text
stringlengths
0
61.5k
ಈ ವಾಕ್ಯವು ಡಾಟ್ ಕಾಮ್ ಬೂಮ್ ಮತ್ತು ಬಸ್ಟ್ ಸಮಯದಲ್ಲಿ ಏನಾಯಿತು ಎಂಬುದನ್ನು ಅದ್ಭುತವಾಗಿ ಹೇಳುತ್ತದೆ.
"ಕೆಲವು ಕಂಪನಿಗಳು ದೊಡ್ಡ ಗ್ರಾಹಕರ ಮಂಥನವನ್ನು ಹೊಂದಿವೆ? ಮತ್ತು ಸಮಸ್ಯೆಯನ್ನು ಬಗೆಹರಿಸಲು ಮತ್ತು ಗ್ರಾಹಕರ ಬಗ್ಗೆ ಮೆಚ್ಚುಗೆಯನ್ನು ತೋರಿಸಲು ಪ್ರಯತ್ನಿಸುವುದಕ್ಕಿಂತ ಹೆಚ್ಚಾಗಿ, ಅವರು ಉಳಿದಿರುವವರನ್ನು ಬದಲಿಸಲು ಗ್ರಾಹಕರನ್ನು ಸ್ವಾಧೀನಪಡಿಸಿಕೊಳ್ಳಲು ಹೆಚ್ಚಿನ ಡಾಲರ್‌ಗಳನ್ನು ಪಂಪ್ ಮಾಡುತ್ತಾರೆ."
ಅಭಿಮನ್ಯು ಮಿಥುನ್ ರೋಚಕ ಆಟ, ಕರ್ನಾಟಕಕ್ಕೆ ಮುನ್ನಡೆ – EESANJE / ಈ ಸಂಜೆ
ಅಭಿಮನ್ಯು ಮಿಥುನ್ ರೋಚಕ ಆಟ, ಕರ್ನಾಟಕಕ್ಕೆ ಮುನ್ನಡೆ
February 13, 2020 Sunil Kumar Karnataka, Ranji Trophy
ಬೆಂಗಳೂರು, ಫೆ.13- ಬರೋಡಾ ವಿರುದ್ಧದ ರಣಜಿ ಪಂದ್ಯದ ಮೊದಲ ದಿನ ಬೌಲಿಂಗ್‍ನಲ್ಲಿ ಮಿಂಚಿದ್ದ ಕರ್ನಾಟಕದ ವೇಗಿ ಅಭಿಮನ್ಯು ಮಿಥುನ್ ಅವರು ದ್ವಿತೀಯ ದಿನ ಬ್ಯಾಟಿಂಗ್ ವೈಭವವನ್ನು ಪ್ರದರ್ಶಿಸುವ ಮೂಲಕ ಕರ್ನಾಟಕ ತಂಡಕ್ಕೆ 148 ರನ್‍ಗಳ ಮುನ್ನಡೆ ತಂದುಕೊಟ್ಟಿದ್ದಾರೆ.
ನಿನ್ನೆ ದಿನದಾಟದ ಅಂತ್ಯಕ್ಕೆ 80 ರನ್‍ಗಳ ಮುನ್ನಡೆ ಸಾಧಿಸಿದ್ದ ಕರ್ನಾಟಕ ಇಂದು ಶರತ್ (34 ರನ್, 6 ಬೌಂಡರಿ) ಹಾಗೂ ಅಭಿಮನ್ಯು ಮಿಥುನ್ (40 ರನ್, 6 ಬೌಂಡರಿ)ರ ಸಮಯೋಚಿತ ಆಟದ ನೆರವಿನಿಂದಾಗಿ 233 ರನ್‍ಗಳನ್ನು ಗಳಿಸುವ ಮೂಲಕ ಮೊದಲ ಇನ್ನಿಂಗ್ಸ್‍ನಲ್ಲಿ 148 ರನ್‍ಗಳ ಮುನ್ನಡೆ ಕಾಯ್ದುಕೊಂಡರು.
ಬರೋಡಾ ವಿರುದ್ಧ ಮಾರಕ ಬೌಲಿಂಗ್ ಪ್ರದರ್ಶಿಸಿದ ಸೌಂಪ್ರಿಯಾ 5 ವಿಕೆಟ್ ಕಬಳಿಸಿದರೆ, ಅಭಿಮನ್ಯು ಸಿಂಗ್, ಭಾರ್ಗವ್ ಭಟ್ 2, ನಾಚಯಕ ಕೇದಾರ್ ಪಾಂಡ್ಯ 1 ವಿಕೆಟ್ ಅನ್ನು ಕಬಳಿಸಿದರು. ದ್ವಿತೀಯ ಇನ್ನಿಂಗ್ಸ್ ಆರಂಭಿಸಿರುವ ಬರೋಡಾ ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ 2ವಿಕೆಟ್ ನಷ್ಟಕ್ಕೆ 48 ರನ್‍ಗಳನ್ನು ಗಳಿಸಿದ್ದು, ಪಠಣ್ (25 ರನ್, 3 ಬೌಂಡರಿ, 1 ಸಿಕ್ಸರ್), ದೀಪಕ್ ಹೂಡಾ ಕ್ರೀಸ್‍ನಲ್ಲಿದ್ದರು. ಕೃಷ್ಣಪ್ಪ ಗೌತಮ್, ಪ್ರಸಿದ್ಧ ಕೃಷ್ಣ ತಲಾ 1 ವಿಕೆಟ್ ಕೆಡವಿದ್ದರು.
ಬಂಟ್ವಾಳದಲ್ಲಿ ಪ್ರಾಕೃತಿಕ ವಿಕೋಪದಿಂದ ಹಲವೆಡೆ ಹಾನಿ — Bantwalnews.com
ಬಂಟ್ವಾಳ: ಮಂಗಳವಾರ ರಾತ್ರಿಯಿಂದೀಚೆಗೆ ಬುಧವಾರವೂ ಸುರಿದ ಭಾರಿ ಮಳೆಯಿಂದ ಬಂಟ್ವಾಳ ತಾಲೂಕಿನ ಹಲವೆಡೆ ಹಾನಿಗಳುಂಟಾಗಿದೆ. ತೆಂಕ ಕಜೆಕಾರು ಗ್ರಾಮದ ಮಿತ್ತಲಿಕೆ ಮನೆ ಎಂಬಲ್ಲಿ ಇಬ್ರಾಯಿ ಬ್ಯಾರಿ ಅವರ ಮನೆಯ ಹಿಂಭಾಗದ ಗೋಡೆ ಕುಸಿದು ಬಿದ್ದಿದ್ದು ಮೇಲ್ಛಾವಣಿ ಸಂಪೂರ್ಣ ಹಾನಿಯಾಗಿದೆ, ಮನೆಯ ಹಲವು ಕಡೆ ಗೋಡೆ ಬಿರುಕು ಬಿಟ್ಟಿದ್ದು ತೀವ್ರ ಹಾನಿಯಾಗಿರುವ ಹಿನ್ನೆಲೆಯಲ್ಲಿ ಮನೆಯವರನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಲಾಗಿದೆ. ಮಣಿನಾಲ್ಕೂರು ಗ್ರಾಮದ ಆಚಾರಿಬೆಟ್ಟು ಎಂಬಲ್ಲಿ ಜನಾರ್ದನ ಅವರ ಮನೆಗೆ ಮರ ಬಿದ್ದು ತೀವ್ರ ಹಾನಿ ಆಗಿದೆ. ಪುಣಚ ಗ್ರಾಮದ ನಡುಸಾರು ಎಂಬಲ್ಲಿ ಪುಟ್ಟ ನಾಯ್ಕ ಅವರ ಮನೆಗೆ ತಾಗಿಕೊಂಡಿರುವ ಶೌಚಾಲಯಕ್ಕೆ ಮರದ ಕೊಂಬೆ ಬಿದ್ದು ಭಾಗಶಃ ಹಾನಿಯಾಗಿದೆ, ಶಂಭೂರು ಗ್ರಾಮದ ಸುಜಾತ ಅವರ ವಾಸ್ತವ್ಯದ ಮನೆಗೆ ಹೊಂದಿಕೊಂಡಿರುವ ಕೊಟ್ಟಿಗೆಗೆ ಮರ ಬಿದ್ದು ಹಾನಿಯಾಗುತ್ತದೆ. ನರಿಂಗಾನ ಗ್ರಾಮದ ಮೋರ್ಲ ಹಿತ್ತಿಲು ಎಂಬಲ್ಲಿ ಆಲಿಯಮ್ಮ ಎಂಬವರ ವಾಸದ ಮನೆಗೆ ಭಾಗಶಃ ಹಾನಿಯಾಗಿದೆ. ಮಂಚಿ ಗ್ರಾಮದ ಗಣಪತಿ ಅವರ ತಡೆಗೋಡೆ ಕುಸಿದುಬಿದ್ದಿದೆ. ಪಿಲಿಮೊಗರು ಗ್ರಾಮದ ಕೆಸೊಟ್ಟು ಎಂಬಲ್ಲಿರುವ ಕೇಶವ ಭಟ್ ಅವರ ಅಡಿಕೆ ತೋಟಕ್ಕೆ ಗಾಳಿ ಮಳೆಯಿಂದಾಗಿ ಹಾನಿಯಾಗಿದೆ.
