text
stringlengths
0
61.5k
ಧೈರ್ಯವಿದ್ದರೆ ಅವನ ಹೆಂಡತಿಯನ್ನು ಹಿಂದೂ ಮಠ- ಮಂದಿರಗಳಿಗೆ ಕರೆದುಕೊಂಡು ಹೋಗಲಿ ಎಂದು ಸವಾಲು ಹಾಕಿದರು. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕುರಿತು ದಿನೇಶ್ ಗುಂಡೂರಾವ್ ನೀಡಿದ್ದ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಆ ನಂತರ ಸ್ವತಃ ದಿನೇಶ್ ಗುಂಡೂರಾವ್, ಆ ರೀತಿ ಹೇಳಿಕೆ ನೀಡಬಾರದಿತ್ತು ಎಂದು ವಿಷಾದ ವ್ಯಕ್ತಪಡಿಸಿದ್ದರು.
ಆದರೆ, ದಿನೇಶ್ ಗುಂಡೂರಾವ್ ಅವರ ಹೇಳಿಕೆಗೆ ತಿರುಗೇಟು ನೀಡುವ ಭರದಲ್ಲಿ ಸೊಗಡು ಶಿವಣ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
sogadu shivanna tumakuru karnataka assembly elections 2018 bjp dinesh gundu rao district news ಸೊಗಡು ಶಿವಣ್ಣ ತುಮಕೂರು ಕರ್ನಾಟಕ ವಿಧಾನಸಭೆ ಚುನಾವಣೆ 2018 ಬಿಜೆಪಿ ಜಿಲ್ಲಾಸುದ್ದಿ
Karnataka Assembly Elections 2018: Former minister, BJP leader Sogadu Shivanna controversial statement in Tumakuru against Congress leader Dinesh Gundu Rao, for his ramarks against Uttar Pradesh chief minister Yogi Adityanath.
ಅಂತರ್ಜಾಲದಲ್ಲಿ 'ರಮ್ಯ'ಲೋಕ! | Ramyaloka in Internet! - Kannada Filmibeat
ಅಂತರ್ಜಾಲದಲ್ಲಿ 'ರಮ್ಯ'ಲೋಕ!
ರಮ್ಯ ಮಿರಮಿರ ಮಿಂಚುತ್ತಿದ್ದರು! ಕಪ್ಪು ಬಣ್ಣದ ಸೀರೆಯಲ್ಲಿ, ಹಾಲಿನಲ್ಲಿ ಮುಖ ತೊಳೆದವರಂತಿದ್ದರು! ನಗರದ ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ಮಂಗಳವಾರ ರಾತ್ರಿ ತಾರಾಲೋಕ!
ರಮ್ಯ ಅಭಿಮಾನಿಗಳ ಸಂಘದ ಸದಸ್ಯರು, ತಮ್ಮ ನೆಚ್ಚಿನ ತಾರೆಯ ಹುಟ್ಟುಹಬ್ಬವನ್ನು ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ಏರ್ಪಡಿಸಿದ್ದರು. ರಾಜಕಾರಣಿಗಳು, ಚಿತ್ರರಂಗದ ಗಣ್ಯರು, ಮಾಧ್ಯಮದವರು ಅಲ್ಲಿ ಕಿಕ್ಕಿರಿದಿದ್ದರು.
'ಚಿತ್ರಲೋಕ' ಪೋರ್ಟಲ್‌ ವಿನ್ಯಾಸಗೊಳಿಸಿರುವ ವೆಬ್‌ಸೈಟ್‌ www.ramyastar.comನ್ನು ಈ ಸಂದರ್ಭದಲ್ಲಿ ಖುಷಿಯಿಂದಲೇ ರಮ್ಯ ಲೋಕಾರ್ಪಣೆ ಮಾಡಿದರು. ರಮ್ಯಅವರ ಚಿತ್ರಬದುಕಿನ ಬಗ್ಗೆ ವೆಬ್‌ಸೈಟ್‌ನಲ್ಲಿ ಸಾಕಷ್ಟು ಮಾಹಿತಿಗಳಿವೆ. ಅಲ್ಲದೇ ಅಂದದ ಚಿತ್ರಗಳೂ ಉಂಟು.
ಸಮಾರಂಭದಲ್ಲಿ ಪಾರ್ವತಮ್ಮ ರಾಜಕುಮಾರ್‌, ಪುನೀತ್‌ ರಾಜಕುಮಾರ್‌, ಇಂದ್ರಜಿತ್‌ ಲಂಕೇಶ್‌, ಗೌರಿ ಲಂಕೇಶ್‌, ವಿಜಯರಾಘವೇಂದ್ರ, ಮುರಳಿ, ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರ ಸೋದರ ಎಸ್‌.ಎಂ.ಶಂಕರ್‌, ಮಾಜಿ ಸಚಿವ ಡಿ.ಕೆ.ಶಿವಕುಮಾರ್‌, ನಫೀಜಾ ಫಜಲ್‌ ಮತ್ತಿತರರು ಹಾಜರಿದ್ದರು.
ನಾಗತಿಹಳ್ಳಿ ಚಂದ್ರಶೇಖರ್‌ ಪರಿವಾರ ಸಮೇತ ಆಗಮಿಸಿದ್ದರು. ರಮ್ಯಳ ಗೆಳತಿ ರಕ್ಷಿತಾ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಆದರೆ ತಂಪು ಹೊತ್ತಿನಲ್ಲಿ ಸುಂಟರಗಾಳಿ ನೆನಪು ಯಾರಿಗೂ ಬಂದಿರಲಿಲ್ಲ!
ಸೈಟು ಮನೆ ಕಾರಿನಾಚೆ ಸಿಗುವ ನೆಮ್ಮದಿ! | Life beyond city life | Bird watching | Hornbill | Animal world | Wildlife | Karnataka forest | ಸೈಟು ಮನೆ ಕಾರಿನಾಚೆ ಸಿಗುವ ನೆಮ್ಮದಿ! - Kannada Oneindia
ಸೈಟು ಮನೆ ಕಾರಿನಾಚೆ ಸಿಗುವ ನೆಮ್ಮದಿ!
| Published: Saturday, March 6, 2010, 13:47 [IST]
ಅವರೆಲ್ಲ ನಲ್ಮೆಯಿಂದ ಬರೆದಿದ್ದರು. ನಾನು ನಿಮ್ಮ ಎಲ್ಲ ಅಂಕಣ ಬರಹಗಳನ್ನು ತಪ್ಪದೇ ಓದುತ್ತೇನೆ. ಆದರೆ ನನಗೆ ಬಹಳ ಇಷ್ಟವಾದದ್ದು ನೀವು ಇತ್ತೀಚೆಗೆ ಬರೆದ ಹಾರ್ನ್‌ಬಿಲ್(ಮಂಗಟ್ಟಿ)ಗಳ ಕುರಿತ ಲೇಖನ. ಲೇಖನದಂತೆ ಅದಕ್ಕೆ ಆಯ್ಕೆ ಮಾಡಿಕೊಂಡ ವಿಷಯ ನನಗೆ ಅನನ್ಯ, ಅಪರೂಪವೆನಿಸಿತು. ಸಾಮಾನ್ಯವಾಗಿ ಪತ್ರಿಕಾ ಸಂಪಾದಕರು ಪ್ರಾಣಿ, ಪಕ್ಷಿಗಳ ಕುರಿತು ಬರೆಯುವುದಿಲ್ಲ. ಯಾಕೆಂದರೆ ಅಧಿಕಾರದಲ್ಲಿರುವ ರಾಜಕಾರಣ...
