text stringlengths 0 61.5k |
|---|
newsics.comಶಾರ್ಜಾ: ಇಲ್ಲಿನ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಐಪಿಎಲ್ 2020 ಆವೃತ್ತಿಯ 51ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ತಂಡ ಭರ್ಜರಿ ಗೆಲುವು ದಾಖಲಿಸಿದೆ.ಪಂದ್ಯದಲ್ಲಿ ಆರ್‌ಸಿಬಿ... |
newsics.comಲಖನೌ: ಉತ್ತರ ಪ್ರದೇಶದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಪಡೆಯುವಲ್ಲಿ ವಿಫಲರಾದ ಬಿಎಸ್ಪಿ ಮುಖಂಡ, ವ್ಯಾಪಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಪೊಲೀಸರ ಮಾಹಿತಿಯಂತೆ, ಮೃತ ವ್ಯಕ್ತಿಯ ಬಳಿ ಡೆತ್ ನೋಟ್ ಪತ್ತೆಯಾಗಿದೆ. ಟಿಕೆಟ್‌ಗಾಗಿ... |
newsics.comಮುಂಬೈ: ಕೆಲಸದ ನಿಮಿತ್ತ ಮಹಿಳೆಯರು ಮನೆಯಿಂದ ಹೊರಬಂದ ನಂತರವೆ ಮೀಟೂ ಅಭಿಯಾನ ಆರಂಭವಾಯಿತು ಎಂದು ನಟ ಮುಖೇಶ್ ಖನ್ನಾ ಅವರ ವಿವಾದಾತ್ಮಕ ಹೇಳಿಕೆಗೆ ನೆಟ್ಟಿಗರು ತೀವ್ರ ವಾಗ್ದಾಳಿ ನಡೆಸಿದ್ದಾರೆ.ಮಹಿಳೆಯರು ಕೆಲಸ... |
ಕೇಂದ್ರ ಕಾರ್ಮಿಕ ಸಚಿವರ ಕುಟುಂಬಕ್ಕೆ ಕೊರೋನಾ ಸಂಕಟ; 7 ಮಂದಿಗೆ ಸೋಂಕು |
newsics.comನವದೆಹಲಿ: ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ (71) ಅವರ ಕುಟುಂಬದ ಏಳು ಮಂದಿಗೆ ಕೊರೋನಾ ಸೋಂಕು ತಗುಲಿದ್ದು, ಕುಟುಂಬದಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ.ಸಚಿವರ ಪತ್ನಿ ಸೇರಿದಂತೆ ಅವರ ಕುಟುಂಬದ... |
ಟ್ರ್ಯಾಕ್ಟರ್ ಹತ್ತಿಸಿ ಮಹಿಳೆ, ಪ್ರಿಯಕರನ ಹತ್ಯೆ |
newsics.comಮುಂಬೈ: ಮಹಿಳೆ ಮತ್ತು ಆಕೆಯ ಪ್ರಿಯಕರನ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಬರ್ಬರವಾಗಿ ಹತ್ಯೆಗೈದ ಘಟನೆ ಮಹಾರಾಷ್ಟ್ರದ ಜಾಲ್ನಾ ಜಿಲ್ಲೆಯಲ್ಲಿ ನಡೆದಿದೆ.ಘನ್ಸವಾಂಗಿ ತಹಸೀಲ್ ವ್ಯಾಪ್ತಿಯ ಚಾಪಲ್ ಗಾಂವ್ ಗ್ರಾಮದ ಮಾರಿಯಾ(32) ಹಾಗೂ... |
ಡೆಲ್ಲಿ ವಿರುದ್ಧ ಮುಂಬೈಗೆ ಜಯ |
newsics.comದುಬೈ: ಇಲ್ಲಿನ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸತತ ನಾಲ್ಕನೇ ಸೋಲು ಕಂಡಿತು. ಶ್ರೇಯಸ್ ಅಯ್ಯರ್ ಬಳಗ 9 ವಿಕೆಟ್‌ಗಳಿಂದ... |
ಬಂಜಾರ ಗುರು ರಾಮರಾವ್ ಬಾಪು ಮಹಾರಾಜ್ ವಿಧಿವಶ |
newsics.comಮುಂಬೈ: ಬಂಜಾರ ಸಮುದಾಯದ ಹಿರಿಯ ಧಾರ್ಮಿಕ ಮುಖಂಡ ರಾಮರಾವ್ ಬಾಪು ಮಹಾರಾಜ್(89) ಅವರು ಸುದೀರ್ಘ ಅನಾರೋಗ್ಯದ ಬಳಿಕ ಶನಿವಾರ(ಅ.31) ಬೆಳಗ್ಗೆ ವಿಧಿವಶರಾದರು.ಕೆಲವು ದಿನಗಳ ಹಿಂದೆ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.... |
ಹರಕೆ ಪೂರೈಸಲು ವ್ಯಕ್ತಿ ಆತ್ಮಹತ್ಯೆ |
Home Newsics Editor - October 31, 2020 |
NEWSICS.COM ಕನ್ಯಾಕುಮಾರಿ: ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ನಾಗರ್‌ಕೋಯಿಲ್ ಮೂಲದ ವ್ಯಕ್ತಿ ಕೆಲಸ ಸಿಕ್ಕ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನಗೆ ಕೆಲಸ ಸಿಕ್ಕರೆ ತನ್ನನ್ನು ದೇವರಿಗೆ ಅರ್ಪಿಸಿಕೊಳ್ಳುವುದಾಗಿ ನವೀನ್ ಎಂಬಾತ ಹರಕೆ ಹೊತ್ತಿದ್ದ. ಅದೇ ರೀತಿ ಬ್ಯಾಂಕ್... |
HomeNEWSICS - October 31, 2020 |
newsics.comಹಾಸನ: ರಸ್ತೆಯಲ್ಲಿ ಶನಿವಾರ ನಡೆದ ಗಂಡ ಹೆಂಡತಿಯ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಜಗಳ ವಿಕೋಪಕ್ಕೆ ತಿರುಗಿದ್ದು, ರಸ್ತೆ ಎನ್ನುವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ ತನ್ನ... |
'ಪುಷ್ಪ'ನ ಜೊತೆ ಸೊಂಟ ಕುಣಿಸಲು ಭಾರಿ ಸಂಭಾವನೆ ಪಡೆದ ಸಮಂತಾ! | Samantha Ruth Prabhu Taking Huge Remuneration For Pushpa Movie Special Song - Kannada Filmibeat |
| Updated: Thursday, November 18, 2021, 14:23 [IST] |
