text
stringlengths
0
61.5k
ತಂತ್ರಜ್ಞಾನದಿಂದ ಸಾಧ್ಯ ಎಂದಮಾತ್ರಕ್ಕೆ ಆ ಪ್ರಯತ್ನ ಚೆನ್ನಾಗಿರಬೇಕು ಎಂದೇನೂ ಇಲ್ಲವಲ್ಲ! ಬ್ರಿಟನ್ನಿನ ಡೇಲಿ ಟೆಲಿಗ್ರಾಫ್ ಪತ್ರಿಕೆ ಹೀಗೊಂದು ತಂತ್ರಾಂಶದ ನೆರವಿನಿಂದ ಸಿದ್ಧವಾದ ಪದಬಂಧಗಳನ್ನು ಪ್ರಕಟಿಸಿದಾಗ ಓದುಗರ ವಿರೋಧವನ್ನು ಎದುರಿಸಬೇಕಾಗಿ ಬಂದಿತ್ತಂತೆ. ಯಂತ್ರಗಳು ರೂಪಿಸುವ ಪದಬಂಧ, ವ್ಯಕ್ತಿಗಳು ರೂಪಿಸುವ ಪದಬಂಧದಷ್ಟು ಆಪ್ತವೆನಿಸುವುದಿಲ್ಲ ಎನ್ನುವುದು ಅದರಲ್ಲಿ ಬಹಳಷ್ಟು ಓದುಗರ ಅಭಿ...
ಅದು ಹೇಗೇ ಇರಲಿ, ಪದಬಂಧಕ್ಕೂ ತಂತ್ರಜ್ಞಾನಕ್ಕೂ ಇರುವ ಸಂಬಂಧ ಮಾತ್ರ ಅಬಾಧಿತವಾಗಿ ಮುಂದುವರೆದಿದೆ. ಪದಬಂಧ ರಚನೆಯ ತಂತ್ರಾಂಶಗಳಷ್ಟೇ ಅಲ್ಲ, ಪದಬಂಧ ಬಿಡಿಸುವವರಿಗೂ ಬೇಕಾದಷ್ಟು ತಂತ್ರಾಂಶಗಳು ಬಂದಿವೆ. ಪತ್ರಿಕೆಯಲ್ಲಿ ಪ್ರಕಟವಾಗುವ ಒಂದೇ ಪದಬಂಧ ಯಾವ ಮೂಲೆಗೂ ಸಾಲುವುದಿಲ್ಲ ಎನ್ನುವ ಪದವ್ಯಸನಿಗಳಿಗೆ ಈ ತಂತ್ರಾಂಶಗಳು ಹೇಳಿಮಾಡಿಸಿದ ಜೋಡಿ ಎನ್ನಬಹುದು. ಅತ್ಯಂತ ಸರಳ ಪದಬಂಧಗಳಿಂದ ಅತ್ಯಂತ ಕ್ಲಿಷ್...
ಮೊದಲಿಗೆ ವಿಶ್ವವ್ಯಾಪಿ ಜಾಲದ ಮೂಲಕ ಕಂಪ್ಯೂಟರಿನಲ್ಲಿ ಬಳಕೆಗೆ ಲಭ್ಯವಾದ ಈ ಬಗೆಯ ತಂತ್ರಾಂಶಗಳು ಮೊಬೈಲಿನತ್ತ ಮುಖಮಾಡಿ ಈಗಾಗಲೇ ಬಹಳ ಸಮಯವಾಗಿದೆ. ಗೂಗಲ್ ಪ್ಲೇ ಸ್ಟೋರಿನಲ್ಲಿ 'ಕ್ರಾಸ್‌ವರ್ಡ್' ಎಂದು ಟೈಪಿಸಿದರೆ ಸಾಕು, ಉಚಿತ ಆಪ್‌ಗಳ ಸಾಲುಸಾಲೇ ನಮ್ಮೆದುರು ಕಾಣಿಸಿಕೊಳ್ಳುತ್ತದೆ. ಅಷ್ಟೇ ಅಲ್ಲ, ಈ ಪೈಕಿ ಕೆಲವು ಜನಪ್ರಿಯ ಆಪ್‌ಗಳು ಲಕ್ಷಾಂತರ ಡೌನ್‌ಲೋಡ್‌ಗಳನ್ನು ದಾಟಿಬಿಟ್ಟಿವೆ. ಪದಬಂಧದ ಜೊತ...
ಅಂದಹಾಗೆ ಕನ್ನಡದ ಮಟ್ಟಿಗೂ ಪದಬಂಧ ಹಾಗೂ ತಂತ್ರಜ್ಞಾನದ ಸಂಬಂಧ ಏರ್ಪಟ್ಟಿದೆ. ಇಂಡಿಕ್ರಾಸ್ ಎಂಬ ಜಾಲತಾಣದಲ್ಲಿ (indicross.com) ಕನ್ನಡ ಪದಬಂಧಗಳನ್ನು ಬಿಡಿಸುವುದು ಸಾಧ್ಯ. ಆಂಡ್ರಾಯ್ಡ್ ಫೋನುಗಳಲ್ಲಿ ಬಳಸಲು ಕನ್ನಡ ಪದಬಂಧಗಳ ಆಪ್ ಕೂಡ ಇದೆ. 'Kannada Crossword Padabandha' ಎಂಬ ಹೆಸರಿನ ಈ ಆಪ್ ಅನ್ನು ಗೂಗಲ್ ಪ್ಲೇ ಸ್ಟೋರಿನಿಂದ ಉಚಿತವಾಗಿ ಪಡೆದುಕೊಳ್ಳಬಹುದು.
ಅನುಮಾನ ಬೇಡ ಮುಂದಿನ ಅವಧಿಗೂ ವಿರಾಟ್ ಕೊಹ್ಲಿ ಆರ್ ಸಿ ಬಿ ನಾಯಕ – Kannada news- suddiDina (ಸುದ್ದಿ ದಿನ) | kannada Live news | Karnataka news | ಕನ್ನಡ ನ್ಯೂಸ್ | Kannada News Portal
ಸುದ್ದಿದಿನ ಡೆಸ್ಕ್ : ಕಳಪೆ ಆಟ ಪ್ರದರ್ಶನದ ಕಾರಣಕ್ಕೆ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಬದಲಾವಣೆಗೆ ಚಿಂತನೆ ನಡೆದಿದೆ ಎಂಬ ಸುದ್ದಿಯನ್ನು ತಂಡದ ಆಡಳಿತ ಮಂಡಳಿ ತಳ್ಳಿ ಹಾಕಿದೆ.
2019 ರ ಐಪಿಎಲ್ ಟೂರ್ನಿಯಲ್ಲಿ ಆರ್ಸಿಬಿ ತಂಡದ ನಾಯಕನಾಗಿ ವಿರಾಟ್ ಕೊಹ್ಲಿ ಅವರೇ ಮುಂದುವರಿಯಲಿದ್ದಾರೆ ಎಂದು ತಂಡದ ಮುಖ್ಯಸ್ಥರು ತಿಳಿಸಿದ್ದಾರೆ.
ಮುಂದಿನ ಸೀಸನ್ ನಲ್ಲಿ ವಿರಾಟ್ ಕೊಹ್ಲಿ ಬದಲಿಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ಆಟಗಾರ ಎಬಿಡಿ ವಿಲಿಯರ್ಸ್ ನಾಯಕರಾಗಲಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿತ್ತು. ಇದನ್ನು ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಮುಖ್ಯಸ್ಥರು ‌ನಿರಾಕರಿಸಿದ್ದಾರೆ.
ಮುಂದಿನ ತಿಂಗಳು ಟ್ರೆಲಾನಿಯಲ್ಲಿ ಹೊಸ RIU ಹೋಟೆಲ್ ಬ್ರೇಕಿಂಗ್ ಗ್ರೌಂಡ್ | ಜಮೈಕಾ
ಸ್ಥಾನ: ಮುಖಪುಟ » ಪೋಸ್ಟ್ ಮಾಡಲಾಗುತ್ತಿದೆ » ದೇಶ | ಪ್ರದೇಶ » ಜಮೈಕಾ » ಮುಂದಿನ ತಿಂಗಳು ಟ್ರೆಲಾನಿಯಲ್ಲಿ ಹೊಸ RIU ಹೋಟೆಲ್ ಬ್ರೇಕಿಂಗ್ ಗ್ರೌಂಡ್
ಜಮೈಕಾ ಪ್ರವಾಸೋದ್ಯಮ ಸಚಿವರು, ಗೌರವಾನ್ವಿತ. ಎಡ್ಮಂಡ್ ಬಾರ್ಟ್ಲೆಟ್ (ಫೋಟೋದಲ್ಲಿ ಬಲ ನೋಡಿ), ಮುಂದಿನ ತಿಂಗಳು ಟ್ರೆಲಾನಿಯಲ್ಲಿ ಹೊಸ 700-ಕೋಣೆಗಳ ರೆಸಾರ್ಟ್‌ಗೆ ನೆಲವನ್ನು ಮುರಿಯುವ ಯೋಜನೆಯನ್ನು ಚರ್ಚಿಸಲು ಸಭೆಯ ನಂತರ RIU ಹೊಟೇಲ್ ಮತ್ತು ರೆಸಾರ್ಟ್ಸ್ ಸರಪಳಿಯ ಮಾಲೀಕರಾದ ಕಾರ್ಮೆನ್ ರಿಯು ಗುಯೆಲ್ ಅವರೊಂದಿಗೆ ಛಾಯಾಚಿತ್ರವನ್ನು ವಿರಾಮಗೊಳಿಸಿದರು.
