text stringlengths 0 61.5k |
|---|
ಮೂಡಿಸಿಹ ಪುಟಪುಟವು ರಸದ ತಾಣ |
ಒಂದು ದೇಹಕ್ಕೆಷ್ಟು ಕಾಲು ಕೈ ತಲೆ ಕಣ್ಣು ? |
ಕವಿ ನಿರಂಕುಶಮತಿಯು, ಅಂತೆ ಕಲೆಗಾರ |
ವಿಶ್ವತೋಮುಖ ವಿಶ್ವತೋಬಾಹು ವಿಶ್ವತ |
ಶ್ಚಕ್ಷು ಎನ್ನುವುದಲ್ತೆ ಋಷಿಯ ಉದ್ಗಾರ |
ಕಿರಿದರೊಳು ಪಿರಿದ ಹೊಮ್ಮಿಸುವುದೇ ಕೌಶಲವು |
ಮೂರ್ತದೊಳಮೂರ್ತಚಿಂತನವು ಅನಿವಾರ್ಯ |
ನಿಜನಿಸರ್ಗವೆ ಭೂಮಕಲ್ಪನೆಗೆ ಖದ್ಯೋತ |
ಬ್ರಹ್ಮಸೃಷ್ಟಿಗು ಮಿಗಿಲು ಕವಿಯಕಾರ್ಯ |
ಭಾವಸಂಘರ್ಷದಾಂದೋಲನದಿ ಮುಳುಗೆದ್ದು |
ಗೆದ್ದು ಬರುವುದೆ ಕಲಾವಿದನ ಹುರುಡು |
ಇಂದ್ರಿಯವ್ಯಾಪಾರಸಾಹಸ್ರಗಳ ಕಟೆಯೆ |
ಶತಗುಣಾಂಗಗಳನ್ನು ಮೂಡಿಸುವನು |
ಸಂಗೀತಸಂಗತಿಯೊ, ಸಾಹಿತ್ಯವರ್ಣನೆಯೊ |
ಭಾವನಾಟ್ಯಗಳೊ ಮುಪ್ಪುರಿಗೊಂಡು ಕಲೆತು |
ಮಿಲಿತವಾಗಿಹವು ಶಿಲ್ಪಿಯ ಕಾಣ್ಕೆಯಾಗಿಲ್ಲಿ |
ಭವ್ಯತೆಯೆ ದಿವ್ಯತೆಯು ಧನ್ಯರಾವು |
*ಖದ್ಯೋತ – ಸೂರ್ಯ, ಮಿಣುಕುಹುಳ |
ಕಡಿಮೆಯಲ್ಲಿ ಹೆಚ್ಚನ್ನು ಹೊಮ್ಮಿಸುವುದು ಎಲ್ಲ ಕಲೆಯ ಚರಮ ಲಕ್ಷ್ಯ. ಅಮೂರ್ತ ಅಂದರೆ, ಕಾಣದ್ದನ್ನು ಹೇಳಬೇಕಾದರೂ ಕಾಂಬುದರ ಮೂಲಕವೇ ಯತ್ನಿಸುವ ಅನಿವಾರ್ಯತೆ ಕವಿ ಕಲಾವಿದರದು. ಅದಕ್ಕೆ ಏಕಾಶ್ರಯವೆಂದರೆ ಪ್ರತ್ಯಕ್ಷಪ್ರಕೃತಿ. ಅದನ್ನೇ ಅವಲಂಬಿಸಿ ವಿಸ್ಮಯಾವಹ ಕಲ್ಪನೆ ಕುದುರಿಸಬೇಕು. ಈ ಪ್ರಕೃತಿಯು ಮಿಂಚುಹುಳವಾಗಿ ಅಲ್ಪದಿಂದ ಬಹುವತ್ತ ಅವನನ್ನು ಒಯ್ಯಬೇಕು. ಬ್ರಹ್ಮನ ಸೃಷ್ಟಿಗಿಂತಲೂ ಕವಿಕಲಾವಿದರ ಸೃಷ್ಟಿಶೀಲತೆ ಇನ್ನೂ ಅತಿಶಯವಾದುದು – ರಂಗಕರ್ಮಿ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು. |
ಲೋಕದಿಂದ ಅತಿಶಯವಾದದ್ದನ್ನು ಹೊಮ್ಮಿಸುವ ಗುರಿ ಶಿಲ್ಪ-ಕಾವ್ಯ-ಕಲೆಗಳ ಮರ್ಮ. ಅದು ಆಯಾ ಕಲಾಮಾಧ್ಯಮದ ಸಂವಿಧಾನ, ಸ್ವಾತಂತ್ರ್ಯವನ್ನು ಗಮನಿಸಿಕೊಂಡು ಚಮತ್ಕಾರ ವೈವಿಧ್ಯವನ್ನು ಪ್ರಕಟಪಡಿಸುತ್ತಲೇ ಇರುತ್ತದೆ. ಅದೇನೇ ಇದ್ದರೂ ಲೋಕದ ಸಹಜ ಚರ್ಯೆಗಿಂತ ಮಿಗಿಲಾದ ವಿಸ್ಮಯವೇ ಕಲೆಗಳ ಸ್ಥಾಯಿ ಮತ್ತು ನಿತ್ಯನೇಮ. ಚೆಲುವನ್ನು ಅರಸುವ ಅಭಿಜಾತೀಯ ಕಲಾಮನಸ್ಸುಗಳಿಗೆ ನಾಟ್ಯಧರ್ಮೀ ಎಂದಿಗೂ ಹೆಗಲೆಣೆ. |
ಮಹಾನಟನಿಗೆ ಕಾವ್ಯ-ನೃತ್ಯೋಪಚಾರ- ಆಲಯವಿಶೇಷತೆಯ ನರ್ತನಕ್ಕೊಂದು ಸೇರ್ಪಡೆ |
ಈ ಲೇಖನ ಭಾಗಕ್ಕೆ ಲೇಖಿಕೆಯು ಶತಾವಧಾನಿ ಡಾ. ಆರ್. ಗಣೇಶ್, ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ವಿದುಷಿ ಕಾಂಚನ ರೋಹಿಣಿ ಸುಬ್ಬರತ್ನಂ ಮತ್ತು ಡಾ.ಶೋಭಾ ಶಶಿಕುಮಾರ್, ಅರ್ಜುನ್ ಭಾರಧ್ವಾಜ್ ಅವರ ಸಲಹೆ, ಸಹಕಾರ ಮಾರ್ಗದರ್ಶನಕ್ಕೆ ಋಣಿಯಾಗಿರುತ್ತಾರೆ. |
Series Navigation << ದೇವಾಲಯ ಶಿಲ್ಪಗಳಲ್ಲಿ ನಾಟ್ಯಾಯಮಾನತೆ- ಭಾಗ 2ದೇವಾಲಯ ಶಿಲ್ಪಗಳಲ್ಲಿ ನಾಟ್ಯಾಯಮಾನತೆ- ಭಾಗ ೪ >> |
danceDr. R GaneshDVGKorgi Shankaranarayana UpadhyayanaatyanrttaNrtyapadma subrahmanyamsculpturetemple |
ಬೆಂಗಳೂರು: ಇನ್ನು 15 ದಿನದಲ್ಲಿ ರಾಜ್ಯಾದ್ಯಂತ ಪ್ಲಾಸ್ಟಿಕ್ ಕವರ್‌ಗಳನ್ನು ಸಂಪೂರ್ಣ ನಿಷೇಧಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಸಚಿವ ಸೊಗಡು ಶಿವಣ್ಣ ಹೇಳಿದ್ದಾರೆ. |
ರಾಜ್ಯದಲ್ಲಿ ಈಗಾಗಲೇ ಶಿವಮೊಗ್ಗ, ಚಿಕ್ಕಮಗಳೂರು, ಚಾಮರಾಜನಗರ ಸೇರಿದಂತೆ ಹಲವೆಡೆ ಪ್ಲಾಸ್ಟಿಕ್ ಕವರ್ ಬಳಕೆ ನಿಷೇಧ ಜಾರಿಯಲ್ಲಿದೆ. ಈ ಹಿಂದೆ 40 ಮೈಕ್ರಾನ್ ಗಿಂತ ತೆಳುವಾದ ಪ್ಲಾಸ್ಟಿಕ್‌ನ್ನು ರಾಜ್ಯದಲ್ಲಿ ನಿಷೇಧಿಸಲಾಗಿತ್ತು. ಇನ್ನು ಮುಂದೆ |
ಯಾವುದೇ ರೀತಿಯ ಪ್ಲಾಸ್ಟಿಕ್ ಕವರ್‌ಗಳನ್ನು ಬಳಸುವಂತಿಲ್ಲ ಎಂದು ಸಚಿವ ಶಿವಣ್ಣ ಹೇಳಿದ್ದಾರೆ. |
