text stringlengths 0 61.5k |
|---|
Gadikannadiga > Blog > State > Belagavi > ಜಿಲ್ಲೆಯಾದ್ಯಂತ ಏಕಕಾಲಕ್ಕೆ ೧೩೫ ಗ್ರಾಮಗಳಲ್ಲಿ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ (ರ್ಯಾಟ್)ಗೆ ಚಾಲನೆ ಎಲ್ಲ ಗ್ರಾಮಗಳಲ್ಲಿ ಕೋವಿಡ್ ಪರೀಕ್ಷೆ: ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ |
ಜಿಲ್ಲೆಯಾದ್ಯಂತ ಏಕಕಾಲಕ್ಕೆ ೧೩೫ ಗ್ರಾಮಗಳಲ್ಲಿ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ (ರ್ಯಾಟ್)ಗೆ ಚಾಲನೆ ಎಲ್ಲ ಗ್ರಾಮಗಳಲ್ಲಿ ಕೋವಿಡ್ ಪರೀಕ್ಷೆ: ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ |
posted on May. 24, 2021 at 12:58 pm |
ಬೆಳಗಾವಿ, ಮೇ.೨೪ : ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ ಸೋಂಕು ತ್ವರಿತ ಪತ್ತೆಗಾಗಿ ಆಯಾ ಗ್ರಾಮಗಳಲ್ಲಿಯೇ ರ್ಯಾಪಿಡ್ ಆ?ಯಂಟಿಜನ್ ಟೆಸ್ಟ್ (ರ್ಯಾಟ್) ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ. |
ಹುಕ್ಕೇರಿ ತಾಲ್ಲೂಕಿನ ಹುಲ್ಲೊಳ್ಳಿ ಹಾಗೂ ಹತ್ತರಗಿ ಗ್ರಾಮದಲ್ಲಿ ಸೋಮವಾರ (ಮೇ ೨೪) ರ್ಯಾಪಿಡ್ ಆ?ಯಂಟಿಜನ್ ಟೆಸ್ಟ್ (ರ್ಯಾಟ್)ಗೆ ಚಾಲನೆ £Ãಡಿ ಅವರು ಮಾತನಾಡಿದರು. |
ಕೋವಿಡ್ ತ್ವರಿತ ಪತ್ತೆಗಾಗಿ ಎಲ್ಲ ಗ್ರಾಮಗಳಲ್ಲಿ ರ್ಯಾಟ್ ನಡೆಸಲು £ರ್ಧರಿಸಲಾಗಿದ್ದು, ಮೊದಲ ದಿನವೇ (ಮೇ ೨೪) ಜಿಲ್ಲೆಯ ೧೩೫ ಗ್ರಾಮಗಳಲ್ಲಿ ಏಕಕಾಲಕ್ಕೆ ರ್ಯಾಟ್ ಶಿಬಿರ ನಡೆಸಲಾಗಿದೆ. |
ಉಳಿದ ಗ್ರಾಮಗಳಲ್ಲೂ ಕೂಡ ರ್ಯಾಪಿಡ್ ಆ?ಯಂಟಿಜನ್ ಟೆಸ್ಟ್ ನಡೆಸಲಾಗುವುದು. ಇದಕ್ಕಾಗಿ ಜಿಲ್ಲೆಯ ಪ್ರತಿ ಗ್ರಾಮಕ್ಕೂ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದ್ದು, ಗ್ರಾಮ ಪಂಚಾಯತಿ ಟಾಸ್ಕ್ ಫೋರ್ಸ್ ಮೂಲಕ ರ್ಯಾಟ್ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.ಕೋವಿಡ್ ಪರೀಕ್ಷೆ ಮತ್ತು ವರದಿ ವಿಳಂಬವಾಗುತ್ತಿರುವುದರಿAದ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇದಕ್ಕೆ ಕಡಿವಾಣ ಹಾಕುವ £ಟ್ಟಿನಲ್ಲಿ ಗ್ರಾಮಗಳಲ್ಲಿಯೇ ಕೋವಿಡ್ ಪರೀಕ್ಷೆಯನ್ನು ಆರಂಭಿಸಲಾಗಿದೆ.ಸೋAಕಿನ ಲಕ್ಷಣ ಹೊಂದಿರುವವರು ಮತ್ತು ಸೋಂಕಿತರ ಸಂಪರ್ಕಿತರನ್ನು ಆಯಾ ಗ್ರಾಮಗಳಲ್ಲಿಯೇ ಪರೀಕ್ಷಿಸಲಾಗುವುದು. ರ್ಯಾಟ್ ನಲ್ಲಿ ಸೋಂಕು ದೃಢಪಟ್ಟರೆ ಅಂತಹವರನ್ನು ತಕ್ಷಣವೇ ಸ್ಥಳೀಯ ಕೋವಿಡ್ ಕೇರ್ ಕೇಂದ್ರಗಳಲ್ಲಿ ದಾಖಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. |
ಆರೋಗ್ಯ ಇಲಾಖೆಯ ತಂಡ ಗ್ರಾಮದಲ್ಲಿ ಕೋವಿಡ್ ಪರೀಕ್ಷಾ ಶಿಬಿರ ಏರ್ಪಡಿಸಿದಾಗ ಶೀತ, ಜ್ವರದ ಲಕ್ಷಣಗಳಿರುವ ಗ್ರಾಮಸ್ಥರು ಸ್ವಯಂಪ್ರೇರಣೆಯಿAದ ಪರೀಕ್ಷೆ ಮಾಡಿಸಿಕೊಳ್ಳಬೇಕು. |
ರ್ಯಾಟ್ ಪರೀಕ್ಷೆಯಲ್ಲಿ ಕೋವಿಡ್ ಸೋಂಕು ದೃಢಪಟ್ಟರೆ ಯಾರೂ ಧೃತಿಗೆಡಬಾರದು. ಸೋಂಕಿತರ ಚಿಕಿತ್ಸೆಗಾಗಿ ಸ್ಥಳೀಯವಾಗಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಆರೈಕೆ ಕೇಂದ್ರಗಳನ್ನು ಆರಂಭಿಸಲಾಗಿದೆ. ಸೋಂಕಿತರಿಗೆ ಉಚಿತವಾಗಿ ಊಟೋಪಚಾರದ ಜತೆಗೆ ಸರಕಾರದ ಮಾರ್ಗಸೂಚಿ ಪ್ರಕಾರ ಔಷಧೋಪಚಾರ £Ãಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹಿರೇಮಠ ಹೇಳಿದರು. |