ಅಂಚೆ ಕಚೇರಿ ಎದುರು ಅಂಗವಿಕಲರ ಪ್ರತಿಭಟನೆ | Prajavani
ಅಂಚೆ ಕಚೇರಿ ಎದುರು ಅಂಗವಿಕಲರ ಪ್ರತಿಭಟನೆ
ಒಂದೂವರೆ ವರ್ಷದಿಂದ ಸರಿಯಾಗಿ ಮಾಸಾಶನ ವಿತರಿಸದ ಆರೋಪ
Published: 13 ಆಗಸ್ಟ್ 2018, 19:12 IST
Updated: 13 ಆಗಸ್ಟ್ 2018, 19:12 IST
ಚಿಕ್ಕಬಳ್ಳಾಪುರ: ಅಂಚೆ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಅನೇಕ ತಿಂಗಳಿಂದ ಹಿರಿಯ ನಾಗರಿಕರು, ಅಂಗವಿಕಲರು, ವಿಧವೆಯರು ಸೇರಿದಂತೆ ಅನೇಕ ಫಲಾನುಭವಿಗಳಿಗೆ ಮಾಸಾಶನ ವಿತರಣೆಯಾಗಿಲ್ಲ ಎಂದು ಆರೋಪಿಸಿ ಕರ್ನಾಟಕ ಅಂಗವಿಕಲರ ಸಂಘಟನೆ (ಕೆವಿಎಸ್) ಪದಾಧಿಕಾರಿಗಳು ಬಿ.ಬಿ.ರಸ್ತೆಯ ಪ್ರಧಾನ ಅಂಚೆ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆವಿಎಸ್ ತಾಲ್ಲೂಕು ಘಟಕದ ಕಾರ್ಯದರ್ಶಿ ಉಷಾಕಿರಣ್, ''ಸರ್ಕಾರದಿಂದ ಪ್ರತಿ ತಿಂಗಳು ವೃದ್ಯಾಪ್ಯ, ಅಂಗವಿಕಲರು ಹಾಗೂ ವಿಧವಾ ವೇತನ ಸರ್ಕಾರದಿಂದ ಬಿಡುಗಡೆಯಾಗುತ್ತಿದೆ. ಆದರೆ ಅಂಚೆ ಇಲಾಖೆ ಸಿಬ್ಬಂದಿ ಕಳೆದ ಒಂದೂವರೆ ವರ್ಷದಿಂದ ಆನ್‌ಲೈನ್ ಸಮಸ್ಯೆ ಹೆಸರಿನಲ್ಲಿ ಸರಿಯಾಗಿ ವಿತರಣೆ ಮಾಡುತ್ತಿಲ್ಲ. ಹೀಗಾಗಿ ವಿತರಣೆಯಾಗಬೇಕಾದ ಬಾಕಿ ಮೊತ್ತ ಸರ್ಕಾರಕ್ಕೆ ಹಿಂತಿರುಗುತ್ತಿದೆ' ಎಂದು ಆರೋಪಿಸಿದರು.
'ಅನೇಕ ಹಿರಿಯ ನಾಗರಿಕರು, ಅಸಹಾಯಕರು ಮಾಸಾಶನ ನೆಚ್ಚಿಕೊಂಡು ಬದುಕುತ್ತಾರೆ. ಅಂಚೆ ಇಲಾಖೆ ನೌಕರರು ಬೇಕಾಬಿಟ್ಟಿಯಾಗಿ ವರ್ತಿಸುತ್ತ ಹಿರಿಯ ಜೀವಗಳಿಗೆ ತೊಂದರೆ ಕೊಡುತ್ತಿದ್ದಾರೆ. ಹೀಗಾಗಿ ಅನೇಕರು ಔಷಧಿಗೆ ಹಣವಿಲ್ಲದೆ ಪರದಾಡುವ ಸ್ಥಿತಿ ಉಂಟಾಗಿದೆ. ಪಿಂಚಣಿ ನೆಚ್ಚಿಕೊಂಡಿರುವವರು ಅಂಚೆ ಕಚೇರಿಗೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ' ಎಂದು ತಿಳಿಸಿದರು.
'ಕುಪ್ಪಹಳ್ಳಿಯ ನಿವಾಸಿ ಕೆ.ಸಿ. ಮಮತಾ ಎಂಬುವರಿಗೆ ಸರ್ಕಾರದಿಂದ ಕಳೆದ 16 ತಿಂಗಳುಗಳಿಂದ ಪಿಂಚಣಿ ಬಿಡುಗಡೆಯಾದರೂ ಅಂಚೆ ಇಲಾಖೆ ಸಿಬ್ಬಂದಿ ವಿತರಣೆ ಮಾಡಿಲ್ಲ. ಅಧಿಕಾರಿಗಳ ಇಂತಹ ಧೋರಣೆಯಿಂದ ಹಿರಿಯ ನಾಗರಿಕರು, ಅಂಗವಿಕಲರು, ವಿಧವೆಯರು, ಲಿಂಗತ್ವ ಅಲ್ಪಸಂಖ್ಯಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಫಲಾನುಭವಿಗಳನ್ನು ನಿತ್ಯ ಅಂಚೆ ಕಚೇರಿಗಳಿಗೆ ಸುತ್ತಾಡಿಸುವುದನ್ನು ತಕ್ಷಣವೇ ನಿಲ್ಲಿಸಬೇಕು' ಎಂದು ಒತ್ತಾಯಿಸಿದರು.
ಕೆವಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಜಿ. ಸುಬ್ರಮಣಿ ಮಾತನಾಡಿ, 'ವಿವಿಧ ಪಿಂಚಣಿಗಳನ್ನು ಪ್ರತಿ ತಿಂಗಳು ಬಂದ ತಕ್ಷಣವೇ ನೀಡಬೇಕು. ಮಾಸಾಶನದಲ್ಲಿ ಸ್ವಲ್ಪ ಮೊತ್ತವನ್ನು ಫೋಸ್ಟ್‌ಮ್ಯಾನ್‌ಗಳು ಹಿಡಿದುಕೊಂಡು ಫಲಾನುಭವಿಗಳಿಗೆ ವಂಚನೆ ಮಾಡುತ್ತಿದ್ದಾರೆ. ಇದನ್ನು ಕಟ್ಟುನಿಟ್ಟಾಗಿ ನಿಲ್ಲಿಸಬೇಕು. ಅಂಚೆ ಕಚೇರಿಯಲ್ಲಿ ಅಂಗವಿಕಲರಿಗಾಗಿ ವಿಶೇಷ ಕೌಂಟರ್ ತೆರೆಯಬೇಕು. ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು' ಎಂದು ಆಗ್ರಹಿಸಿದರು.
ಕೆವಿಎಸ್ ತಾಲ್ಲೂಕು ಘಟಕದ ಗೌರವಾಧ್ಯಕ್ಷ ಕುಶಕುಮಾರ್, ಪದಾಧಿಕಾರಿಗಳಾದ ಸೌಭಾಗ್ಯಮ್ಮ, ಮಮತಾ, ವೆಂಕಟಶಿವಪ್ಪ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಚಿನ್ನ ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ: ಬಂಗಾರ ಪ್ರಿಯರಲ್ಲಿ ಮುಗುಳ್ನಗೆ! | Gold Rate Slips Down During Ganesha Chaturthi Festival
Bangalore, First Published Aug 23, 2020, 10:04 AM IST
ನವದೆಹಲಿ(ಆ.23): ಕೊರೋನಾತಂಕದ ನಡುವೆ ದೇಶದಲ್ಲಿ ಏರಿಕೆ ಕಂಡಿದ್ದ ಚಿನ್ನ, ಬೆಳ್ಳಿ ದರ ಗ್ರಾಹಕರ ಚಿಂತೆಗೆ ಕಾರಣವಾಗಿತ್ತು. ಆದರೀಗ ಹಬ್ಬದ ನಡುವೆ ಚಿನ್ನ, ಬೆಳ್ಳಿ ದರ ಇಳೆಕೆ ಕಾಣುವ ಮೂಲಕ ಬಂಗಾರ ಪ್ರಿಯರನ್ನು ಕೊಂಚ ನಿರಾಳವಾಗಿಸಿದೆ.
ಬರೋಬ್ಬರಿ ಐದು ತಿಂಗಳ ನಂತರ ರಾಜಧಾನಿಯ ಹೋಟೆಲ್‌ಗಳು ಓಪನ್
ಹೌದು ದೇಶದಲ್ಲಿ ಕೊರೋನಾ ಎಂಟ್ರಿ ಕೊಟ್ಟ ದಿನದಿಂದಲೂ ಚಿನ್ನ ಭಾರೀ ಏರಿಕೆ ಕಂಡಿತ್ತು. ಅನೇಕ ಮಂದಿ ಚಿನ್ನವನ್ನು ಕೊಂಡು ಹೂಡಿಕೆ ಮಾಡಿದ್ದರು. ಆದರೀಗ ಹಬ್ಬದ ನಡುವೆ ಚಿನ್ನದ ದರ ಇಳಿಕೆಯಾಗಿದೆ. ಶನಿವಾರ 10 ಗ್ರಾಂ ಚಿನ್ನದದಲ್ಲಿ 100 ರೂಪಾಯಿ ಇಳಿಕೆಯಾಗಿದ್ದು, ಬೆಲೆ 49,500 ರೂಪಾಯಿ ಆಗಿದೆ. ಇನ್ನು 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 110 ರೂಪಾಯಿ ಇಳಿಕೆ ಕಂಡಿದ್ದು, 54,000 ರೂಪಾಯಿ ಆಗಿದೆ.