ಪ್ಲಾಸ್ಟಿಕ್‌ನಿಂದಾಗಿ ಸಾಕಷ್ಟು ಸಮಸ್ಯೆಗಳು ಉಲ್ಬಣಗೊಳ್ಳುತ್ತಿದ್ದು, ಕಸ ವಿಲೇವಾರಿ ಬಿಕ್ಕಟ್ಟು ಬಗೆಹರಿಸಲಾಗದಂತಹ ಸ್ಥಿತಿ ತಲುಪಿದೆ. ಹೀಗಾಗಿ ಅನಿವಾರ್ಯವಾಗಿ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿನಿಷೇಧಿಸಲು ಕ್ರಮ ಕೈಗೊಳ್ಳಲಾಗುತ್ತದೆ. |
ಈಗಾಗಲೇ ರಾಜ್ಯ ಸಕಾರ ನಿಷೇಧಿಸಿರುವ 40 ಮೈಕ್ರಾನ್ ಗಿಂತ ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವಲ್ಲಿ ಸ್ಥಳೀಯ ಸಂಸ್ಥೆಗಳು, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಸಚಿವ ಶಿವಣ್ಣ ಬೇಸರ ವ್ಯಕ್ತಪಡಿಸಿದರು. |
ಹದಿನೈದು ದಿನದಲ್ಲಿ ಎಲ್ಲಾ ರೀತಿಯ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಸದ್ಯದಲ್ಲೇ ಸ್ಥಳೀಯ ಸಂಸ್ಥೆಗಳಿಗೆ ಮಾಹಿತಿ ರವಾನಿಸುವುದಾಗಿ ಹೇಳಿದರು. ಇನ್ನು ಮರುಬಳಕೆ ಮಾಡಬಹುದಾದ ಪ್ಲಾಸ್ಟಿಕ್ ತ್ಯಾಜ್ಯವನ್ನು ಕಾರ್ಖಾನೆಗಳು ಪರ್ಯಾಯಇಂಧನವಾಗಿ ಬಳಸಿಕೊಳ್ಳುವಂತೆ ಸೂಚಿಸಲಾಗಿದೆ. |
ಒಟ್ಟಾರೆ ಪೆಡಂಭೂತವಾಗಿ ಕಾಡುತ್ತಿರುವ ಪ್ಲಾಸ್ಟಿಕ್‌ನ್ನು ಹದಿನೈದು ದಿನದೊಳಗೆ ರಾಜ್ಯಾದ್ಯಂತ ಸಂಪೂರ್ಣ ನಿಷೇಧಿಸಲು ಸರ್ಕಾರ ನಿರ್ಧರಿಸಿದ್ದು, ಸ್ಥಳೀಯಸಂಸ್ಥೆಗಳು(ಸುಮಾರು 183 urban local bodies) ಈ ಬಗ್ಗೆ ಕಾರ್ಯಪ್ರವೃತ್ತವಾಗಲು ಅಣಿಯಾಗುವಂತೆ ಸೂಚಿಸಿದರು. |
ಪಠ್ಯದಲ್ಲಿ ಪರಿಸರ ಅಳವಡಿಕೆ: ಪರಿಸರದ ಬಗ್ಗೆ ವಿದ್ಯಾರ್ಥಿದೆಸೆಯಿಂದಲೇ ಜಾಗೃತಿ ಮೂಡಿಸುವ ಸಲುವಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದಲ್ಲಿ ಪರಿಸರ ವಿಷಯವನ್ನು ಕಡ್ಡಾಯವಾಗಿ ಅಳವಡಿಸಲು ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪತ್ರ ಬರೆದಿದ್ದು, ಮುಂದಿನ ಶೈಕ್ಷಣಿಕವರ್ಷದಿಂದಲೇ ಇದನ್ನು ಜಾರಿಗೊಳಿಸುವಂತೆ ತಿಳಿಸಿದ್ದೇನೆ ಎಂದರು. |
ಮಾಲಿನ್ಯ ಮಂಡಳಿಗೆ ಸರ್ಜರಿ: ರಾಜ್ಯ ಪರಿಸರ ಮಾಲಿನ್ಯವನ್ನು ನಿಯಂತ್ರಿಸಬೇಕಿದ್ದಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯೇ ಮಲೀನವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ ಶಿವಣ್ಣ, ಈ ಮಾಲಿನ್ಯವನ್ನು ಶೀಘ್ರವೇ ನಿಯಂತ್ರಿಸುವುದಾಗಿ ಹೇಳಿದರಲ್ಲದೆ ಮಂಡಳಿಯಲ್ಲಿರುವ ಕೆಲ ಭ್ರಷ್ಟ ಅಧಿಕಾರಿಗಳಿಗೆ ಸದ್ಯದಲ್ಲೇ ತಕ್ಕ ಶಾಸ್ತಿ ಮಾಡುವುದಾಗಿ ಮಾಹಿತಿ ನೀಡಿದರು. |
ಸಕಾಲ ವ್ಯಾಪ್ತಿಗೆ ಮಂಡಳಿ ಸೇವೆ: ರಾಜ್ಯದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಜಾರಿಗೊಳಿಸಿರುವ ಸಕಾಲ ಯೋಜನೆ ವ್ಯಾಪ್ತಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಆರಂಭಿಕ ಸಮ್ಮತಿ ಪತ್ರ, ಕಾರ್ಯಾರಂಭ ಸಮ್ಮತಿ ಪತ್ರ, ಅಧಿಕಾರ ಪತ್ರ ಹಗೂ ವಸತಿ ಸಮುಚ್ಛಯ ಮತ್ತು ವಾಣಿಜ್ಯಸಂಕೀರ್ಣಗಳಿಗೆ ಪರವಾನಿಗೆ ನೀಡುವುದು ಸೇರಿದಂತೆ ಇನ್ನಿತರರು ಸೇವೆಯನ್ನು ತರಲಾಗುವುದು ಎಂದು ವಿವರಿಸಿದರು. |
ಆರ್ಥಿಕತೆಗಳ ಸಮ್ಮಿಲನ · |
ಆರ್ಥಿಕತೆಗಳ ಸಮ್ಮಿಲನ |
ವಿಜಯವಾಣಿ ಸುದ್ದಿಜಾಲ January 21, 2019 3:04 AM |
| ಶಾ.ರಂಗನಾಥ್, ಹಿರಿಯ ನಿವೃತ್ತ ಪ್ರಬಂಧಕರು, ಕೆನರಾ ಬ್ಯಾಂಕ್ |
2017ರ ಆಗಸ್ಟ್ನಲ್ಲಿ ಎಸ್ಬಿಐ ಮತ್ತು ಇತರ 6 ಸಹವರ್ತಿ ಬ್ಯಾಂಕ್ಗಳ ವಿಲೀನಕ್ಕೆ ಲೋಕಸಭೆ ಅಸ್ತು ಎಂದಾಗ ಇಡೀ ದೇಶದಲ್ಲಿ ಗೊಂದಲವುಂಟಾಗಿತ್ತು. ಈ ಬ್ಯಾಂಕುಗಳ ಗ್ರಾಹಕರಿಗೆ ತೊಂದರೆ ಆಗುತ್ತದೆಯೇನೋ ಎನ್ನುವ ಆತಂಕವೂ ಸೃಷ್ಟಿಯಾಗಿತ್ತು. ಆದರೆ, ಇಂದು ಯಾವುದೇ ಗೊಂದಲವಿಲ್ಲದೆ ಗ್ರಾಹಕರು ಎಸ್ಬಿಐನಲ್ಲಿ ತಮ್ಮ ವ್ಯವಹಾರ ಮಾಡುತ್ತಿದ್ದಾರೆ. ಅದೇ ಮಾದರಿಯಲ್ಲಿ ಕೇಂದ್ರ ಸರ್ಕಾರ ಈಗ ಪುನಃ ಬ್ಯಾಂಕುಗಳ ವಿಲೀನ ಪ್ರಕ್ರಿಯೆಗೆ ಕೈಹಾಕಿದೆ. |