ಗ್ರಾಮದ ಇಬ್ಬರಲ್ಲಿ ಸೋಂಕು ಪತ್ತೆ: |
ಹುಕ್ಕೇರಿ ತಾಲ್ಲೂಕಿನ ಹುಲ್ಲೋಳಿಯಲ್ಲಿ ೩೯ ಜನರಿಗೆ ರ್ಯಾಪಿಡ್ ಆ?ಯಂಟಿಜನ್ ಟೆಸ್ಟ್ ಮೂಲಕ ಕೋವಿಡ್ ಪರೀಕ್ಷೆ ನಡೆಸಿದಾಗ ಅದರಲ್ಲಿ ಇಬ್ಬರಲ್ಲಿ ಸೋಂಕು ಪತ್ತೆಯಾಯಿತು. |
ಇಬ್ಬರನ್ನೂ ತಕ್ಷಣವೇ ಕೋವಿಡ್ ಕೇರ್ ಕೇಂದ್ರಕ್ಕೆ ಕಳುಹಿಸಿಕೊಡಲಾಯಿತು. ಇನ್ನುಳಿದ ೩೭ ಜನರ ವರದಿ ನೆಗೆಟಿವ್ ಬಂದಿದ್ದರೂ ಒಂದು ವೇಳೆ ಲಕ್ಷಣಗಳು ಕಂಡುಬAದರೆ ಅಂತಹವರ ಮಾದರಿಯನ್ನು ಆರ್.ಟಿ.-ಪಿ.ಸಿ.ಆರ್ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದರು. |
ಮನೆ ಮನೆಗೆ ತೆರಳಿ ಕೋವಿಡ್ ಜಾಗೃತಿ: |
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು, ಹುಲ್ಲೋಳಿ ಗ್ರಾಮದಲ್ಲಿ ಸಂಚರಿಸಿ ಕೋವಿಡ್ ಕುರಿತು ಗ್ರಾಮಸ್ಥರಲ್ಲಿ ಅರಿವು ಮೂಡಿಸಿದರು. ಗ್ರಾಮ ಪಂಚಾಯತಿ ಸದಸ್ಯರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಜತೆ ಚರ್ಚೆ ನಡೆಸಿದ ಅವರು, ಸೋಂಕಿತರ ಮನವೊಲಿಸುವ ಮೂಲಕ ಕೂಡಲೇ ಅವರನ್ನು ಕೋವಿಡ್ ಕೇರ್ ಕೇಂದ್ರಗಳಿಗೆ ದಾಖಲಿಸಬೇಕು ಎಂದು ಹೇಳಿದರು. |
ಜನತಾ ಕಾಲ£ಯಲ್ಲಿ ಐಸೋಲೇಷನ್ ನಲ್ಲಿರುವ ಕೆಲ ಕುಟುಂಬದ ಸದಸ್ಯರನ್ನು ಭೇಟಿ ಮಾಡಿದ ಅವರು ಆರೋಗ್ಯವನ್ನು ವಿಚಾರಿಸಿದರು. |
ನಂತರ ಗ್ರಾಮದ ಮನೆ ಮನೆಗೆ ತೆರಳಿದ ಜಿಲ್ಲಾಧಿಕಾರಿ ಹಿರೇಮಠ ಅವರು, ಅನಗತ್ಯವಾಗಿ ಯಾರೂ ಹೊರಗಡೆ ಸಂಚರಿಸಬಾರದು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಆಗಾಗ ಸಾಬೂನು ಅಥವಾ ಸ್ಯಾ£ಟೈಸರ್ ಮೂಲಕ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು ಎಂದು ತಿಳಿಸಿದರು. |
ಗಡಿ ಚೆಕ್ ಪೋಸ್ಟ್ ಪರಿಶೀಲನೆ: |
ಇದಾದ ಬಳಿಕ ಮಹಾರಾಷ್ಟç ರಾಜ್ಯ ಸಂಪರ್ಕಿಸುವ ಉಳ್ಳಾಗಡ್ಡಿ-ಖಾನಾಪುರದಲ್ಲಿ ಸ್ಥಾಪಿಸಲಾಗಿರುವ ಗಡಿ ಚೆಕ್ ಪೋಸ್ಟ್ ಗೆ ಜಿಲ್ಲಾಧಿಕಾರಿ ಭೇಟಿ £Ãಡಿ ಪರಿಶೀಲಿಸಿದರು. |
ಹತ್ತರಗಿ ಗ್ರಾಮಕ್ಕೂ ಕೂಡ ಭೇಟಿ £Ãಡಿ ಕೋವಿಡ್ £ಯಂತ್ರಣ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು. |
ಹತ್ತರಗಿ ಗ್ರಾಮದಲ್ಲಿ ಕೂಡ ಸೋಂಕಿತರ ಸಂಪರ್ಕಿತರು ಹಾಗೂ ಸೋಂಕಿನ ಲಕ್ಷಣಗಳನ್ನು ಹೊಂದಿರುವವರಿಗೆ ರ್ಯಾಪಿಡ್ ಆ?ಯಂಟಿಜನ್ ಟೆಸ್ಟ್ (ರ್ಯಾಟ್) ಮಾಡಲಾಯಿತು. |
ಜಿಲ್ಲೆಯಾದ್ಯಂತ ರ್ಯಾಟ್ ಗೆ ಚಾಲನೆ: |
ಕೋವಿಡ್ ತಡೆಗಟ್ಟಲು ಗ್ರಾಮ ಮಟ್ಟದಲ್ಲಿ ರ್ಯಾಪಿಡ್ ಆ?ಯಂಟಿಜನ್ ಟೆಸ್ಟ್ (ರ್ಯಾಟ್)ಗೆ ಮುಂದಾಗಿರುವ ಜಿಲ್ಲಾಡಳಿತವು ಸೋಮವಾರ(ಮೇ ೨೪)ದಿಂದ ಜಿಲ್ಲೆಯಾದ್ಯಂತ ರ್ಯಾಟ್ ಗೆ ಚಾಲನೆ £Ãಡಿತು. |
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ£ರ್ವಾಹಕ ಅಧಿಕಾರಿಗಳಾದ ದರ್ಶನ್ ಎಚ್.ವಿ. ಅವರ ನೇತೃತ್ವದಲ್ಲಿ ಬೈಲಹೊಂಗಲ ತಾಲ್ಲೂಕಿನ ಗ್ರಾಮಗಳಲ್ಲಿ ಕೋವಿಡ್ ಪರೀಕ್ಷೆಗೆ ಚಾಲನೆ £Ãಡಲಾಯಿತು. |
ಅದೇ ರೀತಿ ಅಪರ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಕೋವಿಡ್ ಪತ್ತೆಗೆ ರ್ಯಾಟ್ ನಡೆಸಲಾಯಿತು. ಗ್ರಾಮ ಮಟ್ಟದಲ್ಲಿ ಇರುವ ಟಾಸ್ಕ್ ಫೋರ್ಸ್ ಮೂಲಕ ಕೋವಿಡ್ ಪರೀಕ್ಷಾ ಶಿಬಿರಗಳನ್ನು ನಡೆಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ ತಿಳಿಸಿದ್ದಾರೆ. |
ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ವಿಠ್ಠಲ ಭಟ್ ಜ್ಯೋತಿಷ್ಯ | Exam special: Astrology, vastu tips for learning problems of students - Kannada Oneindia |
| Updated: Thursday, February 8, 2018, 17:04 [IST] |
ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ವಿಠ್ಠಲ ಭಟ್ ಜ್ಯೋತಿಷ್ಯ | Oneindia Kannada |
ಪರೀಕ್ಷೆಗಳು ಹತ್ತಿರ ಬಂದಿವೆ. ಮನೆಯಲ್ಲಿ ಶಾಲೆ- ಕಾಲೇಜುಗಳಿಗೆ ಹೋಗುವ ಹುಡುಗ- ಹುಡುಗಿಯರಿದ್ದರೆ ಪೋಷಕರು ಹೆಚ್ಚು ಗೊಂದಲದಲ್ಲಿ ಇರುತ್ತಾರೆ. ನನ್ನೆದುರೇ ಗಂಟೆಗಟ್ಟಲೆ ಓದುತ್ತಾನೆ/ಳೆ. ಆದರೆ ಪರೀಕ್ಷೆಯಲ್ಲಿ ಸರಿಯಾಗಿ ಬರೆಯುವುದಕ್ಕೆ ಆಗಲ್ಲ. ಓದಿದ್ದೆಲ್ಲ ಮರೆತು ಹೋಗುತ್ತದೆ ಎಂಬ ಉತ್ತರ ಕೊಟ್ಟರೆ ನಾವಾದರೂ ಏನು ಮಾಡುವುದಕ್ಕೆ ಸಾಧ್ಯ ಎಂಬುದು ಹಲವರ ಪ್ರಶ್ನೆ. |
ಇದಕ್ಕೆ ಮನೋವೈಜ್ಞಾನಿಕ ಕಾರಣವೂ ಒಳಗೊಂಡಂತೆ ಜ್ಯೋತಿಷ್ಯ, ವಾಸ್ತು ಕಾರಣಗಳೂ ಇರಬಹುದು. ಗೊತ್ತಿಲ್ಲದೆ ಏನೋ ಸಮಸ್ಯೆ ಆಗುತ್ತಿದೆ. ಮಗು ಮೇಲೆ ಒತ್ತಡ ಹಾಕಿ, ಅದು ಕಳಾಹೀನ ಆಗುತ್ತಿರಬಹುದು. ಆದ್ದರಿಂದ ವಿದ್ಯಾರ್ಥಿಗಳನ್ನೇ ಗಮನದಲ್ಲಿಟ್ಟುಕೊಂಡು ಇಂದಿನ ಲೇಖನ ನಿಮ್ಮ ಮುಂದೆ ಇಡಲಾಗಿದೆ. |
ದೈವ ಕೋಪ ಅಂದರೇನು, ಅದರ ಪರಿಹಾರ ಹೇಗೆ? |
ಹೋದ ವರ್ಷದವರೆಗೆ ಚೆನ್ನಾಗಿ ಓದುತ್ತಿದ್ದ, ಓದುತ್ತಿದ್ದಳು. ಆದರೆ ಇದ್ದಕ್ಕಿದ್ದ ಹಾಗೆ ಯಾಕೋ ಓದಿನಲ್ಲಿ ಆಸಕ್ತಿ ತೋರಿಸುತ್ತಿಲ್ಲ ಎಂಬುದು ಸೇರಿದಂತೆ ಚಿಂತೆಯಲ್ಲಿ ಇರುವವರಿಗೆ ಈ ಲೇಖನದಲ್ಲಿ ಕ್ಷೇತ್ರ ದರ್ಶನ, ವಾಸ್ತು ಟಿಪ್ಸ್ ಹಾಗೂ ರತ್ನಧಾರಣೆ ವಿಷಯವಾಗಿ ಕೆಲವು ಮಾಹಿತಿಯನ್ನು ನೀಡಲಾಗುತ್ತದೆ. ಇನ್ನುಳಿದಂತೆ ಇವುಗಳನ್ನು ಅನುಸರಿಸುವುದು, ಬಿಡುವುದು ನಿಮ್ಮ ವೈಯಕ್ತಿಕ ವಿಚಾರ. ಇದರಲ್ಲಿ ಯಾವುದೇ ಬಲವಂತ ಇಲ್ಲ. |
ಯಾವಾಗ ಓದಿಗೆ ತೊಂದರೆ? |
ಮೊದಲಿಗೆ ನಿಮ್ಮ ಮಗ ಅಥವಾ ಮಗಳ ಜಾತಕವನ್ನು ನೋಡಿಕೊಳ್ಳಿ. ಅವರದು ವೃಷಭ, ಸಿಂಹ, ಕನ್ಯಾ, ಮಕರ, ಮೀನ ರಾಶಿಗಳಾಗಿದ್ದಲ್ಲಿ ಈ ಸಲದ ಶಾಲೆ- ಕಾಲೇಜಿನ ಪರೀಕ್ಷೆಗಳು ಒಂದಿಷ್ಟು ಕಷ್ಟ ಆಗುವ ಸಾಧ್ಯತೆ ಇದೆ. ಇನ್ನು ಜನನ ಕಾಲದಲ್ಲಿ ಬುಧ ಮೀನ ರಾಶಿಯಲ್ಲಿದ್ದರೆ ಅಥವಾ ಗುರು ಮಕರ ರಾಶಿಯಲ್ಲಿದ್ದರೆ, ಲಗ್ನದಿಂದ ಅಥವಾ ಚಂದ್ರನಿಂದ ನಾಲ್ಕನೇ ಮನೆಯ ಅಧಿಪತಿಯೇ ಆರು, ಎಂಟು ಅಥವಾ ಹನ್ನೆರಡನೇ ಮನೆಯಲ್ಲಿದ್ದರೆ ಓದಿನ ಸಮಸ್ಯೆ ಆಗುತ್ತದೆ. |
ಸರ್ಪ ದೋಷ ಇದೆಯೇ ಎಂಬುದನ್ನು ಪರಿಶೀಲಿಸಿ |
ಮಕ್ಕಳ ಜಾತಕದಲ್ಲಿ ಸರ್ಪ ದೋಷ ಇದ್ದರೆ ಆದಷ್ಟು ಬೇಗ ನಿವಾರಣೆ ಮಾಡಿಕೊಳ್ಳಿ. ಏಕೆಂದರೆ ಈಗಾಗಲೇ ಫೆಬ್ರವರಿ ಬಂದುಬಿಟ್ಟಿದೆ. ಮಕ್ಕಳು ಓದಲು ಶ್ರಮ ಹಾಕುತ್ತಿರುವುದು ಕಣ್ಣೆದುರೇ ಇದ್ದರೂ ಅದರಿಂದ ಫಲಿತ ಸಿಕ್ಕುತ್ತಿಲ್ಲ ಎಂಬುದು ಗೊತ್ತಾದ ತಕ್ಷಣ ಜಾತಕವನ್ನು ಜ್ಯೋತಿಷಿಗಳಿಂದ ಪರಿಶೀಲಿಸಿ, ಸರ್ಪ ದೋಷ ಇದ್ದಲ್ಲಿ ತಕ್ಷಣ ಪರಿಹಾರ ಮಾಡಿಸಿ. |
ಆಗ್ನೇಯ ಮೂಲೆ ಕೋಣೆ ಬೇಡ |
ನಿಮ್ಮ ಮನೆಯಲ್ಲಿ ಈಶಾನ್ಯ ಭಾಗದಲ್ಲಿ ಕೋಣೆಯಿದ್ದರೆ ಮಕ್ಕಳು ಅಲ್ಲಿರಬೇಕು. ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಕುಳಿತು ಓದಲಿ. ಮನೆ ಪಾಠಕ್ಕೆ ತೆರಳುತ್ತಿದ್ದರೆ ಪಾಠ ಮಾಡುವವರು ದಕ್ಷಿಣ ದಿಕ್ಕಿಗೆ, ಮಗು ಉತ್ತರ ದಿಕ್ಕಿಗೆ ಕೂರಬೇಕು. ಮನೆಯಲ್ಲಿ ಆಗ್ನೇಯಕ್ಕೆ ರೂಮ್ ಇದ್ದು, ಅಲ್ಲಿ ಮಕ್ಕಳ ವಾಸ ಅನ್ನೋದಾದರೆ ಕನಿಷ್ಠ ಇನ್ನು ನಾಲ್ಕೈದು ತಿಂಗಳಾದರೂ ಅಲ್ಲಿರುವುದು ಬೇಡ. |