ಚಿನ್ನದ ದರ ಹೆಚ್ಚಿದರೂ ಆಭರಣ ಉದ್ದಿಮೆ ನಷ್ಟದಲ್ಲಿ!
ಸಾಮಾನ್ಯವಾಗಿ ಚಿನ್ನದ ದರ ಏರಿದಾಗಲೆಲ್ಲ ಖುಷಿಪಡುತ್ತಿದ್ದ ಚಿನ್ನಾಭರಣ ವ್ಯಾಪಾರಿಗಳು ಕೆಲ ತಿಂಗಳಿನಿಂದ ಚಿನ್ನದ ಬೆಲೆ ಗಗನಕ್ಕೇರುತ್ತಿದ್ದರೂ ಆತಂಕದಲ್ಲಿ ದಿನ ಕಳೆಯುವಂತಾಗಿದೆ. ಕಾರಣ, ಲಾಕ್‌ಡೌನ್‌ ಹಾಗೂ ಆರ್ಥಿಕ ಹಿಂಜರಿಕೆಯಿಂದಾಗಿ ಚಿನ್ನಕ್ಕೆ ಬೇಡಿಕೆ ದೊಡ್ಡ ಪ್ರಮಾಣದಲ್ಲಿ ತಗ್ಗಿದೆ.
ದೇಶದ ಅತ್ಯಂತ ಪ್ರತಿಷ್ಠಿತ ಚಿನ್ನಾಭರಣ ಮಾರುಕಟ್ಟೆಯಾದ ಮುಂಬೈನ ಜವೇರಿ ಬಜಾರ್‌ನಲ್ಲಿ ಇನ್ನೂ ಅನೇಕ ಚಿನ್ನಾಭರಣ ಅಂಗಡಿಗಳು ಲಾಕ್‌ಡೌನ್‌ ನಂತರ ತೆರೆದೇ ಇಲ್ಲ. ಚಿನ್ನಾಭರಣ ತಯಾರಿಸುವ ಕುಶಲಕರ್ಮಿಗಳು ಕೂಡ ಹಳ್ಳಿಗಳಿಗೆ ವಲಸೆ ಹೋಗಿದ್ದಾರೆ. ತೆರೆದಿರುವ ಅಂಗಡಿಗಳಿಗೂ ಗ್ರಾಹಕರು ಬಹಳ ಕಡಿಮೆ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಕಳೆದ 40-50 ವರ್ಷಗಳಿಂದ ಇಷ್ಟುನೀರಸ ಹಾಗೂ ನಷ್ಟದ ವ್ಯಾಪಾರವನ್ನು ನಾವು ನೋಡಿಲ್ಲ ಎಂದು ಚಿನ್ನಾಭರಣ ವ್ಯಾಪಾರಿಗಳು ಹೇಳುತ್ತಿದ್ದಾರೆ.
ದೇಗುಲದಲ್ಲಿ ಅಪಾರ ಚಿನ್ನಾಭರಣ ಕದ್ದೋಡಿದ ಕಳ್ಳರು
ಲಾಕ್‌ಡೌನ್‌ನಿಂದಾಗಿ ಅನೇಕರು ಆರ್ಥಿಕ ನಷ್ಟಅನುಭವಿಸಿ ತಮ್ಮಲ್ಲಿರುವ ಚಿನ್ನವನ್ನೇ ಅಡ ಇಡುತ್ತಿದ್ದಾರೆ. ಇನ್ನು ಅನೇಕರು ಚಿನ್ನದ ಬೆಲೆ ದುಬಾರಿಯಾಗಿರುವುದರಿಂದ ಮತ್ತು ಕೈಯಲ್ಲಿ ಸಾಕಷ್ಟುಹಣವಿಲ್ಲದೆ ಇರುವುದರಿಂದ ಮದುವೆ ಮತ್ತು ಶುಭ ಸಮಾರಂಭಗಳಿಗೆ ಚಿನ್ನ ಕೊಳ್ಳುವುದನ್ನು ಕಡಿಮೆ ಮಾಡುತ್ತಿದ್ದಾರೆ. ಇದೇ ವೇಳೆ, ಕೊರೋನಾ ವೈರಸ್‌ ಭೀತಿಯಿಂದ ಜನರು ಚಿನ್ನಾಭರಣ ಮಳಿಗೆಗಳಿಗೆ ಬರುವುದು ಕೂಡ ಕಡಿಮೆಯಾಗುತ್ತಿದೆ. ಚಿನ್ನದ ಮೇಲೆ ಹೂಡಿಕೆ ಮಾಡುವ ಹೊಸ ತಲೆಮಾರಿನವರು ಹೆಚ್ಚಾಗಿ ಭೌತಿಕ ಚಿನ್ನ ಕೊಳ್ಳದೆ ಡಿಜಿಟಲ್‌ ಚಿನ್ನ ಕೊಳ್ಳುತ್ತಿದ್ದಾರೆ. ಇವೆಲ್ಲಾ ಕಾರಣಗಳಿಂದಾಗಿ ಚಿನ್ನಕ್ಕೆ ಬೇಡಿಕೆಯಿಲ್ಲದಂತಾಗಿದೆ.
ಶಿವು ಜೊತೆ 'ಸ್ಮೈಲ್‌' ಮಾಡಲು ಒಪ್ಪಿದ್ದಾಳೆ | Kareeb girl Neha to act in kannada film | ಶಿವು ಜೊತೆ 'ಸ್ಮೈಲ್‌' ಮಾಡಲು ಒಪ್ಪಿದ್ದಾಳೆ - Kannada Filmibeat
ಶಿವು ಜೊತೆ 'ಸ್ಮೈಲ್‌' ಮಾಡಲು ಒಪ್ಪಿದ್ದಾಳೆ
| Updated: Monday, July 1, 2013, 10:44 [IST]
ಶಿವರಾಜ್‌ಕುಮಾರ್‌ ಜೊತೆ ನಗಲು ಕೊನೆಗೂ ಬಾಲಿವುಡ್‌ ಬೆಡಗಿಯಾಬ್ಬಳು ಗೊತ್ತಾಗಿದ್ದಾಳೆ. ಸುಖಾಸುಮ್ಮನೆ ನಗುವ ಈ ಹುಡುಗಿ ಆರಕ್ಕೆ ಖಂಡಿತ ಏರಲಿಲ್ಲ. ಎರಡೇ ಚಿತ್ರಗಳ ನಂತರ ಮೂರಕ್ಕಿಂತ ಕೆಳಕ್ಕೆ ಬಿದ್ದದ್ದಂತೂ ನಿಜ. ಹೆಸರು ನೇಹಾ.
ರಾಣಿ ಮುಖರ್ಜಿ ಹಾಗೂ ಬಿಪಾಶ ಬಸು ದುಬಾರಿಯಾದ್ದರಿಂದ ಸುಲಭವಾಗಿ ಸಿಕ್ಕ ನೇಹಾ ಸ್ಮೈಲ್‌ ಮಾಡಲು ಒಪ್ಪಿದ್ದಾಳೆ. ಕಡ್ಡಿ ತುಂಡುಮಾಡಿದಂತೆ ಮಾತಾಡುವುದಕ್ಕೇ ಹೆಸರಾಗಿರುವ ನೇಹಾ ಕಿರಿಕಿರಿಯ ಬಗ್ಗೆ ರಾಮ್‌ಗೋಪಾಲ್‌ ವರ್ಮಾರಂಥಾ ಅನೇಕ ನಿರ್ದೇಶಕರು ಗಂಟೆಗಟ್ಟಲೆ ಮಾತಾಡುತ್ತಾರೆ.
ಬಾಬಿ ಡಿಯೋಲ್‌ ಜೊತೆ ಕರೀಬ್‌ ಎಂಬ ಹಿಂದಿ ಚಿತ್ರದಲ್ಲಿ ಸಾದಾ ಹುಡುಗಿಯಾಗಿ ಹಿರಿತೆರೆಗೆ ಬಂದ ನೇಹಾ ನಕ್ಕರೆ ಚೆನ್ನ. ಆ ಕಾರಣಕ್ಕೇ 'ಹೋಗಿ ಪ್ಯಾರ್‌ ಕಿ ಜೀತ್‌" ಎಂಬ ಕಾಮಿಡಿಗೆ ನಾಯಕಿಯಾಗಿ ಗೊತ್ತಾದದ್ದು. ಎರಡೂ ಚಿತ್ರಗಳೂ ತೋಪಾದವು. ನೇಹಾಳ ಅಗ್ಗದ ನಗುವಿಗೆ ಆಫರ್‌ಗಳಿಗೇನೂ ಕೊರೆಯಿರಲಿಲ್ಲ. 'ಫಿಜಾ" ಚಿತ್ರದ ತೂಕದ ಪಾತ್ರ ಸ್ವಲ್ಪ ಭರವಸೆ ಹುಟ್ಟಿಸುವಂತಿತ್ತು. ಆದರೆ ತನ್ನ ಕಿರಿಕ್‌ನಿಂದ ಸಿಕ್ಕ ಆಫರ್‌ಗಳೆನ್ನೆಲ್ಲಾ ಕಾಲಲ್ಲಿ ಒದ್ದಳೆಂಬ ಆರೋಪ ಈಕೆಯ ಬೆನ್ನು ಬಿಡಲಿಲ್ಲ.
