text stringlengths 0 61.5k |
|---|
'ಜಿಲ್ಲೆಯಲ್ಲಿ ಕ್ಯಾನ್ಸರ್, ಸಕ್ಕರೆ ಖಾಯಿಲೆ, ಹೃದ್ರೋಗ ಸಮಸ್ಯೆಯಿಂದ ಬಳಲುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸರ್ವರೋಗಗಳಿಗೆ ಆಹಾರ ಪದಾರ್ಥಗಳ ಗುಣಮಟ್ಟದ ಕೊರತೆಯೇ ಕಾರಣವಾಗಿದೆ. ಬದಲಾದ ಆಹಾರ ಕ್ರಮಗಳೇ ರೋಗಗಳ ಮೂಲವಾಗಿವೆ. ರೈತರು ಗುಣಮಟ್ಟದ ಆಹಾರ ಪದಾರ್ಥಗಳನ್ನು ಬೆಳೆಯಲು ಸಾವಯವ ಕೃಷಿ ಅಳವಡಿಸಿಕೊಳ್ಳಬೇಕು. ರಾಸಾಯನಿಕ ಗೊಬ್ಬರ, ಕೀಟನಾಶಕ ಹೆಚ್ಚಾಗಿ ಬಳಸಬಾರದು' ಎಂದು ಸಲಹೆ ನೀಡಿದರು. |
'ಸಿರಿಧಾನ್ಯ, ಸಾವಯವ ಆಹಾರ ಬಳಕೆಯಿಂದ ಆರೋಗ್ಯ ಉತ್ತಮವಾಗುತ್ತದೆ. ಆರೋಗ್ಯ ಭಾಗ್ಯ ಬಲು ಮುಖ್ಯವಾದುದು. ಗುಣಮಟ್ಟದ ಆಹಾರ ಸೇವನೆಯಿಂದ ಮನಷ್ಯನ ಆರೋಗ್ಯವನ್ನು ಸಮತೋಲನದಲ್ಲಿ ಇರುತ್ತದೆ' ಎಂದರು. |
ಕೃಷಿ ಇಲಾಖೆ ಅಧಿಕಾರಿ ರಾಮಕೃಷ್ಣ ಮಾತನಾಡಿ 'ಮಣ್ಣಿನ ಫಲವತ್ತತೆ ಕಾಪಾಡಿಕೊಂಡು ಕೃಷಿ ಕಾರ್ಯದಲ್ಲಿ ತೊಡಗಬೇಕು ಎಂದು ರೈತರಲ್ಲಿ ಅರಿವು ಮೂಡಿಸಬೇಕು. ಕೃಷಿ ಇಲಾಖೆಯ ಕಾರ್ಯಕ್ರಮಗಳೊಂದಿಗೆ ಮಾರಾಟಗಾರರು ಸ್ಪಂದಿಸಬೇಕು. ಅನ್ಯ ದೇಶಗಳಿಂದ ಎಷ್ಟೋ ಕೃಷಿ ಪರಿಕರಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಆದರೆ, ನಮ್ಮ ದೇಶದಲ್ಲಿ ಅದನ್ನೆಲ್ಲ ಉತ್ಪಾದನೆ ಮಾಡಿಕೊಳ್ಳಬಹುದು. ಅಂತಹ ಯೋಜನೆಗಳಿಗೆ ಮಾರಾಟಗಾರರು ಸ... |
'ರೈತರಿಗೆ ಗುಣಮಟ್ಟದ ಪರಿಕರಗಳನ್ನು ವಿತರಿಸಲು ಸರ್ಕಾರದಿಂದ ಹಲವು ಯೋಜನೆ ಜಾರಿಗೊಳಿಸಲಾಗಿದೆ. ಈ ಕುರಿತು ಅರಿವು ಮೂಡಿಸುವ ಕಾರ್ಯವನ್ನು ಮಾರಾಟಗಾರರು ಮಾಡಬೇಕು. ಗುಣಮಟ್ಟದ ಬಿತ್ತನೆ ಬೀಜ ಮಾರಾಟ ಮಾಡಬೇಕು. ಕಳಪೆ ಬಿತ್ತನೆ ಬೀಜ ನೀಡಿದರೆ ರೈತರು ನಷ್ಟ ಅನುಭವಿಸುತ್ತಾರೆ. ಕಷ್ಟಪಟ್ಟು ಬೆಳೆದ ಬೆಳೆ ಅವರ ಕೈ ಸೇರುವುದಿಲ್ಲ' ಎಂದರು. |
ಕಾರ್ಯಗಾರದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಂದ್ರಶೇಖರ್, ಉಪ ನಿರ್ದೇಶಕರಾದ ಡಾ.ಕೆ.ಮಾಲತಿ, ಮಮತಾ, ಪುಷ್ಪ, ಸುಷ್ಮಾ ಇದ್ದರು. |
ಸಿದ್ದರಾಮಯ್ಯ ಯಾವತ್ತೂ ಹುಲಿನೇ : ಆರ್.ಧ್ರುವನಾರಾಯಣ - Saaksha TV |
ಆದ್ರೆ ಅವರ ಆಸೆ ಫಲಿಸಲಿಲ್ಲ. ಇದರಿಂದಾಗಿ ಪ್ರತಾಪ್ ಸಿಂಹ ಹತಾಶರಾಗಿ ಈ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಯಾವತ್ತೂ ಹುಲಿನೇ. ಇಲಿಗಳಿಂದ ನಾವು ಏನನ್ನು ನಿರೀಕ್ಷೆ ಮಾಡಲ್ಲ ಎಂದು ಪ್ರತಾಪ್ ಹೇಳಿಕೆಗೆ ಟಾಂಗ್ ನೀಡಿದರು. |
ಒಪ್ಪಂದ ಮಾಡಿಕೊಂಡಂತೆ ಜೆಡಿಎಸ್ ನವರು ನಡೆದುಕೊಳ್ಳಲಿಲ್ಲ. ಒಪ್ಪಂದಂತೆ ನಮಗೆ ಈ ಬಾರಿ ಮೇಯರ್ ಪಟ್ಟ ಬಿಟ್ಟುಕೊಡಬೇಕಿತ್ತು. ಸಿದ್ದರಾಮಯ್ಯ ಅವರೇ ನನ್ನನ್ನು ವೀಕ್ಷಕನಾಗಿ ನೇಮಿಸಿದ್ದು, ಸಿದ್ದರಾಮಯ್ಯ ಯಾವತ್ತೂ ನಮ್ಮ ನಾಯಕರೇ ಅವರ ವಿರುದ್ಧ ಪ್ರತಿಭಟನೆ ಮಾಡಿದ್ದು, ಪತ್ರಿಕಾ ಹೇಳಿಕೆ ಕೊಟ್ಟಿದ್ದು ಎರಡೂ ತಪ್ಪು ಅಂತಾ ಧ್ರುವನಾರಾಯಣ ತಿಳಿಸಿದರು. |
ಇಂಜೀನಿಯರ್ ಪದವೀಧರ, ಮಲ್ಟಿನ್ಯಾಶನಲ್ ಕಂಪನಿಯ ಉದ್ಯೋಗಿ ಈಗ ಉಡುಪಿ ಅಷ್ಠಮಠದ ಉತ್ತರಾಧಿಕಾರಿ!! kannada news live · Btv News · |