ನಟಿ ಸಮಂತಾ, ತಮ್ಮ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ಸಿನಿಮಾ ಒಂದರಲ್ಲಿ ವಿಶೇಷ ಹಾಡಿಗೆ ಸೊಂಟ ಬಳುಕಿಸಿದ್ದಾರೆ. ಹೀಗೆ ಐಟಂ ಮಾದರಿಯ ಹಾಡಿಗೆ ಡ್ಯಾನ್ಸ್ ಮಾಡಲು ಭಾರಿ ಮೊತ್ತದ ಸಂಭಾವನೆಯನ್ನೇ ಸಮಂತಾ ಪಡೆಯುತ್ತಿದ್ದಾರೆ. |
'ಪುಷ್ಪ' ಸಿನಿಮಾದಲ್ಲಿನ ವಿಶೇಷ ಹಾಡಿಗೆ ಸಮಂತಾ ಡ್ಯಾನ್ಸ್ ಮಾಡಲಿದ್ದಾರೆ. ಅಲ್ಲು ಅರ್ಜುನ್ ಜೊತೆಗೆ ಸಮಂತಾ ಕುಣಿಯಲಿದ್ದು, ಸಮಂತಾ ಮೊದಲ ಬಾರಿಗೆ ಇಂಥಹಾ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿರುವ ಕಾರಣ ವಿಶೇಷ ತಯಾರಿಯನ್ನು ಚಿತ್ರತಂಡ ಮಾಡಿದೆ. |
ಪ್ರಸ್ತುತ ಸಾಕಷ್ಟು ಬೇಡಿಕೆ ಇರುವ ನಟಿಯಾಗಿರುವ ಸಮಂತಾ ಮೊದಲ ಬಾರಿಗೆ ಐಟಂ ನಂಬರ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾಗಿಯೇ ಈ ವಿಶೇಷ ಪ್ರಯತ್ನಕ್ಕೆ ಭಾರಿ ದೊಡ್ಡ ಮೊತ್ತವನ್ನೇ ಸಮಂತಾ ಪಡೆದುಕೊಳ್ಳುತ್ತಿದ್ದಾರೆ. ಸಮಂತಾ ಪಡೆಯುತ್ತಿರುವ ದೊಡ್ಡ ಮೊತ್ತದ ಸಂಭಾವನೆ ಹುಬ್ಬೇರುವಂತೆ ಮಾಡಿದೆ. |
ಸಮಂತಾ ಪಡೆಯುತ್ತಿರುವ ಸಂಭಾವನೆ ಎಷ್ಟು? |
'ಪುಷ್ಪ' ಸಿನಿಮಾದಲ್ಲಿ ಐದು ನಿಮಿಷದ ಹಾಡಿಗೆ ಡ್ಯಾನ್ಸ್ ಮಾಡಲು ಬರೋಬ್ಬರಿ 1.50 ಕೋಟಿ ಹಣವನ್ನು ಸಮಂತಾ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಕೇವಲ ಐದು ನಿಮಿಷದ ಹಾಡಿಗೆ 1.50 ಕೋಟಿ ಸಂಭಾವನೆಯನ್ನು ಮೈತ್ರಿ ಮೂವೀಸ್ ನೀಡುತ್ತಿದೆ. ಜೊತೆಗೆ ಬಹಳ ರಿಚ್ ಆಗಿ ಹಾಡು ಮೂಡಿ ಬರಲು ಸಕಲ ವ್ಯವಸ್ಥೆಗಳಲ್ಲೂ ಮಾಡಿದೆ. ಒಟ್ಟಾರೆ ಈ ಒಂದು ಹಾಡಿಗೆ ಸುಮಾರು 5 ಕೋಟಿ ಹಣವನ್ನು ಮೈತ್ರಿ ಮೂವೀಸ್ ಖರ್ಚು ಮಾಡುತ್ತಿದೆ. |
ಪೂಜಾ ಹೆಗ್ಡೆಯನ್ನು ಕೇಳಲಾಗಿತ್ತು |
ಇದೇ ಹಾಡಿಗೆ ನರ್ತಿಸುವಂತೆ ಪೂಜಾ ಹೆಗ್ಡೆಯನ್ನು ಕೇಳಲಾಗಿತ್ತು. ಆದರೆ ಪೂಜಾ ಹೆಗ್ಡೆ ಇನ್ನೂ ದೊಡ್ಡ ಮೊತ್ತದ ಸಂಭಾವನೆ ಕೇಳಿದರಂತೆ. ಜೊತೆಗೆ ಪೂಜಾ ಹೆಗ್ಡೆ ಬೇರೆ ಸಿನಿಮಾಗಳಲ್ಲಿ ಬಹಳ ಬ್ಯುಸಿ ಸಹ ಇರುವ ಕಾರಣ ಪೂಜಾ ಹೆಗ್ಡೆ ಬದಲಿಗೆ ಸಮಂತಾರನ್ನು ಚಿತ್ರತಂಡ ಕೇಳಿದೆ. ಹಾಡಿನ ನೃತ್ಯ, ಸಾಹಿತ್ಯ ಹಾಗೂ ಹಾಡಿನಲ್ಲಿನ ಗ್ಲಾಮರ್ ಅಂಶಗಳ ಬಗ್ಗೆ ಕೆಲವು ಷರತ್ತುಗಳನ್ನು ವಿಧಿಸಿದ ಬಳಿಕ ಹಾಡಿಗೆ ನರ್ತಿಸಲು ಸಮಂತಾ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. |
ಮೂರು ಹಾಡು ಬಿಡುಗಡೆ ಆಗಿವೆ |
ಸಿನಿಮಾದ ಮೂರು ಹಾಡುಗಳು ಈಗಾಗಲೇ ಬಿಡುಗಡೆ ಆಗಿವೆ. ಸಿನಿಮಾದ ಐದನೇ ಹಾಡಿನಲ್ಲಿ ಸಮಂತಾ ನರ್ತಿಸಲಿದ್ದಾರೆ. ಈ ಮೊದಲು ಬಿಡುಗಡೆ ಆಗಿರುವ ಮೂರು ಹಾಡುಗಳು ಸೂಪರ್ ಹಿಟ್ ಆಗಿವೆ. ಅದರಲ್ಲಿಯೂ 'ಶ್ರೀವಲ್ಲಿ' ಹಾಗೂ 'ದಾಕ್ಕೊ ದಾಕ್ಕೊ ಮೇಕ' ಹಾಡುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದೀಗ ಸಮಂತಾ ನಟಿಸುತ್ತಿರುವ ಹಾಡನ್ನು ಹೆಚ್ಚಿನ ಕಾಳಜಿವಹಿಸಿ ಚಿತ್ರೀಕರಿಸಲಾಗುತ್ತಿದೆ. ಈ ಹಾಡು ಸಿನಿಮಾದ ಸೆಳೆಯುವ ಅಂಶಗಳಲ್ಲಿ ಒಂದಾಗಿರುತ್ತದೆ ಎಂದಿದೆ ಚಿತ್ರನಿರ್ಮಾಣ ಸಂಸ್ಥೆ ಮೈತ್ರಿ ಮೂವೀಸ್. |
'ಪುಷ್ಪ' ಸಿನಿಮಾ ಬಿಡುಗಡೆ ದಿನಾಂಕ |
'ಪುಷ್ಪ' ಸಿನಿಮಾದಲ್ಲಿ ದೊಡ್ಡ ಸ್ಟಾರ್ ನಟರ ದಂಡೇ ಇದೆ. ಅಲ್ಲು ಅರ್ಜುನ್ ನಾಯಕ, ರಶ್ಮಿಕಾ ಮಂದಣ್ಣ ನಾಯಕಿ, ಫಹಾದ್ ಫಾಸಿಲ್, ಹಾಸ್ಯ ನಟ ಸುನಿಲ್, ಜಗಪತಿ ಬಾಬು, ಕನ್ನಡಿಗ ಡಾಲಿ ಧನಂಜಯ್ ಇನ್ನೂ ಕೆಲವರು ವಿಲನ್‌ಗಳಾಗಿ ನಟಿಸುತ್ತಿದ್ದಾರೆ. ಸಿನಿಮಾವನ್ನು ಜನಪ್ರಿಯ ನಿರ್ದೇಶಕ ಸುಕುಮಾರ್ ನಿರ್ದೇಶನ ಮಾಡಿದ್ದಾರೆ. ಸಂಗೀತ ನೀಡಿರುವುದು ದೇವಿ ಶ್ರೀ ಪ್ರಸಾದ್. ಸುಕುಮಾರ್ ಹಾಗೂ ಅಲ್ಲು ಅರ್ಜುನ್ ಒಟ್ಟಿಗೆ ಮಾಡುತ್ತಿರುವ ಮೂರನೇ ಸಿನಿಮಾ ಇದಾಗಿದೆ. ಈ ಮೊದಲು 'ಆರ್ಯ' ಮತ್ತು 'ಆರ್ಯ 2' ಸಿನಿಮಾಗಳನ್ನು ಈ ಜೋಡಿ ಒಟ್ಟಿಗೆ ಮಾಡಿತ್ತು. 'ಪುಷ್ಪ' ಸಿನಿಮಾವು ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದ್ದು, ಮೊದಲ ಭಾಗವು ಡಿಸೆಂಬರ್ 17 ರಂದು ತೆರೆಗೆ ಬರಲಿದೆ. |
