text
stringlengths
0
61.5k
ಅದನ್ನ ಇಟ್ಟಿಗೆ ಸೋಪು ಅಂತಾನೆ ನಾವೆಲ್ಲಾ ಕರೆಯುತ್ತಿದ್ದೆವು.
ಕೆಂಪು ಕೆಂಪಾದ ಕಲರ್. ಬಣ್ಣದಲ್ಲಿ ಮತ್ತು ಸೈಜಿನಲ್ಲಿ ಇಟ್ಟಿಗೆ ಥರ ಇದ್ದಿದ್ರಿಂದಾನೋ ಏನೋ ಹಳ್ಳಿಗರು ಅದನ್ನ ಇಟ್ಟಿಗೆ ಸೋಪು ಅಂತ ಕರೆಯುತ್ತಿದ್ದರು! ಘಮವಂತೂ ಕೇಳಲೇಬೇಡಿ. ಈಗಿನ ಸೋಪುಗಳ ಥರ ಮಧುರವಾದ ಸುಗಂಧದ ವಾಸನೆಯೇನೂ ಇರಲಿಲ್ಲ. ಅಹ್ಲಾದಕರವಾಗೂ ಇರಲಿಲ್ಲ. ಆ ಸೋಪಿನ ಹೆಸರು ಲೈಫ್ ಬಾಯ್ ಸೋಪ್. ಆ ಕಾಲಕ್ಕೆ ಪ್ರತಿಯೊಬ್ಬರ ಬಚ್ಚಲು ಮನೆಯ ಸಂಗಾತಿ.
ನಮಗೆಲ್ಲಾ ಸ್ನಾನ ಮಾಡಿಸಲು ಅಥವಾ ಆ ಕಾಲದ ಎಲ್ಲರೂ ಸ್ನಾನ ಮಾಡಲು ನಾಲ್ಕೈದು ರೀತಿಯ ಸಾಧನಗಳನ್ನ ಬಳಸುತ್ತಿದ್ದರು. ನಯವಾದ ಚೂರೇಚೂರು ಒರಟಾದ ದುಂಡಗಿನ ಒಂದು ಕಲ್ಲನ್ನ ಆರಿಸಿ ತಂದಿಟ್ಟುಕೊಂಡು ಅದರಿಂದಲೇ ಮೈಯನ್ನು ತಿಕ್ಕಿ ತಿಕ್ಕಿ ತೊಳೆಯುತ್ತಿದ್ದರು. ಎರಡನೇದು 'ಚಗರೆ'. ತೆಂಗಿನ ನಾರನ್ನ ಬಿಡಿಸಿ ಅದನ್ನ ಉಂಡೆ ಮಾಡಿಟ್ಟುಕೊಂಡು ಅದರಿಂದ ಮೈ ತಿಕ್ಕುತ್ತಿದ್ದರು. ಎಷ್ಟು ಉರಿ ಗೊತ್ತಾ ಇದರಲ್ಲಿ ಮೈ...
ಮುಖಮಜ್ಜನ ಮಾತ್ರ ನಿತ್ಯ ನಡೆಯುತ್ತಿತ್ತು.
ಅಸಲಿಗೆ ನಮಗೆ ಸ್ನಾನ ಮಾಡಲು ಬಚ್ಚಲು ಮನೆಗಳೆಲ್ಲಿದ್ದವು ಹೇಳಿ? ಕಕ್ಕಸ್ಸು ಗುಂಡಿಗಳ ಕಲ್ಪನೆಯಂತೂ ಇರಲೇ ಇಲ್ಲ ಬಿಡಿ. ಬೆಳಗ್ಗೆ ಆದರೆ, ಯಾವಾಗ ಬೇಕಾದ್ರೆ ಆವಾಗ ಬಯಲಿನ ಕಡೆ ಹೋಗಿ ಬರುತ್ತಿದ್ದೆವು. ಬಚ್ಚಲು ಮನೆ ಇರಲಿಲ್ಲವಾದ್ದರಿಂದ ಬಯಲಲ್ಲೇ ನಿಂತೋ ಕೂತೋ ಒಂದು ಹಂಡೆಯಲ್ಲಿ ನೀರು ತುಂಬಿಕೊಂಡು ಸ್ನಾನ ಮಾಡುವುದು ಅಭ್ಯಾಸ. ಗಂಡಸರು ತೋಟದ ಬಾವಿಯಲ್ಲೋ ಕೆರೆ ಕುಂಟೆಯಲ್ಲೋ ಮಿಂದು ಬರುತ್ತಿದ್ದರು. ...
ಹೊಲಗದ್ದೆ ಬಿಡಿ ಊರುಗಳಲ್ಲಿದ್ದ ಬಚ್ಚಲು ಮನೆಗಳಲ್ಲೂ ಅಷ್ಟೆ ಬಾಗಿಲು ಇರುತ್ತಿರಲಿಲ್ಲ. ಒಂದು ಪರದೆ ಇಳಿಬಿಡುತ್ತಿದ್ದರು. ಕೆಲವೊಮ್ಮೆ ಅದೂ ಇಲ್ಲ. ಬಚ್ಚಲು ಮನೆಯಲ್ಲಿ ಸೀಗೆಕಾಯಿ, ಕೈಯೆಣ್ಣೆ, ಚುಜ್ಜಲಪುಡಿ, ಒಂದು ಬುಡ್ಡಿದೀಪ ಮತ್ತು ಈ ಲೈಫ್ ಬಾಯ್ ಸೋಪು ಇಷ್ಟಿರುತಿದ್ದವು. ಕೆಲವರು ತಲೆಗೆ ಸೀಗೆಕಾಯಿ ಪುಡಿ ಬಳಸಿದ್ರೆ ಇನ್ನು ಕೆಲವರಿಗೆ ಮೈಗೂ ಮತ್ತು ತಲೆಗೂ ಲೈಫ್ ಬಾಯ್ ಸೋಪೆ ಕ್ಲೀನಿಂಗ್ ಐಟಂ ಆ...
ಬಹುಶಃ ನನಗೆ ಬುದ್ಧಿಬರೋ ತನಕವೂ ನಾನು ನಮ್ಮೂರಿನಲ್ಲಿ ನೋಡಿದ್ದು ಲೈಫ್ ಬಾಯ್ ಸೋಪ್ ಮಾತ್ರ. ಬೇರೆ ಹಮಾಮ್ ಸೋಪು ಇತ್ತೇನೋ. ಆದರೆ ಜನ ಸೈಜ್ ಮತ್ತು ಬಾಳಿಕೆ ದೃಷ್ಟಿಯಿಂದ ಹೆಚ್ಚು ಇಷ್ಟಪಡುತ್ತಿದ್ದುದ್ದು ಲೈಫ್ ಬಾಯ್ ಸೋಪನ್ನೆ. ಇನ್ನೊಂದು ವಿಷಯ ಏನಂದ್ರೆ, ಒಂದು ಲೈಫ್ ಬಾಯ್ ಸೋಪ್ ಬೇಡ ಅನ್ನೋರಿಗೆ ಅಂಗಡಿಯವರು ಅರ್ಧ ಕಟ್ ಮಾಡಿ ಕೊಡುತ್ತಿದ್ದರು. ಅರ್ಧ ಬೆಲೆಗೆ.
ಒಮ್ಮೆ ನಮ್ಮೂರಲ್ಲಿ ಒಂದು ಗುಸುಗುಸು ಪಿಸುಪಿಸು ನಡೆದಿತ್ತು. ನಾವೆಲ್ಲಾ ಮಾರಿಗುಡಿ ಹತ್ತಿರ ಹೋಗಿ ಕೂತು ವಿಷಯ ಏನು ಅಂತ ಕೆದಕಿದಾಗ ಗೊತ್ತಾಗಿದ್ದು ಇಷ್ಟು. ಬಸಪ್ಪ ಅನ್ನೋನು ಸ್ನಾನಕ್ಕೆ ಅಂತ ಹೋಗಿದ್ನಂತೆ. ಹೆಂಡ್ತಿ ಒಲೆ ಊದುತ್ತಾ ಅಡುಗೆ ಮಾಡ್ತಿದ್ದಳಂತೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳು ಶುರುವಾಗಿದೆ. ಬಸಪ್ಪನಿಗೆ ಪಿತ್ತನೆತ್ತಿಗೇರಿ ಬಚ್ಚಲು ಮನೆಯಿಂದಲೇ ಕೈಯಲ್ಲಿದ್ದ ಲೈಫ್ ಬಾಯ್...
ದಿದ್ದ. ಎಸೆದ ರಭಸಕ್ಕೆ ಸೋಪ್ ಹೆಂಡ್ತಿಯ ಪಕ್ಕೆಗೆ ಬಿದ್ದು, ನೋವು ತಾಳಲಾರದ ಆಕೆ ಕಿರುಚಿ ರಂಪ ಮಾಡಿದ್ದಳು. ಗಾಬರಿಯಾದ ಗಂಡ ಬಚ್ಚಲು ಮನೆಯಿಂದ ಹೊರಬಂದು ಎಸ್ಕೇಪ್ ಆಗಿದ್ದ. ಮೂರು ದಿನ ಮನೆಗೆ ಬಂದಿರಲಿಲ್ಲ.
ಲೈಫ್ ಬಾಯ್ ಸೋಪಿನ ಮಹಿಮೆ ಇಷ್ಟೆ ಅನ್ಕೋಬೇಡಿ. ಮನೆಗೆ ತಂದಮೇಲೂ ಪೂರ್ತಿ ಇಟ್ಟರೆ ಬೇಗ ಕರಗಿಹೋಗುತ್ತೆ ಅಂತ ಭಾವಿಸಿದ ಜನ ಅರ್ಧ ಕಟ್ ಮಾಡಿ ಇನ್ನರ್ಧವನ್ನಷ್ಟೇ ಬಚ್ಚಲು ಮನೆಯಲ್ಲಿ ಇಡುತ್ತಿದ್ದರು. ಕಟ್ ಮಾಡುತ್ತಿದ್ದುದ್ದು ಬ್ಲೇಡ್ ನಿಂದಲ್ಲ. ಕೊಡಲಿಯಿಂದ ಇಲ್ಲ ಕುಡಗೋಲಿನಿಂದ ಕೊಯ್ಯುತ್ತಿದ್ದರು. ಉಳಿದರ್ಧ ಗೂಡಿನಲ್ಲಿ ಬುಡ್ಡಿದೀಪದ ಪಕ್ಕ ಬಿದ್ದಿರುತ್ತಿತ್ತು.
ನಮ್ಮೂರಿನ ಗೂಡಂಗಡಿಗಳಿಗೆ ಎಡತಾಕಿದರೆ ಕಾಣುತ್ತಿದ್ದದ್ದು ಒಂದರ ಮೇಲೊಂದು ಪೇರಿಸಿದ್ದ ಲೈಫ್ ಬಾಯ್ ಸೋಪ್ ಮಾತ್ರ. ' ಒಂದ್ ಲೈ
ಪ್ ಬೈ ಸೋಪ್ ತಗಂಡ್ ಬರೋಗುಡಾ? ಬಿರ್ರನ್ ಬಾ' ಅಂತ ಸ್ನಾನಕ್ಕೆ ಕೂತ ಮೇಲೆ ನಮ್ಮಂಥ ಹುಡುಗರನ್ನ ಅಂಗಡಿಗೆ ಅಟ್ಟುತ್ತಿದ್ದರು. ನಾವು ಸೋಪ್ ತಗೊಂಡು ಒಂದೆರಡು ಕಡ್ಲೆ ಅಂತ ಅಂಗಡಿಯವನ ಮುಂದೆ ಕೈ ಚಾಚುತ್ತಿದ್ದೆವು. ಅವನು ಗದರಿಸಿದರೆ ಸೋಪನ್ನ ಚಡ್ಡಿ ಜೇಬಿಗಿಳಿಸಿ ಬುರ್ರ್ ಅಂತ ಮನೆ ಕಡೆಗೆ ಬಂಡಿಬಿಡುತ್ತಿದ್ದೆವು. ಎಷ್ಟೋ ಸಲ ಚಡ್ಡಿಯಲ್ಲಿದ್ದ ಇಟ್ಟಿಗೆ ಗಾತ್ರದ ಸೋಪನ್ನೆ ಮರೆತು ಬೀದಿಯಲ್ಲಿ ಆಡೋದಕ್ಕ...