ಚಿಕ್ಕಮಗಳೂರಿನಿಂದ ವನ್ಯಜೀವಿ ಸಂರಕ್ಷಕ ಕೃಷಿಕ ಜಯಂತ ಸಹ ಇದೇ ಧಾಟಿಯಲ್ಲಿ ಬರೆದಿದ್ದರು-ಪತ್ರಕರ್ತರಿಗೆ ಬರೀ ರಾಜಕಾರಣಿಗಳೇ ಮೈಮನಗಳಲ್ಲಿ ತುಂಬಿರುತ್ತಾರೆ. ಯಡಿಯೂರಪ್ಪ, ಈಶ್ವರಪ್ಪ, ಸಿದ್ದರಾಮಯ್ಯ, ದೇವೇಗೌಡ ಅವರಾಚೆಗೂ ಬದುಕು ಇದೆ ಎಂಬುದು ನಿಮಗೆ ಅರ್ಥವಾಗುವುದಿಲ್ಲ. ಇವರ ಬಗ್ಗೆ ಬರೆದರೆ ಜನರೆಲ್ಲ ಓದುತ್ತಾರೆಂದು ನೀವು ಭಾವಿಸಿದ್ದರೆ, ಇಂದೇ ನಿಮ್ಮ ನಿಲುವನ್ನು ಬದಲಿಸಿಕೊಳ್ಳಿ. ಬಹುಪಾಲು ಓದು...
ಎಷ್ಟು ದಿನ ಅಂತ ಆ ರೆಡ್ಡಿಗಳ ಬಗ್ಗೆ ಬರೀತೀರೋ, ಏನು ಚೆಂದ ಅಂತ ಬರೀತೀರೋ, ಯಾರಿಗೆ ಇಷ್ಟ ಅಂತ ಬರೀತೀರೋ ನಾಕಾಣೆ. ನಿಮ್ಮ ಪಾಲಿಗೆ ರಾಜಕೀಯ, ಕ್ರಿಕೆಟ್, ಸಿನಿಮಾ, ಸೆನ್ಸೆಕ್ಸ್, ಕ್ರೈಮ್ ಆಚೆ ಸುಂದರವಾದ, ರೋಚಕವಾದ ಪ್ರಪಂಚವಿದೆಯೆಂಬುದು ನಿಮಗೇಕೆ ಗೊತ್ತಾಗುವುದಿಲ್ಲ? ನಮ್ಮ ಪ್ರಾಣಿ, ಪಕ್ಷಿ ಸಂಕುಲ, ಮರಗಳ ಬಗ್ಗೆ ಕನಿಷ್ಠ ವಾರಕ್ಕೊಂದು ಪುಟ ಮೀಸಲಿಡಿ ಸಾಕು. ಜನ ಓದುತ್ತಾರೆ. ದಿನಾದಿನ ಆ ರಾಜಕಾರ...
ಆ ಪೈಕಿ ದಿನೇಶ್ 10-12 ಕಪ್ಪೆಗಳನ್ನು ಕಂಡುಹಿಡಿದಿದ್ದಾರೆ. ಕಪ್ಪೆಗಳನ್ನು ಸಂಗ್ರಹಿಸುವ ವಿಧಾನ, ಅವುಗಳ ಮೇಲೆ ನಡೆಸುವ ಪ್ರಯೋಗ, ಅವುಗಳನ್ನು ಅಧ್ಯಯನಕ್ಕೆ ಬಳಸಿಕೊಳ್ಳುವ ರೀತಿ, ಕಪ್ಪೆಗಳ ಅಧ್ಯಯನಕ್ಕೆ ಕಂಪ್ಯೂಟರ್ ಬಳಕೆ ಇತ್ಯಾದಿ ವಿಷಯಗಳ ಬಗ್ಗೆ ತಿಳಿಸಿದರು. ಕಪ್ಪೆಗಳು ಅವರ ಆಲೋಚನೆ, ಚಿಂತನೆಗಳೆಲ್ಲವನ್ನೂ ಸುತ್ತುವರಿದಿರಬಹುದೆಂಬ ಸಂದೇಹ ನನ್ನಲ್ಲಿ ಸುಳಿಯದೇ ಹೋಗಲಿಲ್ಲ. ಆ ಪರಿ ಅವರು ಆ ವಿಷಯ...
ಪ್ರಾಯಶಃ ಒಂದು ವಿಶ್ವವಿದ್ಯಾಲಯ ಮಾಡಬಹುದಾದಷ್ಟು ಕೆಲಸವನ್ನು ಕಿರಣ್ ಮಾಡಿದ್ದಾನೆ. ಪಕ್ಷಿಗಳ ಕುರಿತು ಯಾವುದೇ ಪುಸ್ತಕದ ಬಗ್ಗೆ ಕೇಳಿ, ಕಿರಣ್ ನೂರಾರು ಹೆಸರುಗಳನ್ನು ಪಟಪಟನೆ ಹೇಳುತ್ತಾನೆ. ನಮ್ಮ ಪತ್ರಿಕೆಗೇಕೆ ನೀನು ಒಂದು ಸಂದರ್ಶನ ಕೊಡಬಾರದಾ ಕಿರಣ್?' ಎಂದು ಕೇಳಿದೆ. ಏನಂದ ಗೊತ್ತಾ? ನಿಮ್ಮ ಪತ್ರಿಕೆಯನ್ನು ಹಕ್ಕಿಗಳು ಓದುವುದಿಲ್ಲವಾದ್ದರಿಂದ, ನಾನು ಸಂದರ್ಶನ ಕೊಡುವುದಿಲ್ಲ. ನನಗೆ ಅದರ ಅಗತ...
ಆ ದಿನ ಬಾಯ್ಬಿಟ್ಟರು-ಜನರಿಗೆ ಬುದ್ಧಿ ಇಲ್ಲ. ಗೆದ್ದಲು ಹಿಡಿದು ಹಾಳಾಯಿತು ಅಂತಾರೆ. ಗೆದ್ದಲು ತಿಂದೋಯ್ತು ಅಂತಾರೆ. ಗೆದ್ದಲು ಕಂಡರೆ ಸೀಮೆಎಣ್ಣೆ ಸುರಿದು ಸಾಯಿಸುತ್ತಾರೆ. ಕಾಲಲ್ಲಿ ಜಜ್ಜಿ ಸಾಯಿಸುತ್ತಾರೆ. ಎಂಥ ಬುದ್ಧಿಗೇಡಿ ಜನ? ಗೆದ್ದಲು ಅದ್ಭುತ ಸೃಷ್ಟಿ. ಯಾವ ಜಾಗದಲ್ಲಿ ಗೆದ್ದಲುಗಳಿವೆಯೋ ಅಲ್ಲಿ ನೀರಿದೆ ಅಂತ ಅರ್ಥ. ಅಲ್ಲಿನ ಮಣ್ಣು ಫಲವತ್ತಾಗಿದೆ ಅಂತ ಅರ್ಥ. ಅಂತರ್ಜಲಮಟ್ಟ ಮೇಲಿದೆ ಅಂತ ...