Read more about: samantha dance item song allu arjun telugu tollywood ಸಮಂತಾ ನೃತ್ಯ ಐಟಂ ಹಾಡು ಅಲ್ಲು ಅರ್ಜುನ್ ಟಾಲಿವುಡ್ ತೆಲುಗು |
Samantha Ruth Prabhu taking huge remuneration to act in Puhspa movie special song. Movie is releasing on December 17. |
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ ಮೊದಲ ಆಡಿಷನ್ ವೀಡಿಯೋ ನೋಡಿದ್ದೀರಾ..? |
Updated:Friday, January 14, 2022, 15:10[IST] |
ಚಂದನವನದಿಂದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ತೆರೆ ಮೇಲೆ ಬಂದ ರಶ್ಮಿಕಾ ಮಂದಣ್ಣ ಈಗ ನ್ಯಾಷನಲ್ ಕ್ರಶ್ ಆಗಿದ್ದಾರೆ. ಈಗಾಗಲೇ ಕನ್ನಡ, ತೆಲುಗಿನಲ್ಲಿ ದೊಡ್ಡ ಯಶಸ್ಸು ಕಂಡಿದ್ದಾರೆ. ಇಡೀ ದಕ್ಷಿಣ ಭಾರತದಲ್ಲಿ ಲೀಡಿಂಗ್ ನಲ್ಲಿರೋ ನಾಯಕಿ ಎಂದರೆ ಅದು ರಶ್ಮಿಕಾ ಮಂದಣ್ಣ. ಪ್ರಸ್ತುತ, ಅಲ್ಲು ಅರ್ಜುನ್ ಜೊತೆ ಪುಷ್ಪ ಚಿತ್ರ ಮಾಡ್ತಿದ್ದು, ರಶ್ಮಿಕಾ ಅವರು ಶ್ರೀವಲ್ಲಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನು ಹೊರತು ಪಡಿಸಿ, ಚಲೋ, ಗೀತಾ ಗೋವಿಂದಂ, ಡಿಯರ್ ಕಾಮ್ರೇಡ್ ಅಂತಹ ಸಿನಿಮಾಗಳು ರಶ್ಮಿಕಾಗೆ ಹೆಚ್ಚು ಖ್ಯಾತಿ ತಂದು ಕೊಟ್ಟಿದೆ. |
ನಿತಿನ್ ಜೊತೆ ಭೀಷ್ಮ ಸಿನಿಮಾದಲ್ಲೂ ನಟಿಸಿದ್ದಾರೆ. ಮಹೇಶ್ ಬಾಬು ಜೊತೆ ಸರಿಲೇರು ನೀಕೆವ್ವರು ಸಿನಿಮಾ ಮಾಡಿದ್ರು. ಸಿದ್ಧಾರ್ಥ್ ಮಲ್ಹೋತ್ರ ಅಭಿನಯದ ಮಿಷನ್ ಮಜ್ನು ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಇದು ರಶ್ಮಿಕಾ ನಟನೆಯ ಮೊದಲ ಹಿಂದಿ ಸಿನಿಮಾ. ಈ ಚಿತ್ರದ ಜೊತೆಯಲ್ಲಿ ಗುಡ್ ಬೈ ಎನ್ನುವ ಮತ್ತೊಂದು ಬಾಲಿವುಡ್ ಸಿನಿಮಾ ಮಾಡ್ತಿದ್ದಾರೆ. ಈ ಪ್ರಾಜೆಕ್ಟ್ ನಲ್ಲಿ ಅಮಿತಾಭ್ ಬಚ್ಚನ್ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಇಲ್ಲಿಯವರೆಗೂ ಸರಿ ಸುಮಾರು 10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. |
ಇದೀಗ ಪುಷ್ಪ ಚಿತ್ರದಲ್ಲಿ ಅದ್ಭುತವಾಗಿ ನಟಿಸಿರುವ ರಶ್ಮಿಕಾ ಮಂದಣ್ಣ ಅವರ ಡೈಲಾಗ್, ಹಾಡು, ಸ್ಟೆಪ್ಸ್ ಗಳೆಲ್ಲವೂ ಸೂಪರ್ ಹಿಟ್ ಆಗಿದ್ದು, ವೀಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ. ಇನ್ನು ರಶ್ಮಿಕಾ ಮಂದಣ್ಣ ಬಣ್ಣ ಹಚ್ಚಲು ಕಾರಣ ಕಿರಿಕ್ ಪಾರ್ಟಿ ಚಿತ್ರ. ಕಿರಿಕ್ ಪಾರ್ಟಿ ಚಿತ್ರನ ನಾಯಕಿಗಾಗಿ ರಕ್ಷಿತ್ ಶಟ್ಟಿ ಅವರು ಆಡಿಷನ್ ನಡೆಸುತ್ತಿದ್ದರು. ಆಗ ರಶ್ಮಿಕಾ ಬಂದಿದ್ದರು. ಅವರ ಆಡಿಷನ್ ಮಾಡಿ ಸೆಲೆಕ್ಟ್ ಮಾಡಲಾಯ್ತು. ಕಿರಿಕ್ ಪಾರ್ಟಿ ಚಿತ್ರದ ಬಳಿಕ ರಶ್ಮಿಕಾ ಲಕ್ ಬದಲಾಗಿ ಹೋಯ್ತು. ಈ ಆಡಿಷನ್ ನ ವೀಡಿಯೋವನ್ನು ಕಳೆದ ವರ್ಷ ರಶ್ಮಿಕಾ ಅವರ ಬರ್ತಡೇಗೆ ರಕ್ಷಿತ್ ಶೆಟ್ಟಿ ಅವರು ಹಂಚಿಕೊಂಡು ವಿಶ್ ಮಾಡಿದ್ದರು. ಈ ವೀಡಿಯೋ ಈಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ. |
ಇಂದು ರಾಜ್ಯಮಟ್ಟದ ಸಾಂಸ್ಕೃತಿಕ ಕಲಾ ಉತ್ಸವ - today is a state-level cultural arts festival | Vijaya Karnataka |
today is a state-level cultural arts festival |
ಇಂದು ರಾಜ್ಯಮಟ್ಟದ ಸಾಂಸ್ಕೃತಿಕ ಕಲಾ ಉತ್ಸವ |
Vijaya Karnataka | Updated: 29 Nov 2020, 05:00:00 AM |
ಮುಂಡರಗಿ: ಇಲ್ಲಿಯ ಜನಪದ ಬಯಲಾಟ( ದೊಡ್ಡಾಟ) ಕಲಾಪರಿಷತ್ ಆಶ್ರಯದಲ್ಲಿನ.29 ರಂದು ಬೆಳಗ್ಗೆ 10.30 ಕ್ಕೆ ಜ.ಅನ್ನದಾನೀಶ್ವರ ಪದವಿಪೂರ್ವ ಕಾಲೇಜು ಆವರಣದಲ್ಲಿರಾಜ್ಯಮಟ್ಟದ ಸಾಂಸ್ಕೃತಿಕ ಕಲಾ ಉತ್ಸವ ಜರುಗಲಿದೆ. ಸಾಧಕರಿಗೊಂದು ಸನ್ಮಾನ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಕಲಾ ಉತ್ಸವದಲ್ಲಿವಿವಿಧ ಜನಪದ ಕಲಾತಂಡಗಳು ಪಾಲ್ಗೊಳ್ಳಲಿವೆ ಎಂದು ಪರಿಷತ್ ಅಧ್ಯಕ್ಷ ಮೌನೇಶ್ವರ ಬಡಿಗೇರ ತಿಳಿಸಿದ್ದಾರೆ. |
