text
stringlengths
0
61.5k
ಸೋಮವಾರ ಪುತ್ತೂರು ಎಪಿ‌ಎಂಸಿ ಆಡಳಿತ ಕಚೇರಿಯ ಸಭಾಂಗಣದಲ್ಲಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು. ಮುಂದಿನ ದಿನಗಳಲ್ಲಿ ಬಿಟ್ಟು ಹೋಗಿರುವ ಕಾಮಗಾರಿಗಳ ರೂ. 60 ಲಕ್ಷ ಕ್ರಿಯಾಯೋಜನೆಯನ್ನು ಎಪಿ‌ಎಂಸಿ ಆಡಳಿತ ನಿರ್ದೇಶಕರಿಗೆ ಕಳುಹಿಸಿಕೊಡುವ ಕುರಿತು ಸಭೆಯಲ್ಲಿ ಅಧ್ಯಕ್ಷರು ಪ್ರಸ್ತಾಪಿಸಿದರು.
ಜ. 7 ರಂದು ಪುತ್ತೂರು ಎಪಿ‌ಎಂಸಿ ನೇತೃತ್ವದಲ್ಲಿ ಖಾಸಗಿ ಆಸ್ಪತ್ರೆ ಮತ್ತು ಇತರ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ಖಾಸಗಿ ವೈದ್ಯರ ಮುಷ್ಕರದ ಕಾರಣದಿಂದ ಈ ಹಿಂದೆ ನಿಗದಿಯಾಗಿದ್ದ ದಿನಾಂಕ ಮುಂದೂಡಲ್ಪಟ್ಟಿತ್ತು. ಇದೇ ಸಂದರ್ಭ ಎಪಿ‌ಎಂಸಿ ಪ್ರಾಂಗಣದಲ್ಲಿ ಎಟಿ‌ಎಂ ವ್ಯವಸ್ಥೆ ಉದ್ಘಾಟನೆಯಾಗಲಿದೆ. ಖಾಸಗಿ ಪ್ರವರ್ತನೆಯಲ್ಲಿ ಸರ್ವ ಸರಕಿನ ಮಳಿಯೊಂದು ತೆರೆಯಲ್ಪಡಲಿದೆ ಎಂದು ಅಧ್ಯಕ್ಷರು ಸಭೆಗೆ ಮಾಹಿತಿ ನೀಡಿದರು. ಎಪಿ‌ಎಂಸಿಯಿಂದ ಸಿಗುವ ವಿವಿಧ ಸವಲತ್ತುಗಳ ಮತ್ತು ಅನುದಾನದ ಕುರಿತು ಮಾಹಿತಿ ಮತ್ತು ತರಬೇತಿ ಶಿಬಿರವು ಡಿ.22 ಕ್ಕೆ ಮೈಸೂರಿನಲ್ಲಿ ನಡೆಯಲಿದ್ದು, ಪುತ್ತೂರು ಎಪಿ‌ಎಂಸಿ ನಿರ್ದೇಶಕರೆಲ್ಲರೂ ತರಬೇತಿ ಕಾಂiiಗಾರದಲ್ಲಿ ಭಾಗವಹಿಸುವ ಕುರಿತು ನಿರ್ಣಯ ಕೈಗೊಳ್ಳಲಾಯಿತು.
ಎಪಿ‌ಎಂಸಿ ಪ್ರಾಂಗಣದಲ್ಲಿರುವ ರೈತ ಸಭಾಭವನವು ಸುಸಜ್ಜಿತ ಸಭಾಂಗಣವಾಗಿದ್ದು, ರೈತ ಕುಟುಂಬಗಳ ಶುಭ ಕಾರ್ಯಗಳಿಗೆ ಆಧ್ಯತೆ ನೀಡಲಾಗುತ್ತಿದೆ. ಕಡಿಮೆ ಬಾಡಿಗೆಯಲ್ಲಿ ರೈತರಿಗೆ ಈ ಸಭಾಭವನ ಲಭ್ಯವಾಗಿದೆ. ಇದನ್ನು ಇನ್ನಷ್ಟು ಸುಸಜ್ಜಿತಗೊಳಿಸಿ ಪುತ್ತೂರಿನ ನಂಬರ್ 1 ಸಭಾಭವನವನ್ನಾಗಿ ಪರಿವರ್ತಿಸಲು ಆಡಳಿತ ಮಂಡಳಿ ತೀರ್ಮಾನಿಸಿದೆ. ಕಡಬದ ಉಪ ಮಾರುಕಟ್ಟೆ ಪ್ರಾಂಗಣ ರಚನೆ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅಧ್ಯಕ್ಷರು ವಿವರಿಸಿದರು.
ಎಪಿ‌ಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿರುವ ಕೆನರಾ ಟ್ರೇಡರ್‍ಸ್‌ನ ಮಾಲಕ ಅಬ್ದುಲ್ ರಹಿಮಾನ್. ಪಿ 2015 ರ ಜ. 19 ಕ್ಕೆ ಮೃತಪಟ್ಟಿದ್ದಾರೆ. ಈ ನಿಟ್ಟಿನಲ್ಲಿ ಅವರ ಮಾಲಕತ್ವವನ್ನು ತನ್ನ ಹೆಸರಿಗೆ ಬದಲಾಯಿಸುವಂತೆ ಅವರ ಪುತ್ರ ನವಾಝ್ ಅಹಮ್ಮದ್ ಪಡೀಲು ನ. 17 ಕ್ಕೆ ಅರ್ಜಿ ಸಲ್ಲಿಸಿರುವ ವಿಚಾರ ಸಭೆಯಲ್ಲಿ ಪ್ರಸ್ತಾಪವಾದಾಗ ಆಕ್ಷೇಪಿಸಿದ ನಿರ್ದೇಶಕ ತೀರ್ಥಾನಂದ ದುಗ್ಗಳ ಮೃತಪಟ್ಟವರ ಹೆಸರು ಬದಲಾಯಿಸಲು 2 ವರ್ಷ ಬೇಕಾಗಿದೆಯೇ ಎಂದು ಪ್ರಶ್ನಿಸಿದರು. ಅಲ್ಲದೆ 2 ವರ್ಷ ಒಂದು ಸಂಸ್ಥೆಯ ಮಾಲಕತ್ವ ಮೃತಪಟ್ಟವರ ಹೆಸರಿನಲ್ಲಿರುವುದು ಕಾನೂನು ಬಾಹಿರವಲ್ಲವೇ ಎಂದು ಪ್ರಶ್ನಿಸಿದರು.
ಅದಕ್ಕೆ ಧ್ವನಿಗೂಡಿಸಿದ ನಿರ್ದೇಶಕಿ ಪುಲಸ್ತ್ಯ ರೈ ಯಾವುದೇ ಗ್ರಾಮ ಇರಲಿ ಅಲ್ಲಿ ಒಬ್ಬ ವ್ಯಕ್ತಿಯು ೬ ತಿಂಗಳು ವಾಸ್ತವ್ಯ ಇಲ್ಲವೆಂದಾದರೆ ಆತನ ಹೆಸರನ್ನು ರೇಷನ್ ಕಾರ್ಡ್‌ನಿಂದ ತೆಗೆಯಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಮೃತಪ್ಟಟವರ ಹೆಸರಿನಲ್ಲಿ ಎರಡು ವರ್ಷ ಒಂದು ಸಂಸ್ಥೆ ಕಾರ್ಯಾಚರಣೆ ಮಾಡುವುದು ಕಾನೂನು ಪ್ರಕಾರ ತಪ್ಪು ಎಂದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಪರವಾನಿಗೆ ರದ್ಧತಿಗೆ ಕೆಲವೊಂದು ಸಮಸ್ಯೆ ಬಂದಿರಬಹುದು. ಈಗ ಮಗನ ಹೆಸರಿನಲ್ಲಿ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಅವರು ಅರ್ಜಿ ಸಲ್ಲಿಸಿದ್ದಾರೆ ಎಂದರು.
ಸಭೆಯಲ್ಲಿ ಎಪಿ‌ಎಂಸಿ ಉಪಾಧ್ಯಕ್ಷ ಬಾಲಕೃಷ್ಣ ಬಾಣಜಾಲು, ನಿರ್ದೇಶಕರಾದ ತ್ರಿವೇಣಿ ಪೆರ್‍ವೋಡಿ, ಎ ಕುಶಾಲಪ್ಪ ಗೌಡ, ಮೇದಪ್ಪ ಗೌಡ, ವಿ.ಎಚ್ ಶಕೂರ್ ಹಾಜಿ, ಕಾರ್ತಿಕ್ ರೈ ಬೆಳ್ಳಿಪ್ಪಾಡಿ, ಕೊರಗಪ್ಪ, ಮಂಜುನಾಥ ಎನ್.ಎಸ್, ಗೀತಾ ದಾಸರಮೂಲೆ, ಶಶಿಕಿರಣ್ ರೈ ನೂಜಿಬೈಲು, ರಾಮಕೃಷ್ಣ ಡಿ, ಉಪಸ್ಥಿರಿದ್ದರು. ಎಪಿ‌ಎಂಸಿ ಪ್ರಭಾರ ಕಾರ್ಯದರ್ಶಿ ಭಾರತಿ ಸ್ವಾಗತಿಸಿ, ಮುಖ್ಯ ಲೆಕ್ಕಿಗ ರಾಮಚಂದ್ರ ವಂದಿಸಿದರು.