ದಿನೇಶ್, ಕಿರಣ್, ಗಣೇಶ್, ಮಾಣಿಕ್ಯಮ್ ಮುಂತಾದವರ ಮುಂದೆ ಯಡಿಯೂರಪ್ಪ, ಜನಾರ್ದನ ರೆಡ್ಡಿ ರಾಜಕೀಯ, ದೇವೇಗೌಡ-ಖೇಣಿಯ ನೈಸ್ ಜಟಾಪಟಿ, ಗೋಹತ್ಯೆ ನಿಷೇಧ ಬೇಕೋ, ಬೇಡವೋ ಮುಂತಾದ ವಿಷಯಗಳ ಬಗ್ಗೆ ಕೇಳಿನೋಡಿ. ಅವರಿಗೆ ಅದರಲ್ಲಿ ಸ್ವಲ್ಪವೂ ಆಸಕ್ತಿಯಿಲ್ಲ. ಅದರಲ್ಲೂ ಕಿರಣ್‌ನಂಥವರಿಗೆ ಯಡಿಯೂರಪ್ಪ, ರೆಡ್ಡಿ ಮುಂತಾದವರು ಯಾವುದೋ ಹಕ್ಕಿ'ಯಾಗಿದ್ದರೆ ಆಸಕ್ತಿ ಬರಬಹುದು. ಇಲ್ಲದಿದ್ದರೆ ಇಲ್ಲವೇ ಇಲ್ಲ.
ಅವರು ಮುಖ್ಯಮಂತ್ರಿಯಾಗಿರಲಿ, ರಾಜ್ಯಪಾಲ ರಾಗಿರಲಿ, ಉಹುಂ ಸ್ವಲ್ಪವೂ ಕುತೂಹಲವಿಲ್ಲ. ಅವರನ್ನು ಯಾವ ಪದವಿ, ಸ್ಥಾನಮಾನ, ಪ್ರಶಸ್ತಿ, ಗೌರವ ಡಾಕ್ಟರೇಟ್ ಕೂಡ ಕದಲಿಸುವುದಿಲ್ಲ, ಸಣ್ಣ ರೋಮಾಂಚನವನ್ನೂ ಉಂಟುಮಾಡು ವುದಿಲ್ಲ. ಅವರಿಗೆ ನೌಕರಿ, ಬಡ್ತಿ, ವಿದೇಶ ಪ್ರಯಾಣ, ಬೆಂಗಳೂರಿನಲ್ಲೊಂದು ಫಾರ್ಟಿ ಸಿಕ್ಸ್‌ಟಿ ಸೈಟು, ಟು ಬೆಡ್‌ರೂಮ್ ಅಪಾರ್ಟ್‌ಮೆಂಟ್, ಬ್ಯಾಂಕ್‌ಬ್ಯಾಲೆನ್ಸ್, ಕಾರು, ಮಗಳ ಮದುವೆಗೆಂದ...
ವಿಶ್ವೇಶ್ವರ ಭಟ್ ನೂರೆಂಟು ಮಾತು ಪಕ್ಷಿಗಳು ಪರಿಸರ ವನ್ಯಜೀವಿ ಹಾರ್ನ್‌ಬಿಲ್ ಕಪ್ಪೆ ಅರಣ್ಯ hornbill nature forest wildlife frog vishweshwar bhat noorentu maatu birds animal
ಅಣ್ಣಿಗೇರಿಯಲ್ಲಿ ಗಾಣಿಗ ಸಂಘಕ್ಕೆ ಚಾಲನೆ » eNews Land
by eNewsLand Team ಅಕ್ಟೋಬರ್ 24, 2021 0100
ಅಣ್ಣಿಗೇರಿ : ಅಖಿಲ ಭಾರತ ಗಾಣಿಗ ಸಂಘದ ನೂತನ ಅಣ್ಣಿಗೇರಿ ತಾಲೂಕ ಗಾಣಿಗ ಸಂಘದ ಘಟಕ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿ, ಗಾಣ ದೇವತೆಗೆ ಪುಷ್ಟ ನಮನ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.
ಗಾಣಿಗ ಸಂಘಧ ರಾಜ್ಯಾಧ್ಯಕ್ಷ ಗುರಣ್ಣ ಗೋಡಿ ಮಾತನಾಡಿ, ಗಾಣಿಗ ಸಮುದಾಯ ದೇಶದ ಎಲ್ಲಾ ಕ್ಷೇತ್ರಗಳಲ್ಲಿ ಸೇವೆಗೈಯುತ್ತಿರೋದು ಅವಿಸ್ಮರಣೀಯವಾಗಿದ್ದು, ಒಗ್ಗಟ್ಟಿನಿಂದ ಎಲ್ಲಾ ಸಮುದಾಯ ಸೇವೆ ಮಾಡುತ್ತಿರೋದು ಶ್ಲಾಘನೀಯ.ತಾಲೂಕಿನ ಅಧ್ಯಕ್ಷರು ನೂತನ ಪದಾಧಿಕಾರಿಗಳು ಸಂಘಟನೆ ಹೆಚ್ಚಿಸಿ, ಸಮಾಜ, ಸಮುದಾಯದ ಸಮಗ್ರ ಅಭಿವೃದ್ದಿಯಲ್ಲಿ ಪ್ರೇರಣೆಯಾಗಬೇಕೆಂದರು. ಶಿಕ್ಷಣ ಸಂಸ್ಥೆ, ಜ್ಯೋತಿ ಕ್ರೇಡಿಟ್ ಸೊಸೈಯಿಟಿ...
ತಾಲೂಕಿನ ಅಧ್ಯಕ್ಷರಾಗಿ ನಾಗಪ್ಪ ಗಾಣಿಗೇರ, ಉಪಾಧ್ಯಕ್ಷರಾಗಿ ಕುಮಾರಗೌಡ ಗದ್ದಿಗೌಡ್ರ, ಪ್ರಧಾನ ಕಾರ್ಯದರ್ಶಿಯಾಗಿ ಜಗದೀಶ ಚವಡಿ, ತಾಲೂಕಿನ ಯುವ ಘಟಕದ ಅಧ್ಯಕ್ಷರಾಗಿ ಜಗದೀಶ ಗಾಣಿಗೇರ, ಉಪಾಧ್ಯಕ್ಷರಾಗಿ ದೊಡ್ಡಪಕ್ಕೀರಪ್ಪ ಗಾಣಿಗೇರ, ಪ್ರಧಾನ ಕಾರ್ಯದರ್ಶಿಯಾಗಿ ಆನಂದ ಚವಡಿ ಅವರನ್ನು ನೇಮಕ ಮಾಡಿ, ಅದೇಶ ಪ್ರತಿ ನೀಡಿ, ರಾಜ್ಯಾಧ್ಯಕ್ಷ ಗುರುಣ್ಣ ಗೋಡಿ ಪದಗ್ರಹಣ ಮಾಡಿದರು.
ಈ ವಾರ ತೆರೆಗೆ ವಿಜಯಧ್ವಜ, ಮಜ್ಜಿಗೆ ಹುಳಿ | Prajavani
ಈ ವಾರ ತೆರೆಗೆ ವಿಜಯಧ್ವಜ, ಮಜ್ಜಿಗೆ ಹುಳಿ
ಎಸ್.ಎಲ್.ವಿ ಆರ್ಟ್ಸ್ ಲಾಂಛನದಲ್ಲಿ ಎಸ್.ರಾಮಚಂದ್ರ ಈ ಸಿನಿಮಾ ನಿರ್ಮಿಸಿದ್ದಾರೆ. ರಘುರಾಜ್ ಹಾಗೂ ಗಂಗಾಧರ್ ಈ ಚಿತ್ರದ ಸಹ ನಿರ್ಮಾಪಕರು.