ಜ.ಡಾ.ಅನ್ನದಾನೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಚಿವ ಬಿ.ಶ್ರೀರಾಮುಲು ಉದ್ಘಾಟಿಸುವರು. ಸಚಿವ ಸಿ.ಸಿ.ಪಾಟೀಲ. ಸಂಸದ ಶಿವಕುಮಾರ ಉದಾಸಿ, ಶಾಸಕರಾದ ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ, ಜನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಪಾಲ್ಗೊಳ್ಳುವರು. ಪುರಸಭೆ ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ ಅಧ್ಯಕ್ಷತೆ ವಹಿಸುವರು. ಎಸ್.ವಿ.ಸಂಕನೂರ, ತಹಸೀಲ್ದಾರ ಆಶಪ್ಪ ಪೂಜಾರಿ, ಸಿಪಿಐ ಸುಧೀರ ಬೆಂಕಿ, ಇಒ ಎಸ್.ಎಸ್.ಕಲ್ಮನಿ, ಡಾ.ನಿಂಗು ಸೊಲಗಿ ಮುಂತಾದವರು ಪಾಲ್ಗೊಳ್ಳುವರು. |
ವಿವಿಧ ಜನಪದ ಕಲೆಗಳಲ್ಲಿಸಾಧನೆ ಮಾಡಿದವರನ್ನು ಸನ್ಮಾನಿಸಲಾಗುವದು. ನ.29 ರಂದು ಬೆಳಗ್ಗೆ 7.30 ಕ್ಕೆ ಕನ್ನಡ ಧ್ವಜಾರೋಹಣ ಹಾಗೂ ಚಿತ್ರಕಲಾ ಪ್ರದರ್ಶನ ಉದ್ಘಾಟನೆ ನಡೆಯಲಿದೆ. |
ಮಂಜುನಾಥ ಇಟಗಿ, ಡಾ.ಬಿ.ಜಿ.ಜವಳಿ, ಡಾ.ಲಕ್ಷತ್ರ್ಮಣ ಪೂಜಾರ, ಆನಂದರೆಡ್ಡಿ, ಕೆ.ಧರ್ಮೇಂದ್ರ ಪಾಲ್ಗೊಳ್ಳುವರು. ರಾತ್ರಿ 9.30 ಕ್ಕೆ ಸಾಂಸ್ಕೃತಿಕ ಕಲಾ ಉತ್ಸವದಲ್ಲಿನಾಟಕೋತ್ಸವವನ್ನು ಡಾ.ಮಳೆಯೋಗಿಶ್ವರ ಸ್ವಾಮೀಜಿ ಉದ್ಘಾಟಿಸುವರು. ಧಾರವಾಡದ ವಾಯುಪುತ್ರ ಕಲಾತಂಡ, ಚಂದ್ರಸ್ಪೂರ್ತಿ ಕಲಾತಂಡ, ವಿದ್ಯಾಸಿಂಚನ ಕಲಾತಂಡಗಳು ಪಾಲ್ಗೊಳ್ಳಲಿವೆ ಎಂದರು. |
ಕತೆ ಕೇಳುವಾಗಲೇ ಫ್ಯಾನ್ಸ್ ಬಗ್ಗೆಯೂ ಯೋಚಿಸುತ್ತೇನೆ ಎಂದ ಡಾ.ಶಿವರಾಜ್ ಕುಮಾರ್.! | An Interview with Kannada Actor Shiva Rajkumar - Kannada Filmibeat |
14 min ago ನವರಾತ್ರಿಗೆ ಅಶ್ಲೀಲ ಜಾಹೀರಾತು ಪ್ರಸಾರ: ತೀವ್ರ ವಿರೋಧದ ಬಳಿಕ ಕ್ಷಮೆಯಾಚಿಸಿದ 'ಎರೋಸ್ ನೌ' |
23 min ago ಈ ವಾರದಿಂದ ಚಿತ್ರಮಂದಿರಲ್ಲಿ ಮತ್ತೆ ಬಿಗ್ ಸ್ಟಾರ್ಸ್ ಅಬ್ಬರ |
ಕತೆ ಕೇಳುವಾಗಲೇ ಫ್ಯಾನ್ಸ್ ಬಗ್ಗೆಯೂ ಯೋಚಿಸುತ್ತೇನೆ ಎಂದ ಡಾ.ಶಿವರಾಜ್ ಕುಮಾರ್.! |
| Published: Wednesday, December 26, 2018, 14:56 [IST] |
'ದಿ ವಿಲನ್' ಚಿತ್ರದ ಬಳಿಕ ಶಿವಣ್ಣ ಸಿನಿಮಾಗಳ ಆಯ್ಕೆಯಲ್ಲಿ ಇನ್ನಷ್ಟು ಚ್ಯೂಸಿಯಾಗಿದ್ಧಾರೆ. ಅದಕ್ಕೆ ಕಾರಣ ಮತ್ತೆ ಅಭಿಮಾನಿಗಳೇ ಹೌದು.! |
''ಚಿತ್ರದ ಸೋಲು ಗೆಲುವಿಗಿಂತಲೂ ಅಭಿಮಾನಿಗಳು ಮುಖ್ಯ ಎನ್ನುವುದು ಅವರ ಅಭಿಪ್ರಾಯ. ನನಗೆ ಕತೆ ಹೊಂದಾಣಿಕೆಯಾಗಿಲ್ಲ ಎಂದ ಮಾತ್ರಕ್ಕೆ ದುಡ್ಡು ತೆಗೆದುಕೊಂಡು ಬೇಕಾಬಿಟ್ಟಿ ನಟಿಸುವ ಜಾಯಮಾನ ನನ್ನದಲ್ಲ. ಒಂದೋ ಕತೆ ನನಗೆ ಇಷ್ಟವಾಗಬೇಕು. ಅಥವಾ ಅಭಿಮಾನಿಗಳು ಇಷ್ಟಪಡುವಂತೆ ಚಿತ್ರ ಮಾಡುವ ನಂಬಿಕೆ ನಿರ್ದೇಶಕರಲ್ಲಿ ಇರಬೇಕು'' |
''ನಿರ್ದೇಶಕರ ಮೇಲೆ ಮಾತ್ರ ಭರವಸೆ ಇಟ್ಟು ನಟಿಸುವಾಗಲೂ ನಾನು ಕಾಟಾಚಾರಕ್ಕೆ ನಟಿಸಿ ಹೋಗಿಲ್ಲ. ನನ್ನ ಪಾತ್ರಕ್ಕೆ ಬೇಕಾದ ಏನು ಬೇಕೋ ಹಾಗೆ ಹಾರ್ಡ್ ವರ್ಕ್ ಮಾಡುತ್ತೇನೆ. ಅದರ ಮೇಲೆ ಸೋಲು ಗೆಲುವು ಎನ್ನುವುದು ಭಗವಂತನ ಇಚ್ಛೆ" ಎಂದಿದ್ದಾರೆ ಡಾ. ಶಿವರಾಜ್ ಕುಮಾರ್. |
ಸದ್ಯಕ್ಕೆ ಅವರು ಪಿ.ವಾಸು ನಿರ್ದೇಶನದ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ಹೆಸರಿಡದ ಸಿನಿಮಾದ ಚಿತ್ರೀಕರಣ ಯಲಹಂಕ, ಗೌರಿಬಿದನೂರು ಮೊದಲಾದೆಡೆ ಮುಂದುವರಿದಿದೆ. ಶೂಟಿಂಗ್ ಬಿಡುವಿನ ವೇಳೆ 'ಫಿಲ್ಮಿಬೀಟ್ ಕನ್ನಡ' ಪ್ರತಿನಿಧಿಯೊಂದಿಗೆ ನಡೆಸಿದ ಪ್ರಶ್ನೋತ್ತರದಲ್ಲಿ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ಧಾರೆ. ಮುಂದೆ ಓದಿರಿ... |
ಪ್ರಶ್ನೆ: ನೀವು ಚಿತ್ರಗಳ ಆಯ್ಕೆಯಲ್ಲಿ ತುಂಬ ಚ್ಯೂಸಿಯಾಗುತ್ತಿದ್ದೀರಂತೆ. ಕಾರಣವೇನು? |
