text stringlengths 0 61.5k |
|---|
ಈವರೆಗಿನ ಪ್ರಗತಿ: ಶೇ.50 |
ಅಂದಾಜು ವೆಚ್ಚ: 44.80 ಕೋಟಿ ರೂ. |
ಯೋಜನಾ ವೆಚ್ಚ: 79.81 ಕೋಟಿ ರೂ. |
ಕಾಮಗಾರಿ ಪೂರ್ಣಗೊಳ್ಳಬೇಕಾದ ದಿನಾಂಕ: 30 ಜೂನ್ 2018 |
ಗುತ್ತಿಗೆದಾರ: ಕೆಎಂವಿ ಪ್ರಾಜೆಕ್ಟ್ |
ಈ ತಿಂಗಳ ಪ್ರಗತಿ: ನಾಲ್ಕು ಹಂತಗಳ ಪೈಕಿ ಮೂರನೇ ಹಂತದ -3ರ ಕಾಮಗಾರಿ ಪ್ರಗತಿಯಲ್ಲಿದೆ. ಇದರೊಂದಿಗೆ ಮೂರು ಮಹಡಿಗಳಿಗೆ ಸಂಪರ್ಕ ಕಲ್ಪಿಸುವ ರ್‍ಯಾಂಪ್‌ಗ್ಳ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. |
ವಸ್ತುಸ್ಥಿತಿ: ನಾಲ್ಕು ಹಂತಗಳ ಕಾಮಗಾರಿಯ ಪೈಕಿ ಎರಡು ಹಂತಗಳು ಪೂರ್ಣಗೊಂಡಿದ್ದು, ಒಂದು ಮಹಡಿ ಬಳಕೆಗೆ ಸಿದ್ಧವಿದೆ. ಆದರೆ, ಅಧಿಕಾರಿಗಳು ಈವರೆಗೆ ಟೆಂಡರ್ ಆಹ್ವಾನಿಸಲು ಮುಂದಾಗಿಲ್ಲ. ಉಳಿದಂತೆ ಮೂರನೇ ಹಂತದ -3ರ ಮಹಡಿಯ ಪಾಯ ಕಾಮಗಾರಿ ಪೂರ್ಣಗೊಂಡಿದೆ. |
ಮೂರನೇ ಹಂತದ -3 ಮಹಡಿ ಕಾಮಗಾರಿ ಪ್ರಗತಿಯಲ್ಲಿದ್ದು, ಮೂರು ಮಹಡಿಗಳಿಗೆ ಸಂಪರ್ಕಿಸುವ ರ್‍ಯಾಂಪ್‌ಗ್ಳನ್ನು ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಒಟ್ಟಾರೆಯಾಗಿ ಮುಂದಿನ ಜೂನ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಪಾಲಿಕೆಯ ಎಂಜಿನಿಯರ್ ಮಾಹಿತಿ ನೀಡಿದರು. |
ಯೋಜನೆ – 3 |
ಯೋಜನೆ: ಮುತ್ತುರಾಜ ಜಂಕ್ಷನ್ ಅಂಡರ್ ಪಾಸ್ |
ವಿವರ: ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಮೈಸೂರು ರಸ್ತೆ ಜಂಕ್ಷನ್‌ವರೆಗೆ ಸಿಗ್ನಲ್ ಮುಕ್ತ ಕಾರಿಡಾರ್ ನಿರ್ಮಿಸುವ ಉದ್ದೇಶದಿಂದ ಮುತ್ತುರಾಜ ಜಂಕ್ಷನ್, ಫುಡ್ ವರ್ಲ್ಡ್ ಜಂಕ್ಷನ್ ಹಾಗೂ ಜೇಡಿಮರ ಜಂಕ್ಷನ್‌ಗಳಲ್ಲಿ ಅಂಡರ್‌ಪಾಸ್ ಮತ್ತು ಡಾಲರ್ ಕಾಲೋನಿ, ಹೊಸಕೆರೆ ಹಳ್ಳಿಯ ಕೆಇಬಿ ಜಂಕ್ಷನ್‌ಗಳಲ್ಲಿ ಮೇಲ್ಸೇತುವೆ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. |
ಕಾರ್ಯಾದೇಶ ನೀಡಿದ ದಿನಾಂಕ: 01 ಸೆಪ್ಟಂಬರ್ 2015 |
ಕಾಮಗಾರಿ ಆರಂಭ ದಿನಾಂಕ: ಜನವರಿ 2016 |
ಈವರೆಗಿನ ಪ್ರಗತಿ: ಶೇ.32 |
ಅಂದಾಜು ವೆಚ್ಚ: 190 ಕೋಟಿ ರೂ. |
ಯೋಜನಾ ವೆಚ್ಚ: 154.42 ಕೋಟಿ ರೂ. |
ಗುತ್ತಿಗೆದಾರ: ಎಂವಿಆರ್ ಇನ್ಫಾ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ |
ಈ ತಿಂಗಳ ಪ್ರಗತಿ: ಅಂಡರ್‌ಪಾಸ್ ಕಾಮಗಾರಿಗಾಗಿ ಈಗಾಗಲೇ ಸುಮಾರು 20 ಅಡಿಗಳಷ್ಟು ಮಣ್ಣು ಅಗೆಯಲಾಗಿದ್ದು, ಅಂಡರ್‌ಪಾಸ್ ತಡೆಗೋಡೆಗಳ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇನ್ನು ಕಾಮಗಾರಿಗೆ ಅಡ್ಡವಾಗಿರುವ ಬೃಹತ್ ಬಂಡೆಯನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಬ್ಲಾಸ್ಟ್ ಮಾಡುವ ಕೆಲಸ ಪ್ರಗತಿಯಲ್ಲಿದೆ. |
ವಸ್ತುಸ್ಥಿತಿ: ಒಂದು ತಿಂಗಳ ಹಿಂದಿನಿಂದ ಕಾಮಗಾರಿ ಮರು ಚಾಲನೆ ಪಡೆದಿದ್ದು, ಕಳೆದ ತಿಂಗಳಿಗೆ ಹೋಲಿಸಿದರೆ ಹೆಚ್ಚಿನ ಪ್ರಗತಿಯಾಗಿಲ್ಲ. ಆ ಹಿನ್ನೆಲೆಯಲ್ಲಿ ಇತ್ತೀಚೆಗೆ ಮೇಯರ್ ಸಹ ಸ್ಥಳ ಪರಿಶೀಲಿಸಿ ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. |
