದ ರೀತಿಯನ್ನು ಕಂಡಾಗ ಶಿಲ್ಪವೆಂಬುದು ಯಾವುದನ್ನೂ, ಯಾವ ಹೊತ್ತಿಗೂ, ಯಾವ ಗಾತ್ರದಲ್ಲೂ ತನ್ನೊಳಗೆ ಗರ್ಭೀಕರಿಸಿದ ವಿಶ್ವವೇ ಆಗಿತ್ತೆಂಬುದು ತಿಳಿದುಬರುತ್ತದೆ.
ಶಿಲ್ಪವೆಂಬ ಮಹಾಕಕ್ಷೆಯೊಳಗೆ ಮೂರು ಖಂಡಗಳು, ಒಂಭತ್ತು ಉಪಶಾಸ್ತ್ರಗಳು, ಮೂವತ್ತೊಂದು ವಿದ್ಯೆಗಳು, ಅರುವತ್ತನಾಲ್ಕು ಕಲೆಗಳು (ಇವು ವಾತ್ಸ್ಯಾಯನಾದಿಗಳು ಹೇಳುವ ಕಲೆಗಳಲ್ಲ) ಅಂತರ್ಗತವಾಗಿವೆ. ಇದೊಂದು ಮಹಾಸಮುದ್ರ (ಗಣೇಶ್, ೨೦೦೬; ೬೨).
ಒಟ್ಟಿನಲ್ಲಿ ಶಿಲ್ಪಕ್ಷೇತ್ರದ ಆಳ ಅಗಲಗಳ ವಿಸ್ತಾರವು ಜ್ಯೋತಿರ್ಲಿಂಗದೋಪಾದಿಯಲ್ಲಿ ಅಗಾಧ, ಅಪಾರ. ಬಗೆದಷ್ಟೂ ಮುಗಿಯದ ನಿಧಿ.
ಹೀಗಿರುವಾಗ ಒಂದಾನೊಂದು ಕಾಲದಲ್ಲಿ ಶಿಲ್ಪಾಯತನದೊಳಗಿನಿಂದ ಹೊರಚಿಮ್ಮಿ ಪ್ರಪ್ರತ್ಯೇಕ ಸ್ಥಾನಮಾನ ಪಡೆದು ಆಧುನಿಕ ಕಾಲದಲ್ಲಿ ತಮ್ಮದೇ ಅಸ್ತಿತ್ವಶ್ರೀಮಂತಿಕೆಯಲ್ಲಿ ಮೆರೆವ ಅನೇಕ ಸೋದರಕಲೆಗಳ ಕಲಾವಿದರು ಇನ್ನಾದರೂ ಈ ತಂತಮ್ಮ ಕಲೆಗಳಿಂದ ಸಲ್ಲಬೇಕಾದ ಹಿಂದಿನ ಋಣಸಂದಾಯವನ್ನು ಮನದಟ್ಟು ಮಾಡಿಕೊಳ್ಳಬೇಕು. ಏನಿಲ್ಲವೆಂದರೂ ತತ್ಕಾಲೀನ ಸಂದರ್ಭದಲ್ಲಿ ಮಿತಿಗೊಳಪಟ್ಟ ಶಿಲ್ಪಶಾಸ್ತ್ರದ ಪರಿಧಿಯನ್ನೊಮ್ಮೆ ಪರಿ...
