text stringlengths 0 61.5k |
|---|
Mar 5, 2021 | ಬುಕ್ ಬಝಾರ್ | 0 ಪ್ರತಿಕ್ರಿಯೆಗಳು |
ನಾ ದಿವಾಕರ ಒಬ್ಬ ವ್ಯಕ್ತಿಯ ಬದುಕು ರೂಪಿಸುವಲ್ಲಿ ಬಾಲ್ಯ ಮತ್ತು ಯೌವ್ವನ ಮಹತ್ತರ ಪಾತ್ರ ವಹಿಸುತ್ತವೆ. ನಾವು ಬೆಳೆದ ಪರಿಸರ, ನಮ್ಮ ಸುತ್ತಲೂ ಇದ್ದ ಪ್ರಪಂಚ, ನಾವು ಒಡನಾಟ ಹೊಂದಿದ್ದ ಸಂಬಂಧಿಗಳು ಮತ್ತು ನಾವು ಓದಿದ ಶಾಲೆ, ಪಾಠ ಹೇಳಿದ ಗುರುಗಳು ಹೀಗೆ ಬಾಲ್ಯದ ಬದುಕು ಮನುಷ್ಯನ ಜೀವನದ ನೀಲ ನಕ್ಷೆಯನ್ನು ಅಮೂರ್ತ ನೆಲೆಯಲ್ಲಿ... |
Mar 1, 2021 | ಬುಕ್ ಬಝಾರ್ | 0 ಪ್ರತಿಕ್ರಿಯೆಗಳು |
ಸುಮಾ ವೀಣಾ ಮಹಾಕಾವ್ಯಗಳು ಮೌಲ್ಯಗಳಿಗೆ ಪ್ರತೀಕವಾಗಿರುತ್ತವೆ ಎನ್ನುತ್ತಾರೆ ಅದಕ್ಕೆ ಸಾಕಾರ ರೂಪವಾಗಿ ಸ್ತ್ರೀ ಮೌಲ್ಯವನ್ನು ಗಟ್ಟಿಯಾಗಿ ಪ್ರತಿಪಾದನೆ ಮಾಡಿದವಳು ರಾಮಾಯಣದ ಸೀತೆ ಎನ್ನಬಹುದು. ಈಕೆ ಅನುಸರಿಸಲು ಯಾವ ಮಾದರಿಯೂ ಇಲ್ಲದೆ ಇರುವಾಗ ತಾನೆ ಶಾಶ್ವತ ಮಾದರಿಯಾಗಿ ಹೋಗಿರುವವಳು. ರಾಮಾಯಣದ ಹುಟ್ಟಿಗೂ ಹೆಣ್ಣಿನ... |
ಬಂಟ್ವಾಳ: ರಾಷ್ಟ್ರಮಟ್ಟದ ವಸ್ತು ಪ್ರದರ್ಶನಕ್ಕೆ ಆಯ್ಕೆ – Udupi Times |
ಬಂಟ್ವಾಳ: ರಾಷ್ಟ್ರಮಟ್ಟದ ವಸ್ತು ಪ್ರದರ್ಶನಕ್ಕೆ ಆಯ್ಕೆ |
ಬಂಟ್ವಾಳ : ಬೆಂಗಳೂರಿನ ಡೆಲ್ಲಿ ಪಬ್ಲಿಕ್ ಶಾಲೆಯಲ್ಲಿ ಎರಡು ದಿನ ನಡೆದ ಸಿ.ಬಿ.ಎಸ್.ಇ ಶಾಲೆಗಳ ರಾಜ್ಯಮಟ್ಟದ ವಿಜ್ಞಾನ ಮಾದರಿ ವಸ್ತು ಪ್ರದರ್ಶನದಲ್ಲಿ ಬಂಟ್ವಾಳದ ವಿದ್ಯಾಗಿರಿಯ ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲೆಯು ರಾಷ್ಟ್ರಮಟ್ಟದ ವಸ್ತುಪ್ರದರ್ಶನಕ್ಕೆ ಆಯ್ಕೆಯಾಗಿದೆ. |
ಶಾಲಾ ಪ್ರಾಂಶುಪಾಲೆ ರಮಾಶಂಕರ್ ಅವರು ವಿದ್ಯಾರ್ಥಿನಿಯರ ಸಾಧನೆಯನ್ನು ಪ್ರಶಂಸಿಸಿ ಶುಭಹಾರೈಸಿದ್ದಾರೆ. ಇಂದಿನ ಆಧುನಿಕ ಶೈಲಿಯ ಮನೆಗಳಲ್ಲಿ ಟೈಲ್ಸ್ ಅಥವಾ ಗ್ರಾನೈಟ್‍ಗಳ ಮೇಲೆ ಬಿದ್ದಿರುವ ನೀರನ್ನು ಗುರುತಿಸಲು ಮತ್ತು ಉಂಟಾಗುವ ಅನಾಹುತಗಳನ್ನು ತಪ್ಪಿಸಲು, ವ್ಯಕ್ತಿಯನ್ನು ಜಾಗೃತಗೊಳಿಸಲು ಇದು ಸಹಕರಿಸುತ್ತದೆ. ಈ ವಾಕಿಂಗ್ ಸ್ಟಿಕ್‍ನ ತುದಿಭಾಗವು ನೀರಿನ ಸಂಪರ್ಕ ಪಡೆದೊಡನೇ ಶಬ್ದ ಉತ್ಪತ್ತಿ ಮಾಡು... |
ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಿದ ಜಪಾನ್ ಪ್ರಧಾನಿ ಶಿಂಜೋ ಅಬೆ | PM Narendra Modi receives Japanese PM Shinzo Abe, wife Akie Abe at Ahmedabad Airport | Kannadaprabha.com |
ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಿದ ಜಪಾನ್ ಪ್ರಧಾನಿ ಶಿಂಜೋ ಅಬೆ |
ಶಿಂಜೋ ಅಬೆಗೆ ಪ್ರಧಾನಿ ಮೋದಿ ಸಾಥ್, ಗಾಂಧಿ ಆಶ್ರಮದ ವಿವರ ನೀಡಿದ ನರೇಂದ್ರ ಮೋದಿ |
Published: 13 Sep 2017 04:33 PM IST | Updated: 13 Sep 2017 08:57 PM IST |
ರೋಡ್ ಶೋ ನಲ್ಲಿ ಪ್ರಧಾನಿ ಮೋದಿ ಹಾಗೂ ಜಪಾನ್ ಪ್ರಧಾನಿ ಶಿಂಜೋ ಅಬೆ |
ಅಹ್ಮದಾಬಾದ್: 2 ದಿನಗಳ ಭಾರತ ಪ್ರವಾಸ ಆರಂಭಿಸಿರುವ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ಬುಧವಾರ ಸಂಜೆ ಅಹ್ಮದಾಬಾದ್ ನ ಮಹಾತ್ಮ ಗಾಂಧಿ ಅವರ ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಿದರು. |
ಜಪಾನ್ ಪ್ರಧಾನಿ ಶಿಂಜೋ ಅಬೆ ಅವರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಸಾಥ್ ನೀಡಿದರಲ್ಲದೇ, ಆಶ್ರಮದ ಕುರಿತು ಶಿಂಜೋ ಅಬೆ ಮತ್ತು ಅವರ ಪತ್ನಿ ಅಕೀ ಅಬೆ ಅವರಿಗೆ ಮಾಹಿತಿ ನೀಡಿದರು. ಆಶ್ರಮ ಭೇಟಿ ಬಳಿಕ ಜಪಾನ್ ಪ್ರಧಾನಿ ಹಾಗೂ ಅವರ ಪತ್ನಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಖ್ಯಾತ "ಸಿದಿ ಸೈಯ್ಯದ್ ನಿ ಜಾಲಿ ಮಸೀದಿ"ಗೆ ಕರೆದೊಯ್ದರು. |