Previous : ಎನ್ಶಿಯಂಟ್ ಫುಡ್ ಬಜಾರ್ ಸಾವಯುವ ಸಿರಿಧಾನ್ಯ ಉತ್ಪನ್ನ ಮಾರಾಟ ಕೇಂದ್ರ ಸುರತ್ಕಲ್‌ನ ಶ್ರೀ ತಾರಾ ಟವರ್‍ಸ್‌ನಲ್ಲಿ ಶುಭಾರಂಭ
Next : ಮಕ್ಕಳಿಗಾಗಿ ಮ್ಯಾಜಿಕಲ್ ನವಂಬರ್ ಹಕುನ ಮಠಾಠ ಕ್ಲಬ್‌ನಿಂದ ಆಯೋಜನೆ ಭಾರತ್ ಮಾಲ್‌ನಲ್ಲಿ ಮಕ್ಕಳಿಗೆ ಗೇಮ್ಸ್ ಮತ್ತು ಮ್ಯಾಜಿಕಲ್ ಫನ್
ಮೋದಿ ಸರಕಾರ ದೇಶದ ಆಡಳಿತವನ್ನು ಬಂಡವಾಳಶಾಹಿಯ ಕೈಗೊಪ್ಪಿಸಿದೆ; ಸೋನಿಯಾ ಗಾಂಧಿ ಆರೋಪ – ಪ್ರೆಸ್ ಕನ್ನಡ
ಹೊಸದೆಹಲಿ(19/10/2020): 'ಈ ದೇಶದ ಆಡಳಿತ ಚುಕ್ಕಾಣಿಯನ್ನು ಜನರಿಂದ ಕಸಿದುಕೊಂಡು ಕೆಲವೇ ಕೆಲವು ಬಂಡವಾಳಶಾಹಿಗಳ ಕೈಗೆ ಹಸ್ತಾಂತರಿಸಲು ಈಗಿನ ಸರ್ಕಾರ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ' ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಕೇಂದ್ರದ ಮೋದಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇಂದು ದೆಹಲಿಯಲ್ಲಿ ನಡೆದ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳ ಹಾಗೂ ರಾಜ್ಯ ಉಸ್ತುವಾರಿಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. 'ಪರಿಶಿಷ್ಟ ಜನರ ಮೇಲೆ ದೇಶಾದ್ಯಂತ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದೆ. ಆದರೂ, ಮೋದಿ ಸರಕಾರ ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿರುವುದು ಆಶ್ಚರ್ಯ ಹುಟ್ಟಿಸುತ್ತಿದೆ. ಈ ಸರಕಾರಕ್ಕೆ ಜನರ ಮೇಲೆ ಕಾಳಜಿಯೇ ಇಲ್ಲವೇ? ಪ್ರಜಾಪ್ರಭುತ್ವ ಬಹಳ ಕಷ್ಟದ ದಿನಗಳನ್ನು ಎಣಿಸುತ್ತಿದೆ ' ಎಂದು ಅವರು ಆರೋಪಿಸಿದರು.
`ಹಾಗೆಯೇ, ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿರುವ ನೂತನ ಕೃಷಿ ಕಾಯ್ದೆಗಳು ಕೃಷಿ ಕ್ಷೇತ್ರಕ್ಕೆ ಮಾರಕವಾಗಿವೆ. ಹಸಿರು ಕ್ರಾಂತಿಯಿಂದ ಈ ದೇಶಕ್ಕೆ ಆಗಿರುವ ಲಾಭವನ್ನು ಅಳಿಸಿ ಹಾಕುವ ಪಿತೂರಿಯ ಭಾಗವಾಗಿ ಈ ಕಾಯ್ದೆಗಳನ್ನು ರೂಪಿಸಲಾಗಿದೆ' ಎಂದು ದೂರಿದರು.
ಪರಿಸ್ಥಿತಿ ಕೈಮೀರುತ್ತಿದೆ, ಎಚ್ಚೆತ್ತುಕೊಳ್ಳಿ: ಸರರ್ಕಾರಕ್ಕೆ ತಜ್ಞರ ಗಂಭೀರ ಎಚ್ಚರಿಕೆ! | Experts Warns Karnataka Govt To Take strict Measures to Curb Covid cases pod
ಪರಿಸ್ಥಿತಿ ಕೈಮೀರುತ್ತಿದೆ, ಎಚ್ಚೆತ್ತುಕೊಳ್ಳಿ: ಸರರ್ಕಾರಕ್ಕೆ ತಜ್ಞರ ಗಂಭೀರ ಎಚ್ಚರಿಕೆ!
Bangalore, First Published Mar 26, 2021, 8:02 AM IST
ಪರಿಸ್ಥಿತಿ ಕೈಮೀರುತ್ತಿದೆ, ಎಚ್ಚೆತ್ತುಕೊಳ್ಳಿ| ರಾಜ್ಯದಲ್ಲಿ ದೈನಂದಿನ ಸೋಂಕು 25000ಕ್ಕೇರುವ ದಿನ ದೂರವಿಲ್ಲ| ಕೆಲವೇ ದಿನದಲ್ಲಿ 2ನೇ ಅಲೆ ತುತ್ತತುದಿಗೆ: ತಜ್ಞರ ಎಚ್ಚರಿಕೆ| ಸರ್ಕಾರ ನಿರ್ಬಂಧಗಳನ್ನು ಪ್ರಕಟಿಸುತ್ತಿದೆ, ಕಠಿಣವಾಗಿ ಜಾರಿಗೊಳಿಸುತ್ತಿಲ್ಲ| ಸಾರ್ವಜನಿಕರೂ ಕೊರೋನಾಗೆ ಕ್ಯಾರೆ ಎನ್ನುತ್ತಿಲ್ಲ
ಬೆಂಗಳೂರು(ಮಾ.26): ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿನ ಅಬ್ಬರ ಹೆಚ್ಚಾಗುತ್ತಿದ್ದು, ಎರಡನೇ ಅಲೆಯ ತೀವ್ರತೆ ಕೆಲವೇ ದಿನಗಳಲ್ಲಿ ಗರಿಷ್ಠ ಮಟ್ಟಮುಟ್ಟುವ ಸಾಧ್ಯತೆ ಇದೆ. ಹೀಗಿದ್ದರೂ ಸರ್ಕಾರ ಹಾಗೂ ಸಾರ್ವಜನಿಕರು ಕೊರೋನಾ ನಿಯಂತ್ರಣದ ಬಗ್ಗೆ ನಿರ್ಲಕ್ಷ್ಯ ಮುಂದುವರೆಸಿರುವುದರ ಪರಿಣಾಮ ಸದ್ಯದಲ್ಲೇ ರಾಜ್ಯಕ್ಕೆ ಕೊರೋನಾದ ಭಾರೀ ಗಂಡಾಂತರ ಕಾದಿದೆ.
ಎರಡನೇ ಅಲೆ ಭೀಕರತೆ ಸೃಷ್ಟಿಸುವ ಬಗ್ಗೆ ತಜ್ಞರು ಸರ್ಕಾರಕ್ಕೆ ಈಗಾಗಲೇ ಎಚ್ಚರಿಕೆ ಕೊಟ್ಟಿದ್ದಾರೆ. ಇದಕ್ಕೆ ಸ್ಪಂದಿಸಿ ತೋರಿಕೆಗೆ ಸರ್ಕಾರ ಸರಣಿ ಮಾರ್ಗಸೂಚಿಗಳನ್ನು ಹೊರಡಿಸುತ್ತಿದೆ. ಆದರೆ, ಈ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಜಾರಿಗೆ ಮಾತ್ರ ಕ್ರಮ ಕೈಗೊಳ್ಳುತ್ತಿಲ್ಲ. ಇದೇ ವೇಳೆ ಸಾರ್ವಜನಿಕರು ಕೂಡ ಕೊರೋನಾಗೆ ಕ್ಯಾರೆ ಎನ್ನುತ್ತಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ರಾಜ್ಯದಲ್ಲಿ ದೈನಂದಿನ ಸೋಂಕು 25 ಸಾವಿರ ಮುಟ್ಟುವ ದಿನ ದೂರವಿಲ್ಲ ಎಂದು ತಜ್ಞರು ಎಚ್ಚರಿಸುತ್ತಾರೆ.