RIU ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳು ಸ್ಪ್ಯಾನಿಷ್ ಹೋಟೆಲ್ ಸರಪಳಿಯಾಗಿದ್ದು, ರಿಯು ಕುಟುಂಬವು 1953 ರಲ್ಲಿ ಸಣ್ಣ ರಜಾ ಸಂಸ್ಥೆಯಾಗಿ ಸ್ಥಾಪಿಸಿದರು. ಇದನ್ನು ಮಲ್ಲೋರ್ಕಾ, ಸ್ಪೇನ್‌ನಲ್ಲಿ ಸ್ಥಾಪಿಸಲಾಯಿತು ಮತ್ತು ಪ್ರಸ್ತುತ 49% TUI ಒಡೆತನದಲ್ಲಿದೆ ಮತ್ತು ಕುಟುಂಬದ ಮೂರನೇ ಪೀಳಿಗೆಯಿಂದ ನಡೆಸಲ್ಪಡುತ್ತದೆ. ಅವರು ಈಗ ಜಮೈಕಾದಲ್ಲಿ 6 ಕೊಠಡಿಗಳೊಂದಿಗೆ 3,000 ಹೋಟೆಲ್‌ಗಳನ್ನು ಹೊಂದಿದ್ದಾರೆ.
ಪ್ರಸ್ತುತ ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ನಡೆಯುತ್ತಿರುವ ವಿಶ್ವದ ಅತ್ಯಂತ ಮಹತ್ವದ ವಾರ್ಷಿಕ ಅಂತರಾಷ್ಟ್ರೀಯ ಪ್ರಯಾಣ ಮತ್ತು ಪ್ರವಾಸೋದ್ಯಮ ಟ್ರೇಡ್‌ಶೋ FITUR ನಲ್ಲಿ ಪ್ರವಾಸೋದ್ಯಮ ಮಂತ್ರಿ ಹೊನ್ ಎಡ್ಮಂಡ್ ಬಾರ್ಟ್ಲೆಟ್ ಮತ್ತು ಸಣ್ಣ ತಂಡವು ಭಾಗವಹಿಸುತ್ತಿದ್ದಂತೆ ಈ ಸುದ್ದಿ ಬಂದಿದೆ.
ದಿ ಜಮೈಕಾ ಪ್ರವಾಸೋದ್ಯಮ ಸಚಿವಾಲಯ ಮತ್ತು ಅದರ ಏಜೆನ್ಸಿಗಳು ಜಮೈಕಾದ ಪ್ರವಾಸೋದ್ಯಮ ಉತ್ಪನ್ನವನ್ನು ವರ್ಧಿಸುವ ಮತ್ತು ಪರಿವರ್ತಿಸುವ ಉದ್ದೇಶವನ್ನು ಹೊಂದಿವೆ, ಆದರೆ ಪ್ರವಾಸೋದ್ಯಮ ವಲಯದಿಂದ ಹರಿಯುವ ಪ್ರಯೋಜನಗಳನ್ನು ಎಲ್ಲಾ ಜಮೈಕಾದವರಿಗೆ ಹೆಚ್ಚಿಸಲಾಗಿದೆ ಎಂದು ಖಚಿತಪಡಿಸುತ್ತದೆ. ಈ ನಿಟ್ಟಿನಲ್ಲಿ ಇದು ಜಮೈಕಾದ ಆರ್ಥಿಕತೆಯ ಬೆಳವಣಿಗೆಯ ಎಂಜಿನ್‌ನಂತೆ ಪ್ರವಾಸೋದ್ಯಮಕ್ಕೆ ಮತ್ತಷ್ಟು ವೇಗವನ್ನು ...
ಪ್ರವಾಸೋದ್ಯಮ ಕ್ಷೇತ್ರವು ಜಮೈಕಾದ ಆರ್ಥಿಕ ಅಭಿವೃದ್ಧಿಗೆ ಅದರ ಪ್ರಚಂಡ ಗಳಿಕೆಯ ಸಾಮರ್ಥ್ಯವನ್ನು ನೀಡುವ ಮೂಲಕ ಸಂಪೂರ್ಣ ಕೊಡುಗೆಯನ್ನು ನೀಡುತ್ತದೆ ಎಂದು ಖಚಿತಪಡಿಸಿಕೊಳ್ಳಲು ಸಚಿವಾಲಯವು ಬದ್ಧವಾಗಿದೆ.
ಇನ್ನಷ್ಟು: ರೆಸಾರ್ಟ್ | ಪ್ರವಾಸೋದ್ಯಮ | ಎಡ್ಮಂಡ್ ಬಾರ್ಟ್ಲೆಟ್ | ಜಮೈಕಾ | ಹೋಟೆಲ್
ಐಷಾರಾಮಿ ಕಲೆಕ್ಷನ್ ಬ್ರ್ಯಾಂಡ್ ಕ್ಯಾಪ್ ಕ್ಯಾನಾಗೆ ಬರುತ್ತದೆ. ಪ್ಲಾಯಾ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳು ಮ್ಯಾರಿಯೊಟ್ ಇಂಟರ್‌ನ್ಯಾಶನಲ್‌ನೊಂದಿಗೆ ಸಹಕರಿಸುತ್ತವೆ ರೆಸಾರ್ಟ್|
ಶಿಕ್ಷಣ ವ್ಯವಸ್ಥೆ ದೋಷ ನಿವಾರಣೆ: ಆಂದೋಲನ ಅಗತ್ಯ | Prajavani
ಶಿಕ್ಷಣ ವ್ಯವಸ್ಥೆ ದೋಷ ನಿವಾರಣೆ: ಆಂದೋಲನ ಅಗತ್ಯ
ಬೆಂಗಳೂರು: `ನಮ್ಮಲ್ಲಿ ಬುದ್ಧಿವಂತ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದಾರೆ. ಶಿಕ್ಷಣ ವ್ಯವಸ್ಥೆಯ ಪ್ರವೃತ್ತಿಯಲ್ಲಿ ದೋಷ ಇದೆ. ಆ ದೋಷ ನಿವಾರಣೆಗೆ ಆಂದೋಲನ ನಡೆಯಬೇಕು~ ಎಂದು ಬೆಂಗಳೂರು ಗ್ರಾಮಾಂತರ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ವಿ. ವೆಂಕಟೇಶಪ್ಪ ಪ್ರತಿಪಾದಿಸಿದರು.
ಸೆಂಟರ್ ಫಾರ್ ಪಬ್ಲಿಕ್ ಪಾಲಿಸಿ ಹಾಗೂ ಭಾರತೀಯ ಆಡಳಿತ ನಿರ್ವಹಣಾ ಸಂಸ್ಥೆಯ (ಐಐಎಂ) ಆಶ್ರಯದಲ್ಲಿ ಐಐಎಂ ಸಭಾಂಗಣದಲ್ಲಿ ಬುಧವಾರ ನಡೆದ `ಶಿಕ್ಷಣ ಸೇರ್ಪಡೆ ಹಾಗೂ ಸಾಮಾಜಿಕ ಅಸಮಾನತೆಗಳ ನಿವಾರಣೆ~ ಕುರಿತ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.
`ಶಿಕ್ಷಣ ಕ್ಷೇತ್ರಕ್ಕೆ ಪ್ರತಿವರ್ಷ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಲಾಗುತ್ತಿದೆ. ಆದರೆ ಶಿಕ್ಷಣ ಕ್ಷೇತ್ರದ ಸಮಸ್ಯೆಗಳು ನಿವಾರಣೆ ಆಗಿಲ್ಲ. ವಿದ್ಯಾರ್ಥಿಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದೇವೆ. ಈ ನಿಟ್ಟಿನಲ್ಲಿ ದೊಡ್ಡ ಮನಸ್ಸಿನ ಸಣ್ಣ ಮಕ್ಕಳಿಗೆ ಗುಣಾತ್ಮಕ ಬೆಂಬಲ ನೀಡಬೇಕು~ ಎಂದು ಅವರು ಸಲಹೆ ನೀಡಿದರು.
`ಯಾವ ವಿದ್ಯಾರ್ಥಿಯೂ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಬೇಕು ಎಂದು ಬಯಸುವುದಿಲ್ಲ. ಮಕ್ಕಳು ಕಲಿಕೆಗೆ ಸಿದ್ಧರಿದ್ದಾರೆ. ಪರೀಕ್ಷೆಯ ಬಗ್ಗೆ ಅನಗತ್ಯ ಭೀತಿ ಮೂಡಿಸಲಾಗುತ್ತಿದೆ. ಶಿಕ್ಷಕರು ಆ ಭೀತಿಯನ್ನು ಹೋಗಲಾಡಿಸಬೇಕು. ಪರೀಕ್ಷೆಯು ಹಬ್ಬದಂತಾಗಬೇಕು~ ಎಂದು ಅಭಿಪ್ರಾಯಪಟ್ಟರು.
`ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವವರು ಶೇ 70 ಮಂದಿ ಮಾತ್ರ. ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಶೇ 30 ಮಂದಿ ಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ. ಬಡಗಿ, ಮೆಕ್ಯಾನಿಕ್, ಚಾಲಕ, ಕೃಷಿಕ ಮತ್ತಿತರ ವೃತ್ತಿಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಹೆಚ್ಚಿನ ಸಮಯದಲ್ಲಿ ಶಿಕ್ಷಿತರು ಇವರನ್ನು ಜಾಸ್ತಿ ಅವಲಂಬಿಸುತ್ತಾರೆ. ಪರೀಕ್ಷಾ ಯಶಸ್ಸೇ ಜೀವನದ ಯಶಸ್ಸಲ್ಲ ಎಂಬುದನ್ನು ಮೊದಲು ಅರಿತುಕೊಳ್ಳಬೇಕು~ ಎಂದರು.
ತಮಿಳುನಾಡಿನ ಪ್ರಾಥಮಿಕ ಶಿಕ್ಷಣ ಇಲಾಖೆಯ ನಿವೃತ್ತ ಕಾರ್ಯದರ್ಶಿ ವಿಜಯ ಕುಮಾರ್ ಮಾತನಾಡಿ, `ದೇಶದಲ್ಲಿ ಶಾಲೆಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಶೇ 97ರಷ್ಟು ಮಕ್ಕಳು ಶಾಲೆಗೆ ಬರುತ್ತಿದ್ದಾರೆ. ಅಗತ್ಯ ಶಿಕ್ಷಕರು ಇದ್ದಾರೆ. ಆದರೆ ಉತ್ತೀರ್ಣ ಪ್ರಮಾಣ ಶೇ 60ಕ್ಕಿಂತಲೂ ಕಡಿಮೆ. ಗುಣಾತ್ಮಕ ಶಿಕ್ಷಣದ ಕೊರತೆಯಿಂದ ಈ ಸಮಸ್ಯೆ ಉಂಟಾಗಿದೆ. ಪ್ರಾಯೋಗಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕ...
`ಯೋಜನೆ 1947~ ಸ್ವಯಂಸೇವಾ ಸಂಘಟನೆಯ ಯೋಜನಾ ನಿರ್ದೇಶಕ ನರೇಶ್ ಬಾಲ ಮಾತನಾಡಿ, `ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟದ ಸುಧಾರಣೆಯಾಗಬೇಕು. ಈಗಿನ ಮೌಲ್ಯಮಾಪನಾ ವ್ಯವಸ್ಥೆಯಲ್ಲಿ ಬುದ್ಧಿವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಶೇ 30ರಷ್ಟು ಸರ್ಕಾರಿ ಪ್ರೌಢಶಾಲೆಗಳಲ್ಲಿ ವಿಜ್ಞಾನ ಹಾಗೂ ಗಣಿತ ಶಿಕ್ಷಕರು ಇಲ್ಲ. ಈ ಎಲ್ಲ ಸಮಸ್ಯೆಗಳ ನಿವಾರಣೆ ಆಗಬೇಕು~ ಎಂದರು.
ಭಾರತೀಯ ಏಕಲ್ ಶಿಕ್ಷಣ ಪ್ರತಿಷ್ಠಾನದ ಯೋಜನಾ ಸಂಯೋಜಕ ಡಾ.ಸಿ. ಸತೀಶ್ ಕುಮಾರ್ ವಿಷಯ ಮಂಡಿಸಿ, `ವಿಶ್ವದ ಕೆಲವು ರಾಷ್ಟ್ರಗಳಲ್ಲಿ ಇಂಗ್ಲಿಷ್ ಭಾಷಾ ಬಳಕೆಯೇ ಇಲ್ಲ. ಆದರೂ ಆ ರಾಷ್ಟ್ರಗಳು ಅಭಿವೃದ್ಧಿ ಪಥದಲ್ಲಿ ಸಾಗಿವೆ. ನಮ್ಮಲ್ಲಿ ಇಂಗ್ಲಿಷ್ ಭಾಷಾ ಮೋಹ ಅತಿಯಾಗಿದೆ. ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ಉತ್ತಮ. ಒಂದು ವಿಷಯವಾಗಿ ಇಂಗ್ಲಿಷ್ ಕಲಿಸಿದರೆ ಸಾಕು. ಜತೆಗೆ ಮಕ್ಕಳಿಗೆ ನೈತಿಕ ಶಿಕ್ಷಣ ನೀಡ...
ರಾಜ್ಯ ಮಕ್ಕಳ ಹಕ್ಕು ಸಂರಕ್ಷಣಾ ಆಯೋಗದ ಅಧ್ಯಕ್ಷೆ ನೀನಾ ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, `ಎಲ್ಲ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರಕಬೇಕು. ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಜಾರಿಯಾಗಿದ್ದು, ತಕ್ಕಮಟ್ಟಿಗೆ ಸಮಸ್ಯೆ ಪರಿಹಾರ ಆಗಬಹುದು~ ಎಂದರು. ಐಐಎಂನ ಪ್ರಾಧ್ಯಾಪಕಿ ಪ್ರೊ. ನಯನಾ ತಾರಾ, ಪ್ರೊ. ಡಿ.ವಿ.ಆರ್. ಶೇಷಾದ್ರಿ ಉಪಸ್ಥಿತರಿದ್ದರು.
ಐಪಿಎಲ್‍ನಲ್ಲಿ ನಾಯಕನಾಗಿ ಧೋನಿ ದಾಖಲೆ ಮುರಿದ ವಿರಾಟ್ – Kannada News Live | ಕನ್ನಡ ನ್ಯೂಸ್ ಲೈವ್ | kannadanews.live
ಐಪಿಎಲ್ 2020ಯಲ್ಲಿ ಆರ್‍ಸಿಬಿ ನಿನ್ನೆ ಪಂಜಾಬ್ ತಂಡದ ವಿರುದ್ಧ ಸೋಲು ಕಾಣುವ ಮೂಲಕ ವಿರಾಟ್ ಕೊಹ್ಲಿ ತಮ್ಮ ನಾಯಕತ್ವದ ಬಗ್ಗೆ ಸಖತ್ ಟೀಕೆಗಳನ್ನು ಕೇಳುತ್ತಿದ್ದಾರೆ. ಕೆಲವ್ರು ಕೊಹ್ಲಿ ನಾಯಕತ್ವಕ್ಕೆ ಸೂಕ್ತವಾದ ವ್ಯಕ್ತಿಯಲ್ಲ ಅಂದ್ರೆ, ಇನ್ನು ಕೆಲವ್ರು ವಿರಾಟ್ ನಾಯಕತ್ವದ ಲೆಕ್ಕಾಚಾರದಲ್ಲಿ ಎಡವುತ್ತಿದ್ದಾರೆ ಅಂತ ಹೇಳ್ತಿದ್ದಾರೆ. ಅದೇ ರೀತಿ ವಿರಾಟ್ ಕೊಹ್ಲಿ ಕೂಡ ನಿನ್ನೆಯ ಮ್ಯಾಚ್‍ನಲ್ಲಿ ಹಾಕ...
ಇನ್ನು ವಿರಾಟ್ ಆರ್‍ಸಿಬಿಯ ನಾಯಕನಾಗಿ ಆಡುವ ಬದಲು ಒಬ್ಬ ಉತ್ತಮ ತಂಡದ ಆಟಗಾರನಾಗಿ ಆಡಿದ್ರೆ ಉತ್ತಮ ಅನ್ನೋ ಮಾತುಗಳು ಸಹ ಕೇಳಿ ಬರ್ತಾ ಇದೆ. ಆದ್ರೆ ನಿನ್ನೆ ಪಂದ್ಯದಲ್ಲಿ ಸೋಲಿನ ನಡುವೆಯೂ ವಿರಾಟ್ ಕೊಹ್ಲಿ ಹೊಸದೊಂದು ದಾಖಲೆಯನ್ನು ಮಾಡಿದ್ದಾರೆ.
ಆ ಮೂಲಕ ನಾಯಕನಾಗಿ ಧೋನಿಯ ದಾಖಲೆಯನ್ನು ಸರಿಗಟ್ಟಿದ್ದಾರೆ. ಹೌದು ವಿರಾಟ್ ಕೊಹ್ಲಿ ಐಪಿಎಲ್‍ನಲ್ಲಿ ಆರ್‍ಸಿಬಿ ತಂಡದ ನಾಯಕನಾಗಿ 2013ರಿಂದ ತಂಡವನ್ನು ಮುನ್ನೆಡೆಸುತ್ತಿದ್ದು, ಇದೀಗ ಹೊಸದೊಂದು ದಾಖಲೆಯನ್ನು ಬರೆದಿದ್ದಾರೆ. ನಿನ್ನೆ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 48ರನ್ ಬಾರಿಸುವ ಮೂಲಕ ಐಪಿಎಲ್‍ನಲ್ಲಿ ತಂಡದ ಪರ ನಾಯಕನಾಗಿ ಅತಿಹೆಚ್ಚು ರನ್‍ಗಳಿಸಿದ ಹೆಗ್ಗಳಿಕೆ ವಿರಾಟ್ ಕೊಹ್ಲ...