ದೇಶದ ಪ್ರಧಾನಿಯಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಮೊದಲ ಬಾರಿಗೆ ಮಸೀದಿಗೆ ಭೇಟಿ ನೀಡಿದ್ದು, ಅದೂ ಕೂಡ ಜಪಾನ್ ಪ್ರಧಾನಿಗಳೊಂದಿಗೆ ಮಸೀದಿಗೆ ಭೇಟಿ ನೀಡಿದ್ದು, ವಿಶೇಷವಾಗಿತ್ತು. "ಸಿದಿ ಸೈಯ್ಯದ್ ನಿ ಜಾಲಿ ಮಸೀದಿ" 16ನೇ ಶತಮಾನದ ಐತಿಹಾಸಿಕ ಮಸೀದಿಯಾಗಿದ್ದು, ಪ್ರತೀ ವರ್ಷ ವಿಶ್ವಾದ್ಯಂತ ಲಕ್ಷಾಂತರ ಮುಸ್ಲಿಂ ಬಾಂಧವರು ಇಲ್ಲಿಗೆ ಭೇಟಿ ನೀಡುತ್ತಾರೆ. |
ಗುಜರಾತ್ ನ ಅಹ್ಮದಾಬಾದ್ ವಿಮಾನ ನಿಲ್ದಾಣಕ್ಕೆ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ಆಗಮಿಸಿದ್ದು, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮೀಯ ಅಪ್ಪುಗೆ ಮೂಲಕ ಶಿಂಜೋ ಅಬೆ ಮತ್ತು ಅವರ ಪತ್ನಿ ಅಕೀ ಅಬೆ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. |
ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿ ಇನ್ನೊಂದು ದೇಶದ ಪ್ರಧಾನಿಯೊಂದಿಗೆ ರೋಡ್ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಇನ್ನು ಶಿಂಜೋ ಅಬೆ ಭಾರತ ಭೇಟಿ ಪ್ರಮುಖ ಎನಿಸಿದ್ದು, ಭಾರತ-ಜಪಾನ್ ನಡುವಿನ ವಿವಿಧ ಕ್ಷೇತ್ರಗಳಲ್ಲಿನ ಸಹಕಾರದ ಪ್ರಗತಿಯನ್ನು ಇಬ್ಬರೂ ನಾಯಕರು ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಸೆಪ್ಟಂಬರ್ 14ರಂದು ಅಂದರೆ ನಾಳೆ ಮುಂಬೈ-ಅಹಮದಾಬಾದ್ ನಡುವಿನ ಬುಲೆಟ್ ರೈಲು ಯೋಜನೆ... |
Topics : Ahmadabad, Shinzo Abe India Visit, Japan, PM Modi, ಅಹ್ಮದಾಬಾದ್, ಜಪಾನ್, ಶಿಂಜೋ ಅಬೆ ಭಾರತ ಪ್ರವಾಸ, ಪ್ರಧಾನಿ ಮೋದಿ |
PM Narendra Modi receives Japanese PM Shinzo Abe at the Ahmedabad airport with bear hugs and a hearty handshake. The skies are overcast in Ahmedabad, even as a massive road show is set to begin. The PM greeted Akie Abe, the Japanese PM's wife, and led Abe to the podium where he will receive the guard of honour. They wi... |
ರಸ್ತೆಗಳೆಲ್ಲ ಅಪಾಯದ ಗುಂಡಿಗಳು : ಜಿಲ್ಲಾಡಳಿತ-ಪಾಲಿಕೆ ವಿರುದ್ಧ ಪ್ರತಿಭಟನೆ – ಮೈಸೂರು ಟುಡೆ |
Home/ ನಮ್ಮೂರು/ ಮೈಸೂರು/ರಸ್ತೆಗಳೆಲ್ಲ ಅಪಾಯದ ಗುಂಡಿಗಳು : ಜಿಲ್ಲಾಡಳಿತ-ಪಾಲಿಕೆ ವಿರುದ್ಧ ಪ್ರತಿಭಟನೆ |
ಮೈಸೂರು,ಅ.27:- ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ವಿವಿಧ ಬಡಾವಣೆಗಳಲ್ಲಿ ದೊಡ್ಡಮೋರಿಗಳು,ಚರಂಡಿಗಳನ್ನು ಸರಿಯಾಗಿ ನಿರ್ವಹಣೆ ಮಾಡದೆ ಇರುವ ಹಾಗೂ ಕ್ಷೇತ್ರದೆಲ್ಲೆಡೆ ರಸ್ತೆಗಳೆಲ್ಲವೂ ಅಪಾಯದ ಗುಂಡಿಗಳಾಗಿ ಮಾರ್ಪಾಟಾಗಿರುವುದನ್ನು ಮನಗಂಡು ಮಾದರಿ ಕ್ಷೇತ್ರದ ದುರಂತಗಳನ್ನು ವಿರೋಧಿಸಿ ಜಿಲ್ಲಾಡಳಿತ,ಪಾಲಿಕೆ ವಿರುದ್ಧ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ಅವರ ನೇತೃತ್ವದಲ್ಲಿ ಹಾಗೂ ವಿವಿಧ ಬಡಾವಣೆಗಳ ತ... |
ಮೈಸೂರು ಮಹಾನಗರ ಪಾಲಿಕೆ ಮುಂಭಾಗ ಇಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಮಳೆ ನೀರು ತುಂಬಿ ಜನರು ಪಡಬಾರದ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಜನಪ್ರತಿನಿಧಿಗಳು ಉಪಚುನಾವಣೆಯ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಯಾರೂ ನಮ್ಮ ಕಷ್ಟಗಳನ್ನು ಕೇಳಲು ಬಂದಿಲ್ಲವೆಂದು ಆರೋಪಿಸಿದರು. |