ನಾಯಕ ಲೆಕ್ಕಕ್ಕೆ, ನಾಯಕಿ ಆಟಕ್ಕೆ ಅಂತ ಹೇಳಿದ ಯಾವುದೋ ನಿರ್ದೇಶಕನನ್ನು ಲೆಫ್ಟ್‌ ಅಂಡ್‌ ರೈಟ್‌ ತರಾಟೆಗೆ ತೆಗೆದುಕೊಂಡ ನೇಹಾ, 'ಹಾಗಾದರೆ ನಿಮ್ಮ ಹೀರೋ ಮರಗಳನ್ನೇ ತಬ್ಬಿಕೊಂಡು ಮುತ್ತಿಕ್ಕಲಿ" ಅಂತ ಫಟಾಫಟ್‌ ಹೇಳಿ ದರದರನೆ ಸೆಟ್‌ನಿಂದ ನಡೆದ ಟ್ರ್ಯಾಕ್‌ ರೆಕಾರ್ಡ್‌ ಇಟ್ಟುಕೊಂಡಿದ್ದಾಳೆ. ಅಣ್ಣಾವ್ರ ನೆಚ್ಚಿನ ಹೊಸ ನಟ ಮನೋಜ್‌ ಬಾಜ್‌ಪೇಯಿ ಬಾಯ್‌ಫ್ರೆಂಡ್‌ ಎಂಬುದು ನೇಹಾಳಿಗೆ ನಗುವನ್ನು ಬಿಟ್ಟರೆ ಇರುವ ಹೆಮ್ಮೆಯ ಕ್ವಾಲಿಫಿಕೇಷನ್‌.
ನಿರ್ಮಾಪಕ ಎನ್‌.ಕೆ.ಪ್ರಕಾಶ್‌ ಬಾಬು ಹೇಳಿದಂತೆ ಬಾಲಿವುಡ್‌ ಬೆಡಗಿಯನ್ನು ಕರೆ ತಂದಿದ್ದಾರೆ. ಆದರೆ, ದೂರ್ವಾಸ ಮುನಿ ಸೀತಾರಾಂ ಕಾರಂತ್‌ ಈ ಕಿರಿಕಿರಿ ನಗೆ ನೇಹಾ ಜೊತೆ ಹೆಣಗಾಡಬೇಕಲ್ಲ !
'ಶಿವರಾಜ್‌ಗೆ ಬಾಲಿವುಡ್‌ ಹುಡುಗಿಯೇ ಬೇಕಂತೆ"
ಸ್ಮೈಲ್‌ ಚಿತ್ರೀಕರಣಕ್ಕೆ ಒಂದು ಪೇಸ್‌ ಸಿಕ್ಕಿರುವ ಖುಷಿಯಲ್ಲಿ ಶಿವರಾಜ್‌ ಓಡಾಡಿಕೊಂಡಿದ್ದರೆ, ಕೂಡ್ಲು ರಾಮಕೃಷ್ಣ ಸಿಕ್ಕಸಿಕ್ಕವರಿಗೆ ಈತನ ವಿರುದ್ಧ ದೂರು ಹೇಳುತ್ತಿದ್ದಾರೆ. 'ಅವನಿಗೆ ಬಾಲಿವುಡ್‌ ಹುಡುಗಿಯೇ ಬೇಕಂತೆ ಕಣ್ರೀ" ಅಂತ ಕನಿಷ್ಠ ಒಂದು ಡಜನ್‌ ಸಿನಿಮಾ ಮಂದಿಗೆ ಹೇಳಿಕೊಂಡು ಬಂದಿದ್ದಾರೆ ಕೂಡ್ಲು. ಜುಗಾರಿ ಕ್ರಾಸ್‌ ಚಿತ್ರವನ್ನು ಆಮೇಲೆ ನಾನೇ ನಿರ್ದೇಶಿಸುವುದು. ಶಿವರಾಜ್‌ಗೆ ಚಿತ್ರದಲ್ಲಿ ಜಾಗವಿಲ್ಲ ಅನ್ನುತ್ತಿರುವ ಇವರು, ನಾಯಕಿಯ ಆಯ್ಕೆಯಲ್ಲಿ ಶಿವಣ್ಣನ ಹೆಂಡತಿ ಗೀತಾ ಮೂಗು ತೂರಿಸುತ್ತಾರೆಂದು ಈ ಹಿಂದೆ ಆರೋಪಿಸಿದ್ದರು.
ನೀವು ಯಾವ ರೀತಿಯ ಮಹಿಳೆ ಎಂದು ನಿಮ್ಮ ಜನ್ಮ ತಿಂಗಳು ಹೇಳುತ್ತದೆ ! - Tinystep
ನೀವು ಯಾವ ರೀತಿಯ ಮಹಿಳೆ ಎಂದು ನಿಮ್ಮ ಜನ್ಮ ತಿಂಗಳು ಹೇಳುತ್ತದೆ !
ವ್ಯಕ್ತಿಯ ಗುಣವನ್ನು ಅವರ ಜನ್ಮ ತಿಂಗಳ ಆಧಾರದ ಮೇಲೆ ನಿರ್ಧರಿಸುವುದು ಸಹ ಸಂಖ್ಯಾಶಾಸ್ತ್ರದಲ್ಲಿ ಪ್ರಾಮಾಣಿತವಾಗಿದೆ. ನಾವು ಹುಟ್ಟಿದ ತಿಂಗಳು ನಮ್ಮ ಜೀವನದ ಎಲ್ಲಾ ಅಂದರೆ ವೃತ್ತಿ ಜೀವನದಿಂದ ಇಡಿದು ನಮ್ಮ ವರ್ತನೆ ವರೆಗೂ ನಮ್ಮ ಮೇಲೆ ಪರಿಣಾಮ ಬೀರುತ್ತದೆ ಎಂದು ವಿಜ್ಞಾನಿಗಳು ಮತ್ತು ಸಂಖ್ಯಾಶಾಸ್ತ್ರಜ್ಞರು ಕಂಡುಹಿಡಿದಿದ್ದಾರೆ.
ನಿಮ್ಮ ಜನ್ಮ ತಿಂಗಳ ಆಧಾರದ ಮೇಲೆ ನೀವು ಯಾವ ರೀತಿಯ ಮಹಿಳೆ ಎಂದು ತಿಳಿಯಲು ಮುಂದೆ ಓದಿ.
ಜನವರಿಯಲ್ಲಿ ಹುಟ್ಟಿದ ಮಹಿಳೆಯರು ಅಸಾಧಾರಣ ಮಹತ್ವಾಕಾಂಕ್ಷಿ, ಆದರೆ ಸಂಪ್ರದಾಯವಾದಿ ಮತ್ತು ಗಂಭೀರ ವ್ಯಕ್ತಿಗಳು. ಜನವರಿಯಲ್ಲಿ ಹುಟ್ಟಿದ ಮಹಿಳೆಯರು ಬಹಳ ನಿರ್ಣಾಯಕರಾಗಿದ್ದಾರೆ, ಆದರೆ ಅವರ ಭಾವನೆಗಳ ಕುರಿತು ಮಾತನಾಡಲು ಅವರು ಇಚ್ಛಿಸುವುದಿಲ್ಲ.
ಫೆಬ್ರವರಿಯಲ್ಲಿ ಜನಿಸಿದ ಮಹಿಳೆಯರು ತುಂಬಾ ರೋಮ್ಯಾಂಟಿಕ್ ಆಗಿದ್ದು, ಇವರನ್ನು ನೀವು ತಾಳ್ಮೆ ಇಂದ ನಡೆಸಿಕೊಳ್ಳುವುದು ಉತ್ತಮ. ಅವರ ಬದಲಾಗುವ ಮನಸ್ಥಿತಿಯನ್ನು ಎಲ್ಲರು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಇವರ ವಿಶ್ವಾಸಕ್ಕೆ ಅಥವಾ ನಂಬಿಕೆಗೆ ಮೋಸ ಮಾಡಿದರೆ ನೀವು ಇವರನ್ನು ಮತ್ತೆ ಎಂದು ನೋಡಲು ಸಾಧ್ಯವಿಲ್ಲ.