ರವೀಂದ್ರ ಕೊಟಕಿ ಕಥೆ, ಚಿತ್ರಕಥೆ, ಸಂಭಾಷಣೆ, ಗೀತರಚನೆ ಮಾಡಿ, ನಿರ್ದೇಶನ ಮಾಡಿದ್ದಾರೆ. ಎಂ.ಸಂಜೀವರಾವ್ ಸಂಗೀತ, ನರಸಿಂಹಮೂರ್ತಿ, ಶ್ಯಾಂಸುಂದರ್ ಛಾಯಾಗ್ರಹಣ, ಸಂಜೀವರೆಡ್ಡಿ ಸಂಕಲನ ಹಾಗೂ ಅರವಿಂದ್, ಹೈಟ್ ಮಂಜು, ಗಗಂ ರಾಜು ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕೆ ಇದೆ. ತಾರಾಬಳಗದಲ್ಲಿ ದೀಕ್ಷಿತ್ ವೆಂಕಟೇಶ್, ರೂಪಿಕಾ, ಸುಚೀಂದ್ರ ಪ್ರಸಾದ್, ಮೋಹನ್ ಜುನೇಜ, ರಮೇಶ್ ಭಟ್, ಮಿಮಿಕ್ರಿ ದಯಾನಂದ್, ತರ...
ವಿಜಯಧ್ವಜ
ದರ್ಶನ್ ನಿರ್ಮಾಣ ಮತ್ತು ಶ್ರೀನಾಥ್ ವಸಿಷ್ಠ ನಿರ್ದೇಶಿಸಿರುವ ಮಕ್ಕಳ ಸಿನಿಮಾ ಇದು. ಕಥೆ, ಚಿತ್ರಕಥೆ ಜೆ.ಎಂ. ಪ್ರಹ್ಲಾದ್ ಅವರದ್ದು. ಪವನ್ ಕುಮಾರ್ ಛಾಯಾಗ್ರಹಣ, ಪ್ರವೀಣ್ ಡಿ.ರಾವ್ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ತಾರಾಗಣದಲ್ಲಿ ಶಾಲಾ ವಿದ್ಯಾರ್ಥಿಗಳಾಗಿ ತನ್ಮಯಿ ಎಸ್. ವಸಿಷ್ಠ, ಯೋಧ ವಿಜಯ ಭಾಸ್ಕರ್, ಮಾಸ್ಟರ್ ಲೋಕೇಶ್, ಮಾಸ್ಟರ್ ಭುವನ್, ಮಾಸ್ಟರ್ ರಕ್ಷನ್, ಉಪಾಧ್ಯಾಯರಾಗಿ ನಾಗೇಶ್ ಯಾದವ್...
ಮಂಗಳೂರು ವಿವಿ ಕನ್ನಡ ವಿಭಾಗದ ಮುಖ್ಯಸ್ಥರಿಗೆ ನೋಟಿಸ್ | Vartha Bharati- ವಾರ್ತಾ ಭಾರತಿ
ವಾರ್ತಾ ಭಾರತಿ Sep 27, 2020, 10:05 PM IST
ಮಂಗಳೂರು, ಸೆ.27: ಮಂಗಳೂರು ವಿಶ್ವವಿದ್ಯಾಲಯದ ಎಸ್‌ವಿಪಿ ಕನ್ನಡ ವಿಭಾಗದ ಸಮಸ್ಯೆಯಿಂದಾಗಿ ವಿವಿ ವ್ಯಾಪ್ತಿಯ ಐದು ಕಾಲೇಜುಗಳ ವಿದ್ಯಾರ್ಥಿಗಳು ಸೆ.29ರಂದು ಮತ್ತೆ ಕನ್ನಡ ಕಂಪ್ಯೂಟರ್ ಪರೀಕ್ಷೆ ಬರೆಯಬೇಕಾಗಿ ಬಂದಿದೆ. ಇದೇ ವೇಳೆ ನಿಗದಿತ ದಿನದಂದು ಪರೀಕ್ಷೆ ನಡೆಸದೆ ಕರ್ತವ್ಯಲೋಪ ನಡೆಸಿದ ವಿಭಾಗ ಮುಖ್ಯಸ್ಥರಿಗೆ ವಿವಿ ಆಡಳಿತ ನೋಟಿಸ್ ಜಾರಿ ಮಾಡಿದೆ.
ಮಂಗಳೂರು ವಿವಿ ವ್ಯಾಪ್ತಿಯ ಸ್ನಾತಕ ಹಾಗೂ ಸ್ನಾತಕೋತ್ತರ ವಿಭಾಗಗಳ ಪರೀಕ್ಷೆ ನಡೆಯುತ್ತಿದ್ದು, ಇದುವರೆಗೆ ಎಲ್ಲವೂ ಸುಸೂತ್ರವಾಗಿ ಸಾಗುತ್ತಿತ್ತು. ಆದರೆ ಸೆ.25ರಂದು ನಿಗದಿಯಾದ ಕನ್ನಡ ಕಂಪ್ಯೂಟರ್ ಪರೀಕ್ಷೆ ಮಂಗಳೂರು ವಿವಿ ಆವರಣದೊಳಗಿನ ಕನ್ನಡ ವಿಭಾಗ ಹೊರತು ಪಡಿಸಿ ಬೇರೆ ನಾಲ್ಕು ಕಾಲೇಜುಗಳಲ್ಲಿ ನಡೆದಿತ್ತು. ವಿವಿ ಕನ್ನಡ ವಿಭಾಗದಲ್ಲಿ ಪರೀಕ್ಷೆ ನಡೆದಿರಲಿಲ್ಲ. ಇದಕ್ಕೆ ವಿಭಾಗ ಮುಖ್ಯಸ್ಥರು, ...
ಆದರೆ ವಿಭಾಗ ಮುಖ್ಯಸ್ಥರ ಆರೋಪವನ್ನು ನಿರಾಕರಿಸಿರುವ ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಪಿ.ಎಲ್.ಧರ್ಮ, ಕೋವಿಡ್ ಹಿನ್ನೆಲೆಯಲ್ಲಿ ಅಂಚೆ ಬದಲು ಇ ಮೇಲ್ ಮೂಲಕ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಸೂಚನೆ, ತಿಳಿವಳಿಕೆಗಳನ್ನು ನೀಡಲಾಗಿದೆ. ಅದೇ ರೀತಿ ವಿವಿ ಕನ್ನಡ ವಿಭಾಗಕ್ಕೂ ಮಾಹಿತಿ ಕಳುಹಿಸಲಾಗಿತ್ತು. ಅಲ್ಲದೆ ನಿಯಮಾವಳಿಯಂತೆ ಪ್ರಶ್ನೆ ಪತ್ರಿಕೆಯನ್ನೂ ಮುಂಚಿತವಾಗಿಯೇ ತಲುಪಿಸಲಾಗಿತ್ತು. ಆದರೆ...
