text stringlengths 0 61.5k |
|---|
| Published: Saturday, June 22, 2019, 7:00 [IST] |
ಸಾಮಾಜಿಕ ಜಾಲತಾಣದ ದೈತ್ಯ ಫೇಸ್‌ಬುಕ್ ಮತ್ತೊಂದು ಆವಿಷ್ಕಾರಕ್ಕೆ ಮುಂದಾಗಿದೆ. ತನ್ನ ಹೊಸ ಆಪ್ ಮೂಲಕ ಗ್ರಾಹಕರ ಸ್ಮಾರ್ಟ್‌ಫೋನ್ ಬಳಸಿಕೊಳ್ಳುವ ಹೊಸ ಯೋಜನೆಯನ್ನು ಫೇಸ್‌ಬುಕ್ ಕಂಪನಿ ತರಲು ಮುಂದಾಗಿದೆ. ಹೌದು, ಸ್ಟಡಿ ಎಂಬ ಆಪ್ ಮೂಲಕ ಹೊಸ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಎಫ್‌ಬಿ ಮುಂದಾಗಿದೆ. ಇದಕ್ಕಾಗಿ ಫೇಸ್‌ಬುಕ್ ಬಳಕೆದಾರರಿಗೆ ಹಣವನ್ನು ಕೂಡ ನೀಡಲು ಮುಂದಾಗಿದೆ. ಗ್ರಾಹಕರಿಗೆ ಹಣಕ... |
ಆಪ್‌ಗಳ ಟ್ರಾಕ್ |
ಫೇಸ್‌ಬುಕ್‌ನ ಸ್ಟಡಿ ಆಪ್ ಬಳಕೆದಾರರ ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಲ್ ಆದ ಆಪ್‌ಗಳನ್ನು ಟ್ರಾಕ್ ಮಾಡುತ್ತದೆ. ಇದರ ಜೊತೆಗೆ ನೀವು ಆಪ್‌ಗಳನ್ನು ಬಳಸುವ ಸಮಯ, ದೇಶ, ರಾಜ್ಯ ಮತ್ತಿತರ ಮಾಹಿತಿಗಳನ್ನು ಫೇಸ್‌ಬುಕ್ ಕಲೆಹಾಕುತ್ತದೆ. ಇನ್ನು, ಫೇಸ್‌ಬುಕ್ ಕಂಪನಿ ಹೇಳುವ ರೀತಿ ಸ್ಟಡಿ ಆಪ್ ಯಾವುದೇ ವೈಯಕ್ತಿಕ ಮಾಹಿತಿಯನ್ನು ಕಲೆಹಾಕುವುದಿಲ್ಲ. ಪಾಸ್‌ವರ್ಡ್, ಮೆಸೇಜ್‌ಗಳು ಮತ್ತು ಗ್ರಾಹಕರು... |
ಮಾಹಿತಿ ಮಾರಾಟಕ್ಕಿಲ್ಲ |
ಸ್ಟಡಿ ಆಪ್ ಮೂಲಕ ಫೇಸ್‌ಬುಕ್ ಸರ್ವರ್‌ನಲ್ಲಿ ಶೇಖರಣೆಯಾಗಿರುವ ಮಾಹಿತಿ ಯಾವುದೇ ಕಾರಣಕ್ಕೂ ಲಾಭಕ್ಕೆ ಬಳಸಿಕೊಳ್ಳುವುದಿಲ್ಲ ಎಂದು ಫೇಸ್‌ಬುಕ್ ಹೇಳಿದೆ. ಈ ಹಿಂದೆ ಮಾಹಿತಿ ಸೋರಿಕೆಯಿಂದ ಬಹಳ ಮುಜುಗರಕ್ಕೊಳಗಾಗಿದ್ದ ಫೇಸ್‌ಬುಕ್ ಈ ಮೂಲಕ ಥರ್ಡ್ ಪಾರ್ಟಿ ಆಪ್‌ಗಳಿಗೆ ಮಾಹಿತಿ ಮಾರಾಟ ಮಾಡದೇ ಜನರ ನಂಬಿಕೆ ಉಳಿಸಿಕೊಳ್ಳಲು ಮುಂದಾಗಿದೆ. ಅದಲ್ಲದೇ ಈ ಮಾಹಿತಿಯನ್ನು ಜಾಹೀರಾತುಗಳಿಗೂ ಬಳಸಿಕೊಳ್ಳಲ್ಲ ... |
ಹೇಗೆ ಬಳಸೋದು..? |
ಫೇಸ್‌ಬುಕ್ ಸ್ಟಡಿ ಪ್ರೋಗ್ರಾಂನಡಿಯಲ್ಲಿ ಬಳಕೆದಾರರನ್ನು ಆಹ್ವಾನಿಸುವ ಫೇಸ್‌ಬುಕ್ ಸ್ಟಡಿ ಆಪ್‌ನ್ನು ಅವರ ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಲ್ ಮಾಡಿಸುತ್ತದೆ. ಆಪ್ ಇನ್‌ಸ್ಟಾಲ್ ಆದ ನಂತರ ಫೋನ್‌ನ್ನು ಸಾಮಾನ್ಯವಾಗಿ ಬಳಸಲು ಬೇಕಾದ ಪರ್ಮಿಷನ್‌ಗಳನ್ನು ಆಪ್‌ಗೆ ನೀಡಬೇಕಾಗುತ್ತದೆ. ಈ ಆಪ್‌ನಲ್ಲಿ ನೊಂದಣಿಯಾದ ಬಳಕೆದಾರರಿಗೆ ಹಣದ ರೂಪದ ರೀವಾರ್ಡ್‌ಗಳನ್ನು ಕೂಡ ಫೇಸ್‌ಬುಕ್ ನೀಡಲು ಮುಂದಾಗಿದೆ... |
ಬಳಕೆದಾರರ ಅಧ್ಯಯನ |
ಸ್ಟಡಿ ಆಪ್ ಮೂಲಕ ಫೇಸ್‌ಬುಕ್ ಬಳಕೆದಾರರನ್ನು ಅಧ್ಯಯನ ಮಾಡಲು ಮುಂದಾಗಿದೆ. ಗ್ರಾಹಕರ ವಯಸ್ಸು, ಲಿಂಗ ಹಾಗೂ ಫೇಸ್‌ಬುಕ್ ಉತ್ಪನ್ನಗಳನ್ನು ಅವರು ಹೇಗೆ ಬಳಸುತ್ತಾರೆ ಎಂಬುದನ್ನು ಅರಿಯಲು ಸ್ಟಡಿ ಆಪ್ ಸಹಕಾರಿಯಾಗಲಿದೆ. ಈ ಮೂಲಕ ಬಳಕೆದಾರರು ವಿವಿಧ ಸೇವೆಗಳನ್ನು ಹೇಗೆ ಬಳಸುತ್ತಾರೆ ಎಂಬುದನ್ನು ತಿಳಿಯಲು ಸ್ಟಡಿ ಆಪ್ ಉಪಕಾರಿಯಾಗಲಿದೆ. ಈ ಮಾಹಿತಿಯನ್ನು ಬಳಕೆದಾರರ ಯಾವುದೇ ಅಕೌಂಟ್‌ಗೆ ಲಿಂಕ್ ... |
ಜಲ್ಲಿಕಟ್ಟು: ಮುಖ್ಯಮಂತ್ರಿಗೂ ತಟ್ಟಿದ ಪ್ರತಿಭಟನೆ; 8 ರೈಲು ಕ್ಯಾನ್ಸಲ್ | Chief Minister To Return To Chennai As Madurai Jallikattu Abandoned Amid Protests - Kannada Oneindia |
» ಜಲ್ಲಿಕಟ್ಟು: ಮುಖ್ಯಮಂತ್ರಿಗೂ ತಟ್ಟಿದ ಪ್ರತಿಭಟನೆ; 8 ರೈಲು ಕ್ಯಾನ್ಸಲ್ |
ಜಲ್ಲಿಕಟ್ಟು: ಮುಖ್ಯಮಂತ್ರಿಗೂ ತಟ್ಟಿದ ಪ್ರತಿಭಟನೆ; 8 ರೈಲು ಕ್ಯಾನ್ಸಲ್ |
Published: Sunday, January 22, 2017, 14:41 [IST] |
ಚೆನ್ನೈ: ಜನವರಿ 22: ಜಲ್ಲಿಕಟ್ಟು ವಿಚಾರವಾಗಿ ಸರಕಾರ ಸುಗ್ರೀವಾಜ್ಞೆ ಜಾರಿಗೆ ತಂದರೂ ತಮಿಳುನಾಡಿಗರು ಮಾತ್ರ ತೃಪ್ತಿಯಾಗಿಲ್ಲ. ಶಾಶ್ವತ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆಗಳು ಮತ್ತಷ್ಟು ಹೆಚ್ಚಾಗಿದ್ದು, ಮಧುರೈನಲ್ಲಿ ಜಲ್ಲಿಕಟ್ಟು ಉದ್ಘಾಟನೆ ಮಾಡಬೇಕಾಗಿದ್ದ ಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ ಹಾಗೇ ವಾಪಾಸಾಗಿದ್ದಾರೆ. ಇನ್ನು 10 ರೈಲುಗಳ ಸಂಚಾರವನ್ನೂ ರದ್ದುಪಡಿಸಲ... |