ಆತನ ಹೆತ್ತವರು ಇಂಜೀನಿಯರಿಂಗ್ ಪದವೀಧರ ಮಗನಿಗೆ ಮದುವೆ ಮಾಡುವ ಕನಸಿನಲ್ಲಿದ್ದರು. ಆದರೆ ವಿಧಿ ಲಿಖಿತ ಬೇರೆಯೇ ಇತ್ತು. ಹೀಗಾಗಿ 27 ವರ್ಷದ ಇಂಜಿನಿಯರ್ ಪದವೀಧರ ಪ್ರಶಾಂತ್ ಆಚಾರ್ಯ ಅಷ್ಟಮಠದ ಉತ್ತರಾಧಿಕಾರಿಯಾಗಿ ಸೋಮವಾರ ಸನ್ಯಾಸ ಸ್ವೀಕರಿಸಿದ್ದಾರೆ. |
ಉಡುಪಿ ನಗರದ ಕುಂಜಿಬೆಟ್ಟು ನಿವಾಸಿಯಾಗಿದ್ದ 27 ವರ್ಷದ ಪ್ರಶಾಂತ್ ಆಚಾರ್ಯ, ಇಂಜಿನಿಯರಿಂಗ್ ಪದವೀಧರ ಮತ್ತು ಬೆಂಗಳೂರಿನ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಇವರು ಗುರುರಾಜ ಆಚಾರ್ಯ ಮತ್ತು ವಿನುತಾ ಆಚಾರ್ಯ ದಂಪತಿಗಳ ಪುತ್ರ. |
ಇತ್ತೀಚೆಗಷ್ಟೆ ಮಗನಿಗೆ ಮದುವೆ ಮಾಡಿಸಲು ಹುಡುಗಿ ಹುಡುಕುತ್ತಿದ್ದರು. ಆದರೆ ಪ್ರಶಾಂತ ಜಾತಕ ಬಲದ ಆಧಾರದ ಮೇಲೆ ಪುತ್ತಿಗೆ ಶ್ರೀಗಳ ಆಶಯದ ಮೇರೆಗೆ, ಪುತ್ರನನ್ನು ಹೆತ್ತವರು ಶ್ರೀಮಠಕ್ಕೆ ಒಪ್ಪಿಸಿದ್ದಾರೆ. ಏಪ್ರಿಲ್ 20ರ ಶನಿವಾರ ಸನ್ಯಾಸ ಸ್ವೀಕಾರದ ಪೂರ್ವಭಾವಿಯಾಗಿ ಆತ್ಮಶ್ರಾದ್ದ, ವಿರಾಜ ಹೋಮ ಸಹಿತ, ಹಲವು ಧಾರ್ಮಿಕ ಪ್ರಕ್ರಿಯೆಗಳು ನಡೆದಿದ್ದವು. |
ನಂತರ ಸೋಮವಾರ ಬೆಳಗ್ಗೆ 11.40 – 11.45ರ ಶುಭಲಗ್ನದಲ್ಲಿ , ಪುತ್ತಿಗೆ ಮೂಲ ಮಠದಲ್ಲಿ ಯತಿಗಳಾದ ಸುಗುಣೇಂದ್ರತೀರ್ಥರು, ತಮ್ಮ ಉತ್ತರಾಧಿಕಾರಿಯಾಗಿ ಪ್ರಶಾಂತ್ ಆಚಾರ್ಯ ಅವರಿಗೆ ಸನ್ಯಾಸ ದೀಕ್ಷೆಯನ್ನು ನೀಡಿದ್ದಾರೆ. ಮೊದಲಿನಿಂದಲೂ ಆಧ್ಯಾತ್ಮಕದ ಕಡೆಗೆ ಒಲವು ಹೊಂದಿದ್ದ ಪ್ರಶಾಂತ್ ಆಚಾರ್ಯ, ಸಂಸ್ಕೃತದ ಪ್ರಾಥಮಿಕ ಜ್ಞಾನವನ್ನು ಹೊಂದಿದ್ದು, ಪುತ್ತಿಗೆ ಮಠದ ಯತಿಪರಂಪರೆಯ 31ನೇ ಯತಿ ಇವರಾಗಿದ್ದು, ನ... |
Previousಶ್ರೀಲಂಕಾ ದಾಳಿಯಲ್ಲಿ ಜೆಡಿಎಸ್ ಮುಖಂಡ ರಮೇಶ್ಗೌಡ ಸಾವು!! |
Nextಕೊನೆಗೂ ರೀವಿಲಾಯ್ತು ದಬಾಂಗ್-3 ನಲ್ಲಿ ಸುದೀಪ್ ರೋಲ್! ಬಾಲಿವುಡ್ಗೆ ಖಳನಾಯಕನಾಗ್ತಿದ್ದಾನೆ ಸ್ಯಾಂಡಲವುಡ್ ಕಿಚ್ಚ!! |
ಮಚ್ಚಿನ : ಸರಕಾರಿ ಕೆಲಸಕ್ಕೆ ಅಡ್ಡಿ; 9 ಮಂದಿ ಮೇಲೆ ಪ್ರಕರಣ ದಾಖಲು | ಸುದ್ದಿ ಬೆಳ್ತಂಗಡಿ |
ಬೆಳ್ತಂಗಡಿ : NRLM (ಕೇಂದ್ರ ಸರಕಾರ ಸಂಜೀವಿನಿ ಯೋಜನೆಯ) ಮಾಹಿತಿ ಸಂಗ್ರಹಿಸಲು ತೆರಳಿದ್ದ ಮಚ್ಚಿನ ಗ್ರಾ . ಪಂ ಅದ್ಯಕ್ಷೆ ಹಾಗೂ ಅಲ್ಲಿನ ಗುತ್ತಿಗೆ ನೌಕರರ ಮೇಲೆ 9 ಜನರ ತಂಡ ಕರ್ತವ್ಯಕ್ಕೆ ಅಡ್ಡಿ ಪಡಿಸಿ , ಅವಾಚ್ಯ ಶಬ್ದಗಳಿಂದ ನಿಂದಿಸಿ ,ಸಂಗ್ರಹಿಸಿದ ದತ್ತಾಂಶಗಳನ್ನು ನಾಶ ಪಡಿಸಿದ ಪ್ರಕರಣ ಜ 8 ರಂದು ಪುಂಜಾಲಕಟ್ಟೆ ಪೋಲೀಸ್ ಠಾಣೆಯಲ್ಲಿ ದಾಖಲಾಗಿದೆ. |
ಬೆಳ್ತಂಗಡಿ ತಾಲ್ಲೂಕಿನ ಮಚ್ಚಿನ ಗ್ರಾಮ ಪಂಚಾಯತ್ ನ ಅಧ್ಯಕ್ಷರಾಗಿರುವ ಹರ್ಷಲತಾ ಹಾಗೂ NRLM (ಕೇಂದ್ರ ಸರಕಾರ ಸಂಜೀವಿನಿ )ಯೋಜನೆಯ ಅಡಿಯಲ್ಲಿ ಮಾಹಿತಿ ಸಂಗ್ರಹಿಸಲು ಜಿಲ್ಲಾ ಪಂಚಾಯತ್ ವತಿಯಿಂದ ಗುತ್ತಿಗೆ ಆಧಾರದಲ್ಲಿ ನೇಮಕವಾಗಿರುವ ಜಾನಕಿ, ರೂಪ ಮತ್ತು ಪವಿತ್ರ ಎಂಬವರುಗಳೊಂದಿಗೆ ಮಚ್ಚಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲುಗುಡ್ಡೆ ಎಂಬಲ್ಲಿ ಮಾಹಿತಿ ಸಂಗ್ರಹಿಸುತ್ತಿದ್ದಾಗ ಈ ಕೃತ್ಯ ನಡೆದಿದೆ ... |