ಉತ್ತರ: ನನ್ನನ್ನು ಮೊದಲೇ ಚ್ಯೂಸಿ ಅಂತಾರೆ. ಆದರೆ ಈಗ ಇನ್ನಷ್ಟು ಚ್ಯೂಸಿಯಾಗಿದ್ದೇನೆ. ಅದಕ್ಕೆ ಇತ್ತೀಚೆಗೆ ಬಿಡುಗಡೆಯಾದ ನನ್ನ ಚಿತ್ರದ ಬಗ್ಗೆ ಅಭಿಮಾನಿಗಳಿಂದ ಬಂದಂಥ ಅಸಮಾಧಾನವೂ ಕಾರಣ ಇರಬಹುದು. ನಾವು ಏನಿದ್ದರೂ ಅಭಿಮಾನಿಗಳಿಗಾಗಿ ಸಿನಿಮಾ ಮಾಡುವವರು. ನಾನು ಇದುವರೆಗೂ ಆ ಚಿತ್ರವನ್ನು ನೋಡಿಲ್ಲ. ಆ ನಿರ್ದೇಶಕರು ನನ್ನ ಸಜೆಶನ್ ಕೇಳಲಿಲ್ಲ. ಆದರೆ ಈಗಲೂ ನಿರ್ದೇಶಕರದು ತಪ್ಪು ಎಂದು ನಾನು ಹೇಳುವ ಹಾಗಿಲ್ಲ. ಯಾಕೆಂದರೆ ಚಿತ್ರ ಒಳ್ಳೆಯ ಕಲೆಕ್ಷನ್ ಮಾಡಿದೆ. ನಿರ್ಮಾಪಕರಿಗೆ ಲಾಭ ತಂದುಕೊಟ್ಟಿದೆ. ಕಮರ್ಷಿಯಲ್ ಚಿತ್ರ ಎಂದ ಮೇಲೆ ಅದೇ ಪ್ರಮುಖ ಅಂಶ ಎನ್ನುವುದನ್ನು ಮರೆಯಲಾಗದು. |
ಪ್ರಶ್ನೆ: ಚಿತ್ರದ ನಿರ್ದೇಶಕರ ವಿಶನ್ ಒಳಗೆ ನಾಯಕ ಅಭಿಪ್ರಾಯ ಹೇಳುವುದು ಎಷ್ಟು ಸರಿ? |
ಉತ್ತರ: ಸಿನಿಮಾ ಬಗ್ಗೆ ಎಲ್ಲರಿಗೂ ಒಂದು ವಿಶನ್ ಇರುತ್ತದೆ. ಆದರೆ ನಿರ್ದೇಶಕರ ವಿಶನ್ ಮಾತ್ರ ಸಿನಿಮಾ ಆಗುತ್ತದೆ. ಅವರು ಚಿತ್ರ ಮಾಡುವ ಮುನ್ನ ತಮ್ಮ ವಿಶನ್ ಒಳಗೆ ನಾಯಕ ಕಂಫರ್ಟ್ ಆಗಿದ್ದಾನಾ ಅಥವಾ ಇಲ್ವಾ ಎನ್ನುವುದನ್ನು ಅರ್ಥ ಮಾಡಿಕೊಂಡಿರಬೇಕು. ಯಾಕೆಂದರೆ ನಾಯಕ ಆ ಕತೆಯೊಳಗೆ ಮನಸಾರೆ ಸೇರಿಕೊಂಡಾಗ ಮಾತ್ರ ಚಿತ್ರ ಚೆನ್ನಾಗಿ ಬರಲು ಸಾಧ್ಯ. ಹಾಗಂತ ನನ್ನ ಚಿತ್ರ ಮಾಡುವ ನಿರ್ದೇಶಕರೆಲ್ಲರೂ ಶಿವಣ್ಣನ ಅಭಿಪ್ರಾಯದಂತೆ ಚಿತ್ರ ಮಾಡಬೇಕು ಎಂಬ ಆಕಾಂಕ್ಷೆ ನನಗಿಲ್ಲ. ಆದರೆ ಕತೆ, ಚಿತ್ರಕತೆಗಳ ಕುರಿತಾದ ನನ್ನ ಸಂದೇಹಗಳಿಗೆ ಸರಿಯಾದ ಉತ್ತರ ನೀಡುವ ಸಾಮರ್ಥ್ಯ ಅವರಿಗಿರಬೇಕು. ಅದು ಬಿಟ್ಟು ನಾನು ಹೇಳಿದೆ ಎಂದು ನನ್ನ ಮೇಲೆ ಭಾರ ಹಾಕಿ, ಕತೆ ಬದಲಾಯಿಸೋದಲ್ಲ. |
ಪ್ರಶ್ನೆ: ನಿಮ್ಮ ಸಂದೇಹಗಳಿಗೆ ಉತ್ತರಿಸಲಾಗದೆ ನಿರ್ದೇಶಕರು ವಾಪಸ್ ಹೋದ ಉದಾಹರಣೆ ಇದೆಯಾ? |
ಉತ್ತರ: ಈ ಹಿಂದೆ ನನ್ನ ಜೊತೆ ಕೆಲಸ ಮಾಡಿ ಹಿಟ್ ನೀಡಿದಂಥ ನಿರ್ದೇಶಕರೊಬ್ಬರು ಆ ನಂತರ ಕೂಡ ಒಂದೆರಡು ಕತೆ ನನಗಾಗಿ ಮಾಡಿಕೊಂಡು ಬಂದರು. ಆದರೆ ನನಗೆ ಅದು ಸರಿ ಹೊಂದಲಿಲ್ಲ. ಪಾಪ, ಇದೀಗ ಒಂದು ವರ್ಷದಿಂದ ನಿಮಗಾಗಿಯೇ ಕತೆ ಮಾಡಿದ್ದೇನೆ ಎಂದು ಹೇಳ್ಕೊಂಡು ಬಂದ್ರು. ಅವರು ಹಿಟ್ ಕೊಟ್ಟಿದ್ದಾರೆ ಎಂದು ಒಪ್ಪುವುದು ಸುಲಭ. ಅಥವಾ ಹೀಗೆ ಚೇಂಜ್ ಮಾಡಿ ಎಂದು ಸಜೆಶನ್ ಹೇಳೋದು ಇನ್ನೂ ಸುಲಭ. ಆದರೆ ನನಗೆ ಅವರು ಹೇಳುವ ಕತೆಯೇ ಚೆನ್ನಾಗಿದೆ ಎನಿಸುತ್ತಿಲ್ಲ ಎಂದಾಗ ಬಲವಂತಕ್ಕೆ ಯಾಕೆ ಒಪ್ಕೊಳ್ಳಲಿ? |
ಶಿವಣ್ಣ-ಪಿ.ವಾಸು ಜೋಡಿಯ 'ಆನಂದ್' ಚಿತ್ರಕ್ಕೆ ಮುಹೂರ್ತ ನಿಗದಿ ಆಯ್ತು ಕಣ್ರೀ |
ಪ್ರಶ್ನೆ: ನಿಮ್ಮ ವೃತ್ತಿ ಬದುಕಿನಲ್ಲಿ ಸೋಲುಗಳು ಕಡಿಮೆ. ಮುಂದೆಯೂ ಹಾಗೆ ಇರಬೇಕು ಎಂಬ ಕಾರಣದಿಂದ ಈ ತೀರ್ಮಾನ ಕೈಗೊಂಡಿದ್ದೀರ? |
ಉತ್ತರ: ನಾನು ನನ್ನ ಸ್ವಾರ್ಥಕ್ಕಾಗಿ ಚ್ಯೂಸಿ ಅಂತ ಅಂದ್ಕೋಬೇಡಿ. ಯಾಕೆಂದರೆ ಚಿತ್ರ ಸೋಲುವುದರಿಂದ ನನಗೆ ಯಾವತ್ತೂ ಲಾಸ್ ಆಗಿಲ್ಲ. ಇನ್ನಷ್ಟು ಹೊಸ ಚಿತ್ರಗಳೂ ಸಿಗುತ್ತವೆ, ಸಂಭಾವನೆ ಕೂಡ ಕೈ ಸೇರುತ್ತವೆ. ಆದರೆ ಸೋಲಾಗಲೀ, ಗೆಲುವಾಗಲೀ ಅದು ಅಭಿಮಾನಿಗಳಿಗೆ, ನಿರ್ಮಾಪಕರಿಗೆ ಇಷ್ಟವಾಗದಂಥ ಚಿತ್ರ ಆಗಿರಬಾರದು. ಅಷ್ಟಕ್ಕೂ ತುಂಬ ಒತ್ತಾಯ ಮಾಡಿದರೆ ಖಂಡಿತಾ ನಾನು ಒಪ್ಪಿಕೊಳ್ಳುವೆ. ಆದರೆ ಒಂದು ಕಂಡೀಶನ್ ಇರುತ್ತದೆ! ಚಿತ್ರ ಸೋತರೆ ಅದರ ಜವಾಬ್ದಾರಿ ಹೊರೋದಿಕ್ಕೆ ಆ ನಿರ್ದೇಶಕರು ರೆಡಿನಾ ಕೇಳಿ ನೋಡಿ. ಯಾರೂ ಒಪ್ಪಿಕೊಳ್ಳಲ್ಲ. ಅಷ್ಟು ಕಾನ್ಫಿಡೆನ್ಸ್ ನಿರ್ದೇಶಕರಿಗೆ ಇರದಿದ್ದರೆ ಹೇಗೆ? ಯಾಕೆಂದರೆ ಅವರು ನಿರ್ಮಾಪಕರಿಗೆ ನನ್ನ ಕಾಲ್ ಶೀಟ್ ಮಾತ್ರ ತೋರಿಸಿ ಒಪ್ಪಿಸಿರುತ್ತಾರೆ. ನಿರ್ಮಾಪಕರಾದವರು ನಿರ್ದೇಶಕರ ಮೇಲೆ ನಂಬಿಕೆ ಇರಿಸಿ ಬಂದರೆ ಓ.ಕೆ. ಅದು ಬಿಟ್ಟು "ಶಿವಣ್ಣ ನೀವು ಹೇಗೆ ಹೇಳ್ತೀರಿ ಹಾಗೆ" ಎಂದು ಬಂದಾಗ, ನಾನು ಸುಮ್ಸುಮ್ನೆ ನನಗೇನೇ ನಂಬಿಕೆಯಿರದ ನಿರ್ದೇಶಕರ ಬಗ್ಗೆ ಭರವಸೆ ಕೊಡೋಕೆ ಸಾಧ್ಯವಿಲ್ಲ. |