ಅಷ್ಟೇ ಅಲ್ಲದೆ ರಸ್ತೆಗಳಲ್ಲಿ ಹೊಂಡ ಗುಂಡಿಗಳು ಬಿದ್ದಿದ್ದು ಪ್ರಾಣಕ್ಕೆ ಸಂಚಕಾರವಾಗುವ ಅಪಾಯವಿದೆ. ರಸ್ತೆ ದುರಸ್ತಿ ಕಾರ್ಯಕ್ಕೆ ಯಾರೂ ಮುಂದಾಗುತ್ತಿಲ್ಲವೆಂದು ಆರೋಪಿಸಿ, ಶೀಘ್ರ ರಸ್ತೆ ದುರಸ್ತಿ ಕಾರ್ಯ ಕೈಗೊಂಡು ಹೊಂಡಗುಂಡಿಗಳನ್ನು ಮುಚ್ಚುವಂತೆ ಒತ್ತಾಯಿಸಿದರು. (ಕೆ.ಎಸ್,ಎಸ್.ಎಚ್) |
ಪುಸ್ತಕನೋಟ – 'ತೆರೆದಂತೆ ಹಾದಿ' – ಸುರಹೊನ್ನೆ |
ಪುಸ್ತಕನೋಟ – 'ತೆರೆದಂತೆ ಹಾದಿ' |
by Sangeetha Raviraj, sangeetharhosoor@gmail.com · May 11, 2017 |
ಹೆಣ್ಣಿನ ಕ್ಷಮತೆ,ದಕ್ಷತೆ,,ಕಾರ್ಯವೈಖರಿ, ಸಾಮಾಜಿಕ ಮತ್ತು ಕೌಟುಂಬಿಕ ಸ್ವಾತಂತ್ರ್ಯದ ಒಳಹೊರಗು ಇವುಗಳನ್ನೆಲ್ಲಾ ಒಂದೇ ಪರಿಧಿಯೊಳಗೆ ಹಿಡಿದಿಟ್ಟ ವೈಚಾರಿಕ ಬರಹಗಳ ಗುಚ್ಛ "ತೆರೆದಂತೆ ಹಾದಿ "ಎಂಬ ವಿಶಿಷ್ಟವಾದ ಶೀರ್ಷಿಕೆಯ ಈ ಹೊತ್ತಿಗೆ. ಮೂಡಬಿದಿರೆ ಆಳ್ವಾಸ್ ಕಾಲೇಜ್ ನ ಇಂಗ್ಲೀಷ್ ಉಪನ್ಯಾಸಕಿ ಬಿ.ಜಯಶ್ರೀ ಕದ್ರಿ ಯವರ ತೆರೆದಂತೆ ಹಾದಿ ಪುಸ್ತಕ, ಮಹಿಳೆಯ ಅಂತರಂಗದ ಆಗುಹೋಗುಗಳ ಹೊಸ ಹೊಸ ಆಯಾಮಗಳನ... |
"ಹೆಣ್ಣಾಗಿ ಯಾರು ಹುಟ್ಟವುದಿಲ್ಲ ನಂತರ ರೂಪಿತವಾಗುತ್ತಾರಷ್ಟೆ " ಸಿಮೊನ್ ನೋವಾ ಎಂಬುವರ ಮಾತನ್ನು ಭಾರತೀಯ ಪ್ರತಿಯೊಬ್ಬ ಪ್ರಜೆಯು ಅರ್ಥ ಮಾಡಿಕೊಳ್ಳಬೇಕು.ಅಂದರೆ ಇಲ್ಲಿ ಹೆಣ್ಣಾಗಿ ರೂಪಿಸುವುದು ಇತರರು ಎಂದಾಯಿತು. ಇದು ನಿಜ. ತಮ್ಮ ಸ್ವಂತ ನಡವಳಿಕೆಯಿಂದ ಹುಡುಗಿಯಾದವಳು ಬದುಕುತ್ತಿದ್ದರು, ಚಿಕ್ಕಂದಿನಿಂದಲೇ ಒಂದೊಂದೇ ಕಟ್ಟುಪಾಡುಗಳು ಅವಳನ್ನು ಬಿಗಿದುಕೊಳ್ಳಲು ಪ್ರಾರಂಭಿಸುತ್ತದೆ. ಬೆಳೆದಂತೆ ಅ... |
ಸಾಮಾಜಿಕ ಕಳಕಳಿ ಹೊತ್ತಿರುವ ಸಂಪೂರ್ಣ ವೈಚಾರಿಕ ಬರಹಗಳು ಇಲ್ಲಿದ್ದರು, ಲೇಖಕಿಯ ಒಲವು ಒಳಮನಸ್ಸಿನ ಭಾವನೆಗಳ ತುಮುಲಗಳ ಕಡೆಗೆ ಹೆಚ್ಚಾಗಿ ಒಯ್ದಂತೆ ನಮಗೆ ಭಾಸವಾಗುತ್ತದೆ.ಸ್ವಗತದಲ್ಲಿ ಕಂಡದ್ದನ್ನು ಪರಿಣಾಮಕಾರಿಯಾಗಿ ವಿಶ್ಲೇಷಿಸಿದ್ದಾರೆ. ಪ್ರೀತಿ ಹಾಗು ಜೀವನ ಬಂಧನ ಅಲ್ಲ. ಪ್ರತಿ ಜೀವಿಯು ಇದೊಂದು ಮಾನಸಿಕ ಸ್ಥಿತಿ ಎಂಬುದಾಗಿ ತೆರೆದಿಡುತ್ತಾರೆ. ವರದಕ್ಷಿಣೆ ಕೇಳುವುದಿಲ್ಲ ಸಂಬಳ ಕೇಳುತ್ತಾರೆ ಎಂ... |
'ತೆರೆದಂತೆ ಹಾದಿ'ಯ ಐವತ್ತರಿಂದ ಲೇಖನಗಳನ್ನು ಓದುತ್ತಿದ್ದಾಗ ನನಗೆ ಈ ಪುಸ್ತಕದ ತೀರಾ ಹತ್ತಿರವಾದ ಇನ್ನೊಂದು ಪುಸ್ತಕವಿದೆ ಎಂದು ಬಲವಾಗಿ ಅನ್ನಿಸುತ್ತಿತ್ತು.ಅದು ಸುಧಾಮೂರ್ತಿಯವರ "ಮನದ ಮಾತು "ಪುಸ್ತಕದ ಲೇಖನಗಳು. ಈ ಪುಸ್ತಕಕ್ಕೆ ಅದು ಹೇಗೆ ಬೆಸೆದುಕೊಂಡಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಲಾಗದಿದ್ದರು ನನ್ನ ಮನಸ್ಸಿಗೆ ಈ ವಿಚಾರ ಬಂದಿದಂತು ನಿಜ.ಮನದ ಮಾತು ಪುಸ್ತಕದಲ್ಲಿ 'ಎರಡು ಜಗತ್ತಿನ ಅಂತರ... |
'ತೆರೆದಂತೆ ಹಾದಿ'ಯ ಪ್ರತಿ ಲೇಖನಗಳ ಪ್ರಾರಂಭದಲ್ಲಿ ಒಂದು ಭಾವಗೀತೆಯ ಸಾಲು ಅಥವ ಶುಭನುಡಿಯ ತುಣುಕು ಮತ್ತೇನೋ ನೀತಿಮಾತು ಮಗದೊಂದು ಸಂದೇಶ ಹೀಗೆ ಎದ್ದು ಕಾಣುತ್ತದೆ. ಇಂತಹ ಪ್ರಾರಂಭಿಕ ರೋಚಕ ಸಾಲುಗಳು ಸಂಪ್ರೀತಿಯಿಂದ ಸಂಪೂರ್ಣ ಬರಹವನ್ನು ಓದಲು ನಮ್ಮ ಮನಸ್ಸನ್ನು ಕೇಂದ್ರೀಕರಿಸುತ್ತದೆ ಅಂದರೆ ಅತಿಶಯೋಕ್ತಿ ಅಲ್ಲ. ಆಯಾ ಲೇಖನಕ್ಕೆ ಪೂರಕವಾಗಿ ಸಂದರ್ಭಕ್ಕೆ ತಕ್ಕಂತೆ ಇಂತಹ ಸಾಲೊಂದನ್ನು ಆಯ್ಕೆಮಾಡಿ... |
'ಒಗ್ಗರಣೆ ಸದ್ದಿನಲ್ಲಿ ಕರಗಿಹೋಗುವವರು' ಎಂದು ಉಸುರುತ್ತಾ ಸ್ತ್ರೀ ವಾದದ ಕಕ್ಕುಲಾತಿಯ ಎಳೆ ಎಳೆಯನ್ನು ಬಿಡಿಸಿಟ್ಟು, ಲೇಖಕಿಯು ಪರಾಮರ್ಶಿಸಿದ ರೀತಿ ಅನೂಹ್ಯವಾಗಿದೆ.ಪ್ರತಿ ಲೇಖನವು ಅಧ್ಯಯನ ಶೀಲ ಬರಹದಂತೆ ಭಾಸವಾಗಿ ಪ್ರತಿ ಹೆಣ್ಣಿಗು ತನಗೆ ಬೇಕಾದ 'ಟಿಪ್ಸ್ ' ನೀಡುತ್ತದೆ. ಲೇಖಕಿಯು ಓದಿಕೊಂಡಿರುವ ವಿಚಾರವು, ಅದನ್ನು ತಮ್ಮ ಬರಹದೊಂದಿಗೆ ಬೆಸೆದು ನೀಡಿದ ಉದಾಹರಣೆಗಳು ನಮ್ಮನ್ನು ಗಾಢವಾಗಿ ಸೆಳೆಯ... |
