text stringlengths 0 61.5k |
|---|
ಸ್ಯಾಂಡಲ್‍ವುಡ್‍ನ ಯುವರತ್ನ, ನಟ ಪುನೀತ್ ರಾಜ್‍ಕುಮಾರ್ ಅವರ ನಿಧನದ ಬೆನ್ನಲ್ಲೇ ಕೇರಳ ಸರ್ಕಾರ ಜಿಮ್‍ಗಳಲ್ಲಿ ಎಇಡಿ ಕಡ್ಡಾಯ ಮಾಡುವಂತೆ ನಿರ್ಧಾರ ತೆಗೆದುಕೊಂಡಿದೆ. |
ಕೇರಳ ಸರ್ಕಾರ ರಾಜ್ಯಾದ್ಯಂತ ಇರುವ ಎಲ್ಲ ಜಿಮ್ನಾಷಿಯಂಗಳು, ಕ್ರೀಡಾಂಗಣಗಳು, ಒಳಾಂಗಣಗಳಲ್ಲಿ ಮೂಲಭೂತ ಪ್ರಥಮ ಚಿಕಿತ್ಸಾ ಕಿಟ್‍ಗಳು ಸೇರಿದಂತೆ ಸ್ವಯಂಚಾಲಿತ ಬಾಹ್ಯ ಡಿಫಿಬ್ರಿಲೇಟರ್(ಎಇಡಿ-ಆಟೋಮೇಟೆಡ್ ಎಕ್ಸ್ಟರ್ನಲ್ ಟಿಫಿಬ್ರಿಲೇಟರ್)ಗಳನ್ನು ಬಳಕೆಗೆ ಸಿದ್ಧವಾಗಿಟ್ಟುಕೊಳ್ಳುವ ಅವಶ್ಯಕತೆಯನ್ನು ಎತ್ತಿಹಿಡಿದಿದೆ. |
ಈ ಬಗ್ಗೆ ಕೇರಳ ಸಾರಿಗೆ ಸಚಿವ ಅಂಟೋನಿ ರಾಜು ಪ್ರತಿಕ್ರಿಯಿಸಿದ್ದು, ಕೇರಳದ ಕ್ರೀಡಾ ಸಚಿವ ವಿ. ಆಬ್ದುರೆಹಮಾನ್ ಅವರೊಂದಿಗೆ ಚರ್ಚಿಸಿ ರಾಜ್ಯದಲ್ಲಿ ಇದನ್ನು ತುರ್ತಾಗಿ ಜಾರಿಗೆ ತರುವ ಭರವಸೆಯನ್ನು ನೀಡಿದರು. |
ಶ್ರಾವಣ, ಭಾದ್ರಪದ ಕಳೆದು ನವರಾತ್ರಿ ಬರುತ್ತಿದ್ದರೂ.... | A jinx called Rajkumars release - Kannada Oneindia |
ಶ್ರಾವಣ, ಭಾದ್ರಪದ ಕಳೆದು ನವರಾತ್ರಿ ಬರುತ್ತಿದ್ದರೂ.... |
ಬೆಂಗಳೂರು : ಶ್ರಾವಣದ ಮಾಸದ ತಿಂಗಳು ಪೂರ್ತಿಯ ಹಬ್ಬದ ಸಂಭ್ರಮ, ಭಾದ್ರಪದದ ಗೌರಿಹಬ್ಬ, ಗಣೇಶ ಚೌತಿ ಮುಗಿದು ಈಗ ನಾಡಹಬ್ಬ ದಸರೆಯ ಸಂಭ್ರಮ ನಾಡಿಗೆ ಕಾಲಿಡುತ್ತಿದ್ದರೂ, ಭೀಮನ ಅಮಾವಾಸ್ಯೆಯಂದು ಅಪಹರಣವಾದ ರಾಜಣ್ಣ ಮಾತ್ರ ನಾಡಿಗೆ ಮರಳಿಲ್ಲ. |
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ವರನಟ ರಾಜಣ್ಣ ಕಾಡಿನಲ್ಲಿ ಇರುವಾಗಲೇ ಈ ನಾಡಿನಲ್ಲಿ ಮತ್ತೊಂದು ಫಾಲ್ಕೆ ಪ್ರಶಸ್ತಿಯ ಪ್ರಕಟಣೆಯೂ ಹೊರಬಿದ್ದಿದೆ. ಕನ್ನಡ ನಾಡಿನ ಜನರಲ್ಲಿ ದುಗುಡ, ಆತಂಕ ಇದೆಯಾದರೂ ದೈನಂದಿನ ಚಟುವಟಿಕೆಗಳು ಸರಾಗವಾಗಿ ನಡೆಯುತ್ತಿವೆ. ಆರಂಭದ ನಾಲ್ಕಾರು ದಿನ ಇದ್ದ ತೀವ್ರತೆ, ಪೂಜೆ, ಪುನಸ್ಕಾರ, ಹವನ ಹೋಮ, ಪ್ರತಿಭಟನೆ, ಮೆರವಣಿಗೆ, ಬಂದ್ ಎಲ್ಲ ತಣ್ಣಗಾಗಿದೆ. |
ಮೊದಲ ಹತ್ತು ಹದಿನೈದು ದಿನ ಮಾಧ್ಯಮಗಳಿಗೆ ಭಾರಿ ಆಹಾರವಾಗಿದ್ದ ರಾಜ್ ಅಪಹರಣದ ಸುದ್ದಿ ಈಗ ವಾರ್ತೆಗಳ ಕೊನೆಯ ಸಾಲಿನಲ್ಲಿ , ಪತ್ರಿಕೆಗಳ ಒಳ ಪುಟದಲ್ಲಿ ನುಸುಳುತ್ತಿದೆ. ರಾಜ್ ಅಪಹರಣದ ಕಹಿ ಘಟನೆಯನ್ನು ಜನ ಕೊಂಚ ಕೊಂಚವಾಗಿ ಮರೆತೇ ಬಿಟ್ಟಿದ್ದಾರೇನೋ ಎನ್ನುವ ವಾತಾವರಣ ಮೂಡಿದೆ. ರಾಜ್ ಕುಮಾರ್ ಅವರನ್ನು ಬಿಡಿಸಿಕೊಳ್ಳಲು ಕಳೆದ 50 ದಿನಗಳಿಂದ ರಾಜ್ಯ ಸರಕಾರ ತಮಿಳುನಾಡು ಜತೆಗೂಡಿ ಹರ ಸಾಹಸ ಮಾಡ... |
ಈಗ 'ವೀರಪ್ಪನ್ ಬಿಟ್ಟಾಗ ಬಿಡಿಸಿಕೊಳ್ಳಿ ' ಎನ್ನುವ ಧೋರಣೆಯನ್ನು ರಾಜ್ಯ ಸರಕಾರ ತಳೆದಂತಿದೆ. ಮುಂದೇನು ಮಾಡುವುದು ಎನ್ನುವುದು ರಾಜ್ಯ ಸರಕಾರಕ್ಕೂ ತಿಳಿದಿಲ್ಲ. ರಾಜ್ಯದ ಜನತೆಗೂ ಗೊತ್ತಿಲ್ಲ. ರಾಜ್ ಕುಟುಂಬದವರಿಗಂತೂ ಈ 50 ದಿನಗಳು ಅರ್ಧ ಶತಮಾನವೇ ಕಳೆದಂತೆ ಆಗಿದೆ. ದಿನವೂ ರಾಜ್‌ಕುಮಾರ್ ಅವರ ನಿವಾಸಕ್ಕೆ ಬಂದು ಸಾಂತ್ವನ ಹೇಳುತ್ತಿದ್ದ ಜನರ - ಗಣ್ಯರ ಸಂಖ್ಯೆಯೂ ಕುಗ್ಗಿದೆ. |
ಈಗ ಉಳಿದಿರುವುದು ಹರಕೆ - ನಿರೀಕ್ಷೆ ಗಳು ಮಾತ್ರ |
ಪರಿಸ್ಥಿತಿ ತಣ್ಣಗಾಗಿದ್ದರೂ, ರಾಜ್ ಅಪಹರಣದ ಮೊದಲ ದಿನಗಳಲ್ಲಿ ಹೇಳಿಕೆ ನೀಡಿ, ತಮ್ಮ ಹೇಳಿಕೆಗೆ ಕಟ್ಟು ಬಿದ್ದ ಕನ್ನಡ ಚಿತ್ರ ರಂಗ ಕಳೆದ 50 ದಿನಗಳಿಂದ ತನ್ನ ಎಲ್ಲ ಚಟುವಟಿಕೆ ನಿಲ್ಲಿಸಿದೆ. ಈಗ ವಿಧಿ ಇಲ್ಲದೆ, 25ರಿಂದ ಚಿತ್ರ ಚಟುವಟಿಕೆ ಆರಂಭಿಸುವ ನಿರ್ಧಾರವನ್ನೂ ತಳೆದಿದೆ. ಈ ನಿರ್ಧಾರದಿಂದ ರಾಜ್ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಬೇಕಾದೀತೆಂಬ ಭಯದಿಂದ ಚಿತ್ರ ಚಟುವಟಿಕೆ ಆರಂಭಿಸುವ ಮುನ್ನ... |
ರಾಜ್ ಅವರನ್ನು ಬಿಡಿಸಿಕೊಂಡು ಬರಲು ವೀರಪ್ಪನ್ ಬಳಿಗೆ ತೆರಳಿದ್ದ ಗೋಪಾಲ್ ಮೂರು ಬಾರಿಯೂ ಬರಿಗೈಯಲ್ಲಿ ಮರಳಿದ್ದಾರೆ. ನಾನು ಮೊದಲು ಒಬ್ಬ ವೀರಪ್ಪನ್‌ನನ್ನು ಸಮಾಧಾನ ಪಡಿಸಬೇಕಿತ್ತು , ಈಗ ಕಾಡಿನಲ್ಲಿ 9 ವೀರಪ್ಪನ್ ಗಳಿದ್ದಾರೆ ಎಂದು ಅವರೇ ಬೆಂಗಳೂರಿನಲ್ಲಿ ನೀಡಿದ ಹೇಳಿಕೆ ಪರಿಸ್ಥಿತಿಯ ಗಂಭೀರತೆಯನ್ನು ಸೂಚಿಸುತ್ತದೆ. ಇಷ್ಟೇಲ್ಲಾ ಆಗಿದ್ದರೂ ರಾಜ್ ಬಿಡುಗಡೆಗೆ ಹೊಸ ಪರಿಹಾರೋಪಾಯಗಳು ಮಾತ್ರ ... |