ತಮಿಳುನಾಡಿನಾದ್ಯಂತ ಪ್ರತಿಭಟನೆಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಇದೀಗ ಪ್ರತಿಭಟನೆಯ ಬಿಸಿ ಮುಖ್ಯಮಂತ್ರಿಗೂ ತಟ್ಟಿದೆ. ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಮಧುರೈನ ಜಲ್ಲಿಕಟ್ಟನ್ನು ಪನ್ನೀರ್ ಸೆಲ್ವಂ ಉದ್ಘಾಟನೆ ಮಾಡಬೇಕಾಗಿತ್ತು. ಆದರೆ ವಿದ್ಯಾರ್ಥಿಗಳು ಸೇರಿ ಮುಖ್ಯಮಂತ್ರಿ ಬರಬೇಕಾಗಿದ್ದ ದಾರಿಯನ್ನು ಅಡ್ಡಕಟ್ಟಿದ್ದರಿಂದ ಅನಿವಾರ್ಯವಾಗಿ ಪನ್ನೀರ್ ಸೆಲ್ವಂ ಬಂದ ದಾರಿಗೆ ಸುಂಕವಿಲ್ಲ ಅ... |
ಇನ್ನು ತೀವ್ರ ಪ್ರತಿಭಟನೆಗಳ ಹಿನ್ನಲೆಯಲ್ಲಿ ಇಂದು ತಮಿಳುನಾಡಿನಲ್ಲಿ ಸಂಚರಿಸಬೇಕಾಗಿದ್ದ 8 ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ. ನಾಳೆಯೂ ಎರಡು ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ ಇದರಿಂದ ತಮಿಳುನಾಡಿನಿಂದ ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಿಗೆ ಹೋಗುವ ಜನರಿಗೆ ತೊಂದರೆಯಾಗಿದೆ.[ಜಲ್ಲಿಕಟ್ಟು: ಸುಗ್ರೀವಾಜ್ಞೆ ಜಾರಿಯಾದರೂ ನಿಲ್ಲದ ಪ್ರತಿಭಟನೆ] |
ಪ್ರಾಣಿ ದಯಾ ಸಂಸ್ಥೆ ಪೇಟಾಗೆ ನಿಷೇಧ ಹೇರಬೇಕು ಮತ್ತು ಜಲ್ಲಿಕಟ್ಟು ಸಮಸ್ಯೆಗೆ ಶಾಶ್ವತ ಮುಕ್ತಿ ನೀಡಬೇಕು ಎಂದು ಕೋರಿ ಜನ ಪ್ರತಿಭಟನೆ ಮುಂದುವರಿಸಿದ್ದಾರೆ. |
ಅಲಂಗಲ್ಲೂರಿನಲ್ಲಿ ಮಾತ್ರ ಜಲ್ಲಿಕಟ್ಟು |
ಸರಕಾರದಿಂದ ಅಧಿಕೃತವಾಗಿ ಅಲಂಗಲ್ಲೂರಿನಲ್ಲಿ ಮಾತ್ರ ಜಲ್ಲಿಕಟ್ಟು ಆಯೋಜನೆಯಾಗಿತ್ತು. ಆದರೆ ಇಲ್ಲಿಯೂ ಜನ ಸಮರೋಪಾದಿಯಲ್ಲಿ ಪ್ರತಿಭಟನೆ ನಡೆಸಿದ್ದರಿಂದ ಇದನ್ನು ಮುಖ್ಯಮಂತ್ರಿ ಉದ್ಘಾಟನೆ ಮಾಡುವುದು ಸಾಧ್ಯವಾಗಿಲ್ಲ. ಇಲ್ಲಿ ಜನ ಸಾಗರವೇ ಸೇರಿರುವುದರಿಂದ ರಸ್ತೆಗಳು ಬ್ಲಾಕ್ ಆಗಿದ್ದು ಟ್ರಾಫಿಕ್ನಲ್ಲಿ ಆ್ಯಂಬುಲೆನ್ಸ್ ಸೇರಿದಂತೆ ವಾಹನಗಳು ಸಿಕ್ಕಿ ಹಾಕಿಕೊಂಡಿವೆ. |
ಇನ್ನು ಧರ್ಮಾಪುರಿ ಮತ್ತು ತಿರುಚರಾಪಲ್ಲಿಯ ಮನಪ್ಪರಾಯಿಯಲ್ಲಿ ಜಲ್ಲಿಕಟ್ಟು ನಡೆದಿದ್ದು ವರದಿಯಾಗಿದೆ. ಪುದುಕೊಟ್ಟೈನಲ್ಲಿ ರಾಜ್ಯ ಆರೋಗ್ಯ ಸಚಿವ ವಿಜಯಬಾಸ್ಕರನ್ ಜಲ್ಲಿಕಟ್ಟು ಉದ್ಘಾಟನೆ ಮಾಡಿದ್ದು ವರದಿಯಾಗಿದೆ. |
jallikattu, tamil nadu, panneerselvam, ಜಲ್ಲಿಕಟ್ಟು, ತಮಿಳುನಾಡು |
As locals continued to protest demanding a permanent solution than Ordinance, Tamil Nadu Chief Minister O Panneerselvam was forced to abandon his plan of inaugurating the Jallikattu ceremony in Madurai's Alanganallur. |
ಆಗ ಜಿಲ್ಲೆಗೆ ಇಬ್ಬರು , ಈಗ 2 ಜಿಲ್ಲೆಗೆ ಒಬ್ಬರು | Prajavani |
ಆಗ ಜಿಲ್ಲೆಗೆ ಇಬ್ಬರು , ಈಗ 2 ಜಿಲ್ಲೆಗೆ ಒಬ್ಬರು |
ಪ್ರಜಾವಾಣಿ ವಾರ್ತೆ/ಎಂ.ಎಸ್. ರಾಜೇಂದ್ರಕುಮಾರ್/ಶ್ರೀಕಾಂತ ಕಲ್ಲಮ್ಮನವರ Updated: 12 ಮಾರ್ಚ್ 2014, 01:00 IST |
ಮೈಸೂರು: 'ಮೈಸೂರು– ಕೊಡಗು' ಜಿಲ್ಲಾ ವ್ಯಾಪ್ತಿಯುಳ್ಳ ಈ ಲೋಕಸಭಾ ಕ್ಷೇತ್ರದ ಇತಿಹಾಸ ಕೆದಕಿದರೆ ಹಲವು ಕೌತುಕಗಳು ಬಿಚ್ಚಿಕೊಳ್ಳುತ್ತವೆ. |
1951ರಲ್ಲಿ ನಡೆದ ಪ್ರಥಮ ಸಾರ್ವತ್ರಿಕ ಚುನಾವಣೆ ಮತ್ತು 1957ರ ಚುನಾವಣೆಯಲ್ಲಿ ಮೈಸೂರು ಇಬ್ಬರು ಪ್ರತಿನಿಧಿಗಳನ್ನು ಆಯ್ಕೆ ಮಾಡುವ 'ದ್ವಿಸದಸ್ಯ ಕ್ಷೇತ್ರ'ವಾಗಿತ್ತು. |