ಈ ನಿಟ್ಟಿನಲ್ಲಿ ಇಂದಿನ ನರ್ತನೋಪಚಾರ ಕ್ಷೇತ್ರದ ದಿಕ್ಕನ್ನು ಅರಸಿ ಹೋಗುವವರಿಗೆ ಪ್ರಕೃತ ಲೇಖಿಕೆಯ ಅರಿವಿನ ಮಿತಿಗೆ ಎಟುಕಿದ ಅಂಶಗಳನ್ನು ಮುಂದಿನ ಭಾಗಗಳಲ್ಲಿ ಸಲಹೆಯ ರೂಪದಿಂದ ನೀಡಲಾಗಿದೆ. ಈ ನಿದರ್ಶನಗಳನ್ನು ಆಯಾ ಕಲಾಮಾಧ್ಯಮದವರು ತಮ್ಮ ಆಯದಿಂದ ನೋಡಿಕೊಂಡು ಬೆಳೆಸಿಕೊಂಡರೆ ಶಿಲ್ಪ-ಕಲಾ ಭವಿಷ್ಯ ಉಜ್ಜ್ವಲವಾಗುವುದರಲ್ಲಿ ಸಂದೇಹವಿಲ್ಲ.
ಶಿಲ್ಪಗಳ ನರ್ತನೋಪಚಾರದ ಶೈಲಿ ಮತ್ತು ಶೋಧವೈಶಿಷ್ಟ್ಯ
ಶಿಲ್ಪಗಳ ಅಧ್ಯಯನದಲ್ಲಿ ಶೋಧಕರಾಗಿ ಹೊರಟ ನೃತ್ಯಾಸಕ್ತರಿಗೆ ಕೆಲವೊಂದು ಗುಣಗಳಿರಲೇಬೇಕು ಎಂಬುದನ್ನು ಈಗಾಗಲೇ ಗಮನಿಸಬಹುದು. ಇದನ್ನು ಮತ್ತೂ ಸ್ಪಷ್ಟವಾಗಿ ಹೇಳುವುದಾದರೆ- ಶಿಲ್ಪಿಯ ಕಣ್ಮನಗಳ ಜಾಡನ್ನು ಅರಿಯುವ ಬಗೆ ಮತ್ತು ಅದನ್ನು ಕಲಾತ್ಮಕವಾಗಿ ಪುನರ್ಸೃಷ್ಟಿಸಿಕೊಳ್ಳುವ ಕೌಶಲ್ಯ ಪ್ರಮುಖವಾದದ್ದು. ಇದಕ್ಕೆ ಪೂರ್ವಭಾವಿಯಾಗಿ ಐತಿಹಾಸಿಕ ಮತ್ತು ಲಕ್ಷಣಗ್ರಂಥಾಧಾರಿತವಾಗಿ ಶಿಲ್ಪಗಳನ್ನು ಗಮನಿಸಿಕೊಂಡ...
ಈ ಉಪಕ್ರಮದಲ್ಲಿ ಶಿಲ್ಪಗಳು ಯಾವೆಲ್ಲಾ ನೃತ್ತಾದಿವರ್ಗಗಳಲ್ಲಿ ಬರುತ್ತವೆ? ಅವುಗಳ ಸಾಧ್ಯತೆ ಮತ್ತು ಮಿತಿಗಳೇನು ಎಂಬುದೂ ತಕ್ಕಮಟ್ಟಿಗೆ ಶಿಲ್ಪಾನುಸಂಧಾನಕ್ಕೆ ಪೂರಕ. ಉದಾಹರಣೆಗೆ : ನೃತ್ತಶಿಲ್ಪಗಳಲ್ಲಿ ಅವುಗಳ ವಾಚ್ಯತೆಯನುಸಾರ ಚಾರಿತ್ರಕವಾದ ವಿವರವನ್ನು ಲಕ್ಷಿಸಿಯೇ ನೃತ್ತನವೀಕರಣವನ್ನು ಮಾಡಿಕೊಳ್ಳಬೇಕಾಗುತ್ತದೆ. ನೂರೆಂಟು ಕರಣ, ದೇಶೀಕರಣ, ಪೇರಣೀ, ಗೌಂಡಲೀನೃತ್ತಗಳಂಥವು ಈ ಜಾಡಿನವು.