ಹೌದು ನಾಯಕನಾಗಿ ಅತಿ ಹೆಚ್ಚು ರನ್ ಗಳಿಸಿರೋ ಮೊದಲ ಆಟಗಾರನ ಹೆಸರು ಧೋನಿಯ ಬಳಿ ಇತ್ತು, ಆದ್ರೆ ನಿನ್ನೆ ಪಂದ್ಯದಲ್ಲಿ ವಿರಾಟ್ 48ರನ್ ಸಿಡಿಸುವ ಮೂಲಕ 4314 ರನ್‍ನೊಂದಿಗೆ ಮೊದಲ ಸ್ಥಾನವನ್ನು ಅಲಂಕರಿಸಿದ್ದಾರೆ. ಇನ್ನು ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ 4275ರನ್ ಗಳಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದು, ಕೋಲ್ಕತ್ತಾ ನೈಟ್‍ರೈಡರ್ಸ್ ತಂಡ ಮಾಜಿ ನಾಯಕ ಗೌತಮ್ ಗಂಭೀರ್ 3518ರನ್‍ಗಳಿಸುವ ...
ಆ ಮೂಲಕ ನಾಯಕನಾಗಿ ವಿರಾಟ್ ಕೊಹ್ಲಿ ಆರ್‍ಸಿಬಿ ಪರ ಅತಿಹೆಚ್ಚು ರನ್ ಹೊಡೆದ ಆಟಗಾರನಾಗಿದ್ದು, ನಿನ್ನೆಯ ಪಂದ್ಯದ ಜೊತೆಯಲ್ಲಿ 200 ಲೀಗ್ ಪಂದ್ಯಗಳನ್ನು ಆಡಿದ ಆರ್‍ಸಿಬಿ ಆಟಗಾರನಾಗಿಯೂ ವಿರಾಟ್ ಹೊರಹೊಮ್ಮಿದ್ದಾರೆ.
ಒಟ್ಟಿನಲ್ಲಿ ವಿರಾಟ್ ತಮ್ಮ ನಾಯಕತ್ವದಲ್ಲಿ ಕೆಲವೊಮ್ಮೆ ಎಡವುತ್ತಿದ್ದರು, ತಂಡಕ್ಕೆ ರನ್‍ಗಳಿಸಿಕೊಡುವುದರಲ್ಲಿ ಮಾತ್ರ ತಮ್ಮ ಲೆಕ್ಕಾಚಾರವನ್ನು ಮಿಸ್ ಮಾಡಿಲ್ಲ. ನಿಮ್ಮ ಪ್ರಕಾರ ಆರ್‍ಸಿಬಿ ತಂಡದ ನಾಯಕನಾಗಿ ವಿರಾಟ್ ಸೂಕ್ತವಾಗಿ ಕಾರ್ಯನಿರ್ವಹಿಸುತ್ತಿದ್ದಾರ.ನಾಯಕತ್ವ ಆರ್‍ಸಿಬಿ ಬೇರೆಯವರಿಗೆ ವಹಿಸಬೇಕಾ ನೀವ್ ಏನ್ ಹೇಳ್ತೀರಾ ಕಾಮೆಂಟ್ ಮಾಡಿತಿಳಿಸಿ.
ಡಿ.ಸಿ.ಗೌರಿಶಂಕರ್‌ ವಿರುದ್ಧ ಸ್ತ್ರೀಯರ ಆಕ್ರೋಶ | Udayavani – ಉದಯವಾಣಿ
Friday, 05 Jun 2020 | UPDATED: 03:15 AM IST
ಡಿ.ಸಿ.ಗೌರಿಶಂಕರ್‌ ವಿರುದ್ಧ ಸ್ತ್ರೀಯರ ಆಕ್ರೋಶ
ಬಿಜೆಪಿ ಮಹಿಳಾ ಕಾರ್ಯಕರ್ತೆಯರ ಬಗ್ಗೆ ಜೆಡಿಎಸ್‌ ಕಾರ್ಯಕರ್ತರಿಂದ ಫೇಸ್‌ಬುಕ್‌ನಲ್ಲಿ ಅವಹೇಳನ
Team Udayavani, May 18, 2019, 4:54 PM IST
ತುಮಕೂರು ತಾಲೂಕಿನ ಗೂಳೂರಿನಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತ ರೆಯರು ಶುಕ್ರವಾರ ಶಾಸಕರ ಡಿ.ಸಿ.ಗೌರಿಶಂಕರ್‌ ಹಾಗೂ ಅವರ ಸಾಮಾಜಿಕ ಜಾಲತಾಣದ ಸಿಬ್ಬಂದಿ ವಿರುದ್ಧ ಪ್ರತಿಭಟನೆ ನಡೆಸಿದರು.
ತುಮಕೂರು: ಗ್ರಾಮಾಂತರ ಶಾಸಕರ ಬೆಂಬಲಿಗ ಹಾಗೂ ಜೆಡಿಎಸ್‌ ಕಾರ್ಯಕರ್ತ ಬಿಜೆಪಿ ಮಹಿಳೆಯರ ಬಗ್ಗೆ ಅವಹೇಳನಕಾರಿ ಯಾಗಿ ಫೇಸ್‌ಬುಕ್‌ನಲ್ಲಿ ಕಮೆಂಟ್ ಮಾಡಿ ರುವುದನ್ನು ವಿರೋಧಿಸಿ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರೆಯರು ಶುಕ್ರವಾರ ಶಾಸಕರ ವಿರುದ್ಧ ಹಾಗೂ ಡಿ.ಸಿ.ಗೌರಿಶಂಕರ್‌ ಅವರ ಸಾಮಾಜಿಕ ಜಾಲತಾಣದ ಸಿಬ್ಬಂದಿ ವಿರುದ್ಧ ಪ್ರತಿಭಟನೆ ನಡೆಸಿದರು.
ತಾಲೂಕಿನ ಗೂಳೂರು ಹೋಬಳಿ ಡಿ. ಕೊರಟಗೆರೆ ಗ್ರಾಮದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ರಸ್ತೆ ತಡೆ ಚಳವಳಿ ಮಾಡಿ, ಪೊರಕೆ ಹಿಡಿದು ಪ್ರತಿಭಟನೆಯ ನಡೆಸಿ ಗ್ರಾಮಾಂತರ ಶಾಸಕ ಹಾಗೂ ಅವರ ಬೆಂಬಲಿಗನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಮಹಿಳಾ ಆಯೋಗಕ್ಕೆ ದೂರು: ಪ್ರತಿಭಟನೆ ನೇತೃತ್ವ ವಹಿಸಿದ್ದ ಜಿಪಂ ಸದಸ್ಯೆ ಅನಿತಾ ಸಿದ್ದೇಗೌಡ ಮಾತನಾಡಿ, ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರೆಯನ್ನು ಗೋವಾಗೆ ಹನಿಮೂನಿಗೆ ಕರೆದುಕೊಂಡು ಹೋಗುವು ದಾಗಿ ಫೇಸ್‌ಬುಕ್‌ನಲ್ಲಿ ಕಮೆಂಟ್ ಮಾಡಿರು ವುದನ್ನು ಖಂಡಿಸಿದರು. ಶಾಸಕ ಡಿ.ಸಿ. ಗೌರಶಂಕರ್‌ ಮತ್ತು ಗೌರಿಶಂಕರ್‌ ಸೋಶಿ ಯಲ್ ಮೀಡಿ ಯಾದ ಮುಖ್ಯಸ್ಥನ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡ ಲಾಗುವುದು ಎ...
ಮೋಜಿಗಾಗಿ ಹಾಲಿ ಶಾಸಕರು ವಿದೇಶಿ ಪ್ರವಾಸ: ತುಮಕೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಬರಗಾಲ ಇರುವ ಹಿನ್ನೆಲೆಯಲ್ಲಿ ಹಾಲಿ ಶಾಸಕರು ಮೋಜು ಮಸ್ತಿಗಾಗಿ ವಿದೇಶಿ ಪ್ರವಾಸಕ್ಕಾಗಿ ಸಿಂಗಾಪುರಕ್ಕೆ ಹೋಗಿರುವ ಬಗ್ಗೆ ಸುರೇಶಗೌಡರ ಪ್ಯಾನ್‌ ಪೇಜಿನಲ್ಲಿ ನಮ್ಮ ಕಾರ್ಯಕರ್ತರು ಪೋಸ್ಟ್‌ ಮಾಡಿರುವುದು ತಪ್ಪೇನು? ಹಾಲಿ ಶಾಸಕರಿಗೆ ಬರಗಾಲ ಕಾಣದೆ ಮೋಜು ಮಸ್ತಿಗಾ...
ಕಿಡಿಗೇಡಿಗಳ‌ನ್ನು ಗಡಿಪಾರು ಮಾಡಲು ಆಗ್ರಹ: ಗ್ರಾಮಾಂತರ ಕ್ಷೇತ್ರದ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಕಲಾವತಿ ಮಾತನಾಡಿ, ಹಿಂದೂ ಹೆಣ್ಣು ಮಕ್ಕಳ ಬಗ್ಗೆ ಅವಹೇಳನವಾಗಿ ಫೇಸ್‌ಬುಕ್‌ನಲ್ಲಿ ಕಮೆಂಟ್ ಮಾಡಿರುವ ಕಿಡಿಗೇಡಿಗಳ‌ನ್ನು ಬಂಧಿಸಿ ಗಡಿಪಾರು ಮಾಡುವಂತೆ ಆಗ್ರಹಿಸಿದರು.
ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ: ಜಿಪಂ ಸದಸ್ಯ ವೈ,ಎಚ್.ಹುಚ್ಚಯ್ಯ ಮಾತನಾಡಿ, ಹಿಂದೂ ಹೆಣ್ಣು ಮಕ್ಕಳಿಗೆ ಅಪಮಾನ ಮಾಡಿರುವುದು ಅಲ್ಲದೆ, ಅವಮಾನ ಮಾಡಿದ್ದಾರೆ. ಶಾಸಕ ಡಿ.ಸಿ. ಗೌರಿಶಂಕರ ಮತ್ತು ಅವರ ಬೆಂಬಲಿಗರಿಂದ ಗ್ರಾಮಾಂತರ ಕ್ಷೇತ್ರದ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಾಗಿದೆ. ನಮಗೆ ಸೂಕ್ತ ರಕ್ಷಣೆ ನೀಡಬೇಕು. ನಮ್ಮ ಕ್ಷೇತ್ರದ ಹೆಣ್ಣು ಮಕ್ಕಳಿಗೆ ಏನಾದರೂ ಆದರೆ, ಶಾಸಕ ಡಿ.ಸಿ.ಗೌರಿಶಂಕರ ಮತ್...
ನಾಗವಲ್ಲಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಬಿಜೆಪಿ ಮುಖಂಡ ಸಾಸಲು ಮೂರ್ತಿ ಮಾತನಾಡಿದರು. ತಾಲೂಕು ಪ್ರಧಾನ ಕಾರ್ಯದರ್ಶಿ ಸಿದ್ದೇಗೌಡ, ಜಿಪಂ ಸದಸ್ಯ ಶಿವಕುಮಾರ್‌, ತಾಪಂ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಹೊನ್ನುಡಿಕೆ ಮಾಜಿ ಅಧ್ಯಕ್ಷ ಶಿವರಾಜು, ಮಾಜಿ ಉಪಾಧ್ಯಕ್ಷ ಕಾಂತರಾಜು, ಹೊಳಕಲ್ಲು ಕಿರಣ ಅಂಜಿನಪ್ಪ, ಗಿರೀಶ ನರುಗನಹಳ್ಳಿ, ಕುಮಾರ್‌, ಗಂಗಮ್ಮ, ಶಿವಮ್ಮ, ಅಕ್ಕಮ್ಮ, ಲಕ್ಮಕ್ಕ, ದ್ರಾಕ್ಷಾ...
ಕಪ್ಪುಹಣ ಒಪ್ಪಿಸಿದ ಉದ್ಯಮಿ | Prajavani
ಕಪ್ಪುಹಣ ಒಪ್ಪಿಸಿದ ಉದ್ಯಮಿ
ನವದೆಹಲಿ (ಪಿಟಿಐ): ಕಪ್ಪುಹಣದ ವಿಚಾರ ದೇಶದಾದ್ಯಂತ ಭಾರಿ ಚರ್ಚೆಗೆ ಕಾರಣವಾಗುತ್ತಿರುವ ಈ ಹೊತ್ತಿನಲ್ಲಿಯೇ, ದೆಹಲಿ ಮೂಲದ ಉದ್ಯಮಿ ಸತೀಶ್ ಸ್ವಾನೆ ಎಂಬುವವರು ಸ್ವಿಸ್ ಹಾಗೂ ಅಮೆರಿಕದ ಬ್ಯಾಂಕ್‌ಗಳಲ್ಲಿ ತಾವು ಇಟ್ಟಿರುವ ಕಪ್ಪುಹಣದ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ, 73 ಕೋಟಿ ರೂಪಾಯಿ ಬೇನಾಮಿ ಹಣವನ್ನು ಇಲಾಖೆಯ ಅಪರಾಧ ತನಿಖಾ ಘಟಕಕ್ಕೆ ಶುಕ್ರವಾರ ಒಪ್ಪಿಸಿದ್ದಾರೆ.
ಇಲಾಖೆಯಲ್ಲಿ ನೂತನವಾಗಿ ರಚಿತವಾಗಿರುವ ಅಪರಾಧ ತನಿಖಾ ನಿರ್ದೇಶನಾಲಯದ (ಡಿಸಿಐ) ಅಧಿಕಾರಿಗಳ ತಂಡ ಸತೀಶ್ ಅವರ `ಸೈನಿಕ್ ಫಾರ್ಮ್~ನ ವೈಭವೋಪೇತ ಬಂಗಲೆ ಹಾಗೂ ದಕ್ಷಿಣ ಬಡಾವಣೆ-1ರ ಕಟ್ಟಡಗಳ ಮೇಲೆ ದಾಳಿ ನಡೆಸಿದ ಫಲವಾಗಿ ಈ ಮಾಹಿತಿಯು ಬಹಿರಂಗಗೊಂಡಿದೆ.
ಬಂಗಲೆಯೊಳಗೆ ನಿಲ್ಲಿಸಿದ್ದ `ಎಸ್‌ಯುವಿ~ ವಾಹನದೊಳಗೆ ಅತ್ಯಂತ ಚಾಣಾಕ್ಷತನದಿಂದ ಇಟ್ಟಿದ್ದ ವಿದೇಶಿ ವಬ್ಯಾಂಕ್ ಖಾತೆಯ ವಿವರಗಳನ್ನು ನೋಡಿ ಅಧಿಕಾರಿಗಳು ದಂದಾದರು. ದೇಶ ಹಾಗೂ ವಿದೇಶಗಳಿಗೆ ಇಂಧನ ವಲಯದ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿರುವ ಸ್ವಾನೆ, ಪ್ರಸ್ತುತ ಆದಾಯ ತೆರಿಗೆ ಇಲಾಖೆಯ ವಶದಲ್ಲಿಇದ್ದಾರೆ.
ಜೂರಿಚ್ ಹಾಗೂ ಸಿಂಗಪುರದಲ್ಲಿ ತಲಾ ಒಂದು, ಅಮೆರಿಕದಲ್ಲಿ ಮೂರು ಸೇರಿದಂತೆ ಸ್ವಾನೆ ಐದು ವಿದೇಶಿ ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ.
ಸ್ವಾನೆ ಅವರ ಬಗ್ಗೆ ನಿಖರ ಮಾಹಿತಿ ಪಡೆದ ಬಳಿಕ ಅವರ ಮನೆಗಳಲ್ಲಿ ಶೋಧವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ರೂ 1.5 ಕೋಟಿ ಮೌಲ್ಯದ ಆಭರಣಗಳು ಹಾಗೂ ರೂ 18 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ ಎಂದು ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಲ್ಲದೆ ದೆಹಲಿಯಲ್ಲಿರುವ ಐಸಿಐಸಿಐ, ಎಚ್‌ಡಿಎಫ್‌ಸಿ, ಎಸ್‌ಬಿಐ ಸೇರಿದಂತೆ ಅವರ ಒಟ್ಟು 8 ಬ್ಯಾಂಕ್ ಖಾತೆಗಳಿಗೆ ಮೊಹರು ಹಾಕಲಾಗಿದ್ದು, ಸದ್ಯದಲ್ಲೇ ಅವುಗಳನ್ನು ತೆರೆಯಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ವಿದೇಶಿ ಬ್ಯಾಂಕ್ ಖಾತೆಗೆ ಸಂಬಂಧಿಸಿದ ವರ್ಗೀಕೃತ ಮಾಹಿತಿ ಪಟ್ಟಿಗೂ ಸ್ವಾನೆ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಮೂಲಗಳು ತಿಳಿಸಿವೆ.
ಕೋಲಾರದ ಅಂತರಗಂಗೆ ಬೆಟ್ಟದ ವಿಸ್ಮಯ | Kannada News | Karnataka Temple History \n
Home ಉಪಯುಕ್ತ ಪ್ರವಾಸ ಪುರಾಣ ಪ್ರಸಿದ್ಧ ಕೋಲಾರದ ಅಂತರಗಂಗೆ ಬೆಟ್ಟದ ವಿಸ್ಮಯ ತಿಳಿದುಕೊಂಡ್ರೆ, ಈಗ್ಲೇ ಪ್ರವಾಸಕ್ಕೆ ಹೋಗೊಕ್ಕೆ ಪ್ಲ್ಯಾನ್ ಮಾಡ್ತೀರಾ..
ಪುರಾಣ ಪ್ರಸಿದ್ಧ ಕೋಲಾರದ ಅಂತರಗಂಗೆ ಬೆಟ್ಟದ ವಿಸ್ಮಯ ತಿಳಿದುಕೊಂಡ್ರೆ, ಈಗ್ಲೇ ಪ್ರವಾಸಕ್ಕೆ ಹೋಗೊಕ್ಕೆ ಪ್ಲ್ಯಾನ್ ಮಾಡ್ತೀರಾ..