ಗಂಭೀರ ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ವಿಭಾಗ ಮುಖ್ಯಸ್ಥರಿಗೆ ನೋಟಿಸ್ ನೀಡಲಾಗಿದೆ. ಎರಡು ದಿನದಲ್ಲಿ ಉತ್ತರಿಸುವಂತೆ ಅವರಿಗೆ ಸೂಚಿಸಲಾಗಿದೆ ಎಂದು ಪರೀಕ್ಷಾಂಗ ಕುಲಸಚಿವ ಪ್ರೊ. ಪಿ.ಎಲ್.ಧರ್ಮ ತಿಳಿಸಿದ್ದಾರೆ.
ನೀಶಮ್‌ ದಾಳಿಗೆ ಅಫ್ಗಾನ್‌ ಬ್ಯಾಟ್ಸ್‌ಮನ್‌ಗಳು ದೂಳೀಪಟ; ಅಲ್ಪ ಮೊತ್ತಕ್ಕೆ ಕುಸಿತ | Prajavani
ನೀಶಮ್‌ ದಾಳಿಗೆ ಅಫ್ಗಾನ್‌ ಬ್ಯಾಟ್ಸ್‌ಮನ್‌ಗಳು ದೂಳೀಪಟ; ಅಲ್ಪ ಮೊತ್ತಕ್ಕೆ ಕುಸಿತ
Published: 08 ಜೂನ್ 2019, 21:37 IST
Updated: 08 ಜೂನ್ 2019, 22:10 IST
ಟಾಂಟನ್: ಎರಡೂ ಪಂದ್ಯಗಳಲ್ಲಿ ಭರ್ಜರಿ ಜಯ ಗಳಿಸಿ ಪಾಯಿಂಟ್ ಪಟ್ಟಿಯ ಅಗ್ರಸ್ಥಾನದಲ್ಲಿರುವ ನ್ಯೂಜಿಲೆಂಡ್ ತಂಡ ಶನಿವಾರ ಅಫ್ಗಾನಿಸ್ತಾನದ ವಿರುದ್ಧ ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು. ಉತ್ತಮ ಆರಂಭ ಕಂಡಿದ್ದ ಅಫ್ಗಾನ್‌ಗೆ ಜಿಮ್ಮಿ ನೀಶಮ್‌ ತಡೆಗೋಡೆಯಾದರು.
ಸ್ಕೋರ್‌ ವಿವರ: https://bit.ly/2XAAmo2
ಅಫ್ಗಾನಿಸ್ತಾನ 41.1 ಓವರ್‌ಗಳಲ್ಲಿ ಎಲ್ಲ ವಿಕೆಟ್‌ ನಷ್ಟಕ್ಕೆ 172 ರನ್‌ ಗಳಿಸಿದೆ. ತಂಡದ ಮೊತ್ತ 66 ರನ್‌ ಆಗುವವರೆಗೂ ಆರಂಭಿಕ ಜೋಡಿ ಹಜ್ರತ್ ಜಜಾಯ್(34) ಮತ್ತು ನೂರ್ ಅಲಿ ಜದ್ರಾನ್(31) ಉತ್ತಮ ಆಟ ಪ್ರದರ್ಶಿಸುತ್ತಿದ್ದರು. ಆದರೆ, ನೀಶಮ್‌ ದಾಳಿಗೆ ಉರುಳಿದ ವಿಕೆಟ್‌ಗಳು ಅಫ್ಗಾನ್‌ಗೆ ಆಘಾತ ತಂದಿತು. ತಂಡ 70 ರನ್‌ ಗಳಿಸುವಷ್ಟರಲ್ಲಿ ನಾಲ್ಕು ವಿಕೆಟ್‌ ಉರುಳಿತ್ತು.
Guess who has a five-wicket haul in Taunton 😏 @JimmyNeesh 👏
Follow live ▶️ https://t.co/Xi65EEGMEp#AFGvNZ#BACKTHEBLACKCAPS pic.twitter.com/QHqQCXrZ2R
10 ಓವರ್‌ ಪೂರೈಸಿರುವ ಜಿಮ್ಮಿ ನೀಶಮ್‌ 31 ರನ್‌ ನೀಡಿ 5 ವಿಕೆಟ್‌ ಕಬಳಿಸಿದರು. ಮೂರು ಮೇಡನ್‌ ಓವರ್‌ಗಳೊಂದಿಗೆ ಲಾಕಿ ಫರ್ಗುಸನ್ 4 ವಿಕೆಟ್‌ ಗಳಿಸಿದ್ದಾರೆ.
Lockie Ferguson today:
7 overs 👌
3 maidens 👌
3 wickets 👌
Follow live ▶️ https://t.co/Xi65EEGMEp#AFGvNZ#BACKTHEBLACKCAPS#AfghanAtalan pic.twitter.com/wvYwPAInxh
ನಾಲ್ಕನೇ ಕ್ರಮಾಂಕದಲ್ಲಿ ಹಶ್ಮತ್ ಉಲ್ಲಾ ಶಾಹಿದಿ ತಾಳ್ಮೆಯುತ ಆಟ ಆಡಿದರು. ವಿಕೆಟ್‌ ಪತನದ ಬಿರುಗಾಳಿಯಲ್ಲಿ ದಿಟ್ಟ ಹೋರಾಟ ನಡೆಸಿ ಅರ್ಧ ಶತಕ(59) ಪೂರೈಸಿದರು. ಅಫ್ಗಾನ್‌ ಎದುರು ಗೆಲುವಿಗೆ ನ್ಯೂಜಿಲೆಂಡ್‌ 173 ರನ್‌ ಗಳಿಸಬೇಕಿದೆ. 20 ಓವರ್‌ ನಂತರ ಪಂದ್ಯಕ್ಕೆ ಮಳೆ ಅಡ್ಡಿ ಉಂಟು ಮಾಡಿತ್ತು.
Hasmatullah Shahidi – Afghanistan's first half-centurion in #CWC19! pic.twitter.com/vFni4EHp2M
ಸ್ಪಿನ್ನರ್‌ಗಳ ಬಲ ಹೊಂದಿರುವ ಗುಲ್ಬದಿನ್ ನಯೀಬ್ ನ್ಯೂಜಿಲೆಂಡ್‌ನ ಸ್ಫೋಟಕ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕುವರೇ ಕಾದು ನೋಡಬೇಕು.
ಶ್ರೀಲಂಕಾವನ್ನು 10 ವಿಕೆಟ್‌ಗಳಿಂದ ಮಣಿಸಿ ಶುಭಾರಂಭ ಮಾಡಿದ್ದ ನ್ಯೂಜಿಲೆಂಡ್‌ಗೆ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶ ಕಠಿಣ ಸವಾಲು ಒಡ್ಡಿತ್ತು. ರೋಚಕ ಅಂತ್ಯ ಕಂಡ ಪಂದ್ಯದಲ್ಲಿ ನ್ಯೂಜಿಲೆಂಡ್ ಎರಡು ವಿಕೆಟ್‌ಗಳಿಂದ ಗೆದ್ದಿತ್ತು. ಒಮ್ಮೆಯೂ ಪ್ರಶಸ್ತಿ ಗೆಲ್ಲಲಾಗದ ನ್ಯೂಜಿಲೆಂಡ್ ಕಳೆದ ಬಾರಿ ಫೈನಲ್‌ನಲ್ಲಿ ಮುಗ್ಗರಿಸಿತ್ತು. ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದು ಎಂದೆನಿಸಿಕೊಂಡ...