ಕಾಮಗಾರಿಗೆ ದೊಡ್ಡಬಂಡೆ ಅಡ್ಡಬಂದಿರುವುದರಿಂದ ಕಾಮಗಾರಿ ವಿಳಂಬವಾಗಿತ್ತು. ಇದೀಗ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಕಾಮಗಾರಿ ಬಂಡೆ ಹೊಡೆಯಲಾಗುತ್ತಿದ್ದು, ಈಗಾಗಲೇ ಅಂಡರ್‌ಪಾಸ್ ತಡೆಗೋಡೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಸುಮಾರು 120 ಮೀಟರ್‌ನಷ್ಟು ತಡೆಗೋಡೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. |
ಯೋಜನೆ – 4 |
ಯೋಜನೆ: ಶಿವಾನಂದ ವೃತ್ತದ ಉಕ್ಕಿನ ಸೇತುವೆ |
ವಿವರ: ರೇಸ್‌ಕೋರ್ಸ್ ರಸ್ತೆಯ ಕಡೆಯಿಂದ ಹರೆಕೃಷ್ಣ ರಸ್ತೆಯವರೆಗೆ 326.25 ಮೀಟರ್ ಉದ್ದದ ಉಕ್ಕಿನ ನಿರ್ಮಿಸುವುದು ಯೋಜನೆಯ ಉದ್ದೇಶವಾಗಿದ್ದು, ಇದರಿಂದ ರೇಸ್‌ಕೋರ್ಸ್ ಕಡೆಯಿಂದ ಶೇಷಾದ್ರಿಪುರ ರೈಲ್ವೆ ಕೆಳಸೇತುವೆ ಕಡೆಗೆ ಹೋಗುವ ಹಾಗೂ ಆ ಕಡೆಯಿಂದ ಬರುವವರಿಗೆ ದಟ್ಟಣೆ ಸಮಸ್ಯೆ ಎದುರಾಗುವುದಿಲ್ಲ. |
ಕಾರ್ಯಾದೇಶ ನೀಡಿದ ದಿನಾಂಕ: 30 ಜೂನ್ 2017 |
ಈವರೆಗಿನ ಪ್ರಗತಿ: ಶೇ.20 |
ಭೂಸ್ವಾಧೀನ ವೆಚ್ಚ: 50 ಕೋಟಿ ರೂ. |
ಯೋಜನಾ ವೆಚ್ಚ: 21.76 ಕೋಟಿ ರೂ. |
ಕಾಮಗಾರಿ ಪೂರ್ಣಗೊಳ್ಳಬೇಕಾದ ದಿನಾಂಕ: 04 ನವೆಂಬರ್ 2019 |
ಗುತ್ತಿಗೆದಾರ: ಎಂ.ವೆಂಕಟರಾವ್ ಇನ್ಫಾ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ |
ಈ ತಿಂಗಳ ಪ್ರಗತಿ: ಉಕ್ಕಿನ ಸೇತುವೆಗಾಗಿ ಕಾಂಕ್ರಿಟ್ ಪಿಲ್ಲರ್‌ಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಈಗಾಗಲೇ 4 ರಿಂದ 5 ಪಿಲ್ಲರ್‌ಗಳನ್ನು ನಿರ್ಮಿಸಲಾಗಿದೆ. ಜತೆಗೆ ಮೈಸೂರು ರಸ್ತೆಯಲ್ಲಿ ಸ್ಟೀಲ್ ಫ್ಯಾಬ್ರಿಕೇಷನ್ ಕಾರ್ಯ ನಡೆಸಲಾಗುತ್ತಿದೆ. |
ವಸ್ತುಸ್ಥಿತಿ: ಶಿವಾನಂದ ಉಕ್ಕಿನ ಸೇತುವೆ ಯೋಜನೆಗಾಗಿ ಒಟ್ಟು 16 ಪಿಲ್ಲರ್‌ಗಳನ್ನು ನಿರ್ಮಿಸಬೇಕಿದ್ದು, ಈಗಾಗಲೇ 4 ಪಿಲ್ಲರ್‌ಗಳ ಕಾಮಗಾರಿ ಪೂರ್ಣಗೊಂಡಿದ್ದು, ಮೂರು ಪಿಲ್ಲರ್‌ಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಜತೆಗೆ ಉಕ್ಕಿನ ಸೇತುವೆಗಾಗಿ ಸ್ಟೀಲ್ ಸಿದ್ಧಪಡಿಸಲಾಗುತ್ತಿದೆ. |
ಉಕ್ಕಿನ ಸೇತುವೆ ನಿರ್ಮಾಣ ಯೋಜನೆ ವೇಗ ಪಡೆದುಕೊಂಡಿದ್ದು, ಕಳೆದೊಂದು ತಿಂಗಳಲ್ಲಿ 3 ಪಿಲ್ಲರ್‌ಗಳ ಕಾಮಗಾರಿ ನಡೆಸಿದ್ದೇವೆ. ಇದರೊಂದಿಗೆ ಸೇತುವೆ ನಿರ್ಮಾಣ ಅಗತ್ಯ ಸ್ವೀಲ್‌ನ್ನು ಫ್ಯಾಬ್ರಿಕೇಷನ್ ಮಾಡಲಾಗುತ್ತಿದ್ದು, ಪಿಲ್ಲರ್‌ಗಳ ನಿರ್ಮಾಣ ಕಾರ್ಯ ಪೂರ್ಣಗೊಂಡ ನಂತರದಲ್ಲಿ ಅದನ್ನು ತಂದು ಜೋಡಿಸಲಾಗುವುದು ಎಂದು ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್ ಮಾಹಿತಿ ನೀಡಿದರು. |
ಉಜಿರೆಯ ಖಾಸಗಿ ಪ.ಪೂ ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆ | ಸುದ್ದಿ ಬೆಳ್ತಂಗಡಿ |