ಇನ್ನೊಂದು ವಿಷಯವನ್ನ ನಾನು ನಿಮಗೆ ಹೇಳಲೇಬೇಕು. ನಮ್ಮ ಮನೆಯ ಪಕ್ಕದಲ್ಲೇ ಒಂದು ಚಿಲ್ರೆ ಅಂಗಡಿ ಇತ್ತು. ದೊಡ್ಡದೇನಲ್ಲ ಅದು. ಚಿಕ್ಕದು. ಅಲ್ಲಿಗೆ ಬೀಡಿ ಸೇದಲು ಬರುವ ಗಂಡಸ್ರು ಗಂಟೆಗಟ್ಟಲೆ ಕಟ್ಟೆಮೇಲೆ ಕೂತು ಬೇಕಾದ್ದು ಬೇಡದ್ದನ್ನು ಒದರುತ್ತಿದ್ದರು. ಹೀಗೆ ಮಾತಾಡುವಾಗಲೇ ಅಲ್ಲಿಗೆ ಶಿವ ಅನ್ನೋನು ಬಂದಿದ್ದ. ಶಿವ ಸ್ವಲ್ಪ ರೌಡಿ ಥರ ಇದ್ದ ಆಸಾಮಿ. ಬಂದು ಅಂಗಡಿಯವನಿಗೆ ಒಂದು ಕಟ್ಟು ಬೀಡಿ ಬೆಂಕಿಪ...
ಅಂದ್ರೆ ಆತ್ಮರಕ್ಷಣೆಗೋಸ್ಕರ ಕೂಡ ಲೈಫ್ ಬಾಯ್ ಒಂದು ಅಸ್ತ್ರವಾಗಿತ್ತು.
ಲೈಫ್ ಬಾಯ್ ಸೋಪ್ ಇತಿಹಾಸ ನೋಡಿದ್ರೆ ಅದು 1895ನೇ ಇಸವಿಗೆಹೋಗಿ ನಿಲ್ಲುತ್ತದೆ. ಲಿವರ್ ಬ್ರದರ್ಸ್ ಮೊದಲಿಗೆ ಇಂಗ್ಲಂಡ್ ನಲ್ಲಿ ಲೈಫ್ ಬಾಯ್ ಸೋಪ್ ಶುರುಮಾಡ್ತಾರೆ. ಅಮೆರಿಕದಲ್ಲಂತೂ ಇದು 1923ರಿಂದ 1950ನೇ ಇಸವಿ ತನಕ ಸಿಕ್ಕಾಪಟ್ಟೆ ಪಾಪ್ಯುಲರ್ ಆಗಿತ್ತಂತೆ. ಯಾವಾಗ ಸುಗಂಧಭರಿತ ಸೋಪುಗಳು ಮಾರುಕಟ್ಟೆಗೆ ದಾಂಗುಡಿ ಇಟ್ಟವೋ ಆಗ ಲೈಫ್ ಬಾಯ್ ಸ್ವಲ್ಪ ಹಿಂದೆ ಸರಿಬೇಕಾಯ್ತು. ಹೊಸ ಸೋಪುಗಳ ಜೊತೆ ಜಿದ್ದ...
ವೆಸ್ಟ್ ಇಂಡೀಸ್ ವಿರುದ್ಧದ ಟ್ವೆಂಟಿ-20 ಸರಣಿಗೆ ಟೀಮ್ ಇಂಡಿಯಾ ಪ್ರಕಟ; ಕೊಹ್ಲಿಗೆ ವಿಶ್ರಾಂತಿ | Vartha Bharati- ವಾರ್ತಾ ಭಾರತಿ
ವಾರ್ತಾ ಭಾರತಿ Oct 27, 2018, 12:07 AM IST
ಹೊಸದಿಲ್ಲಿ, ಅ.26: ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಗೆ ಭಾರತದ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದ್ದು, ನಾಯಕ ವಿರಾಟ್ ಕೊಹ್ಲಿ ಮತ್ತು ವಿಕೆಟ್ ಕೀಪರ್ ಎಂ.ಎಸ್ ಧೋನಿಗೆ ವಿಶ್ರಾಂತಿ ನೀಡಲಾಗಿದೆ.
ಉಪನಾಯಕ ರೋಹಿತ್ ಶರ್ಮಾ ತಂಡವನ್ನು ನಾಯಕರಾಗಿ ಮುನ್ನಡೆಸಲಿದ್ದಾರೆ. ತಂಡದ ವಿವರ ಇಂತಿವೆ. ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಲೋಕೇಶ್ ರಾಹುಲ್ , ದಿನೇಶ್ ಕಾರ್ತಿಕ್, ಮನೀಷ್ ಪಾಂಡೆ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಕೃನಾಲ್ ಪಾಂಡೆ, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಹಾಲ್, ಕುಲ್ ದೀಪ್ ಯಾದವ್, ಭುವನೇಶ್ವರ ಕುಮಾರ್, ಜಸ್ ಪ್ರೀತ್ ಬುಮ್ರಾ, ಖಲೀಲ್ ಅಹ್ಮದ್, ಉಮೇಶ್ ...
ಬಟ್ಟೆ ಬರೆಗೆ ಶುಭ್ರ ಕಾಂತಿ, ಕೆರೆಗಳಲ್ಲಿ ಹಸಿರು ಕ್ರಾಂತಿ!
ಸಸ್ಯಗಳು ಚೆನ್ನಾಗಿ ಬೆಳೆಯಲು ಮಣ್ಣಿನಲ್ಲಿ ರಂಜಕ ಇರಬೇಕು; ಇದೇ ರಂಜಕವೇ ನಾವು ನಿತ್ಯ ಬಳಸುವ ಸಾಬೂನು, ಡಿಟರ್ಜಂಟ್‌ಗಳಲ್ಲಿ ಅವಿತಿದ್ದು, ಅದು ಕೆರೆಗಳಲ್ಲಿ ಕಳೆ ಸಸ್ಯವನ್ನು ಪೋಷಿಸುತ್ತ, ಕೃಷಿಗೂ ನೀರಿಲ್ಲದಂತೆ ಮಾಡುತ್ತಿದೆ. ಒಂದೊಮ್ಮೆ ಕೃಷಿಗೆ ಉಪಕಾರಿಯಾಗಿದ್ದ ರಂಜಕ ಈಗ ಅಪಾಯಕಾರಿ..!? ಹರ್ಷವರ್ಧನ ವಿ. ಶೀಲವಂತರವರ ಲೇಖನ.
ಹಿಂದೊಮ್ಮೆ ನವಿಲುಗಳ ನಾಡಾಗಿದ್ದರಿಂದ ಅದು 'ನವಿಲೂರು'.. ಆ ಊರಿನ ಕೆರೆಗೆ ಒಂದೊಮ್ಮೆ ಇಟ್ಟಿದ್ದ ಹೆಸರು 'ತಾವರೆಕೆರೆ'. ಸದ್ಯ ಅದು 'ಐಕಾರ್ನಿಯ ಕಳೆ'ಯ ಕೆರೆ! ಒಟ್ಟು ಇಲ್ಲಿ 'ಹಸಿರು ಕ್ರಾಂತಿ'!
ಧಾರವಾಡದಿಂದ ಹುಬ್ಬಳ್ಳಿಗೆ ಹೋಗುವ ರಸ್ತೆಯ ಮೇಲೆ ಕೇವಲ ೭ ಕಿ.ಮೀ. ದೂರದಲ್ಲಿ ಎಡಬದಿಗೆ ರಾಷ್ಟ್ರೀಯ ಹೆದ್ದಾರಿ ಪಕ್ಕವೇ, ನವಿಲೂರು ಊರಿಗೆ ಹೋಗುವ ಕೂಡು ರಸ್ತೆಗೆ ಗಟಾರು ಪಕ್ಕವೇ ಸಣ್ಣ ನೀರಾವರಿ ಇಲಾಖೆ ಫಲಕವಿದೆ. ಜಲಾನಯನ ಅಭಿವೃದ್ಧಿ ಯೋಜನೆ ಅಡಿ ಸಣ್ಣ ನೀರಾವರಿ ಇಲಾಖೆ ಸುಪರ್ದಿಗೆ ಈ ಕೆರೆ ಇದೆ ಎಂದು ಫಲP ಹೇಳುತ್ತದೆ. ಸುಮಾರು ೮೫ ಲಕ್ಷದ ರೂಪಾಯಿ ಖರ್ಚಿಸಿ ಮಾಜಿ ಶಾಸಕ ಚಂದ್ರಕಾಂv ಬೆಲ್ಲದ ಅವ...
ಕೆರೆಯ ಪಕ್ಕದಲ್ಲಿ ನಿವೇಶನಗಳಾಗದೇ ಅಳಿದುಳಿದ ಹೊಲಗಳಲ್ಲಿ ಹಸಿರು ಕ್ರಾಂತಿ ಜೂನ್ ತಿಂಗಳ ಮಳೆಗಾಲದಲ್ಲಿ ಆರಂಭಗೊಂಡು, ನವೆಂಬರ್ ಒಳಗೆ ಕೊನೆಗೊಳ್ಳುತ್ತದೆ. ಆಮೇಲೆ ನವಿಲೂರು ಕೆರೆಯಲ್ಲಿ ಹಸಿರು ನಳನಳಿಸುತ್ತದೆ. ಈ ಋತುಮಾನ ವ್ಯತ್ಯಾಸ ಹೊರತುಪಡಿಸಿ, ಎರಡೂ ಬಗೆಯ ಹಸಿರು ಕ್ರಾಂತಿಗೆ ಸಾರಜನಕ ಮತ್ತು ರಂಜಕಗಳೇ ಅಪ್ಪ-ಅಮ್ಮ.
'ಎನ್-ಪಿ-ಕೆ' ತ್ರಿವೇಣಿ ಸಂಗಮ
ಸಂಪೂರ್ಣವಾಗಿ ಕಲುಷಿತವಾದ ಕೆರೆಯ ನೀರು
ಮೈ ಕೊಳೆ ತೊಳೆಯಲು, ಬಟ್ಟೆ ಒಗೆಯಲು, ಪಾತ್ರೆ ತಿಕ್ಕಲು ಬಳಸುವ ಸೋಪ್ ಮತ್ತು ಡಿಟರ್ಜಂಟ್‌ಗಳಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ, ರಂಜಕ (ಫಾಸ್ಪರಸ್ -ಪಿ) ಇದೆ. ಇದು ಕೆರೆಯ ಒಡಲು ಸೇರಿದರೆ ಕಳೆ ಸಸ್ಯಗಳಿಗೆ ಪ್ರೊಟೀನ್ ಒದಗಿಸಿದಂತೆ! ಒಂದರ್ಥದಲ್ಲಿ ಹುಲುಸಾದ ರಸಗೊಬ್ಬರ. ಜೊತೆಗೆ ನಮ್ಮ ಪಾಯಖಾನೆ ತ್ಯಾಜ್ಯ, ಗಟಾರು ನೀರು, ಆಕಳು-ಎಮ್ಮೆಗಳ ಗಂಜಲು ಸಾರಜನಕವನ್ನೂ ಸೇರಿಸಿ, ಅಲ್ಲಲ್ಲಿ ಗುಡ್ಡೆಗಟ್ಟಲೆ ಬ...