ಕೃಷ್ಣ ಅವರಿಗಂತೂ ಪ್ರತಿಯಾಂದು ದಿನವೂ ಒಂದು ಯುಗದಂತೆ ಕಳೆಯುತ್ತಿದೆ. ರಾಜ್ಯದ ಎಲ್ಲ ಅಭಿವೃದ್ಧಿ ಕಾರ್ಯಗಳೂ ಸ್ಥಗಿತ ಗೊಂಡಿವೆ. ರಾಜ್ಯ ಸರಕಾರದ ಹಾಗೂ ನಾನಾ ಸಂಘ - ಸಂಸ್ಥೆಗಳ ನೂರಾರು ಅಧಿಕೃತ ಕಾರ್ಯಕ್ರಮಗಳ ರದ್ದಾಗಿವೆ. ರಾಜ್ ಇಲ್ಲದ ರಾಜ್ಯದಲ್ಲಿ ಉಂಟಾದ ನಷ್ಟ ಎಷ್ಟು ಎಂಬ ಬಗ್ಗೆ ಅಧ್ಯಯನ ಮಾಡುವ ಗೋಜಿಗೂ ಯಾರೂ ಹೋಗಿಲ್ಲ. |
ರಾಜ್ ಅಪಹರಣದ ಲಾಭ ಪಡೆದು ಕನ್ನಡ ಜನರ ದೃಷ್ಟಿಯಲ್ಲಿ ಹೀರೋಗಳಾಗ ಬಯಸಿದವರ ಅಟಾಟೋಪಗಳೂ ಈಗ ಬಹಿರಂಗಗೊಂಡಿವೆ. ರಾಜ್ ಕುಮಾರ್ ಕುಟುಂಬದವರಂತೂ ಸರಕಾರದ ಪ್ರಯತ್ನಗಳನ್ನು ಮರೆತು ಕಂಡ ಕಂಡ ದೇವರಿಗೆಲ್ಲಾ ಕೈ ಮುಗಿಯುತ್ತಿದ್ದಾರೆ. ರಾಜ್ ಇನ್ನೊಂದು ವಾರದಲ್ಲಿ ಹಿಂತಿರುಗುತ್ತಾರೆ ಎಂದು ಆರಂಭದ ದಿನಗಳಲ್ಲಿ ಭವಿಷ್ಯ ನುಡಿದಿದ್ದ ಜ್ಯೋತಿಷ್ಕರೆಲ್ಲಾ ಮನೆಯಲ್ಲಿ ಮುದುರಿ ಕುಳಿತಿದ್ದಾರೆ. ಈಗ ಉಳಿದಿರುವ... |
ಶಾಲೆ ಪುನರಾರಂಭಕ್ಕೆ ಕಾರ್ಯಪಡೆ ರಚನೆಗೆ ವಿಜ್ಞಾನಿಗಳು,ವೈದ್ಯರ ಒತ್ತಾಯ: ಮೂರು ರಾಜ್ಯಗಳ ಸಿಎಂಗಳಿಗೆ ಪತ್ರ- Kannada Prabha |
Published: 31st July 2021 09:06 PM | Last Updated: 31st July 2021 09:06 PM | A+A A- |
ನವದೆಹಲಿ: ಶಾಲೆಗಳನ್ನು ಹಂತ ಹಂತವಾಗಿ ಪುನರಾರಂಭಿಸಲು ವೈಜ್ಞಾನಿಕ ಯೋಜನೆಯ ನೆರವಿಗಾಗಿ ತುರ್ತಾಗಿ ಕಾರ್ಯಪಡೆ ರಚನೆಗಾಗಿ ದೇಶಾದ್ಯಂತ ಸುಮಾರು 50 ವೈದ್ಯರು ಮತ್ತು ಸಾರ್ವಜನಿಕ ಆರೋಗ್ಯ ಪರಿಣಿತರೊಂದಿಗೆ ದೆಹಲಿ ಮತ್ತು ಬಾಂಬೆ ಐಐಟಿ ವಿಜ್ಞಾನಿಗಳು ಕರ್ನಾಟಕ, ದೆಹಲಿ, ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. |
ಸುರಕ್ಷತಾ ಕ್ರಮಗಳೊಂದಿಗೆ ಶಾಲೆಗಳ ಪುನರಾರಂಭ ಸಾಧ್ಯ ಎಂಬ ಪುರಾವೆಗಳ ಹೊರತಾಗಿಯೂ ಕಳೆದ 16 ತಿಂಗಳುಗಳಿಂದ ಶಾಲೆಗಳು ಬಂದ್ ಆಗಿದ್ದರಿಂದ ಕೋಟ್ಯಂತರ ವಿದ್ಯಾರ್ಥಿಗಳ ಕಲಿಕಾ ಅಭಿವೃದ್ಧಿ ಕೊರತೆಗೆ ಕಾರಣವಾಗಿದೆ ಎಂದು ಪರಿಣಿತರು ಹೇಳಿದ್ದಾರೆ. ಐಸಿಎಂಆರ್ ಮುಖ್ಯಸ್ಥ ಬಲರಾಂ ಭಾರ್ಗವ ಮತ್ತು ದೆಹಲಿ ಏಮ್ಸ್ ನಿರ್ದೇಶಕ ರಂದೀಪ್ ಗುಲೆರಿಯಾ ನಂತಹ ಸರ್ಕಾರದ ಉನ್ನತಾಧಿಕಾರಿಗಳು, ಕಡಿಮೆ ಪಾಸಿಟಿವಿಟಿ ದರ ಇರ... |
ಇತ್ತೀಚಿಗೆ ಬಿಹಾರ, ಒಡಿಶಾದಂತಹ ರಾಜ್ಯಗಳನ್ನು ಹೊರತುಪಡಿಸಿದಂತೆ ಕೆಲ ರಾಜ್ಯಗಳು ಶಾಲೆಗಳನ್ನು ಪುನರಾರಂಭಿಸಲು ನಿರ್ಧರಿಸಿದ್ದವು. ಸುರಕ್ಷತಾ ಕ್ರಮಗಳೊಂದಿಗೆ ಶಾಲೆಗಳ ಪುನರಾರಂಭ ಸಾಧ್ಯ ಎಂಬ ಪುರಾವೆಗಳ ಹೊರತಾಗಿಯೂ ತಿಂಗಳುಗಟ್ಟಲೇ ಶಾಲೆಗಳನ್ನು ಮುಚ್ಚಿದ್ದರಿಂದ ಕಲಿಕಾ ಮತ್ತು ಅಭಿವೃದ್ಧಿಯಲ್ಲಿ ಕೊರತೆಯಾಗಿದೆ ಎಂದು ದೆಹಲಿ, ಮಹಾರಾಷ್ಟ್ರ ಮತ್ತು ಕರ್ನಾಟಕ ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ... |
ಫ್ರಾನ್ಸ್, ಸ್ವಿಡನ್ ಸೇರಿದಂತೆ ವಿಶ್ವದಾದ್ಯಂತ ಸುಮಾರು 170 ರಾಷ್ಟ್ರಗಳಲ್ಲಿ ಶಾಲೆಗಳು ಸಂಪೂರ್ಣವಾಗಿ ಅಥವಾ ಭಾಗಶ: ವಾಗಿ ಪುನರಾರಂಭವಾಗಿರುವುದಾಗಿ ತಜ್ಞರು, ವೈದ್ಯರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ವಯಸ್ಕರಿಗೆ ಲಸಿಕೆಗೆ ಇನ್ನೂ ಕೆಲ ತಿಂಗಳುಗಳು ಹಿಡಿಯಬಹುದು ಎಂದು ತಜ್ಞರ ಗುಂಪು ಒತ್ತಿ ಹೇಳಿದೆ. ಏಕೆಂದರೆ ದೆಹಲಿಯಲ್ಲಿ ಅರ್ಹ ಜನಸಂಖ್ಯೆಯ ಶೇ.13 ರಷ್ಟು, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲ... |
ಶಾಲೆಗಳನ್ನು ಇಡೀ ರಾತ್ರಿ ತೆರೆಯಲು ಸಾಧ್ಯವಿಲ್ಲ, ಎಲ್ಲಾ ಹಂತಗಳಲ್ಲಿ, ಸ್ಥಳೀಯ ಪರಿಸ್ಥಿತಿಗೆ ಸಂಬಂಧಿಸಿದಂತೆ ಎಚ್ಚರಿಕೆಯಿಂದ ಯೋಜನೆ ರೂಪಿಸಬೇಕಾಗಿದೆ. ಮುಂದಿನ ಹೆಜ್ಜೆಯಾಗಿ, ನಿಮ್ಮ ರಾಜ್ಯಗಳಲ್ಲಿ ಶಾಲೆಗಳನ್ನು ಭಾಗಶ: ಅಥವಾ ಸಂಪೂರ್ಣವಾಗಿ ಪುನರಾರಂಭಿಸಲು ತುರ್ತು ಆಧಾರಿತ ಯೋಜನೆ ಕುರಿತು ಸಂಬಂಧಿತ ತಜ್ಞರೊಂದಿಗೆ ಕಾರ್ಯಪಡೆಯನ್ನು ರಚನೆಯನ್ನು ಪರಿಗಣಿಸಬೇಕು ಎಂದು ತಜ್ಞರು ಪತ್ರದಲ್ಲಿ ಒತ್ತಾಯ... |