ಜಯಶ್ರೀ ಬಿ. ಕದ್ರಿಯವರು ಪ್ರಸ್ತುತ ಕಾಲಮಾನದ ಅವುಗಳ ಜಾಯಮಾನದ ಸಂಗತಿಗಳನ್ನು ಆಧುನಿಕ ಜನಮಾನಸದಲ್ಲಿ ಅನುಸಂಧಾನಿಸುತ್ತಲೇ ತಮ್ಮ ಬರವಣಿಗೆಯನ್ನು ಮುಂದುವರೆಸಿದ್ದಾರೆ. ಅಂದಿನ ಯಲೆಮಾತಿನ ವೈರುಧ್ಯವನ್ನು ಇಂದು ತೆರೆದಿಟ್ಟು ವ್ಯತ್ಯಾಸಗಳನ್ನು ನವುರಾಗಿ ಮೇಳೈಸಿ,ನಮ್ಮನ್ನು ನಾವು ಸಮಾಜಕ್ಕೆ ಇಟ್ಟುಕೊಳ್ಳುವ ಪರಿಯನ್ನು ತಿಳಿಸಿದ ರೀತಿ ವಿಶೇಷವಾಗಿದೆ..ಕೃತಿಯ ಉದ್ದಕ್ಕು ನಾವು ಪ್ರತ್ಯೇಕವಾಗಿ ಗುರುತಿ... |
ಸಂಗೀತ says: |
ದನ್ಯವಾದಗಳು…. |
ಧನ್ಯವಾದ ಸಂಗೀತಾ. ಇಷ್ಟು ಧನಾತ್ಮಕವಾಗಿ ಪರಿಚಯಿಸಿದ್ದಕ್ಕೆ. |
Notice: It seems you have Javascript disabled in your Browser. In order to submit a comment to this post, please write this code along with your comment: 2e00672e3da1b0972aeb3b760e13116f |
ಬೆಂಗಳೂರಿಗೆ ಸಂದ ಸಿಲಿಕಾನ್ ಸಿಟಿ ಸಿಂಹಾಸನಕ್ಕೆ ಧಕ್ಕೆಯಿಲ್ಲ...! | ThatsKannada.com - Karnataka: IT All The Way..... - Kannada Oneindia |
ಬೆಂಗಳೂರಿಗೆ ಸಂದ ಸಿಲಿಕಾನ್ ಸಿಟಿ ಸಿಂಹಾಸನಕ್ಕೆ ಧಕ್ಕೆಯಿಲ್ಲ...! |
*ಭಾರತಿ ಚತುರ್ವೇದಿ |
ಅದು ಜೆ.ಎಚ್. ಪಟೇಲರು ಮುಖ್ಯಮಂತ್ರಿಗಳಾಗಿದ್ದ ಕಾಲ. ಕರ್ನಾಟಕದಲ್ಲಿ ಐಟಿ ಅಂಬೆಗಾಲಿಡುತ್ತಿತ್ತು. ಅದೇ ಸಮಯಕ್ಕೆ ಹೈದರಾಬಾದ್‌ನಲ್ಲಿಯೂ ಐಟಿಯ ಸದ್ದು. ಒಂದಷ್ಟು ವಿದೇಶೀ ಐಟಿ ಕಂಪೆನಿಗಳು ತಮ್ಮ ತಾವು ಹೈದರಾಬಾದೋ.... ಬೆಂಗಳೂರೋ ಅಂತ ಮೀನ ಮೇಷ ಎಣಿಸುತ್ತಿರುವಾಗ ಚಂದ್ರಬಾಬು ನಾಯ್ಡು ತಮ್ಮ ವರ್ಚಸ್ಸಿನಿಂದ ಹಿಡಿಯಷ್ಟು ಐಟಿ ಕಂಪೆನಿಗಳನ್ನು ಹೈದರಾಬಾದ್‌ಗೆ ಡೌನ್‌ಲೋಡ್ ಮಾಡಿಕೊಳ್ಳುವಲ್ಲಿ ಯಶಸ್ವ... |
ಆದರೆ ಮುಂದಿನ ದಿನಗಳು ಹಾಗೇ ಉಳಿಯಲಿಲ್ಲ. ಅಂತೂ ಇಂತೂ ಅಪ್‌ಗ್ರೇಡೆಡ್ ಬೆಂಗಳೂರು, 'ಸಿಲಿಕಾನ್ ಸಿಟಿ' ಪಟ್ಟವನ್ನು ಗಿಟ್ಟಿಸಿಕೊಂಡಿತು. ನಂತರ ಹಿಂತಿರುಗಿ ನೋಡಲಿಲ್ಲ. ಮುಖ್ಯಮಂತ್ರಿ ಎಸ್. ಎಂ. ಕೃಷ್ಣರೂ ಆಕ್ಸ್‌ಫರ್ಡ್ ರಿಟರ್ನ್ಡ್ ಆದ್ದರಿಂದ, ಹೈಟೆಕ್ ಚರ್ಚೆಗಳು, ಕಾರ್ಪೊರೇಟ್ ಇಷ್ಯೂಗಳು ಬೆಂಗಳೂರಿನಲ್ಲಿ ಐಟಿಯ ಕಲವರವ ಹಬ್ಬಲು ನೆರವಾದವು. |
ಈಗ 52 ಚಿಪ್ ಡಿಸೈನಿಂಗ್ ಕಂಪೆನಿಗಳು, 174 ಸಿಸ್ಟಂ ಸಾಫ್ಟ್‌ವೇರ್ ಆಪರೇಟರ್ ಮತ್ತು 126 ಕಮ್ಯೂನಿಕೇಷನ್ ಸಾಫ್ಟ್‌ವೇರ್ ಕೇಂದ್ರಗಳನ್ನು ಹೊಂದಿರುವ ಬೆಂಗಳೂರಿನಲ್ಲಿ ಹೊಸ ನಮೂನೆಯ ಐಟಿ ಕಂಪೆನಿಗಳು ಹುಟ್ಟುತ್ತಲೇ ಇವೆ. ಜಗತ್ತಿನ ಉತ್ತಮ ಸಾಫ್ಟ್‌ವೇರ್ ಕಂಪೆನಿಗಳಲ್ಲಿ ಅರ್ಧದಷ್ಟು ಕಂಪೆನಿಗಳಿಗೆ ಬೆಂಗಳೂರು 'ಮದರ್ ಬೋರ್ಡ್' (ತವರು) ಇದ್ದ ಹಾಗೆ. |
ಬೆಂಗಳೂರು ಐಟಿ ಓಟದಲ್ಲಿ 404 ಎರರ್ ಇಲ್ಲ |
ರಾಜ್ಯದಿಂದ ಒಟ್ಟು 9903 ಕೋಟಿ ರೂಪಾಯಿ ಮೌಲ್ಯದ ಸಾಫ್ಟ್‌ವೇರ್ ರಫ್ತಾಗುತ್ತಿದೆ. ಈ ವರ್ಷವೇ 110 ಹೊಸ ಸಾಫ್ಟ್‌ವೇರ್ ಕಂಪೆನಿಗಳು ನೋಂದಣಿ ಪಡೆದಿವೆ ಎಂದು ರಾಜ್ಯದ ಐಟಿ ನಿರ್ದೇಶಕ ಇ. ವಿ. ರಮಣ ರೆಡ್ಡಿ ಹೇಳುತ್ತಾರೆ. ಹಾರ್ಡ್‌ವೇರ್ ಕ್ಷೇತ್ರದಲ್ಲೂ ರಾಜ್ಯ ಮುನ್ನುಗ್ಗುತ್ತಿದೆ. ಬಿಸಿನೆಸ್ ಪ್ರೋಸೆಸ್ ಔಟ್‌ಸೋರ್ಸಿಂಗ್(ಬಿಪಿಒ) ಕ್ಷೇತ್ರದಲ್ಲಿ ರಾಜ್ಯವು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತ... |
ನ್ಯಾವಿಗೇಷನ್‌ನಲ್ಲೂ... |
ಐಟಿಯಿಂದ ಆಗುತ್ತಿರುವ ಲಾಭಗಳನ್ನು ಮನವರಿಕೆ ಮಾಡಿಕೊಂಡಿರುವ ರಾಜ್ಯ ಸರಕಾರ ಮಂಗಳೂರು, ಮೈಸೂರು ಮತ್ತು ಹುಬ್ಬಳ್ಳಿ-ಧಾರವಾಡಗಳಿಗೂ ಐಟಿ ಕೇಂದ್ರಗಳನ್ನು ವಿಸ್ತರಿಸುತ್ತಿದೆ. ಈ ನಗರಗಳ ನಡುವೆ ಹೈ ಸ್ಪೀಡ್ ಫೈಬರ್ ಆಪ್ಟಿಕ್ ನೆಟ್‌ವರ್ಕ್ ನೀಡುವ ಬಗ್ಗೆಯೂ ಸರಕಾರ ಚಿಂತನೆ ನಡೆಸಿದೆ. |