ಪ್ರಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲೇ ಕುತೂಹಲದ ಘಟನೆಯೊಂದಕ್ಕೂ ಇದು ಸಾಕ್ಷಿಯಾಗಿತ್ತು. ಬೆಂಗಳೂರಿನಲ್ಲಿ ಪತ್ರಕರ್ತನಾಗಿದ್ದ 29ರ ಹರೆಯದ ಯುವಕನೊಬ್ಬನನ್ನು ಕರೆತಂದು ಕಿಸಾನ್ ಮಜ್ದೂರ್ ಪ್ರಜಾ ಪಾರ್ಟಿಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಲಾಗಿತ್ತು. ಎದುರಾಳಿ ಸಾಮಾನ್ಯರಲ್ಲ. 'ಮೈಸೂರು ಗಾಂಧಿ' ಎಂದೇ ಪ್ರಸಿದ್ಧರಾಗಿದ್ದ, ಗಾಂಧೀಜಿಗೆ ಪ್ರೀತಿಪಾತ್ರರಾಗಿ, ನೆಹರೂ ಅವರ ಆಪ್ತಸ್ನೇಹಿತರಾಗಿದ್ದ ಕಾಂಗ್... |
'ದಾಸಪ್ಪ ಅವರನ್ನು ಸೋಲಿಸಿದ ಯುವಕ ಯಾರು?' ಎಂದು ಸ್ವತಃ ನೆಹರೂ ಅವರೇ ಕೇಳಿದ್ದರಂತೆ. ಹಾಗಾಗಿ, ಗುರುಪಾದಸ್ವಾಮಿ ಲೋಕಸಭೆಗೆ ಕಾಲಿಟ್ಟಾಗಲೇ ಕುತೂಹಲದ ಕೇಂದ್ರವಾಗಿದ್ದರು. ದಾಸಪ್ಪ ಅವರಂತಹ ಸ್ವಾತಂತ್ರ್ಯ ಸೇನಾನಿ ಮಣಿಸಿದ 'ದೈತ್ಯ ಸಂಹಾರಿ'ಯ ವರ್ಚಸ್ಸು. ಜತೆಗೆ, ಪ್ರಥಮ ಲೋಕಸಭೆಯ 'ಅತಿ ಕಿರಿಯ ಸದಸ್ಯ' ಎಂಬ ದಾಖಲೆ ಬೇರೆ. |
ಚುನಾವಣಾ ರಾಜಕಾರಣಕ್ಕೂ ಮುನ್ನ ಅವರು 'ಪ್ರಜಾಮತ' ವಾರಪತ್ರಿಕೆಯ ಸಂಪಾದಕರಾಗಿದ್ದರು. ಮುಂದೆ ರಾಜ್ಯಸಭಾ ಸದಸ್ಯರಾಗಿ ಇಂದಿರಾ ಗಾಂಧಿ ಹಾಗೂ ವಿ.ಪಿ. ಸಿಂಗ್ ಸರ್ಕಾರದಲ್ಲಿ ಸಚಿವರೂ ಆದರು. ಪ್ರಥಮ ಚುನಾವಣೆಯಲ್ಲಿ ಅನಿರೀಕ್ಷಿತ ಸೋಲು ಕಂಡರೂ ಮೈಕೊಡವಿ ಮೇಲೆದ್ದ ದಾಸಪ್ಪ, 1967, 1971 ಹಾಗೂ 1977ರ ಚುನಾವಣೆಗಳಲ್ಲಿ ಗೆದ್ದು 'ಹ್ಯಾಟ್ರಿಕ್ ಸಾಧನೆ'ಯಿಂದ ಮಿಂಚಿದರು. ರೈಲ್ವೆ ಸಚಿವರಾದರು. |
ಮೂರು ಗೆಲುವುಗಳ ಮೂಲಕ ದಾಸಪ್ಪ ನಿರ್ಮಿಸಿದ್ದ ದಾಖಲೆಯನ್ನು ಅಳಿಸಿ ಹಾಕಿದವರು ಮೈಸೂರು ಯದುವಂಶದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್. ಅರಮನೆಯ ವ್ಯಕ್ತಿ ಚುನಾವಣಾ ಅಖಾಡಕ್ಕೆ ಬಂದಾಗ ಕ್ಷೇತ್ರದಲ್ಲಿ ಮಿಂಚಿನ ಸಂಚಲನ ಉಂಟಾಗಿತ್ತು. ರಾಜ ವಂಶಸ್ಥರು ಮನೆ ಬಾಗಿಲಿಗೆ ಬಂದದ್ದು ಕಂಡು ಜನ ಗಲಿಬಿಲಿಗೊಂಡರು. ಏನೋ ಅಪಚಾರವಾಗುತ್ತಿದೆ ಎಂದು ಕನಲಿದರು. 'ದೊರೆಗಳು ನೀವೇಕೆ ಬಂದಿದ್ದೀರಿ? ಅರಮನೆಗೆ ಹೋಗಿ.... |
ಈ ಕ್ಷೇತ್ರದಿಂದ ಹೆಚ್ಚು ಬಾರಿ (1984, 1989, 1996 ಹಾಗೂ 1999) ಆಯ್ಕೆಯಾದ ದಾಖಲೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರಿಗೆ ಸಲ್ಲುತ್ತದೆ. ಆದರೆ ಕಾಂಗ್ರೆಸ್ ತೊರೆದು ಬಿಜೆಪಿಯಿಂದ ಕಣಕ್ಕೆ ಇಳಿದ ಅವರಿಗೂ ಸೋಲಿನ ಬಿಸಿ ತಟ್ಟಿತು. ಈ ಅರಸು ಪುತ್ರ ಸೋತಿದ್ದು, ಇನ್ನೊಬ್ಬ ಅರಸು ಪುತ್ರಿಗೆ ಎಂಬುದು ಗಮನಾರ್ಹ. ಅವರನ್ನು 1998ರ ಚುನಾವಣೆಯಲ್ಲಿ ಮಣಿಸಿದ್ದು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ... |
ಅನುಕಂಪಕ್ಕೆ ಹುನ್ನಾರ: ನಾಲ್ಕು ಬಾರಿ ಗೆದ್ದ ಸರದಾರ ಶ್ರೀಕಂಠದತ್ತ ನಿಧನದ ನಂತರ ಕಾಂಗ್ರೆಸ್ ಸೇರಿದಂತೆ ಎಲ್ಲ ಪ್ರಮುಖ ಪಕ್ಷಗಳೂ ಒಡೆಯರ್ ಪತ್ನಿ ಪ್ರಮೋದಾ ದೇವಿ ಅವರಿಗೆ ಮಣೆ ಹಾಕಲು ಅರಮನೆಯತ್ತ ಮುಖ ಮಾಡಿದವು. |
ಪ್ರಮೋದಾ ದೇವಿ ಸ್ಪರ್ಧಿಸುವುದಾದರೆ ಅವರನ್ನು ಬೆಂಬಲಿಸುವುದಾಗಿ ಹಾಲಿ ಸಂಸದ ವಿಶ್ವನಾಥ್ ಬಹಿರಂಗವಾಗಿಯೇ ಹೇಳಿಕೆ ನೀಡಿದರು. ಜೆಡಿಎಸ್ ನಾಯಕರೂ ತಮ್ಮ ಪಕ್ಷದಿಂದ ಪ್ರಮೋದಾ ದೇವಿ ಅವರನ್ನು ಕಣಕ್ಕೆ ಇಳಿಸುವ ಪ್ರಯತ್ನ ನಡೆಸಿದರು. ಆದರೆ, ಅವರು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂಬ ಸಂದೇಶ ಅರಮನೆಯಿಂದ ರವಾನೆಯಾದ್ದರಿಂದ ಎಲ್ಲ ಊಹಾಪೋಹಗಳಿಗೆ ತೆರೆ ಬಿತ್ತು. ಒಡೆಯರ್ ನಿಧನದ ಅನುಕಂಪ ಬಾಚಿಕೊಳ್ಳಲ... |
ಮೈಸೂರು ತೆಕ್ಕೆಗೆ ಬಂದ ಕೊಡಗು: 'ಸಿ' ರಾಜ್ಯದ ಸ್ಥಾನಮಾನ ಹೊಂದಿದ್ದ ಕೊಡಗು, 1956ರಲ್ಲಿ ಅಂದಿನ ಮೈಸೂರು ರಾಜ್ಯದಲ್ಲಿ ವಿಲೀನಗೊಂಡಿತು. ಮೂರು ತಾಲ್ಲೂಕುಗಳನ್ನು ಹೊಂದಿದ್ದರೂ ಜನಸಂಖ್ಯೆಯ ಆಧಾರದ ಮೇಲೆ ಕೊಡಗು ಜಿಲ್ಲೆಯಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳನ್ನು ಮಾತ್ರ ಸೃಷ್ಟಿಸಲಾಯಿತು. ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳು ಮಂಗಳೂರು ಲೋಕಸಭಾ ಕ್ಷೇತ್ರದ ತೆಕ್ಕೆಗೆ ಹೋದವು. 19... |