Newdelhi SchoolReopening Taskforce Scientists doctors urge ನವದೆಹಲಿ ಶಾಲೆ ಪುನರಾರಂಭ ಕಾರ್ಯಪಡೆ ವಿಜ್ಞಾನಿಗಳುವೈದ್ಯರ ಒತ್ತಾಯ |
ಸಿವಿಲ್ ಸರ್ವಿಸಸ್ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ | Civil Services (Main) Exam 2011 | Result Announced | Union Public Service Commission (UPSC) | ವಿಲ್ ಸರ್ವಿಸಸ್ ಮುಖ್ಯ ಪರೀಕ್ಷೆ 2011 | ಪರೀಕ್ಷಾ ಫಲಿತಾಂಶ ಪ್ರಕಟ - Kannada Oneindia |
ಸಿವಿಲ್ ಸರ್ವಿಸಸ್ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ |
| Published: Thursday, March 1, 2012, 18:06 [IST] |
ನವದೆಹಲಿ, ಮಾ.1: ಐಎಎಸ್, ಐಪಿಎಸ್, ಐಎಫ್‌ಎಸ್ ಅಧಿಕಾರಿಯಾಗಬೇಕೆಂಬ ಕನಸು ಕಾಣುತ್ತಿರುವ ಲಕ್ಷಾಂತರ ಯುವ ಪೀಳಿಗೆಯ ಕನಸಿನ ಪರೀಕ್ಷೆ ಸಿವಿಲ್ ಸರ್ವಿಸಸ್ (ಮುಖ್ಯ) 2011ರ ಫಲಿತಾಂಶಗಳು ಹೊರಬಿದ್ದಿವೆ. ವ್ಯಕ್ತಿತ್ವ ಪರೀಕ್ಷೆಗೆ ಅರ್ಹರಾದವರ ನೋಂದಣಿ ಸಂಖ್ಯೆಯನ್ನು ಕೇಂದ್ರ ಲೋಕ ಸೇವಾ ಆಯೋಗವು ಗುರುವಾರ (ಮಾ.1) ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. |
ಮಾರ್ಚ್ 19, 2012ರಿಂದ ವ್ಯಕ್ತಿತ್ವ ಪರೀಕ್ಷೆ ನವದೆಹಲಿಯ ಕೇಂದ್ರ ಲೋಕಸೇವಾ ಆಯೋಗ ಕಚೇರಿಯಲ್ಲಿ ನಡೆಯಲಿದೆ. ಪರೀಕ್ಷೆಯ ದಿನಾಂಕ ಮತ್ತು ಸಮಯವನ್ನು ಅರ್ಹ ಅಭ್ಯರ್ಥಿಗಳಿಗೆ ಪತ್ರ ಮುಖೇನ ರವಾನಿಸಲಾಗಿದೆ. |
ಪತ್ರ ತಲುಪದ ಅರ್ಭರ್ಥಿಗಳು ಆಯೋಗವನ್ನು ಈ ದೂರವಾಣಿ ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆಗಳು ಹೀಗಿವೆ: 011-23385271, 011-23381125, 011-23098543 ಅಥವಾ Fax Nos. 011-23387310, 011-23384472. ಫಲಿತಾಂಶಕ್ಕಾಗಿ www.upsc.gov.in ವೆಬ್‌ಸೈಟನ್ನು ನೋಡಬಹುದು. (ಒನ್‌ಇಂಡಿಯಾ ಕನ್ನಡ) |
ಇನ್ನಷ್ಟು ಐಪಿಎಸ್ ಸುದ್ದಿಗಳುView All |
ಐಪಿಎಸ್ ಪರೀಕ್ಷೆ ಫಲಿತಾಂಶ ias ips exam results |
The Union Public Service Commission (UPSC) have announced the result of Civil Services (Main) Examination, 2011 and Roll Numbers of the candidates who have qualified for Personality Test for selection to the Indian Administrative Service, Indian Foreign Service, Indian Police Service and other Central Services (Group '... |
ಬಂಡೀಪುರದಲ್ಲಿ ವಿಫಲವಾಯ್ತು ಫಾಕ್ಸ್ ಲೈಟ್ ತಂತ್ರಜ್ಞಾನ | Fox Light Technology Failed In Bandipur - Kannada Oneindia |
| Updated: Wednesday, January 1, 2020, 12:09 [IST] |
ಚಾಮರಾಜನಗರ, ಜನವರಿ 01: ಗುಂಡ್ಲುಪೇಟೆ ತಾಲೂಕಿನಲ್ಲಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಹಾಗೂ ರಾಷ್ಟ್ರೀಯ ಉದ್ಯಾನವನದಿಂದ ನಾಡಿಗೆ ತೆರಳುವ ಕಾಡಾನೆ ಸೇರಿದಂತೆ ವನ್ಯಪ್ರಾಣಿಗಳನ್ನು ತಡೆಯುವ ಸಲುವಾಗಿ ಪ್ರಯೋಗಾತ್ಮಕವಾಗಿ ಅಳವಡಿಸಿದ್ದ ಆಸ್ಟ್ರೇಲಿಯಾದ ತಂತ್ರಜ್ಞಾನ ಫಾಕ್ಸ್ ಲೈಟ್ ವಿಫಲಗೊಂಡಿದೆ. |
ಈ ಹಿಂದೆ ಬಂಡೀಪುರ ಅಭಯಾರಣ್ಯ ಗೋಪಾಲಸ್ವಾಮಿ ಬೆಟ್ಟ ವಲಯದ ಆಂಜನೇಯ ದೇವಸ್ಥಾನ ಹಾಗೂ ಹುಂಡೀಪುರ ಹತ್ತಿರ ಫಾಕ್ಸ್ ಲೈಟ್ ಅಳವಡಿಸಲಾಗಿತ್ತು. ಈ ಫಾಕ್ಸ್ ಲೈಟ್ ಹೊರಸೂಸುವ ಬೆಳಕಿನಿಂದ ಕಾಡು ಪ್ರಾಣಿಗಳು ಹೆದರಿ ಹೊರಹೋಗುತ್ತವೆ ಎಂಬ ಉದ್ದೇಶದಿಂದ ಆಸ್ಟ್ರೇಲಿಯಾ ಫಾಕ್ಸ್ ಲೈಟ್ ಕಂಪನಿಯ ಸಿಇಓ ಐಯಾನ್ ಬಂಡೀಪುರಕ್ಕೆ ಖುದ್ದು ಭೇಟಿ ನೀಡಿ ದೀಪಗಳನ್ನು ಗೋಪಾಲಸ್ವಾಮಿಬೆಟ್ಟ ವಲಯ ಕಾರೆಮರಹಳ್ಳ ಹಾಗೂ ಕರಡಿಕಲ್... |