ಭಾರತೀಯ ಸ್ಟೇಟ್ ಬ್ಯಾಂಕ್ ಸಾಮಾನ್ಯವಾಗಿ ಕೇಂದ್ರ ಸರ್ಕಾರದ ಎಲ್ಲ ಬ್ಯಾಂಕಿಂಗ್ ವ್ಯವಹಾರ ನಡೆಸುತ್ತಿದೆ. ಅದೇ ರೀತಿ, ರಾಜ್ಯ ಸರ್ಕಾರಗಳ ಬ್ಯಾಂಕಿಂಗ್ ವ್ಯವಹಾರವನ್ನು ಆ ರಾಜ್ಯದ ಸ್ಟೇಟ್ ಬ್ಯಾಂಕುಗಳು ನಡೆಸುತ್ತಿವೆ. ಉದಾಹರಣೆಗೆ, ಕರ್ನಾಟಕ ಸರ್ಕಾರದ ಎಲ್ಲ ಬ್ಯಾಂಕಿಂಗ್ ವ್ಯವಹಾರಗಳು ಮೈಸೂರು ಬ್ಯಾಂಕಿನ ಮೂಲಕ ನಡೆಯುತ್ತದೆ. ಇತ್ತೀಚೆಗೆ ಅಲ್ಪಮಟ್ಟದ ವ್ಯವಹಾರವನ್ನು ಇತರೆ ರಾಷ್ಟ್ರೀಕೃತ ಬ್ಯಾಂಕ್ಗಳು ಸಹ ನಡೆಸುತ್ತಿದ್ದವು. ಬಹಳ ವರ್ಷಗಳಿಂದ ಭಾರತೀಯ ಸ್ಟೇಟ್ ಬ್ಯಾಂಕಿನ ಜತೆ ಇತರೆ ರಾಜ್ಯಗಳ ಸ್ಟೇಟ್ ಬ್ಯಾಂಕುಗಳ ವಿಲೀನ ಪ್ರಕ್ರಿಯೆ ಚಾಲ್ತಿಯಲ್ಲಿ ಇತ್ತು. 2016ರಲ್ಲಿ ಈ ಪ್ರಕ್ರಿಯೆ ಕಾರ್ಯರೂಪಗೊಂಡು ಎಲ್ಲ ಸ್ಟೇಟ್ ಬ್ಯಾಂಕುಗಳು 2017ರಲ್ಲಿ ಭಾರತೀಯ ಸ್ಟೇಟ್ ಬ್ಯಾಂಕಿನ ಜತೆಯಲ್ಲಿ ವಿಲೀನಗೊಂಡವು. ಹೀಗಾಗಿ, ಈಗ ನಾವು ಹೆಚ್ಚಿನ ಕಡೆಯಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಗಳನ್ನು ಕಾಣಬಹುದು. ಈಗ ಎರಡನೇ ಹಂತದ ಬ್ಯಾಂಕುಗಳ ವಿಲೀನದ ಪ್ರಕ್ರಿಯೆಗೆ ಲೋಕಸಭೆ ಹಾಗೂ ರಾಜ್ಯಸಭೆಗಳು ಒಪ್ಪಿಗೆ ಸೂಚಿಸಿವೆ. ಈ ಎರಡನೇ ಹಂತದಲ್ಲಿ ಬ್ಯಾಂಕ್ ಆಫ್ ಬರೋಡ ಬ್ಯಾಂಕಿನ ಜತೆಯಲ್ಲಿ ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್ ವಿಲೀನಗೊಳ್ಳಲಿವೆ. ಈ ರೀತಿಯ ವಿಲೀನಗಳು ಮುಂದೆ ಬರುವ ಅನೇಕ ವಿಲೀನಗಳಿಗೆ ದಿಕ್ಸೂಚಿಯೂ ಆಗಿದೆ. ಇದರಿಂದ ಬ್ಯಾಂಕುಗಳಿಗೆ, ಗ್ರಾಹಕರಿಗೆ ಮತ್ತು ನೌಕರರಿಗೆ ಕೆಲವು ಅನುಕೂಲಗಳಿವೆ. |
ಅನನುಕೂಲ ಅಲ್ಪ |
ಬ್ಯಾಂಕುಗಳ ವಿಲೀನ ಸ್ವಲ್ಪಮಟ್ಟಿನ ಅನನುಕೂಲವನ್ನು ಸಹ ಉಂಟುಮಾಡುತ್ತದೆ. ಗ್ರಾಹಕರಿಗೆ ಉತ್ತಮ ಬ್ಯಾಂಕ್ ಆಯ್ಕೆ ಕಡಿಮೆಯಾಗುತ್ತದೆ. ಬ್ಯಾಂಕುಗಳ ವ್ಯವಹಾರ ಮತ್ತು ಮೊತ್ತದಲ್ಲಿ ಹೆಚ್ಚಾಗುವುದರಿಂದ ಅದರ ಸೂಕ್ತ ಮೇಲ್ವಿಚಾರಣೆ ಸಹ ಒಂದು ಕಠಿಣ ಪರೀಕ್ಷೆ ಆಗುತ್ತದೆ. ಪದೋನ್ನತಿ, ವರ್ಗಾವಣೆ ವಿಷಯದಲ್ಲಿ ಸಂಬಂಧಪಟ್ಟ ಸಿಬ್ಬಂದಿ ವರ್ಗ ಅಸಮಾಧಾನ ಹೊಂದುವ ಸಾಧ್ಯತೆ ಇರುತ್ತದೆ. ಯಾವುದೇ ಬದಲಾವಣೆಗೆ ಹೊಸದರಲ್ಲಿ ವಿರೋಧ ಕಂಡುಬರುವುದು ಸಹಜ. ಕಾಲ ಕಳೆದಂತೆ ಈ ವಿಲೀನದ ಪ್ರಕ್ರಿಯೆಯ ತೊಡಕುಗಳು ತಾನೇತಾನಾಗಿ ಸರಿ ಹೊಂದಿ ಉತ್ತಮ ಫಲ ದೊರಕುತ್ತದೆ. ಹಾಗಾಗಿ ಈ ವಿಲೀನದ ಲಾಭ ಗ್ರಾಹಕರಿಗೆ, ಸಿಬ್ಬಂದಿ ವರ್ಗಕ್ಕೆ ಹಾಗೂ ಸರ್ಕಾರಕ್ಕೆ ಮುಂಬರುವ ವರ್ಷಗಳಲ್ಲಿ ಕಾಣಬಹುದು. ಸಹಜವಾಗಿ ಸಿಬ್ಬಂದಿ ವರ್ಗ ಹೊಸ ವಾತಾವರಣದಲ್ಲಿ ಕೆಲಸ ಮಾಡಬೇಕಾಗಿ ಬಂದಾಗ ವಿರೋಧ ಕಾಣುವುದು ಸಹಜ. ವಿಲೀನಗೊಂಡ ಬ್ಯಾಂಕುಗಳು ಬೇರೆ ಬೇರೆ ರೀತಿಯ ಪ್ರಾದೇಶಿಕ ಸೊಗಡಿನಿಂದ ಬಂದಿರುತ್ತವೆ. ಕೆಲಸದ ಸಂಸ್ಕೃತಿ ಸಹ ಬೇರೆ ಬೇರೆ ಆಗಿರುತ್ತದೆ. ಒಮ್ಮೆಲೆ ಬೇರೆ ರೀತಿಯ ಕೆಲಸದ ವಾತಾವರಣಕ್ಕೆ ಹೊಂದಿಕೊಳ್ಳಲು ಕಾಲಾವಕಾಶ ಬೇಕು. ಸಿಬ್ಬಂದಿ ವರ್ಗದ ವರ್ಗೀಕರಣ ಸಹ ಬ್ಯಾಂಕ್ಗಳ ವಿಲೀನದಿಂದ ಬೇರೆ ಆಗುವ ಸಾಧ್ಯತೆ ಇರುತ್ತದೆ. ವಿಲೀನವಾದ ಬ್ಯಾಂಕಿನಲ್ಲಿ ಇರುವ ಸ್ಥಾನಮಾನ ವಿಲೀನವಾಗುವ ಬ್ಯಾಂಕಿನಲ್ಲಿ ದೊರೆಯದೇ ಹೋಗಬಹುದು. ಇಷ್ಟೆಲ್ಲ ಕಷ್ಟಗಳ ನಡುವೆಯೂ ಬ್ಯಾಂಕುಗಳ ವಿಲೀನ ಇಂದಿನ ಅನಿವಾರ್ಯವಾಗಿದೆ. ಇದರ ಒಳ್ಳೆಯ ಫಲಗಳನ್ನು ಮುಂದಿನ ವರ್ಷಗಳಲ್ಲಿ ಖಂಡಿತ ಕಾಣಬಹುದು. |
ಬ್ಯಾಂಕುಗಳ ವಿಲೀನದಿಂದ ಶಾಖೆಗಳು ಮತ್ತು ನೌಕರವರ್ಗ ಕಡಿಮೆ ಆಗಿ ನಿರ್ವಹಣಾ ವೆಚ್ಚ ಕಡಿಮೆ ಆಗುವುದು. ಇದರಿಂದ ಬ್ಯಾಂಕುಗಳ ಲಾಭಾಂಶ ಹೆಚ್ಚಾಗಿ ಸರ್ಕಾರಕ್ಕೆ ಮತ್ತು ಆಯಾ ಬ್ಯಾಂಕುಗಳು ಷೇರುದಾರರಿಗೆ ಹೆಚ್ಚಿನ ಅನುಕೂಲವಾಗುವುದು. |
ರಾಷ್ಟ್ರೀಕೃತ ಬ್ಯಾಂಕುಗಳ ನಡುವೆ ಅನವಶ್ಯಕ ಪೈಪೋಟಿ ಕಡಿಮೆಯಾಗುತ್ತದೆ. ಪ್ರಚಾರಕ್ಕೆ ಆಗುತ್ತಿದ್ದ ವೆಚ್ಚ ಕಡಿಮೆ ಆಗಿ ಗ್ರಾಹಕರಿಗೆ ಕಡಿಮೆ ದರದಲ್ಲಿ ಬಡ್ಡಿ ಮತ್ತು ಇತರ ಸೇವಾ ಶುಲ್ಕ ಕಡಿಮೆ ಮಾಡಲು ಅನುಕೂಲವಾಗುತ್ತದೆ. |