ಈ ಸಸ್ಯ ಕೆರೆಯ ನಾಲ್ಕೂ ಬದಿಯಲ್ಲಿ ಶುದ್ಧ ನೀರನ್ನೆಲ್ಲ ನುಂಗಿ, ತೇಲು ಬೇರುಗಳ ಏಕಾಣುಜೀವಿಗಳ ಮೂಲಕ ಮೀಥೇನ್ ಹೊಮ್ಮಿಸುತ್ತ ನೀರಿನಲ್ಲಿನ ಆಮ್ಲಜನಕವನ್ನು ಪೂರ್ತಿ ನಾಶ ಪಡಿಸಿ, ಜಲಚರಗಳನ್ನೆಲ್ಲ ಕೊಂದು, ನಾನಾ ಬಗೆಯ ಸೊಳ್ಳೆ, ಕ್ರಿಮಿ ಕೀಟಗಳಿಗೆ ಆಶ್ರಯ ನೀಡುತ್ತ ಇಡೀ ಜಲಮೂಲವನ್ನೇ ಗಬ್ಬೆಬ್ಬಿಸಿದೆ. ಸದ್ಯ, ನವಿಲೂರು ಕೆರೆಯ ನಾಲ್ಕೂ ಬದಿಗಳು ಬಯಲು ಶೌಚದ ಕೂಪಗಳು.
ರಂಜಕವೇ ಕೆರೆ ಕಳೆಗಳಿಗೆ ರಸಗೊಬ್ಬರ
ಸಾಬೂನಿನಲ್ಲಿರುವ ರಂಜಕವೇ ಕೆರೆ ಕಳೆಗಳಿಗೆ ರಸಗೊಬ್ಬರ ಎಂದು ಸುಮಾರು ೬ ದಶಕಗಳ ಹಿಂದೆ ಕೆನಡಾ ಸರ್ಕಾರ (೧೯೬೦) ಕಂಡುಕೊಂಡಿದೆ. ಮಾತ್ರವಲ್ಲ, ಎಲ್ಲ ಸಾಬೂನುಗಲ್ಲೂ ರಂಜಕವನ್ನು ಕಡಿಮೆ ಮಾಡಿಸಿತು. ಅಮೆರಿಕೆಯಲ್ಲೂ (೧೯೮೦) ಈ ಪ್ರಯತ್ನ ನಡೆದಿತ್ತು. ಆದರೆ, ಸಾಬೂನು ತಯಾರಿಕೆ ಉದ್ಯಮಿಗಳೆಲ್ಲ ಒಟ್ಟಾಗಿ ಸೇರಿ ಸರ್ಕಾರದ ದಾರಿ ತಪ್ಪಿಸಲು ಏನೆಲ್ಲ ಕುತಂತ್ರ ಹೂಡಿದವು. 'ಮನುಷ್ಯರ ತ್ಯಾಜ್ಯದಿಂದ ಬರುವ ಸಾ...
ಆದರೆ, ಜನರ ಒತ್ತಾಯದಿಂದ, ಡಿಟರ್ಜಂಟ್ ಬಿಲ್ಲೆ ಮತ್ತು ಪುಡಿಗಳಲ್ಲಿ ರಂಜಕದ ಬಳಕೆಯನ್ನು ಶೇ.೧೦ಕ್ಕೆ ಇಳಿಸಬೇಕೆಂದು ರಾಷ್ಟ್ರಮಟ್ಟದಲ್ಲಿ ಕಾನೂನು ಜಾರಿಗೆ ಬಂತು. ಕೆಲ ರಾಜ್ಯಗಳಲ್ಲಿ ಸಾಬೂನಿನಲ್ಲಿ ರಂಜಕದ ಲವಲೇಶವೂ ಇರುವಂತಿಲ್ಲ ಎಂದು ಕಟ್ಟಿನಿಟ್ಟಿನ ಆದೇಶ ಹೊರಟಿತು. ಅಲ್ಲಿ ಬಳಸಲಾಗುವ ಸಾಬೂನಿನ ರಕ್ಷಾಪುಟದ ಮೇಲೆ ರಂಜಕ ಪಿ- ಸೊನ್ನೆ ಎಂದು ನಮೂದಿಸಲೇಬೇಕು. ಇತರ ಕಡೆ ಸಾಬೂನಿಲ್ಲಿ ರಂಜಕ -ಪಿದ ಪ್...
ಶೇ.೧೮ ರಿಂದ ೨೫ರ ನಡುವೆ ರಂಜಕ!
ಒಳಚರಂಣಡಿ ನೀರು ತುಂಬಿದ ಕೆರೆಯಲ್ಲಿ ನಿಂತಿರುವ ಎಮ್ಮೆ
ಧಾರವಾಡದ ಅಂಗಡಿಗಳಲ್ಲಿ ಸಿಗುವ ನಾನಾ ಬಗೆಯ ಡಿಟರ್ಜಂಟ್‌ಗಳಲ್ಲಿ ರಂಜಕ ಇದೆಯೇ? ಇಲ್ಲವೋ? ಗೊತ್ತೇ ಆಗುವುದಿಲ್ಲ. ೨೦೦೭ರಲ್ಲಿ ಮೈಸೂರು ವಿವಿಯ ರಸಾಯನಶಾಸ್ತ್ರ ವಿಭಾಗದ ಡಾ. ಮಹದೇವಪ್ಪ ಹಾಗೂ ಅವರ ವಿದ್ಯಾರ್ಥಿಗಳು, ಜನಪ್ರಿಯ ಸಾಬೂನು ಪುಡಿಯ ಮೂರು ಪ್ರತಿಷ್ಟಿತ ಬ್ರ್ಯಾಂಡ್‌ಗಳನ್ನು ಪರೀಕ್ಷಿಸಿ, ಅವುಗಳಲ್ಲಿ ಶೇ.೧೮ ರಿಂದ ೨೫ರ ನಡುವೆ ರಂಜಕವಿರುವುದನ್ನು ಪತ್ತೆ ಮಾಡಿದರು. ಇಷ್ಟು ಭಾರೀ ಪ್ರಮಾಣದ ರಂ...
ನಮ್ಮಂಥ ಶ್ರೀಸಾಮಾನ್ಯರು ಡಿಟರ್ಜಂಟ್ ಉದ್ಯಮಗಳ ಲಾಭ ಗಳಿಕೆಗೆ ನೆರವಾಗುತ್ತ, ಒಂದಾದ ಮೇಲೊಂದರಂತೆ ಊರಿನ ಕೆರೆಗಳನ್ನು ಮುಗಿಸುತ್ತ ಹೋಗುವುದೋ? ಅಥವಾ ವಿಶ್ವ ಬ್ಯಾಂಕಿನ ಸಾಲ ಪಡೆದು ಡ್ರೆಜರ್ ಯಂತ್ರಗಳಿಂದ ಕಳೆ ತೆಗೆಯಬಯಸುವ ಗುತ್ತಿಗೆದಾರರಿಗೆ ಲಾಭಾಂಶವನ್ನು ಹೆಚ್ಚಿಸುತ್ತ ಹೋಗೋಣವೇ? ಅಥವಾ ಕೆರೆಯ ಅಂಗಳದಲ್ಲಿ ಇಟ್ಟಂಗಿ ಭಟ್ಟಿಯನ್ನೆತ್ತಿ ಲಾಭ ಮಾಡಿಕೊಳ್ಳ ಬಯಸುವವರಿಗೆ ಹೂಂ.. ಎನ್ನೋಣವೇ? ಅಥವಾ ಕ...
ವಿದೇಶಗಳಲ್ಲಿ ಖಾಲಿ ಬ್ಯಾಟರಿ ಸೆಲ್‌ಗಳನ್ನೂ, ಉರಿದ ಬಲ್ಬ್‌ಗಳನ್ನೂ ತಯಾರಕರೇ ವಾಪಸ್ ಪಡೆಯಬೇಕೆಂದು ನಿಯಮವಿದೆ. ನಮ್ಮಲ್ಲೂ ಹಾಗೇ ಮಾಡಬೇಕು. ಡಿಟರ್ಜಂಟ್ ತಯಾರಕರೇ ಕೆರೆಯ ಜೊಂಡು ಕಳೆಯನ್ನು ಸ್ವಚ್ಛಗೊಳಿಸಬೇಕು.. ಅಥವಾ ಕಳೆಯನ್ನು ತಮ್ಮ ಫ್ಯಾಕ್ಟರಿಗೆ ಸಾಗಿಸಿಕೊಂಡು 'ರಿಯೂಸ್', 'ರಿಚಾರ್ಜ್' ಅಥವಾ 'ರಿ ಸೈಕಲ್' ಮಾಡಿಕೊಳ್ಳಲಿ. ಆಗ, ರಂಜಕವಿರದ ಸೋಪು ತಯಾರಿಸುವ ಅನಿವಾರ್ಯತೆ ಅವರಿಗೆ ಮನವರಿಕೆಯಾದ...
- ಪಂ. ಮುಂಜಿ. ಗಿನ್ನೀಸ್ ದಾಖಲಿತ ಪರಿಸರವಾದಿ.
ನಾವು, ನಮ್ಮ ಬಟ್ಟೆ, ನಮ್ಮ ವಾಹನಗಳನ್ನು ಶುದ್ಧವಾಗಿಟ್ಟುಕೊಳ್ಳಲು ನಾವು ನಮ್ಮ ಸುತ್ತಲಿನ ಪರಿಸರಕ್ಕೆ ಏನೆಲ್ಲ ರಾಡಿ ಎರಚುತ್ತಿದ್ದೇವೆ. ೪೦ಕ್ಕೂ ಹೆಚ್ಚು ಪ್ರಜಾತಿಯ ವಲಸೆ ಹಕ್ಕಿಗಳು ಬಂದಿಳಿಯುತ್ತಿದ್ದ ನವಿಲೂರು ಕೆರೆಯ ತರಿಭೂಮಿ ಕೊಚ್ಚೆ ರಾಡಿಯಂತಾಗಿರುವುದೇ ಇದಕ್ಕೆ ಸಾಕ್ಷಿ. ಪೇಂಟೆಡ್ ಸ್ಟಾರ್ಕ್, ಸ್ಪೂನ್ ಬಿಲ್, ಪೆಲಿಕಾನ್, ಪಿನ್ ಟೇಲ್ ಡಕ್, ಸ್ಪಾಟ್ ಬಿಲ್ಡ್ ಡಕ್ .. ಹೀಗೆ. ನಮಗಿಂತ ಮೊದಲ...
- ಪ್ರೊ. ಗಂಗಾಧರ ಕಲ್ಲೂರ, ವನ್ಯಜೀವಿಗಳ ಗೌರವ ಕ್ಷೇಮ ಪಾಲಕ, ಧಾರವಾಡ ಜಿಲ್ಲೆ
ಕಮಲದ ಪತ್ರ ತೀರಾ ನುಣುಪಾಗಿರುವುದರಿಂದ ನೀರು, ಧೂಳು ಎಲ್ಲ ಜಾರಿ ಹೋಗುತ್ತದೆ ಎಂಬುದು ನಮ್ಮ ಅನಿಸಿಕೆ. ಜರ್ಮನಿಯ ಸಸ್ಯ ವಿಜ್ಞಾನಿಗಳು ಕಮಲದ ಎಲೆಗಳನ್ನು ಸೂಕ್ಷ್ಮ ದರ್ಶಕದ ಮೇಲಿಟ್ಟು ನೋಡಿ, ಆಶ್ಚರ್ಯಗೊಂಡರು. ಎಲೆಗಳ ಮೇಲ್ಮೈ ನುಣುಪಾಗಿರುವ ಬದಲು ಅಲ್ಲಿ ಮೊಳೆ ಮಣೆಯಂತೆ ಚೂಪು ಗುಡ್ಡ, ಆಳ ಕಣಿವೆಗಳೇ ನಿಬಿಡವಾಗಿವೆ. ಧೂಳಿನ ಕಣಗಳು ಚೂಪುಗುಡ್ಡದ ತುದಿಯ ಮೇಲೆ ನಿಂತರೆ, ನೀರಿನ ಹನಿ ಉದುರಿದಾಗ ಚಪ್...