ಹರ್ಷಲತಾ ರವರು ಈ ದೂರನ್ನು ನೀಡಿದ್ದು ಜ 7 ರಂದು ಮದ್ಯಾಹ್ನ 9 ಜನರ ತಂಡ ನಮ್ಮನ್ನು ತಡೆದು ತಡೆದು ನಿಲ್ಲಿಸಿ NRLM (ಕೇಂದ್ರ ಸರಕಾರ ಸಂಜೀವಿನಿ ) ಯೋಜನೆಗೆ ಸಂಬಂಧಿಸಿದ ಮಾಹಿತಿ ಸಂಗ್ರಹಣೆಗೆ ಅಡ್ಡಿಪಡಿಸಿರುವುದು ಮಾತ್ರವಲ್ಲದೆ ಸಂಗ್ರಹಿಸಿದ್ದ ದತ್ತಾಂಶಗಳನ್ನು ನಾಶಪಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿರುತ್ತಾರೆ ಎಂದು ತಿಳಿಸಿದ್ದಾರೆ . ಇರ್ಫಾನ್ ,ಕಲ್ಲಗುಡ್ಡೆ ಮನೆ, ಮಚ್ಚ... |
ಚಿತ್ರರಂಗದ 'ಮಹಾವೃಕ್ಷ'ದ ನೆನಪು | Prajavani |
ಹಿರಿಯ ನಿರ್ದೇಶಕ ಎಸ್. ಸಿದ್ದಲಿಂಗಯ್ಯ ಅವರು ಕನ್ನಡ ಚಿತ್ರರಂಗಕ್ಕೆ ಮೇಕಿಂಗ್‌ನಲ್ಲಿ ಹೊಸ ವ್ಯಾಕರಣವನ್ನು ಕಲಿಸಿಕೊಟ್ಟ ಮಹಾಗುರು. ಅವರ ಪ್ರತಿಭೆ ಮತ್ತು ಚಿಂತನೆಗಳು ಎಷ್ಟು ಫಲವತ್ತಾಗಿರುತ್ತಿದ್ದವು ಎಂಬುದಕ್ಕೆ ಅವರು ಮಾಡಿದ ಪ್ರತಿ ಚಲನಚಿತ್ರಗಳೂ ನಿದರ್ಶನಗಳಾಗಬಲ್ಲವು. |
1969ರಲ್ಲಿ ನಿರ್ದೇಶಿಸಿದ ಮೊದಲ ಚಿತ್ರ 'ಮೇಯರ್ ಮುತ್ತಣ್ಣ'ದಲ್ಲೇ ಅದು ಸಾಬೀತಾಯಿತು. 'ಬಂಗಾರದ ಮನುಷ್ಯ', 'ಭೂತಯ್ಯನ ಮಗ ಅಯ್ಯು' ಚಿತ್ರಗಳು ಸರ್ವಾಂಗಸುಂದರವಾಗಿ ಮೂಡಿಬಂದು ದಾಖಲೆ ನಿರ್ಮಿಸಿದವು. ಕನ್ನಡ ಚಿತ್ರರಂಗದತ್ತ ಬೇರೆ ಭಾಷಾ ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು ತಿರುಗಿ ನೋಡುವಂತೆ ಮಾಡಿದ ದಿಗ್ಗಜರಲ್ಲಿ ಸಿದ್ದಲಿಂಗಯ್ಯ ಅವರ ಹೆಸರೂ ಮುಂಚೂಣಿಯಲ್ಲಿ ನಿಲ್ಲುತ್ತದೆ. |
ಸಿದ್ದಲಿಂಗಯ್ಯ ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ತರೂರಿನವರು. ಗಾಂಧಿನಗರಕ್ಕೆ ಪರಿಚಯವಾದಾಗ ಮೈಸೂರಿನ ನವಜ್ಯೋತಿ ಸ್ಟುಡಿಯೊದಲ್ಲಿ ಲೈಟ್ ಬಾಯ್ ಮತ್ತು ಫ್ಲೋರ್ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಶಂಕರ್ ಸಿಂಗ್ ಮತ್ತು ವಿಠಲಾಚಾರ್ಯ ಅವರಂತಹ ಮಹತ್ವದ ನಿರ್ದೇಶಕರೊಟ್ಟಿಗೆ ಸಹಾಯಕರಾಗಿ ಗಾಂಧಿ ನಗರದಲ್ಲಿ ಕಾಣಿಸಿಕೊಳ್ಳತೊಡಗಿದರು. 'ಮೇಯರ್ ಮುತ್ತಣ್ಣ' ಚಿತ್ರದ ಮೂಲಕ ಪೂರ್ಣಪ್ರಮಾಣದ ನಿರ್... |
ಸಿದ್ದಲಿಂಗಯ್ಯ ಅವರನ್ನು 'ಸಾಮಾಜಿಕ ನಿರ್ದೇಶಕ' ಎಂದು ಗುರುತಿಸಲಾಗುತ್ತದೆ. ಇದಕ್ಕೆ ಕಾರಣ ಅವರ ಸಿನಿಮಾ ಪರಿಕಲ್ಪನೆಗಳು. ಕತೆಯನ್ನು ಕೈಗೆತ್ತಿಕೊಳ್ಳುವಾಗಲೇ ಅವರು ಆದ್ಯತೆ ಕೊಡುತ್ತಿದ್ದುದು ಗ್ರಾಮೀಣ ಚಿತ್ರಣಗಳಿಗೆ. ಮುಂದೆ ಅದನ್ನು ಚಿತ್ರಕತೆಯಾಗಿ ಹೇಗೆ ಸಮೃದ್ಧಗೊಳಿಸಬಹುದು, ಛಾಯಾಗ್ರಹಣದಿಂದ ಹೇಗೆ ಶ್ರೀಮಂತಗೊಳಿಸಬಹುದು, ನಟ ನಟಿಯರು ಯಾವ್ಯಾವ ಪೋಷಾಕಿನಲ್ಲಿ ಚಿತ್ರಕತೆಗೆ ಜೀವ ತುಂಬಬಹುದು..... |
ರೈತರು, ಕೃಷಿ, ಕೃಷಿ ಕೂಲಿ, ಹಳ್ಳಿಯ ತಾಜಾ ಚಿತ್ರಣ, ಸಂಸ್ಕೃತಿ, ಭಾಷೆ, ಪ್ರಕೃತಿ ಸೌಂದರ್ಯ ಹೀಗೆ ಹಲವು ಆಯಾಮಗಳಲ್ಲಿ ಗ್ರಾಮ್ಯ ಬದುಕನ್ನು ಅಭಿಮಾನದಿಂದ ನೋಡುವಂತೆ ಮಾಡಿದ ಹೆಗ್ಗಳಿಕೆ ಅವರದು. ಗೌಡಿಕೆ, ಜಮೀನ್ದಾರಿಕೆಯ ದೌಲತ್ತುಗಳು, ಶೋಷಣೆಯ ನಾನಾ ಮುಖಗಳು, ಗ್ರಾಮೀಣ ಮಕ್ಕಳು ಮತ್ತು ಹೆಣ್ಣು ಮಕ್ಕಳ ನೈಜ ಸ್ಥಿತಿ, ಶಿಕ್ಷಣ, ಪ್ರೀತಿ ಪ್ರೇಮವನ್ನೂ ಅವಿಸ್ಮರಣೀಯವಾಗಿ ಚಿತ್ರಿಸುವ ಮೂಲಕ ಪ್ರೇಕ್ಷಕ... |