ಆದರೆ ಈ ಫಾಕ್ಸ್ ಲೈಟ್ ಗಳನ್ನು ಕಾಡಾನೆಗಳು ಕಾಲಿನಿಂದ ತುಳಿದು ನಾಶ ಮಾಡಿದ್ದು, ಯಾವುದೇ ಭಯವಿಲ್ಲದೆ ಹೊರಬರುತ್ತಿವೆ. ಜತೆಗೆ ಬೆಳಕಿನ ಪ್ರಖರತೆಯನ್ನು ಗಮನಿಸಿ ಲೈಟ್ ಗಳನ್ನು ಕಿತ್ತು ಹಾಕುತ್ತಿವೆ ಎನ್ನಲಾಗಿದೆ. ಹೀಗಾಗಿ ಅರಣ್ಯ ಇಲಾಖೆಯ ಈ ಪ್ರಯೋಗವನ್ನು ಕೈ ಬಿಟ್ಟಿದೆ. |
"ಗೋಪಾಲಸ್ವಾಮಿ ವಲಯ ವ್ಯಾಪ್ತಿಯಲ್ಲಿ ಆರು ಕಡೆ ಫಾಕ್ಸ್ ಲೈಟ್ ಅಳವಡಿಸಲಾಯಿತು. ಆನೆಗಳು ದಾಳಿ ಮಾಡಿ ನಾಶ ಮಾಡಿವೆ. ಇದು ಪ್ರಯೋಜನಕ್ಕೆ ಬರುವುದಿಲ್ಲ ಎಂಬುದು ಗೊತ್ತಾಗಿದೆ" ಎಂದು ಗೋಪಾಲಸ್ವಾಮಿ ಬೆಟ್ಟ ವಲಯ್ಯಾಣಧಿಕಾರಿ ನವೀನ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. |
ಅರಣ್ಯ ಇಲಾಖೆ ವಿವಿಧ ರೀತಿಯ ಕ್ರಮಗಳನ್ನು ಕೈಗೊಂಡಿದ್ದರೂ ಬಂಡೀಪುರ ಅರಣ್ಯದಂಚಿನಲ್ಲಿ ಮಾನವ ಮತ್ತು ವನ್ಯ ಜೀವಿಗಳ ನಡುವಿನ ಸಂಘರ್ಷಕ್ಕೆ ತಡೆ ಬಿದ್ದಿರಲಿಲ್ಲ. ಹೀಗಾಗಿ ಫಾಕ್ಸ್ ಲೈಟ್ ನ ವಿನೂತನ ಪ್ರಯೋಗಕ್ಕೆ ಅರಣ್ಯ ಇಲಾಖೆ ಮುಂದಾಗಿತ್ತು. ಆದರೆ ಇದಕ್ಕೂ ಕಾಡಾನೆಗಳು ಜಗ್ಗಲಿಲ್ಲ. ಫ್ಯಾಕ್ಸ್ ಲೈಟ್ ರಾತ್ರಿ ಸಮಯದಲ್ಲಿ ಕೆಂಪು, ನೀಲಿ, ಬಿಳಿ ಬಣ್ಣದ ಬೆಳಕನ್ನು ಹೊರಚೆಲ್ಲುವುದರಿಂದ ಕಾಡಾನೆ ಸೇರಿದಂ... |
bandipur technology animal chamarajanagar ಬಂಡೀಪುರ ತಂತ್ರಜ್ಞಾನ ಪ್ರಾಣಿ ಚಾಮರಾಜನಗರ |
The Fox light technology, an australian technology which was introduced by forest Department to keep wild animals away from entering villages in bandipur failed |
ನ್ಯೂಜಿಲೆಂಡ್‌ಗೆ ವಿಲಿಯಮ್ಸನ್ ಆಸರೆ | Prajavani |
ನ್ಯೂಜಿಲೆಂಡ್‌ಗೆ ವಿಲಿಯಮ್ಸನ್ ಆಸರೆ |
Published: 03 ಡಿಸೆಂಬರ್ 2018, 21:40 IST |
Updated: 03 ಡಿಸೆಂಬರ್ 2018, 21:40 IST |
ಅಬುಧಾಬಿ: ನಾಯಕ ಕೇನ್ ವಿಲಿಯಮ್ಸನ್ (89; 176ಎ, 7ಬೌಂ) ಅವರ ಅರ್ಧಶತಕದ ಬಲದಿಂದ ನ್ಯೂಜಿಲೆಂಡ್ ತಂಡ ಪಾಕಿಸ್ತಾನ ಎದುರಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ಕುಸಿಯುವ ಅಪಾಯದಿಂದ ಪಾರಾಗಿದೆ. |
ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ಸೋಮವಾರ ಮೊದಲು ಬ್ಯಾಟ್ ಮಾಡಿದ ಕಿವೀಸ್ ನಾಡಿನ ತಂಡ ಮೊದಲ ಇನಿಂಗ್ಸ್‌ನಲ್ಲಿ ದಿನದಾಟದ ಅಂತ್ಯಕ್ಕೆ 90 ಓವರ್‌ಗಳಲ್ಲಿ 7 ವಿಕೆಟ್‌ಗೆ 229ರನ್ ಕಲೆಹಾಕಿದೆ. |
ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ 72ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟ ಎದುರಿಸಿತ್ತು. ಈ ಹಂತದಲ್ಲಿ ಕೇನ್ ಮತ್ತು ಬಿ.ಜೆ.ವಾಟ್ಲಿಂಗ್ (ಬ್ಯಾಟಿಂಗ್ 42; 180ಎ, 1ಬೌಂ) ಸುಂದರ ಇನಿಂಗ್ಸ್ ಕಟ್ಟಿದರು. ಈ ಜೋಡಿ ಐದನೇ ವಿಕೆಟ್ ಪಾಲುದಾರಿಕೆಯಲ್ಲಿ 104ರನ್ ಗಳಿಸಿ ತಂಡದ ಮೇಲೆ ಆವರಿಸಿದ್ದ ಆತಂಕದ ಕಾರ್ಮೋಡವನ್ನು ದೂರ ಸರಿಸಿತು. |
ಸಂಕ್ಷಿಪ್ತ ಸ್ಕೋರ್: ನ್ಯೂಜಿಲೆಂಡ್: ಮೊದಲ ಇನಿಂಗ್ಸ್, 90 ಓವರ್‌ಗಳಲ್ಲಿ 7 ವಿಕೆಟ್‌ಗೆ 229 (ಜೀತ್ ರಾವಲ್ 45, ಕೇನ್ ವಿಲಿಯಮ್ಸನ್ 89, ಬಿ.ಜೆ.ವಾಟ್ಲಿಂಗ್ ಬ್ಯಾಟಿಂಗ್ 42, ಕಾಲಿನ್ ಡಿ ಗ್ರ್ಯಾಂಡ್‌ಹೋಮ್ 20, ವಿಲಿಯಮ್ ಸೋಮರ್‌ವಿಲ್ಲೆ ಬ್ಯಾಟಿಂಗ್12; ಹಸನ್ ಅಲಿ 46ಕ್ಕೆ1, ಶಾಹೀನ್ ಅಫ್ರಿದಿ 43ಕ್ಕೆ1, ಯಾಸಿರ್ ಶಾ 62ಕ್ಕೆ3, ಬಿಲಾಲ್ ಆಸಿಫ್ 57ಕ್ಕೆ2). |
ಅಂಡಮಾನ್ ದ್ವೀಪದಲ್ಲಿ ಸಿಲುಕಿದ್ದ ಎಲ್ಲ 2,376 ಮಂದಿ ಪ್ರವಾಸಿಗರ ರಕ್ಷಣೆ | News13 |
News13 > ಸುದ್ದಿಗಳು > ರಾಷ್ಟ್ರೀಯ > ಅಂಡಮಾನ್ ದ್ವೀಪದಲ್ಲಿ ಸಿಲುಕಿದ್ದ ಎಲ್ಲ 2,376 ಮಂದಿ ಪ್ರವಾಸಿಗರ ರಕ್ಷಣೆ |
ಅಂಡಮಾನ್ ದ್ವೀಪದಲ್ಲಿ ಸಿಲುಕಿದ್ದ ಎಲ್ಲ 2,376 ಮಂದಿ ಪ್ರವಾಸಿಗರ ರಕ್ಷಣೆ |
ಪೋರ್ಟ್ ಬ್ಲೇರ್: ಕೇಂದ್ರಾಡಳಿತ ಪ್ರದೇಶದ ಆಡಳಿತ ಮಂಡಳಿ ಹಾಗೂ ಭದ್ರತಾ ಪಡೆ ಸಿಬ್ಬಂದಿಗಳು ಅಂಡಮಾನ್ ಮತ್ತು ನಿಕೋಬಾರ್‌ನ ನೀಲ್ ಮತ್ತು ಹ್ಯಾವ್ಲಾಕ್ ದ್ವೀಪಗಳಲ್ಲಿ ಸಿಲುಕಿದ್ದ ವಿದೇಶಿ ಪ್ರವಾಸಿಗರು ಸೇರಿದಂತೆ ೨,೩೭೬ಕ್ಕೂ ಅಧಿಕ ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ. |