​ ಸಿರಿಧಾನ್ಯ ಬೆಳೆದು ಆರ್ಥಿಕ ಸದೃಢರಾಗಿ ಕೃಷಿ ವಸ್ತು ಪ್ರದರ್ಶನ, ಕೃಷಿ ವಿಜ್ಞಾನಿಗಳೊಂದಿಗೆ ರೈತರ ಸಂವಾದ | ಶಾಸಕ ಟಿ.ರಘುಮೂರ್ತಿ ಭರವಸೆ|ಸಬ್ಸಿಡಿ ಹೆಚ್ಚಿಸುವಂತೆ ಅಧಿವೇಶನದಲ್ಲಿ ಪ್ರಸ್ತಾಪ - chitradurga - News in kannada, vijaykarnataka
​ ಸಿರಿಧಾನ್ಯ ಬೆಳೆದು ಆರ್ಥಿಕ ಸದೃಢರಾಗಿ ಕೃಷಿ ವಸ್ತು ಪ್ರದರ್ಶನ, ಕೃಷಿ ವಿಜ್ಞಾನಿಗಳೊಂದಿಗೆ ರೈತರ ಸಂವಾದ | ಶಾಸಕ ಟಿ.ರಘುಮೂರ್ತಿ ಭರವಸೆ
ಸಬ್ಸಿಡಿ ಹೆಚ್ಚಿಸುವಂತೆ ಅಧಿವೇಶನದಲ್ಲಿ ಪ್ರಸ್ತಾಪ
ವಿಕ ಸುದ್ದಿಲೋಕ | Updated: Jun 4, 2017, 10:53AM IST
ಚಳ್ಳಕೆರೆ : ಸಬ್ಸಿಡಿ ಹೆಚ್ಚಿಸುವ ಬಗ್ಗೆ ಸೋಮವಾರದಿಂದ ಆರಂಭವಾಗುವ ಅಧಿವೇಶನದಲ್ಲಿ ಪ್ರಸ್ತಾಪ ಮಾಡುವುದಾಗಿ ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ಶನಿವಾರ ಆಯೋಜಿಸಿದ್ದ 2017-18ನೇ ಸಾಲಿನ ಕೃಷಿ ವಸ್ತು ಪ್ರದರ್ಶನ ಹಾಗೂ ಕೃಷಿ ವಿಜ್ಞಾನಿಗಳೊಂದಿಗೆ ರೈತರ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರಕಾರ ವಿತರಿಸುತ್ತಿರುವ ಬಿತ್ತನೆ ಶೇಂಗಾ ಬೆಲೆ ಅಧಿಕವಾಗಿರುವ ಕುರಿತು ವಿಕ ಪತ್ರಿಕೆಯಲ್ಲಿ ಜೂ.1ರ ಗುರುವಾರ ಬಿತ್ತನೆ ಶೇಂಗಾ ದುಬಾರಿ ಎಂಬ ಸುದ್ದಿ ಪ್ರಕಟಿಸಿದ್ದು, ಇಲ್ಲಿ ಸ್ಮರಿಸಬಹುದು. ಒಂದು ಕಾಲದಲ್ಲಿ ನವಣೆಅಕ್ಕಿ ಅನ್ನ ಊಟ ಮಾಡುವವ ಬಡವ, ಭತ್ತದ ಅಕ್ಕಿ ಅನ್ನ ತಿನ್ನುವವ ಶ್ರೀಮಂತ ಎಂಬ ವಾಡಿಕೆ ಇತ್ತು. ಈಗ ನವಣೆ ಸಿರಿಧಾನ್ಯಗಳ ತಿನ್ನುವರು ಸಿರಿವಂತರು ಎನ್ನುತ್ತಾರೆ. ಕಾಲಚಕ್ರ ಉರುಳಿದಂತ...
ಸಿರಿಧಾನ್ಯ ಬೆಳೆಯುವುದರಿಂದ ಕಡಿಮೆ ಖರ್ಚಿನಲ್ಲಿಯೇ ಉತ್ತಮ ಆದಾಯ ಪಡೆಯಬಹುದು. ಈಚೆಗೆ ಮಾರುಕಟ್ಟೆಯಲ್ಲಿ ಸಿರಿಧಾನ್ಯಕ್ಕೆ ಉತ್ತಮ ಬೇಡಿಕೆ ಇದೆ. ಸಾವಯವ ಗೊಬ್ಬರ ಮತ್ತು ತಾವೇ ತಯಾರಿಸಿದ ಕೀಟನಾಶಕವನ್ನು ರೈತರು ಬಳಸುವುದು. ಪರಿಸರ ಸ್ನೇಹಿ ವಿಧಾನ ಇಲಾಖೆಯ ನಾನಾ ಯೋಜನೆ ಮತ್ತು ತಾಂತ್ರಿಕ ಮಾಹಿತಿ ಬಳಸಿ ಅಧಿಕ ಇಳುವರಿಗೆ ಪಡೆಯಬೇಕು ಎಂದರು.
ಬಬ್ಬೂರು ಕೃಷಿ ವಿವಿಯ ಕೃಷಿ ವಿಷಯ ತಜ್ಞ ಡಾ.ರುದ್ರೇಗೌಡ ರೈತರ ಜತೆ ಸಂವಾದ ನಡೆಸುತ್ತಾ, ಭೂಮಿ ತಾಯಿ ಸಾವಿರಾರು ವರ್ಷಗಳಿಂದ ಮನುಷ್ಯನ ಆಸೆ ಆಮಿಷಗಳನ್ನು ಪೂರೈಸಿದೆ. ನಾವು ಮಾತ್ರ ಪ್ರತಿಫಲವಾಗಿ ಏನು ನೀಡಿಲ್ಲ. ಹೀಗಾಗಿ ಭೂಮಿ ತನ್ನ ಆರೋಗ್ಯವನ್ನು ಕಳೆದುಕೊಂಡು ಈಗ ಚೈತನ್ಯ ಹೀನವಾಗಿದೆ ಎಂದರು.
ಜಮೀನಿನಲ್ಲಿ ಅಧಿಕ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯಿಂದ ಭೂಮಿಯ ಫಲವತ್ತತೆ ಕಡಿಮೆಯಾಗುತ್ತಿದೆ. ಜಮೀನಿನ ಆರೋಗ್ಯವೃದ್ಧಿಗೆ ಸಾವಯವ ಗೊಬ್ಬರ ಬಳಕೆ, ಹಸಿರೆಲೆ, ಎರೆಹುಳು ಹಾಗೂ ಕೊಟ್ಟಿಗೆ ಗೊಬ್ಬರಗಳ ಬಳಕೆಗೆ ಹೆಚ್ಚಿನ ಒತ್ತು ನೀಡುವ ಜತೆಗೆ ಕಡಿಮೆ ನೀರಿನಲ್ಲಿ ಅಧಿಕ ಇಳುವರಿ ಬೆಳೆಗಳಾದ ಸಿರಿಧಾನ್ಯಗಳನ್ನು ಬೆಳೆಯುವಂತೆ ಸಲಹೆ ನೀಡಿದರು.
ರೈತ ಮುಖಂಡ ಕೆ.ಪಿ. ಬೂತಯ್ಯ ಮಾತನಾಡಿ, ಈ ಭಾಗದಲ್ಲಿ ಸತತ ಬರಗಾಲದಿಂದ ರೈತರು ನಷ್ಟದಲ್ಲಿದ್ದಾರೆ. 7500 ರೂ. ದುಬಾರಿ ಬೆಲೆಯ ಬಿತ್ತನೆ ಶೇಂಗಾ ಖರೀದಿಸಲು ಹಣವಿಲ್ಲ. ಹಾಗಾಗಿ ಶಾಸಕರು ಕೃಷಿ ಸಚಿವರ ಗಮನಕ್ಕೆ ತಂದು ಸಬ್ಸಿಡಿ ಹೆಚ್ಚಿಸಿ ಕ್ವಿಂಟಾಲ್‌ಗೆ 3ರಿಂದ 4 ಸಾವಿರಕ್ಕೆ ಕೊಡಲು ಶೇಂಗಾ ಬೆಳೆಯುವ ಈ ಭಾಗಕ್ಕೆ ವಿಶೇಷ ಪ್ಯಾಕೇಜ್‌ ನೀಡಲೆಂದು ಆಗ್ರಹಿಸಿದರು.
ಹಿಂದೆ ರೈತರೇ ವಿಜ್ಞಾನಿಗಳಾಗಿದ್ದರು. ಯಾವ ಮಳೆಗೆ ಬಿತ್ತನೆ ಮಾಡಬೇಕು. ಕೀಟ ನಾಶಕ್ಕೆ ಏನು ಮಾಡಬೇಕೆಂದು ತಿಳಿದಿದ್ದರು. ಎಕರೆಗೆ ಐದು ಚೀಲ ಬೆಳೆದರೂ ನಷ್ಟವಾಗುತ್ತಿರಲಿಲ್ಲ. ಕೃಷಿ ವಿಜ್ಞಾನಿಗಳು ಹೈಬ್ರಿಡ್‌ ಹೊಸ ಹೊಸ ತಳಿ ಬಿತ್ತನೆ ಬೀಜಗಳಿಂದ ಹಾಗೂ ರಾಸಾಯನಿಕ ಗೊಬ್ಬರ ಸಿಂಪರಣೆಯಿಂದ 50 ಚೀಲ ಬೆಳೆದರೂ ಸಾಲಗಾರಾಗಿದ್ದಾರೆ. ಮತ್ತೆ ಈಗ ಕೃಷಿ ವಿಜ್ಞಾನಿಗಳು ಪೂರ್ವಜರ ಕೃಷಿ ಪದ್ಧತಿಯನ್ನು ಅಳವಡಿಸ...
ಕೃಷಿ ಉಪನಿರ್ದೇಶಕಿ ಡಾ.ಸುಜಾತ ಮಾತನಾಡಿ, ಚಿತ್ರದುರ್ಗದಲ್ಲಿ ಭಾನುವಾರದಿಂದ ಸಿರಿಧಾನ್ಯಗಳಿಂದ ತಯಾರಿಸಿದ ಊಟ ನೀಡಲು ಸಿರಿಪಾಕ ಹೋಟೆಲ್‌ ಪ್ರಾರಂಭವಾಗುತ್ತಿದೆ. ಕಡಿಮೆ ನೀರಿನಲ್ಲಿ ಅತಿ ಹೆಚ್ಚು ಇಳುವರಿ ನೀಡುವ ಸಿರಿಧಾನ್ಯಗಳನ್ನು ಬೆಳೆಯಬೇಕು. ಇದಕ್ಕೆ ಸಾಕಷ್ಟು ಬೇಡಿಕೆಯಿದೆ. ಆದರೆ ಬೆಳೆ ಕಡಿಮೆಯಿರುವುದನ್ನು ಕೆಲವರು ದುರುಪೋಗಪಡಿಸಿಕೊಂಡು ನವಣೆಯೆಂದು ಮೋಸದಿಂದ ಮಾರುವ ನಿರ್ದಶನಗಳಿವೆ ಎಂದರು.
