text stringlengths 0 61.5k |
|---|
ಬದಲಾಗಿದೆ ಪ್ರಜಾಪ್ರಭುತ್ವ ವ್ಯಾಖ್ಯೆ – ವಿಜಯವಾಣಿ |
ವಿಜಯವಾಣಿ ಜಿಲ್ಲೆ ತುಮಕೂರು ಬದಲಾಗಿದೆ ಪ್ರಜಾಪ್ರಭುತ್ವ ವ್ಯಾಖ್ಯೆ |
ಬದಲಾಗಿದೆ ಪ್ರಜಾಪ್ರಭುತ್ವ ವ್ಯಾಖ್ಯೆ |
ತುಮಕೂರು :ಜನರಿಂದ ಜನರಿಗಾಗಿ ಜನರಿಗೋಸ್ಕರ ಎಂಬ ಪ್ರಜಾಪ್ರಭುತ್ವ ವ್ಯಾಖ್ಯೆ ಪ್ರಸ್ತುತ ದಿನದಲ್ಲಿ ಬದಲಾಗಿದ್ದು, ರಾಜಕಾರಣಿಗಳಿಂದ ರಾಜಕಾರಣಿಗಳಿಗಾಗಿ ರಾಜಕಾರಣಿಗಳಿಗೋಸ್ಕರ ಎಂಬಂತಾಗಿದೆ ಎಂದು ನಿವೃತ್ತ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು. |
ನಗರದ ಆರ್ಯಭಾರತಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಬುಧವಾರ ಪ್ರಾರಂಭೋತ್ಸವ ಮತ್ತು ನೂತನ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು. |
ಹಿಂದೆ ಹಗರಣ ಲಕ್ಷ ರೂ.ನಲ್ಲಿದ್ದವು. ಇಂದು ಅದರ ಸ್ವರೂಪ ಬದಲಾಗಿದ್ದು, ಸಾವಿರಾರು ಕೋಟಿಗೆ ತಲುಪಿದೆ. ಅನೇಕ ಹಗರಣಗಳು ಬೆಳಕಿಗೆ ಬರದೆ ಮುಚ್ಚಿಹೋಗಿವೆ. ಜೈಲಿಗೆ ಹೋಗಿ ಬಂದವರನ್ನು ಸನ್ಮಾನಿಸುವ, ಮೆರವಣಿಗೆ ಮಾಡುವ ಕೆಟ್ಟ ಅಭ್ಯಾಸ ನಮ್ಮದಾಗಿದೆ. ಇದಕ್ಕೆಲ್ಲ ಸಮಾಜವೇ ಕಾರಣ ಎಂದು ವಿಷಾದಿಸಿದರು. |
ಯುವಕರು ಜೀವನದಲ್ಲಿ ಉನ್ನತ ಮೌಲ್ಯ ಅಳವಡಿಸಿಕೊಂಡು ಭ್ರಷ್ಟರನ್ನು ಬಹಿಷ್ಕರಿಸುವ, ಶಾಂತಿ, ಸೌಹಾರ್ದತೆಯ ಸಮಾಜ ನಿರ್ವಿುಸಬೇಕು. ಎಲ್ಲರ ಜೀವನದಲ್ಲಿಯೂ ತೃಪ್ತಿ ಮತ್ತು ಮಾನವೀಯತೆ ಅಗತ್ಯ. ಎಷ್ಟು ಬೇಕಾದರೂ ಹಣ ಗಳಿಸಬಹುದು. ಆದರೆ ದುಡಿಮೆಯ ದಾರಿ ಪ್ರಾಮಾಣಿಕವಾಗಿದ್ದರೆ ಜೀವನದಲ್ಲಿ ತೃಪ್ತಿ ಸಾಧ್ಯ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದಲ್ಲಿ ಮೌಲ್ಯ ಕುಸಿತವಾಗಿದೆ. ಈ ಬಗ್ಗೆ ಯುವಕರು ಜಾಗೃತರಾಗ... |
ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಹಿರಿಯ ವಿಜ್ಞಾನಿ ಬಿ.ಕೆ.ವೆಂಕಟರಾಮು ಮಾತನಾಡಿ, ಕೇವಲ ಹಣ ಸಂಪಾದನೆಯೇ ಜೀವನದ ಗುರಿಯಾಗಬಾರದು. ಕಲಿತ ವಿದ್ಯೆ ಮತ್ತೊಬ್ಬರಿಗೂ ಅನುಕೂಲವಾಗಬೇಕು ಎಂದರು. |
ಆರಂಭದಲ್ಲಿ ಬೇರೆ ದೇಶದ ಮೇಲೆ ಅವಲಂಬಿತವಾಗಿದ್ದ ಇಸ್ರೋ ಇಂದು ಸ್ವಂತ ಬಲದಿಂದ ಉಪಗ್ರಹ ತಯಾರಿಸುವ ಮತ್ತು ಉಡಾಯಿಸುವ ಕ್ಷಮತೆ ಹೊಂದಿದೆ. ಇಲ್ಲಿಯವರೆಗೆ ಸುಮಾರು 85ರಿಂದ 90 ಉಪಗ್ರಹ ಮತ್ತು 65 ರಾಕೆಟ್ ಉಡಾವಣೆ ಮಾಡಿದೆ. ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಮ್ಯುನಿಕೇಷನ್ ಉಪಗ್ರಹ, ನಾವಿಗೇಷನ್ ಉಪಗ್ರಹ, ಟೆಲಿಮೆಡಿಸನ್, ಟೆಲಿ ಎಜುಕೇಷನ್, ಹವಾಮಾನದ ಮುನ್ಸೂಚನೆ ನೀಡುವುದು ಸೇರಿ ಅನೇಕ ಜನೋಪಯೋಗ... |
ಸಂಸ್ಥೆ ಉಪಾಧ್ಯಕ್ಷ ಎಚ್.ಎನ್.ಚಂದ್ರಶೇಖರ್, ಕಾರ್ಯದರ್ಶಿ ಆರ್.ಎನ್.ಸತ್ಯನಾರಾಯಣ, ಅಧ್ಯಕ್ಷ ಕೆ. ನರಸಿಂಹಮೂರ್ತಿ ಮಾತನಾಡಿದರು. ಸಂಸ್ಥೆಯ ನಿರ್ದೇಶಕರಾದ ಕೆ.ವಿ.ಕುಮಾರ್, ಟಿ.ಎಸ್.ರಾಮಶೇಷ, ಎಂ.ಎಚ್.ಮಂಜುನಾಥ್, ಪ್ರಾಚಾರ್ಯ ಕೆ.ಆರ್.ಅಶೋಕ್, ಉಪಪ್ರಾಚಾರ್ಯ ಬಿ.ವಿ.ರಾಜೇಂದ್ರ ಕುಮಾರ್ ಇದ್ದರು. |
ಸಿಡಿ ಪ್ರಕರಣದಲ್ಲಿ ಎಸ್ಐಟಿ ತನಿಖೆ ಬೇಗ ಮುಗಿಯಲಿ: ಬಾಲಚಂದ್ರ ಜಾರಕಿ ಹೋಳಿ | Ramesh jarkiholi cd row: Balachandra jarkiholi statement on Investigation - Kannada Oneindia |
2 min ago ತಮ್ಮ ಕಾಲೇಜು ದಿನಗಳನ್ನು ನೆನಪಿಸಿಕೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ! |