ನೀಲ್ ಮತ್ತು ಹ್ಯಾವ್ಲಾಕ್ ದ್ವೀಪಗಳಲ್ಲಿ 'ವರ್ದಾ' ಚಂಡಮಾರುತ ಮತ್ತು ಪ್ರತಿಕೂಲ ವಾತಾವರಣದ ಕಾರಣ ಅಲ್ಲಿ ಸಿಲುಕಿದ್ದ 2,376 ಪ್ರವಾಸಿಗರನ್ನು ಕಾರ್ಯಾಚರಣೆಯಲ್ಲಿ ರಕ್ಷಿಸಿ ಪೋರ್ಟ್ ಬ್ಲೇರ್‌ಗೆ ಸ್ಥಳಾಂತರಿಸಲಾಗಿದೆ. ಇವರಲ್ಲಿಸ್ಪೇನ್, ಜರ್ಮನಿ, ಇಸ್ರೇಲ್, ಐಲ್ಯಾಂಡ್, ಇಟಲಿ ಮತ್ತಿರ ರಾಷ್ಟ್ರಗಳ 15 ಮಂದಿ ವಿದೇಶಿಗರು ಸೇರಿದ್ದಾರೆ ಎಂದು ವಿಪತ್ತು ನಿರ್ವಹಣಾ ನಿರ್ದೇಶನಾಲಯ ತಿಳಿಸಿದೆ. |
ಭಾರತೀಯ ನೌಕಾಪಡೆಯ 6 ನೌಕೆಗಳಾದ ಕಾರ್ಮುಖ. ಕುಂಭೀರ್, ಬಿಟ್ರಾ., ಬರತಾಂಗ್, ಎಲ್‌ಸಿಯು ೨೭ ಹಾಗೂ ೩೮, ಕರಾವಳಿ ರಕ್ಷಣಾ ಪಡೆಗಳ 3 ಹಡಗುಗಳು, ಭಾರತೀಯ ವಾಯು ಸೇನೆಯ 3 ಎಂಐ-17 ಚಾಪರ್‌ಗಳ ಸಹಾಯದಿಂದ ಬಂಗಾಲ ಕೊಲ್ಲಿಯ ದ್ವೀಪಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. |
ಸಾರ್ವಜನಿಕರ ಮೇಲೆ ಗೂಳಿ ರೌದ್ರಾವತಾರ: ಬೆಚ್ಚಿಬಿದ್ದ ಜನತೆ | Bull Attack on Public in Bengaluru |
ಸಾರ್ವಜನಿಕರ ಮೇಲೆ ಗೂಳಿ ರೌದ್ರಾವತಾರ: ಬೆಚ್ಚಿಬಿದ್ದ ಜನತೆ |
Bengaluru, First Published 6, Sep 2020, 10:52 AM |
ಇಬ್ಬರಿಗೆ ಗಾಯ, ಓರ್ವನ ಸ್ಥಿತಿ ಗಂಭೀರ| ಹಗ್ಗ ಹಾಕಿ ಬಿಗಿದ ಜನರು ಗೂಳಿ ಸಾವು|ಘಟನೆಯಲ್ಲಿ ಕಾರು, ಕೆಲ ದ್ವಿಚಕ್ರ ವಾಹನಗಳು ಹಾಗೂ ಅಂಗಡಿಗಳು ಜಖಂ| ಗೂಳಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ನಾಯಿ ಕಚ್ಚಿ, ರೇಬಿಸ್‌ನಿಂದಾಗಿ ಮದವೇರಿ ದಾಂಧಲೆ ನಡೆಸಿರುವ ಸಾಧ್ಯತೆ| |
ಬೆಂಗಳೂರು(ಸೆ.06): ಮದವೇರಿದ ಗೂಳಿಯೊಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಾರ್ವಜನಿಕರಿಬ್ಬರಿಗೆ ತಿವಿದು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಎಚ್‌ಎಎಲ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. |
ಅನ್ನಸಂದ್ರಪಾಳ್ಯದ ಗುರಪ್ಪಾ (47) ಮತ್ತು ಸೆಲ್ವಕುಮಾರ್ (40) ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಲ್ಲಿ ಕಾರು, ಕೆಲ ದ್ವಿಚಕ್ರ ವಾಹನಗಳು ಹಾಗೂ ಅಂಗಡಿಗಳು ಜಖಂಗೊಂಡಿವೆ ಎಂದು ಎಚ್‌ಎಎಲ್ ಠಾಣೆ ಪೊಲೀಸರು ಹೇಳಿದ್ದಾರೆ. |
ಶನಿವಾರ ಬೆಳಗ್ಗೆ ಗುರಪ್ಪಾ ಮತ್ತು ಸೆಲ್ವಕುಮಾರ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಏಕಾಏಕಿ ಗೂಳಿ ಪಾದಚಾರಿಗಳ ಮೇಲೆ ಎರಗಿದೆ. ಗುರಪ್ಪಾ ಅವರನ್ನು ಕೊಂಬಿನಿಂದ ಎತ್ತಿ ಎಸೆದು, ತಿವಿದಿದೆ. ಕೆಳಗೆ ಬಿದ್ದ ಗುರಪ್ಪಾ ಅವರನ್ನು ಕೊಂಬಿನಿಂದ ತಿವಿಯುತ್ತಿತ್ತು. ಈ ವೇಳೆ ಗಾಯಾಳು ಸಂಪೂರ್ಣವಾಗಿ ಅಸ್ವಸ್ಥರಾಗಿ ಬಿದ್ದಿದ್ದರು. ಸಾರ್ವಜನಿಕರು ಗೂಳಿಯನ್ನು ದೊಣ್ಣೆಯಿಂದ ಹೊಡೆದು ತಡೆದು... |
ಸ್ಥಳಕ್ಕೆ ಬಂದ ಪೊಲೀಸರಿಗೆ ಕೂಡ ಗೂಳಿಯನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಅನ್ನಸಂದ್ರಪಾಳ್ಯ, ಲಾಲ್ ಬಹೂದ್ದೂರ್ ಶಾಸ್ತ್ರಿ, ಇಸ್ಲಾಂಪುರ, ವಿನಾಯಕ್ ನಗರದೆಲ್ಲೆಲ್ಲಾ ಸುತ್ತಾಡಿ ದಾಂಧಲೆ ನಡೆಸಿದೆ. ಸಾರ್ವಜನಿಕರೇ ದೂರದಿಂದ ಗೂಳಿಗೆ ಹಗ್ಗ ಹಾಕಿ ನಿಯಂತ್ರಿಸಿದ್ದಾರೆ. ಕುತ್ತಿಗೆ ಹಗ್ಗ ಹಾಕಿ ಬಿಗಿದ ಪರಿಣಾಮ ಗೂಳಿ ಸ್ಥಳದಲ್ಲಿಯೇ ಮೃತಪಟ್ಟಿದೆ. |
ಮದವೇರಿದ ಗೂಳಿ ಶುಕ್ರವಾರ ರಾತ್ರಿಯಿಂದ ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳಿಗೆ ತಿವಿಯುವುದನ್ನು ಮಾಡುತ್ತಿತ್ತು. ಸಾರ್ವಜನಿಕರು ಇದನ್ನು ಸಾಮಾನ್ಯ ಎಂದು ಸುಮ್ಮನಾಗಿದ್ದರು. ಆದರೆ ಬೆಳಗ್ಗೆ ಇದ್ದಕ್ಕಿದ್ದ ಹಾಗೇ ಸಾರ್ವಜನಿಕರ ಮೇಲೆ ಹೇರಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಈ ಸಂಬಂಧ ಸಾರ್ವಜನಿಕರು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಗೂಳಿ ಸುಮಾರು ಮೂರ್ನಾಲ... |
ಗೂಳಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ನಾಯಿ ಕಚ್ಚಿ, ರೇಬಿಸ್‌ನಿಂದಾಗಿ ಮದವೇರಿ ದಾಂಧಲೆ ನಡೆಸಿರುವ ಸಾಧ್ಯತೆ ಇದೆ. ವರದಿ ಬಂದ ಬಳಿಕ ಖಚಿತವಾಗಿ ತಿಳಿಯಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. |
ಶೀಘ್ರದಲ್ಲೇ ಪ್ರಕಟವಾಗಲಿದೆ ಟಾಟಾ ಕಾರುಗಳ ಹೊಸ ದರ - Kannada DriveSpark |
Updated: Monday, August 9, 2021, 11:41 [IST] |
ಆಟೋ ಬಿಡಿಭಾಗಗಳ ದರ ಹೆಚ್ಚಳ ಪರಿಣಾಮ ವಿವಿಧ ಕಾರು ಉತ್ಪಾದನಾ ಕಂಪನಿಗಳು ತಮ್ಮ ಹೊಸ ವಾಹನ ಬೆಲೆಯಲ್ಲಿ ನಿರಂತರವಾಗಿ ಹೆಚ್ಚಳ ಮಾಡುತ್ತಿದ್ದು, ಟಾಟಾ ಮೋಟಾರ್ಸ್ ಕಂಪನಿಯು ಸಹ ಅಗಸ್ಟ್ 1ರಿಂದಲೇ ಬೆಲೆ ಹೆಚ್ಚಳ ಮಾಡಲು ನಿರ್ಧರಿಸಿದೆ. |
ಹೊಸ ವಾಹನಗಳ ದರ ಪರಿಷ್ಕರಣೆಯ ಮಾನದಂಡಗಳನ್ನು ಬದಲಾವಣೆ ಮಾಡಿರುವ ಆಟೋ ಉತ್ಪಾದನಾ ಕಂಪನಿಗಳು ಬಿಡಿಭಾಗಗಳ ಕೊರತೆ ಮತ್ತು ಹೆಚ್ಚುತ್ತಿರುವ ವೆಚ್ಚಗಳನ್ನು ನಿರ್ವಹಿಸಲು ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಬೆಲೆ ಹೆಚ್ಚುತ್ತಿವೆ. ಬಿಡಿಭಾಗಗಳು ದುಬಾರಿಯಾಗುತ್ತಿರುವುದರಿಂದ ಹೊಸ ವಾಹನಗಳು ಕಳೆದ ಒಂದು ವರ್ಷದಲ್ಲಿ ಸಾಕಷ್ಟು ಬೆಲೆ ಏರಿಕೆ ಕಂಡಿದ್ದು, ವಾಹನ ಮಾಲೀಕತ್ವವು ಮತ್ತಷ್ಟು ಹೊರೆಯಾಗಿ ಪರಿಣಮಿ... |
ಕೋವಿಡ್‌ಗೂ ಮುನ್ನ ಪ್ರತಿ ಆರು ತಿಂಗಳಿಗೆ ಒಂದು ಬಾರಿ ಉತ್ಪಾದನಾ ವೆಚ್ಚದ ಆಧಾರದ ಮೇಲೆ ವಾಹನಗಳ ದರ ಪರಿಷ್ಕರಣೆ ಮಾಡುತ್ತಿದ್ದ ಆಟೋ ಕಂಪನಿಗಳು ಇದೀಗ ಬಿಡಿಭಾಗಗಳ ಕೊರತೆ ಮತ್ತು ಹೆಚ್ಚುತ್ತಿರುವ ವೆಚ್ಚ ನಿರ್ವಹಣೆಗಾಗಿ ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ದರ ಹೆಚ್ಚಳ ಮಾಡುತ್ತಿವೆ. |
ಬಹುತೇಕ ವಾಹನ ಉತ್ಪಾದನಾ ಕಂಪನಿಗಳು 2021ರಲ್ಲೇ ಎರಡರಿಂದ ಮೂರು ಬಾರಿ ದರ ಹೆಚ್ಚಿಸಿದ್ದು, ಇದೀಗ ಮತ್ತೆ ಬೆಲೆ ಹೆಚ್ಚಿಸಲು ನಿರ್ಧರಿಸಿವೆ. ಇದರಿಂದ ಕಾರು ಮಾಲೀಕತ್ವವು ಸಾಕಷ್ಟು ದುಬಾರಿಯಾಗುತ್ತಿದ್ದು, ಹೊಸ ವಾಹನ ಬಿಡಿಭಾಗಗಳ ಉತ್ಪಾದನೆಯಲ್ಲಿ ಉಂಟಾಗಿರುವ ಬಿಕ್ಕಟ್ಟು ದರ ಸಮರಕ್ಕೆ ಪ್ರಮುಖ ಕಾರಣವಾಗಿದೆ. |
ಹೊಸ ವಾಹನಗಳ ಬೆಲೆಯಲ್ಲಿ ನಿರಂತರವಾಗಿ ಶೇ. 1.50ರಿಂದ ಶೇ.2 ರಷ್ಟು ಬೆಲೆ ಹೆಚ್ಚುತ್ತಿದ್ದು, ಕಳೆದ ಒಂದು ವರ್ಷದಲ್ಲಿ ಬಜೆಟ್ ಕಾರುಗಳ ಬೆಲೆಯಲ್ಲಿ ಸರಾಸರಿಯಾಗಿಯಾಗಿ ರೂ.50 ಸಾವಿರದಿಂದ ರೂ.1.20 ಲಕ್ಷದಷ್ಟು ಬೆಲೆ ಹೆಚ್ಚಳವಾಗಿವೆ. |
ಮಧ್ಯಮ ಗಾತ್ರದ ಕಾರುಗಳ ಬೆಲೆಯಲ್ಲಿ ರೂ. 80 ಸಾವಿರದಿಂದ ರೂ. 1.50 ಲಕ್ಷದವರೆಗೆ ಬೆಲೆ ಹೆಚ್ಚಳವಾಗಿದ್ದು, ವಿದೇಶಿ ಮಾರುಕಟ್ಟೆಗಳಿಂದ ಆಮದುಗೊಳ್ಳುವ ಎಲೆಕ್ಟ್ರಾನಿಕ್ ಸೆಮಿ ಕಂಡಕ್ಟರ್‌ಗಳ ಬೆಲೆ ಹೆಚ್ಚಳವಾಗುತ್ತಿರುವ ಪರಿಣಾಮ ಹೊಸ ವಾಹನ ಖರೀದಿಯು ದುಬಾರಿಯಾಗುತ್ತಿದೆ. |
ಕಳೆದ ಜನವರಿ ಮತ್ತು ಏಪ್ರಿಲ್‌ನಲ್ಲಿ ದರ ಹೆಚ್ಚಳ ಮಾಡಿದ್ದ ಟಾಟಾ ಕಂಪನಿಯು ಇದೀಗ ಅಗಸ್ಟ್ 1ರಿಂದ ಮತ್ತೆ ಬೆಲೆ ಹೆಚ್ಚಳ ಮಾಡುವುದಾಗಿ ಹೇಳಿಕೊಂಡಿದ್ದು, ಹೊಸ ದರಪಟ್ಟಿಯ ಪ್ರಮುಖ ಕಾರು ಮಾದರಿಗಳು ಶೇ.1.50ರಿಂದ ಶೇ.2ರಷ್ಟು ದುಬಾರಿಯಾಗುವ ಸಾಧ್ಯತೆಗಳಿವೆ. |
ಇನ್ನು ಹೊಸ ವಾಹನ ಮಾರಾಟವು ಕಳೆದ ಎರಡು ತಿಂಗಳ ನಂತರ ಮೊದಲ ಬಾರಿಗೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ದೇಶದ ಮುಂಚೂಣಿ ಕಾರು ತಯಾರಿಕಾ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಪ್ರಮುಖ ಕಾರುಗಳ ಖರೀದಿಯನ್ನು ಉತ್ತೇಜಿಸಲು ಹಲವಾರು ಆಫರ್‌ಗಳನ್ನು ಘೋಷಣೆ ಮಾಡಿದೆ. |
ಬಾನರಿಮೆ – ಅರಿಮೆ |
Tag: ಬಾನರಿಮೆ |
By admin 20/04/2020 25/04/2020 ಭೌತಶಾಸ್ತ್ರ (physics) |
(ಇಗೋ ವಿಜ್ಞಾನ – 2020 ಪೈಪೋಟಿಯಲ್ಲಿ ವಿಶೇಷ ಬಹುಮಾನ ಪಡೆದ ಬರಹ) |
– ಎಮ್. ಎಸ್. ಎಸ್. ಮೂರ್ತಿ |