2007ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆ ಆಯೋಗದ ಶಿಫಾರಸ್ಸಿನಲ್ಲಿ ಕೊಡಗು ಜಿಲ್ಲೆಯ ಸೋಮವಾರಪೇಟೆ ವಿಧಾನಸಭಾ ಕ್ಷೇತ್ರವನ್ನು ಕೈಬಿಡಲಾಯಿತು. ಜತೆಗೆ, ಅದುವರೆಗೆ ಮಂಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದ್ದ ಮಡಿಕೇರಿ, ವಿರಾಜಪೇಟೆ ಕ್ಷೇತ್ರಗಳು ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಸೇರ್ಪಡೆಯಾದವು. ಹಾಗೆಯೇ, ಅದುವರೆಗೆ ಮೈಸೂರು ಕ್ಷೇತ್ರ ವ್ಯಾಪ್ತಿಯಲ್ಲಿದ್ದ ಕೆ.ಆರ್. ನಗರ ವಿಧಾನಸಭಾ ಕ್ಷೇತ್ರ ... |
ಪ್ರತ್ಯೇಕ ಸ್ಥಾನ: 1952ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಮಾತ್ರ ಕೊಡಗು ಜಿಲ್ಲೆಗೆ ಪ್ರತ್ಯೇಕವಾದ ಸಂಸದರ ಸ್ಥಾನವಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎನ್. ಸೋಮಣ್ಣ ಜಯ ಗಳಿಸಿದ್ದರು. |
ಏಕೀಕೃತ ಮೈಸೂರಿನ ಭಾಗವಾದ ನಂತರ ಪ್ರತ್ಯೇಕ ಲೋಕಸಭಾ ಸ್ಥಾನಮಾನವನ್ನು ಕಳೆದುಕೊಂಡು ಮಂಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದ ನಂತರ, 1967ರ ಚುನಾವಣೆಯಲ್ಲಿ ಗೆದ್ದ ಕೊಡಗಿನ ಏಕಮಾತ್ರ ಸಂಸದ ಸಿ.ಎಂ. ಪೂಣಚ್ಚ. ಹಿಂದೆ 'ಸಿ' ರಾಜ್ಯದ ಸ್ಥಾನಮಾನ ಇದ್ದಾಗ ಕೊಡಗಿನ ಮುಖ್ಯಮಂತ್ರಿಯಾಗಿದ್ದ ಪೂಣಚ್ಚ ಮತ್ತೆ 1973ರಲ್ಲಿ ಸ್ಪರ್ಧಿಸಿದರೂ ಗೆಲ್ಲಲಾಗಲಿಲ್ಲ. ಆ ನಂತರ ಕೊಡಗಿನಿಂದ ಯಾರೊಬ್ಬರೂ ಲೋಕಸಭ... |
ಈಗ ಇದು ಮುಖ್ಯಮಂತ್ರಿ ಅವರ ತವರು ಜಿಲ್ಲೆಯ ಕ್ಷೇತ್ರ. ಇದನ್ನು ಉಳಿಸಿಕೊಳ್ಳುವುದು ಕಾಂಗ್ರೆಸ್ ಪಕ್ಷಕ್ಕಷ್ಟೇ ಅಲ್ಲ; ಸ್ವತಃ ಸಿದ್ದರಾಮಯ್ಯ ಅವರಿಗೂ ಪ್ರತಿಷ್ಠೆಯ ಪ್ರಶ್ನೆ. ಕ್ಷೇತ್ರವನ್ನು ಮೂರನೇ ಬಾರಿಗೆ ಕಸಿದುಕೊಳ್ಳಲು ಬಿಜೆಪಿ ಕಸರತ್ತು ನಡೆಸಿದ್ದರೆ, 'ಕ್ಷೇತ್ರದ ಪರೋಕ್ಷ ಕಾಂಗ್ರೆಸ್ ಅಭ್ಯರ್ಥಿ' ಸಿದ್ದರಾಮಯ್ಯ ಅವರಿಗೆ ಮುಖಭಂಗ ಉಂಟು ಮಾಡುವ ಯಾವುದೇ ಅವಕಾಶವನ್ನು ಬಿಟ್ಟುಕೊಡದಿರಲು ಜೆಡಿ... |
'); $('#div-gpt-ad-218380-2').append(' |
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(funct... |
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-218380').addClass('inartprocessed'); } else $('#in-article-218380').hide(); } else { _taboola.push({article:'auto', url:'https://www.prajavani.net/article/ಆಗ-ಜಿಲ್ಲೆಗೆ-ಇಬ್ಬರು-ಈಗ-2-ಜಿ... |
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-218380 .field-name-body .field-items div.field-item > p'); if(x1 != null && x1.length != 0) { $('#node-218380 .field-name-body... |
'); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-218380 .field-name-body .field-items div.field-item > p:eq(2)').after(' |
'); googletag.cmd.push(function() { googletag.display('in-article-mob-3rd-218380'); }); } else { $('#in-article-mob-218380').hide(); $('#in-article-mob-3rd-218380').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' |
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ ... |
ಬಾಂಗ್ಲಾ ರೋಹಿಂಗ್ಯಾ ಮುಸ್ಲಿಮರಿಗೆ ನೆರವಿನ ಹಸ್ತ ಚಾಚಿದ ಭಾರತ | Why India decided to send aid to Rohingya Muslims - Kannada Oneindia |