19 min ago ಅಂದು ಯುಪಿಎ ಸರ್ಕಾರ ಸೋನಿಯಾರನ್ನು ಪ್ರಧಾನಿ ಮಾಡಬಹುದಿತ್ತು: ಅಠಾವಳೆ |
40 min ago ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಯೋಜನೆ ಎಂದರೇನು, ನೋಂದಣಿ ಹೇಗೆ? |
| Published: Tuesday, March 23, 2021, 20:42 [IST] |
ಬೆಂಗಳೂರು, ಮಾರ್ಚ್ 23 : ರಮೇಶ್ ಜಾರಕಿಹೊಳಿ ಸಿಡಿ ಸ್ಫೋಟ ಪ್ರಕರಣ ಕುರಿತು ಕಲಾಪದಲ್ಲಿ ಎರಡು ದಿನ ಚರ್ಚೆ ನಡೆದ ಬೆನ್ನಲ್ಲೇ ಬಾಲಚಂದ್ರ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯ ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ಸಿಡಿ ಗರ್ಲ್ ವಿಡಿಯೋ ಹೇಳಿಕೆ ಆಧರಿಸಿ ತನಿಖೆ ನಡೆಸಬೇಕೆಂಬ ಸಿದ್ಧರಾಮಯ್ಯ ಅವರ ಮಾತು ಶೋಭೆ ತರುವಂತದ್ದಲ್ಲ. ರಮೇಶ್ ಜಾರಕಿಹೊಳಿ ಮತ್ತು ಪಕ್ಷಕ್ಕೆ ಮುಜುಗರ ತರ... |
ಸಿಡಿ ವಿಚಾರವಾಗಿ ಕಲಾಪದಲ್ಲಿ ಕಾಂಗ್ರೆಸ್ ದೊಡ್ಡ ಗದ್ದಲ ಎಬ್ಬಿಸಿದ ಹಿನ್ನೆಲೆಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಜಾರಕಿಹೊಳಿ, ಎಸ್ಐಟಿ ಮಹತ್ವದ ತನಿಖೆ ನಡೆಸುತ್ತಿದೆ. ಹಿರಿಯ ವಕೀಲರು ಮತ್ತು ಸಚಿವರ ಸಲಹೆ ಮೇರೆಗೆ ಈ ಪ್ರಕರಣದ ಬಗ್ಗೆ ಹೆಚ್ಚು ಮಾತನಾಡುವುದು ಸೂಕ್ತವಲ್ಲ. ಪ್ರಕರಣದ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದು ಬೇಡ ಎಂದು ಸುಮ್ಮನಿದ್ದೇವೆ. ಯುವತಿ ವಿಡಿಯೋ ಹೇಳಿಕೆ ಬಿಟ್ಟ ನಂ... |
ಸಂತ್ರಸ್ತೆ ಎನ್ನಲಾದ ಯುವತಿ ಪೋಷಕರು ನಾಲ್ಕು ವರ್ಷದಿಂದ ಬಾಡಿಗೆ ಮನೆಯಲ್ಲಿದ್ದರು. ಹೀಗಾಗಿ ಅಪಹರಣ ಕುರಿತು ಅವರು ಅಲ್ಲೇ ದೂರು ನೀಡಿದ್ದರು. ಆಕೆಯನ್ನು ಅಪಹರಿಸಿದ್ದಾರೋ, ಒತ್ತೆಯಾಳನ್ನಾಗಿ ಇಟ್ಟುಕೊಂಡಿದ್ದಾರೋ ಆಕೆ ಸಿಕ್ಕ ಮೇಲೆ ಗೊತ್ತಾಗಲಿದೆ. ಅತಿ ಬೇಗ ತನಿಖೆ ಮುಗಿದು ವರದಿಯನ್ನು ಸರ್ಕಾರಕ್ಕೆ ನೀಡಲಿ ಎಂಬುದು ನಮ್ಮ ಮನವಿ. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು. |
ramesh jarkiholi sit cd bengaluru police balachandra jarkiholi siddaramaiah assembly session ಎಸ್ಐಟಿ ಸಿಡಿ ಬೆಂಗಳೂರು ಪೊಲೀಸ್ ಬಾಲಚಂದ್ರ ಜಾರಕಿಹೊಳಿ ಸಿದ್ದರಾಮಯ್ಯ ವಿಧಾನಸಭೆ ಅಧಿವೇಶನ |
MLA Balachandra Jarkiholi reacted on SIT investigation into the Ramesh Jarkiholi CD row case. Know more |
ಸಂಭ್ರಮದ ಕಡೇ ಶ್ರಾವಣ ಶನಿವಾರದ ಪೂಜೆ | Prajavani |
ಸಂಭ್ರಮದ ಕಡೇ ಶ್ರಾವಣ ಶನಿವಾರದ ಪೂಜೆ |
ಸಾವಿರಾರು ಭಕ್ತರು ಭಾಗಿ, ವಿವಿಧೆಡೆ ಅನ್ನ ಸಂತರ್ಪಣೆ, ವೈಭವದ ಆಚರಣೆ |
Published: 08 ಸೆಪ್ಟೆಂಬರ್ 2018, 19:45 IST |
Updated: 08 ಸೆಪ್ಟೆಂಬರ್ 2018, 19:45 IST |
ಮಂಡ್ಯ: ಕಡೇ ಶ್ರಾವಣ ಶನಿವಾರದ ಅಂಗವಾಗಿ ಜಿಲ್ಲೆಯಾದ್ಯಂತ ವಿವಿಧ ದೇವಾಲಯಗಳಲ್ಲಿ ಸಂಭ್ರಮದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಕಳೆದ ಒಂದು ತಿಂಗಳಿಂದ ವ್ರತಾಚರಣೆ ಮಾಡುತ್ತಿದ್ದ ಮಹಿಳೆಯರು ಕೊನೆಯ ಶನಿವಾರದ ಪೂಜೆ ನೆರವೇರಿಸಿ ದೇವರ ಆಶೀರ್ವಾದ ಬೇಡಿದರು. |
ಮೇಲುಕೋಟೆಯ ಚೆಲುವನಾರಾಯಣಸ್ವಾಮಿ, ಶ್ರೀರಂಗಪಟ್ಟಣದ ರಂಗನಾಥಸ್ವಾಮಿ, ನಿಮಿಷಾಂಬದೇವಿ, ಕೆ.ಆರ್.ಪೇಟೆ ತಾಲ್ಲೂಕು ಹೇಮಗಿರಿಯ ಕಲ್ಯಾಣವೆಂಕಟರಮಣನ ಸನ್ನಿಧಿ, ಮಳವಳ್ಳಿಯ ನರಸಿಂಹಸ್ವಾಮಿ ದೇವಾಲಯಗಳಿಗೆ ಸಾವಿರಾರು ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು. ನಸುಕಿನಿಂದಲೂ ದೇವಾಲಯಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. |
ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ಪ್ರಾಕಾರೋತ್ಸವ, ಕುಂಕುಮಾರ್ಚನೆ, ಮಹಾಮಂಗಳಾರತಿ ಮುಂತಾದ ಕಾರ್ಯಕ್ರಮಗಳು ನಡೆದವು. ಹಲವು ದೇವಾಲಯಗಳಲ್ಲಿ ಭಕ್ತರಿಗೆ ಅನ್ನ ಸಂತರ್ಪಣೆ ಆಯೋಜನೆ ಮಾಡಲಾಗಿತ್ತು. |
ನಗರದ ಹೊರವಲಯ ಸಾತನೂರು ಕಂಬದ ನರಸಿಂಹಸ್ವಾಮಿ ದೇವಾಲಯದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು. ಸಾತನೂರು ಬೆಟ್ಟದ ಮೇಲೆ ನೆಲೆಸಿರುವ ನರಸಿಂಹಸ್ವಾಮಿ ದರ್ಶನಕ್ಕೆ ಭಕ್ತರು ಸಾಲುಗಟ್ಟಿ ನಿಂತಿದ್ದರು. ಬೆಳಿಗ್ಗೆಯಿಂದ ರಾತ್ರಿಯವರೆಗೂ ಭಕ್ತರು ಬೆಟ್ಟ ಹತ್ತಿ ದೇವರ ದರ್ಶನ ಪಡೆಯುತ್ತಿದ್ದರು. ಮೆಟ್ಟಿಲುಗಳ ಉದ್ದಕ್ಕೂ ವಿವಿಧ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ದೇವಾಲಯದ ಆವರಣದಲ್ಲಿ ಜಾತ್ರೆಯ ವಾತ... |
ಉತ್ಸವ ಮೂರ್ತಿಯ ಮೆರವಣಿಗೆ |
ನಗರದ ಹನಿಯಂಬಾಡಿ ರಸ್ತೆಯಲ್ಲಿರುವ ಲಕ್ಷ್ಮಿ ವೆಂಕಟೇಶ್ವರ ದೇವಾಲಯದಲ್ಲಿ ಬೆಳಿಗ್ಗೆಯಿಂದಲೂ ವೈಭವದ ಪೂಜಾ ಕೈಂಕರ್ಯಗಳು ಜರುಗಿದವು. ಲಕ್ಷ್ಮಿವೆಂಕಟೇಶ್ವರನಿಗೆ ಮಾಡಿದ್ದ ಹೂವಿನ ಅಲಂಕಾರ ಭಕ್ತರ ಗಮನ ಸೆಳೆಯಿತು. ಅರ್ಚಕರು ಉತ್ಸವ ಮೂರ್ತಿಯನ್ನು ದೇವಾಲಯದ ಸುತ್ತಲೂ ಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು. ಎಲ್ಲಾ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿ... |
ನಗರದ ಪೊಲೀಸ್ ಕಾಲೊನಿಯಲ್ಲಿರುವ ಚಾಮುಂಡೇಶ್ವರಿ ದೇವಾಲಯ, ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ಸಮೀಪದ ಆಂಜನೇಯಸ್ವಾಮಿ ದೇವಾಲಯ, ಕಾಳಿಕಾಂಬ ದೇವಾಲಯ, ಕಲ್ಲಹಳ್ಳಿಯ ಶ್ರೀಕಂಠೇಶ್ವರ ದೇವಾಲಯ, ಆನೆಕೆರೆ ಬೀದಿಯ ಈಶ್ವರ ದೇವಾಲಯ, ಲಕ್ಷ್ಮಿಜನಾರ್ಧನ ದೇವಾಲಯ, ಶ್ರೀನಿವಾಸ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ಜರುಗಿದವು. |
ಕಾಲ್ಚಳಕದ ಆಟಕ್ಕೆ ಭರ್ಜರಿ ಆಫರ್ ನೀಡಿದ ಟೆಲಿಕಾಂ ಆಪರೇಟರ್ಸ್..! | FIFA 2018 World Cup offers by Airtel, Jio, BSNL, Vodafone, and others - Kannada Gizbot |
ಇಂದಿನಿಂದ ವಿಶ್ವದಾದ್ಯಂತ ಫುಟ್ಬಾಲ ಜ್ವರ ಶುರುವಾಗಲಿದ್ದು, ರಷ್ಯಾದಲ್ಲಿ ನಡೆಯುವ 32 ದೇಶಗಳ ಕಾಲ್ಚಳಕ ನೋಡಲು ಇಡೀ ಜಗತ್ತು ಕಾತರದಿಂದ ಕಾಯುತ್ತಿದೆ. ಅದರಂತೆ ಟೆಲಿಕಾಂ ಆಪರೇಟರ್ ಗಳು ಸಹ ತಮ್ಮ ಬಳಕೆದಾರರಲ್ಲಿ ಫಿಫಾ ಸಂಭ್ರಮವನ್ನು ಇಮ್ಮಡಿಗೊಳಿಸಲು ವಿವಿಧ ರೀತಿಯಲ್ಲಿ ಪ್ರಯತ್ನಿಸುತ್ತಿವೆ. ಫ್ರೀ ಲೈವ್ ಸ್ಟ್ರೀಮ್, ಡೇಟಾ ಆಫರ್, ವಿನ್ನಿಂಗ್ ಆಫರ್ ಗಳನ್ನು ನೀಡಿ ಅಂಗೈಯಲ್ಲಿ ಫುಟ್ಬಾಲ್ ವೈಭವವನ್... |
ಬಿಎಸ್ಎನ್ಎಲ್, ಏರ್ ಟೆಲ್, ಜಿಯೋ, ವೋಡಾಪೋನ್ ಸೇರಿದಂತೆ ಹಲವು ಭಾರತೀಯ ಟೆಲಿಕಾಂ ಆಪರೇಟರ್ ಗಳು ಭರ್ಜರಿ ಆಫರ್ ನೀಡಿ ಗ್ರಾಹಕರನ್ನು ಸೆಳೆಯುತ್ತಿವೆ. ಭಾರತದಲ್ಲಿ ಕ್ರೀಡೆಗೆ ಯಾವತ್ತೂ ಕ್ರೇಜ್ ಕಡಿಮೆ ಆಗಲ್ಲ ಎಂಬುದನ್ನು ಮನದಟ್ಟು ಮಾಡಿಕೊಂಡಿರುವ ಟೆಲಿಕಾಂ ಆಪರೇಟರ್ ಗಳು ಸಿಕ್ಕ ಅವಕಾಶದಲ್ಲಿ ಗ್ರಾಹಕರ ಸೆಳೆಯುತ್ತಿವೆ. ಫುಟ್ಬಾಲ್ ವಿಶ್ವಕಪ್ ಗೆ ಯಾವ ಟೆಲಿಕಾಂ ಆಪರೇಟರ್ ಯಾವ ಆಫರ್ ನೀಡಿದ್ದಾರೆ, ... |
ಏರ್ ಟೆಲ್ ನಿಂದ ಉಚಿತ ಸ್ಟ್ರೀಮಿಂಗ್ |