ನೆರೆ ರಾಜ್ಯಗಳ ರೀತಿಯಲ್ಲೇ ನಮ್ಮಲ್ಲೂ ಶಾಲಾ-ಕಾಲೇಜು ತರಗತಿಗಳಿಗೆ ತಾತ್ಕಾಲಿಕ ನಿರ್ಬಂಧ ಹೇರಬೇಕು. ಲಕ್ಷಾಂತರ ಜನ ಸೇರುವ ಜಾತ್ರೆಗಳು, ಮಸೀದಿಗಳಲ್ಲಿನ ಸಾಮೂಹಿಕ ಪ್ರಾರ್ಥನೆ, ಹೊಸ ಸಿನಿಮಾಗಳ ಪ್ರಮೋಷನ್‌ಗಾಗಿ ನಡೆಯುವ ರೋಡ್‌ ಶೋ, ರಾಜಕೀಯ ಸಮಾವೇಶಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ. ಆದರೂ, ಸರ್ಕಾರ ಇಂತಹ ಕ್ರಮ ಕೈಗೊಂಡಿಲ್ಲ.
ಇನ್ನು ಕೊರೋನಾ ನಿಯಂತ್ರಣಕ್ಕೆ ಹಲವು ಮಾರ್ಗಸೂಚಿಯನ್ನು ಪ್ರಕಟಿಸಿದ್ದರೂ ರಾಜ್ಯ ಸರ್ಕಾರ ಅವುಗಳ ಸಮರ್ಪಕ ಅನುಷ್ಠಾನದಲ್ಲಿ ಸೋತಿದೆ. ಅನ್ಯ ರಾಜ್ಯಗಳಿಂದ ಬಂದವರಿಗೆ ಆರ್‌ಟಿ-ಪಿಸಿಆರ್‌ ಪರೀಕ್ಷೆ ಕಡ್ಡಾಯಗೊಳಿಸಿಲ್ಲ. ಕೇರಳದಿಂದ ಬರುವವರಿಗೆ ಕಡ್ಡಾಯವಾಗಿದ್ದರೂ ನಾಮ್‌ಕೇವಾಸ್ತೆಗೆ ಪರಿಶೀಲನೆ ನಡೆಸುತ್ತಿದೆ. ಸಭೆ- ಸಮಾರಂಭ, ರಾಜಕೀಯ ಕಾರ್ಯಕ್ರಮಗಳಲ್ಲಿ ಜನ ಸೇರಲು ಹೇರಿರುವ ಮಿತಿ ಕೇವಲ ಆದೇಶಕ್ಕಷ್ಟೇ ಸೀಮಿತವಾಗಿದೆ.
ಸಾವಿರಾರು ಜನ ಸೇರಿ ಮದುವೆ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದರೂ ಸರ್ಕಾರ ಗಮನ ನೀಡುತ್ತಿಲ್ಲ. ಸಿನಿಮಾ ಪ್ರಚಾರ, ಜಾತ್ರೆ, ರಾಜಕೀಯ ಕಾರ್ಯಕ್ರಮಗಳ ಹೆಸರಿನಲ್ಲಿ ಸಾವಿರಾರು ಮಂದಿ ಸೇರುತ್ತಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ. ಇವೆಲ್ಲದರ ಪರಿಣಾಮ ಕೆಲವೇ ದಿನಗಳಲ್ಲಿ ಕೊರೋನಾ ಪ್ರಕರಣಗಳು ತಾರಕಕ್ಕೇರಲಿವೆ ಎಂದು ಎಚ್ಚರಿಸುತ್ತಾರೆ ತಜ್ಞರು.
ಸೋಂಕು ದ್ವಿಗುಣ ದರ ಇದೇ ರೀತಿ ಮುಂದುವರೆದರೆ ಒಂದರಿಂದ ಒಂದೂವರೆ ತಿಂಗಳ ಅವಧಿಯಲ್ಲಿ ದಿನವೊಂದಕ್ಕೆ ಬರೋಬ್ಬರಿ 25 ಸಾವಿರ ಪ್ರಕರಣಗಳವರೆಗೂ ವರದಿಯಾಗಲಿವೆ. ಪರಿಸ್ಥಿತಿ ಕೈ ಮೀರುವ ಮೊದಲೇ ಸರ್ಕಾರ ಹಾಗೂ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರತಿ ವಾರವೂ ಸೋಂಕು ಡಬಲ್‌:
ಬುಧವಾರ ಒಂದೇ ದಿನ ದೇಶದಲ್ಲಿ 53,476 ಪ್ರಕರಣ ವರದಿಯಾಗಿದ್ದು, ಗುಜರಾತ್‌ ಹಾಗೂ ಮಹಾರಾಷ್ಟ್ರದಲ್ಲಿ ದಿನವೊಂದರ ಗರಿಷ್ಠ ಪ್ರಕರಣ ದಾಖಲಾಗಿದೆ. ನೆರೆಯ ಕೇರಳ, ಮಹಾರಾಷ್ಟ್ರದಲ್ಲಿ ಹೊಸ ರೂಪಾಂತರಿ ಕೊರೋನಾ ಸಹ ಪತ್ತೆಯಾಗಿದೆ. ರಾಜ್ಯದಲ್ಲೂ ಪ್ರತಿ ವಾರ ಸೋಂಕು ಪ್ರಮಾಣ ದ್ವಿಗುಣಗೊಳ್ಳುತ್ತಿದೆ. ಮಾ.12 ರಂದು 833 ಪ್ರಕರಣ ವರದಿಯಾಗಿದ್ದರೆ ಮಾ.18ಕ್ಕೆ 1,488 ಕ್ಕೆ ಏರಿಕೆಯಾಗಿದೆ. ಮಾ.25ರ ವೇಳೆಗೆ 2,523ರಷ್ಟಾಗಿದೆ. ಪ್ರತಿ ವಾರವೂ ದಿನನಿತ್ಯ ವರದಿಯಾಗುವ ಪ್ರಕರಣಗಳ ಸಂಖ್ಯೆ ದ್ವಿಗುಣಗೊಳ್ಳುತ್ತಿದ್ದು, ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಕಟ್ಟುನಿಟ್ಟಿನ ನಿರ್ಬಂಧಗಳನ್ನು ಹೇರಬೇಕು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
10 ರಾಜ್ಯಗಳಲ್ಲಿ ಶಾಲಾ-ಕಾಲೇಜು ಬಂದ್‌:
ರಾಜ್ಯದ ನೆರೆ ರಾಜ್ಯಗಳು ಈಗಾಗಲೇ ಕಟ್ಟುನಿಟ್ಟಿನ ನಿರ್ಬಂಧ ಕ್ರಮಗಳನ್ನು ಅನುಸರಿಸುತ್ತಿದ್ದು ತೆಲಂಗಾಣ ಸೇರಿದಂತೆ ಹತ್ತು ರಾಜ್ಯಗಳಲ್ಲಿ ಈಗಾಗಲೇ ಶಾಲಾ-ಕಾಲೇಜುಗಳಲ್ಲಿ ತರಗತಿಗಳಿಗೆ ನಿರ್ಬಂಧ ವಿಧಿಸಲಾಗಿದೆ. ಆದರೆ, ರಾಜ್ಯದಲ್ಲಿ 6ನೇ ತರಗತಿಯಿಂದ ಎಲ್ಲಾ ತರಗತಿಗಳಿಗೂ ಅವಕಾಶ ನೀಡಲಾಗಿದೆ. ವಿಚಿತ್ರವೆಂದರೆ ಹಲವೆಡೆ 1ರಿಂದ 5ನೇ ತರಗತಿವರೆಗಿನ ಮಕ್ಕಳಿಗೂ ತರಗತಿಗಳನ್ನು ನಡೆಸಲಾಗುತ್ತಿದೆ. ಹೀಗಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ಆರೋಪ ಕೇಳಿ ಬಂದಿದೆ.
ವ್ಯಾಯಾಮದ ಬಳಿಕ ಈ ಆಹಾರಗಳನ್ನು ತಿನ್ನಲೇಬಾರದು | Foods You Should Never Eat After Your Workout - Kannada BoldSky
| Published: Tuesday, February 11, 2020, 17:26 [IST]
ನೀವು ವ್ಯಾಯಾಮ ಮಾಡುತ್ತಿದ್ದೀರಾ? ಹಾಗಾದರೆ ಬಯಸಿದ ಫಲ ಸಿಗಲು ಆಹಾರಕ್ರಮದ ಕಡೆ ಗಮನ ನೀಡಲೇಬೇಕು. ವ್ಯಾಯಾಮ ನಂತರ ಕೆಲವೊಂದು ಆಹಾರಗಳನ್ನು ತಿನ್ನಬೇಕು, ಇನ್ನು ಕೆಲವೊಂದು ಆಹಾರಗಳನ್ನು ತಿನ್ನಲೇಬಾರದು.