ಕರಿಕಾನ ಪರಮೇಶ್ವರಿ ದರ್ಶನ |
ಇನ್ನು ಕ್ಷೇತ್ರ ದರ್ಶನದ ವಿಚಾರಕ್ಕೆ ಬಂದರೆ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ಅರೆಯಂಗಡಿ ಎಂಬಲ್ಲಿ ಬೆಟ್ಟ ಇದೆ. ಅಲ್ಲಿ ಕರಿಕಾನ ಪರಮೇಶ್ವರಿ ದೇವಸ್ಥಾನ ಇದೆ. ಅದು ಸಾಕ್ಷಾತ್ ಸರಸ್ವತಿ ಸಾನ್ನಿಧ್ಯ ಎಂಬುದು ನಂಬಿಕೆ. ಅದು ಉದ್ಭವ ಮೂರ್ತಿ. ಅಲ್ಲಿ ಮಗುವಿನ ಕೈಯಲ್ಲಿ ಎರಡು ಕೇಜಿ ಅರಿಶಿನ ಕೊಡಿಸಿ. ಅದರಲ್ಲಿ ದೇವಿಗೆ ಮುಖವಾಡ ಮಾಡುತ್ತಾರೆ. ಈ ಕ್ಷೇತ್ರ ದರ್ಶನ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಮಾಡಿಸಿ, ಆ ತಾಯಿಯಲ್ಲಿ ಪ್ರಾರ್ಥನೆ ಮಾಡಿ. |
ಕ್ಷೇತ್ರ ದರ್ಶನ ಸಾಧ್ಯವಾಗದಿದ್ದಲ್ಲಿ ಮನೆಯಲ್ಲೋ ಅಥವಾ ಮನೆಯ ಹತ್ತಿರ ಇರುವ ದೇಗುಲದಲ್ಲೋ ಸಪ್ತ ಶತಿ ಚಂಡಿಕಾ ಪಾರಾಯಣವನ್ನು ಸಂಪುಟಿ ವಿಧಾನದಲ್ಲಿ ಮಾಡಿಸಬೇಕು. ವಿದ್ಯಾಂದೇಹಿ, ಧನಂ ದೇಹಿ ಇತ್ಯಾದಿ ಶ್ಲೋಕಗಳಿಂದ ಪೂಜೆ ಮಾಡಿಸಬೇಕು. ಇನ್ನು ಮನೆಯಲ್ಲೇ ಸರಸ್ವತಿ ಅಷ್ಟೋತ್ತರ ಪಠಣ ಮಾಡಬಹುದು. ಆಯುರ್ವೇದದ ಹಿನ್ನೆಲೆಯಲ್ಲಿ ಹೇಳಬೇಕೆಂದರೆ, ಬ್ರಾಹ್ಮಿ ಅಂತ ಸಿಗುತ್ತದೆ. ಅದನ್ನು ಬಳಸಬಹುದು. ಜತೆಗೆ ಖಾಲಿ ಹೊಟ್ಟೆಯಲ್ಲಿ ಎರಡು ದಳ ತುಳಸಿ ಸೇವಿಸಿದರೂ ಜ್ಞಾಪಕ ಶಕ್ತಿ ಚುರುಕಾಗುತ್ತದೆ. |
ದೃಷ್ಟಿ ದೋಷ ಪರಿಹಾರಕ್ಕೆ ವ್ಯಾಘ್ರ ನೇತ್ರ ಮಾಲೆ ಧಾರಣೆ |
ಮಕ್ಕಳಿಗೆ ದೃಷ್ಟಿ ದೋಷ ಆಗಿದ್ದರೆ, ಅದರ ಪರಿಹಾರ ಆಗಬೇಕು ಅಂದರೆ ವ್ಯಾಘ್ರ ನೇತ್ರ ರತ್ನ ಮಾಲೆಯನ್ನು ರುದ್ರ ಮಂತ್ರಗಳಿಂದ ಅಭಿಮಂತ್ರಿಸಿ, ಹಾಕಿಕೊಂಡರೆ ತುಂಬ ಪರಿಣಾಮಕಾರಿಯಾಗಿರುತ್ತದೆ. ಇದರಿಂದ ದೃಷ್ಟಿ ದೋಷ ಪರಿಹಾರವಾಗಿ ಓದಿನಲ್ಲಿ ಆಸಕ್ತಿ ಮೂಡುತ್ತದೆ. ಸಕಾರಾತ್ಮಕ ಬದಲಾವಣೆ ಆಗುತ್ತದೆ. |
astrology student exam zodiac sign ಜ್ಯೋತಿಷ್ಯ ವಿದ್ಯಾರ್ಥಿ ಪರೀಕ್ಷೆ ರಾಶಿ ಚಕ್ರ |
Examinations are near to school and college students. Here are the astrology, vastu tips for learning problems of students by well known astrologer pandit Vittal Bhat. Effective remedies for learning problems of students according to vedic astrology. |
ಉತ್ತರ ಪ್ರದೇಶ: ಡಾ. ಕಫೀಲ್ ಖಾನ್ ಸಹೋದರನ ಮೇಲೆ ಗುಂಡಿನ ದಾಳಿ | dr kafeel khan's brother attacked in gorakhpur - Kannada Oneindia |
| Published: Monday, June 11, 2018, 10:22 [IST] |
ಗೋರಖ್‌ಪುರ, ಜೂನ್ 11: ಉತ್ತರ ಪ್ರದೇಶದ ಗೋರಖ್‌ಪುರದ ಆಸ್ಪತ್ರೆಯಲ್ಲಿ ನಡೆದ ಶಿಶುಗಳ ಸರಣಿ ಸಾವಿನ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಆರೋಪಿ ಡಾ. ಕಫೀಲ್ ಖಾನ್ ಅವರ ಸಹೋದರ ಮೇಲೆ ಗುಂಡಿನ ದಾಳಿ ನಡೆದಿದೆ. |
ಉದ್ಯಮಿ ಆಗಿರುವ ಖಾಶಿಫ್ ಜಮೀಲ್ ಮೇಲೆ ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ಬೈಕ್‌ನಲ್ಲಿ ಬಂದ ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ. |
ಜಮೀಲ್ ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಅವರು ಅಪಾಯದಿಂದ ಪಾರಾಗಿದ್ದಾರೆ. |