30 ಸಾವಿರ ಮಂದಿ ಪರಿಣತ ಇಂಜಿನಿಯರ್‌ಗಳು ಹಾಗೂ ಲಕ್ಷಕ್ಕೂ ಹೆಚ್ಚು ಕಂಪ್ಯೂಟರ್ ಪದವೀಧರರು ಈ ಕ್ಷೇತ್ರಕ್ಕೆ ಪ್ರತಿವರ್ಷ ಕಾಲಿಡುತ್ತಿದ್ದಾರೆ. ಅಲ್ಲದೆ ಸರಕಾರವು ಭೂಮಿ, ರೈತ ಮಿತ್ರ, ಯುವ.ಕಾಂನಂತಹ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೇ ಇದೆ. |
ಯುವ.ಕಾಂ ಯೋಜನೆಯಡಿಯಲ್ಲಿ ಗ್ರಾಮೀಣ ಪ್ರದೇಶದ ಯುವಜನತೆಗೆ ಕಂಪ್ಯೂಟರ್ ತರಬೇತಿಯನ್ನು ನೀಡಲಾಗುತ್ತಿದೆ. ಇದಿರಂದ ಬೆಂಗಳೂರಿನ ಕಾರ್ಪೊರೇಟ್ ಜಗತ್ತಿಗೆ ಸೀಮಿತವಾದ ಐಟಿ ಹಳ್ಳಿಗಳನ್ನೂ ತಲುಪುವುದು ಸುಲಭವಾಗುತ್ತದೆ. ರೈತ ತಾನು ಬೆಳೆದ ಬೆಳೆಯ ಬಗ್ಗೆ ಸಾಕಷ್ಟು ಮಾಹಿತಿಯನ್ನು ರೈತ ಮಿತ್ರ ಕೇಂದ್ರದಲ್ಲಿಯೇ ಪಡೆಯಬಹುದು. |
ರೈತ ಮಿತ್ರ ಕೇಂದ್ರಗಳನ್ನು ಹೋಬಳಿ ಮಟ್ಟದಲ್ಲಿ ನಡೆಸಲಾಗುತ್ತಿದೆ. ರೈತರಿಗೆ ಅಗತ್ಯ ಮಾಹಿತಿ ಪೂರೈಕೆ ಕಾರ್ಯದ ಹೊಣೆಯನ್ನು ಐಟಿ ಕ್ಷೇತ್ರಕ್ಕೆ ವಹಿಸಲಾಗಿದೆ. 117 ಹೋಬಳಿಗಳಲ್ಲಿ ಪ್ರಾಯೋಗಿಕವಾಗಿ ರೈತ ಮಾಹಿತಿ ಕೇಂದ್ರಗಳು ನಡೆಯುತ್ತಿವೆ. ಕರ್ನಾಟಕದ ಹೆದ್ದಾರಿಗಳಲ್ಲಿ ಮಾಹಿತಿ ತಂತ್ರಜ್ಞಾನದ ಯಾತ್ರೆ ಸಾಗಿದೆ. |
ದುಬೈ: ಬ್ಯಾರೀಸ್ ಕಲ್ಚರಲ್ ಫೋರಂ-ಇಫ್ತಾರ್ ಮೀಟ್ -2017 | SahilOnline |
ದುಬೈ: ಬ್ಯಾರೀಸ್ ಕಲ್ಚರಲ್ ಫೋರಂ-ಇಫ್ತಾರ್ ಮೀಟ್ -2017 |
Source: arshad | By Arshad Koppa | Published on 10th June 2017, 9:43 PM | Gulf News | Special Report | Don't Miss | |
ದುಬೈ, ಜೂ ೧೦: ಬ್ಯಾರಿ ಬಾಂಧವರ ಸಂಘಟನೆಯಾದ ಬಿಸಿಎಫ್ ಅಥವಾ ಬ್ಯಾರೀಸ್ ಕಲ್ಚರಲ್ ಫೋರಂ ದುಬೈ ಘಟಕದಿಂದ ಜೂನ್ ೯ ರ ಶುಕ್ರವಾರ ಸಂಜೆ ನಗರದ ಇರಾನಿಯನ್ ಕ್ಲಬ್ ಸಭಾಂಗಣದಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಲಾಗಿತ್ತು. |
ನಾಡಿನಲ್ಲಿ ವ್ಯಾಸಾಂಗ ಮಾಡುತ್ತಿರುವ, ಜಾತಿ ಮತ ಪಂಗಡಗಳ ಬೇಧವಿಲ್ಲದೇ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ನಿಟ್ಟಿನಲ್ಲಿ ಇಫ್ತಾರ್ ಬಳಿಕದ ಸಭೆಯಲ್ಲಿ ಪ್ರಾಯೋಜಕರಿಂದ ದೇಣಿಗೆಯನ್ನು ಕೋರಲಾಯಿತು. |
ಇಫ್ತಾರ್ ಕಾರ್ಯಕ್ರಮಕ್ಕೂ ಮುನ್ನ ಕೆಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮಕ್ಕಳು ಕುರಾನ್ ಪ್ರವಚನದ ಮೂಲಕ ಪ್ರತಿಭೆಯನ್ನು ಮೆರೆದರು. ಪ್ರವಚನ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು. |
ಇಬ್ರಾಹಿಂ ದುಬಾಲ್ ರವರು 'ಇಸ್ಲಾಮಿಕ್ ಕ್ವಿಜ್' ರಸಪ್ರಶ್ನೆ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು. |
ಕಳೆದ ಹದಿನೇಳು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಬಿಸಿಎಫ್ ಸ್ಕಾರಲ್ ಶಿಪ್ ವಿತರಣೆಯ ಕಿರುಚಿತ್ರವನ್ನು ಡಾ. ಮೊಹಮ್ಮದ್ ಕಾಪುರವರು ಪವರ್ ಪಾಯಿಂಟ್ ಸ್ಲೈಡ್ ಷೋ ಮೂಲಕ ಪ್ರದರ್ಶಿಸಿ ಸಭಿಕರಿಗೆ ಅಮೂಲ್ಯ ಮಾಹಿತಿಯನ್ನು ಒದಗಿಸಿದರು. |
ಕೆಸಿಎಫ್ ಸಂಘಟನೆಯ ಅಧ್ಯಕ್ಷರಾದ ಮೌಲಾನಾ ಮಹಬೂಬ್ ಸಖಾಫಿಯವರು ಕನ್ನಡದಲ್ಲಿ ನೀಡಿದ ಧಾರ್ಮಿಕ ಪ್ರವಚನದ ಮೂಲಕ ರಮಧಾನ್ ತಿಂಗಳ ಮಹತ್ವವನ್ನು ಮನದಟ್ಟು ಮಾಡಿಸಿದರು. ಉಪವಾಸಿಗನಿಗೆ ಉಪವಾಸವನ್ನು ಆಚರಿಸುವ ಮೂಲಕ ಲಭ್ಯವಾಗುವ ಎರಡು ಪ್ರಯೋಜನಗಳನ್ನು ವಿವರಿಸಿದರು. ಉಪವಾಸ ಸಂಪನ್ನಗೊಳಿಸುವಾಗ ಲಭಿಸುವ ಸಂತಸ ಹಾಗೂ ತನ್ನ ಸುತ್ತ ಮುತ್ತಲ ಜನರ ಹಸಿವನ್ನು ಅರಿತುಕೊಂಡು ಅದಕ್ಕೆ ಸ್ಪಂದಿಸುವ ಅವಕಾಶ ಲಭಿಸುತ್... |
ಇಫ್ತಾರ್ ಸಮಯದಲ್ಲಿ ದಕ್ಷಿಣ ಕನ್ನಡ ಸುನ್ನಿ ಸೆಂಟರ್ ಅಧ್ಯಕ್ಷರಾದ ಶೈಖುನಾ ಥಾಹಾ ತಂಞಳ್ ರವರಿಂದ ದುವಾ ನೆರವೇರಿತು. |
ಇಪ್ತಾರ್ ಬಳಿಕ ಮಗ್ರಿಬ್ ನಮಾಜಿನ ವ್ಯವಸ್ಥೆಯನ್ನೂ ಅಚ್ಚುಕಟ್ಟಾಗಿ ಮಾಡಲಾಗಿತ್ತು. |