ಭಾರತದ ಅತಿದೊಡ್ಡ ನೆಟ್ ವರ್ಕ್ ಭಾರ್ತಿ ಏರ್ ಟೆಲ್ ಫಿಫಾ ವಿಶ್ವಕಪ್ ಪ್ರಸಾರವನ್ನು ತನ್ನ ಏರ್ ಟೆಲ್ ಟಿವಿ ಆಪ್ ನಲ್ಲಿ ಉಚಿತವಾಗಿ ನೀಡುತ್ತೇವೆ ಎಂದು ಘೋಷಿಸಿಕೊಂಡಿದೆ. ಈ ಲೈವ್ ಸ್ಟ್ರೀಮಿಂಗ್ ಭಾರತದ ಪ್ರಾದೇಶಿಕ ಭಾಷೆಗಳ ಜೊತೆ ಹಿಂದಿ ಮತ್ತು ಇಂಗ್ಲೀಷ್ ಭಾಷೆಯ ವಿವರಣೆಯೊಂದಿಗೆ ವೈವಿಧ್ಯಮಯ ಭಾರತದಲ್ಲಿ ಫುಟ್ಬಾಲ್ ಪ್ರೇಮವನ್ನು ಪಸರಿಸಲಿದೆ. |
ಏರ್ ಟೆಲ್ ಟಿವಿ ಆಪ್ ಅಪ್ ಗ್ರೇಡ್ ಮಾಡ್ಕೊಳ್ಳಿ |
ಏರ್ ಟೆಲ್ ಘೋಷಿಸಿರುವ ಉಚಿತ ಲೈವ್ ಸ್ಟ್ರೀಮ್ ಪಡೆಯಲು ಏರ್ ಟೆಲ್ ಟಿವಿ ಆಪ್ ಅನ್ನು ಅಪ್ ಗ್ರೇಡ್ ಮಾಡಿಕೊಳ್ಳಬೇಕಾಗಿದೆ. ಮುಂದಿನ ದಿನಗಳಲ್ಲಿ ಆಂಡ್ರಾಯ್ಡ್ ಮತ್ತು iOS ಎರಡು ಆವೃತ್ತಿಗಳಲ್ಲಿ ಆಪ್ ಲಭ್ಯವಿದ್ದು, ಇನ್ಸ್ಟಾಲ್ ಮಾಡಿಕೊಳ್ಳಬಹುದು. |
IPL ಸ್ಟ್ರೀಮಿಂಗ್ ಯಶಸ್ಸಿನ ಮುಂದುವರಿಕೆ |
ಭಾರ್ತಿ ಏರ್ ಟೆಲ್ 2018ರ ಐಪಿಎಲ್ ಪ್ರಸಾರವನ್ನು ಉಚಿತವಾಗಿ ನೀಡಿತ್ತು, ಅದರ ಯಶಸ್ಸಿನ ನಂತರ ಫುಟ್ಬಾಲ್ ವಿಶ್ವಕಪ್ ಗೆ ತನ್ನ ಉಚಿತ ಪ್ರಸಾರ ಸೇವೆಯನ್ನು ವಿಸ್ತರಿಸಿದೆ. ಇದರಿಂದ ಫುಟ್ಬಾಲ್ ಕ್ರೇಜ್ ಹೆಚ್ಚುವುದಲ್ಲದೇ ಗ್ರಾಹಕರ ಅದ್ಭುತ ಪ್ರತಿಕ್ರಿಯೆಗೆ ಕಾಯುತ್ತಿದ್ದೇವೆ ಎಂದು ಭಾರ್ತಿ ಏರ್ ಟೆಲ್ ಕಂಟೆಂಟ್ ಮತ್ತು ಆಪ್ಸ್ ಸಿಇಒ ಸಮೀರ್ ಬಾತ್ರಾ ತಿಳಿಸಿದ್ದಾರೆ. |
ಫಿಫಾಗಾಗಿ ಬಹಳಷ್ಟು ಅಪ್ ಡೇಟ್ ಕಂಡ ಏರ್ ಟೆಲ್ ಟಿವಿ ಆಪ್ |
ಏರ್ ಟೆಲ್ ಟಿವಿ ಆಪ್ ಅನ್ನು ಕ್ರೀಡಾ ಪ್ರೇಮಿಗಳತ್ತಿರ ತೆಗೆದುಕೊಂಡು ಹೋಗುವ ಉದ್ದೇಶದಿಂದ ಹಲವು ಬದಲಾವಣೆಗಳನ್ನು ಟಿವಿ ಆಪ್ ತಂದಿದೆ. ಲೈವ್ ಸ್ಟ್ರೀಮಿಂಗ್ ಜೊತೆಗೆ ಫಿಫಾ 2018 ಅಪ್ ಡೇಟ್ಸ್ ಮತ್ತು ಕ್ರೀಡಾಂಗಣದ ಹೊರಗಡೆ ಏನು ನಡೆಯುತ್ತಿದೆ, ಪಂದ್ಯಗಳ ಪ್ರಿವೀವ್ ಮತ್ತು ರಿವೀವ್ ಗಳು ಆಪ್ ನಲ್ಲಿ ಲಭ್ಯವಿವೆ. |
ಜಿಯೋದಿಂದಲೂ ಉಚಿತ ಸ್ಟ್ರೀಮಿಂಗ್ ಆಫರ್ |
ಅನೇಕ ಅವಾರ್ಡ್ ಗಳನ್ನು ಪಡೆದಿರುವ ಲೈವ್ ಟಿವಿ ಆಪ್ ಜಿಯೋ ಟಿವಿ ಮೂಲಕ ಫಿಫಾ ವಿಶ್ವಕಪ್ ಅನ್ನು ಉಚಿತ ಲೈವ್ ಸ್ಟ್ರೀಮ್ ನೀಡಲು ರಿಲಾಯನ್ಸ್ ಜಿಯೋ ಮುಂದಾಗಿದೆ. ಭಾರತ ಮತ್ತು ಅಪ್ಘಾನಿಸ್ತಾನ ನಡುವಿನ ಟೆಸ್ಟ್ ಪಂದ್ಯವನ್ನು ಜೂನ್ 14 ರಿಂದ 18ರವರೆಗೆ ಬೆಳಗ್ಗೆ 9.30ರಿಂದ ಲೈವ್ ಸ್ಟ್ರೀಮ್ ಮಾಡುತ್ತಿದೆ. ಅದರಂತೆ, ಜೂನ್ 14 ರಿಂದ ಜುಲೈ 15ರವರೆಗೆ ಫಿಫಾ ವಿಶ್ವಕಪ್ ಪ್ರಸಾರ ಮಾಡಲಿದೆ. |
ವೋಡಾಪೋನ್ ನಿಂದ ಐಪಾಡ್ ಮಿನಿ ಆಫರ್ |
ಭಾರತದ ಎರಡನೇ ಅತಿದೊಡ್ಡ ನೆಟ್ ವರ್ಕ್ ವೋಡಾಪೋನ್ ತನ್ನ ಗ್ರಾಹಕರಿಗೆ ಫಿಫಾ ವಿಶ್ವಕಪ್ ಸಲುವಾಗಿ ಐಪಾಡ್ ಮಿನಿ ಗೆಲ್ಲುವ ಅವಕಾಶ ನೀಡಿದೆ. ಸರಳವಾದ ಆಟ ಆಡುವುದರೊಂದಿಗೆ ಗೋಲ್ ಪಾಯಿಂಟ್ಸ್ ಗೆಲ್ಲಬೇಕು ಅಥವಾ ಮೈ ವೋಡಾಪೋನ್ ಆಪ್ ಮೂಲಕ ಟ್ರಾನ್ಸಾಕ್ಷನ್ ಮಾಡಿದರೆ ಐಪಾಡ್ ಮಿನಿ ಗೆಲ್ಲಬಹುದು. |
ಐಪಾಡ್ ಮಿನಿ ಗೆಲ್ಲಲು ಹೀಗೆ ಮಾಡಿ |
ವೊಡಾಪೋನ್ ಐಪಾಡ್ ಮಿನಿ ಗೆಲ್ಲಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದೆ. |
ಮೊದಲು ಮೈವೊಡಾಪೋನ್ ಖಾತೆಗೆ ಲಾಗಿನ್ ಆಗಿ. |
ಹೋಮ್ ಸ್ಕ್ರೀನ್ ನಲ್ಲಿ ಕಾಣುವ ಕಂಟೆಸ್ಟ್ ಚಿತ್ರದ ಮೇಲೆ ಕ್ಲಿಕ್ ಮಾಡಿ. |
ಮೈ ವೊಡಾಪೋನ್ ಆಪ್ ನಲ್ಲಿ ಗೋಲ್ ಗಳನ್ನು ಗಳಿಸುವುದಕ್ಕೆ ಶುರುಮಾಡಿ ಮತ್ತು ಪಾಯಿಂಟ್ಸ್ ಅನ್ನು ಗಳಿಸಿ. |
ರಿಚಾರ್ಜ್ ಮತ್ತು ಬಿಲ್ ಪಾವತಿಸಿ ಮತ್ತೊಂದು ಗೋಲ್ ಗಳಿಸುವ ಅವಕಾಶ ಪಡೆದು, ಹೆಚ್ಚುವರಿ ಪಾಯಿಂಟ್ಸ್ ಪಡೆಯಿರಿ. |
ಅತಿಹೆಚ್ಚು ಪಾಯಿಂಟ್ಸ್ ಪಡೆದು ಡೈಲಿ ಬಹುಮಾನಗಳನ್ನು ಗೆಲ್ಲಿ. |