» ಬಾಂಗ್ಲಾ ರೋಹಿಂಗ್ಯಾ ಮುಸ್ಲಿಮರಿಗೆ ನೆರವಿನ ಹಸ್ತ ಚಾಚಿದ ಭಾರತ |
ಬಾಂಗ್ಲಾ ರೋಹಿಂಗ್ಯಾ ಮುಸ್ಲಿಮರಿಗೆ ನೆರವಿನ ಹಸ್ತ ಚಾಚಿದ ಭಾರತ |
Updated: Thursday, September 14, 2017, 15:17 [IST] |
ನವದೆಹಲಿ, ಸೆಪ್ಟೆಂಬರ್ 14: ಬಾಂಗ್ಲಾದೇಶದಲ್ಲಿ ವಲಸೆ ಬಂದು ನೆಲೆ ನಿಂತಿರುವ ರೊಹಿಂಗ್ಯಾ ಮುಸ್ಲಿಮರಿಗೆ ಭಾರತ ನೆರವಿನ ಹಸ್ತ ಚಾಚಿದೆ. ಏಕಾಏಕಿ ಲಕ್ಷಾಂತರ ಜನ ನಿರಾಶ್ರಿತರಾಗಿ ಬಾಂಗ್ಲಾಕ್ಕೆ ವಲಸೆ ಬಂದಿರುವುದರಿಂದ ಇವರ ನಿರ್ವಹಣೆ ನಡೆಸಲು ಬಾಂಗ್ಲಾ ಒದ್ದಾಡುತ್ತಿತ್ತು. ಇದೇ ಸಂದರ್ಭದಲ್ಲಿ ನೆರೆಯ ರಾಷ್ಟ್ರದ ನೆರವಿಗೆ ಭಾರತ ಧಾವಿಸಿದೆ. |
ರೋಹಿಂಗ್ಯಾ ಮುಸ್ಲಿಮರಿಂದ ಭಾರತದ ಭದ್ರತೆಗೆ ಅಪಾಯ : ರಾಜನಾಥ್ ಸಿಂಗ್ |
ರೋಹಿಂಗ್ಯಾ ಮುಸ್ಲಿಮರು ಭದ್ರತೆಗೆ ತೊಡಕಾಗಿದ್ದಾರೆ ಎಂದು ಕೇಂದ್ರ ಸರಕಾರ ಹೇಳಿತ್ತು. ಹೀಗಿದ್ದೂ ಬಾಂಗ್ಲಾದೇಶದ ಮನವಿ ಮೇರೆಗೆ ನೆರವು ನೀಡಿರುವುದಾಗಿ ಉನ್ನತ ಅಧಿಕಾರಿಗಳು 'ಒನ್ಇಂಡಿಯಾ'ಗೆ ತಿಳಿಸಿದ್ದಾರೆ. |
ಭಾರತದಿಂದ ಅಗತ್ಯ ಸಾಮಾಗ್ರಿಗಳನ್ನು ಹೊತ್ತ ಮೊದಲ ವಿಮಾನ ಇಂದು ಬಾಂಗ್ಲಾದೇಶಕ್ಕೆ ಪ್ರಯಾಣಿಸಿದೆ. ಬಾಂಗ್ಲಾದ ಚಿತ್ತಗಾಂಗ್ ವಿಮಾನ ನಿಲ್ದಾಣದಲ್ಲಿ ಬೆಳಿಗ್ಗೆ 11 ಗಂಟೆಗೆ ವಿಮಾನ ಹೋಗಿ ತಲುಪಿದ್ದು, ಭಾರತದ ಬಾಂಗ್ಲಾ ರಾಯಭಾರಿ ಹರ್ಷ್ ವರ್ಧನ್ ಶ್ರಿಂಗ್ಲಾ ಪರಿಹಾರ ಸಾಮಾಗ್ರಿಗಳನ್ನು ಬಾಂಗ್ಲಾದ ಸಚಿವ ಒಬೈಸುಲ್ ಖಾದರ್ ಗೆ ಹಸ್ತಾಂತರಿಸಿದ್ದಾರೆ. |
ಪರಿಹಾರ ಸಾಮಗ್ರಿಗಳಲ್ಲಿ ಅಕ್ಕಿ, ಬೇಳೆ ಕಾಳುಗಳು, ಸಕ್ಕರೆ, ಉಪ್ಪು, ಅಡುಗೆ ಎಣ್ಣೆ, ಚಹಾ, ಬಿಸ್ಕೇಟ್, ಸೊಳ್ಳೆ ಪರದೆಗಳು ಸೇರಿದಂತೆ ಇತರ ಸಾಮಾಗ್ರಿಗಳು ಇವೆ. |
ಇತ್ತೀಚೆಗೆ ಬಾಂಗ್ಲಾದೇಶಕ್ಕೆ 3,70,000 ಕ್ಕೂ ಹೆಚ್ಚು ರೊಹಿಂಗ್ಯಾ ಮುಸ್ಲಿಮರು ಮಯನ್ಮಾರ್ ನಿಂದ ನಿರಾಶ್ರಿತರಾಗಿ ವಲಸೆ ಬಂದಿದ್ದಾರೆ. ಇವರ ನಿರ್ವಹಣೆಯಲ್ಲಿ ಬಾಂಗ್ಲಾ ಬಸವಳಿದಿದ್ದು ಅಂತರಾಷ್ಟ್ರೀಯ ಸಮುದಾಯಕ್ಕೆ ಮಧ್ಯಪ್ರವೇಶಿಸುವಂತೆ ಮೊರೆ ಇಟ್ಡಿದೆ. ಮಯನ್ಮಾರ್ ನ ಮೇಲೆ ಒತ್ತಡ ಹೇರಿ ಸಮಸ್ಯೆ ಬಗೆಹರಿಸುವಂತೆ ಅದು ಕೇಳಿಕೊಂಡಿದೆ |
ಬಳ್ಳಾರಿ: ಮಳೆ ಇಲ್ಲದೆ ರೈತರು ಕಂಗಾಲು | Prajavani |
ಬಳ್ಳಾರಿ: ಮಳೆ ಇಲ್ಲದೆ ರೈತರು ಕಂಗಾಲು |
ಬಳ್ಳಾರಿ: ಎರಡು ವರ್ಷಗಳಿಂದ ಬರಗಾಲ ಎದುರಿಸುತ್ತಿರುವ ಜಿಲ್ಲೆಯಲ್ಲಿ ಈ ಬಾರಿ ಜುಲೈ ಕಾಲಿಟ್ಟರೂ ಸಮರ್ಪಕವಾಗಿ ಮಳೆ ಬೀಳುತ್ತಿಲ್ಲ. ಹೀಗಾಗಿ ಮತ್ತೆ ಬರದ ಭೀತಿ ಆವರಿಸಿದೆ. ಕೃಷಿಯನ್ನೇ ನೆಚ್ಚಿಕೊಂಡಿರುವ ರೈತ ಸಮುದಾಯವನ್ನು ಚಿಂತೆಗೆ ನೂಕಿದೆ. |
ಮೇ ಅಂತ್ಯದಲ್ಲಿ ಹಾಗೂ ಜೂನ್ ಮೊದಲ ವಾರದಲ್ಲಿ ರೋಹಿಣಿ ಮಳೆ ಅಲ್ಪ ಪ್ರಮಾಣದಲ್ಲಿ ಸುರಿದಿದ್ದರಿಂದ ಜೋಳ, ಮೆಕ್ಕೆ ಜೋಳ, ಸೂರ್ಯಕಾಂತಿ, ಸಜ್ಜೆ ಮತ್ತಿತರ ಬಿತ್ತನೆ ಪೂರೈಸಿರುವ ರೈತರು ಆಕಾಶದತ್ತಲೇ ಮುಖ ಮಾಡಿದ್ದು, ನಂತರದ ಮೃಗಶಿರಾ ಹಾಗೂ ಆರಿದ್ರಾ ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದೆ ಅವರನ್ನೆಲ್ಲ ನಿರಾಸೆ ಮಡುವಿನಲ್ಲಿ ಸಿಲುಕಿಸಿದೆ. |
ಹೂವಿನಹಡಗಲಿ, ಕೂಡ್ಲಿಗಿ, ಹಗರಿಬೊಮ್ಮನಹಳಲ್ಲಿ ಮತ್ತು ಸಂಡೂರು ತಾಲ್ಲೂಕುಗಳು ಮಳೆಯಾಶ್ರಿತ ಕೃಷಿ ಅವಲಂಬಿಸಿದ್ದು, ಜಿಲ್ಲೆಯಲ್ಲಿ ಈವರೆಗೆ ಕೇವಲ ಶೇ 31ರಷ್ಟು ಬಿತ್ತನೆ ಪೂರ್ಣಗೊಂಡಿದೆ. |
ಹೂವಿನ ಹಡಗಲಿಯಲ್ಲಿ ಮಾತ್ರ ಶೇ 72ರಷ್ಟು ಬಿತ್ತನೆಯಾಗಿದ್ದು, ಮಿಕ್ಕ ಕಡೆ ಅದರ ಪ್ರಮಾಣ ಶೇ 30 ದಾಟಿಲ್ಲ. ಬಳ್ಳಾರಿ, ಸಿರುಗುಪ್ಪ ಮತ್ತು ಹೊಸಪೇಟೆ ತಾಲ್ಲೂಕುಗಳ ಮಳೆಯಾಶ್ರಿತ ಪ್ರದೇಶದಲ್ಲೂ ಅಷ್ಟಾಗಿ ಬಿತ್ತನೆಯಾಗಿಲ್ಲ. |