ಯಾವುದ್ಯಾವುದೋ ಕಾಲದ ಶಿಲ್ಪಗಳನ್ನು ಒಂದೆಡೆ ಕಲೆಹಾಕಿ ನಿರ್ದಿಷ್ಟ ನೃತ್ಯಕ್ರಮವನ್ನು ಅಂದಾಜಿಸುವುದು ಅಧ್ಯಯನಕ್ರಮದ ಶಿಸ್ತಿಗೆ ಭೂಷಣವಲ್ಲ. ಈ ಬಗೆಯ ಮಾದರಿಯೇನಿದ್ದರೂ ನೃತ್ತದ ಅಂಗಾಂಶಗಳನ್ನು ಸ್ಥೂಲವಾಗಿ ಸಮೀಕ್ಷೆ ಮಾಡಲು ನೆರವಾಗುತ್ತದೆ. ನರ್ತನದ ಶಿಸ್ತನ್ನಷ್ಟೇ ಅರಸಿ ಹೊರಡುವವರಿಗೆ ನೃತ್ತಶಿಲ್ಪಗಳೇ ಅಧ್ಯಯನಕ್ಕೆ ಹೆಚ್ಚು ಒದಗಿಬರುವಂತವು. ಅದೇ ನಾಟ್ಯ ಮತ್ತು ನೃತ್ಯವರ್ಗದ ಶಿಲ್ಪಗಳು ನೃತ್ಯಸನ...
ಕಲೆಯೊಂದು ಐತಿಹಾಸಿಕ ಬದ್ಧತೆ-ಶಿಸ್ತಿಗೆ ಒಳಪಡುವುದಕ್ಕಿಂತಲೂ ಹೆಚ್ಚಿನ ಸ್ವಾತಂತ್ರ್ಯ ಪಡೆಯುವುದು ಆಯಾ ಕಾಲದ ಕಲಾವಿದನ ಕಲ್ಪನಾವೇಶಗಳಿಗೆ ಹೆಚ್ಚಿನ ಅನುಕೂಲ ಕೊಡುವ ಪುರಾಣದಂಥ ವಸ್ತುಸಂವಿಧಾನದಲ್ಲಿಯೇ. ಒಂದರ್ಥದಲ್ಲಿ ಚಾರಿತ್ರಕವಾದ ಶಿಸ್ತು ಆಕೃತಿನಿಷ್ಠವಾದರೆ, ಪುರಾಣ-ಕಥಾ-ಕಲ್ಪನೆಗಳು ಆಶಯನಿಷ್ಠೆಗೆ ದುಡಿಯುತ್ತವೆ. ಚಾರಿತ್ರಕ ಮಾಹಿತಿಯು ಆಂಗಿಕ ಇಲ್ಲವೇ ನೃತ್ಯತಂತ್ರದ ನಿರೂಪಣೆಗೆ ಇಂಬಾದರೆ, ಕ...
ಈ ತ್ರಿವರ್ಗಗಳಲ್ಲದೆಯೂ ಶಿಲ್ಪಪ್ರಪಂಚದ ಯಾವುದೇ ಬಗೆಯಾದ ಅಂಗಭಂಗಿಗಳನ್ನೂ ನರ್ತನಕ್ಕೆ ಅಳವಡಿಸಿಕೊಳ್ಳಬಹುದಾಗಿದೆ. ಅಲ್ಲಿಯೂ ಈ ಚಾಕಚಕ್ಯತೆ ನರ್ತಕನಿಗೆ ಇದ್ದರೆ ಯಾವುದೇ ಶಿಲ್ಪವೂ ಆತನ ಕಲ್ಪನೆಯೊಳಗೆ ಮಿಂದು ಬೆಂದು ಹದವಾಗಿ ನರ್ತನದ ಮೂರ್ತರೂಪ ತಳೆಯಬಹುದು. ಯುದ್ಧಗತಿಯ ಚಲನೆಗಳು ಹೇಗೆ ಮಂಡಲನೃತ್ಯವೆನ್ನುವ ವಿಶಿಷ್ಟ ನೃತ್ತಬಂಧವನ್ನು ತನ್ನ ಆಯಾಮದೊಳಗೆ ಕಟ್ಟಿಕೊಟ್ಟಿದೆ ಎನ್ನುವುದು ಈ ನೆಲೆಯಲ್ಲಿ...