ಕಳೆಂಜ ಗ್ರಾಮದ ಕಾಟ್ಲಾಜೆ ಮನೆ ನೋಣಯ್ಯ ಗೌಡ ಮತ್ತು ಹರಿಣಾಕ್ಷಿ ದಂಪತಿಯ ಏಕೈಕ ಪುತ್ರಿ ಉಜಿರೆ ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷದ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾದ ಕು| ಸುನೀತಾ (16.ವ) ರವರು ಸೆ. 3 ರಂದು ಬೆಳಿಗ್ಗೆ ತಮ್ಮ ಸ್ವಗೃಹದಲ್ಲಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. |
ಸುನೀತಾ ರವರು ಪುತ್ತೂರು ಕೊಂಬೆಟ್ಟು ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದಿದ್ದು, ಪ್ರಥಮ ಪಿಯುಸಿಯಲ್ಲಿ ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿದ್ದರು. ಇತ್ತೀಚೆಗೆ ನಡೆದಿದ್ದ ಸೆಮಿಸ್ಟರ್ ಪರೀಕ್ಷೆಯಲ್ಲಿ ಕಡಿಮೆ ಅಂಕಗಳು ಲಭಿಸಿದ್ದ ಹಿನ್ನೆಲೆಯಲ್ಲಿ ನೊಂದು ಅವರು ಈ ಕೃತ್ಯವೆಸಗಿರಬಹುದು ಎಂದು ಶಂಕಿಸಲಾಗಿದೆ. ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ದೇರಳಕಟ್ಟೆ ಖಾಸಗಿ ಆಸ... |
ರಾಧಿಕಾ ಪಂಡಿತ್ ಸೀಮಂತ ಕಾರ್ಯಕ್ರಮ ಹೇಗಿತ್ತು ಗೊತ್ತಾ..? |
Mon Mar 01 2021 22:29:23 GMT+0000 (Coordinated Universal Time) |
TV5 Kannada18 Nov 2018 8:35 AM GMT |
ಬೆಂಗಳೂರು: ನಗರದ ತಾಜ್ ವೆಸ್ಟೆಂಡ್ ಹೊಟೇಲ್‌ನಲ್ಲಿಂದು ರಾಧಿಕಾ ಪಂಡಿತ್ ಸೀಮಂತ ಕಾರ್ಯಕ್ರಮ ನೆರವೇರಿದ್ದು, ಸ್ಯಾಂಡಲ್‌ವುಡ್ ಗಣ್ಯರೆಲ್ಲ ಆಗಮಿಸಿ, ಶುಭಕೋರಿದ್ದಾರೆ. |
ಹಿರಿಯ ನಟಿ ಜಯಂತಿ, ಅಂಬರೀಶ್ , ನಿರ್ದೇಶಕ ಯೋಗ ರಾಜ್ ಭಟ್ ಫ್ಯಾಮಿಲಿ, ರವಿಚಂದ್ರನ್ ಪತ್ನಿ , ತಾರ, ಸುಧಾರಾಣಿ , ನಿರ್ದೇಶಕ ಎ. ಹರ್ಷ, ನಿರ್ಮಾಪಕ ಕೆ.ಮಂಜು, ಕಿರುತೆರೆ ಕಲಾವಿದರು ಸೇರಿದಂತೆ ಸಾಕಷ್ಟು ಮಂದಿ ರಾಧಿಕಾ ಪಂಡಿತ್ ಸೀಮಂತಕ್ಕೆ ಆಗಮಿಸಿದ್ದರು. |
ವಿಶೇಷವೆಂದರೆ ಗಾಲಿ ಜನಾರ್ಧನ ರೆಡ್ಡಿ ಕೂಡ ರಾಧಿಕಾ ಸೀಮಂತ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಗೌಡರ ಸಂಪ್ರದಾಯದಂತೆ ಸೀಮಂತ ಕಾರ್ಯಕ್ರಮ ನಡೆದಿದ್ದು, ಯಶ್-ರಾಧಿಕಾ ಮದುವೆಯಾದ ಸ್ಥಳದಲ್ಲೇ ಸೀಮಂತ ಶಾಸ್ತ್ರ ನಡೆದಿದ್ದು ಇನ್ನೊಂದು ವಿಶೇಷ. |
ಕಾರ್ಯಕ್ರಮದಲ್ಲಿ ಗೌಡರ ಸಂಪ್ರದಾಯದಂತೆ, ದಕ್ಷಿಣ ಭಾರತ ಶೈಲಿಯ ಖಾದ್ಯ ತಯಾರಿಸಲಾಗಿತ್ತು. ಇನ್ನು ಅಮ್ಮನಾಗುವ ಖುಷಿಯಲ್ಲಿರುವ ರಾಧಿಕಾ ಪಂಡಿತ,ಹಸಿರು ರೇಷ್ಮೆ ಸೀರೆಯಲ್ಲಿ ಕಂಗೊಳಿಸುತ್ತಿದ್ದರು. |
ಯಶ್, ರಾಧಿಕಾ ಡಿಸೆಂಬರ್ 9 ರಂದು ಮದುವೆ ಆಗಿದ್ದು, ಇದೇ ದಿನ ಮಗುವಿನ ಜನನಕ್ಕೆ ವೈದ್ಯರು ಡೇಟ್ ಕೊಟ್ಟಿದ್ದಾರೆ. ಡಿಸೆಂಬರ್ 9ಕ್ಕೆ ಜೂನಿಯರ್ ರಾಕಿಂಗ್ ಸ್ಟಾರ್ ಬರ್ತಾನಾ..? ಅಥವಾ ಪುಟಾಣಿ ಪ್ರಿನ್ಸೆಸ್ ಬರ್ತಾಳಾ?.. ಕಾದು ನೋಡಬೇಕಿದೆ. |
baby shower ceremony Bengaluru celebrities kannada film industry kannada news today karnataka news today radhika pandith Sandalwood taj westend top news top5 topnews tv5 kannada tv5 kannada live tv5 kannada news tv5 live yash |
ಇನ್ನು ಮುಂದೆ ಕಾಲು ಮೇಲೆ ಕಾಲು ಹಾಕಿ ಕುಳಿತುಕೊಳ್ಳುವ ಮುನ್ನ ಯೋಚಿಸಿ!!! - TheNewsism \n |