ಅತ್ಯಂತ ಪುರಾತನ ನಾಗರಿಕತೆ ಹೊಂದಿರುವ ಭಾರತದಲ್ಲಿ ಅನೇಕ ಅಚ್ಚರಿಗಳ ತಾಣಗಳಿವೆ. ಕೆಲವು ಪ್ರದೇಶಗಳಿಗೆ ಅದರ ವೈಶಿಷ್ಟ್ಯ ತೆಯಿಂದಾಗಿ ಆ ಪ್ರದೇಶಗಳಿಗೆ ನಾಮಕರಣ ಮಾಡಿರುತ್ತಾರೆ. ಉದಾಹರಣೆಗೆ ಸರ್ಪವೊಂದು ತನ್ನ 5 ಹೆಡೆಗಳನ್ನು ಅರಳಿಸಿದ ವಿನ್ಯಾಸದಂತೆ ತೋರುವ ಕುಮಾರ ಪರ್ವತವಿರುವ ಪ್ರದೇಶ ಇಂದು ಕುಕ್ಕೆ ಸುಬ್ರಹ್ಮಣ್ಯವಾಗಿದೆ. ಅಂತೆಯೇ ವೈಶಿಷ್ಟ್ಯ ತೆಯಿಂದ ಕೂಡಿರುವಂತೆ ಮತ್ತೊಂದು ಅಚ್ಚರಿಯ ಪ್ರದೇಶ...
ಈ ಬೆಟ್ಟದ ಸುತ್ತಲೂ ಹನಿ ನೀರಿಗೆ ಪರದಾಟವಿದೆ. ಅಲ್ಲಿ 1000 ಅಡಿಯಷ್ಟು ನೆಲವನ್ನು ಕೊರೆದರೆ ಅಲ್ಪ ನೀರು ಸಿಗುವುದಾದರೂ ಅದು ಫ್ಲೋರೈಡ್ ಮಿಶ್ರಿತವಾಗಿರುತ್ತದೆ. ಆದರೆ ಬೆಟ್ಟದ ತುದಿಯಲ್ಲೊಂದು ಒರತೆ ಇದ್ದು, ಬರುವ ನೀರು ಅತ್ಯಂತ ಪರಿಶುದ್ಧ ಮತ್ತು ಒಮ್ಮೊಯೂ ನಿಂತಿಲ್ಲ. ಕೋಲಾರ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರದಲ್ಲಿ ಒಂದಾದ ಅಂತರಗಂಗೆ ಬೆಟ್ಟ ಕೋಲಾರ ನಗರದಿಂದ ಕೇವಲ ನಾಲ್ಕು ಕಿಲೋಮೀಟರರ್ ದೂರ...
ಕರ್ನಾಟಕದಲ್ಲಿ ಅಷ್ಟೇ ಅಲ್ಲ ಕೇರಳ, ತಮಿಳುನಾಡು, ಆಂಧ್ರಪ್ರದೇಶದಿಂದಲೂ ಪ್ರವಾಸಿಗರು ಕೂಡ ಇಲ್ಲಿಗೆ ಬರುತ್ತಾರೆ. ಅಂತರ್ಗಾಮಿ ಜಲ ಮೂಲವೊಂದು ಇಲ್ಲಿ ಇರುವುದರಿಂದ ಈ ಬೆಟ್ಟಕ್ಕೆ ಅಂತರಗಂಗೆ ಬೆಟ್ಟ ಎನ್ನುವ ಹೆಸರು ಬಂದಿದೆ. ಬೆಟ್ಟದ ಮೇಲೆ ಶಿವನ ದೇವಸ್ಥಾನ, ಅದರ ಪಕ್ಕದಲ್ಲೇ ಕಲ್ಯಾಣಿ, ಗಣೇಶನ ವಿಗ್ರಹ ಹಾಗೂ ಬಸವಣ್ಣನ ಮೂರ್ತಿಯ ಬಾಯಿಯಿಂದ ನಿರಂತರವಾಗಿ ಗಂಗೆ ಹರಿಯುವುದು ಇಲ್ಲಿನ ವಿಶೇಷ.
ಈ ಬೆಟ್ಟದ ಸುತ್ತ ವಾಸಿಸುತ್ತಿರುವ ನಿವಾಸಿಗಳ ಪ್ರಕಾರ, ಅಂತರಗಂಗೆ ವರ್ಷದ ಎಲ್ಲ ದಿನಗಳಲ್ಲಿಯೂ ಒಂದೇ ರೀತಿ ಹರಿಯುತ್ತದೆ. ದಕ್ಷಿಣ ಕಾಶಿ ಎಂದು ಕರೆಯಲ್ಪಡುವ ಅಂತರಗಂಗೆ ಬೆಟ್ಟಕ್ಕೆ ತನ್ನದೇ ಆದ ಪುರಾತನ ಐತಿಹ್ಯ ಇದೆ. ಇಲ್ಲಿ ಭಗೀರಥನು ದೀರ್ಘ ಕಾಲ ತಪಸ್ಸು ಮಾಡಿ ಗಂಗೆಯನ್ನು ಒಲಿಸಿಕೊಂಡು, ಬಳಿಕ ಅದನ್ನು ಶಿವನ ಜಟೆಯ ಮೂಲಕ ಭೂಮಿಗೆ ಇಳಿಸಿಕೊಂಡ ಎಂಬ ಪ್ರತೀತಿ ಇದೆ. ಅಷ್ಟೇ ಅಲ್ಲ ಈ ಬೆಟ್ಟವು ಪರಶು...
ಹಿಂದೂ ಪುರಾಣದ ಪ್ರಕಾರ ಕರ್ತವೀರ್ಯಾರ್ಜುನನನ್ನು ಪರಶುರಾಮನು ಕೊಂದ ನಂತರ ಜಮದಗ್ನಿಯ ಸಾವು ಹಾಗು ರೇಣುಕಾ ಸ್ವಯಂ ಬಲಿ ಈ ಬೆಟ್ಟದ ಮೇಲೆ ನಡೆದಿದೆ ಎನ್ನಲಾಗಿದೆ. ಅದರ ಜೊತೆಗೆ ಪರಶುರಾಮನು ಕ್ಷತ್ರಿಯ ವರ್ಗದವರನ್ನು ಕೊಲ್ಲಲು ಈ ಬೆಟ್ಟದ ಮೇಲೆ ಶಪಥ ಮಾಡಲಾಗಿದೆ. ಮತ್ತು ಕಾಶಿ ವಿಶ್ವೇಶ್ವರ ದೇವಾಲಯದ ನೀರು ಬಸವನ ಬಾಯಿಂದ ಬರುವ ಅಂತರಗಂಗೆ ಎಂಬ ಜಲವೆಂದು ಭಕ್ತರ ಬಲವಾದ ನಂಬಿಕೆ ಇದೆ.
ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ವಿಜೃಂಭಣೆಯಿಂದ ಇಲ್ಲಿ ಜಾತ್ರೆ ನಡೆಯುತ್ತದೆ. ಕಲ್ಲು ಬಂಡೆಗಳಿಂದ ಕೂಡಿರುವ ಈ ಬೆಟ್ಟವನ್ನು ಏರುವುದು ಸ್ವಲ್ಪ ಕಠಿಣ ಸವಾಲಾದರೂ ಏರಿದ ಮೇಲೆ ಸಿಗುವ ಅನುಭವ ಮಾತ್ರ ಅವಿಸ್ಮರಣೀಯ.
Also Read: ಒತ್ತಡಗಳ ಮಧ್ಯೆ ನೆಮ್ಮದಿ ಅರಸುತ್ತಿದ್ದರೆ ಈ ವೀಕೆಂಡ್ ಬೆಂಗಳೂರಿನ ಹೊರವಲಯದಲ್ಲಿರುವ ನವಗ್ರಹಗಳ ಬನ ಶ್ರೀಧರ ಶ್ರೀಗುಡ್ಡಕ್ಕೆ ತಪ್ಪದೇ ಭೇಟಿ ಕೊಡಿ..
Previous articleಬೆಂಗಳೂರಿನಲ್ಲಿ ನಡೆಯುತ್ತಿರುವ ಅತ್ಯಾಕರ್ಷಕ ಕೇಕ್ ಪ್ರದರ್ಶನ!!! 3ಡಿ ಕೇಕ್'ನಲ್ಲಿ ಮೂಡಿಬಂದ ಅಣ್ಣಾವ್ರ ಕೇಕ್ ಪ್ರಮುಖ ಆಕರ್ಷಣೆ !!!
Next articleಏರ್ಟೆಲ್ ಸಂಸ್ಥೆಗೆ ಆಧಾರ್ ಇಲಾಖೆ ನಿರ್ಬಂಧ ಹೇರಿದ್ದು ಯಾಕೆ? ಗ್ರಾಹಕರಿಗೆ ಅರಿವಿಲ್ಲದೇ ಅವರ ಹಣವನ್ನು ವರ್ಗಾವಣೆ ಮಾಡಿತ್ತಾ ಏರ್ಟೆಲ್??
ಜಮ್ಮು ಮತ್ತು ಕಾಶ್ಮೀರ-ಒಣ ಭಾವಾವೇಶ ಯಾಕೆ? - Varthabharati
ಜಮ್ಮು ಮತ್ತು ಕಾಶ್ಮೀರ-ಒಣ ಭಾವಾವೇಶ ಯಾಕೆ?