ಜಮೀಲ್ ಅವರ ಕತ್ತಿನ ಭಾಗಕ್ಕೆ ಗುಂಡು ಹೊಕ್ಕಿದ್ದು, ಅದನ್ನು ಹೊರತೆಗೆಯಲು ತುರ್ತು ಚಿಕಿತ್ಸೆಗಾಗಿ ವ್ಯವಸ್ಥೆ ಮಾಡಲಾಗಿತ್ತು. ಎಂದು ಡಾ. ಕಫೀಲ್ ಖಾನ್ ತಿಳಿಸಿದರು. |
ಗುಂಡನ್ನು ಹೊರ ತೆಗೆಯಲಾಗಿದ್ದು, ಜಮೀಲ್ ಅವರನ್ನು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅವರನ್ನು 48 ಗಂಟೆಗಳ ಕಾಲ ನಿಗಾದಲ್ಲಿ ಇರಿಸಲಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. |
ಜಮೀಲ್ ಅವರ ಮೇಲೆ ಗುಂಡಿನ ದಾಳಿ ನಡೆಸಲು ಯಾವುದೇ ನಿರ್ದಿಷ್ಟ ಕಾರಣಗಳು ತಿಳಿಯುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ. |
ಈ ಘಟನೆ ಬಳಿಕ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಅವರು ಯೋಗಿ ಆದಿತ್ಯನಾಥ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. |
ಯೋಗಿ ಆದಿತ್ಯನಾಥ ಅವರ ಬಳಿ ಆಮ್ಲಜನಕಕ್ಕೆ ಹಣವಿಲ್ಲದೆ ಹೋದಾಗ ಡಾ. ಕಫೀಲ್ ಅವರು ಮಕ್ಕಳನ್ನು ಉಳಿಸಿದರು. ಅದರ ಪರಿಣಾಮ ಅವರನ್ನು ಜೈಲಿನ ಕಂಬಿ ಹಿಂದೆ ಇರಿಸಲಾಯಿತು. ಈಗ ಅವರ ಸಹೋದರನ ಮೇಲೆ ಗುಂಡು ಹಾರಿಸಲಾಗಿದೆ. |
ದ್ವೇಷ ಭಾಷಣಗಳು, ಹಿಂಸಾಚಾರ, ರಕ್ತಪಾತ ಮತ್ತು ಗುಂಡಿನ ದಾಳಿಯ ಕೊಡುಗೆಗಳನ್ನು ನಿಮ್ಮ ಅಚ್ಛೇ ದಿನ್ ನೀಡುತ್ತಿರುವುದಕ್ಕೆ ಮೋದಿಜಿ ಅವರಿಗೆ ಧನ್ಯವಾದಗಳು ಎಂದು ಮೇವಾನಿ ಟ್ವೀಟ್ ಮಾಡಿದ್ದಾರೆ. |
2017ರ ಆಗಸ್ಟ್ ತಿಂಗಳಿನಲ್ಲಿ ಗೋರಖ್‌ಪುರದ ಬಿಆರ್‌ಡಿ ಆಸ್ಪತ್ರೆಯಲ್ಲಿ ಒಂದು ವಾರದ ಅವಧಿಯಲ್ಲಿಯೇ 60ಕ್ಕೂ ಅಧಿಕ ಹಸುಳೆಗಳು ಮೃತಪಟ್ಟಿದ್ದವು. ಆಮ್ಲಜನಕದ ಪೂರೈಕೆಯ ಕೊರತೆಯಿಂದ ಈ ಮಕ್ಕಳು ಮೃತಪಟ್ಟಿರುವುದಾಗಿ ಆರೋಪಿಸಲಾಗಿತ್ತು. |
This is the price you pay for being the brother of Dr. Kafeel who exposed Yogi gov. Your brother will be shot at, your mother Gauri Lankesh will be killed, your Professors Dabholkars, Kalburgis, Pansares will be killed. U bloody activist shut your mouth pic.twitter.com/rcCwRMJ86H |
— Jignesh Mevani (@jigneshmevani80) 10 June 2018 |
ಆದರೆ, ಶಿಶುಗಳ ಸಾವಿಗೆ ಆಮ್ಲಜನಕದ ಕೊರತೆಯ ವರದಿಗಳನ್ನು ಉತ್ತರ ಪ್ರದೇಶ ಸರ್ಕಾರ ತಳ್ಳಿಹಾಕಿತ್ತು. ಮಕ್ಕಳ ವಿಭಾಗದ ಉಸ್ತುವಾರಿಯಾಗಿದ್ದ ಡಾ. ಖಾನ್ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. |
ಖಾನ್ ಅವರು ಎಂಟು ತಿಂಗಳ ಕಾಲ ಜೈಲಿನಲ್ಲಿದ್ದರು. ಖಾನ್ ಅವರ ನಿರ್ಲಕ್ಷ್ಯದಿಂದಾಗಿ ಈ ಅವಘಡ ಸಂಭವಿಸಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಅವರಿಗೆ ಜಾಮೀನು ನೀಡಿತ್ತು. |
uttar pradesh gorakhpur hospital fire ಉತ್ತರ ಪ್ರದೇಶ ಆಸ್ಪತ್ರೆ ಗುಂಡು ದಾಳಿ |
Brother of Dr. Kafeel Khan who is out in bail in the case of Gorakhpur children death, was shot at Sunday night Gorakhpur. |
ಉಳ್ಳಾಲ : ಕಡಲಿನಬ್ಬರದಿಂದ 20ಕ್ಕೂ ಹೆಚ್ಚು ಮನೆಗಳಿಗೆ ಹಾನಿ | Vartha Bharati- ವಾರ್ತಾ ಭಾರತಿ |
ವಾರ್ತಾ ಭಾರತಿ May 16, 2021, 5:25 PM IST |