Home ಉಪಯುಕ್ತ ಜಾಗೃತಿ ಇನ್ನು ಮುಂದೆ ಕಾಲು ಮೇಲೆ ಕಾಲು ಹಾಕಿ ಕುಳಿತುಕೊಳ್ಳುವ ಮುನ್ನ ಯೋಚಿಸಿ!!! |
Also read: ಗ್ರಾಹಕರೆ ಜಾಗೃತರಾಗಿರಿ, ಹಣ್ಣು ಕೋಳ್ಳುವ ಮುನ್ನ ಒಮ್ಮೆ ಯೋಚಿಸಿ! |
ಮಹಿಳೆಯರು ಈ ರೀತಿಯಾದ ಭಂಗಿಯಲ್ಲಿ ಕುಳಿತುಕೊಳ್ಳುವುದು ಸರ್ವೇಸಾಮಾನ್ಯ. ಈ ರೀತಿಯದಾಗಿ ಕುಳಿತುಕೊಳ್ಳುವುದರಿಂದ ಆಗುವ ದುಷ್ಪರಿಣಾಮಗಳು. |
Also read: Zomato ಡೆಲಿವರಿ ಮಾಡುವವನ ವೈರಲ್ ವೀಡಿಯೊ ಹಿಂದಿರೋ ಸತ್ಯ ತಿಳಿದರೆ, ನಿಮಗೂ ಕೂಡ ಆ ವ್ಯಕ್ತಿಯ ಮೇಲೆ ಅನುಕಂಪ ಮೂಡುತ್ತದೆ!! |
1. ಈ ರೀತಿ ಕುಳಿತುಕೊಳ್ಳುವಾಗ ಸೊಂಟದ ಭಾಗದ ಎಲುಬುಗಳ ಸ್ನಾಯುಗಳು ಒಂದು ಬದಿಯಲ್ಲಿ ಸಂಕುಚಿತಗೊಂಡರೆ ಇನ್ನೊಂದು ಬದಿಯಲ್ಲಿ ವಿಕಸನಗೊಳ್ಳುತ್ತವೆ. |
2.ಈ ಭಂಗಿಯಲ್ಲಿ ಕುಳಿತು ಸುದೀರ್ಘವಾಗಿ ಕಾರ್ಯನಿರ್ವಹಿಸಿದ ನಂತರ ಕುರ್ಚಿಯಿಂದ ಏಳುವಾಗ ಸ್ನಾಯುಗಳು ಸಾಮಾನ್ಯ ಸ್ಥಿತಿಗೆ ಬರಲು ಸ್ವಲ್ಪ ಸಮಯ ಬೇಕಾಗುತ್ತದೆ. ಇದರಿಂದಾಗಿ ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. |
3.ಭುಜ ಮತ್ತು ಬೆನ್ನಿನ ಕೆಳಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. |
4. ಈ ರೀತಿ ಕುಳಿತುಕೊಳ್ಳುವದರಿಂದ peroneal ನರ ಪಾರ್ಶ್ವವಾಯು ಅಥವಾ ಲಕ್ವ ಹೊಡೆಯುವ ಅವಕಾಶವಿರುತ್ತದೆ. |
5. ನಿಮ್ಮ ದೇಹದ ರಕ್ತದ ಒತ್ತಡವು ಏರುತ್ತದೆ. ಇದರಿಂದಾಗಿ ನಿಮ್ಮ ಹೃದಯ ಔಟ್ ಪಂಪ್ ಮಾಡುವುದರ ಮೇಲೆ ಪರಿಣಾಮ ಬೀರುತ್ತದೆ ಮತ್ತು ಮತ್ತಷ್ಟು ರಕ್ತಪರಿಚಲನೆಯ ತೊಂದರೆಗಳು ಉಂಟಾಗಬಹುದು. |
6. ಈ ರೀತಿಯಾದ ಭಂಗಿಇಂದಾಗಿ ಕಾಲುಗಳ ಸ್ನಾಯುಗಳ ಶ್ರೋಣಿಯ ಅಸಮತೋಲನಕ್ಕೆ ಕಾರಣವಾಗಬಹುದು. ದೀರ್ಘಕಾಲದ ಕಾಲು ಅಡ್ಡವಾಗಿ ಹಾಕುವುದರಿಂದ ಹೊರ ತೊಡೆಯ ಸ್ನಾಯು ಮುಂದೆ ಒಳ ತೊಡೆಯ ಸ್ನಾಯುವನ್ನು ಕಡಿಮೆ ಮಾಡುತ್ತದೆ ಮತ್ತು, ಮತ್ತು ಆ ಸ್ಥಳದ ರಕ್ತ ಪರಿಚಲನದಲ್ಲಿ ವ್ಯತಾಸವಾಗುತ್ತದೆ ಇದರಿಂದಾಗಿ ನಿಮ್ಮ ಕೀಲುಗಳ ಸಮಸ್ಯೆ ಎದುರಿಸಬೇಕಾಗುತ್ತದೆ. |
ದಿನವಿಡೀ ಕುರ್ಚಿಯಲ್ಲಿ ಕುಳಿತುಕೊಂಡು ಕೆಲಸಮಾಡುವುದು ತುಂಬಾ ಆರಾಮದಾಯಕ ಎಂದು ಆಲೋಚಿಸುವವರೆಲ್ಲಾ ಇನ್ನು ಮುಂದೆ ಕುಳಿತುಕೊಳ್ಳುವ ಮುನ್ನ ಯೋಚಿಸಬೇಕು. ನಮ್ಮ ದೇಹದ ಆರೋಗ್ಯ ನಾವು ಕುಳಿತುಕೊಳ್ಳುವ ಭಂಗಿಯಲ್ಲಿದೆ! |
ಹೊಸ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹೊಂದಲಿವೆ ಟಾಟಾ ಕಾರುಗಳು - Kannada DriveSpark |
ಹೊಸ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹೊಂದಲಿವೆ ಟಾಟಾ ಕಾರುಗಳು |
Updated: Tuesday, October 1, 2019, 9:20 [IST] |
ಟಾಟಾ ಮೋಟಾರ್ಸ್ ತನ್ನ ಟಿಯಾಗೋ ಹ್ಯಾಚ್‍ಬ್ಯಾಕ್ ಮತ್ತು ಟಿಗೋರ್ ಸೆಡಾನ್ ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೋಮೆಂಟ್ ಕ್ಲಸ್ಟರ್ ಅನ್ನು ಅಪ್‍ಡೇಟ್ ಮಾಡುವ ಪಕ್ರಿಯೆಯಲ್ಲಿ ಇದ್ದಾರೆ. ಈ ಎರಡು ಮಾದರಿಗಳಲ್ಲಿ ಹೊಸ ಪೂರ್ಣ ಪ್ರಮಾಣದ ಡಿಜಿಟಲ್ ಕ್ಲಸ್ಟರ್ ಅನ್ನು ಹೊಂದಲಿದೆ. |