ಬಂಪರ್ ಬಹುಮಾನ ಗೆಲ್ಲುವುದಕ್ಕಾಗಿ ಸ್ಕೋರ್ ಬೋರ್ಡ್ ನಲ್ಲಿ ಅತಿ ಹೆಚ್ಚು ಪಾಯಿಂಟ್ಸ್ ಪಡೆಯಿರಿ. |
ಬಂಪರ್ ಬಹುಮಾನ ಗೆದ್ದವರಿಗೆ 1 ಲಕ್ಷ ರೂ. ಮೌಲ್ಯದ ಟ್ರಾವೆಲ್ ವೋಚರ್ ಸಿಗಲಿದೆ. |
ಬಿಎಸ್ಎನ್ಎಲ್ ನಿಂದ 4GB ಬಂಪರ್ ಆಫರ್ |
ಎಲ್ಲಾ ಟೆಲಿಕಾಂ ಆಪರೇಟರ್ ಗಳು ಆಫರ್ ನೀಡುತ್ತಿರಬೇಕಾದರೆ, ಎಲ್ಲ ಆಪರೇಟರ್ ಗಳು ಹುಬ್ಬೇರಿಸುವಂತೆ ಬಿಎಸ್ಎನ್ಎಲ್ ಫಿಫಾ ವಿಶ್ವಕಪ್ ಗಾಗಿ 4GB ಡೇಟಾ ಆಫರ್ ನೀಡಿದೆ. 149 ರೂ. ಹೊಸ ಪ್ಲಾನ್ ಪರಿಚಯಿಸಿರುವ ಬಿಎಸ್ಎನ್ಎಲ್ 30 ದಿನಗಳ ವ್ಯಾಲಿಡಿಟಿಯೊಂದಿಗೆ ಆಫರ್ ನೀಡಿರುವುದು ಟೆಲಿಕಾಂ ಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. |
FIFA 2018 World Cup offers by Airtel, Jio, BSNL, Vodafone, and others. To know more this visit kannada.gizbot.com |
ಹಸಿವು - ವಿಕಿಪೀಡಿಯ |
ಹಸಿವು:- ಮನುಷ್ಯನ ಹೊಟ್ಟೆ ಹಸಿವು. ಪ್ರಪಂಚದ ಎಲ್ಲಾ ತಾಯಂದಿರಿಗೆ ಜನನವಾಗುವ ಮಗು ಅಳುತ್ತದೆ, ಭೂಮಿಗೆ ಬಂದ ಕಂದನ ಮೊದಲ ಅಳುವಿನಿಂದಲೇ ಶುರುವಾಗುವುದು ಹಸಿವು. ಪ್ರಪಂಚದಲ್ಲಿ ೮೮ ಸಾವಿರಕೋಟಿ ಜೀವರಾಶಿಗಳು ಇವೆ. ಎಲ್ಲಾ ಜೀವರಾಶಿಗಳಿಗೂ ಹಸಿವು ಸಾಮಾನ್ಯ, ಬುದ್ದಿಜೀವಿ ಎನಿಸಿಕೊಂಡಿರುವ ಮಾನವ ಮೊದಲನೆಯವನಾಗಿರುತ್ತಾನೆ. ಮಾನವ ಹಸಿವಾಗುವುದನ್ನು ಹೇಳಿಕೊಳ್ಳುತ್ತಾನೆ. ಪ್ರಾಣಿ, ಪಕ್ಷಿ ಹಾಗೂ ಜಲಚರ ... |
೧ ಅನಾದಿ ಕಾಲದಲ್ಲಿ |
೨ ಕಾಡ್ಗಿಚ್ಚು |
೩ ಬಾಯಿ |
ಅನಾದಿ ಕಾಲದಲ್ಲಿಸಂಪಾದಿಸಿ |
ಆದಿ ಕಾಲದಿಂದಲೂ ಮಾನವ ಹಸಿವನ್ನು ನೀಗಿಸಿಕೊಳ್ಳಲು ಹಸಿ ಮಾಂಸ ಗಡ್ಡೆ ಗೆಣಸು ಸೊಪ್ಪು ತರಕಾರಿ ಇವುಗಳನ್ನು ತಿನ್ನಲು ಶುರುಮಾಡಿದ ಆದಿಮಾನವ ತನ್ನದೇ ಶೈಲಿಯಲ್ಲಿ ಉಡುಪುಗಳನ್ನು ಧರಿಸುತಿದ್ದ, ಎಲೆ ತೊಗಟೆ ಚರ್ಮ ಇತ್ಯಾದಿಗಳನ್ನು ಬಳಸುತಿದ್ದ. ತದನಂತರ ಕಾಡಿನ ಗುಹೆಗಳಲ್ಲಿ ವಾಸಿಸುತಿದ್ದ ಮಳೆ,ಗಾಳಿ, ಬಿಸಿಲು ಇವುಗಳಿಂದ ತನ್ನ ರಕ್ಷಣೆಗಾಗಿ ಗುಹೆಯನ್ನು ಸೇರುತಿದ್ದ. ಮನುಷ್ಯನು ಆಹಾರಕ್ಕಾಗಿ ಕಾಡುಗಳಲ... |
ಕಾಡ್ಗಿಚ್ಚು ಸಂಪಾದಿಸಿ |
ಎಂದರೆ ಕಾಡಿನಲ್ಲಿ ಬೆಂಕಿ ಉದ್ಬವವಾಗಿರುವ ಸಮಯದಲ್ಲಿ ಮನುಷ್ಯ ಆಹಾರ ಹುಡುಕಿಕೊಂಡು ಅಲೆಯುತ್ತಿರುವಾಗ ಗಡ್ಡೆ ಗೆಣಸುಗಳು ಬೆಂಕಿಯಲ್ಲಿ ಸುಟ್ಟು ಬೆಂದು ಹೋಗಿದ್ದವು ಹಸುವಿನಿಂದ ಮಾನವ ಅದನ್ನೆ ತಿನ್ನಲು ಶುರುಮಾಡಿದ ಅದು ರುಚಿಯಾಗಿ ಕಂಡಿತು ಅಂದಿನಿಂದ ಬೇಯಿಸಿ ತಿನ್ನಲು ಹುಡುಕಾಟ ಶುರುಮಾಡಿದ ಬೆಂಕಿಯನ್ನು ತಯಾರಿಸಲು ನಾನ ಪ್ರಯತ್ನಗಳನ್ನು ಮಾಡಿದ ಆ ಸಮಯದಲ್ಲಿ ಬಿರುಗಾಳಿ ಕಾಣಿಸಿಕೊಂಡಿತು ಮನುಷ್ಯ ನ... |
ನಂತರ ಬೆಂಕಿಯನ್ನು ಆರಿಸಲು ನೀರನ್ನು ಬಳಸಬೇಕು ಏಂಬುವುದನ್ನು ತಿಳಿದುಕೊಂಡನು ಹಸಿವನ್ನು ನೀವಾರಿಸಿಕೊಳ್ಳಲು ನೀರು,ಗಾಳಿ ಬೆಳಕು ಆಹಾರ ಇವುಗಳೆಲ್ಲವೂ ಅಗತ್ಯವಾದುದು ಹಸಿವೆಂಬುವುದು ಜನ್ಮದಿಂದ ಹಿಡಿದು ಮರಣದವರೆಗೂ ಹಸಿವಿರುತ್ತದೆ ಹೊಟ್ಟೆ ಇರುವವರೆಗೂ ಹಸಿವು ನಿಲ್ಲದು ಕ್ರಮೇಣ ಮಾನವ ಬುದ್ದಿವಂತನಾಗಿ ಎಲ್ಲವನ್ನೂ ತಿಳಿದುಕೊಂಡನು.ದೇಹವನ್ನು ಮುಚ್ಚಲು ಬಟ್ಟೆ ಬೇಕು ಹಸಿವನ್ನು ನೀವಾರಿಸಿಲು ಆಹಾರ ಬ... |
ಬಾಯಿ ಸಂಪಾದಿಸಿ |
ಮೂಗು, ಆಹಾರದ ವಾಸನೆಯನ್ನು ಗ್ರಹಿಸುತ್ತದೆ. ಕಣ್ಣು ಬಣ್ಣವನ್ನು ನೋಡುತ್ತದೆ. ಆಗ ನನ್ನಲ್ಲಿ ನೀರು ದ್ರವಿಸಲು ಪ್ರಾರಂಭವಾಗುತ್ತದೆ. ಅದು ಬರಿಯ ನೀರಲ್ಲ, ಅದನ್ನು ಜೊಲ್ಲು ಎಂದು ಕರೆಯುತ್ತಾರೆ. ದಿನಕ್ಕೆ ಸುಮಾರು ಎರಡು ಲೀಟರಿನಷ್ಟು ಜೊಲ್ಲು ತಯಾರಾಗುತ್ತದೆ. ಜೀರ್ಣಕ್ರಿಯೆ ಹೊಟ್ಟೆಯಲ್ಲಿ ಪ್ರಾರಂಭವಾಗುವುದೆಂದು ಬಹಳ ಜನರ ನಂಬಿಕೆ. ಇಲ್ಲ, ಅದು ಪ್ರಾರಂಭವಾಗುವುದು ನನ್ನಿಂದ. ಜೀರ್ಣಕ್ರಿಯೆಯಲ್ಲಿ ... |