ಉಳ್ಳಾಲ : ತೌಕ್ತೇ ಚಂಡಮಾರುತ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳಿಂದ ಸುರಿದ ಗಾಳಿ ಮಳೆಗೆ ಪ್ರಕುಬ್ದ ಗೊಂಡಿದ್ದ ಕಡಲಿನಬ್ಬರದ ತೀವ್ರತೆ ರವಿವಾರ ಇಳಿಕೆ ಯಾಗಿದೆ. ಉಳ್ಳಾಲ ನಗರ ಸಭಾ ವ್ಯಾಪ್ತಿಯಲ್ಲಿ ಸುಮಾರು 20ಕ್ಕೂ ಹೆಚ್ಚು ಮನೆಗಳು ಭಾಗಶಃ ಹಾನಿಯಾಗಿದ್ದು, ಪರಿಹಾರ ಕಾರ್ಯ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. |
ಕೈಕೋ, ಹಿಲರಿಯನಗರ, ಕೋಟೆ ಪುರ, ಧರ್ಮ ನಗರ ಮುಂತಾದ ಪ್ರದೇಶಗಳಲ್ಲಿ ತಡೆಗೋಡೆ ಇದ್ದರೂ ನೀರಿನ ಅಲೆ ತಡೆಗೋಡೆ ದಾಟಿ ಬಂದಿತ್ತು. ಈ ಪ್ರದೇಶದಲ್ಲಿ ಮಸೀದಿ, ಮನೆಗಳ ಗೋಡೆಗಳಿಗೆ ಸಮುದ್ರದ ಅಲೆ ಅಪ್ಪಳಿಸಿದೆ. ಅಪಾಯದಂಚಿನಲ್ಲಿರುವ ಮನೆ ಮಂದಿಯನ್ನು ನಿನ್ನೆ ತೆರವು ಗೊಳಿಸಲಾಗಿತ್ತು. |
ರವಿವಾರ ಘಟನಾ ಸ್ಥಳಕ್ಕೆ ಶಾಸಕ ಖಾದರ್, ತಹಶೀಲ್ದಾರ್ ಗುರುಪ್ರಸಾದ್, ಉಳ್ಳಾಲ ನಗರ ಸಭೆ ಪೌರಾಯುಕ್ತ ರಾಯಪ್ಪ, ಅಧ್ಯಕ್ಷ ಚಿತ್ರ ಕಲಾ, ಉಪಾಧ್ಯಕ್ಷ ಅಯ್ಯೂಬ್ ಮಂಚಿಲ, ನಝೀರ್, ಮುಸ್ತಫಾ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾನಿಯಾದ, ಜಲಾವೃತ ಗೊಂಡ ಮನೆಗಳಿಗೆ ಶೀಘ್ರ ಪರಿಹಾರ ಒದಗಿಸುವಂತೆ ಈ ವೇಳೆ ಅಧಿಕಾರಿ ಗಳಿಗೆ ಶಾಸಕ ಖಾದರ್ ಸೂಚಿಸಿದ್ದಾರೆ. |
ಸೋಮೇಶ್ವರ ಪುರಸಭಾ ವ್ಯಾಪ್ತಿಯಲ್ಲಿ ನಾಲ್ಕು ಮನೆಗಳು ಭಾಗಶಃ ಹಾನಿಯಾಗಿದೆ. ಹಿಂದೂ ರುದ್ರ ಭೂಮಿ ತಡೆಗೋಡೆ ಸಮುದ್ರ ಮಡಿಲು ಸೇರಿದ್ದು ಬಿಟ್ಟರೆ ದೊಡ್ಡ ಅನಾಹುತ ನಡೆಯಲಿಲ್ಲ. ಕುದ್ರುವಿನಲ್ಲಿ ಜಲಾವೃತ ಗೊಂಡ 50ಕ್ಕೂ ಅಧಿಕ ಮನೆಗಳಲ್ಲಿ ಅಗತ್ಯ ಸಾಮಗ್ರಿಗಳು, ದಾಖಲೆ ಪತ್ರಗಳು ನೀರು ಪಾಲಾಗಿ ಹಾನಿಯಾಗಿದೆ. ಶನಿವಾರ ತಡರಾತ್ರಿ ಸುರಿದ ಗಾಳಿ ಮಳೆಗೆ ಪೆರಂಬೈಲ್ ನಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿವೆ. ಪಿಲಾರ್ ನಲ್ಲಿ ಮರವೊಂದು ಧರೆಗುರುಳಿದ್ದು, ಅದನ್ನು ರಾತ್ರಿಯೇ ತೆರವು ಗೊಳಿಸಲಾಗಿದೆ. ತಲಪಾಡಿ ಯಲ್ಲಿ ಮನೆಯೊಂದರ ಕಾಂಪೌಂಡ್ ಜರಿದು ಬಿದ್ದಿದೆ. |
ಉಚ್ಚಿಲ ಪೆಟ್ರೋಲ್ ಪಂಪ್ ಬಳಿ ನೀರು ತುಂಬಿದ್ದ ರಸ್ತೆಯನ್ನು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಚರಂಡಿ ವ್ಯವಸ್ಥೆ ಮಾಡಿ ಇತ್ಯರ್ಥ ಪಡಿಸಿದ್ದಾರೆ. |
ಶನಿವಾರ ದಾರುಸಲಾಂ ಮದ್ರಸದಲ್ಲಿ ಆಶ್ರಯ ಪಡೆದಿದ್ದ ಜನರು ರವಿವಾರ ಅವರವರ ಮನೆಗೆ ತೆರಳಿದ್ದಾರೆ.ತಲಪಾಡಿ ಮದ್ರಸದಲ್ಲಿ ಆಶ್ರಯ ಪಡೆದಿದ್ದ ಜನರು ಕೂಡ ರವಿವಾರ ಮನೆಗೆ ತೆರಳಿದ್ದಾರೆ. |
ಘಟನಾ ಸ್ಥಳಕ್ಕೆ ಶಾಸಕ ಖಾದರ್, ತಹಶೀಲ್ದಾರ್ ಗುರುಪ್ರಸಾದ್ ಉಳ್ಳಾಲ ಇನ್ಸ್ ಪೆಕ್ಟರ್ ಸಂದೀಪ್, ಉಪ ನಿರೀಕ್ಷಕ ಪ್ರದೀಪ್, ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ವಾಣಿ, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. |
ಹಾನಿಯಾದ ಮನೆಗೆ ಹಾಗೂ ಅಗತ್ಯ ಸಾಮಗ್ರಿಗಳು ನಾಶವಾದ ಕುಟುಂಬಕ್ಕೆ ಪರಿಶೀಲನೆ ನಡೆಸಿದ ಬಳಿಕ ಪರಿಹಾರ ಒದಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. |
ರವಿವಾರ ಕಡಲಿನಬ್ಬರದ ತೀವ್ರತೆ ಇಳಿಕೆ ಆಗಿದೆ. ಸೋಮೇಶ್ವರದಲ್ಲಿ ಮದ್ರಸದಲ್ಲಿ ಆಶ್ರಯ ಪಡೆದವರು ಮನೆಗೆ ತೆರಳಿದ್ದಾರೆ. ಈ ಬಾರಿ ತೌಕ್ತೇ ಚಂಡಮಾರುತದ ಪರಿಣಾಮವಾಗಿ ಹಾನಿಯಾದ ಮನೆಗೆ ಹಾಗೂ ಅಗತ್ಯ ಸಾಮಗ್ರಿಗಳು ಕಳೆದುಕೊಂಡವರಿಗೆ ಸೂಕ್ತ ಪರಿಹಾರ ವ್ಯವಸ್ಥೆ ಮಾಡಲಾಗುವುದು. |
ವಿಜಯ ಬ್ಯಾಂಕ್ ಲಾಭ ರೂ.224 ಕೋಟಿ | Prajavani |