ಭಾರತದ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್, ಟಿಯಾಗೊ ಹ್ಯಾಚ್‌ಬ್ಯಾಕ್ ಮತ್ತು ಕಾಂಪ್ಯಾಕ್ಟ್-ಸೆಡಾನ್ ಅನ್ನು ಸಂಪೂರ್ಣ ಡಿಜಿಟಲ್ ಉಪಕರಣ ಕ್ಲಸ್ಟರ್‌ನೊಂದಿಗೆ ನವೀಕರಿಸುವ ಪ್ರಕ್ರಿಯೆಯಲ್ಲಿದೆ. ಎಲ್ಲಾ ಹೊಸ ಉಪಕರಣ ಕ್ಲಸ್ಟರ್ ಎರಡೂ ಮಾದರಿಗಳ ಟಾಪ್ ಎಂಡ್ ರೂಪಾಂತರಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ. |
ಡೀಲರ್‍ಗಳ ಪ್ರಕಾರ ಟಿಯಾಗೊ ಮತ್ತು ಟಿಗೋರ್ ಎಎಂಟಿ ಗೇರ್‍ಬಾಕ್ಸ್ ಮತ್ತು ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಆಯ್ಕೆಗಳಲ್ಲಿ ಶೀಘ್ರದಲ್ಲೇ ಲಭ್ಯವಿರುತ್ತದೆ. ಅಂದರೆ ಎಕ್ಸ್ ಝಡ್ ಪ್ಲಸ್ ಮತ್ತು ಎಕ್ಸ್ ಝಡ್‍ಎ ಪ್ಲಸ್ ಮಾದರಿಗಳಲ್ಲಿಯೂ ಈ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. |
ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನಲಾಗ್ ಯುನಿಟ್ ಆಗಿದೆ. ಡಿಜಿಟಲ್ ಸ್ಪೀಡೋಮೀಟರ್, ಟ್ಯಾಜೊಮೀಟರ್ ಮತ್ತು ಡಿಜಿಟಲ್ ಕ್ಲಾಕ್ ಹೊಂದಿದೆ. |
ಎರಡು ಟಾಟಾ ಕಾರುಗಳ ಎಕ್ಸ್ ಜಡ್ ಪ್ಲಸ್ ಮಾದರಿಗಳು ದೊಡ್ಡದಾದ 15 ಇಂಚಿನ ಅಲಾಯ್ ವ್ಹೀಲ್‍ಗಳು, ಪ್ರೋಜೆಕ್ಟರ್ ಹೆಡ್‍ಲ್ಯಾಂಪ್‍ಗಳು ಮತ್ತು 7.0 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್‍ಮೆಂಟ್ ಸಿಸ್ಟಂ ನಂತಹ ಕೆಲವು ವೈಶಿಷ್ಟ್ಯಗಳನ್ನು ಹೊಂದಿದೆ. ಪವರ್ ಪ್ಲೋಡಿಂಗ್ ವಿಂಗ್ ಮೀರರ್ ನೊಂದಿಗೆ ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್ ಸ್ಟ್ಯಾಂಡರ್ಡ್ ಮಾದರಿಯಾಗಿದೆ. ಈ ಮಾದರಿಗಳು 5-ಸ್ಪೀಡ್ ಮ್ಯಾನುವಲ್... |
ರೆನಾಲ್ಟ್ ಟ್ರೈಬರ್ ಮಾತ್ರ ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸು ಟ್ರೋಮೆಂಟ್ ಕ್ಲಸ್ಟರ್ ನೊಂದಿಗೆ ಲಭ್ಯವಿದೆ. ಆಕ್ಟೋಬರ್ 1ರಂದು ಬಿಡುಗಡೆಯಾಗಲಿರುವ ಹೊಸ ರೆನಾಲ್ಟ್ ಕ್ವಿಡ್ ಬಿಡುಗಡೆ ಮಾಡುವ ಮೂಲಕ ಫ್ರೆಂಚ್ ಬ್ರ್ಯಾಂಡ್‍ನಿಂದ ಎರಡನೆಯ ವಾಹನವಾಗಿದೆ. |
ಟಿಯಾಗೊ ಕ್ವಿಡ್‍ಗಿಂತ ಮೇಲಿನ ಸ್ಥಾನದಲ್ಲಿರುವ ಹ್ಯಾಚ್‍ಬ್ಯಾಕ್ ಆಗಿರುವುದರಿಂದ ಇದು ತನ್ನ ಸೆಗ್‍ಮೆಂಟ್‍ನಲ್ಲಿ ಮೊದಲ ಕಾರು ಆಗಿರುತ್ತದೆ. ಹ್ಯಾಚ್‍ಬ್ಯಾಕ್ ಸೆಗ್‍ಮೆಂಟ್‍ನಲ್ಲಿ ಮಾರುತಿ ಸುಜುಕಿಯ ಸೆಲೆರಿಯೊ ಮತ್ತು ವ್ಯಾಗನ್‍ಆರ್ ಮತ್ತು ಇತರ ಬ್ರ್ಯಾಂಡ್‍ನ ದಟ್ಸನ್ ಗೋ ಮತ್ತು ಹ್ಯುಂಡೈ ಸ್ಯಾಂಟ್ರೋಗಳಂತಹ ಮಾದರಿಗಳಲ್ಲಿ ಇದೇ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಸ್ತುತ ಮಾರಾಟದಲ್ಲಿ... |
ಟಾಟಾ ಮೋಟಾರ್ಸ್ ಅವರ ವಿಶೇಷ ಆವೃತ್ತಿಯ ಟಿಯಾಗೋ ವಿಜ್ ಈ ಹಬ್ಬದ ವೇಳೆಯಲ್ಲಿ ಮಾರುಕಟ್ಟೆಗೆ ಪ್ರವೇಶಿಸಲಿದೆ. ಟಿಯಾಗೊ ಮತು ಟಿಗೋರ್ ಮಾದರಿಗಳನ್ನು ಟಾಟಾ ಕಂಪನಿಯು ನವೀಕರಿಸುತ್ತಿದೆ. ಈ ನವೀಕರಿಸಿದ ಮಾದರಿಗಳು ಬಿಎಸ್-6 ಎಂಜಿನ್ ಪ್ರೇರಿತ ಎಂಜಿನ್ ಹೊಂದಲಿದೆ. ಫೇಸ್‍ಲಿಫ್ಟ್ ಟಿಯಾಗೋ ಮತ್ತು ಟೋಗೊರ್ ಪೆಟ್ರೋಲ್ ಮಾದರಿಗಳಲ್ಲಿ ಮಾತ್ರ ಮಾರಾಟವಾಗಲಿದೆ. |