ಪ್ರಶ್ನೆ: ಮುಖ್ಯವಾಗಿ ನಾಯಕ ಮತ್ತು ನಿರ್ಮಾಪಕರ ಜೊತೆಗೆ ನಿರ್ದೇಶಕರ ಸಂಬಂಧ ಚೆನ್ನಾಗಿದ್ದರೆ ಮಾತ್ರ ಒಳ್ಳೆಯ ಚಿತ್ರ ಬರಬಹುದು ಎನ್ನುತ್ತೀರಾ? |
ಉತ್ತರ: ಅದು ಸಹಜ ತಾನೇ? ಒಂದು ಟೀಮ್ ಎಂದ ಮೇಲೆ ಅದೆಲ್ಲ ಇರಲೇಬೇಕು. ಅದು ಬಿಟ್ಟು ಕೊನೇಲಿ ರಿಸಲ್ಟ್ ಫ್ಲಾಪ್ ಆದರೆ ಮಾತ್ರ ಹೀರೋ ಮೇಲೆ ಜವಾಬ್ದಾರಿ ಹಾಕೋ ಹಾಗೆ ಇರಬಾರದು. ಚಿತ್ರ ಶುರುವಾಗಬೇಕಾದರೆ ಕೋ ಆರ್ಡಿನೇಶನ್ ತುಂಬ ಮುಖ್ಯ. ಇದು ಡೈರೆಕ್ಟರ್ ಗೂ ಮುಖ್ಯ. ಏನೋ ಚಾನ್ಸ್ ಸಿಕ್ತು ಅಂತ ಯಾರಿಗೂ ಇಷ್ಟ ಆಗದ ಸಿನಿಮಾ ಮಾಡೋದಲ್ಲ. ಒಬ್ರು ಯಂಗ್ ಡೈರೆಕ್ಟರ್ ಇದ್ದರು. ಅವರ ಜೊತೆಗೆ ನಾನು ಒಂದು ಚಿತ್ರ ಮಾಡಬೇಕಿತ್ತು. ಆ ಕತೆಯೂ ನನಗೆ ಇಷ್ಟವಿತ್ತು. ಆದರೆ ನಿರ್ದೇಶಕರಿಗೇನೇ ಅದನ್ನು ಮುಂದುವರಿಸೋಕೆ ಕಾಲ ಕೂಡಿ ಬರಲಿಲ್ಲ. ಅದರ ಮೇಲೆ ನಾನು ಒತ್ತಡ ಹಾಕೋದು ನ್ಯಾಯ ಅಲ್ಲ. ಹಾಗಾಗಿ ಆ ಪ್ರಾಜೆಕ್ಟ್ ನಡೆಯಲಿಲ್ಲ. ಡೈರೆಕ್ಟರ್ ಹಾಗೆ, ಡೈರೆಕ್ಟರ್ ಥರಾನೇ ಇರಬೇಕು. ಅದೇ ರೀತಿ ನಿರ್ಮಾಪಕನಿಗೋ, ನಾಯಕನಿಗೋ ಅಸಮಾಧಾನ ಇದೆ ಎಂದು ಗೊತ್ತಾದ ಮೇಲೆ ನಿರ್ದೇಶಕನಿಗೂ ಕಂಫರ್ಟ್ ಆಗಿ ಡೈರೆಕ್ಷನ್ ಮಾಡೋಕೆ ಸಾಧ್ಯಾಗಲ್ಲ. |
ಪ್ರಶ್ನೆ: ಪಿ.ವಾಸು ಅವರೊಂದಿಗಿನ ನಿಮ್ಮ ಚಿತ್ರದ ವಿಶೇಷತೆಗಳೇನು? |
ಉತ್ತರ: ಈ ಚಿತ್ರದಲ್ಲಿ ಒಂದು ದೊಡ್ಡ ಕುಟುಂಬ ಇದೆ. ಅದರಲ್ಲಿ ಹದಿನೈದು ಇಪ್ಪತ್ತು ಮಂದಿ ಇರುತ್ತಾರೆ. ಅನಂತ್ ನಾಗ್ ಕುಟುಂಬದಲ್ಲಿ ಹಿರಿಯ. ಅವರಿಗೆ ಮೂರು ಮಂದಿ ಗಂಡು ಮಕ್ಕಳು. ಅವರ ಸ್ನೇಹಿತರ ಮಕ್ಕಳನ್ನೇ ಮೂರು ಜನಕ್ಕೂ ವಿವಾಹ ಮಾಡಿ ಸೊಸೆಯಂದಿರನ್ನಾಗಿಸಿರುತ್ತಾರೆ. ಎಲ್ಲರಿಗೂ ಮೊಮ್ಮಕ್ಕಳು ಇರುತ್ತಾರೆ. ಅವರೊಳಗೆ ನಾಯಕಿ ಯಾರು? ಅಲ್ಲಿಗೆ ಕಾಲಿಡುವ ನಾಯಕನಿಗೆ ಆ ತಾತನ ಜೊತೆಗೆ ಇರುವ ಸಂಬಂಧ ಏನು? ನಾಯಕನ ವರ್ತನೆಗಳು ತಾತನನ್ನು ಯಾಕೆ ಇಂಪ್ರೆಸ್ ಮಾಡುತ್ತವೆ? ನಾಯಕನಿಗೂ ಅನಂತನಾಗ್ ಅವರ ಪಾತ್ರಕ್ಕೂ ಇರುವ ಬಾಂಡಿಂಗ್ ತುಂಬ ಹತ್ತಿರವಾಗಿರುವಂಥದ್ದು. ಆ ಎರಡು ಪಾತ್ರಗಳ ನಡುವಿನ ಭಾವನಾತ್ಮಕ ಸಂಬಂಧ ತುಂಬ ಚೆನ್ನಾಗಿದೆ. ಹಾಗಂತ ಎಲ್ಲಿಯೂ ಮೆಲೋ ಡ್ರಾಮಾ ಇಲ್ಲ. ಆ ಕುಟುಂಬದೊಳಗೆ ನಾಯಕನ ಪಾತ್ರ ಹೇಗೆ ಎಂಟ್ರಿಯಾಗುತ್ತದೆ ಮತ್ತು ಹೇಗೆ ಮುಂದುವರಿಯುತ್ತದೆ ಎನ್ನುವುದು ಚಿತ್ರದ ಕುತೂಹಲದ ಅಂಶ. |
ಪ್ರಶ್ನೆ: ಸಿನಿಮಾದ ಮೂಲಕ ಹಂಚಲಾಗುವ ವಿಶೇಷ ಸಂದೇಶಗಳು ಏನಾದರೂ ಇವೆಯೇ? |
ಉತ್ತರ: ಈ ಚಿತ್ರದಲ್ಲಿ ಸಮಾಜಕ್ಕೆ ಸಂದೇಶ ನೀಡುವಂಥ ಅಂಶಗಳಿದ್ದರೂ ಕೌಟುಂಬಿಕವಾಗಿ ಸೆಳೆಯುವಂಥ ಸಂಗತಿಗಳೇ ಹೆಚ್ಚು ಇವೆ. ಪ್ರತಿಯೊಂದು ಸಮಸ್ಯೆಗಳಿಗೆ ಕ್ಲಾರಿಟಿ ಹುಡುಕಿಕೊಳ್ಳುವುದು ಮುಖ್ಯ. ಅದಕ್ಕೆ ಉತ್ತರ ಹುಡುಕದೇ ಹೋದರೆ ಆ ಕೊರಗು ಮನದೊಳಗೇ ಉಳಿಯುತ್ತದೆ. ಮನುಷ್ಯನ ಮನಸ್ಸಿನೊಳಗೆ ಉಳಿದುಕೊಳ್ಳುವ ತಪ್ಪಿತಸ್ಥ ಭಾವದಿಂದ ಏನೇನು ನಡೆಯಬಹುದು ಎಂಬ ಬಗ್ಗೆ ಚಿತ್ರ ಹೇಳುತ್ತದೆ. |
Read more about: shiva rajkumar interview kannada cinema sandalwood ಶಿವರಾಜ್ ಕುಮಾರ್ ಸಂದರ್ಶನ ಕನ್ನಡ ಸಿನಿಮಾ ಸ್ಯಾಂಡಲ್ ವುಡ್ |
Kannada Actor Shiva Rajkumar reveals about his choosy nature in an exclusive interview with Filmibeat Kannada. |
ಪರಿಸ್ಥಿತಿ ನಿಭಾಯಿಸಲು SDRF ತಂಡ ಉಡುಪಿಗೆ : ಬಸವರಾಜ ಬೊಮ್ಮಾಯಿ | themangaloremirror.in |
ಉಡುಪಿ : ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ, ಕೆಲವು ಗ್ರಾಮಗಳು ಜಲಾವೃತ, ಹಲವೆಡೆ ರಸ್ತೆ ಸಂಪರ್ಕ ಕಡಿತ ಹಿನ್ನೆಲೆ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ. |
ಪರಿಸ್ಥಿತಿ ನಿಭಾಯಿಸಲು ರಾಜ್ಯದ SDRF ತಂಡ ಉಡುಪಿಗೆ ರವಾನೆ ಮಾಡಲಾಗಿದೆ, ಸುಮಾರು 250 ಸದಸ್ಯರ SDRF ತಂಡವನ್ನು ತಡರಾತ್ರಿಯೇ ಉಡುಪಿಗೆ ಕಳಿಸಿದ್ದೇವೆ.ಈತನಕ 200ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ,NDRF ತಂಡ ಕೂಡ ಕೆಲವೇ ಸಮಯದಲ್ಲಿ ಸ್ಥಳಕ್ಕೆ ತಲುಪಲಿದೆ. |
ಉಡುಪಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಕೆಲವು ಗ್ರಾಮಗಳು ಜಲಾವೃತಗೊಂಡಿರುತ್ತವೆ. ಹಾಗೂ ರಸ್ತೆ ಸಂಪರ್ಕವು ಕಡಿತವಾಗಿರುವುದರ ಕುರಿತು ನನ್ನ ಗಮನಕ್ಕೆ ಜಿಲ್ಲಾಡಳಿತ ತಂದ ತಕ್ಷಣ ರಾಜ್ಯದ ಒಂದು SDRF ತಂಡದ ಸುಮಾರು 250 ಸದಸ್ಯರನ್ನು ತಡರಾತ್ರಿಯೇ ಸ್ಥಳಕ್ಕೆ ಕಳುಹಿಸಿದ್ದು, |
ಜಿಲ್ಲಾಡಳಿತಕ್ಕೆ ಎಲ್ಲಾ ಕ್ರಮಗಳನ್ನು ತಗೆದುಕೊಳ್ಳಲು ಸೂಚಿಸಲಾಗಿದೆ,ಈ ಬಗ್ಗೆ ಕಂದಾಯ ಸಚಿವರ ಜೊತೆಯೂ ಸಮಾಲೋಚನೆ ಮಾಡಿದ್ದೇನೆ. ರಕ್ಷಣಾ ಇಲಾಖೆಯ ಒಂದು ಹೆಲಿಕಾಪ್ಟರ್ ನ್ನು ನೀಡಲು ಕೇಳಿಕೊಂಡಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ. |
ರಾಜಕೀಯ ತಿರುವು ಪಡೆದ ಸಲ್ಮಾನ್ ಖಾನ್ ದಬಾಂಗ್ 3 ವಿವಾದ | salman khan starrer dabaanng-3 controversy before its release - Kannada Filmibeat |
32 min ago 'ಚಾರ್ಲಿ' ಜೊತೆ ಕಾಶ್ಮೀರಕ್ಕೆ ಹೊರಟ ನಟ ರಕ್ಷಿತ್ ಶೆಟ್ಟಿ |
34 min ago ದೇವಾಲಯದಲ್ಲಿ ಚುಂಬನ ದೃಶ್ಯ: ನೆಟ್‌ಫ್ಲಿಕ್ಸ್‌ನ ಇಬ್ಬರು ಅಧಿಕಾರಿಗಳ ವಿರುದ್ಧ ಎಫ್‌ಐಆರ್ |
| Published: Friday, April 5, 2019, 15:56 [IST] |
ಬಿಡುಗಡೆಗೂ ಮುನ್ನ ರಾಜಕೀಯ ತಿರುವು ಪಡೆದ ಕಿಚ್ಚನ ಸಿನೆಮಾ |
ನಟ ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷೆಯ ದಂಬಾಂಗ್-3 ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಮಧ್ಯ ಪ್ರದೇಶದ ಇಂದೋರ್ ನಲ್ಲಿ ಚಿತ್ರದ ಹಾಡಿನ ಚಿತ್ರೀಕರಣ ಮಾಡಲಾಗುತ್ತಿದೆ. ನರ್ಮದಾ ನದಿ ತೀರದಲ್ಲಿ ಸೆಟ್ ಹಾಕಿ ದಂಬಾಂಗ್-3 ಚಿತ್ರದ ಅದ್ಧೂರಿ ಶೂಟಿಂಗ್ ಮಾಡಲಾಗುತ್ತಿದೆ. |
ಆದ್ರೀಗ ಈ ಚಿತ್ರೀಕರಣ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಕಾರಣ ಚಿತ್ರದಲ್ಲಿ ಶಿವಲಿಂಗವನ್ನು ಬಳಸಲಾಗಿದ್ದು ಈ ಶಿವಲಿಂಗವನ್ನು ಮರದ ಹಲಗೆಗಳ ಅಡಿ ಇಡಲಾಗಿದೆ. ಈ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಶಿವಲಿಂಗಕ್ಕೆ ಅವಮಾನ ಮಾಡಲಾಗಿದೆ, ಹಿಂದೂ ಧಾರ್ಮಿಕ ಭಾವನೆಗಳಿಗೆ ಸಲ್ಮಾನ್ ಖಾನ್ ಧಕ್ಕೆ ತರುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. |
ಈ ಘಟನೆ ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಇದೇ ವಿವಾದವನ್ನು ಬಳಸಿಕೊಂಡು ರಾಜಕೀಯ ಲಾಭ ಪಡೆಯಲು ಕಿತ್ತಾಡುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬೋಪಾಲ್ ಜಿಲ್ಲೆಯ ಹಾಜಿಪುರ್ ಬಿಜೆಪಿ ಶಾಸಕ ರಾಮೇಶ್ವರ್ ಶರ್ಮಾ, 'ಕಾಂಗ್ರೆಸ್ ನೇತೃತ್ವದ ಕಮಲ್ ನಾಥ್ ಸರ್ಕಾರ ಬಂದ ಮೇಲೆ ಹಿಂದೂಗಳ ಭಾವನೆಗೆ ಧಕ್ಕೆ ತರುವಂತಹ ಕೆಲಸಗಳು ಹೆಚ್ಚಾಗುತ್ತಿವೆ. ಶಿವನಿಗೆ ಅಪಮಾನ ಮಾಡಿದವರ ವಿರುದ್ದ ಎಫ್ ಐ ಆರ್ ಧಾಖಲಿಸಬೇಕೆಂದು' ಎಂದು ಒತ್ತಾಯಿಸಿದ್ದಾರೆ. |
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ವಕ್ತಾರೆ ಶೋಭ ಓಝಾ. 'ಬಿಜೆಪಿ ಮುಖಂಡರು ಸಂಕುಚಿತ ಮನೋಭಾವದವರು. ನಾವು ಶರ್ಮ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಸಲ್ಮಾನ್ ಖಾನ್ ಒಬ್ಬ ಅದ್ಭುತ ಹಾಗೂ ಧಾರ್ಮಿಕ ಸಾಮರಸ್ಯ ಹೊಂದಿರುವ ನಟ. ಆದ್ರೆ ಬಿಜೆಪಿ ಈ ಘಟನೆಯನ್ನು ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ' ಎಂದು ಹೇಳಿದ್ದಾರೆ. |
ಈ ವಿವಾದ ದೊಡ್ಡದಾಗುತ್ತಿದ್ದಂತೆ ನಟ ಸಲ್ಮಾನ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ. 'ಶಿವಲಿಂಗ ಹಾಳಾಗಬಾರದು ಎನ್ನುವ ಕಾರಣಕ್ಕೆ ಮರದ ಹಲಗೆ ಕೆಳಗೆ ಇಟ್ಟಿರುವುದು. ಚಿತ್ರೀಕರಣ ಮುಗಿದ ಬಳಿಕ ತೆಗೆಯುತ್ತೇವೆ' ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ. |