ತಾಪಂ ಅಧ್ಯಕ್ಷ ಜಿ.ವೀರೇಶ್‌, ಎಪಿಎಂಸಿ ಅಧ್ಯಕ್ಷ ಸಿ.ಆರ್‌.ಶಿವಣ್ಣ, ತಾಪಂ ಸದಸ್ಯರಾದ ರಂಜಿತಾ ಗಿರಿಯಪ್ಪ, ಕೃಷಿಕ ಸಮಾಜದ ಮುಖಂಡರಾದ ಆನಂದಪ್ಪ, ಬೊಪ್ಪಣ್ಣ, ಕೃಷ್ಣಮೂರ್ತಿ, ತೋಟಗಾರಿಕೆ ಸಹಾಯಕ ನಿರ್ದೇಶಕ ಡಾ.ರವಿ. ಪಶುಸಂಗೋಪನೆ ಅಧಿಕಾರಿ ರೇವಣ್ಣ, ಸಹಾಯಕ ಕೃಷಿ ನಿರ್ದೇಶಕ ಡಾ.ಮಾರುತಿ, ಕೃಷಿ ಅಧಿಕಾರಿಗಳಾದ ಅಶೋಕ್‌, ಗಿರೀಶ್‌, ವೀರಣ್ಣ ಇತರರಿದ್ದರು.
ಕೆ.ವೆಂಕಟಪ್ಪ – ಕಣಜ
ಕೆ.ವೆಂಕಟಪ್ಪ
Home/ವ್ಯಕ್ತಿ ಪರಿಚಯ/ಕೆ.ವೆಂಕಟಪ್ಪ
ಕೆ.ವೆಂಕಟಪ್ಪಕನ್ನಡ ನಾಡಿನ ಬಹು ಶ್ರೇಷ್ಠ ಕಲಾವಿದರು. ಚಿತ್ರ, ಶಿಲ್ಪ, ವೀಣೆ ಮೂರರ ಮೇಲೂ ಅಸಾಧಾರಣ ಪ್ರಭುತ್ವ ಪಡೆದವರು. ವಿಶಿಷ್ಟ ವ್ಯಕ್ತಿತ್ವದ ವೆಂಕಟಪ್ಪನವರು ಮದುವೆಯೂ ಆಗದೆ ಬಾಳನ್ನೆಲ್ಲ ಕಲೆಗೆ ಅರ್ಪಿಸಿದರು.
ಕನ್ನಡನಾಡನ್ನು ಕಲೆಗಳ ಬೀಡೆಂದು ತಾನೆ ಕರೆಯುತ್ತಾರೆ? ಈ ಬೀಡಿಗೆ ಗೂಡಿನಂತಿದ್ದುದು ಮೈಸೂರು ಅರಮನೆ. ಅಲ್ಲಿನ ಅರಸರು ತಲೆಮಾರುಗಳಿಂದ ರಸಿಕರು. ಕಲೆಯ ಎಲ್ಲ ಬಗೆಗಳನ್ನೂ ಉಳಿಸಿಕೊಂಡು ಬೆಳೆಸಿಕೊಂಡು ಬಂದವರು. ನೂರಾರು ಮಂದಿ ಕಲಾವಿದರು ಬದುಕಲು, ಬೆಳೆಯಲು ನೆರವಾದವರು. ಈ ಅರಸರ ಸಾಲಿನಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರಂತೂ ತಾವೇ ಕಲೆಗಾರರಾಗಿದ್ದವರು. ನೆರೆನಾಡುಗಳಿಂದೆಲ್ಲ ಕಲೆಗಾರರನ್ನು ಕರೆಯಿಸಿಕ...
ಅವರ ಮನೆತನದಲ್ಲಿಯೇ ಕಲೆ ಕೈಗೂಡಿದ್ದಿತು. ವೃತ್ತಿಯಲ್ಲಿ ಚಿನ್ನ ಬೆಳ್ಳಿಗಳ ವ್ಯಾಪಾರ; ವಿಗ್ರಹಗಳನ್ನು ಮಾಡುವುದು, ಪುತ್ಥಳಿಗಳನ್ನು ಕಡೆಯುವುದು, ನವುರಾಗಿ ಕುಸುರಿಕೆಲಸ ಮಾಡುವುದು, ಗೆರೆಗಳಲ್ಲಿ ಸೊಗಸಾದ ಚಿತ್ರಗಳನ್ನೂ ಮಂಡಲಗಳನ್ನೂ ಬಿಡಿಸುವುದು ಇವೆಲ್ಲ ಅವರ ಹಿಂದಿನವರು ನಡೆಸಿಕೊಂಡು ಬಂದಿದ್ದವೇ. ಕೃಷ್ಣಪ್ಪನವರೂ ಜಾಣರು, ಈ ಎಲ್ಲ ಕಲಾಭಾಗಗಳಲ್ಲಿಯೂ ನುರಿತವರು. ಅವರನ್ನು ಕಂಡರೆ ಅರಸರಿಗೆ ತುಂ...
ಕೃಷ್ಣಪ್ಪನ ಮೊಮ್ಮಗನೇ ವೆಂಕಟಪ್ಪ. ಲೋಕದಲ್ಲಿ ಕನ್ನಡನಾಡಿಗೆ ಕಲೆಯ ತೌರೂರೆಂಬ ಹೆಸರನ್ನು ಗಳಿಸಿಕೊಟ್ಟ ಕಲಾವಿದ. ಇವರ ತಂದೆಯೂ ಅರಮನೆಯ ಕೆಲಸದಲ್ಲಿದ್ದ ಕಲೆಗಾರರೇ. ಮುಮ್ಮಡಿಕೃಷ್ಣರಾಜ ಒಡೆಯರ ನಂತರ ಅರಸರಾದ ಚಾಮರಾಜ ಒಡೆಯರ ಕಾಲದಲ್ಲಿದ್ದವರು.
ಕಲೆಯ ಹಿನ್ನೆಲೆ
ಚಾಮರಾಜ ಒಡೆಯರ ಮಗ ನಾಲ್ವಡಿ ಕೃಷ್ಣರಾಜ ಒಡೆಯರ ಹೆಸರನ್ನು ಕೇಳದಿರುವವರು ಯಾರು? ಅವರನ್ನು ನಮ್ಮ ನಾಡಿನವರು ಮಾತ್ರವಲ್ಲ, ಹೊರಗಿನವರೂ, ಗೌರವದಿಂದ ಕಾಣುತ್ತಿದ್ದರು. ಅವರಿಗೆ 'ರಾಜರ್ಷಿ'ಯೆಂದೇ ಹೆಸರಾಯಿತು. ಎಂದರೆ ಅಷ್ಟು ಸಾತ್ವಿಕರು. ಮಹಾರಾಜರಾಗಿದ್ದರೂ ಸ್ವಂತ ಜೀವನವನ್ನು ಸಾಧು ಸಂತರಂತೆ ಕಳೆದರು. ಮೇಲಾಗಿ, ತಾವೇ ಕಲಾವಿದರು, ಕಲಾರಸಿಕರು. ವೀಣೆಯನ್ನೂ ಹಲವು ಪಾಶ್ಚಾತ್ಯ ವಾದ್ಯಗಳನ್ನೂ ನುಡಿಸು...
ಇವರ ಆಳ್ವಿಕೆ ಮೊದಲಾಗುವ ವೇಳೆಗೆ ವೆಂಕಟಪ್ಪ ಇನ್ನೂ ಎಳೆಯ ಹುಡುಗ. ತಂದೆ ಬದುಕಿದ್ದಾಗ ಅವರೊಂದಿಗೆ ಅರಮನೆಯಲ್ಲೆಲ್ಲ ಓಡಾಡಿ, ಅಲ್ಲಿನ ಕಲಾ ಪ್ರಕಾರಗಳನ್ನು ಚೆನ್ನಾಗಿ ಅರಿತುಕೊಂಡಿದ್ದ ಚುರುಕು ಬುದ್ಧಿಯ ಹುಡುಗ. ಮನೆಯಲ್ಲಿಯೇ ಕಲೆಯ ಹಿನ್ನೆಲೆ; ಈಗ ಅರಮನೆಯ ಕಲೆಯ ಪರಿಸರದಲ್ಲಿ ಬೆಳವಣಿಗೆ; ಹುಡುಗನಿಗಂತೂ ಹುಟ್ಟಿನಿಂದಲೇ ಕಲೆಯ ಮೇಲೆ ಒಲುಮೆ; ಮೇಲಾಗಿ ಹರಿತವಾದ ಬುದ್ಧಿ! ಕೇಳುವುದೇನು? ಮೇಲ್ಮಟ್ಟದ ...
ಇದನ್ನು ಮಹಾರಾಜರೂ ಕಂಡುಕೊಂಡರು. ತಂದೆಯಿಲ್ಲದ ಈ ಬುದ್ಧಿಶಾಲಿಯ ಬೆಳವಣಿಗೆ ತಮ್ಮ ಹೊಣೆಯೆಂದು ಅರಿತುಕೊಂಡರು. ಅವನನ್ನು ಕರೆಯಿಸಿ ಕೊಂಡು, ಪರೀಕ್ಷಿಸಿ, ಅವನಿಂದ ಕಲಾಕೃತಿಗಳನ್ನು ಮಾಡಿಸಿ ಮೆಚ್ಚಿಕೊಂಡರು. ಇನ್ನೂ ಎಳೆಯ ವಯಸ್ಸಾದು ದರಿಂದ ಕಲೆಯ ಬಗ್ಗೆ ಆಧುನಿಕ ಕ್ರಮದಲ್ಲಿ ಶಿಕ್ಷಣವನ್ನು ಈ ಹುಡುಗ ಪಡೆದುಕೊಂಡರೆ ಒಳ್ಳೆಯದೆಂದು ಬಗೆದು, ಅದಕ್ಕೆ ತಕ್ಕ ಏರ್ಪಾಡು ಮಾಡಲು ತಮ್ಮ ಅಧಿಕಾರಿಗಳಿಗೆ ಅಪ್ಪಣ...
ಆ ಕಾಲಕ್ಕೆ ದಕ್ಷಿಣ ದೇಶದಲ್ಲೆಲ್ಲ ಈ ರೀತಿಯ ಕಲಾ ಶಿಕ್ಷಣವನ್ನು ಒದಗಿಸುತ್ತಿದ್ದ ಶಾಲೆ ಮದರಾಸಿನಲ್ಲಿ ಮಾತ್ರ ಇದ್ದಿತು. ಮೈಸೂರಿನ ಈ ಹುಡುಗನನ್ನು ಮದರಾಸಿನ ಶಾಲೆಗೆ ಕಳುಹಿಸಲು ಅರಮನೆಯ ಅಧಿಕಾರಿಗಳೇ ಎಲ್ಲ ಏರ್ಪಾಡನ್ನೂ ಮಾಡಿ, ಅರಮನೆಯೇ ಅಲ್ಲಿನ ಎಲ್ಲ ವೆಚ್ಚವನ್ನೂ ವಹಿಸಿಕೊಳ್ಳುವಂತೆ ವ್ಯವಸ್ಥೆ ಮಾಡಿದರು. ವೆಂಕಟಪ್ಪ ಅಲ್ಲಿಗೆ ಹೋಗಿ ಅಲ್ಲಿನ ಕಲಿಕೆಯಲ್ಲಿನ್ನೆಲ್ಲ ಮುಗಿಸಿ ಮೈಸೂರಿಗೆ ಹಿಂದಿರುಗ...