ಈಗಿನ ಕಾಲಕ್ಕೆ ನಾಟ್ಯಾಯಮಾನತೆಯನ್ನು ಉದ್ದೇಶಿಸಿ ಶಿಲ್ಪಗಳನ್ನು ಶೋಧಪ್ರಜ್ಞೆಯಿಂದ ಪರಿಭಾವಿಸುವಾಗ ಅವು ಬಿಂಬಿಸಲ್ಪಟ್ಟ ನರ್ತನದ ಶಿಸ್ತನ್ನೋ ಅಥವಾ ಇಂದಿನ ನೃತ್ಯಕ್ರಮವನ್ನೋ ಹೆಚ್ಚು ಲಂಬಿಸದೇ ಔಚಿತ್ಯಾನೌಚಿತ್ಯದ ಹದದಲ್ಲಿ ರಸಭಾವಯುಕ್ತವಾಗಿ ನೇತ್ರಪ್ರೀತ್ಯರ್ಥ ಮಾಡಿಕೊಳ್ಳುವುದು ಸರ್ವಥಾ ಅಪೇಕ್ಷಿತ. ವಸ್ತು ಮತ್ತು ತಂತ್ರಗಳು ರಸ-ಧ್ವನಿ-ಔಚಿತ್ಯಗಳ ಪ್ರಮಾಣದಲ್ಲಿ ಗ್ರಹಿಸಲ್ಪಟ್ಟು ನಿರಾಗ್ರಹರೂಪದ...
ಶಿಲ್ಪದಲ್ಲಿ ಬಿಂಬಿತವಾದ ಸೂಕ್ಷ್ಮ ವಿವರಗಳನ್ನು ನರ್ತನಕ್ಷೇತ್ರದ ದಾಖಲೆಯ ದೃಷ್ಟಿಗಷ್ಟೇ ಚಿಂತಿಸುವ ಪ್ರಯುಕ್ತಿ ಪ್ರಾಥಮಿಕ ವರ್ಗದ ಅಧ್ಯಯನದ್ದು. ಶಿಲ್ಪಗಳ ಮೂಲಕ ಪಡೆದ ಅರಿವನ್ನು ಕ್ವಚಿತ್ತಾಗಿ ಸ್ಥಾನಕ, ಭಂಗಿಭಾವಗಳ ನಿರ್ಣಯಕ್ಕಷ್ಟಕ್ಕೇ ಮುಕ್ತಾಯಗೊಳಿಸಿಯೋ ಇಲ್ಲವೇ ಅದರ ಆಧಾರದಲ್ಲಿ ನೃತ್ತವೊಂದನ್ನು ಪುನರ್ಸೃಷ್ಟಿಸಿಕೊಳ್ಳುವುದು ಮಾಧ್ಯಮಿಕ ವರ್ಗದ್ದು. ಇವೆರಡಕ್ಕಿಂತ ಮೇಲ್ಮಟ್ಟದ್ದು- ಶಿಲ್ಪದಲ...
ಹೀಗೆ ಶಿಲ್ಪದ ಪ್ರೇರಣೆಯಲ್ಲಿ ನರ್ತನಕ್ರಮಕ್ಕೆ ಜೀವನ-ಉಜ್ಜೀವನವನ್ನು, ಪ್ರಯೋಗಶ್ರೀಮಂತಿಕೆಯನ್ನು ಕೊಡಲು ಕಲಾವಿದರು ಅನುಸರಿಸಿದ ಪ್ರಮುಖ ಎರಡು ಮಾರ್ಗಗಳನ್ನೂ ನಿದರ್ಶನವಾಗಿ ವಿವೇಚಿಸುವುದು ಸಮಂಜಸ. ಅವು ಶಿಲ್ಪಾಧಾರಿತವಾಗಿ ನಡೆದ ನರ್ತನಶೋಧದಲ್ಲಿ ಉನ್ನತೋನ್ನತ ಸ್ಥಾನವನ್ನಲಂಕರಿಸಿದವು. ಶೋಧಕರ ಅಧ್ಯಯನಕ್ರಮಕ್ಕೆ ಮಾರ್ಗದರ್ಶಿಸ್ವರೂಪದವು. ಇವೆರಡರ ನಂತರಕ್ಕೆ ಅದೇ ಜಾಡಿನಲ್ಲಿ ಅನೇಕ ಅಧ್ಯಯನಗಳು ನ...