ಇವರಲ್ಲಿ ಉತ್ತಮವಾದ ತೇಜಸ್ಸು, ವರ್ಚಸ್ಸು ಮತ್ತು ಆಕರ್ಷಕ ಚೆಲುವು ಇದೆ. ಇವರು ಸಮರ್ಪಿಸುವ ಮತ್ತು ನಿಷ್ಠಾವಂತ ವ್ಯಕ್ತಿಗಳು. ಇವರು ಪ್ರೀತಿಯಲ್ಲಿ ಅಷ್ಟು ಸುಲಭವಾಗಿ ಬೀಳುವುದಿಲ್ಲ. ಅವರನ್ನು ನೀವು ಅಸಮಾಧಾನ ಮಾಡುವವರೆಗೂ ಅವರು ತುಂಬಾ ಸುಂದರವಾಗಿ ಅಥವಾ ಮುದ್ದಾಗಿರುವರು. ಇವರ ಜೊತೆ ಬದುಕುವುದು ನಿಜವಾಗಿಯೂ ಸಂತೋಷ ತರುತ್ತದೆ.
ಇವರು ರಾಜತಾಂತ್ರಿಕರು, ಮತ್ತು ಅಷ್ಟು ಸುಲಭವಾಗಿ ಯಾರ ಜೊತೆಯೂ ಮಾತುಕತೆ ಅಥವಾ ಸಂಭಾಷಣೆ ಮಾಡುವುದಿಲ್ಲ. ಕೆಲವೊಮ್ಮೆ ಅವರ ಬಗ್ಗೆ ತಾವೇ ಕರುಣೆ ಅಥವಾ ಅನುಕಂಪವನ್ನು ತೋರಿಸಿಕೊಳ್ಳುವರು. ಇವರು ಅವರ ಸಂಗಾತಿಯನ್ನು ಭೂಮಿಯಲ್ಲೇ ಹೆಚ್ಚು ಖುಷಿಯಾಗಿರುವ ವ್ಯಕ್ತಿ ಆಗಿಸಲು ಪ್ರಯತ್ನಿಸುವರು. ಅವರ ನಂಬಿಕೆ ಗಳಿಸಿದ ಮೇಲೆ ನಿಮ್ಮ ಜೊತೆ ಅವರು ಮುಕ್ತವಾಗಿರುವರು.
ಇವರು ಹಠಬಿಡದ, ನಿಷ್ಠಾವಂತ ವ್ಯಕ್ತಿಗಳು, ಇವರು ಇವರದ್ದೇ ಆದ ತತ್ವಗಳಿಗೆ ಬದ್ಧರಾಗಿರುವರು. ಇವರು ಹೆಚ್ಚು ಆಕರ್ಷಕವಾಗಿರುವರು. ಆದಾಗ್ಯೂ ಇವರು ಕಠಿಣ ಪಾತ್ರಗಳಿಂದ ಕೂಡಿದ್ದು, ಇವರ ಜೊತೆ ಪ್ರೀತಿಯಲ್ಲಿ ಬೀಳುವವರು ಅಪಾಯವನ್ನು ಎದುರಿಸಲು ಸಿದ್ಧರಾಗಿರಬೇಕು.
ಇವರು ತುಂಬಾ ಕುತೂಹಲಕಾರಿ ಹುಡುಗಿಯರು, ಜೊತೆಗೆ ರಚನಾತ್ಮಕ ಮತ್ತು ಅಭಿವ್ಯಕ್ತಿಶೀಲ ವ್ಯಕ್ತಿಗಳು. ಆದರೆ ಇವರು ಯೋಚಿಸುವ ಮೊದಲೇ ಮಾತನಾಡುವರು. ಇವರು ನೇರವಾಗಿ ಸತ್ಯ ಹೇಳುವುದನ್ನು ಬಯಸುವರು, ಬೆನ್ನ ಹಿಂದೆ ಮಾತನಾಡುವುದನ್ನು ಇವರು ಇಚ್ಛಿಸುವುದಿಲ್ಲ. ಇವರ ಸಂಗಾತಿ ಇವರ ಕೈ ಗೊಂಬೆ ಆಗುತ್ತಾರೆ.
ಇವರು ತುಂಬಾ ಪ್ರಾಮಾಣಿಕರು, ನಿಗೂಢ, ಬುದ್ದಿವಂತರು ಮತ್ತು ಸುಂದರ ಚೆಲುವೆಯರು. ಇವರಿಗೆ ಗಲಭೆ ಅಥವಾ ಜಗಳ ಇಷ್ಟವಾಗುವುದಿಲ್ಲ, ಮತ್ತು ಇವರು ಎಲ್ಲರ ಜೊತೆ ಸೌಮ್ಯವಾಗಿರುವರು. ಇವರಿಗೆ ಮೋಸಮಾಡುವುದರಿಂದ ಇವರನ್ನು ನೀವು ಸುಲಭವಾಗಿ ಕಳೆದುಕೊಳ್ಳುವಿರಿ.
ತಮ್ಮ ಮನಸ್ಸನ್ನು ಕೇಂದ್ರೀಕರಿಸುವ ಅಥವಾ ತಮ್ಮ ಹತೋಟಿಯಲ್ಲಿ ಇರಿಸಿಕೊಂಡಿರುವ ಮತ್ತು ಒಳ್ಳೆಯ ಹೃದಯ ಎರಡನ್ನು ಹೊಂದಿರುವ ವಿಭಿನ್ನ ಮಹಿಳೆಯರು ಇವರು. ಇವರ ಜೊತೆ ಅವ್ಯವಸ್ಥೆ ಮಾಡಿಕೊಳ್ಳಬೇಡಿ, ಏಕೆಂದರೆ ತ್ವರಿತವಾಗಿ ಅಥವಾ ನಿಧಾನವಾಗಿ ಆದರೂ ಸರಿ ಇವರೇ ಗೆಲ್ಲುವರು.ಇವರಿಗೆ ಹಾಸ್ಯ ಪ್ರಜ್ಞೆ ಇದೆ. ಆದರೆ ಇವರನ್ನು ಅಪಹಾಸ್ಯ ಮಾಡುವ ಸಾಹಸ ಮಾಡಬೇಡಿ, ಏಕೆಂದರೆ ನಂತರ ನಿಮಗೆ ಅದು ಹೇಗೆ ತಿರುಗುತ್ತದೆ ಎಂದು ಹೇಳಲಾಗುವುದಿಲ್ಲ.
ಅನುಕಂಪವುಳ್ಳ, ಶಿಸ್ತುಬದ್ಧ, ಮತ್ತು ಸುಂದರ ಹುಡುಗಿಯರು. ಇವರ ನಂಬಿಕೆಗೆ ಮೋಸ ಮಾಡಿದವರನ್ನು ಇವರು ಎಂದು ಕ್ಷಮಿಸುವುದಿಲ್ಲ. ಮತ್ತು ಅದಕ್ಕೆ ಸೇಡು ತೀರಿಸಿಕೊಳ್ಳುವ ತನಕ ಅವರನ್ನು ಬಿಡುವುದಿಲ್ಲ. ದೀರ್ಘ ಕಾಲದವರೆಗೆ ತಮ್ಮ ಸಂಬಂಧಗಳನ್ನು ಉಳಿಸಿಕೊಳ್ಳಲು ಇಚ್ಛಿಸುವರು.
ಈ ತಿಂಗಳಲ್ಲಿ ಜನಿಸಿದ ಹುಡುಗಿಯರು ಬಲಿಷ್ಠವಾದ ವ್ಯಕ್ತಿತ್ವವನ್ನು ಹೊಂದಿರುವರು. ಇವರು ತುಂಬಾ ಭಾವನಾತ್ಮಕ ಹುಡುಗಿಯರು. ಆದರೆ, ಬೇರೆಯವರ ಮುಂದೆ ಇವರು ಅಳುವುದಿಲ್ಲ. ಇವರು ಚತುರರು, ಎಲ್ಲರ ಜೊತೆ ಮುಕ್ತವಾಗಿರುವುದಿಲ್ಲ. ಇವರ ಬಗ್ಗೆ ಬೇರೆ ಮಹಿಳೆಯರು ಅಸೂಯೆ ಪಡುವುದರಿಂದ ಇವರನ್ನು ದ್ವೇಷಿಸುವರು.
ನವೆಂಬರ್ ಮಹಿಳೆಯರು ಬೇರೆ ಎಲ್ಲಾ ಮಹಿಳೆಯರಿಗಿಂತ ಒಂದು ಹೆಜ್ಜೆ ಮುಂದೆ ಇರುವರು, ಮತ್ತು ಸುಳ್ಳನ್ನು ಸುಲಭವಾಗಿ ಗುರುತಿಸಬಹುದು. ಇವರ ಜೊತೆ ಆಟವಾಡಬೇಡಿ, ಏಕೆಂದರೆ ಕೊನೆಯಲ್ಲಿ ಫಲಿತಾಂಶ ತುಂಬಾ ಕೆಟ್ಟದಾಗಿರುತ್ತದೆ. ನಿಮಗೆ ನಿಜವಾಗಿಯೂ ಸತ್ಯ ತಿಳಿಯಬೇಕಾದರೆ ಇವರ ಬಳಿ ಕೇಳಬೇಡಿ.