ವೆಂಕಟಪ್ಪನನ್ನು ಮಹಾರಾಜರು ಕರೆಯಿಸಿ ಕೊಂಡು, 'ಏನು ವೆಂಕಟಪ್ಪ, ಕಲಿಯುವುದು ಮುಗಿಯಿತೆ? ಮನಸ್ಸಿಗೆ ಸಮಾಧಾನವಾಯಿತೆ?' ಎಂದು ಕೇಳಿದರು. ವೆಂಕಟಪ್ಪ ಧೈರ್ಯದಿಂದ, 'ಮಹಾಸ್ವಾಮಿ, ಕಲಿಯುವುದು ಇನ್ನೂ ಬಹಳ ಇದೆ! ಈಗ ನಾನು ಕಲಿತದ್ದು ಅದರ ಒಂದು ತುಣುಕಷ್ಟೆ!' ಎಂದು ಉತ್ತರ ಕೊಟ್ಟ. ಈ ಉತ್ತರ ಮಹಾರಾಜರಿಗೆ ಮೆಚ್ಚಿಗೆಯಾಯಿತು. 'ಕೆಲವು ವರ್ಷಗಳು ಕಲಿತದ್ದೇ ಸಾಕು, ತಾನು ದಡ ಮುಟ್ಟಿದ್ದೇನೆ, ತನಗೆ ಯಾರೂ...
ಅವನೀಂದ್ರರಲ್ಲಿ ಕಲಿಕೆ
ಅವರು 'ವೆಂಕಟಪ್ಪ ಈಗೇನು ಮಾಡ ಬೇಕೆಂದಿರುವೆ?' ಎಂದು ಕೇಳಿದರು. ಅದಕ್ಕೆ ಅವನು 'ಮಹಾಸ್ವಾಮಿ, ಕಲ್ಕತ್ತ ನಗರದಲ್ಲಿರುವ ಕಲಾಶಾಲೆಯಲ್ಲಿ ಹೆಚ್ಚಿನ ಶಿಕ್ಷಣ ದೊರೆಯುವುದೆಂದು ಕೇಳಿದ್ದೇನೆ. ಅಲ್ಲಿನ ಅಧ್ಯಾಪಕರೂ ತುಂಬ ಹೆಸರು ಪಡೆದವರು ಎಂದು ಹೇಳುತ್ತಾರೆ. ಮಹಾಸ್ವಾಮಿಯವರ ಚಿತ್ತಕ್ಕೆ ಬಂದರೆ, ಅಲ್ಲಿ ಕೆಲವು ವರ್ಷ ಕಲಿತು ಬರುತ್ತೇನೆ. ಅನಂತರ ತಮ್ಮ ಸೇವೆಯಲ್ಲಿ ತೊಡಗುತ್ತೇನೆ' ಎಂದ. ಈ ಸೂಚನೆ ಮಹಾರಾ...
ವೆಂಕಟಪ್ಪನವರು ಸೇರಿದ ಕಲಾಶಾಲೆಯ ಮುಖ್ಯಸ್ಥ ಪೆರ್ಸಿ ಬ್ರೌನ್ ಎಂಬಾತ; ಆ ಕಾಲದ ಕಲಾಪ್ರಪಂಚದಲ್ಲಿ ಅವನ ಹೆಸರು ಮನೆಮಾತಾಗಿದ್ದಿತು. ಆ ಶಾಲೆಯಲ್ಲಿ ಅಧ್ಯಾಪಕರಾಗಿದ್ದವರಲ್ಲಿ ಅವನೀಂದ್ರನಾಥ ಠಾಕೂರರು ಒಬ್ಬರು. ಇವರೇ ವೆಂಕಟಪ್ಪನ ಕೈಹಿಡಿದು ನಡೆಸಿದವರು.
ಭಾರತದ ಸುಪ್ರಸಿದ್ಧ ಕವಿ ರವೀಂದ್ರನಾಥ ಠಾಕೂರರ ಹೆಸರನ್ನು ನೀವು ಕೇಳಿಯೇ ಇದ್ದೀರಿ. ಅವರ ತಂದೆ ಮಹರ್ಷಿ ದೇವೇಂದ್ರನಾಥ ಠಾಕೂರರೂ ಪ್ರಖ್ಯಾತರೇ. ಅವರ ಕಿರಿಯ ಸೋದರ ಗಿರೀಂದ್ರನಾಥ ಠಾಕೂರರ ಮೊಮ್ಮಗನೇ ಈ ಅವನೀಂದ್ರನಾಥರು. ವೆಂಕಟಪ್ಪ ಕಲಾಶಾಲೆಗೆ ಸೇರಿದಾಗಲೇ ಅವನೀಂದ್ರನಾಥರು ಲೋಕಪ್ರಖ್ಯಾತರಾಗಿದ್ದರು. ಕಲಾಶಿಕ್ಷಣದಲ್ಲಂತೂ ಅವರಿಗೆ ಯಾರೂ ಸರಿಗಟ್ಟರು. ಹೀಗಾಗಿ ವೆಂಕಟಪ್ಪನ ಜೊತೆಗೆ ಅವರ ವಿದ್ಯಾರ್ಥಿ...
ಕಲೆಯ ತಪಸ್ಸು
ವೆಂಕಟಪ್ಪ ಕಲ್ಕತ್ತ ಕಲಾಶಾಲೆಯನ್ನು ಸೇರಿದ್ದು ಎರಡು ವರ್ಷಗಳ ಓದಿಗೆಂದು. ಆದರೆ ಅವರು ಅಲ್ಲಿ ಕಳೆದದ್ದು ಒಟ್ಟು ಏಳೂವರೆ ವರ್ಷಗಳು. ಅರಮನೆಯ ಅಧಿಕಾರಿಗಳು ಮೊದಲಿನ ಎರಡು ವರ್ಷಗಳ ಅವಧಿಯನ್ನು ಅರಸರ ಒಪ್ಪಿಗೆಯ ಮೇಲೆ ವೆಂಕಟಪ್ಪನ ಬಯಕೆಯಂತೆ ಹಿಗ್ಗಿಸಿದರು. ವೆಂಕಟಪ್ಪ ಮೊದಲು ಹೋದದ್ದು ಚಿತ್ರಕಲಾಭ್ಯಾಸಕ್ಕೆಂದೇ. ಆದರೆ ಅಲ್ಲಿ ಕಲೆಯ ಬೇರೆ ಬೇರೆ ಪ್ರಕಾರಗಳಲ್ಲಿ ಶಿಕ್ಷಣಕ್ಕೆ ಸೌಕರ್ಯ ವಿದ್ದುದರಿಂದ,...
ಕಲ್ಕತ್ತೆಯಲ್ಲಿ ವೆಂಕಟಪ್ಪ ಇದ್ದದ್ದು ದಕ್ಷಿಣ ಭಾರತದ ಹೋಟೆಲ್ ಒಂದರಲ್ಲಿ. ಅವರು ತಮ್ಮ ಓದು, ಅಭ್ಯಾಸಗಳಲ್ಲೇ ಮುಳುಗಿ ಎಷ್ಟೋ ವೇಳೆ ಹೊತ್ತು ಹೊತ್ತಿನ ಊಟ ತಪ್ಪುತ್ತಿತ್ತು. ನಗರದ ಮನರಂಜನೆಯಾಗಲೀ, ಓರಗೆಯವರೊಂದಿಗೆ ಊರೊಳಗೆ ಅಡ್ಡಾಟವಾಗಲೀ ಅವರ ಆಸಕ್ತಿಯನ್ನು ಸೆಳೆಯಲಿಲ್ಲ. ರಾತ್ರಿ ನಾಲ್ಕೈದು ಗಂಟೆ ನಿದ್ರೆಯನ್ನು ಬಿಟ್ಟರೆ ಉಳಿದೆಲ್ಲ ಕಾಲವೂ ಕಲೆಯ ಕಲಿಕೆಗೇ ಮೀಸಲು; ಅದಕ್ಕೆ ಬೇಕಾದ ಓದು, ಸಿದ್ಧ...
ಅವರು ಕಲಾಶಾಲೆಯಲ್ಲಿದ್ದಾಗ ಗುರುಗಳಾದ ಅವನೀಂದ್ರನಾಥ ಠಾಕೂರರು ಅವರನ್ನು ತುಂಬ ಮೆಚ್ಚಿಕೊಂಡಿದ್ದರು. ಅವರೂ ಕವಿ ರವೀಂದ್ರನಾಥರೂ ಅವರನ್ನು 'ಅಪ್ಪ' ಎಂದೇ ಕರೆಯುತ್ತಿದ್ದರು. ವೆಂಕಟಪ್ಪ ಮೈಸೂರಿಗೆ ಹಿಂದಿರುಗಿದ ಮೇಲೂ ಅವರು ಮೈಸೂರೆಂದರೆ 'ಅಪ್ಪನ ಊರು' ಎಂದೇ ಜ್ಞಾಪಿಸಿ ಕೊಳ್ಳುತ್ತಿದ್ದರು. ಈ ಕಡೆಯಿಂದ ಯಾರು ಅವರನ್ನು ಕಾಣಲೆಂದು ಹೋದರೂ, 'ನೀವು ಅಪ್ಪನನ್ನು ಬಲ್ಲಿರಾ? ಅವನು ಹೇಗಿದ್ದಾನೆ?' ಎಂದು...
ಸಾಹಸದ ಸಾಧನೆ
ಅವರು ವಿದ್ಯಾರ್ಥಿದೆಶೆಯಲ್ಲಿದ್ದಾಗಲೇ, ೧೯೦೯ ರಿಂದ ೧೯೧೩ ರವರೆಗೆ ಹೆರಿಂಗ್‌ಹ್ಯಾಮ್ ಎಂಬಾಕೆ ಅಜಂತಾಗುಹೆಗಳ ಒಳಗಿರುವ ವಿಶ್ವವಿಖ್ಯಾತ ಭಿತ್ತಿಚಿತ್ರಗಳ ಪ್ರತಿಕೃತಿಗಳನ್ನು ಸಿದ್ಧಪಡಿಸುವ ಕೆಲಸವನ್ನು ಕೈಗೊಂಡು ಈ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಕಲಾವಿದರನ್ನು ಸೂಚಿಸುವಂತೆ ಠಾಕೂರರನ್ನು ಕೇಳಿದರು ಅವನೀಂದ್ರ ನಾಥರು ಒಡನೆಯೇ, ಇಂಥ ಶ್ರಮಸಾಧ್ಯವಾದ ಕೆಲಸವನ್ನುನಿಷ್ಠೆಯಿಂದ ಮಾಡ ಬಲ್ಲವನು ...
ಹೀಗೆ ಕಲ್ಕತ್ತ ಕಲಾಶಾಲೆಯಲ್ಲಿ ಏಳೂವರೆ ವರ್ಷಗಳ ಕಾಲವನ್ನು ಕಳೆದು ಮೈಸೂರಿಗೆ ಹಿಂದಿರುಗಿ ದಾಗ ಕಲಾ ಶಾಲೆಯ ಮುಖ್ಯಸ್ಥನಾಗಿದ್ದ ಪೆರ್ಸಿ ಬ್ರೌನ್ ಸರ್ಕಾರಕ್ಕೆ ಕಾಗದವೊಂದನ್ನು ಬರೆದು ವೆಂಕಟಪ್ಪನನ್ನು ಇನ್ನೂ ಹೆಚ್ಚಿನ ಶಿಕ್ಷಣಕ್ಕೆ ಲಂಡನ್ನಿನ ರಾಯಲ್ ಕಾಲೇಜ್ ಆಫ್ ಫೈನ್ ಆರ್ಟ್ಸ್‌ಗೆ ಕಳುಹಿಸಿಕೊಡಬೇಕೆಂದು ಸೂಚಿಸಿ ದನು. ವೆಂಕಟಪ್ಪ ಮದರಾಸಿನಲ್ಲಿಯೂ ಕಲ್ಕತ್ತದಲ್ಲಿಯೂ ಪಡೆದ ವಿಜಯವನ್ನು ಕಂಡು ಮೆಚ...