ಭೂಮಿಯ ಮೇಲಿರುವಂತೆ ಇತರ ಗ್ರಹಗಳಲ್ಲಿ ಜೀವ ಸಂಪತ್ತು ಇದೆಯೆ? ಅನಾದಿಕಾಲದಿಂದಲೂ ಈ ಪ್ರಶ್ನೆ ಮನುಷ್ಯನ ಕುತೂಹಲವನ್ನು ಕೆರಳಿಸುತ್ತಾ ಬಂದಿದೆ. ಆದರೆ, ಇದುವರೆಗೆ ತಿಳಿದಿರುವಂತೆ, ಜೀವ ಸಂಪತ್ತು ಸಾಧ್ಯವಾಗಿರುವುದು ಭೂಮಿಯ ಮೇಲೆ ಮಾತ್ರ. ಅದಕ್ಕೆ ಅನೇಕ ಕಾರಣಗಳು ಇವೆ. ಭೂಮಿಯ ಮೇಲಿನ ತಾಪಮಾನ ಸರಾಸರಿ 15°C ಇರುವುದರಿಂದಾಗಿ, ನೀರು ಜಲರೂಪದಲ್ಲಿ ಲಭ್ಯವಿದ್ದು ಜೀವ ಸಂಪತ್ತು ವೃದ್ಧಿಯಾಗಲು ಪೂರಕವಾಗ... |
ಸುಮಾರು 200,000 ವರ್ಷಗಳ ಹಿಂದೆ ಆಧುನಿಕ ಮಾನವ ಈ ಭೂಮಿಯ ಮೇಲೆ ಮೈದಳೆದನೆಂಬುದು ತಜ್ಞರ ಲೆಕ್ಕಾಚಾರ. ಆದರೆ, ಈ ದೀರ್ಘಾವಧಿಯಲ್ಲಿ ಮನುಷ್ಯ ತನ್ನ ಪರಿಸರವನ್ನೇ ಬದಲಾಯಿಸಿಬಿಟ್ಟಿದ್ದಾನೆ. ಏರುತ್ತಿರುವ ಜನಸಂಖ್ಯೆ, ಅನಿಯಂತ್ರಿತ ನಗರೀಕರಣ ಇವುಗಳಿಂದಾಗಿ ನೈಸರ್ಗಿಕ ಸಂಪನ್ಮೂಲಗಳು ಬರಿದಾಗುವುದಲ್ಲದೆ, ಹವಾಮಾನದಲ್ಲಿಯೂ ತೀವ್ರ ಏರುಪೇರುಗಳಾಗಿ ಜೀವಿಗಳ ಅಸ್ತಿತ್ವಕ್ಕೇ ಮಾರಕವಾಗುವ ಸನ್ನಿವೇಶ ಉಂಟಾಗಿ... |
ಮಾನವ ಚಟುವಟಿಕೆಗಳು ಮಾತ್ರವೇ ಅಲ್ಲದೆ ನಿಸರ್ಗದಲ್ಲಿ ಸಂಭವಿಸುವ ಹಲವು ಘಟನೆಗಳೂ ಭೂಮಿಯ ಮೇಲಿನ ಜೀವಿಗಳ ಅಸ್ತಿತ್ವಕ್ಕೆ ಮಾರಕವಾಗಬಹುದು. ಖಗೋಳ ವಿಜ್ಞಾನಿಗಳ ಪ್ರಕಾರ ಸುಮಾರು 5 ಬಿಲಿಯನ್ ವರ್ಷಗಳ ಹಿಂದೆ ಸೌರಮಂಡಲ ಮೈದಳೆಯಿತು. ಈ ಸೌರಮಂಡಲದ ಅಧಿಪತಿಯಾದ ಸೂರ್ಯ ಇನ್ನೊಂದು 4.5 ಬಿಲಿಯನ್ ವರ್ಷಗಳನಂತರ ಅವಸಾನ ಸ್ಥಿತಿಯನ್ನು ತಲುಪಿ, ಕೆಂಪುದೈತ್ಯವಾಗಿ (Red Giant) ಪರಿವರ್ತನೆಯಾಗುತ್ತದೆ. ಆಗ ಅದ... |
ಮಂಗಳಗ್ರಹದಲ್ಲಿ ಏನಿದೆ, ಏನಿಲ್ಲ? |
ಮಂಗಳಗ್ರಹವು, ಭೂಮಿಯಿಂದ ಆಚೆಗೆ, ಸೂರ್ಯನಿಂದ ಸರಾಸರಿ 228 ಮಿಲಿಯನ್ ಕಿಮೀ ದೂರದಲ್ಲಿದೆ. ಮಂಗಳಗ್ರಹ ಮೈದಳೆದಾಗ, ಅದು ಬಹುಮಟ್ಟಿಗೆ ಭೂಮಿಯಂತೆಯೇ ಇತ್ತು. ಅಲ್ಲಿನ ಒಂದು ದಿನದ ಅವಧಿ, ಭೂಮಿಯ ದಿನಕ್ಕಿಂತ ಸುಮಾರು 39 ನಿಮಿಶಗಳು ಅಧಿಕ. ವರ್ಷ ಮಾತ್ರ 687 ಭೂದಿನಗಳು. ಹಾಗೆಯೇ, ಋತುಮಾನಗಳು ಕೂಡ ದೀರ್ಘ. ಆಗ ಅಲ್ಲಿ ದಟ್ಟ ವಾತಾವರಣ, ಹರಿವ ನೀರು, ಪ್ರಬಲ ಕಾಂತಕ್ಷೇತ್ರ ಎಲ್ಲ ಇದ್ದವು. ಆದರೆ, ಕೆಲವು... |
ಮಂಗಳದ ವ್ಯಾಸ, ಭೂಮಿಯ ವ್ಯಾಸದ ಅರ್ಧದಷ್ಟು. ಹಾಗಾಗಿ ಅದರ ಗುರುತ್ವ ಭೂಮಿಯ ಗರುತ್ವದ ಶೇಕಡ 40ರಷ್ಟು ಮಾತ್ರ. ಅದಲ್ಲದೆ, ಮಂಗಳ ಸೂರ್ಯನಿಂದ, ಭೂಮಿಗಿಂತ ಸರಾಸರಿ 60 ಮಿಲಿಯನ್ ಕಿಲೊಮೀಟರ್ ಅಧಿಕ ದೂರದಲ್ಲಿದೆ. ಹಾಗಾಗಿ, ಅಲ್ಲಿ ಬೀಳುವ ಸೂರ್ಯನ ಬೆಳಕು, ಭೂಮಿಯ ಮೇಲೆ ಬೀಳುವ ಬೆಳಕಿನ ಅರ್ಧದಷ್ಟು. ಸರಾಸರಿ ತಾಪಮಾನ ಮೈನಸ್ 63°C ಇಂದು ಮಂಗಳ ಒಂದು ಶೀತ, ಬಂಜರು ಗ್ರಹವಾಗಿದೆ. |
ಮಂಗಳದಲ್ಲಿ ಬದುಕುವುದು ಹೇಗೆ? |
ಹಾಗಾಗಿ, ಮಂಗಳಗ್ರಕ್ಕೆ ವಲಸೆ ಹೋಗುವುದೆಂದರೆ, ಬೇರೊಂದು ಊರು ಅಥವಾ ದೇಶಕ್ಕೆ ಹೋಗಿ ನೆಲಸಿದಷ್ಟು ಸುಲಭವಲ್ಲ. ಮಾನವ ಹಾಗೂ ಇತರ ಜೀವಿಗಳು ಲಕ್ಷಾಂತರ ವರ್ಷಗಳಿಂದ ವಿಕಸನಗೊಂಡು ಭೂಮಿಯಮೇಲಿನ ಪರಿಸರಕ್ಕೆ ಹೊಂದಿಕೊಂಡಿವೆ. ಮಂಗಳಗ್ರಹದಲ್ಲಿ ಇಲ್ಲಿನಂತೆ ಮುಕ್ತವಾಗಿ ಓಡಾಡಿಕೊಂಡಿರಲು ಸಾಧ್ಯವಿಲ್ಲ. ಯಾವಾಗಲೂ ಆಮ್ಲಜನಕದ ಸಿಲೆಂಡರ್ ಜೊತೆಯಲ್ಲಿ ಇರಲೇಬೇಕು. ವಾತಾವರಣದ ಒತ್ತಡ ತೀರ ಕಡಿಮೆಯಾದ್ದರಿಂದ ದೇಹ... |
ಮಂಗಳಗ್ರಹದ ಕಡಿಮೆ ಗುರುತ್ವವೂ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು.ಇಂಟರ್ನ್ಯಾಶನಲ್ ಸ್ಪೇಸ್ ಸ್ಟೇಶನ್ (International Space Station – ISS) ಗಗನ ಯಾತ್ರಿಗಳ ಅನುಭವದ ಪ್ರಕಾರ, ಮಿನಿ ಗುರುತ್ವದಿಂದಾಗಿ ದೇಹದ ಮೂಳೆ, ಮಾಂಸ ಕ್ಷೀಣಿಸಿ ಮೂಳೆ ಮುರಿತ ಉಂಟಾಗಬಹುದು. ಅಲ್ಲದೇ, ಭೂಮಿಯ ಮೇಲಿರುವಾಗ, ಗುರುತ್ವಕ್ಕೆ ವಿರುದ್ಧ ದಿಕ್ಕಿನಲ್ಲಿ ರಕ್ತ ಸಂಚಲನೆಯಾಗಬೇಕಾದುದರಿಂದ, ನಮ್ಮ ಹೃದಯ ಹೆಚ್ಚು ದಕ... |
ಹಾಗಾದರೆ, ಮನುಷ್ಯನಿಗೆ ಮಂಗಳಗ್ರಹದಲ್ಲಿ ವಾಸಮಾಡಲು ಸಾಧ್ಯವಿಲ್ಲವೆ? ಸಾಧ್ಯವಿದೆ ಎನ್ನುತ್ತಾರೆ ವಿಜ್ಞಾನಿಗಳು. ಅದಕ್ಕಾಗಿ ಕೆಲವು ಪರಿಹಾರಗಳನ್ನು ಸೂಚಿಸಿದ್ದಾರೆ. |
ಎರಡನೇ ಭೂಮಿ: |