೧. ಡಾ. ಪದ್ಮಾ ಸುಬ್ರಹ್ಮಣ್ಯಂ ಅವರಿಗೆ ನೂರೆಂಟು ಕರಣಗಳ ಪುನರ್ನವೀಕರಣಕ್ಕೆ ಒದಗಿದ ತಮಿಳುನಾಡಿನ ಚೋಳರ ಕಾಲದ ಶಿಲ್ಪಗಳು. ತಂಜಾವೂರು, ಕುಂಭಕೋಣಂ, ಚಿದಂಬರಂ, ತಿರುವಣ್ಣಾಮಲೈ, ವೃದ್ಧಾಚಲಂ ಮತ್ತು ಇಂಡೋನೇಷ್ಯಾದ ದೇವಾಲಯಗಳಲ್ಲಿ ಕೆತ್ತಲ್ಪಟ್ಟ ಶಿಲ್ಪಾಕೃತಿಗಳ ನಮೂನೆಗಳನ್ನು ಪಡೆದು ಅವುಗಳೊಳಗೆ ಏಕಸೂತ್ರವಾಗಿ ಹಂಚಲ್ಪಟ್ಟಿದ್ದ ಕರಣಗಳ ಚಲನ-ವಲನಗಳನ್ನು ಗುರುತಿಸಿ, ಚಲನೆಗಳಲ್ಲಿದ್ದ ಒಂದು ನಿರಂತರತೆ...
೨. ಇಂಥದ್ದೇ ಬೆಲೆಬಾಳುವ ಮತ್ತೊಂದು ಸಂಶೋಧನೆ ಡಾ.ಪದ್ಮಾ ಸುಬ್ರಹ್ಮಣ್ಯಂ ಅವರ ಶಿಷ್ಯೆ ಸುಂದರೀಸಂತಾನಂ ಅಧ್ಯಯನದಲ್ಲಿ ಪಡಿಮೂಡಿದ ೧೦೮ದೇಶೀಕರಣಗಳ ಪುನರ್ನಿರ್ಮಿತಿ. ಇದಕ್ಕೆ ಆಕರವಾದದ್ದು ಬಳ್ಳಿಗಾವೆಯ ನರ್ತನಸುಂದರಿಯ ಸರಣಿಶಿಲ್ಪಗಳು. ಇದೇನು ಮಾರ್ಗಕರಣಗಳಂತೆ ಚಾರಿತ್ರಕ ಪುನರ್ಸೃಷ್ಟಿಯಾಗಿರಲಿಲ್ಲ. ಒಂದಾನೊಂದು ಕಾಲದಲ್ಲಿ 'ಇದ್ದಿರಬಹುದೆನ್ನಲಾದ' ನೃತ್ಯಶೈಲಿಯನ್ನು ಅಂದಾಜಿಸಿ ಶೋಧಕಿಯು ಕೊಟ್ಟ ಹೊ...