ಇತ್ತೀಚೆಗೆ ಸ್ಟೇಟ್ ಬ್ಯಾಂಕ್ ವಿಲೀನ ಪ್ರಕ್ರಿಯೆಯಲ್ಲಿ ಸ್ವಯಂ ನಿವೃತ್ತಿ ಘೊಷಣೆಯಿಂದ ಸಿಬ್ಬಂದಿ ಸಂಬಳ ಇತರೆ ವೆಚ್ಚಗಳು ಕಡಿಮೆ ಆಗಿದೆ. ಈ ಸ್ವಯಂ ನಿವೃತ್ತಿ ಯೋಜನೆಯಿಂದ ಹೆಚ್ಚಿನ ಸಿಬ್ಬಂದಿ ತಾವಾಗಿಯೇ ಕೆಲಸದಿಂದ ನಿವೃತ್ತಿ ಹೊಂದಿರುತ್ತಾರೆ. ಇದರಿಂದ ಪ್ರತಿ ಸಿಬ್ಬಂದಿಯಿಂದ ಬ್ಯಾಂಕಿಗೆ ಆಗುವ ಲಾಭಾಂಶ ಹೆಚ್ಚಳ ಆಗುತ್ತದೆ. ಅಷ್ಟರಮಟ್ಟಿಗೆ, ಮುಂದೆ ಬರುವ ವರ್ಷಗಳಲ್ಲಿ ಆ ನಿವೃತ್ತಿ ಹೊಂದಿರುವ ನೌಕರರ ಸಂಬಳ ಇತರೆ ವೆಚ್ಚಗಳು ಆಯಾ ಬ್ಯಾಂಕುಗಳ ಲಾಭಾಂಶ ಹೆಚ್ಚಲು ಸಹಕರಿಸುತ್ತವೆ. |
ವಿಲೀನದಿಂದ ಎಲ್ಲ ಬ್ಯಾಂಕಿನಲ್ಲಿರುವ ಪರಿಣತ ಸಿಬ್ಬಂದಿ ವರ್ಗದ ಸೇವೆ ಗ್ರಾಹಕರಿಗೆ ದೊರೆಯುತ್ತದೆ ಹಾಗೂ ಎಲ್ಲ ತಾಂತ್ರಿಕ ಮತ್ತು ಇತರೆ ಉತ್ತಮ ಸೇವೆಗಳು ವಿಲೀನಗೊಂಡ ಬ್ಯಾಂಕುಗಳ ಗ್ರಾಹಕರಿಗೂ ದೊರೆಯುತ್ತವೆ. |
ಸಿಬ್ಬಂದಿ ವರ್ಗಗಳ ಸೇವಾನಿಯಮಗಳು ಉತ್ತಮಗೊಳ್ಳುವ ಸಾಧ್ಯತೆ ಇರುತ್ತದೆ. ವಿಲೀನಗೊಂಡ ಬ್ಯಾಂಕುಗಳ ಹೆಚ್ಚುವರಿ ಖರ್ಚು ಉಳಿತಾಯ ಆಗುವುದರಿಂದ ನೌಕರರಿಗೆ ಪದೋನ್ನತಿ ಮತ್ತು ತಮ್ಮ ಕೆಲಸದಲ್ಲಿ ಆಸಕ್ತಿ ಹೆಚ್ಚಿ ತೃಪ್ತಿ ಸಿಗುವ ಸಾಧ್ಯತೆ ಇರುತ್ತದೆ. |
6 ಬ್ಯಾಂಕುಗಳು ವಿಲೀನವಾದ ನಂತರ ಆರೋಗ್ಯಕರ ಬೆಳವಣಿಗೆ ಉಂಟಾಗಿ ಹೆಚ್ಚು ನೌಕರಿ ಸೃಷ್ಟಿ ಆಗುವ ಅವಕಾಶ ಜಾಸ್ತಿಯಾಗುತ್ತಿದೆ. ಆದ್ದರಿಂದ ನಮ್ಮ ಯುವಜನರಿಗೆ ಹೆಚ್ಚು ಉದ್ಯೋಗಾವಕಾಶ ಸಿಗುತ್ತದೆ. ಒಂದೇ ಪ್ರದೇಶದ ವಾತಾವರಣ ಇರುವ ಎರಡು ಅಥವಾ ಮೂರು ಬೇರೆ ಬೇರೆ ವಿಲೀನಗೊಂಡ ಬ್ಯಾಂಕಿನ ಶಾಖೆಗಳನ್ನು ಒಂದುಗೂಡಿಸುವುದರಿಂದ ಶಾಖೆಗಳ ಸಂಖ್ಯೆ ಕಡಿಮೆ ಆಗುತ್ತದೆ. ಇದರಿಂದ ಸಿಬ್ಬಂದಿ ವರ್ಗದ ಸಂಬಳ ಬಾಡಿಗೆ ಮತ್ತು ಇತರೆ ಖರ್ಚುಗಳು ಕಡಿಮೆಯಾಗುತ್ತವೆ. ಇದರಿಂದ ವಿಲೀನಗೊಂಡ ಬ್ಯಾಂಕಿನ ನಿರ್ವಹಣಾ ವೆಚ್ಚ ಕಡಿಮೆಯಾಗಿ ಲಾಭಾಂಶ ಹೆಚ್ಚಾಗುತ್ತದೆ. |
ಸಿಬ್ಬಂದಿ ಸಂಘಗಳು ಬೇರೆ ಬೇರೆ ರಾಜ್ಯದಲ್ಲಿ ಆಯಾ ಸಂಸ್ಕೃತಿಗೆ ತಕ್ಕಂತೆ ಸಾಮಾಜಿಕ ಪರಿಸರದಂತೆ ಪ್ರಸ್ತುತ ಕಾರ್ಯನಿರ್ವಹಿಸುತ್ತಿವೆ. ಬ್ಯಾಂಕುಗಳ ವಿಲೀನದಿಂದ ಈ ಸಂಘಗಳು ಒಂದೇ ರೀತಿಯಲ್ಲಿ ಸಿಬ್ಬಂದಿ ಹಾಗೂ ಗ್ರಾಹಕರ ಹಿತವನ್ನು ಗಮನದಲ್ಲಿಟ್ಟು ಕೆಲಸ ಮಾಡಬೇಕಾಗಿರುತ್ತದೆ. ಇದು ಸಹ ಆರೋಗ್ಯಕರ ಬೆಳವಣಿಗೆಗೆ ಸಹಕಾರಿಯಾಗುತ್ತದೆ. |
ಬದಲಾದ ಪರಿಸ್ಥಿತಿಗೆ ತಕ್ಕಂತೆ ಸಿಬ್ಬಂದಿ ವರ್ಗ ಬೇರೆ ಬೇರೆ ಪ್ರದೇಶಗಳಿಗೆ ವರ್ಗವಾಗಿ ಕೆಲಸ ಮಾಡಬೇಕಾಗುತ್ತದೆ. ಇದರಿಂದ ಸಿಬ್ಬಂದಿ ವರ್ಗಗಳ ಪರಿಣತಿ ಎಲ್ಲ ಪ್ರದೇಶಗಳಿಗೆ ಲಭ್ಯವಾಗುವ ಅವಕಾಶ ಉಂಟಾಗುತ್ತದೆ ಮತ್ತು ಯಾವುದೇ ಒಂದು ವರ್ಗಕ್ಕೆ ಅನುಕೂಲ ಅಥವಾ ಅನನುಕೂಲವಾಗುವ ಸಾಧ್ಯತೆ ಕಡಿಮೆಯಾಗುತ್ತದೆ. |
ಸಿಬ್ಬಂದಿ ವರ್ಗಕ್ಕೆ ಏಕರೂಪವಾಗಿ ತರಬೇತಿ ಮತ್ತು ಪರಿಣತಿ ದೊರಕಿಸಿಕೊಡಲು ಎಲ್ಲ ವಿಲೀನಗೊಂಡ ಬ್ಯಾಂಕುಗಳಿಗೆ ಅನುಕೂಲವಾಗುತ್ತದೆ. ಸಿಬ್ಬಂದಿ ವರ್ಗದ ನಿಯೋಜನೆ ಸಹ ಉತ್ತಮ ಮಟ್ಟದ್ದಾಗಿ ಮಾಡಲು ಸಹಕಾರಿಯಾಗುತ್ತದೆ. |
ಹೆಚ್ಚುವರಿ ಸಿಬ್ಬಂದಿಯನ್ನು ಸರಿಯಾದ ರೀತಿಯಲ್ಲಿ ನಿಯೋಜಿಸಿ ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸಲು ಅನುಕೂಲವಾಗುತ್ತದೆ. |
ಸುಸ್ತಿ ಸಾಲ ವಸೂಲಾತಿ ಕ್ರಮವಾಗಿ ಸಾಗಿ ಉತ್ತಮಗೊಳ್ಳುತ್ತದೆ. ಹೊಸ ಸಾಲಗಳ ಪರಿಶೀಲನೆ ವಿನಿಯೋಗಕ್ಕೆ ಸೂಕ್ತ ಅವಕಾಶ ದೊರೆಯುತ್ತದೆ. ಆಡಳಿತಾತ್ಮಕ ವಿಷಯ, ಸಿಬ್ಬಂದಿ ನಿಯೋಜನೆ, ಸಾಲಗಳ ನಿರ್ವಹಣೆ ಮುಂತಾದ ವಿಷಯಗಳಿಗೆ ಅವಕಾಶ ದೊರೆಯುತ್ತದೆ. |
92 ಪೈಸೆ ರೈಲ್ವೆ ವಿಮೆ, ನಾಮಿನಿ ಮಾಡಬೇಕಾದ ಜರೂರು | Railway insurance premium at 92 paise: Why you must appoint a nominee - Kannada Oneindia |
» 92 ಪೈಸೆ ರೈಲ್ವೆ ವಿಮೆ, ನಾಮಿನಿ ಮಾಡಬೇಕಾದ ಜರೂರು |
Updated: Tuesday, November 22, 2016, 11:01 [IST] |