ಪ್ರತಿ ನಿತ್ಯ ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ಮೈಕೊಬ್ಬು ಕರಗುವುದು ಮಾತ್ರವಲ್ಲ, ಅನೇಕ ಆರೋಗ್ಯ ಸಮಸ್ಯೆಗಳಿಂದಮುಕ್ತಿ ಪಡೆಯಬಹುದು. ಮಧುಮೇಹ, ಒಬೆಸಿಟಿ ಮುಂತಾದ ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ಆಹಾರಕ್ರಮ ತುಂಬಾ ಒಳ್ಳೆಯದು. ದಿನ ನಿತ್ಯ ವ್ಯಾಯಾಮ ಹಾಗೂ ಆರೋಗ್ಯಕರ ಆಹಾರಕ್ರಮವನ್ನು ಪಾಲಿಸಿದ್ದೇ ಆದರೆ ಎಷ್ಟೋ ಆರೋಗ್ಯ ಸಮಸ್ಯೆಗಳನ್ನು ಇಲ್ಲವಾಗಿಸಬಹುದು.
ಈ ಲೇಖನದಲ್ಲಿ ನಾವು ವ್ಯಾಯಾಮದ ನಂತರ ಯಾವ ಆಹಾರಗಳನ್ನು ತಿನ್ನಬಾರದು ಎಂದು ಹೇಳಿದ್ದೇವೆ ನೋಡಿ:
1. ಖಾರ ಪದಾರ್ಥಗಳು
ಜಿಮ್‌ನಲ್ಲಿ ಚೆನ್ನಾಗಿ ದೇಹ ದಂಡಿಸಿ ನಂತರ ಪಾನಿಪುರಿ ತಿನ್ನಲು ಹೋದರೆ ವ್ಯಾಯಾಮ ಮಾಡಿ ಏನೂ ಪ್ರಯೋಜನವಿಲ್ಲ. ಏಕೆಂದರೆ ದೇಹದ ಸ್ನಾಯುಗಳು ಬಳಲಿರುತ್ತವೆ. ವ್ಯಾಯಾಮ ಮಾಡಿದ ತಕ್ಷಣ ಖಾರ ಪದಾರ್ಥಗಳನ್ನು ತಿಂದರೆ ಜೀರ್ಣಕ್ರಿಯೆಗೆ ಅಡಚಣೆ ಆಗುತ್ತದೆ, ದೇಹಕ್ಕೆ ಆ ಆಹಾರವನ್ನು ಜೀರ್ಣ ಮಾಡುವ ಸಾಮಾರ್ಥ್ಯವಿರುವುದಿಲ್ಲ.
2. ಸೋಡಾ
ಗಂಟೆಗಟ್ಟಲೆ ಜಿಮ್‌ನಲ್ಲಿ ಬೆವರಳಿಸಿದಾಗ ಬಾಯಾರಿಕೆಯಾಗುವುದು ಸಹಜ, ಹಾಗಂತ ತಣ್ಣನೆಯ ಸೋಡಾ ನೀರು ಕುಡಿದರೆ ಹೊಟ್ಟೆ ಉಬ್ಬುವ ತೊಂದರೆ ಕಾಣಿಸಿಕೊಳ್ಳಬಹುದು. ಇನ್ನು ಸೋಡಾ ಹಾಕಿದ ಪದಾರ್ಥಗಳನ್ನು ತಿನ್ನುವುದರಿಂದ ಕೂಡ ಹೊಟ್ಟೆ ಹಾಳಾಗುವುದು.
3. ಅತ್ಯಧಿಕ ಪ್ರೊಟೀನ್ ಇರುವ ಆಹಾರ
ವ್ಯಾಯಾಮ ಬಳಿಕ ಪ್ರೊಟೀನ್ ಶೇಕ್‌ ತೆಗೆದುಕೊಳ್ಳುತ್ತಾರೆ. ಆದರೆ ಪ್ರೊಟೀನ್ ಅನ್ನು ಕೂಡ ಮಿತಿಯಲ್ಲಿ ತೆಗೆದುಕೊಳ್ಳಬೇಕು. ಅತ್ಯಧಿಕ ಪ್ರೊಟೀನ್ ಇರುವ ಆಹಾರವನ್ನು ವ್ಯಾಯಾಮ ಮಾಡಿದ ತಕ್ಷಣ ತಿನ್ನಬಾರದು. ವ್ಯಾಯಾಮ ಮಾಡಿದ ಬಳಿಕ ಮಸಾಲೆ ಪದಾರ್ಥಗಳನ್ನು ಹಾಕಿ ತಯಾರಿಸಿದ ಮಾಂಸಾಹಾರ ತಿನ್ನಬಾರದು. ತಿಂದರೆ ಜೀರ್ಣಕ್ರಿಯೆಗೆ ತೊಂದರೆ ಉಂಟಾಗುವುದು. ವ್ಯಾಯಾಮದ ಬಳಿಕ ದೇಹಕ್ಕೆ ಸ್ವಲ್ಪ ವಿಶ್ರಾಂತಿ ನೀಡಬೇಕು. ವ್ಯಾಯಾಮ ಮಾಡಿದ ಎರಡು ಗಂಟೆಯ ಬಳಿಕ ಮಿತಿಯಲ್ಲಿ ಪ್ರೊಟೀನ್ ಆಹಾರ ಸೇವಿಸಬಹುದು.
4. ಅಧಿಕ ನಾರಿನಂಶವಿರುವ ಆಹಾರ
ನಾರಿನಂಶವಿರುವ ಆಹಾರ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗಂತ ತುಂಬಾ ನಾರಿನಂಶವಿರುವ ಆಹಾರವನ್ನು ವ್ಯಾಯಾಮ ಮಾಡಿದ ಅರ್ಧ ಗಂಟೆಯೊಳಗೆ ತಿನ್ನಲು ಹೋಗಬೇಡಿ . ವ್ಯಾಯಾಮ ಬಳಿಕ ಅಧಿಕ ನಾರಿನಂಶವಿರುವ ಆಹಾರ ತಿಂದರೆ ಹೊಟ್ಟೆ ಉಬ್ಬುವುದು, ಅಜೀರ್ಣ ಸಮಸ್ಯೆ ಉಂಟಾಗುವುದು.
5.ಕೊಬ್ಬಿನಂಶವಿರುವ ಆಹಾರಗಳು
ಎಣ್ಣೆಯಲ್ಲಿ ಕರಿದ ಪದಾರ್ಥಗಳು ಬಾಯಿಗೆ ರುಚಿ ಅನಿಸಿದರೂ ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ. ಇನ್ನು ವ್ಯಾಯಾಮ ಮಾಡಿದ ತಕ್ಷಣ ಇಂಥ ಅಹಾರಗಳನ್ನು ತಿನ್ನಲೇಬಾರದು. ಕೊಬ್ಬಿನಂಶವಿರುವ ಆಹಾರ ತಿಂದರೆ ದೇಹಕ್ಕೆ ಜೀರ್ಣವಾಗಲು ಕಷ್ಟವಾಗುತ್ತದೆ, ಅಲ್ಲದೆ ಕರಗಿದ ಕ್ಯಾಲೋರಿ ಮತ್ತೆ ದೇಹಕ್ಕೆ ಸೇರುವುದರಿಂದ ತೂಕ ಇಳಿಕೆಯೂ ಆಗುವುದಿಲ್ಲ.
6. ಹಸಿ ತರಕಾರಿಗಳು
ಹಸಿ ತರಕಾರಿಗಳು ಆರೋಗ್ಯಕ್ಕೆ ಒಳ್ಳೆಯದು, ಆದರೆ ಇವುಗಳನ್ನು ವ್ಯಾಯಾಮದ ನಂತರ ತಿನ್ನುವುದು ಸೂಕ್ತವಲ್ಲ. ವ್ಯಾಯಾಮದ ನಂತರ ದೇಹಕ್ಕೆ ಅವಶ್ಯಕವಾದ ಪೋಷಕಾಂಶಗಳು, ಖನಿಜಾಂಶಗಳು, ವಿಟಮಿನ್ಸ್ ಅಗ್ಯತ, ಆದರೆ ಇದನ್ನು ಹಸಿ ತರಕಾರಿ ತಿನ್ನುವುದರಿಂದ ಪೂರೈಸಲು ಸಾಧ್ಯವಿಲ್ಲ.