ಸಿದ್ದಲಿಂಗಯ್ಯ ಅವರನ್ನು ಕನ್ನಡ ಚಿತ್ರರಂಗದ ಮಹಾವೃಕ್ಷ ಎನ್ನಬಹುದು. ಅವರ ಪ್ರತಿಭೆ ಮತ್ತು ಉದಾರ ಮನೋಭಾವದ ನೆರಳಿನ ಆಸರೆ ಪಡೆದು ಚಿಗುರಿದ ಗಿಡಗಳೆಷ್ಟೋ. ಅದಾಗಲೇ ಸೆಲೆಬ್ರಿಟಿಗಳಾದ ನಟ ನಟಿಯರಷ್ಟೇ ಆದ್ಯತೆಯನ್ನು ಹೊಸ ಮುಖಗಳಿಗೂ ಕೊಟ್ಟ ವಿಶಾಲ ಹೃದಯಿ ಅವರು. |
ಹಿರಿಯ ನಟ ಲೋಕನಾಥ್ ಅವರು 'ಭೂತಯ್ಯನ ಮಗ ಅಯ್ಯು' ಚಿತ್ರಕ್ಕೆ ಆಯ್ಕೆಯಾದ ಸನ್ನಿವೇಶವನ್ನು ಸಿದ್ದಲಿಂಗಯ್ಯ ಅವರು ಮರಣಿಸಿದ ನಂತರ ಮೆಲುಕು ಹಾಕಿದ್ದರು. 'ಬೇರೆ ಯಾರೋ ಆ ಪಾತ್ರ ಮಾಡಬೇಕಿತ್ತು. ಆದರೆ ಸಿದ್ದಣ್ಣ ಆ ಪಾತ್ರವನ್ನು ನನಗೆ ಕೊಟ್ಟರು. ಉಪ್ಪಿನಕಾಯಿ ನೆಕ್ಕುವ ದೃಶ್ಯ ಇವತ್ತಿಗೂ ಎಲ್ಲರ ಮನಸ್ಸಿನಲ್ಲಿ ನಾಟಿ ನಿಂತಿದೆ ಎಂದರೆ ಅದಕ್ಕೆ ಕಾರಣ ನಾನಲ್ಲ ಸಿದ್ದಲಿಂಗಯ್ಯ. ಆ ದೃಶ್ಯ ಅಂತಿಮವಾಗಿ ಓ... |
ಅದೇ ಚಿತ್ರ ಶತದಿನ ಪೂರೈಸಿದಾಗ ಲೋಕನಾಥ್ ಅವರಿಗೆ ಸಿದ್ದಲಿಂಗಯ್ಯ ಅವರಿಂದ ಚಿನ್ನದ ಉಡುಗೊರೆಯೂ ಸಿಕ್ಕಿತ್ತು. ಯಶಸ್ವಿ ಚಿತ್ರಗಳ ನಿರ್ದೇಶಕರೊಬ್ಬರು ತಮ್ಮ ಸಿನಿಮಾದ ಯಶಸ್ಸನ್ನು ತಂಡದೊಂದಿಗೆ ಹಂಚಿಕೊಳ್ಳುವುದು ಎಂದರೆ ಸಿದ್ದಲಿಂಗಯ್ಯ ಅವರ ಹಾಗೆ! |
ಅವರಿಗೆ ಸಾಟಿಯಾಗಬಲ್ಲ ಮತ್ತೊಬ್ಬ ನಿರ್ದೇಶಕರನ್ನು ಕನ್ನಡ ಚಿತ್ರರಂಗ ಕಾಣಲಾರದೇನೊ. ಹಾಗಾಗಿ ಸಿದ್ದಲಿಂಗಯ್ಯ ಅವರಿಗೆ ಅವರೇ ಸಾಟಿ. |
ಮದುವೆ ಮಂಟಪದಲ್ಲಿಯೇ ಕಳಚಿಬಿದ್ದ ವರನ ವಿಗ್: ಮುರಿದುಬಿತ್ತು ವಿವಾಹ - E MUNGARU --> |
Home › national › ಮದುವೆ ಮಂಟಪದಲ್ಲಿಯೇ ಕಳಚಿಬಿದ್ದ ವರನ ವಿಗ್: ಮುರಿದುಬಿತ್ತು ವಿವಾಹ |
ಮದುವೆ ಮಂಟಪದಲ್ಲಿಯೇ ಕಳಚಿಬಿದ್ದ ವರನ ವಿಗ್: ಮುರಿದುಬಿತ್ತು ವಿವಾಹ |
5/22/2022 09:03:00 PM |
ಉನ್ನಾವೋ (ಉತ್ತರ ಪ್ರದೇಶ): ಮದುವೆಯಾಗಲು ಇನ್ನೇನು ಕೆಲವೇ ಕ್ಷಣ ಇರುವಾಗ ಮಂಟಪದಲ್ಲಿಯೇ ವರನ ವಿಗ್ ಕಳಚಿ ಬಿದ್ದ ಪರಿಣಾಮ ವಿವಾಹವೇ ಮುರಿದು ಬಿದ್ದ ಘಟನೆ ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯ ಸಫಿಪುರ್ ಕೊಟ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. |
ವರನ ಬೋಳು ತಲೆಯನ್ನು ನೋಡಿದ ವಧು ಮದುವೆಯನ್ನೇ ನಿರಾಕರಿಸಿದ್ದಾಳೆ. ಈ ವಿಚಾರವನ್ನು ಮುಚ್ಚಿಟ್ಟು ಮದುವೆ ನಡೆಸಲು ಯತ್ನಿಸಿರುವುದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಧ್ಯ ಪ್ರವೇಶಿಸಿ ವಧು-ವರರ ಕಡೆಯವರನ್ನು ಮನವೊಲಿಸಿದ್ದಾರೆ. ಆದರೆ ವಿವಾಹ ಮಾತ್ರ ರದ್ದುಗೊಂಡಿತು. |
ಸಾಕಷ್ಟು ಮನವೊಲಿಕೆಯ ಬಳಿಕವೂ ವಧುವಿನ ಕಡೆಯವರು ಈ ಮದುವೆಗೆ ಒಪ್ಪಿಗೆ ನೀಡಲಿಲ್ಲ. ಹಾಗಾಗಿ ವರನು ಮದುವೆಯಾಗದೇ ಹಿಂದಿರುಗಬೇಕಾಯಿತು. ಮೇ 20 ರಂದು ವರನ ಕಡೆಯವರು ವಧುವಿನ ಮನೆಗೆ ಮೆರವಣಿಗೆ ಮೂಲಕ ಬಂದಿದ್ದರು. ಎಲ್ಲವೂ ಸುಸೂತ್ರವಾಗಿಯೇ ನಡೆಯುತ್ತಿತ್ತು. ಜೈಮಾಲ್ ಕಾರ್ಯಕ್ರಮಕ್ಕೆ ವೇದಿಕೆಯನ್ನು ಅಣಿಗೊಳಿಸಲಾಗಿತ್ತು. ವಧೂ - ವರರು ವೇದಿಕೆಗೆ ಆಗಮಿಸಿದ್ದರು. ಇಬ್ಬರೂ ಒಬ್ಬರಿಗೊಬ್ಬರು ಹಾರವನ್ನೂ ... |