ಯಾಂತ್ರಿಕ ಕ್ರಿಯೆಯು ಆಹಾರವನ್ನು ನುರಿಸಿ ನುಣ್ಣಗೆ ಮಾಡುವುದು. ಇದು ಜೀರ್ಣಕ್ರಿಯೆಯ ಮೊದಲ ಹಂತ. ಇದನ್ನು ನನ್ನಲ್ಲಿರುವ ಹಲ್ಲುಗಳು ಮಾಡುವುವು. |
ಜೀರ್ಣಕ್ರೀಯೆ -ಯಾವುದೆ ಮನುಷ್ಯನಲ್ಲಿ ಅಥವಾ ಪ್ರಾಣಿಗಳಲ್ಲಿ ಜೀರ್ಣಕ್ರೀಯೆ ಮುಖ್ಯವಾದ ಅಂಶ ಜೀರ್ಣಕ್ರೀಯೆ ಆದರೆ ಮಾತ್ರ ಹಸಿವಾಗುತ್ತದೆ ಇಲ್ಲವಾದಲ್ಲಿ ಹಸಿವಾಗುವುದಿಲ್ಲ ಇವುಗಳಿಗೆ ಹಲವಾರು ಕಾರಣಗಳಿರುತ್ತವೆ ಹಸಿವಾದಗ ತಿನ್ನಲು ಮತ್ತು ಅಗಿಯಲು ಹಲ್ಲುಗಳು ಬೇಕಾಗುತ್ತದೆ ಹಲ್ಲುಗಳಲ್ಲಿ ಬಾಚಿ ಹಲ್ಲುಗಳು, ಕೋರೆಹಲ್ಲು, ದವಡೆಹಲ್ಲುಗಳು ಕೊರೆ ಹಲ್ಲುಗಳು- ಸಾಮಾನ್ಯವಾಗಿ ಪ್ರಾಣಿಗಳಲ್ಲಿ ಕೋರೆ ಹಲ್ಲು... |
ಜಠರ- ಅ ದೊಡ್ಡ ಜಠರದಿಂದ ಸಣ್ಣಕರುಳಿನ ಮಧ್ಯಭಾಗದಲ್ಲಿ ಸಿಕ್ಕಿ ನಜ್ಜುಗುಜ್ಜಾಗುತ್ತಿರುವ ಹತ್ತು ಅಂಗುಲ ಉದ್ದದ ಸಣ್ಣ ಅಂಗವೇ ಜಠರ. ಜಠರದಲ್ಲಿ ದ್ರವರೂಪಕ್ಕೆ ಬಂದ ಆಹಾರ, ಅದಕ್ಕೆ ಚೈಮ್ ಎನ್ನುತ್ತಾರೆ, ಇದು ಪೈಲೋರಿಕ್ ಸ್ಪಿಂಕ್ ಸ್ಟರ್ ಮೂಲಕ ನನ್ನಲ್ಲಿಗೆ ಬರುತ್ತದೆ. ಅದಿಲ್ಲದಿದ್ದರೆ ಆ ದ್ರವದ ಜತೆಯಲ್ಲಿ ಆಮ್ಲವೂ ಸಹ ನುಗ್ಗಿಬಿಡುತ್ತಿತ್ತು. ಹಾಗಾಗಿದ್ದರೆ ನಾನು ಜಠರ ಸತ್ತೇಹೋಗುತ್ತಿದ್ದೆ. ಆದ್... |
ಜಠರದಲ್ಲಿ ಪಚನಕ್ರಿಯೆ ಕ್ಷಾರಮಾಧ್ಯಮದಲ್ಲಿ ಮುಖ್ಯವಾಗಿ ಮೇದಸ್ಸಿನ ಜೀರ್ಣಕ್ರಿಯೆಯ ಪ್ರಾರಂಭ. ಮನುಷ್ಯ ಜಠರಕ್ಕೆ ಕೊಟ್ಟಷ್ಟು ಪ್ರಾಮುಖ್ಯತೆಯನ್ನು ಬಹುಶಃ ಶರೀರದ ಯಾವ ಅಂಗಕ್ಕೂ ಕೊಟ್ಟಿಲ್ಲ. ಅದಕ್ಕೇ ಅನೇಕ ಗಾದೆಗಳು. "ಎಲ್ಲಾ ಮಾಡುವುದು ಹೊಟ್ಟೆಗಾಗಿ" "ಜಠರ-ದೇಹದ ಕಮ್ಮಟ". "ಜಠರ-ಹೋಟೆಲಿದ್ದಂತೆ-ಬರುವವರೂ ಹೋಗುವವರೂ ಸದಾ ಇರುತ್ತಾರೆ." ಜಠರವನ್ನು ಮೊದಲು ಸಾಮಾನ್ಯವಾಗಿ ಹೊಗಳುವವರೇ ಹೆಚ್ಚು. ಕಡೆ... |
ಆಹಾರವನ್ನು .ಜಠರ ಕಡೆಯುತ್ತೇನೆ. ಅದರಿಂದ ಕೊಂಚ ನುರಿಸಿ ಆಹಾರವನ್ನು ದ್ರವರೂಪಕ್ಕೆ ತರಬಲ್ಲೆ. .ಜಠರದ ಪದರದಲ್ಲಿರುವ ಅನೇಕ ಗ್ರಂಥಿಗಳು ಸುಮಾರು ೩ ಲೀಟರ್ ನಷ್ಟು ಹೈಡ್ರೋಕ್ಲೋರಿಕ್ ಆಮ್ಲವನ್ನು ಸುರಿಸುತ್ತವೆ. .ಜಠರದಲ್ಲಿ ತಯಾರಾಗುವ ಕಿಣ್ವ ಪೆಪ್ಸಿನ್. ಇದು ಪ್ರೊಟೀನನ್ನು ಪಾಲಿಪೆಪ್ ಟೈಡ್ ಎಂಬ ರೂಪಕ್ಕೆ ಒಡೆಯುತ್ತದೆ. ಬಾಯಿಯಲ್ಲಿ ಪ್ರಾರಂಭವಾಗದಿದ್ದ ಸಸಾರಜನಕದ ಜೀರ್ಣಕ್ರಿಯೆ ಇಲ್ಲಿ ಪ್ರಾರಂಭವ... |
ಸಣ್ಣ ಕರುಳು : ನಾನು ನಿನ್ನ ಸಣ್ಣ ಕರುಳು. ಜಠರದಿಂದ ಕೆಳಗೆ ಹಾವಿನಂತೆ ಸುತ್ತಿಕೊಂಡು ಇಪ್ಪತ್ತನಾಲ್ಕು ಅಡಿ ಇದ್ದೇನೆ. ನೀನು ನನಗೆ ಆಹಾರ ಕೊಡುತ್ತೇನೆಂದು ಬೀಗುತ್ತೀಯೆ. ನಿಜವಾಗಿ ನಾನು ನಿನಗೆ ಆಹಾರ ಕೊಡುತ್ತಿದ್ದೇನೆ! ನೀನು ತಿಂದ ಆಹಾರ ಹಾಗೆಯೇ ರಕ್ತ ಸೇರಿದರೆ ನಿಮಿಷಾರ್ಧದಲ್ಲಿ ನಂಜಾಗಿ ಸಾಯುತ್ತೀಯೆ. ಆ ಆಹಾರವನ್ನು ರಕ್ತವಾಗುವಂತೆ ಮಾಡುವವ ನಾನು. ಆಹಾರ ರಕ್ತಕ್ಕೆ ಸೇರಿದ ನಂತರ ಶರೀರದ ಕೋಟ... |
ಸಸಾರಜನಕ ವಸ್ತುಗಳನ್ನು ಅಮೈನೋ ಆಮ್ಲಗಳಾಗಿ ಬೇರ್ಪಡಿಸುತ್ತೇನೆ. ಪಿಷ್ಠವನ್ನು ಗ್ಲೂಕೋಸ್ ಆಗಿ ಪರಿವರ್ತಿಸುತ್ತೇನೆ. ನಾರು-ಬೇರುಗಳನ್ನು ಬಿಟ್ಟು ಉಳಿದ ಎಲ್ಲಾ ಆಹಾರಾಂಶಗಳನ್ನು ರಕ್ತಕ್ಕೆ ಸೇರಿಸುತ್ತೇನೆ. ನಾನು ಹೊರಕ್ಕೆ ನೂಕುವ ವಸ್ತುಗಳಲ್ಲಿ ಅರ್ಧದಷ್ಟು ಸತ್ತ ಬ್ಯಾಕ್ಟೀರಿಯಾಗಳೂ, ಮತ್ತರ್ಧ, ದಾರಿಯುದ್ದಕ್ಕೂ ಸಣ್ಣ ಕರುಳು ಸ್ರವಿಸಿದ ಆಮ ಜತೆಗೆ ನಾನು ಅರಗಿಸಿಕೊಳ್ಳಲಾರದ ವಸ್ತುಗಳು.ಡಿಯೋಡಿನಂ ... |