ವಾರ್ತಾ ಭಾರತಿ : 27 Aug, 2019
ಕೇಂದ್ರೀಕರಣ ಹಾಗೂ ಬ್ರಾಹ್ಮಣಶಾಹಿ ಫ್ಯಾಶಿಸ್ಟೀಕರಣದ ಸಂದರ್ಭ ಇದಾಗಿದೆ. ರಾಜ್ಯಗಳು ಅದರ ಸರಕಾರಗಳು, ಅಲ್ಲಿನ ನಿಯಮಗಳು, ಒಕ್ಕೂಟ ತತ್ವಗಳು, ಹೀಗೆ ಅವರ ನಡೆಗಳಿಗೆ ತಡೆಯಾಗಬಹುದಾದ ಎಲ್ಲವನ್ನೂ ಬದಲಾಯಿಸಿ ಅವರ ಅನುಕೂಲಕ್ಕೆ ತಕ್ಕಂತೆ ರೂಪಿಸಿಕೊಳ್ಳಲು ಹೊರಟಿದ್ದಾರೆ. ಹಾಗಾಗಿ ಇರುವ ಒಂದು ಮಟ್ಟದ ಸಂವಿಧಾನಾತ್ಮಕ ಅಡೆತಡೆಗಳನ್ನೂ ನಿವಾರಿಸಿಕೊಳ್ಳುವ ಧಾವಂತದಲ್ಲಿ ಭಾರೀ ಕಾರ್ಪೊರೇಟ್ ಹಾಗೂ ಆಸ್ತಿವಂತ...
ಭಾರತದ ಆಡಳಿತದಡಿ ಇರುವ ಜಮ್ಮು ಮತ್ತು ಕಾಶ್ಮೀರ ಪ್ರದೇಶ ಸಂಪೂರ್ಣ ಸ್ತಬ್ಧತೆಗೆ ಬಂದು ಈಗಾಗಲೇ ಮೂರು ವಾರವಾಗಿವೆ. ಸಾಮಾಜಿಕ ಹಾಗೂ ಮಾನವ ಹಕ್ಕುಗಳ ಕಾರ್ಯಕರ್ತರ ತಂಡವೊಂದು ಕಾಶ್ಮೀರ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ವಾಸ್ತವ ಪರಿಸ್ಥಿತಿಯ ಕುರಿತಾದ ವರದಿಯೊಂದನ್ನು ಬಿಡುಗಡೆಗೊಳಿಸಿತ್ತು.
ಆ ವರದಿಯ ಪ್ರಕಾರ ಕಾಶ್ಮೀರ ಕಣಿವೆಯ ಜನರು ಕೇಂದ್ರ ಸರಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳ ವಿರುದ್ಧ ಆಕ್ರೋಶಗೊಂಡಿದ್ದಾರೆ. ಶ್ರೀನಗರ ಸಂಪೂರ್ಣ ಸ್ತಬ್ಧಗೊಂಡಿದೆ. ಎಲ್ಲಾ ಪ್ರದೇಶಗಳಲ್ಲಿ ಕರ್ಫ್ಯೂ ಹೇರಿ ಜನರನ್ನು ಅಕ್ಷರಶಃ ಗೃಹ ಬಂಧನಗಳಲ್ಲಿ ಇರಿಸಲಾಗಿದೆ. ವ್ಯಾಪಕವಾದ ಬಂಧನಗಳು ನಡೆಯುತ್ತಿವೆ. ದೂರವಾಣಿ, ಮೊಬೈಲ್, ಅಂತರ್ಜಾಲ ವ್ಯವಸ್ಥೆಯನ್ನು ಸಂಪೂರ್ಣ ಸ್ತಬ್ಧಗೊಳಿಸಲಾಗಿದೆ. ಪತ್ರಿಕಾ ಸ್ವಾತಂ...
ರಾಜ ಹರಿಸಿಂಗ್ ನಡೆಸಿದ ಈ ದಾಳಿಗಳ ಮುಖ್ಯ ಉದ್ದೇಶ ಜಮ್ಮು ಕಾಶ್ಮೀರದಲ್ಲಿ ಬಹುಸಂಖ್ಯಾತ ಮುಸ್ಲಿಮ್ ಸಮುದಾಯವನ್ನು ಕಡಿಮೆ ಮಾಡಿ ಅಲ್ಲಿ ತನ್ನ ಸಮುದಾಯವಾದ ಡೋಗ್ರಾ ಸಮುದಾಯವನ್ನು ನೆಲೆಸುವಂತೆ ಮಾಡುವುದಾಗಿತ್ತು. ಹಾಗೆ ಮಾಡಿ ಜಮ್ಮುವಿನ ಶೇ. 60ರಷ್ಟಿದ್ದ ಮುಸ್ಲಿಂ ಜನಸಂಖ್ಯೆಯನ್ನು ದಾಳಿಗೊಳಪಡಿಸಿ, ಕಗ್ಗೊಲೆ, ನಿರ್ವಸಿತರನ್ನಾಗಿ ಮಾಡಿ ಅಲ್ಪಸಂಖ್ಯಾತ ಮಟ್ಟಕ್ಕೆ ಇಳಿಸಲಾಯಿತು. ರಾಜ ಹರಿಸಿಂಗ್‌ನ ಬ...
ಈ ಸಂದರ್ಭವನ್ನು ನೆಹರೂ ಹಾಗೂ ಸರ್ದಾರ್ ಪಟೇಲರು ಉಪಯೋಗಿಸಿ ಭಾರತದೊಂದಿಗೆ ಕಾಶ್ಮೀರವನ್ನು ವಿಲೀನಗೊಳಿಸುವ ಪ್ರಸ್ತಾವನೆ ಇಟ್ಟು ಒಪ್ಪಂದಕ್ಕೆ ಬಂದರೆ ಸಹಾಯ ಮಾಡುವುದಾಗಿ ಭರವಸೆ ನೀಡಿ, ಒತ್ತಡ ಹೇರಿ ರಾಜ ಹರಿಸಿಂಗ್‌ನೊಂದಿಗೆ ವಿಲೀನ ಒಪ್ಪಂದಕ್ಕೆ 1947ರ ಅಕ್ಟೋಬರ್ 26ರಂದು ಸಹಿ ಮಾಡಿದರು. ನಂತರ ಭಾರತ ಸೇನೆ ಪ್ರದೇಶದ ಬುಡಕಟ್ಟು ಸೇನೆ ಹಾಗೂ ಸರಕಾರಿ ಸೇನೆಯೊಂದಿಗೆ ಯುದ್ಧದಲ್ಲಿ ತೊಡಗುತ್ತದೆ. ಇದರ...
ಆಗಿನಿಂದಲೂ ಪಾಕಿಸ್ತಾನ, ಭಾರತ ಹಾಗೂ ಚೀನಾ ಜಮ್ಮು ಕಾಶ್ಮೀರದ ಭೂಭಾಗಗಳನ್ನು ತಮ್ಮ ಅಧೀನದಲ್ಲಿಟ್ಟುಕೊಂಡಿವೆ. ಅದರಲ್ಲಿ ಭಾರತ ಸುಮಾರು ಶೇ.55ರಷ್ಟು ಭೂಭಾಗವನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದ್ದರೆ, ಪಾಕಿಸ್ತಾನ ಶೇ.30ರಷ್ಟು ಭೂಭಾಗವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದೆ. ಚೀನಾ ಜನವಸತಿಯಿರದ ಶೇ. 15ರಷ್ಟು ಭೂಭಾಗವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದೆ. ಈಗಿರುವ ಗಡಿಗಳನ್ನೇ ಮೂರೂ ದೇಶಗ...
ಮೋದಿ ಸರಕಾರ -2 ಅಧಿಕಾರಕ್ಕೆ ಬಂದಮೇಲೆ ಕಾನೂನು ತಿದ್ದುಪಡಿಗಳು ಸಂವಿಧಾನಾತ್ಮಕ ವಿಧಿಗಳನ್ನು ರದ್ದುಪಡಿಸುವ ಕಾರ್ಯಗಳನ್ನು ತೀವ್ರಗೊಳಿಸತೊಡಗಿದೆ. ಇವುಗಳು ಬಿಡಿ ನಡೆಗಳಲ್ಲ. ವ್ಯವಸ್ಥಿತವಾದ ಯೋಜನೆಯ ಭಾಗವಾಗಿಯೇ ನಡೆಯುತ್ತಿವೆ. ಹಾಗಂತ ಇದು ಮೋದಿ ಸರಕಾರವೇ ಶುರುಮಾಡಿದ್ದು ಎಂದು ಹೇಳಲಾಗದು. ಯಾಕೆಂದರೆ ಸಂವಿಧಾನಾತ್ಮಕ ವಿಧಿಗಳನ್ನು ಸಡಿಲಗೊಳಿಸುವುದು, ಕಾರ್ಯಗತಗೊಳಿಸದೇ ಇರುವುದು, ಕೇವಲ ಪುಸ್ತಕ...