7. ಆಮ್ಲೆಟ್
ವ್ಯಾಯಾಮದ ಬಳಿಕ ಮೊಟ್ಟೆ ತಿನ್ನುವುದಾದರೆ ಅದನ್ನು ಬೇಯಿಸಿ ತಿನ್ನಬೇಕು. ಆಮ್ಲೆಟ್ ಅಥವಾ ಎಗ್‌ಬುರ್ಜಿ ಮಾಡಿ ತಿನ್ನುವುದರಿಂದ ವ್ಯಾಯಾಮದ ಫಲ ನಿರೀಕ್ಷಿಸಲು ಸಾಧ್ಯವಿಲ್ಲ. ಮೊಟ್ಟೆಯನ್ನು ತಿನ್ನುವುದಾದರೆ ಬೇಯಿಸಿ ತಿನ್ನಬೇಕು, ಇಲ್ಲಾ ಹಸಿ ಮೊಟ್ಟೆಯನ್ನು ಪ್ರೊಟೀನ್‌ ಶೇಕ್‌ ಜೊತೆ ಮಿಕ್ಸ್ ಮಾಡಿ ಕುಡಿಯಬಹುದು.
8. ಸಿಹಿ ಪದಾರ್ಥಗಳು
ವ್ಯಾಯಾಮದ ನಂತರ ನೀವು ತಿನ್ನುವ ಸ್ನ್ಯಾಕ್ಸ್‌ನಲ್ಲಿ ಕಾರ್ಬೋಹೈಡ್ರೇಟ್ಸ್ ಹಾಗೂ ನಾರಿನಂಶವಿರಬೇಕು, ಇದರಿಂದ ದೇಹಕ್ಕೆ ಅಗ್ಯತವಿರುವ ಗ್ಲೈಕೋಜಿನ್ ಪೂರೈಕೆಯಾಗುತ್ತದೆ. ಆದರೆ ಕೇಕ್, ಪೇಸ್ಟ್ರಿ ತಿಂದರೆ ಇದರಿಂದ ಶರೀರದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುವುದು.
9. ಉಪ್ಪಿನಂಶವಿರುವ ಪದಾರ್ಥಗಳು
ವ್ಯಾಯಾಮ ಮಾಡಿದ ಬಳಿಕ ತಿನ್ನುವ ಆಹಾರದಲ್ಲಿ ಉಪ್ಪಿನಂಶ ಕಡಿಮೆ ಇರಬೇಕು. ರೆಡಿಮೇಡ್ ಆಹಾರ ಸೇವನೆ ಮಾಡಿದರೆ ಅದರಲ್ಲಿ ಉಪ್ಪಿನಂಶ ಅಧಿಕವಿರುತ್ತದೆ. ಬಾಯಿ ರುಚಿಗಾಗಿ ಪಾಪ್‌ಕಾರ್ನ್‌, ಫ್ರೆಂಚ್‌ಫ್ರೈ ಅಂಥ ಚಪ್ಪರಿಸಿದರೆ ಇದರಿಂದ ನಿಮ್ಮ ದೇಹಕ್ಕೆ ಅಗ್ಯತವಿರುವ ಪೋಷಕಾಂಸಗಳು ದೊರೆಯದೆ ಆರೋಗ್ಯದ ಮೇಲೆ ಅಡ್ಡಪರಿಣಾಮ ಉಂಟಾಗುವುದು.
10. ಚಾಕೋಲೆಟ್
ನೀವು ತೂಕ ಇಳಿಕೆಗಾಗಿ ವ್ಯಾಯಾಮ ಮಾಡುತ್ತಿದ್ದರೆ ವ್ಯಾಯಾಮದ ಬಳಿಕ ಚಾಕೋಲೆಟ್‌ಗೆ ನೋ... ನೋ. ಚಾಕೋಲೆಟ್‌ನಲ್ಲಿರುವ ಕೊಬ್ಬಿನಂಶದಿಂದಾಗಿ ದೇಹವು ಪ್ರೊಟೀನ್ ಹೀರಿಕೊಳ್ಳುವುದು ಕಡಿಮೆಯಾಗುತ್ತದೆ, ಅಲ್ಲದೆ ಕೃತಕ ಸಿಹಿ ದೇಹವನ್ನು ಸೇರಿ ಮೈ ತೂಕ ಹೆಚ್ಚಿಸುವುದು. `
ವ್ಯಾಯಾಮ ಮಾಡದೇ ಮೈ ಕರಗಿಸಲು ಈ ಡ್ರಿಂಕ್ಸ್ ಕುಡಿಯಿರಿ
ಕುಟುಂಬದ ಸದಸ್ಯರ ಆರೋಗ್ಯ ಹಾಗೂ ಫಿಟ್ನೆಸ್‌ಗಾಗಿ ಹೀಗೆ ಮಾಡಿ
ಮೆದುಳು ಚುರುಕಾಗಬೇಕೆ ಈ ಮೈಂಡ್ ಡಯಟ್ ಅನುಸರಿಸಿ!
Read more about: diet exercise ವ್ಯಾಯಾಮ ಆಹಾರಕ್ರಮ
Reckless eating or in other words mindless munching of food after exercise, in the long run, will wreck your health. Have a look at some of the foods to avoid after a workout, here.
ಮೈಸೂರ್ ಪಾಕ್ ಅಂದರೆ ಕೋಲಾರದ ಲಕ್ಷ್ಮೀವೆಂಕಟೇಶ್ವರ ಸ್ವೀಟ್ಸ್ | Must Try Kolar Lakshmi Venkateshwara Sweets Mysorpak Once - Kannada Oneindia
| Published: Friday, September 13, 2019, 23:33 [IST]
ಬೆಂಗಳೂರಿನಲ್ಲಿ ಸಿಗದೇ ಇರುವ ಸ್ವೀಟ್ ಇದೆಯಾ? ಇಲ್ಲಿ ಸಿಗದೆ ಇರುವ ರುಚಿ ಇದೆಯಾ? - ಹೀಗೇನಾದರೂ ನಿಮಗೆ ನೀವೇ ಅಂದುಕೊಂಡು ಹೆಮ್ಮೆ- ಗರ್ವ ಪಡುತ್ತಿದ್ದರೆ ಸ್ವಲ್ಪ ಸಮಯ ಬಿಡುವು ಮಾಡಿಕೊಂಡು ಈ ಲೇಖನ ಓದಿ. ಕೋಲಾರ ನಗರದಲ್ಲಿ ಎಂ. ಜಿ. ರಸ್ತೆಯಲ್ಲಿ ಶ್ರೀ ವೆಂಕಟೇಶ್ವರ ಸ್ವೀಟ್ ಸ್ಟಾಲ್ ಇದೆ. ಅಲ್ಲಿನ ಮೈಸೂರ್ ಪಾಕ್ ಬಗ್ಗೆ ಬರೆದರೆ ಅದಷ್ಟೇ ದೊಡ್ಡ ಲೇಖನ ಆಗುತ್ತದೆ.
ಆದರೆ, ನಮ್ಮ ಉದ್ದೇಶ ಆ ಮಳಿಗೆಯನ್ನು ಪರಿಚಯಿಸುವುದು ಅಷ್ಟೇ. ಕೋಲಾರದ ಸ್ಥಳೀಯರಲ್ಲಿ ವಿಳಾಸ ಕೇಳಿದರೆ ಬಹಳ ಸುಲಭಕ್ಕೆ ಹೇಳುತ್ತಾರೆ. ದಶಕಗಳಿಂದ ಇರುವ ಈ ಅಂಗಡಿಗೆ ಅಕ್ಕಪಕ್ಕದ ಜಿಲ್ಲೆಯವರೂ ಬಂದು, ಸಿಹಿ- ಖಾರದ ತಿನಿಸನ್ನು ಖರೀದಿಸಿ ಹೋಗುತ್ತಾರೆ. ಮುಖ್ಯವಾಗಿ ಮೈಸೂರ್ ಪಾಕ್. ಬಿಸ್ಸಿ- ಬಿಸಿ ಮೈಸೂರ್ ಪಾಕ್ ಅಲ್ಲೇ ಸ್ವಲ್ಪ ತಿನ್ನುವುದಕ್ಕೆ ರುಚಿಗೆ ಕೊಡುತ್ತಾರೆ. ಹಾ, ಅಬ್ಬಾ ಅಂಥ ರುಚಿ ಮರೆಯುವುದಕ್ಕೆ ಕಷ್ಟ- ಕಷ್ಟ.
ಬೆಲೆ ವಿಚಾರಕ್ಕೆ ಬಂದರೆ ಸ್ವಲ್ಪ ದುಬಾರಿ ಅನ್ನಿಸಬಹುದು. ಆದರೆ ಶುದ್ಧ ತುಪ್ಪದಲ್ಲೇ ಮಾಡಿದ್ದು ಎಂಬುದಕ್ಕೆ ಯಾವ ಅನುಮಾನವೂ ಪಡುವ ಅಗತ್ಯ ಇಲ್ಲ. ಸರಿಯಾದ ಪದಾರ್ಥ ಹಾಕದೆ, ಉತ್ತಮ ಗುಣಮಟ್ಟ ಇಲ್ಲದಿದ್ದರೆ ಮೈಸೂರ್ ಪಾಕ್ ತಿಂದ ಸ್ವಲ್ಪ ಹೊತ್ತಿಗೆ ಗಂಟಲಿನಲ್ಲಿ ಹಿಂಸೆ ಆಗಲು ಆರಂಭಿಸುತ್ತದೆ. ಆದರೆ ಇಲ್ಲಿ ನೀವು ಪರೀಕ್ಷೆ ಮಾಡಿ, ಖರೀದಿ ಮಾಡಬಹುದು.