ಮಗ್ರಿಬ್ ನಮಾಜಿನ ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಸಿಎಫ್ ಅಧ್ಯಕ್ಷರಾದ ಡಾ. ಬಿ.ಕೆ ಯೂಸುಫ್ ರವರು ವಹಿಸಿದ್ದರು. ಇವರೊಂದಿಗೆ ವೇದಿಕೆಯಲ್ಲಿ ದಕ್ಷಿಣ ಕನ್ನಡ ಸುನ್ನಿ ಸೆಂಟರ್ ಅಧ್ಯಕ್ಷರಾದ ಶೈಖುನಾ ಥಾಹಾ ತಂಞಳ್, ಕೆಸಿಎಫ್ ಸಂಘಟನೆಯ ಅಧ್ಯಕ್ಷರಾದ ಮೌಲಾನಾ ಮಹಬೂಬ್ ಸಖಾಫಿ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿ, ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರಾದ... |
ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡಿದ ಡಾ. ಬಿ.ಕೆ ಯೂಸುಫ್ ರವರು ರಮಧಾನ್ ತಿಂಗಳಲ್ಲಿ ಮಾಡುವ ದಾನ ಧರ್ಮಗಳಿಗೆ ಅತಿ ಹೆಚ್ಚಿನ ಪ್ರತಿಫಲವಿದ್ದು ನಮ್ಮಿಂದ ಸಾಧ್ಯವಾದಷ್ಟು ಮಟ್ಟಿಗೆ ಅಗತ್ಯವುಳ್ಳವರಿಗೆ ನೆರವು ನೀಡುವುದೇ ಬಿಸಿಫ್ ನ ಪ್ರಮುಖ ಉದ್ದೇಶವಾಗಿದೆ. ಈ ಉದ್ದೇಶಗಳಲ್ಲಿ ವಿದ್ಯಾರ್ಥಿವೇತನ ನೀಡುವುದೂ ಒಂದಾಗಿದೆ. ಈ ಕಾರ್ಯಕ್ರಮಗಳಿಗೆ ಬೆಂಬಲ ನೀಡುವ ಮೂಲಕ ಬಿಸಿಎಫ್ ನ ಜಾತಿಮತಬೇಧವಿಲ್ಲದ ಸಮ... |
ಬಳಿಕ ಮಾತನಾಡಿದ ಬಿಸಿಎಫ್ ಉಪಾಧ್ಯಕ್ಷರು ಹಾಗೂ ಬಿಸಿಎಫ್ ಇಫ್ತಾರ್ ಸಮಿತಿಯ ಚೇರ್ಮನ್ನರಾದ ಅಬ್ದುಲ್ ಲತೀಫ್ ಮೂಲ್ಕಿಯವರು ಈ ರಮಧಾನ್ ತಿಂಗಳಲ್ಲಿ ನಮ್ಮ ಪಾಪಗಳಿಗೆ ಕೋರುವ ಕ್ಷಮೆಯನ್ನು ಅಲ್ಲಾಹನು ಮನ್ನಿಸುತ್ತಾನೆ. ರಮಧಾನ್ ತಿಂಗಳ ಉಪವಾಸ ಎಲ್ಲರಿಗೂ ಲಭಿಸುವಂತಾಗಲಿ. ಬಿಸಿಎಫ್ ನ ಈ ಇಫ್ತಾರ್ ಕೂಟಕ್ಕೆ ಬಂದಿರುವವರೆಲ್ಲರೂ ಜಾತಿ ಮತ ಬೇಧವನ್ನು ಮೀರಿರುವ ಕೇವಲ ಕನ್ನಡಿಗರಾಗಿದ್ದು ನಮ್ಮ ನಡುವೆ ಸಹೋದ... |
ಬಳಿಕ ಮಾತನಾಡಿದ ಜನಾಬ್ ಎಂ.ಇ. ಮೂಳೂರು ರವರು ಈ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರೂ ಕನ್ನಡಿಗರಾಗಿ ಆಗಮಿಸಿದ್ದೀರಿ. ಇಲ್ಲಿ ಜಾತಿ ಮತ ಬೇಧವಿಲ್ಲ. ಇದೇ ಬಿಸಿಎಫ್ ನ ಹೆಮ್ಮೆಯ ವಿಷಯವಾಗಿದೆ. ಇಂದಿನ ಜಗತ್ತಿನಲ್ಲಿ ಈ ಸಾಮರಸ್ಯದ ಅಗತ್ಯವಿದೆ. ಇಸ್ಲಾಂ ಪ್ರವರ್ಧಮಾನಕ್ಕೆ ಬರುವ ಮುನ್ನ ಜನರನ್ನು ಜಾತಿಯ ಮೂಲಕ ಅಳೆಯಲಾಗುತ್ತಿತ್ತು. ಆದರೆ ಪ್ರವಾದಿಯವರು "ಲಕುಂ ದೀನುಕುಂ ವಲಿಯದೀನ್" ಅಥವಾ ಸಮಾಜದಲ್ಲಿ ಎ... |
ಬಳಿಕ ಎಲ್ಲಾ ಕನ್ನಡಿಗರ ಪರವಾಗಿ ಮಾತನಾಡಿದ ಶ್ರೀ ಸರ್ವೋತ್ತಮ ಶೆಟ್ಟಿಯವರು ಉಪವಾಸದ ಮೂಲಕ ಕೇವಲ ರಮಧಾನ್ ಮಾಸದಲ್ಲಿ ಮಾತ್ರವಲ್ಲ, ಇಡಿಯ ವರ್ಷದಲ್ಲಿ ಮನಸ್ಸು ಮತ್ತು ದೇಹವನ್ನು ನಿಯಂತ್ರಿಸಬಹುದು. ಇಫ್ತಾರ್ ಒಂದು ಸಂತಸದ ಘಳಿಗೆಯಾಗಿದ್ದು ಕೇವಲ ಮುಸ್ಲಿಮರಿಗೆ ಮಾತ್ರವಲ್ಲ, ಎಲ್ಲರಿಗೂ ಶುಭ ಘಳಿಗೆಯಾಗಿದೆ. ಈ ಘಳಿಗೆಯಲ್ಲಿ ಎಲ್ಲರಿಗೂ ಒಳ್ಳೆಯದೇ ಆಗಲಿ ಎಂದು ನಾವೆಲ್ಲರೂ ಪ್ರಾರ್ಥಿಸೋಣ ಎಂದರು. |
ಹನ್ನೆರಡನೇ ಶತಮಾನದಲ್ಲಿಯೇ ಬಸವಣ್ಣನವರು ಹೇಳಿದ ಮಾತುಗಳನ್ನು ಅವರು ಈ ಸಂದರ್ಭದಲ್ಲಿ ಉಚ್ಛರಿಸಿದರು. |
"ಇವನಾರವ, ಇವನಾರವ ಎಂದೆನ್ನದಿರಯ್ಯ |
ಇವ ನಮ್ಮವ, ಇವ ನಮ್ಮವ ಎಂದೆನ್ನಿರಯ್ಯ" |
ಸಾಮಾಜಿಕ ಸಮಾನತೆಗೆ ಅಂದಿನ ದಿನದಲ್ಲಿಯೇ ಒತ್ತು ನೀಡಲಾಗಿತ್ತು. ಪ್ರವಾದಿಯವರ ಮಾತುಗಳೂ ಇದೇ ರೀತಿಯಾಗಿದ್ದು ಎಲ್ಲಾ ಧರ್ಮಗಳೂ ಒಳ್ಳೆಯದನ್ನೇ ಬೋಧಿಸುತ್ತವೆ, ದೇವರು ಎಲ್ಲರಿಗೂ ಒಳ್ಳೆಯದನ್ನೇ ಮಾಡಲಿ ಎಂದು ಹಾರೈಸಿದರು. |
ಬಳಿಕ ಮಾತನಾಡಿದ ಕರ್ನಾಟಕ ಎನ್ನಾರೈ ಫೋರಂ ಕಾರ್ಯದರ್ಶಿಗಳಾದ ಶ್ರೀ ಪ್ರಭಾಕರ ಅಂಬಲ್ತೆರೆಯವರು ಭಾವೈಕ್ಯತೆಯನ್ನು ಬಿಂಬಿಸುವ ಕೆಲವು ಘಟನೆಗಳನ್ನು ಉದಾಹರಿಸಿ ಬಿಸಿಎಫ್ ನ ಸಮಾಜಸೇವೆ ಸದಾ ಈ ಮಣ್ಣಿಗೆ ಲಭಿಸುವಂತಾಗಲಿ ಎಂದು ಹಾರೈಸಿದರು. |
ಬಳಿಕ ಈ ಕಾರ್ಯಕ್ರಮ ನಡೆಸಿಕೊಡಲು ಅಪಾರವಾದ ನೆರವು ನೀಡಿದ ಫ್ಯಾಂಟಾಸ್ಟಿಕ್ ರೂಫ್ ಸಂಸ್ಥೆಯ ಮಾಲಿಕರಾದ ಶ್ರೀ ಅನಿಲ್ ರವರಿಗೆ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಲಾಯಿತು. |