ವಿಜಯ ಬ್ಯಾಂಕ್ ಲಾಭ ರೂ.224 ಕೋಟಿ |
4ನೇ ತ್ರೈಮಾಸಿಕದಲ್ಲಿ ಶೇ 24ರಷ್ಟು ಸಾಧನೆ |
ಬೆಂಗಳೂರು: ವಿಜಯ ಬ್ಯಾಂಕ್ ಮಾರ್ಚ್ 31ಕ್ಕೆ ಕೊನೆಗೊಂಡ 2012-13ನೇ ಹಣಕಾಸು ವರ್ಷದ 4ನೇ ತ್ರೈಮಾಸಿಕದಲ್ಲಿ ರೂ.224.15 ಕೋಟಿ ನಿವ್ವಳ ಲಾಭ ಗಳಿಸಿ ಶೇ 24ರಷ್ಟು ಪ್ರಗತಿ ದಾಖಲಿಸಿದೆ. ಹಿಂದಿನ ವರ್ಷದ ಇದೇ ಅವಧಿಯ ಲಾಭ ರೂ.180.97 ಕೋಟಿಯಷ್ಟಿತ್ತು. |
`ಸಾಲಗಳಿಂದ ಬಂದ ಬಡ್ಡಿ ಆದಾಯ ಶೇ 8ರಷ್ಟು ಹೆಚ್ಚಿದ್ದು, ಹೂಡಿಕೆಗಳ ಗಳಿಕೆಯಲ್ಲಿ ಶೇ 15ರಷ್ಟು ಏರಿಕೆಯಾಗಿದ್ದು ಮತ್ತು ನಿರ್ವಹಣಾ ವರಮಾನದಲ್ಲಿ ಶೇ 100ರಷ್ಟು ಸುಧಾರಣೆ ಆಗಿದ್ದು ಪ್ರಗತಿ ಕಾರಣ. ಇನ್ನೊಂದೆಡೆ ದೊಡ್ಡ ಮೊತ್ತದ ಠೇವಣಿಗಳನ್ನು ಶೇ 46.47ರಿಂದ ಶೇ 22.30ಕ್ಕೆ ತಗ್ಗಿಸಿದ್ದರಿಂದ ಪಾವತಿಸಬೇಕಿದ್ದ ಭಾರಿ ಬಡ್ಡಿ ಹೊರೆ ತಗ್ಗಿದೆ. ಇದೆಲ್ಲದರಿಂದಾಗಿ ಜನವರಿ-ಮಾರ್ಚ್ ಅವಧಿಗೆ ಲಾಭ ಗಳಿಕೆಯಲ್ಲಿ ಉತ್ತಮ ಪ್ರಗತಿ ಸಾಧಿಸಲು ಸಾಧ್ಯವಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಎಚ್.ಎಸ್.ಉಪೇಂದ್ರ ಕಾಮತ್ ವಿವರಿಸಿದರು. |
ನಗರದಲ್ಲಿ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು, ಇಡೀ ಹಣಕಾಸು ವರ್ಷದಲ್ಲಿ ರೂ.585.61 ಕೋಟಿ(ಹಿಂದಿನ ವರ್ಷ ರೂ.580.99 ಕೋಟಿ) ನಿವ್ವಳ ಲಾಭವಾಗಿದೆ. ಒಟ್ಟು ವಹಿವಾಟು ರೂ.1,67,531 ಕೋಟಿಗೇರಿದೆ. ಇದು ಸಾರ್ವಕಾಲಿಕ ದಾಖಲೆ ಎಂದು ಹರ್ಷ ವ್ಯಕ್ತಪಡಿಸಿದರು. ಕಾರ್ಯನಿರ್ವಾಹಕ ನಿರ್ದೇಶಕ ಕೆ.ಆರ್.ಶೆಣೈ ಸುದ್ದಿಗೋಷ್ಠಿಯಲ್ಲಿದ್ದರು. |
ಉತ್ತಮ ಫಲಿತಾಂಶ ಕಾರಣ ವಿಜಯ ಬ್ಯಾಂಕ್ ಷೇರು ಮುಂಬೈ ಷೇರುಪೇಟೆಯಲ್ಲಿ ಶುಕ್ರವಾರ ಮಧ್ಯಾಹ್ನ ಶೇ 2.98ರಷ್ಟು ಮೌಲ್ಯ ಹೆಚ್ಚಿಸಿಕೊಂಡು ರೂ.53.50ರಲ್ಲಿ ಮಾರಾಟವಾಗುತ್ತಿದ್ದವು. |
ಕಾರುಗಳಲ್ಲಿ ಇಂಧನ ತುಂಬಿಸುವ ಟ್ಯಾಂಕ್ ಮುಚ್ಚಳ ಒಂದೇ ಕಡೆಯಲ್ಲಿ ಇರುವುದಿಲ್ಲ - Kannada DriveSpark |
ಎಲ್ಲಾ ಕಾರುಗಳ ಇಂಧನದ ಟ್ಯಾಂಕ್ ಮುಚ್ಚಳ ಒಂದೇ ಬದಿ ಇರೋದಿಲ್ಲ !! ಯಾಕೆ ಗೊತ್ತಾ..? |
Updated: Wednesday, March 1, 2017, 16:06 [IST] |
ಸಾಮಾನ್ಯವಾಗಿ ಇಂಧನ ತುಂಬಿಸುವ ಟ್ಯಾಂಕ್ ಒಂದೊಂದು ಕಾರಿನಲ್ಲಿ ಒಂದೊಂದು ರೀತಿಯಲ್ಲಿ ಇರುವುದನ್ನು ನಾವೆಲ್ಲರೂ ಗಮನಿಸುತ್ತಿರುತ್ತೇವೆ. ಕೆಲವೊಂದು ಬಾರಿ ನಾವು ಅದರ ಬಗ್ಗೆ ಅರಿವೇ ಇಲ್ಲದಂತೆ ಮುನ್ನೆಡೆಯುತ್ತಿರುತ್ತೇವೆ. |
ನೀವೇನಾದರೂ ನಿಮ್ಮ ಸ್ನೇಹಿತನ ಕಾರನ್ನು ಇಂಧನ ತುಂಬಿಸಲು ಕೊಂಡೈದಿದ್ದರೆ ಈ ವಿಚಾರ ನಿಮ್ಮ ಅರಿವಿಗೆ ಕಂಡಿತಾ ಬಂದಿರುತ್ತದೆ. ಹೌದು, ನಿಮಗೆ ಕಂಡಿತಾ ಈ ವಿಚಾರ ಗೊಂದಲಕ್ಕೀಡು ಮಾಡುವುದರಲ್ಲಿ ಸಂದೇಹವಿಲ್ಲ. ಏಕೆ ಎಲ್ಲಾ ಕಾರುಗಳ ಇಂಧನ ತುಂಬಿಸುವ ಮುಚ್ಚಳ ಒಂದೇ ಕಡೆ ಇರುವುದಿಲ್ಲ ಎಂದು ಕೆಲವೊಮ್ಮೆ ನೀವು ಯೋಚಿಸಿರುತ್ತೀರಿ ಕೂಡ. |
ಏಕೆ ಎಲ್ಲಾ ದೇಶದ ಕಾರು ಉತ್ಪಾದಕ ಕಂಪನಿಗಳು ಒಂದೇ ಕಡೆ ಇಂಧನದ ಮುಚ್ಚಳ ಕೊಡುವುದಿಲ್ಲ ಎಂಬುದರ ಬಗ್ಗೆ ಚರ್ಚಿಸೋಣ.ಒಂದು ದೇಶದ ಕಾರುಗಳಿಗೂ ಮತ್ತೊಂದು ದೇಶದ ಕಾರುಗಳಿಗೂ ಸಹ ಇಂಧನ ಟ್ಯಾಂಕ್ ಮುಚ್ಚಳ ಬದಲಾವಣೆಗೊಳ್ಳುತ್ತದೆ ಎಂದರೆ ನೀವು ನಂಬಲೇ ಬೇಕು. |
ಸಾಮಾನ್ಯವಾಗಿ ಜಪಾನ್ ದೇಶದ ಕಾರುಗಳ ಇಂಧನ ಮುಚ್ಚಳ ಎಡಭಾಗದಲ್ಲಿರುತ್ತದೆ. ಇನ್ನು ಜರ್ಮನ್ ಕಾರುಗಳ ವಿಚಾರಕ್ಕೆ ಬರುವುದಾದರೆ, ಎಲ್ಲಾ ಜರ್ಮನ್ ಕಾರುಗಳ ಇಂಧನದ ಮುಚ್ಚಳ ಬಲಭಾಗಕ್ಕಿರುತ್ತದೆ. |