ಇದಾದ ಬಳಿಕ ವಧುವಿನ ಸಹೋದರ ವರನ ಮುಖಕ್ಕೆ ನೀರನ್ನು ಎರಚಿದ್ದಾನೆ. ಆಗ ವರನ ತಲೆಯಿಂದ ವಿಗ್ ಕಳಚಿ ಬಿದ್ದಿದೆ. ಆಗ ಎಲ್ಲರಿಗೂ ವರನ ಬೋಳು ತಲೆ ಗೋಚರಿಸಿದ್ದು, ಇದನ್ನು ನೋಡಿದ ಎಲ್ಲರೂ ಶಾಕ್ ಗೊಳಗಿದ್ದಾರೆ. ಪರಿಣಾಮ ವಧು ಮದುವೆಯಾಗಲು ನಿರಾಕರಿಸಿದ್ದಾಳೆ. ಮದುವೆಯ ವಿಚಾರವಾಗಿ ಎರಡೂ ಕಡೆಯವರ ನಡುವೆ ಸಾಕಷ್ಟು ಜಗಳ ನಡೆದಿದ್ದು, ಪೊಲೀಸರು ಮಧ್ಯಪ್ರವೇಶಿಸಿ ಪ್ರಕರಣವನ್ನು ಇತ್ಯರ್ಥಗೊಳಿಸಿದ್ದಾರೆ. ಇದ... |
17 ವರ್ಷಗಳ ನಂತರ ಭಾರತಕ್ಕೆ ಒಲಿದ 'ವಿಶ್ವಸುಂದರಿ' ಕಿರೀಟ – EESANJE / ಈ ಸಂಜೆ |
17 ವರ್ಷಗಳ ನಂತರ ಭಾರತಕ್ಕೆ ಒಲಿದ 'ವಿಶ್ವಸುಂದರಿ' ಕಿರೀಟ |
November 18, 2017 Sri Raghav Manushi Chhillar crowned Miss World 2017 The, ಮನೂಷಿ ಚಿಲ್ಲರ್, ವಿಶ್ವಸುಂದರಿ |
ಸಾನ್ಯಾ ಸಿಟಿ (ಚೀನಾ). ನ.18 : 17 ವರ್ಷಗಳ ನಂತರ ಭಾರತ ವಿಶ್ವಸುಂದರಿ ಪಟ್ಟ ಭಾರತಕ್ಕೆ ಒಲಿದಿದ್ದು, ಹರ್ಯಾಣದ ಮೆಡಿಕಲ್ ವಿದ್ಯಾರ್ಥಿನಿ ಮನೂಷಿ ಚಿಲ್ಲರ್ 2017 ನೇ ಸಾಲಿನ ವಿಶ್ವಸುಂದರಿಯಾಗಿ ಆಯ್ಕೆಯಾಗಿದ್ದಾಳೆ. ಈ ವಿಶ್ವಸುಂದರಿಗೆ ಈಗ ವಿಶ್ವದಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಮಿಸ್ ಇಂಗ್ಲೆಂಡ್ ಸ್ಟೀಫನ್ ಹಿಲ್ ಮೊದಲ ರನ್ನರ್ ಅಪ್, ಮಿಸ್ ಮೆಕ್ಸಿಕೋ ಆಂಡ್ರಿಯಾ ಮೇಜಾ ಎರಡನ... |
ಸ್ಪರ್ಧೆಯಲ್ಲಿದ್ದ 108 ಸುಂದರಿಯರನ್ನು ಹಿಂದಿಕ್ಕಿ ಮಾನುಷಿ ವಿಶ್ವಸುಂದರಿಯಾಗಿ ಆಯ್ಕೆಯಾಗುವ ಮೂಲಕ ಭಾರತಕ್ಕೆ ಮತ್ತೊಮ್ಮೆ ಈ ಪಟ್ಟ ಗಿಟ್ಟಿಸಿಕೊಟ್ಟಿದ್ದಾಳೆ. |
2000 ಇಸವಿಯಲ್ಲಿ ಪ್ರಿಯಾಂಕಾ ಚೋಪ್ರಾ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ್ದರು. ಹರಿಯಾಣ ನಿವಾಸಿಯಾದ ಮಾನುಷಿ ವೈದ್ಯಕೀಯ ವಿದ್ಯಾರ್ಥಿನಿ. 20ರ ಹರೆಯದ ಈಕೆ ದೆಹಲಿಯ ಸೇಂಟ್ ಥಾಮಸ್ ಸ್ಕೂಲ್‍ನಲ್ಲಿ ವಿದ್ಯಾಭ್ಯಾಸ ಮುಗಿಸಿ ಭಗತ್ ಫೂಲ್ ಸಿಂಗ್ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. ಈ ಸ್ಪರ್ಧೆಯಲ್ಲಿ ಬ್ಯೂಟಿ ವಿತ್ ಎ ಪರ್ಪಸ್ ಎಂಬ ಪಟ್ಟವನ್ನೂ ಮಾನುಷಿ ತಮ್ಮ... |
ರಾಜ್ಯದ ಮಗಳು ಮನೂಷಿ ಚಿಲ್ಲರ್ ಈ ಪ್ರಶಸ್ತಿ ಗೆದ್ದಿದ್ದಕ್ಕೆ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆಂದು ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಮನೂಷಿಯವರನ್ನು ಅಭಿನಂದಿಸಿದ್ದಾರೆ. |
ಕರ್ನಾಟಕ ಪ್ರೀಮಿಯರ್ ಲೀಗ್ 2019: ಎಲ್ಲಾ ತಂಡಗಳ ಸಂಪೂರ್ಣ ವಿವರ ಇಲ್ಲಿದೆ | Karnataka Premier League 2019: Team List of All Seven Franchise - kannada MyKhel |
» ಕರ್ನಾಟಕ ಪ್ರೀಮಿಯರ್ ಲೀಗ್ 2019: ಎಲ್ಲಾ ತಂಡಗಳ ಸಂಪೂರ್ಣ ವಿವರ ಇಲ್ಲಿದೆ |
ಕರ್ನಾಟಕ ಪ್ರೀಮಿಯರ್ ಲೀಗ್ 2019: ಎಲ್ಲಾ ತಂಡಗಳ ಸಂಪೂರ್ಣ ವಿವರ ಇಲ್ಲಿದೆ |
Published: Sunday, July 28, 2019, 16:39 [IST] |
ಬೆಂಗಳೂರು, ಜುಲೈ 28: ವಿವಿಧ ಫ್ರಾಂಚೈಸಿಗಳು ಕರ್ನಾಟಕ ಪ್ರೀಮಿಯರ್ ಲೀಗ್‌ನ 2019ರ ಆವೃತ್ತಿ ಸಲುವಾಗಿ ಜುಲೈ 27ರಂದು (ಶನಿವಾರ) ನಡೆದ ಆಟಗಾರರ ಹರಾಜು ಪ್ರಕ್ರಿಕೆಯಲ್ಲಿ ಹಣದ ಹೊಳೆ ಹರಿಸಿ ತಮ್ಮ ತಮ್ಮ ತಂಡಗಳನ್ನು ರಚಿಸಿಯಾಗಿದೆ. |