ಬೆಂಗಳೂರು, ನವೆಂಬರ್ 22: ಆನ್ ಲೈನ್ ಮೂಲಕ ರೈಲು ಟಿಕೆಟ್ ಖರೀದಿಸುವಾಗ ಮತ್ತು ಇನ್ಷೂರೆನ್ಸ್ ಅಯ್ಕೆ ಮಾಡಿಕೊಳ್ಳುವಾಗ ತಪ್ಪದೆ ನಾಮಿನಿ (ನಾಮ ನಿರ್ದೇಶನ)ಯನ್ನು ಹೆಸರಿಸಿ. ಈ ಇನ್ಷೂರೆನ್ಸ್ ಗೆ ನೀವು ನೀಡುವುದು 92 ಪೈಸೆ ಮಾತ್ರ. ನಾಮಿನಿ ಮಾಡಲಿಲ್ಲ ಅಂದರೆ ಹಣ ನಿಮ್ಮ ಹತ್ತಿರದವರಿಗೆ ಸಿಗಲ್ಲ ಅಂತೇನೂ ಅಲ್ಲ. |
ಅದರೆ, ಅದಕ್ಕಾಗಿ ತುಂಬ ಸಮಯ ತೆಗೆದುಕೊಳ್ಳುತ್ತದೆ. ನಿಮ್ಮ ಸಂಬಂಧಿ ಎಂಬುದನ್ನು ಸಾಬೀತು ಪಡಿಸಲು ಅಧಿಕೃತ ದಾಖಲೆಗಳನ್ನು ನೀಡಬೇಕಾಗುತ್ತದೆ. ಅಂಥ ವೇಳೆ ವಿಳಂಬ ಆಗುತ್ತದೆ. ಭಾನುವಾರ ನಡೆದ ರೈಲು ಅಪಘಾತದಲ್ಲಿ ನೂರಾ ನಲವತ್ತು ಮಂದಿ ಸಾವನ್ನಪ್ಪಿದ್ದಾರೆ. ನೂರರಷ್ಟು ಮಂದಿ ಆನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡಿದವರು ಇನ್ಷೂರೆನ್ಸ್ ಮಾಡಿಸಿದ್ದಾರೆ.[ಶೀಘ್ರದಲ್ಲೇ, ರೈಲು ಟಿಕೆಟ್ ಕೊಳ್ಳಲು ಆಧಾರ್ ಕಡ್ಡಾಯ!] |
ಈ ರೀತಿ ಪ್ರಯಾಣ ವಿಮೆಯನ್ನು ಸೆಪ್ಟೆಂಬರ್ 1, 2016ರಿಂದ ಪರಿಚಯಿಸಲಾಗಿದೆ. 92 ಪೈಸೆ ಪಾವತಿಸುವ ಮೂಲಕ ಅದರ ಪ್ರಯೋಜನ ಪಡೆಯಬಹುದು. ಅದರೆ ಬಹುತೇಕ ಪ್ರಯಾಣಿಕರು ನಾಮಿನಿ ಮಾಡುವುದನ್ನು ಮರೆಯುತ್ತಾರೆ. ಮೊದಲನೇದಾಗಿ 92 ಪೈಸೆ ವಿಮೆ ಏನು ಮಹಾ ಎಂಬ ಧೋರಣೆ, ಎರಡನೇದು ಪ್ರಯಾಣ ಸುರಕ್ಷತೆಯನ್ನು ಗಂಭೀರವಾಗಿ ಪರಿಗಣಿಸದೆ ನಾಮಿನಿ ಮಾಡಿಸೋದಿಲ್ಲ.[ಯಶವಂತಪುರ-ಶಿವಮೊಗ್ಗ ರೈಲು ವಾರದಲ್ಲಿ 3 ದಿನ ಸಂಚಾರ] |
ಯಾರು ನಾಮಿನಿ ಮಾಡಿರೋದಿಲ್ಲವೋ ಇ ಮೇಲ್, ಮೆಸೇಜ್ ಮೂಲಕ ನೆನಪಿಸಲಾಗುತ್ತದೆ. ಆದರೆ ಅದನ್ನು ಗಂಭೀರವಾಗಿ ಪರಿಗಣಿಸಲ್ಲ. ಅನಾಹುತ ಸಂಭವಿಸಿದಲ್ಲಿ ಯಾರಿಗೆ ಪರಿಹಾರ ನೀಡಬೇಕು ಎಂಬುದು ಇನ್ಷೂರೆನ್ಸ್ ಕಂಪನಿಗಳಿಗೆ ತಿಳಿಯುವುದೇ ಕಷ್ಟವಾಗಿದೆ. |
ಸಂಬಂಧಪಟ್ಟವರ ವಿಳಾಸಕ್ಕೆ ಜ್ಞಾಪನಾ ಪತ್ರಗಳನ್ನು ಕಳಿಸಬೇಕು. ತೊಂದರೆಗೊಳಗಾದ ವ್ಯಕ್ತಿಯ ಹತ್ತಿರದ ಸಂಬಂಧಿ ಎಂದು ಸಾಬೀತಾದ ನಂತರವೇ ಪರಿಹಾರ ನೀಡಬೇಕು. ಒಂದು ವೇಳೆ ನಾಮಿನಿ ಎಂದು ಕೊಟ್ಟುಬಿಟ್ಟಿದ್ದರೆ ಸಲೀಸಾಗುತ್ತದೆ. |
Read in English: Railway: Most ignore 92 paise insurance |
indian railways, insurance, online, accident, bengaluru, karnataka, ಭಾರತೀಯ ರೈಲ್ವೆ, ವಿಮೆ, ಟಿಕೆಟ್, ಆನ್ ಲೈನ್, ಅಪಘಾತ, ಬೆಂಗಳೂರು, ಕರ್ನಾಟಕ |
When you purchase a train ticket online and opt for insurance, make sure you appoint a nominee. With the insurance premium being just 92 paise, many do not bother appointing a nominee. |
ಬಿಸಿ ಮತ್ತು ತಣ್ಣೀರಿನ ಮೀನುಗಳು ಒಟ್ಟಿಗೆ | ಮೀನುಗಳ |
ಕೆಲವು ಸಾಕುಪ್ರಾಣಿ ಅಂಗಡಿಗಳಲ್ಲಿ ಬೇಸಿಗೆಯಲ್ಲಿ, ತಮ್ಮ ಅಕ್ವೇರಿಯಂಗಳಲ್ಲಿ, ಒಂದೇ ಸ್ಥಳದಲ್ಲಿ ವಿವಿಧ ರೀತಿಯ ಮೀನುಗಳು, ಕೆಲವೊಮ್ಮೆ ಉಷ್ಣವಲಯದ ಅಥವಾ ವಿವಿಧ ಜಾತಿಯ ಬಿಸಿನೀರಿನ ಮೀನುಗಳನ್ನು ಹೊಂದಿರುತ್ತವೆ, ಆದರೆ, ಕೆಲವೊಮ್ಮೆ, ಕಡಿಮೆ ಅಥವಾ ಕಡಿಮೆ ಎಂದು ತಿಳಿದಿರುವುದರಿಂದ ಅವರು ಹೋರಾಡಲು ಹೋಗುವುದಿಲ್ಲ ಎಂದು ಅವರಿಗೆ ತಿಳಿದಿದೆ, ಬಿಸಿನೀರಿನ ಮೀನುಗಳೊಂದಿಗೆ ತಣ್ಣೀರಿನ ಮೀನು. |
ಬೇಸಿಗೆಯಲ್ಲಿ ಮೀನುಗಳು ಸಾಮಾನ್ಯವಾಗಿ ಹೀಟರ್ ಅನ್ನು ಹೊಂದಿರುವುದಿಲ್ಲ ಏಕೆಂದರೆ ಪರಿಸರದ ಶಾಖವು ಅವುಗಳನ್ನು ಬೆಚ್ಚಗಿಡಲು ಸಾಕಾಗುತ್ತದೆ ಮತ್ತು ಇದು ಉಳಿತಾಯವಾಗಿದೆ. ಅದಕ್ಕಾಗಿಯೇ ಕೆಲವರು ಎರಡೂ ಜಾತಿಯ ಮೀನುಗಳನ್ನು ಖರೀದಿಸಲು ಪ್ರಯತ್ನಿಸುತ್ತಾರೆ ಮತ್ತು ಅವುಗಳನ್ನು ತಮ್ಮ ಅಕ್ವೇರಿಯಂಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಾರೆ, ಆದರೆ ನೀವು ಒಟ್ಟಿಗೆ ಬಿಸಿ ಮತ್ತು ತಣ್ಣೀರಿನ ಮೀನುಗಳನ್ನು ಹೊಂದಬಹುದೇ? |