ಎರಡನೇ ವಿಶ್ವಕಪ್ ಟೂರ್ನಿ ಆಡುತ್ತಿರುವ ಅಫ್ಗಾನಿಸ್ತಾನದ ಸ್ಪಿನ್ ವಿಭಾಗದಲ್ಲಿ ಲೆಗ್ ಸ್ಪಿನ್ನರ್ ರಶೀದ್ ಖಾನ್ ಅಪಾಯಕಾರಿಯಾಗಿದ್ದಾರೆ. ಮೊಹಮ್ಮದ್ ನಬಿ ಕೂಡ ರಶೀದ್‌ ಖಾನ್‌ಗೆ ಉತ್ತಮ ಬೆಂಬಲ ನೀಡುತ್ತಿದ್ದಾರೆ.
ಅಪ್ಪು ತಮ್ಮ ಮನೆಯ ವಾಚ್ ಮ್ಯಾನ್, ಗನ್ ಮ್ಯಾನ್ ರನ್ನೆಲ್ಲಾ ಅಣ್ಣಾ ಎಂದು ಏಕೆ ಕರೆಯುತ್ತಿದ್ದರು ಗೊತ್ತೇ?ಇದರ ಹಿಂದಿದೆ ಕಣ್ಣೀರಿನ ಕತೆ.. – Kannada BigNews
November 16, 2021 November 16, 2021 Kannada BigNews
ಕನ್ನಡಿಗರ ಮನೆ ಮಗ ಅಪ್ಪು ಇಹಲೋಕ ತುಜಿಸಿ ಇಷ್ಟು ದಿನ ಕಳೆದರೂ ಅವರ ಅಗಲಿಕೆಯ ನೋವು ಮಾತ್ರ ಒಂದಿಷ್ಟು ಕಡಿಮೆಯಾಗಿಲ್ಲ. ಪ್ರತಿಯೊಬ್ಬರೂ ಅವರದ್ದೇ ಗುಂಗಿನಲ್ಲಿ ಇದ್ದಾರೆ. ಅವರ ಸಾಧನೆ, ವ್ಯಕ್ತಿತ್ವ, ಮಾನವೀಯತೆಯ ಗುಣ ಗಾನ ಮುಂದುವರೆದಿದೆ. ಅವರ ಕುರಿತ ಮಹತ್ವದ ವಿಚಾರಗಳು ಈಗ ಒಂದೊಂದೇ ಹೊರಬರುತ್ತಿವೆ. ಪುನೀತ್ ರಾಜ್ ಕುಮಾರ್ ಎಂತಹ ಪಿತೃ ವಾಕ್ಯ ಪರಿಪಾಲಕ ಆಗಿದ್ದರು ಎಂಬುದನ್ನು ಅವರ ಆಪ್ತರೊಬ್ಬ...
ಈ ಕುರಿತು ಬಾರಿಗೆ ಪ್ರಶಂಸೆಯ ಮಾತುಗಳು ಕೇಳಿ ಬಂದವು ಆದರೆ ಅವರು ಹಾಗೆ ಏಕೆ ಕರೆಯುತಿದ್ದರು ಎಂಬುದು ಯಾರಿಗೂ ತಿಳಿದಿರಲಿಲ್ಲ. ಅವರು ಏಕೆ ಹಾಗೆ ಕರೆಯುತ್ತಿದ್ದರು ಎಂಬುದಕ್ಕೆ ಈಗ ಉತ್ತರ ಸಿಕ್ಕಿದೆ. ಅವರ ಆಪ್ತ ರೊಬ್ಬರು ಪುನೀತ್ ಪುಣ್ಯ ಸ್ಮರಣೆಯ ಕಾರ್ಯದ ಸಂಧರ್ಭದಲ್ಲಿ ಹಂಚಿಕೊಂಡಿದ್ದಾರೆ. ಅಪ್ಪು, ಡಾ. ರಾಜ್ ಕುಮಾರ್ ಹಾಗೂ ಪಾರ್ವತಮ್ಮ ದಂಪತಿಯ ಕಿರಿಯ ಪುತ್ರ. ಪ್ರೀತಿಯ ಪುತ್ರ. ಅದರಲ್ಲೂ ಪಾರ...
ನೋಡಪ್ಪಾ ಅಪ್ಪೂ ಅವರನ್ನು ಏಕೆ "ವಾಚ್ ಮ್ಯಾನ್" ಎಂದು ಕರೆದೆ? ನೀನು ಅವರನ್ನು ನಮ್ಮ ಕುಟುಂಬದವರಂತೆ ಭಾವಿಸುವುದಿಲ್ಲವೇ? ಅವರನ್ನು ತಾತ ಅಥವಾ ಆಂಕಲ್ ಎಂದು ಕರೆಯಬಹುದಿತಲ್ಲ ಎಂದು ಭಾವುಕರಾದರು. ಇದನ್ನು ಕಂಡ ಪಾರ್ವತಮ್ಮ ರಾಜ್ ಕುಮಾರ್ ಕಣ್ಣನಲ್ಲೂ ನೀರು ಸುರಿಯಿತು. ಇದನ್ನು ನೋಡಿ ಬಾಲಕ ಪುನೀತ್ ರಾಜ್ ಕುಮಾರ್ ಮನಸು ಕರಗಿತು. ಆಗಲೇ ಅವರು ಅಪ್ಪಾಜಿಯವರ ಕಾಲಿಗೆ ಬಿದ್ದು ಅಪ್ಪಾಜಿ ತಪ್ಪಾಯಿತು ಕ...
ಅಪ್ಪು ಕೊನೆಯ ಕ್ಷಣದ ವರೆಗೂ ತಮ್ಮ ಮನೆಯ ವಾಚ್ ಮ್ಯಾನ್, ಗನ್ ಮ್ಯಾನ್ ಎಲ್ಲರನ್ನೂ ಅಣ್ಣಾ ಎಂದೇ ಕರೆಯುತ್ತಿದ್ದರು. ಅವರು ತಮ್ಮ ಕೊನೆಯ ಕ್ಷಣ ಮನೆಯಿಂದ ಆಸ್ಪತ್ರೆಗೆ ಹೊರಡುವಾಗಲೂ ವಾಚ್ ಮ್ಯಾನ್ ಮತ್ತು ಗನ್ ಮ್ಯಾನ್ ಗೆ ಅಣ್ಣಾ ಇಲ್ಲೇ ಇರಿ ಬರುತ್ತೇನೆ ಎಂದು ಹೇಳಿ ಹೋಗಿದ್ದರು. ಪುನೀತ್ ರಾಜ್ ಕುಮಾರ್ ಅಣ್ಣಾವ್ರು ಹೇಳಿಕೊಟ್ಟ ಪ್ರತಿಯೊಂದು ವಿಷಯವನ್ನೂ ತಮ್ಮ ಹೃದಯದಲ್ಲಿ ಇಟ್ಟುಕೊಂಡಿದ್ದರು. ಅಪ್...
24 ಗಂಟೆಯಲ್ಲಿ ದೇಶದಾದ್ಯಂತ 52,000 ಮಂದಿಗೆ ಪಾಸಿಟಿವ್, 876 ಸಾವು..! – EESANJE / ಈ ಸಂಜೆ
24 ಗಂಟೆಯಲ್ಲಿ ದೇಶದಾದ್ಯಂತ 52,000 ಮಂದಿಗೆ ಪಾಸಿಟಿವ್, 876 ಸಾವು..!