ಕಳೆದ ಬಾರಿ ಬೆಂಗಳೂರು ಬ್ಲಾಸ್ಟರ್ಸ್ ಪರ ಆಡಿದ್ದ ಪವನ್ ದೇಶಪಾಂಡೆ ಅವರನ್ನು ಈ ಬಾರಿ ಶಿವಮೊಗ್ಗ ಲಯನ್ಸ್ ತಂಡ ಬರೋಬ್ಬರಿ 7.30 ಲಕ್ಷ ರೂ.ಗಳ ಭಾರಿ ಮೊತ್ತ ನೀಡಿ ತನ್ನ ತೆಕ್ಕೆಗೆ ತೆಗೆದುಕೊಂಡಿರುವುದು ಈ ಬಾರಿಯ ಕೆಪಿಎಲ್ ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆಯ ಪ್ರಮುಖ ಹೈಲೈಟ್ ಆಗಿದೆ. |
ಕೆಪಿಎಲ್ ಹರಾಜು: ಪಾಂಡೆ ಕಡೆಗಣನೆ, ದೇಶಪಾಂಡೆಗೆ ಭಾರಿ ಡಿಮ್ಯಾಂಡ್! |
ಇನ್ನು ರಾಷ್ಟ್ರೀಯ ತಂಡದ ಸೇವೆಗಳಲ್ಲಿ ನಿರತರಾಗಿರುವ ಸ್ಟಾರ್ ಬ್ಯಾಟ್ಸ್‌ಮನ್ ಮನೀಶ್ ಪಾಂಡೆ ಅವರನ್ನು ಮೊದಲಿಗೆ ಯಾವ ತಂಡವೂ ಖರೀದಿಗೆ ಮುಂದಾಗಲಿಲ್ಲ. ಬಳಿಕ ಮರು ಹರಾಜಿನಲ್ಲಿ ಬೆಳಗಾವಿ ಪ್ಯಾಂಥರ್ಸ್ ತಂಡ 2 ಲಕ್ಷ ರೂ. ಮೊತ್ತಕ್ಕೆ ಪಾಂಡೆ ಅವರನ್ನು ತನ್ನತ್ತ ಕರೆದುಕೊಂಡಿದೆ. ಆದರೆ, ಭಾರತ ತಂಡದ ಪರ ಒಡಿಐ ಮತ್ತು ಟಿ20 ತಂಡಗಳಲ್ಲಿ ಸ್ಥಾನ ಪಡೆದಿರುವ ಮನೀಶ್, ಕೆಪಿಎಲ್‌ನಲ್ಲಿ ಎಷ್ಟು ಪಂದ್ಯ... |
ಎಂಟನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ ಆಗಸ್ಟ್ 16ರಂದು ಬೆಂಗಳೂರಿನಲ್ಲಿ ಆರಂಭವಾಗಲಿದ್ದು, ಸೆಪ್ಟೆಂಬರ್ 1ರಂದು ಮೈಸೂರಿನಲ್ಲಿ ಕೊನೆಗೊಳ್ಳಲಿದೆ. ಬೆಂಗಳೂರು, ಹುಬ್ಬಳ್ಳಿ ಮತ್ತು ಮೈಸೂರು ನಗರಗಳು ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ. |
ಇನ್ನು ವಿವಿಧ ತಂಡಗಳು ತಮ್ಮ ತಮ್ಮ ಆಟಗಾರರನ್ನು ಖರೀದಿಸಿಯಾಗಿದ್ದು, ಯಾವ ತಂಡಗಳಲ್ಲಿ ಯಾರೆಲ್ಲಾ ಆಡುತ್ತಿದ್ದಾರೆ ಎಂಬುದರ ಸಂಪೂರ್ಣ ವಿವರವನ್ನು ಮೈಖೇಲ್ ಕನ್ನಡ ಇಲ್ಲಿ ನೀಡಿದೆ. |
ಬೆಂಗಳೂರು ಬ್ಲಾಸ್ಟರ್ಸ್ |
ಕೌಶಿಕ್ ವಿ., ಮನೋಜ್ ಭಾಂಡಗೆ, ರೋಹನ್ ಕದಮ್, ಶರತ್ ಬಿ.ಆರ್ , ಭರತ್ ಡಿ., ಅನಿಲ್ ಐ.ಜಿ., ಆನಂದ್ ದೊಡ್ಡಮನಿ, ಅನುರಾಗ್ ಬಾಜ್ಪಾಯ್, ನಿಕಿನ್ ಜೋಸ್, ನಾಗ ಭರತ್, ನಿಶಾಂತ್ ಸಿಂಗ್ ಶೇಖಾವತ್, ಜೊನಾಥನ್ ಆರ್., ಭರತ್ ಧುರಿ, ಮುತ್ತಣ್ಣ ಚಂದ್ರಶೇಖರ್, ಕಿಶೋರ್ ಕಾಮತ್, ಕುಲ್ದೀಪ್ ಕುಮಾರ್, ರಿಶಿ ಬೋಪಣ್ಣ, ಆದಿತ್ಯ ಗೋಯಲ್. |
ಆಟಗಾರರ ಖರೀದಿಗೆ ಖರ್ಚು ಮಾಡಿದ ಮೊತ್ತ: 28.85 ಲಕ್ಷ ರೂ. |
ಶಿವಮೊಗ್ಗ ಲಯನ್ಸ್ |
ಅಭಿಮನ್ಯ ಮಿಥುನ್, ಪ್ರದೀಪ್ ಟಿ., ಪವನ್ ದೇಶಪಾಂಡೆ, ನಿಹಾಲ್ ಉಲ್ಲಾಳ್, ಪೃಥ್ವಿರಾಜ್ ಶೇಖಾವತ್, ರಿಷಭ್ ಸಿಂಗ್, ರೋಹಿತ್ ಗೌಡ, ಅರ್ಜುನ್ ಹೊಯ್ಸಳ, ಅಕ್ಷಯ್ ಬಲ್ಲಾಳ್, ನಿಧೀಶ್ ಎಂ., ರೋಹಿತ್ ಕೆ., ಪ್ರಶಾಂತ್ ಎಚ್.ಎಸ್, ಹೊಯ್ಸಳ ಕೆ., ಪ್ರದೀಪ್ ಗಂಗಾಧರ್, ಶಿವರಾಜ್ ಎಸ್., ಸುಜಿತ್ ಎನ್. ಗೌಡ, ಎಸ್.ಪಿ ಮಂಜುನಾಥ್. |
ಆಟಗಾರರ ಖರೀದಿಗೆ ಖರ್ಚು ಮಾಡಿದ ಮೊತ್ತ: 27.35 ಲಕ್ಷ ರೂ. |
ಸುಚಿತ್ ಜೆ., ವೈಶಾಖ್ ವಿಜಯ್ ಕುಮಾರ್, ಸಿದ್ಧಾರ್ಥ್ ಕೆ.ವಿ., ಅಮಿತ್ ವರ್ಮಾ, ಅನಿರುದ್ಧ ಜೋಶಿ, ಕುಶಲ್ ಎಂ. ವಾಧ್ವಾನಿ, ವಿನಯ್ ಎನ್ ಸಾಗರ್, ವೆಂಕಟೇಶ್ ಎಂ., ಶೊಯೇಬ್ ಮ್ಯಾನೇಜರ್, ದೇವಯ್ಯ ಕೆ.ಎಸ್, ಸೌರಭ್ ಯಾದವ್, ಮಂಜೇಶ್ ರೆಡ್ಡಿ ಎನ್.ವಿ., ಸಂಕಲ್ಪ್ ಪಿ., ಬಿ.ಯು ಶಿವಶಂಕರ್, ರಾಮ್ ಸಾರಿಕ್ ಯಾದವ್, ಜಯೇಶ್ ಬಾಬು, ಕಿಶನ್ ಬಿದರೆ, ಡಿ. ನಿಶ್ಚಲ್. |