ಮೊದಲೇ ಹೇಳಿದ ಹಾಗೆ, ಇಲ್ಲಿಗೆ ಹುಡುಕಿಕೊಂಡು ಬಂದು ಮೈಸೂರ್ ಪಾಕ್ ತಿಂದು ಹೋಗ್ತಾರೆ. ಖರೀದಿಸಿ ಹೋಗ್ತಾರೆ. ಇದರ ಜತೆಗೆ ಕಾಜು ಬರ್ಫಿ, ಕಾಜು ಕಟ್ಲಿ, ಹುರಿದ ಗೋಡಂಬಿ, ಚೌಚೌ ಹೀಗೆ ವಿವಿಧ ಖಾರ- ಸಿಹಿ ತಿನಿಸುಗಳು ಸಿಗುತ್ತವೆ. ಆದರೆ ಎಲ್ಲಕ್ಕಿಂತ ಚಂದ ಅಂದರೆ ಅದು ಮೈಸೂರ್ ಪಾಕ್.
ಬೆಳಗ್ಗೆ ಒಂಬತ್ತರಿಂದ ರಾತ್ರಿ ಒಂಬತ್ತರ ತನಕ ಈ ಅಂಗಡಿ ತೆರೆದಿರುತ್ತದೆ. ಅಂತರಗಂಗೆ, ಆವನಿ ಬೆಟ್ಟ, ಕುರುಡುಮಲೆ, ನರಸಿಂಹ ತೀರ್ಥ.. ಹೀಗೆ ಕೋಲಾರ ಜಿಲ್ಲೆ ಪ್ರವಾಸಿ ತಾಣದ ರೀತಿ ವೆಂಕಟೇಶ್ವರ ಸ್ವೀಟ್ ಸ್ಟಾಲ್ ಕೂಡ ಹೆಸರುವಾಸಿ. ಸ್ಥಳೀಯರು ಹೇಳುವ ಹಾಗೆ ಐವತ್ತು- ಅರವತ್ತು ವರ್ಷಗಳಿಂದಲೂ ಈ ಅಂಗಡಿ ಇದೆ. ದೇಶದಾದ್ಯಂತ ವಿವಿಧೆಡೆಗೆ ಈ ಅಂಗಡಿಯಿಂದ ಸಿಹಿ- ಖಾರದ ತಿನಿಸು ಖರೀದಿಸುತ್ತಾರೆ.
ಇಲ್ಲಿ ಸಿಹಿ- ಖಾರ ತಿನಿಸು ತಿಂದ ಮೇಲೆ ಆ ಮಾತುಗಳ ಬಗ್ಗೆ ಯಾವ ಅನುಮಾನ ಕೂಡ ಬರುವುದಿಲ್ಲ. ನಗರದ ಒಳ ಭಾಗದಲ್ಲಿ ಈ ಅಂಗಡಿ ಇರುವುದರಿಂದ ಲಕ್ಷ್ಮೀವೆಂಕಟೇಶ್ವರ ಸ್ವೀಟ್ಸ್ ಬಗ್ಗೆ ಗೊತ್ತಿಲ್ಲದ ಹೆಚ್ಚಿನ ಮಂದಿ ಇಲ್ಲಿ ರುಚಿ ನೋಡುವುದಕ್ಕೆ ಪ್ರಯತ್ನ ಪಟ್ಟಿರಲಿಕ್ಕಿಲ್ಲ. ಇದನ್ನು ಓದುತ್ತಿರುವ ನಿಮಗೆ ಕೋಲಾರದಲ್ಲೇ ಸ್ನೇಹಿತರಿದ್ದರೆ ಈ ಬಗ್ಗೆ ವಿಚಾರಿಸಿ ನೋಡಿ. ಸ್ವತಃ ನೀವೇ ಇಲ್ಲಿ ರುಚಿ ನೋಡಿದ್ದರೆ ನಿಮಗೆ ಅನಿಸಿದ್ದನ್ನು ಇತರರ ಜತೆ ಹಂಚಿಕೊಳ್ಳಿ.
ಬೆಂಗಳೂರಿಗೆ ಅರವತ್ತೈದು- ಎಪ್ಪತ್ತು ಕಿ.ಮೀ. ದೂರದ ಕೋಲಾರಕ್ಕೆ ಒಂದು ಲಾಂಗ್ ಡ್ರೈವ್ ಹೋಗಿ, ರುಚಿ ನೋಡಿ ಬರಬಹುದು. ನೀವು ಮೈಸೂರ್ ಪಾಕ್ ವಿಪರೀತ ಇಷ್ಟಪಡುವವರಾಗಿದ್ದರೆ ಒಮ್ಮೆ ಟ್ರೈ ಮಾಡಿ.
food talk kolar food culture ಆಹಾರ ಸಂಸ್ಕೃತಿ ಕೋಲಾರ
Kolar city Sri Lakshmi Venkateshwara Sweets famous for Mysorepak and other sweets and spicy snacks. Here is the details of the shop.
ವಾಣಿಜ್ಯ ಮೊಕದ್ದಮೆಯನ್ನು ಬಗೆಹರಿಸಲು 6 ಪ್ರಮುಖ ಮಾರ್ಗಗಳು: ಉದ್ಯಮಿಗಳಿಗೆ ಕಾನೂನು ಮಾರ್ಗದರ್ಶಿ. 0000
ವಾಣಿಜ್ಯ ಮೊಕದ್ದಮೆಯನ್ನು ಬಗೆಹರಿಸಲು 6 ಪ್ರಮುಖ ಮಾರ್ಗಗಳು: ಉದ್ಯಮಿಗಳಿಗೆ ಕಾನೂನು ಮಾರ್ಗದರ್ಶಿ.
ಒಂದು ಕಮೆಂಟನ್ನು ಬಿಡಿ / ವಕೀಲರು, ಬ್ಲಾಗ್ / ಬೈ ಸಾರಾ
ಉದ್ಯಮಿಗಳಿಗಾಗಿ ವಾಣಿಜ್ಯ ಮೊಕದ್ದಮೆಯನ್ನು ಸ್ಥಾಪಿಸಲು 6 ಪ್ರಮುಖ ಮಾರ್ಗಗಳು
ಒಪ್ಪಂದದ ಉಲ್ಲಂಘನೆಯಿಂದಾಗಿ ಯಾವುದೇ ಕ್ಷಣದಲ್ಲಿ ವ್ಯಾಪಾರ ಮತ್ತು ಪಾಲುದಾರಿಕೆಗಳು ಹುಳಿಯಾಗಬಹುದು (ಇದನ್ನು ಮುರಿದ ಅಥವಾ ವಿಫಲ ಭರವಸೆಗಳು ಎಂದು ಕರೆಯಲಾಗುತ್ತದೆ). ಮತ್ತು ಇದು ವಾಣಿಜ್ಯ ಮೊಕದ್ದಮೆ ಅಥವಾ ಒಪ್ಪಂದದ ಒಪ್ಪಂದದ ವಿವಾದಕ್ಕೆ ಕಾರಣವಾಗಬಹುದು. ಈ ಲೇಖನದಲ್ಲಿ, ವಾಣಿಜ್ಯ ಮೊಕದ್ದಮೆಯನ್ನು ಬಗೆಹರಿಸುವ 6 ಮಾರ್ಗಗಳನ್ನು ನಾವು ಅರ್ಥಮಾಡಿಕೊಳ್ಳೋಣ.