ಈ ಮೂರೂ ತಾಲ್ಲೂಕುಗಳಲ್ಲಿ ತುಂಗಭದ್ರಾ ಜಲಾಶಯ ಅವಲಂಬಿಸಿರುವ ರೈತರು, ಜಮೀನು ಸಿದ್ಧಪಡಿಸಿಕೊಂಡು ಕಾಲುವೆಗೆ ನೀರು ಬಿಡುವುದನ್ನೇ ಕಾಯುತ್ತಿದ್ದಾರೆ. ಮುನಿರಾಬಾದ್‌ನಲ್ಲಿ ಇದೇ 9ರಂದು ನಡೆಯಲಿರುವ ನೀರಾವರಿ ಸಲಹಾ ಸಮಿತಿ ಸಭೆ ನಂತರ ನೀರು ಹರಿಸುವ ವೇಳಾಪಟ್ಟಿ ಅಂತಿಮವಾಗುವ ಸೂಚನೆಗಳಿವೆ. |
ಗುಳೆ ಅನಿವಾರ್ಯ: `ಮಳೀ ಸುರೀಬಹುದು ಅಂತ ಊರಿಗೆ ಹೊಳ್ಳಿ ಬಂದು ಭೂಮಿ ಹರಗಿ ಬಿತ್ತಗಿ ಮಾಡೇವಿ. ಚೋಟುದ್ದ ಪೀಕ್‌ನ್ಯಾಗ ಬೆಳೆದ ಕಳೇವು ತೆಗಿಯಾಕತ್ತೇವಿ. ಎರಡ್ ವರ್ಸದಿಂದ ಮಳೀ ಆಗಿಲ್ಲ. ಈ ವರ್ಸನೂ ಮಳೀ ಬರವಲ್ದು. ಹಿಂಗ ಆದ್ರ ಇನ್ನೊಂದ್ 15 ದಿವಸ ನೋಡಿ ಮತ್ತ ಗೋವಾ ಕಡೆ ಗುಳೇ ಹೋಗಬೇಕಾಗತೈತಿ' ಎಂದು ಹೊಸಪೇಟೆ ತಾಲ್ಲೂಕಿನ ತಾಳೆ ಬಸಾಪುರ ತಾಂಡಾದ ಕೃಷಿ ಕೂಲಿಕಾರರು `ಪ್ರಜಾವಾಣಿ' ಎದುರು ಅಳಲು ತೋಡ... |
`ಬ್ಯಾರೆ ಕಡೆ ಚೊಲೋ ಮಳೀ ಸುರಿಯಾಕತ್ತೈತಿ. ನೆರಿ ಬಂದು ಎಷ್ಟೋ ಮಂದಿ ಜೀವಾ ಕಳಕೊಂಡಾರ. ಇಲ್ಲಿ ಮಳೀ ಇಲ್ಲದ ನಮ್ಮ ಜೀವ ಹೊಂಟೈತಿ. ಮೂರು ವರ್ಸದಿಂದ ಮಳೀ ಕೈಕೊಡಾಕತ್ತೈತಿ. ಸಾಲ ಹೆಚ್ಚಾಗಾಕತ್ತೈತಿ. ಮಳೀ ಆಗಲಿಲ್ಲಂದ್ರ ಹೆಂಗ ಮಾಡಬೇಕು ಅನ್ನೂದು ತಿಳೀವಲ್ಲದು' ಎಂದು ಆಕಾಶದತ್ತಲೇ ದೃಷ್ಟಿ ನೆಟ್ಟಿರುವ ಗ್ರಾಮದ ಲಕ್ಷ್ಮಣ ನಾಯ್ಕ ಹೇಳಿದರು. |
`ಬಿತ್ತಗಿ ಮಾಡಿ 25 ದಿನಾ ಆತು. ಅವತ್ತಿಂದ ಇವತ್ತಿನವರೆಗೂ ದಿನಾಲೂ ಮೋಡ ಆಗತೈತಿ. ಆದರೂ ಮಳೀನ ಸುರಿವಲ್ದು. ಸಣ್ಣಗ ಜುಬ್ಬರದಂಗ ಮಳೀ ಸುರಿದರೂ ಉಪಯೋಗ ಇಲ್ಲ. ಗೊಂಜೋಳ, ಜೋಳ ಬಾಡಾಕತ್ತೈತಿ. ಇನ್ನೊಂದ್ ವಾರದಾಗ ಮಳೀ ಬರಲಿಲ್ಲಾ ಅಂದ್ರ ಬೆಳೀ ಪೂರ್ತಿ ಒಣಗತೈತಿ...' ಎಂದು ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮರಿಯಮ್ಮನಹಳ್ಳಿಯ ಬನ್ನಿಕಲ್ ಬಸಪ್ಪ ಬೇಸರ ವ್ಯಕ್ತಪಡಿಸಿದರು. |
ಜುಲೈ ಅಂತ್ಯದವರೆಗೆ ಒಂದೆರಡು ಉತ್ತಮ ಮಳೆ ಸುರಿದರೂ ಮಿಕ್ಕ ಶೇ 70 ಭಾಗದಲ್ಲಿ ಬಿತ್ತನೆ ಪೂರ್ಣಗೊಳ್ಳುತ್ತದೆ. ಇಲ್ಲದಿದ್ದರೆ ಈಗ ಬಿತ್ತನೆ ಮಾಡಿರುವ ಭೂಮಿಯಲ್ಲಿನ ಬೆಳೆಯೂ ಒಣಗುತ್ತದೆ. ಮಳೆ ಸುರಿಯಬಹುದು ಎಂಬುದು ಕೃಷಿ ಇಲಾಖೆಯ ಅಧಿಕಾರಿ ಮಹಾಬಲೇಶ್ವರಪ್ಪ ಅವರ ಆಶಾಭಾವನೆ. |
ಮುಖಪುಟ » ಇತ್ತೀಚಿನ ಸುದ್ದಿ ಲೇಖನಗಳು » ರೈಲು ಪ್ರಯಾಣ » ಲಂಡನ್‌ನಿಂದ ಎಡಿನ್‌ಬರ್ಗ್‌ಗೆ ಹೊಸ ಕಡಿಮೆ ದರದ ರೈಲು |
ಏರ್ಲೈನ್ಸ್ • ವಿಮಾನಯಾನ • ಬ್ರೇಕಿಂಗ್ ಯುರೋಪಿಯನ್ ಸುದ್ದಿ • ಬ್ರೇಕಿಂಗ್ ಅಂತರಾಷ್ಟ್ರೀಯ ಸುದ್ದಿ • ಬ್ರೇಕಿಂಗ್ ಪ್ರಯಾಣ ಸುದ್ದಿ • ವ್ಯಾವಹಾರಿಕ ಪ್ರವಾಸ • ಸುದ್ದಿ • ರೈಲು ಪ್ರಯಾಣ • ಪುನರ್ನಿರ್ಮಾಣ • ಜವಾಬ್ದಾರಿ • ಸ್ಕಾಟ್ಲೆಂಡ್ ಬ್ರೇಕಿಂಗ್ ನ್ಯೂಸ್ • ಪ್ರವಾಸೋದ್ಯಮ • ಸಾರಿಗೆ • ಪ್ರಯಾಣ ಗಮ್ಯಸ್ಥಾನ ನವೀಕರಣ • ಟ್ರಾವೆಲ್ ವೈರ್ ನ್ಯೂಸ್ |
ಲಂಡನ್‌ನಿಂದ ಎಡಿನ್‌ಬರ್ಗ್‌ಗೆ ಹೊಸ ಕಡಿಮೆ ವೆಚ್ಚದ ರೈಲು ಪ್ರಸ್ತುತ ರೈಲು ಮತ್ತು ವಿಮಾನ ಸೇವೆಗಳನ್ನು ಅಡ್ಡಿಪಡಿಸಬಹುದು |
ಇತ್ತೀಚಿನ ಸಮೀಕ್ಷೆಯಲ್ಲಿ 11% ಜಾಗತಿಕ ಪ್ರತಿಕ್ರಿಯೆಯು ಈಗ ರಜಾದಿನದ ಬಜೆಟ್ ಅನ್ನು COVID ಪೂರ್ವಕ್ಕಿಂತ ಕಡಿಮೆ ಹೊಂದಿದೆ ಮತ್ತು 37% ರಷ್ಟು ಜನರು ಮುಂದಿನ ದಿನಗಳಲ್ಲಿ ರಜಾದಿನಗಳಲ್ಲಿ ಹೋಗಲು ಸಾಧ್ಯವಾಗುವುದಿಲ್ಲ ಹಾಗಾಗಿ ಹೊಸ ಕಡಿಮೆ ಬೆಲೆಯ ಸೇವೆಯನ್ನು ಸ್ವಾಗತಿಸಲಾಗುತ್ತದೆ. |
ಲುಮೋನ ಕಡಿಮೆ ವೆಚ್ಚದ ರೈಲು ಉಡಾವಣೆ ಬಜೆಟ್ ಮತ್ತು ಪರಿಸರ ಕಾಳಜಿಯನ್ನು ಪೂರೈಸುತ್ತದೆ. |
ಲುಮೋನ ಕಡಿಮೆ ವೆಚ್ಚದ ರೈಲು ಸೇವಾ ಮಾದರಿಯು ಪ್ರಯಾಣಿಕರಲ್ಲಿ ಬಹಳ ಜನಪ್ರಿಯವಾಗಬಹುದು. |
ಸೇವೆಯು ಕಡಿಮೆ ಬೆಲೆಯದ್ದಾಗಿದ್ದರೂ, ಉಚಿತ ವೈ-ಫೈ ಮತ್ತು ಬೇಡಿಕೆಯ ಮನರಂಜನೆಯು ಎಲ್ಲರಿಗೂ ಲಭ್ಯವಿರುತ್ತದೆ. |