ಆಟಗಾರರ ಖರೀದಿಗೆ ಖರ್ಚು ಮಾಡಿದ ಮೊತ್ತ: 30.00 ಲಕ್ಷ ರೂ. |
ಹುಬ್ಬಳ್ಳಿ ಟೈಗರ್ಸ್ |
ಆರ್. ವಿನಯ್ ಕುಮಾರ್, ಪ್ರವೀಣ್ ದುಬೇ, ಶಿಶಿರ್ ಭವಾನೆ, ಆದಿತ್ಯ ಸೋಮಣ್ಣ, ಮೊಹಮ್ಮದ್ ತಾಹ, ಶಿವಿಲ್ ಕೌಶಿಕ್, ಮಹೇಶ್ ಪಟೇಲ್, ಸೂರಜ್ ಶೇಶಾದ್ರಿ, ಮಿತ್ರಕಾಂತ್ ಯಾದವ್, ವಿಶ್ವನಾಥ್ ಎಂ., ಶ್ರೀಜಿತ್ ಕೆ.ಎಲ್., ಪವನ್ ಕೆ.ಬಿ., ಡೇವಿಡ್ ಮಥಿಯಾಸ್, ವಿದ್ಯಾಧರ್ ಪಾಟಿಲ್, ಅಭಿಲಾಶ್ ಶೆಟ್ಟಿ, ಪರೀಕ್ಷಿತ್ ಶೆಟ್ಟಿ, ಧೀರಜ್ ಶಶಿಧರ್. |
ಆಟಗಾರರ ಖರೀದಿಗೆ ಖರ್ಚು ಮಾಡಿದ ಮೊತ್ತ: 29.25 ಲಕ್ಷ ರೂ. |
ಸಿ.ಎಂ. ಗೌತಮ್, ದೇವದತ್ ಪಡಿಕಲ್, ಗೌತಮ್ ಕೆ., ಅಭಿಷೇಕ್ ರೆಡ್ಡಿ, ಕಾರ್ತಿಕ್ ಸಿ.ಎ., ಪ್ರಸಿಧ್ ಕೃಷ್ಣ, ಅಬ್ರಾರ್ ಖಾಝಿ, ಕೆ.ಪಿ ಅಪ್ಪಣ್ಣ, ಝೀಶಾನ್ ಅಲಿ ಸೈಯದ್, ಮೊಹಮ್ಮದ್ ನಿಯಾಸ್ ನಿಝಾರ್, ಭವೇಶ್ ಗುಲೇಚ, ರುಚಿರ್ ಜೋಶಿ, ಸ್ಯಾಂತೋಕ್ ಸಿಂಗ್, ವಿಷ್ಣು ಪ್ರಿಯನ್, ಗೌರವ್ ಧಿಮಾನ್, ಶರತ್ ಶ್ರೀನಿವಾಸ್, ಸೂರಜ್ ರೆಡ್ಡಿ, ಶರಣ ಬಸವ. |
ಆಟಗಾರರ ಖರೀದಿಗೆ ಖರ್ಚು ಮಾಡಿದ ಮೊತ್ತ: 28.65 ಲಕ್ಷ ರೂ. |
ಬಿಜಾಪುರ್ ಬುಲ್ಸ್ |
ಭರತ್ ಚಿಪ್ಲಿ, ಕೆ.ಚಿ ಕಾರಿಯಪ್ಪ, ಪ್ರತೀಕ್ ಜೈನ್, ನವೀನ್ ಎಂ.ಜಿ., ಪ್ರಣವ್ ಭಾಟಿಯಾ, ಶಿಮೊನ್ ಲೂಯ್ಝ್, ಬಿ.ಎ. ಮೋಹಿತ್, ಜಿ.ಎಸ್ ಚಿರಂಜೀವಿ, ಸ್ವಪ್ನಿಲ್ ಶಿವಾಜಿ ಯೆಳವೆ, ಸುನಿಲ್ ರಾಜು, ಸಮರ್ಥ್ ಊಟಿ, ಲಿಯಾನ್ ಖಾನ್, ಭರತ್ ಎಂ.ಪಿ., ಪಿ. ಪ್ರವೀಣ್ ಕುಮಾರ್, ಸೂರಜ್ ಕಾಮತ್, ಎಸ್.ಎಲ್ ಅಕ್ಷಯ್, ಜಶ್ವಂತ್ ಆಚಾರ್ಯ, ರಾಜೂ ಭಟ್ಕಳ್. |
ಆಟಗಾರರ ಖರೀದಿಗೆ ಖರ್ಚು ಮಾಡಿದ ಮೊತ್ತ: 27.10 ಲಕ್ಷ ರೂ. |
ಶುಭಾಂಗ್ ಹಗಡೆ, ದಿಕ್ಷಾನ್ಷು ನೇಗಿ, ಸ್ಟ್ಯಾಲಿನ್ ಹೂವರ್, ಆರ್. ಸಮರ್ಥ್, ಮನೀಶ್ ಪಾಂಡೆ, ಅವಿನಾಶ್ ಡಿ., ರಿತೇಶ್ ಭಟ್ಕಳ್, ಎ.ಎಮ್ ಕಿರಣ್, ಎಸ್ ರಕ್ಷಿತ್, ಅಭಿನವ್ ಮನೋಹರ್, ಮಿರ್ ಕೌನೇನ್ ಅಬ್ಬಾಸ್, ಅಬ್ದುಲ್ ಮಾಜಿದ್, ಅರ್ಶ್ ದೀಪ್ ಬ್ರಾರ್, ಎಂ.ಬಿ ದರ್ಶನ್, ಶರಣ್ ಗೌಡ, ಲೋಚನ್ ಅಪ್ಪಣ್ಣ, ಬಿ.ಒ ದರ್ಶನ್ ಮಾಚಯ್ಯ, ಝಹೂರ್ ಫಾರೂಕಿ. |
ಆಟಗಾರರ ಖರೀದಿಗೆ ಖರ್ಚು ಮಾಡಿದ ಮೊತ್ತ: 28.70 ಲಕ್ಷ ರೂ. |
More ಕರ್ನಾಟಕ ಪ್ರೀಮಿಯರ್ ಲೀಗ್ News |
ಕೆಪಿಎಲ್‌ಗೆ ರಾಕ್‌ಸ್ಟಾರ್ಸ್ ತಂಡ ಮರಳುವ ಸುಳಿವು ಕೊಟ್ಟ ಕಿಚ್ಚ ಸುದೀಪ್ |
8ನೇ ಆವೃತ್ತಿಯ ಕೆಪಿಎಲ್ ಟಿ20 ಕದನ: ಜು.27ರಂದು ಆಟಗಾರರ ಹರಾಜು |
ಬೆಂಗಳೂರಿಗೆ ಹಿಂದಿರುಗಿದ ಕರ್ನಾಟಕ ಪ್ರೀಮಿಯರ್ ಲೀಗ್ |
ಕೆಪಿಎಲ್ ಫಿಕ್ಸಿಂಗ್: ಬೆಳಗಾವಿ ಪ್ಯಾಂಥರ್ಸ್ ಕೋಚ್ ಸುಧೀಂದ್ರ ಶಿಂಧೆ ಬಂಧನ |
Read more about: ಕರ್ನಾಟಕ ಪ್ರೀಮಿಯರ್ ಲೀಗ್ karnataka premier league ಕೆಪಿಎಲ್ 2019 kpl 2019 ಟಿ20 t20 ಕ್ರಿಕೆಟ್ cricket ಕೆಎಸ್‌ಸಿಎ ksca player auction ಆಟಗಾರರ ಹರಾಜು |