ಇವೆರಡೂ ಅಧ್ಯಯನಗಳ ವೈಶಿಷ್ಟ್ಯವನ್ನು ಕಲಾವಿದೆ, ಸಂಶೋಧಕಿ ಡಾ.ಶೋಭಾ ಶಶಿಕುಮಾರ್ ಹೀಗೆ ಅಭಿಪ್ರಾಯಿಸುತ್ತಾರೆ- ನೃತ್ಯಸಂಶೋಧಕರು ತಮ್ಮ ಶೋಧನೆಯಲ್ಲಿ ಕಂಡುಕೊಂಡ ನರ್ತನಚಲನೆಗಳಲ್ಲಿ ಆಯಾಕಾಲಕ್ಕೆ ಅವರದ್ದೇ ಆದ ಸೃಷ್ಟಿಶೀಲ ಸಾಧ್ಯತೆಗಳು ಹೆಚ್ಚಿರಬಹುದು. ನಂತರದ ಕಾಲಗಳಲ್ಲಿ ಇವು ಕಲಿಕೆಗೂ, ಪ್ರಯೋಗಕ್ಕೂ ಒಳಪಡುವಾಗ ವಿದ್ಯಾರ್ಥಿಗಳಿಗೆ ಅದು ಸೃಷ್ಟಿಶೀಲ ಪುನರ್ನವೀಕರಣವೆಂಬ ಶಿರೋನಾಮೆಯಲ್ಲಷ್ಟೇ ಉಳಿಯುವ...
ಒಟ್ಟಿನಲ್ಲಿಇಂತಹ ಐತಿಹಾಸಿಕವೆನಿಸುವ ನರ್ತನೋಪಚಾರ/ಸಂಶೋಧನೆಗಳಷ್ಟೇ ರಂಗದಲ್ಲೂ ಶಾಸ್ತ್ರದಲ್ಲೂ ಗೆಲ್ಲಬಲ್ಲವು ಮತ್ತು ಮಾದರಿಯಾಗಬಲ್ಲವು.
ಶಿಲ್ಪಗಳ ಕಾವ್ಯೋಪಚಾರ ನೆಲೆ- ಕನ್ನಡದಲ್ಲಿ ಅಂತಃಪುರಗೀತಗಳ ಮೇಲ್ಪಂಕ್ತಿ
ಶಿಲ್ಪದ ಕಾವ್ಯೋಪಯೋಗಗಳ ಬಗೆಗೊಂದು ಇಣುಕುನೋಟ ಬೀರುವ ಯತ್ನ ಈ ಅಧ್ಯಾಯದ್ದು. ಈ ಪೈಕಿ ಅಂತಃ ಪುರಗೀತಗಳ ಮೇಲ್ಪಂಕ್ತಿಯನ್ನು ಗಮನಿಸುತ್ತಾ, ಅನಂತರದಲ್ಲಿ ಲೇಖಿಕೆಯ ಸಂಶೋಧನಾಂಶಗಳ ಹಿನ್ನೆಲೆಯಲ್ಲಿ ಶಿಲ್ಪಾಧಾರಿತವಾದ ಕಾವ್ಯನಿರ್ಮಾಣದ ಅವಶ್ಯಕತೆಯನ್ನೂ ಇಲ್ಲಿ ವಿಶ್ಲೇಷಿಸಲಾಗಿದೆ.
ಶಿಲೆ ನಡೆಯಲು ಸಾಧ್ಯವೇ?-ಇಲ್ಲ. ಆದರೆ ಕಲೆಯಾದಾಗ ಅದಕ್ಕೆ ಆಂತರಂಗಿಕವಾದ ನಡೆಯೊಂದು ಸಿದ್ಧಿಸುವುದು ಸುಳ್ಳಲ್ಲ. ಕನಿಷ್ಟಪಕ್ಷ, ಕಲ್ಪನೆಯಲ್ಲಾದರೂ ಸರಿಯೇ- ಶಿಲ್ಪವೊಂದು ಚಲನೆಯ ಪರಿಕಲ್ಪನೆಯನ್ನು ಕಣ್ಣಿಗೆ ನೀಡುವುದು ಸಣ್ಣಸಂಗತಿಯೇನಲ್ಲ. ಇದು ಹಲವು ಬಗೆಗಳಲ್ಲಿ ಪ್ರಸ್ತುತಿಗೊಳ್ಳುತ್ತಿದ್ದರೆ ಆಲಂಬನ ಮತ್ತು ಅವಲಂಬನ ಕಲೆಯೆರಡರ ಆಯುಷ್ಯವೂ ವರ್ಧಿಸುವುದರಲ್ಲಿ ಸಂದೇಹವಿಲ್ಲ. ಶಿಲ್ಪವು ನರ್ತನಕ್ರಮಕ್...