August 18, 2020 Sri Raghav Covid-19 Deathtoll In India
ನವದೆಹಲಿ/ಮುಂಬೈ, ಆ.18-ದೇಶದಲ್ಲಿ ಕಳೆದ 10 ದಿನಗಳಿಂದ ಗಂಡಾಂತರಕಾರಿ ಮಟ್ಟದಲ್ಲಿ ಆರ್ಭಟಿಸಿದ್ದ ಡೆಡ್ಲಿ ಕೊರೊನಾ ಸೋಂಕಿನ ಮಹಾಸೋಟದ ಪ್ರಕೋಪ ಸತತ 2ನೆ ದಿನವೂ ಕೊಂಚ ಕಡಿಮೆಯಾಗಿದೆ. 24 ತಾಸುಗಳ ಅವಯಲ್ಲಿ 55,079(ಮೊನ್ನೆ 57,981)ಪಾಸಿಟಿವ್ ಪ್ರಕರಣಗಳು ಮತ್ತು 876 (ನಿನ್ನೆ 941) ಸಾವುಗಳು ಸಂಭವಿಸಿದೆ.
ಚೇತರಿಕೆ ಪ್ರಮಾಣದಲ್ಲಿ ಶೇ.73.18ರಷ್ಟು ವೃದ್ಧಿ ಕಂಡುಬಂದಿದ್ದು, ಈವರೆಗೆ ದೇಶದಲ್ಲಿ 3.09 ಕೋಟಿಗೂ ಹೆಚ್ಚು ಜನರ ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ದೇಶದಲ್ಲೀಗ ಸೋಂಕಿತರ ಸಂಖ್ಯೆ 27.02 ದಾಟಿರುವುದು ಹಾಗೂ ಸಾವಿನ ಸಂಖ್ಯೆ 52,000 ಸನಿಹದಲ್ಲಿರುವುದು ಆತಂಕದ ವಿದ್ಯಮಾನವಾಗಿದೆ.
ಆ.7ರಿಂದಲೂ ದೇಶದಲ್ಲಿ 60,000+ ರೋಗ ಪ್ರಕರಣಗಳು (ಆಗಸ್ಟ್ 11ರಂದು 53,609 ಹಾಗೂ ಮೊನ್ನೆ 57,981 ಮತ್ತು 55,074 ಕೇಸ್‍ಗಳನ್ನು ಹೊರತುಪಡಿಸಿ) ವರದಿಯಾಗುತ್ತಿತ್ತು. ಅದರೆ, ಸತತ 2ನೆ ದಿನ ಸೋಂಕು ಪ್ರಮಾಣದಲ್ಲಿ ಅಲ್ಪ ಕುಸಿತ ಕಂಡುಬಂದಿರುವುದು ಸಮಾಧಾನಕರ ಸಂಗತಿಯಾಗಿದೆ.
200 ದಿನಗಳ ಹಿಂದೆ ದೇಶದಲ್ಲಿ ಮೊದಲ ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿತ್ತು. ಈಗ ಸೋಂಕಿತರ ಸಂಖ್ಯೆ 28 ಲಕ್ಷ ಸನಿಹದಲ್ಲಿರುವುದು ಮತ್ತು ಮೃತರ ಸಂಖ್ಯೆ 52,000 ಸಮೀಪದಲ್ಲಿರುವುದು ಆತಂಕಕಾರಿ ಸಂಗತಿಯಾಗಿದೆ.
ದೇಶದಲ್ಲಿ ಒಂದೆಡೆ ಚೇತರಿಕೆ ಪ್ರಮಾಣದಲ್ಲಿ ವೃದ್ಧಿ ಕಂಡುಬಂದಿದ್ದರೂ, ಮತ್ತೊಂದೆಡೆ ಸಕ್ರಿಯ ಪ್ರಕರಣಗಳ ಹೆಚ್ಚಳ ಆತಂಕಕ್ಕೆ ಕಾರಣವಾಗಿದೆ. ಇದರ ನಡುವೆಯೂ 19.77 ಲಕ್ಷಕ್ಕೂ ಹೆಚ್ಚು ಮಂದಿ ಹೆಮ್ಮಾರಿಯ ಬಿಗಿಹಿಡಿತದಿಂದ ಪಾರಾಗಿದ್ದು, ಚೇತರಿಕೆ ಪ್ರಮಾಣದಲ್ಲಿ ಶೇ.73.18ರಷ್ಟು ಏರಿಕೆ ಕಂಡುಬಂದಿದೆ.
24 ತಾಸುಗಳಲ್ಲಿ ಸುಮಾರು 876 ಮಂದಿ ಮೃತಪಟ್ಟಿದ್ದು, ಒಟ್ಟಾರೆ ಸಾವಿನ ಸಂಖ್ಯೆ 51,797ಕ್ಕೇರಿದೆ. ಈವರೆಗೆ ಭಾರತದಲ್ಲಿ ರೋಗಪೀಡಿತರ ಪ್ರಮಾಣ 27,02,742 ದಾಟಿದೆ. ದೇಶದಲ್ಲಿ ಈಗ 6,73,166ಕ್ಕೂ ಅಕ ಆಕ್ಟಿವ್ ಕೇಸ್‍ಗಳಿದ್ದು, 19,77,780ಕ್ಕೂ ಅಕ ರೋಗಿಗಳು ಚೇತರಿಸಿಕೊಂಡು, ಗುಣಮುಖರಾಗಿದ್ದಾರೆ.
ಚೇತರಿಕೆ ಪ್ರಮಾಣ ಶೇ.73.18ರಷ್ಟು ಏರಿಕೆ ಮತ್ತು ಸಾವಿನ ಪ್ರಮಾಣ ಶೇ.1.92ರಷ್ಟು ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.ಇಂದು ಬೆಳಗ್ಗೆಯಿಂದಲೂ ದೇಶದ ಬಹುತೇಕ ರಾಜ್ಯಗಳಲ್ಲಿ ಹೊಸ ಸೋಂಕು ಮತ್ತು ಸಾವಿನ ಪ್ರಕರಣಗಳು ವರದಿಯಾಗುತ್ತಲೇ ಇವೆ.
ದೇಶದ ವಿವಿಧ ರಾಜ್ಯಗಳಲ್ಲಿ ನಿನ್ನೆ ಒಂದೇ ದಿನ ದಾಖಲೆ ಪ್ರಮಾಣದಲ್ಲಿ ಅಂದರೆ 8,99,864 ಜನರ ಸ್ಯಾಂಪಲ್‍ಗಳನ್ನು ಪರೀಕ್ಷಿಸಲಾಗಿದ್ದು, ಈವರೆಗೆ 3.09 ಕೋಟಿಗೂ ಹೆಚ್ಚು ಜನರ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ತಿಳಿಸಿದೆ.