ಲುಮೋ ಕಡಿಮೆ ದರದ ರೈಲು ಸೇವೆಗಳನ್ನು ಆರಂಭಿಸುವುದರಿಂದ ಲಂಡನ್ ಮತ್ತು ಎಡಿನ್ಬರ್ಗ್ ನಡುವಿನ ಪ್ರಸ್ತುತ ರೈಲು ಮತ್ತು ವಿಮಾನ ಸೇವೆಗಳನ್ನು ಅಡ್ಡಿಪಡಿಸಬಹುದು. ಇದರ ಕಡಿಮೆ ಬೆಲೆಯ ಮಾದರಿಯು ಪರಿಸರದ ಪ್ರಭಾವವನ್ನು ಕಡಿಮೆ ಮಾಡುವತ್ತ ಗಮನಹರಿಸುವುದರ ಜೊತೆಗೆ ಈ ವಲಯವು ಸಾಂಕ್ರಾಮಿಕ ರೋಗದಿಂದ ಚೇತರಿಸಿಕೊಳ್ಳುವುದರಿಂದ ಪ್ರಯಾಣಿಕರ ಪ್ರವೃತ್ತಿಯನ್ನು ಬದಲಿಸಲು ಅನುಕೂಲವಾಗುತ್ತದೆ. |
ಲುಮೋನ ಕಡಿಮೆ ದರದ ರೈಲು ಸೇವೆ ಜನಪ್ರಿಯವಾಗಬಹುದು. ಬ್ರಿಟಿಷ್ ಪ್ರಯಾಣಿಕರು ಹೆಚ್ಚಿನ ದರಗಳು ಮತ್ತು ಕಡಿಮೆ-ಗುಣಮಟ್ಟದ ಸೇವೆಗಳಿಗೆ ಒಗ್ಗಿಕೊಂಡಿರುತ್ತಾರೆ, ಅದು ಕೋವಿಡ್‌ಗೆ ಮುಂಚಿತವಾಗಿ, ಹೆಚ್ಚಾಗಿ ಕಿಕ್ಕಿರಿದಿದೆ. ಎಡಿನ್ಬರ್ಗ್ ಮತ್ತು ಲಂಡನ್ ನಡುವೆ ಹೊಸ ಬಜೆಟ್ ಆಪರೇಟರ್ ಮಾರ್ಗದ ಆರಂಭವು ರೈಲು ನಿರ್ವಾಹಕರ ನಡುವಿನ ಸ್ಪರ್ಧೆಯ ಕೊರತೆಯಿಂದಾಗಿ ಅಡ್ಡಿಪಡಿಸುವ ಶಕ್ತಿಯಾಗಿದೆ. UK. ಇದು ಕಡಿಮೆ... |
ಬಜೆಟ್‌ಗಳನ್ನು ವಿಸ್ತರಿಸುವುದರೊಂದಿಗೆ, ಕಡಿಮೆ ವೆಚ್ಚದ ರೈಲು ಸೇವೆಯ ಪರಿಚಯವು UK ಯಲ್ಲಿ ದೇಶೀಯ ಬೇಡಿಕೆಯು ಗಗನಕ್ಕೇರಿದಾಗ ನಗದು-ತೊಂದರೆಗೊಳಗಾದ ಪ್ರಯಾಣಿಕರೊಂದಿಗೆ ಚೆನ್ನಾಗಿ ಆಡುತ್ತದೆ. ಪ್ರಯಾಣಿಕರ ಹೆಚ್ಚಿದ ಬೆಲೆ ಸೂಕ್ಷ್ಮತೆಗೆ ಪ್ರತಿಕ್ರಿಯಿಸಲು ಕಡಿಮೆ ದರಗಳು ಅತ್ಯಗತ್ಯ. ಸಾಂಕ್ರಾಮಿಕ ರೋಗದಿಂದ ಆರ್ಥಿಕ ಕಚ್ಚುವಿಕೆಯನ್ನು ಅನೇಕರು ಅನುಭವಿಸಿದ್ದಾರೆ, ಇದರ ಪರಿಣಾಮವಾಗಿ ಮನೆ ಮತ್ತು ಪ್ರ... |
ಲುಮೋನ ಸ್ಪರ್ಧಾತ್ಮಕ £ 15 (US $ 20.78) ಏಕಮುಖ ಕಡಿಮೆ ದರ ಆಯ್ಕೆಯು ಲಂಡನ್ ಮತ್ತು ಪ್ರಯಾಣದ ನಡುವಿನ ಬೇಡಿಕೆಯನ್ನು ಉತ್ತೇಜಿಸುತ್ತದೆ ಎಡಿನ್ಬರ್ಗ್. ಕಡಿಮೆ ದರಗಳು ಕಡಿಮೆ ದರದ ವಿಮಾನಕ್ಕಿಂತ ಅಗ್ಗವಾಗಿರುತ್ತವೆ ಮತ್ತು ಈಸಿ ಜೆಟ್‌ನಲ್ಲಿ ಸ್ಪರ್ಧಾತ್ಮಕ ಒತ್ತಡವನ್ನು ಹೇರಬಹುದು ಮತ್ತು ಸ್ವಲ್ಪ ಮಟ್ಟಿಗೆ, ಬ್ರಿಟಿಷ್ ಏರ್ವೇಸ್. COVID-19 ಚೇತರಿಕೆಯ ಹಂತದಲ್ಲಿ ಕಸ್ಟಮ್ ಅನ್ನು ಆಕರ್ಷಿಸಲು ಬೆ... |
ಒಂದು ಉತ್ಪನ್ನ ಅಥವಾ ಸೇವೆಯು ಎಷ್ಟು ಪರಿಸರ ಸ್ನೇಹಿಯಾಗಿದೆ ಎಂಬುದರ ಮೇಲೆ ಪ್ರಯಾಣಿಕರು ಹೆಚ್ಚು ಪ್ರಭಾವ ಬೀರುವ ಸಾಧ್ಯತೆಯಿದೆ. ಕ್ಯೂ 1 2021 ಗ್ರಾಹಕ ಸಮೀಕ್ಷೆಯು 70% ಎಂದು ಬಹಿರಂಗಪಡಿಸಿದೆ UK ಪ್ರತಿಕ್ರಿಯಿಸುವವರು 'ಯಾವಾಗಲೂ', 'ಆಗಾಗ್ಗೆ', ಅಥವಾ 'ಕೆಲವೊಮ್ಮೆ' ಈ ಅಂಶದಿಂದ ಪ್ರಭಾವಿತರಾಗಿದ್ದಾರೆ. |
ಲುಮೋ ಅವರ ಪರಿಸರ ಸ್ನೇಹಿ ಕಾರ್ಯಾಚರಣೆಯ ಮೇಲೆ ಹೆಚ್ಚಿನ ಗಮನ, ಭವಿಷ್ಯದ ಅದರ ವ್ಯಾಪಾರ ಮಾದರಿಯನ್ನು ರುಜುವಾತುಪಡಿಸುತ್ತದೆ. ಎರಡು ನಗರಗಳ ನಡುವೆ ಹೆಚ್ಚಾಗಿ ಹಾರಾಟ ನಡೆಸುವ ಪ್ರಯಾಣಿಕರು ಹೆಚ್ಚು ಪರಿಸರ ಸ್ನೇಹಿ ಮತ್ತು ಅಗ್ಗದ ಆಯ್ಕೆಯತ್ತ ಒಲವು ತೋರುವ ಸಾಧ್ಯತೆಯಿದೆ. ಹಾರಾಟದ ಮೇಲೆ ಲುಮೋನ ಸಂಪೂರ್ಣ ವಿದ್ಯುತ್ ರೈಲುಗಳಲ್ಲಿ ಪ್ರಯಾಣಿಸಲು ಆಯ್ಕೆ ಮಾಡುವುದರಿಂದ ಪ್ರಯಾಣದ ಕಾರ್ಬನ್ ಹೊರಸೂಸುವಿಕ... |
ಇನ್‌ವೆಸ್ಟ್ ಕರ್ನಾಟಕ: 10 ಲಕ್ಷ ಕೋ.ರೂ. ಹೂಡಿಕೆ ನಿರೀಕ್ಷೆ | Udayavani – ಉದಯವಾಣಿ |
Saturday, 04 Dec 2021 | UPDATED: 12:39 AM IST |
Team Udayavani, Oct 22, 2021, 7:33 AM IST |
ಬೆಂಗಳೂರು: ಮುಂದಿನ ವರ್ಷದ ನವೆಂಬರ್‌ನಲ್ಲಿ "ಇನ್‌ವೆಸ್ಟ್ ಕರ್ನಾಟಕ' ಸಮಾವೇಶ ನಡೆಯಲಿದ್ದು, ಹತ್ತು ಲಕ್ಷ ಕೋ.ರೂ. ಬಂಡವಾಳ ಹೂಡಿಕೆ ಆಗುವ ನಿರೀಕ್ಷೆ ಇದೆ. ಈ ಗುರಿ ಸಾಧನೆಗೆ ದುಬಾೖ ಎಕ್ಸ್‌ಪೋ ಸಹಕಾರಿ ಯಾಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ವಿಶ್ವಾಸ ವ್ಯಕ್ತಪಡಿಸಿದರು. |
"ದುಬಾೖ ಎಕ್ಸ್‌ಪೋ-2020'ದಲ್ಲಿ 3 ದಿನಗಳ ಕಾರ್ಯಕ್ರಮ ಯಶಸ್ವಿ ಯಾಗಿದೆ. 190ಕ್ಕೂ ಅಧಿಕ ದೇಶಗಳು ಪಾಲ್ಗೊಂಡಿದ್ದವು. ಅಂದಾಜು 45 ಲಕ್ಷ ಮಂದಿ ಎಕ್ಸ್‌ಪೋಗೆ ಭೇಟಿ ನೀಡಲಿದ್ದಾರೆ. ಎಕ್ಸ್‌ಪೋದಲ್ಲಿ ದುಬಾೖ ಇಸ್ಲಾಮಿಕ್ ಇನ್‌ವೆಸ್ಟರ್ಸ್ ಜತೆ ಒಪ್ಪಂದ ಮಾಡಿ ಕೊಳ್ಳಲಾಗಿದೆ. ಅದು ಬೆಂಗಳೂರಿನಲ್ಲಿ ಕಚೇರಿ ತೆರೆಯಲಿದ್ದು, ಮುಂದಿನ 3 ವರ್ಷಗಳಲ್ಲಿ 3,500 ಕೋಟಿ ರೂ. ಬಂಡವಾಳ ಹೂಡಲು ಆಸಕ್ತಿ ಪ್ರದರ್ಶಿ... |