ದಬಾಂಗ್-3 ಪ್ರಭುದೇವ ನಿರ್ದೇಶದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. |
Bollywood actor Salman Khan starrer Dabangg-3 movie facing major controversy before its release. Shivling covered with wooden planks during the shooting of the Dabangg-3. |
ರೋಗ ನಿಯಂತ್ರಿಸಲು ಅಜ್ಜಿ ಹಬ್ಬ! | Prajavani |
ರೋಗ ನಿಯಂತ್ರಿಸಲು ಅಜ್ಜಿ ಹಬ್ಬ! |
Published: 15 ಜುಲೈ 2012, 14:40 IST |
Updated: 15 ಜುಲೈ 2012, 14:40 IST |
ಭರಮಸಾಗರ: ಗ್ರಾಮದಲ್ಲಿ ಶುಕ್ರವಾರ ಸಂಭ್ರಮದಿಂದ `ಅಜ್ಜಿ ಹಬ್ಬ~ ಆಚರಿಸಲಾಯಿತು. ಸಾಂಕ್ರಾಮಿಕ ಕಾಯಿಲೆಗಳು ಬಾರದಿರಲಿ, ಗ್ರಾಮ ದುಷ್ಟಶಕ್ತಿಗಳ ಕಾಟದಿಂದ ಮುಕ್ತವಾಗಿರಲಿ ಎನ್ನುವ ನಂಬಿಕೆಯಿಂದ ಅಜ್ಜಿ ಹಬ್ಬ ಆಚರಿಸಲಾಗುತ್ತದೆ ಎನ್ನುತ್ತಾರೆ ಇಲ್ಲಿನ ಹಿರಿಯರು. |
ಶುಕ್ರವಾರ ಹಬ್ಬದ ಪ್ರಯುಕ್ತ ಗ್ರಾಮದೇವತೆ ದುರ್ಗಾಂಬಿಕಾ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿದವು. ಸಂಜೆ ಹಬ್ಬ ಆಚರಣೆಯಲ್ಲಿ ತೊಡಗಿಕೊಂಡ ಪ್ರತಿ ಮನೆಯವರು ಮಡಿಯಿಂದ ಪುಟ್ಟಿಗಳಲ್ಲಿ ಹೂ, ಹಣ್ಣು, ಹೋಳಿಗೆ ಎಡೆಯನ್ನು ದೇವಸ್ಥಾನದ ಬಳಿ ತಂದು ಪೂಜೆ ಸಲ್ಲಿಸಿದರು. |
ಬಳಿಕ ದುರ್ಗಾಂಬಿಕ ಮತ್ತು ಮಾರಿಕಾಂಬಾ ದೇವಿ ಉತ್ಸವ ಮೂರ್ತಿಗಳನ್ನು ಮೆರವಣಿಗೆ ಮೂಲಕ ಗ್ರಾಮದ ಗಡಿವರೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಬೇವಿನಮರದ ಕೆಳಗೆ ಪೂಜೆ ಸಲ್ಲಿಸಿದ ನಂತರ ಭಕ್ತರು ಪುಟ್ಟಿಗಳಲ್ಲಿ ತಂದ ಎಡೆ ಅರ್ಪಿಸಿದರು. ದೇವರ ಮೂರ್ತಿಗಳನ್ನು ಮರಳಿ ದೇವಸ್ಥಾನಕ್ಕೆ ಕರೆ ತಂದು ಗುಡಿತುಂಬಿಸಲಾಯಿತು. ಸಮಾಳ, ಭಜನೆ ಮುಂತಾದ ಜನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. |
ಮಳೆಗೆ ವಿಶೇಷ ಪೂಜೆ |
ಹೋಬಳಿಯಾದ್ಯಂತ ಮಳೆ ಬಾರದೆ ಕಂಗಲಾಗಿರುವ ರೈತರು ಇದೀಗ ಮಳೆಗಾಗಿ ದೇವರ ಮೊರೆ ಹೋಗುತ್ತಿದ್ದಾರೆ. |
ಸಮೀಪದ ಹೆಗ್ಗೆರೆ ಗ್ರಾಮದಲ್ಲಿ ಶುಕ್ರವಾರ ಮಳೆಗಾಗಿ ಪ್ರಾರ್ಥಿಸಿ ಬಾದಾಮಟ್ಟಿನ ಸರದ ಪುಣ್ಯ ಕ್ಷೇತ್ರದಲ್ಲಿ ಗಂಗಾ ಪೂಜೆ ನೆರವೇರಿಸಲಾಯಿತು. |
ಊರಾಚೆ ಗುಡ್ಡಗಾಡು ಪ್ರದೇಶದಲ್ಲಿರುವ ಈ ಸ್ಥಳದಲ್ಲಿ ನೀರು ಸಂಗ್ರಹಗೊಂಡರೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಲ್ಲಿ ಅಂತರ್ಜಲ ಹೆಚ್ಚುತ್ತದೆ. ಈ ಬಾರಿ ನಿರೀಕ್ಷೆಯಂತೆ ಮಳೆ ಬಾರದಿರುವ ಹಿನ್ನೆಲೆಯಲ್ಲಿ ಹೆಗ್ಗೆರೆ ಗ್ರಾಮಸ್ಥರು ಅನಾದಿಕಾಲದಿಂದ ನಡೆದುಕೊಂಡು ಬಂದ ಪದ್ಧತಿಯಂತೆ ಶುಕ್ರವಾರ ರಾತ್ರಿ ದುರ್ಗಮ್ಮ, ಆಂಜನೇಯ, ಸಿದ್ದಪ್ಪ ದೇವರುಗಳನ್ನು ಅಲಂಕೃತ ಹೂವಿನ ಪಲ್ಲಕ್ಕಿಯಲ್ಲಿ ಇರಿಸಿ ಮೆರವಣಿಗೆ ಮೂಲಕ ಬಾದಾಮಟ್ಟಿಸರದ ಬಳಿ ಕರೆತಂದು ಸಾಂಪ್ರದಾಯಿಕ ರೀತಿ ರಿವಾಜುಗಳನ್ನು ನೆರವೇರಿಸಿದರು. |
ಬಳಿಕ ಗಂಗಾಪೂಜೆ ನೆರವೇರಿಸಿ ಪುಣ್ಯಕ್ಷೇತ್ರದಲ್ಲಿನ ನೀರನ್ನು 101 ಬಿಂದಿಗೆಗಳಲ್ಲಿ ಸಂಗ್ರಹಿಸಲಾಯಿತು. ಅನ್ನಸಂತರ್ಪಣೆ ನಂತರ ಮೆರವಣಿಗೆ ಮಾಡಿ ಪ್ರಸಾದ ವಿತರಿಸಿ ದೇವರನ್ನು ಗುಡಿದುಂಬಿಸಲಾಯಿತು. |
ಸಮಾಳ, ಭಜನೆ ಮುಂತಾದ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಗ್ರಾಮ ಪಂಚಾಯ್ತಿ ಸದಸ್ಯರಾದ ನರಸಿಂಹಮೂರ್ತಿ, ಹೇಮಾಚಾರ್, ಮುಖಂಡರಾದ ಲಿಂಗಪ್ಪ, ಗುರುಮೂರ್ತಿ, ಗುಡ್ಡಪ್ಪ, ವಸಂತಕುಮಾರ್, ಜಕಣಾಚಾರಿ, ಪಿ. ಜಯಪ್ಪ, ಕರಿಬಸಪ್ಪ, ಸುನೀಲ್, ಪರುಶುರಾಮ್, ಮಂಜುನಾಥ್ ಹಾಜರಿದ್ದರು. |
Subsets and Splits
No community queries yet
The top public SQL queries from the community will appear here once available.