ಇವರು ತಾಳ್ಮೆಯಿಲ್ಲದ, ಆದರೆ ಅದೃಷ್ಟ ಇರುವ ಹುಡುಗಿಯರು, ಏಕೆಂದರೆ ಇವರು ಯಾವುದೇ ಸಂದರ್ಭದಲ್ಲಿ ಗೆಲ್ಲುವ ಅವಕಾಶವನ್ನು ಪಡೆಯುವರು. ಮುಕ್ತಮನಸ್ಸಿನವರು ಇವರು. ಇವರು ಬಯಸಿದ್ದು ಇವರಿಗೆ ಸಿಗುವುದು.
ಬಿಜೆಪಿಯ ದೇಣಿಗೆ ಸಂಗ್ರಹದಲ್ಲಿ ಬರೋಬ್ಬರಿ ಶೇ 539 ರಷ್ಟು ಏರಿಕೆ! | bjp donation increased 593% with 532.27 crores - Kannada Oneindia
| Published: Thursday, May 31, 2018, 16:26 [IST]
ನವದೆಹಲಿ, ಮೇ 31: ಕಳೆದ ವರ್ಷದಲ್ಲಿ ಬಿಜೆಪಿಯ ಘೋಷಿತ ದೇಣಿಗೆಯ ಪ್ರಮಾಣದಲ್ಲಿ ಶೇ 593ರಷ್ಟು ಹೆಚ್ಚಳವಾಗಿದೆ.
2016-17ರ ನಡುವೆ 20,000 ರೂ.ಗಿಂತ ಅಧಿಕ ಮೊತ್ತದ ದೇಣಿಗೆ ಸಂಗ್ರಹದ ಮೊತ್ತವನ್ನು ಮಾತ್ರ ಪರಿಗಣಿಸಲಾಗಿದ್ದು, ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ (ಎನ್‌ಇಡಬ್ಲ್ಯೂ) ನಡೆಸಿದ ಪಕ್ಷಗಳ ಆದಾಯದ ಮೌಲ್ಯಮಾಪನದಲ್ಲಿ ಈ ಮಾಹಿತಿ ದೊರೆತಿದೆ.
2015-16ರಲ್ಲಿ ಆಡಳಿತಾರೂಢ ಬಿಜೆಪಿಯು ಈ ರೀತಿ 76.85 ಕೋಟಿ ವಂತಿಗೆ ಪಡೆದುಕೊಂಡಿದ್ದರೆ, ಅದರ ಮೊತ್ತ 2016-17ರ ಅವಧಿಯಲ್ಲಿ 532.27 ಕೋಟಿ ರೂಪಾಯಿಗೆ ಏರಿಕೆಯಾಗಿದೆ.
ಇದು ಕಾಂಗ್ರೆಸ್ ಘೋಷಿಸಿಕೊಂಡಿರುವ ತನ್ನ ದೇಣಿಗೆಯ ಮೊತ್ತಕ್ಕಿಂತ ಹತ್ತು ಪಟ್ಟು ಹೆಚ್ಚಿನದ್ದಾಗಿದೆ. ಇದೇ ಅವಧಿಯಲ್ಲಿ ದೇಣಿಗೆ ಪಡೆದುಕೊಂಡ ಪಕ್ಷಗಳ ಪಟ್ಟಿಯಲ್ಲಿ ಕಾಂಗ್ರೆಸ್ ಎರಡನೆಯ ಸ್ಥಾನದಲ್ಲಿದೆ.
ಕಾಂಗ್ರೆಸ್ 2016-17ರ ಅವಧಿಯಲ್ಲಿ ತನ್ನ ಬಳಿ 41.90 ಕೋಟಿ ವಂತಿಗೆ ಸಂಗ್ರಹವಾಗಿದೆ ಎಂದು ಘೋಷಿಸಿಕೊಂಡಿದೆ. ಆದರೆ, ಕಾಂಗ್ರೆಸ್‌ನ ಒಟ್ಟಾರೆ ವಂತಿಗೆ ಸಂಗ್ರಹದಲ್ಲಿಯೂ ಶೇ 105ರಷ್ಟು ಹೆಚ್ಚಳವಾಗಿದೆ. 2015-16ರಲ್ಲಿ ಕಾಂಗ್ರೆಸ್‌ 20.42 ಕೋಟಿ ರೂ. ದೇಣಿಗೆ ಪಡೆದುಕೊಂಡಿತ್ತು.
ಪ್ರಮುಖ ರಾಷ್ಟ್ರೀಯ ಪಕ್ಷಗಳು ತಾವು ಪಡೆದುಕೊಂಡ ದೇಣಿಗೆಯ ಮೊತ್ತವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಿದ್ದು, ಅದರ ಆಧಾರದಲ್ಲಿ ಈ ವರದಿ ಸಿದ್ಧಪಡಿಸಲಾಗಿದೆ.
ಎನ್‌ಸಿಪಿ ದೇಣಿಗೆಯಲ್ಲೂ ಏರಿಕೆ
ಆದರೆ, ಒಟ್ಟಾರೆ ದೇಣಿಗೆ ಸಂಗ್ರಹದಲ್ಲಿ ಅತಿ ಹೆಚ್ಚಿನ ಏರಿಕೆ ಕಂಡಿರುವುದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ). ಘೋಷಿತ ದೇಣಿಗೆಗಳಲ್ಲಿ ಎನ್‌ಸಿಪಿ ಶೇ 793ರಷ್ಟು ಹೆಚ್ಚಳವಾಗಿದೆ. 2015-16ರಲ್ಲಿ 71 ಲಕ್ಷ ರೂ ವಂತಿಗೆ ಹೊಂದಿದ್ದ ಎನ್‌ಸಿಪಿ, 2016-17ರಲ್ಲಿ ಮೊತ್ತವನ್ನು 6.34 ಕೋಟಿಗೆ ಹೆಚ್ಚಿಸಿಕೊಂಡಿದೆ.
ಕಮ್ಯುನಿಸ್ಟ್ ಪಕ್ಷದಲ್ಲಿ ಇಳಿಕೆ
ಎಲ್ಲ ಪ್ರಮುಖ ರಾಜಕೀಯ ಪಕ್ಷಗಳ ನಡುವೆ ದೇಣಿಗೆ ಸಂಗ್ರಹದಲ್ಲಿ ಇಳಿಕೆ ಕಂಡಿರುವುದು ಭಾರತೀಯ ಕಮ್ಯುನಿಸ್ಟ್ ಪಾರ್ಟಿ (ಸಿಪಿಐ) ಮಾತ್ರ. ಸಿಪಿಐನ ದೇಣಿಗೆ ಮೊತ್ತದಲ್ಲಿ ಶೇ 9ರಷ್ಟು ಕುಸಿತವಾಗಿದೆ. 2015-16ರಲ್ಲಿ 1.58 ಕೋಟಿ ದೇಣಿಗೆ ಪಡೆದುಕೊಂಡಿದ್ದ ಸಿಪಿಐ, 2016-17ರಲ್ಲಿ 1.44 ಕೋಟಿ ದೇಣಿಗೆ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ.
ಒಟ್ಟಾರೆ ದೇಣಿಗೆ ಶೇ 478ರಷ್ಟು ಏರಿಕೆ
ಪ್ರಮುಖ ಏಳು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಬಿಎಸ್‌ಪಿ, ಎನ್‌ಸಿಪಿ, ಸಿಪಿಐ, ಸಿಪಿಎಂ ಮತ್ತು ತೃಣಮೂಲ ಕಾಂಗ್ರೆಸ್‌ನ ಒಟ್ಟಾರೆ ವಂತಿಗೆ ಸಂಗ್ರಹದ ಮೊತ್ತದಲ್ಲಿ ಶೇ 478ರಷ್ಟು ಏರಿಕೆಯಾಗಿದೆ. 2015-16ರಲ್ಲಿ ಒಟ್ಟು 102.02 ಕೋಟಿ ರೂ. ದೇಣಿಗೆ ಸಂಗ್ರಹವಾಗಿದ್ದರೆ, 2016-17ರಲ್ಲಿ 589.38 ಕೋಟಿ ದೇಣಿಗೆ ಸಂಗ್ರಹವಾಗಿದೆ.
2016-17ರಲ್ಲಿ ಸಂಗ್ರಹವಾದ 589.38 ಕೋಟಿ ದೇಣಿಗೆ ಮೊತ್ತದಲ್ಲಿ ಬಿಜೆಪಿಯದೇ ಪಾಲು 532.27 ಕೋಟಿ ರೂ.ನಷ್ಟಿದೆ.
ಅಪರಿಚಿತ ಮೂಲಗಳಿಂದ ದೇಣಿಗೆ
ಈ ವಂತಿಗೆಯ ಮೂಲಗಳನ್ನು ಅಪರಿಚಿತ ಎಂದು ರಾಜಕೀಯ ಪಕ್ಷಗಳು ಹೇಳಿಕೊಂಡಿವೆ. ತಮ್ಮ ದೇಣಿಗೆದಾರ ಮಾಹಿತಿಯ ಪಟ್ಟಿಯನ್ನು ನೀಡುವಂತೆ ಮಾಹಿತಿ ಹಕ್ಕು ಕಾಯ್ದೆಯಡಿ ಕೋರಲಾಗಿತ್ತು.