ನಾನು ನಿಮಗೆ ಸತ್ಯವನ್ನು ಹೇಳಿದರೆ, ಎಲ್ಲವೂ ಆಗುತ್ತದೆ ಮೀನಿನ ಅದೃಷ್ಟ ಮತ್ತು ಶಕ್ತಿಯನ್ನು ಅವಲಂಬಿಸಿರುತ್ತದೆ. ತಣ್ಣೀರಿನ ಮೀನುಗಳಿವೆ, ಅವುಗಳು ಸಾಮಾನ್ಯವಾಗಿರುವುದಕ್ಕಿಂತ ಹೆಚ್ಚಿನ ತಾಪಮಾನವನ್ನು ಹೊಂದಿಕೊಳ್ಳುತ್ತವೆ ಆದರೆ ಬೆಚ್ಚಗಿನ ನೀರಿನ ಮೀನುಗಳು ಸಾಮಾನ್ಯಕ್ಕಿಂತ ಸ್ವಲ್ಪ ಕಡಿಮೆ ತಾಪಮಾನವನ್ನು ಹೊಂದಬಹುದು. ಹೇಗಾದರೂ, ಇದೆಲ್ಲವನ್ನೂ ಚಿಕ್ಕ ವಯಸ್ಸಿನಿಂದಲೇ ನಡೆಸಬೇಕಾಗಿದೆ, ಆದ್ದರಿಂದ ಮೀನು ಮೊಟ್ಟೆಯಿಡುವ ಮರಿಗಳನ್ನು ಖರೀದಿಸಲು ಅನೇಕರು ಕಾಯುತ್ತಾರೆ. |
ಚಿಕ್ಕವರು, ಚಿಕ್ಕವರಾಗಿರುವುದರಿಂದ ಹೆಚ್ಚು ಸೂಕ್ಷ್ಮ ಆದರೆ ಪ್ರಾರಂಭದಿಂದ ಉತ್ತಮವಾಗಿ ಹೊಂದಿಕೊಳ್ಳಿ. ತಂತ್ರವು ನಿಮ್ಮ ತಾಪಮಾನವನ್ನು ಕ್ರಮೇಣ ಸರಿಹೊಂದಿಸುವುದು, ಒಂದೇ ಬಾರಿಗೆ ಅಲ್ಲ. ಉದಾಹರಣೆಗೆ, ನಿಮ್ಮ ತಾಪಮಾನವು 22 ಡಿಗ್ರಿಗಳಾಗಿದ್ದರೆ, ನಾವು ಆ ತಾಪಮಾನವನ್ನು ಸ್ವಲ್ಪಮಟ್ಟಿಗೆ ಸುಮಾರು 20 ಡಿಗ್ರಿಗಳಿಗೆ ಇಳಿಸುತ್ತೇವೆ. ಮತ್ತು ಅದನ್ನು ತಣ್ಣೀರಿನ ಮೀನುಗಳಿಗೆ ಬೆಳೆಸುವುದು. |
ನಾನು ನಿಮಗೆ ಹೇಳಿದಂತೆ, ಇದು ಸುಲಭದ ಕೆಲಸವಲ್ಲ ಮತ್ತು ಈ ಪ್ರಕ್ರಿಯೆಯಲ್ಲಿ ಮೀನುಗಳು ಸಾಯುತ್ತವೆ. ಅದಕ್ಕಾಗಿಯೇ ಅಂತಹ ಎರಡು ವಿಭಿನ್ನ ಜಾತಿಗಳ ಮೀನುಗಳನ್ನು ಒಟ್ಟಿಗೆ ಹೊಂದಲು ಅನೇಕರು ಕಷ್ಟವೆಂದು ಪರಿಗಣಿಸುತ್ತಾರೆ. ಹಾಗಾಗಿ ನಾನು ನಿಮಗೆ ಹೇಳುತ್ತೇನೆ: ಕಷ್ಟ, ಅಸಾಧ್ಯ, ಇಲ್ಲ. |
ಲೇಖನಕ್ಕೆ ಪೂರ್ಣ ಮಾರ್ಗ: ಮೀನುಗಳ » ಮೀನು » ಬಿಸಿ ಮತ್ತು ತಣ್ಣೀರಿನ ಮೀನುಗಳು ಒಟ್ಟಿಗೆ |
ಒರಿಕಮಾ 88 ಡಿಜೊ |
ನಾನು ಬಿಸಿನೀರು ಮತ್ತು ತಣ್ಣೀರಿನಲ್ಲಿ ಮೀನುಗಳನ್ನು ಹೊಂದಿದ್ದೇನೆ ಮತ್ತು ಅವರಿಗೆ ಏನೂ ಆಗಿಲ್ಲ |
ಒರಿಕಮಾ 88 ಗೆ ಪ್ರತ್ಯುತ್ತರಿಸಿ |
ಮಾರಿಸಾ ಡಿಜೊ |
ನಾನು ಕೂಡ ಬೆರೆಸಿದ್ದೇನೆ ಮತ್ತು ನನಗೆ ಯಾವತ್ತೂ ಸಮಸ್ಯೆಗಳಿಲ್ಲ, ಅವುಗಳು ಚೆನ್ನಾಗಿ ಹೊಂದಿಕೊಂಡವು, ಇನ್ನೂ ಒಂದೆರಡು ಗುಪ್ಪಿಗಳ ಸಂತತಿಯನ್ನು ನಾನು ಹೊಂದಿದ್ದೇನೆ, 10 ಜನಿಸಿದವು, ಅವರ ದೂರದ ಪೆನ್ನಲ್ಲಿ ಬೇರ್ಪಟ್ಟವು, 25 ರಿಂದ 27 ಡಿಗ್ರಿಗಳಷ್ಟು ಹೀಟರ್ನೊಂದಿಗೆ, ಮತ್ತು ದೊಡ್ಡವು ಬೆಳೆಯುತ್ತಿವೆ ನನ್ನ ಮೀನು ಟ್ಯಾಂಕ್ 100 ಲೀಟರ್ ಆಗಿದೆ, ನನ್ನ ಬಳಿ 2 ಗೋಲ್ಡ್ ಫಿಷ್, 2 ಶುಬಂಕಿನ್, 4 ಜೀಬ್ರಾ, 1 ಹಾರ್ನಿಸ್ಚ್ವೆಲ್ಸ್ ಕ್ಯಾಟ್ ಫಿಶ್ 10 ಸೆಂ.ಮೀ. ಅವರು ಕೆಳಭಾಗ ಮತ್ತು ಕಿಟಕಿಗಳನ್ನು ಸ್ವಚ್ clean ಗೊಳಿಸುತ್ತಾರೆ, ಮತ್ತು ಅಂಗುಯಿಲಾದಂತೆ ಕಾಣುವ ಒಂದು ಸ್ವಚ್ ans ಗೊಳಿಸುವಿಕೆಯು ಅದನ್ನು ಕರೆಯುವುದನ್ನು ನನಗೆ ನೆನಪಿಲ್ಲ. ನೀವು ಅವರನ್ನು ಪ್ರೀತಿಯಿಂದ ನೋಡಿಕೊಂಡರೆ ಮತ್ತು ಮನೆಯಲ್ಲಿ ಶಾಂತಿ ಇದ್ದರೆ, ಅವರು ಹೊಂದಿಕೊಳ್ಳುತ್ತಾರೆ. |
ನದಿ ಪಾತ್ರಗಳ ಮರಳು ದಿಬ್ಬಗಳನ್ನು ತೆರವುಗೊಳಿಸುವ ಆಸಕ್ತರಿಗೆ ಅರ್ಜಿ ಆಹ್ವಾನ - e-ಉತ್ತರಕನ್ನಡ |
Home › ಜಿಲ್ಲಾ ಸುದ್ದಿ › ನದಿ ಪಾತ್ರಗಳ ಮರಳು ದಿಬ್ಬಗಳನ್ನು ತೆರವುಗೊಳಿಸುವ ಆಸಕ್ತರಿಗೆ ಅರ್ಜಿ ಆಹ್ವಾನ |
ಕಾರವಾರ: ಕರಾವಳಿ ನಿಯಂತ್ರಣ ವಲಯ ಪ್ರದೇಶಗಳ ನದಿ ಪಾತ್ರಗಳಲ್ಲಿ ಮರಳು ದಿಬ್ಬಗಳನ್ನು ತೆರವುಗೊಳಿಸಲು ಸಾಂಪ್ರದಾಯಿಕವಾಗಿ ಮರಳು ತೆಗೆಯುವ ವ್ಯಕ್ತಿ/ಸಮುದಾಯಗಳನ್ನು ಗುರುತಿಸಲು ಆಸಕ್ತ ಅರ್ಜಿದಾರರಿಂದ ಅರ್ಜಿ ಆಹ್ವಾನಿಸಲಾಗಿದೆ. |
2011 ರ ನವಂಬರ್ 8 ರ ಪೂರ್ವದಲ್ಲಿ ಕರಾವಳಿ ನಿಯಂತ್ರಣ ವಲಯ ಪ್ರದೇಶದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಮರಳು ತೆಗೆಯಲು ತಾತ್ಕಾಲಿಕ ಪರವಾನಿಗೆ ಹೊಂದಿರುವ ವ್ಯಕ್ತಿಗಳು ಅಥವಾ ಕರಾವಳಿ ಜಿಲ್ಲೆಗಳಲ್ಲಿ ಮೀನುಗಾರಿಕೆಯನ್ನು ಕುಲಕಸುಬನ್ನಾಗಿ ಮಾಡುತ್ತಿದ್ದು, ಮೀನುಗಾರಿಕೆ ಇಲಾಖೆಯಿಂದ ಬೋಟು/ಡಿಂಗಿ/ನಾಡದೋಣಿಯನ್ನು ಹೊಂದಿರುವ ಬಗ್ಗೆ ದೃಢೀಕೃತ ನೊಂದಾಯಿತ ಪ್ರಮಾಣ ಪತ್ರ ಹೊಂದಿರುವ ವ್ಯಕ್ತಿಗಳು ಅರ್ಜಿ ಸಲ್ಲಿಸಬಹುದಾಗಿದೆ. |