ಭಾರತ ಬಂದ್: Latest ಭಾರತ ಬಂದ್ News & Updates, Photos & Images, Videos | Vijaya Karnataka
May,31,2020, 02:55:13
LAST UPDATED: May 02, 2020, 05.00 AM IST
May 02, 2020, 05.00 AM
ವಿಸ್ತಾರ ಅಂಕಣ: ಭವಿಷ್ಯದ ದಿನಗಳಲ್ಲಿ ನಮ್ಮ ಜೀವನ, ಚಿಂತನೆಗಳಲ್ಲೇ ಬಹುದೊಡ್ಡ ಬದಲಾವಣೆ ಆಗಬೇಕಿದೆ
ವಿದ್ಯುತ್‌ ಬಿಲ್‌ ಪಾವತಿಗೆ ಮನವಿ
Mar 28, 2020, 05.00 AM
ಹಾವೇರಿ: ಕೊರೊನಾ ವೈರಾಣು ಹರಡುವಿಕೆ ತಡೆಗಾಗಿ ಭಾರತ ಬಂದ್‌ ಇದ್ದರೂ ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ ತನ್ನ ಗ್ರಾಹಕರಿಗೆ ತಡೆ ರಹಿತ ನಿರಂತರ ವಿದ್ಯುತ್‌ ಪೂರೈಕೆಗೆ ಪ್ರಯತ್ನಿಸುತ್ತಿದೆ. ಹಾವೇರಿ, ಹಾನಗಲ್‌, ಶಿಗ್ಗಾವಿ ಮತ್ತು ಸವಣೂರು ತಾಲೂಕುಗಳ ವ್ಯಾಪ್ತಿಯ ಸರಕಾರಿ ಇಲಾಖೆಗಳು, ಕೈಗಾರಿಕೆಗಳು ಹಾಗೂ
ಎಲ್ಲವೂ ಸ್ತಬ್ಧ
ಜಗತ್ತಿಗೆ ಮಾರಿಯಾಗಿರುವ ಕೊರೊನಾ ವೈರಸ್‌ ನಿಯಂತ್ರಣಕ್ಕೆ ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳಿಗೆ ಭಾನುವಾರ ಕರೆ ನೀಡಿದ್ದ ಜನತಾ ಕಫ್ರ್ಯೂಗೆ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇಡೀ ಜಿಲ್ಲೆಸಂಪೂರ್ಣ ಸ್ತಬ್ದಗೊಳ್ಳುವ ಮೂಲಕ ಜನತಾ ಕಫ್ರ್ಯೂ ಯಶಸ್ಸು ಕಂಡಿತು.
ತೇರದಾಳದಲ್ಲಿಪ್ರತಿಭಟನೆ ವಿಫಲ
ತೇರದಾಳ: ಕೇಂದ್ರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಹಾಗೂ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಲವು ಕಾರ್ಮಿಕ ಸಂಘಟನೆಗಳು ಬುಧವಾರ ಕರೆ ನೀಡಿದ್ದ ಭಾರತ ಬಂದ್‌ ತೇರದಾಳ ನಗರದಲ್ಲಿಸಂಪೂರ್ಣ ವಿಫಲವಾಯಿತು. ತಮ್ಮ ಕೆಲಸವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ ಪುರಸಭೆ ಕಾರ್ಮಿಕರು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವಿಶೇಷ ತಹಸೀಲ್ದಾರ್‌ ಕಚೇರಿಯ ಶಿರಸ್ತೆದಾರ ಎಸ್‌.ಬಿ. ಕಾಂಬಳೆ ಅವರಿಗೆ ಮನವಿ...
ಭಾರತ್ ಬಂದ್‌ ಬಿಸಿ: ಪ.ಬಂಗಾಳದಲ್ಲಿ ರೈಲು ತಡೆ, ಟಿಎಂಸಿ- ಎಸ್‌ಎಫ್‌ಐ ನಡುವೆ ಗುಂಪುಘರ್ಷಣೆ
Jan 08, 2020, 02.55 PM
ವಾಣಿಜ್ಯ ಸಂಘಟನೆಗಳ ಜಂಟಿ ಸಮಿತಿ ಕರೆ ನೀಡಿದ್ದ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಪಶ್ಚಿಮ ಬಂಗಾಳದಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದೆ. ಬ್ಯಾಂಕಿಂಗ್‌, ಎಟಿಎಂ ಸೇವೆಗಳಲ್ಲಿ ವ್ಯತ್ಯಯವಾಗಲಿದೆ. ದೇಶಾದ್ಯಂತ ಸುಮಾರು 25 ಕೋಟಿ ಜನತೆ 'ದೇಶವ್ಯಾಪಿ ಮುಷ್ಕರದಲ್ಲಿ' ಪಾಲ್ಗೊಳ್ಳಲಿದ್ದಾರೆ. ಭಾರತ್‌ ಬಂದ್‌ ಕುರಿತ ಕ್ಷಣಕ್ಷಣದ ಮಾಹಿತಿ ಇಲ್ಲಿದೆ.
​ಬಳ್ಳಾರಿಯಲ್ಲೂ ಭಾರತ್ ಬಂದ್ ಯಶಸ್ವಿಯಾಗಿಲ್ಲ
ವಿಡಿಯೋ: ಜನವರಿ 8ರ ಬುಧವಾರ ಭಾರತ್ ಬಂದ್‌ ಯಾಕೆ? ಬೇಡಿಕೆ ಏನು?
ಭಾರತ ಬಂದ್‌ಗೆ ಸಹಕರಿಸಲು ಮನವಿ
ರೋಣ: ಕೇಂದ್ರ ಸರಕಾರದ ಜನವಿರೋಧಿ ಮತ್ತು ಕಾರ್ಮಿಕ ನೀತಿ ಖಂಡಿಸಿ, ತಾಲೂಕಿನಾದ್ಯಂತ ಜ. 8 ರಂದು ಸಿಐಟಿಯು ಜಂಟಿ ತಾಲೂಕು ಸಮಿತಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ರೈತರು ಸೇರಿದಂತೆ ನಾನಾ ಕಾರ್ಮಿಕರ ಸಂಘಗಳಿಂದ ಭಾರತ ಬಂದ್‌ ಮಾಡಲು ನಿರ್ಧರಿಸಲಾಗಿದ್ದು ಬಂದ್‌ ಯಶಸ್ವಿಗೊಳಿಸಬೇಕು ಎಂದು ಸಿಐಟಿಯು ಮುಖಂಡ ಪೀರು ರಾಠೋಡ ಮನವಿ ಮಾಡಿದರು.
ಕೇಂದ್ರದ ನೀತಿ ಖಂಡಿಸಿ ಜ. 8ರಂದು ಭಾರತ ಬಂದ್‌
Dec 25, 2019, 05.28 PM
ಮುಂಡರಗಿ: ಲೋಕಸಭಾ ಚುನಾವಣೆ ಪೂರ್ವದಲ್ಲಿನೀಡಿದ ಭರವಸೆ ಈಡೇರಿಸಲಾಗುತ್ತದೆ ಎಂದು ಹೇಳುವ ಕೇಂದ್ರ ಸರಕಾರ 370 ಕಾಯ್ದೆ, ಪೌರತ್ವ ಕಾಯ್ದೆ ಜಾರಿಗೊಳಿಸುತ್ತಿರುವಂತೆ ಡಾ.ಸ್ವಾಮಿನಾಥನ್‌ ವರದಿಯನ್ನು ಏಕೆ ಜಾರಿಗೊಳಿಸುತ್ತಿಲ್ಲಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಪ್ರಶ್ನಿಸಿದರು.
CAA Protest: ಹಿಂಸಾಚಾರಕ್ಕೆ ತಿರುಗಿದ ಪೌರತ್ವ ಪ್ರತಿಭಟನೆ : ರಾಜ್ಯಾದ್ಯಂತ ಬಿಗುವಿನ ವಾತಾರಣ!