ಟಿಯಾಗೊ ಮತ್ತು ಟಿಗೋರ್ ಹೊಸ ಮಾದರಿಗಳು ಬಿಡುಗಡೆಯಾದ ಬಳಿಕ ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಡಿಜೈರ್, ಫೋರ್ಡ್ ಆಸ್ಪೈರ್ ಮತ್ತು ಹೋಂಡಾ ಅಮೇಜ್ ಕಾರುಗಳಿಗೆ ಪೈಪೋಟಿ ನೀಡಲಿದೆ. |
Tata Tiago & Tigor Top End Variants To Feature New Fully-Digital Instrument Cluster - Read in kannda |
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಕೆ.ಜಯಪ್ರಕಾಶ್ ಹೆಗ್ಡೆ ನೇಮಕ | Vartha Bharati- ವಾರ್ತಾ ಭಾರತಿ |
ವಾರ್ತಾ ಭಾರತಿ Nov 23, 2020, 4:37 PM IST |
ಬೆಂಗಳೂರು, ನ.23: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. |
2014ರ ಜೂನ್‍ನಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರನ್ನಾಗಿ ಎಚ್.ಕಾಂತರಾಜ್ ಅವರನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ನೇಮಕ ಮಾಡಿತ್ತು. ಆದರೆ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಗೆ ಚಾಲನೆ ನೀಡಿದ್ದ ಆಯೋಗವು ತನ್ನ ಅಂತಿಮ ವರದಿಯನ್ನು ಸಲ್ಲಿಸುವ ಸಿದ್ಧತೆ ನಡೆಸುತ್ತಿದ್ದರಿಂದ, 2017ರ ಜುಲೈನಲ್ಲಿ ಅವರ ಅಧಿಕಾರಾವಧಿಯನ್ನು ರಾಜ್ಯ ಸರಕಾರ ವಿಸ್ತರಣೆ ಮಾಡಿ... |
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಲ್ಲಿಯೂ ಕಾಂತರಾಜ್ ಮುಂದುವರಿದಿದ್ದರು. ಆದರೆ, 2019ರ ಸೆಪ್ಟಂಬರ್ ನಲ್ಲಿ ಅವರು ಜವಾಬ್ದಾರಿಯಿಂದ ಮುಕ್ತರಾದರು. ಅಲ್ಲಿಂದ ಸುಮಾರು ಒಂದು ವರ್ಷ ಎರಡು ತಿಂಗಳುಗಳ ಕಾಲ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ಬಿಜೆಪಿ ಸರಕಾರ ಅಧ್ಯಕ್ಷರ ನೇಮಕ ಮಾಡಿರಲಿಲ್ಲ. |
ಕಿರಾತಕನಿಗೆ 31 ರ ಹುಟ್ಟುಹಬ್ಬ ಸಂಭ್ರಮ ರಾಧಿಕಾ ಪಂಡಿತ್ ಸಾಥ್ |
January 8, 2017 EnSuddi Author birthaday, home, kirataka, raajahuli, radhika pandith, rocking star, support, yash |
ಇತ್ತೇಚಿಗಷ್ಟೆ ವಿವಾಹವಾಗಿ ಹನಿಮೂನ್ ಗೆ ತೆರಳಿ ಜೋಡಿಹಕ್ಕಿಗಳ ತರ ಹಾರಾಡುತ್ತಿರುವ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿಗೆ ಮತ್ತೊಂದು ಸಿಹಿಸುದ್ದಿ ಮನೆಮಾಡಿದ್ದು, ರಾಕಿಂಗ್ ಸ್ಟಾರ್ ಯಶ್‌ರವರು ತಮ್ಮ 31 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ನಿನ್ನೆ ಸಂಜೆಯಿಂದಲೇ ಅವರ ಮನೆಯತ್ತ ಅಭಿಮಾನಿಗಳ ದಂಡು ಆಗಮಿಸಿದ್ದು, ನೆಚ್ಚಿನ ನಟನನ್ನು ನೋಡಲು ಮುಗಿಬಿದ್ದಿದ್ದಾರೆ ಎನ್ನಲಾಗಿದೆ. |
ಪ್ರೀತಿಯ ಅಣ್ ತಮ್ಮನಿಗೆ ಶುಭ ಹಾರೈಸಲು ಮಧ್ಯ ರಾತ್ರಿಯಿಂದಲೇ ಅವರ ನಿವಾಸದ ಬಳಿ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು. ರಾಕಿಂಗ್ ಸ್ಟಾರ್ ಯಶ್ ಗೆ ಮದುವೆಯಾದ ನಂತರದ ಮೊದಲ ಜನುಮದಿನ ಆಗಿರುವುದರಿಂದ ಹುಟ್ಟುಹಬ್ಬದ ಸಂಭ್ರಮ ಸ್ವಲ್ಪ ವಿಶೇಷವಾಗಿತ್ತು ಎನ್ನಲಾಗಿದೆ. |