ಎಲ್ಲ ಪಕ್ಷಗಳ ವಂತಿಗೆ ಹಣವು ಒಟ್ಟು 589.38 ಕೋಟಿಯಷ್ಟಿದ್ದರೆ, ಇದೇ ಅವಧಿಯಲ್ಲಿ ಒಟ್ಟಾರೆ ಆದಾಯವು 1559.17 ಕೋಟಿಯಷ್ಟಿದೆ. ಇದರಲ್ಲಿಯೂ ಶೇ 45.59ರಷ್ಟು ಆದಾಯ ಅಜ್ಞಾತ ಮೂಲದಿಂದ ಬಂದಿದೆ.
ಬಿಜೆಪಿಯು ಸ್ವಯಂ ಇಚ್ಛೆಯಿಂದ ಜನರು ನೀಡಿರುವ ಕೊಡುಗೆಗಳು ಎಂದು ತನ್ನ ಶೇ 99.98ರಷ್ಟು ಆದಾಯವನ್ನು ತೋರಿಸಿಕೊಂಡಿದೆ. 2016-17ರಲ್ಲಿ ಬಿಜೆಪಿಯ ಆದಾಯ 464.94 ಕೋಟಿ ರೂ.ನಷ್ಟಿದೆ.
ಕಾಂಗ್ರೆಸ್ ಮತ್ತು ಇತರೆ ರಾಜಕೀಯ ಪಕ್ಷಗಳು ದಾನಿಗಳಿಂದ ದೇಣಿಗೆ ಸಂಗ್ರಹಿಸಲು 'ಕೂಪನ್ ಸೇಲ್' ಪದ್ಧತಿಯನ್ನು ಅನುಸರಿಸುತ್ತಿರುವುದಾಗಿ ಹೇಳಿಕೊಂಡಿವೆ. ಈ ಪಕ್ಷಗಳು ಅಜ್ಞಾತ ಮೂಲದಿಂದ ಶೇ 91.69ರಷ್ಟು ಆದಾಯ ಕಂಡಿವೆ. ಇದರ ಒಟ್ಟು ಮೊತ್ತ 2016-17ರಲ್ಲಿ 126.12 ಕೋಟಿ ರೂ.
ಆರ್‌ಟಿಐ ವ್ಯಾಪ್ತಿಯಲ್ಲಿ ಇಲ್ಲ
ಎಲ್ಲ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳೂ ಮಾಹಿತಿ ಹಕ್ಕು ನಿಯಮದಡಿ ತಮ್ಮ ಹಣಕಾಸಿನ ಎಲ್ಲ ವ್ಯವಹಾರಗಳನ್ನೂ ಒದಗಿಸಬೇಕು. ರಾಜಕೀಯ ಪಕ್ಷಗಳು, ಚುನಾವಣೆ ಮತ್ತು ಪ್ರಜಾಪ್ರಭುತ್ವವನ್ನು ಬಲಪಡಿಸಲು ನೆರವಾಗಲಿದೆ ಎಂದು ವರದಿ ಹೇಳಿದೆ.
ಚುನಾವಣಾ ಆಯೋಗವು ರಾಜಕೀಯ ಪಕ್ಷಗಳು ಆರ್‌ಟಿಐ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಇತ್ತೀಚೆಗೆ ಹೇಳಿಕೆ ನೀಡಿತ್ತು. ಕೇಂದ್ರ ಮಾಹಿತಿ ಆಯೋಗವು ಆರು ರಾಷ್ಟ್ರೀಯ ಪಕ್ಷಗಳು ಸಾರ್ವಜನಿಕ ಅಥಾರಿಟಿಗಳಾಗಿವೆ ಎಂದು ಹೇಳಿತ್ತು.
bjp congress donation ncp rti politics ಬಿಜೆಪಿ ಕಾಂಗ್ರೆಸ್ ದೇಣಿಗೆ ವಂತಿಗೆ ತೃಣಮೂಲ ಕಾಂಗ್ರೆಸ್ ಆರ್‌ಟಿಐ ಮಾಹಿತಿ ಹಕ್ಕು ಕಾಯ್ದೆ ರಾಜಕೀಯ
ADR and New Election Watch reports said that the donation of BJP has increased to 593% in the 2016-17 financial year. BJP received the amount of 532.27 crores. Its donation was 76.85 crores in 2015-16.
ಮೇನಕಾ ಗಾಂಧಿಯ 'ಪೀಪಲ್ ಫಾರ್ ಅನಿಮಲ್ಸ್' ವೆಬ್‍ಸೈಟ್ ಹ್ಯಾಕ್ ! - Varthabharati
"ಕೋಮು ದ್ವೇಷದ ವಿರುದ್ಧದ ಕಾರ್ಯಾಚರಣೆ" ಎಂದ ಹ್ಯಾಕರ್ ಗುಂಪು
ಹೊಸದಿಲ್ಲಿ: ಬಿಜೆಪಿ ಸಂಸದೆ ಮೇನಕಾ ಗಾಂಧಿಯವರ ಪೀಪಲ್ ಫಾರ್ ಅನಿಮಲ್ಸ್ (ಪಿಎಫ್‍ಎ) ಸ್ವಯಂಸೇವಾ ಸಂಸ್ಥೆಯ ಅಧಿಕೃತ ವೆಬ್‍ಸೈಟನ್ನು "ಕೇರಳ ಸೈಬರ್ ವಾರಿಯರ್ಸ್" ಎಂಬ ಫೇಸ್‍ಬುಕ್ ಗುಂಪು ಹ್ಯಾಕ್ ಮಾಡಿದೆ. "ಕೋಮು ದ್ವೇಷದ ವಿರುದ್ಧದ ಕಾರ್ಯಾಚರಣೆ" ಎಂದು ಇದನ್ನು ಹ್ಯಾಕರ್ ಗುಂಪು ಬಣ್ಣಿಸಿದೆ.
ಇದೀಗ ವೆಬ್‍ಸೈಟ್, ಹ್ಯಾಕರ್ ಗಳ ಸುಧೀರ್ಘ ಸಂದೇಶವನ್ನು ಪ್ರದರ್ಶಿಸುತ್ತಿದ್ದು, ಇದರ ಜತೆಗೆ ಗರ್ಭಿಣಿ ಆನೆ ಮೃತಪಟ್ಟ ಪಾಲಕ್ಕಾಡ್ ಜಿಲ್ಲೆಯ ಅಂಬಲಪ್ಪಾರ ಪ್ರದೇಶದ ಗೂಗಲ್ ನಕ್ಷೆಯನ್ನೂ ತೋರಿಸುತ್ತಿದೆ.
"ಮೇನಕಾ ಗಾಂಧಿ ಗರ್ಭಿಣಿ ಆನೆಯ ಸಾವಿನ ವಿವಾದವನ್ನು ಕೊಳಕು ರಾಜಕೀಯಕ್ಕೆ ಎಳೆದಿದ್ದಾರೆ. ನೀವು ಪರಿಸರವಾದಿ ಹಾಗೂ ಭೂಗೋಳದಲ್ಲಿ **** ಆಗಿದ್ದೀರಿ. ನಿಮ್ಮ ಪುಟ್ಟ ಮೆದುಳಿಗೆ ಗೂಗಲ್ ನಕ್ಷೆ ಪರಿಚಯಿಸುತ್ತಿದ್ದೇವೆ" ಎಂದು ವೆಬ್‍ಸೈಟ್‍ನಲ್ಲಿ ಸಂದೇಶ ಪ್ರದರ್ಶಿತವಾಗುತ್ತಿದೆ.
ಗರ್ಭಿಣಿ ಆನೆಯ ಸಾವಿನ ಹಿನ್ನೆಲೆಯಲ್ಲಿ ರಾಜಕೀಯ ಕೆಸರೆರಚಾಟ ನಡೆಯುತ್ತಿದ್ದು, ಮುಸ್ಲಿಂ ಬಾಹುಳ್ಯದ ಮಲಪ್ಪುರಂ ಜಿಲ್ಲೆಯನ್ನು ಬಿಜೆಪಿ ನಾಯಕಿ, ಪ್ರಾಣಿ ಹಕ್ಕುಗಳ ಹೋರಾಟಗಾರ್ತಿ ಮೇನಕಾ ಗಾಂಧಿ "ಭಾರತದ ಅತ್ಯಂತ ಹಿಂಸಾತ್ಮಕ ಜಿಲ್ಲೆ" ಎಂದು ಬಣ್ಣಿಸಿದ್ದರು.
ಈ ಹೃದಯ ವಿದ್ರಾವಕ ಘಟನೆಗೆ ಕೋಮು ಲೇಪನ ನೀಡುತ್ತಿರುವ ಬಗ್ಗೆ ಬಿಜೆಪಿ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮನುಷ್ಯ- ಪ್ರಾಣಿ ಸಂಘರ್ಷವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ಪ್ರಯತ್ನ ಎಂಬ ಟೀಕೆ ಕೇಳಿ ಬಂದಿದೆ.