ಆಗ ಅವರಿಗೆ ಮೂವತ್ತೊಂದು ವರ್ಷ ವಯಸ್ಸು. 'ಕಲೆಯ ಕೈ ಹಿಡಿದವನಿಗೆ ಮದುವೆ ಎಂಥದು?' ಎಂದು ನಿರ್ಧರಿಸಿ ಮದುವೆಯ ಸಲಹೆಗಳನ್ನೆಲ್ಲ ತಳ್ಳಿ ಹಾಕಿದರು. ಕಲೆಯೇ ಅವರ ಪಾಲಿಗೆ ಮಡದಿ, ಮನೆಯ ಗೀಳು, ಗೋಳು ಅಂಟಿದರೆ ಕಲೆಯ ತಪಸ್ಸು ಮುಂದರಿಯು ವುದಿಲ್ಲವೆಂದು ಅವರ ಭಯ. ಹೀಗಾಗಿ ಬಾಳಿನುದ್ದಕ್ಕೂ ಕಟ್ಟುನಿಟ್ಟಾದ ಬ್ರಹ್ಮಚರ್ಯದ ವ್ರತವನ್ನು ಹಿಡಿದು ಏಕಾಂಗಿಯಾಗಿಯೇ ಉಳಿದರು.
'ವೀಣೆಯ ಹುಚ್ಚು'
ಅವರು ಮೈಸೂರಿನಲ್ಲಿಯೇ ಇರತೊಡಗಿದ ಮೇಲೆ ಆಗಿನ ಅರಮನೆಯ ವಾತಾವರಣದಲ್ಲಿ ತುಂಬ ಸ್ವಾರಸ್ಯವೆನ್ನಬಹುದಾದ ವೀಣೆ ಶೇಷಣ್ಣನವರ ಸಂಪರ್ಕ ಬೆಳೆಯಿತು. ಆ ಕಾಲಕ್ಕೆ ವೀಣೆ ಶೇಷಣ್ಣನವರೆಂದರೆ ದೇಶದೇಶಗಳಲ್ಲೆಲ್ಲ ಪ್ರಸಿದ್ಧಿ;'ವೀಣೆಯ ಬೆಡಗಿದು ಮೈಸೂರು' ಎಂದು ಕವಿ ಹಾಡುವಷ್ಟರ ಮಟ್ಟಿಗೆ ಮೈಸೂರಿನ ಈ ವೈಣಿಕನ ಪ್ರಭಾವ ಮೂಡಿದ್ದಿತು. ನಾಲ್ವಡಿ ಕೃಷ್ಣರಾಜರು ಅವರಿಗೆ 'ವೈಣಿಕ ಶಿಖಾಮಣಿ' ಎಂಬ ಬಿರುದ ನ್ನಿತ್ತು ಆಸ...
ಆ ವೇಳೆಗಾಗಲೇ ವೆಂಕಟಪ್ಪನ ಬಳಿಯಲ್ಲಿ ಒಂದು ವೀಣೆಯೂ ಇದ್ದಿತು; ಕಲ್ಕತ್ತೆಯಲ್ಲಿದ್ದಾಗಲೇ ಕೊಂಚ ಮಟ್ಟಿಗೆ ವೀಣೆ ನುಡಿಸುವುದನ್ನು ಕಲಿತೂ ಇದ್ದರು. ಶೇಷಣ್ಣ ನವರ ಸಂಪರ್ಕಕ್ಕೆ ಬಂದನಂತರ ವೀಣೆಯ ಹುಚ್ಚು ಬಲ ವಾಗಿ ಹಿಡಿದು ಚಿತ್ರಕಲೆಯೇ ಹಿಂದಕ್ಕೆ ಸರಿಯಿತು. ಹಗಲೂ ಇರುಳೂ ವೀಣೆಯ ಅಭ್ಯಾಸವೇ ಆಗಿಬಿಟ್ಟಿತು.
ಶೇಷಣ್ಣನವರೂ ವೆಂಕಟಪ್ಪನ ಬುದ್ಧಿಶಕ್ತಿಯನ್ನೂ ಸಾಹಸಪ್ರವೃತ್ತಿಯನ್ನೂ ಸಾಧನೆಯ ನಿಷ್ಠೆಯನ್ನೂ ಮೆಚ್ಚಿ ಕೊಂಡರು. ಉಳಿದ ಶಿಷ್ಯರೆಲ್ಲ ಪಾಠ ಮುಗಿಸಿ ಹೋದ ಮೇಲೆ ವೆಂಕಟಪ್ಪನನ್ನು ಕೂರಿಸಿಕೊಂಡು ವೀಣಾವಾದನದ ಸೂಕ್ಷ್ಮಗಳನ್ನೆಲ್ಲ ಮನದಟ್ಟು ಮಾಡಿಸಿ ಕೊಡುವರು. ತಮಗೆ ತಿಳಿದುದನ್ನೆಲ್ಲ ಮುಚ್ಚು ಮರೆಯಿಲ್ಲದೆ ಈ ಶಿಷ್ಯನಿಗೆ ತಿಳಿಸುವರು. 'ನನ್ನ ನುಡಿಸುವ ರೀತಿಯ ಸಂಪ್ರದಾಯ ವನ್ನು ಉಳಿಸುವವನು ಈ ಶಿಷ್ಯನೇ'...
ವೆಂಕಟಪ್ಪನವರು ವೀಣೆಯ ಸೊಬಗಿಗೆ ಮಾರು ಹೋಗಿ ಚಿತ್ರಕಲೆಯನ್ನು ಪೂರಾ ಬಿಟ್ಟುಬಿಟ್ಟರು; ತಿಂಗಳುಗಳು, ವರ್ಷಗಳು ಕುಂಚವನ್ನೇ ಹಿಡಿಯುತ್ತಿರಲಿಲ್ಲ. ಸದಾ ವೀಣೆಯ ಅಭ್ಯಾಸವೇ ಆಗಿಬಿಟ್ಟಿತು. ಈ ಸುದ್ದಿ ಗುರುಗಳಾದ ಅವನೀಂದ್ರನಾಥ ಠಾಕೂರರಿಗೆ ಹೇಗೋ ಮುಟ್ಟಿತು. ಅವರು ಕಲ್ಕತ್ತೆಯಿಂದ ವೆಂಕಟಪ್ಪನವರಿಗೆ ಕಾಗದವೊಂದನ್ನು ಬರೆದು, 'ಏನು ವೆಂಕಟಪ್ಪ, ನೀನು ಚಿತ್ರಕಲೆಯನ್ನು ಕೈಬಿಟ್ಟಿದ್ದೀಯಂತೆ, ದಿಟವೇ? ಹಾಗ...
ಹೀಗೆ ಚಿತ್ರಕಲೆಯ ಅಭ್ಯಾಸ ಮತ್ತೆ ಶುರು ವಾಯಿತು. ಜೀವನೋಪಾಯಕ್ಕೆ ಚಿತ್ರಕಲೆ ಮತ್ತಿತರ ಕಲಾ ಪ್ರಕಾರಗಳು; ವೀಣಾವಾದನ ಮಟ್ಟಿಗೆ ಆತ್ಮಸಂತೋಷಕ್ಕೆ.
ಅರಮನೆಯ ಪರಿಸರದಲ್ಲಿ
ಮಹಾರಾಜರು ವೆಂಕಟಪ್ಪನವರ ಪ್ರತಿಭೆಯನ್ನೂ ಪ್ರಕೃತಿಯನ್ನೂ ಮನಸ್ಸಿಗೆ ತಂದುಕೊಂಡು ಅವರಿಗೆ ಅರಮನೆಯಲ್ಲಿಯೇ ಉದ್ಯೋಗಾವಕಾಶವನ್ನೂ ಸ್ವಾತಂತ್ರ್ಯ ವನ್ನೂ ಒದಗಿಸಿಕೊಟ್ಟರು. ವೆಂಕಟಪ್ಪನವರದು ಮೊದಲಿಂದ ಖಂಡಿತ ಸ್ವಭಾವ; ಯಾರ ದಾಕ್ಷಿಣ್ಯಕ್ಕೂ ಒಳ ಗಾಗದ, ಯಾರ ಅಂಜಿಕೆಗೂ ಸಗ್ಗದ ಪ್ರವೃತ್ತಿ ಅವರದ್ದು. ಬಲಾತ್ಕಾರಕ್ಕೆ ಎಂದೂ ಮಣಿಯುವವರಲ್ಲ; ತಮಗೆ ತಪ್ಪೆಂದು ತೋರಿದುದನ್ನು ಯಾರ ಹಂಗಿಗೂ ಬಗ್ಗದೆ ಕಟು ವಾಗಿ...
ಈ ಅವಧಿಯಲ್ಲಿ ಅವರು ಮಾಡಿ ಮುಗಿಸಿದ ಕಲಾಕೃತಿಗಳು ಲೋಕವಿಖ್ಯಾತವಾದವು. ತಮ್ಮ ದಣಿಯಾದ ನಾಲ್ವಡಿ ಕೃಷ್ಣರಾಜ ಒಡೆಯರ ಭಾವಚಿತ್ರವೊಂದನ್ನು ದಂತಫಲಕದ ಮೇಲೆ ಮೂಡಿಸಿದ್ದಾರೆ; ಸಹಜ ಸುಂದರವಾದ ಕಲಾಕೃತಿಯಿದು. ಹಾಗೆಯೇ ತಮ್ಮ ಗುರುಗಳಾದ ಅವನೀಂದ್ರನಾಥ ಠಾಕೂರರ ಭಾವಚಿತ್ರವನ್ನು ದಂತ ಫಲಕದ ಮೇಲೆ ಬಿಡಿಸಿದ್ದಾರೆ. ದಂತದಂಥ ನುಣುಪಾದ ಮೇಲ್ಮೈ ಮೇಲೆ ವರ್ಣರಂಜಿತ ವ್ಯಕ್ತಿಚಿತ್ರವನ್ನು ಸಿದ್ಧಪಡಿಸುವುದು ತುಂಬ ...
ವೀಣೆ ಶೇಷಣ್ಣನವರ ಫ್ಲಾಸ್ಟರ್ ಶಿಲ್ಪಕೃತಿ ಇನ್ನೊಂದು ಅದ್ಭುತ ಕೃತಿ. ವರ್ಷಗಟ್ಟಲೆ ದಿನವೂ ಹಲವು ಗಂಟೆಗಳ ಕಾಲ ಅವರ ಮುಂದೆ ಕೂತು ಕೂತು, ಗುರುಭಕ್ತಿ ಯಿಂದ ಅವರ ಆಕೃತಿಯನ್ನು ತಮ್ಮ ಚಿತ್ತಭಿತ್ತಿಯಲ್ಲಿ ಕಡೆದು ಕೊಂಡು ಅನಂತರ ಈ ಭೌತಿಕ ಶಿಲ್ಪದಲ್ಲಿ ಅದನ್ನು ಇಳಿಸಿರುವುದು ತಟ್ಟನೆ ತಿಳಿಯುತ್ತದೆ. ಈಗ ಈ ಶಿಲ್ಪ ಎಲ್ಲಿದೆಯೋ ತಿಳಿಯದು. ಅದರ ಛಾಯಾ ಚಿತ್ರಗಳು ಸ್ವಲ್ಪ ಮಟ್ಟಿಗೆ ಉಳಿದುಕೊಂಡಿವೆ.