ಅರ್ಜಿ ಸಲ್ಲಿಸಬಯಸುವವರು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸವಾಗಿರುವ ಬಗ್ಗೆ ವಾಸಸ್ಥಳ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ಹೊಂದಿರತಕ್ಕದ್ದು ಮತ್ತು ನದಿ ತೀರಕ್ಕೆ ಹೊಂದಿಕೊಂಡಂತೆ ಮರಳು ದಾಸ್ತಾನು ಮಾಡಲು ದಾಸ್ತಾನು ಪ್ರದೇಶವನ್ನು ಹೊಂದಿರುವವರು ಅಥವಾ ಅಂತಹ ಜಮೀನು ಮಾಲೀಕರಿಂದ ನೋಂದಾಯಿತ ಒಪ್ಪಿಗೆ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸತಕ್ಕದ್ದು. |
ಅರ್ಜಿ ನಮೂನೆಗಳನ್ನು ಉಪ ನಿರ್ದೇಶಕರು, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಉತ್ತರ ಕನ್ನಡ ಜಿಲ್ಲೆ, ಕಾರವಾರ ಇವರ ಕಛೇರಿಯಲ್ಲಿ ಫೆ.14 ರಿಂದ ಪಡೆದು ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಅರ್ಜಿದಾರರೇ ಖುದ್ದು ಸಹಿ ಮಾಡಿ ಫೆ.28 ರೊಳಗಾಗಿ ಕಛೇರಿಗೆ ಸಲ್ಲಿಸಬೇಕು. ನಿಗದಿಪಡಿಸಿರುವ ಕಡೆಯ ದಿನಾಂಕದ ನಂತರದಲ್ಲಿ ಸಲ್ಲಿಸಲಾಗುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. |
'ಗ್ಯಾಲಾಕ್ಸಿ ಎ7' ಲಾಂಚ್..ಮೊದಲ ಮೂರು ಕ್ಯಾಮೆರಾಗಳ ಸ್ಯಾಮ್‌ಸಂಗ್ ಸ್ಮಾರ್ಟ್‌ಪೋನ್! | Samsung Galaxy A7 (2018) goes official with triple rear cameras - Kannada Gizbot |
ವಿಶ್ವ ಮೊಬೈಲ್ ಮಾರುಕಟ್ಟೆಯ ದಿಗ್ಗಜ ಕಂಪೆನಿ 'ಸ್ಯಾಮ್‌ಸಂಗ್' ಇದೇ ಮೊದಲ ಬಾರಿಗೆ ಮೂರು ರಿಯರ್ ಕ್ಯಾಮೆರಾಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್ ಒಂದನ್ನು ಬಿಡುಗಡೆ ಮಾಡಿ ಮೊಬೈಲ್ ಪ್ರಪಂಚಕ್ಕೆ ಆಶ್ಚರ್ಯ ಮೂಡಿಸಿದೆ. ಸ್ಯಾಮ್‌ಸಂಗ್ ಕಂಪೆನಿಯ ಮೊದಲ ಮೂರು ಕ್ಯಾಮೆರಾ ಸ್ಮಾರ್ಟ್‌ಪೋನ್ 'ಗ್ಯಾಲಾಕ್ಸಿ ಎ7' ನೆನ್ನೆಯಷ್ಟೆ ಮಾರುಕಟ್ಟೆಗೆ ಬಿಡುಗಡೆಯಾಗಿದೆ. |
ಹೌದು, ಮೊಬೈಲ್ ಮಾರುಕಟ್ಟೆಯಲ್ಲಿ ಎಂದೂ ಸಹ ಹಿಂದೆ ಬೀಳಿದಂತೆ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಸ್ಯಾಮ್‌ಸಂಗ್ ಕಂಪೆನಿ, ಈಗ ಮೂರು ಕ್ಯಾಮೆರಾಗಳಿರುವ ಸ್ಮಾರ್ಟ್‌ಪೋನ್ ತಂತ್ರಜ್ಞಾನದ ಮೇಲೂ ಸಹ ಕಣ್ಣಿಟ್ಟಿದೆ. ಈ ಮೂಲಕ ಚೀನಾ ಮೊಬೈಲ್ ಕಂಪೆನಿಗಳಿಗೂ ಸೆಡ್ಡು ಹೊಡೆಯಲು ಸ್ಯಾಮ್‌ಸಂಗ್ ತಯಾರಿ ನಡೆಸಿದೆ ಎಂದು ಹೇಳಲಾಗುತ್ತಿದೆ. |
6 ಇಂಚುಗಳ ಸಂಪೂರ್ಣ HD+ (1080x2280) ಸೂಪರ್ AMOLED ಇನ್ಫಿನಿಟಿ ಡಿಸ್‌ಪ್ಲೇ, 24 MP ಸೆಲ್ಫಿ ಫಿಕ್ಸೆಡ್ ಫೋಕಸ್ ಸೆಲ್ಫಿ ಕ್ಯಾಮೆರಾಗಳಂತಹ ಅತ್ಯುತ್ತಮ ಫೀಚರ್ಸ್ ಹೊತ್ತು ಬಜೆಟ್ ಬೆಲೆಯಲ್ಲಿ 'ಗ್ಯಾಲಾಕ್ಸಿ ಎ7' ಮಾರುಕಟ್ಟೆಗೆ ಎಂಟ್ರಿ ನೀಡುತ್ತಿದೆ. ಹಾಗಾದರೆ, ಬಹು ನಿರೀಕ್ಷಿತ 'ಗ್ಯಾಲಾಕ್ಸಿ ಎ7' ಸ್ಮಾರ್ಟ್‌ಪೋನ್ ಹೊಂದಿರುವ ಫೀಚರ್ಸ್ ಯಾವುವು ಎಂಬುದನ್ನು ಮುಂದೆ ಓದಿರಿ. |
After many leaks, Samsung has officially launched the Galaxy A7, its latest addition to the Galaxy A lineup. to know more visit to kannada.gizbot.com |
ನಮ್ಮ ಮೆಟ್ರೋ ಪಿಲ್ಲರ್‌ನಲ್ಲಿ ಬಿರುಕು, ರಿಪೇರಿಗಾಗಿ ಶನಿವಾರ, ಭಾನುವಾರ ಸಂಚಾರ ಸ್ಥಗಿತ - Kannada Today - ಕನ್ನಡ ಟುಡೇ - Digital News |
ನಮ್ಮ ಮೆಟ್ರೋ ಪಿಲ್ಲರ್‌ನಲ್ಲಿ ಬಿರುಕು, ರಿಪೇರಿಗಾಗಿ ಶನಿವಾರ, ಭಾನುವಾರ ಸಂಚಾರ ಸ್ಥಗಿತ |
ಬೆಂಗಳೂರು: ನಗರದ ಟ್ರಿನಿಟಿ ಮೆಟ್ರೋ ನಿಲ್ದಾಣದ ಪಿಲ್ಲರ್ ವೊಂದರಲ್ಲಿ ಬಿರುಕು ಬಿಟ್ಟಿರುವ ಹಿನ್ನೆಲೆಯಲ್ಲಿ ಬಿಎಂಆರ್ಸಿಎಲ್ ದುರಸ್ಥಿ ನಡೆಸಿ ಪಿಲ್ಲರ್ ನ ಎರಡು ಕಡೆ ಸಪೋರ್ಟಿಂಗ್ ಸ್ಟ್ರಕ್ಚರ್ ಅಳವಡಿಸಲಾಗಿದೆ. ಇನ್ನು ಹೆಚ್ಚುವರಿ ರಿಪೇರಿಗಾಗಿ ನಾಳೆ ಮತ್ತು ನಾಳಿದ್ದು ಎರಡು ದಿನ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಲಿದೆ. |