ಪಾಲಕ್ಕಾಡ್ ಮತ್ತು ಮಲಪ್ಪುರಂ ಜಿಲ್ಲೆಯ ಗಡಿಯಲ್ಲಿ ಹರಿಯುವ ವೆಲ್ಲಿಯಾರ್ ನದಿಯಲ್ಲಿ ಆನೆಯ ಶವ ಪತ್ತೆಯಾಗಿತ್ತು. ಅರಣ್ಯ ಅಧಿಕಾರಿಗಳ ಹೇಳಿಕೆ ಪ್ರಕಾರ, ಸ್ಫೋಟಕಗಳನ್ನು ತುಂಬಿದ್ದ ಅನಾನಸು ತಿಂದು ಆನೆ ಮೃತಪಟ್ಟಿದೆ.
ಪ್ರಜಾಪ್ರಭುತ್ವ: ಇದೆ ಇತಿಮಿತಿ | Prajavani
limitations in democracy development and democracy
ವೇಗವಾಗಿ ಪ್ರಗತಿ ಹೊಂದುತ್ತಿರುವ ದೇಶ ನಮ್ಮದೆಂದು ಸಂಭ್ರಮಿಸುವ ಹೊತ್ತಿನಲ್ಲೇ ಅಭದ್ರತೆ ಮೂಡಿಸುತ್ತಿರುವ ಸಂಗತಿಗಳನ್ನೂ ಗಂಭೀರವಾಗಿ ಪರಿಗಣಿಸಬೇಕಾಗಿದೆ
ಪ್ರಜಾಪ್ರಭುತ್ವ: ಇದೆ ಇತಿಮಿತಿ
ಸತೀಶ್ ಜಿ.ಕೆ. ತೀರ್ಥಹಳ್ಳಿ Updated: 11 ಜನವರಿ 2021, 01:01 IST
ಚರಿತ್ರೆಯುದ್ದಕ್ಕೂ ನಿರಂಕುಶ ಪ್ರಭುತ್ವ, ರಾಜರ ಆಡಳಿತ, ಸೇನಾ ಆಡಳಿತಗಳನ್ನೆಲ್ಲಾ ಕಂಡುಂಡ ಜಗತ್ತು, ಕೊನೆಗೆ ಪ್ರಜಾಪ್ರಭುತ್ವ ಮಾದರಿಯನ್ನು ಅನ್ವೇಷಿಸಿ, ಆ ವ್ಯವಸ್ಥೆಯಲ್ಲಿ ನಂಬಿಕೆ ಮತ್ತು ವಿಶ್ವಾಸವನ್ನು ಇರಿಸಿಕೊಂಡು ಮುನ್ನಡೆಯುತ್ತಿದೆ. ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವ ಮಾದರಿಯ ಸರ್ಕಾರಗಳಿವೆ ಮತ್ತು ಉಳಿದವು ಅದರೆಡೆಗೆ ಆಸೆಗಣ್ಣಿನಿಂದ ನೋಡುತ್ತಿವೆ. 2007ರ ಸೋವಿಯತ್ ಒಕ್ಕೂಟದ ಚುನಾವಣೆಯಲ್ಲಿಯೂ ಇದು ಸಾಬೀತಾಗಿದೆ. ಚೀನಾದ ಟಿಯನನ್ಮೆನ್‌ ಚೌಕದ ವಿದ್ಯಾರ್ಥಿಗಳ ಪ್ರತಿಭಟನೆ ಮತ್ತು ಹಾಂಗ್‌ಕಾಂಗ್ ನಾಗರಿಕರ ಇತ್ತೀಚಿನ ಹೋರಾಟವೂ ಇದೇ ನಿಲುವನ್ನು ಧ್ವನಿಸುತ್ತವೆ. ಲಿಬಿಯಾದ ದಂಗೆಯ ಆಶಯ ಕೂಡ ಪ್ರಜಾಪ್ರಭುತ್ವ ಸ್ಥಾಪನೆಯೇ ಆಗಿತ್ತು.
ಹಾಗೆಂದು ಪ್ರಜಾಪ್ರಭುತ್ವವನ್ನು ಸ್ಥಾಪಿಸುವುದಾಗಲೀ ಉಳಿಸಿಕೊಳ್ಳುವುದಾಗಲೀ ಸುಲಭ ಅಂತೇನಲ್ಲ. ಆ ಮಾದರಿಯಲ್ಲಿನ ಯಶಸ್ಸಿನಲ್ಲಿ ಮತದಾರನ ಪ್ರಜ್ಞಾವಂತಿಕೆ ಮತ್ತು ಹೊಣೆಗಾರಿಕೆಯ ಪಾಲು ದೊಡ್ಡದಿರುತ್ತದೆ. ಜಾಗರೂಕ ಸಮಾಜದ ಪಾಲ್ಗೊಳ್ಳುವಿಕೆಯ ಜರೂರತ್ತು ಇರುತ್ತದೆ. ಹೀಗಾಗಿ, ದೇಶದ ಪ್ರಜಾಪ್ರಭುತ್ವಕ್ಕಿರುವ ಆತಂಕಗಳನ್ನು ಸದಾಕಾಲ ತೆರೆದ ಮನಸ್ಸಿನಿಂದ ಅವಲೋಕಿಸಬೇಕಿರುತ್ತದೆ.
ಎಕಾನಮಿಸ್ಟ್‌ ಇಂಟೆಲಿಜೆನ್ಸ್‌ ಯುನಿಟ್‌ (ಇಐಯು) ಸಿದ್ಧಪಡಿಸುವ ಜಾಗತಿಕ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ ಭಾರತವೀಗ ಕಳೆದ ಬಾರಿಗಿಂತ ಹತ್ತು ಸ್ಥಾನ ಕುಸಿತ ದಾಖಲಿಸುವುದರೊಂದಿಗೆ, ದೇಶದ ಪ್ರಜಾಪ್ರಭುತ್ವವು ಅಪಾಯದಲ್ಲಿದೆ ಎಂಬ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ನಾರ್ವೆಯು ಅಗ್ರಸ್ಥಾನ ಮತ್ತು ಉತ್ತರ ಕೊರಿಯಾವು ಕೊನೆಯ ಸ್ಥಾನದಲ್ಲಿರುವುದು ನಿರೀಕ್ಷಿತ ಬೆಳವಣಿಗೆಯೇ! ರಾಜಕೀಯ ನೇತಾರರು- ಪಕ್ಷಗಳು ದ್ವೇಷ ಬಿತ್ತುತ್ತಾ, ನಾಗರಿಕ ಸ್ವಾತಂತ್ರ್ಯವನ್ನು ನಿರಾಕರಿಸುತ್ತಿರುವ ಸೂಚಕವಿದು. ರಾಜಕೀಯ ಸಂಸ್ಕೃತಿ-ಸಹಭಾಗಿತ್ವ, ಸರ್ಕಾರದ ಕಾರ್ಯವೈಖರಿ, ಬಹುತ್ವದ ವ್ಯವಸ್ಥೆ ಮತ್ತು ಮಾನವ ಹಕ್ಕುಗಳ ಆದ್ಯಪಾಲನೆಗಳು ದೋಷಪೂರಿತ ಹಾದಿಯಲ್ಲಿ ಸಾಗಿರುವುದೇ ಹಿನ್ನಡೆಗೆ ಕಾರಣವೆಂದೂ ವಿಶ್ಲೇಷಿಸಲಾಗುತ್ತಿದೆ.
ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಸುಶಿಕ್ಷಿತ ಅಮೆರಿಕದ ವರ್ತಮಾನದ ಬೆಳವಣಿಗೆಗಳೂ ಪ್ರಜಾಪ್ರಭುತ್ವ ವ್ಯವಸ್ಥೆಗಿರುವ ಆತಂಕವನ್ನು ಹೆಚ್ಚಿಸಿವೆ. ಪ್ರಜಾ
ಪ್ರಭುತ್ವವೆಂದರೆ, ಸಹಬಾಳ್ವೆಯ ಸೊಗಸು ಮತ್ತು ಜನಸೇವಾ ಮನೋಭಾವವು ಪರಸ್ಪರ ದಟ್ಟೈಸುವ ಒಂದು ಸುಂದರ ಜೋಡಣೆ. ಸಹವರ್ತಿಗಳಲ್ಲಿ ಗೌರವ ಮತ್ತು ಸಮಾನಭಾವ ತೋರುವ, ಪೆಡಸಾದ ಸಾಮಾಜಿಕ ನಿರ್ಬಂಧ ಮೀರಿದ ಮುಕ್ತ ಸಮಾಜವಾಗಿರಬೇಕು ಎಂಬುದು ಸಂವಿಧಾನ ನಿರ್ಮಾತೃಗಳ ಆಶಯವಾಗಿತ್ತು. ಜೊತೆಗದು ಸಮಾಜವಾದಕ್ಕೆ ಹೊರಳಬೇಕಾದ, ಶ್ರೇಣೀಕರಣ ಮತ್ತು ಪ್ರತ್ಯೇಕತೆಗಳಿರದ ಸಮಾಜವ್ಯವಸ್ಥೆಯ ಪ್ರತಿರೂಪವೂ ಆಗಿರಬೇಕೆಂದು ಬಯಸಿದ್ದರು.