ಕಲೆಯಿಂದ ಶಿಲೆಯಮೃತ
ಲಲಿತಕಲೆ ಹೃತ್‌ಸುಕೃತ | ಬೇಲೂರ ನೋಡು
ಅಳಿವ ಲೋಕದ ನಡುವೆ ಉಳಿವ ರಸಘಟಿಕೆ ಬಾಳ್ಜೇನ ಗೂಡು– (ಡಿವಿಜಿ, ೨೦೦೨; ೨೦).
ಹಾಗೆ ನೋಡಿದರೆ, ಡಿವಿಜಿ ಅವರ ಅಂತಃಪುರ ಗೀತಗಳು ಕಾವ್ಯಾತ್ಮಕವಾಗಿ ಅರಳಿಕೊಂಡ ನೃತ್ಯಶೋಧವೇ ಸರಿ. ಬಹುಶಃ ಡಿವಿಜಿ
ಅವರು ರಚಿಸುವವರೆಗೂ ಶಿಲ್ಪಗಳನ್ನೇ ಆಧರಿಸಿ ಜನಪ್ರಿಯವಾದ ಕಾವ್ಯಕನ್ನ್ಯಕೆಗಳೇ ಇರಲಿಲ್ಲ. ಕುವೆಂಪು ಅವರು ಬರೆದ 'ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆ' ಎಂಬ ಪ್ರಸಿದ್ಧ ಪದ್ಯ ಮತ್ತು ಇದೇ ಜಾಡಿನಲ್ಲಿ ಬಂದಿರಬಹುದಾದ ಕೆಲವೊಂದಷ್ಟು ಇತರ ಕವಿಗಳ ಬಿಡಿ ಪದ್ಯರಚನೆಗಳನ್ನು ಗುರುತಿಸಬಹುದಾದರೂ ಅಂತಃಪುರ ಗೀತಗಳಂತೆ ಅಗಾಧತೆಯನ್ನು ಮೊಗಮೊಗೆದು ಕೊಟ್ಟ ಕಾವ್ಯಗಳೇ ಕನ್ನಡದಲ್ಲಿ ಇರಲಿಕ್ಕಿಲ್ಲ. ಅಷ್ಟೇ...
ರೂಪಭಾವವು ವಿಗ್ರಹದಲ್ಲಿ ಶಿಲ್ಪಿ ಕೊರೆದಿರುವ ಅಂಗಾಂಗಸಂಜ್ಞೆಗಳಿಂದ ತೋರತಕ್ಕದ್ದು. ವಾಕ್ಯಭಾವವು ಅಂಗಭಂಗಿಗಳ ಇಂಗಿತವನ್ನು ಮಾತುಗಳಿಂದ ಸ್ಪಷ್ಟಪಡಿಸತಕ್ಕದ್ದು. ಗಾನಭಾವವು ಅಕ್ಷರಗಳ ಒಳಗೂ ಹೊರಗೂ ತುಂಬಿಕೊಂಡು ರಂಜನೆಯನ್ನುಂಟುಮಾಡುವ ರಾಗಪ್ರವಾಹ (ಡಿವಿಜಿ, ೨೦೦೨; ೨೦).