ಈ ಸಮಸ್ಯೆಗಳಿಗೆ ಒಂದು ದೀರ್ಘಕಾಲದ ಪರಿಹಾರವೆಂದರೆ, ಮಂಗಳಗ್ರಹವನ್ನು ಎರಡನೇ ಭೂಮಿಯಾಗಿ ಪರಿವರ್ತಿಸುವುದು. ಅದಕ್ಕೆ ಟೆರಾಪಾರ್ಮಿಂಗ್ (Terraforming) ಎನ್ನುತ್ತಾರೆ. ಮೊದಲನೆಯದಾಗಿ, ಅಲ್ಲಿ ಒಂದು ದಟ್ಟ ವಾತಾವರಣ ಸೃಷ್ಟಿಸಬೇಕು. ಅಲ್ಲಿನ ಬಂಡೆಗಳು, ಮಣ್ಣು, ಉತ್ತರ ಮತ್ತು ದಕ್ಷಿಣ ಧ್ರುವ ಇವುಗಳಲ್ಲಿ ಹೇರಳವಾಗಿ ಕಾರ್ಬನ್ ಡೈಆಕ್ಸೈಡ್ ಘನೀಭೂತವಾಗಿದೆ. ಅದನ್ನು ಬಿಡುಗಡೆ ಮಾಡುವುದರಿಂದ ವಾತಾವರಣ... |
ಮಂಗಳದ ಮಣ್ಣಿನಲ್ಲಿ, ಕಬ್ಬಿಣದ ಅಂಶ ಹೆಚ್ಚಿನ ಸಾಂದ್ರತೆಯಲ್ಲಿದೆ. ಅದೇ ಮಾದರಿಯ ಮಣ್ಣನ್ನು ಪ್ರಯೋಗಾಲಯದಲ್ಲಿ ಸೃಷ್ಟಿಸಿ, ಅದಕ್ಕೆ ಸೂಕ್ತವಾದ ಪಾಲಿಮರ್ ನ್ನು ಬೆರಸಿ, ಒತ್ತಡಕ್ಕೆ ಒಳಪಡಿಸಿದರೆ, ಗಟ್ಟಿಯಾದ ಇಟ್ಟಿಗೆಗಳನ್ನು ತಯಾರಿಸಬಹುದೆಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಅದರಿಂದ ಸುರಕ್ಷಿತವಾದ ವಸತಿಗಳನ್ನು ಮಂಗಳದ ಮಣ್ಣಿನಿಂದಲೇ ನಿರ್ಮಾಣ ಮಾಡಬಹುದು. |
ಆದರೆ, ಮಂಗಳದಲ್ಲಿ ಹೀಗೆ ಸೃಷ್ಟಿಸಿದ ವಾಯುಮಂಡಲ, ಮತ್ತೆ ಚದುರಿಹೋಗದೆ, ಸ್ಥಿರವಾಗಿರಬೇಕಾದರೆ, ಅದನ್ನು ಸೌರಮಾರುತದ ವಿಕಿರಣಗಳಿಂದ ರಕ್ಷಿಸಲು ಒಂದು ಪ್ರಬಲ ಕಾಂತಕ್ಷೇತ್ರ ಬೇಕು. ಅದಕ್ಕಾಗಿ ನಾಸಾ ವಿಜ್ಞಾನಿಗಳು ಒಂದು ಅದ್ಭುತ ಯೋಜನೆಯನ್ನು ರೂಪಿಸಿದ್ದಾರೆ. ಅದರ ಪ್ರಕಾರ ಸೂರ್ಯ ಮತ್ತು ಮಂಗಳದ ನಡುವೆ ಒಂದು ಪ್ರಬಲವಾದ (1 ರಿಂದ 2 ಟೆಸ್ಲ) ಕೃತಕ ಕಾಂತಕ್ಷೇತ್ರವನ್ನು ನಿರ್ಮಿಸಲಾಗುವುದು. ಅದು ಸೌರ... |
ಮಂಗಳದಲ್ಲಿ ಒಂದು ಹೊಸ ಮಾನವ ಪ್ರಭೇದ? |
ಹೀಗೆ ಮಂಗಳಗ್ರಹವನ್ನು ಎರಡನೇ ಭೂಮಿಯಾಗಿ ಪರಿವರ್ತಿಸಲು ಹಲವಾರು ಯೋಜನೆಗಳಿವೆ. ಆದರೆ, ಅವುಗಳಿಂದ ಭಿನ್ನವಾಗಿ, ವಿಜ್ಞಾನಿಗಳು ಮತ್ತೊಂದು ರೀತಿಯ ಯೋಜನೆಯ ಬಗ್ಗೆಯೂ ಚರ್ಚಿಸುತ್ತಿದ್ದಾರೆ. ಮಂಗಳವನ್ನು ಎರಡನೇ ಭೂಮಿಯಾಗಿ ರೂಪಿಸುವ ಬದಲು, ಮನುಷ್ಯನನ್ನೇ ಮಂಗಳದ ಪರಿಸರಕ್ಕೆ ಹೊಂದಿಕೊಳ್ಳುವಂತೆ ಏಕೆ ಪರಿವರ್ತಿಸಬಾರದು? ಅಂತಹ ಮನುಷ್ಯ ಉಸಿರಾಡಲು ವಾತಾವರಣ ಬೇಕಿಲ್ಲ. ಅಲ್ಲಿನ ಕಡಿಮೆ ವಾಯು ಒತ್ತಡ, ಗು... |
ಈ ಎಲ್ಲ ಯೋಜನೆಗಳೂ, ಸೈದ್ಧಾಂತಿಕವಾಗಿ ಸಾಧ್ಯವಾದರೂ, ಸಾಕ್ಷಾತ್ಕಾರಗೊಳ್ಳಬೇಕಾದರೆ, ಸಹಸ್ರಾರು ವರ್ಷಗಳೇ ಬೇಕಾಗಬಹುದೆಂದು ತಜ್ಞರ ಅಭಿಪ್ರಾಯ. ಇವೆಲ್ಲದರ ನಡುವೆಯೂ, ಮಾನವನ ಪ್ರಥಮ ಮಂಗಳಯಾನಕ್ಕೆ ಸಿದ್ಧತೆ ನಡೆಯುತ್ತಿದೆ. ಅಮೆರಿಕದ ನಾಸಾ ಸಂಸ್ಥೆಯು ಒಂದು ಶೋಧಕ ತಂಡವನ್ನು 2030ರ ದಶಕದಲ್ಲಿ ಕಳುಹಿಸಲು ತಯಾರಿ ನಡೆಸುತ್ತಿದೆ. ಅನೇಕ ಖಾಸಗಿ ಸಂಸ್ಥೆಗಳೂ ಮಂಗಳದ ವಾಸ್ತವ್ಯದಲ್ಲಿ ಉತ್ಸುಕವಾಗಿವೆ. ಅಮ... |
ಅದೇ ರೀತಿ ಯುನೈಟೆಡ್ ಅರಬ್ ರಿಪಬ್ಲಿಕ್ ಕೂಡ ಒಂದು ಯೋಜನೆಯನ್ನು ಹಮ್ಮಿಕೊಂಡು, ಅದಕ್ಕಾಗಿ ದುಬೈ ನಗರದಲ್ಲಿ ಮಾದರಿ ಮಾರ್ಸ್ ಸಿಟಿ (Mars City) ನಿರ್ಮಾಣವಾಗುತ್ತಿದೆ. ಅದು 2023ರಲ್ಲಿ ಮುಗಿಯಬಹುದು. |
ಹಾಗಾಗಿ, ಮಂಗಳಗ್ರಹದಲ್ಲಿ ವಾಸ್ತವ್ಯ ಹೂಡುವುದು ಹಗಲುಗನಸೇನಲ್ಲ. ಆದರೆ, ಅದರ ಉತ್ಸಾಹಿಗಳು ಬಯಸಿದಷ್ಟು ಬೇಗ ಸಾಧ್ಯವಾಗದೇ ಇರಬಹುದು. ಆದರೆ, ವಿಜ್ಞಾನಿಗಳು ಅಷ್ಟಕ್ಕೇ ತೃಪ್ತರಾಗಿಲ್ಲ. ಮೊದಲೇ ಹೇಳೀದಂತೆ, ಸೂರ್ಯನ ಅವಸಾನದ ವೇಳೆ ಮಂಗಳ ಗ್ರಹ ಕೂಡ ನಾಶವಾಗುವುದು. ಅಂತಹ ಆಪತ್ತು ಸಂಭವಿಸುವ ಮೊದಲೇ, ಮನುಕುಲ ಸೌರಮಂಡಲದಿಂದಲೇ ಹೊರಗೆ, ಬೇರೆ ನಕ್ಷತ್ರಗಳ ಗ್ರಹಗಳಲ್ಲಿ ವಾಸ್ತವ್ಯ ಹೂಡಬೇಕಾಗುತ್ತದೆ. ಅ... |
Tagged :: ಎಮ್.ಎಸ್.ಎಸ್.ಮೂರ್ತಿ ::, astronomy, Mars, Terraforming, ಇಗೋ ವಿಜ್ಞಾನ, ಖಗೋಳಶಾಸ್ತ್ರ, ಬಾನರಿಮೆ, ಮಂಗಳಗ್ರಹ |
ಜಿಲ್ಲೆಯಾದ್ಯಂತ ಏಕಕಾಲಕ್ಕೆ ೧೩೫ ಗ್ರಾಮಗಳಲ್ಲಿ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ (ರ್ಯಾಟ್)ಗೆ ಚಾಲನೆ ಎಲ್ಲ ಗ್ರಾಮಗಳಲ್ಲಿ ಕೋವಿಡ್ ಪರೀಕ್ಷೆ: ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ - Gadikannadiga |
Subsets and Splits
No community queries yet
The top public SQL queries from the community will appear here once available.