ಇನ್ನೂ ಹೊಸಕೆರೆ ಹಳ್ಳಿ ಯಶ್ ನಿವಾಸದಲ್ಲಿ ಕಿರಾತಕನ ಬರ್ತಡೇ ಸಂಭ್ರಮ ಮನೆ ಮಾಡಿತ್ತು. ಮಧ್ಯರಾತ್ರಿ 12ಕ್ಕೆ ಕರುನಾಡ ಕಲಾ ವಿಕ್ರಮ ರಾಕಿಂಗ್ ಸ್ಟಾರ್ ಅಭಿಮಾನಿಗಳ ಸಂಘ ತಂದಿದ್ದ ಭಾರಿ ಗಾತ್ರದ ಕೇಕ್ ಕತ್ತರಿಸಿ ಯಶ್ ಹುಟ್ಟುಹಬ್ಬ ಆಚರಿಸಿಕೊಂಡರು. ಅಭಿಮಾನಿಗಳಿಗೆ ಜನುಮದಿನದ ಕೊಡುಗೆಯಾಗಿ 'ಯಶೋಮಾರ್ಗ' ಹೆಸರಿನ ವೆಬ್ ಸೈಟ್ ಲಾಂಚ್ ಮಾಡಲಾಯಿತು ಎಂದು ತಿಳಿದುಬಂದಿದೆ. |
ಇನ್ನೂ ನಟ ಯಶ್ ಅವರ ಹುಟ್ಟುಹಬ್ಬಕ್ಕೆ ತನ್ನ ಬಾಳ ಸಂಗಾತಿ ರಾಧಿಕಾ ಪಂಡಿತ್ ಸಾಥ್ ನೀಡಿದ್ದು, ಈ ಜೋಡಿಹಕ್ಕಿಗಳನ್ನು ವೇದಿಕೆಯಲ್ಲಿ ಜೊತೆಯಾಗಿ ಕಂಡು ಹುಟ್ಟುಹಬ್ಬ ಆಚರಿಸಿದ್ದು ವಿಶೇಷವಾಗಿದ್ದು, ಯಶ್ ಅಭಿಮಾನಿಗಳು ಹುಟ್ಟುಹಬ್ಬದಲ್ಲಿ ತಮ್ಮ ನೆಚ್ಚಿನ ನಾಯಕನ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. |
ಗುಪ್ತವಾಗಿ ಪಾಕಿಸ್ತಾನಿ ಅಧಿಕಾರಿಗಳನ್ನು ಭೇಟಿಯಾದರೆ ಕಾಂಗ್ರೆಸ್ಸಿಗರು? |
ದೆಹಲಿ: ಈ ಕಾಂಗ್ರೆಸ್ ಮುಖಂಡರಿಗೆ ಇದ್ದಕ್ಕಿದ್ದಹಾಗೆ ಏನಾಗುತ್ತದೆಯೋ ಗೊತ್ತಿಲ್ಲ. ವಿಚಿತ್ರವಾಗಿ ವರ್ತಿಸುತ್ತಾರೆ, ಸರ್ಕಾರಕ್ಕೆ ಮಾಹಿತಿ ಇಲ್ಲದೆ ವೈರಿ ರಾಷ್ಟ್ರದವರ ಜತೆ ಮಾತುಕತೆ ನಡೆಸುತ್ತಾರೆ. ಇದಕ್ಕೆ ಡೊಕ್ಲಾಂ ಗಡಿಯಲ್ಲಿ ಭಾರತ-ಚೀನಾ ಬಿಕ್ಕಟ್ಟು ಸೃಷ್ಟಿಯಾದಾಗ, ಇದೇ ರಾಹುಲ್ ಗಾಂಧಿಯವರು ಗುಪ್ತವಾಗಿ ಚೀನಾ ರಾಯಭಾರಿಗಳನ್ನು ಭೇಟಿ ಮಾಡಿದ್ದು ಇದಕ್ಕೆ ನಿದರ್ಶನ. |
ಈಗ ಕಾಂಗ್ರೆಸ್ ಮುಖಂಡರು ಗುಜರಾತ್ ಚುನಾವಣೆ ಮಧ್ಯೆಯೇ ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವರನ್ನು ಭೇಟಿಯಾಗಿದ್ದಾರೆ ಎಂದು ರಿಪಬ್ಲಿಕ್ ಟಿವಿ ಶಂಕೆ ವ್ಯಕ್ತಪಡಿಸಿದೆ. |
ಡಿ.6ರಂದು ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಪಾಕಿಸ್ತಾನ ವಿದೇಶಾಂಗ ವ್ಯವಹಾರಗಳ ಸಚಿವ ಖುರ್ಷೀದ್ ಕಸೂರಿ ನೇತೃತ್ವದ ಅಧಿಕಾರಿಗಳನ್ನು ದೆಹಲಿಯಲ್ಲಿರುವ ಅಯ್ಯರ್ ನಿವಾಸದಲ್ಲಿ ಸಭೆ ನಡೆಸಿ ಗುಪ್ತವಾಗಿ ಚರ್ಚೆ ಮಾಡಲಾಗಿದೆ ಎಂದು ತಿಳಿದುಬಂದಿದೆ. |
ಸಭೆ ನಡೆದಿರುವ ಕುರಿತು ಸಿಕ್ಕಿರುವ ಮಾಹಿತಿ ನಿಜವಾಗಿದ್ದು, ಗುಪ್ತಚರ ಇಲಾಖೆ ಮಾಹಿತಿಯಿಂದ ನಿಖರ ಉತ್ತರ ಸಿಗಲಿದೆ ಎಂದು ಬಿಜೆಪಿ ಮುಖಂಡ ಅಜಯ್ ಅಗರ್ವಾಲ್ ಮಾಹಿತಿ ನೀಡಿದ್ದು ಮಾತುಕತೆ ನಡೆಸಲಾಗಿರುವ ಕುರಿತು ಮತ್ತಷ್ಟು ಪುಷ್ಟಿ ಸಿಕ್ಕಿದೆ. |
ಗುಜರಾತ್ ಚುನಾವಣೆ ಮಧ್ಯೆಯೇ ಕಾಂಗ್ರೆಸ್ ಮುಖಂಡರು ಪಾಕಿಸ್ತಾನಿ ಅಧಿಕಾರಿಗಳ ಜತೆ ಗುಪ್ತವಾಗಿ ಮಾತುಕತೆ ನಡೆಸಿರುವ ಕುರಿತು ಕೂಡಲೇ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೂಡಲೇ ಸ್ಪಷ್ಟನೆ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ. |
ಒಟ್ಟಿನಲ್ಲಿ ಚುನಾವಣೆ ವೇಳೆ, ಸರ್ಕಾರಕ್ಕೇ ಮಾಹಿತಿ ಇಲ್ಲದೆ ಕಾಂಗ್ರೆಸ್ ಮುಖಂಡರನ್ನು ಪಾಕಿಸ್ತಾನಿ ಅಧಿಕಾರಿ, ಸಚಿವರ ಜತೆ ಮಾತುಕತೆ ನಡೆಸುವ ಅನಿವಾರ್ಯ ಹಾಗೂ ಬಲವಾದ ಕಾರಣಗಳೇನಿದ್ದವು ಎಂಬುದು ನಿಗೂಢವಾಗಿದ್ದು, ಹಲವು ಅನುಮಾನಗಳಿಗೆ ಈಡುಮಾಡಿದೆ. |
ಶಿಶುನಾಳ ಶರೀಫರು – ಕಣಜ |
Home/ವ್ಯಕ್ತಿ ಪರಿಚಯ/ಶಿಶುನಾಳ ಶರೀಫರು |