ಉಕ್ಕಿನ ಸೇತುವೆ ಕಾಮಗಾರಿ ಚುರುಕು | Udayavani – ಉದಯವಾಣಿ |
Friday, 26 Feb 2021 | UPDATED: 01:27 AM IST |
ಉಕ್ಕಿನ ಸೇತುವೆ ಕಾಮಗಾರಿ ಚುರುಕು |
Team Udayavani, Sep 5, 2018, 12:11 PM IST |
ಯೋಜನೆ – 1 |
ಯೋಜನೆ: ಓಕಳಿಪುರ ಜಂಕ್ಷನ್ ಅಷ್ಟಪಥ |
ವಿವರ: ದೇವರಾಜ ಅರಸು ವೃತ್ತದಿಂದ ಓಕಳಿಪುರ ವೃತ್ತದವರೆಗಿನ ಎಂಟು ಪಥದ ಸಿಗ್ನಲ್ ಮುಕ್ತ ಕಾರಿಡಾರ್ ಯೋಜನೆ. ಈ ಯೋಜನೆಯಿಂದ ಗುಬ್ಬಿ ತೋಟದಪ್ಪ ರಸ್ತೆ, ಶೇಷಾದ್ರಿ ರಸ್ತೆ, ಓಕಳಿಪುರ ರಸ್ತೆ ಹಾಗೂ ಕೃಷ್ಣಮಿಲ್ ರಸ್ತೆಗಳಲ್ಲಿನ ಸಂಚಾರ ಸಿಗ್ನಲ್ ಮುಕ್ತವಾಗಲಿದೆ. |
ಕಾಮಗಾರಿ ಆರಂಭ ದಿನಾಂಕ: 14 ಜುಲೈ 2016 |
ಕಾಮಗಾರಿ ಅವಧಿ: 18 ತಿಂಗಳು |
ಈವರೆಗಿನ ಪ್ರಗತಿ: ಶೇ.78 |
ಯೋಜನಾ ವೆಚ್ಚ: 102.84 ಕೋಟಿ ರೂ. |
ಕಾಮಗಾರಿ ಪೂರ್ಣಗೊಳ್ಳಬೇಕಾದ ದಿನಾಂಕ: 31 ಡಿಸೆಂಬರ್ 2017 |
ಗುತ್ತಿಗೆದಾರ: ಸಿಂಪ್ಲೆಕ್ಸ್ ಇನ್‌ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ |
ಈ ತಿಂಗಳ ಅಪ್‌ಡೇಟ್: ಆರ್.ಆರ್.ಕಲ್ಯಾಣ ಮಂಟಪದ ಬಳಿಯ ರೈಲ್ವೆ ಹಳಿಗೆ ಒಂದು ಕಾಂಕ್ರಿಟ್ ಎಲಿಮೆಂಟ್ ಅಳವಡಿಕೆ ಪೂರ್ಣಗೊಂಡಿದ್ದು, ಕೋಡೆ ವೃತ್ತ ಕಡೆಗೆ ಹೋಗುವ ರಸ್ತೆಯ ರೈಲ್ವೆ ಹಳಿಗೆ ಎರಡು ಕಾಂಕ್ರಿಟ್ ಎಲಿಮೆಂಟ್ ಅಳವಡಿಸಲಾಗಿದೆ. |
ವಸ್ತುಸ್ಥಿತಿ: ಮಳೆ ಹಾಗೂ ಕೆಲ ತಾಂತ್ರಿಕ ಕಾರಣಗಳಿಂದ ಕಾಮಗಾರಿ ವಿಳಂಬವಾಗುತ್ತಿದ್ದು, ಕಳೆದ ತಿಂಗಳಿಗೆ ಹೋಲಿಕೆ ಮಾಡಿದರೆ ಕೇವಲ ಶೇ.2ರಷ್ಟು ಪ್ರಗತಿಯಾಗಿದೆ. ಎರಡು ಕಡೆಗಳಲ್ಲಿ ರೈಲ್ವೆ ಹಳಿಗಳಿಗೆ ಮೂರು ಕಾಂಕ್ರಿಟ್ ಎಲಿಮೆಂಟ್‌ಗಳ ಅಳವಡಿಕೆ ಕಾರ್ಯ ಬಾಕಿಯಿದೆ. |
ಕೋಡೆ ವೃತ್ತ ಹಾಗೂ ಆರ್.ಆರ್.ಕಲ್ಯಾಣ ಮಂಟಪದ ಬಳಿಯ ರೈಲ್ವೆ ಹಳಿಗಳಿಗೆ ಒಟ್ಟು 10 ಕಾಂಕ್ರಿಟ್ ಎಲಿಮೆಂಟ್ ಅಳವಡಿಸಬೇಕಿದ್ದು, ಈಗಾಗಲೇ 7 ಎಲಿಮೆಂಟ್ ಅಳವಡಿಕೆ ಪೂರ್ಣಗೊಂಡಿದೆ. ಉಳಿದ ಮೂರು ಎಲಿಮೆಂಟ್‌ಗಳನ್ನು ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು. ಜತೆಗೆ ಮಲ್ಲೇಶ್ವರದಿಂದ ರೈಲ್ವೆ ನಿಲ್ದಾಣದ ಸಂಪರ್ಕ ಕಲ್ಪಿಸುವ ಲೂಪ್-2 ನಿರ್ಮಿಸಲು ಸಂಚಾರ ಬದಲಿಸಬೇಕಿದೆ ಎಂದು ಎಂದು ಸಹಾಯಕ ಇಂಜಿನಿಯರ್ ತಿ... |
ಯೋಜನೆ -2 |
ಯೋಜನೆ: ಬಹುಮಹಡಿ ವಾಹನ ನಿಲುಗಡೆ ತಾಣ |
ವಿವರ: ನಗರದಲ್ಲಿನ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಪಾಲಿಕೆಯಿಂದ ಗಾಂಧಿನಗರದ ಫ್ರೀಡಂ ಪಾರ್ಕ್‌ನಲ್ಲಿ ಬಹುಮಹಡಿ ವಾಹನ ನಿಲುಗಡೆ ತಾಣ ನಿರ್ಮಿಸಲಾಗುತ್ತಿದ್ದು, ಕಾಮಗಾರಿ ಪೂರ್ಣಗೊಂಡ ನಂತರ 556 ಕಾರುಗಳು ಮತ್ತು 500 ದ್ವಿಚಕ್ರ ವಾಹನಗಳ ನಿಲುಗಡೆ ಮಾಡಬಹುದಾಗಿದೆ. |
ಕಾರ್ಯಾದೇಶ ನೀಡಿದ ದಿನಾಂಕ: 24 ಜೂನ್ 2015 |
ಕಾಮಗಾರಿ ಆರಂಭ ದಿನಾಂಕ: 30 ಜೂನ್ 2018 |
ಕಾಮಗಾರಿ ಅವಧಿ: 24 ತಿಂಗಳು |
Subsets and Splits
No community queries yet
The top public SQL queries from the community will appear here once available.