ಬಳಿಕ ಮಾತನಾಡಿದ ಅವರು ಇದು ತನ್ನ ನಾಲ್ಕನೆಯ ವರ್ಷವಾಗಿದ್ದು ಪ್ರತಿ ಬಾರಿಯೂ ಸಮಾಜಸೇವೆಯಲ್ಲಿ ತೊಡಗಿಸಿಕೊಂಡ ಬಿಸಿಎಫ್ ಕಾರ್ಯಗಳಿಗೆ ನೆರವಾಗಲು ಹೆಮ್ಮೆ ಎನಿಸುತ್ತಿದೆ ಎಂದು ತಿಳಿಸಿದರು. |
ಬಳಿಕ ಶ್ರೀ ಹರೀಶ್ ಶೇರಿಗಾರ್ ರವರ ನಿರ್ಮಾಣದ ಕನ್ನಡ ಚಲನಚಿತ್ರ 'ಮಾರ್ಚ್ ೨೨' ದ ಆಡಿಯೋ ರಿಲೀಸ್ ದಿನಾಂಕವನ್ನು ಜುಲೈನಲ್ಲಿ ಮಾಡಲಾಗುತ್ತಿದೆ. ಧಾರ್ಮಿಕ ಸಾಮರಸ್ಯದ ವಿಷಯವಿರುವ ಈ ಚಲನಚಿತ್ರವನ್ನು ಖಂಡಿತಾ ವೀಕ್ಷಿಸಿ ಎಂದು ಕರೆ ನೀಡಿದರು. |
ಆ ಬಳಿಕ ವೇದಿಕೆಯನ್ನು ಅಲಂಕರಿಸಿದ ಬಿಸಿಎಫ್ ಸ್ಕಾಲರ್ ಶಿಪ್ ಸಮಿತಿಯ ಕಾರ್ಯದರ್ಶಿ ಡಾ. ಮೊಹಮ್ಮದ್ ಕಾಪುರವರು ವಿವಿಧ ಶೈಕ್ಷಣಿಕ ಕೋರ್ಸುಗಳನ್ನು ವಿವರಿಸಿ ಇವುಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನೀಡಲಾಗುವ ನೆರವಿನ ಪ್ರಮಾಣವನ್ನು ಘೋಷಿಸಿ ದಾನಿಗಳಿಂದ ನೆರವನ್ನು ಯಾಚಿಸಿದರು. ಈ ಪ್ರಕಾರ ಪಿಯುಸಿ-೫೦೦೦ ರೂ, ಬಿ.ಕಾಮ್, ಬಿಎ, ಬಿಎಸ್ಸಿ, ೫೦೦೦ರೂ, ಡಿಪ್ಲೋಮಾ ಇನ್ ಟೆಕ್ನಾಲಜಿ-೫೦೦... |
ಗ್ಯಾರೇಜ್ ಮಾಲಕರ ಸಂಘದ ವಾರ್ಷಿಕ ಮಹಾಸಭೆ | ಸುದ್ದಿ ಸುಳ್ಯ |
ಗ್ಯಾರೇಜ್ ಮಾಲಕರ ಸಂಘದ ವಾರ್ಷಿಕ ಮಹಾಸಭೆ |
ಲೈಪ್ ಮೆಂಬರ್ ಶಿಪ್ ಕಾರ್ಡ್ ಮತ್ತುವಿದ್ಯಾರ್ಥಿ ಗಳಿಗೆ ಸ್ಕಾಲರ್ ಶಿಪ್ ವಿತರಣೆ |
ದ .ಕ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘ(ರಿ) ಇದರ ಆಶ್ರಯದಲ್ಲಿ ಸುಳ್ಯ ತಾಲೂಕು ಗ್ಯಾರೇಜ್ ಮಾಲಕರ ಸಂಘ(ರಿ) ದ ವಾರ್ಷಿಕ ಮಹಾಸಭೆ ಮೇ 29 ರಂದು ವಿಷ್ಣು ಸರ್ಕಲ್ ನ ಸಂಘದ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮ ದ ಉದ್ಘಾಟನೆ ಯನ್ನು ಪದ್ಮಶ್ರೀ ಪುರಸ್ಕೃತ ರು ಮತ್ತು ಸಂಘದ ಗೌರವಾಧ್ಯಕ್ಷರಾದ ಗಿರೀಶ್ ಭಾರದ್ವಾಜ್ ರವರು ದೀಪ ಬೆಳಗಿಸಿ ಕಾರ್ಯಕ್ರಮ ದ ಉದ್ಘಾಟನೆಯನ್ನು ನೆರವೇರಿಸಿ ಸಂಘ ಬೆಳೆದು ಬಂದ ಹಾದಿ... |
ಸುಳ್ಯ ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ರಾದ ಮಲ್ಲೇಶ್ ಬೆಟ್ಟಂಪಾಡಿ ಅಧ್ಯಕ್ಷ ತೆ ವಹಿಸಿ ಗಣ್ಯರನ್ನು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಜನಾರ್ದನ ದೊಳ ವರಧಿ ವಾಚಿಸಿದರು., ಮಾವಿನಕಟ್ಟೆ ಶ್ರೀ ಮಹಾವಿಷ್ಣು ಮೂರ್ತಿ ದೈವಾಸ್ಥಾನದ ಪ್ರಧಾನ ಕಾರ್ಯದರ್ಶಿ ಗಳಾದ ಕೆ ಆರ್ ರಾದಕೃಷ್ಣ,, ಎಂಬಿ ಪೌಂಡೇಶನ್ ಪೌಂಡರ್ ರಾದ ಎಂಬಿ ಸದಾಶಿವಾ,ದ.ಕ ಮತ್ತು ಉಡುಪಿ ಜಿಲ್ಲಾ ಗ್ಯಾರೇಜ್ ಮಾಲಕ... |
ಈ ಸಂದರ್ಭದಲ್ಲಿ ಸುದ್ದಿ ಬಿಡುಗಡೆ ವರದಿಗಾರ ವೆಂಕಟೇಶ್ ಮೇನಾಲ ಮತ್ತು ಕೆ ವಿ ಜಿ ಮೆಡಿಕಲ್ ಕಾಲೇಜಿನ ಪಬ್ಲಿಕ್ ರಿಲೇಶನ್ ಅಪೀಸರ್ ರಾದ ಕೌಶಲ್ ಗೌಡ ರನ್ನು ಸನ್ಮಾನಿಸಲಾಯಿತು. ಉಪಾಧ್ಯಕ್ಷ ರಾದ ಲ ಜಗನ್ನಾಥ ರೈ,ಮಾಜಿ ಅಧ್ಯಕ್ಷ |
ಶಾಂತಪ್ಪ ಡಿ ಎಸ್, ಡಿ ಎನ್ ವೆಂಕಟರಮಣ,ಐ ವೆಂಕಟರಮಣ ನಿರ್ದೇಶಕರು ಗಳಾದ ಸತ್ಯನಾರಯಣ ಎಂ ಆಚಾರ್ಯ ಪೈಚಾರು,ಹರೀಶ್ ಕೆ ಅರಂಬೂರು ನಾಗೇಶ್ ಕೆರ್ಪಳ, ಅಬ್ದುಲ್ ಬಶೀರ್, ನವೀನ್ ಕುಮಾರ್, ಅಣ್ಣಿಪೂಜಾರಿ ಬೆಳ್ಳಾರೆ ,ಐತಪ್ಪ ಪಂಜ,ಧನಂಜಯ ಪಿ ಎಸ್ ಗುತ್ತಿಗಾರು, ಗಣೇಶ್ ಕಲ್ಲುಗುಂಡಿ, ಜತೆ ಕಾರ್ಯದರ್ಶಿ ಮನೋಹರ ಬೊಳ್ಳುರು, ಪಿ ಎ ಸೀತಾರಾಮ ನಿವೃತ ಸುಬೇದಾರ್ ಸದಸ್ಯರುಗಳು ಜಿಲ್ಲಾ ಮಟ್ಟದ ಪದಾಧಿಕಾರಿಗಳು,ಮಾ... |
ಕಾರು-ಲಾರಿಡಿಕ್ಕಿ:ಬಿಎಸ್ ಕುಟುಂಬದ ನಾಲ್ವರ ಸಾವು | B S Channabasappas kins killed in road accident - Kannada Oneindia |
13 min ago ಅಪಾಯದಲ್ಲಿದ್ದ ಭಾರತದ ವಿಮಾನಕ್ಕೆ ಪಾಕ್ ನೆರವು |
15 min ago ಯಶವಂತಪುರ ಉಪ ಚುನಾವಣೆ; ಕಾಂಗ್ರೆಸ್ ಅಭ್ಯರ್ಥಿ ಯಾರು? |
ಕಾರು-ಲಾರಿಡಿಕ್ಕಿ:ಬಿಎಸ್ ಕುಟುಂಬದ ನಾಲ್ವರ ಸಾವು |