ಪ್ರಸ್ತುತ ದೇಶವನ್ನು ಅಪಾಯಕಾರಿ ಪರಿಸ್ಥಿತಿಗಳಿಗೆ ತಳ್ಳುತ್ತಿರುವ ಶಕ್ತಿಗಳು ಮತ್ತು ಅವರ ನಡೆಗಳ ಬಗ್ಗೆ ಬಹಳ ಎಚ್ಚರ ವಹಿಸಬೇಕಿದೆ. ಅಂತಹವುಗಳ ಮೇಲಿನ ಗಮನವನ್ನು ತಪ್ಪಿಸದೆ ನಮ್ಮ ಚರ್ಚೆ ಹಾಗೂ ನಡೆಗಳು ಇರಬೇಕು. ಇದನ್ನು ಜೋಡಿಸಿಕೊಳ್ಳದೆ ಸರಕಾರದ ಇಂತಹ ಜನರ ದಿಕ್ಕು ತಪ್ಪಿಸುವ ಕ್ರಮಗಳ ಬಗ್ಗೆ ಮಾತ್ರ ಪ್ರತಿಕ್ರಿಯೆಗಳಿಗೆ ಇಳಿದರೆ ಅದು ಅವರ ಬಲೆಯೊಳಗೆ ನಾವೇ ಹೋಗಿ ಸಿಲುಕುವಂತಾಗುತ್ತದೆ. ಅವರ ಉದ...
ವಸತಿ ಯೋಜನೆಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಿ- ಸಂಸದ ಶಿವರಾಮಗೌಡ » Kannadanet.com
Home Koppal News ವಸತಿ ಯೋಜನೆಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಿ- ಸಂಸದ ಶಿವರಾಮಗೌಡ
ವಸತಿ ಯೋಜನೆಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಿ- ಸಂಸದ ಶಿವರಾಮಗೌಡ
ಕೇಂದ್ರ ಹಾಗೂ ರಾಜ್ಯದ ವಿವಿಧ ವಸತಿ ಯೋಜನೆಗಳನ್ನು ಜಿಲ್ಲೆಯಲ್ಲಿ ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಲು ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು. ತಪ್ಪಿದಲ್ಲಿ, ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಿ, ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ಶಿವರಾಮಗೌಡ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಕೇಂದ್ರ ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆ ಸಂಬಂಧ ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸೂರು ರಹಿತ ಬಡಜನರಿಗೆ ಮನೆ ನಿರ್ಮಿಸಿಕೊಡುವ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಇಂದಿರಾ ಆವಾಸ್, ಬಸವ ವಸತಿ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ರೂಪಿಸಿ, ಜಾರಿಗೊಳಿಸಿದೆ. ಆದರೆ ಜಿಲ್ಲೆಯಲ್ಲಿ ವಸತಿ ಯೋಜನೆಗಳ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಅಧಿಕಾರಿಗಳು ಯೋಜನೆಗಳ ಅನುಷ್ಠಾನದಲ್ಲಿ ಅನಗತ್ಯ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಇದರಿಂದಾಗಿ ಸರ್ಕಾರದ ಯೋಜನೆಗಳು ಅರ್...
ಕುಡಿಯುವ ನೀರು : ಈ ವರ್ಷ ಮಳೆಯ ವಿಫಲತೆಯಿಂದಾಗಿ ಬರಪರಿಸ್ಥಿತಿ ತಲೆದೋರಿದೆ. ಬೇಸಿಗೆಯ ದಿನಗಳು ಹತ್ತಿರವಾಗುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ತೊಂದರೆ ಎದುರಾಗದಂತೆ ಅಧಿಕಾರಿಗಳು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಜಾರಿಯಲ್ಲಿರುವ ರಾಜೀವ್‌ಗಾಂಧಿ ಸಬ್‌ಮಿಷನ್ ಯೋಜನೆಯಡಿಯಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಪೂರ್ಣಗೊಳ...
ಸಿಲಿಂಡರ್ ಸಮಸ್ಯೆ: ಜಿಲ್ಲೆಯಲ್ಲಿ ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್‌ಗಳ ಪೂರೈಕೆಯಲ್ಲಿ ತೀವ್ರ ಸಮಸ್ಯೆ ಕಂಡುಬಂದಿದ್ದು, ಅಡುಗೆ ಅನಿಲ ಸಿಲಿಂಡರ್ ವಿತರಕರು ಸೂಕ್ತ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ. ಗಂಗಾವತಿ ನಗರದಲ್ಲಿ ಎರಡು ಏಜೆನ್ಸಿಗಳಿದ್ದು, ಗ್ರಾಹಕರ ಹಂಚಿಕೆಯಲ್ಲಿ ಬಹಳಷ್ಟು ಲೋಪದೋಷಗಳಾಗಿವೆ. ಕೊಪ್ಪಳ ನಗರದಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವು ಕೊಪ್ಪಳ ನಗರದ ಗ್ರಾಹಕ...
ಉದ್ಯೋಗಖಾತ್ರಿ : ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಡಿ ಕುಷ್ಟಗಿ ಹಾಗೂ ಯಲಬುರ್ಗಾ ತಾಲೂಕಿನಲ್ಲಿ ಪಾಸ್‌ವರ್ಡ್ ದುರ್ಬಳಕೆಯಿಂದ ಬಹಳಷ್ಟು ಲೋಪ-ದೋಷಗಳುಂಟಾಗಿದ್ದು, ಕಂಪ್ಯೂಟರ್‌ನಲ್ಲಿ ದಾಖಲಿಸಿರುವ ಪ್ರಕಾರ ಭೌತಿಕವಾಗಿ ಯಾವುದೇ ಕೆಲಸವಾಗಿಲ್ಲ. ಆದರೆ ಕಂಪ್ಯೂಟರ್‌ನಲ್ಲಿ ಮಾತ್ರ ಹಣ ಪಾವತಿ ದಿನಾಂಕವನ್ನೂ ಸಹ ದಾಖಲಿಸಿದ್ದು, ವಾಸ್ತವದಲ್ಲಿ ಹಣ ಪಾವತಿಸಿಲ್ಲ. ಇದರಿಂದಾಗಿ ...
ಸಭೆಯಲ್ಲಿ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ, ಜಿ.ಪಂ. ಉಪಕಾರ್ಯದರ್ಶಿ ಅನ್ನದಾನಯ್ಯ , ಜಾಗೃತ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರುಗಳಾದ ಶರಣಬಸಪ್ಪ, ಸುನಂದಾ, ಜಿ.ಪಂ. ಮುಖ್ಯ ಯೋಜನಾಧಿಕಾರಿ ಟಿ.ಪಿ. ದಂಡಿಗದಾಸರ್, ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು. ಸಭೆಯಲ್ಲಿ ವಿವಿಧ ಇಲಾಖೆಗಳಿಂದ ಅನುಷ್ಠಾನಗೊಳಿಸಲಾಗುವ ಕೇಂದ್ರ ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗ...
ಆಲ್ಕೋಹಾಲ್'ಯುಕ್ತ ಸಾನಿಟೈಸರ್ ರಫ್ತು ನಿಷೇಧ | NEWSICS
ರಸ್ತೆಯಲ್ಲೇ ಪತ್ನಿಯ ಕತ್ತು ಸೀಳಿ ಹತ್ಯೆ
RCB ವಿರುದ್ಧ ಗೆದ್ದು ಬೀಗಿದ ಹೈದರಾಬಾದ್
ಬಿಎಸ್‌ಪಿ ಟಿಕೆಟ್ ಪಡೆಯುವಲ್ಲಿ ವಿಫಲ; ವ್ಯಾಪಾರಿ ಆತ್ಮಹತ್ಯೆ
ಮಂಗಳೂರು ವಿಮಾನ ನಿಲ್ದಾಣ ಇನ್ನು 'ಅದಾನಿ ಮಂಗಳೂರು ಇಂಟರ್‌ನ್ಯಾಶನಲ್‌ ಏರ್‌ಪೋರ್ಟ್‌'
ಮಹಿಳೆಯರು ಮನೆಯಿಂದ ಹೊರಬಂದಿದ್ದರಿಂದಲೇ ಮೀ ಟೂ ಅಭಿಯಾನ
ಆಲ್ಕೋಹಾಲ್'ಯುಕ್ತ ಸಾನಿಟೈಸರ್ ರಫ್ತು ನಿಷೇಧ
ನವದೆಹಲಿ: ಆಲ್ಕೋಹಾಲ್'ಯುಕ್ತ ಸಾನಿಟೈಸರ್ ರಫ್ತು ಮಾಡುವುದನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.
ಆಲ್ಕೋಹಾಲ್ ಆಧಾರಿತ ಸಾನಿಟೈಸರ್ ರಫ್ತು ನಿಷೇಧಿಸಲಾಗಿದೆ ಎಂದು ವಿದೇಶಿ ವ್ಯಾಪಾರ ನಿರ್ದೇಶನಾಲಯ ಬುಧವಾರ ಅಧಿಸೂಚನೆ ಹೊರಡಿಸಿದೆ. ಕೊರೋನಾ ವೈರಸ್ ಹಿನ್ನೆಲೆಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸಾನಿಟೈಸರ್ ಅಭಾವವಾಗಬಾರದು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ ಎಂದು ವಿದೇಶಿ ವ್ಯಾಪಾರ ನಿರ್ದೇಶನಾಲಯ ಹೇಳಿದೆ.
Home NEWSICS - October 31, 2020