ಸಹೋದ್ಯೋಗಿ ಸ್ಥಳವು ದುಬೈ ಕಚೇರಿಗಳ ಭವಿಷ್ಯ ಎಂಬ ಬಗ್ಗೆ ಅನೇಕ ವಿಚಾರಗಳಿವೆ, ಆದರೂ ಸಹೋದ್ಯೋಗವು ಇನ್ನೂ ಆರಂಭಿಕ ಹಂತದಲ್ಲಿದೆ. ಫಲಿತಾಂಶಗಳು ಉತ್ಪಾದಕತೆ ಮತ್ತು ನಾವೀನ್ಯತೆಗೆ ಎಷ್ಟು ಸಕಾರಾತ್ಮಕ ಸಂಬಂಧವನ್ನು ಹೊಂದಿವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
ಪ್ರಸ್ತುತ ಆರ್ಥಿಕ ಸಂಕಷ್ಟಗಳು ಮತ್ತು ಭವಿಷ್ಯದ ಅನಿಶ್ಚಿತತೆಯೊಂದಿಗೆ, ಅನೇಕ ಉದ್ಯಮಿಗಳು ತಮ್ಮ ಅಸುರಕ್ಷಿತ ಸಾಲಗಳನ್ನು ವಿಷಾದಿಸುತ್ತಿದ್ದಾರೆ. ತಮ್ಮ ಸಾಲವನ್ನು ತೀರಿಸಲು, ಅವರು ದಾವೆ ಮತ್ತು ಕಾನೂನು ಹೋರಾಟಗಳನ್ನು ನಡೆಸಬೇಕಾಗುತ್ತದೆ. ಈ ಪೋಸ್ಟ್ನಲ್ಲಿ, ನಾವು ವಾಣಿಜ್ಯ ಮೊಕದ್ದಮೆಯನ್ನು ಪರಿಹರಿಸುವ ಮಾರ್ಗಗಳ ಬಗ್ಗೆ ಮಾತನಾಡುತ್ತೇವೆ. ವಾಣಿಜ್ಯ ಮೊಕದ್ದಮೆ ಯಾವುದು ಮತ್ತು ಅದನ್ನು ವಕೀಲರ ಸಹಾಯದಿಂದ ಹೇಗೆ ಇತ್ಯರ್ಥಪಡಿಸಬಹುದು ಎಂಬುದರ ಕುರಿತು ನಾವು ಗಮನ ಹರಿಸುತ್ತೇವೆ. ವಾಣಿಜ್ಯ ಮೊಕದ್ದಮೆಯನ್ನು ನಿರ್ಧರಿಸಲು ಸಹಾಯ ಮಾಡುವ ಸೂಕ್ತ ವಕೀಲರನ್ನು ಹೇಗೆ ಗುರುತಿಸಬಹುದು ಎಂಬುದನ್ನು ನಾವು ಚರ್ಚಿಸುತ್ತೇವೆ.
ವಾಣಿಜ್ಯ ಮೊಕದ್ದಮೆ ಎಂದರೇನು?
ವಾಣಿಜ್ಯ ಮೊಕದ್ದಮೆ ಎಂದರೆ ಒಂದು ಕಂಪನಿಯು ಇನ್ನೊಂದರ ವಿರುದ್ಧ ತೆಗೆದುಕೊಳ್ಳುವ ಕಾನೂನು ನೆರವು. ಇದರಲ್ಲಿ ವಿಚಾರಣೆಯನ್ನು ನಡೆಸಲಾಗುತ್ತದೆ ಮತ್ತು ವಿಜೇತ ಪಕ್ಷದ ಪರವಾಗಿ ತೀರ್ಪು ನೀಡಲಾಗುತ್ತದೆ. ವ್ಯವಹಾರಗಳಲ್ಲಿನ ಸಹಭಾಗಿತ್ವವು ಸಾಮಾನ್ಯವಾಗಿ ಹಣ ಅಥವಾ ಅಂತಹುದೇ ಪರಿಗಣನೆಗಳಿಗೆ ಬದಲಾಗಿ ಸೇವೆ ಅಥವಾ ಉತ್ಪನ್ನವನ್ನು ತಲುಪಿಸುವ ಭರವಸೆಗಳನ್ನು ಒಳಗೊಂಡಿರುತ್ತದೆ. ಎರಡೂ ಪಕ್ಷಗಳು ಭರವಸೆಯನ್ನು ಉಳಿಸಿಕೊಳ್ಳಲು ವಿಫಲವಾದಾಗ, ಇತರರು ಒಪ್ಪಂದವನ್ನು ಅಥವಾ ಒಪ್ಪಂದವನ್ನು ಜಾರಿಗೊಳಿಸಬಹುದು ನಾಗರಿಕ ಮೊಕದ್ದಮೆ ತುಂಬುವುದು.
ಇಂದಿಗೂ, ಯುಎಇಯಲ್ಲಿ ಹೆಚ್ಚಿನ ಮೌಲ್ಯ ಮತ್ತು ಸಂಕೀರ್ಣ ವಿವಾದಗಳನ್ನು ಪರಿಹರಿಸುವ ಪ್ರಾಥಮಿಕ ವಿಧಾನವೆಂದರೆ ವಾಣಿಜ್ಯ ಮೊಕದ್ದಮೆ.
ವಾಣಿಜ್ಯ ಮೊಕದ್ದಮೆ ಯುಎಇಯಲ್ಲಿ ಹೆಚ್ಚಿನ ಮೌಲ್ಯ ಮತ್ತು ಸಂಕೀರ್ಣ ವಿವಾದಗಳನ್ನು ಪರಿಹರಿಸುವ ಪ್ರಾಥಮಿಕ ವಿಧಾನವಾಗಿ ಉಳಿದಿದೆ.
ವಾಣಿಜ್ಯ ಮೊಕದ್ದಮೆಗಾಗಿ ಕ್ರಮ ತೆಗೆದುಕೊಳ್ಳುವ ಮೊದಲು ಪರಿಗಣಿಸಬೇಕಾದ ಪ್ರಮುಖ ವಿಷಯಗಳು
ಕಾನೂನು ಕ್ರಮವನ್ನು ಬಯಸುವ ಪಕ್ಷವು ಈ ಕೆಳಗಿನ ಸಂದರ್ಭಗಳನ್ನು ಪರಿಗಣಿಸಬೇಕು:
ಎ. ಪ್ರತಿವಾದಿಯ ಆರ್ಥಿಕ ಕಾರ್ಯಸಾಧ್ಯತೆ,
b. ಪ್ರತಿವಾದಿಯು ಪರಾರಿಯಾಗಲು ಅಥವಾ ಪಲಾಯನ ಮಾಡುವ ಸಾಧ್ಯತೆ.
ಪ್ರತಿವಾದಿಯು ಸ್ವತ್ತುಗಳನ್ನು ಚದುರಿಸುವುದಿಲ್ಲ ಅಥವಾ ಕರಗಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಪಕ್ಷವು ನ್ಯಾಯಾಲಯದಲ್ಲಿ ಮುನ್ನೆಚ್ಚರಿಕೆ ಲಗತ್ತು ಅರ್ಜಿಯನ್ನು ಸಲ್ಲಿಸಬಹುದು.
ವಾಣಿಜ್ಯ ಮೊಕದ್ದಮೆಯನ್ನು ಬಗೆಹರಿಸುವ ಮಾರ್ಗಗಳು ಯಾವುವು?
ನಿಯಮಗಳ ಮೂಲಕ ಎಚ್ಚರಿಕೆಯಿಂದ ಹೋಗಿ
ಯಾವುದೇ ಒಪ್ಪಂದಕ್ಕೆ ಸಹಿ ಮಾಡುವ ಮೊದಲು, ನೀವು ಅದನ್ನು ಯಾವಾಗಲೂ ಎಚ್ಚರಿಕೆಯಿಂದ ಓದಬೇಕು. ಮತ್ತು ಯಾವುದೇ ವಿವಾದದ ಸಂದರ್ಭದಲ್ಲಿ, ಮತ್ತೆ ಒಪ್ಪಂದದ ಮೂಲಕ ಹೋಗಿ, ಮತ್ತು ಈ ಸಮಯದಲ್ಲಿ ಹೆಚ್ಚು ಎಚ್ಚರಿಕೆಯಿಂದ. ಯಾವುದನ್ನಾದರೂ ವಿವರಿಸುವ ನಿರ್ದಿಷ್ಟ ಷರತ್ತುಗಳು ಅಥವಾ ವಿಭಾಗಗಳಲ್ಲಿ ನಿಮ್ಮ ಗಮನವನ್ನು ನೀಡಿ -
ಇದು ನಿಮ್ಮ ವಿವಾದಕ್ಕೆ ಸಂಬಂಧಿಸಿದೆ. ಮತ್ತು ನೀವು ಮತ್ತು ನಿಮ್ಮ ಗುತ್ತಿಗೆದಾರನು ಜವಾಬ್ದಾರಿಗಳನ್ನು ಪೂರೈಸಿದ್ದರೆ.
ಅಂತಹ ಪರಿಸ್ಥಿತಿಯಲ್ಲಿ ಅಥವಾ ನಿಮ್ಮ ವಿವಾದವನ್ನು ಪರಿಹರಿಸುವಾಗ ನೀವು ಅನುಸರಿಸಬೇಕಾದ ಕಾರ್ಯವಿಧಾನಗಳು.
ಮುಕ್ತಾಯದ ಷರತ್ತು ಈ ಒಪ್ಪಂದದ ಸಂಬಂಧವನ್ನು ಹೇಗೆ ಕೊನೆಗೊಳಿಸಬೇಕು ಎಂದು ನಿಮಗೆ ತಿಳಿಸಬಹುದು.