ಆ ಕೆಲಸ ನಿಂತರೆ ಹುಣ್ಣು ಪ್ರಾರಂಭವಾಗುತ್ತದೆ. ಮುಕ್ಕಾಲು ಭಾಗ, ಹುಣ್ಣಿಗೆ ಡಿಯೋಡಿನಂ ಒಳ್ಳೆಯ ಫಲವತ್ತಾದ ಜಾಗ. ನನ್ನಲ್ಲಿ ತಯಾರಾಗುವ ಕಿಣ್ವಗಳು ಹಲವು. ಟ್ರಿಪ್ಸಿನ್, ಚೈಮೋಟ್ರಿಪ್ಸಿನ್, ಕಾರ್ಬಾಕ್ಸಿಪೆಪ್ ಟೈಡ್ಸ್, ಪ್ಯಾಂಕ್ರಿಯಾಟಿಕ್ ಲಿಪೇಸ್, ಪ್ಯಾಂಕ್ರಿಯಾಟಿಕ್ ಅಮೈಲೇಸ್.ನನ್ನಲ್ಲಿ ೨ ಲೀ.ನಷ್ಟು ಲಾಲಾರಸ, ೩ ಲೀ.ನಷ್ಟು ಗ್ಯಾಸ್ಟ್ರಿಕ್ ರಸ, ಪಿತ್ತಜನಕಾಂಗದಿಂದ ೧ ಲೀ.ನಷ್ಟು ಪಿತ್ತರಸ, ಮತ್ತ... |
ದೊಡ್ಡ ಕರುಳು : ದೊಡ್ಡ ಕರುಳು. ಅಡ್ಡಕರುಳು, ಉದ್ದಕರುಳು, ನೆಟ್ಟಕರುಳು ಎಂದು ಮೂರು ಭಾಗವಾಗಿ ಒಟ್ಟು ಆರಡಿ ಇದೆ..ದೊಡ್ಡ ಕರುಳಿನ ತಮ್ಮ ಸಣ್ಣ ಕರುಳು ಆಹಾರಾಂಶವನ್ನು ಹೀರಿ ಉಳಿದ ದ್ರವದ ರೂಪವನ್ನು ತಳ್ಳುತ್ತಾನೆ. .ದೊಡ್ಡ ಕರುಳು ಅಡ್ಡಕರುಳು ಮತ್ತು ಉದ್ದಕರುಳಿನಲ್ಲಿ ನೀರನ್ನು ಹೀರಿ ರಕ್ತಕ್ಕೆ ಕಳುಹಿಸುತ್ತದೆ ನೀರನ್ನು ಹೀರಿ ರಕ್ತಕ್ಕೆ ಏಕೆ ಕಳುಹಿಸಬೇಕು? ಅದು ಬರೀ ನೀರಲ್ಲ, ಬಾಯಿಯಿಂದ ಪ್ರಾ... |
ದೊಡ್ಡ ಕರುಳಿಗೆ ಕಿರಿಕಿರಿಯಾದರೆ ಮಾತ್ರ.ದೊಡ್ಡ ಕರುಳು ಹಾಗೆ ಮಾಡಿದರೆ ತಕ್ಷಣ ದಾಕ್ಟರಲ್ಲಿಗೆ ಓಡುತ್ತೀಯೆ. ಅದೇ ಅತಿಸಾರ. ಮನುಷ್ಯ ಬದುಕಲು ಆಹಾರ ನೀರು ಗಾಳಿ ಬೇಳಕು ಇವುಗಳು ಇದ್ದರೂ ಸಹ ಹಸಿವಾಗುತ್ತದೆ ಅದರ ಅರಿವಾಗುತ್ತದೆ ಮನುಷ್ಯನಲ್ಲಿ ಜೀರ್ಣಕ್ರಿಯೆ ಸರಿಯಾಗಿ ಅಗದಿದ್ದರೆ ಹಸಿವು ಕಮ್ಮಿಯಾಗಿ ತೊಂದರೆಗೊಳಗಾಗುತ್ತಾನೆ ಹಸಿವು ಅಪಾಯಕಾರಿ ಮತ್ತು ಅನಾರೋಗ್ಯಕಾರಿಯು ಅನಾರೋಗ್ಯಕಾರಿಯು ಅನಾರೋಗ್ಯ... |
ಪ್ರಪಂಚದ ಎಲ್ಲಾ ಜೀವರಾಶಿಗಳಿಗೂ ದೇವರು ಆಹಾರ ಸೃಷ್ಷ್ಟೀಕರಿಸಿರುತ್ತಾನೆ ಅಯಾ ವರ್ಗಕ್ಕೆ ವಿಧ ವಿಧವಾದ ಆಹಾರ ಅವನಿಂದಲೇ ಯಾವುದೇ ಜೀವಿ ಆಹಾರವಿಲ್ಲದೆ ಬದುಕಲಾರ ಆಕಾಶ ಭೂಮಿ ಸೂರ್ಯ ಚಂದ್ರ ನೀರು ಗಾಳಿ ಬೇಳಕು ಆಹಾರ ಇರುವವರೆಗೂ ಮನುಷ್ಯ ಬದುಕಬಲ್ಲ ಇದ್ಯಾವುದು ಸಿಗದಿದ್ದಾಗ ಭೂಮಿಯಲ್ಲಿ ಮನುಷ್ಯನಿರುವುದಿಲ್ಲ ಒಮ್ಮೆ ಕಾಡಿನಲ್ಲಿ ವಿಶ್ವಾಮಿತ್ರ ಮಹರ್ಷಿಗಳು ಘೋರ ತಪಸ್ಸನ್ನು ಆಚರಿಸಿ ಎಚ್ಚರವಾದಾಗ ವಿ... |
೨ ಬಡತನದ ಹಸಿವು |
ಭಾರತದ ಅತೀ ಬಡ ರಾಜ್ಯ ಬಿಹಾರದಲ್ಲಿ ಗ್ರಾಮೀಣ ಕಾರ್ಮಿಕ ಬೆರಣಿಯನ್ನು ಒಣಗಿಸುತ್ತಿರುವುದು. |
ಭಾರತದಲ್ಲಿ ಬಡತನ ಬಹುವ್ಯಾಪಕವಾಗಿದ್ದು, ವಿಶ್ವದ ಒಟ್ಟು ಬಡವರ ಸಂಖ್ಯೆಯಲ್ಲಿ ಮೂರನೇ ಒಂದು ಭಾಗ ರಾಷ್ಟ್ರದಲ್ಲಿದ್ದಾರೆಂದು ಅಂದಾಜು ಮಾಡಲಾಗಿದೆ. ಭಾರತದ ಯೋಜನಾ ಆಯೋಗ ಬಳಸಿದ ಮಾನದಂಡದ ಅನ್ವಯ 2004-2005ರಲ್ಲಿ ಜನಸಂಖ್ಯೆಯ 27.5% ಬಡತನ ರೇಖೆ ಕೆಳಗೆ(ಕಡುಬಡತನ)ವಾಸಿಸಿದ್ದು, 1977-1978ರಲ್ಲಿ 51.3%ಗಿಂತ ಮತ್ತು 1993-1994ರಲ್ಲಿ 36%ಗಿಂತ ಕೆಳಮುಖದಲ್ಲಿದೆ.[೧] UN ಅಭಿವೃದ್ಧಿ ಕಾರ್ಯಕ್ರಮ, ... |
ಭಾರತದಲ್ಲಿ ಅಧಿಕ ಮಟ್ಟದ ಬಡತನಕ್ಕೆ ಬ್ರಿಟಿಷ್ ಆಡಳಿತದಡಿಯ ಇತಿಹಾಸ, ಅಪಾರ ಜನಸಂಖ್ಯೆ ಮತ್ತು ಕಡಿಮೆ ಸಾಕ್ಷರತೆ ಕಾರಣಗಳನ್ನು ನೀಡಲಾಗಿದೆ. ಭಾರತದ ಜಾತಿ ಪದ್ಧತಿ ಮತ್ತು ಭಾರತದ ಸಮಾಜದಲ್ಲಿ ಮಹಿಳೆಯರ ಪಾತ್ರ ಸೇರಿದಂತೆ ಭಾರತದ ಸಾಮಾಜಿಕ ಸ್ವರೂಪ ಕೂಡ ಮುಖ್ಯವಾಗಿದೆ. ಕೃಷಿ ಮೇಲೆ ಹೆಚ್ಚು ಅವಲಂಬಿತವಾದ್ದರಿಂದ ಮತ್ತು ಭಾರತದ ಸ್ವಾತಂತ್ರ್ಯದ ನಂತರ ಆರ್ಥಿಕ ನೀತಿಗಳನ್ನು ಅಳವಡಿಸಲಾಗಿದ್ದರಿಂದ ಹಿಂದಿ... |
Wikimedia Commons has media related to ಹಸಿವು. |
Wikiversity has learning materials about ಹಸಿವು |