ಕವಿಯಾದವನು ಶಿಲ್ಪಗಳ ಜೀವಚೈತನ್ಯವನ್ನು ಮೂರು ಹೃದಯಭಾವಗಳಾಗಿ ಕಂಡಿರುವುದೇ ಶಿಲ್ಪಗಳನ್ನಾಧರಿಸಿ ಮೂಡಿದ ಮಹತ್ಕಾವ್ಯಕ್ಕೆ ಮುಖ್ಯ ಕಾರಣವೆಂದು ಕಂಡುಕೊಳ್ಳಬಹುದು. ಇನ್ನು ಭಾವಸಂವಹನವಾದರೋ ಭಾರತೀಯ ಶಿಲ್ಪಗಳ ವಿಶೇಷತೆ. ಅದರೊಳಗೂ ಹೊಯ್ಸಳ ಶಿಲ್ಪಗಳಲ್ಲಂತೂ ನಾಟ್ಯಧರ್ಮೀಯ ಪರಿಕಲ್ಪನೆ, ನರ್ತನ ಪ್ರಭಾವ ಹೆಚ್ಚು. ಹಾಗೆಂ ದೇ ಬೇಲೂರಿನ ಮದನಿಕೆಗಳ ಭಾವಜಗತ್ತು ರಸಾವಹಲೋಕವನ್ನೇ ನಿರ್ಮಿಸಿದೆ. ಮದನಿಕೆಗಳ ಅ...
ವಾಸ್ತುಶಿಲ್ಪದ ಅಂಗಭೂತವಾಗಿ ಬರುವುದರಲ್ಲಿ ಉಪಯೋಗಾಂಶವೇ ಎದ್ದು ತೋರುವುದರಿಂದ ಕಲಾವ್ಯಾಪಾರಕ್ಕೆ ಬೆಲೆ ಅತ್ಯಲ್ಪ. ಅದೇ ವಿಗ್ರಹಶಿಲ್ಪದಲ್ಲಿ ಹಾಗಲ್ಲ. ಆದಾಗ್ಯೂ ಬೇಲೂರಿನಂತಹ ಸರ್ವೋತ್ಕೃಷ್ಟ ಕಲಾಭೂಮಿಕೆಗಳಲ್ಲಿ ಅದೂ ಸರ್ವದಾ ಸ್ತುತ್ಯರ್ಹವೇ. ಬೇಲೂರಿನ ಶ್ರೇಷ್ಠತೆಯಿರುವುದೇ ಅದರ ಕಲಾಭಾಗದಲ್ಲಿ ಅಂದರೆ ವಿಗ್ರಹಶಿಲ್ಪದ ಸೌಂದರ್ಯದಲ್ಲಿ. ಅದಕ್ಕಿರುವ ಹೃದಯೋದ್ದೀಪನ ಶಕ್ತಿ ಅನನ್ಯ. ವರ್ಣಿಸಲಸದಳ. ಅದ...
ಈ ನೆಲೆಯಲ್ಲಿ ಶಿಲ್ಪಗಳು ಮತ್ತು ಅದರ ಕಾವ್ಯೋಪಚಾರದ ರೀತಿ-ನೀತಿಗಳನ್ನು ಏಕಸೂತ್ರತೆಯಲ್ಲಿ ಕಟ್ಟಿಕೊಟ್ಟಿದ್ದಾರೆ ಸ್ವತಃ ಕವಿಗಳಾದ ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು. ಲೇಖನದ ಉದ್ದೇಶ ಮತ್ತು ಪ್ರಶ್ನೆಗಳ ಹಿನ್ನೆಲೆಯಲ್ಲಿ ಕಾವ್ಯಪರಿಹಾರವೆಂಬಂತೆ ಇದನ್ನು ಗುರುತಿಸಿಕೊಳ್ಳಬಹುದಾಗಿರುವುದರಿಂದ ಇಲ್ಲಿ ವಿಶೇಷತಃ ಉಲ್ಲೇಖಿಸಲಾಗಿದೆ.
ಕಲೆಯನಲ್ಲದೆ ಶಿಲ್ಪಿ ಶಿಲೆಯನೇಂ ಸೃಷ್ಟಿಪನೆ
ಶಿಲೆಯೆ ತಾಳೇಗರಿಯು ಲೇಖನಿಯೆ ಚಾಣ
ಘಾತಘಾತದಿ ವರ್ಣವರ್ಣಗಳಲಂಕೃತಿಯ