ಮದುವೆ ನಿಶ್ಚಿತಾರ್ಥಕ್ಕೆ ತೆರಳಿದ ಮಂದಿ ಮತ್ತೆ ಮನೆಗೆ ಮರಳಲಿಲ್ಲ... |
ಹುಬ್ಬಳ್ಳಿ : ಲಾರಿ ಮತ್ತು ಕಾರಿನ ನಡುವೆ ಸಂಭವಿಸಿರುವ ಭೀಕರ ವಾಹನ ಅಪಘಾತದಲ್ಲಿ ದಾವಣಗೆರೆಯ ಪ್ರಖ್ಯಾತ ಜವಳಿ ಅಂಗಡಿ ಬಿ.ಎಸ್.ಚನ್ನಬಸಪ್ಪ ಅವರ ಕುಟುಂಬಕ್ಕೆ ಸೇರಿದ ನಾಲ್ವರು ಮೃತಪಟ್ಟಿದ್ದಾರೆ. |
ಬೆಳಗಾವಿಯಲ್ಲಿ ಏರ್ಪಡಿಸಲಾಗಿದ್ದ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಕಾರಿನಲ್ಲಿ ತೆರಳುತ್ತಿದ್ದಾಗ, ರಭಸದಿಂದ ಎದುರಿಗೆ ಬಂದ ಲಾರಿಯಾಂದು ಡಿಕ್ಕಿ ಹೊಡೆದು ಧಾರವಾಡದ ಯರಿಕೊಪ್ಪ ಸಮೀಪ ಈ ದುರಂತ ಸಂಭವಿಸಿದೆ. |
ಮೃತಪಟ್ಟವರನ್ನು ರಾಜು, ಪ್ರವೀಣ್, ಮನೋಹರ್ ಮತ್ತು ಅರ್ಶಿತಾ ಎಂದು ಗುರ್ತಿಸಲಾಗಿದೆ. ಮೃತರಾದ ಪ್ರವೀಣ್ ಮತ್ತು ರಾಜು ಅವರನ್ನು ಬಿ.ಎಸ್.ಚನ್ನಬಸಪ್ಪ ಅವರ ಮೊಮ್ಮಕ್ಕಳು ಎನ್ನಲಾಗಿದೆ. ರಾಜು ಮತ್ತು ಪ್ರವೀಣ್ ಮಾಜಿ ಸಂಸದ ವಿಜಯ ಸಂಕೇಶ್ವರ್ ಅವರ ಹತ್ತಿರದ ಸಂಬಂಧಿಗಳು ಎಂದು ಮೂಲಗಳು ತಿಳಿಸಿವೆ. |
ಮೊಬೈಲ್ ನೆಟ್ ವರ್ಕ್ ಸಮಸ್ಯೆ ಸರಿಪಡಿಸಲು ಸಂಸದ ನಳಿನ್ ಕುಮಾರ್ ಸೂಚನೆ | themangaloremirror.in |
ಮಂಗಳೂರು, ಜೂನ್ 2:- ಜಿಲ್ಲೆಯ ಜನವಸತಿ ಪ್ರದೇಶಗಳಲ್ಲಿ ಮೊಬೈಲ್ ನೆಟ್‍ವರ್ಕ್ ಸೌಲಭ್ಯ ಒದಗಿಸುವುದರೊಂದಿಗೆ ಮೊಬೈಲ್ ಸೇವಾ ಪೂರೈಕೆದಾರರು ಉತ್ತಮ ಸೇವೆಯನ್ನು ಒದಗಿಸಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಸೂಚನೆ ನೀಡಿದರು. |
ಮಂಗಳೂರಿನ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿನ ಮೊಬೈಲ್ ನೆಟ್‍ವರ್ಕ್ ಸಮಸ್ಯೆ ಕುರಿತ ಸಭೆಯಲ್ಲಿ ಮಾತನಾಡಿದರು. |
ಜಿಲ್ಲೆಯ ಹೆಚ್ಚಿನ ಭಾಗಗಳಲ್ಲಿ ಮೊಬೈಲ್ ನೆಟ್‍ವರ್ಕ್ ಸಮಸ್ಯೆಯಿಂದಾಗಿ ಸರ್ಕಾರದ ಅನೇಕ ಸೌಲಭ್ಯಗಳನ್ನು ಒದಗಿಸುವುದು ಸೇರಿದಂತೆ ಜನಸಾಮಾನ್ಯರ ದೈನಂದಿನ ದೂರವಾಣಿ ಸೌಲಭ್ಯವನ್ನು ಉಪಯೋಗಿಸಲು ತೊಂದರೆ ಉಂಟಾಗುತ್ತಿದೆ. ಹೀಗಾಗದಂತೆ ಎಲ್ಲಾ ಮೊಬೈಲ್ ನೆಟ್‍ವರ್ಕಿಂಗ್ ಕಂಪೆನಿಗಳು ಎಚ್ಚರ ವಹಿಸುವುದರೊಂದಿಗೆ ಉತ್ತಮ ಸೇವೆಯನ್ನು ಒದಗಿಸಲು ಮುಂದಾಗಬೇಕು ಎಂದು ಸೂಚನೆ ನೀಡಿದರು. |
ನೆಟ್‍ವರ್ಕ್ ಸಮಸ್ಯೆಯಿಂದಾಗಿ ಕೋವಿಡ್ ಸೋಂಕಿತರಿಗೆ ಮೆಡಿಕಲ್ ಟ್ರೀಟ್‍ಮೆಂಟ್ ಕೊಡಲು ಪಡಿತರ ವಿತರಣೆ, ಜಿ.ಪಿ.ಎಸ್ ಆಧಾರದ ಮೇಲೆ ಗೃಹ ನಿರ್ಮಾಣದ ಅನುದಾನ ನೀಡಲು ಸೇರಿದಂತೆ ಮತ್ತಿತರ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ. ಕಳೆದ ವರ್ಷ ಕೊರೋನಾದಿಂದ ಶಾಲಾ –ಕಾಲೇಜುಗಳು ಪ್ರಾರಂಭವಾಗದಿದ್ದರೂ ಆನ್‍ಲೈನ್ ತರಗತಿಗಳು ನಡೆಯುತ್ತಿವೆ. ಇದರಿಂದ ಗ್ರಾಮೀಣ ಭಾಗದಲ್ಲಿನ ವಿದ್ಯಾರ್ಥಿಗಳಿಗೆ ಹಾಗೂ ವರ್ಕ... |
ಸರ್ಕಾರ ಸ್ವಾಮ್ಯದ ಬಿ.ಎಸ್.ಎನ್.ಎಲ್ ಮುಂಚೂಣಿ ಟೆಲಿ ಕಂಪೆನಿಯಾಗಿದ್ದರೂ ಸಹ ಜಿಲ್ಲೆಯಲ್ಲಿನ ಗ್ರಾಹಕರುಗಳಿಗೆ ಉತ್ತಮ ಗುಣಮಟ್ಟದ ಸೇವೆಗಳನ್ನು ಒದಗಿಸುತ್ತಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದ ಅವರು, ಮುಂದಿನ ದಿನಗಳಲ್ಲಿ ಹೀಗಾಗದಂತೆ ನೋಡಿಕೊಳ್ಳಲು ಯೋಜನೆಯನ್ನು ರೂಪಿಸುವುದರೊಂದಿಗೆ ಉತ್ತಮ ನೆಟ್‍ವರ್ಕ್ ಸೌಲಭ್ಯವನ್ನು ಒದಗಿಸಬೇಕು ಎಂದರು. |
ಸೂರ್ಯಗ್ರಹಣ ವೀಕ್ಷಣೆ ವೇಳೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು » Kannadanet.com |
Home Koppal News ಸೂರ್ಯಗ್ರಹಣ ವೀಕ್ಷಣೆ ವೇಳೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು |
Subsets and Splits
No community queries yet
The top public SQL queries from the community will appear here once available.