The Global Food Security and Nutrition Forum (FSN Forum) Archived 2010-01-16 at the Wayback Machine. |
ಮಡಿಕೇರಿಯಲ್ಲಿ ಕರ್ನಾಟಕ ಪಕ್ಷಿ ಹಬ್ಬಕ್ಕೆ ತೆರೆ : ಪಕ್ಷಿ ವೀಕ್ಷಕರಿಂದ ವಿವಿಧೆಡೆ ಪಕ್ಷಿ ವೀಕ್ಷಣೆ - Sudhisanthe |
ಮಡಿಕೇರಿಯಲ್ಲಿ ಕರ್ನಾಟಕ ಪಕ್ಷಿ ಹಬ್ಬಕ್ಕೆ ತೆರೆ : ಪಕ್ಷಿ ವೀಕ್ಷಕರಿಂದ ವಿವಿಧೆಡೆ ಪಕ್ಷಿ ವೀಕ್ಷಣೆ |
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆ, ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಹಾಗೂ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ ಆಶ್ರಯದಲ್ಲಿ ಮಡಿಕೇರಿ ನಗರ ಮತ್ತು ಸುತ್ತಲಿನ ಪ್ರದೇಶದಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾಗಿದ್ದ ಕರ್ನಾಟಕ ಪಕ್ಷಿ ಹಬ್ಬ : 2022 ಕ್ಕೆ ಭಾನುವಾರ ( ಏಪ್ರಿಲ್ 10 ರಂದು ) ತೆರೆಬಿತ್ತು. |
ಪಕ್ಷಿ ಹಬ್ಬದ ಕಾರ‍್ಯಕ್ರಮದಲ್ಲಿ ಪಕ್ಷಿ ವೀಕ್ಷಕರು ಪಶ್ಚಿಮ ಘಟ್ಟ ಪ್ರದೇಶದ ಅಪರೂಪದ ಪಕ್ಷಿಗಳನ್ನು ವೀಕ್ಷಿಸುವ ಮೂಲಕ ಸಂತಸಪಟ್ಟರು. |
ಮಡಿಕೇರಿ ನಗರ ಮತ್ತು ಸುತ್ತಲಿನ ಆಯ್ದ ಜಾಗಗಳಲ್ಲಿ ಪಕ್ಷಿ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ 8 ಜಾಗಗಳನ್ನು ಗುರುತಿಸಿ ಪಕ್ಷಿ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಮಡಿಕೇರಿ ಅರಣ್ಯ ಭವನದ ಬಳಿ, ಗಾಳಿಬೀಡು, ನಿಶಾನೆ ಬೆಟ್ಟ, ಮೊಣ್ಣಂಗೇರಿ, ಬೊಟ್ಟಪ್ಪ ದೇವಸ್ಥಾನದ ಸರಹದ್ದು ಸೇರಿದಂತೆ ಸುತ್ತಲಿನ ಸ್ಥಳಗಳಲ್ಲಿ ಪಕ್ಷಿ ಪ್ರಿಯರು ಪಕ್ಷಿ ವೀಕ್ಷಿಸಿದರು. |
ಹಕ್ಕಿ ಹಬ್ಬದ ಸಂಭ್ರಮದಲ್ಲಿ ಮುಂಜಾನೆ ವೇಳೆಯಲ್ಲಿ ಮಂಜುವಿನೊಂದಿಗೆ ಮಡುಗಟ್ಟಿದ್ದ ಮಂಜಿನ ನಗರಿ ಮಡಿಕೇರಿ ಮತ್ತು ಸುತ್ತಲಿನ ಪಕ್ಷಿ ಸಂಕುಲಗಳ ತಾಣಗಳು ಪಕ್ಷಿ ಪ್ರಿಯರ ಮನಸ್ಸಿಗೆ ಮುದ ನೀಡಿದವು. |
ಪಕ್ಷಿ ವೀಕ್ಷಣೆ ಕಡೆಗೆ ಜನರ ಗಮನ ಸೆಳೆಯಲು ಹಾಗೂ ಯುವ ವನ್ಯಜೀವಿ ಉತ್ಸಾಹಿಗಳಲ್ಲಿ ಪಕ್ಷಿಗಳ ಸಂರಕ್ಷಣೆಗೆ ಬಗ್ಗೆ ಆಸಕ್ತಿ ಬೆಳೆಸುವುದರೊಂದಿಗೆ ಕಾಡೊಳಗಿನ ಜೀವ ವೈವಿಧ್ಯದ ವಿಶೇಷತೆಯನ್ನು ಜನರಿಗೆ ಪರಿಚಯಿಸಲು ಹಕ್ಕಿ ಹಬ್ಬವನ್ನು ಆಯೋಜಿಸಲಾಗಿತ್ತು. |
ಭಾನುವಾರ ನಡೆದ ಪಕ್ಷಿ ವೀಕ್ಷಣೆಯಲ್ಲಿ ಜಿ.ಪಂ.ಸಿಇಓ ಭನ್ವರ್ ಸಿಂಗ್ ಮೀನಾ, |
ಮಡಿಕೇರಿ ಅರಣ್ಯ ವಿಭಾಗದ ಉಪ ಸಂರಕ್ಷಣಾಧಿಕಾರಿ ಎ.ಟಿ.ಪೂವಯ್ಯ, |
ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಶಿವರಾಮ್ ಬಾಬು, ಕರ್ನಾಟಕ ಪರಿಸರ ಪ್ರವಾಸೋದ್ಯಮ ವ್ಯವಸ್ಥಾಪಕ ನಿರ್ದೇಶಕ ತಡಗಣಿ ವಿ.ಗಣೇಶ್, ಕಾರ್ಯನಿರ್ವಾಹಕ ಸಹಾಯಕಿ ವನಶ್ರೀ, ರಾಷ್ಟ್ರೀಯ ಹಸಿರು ಪಡೆ ಇಕೋ ಕ್ಲಬ್ ಘಟಕದ ಕೊಡಗು ಜಿಲ್ಲಾ ನೋಡಲ್ ಅಧಿಕಾರಿ ಟಿ.ಜಿ.ಪ್ರೇಮಕುಮಾರ್ ಸೇರಿದಂತೆ ಅರಣ್ಯ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು. |
ಪ್ರಮುಖವಾಗಿ ಹುಲಿ ಕೇಂದ್ರಿತ ವನ್ಯಜೀವಿ ಸಫಾರಿ ಮತ್ತು ಪ್ರವಾಸೋದ್ಯಮದಿಂದ ನವ ತಲೆಮಾರಿನ ವನ್ಯಜೀವಿ ಪ್ರೇಮಿಗಳನ್ನು ಪಕ್ಷಿಗಳ ಸುಂದರ ಲೋಕದ ಕಡೆಗೆ ತರುವ ಉದ್ದೇಶದಿಂದ ಹಕ್ಕಿ ಹಬ್ಬ ಕಾರ್ಯಕ್ರಮದ ಆಯೋಜಿಸಲಾಗಿತ್ತು |
Subsets and Splits
No community queries yet
The top public SQL queries from the community will appear here once available.