ಹೋಗೆ ಉಗುಳುವ ಕೊಳವೆಯಿಂದ ಬರುವಂತಹ ಶಾಖದಿಂದ ಯಾವುದೇ ರೀತಿಯ ಬೆಂಕಿಯ ಅವಘಡಗಳು ಸಂಭವಿಸದೇ ಇರಲಿ ಎನ್ನುವ ಕಾರಣಕ್ಕೆ ಹೋಗೆ ಉಗುಳುವ ಕೊಳವೆಯ ಮತ್ತೊಂದು ಬದಿಯಲ್ಲಿ ಈ ಇಂಧನದ ಮುಚ್ಚಳ ಇರಿಸಿರುತ್ತಾರೆ. |
ಸಾಮಾನ್ಯವಾಗಿ ಹೊರದೇಶಗಳಲ್ಲಿನ ಹೆದ್ದಾರಿಗಳಲ್ಲಿ ಇಂದನವನ್ನು ಸತಃ ತಾವೇ ಕಾರುಗಳಿಗೆ ತುಂಬಿಸಿಕೊಳ್ಳುವ ಪರಿಪಾಠ ನೆಡೆದುಕೊಂಡು ಬಂದಿದೆ, ಆದ ಕಾರಣ ಚಾಲಕನಿಗೆ ಹೆಚ್ಚು ಅನುಕೂಲವಾಗಲಿ ಎನ್ನುವ ನಿಟ್ಟಿನಲ್ಲಿ ಕಾರಿನ ಚಾಲಕನ ಕಡೆ ಇಂಧನದ ಟ್ಯಾಂಕ್ ಮುಚ್ಚಳ ನೀಡುವುದುಂಟು. |
ಒಂದೇ ಕಡೆ ಇಂಧನ ತುಂಬಿಸುವ ಟ್ಯಾಂಕ್ ಮುಚ್ಚಳ ನೀಡಿದರೆ ಇಂಧನ ತುಂಬಿಸುವ ಬಂಕುಗಳಲ್ಲಿ ಜನಗಳ ಸಮಯ ವ್ಯರ್ಥವಾಗಬಹುದು ಮತ್ತು ಇನ್ನು ಒಮ್ಮೊಮ್ಮೆ ಸಂಘರ್ಷಕ್ಕೆ ಕಾರಣವಾಗಬಹುದು ಎಂಬ ನಿಟ್ಟಿನಲ್ಲಿ ಒಂದೇ ಕಡೆ ಮುಚ್ಚಳವನ್ನು ನೀಡುವುದಿಲ್ಲ. |
ಇತ್ತೀಚಿಗೆ ಗ್ಯಾಸೋಲಿನ್ ಇಂಧನದ ಕಾರುಗಳು ಪ್ರತ್ಯೇಕ ಬಂಕುಗಳಿಗೆ ಹೋಗಿ ಇಂಧನ ತುಂಬಿಸಬೇಕಾಗಿದ್ದು, ಈ ರೀತಿಯ ವಾಹನಗಳಿಗೆ ಕಾರಿನ ನಂಬರ್ ಪ್ಲೇಟ್ ಕೆಳಗಡೆ ವಿಶೇಷ ರೀತಿಯ ಲೈಟರ್ ನೀಡಲಾಗುತ್ತದೆ. |
ಮಾತು ಹಲವು ಕಾರುಗಳು ವಿಶೇಷ ರೀತಿಯಲ್ಲಿ ವಿನ್ಯಾಸ ಹೊಂದಿದ್ದು, ಕಾರಿನ ಹಿಂಬದಿಯಲ್ಲಿರುವ ಟೈಲೈಟ್ ದೀಪದ ಒಳಗೆ ಇಂಧನದ ಮುಚ್ಚಳ ಇರಿಸಲಾಗಿರುತ್ತದೆ, ಇದಕ್ಕೆ ಕಾರಣ ಕೇವಲ ವಿನ್ಯಾಸವಷ್ಟೇ ಆಗಿದ್ದು ಮತ್ತಿನೇನು ಅಲ್ಲವೇ ಅಲ್ಲ. |
ಕೆಲವೊಂದು ಬಾರಿ ಅಪಘಾತ ಸಂಭವಿಸಿದ ಕೂಡಲೇ ಇಂಧನ ಟ್ಯಾಂಕಿಗೆ ಹೆಚ್ಚು ಭದ್ರತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಹೆಚ್ಚು ಬಾರಿ ಹಿಂದಿನ ಬಲ ಅಥವಾ ಎಡ ಬದಿಯಲ್ಲಿ ನೀಡಲಾಗುತ್ತದೆ. |
ಹಲವು ಬಾರಿ ಕಾರಿನ ಎಲೆಕ್ಟ್ರಿಕ್ ಸರ್ಕ್ಯೂಟ್ ಕೂಡ ಇಂಧನದ ಮುಚ್ಚಳ ಯಾವ ಕಡೆ ಇರಿಸಬೇಕು ಎಂಬುದನ್ನು ನಿರ್ಧರಿಸುತ್ತದೆ. ಎಲೆಕ್ಟ್ರಿಕ್ ವೈರುಗಳು ಇರುವ ಕಡೆ ಇಂಧನದ ಮುಚ್ಚಳ ಇರಿಸಿದ್ದಲ್ಲಿ ಕೆಲವೊಮ್ಮೆ ಅವಘಡಗಳು ತೀವ್ರತೆ ಹೆಚ್ಚಾಗುವ ಸಂಭವವಿರುತ್ತದೆ. |
ಮುಂಗಾರು ಮಳೆಯಲ್ಲಿ ಮುಳುಗುತ್ತಿದೆ ಮುಂಬೈ ಮಹಾನಗರಿ | heavy rain in mumbai hits flights - Kannada Oneindia |
| Published: Thursday, June 7, 2018, 14:56 [IST] |
ಮುಂಬೈ, ಜೂನ್ 7: ಮಹಾಮಳೆಯಿಂದ ಕಳೆದ ವರ್ಷ ತತ್ತರಿಸಿದ್ದ ಮುಂಬೈ ನಗರಿ ಮತ್ತೊಮ್ಮೆ ಪ್ರವಾಹದಲ್ಲಿ ಮುಳುಗುವ ಭೀತಿ ಎದುರಾಗಿದೆ. |
ಮಹಾನಗರಿಯಲ್ಲಿ ವರುಣನ ಆರ್ಭಟ ಜೋರಾಗಿದ್ದು, ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ಲಂಡನ್‌ನಿಂದ ಬಂದ ಜೆಟ್ ಏರ್‌ವೇಸ್ ವಿಮಾನವನ್ನು ಮಾರ್ಗ ಬದಲಿಸಿ ಅಹಮದಾಬಾದ್ ವಿಮಾನನಿಲ್ದಾಣದಲ್ಲಿ ಇಳಿಸಲಾಗಿದೆ. |
ದಾದರ್, ಪರೇಲ್, ಕಫ್ ಪರೇಡ್, ಬಾಂದ್ರಾ, ಬೊರಿವೇಲಿ ಮತ್ತು ಅಂಧೇರಿಗಳಲ್ಲಿನ ರಸ್ತೆಗಳು ಕಲಾವೃತವಾಗಿವೆ. ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರ ಎಚ್ಚರಿಕೆ ನೀಡಿದೆ. |
Mumbai rains. BKC right now. pic.twitter.com/rREEH8igww |
Subsets and Splits
No community queries yet
The top public SQL queries from the community will appear here once available.