"ಸಾಧುಗಳ ಸಹಜ ಪಥವಿದು: ಆನಂದದಿಂದಿರುವುದು". |
-ಹೀಗೆ ಹಾಡಿದವರು ಶಿಶುನಾಳ ಶರೀಫರು. ಅವರು ಬಾಳಿದ್ದೂ ಹಾಗೆಯೇ. ಸಂಸಾರದಲ್ಲಿ ಇದ್ದೂ ಅವರು "ಸಾಧು" ಆಗಿದ್ದರು. ಬಾಳಿನಲ್ಲಿ ಬಗೆಬಗೆಯ ಕಷ್ಟ ಎದುರಿಸಿಯೂ ಅವರು ಆನಂದದಿಂದ ಇದ್ದರು. ಅವರು ಆನಂದವು ಹೊರಗಿನ ವಸ್ತುಗಳನ್ನು ಅವಲಂಬಿಸಿರಲಿಲ್ಲ. ಶರೀಫರು ಸಂಸಾರದ ಬೇಕು-ಬೇಡಗಳನ್ನು ಸಾಕುಮಾಡಿ ಲೋಕದೊಳಗೆ ಏಕವಾಗಿ ಬಾಳಿದ ಸಾಧು. ಶಿಶುನಾಳದೀಶನ ಬೆಳಕಿನೊಳಗೆ ಬೆಳಗಿದ ವರಕವಿ. ಹಳ್ಳಿಯ ಜನರ ಬಾಳಿನೊಂದಿಗೆ ... |
ಕಬೀರರಂತೆ |
ಇಂತಹ ಶರೀಫರು ಕರ್ನಾಟಕದ ಪುಣ್ಯ ಪುರಷರಲ್ಲಿ ಒಬ್ಬರು. ಇಡೀಯ ಭಾರತದ ಪುಣ್ಯ ಪುರುಷರ ಸಾಲಿಗೆ ಸೇರುವ ಹಿರಿಮೆಯುಳ್ಳವರು. ಜಾತಿ-ಮತ-ಪಂಥಗಳ ಮೇರೆಯನ್ನು ಮೀರಿನಿಂತ ಎತ್ತರ ಮಟ್ಟದ ಮಾನವರು, ದೈವ ಭಕ್ತರು. |
"ಎಲ್ಲ ಧರ್ಮಗಳ ದೇವರು ಒಬ್ಬನೇ" ಎಂಬ ಸಂದೇಶ ಉತ್ತರ ಹಿಂದುಸ್ತಾನದ ಕಬೀರ, ಕರ್ನಾಟಕದ ಶರೀಫ ಇವರುಗಳ ಬಾಳಿನಲ್ಲಿ ಬೆಳಗಿತು. |
ಶರೀಫರು ಹುಟ್ಟಿದ್ದು ಒಂದು ಜಾತಿಯಲ್ಲಿ. ರೂಢಿಸಿಕೊಂಡಿದ್ದು ಬೇರೊಂದು ಧಾರ್ಮಿಕ ತತ್ವವನ್ನು. ಗುರುವನ್ನು ಪಡೆದುಕೊಂಡಿದ್ದು ಇನ್ನೊಂದು ಧರ್ಮದಿಂದ. ಹೀಗಾಗಿ ಆತನು ಜೀವಿಸಿರುವಾಗ ಯಾವ ಒಂದು ಜಾತಿಯವರೂ ಅವರನ್ನು ತಮ್ಮವನೆಂದು ಭಾವಿಸಲಿಲ್ಲ. ಆದರೆ ಆತನು ಮರಣಹೊಂದಿದಾಗ ಆತನ ಹಿರಿಮೆಯನ್ನು ಎಲ್ಲರೂ ಅರಿತುಕೊಂಡರು. ಸಕಲರೂ ಸೇರಿ ಆತನ ಸಮಾಧಿ ಮಾಡಿದರು. |
ಸಮಾಧಿಯ ಸಂದೇಶ |
ಶರೀಫರ ಸಮಾಧಿಯು ಒಂದು ದೊಡ್ಡದಾದ ಚೌಕ ಆಕಾರದ ಕಟ್ಟೆಯಾಗಿದೆ. ಅಲ್ಲಿ ಎರಡು ಬೇವಿನ ಮರಗಳು ಒಂದಾಗಿ ಕಾಣುವಂತೆ ಬೆಳೆದಿವೆ. ಜೊತೆಗೆ ಮಲ್ಲಿಗೆ ಬಳ್ಳಿಯು ಹಬ್ಬಿವೆ. ಬೇವು ಮಲ್ಲಿಗೆಗಳು ಒಂದನ್ನೊಂದು ಅಪ್ಪಿಕೊಂಡಿವೆ. ಬೇವಿನ ಮರಗಳು ವಿಶಾಲವಾಗಿ ಬೆಳೆದಿವೆ. ಕಟ್ಟೆಯ ತುಂಬ ನೆರಳು ಬೀಳುತ್ತಿದೆ. ಮಲ್ಲಿಗೆಯ ಬಳ್ಳಿಗಳಿಂದ ಗದ್ದಿಗೆ(ಕಟ್ಟೆ)ಯ ಮೇಲೆ ಹೂವು ಸುರಿಯುತ್ತಿವೆ. ಕಟ್ಟೆಯ ಮೇಲೆ ಮುಂಜಾನೆ, ಸಂಜೆ... |
ಈ ಸಮಾಧಿಯಿರುವುದು ಶಿಶುನಾಳ ಗ್ರಾಮದ ಹತ್ತಿರದಲ್ಲಿ. ಶಿಶುನಾಳವು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಒಂದು ಸಣ್ಣ ಹಳ್ಳಿ. ಅದು ಶರೀಫರು ಹುಟ್ಟಿ ಬೆಳೆದ ಸ್ಥಳ. ಶಿಶುನಾಳವು ಶರೀಫರ ಜನ್ಮ ಭೂಮಿ, ಕರ್ಮಭೂಮಿ, ಪುಣ್ಯಭೂಮಿ. |
ವೀರಶೈವ ಧರ್ಮದ ಪರಿಚಯ |
ಶಿಶುನಾಳದಲ್ಲಿ ಇಮಾಮಭಾಯಿ ಮತ್ತು ಹಜ್ಜುಮಾ ಎಂಬ ಸಜ್ಜನ ದಂಪತಿಗಳಿದ್ದರು. ಬಹು ಕಾಲದವರೆಗೆ ಅವರಿಗೆ ಮಕ್ಕಳಾಗಿರಲಿಲ್ಲ. ಅವರು ನೆರೆಯ ಹಳ್ಳಿಯಾದ ಹುಲಗೂರಿನ ಹಜರೇಶ ಖಾದರಿ ಅವರಿಗೆ ಭಕ್ತಿಯಿಂದ ನಡೆದುಕೊಳ್ಳುತ್ತಿದ್ದರು. ಖಾದರಿ ಅವರು ಕೃಪೆಯಿಂದ ಈ ದಂಪತಿಗಳಿಗೆ ಸಂತಾನ ಪ್ರಾಪ್ತಿಯಾಯಿತು. ಇವರಿಗೆ ೧೮೧೮ ಮಾರ್ಚ್ ೭ ರಂದು ಜನಿಸಿದ ಮಗುವೇ ಶರೀಫ. ಹಜರೇಶ ಖಾದರಿ ಅವರನ್ನು ಶರೀಫರು ತಮ್ಮ ಹಾಡುಗಳಲ್ಲಿ... |
Subsets and Splits
No community queries yet
The top public SQL queries from the community will appear here once available.