ಎಂಜಿ ರಸ್ತೆಯಿಂದ ಬೈಯ್ಯಪ್ಪನಹಳ್ಳಿ ತನಕದ ನೇರಳೆ ಬಣ್ಣದ ಲೈನ್ ನಲ್ಲಿ ಮೆಟ್ರೋ ಸಂಚಾರ ಸ್ಧಗಿತಗೊಳ್ಳುವ ಸಾಧ್ಯತೆ ಇದೆ. ಈ ಕುರಿತಂತೆ ಮಾತನಾಡಿರುವ ಬಿಎಂಆರ್ಸಿಎಲ್ ನಿರ್ದೇಶಕ ಅಜಯ್ ಸೇಠ್ ಅವರು ರಿಪೇರಿ ಕೆಲಸಕ್ಕಾಗಿ 30 ರಿಂದ 36 ಗಂಟೆಗಳ ಕಾಲ ನಡೆಸಲಾಗುವುದರಿಂದ ಎರಡು ದಿನ ಸಂಚಾರ ಸ್ಥಗಿತವಾಗುವ ಸಾಧ್ಯತೆ ಇದೆ ಎಂದರು. |
ಇದೇ ವೇಳೆ ಮಾತನಾಡಿದ ಬಿಎಂಆರ್ಎಸಿಎಲ್ ಸಾರ್ವಜನಿಕ ಸಂಪರ್ಕಧಿಕಾರಿ ಚಾವನ್, ಇದೇ ಮೊದಲ ಬಾರಿಗೆ ಇಂತಹ ಸಮಸ್ಯೆ ಎದುರಾಗಿದೆ. ದುರಸ್ಥಿ ಕಾರ್ಯಕ್ಕಾಗಿ ದೆಹಲಿ ಮೆಟ್ರೋ ವಿಭಾಗದಿಂದ ಎಂಜಿನಿಯರ್ಗಳು, ತಜ್ಞರು ಆಗಮಿಸಿದ್ದು ವಾರಾಂತ್ಯ ದಿನದಲ್ಲಿ ಮೆಟ್ರೋ ಸಂಚಾರವನ್ನು ಸಂಪೂರ್ಣ ನಿಲ್ಲಿಸುವಂತೆ ಎಂಜಿನಿಯರ್ ಗಳು ಸಲಹೆ ನೀಡಿದ್ದಾರೆ ಎನ್ನಲಾಗಿದೆ. |
ಬಿರುಕು ಸರಿಪಡಿಸಲು ಕನಿಷ್ಠ 10 ದಿನ ಬೇಕೇ ಬೇಕು. ಲಾಭದ ಬಗ್ಗೆ ತಲೆಕೆಡಿಸಿಕೊಂಡರೆ, ದುರಸ್ತಿ ಕಾರ್ಯ ಪರಿಣಾಮಕಾರಿಯಾಗಿ ನಡೆಯುವುದಿಲ್ಲ. ತಾತ್ಕಾಲಿಕ ರಿಪೇರಿನೂ ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿ. ಹಾಗಾಗಿ ಕನಿಷ್ಟ ಎರಡು ದಿನವಾದರೂ ಮೆಟ್ರೋ ಸಂಚಾರ ಸ್ಥಗಿತವಾಗಲೇಬೇಕು ಎಂದು ಎಂಜಿನಿಯರ್ ಗಳು ಸಲಹೆ ನೀಡಿದ್ದಾರೆ. |
ಗೋವಿನ ಸೆಗಣಿಯಿಂದ ತಯಾರಿಸಿದ ಚಿಪ್ ರಿಲೀಸ್: ಮೊಬೈಲ್ ನ ವಿಕಿರಣವನ್ನು ತಡೆಯುತ್ತಂತೆ ಇದು! - ಪ್ರೆಸ್ ಕನ್ನಡ |
ಗೋವಿನ ಸೆಗಣಿಯಿಂದ ತಯಾರಿಸಿದ ಚಿಪ್ ರಿಲೀಸ್: ಮೊಬೈಲ್ ನ ವಿಕಿರಣವನ್ನು ತಡೆಯುತ್ತಂತೆ ಇದು! |
ನವದೆಹಲಿ(13-10-2020): ರಾಷ್ಟ್ರೀಯ ಕಾಮಧೇನು ಆಯೋಗ (ಆರ್‌ಕೆಎ) ಅಧ್ಯಕ್ಷ ವಲ್ಲಭಭಾಯ್ ಕಥಿರಿಯಾ ಅವರು ಗೋವಿನ ಸೆಗಣಿಗಳಿಂದ ತಯಾರಿಸಿದ 'ಚಿಪ್' ಅನ್ನು ಅನಾವರಣಗೊಳಿಸಿದ್ದು, ಇದು ಮೊಬೈಲ್ ಹ್ಯಾಂಡ್‌ಸೆಟ್‌ಗಳಿಂದ ವಿಕಿರಣವನ್ನು ಕಡಿಮೆ ಮಾಡುತ್ತದೆ ಮತ್ತು ಇದು ರೋಗಗಳ ವಿರುದ್ಧದ ರಕ್ಷಣೆಯಾಗಿದೆ ಎಂದು ಹೇಳಿದ್ದು, ನಿಜಕ್ಕೂ ಅಚ್ಚರಿ ಮೂಡಿಸಿದೆ. |
ಹಸುವಿನ ಉತ್ಪನ್ನಗಳನ್ನು ಉತ್ತೇಜಿಸುವ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿ ಪ್ರಾರಂಭಿಸಿದ 'ಕಾಮಧೇನು ದೀಪಾವಳಿ ಅಭಿಯಾನ್' ಉದ್ಘಾ ಟನೆಯಲ್ಲಿ ಮಾತನಾಡಿದ ವಲ್ಲಭಭಾಯ್ ಕಥಿರಿಯಾ "ಹಸು ಸಗಣಿ ಎಲ್ಲರನ್ನೂ ರಕ್ಷಿಸುತ್ತದೆ, ಇದು ವಿಕಿರಣ ವಿರೋಧಿ, ಇದು ವೈಜ್ಞಾನಿಕವಾಗಿ ಸಾಬೀತಾಗಿದೆ, ಇದು ವಿಕಿರಣ ಚಿಪ್ ಆಗಿದ್ದು, ಇದನ್ನು ವಿಕಿರಣವನ್ನು ಕಡಿಮೆ ಮಾಡಲು ಮೊಬೈಲ್ ಫೋನ್‌ಗಳಲ್ಲಿ ಬಳಸಬಹುದು ಎಂದು ಹೇಳಿದ್ದಾರೆ. |
ಗೌಸತ್ವ ಕವಾಚ್ ಹೆಸರಿನ 'ಚಿಪ್' ಅನ್ನು ರಾಜ್‌ಕೋಟ್ ಮೂಲದ ಶ್ರೀಜಿ ಗೋ ಶಾಲೆ ತಯಾರಿಸಿದ್ದಾರೆ. 2019 ರಲ್ಲಿ ಸ್ಥಾಪನೆಯಾದ ಆರ್‌ಕೆಎ ಹಸುಗಳ ಸಂರಕ್ಷಣೆ, ರಕ್ಷಣೆ ಮತ್ತು ಅಭಿವೃದ್ಧಿ ಮತ್ತು ಅವುಗಳ ಸಂತತಿಯನ್ನು ಗುರಿಯಾಗಿರಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಚಿಪ್ ತಯಾರಿಸಲಾಗಿದೆ. |
ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ವ್ಯಾಪ್ತಿಗೆ ಬರುವ ಈ ಆಯೋಗ, ಹಬ್ಬದ ಸಮಯದಲ್ಲಿ ಹಸುವಿನ ಆಧಾರಿತ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸಲು ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸಿದೆ. |
ನೌಕರಿ ಕೊಡಿಸುವುದಾಗಿ ವಂಚಿಸಿದ ಆರೋಪಿಯ ಬಂಧನ.. - e-ಉತ್ತರಕನ್ನಡ |
Subsets and Splits
No community queries yet
The top public SQL queries from the community will appear here once available.