2. ಮಾತುಕತೆ
ಕಾನೂನು ಕ್ರಮ ತೆಗೆದುಕೊಳ್ಳಲು ಯೋಜಿಸುವ ಮೊದಲು ನಿಮ್ಮ ಗುತ್ತಿಗೆದಾರರೊಂದಿಗೆ ನೀವು ಮಾತುಕತೆ ನಡೆಸುವುದು ಯಾವಾಗಲೂ ಉತ್ತಮ. ಗುತ್ತಿಗೆದಾರನು ತಪ್ಪು ಮಾಡಿದನೆಂದು ನೀವು ಭಾವಿಸುವ ನಿರ್ದಿಷ್ಟ ಕ್ಷೇತ್ರಗಳನ್ನು ನೀವು ಗಮನಸೆಳೆಯಬೇಕು ಮತ್ತು ಪ್ರತಿಕ್ರಿಯಿಸಲು ಅವಕಾಶವನ್ನು ನೀಡಬೇಕು. ಅನೇಕ ವಿವಾದಗಳು ಕೇವಲ ತಪ್ಪು ಸಂವಹನ ಮತ್ತು ತಪ್ಪು ತಿಳುವಳಿಕೆಯಿಂದಾಗಿವೆ. ಪರಿಸ್ಥಿತಿಯನ್ನು ಸಾಮಾನ್ಯಗೊಳಿಸಲು ಮತ್ತು ಅವರು ಏನು ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡಲು ತೆಗೆದುಕೊಳ್ಳಬೇಕಾದ ಪರಿಹಾರ ಕ್ರಮಗಳ ಬಗ್ಗೆ ಗುತ್ತಿಗೆದಾರರೊಂದಿಗೆ ಚರ್ಚಿಸಿ.
ಎರಡೂ ಕಡೆ ವಕೀಲರನ್ನು ಪರಿಚಯಿಸುವ ಮೂಲಕ ನೀವು ಮಾತುಕತೆಗಳನ್ನು formal ಪಚಾರಿಕಗೊಳಿಸಬಹುದು. ಇದು ವ್ಯತ್ಯಾಸಗಳನ್ನು ಬಗೆಹರಿಸುವ ಮೂಲಭೂತ ಮಾರ್ಗವಾಗಿದೆ. ಇದು ವಿವಾದಕ್ಕೆ ಪರಿಹಾರವನ್ನು ಕಂಡುಹಿಡಿಯುವ ಕೇವಲ ಗುರಿಯೊಂದಿಗೆ ಹಿಂದಕ್ಕೆ ಮತ್ತು ಮುಂದಕ್ಕೆ ಸಂವಹನ ನಡೆಸುತ್ತದೆ.
ನಂತರದ ಸಮಾಲೋಚನೆಗೆ ನಿರ್ದಿಷ್ಟ ಕಾರ್ಯವಿಧಾನ ಅಥವಾ ನಿಯಮಗಳಿಲ್ಲ. ಯಾವುದೇ ಪಕ್ಷವು ಶಾಂತ ರೀತಿಯಲ್ಲಿ ಸಮಾಲೋಚನೆಯನ್ನು ನಿರ್ಧರಿಸಬಹುದು ಮತ್ತು ಪ್ರಾರಂಭಿಸಬಹುದು. ಯಾವುದೇ ಹಂತದಲ್ಲಿ ಮಾತುಕತೆಯನ್ನು ಪ್ರಾರಂಭಿಸಲಾಗುತ್ತದೆ: ಅಂದರೆ, ಮೊಕದ್ದಮೆ ಹೂಡುವ ಮೊದಲು, ಒಂದು ಪ್ರಕರಣವು ಪ್ರಕ್ರಿಯೆಯಲ್ಲಿರುವಾಗ, ವಿಚಾರಣೆಯಲ್ಲಿ, ಅಥವಾ ಮೇಲ್ಮನವಿ ಸಲ್ಲಿಸುವ ಮೊದಲು ಅಥವಾ ನಂತರ.
3. ರಾಜ್ಯ ಮತ್ತು ಸ್ಥಳೀಯ ಏಜೆನ್ಸಿಗಳನ್ನು ಸಂಪರ್ಕಿಸಿ
ಅನೇಕ ರಾಜ್ಯ ಗುತ್ತಿಗೆದಾರ ಏಜೆನ್ಸಿಗಳು ಅಥವಾ ಅಂತಹುದೇ ವ್ಯಾಪಾರ ಗುಂಪುಗಳು ರೆಸಲ್ಯೂಶನ್ ಕಾರ್ಯಕ್ರಮಗಳನ್ನು ಹೊಂದಿವೆ ಸಾಮಾನ್ಯ ವಿವಾದಗಳು ಗುತ್ತಿಗೆದಾರರನ್ನು ಒಳಗೊಂಡಿರುತ್ತದೆ. ಅವರು ಗುತ್ತಿಗೆದಾರರ ಬಗ್ಗೆ ಸ್ವಲ್ಪ ಪಕ್ಷಪಾತ ಹೊಂದಿರಬಹುದು, ಆದರೆ ಅವರು ಖಂಡಿತವಾಗಿಯೂ ಅವರ ಯಾವುದೇ ಸದಸ್ಯರಿಗೆ ಸಂಬಂಧಿಸಿದ ಯಾವುದೇ ವಿವಾದಗಳಲ್ಲಿ ಆಸಕ್ತಿ ಹೊಂದಿರುತ್ತಾರೆ. ಎಲ್ಲಾ ನಂತರ, ವ್ಯವಹಾರಕ್ಕೆ ಪ್ರತಿಷ್ಠೆಗಳು ಅವಶ್ಯಕ. ಇದಲ್ಲದೆ, ನೀವು ಸಹಾಯವನ್ನು ಕಂಡುಕೊಂಡರೆ ಮತ್ತು ಸಂಘರ್ಷವನ್ನು ಪರಿಹರಿಸಿದರೆ, ಅದು ಖಂಡಿತವಾಗಿಯೂ ನಿಮ್ಮ ವೆಚ್ಚವನ್ನು ಕಡಿತಗೊಳಿಸುತ್ತದೆ.
4. ಮಧ್ಯಸ್ಥಿಕೆ
ಮಧ್ಯಸ್ಥಿಕೆಯು ಸಮಾಲೋಚನೆಯ ಹೆಚ್ಚು ಕಾನೂನುಬದ್ಧ ಮತ್ತು ರಚನಾತ್ಮಕ ರೂಪವಲ್ಲ. ಇದನ್ನು ಮಧ್ಯವರ್ತಿ ಎಂದು ಕರೆಯಲಾಗುವ ಮೂರನೇ ವ್ಯಕ್ತಿಯ ಅಥವಾ ಸ್ವತಂತ್ರ ವ್ಯಕ್ತಿಯು ನೋಡಿಕೊಳ್ಳುತ್ತಾನೆ. ನೀವು ಒಪ್ಪಂದವನ್ನು ತಲುಪಲು ವಿಫಲವಾದರೆ ಇದು ಮುಂದಿನ ಹಂತವಾಗಿದೆ. ವಿವಾದದ ಹೊಸ ದೃಷ್ಟಿಕೋನವನ್ನು ಹೊಂದಿರುವುದರಿಂದ ಮಧ್ಯವರ್ತಿ ಎರಡೂ ಪಕ್ಷಗಳಿಂದ ಸಮಸ್ಯೆಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ಇದು ಸಮಸ್ಯೆಯನ್ನು ಪರಿಹರಿಸಲು ಮತ್ತು ತೃಪ್ತಿದಾಯಕ ಒಪ್ಪಂದಕ್ಕೆ ಬರಲು ಸಹಾಯ ಮಾಡುತ್ತದೆ. ಮಧ್ಯವರ್ತಿ ಸಾಮಾನ್ಯವಾಗಿ ನ್ಯಾಯಾಧೀಶರು ಅಥವಾ ಹಿರಿಯ ವಕೀಲರು.
ಎರಡೂ ಪಕ್ಷಗಳು ಪರಸ್ಪರರ ದೃಷ್ಟಿಕೋನವನ್ನು ಕಾಣುವಂತೆ ಮಾಡುವ ಮೂಲಕ ಈ ಹಂತವು ಸಹಾಯ ಮಾಡುತ್ತದೆ. ಇದು ಬಂಧಿಸದ ಪ್ರಕ್ರಿಯೆ; ಪಕ್ಷಗಳು ಪರಸ್ಪರ ಒಪ್ಪಿಕೊಂಡಾಗ ಮತ್ತು ನಿಯಮಗಳನ್ನು ಲಿಖಿತ ರೂಪದಲ್ಲಿ ಮತ್ತು ಸಹಿ ಮಾಡಿದಾಗ ಮಾತ್ರ ಅದನ್ನು ಬಂಧಿಸಬಹುದು.
ಮಧ್ಯಸ್ಥಿಕೆ ಅತ್ಯಂತ ಉಪಯುಕ್ತವಾದ ವಿವಾದಗಳ ಪ್ರಕಾರಗಳು -
ಬಾಡಿಗೆದಾರರು ಮತ್ತು ಭೂಮಾಲೀಕರು