ಇಂಥದೇ ಇನ್ನೊಂದು ಶಿಲ್ಪ ಮಾಣಿ ನರಸಿಂಹ ನದು. ಇನ್ನೂ ಒಂದು ಎಂದರೆ ಕವಿ ರವೀಂದ್ರನಾಥ ಠಾಕೂರರದ್ದು. ಇವಲ್ಲದೆ ಹಲವಾರು ಪ್ಲಾಸ್ಟರ್ ಶಿಲ್ಪಫಲಕ ಗಳನ್ನೂ ಸಿದ್ಧಪಡಿಸಿದರು. ಬರೋಡ ಮಹಾರಾಜರ ದಂತ ಚಿತ್ರವೊಂದನ್ನೂ ನಿರ್ಮಿಸಿದರು. ಅರಮನೆಗೆ ಸಂಬಂಧಿಸಿದ ಹಲವು ವಿನ್ಯಾಸಗಳನ್ನು ಉಬ್ಬುಶಿಲ್ಪದಲ್ಲಿ ಮೂಡಿಸಿದರು.
ಸ್ವತಂತ್ರ ಮನೋವೃತ್ತಿ
ಈ ಸುಮಾರಿಗೆ ಅವರಿಗೆ ತಾವು ಓದಿದ ಕಲಾ ಶಾಲೆಯಿಂದ ಅದರ ಮುಖ್ಯಸ್ಥರಾಗಲು ಕರೆ ಬಂದಿತು. ವೆಂಕಟಪ್ಪ ಅಲ್ಲಿ ಕಲಿಯುತ್ತಿದ್ದಾಗ ಶಾಲೆಯ ಮುಖ್ಯಸ್ಥನಾಗಿದ್ದ ಪೆರ್ಸಿ ಬ್ರೌನ್ ನಿವೃತ್ತನಾಗುವ ಮೊದಲು, ತನ್ನ ಜಾಗವನ್ನು ತುಂಬಲು ವೆಂಕಟಪ್ಪನೇ ತಕ್ಕವನೆಂದು ಸರ್ಕಾರಕ್ಕೆ ಸೂಚಿಸಿದರು. ಬಂಗಾಳ ಸರ್ಕಾರ ಅವರ ಸೂಚನೆಯನ್ನು ಒಪ್ಪಿತು. ವೆಂಕಟಪ್ಪನವರಿಗೆ ಸರ್ಕಾರದಿಂದ ಪತ್ರ ಬಂದಿತು; ಮೈಸೂರು ಅರಮನೆಯ ಅಧಿಕಾರಿಗ...
ಆದರೆ ವೆಂಕಟಪ್ಪ ಬಂಗಾಳ ಸರ್ಕಾರಕ್ಕೆ ಉತ್ತರ ಬರೆದು ಈ ಉದ್ಯೋಗವನ್ನು ತಿರಸ್ಕರಿಸಿಬಿಟ್ಟರು. ಅವರ ಉತ್ತರದ ಒಕ್ಕಣೆ ಸ್ವಾರಸ್ಯವಾಗಿದೆ 'ನೀವು ನನ್ನನ್ನು ಕಲಾವಿದನೆಂದು ಕರೆದು ತಪ್ಪು ಮಾಡಿದ್ದೀರಿ. ನಾನೇನು ಕಲಾವಿದನಲ್ಲ, ಕಲಾವಿದ್ಯಾರ್ಥಿ ಅಷ್ಟೇ. ಬದುಕಿನುದ್ದಕ್ಕೂ ನಾನು ವಿದ್ಯಾರ್ಥಿಯೇ! ಕಲೆಯ ಆಳ ಅಗಲಗಳನ್ನು ತಿಳಿದುಕೊಳ್ಳುವ ಕುತೂಹಲ ನನಗುಂಟು. ಆದ್ದರಿಂದ ನಾನು ಕಲಾ ವಿದ್ಯಾರ್ಥಿಯಾಗಿಯೇ ಬಾಳ...
ಹೀಗೆಯೇ ಇತರ ಕೆಲವು ಕಡೆಗಳಿಂದಲೂ ಉನ್ನತ ಹುದ್ದೆಗಳನ್ನು ಅಲಂಕರಿಸಲು ಆಹ್ವಾನಗಳು ಬಂದವು. ವೆಂಕಟಪ್ಪನವರು ಎಲ್ಲವನ್ನೂ ನಿರಾಕರಿಸಿ ಸ್ವತಂತ್ರರಾಗಿ ಉಳಿದುಕೊಂಡರು. ಅದು ಅವರು ಬೆಂಗಳೂರಿಗೆ ಬಂದು ನೆಲೆಸಿದ ಮೇಲೆ ನಡೆದದ್ದು.
ಅವರ ಸ್ವತಂತ್ರ ಮನೋವೃತ್ತಿಗೆ ಸ್ವಾರಸ್ಯವಾದ ನಿದರ್ಶನವೆಂದರೆ ಇದು. ನಾಲ್ವಡಿ ಕೃಷ್ಣರಾಜ ಒಡೆಯರು ಅವರಿಗೆ ಕೆಲವು ಕಲಾಕೃತಿಗಳನ್ನು ಮಾಡಲು ಹೇಳಿದ್ದು ಅದರ ಆರ್ಥಿಕ ಮೌಲ್ಯವನ್ನೂ ನಿರ್ಧರಿಸಿದ್ದರು. ಈ ಕೃತಿಗಳು ಮುಗಿಯುವಷ್ಟರಲ್ಲಿ ಮಹಾರಾಜರು ತೀರಿಕೊಂಡರು. ಮುಂದೆ ಬಂದ ಅರಸರ ಅಧಿಕಾರಿಗಳು ಈ ಕಲಾಕೃತಿಗಳನ್ನು ಕೊಳ್ಳಲು ನಿರಾಕರಿಸಿದರು; ಅವರು ಪಟ್ಟ ಶ್ರಮಕ್ಕೆ ಪ್ರತಿಫಲವಾಗಿ, ಮೊದಲು ನಿರ್ಧರಿಸಿದ ...
ನೋಡಿದಿರಾ, ಎಷ್ಟು ಧೈರ್ಯ! ಅರಸೊತ್ತಿಗೆ ಇನ್ನೂ ಪ್ರಬಲವಾಗಿದ್ದಾಗಲೇ ನಡೆದ ಪ್ರಸಂಗ ಇದು. ದೇಶದ ಅರಸರನ್ನು ನ್ಯಾಯಾಲಯಕ್ಕೆ ಎಳೆಯುವ ಸಾಹಸ ಮತ್ತೊಬ್ಬರು ಮಾಡಿಯಾರೆ? ಆದರೆ ಆ ಕಾಲದಲ್ಲಿ ಹೀಗೆ ಅರಮನೆಯ ವ್ಯವಹಾರವನ್ನು ರಾಜ್ಯದ್ದೇ ನ್ಯಾಯಾಲಯ ವಿಮರ್ಶೆಗೆ, ಪರಿಶೀಲನೆಗೆ ಎತ್ತಿಕೊಳ್ಳುವ ಹಾಗಿರಲಿಲ್ಲ. ವೆಂಕಟಪ್ಪನವರ ಮನಸ್ಸು ಕಹಿಯಾಯಿತು; ಇನ್ನು ಮೈಸೂರಿನಲ್ಲಿರಬಾರದೆಂದು ನಿಶ್ಚಯಿಸಿ, ತಮ್ಮ ಕಲಾಕೃತ...
ಬೆಂಗಳೂರಿನಲ್ಲಿ ವಾಸ
ವೆಂಕಟಪ್ಪ ಬೆಂಗಳೂರಿಗೆ ಬಂದದ್ದು ಹೀಗೆ. ಅವರು ಬಂದದ್ದು ೧೯೪೬ ರ ಜುಲೈ ತಿಂಗಳಿನಲ್ಲಿ. ಆಗ ಅವರಿಗೆ ಅರವತ್ತು ವರ್ಷ ವಯಸ್ಸು. ಒಂದು ಸುಸಜ್ಜಿತವಾದ ಕಲಾಶಾಲೆಯನ್ನು ತೆರೆಯುವ ಉದ್ದೇಶ ದಿಂದ ಅವರು ಮಲ್ಲೇಶ್ವರದ ಅಂಚಿನಲ್ಲಿ, ಪ್ರಶಾಂತವಾದ ಒಂದೆಡೆ, ವಿಶಾಲವಾದ ಜಾಗವನ್ನು ಕೊಂಡು ಅಲ್ಲಿ ಕಲಾಭ್ಯಾಸಕ್ಕೆ ತಕ್ಕಂತೆ ಮನೆಯೊಂದನ್ನು ಕಟ್ಟಿಸಿ ಕೊಂಡರು. ತಮ್ಮ ವಾಸಕ್ಕೆಂದೇ ಮನೆಯಾದರೂ, ತಮ್ಮೆಲ್ಲ ಕಲಾಕೃತಿ...
ಬೆಂಗಳೂರಿನ ಈ ಮನೆಯಲ್ಲಿ ಅವರು ವಾಸಮಾಡತೊಡಗಿದ ಮೇಲೆ ತಮ್ಮ ಹಳೆಯ ಕಲಾಕೃತಿ ಗಳ ಮೇಲೆ ಮತ್ತೊಮ್ಮೆ ಕೈಯಾಡಿಸಿದರು; ಹೊಸಕೃತಿ ಮಾಡುವ ಗೋಜಿಗೆ ಹೋಗಲಿಲ್ಲ. ಜನರಲ್ಲಿದ್ದ ಅನಾದರ, ಸರ್ಕಾರದ ಆಲಸ್ಯ, ಕಲಾವಿದರೆನಿಸಿಕೊಂಡವರ ಮಾತ್ಸರ್ಯ ಇವುಗಳಿಂದ ಅವರು ಬೇಸರಗೊಂಡರು. ಮೊದಲೇ ಸ್ವತಂತ್ರವಾಗಿದ್ದ ಅವರ ಮನೋವೃತ್ತಿ ಈಗ ನಿಷ್ಠುರವಾಯಿತು. ಒಂಟಿಯಾಗಿಯೇ ಉಳಿದಿದ್ದ ಅವರು ಈಗ ಇತರರ ಸಂಪರ್ಕವನ್ನೂ ದೂರವಿರಿಸಿದ...
ಬೆಂಗಳೂರಿನಲ್ಲಿ ಇಷ್ಟು ವಿಖ್ಯಾತನಾದ, ಪ್ರತಿಭಾ ಶಾಲಿಯಾದ ಕಲಾವಿದನೊಬ್ಬನಿದ್ದಾನೆ ಎನ್ನುವುದೇ ಬಹಳ ಮಂದಿಗೆ ತಿಳಿಯದಂತೆ ಇಲ್ಲಿ ಸುಮಾರು ಇಪ್ಪತ್ತು ವರ್ಷ ಗಳ ಕಾಲ ವಾಸಮಾಡಿದರು. ಕಡೆಯ ದಿನಗಳಲ್ಲಿ ಸಂಧಿವಾತವೆಂಬ ಬೇನೆ ಅವರ ದೇಹದಲ್ಲಿ ಕಾಲಿಟ್ಟಿತು. ನಿಶ್ಚಿಂತರಾಗಿ ಅವರು ನಡೆಸಿಕೊಂಡು ಹೋಗುತ್ತಿದ್ದ ಕಲಾಭ್ಯಾಸ ಈಗ ಕಷ್ಟವಾಯಿತು. ಕೂಡುವುದು, ಏಳುವುದು, ನಡೆಯುವುದು ದುಸ್ತರವಾಯಿತು. ಆದರೂ ಸ್ವತಂ...