ಅ. 17ರಂದು ನಡೆದ ಉದ್ಯಮಿಗಳ ಚರ್ಚೆಯಲ್ಲಿ 180ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. "ಕರ್ನಾಟಕ- ನೌ ಬಿಯಾಂಡ್' ಕಾರ್ಯಕ್ರಮದ ಮೂಲಕ ಕೊಲ್ಲಿ ಸಹಿತ ವಿಶ್ವದ 200ಕ್ಕೂ ಹೆಚ್ಚು ಪ್ರಮುಖ ಕೈಗಾರಿಕೋದ್ಯಮಿಗಳಿಗೆ ಕರ್ನಾಟಕವು ಹೂಡಿಕೆಗೆ ಪ್ರಶಸ್ತ ಸ್ಥಳ ಎಂದು ಮನದಟ್ಟು ಮಾಡಲಾಗಿದೆ. ರಾಜ್ಯದ ಸಂಸ್ಕೃತಿಯನ್ನೂ ಅನಾವರಣ ಮಾಡಲಾಗಿದೆ ಎಂದರು. |
ಐದು ಕಡೆ ಅದಾಲತ್: ಈಚೆಗೆ ನಡೆದ "ಉದ್ಯಮಿಯಾಗು ಉದ್ಯೋಗ ನೀಡು' ಕಾರ್ಯಾಗಾರ ಯಶಸ್ವಿಯಾಗಿದ್ದು, ಕೈಗಾರಿಕಾ ಅದಾಲತ್ ಕೂಡ ಫಲ ನೀಡಿದೆ. ನ. 11 ಮತ್ತು 12ರಂದು ಕಲಬುರಗಿಯಲ್ಲಿ ಕೈಗಾರಿಕಾ ಅದಾಲತ್ ಹಮ್ಮಿಕೊಳ್ಳಲಾಗಿದೆ. ಬಳಿಕ ಬೆಳಗಾವಿ, ಕರಾವಳಿ ಸೇರಿದಂತೆ ಐದು ಕಡೆ ಆಯೋಜಿ ಸಲು ಉದ್ದೇಶಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. |
ದಸರಾ ಕುಸ್ತಿಗೆ ತೆರೆ: ದಾವಣಗೆರೆಯ ಕಿರಣ್ 'ದಸರಾ ಕಂಠೀರವ' | Prajavani |
ದಸರಾ ಕುಸ್ತಿಗೆ ತೆರೆ: ದಾವಣಗೆರೆಯ ಕಿರಣ್ 'ದಸರಾ ಕಂಠೀರವ' |
ಸದಾಶಿವ 'ದಸರಾ ಕೇಸರಿ' |
Published: 05 ಅಕ್ಟೋಬರ್ 2019, 01:21 IST |
Updated: 05 ಅಕ್ಟೋಬರ್ 2019, 01:21 IST |
ಮೈಸೂರು: ಕುಸ್ತಿ ಪ್ರೇಮಿಗಳ ಚಪ್ಪಾಳೆಯ ನಡುವೆ ಬಿಗಿಪಟ್ಟುಗಳನ್ನು ಹಾಕಿದ ದಾವಣಗೆರೆಯ ಕಿರಣ್ ಅವರು ದಸರಾ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ 'ದಸರಾ ಕಂಠೀರವ' ಪ್ರಶಸ್ತಿ ಗಳಿಸಿದರು. |
ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದ ಅಖಾಡದಲ್ಲಿ ಶುಕ್ರ ವಾರ ನಡೆದ ಪೈಪೋಟಿಯಲ್ಲಿ ಕಿರಣ್ ಅವರು ಬೆಳಗಾವಿಯ ಶಿವಯ್ಯ ಪೂಜಾರಿ ವಿರುದ್ಧ ಗೆದ್ದರು. 30 ನಿಮಿಷಗಳ ಹಣಾಹಣಿಯಲ್ಲಿ ಕಿರಣ್ 11–0 ಪಾಯಿಂಟ್‌ಗಳಿಂದ ಮೇಲುಗೈ ಸಾಧಿಸಿದರು. ಅವರಿಗೆ ಒಂದೂಕಾಲು ಕೆ.ಜಿ.ತೂಕದ ಬೆಳ್ಳಿ ಗದೆಯನ್ನು ಕಾಣಿಕೆಯಾಗಿ ಬಹುಮಾನವಾಗಿ ನೀಡಲಾಯಿತು. |
'ದಸರಾ ಕೇಸರಿ' ಪ್ರಶಸ್ತಿಗೆ ನಡೆದ 30 ನಿಮಿಷಗಳ ಹೋರಾಟದಲ್ಲಿ ಧಾರವಾಡದ ಸದಾಶಿವ ನಲವಡೆ ಅವರು ತಮ್ಮದೇ ಊರಿನವರಾದ ಅನಿಲ್ ದಳವಾಯಿ ವಿರುದ್ಧ 10–3 ಪಾಯಿಂಟ್‌ಗಳಿಂದ ಜಯ ಸಾಧಿಸಿದರು. |
'ದಸರಾ ಕುಮಾರ' ಪ್ರಶಸ್ತಿಗೆ ನಡೆದ ಸೆಣಸಾಟದಲ್ಲಿ ಮೈಸೂರಿನ ಪ್ರವೀಣ್ ಎಂ. ಚಿಕ್ಕಹಳ್ಳಿ ಅವರು ಕೆ.ಕುಮಾರ್ ವಿರುದ್ಧ ಗೆದ್ದರು. ಈ ಪ್ರಶಸ್ತಿಗೆ 20 ನಿಮಿಷಗಳ ಕಾದಾಟ ನಿಗದಿಪಡಿಸಲಾಗಿತ್ತು. ಪ್ರವೀಣ್ ಅವರು 13ನೇ ನಿಮಿಷದಲ್ಲಿ ಎದುರಾಳಿಯನ್ನು ಚಿತ್ ಮಾಡಿದರು. 'ದಸರಾ ಕೇಸರಿ', 'ದಸರಾ ಕುಮಾರ' ಮತ್ತು 'ದಸರಾ ಕಿಶೋರಿ' ಗೆದ್ದವರು ತಲಾ ಒಂದು ಕೆ.ಜಿ, ಮುಕ್ಕಾಲು ಕೆ.ಜಿ. ಮತ್ತು ಅರ್ಧ ಕೆ.ಜಿ. ತ... |
ಲೀನಾ ಸಿದ್ದಿ ಸಾಧನೆ |
'ದಸರಾ ಕಿಶೋರಿ' ಪ್ರಶಸ್ತಿಗೆ ನಡೆದ ಮಹಿಳೆಯರ ಕುಸ್ತಿಯಲ್ಲಿ ಹಳಿಯಾಳದ ಲೀನಾ ಸಿದ್ದಿ ಅವರು ಗದುಗಿನ ಎಚ್. ಪ್ರೇಮಾ ಅವರನ್ನು ಮಣಿಸಿದರು. ಈ ಮೂಲಕ 'ದಸರಾ ಕಿಶೋರಿ' ಪ್ರಶಸ್ತಿ ಪಡೆದ ಸಿದ್ದಿ ಜನಾಂಗದ ಮೊದಲ ಕುಸ್ತಿಪಟು ಎಂಬ ಗೌರವ ಪಡೆದರು. |
'ಈ ಹಿಂದೆ ಎರಡು ವರ್ಷ ದಸರಾ ಕುಸ್ತಿಯಲ್ಲಿ ಪಾಲ್ಗೊಂಡಿದ್ದೆ. ಆದರೆ ದಸರಾ ಕಿಶೋರಿ ಪ್ರಶಸ್ತಿಗೆ ಸ್ಪರ್ಧಿಸಲು ಅವಕಾಶ ಸಿಕ್ಕಿರಲಿಲ್ಲ. ಈ ಬಾರಿ ಸಿಕ್ಕ ಅವಕಾಶವನ್ನು ಬಳಸಿಕೊಂಡು ಗೆದ್ದೆ. ಈ ಸಾಧನೆ ಸಂತಸ ನೀಡಿದೆ' ಎಂದು ಲೀನಾ ಪ್ರತಿಕ್ರಿಯಿಸಿದರು. |
Subsets and Splits
No community queries yet
The top public SQL queries from the community will appear here once available.